Categories
ದಾಸ ಶ್ರೇಷ್ಠರು

ಐಹೊಳೆ ವೆಂಕಟೇಶ

ದಾಸರ ಹೆಸರು : ಐಹೊಳೆ ವೆಂಕಟೇಶ ;
ಜನ್ಮ ಸ್ಥಳ : ಐಹೊಳೆ (ವಿಜಾಪುರ ಜಿಲ್ಲೆ) ;
ತಂದೆ ಹೆಸರು : ಮುತಾಲಿಕ ದೇಸಾಯ ರಾಘವಪ್ಪ ;
ಕಾಲ : 1835- ; ಅಂಕಿತನಾಮ : ಸ್ವಪ್ನಾಂಕಿತ ಐಹೊಳೆವೆಂಕಟೇಶ ;
ಲಭ್ಯ ಕೀರ್ತನೆಗಳ ಸಂಖ್ಯೆ : 6 ;
ಪೂರ್ವಾಶ್ರಮದ ಹೆಸರು : ಭೀಮರಾವ್ ರಾಘವೇಂದ್ರ ಕುಲಕರ್ಣಿ (ಭಾರದ್ವಾಜ ಗೋತ್ರ) ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ಪಾರಿಜಾತ ನಾಟಕಗಳು, ವಿರಾಟಪರ್ವ ರಾಮಪಾರಿಜಾತ, ರುಕ್ಮಾಂಗದ ನಾಟಕ, ನಳೋಪಖ್ಯಾನ ಅಂಬರೀಷ ನಾಟಕ, ಕೃಷ್ಣ ಪಾರಿಜಾತ, ಏಕಾದಶೀ ಮಹಾತ್ಮೆ ರುಕ್ಮಿಣೀ ಸತ್ಯಭಾಮೆಯರ ಮುಯ್ಯದ ಹಾಡು, ಗೋಪ ನಾರಿಯರ ಕರುಣಾಲಾಪಿ ;
ವೃತ್ತಿ : ಬೆಳಗಾವಿಯ ಸರ್ದಾರ್ ಹೈಸ್ಕೂಲ್ನಲ್ಲಿ ಅಧ್ಯಾಪಕರಾಗಿದ್ದು ನಂತರ ರೋಣ, ಮುರುಗೋಡದಲ್ಲಿ ಫೌಜುದಾರರಾಗಿದ್ದರು ;
ಕೃತಿಯ ವೈಶಿಷ್ಟ್ಯ : ವಿಜಾಪುರ ಜಿಲ್ಲೆಯ ಅಚ್ಚಕನ್ನಡದ ಸೊಗಡು ಇವರ ಕೃತಿಗಳಲ್ಲಿ ಎದ್ದು ಕಾಣುತ್ತದೆ.