Categories
ರಚನೆಗಳು

ಇಂದಿರೇಶರು

೫೧
ಅಂಜಬ್ಯಾಡಂಜಬ್ಯಾಡವೋ ಭೂನಂದಸೂನು ಪ
ಅಂಜಬ್ಯಾಡಂಜಬ್ಯಾಡ ಕರುಣನಿಧಿಯೆ
ಸಂಜೆ ಮುಂಜಾನಿಲ್ಲೆ ಬಾರೋ ಮಂಜುಳಾದ ಕಥೆಯ ಪೇಳ್ವೆ ಅ.ಪ.
ಪಾಂಡುತನಯನಂತೆ ನಿನ್ನ ಭಂಡಿ ಬಾಹು ಕನ್ನೆಮಾಡಿ
ಕಂಡ ಕಂಡ ಕಾರ್ಯದಲ್ಲೆ ದಂಡಿಸುವುದು ಎನ್ನೊಳಿಲ್ಲ ೧
ಗೋಪಿಯಂತೆ ಸೊಂಟದಲ್ಲೆ ತ್ಯಾಪಿ ಹಗ್ಗಗಳನೆ ಕಟ್ಟಿ
ಶ್ರೀಪತಿಯ ಒರಳಿಗ್ಹಾಕಿ ಆಪರಿಂದ ಕಟ್ಟೋಣಿಲ್ಲ೨
ಜಾರ ಚೋರನಂತೆ ನಿನ್ನ ನಾರೇರಂತೆ ವ್ಯಾಸಮುನಿಯ
ಮಾರಿಗ್ಹಾಕಿ ವಾರ್ತೆಯನ್ನು ದೂರೋಣಿಲ್ಲ ಜಗದಿ ಸ್ವಾಮಿ ೩
ಮಂದಗಮನೆ ಮೋಹಕಾಗಿ ಚಂದ್ರಮೌಳಿಯಂತೆ ಬೆಣ್ಣೆ
ಹಿಂದೆ ಮುಂದೆ ಓಡಿಸಿಂದು ದಣಿಸೋಣಿಲ್ಲ ಶ್ರೀಶಕೃಷ್ಣ ೪
ಇಂದಿರೇಶ ಎನ್ನ ಹೃದಯ ಮಂದಿರದೊಳಿಟ್ಟುಕೊಂಡು
ಚಂದ ಚಂದ ಕಥೆಯ ಪೇಳ್ವೆ ನಂದತನಯ ನೊಂದಿಸುವೆನು ೫

೧೨೨
ವಾಯುದೇವರು
ಅಂಜುವೆನು ನಿನಗಂಜನೆಯ ತನಯ
ಪ್ರಭಂಜನನ ಸುತ ಅಂಜುವೆನು ಪ
ವಾರಿಧಿಯನು ಹಾರಿ ಸೀತೆಗೆ ಚಾರು ಮುದ್ರೆಯನುತೋರಿ
ಲಂಕೆಯ ಸೂರೆ ಮಾಡಿದೆ ಘೋರರಾಕ್ಷಸರ್ಘಾತಗೊಳಿಸಿದಿ ೧
ಮಾರಮಣಪದ ಸಾರಸಾವನು ಭೂರಿ ಸೇವಿಸಿದೆ
ನಾರಿ ಕಾಡಿದ ಕ್ರೂರರಡಹನು ಹಾರ ಮಾಡಿದಿ ಶೂರ ಭೀಮನೆ ೨
ನಂದ ತೀರ್ಥನೆ ಬಂದು ದುರ್ಜನದುಂದು ನಿಲ್ಲಿಸುತಾ
ಇಂದಿರೇಶ ವಿದೇಂದ್ರದೈವತ ವಂದ್ಯನೆಂದು ನಿಬಂಧ ಮಾಡಿದಿ ೩


ಆ. ಧನ್ವಂತರಿ
ಅಂತರಂಗದ ರೋಗ ಚಿಂತೆ ಪರಿಹರಿಸಿ
ಮೋಕ್ಷಪಂಥ ಸಾಧಿಸು ಧನ್ವಂತ್ರಿ ಪ್ರಭುವೆ ಪ
ಸುರರು ಅಸುರರು ಕೂಡಿ ಶರಧಿಯಾ ಮಥಿಸಲು
ಕರದೊಳಮೃತ ಪಾತ್ರೆ ಧರಿಸಿ ನೀ ಬಂದೆ ೧
ಇಂದ್ರ ನೀಲಾಂಭ್ರಣಿ ಸನ್ನಿಭರೂಪ
ಚಂದ್ರ ಮಂಡಲದೊಳು ನಿಂತು ರಾಜಿಸುವಿ ೨
ಯೋಷಿತ ರೂಪದಿ ಸುಧೆಯನು ಕೊಟ್ಟು
ಪೋಷಿಸಿದೆಯೋ ಇಂದಿರೇಶ ದಿವಿಜರಾ ೩

ಉ. ಲಕ್ಷ್ಮೀದೇವಿ

೧೦೧
ಅಂಬಾಬಾಯೇ ನಂಬಿದೆ ಬಾ ಜನನೀ ಪ
ಕೋಮಲಾಂಗಿಯೇ ಕಾಮಿತದಾಯಕೆಕರುಣಾವಾರಿಧಿಯೇ ತಾಯೇ ೧
ಸಾರಸಾಕ್ಷಳೇ ತೋರಿಸು ಹರಿಯನ್ನುಪೋಷಿಸೆನ್ನ ಮನಸು ತಾಯೇ ೨
ಇಂದಿರೇಶನಂಕವಿಹಾರಿಣೀಸುಂದರಾಂಗ ಸುಭಗೇ ತಾಯೇ ೩

೫೨
ಅಕ್ಕ ಕೊಳಲನೂದುವ ಸುಂದರನ್ಯಾರೇ ಅಕ್ಕ ಪ
ಸುಂದರನ್ಯಾರೇ ನೋಡೋಣ ಬಾರೆ ಅ.ಪ.
ಅಮ್ಮಮ್ಮಾ ಮಾರನಸ್ತ್ರವ ತಾಳಲಾರೆವೆ ಅಕ್ಕ
ಬೊಮ್ಮನ ಪಿತನಂತಃಕರಣಿರಲೇ ಅಕ್ಕ ೧
ಪತಿಯು ನಮ್ಮನು ಬಿಟ್ಟರೆ ಬಿಡಲೇ ಅಕ್ಕ
ರತಿಪತಿ ಪಿತನ ದಯವು ಇರಲೇ ಅಕ್ಕ ೨
ಮನೆ ಧನವೆತ್ತ ಪೋದರೆ ಪೋಗಲೇ ಅಕ್ಕ
ಮನಸಿಜ ಪಿತನ ದಯವು ಇರಲೇ ಅಕ್ಕ ೩
ಕಂದರ ಎತ್ತಲಾರೆವು ನಾವು ಕೇಳೇ ಅಕ್ಕ
ಕಂದರ್ಪ ಸುತನ ಕರೆದು ತಾರೇ ಅಕ್ಕ ೪
ನೀರೆ ಪೋಗೋಣು ನಡಿ ಆ ವನಕೆ ಅಕ್ಕ
ಮಾರಸುಂದರನ ನೋಡುವುದಕ್ಕೆಇಂದಿರೇಶನ್ನ ಕರೆತರುವುದಕ್ಕೆ ೫


ಅನ್ನದಾನದ ಸುಖ ನಿನಗಲ್ಲದೆ ಬೇರೆ
ಅನ್ಯ ಜನರೊಳಗುಂಟೆ ಜನ್ಯ ಜನಕಾ ಪ
ಸಹಿತ ಒಂದು ಕೂಸು ಬರಲು
ಜಗತ್ ಕೋಶ ಅನ್ನವ ಮಾಡಿ ನೀ ಸಮರ್ಪಿಸಿದೆ ೧
ಕೊಟ್ಟ ಅನ್ನಕೆ ಸಮ ಇಷ್ಟನ್ನವೇನುಂಬಿ
ಇಷ್ಟು ಜನರು ಬಲಿಕೊಟ್ಟು ಭುಂಜಿಪರು ೨
ಇಂದಿರೇಶಗೆ ಕೊಟ್ಟ ದಾನದಿ ಶತಾನಂದನಾದಿಯೇ
ಮುಕ್ತಿ ಮಂದಿರದೊಳಗೆ ಹರಿತಂದು ತೋರೆನಗೆ ೩

೫೩
ಆರಮ್ಮ ಮುರಲಿಯನೂದುವನು
ಮಾರ ಸುಂದರ ಸುಖ ಸಾರುವ ಜಗಕೆ ಪ
ಪುಂಡರೀಕಾಕ್ಷನು ಹಿಂಡುಗೋವ್ಗಳ ಕಾಯ್ದು
ಕಂಡ ಕಂಡವರನ್ನು ಕರೆಯುತಾನೆ
ಚೆಂಡು ಬಗರಿ ಗೋಲಿ ಗುಂಡುಗಳನೆ ಕಟ್ಟಿ
ತಂಡ ತಂಡವಾಗಿ ಪೋದನಮ್ಮ ೧
ತಾಯಿ ಕಟ್ಟಿರುವಂಥಾ ತೋರ ಬುತ್ತಿಯ ಗಂಟು
ತೂಗುತ ಯಮುನೆಯ ತೀರದಲ್ಲೇ
ತೋರ ಉಪ್ಪಿನಕಾಯಿ ಬುತ್ತಿಗಳನೆ ತಿಂದು
ತೀರಿದವರಿಗೆಲ್ಲಾ ತಾ ಕೊಡುವಾ ೨
ಇಂದಿರೇಶನು ಕೊಟ್ಟ ತಿಂದ ಉಪ್ಪಿನಕಾಯಿ
ಆನಂದಬಟ್ಟರು ಗೋಪನಂದನರು
ಹಿಂದಿನ ಪುಣ್ಯವು ಬಂದೊದಗಿತು ಎಂದು
ತಿಂದ ಎಂಜಲನಿಟ್ಟ ಇಂದಿರೇಶ೩

೪೧
ಶ್ರೀಹರಿಯ ಮಂಗಳ ಪದಗಳು
ಆರುತಿ ಬೆಳಗುವೆನು ಮಾಧವಗಾರುತಿ ಬೆಳಗುವೆನು ಪ
ಆರುತಿ ಬೆಳಗುವೆ ಮಾರುತಿ ಪ್ರಿಯ ಯದು-ಕೀರುತಿಕರ ಪಾರ್ಥಸಾರಥಿ ಹರಿಗೆ ಅ.ಪ.
ನೀರೊಳು ಪೊಕ್ಕವಗೆ ಕಡಲೊಳು ಭಾರವ ಪೊತ್ತವಗೆ
ಮೂರು ಪಾದದಿ ಸರ್ವಧಾರುಣಿ ಅಳೆಯುತ
ಧೀರ ಬಲಿಯ ಮನೆ ದ್ವಾರ ಕಾಯ್ದವಗೆ ೧
ಕ್ಷತ್ರಿಯರ ಗೆಲಿದವಗೆ ಗಾರ್ಜಿತ ಸತ್ರವ ಕಾಯ್ದವಗೆ
ಸತ್ಯ ರುಕ್ಮಿಣಿ ಮುಖ್ಯ ಪತ್ನಿಯರಾಳಿದ
ಬತ್ತಲೆ ಕುದುರಿಯ ಹತ್ತಿ ಮೆರೆದವಗೆ ೨
ಸೃಷ್ಟಿಯು ಇಲ್ಲದವಗೆ ಜಗವನು ಸೃಷ್ಟಿ ಪಾಲಿಪಗೆ
ಬಟ್ಟಿಲಿಂದಲೇ ಗಿರಿ ಬೆಟ್ಟನೆತ್ತಿದ-
ಭೀಷ್ಟ ನೀಡಲು ಸುಖ ಪುಷ್ಪವಂದಿತಗೆ ೩
ನಂದಗೋಕುಲದಲ್ಲೆ ಬೆಳೆಯುವ ಮಂದಜಾಕ್ಷಿಯರಲ್ಲೆ
ಒಂದೊಂದು ಆಟಗಳಾಡಿ ಸುಖವನಿತ್ತ
ನಂದ ಬಾಲಕನಾದ ಇಂದಿರೇಶನಿಗೆ೪

೪೨
ಆರುತಿ ಮಾಡಿದೆವೆ ನಾರಿಯಮಣಿಯರು ಪ
ಆರುತಿ ಮಾಳ್ಪೆವು ಚಾರು ಪುಸ್ತಕದಿ
ಭೂರಿ ಶೋಭಿಪ ಪರಾಶರ ತನುಜಗೆ ಅ.ಪ.
ಚಿತ್ರ ಮಂಟಪದೊಳು ಮುತ್ತಿನಂದದಿ ಕೂತು
ಭಕ್ತ ಪೂಜಿತನಾಗಿ ಭಾಗ್ಯವ ತತ್ವ ಪೇಳಿದವಗೆ ೧
ಹರಿಯೇ ಸರ್ವೋತ್ತಮ ನರರು ತದ್ಧಾಸರು
ಹಿಂಗರುಹಿ ಶಾಸ್ತ್ರವ ಅಖಿಳ ದುರ್ವಾದಿ ವಿಜಯಗೆ೨
ಭಾರತ ಮುಖ ಬಹುಸಾರ ಶಾಸ್ತ್ರವ ಮಾಡಿ
ಧಾರುಣಿಯೊಳು ಮುಕ್ತಿದಾರಿ ತೋರಿದವಗೆ ೩
ನಾರದ ಶುಕಪೈ ಸೇರಿ ವೈಶಂಪಾಯನ
ದ್ವಾರಪಾಲಕರಿಂದ ನಿರುತ ಪೂಜಿತಗೆ ೪
ವಾಸವೀ ತನುಜಾ ವ್ಯಾಸನ ಸ್ತುತಿಸಿದಾ
ಭಾಷಿ ಭಾಷಿಗೆ ಇಂದಿರೇಶ ಪಾಲಿಸುವನು ೫

೧೫೯
ಆರುತಿ ಮಾಡುವೆ ನಾ ಪ್ರಲ್ಹಾದಗೆ ಪ
ಆರುತಿ ಮಾಡುವೆ ಧಾರುಣಿಯೊಳು
ರಘುವರನರ್ಚಿಪ ಯತಿವರ ವಂದಿಪಗೆ ಅ.ಪ.
ಸಾಲಿಯೊಳಗೆ ಕೂತು ಬಾಲಕರಿಗೆ
ಹರಿಲೀಲೆ ಪೇಳಿದ ಭಕ್ತ ಲೋಲನಾದವಗೆ ೧
ಐದನೇ ವರುಷದಿ ಕಾದು ತಂದೆಯ ಕೂಡ
ಶ್ರೀಧರ ನರಹರಿ ಪಾದ ಕಂಡವಗೆ ೨
ಬಂದು ಭೂಮಿಲಿ ರಾಘವೇಂದ್ರ ನಾಮದಿ
ಪೂಜಿಸಿಂದಿರೇಶ ಪುಟ್ಟ ಬೃಂದಾವನದಿ ಕೂತ೩

೧೧೮
ಆರತಿಪದ
ಆರುತಿಯ ಮಾಡುವೆನೆ ಮಾರಜನನಿಯೆ ಲಕ್ಷ್ಮೀ ಪ
ಭಂಗಾರದ ತಾಟಿನೊಳು ಶೃಂಗಾರದಾರುತಿ ಪಿಡಿದು
ರಂಗನಂಗನೀಯ ಲಕ್ಷ್ಮೀ ಮಂಗಳ ಪದವಪಾಡಿ ೧
ಮುತ್ತಿನಾರತಿ ನಿನಗೆ ಎತ್ತಿನಿಂತೆನೆ ತಾಯಿ
ಭಕ್ತಹೃದಯೆ ಇತ್ತಕಡೆ ನೋಡೆ ದೇವಿ ೨
ಇಂದಿರೇಶನ ರಾಣಿ ಸುಂದರ ಸರೋಜವದನೆ
ಇಂದುರಂಗ ರಾಮಕೃಷ್ಣರನ್ನು ತೋರಿಸಮ್ಮಾ ರಾಮೆ ೩

೧೦೨
ಇಂದಿರೆ ನಿನ್ನ ಪೂಜೆ ಛೆಂದಾಗಿ ಮಾಡುವೆ ನಾನು ಪ
ಮಂದಹಾಸದಿ ಮೋದದಿಂದಲೇ ನೋಡು ದಯದಿ ಅ.ಪ.
ಜರದ ಪೀತಾಂಬರ ಕರದೊಳು ಧರಿಸಿರುವೆನೆ
ಎರಕೋ ಹರಿಯ ಕೂಡ ಸರಸಿಜದಳ ನೇತ್ರಿಯೇ ೧
ಮಂದಾರ ಮಲ್ಲಿಗೆ ಕುಂದದ ಚಂಪಕ ಜಾಜಿ
ತಂದು ನಿಂತಿಹೆ ಹರಿಸುಂದರಿ ಸರಸದಿ ಮುಡಿಯೇ ೨
ಗಂಧಕುಂಕುಮ ವೀಳ್ಯಾ ಬುಂದ್ಯಾ ಭಕ್ಷಗಳನು
ಬಂದು ಹರಿಯ ಕೂಡಿ ಛೆಂದಾಗಿ ಭುಂಜಿಸು ಬೇಗ ೩
ಹರಡಿ ಕಂಕಣ ದುಂಡು ಹೆರಳು ಭಂಗಾರಗಳನು
ಹರುಷದಿಂದಲಿ ಕೃಷ್ಣನರಸಿ ತಂದಿಹೆ ನಿನಗೆ೪
ಚಂದ್ರಶೇಖರ ಸುರವೃಂದಾದಿ ವಂದಿತ ಚರಣೆ
ಇಂದಿರೇಶನ ಸಹ ಬಂದಿಲ್ಲಿ ತೋರಿಸು ಮುಖವಾ ೫

೫೪
ಬಾಲಕೃಷ್ಣ
ಇಂದುವದನೆ ಎನ್ನ ಕಂದನ ನೋಡೆ ಪ
ಮಂದಿರದೊಳಗೆಷ್ಟು ಚಂದದಿಂದಾಡುವನೆ ಅ.ಪ
ದೃಷ್ಟಿ ಮಾಲೆಯ ಕಟ್ಟಿಪೆ ಕೊರಳೊಳು
ದೃಷ್ಟಿ ಆಗುವುದಲ್ಲೆ ಪುಟ್ಟ ನಮ್ಮಪ್ಪನಿಗೆ ೧
ನಗುವನು ಬೆಳದಿಂಗಳ ಹಗಲೆ ಬಂದಿಹುದೇನೆ
ನಗುತ ನಿಂತಿರುವ ಸುಗುಣವಂತನ್ನ
ಎನ್ನಬಗಲೊಳಗೆತ್ತಿಕೊಂಬುವೆನೆ ೨
ತುಡುಗನೆಂಬುವರಲ್ಲೆ ಮಡದೇರು ಊರೊಳು
ಕೊಡ ಕೊಡ ದಧಿ ಪೇಯ ಪಿಡಿಯನು ಒಂದಿ£ ೩
ಅಂಗಿ ಕುಂಚಿಗಿ ಹಾಕಿ ಶೃಂಗರಿಸುವೆನು
ಅಂಗಳದೊಳಗೆಷ್ಟು ಮಂಗಳ ತೋರುವನೆ ೪
ಕೂಸಿನಿಂದಲೆ ಗೋಷ್ಟ ಭೂಷಿತವಾಗಿದೆ
ಸಂತೋಷಿಸುತ ಇಂದಿರೇಶನು ನಲಿವನು ೫

೧೪೦
ನಾರದ
ಇಲ್ಲೆ ಬಂದಿಹ ಮುನಿ ಇಲ್ಲೇ ಬಂದಿಹಾ
ಎಲ್ಲ ಲೋಕ ತಿರುಗಿ ಇಲ್ಲೆ ಬಂದಿಹಾ ಪ
ಫುಲ್ಲನಾಭನ ಭಕ್ತರಲ್ಲಿ ಮಾಣಿಕ್ಯವೇಅ.ಪ.
ಕರದಿ ವೀಣೆಯನ್ನು ಧರಿಸಿ ಶಿಷ್ಯರಿಂದ
ಸುರಮುನಿಯು ಕೇಳಿ ಭರದಿ ಜಾಗರಕ್ಕೆ ೧
ಹರಿಯ ದಿನದಿ ನಿನ್ನ ಚರಿತಾಮೃತವ ಪಾಡೆ
ಹರಿಯ ನಿಲಯದಿ ಗಾನ ಭರದಿ ಮಾಡುತಲೆ ೨
ನಂದ ಬಾಲಕನ ತಂದುತೋರುವನೇ
ಇಂದು ನಿನ್ನ ತುತಿಪೆ ಇಂದಿರೇಶ ದಾಸಾ ೩

೫೫
ಇಷ್ಟು ದಿನ ಇಂಥ ಸುಖ ಕಾಣಲಿಲ್ಲ
ಕೃಷ್ಣ ಈ ದಿನ ನೋಡಿ ತುಷ್ಟನಾದೆನೊ ದೇವಾ ಪ
ಆಟಗಳು ಸುಖವಲ್ಲ ಕೃಷ್ಣ ನೋಟಗಳು ಸುಖವಲ್ಲ
ಪಾಠಗಳು ಸುಖವಲ್ಲ ಕೂಟವಲ್ಲ
ತೋಟದೊಳು ರವಿಸುತನ ಕೂಟದೊಳು ಗೋಪಿಯರ
ಆಟಕದ ಕೊಳಲೂದೊ ನೋಟ ಸ್ಮರಣೆಗೆ ತರುವೆ ೧
ಏನು ಸೌಂದರ್ಯವೊ ಕೃಷ್ಣ ಏನು ಸೌಭಾಗ್ಯವೊ
ಧೇನುಪಾಲನ ನೋಟಕಾಶ್ಚರ್ಯವೊ
ನಾನು ಒಲ್ಲೆನು ಸೀದಾ ಆಣೆ ಮಾಡುವೆ
ನೀಗಧೇನು ಮುಖ ಸಮ ತೋರಿ ಧ್ಯಾನ ತಪ್ಪಿಸೋ ಜಗದಿ ೨
ನಿಂದು ಕೊಳಲನು ಕರದಿ ಇಂದು ಬಾಯೊಳಗಿಟ್ಟು
ಮಂದಹಾಸವ ಮಾಡುತಿಂದಿರೇಶ
ಕಂದರ್ಪಸಮರೂಪದಿಂದ ನೋಡುವೆನೀಗ
ಸಿಂಧುನೊಳು ಮುಳುಗಿದೆನು ನಂದಬಾಲಕನೆ ೩

೫೬
ಉದ್ಧವನು ಯಮುನೆಗೆ ಪೋಗುವಾಗಗದ್ದಲವ ಕೇಳಿದನು ಗೋಪನಾರಿಯರ ಪ
ಎದ್ದು ಗೋಪಿಯರೆಲ್ಲ ಮುದ್ದು ಮುಖವನೆ ತೊಳೆದುತಿದ್ದಿ ತಿಲ್ಕವನಿಟ್ಟು ಬಾಲ್ಯದಲ್ಲೆಶ್ರದ್ಧೆಪೂರ್ವಕ ಹರಿಯ ಪದ್ಮಂಗಳಿಗೆ ನಮಿಸಿಉದ್ಧಾರ ಮಾಡೆಂದು ಪ್ರಾರ್ಥಿಸಿದರು ೧
ಅಂಗಳಕೆ ಥಳಿಹಾಕಿ ರಂಗವಾಲಿಯನಿಕ್ಕಿಮಂಗಳಾತ್ಮಕ ದೀಪ ಮನೆಯ ಮುಂದತೆಂಗುಬಾಳೆ ಸ್ತತ್ಥ ಫಲಂಗಳ್ಹೊಸ್ತಲಿಕಿಟ್ಟುರಂಗಗರ್ಪಿತವೆಂದು ನುಡಿದಲಾಗ ೨
ಮಂದಗಮನಿಯರೆಲ್ಲ ಸುಂದರಾಂಬರವುಟ್ಟು ಚಂದ್ರಕುಪ್ಪಸಗಳನು ತೋಳಿಲಿಟ್ಟು ಛಂದಾದ ವಾಲೆ ಸರಪಣಿಯಾ ಕಿವಿಯಲಿಟ್ಟುಮಂದಹಾಶ್ಯದಿ ಮುಖದಿ ಮುಖರೆನಿಟ್ಟು೩
ಕಾಲಿಕಾಲ್ಕಡ್ಗ ರುಳಿಯು ಘಾಲು ಪೈಝಣಕಾಲುಂಗ್ರಗಳು ಪಿಲ್ಲೆ ಕಾಲಿನಲ್ಲೆಸಾಲುಗೆಜ್ಜೆಗಳುಳ್ಳ ಮೇಲೆ ಕಾಂಚಿಯನುಟ್ಟುಮುಕ್ತಮಾಲೆಗಳು ಕೊರಳಲ್ಲೆ ಲೋಲಪದಕ ೪
ಕಂಕಣವು ಕರದಲ್ಲಿ ವಂಕಿ ತಾಯಿತ ಭುಜದಿಬಿಂಕದಿಂದಲೆ ಮಂಲಿ ಹೆರಳ್ಹಾಕಿಅಂಕೆಯಿಲ್ಲದ ಸರ್ವಲಂಕಾರಗಳನಿಟ್ಟುಪಂಕಜಾಕ್ಷನ ಮನದಿ ಸ್ಮರಿಸಿದ ೫
ಲೋಲಾಕ್ಷಿ ಗೋಪಿಯರು ಭಾಳ ವಸ್ತ್ರಗಳಿಟ್ಟುಲೋಲ ಲತೆಯಂತೆ ಬಳುಕಾಡುತಮಾಲೆ ಹೆಗಲ್ಹಾಡುತಿರೆ ಮೇಲೆ ಸ್ವರಗಳನೆತ್ತಿನೀಲವರ್ಣನ ಮಹಿಮಿ ಪಾಡಿದರು ೬
ಬಂಗಾರದ ತಬಕಿನಲಿ ಮಂಗಳಾರುತಿಯೆತ್ತಿಶೃಂಗಾರ ಪದಗಳನೆ ಪಾಡುತಲೆರಂಗು ನೀಲದ ರತ್ನದುಂಗುರವು ಬೆರಳಲ್ಲೆರಂಗಗಾರತಿ ಬೆಳಗಿ ಬೇಡಿದರು ೭
ಮಸರನೆಲ್ಲವನಾಕಿ ಹೊಸ ಪಾತ್ರೆಯಲಿ ಮಂತಹೊಸದು ಹಗ್ಗವ ಕಟ್ಟಿ ಕಡಿಯುವಾಗಶಶಿಮುಖೀಯರೆಲ್ಲ ಕುಸುಮನಾಭನ ಚರಿತೆಉಸುರುತಲೆ ಕಂದರ್ಪ ಶರಾದರತಿ ೮
ಘಿಲ್ಲು ಘಿಲುಕೆಂದು ಮೈಯ್ಯಲ್ಲಿ ವಸ್ತ್ರದ ಶಬ್ದಪುಲ್ಲಾಕ್ಷಿಯರು ಕಡಿದ ಮಥನ ಶಬ್ದನಲ್ಲೆರ್ಹಾಡುವ ಕಂಠದಲ್ಲೆ ಗಾಯನದ ಶಬ್ದಎಲ್ಲ ಶಬ್ದವು ಸ್ವರ್ಗ ೯
ನಿಂತು ನಿಜಕರದಿಂದ ಮಂತಧಾಮವ ಪಿಡಿದುಕಂತುಪಿತ ಕೃಷ್ಣನ್ನ ಪಾಡುತಲೆಕಾಂತೆರೆಲ್ಲರು ಮಸರು ಕಡೆವ ಶಬ್ದವ ಕೇಳಿಭ್ರಾಂತಿಯಲಿ ಉದ್ಧವನು ನಿಂತನಲ್ಲೆ ೧೦
ಅವರ ಭಕುತಿಯ ನೋಡಿ ಅನುದಿನದಿ ಉದ್ಧವನುಅವರ ಪಾದದ ಧೂಳಿ ಸ್ವೀಕರಿಸಿದಅವರರುಹದೊಳಗೆನ್ನ ಆಗಲುದಯವು ಎಂದಅವರೊಳಗೆ ಅವರಂತೆ ಅನುಕರಿಸಿದ ೧೧
ಇಂಥ ಪರಿಯಲಿ ಗೋಪಕಾಂತೆ ಕಾಲಾಪಗಳುನಿಂತು ನೋಡುತ ತನ್ನ ಮೈಯ್ಯ ಮುರಿದಭ್ರಾಂತನಾಗುತಲೆ ಅವರಂತೆ ಮಥನವ ಮಾಡಿಅವರಂತೆ ಕರಗಳ ಮಾಡಿ ನಲಿದು ಕುಣಿವ ೧೨
ಎರಡು ಸಾಲಲಿ ದೀಪ ಕರಗಳಂಬಾರಗಳುತುರವು ತರಿಸುವ ದನಿಯು ಮಥನ ಶಬ್ದಸರಸಿಜಾಕ್ಷಿಯರೆಲ್ಲ ಗಾಯನ ಮಾಡುವ ಶಬ್ದಬೆರಗಾಗಿ ಕೇಳಿದನು ಪರಿಹರುಷದಿ ೧೩
ಕುಂದ ಮಲ್ಲಿಗೆ ಜಾಜಿ ಪಾರಿಜಾತಾಂಬುಜವುಮಂದಾರ ಮರವು ಕೇತಕಿ ಬಕುಳವುನಂಧವರ್ತಾದಿ ಸುಮದಿಂದವೆರಡು ಸಾಲುಮಂದಿರದ ಮಂದ ಸುಗಂಧಡಗಿತು ೧೪
ಸರಸಿಜಾಕ್ಷಿಯರೆಲ್ಲ ಪರಮಪುರುಷನ ಸ್ಮರಿಸಿಸುರಿಸುತಲಿ ಕಣ್ಣೀರು ಪರವಶದಲೇನೆರಗು ಬೀಳಲು ಹೊರದೆ ಹೆರಳ ಮಾಲೆಯ ಮರೆದುಬರೆದ ಚಿತ್ರಗಳಂತೆ ಪರಿಯಾದರು ೧೫
ವಾರಿಜಾಕ್ಷಿಯರ್ಹರಿಯ ಧ್ಯಾನಮನದಲಿ ಕೃಷ್ಣಸಾರ ಸುಂದರ ಮೂರ್ತಿಯಳೆ ಕಾಣುತಮದ ಜಾನಕನ ಮಾತನಾಡುತ ಮನದಿಪಾರುಗಾಣದೆ ಸುಖದ ವಾರಿಧಿಯೊಳು ೧೬
ಮನೆಯ ಹಂಬಲವಿಲ್ಲ ಮಾವನಂಕೆಯಿಲ್ಲಮೊದಲೆಯಿಲ್ಲ ಅತ್ತಿ ಪತಿಗಳಂಜಿಕೆಮಾರಜನಕನ ಕೂಡ ಮೈಯ್ಯಕೈಯನ ಮುರಿದುಮಾಧವನೆ ಪಾಲಿಸೆಂದೊದರಿದಾರು ೧೭
ಮಂದಜಾಕ್ಷರು ಮಾಳ್ಪ ನಂದಬಾಲನ ಕಥೆಯಆನಂದದಲಿ ಕೇಳಿ ಉದ್ಧವನುಇಂದಿರೇಶನ ಚರಣ ದ್ವಂದ್ವ ಸ್ಮರಿಸುತಮಧುರೆಲ್ಹಿಂದ ಬಂದ್ಹೇಳಿದನು ನಂದಸುತಗೆ ೧೮

೫೭
ಎಂದಪ್ಪಿಕೊಂಬೆ ರಂಗಯ್ಯನ ಎಂದಪ್ಪಿಕೊಂಬೆ ಪ
ಎಂದಪ್ಪಿಕೊಂಬೆನೋ ಎಂದು ಮುದ್ದಾಡುವೆನಂದ ಕಂದನ ಗೋವಿಂದನೆಂಬುವ ಕೂಸ ಅ.ಪ.
ಕರದಲಿ ತನ್ನಯ ಬೆರಳು ಬಾಯೊಳಗಿಟ್ಟುಜುರು ಜುರು ಚೀಪುವ ವರಮುದ್ದು ಬಾಲನ೧
ಗುರುಳು ಮಧ್ಯದಿ ರತ್ನ ಅರಳೆಲೆ ಹೊಳೆಯುತಜರದ ಕುಂಚಿಗೆ ಹೊದ್ದು ಚರಿಸುವ ಕೂಸಿನ್ನ ೨
ಪುಟ್ಟ ಪುಟ್ಹೆಜ್ಜೆಯನಿಟ್ಟು ಗೋಕುಲದೊಳುತುಷ್ಟಿ ನೀಡಲು ಬಾಲಕೃಷ್ಣನೆಂಬುವ ಕೂಸ ೩
ಬಾಲೆರ ಮನೆಪೊಕ್ಕು ಪಾಲುಮೊಸರು ತಿಂದಲೀಲೆ ಮಾಡುತ ಅಂಬೆಗಾಲನಿಕ್ಕುವ ಕೂಸ ೪
ಕಾಲಕಡಗ ರುಳಿಯ ಪೂಲು ಪೈಜಣನಿಟ್ಟುಮ್ಯಾಲೆ ಉಡುದಾರ ಪೊಳೆವಂಥ ಕೃಷ್ಣನ೫
ತಂದೆ ತಾಯರ ಮುಂದೆ ನಿಂದು ಮಾತಾಡಿದನಂದ ಬಾಲಕನಾದ ಇಂದಿರೇಶನೆ ಬೇಗ ೬

೫೮
ಇಂದಿರೇಶ ಭಾಗವತ
ಎಂದು ಬರುವನು ಇಲ್ಲೆ ಮಂದಸೂನನುನಮಗೆ ಮುಂದೆ ಗತಿಯೇನುದ್ಧವಾಒಂದು ಕಾರ್ಯವು ಬಾರದಂದಿನಾದಿಈಶ ಸುರಸುಂದರನು ಪೋದನಲ್ಲೋ ಉದ್ಧವಾ ಪ
ಸರಿ ರಾತ್ರಿಯೊಳು ಯಮುನೆ ಸರಿತ ತೀರದಿ ನಿಂತುಮುರಲಿ ಊದಿದನುದ್ಧವಾಶರಣದೊಳು ಪತಿ ಸುತರ ಪರಿಚರಿಸುತಿಹ ನಮ್ಮಮರುಳು ಮಾಡಿದನುದ್ಧವಾ ೧
ತೊರೆದು ಮನೆ ಧನಗಳನೆ ಬರಲು ಬಳಿಯಲಿ ಭಾಳತರಲಿ ಮಾಡಿದನುದ್ಧವಾಅರಿಯಲಿಲ್ಲವೊ ನಾವು ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ ೨
ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆತುರುಬಿನೊಳಗಿಟ್ಟುದ್ಧವಾಸರಸ ಸೌಂದರ್ಯಕ್ಕೆ ಮರುಳಾದನಿವನೆಂದುಗರುವ ಮಾಡಿದೆವುದ್ಧವಾಅಂತು ನಮ್ಮನು ಬಿಟ್ಟು ಮರೆಯಾಗಿ ರೋಧಿಸಲುಭರದಿ ಬಂದನುದ್ಧವಾ ೩
ಕೋಲು ಕುದುರೆಯನೇರಿ ಬಾಲಕರಕೂಡಿ ತಾ ಕೇಳಿ ಮಾಡಿದನುದ್ಧವಾಲೀಲೆ ಚತುರರ ಸದೃಶ ಬಾಲೆಯರಕೂಡಿ ತಾ ಕೋಲನಾಡಿದನುದ್ಧವಾ೪
ಕಾಲಿನೊಳು ರುಳಿಗೆಜ್ಜೆ ಕರದಿ ಕಂಕಣವಂಕಿ ಶೀಲ ಸುಂದರನುದ್ಧವಾಪಾಲು ದಧಿ ಬೆಣ್ಣೆ ನಮ್ಮಾಲಯದೊಳುತಿಂದು ಭಾಳ ಮೋಹಿಸಿದನುದ್ಧವಾ ೫
ಸುಖಿಸಿದನುದ್ಧವಾ ಉರಗರಾಜನ ತುಳಿದುಮಡದಿ ನುಡಿಸಲು ಡಾನು ಗರಳ ಹರಿಸಿನುದ್ಧವಾಉರಿಯ ನುಂಗುತ ಮುಖದಿ ಬೆರಳೊಂದುಹತ್ತೊಂದು ವರುಷ ಇಲ್ಲಿದ್ದುದ್ಧವಾಅರಿಯಲಿಲ್ಲವೊ ನಾವು ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ ೬
ಒಂದಿನಾದರೂ ಒಮ್ಮೆ ಮನದಿ ಗೋಕುಲದವರಇಂದು ಸ್ಮರಿಪನೆ ಉದ್ಧವಾಚಂದ್ರ ವದನೇರ ಸ್ನೇಹ ಕೂಡಿ ಪುರದೊಳು ನಮ್ಮನಿಂದು ಮರೆತನೆ ಉದ್ಧವಾ ೭
ಬಂದು ಬಳಗವ ಬಿಟ್ಟು ಮಧುರೆಗೆಲ್ಲರುನಿನ್ನ ಹಿಂದೆ ಬರುವೆವೊ ಉದ್ಧವಾಕಂದರ್ಪ ಪಿತನಿವನ ಸ್ಮರಿಸುತಲೆ ದೇಹದಿಪ್ರಾಣವೊಂದೇ ಉಳಿದಿಹುದುದ್ಧವಾ೮
ಪರಮ ವೈಕುಂಠನು ಸರತಿಯಲೆ ತೋರಿಸುತಮರುಳು ಮಾಡಿದನುದ್ಧವಾಗಿರಿಗಿರಿ ಝರಿಯೊಳಗೆ ಚರಿಸಿ ಚಿನ್ನದ ಚರಯಗುರುತು ಮಾಡಿದನುದ್ಧವಾಅರಿಯಲಿಲ್ಲವೋ ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ ೯

ಇ. ಶ್ರೀ ಹರಿಯ ಸ್ತುತಿ


ತಿರುಪತಿ ಶ್ರೀನಿವಾಸ ದೇವರು
ಎಡ್ಡಂ ತಿಡ್ಡಂ ಮಾತುಗಳಾಡುವಿದಡ್ಡನು ಶಾಣ್ಯಾನೋಗುಡ್ಡದಿ ಸೇರುತ ಬಡ್ಡಿ ಸಹಿತ ಪರದುಡ್ಡು ಸೆಳೆವರೇನೋ ಪ
ಕೊಟ್ಟಾದನ್ನುಣ್ಣುತ ದೇಹವ ಪುಷ್ಟಿಸಿ ಕಾದಿರುಶಕಟ್ಟಿದ ಹಣವನು ಕಷ್ಟದಿ ಕೊಡದಿರೆ ಕುಟ್ಟಿ ಸೆಳೆದು ತರುವಿ ಚಾಳಿ ಕೆಟ್ಟದು ಕಲಿತಿರುವಿ ೧
ಶಿಷ್ಟರು ಗುಡಿಯೊಳು ಬಂದರೆ ಅವರನು ಅಟ್ಟಿಸಿ ಹೊರಡಿಸುವಿಮೊಟ್ಟೆಯಲಿ ಹಣ ಕಟ್ಟಿದವರು ಬರೆ ದೃಷ್ಟಿಸಿ ಮನ್ನಿಸುವಿಚಾಳಿ ಕೆಟ್ಟದು ಕಲಿತಿರುವಿ ೨
ಹೇಳಿದ ಮಾತನು ಕೇಳದೆ ನಮ್ಮೊಳು ಕಾಳಗ ನಡೆಸಿರುವಿಶ್ರೀಲೋಲನೆ ಮುಖತೋರಿಸು ಎಂದರೆ ಆಲಯಕ್ಹೋಗೆನುವಿಚಾಳಿ ಕೆಟ್ಟದು ಕಲಿತಿರುವಿ ೩
ಹುಚ್ಚುನ ತೆರದೆಲೆ ಮಾತುಗಳಾಡುವಿ ನಿಶ್ಚಯ ಒಂದಿಲ್ಲಾತುಚ್ಛಿಸಿ ಎಲ್ಲವ ನಿನ್ನಲಿ ಬಂದರೆ ಮತ್ಸರ ನಡೆಸಿರುವಿಚಾಳಿ ಕೆಟ್ಟದು ಕಲಿತಿರುವಿ ೪
ಭೂಸುರ ನಿಲಯದಿ ವಾಸಿಸೆ ನಿಜ ಶುಭ ದಾಸನಾಗಿದ್ದಿಈ ಸಮಯದೀತನು ಪೋಷಿಸಲು ವಿಷಯಾಸೆಯನಾಗಿದ್ದಿಧನರಾಸಿಯೊಳಗೆ ಬುದ್ಧಿ ಇಂದಿರೇಶನೆ ಕಲಿಸಿದ್ದಿ ೫

೫೯
ಎತ್ತಿಕೊಂಡ್ಹೋಗುವೆನೆ ಈ ಕೂಸಿನ್ನ ಎತ್ತಿಕೊಂಡ್ಹೋಗುವೆನೆ ಪ
ಎತ್ತಿಕೊಂಡ್ಹೋಗುವೆ ಮುತ್ತಿನಂಥಾ ಕೂಸುಹತ್ತಲಿ ಬರುವುದು ಚಿತ್ತಬಿಟ್ಟಗಲದು ಅ.ಪ.
ಗುಂಡು ಬಿಂದಲಿ ಕೈಯೊಳು ಮುತ್ತಿನ ದಿವ್ಯ ಚೆಂಡುಪಿಡಿದ ಬಿಡನುಹಿಂಡು ಬಾಲರ ಕೂಡಿಕೊಂಡು ಆಡುವ ಕೂಸುಇಂಥ ಕಂದನ್ನ ಪಡೆದಿಯೇನೇ ಗೋಪಮ್ಮ ನೀ ೧
ಕಾಲ ಕಡಗರುಳಿಯು ಕಾಲೊಳಗಿಟ್ಟು ನೀಲ ಮಾಣಿಕ ಗೆಜ್ಜೆಯುಭಾಳ ಕಡೆಗೆ ಪೋಗಿ ಲೋಲಾಡುವ ದೃಷ್ಟಿಮಾಲೆಯನ್ಹಾಕಿ ತಾರೆ ಗೋಪಮ್ಮ ೨
ಅರಳೆಲೆನಿಟ್ಟಿಹದು ಮುಂದಲೆಯಲ್ಲಿ ಜರದ ಕುಂಚಿಗೆ ಇಹುದುತೆರದ ಕಣ್ಣು ಮುಚ್ಚಿ ತೆರೆದು ನೋಡುತಲಿದ್ದಎರೆದು ಮಲಗಿಸಿದೆಯೇನೆ ಗೋಪಮ್ಮ ನೀ ೩
ಎಷ್ಟು ಜನ್ಮದ ಪುಣ್ಯವು ಬಂದೊದಗೀತ ಪುಟ್ಟಿದೆ ಇಂಥ ಕೂಸುಪುಟ್ಟ ಬಾಲಗೆ ಉಮ್ಮಕೊಟ್ಟು ಬಟ್ಟಲಿ ನಾನುದೃಷ್ಟಿಯು ಮುರಿಯುವೆನೇ ಗೋಪಮ್ಮ ನಾ ೪
ಮಂದಿ ಕೈಯಲಿ ಕೊಡೆನೆ ಈ ಕೂಸಿನ್ನ ತಂದು ಕೊಡುವೆನೆ ನಾನುಇಂದಿರೇಶನ ಬಿಟ್ಟು ನಿಂದಲಾರದ ಮನಇಂಥ ಕಂದನ್ನ ಪಡೆದಿಹೆನೆ ಗೋಪಮ್ಮ ನೀ ೫

೬೧
ಎಷ್ಟು ಚಲುವರೋ ರಾಮಕೃಷ್ಣರೆಷ್ಟು ಚಲುವರೊಎಷ್ಟು ಚಲುವರಿವರ ಶಿರದಿ ಬಿಟ್ಟ ಜುಲುಪಿ ಕೇಶ ಚಂದ ಪುಟ್ಟ ಬಾಲಕಾರು ಕೂಡಿ ಗೋಷ್ಟದೊಳಗೆ ಚಲಿಸಿದಾರೊ ಪ
ನಿನಗು ಇದ್ದವೋ ಈ ಜುಲುಪಿ ನಿನ್ನನುಜಗಿದ್ದವೊಮುನಿಯ ಕೂಡಿ ಪೋಗುವಾಗ ವನದಿ ನಾಲ್ಕು ಹತ್ತು ವರುಷಜನತೆಗಾದ ನಯನ ಸುಖದ ಘನತೆ ನೀನು ತಿಳಿದು ಪೇಳೋ ೧
ಬಹಳ ಶೂರನೋ ತಥೋಪಿ ಧೈರ್ಯಶೀಲನಾಮನೋಶೂಲ ಪಾಣಿ ಧನದ ಭೂಮಿ ಪಾಲು ಸಾಧಿಸಿ ಮುರಿದು ನಿಂತಬಾಲಕೃಷ್ಣ ಶತ್ರುಗಣದಿ ಬಾಲೆಯೆತ್ತಿಕೊಂಡು ಪೋದ ೨
ಸತ್ತ ಕಪಿಗಳಾ ನೋಡದೆಲೆ ವನದೊಳಿತ್ತಿ ಅಸ್ತುಗಳುಮೃತ್ಯುಪೊಂದಿ ಬಹಳ ಕಾಲ ಎತ್ತಜೀವ ಎತ್ತಕಾಯಪುತ್ರ ವೃತ್ತಿ ಮಾತೆ ಗುರು ಸುಪಾತ್ರರನ್ನು ಸುಖಿಸಿದಾರು ೩
ಪಿತೃನಾಗ್ಞದಿ ನೋಡುತಲೆ ವನದೊಳ್ಹೆತ್ತೆ ಮಾಡಿದೆಮತ್ತ ಆನೆಯಮಲ್ಲ ಕಂಸನೊತ್ತಿ ತುಳಿದು ಮಧುರೆಯಲ್ಲಿಹತ್ತು ಒಂದು ವಯದ ಬಾಲ ಮುತ್ಯಾ ಮಾತೆಯರನು ಕಾಯ್ದ ೪
ಕೂಸುಪಿಡಿಯಿತು ಪೂಥಣಿಯ ಮೊಲೆಯ ತಾಸು ತಿಂದಿತುಈ ಶರೀರದೊಳಗೆ ತಾಟಕಾಸುರೀಯ ಕೊಂದ ಇಂದಿರೇಶಅದ್ಭುತಾವದಿದರೊಳಾರು ಪೇಳೊ ದಾಶರಥಿಯೆ ೫

೬೦
ಎಷ್ಟು ಸುಸ್ವರ ಊದುತಿಹನಮ್ಮ ಶ್ರೀಕೃಷ್ಣ ಕೊಳಲನ ಪ
ಎಷ್ಟು ಸುಸ್ವರ ಊದುತಿಹನೋ ಗೋಷ್ಠಿಯೊಳು ಗೋವುಗಳಕಿವಿಗಳು ನೆಟ್ಟನಿಲ್ಲಿಗೆ ಕೇಳಿ ಮೋದದಿ ಕಟ್ಟಿದೆಲೆ ಕಣ್ಣಿಗಳಹರಿವವೊಅ.ಪ
ತರಣಿ ತನುಜನ ತೀರದಲ್ಲಿಹನೆ ಕೊರಳೊಳಗೆ ಕೌಸ್ತುಭಹರಳಿನಿಂದ ಜಗವ ಬೆಳಗುವನೆ ಕುರುಳು ಕುಣಿಸುತಬಾಲಬಿಂಬದಿಕರ್ಣಕುಂಡಲ ಗಂಡ ಸುಪ್ರಭ ಮರುಳು ಮಾಡುತಮೂರು ಲೋಕವಸಿರಿಯ ಮೋಹಿಪ ಪರಮ ಪುರುಷನು೧
ಚರಣದೊಳು ಭೂಷಗಳ ನುಡಿಸುವನೆ ಕಟಿಯಲ್ಲಿ ಕಾಂಚನಜರದ ಪೀತಾಂಬರವ ಹೊದ್ದವನೆ ಕರದಿ ಕಂಕಣ ವಂಕಿಉಂಗುರಹರಳು ಕೆತ್ತಿದ ಸರಿಗೆಸರ ನಗ ಮುರಿಗೆ ತೋಡೆ ಸುಹಾರಭೂಷಿತಉರದಿ ಕುಳಿತಿಹ ಸಿರಿಯ ಮೋಹಿಪ ೨
ಅರಗೀಮನೆ ಬಾಂಧವರು ಬೇಕೆ ನಿಜ ಪತಿಗಳೆಮ್ಮನುಮೀರಿ ಪೋದರು ಅಂದರೆನಲೇಕೆ ಮಾರನಯ್ಯನ ಮುರಲಿಸುಸ್ವರಸಾರಿ ಮನಸಪಹಾರ ಮಾಡಿತು ನಾರಿ ಮಣಿಯರೆ ಕ್ಷಣವುತಡೆಯದೆವಾರಿಜಾಸನ ವನಕೆ ತೆರಳಿರೆ ೩
ಎಷ್ಟು ಜನ್ಮದ ಪುಣ್ಯವಿರುತಿಹದೆ ಈ ಮುರಲಿ ಬಾಲನಪುಟ್ಟತುಟಿಯಲಿ ಸುಧೆಯ ಸುರಿಸುವದೇಸೃಷ್ಟಿರವ ಬಳ್ಳಿಮನದಲಿ ವೃಷ್ಟಿಹಿಡಿಸದೆ ಕುಸುಮಫಲಗಳುವೃಷ್ಟಿಯಿಂದಲೆ ಹೊರಗೆ ಚೆಲ್ಲುತ ಅಭೀಷ್ಠೆ ಸುರಿಸುತಪೇಳುತಿಹವೊ ೪
ಅರುಣನಂದಧಿ ಅದರ ಸೌಭಗವೊ ವನ ನಿಲಯ ಮೃಗಗಳುತೊರೆದು ವೈರವ ಸುತ್ತು ನಿಂತಿಹವೋ ಹರುಷದಲೆ ಮನತೊರೆದು ನಿಲ್ಲಲು ಇಂದಿರೇಶನ ತರುಣಿಯರು ಪೋಗೋಣ ನಡೆಯಿರಿ ೫


ಏನು ಕಾರಣ ಕೃಷ್ಣಾ ಏನು ಕಾರಣ ಪ
ಏನು ಕಾರಣ ಎನ್ನ ಕಣ್ಣಿಗೆ ನೀನು ತೋರದಿರುವುದು ಇದು ಅ.ಪ
ಖಗ ಮೃಗಾದಿಗಳಿಗೆ ನೀನು ರಘು ಕುಲೇಶ ದರ್ಶನವಿತ್ತೆಸೊಗಸು ಮೋಕ್ಷವಿತ್ತೆ ಅದಕುಖಗವರೂಢ ಕಡಿಮೆಯೇನು ೧
ಶಬರಿ ಎಂಜಲುಂಡು ವನದಿಅಬುಜ ಶಯನ ದರುಶವಿತ್ತೆಕುಬುಜೆ ಕೂಡಿದೆಲ್ಲೊ ಅದಕುವಿಬುಧ ವಂದ್ಯ ಕಡಮೆನೋವಾ ೨
ಮುರಲಿನೂದಿ ವನದಿ ಹರಿಯುತರುಲತಾದಿಗಳಿಗೆ ದರ್ಶನವಿತ್ತು ಕಾಯ್ದುಅದಕು ಪರಮ ಪುರುಷ ಕಡಿಮೆ ನೋವಾ೩
ಹಾದಿಲ್ಹೋಗೋ ಕೀಟನಿಗೆವೇದನಾಥ ದರುಶನಿತ್ತಿಆದಿ ವರ್ಣದವನು ಅದಕುಬಾದರಾಯಣ ಕಡಿಮೆ ಏನೋ ೪
ಎಷ್ಟು ಎಷ್ಟು ಜನರಿಗೀಗಭೆಟ್ಟಿ ನೀಡಿ ಸುಖವನಿತ್ತೆಶ್ರೇಷ್ಠನೆಂದು ಸ್ತುತಿಪೆ ನಿನ್ನ ಕೃಷ್ಣ ಕರುಣಿ ಬೇಗನೆ ಬಾ ೫
ಇಂಥಾ ಜನುಮದಲ್ಲಿ ನಿನ್ನಕಂತು ಪಿತನೆ ಕಾಣದಿರಲುಪಂಥಗಾಣೆ ಮುಂದಿನ ತನುಎಂಥದಾಗುವುದೋ ತಿಳಿಯೆ ೬
ಇಂದಿರೇಶ ಮುರಲಿ ಶೋಭಿತಇಂದು ಬಿಂಬ ವಿಜಯ ವದನತಂದು ತೋರಿಸೆನ್ನ ಮನಕಾ-ನಂದಿಸೀಗ ನಂದನಸುತ ೭

೬೨
ಏನು ಚತುರನಮ್ಮಾ ಧೇನುಪಾಲಾಸಾನುರಾಗದಿ ನಮ್ಮ ಮಾನಿನಿ ಕರೆದ ಪ
ನನ್ನ ಕರೆವ ನೋಡೆ ನಿನ್ನ ಕರೆವ ನೋಡೆಅನ್ಯ ಗೋಪಿಯರನೆಲ್ಲ ಕರೆಯುತಾನೆಮನ್ಮಥನಂಘ್ರಿ ಇನ್ನು ಬಿಟ್ಟಿರಲಾರೆಸನ್ನುತಾಂಗಿಯರೆಲ್ಲ ಸಾಗಿ ಬನ್ನಿ ೧
ವೇಣುಸ್ವರವು ತಮ್ಮ ಮಾನಸದೊಳು ತುಂಬಿಕಾನ ಮೇಲೆ ಮಾಡಿ ಕೇಳುತಾವಖಾನ ಪುಲ್ಲನೆ ಬಿಟ್ಟುವ ವೃಂದಗೋಷ್ಟದಿ ನಿಂತುಸ್ಥಾನದೊಳಗೆ ಕಣ್ಣಿ ಕೀಳುತಾವ ೨
ಇಂದಿರೇಶನೆ ರವಿನಂದನೆ ತೀರದಿಇಂದು ನೋಡದೆ ಸ್ಥಾನ ಪೊಂದಿತಂದುಸುಂದರ ಸುರಿಯೋಳು ಇಂದು ಪಿಡಿದು ಪೋಗಿಆನಂದವಾಲನ ಮುಖ ಕಾಂಬೋಣಮ್ಮಾಆನಂದವಾಲನ ಮುಖ ನೋಡೋಣಮ್ಮಾ ೩