Categories
ರಚನೆಗಳು

ಉರಗಾದ್ರಿವಾಸ ವಿಠಲದಾಸರು

ತಮಗೆ ಸ್ವಪ್ನದಲ್ಲಿ ಪರಮಾತ್ಮನ ದರ್ಶನವಾದುದನ್ನೂ
ಆತ್ಮನಿವೇದನೆ
೬೩
ಅಚಿಂತ್ಯಾದ್ಭುತ ಮಹಿಮ ಈ ಸಚರಾಚರದೊಳು
ಪ್ರಚುರನಾಗಿಹೆ ದೇವಾ ಮುಚುಕುಂದವರದಾ ಪ
ಅಚಲಭಕುತಿಯು ನಿನ್ನ ಚರಣದಿ
ಕಿಂಚಿತಾದರೂ ಪ್ರಚುರಮಾಡಿಸು
ಅತಿಚಂಚಲನು ಬಲು ವಂಚಕನು ನಾ ಅನು-
ಚಿತೋಚಿತ ಕರ್ಮವರಿಯೆನೋ ಅ.ಪ
ವಿಪಿನವಾಸದಿ ಎನಗೆ ವಿಪರೀತವನು ತೋರಿ
ಅಪರಾಧವೆಣಿಸದೆ ಪಾಲಿಸಿದೇ
ಕೃಪಣವತ್ಸಲ ನೀನೇ ಕೃಪೆಮಾಡಿ ಸ್ವಪನದಿ
ಅಪರಿಮಿತದ ವಿಶ್ವರೂಪವ ನೀ ತೋರ್ದೆ
ಅಪರಾಧಿ ನಾನಹುದೋ ಸ್ವಾಮಿ ಅಪವರ್ಗಪ್ರದನು ನೀನು
ಸಫಲಗೊಳಿಸಿದೆ ಎನ್ನ ಮನದನು-
ತಾಪವನು ಪರಿಹರಿಸಿ ಕಾಯ್ದೆ
ಈಪಯೋಜಾಂಡದೊಡೆಯ ಬಿಡದೆ
ನಿನ್ನಡಿದಾವರೆಯ ನಂಬಿದೆನೋ
ಶ್ರೀ ಪರಮಹಂಸರಿಂದ ನುಡಿಸಿದ ರಹಸ್ಯಗಳು ಅದುಏನೋ
ಶ್ರೀ ಪುರುಷೋತ್ತಮನೆ ನೀನೆನ್ನಭಯಹಸ್ತದಿ
ಕರೆದ ಪರಿಯೇನೋ ಅದನೊಂದನರಿಯೆನೊ
ಈಪರಿಯ ಕರಚರಣದಲಿ ಚರಿಸಿದ
ಅನುಪಮ ಕ್ರಿಯೆಯ ನೋಡಿ ಮನದೊಳು
ಸುಪುತಕಾಲದಿ ತೈಜಸನೆ ನೀನೆನ್ನ
ಪುಳುಕಾಂಕಿತನ ಮಾಡಿದೇ ೧
ಹಲವು ಜನ್ಮವನೆತ್ತಿ ಹೊಲಬುಗೆಟ್ಟು ತಿರುಗುತ
ಫಲವಿಲ್ಲದೆ ಅಮಿತ ಕಾರ್ಯವನೆಸಗೀ
ಬಲು ಯಾತನೆಗೊಂಡು ಇಳೆಯೊಳು ಬಾಳೀ ದು-
ರ್ಬಲನಾಗಿದ್ದರು ಎನ್ನ ಛಲವು ತೊಲಗಲಿಲ್ಲ
ಜಲಜನಾಭನೆ ನೀನೆ ಕರುಣಿಸಿ ಸಲಹದಿರ್ದೊಡೆ ಪ್ರ-
ಬಲರೆನ್ನನು ಕವಿದು ಮನಚಂಚಲವ ಪುಟ್ಟಿಸೀ
ವಲೀಮುಖನಂತಾಡಿಸುವರೋ
ಶ್ರೀಲೋಲನೆ ನೀನೆನ್ನ ಮನದ
ಕಲಿಮಲವನ್ನೆ ಪರಿಹರಿಸುವುದೋ
ತಿಲಮಾತ್ರ ನಿನ್ನನು ಧೇನಿಸಲು
ಮನದಿ ಎಡೆಯು ದುರ್ಲಭವೋ
ಒಲುಮೆಯಿಂದಲಿ ಸಾಧಿಸಲು ಎಲ್ಲೆಡೆಯ ಸರ್ವತಂತ್ರ
ಸ್ವಾತಂತ್ರ್ಯ ನಿನ್ನದೋ ಭೋ ಜಗತ್ಪತೇ
ಕಾಲನಾಮಕ ನೀನೆ ಆಪತ್ಕಾಲಬಾಂಧವವೆಂದು ನಂಬಿದೆ
ಜಾಲಮಾಡದೆ ಎನ್ನ ಜೀವಿತದಲ್ಪಕಾಲದಿ ಕರುಣೆ ತೋರೈ೨
ತುಷ್ಟನೆಂತಾಗುವೆಯೊ ಭ್ರಷ್ಟಪಾತಕಿ ನಾನು
ಕಷ್ಟವಲ್ಲವೋ ನಿನಗೆ ಶ್ರೇಷ್ಟಮೂರುತಿಯೆ
ಇಷ್ಟಮೂರುತಿಯೆಂದು ಇಷ್ಟು ನುಡಿದೆನೊ
ಸಾಷ್ಟಾಂಗ ನಿನ್ನೊಳು ಇರಲೋ ಇಷ್ಟೇ ಎನ್ನದೊ ದೇವಾ
ಕಷ್ಟಕಷ್ಟವೊ ಬೆಟ್ಟದೊಡೆಯ
ಕೊಟ್ಟುದಷ್ಟು ನಿನ್ನದಯ್ಯಾ ಇಷ್ಟೆಬೇಡುವೆ ಎನಗೆ ಎ-
ಳ್ಳಷ್ಟು ಭಕುತಿಯ ಕೊಡದಿರುವೆಯಾ
ಸೃಷ್ಟಿಸ್ಥಿತಿಲಯನಿಯಮನಾದ್ಯಷ್ಟ
ಕತೃತ್ವವು ನಿನ್ನದೊ ಅಷ್ಟಾಂಗಯೋಗದಿ
ತುಷ್ಟಪಡಿಸೆ ತನುಮನೋಧಿಷ್ಟಾನವು ನಿನ್ನದೊ
ಶ್ರೇಷ್ಠಮೂರುತಿ ಸುಲಭದಲಿ ನೀ
ದೃಷ್ಟಿಗೋಚರವಾಗುವುದು ಇನ್ನೆಂತೋ ಹಾ ಕಷ್ಟಕಷ್ಟವೋ
ಸೃಷ್ಟಿಯೊಳು ನಾನೆಷ್ಟರವ ನಿನ್ನಿಷ್ಟಬಂದಂತಾಗಲಿ ಭವ-
ಕಷ್ಟಪರಿಹರಿಸೆನ್ನ ಕಾಯೋ
ಶ್ರೀ ವೇಂಕಟೇಶ ಉರಗಾದ್ರಿವಾಸವಿಠಲ ೩

ಶ್ರೀ ವಾಯು ದೇವರ ಮೂಲ ರೂಪದ
೩೭
ಹನುಮ – ಭೀಮ – ಮಧ್ವರು
ಅಮಮ ಎನಿತÀದ್ಭುತಮಹಿಮೆ ಪೊಗಳನು
ಪಮ ದೇವ ಜೀವೋತ್ತಮ ಸುರಸಾರ್ವಭೌಮ ಹನುಮ ಪ
ಭೀಮ ರಿಪುಕುಲಧೂಮ ಯತಿಕುಲಸೋಮ
ಶ್ರೀಮದಾನಂದ ಮುನಿಮಹಿಮಾಅ.ಪ
ಜೀಯ ಈ ಪಯೋಜಾಂಡದೊಳಿನ್ನೆಣೆಯಿಲ್ಲ ಬಲದೊಳು
ಶೌರ್ಯ ಕಾಯನೋಡಲು ಆಖಣಾಶ್ಮಸಮನು
ನಿನ್ನೊಳು ಹರಿಯರೂಪಗಳೆನಿತು ಇಹುದಯ್ಯ
ಶ್ರೀಯರಸನ ಪೂರ್ಣಕರುಣಾಕಟಾಕ್ಷ
ನಿನ್ನಲ್ಲಿಹುದು ಇನ್ನೆಷ್ಟಯ್ಯ
ಶ್ರೀಯರಸ ಶ್ರೀ ಶಿಂಶುಮಾರನು ನಿನ್ನ ಮುಖಕಮಲದಲ್ಲಿಹನೂ
ವಾಯುಮೂರುತಿ ನಿನ್ನ ನಾಸಾಗ್ರದೊಳು ಶೋಭಿಪ
ಮತ್ಸ್ಯಮೂರುತಿಯು ಜೀಯ ನಿನ್ನಯ ನಾಸಪೃಷ್ಠದಿ
ಕೂರ್ಮ ಮೂರುತಿಯು ಅಲ್ಲಿ ನೆಲೆಸಿಹನು ನಯನದ್ವಯದಿ
ಕಪಿಲವಿಷ್ಣು ಶ್ರವಣದ್ವಯಗಳೊಳು ಕೃಷ್ಣರಾಮರು
ಆರ್ಯ ಧನ್ವಂತ್ರಿಯು ಗ್ರೀವಲಲಾಟದೊಳು
ನಾರಾಯಣ ಇಹನು ೧
ಅಹಹ ಬಾಹ ದುರಿತದ ರಾಶಿಗಳ ಕಾನನಕೆ ನೀನೆ ದಾವ
ಬಾಹುದ್ವಯಗಳೋಳ್ಕಲ್ಕಿ ಬುದ್ಧರೂಪಿರೆ
ಬಾಹುಬಲವಿನ್ನೆಷ್ಟಯ್ಯ ಅಹುದು ಪವನಹಸ್ತದೊಳ್
ಪಾವನ್ನ ಶ್ರೀ ಬಾದಾರಾಯಣ ಕಂಗೊಳಿಪನಯ್ಯ
ಪಾಹಿ ಪವನನೆ ಪಾದದ್ವಯದೊಳು ಹಂಸನಾಮಕ
ಶ್ರೀ ಹರಿಯು ನೆಲೆಸಿಹನು
ಅಹುದಹುದು ಕೇಶವ ನಿನ್ನ ಪಾದ
ಮಧ್ಯಸ್ಥಾನದಲಿ ಸಲೆ ಬೆಳಗುತಿಹನು
ಮಹಮಹಿಮ ನಿನ್ನಯ ಪಾದಪೃಷ್ಠದಿ
ಹೃಷೀಕೇಶ ಹರಿಯು ನಿಂತಿಹನು
ಇಹರಯ್ಯ ದಕ್ಷಿಣ ವಾಮಜಾನುಗಳಲಿ ಯಜ್ಞ ಶ್ರೀಧರರಿಹರು
ಮಹಿದಾಸವಾಮನ ಕಟಿ ಪ್ರದೇಶದಿ ದಿಟ್ಟರಾಗಿಹರು ೨
ಪ್ರಾಣ ನೀ ಜಗತ್ರಾಣ ವನಮಾಲಸ್ಕಂದನೊಳಿಂದ್ರ ಶೇಷರುಗಳ್
ಪ್ರಾಣವಾಯು ದಿಗ್ದೇವನೆ ನಿನ್ನ
ದಕ್ಷಿಣದಲ್ಲಿಹ ವನಮಾಲೆಯಲ್ಲಿಹರು
ಗುಣನಿಧಿಯೆ ತದುಪರಿ ಸೂರ್ಯವರುಣಅಶ್ವಿನಿಗಳೆಲ್ಲ
ನಿನ್ನಯ ವನಮಾಲೆಯಲಿಹರು
ಎಣಿಸೆ ದಕ್ಷಪ್ರಜಾಪತಿಯು ನಿನ್ನ
ವಾಮ ವನಮಾಲದೊಳಲ್ಲಿ ಇರುತಿಹನು
ಮಣಿದು ಸೇವಿಪ ಜಯಂತ ಮನುಯಮ
ತದನಂತರ ವನಮಾಲೆಯಲ್ಲಿಹರು
ಜಾಣ ಬೃಹಸ್ಪತಿ ದಕ್ಷಿಣ ವನಮಾಲದೊಳು
ಆಶ್ರಯಿಸಿ ತಾವಿಹರು
ಪ್ರಾಣ ಅಪಾನ ವ್ಯಾನೋದಾನ ಸಮಾನ
ವನಮಾಲದಲ್ಲಿಹರು ೩
ಬೋಧ ನಿನ್ನನಾಭೀಕಮಲದಿ
ಪದುಮನಾಭನು ಸಲೆ ಬೆಳಗುತಿಹನು
ಮಾಧವ ಮಧುಸೂದನರು ನಿನ್ನೊಳು
ವಾಮದಕ್ಷಿಣ ಕುಕ್ಷಿಯೊಳಿಹರು
ಹೃದಯಮಧ್ಯದಿ ಪ್ರಾಜ್ಞನಾಮಕ
ಹರಿಮೂರುತಿ ನಿನ್ನಾಂತರದಿಂದ ನಿಂತಿಹನು
ಪಾದಪಾಶ್ರ್ವಗಳಲ್ಲಿ ಋಷಭ ಗೋವಿಂದ ಮೂರುತಿ
ಅಲ್ಲೆ ಇರುತಿಹರು
ಮುದದಿ ನಿನ್ನಯ ವಕ್ಷದೊಳು ಶ್ರೀ ವರಹಮೂರುತಿ
ಅಲ್ಲೆ ನೆಲೆಸಿಹನು
ಎದುರಿಲ್ಲ ನಿನಗೆ ಕಪೋಲದೊಳು ಶ್ರೀ ವಾಸುದೇವನು ಇಹನು
ವಿಧಿವಾಯುಗಳು ನಿನ್ನಯ ವಾಮಭುಜದೊಳು
ಮುದದಿ ನಲಿಯುತಿಹರು
ವಿಧಿ ವಾಯುಸತಿಯರು ದಕ್ಷಿಣಭುಜದೊಳು ನುತಿಸುತಿಹರು ೪
ಪವನಶಕ್ತಿ ಹನ್ನೆರಡೆಲ್ಲ-ನಿನ್ನಯ ಹೃದಯದಾಭರಣ
ಪವನಿಸಿರ್ಪುದು ಕ್ರಮದಿ-ಶಕ್ತಿ ಪ್ರತಿಷ್ಠೆ ಸಂವಿತ್ ಸ್ಪೂರ್ತಿ
ಪ್ರವೃತ್ತಿ ಭವಹಾರಿ ನಿನಗೆ ಕಲಾವಿದ್ಯಾಮತಿ ನಿಯತಿ
ಮಾಯಾ ಕಾಲಪುರುಷ ಈ ಪರಿಯು
ಜೀವೇಶ ನಿನ್ನಯ ಮಹಿಮ ಗುಣಗಳ ಪೊಗಳಲಳವೇ
ಹರಮುಖಾದ್ಯರಿಗೆ ಜೀವರೆಸಗುವ ಕಾರ್ಯಗಳು
ಲವಲೇಶ ನಿನ್ನ ಬಿಟ್ಟು ನಡೆಯದೊ
ಪವಮಾನಮೂರುತಿ ಹರಿಯ ಕರುಣಾಕಟಾಕ್ಷ ನಿನ್ನೊಳು
ಇಟ್ಟುಇರುವುದು ಇನ್ನೆಷ್ಟೊ
ದೇವ ನಿನ್ನಯ ಖ್ಯಾತಿ ಎಷ್ಟೋ ಬಲದಿ ಶೇಷಶೈಲವ ತಂದೆ
ಕಾವುದಯ್ಯ ಶ್ರೀ ವೇಂಕಟೇಶನ ಪ್ರೇಮದ ದೂತ ೫

ಅನೇಕ ಪುರಾಣಪ್ರಸಂಗಗಳನ್ನು ಉಲ್ಲೇಖಿಸಿ
ಶ್ರೀಹರಿ ಸಂಕೀರ್ತನೆ

ಆರಿಗೆ ಆರಾಗರಯ್ಯ-ಶ್ರೀ ವಾಸುದೇವ ನೀನೊಬ್ಬನಲ್ಲದೇ ಪ
ಮಾತೆ ಇದ್ದರು ದೃಢವ್ರತನಾದ ಧ್ರುವಗೆ ಶ್ರೀ-
ಪತಿ ನೀನೆ ಗತಿಯಾದೆ ಆರಾದರಯ್ಯ
ಪಿತನು ಹಿತನೆನ್ನೆ ಪ್ರಹ್ಲಾದಗಾದಂಥ
ಗತಿ ನೋಡಿ ನರಹರಿ ಗತಿ ಪ್ರದ ನೀನಾದೆ ೧
ಭ್ರಾತರಾವಣನ ಸಹಜಾತ ವಿಭೀಷಣನ ನಿ-
ರ್ಭೀತನ ಮಾಡಿ ಕಾಯ್ದವÀರಾರಯ್ಯ
ಪತಿಗಳೈವರು ಸತಿಯಾ ಅತಿ ಖೇದ ಹರಿಸಿದರೆ
ಸಂತೈಸಿದಾನಾಥ ರಕ್ಷಕ ಹರಿಯಲ್ಲವೇ ೨
ಬಂಧುಗಳಿರೆ ಗಜರಾಜನ ನಕ್ರವು
ಬಂದು ಬಾಧಿಸೆ ಬಂಧ ಬಂದು ಹರಿಸಿದರ್ಯಾರೋ
ಅಂದು ಇಂದು ಎಂದನಿಮಿತ್ತ ಬಂಧು ನೀ
ಬಂಧುವಲ್ಲದೆ ಎಲ್ಲರು ಬಂಧಕರಯ್ಯಾ೩
ಸತಿಯಿಂದ ದಶರಥಪತಿಯು ಸುತನನಟ್ಟಿ
ಗತಿಕಾಣದೆ ತಾನೇನಾದನೋ – ಸತತ ಕುರುಪತಿ
ಅತಿಹಿತನಾದನೆ ಭೀಷ್ಮಗೆ
ಪತಿತಪಾವನ ನೀ ಅಂತ್ಯಕಾಲಕ್ಕಾದೆ ೪
ಸುತರು ರಕ್ಷಕರೇನೊ – ಶತಸೂನುಗಳಿಗೆ ಪಿತ
ಧೃತರಾಷ್ಟ್ರಗೆ ಕೊನೆಗಾರಾದರಯ್ಯ
ಇತರರ ಪಾಡೇನೊ ಶ್ರೀ ವೇಂಕಟೇಶನೆ
ಗತಿ ಎಮಗೆ ಉರಗಾದ್ರಿವಾಸ ವಿಠಲನಲ್ಲವೆ ೫

ಶ್ರೀಹರಿಯ ದಶಾವತಾರಗಳ ಸ್ತುತಿ

ಇಂದಿರಾರಾಧ್ಯನೆ ಬಂದು ನಿಲ್ಲೊ ಪ
ಇಂದೆನ್ನ ಸಲಹೊ ಮಂದನಾನೊಂದನರಿಯೆ ಏ-
ನೆಂದು ಕರೆಯಲೋ ಗೊವಿಂದ ಅ.ಪ
ಜಲದೊಳಾಡುವ-ಕಲ್ಲಹೊರುವ
ಎಲ್ಲಕಾಡಿನೊಳಾಡುವ ಭಳಿರೆ ಎರಡಂಗವ ತಳೆವ
ಇಳೆಯನಳೆಯುವ ಭಾರ್ಗವ ಖಳಕುಲ
ವನಳಿವಗೋವನೆ ಕಾಯ್ದ
ಲಲನೆಯರವ್ರತವನಳಿವ ಅಶ್ವವ ನೇರಿ
ಮರೆವ ನಿನ್ನಯ ರೂಪವಾ
ಸಲಿಲ ಹೊಕ್ಕು ಅಸುರನ ಸಂಹರಿಸಿ
ಕಲಕಿಶರಧಿಯ ಸುಧೆಯನು ತರಿಸಿ
ನೆಲಗಳ್ಳನ ಮದವನೆ ಮರ್ದಿಸಿ
ಚೆಲುವಚೆಳ್ಳುಗುರಿನಿಂದುದರವ ಛೇದಿಸಿ
ಸುಲಭದಿಂದ ಶುಕ್ರನ ಕಣ್ಮರಿಸಿ
ಬಲುಕೊಬ್ಬಿದ ಕ್ಷತ್ರಿಯರನೊರೆಸಿ
ಶಿಲೆಯ ಮೆಟ್ಟಿ ಮುನಿಸತಿಯರನುದ್ಧರಿಸಿ
ಲೀಲೆಯಿಂದ ವ್ರಜನಾರಿಯರೊಲಿಸಿ
ಸಲೆದಿಗಂಬರರೂಪವ ಧರಿಸಿ
ಇಳೆಯೊಳು ರಾವುತನಾಗಿ ಮೆರೆವ-ನಿನ್ನಯ
ರೂಪವ ಬಲ್ಲವರಾರೊ ಮಾಧವ ೧
ಜಲದೊಳು ನಿಂದು ಕಣ್ಣಬಿಡುವ ಶೈಲವ ತಳೆವಾ
ಕಲಕೀ ಮಣ್ಣ ಮೆಲುವ ಕಲ್ಲಕಂಭವ ಒಡೆವಾ
ಬಲಿಯನೆ ಬೇಡುವ ಪರಶುವ ತೊಳೆದು ವನವನಗಳ ಚರಿಸುವ
ಬಾಲೆಯರನಾಳ್ವ ಎಲ್ಲನಾಚಿಕೆಯ ಬಿಡುವ
ಸಲ್ಲುವಹಯವೇರಿ ಮೆರೆವಾ ನಿನ್ನಯ ರೂಪವಾ
ಎಲ್ಲವೇದವನುದ್ಧರಿಸಿ ವಾರಿಧಿಯಲಿ
ತಳೆದು ಅಮೃತಮಥನಕೆ ಶಿಲೆಯ
ಝಲಿಸಿ ನಿಲಸಿದೆ ನಿಜಕೆ ಧರಣಿಯ
ಬಲ್ಲಿದ ಬಲಿಯ ಬಂಧಿಸಿ ಭಕ್ತಿಯ
ಸಲ್ಲಿಸಿದೆ ಪಿತ ಪೇಳ್ದ ಆಜ್ಞೆಯ
ಬಿಲ್ಲನೆತ್ತಿ ವರಿಸಿದೆ ಸೀತೆಯ
ಮಲ್ಲರ ಮಡುಹಿ ತೋರಿದೆ ಚರಿಯ
ಜಳ್ಳುಮಾಡಿತೋರ್ದೆ ಧರ್ಮಕೆ ಮಾಯ
ಹುಲ್ಲುಣಿಸುವ ಹಯವೇರಿ ಮೆರೆದ ಶ್ರೀ
ವಲ್ಲಭ ನಿನ್ನಯ ರೂಪವ ಸೊಲ್ಲಿಪರಾರೋ ಶ್ರೀಧರ ೨
ನಿಗಮತಂದಿತ್ತೆ ನಗವಾನೆ ನೆಗವಾ
ಮೊಗದೊಳು ಭೂಮಿಯ ಬಗೆವಾ ಉಗುರಿಂದುದರವ ಸೀಳ್ವ
ತ್ಯಾಗಿಯನ್ಯಾಚಿಸುವ ಭೃಗುವಿಗೆ ಮುದವ ತೋರ್ವ
ಸಾಗರಕೆ ಸೇತುಕಟ್ಟುವ ನೆನೆದಮೃತವ ಮೆಲುವ
ನಿಗಮ ಮೋಹಿಸಿ ತೋರ್ವ ಜಗದಿ ಕಲ್ಕಿ
ಎಂದೆನಿಸಿ ಮೆರೆವ ನಿನ್ನಯ ರೂಪವಾ
ಪೊಗಲಳವೇ ಭೂಧವ
ನಿಗಮಕಾಗಿ ನೀ ತಮನ ಮರ್ದಿಸಿ
ನಗವ ಬೆನ್ನಲಿ ಪೊತ್ತು ಸುಧೆಯನು ಸಾಧಿಸಿ
ಹಗೆಯ ಹಿರಣ್ಯನ ಅಸುವನೆ ಹರಿಸಿ
ಮಗುವಿನ ಭಕ್ತಿಗೆ ವ್ಯಾಪ್ತಿಯ ತೋರಿಸಿ
ಬಾಗಿಲ ಕಾಯ್ದು ನೀ ಬಲಿಯ ರಕ್ಷಿಸಿ
ಆ ಗರ್ವಿಸಿದರಸರ ಪರಶುವಿಂದ ವರೆಸಿ
ಯಾಗರಕ್ಷಣೆಗೆ ನೀ ರಕ್ಷಕನೆನಿಸಿ
ನೀಗಲು ಕುರುಕುಲ ಕಲಹವೆಬ್ಬಿಸಿ
ಆಗಮ ಶಾಸ್ತ್ರಕೆ ಮಾಯವ ಕಲ್ಪಿಸಿ
ಬೇಗ ಬಂದು ಹಯವೇರಿ ಮೆರೆವ-
ಶ್ರೀ ವೆಂಕಟೇಶ ನಿನ್ನಯ ರೂಪವ
ಬೇಗದಿ ತೋರೋ ಶ್ರೀಪಾದವಾ ೩

ತಿರುಪತಿ ಶ್ರೀವೆಂಕಟೇಶನ ಕಲ್ಯಾಣದ
ಪುರಾಣವಿಷಯ
೯೦
ಶ್ರೀವೆಂಕಟೇಶ ಕಲ್ಯಾಣ
ಇನ್ನೆಂದಿಗೋ ನಿನ್ನದರುಶನ ಶೇಷಾದ್ರಿವಾಸ ಪ
ಪನ್ನಂಗಶಯನ ಪ್ರಸನ್ನರ ಪಾಲಿಪ
ಘನ್ನಮಹಿಮ ನೀನೆನ್ನನುದ್ಧರಿಸೂಅ.ಪ
ವರ ಸುರಮುನಿಗಳ ವೃಂದ ನೆರಹಿದ ಯಾಗಗಳಿಂದ
ಪರಮಾದರದಿಂದಿರುವ ಸಮಯದಿ
ನಾರದ ಮುನಿ ಬಂದೊದಗಿ ನಿಂದ ಇ-
ದಾರಿಗರ್ಪಿತವೆಂದರುಹಿ ಮರಳೀ ತೆರಳಿದ
ಸುರಮುನಿವಚನದಿ ಭೃಗುಮುನಿವರ ಪೋಗಿ
ಹರವಿರಂಚಿಯರ ನೋಡಿದಾ ಉರುತರಕೋಪದಿ ನಿಲ್ಲುತ
ಪರಮಪುರುಷರಲ್ಲೆಂದೆನ್ನುತ ವೈಕುಂಠವನ್ನೇ ಸಾರುತ
ಹರುಷದಿ ಶ್ರೀಹರಿ ಉರಗಶಯನನಾಗಿ
ಪರಮಯೋಗನಿದ್ರೆ ಮಾಡುತಾ ಅರಿಯದಂತೆ ತಾ ನಟಿಸುತ
ಇರೆ ಮುನಿ ಪದದಿಂದೊದೆಯುತ ತ್ವರಿತದಿಂದ ತಾನೇಳುತ
ಹರುಷದಿ ಮುನಿಪಾದ ಕರದಲಿ ಒತ್ತುತ
ಕರುಣದಿ ಸಲಹಿದೆ ದುರಿತವ ಹರಿಸಿ
ಹರಿಭಕುತರ ಅಘಹರಿಸಿಕಾಯುವಂಥ
ಕರುಣಿಗಳುಂಟೇ ಶ್ರೀಹರಿ ಸರ್ವೋತÀ್ತುಮಾ ೧
ಸ್ವಾಮಿ ನೀನಿಜಧಾಮವನೇ ತೊರೆದೂ
ಸ್ವಾಮಿಕಾಸಾರ ತೀರದಿ ನಿಂದೂ ಧಾಮವನರಸಿ
ವಲ್ಮೀಕವನೆ ನೋಡಿ
ವಿಮಲಸ್ಥಳವಿದೆಂದು ಮನದಲಿ ಆನಂದದಿಂದಲಿ ಬಂದು ನಿಂದೆ
ಸನ್ಮುದವನ್ನೇ ತೋರುತ
ಕಮಲ ಭವಶಿವ ತುರುಕರುರೂಪದಿ
ಈ ಮಹಗಿರಿಯನ್ನು ಅರಸುತ ಸ್ವಾಮಿ ನೀನಿಲ್ಲಹೆನೆಂದೆನ್ನುತ
ಕಾಮಧೇನು ಪಾಲ್ಗರೆಯುತಾ ಈ ಮಹಿಮೆಯನ್ನೇ ಬೀರುತಾ
ಭೂಮಿಗೊಡೆಯ ಚೋಳನೃಪಸೇವಕನು
ಧೇನುವನ್ನು ತಾ ಹೊಡೆಯಲು ಕಾಮನಯ್ಯ ನೀನೇಳಲು
ಭೀಮವಿಕ್ರಮವ ತೋರಲು ಕ್ಷಮಿಸಿದೆ ನೃಪನ ದಯಾಳು
ಅಮಿತ ಸುಗುಣಪೂರ್ಣ ಅಜರಾಮರಣ
ನೀ ಮಸ್ತಕಸ್ಪೋಟನ ವ್ಯಾಜವ ತೋರಿ
ಪ್ರೇಮದಿ ಗುರುಪೇಳ್ದೌಷಧಕಾಗಿ
ನೀ ಮೋಹವ ತೋರಿದೆ ವಿಡಂಬನಮೂರ್ತೇ ೨
ಮಾಯಾರಮಣನೆ ಜೀಯಾ ಕಾಯುವೆ ಜೀವನಿಕಾಯಾ
ತೋಯಜಾಂಬಕ ಹಯವನೇರಿ ಭರದಿ ತಿರುಗಿತಿರುಗೀ
ವನವನೆÀಲ್ಲ ಮೃಗನೆವನದಿ ನಿಂದು ನೋಡಿದೇ
ಪ್ರಿಯಸಖಿಯರ ಕೂಡಿ ಪದುಮಾವತಿಯು ತಾ
ಹಯದಿ ಕುಳಿತ ನಿನ್ನ ನೋಡಲು
ಪ್ರಿಯಳಿವಳೆನಗೆಂದು ಯೋಚಿಸಿ
ಕಾಯಜಪಿತ ನಿನ್ನ ಹಯವನೆ ಕಳಕೊಂಡು
ಮಾಯದಿಂದ ನೀ ಮಲಗಿದೆ
ತಾಯಿ ಬಕುಳೆಯೊಳು ಪೇಳಿದೆ
ತೋಯಜಮುಖಿಯಳ ಬೇಡಿದೇ
ಆ ಯುವತಿಯನ್ನೇ ಸ್ಮರಿಸುತಾ
ಶ್ರೀಯರಸನೆ ನೀನು ಸ್ತ್ರೀರೂಪದಿ ಹೋಗಿ
ಶ್ರೀಯಾಗಿಹಳಿನ್ನು ಶ್ರೀಹರಿಗೀಯಲು
ಶ್ರೇಯವೆಂದು ಆಕಾಶನನೊಪ್ಪಿಸಿ
ತಾಯಿಯಭೀಷ್ಟವನಿತ್ತೆ ಸ್ವರಮಣಾ ೩
ಸಕಲಲೋಕೈಕನಾಥಾ ಭಕುತರಭೀಷ್ಟಪ್ರದಾತಾ
ಭಕುತನಾದ ಆಕಾಶನೃಪತಿಯು ಬಕುಳೆ ಮಾ-
ತ ಕೇಳಿ ಅಭಯವಿತ್ತು ಮನ್ನಿಸಿ ಪದುಮಾವತಿಯ ಪರಿಣಯ
ಶುಕರ ಸನ್ಮುಖಹಲ್ಲಿ ಅಕಳಂಕ ಮಹಿಮ-
ಗೆ ಕೊಟ್ಟನು ತಾ ಲಗ್ನಪತ್ರಿಕಾ
ಸ್ವೀಕರಿಸುವದೀ ಕನ್ನಿಕಾ ಈ ಕಾರ್ಯಕೆ ನೀವೆ ಪ್ರೇ
ರಕಾ ತಾ ಕಳುಹಿದ ಪುಣ್ಯಶ್ಲೋಕನು
ಶೋಕರಹಿತ ಜಗದೇಕವಂದ್ಯ ಅವಲೋಕಿಸಿ ಪತ್ರಿಕವನ್ನು
ಸಕಲಸಾಧನವಿಲ್ಲಿನ್ನು
ಲೋಕೇಶಗರುಹಬೇಕಿನ್ನು
ಏಕಾಂಗಿ ನಾನು ಎನ್ನಲು
ಲೋಕಪತಿಯೆ ಸುರಕೋಟಿಗಳಿಂದಲಿ
ಈ ಕುವಲಯದಿ ನಿನ್ನಯ ಪರಿಣಯವೆಸಗಲು
ಲೋಕಜನಕೆ ಕಲ್ಯಾಣವ ತೋರಿದೆ
ಭಕುತಜನಪ್ರಿಯ ಶ್ರೀವತ್ಸಾಂಕಿತ ೪
ಖಗವರವಾಹನ ದೇವಾ
ತ್ರಿಗುಣರಹಿತ ಜಗಕಾವ
ಅಗಣಿತಮಹಿಮ ಗೋಮಯನೆನಿಸಿ
ಬಗೆಬಗೆ ರೂಪವ ಧರಿಸಿ ಪರಮಾದರದಲಿ
ಸುರರ ಪೊರೆಯುತಾ
ನಗಧÀರ ನೀನೀ ಗಿರಿಯೊಳು ನೆಲೆಸಿಹೆ
ಅಗಣಿತ ಸುರಗಣ ಕಿನ್ನರರು ಸಾಧ್ಯರು ತರು ಫಲ
ಖಗಮೃಗ ರೂಪವ ಬಗೆಬಗೆ ಇಹೆ
ಪೊಗಳಲಳವೇ ಗಿರಿವರವು
ಹಗಲು ಇರುಳು ಭಗವಂತನೆ ನಿನ್ನನ್ನು
ಪೊಗಳುತಿಹರು ನಿನ್ನ ಭಕುತರು
ನಿಗಮವ ಪಠಿಸುತ ನಡೆವರು ನಗೆ
ಮೊಗದಲಿ ನಿನ್ನ ದಾಸರು ಗೋವಿಂದ ಮುಕುಂದ ಎನ್ನುತಾ
ಯುಗ ಯುಗದೊಳು ನೀನಗದೊಳು ನೆಲಸಿಹೆ
ಜಗದ ದೇವ ರಾಜಿಸುವವನಾಗಿಹೆ
ಮಿಗಿಲೆನಿಸಿದ ಶ್ರೀ ವೆಂಕಟೇಶಾ
ಸದ್ಗುಣ ಸಚ್ಚಿದಾನಂದ ಮುಕುಂದ ಗೋವಿಂದಾ ೫

ಪರಮಾತ್ಮನ ಸರ್ವತ್ರ ವ್ಯಾಪಕತ್ವವನ್ನೂ,

ಈ ಭಾಗ್ಯವೆ ನಿನ್ನದೊ ವರ ಭೋಗಿಶಯನಾ ಪ
ಸೌಭಾಗ್ಯವೇ ನಿನ್ನ ಮಹಿಮೆ ತಿಳಿಯುವ ಯೋಗಅ.ಪ
ನೀನಿಲ್ಲದಾಸ್ಥಾನ ಈ ನಳಿನಜಾಂಡದೊಳಿಲ್ಲ
ನೀನೆಲ್ಲವನು ಬಲ್ಲೆ ನಿನ್ನತಿಳಿಯಗೊಡದೆ
ಹೀನಮಾನವ ನಾನು ನಿನ್ನನವರತ ಮರೆತರು ನೀ
ಎನ್ನ ಮರೆಯದಲೆ ಎನ್ನೊಳಗೆ ಇಹೆ ಎಂಬ ೧
ನಿಲ್ಲಿಸಲು ನಿಲ್ಲುವೆನು ಮಲಗಿಸಲು ಮಲಗುವೆನು
ತಿಳಿಸಿದರೆ ನಾ ತಿಳಿವೆ ತಿಳುವಳಿಕೆ ನೀನೆ
ತಿಳಿಯಗೊಡಿಸೋಎನ್ನಕ್ರಿಯೆಗಳನು ದೇಹದ
ನೆಳಲಂತೆ ನಿನಗೆ ನಾನಿಹೆನಯ್ಯ ದೇವಾ ೨
ಈ ಜಗತ್ತಿನೊಳಗೆಲ್ಲ ಪೂಜ್ಯಪೂಜಕ ಪೂಜ್ಯ
ಪೂಜೋಪಕರಣದೊಳು ನೀನೆ ನಿಂತು
ಮೂರ್ಜಗತ್ಪತಿಯೆ ನಿನ್ನನರ್ಚಿಸುವ ಭಜಕರಿಗೆ
ನೈಜಸುಖ ವ್ಯಕ್ತಿಯನು ಮಾಡುತಲಿ ಪೊರೆವೇ ೩
ನೀರು ತೃಣವನು ಕೊಡಲು ಹರುಷದಿಂದಲಿ ಗೋವು
ಕ್ಷೀರವನು ಕರೆದು ಜನರ ಪೊರೆವಂತೆ
ಸೂರಿಗಳು ಮಾಳ್ವ ಅಪರಾಧಗಳೆಣಿಸದಲೆ
ಕರುಣದಿಂದಲಿ ಅವರ ಪೊರೆವ ಶ್ರೀಹರಿಯೆ೪
ಪನ್ನಗಾಚಲನಿಲಯ ನೀನೆ ಎನ್ನೊಳಗಿರಲು
ಬನ್ನಪಡಲ್ಯಾತಕೆ ಚಿನ್ಮಯರೂಪ
ಎನ್ನಂಥಜೀವರಿನ್ನೆಷ್ಟೋ ಬ್ರಹ್ಮಾಂಡದೊಳು
ಘನ್ನಭಕುತಿಯನೀಡೋ ಶ್ರೀಉರಗಾದ್ರಿವಾಸವಿಠಲ ೫

ತಮ್ಮ ಆಯುಸ್ಸಿನ ಬಹಳ ಭಾಗ ಉಪಯೋಗವಿಲ್ಲದ,
೬೪
ಎಂದು ಕಾಂಬೆನು ನಾನುಗೋ-
ವಿಂದ ನಿನ್ನಯ ಪಾವನ್ನ ಪಾದವನ್ನು ನಾ
ಪೊಂದಿಸೇವಿಸಿ ಆನಂದಪಡುವುದಕಿನ್ನು ಕರುಣಿಸೈ ಮುನ್ನ ಪ
ಎಂದಿಗಾದರು ನಿನ್ನಪದಯುಗ
ಪೊಂದಿ ಮಹದಾನಂದ ಪಡೆಯಲು
ಕಂದಿಕುಂದಿತು ತನುಮನೇಂದ್ರಿಯ
ಇಂದೆ ತೋರಿಸೊ ಪಾದಕಮಲವ ಅ.ಪ
ಬಾಲತನದಲಿ ನಾನು ಶ್ರೀಲೋಲ ನಿನ್ನಿಂದ
ಪಾಲಿತನಾದೆನೊ ಬೆಲೆಯುಳ್ಳ ಆಯುವನೆಲ್ಲ
ಕಳೆದು ಬಿಟ್ಟೆನು ನಾನು ಕೆಲಕಾಲದಲಿ ನಾ
ಕಲುಶಕ್ರಿಯೆಗಳನ್ನು ಫಲವಿಲ್ಲದೆಸಗಿದೆನು
ಎಲ್ಲರೊಳು ನೀ ನೆಲಸಿ ಜೀವರ ಎಲ್ಲಕರ್ಮವ ಮಾಡಿಸಿ
ಫಲವೆಲ್ಲ ಅವರಿಗೆ ಇತ್ತು ನೀ ನಿರ್ಲಿಪ್ತನೆಂದು ತಿಳಿಯದಲೆ
ಖುಲ್ಲಮಾನವರೊಡನೆ ಬೆರೆತು
ಪುಲ್ಲಲೋಚನ ನಿನ್ನ ಮರೆದು
ಇಲ್ಲ ಎನಗೆ ಎಣೆಯೆನುತ ನಾ
ಬಲುಹೆಮ್ಮೆಯಿಂದಲಿ ದಿನಗಳ ಕಳೆದೇ
ಇಲ್ಲನಿನಗೆಸರಿಯಿಲ್ಲ ನೀ
ನಿಲ್ಲದಾಸ್ಥಳವಿಲ್ಲ ಜಗದಾ ಎಲ್ಲ
ಕಾಲಗಳಲ್ಲಿ ಇಹ ಶ್ರೀನಲ್ಲ ನೀನೆಲ್ಲ ಬಲ್ಲೆಯೊ ೧
ಬರಿದೇ ಕಾಲವ ಕಳೆದೇ ಶ್ರೀಹರಿಯೆ ನಿನ್ನಯ
ಸ್ಮರಣೆಯನ್ನು ಮಾಡದೇ
ಪರಿಪರಿಯ ತನುಮನ ಕ್ಲೇಶಗಳಿಗೊಳಗಾದೆ
ಪರಿಹರಕೆ ನಿನ್ನಯ
ನಾಮಸ್ಮರಣೆಯೊಂದಲ್ಲದೇ ಇನ್ನೆಲ್ಲಾ ಬರಿದೇ
ಪರಮಕರುಣಾಶರಧಿ ಎಂಬುವ
ಕರಿಧ್ರುವಬಲಿಮುಖ್ಯರೆಲ್ಲರ
ಪೊರೆದ ಕೀರುತಿ ಕೇಳಿ ನಂಬಿದೆ
ಶರಣಜನಮಂದಾರನೆಂದು
ಅರಿಯೆ ನಾನವರಂತೆ ಸಾಧನ
ಅರಿತು ಮಾಡುವ ಪರಿಯು ತಿಳಿಯದು
ಬಿರುದು ಭಕ್ತಾಧೀನನೆಂದು
ಹರಿಯೆ ನಿನ್ನಯ ಮರೆಯಹೊಕ್ಕೆನು
ದುರಿತಶರಧಿಯೊಳಾಡುತಿರುವನ ಉ-
ತ್ತರಿಸಲೊಂದೇ ನಾವೆಯಂತಿಹ
ಚರಣಸ್ಮರಣೆಯಕೊಟ್ಟು ರಕ್ಷಿಸು
ಪುರುಷಸೂಕ್ತಸುಮೆಯ ಜೀಯಾ೨
ಶೇಷಗಿರಿಯವಾಸ ಶ್ರೀ ಶ್ರೀನಿವಾಸ
ದೋಷರಹಿತ ಸರ್ವೇಶ ಮನೋ-
ಕಾಶದಲಿ ಅನವರತ ನಿಲ್ಲೊ
ಶ್ರೀಶಾ ಬಿಡಿಸೆನ್ನ ಭವಬಂಧ ಗ್ರಂಥಿಯ
ಪಾಶಾ ಹರಿಸುವುದು ಕ್ಲೇಶಾ
ಶ್ರೀಶ ನಿಗಗತಿಶಯವೆ ಎನ್ನಯ
ವಿಷಯದಭಿಲಾಷೆಗಳ ಬಿಡಿಸೀ
ದೋಷರಹಿತನ ಮಾಡಿಸೀ ಎನ್ನ
ಪೋಷಿಸೋ ನಿನ್ನಸ್ಮರಣೆಯಿತ್ತು ದ್ವಾಸುಪ-
ರ್ಣ ಶ್ರುತಿಗಳಿಂದಲಿ
ಈಶ ದಾಸರ ಭಾವ ತಿಳಿಯದೆ
ಮೋಸಹೋದೆನೊ ಬೋಧೆ ಇಲ್ಲದೆ
ವಾಸುದೇವನೆ ರಕ್ಷಿಸೆನ್ನನು
ಏಸುಕಾಲಕು ನೀನೆ ಗತಿ ಎಂದು
ಆಸೆ ಮಾಡುವೆ ನಿನ್ನ ಕರುಣಕೆ
ಬೇಸರದಲೆ ಮೊರೆಯ ಲಾಲಿಸಿ
ಶ್ರೀಶ ಶ್ರೀ ವೆಂಕಟೇಶನೆ ೩

ಶ್ರೀ ಹರಿಯ ದಶಾವತಾರಗಳನ್ನು

ಎಲ್ಲಿಗ್ಹೋಗುವೆ ಎಲೊ ಹರಿಯೇ ಮನದಲ್ಲಿ
ನಿಲ್ಲೋ ಒಂದರಘಳಿಗೆ ಹೇ ಧೊರೆಯೆ ಪ
ವಾರಿವಿಹಾರದಿ ನಿಂದು-ಗಿರಿಭಾರ ಕಳೆದು ನೀನಡಗಿದೆ ಅಂದು
ಧಾರುಣಿಯನೆ ಬಗೆದು ನಿಂದು-ಧೀರ ಪೋರನ
ಮಾತನ ಸಲಹಬೇಕೆಂದು ೧
ವರವಟುವೇಷವ ಧರಿಸಿ-ದುಷ್ಟನೃಪರಕುಲಗೇಡಿಗನೆಂದೆನಿಸಿ
ನಾರಿಯನಟವಿಯೊಳರಸಿ-ಪುರನಾರಿಯರ
ಮನವನ್ನೆಅಪಹರಿಸಿ ೨
ವರವಸನವ ಬಿಟ್ಟು ನಿಂದು-ಘೋರತುರಗವನೇರಿ
ಓಡುವೆಯೊಮುಂದು
ಧೊರೆ ಶ್ರೀ ವೆಂಕಟೇಶನೆಂದೂ-ನೀನೆ
ಉರಗಾದ್ರಿವಾಸ ವಿಠಲ ದಯಾಸಿಂಧು ೩

ಜಪ, ತಪ, ಪೂಜೆ ಇತ್ಯಾದಿಗಳಲ್ಲಿ ಅಕ್ಷರಾಭಿಮಾನಿ
ತ್ತಾತ್ವಿಕವಿವೇಚನೆ
೭೫
ಏಕ ಪಂಚಾಶದ್ವರ್ಣವಾಚ್ಯ
ಶ್ರೀಕಳತÀ್ರನೆ ಸರ್ವಶಬ್ದಗೋಚರನಯ್ಯ ಪ
ಈ ಕಾಯ ಕಾರ್ಯಕಾರಣವನನುಸರಿಸಿ
ತ್ರಿಕರಣದೊಳಗಿದ್ದು ಕ್ರಿಯವ ನÀಡೆಸುವ ದೇವಅ.ಪ
ಅಜಾನಂದೇಂದ್ರೇಶ ಶಿರ ಮುಖ ನೇತ್ರದೊಳು
ನಿಜರೂಪ ಉಗ್ರ ಊರ್ಜ ಕರ್ಣದೊಳು
ನಿಜ ಋತುಂಬರ ಋಘನಾಸದಲ್ಲಿ
ಲೃಶಾ ಲೃಜ ವರ್ಣವಾಚ್ಯ ಗಂಡ ಸ್ಥಳದಲ್ಲಿಪ್ಪ ೧
ಏಕಾತ್ಮ ಐರಸ ಓಷ್ಠದಲಿ ನೀನಿದ್ದು
ಪೊರೆಯಯ್ಯ ಓಜೋಬೃತೌರಸ
ಜೋಕೆಯಿಂದಲಿ ದಂತ ಪಂಕ್ತಿಯಲ್ಲಿಹೆ ದೇವ
ಅನಂತಾರ್ಥಗರ್ಭನೆ ನೀ ವಾಚಿಯಲ್ಲಿ ೨
ಕಪಿಲ ಖಪತಿ ಗರುಡ ಘರ್ಮ ದಕ್ಷಿಣಭುಜದೊಳ್
ಅಪರಿಚ್ಛಿನ್ನನೇ ನೀನು ಸಂಧಿಗಳಲಿ
ಸುಫಲದಾತನೆ ಙಸಾರನಾಮದಲಿದ್ದು
ಅಂಗುಲ್ಯಾಗ್ರದಲ್ಲಿ ನೀ ನಿರುತರಲಿ ನೆಲಸಿರ್ಪೆ ೩
ಚಾರ್ವಾಂಗ ಛಂದೋಗಮ್ಯ ಜನಾದರ್Àನ
ಝೂಟಿತಾರ ವರ್ಣವಾಚ್ಯವ ಮಾಡಿ ನಿರುತದಲಿ
ವಾಮಭುಜ ಸಂಧಿಗಳಲ್ಲಿರುವೆ ಬೆರಳ ಅಗ್ರದಿ
ಞಮನಾಮದಲಿ ನೆಲೆಸಿರುವೆ ೪
ಟಂಕ ಠಲಕ ಡರೌಕ ಢರಣಣಾಕ್ಮಕ ನೀ ನಾ
ಟಂಕ ರಹಿತ ದಕ್ಷಿಣ ಪಾದದಲ್ಲಿ
ಬಿಂಕವಿಲ್ಲದೆ ತಾರ ಥಪತಿ ದಂಡಿ ಧನ್ವೀ
ನಮ್ಯನಾಮನೆ ವಾಮಪಾದ ಸಂಧಿಗಳಲ್ಲಿ ೫
ಪರಫಲಿ ವರ್ಣವಾಚ್ಯ ದೇಹದಪಾಶ್ರ್ವ
ಬಲಿ ಭಗನಾಮ ಪೃಷ್ಟ ಗುಹ್ಯದಲಿ
ನಿರುತ ಮನ ವರ್ಣವಾಚ್ಯ ನೆನಿಸಿಹೆ
ದೇವ ತುಂದಿ ಸ್ಥಾನದಲಿ ಎಂದೆಂದು ನಿಂದೆ೬
ಯಜ್ಞ ಹೃದಯದಿ ರಾಮ ತ್ವಕ್‍ಲಕ್ಷ್ಮೀಪತಿ
ಚರ್ಮ ವರಹ ರುಧಿರ ಶಾಂತಸಂವಿತ್ ಮಾಂಸದಲ್ಲಿ
ಸುಜ್ಞ ಷಡ್ಗುಣ ಮಜ್ಜ ಸಾರತ್ಮ ಅಸ್ತಿಯು
ಹಂಸ ಸ್ನಾಯುಳಾಳುಕ ನೀ ಪ್ರಾಣದಲ್ಲಿ ೭
ಕ್ಷಕಾರವಾಚ್ಚ ಶ್ರೀ ಲಕ್ಷ್ಮೀ ನರಸಿಂಹ
ಕ್ಷರ ಜೀವರಾ ದೇವ ಸರ್ವ ಸ್ಥಳದಲ್ಲಿಪ್ಪ
ಶ್ರೀಕರಾರ್ಚಿತ ನಿನ್ನ ವಾಕ್ ಮನೋರೂಪಗಳು
ಸಕಲ ಸಚ್ಛಾಸ್ತ್ರಾಗಮಗಳಾಗಿಹವೋ ೮
ಸ್ವರವರ್ಣ ಸಂಯುಕ್ತ ಶಬ್ದವಾಕ್ಯದಿ ಸಕಲ
ಪುರಾಣಾಗಮದಿ ಶಾಸ್ತ್ರ ಸರ್ವದಿ ನಿತ್ಯ
ಪರಿಪರಿ ಭೇರಿ ಮರ್ಮದಿ ಶಬ್ದಗಳು
ನಿರುತ ನಿನ್ನನುದಿನದಿ ಪೊಗಳುತಿಹವೋ ೯
ಸ್ವಪ್ರಯೋಜನಕಾಗಿ ವರ್ಣ ಭೇದದಿ ವಾಕ್ಯ
ಅಪ್ರಕೃತವಾಗೆಷ್ಟೋ ನಾನುಚ್ಚರಿಸಿದೆ
ಸ್ವಪ್ರಯೋಜನ ರಹಿತ ಶ್ರೀವೇಂಕಟೇಶ ಶ್ರೀ
ಉರಗಾದ್ರಿವಾಸ ವಿಠಲ ಜಗದೀಶ೧೦

ಶ್ರೀಹರಿಯು ತನ್ನ ನಾರಾಯಣ, ವಾಸುದೇವ,

೭೬
ಏಕಮೇವ ಅದ್ವಿತೀಯಾ ಅಪ್ರಾಕೃತ ಕಾಯಾ ಪ
ಶ್ರೀಕರಾರ್ಚಿತಪಾದ ಲೋಕೇಶ ವಂದಿತ ಅ-
ವ್ಯಾಕೃತಾಕಾಶದೊಡೆಯನೆ ವಾಸುಕೀಶಯನ ಸರ್ವೇಶ ನೀನೆ
ಮುಕ್ತಾಶ್ರಯ ಸರ್ವಲೋಕಾಶ್ರಯನಾಗಿಹೆ
ಪ್ರಾಕೃತ ಸಜ್ಜಮಜ್ಜನ
ಕಾರ್ಯಕೆ ಕಾರಣನಯ್ಯ ಏಕೋ ನಾರಾಯಣ ಅ.ಪ
ಪ್ರಳಯಕಾಲದಿ ಜೀವರ ನಿಲಯಾ ಕಲ್ಪಿಸಿ ತತ್ತ
ಸ್ಥಳದಲ್ಲಿಡೆ ನಾಲ್ಕು ಸ್ಥಳಗಳನ್ನಾಗಿ ನಿನ್ನ ಕಳೆಯಾ
ನಾಲ್ಕುವಿಧಗಳ ರೂಪಗಳನು ಧರಿಸಿ ಪ್ರಳಯದೊಳಿಂಬಿಟ್ಟು
ಲೀಲೆಯೊಳು ನಿಂದೆ ನಳಿನನಾಭ ನೀ ಪಸುಳೆಯಂತೆ
ನಲಿದಾಲದೆಲೆಯೊಳು ಪೊಳೆಯುತಲಿದ್ದು
ಎಳೆಸಿದ ಕಟಾಕ್ಷವೀಕ್ಷಣದಿಂದಲಿ ೧
ಅಳವು ಇಲ್ಲದ ಸೃಷ್ಟಿಯನೆಸಗಿದೇ
ಸಾಧುಜೀವರು ತಮ್ಮ ಸಾಧನ ಪೊರೈಸಿ
ಸ್ವದೇಹದೊಳು ಬಂದ ಮೋದದಿಂದಲಿ ನೋಡಿ
ಬಾಧಿಪ ಲಿಂಗಭಂಗವೈದಿಹ ಪ್ರಾರಬ್ಧನಾಶನವಿಹ ವಿ-
ವಿಧ ಸುಜೀವರ ಮೋದಪಡಿಸಿ ನಿ-
ಷೇಧಿಸದೆ ಸ್ವರೂಪಾನಂದವೀಯಲೋಸುಗ
ಉದರದೊಳಿಟ್ಟ್ಯಯ್ಯ ಸದಮಲಮೂರುತಿ
ಅದುಭುತಮಹಿಮ ಶ್ರೀ ವಾಸುದೇವನೆ೨
ಆಗಾಮಿ ಸಂಚಿತ ನೀಗಿ ಪ್ರಾರಬ್ಧ ಶೇಷ
ಭೋಗ ಉಳ್ಳವರೆಲ್ಲ ಆಗದೆ ಪೂರ್ಣ ಸಾಧನೆ
ನೀಗದೆ ಲಿಂಗಭಂಗ ಆಗ ಬಿಂಬನ್ನ ನೋಳ್ಪರ
ನಾಗಶಯನ ನಿನ್ನಂಗದೊಳಿಂಬಿಟ್ಟೆ
ಜಾಗುಮಾಡದೆ ನೀನಾಗಲೆ ಜೀವರ ಭೋಗವ ತರಲು
ಭಾಗವಗೈಸಿ ಭೂಭಾಗದ ಸಾಧನ ಮಾಳ್ಪ ಜೀವಗಣ
ಭಾಗವ ಕಾಯ್ದೆ ಸಂಕರುಷಣ ಮೂರುತೆ ೩
ನಿತ್ಯಸಂಸಾರಿಗಳಿಗೆ ಇತ್ತೆ ನಿನ್ನುದರದೊಳು
ಗತಿಪ್ರದ ಪ್ರದ್ಯುಮ್ನ ನಿತ್ಯಸಾಧನರಿಗೆ
ಮುಕ್ತರೊಡೆಯ ದೇವ ಶಕ್ತನಹುದೋ ನೀ
ಮತ್ತೆ ಮುಂದಿನ ಬ್ರಹ್ಮನ ಹತ್ತಿಬರುವ ಜೀವರ
ಮೊತ್ತ ಮೊದಲು ನೀನಿತ್ತು ಪೊರೆದೆ ಬರಲಿತ್ತ ಕಾರಣ ಪ್ರ-
ಕೃತಿಯಿಂದಲಿ ಸುತ್ತಿ ತಂದು ಮತ್ತೆ
ಸುತ್ತಿ ಸುತ್ತಿರುವೆ ಬಿತ್ತರಿಸಲೇನನಿರುದ್ಧಮೂರುತೇ ೪
ಅಣುವಿಗೆ ಅಣುವಾಗಿ ಘನತೆ ಘನತಮನಾಗಿ
ತೃಣಜೀವರಾದಿ ಬ್ರಹ್ಮಗಣರೆಲ್ಲರೊಳು
ಗಣನೆ ಇಲ್ಲದ ಕಾರ್ಯ ಕ್ಷಣಬಿಡದಲೆ ನಡೆಸಿ
ಗುಣನಿಧೆ ತೇನ ವಿನಾ ತೃಣಮಪಿನಚಲತಿ ಎಂಬ
ಎಣೆಯಿಲ್ಲದಿಹ ಸುಗುಣ ಸಾಂದ್ರನೆ
ಪ್ರಣವದೊಳು ಪ್ರತಿಪಾದ್ಯನಾಗಿಹೆ ತ್ರಿಗುಣರಹಿತ ಮುಖ್ಯ
ಪ್ರಾಣಾಂತರ್ಗತ ಪ್ರಣತಕಾಮದ ಪೂರ್ಣ ಸಂಪೂರ್ಣ೫
ಮುಕ್ತಾಮುಕ್ರಾಶ್ರಯ ಭಕ್ತಪರಾಧೀನ
ಶಕ್ತಾನೆ ಸರ್ವವೇದೋಕ್ತ ಮಹಿಮಾತೀತ
ಉಕ್ತನಾಗಿಹೆ ಪುರುಷಸೂಕ್ತಾದೊಳಪ್ರಮೇಯ
ವ್ಯಕ್ತಾನಲ್ಲವೊ ನೀನು ಭಕ್ತಿಯಿಂದಲ್ಲದೆ
ಮುಕ್ತಿದಾತ ಪುರುಷೋತ್ತಮ ನಿನ್ನಯ
ಶಕ್ತಿಯನರಿಯರು ಅಜಭವಾದ್ಯರು
ಶಕ್ತನೆ ಜೀವನ್ಮುಕ್ತರೌಘ
ಸಕ್ತರಾಗಿ ನಿನ್ನ ಸ್ತೋತ್ರವ ಮಾಳ್ಪರು ೬
ಶ್ರೀಶಾ ಸರ್ವೋತ್ತಮ ವಾಸ ವೈಕುಂಠಾಧೀಶ
ಶ್ವಾಶಾನಿಂದಲಿ ಶೇಷನಹಂಕಾರ ಬಿಡಿಸಿದೆ
ವಾಸವಾದಿ ವಂದಿತ ಭಾಸುರಾಂಗನೆ
ವಿಶ್ವಾಸ ನಿನ್ನೊಳಿಟ್ಟ ದಾಸ ಜನರ ಕಾಯ್ವ
ಈಶಾವ್ಯಾಸಮಿದಂಸರ್ವಂ ಎಂದೆಂದು ಎಂದು
ಉಸುರುವ ವೇದಗಳ್ ಏಸುಕಾಲಕು ಸಾಕಲ್ಯದಿ ವರ್ಣಿಸ
ಲೀಶ ಕೋಟಿ ಪ್ರವಿಷ್ಟೆಗೆ ಅಸದಳ ೭
ಅಂಗಜಪಿತ ರಂಗ ಮಂಗಳಾಂಗನೆ ಮಾ-
ತಂಗವರದ ದೇವ ಗಂಗಾಜನಕ ಕಾಳಿಂಗನಾ ಮದ ಮೆಟ್ಟಿ
ಭಂಗಾಗೈಸಿದ ಭುಜಂಗಶಯನ ಎನ್ನಂತಾ-
ರಂಗದಿ ನಿಲ್ಲೋ ಇಂಗಿತ ಬಲ್ಲೆ ಶ್ರೀರಂಗಶಾಯಿ ಸಾ-
ರಂಗಪಾಣಿ ಕೃಪಾಂಗ ಎನ್ನಯ ಭವಭಂಗಗೈಸಿ ಸ-
ತ್ಸಂಗವೀಯೋ ಯದುಪುಂಗವ ಮಂಗಳಮೂರುತಿ ಶೌರೇ೮
ಕಾಲನಾಮಕ ನೀನೆ ಕಾಲ ಮಹತ್ಕಾಲ ಕಾಲಕಲ್ಪಾಂತ
ಕಾಲದಲ್ಲಿ ಸೃಷ್ಟಿಯ ಲೀಲೆತನದಿ ಲಯ ಲೀಲೆಯ ತೋರಿ
ಬಾಲಲೀಲೆಯಿಂದಲಿ ಆಲದೆಲೆಯೊಳು ಪವಳಿಸಿದೆ
ಶ್ರೀಲಲನೆಯ ಲೋಲ ನೀನೆಲೊ ಈ ಜನಲೀಲೆಗೆ ಜೀವರ
ಜಾಲವ ತಂದೆ ಪಾಲಿಪ ಸಲಹಿಪ ಕರ್ತ ನೀನಲ್ಲದಿ-
ನ್ನಿಲ್ಲವಯ್ಯ ಶ್ರೀ ವೇಂಕಟೇಶ ಪ್ರಭೋ ೯

ನಾನು, ನನ್ನದು ಎಂಬ ಅಭಿಮಾನದಿಂದ
೬೫
ಏನೂ ತೋಚದೋ ಮುಂದೇನು ಗತಿಯೋ ದೇವಾ
ದೀನವತ್ಸಲ ಕಾಯೋ ಅಪ್ರಮೇಯ ಸದಾ ಪ
ನಾನು ನನ್ನದು ಎಂಬಭಿಮಾನದಿಂದನುದಿನ
ಹೀನಕರ್ಮದ ಸುಳಿಯೊಳು ನಾ ನೊಂದು ನಿಂದೆನೊ ಅ.ಪ
ಬೋಧೆ ಇಲ್ಲದೆ ನಾನು ಬಾಧೆಪಡುವೆ ಪೂರ್ಣ
ಬೋಧರ ಮತತತ್ತ್ವ ಸಾಧಿಸಲಿಲ್ಲವೋ
ಸಾಧುಸಜ್ಜನರೆಂದು ಆದರಿಸಲರಿಯೆನೋ
ಆಧಾರನಾಗೋ ನಿರಾಧಾರನಾಗಿಹೆ
ಬಾಧಿಪರೋ ಬಂಧುಗಳು ಪ್ರತಿದಿನ
ನಿಂದಿಪರೋ ಮನಬಂದ ತೆರದಲಿ ಊರೊಳಿತರಜನ
ಉದಯಾಸ್ತ ಪರಿಯಂತರದಿ ಎನಗೆ
ಉದರದ ಯೋಚನೆ ಆದುದೀಪರಿ ಎನ್ನ ಜೀವನ
ಇದಕೆ ಸಾಧನಮಾಡಿ ಮೋಹದ
ಮುದದಿ ಮೈಮರೆದೆನನುದಿನ
ಪದುಮನಾಭನೆ ಮೊರೆಯಿಡುವೆ
ಮುಂದೇನು ಗತಿ ಪಥವಾವುದೋ ದೇವಾ ೧
ಯುಕುತಿಯಿಂದಲಿ ಕರ್ಮಮಾಡಿ ಬೆಂಡಾದೆ
ಭಕುತಿಮಾತ್ರವು ಏನ್ನೊಳಿನಿತಿಲ್ಲವೋ
ಶಕುತಿಯುಕುತಿಗಳೊಳು ನೀನಿದ್ದು ನಡೆಸುವೆ
ಭಕುತಿ ಕೊಡದಿರುವೆಯಾ ಮುಕುತರೊಡೆಯಾ
ಮಾಕಳತ್ರನೆ ನಿನ್ನ ದಯವೊಂದನವರತ ಇರಲಿ
ಅಕುಟಿಲಾಂತಃಕರಣ ಭಕ್ತರ ಸಂಗವೆನಗಿರಲಿ
ನಿಖಿಲಗುಣಗಣಪೂರ್ಣ ನಿನ್ನಯ ಸ್ಮರಣೆಯೊಂದಿರಲಿ
ಸಾಕು ಇದಕಾನೇನು ಮಾಡಲಿ ವಾಕುಮನಸಿಗೆ ಸಿ-
ಲುಕದವ ನಿನ್ನ ಕಾಕುಮನುಜ ನಾನೆಂತು ತಿಳಿಯಲಿ
ನೀ ಕರುಣಿಸದಲಿರೆ ಇನ್ನು ಅವಿ-
ವೇಕಿ ನಾನಿನ್ನೆಂತುಗೈಯಲಿ ೨
ನರಜನುಮದಿ ಬಂದು ಬರಿದೆ ಆಯುವ ಕಳೆದೆ
ಹರಿಯೆ ನಿನ್ನಯ ಕರುಣ ದೊರೆಯಲಿಲ್ಲಾ
ಕರೆಕರೆಪಡುತಲಿ ಜರೆಯೊಳಾಡುತಿಹೆ
ಪರಿಹಾರ ತೋರೆನಗೆ ದುರಿತ ಹರೇ
ದಾರಿ ಎನಗೇನಿಹುದೋ ಇನ್ನು ಮುಂದೆ
ಪರಿಪರಿಯ ತನುಮನ ಕ್ಲೇಶ ಕೊಡದಲೆ
ಪಾರುಗಾಣಿಸೋ ತಂದೆ ಶರಣಜನರಿಗನವರತ
ಸುರಧೇನು ನೀನೆಂದೇ ಅರಿಯದವ ನಾ ನೀ
ಪೊರೆಯಲರಿದೇ ಕರುಣಾಶರಧಿಯೇ ನಿನ್ನ ಕೃಪೆಯೊಂದಿರಲು
ಉರುತರ ಸಾಧನವು ಅದು
ತರವರಿತು ಧೃಢಭಕ್ತಿ ಪಾಲಿಸೊ
ಉರಗಗಿರಿ ಶ್ರೀ ವೇಂಕಟೇಶನೆ೩

ಓಂಕಾರದ ಅ, ಉ, ಮ, ನಾದ, ಬಿಂದು,
೭೮
ಓಂ ನಮೋ ನಾರಾಯಣಾಯ
ತೇ ನಮೋ ನಮೋ ನಮೋ ಪ
ಓಂ ನಮೋ ಓಂಕಾರಾದಿ ನೀ ಘನ್ನ
ಮಹಿಮ ಅಷ್ಟಾಕ್ಷರಾತ್ಮಕನೆ ಅ.ಪ
ಪ್ರಣವ ಪ್ರತಿಪಾದ್ಯ ನೀ ಅಷ್ಟಾಕ್ಷರದೊಳು ವಿಶ್ವತÉೈಜಸ
ಪ್ರಾಜ್ಞ ತುರ್ಯಾತ್ಮ ಅಂತರಾತ್ಮ ಪರಮಾತ್ಮ ಎ್ಞÁನಾತ್ಮ
ವರ್ಣಾತ್ಮಕ ನೀ ಓಂಕಾರದೊಳು ಅಉ
ಮನಾದಬಿಂದು ಘೋಷ ಶಾಂತ
ಅತಿಶಾಂತದೊಳು ಪ್ರತಿಪಾದ್ಯಮೂರುತಿ ಹರೆ೧
ಪ್ರಣವದೊಳು ಆದಿವರ್ಣದಿಂದಭಿವ್ಮಕ್ತಿ
ಷೋಡಶ ಸುಸ್ವರಗಳ್ ಅನಂತ ವೇದಗಳ
ಕಾಲಗಳ್‍ವ್ಯಕ್ತವೊ
ಪ್ರಾಣ ಲಕುಮಿಯಭಿಮಾನಿಗಳನಂತ ವೇದಗಳಿಂ
ದನವರತ ನಿನ್ನಾಗುಣಗಳ ನುತಿಪರೋ
ವಿಶ್ವಮೂರುತೀ ಹರೆ೨
ವರ್ಣದ್ವಿತೀಯದೊಳು ನೀ ಪ್ರತಿಪಾದ್ಯ ಅಭಿವ್ಯಕ್ತವಾದ
ವಯ್ಯ ಕವರ್ಗ ವರ್ಗವೈದು ಪಂಚಭೂತಗಳಂ
ವರ್ಣದೊಳಭಿಮಾನಿಗಳ್ ಭೂತಕ ಗಣಪ ಪ್ರಹವವಾಯು
ವಹ್ನಿ ಶನಿಯು ವರುಣಾರು ಗುಣಗಳ ನುತಿಪರೊ
ತೈಜಸ ಮೂರುತೇ೩
ಪ್ರತಿಪಾದ್ಯನೆ ಮಕಾರ ವಾಚ್ಯ ಶ್ರೀ ಪ್ರಾಜ್ಞ ನಿನ್ನಿಂದಭಿ-
ವ್ಯಕ್ತಿ ಚವರ್ಗ ಪಂಚಕ ಎ್ಞÁನೇಂದ್ರಿಯ ವೈದು
ತತ್ತದಭಿಮಾನಿ ಆಶ್ವಿನಿ ವರುಣ ಸೂರ್ಯ ಪ್ರಾಣ ದಿಗ್ದೇ-
ವತೆಗಳಿಹರು ಪ್ರತಿಗಾಣಿನೊ ಶ್ರೀ ಪ್ರಾಜ್ಞಮೂರುತಿ ಹರೆ೪
ನಾದವಾಚ್ಯಪ್ರತಿಪಾದ್ಯ ತುರ್ಯನೆ ಅಭಿವ್ಯಕ್ತ
ಪಂಚವರ್ಣ ಟವರ್ಗ ಕರ್ಮೇಂದ್ರಿಯಗಳ್
ತದಭಿಮಾನಿಗಳು ಆದರು ಸ್ವಯಂಭುವ ಮನು ಜಯಂತ
ದಕ್ಷ ವಹ್ನಿ ದೇವತೆಗಳು ಅದುಭುತ ಮಹಿಮ
ಶ್ರೀ ತುರ್ಯ ಮೂರುತೆ ೫
ಬಿಂದುವಾಚ್ಯ ಪ್ರತಿಪಾದ್ಯ ನೀನಾತ್ಮ ಬಿಂದುವಿಂದ ತವರ್ಗ
ಪೊಂದಿಕೊಂಡಿಹುದು ತನ್ಮಾತ್ರಪಂಚಕ
ಗಂಧ ರಸ ರೂಪಸ್ಪರ್ಶ ಶಬ್ದಗಳಿಗೆ
ಪಂಚವಾಯುಗಳಿಹರಯ್ಯ
ಬಂಧ ಮೋಚಕ ನೀ ಕಾರಣ ಹರೆ ೬
ಘೋಷದಿಂದಲಭಿವ್ಯಕ್ತಿ ಪಂಚಮನೋ
ವೃತ್ತಿಗಳದರಭಿಮಾನಿ
ಓಷಧೀಧರ ಖಗಪ ಶೇಷೇಂದ್ರ ಕಾಮರು
ಘೋಷವಾಚ್ಯ ನೀನಂತರಾತ್ಮ ಪ್ರತಿಪಾದ್ಯನಹುದೋ
ಪಕಾರ ಪಂಚವರ್ಣ
ದೋಷರಹಿತ ಮನೋಧಾಮದಿ ನೀ ದೊರೆ ೭
ಪರಮಾತ್ಮನೆ ನೀ ಶಾಂತವಾಚ್ಯ
ಪ್ರತಿಪಾದ್ಯನಹುದೋ ಅಭಿವ್ಯಕ್ತಿಯ
ಕಾರಾದಿ ಸಪ್ತವರ್ಣ ಸಪ್ತಧಾತುಗಳಲ್ಲಿ
ನಿರುತದಿ ಯಜ್ಞರಾಮ ಲಕುಮಿ ಪತಿಯು
ವರಹ ಶೇಷ ಷಡ್ಗುಣಸಾರ
ಇರುವರಿವರ ಪರಿ ಅರಿಯೆನೊ ಹರಿಯೆ ೮
ಅತಿ ಶಾಂತದೊಳು ಪ್ರತಿಪಾದ್ಯನಾಗಿಹೆ ಎ್ಞÁನಾತ್ಮ
ಹಕಾರಾದಿ ತ್ರೈವರ್ಣ ಅದರಿಂದ ಗುಣಕ್ರಿಯವೊ
ತತುಕ್ರಿಯ ಜಾಗೃತ ಸ್ವಪ್ನ ಸುಷುಪ್ತಿ ವಿಶ್ವಾದಿರೂಪದಿಂದ
ತೋರುವ ಶ್ರೀವೇಂಕಟೇಶ
ಉರಗಾದ್ರಿವಾಸವಿಠಲ ಮೂರುತೇ ೯

ಇದು ಸುವಾಲಿ ಮಟ್ಟಿನ ಕೃತಿ.
೭೭
ತತ್ವಸುವಾಲಿಗಳು
ಓಂಕಾರ ಪ್ರತಿಪಾದ್ಯ ಶ್ರೀಕಾಂತನೇ ನಿನ್ನ
ಏಕಾಂತ ಭಕ್ತರಾಸಂಗವಾ-ಸಂಗವ ಕೊಟ್ಟು ಭವ
ಭಂಗವ ಗೈಸಿ ಶುಭಾಂಗನೆ ಕಾಯಯ್ಯ ಶ್ರೀರಂಗ ೧
ಕಾಲತÀ್ರಯಕೃತ ವಿಕಾರವಿಲ್ಲದೆ ನೀನೆ
ಮೂಲರೂಪನೆ ಬಹು ರೂಪ-ಬಹುರೂಪ
ಸ್ವಗತಭೇದ ವಿವರ್ಜಿಕನೆ ಸಲಹಯ್ಯ ೨
ಆವಕಾಲಕು ನೀನೆ ಚತುರ ರೂಪದೊಳಿದ್ದು
ಜೀವ ನಿಯಾಮನು ನೀನಾಗಿ-ನೀನಾಗಿ
ತಿಳಿಸುವೆ ವಿಶ್ವ ತೈಜಸ ಪ್ರಾಜ್ಞ ತುರ್ಯಾತ್ಮ೩
ಸಪ್ತಾಂಗ ಏಕೋ ನ ವಿಂಶತಿ ಮುಖನಾಗಿ
ಇಪ್ಪೆ ನೀ ಬಲಗಣ್ಮನೆಯೊಳು-ಮನೆಯೊಳು
ಸ್ಥೂಲ ಶುಭ ವಿಷಯಂಗಳಾ ಮಾಡಿ ಉಣಿಸುವೆ ೪
ವಿಶ್ವದಲಿ ವ್ಯಾಪಿಸಿಹೆ ವಿಶ್ವನಂಬೋರು ನಿನ್ನ
ನಾಶರಹಿತನೆಂದೂ ನರನೆಂದೂ-ನರನೆಂದೂ
ನಿನ್ನ ವೈಶ್ವಾನರನು ಎಂದು ಪೇಳ್ವಾರೊ ೫
ಹರಿ ನಿನ್ನ ವಿಶ್ವನೆಂದು ಉಪಾಸನೆಯನು ಮಾಡಿ
ಹೇರಂಬ ನಿನ್ನ ಒಲಿಸಿದಾ-ಒಲಿಸಿದಾ
ಗಜವಕ್ತ್ರನಾಗಿ ನಿನ್ನ ಸ್ತುತಿಪಾನೋ ೬
ಬಾಹ್ಯಾನುಭವಗಳಿಂದ ಇತರಾನುಭವವ
ದೇಹದೊಳು ಸ್ವಪನದಲಿ ನೀ ನೀಡಿ-ನೀ ನೀಡಿ
ಜೀವರುಪಭೋಗಿಸುವ ಸಾರವನು ರಕ್ಷೀಪೆ ೭
ಸ್ವಪನಕಾಲದಲಿ ಕಂಠದೊಳು ನೀನಿದ್ದು
ಅಪರಿಮಿತಕಾರ್ಯ ಮನಸಿನಲ್ಲಿ-ಮನಸಿನಲ್ಲಿ
ತೈಜಸನೆ ವಾಸನಾಮಯವೆಲ್ಲ ತೋರೀಪೆ೮
ಸ್ವಪನಕಾಲದಲಿ ದೇಹಾಭಿಮಾನದ
ವ್ಯಾಪಾರವೆಲ್ಲವ ಬಿಡಿಸೂವೆ-ಬಿಡಿಸೂವೆ
ತತ್ವಗಳ ವ್ಯಾಪಾರವೇ ವ್ಯಾಪಾರ೯
ಸುಪ್ತಕಾಲದಿ ಜೀವ ಸ್ವರೂಪಕೆ ತಕ್ಕ
ಕ್ಲುಪ್ತ ಅಎ್ಞÁನ ಮೊದಲಾದ-ಮೊದಲಾದ
ಕಾಲವನನುಸರಿಸಿ ಜೀವನಿಗೆ ತನ್ನ ತಿಳಿಯಗೊಡದೆ ೧೦
ಪ್ರಾಜ್ಞಮೂರುತಿ ನೀನೆ ಹೃದಯಸ್ಥಾನದೊಳಿದ್ದು
ಅಎ್ಞÁನಿ ಜೀವನ ಕಾಲಾವ-ಕಾಲಾವ
ನನುಸರಿಸಿ ಜೀವ ಸ್ವರೂಪಾನಂದವÀನು ನೀನೀವೆ೧೧
ಸ್ವಪನ ಜಾಗ್ರತ ಎ್ಞÁನವಿನಿತಿಲ್ಲವೆಂದು
ಸುಪ್ತಿಕಾಲದಿ ಪ್ರಾಜ್ಞ ನಿನ್ನಿಂದ-ನಿನ್ನಿಂದ
ಕೂಡುವ ಜೀವ ಆನಂದ ಹಿಂದೆಂದೂ ಕಾಣನೊ೧೨
ಘನ ಬಹಿ ಪ್ರಾಜ್ಞ ತೈಜಸಾಂತ ಪ್ರಾಜ್ಞ
ಘನ ಪ್ರಾಜ್ಞ ಮೂರುತಿ-ಮೂರುತಿ
ಗಳುಪಾಸನೆ ಮಾಳ್ವ ಬುಧರೇನು ಧನ್ಯರೊ ೧೩
ತುರ್ಯಾನಾಮಕ ಹರಿಯೆ ಶಿರವೆ ನಿನ್ನಾಯ ಸ್ಥಾನ
ಸೂರಿಗಳ ಎ್ಞÁನಕ್ಕೆ ಗೋಚರ-ಗೋಚರ
ನಾಗಿ ನೀ ಕೊಡುತಿರುವೆ ಮುಕ್ತರಿಗೆ ಆನಂದ ೧೪
ಮುಕ್ತರಿಗೆ ದೃಷ್ಟನೋ ಅದೃಷ್ಟನೋ ಅ-
ಮುಕ್ತರಿಗೆ ನಷ್ಟ ಪ್ರಾರಬ್ಧರ್ಗೆ ಲಭ್ಯನೋ-ಲಭ್ಯನಾಗುವೆ
ಗುರುಪ್ರಾಣನನುಗ್ರಹದಿ ಲಭ್ಯನಹುದಯ್ಯಾ ಹೇ ಜೀಯ ೧೫
ಕಣ್ಮನ ಹೃದಯ ತ್ರಿಧಾಮಗಳಲ್ಲಿ ಇದ್ದು
ಉಣಿಸೂವೇ ಜೀವರಿಗೆ ಫಲಭೋಗ-ಫಲಭೋಗವು
ವಿಶ್ವತೈಜಸ ಪ್ರಾಜ್ಞ ಸ್ಥಿತಿಯೊಳು ೧೬
ಸರ್ವರೂಪವು ಪೂರ್ಣ ಸರ್ವಗುಣ ಸಂಪೂರ್ಣ
ಸರ್ವೋತ್ಪಾದಕ ಸುಖರೂಪಿ-ಸುಖರೂಪಿ
ಸರ್ವಲೋಕ ಜೀವರೊಳಿದ್ದು ನಿರ್ಲಿಪ್ತಾ ೧೭
ವರ್ಣತ್ರಯಯುತ ಓಂಕಾರದೊಳಾದ್ಯವರ್ಣ
ಅಕಾರದೊಳು ವಿಶ್ವ ನೀನೆ-ವಿಶ್ವನು ನೀನೆ
ಉಕಾರವೇ ತೈಜಸನು ಮಕಾರ ವಾಚ್ಯನೇ ಶ್ರೀಪ್ರಾಜ್ಞ ೧೮
ನಾದದೊಳು ನೀ ವಾಚ್ಯ ತುರ್ಯರೆಂಬೋರು ನಿನ್ನ
ಸದನವಾಗಿಹುದೈ ಶಿರಸ್ಥಾನ-ಶಿರಸ್ಥಾನ
ನಾಶಿಕಾಗ್ರದಿ ಊಧ್ರ್ವ ದ್ವಾದಶಾಂಗುಲದಲ್ಲಿ ನೆಲೆಸಿರ್ಪೆ ೧೯
ಭೋಗ್ಯವಿಷಯಗಳನು ಪ್ರಾಪಿಸುವ ವಿಶ್ವನೆ
ತೈಜಸನೊಡಗೂಡಿ ವಾಸನಾ-ವಾಸನಾಮಯ
ಕಳೆವ ಅಎ್ಞÁನಿ ಜೀವನನ್ನಾಡಿಸುವೆ ಶ್ರೀಪ್ರಾಜ್ಞ ೨೦
ಸರ್ವಶಕ್ತನು ನೀನೆ ಸರ್ವಕತರ್Àನು ನೀನೆ
ಸವೋತ್ತಮನು ನೀನೆ ಸರ್ವಜ್ಞ-ಸರ್ವಜ್ಞ
ಪೂರ್ಣಪ್ರಎ್ಞÁಂತರ್ಯಾಮಿ ಸಲಹಯೈ೨೧
ಏಸೇನು ಜನುಮದಲಿ ಏಸು ಸಾಧನವನ್ನು
ಏಸೇಸು ಮಾಡಲು ಇನ್ನೇನು-ಇನ್ನಾವ
ಪಲವಿಲ್ಲ ವಾಸುದೇವನೆ ನಿನ್ನ ದಯ ಬೇಕೊ ೨೨
ನಾ ಸುಮ್ಮನಿದ್ದರೆ ಮನಸು ಸಮ್ಮತಿಸದೆ
ನೀ ಸುಮ್ಮನಿರದೆ ಎನ್ನನೂ-ಎನ್ನನು
ಪ್ರೇರಿಸುವೆ ಲೇಸುಮನ ನಿನ್ನಲ್ಲಿ ನೆಲೆಸಲೋ ೨೩
ಕಂಡಕಂಡಲ್ಲಿ ನಾ ಉಂಡುಂಡು ಓಡಾಡಿ
ಧಾಂಡಿಗನಾಗಿ ಬೆಳೆದೆನೊ-ಬೆಳೆದೆನೊ
ನೊಂದೆನೋ ಪುಂಡರೀಕಾಕ್ಷ ನಿನ್ನ ಮರೆತೆನೋ೨೪
ಅವಾವ ಕಾಲದೊಳು ನೀನಿದ್ದು ಉಣಿಸುವೆ
ಜೀವಕೃತ ಕರ್ಮಫಲಗಳ-ಫಲಗಳ
ಶ್ರೀ ವೇಂಕಟೇಶ ನೀನಿತ್ತು ಸಲಹೂವೇ ೨೫
ಮಂದರೋಧ್ಧರ ಜಗದ ಬಂಧಮೋಚಕ ನೀನೆ
ವಂದನೆಯು ಒಂದೆ ಮನದಿಂದೆ-ಮನದಲಿ ನಿನ್ನ
ಪಾದಾರವಿಂದವ ತೋರಯ್ಯ೨೬
ಬಂಧುಗಳು ಹಿತರೆನ್ನೆ ಬಂಧಕರಾಗಿಹರು
ಹಿಂದು ಮುಂದಕು ಎನ್ನ ಬಿಡದಲೆ-ಬಿಡದಲೆ ಭವಪಾಶ
ಬಂಧನಕೆ ನಾ ಇನ್ನು ಸಿಲುಕಿದೆ ೨೭
ಜನನದಾರಭ್ಯದಿ ಜನನಿ ಜನಕರು ಬಿಡದೆ
ಘನವಾಗಿ ತನು ಬೆಳೆಸಿ ಹಿತದಿಂದ-ಹಿತದಿಂದ
ಮುಂದೆ ಪರಗತಿಯ ಕಾಣುವುದೆಂತೊ ಗೋವಿಂದ೨೮
ವಿತ್ತಾಪಹಾರಕರು ಹೃತ್ತಾಪಕಳೆವರೆ
ನಿತ್ಯ ನೀನನಿಮಿತ್ತ ಬಾಂಧವನಾಗಿ-ಬಾಂಧವನಾಗಿ ನೀ
ಉತ್ತಮಗತಿಯ ತೋರಿಸು೨೯
ಹರಿಕಥಾಪುರಾಣಶ್ರವಣ ನಿತ್ಯದೀ ಮಾಡೀ
ಪರಿಯಿಂದ ನಿಜತತ್ವವರಿಯಾದೆ-ಅರಿಯಾದೆ
ಬರಿದೇ ವಿಪರೀತ ಜ್ಞಾನಕೆ ವಶನಾದೆ೩೦
ಮದ್ಯ ತುಂಬಿದ ಭಾಂಡ ಗದ್ಗುಗೆಯ ಮೇಲಿಟ್ಟು
ಶ್ರಧ್ದೆಯಿಂದಲಿ ಅದನ ಪೂಜಿಸೆ-ಪೂಜಿಸೆ
ಪೂತÀ ದುರ್ಗಂಧ ಫಲವದು ಬಿಟ್ಟೀತೆ ೩೧
ಮಂದಹಾಸದಿ ಜನರ ಸಂದೋಹದಲಿ ಕುಳಿತು
ನಿಂದೆ ಮಾತುಗಳಾಡಿ ಮದತುಂಬೀ-ಮದತುಂಬಿಬಿದಾ ದುರ್ಮ
ದಾಂಧರಿಗೆ ಗತಿಯು ಮುಂದೆ ಇನ್ನೆಂತೊ೩೨
ಕಂಡಕಂಡವರಲ್ಲಿ ಕೊಂಡೆ ಮಾತುಗಳಾಡಿ
ಪುಂಡರೀಕಾಕ್ಷ ನಿನ್ನ ಸ್ಮರಿಸಾದೆ-ಸ್ಮರಿಸದಲೆ
ಪರದಿ ಯಮದಂಡಕ್ಕೆ ಗುರಿಯಾದೆ೩೩
ಹಿಂದೆ ಮಾಡಿದ ಪುಣ್ಯದಿಂದ ಇಂದಿನ ಭಾಗ್ಯ
ವೆಂದು ತಿಳಿದು ಮುಂದೆ ನಡೆಯಾದೆ-ನಡೆಯಾದೆ
ತಿಳಿಗೇಡಿ ಬುದ್ಧಿಯಿಂದ ಕುಂದುಪೊಂದುವೆ ೩೪
ಬಾಯಿಮಾತಲ್ಲ ಶ್ರೀ ತೋಯಜಾಕ್ಷನ ಭಕ್ತ-
ರಾಯತನ ತಿಳಿವುದು ಶ್ರಮಸಾಧ್ಯ-ಶ್ರಮಸಾಧ್ಯ
ವನು ಸದುಪಾಯದಿಂದ ತಿಳಿದು ನಲಿದಾಡೊ ೩೫
ನಿಂದಕರ ನುಡಿಯಿಂದ ಹಿಂದೆ ಮಾಡಿದ ಪಾಪ
ಒಂದೊಂದು ಪರಿಯಲ್ಲಿ ಪರಿಹಾರ-ಪರಿಹಾರವಾಗಿ
ನಿಂದಕರು ಬಂಧನಕೆ ಬೀಳ್ವಾರೋ ೩೬
ಸ್ರ‍ಮತಿಯುಕ್ತಿಯನೆ ಬಿಟ್ಟು ಯುಕ್ತಿಮಾತುಗಳಿಂದ
ಹೊತ್ತು ಕಳೆಯುತ ಉನ್ಮತ್ತನೆನಿಸಿ-ಉನ್ಮತ್ತನೆನಿಸಿದವ ಇ-
ನ್ನೆತ್ತÀ್ತ ಭವಶರಧಿಯ ದಾಟÀುವ ೩೭
ಪರರ ದೂಷಣೆಯಿಂದ ಹರಿ ಸ್ಮರಣೆ ಮಾಡದೆ
ಅರೆಘಳಿಗೆ ಕಳೆದುದಿಹ ನರಜನ್ಮ-ನರಜನ್ಮ ಬಂದುದು
ನರಕಯಾತನೆಗಲ್ಲದಿನ್ನಿಲ್ಲ ೩೮
ಉದಯಾಸ್ತ ಪರಿಯಂತ ಉದರಭರಣಕಾಗಿ
ಉದಧಿಶಯನ ನಾ ನಿನ್ನ ಭಜಿಸಾದೆ-ಭಜಿಸಾದೆ
ಮದದಿಂದ ಬುಧಜನರ ನಿಂದೆಯ ಮಾಡೀದೆ೩೯
ಇನ್ನಿಲ್ಲ ಪಾತಕವು ಅನ್ಯನಿಂದನೆಗಿಂತ
ಇನ್ನಲ್ಲ ಪರಗತಿಯ ಸಾಧನ-ಸಾಧನವು
ತನ್ನೊಳು ತÀನ್ನಿರವರಿತು ಸುಮ್ಮನಿರುವುದು ಅದು ನಿಧಾನ೪೦
ಭಿನ್ನಜೀವರ ಗುಣ ಭಿನ್ನಕ್ರಿಯೆಗಳು
ಭಿನ್ನಧರ್ಮಂಗಳ ಗ್ರಹಿಸಾದೆ-ಗ್ರಹಿಸಾದೆ
ನೀನೆಣಿಸಿದೆ ತನ್ನಗುಣಧರ್ಮದಂತನ್ಯರಿಹನೇನೊ ೪೧
ಕಾಯವೇ ತಾನೆಂದು ಮಾಯಕೆ ಒಳಗಾಗಿ
ಬಾಯಿ ಬಂದಂತೆ ಮಾತಾಡಿ-ಮಾತಾಡಿ ಈ ಜೀವ
ಕಾಯಯಾತನೆಗೊಂಡು ನೋಯುವಾ ೪೨
ವಚನ ವಚನವು ಸರ್ವ ಉಚಿತ ದೇಹದ ಕಾರ್ಯ
ನಿಚಯದೊಳು ಹರಿ ಪ್ರಚುರನಾಗಿ-ಪ್ರಚುರನಾಗಿ
ಕಾಯಕುಪಚಯವಿತ್ತು ಸಲಹೂವ ೪೩
ದೇಹ ಕಾಯದ ಕಾರ್ಯಪ್ರಕ್ರಿಯವ ತಿಳಿಯಾದೆ
ಮಾಯೆಗೊಳಗಾಗದಿರು ಹೇ ಮಾನವಾ-ಮಾನವನೆ ತಿ-
ಳಿಯೊ ಮಾಯಾರಮಣನ ಬಿಂಬಕ್ರಿಯವಾ೪೪
ತನ್ನೊಳಗೆ ಇಹ ಷಡ್ವೈರಿಗಳ ಗೆಲ್ಲದವ
ಅನ್ಯರೊಳು ನೀ ಹೋರಾಡಬಲ್ಲೆಯ-ಬಲ್ಲೆಯಾ
ನಿನ್ನ ವೈರಿಗಳ ಜಯಿಸಲರಿಯದ ಖೂಳ ರಣಹೇಡಿ ೪೫
ಕೊಳೆತು ನಾರುವ ದೇಹದೊಳಗಿರುವ ಹುಳುಕುಗಳ
ಕೊಳೆಯ ಕಳೆಯದ ಮನುಜ ನೀನೆಂತೊ-ನೀನೆಂತೊ
ಕೊಳೆತÀ ಸಗಣಿಯೊಳಗಿಹ ಹುಳುವೆ ನಿನ್ನ ಗತಿಯೆಂತೊ೪೬
ಆದದ್ದು ಆಯಿತು ಯತ್ನ ತಪ್ಪಿತು ಎಂದು
ಹೆದ್ದಾರಿ ಹಿಡಿದು ಪರಮಾರ್ಥ-ಪರಮಾರ್ಥವ
ಬುದ್ಧಿ ತಿದ್ದಿಕೊಳ್ಳಲು ಮುಂದೆ ಅನುವಾಗೊ೪೭
ತತ್ತ ್ವದೇವತೆಗಳು ತತ್ತತ್ವಕಾರ್ಯಜಿ-
ವೋತ್ತಮನಾಜ್ಞೆಯಿಂ ತಾವ್ ಗೈವರೊ-ತಾವ್‍ಗÉೈ
ಯುತ್ತಲಿರೆ ನಾನೆತ್ತ ಮೃತ್ತಿಕಾಪ್ರತಿಮೆಯೋ೪೮
ಒಂದೊಂದು ರೀತಿಯಿಂ ಚೆಂದಾಗಿ ಯೋಚಿಸು
ಮಂದಮತಿಯು ನೀನು ಹಿಂದೆಂತೂ-ಹಿಂದೇನು
ಮುಂದೇನು ಇಂದೆ ಗೋವಿಂದನಾ
ವಂದನೆಯೊಂದಲ್ಲದಿನ್ನಿಲ್ಲ೪೯
ಡಾಂಭಿಕತನ ಬಿಟ್ಟು ಡಿಂಬದೊಳು ಸರ್ವದಾ
ಅಂಬುಜನಾಭನೇ ಇಂಬಾಗಿ-ಇಂಬಾಗಿ ಸರ್ವತ್ರ
ತುಂಬಿಕೊಂಡಿಹನೆಂದು ನಲಿದಾಡೋ ೫೦
ತುಷ್ಟಿಯಾಗಿರು ನೀನು ಕೊಟ್ಟಷ್ಟು ಲಾಭಕ್ಕೆ
ದುಷ್ಟವಿಷಯಗಳಿಗೆ ಎರಗಾದೆ-ಎರಗಾದೆ ಇರಲು ಸಂ-
ತುಷ್ಟ ನಾಗುವನಯ್ಯ ಶ್ರೀಕೃಷ್ಣ೫೧
ಕಾಯ ನಿನ್ನದು ಅಲ್ಲ ಮನವು ಅಧೀನವಲ್ಲ
ಹೇಯವಿಲ್ಲದೆ ಮಾಯಕೊಳಗಾಗಿ ಮರುಳಾಗದಲೆ-ಮರುಳಾಗದಲೆ
ಮಾಯಾರಮಣನ್ನ ನೆನೆಯೊ ನಿರ್ಭಯದಿಂದ ೫೨
ಹಲವು ಶಾಸ್ತ್ರವ ನೋಡಿ ತಲೆಹರಟೆಯ ಬಿಟ್ಟು
ಅಲವಬೋಧರ ತತ್ತ ್ವಸುಧೆಯನ್ನು- ಸುಧೆಯನ್ನು ಸವಿದು ನಿ-
ರ್ಮಲ ಎ್ಞÁನ ದೊಳು ನಲಿದಾಡೆÀೂ