Categories
ರಚನೆಗಳು

ಅನಂತಾದ್ರೀಶರು

6

ಚಾರು ಶ್ರೀ ಕುಶನದಿ ತೀರದಲ್ಲಿರುತಿಹನ್ಯಾರೆ ಪೇಳಮ್ಮಯ್ಯ

ಸಾರಯತೀಶ್ವರ ಧೀರ ಸುಗುಣಗಂಭೀರ

ವಿಷ್ಣುತೀರ್ಥಾರ್ಯಕಾಣಮ್ಮಾ ಪ

ವೃಂದಾರಕ ವರವೃಂದದೊಳಗೆ ನವ

ಇವನಾರೆ ಪೇಳಮ್ಮಯ್ಯ

ವೃಂದಾವನದಲಿ ಬಂದಿರುವರು ಮತ್ತಲ್ಲಿ ನೋಡಮ್ಮಯ್ಯಾ

ಮುಂದೆ ಮುದ್ರೆ ಬಹು ಛಂದದ ನಾಮವು

ಗಂಧಾಕ್ಷತ ನೋಡಮ್ಮಯ್ಯ

ಸಾರಯತೀಶ್ವರ ಧೀರ ಸುಗುಣ ಗಂಭೀರ

ವಿಷ್ಣು ತೀರ್ಥಾರ್ಯ ಕಾಣಮ್ಮಾ 1

ನೀರೇ ನಾಲ್ಕು ವರ ಮೂರುತಿಗಳ್

ಬೆನ್ಹಿಂದೆ ನೋಡಮ್ಮಯ್ಯ

ನಾರಾಯಣ ತನ್ನ ನಾರಿಯ ಸಹಿತಾ

ಇಹನೂ ನೋಡಮ್ಮಯ್ಯ

ನಾರಿಮಣಿಯೇ ಶ್ರೀನಾರಸಿಂಹನೂ ಚಾರುಚಕ್ರ

ತೀರದಲ್ಲಿಹನಮ್ಮಾ

ಸಾರಯತೀಶ್ವರ ಧೀರ ಸುಗುಣಗಂಭೀರ ವಿಷ್ಣು

ತೀರ್ಥಾರ್ಯ ಕಾಣಮ್ಮಾ 2

ಲೇಸು ಆದ ಕೂರ್ಮಸನವಿರುವುದು ಕೆಳಗೇ

ನೋಡಮ್ಮಯ್ಯಾ

ಭಾಸುರ ಜಯಮುನಿ ಶೇಷನಾಗಿರುತಿಹ ಮ್ಯಾಲೇ

ನೋಡಮ್ಮಯ್ಯ

ಈಶಾನಂತಾದ್ರೀಶನಿರತ ಮೋದೇಶ್ವರಾಖ್ಯ

ಪುರವಾಸಾ ಕಾಣಮ್ಮ

ಸಾರಯತೀಶ್ವರ ಧೀರ ಸುಗುಣ ಗಂಭೀರ

ವಿಷ್ಣು ತೀರ್ಥಾರ್ಯ ಕಾಣಮ್ಮ 3