Categories
ರಚನೆಗಳು

ಅನಂತಾದ್ರೀಶರು

ಶ್ರೀ ಹರಿಸ್ತುತಿ

1

ಎಷ್ಟು ಅಟ್ಟಲೆ ಕೊಡುವ ನೋಡಮ್ಮ ಏ

ಗೋಪಿ ನಿನ್ನ ಮಗ ಪ

ಎಷ್ಟು ಅಟ್ಟಲೆ ಕೊಡುವ ನಮಗೆ ದುಷ್ಟತನ

ಯಥೇಷ್ಟ ಮಾಡುವ

ಸ್ಪಷ್ಟನಾ ಇನ್ನೆಷ್ಟು ಹೇಳಿದರಷ್ಟು ಮಾಡುವ

ಈ ಕಳ್ಳ ಕೃಷ್ಣನು ಅ.ಪ

ಅಡಗಿ ಮನೆಯೊಳಡಗಿಕೊಂಡಿರುವ ಅಲ್ಲಿದ್ದ ಭಾಂಡಗಳ್

ಬುಡಮೇಲ್ ಮಾಡಿ ಅಡಕಲೇರಿಸುವಾ

ಅಡಿಗಳನು ಮೆಲ್ ನಿಡುತ ನೆಲವಿಲಿ

ಇಡುವ ಪಾಲ್ ಮೊಸರನೆಲ್ಲ ಸವಿಯುವ

ಗಡನೆ ಗೆಳೆಯರ ನೊಡನೆ ಬಂದು

ಕಡೆವ ಗಡಗಿಯ ನೊಡೆದು ಪೋಗುವಾ 1

ಸಿಕ್ಕಮನೆ ಮನೆ ಹೊಕ್ಕು ನೋಡುವನೆ ತಾ

ಸಿಕ್ಕದಿರನು ತಕ್ಕ ಕಳ್ಳಿವ ಠಕ್ಕನಾಗಿಹನು

ಅಕ್ಕ ಕೇಳೆ ಅಕ್ಕರದಿ ಕೈಯಿಕ್ಕಿ ಕಡೆದಿಹ

ಚೊಕ್ಕ ಬೆಣ್ಣೆಯ ಚಿಕ್ಕ ಬಾಲರಿಗಿಕ್ಕಿ ತಿನ್ನುವ

ಮಿಕ್ಕ ಬೆಣ್ಣೆಯ ಬೆಕ್ಕಿಗ್ಹಾಕುವ 2

ಎಂಥವನಿವ ಖಳರಂತೆ ಮಾಡುವನೆ ಬೇ

ಕಂತೆ ಕರುಗಳ ತಂತುಬಿಚ್ಚಿ ನಿಂತುನೋಡುವನೆ

ಅಂಥ ಇಂಥವನಲ್ಲ ನಿನ್ನ ಮಗ ಸಂತ ಜನಮನ

ದಂತರಂಗನು ಕಾಂತೆಯರು ಮನದಂತೆ ಬೈದರೆ

ನಿಂತು ನಗವಾನಂತಾದ್ರೀಶನು 3