Categories
ರಚನೆಗಳು

ಅನಂತಾದ್ರೀಶರು

7

ವರದ ವಿಷ್ಣು ತೀರ್ಥಾನೀ ಕೊಡು ಕರುಣದಿ

ಪುರುಷಾರ್ಥ ಪ

ವರದ ಅಭೀಷ್ಟೆಯ ಕರದು ಎನಗೆ ನೀ

ವರದನೆಂಬೊ ನಿನ್ನ ಬಿರುದನ ರಕ್ಷಿಸು ಅ.ಪ

ಅಜನ ಜನಕನÀಲ್ಲಿ ಇರುವಿಯೊ ವಿಜನ ದೇಶದಲ್ಲೀ

ಸುಜನರು ಇದ್ದಲ್ಲಿ ಬರುವೆಯೊ ಭಜನೆಮಾಡುವಲ್ಲೀ

ಸುಜನರ ತಾಪಕೆ ವ್ಯಜನನು ನೀನೂ

ಸುಜನಕಲ್ಪತರು ಕುಜನಕುಠಾರಾ 1

ನಂದನಂದನನೂ ಅವನಿನ್ನ ಬಂಧನದೊಳಗಿಹನೂ

ಅಂಧನಾಗಿ ನಾನೂ ಸಂಸೃತಿ ಬಂಧನದೊಳಗಿನ್ನೂ

ನೊಂದೆನು ಬೆಂದೆನು ಬಂದೆನು ನಿನ್ನಲಿ

ಕಂದನ ಲಾಲಿಸು ಒಂದಿನ ಬಿಡದೆ 2

ಮರೆತೆನು ನಾನಿನ್ನಾ ಅವಗುಣ ಮರೆತು ಪಾಲಿಸು ಮುನ್ನಾ

ಪರತರಗುರು ನಿನ್ನಾ ಹೊರತು ಗತಿ ಗುರುತತಿಲ್ಲ ಮುನ್ನಾ

ಅರಿತು ಅನಂತಾದ್ರಿ ನಿರತನ ತೋರಿಸು

ತ್ವರತ ಮೋದ ಪುರನಿರತ ಸದ್ಗುರುವೆ 3