Categories
ರಚನೆಗಳು

ಅಜ್ಞಾತ

95

ಆಕಾರದಿ ತೋರಿರೆ ಜಗವೆಲ್ಲವು |ಓಂಕಾರದ ಹೊರತು ಏನಿಲ್ಲ ಪ

ಆದಿ ಶೂನ್ಯದಿಂದ ಅಕಾರ ಪುಟ್ಟಿತು |ದಂಡಕ ಉಕಾರ ಪಡೆಲಿಲ್ಲ 1

ಅರ್ಧ ಮಾತ್ರದಿ ಮಕಾರ ವೇದಿ |ಊಧ್ರ್ವ ಶೂನ್ಯ ದಶನಾದೆಲ್ಲ 2

ಇದರ ಮೂಲವು ಸಿದ್ಧರು ಬಲ್ಲರು |ಗೋರಖ ಮತ್ಸ್ಯೇಂದ್ರಾದಿಯರೆಲ್ಲ 3

ಆದಿಸಿದ್ಧ ಬಾಬಾ ಚೈತನ್ಯನು |ತುಕಾ ವಾಣಿಗೆ ಹೇಳಿದನಲ್ಲ 4

ಮನಿಹಾಳ ವಾಸಿ ಎಮ್ಮ ಶಿವನು |ಗಿರಿಜೆಗೆ ಉಪದೇಶಿಸಿದನಲ್ಲ 5