Categories
ರಚನೆಗಳು

ಅಸ್ಕಿಹಾಳ ಗೋವಿಂದ

ಗಣೇಶ ಪ್ರಾರ್ಥನೆ

ನಿರ್ವಿಘ್ನ ನೀಡೋ ನಭದೀಶಾ ಪ
ಗಜಮುಖ ಅಗಜ ಅಂಗಜ ಮೃದ್ಭವ
ಗಜವರದನ ನಿಜ ದಾಸ ೧
ನಾಕಪವಂದ್ಯ ಪಿನಾಕಿಧರನುತ
ಏಕದಂತ ದ್ರಿತ ಪಾಶಾ ೨
ಶಿರಿಗೋವಿಂದ ವಿಠಲನ ದಾಸರಿಗೆ
ಶಿರಿದ ನಿಖಿಳ ಭಯ ನಾಶ ೩

ಶ್ರೀಹರಿ ಸಂಕೀರ್ತನೆ

ಪತಿತ ಪಾವನ ಗೋವಿಂದ
ನಮ್ಮ ಪದುಮದಳಾಕ್ಷ ಸದಾನಂದ ಪ
ಸತಿಪತಿ ನುತ ಸಾರ್ವಭೌಮ ಸು
ವೃತಾ ಚರಣ ಘನ ರಾಜಿತ ಸುಂದರ ಅ.ಪ
ಧೀರನಮೋ ಸುವಿಚಾರ ನಮೋ
ಯದುವೀರ ನಮೋ ರಜದೂರ ನಮೊ
ಮಾರನಮೋ ಗಂಭೀರ ನಮೊ ಭವಹಾರ ನಮೋ
ಸುವಿಚಾರನಮೊ ದಧಿ ಚೋರ ನಮೊ ೧
ಜನನ ಮರಣ ಜರ ರಹಿತ ನಮೋ ಪಾವನ ಪದ
ಪಂಕೇರುಹ ನಯನ ನಮೋ
ಮನ ವಚನಕೆ ಸಿಗದ ನಿಮಿಷ ಪತಿ
ನಿನ್ನನೆ ಬೇಡುವೆ ಪೊರೆಯೆನುತ ಕರಮುಗಿದು ೨
ರಾಮ ರಾವಣಾಂತಕ ಶೌರಿ ಶುಭ
ನಾಮ ಭಕ್ತ ಜನ ಹಿತಕಾರಿ
ಸಾಮ ವಂದ್ಯ ಸುತ್ರಾಮ ಅನುಜ ನಿ
ಸ್ಸೀಮ ಮಹಿಮ ಶಿರಿಧಾಮ ಅನಘ ನಮೊ ೩
ಅನ್ಯನೆ ನಾ ನಿನ್ನಗೆ ದೇವ ಸಾಮಾನ್ಯನೆ
ಅಭಿಮನ್ಯುನ ಮಾವಾ
ಇನ್ನೆನೆನ್ನದೆ ನಿನ್ನಿಂ ಲಭಿಸಿದ
ನುಣ್ಣುವ ಯನ್ನನು ಮನ್ನಿಸದಿರುವರೆ ೪
ಹಿರಿಯರ ದಯವಿರುವುದು ಸರೆ
ನೀ ಪೊರೆವಿ ಬಿಡದೆ ಯಂಬೋದು ಖರೆ
ಸ್ವರಸ್ವರ ಘಸಿದಾಲ್ಪರಿದ ಮೇಲೆ ಸುಧೆ ಗರಿವರ
ತೆರ ಚರಿಪುದು ಧರವೆ ೫
ದಾಸರ ಪೊರೆಯಲು ದಾಶರಥೇ
ನೀ ಬ್ಯಾಸರ ಬಿಡುವರೆ ಅಮಿತ ಮತೆ
ಶ್ರೀಶಾನಿಮಿತ್ಯ ಬಂಧುಯೆನಿಸಿ
ಉದಾಸಿಸೆ ಆಗಮ ರಾಶಿಗೆ ಶೋಭವೆ ೬
ಘಾಸಿಗೊಳಿಸುವರೆ ಸೈಸೈಸೈ ನೀ
ನೀಶನಾದದಕೆ ಫಲವೇನೈ
ಪೋಷಕ ನೀನೆಂದಾಸಿಸಿದವರನು
ನೀ ಸಲಹದೆ ಬರೆ ಸೋಸಿಲಿ ಮೆರೆವರೆ ೭
ಧೃವನ ಪೊರೆದ ಬಲುವೇನಾಯ್ತೈ
ಉದ್ಧವಗೆ ವಲಿದ ದಯ ಏಲ್ಹೊಯತೈ
ಬವರದೊಳಗೆ ಪಾಂಡವರ ಕಾಯ್ದ ಮತಿ ಸವಿಯುತೆ
ಪವನಪಸವಿದ ಸತತ ಸುಖ ೮
ಘನ್ನ ಕರುಣಿ ನೀ ನಹುದೇನೊ
ಆಪನ್ನ ರಾಪ್ತ ನೀ ನಿಜವೇನೋ
ಸೊನ್ನೊಡಲಾಂಡಗ ನೀನಾದರೆ ಗತ
ಮನ್ಯುನಾಗಿ ಜವ ನಿನ್ನನೆ ತೋರಿಸು ೯
ತಂದಿನ ಪಾಲಿಸಿ ಮಗನನ್ನು ಬೇಕೆಂದು
ಕೊಂದ ಕೃಷ್ಣನೆ ನೀನು
ಹಿಂದಿನ ತೆರ ಎನ್ನಂದವ ಕಡಿಸದೆ
ತಂದು ತೋರೊತವ ಸುಂದರ ಪದಯುಗ೧೦
ಕಂದುಗೊರಳನುತ ಪೊರೆಯೆಂದು
ಬಲು ವಂದಿಸಿದರು ತ್ವರ ನೀ ಬಂದು
ಕಂದನ ಕರದ್ಯಾಕೆಂದು ಕೇಳ್ದದಕೆ
ನೊಂದು ಬಿಡಿ ನುಡಿ ಗಳೆಂದೆನು ಕ್ಷಮಿಸೈ ೧೧
ಬಲು ಮಂದಿನ ಸಲಹಿದಿ ನೀನು
ಅವರೊಳಗೆ ಓರ್ವನಾನಲ್ಲೇನೊ
ನೆಲೆಗಾಣದೆ ತವ ಜಲಜ ಪಾದ
ಹಂಬಲಿಸುವರರ್ಥವ ಸಲಿಸದೆ ಬಿಡುವರೆ ೧೨
ಬೇಡಿಕೊಂಬುವದೊಂದೆ ಬಲ್ಲೆ
ಅದುಕೂಡಾ ತಿಳಿದು ನೋಡಲು ಸುಳ್ಳೆ
ಬೇಡಿ ಬೇಡಿಸುವಿ ಮಾಡಿ ಮಾಡಿಸುವಿ
ರೂಢಿಪತಿ ನೀನಾಡಿದ ನಾಡುವೆ ೧೩
ನಾಗಶಯನ ನೀ ಬದುಕಿರಲು
ಎನಗಾಗ ಬೇಕೆ ಕಲಬಾಧೆಗಳು
ಸಾಗರಾಂಬರಪ ಸುತನಿಗೆ ಪುರ ಜನ
ಬಾಗದೆ ಅಣಕಿಸಿಧಾಂಗಲ್ಲವೆ ಇದು ೧೪
ಕರೆದರೆ ಬರುವೆನು ನಿನ್ನಡಿಗೆ ಧಿ
ಕ್ಕರಿಸಲು ಮರುಗುವೆ ಮನದಾಗೆ
ನಿರ್ವಿಣ್ಯನು ಪರತಂತ್ರನು ನಾನಿ
ನ್ನೆರಳಲ್ಲವೆ ಮದ್ಗುರುವರ ವರದಾ ೧೫
ಅಲ್ಲದ ಜನರಿಂದಲಿ ನೀನು ಬರೆ
ಕಲ್ಲಿನ ರೂಪದಿ ಪೂಜಿಯನು
ಗೊಳ್ಳುವ ಬಗೆ ನಾನೊಲ್ಲೆ ನಿನ್ನ ಶಿರಿ
ನಲ್ಲೆ ಸಹಿತ ಬಂದು ನಿಲ್ಲೊ ಅರ್ಚಿಸುವೆ ೧೬
ಕಣ್ಣಲಿ ತವದರ್ಶನ ಅಮೃತ
ಎಂದುಣ್ಣುವೆ ಆದಿನ ಭವ ತ್ರಾತಾ
ಘನ ಕರುಣಿ ಬಾರೆನೆ ಬರುವೆನು
ಎಂದೆನ್ನುವ ಬುಧ ನುಡಿ ನನ್ನಿಯೆನ್ನುವೆನು ೧೭
ಭಿಡೆಯ ಬಾರದೆ ಬಲು ಘನ್ನಾ
ನಾನುಡಿಯು ವಡ್ಡಿ ಬೇಡಿದರನ್ನ
ಕೊಡಗೈಯವನಿಗೆ ಲೋಭವು
ಎಲ್ಲಂದಡರಿತು ನುಡಿ ನುಡಿ ಕಡಲಜಳೊಡೆಯನೆ೧೮
ನ್ಯಾಯಕೆ ಅಧಿಪ ನೀನೆ ಜೀಯಾ
ಅನ್ಯಾಯಕೆ ಪೇಳುವರಾರೈಯ್ಯ
ಮಾಯವೆಂಬೊ ಘನ ಘಾಯವುಎನ್ನನು
ನೋಯಿಸುತಿದೆ ಜವಮಾಯಿ ಸುಭೀಷಿಜನೆ ೧೯
ವರುಣಗೆ ವಾರಿಯು ನೀನಯ್ಯ ದಿನ
ಕರನಿಗೆ ಮಿತ್ರನು ನೀನಯ್ಯ
ಸುರಪಗೆ ಇಂದ್ರನು ಉರಗಕೆ ಶೇಷನು
ಸರ್ವವು ನೀನೆಂದರಿತೆನು ಕರುಣಿಸು ೨೦
ಹನುಮಗೆ ಪ್ರಾಣ ಮೂರೊಂದು
ಆನನನಿಗೆ ವೇಧನು ನೀನಂದು
ಮನಸಿಗೆ ನೀ ಮನ ಜೀವಕೆ ಜೀವನ
ಎನುತ ಅರಿದು ನಮೊ ಎನ್ನುವೆ ಕರಮುಗಿದು ೨೧
ಮೂಗಣ್ಣಗೆ ರುದ್ರನು ನೀನೆಧರೆ
ಆಗಸ ಸಾಗರ ಧಾರಕನೆ
ಶ್ರೀ ಗುರು ರಘುಪತಿ ರಾಗ ಪಾತ್ರ
ನೀನಾಗಿ ಎನ್ನ ಭವ ನೀಗದೆ ಬಿಡುವರೆ ೨೨
ಪದುಮನಾಭ ನಿನ್ನನು ಕುರಿತು ನಾ
ನೊದರುವ ನುಡಿಗಳು ಚಿತ್ರವತು
ವಿಧಿಪತ್ರವನಾಂತು ನಿನ್ನ ಪಾದ
ವದಗಿಸದಲೆ ಬರೆ ಪದವೆನಿಸಿದವೆ ೨೩
ಸ್ತವನಕೆ ವಲಿಯದೆ ಇರೆ ನಮನ
ಗೈಯುವೆ ಇಕೊ ನೋಡೆ ದಾಸ್ಯತನಾ
ಅವನಿಪ ಸರ್ವಕೆ ವಲಿಯದೆ ಇರೆ
ಬೈಯುವೆ ಬಡಿಯುವೆ ಸಿಕ್ಕರೆ ಸೆರೆ ಪಿಡಿಯುವೆ ೨೪
ಚೋರನೆ ನೀ ನಡಗಿದೆಯಾಕೆ
ಸ್ರ‍ಮತಿ ದೂರನೆ ಎನ್ನನು ಮರಿವದೇಕೆ
ಆರು ನಿನಗೆ ವೈಯಾರವು ಈ ಪರಿ
ಕಾರುಣ್ಯದಿ ಕಲಿಸಿದರೋ ಕರಿವರದಾ ೨೫
ಮರೆದಿಯ ನೀ ಕನಿಕರ ಬಡುವ ಸ್ಥಿತಿ ನೀ
ಜರದರೆ ನಮಗಿನ್ನೇನು ಗತಿ
ಪರಿಪರಿ ವರಲು ವರಲಿ ದಯಮಾಡದೆ
ಇರವದು ನಿನ್ನಗೆ ಮರಿಯಾದಿಯೆ ಹರಿ ೨೬
ರೂಪ ತೋರಲೆನ್ನುವಿಯಾ
ಆಹದೆ ಪೇಳಲೊ ಹೇ ವಿಗತಾಗಭಯ
ಪಾಪಬಾರದೆ ಈ ಪರಿಯನ್ನನು
ನೀ ಪಿಡಿಸೆ ಗತತಾಪ ಶ್ರೀಪ ಹರಿ ೨೭
ಸುರತನು ಸಾಕದೆ ಬಿಟ್ಟವಗೆ ತನ್ನ
ಸತಿಯಳ ಖತಿಯೊಳಗಿಟ್ಟವಗೆ
ಕ್ಷಿತಿಯರು ಏನೆನ್ನುವರು ಮನದೊಳಗೆ
ಕೃತಿ ಪತಿ ಯೋಚಿಸಿ ಹಿತಗೈಯನ್ನೊಳು ೨೮
ಶಿರಿಗೋವಿಂದ ವಿಠಲ ಪಾಹಿ
ಗುರುವರ ರಘುಪತಿನುತ ಪದ ಪಾಹಿ
ಬರೆ ಮಾತಲ್ಲವೊ ತ್ವರ ತವ ಪಾದ
ಸಂದರ್ಶನ ಕೊಡದಿರೆ ಸಿರಿ ಸುರರಾಣೆ ೨೯

 

ದೇವ-ದೇವತೆಗಳ ಸ್ತುತಿ
ಶ್ರೀ ಲಕ್ಷ್ಮೀ ಸ್ತುತಿ

ನೀನನ್ನ ಹೇಳಬಾರದೇನ ತಾಯಿ
ನೀನನ್ನ ವಾನರ ವಂದಿತ ಶ್ರೀನಿವಾಸಗೆ ಬುದ್ಧಿ ಪ
ಶ್ರೀನಿಧಿ ಪರನೆಂದು ನಂಬಿ ಬಂದ ಬಡ
ಪ್ರಾಣಿಯ ಪೊರೆಯೆಂದು ಜಾನಕಿ ದೇವಿಯೆ ೧
ಮೊರೆ ಹೊಕ್ಕವರ ಕರ ಪಿಡಿವೆನೆಂಬೊ ಘನಾ
ಬಿರುದು ಉಳಿಸಿಕೊ ಎಂದ್ಹರುಷದಿ ಸಿರಿದೇವಿ ೨
ಉರಗಶಾಯಿ ಶಿರಿಗೋವಿಂದ ವಿಠಲ ತುರಗಗ್ರೀವ
ನರಹರಿಗೆ ತ್ವರಿತದಲಿ ೩

ಶ್ರೀ ವಾಯುದೇವರ ಸ್ತುತಿ

ಪವಮಾನ ಪವಮಾನ ತವನವ ಪದ
ಪಲ್ಲವ ಜವ ತೋರಿಸೊ ಪ
ಶ್ರೀಕರ ಕಪಿಪ ಪಿನಾಕ ಹರಿಪಾದ
ಕೋಕನದ ಮಧುಪ ಕೃಪಾಕರ ಗುರುವರ ೧
ಕ್ಷುಲ್ಲಕ ಮಲ್ಲಕ ಸು
ದಲ್ಲಣ ದ್ರೌಪದಿ
ವಲ್ಲಭ ಬಲ್ಲಿದ ಬಲ್ಲವರೂಪಿ ೨
ಯತಿಕುಲಪತಿ ದಿತಿ ಸುತ ಮಥನನೆ
ಕ್ಷಿತಿ ಸುತೆ ಪತಿ ಕಥೆಯಲಿ ರತಿ ನೀಡ್ಹಿತದಲಿ ೩
ಪ್ರೇಮದ ಕಾಮದ ರಾಮನ ಕ್ಷೇಮವ
ಭೂಮಿಜೆ ಗರುಪಿದ ವ್ಯೋಮಕೇಶನುತಾ ೪
ಸಾಮಜಪುರ ಪತಿ ತಾಮಸ ಕೌರವ
ಸ್ತೋಮವಳಿದ ಸುತ್ರಾಮಜ ಪ್ರೀಯ ನಮೋ ೫
ಕ್ಷುದ್ರಾ ದ್ವೈತರ ಸದ್ದಳಿದಾಮಲ
ಪದ್ಧತಿಗೈದ ಪ್ರಸಿದ್ಧ ಮಧ್ವಮುನಿ ೬
ಸಿಂಧು ದಾಟಿ ಕುರು ವೃಂದ ವಳಿದ
ಕರ್ಮಂದಿಯ ಶಿರಿಗೋವಿಂದ ವಿಠಲಸುತ ೭


ಮುದದಿ ಪಾಲಿಸೊ ಮುದತೀರಥರಾಯಾ
ಸದ್ಭುಧ ಜನಗೇಯಾ ಪ
ಪದುಮನಾಭ ಪದ ಪದುಮ ಮಧುಪ ಸದಯಾ
ಸದಮಲ ಶುಭಕಾಯಾ ಅ.ಪ
ವದಗಿ ರಾಮಕಾರ್ಯದಿ ನೀ ಮನಸಿಟ್ಟಿ
ಲಂಕಾಪುರ ಮೆಟ್ಟಿ ಹೆದರದೆ ದಿತಿಜರನೆಲ್ಲ ಕೊಂದುಬಿಟ್ಟೆ
ಪುಚ್ಛದಿ ಪುರಸುಟ್ಟ ಕದನದಿ ಭೀಮ ವೃಕೋದರ
ಜಗಜಟ್ಟಿ ಸಂನ್ಯಾಸತೊಟ್ಟಿ೧
ಸೀತಾಶೋಕ ವಿನಾಶನ ಮಹಂತಾ
ಮಹಬಲಿ ಹನುಮಂತ
ವಾತಜ ವಾರಿಜ ಜಾತನಾಗುವಂತಾ ಖ್ಯಾತಿಯುಳ್ಳ ವಂಥಾ
ಕೋತಿರೂಪ ಧರ್ಮಾನುಜ
ಜಯವಂತಯತಿನಾಥನೆ ಶಾಂತಾ ೨
ಶಿರಿಗೋವಿಂದ ವಿಠಲನ ಪ್ರೀತಿ ಕಂದಾ
ಭೀಮನೆ ಆನಂದಾಗರಿದು ಮುರಿದು
ಪರಮತವನೆ ಆನಂದಾ ಮುನಿ ರೂಪದಲಿಂದ
ಶಿರಿರಾಮನ ಸುತ ನರಪ್ರೀಯ ಭರದಿಂದ
ಬದರಿಗೆ ನಡೆತಂದಾ ೩

ಶ್ರೀ ರುದ್ರ ದೇವರ ಸ್ತುತಿ

ಪಾಲಿಸೆನ್ನ ಕಾಪಾಲಿಯೆ ನೀನು ಪ
ಪಾಲಿಸುಯನ್ನ ಕಾಪಾಲಿಯೆ ತ್ವರ ಗೋಪಾಲನಂಘ್ರಿ
ಯುಗ ವಾಲಗ ಕೊಟ್ಟು ಅ.ಪ
ನೀ ಮಹದೌಷಧಿ ಕಾಮಾದಿಗಳೆಂಬಾಮಯ
ಸ್ತೋಮಕೆ ಹೇ ಮಮಸ್ವಾಮಿ ೧
ನೀ ಕಾಯದೆ ಬಿಡೆ ಕಾಯಜ ಭಯ
ನೂಕೆಯನ್ನ ಕಡೆಗ್ಹಾಕುವರ್ಯಾರೈ ೨
ತಿಂಗಳಚೂಡ ತ್ರಿಗಂಗಳ ಶೋಭಿತ
ಅಂಗಜ ರಿಪು ಭಸಿತಾಂಗನೆ ಲಿಂಗಾ ೩
ನಾಕರಮುಗಿಯುವೆನು ನಾಕಪನುತ ರ
ತ್ನಾಕರ ಸುತೆವರನಾ ಕರತಾರೋ ೪
ಕಂದನು ಇವನೆಂತೆಂದು ಎನ್ನ ನೀ
ಮುಂದಕೆ ಕರೆಯೈ ನಂದಿಶ್ಯಂದನಾ ೫
ಅರ್ಧಂಗನ ವಪುಸ್ವರ್ಧುನಿಧರಾ ಅಘ
ಮರ್ದನ ಕಾಯೋ ಕಪರ್ದಿಯೆ ನಿರುತಾ ೬
ಅದ್ರಿಜ ಪತಿ ಮಹರುದ್ರನೆ ನಮಿಸುವೆ
ಕ್ಷುದ್ರ ಮನಸಿನ ಉಪದ್ರವ ಬಿಡಿಸಿ ೭
ದುರ್ಜನರರಿ ಖತಿವರ್ಜಿತ ಪಾಲಿಸೋ
ನಿರ್ಜರನುತನ ಗುರು ಅರ್ಜುನ ವರದಾ ೮
ನೀನೊಲಿಸಿದ ಸಿರಿಗೋವಿಂದವಿಠಲನ
ಪಾವನ ಮೂರುತಿ ಕೋವಿದರೊಡೆಯ ೯

ವ್ಯಾಸಕೂಟ-ದಾಸಕೂಟ ಮತ್ತು
ಇತರ ಗುರುಗಳ ಸ್ತುತಿ
ಶ್ರೀ ನಾರದರ ಸ್ತುತಿ

ಇದೇ ಪೇಳಿ ಪೋದರು ವಿಧುವದನೆ
ನಮ್ಮ ಬುಧನುತ ಪದದ ನಾರದರು ಈ ಜಗದಿ ಬಂದು ಪ
ಸಿರಿ ಅರಸನೆ ಈ ಧರೆಯೊಳಗುತ್ತಮ
ಮರುತ ದೇವರೆ ಜಗದ್ಗುರುಗಳೆಂದು
ತರತಮ ಪಂಚಭೇದ ಎ್ಞÁನಶೀಲನೆ
ಸುರಲೋಕವಾಸಿ ಶ್ರೀ ಹರಿ ಪ್ರೇಮ ಪಾತ್ರನೆಂಬೊದೆ ಪೇಳಿ ೧
ಜರದೂರ ನರಹರಿ ಧರೆಯೊಳು ವ್ಯಾಪಿಸಿ
ಇರಲು ತ್ರಿಗುಣ ಕಾರ್ಯವಾಹವೆನ್ನುತಾ
ಪರತಂತ್ರ ಜೀವವೆಂದರಿದು ಪಾಪ ಪುಣ್ಯ
ಸರಸಿಜನಾಭನಿಗರ್ಪಿಸಿ ಒಟ್ಟಿಗೆ ಬರಬೇಕು ಯೆಂದು ೨
ಸಿರಿಗೋವಿಂದ ವಿಠಲ ವಿಶ್ವವ್ಯಾಪಕ
ಗಿರುವವು ಎರಡು ಪ್ರತಿಮೆ ಜಗದಿ
ಚರ ಅಚರಗಳನ್ನು ಅರಿತು ಮಾನಸದಲ್ಲಿ
ಹರಿ ಪೂಜೆ ಮಾಡಿ ಸೇರಿರಿ ವೈಕುಂಠವೆಂಬೊದೆ
ಪೇಳಿ ಪೋದರು ೩


ಎಂದು ಕಾಂಬೆನೊ ರಾಘವೇಂದ್ರ ಗುರುಗಳನಾ |
ಸುಂದರ ಕಾಯ ಆನಂದ ನಿಧಿಯ ಪ
ತಾಯಿಯಂದದಿ ನಮ್ಮ ಕಾಯುವ ಧಣಿಯಾ
ನ್ಯಾಯ ಸದ್ಗುಣ ಪೂರ್ಣ
ಮಾಯಿ ಜಗ ಹರಿಯಾ ೧
ಮಾಯಾ ರಮಣನ ನಾಮ ಗಾಯನ ಪರನ
ದಾಯಾದಿ ಕುಲವೈರಿ ಶ್ರೇಯ ಬಲಯುತನಾ೨
ನರರೂಪ ಧರಿಸಿ ವಾನರÀ ಭಕ್ತವರನಾ
ನರಶೌರಿ ಪ್ರೀಯ ದೀನರ ಕಾಯುತಿಹರಾ ೩
ಜನರನ ಪೊರೆವನೆಂದೆನುತ ಭೂಮಿಯಲಿ
ಜನಿಸಿದ ತನ್ನವನ್ನ ವನುತಿ ಸಹಿತದಲಿ ೪
ದುರಿತ ವರೆಕೆ ತಾಮುರುತನಾಗಿಪ್ಪ
ಗುರುವೆಂಬ ಸಿರಿಗೆ ಇವ ನಿರಂತರದಿ ಸುರಪಾ ೫
ಭಕ್ತರ ಬಯಕೆ ಪೂರೈಪಾ ಸುರತರುವೇ
ಶಕ್ತ ವಿರಕ್ತ ಹರಿಭಕ್ತ ಮದ್ಗುರುವೆ ೬
ಭುವನದಿಂ ದಾಟಿಸೆ ನೌಕವಾಗಿಹಿನಾ
ನವ ಭಕುತಿಯನೀವ ಕುವಿಕುಲ ವರನಾ ೭
ದಿವಿಜೇಶನಂತೆ ಪೃಥ್ವಿಯೊಳು ಮೆರೆವಾ
ಇವನೇ ಗತಿಯೆನೆ ಎ್ಞÁನ ತವಕದಿ ಕೊಡುವಾ ೮
ನಿಂದಿಪ ಜನರಲ್ಲಿ ಪೊಂದಿಪ ಪ್ರೇಮ
ವಂದಿಪ ಜನರಿಗೆ ಸತತ ಶ್ರೀ ರಾಮ ೯
ಶ್ರೀನಿವಾಸ ಪುತ್ರ ಪರಮ ಪವಿತ್ರಾ
ಎ್ಞÁನಿ ಜನರ ಮಿತ್ರ ವಿಹಿತ ಚರಿತ್ರಾ ೧೦
ನಷ್ಟ ತುಷ್ಟಿಗೆ ಅಂಜಾ ದುಷ್ಟ ಶೇರಾ
ಕಷ್ಟ ಕಳೆಯುವ ನಮ್ಮ ಕೃಷ್ಣ ಪಾರಿಜಾತ ೧೧
ಪೊಳಲುರಿ ಸಖನಾ ಘನಪೊಳಿಯುವ ಪಾದಯುಗವಾ
ಘಳಿಗಿ ಬಿಡದಲೆ ನೋಡುತ ನಲಿಯುತಿರುವಾ ೧೨
ಅರಿದು ಈತನೇಯನ್ನ ಗುರುವೆಂಬಗೆ ರುದ್ರಾ
ಧುರದೊಳು ಭೀಮ ಗುರುವಿಗತಾ ದಾರಿದ್ರ್ಯಾ ೧೩
ಅನಿಮಿತ್ತ ಬಂಧು ಬ್ರಾಹ್ಮಣ ವಂಶಜಾ
ಅನಘಾತ್ಮ ಹರಿಭಕ್ತ ಜನಕಾ ಭವ ತ್ರಾತಾ ೧೪
ತಪ್ಪು ನೋಡದಲೆ ಕಾಯುತಿಪ್ಪ ನಮ್ಮಪ್ಪ
ಸರ್ಪ ತಲ್ಪನ ಧ್ಯಾನದಿಪ್ಪ ನಿಪ್ಪ ೧೫
ಅರುಣಾಭಿ ಚರಣ ತಲೆಬೆರಳು ಪಂಕ್ತಿಗಳಾ
ಸರಸಿಜ ಪೋಲ್ವ ಮೃದುತರ ಪಾದಯುಗಳಾ ೧೬
ಇಳೆಯಾ ಸುರನತಿ ಪಾಪ ಕಳೆದ ಘನ
ವಲಿದ ಭಕ್ತರಿಗಿಷ್ಟ ಸಲಿಸುವ ಪಾದ೧೭
ಸಕಲ ರೋಗವ ಕಳೆವ ಅಕಳಂಕ ಪಾದ
ನಿಖಿಲೈಶ್ವರ್ಯದ ಸುಖದಾಯಕ ಪಾದ ೧೮
ಹರಿಯಂತೆ ಹರನೊಲ್ ಸಾಸಿರ ನಯನನಂತೆ
ಶಿರಿಯಂತೆ ತೋರ್ಪ ಭಾಸ್ಕರ ನರನಂತೆ ೧೯
ಸುಳಿರೋಮಗಳುಳ್ಳ ಚಲುವ ಜಾನುಗಳಾ
ಎಳೆಬಾಳೆ ತೆರ ಊರು ಹೊಳೆವ ಸುಚೈಲ ೨೦
ತಟಿತ ಸನ್ನಿಭವಾದ ಕಟಿಗಿಪ್ಪ ಸೂತ್ರ
ನಟ ಶೇವಸಿವಲಿ ತಾನು ಪುಟಿಯು ಉದರಾ ೨೧
ಎದೆಯಲಿಪ್ಪುದÀು ನಮ್ಮ ಪರಮೇಶನ ಮನೆಯೊ
ವದಗಿ ಭಕ್ತರಿಗೆ ಕರುಣದಿ ಕಾಯ್ವ ಖಣಿಯೂ ೨೨
ಹುತವಾಹನನಂತೆ ಭಾರತೀಕಾಂತನಂತೆ
ಚತುರಾಶ್ಯ ಈ ಕ್ಷಿತಿಯಂತೆ ಇಹನಂತೆ೨೩
ಹಸುವಿನಂದದಲಿ ಪಾಗಸನೊಳಿಹನ
ವಸುಧಿಯೊಳಿಂತಿದೊಮ್ಮೆ ಪಸುಯನಿಸಿದನಾ ೨೪
ಭೂಧರತನಂತೆ ವಸುಧರನಂತೆ
ಭೂಧರನಂತೆ ಸೋದರನಂತೆ ೨೫
ಚಂದನ ಚರ್ಚಿತ ಸುಂದರ ರೂಪ
ದಿಂದೊಪ್ಪುವ ಕಂಬು ಲೋಕ ಕಂಧರಾಯುತನ ೨೬
ಕರೆದು ಭಕ್ತರಿಗಿಷ್ಟಗರಿಯುವ ಚೆಲ್ವಾ
ವರ ರೇಖೆಯುತ ಶಿರಕರದಾ ವೈಭವನಾ ೨೭
ಮಂಗಳದಾಯಕ ಅಂಗೈಯಿಯುಗಳಾ
ಭಂಗಾರ ದುಂಗಾರ ಇಟ್ಟಿಪ ಬೆರಳು ೨೮
ಕೆಂದುಟಿ ಮೊದನಾಗಿ ಇಂದಿಪ್ಪ ವದನಾ
ಪೊಂದಿದ ದಂತಗಳಿಂದ ಸ್ವಾರಚನಾ೨೯
ಹಸನಾದ ದೊಕರದಂತೆಸೆವ ಗಲ್ಲಗಳಾ
ಬಿಸಜದಂತೆ ರಾಜಿಸುವ ನೇತ್ರಗಳಾ ೩೦
ನಾಸಿಕದಲಿಪ್ಪ ಮೀಸಿ ದ್ವಂದ್ವಗಳಾ
ದೇಶಾದಿ ಪಾಲ್ಮೂರು ವಾಸಿ ಕರ್ಣಗಳಾ ೩೧
ಗಿಳಿಗೆ ವಾಚ್ಯಾಪದೊಳ ಹೊಳೆವಾ ಪುಚ್ಛಗಳಾ
ತಿಲಕಾ ಮುದ್ರೆ ಪುಂಡ್ರಗಳುವುಳ್ಳ ಫಾಲಾ ೩೨
ಹರಿಪಾದ ಜಲವನ್ನು ಧರಿಸಿದ ಶಿರವಾ
ಶಿರಿಗೋವಿಂದ ವಿಠಲನ್ನಡಿಗೆಯರಗುವಾ ಶಿರವಾ೩೩


ನಿತ್ಯದಿತಿಜರು ಕಲಿಗೆ ದೂರುತಿಹರೋ
ಸತ್ಯಧ್ಯಾನರ ಕಾಟ ತಾಳಲಾರೆವೊಯೆಂದು ಪ
ನೀ ಕಲಿಸಿದಾಟವನು ತಾ ಕಳೆದು ಜನರ ಅಘನೂಕಿ
ಜಗಸತ್ಯ ಶ್ರೀ ಹರಿಯು ಪರನು
ಶ್ರೀಕಮಲಭವರೆಲ್ಲ ದಾಸರೆಂದರುಪಲು
ತಾ ಕಲ್ಪಿಸಿದ ಪಾಠಶಾಲೆ ಸಭೆಗಳನೆಂದು ೧
ಭೂಸುರರಿಗನ್ನ ಧನ ಭೂಷಣಗಳಿತ್ತು
ಅಭ್ಯಾಸಗೈಸಿದ ಸಕಲ ವೇದಶಾಸ್ತ್ರ
ಏಸು ವಿಧ ಯತ್ನಗಳು ನಾ ಮಾಡಿದರು ಜಯ
ಲೇಸು ಕಾಣದೆ ನಿನ್ನ ಬಳಿಗೆ ಬಂದೆವು ಎಂದು ೨
ಇಂತು ತಾ ಮಾಡಿದನು ಪಿಂತಿನಾಶ್ರಮದಿ
ಈ ಗಂತು ನಮ್ಮವರಾದ ವದು ಮತ್ಸರಾ
ಕಂತು ಕೋಪಾದಿಗಳಿಗಂತಕನು ಯನಿಸಿ
ಮುನಿ ಸಂತತಿಪನಾಗಿರುವದೆಂತು ನೋಳ್ಪೆವು ಎಂದು ೩
ತಾಪಸೋತ್ತಮ ಸತ್ಯದ್ಯಾನದಿಂ ಭೂತಳದಿ
ಪಾಪ ಸರಿದಿತು ಪುಣ್ಯವೆಗ್ಗಳಿಸಿತು
ಲೇಪಿಸದು ಖತಿಜನಕ ಇವರ ದಯದಿಂದೆಮ್ಮ
ವ್ಯಾಪಾರ ಧರೆಯೊಳಗೆ ಭೂಪ ಇನ್ಯಾಕೆಂದು ೪
ನಿರುತ ಸಿರಿಗೋವಿಂದ ವಿಠಲನ್ನ ಸೇವಿಸುತಾ
ಪರಹಿಂಸೆ ಧನಯುವತಿ ದ್ಯೂತತೊರದಾ
ವರಯತಿಯ ಮೋಹಿಸುವ ಶಕ್ತಿ ತನಗಿಲ್ಲೆಂದು
ಅರುಹಿದನು ಭೃತ್ಯರಿಗೆ ಕಲಿ ಮನನೊಂದು ೫

೧೦
ಇಷ್ಟು ಮಾಡಿ ಕೈ ಬಿಟ್ಟು ಕೂಡ್ರುವದು
ಶಿಷ್ಟರ ನಡತೆಲ್ಲೆಲ್ಲೂ ಗುರುವೇ ಬಲು
ಕಷ್ಟದೊಳಗೆ ನಾ ಮುಳುಗಿರುವೆ ನೀ
ಕೊಟ್ಟ ಅಭಯದಿಂ ಬದುಕಿರುವೆ
ಸಿಟ್ಟು ಮಾತ್ರ ನೀನಾಗ ಬೇಡ ಪೊರೆ
ಜಿಷ್ಣುಸಾರಥಿಯ ಪ್ರೀಯ ಮಗುವೆ ಬಾ ಬಾ ಗುರುವೆ ಪ
ನೀ ಮಾಡಿದ ಉಪಕಾರಕೆ ಪ್ರತಿ ನಭಭೂಮಿ
ಇತ್ತರು ಸರಿಯಿಲ್ಲ
ಈ ಮಾತು ಹೊರಗೆ ಪೇಳುವವಲ್ಲಾ
ನಾ ನಿದ್ದೆ ಪೂರ್ವದಲಿ ಅತಿ ಖುಲ್ಲಾ
ಶಿಲೆಯನು ಸುಂದರ ಮೂರ್ತಿಗೈದತೆರ
ಬಲು ವಿಧದಲಿ ಸಲಹಿದಿಯಲ್ಲ ಹರಿಬಲ್ಲಾ
ಎ್ಞÁನವಿತ್ತಿ ಹರಿಪಾದದಲ್ಲಿ ಅಭಿಮಾನವಿತ್ತಿ ಸುಖವೆಲ್ಲಾ
ಬಲುಹೇಯವೆಂದು ತಿಳಿಸಿದಿಯಲ್ಲಾ
ಮೇಲ್ವರದಿ ರಂಗನೊಲಿಯುವ ಸೊಲ್ಲಾ
ಅಸನ ವಸನಗಳು ಕೊಟ್ಟು ಕೊನೆಗೆ ತುಚ್ಛಿಸುವ ನಿನ್ನ
ಗುಣ ತಿಳಿಯಲಿಲ್ಲಾ ಇದು ಥಸ್Àರವಲ್ಲಾ
ನಿನ್ನ ಪಾದವೇ ಸಡಗರ ಸಿರಿ
ಮೇಲೆ ಸುರಪುರಿ ಎ್ಞÁನನಿಧಿ ಥಸ್Éರಿ
ಕಾಶಿ ಗಯಾ ಮಧುರಿ ಹರಿ ಓಂ ಓಂ ಓಂ
ನಿನ್ನ ನಾಮ ದುರಿತವೆಂಬೊ ಕರಿ
ಕುಲಕೆ ಘನ ಹರಿ
ಎಂದು ಈ ಪರಿ ತಿಳಿದೆನೆಲೊಧೊರಿ ಹರಿ ಓಂ ಓಂ ಓಂ
ಇನ್ನಾದರು ಕೋಪವತ್ವರಿ
ಕರುಣಿ ಕಣ್ತೆರಿ
ಸುತಗೆ ಸುಖಗರಿ
ತೋರೋ ನಿನ್ನ ಮಾರಿ ಹರಿ ಓಂ ಓಂ ಓಂ
ಎನ್ನಯ ಬಿಸ್Àಷ್ಟಗಳನ್ನು ನೀಡದಿರೆ
ನಿನ್ನ ವಿಮಲ ಕೀರ್ತಿಗೆ ಗುರುವೆ ಕುಂದನ್ನು ಬಿಡದೆ
ತಿಳಿ ನಾ ತರುವೆ
ಸಿಟ್ಟು ಮಾತ್ರ ನೀನಾಗ ಬೇಡ ಪೊರೆ ಜಿಷ್ಣು
ಸಾರಥಿಯ ಪ್ರಿಯ ಮಗುವೆ ಬಾ ಬಾ ಗುರುವೆ ೧
ಪಂಥವೇ ಹೇ ಮಹಾಕಾಂತ ಪ್ರಿಯ ನಿನ್ನ
ಸಂತತಿಯೊಳು ಸೂರಿಗಳೊಡೆಯ
ನೀನೆಂತು ಪೊಂದಿದೈ ನಿರ್ಭಿಡಿಯಾ
ಇದು ಸಂತರು ಕೇಳಿದರಾಶ್ಚರ್ಯ
ವಂತರು ಆಗರೆ ಸಾಕು
ಮುಂದೆಯನ್ನಂತರಂಗವೇ ತವನಿಲಯ
ಆಗಲಿ ಜೀಯಾ
ಕಂದನ ಕಾಯುವದಂತು ಸಹಜ ಸಿರಿ
ಹಿಂದಕೆ ಪಾಂಡವನೆಂಭಿರಿಯಾ ಆ
ಗಂಧರ್ವನ ಮಗನಾದ ಗಯಾ ತಾ
ಬಂದು ಹೋಗಲವನನು ಮೊರೆಯ
ಸಿಂಧು ಜಪನ ಸಹ ಲಕ್ಷಿಸದಲೆ ತ್ವರ
ತಂದು ಕೊಟ್ಟನವನಿಗೆ ವಿಜಯಾ
ಮೇಲ್ಹರಿಯದಯಾ
ಇದು ಅಲ್ಲದೆ ಬಹು ಭಕ್ತರು ಎ್ಞÁನಯುಕ್ತರು
ಸುಧಿಯ ಭೋಕ್ತರು
ಭವ ವಿಮುಕ್ತರು ಹರಿ ಓಂ ಓಂ ಓಂ
ನೆನೆದವರ ದು:ಖ ಬಿಡಿಸಿದರು
ಪಾಪ ಕೆಡಿಸಿದರು ಮತಿಯನಿಡಿಸಿದರು
ಸುಧೆಯ ಬಡಿಸಿದರು
ಹರಿ ಓಂ ಓಂ ಓಂ
ಬಲು ಹಿತದಿ ಶುಭವ ಕೋರಿದರು
ತಾಪ ಹೀರಿದರು
ವಾಕ್ಯ ಸಾರಿದರು
ಹರಿಯ ತೋರಿದರು ಹರಿ ಓಂ ಓಂ ಓಂ
ನೀನಾದರೂ ಬಹಳರ ಪೊರದಿ
ಈ ಹೀನ ಓರ್ವ ನಿನ್ನಗೆಯರವೆ ಮರಿಯಬ್ಯಾಡ ಕರುಣೆ
ನಾ ಕರವ ಮುಗಿವೆ ಸಿಟ್ಟು ಮಾತ್ರ ನೀನಾಗ ಬೇಡ೨
‘ಶಿರಿಗೋವಿಂದ ವಿಠಲ’ ಪರ ಖರೆ ಆದರು
ಗುರುವಿಲ್ಲದ ಗತಿಯನ್ನು
ಧರೆತ್ರಯದಿ ತೋರು ತುಸು ನೋಡೋಣ ಗಿರಿಧರಿಯ ಬಿಟ್ಟು
ನಿಲ್ಲುವುದೇನು
ಗುರುವೆ ತ್ರಿಟಿಯ ಬಿಟ್ಟೊರುಷವಾಗುತದೆ ಹಿರಿಯರಿ ಪೇಳ
ವದಿನ್ನೇನು ಹೇ |
ಸುರಧೇನು ಗುರುವೆ ಸುಖದ ಖಣಿ ಗುರುತನುಮಣಿ
ಗುರುವೆ ಮುಕುಟ ಮಣಿ ಸುಜನರಿಗೆ ಹೀಗೆಂದು
ತಿಳಿದೆ ನಾ ಮನದಾಗೆ
ಪರಕಿಸಿದೆನ್ನನು ಪೊರೆಯೆ ಯನುತ ಬಾ
ಯ್ತೆರೆಯುತ ಮಣಿಸುವೆ ಶಿರನಿನಗೆ ಮೂಜಗದಾಗೆ |
ನಿನ್ನಿಂದ ಎನಗೆ ಸದ್ಬುದ್ಧಿ ಯೋಗದಾಸಿದ್ಧಿ
ಕಾರ್ಯದಾಸಿದ್ಧಿ ಸ್ವರ್ಗದಾಸಿದ್ಧಿ ಹರಿ ಓಂ ಓಂ ಓಂ
ನಿನ್ನಿಂದ ಪಡೆದ ವಿಎ್ಞÁನ ಹರಿಯರಾ ಖೂನಾ ಲೋಕದೊಳು
ಮಾನ ಮುಕ್ತಿ ಸೋಪಾನ ಹರಿ ಓಂ ಓಂ ಓಂ
ನೀನೇವೆ ಯನಗೆ ಆಭರಣ ಝಗಝಗಿಪ ವಸನ
ಶ್ರೀಹರಿಯ ಚರಣ ವಿರಜಾನದಿ ಸ್ನಾನ ಹರಿ ಓಂ ಓಂ ಓಂ
ನಿನ್ನೊಮ್ಮೆ ನೆನಸೆ ಪವಮಾನ ಕಾಯ್ವ ಪ್ರತಿದಿನ
ಇದಕೆ ಅನುಮಾನ ಇಲ್ಲ ಏನೇನ ಹರಿ ಓಂ ಓಂ ಓಂ
ಗಡ ಕೇಳ್ವಡೆಯನೆ
ಕಡೆ ನುಡಿಯನ್ನದು ಭಿಡೆಯ ಇಡದೆ
ನಾನುಡಿವೆ ಎನ್ನ ಮರೆತರೆ ಮಂಗನು ನೀ ನಿಜವೆ ೩

೧೧
ಏನೇನು ಭಯವಿಲ್ಲ ನಮಗೆ
ಪವಮಾನ ಸೇವಕ ಗುರು ರಘುಪತಿಯ ದಯವಿರೆ ಪ
ಜೋಡು ಕರ್ಮದಿ ಬಿದ್ದುಕೇಡು ಲಾಭಕೆ ಸಿಲ್ಕಿ
ಮಾಡಿದ್ದೆ ಮಾಡುತ ಮೂಢನಾಗಿ
ರೂಢಿವಳಗೆ ತಿರಿಗ್ಯಾಡುವ ಅಎ್ಞÁನಿ
ಕೋಡಗನ್ನ ಸಿಂಹ ಮಾಡಿದ ಗುರುವಿರೆ ೧
ಆವಾನು ದಯಮಾಡೆ ದೇವನು ವಲಿವನು
ಆವನ ನಂಬಲು ದೇವಗಣಾ
ಕಾವಲಿಗಳಾಗಿ ಕಾವದು ಅಂತ
ಕೋವಿದಾಗ್ರಣಿ ಗುರು ರಘುಪತಿ ದಯವಿರೆ ೨
ಕರವೆಂಬೊ ಲೇಖನದ್ವಾರದಿಂದ ನಮ್ಮ ಶಿರಿಗೋವಿಂದ ವಿಠಲ
ರಾಯನಾ ಕರಸಿ ಸುಹೃತ್ಸುಖ ಬೆರಸಿ ಪರಸ್ಪರ ಕರವಿಡಿದು
ತಿರುಗುವ ಗುರುಕೃಪೆ ನೆರಳಿರೆ ೩

ಆತ್ಮನಿವೇದನೆಯ ಕೀರ್ತನೆಗಳು
೧೬
ಆತನೆಯನ್ನ ತಾತನು
ರಘುನಾಥನಾಗಿ ತ್ರೇತಾಯುಗದಲಿ
ಮೆರೆದಾತನೆಯನ್ನ ತಾತನು ಪ
ತಂದಿನ ಅಗಲಿದ ಕಂದ ಕಾನನದೊಳು
ಬಂದು ಅಂಗುಟ ಊರಿನಿಂದುತ್ವರಾ
ಇಂದಿರೇಶ ಭವಬಂಧ ಮೋಚಕ ಪೊರೆಯಂದೆನೆ
ಧೃವನಿಗೆ ಚಿರಪದವಿ ಕೊಟ್ಟಾತನೆಯನ್ನ ತಾತನು ೧
ದುರುಳತನಪರಿಹರಿಸ ಬೇಕೆನೆ
ನರನರಸಿ ದ್ರೌಪದಿ ಮಾನವ ಪರಮಕರುಣಿ
ಮುರಹರನೆ ತಡಿಯದಲೆ ಪೊರೆಯನೆ
ತರುಣಿಯ ಮೊರೆ ಕೇಳಿದಂಥಾತನೆ ೨
ಶಿರಿಗೋವಿಂದ ವಿಠಲ ವೇದ ವಂದಿತ
ಧರಣಿಜ ಪತಿ ಹರಿಪರನೆನ್ನುತ
ಪರಮ ಭಕುತಿಯಿಂದ ಸ್ಮರಿಸುವವರ
ಕರಪಿಡಿಯಲೋಸುಗ ತನ್ನ ಕರಚಾಚಿಕೊಂಡು ನಿಂತಾತನೆ ೩

೧೭
ಉದಕಜಕಾರ್ಕನು ಉದಯಿಸಿದಂತೆ
ಮಧುರಿಪು ನೀ ಬಂದೊದಗಿದೆ ಸಲಹೈ ಪ
ಗಾದೇಯ ನಾಮಕ ಗಾದೆ ಪ್ರಭುವೆ ಖಳಾ
ಭಾದೆ ಬಿಡಿಸೊ ಖಲ | ಪರಮಾದರದಿ ಪ್ರಹ್ಲಾದನ ಪೋಷಿಪ ೧
ಮನೆ ಧನ ಬಿಟ್ಟು ನಿಮ್ಮನು ಭಜಿಸುವ ನಮ್ಮನು
ಬಾಧಿಪ ಖಳನನು ಶಿಕ್ಷಿಸು ಹೇ ವನಜನಯನ ಹರಿ ೨
ಆವನು ನಿನ್ನುಳಿದೀ ವಸುಧರೆಯೋಳು
ಜೀವರ ಸಲಹುವ ದೇವದೇವ ಶಿರಿಗೋವಿಂದ ವಿಠಲ ೩

೧೮
ಕರುಣಾದಿ ಪಿಡಿ ಕರವಾ ದೇವರ ದೇವ ಪ
ಕರುಣಾದಿ ಪಿಡಿಕರ ಸರಸಿಜಾಂಬಕ ಎನ್ನ
ಗುರು ರಘುಪತಿ ಪಾಲಾ ಮರುತಾಂತರಿಯಾಮಿ ಅ.ಪ
ಗತಶೋಕ ಜಿತಮಾಯ
ಪತಿತ ಪಾವನವೇದ್ಯ
ಪ್ರತಿಪಾದ್ಯ ಕ್ಷಿತಿಪ ಭಾರತಿ ಕಾಂತ ವಂದ್ಯಾ ಆ
ನತರ ಪಾಲಕ ದುಷ್ಟದಿತಿಜಾರಿ ತವಪಾದ
ಶತಪತ್ರ ಬಿಡದೆ ಸಂತತ ಭಕುತಿಯಲಿಂದ
ಸ್ತುತಿಪಾರ ಮಿತ ಅಘವಾ
ಕಳೆದು ಮತ್ತೆ ಹಿತದಿ ಸದ್ಗತಿ ಕೊಡುವಾ
ನಿನ್ನಯ ದಿವ್ಯಾಚ್ಯುತವಾದ ಘನದಯವಾ ಪೊಗಳು
ವಂಥ ಮತಿವಂತರನು ಕಾಣೆ ಶತಮುಖಜಜ ಮಾವಾ ೧
ಅನಿಮಿತ್ಯ ಬಂಧುವೆ ವನಚಾರಿ ಕೂರ್ಮನೆ
ಕನಕ ನೇತ್ರಾರಿ ಪಾವನತರ ನರ ಪಂಚ
ನಾನಾ ರೂಪದಿಂದ ಬಾಲನಾ ಕಾಯ್ದೊನರ ಹರಿಬಲಿ
ಯನು ಪಾದದಿಂದ ತುಳದು ನಿತ್ಯ ಅನಘಾತ್ಮ
ಜನನೀಯ ಕೊಂದಾನೆ ಜನಕ ಜಾಪತಿಯ ರು
ಕ್ಮಿಣಿ ಮನೋಹರನೆ ವಸನದೂರ ಹಯರೂಢ
ಜನನ ರಹಿತ ವಿಖ್ಯಾತಾ
ನಮಿಸುವೆ ಅನಿಮಿಷಪಜನ ಸುತಾ ಬೇಡಿಕೊಂಬೆ
ಅನುದಿನದಲಿ ಮಮತಾ
ಎನ್ನೊಳಗಿಟ್ಟು ಕ್ಷಣ ಬಿಡದಲೆ ಕಾಯೊ
ಕನಕೋದರನ ತಾತಾ ೨
ಸರಿವೀರ ಹಿತ ಬಲಿಸರಸಿ ಜಾಂಬಕ ಮುರ
ಹರ ಹರ ವಂದಿತ ಹರಿಮುಖ ಹರಿನುತ
ಹರಿಸುರ ಪ್ರೀತಿ ಪಾದ್ಯ ಹರಸು ಎನ್ನಯ ಅಘ
ನಿರುತ ನಿನ್ನ ಡಿಂಗರರ ನೀಕರದಿತ್ತು
ಗುರುವಿನ ಚರಣಾದಿ ಸ್ಥಿರ ಭಕುತಿಯ ಕೊಟ್ಟು
ವರ ಶಿರಿಗೋವಿಂದ ವಿಠಲನೆ ನೀ ಯನ್ನ
ಮರಿಯದೆ ಮಮತೆಯಿಂದಾ
ಪಾಲಿಸು ನಿತ್ಯ ಗರಿಯುತಲಿರು ಆನಂದಾ
ನಿನ್ನಯ ಪಾದಾದಿರಲಿ ಮನಸು ಮುಕುಂದಾ
ಬೇಡಿಕೊಂಬೆ ಭರದಿಂದ ಬಿಡಿಸೊ ಈ ದುರುಳ
ಭವದ ಬಂಧ ೩

೧೯
ಕಳೆಯ ಬ್ಯಾಡ ಮನವೇ ದಿನಾ ಕಳೆಯ ಬ್ಯಾಡ ಪ
ಹನುಮ ವಿನುತ ಪದವನುಜ ಮರೆತು ದಿನ ಅ.ಪ
ಆರನು ನಂಬಿದರಾರು ಕಾಯುವರು
ಧೀರ ದೇವಕಿಯ ಸುಕುಮಾರ ನುಳಿದು ದಿನ ೧
ಯತಿಕುಲಪತಿ ಸುಖತೀರ್ಥರ ಮತ ರತುನದ
ಕ್ಷಿತಿಗೆ ಪಾರ್ಥಸಾರಥಿಯ ನುಳಿದು ೨
ನಂದದ ಶಿರಿಗೋವಿಂದ ವಿಠಲರಾಘವೇಂದ್ರ ವಿನುತ ದ್ವಂದ್ವನುಳಿದು ದಿನ ೩

ಲೋಕನೀತಿಯ ಪದಗಳು
೨೬
ಕೇಶವನ ದಾಸರಿಗೆ ಘಾಸಿಯುಂಟೆ
ವಾಸವನ ವಜ್ರಕೆ ಗಿರಿನಿಕರದಂಜಿಫ್ಯೆ ಪ
ಇದ್ದಲಿಯನು ಗೊರಲಿ ಮೆದ್ದು ಜೀವಿಪದುಂಟೆ
ಮದ್ದಾನೆಗಳಿ ಗಲ್ಪ ನರಿಯ ಭಯವೇ
ಅಬ್ದಗಳು ಮರುತನೊಳು ಯುದ್ಧ ಬಯಸುವದುಂಟೆ
ಸಿದ್ಧರಿಗೆ ಭವಪಾಶ ಪದ್ಧತಿಯು ಉಂಟೆ ೧
ಗುರುಕೃಪೆಯ ಪಡೆದವಗೆ ಪರಸೌಖ್ಯ ತಪ್ಪದೇ
ಹರಿಯ ಸ್ಮರಿಸುವ ನರಗೆ ನರಕ ಭಯವೇ
ಸರಿಗಟ್ಟಿ ಉರಗ ನಭಚರನೆದುರಲ್ಲಿಪ್ಪದೆ
ನರಚಂಡಕರಕರ ಕಂಡು ಅರುಳುವುದೆ ಕುರುಕುಮುದಾ ೨
ಮೇರುವಿಗೆ ಛಳಿ ಭಯವೇ
ವಾರಿಧಿಗೆ ಮಳಿ ಭಯವೇ
ಮಾರನ್ನ ಗೆದ್ದವಗೆ ನಾರಿ ಭಯವೇ
ತಾರಕಾ ಪ್ರೀಯ ಶಿರಿಗೋವಿಂದವಿಠಲಗೆ
ಸೇರಿರುವ ಶೂರರಿಗೆ ಆವ ಭಯವೈಯ್ಯಾ ೩

೨೦
ಕೇಳುವದರೊಳಗೆ ಕಳದಿಯಲ್ಲ ದಿನ ಮಾಡುವ-
ದೆಂದ್ಹೇಳಲೆ ಮನವೆ ಪ
ಮನನ ಮಾಡಿ ಮಾಧವನ ಮಹಿಮೆ
ಅನುಭವಕೆ ತಾರದೆ ಈ ಪರಿಯಲಿ ಬರೆ ಅ.ಪ
ಪರರ ಹರಟೆಗೆ ಪರವಶನಾಗುತ ನಿರುತ ಈ
ಪರಿ ಕಾಲ ಕಳೆವೆ
ಮರಳಿ ಹರಿಸ್ಮರಿಸರೆಂದು ಡಂಗುರ ಹೊಯ್ಯವ
ಗುರುಹಿರಿಯರ ನುಡಿಗಳು ೧
ಹೆಣ್ಣು ಮಣ್ಣು ಹಣವನ್ನು ನಂಬಿ ನೀನು
ಕೆಡದಿರೆಲೊಯಂದೆನುತ
ಚನ್ನಾಗಿ ಸರ್ವತ್ರ ಕೇಳಿ ನೀ ಮುನ್ನಿನಂತೆ
ಆಚರಿಸುತಿರುವಿಯಾ ೨
ಎ್ಞÁನವಿಟ್ಟು ಪವಮಾನ ವಂದಿತನ
ಗಾನಮಾಡು ಶ್ರೀಹರಿಗುಣವಾ
ಮಾನದ ಸಿರಿ ಗೋವಿಂದವಿಠಲಗೆ ಹೀನ
ಲೇಸುಗಳ ಅರ್ಪಿಸು ಮರೆಯದೆ ೩

೧೫
ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ
ಕೋಲು ಶ್ರೀಹರಿಯಾ ಬಲಗೊಂಬೆ ಕೋಲೆ ಪ
ಮೊದಲು ನಮ್ಮ ಗುರು ರಘುಪತಿಯ ಪಾದಕ್ಕೆ
ಮುದದಿಂದ ಎರಗಿ ಬಿನ್ನೈಪೆ ಕೋಲೆ
ಮುದದಿಂದ ಎರಗಿ ಬಿನ್ನೈಪೆ ಮನದಲ್ಲಿ
ಪದಮನಾಭನ್ನ ತೋರೆಂದು ಕೋಲೆ೧
ಜನುಮ ಜನುಮದಲ್ಲಿ ಅನಿಮಿತ್ಯ ಬಂಧು
ನೀಯನಗೀಯೋ ನಮ್ಮ ಸೇವೆಯ ಕೋಲೆ
ಎನಾಗಿಯೋ ನಿಮ್ಮ ಸೇವೆಯ ತವ
ಪಾದವನು ಧ್ಯಾನ ಮರಿಯಾದೆ ಕೋಲೆ೨
ಮೂಢನಾದ ಎನ್ನನೋಡಿ ಕರುಣವನು
ಮಾಡಿ ಹರಿಚರಣ ತೋರಿದ ಕೋಲೆ
ಮಾಡಿ ಹರಿಚರಣ ತೋರಿದ ನಿಮ್ಮ ದಯ
ಕೀಡುಂಟೆ ಜಗದಿ ಗುರುವರ್ಯ ಕೋಲೆ೩
ಪತಿತನಾದವನಿಗೆ ಮತಿಯಿತ್ತು ಗುರು ಪ್ರಾಣ
ಪತಿಪಾದ ಮಹಿಮೆ ತೋರಿಸಿ ಕೋಲೆ
ಪತಿಪಾದ ಮಹಿಮಾ ತೋರಿಸಿ ಸ
ದ್ಗತಿ ಪಥಸ್Àವನ್ನು ವಿಡಿಸಿದ ಕರುಣಿಯೆ ಕೋಲೆ ೪

ಅನಾಥ ರಕ್ಷಕ ಆಪತ್ತು ಬಾಂಧವ
ಶ್ರೀನಿವಾಸನ್ನ ನಿಜದಾಸ ಕೋಲೆ
ಶ್ರೀನಿವಾಸನ್ನ ನಿಜದಾಸ ಮಮಕುಲ ಸ್ವಾಮಿಗೆ
ನಮಿಪೆ ಮನದಲ್ಲಿ ಕೋಲೆ ೫
ಲಕುಮೀಶ ಹರಿ ದೇವಕಿ ತನಯಗೆ
ಸಕಲಾ ಕರ್ಮಗಳಾ ಅರ್ಪಿಸೆ ಕೋಲೆ
ಸಕಲಾ ಕರ್ಮಗಳಾ ಅರ್ಪಿಪೆ ನಮ್ಮಗುರು
ಸುಖನಿಧಿಗಳಿಗೆ ನಮಿಸುವೆ ಕೋಲೆ ೬
ಆನಮಿಸುವೆ ಮಹಾನುಭಾವ ಗುರು
ನೇಮಕಲ್ಲಾರ್ಯರ ಚರಣಕ್ಕೆ ಕೋಲೆ
ನೇಮಕಲ್ಲಾರ್ಯರ ಚರಣಕ್ಕೆ ಕೋಸಗಿ
ಸ್ವಾಮಿರಾಚಾರ್ಯರ ಪಾದಕ್ಕೆ ಕೋಲೆ ೭
ಪುರಂದರಾದಿ ದಾಸವರ್ಯರ ಸುಂದರ ಚರಣಕ್ಕೆ
ಎರುಗುವೆ ಭರದಿಂದ ಕೋಲೆ
ಭರದಿಂದ ಮುದಮುನಿ ಇವರನ್ನು
ತೋರಿ ಪೊರೆಯಂದು ಕೋಲೆ ೮
ಅಂದದಿಂದ ಆನಂದತೀರ್ಥ ರಾಘ
ವೇಂದ್ರಾದಿ ಸಕಲ ವಿಭುದಾದಿ ಕೋಲೆ
ರಾಘವೇಂದ್ರಾದಿ ಸಕಲ ವಿಭುದ ಆ ಕರ್ಮಂ
ದೀಗಳಿಗೆ ನಮಿಸುವೆ ಕೋಲೆ ೯
ವಾದಿರಾಜರ ದಿವ್ಯ ಪಾದಕ್ಕೆ ನಮಿಸುವೆ
ಸಾಧಿಸಿ ಕೊಡಲಿ ಸತತಾದಿ ಕೋಲೆ
ಸಾಧಿಸಿ ಕೊಡಲಿ ಸತತಾದಿ ಹರಿದಾಸ
ರಾದವರ ಸೇವೆಯನಗೆಂದು ಕೋಲೆ ೧೦
ಗಣಪಾದಿಗಳು ಸುರಮುನಿ ಪಾದಗಳಿಗಾ
ನಮಿಸುವೆ ಮನಸಿಜ ಸುರಪಾಗ ಕೋಲೆ
ನಮಿಸುವೆ ಮನಸಿಜ ಸುರಪಾಗ ಭೂತ
ಗಣಪತಿ ಶೇಷರಪಾದ ಕಮಲಕ್ಕೆ ಕೋಲೆ ೧೧
ಭಾರತೀವಾಣಿ ಗುರು ಮಾರುತಿ ಪಾದಕೆ
ಸಾರುತ ಈ ಪರಿ ಮಣಿಯುವೆ ಕೋಲೆ
ಸಾರುತ ಈ ಪರಿ ಮಣಿಯುತ ಹರಿಪಾದ
ತೋರುತ ಮನದಲ್ಲಿ ನಿಲಿಸೆಂದು ಕೋಲೆ ೧೨
ಲಕ್ಷ್ಮೀದೇವಿಯೆ ಲಕ್ಷಣವಂತಿಯೆ
ಪಕ್ಷಿವಾಹನನ ಅರ್ಧಾಂಗಿ ಕೋಲೆ
ಪಕ್ಷಿವಾಹನನ ಅರ್ಧಾಂಗಿ ಭವದಿಂದ
ರಕ್ಷಿಸಲೆನ್ನ ತವಕಾದಿ ಕೋಲೆ ೧೩
ಶಿರಿಗೋವಿಂದವಿಠಲ ವಿಶ್ವವ್ಯಾಪಕ
ಮರುತಾಂತರ್ಗತನೆ ಮುರರಿಪು ನಮ್ಮ
ಗುರುವರ್ಯರ ಪ್ರೀಯ ಸಲಹಯ್ಯ ಕೋಲೆ೧೪

೧೨
ಗುರುರಾಯ ಭವಹರ ಹರಿಪ್ರೀಯಾ ಪ
ಅಂಗಜ ಸಮಕಾಯಾ ರಂಗನಾಥನ ಪ್ರೀಯ
ಹಿಂಗಿಸೊ ಭವ ಭಯ ಅಂಗಜ ನಿಚಯಾ ೧
ನಮಿಸುವೆ ತವಪಾದ ವನಜಕೆ ನಾ ಸದಾ
ಅನಘ ಚರಿತನೇ ಬುಧಾ ವಿನಮಿತ ಕಾಮದಾ ೨
ಮಾನವ ಅರಿಶಿರಿ ಗೋವಿಂದ ವಿಠಲನ್ನ
ಪಾವನ ಪಾದದ ಸೇವೆನೀಯೊ ೩

೨೧
ಚೇತರಿಸಾಲೊಲ್ಲೆಯಾ ಮನಪಾತಕ ನಿದ್ರೆ ಭರದಿಂ ಪ
ಮಲಮಯ ಕಾಯದಾ ಹೊಲಸು ಹಸಿವಿತ್ರಿಷಿ
ಛಲಮದ ರÉೂೀಗಗಳಾ
ಕುಲಗೆಡಿಸುವ ಆಶಾದಿಗಳಳಿಯದೆ
ಮಲಗುವರೆ ಮಹನೀಯರ ತೆರದಿ ೧
ದಾರಾತನು ಬಲಹೀರುತ ಮಾಯವ
ಬೀರುತಲಾತ್ಮಜರು ದಾರಿದ್ರ್ಯದ ದಾವಾನಳ ಸುಡುತಿರೆ
ನಾರದರೋಲ್ ನಿಶ್ಚಿಂತನಾಗಿ ೨
ಶಿರಿಗೋವಿಂದ ವಿಠಲ ಮೊರೆ ಪೊಕ್ಕರೆ
ಪೊರೆಯುವನೆಂದು ಅಭಯಾ
ವರಭುಜಗಳು ನಾಭಾಯತ್ತಿನಿಂದಿರಲು
ಸುರ ಅರಿಗಳ ತೆರೆ ಹೊರಳೂರಗದಾ ೩

೨೭
ದೋಷ ಬಪ್ಪದೆ ಇಪ್ಪದೆ ಪಾಮರನಿಗೆ ಪ
ಜಲಜನಾಭನ ಮರೆತು ಜಲದಲ್ಲಿ ಮಿಂದು ಹೆ
ಬ್ಬುಲಿ ಬಣ್ಣದಂತೆ ನಾಮಗಳ ಧರಿಸಲೇನು ೧
ಸನಕಾದಿ ಮುನಿವಂದ್ಯ ಮನಸಿಜ ಜನಕಾ
ನಮ್ಮನನು ಕಾಯುತಿರೆ ಭೂಮಿಧನವೇ ಜೀವನನೆಂಬುವಗೆ ೨
ಶಿರಿಗೋವಿಂದ ವಿಠಲನ ಸಂಸ್ತುತಿಸುವ
ಹರಿದಾಸನ ತಿರಸ್ಕರಿಸುವ ದುರುಳಗೆ ೩

೨೨
ನೆನಿ ಮನ ಅನುದಿನದಿ ಅನಮಾನಿಸದೆ ನೀ ಪ
ನೆನಿಮನ ಶ್ರೀ ಸತ್ಯಎ್ಞÁನರ ಅನಘಹೃದ್ವನಜದಲಿ
ಘನ ದಿನ ಮಣಿಯವೊಲ್ ಮಿನುಗುವನ
ಗುಣ ಗಣ ತನು ಮರೆದು ಕುಣಿಕುಣಿದು ಹರುಷದಿ ಅ.ಪ

ಎ್ಞÁನಾತ್ಮ ಪರನೆಂದು ಮಿಕ್ಕಾದದಿತಿಯರು
ಊನರು ಹರಿಗೆಂದು
ಚೇತÀನರ ಅವನಾಧೀನರು ಅಹುದೆಂದು
ವಿಸ್ತರಿಸಿ ಪೇಳಿದ ದಿನಪಾಲಕದೇವ ಶ್ರೀ
ಪವಮಾನ ಮತ ಅಂಬುಧಿಯೊಳನುದಿನ
ಮೀನನೆನಿಸಿದ ನಮ್ಮ ಸತ್ಯಎ್ಞÁನ
ತೀರ್ಥರ ಮಾನದಂಘ್ರೀಯ ೧
ಕಮಲಾಪ್ತಗಧೀಕವಾದ ತೇಜದಲಿ ಪೊಳೆಯುವ
ಕಮಲಾಪತಿಯ ಸುಪಾದಾ ಅತಿ ವಿಮಲತನ
ಹೃತ್ಕಮಲದೊಳಿಟ್ಟು ಸದಾ ಭಯಹಾರಿ ಕರದ್ವಯ
ಕಮಲದಿಂ ಸೇವಿಸುತ ಮೈಮುಖ
ಕಮಲಚಂದಿರನೆನಿಸಿ ಸಜ್ಜನ ಕಮಲದ ಮಹಿಮೆಯ
ತೋರ್ದ ಗುರುತಮ ಕಮಲ ಸಂಭವ ಪಿತನ ಪೂತನ ೨
ಇಂದ್ರ ಲೋಕವ ತೊರೆದು ಕೆಲಕಾಲ ತಾರ
ಕೇಂದ್ರನೊಳು ಭುವಿಗಿಳಿದು ಸಜ್ಜನರ ಪೊರೆವದ
ಕಿಂದ್ರಿಯಂಗಳ ಗೆಲಿದು ಸನ್ಯಾಸ ಕೊಂಡು
ಇಂದ್ರ ಹರಿಹರ ಶೀತ ರಘುಕುಲ ಇಂದ್ರನಾವ ಉ
ಪೇಂದ್ರ ಶಿರಿಗೋವಿಂದ ವಿಠಲನ ಭಜಿಸಿ ರಾಜ ಮ
ಹೇಂದ್ರಿಯ ತನುವಿಟ್ಟ ಗುರುಪದ ೩

೨೩
ಬಾಯಂದು ಕರೆವೆನೊ ದೇವನಿನ್ನ
ಮಾಯಿ ವೈರಿ ಮಧ್ವರಾಯರ ಪ್ರೀಯನೆ ಪ
ರಾಮ ನಿರಾಮಯ ಮಾಮನೋಹರ ಶೌರಿ
ಸೋಮಧತಾರ್ಚಿತ ಸಾಮನುತಾ ಭೂಮಿಜ
ಲÉೂೀಲಬಾರೊ ಸಾಮಜ ಪಾಲ ಬಾರೊ
ಕಾಮಿತ ಶೀಲ ಬಾರೊ ತಾಮಸ ಕಾಲ ಪ್ರೇಮದಿ ೧
ಬಿಸಿಜಾಭಾಸ್ಪಜನ ಮಾನಸಗೆ ಅಸುರ ವೈರಿ
ಕುಸಮಶರ ಪಿತ ಸುಮನಸ ವಂದಿತಾ
ಅಸಮ ಶೂರ ಬಾರೊ ವಸುಧಿಧರ ಬಾರೊ
ವ್ಯಸನ ಹರ ಬಾರೊ ಅಸುರ ವೈರಿ ಕುಶಲದಿ ೨
ನಂದನ ಕಂದನೆ ಇಂದಿರೆ ಮಂದಿರ
ಸುಂದರ ಶಿರಿಗೋವಿಂದ ವಿಠಲ
ಮಂದರಧರ ಬಾರೋ ಚಂದಿರ ಮೊಗ ಬಾರೊ
ಛಂದದ ದೈವ ಬಾರೊ ಇಂದಿನ ಯನ್ನ ಮನಸಿಗೆ ೩

೨೪
ಬಿಡುಮನ ಭವಾಖ್ಯ ಉರಗದ ಸಂಗ
ತಿಳಿ ಮಡಿದು ಪೋಪದಿ ಅಂಗ ಪ
ಅಚ್ಯುತನಾಮನುಚ್ಚರಿಸದವನ
ಕಚ್ಚದೇ ಬಿಡದೀ ಭುಜಂಗ ೧
ವಿಷಮಯ ವಿಷಯಕೆ
ವಶನಾಗದೆ ಬಲು ವಸುಧೆಯೊಳು ನಿಸ್ಸಂಗಾ ೨
ಸಿರಿಗೋವಿಂದ ವಿಠಲನ ಸ್ಮರಿಸೆ ಹರಿ
ಪೊರೆವ ತ್ವರದಯಾ ಪಾಂಗ ೩

೨೫
ಭಕುತರಿಗಾಗಿ ನೀ ಬಡುವ ಕಷ್ಟಗಳು
ಅಕಟ ಪೇಳಲಳವೆ ( ನೋಡಲಳವೆ)
ಲಕುಮಿ ಪತಿಯೆ ಯಾತಕೆ ವೃಥಾನಿಕರಕೆ ಸುಖವೀವೆಕಾವೆ ಪ
ಮಂದಿಮನ ವಲಿಸಿ ಮದುವೆ ನೀನು ಮ
ತ್ತೊಂದು ಮಾಡಿಕೊಳುತ್ಯಾ
ಅಂದಣಾದಿ ಐಶ್ವರ್ಯವನ್ನು ಪರರಿಂದ ಕೇಳಿಕೊಳುತ್ಯಾ
ನಿಂದೆ ಮಾಡುವರೆಂಬೊ ಭಯದಿ
ಅವರ್ಹಿಂದೆ ಹಿಂದೆ ಇರುತ್ಯಾ
ಅಂದವಾದ ಆಟಗಳೊಳಗೆ ಇದುವಂದು ಎನುತ್ಯಾದೇವ ೧
ಸಡಗರದಲಿ ಕರಪಿಡಿದು ಕಾಯ್ದೆ ನೀ
ಹುಡುಗರೀರ್ವರನ್ನು
ಮಡುವಿನೊಳಗೆ ಆ ಮಕರಿಯಿಂದ ಕಾಲ್ಹಿಡಿಸಿಕೊಂಡವನ್ನ
ಮಡದಿಗಂತು ಗಡಿತಡಿಯದೆ
ನೀಡಿದಿ ಉಡುಗೆ ಅಗಣಿತವನ್ನು
ಕಡಿಗೆ ನಿನ್ನ ಕರದೊಂದು ದಿನಾದರು
ಬಡಿಶ್ಯಾರೆ ಸುಖವನ್ನು ಏನು ೨
ಏನು ತಪ್ಪು ನಿನ್ನವರು ಮಾಡಿದರು ಕಾಣಬಾರವು ನಿನಗೆ
ಸೂನು ವೈರಿ ಪರಪ್ರಾಣಹಾರಿಗಳ ಪೊರೆದು ಕರುಣಿ
ನಿನಗೆ ಅನುವಂದು ಪಂಚಿಕೆ ಪೇಳುವೆ
ಸುರಧೇನು ಬಾರೊ ಬ್ಯಾಗ
ಮಾನದ ಶಿರಿಗೋವಿಂದ ವಿಠಲ ಎನ್ನ
ಮಾನಸ ಮಂದಿರಕೆ ಈಗ ೩

೧೩
ಮಿಗೆ ಧನ್ಯ ನಾನಾದೆ ಜಗದ ವಳಗೆ
ಅಘ ಕಳಿವ ಗುರುಪಾದಯುಗಳ ಕಣ್ಣಲ್ಲಿ ಕಂಡು ಪ
ಮುಕುಟ ಮಂಡಿತ ದಿನಪ
ಪ್ರಕರ ಸನ್ನಿಭ ಶಿರದಿ
ಮಕರಂದ ಮಯವಾದ
ಶಿಖದ ಸೊಬಗು ಅಕಳಂಕಮಾದ ಫಾಲಕೆ
ವಪ್ಪುವ ತಿಲಕ ಭ್ರುಕುಟಿ ಮಧ್ಯದಿ ಪುಂಡ್ರ
ಸುಖದ ದ್ವಯದ್ರಿಕ ಕಂಡು ೧
ಹರಿನಾಮ ರವಿಯ ಕಂಡರಳುವೊ ಕರ್ಣಾಖ್ಯ
ಸರಸಿರುಗ್ವಗಳು ಚಂದ್ರ ತೆರ ಶೋಭಿಪಾ
ವರಕದಪಯುತ ವದನ ಕೊರಳು ಉರುಬಲದ ಭುಜ
ಕರ ಹೃದಯ ಎರಡು ಘನ ಗೆರೆಯು ಉದರವ ಕಂಡು ೨
ಧಿಟ ಕಟಿತ ಪಟರೋಮ ದಟಿತವಾಗಿಹ ಜಾನು
ಚಟುಲಶಿರಿ ಗೋವಿಂದ ವಿಠಲ ನಾಮ ಪಠಿಸಿದಾಕ್ಷಣ
ನಟಿಸುವ ಪಾದದ ಕಠಿಣ ಸಂಸಾರ ಸಂಕಟ
ಕಳೆವ ರಜಕಂಡು ೩

ತಾತ್ವಿಕ ಹಿನ್ನೆಲೆ
೨೮
ಮೋದಭರಿತ ಕೇಶವನೆ ಈ ಜಗಕಾದಿ
ಕರ್ತನೆಂಬೋದು ಖರೆ
ಸಾಧಿಸಿಕೊಂಬುವ ವಿಬುಧರ ಕೈವಶ
ನಾಗುತಿಪ್ಪನೆಂಬೋದು ಖರೆ ಪ
ಪೊಡವಿಯೊಳಗೆ ನಾರಾಯಣ ತಾನು ಬಿಡದೆ
ಇಪ್ಪನೆಂಬೋದು ಖರೆ
ಮೃಡನುತನಿಗೆ ಮನೆ ಸಕಲವಾದ ಈ
ಜಡಜಂಗಮವೆಂಬೋದು ಖರೆ ೧
ಅಘದೂರನ ಮಹ ಉದರದೊಳಗೆ ಈ
ಜಗವು ಇಪ್ಪದೆಂಬೋದು ಖರೆ
ಖಗನಗ ಮೃಗ ಸರ್ವಗನಿಗೆ ಎಂದಿಗು ವಿಗಡವಿಲ್ಲ
ವೆಂಬೋದು ಖರೆ ೨
ಉಂಬುವಲ್ಲಿ ಉಡುವಲ್ಲಿ ನಮ್ಮ ಹರಿ
ಇಂಬಾಗಿಹನೆಂಬೋದು ಖರೆ
ಕೊಂಬುವಲ್ಲಿ ಕೊಡುವಲ್ಲಿ ಸರ್ವರಲ್ಲಿ ತುಂಬಿ
ಇಪ್ಪನೆಂಬೋದು ಖರೆ೩
ಎಲ್ಲೆಲ್ಹುಡುಕಲು ಇಲ್ಲ ನಮ್ಮ ಹರಿ ಇಲ್ಲದ
ಸ್ಥಳ ಇಲ್ಲೆಂಬೋದು ಖರೆ
ಬಲ್ಲಿದರಿಗೆ ಪ್ರತಿಮಲ್ಲ ಈತಗೆಣೆ ಇಲ್ಲೇ
ಇಲ್ಲವೆಂಬೋದು ಖರೆ ೪
ವಾನರ ವಂದಿತ ಶ್ರೀನಿವಾಸನಿಗೆ ಹೀನತೆ
ಇಲ್ಲೆಂಬೋದು ಖರೆ
ಶ್ರೀನಿಧಿ ಪರನೆಂದ್ಹೊಗಳುವಲ್ಲಿ ಅನುಮಾನ
ವಿಲ್ಲವೆಂಬೋದುಖರೆ ೫
ವೇದತಂದು ವೇದನಿಗಿತ್ತಾತನೆ ಭೂಧರನೆಂಬೋದು ಖರೆ
ಮೋದದಿ ಬೇರನು ಮೆದ್ದು ಕ್ರೂರ ವಟುವಾದನು
ಈತನೆಂಬೋದು ಖರೆ ೬
ಪರಶುಧಾರಿ ರಘುರಾಮ ಕೃಷ್ಣವರ
ಬದ್ಧರೂಪನೆಂಬೋದು ಖರೆ
ತುರಗ ರೂಢ ಬಹುರೂಪನಾಗುವುದು
ಧರೆಯೊಳು ನಿಜವೆಂಬೋದು ಖರೆ ೭
ಸುಪ್ತಿ ಸ್ವಪ್ನ ಜಾಗ್ರತಿಗಳು ಜೀವಕೆ ಕ್ಲಿಪ್ತ
ಮಾಳ್ಪನೆಂಬೋದು ಖರೆ
ಆಪ್ತನಾಗಿ ಎಡೆಬಿಡದೆ ಸರ್ವರಲಿ
ವ್ಯಾಪಿಸಿರುವನೆಂಬೋದು ಖರೆ ೮
ಜನನ ಮರಣಗಳು ಜೈಸಿದವನು ರಾಮನು
ಎನಿಸಿದನೆಂಬೋದು ಖರೆ
ಗುಣದೂರನು ಆ ದನುಜವರಿಯ ರಾವಣನ
ಕೊಂದನೆಂಬೋದು ಖರೆ ೯
ದನುಜರೊಂದಿಗೆ ದ್ವೇಷ ಮಾಡಿ ಸುಮನಸರ
ಪೊರೆವನೆಂಬೋದು ಖರೆ
ಇನಿತು ಲೀಲೆ ತೋರಲು ಅವನಿಗೆ ಕಾರಣವೆ
ಇಲ್ಲೆಂಬೋದು ಖರೆ ೧೦
ನಿಗಮಗಳೆಲ್ಲವು ಈತನ ಗುಣಗಳ ಪೊಗಳು
ತಲಿಹ ವೆಂಬೋದು ಖರೆ
ಅಗಣಿತ ಮಹಿಮನ ನಾಮವೆ ಸ್ರ‍ಮತಿವರ್ಣಗಳು
ಸ್ವರಗಳೆಂಬೋದು ಖರೆ ೧೧
ಅತಿವಿಮಲನಿಗಿವರೆನಿಪರಹಿತದಲಿ ಪ್ರತಿಬಿಂಬರು
ಯಂಬೋದು ಖರೆ
ಚತುರಾನನÀ ಭಾರತಿಧವ ಭವ ಶಚಿ ಪತಿಗಳು
ನಿಜವೆಂಬೋದು ಖರೆ ೧೨
ಸಾಸಿರನಾಮಗೆ ವಾಸವಾದಿಗಳು ಕೂಸುಗಳ
ಹುದೆಂಬೋದು ಖರೆ
ಸೋಸಿಲಿಂದ ಅರ್ಧಾಂಗಿ ಆದಳು ಶ್ರೀ
ಸತಿನಿಜವೆಂಬೋದು ಖರೆ ೧೩
ಅಚ್ಯುತನಿಗೆ ನಮ್ಮ ಗುರುವರ ಮಾರುತಿ ಚೊಚ್ಚಿಲ
ಮಗನೆಂಬೋದು ಖರೆ
ಹೆಚ್ಚಿನ ಭಕುತರು ಇಲ್ಲ ವಿಧಿಹೊರತು ನಿಶ್ಚಯ
ನಿಜವೆಂಬೋದು ಖರೆ ೧೪
ಈತನು ಪೇಳಿದ ಮಾತುಗಳನು ಹರಿ ಕೂತು
ಕೇಳ್ವನೆಂಬೋದು ಖರೆ
ಈತನ ನಂಬಿದ ಜನರ ಕಂಡು ಅತಿ
ಪ್ರೀತನಾಗ್ವನೆಂಬೋದು ಖರೆ ೧೫
ಮುದಮುನಿಯಾಗಿ ಹನುಮನು ಈ ಜಗದೊಳಗುದಿಸಿ
ಬಂದನೆಂಬೋದು ಖರೆ
ಬುಧವರ ಪುರಂದರದಾಸರಾಗಿ ನಾರದ
ನೆಂದರೆಂಬೋದು ಖರೆ ೧೬
ಮಧ್ವಮತವೇ ಮೂಜಗದೊಳ್
ಪರಿಶುದ್ಧವಾದುದೆಂಬೋದು ಖರೆ
ಅದ್ವೈತರನೆಲ್ಲ ಗೆದ್ದು ಪರಮ ಪ್ರಸಿದ್ಧ
ವಾದುದೆಂಬೋದು ಖರೆ ೧೭
ಹರಿನಾಮಕೆ ಹರಿಯದ ಪಾಪಿಗಳೀಧರೆಯೊಳಿ-
ಲ್ಲವೆಂಬೋದು ಖರೆ
ಹರಿಸ್ಮರಣೆಗೆ ಸರಿಯಾದ ಪುಣ್ಯ ಮತ್ತರಸಲಿಲ್ಲ
ವೆಂಬೋದು ಖರೆ ೧೮
ಜೀವರು ಮಾಡುವ ದ್ವಂದ್ವ ಕರ್ಮ
ಹರಿಸೇವೆಯನಿಪವೆಂಬೋದು ಖರೆ
ಕೋವಿದರೀ ತೆರಾಮನದಿ ನಿತ್ಯದಲಿ
ಭಾವಿಸುತಿಹರೆಂಬೋದು ಖರೆ ೧೯
ಅಜನಯ್ಯನ ಪದ ಭಜಿಸುವರೆ
ನಿಜದ್ವಿಜರಹುದೆಂಬೋದು ಖರೆ
ಸುಜನರೊಂದಿಗೆ ದ್ವೇಷಮಾಡುವರೆ
ದನುಜರೆನಿಪರೆಂಬೋದು ಖರೆ ೨೦
ವಿಧಿನಿಷೇದಗಳು ಇತರರಿಗುಂಟು
ಬುಧರಿಗಿಲ್ಲವೆಂಬೋದು ಖರೆ
ಶ್ರೀದನುಳಿದ ವರ್ಣಕರ್ಮಮಾಳ್ಪರಿಗೆ ಮೋದವೆ
ಇಲ್ಲೆಂಬೋದು ಖರೆ ೨೧
ಮುಕ್ತಿಮಾರ್ಗಕೆ ಎಲ್ಲಕಿಂತ ಹರಿಭಕ್ತಿಯ
ವರವೆಂಬೋದು ಖರೆ
ಯುಕ್ತಿಯ ವಚನಗಳಲ್ಲವು ಇವು ವೇದೋಕ್ತಿಗಳ-
ಹುದೆಂಬೋದು ಖರೆ ೨೨
ಅರಿಯಲು ಹರಿಗುಣ ಓರ್ವಸರಸ
ಸದ್ಗುರುವರಬೇಕೆಂಬೋದು ಖರೆ
ಗುರುವಿನ ಸುಂದರ ಚರಣದ ಸ್ಮರಣೆಯು
ಪರಮಸೌಖ್ಯವೆಂಬೋದುಖರೆ ೨೩
ಹರಿಯು ಪರನು ಮಿಕ್ಕಾದವರಾತನ ಚರಣ
ಸೇವಕರು ಖರೆ ಖರೆ
ಗುರುವಿನ ಕರುಣವೆ ಪರಮ ಸೌಖ್ಯವನು
ಗರಿಯುತಲಿರುವದು ಖರೆ ಖರೆ ೨೪
ರಘುಪತಿ ಎಂಬೋ ನಾಮ ಧ್ಯಾನದಿಂದಘ
ಹೋಗುವದು ಖರೆ ಖರೆ
ಜಗದೋದರ ಶಿರಿಗೋವಿಂದ ವಿಠಲ
ನಿಗಮಗೋಚರನು ಖರೆ ಖರೆ ೨೫

೧೪
ಶ್ರೀಗುರು ಪದಕೆ ಬಿಡದೆ ರಾಗದಿ ನಮಿಪೆ ಪ
ಜಾಗುಮಾಡದೆ ಜವದಿ ಭವದ ರೋಗಗಳ
ಕಳಿಯುವಂಥ ಅ.ಪ
ಮಾನವರೂಪಾ ಮಹಾಎ್ಞÁನದ ಪಾಪಾ
ಕಾನನ ದಾವಾಗ್ನಿಎನಿಸಿ ದೀನಜನರ ಪೊರೆಯವಂಥ ೧
ಮಂಗಳ ಚರಿತಾ ಪಾಂಡುರಂಗನ ದೂತ
ತಿಂಗಳ ಸಮ ಕಾಂತಿವಂತ
ಡಿಂಗರಿಗರ ಪೊರೆಯುವಂಥ ೨
ನರಜಗಮಾವಾ ಲಕುಮಿಗೆ ವರನೆನಿಸುವಾ
ವರಶಿರಿ ಗೋವಿಂದ ವಿಠಲನ್ಹರುಷದಿಂದ ಸ್ಮರಿಸುತಿರುವ ೩

ಕೇಳುವದರೊಳಗೆ ಕಳದಿಯಲ್ಲೋ
೨೦
ಕೇಳುವದರೊಳಗೆ ಕಳದಿಯಲ್ಲ ದಿನ ಮಾಡುವ-
ದೆಂದ್ಹೇಳಲೆ ಮನವೆ ಪ
ಮನನ ಮಾಡಿ ಮಾಧವನ ಮಹಿಮೆ
ಅನುಭವಕೆ ತಾರದೆ ಈ ಪರಿಯಲಿ ಬರೆ ಅ.ಪ
ಪರರ ಹರಟೆಗೆ ಪರವಶನಾಗುತ ನಿರುತ ಈ
ಪರಿ ಕಾಲ ಕಳೆವೆ
ಮರಳಿ ಹರಿಸ್ಮರಿಸರೆಂದು ಡಂಗುರ ಹೊಯ್ಯವ
ಗುರುಹಿರಿಯರ ನುಡಿಗಳು ೧
ಹೆಣ್ಣು ಮಣ್ಣು ಹಣವನ್ನು ನಂಬಿ ನೀನು
ಕೆಡದಿರೆಲೊಯಂದೆನುತ
ಚನ್ನಾಗಿ ಸರ್ವತ್ರ ಕೇಳಿ ನೀ ಮುನ್ನಿನಂತೆ
ಆಚರಿಸುತಿರುವಿಯಾ ೨
ಎ್ಞÁನವಿಟ್ಟು ಪವಮಾನ ವಂದಿತನ
ಗಾನಮಾಡು ಶ್ರೀಹರಿಗುಣವಾ
ಮಾನದ ಸಿರಿ ಗೋವಿಂದವಿಠಲಗೆ ಹೀನ
ಲೇಸುಗಳ ಅರ್ಪಿಸು ಮರೆಯದೆ ೩

ಹಾಡಿನ ಹೆಸರು :ಕೇಳುವದರೊಳಗೆ ಕಳದಿಯಲ್ಲೋ
ಹಾಡಿದವರ ಹೆಸರು :ಪಲ್ಲವಿ ಎಂ. ಡಿ.
ರಾಗ :ಬಿಲಾಸ್‍ಖಾನಿ ತೋಡಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ರತ್ನಮಾಲಾ ಪ್ರಕಾಶ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ದೋಷ ಬಪ್ಪದೆ ಇಪ್ಪದೆ ಪಾಮರನಿಗೆ
೨೭
ದೋಷ ಬಪ್ಪದೆ ಇಪ್ಪದೆ ಪಾಮರನಿಗೆ ಪ
ಜಲಜನಾಭನ ಮರೆತು ಜಲದಲ್ಲಿ ಮಿಂದು ಹೆ
ಬ್ಬುಲಿ ಬಣ್ಣದಂತೆ ನಾಮಗಳ ಧರಿಸಲೇನು ೧
ಸನಕಾದಿ ಮುನಿವಂದ್ಯ ಮನಸಿಜ ಜನಕಾ
ನಮ್ಮನನು ಕಾಯುತಿರೆ ಭೂಮಿಧನವೇ ಜೀವನನೆಂಬುವಗೆ ೨
ಶಿರಿಗೋವಿಂದ ವಿಠಲನ ಸಂಸ್ತುತಿಸುವ
ಹರಿದಾಸನ ತಿರಸ್ಕರಿಸುವ ದುರುಳಗೆ ೩

ಹಾಡಿನ ಹೆಸರು :ದೋಷ ಬಪ್ಪದೆ ಇಪ್ಪದೆ ಪಾಮರನಿಗೆ
ಹಾಡಿದವರ ಹೆಸರು :ಶ್ರೀರಕ್ಷಾ ಅರವಿಂದ್
ರಾಗ :ಮೋಹನ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ರತ್ನಮಾಲಾ ಪ್ರಕಾಶ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ನೀನನ್ನ ಹೇಳಬಾರದೇನ
ದೇವ-ದೇವತೆಗಳ ಸ್ತುತಿ
ಶ್ರೀ ಲಕ್ಷ್ಮೀ ಸ್ತುತಿ

ನೀನನ್ನ ಹೇಳಬಾರದೇನ ತಾಯಿ
ನೀನನ್ನ ವಾನರ ವಂದಿತ ಶ್ರೀನಿವಾಸಗೆ ಬುದ್ಧಿ ಪ
ಶ್ರೀನಿಧಿ ಪರನೆಂದು ನಂಬಿ ಬಂದ ಬಡ
ಪ್ರಾಣಿಯ ಪೊರೆಯೆಂದು ಜಾನಕಿ ದೇವಿಯೆ ೧
ಮೊರೆ ಹೊಕ್ಕವರ ಕರ ಪಿಡಿವೆನೆಂಬೊ ಘನಾ
ಬಿರುದು ಉಳಿಸಿಕೊ ಎಂದ್ಹರುಷದಿ ಸಿರಿದೇವಿ ೨
ಉರಗಶಾಯಿ ಶಿರಿಗೋವಿಂದ ವಿಠಲ ತುರಗಗ್ರೀವ
ನರಹರಿಗೆ ತ್ವರಿತದಲಿ ೩

ಹಾಡಿನ ಹೆಸರು :ನೀನನ್ನ ಹೇಳಬಾರದೇನ
ಹಾಡಿದವರ ಹೆಸರು :ಅಪೂರ್ವ ಶ್ರೀಧರ್
ರಾಗ :ಚಂದ್ರಕೌಂಸ್
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ರತ್ನಮಾಲಾ ಪ್ರಕಾಶ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಬಿಡುಮನ ಭವಾಖ್ಯ
೨೪
ಬಿಡುಮನ ಭವಾಖ್ಯ ಉರಗದ ಸಂಗ
ತಿಳಿ ಮಡಿದು ಪೋಪದಿ ಅಂಗ ಪ
ಅಚ್ಯುತನಾಮನುಚ್ಚರಿಸದವನ
ಕಚ್ಚದೇ ಬಿಡದೀ ಭುಜಂಗ ೧
ವಿಷಮಯ ವಿಷಯಕೆ
ವಶನಾಗದೆ ಬಲು ವಸುಧೆಯೊಳು ನಿಸ್ಸಂಗಾ ೨
ಸಿರಿಗೋವಿಂದ ವಿಠಲನ ಸ್ಮರಿಸೆ ಹರಿ
ಪೊರೆವ ತ್ವರದಯಾ ಪಾಂಗ ೩

ಹಾಡಿನ ಹೆಸರು : ಬಿಡುಮನ ಭವಾಖ್ಯ
ಹಾಡಿದವರ ಹೆಸರು : ರವೀಂದ್ರ ಸೂರಗಾವಿ
ರಾಗ : ಭೀಮ್‍ಪಲಾಸ್
ತಾಳ : ಭಜನ್ ಠೇಕಾ
ಸಂಗೀತ ನಿರ್ದೇಶಕರು : ನಾಗರಾಜರಾವ್ ಹವಾಲ್ದಾರ್
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ