Categories
ರಚನೆಗಳು

ಇಂದಿರೇಶರು

೧೭
ನಂದ ವೃಜ ಮಧುರಿ ದ್ವಾರಕೀಯೊಳಾಡಿದ ಕೂಸೆಎಂದು ಬಾಹುವಿ ಇಲ್ಲಿಗೆ ಪ
ಕಂದರ್ಪ ಕೋಟಿ ಸುಂದರಾನಿನ ಬಿಟ್ಟುನಿಂದಿರಲೊಲ್ಲದು ಮನಸಾ ಶ್ರೀಶಾ ಅ.ಪ.
ಮಧುರೆಯಲಿ ನೀಪುಟ್ಟಿ ಪಿತೃಗಳ ರಕ್ಷಿಸಿದಿಹಿತದಿಂದ ಯಾದವರ ತಲೆಯ ಕಾಯ್ದಿಮೃತವಾದ ಮಗುವನು ಗುರುಸತಿಯ ಮಾತಿಗೆ ಕೊಟ್ಟೆಪ್ರತಿಗಾಣೆನೊ ನಿನ್ನ ಬಲಕೆ ಛಲಕೆ ೧
ಘೋರ ದಿತಿಜನು ತನ್ನ ಪೋರನಿಗೆ ಭಯವಿತ್ತುಸಾರಿ ಕಂಬದಿ ನಿನ್ನ ತಂದು ತೋರೆನಲುನಾರಸಿಂಹನೆ ನೀನು ವೈರಿ ಬಾಧೆಯ ಬಿಡಿಸಿಭೂರಿ ಸುಖವಿತ್ತು ಪೊರೆದಿ ಭರದಿ ೨
ಸರಯು ತೀರದಿ ಅಯೋಧ್ಯಾ ಪುರದೊಳಗೆ ಕಾಂಚನದಪರಮ ಪೀಠದಿ ಕುಳಿತು ಸೀತೆಯೊಡನೆಹರಳು ಕೆತ್ತಿದ ನಾನಾ ಭೂಷಣಂಗಳನಿಟ್ಟುಮರುಳು ಮಾಡುವಿ ನಮ್ಮನೂ ನೀನು ೩
ನಂದ ಗೋಕುಲದಿ ರವಿ ನಂದನೀಯ ತೀರದಲ್ಲಿಚಂದದಿಂದಲಿ ನಿಂತು ಕೊಳಲನೂದಿಮಂದಗಮನಿಯರ ಮನಸು ಮರುಳು ಮಾಡುತ ಸುಖವು ದ್ವಂದ್ವಲೋಕದಿ ಕೊಟ್ಟಿ ಭೆಟ್ಟಿ ೪
ಮಂದಿ ಮಾತುಗಳೊಲ್ಲೆ ಚೆಂದವೆಂಬುವುದೊಲ್ಲೆಸುಂದರ ಸಿರಿ ಸಂಪತ್ತು ಬಲ್ಲೆಇಂದಿರೇಶನೆ ಎನ್ನ ಚಿತ್ತ ಮಂದಿರದೊಳು ನಿನ್ನಸುಂದರಾನನ ತೋರೋ ಬಾರೋ೫

೧೦೯
ನಂಬಿದೆ ನಮ್ಮಮ್ಮನ ನಂಬಿದೆ ಪ
ನಂಬಿದೆ ನಮ್ಮಮ್ಮನಂಬುಜಾಸನ ವಾಯುಶಂಭು ಮುಖಮರ ಕದಂಬ ಕರರ್ಚಳ ನಂಬಿದೆ ಅ.ಪ.
ಕರವೀರದೊಳಗಿರುತಿಹಳು ರವಿ ಕಿರಣ ಕಾಂಚನ ಪೀಠ ನಿಧಿತಳು ಸುರತರುಣಿ ಸಂಘಾತ ಸೇವಿತಳು ಆಹಾಹರಿಯ ವಕ್ಷದಿ ಕೂತು ಕರುಣ ಕಟಾಕ್ಷದಿಪರಿವಾರ ಜನಕೆಲ್ಲ ಸುರಿವಳು ಸುಖವನ್ನು ೧
ಕರದಿ ಕಂಕಣ ತೋಡೆ ಬಳೆಯು ನಾಗಮುರಿಗೆ ವಂಕಿಯುಶೋಭ ಸಿರಿಯು ಪಾದಾಭರಣದ ಕಲಕಲಧ್ವನಿಯು ಆಹಾಕರಣದಿ ವಾಲಿ ಕಂಠದಿ ಸರ ಸುರಗಿಯುಭರಮ ಮೇಖಳ ಕಾಂತಿ ಹರವಿಲಿ ಬೆಳಗೋದು ೨
ಮುಖವನೋಡಲು ಸೋಮಬಿಂಬ ದಿವ್ಯ ಚಿಕುರಮ ಭ್ರಮರದಂಬನಾಸ ಮುಖದಿ ಮಣಿಯು ರವಿಬಿಂಬ ಆಹಾವಿಕಸಿತ ಸುಮಮಾಲೆ ವಿಕಸರ ಫಣಿವೇಣಿಚಕಚಕಿತಾಭರಣಳಕಳಂಕ ಚಲಿವಿಯ ೩
ನವನಿಧಿನಾಥನ ಮಗಳು ಸರ್ವಭುವನಾಧಿಪತಿಯ ಸುಪ್ರಿಯಳು ಅನು-ಪವನ ಮುಖಾಮರ ಸ್ವಭವನದಾಯಕಳಾತ್ಮ ಕವನ ಮಾಡುವ ಕವಿ ಭುವನದೊಳಿರುವಳ ೪
ದೇಶಕಾಲಗಳಿಂದಸಮಳು ಹರಿಗಾಸುಗುಣಗಳಿಂದಾಸಮಳುಸುಖರಾಶಿ ಸೌಂದರ್ಯ ಸೌಭಗಳು ಆಹಾವಾಸುದೇವನ ಭಕ್ತಿರಾಶೆ ಪೂರೈಸುತಿಂದಿ-ರೇಶನು ಚ್ಛಾಂಗದಿ ತಾ ಸುಖಿಸುವಳಂಬ ೫

೮೧
ಬಾಲಕೃಷ್ಣ
ನಡಿ ಬೇಗನೆ ಪೋಗೋಣ ವೃಂದಾವನ ಪ
ಪಾಡೋಣ ಯಶೋದೆಯ ಕಂದನ ಅ.ಪ.
ಎಲ್ಲ ಗೋಪೇರು ಮನಿಯಲ್ಲಿ ನಿಲ್ಲದೆ ಅವ-ನಲ್ಲಿ ನಿಂತಿಹರು ನೋಡೋಣ ನಡಿ ೧
ಮುರಳಿಗಾನವ ಕೇಳಿ ಮರುಳಾಗಿದೆ ಮನಸ್ಥಿರವ ಪೊಂದದು ಬಿಡುಮೌನ ನಡಿ ೨
ನಂದಸೂನು ಗಾನ ಇಂದು ಕೇಳುತ ಹೃದಯಸಂದಿಸಿಹುದು ಸ್ಮರ ಬಾಣ ನಡಿ ೩
ಆರು ವಂದಿಸಲೇನು ಆರು ನಿಂದಿಸಲೇನು ನೀರಜಾಕ್ಷನ ನೋಡೋಣ ನಡಿ ೪
ಇಂದಿರೇಶನ ಮುಖ ಮಂದಹಾಸವ ನೋಡಿನಂದುತಿಹುದು ಭವ ಧ್ಯಾನ ನಡಿ ೫

೧೪೪
ನಾರದ ಮುನಿಯೇ ಎನ್ನೊಳು ನಮ್ಮನೀರಜಾಕ್ಷನ ಮುಖವನು ತೋರೋ ಪ
ಧ್ರುವತಾಯಿ ಮಾತಿಗೆ ನೊಂದಾನು ತನ್ನಭವನದಾಸೆಯ ಬಿಟ್ಟು ಬಂದಾನುಶ್ರವಣ ಮಾಡುತ ಮಂತ್ರ ಅಂದಾನು ಹರಿನವನವ ಮಹಿಮೆಯ ತಿಳಿದಾನು ೧
ಮಧುವನದೊಳು ತಪಮಾಡಿದ ಹೃದಯದೊಳುಮಧುಸೂದನ ಮುಖನೋಡಿದಾಮುದದಿಂದ ಹರಿಯನ್ನು ಸ್ತುತಿಸಿದಾ ಮುಕ್ತಸದನ ಶ್ರೀ ಹರಿಪುರ ಸೇರಿದಾ ೨
ವರ ಪ್ರಹ್ಲಾದಗೆ ಗರ್ಭದಿ ಕೊಟ್ಟಸುರಮುನಿ ನಿನ್ನುಪದೇಶದಿಹರಿಯನು ಭಜಿಸಿದ ಧೈರ್ಯದಿ ಶಾಲೆತರುಳರಿಗೆಲ್ಲ ಹೇಳಿದ ಬೋಧಿ ೩
ಶ್ರೇಷ್ಠ ನಿನ್ನುಪದೇಶ ಕೇಳುತ ಹೀಗೆಎಷ್ಟೋ ಜನರು ಹರಿ ಕಾಣುತಮೆಟ್ಟಿದರು ಹರಿಪುರ ಸುಖಿಸುತ ಎನ-ಗಷ್ಟುಪದೇಶ ಮಾಡೆಲೋ ತಾತ ೪
ಸುಂದರ ವೀಣೆಯ ಕರದೊಳು ಪಿಡಿದುಇಂದಿರೇಶನ ಭಕ್ತ ಸಭೆಯೊಳುನಂದ ಬಾಲನ ಕಥೆ ಜಗದೊಳು ಪೇಳಿವಂದಾರು ಕವಿ ಕರುಣಾಳು ೫

೧೪೨
ನಾರದಾ ಬಾ ಮುನಿಜಾತಾ ಹೇ ನಾಥಾಮಿತ್ರನಂದದಿ ಸದಾ ಧಾತ್ರೀಲಿ ಚರಿಸುವಿಭಕ್ತಜನಕೆ ಸುಖದಾತಾ ಹೇ ನಾಥಾಈ ತನುವಿಲಿ ಗೋಪಿ ಪೋತನ ಕಾಣದೆಮಾತು ಮರೆತೆಂಧೀತ ಭೀತಾ ಹೇ ನಾಥಾಭಾಷೆ ಕೇಳುತ ನಿಮ್ಮೋಲ್ ಆಶೆ ಪುಟ್ಟಿಹಇಂದಿರೇಶನ ಸಹ ಸುಖಗೀತಾ ಹೇ ನಾಥಾ

೧೪೩
ನಾರದಾನೆ ಕಂಡೆ ನಿನ್ನ ಮೂರು ತಂತೀಯಾಚಾರು ವೀಣೆ ಪಿಡಿದು ಪಾಡುವ ಭೂರಿ ಮಹಿಮೆಯಾ ಪ
ಕಾಲ ಮೇಲೆ ಕಾಲ ಹದಡಮೇಲೆ ವೀಣೆಯ ಶಾಲನ್ಹೊದ್ದು ಹರಿಯಗಾಯ ಲೀಲೆ ಬಾ ಹೊದೊ೧
ಕರೆದ ಕ್ಷಣಕೆ ಬರುವಿ ಎನ್ನೊಳುಕರುಣವೇನಿದು ಗುರುತು ತೋರದಂತೆಎನ್ನ ಬಳಿಗೆ ಬರುವುದೋ ೨
ನಿನ್ನ ನಂಬಿದೆನ್ನ ಭಾಷೆಯನ್ನು ಲಾಲಿಸೋಇನ್ನು ಇಂದಿರೇಶ ವದನವನ್ನು ತೋರಿಸೋ ೩

೮೨
ನಿಲ್ಲ ಬಾ ನಿಲ್ಲ ಬಾ ಮೆಲ್ಲಮೆಲ್ಲನೆ ಹೆಜ್ಜೆನಿಟ್ಟುನಿಲ್ಲ ಬಾರೋ ಕೃಷ್ಣಾ ನಿಲ್ಲ ಬಾರೋ ಪ
ದುಷ್ಟ ಪೂತನಿಯ ದೊಡ್ಡ ಹೊಟ್ಟೆಯೊಳಾಡಿದಿ ಮಂದಿದೃಷ್ಟಿ ತಾಕಿಹುದೊ ರಕ್ಷೆನಿಟ್ಟು ಮುದ್ದಿಸುವೆ ೧
ಆಲಯದಂಗಳದೊಳು ಲೀಲೆ ಮಾಡುವಿಯೊ ಕೆಟ್ಟಬಾಲೆಯರ ಗಾಳಿ ಸೋಕಿಹುದೋ ಹಣ್ಣು ನಿವಾಳಿಸಿಒಗೆವೆ ಕೃಷ್ಣ ೨
ಇಂದಿರೇಶ ನಿನ್ನ ಬಹುಮಂದಿ ನೋಡುವರೋ ದೃಷ್ಟಿಇಂದು ಆಗಿಹುದೊ ಮಾಳ್ಪೆ ಕದಲಾರತಿಯ ಕೂಸೆ ೩

೧೨೪
ನೀ ಬಾರದಿರೆ ಬಾರನು ಶ್ರೀ ನರಹರಿ ಪ
ನೀ ಬಾರದಿರೆ ಬಾರ ನೀರಜಾಕ್ಷನು ಹರಿನಾನು ನಂಬಿದೆ ನಿಮ್ಮ ನೀವು ಪಾಲಿಸಬೇಕು ಅ.ಪ.
ನೀನು ಆತನ ಕಾಯ್ದಿ ತಾನು ಆತನ ಕಾಯ್ದನೀನು ಬಿಡಲು ಬಿಟ್ಟ ಭಾನುಸುತನ ಕೃಷ್ಣ ೧
ನಿಮ್ಮ ಮಾತುಗಳನ್ನು ಒಮ್ಮೆ ಮೀರನು ಹರಿನಮ್ಮ ಬಿಡುವುದ್ಯಾಕೊ ಬ್ರಹ್ಮ ಪದಾರ್ಹನೆ ೨
ಇಂದು ನಾಳೆನ್ನದೆ ಆನಂದತೀರ್ಥರೆ ನಮ-ಗಿಂದು ತೋರಿಸು ಹರಿಯ ಇಂದಿರೇಶನ ಪ್ರೀಯ ೩

೧೮
ನೀರಜಾಕ್ಷನೆ ಚಾರುರೂಪನೆಸೇರಿ ಚಿತ್ತದೊಳು ಮೋರೆ ತೋರಿಸೀಗಾ ಪ
ಎಷ್ಟು ಭಕ್ತರಾಭೀಷ್ಟ ನೀಡಿದಿವೃಷ್ಣಿವರ್ಯನೆ ಭೆಟ್ಟಿ ಪಾಲಿಸೀಗಾ ೧
ಮುಷ್ಠಿ ಅವಲಿಯಾ ಕೊಟ್ಟ ವಿಪ್ರಗೆ ಕೊಟ್ಟೆ ಸಂಪದವಾಭೀಷ್ಟದಾಯಕನೆ ೨
ಇಂದಿರೇಶನೆ ಬಂಧ ಮೋಚನೆ ಗೈದು ಬಂದು ಕಾಯೋ ನಂದ ಬಾಲಕನೇ ೩

೧೬೨
ಮೊದಲಕಲ್ಲು ಶೇಷದಾಸ ಸ್ತುತಿ
ನೇತ್ರಗಳ ಸಾಫಲ್ಯಮಾಳ್ವ ಸುಗಾತ್ರರನು ಕಂಡೆ ಪ
ಪಾತ್ರರಾದವರು ದಾಸರ ಕೀರ್ತಿಸಲು ಪಾಪಗಳು ನಿಲ್ಲವೊ ಅ.ಪ.
ವೇದ ಶಾಸ್ತ್ರಗಳ ಪೇಳುತ ಮೋದದಿಂದಿಹರುವಾದ ಮಾಡುವರಲ್ಲಿ ಶಮದಮಾದಿ ಗುಣದವರುಮೋದ ತೀರ್ಥರ ಮತಾನುಸಾರವಬೋಧಿಸುತ ಪರಮಾನುಗ್ರಹ ಮಾಳ್ವರ ೧
ವಾಸುದೇವನ ದಾಸರೊಳಗ್ರೇಸರರು ಇವರುಶ್ರೀಶನ ಶುಭಗುಣ ಕರ್ಮಂಗಳು ಚಿಂತಿಸುತಲಿಹರುಭೂಸುರಾಂಶರಲ್ಲಿದಾವ ಸುರೇಶರೋಶೇಷದಾಸರಾಗಿ ಇಹರು ೨
ತಂದೆ ಶ್ರೀ ನರಸಿಂಹನ ಪದದ್ವಂದ್ವ ಭಜಿಸುವರುಬಂದ ಸಜ್ಜನವೃಂದ ಜನಕಾನಂದಗೈಸುವರುಇಂದಿರೇಶನ ಒಂದೆ ಮನದಿ ಆ-ನಂದಬಾಷ್ಪಗಳಿಂದ ಧೇನಿಪರು ೩

೧೯
ಉಡುಪಿಯ ಕೃಷ್ಣ
ನೋಡಿರಿವನೊಳದ್ಭುತವಾ ಪಾಡುವರಿಗೆ ಸುಪ್ರೀತ ದಾತಾ ಪ
ಮುರಳಿ ಮುಖದೊಳಿಟ್ಟು ನಿಂತುಕೊಂಡಿಹನೊಕರುಣಾಮೃತ ಸುಧೆ ಸುರಿಸುತಲಿಹನೊಕರುಣಾಪಾಂಗದಿ ನೋಡು ತಲಿಹನೋ ಸುಸ್ವಭಾವದಾತ ೧
ಶುಕ್ರವಾರದಿ ಸೀರೆಯನುಡುವನೋ ಮಕ್ಕಳ ಪಡೆದ್ಹೆಂಗಸು ಇವನೋಲಕ್ಕುಮಿದೇವಿಗೆ ವರನಾಗಿಹನೋ ವಿಲಕ್ಷಣ ಸ್ವಭಾವದಾತ ೨
ಈಶನು ಕ್ಷಣದಲಿ ದಾಸನಾಗುವನೋ ಭೂಷಣ ಭೂಷಿತ ಬತ್ತಲಾಗುವನೋಪೋಷ ಪೋಷಕ ಇಂದಿರೇಶ ಭೂಷಿತನೋ ದಾಸರಪೋಷಿಪನೋ ೩

೧೩೫
ನೋಡು ನೋಡಮ್ಮ ಭಾರತಿದೇವಿ ಪ
ನೋಡಿ ನೋಡಮ್ಮ ಜೋಡುಕರಗಳ ಜೋಡಿಸಿ ಎದುರಿಲಿ ಮೂಢನು ನಿಂತಿಹೆಅ.ಪ.
ಕಾಳಿ ದ್ರೌಪದಿ ನೀಲಲೋಹಿತೆಬಾಲೇ ಮಂಗಳೇ ಶೀಲೆ ಸುಂದರಿ ೧
ಇಂದ್ರಸತಿ ಮುಖ ಸುಂದರಿಯರುಬಂದು ಸೇವಿಸೆ ಪೊಂದಿಪುಟ್ಟಿದೆ ೨
ವಾಸುದೇವನ ನೀ ಸ್ಮರಿಸೆ ವಸ್ತ್ರರಾಶಿ ಪಡೆದೆ ಇಂದಿರೇಶನ ಸುಪ್ರಿಯೆ ೩

೨೧
ನೋಡುವೆನು ನೋಡುವೆನು ತೋರಿಸುನಿಮ್ಮ ನೋಡುವೆ ಪ
ನೋಡುವೆ ಮಾಡು ದಯ ಎನ್ನೊಳುರೂಢಿಯೊಳಗೆ ನಿಮ್ಮ ಪಾಡುತ ಮಹಿಮೆ ಅ.ಪ.
ಮದನ ಜನಕನೊಳು ಕದನ ಮಾಡಿದ ದು-ರ್ಯೋಧನನ ಶಿರದೊಳಿಟ್ಟ ಪದುಮ ಪಾದಗಳನು ೧
ನೂರುಗಾವುದ ಜಲ ಹಾರುವಾಗಲೆ ದಿವ್ಯಭೂರುಹ ಕೆಡದಿಹ ಊರುಗಳನ್ನು ಸ್ವಾಮಿ ೨
ಕೆಟ್ಟ ಬಕನ ಕೊಂದು ಅಷ್ಟು ಅನ್ನವನುಂಡಹೊಟ್ಟಿ ನೋಡುವೆ ದಿವ್ಯ ದೃಷ್ಟಿ ನೀಡಿರಿ ಸ್ವಾಮಿ ೩
ಭೂಮಿ ಸುತೆಯ ವಾರ್ತೆ ರಾಮನು ಕೇಳಿದಾಪ್ರೇಮಾಲಿಂಗನವಿತ್ತ ಆ ಮಹಾವುರವನ್ನೆ ೪
ಮದಗಜಗಳ ಕೂಡ ಕದನ ಮಾಡಿದ ದಿವ್ಯಗದೆಯ ಪಿಡಿದ ಕರವದು ಮಗಳನು ಸ್ವಾಮಿ೫
ಅಜಗರ ನಹುಷನ ವಿಜಯ ಸಹೋದರ ಪದುಮನಾಭನ ಗುಣಮುದದಿ ಸಾರುತ ದೈತ್ಯ ಕದನಗೆಳೆದ ನಿನ್ನ ವದನಕಮಲವನ್ನು ೬
ವೇದ ಶಾಸ್ತ್ರಗಳನ್ನು ಓದಿ ಹೇಳುತ ಶಿಷ್ಯಮೋದಗರೆವ ನಿನ್ನ ವಾಣಿ ಸ್ವಾದು ಕೇಳುವೆ ನಿನ್ನ ೭
ಇಂದಿರೇಶನ ದಯದಿಂದ ಗೆಲಿದಿ ಇಪ್ಪ-ತ್ತೊಂದು ಮತವ ಆನಂದ ತೀರ್ಥರೆ ನಿಮ್ಮ ೮

೨೨
ಪರಮ ಪುರುಷನ ಮೊದಲು ನಮಿಸುತಚರವವೈದಿದ ದೈವತಂಗಳಿಗೆರಗುವೆನು ಕ್ರಮದಿಂದ ಕೂಡುತಧರಣಿ ತಳದಲ್ಲಿ ೧
ದರ್ಭ ಮುಖ ವಿಸ್ತರದಿ ಹಾಕುತಪದ್ಮ ಮೊದಲಾಸನದಿ ಪ್ರಾಂಗ್ಮುಖಇದ್ದರಗ್ರ್ಯಾಳ ಸಮ್ಮುಖ ಶ್ರದ್ಧೆ ಮಾಡುವುದು ೨
ವಾಸನಾದೊಳಗೊಂದು ಬಿಂಬದಿವಾಸ ಮಾಡುತ ಕೂರ್ಮ ಆಸನಈಸು ಚಿಂತಿಸಬೇಕು ಎಂಬೋಭಾಷೆ ರಾಜಿಪುದು ೩
ಧಾರುಣಿ ಮಂತ್ರದಲಿ ಕೂಡುತನಾರಸಿಂಹ ಸುದರ್ಶನಾಸ್ತ್ರದಿಆರು ದಿಕ್ ದಿಗ್ಬಂಧನಾಡಿಯಸೂರಿ ಮಾಡುವುದು ೪
ನಾಗಭೂಷಾಜ್ಞೆಯಲಿ ಭೂತಗಳ್‍ಹೋಗಲೆಂಬುವ ಮಂತ್ರ ಪಠಿಸುತಯೋಗಿಗಳ ಪ್ರಾರ್ಥಿಸುತ ಸಂತತಯಾಗ ಮಾಡುವದು ೫
ಹರಿಯ ಗುರುಗಳ ನಮನಗೋಸುಗಕರವ ಮನವನು ಶೋಧಿಸೂವುದುಎರಡು ಬೀಜಾಕ್ಷರದಿ ನಾಂಕುಎರಡು ಸ್ಥಾನದಲಿ ೬
ಬ್ರಹ್ಮಹತ್ಯಾ ಮಂತ್ರದಿಂದಲಿತಮ್ಮ ವಾಮಾಂಗವನೆ ಮುಟ್ಟುತಅಧರ್ಮ ಪುರುಷನ ಚಿಂತಿಸುವುದುಕರ್ಮ ಕರ್ತೃಕನು ೭
ಶೋಕ್ಷ ನಾಭಿಲಿ ಪಾಪ ಪುರುಷನನಾಶ ಹೃದಯದಿ ಭಸ್ಮ ತ್ಯಜಿಸುತಲೇಸು ವರುಣದಿ ಸುಧೆಯ ವೃಷ್ಟಿಲಿಸೂಸುವುದು ತನುವ ೮
ಹೀಗೆ ನಿತ್ಯದಿ ಕಾಮಿನೀಯರುಬಾಗಿ ಪತಿಯಲೆ ಕಾರ್ಯ ಮಾಡುತನಾಗಶಯನ ನಕ್ಷರದ ತತ್ಸುಖಭೋಗ ಬಯಸುವುದು೯
ನಾರಿಯರು ಗುರು ಮಂತ್ರದೀಪರಿಪೂರ್ವದಲೆ ಮಾಡುತ ಕೃಷ್ಣನಆರು ವರ್ಣವ ಪಠಿಸುತಲೆ ಗೃಹಕಾರ್ಯ ಮಾಡುವುದು ೧೦
ರಾಮ ಮೊದಲಾದನ್ಯ ಮಂತ್ರಗಳ್‍ಕಾಮಿನೀಯರು ಜಪಿಸುತಲೆ ನಿಜಕಾಮದಿಂದಲೆ ಯೋಗ್ಯತಾವನುನೇಮದಿಂದಿರಲು ೧೧
ತಾರತಮ್ಯವು ಪಂಚಭೇದವುಭೂರಿ ಭಕುತಿಲಿ ಭಜಿಸಿ ಕೃಷ್ಣನಆರು ವರ್ಣವು ಪಠಿಸುತಲೆ ತನ್ನು -ದ್ಧಾರ ಮಾಡುವನು೧೨
ವಾಸು ಮಾಡುತಲೆನ್ನ ಮನದೊಳುಆಶು ಭೇದಕ ಸ್ತ್ರೀಜನಂಗಳಿಗೀಶ ಮಾಡಿದ ಇದನ ಇಂದಿ-ರೇಶಗರ್ಪಿಸುವೆ ೧೩

೧೩೯
ಪಾಹಿ ಪಾರ್ವತಿ ನಿನ್ನ ಪಾದವ ಪೊಂದಿಹೆಪ್ರೇಮದಿಂದಲಿ ಹರಿಯ ಪೂಜೆ ಮಾಡಿಸೆ ಪ
ಶಿವನ ರಾಣಿ ಎನ್ನ ಭುವನ ಮಧ್ಯದಲಿಪವನ ಶಾಸ್ತ್ರವು ನಿತ್ಯ ಶ್ರವಣ ಮಾಡಿಸೆ ೧
ಹರನ ತೊಡೆಯೊಳು ಪೊಳೆವ ಸರಸಿಜಾಕ್ಷಿಯೆಹರಿಯ ಬೋಧವ ಕೇಳಿ ಹಟವಗೆಲಿದೆಯೆ೨
ಸರ್ವಮಂಗಳೆ ನಿನ್ನ ಶರಣು ಬಂದಿಹೆ ನಾನುಹರಿಯ ಗುಣಗಳ ವಾಣಿಯಲ್ಲಿರಿಸು ಕರುಣದಲಿ ೩
ಹರಿಯ ಶಾಸ್ತ್ರದ ಸ್ಮರಣೆ ಮನದಿ ನಿಲ್ಲಿಸುಮರವು ಕೊಡದೆಲೆ ಹರಿಚರಣ ತೋರಿಸು ೪
ಬಂದ ಭಕ್ತರ ಬಿಡುವುದಿಂದುಚಿತವೆಇಂದಿರೇಶನ ಮನದಿ ತಂದು ತೋರಿಸೆ ೫

೧೧೦
ಮಹಾಲಕ್ಷ್ಮೀ ಅಷ್ಟಕಂ
ಪಾಹಿ ಮಂಗಳದೇವಿ ರುಕ್ಮಿಣಿ ಪಾಹಿ ಪಂಕಜ ಮಾಲಿನಿಪಾಹಿಮಾಂ ಕರವೀರವಾಸಿನಿ ಪಾಹಿ ರಾಘವ ಕಾಮಿನಿ ಪ
ಚಂದ್ರಮಂಡಲ ಹಾಸ ಸನ್ಮುಖ ಮಂದಹಾಸ ಸುಶೋಭಿತೆಸಿಂಧುರೇಂದ್ರ ಕರಾಮೃತೌಘ ಸುಗಂಧ ಬಿಂದು ನಿಷೇಚಿತೆಕುಂದರೋಜ್ವಲ ಇಂದ್ರನೀಲ ಮಣೀಂದ್ರಹಾರ ವಿಲಾಸಿತೇಬಂದ್ರಿರಾಜಸುತೇವ ಸೂನುಮನಾದಿ ಬಂಧ ವಿವರ್ಜಿತೇ ೧
ಕುಂತಲಾವಳಿ ಸೋಭಿಸನ್ಮುಖ ಕಾಂತೆ ತೋಷಿತೆ ಮಾಧವೆಶಾಂತ ಭಕ್ತೆ ಉಪಾಸೆ ತೋರು ಕೃತಾಂತ ದುರ್ಭರ ವೈಭವೇಕಂತು ಮೋತರನಂತಶಾಯಿ ಸದಾಂತ ಪಾಣಿ ಸರೋರುಹೇಸಂತತಂ ಹೃದಮೇವ ಸಾಂಬ ಸುಶಾಂತಿ ಕಾಂತಿ ಸಹೋದ್ಭವೆ ೨
ನಾರದಾಮರ ಮೌನಿದತ್ತ ಸುಪಾರಿಜಾತ ಸುಮಾಲಿಕೇಸೂರ್ಯ ಸೋಮ ಸಮಾನ ಕಾಂಚನ ಭೂರಿಭೂಷಣ ಮಸ್ತಕೇಹಾರಮೌಕ್ತಿಕ ಹೇಮಭೂಷಣ ಚಾರು ಚಂಪಕ ನಾಸಿಕೆ ಸಾರಸಾಕ್ಷಿ ಸಮೀರ ಪೂರ್ವಕ ಸುರಾಳಿ ಮೌಳಿಗ ಹಸ್ತತೇ ೩
ತಪ್ತಕಾಂಚನ ನೂಪುರೋಜ್ವಲ ರಕ್ತಪಾಲ ಸರೋರಹೆಚಿತ್ರಪೇಟ ಪಟೋಲ್ಲ ಸತ್ಕಟೆ ರತ್ನ ಕಾಂಚಿ ಗುಣೋದ್ಭವೇನಿತ್ಯತೃಪ್ತ ನಿರಂಜನೈಸುರ ಮೃತ್ಯುಮೋಹನ ವಿಗ್ರಹೆತತ್‍ಕೃಪೈವಪು ಮೃತ್ಯುಸಾಧನ ಸಪ್ತ ಮೋಡಿಹ ವಿದ್ಮಹೆ ೪
ಅಂಬಜಾವಕ ಲಕ್ಷ್ಮೀ ಮೇಷ ಕದಂಬಿನೀನಿಲಯಸ್ಥಿತೆಕಂಬುಕಂಜರ ತಾರಿಬೇಟ ಕರಾಂಬು ಸಂಭವ ಸೇವಿತೆಶಂಭರಾರಿ ಸುತಾಂಘ್ರಿಪಂಕಜೆ ಬಿಂಬರಾಹಿ ಭೂಸುತೆಸಾಂಬಹೀಂಬ ನಿಹಾ ಸುದರ್ಶಯ ಜಂಜವೈರಿನಿ ಸೇವಿತೆ ೫
ಇಂದಿರೆ ಹರಿ ಮತ್ಸ ಮಯೂರೇಂದ್ರ ತಲ್ಪ ಸುಶಾಯಿನಂಸಿಂಧುಮಂದಿರ ಸಾರಸಾಕ್ಷನು ಮಂದ ಸೌಭಗ ಶಾಲನಂವಂದ್ಯ ಮಾನ ವಿದೇಂದ್ರ ದೈವತ ವೃಂದ ವೈಭವದಾಯಿನಂಸುಂದರಾಂಗಿಣಿ – ನಿವೇದಗೇಹ ಭವಾಂಧಿ ಪೋಪನೀ ಶೋರ್ಪಣಂ ೬
ಜೀವವರ್ಗ ಹೃದಾಲಯ ಸ್ಥಿತ ಭೂವರಾಹಸಹಾನನೇಪಾವನೀತಾಹೇ ವಸೇದ್ರುಮ ಹಾನು ಭಾವ ಶಿಖಾಮಣಿಹಾವಭಾವ ವಿಲಾಸಿನಾಕಿ ಸುವಾಸಿನಿನುತ ಸದ್ಗುಣಿಸೇವಕೇಯ ವಿಭಾವಿತಾಖಿಲ ಭಾವಕಾಯದ ಶಿಕ್ಷಣಿ ೭
ಇಂದಿರೇಶ ಸತೀಂದುಮೌಳಿ ಕರಾರವಿಂದ ನಿಷೇವಣೇಚಂದ್ರಮಾರುತರೇಂದು ಸೈಂದವವೀಂದ್ರ ಪೂರ್ವಸು ವಾಹನೇಅಂಧಕೂಪ ಸಮಾನ ದುರ್ಭವ ಬಂಧ ಸೇಘನೀ ಪೋಷಿಣಿನಂದನಂದನ ಮಾಸುದರ್ಶಯ ಬಂಧುರಾಮೃತ ಭಾಷಿಣಿ ೮

೨೩
ಶ್ರೀನಿವಾಸಾಷ್ಟಕ
ಪಾಹಿಮಾಮರೇಂದ್ರ ವಂದಿತ ಪಾಹಿಮಾಮ ಜರಾವೃತಪಾಹಿಮಾಮಿಭರಾಜ ಪೂಜಿತ ಪಾಹಿ ಪಾಂಡವ ಕಾಮಿತ ಪ
ಶ್ರೀನಿವಾಸ ಸರೋಜ ಶೋಭಿತ ಪಾಣಿ ಕಾಂಚನ ಕಂಕಣಎ್ಞÁನ ವೀರ್ಯ ಬಲ ಪ್ರಮೋದ ಮುಖೋರು ಸದ್ಗುಣ ಕಾರಣವೇಣುನಾದ ವಿಮೋಹ ಗೋಕುಲ ಕಾಮಿನೀ ಸುಖ ಸಾಧನಸಾನುರಾಗ ಕಟಾಕ್ಷ ಸುಸ್ಮಿತ ಭಾನು ಕೋಟಿ ಸಮಾನನ ೧
ಸುಂದರೀವ ಪುರಿಂದು ವಕ್ತ್ರ ಸುಮಂದಹಾಸ ವಿಮೋಹನಮಂದರೋದ್ಧರ ಮಾಧವಾವರ ವೃಂದಪಾಲನ ಭಾವನಇಂದ್ರ ಮುಖ್ಯ ಸುರೇಂದ್ರ ಶತ್ರು ಬಲೀಂದ್ರ ದಾನವ ಬೋಧನಸಿಂಧು ಸಂಭವ ಸುಂದರಾಮೃತ ಭೋಜನಾಮರ ಮೋದನ ೨
ಕಂಸಕಾಲ ಜರಾಸುತಾದ್ಯ ಸುರಾಂಶ ಸಂಘ ನಿಷೂದನಸಂಶಿತವೃತ ಕಾಮಿನೀ ವರ ಹಿಂಸಿತಾಸುರ ಕಾಮನಹಂಸನಾಶ ಭವಾಂಶ ತೋಷ ಸುಧಾಂಶು ಬಿಂಬ ನಿಕೇತನಕಂಸಚಾಪ ವಿನಾಶನಾಮರ ಸಂಶಯಾಂಕುರ ಮೋಚನ ೩
ಮತ್ಸ್ಯ ಕೂರ್ಮ ವರಾಹ ವಾಮನ ವತ್ಸ ಭಾಷಿತ ಪಾಲನಕತ್ಸಿತಾವನಿಪಾಲನ ಶತೃದಚ್ಚುತಾತ್ಮ ಸುಬೋಧನವತ್ಸವಾಟ ಚರೋರು ರಾಕ್ಷಸ ಭತ್ರ್ಸನಾಮೃತ ಸಾಧನಸ್ವೇಚ್ಛಯಾತ್ತ ಸಮಸ್ತ ವಿಗ್ರಹ ಮತ್ ಶರೀರ ಸುಖಾಸನ ೪
ನೀರಜಾಕ್ಷ ಸರೋಜ ಪಂಕಜ ಹಾರ ಭೂಷಿತ ಕಂಧರಸಾರಸಾಸನ ನಾರದೇಡಿತ ವಾರಿಪಾಲಿತ ಸಿಂಧುರಮಾರ ಸುಂದರ ಶೂರ ನಂದನ ಚಾರು ಲಕ್ಷ್ಮಣ ಸೋದರ ವೀರರಾಘವ ಭೋನರೇಂದ್ರ ಸಮೀರ ಸೂನು ದಯಾಕರ ೫
ಮಂದಹಾಸ ಮುಖೇಂದು ಮಂಡಲ ಸುಂದರಾಮೃತ ಭಾಷಣನಂದ ಚಿದ್ಭನ ವೃಂದ ಭೂಷಣ ನಂದಗೋಪ ಸುನಂದನಸಿಂಧುತೀರ ವಿಹಾರ ಗೋಕುಲ ಕಾಮಿನಿ ಸುಂದರೀಕರ ಪೂಜನನಂದ ಚಿದ್ಭನ ದೇವ ಭಾಸ್ಕರ ನಂದಿನೀ ರತಿ ಸಾಧನ ೬
ಕೃಷ್ಣ ಕೇಶವ ಜಿಷ್ಣು ಸಾರಥಿ ವೃಷ್ಣಿವಂಶ ಸಮುಜ್ವಲಪ್ರೇಷ್ಠ ಸಂಸದಿ ಸೇವಿತಾಮರ ಸರ್ವದಿವೌಕ ಸಾಮುರು ಮುಷ್ಟಿಕಾದ್ಯ ಸುರಾನಳಮುಷ್ಟಿಧಾನ್ಯದ ಕಷ್ಟ ನಾಶನ ವೃಷ್ಣಿವರ್ಯ ಮಹಾಬಲ ತುಷ್ಟದಾಶ್ರಿತ ಸತ್ಫಲವಿಷ್ಣುರೂಪಮಮೇಷ್ಟ ದೋಹವಶಿಷ್ಠ ಸೇವಿತ ವಿಠ್ಠಲ ೭
ಇಂದಿರೇಶ ಸುಕಂದ ಮಾಲ್ಯ ರವೀಂದು ವಹ್ನಿ ಸುಲೋಚನಸಿಂಧುಮಂದಿರ ಸಾರಸಾಂಬುದ ವೃಂದ ಗಾತ್ರಿ ವಿಕಾಸನಕಂದರೋಜ್ವಲ ಕೌಸ್ತುಭಾಹಿ ನಿರೀಂದ್ರ ವಕ್ತ್ರ ನಿಷೇವಣಬಂಧನಂ ಪರಿಹೃತ್ಯ ಮಾಮವ ಸುಂದರಾಂಬರ ಭೂಷಣ ೮

೮೩
ಪುಟ್ಟ ಬಾಲನೆ ಮನೆ ಕಟ್ಟೀಲಾಡೋಕೆಟ್ಟ ಗೋಪರ ಮನೀಗ್ಹೋಗಬ್ಯಾಡಾ ಪ
ನಿನ್ನ ಮಗನು ಮೆದ್ದು ಬೆಣ್ಣೆ ಪಾಲ್ ಮೊಸರನೆಉಣ್ಣೀಸುತಲೆ ಬೆಕ್ಕಿಗುಂಡನಮ್ಮಸಣ್ಣ ಮಕ್ಕಳ ಕೈಯ್ಯ ಕಣ್ಣಿನಿಂದಲೆ ಕಟ್ಟಿಓಡುತಲಿಹರಮ್ಮಾ ನೋಡೆಂಬರೋ ೧
ಕಂದಯ್ಯಾ ಗೋಪೆಯರ ಮಂದಿರಕ್ಹೋಗದೆಇಂದು ಹುಟ್ಟಿದ ದಿನಾ ಎರಕೋ ಕೂಸಮಂದಿರದೊಳು ವಿಪ್ರವೃಂದವ ಪೂಜಿಸಿಛಂದಛಂದದ ವಸ್ತ ತಂದಿಡುವೆ ೨
ಮಂದಿ ಮಕ್ಕಳು ನೋಡು ಛಂದದಿ ತಮ್ಮನೆಮುಂದಲೆ ಊರೊಳಗಾಡೆಂಬರೊನಿಂದ ಧಾಂಧಲೆ ಭಾಳ ಬಂದು ಹೇಳುವರಲ್ಲೋಇಂದೆಲ್ಲಿ ಪೋಗದಿರಿಂದಿರೇಶಾ ೩

೧೬೧
ಬಂದನೊ ಸುಜನರ ಸಂದಣಿಯೊಳಗತಿಸುಂದರ ರಥವೇರಿ ಗುರುವರ ಬಂದನೊ ಪ
ಬಂದಿ ಜನರು ಮುದದಿಂದ ಬಹುಪರಾಕೆಂದು ನುಡಿಯಲಾನಂದ ಬೀರುತ ಬಂದನೊ ಅ.ಪ.
ಕ್ಷಿತಿ ಸುರಪತಿ ಶುಭಮತಿ ಬಲ್ಮತದವರೊಯತಿ ಪರರತಿಶಯ ದಶಮತಿ ಸಂ-ಸ್ರ‍ಕತ ಭಾಷಣದವರೊ ಭಯಹರಣನೆಂಬೊ ವಾ-ರುತಿಯ ಕೀರುತಿಯ ಪೂರುತಿಯ ಕೇ-ಳುತ ಮಹಿಮಾಂಗಣಕಥಿಸುತ ಗ್ರಂಥಿಸುತ ತುತಿಶುತನುತಿಸಿ ಯತಿ ಶಿರೋಮಣಿಗೆರತುನ ಖಚಿತವಾದಾರುತಿಯ ಬೆಳಗಿರೆ ೧
ಶರಣರ ಸುರತರು ವರದ ಶಿಖಾಮಣಿಯೊಮುರಹರ ಚರಣಾಂಬುಜ ವರ ಮಧುಕರ ಸಿರಿಪರಮಹಂಸರ ಧಣಿಯೋ ಕೋವಿದ ಬುಧರೊಳು ಮದಕರಿಯೋ ಶುಭ ಧೊರೆಯೋ ವಾಗ್ಝರಿಯೋಸರಸಾರ್ತಿ ಜನಗಳ ನೆರೆಸುತಾದರಿಸುತಾಬಲು ಸುಖ ಸುರಿಸುತಾ ದರಿದ್ರವ ತರಿದುಪೊರೆದೂ ಕರೆದವರಿಗೆ ಕೈ-ಶರೆಯಾಗುವೆನೆಂಧರುಷದಿ ಗುರುವರ ಬಂದನೊ ೨
ಬಗೆ ಬಗೆ ಮಣಿಗಳು ಬಿಗಿದ ಬಿಳಿಗೋಡಿಗಳೊ ವಾಲಗ ಘೊರ್ಮಿಡೆ ಭಟರುಗಳ ಹೆಗಲ ಮ್ಯಾಲೆಝಗ ಝಗಿಸುವ ಛಡಿಗಳೊ ಕುಣಿಕುಣಿದಾಡುವವರಹಿ ವೇಣಿಗಳೋ ವಾಣಿಗಳು ಶ್ರೀಣಿಗಳು ಶೋಭಿಸೆಸುಜನರು ಕೈ ಮುಗಿವರು ನಗುವರುಸಂಭ್ರಮದಿಂದ ಬಿಗಿವರು ದೃಗಾರೋಢನದಿಜಿಗಿದು ಅಘದೂರೊಗೆದ ಜನರೊಳುವೆಗ್ಗಳದಲಿಂದಿರೇಶನ ಭಕುತಾಗ್ರಣಿ ಬಂದನೊ ೩
(ಇಲ್ಲಿ ವರ್ಣಿತವಾದ ಯತಿಗಳು ಯಾರೆಂದು ತಿಳಿಯದು.)

೮೪
ಬಂದಾನೊ ನಂದಸುತ ಈ ಮಂದಿರದಿ ಪ
ಮುರಳಿಯನೂದುವನು ತುರುಗಳ ಕರೆಯುವನುಸರಸಿಜಾಕ್ಷರೆ ನಮ್ಮ ಶರಣರಂಗಳದೊಳು೧
ತುರುಗಳ ಕಾಯುವನು ಸರಗಳ ಮುಡಿದಿಹನುಸರಣೀಯೊಳಗೆ ಮುದ್ದು ಚರಣವನಿಕ್ಕುತ ೨
ಅರಳೆಲೆ ತೂಗುವನು ಕೃಷ್ಣ ಅರಗಿಣಿಯಂತಿಹನುಹರುಷವ ಬಡಿಸುತವರ ಇಂದಿರೇಶನು ೩

೮೫
ಬಂದು ಕೂಡೋ ನಂದ ಬಾಲನೆ ಪ
ಬಂದು ಕೂಡೋ ನಂದ ಬಾಲನೆ ಇಂದು ಮುಖವನೋಡಿ ಸ್ತುತಿಪೆಬಂಧದೊಳು ವಂದಿಸುತ ಆನಂದವನು ಪೊಂದುವೆನಾ ೧
ಬಾಲಕೃಷ್ಣ ನಿನ್ನವೆರಡು ತೋಳು ತಾರೋ ಅಪ್ಪಿಕೊಂಬುವೆಭಾಳಾ ದಿನ ತವಲೀಲೆ ಕೇಳದೆ ಮನ ತಾಳದಿಹುದು೨
ಮುರಳಿ ಸ್ವರದಿ ಭೂಷಿತಾನನ ತ್ವರದಿ ತೋರೋಉಮ್ಮ ಕೊಡುವೆಕರುಣಾನಿಧಿ ಇರಲಾರೆನು ಮರುಳಾದೆನು ತವ ಪಾದಕೆ ೩
ಇಂದಿರೇಶ ಇಷ್ಟು ಜನುಮ ಹಿಂದೆ ಕಳೆದೆ ನಿನ್ನ ನೋಡದೆಇಂದಿರೆಯ ಪೊಂದಿಹ ನಂದಾತ್ಮಜ ಬಂದು ಪೊರೆಯೋ ೪

೨೪
ಬಂದು ಪೊರೆಯೆಲೊ ಇಂದಿರೇಶಾ ಎನ್ನವಂದಿಸುವೆನೂ ಸಿಂಧುಶಯನ ಬೇಗ ಪ
ಶಿಷ್ಟರ ಸಂಗತಿ ಕೊಟ್ಟು ಕಾಯೊ ಮತಿಭ್ರಷ್ಟನಾದೆನತಿ ಧಿಟ್ಟ ರಘುಪತಿ ೧
ಮುಕ್ತಿದಾಯಕನಾ ಭಕ್ತಿಯೊಳ್ ಭಜಿಪರೆಶಕ್ತಿ ಸಾಲದು ಶ್ರೀ ಭಕ್ತವತ್ಸಲನೆ ೨
ವಂದಿತ ಭಕ್ತರ ಚಂದದಿಂ ಪಾಲಿಪಸುಂದರ ಮೂರುತಿ ಸಂದೇಹ ಮಾಡದೆ ೩
ಹಿಂಡು ಬಾಲರೊಡಗೊಂಡು ಗೋಕುಲದಿಪುಂಡು ಮಾಡಿದ ಪ್ರಚಂಡ ಕೃಷ್ಣ ಬೇಗ ೪
ಅಂಗನೆಯರ ವ್ರತ ಭಂಗಗೈಸಿ ತನ್ನಸಂಗವಿತ್ತು ಕಾಯ್ದ ರಂಗನಾಥ ಸ್ವಾಮಿ ೫

೨೫
ಬರುವ ಹಾದಿಯ ಪೇಳೆ ಶ್ರೀಹರಿಬರುವ ಹಾದಿಯ ಪೇಳೆ ಪ
ಬರುವ ಹಾದಿಯ ಪೇಳೆ ಬರುವೆನು ಅಲ್ಲಿಗೆ ಪರಮ ಮಂಗಳ ದ್ರವ್ಯ ಕರದಿ ತೆಗೆದುಕೊಂಡು ಅ.ಪ.
ಉತ್ತರ ದಿಕ್ಕಿನಲ್ಲಿ ಇರುತಿಹ ಉತ್ತಮ ಪುರದಲ್ಲಿಮುಕ್ತ ಜನರು ಅವನ್ಹತ್ತಿರ ಇರುವರು ಇತ್ತ ಬಿಡುವರೇನೇ ಏನೇ ೧
ಗರುಡನ ಏರಿಹನೆ ತೊಡಿಯೊಳು ತರುಣಿಯ ಕೂಡಿಹನೆಶರಣಾಗತರನು ಪೊರೆವಗೋಸುಗ ತನ್ನ ಪುರವಬಿಟ್ಟಿಹನೇನೇ ಏನೇ ೨
ಛತ್ರವ ಪಿಡಿದಿಹರೆ ಚಾಮರ ಸುತ್ತಲು ಬೀಸುವರೇಮತ್ತೆ ಘನ್ನೋದಕ ದಾಟಿ ಬ್ರಹ್ಮನ ಮನಿ ಹತ್ತಿರಬಂದಿಹನೇ ಏನೇ ೩
ಸುರಪುರ ಬಿಟ್ಟಿಹನೆ ಕರಿಪುರ ಹತ್ತಿರ ಬಂದಿಹನೆಸ್ಮರಿಸಿ ದ್ವಾರಕೆಯನು ಕುರುಕುಲದಲ್ಲಿ ವಸ್ತಿ ಇರಳುಮಾಡಿದನೇನೇ ಏನೇ ೪
ಇಂದು ಈ ಪುರದಲ್ಲಿ ಮನ್ಮನ ಮಂದಿರ ಮಧ್ಯದಲೀಇಂದಿರೇಶನು ಕೃಷ್ಣ ಸುಂದರ ಮೂರುತಿ ಬಂದು ತೋರುವನೇ ನೇ ೫

೧೧೧
ಬಾರೆ ನಮ್ಮನಿತನಕ ಭಾಗ್ಯದ ದೇವಿ ಬಾರೆ ನಮ್ಮನಿತನಕ ಪ
ಬಾರೆ ನಮ್ಮನಿತನಕ ಬಹಳ ಕರುಣದಿಂದ ಜೋಡಿಸಿ ಕರಗಳ ಎರಗುವೆ ಚರಣಕೆ ಅ.ಪ.
ಹರಡಿ ಕಂಕಣ ದುಂಡು ಕರದಲ್ಲಿ ಹೊಳೆಯುತಸರಗಿ ಸರವು ಚಂದ್ರಹಾರಗಳಲೆಯುತ೧
ಜರದ ಪೀತಾಂಬರ ನಿರಿಗೆಗಳೆಲೆಯುತತರಳನ ಮ್ಯಾಲೆ ತಾಯಿ ಕರುಣವಿಟ್ಟು ಬೇಗನೆ೨
ಮಂದಗಮನೆ ನಿನಗೆ ವಂದಿಸಿ ಬೇಡುವೆಇಂದಿರೇಶನ ಕೂಡ ಇಂದು ನಮ್ಮನಿತನಕ ೩

೧೪೬
ಗಂಗಾನದಿ
ಬಾರೆ ಬಾರಮ್ಮ ಜಾನ್ಹವೀದೇವಿಹರಿಭಕುತರ ಕಾಯಿ ಪ
ಬಾರೆ ಬಾರೆ ಪುರವೈರಿ ಸಿರಸ್ಥಿತೆಮೂರು ಲೋಕಗಳ ವಾರಣ ಮಾಡುವಿ ಅ.ಪ.
ಮಾರಜನಕ ಚರಣೋದ್ಭವಿತೆ ನೀರಜ ಶುಭವಸ್ತ್ರೆಸಾರಸಾಯತ ಸುಂದರ ನೇತ್ರೇಚಾರು ಸುರಗಿ ಮುತ್ತಿನ್ಹಾರ ಕುಂಡಲನೊಸ-ಲ್ಹೀರ ಮಸ್ತಕವಿದು ಸಾರಸಭೂಷೆ ೧
ಹರಿಯಾ ಸ್ನಾನೋದಕದಲಿ ನೀನಿರುವಿವರ ವೀಳ್ಯದಲಿರುವಿಹರಿಯಾ ತರುಣಿಯನೆ ನೀ ಪಡೆದಿರುವಿ೨

೧೧೨
ಬಾರೆ ವೆಂಕಟರಮಣಿ ಶ್ರೀದೇವಿ ನೀ ಬಾರೆ ವೆಂಕಟರಮಣಿ ಪ
ಬಾರೆ ವೆಂಕಟರಮಣಿ ನಾರಾಯಣಿ ಕೇಳುಚಾರು ವದನೆ ಉಪಹಾರ ಕಾಲಕ್ಕೆ ನಿತ್ಯ ಅ.ಪ.
ಏನು ಪುಣ್ಯವೆ ನಂದು ಪಾರಾಯಣನೀನು ಕೇಳುವಿ ಬಂದುಹೀನ ಮಾನವನಿಗೆ ನೀನು ಬರುವಿ ಎಂಬೊಎ್ಞÁನವಿಲ್ಲದೆ ಉಚ್ಚ ಸ್ಥಾನದೊಳಗೆ ಬಾರೆ ೧
ಸ್ವಪ್ನದೊಳಗೆ ಬರುವಿ ಶ್ರೀದೇವಿ ನೀಕ್ಷಿಪ್ರದಿಂದಲಿ ಪೋಗುವಿಸರ್ಪಶಯನ ನಮ್ಮಪ್ಪ ಗೋಕುಲ ಬಾಲಅಪ್ಪಿಕೊಳ್ಳುವ ಸುಖ ಒಪ್ಪಿಸಬೇಕಮ್ಮ ೨
ಮಂಗಳಾಂಗಿಯೇ ನಿನ್ನ ನೋಡದೆ ಬಲುಭಂಗಪಡುವೆನಮ್ಮಗಂಗಜನಕ ಸಿರಿ ರಂಗನಂಕದಿ ಕೂತುಭೃಂಗಕುಂತಳೆ ಹೃದಯಂಗಳದೊಳಗಾಡೆ ೩
ಎಲ್ಲ ದೇವತೆಗಳನೆ ತಪಾದಿಯೆಪುಲ್ಲ ವಾರಿಜನಯನೆಗೊಲ್ಲ ಬಾಲನಪಾದ ಪಲ್ಲವ ನೋಡದೆನಿಲ್ಲಲೊಲ್ಲದು ಮನಸೊಲ್ಲು ಲಾಲಿಸೆ ತಾಯೆ೪
ಇಂದಿರೇಶನ ರಾಣಿ ಎನ್ನಯ ಮನೋ-ಮಂದಿರದೊಳು ಬಾ ನೀನಂದಗೋಕುಲ ಬಾಲಾನಿಂದು ಕರದೊಳೆತ್ತಿತಂದು ತೋರಿಸೆ ಅರವಿಂದನಿಲಯೆ ಲಕ್ಷ್ಮಿ ೫

೨೭
ಬಾರೋ ಗೋಪಿಯ ಬಾಲಾ ಮಾನಸದೊಳುತೋರಿಸೋ ಮುಖಕಮಲಾ ಪ
ಸೇರಿಸೊ ನಿನ್ನ ಪದ ಸಾರಸಯುಗಳ-ಪಾರ ಸದ್ಗುಣ ಶೀಲ ಅಪ್ಪಯ್ಯ ಕೃಷ್ಣಅ.ಪ.
ವಕ್ತ್ರಲಂಬಿತವಾಲಾ ಮಣಿಮಯ ಚಿತ್ರಶೋಭಿತ ಭಾಲಾರತ್ನಕುಂಡಲ ನವಮೋಕ್ತಿಕ ಮಾಲಾ ಭೃತ್ಯಭಾಷಿತ ಪಾಲಾ ೧
ಕಂಕಣಾಂಗದ ಭೂಷಾ ಮಣಿಮಯಾಲಂಕೃತ ಶುಭ ವೇಷಾಶಂಕರಮುಖ ಸುರಾತಂತಂ ವಿನಾಶ ಕಿಂಕರ ಜನ ಘೋಷ ೨
ವೇದವನಿತ್ತವನೇ ವಾರಿಧಿಯೊಳು ಭೂಧರ ಪೊತ್ತವನೆಮೇದಿನಿಯನು ಕೋರಿಲ್ಯಾ ಧರಿಸಿದನೇ ನರ ಮೃಗದಾ ಮೊಗದವನೆ ೩
ಧಾರುಣಿ ಅಳೆದವನೆ ಭಾರ್ಗವ ಸೀತಾ ಚೋರನ ಗೆಲಿದವನೆ ನಾರಿಮೋಹನ ಜಿನಾಚಾರ್ಯ ಸುತನೆ ಘೋರ ಮ್ಲೇಂಛರ ಹರನೇ ೪
ಮಂದಹಾಸನ ಮುಖನಾ ಸುರವರವೃಂದ ಶೋಭಿತ ಸದನಾಇಂದಿರೇಶನ ಯದುನಂದನ ಕರುಣಾಸಿಂಧು ಸಾಮಜ ಶರಣಾ ೫

೧೨೫
ಬಾರೋ ನಮ್ಮನಿಯೊಳಗೆ ಭಾರತಿಪತಿ ಪ
ಬಾರೋ ನಮ್ಮನಿಗೀಗ ನೀರಜಾಕ್ಷನು ನಿನ್ನಸೇರಿದ ಜನರೊಳು ಭಾಳ ಬಹಳೇ ಪ್ರೀತಿಯ ಮಾಳ್ಪ ಅ.ಪ.
ಹರಿಯ ಮಂಟಪದೊಳು ಸರಸಿಜಾಕ್ಷನ ಮುಂದೆಇರಿಸಿ ನಿನ್ನನು ನಿತ್ಯಾ ಸ್ಮರಿಸಿ ಪೂಜಿಪೆ ಸ್ವಾಮಿ ೧
ನಿನ್ನ ಸೇರಿದ ಕಪಿಯನ್ನು ಪೊರೆದ ಹರಿನಿನ್ನ ಸೇರದ ವಾಲಿಯನ್ನು ಘಾತಿಸಿದಾ ೨
ನಂತ ತೀರ್ಥರೆ ದಯದಿಂದ ನಮ್ಮೊಳು ಭವ-ಬಂಧನ ಬಿಡಿಸೆಂದು ಇಂದಿರೇಶಗೆ ಪೇಳು ೩

೨೮
ಬಾರೋ ಬಾರೆಲೋ ಹೃದಯ ವಾರಿಜದೊಳುಬಾರಿ ಬಾರಿಗೆ ಕರೆವೆ ನಿನ್ನ ಮೋರೆ ತೋರೆಲೋ ಪ
ಪುಟ್ಟ ಪಾದವ ಕ್ಷಿತಿಯೊಳಿಟ್ಟು ಮೋದವ ಕೊಟ್ಟು ಭಕ್ತರಿಗೆ ತೋರೋ ಕೃಷ್ಣ ರೂಪವಾ ೧
ಸಿಂಧು ಮಥಿಸಿದಿ ಸುಧೆಯ ತಂದು ಬಡಿಸಿದಿ ಕೃಷ್ಣಾಚಂದದಿಂದ ದೇವತೆಗಳ ವೃಂದ ಸಲಹಿದಿ ೨
ಇಂದು ವದನನೆ ಶಾಮಸುಂದರಾಂಗನೇಆನಂದದಿಂದ ತೋರೋ ಎನಗೆ ಕುಂಜಹೃದಯನೇ ೩
ಇಂದಿರೇಶನೆ ಭವೇಂದ್ರ ವಂದ್ಯನೆ ಕೃಷ್ಣಾ ನಿನ್ನಕಂದನೆಂದು ಕರೆಯೋ ಎನ್ನ ನಂದ ಬಾಲನೇ೪

೨೯
ಬಾರೋ ಬಾಲಾ ಬಾ ಅಪ್ಪುವೆ ತಾರೋ ತೋಳನು ತಾಭೂರಿ ದೃಷ್ಟಿಯ ಮಾಲಿಯನ್ಹಾಕಿದಾಪಾರ ಮಹಿಮ ಬಾ ಪ
ಐದು ವರುಷ ಬಾ ಎನಗೆ ಬೋಧವ ನೀಡಿದಿ ಬಾಸಾಧು ಸೇವಿತ ಶ್ರೀಧರ ಭೂಧರ ಗೋಧರಧರನೇ ಬಾ ೧
ಗೌರ ಮುಖನೆ ಬಾ ಕರುಣಾವಾರಿ ನಿಧಿಯೇ ಬಾಆರ ಮಾತನು ಹಚಿಕೋ ಬ್ಯಾಡೆಲೆ ಸಾರಿದ ಕೃಷ್ಣ ೨
ಸಿಂಧುರ ವರದ ಬಾ ಗೋಪಿ ಬಂಧನ ಹರಣಾ ಬಾಮುಂದೆ ನಿಲ್ಲುತ ಮಾತುಗಳಾಡಿಸಿ ಇಂದಿರೇಶ ಬಾ ೩

೩೦
ಬಾದರಾಯಣರು
ಬಾರೋ ಬೇಗನೆ ಬಾದರಾಯಣ ನಿನ್ನಸಾರುವೆ ಸಂತತ ಪ
ಗ್ರಂಥಗಳನು ತೋರಿಸು ತವ ಸುಸ್ಮಿತ ವದನದೇಹಗಾರದೊಳಗೆ ತಪ್ಪಿಸಭಿಮಾನ ಅ.ಪ.
ಬಾದರಿ ಸುಖ ವಲಜೆ ಮುನಿತವ ಪೂರ್ಣ-ಬೋಧ ವೈಶಂಪಾಯನ ಮುನಿಸಾಧು ಸಂಸೇವಿತ ಪದಾಂಭೋಜಿನೀ ಯೆಮಗ-ಗಾಧ ಮಹಿಮೆ ತೋರಿಸೋ ೧
ವೃಂದ ಚಕೂತ ಮುನಿಗಳಿಗೆ ಸುಖಸಂದೋಹದಾರ್ಥ ಪೇಳುತಿರಲುಬಂದ ಸಂಶಯ ಹರಿಸುತ ಬೇಗ ಮಹಾ-ನಂದ ನೀಡಿದಿ ಕೇಳಿದವರಿಗೆ ೨
ಸತ್ಯವತಿಯ ಸುಕುಮಾರನೆಧಾತ್ರಿಯೊಳಗೆ ಪುಣ್ಯಚರಿತನೆಸುತ್ತಮುತ್ತಲೂ ಶೇಷಶಯ್ಯನೆ ಎನ್ನನೇತ್ರಕ್ಕೆ ಪೊಳಿ ಇಂದಿರೇಶನೆ ೩

೮೬
ಬಾರೋ ಮನೆಗೆ ಕೃಷ್ಣಯ್ಯ ಕೃಷ್ಣಾಬಾರೋ ನಮ್ಮ ಮನೆಗೆ ಪ
ಬಾರೋ ನಮ್ಮ ಮನೆಗೆ ವಾರೀಜನಾಭನೆಬಾರಿ ಬಾರಿಗು ನಿನ್ನ ಸಾರಿ ಕರೆವೆ ಕೃಷ್ಣ ಅ.ಪ.
ಭಾನು ಭಾಸನೆ ನಿನ್ನ ವೇಣುನಾದವ ಕೇಳಿಧ್ಯಾನಗೆಟ್ಟರು ಗೋಪಿ ಮಾನುನಿಯರು ಸ್ವಾಮಿ ೧
ಮಂದಾರ ಮಲ್ಲಿಗೆ ಕುಂದ ಚಂಪಕ ಜಾಜಿವೃಂದ ಶೋಭಿಪ ಮುಖ ಗಂಧವರ್ಚಿಪ ಕೃಷ್ಣ೨
ಇಂದುವದನ ನಿನ್ನ ಚಂದವ ನೋಡಲುದಿವಿಜೇಂದ್ರರು ಬಂದಿಹರು ಇಂದಿರೇಶನೆ ಕೃಷ್ಣ ೩

೧೪೫
ಬಾರೋ ಮೋರೆಯ ತೋರೋನಾರದ ಅಗಾಧ ಬೋಧ ಪ
ಶ್ರೀನಿವಾಸನ ನಾಮ ಲೀಲೆಯಸಾನುರಾಗದಿ ವಾಣಿಜಾಣೆಸೂನೂನ ಪಾಪವ ಹಾನಿಯ ಮಾಡುತ ೧
ಹತ್ತು ನಾಲ್ಕು ಸುತ್ತದೇಶದಿಚಿತ್ರ ಚರಿತನ ವೃತ್ತಿ ನಿತ್ಯದಿವಿಸ್ತರಿಸಿ ಹೇಳುತ ಚಿತ್ತದಿ ಸುಖಿಸುವಿ ೨
ಇಂದಿರೇಶನ ತಂದು ತೋರುವಿಎಂದು ನಿನ್ನನು ಪೊಂದಿ ಬಂದೆನಂದನ ಕಂದನ ಬಂದೀಗ ತೋರಿಸು ೩

೧೨೬
ಬಾರೋ ಹೃದಯ ಸದನಾ ಮುಖ್ಯ ಪ್ರಾಣ ಪ
ಬಾರೋ ಹೃದಯದೊಳು ವಾರಿಜಾಸನ ಪದಏರುವಾತನೆ ದಿವ್ಯ ಕಾರುಣ್ಯ ಸಾಗರ ಅ.ಪ.
ಹರಿಭಕ್ತರೊಳು ನೀನು ಹಿರಿಯನೆಂಬುವ ವಾರ್ತೆಪರಿಪರಿ ಕೇಳುತ ಶರಣು ಬಂದೆನೊ ನಿನ್ನ೧
ಮಂದಗಮನೆ ಕೊಟ್ಟ ಇಂದ್ರಮಾಣಿಕ ಮಾಲೆಕಂಧರದೊಳಗಿಟ್ಟ ಇಂದ್ರಶಯನ ಪ್ರೀಯಾ ೨
ಕಾಳಿ ರಮಣ ಧರ್ಮನಾಳೆ ಎನಲು ಧನ-ನೀಲ ಮಾಣಿಕ್ಯ ಭೂಷಲೋಲ ಭೂಸುರಗಿತ್ತೆ ೩
ಮಾಧವನಾಜ್ಞದಿ ಮೇದಿನಿಯೊಳು ಬಂದುಬಾದರಾಯಣ ಮತ ಸಾಧನೆ ಮಾಡಿದ ೪
ಇಂದಿರೇಶನ ಪಾದ ಮುಂದೆ ಸೇವಿಸಿ ನಿತ್ಯಾನಂದತೀರ್ಥರೇ ನೀವು ಸಂದೇಹವಿಲ್ಲದೆ ೫

೮೭
ಬಾಲನ ಕಂಡಿಹೆನೆ ಗೋಪಾಲನ ಕಂಡಿಹೆನೆ ಪ
ಬಾಲನ ಕಂಡಿಹೆ ಲೀಲೆಯ ಮಾಡುತ ಅಂಬೆ-ಗಾಲಿಕ್ಕುತ ಗೋಕುಲಾಲಯದೊಳಗಿಹಅ.ಪ.
ಮುರಳಿ ಮುಖದೊಳಿದ್ದು ಊದುತ ವೃಜದಿಸರಸಿ ಗೋಪಿವನಿತೆರ ಮೋಹಿಪ ೧
ಕರದೊಳು ಕಂಕಣ ವಂಕಿ ಪೊನ್ನುಂಗುರಅಲಂಕೃತ ಪೂರ್ಣ ಅಕಳಂಕ ಇಂದು ವಕ್ತ್ರನ ೨
ಕಾಶೀ ಪೀತಾಂಬರ ಭೂಷಿತ ಕಟಿ ಮಂದ-ಹಾಸ ಮಾಡುತಲಿದ್ದ ಇಂದಿರೇಶನ ಹೇ ಸಖಿ ೩

೮೮
ಬಾಳು ಪ್ರೀತಿಯಲಿ ನಮ್ಮ ಬಾಲಕೃಷ್ಣಗೆ ದ್ರಾಕ್ಷಾ-ದೋಳು ಬಂದಿಹ ಗೋಕುಲಾಲಯದಿಂದ ಪ
ಪುಟ್ಟ ಕರದಿ ಚೌಕಿಲಿಟ್ಟ ದ್ರಾಕ್ಷದ ಬೆಳ್ಳಿಬಟ್ಟಲಾ ಪಿಡಿಯುತ ದೃಷ್ಟಿಗ್ಹೇಳಿದಾನು ೧
ಉದ್ಧವಾ ಪದವನ್ನು ಶುದ್ಧವಾಗಲೆ ಪಾಡೆಮುದ್ದು ಕನಕಕಾಂಬೆ ಉದ್ದ ಬಾಲಕನು ೨
ಸುಂದರ ಬಾಲಕಾ ಇಂದಿರೇಶನೆ ಇವಇಂದು ನೋಡುತ ಮುಖ ನಂದವಾಗಿಹುದು ಆನಂದವಾಗಿಹುದು ೩

೮೯
ಬಾಳೆ ಕಿತ್ತಳೆ ಜಂಬುದ್ರಾಕ್ಷಿ ರಸಾಲ ಫಣಸ ಖರ್ಜೂರ ಫಲಗಳ ಬಾಲಕೃಷ್ಣಗೆ ಮನುಜಾ ಸಾಯಂಕಾಲ ಪ್ರಾರ್ಥಿಪುದು ಪ
ಪರಮಪುರುಷನು ಪೂಜೆಕಾಲದಿಸುರರು ಕರ್ಮಗಳಿಗೆ ಚಿಂತಿಸಿಪರಿಚರಿಸುವ ಪುರುಷ ಮಾಧವಚರಣ ಪೊಂದುವನು ೧
ನಾನು ಮಾಡುವ ಕವಿತೆ ಎಲ್ಲವವೇಣು ಬಾಲನ ಮುಂದೆ ಪೇಳುವೆಸಾನುರಾಗವ ಮಾಡಲೆನ್ನೊಳುಮೌನಿ ನಾರದರು ೨
ಇಂದಿರೇಶನ ಮುಖವ ನೋಡುತನಂದಗೋಪಗೆ ಈ ಸುಶೃತಿಗಳಿಂದವೃಂದ ಚರಿಸುತ ತತ್ವಾದಾಂಬುಜದ್ವಂದ್ವಕರ್ಪಿಸುವೆ ೩

೯೦
ಬಿಡು ಎನ್ನ ಶೆರಗನು ಬಾಲಕೃಷ್ಣಾಉಡುಗಿ ದೇವರ ಮನಿ ಬರುವೆ ಬೇಗ ಪ
ಅಂಗಳ ಥಳಿ ಹಾಕಿ ರಂಗವಲ್ಲಿಯ ಹಾಕಿತಂಗಳ ಮೊಸರನ್ನಾ ಕಡೆಯಲ್ಹಾಕಿಬಂಗಾರದ ಬಟ್ಟಲೊಳು ರಂಗ ಬೆಣ್ಣೆಯನೀವೆಕಂಗಳನೆ ತೆಗಿ ಬೀರು ಮಂಗಳವಾ೧
ಹಾಸಿಗೆ ಬಿಟ್ಟೇಳು ವಾಸುದೇವನೆ ನಿಮ್ಮಹಾಸಿನ ತೊಟ್ಟಿಲೊಳು ಮಲಗು ಕೂಸಾಏಸು ಹುಡುಗರೆಲ್ಲ ಸೋಸಿಲಿ ಕರೆವರುದೋಸೆ ಕೊಡುವೆ ತಿನ್ನೋ ಏಳು ಬೇಗ ೨
ತರುವು ಕಟ್ಟಲಿ ಬೇಕು ಕರುವು ಕಾಯಲುಬೇಕುತೊರೆದು ಮಲಿಯನುಣ್ಣು ಏಳು ಬಾಲಜರದ ಕುಂಚಿಗೆ ಹೊದ್ದು ಹೊರಗೆ ಬಂದಿಹ ರಾಮಕರೆಯುತ್ತಲಿರುವನು ಕಣ್ಣೆತ್ತಿ ನೋಡು ೩
ಕೋಳಿ ಕೂಗುತಲಿದೆ ಕಾಳು ಕಡಿವೆ ಹಾಕುಏಳು ಗಿಳಿಯು ನಿನ್ನ ಕೇಳುತಲಿವೆಪಾಲು ಸಕ್ಕರಿನಿತ್ತು ಸಾಲು ಕೋಕಿಲ ಹಿಂಡುಗಾನ ಮಾಡುತಲಿವೆ ಏಳು ಬೇಗ೪
ಅಂದ ಮಾತನು ಕೇಳಿ ಆ ಕಂದ ಎತ್ತಿಕೋ ಎನ್ನಒಂದು ಬಟ್ಟಲದೊಳಗೆ ತಂದುಕೊಡು ಆಡುವೆಎಂದು ತಾಯಿ ಚಿನ್ನಾ ಹಿಂದೆ ಸೆರಗಪಿಡಿದು ಇಂದಿರೇಶ ೫

೯೧
ಬಿಸಿ ನೀರಿನಲಿ ಮೋರೆ ತೊಳೆಯೆ ಅಮ್ಮಬಿಸಜಾಕ್ಷ ವೆಂಕಟ ವಸುದೇವನ ಸೂನು ಪ
ನಡೆದು ಬರಲು ಒಬ್ಬ ಮಡದಿಯುಕೊಡಿರಿ ಸ್ಥಳವು ಎಂದು ನುಡಿಯುತಲಿಗಡಿಬಿಡಿಯಲಿ ನಮ್ಮ ನಡುಮನೆಯೊಳು ಬಂದು ಇಂಥಕಡುಮುದ್ದು ಬಾಲನ ಪಡೆದು ತೋರಿದಳಂತೆ ೧
ಮಾತೆ ಬಾಣಂತಿಯು ನವಜಾತ ಶಿಶುವು ಸದ್ಯೋಜಾತನ ನಿಶೇಷ ಧಾತ್ರಿಧರನಾಥಾಅತಿಶಯ ಥಂಡಿ ಪ್ರಾತಃಕಾಲವು ತವಸೀತವಾಗಿದೆ ಎಂದು ಭೀತಿ ಉಂಟಾಗಿದೆ ೨
ಒಂದು ನಾಲಕು ದಿನ ಸಂಧಿಸಿ ಗುಡಿ ವೃಜದಿಂದ ಕರದಿ ತನ್ನ ಕಂದನ್ನೆತ್ತಿಇಂದಿರೇಶನ ಪ್ರಿಯೇ ಒಂದಿನಿತು ಧ್ಯಾನಮಂದಿರದೊಳು ಬಂದು ಚಂದ ತೋರಿದಳಂತೆ ೩

೩೧
ಬೀಸಣಿಗೆಯಿಂದಲಿ ಬೀಸೋರು ಪ
ಬಾಳದ ಬೇರ ಬೀಸಣಿಗೆಯಲಿ ಬೀಸೋಳೀಸಮಯದಿ ನಿಂತು ವಾಸುದೇವನಿಗೆ ಅ.ಪ.
ಅಂಬೆಯು ನಿಂತಿಹಳು ಎದುರು ಚಿನ್ನಗೊಂಬೆಯಂತ್ಹೊಳೆವಳುತುಂಬಾ ಭರಣ ಭೂಷಿತಾಂಬುಜ ಕರದೊಳುಲಂಬಿಸಿ ವ್ಯಜನವ ಸಂಭ್ರಮದಲಿ ಸರಸಿಜಾಕ್ಷ ತಾನು ೧
ಮಲಯ ಜಾಲಗ ಮಾರುತಾದೋದ್ಭವಹಲವು ಸಾರವು ಬೀರಿತಾ ನಳಿನಾಕ್ಷಿನೀರಜಕರ ನಿಲಯದೊಳಗೆ ಪೊಕ್ಕುಹಲಧರನುಜ ನಿನ್ನ ಬಲು ಸೇವಿಸುವ ನಿತ್ಯ ೨
ತಂದೆಯ ಸೇವೆಗಾಗಿ ವ್ಯಜನದೊಳುಮಂದ ಮಾರುತನಾಗಿ ಇಂದಿರೇಶನ ಸರ್ವಸುಂದರಾಂಗವ ಮುಟ್ಟಿಮುಂದಿನ ಸಾಯುಜ ಇಂದು ಭೋಗಿಸುವನು ೩