Categories
ರಚನೆಗಳು

ಐಹೊಳೆ ವೆಂಕಟೇಶ

೩೨೪
ತಿರುಪತಿಯ ಶ್ರೀ ವೆಂಕಟೇಶ
ಇಷ್ಟು ದಿನ ಈ ಶೇಷಾದ್ರಿ ಎಷ್ಟು ದೂರವೊ ಎನುತಿದ್ದೆದೃಷ್ಟಿಯಿಂದ ನೋಡಿದೆ ನಾ ಬೆಟ್ಟದೊಡೆಯನಂಘ್ರಿ ಕಮಲ ಪ
ಹೇಮಮುಖದೀ ನದಿಯ ಕಂಡೇ ಗೋಮಿನೀ ಪದ್ಮಾವತಿ ಕಂಡೆಭೂಮಿಸುರರ ಮೇಳವ ಕಂಡೆ ಆ ಮಹಾ ಗಾಳಿಗೋಪುರ ಕಂಡೆ ೧
ಸ್ವಾಮಿ ಪುಷ್ಕರಿಣೀಯ ಕಂಡೆ ಭೂಮಿ ವರಹಾ ದೇವರ ಕಂಡೆರಾಮದೂತನ ಪಾದವ ಕಂಡೆ ಸ್ವಾಮಿಯ ಮಹಾದ್ವಾರವ ಕಂಡೆ ೨
ಹರಿಯು ಅಡಗಿದ ಹುತ್ತನು ಕಂಡೆ ಹರಿಯಧ್ವಜದ ಸ್ತಂಭವ ಕಂಡೆಪರಿಪರಿ ವೈಭವವನು ಕಂಡೆ ಪರಮಪುರುಷನಾ ಮೂರ್ತಿಯ ಕಂಡೆ ೩
ಹರಿಹರಿ ಎನ್ನುವರನು ಕಂಡೆ ಹರಿದು ಒಳ ಪೋಗುವರನು ಕಂಡೆಹರಿಣಾಂಜನದ ತಾಡನ ಕಂಡೆ ಮಣಿಮಯಿಮುಕುಟವನು ಕಂಡೆ ೪
ಹಣೆಯಲ್ಲಿಯ ನಾಮವ ಕಂಡೆ ಅನುಪಮಾದಂಗವನೂ ಕಂಡೆಕೊರಳ ಸರಗೀ ಸರಗಳ ಕಂಡೆ ಹರಳು ರತ್ನದಾಭರಣಗಳನು ಕಂಡೆ ೫
ಉರದಿ ಶ್ರೀ ಭೂದೇವಿಯರ ಕಂಡೆ ಕರದಿ ಶುಭಶಂಖ ಚಕ್ರಗಳ ಕಂಡೆಗುರು ಶ್ರೀವಾದಿರಾಜರ್ಪಿಸಿದ ವರ ಶಾಲಿಗ್ರಾಮ ಹಾರವ ಕಂಡೆ ೬
ಉದಗಿ ಪೀತಾಂಬರವ ಕಂಡೆ ನಡುವಿನೊಡ್ಯಾಣವನು ಕಂಡೆಜಡಿದ ಮಣಿಗಣ ಭೂಷಣನ ಕಂಡೆ ಜಡಜನಾಭನ ಮೂರ್ತಿಯ ಕಂಡೆ ೭
ಅಂದದೀ ಕಾಲ್ಗಡಗವ ಕಂಡೆ ಸುಂದರ ಪಾದಗಳ ಕಂಡೆಮಂದಹಾಸ ಮುಖಾಬ್ಜ ಕಂಡೆ ಇಂದಿರೆಯ ರಮಣನ ಕಂಡೆ ೮
ಆಗಮ ಶೃತಿ ಘೋಷವ ಕಂಡೆ ಭಾಗವತರಾ ಮೇಳವ ಕಂಡೆಬಾಗಿಲಾ ಬಲ ಹಸ್ತವ ಕಂಡೆ ಭಾಗೀರಥಿಯಾ ಪಿತನವ ಕಂಡೆ ೯
ಚಿನ್ನದ ಕೂಪವನೂ ಕಂಡೆ ಅನ್ನಪೂರ್ಣಾದೇವಿಯ ಕಂಡೆರನ್ನದ ಹರಿವಾಣವ ಕಂಡೆ ಉಂಬುವ ವೈಭವವನು ಕಂಡೆ ೧೦
ಕಪ್ಪದ ಕಣಜವನೂ ಕಂಡೆ ತಪ್ಪದೇಹಾರುವವರನು ಕಂಡೆಇಪ್ಪತ್ತು ದುಡ್ಡಿಗೆ ತೀರ್ಥ ಒಪ್ಪಿಲೇಮಾರುದನುರನು ಕಂಡೆ ೧೧
ಸಾಸಿರ ನಾಮಗಳ ಒಡೆಯಾ ವಾಸುದೇವಾಚ್ಯುತನ ಕಂಡೆಕಾಸಿಗೆ ಕೈಚಾಚುವಂಥ ಕೇಸಕ್ಕ ತಿಮ್ಮಪ್ಪನ ಕಂಡೆ ೧೨
ಆವ ಜನುಮದ ಸುಕೃತವೋ ಎನಗೆ ಭೂವೈಕುಂಠವನ್ನೇ ಕಂಡೆಶ್ರೀವಿಧಿಭವಾದಿ ವಂದ್ಯ ಐಹೊಳಿ ವೆಂಕಟೇಶನ ಕಂಡೆ ೧೩
ಜಯ ಜಯ ಜಯ ಮಂಗಲಂ ಹರಿಗೆ ಜಯ ಜಯ ಶುಭ ಮಂಗಲಂ ಸಿರಿಗೆಜಯ ಪುದವೀ ಪದ ಕೇಳಿ ಪೇಳಿದರೆ ಒಲಿದು ಫಲವೀವ ಕುಲಸ್ವಾಮಿ ಅವರೀಗೆ ೧೪

೩೨೫
ಶ್ರೀ ರಾಘವೇಂದ್ರರು
ಎಂಥಾ ದಯವಂತರು ರಾಘವೇಂದ್ರರಿನ್ನೆಂಥ ಮಹಿಮ ಪೂರ್ಣರುಚಿಂತಿತ ಫಲರೆಂದೆನಿಸಿ ವೃಂದಾವನದಂತರ್ಗತ ಪೊಳೆವರು ಪ
ಪೃಥುವೀಧರನ ದಂತೋದ್ಭವೆಯಾದಆ ತುಂಗಾತಟ ಕೃತ ಮಂದಿರರುಧೃತರಾಷ್ಟ್ರನೃಪರ ಮಕ್ಕಳ ಕೊಂದವನ ಸ ನ್ಮತಾಂಬುಧಿ ಚಂದ್ರಮರು ಪ್ರತಿಯಿಲ್ಲ ಇದರ ಸರಿಯ ಮಹಾತ್ಮೆಯು ಯಾವಯತಿಯೊಳಗೆ ಕಾಣರು ಸತತಾದಿತೇಯ ಸ್ವಭಾವಪೂರ್ಣರಾಗಿ ಇಷ್ಟಾರ್ಥ ಕೊಡುತಿಹರು ೧
ಸಂತತ ಶುಭಕಾರ್ಯವಾಗುವವು ಇವರಲ್ಲಿಅಂತರ ಬರಗೊಡರು ಹೊಂತಕಾರಿ ಮಹಿಮಂತ ತಿಳಿಯದೆಂದು ಬುಧರು ಭ್ರಾಂತರಾಗ್ವರುಸಂತೋಷದಲಿ ಸದ್ಭಾಗವತ ಸಮ್ಮೇಳರುನಿಂತು ಸನ್ಮುಖ ಪಾಡ್ವರು ಸಂತರು ಶ್ರಾವಣ ಬಹುಳತೃತೀಯ ರಥ ಸಂತೆ ನೆರೆದಂತೆಳೆವರು ೨
ಕರುಣಾರ್ಣವ ಎಂಬ ಗುಣ ನಿಮ್ಮಲ್ಲಿದ್ದಕಾರಣದಿ ಪ್ರಾರ್ಥಿಸುತಿಹರುಧೊರೆ ನೀವು ಸಲಹಬೇಕಲ್ಲವೆ ಮರೆತರೆ ಇನ್ನಾರುಪೊರೆಯುವರು ಕರಿರಾಜವರದ ಐಹೊಳೆಯ ವೆಂಕಟಗೆಪ್ರೀತಿ ಪಾತ್ರರು ಗುರು ಸಾರ್ವಭೌಮ ನಿಮ್ಮಂಘ್ರಿಯುಗಳಲ್ಲಿ ಭಕ್ತಿಯಲಿ ಉದ್ಧರಿಸುವರು ೩

೩೨೩
ತಿಳಿವಳಿಕೆಯಲಿ ನಡಿ ಮನುಜಾ ಯಮ-ನಲಿ ಆಗೊ ಭವಣೆಯು ತಪ್ಪದು ನೈಜಾ ಪ.
ಸುಳ್ಳು ಮಾತುಗಳಾಡೋರಿಲ್ಲೆ ನಿನ್ನಹಲ್ಲು ಕಿತ್ತಿಸಿ ಕಡಿ ಘಾಕುವರಲ್ಲೆಕಳ್ಳತನವ ಮಾಡೋದಿಲ್ಲೆ ಬೆನ್ನಸೆಳ್ಳಿಯಬ್ಬಿಸೆ ಕೈಯ ಕಡಿಸುವರಲ್ಲೆ ೧
ದತ್ತಾಪಹಾರ ಮಾಡೋದಿಲ್ಲೆ ಜಿಂಹ್ವಕತ್ತರಿಸುವರೆಲೊ ಅಂತಕರಲ್ಲೆವೃತ್ತಿಛೇದನ ಮಾಡೋದಿಲ್ಲೆ ನಿನ್ನಎತ್ತಿ ಹಾಕುವರೊ ಕುಂಭೀಪಾಕದಲ್ಲೆ ೨
ಪರಸತಿಯರನಪ್ಪೋದಿಲ್ಲೆ ನಿನ್ನಉರಿವ ಉಕ್ಕಿನ ಕಂಭ ತೆಕ್ಕಿಸೋರಲ್ಲೆಮರವಿ ಮೋಸವ ಮಾಡೋದಿಲ್ಲೆ ನಿನ್ನಪರಿಪರಿ ಭವಣಿಯ ಬಡಿಸುವರಲ್ಲೆ ೩
ಪ್ರಾಣಹಿಂಸೆಯ ಮಾಡೋದಿಲ್ಲೆ ಕಲ್ಲಗಾಣದೊಳಗೆ ಇಕ್ಕಿ ತಿರಗಿಸೋರಲ್ಲೆಮಾನಿನಿಯರ ನೋಡೋದಿಲ್ಲೆ ಶಸ್ತ್ರಪೋಣಿಸಿ ಕಂಣಾ ಮೀಟಿಸುವರೋ ಅಲ್ಲೆ ೪
ಹೇಸಿ ವಿಷಯ ನಂಬೋದಿಲ್ಲೆ ಸೀಸ
ಕಾಶಿ ಹೊಯ್ಯುವರೆನೊ ನಿನ್ನ ಬಾಯಲ್ಲೆದೂಷಣ ನಿಂದಗಳಿಲ್ಲೆ ಬಲುದೋಷಿಯೆನ್ನುತ ನಿನ್ನ ಘಾಸಿಪರಲ್ಲೆ ೫

೩೨೬
ಶ್ರೀ ರಾಘವೇಂದ್ರರು
ದಿನಕರನುದಿಸಿದನು ಧರೆಯೊಳಗೆದಿನಕರನುದಿಸಿದನು
ದಾನವ ಕುಲದಲಿ ಕ್ಷೋಣಿಯೊಳಗೆ ಪ
ಪ್ರಥಮ ಪ್ರಲ್ಹಾದನಾಗಿ ಅವತಾರ ಮಾಡಿಸತತ ಹರಿಯ ನುತಿಸಿಮತಿ ಹೀನನಾದ ತಂದೆಗೆ ನರಹರಿರೂಪರತಿಯಿಂದ ತೋರಿದ ಪ್ರಲ್ಹಾದರಾಯರೆಂಬ ೧
ವ್ಯಾಸಮುನಿಯ ಎನಿಸಿ ಸೋಸಿಲಿಂಗವಾಸವನುತನ ಭಜಿಸಿದಾಸನೆಂದು ಮೆರೆದಿ ನವ ವೃಂದಾವನದಿಸೋಸಿಲಿ ಕರೆದರೆ ವಾಸ ಮಾಡುವುದಕ್ಕೆ ೨
ತುಂಗಭದ್ರೆಯ ತೀರದಿ ಮಂಗಳಮರ ಮಂತ್ರಾಲಯ ಸ್ಥಳದಿಅಂಗಜ ಪಿತ ನಮ್ಮ ಐಹೊಳೆವೆಂಕಟನಕಂಗಳಿಂದ ಕಂಡೆ ಗುರು ರಾಘವೇಂದ್ರನೆಂಬ ೩

೩೨೭
ಶ್ರೀ ರಾಘವೇಂದ್ರರು
ನೋಡಿದೆ ನಾ ಗುರುವರನ ಈರೂಢಿಗಧಿಕ ರಾಘವೇಂದ್ರರಾಯನ ಪ
ವೃಂದಾವನ ರೂಪನ ಭಕ್ತ ವೃಂದಕಾನಂದ ಕೊಡುವ ಕಲ್ಪದ್ರುಮನಕಂದರ್ಪನ ಗೆಲಿದವನಅಂದಣದಲಿ ನಾಲವಿಂದ ಮೆರೆವರ ೧
ಕಮಲಾಕ್ಷಿಮಾಲಾ ಕಂಧರನ ಈ ಕ್ಷಿತಿಯೊಳು ಮಧ್ವಮತಾಬ್ಧಿ ಚಂದಿರನತಮವೈರಿಸಮತೇಜದವನ ಸಾಧುಸುಮನ ಪ್ರಿಯ ಸುಧೀಂದ್ರ ಕರಜನ೨
ಶೃಂಗಾರಾಭರಣಭೂಷಣ ದಿವ್ಯಅಂಗ ಪುಣ್ಯದಿ ಲೋಕ ಪವಿತ್ರ ಗೈಯುವನತುಂಗಾತಟ ಮಂದಿರನ ಮಹಮಂಗಲಪ್ರದ ಮಂತ್ರಾನಿಲಯದೊಲ್ಲಭನ ೩
ಲೇಸಾದ ಭಿಕ್ಷು ಎನಿಪನ ತನ್ನದಾಸರಾ ಸ್ತುತಿಗೆ ಸರ್ವಾರ್ಥದಾಯಕನಭಾಸುರಾಗಮ್ಯ ಮಹಿಮನ ಜಗಧೀರ ನರಹರಿದೂತ ದೇವಸ್ವಭಾವನ ೪
ಪರವಾದಿ ಹೃದಯದಲ್ಲಣನ ದ್ವೈತಸ್ಥಿರವೆಂದು ಜಗದಿ ಭೇರಿಯ ಹೊಡಿಸಿದನಪರಿಮಳಾದಿ ಗ್ರಂಥ ಬೀರಿದನ ಕರಿವರದ ಐಹೊಳೆ ವೆಂಕಟನ ಕಿಂಕರನ ೫