Categories
ರಚನೆಗಳು

ಕನಕದಾಸರು

ಕತ್ತಲ ಲೋಕ ಸೇರುವವರು
೭೭
ಅಂಧಂತಮಸು ಇನ್ನಾರಿಗೆ ಗೋ-ವಿಂದನ ನಿಂದಿಸುವರಿಗೆ ಪ
ಸಂದೇಹವಿಲ್ಲದೆ ಸಾರಿಸಾರಿಗೆ ವಾಯುನಂದನನ ವಂದಿಸದವರಿಗೆ ಅ
ಮಾತುಮಾತಿಗೆ ಹರಿಯ ನಿಂದಿಸಿ ಸ-ರ್ವೋತ್ತಮ ಶಿವನೆಂದು ವಾದಿಸಿಧಾತುಗ್ರಂಥಗಳೆಲ್ಲ ತೋರಿಸಿ ವೇ-ದಾಂತ ಪ್ರಮಾಣಗಳ ಹಾರಿಸಿಸೋತು ಸಂಕಟಪಟ್ಟು ಘಾತಕ ಒಡಲೊಳಗಿಟ್ಟುನೀತಿ ಹೇಳುವ ಕೆಟ್ಟ ಜಾತಿಗಳಿಗಲ್ಲದೆ ೧
ಮೂಲಕವತಾರಕ್ಕೆ ಭೇದವು – ಮುಖ್ಯಶೀಲ ಪಂಡಿತರೊಳಗೆ ವಿವಾದವುಲೀಲಾ ಸಾದೃಶ್ಯವ ತೋರುತ – ಲಿಂಗಭಂಗವಿಲ್ಲದ ದೇಹ ಹಾರುತಮೂಲ ಗುರುವು ಕುಂತೀಬಾಲನೆನ್ನದೆ ವೃಥಾಶೀಲಗೆಟ್ಟಂಥ ಖೂಳರಿಗಲ್ಲದೆ ಮತ್ತೆ ೨
ವ್ಯಾಸರ ಮಾತುಗಳಾಡುತ ವಿ-ಶ್ವಾಸ ಘಾತಕತನ ಮಾಡುತದೋಷವೆಂದರೆ ನುಡಿ ಕೇಳದೆ ಸಂ-ತೋಷವೆಂದರೆ ನೋಡಿ ಬಾಳದೆಶೇಷಶಯನನಾದಿಕೇಶವರಾಯನದಾಸರೊಡೆಯ ಮಧ್ವದ್ವೇಷಿಗಳಿಗಲ್ಲದೆ ೩

ವಿಷ್ಣುವಿನ ದಶಾವತಾರ ಲೀಲೆಗಳ
ದಶಾವತಾರದ ಲೀಲೆಗಳು
೨೨೭
ಅಂಬುಜದಳಾಕ್ಷಗೆ ಮಂಗಳ ಪ
ಸರ್ವ ಜೀವರಕ್ಷಕಗೆ ಮಂಗಳ ಅ
ಜಲಧಿಯೊಳಾಮ್ನಾಯ ತಂದಗೆ ಮಂಗಳಕುಲಗಿರಿ ತಾಳ್ದಗೆ ಜಯಮಂಗಳನೆಲನ ಕದ್ದಸುರನ ಗೆಲಿದಗೆ ಮಂಗಳಚೆಲುವ ನರಸಿಂಹಗೆ ಶುಭಮಂಗಳ೧
ವಸುಧೆಯ ಈರಡಿಗೈದಗೆ ಮಂಗಳವಸುದಾಧಿಪರಳಿದಗೆ ಜಯಮಂಗಳದಶಕಂಧರನನ್ನು ಗೆಲಿದಗೆ ಮಂಗಳಪಶುಗಳ ಕಾಯ್ದಗೆ ಶುಭ ಮಂಗಳ ೨
ಪುರ ತ್ರಯ ವಧುಗಳ ಗೆಲಿದಗೆ ಮಂಗಳತುರಗ ವಾಹನನಿಗೆ ಜಯ ಮಂಗಳವರ ನೆಲೆಯಾದಿಕೇಶವನಿಗೆ ಮಂಗಳಪರಮ ಪತ್ನಿವ್ರತಗೆ ಶುಭ ಮಂಗಳ ೩

ಅಸಂಸ್ರ‍ಕತರೊಡನೆ ಸರಸ ಆಡುವುದಕ್ಕಿಂತ
ಸಮಾಜ ಚಿಂತನೆ :ನೀತಿಬೋಧನೆ
೧೬೯
ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತಸುಜ್ಞಾನಿಗಳ ಕೂಡೆ ಜಗಳವೇ ಲೇಸು ಪ
ಉಂಬುಡುವುದಕಿಲ್ಲದರಸಿನೋಲಗಕಿಂತತುಂಬಿದೂರೊಳಗೆ ತಿರಿದುಂಬುವುದೆ ಲೇಸುಹಂಬಲಿಸಿ ಹಾಳ್ಹರಟೆ ಹೊಡೆವುದಕಿಂತ – ಹರಿಯೆಂಬ ದಾಸರ ಕೂಡೆ ಸಂಭಾಷಣೆಯೆ ಲೇಸು೧
ಒಡನೆ ಹಂಗಿಸುವನೋಗರವನುಂಬುದಕಿಂತಕುಡಿನೀರು ಕುಡಿದುಕೊಂಡಿರುವುದೇ ಲೇಸುಬಿಡದೆ ಬಾಂಧವರೊಡನೆ ಕಡಿದಾಡುವುದಕಿಂತಅಡವಿಯೊಳಗಜ್ಞಾತ ವಾಸವೇ ಲೇಸು೨
ಮಸೆಯುತಿಹ ಮತ್ಸರದ ನೆರೆಯೊಳಿರುವುದಕಿಂತಹಸನಿಲ್ಲದ ಹಾಳುಗುಡಿಯೇ ಲೇಸುಬಿಸಜಾಕ್ಷ ಕಾಗಿನೆಲೆಯಾದಿಕೇಶವರಾಯವಸುಮತಿಯೊಳು ನಿನ್ನ ದಾಸತ್ವವೇ ಲೇಸು ೩

ಸಮೂಹ ಹಿತವನ್ನೊಲ್ಲದ
೧೭೦
ಅಟ್ಟು ಇಕ್ಕದವರ ಮನೆಯ ಪ
ಅಟ್ಟು ಇಕ್ಕದವರ ಮನೆ ಪಾಯಸ ಕಜ್ಜಾಯವಅಟ್ಟರೇನು ಅಡದಿದ್ದರೇನು ಅ
ನಿಚ್ಚಣಿಗೆ ದೋಟಿಗೆ ನಿಲುಕದ ಹಣ್ಣಿನ ವೃಕ್ಷನಿಚ್ಚ ನಿಚ್ಚವು ಬಾಗಿ ಫಲವಾದರೇನುಔಚಿತ್ಯ ವಿದ್ಯೆಯನರಿಯದ ದೊರೆ ತಾನುಮೆಚ್ಚಿದರೇನು ಮೆಚ್ಚದಿದ್ದರೇನು ೧
ದಾರಿದ್ರ್ಯಕ್ಕೊದಗದ ದ್ರವ್ಯ ಪದಾರ್ಥದಏರಿ ಇದ್ದರೇನು ಪರ್ವತವಿದ್ದರೇನುಶರೀರ ಸೌಖ್ಯ ಶಮನಕ್ಕಾಗದ ಹೆಣ್ಣುಊರಲಿದ್ದರೇನು ತೌರೂರಲಿದ್ದರೇನು ೨
ಉರಗಾದ್ರಿ ವಾಸ ನಾರಾಯಣಾದಿಕೇಶವನಚರಣ ಕಮಲವನು ಸೇರಿಕೊಳ್ಳದೆವರ ಶಾಪವಿಲ್ಲದ ಬಣಗು ದೈವಗಳಿಗೆಶರಣೆಂದರೇನು ಶರಣೆನದಿದ್ದರೇನು ೩

ಅಡಿಗೆಯ ರೂಪಕದಲಿ
ಜ್ಞಾನ ಭಕ್ತಿ ವೈರಾಗ್ಯ
೭೨
ಅಡಿಗೆಯನು ಮಾಡಬೇಕಣ್ಣ – ನಾನೀಗ ಜ್ಞಾನದಡಿಗೆಯನು ಮಾಡಬೇಕಣ್ಣ ಪ
ಅಡಿಗೆಯನ್ನು ಮಾಡಬೇಕುಮಡಿಸಬೇಕು ಮದಗಳನ್ನುಒಡೆಯನಾಜ್ಞೆಯಿಂದ ಒಳ್ಳೆಸಡಗರದಲಿ ಮನೆಯ ಸಾರಿಸಿ ಅ
ತನ್ನ ಗುರುವ ನೆನೆಯ ಬೇಕಣ್ಣತನುಭಾವವೆಂಬ ಭಿನ್ನ ಕಲ್ಮಶವಳಿಯ ಬೇಕಣ್ಣಒನಕೆಯಿಂದ ಕುಟ್ಟಿಕೇರಿ ತನಗೆ ತಾನೆ ಆದ ಕೆಚ್ಚನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ ೧
ತತ್ವಭಾಂಡವ ತೊಳೆಯ ಬೇಕಣ್ಣ – ಸತ್ಯಾತ್ಮನಾಗಿಅರ್ತಿ ಅಕ್ಕಿಯ ಮಥಿಸಬೇಕಣ್ಣಕತ್ತರಿ ಮನವೆಂಬ ಹೊಟ್ಟನು ಎತ್ತಿ ಒಲೆಗೆ ಹಾಕಿ ಇನ್ನುಮುತ್ತಿಕೊಂಡಿಹ ಮಮತೆಯನ್ನು ಎತ್ತಿ ಎಸರ ಹಿಂಗಿಸುತಲಿ ೨
ಜನನ ಸೊಂಡಿಗೆ ಹುರಿಯಬೇಕಣ್ಣ – ನಿಜವಾಗಿ ನಿಂತುತನುವು ತುಪ್ಪವ ಕಾಸಬೇಕಣ್ಣಕನಕಗಿರಿ ಕಾಗಿನೆಲೆಯಾದಿಕೇಶವನ ದಾಸಕನಕನ ಕಟ್ಟಳೆಯೊಳು ನಿಂತು ಸುಖದ ಪಾಕವ ಚಂದದಿ ಸವಿದುಣ್ಣಲಿಕ್ಕೆ ೩

ಸರ್ವೋತ್ತಮನೂ ಸರ್ವಾಂತರ್ಯಾಮಿಯೂ
೭೩
ಅಣು ಮಹತ್ತಾದ ದೇವ ಪ
ಅಣುವಿಂಗೆ ಅಣುವು ಮಹತಿಂಗೆ ಮಹಿಮನು ಅಖಿಳಗುಣಭರಿತ ಪರಮ ಪಾವನ ಚರಿತ ಎನ್ನ ನಿರ-ಯಣ ಸಮಯದಲ್ಲಿ ಶ್ರೀಹರಿ ಹರಿಯೆ ಎಂದೆಂಬನೆನಹನೊಲಿದಿತ್ತು ಸಲಹಯ್ಯ ಅ
ನೋಡಿ ನಡೆಯದೆ ಹಿಂದನೇಕ ಜನ್ಮಗಳಲ್ಲಿಮಾಡಿರುವ ಪಾತಕವು ವ್ಯಾಧಿರೂಪಗಳಿಂದಪೀಡಿಸುತ ತನುವ ತೊತ್ತಳ ತುಳಿದು ನೆಲಕಿಕ್ಕಿತೀಡಿ ಬಸವಳಿದ ಬಳಿಕನಾಡಿಗಳು ಸ್ವಸ್ಥಾನದಾಸ್ಥಾನ ಛೇದಿಸಲುಓಡಿ ಕಂಠೋಪದಲಿ ಪ್ರಾಣ ನಿಲ್ಲದಲೆ ಒ-ದ್ದಾಡುತಿಹ ಸಮಯದಲಿ ನಾಲಗೆ ಹರಿ ನಾಮವಪಾಡಿ ಪೊಗಳುವುದ ಕರುಣಿಸಯ್ಯ ೧
ಕಂದ ಬಾರೆಂತೆಂದು ಶೋಕಿಪ ಜನನಿ ಜನಕನಿಂದಳುತ ಜೇಷ್ಠರು ಕನಿಷ್ಠ ಭ್ರಾತೃಪುತ್ರಬಂಧು ಮಿತ್ರರು ಬಹು ಪ್ರಳಾಪಮಂ ಗೈವ ಸತಿಅಂದವಾಗಿಹ ಮಂದಿರಹೊಂದಿಪ್ಪ ಸಂಪತ್ತು ನೋಡಿ ಹಂಬಲಿಸುತಲಿವೃಂದಾವನ ಪ್ರಿಯನೆ ನಿನ್ನ ಮರೆತಿದ್ದೆ ಗೋ-ವಿಂದ ವೈಕುಂಠ ವಿಭುವೇ ಎಂದು ತಾರಿಸಿ ಮು-ಕುಂದ ಮುಕುತಿಯನೊದಗಿಸಯ್ಯ ೨
ಘಾತೀತಿಯನು ಹಿಡಿದು ಹೆಡಗಟ್ಟಿ ಪಂಚ ಮಹಾಪಾತಕನ ತೊಗಲ ಸುಲಿದೆದೆಯ ಸೀಳೆಂಬ ಯಮದೂತರುದ್ಧತ ಕಣ್ಗಳನು ಕಂಡು ಮನದಲಿಭೀತಿಯಿಂ ನಡುನಡುಗಿ ಬಳಲಿಚೇತನವು ಕುಂದಿ ನಾಲಗೆ ಬೀಳ್ವ ಸಮಯದಲಿಯಾತರಾಸೆಯು ಬಾರದಂತಾದಿಕೇಶವ ಅ-ನಾಥ ಬಂಧುವೆ ಅಚ್ಯುತ ಮುರಾರಿ ಹರಿಯೆಂಬಮಾತನಾಡಿಸಿ ಮುಕುತಿಯೊದಗಿಸಯ್ಯ ೩

ವಿಷ್ಣು ನಾಮಸ್ಮರಣೆ ಮಾಡಿದರೆ
ಶ್ರೀಹರಿ ಸ್ತುತಿ ಮತ್ತು ಶ್ರೀಲಕ್ಷ್ಮಿ ಸ್ತುತಿ

ಅಭ್ಯಾಸವನು ಮಾಡಬೇಕು ಬಿಡದೆ…. ಶ್ರೀ ಗು-ರುಭ್ಯೋನಮಃ ಎಂಬ ದಿವ್ಯನಾಮಂಗಳಂ ಪ
ಕೇಶವ ನಾರಾಯಣ ಮಾಧವ ಗೋವಿಂದ ಭವನಾಶ ಭಕ್ತ ಹೃದಯ ಕಮಲಾಬ್ಜದ್ಯುಮಣಿದೋಷರಹಿತ ವಿಷ್ಣು ಮದುಸೂದನ ತ್ರಿವಿಕ್ರಮ ಸು-ರೇಶ ಸರ್ವೋತ್ತಮ ದಿವ್ಯ ನಾಮಂಗಳನು ೧
ವಾಮನ ಶ್ರೀಧರ ಹೃಷಿಕೇಶ……….ಪುಣ್ಯೋದರ ಹಿರಣ್ಯವಾಸದಾಮೋದರಾಮಲ ಕೌಸ್ತುಭರತ್ನ ವನಮಾಲಿರಾಮ ರಘುಪುಂಗವನ ನಾಮಂಗಳನು ೨
ಸಂಕರ್ಷಣ ವಾಸುದೇವ ಪ್ರದ್ಯುಮ್ನ ನಿಖಿ-ಳಾಂಕ ಪಂಕೇಜ ಪತ್ರಾಯತಾಕ್ಷಕಿಂಕರ ರಕ್ಷಕ ಅನಿರುದ್ಧ ಪುರುಷೋತ್ತಮಶಂಕರಪ್ರಿಯ ಅಧೋಕ್ಷಜ ನಾಮಂಗಳಂ೩
ನಾರಸಿಂಹಾಚ್ಯುತ ಜನಾರ್ದನ ಉಪೇಂದ್ರಸಾರ ಭವಭಯ ಹರ ಕೃಷ್ಣ ವಿಶ್ವೋ-ದ್ಧಾರ………….. ವನಮಾಲಿ ಆಮೂರುತಿಯ ನಾಮಂಗಳಂ ೪
ಅಸಮಪಟು ಬಲಿಯ ಕಾಳೆಗದಿ ನುಂಗಿದ ನಿಜಪಾದರಸವಿರುದ್ಧ ತಾವಿಗೊದಗುವ ತೆರದೊಳುಬಿಸಜಾಕ್ಷ ಕಾಗಿನೆಲೆಯಾದಿಕೇಶವ ಎನ್ನಅಸುವಳಿದು ಪೋಪಾಗ ಜಿಹ್ವೆಗೊದಗುವಂತೆ೫

ಈ ಕೀರ್ತನೆಯಲ್ಲಿ ಯಥಾ ರಾಜ ತಥಾ ಪ್ರಜಾ
ದೇವತಾಸ್ತುತಿ ಮತ್ತು ಗುರುಸ್ತುತಿ
೪೦
ಅರಸಿನಂತೆ ಬಂಟನೋ ಹನುಮರಾಯ ಪ
ಅರಸಿನಂತೆ ಬಂಟನೆಂಬುದ ನೀನುಕುರುಹು ತೋರಿದೆ ಮೂರು ಲೋಕಕೆ ಹನುಮ ಅ
ಒಡೆಯನಂಬುಧಿಯೊಳು ಪೊಕ್ಕು ದೈತ್ಯನ ಕೊಂದುತಡೆಯದೆ ಶ್ರುತಿಯನಜಗಿತ್ತನೆಂದುಸಡಗರದಿಂದ ಶರಧಿಯ ದಾಂಟಿ ಮಹಿಜೆ ಪೆ-ರ್ಮುಡಿಯ ಮಾಣಿಕವ ರಾಘವಗಿತ್ತೆ ಹನುಮ ೧
ಮಂದರಧರ ಗೋವರ್ಧನ ಗಿರಿಯನು ಲೀಲೆ-ಯಿಂದಲಿ ನಿಂದು ನೆಗಹಿದನೆಂದುಸಿಂಧು ಬಂಧನಕೆ ಸಮಸ್ತ ಪರ್ವತಗಳತಂದು ನಳನ ಕೈಯೊಳಗಿತ್ತೆ ಹನುಮ೨
ಸಿರಿಧರ ವರ ಕಾಗಿನೆಲೆಯಾದಿಕೇಶವಸುರರಿಗಮೃತವನು ಎರೆದನೆಂದುವರ ಸಂಜೀವನವ ತಂದು ಸೌಮಿತ್ರಿಗಂದುಎರೆದು ಶ್ರೀರಾಮನ ನಿಜದೂತನೆನಿಸಿದೆ ಹನುಮ ೩

ಶ್ರೀಹರಿಯ ಪಾದಭಜನೆ
೭೪
ಅರಿತು ನಡೆಯಲಿ ಬೇಕು ನರಕಾಯವೆತ್ತಿದ ಮೇಲೆಅರಿಯದಿದ್ದರೆ ನರಕವೇ ಪ್ರಾಪ್ತಿ ಪ
ದುರ್ಜನರ ಮನೆಯ ಪಾಯಸಾನ್ನಕಿಂತಸಜ್ಜನರ ಮನೆಯ ರಬ್ಬಳಿಗೆ ಲೇಸುಹೆಜ್ಜೆಗೆ ಸಾವಿರ ಹೊನ್ನನಿತ್ತರೂ ಬೇಡ – ಬಲುದುರ್ಜನರ ಸಂಗ ಬಲು ಭಂಗ ಹರಿಯೆ ೧
ಭಕ್ತಿಹೀನರ ಮನೆಯ ಪಟ್ಟು ಸುಪ್ಪತ್ತಿಗೆಗಿಂತಭಕ್ತರ ಮನೆಯ ಕಡೆಬಾಗಿಲ ಕಾಯುವುದು ಲೇಸುಮುಕ್ತಿಮಾರ್ಗವ ತೋರ್ಪ ಮುರಹರನ ದಾಸರನುಸಕ್ತಿಯಿಂ ಸೇವಿಸುವುದು ಬಲು ಸೌಖ್ಯ ಹರಿಯೆ ೨
ಆಶೆಕಾರರ ಮನೆಯ ವಿಲಾಸ ಸುಖಕಿಂತಆಶಾರಹಿತರ ಮನೆಯ ನಿರ್ಗತಿಕ ದೈನ್ಯ ಲೇಸುಭೂಸುರಪ್ರಿಯ ಕಾಗಿನೆಲೆಯಾದಿಕೇಶವನಮೀಸಲಿನ ಪಾದಭಜನೆ ಕಡುಲೇಸು ಮನವೆ ೩

ಪ್ರತಿಯೊಬ್ಬರ ಅಂತರಾತ್ಮನಾಗಿ
೭೫
ಅರಿತು ಭಜಿಪರ್ಯಾರಯ್ಯ ರಂಗಯ್ಯ ನಿನ್ನ ಪ
ಸಿರಿದೇವಿಯು ಕಿರುಬೆರಳಲ್ಲಿರುವ ಸೊಬಗನ್ನುಅರಿಯಲಾರಳೊ ದೇವಅ
ಇಂದಿರಾದೇವಿಯು ಅರಿಯಲಾರಳು ದೇವಬೃಂದಾರಕರೆಲ್ಲ ನಿಂದು ಯೋಚಿಪರುನಂದತೀರ್ಥರ ಮತದೊಳಗೆ ಬಂದವರೆಲ್ಲಎಂದಿಗಾದರು ಪರಮಾನಂದ ಪೊಂದುವರು೧
ಮಾನವರು ಹೀನಮಾರ್ಗದೊಳು ಮುಳುಗಿಹರುಜ್ಞಾನಿಗಳು ನಿಂದು ಧ್ಯಾನಿಪರು ನಿನ್ನನೀನೆ ದಯಮಾಡಿ ಸಲಹೊ ಎನ್ನನು ಕೃಷ್ಣಕಾನನದೊಳು ಕಣ್ಣುಮುಚ್ಚಿ ಬಿಟ್ಟಿಹರೊ ೨
ಜಲದೊಳಗಿನ ಕಪ್ಪೆ ಜಲದ ಸವಿಯರಿಯದುಜಲದ ಸುಗಂಧವ ಜಲವರಿಯದುನೆಲೆಯ ಕಂಡವರ್ಯಾರು ನೆಲೆಯಾದಿಕೇಶವನೆಸುಲಲಿತ ತತ್ತ್ವವನು ಸುಲಭ ಮಾರ್ಗದಿ ತೋರೊ ೩

ಅವಗುಣಗಳ ದೆಸೆಯಿಂದ ಕೆಟ್ಟೆ
೭೬
ಅಹಹ ಮೋಸ ಹೋದೆನಯ್ಯ ಹರಿಯೆ ನಿನ್ನ ನೆನೆಯದೆ ಪ
ಇಹದ ಭೋಗ ನಿತ್ಯವೆಂದು ಮೆರೆದೆ ನಿನ್ನ ನೆನೆಯದೆ ಅ
ಹೇಯವಾದ ದೇಹವನ್ನು ಶ್ಲಾಘನೀಯವೆಂದು ನಾಲ್ವರೊಡನುಪಾಯದಿಂದ ಹೇಮದಂತೆ ಬಣ್ಣಗಟ್ಟಿಬಾಯ ಬಡಿದು ತಂದು ತಂದುಕಾಯ ಕಳದೆನಲ್ಲದೆ ೧
ಚಂಚಲತ್ವ ಬಲವು ಫಲವು ಜಾಲ ಕೋಪ ತಾಪದಿಂದವಂಚನಾರ್ಥ ಹಲವು ಕೆಲವು ಮಿಂಚಿನಂತೆ ಸುಳಿಸುತಸಂಚುಮಾಡಿ ಕಾಲನವರ ವಂಚನೆಗಳ ತಿಳಿಯದ್ಹೋದೆಪಂಚಬಾಣನಯ್ಯ ಕಾಯೊ ಎನ್ನವಗುಣಗಳನೆಣಿಸದೆ೨
ದಿಕ್ಕುದೆಸೆಯದಾರೊ ಅಕ್ಕರದಿಂದಾರ ಕರೆವೆಉಕ್ಕಿ ಸವಿದು ಮನುಜರೊಡನೆಸೊಕ್ಕಿ ದಿನವ ಕಳೆದೆನೆನಗೆತಕ್ಕುದಾಯಿತಯ್ಯ ಕೇಳು ಒಡೆಯ ಆದಿಕೇಶವ೩

ಮನುಷ್ಯರ ಸ್ವಭಾವ
೧೭೨
ಅಹುದಾದಡಹುದೆನ್ನಿ ಅಲ್ಲವಾದಡಲ್ಲವೆನ್ನಿಸಹಜವಿದು ಸಜ್ಜನರ ಮನಕೆ ಸಮ್ಮತವು ಪ
ಕರಿಕೆಯಿಲ್ಲದ ಬಾಳು ಕರಿವರದನ ದಯೆ ಕೇಳುಅರಿತವರಿರೆ ಮನೆಯೊಳು ಅದು ಸ್ವರ್ಗವು ಕೇಳುಕರಣಿಕರೊಳಗಣ ನಂಟು ಕಟ್ಟಿದ ಹಣವಿನ ಗಂಟುಗುರುವಿನ ವಾಕ್ಯದಿ ಭಕ್ತಿ ಇಹಪರಕದು ಮುಕ್ತಿ೧
ಒಕ್ಕಲಿಗಾಗದ ಗವುಡ ಮೇಲೆರಗಿ ಕುಕ್ಕುವ ಲಗಡಮಕ್ಕಳ ಪಡೆವುದು ಪುಣ್ಯ ನಲಿವು ನಗೆಗಳ ಪಣ್ಯಇಕ್ಕುವ ಅನ್ನವು ಧರ್ಮ ಇಹಪರಕದು ಅತಿ ಧರ್ಮಬಿಕ್ಕಳಿಕಿಕ್ಕಿದ ವ್ಯಾಧಿ ಯಮಪುರಕದು ಹಾದಿ೨
ಕಂಡರೆ ಸೇರದ ನಾರಿ ಕೆಂಡವನುಗುಳುವ ಮಾರಿದಂಡವ ತೆರಿಸುವ ಪುತ್ರ ಹಗೆಗಳಿಗವ ಮಿತ್ರಉಂಡರೆ ಸೇರದ ತಾಯಿ ಉರಗನ ಮೆಕ್ಕೆ ಕಾಯಿಹಿಂಡನಗಲಿದ ಗೋವು ಹುಲಿಗಿಕ್ಕಿದ ಮೇವು ೩
ಪರನಾರಿಯರೊಡನಾಟ ಗರಲವನಟ್ಟುಂಬಾಟಬರೆದೂ ಅರಿಯದ ಲೆಕ್ಕ ಕಡೆಯಲಿ ಬಹು ದುಕ್ಕಇರಿತಕೆ ಬೆದರುವ ಮದಕರಿ ಬಾಯ್ಕಿರಿವ ಕೋಡಗ ಮರಿಕರೆ ಬರಲರಿಯದ ಗಂಡ ಅವ ನಾಚಿಕೆ ಭಂಡ೪
ಸಮಯಕ್ಕೊದಗದ ಅರ್ಥ ಸಾವಿರವಿದ್ದರು ವ್ಯರ್ಥಸವತಿಯರೊಳಗಣ ಕೂಟ ಎಳನಾಗರ ಕಾಟಅಮರರಿಗೊದಗದ ಯಾಗ ಆಡಿನ ಮೇಲಣ ರೋಗನಮ್ಮ ಆದಿಕೇಶವನ ಭಕ್ತ ಅವ ಜೀವನ್ಮುಕ್ತ ೫

ಸಂಸ್ರ‍ಕತಿಯ ಕೊರತೆ ಯಾವುದು
೧೭೧
ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ ಪ
ಬಹುಜನರು ನೆರೆ ತಿಳಿದು ಪೇಳಿ ಮತ್ತಿದನು ಅ
ದೇವರಿಲ್ಲದ ಗುಡಿಯು ಪಾಳು ಬಿದ್ದಂಗಡಿಯುಭಾವವಿಲ್ಲದ ಭಕುತಿ ಅದು ಕುಹಕ ಯುಕುತಿಹೇವವಿಲ್ಲದ ಹೆಣ್ಣು ಗಜುಗ ಬೆಳೆದ ಕಣ್ಣುಸೇವೆಯರಿಯದ ದಣಿಯು ಕಲ್ಲಿನಾ ಕಣಿಯು೧
ಧರ್ಮವಿಲ್ಲದ ಅರಸು ಮುರಿದ ಕಾಲಿನ ಹೊರಸುನಿರ್ಮಲಿಲ್ಲದ ಮನಸು ಅದು ಕಜ್ಜಿ ತಿನಿಸುಶರ್ಮವಿಲ್ಲದ ಗಂಡು ಕರಿಯ ಒನಕೆಯ ತುಂಡುಮರ್ಮವಿಲ್ಲದ ಮಾತು ಒಡಕು ಮಡಕೆ ತೂತು ೨
ಮಕ್ಕಳಿಲ್ಲದ ಸಿರಿಯು ಕೊಳೆತ ತೆಂಗಿನ ತುರಿಯುಸೌಖ್ಯವಿಲ್ಲದ ಊಟ ಅದು ಕಾಳಕೂಟಒಕ್ಕಲಿಲ್ಲದ ಊರು ಕೊಳೆತು ನಾರುವ ನೀರುಸೊಕ್ಕಿ ನಡೆಯುವ ಭೃತ್ಯ ಅವ ಕ್ರೂರ ಕೃತ್ಯ ೩
ಕಂಡು ಕರೆಯದ ನೆಂಟ ಮೊನೆಯು ಕೆಟ್ಟಿಹ ಕಂಟಉಂಡು ನಗದಿಹ ಮೋರೆ ಅದು ಕಹಿಯ ಸೋರೆದಂಡಿಗಂಜುವ ಬಂಟ ಒಡಕು ಹರವಿಯ ಕಂಠಗಂಡಗಂಜದ ನಾರಿ ಅವಳೆ ಹೆಮ್ಮಾರಿ ೪
ಬಿಟ್ಟು ನಡೆಯುವ ಗೆಣೆಯು ಹರಕು ತೊಗಲಿನ ಮಿಣಿಯುಕೊಟ್ಟು ಪೇಳುವ ದಾತ ಅವ ಹೀನ ಜಾತಸೃಷ್ಟಿಯೊಳು ಕಾಗಿನೆಲೆಯಾದಿಕೇಶವನಂಘ್ರಿಮುಟ್ಟಿ ಭಜಿಸದ ನರನು ಅವನೆ ವಾನರನು ೫

ಹಿಂದೆ ನೀನು ಯಾರನ್ನೇ ಕಾಪಾಡಿರು
೮೫
ಆ ವೇಳೆಯಲಿ ಆರಾರ ಕಾಯ್ದೆಯೊ ದೇವಈ ವೇಳೆಯಲಿ ಎನ್ನ ಕಾಯ್ದರದು ನಿಜವಹುದು ಪ
ಕರೆಯೆ ಕಂಬದಿ ಬಂದು ಹಿರಣ್ಯಕಶಿಪುವ ಕೊಂದೆಶರಣನನು ಪಾಲಿಸುತೆ ಕಾಯ್ದೆಯಂತೆಕರಿರಾಜ ಹರಿಯೆಂದು ಕರೆಯಲಾಕ್ಷಣ ಬಂದುಕರುಣದಿಂದಲಿ ಕಾಯ್ದೆಯಂತೆ ಹರಿಯೆ ೧
ಧರೆಗಧಿಕನಾಥನಾ ತೊಡೆಯನೇರಲು ಕಂಡುಜರೆಯಲಾ ಧ್ರುವನ ನೀ ಕಾಯ್ದೆಯಂತೆದುರುಳ ದುಃಶಾಸನ ದ್ರೌಪದಿಯ ಸೀರೆಯ ಸೆಳೆಯೆತರುಣಿಗಕ್ಷಯವಿತ್ತು ಕಾಯ್ದೆಯಂತೆ ಹರಿಯೆ ೨
ಅಂದು ರಾವಣ ವಿಭೀಷಣನ ನೂಕಲು ಕಂಡುಇಂದಿರಾರಮಣ ನೀ ಕಾಯ್ದೆಯಂತೆಮಂದರೋದ್ಧರ ಮಧುಸೂದನ ಮಾಧವ ಗೋ-ವಿಂದ ರಕ್ಷಿಸು ಬಾಡದಾದಿಕೇಶವರಾಯ ೩

ಶ್ರೀ ಹರಿಯ ಮಹಾತ್ಮ್ಯವನ್ನು ಕುರಿತದ್ದು

ಆತನ ಪಾಡುವೆ ಅನವರತಪ್ರೀತಿಯಿಂದ ಭಾಗವತರ ಸಲಹುವ ದೇವನೆಂದು ಪ
ಆವಾತನ ಕೀರ್ತಿಯ ಕಳೆ ಪೆರೆಯು……….ಯಿಂದ ಶುಕನಾರ ಪೊಗಳಿದನು ?ಆವಗೆ ಬಲೀಂದ್ರನು ಆರ………………………………..ವಿದನಯ್ಯಾ ? ೧
ಕಲು ತರುಣಿಯ ಮಾಡಿದ ಪಾದವಾರದುಜಲಜ ಸಂಭವನ ಪೆತ್ತವನಾರು ?ಕಲಿಯುಗದ ಜನರಿಗೆ ಆರ ನಾಮವು ಗತಿಇಳೆಯ ಭಾರವನುಳುಹಿದನಾರಯ್ಯ೨
ದ್ರುಪದನ ಮಗಳ ಅಭಿಮಾನ ರಕ್ಷಕನಾರುನೃಪ ಧರ್ಮನೆನೆಸಿಕೊಂಡವನಾರು ?ಕೃಪೆಯೊಳು ವಿದುರನ ಮನೆಯಲುಂಡವನಾರುಆಪತ್ಕಾಲದಿ ಗಜೇಂದ್ರನ ಸಲಹಿದರಾರು ? ೩
ಅತಿ ಸ್ನೇಹದಿಂದ ಅರ್ಜುನಗೆ ಸಾರಥಿಯಾಗಿರಥವ ನಡೆಸಿದವನಾರು ?ಪೃಥಿವಿಯಲಿ……………………………………………………………………………………….೪

ಶ್ರೀಹರಿಯ ಹಿರಿಮೆಗರಿಮೆ

ಆತನೇ ಪರಮಾತ್ಮ ಪರತತ್ತ್ವ ಪ್ರಣವನೆಂ-ದರಿತು ಪೂಜಿಸಬಾರದೆಆತನಾ ಪದತೋಯ ಶಿರಸಾ ವಹಿಸಿ ಪಾನ-ದಿಂದಧಿಕರಾದರು – ಜೀವಿಗಳು ಮನುಜ ಪ
ದಾನಮುಖದಲಿ ಬಲಿಯ ಬೇಡಿ ಭುವನವನೊಂದುಪದದಿ ಅಳೆದವನಾವನುಮಾನದಾನವನ ನಾಲ್ಮೈಯ ಮುಡಿಗಟ್ಟಿವನಮಾನ ಉಳುಹಿದನಾವನುಮಾನ ಮರುಳಾದವನ ಮರ್ದಿಸಿದ ಬ್ರಹ್ಮಹತ್ಯೆಮಹಿಗೆ ಇಳುಹಿದನಾವನುಭಾನು ಮೊದಲಾದಖಿಳ ಬ್ರಹ್ಮಾಂಡಗಳಿಗೊಂದುಪಾದ ಹೊದಿಸಿದನಾವನು ? ೧
ಕೊಟ್ಟ ವರಗಳನೆಲ್ಲ ಕೊಡಹಿ ಬಹು ದನುಜರನುಕುಟ್ಟಿ ಹಾಕಿದನಾವನುದಿಟ್ಟವರ ಕಾಲಾಂಣ(?) ಕಟ್ಟಿ ಮುನಿ ದೈವಗಳ ಪಟ್ಟದರಸು ಅದಾವನುಬೆಟ್ಟದಾತ್ಮಜೆ ಬೆನಕ ಪೆಸರ್ಗೊಂಡು ತನ ನಾಮಗುಟ್ಟಿನಲಿ ನೆನೆಸಿದುದಾವನುಗಟ್ಟಿಯಾಗಿ ಮುನಿಪೆಣ್ಗೆ ಕೊಟ್ಟಿದ್ದ ಶಾಪವನುಬಿಟ್ಟೋಡಿಸಿದನಾವನು ? ೨
ವೇದಮುಖದವನ ಅತಿ ಮೋದದಲಿ ಪುಟ್ಟಿಸಿದಆದಿಮೂರುತಿ ಆವನುನಾದದಲಿ ಅಖಿಳ ಮಹಿ ನಟಿಸುವ ಮಹಾತ್ಮಕನಾದ ಸಾತ್ತ್ವಿಕನಾವನುಆದಿಯಲಿ ಜಗಗಳಿರದಂದು ವಟಪತ್ರಶಯನನಾದ ಮೂಲವದಾವನುಆದಿಕೇಶವ ದೈವವಲ್ಲದಿನ್ನಿಲ್ಲವೆಂದುಆಗಮವು ನುಡಿವುದಾವನನು ? ೩

ಆನೆಯ ರೂಪಕದಲ್ಲಿ ಶ್ರೀಕೃಷ್ಣನ
೨೧೦
ಆನೆ ಬಂದಿದೆ ಇದಿಗೊ ಮದ್ದಾನೆ ಪ
ಜ್ಞಾನಿಗಳೊಳಾಡುವ ಮದ್ದಾನೆ ಅ
ದೇವಕಿಯೊಳು ಪುಟ್ಟಿದಾನೆ – ವಸುದೇವನ ಪೆಸರೊಳೈತಂದ ಮದ್ದಾನೆಶ್ರೀ ವಾಸುದೇವನೆಂಬಾನೆ – ಗೋಪಿದೇವಿಯ ಗೃಹದೊಳಾಡುವ ಪುಟ್ಟಾನೆ ೧
ನೀಲವರ್ಣದ ನಿಜದಾನೆ – ಸ್ವರ್ಣಮಾಲೆಗಳಿಟ್ಟು ಮೆರೆವ ಚಲುವಾನೆಶ್ರೀಲೋಲನೆನಿಪ ಪಟ್ಟದಾನೆ – ದುಷ್ಟಕಾಲಿಂಗನ ಪೆಡೆಯ ಮೆಟ್ಟಿ ತುಳಿದಾನೆ ೨
ಬಾಲೇಂದು ಮುಖದ ಮರಿಯಾನೆ – ಕದ್ದುಪಾಲನ್ನು ಕುಡಿದ ಮರಿಯಾನೆಕೈಲಿ ಗಿರಿಯನೆತ್ತಿದಾನೆಕಾಳ್ಕಿಚ್ಚನ್ನು ನುಂಗಿದ ಪಟ್ಟದಾನೆ ೩
ಧೇನುಕಾಸುರನ ಕೊಂದಾನೆತನಗೆ ಜೋಡಿಲ್ಲದಿಹ ನಿಜದಾನೆಮಾನವರಿಗೆಲ್ಲ ಸಿಲ್ಕದಾನೆಶೌನಕಾದಿಗಳೊಂದಿಗಿಪ್ಪಾನೆ ೪
ಮಲ್ಲರೊಡನೆ ಗೆಲಿದಾನೆ – ಕಡುಖುಲ್ಲ ಕಂಸನ ಕೆಡಹಿದಾನೆ – ವಿದ್ಯೆ ಸಾಂದೀಪರಲಿ ಕಲಿತ ಮರಿಯಾನೆಸಲೆ ಭಕ್ತರ ಕಾವ ಪುಟ್ಟಾನೆ ೫
ತರಳೆ ರುಕ್ಮಿಣಿಯ ತಂದಾನೆ – ಬಹುಕರುಣದಿಂ ಪಾಂಡವರ ಪೊರೆದಾನೆವರ ವೇಲಾಪುರದೊಳಿಪ್ಪಾನೆಸಿರಿಯಾದಿಕೇಶವನೆಂಬ ಮದ್ದಾನೆ ೬

ಆನೆಯ ರೂಪಕದಲ್ಲಿ
ಕೃಷ್ಣಲೀಲೆ
೨೦೯
ಆನೆ ಬರುತಾದೆ ನೋಡಮ್ಮ ಮದ್ದಾನೆ ಬರುತಾದೆ ಪ
ಆನೆ ಬರುತಾದೆ ಎಲ್ಲರು ನೋಡಿರಿ ಒಂ-ದಾನೆಯ ಕೊಂದ ಮದ್ದಾನೆಏನೆಂದು ಪೇಳಲಿ ಎಲ್ಲ ದಿಕ್ಕುಗಳಲಿತಾನೇ ತಾನಾಗಿ ಮದ ಸೊಕ್ಕಿದಾನೆಅ
ನೀರ ಮುಳುಗಿ ಖಳನ ಕೊಂದು ವೇದ ತಂದುಬರಮದೇವಗಿತ್ತ ಮದ್ದಾನೆಕ್ರೂರ ಚಿತ್ರಗುಪ್ತನೊಡನೆ ಕಾರುಬಾರಿಗಿಳಿದಜಾರ ಕೃಷ್ಣನೆಂಬ ಸೊಕ್ಕಿದಾನೆ ೧
ದಶದಿಕ್ಕಿನೊಳು ಘಂಟೆ ಘಣಿರೆಂದು ಬರುತ್ತಿದೆಕುಸುಮಶರನ ಪೆತ್ತ ಮದ್ದಾನೆದಶಕಂಠನ ಕೊಂದು ಅನುಜಗೆ ಪಟ್ಟಗಟ್ಟಿದದಶರಥಸುತನೆಂಬ ಮದ ಸೊಕ್ಕಿದಾನೆ ೨
ಗಂಧ ಕಸ್ತೂರಿ ಬೊಟ್ಟು ಗಮಕದಿಂದಲಿ ಇಟ್ಟುಗೊಂದಲಗಡಿಬಿಡಿ ಸುರಲೋಕ ಅಮ್ಮಮ್ಮಬೆಂಬಿಡದೆ ದೈತ್ಯರನು ಕೊಂದ ಗುಣ ಸಂಪನ್ನಸುಂದರ ಕೃಷ್ಣನೆಂಬ ಮದ ಸೊಕ್ಕಿದಾನೆ ೩
ಸಾವಿರ ತೋಳವನ ಸರಸದಿಂದಲಿ ಕಡಿದಭುವನ ರಕ್ಷಕನಾದ ಮದ್ದಾನೆಯೌವನದ ಗೋಪಿಯರ ಕಣ್ಮಣಿ ಎನಿಪ ವಸುದೇವಸುತನೆಂಬ ಮದ ಸೊಕ್ಕಿದಾನೆ ೪
ಗರುಡವಾಹನವೇರಿ ಧಿಮಕೆಂದು ಬರುತಾನೆಸರುವ ಲೋಕರಕ್ಷಕನೆಂಬ ಮದ್ದಾನೆಉರೆ ಪೂತನಿಯ ಹೀರಿ ಮಾವ ಕಂಸನ ಕೊಂದಸಿರಿಯಾದಿಕೇಶವನೆಂಬ ಮದ ಸೊಕ್ಕಿದಾನೆ ೫

ಶಿಶುಗೀತದ ಧಾಟಿಯಲ್ಲಿರುವ
೨೧೧
ಆನೆಯ ನೋಡಿರಯ್ಯ ನೀವೆಲ್ಲರುಆನಂದ ಪಡೆಯಿರಯ್ಯ ಪ
ತಾನು ತನ್ನವರೆಂಬ ಮಾನವರ ಸಲಹಿದಅ
ಪಾಂಡು ಚಕ್ರೇಶನ ಸುತರಿಗೊಲಿದಾನೆಗಂಡುಗಲಿ ಮಾಗಧನ ಒರಸಿದಾನೆಹಿಂಡು ಗೋವಳರೊಳಗೆ ಹಿರಿಯನ ಕಳೆಯದಾನೆಲಂಡರಿಗೆ ಎದೆಗೊಡುವ ಪುಂಡಾನೆ ೧
ಬಾಲಕನ ನುಡಿಗೇಳಿ ಖಳನ ಸೀಳಿದಾನೆಪಾಲುಂಡು ವಿದುರನ ಸಲಹಿದಾನೆಲೋಲಾಕ್ಷಿ ಮಾನಭಂಗಕ್ಕೊದಗಿದಾನೆಖೂಳ ಶಿಶುಪಾಲನನು ಸೀಳಿದಾನೆ೨
ಅಜಮಿಳನಿಗೆ ನಿಜಪದವಿಯ ಕೊಟ್ಟಾನೆಕುಜನರೆಲ್ಲರನು ಒರಗಿಸಿದಾನೆಅಜಪಿತ ಕಾಗಿನೆಲೆಯಾದಿಕೇಶವಾನೆತ್ರಿಜಗವಲ್ಲಭ ತಾನು ಭಜಕರ ವಶವಾನೆ ೩

ಜ್ಞಾನವಿಲ್ಲದೆ ಆತ್ಮಯೋಗಸಿದ್ಧಿ
೭೮
ಆರಿಗಳವಲ್ಲಾತ್ಮ ಯೋಗ ಸಿದ್ಧಿಸೇರಿ ಸುಜ್ಞಾನದಲಿ ಸವಿದುಂಬಗಲ್ಲದೆ ಪ
ರಜಸು – ತಾಮಸವೆಂಬ ರಯವನೆಲ್ಲವ ಕಳೆದುಗಜ ಬಜಿಸುವ ಪಂಚಭೂತಗಳರಜನಿಗೆ ಸಿಲ್ಕದೆ ಪರಬ್ರಹ್ಮನ ಬಲುನಿಜವ ತಿಳಿಯಬಲ್ಲ ನಿರ್ವಾಣಗಲ್ಲದೆ ೧
ಭಿನ್ನ ಭೇದಗಳೆಂಬ ಬಲು ಸಂಶಯ ಕಳೆದುತನ್ನೊಳಗೆ ತಾ ತಿಳಿದು ತಾರಕಬ್ರಹ್ಮವಚೆನ್ನಾಗಿ ನೀ ನೋಡು ಚೆಲುವ ಕಂಗಳಿಂದತನ್ನಗ್ನಿಯೊಳಗಿರುವ ಪ್ರೌಢರಿಗಲ್ಲದೆ ೨
ಅಕಾರ ಉಕಾರ ಮಕಾರ ಎಂತೆಂಬಓಂಕಾರಕೆ ಕೂಡಿ ಎರಡಿಲ್ಲದಸಾಕಾರ ಕಾಗಿನೆಲೆಯಾದಿಕೇಶವನಆಕಾರದೊಡನಾಡುವರಿಗಲ್ಲದೆ ೩

ಪ್ರಾಚೀನ ಕರ್ಮ ಯಾರನ್ನೂ ಬಿಡದು
ತಾತ್ತ್ವಿಕತೆ
೨೪೫
ಆರಿಗಾದರು ಪೂರ್ವಕರ್ಮ ಬಿಡದುವಾರಿಜೋದ್ಭವ ಅಜಭವಾದಿಗಳ ಕಾಡುತಿಹುದು ಪ
ವೀರಭೈರವನಂತೆ ತಾನು ಬತ್ತಲೆಯಂತೆಮಾರಿ ಮಸಣಿಗಳಂತೆ ತಿರಿದು ತಿಂಬರಂತೆಸೂರ್ಯ ಚಂದ್ರಮರಂತೆ ರಾಹುವಟ್ಟುಳಿಯಂತೆಮೂರೆರಡು ತಲೆ ಹರಗೆ ಕೈಲಿ ಕಪ್ಪರವಂತೆ ೧
ಶಿಷ್ಟ ಹರಿಶ್ಚಂದ್ರನಿಗೆ ಮಸಣದಡಿಗೆಯಂತೆಸೃಷ್ಟಿಸುವ ಬೊಮ್ಮನಿಗೆ ಶಿರ ಹೋಯಿತಂತೆಅಷ್ಟದಿಕಾಲ್ಪಕರು ಸೆರೆಯಾಗಿರುವರಂತೆಕಟ್ಟುಗ್ರದಿಂದ್ರನಿಗೆ ಮೈಯೆಲ್ಲ ಕಣ್ಣಂತೆ2
ಹನ್ನೊಂದಕ್ಷೆÆÃಹಿಣಿ ಬಲವುಳ್ಳ ಕೌರವನುರಣದೊಳಗೆ ತೊಡೆಮುರಿದು ಬಿದ್ದನಂತೆವನಜಾಕ್ಷ ಸಿರಿಯರಸ ಬಲಿಯ ಬೇಡಿದನಂತೆವನಿತೆ ಧರ್ಮಜನ ತಾಯ್ತಿರಿದುಂಡಳಂತೆ ೩
ಧರೆಗೆ ಧರ್ಮಜನಂತೆ ಕಂಕಭಟ್ಟನಂತೆಶೂರ ಭೀಮನು ಬಾಣಸಿಗನಾದನಂತೆವೀರ ಫಲುಗುಣನಂತೆ ಕೈಯೊಳಗೆ ಬಳೆಯಂತೆಕಿರಿಯ ನಕುಲ ಸಹದೇವರು ತುರುಗಾಯ್ದರಂತೆ ೪
ಹರನ ವಾಹನವಂತೆ ಹುಲ್ಲು ತಿಂಬುವುದಂತೆವಿರಿಂಚಿ ವಾಹನವಂತೆ ಕಮಲ ಭಕ್ಷಿಪನಂತೆಹರಿಯ ಹೊತ್ತಿಹನಂತೆ ಹಾವು ಭಕ್ಷಿಪನಂತೆಸಿರಿಯಾದಿಕೇಶವನು ತಾ ಬೆಣ್ಣೆಗಳ್ಳನಂತೆ ೫

ಪೂರ್ವ ಸಂಕಲ್ಪವನ್ನು ಮೀರಲು
೨೪೬
ಆರಿಗಾದರು ಪೂರ್ವಕಲ್ಪನೆ ತಪ್ಪದು ಪ
ಬೇರೆ ಬಯಸಿದರೆ ಬರಲರಿಯದಯ್ಯ ಅ
ರಾಮಚಂದ್ರನ ಸೇವೆ ಮಾಡಿ ಮೆಚ್ಚಿಸಿ ಮಹಾತಾಮಸನ ಗರ್ವವನು ಮುರಿದು ಬಂದರೋಮಕೋಟಿ ಲಿಂಗನೆನಿಸಿದ ಹುನುಮನಿಗೆ ಹೊರಗೆಗ್ರಾಮಗಳ ಕಾಯ್ದುಕೊಂಡಿಹುದೆ ಮನೆಯಾಯ್ತು ೧
ಸುರಪತಿಯ ಗೆದ್ದು ಸುಧೆಯನು ತಂದು ಮಾತೆಯಸೆರೆಯ ಪರಿಹರಿಸಿ ಬಹು ಭಕ್ತನೆನಿಸಿಹರಿಗೆ ವಾಹನನಾಗಿ ಹದಿನಾಲ್ಕು ಲೋಕವನುಚರಿಸಿದ ಗರುಡನಿಗೆ ಮನೆ ಮರದ ಮೇಲಾಯ್ತು ೨
ಪೊಡವಿ ಭಾರವ ಪೊತ್ತು ಮೃಡಗೆ ಭೂಷಣನಾಗಿಹೆಡೆಯೊಳಗೆ ಮಾಣಿಕ್ಯವಿಟ್ಟುಕೊಂಡುಬಿಡದೆ ಶ್ರೀಹರಿಗೆ ಹಾಸಿಗೆಯಾದ ಫಣಿಪತಿಗೆಅಡವಿಯೊಳಗಣ ಹುತ್ತು ಮನೆಯಾಯಿತಯ್ಯ3
ಮೂರು ಲೋಕದ ಒಡೆಯ ಮುಕ್ಕಣ್ಣನೆಂಬಾತಸಾರುತಿದೆ ಸಟೆಯಲ್ಲ ವೇದವಾಕ್ಯಪಾರ್ವತೀ ಪತಿಯಾದ ಕೈಲಾಸದೊಡೆಯನಿಗೆಊರ ಹೊರಗಣ ಮಸಣ ಮನೆಯಾಯಿತಯ್ಯ ೪
ಮೀರಲಳವಲ್ಲವೋ ಮುನ್ನ ಮಾಡಿದ್ದುದನುಯಾರು ಪರಿಹರಿಸಿಕೊಂಬವರಿಲ್ಲವೊಮಾರ ಪಿತ ಕಾಗಿನೆಲೆಯಾದಿಕೇಶವರಾಯಕಾರಣಕೆ ಕರ್ತ ನೀ ಕಡೆ ಹಾಯಿಸಯ್ಯ ೫

ಆಪತ್ಕಾಲದಲ್ಲಿ ಯಾರಿಗೆ ಯಾರೂ ಆಗುವುದಿಲ್ಲ
ಆತ್ಮಚರಿತ್ರೆ
೫೬
ಆರಿಗಾರಿಲ್ಲ ಆಪತ್ಕಾಲದೊಳಗೆ ಪ
ವಾರಿಜಾಕ್ಷನ ನಾಮ ನೆನೆ ಕಂಡ್ಯ ಮನವೆ ಅ
ಹಸಿದು ಬಳಲುವಾಗ ಹಗೆ ಕೈಗೆ ಸಿಲುಕಿದಾಗದೆಸೆಗೆಟ್ಟು ಅಧಿಕ ವ್ಯಾಧಿಯಲಿ ಇರುವಾಗಅಸಮಾನನಾದಾಗ ಅತಿ ಭೀತಿಗೊಂಡಾಗಬಿಸಜನಾಭನ ನಾಮ ನೆನೆಕಂಡ್ಯ ಮನವೆ ೧
ಸಾಲದವರೆಳೆವಾಗ ಚಾಡಿ ಮಾತಿಗೆ ಭೂಪಘಳುಘುಳಿಸುತ ಕೋಪವನು ತೋರಿದಾಗಮೇಲು ತಾನರಿಯದಯೆ ನಿಂದೆ ಹೊಂದಿರುವಾಗನೀಲಮೇಘಶ್ಯಾಮನ ನೆನೆಕಂಡ್ಯ ಮನವೆ ೨
ಪಂಥದಲಿರುವಾಗ ಪದವಿ ತಪ್ಪಿರುವಾಗದಂತಿಮದವೇರಿ ಬೆನ್ನತ್ತಿದಾಗಕಂತುಪಿತ ಕಾಗಿನೆಲೆಯಾದಿಕೇಶವನ ನಿ-ಶ್ಚಿಂತೆಯಿಂದಲಿ ನೀನು ನೆನೆಕಂಡ್ಯ ಮನವೆ ೩

ನಿಂದಾಸ್ತುತಿ ರೂಪದ ಕೀರ್ತನೆ

ಆರು ಬದುಕಿದರಯ್ಯ ಹರಿ ನಿನ್ನ ನಂಬಿ ಪ
ತೋರು ಈ ಧರೆಯೊಳಗೆ ಒಬ್ಬರನು ಕಾಣೆ ಕೃಷ್ಣ ಅ
ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆಸುಲಭದಲಿ ಕೌರವರ ಮನೆಯ ಮುರಿದೆನೆಲನ ಬೇಡಲು ಪೋಗಿ ಬಲಿಯ ಭೂಮಿಗೆ ತುಳಿದೆಮೊಲೆಯನುಣ್ಣಲು ಪೋಗಿ ಪೂತನಿಯ ಕೊಂದೆ ೧
ಕರುಳೊಳಗೆ ಕತ್ತರಿಯನಿಟ್ಟೆ ಹಂಸಧ್ವಜನಸರಸದಿಂ ಮಗಳ ಗಂಡನ ಕೊಲಿಸಿದೆಮರುಳಿನಿಂದಲಿ ಪೋಗಿ ಭೃಗುಮುನಿಯ ಕಣ್ಣೊಡೆದೆಅರಿತು ನರಕಾಸುರನ ಹೆಂಡಿರನು ತಂದೆ೨
ತಿರಿದುಂಬ ದಾಸರ ಕೈ ಕಪ್ಪ ಕೊಂಬ ಮರ್ಮತಿರುಮಲಾಚಾರ್ಯ ಶ್ರೀಗುರುವೆ ಬಲ್ಲವರ ಕಾಗಿನೆಲೆಯಾದಿಕೇಶವನ ಭಜಿಸಿದರೆತಿರಿವೆನೆಂದರು ತಿರುಪೆ ಕೂಳ್ ಪುಟ್ಟದೈ ಕೃಷ್ಣ೩

ಹರಿಹರರು ಬೇರೆ ಬೇರೆಯಲ್ಲ

ಆರು ಬಲ್ಲರು ಹರಿಹರಾದಿಗಳ ಮಹಿಮೆಯನು ಪ
ವಾರಿಜೋದ್ಭವ ಸುರೇಂದ್ರಾದಿಗಳಿಗಳವಲ್ಲಅ
ಪೌರತ್ರಯವ ಗೆಲ್ವ ಸಮಯದಲಿ ತಪ ಮಾಡಿನಾರಾಯಣಾಸ್ತ್ರವನು ಪಡೆದನೀತಗೌರೀ ಮನೋಹರನ ಘನತರಾರ್ಚನೆಗೈದುಚಾರುತರ ಚಕ್ರವನು ಪಡೆದನಾ ಶೌರಿ ೧
ಬಲಿಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ ಬಾ-ಗಿಲ ಕಾಯ್ದನಚ್ಯುತನು ಅನುಗಾಲದಿಬಲು ಭುಜನು ಬಾಣಾಸುರನ ಗೃಹ ದ್ವಾರವನುಬಳಸಿ ಕಾಯ್ದನು ಹರನು ವರವ ತಾನಿತ್ತು ೨
ಭೋಗಿಶಯನನು ಆಗಿ ಭೋಗಿಭೂಷಣನಾಗಿವಾಗೀಶನಾಗಿ ಸೃಷ್ಟಿಸ್ಥಿತಿಲಯಕ್ಕಾಗು ಕಾರಣ ಕಾರ್ಯ ಕರ್ಮಾದಿ ರೂಪಕ್ಕೆಕಾಗಿನೆಲೆಯಾದಿಕೇಶವನ ಮಹಿಮೆಯನು ೩

ದೈವಸ್ಮರಣೆ ಇಲ್ಲದವರ ಬಾಳು ವ್ಯರ್ಥ
೧೭೩
ಆರು ಬಾಳಿದರೇನು ಆರು ಬದುಕಿದರೇನುನಾರಾಯಣನ ಸ್ಮರಣೆ ನಮಗಿಲ್ಲದನಕ ಪ
ಉಣ್ಣ ಬರದವರಲ್ಲಿ ಊರೂಟವಾದರೇನುಹಣ್ಣುಬಿಡದ ಮರಗಳು ಹಾಳಾದರೇನುಕಣ್ಣಿಲ್ಲದವಗಿನ್ನು ಕನ್ನಡಿಯಿದ್ದು ಫಲವೇನುಪುಣ್ಯವಿಲ್ಲದವನ ಪ್ರೌಢಿಮೆ ಮೆರೆದರೇನು ೧
ಅಕ್ಕರಿಲ್ಲದವಗೆ ಮಕ್ಕಳಿದ್ದು ಫಲವೇನುಹೊಕ್ಕು ನಡೆಯದ ನಂಟತನದೊಳೇನುರೊಕ್ಕವಿಲ್ಲದವಗೆ ಬಂಧುಗಳು ಇದ್ದರೇನುಮರ್ಕಟನ ಕೈಯೊಳಗೆ ಮಾಣಿಕ್ಯವಿದ್ದರೇನು ೨
ಅಲ್ಪ ದೊರೆಗಳ ಜೀತ ಎಷ್ಟು ಮಾಡಿದರೇನುಬಲ್ಪಂಥವಿಲ್ಲದವನ ಬಾಳ್ವೆಯೇನುಕಲ್ಪಕಲ್ಪಿತ ಕಾಗಿನೆಲೆಯಾದಿಕೇಶವನಸ್ವಲ್ಪವೂ ನೆನೆಯದ ನರನಿದ್ದರೇನು ೩

ಕಷ್ಟಕಾಲಕ್ಕಾಗುವವನು
೭೯
ಆರು ಹಿತವರು ಎಂದು ನಂಬಬೇಡ ಪ
ಆರಿಗಾರಿಲ್ಲ ಆಪತ್ತು ಬಂದೊದಗಿದಡೆ ಅ
ಜನಕ ಹಿತದವನೆಂದು ನಂಬಬಹುದೇ ಹಿಂದೆತನಯ ಪ್ರಹ್ಲಾದನಿಗೆ ಪಿತ ಮುನಿದನುಜನನಿ ರಕ್ಷಿಪಳೆಂಬೆನೇ ತಿಳಿತಿಳಿದು ಕುಂತಿತನಯ ರಾಧೇಯನಿಗೆ ಎರಡೆಣಿಸಿದ ಮೇಲೆ ೧
ಮಗನು ತೆತ್ತಿಗನೆನಲೆ ಕಂಸ ತನ್ನಯ ಪಿತನನಿಗಳ ಬಂಧನದಿಂದ ಬಂಧಿಸಿದನುಜಗವರಿಯೆ ಸೋದರನು ಮಮತೆಯುಳ್ಳವನೆನಲೆಹಗೆವೆರಸಿ ವಾಲಿಯನು ಅನುಜ ಕೊಲಿಸಿದ ಮೇಲೆ೨
ತನಗೆ ದೇಹಾನುಬಂಧಿಗಳೆ ಬಂಧುಗಳೆಂದುಮನದಿ ನಿಚ್ಚಳವಾಗಿ ನಂಬಬೇಡಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನಅನುದಿನದಿ ನಂಬಿದವಗಿಹಪರದಿ ಸುಖವು ೩

ಭಗವನ್ನಾಮಸ್ಮರಣೆಯೊಂದೇ
೮೦*
ಆರೂ ಸಂಗಡ ಬಾಹೋರಿಲ್ಲ ಪ
ನಾರಾಯಣ ನಾಮ ನೆರೆ ಬಾಹೋದಲ್ಲದೆ ಅ
ಹೊತ್ತು ನವಮಾಸ ಪರಿಯಂತ ಗರ್ಭದಲಿಹೆತ್ತು ಅತ್ಯಂತ ನೋವು ಬೇನೆಗಳಿಂದಲಿತುತ್ತು ವಸ್ತ್ರವನಿಕ್ಕಿ ಸಲಹಿದಾ ತಾಯ್ತಂದೆಹೊತ್ತುಗಳೆವರಲ್ಲದೆ ಬೆನ್‍ಹತ್ತಿ ಬಹರೆ ೧
ಗುರು ಬಂಧು ಬುಧ ಜನರು ನಿಂತಗ್ನಿ ಸಾಕ್ಷ್ಯಾಗಿಕರವಿಡಿದು ಧಾರೆಯನೆರೆಸಿಕೊಂಡತರುಣಿ ಇನಿಯನ ಹರಣ ಹೋಗಲು ತಾ ಕಂಡುಬರುವುದಕಂಜಿ ದಾರು ಗತಿಯೆಂದಳುವಳು೨
ಮನೆ ಮಕ್ಕಳು ತಮ್ಮ ಧನಕೆ ಬಡಿದಾಡುವರುಧನಕಾಗಿ ನಿನ್ನನೆ ನಂಬಿದವರುಅನುಮಾನವೇಕೆ ಜೀವನು ತೊಲಗಿದಾಕ್ಷಣದಿಇನ್ನೊಂದು ಅರಗಳಿಗೆ ನಿಲ್ಲಗೊಡರು ೩
ಸುತ್ತಲು ಕುಳ್ಳಿರ್ದ ಮಿತ್ರ ಬಾಂಧವರೆಲ್ಲಹೊತ್ತು ಹೋದೀತು ಹೊರಗೆ ಹಾಕೆನುವರುಹಿತ್ತಲಾ ಕಸಕಿಂತ ಅತ್ತತ್ತ ಈ ದೇಹಹೊತ್ತುಕೊಂಡೊಯ್ದು ಅಗ್ನಿಯಲಿ ಬಿಸುಡುವರು ೪
ಹರಣ ಹಿಂಗದ ಮುನ್ನು ಹರಿಯ ಸೇವೆಯ ಮಾಡಿಪರಗತಿಗೆ ಸಾಧನವ ಮಾಡಿಕೊಳ್ಳೊಕರುಣನಿಧಿ ಕಾಗಿನೆಲೆಯಾದಿಕೇಶವರಾಯನನಿರುತದಲಿ ನೆನೆನೆನೆದು ಸುಖಿಯಾಗೊ ಮನುಜ೫
* ಈ ಕೀರ್ತನೆ ಪುರಂದರಾಸರ ಅಂಕಿತದಲ್ಲೂ ಇದೆ.

ಬಂಧುಬಾಂಧವರಾರೂ ಆಪತ್ಕಾಲದಲ್ಲಿ
೮೧
ಆರೂ ಸಮಯಕ್ಕೊದಗಲಿಲ್ಲಮೋರೆ ನೋಡುತ ಸುಮ್ಮನಿಹರೆಲ್ಲ ಪ
ಮಗಳು ಮಹಲಕುಮಿ ಮೊಮ್ಮಗನು ಸರಸಿಜಭವನುಖಗರಾಜವಾಹನನು ತನ್ನಳಿಯನುಅಗಜನಂದು ತನ್ನೊಡಲೊಳಿಂಬಿಟ್ಟು ಮೂ-ರ್ಬೊಗಸೆ ಮಾಡಿದ ಮುನಿಯ ಬಿಡಿಸಲಿಲ್ಲ೧
ಶ್ರೀದೇವಿ ಭೂದೇವಿ ಮಾತೆಯರು ತಾವಿರಲುಯಾದವರಾಯ ಮೋಹದ ತಂದೆಯುವೇದಮುಖದಣ್ಣನಿರೆ ಉರಿ ನಯನದಿಂದ ಸ್ಮರಬೂದಿಯಾಗುವಾಗ ಬಿಡಿಸಲಿಲ್ಲವೇಕೆ೨
ಪಿತನು ಸಾಗರನು ಹಿತದಾಕೆ ಶ್ರೀದೇವಿಅತಿ ಬೀಗನಾದವ ನಾರಾಯಣಜತೆ ಅಳಿಯರು ಬೊಮ್ಮ ಮನ್ಮಥರಿರಲಾಗಿಕ್ಷಿತಿಯೊಳಗೆ ಶಶಿ ಕ್ಷೀಣವಾಗುವ ಸಮಯದಿ ೩
ತೆತ್ತೀಸ ಕೋಟಿ ದೇವರ್ಕಳು ತಾವಿರಲುಒತ್ತಿನಲಿ ಇಂದ್ರ ಉಪೇಂದ್ರರಿರಲುಮತ್ತೆ ಪಾರ್ವತಿ ಪುತ್ರ ವೀರೇಶ ದಕ್ಷನನೆತ್ತಿ ಹರಿಗಡಿವಾಗ ನೋಡುತಿಹರೆಲ್ಲ ೪
ಇಂಥಿಂಥ ದೊಡ್ಡವರು ಈ ಪಾಡು ಪಡಲಾಗಿಭ್ರಾಂತ ಮನುಜರಿಗೆ ಪೇಳಲಿನ್ನೆಷ್ಟುಕಂತುಪಿತ ಕಾಗಿನೆಲೆಯಾದಿಕೇಶವನಸಂತೋಷದಿಂ ನೆನೆದು ಸುಖಿಯಾಗೊ ಮನುಜ೫

ಗಯಾ ಕ್ಷೇತ್ರದಲ್ಲಿ ಪಿಂಡ
ವೈಚಾರಿಕತೆ
೧೯೯
ಆವ ಕರ್ಮವೊ ಇದು ಆವ ಧರ್ಮವೊಆವ ಕರ್ಮವೆಂದರಿಯೆ, ಹಾರುವರಿವರು ಬಲ್ಲರೆ ಪ
ಸತ್ತವನು ಎತ್ತ ಪೋದಸತ್ತು ತನ್ನ ಜನ್ಮಕೆ ಪೋದಸತ್ತವನು ಉಣ್ಣುವನೆಂದುನಿತ್ಯ ಪಿಂಡವಿಕ್ಕುತೀರಿ೧
ಎಳ್ಳು ದರ್ಭೆ ಕೈಲಿ ಪಿಡಿದುಪಿತರ ತೃಪ್ತಿ ಪಡಿಸುತೀರಿಎಳ್ಳು ಮೀನು ನುಂಗಿ ಹೋಯಿತುದರ್ಭೆ ನೀರೊಳು ಹರಿದು ಹೋಯಿತು ೨
ಎಡಕೆ ಒಂದು ಬಲಕೆ ಒಂದುಎಡಕೆ ತೋರಿಸಿ ಬಲಕೆ ತೋರಿಸಿಕಡು ಧಾವಂತ ಪಡಿಸಿಕಟಿಯ ಹಸ್ತದೊಳಗೆ ಪಿಡಿಸುತೀರಿ ೩
ಮಂತ್ರಾಕ್ಷತೆಯ ಕೈಗೆ ಕೊಟ್ಟುಮೋಕ್ಷವನ್ನು ಹಾರೈಸುವಿರಿಮಂತ್ರವೆಲ್ಲೊ ಅಕ್ಷತೆಯೆಲ್ಲೊಮೋಕ್ಷವೆಲ್ಲೊ ಮತ್ರ್ಯವೆಲ್ಲೊ೪
ಹೇಳುವವನು ಅವಿವೇಕಿಕೇಳುವವನು ಅಜ್ಞಾನಿಹೇಳುವ ಕೇಳುವ ಇಬ್ಬರ ಸೊಲ್ಲಆದಿಕೇಶವಮೂರ್ತಿ ಬಲ್ಲ೫

ಕನಕದಾಸರು ಈ ಕೀರ್ತನೆಯಲ್ಲಿ
೮೨
ಆವ ಪರಿಯಲಿ ನಿಮ್ಮನೊಲಿಸಿ ಮೆಚ್ಚಿಪ ವಿಧವುರವೆಯಷ್ಟು ತೋರದಲ್ಲ ಪ
ದೇವ ದೇವೇಶ ನೀನೆಂದು ನಂಬಿರಲು ಕೃ-ಪಾವಲೋಕನದಿ ಸಲಹೊ ದೇವಅ
ಫಣಿರಾಜನಾಸನದಿ ಕುಳಿತಿಹಗೆ ಅರಿವೆಯಾಸನವ ನಾನೆಂತ್ಹಾಸಲಿಘನವಾದ ಗಂಗೆಯನು ಪಡೆದವಗೆ ಕಲಶ ನೀರನದೆಂತು ಮೈಗೆರೆಯಲಿತನುವಿನ ಪರಿಮಳವು ಘಮಘಮಿಪನಿಗೆ ಸುಚಂದನವದೆಂತು ನಾ ಪೂಸಲಿಅನವರತ ನಾಭಿಯೊಳು ಶತಪತ್ರವಿಹಗೆ ಮಿಕ್ಕಿನ ಪೂವ ಮುಡಿಸಲೆಂತೈ ದೇವ ೧
ಸುರುಚಿರೋಜ್ವಲ ಪೀತವಾಸನಿಗೆ ಉಡುಗೊರೆಯಅರಿವೆಯೇನನು ಪೊದಿಸಲಿವರ ಕೌಸ್ತುಭವು ಕೊರಳೊಳಗೆ ಇಪ್ಪವಗೆ ಆ-ಭರಣವಾವುದ ತೊಡಿಸಲಿತರಣಿ ಶತಕೋಟಿತೇಜನ ಮುಂದೆ ಹ್ಯಾಗೆ ನಾ-ಪೆರತೊಂದು ದೀಪವಿಡಲಿನೆರಹಿದ ಫಣಿಪತಿಯ ಸ್ತೋತ್ರದೂರನ ನಾನುಸ್ಮರಿಪೆನೆಂತಯ್ಯ ದೇವ ದೇವ ೨
ವನಜಜಾಂಡ ಕೋಟಿಯುದರಂಗೆ ಆವುದನುಉಣಿಸಿ ತೃಪ್ತಿಯ ಮಾಡಲಿಅನಿಮಿಷರಿಗಮೃತವನ್ನೆರೆದವನ ತೃಷೆಯ ನೀ-ರಿನೊಳೆಂತು ಸಂತವಿಡಲಿವಿನತೆಯಾತ್ಮಜ ಪಕ್ಷದನಿಲನಿರೆ ಬೇರೆ ಬೀ-ಸಣಿಗೆಯನ್ನೇಂ ಬೀಸಲಿಅಣುರೇಣು ಪರಿಪೂರ್ಣ ಮೂರುತಿಗೆ ನಾ ಪ್ರದ-ಕ್ಷಿಣೆಯೆಂತು ಸುತ್ತಿಬರಲಿ ದೇವ ೩
ಮಿಗೆ ಫಣಿಯ ಫಣದಾತಪತ್ರವಿರುವಂಗೆ ನೆರ-ಳಿಗೆ ಕೊಡೆಯನೇಂ ಪಿಡಿಯಲಿಪಗಲಿರುಳು ಸಾಮಗಾನ ಪ್ರಿಯನ ಮುಂದೆ ಗೀ-ತಗಳ ನಾನೇಂ ಪಾಡಲಿಜಗವರಿಯೆ ಲಕ್ಷ್ಮೀದೇವಿಪತಿಗೆ ಎಷ್ಟು ಹೊ-ನ್ನುಗಳ ದಕ್ಷಿಣೆಯ ಕೊಡಲಿನಿಗಮತತಿ ಕಾಣದಿಹ ಮಹಿಮನಿಗೆ ನಮಿಸುವಬಗೆಯ ನಾನರಿವೆನೆಂತೈ ದೇವ ೪
ಒಲಿಸುವುದನರಿಯೆ ಮೆಚ್ಚಿಸುವ ಬಗೆಯರಿಯೆ ಹೊ-ಗಳುವ ಹೊಲಬ ನಾನರಿಯೆನುತಿಳಿದುದಿಲ್ಲವು ಷೋಡಶೋಪಚಾರದ ಪೂಜೆ-ಗಳಲೊಂದು ಪರಿಯಾದರೂನೆಲೆಯ ಕಾಣೆನು ನಿಗಮಶಾಸ್ತ್ರ ನವವಿಧ ಭಕ್ತಿ-ಯೊಳಗೊಂದು ಬಗೆಯಾದರೂಅಳಿಲಸೇವೆಯನೊಪ್ಪಿಸಿಕೊಂಡು ಶರಣನ ಸಲಹೊನೆಲೆಯಾದಿ ಕೇಶವನೆ ಸ್ವಾಮಿ – ಪ್ರೇಮಿ೫

ಸರ್ವೋತ್ತಮನೆನಿಸಿದ ವಿಷ್ಣುವಿನ

ಆವ ಬಲವಿದ್ದರೇನು – ವಾಸುದೇವನಾ ಬಲವು ನಿಜವಾಗಿ ಇರದನಕ ಪ
ನೊಸಲಗಣ್ಣನ ಬಲ ನಾಲ್ಕು ತೆರದ ಬಲತ್ರಿಶುಲ ಡಮರು ಅಗ್ನಿ ಫಣಿಯ ಬಲವುಪಶುಪತಿಯ ರೂಪಿನ ಬಲದ ಶಿಶುಪಾಲನಅಸುರಮರ್ದನ ಕೃಷ್ಣ ಶಿರವ ಛೇದಿಸುವಾಗ ೧
ಹರನ ಕರುಣದ ಬಲವು ಸುರರ ಗೆಲಿದಾ ಬಲವುಪರಮ ಶಕ್ತಿಯು ತನ್ನ ಭುಜದ ಬಲವುಧರೆಯನೆತ್ತಿದ ಬಲವುಳ್ಳ ಹಿರಣ್ಯಾಕ್ಷನಶಿರವ ಹರಿ ವರಾಹನಾಗಿ ತರಿವಾಗ೨
ಮುನ್ನ ಗೆಲಿದ ಬಲ ಮುಕ್ಕಣ್ಣ ಹರನ ಬಲಘನ್ನ ಲಂಕಿಣಿಯ ಕಾವಲಿನ ಬಲವುತನ್ನ ವಂಶದ ಬಲವುಳ್ಳ ರಾವಣನ ಶಿರವಸನ್ನುತ ರಾಘವ ಪಟ್ಟನೆ ಪಾರಿಸುವಾಗ ೩
ಲಿಂಗಪೂಜೆಯ ಬಲ ನಿಶ್ಚಿಂತನಾಗಿಹ ಬಲಹಿಂಗದೆ ಹರನು ಬಾಗಿಲ ಕಾಯ್ದ ಬಲವುಮುಂಗೈಯ ಶಕ್ತಿ ಸಾವಿರ ತೋಳ ಬಾಣನತುಂಗ ವಿಕ್ರಮ ಕೃಷ್ಣ ತೋಳ ಖಂಡಿಸುವಾಗ ೪
ಈಸು ದೇವರ ಬಲಗಳಿದ್ದರೆ ಫಲವೇನುವಾಸುದೇವನ ಬಲವಿಲ್ಲದವಗೆದೇಶಕಧಿಕ ಕಾಗಿನೆಲೆಯಾದಿಕೇಶವನಲೇಸಾದ ಚರಣ ಕಮಲದ ಬಲವಿರದನಕ ೫

ಸಿರಿಯ ಮದದಲ್ಲಿ ಭಕ್ತನನ್ನು ಮರೆತೆಯಾ
೮೩
ಆವ ಸಿರಿಯಲಿ ನೀನು ಎನ್ನ ಮರೆತೆದೇವ ಜಾನಕೀರಮಣ ಪೇಳು ರಘುಪತಿಯೆ ಪ
ಸುರರ ಸೆರೆಯನು ಬಿಡಿಸಿ ಬಂದೆನೆಂಬಾ ಸಿರಿಯೆಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆಶರಧಿಗೆ ಸೇತುವೆಗಟ್ಟಿದೆನೆನ್ನುವಾ ಸಿರಿಯೆಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ ೧
ಕಡಲೊಳಗೆ ಮನೆಮಾಡಿ ಮಲಗಿದೆನೆಂಬಾ ಸಿರಿಯೆಮೃಢ ನಿನ್ನ ಸಖನಾದನೆಂಬ ಸಿರಿಯೆಬಿಡದೆ ದ್ರೌಪದಿ ಮಾನ ಕಾಯ್ದೆನೆಂಬಾ ಸಿರಿಯೆದೃಢವಾಗಿ ಹೇಳೆನಗೆ ದೇವಕೀ ಸುತನೆ೨
ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆಕಾಮ ನಿನ್ನ ಸುತನಾದನೆಂಬ ಸಿರಿಯೆಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ ೩
ಮನುಜರೆಲ್ಲರು ನಿನ್ನ ಸ್ತುತಿಸುವರೆಂಬ ಸಿರಿಯೆಹನುಮ ನಿನ್ನ ಬಂಟನಾದನೆಂಬ ಸಿರಿಯೆಬಿನುಗು ದೈವಗಳು ನಿನಗೆಣೆಯಿಲ್ಲವೆಂಬ ಸಿರಿಯೆಅನುಮಾನ ಮಾಡದೆ ಪೇಳೊ ನರಹರಿಯೆ ೪
ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿಪಂಥವೇ ನಿನಗಿಚಿದು ಆವ ನಡತೆಕಂತುಪಿತ ಕಾಗಿನೆಲೆಯಾದಿಕೇಶವ ರಂಗಚಿಂತೆಯನು ಬಿಡಿಸಿ ಸಂತೋಷವನು ಪಡಿಸೊ೫

ಭಕ್ತನೇ ಭಗವಂತನನ್ನು ತರಾಟೆಗೆ
೮೪
ಆವುದೊಳ್ಳೆಯದೊ ನಿನ್ನಂಗ – ಚೆಲುವದೇವ ಬಂಕಾಪುರದ ಲಕುಮಿ ನರಸಿಂಗ ಪ
ಜಗದೊಳಗೆ ತಾನು ತಂದೆಯ ಮಾತು ಕೇಳದಾಮಗನು ಇಹ ಪರಕೆ ಸಲುವ ಪ್ರಾಜ್ಞನೆ ?ಬಗೆಗೊಳಿಸಿ ಪ್ರಹ್ಲಾದ ಪಿತನೊಡಲ ನಿನ್ನ ಕೂ-ರುಗುರಿನಿಂ ಬಗೆಸಿದಾತಂಗೆ ಮುಕುತಿಯನೀವೆ ೧
ಪೊಡವಿಯೊಳು ಅಣ್ಣನಾಜ್ಞೆಯ ಮೀರಿ ನಡೆಯುತಿಹಒಡಹುಟ್ಟಿದವಗೆ ಕೈವಲ್ಯವುಂಟೆ ?ದೃಢದಲಿ ವಿಭೀಷಣಾಗ್ರಜನನ್ನು ಬಾಣದಲಿಕೆಡಹಿಸಿದ ಬಳಿಕವಗೆ ಸ್ಥಿರಪಟ್ಟ ಕಟ್ಟಿದೆ೨
ರೂಢಿಯಲಿ ಗುರುದ್ರೋಹವನು ಮಾಡಿದವನ ಮೊಗನೋಡಿದಾಗಲೆ ಪ್ರಾಯಶ್ಚಿತ್ತವುಂಟುನೋಡಿದಾಗಲೆ ಬೃಹಸ್ಪತಿಸತಿಗೆ ಅಳುಪಿದನಸೂಡಿದಾತನ ಸ್ನೇಹವನು ಮಾಡಿಕೊಂಡಿರ್ಪೆ ೩
ದೇಶದೊಳು ವಂಶಕಂಟಕರೆನಿಸಿದವರೊಳಗೆಭಾಷಣವ ಮಾಡಬಪ್ಪುದೆ ಪ್ರಾಜ್ಞರು ?ಬೇಸರಿಸದೆ ಕೌರವರ ಕೊಂದ ಪಾಂಡವರ ಸಂ-ತೋಷದಲಿ ಪಕ್ಷಿಕರ ಮಾಡಿಕೊಂಡಿರ್ಪೆ ೪
ಪೊಡವಿಪತಿ ಕೇಳು ಶ್ರೀ ಆದಿಕೇಶವನೆ ಹಿಂ-ಗಡೆಯಲ್ಲಿ ಮನೆಯ ಕಟ್ಟಿಸಬಾರದೆ ?ಬಿಡೆಯವಿಲ್ಲದೆ ಸಭಾಮಧ್ಯದಲಿ ಹೆಂಡತಿಯತೊಡೆಯ ಮೇಲ್ಕುಳ್ಳಿರಿಸಿಕೊಂಡಿರ್ಪ ಹಿರಿಯತನ ೫

ತಾಯಿಯಾದ ಯಶೋಧೆ
೨೧೨
ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪ ಪ
ಮುಂದಕೆ ನಿಮ್ಮ ಮನೆಗೆ ಬಾರನಮ್ಮಅ
ಮಗುವು ಬಲ್ಲುದೆ ಇಷ್ಟು ಬೆಣ್ಣೆಯ ಕದ್ದರೆಬಿಗಿಯ ಬಹುದೇ ಶ್ರೀ ಚರಣವನುಅಗಣಿತ ಮಹಿಮನ ಅಂಜಿಸಲೇಕಮ್ಮಬಗೆಯ ಬಾರದೆ ನಿಮ್ಮ ಮಕ್ಕಳಂತೆ ೧
ಹಸುಮಗುವನು ಕಂಡು ಮುದ್ದಿಸಲೊಲ್ಲದೆಹುಸಿಗ ಕಳ್ಳನೆಂದು ಕಟ್ಟುವಿರಿವಸುಧೆಯೊಳಗೆ ನಾನೊಬ್ಬಳೆ ಪಡೆದೆನೆ ನಿಮ್ಮಹಸು ಮಗುವಿನಂತೆ ಭಾವಿಸಬಾರದೆ ೨
ಎಷ್ಟು ಸಾರಿಯು ನಾ ಬೇಡವೆಂದರೆ ಕೇಳದುಷ್ಟ ಮಕ್ಕಳ ಕೂಡೆ ಒಡನಾಟವಕಟ್ಟಿದ ನೆಲುವಿನ ಬೆಣ್ಣೆಯನೀವೆನುಬಿಟ್ಟು ಕಳುಹಿರಮ್ಮ ಆದಿಕೇಶವನ ೩

ಭಗವದ್ ಕೃಪೆ ದೊರಕಿದಾಗಿನ
೮೬
ಇದ್ದೀಯಾ ಶ್ರೀ ಹರಿ ನೀನೊಲಿದು ಬಂದಿದ್ದೀಯಾ ಪ
ಇದ್ದೀಯಾ ಶ್ರೀಹರಿ ನೀನು – ವೃದ್ಧಿಸಿದ್ಧಿಯ ನಡುವೆ ಪದುಮನಾಭನು – ಅಭಿ-ವೃದ್ಧಿಯಾಗಲು ತಡವೇನು – ಅಹಬುದ್ಧಿಯಾಗಿ ಭಜಿಸುವ ಬಾಳುವೆಗೆ – ಸ-ಮೃದ್ಧಿಯಾಗಿ ಸರ್ವ ಸಿದ್ಧಿಯ ಕೊಡಲಾಗಿ ೧
ನಂಬಿದ್ದ ಸುಜನರು ಹರಿಯೆ – ಕೆಟ್ಟದೆಂಬ ಸುದ್ದಿಯ ನಾನರಿಯೆ – ಸತ್ಕು-ಟುಂಬ ಎಂಬುದು ಹೊಸಪರಿಯೆ – ಅಹಬೆಂಬಲವಾಗಿ ಸಜ್ಜನರ ಸಲಹುವ ಕೃ-ಪಾಂಬುಧಿ ಮೂಜಗಕೊಲಿಯಲೋಸುಗ ಬಂದು ಉಲಿಯೆ೨
ಶೇಷಗಿರೀಶ ಮದ್ಬಂಧು – ಆದಿಕೇಶವ ಗುರುವೆ ನೀನೆಂದು – ಕೃಷ್ಣಕ್ಲೇಶ ಬಿನ್ನೈಸುವೆ ಇಂದು – ಅಹಆಸೆ ಬಿಟ್ಟು ಪೂಜಿಸುವ ಭಕ್ತರದಾಸನೆಂದು ವೆಂಕಟೇಶ ನೀನೊಲಿದು ಬಂದಿದ್ದೀಯಾ೩

ಅನಿತ್ಯವಾದ ಪ್ರಾಪಂಚಿಕ ಸುಖ
೮೭
ಇರಬಂದುದಿಲ್ಲ ಸಂಸಾರ – ಇದನರಿತುಸಿರಿಹರಿಯ ಭಜಿಸುವುದು ಸಾರ ಪ
ಧರೆಯನಾಳಿದ ತ್ರಿಶಂಕು ದೊರೆಯು ತಾನೆಲ್ಲಿಹರಿಶ್ಚಂದ್ರ ಮೊದಲಾದ ಚಕ್ರವರ್ತಿಗಳೆಲ್ಲಿಶರಧಿ ಮಧ್ಯದೊಳಿದ್ದ ರಾವಣಾಸುರನೆಲ್ಲಿಸಿರಿಯುಳ್ಳ ಕೌರವರು ಪಾಂಡವರು ತಾವೆಲ್ಲಿಧರೆಗಿಳಿದು ಪೋದಾತ ವಾಲಿಯು ತಾನೆಲ್ಲಿಸುರರೊಡನೆ ಹೋರಿದಾ ಬಲಿಯು ತಾನೆಲ್ಲಿ ೧
ದಶರಥ ಮೊದಲು ಷೋಡಶ ರಾಯರುಗಳೆಲ್ಲಿಅಸಹಾಯ ಶೂರ ವೀರ ವಿಕ್ರಮರೆಲ್ಲಿಅಸಮಬಲ ವಸುಮತಿಯ ಹಿರಣ್ಯಾಕ್ಷನೆಲ್ಲಿವಸುಧೆಯೊಳಗಿದ್ದ ಹದಿನಾರು ಸಾವಿರರೆಲ್ಲಿಕುಸುಮ ಬಾಣನ ಪಡೆದ ದೇವ ತಾನೆಲ್ಲಿಸುಶರೀರ ಎನಿಸಿದ ಅಭಿಮನ್ಯು ತಾನೆಲ್ಲಿ ೨
ಈ ಪರಿಯೆ ಈ ಧರೆಯನಾಳಿ ಹೋದವರೆಷ್ಟುಈ ಪರಿಯೆ ಸ್ವರ್ಗಕ್ಕೆ ಇಂದ್ರಾದಿಗಳು ಎಷ್ಟುಈ ಪರಿಯೆ ಹರಬ್ರಹ್ಮರಾದವರು ತಾವೆಷ್ಟುಈ ಪರಿಯೆ ಯುಗಪ್ರಳಯವಾಗಿ ಹೋದವು ಎಷ್ಟುಈ ಪರಿಯೆ ಜಲ ಪ್ರಳಯವಾಗಿ ಹೋದವು ಎಷ್ಟುಶ್ರೀಪತಿ ಕೇಶವನಲಿಡು ಭಕುತಿ – ಕೊಡುವ ಮುಕುತಿ ೩

ಯೋಗ ದೃಷ್ಟಿಯಿಂದ ಭಗವಂತನ ದಿವ್ಯದರ್ಶನ
೮೮
ಇಷ್ಟು ದಿನ ಈ ವೈಕುಂಠಎಷ್ಟು ದೂರವೊ ಎನ್ನುತಲಿದ್ದೆದೃಷ್ಟಿಯಿಂದಲಿ ನಾನು ಕಂಡೆಸೃಷ್ಟಿಗೀಶನೆ ಶ್ರೀರಂಗಶಾಯಿ ಪ
ಎಂಟು ಏಳನು ಕಳೆದುದರಿಂದತುಂಟರೈವರ ತುಳಿದುದರಿಂದಕಂಟಕನೊಬ್ಬನು ಅಳಿದುದರಿಂದಭಂಟನಾಗಿ ಬಂದೇ ಶ್ರೀರಂಗಶಾಯಿ೧
ವನ ಉಪವನಗಳಿಂದಘನ ಸರೋವರಗಳಿಂದಕನಕ ಗೋಪುರಗಳಿಂದಘನಶೋಭಿತನೆ ಶ್ರೀರಂಗಶಾಯಿ೨
ವಜ್ರವೈಢೂರ್ಯ ತೊಲೆಗಳ ಕಂಡೆಪ್ರಜ್ವಲಿಪ ಮಹಾದ್ವಾರವ ಕಂಡೆನಿರ್ಜರಾದಿ ಮುನಿಗಳ ಕಂಡೆದುರ್ಜನಾಂತಕ ಶ್ರೀರಂಗಶಾಯಿ ೩
ರಂಭೆ ಊರ್ವಶಿ ಮೇಳವ ಕಂಡೆತುಂಬುರು ನಾರದರ ಕಂಡೆಅಂಬುಜೋದ್ಭವ ಪ್ರಮುಖರ ಕಂಡೆಶಂಬರಾರಿ ಪಿತನೆ ಶ್ರೀರಂಗಶಾಯಿ೪
ನಾಗಶಯನನ ಮೂರುತಿ ಕಂಡೆಭೋಗಿ ಭೂಷಣ ಶಿವನನು ಕಂಡೆಭಾಗವತರ ಸಮ್ಮೇಳವ ಕಂಡೆಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ ೫

ಮಥುರಾ ನಗರದ ಶ್ರೀ ಗೋಪಾಲಕೃಷ್ಣ

ಈ ಪರಿಯ ಸೊಬಗಾವ ದೇವರಲಿ ನಾ ಕಾಣೆಗೋಪಿದೇವಿಯ ತನಯ ಗೋಪಾಲ ಬಾಲಗಲ್ಲದೆ ಪ
ದೊರೆಯ ತನದಲಿ ನೋಡೆ ಧರಣಿ ಜಾತೆಯ ರಮಣಸಿರಿಯ ತನದಲಿ ನೋಡೆ ಶ್ರೀಕಾಂತನುಹಿರಿಯ ತನದಲಿ ನೋಡೆ ಸರಸಿಜೋದ್ಭವನ ಪಿತನುಗುರುವು ತನದಲಿ ನೋಡೆ ಆದಿಗುರುವು ೧
ಪಾವನತ್ವದಿ ನೋಡೆ ದೇವಿ ಗಂಗಾಜನಕದೇವತ್ವದಲಿ ನೋಡೆ ದಿವಿಜರೊಡೆಯಲಾವಣ್ಯದಲಿ ನೋಡೆ ಲೋಕ ಮೋಹನ ಪಿತನುಜವ ಧೈರ್ಯದಲಿ ನೋಡೆ ಅಸುರಾಂತಕ೨
ಗಗನದಲಿ ಸಂಚರಿಪ ವೈನತೇಯ ವಾಹನಜಗವನು ಪೊತ್ತಿರ್ಪ ಶೇಷ ಶಯನಕಾಗಿನೆಲೆಯಾದಿಕೇಶವರಾಯಗಲ್ಲದೆಮಿಗಿಲು ದೈವಗಳಿಗೀ ಭಾಗ್ಯಮುಂಟೆ ೩

ಸಂಪತ್ತು ಕೇಂದ್ರೀಕೃತಗೊಳ್ಳಬಾರದು.
೯೦
ಈ ಸಿರಿಯ ನಂಬಿ ಹಿಗ್ಗಲು ಬೇಡ ಮನವೆ ಪ
ವಾಸುದೇವನ ಭಜಿಸೊ ಒರಟು ಜೀವನವೆ ಅ
ನೆಂಟರೂರಿಗೆ ಹೋಗಿ ನಾಲ್ಕು ದಿವಸವಿದ್ದರೆಎಂಟು ದಿನದಾಯಾಸ ಅಟ್ಟಬಹುದೊಉಂಟು ಸೌಭಾಗ್ಯವೆಂಬ ಧೈರ್ಯವ ಬಿಟ್ಟು ವೈ-ಕುಂಠವಾಸಿಯ ಭಜಿಸೊ ತುಂಟ ಜೀವನವೆ೧
ಮಡದಿ ಮಕ್ಕಳು ಎಂಬ ಮಾಯಾ ಸಂಸಾರಕ್ಕೆಸಡಗರವಗೊಂಡು ಬರಿದೆ ಭ್ರಮಿಸಲೇಕೆಬಿಡದೆ ಯಮನಾಳುಗಳು ಬಾರೆಂದು ಎಳೆವಾಗಮಡದಿ ಮಕ್ಕಳು ಬಹರೆ ಭಂಡ ಜೀವನವೆ೨
ಇಷ್ಟ ಸಂಪತ್ತನ್ನು ಬಡವರಾ ಕರೆತಂದುಕೊಟ್ಟು ಮಾಡಿದ ಪುಣ್ಯಫಲ ತನ್ನದೊಸೃಷ್ಟಿಯೊಳು ಕಾಗಿನೆಲೆಯಾದಿಕೇಶವನಂಘ್ರಿಮುಟ್ಟಿ ಮನದಲಿ ಭಜಿಸೊ ಭ್ರಷ್ಟಜೀವನವೆ೩

ಹರಿಯ ದಶಾವತಾರ ಲೀಲೆಗಳನ್ನು
೨೨೮
ಈತನೇನೆ ನಿನ್ನ ಮಗನು ಪ
ಸೀತಾಪತಿ ರಘುನಾಥನೆಂಬವನು ಅ
ವ್ಯಾಸನ ಜನನಿಯ ವಾಸನೆ ತಾಳ್ದನುದೇಶದೊಳಗೆ ಬಲು ಪೆಸರುಳ್ಳವನುನಾಸದೊಳೊರ್ವನ ಪೊತ್ತು ಮುರಿದು ಮು-ನೀಶರ ಶಾಪವ ಪಿಡಿದು ಕೊಂದಾತನು ೧
ಆನೆವಾಹನ ಪಿತನ ತಾಯನಳೆದೋನುಭಾನುಸುತಗೆ ಶಾಪವಿತ್ತವನುಕಾನನ ಜನನಿಯ ಕೊಂದು ಪ್ರಿಯದಲಿ ನಿ-ಧಾನದಿ ಶರಧಿ ಶಯನ ಮಾಡಿದಾತನು ೨
ಮೂಗ್ರಾಮ ಮುರಿದು ವಾಜಿಯನೇರಿದಾತನುಸಾಗ್ರದಿಂದಿಳೆಯ ಭಾಗ್ಯ ಹಿಂಗಿಸಿದಯೋಗ್ಯದಿಂದ ಬಳಪತಿತನವನಿಗೆಭಾಗ್ಯವಿತ್ತ ಕಾಗಿನೆಲೆಯಾದಿಕೇಶವ ೩

ಶ್ರೀಹರಿಯ ಇಪ್ಪತ್ತುನಾಲ್ಕು ನಾಮಗಳನ್ನು
೮೯
ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನುದೋಷ ರಾಶಿ ನಾಶ ಮಾಡು ಶ್ರೀಶ ಕೇಶವ ಪ
ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನಚರಣ ಸ್ಮರಣೆ ಕರುಣಿಸಯ್ಯ ನಾರಾಯಣ೧
ಶೋಧಿಸೆನ್ನ ಭವದ ಕಲುಷ ಬೋಧಿಸಯ್ಯ ಜ್ಞಾನವೆನಗೆಬಾಧಿಸುವಾ ಯಮನ ಬಾಧೆ ಬಿಡಿಸು ಮಾಧವ ೨
ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನುಇಂದು ಭವದ ಬಂಧ ಬಿಡಿಸು ತಂದೆ ಗೋವಿಂದನೆ ೩
ಭ್ರಷ್ಟನೆನಿಸ ಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆಶಿಷ್ಟರೊಳಗೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ ೪
ಮೊದಲು ನಿನ್ನ ಪಾದ ಪೂಜೆ ಮುದದಿ ಗೈವೆನಯ್ಯ ನಾನುಹೃದಯದೊಳಗೆ ಒದಗಿಸಯ್ಯ ಮಧುಸೂದನ ೫
ಕವಿದುಕೊಂಡು ಇರುವ ಪಾಪ ಸವೆದು ಹೋಗುವಂತೆ ಮಾಡಿಜವನ ಬಾಧೆಯನ್ನು ಬಿಡಿಸೊ ಘನ ತ್ರಿವಿಕ್ರಮ ೬
ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ ೭
ಮದನನಯ್ಯ ನಿನ್ನ ಮಹಿಮೆ ವದನದಲ್ಲಿ ಇರುವ ಹಾಗೆಹೃದಯದಲ್ಲಿ ಸದನ ಮಾಡು ಮುದದಿ ಶ್ರೀಧರ ೮
ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದುಹುಸಿಗೆ ನನ್ನ ಹಾಕದಿರೋ ಹೃಷಿಕೇಶನೆ ೯
ಅಬ್ಧಿಯೊಳಗೆ ಬಿದ್ದು ನಾನು ಒದ್ದುಕೊಂಬೆನಯ್ಯ ಭವದಿಗೆದ್ದು ಪೋಪ ಬುದ್ಧಿ ತೋರೊ ಪದ್ಮನಾಭನೆ೧೦
ಕಾಮಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ ನುಡಿಸುಶ್ರೀಮಹಾನುಭಾವನಾದ ದಾಮೋದರ ೧೧
ಪಂಕಜಾಕ್ಷ ನೀನು ಎನ್ನ ಮಂಕುಬುದ್ಧಿ ಬಿಡಿಸಿ ನಿನ್ನಕಿಂಕರನ್ನ ಮಾಡಿಕೊಳ್ಳೊ ಸಂಕರುಷಣ೧೨
ಏಸು ಜನ್ಮ ಬಂದರೇನು ದಾಸನಲ್ಲವೇನೊ ನಿನ್ನಘಾಸಿ ಮಾಡದಿರೋ ಎನ್ನ ವಾಸುದೇವನೆ ೧೩
ಬುದ್ಧಿ ಶೂನ್ಯನಾಗಿ ನಾನು ಕದ್ದ ಕಳ್ಳನಾದೆನಯ್ಯತಿದ್ದಿ ಹೃದಯ ಶುದ್ಧಿ ಮಾಡೊ ಪ್ರದ್ಯುಮ್ನನೆ ೧೪
ಜನನಿ ಜನಕ ನೀನೆ ಎಂದು ಎನುವೆನಯ್ಯ ದೀನಬಂಧುಎನಗೆ ಮುಕ್ತಿ ಪಾಲಿಸಿಂದು ಅನಿರುದ್ಧನೆ ೧೫
ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು ನೇಮಇರಿಸು ಚರಣದಲ್ಲಿ ಕ್ಷೇಮ ಪುರುಷೋತ್ತಮ ೧೬
ಸಾಧು ಸಂಗ ಕೊಟ್ಟು ನಿನ್ನ ಪಾದಭಜಕನೆನಿಸು ಎನ್ನಭೇದ ಮಾಡಿ ನೋಡದಿರೋ ಅಧೋಕ್ಷಜ ೧೭
ಚಾರುಚರಣ ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆಭಾರ ಹಾಕಿ ಇರುವೆ ನಿನಗೆ ನಾರಸಿಂಹನೆ ೧೮
ಸಂಚಿತಾರ್ಥ ಪಾಪಗಳನು ಕಿಂಚಿತಾದರುಳಿಯದಂತೆಮುಂಚಿತಾಗಿ ಕಳೆದು ಪೊರೆಯೊ ಸ್ವಾಮಿ ಅಚ್ಯುತ೧೯
ಜ್ಞಾನ ಭಕ್ತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಎನ್ನಹೀನ ಬುದ್ಧಿ ಬಿಡಿಸೊ ಮುನ್ನ ಜನಾರ್ದನ ೨೦
ಜಪತಪಾನುಷ್ಠಾನ ನೀನು ಒಪ್ಪುವಂತೆ ಮಾಡಲಿಲ್ಲತಪ್ಪ ಕೋಟಿ ಕ್ಷಮಿಸಬೇಕು ಉಪೇಂದ್ರನೆ ೨೧
ಮೊರೆಯನಿಡುವೆನಯ್ಯ ನಿನಗೆ ಸೆರೆಯ ಬಿಡಿಸು ಭವದ ಎನಗೆಇರಿಸು ಭಕ್ತರೊಳಗೆ ಪರಮಪುರುಷ ಶ್ರೀಹರೇ೨೨
ಪುಟ್ಟಿಸಲೇ ಬೇಡವಿನ್ನು ಪುಟ್ಟಿಸಿದಕೆ ಪಾಲಿಸಿನ್ನುಇಷ್ಟು ಬೇಡಿಕೊಂಬೆ ನಾನು ಶ್ರೀಕೃಷ್ಣನೆ೨೩
ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವವರಅರ್ತಿಯಿಂದ ಕಾಯದಿರನು ಕರ್ತೃ ಕೇಶವ ೨೪
ಮರೆತು ಬಿಡದೆ ಹರಿಯ ನಾಮ ಬರೆದು ಓದಿ ಕೇಳುವರಿಗೆಕರೆದು ಮುಕ್ತಿ ಕೊಡುವ ಬಾಡದಾದಿಕೇಶವ ೨೫

ದಾಸಯ್ಯನ ರೂಪಕದಲ್ಲಿ
೨೧೩
ಊರಿಗೆ ಬಂದರೆ ದಾಸಯ್ಯ – ನಮ್ಮಕೇರಿಗೆ ಬಾ ಕಂಡ್ಯ ದಾಸಯ್ಯ ಪ
ಕೈಲಿ ಕೋಲು ಕೊಳಲು ದಾಸಯ್ಯಕಲ್ಲಿಗೆ ವರವಿತ್ತೆ ದಾಸಯ್ಯಮಲ್ಲನ ಮರ್ದಿಸಿ ಮಾವನ ಮಡುಹಿದನೀಲಮೇಘಶ್ಯಾಮ ದಾಸಯ್ಯ ೧
ಕೊರಳೊಳು ವನಮಾಲೆ ದಾಸಯ್ಯ – ಬಲುಗಿರಿಯನು ನೆಗಹಿದೆ ದಾಸಯ್ಯಇರುಳು ಹಗಲು ನಿನ್ನ ಕಾಣದೆ ಇರಲಾರೆಮರುಳು ಮಾಡುವಂಥ ದಾಸಯ್ಯ ೨
ಆದಿನಾರಾಯಣ ದಾಸಯ್ಯಮೋದದೊಂದು ಸಾಸಿರ ನಾಮದ ದಾಸಯ್ಯಮೇದಿನಿಯೊಳು ಪುಟ್ಟಿ ಗೋವ್ಗಳ ಕಾಯ್ದಆದಿಕೇಶವರಾಯ ದಾಸಯ್ಯ೩

ಸಂಸಾರ ಬಂಧನದಿಂದ ಜಿಗುಪ್ಸೆ ಹೊಂದಿ
೯೪
ಎಂತಹುದೊ ನಿನ್ನಯ ಭಕುತಿ ಎನಗೆ – ಶ್ರೀ-ಕಾಂತ ನಿನ್ನಯ ಒಲುಮೆಯಿಲ್ಲದ ಮೂಢಾತ್ಮನಿಗೆ ಪ
ಹಿಂದೆ ಮಾಡಿದ ಸುಕೃತ ಫಲವು ಮೊದಲಿನಿತಿಲ್ಲಇಂದು ಬಂದಡೆ ಒಳ್ಳೆ ಮತಿಯ ಕೊಡಲಿಲ್ಲಸಂದ ವಯಸನು ತಿಳಿದು ಕುಂದುತಿದೆ ಎನ್ನ ಮನ-ದಂಧಕಾರವ ಬಿಡಿಸಿ ಹೊಂದಿಸು ಜ್ಞಾನವನು ೧
ವೇದಶಾಸ್ತ್ರ ಶಬ್ದ ತರ್ಕ ಮೀಮಾಂಸೆಗಳಓದಿದವನಲ್ಲ ನಿನ್ನಯ ಭಕುತಿಗಧಿಕವಾದ ಇನ್ನೊಂದೇನನುಸುರುವೆನು ನಾ ಮುನ್ನ ಸಂ-ಪಾದಿಸುವ ಭಕುತಿ ಇನ್ನೆಂತಿಹುದೊ ದೇವ ೨
ಹುಟ್ಟಿದ ಮೊದಲುಗೊಂಡು ಇಂದು ಪರಿಯಂತರವುಭ್ರಷ್ಟನಾಗಿ ಪರರ ಸೇವೆಯಿಂದಿರುತಿಹೆನುಇಷ್ಟಲ್ಲದಿನ್ನೆನಗೆ ತೃಪ್ತಿ ಇನ್ನೆಂತಹುದೀಕಷ್ಟ ಶರೀರದೊಳು ತೊಳಲಲಾರೆನು ಹರಿಯೆ ೩
ನರಜನ್ಮವೆಂಬ ಪಾತಕದ ಪಂಜರದೊಳಗೆಸ್ಥಿರವೆಂಬೊ ಅಹಂಕೃತಿ ಜೀವನವ ನಿರ್ಮಿಸಿಎರವಿನ ಮಾತಾಪಿತರನುಜರೆಂಬಉರಿಕಾವು ಕ್ಷಯವೆಂಬ ಸರಿಗಳನು ವಂದಿಸುವೆನು ೪
ಇನಿತುಪರಿಯಲಿ ನಾನು ಹಲುಬಿದೊಡೆನೀನು ಸುಮ್ಮನಿದ್ದೊಡೆ ಬಹು ಅಪಕೀರ್ತಿಯುನಿನ್ನ ದಾಸಗೊಲಿದು ಸಲಿಸಯ್ಯ ಮನದಿಷ್ಟಕನಕಾದ್ರಿಯೊಳು ನೆಲಸಿದಾದಿಕೇಶವರಾಯ ೫

ಶ್ರೀ ಹರಿಯ ಪಾದ ಮಹಿಮೆಯ
೧೧
ಎಂಥ ಕೀರುತಿ ಪೊತ್ತುವೆರಡು ಪಾದ – ಶ್ರೀ-ಕಾಂತ ಬಾಡದ ರಂಗ ಕರುಣಿ ದೇವೋತ್ತುಂಗ ಪ
ಕುಬ್ಜ ಬ್ರಾಹ್ಮಣನಾಗಿ ಕುಂಭಿನಿ ಈರಡಿ ಮಾಡಿಹೆಜ್ಜೆಯೊಳಡಗಿಟ್ಟ ಹೆಚ್ಚಿನ ಪಾದಅರ್ಜುನನ ಶಿರವ ಕಾಯಲು ಬಾಣದಿಂದ ರಥವಗುಜ್ಜೆಯಲೂರಿ ನೆಲಕೊತ್ತಿದ ಪಾದ ೧
ಶಾಪದಿ ಬಹುಕಾಲ ಅಹಲ್ಯೆಯು ಶಿಲೆಯಾಗೆಆ ಪ್ರಾಣ ನಿರ್ಮಿಸಿದ ಅಧಿಕ ಪಾದಗೋಪಿ ಕಟ್ಟಿದ ಒರಳ ಗೊಲ್ಲಗೇರಿಗೆಳೆಯುತಆ ಫಣಿಯ ತಲೆಯ ಮೇಲಾಡಿದ ಪಾದ ೨
ಕುರುರಾಯನೇಳದೆಯೆ ಕುಳಿತ ಸಿಂಹಾಸನದಿಉರುಳಿಸಿಬಿಟ್ಟಂತ ಉನ್ನತ ಪಾದಮರಕತ ನಗರಿಯ ಬಾಡ ಬಂಕಾಪುರದರಸು ಸಿರಿಯಾದಿಕೇಶವನ ಶ್ರೀಪಾದ೩

ಜಾನಪದ ನೆಲೆಗಟ್ಟಿನಿಂದ
೨೧೪
ಎಂಥ ಟವಳಿಗಾರನಮ್ಮ ಪ
ನಂದ ಗೋಪ್ಯಮ್ಮ ಕೇಳೆ – ನಿನ್ನ ಮಗ ಎಂಥ ಟವಳಿಗಾರನಮ್ಮ ಅ
ಹಣವ ಕೊಟ್ಟೇನೆಂದುಗುಣದಿಂದ ಎನ್ನ ತಂದಹಣವ ಕೇಳಿದರಲ್ಲಿ – ಹಣವೆ ?ತಡೆಯಲಾರದ ತಲ್ಲಣವೆ ?ಕುದುರೆ ಮೇಲಿನ ಪಲ್ಲಣವೆ ?ಇಲ್ಲ, ಬಾಯಿಗಿಟ್ಟ ಬೊಕ್ಕಣವೆ ? – ಹೋಗೆನುತಾನೆ ೧
ಕೊಪ್ಪಾನೆ ಕೊಟ್ಟೇನೆಂದುಒಪ್ಪಿಸಿ ಎನ್ನ ತಂದಕೊಪ್ಪಾನ ಕೇಳಿದರಲ್ಲಿ – ಕೊಪ್ಪ ?ಊರಮುಂದಿನ ತಿಪ್ಪ ?ಕೇರಿಯೊಳಗಿನ ಕೆಪ್ಪ ?ಕೆರೆಯೊಳಗಿನ ಹುಳಿಸೊಪ್ಪ ? – ಹೋಗೆನುತಾನೆ೨
ಬಳೆಯ ಕೊಟ್ಟೇನೆಂದುಬಲು ಮಾತಿನಲಿ ತಂದಬಳೆಯ ಕೇಳಿದರಲ್ಲಿ – ಬಳೆಯೆ ?ಊರ ಮುಂದಿನ ಗಳೆಯೆ ?ಗದ್ದೆಯೊಳಗಿನ ಕಳೆಯೆ ?ಕೈಕಾಲ ಹಿಡಿದು ಸೆಳೆಯೆ ? – ಹೋಗೆನುತಾನೆ ೩
ವಾಲೆಯ ಕೊಟ್ಟೇನೆಂದುಒಲವಿನಿಂದ ತಂದವಾಲೆಯ ಕೇಳಿದರಲ್ಲಿ – ವಾಲೆ ?ಕನ್ನಡಿಯ ಕಪೋಲೆ ?ಹೇಳು ಸುವ್ವಿ ಸುವ್ವಾಲೆ ?ನಿನ್ನ ಕಾಲಿಗೆ ಸಂಕೋಲೆ ? – ಹೋಗೆನುತಾನೆ ೪
ಕಡಗವ ಕೊಟ್ಟೇನೆಂದುಸಡಗರದಿಂದ ತಂದಕಡಗ ಕೇಳಿದರಲ್ಲಿ – ಕಡಗ ?ಅಂಬರದ ಗುಡುಗ ?ಮುಂಗೈ ಮೇಲಿನ ಗಿಡುಗ ?ಎತ್ತಿನ ಮ್ಯಾಲಿನ ಧಡಗ ? – ಹೋಗೆನುತಾನೆ ೫
ಬುಗುಡಿಯ ಕೊಟ್ಟೇನೆಂದುರಗಡು ಕಿವಿಹಿಂಡಿ ತಂದಬುಗುಡಿ ಕೇಳಿದರಲ್ಲಿ – ಬುಗುಡಿ ?ಪಾಂಡವರಾಡಿದ ಪಗಡಿ ?ಮೂಗಿಂದ ಸುರಿವ ನೆಗಡಿ ?ಛಿ ! ನೀನೆಂಥ ಧಗಡಿ ? – ಹೋಗೆನುತಾನೆ ೬
ಆದಿಕೇಶವನ ಮೇಲೆಆಣೆಯಿಟ್ಟು ಕರೆತಂದಆಣಿ ಎಲ್ಲಹುದೆಂದು ತೋರ್ದಆನಂದದಿಂದಲಿ ಬೆರೆದಬೀದಿಗೆ ಬಂದು ಕರೆದಹೀಂಗೆ ಧರೆಯೊಳು ಮೆರೆದ – ಶ್ರೀ ಕೃಷ್ಣರಾಯ ೭

‘ಕೊಂಪೆಯ’ ರೂಪಕದಲ್ಲಿ
೯೫
ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ ಪ
ಮುಂದರಿತು ಶ್ರೀಹರಿಯ ಭಜಿಸುವುದು ಲೇಸುಅ
ಎಲುವುಗಳು ತೊಲೆಜಂತೆ ನರಗಳವು ಬಿಗಿದಂತೆಬಲಿದ ಚರ್ಮವು ಮೇಲು ಹೊದಿಕೆಯಂತೆಗಳಗಳನೆ ನುಡಿವ ನಾಲಗೆ ಗಂಟೆಯುಲಿಯಂತೆಕೆಲಕಾಲಕೀ ಕೊಂಪೆ ಕಡೆಗಾಹುದಂತೆ ೧
ಕಂಡಿಗಳು ಒಂಬತ್ತು ಕಳಬಂಟರೈವರುಅಂಡಲೆವುದೊತ್ತಿನಲಿ ಷಡುವರ್ಗವುಮಂಡಲಕೆ ಹೊಸಪರಿಯ ಮನ್ಮಥನ ಠಾಣ್ಯವಿದುಮಂಡೆ ಹೋಗುವುದನ್ನು ಅರಿಯದೀ ಕೊಂಪೆ೨
ಕೊಂಪೆಯಲಿ ಶೃಂಗಾರ ಕೊಂಡಾಡಲಳವಲ್ಲಕೆಂಪು ಬಣ್ಣಗಳಿಂದ ಚೆನ್ನಾಯಿತುಇಂಪಿನಲಿ ಕಾಗಿನೆಲೆಯಾದಿಕೇಶವನನ್ನುಸೊಂಪಿನಲಿ ನೆನೆನೆನೆದು ಸುಖಿಯಾಗು ಮನುಜಾ ೩

ಸೀತೆ ಹನುಮಂತರ ಮಧ್ಯೆ ಜರುಗಿದ ಸಂವಾದ
೪೧
ಎನ್ನ ಕಂದ ಹಳ್ಳಿಯ ಹನುಮ ಪ
ಚೆನ್ನಾಗೈದಾರ ಲಕ್ಷ್ಮಣ ದೇವರು ಅ
ತುಪ್ಪ ಪಂಚಾಮೃತವಂದು ಅಡವಿಗಡ್ಡೆಗಳಿಂದುಕರ್ಪೂರ ವೀಳ್ಯವಂದು ಕುರುಕು ಇಂದುಸುಪ್ಪತ್ತಿಗೆ ಮಂಚವಂದು ಹುಲ್ಲು ಹಾಸಿಗೆಯಿಂದುಶ್ರೀಪತಿ ರಾಘವ ಕ್ಷೇಮದಲೈದಾರೆ೧
ನವ ವಸ್ತ್ರಗಳು ಅಂದು ನಾರಸೀರೆಗಳಿಂದುಹೂವಿನ ಗಂಟು ಅಂದು ಜಡೆಗಳಿಂದುಜವ್ವಾಜಿ ಕತ್ತುರಿಯಂದು ಭಸಿತ ಧೂಳಿಂದುಶ್ರೀವರ ರಾಘವ ಕ್ಷೇಮದಲೈದಾರೆ೨
ಕನಕ ರಥಗಳಂದು ಕಾಲುನಡಿಗೆಯಿಂದುಘನ ಛತ್ರ ಚಾಮರವಂದು ಬಿಸಿಲು ಇಂದುಸನಕಾದಿಗಳೋಲೈಪ ಆದಿಕೇಶವ ನಮ್ಮಹನುಮೇಶ ರಾಘವ ಕ್ಷೇಮದಲೈದಾರೆ ೩

ಅನುಭವ ಸತ್ಯಗಳನ್ನು
೧೭೪
ಎನ್ನ ನುಡಿ ಪುಸಿಯಲ್ಲ ಈ ಜಗದೊಳು ಪ
ಅರವಿಂದವಿಲ್ಲದಿಹ ಕೊಳವು ತಾ ಕಂಗಳವುಹರಿಣಾಂಕನಿಲ್ಲದಿಹ ಇರುಳು ಮರುಳುಸ್ವರಭೇದವಿಲ್ಲದಿಹ ಸಂಗೀತವಿಂಗೀತಸರಸವಿಲ್ಲದಿಹ ಸತಿಯ ಭೋಗ ತನುರೋಗ ೧
ಪಂಥ ಪಾಡುಗಳನರಿಯದ ಬಂಟನವ ತುಂಟಅಂತರವರಿಯದಾ ವೇಶಿ ಹೇಸಿದಂತಿಯಿಲ್ಲದ ಅರಸು ಮುರಿದ ಕಾಲಿನ ಗೊರಸುಅಂತಸ್ಥವಿಲ್ಲದ ಪ್ರಧಾನಿ ಮದ್ಯಪಾನಿ೨
ಮಾಗಿಯಲಿ ಸತಿಯನಗಲಿದ ಕಾಂತನವ ಭ್ರಾಂತಪೂಗಣೆಯ ಗೆಲಿಯದಿಹ ನರ ಗೋಖುರಭೋಗಿಸದೆ ಇಹಪರಕೆ ಗಳಿಸಿದರ್ಥ ಅಪಾರ್ಥಕಾಗಿನೆಲೆಯಾದಿಕೇಶವನ ಭಕ್ತ ಮುಕ್ತ ೩

ಈ ಕೀರ್ತನೆಯಲ್ಲಿ ಹೊಟ್ಟೆ ಬಟ್ಟೆಯ ಸಮಸ್ಯಾ
೧೭೫
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿಪ
ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೧
ಚಂಡಭಟರಾಗಿ ನಡೆದು ಕತ್ತಿ ಢಾಲು ಕೈಲಿ ಹಿಡಿದುಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೨
ಅಂಗಡಿ ಮುಂಗಟ್ಟನ್ಹೂಡಿ ವ್ಯಂಗ್ಯ ಮಾತುಗಳನ್ನಾಡಿಭಂಗ ಬಿದ್ದು ಗಳಿಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೩
ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮನು ಮಾಡಿರೆಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೪
ಬೆಲ್ಲದಂತೆ ಮಾತಾನಾಡಿ ಎಲ್ಲರನ್ನು ಮರುಳು ಮಾಡಿಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೫
ಕೊಟ್ಟಣವನು ಕುಟ್ಟಿಕೊಂಡು ಕಟ್ಟಿಗೆಯನು ಹೊತ್ತುಕೊಂಡುಕಷ್ಟ ಮಾಡಿ ಉಣ್ಣುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೬
ತಾಳ ದಂಡಿಗೆ ಶ್ರುತಿ ಮೇಳ ತಂಬೂರಿಯ ಹಿಡಿದುಕೊಂಡುಸೂಳೆಯಂತೆ ಕುಣಿಯುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೭
ಸಂನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿನಾನಾ ವೇಷಗಳೆಲ್ಲ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೮
ಹಳ್ಳದಲ್ಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡುಕಳ್ಳತನವ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೯
ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿಚಂದದಿಂದ ಮೆರೆಯುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ೧೦
ಉನ್ನತ ಕಾಗಿನೆಲೆಯಾದಿಕೇಶವನಾ ಧ್ಯಾನವನ್ನುಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕಾಗಿ ೧೧

ಈ ಕೀರ್ತನೆಯಲ್ಲಿ ಸರ್ವಾಂತರ್ಯಾಮಿಯಾದ

ಎಲ್ಲಿ ನೋಡಿದರಲ್ಲಿ ರಾಮ – ಇದ ಪ
ಬಲ್ಲ ಜಾಣರ ದೇಹದೊಳಗೆ ನೋಡಣ್ಣ ಅ
ಕಣ್ಣೇ ಕಾಮನ ಬೀಜ – ಈಕಣ್ಣಿಂದಲೆ ನೋಡು ಮೋಕ್ಷ ಸಾಮ್ರಾಜ್ಯಕಣ್ಣಿನ ಮೂರುತಿ ಬಿಗಿದು – ಒಳಗಣ್ಣಿಂದಲೇ ದೇವರ ನೋಡಣ್ಣ ೧
ಮೂಗೇ ಶ್ವಾಸ ನಿಶ್ವಾಸ – ಈಮೂಗಿಂದಲೇ ಕಾಣೊ ಯೋಗ ಸಂನ್ಯಾಸಮೂಗನಾದರೆ ವಿಶೇಷ – ಒಳಮೂಗಲಿ ನೋಡಣ್ಣ ಲೀಲಾವಿಲಾಸ ೨
ಕಿವಿಯೇ ಕರ್ಮಕೆ ದ್ವಾರ – ಈಕಿವಿಯಿಂದಲೇ ಕೇಳೋ ಮೋಕ್ಷದ ಸಾರಕಿವಿಯೇ ಕರ್ಮ ಕುಠಾರ – ಒಳಗಿವಿಯಲ್ಲಿ ಕಾಣೊ ನಾದದ ಬೇರ ೩
ಬೊಮ್ಮ ಮಾಡಿದ ತನುಬಿಟ್ಟು – ವಿಶ್ವಕರ್ಮನು ಮಾಡಿದ ಬೊಂಬೆಯನಿಟ್ಟುಸುಮ್ಮನೆ ಕೂಗುಗಳಿಟ್ಟು – ಅದನಂಬುವನೆಂಬೋನು ಹೋಹ ಕಂಗೆಟ್ಟು೪
ರೂಢಿಯೊಳಗೆ ಶುದ್ಧ ಮೂಢ – ಈಕಾಡುಕಲ್ಲುಗಳನ್ನು ನಂಬಬೇಡನಾಡಾಡಿ ದೈವಗಳನೆಲ್ಲ – ನಮ್ಮಬಡದಾದಿ ಕೇಶವನೊಬ್ಬನೆ ಬಲ್ಲ ೫

ಬಂದದ್ದು ಎಲ್ಲಿಂದ,
೯೧
ಎಲ್ಲಿಂದ ಬಂದೆ ಮುಂದೆತ್ತ ಪಯಣಇಲ್ಲಿ ನಿನಗೆಷ್ಟು ದಿನವಾಲಸ್ಯ ಮರುಳೆ ಪ
ಮಾತೆಯುದರದೊಳು ನವಮಾಸ ಮಲಮೂತ್ರದೊಳುಯಾತನೆಯ ಯೋನಿ ಮುಖ ಮಾರ್ಗವಿಡಿದುಭೂತಳಕೆ ಬಂದ ಹದನೇನ ತೀರಿಸಿಕೊಂಡೆಜಾತಿ ಯಾವುದು ನಿನ್ನ ಹೆಸರೇನು ಮರುಳೆ೧
ಮುಂದಾವ ಪಥವ ಸೇರುವೆ ಮರುಳೆ, ಸಾಕಿನ್ನುಹಿಂದೆ ನೆರವಾಗಿ ನಿಂತಾಪ್ತರುಂಟೆಒಂದುಗೂಡಿದ ಪತ್ನಿ ಸುತರೆಲ್ಲ ವರ್ಜಿಪರುನಿಂದು ಮಾತಾಡು ಬರಿದೆ ಬಳಲಿದೆ ಮರುಳೆ ೨
ಬರವಿದೇತಕೆ ನಿನ್ನ ಸ್ಥಳವೆಲ್ಲಿ ನೆಲೆಗೊಂಡುಇರುವ ಮಂದಿರವಾವುದದನೆನಗೆ ಪೇಳೊಧರೆಯೊಳಗೆ ವರಕಾಗಿನೆಲೆಯಾದಿಕೇಶವನಸಿರಿ ಚರಣಕಮಲವನು ನೆರೆನಂಬಿ ಸುಖಿಸೊ೩

ಸರ್ವಾಂತರ್ಯಾಮಿಯಾದ ಪರಮಾತ್ಮ
೧೦
ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ ಪ
ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನುಅ
ತರಳ ಪ್ರಹ್ಲಾದ ಹರಿ ವಿಶ್ವಮಯನೆಂದುಬರೆದೋದಲವನ ಪಿತ ಕೋಪದಿಂದಸ್ಥಿರವಾದಡೀ ಕಂಬದಲಿ ತೋರು ತೋರೆನಲುಭರದಿಂದ ಬರಲದಕೆ ವೈಕುಂಠ ನೆರೆಮನೆಯೇ೧
ಪಾಪ ಕರ್ಮವ ಮಾಡಿದಜಮಿಳನ ಯಮಭಟರುಕೋಪದಿಂದೆಳೆಯುತಿರೆ ಭೀತಿಯಿಂದತಾ ಪುತ್ರನನು ಕರೆಯೆ ಕೇಳಿ ರಕ್ಷಿಸೆ ಶ್ವೇತದ್ವೀಪವೀ ಧರೆಗೆ ಸನಿಹದಲ್ಲಿಹುದೆ ೨
ಕರಿರಾಜನನು ನೆಗಳು ನುಂಗುತಿರೆ ಭಯದಿಂದಮೊರೆಯಿಡಲು ಕೇಳಿ ತ್ವರಿತದಲಿ ಬಂದುಕರುಣದಲಿ ಬಂಧನವ ಪರಿಹರಿಸೆ ಗಜರಾಜನಿರುವ ಸರಸಿಯು ಅನಂತಾಸನಕೆ ಮುಮ್ಮನೆಯೆ ೩
ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆತರುಣಿ ಹಾ ಕೃಷ್ಣ ಎಂದೊದರೆ ಕೇಳ್ದುಭರದಿಂದ ಅಕ್ಷಯಾಂಬರವೀಯೆ ಹಸ್ತಿನಾಪುರಿಗೆ ದ್ವಾರಾವತಿಯು ಕೂಗಳತೆಯೆ ೪
ಅಣು ಮಹತ್ತಿನೊಳೆಲ್ಲ ಪರಿಪೂರ್ಣ ವಿಶ್ವಮಯಗಣನೆಯಿಲ್ಲದ ಮಹಾಮಹಿಮನೆನಿಪಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನುನೆನೆದವರ ಮನದೊಳಿಹನೆಂಬ ಬಿರುದುಂಟಾಗಿ೫

ಕ್ಷೇತ್ರ ಸಂದರ್ಶನ ಕಾಲದಲ್ಲಿ
೪೨
ಎಷ್ಟು ಪೊಗಳಲಿ ನಾನು ಎನ್ನೊಡೆಯ ನಿಮ್ಮ ವಿ- ಶಿಷ್ಟ ಮಹಿಮೆಗಳನು ಸುಜನರಿಗೆ ಬಂದ ಕಷ್ಟವಳಿಯಲ್ಕೆ ನೀ ಸುರಕಾಮಧೇನು ಪ
ವಿಷ್ಣುವೆ ಪರಮದೈವವೆಂದು ದುಷ್ಟ ರಾಕ್ಷಸರ ಕೊಂದೆ ಸೃಷ್ಟಿಸಿ ಪಾಲಿಪ ಶ್ರೀರಾಮರ ಇಷ್ಟ ಭಕ್ತರೊಳು ಶ್ರೇಷ್ಠನೆಂದೆನಿಸಿದೆ ಅ
ತಾಯಿಯಪ್ಪಣೆಗೊಂಡು ಸೇವೆಗೆ ರಘುಪತಿ ರಾಯನಲ್ಲಿ ನಿಂದು ತನ್ನಾತ್ಮ ಸುಖ ಬಯಸೆನೆಂದು ಶ್ರೀ ಹರಿಗೆ ನುಡಿದುಕಾಯಬೇಕು ಸುಗ್ರೀವನನೆನುತಲಿ ತೋಯಜಾಕ್ಷಗೆ ಪೇಳಿ ವಾಲಿಯನು ಪಾಯದಿಂದಲಿ ಕೊಲ್ಲಿಸಿ ರವಿಜಗೆ ಸ- ಹಾಯ ಮಾಡಿದೆ ವಾಯುತನಯ೧
ಕಡಲ ಬೇಗನೆ ಹಾರಿ ಶ್ರೀರಾಮರ ಮಡದಿಗುಂಗುರವ ಕೊಟ್ಟು ಅಲ್ಲಿದ್ದ ದನುಜರ ಹೊಡೆದು ಬಲು ಹಂತಕಾರಿ ಮಾಡಿದೆ ಶೌರಿ ಒಡೆಯಗೆ ವಾರ್ತೆಯ ಪೇಳಿ ಶೀಘ್ರದಿ ನಡೆಸಿ ಸೈನ್ಯವ ದಶಮುಖನ ಶಿರವ ನೊಡಿಸಿದಾಕ್ಷಣ ಲೋಕಮಾತೆಯ ನೊಡಗೂಡಿಸಿದೆ ಶ್ರೀವಾಸುದೇವರಿಗೆ ೨
ಮೂರು ರೂಪವ ತಾಳಿ ಮಹಾಯೋಗ್ಯರುಗಳಿಗೆ ಸಾರ ತತ್ತ್ವವ ಪೇಳ್ದೆ ಶರಣು ಹೊಕ್ಕ ಮನುಜರ ಘೋರ ದುರಿತವ ಸೀಳ್ದೆ ಧೀರ ತನು ಧುರದುಂಡಿ ಹನುಮಯ್ಯರಿಂ ಸೇವಿಸಿದ ನಿಮ್ಮಂಘ್ರಿ ಕಮಲವದೂರ ಮಾಡದೆ ಎನ್ನ ಸಲಹಯ್ಯ ಕರುಣಾವಾರಿಧಿ ಕಾಗಿನೆಲೆಯಾದಿಕೇಶವ ಮುತ್ತತ್ತಿ ದೊರೆಯೆ೩

ಬಿಡಬೇಕೆಂದರೂ ಬಿಡಲಾಗದ
೯೨
ಎಷ್ಟು ಪ್ರೀತಿಯೊ ಮನಕೆ ಎಷ್ಟು ಪ್ರೀತಿಯೊ ಪ
ಇಷ್ಟವೆಂದು ತಿಳಿದು ಈ ಕಷ್ಟ ಸಂಸಾರ ಹೊರುವುದು ಅ
ಹಸಿವು ತೃಷೆಯು ಶೋಕ ಮೋಹ ಅಸುವಗೊಂಬ ಜನನ ಮರಣವಿಷ ಸಮಾನವಾದ ಬಹಳ ವ್ಯಸನ ಮೆರವಣಿಮುಸುಕಿ ಕವಿವ ವ್ಯಾಘ್ರದಂತೆ ಅಡಗಿ ಮುಪ್ಪುಗೊಂಬ ರೋಗವಿಷಯದೊಳಗೆ ಕ್ಲೇಶಪಟ್ಟು ವಿಷಯದಿಚ್ಛೆ ಬಿಡದ ಮನಕೆ ೧
ನೀರಗುಳ್ಳೆ ಎನಿಪ ಕಣ್ಣ ನೀರಜಾಕ್ಷಿ ಎಂದು ಮತ್ತೆಸೋರುವ ಜಘನ ಕರಿಯ ಕುಂಭ ಸುರಿವ ಶ್ಲೇಷ್ಮದಮೋರೆ ಚಂದ್ರಬಿಂಬ, ಮಾಂಸವಿಕಾರವಾದ ಕುಚವ ಕನಕಕಲಶಸಾರವೆಂದು ನರಕರೂಪಿನ ನಾರಿಯರಿಗೆ ಭ್ರಮಿಸಿ ಬಾಳ್ವುದು೨
ಅಸ್ಥಿ ಚರ್ಮ ರಕ್ತ ಮಾಂಸ ವಿಸ್ತರವಾದ ಹೇಯ ಮಧ್ಯಮೆವಸ್ತು ಏರುತಿಳಿಯುತುದಯ ಅಸ್ತಮಾನದಿರಕ್ತ ಕುಸುಮ ಗಂಧಮಾಲೆ ಕಸ್ತೂರಿಯನು ಪೂಸಿಕೊಂಡುವಸ್ತ್ರ ಒಡವೆ ಇಟ್ಟು ಬಹಳ ಶಿಸ್ತು ನರಕಿಯೆನಿಸಿ ಮೆರೆವುದು೩
ಬೇಯದಿರುವ ಹಸಿಯ ಬಿಂದಿಗೆ ತೋಯ ಹಿಂಗುವಂತೆ ಸಾಕ್ಷಿ ಆಯುಷ್ಯವನರಿಯದಿರುವ ಕಾಯ ಸೌಖ್ಯದಿಆಯಾಸಪಟ್ಟು ಗಳಿಸಿದರ್ಥ ಹೇಯವೆನದೆ ಭೋಗಿಸುತ್ತಬಾಯ ಸವಿಯನುಂಡು ಕಡೆಗೆ ನಾಯ ಸಾವು ಸಾಯೋ ಬಾಳಿಗೆ ೪
ಮನ್ನಿಸಿ ಗುರುಹಿರಿಯರುಕ್ತಿಯನ್ನು ಕೇಳದೆ ಕಿವುಡುಗೆಟ್ಟುಜೊನ್ನೆಯ ತುಪ್ಪ ಅನ್ನ ಒಲ್ಲದೆ ಎಲುವು ಮಾಂಸವನ್ನು ತಿಂಬಕುನ್ನಿಯಾದೆನಯ್ಯ ಕೃಷ್ಣ ನಿನ್ನ ಮಾಯದೊಳು ಸಿಲ್ಕಿದಎನ್ನನುದ್ಧರಿಸೊ ಸುಪ್ರಸನ್ನ ಆದಿಕೇಶವ೫

ವಿಧಿಯನ್ನು ಮೀರಲಾಗುವುದಿಲ್ಲ
೨೪೭
ಎಷ್ಟು ಮರುಗಿದರು ನಿನ್ನ ಹಣೆಯ ಬರೆಹಾಷ್ಟಲ್ಲದಿಲ್ಲ ಸ್ತುತಿ ವಚನದ ಫಲ ಕಂದ ಪ
ಅಂಬರದೊಳಾಡುವ ಪಕ್ಷಿ ತನ್ನ ವಶವಹುದೇಉಂಬುವರ ಕರುಬಿದಡೆ ಉದರ ತುಂಬುವುದೇಕಂಬಳಿಯ ಕೊಡಲು ಕನಕಾಂಬರ ತನಗಹುದೆಹಂಬಲಿಸಿ ಹಲವ ಹಲುಬಿದಡೆ ಸಿರಿ ಬಹುದೆ ೧
ಇಲ್ಲದುದ ಬಯಸಿ ಬೇಡಿದೊಡೆ ಭಂಗಬಹುದೊಬಲ್ಲೆನೆಂದೊಡೆ ಮಣಿಸದೆ ಬಿಡಳು ವಿಧಿಯುಬಲ್ಲಿದನು ಬಡವನಿವನೆಂದು ನೋಡರು ಸಿರಿವಲ್ಲಭನ ಮಗಳ ಮೀರುವರಾರು ಕಡೆಗೆ ೨
ಸಿರಿಗೆ ಹಿಗ್ಗದೆ ಬಡತನಕೆ ಬೆಂಡಾಗದಿರುಸೇರಿದ ನೆಲೆಯಲಾ ಸುಖ ಸಾವ ಕಾಲದಲಿಶರಣ ಜನಾಶ್ರಿತ ನೆಲೆಯಾದಿಕೇಶವನಚರಣ ಕಮಲವ ಭಜಿಸಿ ಸುಖಿಯಾಗು ಮನವೆ ೩

ಅನನ್ಯ ಭಕ್ತಿ ರಹಿತವಾದ ಯಾಂತ್ರಿಕ
೯೩
ಎಳ್ಳು ಕಾಳಿನಷ್ಟು ಭಕ್ತಿ ಎನ್ನೊಳಗಿಲ್ಲ ಪ
ಕಳ್ಳರಿಗೆ ಕಳ್ಳನಂತೆ – ಬೆಳ್ಳಕ್ಕಿಯಂದದಿ ಡಂಭಅ
ಗಾಣದೆತ್ತಿನಂತೆ ಕಣ್ಣಮುಚ್ಚಿ ಪ್ರದಕ್ಷಿಣೆಯ ಮಾಡಿಕಾಣದೆ ತಿರುಗುವೆನೆರಡು ಕಣ್ಣಿದ್ದು ನಾನುಮಾಣಿಕ್ಯದ ರಾಶಿಯಲ್ಲಿ ಅಂಧಕರೈವರು ಕೂಡಿಆಣಿಮುತ್ತ ಹಿಡಿದು ಹಿಡಿದು ಬಿಡುವ ಭ್ರಮಿತನಯ್ಯ೧
ಗುಂಡು ಮುಳುಗನ ಹಕ್ಕಿಯಂತೆ ಕಂಡ ಕಂಡ ನೀರ ಮುಳುಗಿಮಂಡೆ ಶೂಲೆ ಬಾಹೋದಲ್ಲದೆ ಗತಿಯ ಕಾಣೆನೊಮಂಡೂಕನಂದದಲಿ ನೀರ ತಡಿಯಲಿ ಕುಳಿತುಕೊಂಡುಮುಂಡೆ ಮುಸುಕನಿಕ್ಕಿ ಮೂಗು ಹಿಡಿದು ಬಿಡುವ ಭ್ರಮಿತನಯ್ಯಾ ೨
ಇಕ್ಕುಳದ ಕೈಯಲ್ಲಿ ಹಿಡಿದ ಕಾದ ಕಬ್ಬಿಣದಂತೆಸಿಕ್ಕಿ ಸಿಡಿಮಿಡಿಗೊಂಬೆ ಗತಿಯ ಕಾಣದೆಹೊಕ್ಕುಳ ಹೂವಿನ ಬಾಡದಾದಿಕೇಶವನ ಮೊರೆಹೊಕ್ಕೆನಿಂದು ಮನ್ನಿಸಿ ಕಾಯೋ ದೇವದೇವೋತ್ತಮನೆ ೩

ಎಲ್ಲವನ್ನೂ ತೊರೆದು ಒಂಟಿಯಾಗಿ
೯೬
ಏಕೆ ದಯವಿನಿತಿಲ್ಲ ಲೋಕಪಾವನ ಮೂರ್ತಿ ಪ
ಬೇಕೆಂದು ನಿನ್ನ ಪಾದ ನಂಬಿದ ದಾಸನ ಮೇಲೆ ಅ
ಎಡರಿಗಾಗುವರಿಲ್ಲ ಕಡನ ನಂಬುವರಿಲ್ಲಬಡವನೆಂದು ವಸ್ತ್ರವ ಕೊಡುವರಿಲ್ಲದೃಢದೊಳಿದ್ದರು ಬವಣೆ ಬಂದೊಡನೆ ಕಾಡುವುವುಒಡೆಯ ಕಂಡೂ ಕಾಣದಿರುವುದುಚಿತವಲ್ಲ೧
ಮೊರೆಯ ಕೇಳುವರಿಲ್ಲ ಸಿರಿವಂತ ನಾನಲ್ಲಪರಮಾತ್ಮ ನಿನ್ನೊಳಗೆ ನಾನರಿತಿಲ್ಲಬೆರೆತುಕೊಂಡಿರಲು ಸಜ್ಜನರ ಗೆಳೆತನವಿಲ್ಲಪರಮಹಂಸನೆ ಹರಿಸೊ ಇಂಥ ಕೊರತೆಗಳೆಲ್ಲ ೨
ನೀಲವರ್ಣದ ಲೋಲ ಕಾಲನವರಿಗೆ ಶೂಲಬಾಲ್ಯದಿ ಯಶೋದೆಯ ಹಾಲ ಸವಿದ ಗೋಪಾಲನಾಲಗೆಗೆ ನಿನ್ನ ವಿಶಾಲ ಅಷ್ಟಾಕ್ಷರಿಯನಿತ್ತುಪಾಲಿಸೋ ಶ್ರೀ ಕಾಗಿನೆಲೆಯಾದಿಕೇಶವನೆ೩

ಭೂಕಂಪವನ್ನು ವಸ್ತುವನ್ನಾಗಿ ಮಾಡಿಕೊಂಡು
೧೭೬
ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು – ಜಗ ಪ
ದೇಕ ಪೊಡವಿಗೊಡೆಯನ ರಾಣಿ ಪರಮ ಕಲ್ಯಾಣಿ ಅ
ಗುರು ಹಿರಿಯರನು ಕಂಡು ಮುರುಕಿಸುವ ಮೋರೆಯಲಿಅರೆಮತಿಯ ಕೊಂಕು ಮಾತುಗಳನಾಡಿಚರಣಕೆರಗದ ಮನುಜರಿರಬಾರದೆಂದೆನುತಮರಮುರಿದು ಒರಗಿ ಸಾಯಲಿ ಎಂದು ನಡುಗಿದೆಯ೧
ಉತ್ತಮರ ಹೊಟ್ಟೆಯಲಿ ಬಗಳೊ ಶ್ವಾನವು ಹುಟ್ಟಿಹೆತ್ತವರ ನಿರ್ಬಂಧಕೊಳಗು ಮಾಡಿಅತ್ತೆ ಮಾವರ ಕೀರ್ತಿಯ ಕೊಂಡಾಡುವಧಮರಹೊತ್ತು ಇರಲಾರೆನೆನುತ ಮತ್ತೆ ನಡುಗಿದೆಯ೨
ಕಳ್ಳತನವನು ಕಲಿತು ಕಾಲೋಚಿತವ ಕೇಳ್ದುಸುಳ್ಳು ಮಾತುಗಳಾಡಿ ಒಡಲ ಪೊರೆದುಕೊಳ್ಳಿ ದೆವ್ವಗಳಂತೆ ಅಲೆದಾಡುತಿರುವಂಥಸುಳ್ಳು ಮನುಜರ ಹೊರಲಾರೆನೆಂದು ನಡುಗಿದೆಯ ೩
ಕಲಿಯುಗದಿ ಮುರಹರನ ಸ್ಮರಣೆಯನು ಮಾಡದೆಯೆಸಲೆ ಭಕ್ತಿಯಿಂ ವೇದಶಾಸ್ತ್ರವನೋದದೆಲಲನೆಯರ ಮೇಲೆ ಕಣ್ಣಿಡುವ ಹೊಲೆಯರನು ನಾ-ನೊಲಿದು ಹೊರಲಾರೆನೆಂದು ನಡುಗಿದೆಯ ೪
ಧರೆಯೊಳಗೆ ಕರ್ಮಿಗಳು ಹೆಚ್ಚಿ ಕವಿತ್ವವ ಕಲಿತುನರಕುರಿಗಳೆಲ್ಲರು ನಡೆಗೆಟ್ಟರೆಂದುಗುರುವೆ ಕೇಳಯ್ಯ ಕನಕ ಪ್ರಿಯ ತಿರುಪತಿಯಗಿರಿಯಾದಿಕೇಶವನೆ ಒಲಿದು ನಿಲ್ಲಿಸಿದ ೫

ಸಾಧಕನಿಗೆ ಎದುರಾಗುವ ಅಡ್ಡಿ
೯೭
ಏನಿದೆತ್ತಣ ಬಯಕೆ ಎಲೊ ಮಂಕು ಜೀವನೀನು ಅರಿತರೆ ಪೇಳು ನಿಜವನೆನಗೆ ಪ
ಎಂಟೆರಡು ಮಾರುತರು ಎಡೆಎಡೆಗೆ ಬರುತಿರಲುನಂಟರೈವರು ಕೂಡಿ ಆಕ್ರಮಿಸುತಿಹರುದಾಂಟುವುದು ಅಸದಳವೊ ಎರಡೊಂದು ಬಲೆಗಳಲಿಕಂಟಕದಿ ಬಲು ತಾಪದಿಂದ ಬಳಲುವರು ೧
ಆರೆರಡು ದಂತಿಗಳು ದಾರಿಯೊಳು ನಿಂತಿಹವುಆರು ಮೂರು ತುರುಗಗಳು ದಾರಿಯನು ಕೊಡವುಮೂರೆರಡನೀಡಾಡಿ ತೋರುವುದು ಎನ್ನಾಣೆಸಾರಿ ಏನೇನಹುದು ಎಂಬುದನು ನೋಡು ೨
ಪರರನು ನಿಂದಿಸದೆ ಪರಯೋಗ್ಯ ನೀನಾಗಿಪರರ ಪಾಪಗಳ ನೀ ಕಟ್ಟಿಕೊಳದೆಪರಮಾತ್ಮ ಕಾಗಿನೆಲೆಯಾದಿಕೇಶವರಾಯಪರಹಿತಕೆ ಸಖನೆಂದು ಭಜಿಸೆಲೊ ಮನುಜ ೩

ಅನಿತ್ಯವಾದ ಜೀವನದಲ್ಲಿ
೧೭೭*
ಏನು ಇಲ್ಲದ ಎರಡು ದಿನದ ಸಂಸಾರಜ್ಞಾನದಲಿ ದಾನಧರ್ಮವ ಮಾಡಿರಯ್ಯ ಪ
ಹಸಿದು ಬಂದವರಿಗೆ ಅಶನವೀಯಲು ಬೇಕುಶಿಶುವಿಗೆ ಪಾಲ್ಬೆಣ್ಣೆಯನುಣಿಸಬೇಕುಹಸನಾದ ಭೂಮಿಯನು ಧಾರೆಯೆರೆಯಲು ಬೇಕುಪುಸಿಯಾಡದಲೆ ಭಾಷೆ ನಡೆಸಲೇ ಬೇಕು೧
ಕಳ್ಳತನಗಳ ಮಾಡಿ ಒಡಲ ಹೊರೆಯಲು ಬೇಡಕುಳ್ಳಿರ್ದ ಸಭೆಯೊಳಗೆ ಕುತ್ಸಿತವು ಬೇಡಒಳ್ಳೆಯವ ನಾನೆಂದು ಬಲು ಹೆಮ್ಮೆಪಡಬೇಡಬಾಳ್ವೆ ಸ್ಥಿರವೆಂದು ನೀ ನಂಬಿ ಕೆಡಬೇಡ ೨
ದೊರೆತನವು ಬಂದಾಗ ಕೆಟ್ಟುದ ನುಡಿಯಬೇಡಸಿರಿ ಬಂದ ಕಾಲಕ್ಕೆ ಬಲು ಮೆರೆಯಬೇಡಸಿರಿವಂತ ಶ್ರೀ ಕಾಗಿನೆಲೆಯಾದಿಕೇಶವನಚರಣ ಕಮಲವ ಸೇರಿ ಸುಖಿಯಾಗು ಮನುಜ ೩
* ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.

ಕನಕದಾಸರು ಅಹೋಬಲದ
೨೨೯
ಏನು ಕಾರಣ ಬಾಯಿ ತೆರೆದಿ – ಪೇಳೆಲೊದಾನವಾಂತಕ ಅಹೋಬಲ ನಾರಸಿಂಹನೆ ಪ
ನಿಗಮ ಚೋರನ ಕೊಲಲು ತೆರೆದೆಯೋ ಈ ಬಾಯನಗವ ಬೆನ್ನಲಿ ಹೊತ್ತು ನಡುಗಿ ತೆರೆದೆಯೋ ಬಾಯ ಭೂ-ಮಿಗಳ್ಳನ ಕೊಂದು ಬಳಲಿ ತೆರೆದೆಯೋ ಬಾಯಜಗವರಿಯೆ ಪೇರುರವಿರಿದ ಪ್ರಹ್ಲಾದವರದಅಹೋಬಲ ನಾರಸಿಂಹನೆ೧
ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯಮರೆತು ಮಾವನ ಕೊಂದು ನಿಂದೆ – ಇಂಥಇಳಿಯ ಬಾರದ ಭೂಮಿಗಿಳಿದ ನಾರಸಿಂಹ೨
ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ ಬಾಯಏರಿ ಅಶ್ವವ ಮೆಟ್ಟಿ ಅಳಲಿ ತೆರೆದೆಯೊ ಬಾಯಮಾರಪಿತ ಕಾಗಿನೆಲೆಯಾದಿಕೇಶವ ರಂಗಧೀರ ಶ್ರೀನಾಥ ಭವನಾಶ ಪೇಳೋ ಪೇಳುಏತಕೆ ಅಹೋಬಲ ನಾರಸಿಂಹನೆ ೩

ಮನುಷ್ಯ ಸಂಪಾದಿಸುವ
೯೮
ಏನು ಬರುವುದೊ ಸಂಗಡೇನು ಬರುವುದೊ ಪ
ದಾನ ಧರ್ಮ ಮಾಡಿ ಬಹು ನಿಧಾನಿ ಎನಿಸಿಕೊಳ್ಳೊ ಮನುಜಅ
ಹೆಂಡರಿಲ್ಲ ಮಕ್ಕಳಿಲ್ಲ ಮಂಡೆ ತುಂಬ ಬಂಧುಬಳಗಕಂಡು ಬಿಡಿಸಿಕೊಂಬರಾರೊ ದುಂಡ ಯಮನ ದೂತರೆಳೆಯೆಬಂಡಿ ತುಂಬ ಇದ್ದ ಧನವು ಹಿಂದೆ ಉಳಿವುದಲ್ಲೊ ನಿನ್ನಅಂಡಿಕೊಂಡು ಬರುವ ವಸ್ತು ಕೀರ್ತಿ ಅಪಕೀರ್ತಿ ಎರಡೆ೧
ಎನ್ನದೆಂದು ತನ್ನದೆಂದು ಹೊನ್ನು ಹೆಣ್ಣು ಮಣ್ಣಿಗಾಗಿಬನ್ನಪಟ್ಟು ಬಾಯಿಬಿಡುವೆ ಬರಿದೆ ಮೋಹದಿಚೆನ್ನ ಮನದಿ ಪರಹಿತಾರ್ಥ ಮಾಡಿ ಪುಣ್ಯಪಡೆಯೊ ನೀನುಇನ್ನು ಮುಂದೆ ಕಿತ್ತು ತಿಂಬ ಕೂಪದಲ್ಲಿ ಕೆಡಲು ಬೇಡ ಮನುಜ೨
ಬತ್ತಲಿಂದ ಬರುತ್ತಿಹರು ಬತ್ತಲಿಂದ ಹೋಗುತಿಹರುಕತ್ತಲೆ ಕಾಲವನು ಬೆಳಕು ಮಾಡಿ ಹೊತ್ತುಗಳೆವರುಸತ್ತರಿಲ್ಲ ಅತ್ತರಿಲ್ಲ ಹೊತ್ತುಕೊಂಡು ಹೋಹರಿಲ್ಲಿಮತ್ತೆ ದೇಹ ಮಣ್ಣುಗೂಡಿದಂತೆ ಕೆಡಲು ಬೇಡ ಮನುಜ೩
ಕಟ್ಟಲಿಲ್ಲ ಬಿಚ್ಚಲಿಲ್ಲ ಕಷ್ಟಪಟ್ಟು ಬಳಲಲಿಲ್ಲಸುಟ್ಟು ಸುಟ್ಟು ಸುಣ್ಣದ್ಹರಳು ಆಯಿತಲ್ಲೊ ಕಾಯಬಿಟ್ಟು ಹೋಗುವಾಗ ಬೊಟ್ಟು ಬಟ್ಟೆ ನಿನಗೆ ಹೊಂದಲಿಲ್ಲಕಟ್ಟ ಕಡೆಗೆ ದೃಷ್ಟಿ ನೋಟ ಬಟ್ಟ ಬಯಲು ಆಗುತಿಹುದು ೪
ಗರುವದೋರಿ ನಿಂದ ನೀನು ಬರಿದೆ ಕಾಲ ಕಳೆದೆ – ಮುಂ-ದರಿದು ನೋಡು ನರರ ತನುವು ದೊರಕಲರಿಯದುನೆರೆ ಮಹಾಮೂರ್ತಿ ಒಡೆಯ ಬಾಡದಾದಿಕೇಶವನಲಿಟ್ಟು ಭಕುತಿಚರಣ ಭಜಿಸಿ ಚಂಚಲಳಿಸಿ ವರವ ಪಡೆದು ಹೊಂದು ಮುಕುತಿ ೫

೯೯
ಏನು ಮಾಡಲಯ್ಯ ಬಯಲಾಸೆ ಬಿಡದು ಪ
ಮಾನವ ಮೃಗೇಂದ್ರ ರಾಮಚಂದ್ರ ರಕ್ಷಿಸಯ್ಯ ಅ
ಜ್ಯೋತಿರ್ಮಯವಾದ ದೀಪದ ಬೆಳಕಿಗೆ ತಾನುಕಾತರಿಸಿ ಬೀಳುವ ಪತಂಗದಂದದಲಿಧಾತುಗೆಟ್ಟು ಬೆಳ್ಳಿ ಬಂಗಾರದಲಿ ಮೆರೆವಧೂರ್ತೆಯರ ನೋಡುವೀ ಚಕ್ಷುರಿಂದ್ರಿಯಕೆ ೧
ಅಂದವಹ ಸಂಪಗೆಯ ಅರಳ ಪರಿಮಳವುಂಡುಮುಂದುವರಿಯದೆ ಬೀಳ್ವ ಮಧುಪನಂತೆಸಿಂಧೂರ ಗಮನೆಯರ ಸಿರಿಮುಡಿಯೊಳಿಪ್ಪ ಪೂಗಂಧ ವಾಸಿಸುವ ಘ್ರಾಣೇಂದ್ರಿಯಕೆ ೨
ಗಾಣದ ತುದಿಯೊಳಿಪ್ಪ ಭೂನಾಗನಂ ಕಂಡುಪ್ರಾಣಾಹುತಿಯೆಂದು ಸವಿವ ಮೀನಿನಂತೆಏಣಾಕ್ಷಿಯರ ಚೆಂದುಟಿಯ ಸವಿಯ ಸವಿಸವಿದುಜಾಣತನದಲಿ ನಲಿವ ಜಿಹ್ವೇಂದ್ರಿಯಕೆ ೩
ದಿಮಿದಿಮ್ಮಿ ಘಣಘಣಾ ಎಂಬ ಘಂಟೆಯ ರವಕೆಜುಮುಜುಮನೆ ಬೆಮೆಗೊಳ್ಳುವ ಹರಿಣದಂತೆರಮಣಿಯರ ರಂಜಕದ ನುಡಿಗಳನು ಕೇಳಿ ಪ್ರ-ಣಮವೆಂದು ತೋಷಿಸುವ ಕರ್ಣೇಂದ್ರಿಯಕೆ ೪
ತ್ವಕ್ಕು ಮೊದಲಾದ ಪಂಚೇಂದ್ರಿಯಗಳೊಳು ಸಿಕ್ಕಿಕಕ್ಕುಲಿತೆಗೊಂಬುದಿದ ನೀನು ಬಿಡಿಸೊಸಿಕ್ಕಿಸದಿರು ಸಿಕ್ಕಿಗೆ ಆದಿಕೇಶವರಾಯದಿಕ್ಕಾಗಿ ನಿನ್ನಂಘ್ರಿಯೊಳೆನ್ನ ಮನವನಿರಿಸೊ ೫

ಸೀತೆಯ ಮೇಲೆ ರಾಮನಿಗಿರುವ ಪ್ರೇಮದ ತುಡಿತ
೪೩
ಏನೆಂದಳೇನೆಂದಳೋ ಪ
ನಿನ್ನೊಳು ಸೀತೆ ಹನುಮಯ್ಯ ಅ
ಜನಕನರಮನೆಯಲ್ಲಿ ಜನಿಸಿ ಸುಖದಲ್ಲಿರಲುಧನು ಮುರಿದು ಕೈಹಿಡಿದು ತನ್ನಘನ ಪದವಿಯನು ಬಿಟ್ಟು ವನವ ಸೇರಿದನೆಂದುವನಿತೆ ತಪಿಸುತೆ ಮನದಿ ನೊಂದು ೧
ಕುರುಹಿನುಂಗುರವನು ತರಳಾಕ್ಷಿಗಿತ್ತಾಗತಿರುಳಿಗಿಂತಧಿಕವೇ ಕರಟವೆಂದುಬೆರಳಿಂದ ಚಿಮ್ಮಿದಳೆ ಅಶೋಕವನದಾಚೆಗೆನಿರುತ ಸಂತಾಪದಲಿ ಮನದಿ ನೊಂದು ೨
ಸೇತುವೆಯ ಕಟ್ಟಿ ಸಿಂಧುಗೆ ವಿಭೀಷಣಾಗ್ರಜಾತ ಲಂಕಾಧಿಪನ ವಧಿಸಿಸೀತೆಯನು ಸೆರೆಯಿಂದ ಬಿಡಿಸಿದ್ದೆ ಆದರೆನಾಥಾದಿಕೇಶವಗೆ ಬಲು ಬಿರುದು ಎಂದು೩

ಭಗವಂತನ ಅಮಿತತೆಯನ್ನು
೧೦೦
ಏನೆಂದು ಕೊಂಡಾಡಿ ಸ್ತುತಿಸಲೋ ದೇವನಾನೇನು ಬಲ್ಲೆ ನಿನ್ನ ಮಹಿಮೆಗಳ ಮಾಧವ ಪ
ಹರಿಮುಕುಂದನು ನೀನು ನರಜನ್ಮ ಹುಳು ನಾನುಪರಮಾತ್ಮನು ನೀನು ಪಾಮರನು ನಾನುಗರುಡ ಗಮನನು ನೀನು ಮರುಳು ಪಾಪಿಯು ನಾನುಪರಂಜ್ಯೋತಿಯು ನೀನು ದುರುಳ ತಿರುಕನು ನಾನು ೧
ವಾರಿಧಿಶಯನನಾದ ಕಾರುಣ್ಯನಿಧಿ ನೀನುಘೋರದಿಂದಿಹ ಕಾಮಿಕ್ರೋಧಿ ನಾನುಈರೇಳು ಭುವನದೊಳು ಇರುವ ಮೂರುತಿ ನೀನುದೂರಿ ನಿನ್ನನು ಬೈವ ದುಷ್ಟ ನಾನು೨
ಅಣುರೇಣು ತೃಣಗಳಲಿ ಪರಿಪೂರ್ಣನು ನೀನುಕ್ಷಣಕ್ಷಣಕೆ ಅವಗುಣದ ಕುಕರ್ಮಿ ನಾನುವಾಣಿಯರಸನ ಪೆತ್ತ ವೈಕುಂಠಪತಿ ನೀನುಕ್ಷಣಭಂಗುರ ತನುವಿನ ಗೊಂಬೆ ನಾನು ೩
ಕಂಬದಲಿ ಬಂದ ಆನಂದ ಮೂರುತಿ ನೀನುನಂಬಿಕೆಯಿಲ್ಲದ ಪ್ರಪಂಚಕನು ನಾನುಅಂಬರೀಷಗೆ ಒಲಿದ ಅಕ್ರೂರಸಖ ನೀನುಡಂಬ ಕರ್ಮಿಯು ನಾನು ನಿರ್ಜಿತನು ನೀನು೪
ತಿರುಪತಿಯ ವಾಸ ಶ್ರೀವೆಂಕಟೇಶನೆ ನಿನ್ನಚರಣಸೇವಕರ ಸೇವಕನು ನಾನುಬಿರುದುಳ್ಳವನು ನೀನು ಮೊರೆಹೊಕ್ಕವನು ನಾನುಸಿರಿ ಕಾಗಿನೆಲೆಯಾದಿಕೇಶವನು ನೀನು ೫

ಪಂಡರಾಪುರದ ವಿಠಲನನ್ನು
೧೨
ಏನೆಂದು ನುಡಿವೆ ನಿನ್ನವರಂತೆ ಕೇಡು ಬುದ್ಧಿ ಎನ್ನೊಳಗಿಲ್ಲ – ಗುಣಹೀನರಲ್ಲದ ಈ ನರರ ಪಾಲಿಪ ಬುದ್ಧಿ ನಿನ್ನೊಳಗಿಲ್ಲ ಪ
ತರಳ ಪ್ರಹ್ಲಾದನಂದದಿ ನಿನ್ನ ರೂಪನು ಕೆಡಿಸಲಿಲ್ಲನರನಂತೆ ಬಂಡಿಬೋವನ ಮಾಡಿ ನಿನ್ನ ದುಡಿಸಲಿಲ್ಲಪರಾಶರನಂತೆ ನದಿಯೊಳಿದ್ದ ಹೆಣ್ಣ ಕೂಡಲಿಲ್ಲಗರುಡನಂದದಿ ನಿನ್ನ ಪೊತ್ತು ತಿರುಗಲಿಲ್ಲ ೧
ಸನಕಾದಿ ಮುನಿಯಂತೆ ವನದೊಳು ಅನುದಿನ ಚರಿಸಲಿಲ್ಲಬಿನಗು ಬೇಡತಿಯಂತೆ ಸವಿದುಂಡ ಹಣ್ಣ ತಿನಿಸಲಿಲ್ಲಇನಕುಲ ಕಪಿಯಂತೆ ವಂಚಿಸಿ ವಾಲಿಯ ಕೊಲಿಸಲಿಲ್ಲಘನ ಪಾತಕದಜಮಿಳನಂತೆ ನಾರಗ ಎನ್ನಲಿಲ್ಲ೨
ಕದನದೊಳು ವಿಭೀಷಣನಂತೆ ಅಣ್ಣನ ಕೊಲಿಸಲಿಲ್ಲವಿದುರನ ತೆರನಂತೆ ಸದನವ ಮುರಿದು ನಿನ್ನ ಬೆರೆಯಲಿಲ್ಲಮದಗಜದಂತೆ ಮಕರಿಗೆ ಸಿಲ್ಕಿ ಒರಲಲಿಲ್ಲಗದರಿ ಶಿಶುಪಾಲನಂದದಿ ನಿನ್ನನುಪೇಕ್ಷಿಸಿ ಜರೆಯಲಿಲ್ಲ೩
ಬುವಿಯೊಳು ಬಲಿಯಂತೆ ದಾನವ ನೀಡಲಿಲ್ಲಭವನಂತೆ ಶ್ಮಶಾನದಿ ಮನೆಮಾಡಿ ಸ್ಮರಿಸಲಿಲ್ಲತವ ಪುಂಡರೀಕನಂತೆ ಹಲಗೆಯಿಟ್ಟಿಗೆ ಮೇಲೆ ನಿಲಿಸಲಿಲ್ಲಭುವನದೊಡೆಯ ನೆಲೆಯಾದಿಕೇಶವನ ಮರೆಯಲಿಲ್ಲ೪

ಕರ್ಮಫಲವನ್ನು ಅನುಭವಿಸದೆ
೨೪೮
ಒಲ್ಲೆನೆಂದರಾಗುವುದೆ ಅಲ್ಲಿ ಪಡೆದು ಬಂದುದನುಎಲ್ಲವನುಂಡು ತೀರಿಸಬೇಕು ಹರಿಯೆ ಪ
ತಂದೆತಾಯಿ ಬಸಿರಿಂದ ಬಂದ ದಿನ ಮೊದಲಾಗಿಒಂದಿಷ್ಟು ಸುಖವನೆ ಕಾಣೆ ನಾ ಹರಿಯೆಬಂದುದನೆಲ್ಲವನುಂಡು ತೀರಿಸದೆ ಭ್ರಮೆಗೊಂಡ ಮೇಲೇನುಂಟು ಹಗೆಯ ಜೀವನವೆ ೧
ಎಮ್ಮರ್ಥ ಎಮ್ಮ ಮನೆ ಎಮ್ಮ ಮಕ್ಕಳು ಎಂಬಹೆಮ್ಮೆ ನಿನಗೇತಕೊ ವ್ಯರ್ಥ ಜೀವನವೆಬ್ರಹ್ಮ ಪಣೆಯೊಳು ಬರೆದ ವಿಧಿಯು ತಪ್ಪುವುದುಂಟೆಸುಮ್ಮನೆ ಇರು ಕಂಡ್ಯ ಹಗೆಯ ಜೀವನವೆ2
ಅಂತರಂಗದಲೊಂದು ಅರ್ಥ ದೇಹದಲೊಂದುಚಿಂತೆಯಾತಕೆ ನಿನಗೆ ಪಂಚರೆದುರುಕಂತುಪಿತ ಕಾಗಿನೆಲೆಯಾದಿಕೇಶವರಾಯಾಂತರಂಗದಿ ನೆಲೆಗೊಳುವ ತನಕ ೩

ವಿಷ್ಣು ನರಸಿಂಹಾವತಾರವನ್ನೆತ್ತಿ
೧೩
ಕಂಡೆ ನಾ ತಂಡ ತಂಡದ ಹಿಂಡು ಹಿಂಡು ದೈವ ಪ್ರಚಂಡ – ರಿಪುಗಂಡ ಉದ್ದಂಡ ನರಸಿಂಹನ ಕಂಡೆನಯ್ಯ ಪ
ಘುಡುಘುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದುಘಡಘಡನೆ ನಡುನಡುಗೆ ಘುಡುಘುಡಿಸಿ ಸಭೆ ಬೆದರೆಹಿಡಿ ಹಿಡಿದು ಹಿರಣ್ಯಕನ ತೊಡೆ ಮೇಲೆ ಕೆಡಹಿದನ೧
ಉರದೊಳಪ್ಪಳಿಸಿ ಅರಿ ಬಸಿರ ಸರಸರನೆ ಸೀಳಿಪರಿಪರಿಯಲಿ ಚರ್ಮ ಎಳೆದೆಳೆದು ಎಲುಬು ನರನರವನು ತೆಗೆದು ನಿರ್ಗಳಿತ ಶೋಣಿತ ಸುರಿಯೆಹರಿಹರಿದು ಕರುಳ ಕೊರಳೊಳಿಟ್ಟವನ೨
ಪುರಜನರು ಹಾಯೆನಲು ಸುರರು ಹೂಮಳೆಗರೆಯೆತರತರದ ವಾದ್ಯ ಸಂಭ್ರಮಗಳಿಂದಹರಿಹರಿ ಶರಣೆಂದು ಸ್ತುತಿಸಿ ಶಿಶು ಮೊರೆಯಿಡುವಕರುಣಾಳು ಕಾಗಿನೆಲೆಯಾದಿಕೇಶವನ೩

ಗಯಾ ಕ್ಷೇತ್ರಕ್ಕೆ ಹೋದಾಗ
೧೪
ಕಂಡೆ ಶ್ರೀಹರಿ ದಿವ್ಯಪಾದ – ಬ್ರ-ಹ್ಮಾಂಡ ವ್ಯಾಪಕವಾಗಿ ಬೆಳಗುವ ಪಾದ ಪ
ಸಿರಿಯು ಸೇವಿಪ ವರ ಪಾದ – ನಮ್ಮಗರುಡನಿಂದ ಹೊತ್ತು ತಿರುಗುವ ಪಾದತರಳ ಧ್ರುವನ ಕಾಯ್ದ ಪಾದ – ಮುನಿಸುರರು ನಮಿಸುವ ಲಲಿತ ಪಾದ ೧
ಸರಸಿಜೋದ್ಭವ ವಂದ್ಯ ಪಾದಪುರಹರ ನಮಿತ ಪರಿಪೂರ್ಣ ಪಾದನರಗೆ ಸಾರಥಿಯಾದ ಪಾದಕೌರವ ಮೂಲ ಮುರಿದಿಟ್ಟ ಪಾದ೨
ದಿವಿಜರಾಜನಿಗೊಲಿದ ಪಾದಅವಿವೇಕಿ ದಾನವರ ಕೊಂದ ಪಾದಬುವಿ ಗಯಾಪುರ ಶ್ರೇಷ್ಠ ಪಾದಭವ ಹಿಂಗಿಪಾದಿಕೇಶವ ಪಾದ೩

ಐಹಿಕ ಎಳೆತಸೆಳೆತಕ್ಕೆ ಸಿಕ್ಕಿ
೧೦೧
ಕಡೆ ಹಾಯಿಸೊ ಕಮಲ ಲೋಚನನೆ ಎನ್ನತಡಿಯ ಸೇರಿಸೊ ತರಣಿಶತಕೋಟಿ ತೇಜ ಪ
ಕಾಕು ಇಂದ್ರಿಯಗಳೆಂಬ ಕಟುಕರಿಗೆ ನಾ ಸಿಲುಕಿಮೇಕೆಯಂದದಿ ಬಾಯಿ ಬಿಡುತಿಪ್ಪೆನುಸಾಕಾರ ರೂಪ ಸರ್ವೋತ್ತಮನೆ ನೀ ಕರುಣಾಕರನೆಂಬ ಪೆಂಪುಂಟಾದಡೀಗೆನ್ನ ೧
ಹಲವು ಜನ್ಮದ ಪಾಪವೆನಿಪ ಸೊಕ್ಕಾನೆ ಸೊಂಡಿಲು ಸುತ್ತಿ ಬಂದು ಸೀವರಿಸುತಿದೆಕೊಮಲೆವ ದುಷ್ರ‍ಕತವೆಂಬ ಗಜಕೆ ಕೇಸರಿ ಎಂಬಛಲ ಬಿರುದು ತಾಳ್ದ ದೇವರ ದೇವ ನೀನೆನ್ನ ೨
ಹಾದಿಗಾಣದೆ ತೊಲಗಿ ಪೋಪೆನೆಂದರೆ ಭಾವಬೂದಿಯೊಳಗಾಡಿ ಮುಳುಗಾಡುತಿಹೆನೊಭೂಧರನ ತಾಳ್ದ ಕೂರ್ಮಾವತಾರನೆ ಬಾಡದಾದಿಕೇಶವರಾಯ ಬೆನ್ನಲೆತ್ತಿಕೊಂಡು ೩

ಕಣಿ ಹೇಳುವ ಕೊರವಂಜಿಯ
೨೦೦
ಕಣಿಯ ಹೇಳಲು ಬಂದೆ ನಾರಾಯಣನಲ್ಲದೆ ಇಲ್ಲವೆಂದು – ಮಿಕ್ಕಬಣಗು ದೈವದ ಗೊಡವೆ ಬೇಡ ನರಕ ತಪ್ಪದು ಪ
ಎಕ್ಕನಾತಿಯರು ಕಾಟಿ ಜಕ್ಕಿ ಜಲಕನ್ಯೆಯರುಸೊಕ್ಕಿನಿಂದ ಸೊಂಟಮುರುಕ ಬೈರೇ ದೇವರುಮಿಕ್ಕ ಮಾರಿ ಮಸಣಿ ಚೌಡಿ ಮೈಲಾರಿ ಮೊದಲಾದಠಕ್ಕು ದೈವದ ಗೊಡವೆ ಬೇಡ ನರಕ ತಪ್ಪದು ೧
ಸುತ್ತಣವರ ಮಾತ ಕೇಳಿ ಗುತ್ತಿಯ ಎಲ್ಲಮ್ಮಗೊಲಿದುಬತ್ತಲೆಯೆ ದೇವರೆದುರು ಬರುವುದು ನೋಡಿರೊಮತ್ತೆ ಬೇವಿನುಡುಗೆಯ ಅರ್ತಿಯಿಂದುಟುಗೊಂಡುಮುಕ್ತಿ ಕಾಂಬೆವೆಂಬ ಮೌಢ್ಯ ಬೇಡಿರÉೂ ೨
ತೂಳದವರ ಮಾತ ಕೇಳಿ ಖೂಳರೆಲ್ಲ ಕೂಡಿಕೊಂಡುಹಾಳು ಮಾಡಿ ಕೈಯಲಿದ್ದ ಹೊನ್ನು ಹಣಗಳಬಾಳುತಿಪ್ಪ ಕೋಣ ಕುರಿಯ ಏಳಬೀಳ ಕೊರಳ ಕೊಯ್ದುಬೀಳ ಬೇಡಿ ನರಕಕೆಂದು ಹೇಳ ಬಂದೆನೊ೩
ಹೊಳ್ಳದ ಬಿಚ್ಚೇರು ಸಹಿತ ಸುಳ್ಳರೆಲ್ಲ ಕೂಡಿಕೊಂಡುಬೆಳ್ಳನ ಬೆಳತನಕ ನೀರ ತಡಿಯಲಿ ಕುಳಿತುಗುಳ್ಳೆ ಗೊರಜೆ ಕೂಡಿ ತಿಂದು ಕಳ್ಳು ಕೊಡನ ಬರಿದು ಮಾಡುವಂಥಪೊಳ್ಳು ದೈವದ ಗೊಡವೆ ಬೇಡ ನರಕ ತಪ್ಪದು೪
ಪೊಡವಿಗಧಿಕ ವಿಜಯನಗರದೊಡೆಯ ಕಟ್ಟೆ ವೆಂಕಟೇಶಕಡು ಚೆಲ್ವ ಕಟ್ಟಾಣಿ ಕನಕನೊಡೆಯಬಡದಾದಿ ಕೇಶವನ ಪಾದ ಬಿಡದೆ ಭಜಿಸಿರೊಜಡದೈವಗಳ ಇಂಥ ಪೂಜೆ ಬೇಡ ಕಾಣಿರೋ ೫

ಕದಿರುಮಂಡಲಗಿಯ ಹನುಮಂತನ ಗುಣಗಾನದ
೪೪
ಕದರ ಮಂಡಲಗಿಯ ಕರುಣಿ ಹನುಮರಾಯ |ಸದುಗುಣವಂತನೆ ಹಣುವಂತನೆ ಪ
ಅಂಜನೆಯ ವರಸೂನು ಆಶ್ರಿತ ಕಾಮಧೇನುಮಂಜುಳ ಗಾನ ಗೀತ ಪರಮ ವಿಖ್ಯಾತ ಸಂಜೀವನವ ತಂದ ವ್ಯೋಮ ಮಾರ್ಗದಿ ಬಂದಅಂಜದ ಗುಣವಂತನೆ ಹಣುವಂತನೆ೧
ಶಶಿಧರಾನ್ವಯ ದೂತ ಸೌಮಿತ್ರಿಯ ವರೂಥ ಅಸಮಾಸ್ತ್ರಧೃತವೇದ ಅಮಿತ ಪ್ರಖ್ಯಾತ ಆ ಸುಗ್ರೀವ ಜಾಮಾತ ಮುಖ್ಯ ಪ್ರಾಣನಾಥ ವಿಶಾಲ ಗುಣವಂತನೆ ಹಣುವಂತನೆ ೨
ಕ್ಷೋಣಿಯೊಳು ಕನಕದಾಸನ ನೆರಳು ಅನಕ ಏನು ಬಲಿಸಿದೆಯೊ ಔಷಧಿಯ ಕುಣುಕ ನೀನಿದ್ದರೆ ಕನಕ ಪ್ರಾಣ ತೆರಳುವ ತನಕ ಶ್ರೀನಿಧೇ ಆದಿಕೇಶವ ಎನ್ನ ಜನಕ೩

ಶ್ರೇಷ್ಠತೆಯ ಗರ ಬಡಿದ ಕೆಲ
೫೭*
ಕನಕದಾಸನ ಮೇಲೆ ದಯ ಮಾಡಲು ವ್ಯಾಸಮುನಿ ಮಠಿಕರೆಲ್ಲರು ದೂರುತಿಹರೊ ಪ.
ತೀರ್ಥವನು ಕೊಡುವಾಗ ಕನಕನ್ನ ಕರೆಯೆನಲುದೂರ್ತರಾಗಿದ್ದ ವಿದ್ವಾಂಸರೆಲ್ಲಸಾರ್ಥಕವಾಯ್ತು ಇವರ ಸನ್ಯಾಸಿತನವೆಲ್ಲಪೂತ್ರ್ಯಾಗಲೆಂದು ಯತಿ ನಗುತಲಿಹನು ೧
ಮರುದಿನ ಅವರವರ ಪರೀಕ್ಷಿಸಬೇಕೆಂದುಕರೆದು ಸನ್ಯಾಸಿಗಳ ಕನಕಸಹಿತತ್ವರಿತದಲಿ ಕರದಲ್ಲಿ ಕದಳಿ ಫಲವನೆ ಕೊಟ್ಟುಯಾರಿರದ ಸ್ಥಳದಲ್ಲಿ ಮೆದ್ದು ಬನ್ನಿರಿ ಎನಲು೨
ಊರ ಹೊರಗೆ ಹೋಗಿ ಬ್ಯಾರೆ ಬ್ಯಾರೆ ಕುಳಿತುತ್ವರಿತದಿಂ ಮೆದ್ದು ವಿದ್ವಾಂಸರೆಲ್ಲತೋರಲಿಲ್ಲವು ಎನಗೆ ಏಕಾಂತ ಸ್ಥಳವೆನುತಸಾರಿ ಕದಳಿ ಫಲವ ತಂದು ಮುಂದಿಟ್ಟ ೩
ಡಿಂಬದೊಳು ಶಬ್ದ ವಾಗಾದಿ ಶ್ರೋತೃಗಳಲ್ಲಿಇಂಬಾಗಿ ತತ್ತ್ವೇಶರೆಲ್ಲ ತುಂಬಿಹರುತಿಂಬುವುದು ಹ್ಯಾಂಗೆನುತ ವ್ಯಾಸರಾಯರ ಕೇಳೆಕಂಬದಂತಾದರವರೆಲ್ಲ ಕುಳಿತವರು ೪
ಮಾಣಿಕವು ಕೋಡಗನ ಕೈಯಲ್ಲಿ ಇದ್ದಂತೆಕೋಣನಿದಿರಿಗೆ ಕಿನ್ನರಿಯ ಮೀಟಿದಂತೆವೇಣುಧ್ವನಿ ಬಧಿರನ ಬಳಿ ಹೊರಡಿಸಿದಂತೆ ಕಣ್‍ಕಾಣದವನಿಗೆ ಕನ್ನಡಿಯ ತೋರಿದಂತೆ ೫
ನೋಡಿದಿರ ಈ ಕನಕನಾಡುವ ಮಾತುಗಳಮೂಢ ಜನರರಿಯಬಲ್ಲರೆ ಮಹಿಮೆಯನಾಡಾಡಿಯಂತೆಯೆ ಮಾಡಿಬಿಟ್ಟರು ಇವಗೆ ನಾಡೆಲ್ಲ ಹುಡುಕಿದರು ಈಡಾರ ಕಾಣೆ೬
ಕರದಲಿ ಮೂರ್ತಿಯ ಪಿಡಿದು ಕೇಳುತ್ತಿರಲುಅರಿಯದಜ್ಞಾನದಲಿ ಪೇಳುತ್ತಿರಲುತ್ವರದಿ ಕನಕನು ಬಂದು ವಾಸುದೇವನ ರೂಪಪರಬೊಮ್ಮ ಪುರಂದರ ವಿಠಲನೆಂದ ೭
* ಈ ಕೀರ್ತನೆ ಕನಕದಾಸರದೆಂದೂ, ‘ಪುರಂದರ ವಿಠಲ’ ಎಂಬ ಅಂಕಿತ ಪ್ರಕ್ಷಿಪ್ತವೆಂದೂ ಪ್ರತೀತಿ.

ಐಶ್ವರ್ಯ ಸ್ಥಾನಮಾನಗಳ ಅಮಲಿನಲ್ಲಿ
೧೭೯
ಕಲಿ ಹೆಚ್ಚಿ ಬಂದಿತಲ್ಲ, ರಂಗಯ್ಯ ಕಾಯೆನ್ನ ಸಿರಿಯ ನಲ್ಲ ಪ
ಬಲು ಘೋರ ಪಾತಕದಿ ಇಳೆಯು ತಲ್ಲಣಗೊಂಡುಕಳವಳಿಸುತಿದೆ ಕಾಲ ವಿಪರೀತದಿ ಅ
ಅತ್ತೆಯ ಸೊಸೆ ಬಯ್ವಳು – ಪುತ್ರರು ತಮ್ಮಹೆತ್ತ ತಾಯಿಯ ಬಿಡುವರುಉತ್ತಮ ಗರತಿಗೆ ಅಪವಾದ – ಅವಿವೇಕಿಗಳುಎತ್ತ ನೋಡಲು ಹೆಚ್ಚಿ ಹೆದರಿಸಿತುನ್ಮತ್ತತನದಲಿ ಮನೆಯ ರಚಿಸುವರುಭಕ್ತಿಯೆಂಬುದ ಬಯಸದಿರುವರುಕತ್ತಲಾಯಿತು ಕಲಿಯ ಮಹಿಮೆ ೧
ನಿತ್ಯ ನೇಮವು ನಿಂತಿತು – ಹೋಯಿತಲ್ಪಜಾತಿಗೈಶ್ವರ್ಯ ಭೋಗಭಾಗ್ಯಧಾತರಾದವರಿಗೆ ಧಾರಣೆ ಪಾರಣೆಜಾತಿನೀತಿಗಳೆಲ್ಲ ಒಂದಾಗಿಪಾತಕದಿ ಮನವೆರಗಿ ಮೋಹಿಸುತಮಾತಾಪಿತೃ ಗುರು ದೈವ ದ್ರೋಹದಿಭೂತಳವು ನಡ ನಡುಗುತಿಹುದು ೨
ಬಿನ್ನಣ ಮಾತುಗಳು ಮತ್ತೆ ಮತ್ತೆಘನ್ನ ಮತ್ಸರ ಕ್ರೋಧಗಳುಅನ್ಯಾಯದಿಂದ ಅರ್ಥವ ಗಳಿಸುವರುತನ್ನ ಕಾಂತನ ಬಿಟ್ಟು ಸ್ತ್ರೀಯರುಅನ್ಯರಿಗೆ ಮನವೆರಗಿ ಮೋಹಿಪರುಬಣ್ಣಗೆಟ್ಟಿತು ವರ್ಣ ತಪ್ಪಿತು ಪ್ರ-ಸನ್ನ ಶ್ರೀ ನೆಲೆಯಾದಿಕೇಶವನೆ ೩

ರಕ್ಕಸ ತಂಗಡಿ ಯುದ್ಧದಲ್ಲಿ
೧೭೮
ಕಲಿಯುಗದ ಮಹಿಮೆಯನು ಕಂಡಷ್ಟು ಪೇಳುವೆನು ಪ
ಜಲಜನಾಭನ ಕೃಪೆಯ ಪಡೆದವರು ಕೇಳಿ ಅ
ಸತ್ಯಧರ್ಮಗಳೆಲ್ಲ ಎತ್ತ ಪೋದವೊ ಕಾಣೆಉತ್ತಮರ ಜೀವನಕೆ ದಾರಿಯಿಲ್ಲನಿತ್ಯದಲಿ ಕಳವು ವ್ಯಭಿಚಾರವುಳ್ಳವರೆಲ್ಲಅರ್ಥ ಸಂಪನ್ನರಾಗನುಭವಿಸುತಿಹರು೧
ಅತ್ತೆಯೇ ಸೊಸೆಯಾಗಿ ಸೊಸೆಯು ಅತ್ತೆಯು ಆಗಿಪುತ್ರ ಪಿತನಾಗಿ ಪಿತ ಪುತ್ರನಾಗಿಮತ್ತೆ ಗಂಡನಿಗೆ ಹೆಂಡತಿಯೆ ಗಂಡಳು ಆಗಿವರ್ತಿಸುವರಯ್ಯ ತಮಗೆದುರಿಲ್ಲವೆಂದು ೨
ವಾವೆವರಸೆಯು ತಪ್ಪಿ ವೈರಿ ವರ್ಗವು ಹೆಚ್ಚಿದೇವ ಬ್ರಾಹ್ಮಣ ಗುರು ಹಿರಿಯರನು ಜರಿದುಕೇವಲಾಧಮರೆಲ್ಲ ಸಿರಿ ಮದದಿ ಸೊಕ್ಕಿದರುಕಾವರಾರೈ ಸಾಧು ಸಜ್ಜನರನೀಗ೩
ವೇದ ವಿಪ್ರರು ತಮ್ಮ ವೃತ್ತಿ ಸ್ವಾಸ್ಥ್ಯವ ಕಳೆದುಆಧಾರವಿಲ್ಲದೆ ತಿರಿದು ತಿಂಬುವರುಕಾದುವ ಶೂರರಿಗೆ ಕಾಸು ಕೊಡುವವರಿಲ್ಲಮೇದಿನಿಗೆ ಬೀಳ್ವ ಮಳೆ ಖಂಡಮಂಡಲವು ೪
ಅನ್ನವಸ್ತ್ರಗಳಿಂದ ಚೆನ್ನಾಗಿ ಬಾಳುವರಭಿನ್ನ ತಂತ್ರವ ಮಾಡಿ ಕೆಡಿಸುತಿಹರುಗನ್ನಗತಕವ ಮಾಳ್ಪ ಗ್ರಾಮಣ್ಯಗಳ ಕಲಿತುಕುನ್ನಿಗಳು ಹೆಚ್ಚಿದರು ಕ್ರೂರ ಫಣಿಯಂತೆ ೫
ಆಳಿದೊಡೆಯಂಗೆರಡು ಬಗೆಯುವಾತಗೆ ಒಳ್ಳೆಮಾಳಿಗೆಯ ಮನೆ ತುರುವು ಧನಧಾನ್ಯವುವೇಳೆವೇಳೆಗೆ ಬರುವ ಹೆಂಡತಿಯ ಲೆಕ್ಕಿಸದೆಸೂಳೆಯನು ನೆಚ್ಚಿ ಕಾಲವ ಕಳೆವರಯ್ಯ೬
ಸೇರಿ ದ್ರೋಹವ ಮಾಳ್ಪ ಕ್ರೂರಕರ್ಮಿಗಳ ಮತಪೂರೈಸಿ ಕೊಡುವರರಸುಗಳೆಲ್ಲರುಧಾರಿಣಿಯ ಭಾರವನು ತಾಳಲಾರದೆ ದೇವಿಶ್ರೀರಾಮ ರಾಮೆಂದು ಶಿರವ ತೂಗುವಳು೭
ಉತ್ತಮ ಪತಿವ್ರತೆಯು ಪತಿ ನೀನೆ ಗತಿಯೆನಲುಮುತ್ತೈದೆಗುಡುವುದಕೆ ವಸ್ತ್ರವಿಲ್ಲಮತ್ತೆ ವ್ಯಭಿಚಾರಿಣಿಗೆ ತೊಡಿಗೆ ಬಂಗಾರಗಳುವರ್ತನೆಯಿದೇನಯ್ಯ ಕಲಿಯುಗದ ಮಹಿಮೆ ೮
ಪತಿವ್ರತೆಯರೆಂಬುವರು ಶತಸಹಸ್ರಕೊಬ್ಬರುಮಿತಿಮೀರಿ ಇಹರಯ್ಯ ಇತರ ಜನರುಮತಿಗೆಟ್ಟು ಮನಸೋತು ಅನ್ಯ ಪುರುಷರ ಕೂಡಿಗತಿಗೆಟ್ಟು ಹೋಗುವರು ಮೂರು ತೊರೆದು ೯
ಹರಿಹರರ ಪೂಜೆಗಳು ಹಗರಣಗಳಾದವುಉರಿ ಮಾರಿ ಚಾಮುಂಡಿ ಶಕ್ತಿಗಳಿಗೆಕುರಿ ಕೋಣ ನೈವೇದ್ಯ ಧೂಪದೀಪಗಳಿಂದಪರಮ ಭಕ್ತಿಯ ಸಲಿಸಿ ಪೂಜಿಸುವರಯ್ಯ೧೦
ನಡೆವ ಕಾರ್ಯಗಳೆಲ್ಲ ನುಡಿಯಲೆನ್ನಳವಲ್ಲಒಡೆಯ ನೀನೇ ಬಲ್ಲೆ ಕಲಿಯುಗದ ಮಹಿಮೆತಡವ ಮಾಡಲಿ ಬೇಡ ತಾಳಲಾರದು ಲೋಕಮೃಡನ ವೈರಿಯ ಪೆತ್ತ ಆದಿಕೇಶವನೆ೧೧

ಹಿಂದಿನ ತಮ್ಮ ಅವಗುಣಗಳ
೧೦೨
ಕಷ್ಟ ತನುವಿನಲಿ ಹುಟ್ಟಿ ತೊಳಲುವಂಥಎಷ್ಟೆಂದು ತಾಳುವೆನೊ ಶ್ರೀರಂಗ ಪ
ಅಷ್ಟರೊಳೆಂದೆನ್ನ ಅವಗುಣವೆಣಿಸದೆ ಕಷ್ಟ ಪಡಿಸುವುದೇನು ಶ್ರೀರಂಗ ಅ
ನರಜನ್ಮವನು ಎತ್ತಿ ನರಕದೊಳಗೆ ಸುತ್ತಿಗುರಿ ಗೊತ್ತು ಕಾಣೆನಯ್ಯ ಶ್ರೀರಂಗಪರಮಪಾತಕನಾಗಿ ಹರಿ ನಿಮ್ಮ ಸ್ಮರಣೆಯನುಮರೆದು ಪಾಮರನಾದೆ ಶ್ರೀರಂಗ೧
ಅತಿವೇಧೆಯಲಿ ಸತಿಸುತರೆಂಬ ಮಂದ ದು-ರ್ಮತಿಗೆ ಮರುಳಾದೆನೊ ಶ್ರೀರಂಗಅತುಳ ಪ್ರಪಂಚಕ್ಕೆ ಹಿತನಾಗಿ ದುಷ್ಟ ಸಂ-ಗತಿಯ ನಾನರಿದಿದ್ದೆನೊ ಶ್ರೀರಂಗ ೨
ಮಿತಿಮೀರಿ ಮನ ಹರಿ ಪದವ ನೆನೆಯದೆ ಪರಸತಿಯರಿಗಳುಪಿದೆನೊ ಶ್ರೀರಂಗಕೃತಬುದ್ಧಿಯೊಳು ಉನ್ನತನಾಗಿ ತಾನೆರೆದುಸ್ತುತಿ ಮಾಡಿಕೊಂಡಿದ್ದೆನೈ ಶ್ರೀರಂಗ ೩
ಆಶಾಪಾಶಗಳೆಂಬ ದೇಹಕ್ಕೆ ಸಿಲ್ಕಿ ಸ-ದ್ವಾಸನೆಯನು ಬಿಟ್ಟೆನು ಶ್ರೀರಂಗಮೋಸದಿಂದಾತ್ಮಘಾತುಕನಾಗಿ ಅಪರಾಧವೇಸೊಂದು ಮಾಡಿದೆನಯ್ಯ ಶ್ರೀರಂಗ ೪
ಈಸಲಾರದೆ ಹೊಳೆಯಲಿ ಕಾಸಲಾರದೆ ಒಲೆಯಲಿಸೋಸುತ್ತ ಕುಳಿತಿಹೆನು ಶ್ರೀರಂಗವಾಸುಕಿ ಶಯನ ನೆಲೆಯಾದಿಕೇಶವ ನಿಮ್ಮಾಶ್ರಿತದಾಸರ ದಾಸನಯ್ಯ ಶ್ರೀರಂಗ ೫

ಮನುಷ್ಯ ಎಷ್ಟು ತಿಪ್ಪರಲಾಗ
೨೪೯
ಕಷ್ಟಪಟ್ಟರು ಇಲ್ಲ ಕಳವಳಿಸಿದರು ಇಲ್ಲಭ್ರಷ್ಟ ಮಾನವ ನಿನ್ನ ಹಣೆಬರೆಹವಲ್ಲದೆ ಇಲ್ಲ ಪ
ಸಿರಿವಂತನ ಸ್ನೇಹವ ಮಾಡಿ ನಡೆದರು ಇಲ್ಲಪರಿಪರಿಯಲಿ ವಿದ್ಯೆಯ ಕಲಿತರಿಲ್ಲನರಿಯ ಬುದ್ಧಿಯಿಂದಲಿ ನಡೆದುಕೊಂಡರು ಇಲ್ಲಅರಿಯದೆ ಹಲವ ಹಂಬಲಿಸಿದರು ಇಲ್ಲ ೧
ಕೊಂಡಾಡಿ ಕಾಡಿ ನೀ ಬೇಡಿಕೊಂಡರು ಇಲ್ಲಕಂಡ ಕಂಡವರಿಗೆ ಕೈ ಮುಗಿದರಿಲ್ಲಗಂಡುಗತ್ತರಿಯನು ಕೊರಳಿಗಿಟ್ಟರು ಇಲ್ಲ – ಪ್ರ-ಚಂಡನಾದರು ಇಲ್ಲ, ಪರಿಹಾಸ್ಯವೆಲ್ಲ ೨
ಕಟ್ಟಾಳು ಕಡುಜಾಣನಾಗಿ ಪುಟ್ಟಿದರಿಲ್ಲಬೆಟ್ಟವನು ಕಿತ್ತು ತಂದಿಟ್ಟರಿಲ್ಲಸೃಷ್ಟಿಯೊಳು ಕಾಗಿನೆಲೆಯಾದಿಕೇಶವರಾಯಕೊಟ್ಟವರಿಗುಂಟು ಕೊಡದವರಿಗಿಲ್ಲ೩

ಕಾಡುವ ದುರಿತಗಳಿಂದ
೧೦೩
ಕಾಡುವ ದುರಿತಗಳನು ಬಿಡಿಸೆಂದುಬೇಡಿಕೊಂಬೆನೊ ದೇವ ನಾ ನಿನ್ನ ಪ
ಅಡಿದಾಸನೆಂಬೋ ಎನಗೊಂದು ದೃಢ ಬುದ್ಧಿಯು ಇಲ್ಲದೆಮಡದಿ ಮಕ್ಕಳೆಂಬೊ ಕಡಲೊಳು ಮುಳುಗಿದೆಕಡೆ ಹಾಯಿಸೊ ಎನ್ನೊಡೆಯ ನೀನಾದಡೆ ೧
ಆಸೆಗಳ ಆಧಿಕ್ಯದಿಂದೀ ಪರಿಯ ಯಮಪಾಶಕ್ಕೆ ಒಳಗಾದೆನೋಮೀಸಲೂಳಿಗವ ಮಾಡದೆಯೆ ಪರಿಪರಿಯಕ್ಲೇಶದಿಂದಲಿ ಗಾಸಿಗೊಂಡೆನಯ್ಯ ೨
ಪಾಡುವೆನು ನಿನ್ನ ನಾಮ ಸೀತಾರಾಮಆಡುವೆನು ಮನದಣಿವ ತನಕಬೇಡಿಕೊಂಬೆನೊ ನಿನ್ನ ಭಕ್ತರ ಸೇವೆಯನುಬಾಡದಾದಿಕೇಶವ ಭಕ್ತವತ್ಸಲನೆ೩

ಈ ಕೀರ್ತನೆಯಲ್ಲಿ ಕನಕದಾಸರು ತಿರುಪತಿಗೆ
೫೮
ಕಾಯೊ ಎನ್ನನು ದೇವ ಕಡೆ ಹಾಯಿಸೊ ಕಡಲೊಡೆಯ ಪ
ಕಾಯಯ್ಯ ನೀ ಎನ್ನ ಕಮಲದಳಾಕ್ಷ ಅ
ಒಂದು ಕಾಯಲಿ ನಾನು ಒಲಿದು ದಂಡಿಗೆಯಾದೆಎರಡು ಕಾಯಲಿ ನಾನು ವೀಣೆಯಾದೆಮೂರು ಕಾಯಲಿ ನಾನು ಮುದ್ದು ಕಿನ್ನರಿಯಾದೆನೀಟಾದ ಕಾಯಲಿ ನಾನು ನಾಗಸ್ವರವಾದೆ ೧
ದಪ್ಪ ದಪ್ಪ ಕಾಯಲಿ ದರವೇಶಿಗಳಿಗಾದೆಮಿಕ್ಕ ಕಾಯಲಿ ನಾನು ಸನ್ನೇಸಿಗಳಿಗಾದೆಕೈತಪ್ಪಿ ಬಿದ್ದರೆ ಕದಿರಿಗೆ ಬಿಲ್ಲಾದೆಮತ್ತೆ ದೇವರ ಗುಡಿಗೆ ದೀಪವೇ ನಾನಾದೆ ೨
ಚಿಕ್ಕಂದು ಮೊದಲು ನಾ ಸಾಸೂವೆ ಕಾಯಾದೆಚಿಕ್ಕ ಚಿನ್ಮಯಗೆ ಬುರುಡೆಯಾದೆಉಕ್ಕುವಾ ಹೊಳೆಯಲ್ಲಿ ತೆಪ್ಪವೇ ನಾನಾದೆಚೊಕ್ಕ ಕನಕಪ್ಪನ ಹಿಂದೆ ನಾ ತಿರುಪತಿಗೆ ಬಂದೆ೩

ಬೇರೆಯವರಿಗೆ ಹೋಲಿಸಿಕೊಂಡರೆ
೧೦೪
ಕಾಯೊ ಕರುಣಾಕರನೆ ಕಡು ಪಾಪಿ ನಾನುನ್ಯಾಯವೆಂಬುದು ಎನ್ನೊಳೆಳ್ಳನಿತಿಲ್ಲ ಪ
ಎಣ್ಣೆ ಕೊಪ್ಪರಿಗೆಯೊಳ್ಬಿದ್ದು ಸ್ತುತಿಸಿದವನಲ್ಲಚಿನ್ನಕಶಿಪು ಬಾಧೆಗೊಳಗಾದವನಲ್ಲಬಣ್ಣಗೆಟ್ಟಡವಿಯಲಿ ತಪಸು ಮಾಡಿದವನಲ್ಲಹೆಣ್ಣನೊಲ್ಲದೆ ನಿನ್ನ ಬಂಟನಾದವನಲ್ಲ ೧
ಒಲಿದು ದಾನವನಿತ್ತ ವೈರಿಕುಲದವನಲ್ಲಬಲು ಭಕುತಿಯ ದಾಸಿ ಪುತ್ರ ನಾನಲ್ಲಕಲಹದಲಿ ಪಣೆಗೆ ಬಾಣವ ನೆಡಿಸಿದವನಲ್ಲಕಳವಳದಿ ಕರೆದ ಪಾಂಚಾಲಿ ನಾನಲ್ಲ ೨
ಉರಗರಾಜನ ತೆರದಿ ಹಾಸಿಗಾದವನಲ್ಲಗರುಡನಂದದಿ ಪೊತ್ತು ತಿರುಗಿದವನಲ್ಲಸಿರಿಧರನೆ ಕಾಗಿನೆಲೆಯಾದಿಕೇಶವ ನಿನ್ನಚರಣ ಡಿಂಗರಿಗ ಮಾತ್ರ ನಾನಾಗಿಹೆನೆಂದು ೩

ಹರಿ ಕೀರ್ತನೆಯಿಂದ ಮೋಕ್ಷ
೧೦೫
ಕೀರ್ತನೆಯ ಮಾಡಿ ಕೈವಲ್ಯ ಪಡೆವರು ಜನರು – ಹರಿ ಪ
ಮೂರ್ತಿ ಶ್ರೀ ಚೆನ್ನಕೇಶವನ ಮನದೊಳಗಿಟ್ಟು ಅ
ಹಲುವು ಮಾಯಗಳಿಂದ ಹಂಬಲಿಸಿ ಕೆಡಬೇಡಬಲವಂತರೊಡನೆ ಹಗೆ ಮಾಡಬೇಡಕುಲದಲ್ಲಿ ಜನಿಸಿ ಕುಚೋದ್ಯ ಮಾಡಲುಬೇಡನಲಿದು ಹರಿಯ ಪೊಗಳದ ನಾಲಗೆಯು ಬೇಡ ೧
ಮಂದಮತಿಗಳ ಕೂಡ ಮಹಕಥೆಯ ನುಡಿಬೇಡಯತಿಯಾದ ಮೇಲೆ ಸತಿಸುತರಾಸೆ ಬೇಡ…………………………………………………………ಹಿತ ತಪ್ಪಿ ನಡೆವಂಥ ಹೆಂಡತಿಯು ಬೇಡ ೨
ಕೆಟ್ಟು ಹೋದವರನ್ನು ತಿರುಗಿ ಕರೆತರಬೇಡಮುಟ್ಟಾದ ಮೇಲೆ ಮೋಹಿಸಿ ಕೂಡಬೇಡಭ್ರಷ್ಟನಾಡಿದನೆಂದು ಸಿಟ್ಟಿನಲಿ ನುಡಿಬೇಡಕಷ್ಟದೆಸೆಯೊಳು ಧೈರ್ಯ ಬಿಟ್ಟು ಕೆಡಬೇಡ ೩
ವಿಟಜನರ ಕೂಡಿ ವೇಶ್ಯಾವಾರ್ತೆಗಿಳಿಯಬೇಡಸಟೆ ಹೇಳಿ ಸಂಸಾರ ಕೆಡಿಸಬೇಡತುಟಿ ಮೀರ್ದ ಹಲ್ಲಂತೆ ದೂತ ಎಂದಿಗು ಬೇಡನಿಟಿಲನೇತ್ರನು ನಾನೆನುವ ಜಂಭ ಬೇಡ ೪
ತೀರ್ಥ ಯಾತ್ರೆಗೆ ಪೋಗಿ ತಿರುತಿರುಗಿ ಬಳಲಿ ಕೃ-ತಾರ್ಥನಾದೆನು ಎಂಬ ಘನತೆ ಬೇಡಪಾರ್ಥಸಾರಥಿ ಕಾಗಿನೆಲೆಯಾದಿಕೇಶವನಸಾರ್ಥಕದಿ ಭಜಿಸಿ ಸುಖಿಯಾಗು ಮನುಜ ೫

ವ್ಯಾಸರಾಯರ ಶಿಷ್ಯರಾದ ಮೇಲೆ
೨೦೧
ಕುಲ ಕುಲ ಕುಲವೆನ್ನುತಿಹರು ಪ
ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ ಅ
ಕೆಸರೊಳು ತಾವರೆ ಪುಟ್ಟಲು ಅದ ತಂದುಬಿಸಜನಾಭನಿಗರ್ಪಿಸಲಿಲ್ಲವೆಹಸುವಿನ ಮಾಂಸದೊಳುತ್ಪತ್ತಿ ಕ್ಷೀರವವಸುಧೆಯೊಳಗೆ ಭೂಸುರರುಣಲಿಲ್ಲವೆ೧
ಮೃಗಗಳ ಮೈಯಲಿ ಪುಟ್ಟಿದ ಕತ್ತುರಿಯತೆಗೆದು ಪೂಸುವರು ದ್ವಿಜರೆಲ್ಲರುಬಗೆಯಿಂದ ನಾರಾಯಣನ್ಯಾವ ಕುಲಅಗಜ ವಲ್ಲಭನ್ಯಾತರ ಕುಲದವನು ೨
ಆತ್ಮ ಯಾವ ಕುಲ ಜೀವ ಯಾವ ಕುಲತತ್ತ್ವೇಂದ್ರಿಯಗಳ ಕುಲ ಪೇಳಿರಯ್ಯಆತ್ಮಾಂತರಾತ್ಮ ನೆಲೆಯಾದಿಕೇಶವನುಆತನೊಲಿದ ಮೇಲೆ ಯಾತರ ಕುಲವಯ್ಯ ೩

ಮೇಲು ಕುಲ ಮತ್ತು ಕೀಳು ಕುಲ
೨೦೨
ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮಕುಲದ ನೆಲೆಯನೇನಾದರೂ ಬಲ್ಲಿರ ಪ
ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲಅಟ್ಟು ಉಣ್ಣದ ವಸ್ತುಗಳಿಲ್ಲಗುಟ್ಟು ಕಾಣಿಸ ಬಂತು ಹಿರಿದೇನು ಕಿರಿದೇನುನೆಟ್ಟನೆ ಸರ್ವಜ್ಞನ ನೆನೆ ಕಂಡ್ಯ ಮನುಜ ೧
ಜಲವೆ ಸಕಲ ಕುಲಕ್ಕೆ ತಾಯಲ್ಲವೆಜಲದ ಕುಲವನೇನಾದರೂ ಬಲ್ಲಿರಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹನೆಲೆಯನರಿತು ನೀ ನೆನೆ ಕಂಡ್ಯ ಮನುಜ ೨
ಹರಿಯೆ ಸರ್ವೋತ್ತಮ ಹರಿಯೆ ಸರ್ವೇಶ್ವರಹರಿಮಯವೆಲ್ಲವೆನುತ ತಿಳಿದುಸಿರಿ ಕಾಗಿನೆಲೆಯಾದಿಕೇಶವರಾಯನಚರಣ ಕಮಲವ ಕೀರ್ತಿಸುವನೆ ಕುಲಜ ೩

ತಮ್ಮ ಗುರುವಾದ ವ್ಯಾಸರಾಯರನ್ನು ಸ್ತುತಿಸುವ
೫೫
ಕೂಸನು ಕಂಡೀರ್ಯಾ ಸುಪ್ರ-ಹ್ಲಾದನ ಕಂಡೀರ್ಯಾ ನಮ್ಮಕೂಸನು ಕಂಡೀರ್ಯಾ ಪ
ರಾಕ್ಷಸ ಕುಲದಲಿ ಜನಿಸಿತು ಕೂಸುರಾಧಾಕೃಷ್ಣನ ಭಜಿಸಿತು ಕೂಸುರಾಗ ದ್ವೇಷಗಳ ಬಿಟ್ಟಿತು ಕೂಸುರಾಮ ಪಾದವ ನೆನೆಯುವ ಕೂಸು ೧
ಘನ ಹರಿ ಕಂಬದಿ ತೋರಿತು ಕೂಸುಗಳಿಸಿತು ಕೃಷ್ಣನ ಪ್ರೇಮವ ಕೂಸುಘನ ಪಂಪಾಲಯದಿ ವಾಸಿಪ ಕೂಸುಗಣೆ ಗೋಪಾಲನ ಪ್ರೀತಿಯ ಕೂಸು೨
ಪ್ರಸಿದ್ಧ ವ್ಯಾಸರಾಯರೆಂಬ ಕೂಸುಪ್ರವೀಣ ವಿದ್ಯೆಯೊಳೆನಿಸಿದ ಕೂಸುಪ್ರಹ್ಲಾದನೆಂಬುವ ಆಹ್ಲಾದ ಕೂಸುಪ್ರಸನ್ನ ಕಾಗಿನೆಲೆಯಾದಿಕೇಶವನ ಕೂಸು೩

ಭಗವತ್ ಕೃಪೆ ಒದಗುವ ತನಕ
೧೮೦
ಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರುತಿರು ಹೇ ಮನುಜ ಪ
ಕ್ಲೇಶಪಾಶಂಗಳ ಹರಿದು ವಿಲಾಸದಿಶ್ರೀಶನ ನುತಿಗಳ ಪೊಗಳುತ ಮನದೊಳುಅ
ಮೋಸದಿ ಜೀವರ ಘಾಸಿ ಮಾಡಿದ ಪಾಪಕಾಶಿಗೆ ಹೋದರೆ ಹೋದೀತೆಶ್ರೀಶನ ಭಕುತರ ದೂಷಿಸಿದಾ ಫಲಕಾಸು ಕೊಟ್ಟರೆ ಬಿಟ್ಟೀತೆಭಾಷೆಯ ಕೊಟ್ಟು ನಿರಾಶೆಯ ಗೈದ ಫಲಕ್ಲೇಶಗೊಳಿಸದೆ ಇದ್ದೀತೆಭೂಸುರಸ್ವವ ಹ್ರಾಸ ಮಾಡಿದ ಫಲಏಸೇಸು ಜನುಮಕು ಬಿಟ್ಟೀತೆ ೧
ಜೀನನ ವಶದೊಳು ನಾನಾ ದ್ರವ್ಯವಿರೆದಾನಧರ್ಮಕೆ ಮನಸಾದೀತೆಹೀನ ಮನುಜನಿಗೆ ಜ್ಞಾನವ ಬೋಧಿಸೆಹೀನ ವಿಷಯ ಅಳಿದ್ಹೋದೀತೆಮಾನಿನಿ ಮನಸದು ನಿಧಾನವಿರದಿರೆಮಾನಾಭಿಮಾನಗಳುಳಿದೀತೆಭಾನುಪ್ರಕಾಶನ ಭಜನೆಯ ಮಾಡದಹೀನಗೆ ಮುಕುತಿಯು ದೊರಕೀತೆ೨
ಸತ್ಯಧರ್ಮಗಳ ನಿತ್ಯವು ಬೋಧಿಸೆತೊತ್ತಿನ ಮನಸಿಗೆ ಸೊಗಸೀತೆತತ್ವದ ಅರ್ಥವ ವಿಚಿತ್ರದಿ ಪೇಳೆಕತ್ತೆಯ ಚಿತ್ತಕೆ ಹತ್ತೀತೆಪುತ್ಥಳಿ ಬೊಂಬೆಯ ಚಿತ್ರದಿ ಬಣ್ಣಿಸಿಮುತ್ತು ಕೊಟ್ಟರೆ ಮಾತನಾಡೀತೆಕತ್ತುರಿ ತಿಲಕವನೊತ್ತಿ ಫಣೆಯೊಳಿಡೆಅರ್ತಿಯ ತೋರದೆ ಇದ್ದೀತೆ ೩
ನ್ಯಾಯವ ಬಿಟ್ಟನ್ಯಾಯವ ಪೇಳುವನಾಯಿಗೆ ನರಕವು ತಪ್ಪೀತೆಬಾಯಿ ಕೊಬ್ಬಿನಲಿ ಬಯ್ಯುವ ಮನುಜಗೆಘಾಯವಾಗದೆ ಬಿಟ್ಟೀತೆತಾಯಿತಂದೆಗಳ ನೋಯಿಸಿದವನಿಗೆಮಾಯದ ಮರಣವು ತಪ್ಪೀತೆಮಾಯಾಜಾಲವ ಕಲಿತ ಮನುಜನಿಗೆಕಾಯ ಕಷ್ಟವು ಬಿಟ್ಟೀತೆ ೪
ಸಾಧು ಸಜ್ಜನರ ನೋಯಿಸಿದ ಮಾಯಾವಾದಿಗೆ ನರಕವು ತಪ್ಪೀತೆಬಾಧಿಸಿ ಪರರರ್ಥವ ದೋಚುವವಗೆವ್ಯಾಧಿಯು ಕಾಡದೆ ಬಿಟ್ಟೀತೆಭೇದವೆಣಿಸಿ ಬಲು ಕ್ಷುದ್ರವ ಕಲಿತರೆಮೋದವೆಂದಿಗು ಆದೀತೆಕದ್ದು ಒಡಲ ಪೊರೆವವನ ಮನೆಯೊಳುಇದ್ದದ್ದು ಹೋಗದೆ ಉಳಿದೀತೆ೫
ಅಂಗಜ ವಿಷಯಗಳನು ತೊರೆದಾತಗೆಅಂಗನೆಯರ ಸುಖ ಸೊಗಸೀತೆಸಂಗ ದುಃಖಗಳು ಹಿಂಗಿದ ಮನುಜಗೆಶೃಂಗಾರದ ಬಗೆ ರುಚಿಸೀತೆಇಂಗಿತವರಿತ ನಿಸ್ಸಂಗಿ ಶರೀರ ವ-ಜ್ರಾಂಗಿಯಾಗದೆ ತಾನಿದ್ದೀತೆಮಂಗಳ ಮಹಿಮನ ಅಂಘ್ರಿಯ ಕಾಣದಮಂಗಗೆ ಮುಕುತಿಯು ದೊರಕೀತೆ ೬
ಕರುಣಾಮೃತದಾಭರಣವ ಧರಿಸಿದಶರಣಗೆ ಸಿರಿಯು ತಪ್ಪೀತೆಕರುಣ ಪಾಶದುರವಣೆ ಹರಿದಾತಗೆಶರಣರ ಕರುಣವು ತಪ್ಪೀತೆಅರಿತು ಶಾಸ್ತ್ರವನಾಚರಿಪ ಯೋಗ್ಯಗೆಗುರು ಉಪದೇಶವು ತಪ್ಪೀತೆವರ ವೇಲಾಪುರದಾದಿಕೇಶವನಸ್ಮರಿಸುವನಿಗೆ ಮೋಕ್ಷ ತಪ್ಪೀತೆ ೭

ಕನಕದಾಸರು ಲಿಂಗವಂತರ ಇಷ್ಟಲಿಂಗ
೧೮೧
ಕೇಳಿರೈ ಶಿವಶರಣರು ಹೇಳಲಂಜಿಕೆ ಆವುದು ಪ
ಭಾಳನೇತ್ರನ ಭಕ್ತರಿಂತು ನೋಡಿಕೊಳ್ಳಿರೈಅ
ಮೂರುಲಿಂಗ ತನ್ನೊಳು ಮುಖ್ಯವಾಗಿರುವಾಗಬೇರೊಂದು ಲಿಂಗ ಬೆಲೆ ಮಾಡಿ ತಂದುತೋರುವಂಗೈಲಿಟ್ಟು ತೋಯ ಪುಷ್ಪವ ನೀಡಿಯಾರ ಮನಕೊಪ್ಪಿಸುವರೀ ಶೀಲವಂತರು ೧
ಲಿಂಗವೊಂದು ತನ್ನೊಳು ಲೀನವಾಗಿರುವಾಗಅಂಗಭವಿಗಳು ಕೂಡಿ ಆಡಿಕೊಂಬರುಅಂಗದನುಭವದರ್ಥವನರಿಯದ ಇಂತಹಭಂಗಿ ಹುಚ್ಚರೆಲ್ಲ ಶಿವನ ಭಕ್ತರಹರೆ ೨
ನಾಗಲಿಂಗ ತನ್ನೊಳು ನಾಟ್ಯವಾಡುತಲಿರಲುಆಗಮಿಸಿದ ಲಿಂಗವ ಬೆದಕಲೇತಕ್ಕೆಕಾಗಿನೆಲೆಯಾದಿಕೇಶವನೆ ನಾಗಶಯನನಾಗಿರಲು ಬೇರೊಂದನರಸಲೇತಕ್ಕೆ ೩

೧೦೬
ಕೈಯ ತೋರಿದ ಬಗೆಯ, ಅಮ್ಮಮ್ಮ ಯಾದವಗಿರಿ ಕಲ್ಯಾಣಿ ನೀನು ಪ
ಸಕಲ ಜನರು ಕಾಣುತಿರಲುವಿಕೃತಿ ವತ್ಸರ ಚೈತ್ರ ದ್ವಿತೀಯೇಕಾದಶಿಯೊಳುಪ್ರಕಟಿತಾ ಶುಕ್ರವಾರದೊಳು ತನ್ನಭಕುತರಿಗುತ್ಸಾಹ ಸಂಧ್ಯಕಾಲದೊಳು ೧
ಕಡಗ ಕಂಕಣ ಗೀರುಗಂಧ ಮಿಗೆಕಡು ಚೆಲುವಿನ ಬಣ್ಣ ಕುಪ್ಪುಸದಿಂದನಡು ಬೆರಳುಂಗುರದಿಂದ ಕೈಯಬೆಡಗ ನೋಡಿದ ಜನರಿಗೆ ಪುಟ್ಟಿತಾನಂದ ೨
ಜನರೆಲ್ಲ ಯದುಶೈಲೋತ್ಸವವ ಕೇಳಿಘನ ಕಾಲದೇಶದಜಿತ ಭಯವನಿಮಗೆ ಬಿನ್ನೈಪೆನು ನಯವ ಕೊಟ್ಟಮನೋಹರುಷದಿ ನಮಗಿತ್ತ ವೈಭವವ ೩
ಚೆಲುವರಾಯನ ರಥೋತ್ಸವದೀ ತೀರ್ಥಕೊಲಿದು ಗಂಗಾದೇವಿ ಬರುವ ಸಂಭ್ರಮವನೆಲೆಯ ಸರ್ವರಿಗನುಭವವ ಕೋಟಿಮನೋಹರುಷವನ್ನು ನಮಗಿತ್ತ ವೈಭವವ ೪
ನಿನ್ನ ಮೋಹದ ಕಂದ ನಾನೊ ಕೇಳೆನಿನ್ನೊಮ್ಮೆ ದಿವ್ಯ ಹಸ್ತಂಜವನೀವಚೆನ್ನಿಗ ವರದ ವೆಂಕಟಾದಿಕೇಶವನುತನ್ನ ನಂಬಿದ ಭಕ್ತರಾಶ್ರಿತ ಕಾಮಧೇನು ೫

ನಿಂದಾಸ್ತುತಿ ರೂಪದಲ್ಲಿರುವ
೨೧೫
ಕೊಕೊಕೋ ಎನ್ನಿರೊ ಕುಂಭಿನಿಯವರೆಲ್ಲಕೊಕೊಕೋ ಎನ್ನಿರೊ – ನಮ್ಮ ಪ
ಗೋಕುಲದೊಳಗೊಬ್ಬ ಕಳ್ಳ ಬರುತಾನೆಂದುಕೊಕೊಕೋ ಎನ್ನಿರೊ ಅ
ಹೊದ್ದಿ ಮೊಲೆಯನುಂಡವಳಸುವನೆ ಕೊಂದಮುದ್ದುಗಾರ ಕಳ್ಳ ಕೊಕೊಕೋ ಎನ್ನಿರೊಕದ್ದುಕೊಂಡೊಯ್ವ ರಕ್ಕಸರನೆಲ್ಲರ ಕಾಲಲೊದ್ದೊರಸಿದ ಕಳ್ಳ ಕೊಕೊಕೋ ಎನ್ನಿರೊಹದ್ದು ಹಗೆಯ ಹಾಸಿಗೆಯ ಮೇಲೊರಗಿದಮುದ್ದುಗಾರ ಕಳ್ಳ ಕೊಕೊಕೋ ಎನ್ನಿರೊಅರ್ಧದೇಹನ ಕೈಯ ತಲೆಯ ಕಪಟದಿಂದಕದ್ದು ಬಿಸುಟ ಕಳ್ಳ ಕೊಕೊಕೋ ಎನ್ನಿರೊ ೧
ಕೆಂಜಾಜಿಯ ಮಣಿ ಮಲ್ಲಿಗೆ ದಂಡೆಯರಂಜೆ ಕದ್ದ ಕಳ್ಳ ಕೊಕೊಕೋ ಎನ್ನಿರೊಗುಂಜಿಯ ದಂಡೆಯ ಕಲ್ಲಿಯ ಚೀಲದಮಂಜು ಮೈಯ್ಯ ಕಳ್ಳ ಕೊಕೊಕೋ ಎನ್ನಿರೊಅಂಜದೆ ಗೊಲ್ಲರ ಹಳ್ಳಿಯೊಳಗೆ ಹಾಲನೆಂಜಲಿಸಿದ ಕಳ್ಳ ಕೊಕೊಕೋ ಎನ್ನಿರೊಸಂಜೆ ಬೈಗಿನಲ್ಲಿ ಕರೆಯುವ ಸತಿಯರಅಂಜಿಸಿದ ಕಳ್ಳ ಕೊಕೊಕೋ ಎನ್ನಿರೊ ೨
ಕೇಸರಿ ಎಂಬ ರಕ್ಕಸರನೆಲ್ಲರ ಕೊಂದವೇಷಧಾರಿ ಕಳ್ಳ ಕೊಕೊಕೋ ಎನ್ನಿರೊಮೋಸದಿ ಬಲಿಯ ದಾನವ ಬೇಡಿ ಅನುದಿನಬೇಸರಿಸಿದ ಕಳ್ಳ ಕೊಕೊಕೋ ಎನ್ನಿರೊಮೀಸಲ ಅನ್ನವ ಕೂಸಾಗಿ ಸವಿದುಂಡವೇಷಧಾರಿ ಕಳ್ಳ ಕೊಕೊಕೋ ಎನ್ನಿರೊಸಾಸಿರ ನಾಮಕ್ಕೆ ಹೆಸರಾದ ಚಪ್ಪನ್ನದೇಶದ ದಾರಿಗಳ್ಳ ಕೊಕೊಕೋ ಎನ್ನಿರೊ ೩
ಆಕಳೊಳಾಡಿ ಪರಲೋಕಕೆ ನಡೆದಂಥಆಕೆವಾಳ ಕಳ್ಳ ಕೊಕೊಕೋ ಎನ್ನಿರೊಭೂಕಾಂತೆಯ ಸೊಸೆಯರನೆತ್ತೆ ಬಲುಹಿಂದನೂಕಿ ತಂದ ಕಳ್ಳ ಕೊಕೊಕೋ ಎನ್ನಿರೊಗೋಕುಲದೊಳು ಪುಟ್ಟಿ ಗೊಲ್ಲರೆಲ್ಲರ ಕೈಲಿಸಾಕಿಸಿಕೊಂಡ ಕಳ್ಳ ಕೊಕೊಕೋ ಎನ್ನಿರೊಸಾಕಾರನಾಗಿ ಈ ಲೋಕವನೆಲ್ಲವಆಕ್ರಮಿಸಿದ ಕಳ್ಳ ಕೊಕೊಕೋ ಎನ್ನಿರೊ೪
ಕ್ಷೀರವಾರಿಧಿ ವೈಕುಂಠನಗರಿಯನುಸೇರಿಸಿದ ಕಳ್ಳ ಕೊಕೊಕೋ ಎನ್ನಿರೊದ್ವಾರಾವತಿಯನು ನೀರೊಳು ಬಚ್ಚಿಟ್ಟಊರುಗಳ್ಳ ಬಂದ ಕೊಕೊಕೋ ಎನ್ನಿರೊದ್ವಾರಕೆಯಾಳುವ ಉಭಯದಾಸರ ತನ್ನಊರಿಗೊಯ್ದ ಕಳ್ಳ ಕೊಕೊಕೋ ಎನ್ನಿರೊಕಾರಣಾತ್ಮಕ ಕಾಗಿನೆಲೆಯಾದಿಕೇಶವಕ್ಷೀರ ಬೆಣ್ಣೆಯ ಕಳ್ಳ ಕೊಕೊಕೋ ಎನ್ನಿರೊ ೫

‘ತೃಣಮಪಿ ನ ಚಲತಿ ತೇನ ವಿನಾ’
೧೦೭
ಕೊಡಲು ನೀನಾರು ಬಿಡಲು ನೀನಾರುಪೊಡವಿಗೊಡೆಯ ಶ್ರೀಹರಿ ಲೀಲೆಯದು ಪ
ಮಾಡಲು ನೀನಾರು ಮಾಡೆನಲು ನೀನಾರುಮಾಡದವರಿಂದ ಮಾಡಿಪ ಮೋಡಿರೂಪಮಾಡಬೇಕೆಂಬರ ತಡೆದು ಕಾಡಿಪನವನುಹಿಡಿಗೆ ಅಡಗದಾ ಹಿರಣ್ಯಗರ್ಭನವನಿರೆ
ಪಾಡುವ ಪದ್ಯಗಳಲಿ ಭಾವವಾಗಿರುವನೋಡುವ ನೋಟಗಳ ನೋವು ಗ್ರಹಿಸುವನುಡಿವ ನುಡಿಯ ತಾತ್ಪರ್ಯವನರಿವನಾಡಿ ನರಗಳಂತೊಲಿವ ಆದಿಕೇಶವರಾಯ ೨

ಹರಿದಾಸರ ಮಹಿಮೆಯನ್ನು ಸಾರುವ
ಹರಿದಾಸಮಹತಿ
೧೬೨
ಕ್ಷಮಿಸುವುದೆಮ್ಮ ತಪ್ಪುಗಳ ಸ್ವಾಮಿಕ್ಷಮಶೀಲವೆಂಬ ದಾಸೋಹ ಬಿರುದಿನೊಳು ಪ
ಕಮಲಜ ಹರಿ ರುದ್ರ ವಿಮಲ ಸುರರು ಸಾಧುಸಮರಲ್ಲವೆಂಬ ಶ್ರುತಿ ಸರಿಬಂತು ಸ್ವಾಮಿ ಅ
ಶರಧಿಯೊಳಿರುತಿರ್ಪ ಚರಜೀವಿಗಳ ಗುಣಾ-ಕರಿಸಿ ಇಷ್ಟೆಂದು ಪೇಳಲುಬಹುದುಸಿರಿವರದನ ಅಂತಃಕರಣಕೊಪ್ಪಿದ ನಿಮ್ಮಇರವ ತಿಳಿಯಲು ನರರ ವಶವೆ ಸ್ವಾಮಿ೧
ಆಢಕದೊಳಗಂಬರವನೆ ಅಳೆದು ಲೆಕ್ಕಕೂಡಿದ ಮಿತಿಯ ಪೇಳಲು ಬಹುದುರೂಢಿಗೀಶನ ಸೇವೆ ಮಾಡಿದ ಮುಕ್ತರಈಡಿಲ್ಲವೆಂಬುದನಿತರರರಿವರೆ ಸ್ವಾಮಿ ೨
ಈ ಶರೀರದೊಳಗಿಪ್ಪ ಕೇಶಗಳೆಲ್ಲವನುಬೇಸರಿಸದೆಣಿಸಿ ಹೇಳಲು ಬಹುದುಶೇಷಶಯನ ಕಾಗಿನೆಲೆಯಾದಿಕೇಶವದಾಸರ ಮಹಿಮೆ ಕಾಣಲಿಕಾಗದು ಸ್ವಾಮಿ ೩

ಅಶಾಶ್ವತ ದೈಹಿಕ
೧೦೮
ಗುರು ಹಿರಿಯರ ಸೇವಿಸಿಹರಿಯ ಮನದೊಳಗಿರಿಸಿಪರಗತಿಯ ಬೇಗ ಸಾಧಿಸಿಕೊಳ್ಳಿರೊ ಪ
ಲೆಕ್ಕವಿಲ್ಲದ ದೇಹವೆಂಬ ಸೆರೆಮನೆಯೊಳಗೆಸಿಕ್ಕಿ ಬಹುಕಾಲ ಬಳಲದೆರಕ್ಕಸಾರಿಯ ಭಕ್ತರೊಳು ಸೇರಿ ನೀವು ಸೆರೆಯಿಕ್ಕದಂಥವನ ಮೊರೆ ಹೋಗಿರೊ ೧
ಕಂಬಳಿಯ ಬುತ್ತಿಯಂತೀ ದೇಹದೊಳಗೆಲ್ಲತುಂಬಿರುವ ಸುಖವೆಲ್ಲ ದುಃಖಭರಿತಅಂಬುಜಾಕ್ಷನ ದಿವ್ಯ ಮಂಗಳ ಕಥಾಮೃತವನುಂಬ ಭ್ರಮರಕೆ ಸರಿಗಾಣೆನೊ ೨
ಮಕ್ಕಳುಗಳಳುವಾಗ ಮಡದಿಯರು ಜರಿವಾಗಬಿಕ್ಕುಗಳು ಬಂದು ಬೈವಾಗಇಕ್ಕಿ ಪೊರೆವುದಕೆ ಗತಿಯಿಲ್ಲದಾ ದರಿದ್ರರಿಗೆಸೌಖ್ಯವೆತ್ತಣದೊ ಮನುಜರಿಗೆ ೩
ತಾಯ ಮಾರಿ ತೊತ್ತನು ಕೊಂಬ ಪಾಮರರಂತೆಹೇಯ ಕುಜನರಾ ಚರಣಕೆರಗಿಮಾಯಾಪತಿಯಂಘ್ರಿಗಳ ನೆನೆಯಲೊಲ್ಲದ ನರನಆಯುಷ್ಯ ಬರಿದೆ ಹೋಯಿತಲ್ಲ ೪
ಅಯಿವರಿತ್ತೊಡವೆಯ ಅವರವರೊಯ್ಯುವರು ಮ-ತ್ತಯಿವರೆಂಬುವರು ತೊಲಗುವರುಮೈಯ ನೆತ್ತರು ಕೂಡ ಹರಿದು ಹೋಹುದು ನಿಮ್ಮಕೈಯ ಪಿಡಿದೆತ್ತುವರ ನಾನು ಕಾಣೆ ೫
ಬಲಗುಂದಿ ನೆಲ ಹಿಡಿಯೆ ರೋಗರುಜಿನಗಳೆಂಬಕಾಲನ ಭಟರು ಬಂದು ಕವಿದುಸಾಲಾಗಿ ನಿಂತಾಗ ಮುಖ ಗಂಟಲೊಳಗಣನಾಲಗೆಯ ನಾದ ಎಲ್ಲಿಹುದೊ ೬
ಆಗಲೇ ಹರಿನಾಮ ನಾದದಿಂದೆಚ್ಚತ್ತುನಾಗಶಯನನ ಪುರದ ಪಥವಆಗಮಜ್ಞರ ಕೇಳಿ ತಿಳಿದುಕೊಳ್ಳಿರೊ ನಿಮಗೆಈ ಗಾಳಿ ದೀಪ ಸ್ಥಿರವಲ್ಲ ೭
ಜರೆಯೆಂದು ಕಡೆಯಲ್ಲಿ ಗೊರಗೊರನೆ ಉಸಿರಾಡೆಶರೀರದ ಸಂಬಂಧಗಳಕಟಾತರುಣಿಯರ ಮ್ಯಾಲಾಸೆ ತಮ್ಮ ಹಿತವನರಿಯದೆಬರಿದೆ ಭವದಲ್ಲಿ ಬಳಲುವಿರಿ ೮
ವೇದ ಶಾಸ್ತ್ರವನೋದಲಿಲ್ಲ ಜಪ ಹೋಮಾದಿಸಾಧು ಕರ್ಮಗಳ ಸರಕು ಇಲ್ಲಮಾಧವನ ಪೂಜೆ ಒಮ್ಮೆಯೂ ಮಾಡಿಲ್ಲ ಹರಿಪಾದ ತೀರ್ಥದಾ ವ್ರತಗಳಿಲ್ಲ ೯
ಊಧ್ರ್ವಪುಂಡ್ರಗಳಿಲ್ಲ ಹರಿಯ ಲಾಂಛನವಿಲ್ಲಪದ್ಮ ತುಳಸಿಯಾ ಸರಗಳಿಲ್ಲಸದ್ಧರ್ಮ ಪಥವೆತ್ತ ವಿಷಯಾಂಧ ಕೂಪದೊಳುಬಿದ್ದು ಪೊರಳುವ ಮರುಳಿದೆತ್ತ ೧೦
ಏಕಾದಶಿಯ ಮಾಡಿ ಯತಿಗಳೊಡನೆ ಆಡಿಪೋಕ ವೃತ್ತಿಗಳನೀಡಾಡಿಶ್ರೀಕಾಂತನನು ಬೇಡಿ ಸುಕೃತಿಗಳನೆ ಕೂಡಿಆ ಕೃಷ್ಣನಂಘ್ರಿಗಳ ಪಾಡಿ೧೧
ಸಕ್ತಿಯಿಂ ಹರಿಯ ಪೊಗಳಿ ಅಡಿಯಲುರುಳಿ ಶುಷ್ಕಭುಕ್ತಿಗಳ ಮೇಲುಗುಳಿ ದೂರ ನಿಲ್ಲಿಭಕ್ತಿ ಜ್ಞಾನಗಳಿರಲಿ ಮತ್ರ್ಯ ಪಥದಿಂ ಮರಳಿಮುಕ್ತಿ ಮಾರ್ಗದಲಿನ್ನು ತೆರಳಿ ೧೨
ಕೊಳ್ಳೆನಾಯಕ ಬಂದು ಕೋಟೆ ಕೆಡಹುವ ಮುನ್ನಕಳ್ಳರೈವರ ಕಾರಣದಿಂದಉಳ್ಳ ಪುಣ್ಯಾರ್ಥಗಳು ಕೊಳ್ಳೆ ಹೋಗದ ಮುನ್ನಫುಲ್ಲನಾಭನ ಅಡಿಗೆ ಮೊರೆ ಹೋಗಿರೊ೧೩
ಮಲಮೂತ್ರ ರಕ್ತ ಮಾಂಸಗಳ ಬಂಬಲು ಮೆತ್ತಿಎಲುಬಿನಾ ಬಲದಿಂದ ಗೂಡು ಮಾಡಿಬೆಳೆಸಿದೀ ತನುವೆಂಬ ನರಕದಾಸೆಯ ಬಿಟ್ಟುನಳಿನನಾಭನ ಪಾದ ಸೇರಿರೋ ೧೪
ಒಂಬತ್ತು ರಂಧ್ರಗಳ ತನುವೆಂಬ ಮನೆಯಲ್ಲಿತುಂಬಿರುವ ವಾಯು ಸ್ಥಿರವಲ್ಲನಂಬಿದರ ಪೊರೆವ ನೆಲೆಯಾದಿಕೇಶವನ ಪಾದಾಂಬುಜವನು ಸೇರಿ ಬದುಕಿರೊ ೧೫

ಕೃಷ್ಣನ ಕೀಟಲೆ ಪೋಲಿತನಗಳನ್ನು ಸಹಿಸದೆ
೨೧೬
ಗೊಲ್ಲರಾ ಮನೆಯ ಪೊಕ್ಕುಗುಲ್ಲು ಮಾಡುವುದೇನಲ – ಬಲುಲಲ್ಲೆ ಮಾಡುವುದೇನಲ ಪ
ಹಾಲು ಮೊಸರು ಘೃತವು ನೆಲುವಿನಮೇಲೆ ಇಟ್ಟ ಬೆಣ್ಣೆಯಬಾಲಕರಿಗಿಲ್ಲದಲೆ ಸುರಿದುಹಾಲುಗಡಿಗೆಯನೊಡೆದಲ ೧
ಸಣ್ಣ ಮಕ್ಕಳ ಕಣ್ಣ ಮುಚ್ಚಿಹುಣ್ಣಿಮೆ ಬೆಳುದಿಂಗಳಲಿಬಣ್ಣ ಬಣ್ಣದ ಮಾತನಾಡಿಸಣ್ಣ ಕೆಲಸಕ್ಕೆಳೆದಲ ೨
ಸುದತಿಯೊಬ್ಬಳು ದಧಿಯ ಮಥಿಸುತಒದಗಿದ ಬೆಣ್ಣೆಯ ತೆಗೆಯಲುಮದನ ಕದನಕೆ ಕೆಡಹಿ ಮಾನಿನಿಒದರಿದರು ನೀ ಬಿಡೆಯಲ ೩
ಕಿಟ್ಟ ನಾ ನಿನಗೆಷ್ಟು ಹೇಳಲಿದುಷ್ಟ ಬುದ್ಧಿಯ ಬಿಡೆಯಲಇಷ್ಟು ಹರಳಿಸಿ ರಟ್ಟು ಯಾತಕೆಬಿಟ್ಟು ಮಧುರೆಗೆ ಪೋಗೆಲ೪
ಕೇಶವ ವಿಠ್ಠಲ ನಿನ್ನನುಕೂಸು ಅಂದವರ್ಯಾರಲೊ – ಹಸುಗೂಸು ಅಂದವರ್ಯಾರಲೊದೇಶದೊಳಗೆ ವಾಸವಾಗಿಹ ಬೇಲೂರು ಚೆನ್ನಕೇಶವ ೫

ಎಲ್ಲ ರಾಜಸ ತಾಮಸ ಮಾರ್ಗದ
೨೦೩
ಗೋವಿಂದ ಗೋವಿಂದ ಎನ್ನಲರಿಯದೆ – ವೃಥಾನೋವಿಂದ ಭಂಗವ ಪಡುವುದುಚಿತವೆ ? ಪ
ಕ್ಷೀಣ ಶಾಸ್ತ್ರಾರ್ಥವನು ಪರಿಗ್ರಹಿಸಿ ನಿಖಿಲ ಕುರಿಕೋಣಗಳ ತಲೆಚೆಂಡ ಕುಟ್ಟಿಸುತಪ್ರಾಣ ಹತ್ಯವ ಮಾಳ್ಪುದಾವ ಸತ್ಕರ್ಮ – ನಾರಾ-ಯಣನ ನಾಮಸ್ಮರಣೆ ಮಾಡು ಮನವೆ ೧
ಖಂಡವನು ಕೊಯ್ದು ಕೊಡಬೇಡ ದಳ್ಳುರಿಯಗ್ನಿಕುಂಡವನು ಹೊಕ್ಕು ಹೊರಡುವುದುಚಿತವೆಭಂಡರಂದದಿ ಬತ್ತಲೆಯೆ ಬರುವುದಾವಾಟಪುಂಡರೀಕಾಕ್ಷನ ನೆನೆ ಕಂಡ್ಯ ಮನವೆ ೨
ಕುಟ್ಟಿಕೊಳ್ಳದಿರಿ ಜಟ್ಟಿ ಗುಂಡಿನಲಿ, ಶಸ್ತ್ರವನುಚಿಟ್ಟಿ ಕೊಳ್ಳದಿರಿ, ಬೆನ್ನಲಿ ಸಿಡಿಯನುಕಟ್ಟಿ ತೂಗಿಸಿಕೊಳ್ಳದಿರಿ ಕರಟಕದಂತೆಗುಟ್ಟಿನಲಿ ಗೋಪಾಲಕನ ಸ್ಮರಿಸು ಮರುಳೆ ೩
ತೊಗಲ ಬಿಲ್ಲೆಗಳ ಕೊರಳಲ್ಲಿ ಕಟ್ಟಿಕೊಂಡುಹಗಲಿರುಳು ಅನ್ನಪಾನಕೆ ಹೋಗದೆಮೃಗವೈರಿಯಂತೇಕೆ ಕಿಸುಕೆಲೆವ ರಂಪಾಟಜಗದಾಧಿಪತಿಯ ನಾಮ ಸ್ಮರಿಸು ಮರುಳೆ ೪
ಉತ್ತಮರು ಸುರೆಯನೀಂಟುವರೆ ತರಹರಿಸಿ ಮದೋ-ನ್ಮತ್ತರಾಗಿ ಅಸಭ್ಯ ಶಬ್ದವ ನುಡಿವರೆಸತ್ತ ಹೆಣದಂತೆ ಬಿದ್ದಿಹುದಾವ ನೀತಿ ಪುರು-ಷೋತ್ತಮನ ನಾಮ ಸ್ಮರಣೆಯ ಮಾಡು ಮನವೆ ೫
ವೇದೋಕ್ತ ಪೂಜೆಯಲಿ ತೃಪ್ತಿಪಟ್ಟರೆ ನೀವುಅದರಿಂದ ಫಲವೇನು ಪೇಳಿರಯ್ಯನಾದವನು ಕೇಳ್ದ ಹರಿಣದಂದದಿ ಕೆಡದೆ ಮಧುಸೂದನನ ನಾಮ ಸ್ಮರಣೆಯ ಮಾಡು ಮರುಳೆ ೬
ನಿಂದಾಪವಾದ ಘಟಿಸುವುದೈಸೆ ಇದರಿಂದಮುಂದೆ ಮುಕ್ತಿಯು ನಿಮಗೆ ಸಾಧ್ಯವಹುದೆತಂದೆ ಶ್ರೀ ಕಾಗಿನೆಲೆಯಾದಿಕೇಶವ ನಾಮಒಂದೇ ವೈಕುಂಠ ಪದವನೈದಿಪುದಯ್ಯ ೭

ಶ್ರೀ ಹರಿಯ ಲೀಲಾವಿನೋದಗಳನ್ನು
೨೩೦
ಗೋವಿಂದ ಸಲಹೆನ್ನನು – ಸದಾನಂದಗೋವಿಂದ ಸಲಹೆನ್ನನು ಪ
ಗೋವಿಂದ ಸಲಹೆನ್ನ ಕುಮುದಲೋಚನ ನಿನ್ನಸೇವಕರಡಿಯ ಸೇವಕನಯ್ಯ ಗೋವಿಂದ ಅ
ತಮನ ಸಂಹರಿಸಿ ವೇದವ ತಂದೆ ಗೋವಿಂದಅಮರರಿಗಮೃತ ಪಾನವನಿತ್ತೆ ಗೋವಿಂದರಮಣಿಯ ತಂದ ವರಾಹರೂಪಿ ಗೋವಿಂದಭ್ರಮಿಸಿ ಕಂಬದೊಳುದ್ಭವಿಸಿದೆ ಗೋವಿಂದಕ್ಷಮೆಯನಳೆದ ಬ್ರಹ್ಮಚಾರಿಯೆ ಗೋವಿಂದಸಮರದೊಳಖಿಲ ರಾಯರ ಕೊಂದೆ ಗೋವಿಂದಕಮಲಾಕ್ಷ ಕಡಲ ಕಟ್ಟಿದ ದಿಟ್ಟ ಗೋವಿಂದಮಮತೆಯೊಳಿಳೆಯ ಗೋವ್ಗಳ ಕಾಯ್ದೆ ಗೋವಿಂದರಮಣಿಯರ್ಗೊಲಿದು ಬತ್ತಲೆ ನಿಂತೆ ಗೋವಿಂದವಿಮಲ ತುರಗವೇರಿ ನಡೆಸಿದೆ ಗೋವಿಂದನಮಿಪರಿಗೊಲಿದೆ ಗೋವಿಂದ – ನಿಂದಿಪರಿಗೆಶಮನನಂತಿಪ್ಪೆ ಗೋವಿಂದ – ಎಲ್ಲರೊಳಿಪ್ಪಅಮಿತ ಮಹಿಮ ಗೋವಿಂದ – ಇಂಗಡಲೊಳುಗಮನ ನಿರ್ಜಿತ ಗೋವಿಂದ – ಅಚ್ಯುತ ಸರ್ವೋ-ತ್ತಮನೆ ಚಿನ್ಮಯ ಗೋವಿಂದ – ನಿಶ್ಚಲಭಕ್ತಿಕ್ರಮವ ಬೋಧಿಸೊ ಗೋವಿಂದ – ಪಾಪವನೆಲ್ಲಶಮನಗೊಳಿಪ ಗೋವಿಂದ – ಲಕ್ಷ್ಮೀರಮಣನಮೋ ದಶಾವತಾರಿ ಗೋವಿಂದ ೧
ಮನವೆನ್ನ ಮಾತು ಕೇಳದು ಕಾಣೊ ಗೋವಿಂದಮನವ ಗೆಲ್ಲುವ ಬಲ ಎನಗಿಲ್ಲ ಗೋವಿಂದಕನಸಿನಂತಿಹ ದೇಹ ಸ್ಥಿರವಲ್ಲ ಗೋವಿಂದಬಿನುಗು ಬುದ್ಧಿಗಳ ಬಿಡಿಸಯ್ಯ ಗೋವಿಂದನೆನಹು ನಿನ್ನೊಳಗಿಟ್ಟು ನಡೆಸಯ್ಯ ಗೋವಿಂದನೆನೆವ ದಾಸರ ಮನದೊಳಗಿರ್ಪ ಗೋವಿಂದವನಜಲೋಚನ ನಾ ನಿನ್ನವನಯ್ಯ ಗೋವಿಂದಘನ ಮಹಿಮನೆ ನಿನ್ನ ಮೊರೆಹೊಕ್ಕೆ ಗೋವಿಂದಮುನಿಗಳ ಮನದೊಳು ಮಿನುಗುವ ಗೋವಿಂದನಿನಗಲ್ಲದಪಕೀರ್ತಿ ಎನಗೇನೊ ಗೋವಿಂದಜನನ ರಹಿತ ಗೋವಿಂದ – ನಿನ್ನಡಿಗಳನೆನವು ಕೊಡೊ ಗೋವಿಂದ – ದುರ್ವಿಷಯ ವಾ-ಸನೆಯ ಬಿಡಿಸೊ ಗೋವಿಂದ – ಕುತ್ಸಿತ ಕೆಟ್ಟತನವ ಬಿಡಿಸೊ ಗೋವಿಂದ – ಸದ್ಗುಣವೆಂಬಧನವ ತುಂಬಿಸೊ ಗೋವಿಂದ – ಇದಕ್ಕೆ ಬಡ-ತನವೆ ನಿನಗೆ ಗೋವಿಂದ – ಸದಾ ನಿನ್ನಘನ ಸ್ಮರಣೆ ಕೊಡು ಗೋವಿಂದ – ಸನಕಸನಂದನಾರ್ಚಿತ ಗೋವಿಂದ ೨
ನರ ಬೊಂಬೆಗಳ ಮಾಡಿ ಕುಣಿಸುವೆ ಗೋವಿಂದನರರ ನೋಡಿ ನೋಡಿ ನಗುತಿರ್ಪೆ ಗೋವಿಂದಅರಿದೆನೆಂಬರಿಗಂತ್ಯ ತೋರದೊ ಗೋವಿಂದಅರಿಯದಂತಖಿಳದೊಳಗಡಗಿರ್ಪೆ ಗೋವಿಂದಅರಿಯಾಡಂಬರಗಳಿಗಳವಡದ ಗೋವಿಂದಪರಮ ಪಾವನನೆಂಬ ಬಿರುದುಳ್ಳ ಗೋವಿಂದ ಪರಮ ಪುರುಷ ಪುರುಷೋತ್ತಮ ಗೋವಿಂದಪರಬ್ರಹ್ಮ ಪರಮ ಪರಾತ್ಪರ ಗೋವಿಂದಮೊರೆ ಹೊಕ್ಕ ಭಕ್ತರ ಸಲಹುವ ಗೋವಿಂದಕರಿರಾಜ ಕರೆಯಲೊದಗಿ ಬಂದೆ ಗೋವಿಂದಗರುಡಗಮನ ಗೋವಿಂದ – ಕಿನ್ನರ ಸಿದ್ಧಗರುಡ ಸನ್ನುತ ಗೋವಿಂದ – ಅಪರಿಮಿತಕರುಣಾಸಾಗರ ಗೋವಿಂದ – ಅರಿಯದಂಥಪರಮ ಜ್ಯೋತಿಯೆ ಗೋವಿಂದ – ಗಂಗೆಯ ಪೆತ್ತಚರಣ ನಿರ್ಮಲ ಗೋವಿಂದ – ತೆತ್ತೀಸ ಕೋಟಿಸುರರ ಪೊರೆವ ಗೋವಿಂದ – ಶ್ರೀವೈಕುಂಠಪುರದೊಳಗಿಹ ಗೋವಿಂದ – ಅಚ್ಯುತಾನಂತತಿರುಪತಿ ನೆಲೆಯಾದಿ ಕೇಶವ ಗೋವಿಂದ ೩

ಭಗವಂತನ ದಶಾವತಾರ ಲೀಲೆಗಳನ್ನು
೨೩೧
ಗೋವಿಂದ ಹರಿ ಗೋವಿಂದ ಪ
ಗೋವಿಂದ ಪರಮಾನಂದ ಮುಕುಂದಅ
ಮಚ್ಛ್ಯಾವತಾರದೊಳಾಳಿದನೆ – ಮಂದರಾಚಲ ಬೆನ್ನೊಳು ತಾಳಿದನೆಅಚ್ಛ ಸೂಕರನಾಗಿ ಬಾಳಿದನೆ – ಮದಹೆಚ್ಚೆ ಹಿರಣ್ಯಕನ ಸೀಳಿದನೆ೧
ಕುಂಭಿನಿ ದಾನವ ಬೇಡಿದನೆ – ಕ್ಷಾತ್ರ-ರೆಂಬುವರನು ಹತ ಮಾಡಿದನೆಅಂಬುಧಿಗೆ ಶರ ಹೂಡಿದನೆ – ಕಮ-ಲಾಂಬಕ ಗೊಲ್ಲರೊಳಾಡಿದನೆ ೨
ವಸುದೇವನುದರದಿ ಪುಟ್ಟಿದನೆ – ಪಲ್‍ಮಸೆವ ದನುಜರೊಡೆಗುಟ್ಟಿದನೆಎಸೆವ ಕಾಳಿಂಗನ ಮೆಟ್ಟಿದನೆ – ಬಾ-ಧಿಸುವರ ಯಮಪುರಕಟ್ಟಿದನೆ ೩
ಪೂತನಿಯ ಮೈ ಸೋಕಿದನೆ – ಬಲುಘಾತದ ಮೊಲೆಯುಂಡು ತೇಕಿದನೆಘಾತಕಿಯನತ್ತ ನೂಕಿದನೆ – ಗೋಪವ್ರಾತ ಗೋಗಳನೆಲ್ಲ ಸಾಕಿದನೆ೪
ಸಾಧಿಸಿ ತ್ರಿಪುರರ ಗೆಲಿದವನೆ – ಮ್ಲೇಚ್ಛರಛೇದಿಸೆ ಹಯವೇರಿ ಕೆಲೆದವನೆಸಾಧುಸಂತರೊಡನೆ ನಲಿದವನೆ – ಬಾಡದಾದಿಕೇಶವ ಕನಕಗೊಲಿದವನೆ ೫

ನಾರಸಿಂಹನ ಗುಣಗಾನ
೧೦೯
ಚೆಲ್ವ ಕಂಗಳ ಚೆಲ್ವಕಾರ ನೋಡ ಬಂದೆ ನಿನ್ನ ಬಳಿ ಸಾರ ಬಂದೆ ಪ
ಚಕ್ರಧರ ಧುರಧೀರ ನಾರಸಿಂಹ ನಾನು ಬಂದೆ ನಾನು ಬಂದೆ ಅ
ಕಲ್ಲೊಳು ವಿಷಯ ಪುಟ್ಟಿಸಿದನಾ ಶುಭವಲ್ಲದ ದಿವಸದೊಳಿರಾ ನೋಡಿಇಲ್ಲದ ಬಯಲ ನಿಂದೆಯ ಪೊತ್ತು ಶುಕಾಮಲ್ಲರೊಡನೆ ಕಾದಿ ಮಲೆತ ಸಾಲ್ವರ ಕೊಂದುಮಡದಿಗೆ ರತ್ನ ತಂದುದರಿಂದ ೧
ಮಡದಿಯ ಮನೆಯ ಅರ್ಭಕನಾಗಿ ಬಲುಗಡಿಯ ದಾನವನ ಕೊಂದನ ಸೂನುಬಡನಡುವಿನ ಠಾವಿಗೆ ಸಿಲ್ಕಿ ಸುಖಪಡದಿರೆ ರಾಯನಾ ಹಿಡಿದು ತೋಳು ಕಟ್ಟಿದುದರಿಂದ ೨
ಮೂಲ ವೃಕ್ಷದಾಲಾರ ಮುಂದೆಯ ದಾನವರಿರ್ದಾಲಯ ದಹಿಪನೆಂಬುದಯ್ಯನಬಲಮಾಡಿ ಬಲಗೆ ಇಂದುರುಹಿದೆ ಕಾಗಿನೆಲೆಯಾದಿ ಕೇಶವ ಖಳನ ಗರ್ಭವಿಚ್ಛನ್ನಪ್ರಹ್ಲಾದಗೆ ಪ್ರಸನ್ನವಾದುದರಿಂದ ೩

ಉಂಡಾಡಿಗುಂಡನೊಬ್ಬನ ವ್ಯರ್ಥ
೧೧೦
ಛೀ ನಿನ್ನ ಮೋರೆ ಮೇಲೆ – ಠೊಣ್ಯಛೀ ನಿನ್ನ ಮೋರೆ ಮೇಲೆ ಪ
ಹೊತ್ತರೆದ್ದು ಮುಖ ತೊಳೆದು ಮನೆಮನೆ ಪೋಕರಿ ಅಲೆಯುತಿದ್ದೆವಿತ್ತ ಮದದಿ ಪರಸ್ತ್ರೀಯರ ಕಂಡು ಅರ್ತಿಬಡುತಲಿದ್ದೆಲೆತ್ತ ಪಗಡೆ ಚದುರಂಗ ಆಟದಲ್ಲೆ ಹೊತ್ತು ಕಳೆಯುತಿದ್ದೆನಿತ್ಯ ನಿತ್ಯ ಈ ಪರಿ ಆಯುಷ್ಯವ ವ್ಯರ್ಥ ಕಳೆಯುತಿದ್ದೆ ಠೊಣ್ಯ ೧
ಕಂಡ ಕಂಡಲ್ಲಿಗೆ ಪೋಗಿ ಧನಂಗಳ ಕೊಂಡು ಬರುತ್ತಲಿದ್ದೆಹೆಂಡಿರು ಮಕ್ಕಳು ಹಿತದವರೆಂದು ಕೊಂಡಾಡುತಲಿದ್ದೆಖೋಡಿ ಮಾತುಗಳನು ಹೇಳಿ ಮಂದಿಯ ಕುಂಡೆ ಚಿವುಟುತಿದ್ದೆಭಂಡ ಬಾಳು ಇದು ರಂಡೆ ಗಂಡ ಕಂಡ್ಯ ಯಮನ ಬಾಧೆ ಠೊಣ್ಯ೨
ಮಾನವ ಜನ್ಮಕೆ ಬಂದು ಪುಣ್ಯ ಮತ್ತೇನೂ ಮಾಡದೆ ಹೋದೆದಾನವಾಂತ ಸತ್ಪಾತ್ರರಿಗೆ ನೀ ದೀನತ್ವವ ಪಡೆದೆಜ್ಞಾನಶೂನ್ಯ ಮದವೇರಿದ ಸೊಕ್ಕಿದ ಕೋಣಕೆ ಹುಟ್ಟಿದ್ದೆದೀನರಕ್ಷಕಾದಿಕೇಶವ ವಿಠಲಂಗೆ ನೀನತಿ ದೂರಾದೆ ಠೊಣ್ಯ ೩

ವಿಷ್ಣುವಿನ ಸರ್ವಾಂತರ್ಯಾಮಿತ್ವವನ್ನು
೧೫
ಜಗದಂತರ್ಯಾಮಿಯೆಂದೆನುತ ನಿನ್ನನಿಗಮ ಸಾರುವ ಮಾತು ಪುಸಿಯೆ ರಂಗ ಪ
ಭೇದವಿಲ್ಲದೆ ಸಕಲ ಜೀವರನು ಪೊತ್ತಿಹಳುಭೂದೇವಿಯೆಂಬಾಕೆ ನಿನ್ನ ಅರ್ಧಾಂಗಿಯುಸಾಧನವು ಸಕಲ ಸಿರಿ ಸಂಪತ್ತುಗಳನೀವಶ್ರೀದೇವಿ ನಿನ್ನ ಹಿರಿಯರಸಿಯೋ ದೇವ ೧
ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳನ್ನುಬೊಂಬೆಗಳ ಮಾಡಿ ಭವರಂಗದಲಿತುಂಬಿ ಕಲೆಗಳನೊತ್ತಿ ನೊಸಲ ಬರೆಹವ ಬರೆವಅಂಬುಜೋದ್ಭವ ನಿನ್ನ ಹೆಮ್ಮಗನು ದೇವ ೨
ಸಕಲ ಜೀವರಾಶಿಗಳನು ಕಲ್ಪಿಸುವ ಬೀಜಸುಖದಿಂದ ಮಾಯಾಂಗನೆಯರೊಡಲೊಳುಅಕ್ಕರದಿ ಪಿಂಡಾಂಡಗಳ ಕಟ್ಟಿ ಬಲಿಸುವಮಕರಾಂಕ ನಿನ್ನ ಕಿರಿಮಗ ದೇವ ೩
ರಾಮನಾಮವ ಜಪಿಸಿ ಪರಮ ವೈಷ್ಣವನಾಗಿಹೇಮಗಿರಿ ಸನಿಹ ಸಾಹಸ್ರನಾಮಪ್ರೇಮದಲಿ ಜಪಿಸುತ್ತ ವೈರಾಗ್ಯನಿಧಿಯಾದಸೋಮಶೇಖರನು ನಿನ್ನ ಮೊಮ್ಮಗನು ೪
ಜಂಗಮ ಸ್ಥಾವರಕಾಧಾರವಾಗಿಹಳುಭಂಗಪಡುವ ಜನರ ಕರ್ಮವ ಕಳೆವಳುಹಿಂಗದೆ ಜಗವ ಪಾವನವ ಮಾಡುವ ಪುಣ್ಯಗಂಗೆಯೆಂಬಾಕೆ ನಿಮ್ಮಯ ಮಗಳು ದೇವ ೫
ಶುದ್ಧ ಬುದ್ಧಿಯನುಳ್ಳ ಪ್ರದ್ಯುಮ್ನನಾ ಮಗಳುಶ್ರದ್ಧೆಯೆನಿಸಿಕೊಂಡು ಸೂತ್ರಗೆ ಸತಿಯಾಗಿಸದ್ಯೋಜಾತನ ಪಡೆದು ಪ್ರಸಿದ್ಧವಹ ದೇವಿ ಈ ಧರೆಯೊಳು ಪುಟ್ಟಿ ನಿನ್ನ ದಾಸಿಯಾದಳು ೬
ಇಂತು ಅಣುರೇಣು ತೃಣ ಕಾಷ್ಠದೊಳಗೆಲ್ಲಸಂತೋಷವಾಗಿಹುದು ನಿನ್ನ ಸ್ಮರಣೆಯಂತ್ರವಾಹಕನೆಂಬ ಬಿರುದು ಸಲುವುದು ನಿನಗೆಕಂತುಪಿತ ಕಾಗಿನೆಲೆಯಾದಿಕೇಶವನೆ ೭

ಹೃದಯ ಶುದ್ಧಿಯಿರದ ಕಪಟಿಗಳ
೧೧೧
ಜಪವ ಮಾಡಿದರೇನು ತಪವ ಮಾಡಿದರೇನುವಿಪರೀತ ಕಪಟಗುಣ ಕಲುಷವಿದ್ದವರು ಪ
ಆದಿಗುರುವರಿಯದೆ ಅತ್ತಲಿತ್ತಲು ತೊಳಲಿವೇದಶಾಸ್ತ್ರವನೋದಿ ಬಾಯಾರಲುಹಾದಿಯನು ಕಾಣದಂತಿರುತಿರ್ದು ಹಲವೆಂಟುವಾದ ತರ್ಕದೊಳಿದ್ದ ಭೇದವಾದಿಗಳು ೧
ನುಡಿ ನಡೆವ ಕಾಲದಲಿ ದಾನ ಮಾಡದೆ ಇರಲುಅಡವಿಯೊಳು ಕೆರೆ ತುಂಬಿ ಬತ್ತಿದಂತೆಮಡದಿ ಮಕ್ಕಳಿಗೆಂದು ಒಡವೆ ವಸ್ತ್ರವ ಗಳಿಸೆಹಿಡಿಯಲಾ ಯಮನವರ ಕಟ್ಟಿಗೊಳಗಾಗಿ ೨
ಚಳಿಮಳೆಯ ಅತಿ ಕಾರುಗತ್ತಲೆಯೊಳಗೆ ಎದ್ದುಹೊಳೆಯೊಳಗೆ ಮುಳುಗಿ ಜಪ ತಪವ ಮಾಡಿಕಳವಳಿಸಿ ನೂರೆಂಟು ಹಲುಬಿ ಬಳಲಲು ಬೇಡನಳಿನಾಕ್ಷ ಆದಿಕೇಶವನ ನೆನೆ ಮನವೆ ೩

ಮುಖ್ಯಪ್ರಾಣನ ಮೂರು ಅವತಾರಗಳ
೪೫
ಜಯಮಂಗಲಂ ನಿತ್ಯ ಶುಭಮಂಗಲಂ ಪ
ವಾತಜಾತನು ಆಗಿ ಖ್ಯಾತಿಯಲಿ ಮೆರೆದಗೆಸೇತುವೆಯ ಭರದಿಂದ ಲಂಘಿಸಿದಗೆಸೀತೆಯನು ವಂದಿಸುತೆ ಉಂಗುರವನಿತ್ತವಗೆದೈತ್ಯಪುರವನು ಭರದಲುರಿಸಿದವಗೆ ೧
ವಸುಧೆಯಲಿ ಕುಂತಿನಂದನನಾಗಿ ಉದಿಸಿದಗೆಕುಸುಮವನು ತಂದು ದ್ರೌಪದಿಗಿತ್ತಗೆಕುಶಲತನದಲಿ ಕೌರವಾದಿಗಳ ಸಂಹರಿಸಿ-ದಸಹಾಯ ವೀರ ಶ್ರೀ ಭೀಮಸೇನಗೆ ೨
ಮಧ್ಯಗೃಹದಾತನಾ ಸತಿಯಲ್ಲಿ ಉದಿಸಿದಗೆಬೌದ್ಧ ಚಾರ್ವಾಕ ಮಾಯ್ಗಳ ಜರಿದಗೆಮಧ್ವಶಾಸ್ತ್ರವನೆಲ್ಲ ಸಜ್ಜನರಿಗೊರೆದಗೆಮುದ್ದು ಶ್ರೀಆದಿಕೇಶವನ ಭಜಕಗೆ ೩

ಸೂತ್ರಧಾರಿ ಆಡಿಸಿದಂತೆ ಕುಣಿಯುವ,
೧೧೨
ಡಿಂಬದಲ್ಲಿ ಇರುವ ಜೀವ ಕಂಬಸೂತ್ರ ಗೊಂಬೆಯಂತೆಎಂದಿಗಿದ್ದರೊಂದು ದಿನ ಸಾವು ತಪ್ಪದು ಪ
ಹುಟ್ಟುತೇನು ತಾರಲಿಲ್ಲ ಸಾಯುತೇನು ಒಯ್ಯಲಿಲ್ಲಸುಟ್ಟು ಸುಟ್ಟು ಸುಣ್ಣದ ಹರಳಾಯಿತೀ ದೇಹಹೊಟ್ಟೆ ಭಾಳ ಕೆಟ್ಟದೆಂದು ಎಷ್ಟು ಕಷ್ಟ ಪಟ್ಟರೂನುಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣದು೧
ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರಅರ್ಥಕಾಗಿ ಆಸೆಪಟ್ಟು ಸುಳ್ಳು ನ್ಯಾಯ ಮಾಡ್ವರುಬಿತ್ತಿ ಬೆಳೆದು ತನ್ನದೆಂಬ ವ್ಯರ್ಥಚಿಂತೆಯನ್ನು ಮಾಡೆಸತ್ತು ಹೋದ ಮೇಲೆ ಅರ್ಥ ಯಾರಿಗಾಹುದೊ ೨
ಹೊನ್ನು ಹೆಣ್ಣು ಮಣ್ಣು ಮೂರು ತನ್ನಲಿದ್ದು ಉಣ್ಣಲಿಲ್ಲಅಣ್ಣತಮ್ಮ ತಾಯಿ ತಂದೆ ಬಯಸಲಾಗದುಅನ್ನ ವಸ್ತ್ರ ಭೋಗಕಾಗಿ ತನ್ನ ಸುಖವ ಕಾಣಲಿಲ್ಲಮಣ್ಣುಪಾಲು ಆದಮೇಲೆ ಯಾರಿಗಾಹುದೊ ೩
ಬೆಳ್ಳಿ ಬಂಗರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದುಕೊಂಡುಅಳ್ಳಾಚಾರಿ ಗೊಂಬೆಯಂತೆ ಆಡಿ ಹೋಯಿತುಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆಉಳ್ಳೆ ಪೊರೆಯಂತೆ ಕಾಣೊ ಸಂಸಾರದಾಟವು ೪
ವಾರ್ತೆ ಕೀರ್ತಿಯೆಂಬುವೆರಡು ಸತ್ತ ಮೇಲೆ ಬಂದವಯ್ಯವಸ್ತು ಪ್ರಾಣನಾಯಕನು ಎಲ್ಲಿ ದೊರಕ್ಯಾನುಕರ್ತೃ ಕಾಗಿನೆಲೆಯಾದಿಕೇಶವನ ಚರಣಕಮಲನಿತ್ಯದಲ್ಲಿ ಭಜಿಸಿ ಸುಖಿಯಾಗಿ ಬಾಳೆಲೊ ೫

ನಾಯಿಯ ರೂಪಕದಲ್ಲಿ ಮನುಷ್ಯನ ಡೊಂಕುತನ
೫೯*
ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ ಪ
ಕಣಕ ಕುಟ್ಟೋ ಅಲ್ಲಿಗೆ ಹೋಗಿ ಹಣಿಕಿ ಇಣಿಕಿ ನೋಡುವಿರಿಕಣಕ ಕುಟ್ಟೋ ಒನಕಿಲಿ ಹೊಡೆದರೆ ಕುಯ್ ಕುಯ್ ರಾಗವ ಪಾಡುವಿರಿ ೧
ಹುಗ್ಗಿ ಮಾಡೋ ಅಲ್ಲಿಗೆ ಹೋಗಿ ತಗ್ಗಿ ಬಗ್ಗಿ ನೋಡುವಿರಿಹುಗ್ಗಿ ಮಾಡೋ ಸೌಟಲಿ ಹೊಡೆದರೆ ಕುಯ್ ಕುಯ್ ರಾಗವ ಪಾಡುವಿರಿ ೨
ಹಿರಿಯ ಹಾದಿಲಿ ಓಡುವಿರಿ ಕರಿಯ ಬೂದಿಲಿ ಹೊರಳುವಿರಿಸಿರಿ ಕಾಗಿನೆಲೆಯಾದಿಕೇಶವನ ಸ್ಮರಿಸದವರ ಗತಿ ತೋರುವಿರಿ ೩
* ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.

ಕನಕದಾಸರ ಗುರುಗಳಾದ ವ್ಯಾಸರಾಯರು
೬೦
ತಡೆಯುತಲಿದೆ ಪುಷ್ಪಮಾಲೆ ಪ
ಒಡಲೊಳಗಾತ್ಮನ ವರ ಮಕುಟಾಗ್ರದಿಅ
ನವರತ್ನಖಚಿತ ಕಿರೀಟ ದೊಡ್ಡಿತು ದಿವ್ಯನವತರ ಕುಸುಮ ದಾಮವು ಕಿರಿದುವಿವರ ಬಲ್ಲ ಸದ್ಗುರು ತಮ್ಮ ಉದ್ದೇಶದನವ ವೈಜಯಂತಿಯ ಹಿರಿದಾಗಿ ಭಾವಿಸಿ೧
ಸ್ಥಿರ ಮತಿಯೆಂಬ ಆಸನವನು ಅಳವಡಿಸಿ – ತ್ರಿಕರಣವೆಂಬ ತಾಂಬೂಲವನೊಪ್ಪಿಸುತ – ಮಾಯ ಮರವೆಯೆಂಬ ದಕ್ಷಿಣೆ ಕೊಟ್ಟು – ಮಮ ಭಾವದಿರುವಿನ ತಮವನೋಡಿಸಿ ನಿಂದ ಗುರುದೇವ೨
ಅಜ್ಞಾನವೆಂಬ ನಿರ್ಮಾಲ್ಯವನು ಮಾಡಿಸುಜ್ಞಾನವೆಂಬಕ್ಷತೆಯ ಪಣೆಗೆ ಸೂಡಿಪ್ರಜ್ಞಾನವೆಂಬ ದೀವಿಗೆ ಸ್ತಂಭ ಹೂಡಿಪೂಜಿಸಿ ಪ್ರವಿಮಲ ಜ್ಯೋತಿಯ ದೇಶಿಕೋತ್ತಮ ೩

ಪಾತ್ರಧಾರಿಯ ನಡೆನುಡಿ
೧೧೩
ತನು ನಿನ್ನದು ಜೀವನ ನಿನ್ನದು ರಂಗ ಪ
ಅನುದಿನದಲಿ ಬಾಹೊ ಸುಖದುಃಖ ನಿನ್ನದಯ್ಯ ಅ
ಸವಿನುಡಿ ವೇದ ಪುರಾಣ ಶಾಸ್ತ್ರಂಗಳಕಿವಿಗೊಟ್ಟು ಕೇಳುವ ಕಥೆ ನಿನ್ನದುನವಮೋಹನಾಂಗಿಯರ ರೂಪವನು ಕಣ್ಣಿಂದಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ ೧
ಒಡಗೂಡಿ ಗಂಧಕಸ್ತೂರಿ ಪರಿಮಳಂಗಳಬಿಡದೆ ಲೇಪಿಸಿಕೊಂಬುವುದು ನಿನ್ನದುಷಡುರಸದನ್ನಕ್ಕೆ ನಲಿದಾಡುವ ಜಿಹ್ವೆಕಡು ರುಚಿಗೊಂಡರಾ ರುಚಿ ನಿನ್ನದಯ್ಯ ೨
ಮಾಯಾ ಪಾಶದ ಬಲೆಯೊಳಗೆ ಸಿಲುಕಿರುವಕಾಯ ಪಂಚೇಂದ್ರಿಯಂಗಳು ನಿನ್ನವುಕಾಯಜಪಿತ ಕಾಗಿನೆಲೆಯಾದಿಕೇಶವರಾಯ ನೀನಲ್ಲದೆ ನರರು ಸ್ವತಂತ್ರರೆ ೩

ವಿಧಿ ಬರೆಹವನ್ನು ಯಾರೂ ಮೀರಲಾಗುವುದಿಲ್ಲ
೨೫೦
ತನ್ನ ಪ್ರಾಪ್ತಿಯ ಫಲವ ತಾನರಿಯದೆ ಪ
ಇನ್ನು ನುಡಿವುದು ಮೂರ್ಖತನವಲ್ಲದೆ ಅ
ಸರಸಿಜೋದ್ಭವನು ಫಣೆಯೊಳು ಬರೆದು ನಿರ್ಮಿಸಿದತೆರನೊಂದು ಬೇರುಂಟೆ ತಾನರಿಯದೆಕೆರಕೊಂಡು ಕಂಡವರ ಕೂಡೆ ತಾನಾಡಿದರೆನೆರೆ ದುಃಖವಿದು ಬಿಟ್ಟು ಕಡೆಗೆ ತೊಲಗುವುದೆ ೧
ಬಡತನವು ಬಂದಲ್ಲಿ ಬಾಯಿ ಬಿಟ್ಟರೆ ಮುನ್ನಪಡೆದಂಥ ವಿಧಿ ಬೆನ್ನ ಬಿಡಲರಿವುದೆಅಡಿಗಡಿಗೆ ಶೋಕದಲಿ ಅವರಿವರಿಗುಸುರಿದರೆಬಡತನವು ತಾ ಬಿಟ್ಟು ಕಡೆಗೆ ಕದಲುವುದೆ೨
ದೆಸೆಗೆಟ್ಟು ನಾಡದೈವಂಗಳಿಗೆ ಎರಗಿದರೆನೊಸಲ ಬರೆಹವ ತೊಡೆದು ತಿದ್ದಲಳವೆವಸುಧೇಶ ಕಾಗಿನೆಲೆಯಾದಿಕೇಶವಸನಂಘ್ರಿಬಿಸಜವನು ಕಂಡು ನೀ ಸುಖಿಯಾಗು ಮನುಜ೩

ದೈವದ ತಾಯಿತನವನ್ನು ಬೋಧಿಸುತ್ತಾ
೧೧೪
ತಲ್ಲಣಿಸದಿರು ಕಂಡ್ಯ ತಾಳು ಮನವೆ ಪ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ಅ
ಬೆಟ್ಟದಾ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆಕಟ್ಟೆಯನು ಕಟ್ಟಿ ನೀರೆರೆದವರು ಯಾರೊಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲುಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ ೧
ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲಅಡಿಗಡಿಗೆ ಆಹಾರವಿತ್ತವರು ಯಾರೊ ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿಬಿಡದೆ ರಕ್ಷಿಪನು ಇದಕೆ ಸಂಶಯವಿಲ್ಲ ೨
ನವಿಲಿಗೆ ಚಿತ್ರ ಬರೆದವರು ಯಾರುಪವಳದ ಲತೆಗೆ ಕೆಂಪಿಟ್ಟವರು ಯಾರುಸವಿಮಾತಿನರಗಿಳಿಗೆ ಹಸುರು ಬರೆದವರು ಯಾರುಅವನೆ ಸಲಹುವನು ಇದಕೆ ಸಂಶಯವಿಲ್ಲ೩
ಕಲ್ಲಿನಲಿ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲಅಲ್ಲಲ್ಲಿಗಾಹಾರ ತಂದೀವರಾರುಬಲ್ಲಿದನು ಕಾಗಿನೆಲೆಯಾದಿಕೇಶವರಾಯಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ೪

ದೇಹ ವ್ಯಾಮೋಹ ಸುಖಕ್ಕಿಂತ ಆತ್ಮವ್ಯಾಮೋಹ
೧೧೫
ತಾನ್ಯಾರು ತನ್ನ ದೇಹವ್ಯಾರು – ದಿವ್ಯಜ್ಞಾನದಲಿ ತಿಳಿದಾತ ಪರಮ ಯೋಗಿ ಪ
ಸೂತಿಕಾವಸ್ಥೆಯಲಿ ನವಮಾಸ ನೆರೆದಾಗಮಾತೆಯುದರದಿ ಬಂದು ಬೆಳೆದು ನಿಂದುಪಾತಕವದೊಂದು ಮೂರುತಿಯಾದ ತನುವೆಂದುನೀತಿಯಲಿ ತಿಳಿದಾತ ಪರಮ ಯೋಗಿ ೧
ಅಸ್ಥಿಪಂಜರದ ನರಗಳ ತೊಗಲಿನ ಹೊದಿಕೆಯವಿಸ್ತರಿಸಿ ಬಿಗಿದ ಮಾಂಸದ ಬೊಂಬೆಯುರಕ್ತ ಮಲಮೂತ್ರ ಕೀವಿನ ಪ್ರಳಯದೊಡಲೆಂದುಸ್ವಸ್ಥದಿಂ ತಿಳಿದಾತ ಪರಮ ಯೋಗಿ ೨
ಘೋರ ನರಕದ ತನುವು ಎಂದು ಮನದಲಿ ತಿಳಿದುಗೇರು ಹಣ್ಣಿನ ಬೀಜದಂತೆ ಹೊರಗಿದ್ದುಮಾರಪಿತ ಕಾಗಿನೆಲೆಯಾದಿಕೇಶವನ ಪಾದವಾರಿಜವ ನೆನೆದವನೆ ಪರಮ ಯೋಗಿ ೩

ಶ್ರೀಹರಿ ದಶಾವತಾರಗಳನ್ನೆತ್ತಿ ಎಸಗಿದ
೨೩೨
ತಾಳಲ್ಲಲ್ಲಲ್ಲಲ್ಯೋ ಮಾಸಾಳಲ್ಲಲ್ಲಲ್ಲಲ್ಯೋ ಪ
ಹೆಚ್ಚಿದ ತಮನೆಂಬ ದನುಜ ವೇದವ ಕದ್ದುಬಚ್ಚಿಟ್ಟು ನೀರೊಳು ಮುಳುಗಿರಲುಮಚ್ಚ ರೂಪದಿಂದ ಪೋಗಿ ಅವನ ಕೊಂದಅಚ್ಯುತರಾಯನೆಂಬ ಮಾಸಾಳಮ್ಮ೧
ಸಿಂಧು ಮಥನವ ಮಾಡೆ ಅಮರರೆಲ್ಲರುಮಂದರಗಿರಿ ನೀರೊಳು ಮುಳುಗಲುಚಂದದಿ ಕೂರ್ಮ ರೂಪಿನಿಂದೆತ್ತಿದ ಗೋ-ವಿಂದನೆಂಬುವ ಮಾಸಾಳಮ್ಮ೨
ರೂಢಿಯ ಕದ್ದುಕೊಂಡೋಡುವ ದೈತ್ಯನನೀಡಿ ತಿವಿದು ಕೋರೆದಾಡೆಯಿಂದದೂಡಿ ದ್ವಂಸವ ಮಾಡಿ ರೂಢಿಯ ತಂದಕಾಡು ವರಾಹ ರೂಪಿ ಮಾಸಾಳಮ್ಮ ೩
ಲೇಸು ತಪ್ಪಿದನೆಂದು ಹಿರಣ್ಯಕ ತನಯನಘಾಸಿ ಮಾಡಲು, ಕಂಬ ಒಡೆದುದಿಸಿರೋಷದಿ ದೈತ್ಯನ ಕರುಳ ಕಿತ್ತ ನರಕೇಸರಿ ರೂಪಿನ ಮಾಸಾಳಮ್ಮ ೪
ಆ ಮಹಾಸಿರಿಯ ಗರ್ವದಿ ಮುಂದರಿಯದೆಭೂಮಿಯನು ಬಲಿ ತಾನಾಳುತಿರೆನೇಮಿಸಿ ಎರಡೇ ಹೆಜ್ಜೆಯೊಳಳಕೊಂಡವಾಮನ ರೂಪಿನ ಮಾಸಾಳಮ್ಮ ೫
ಕಾಮಧೇನುವಿಗಾಗಿ ಕಾರ್ತವೀರ್ಯಾರ್ಜುನಆ ಮಹಾಮುನಿಯ ಪ್ರಾಣಕೆ ಮುನಿಯೆತಾಮಸವಿಲ್ಲದೆ ಕ್ಷತ್ರಿಯರ ಸಂಹರಿಸಿದರಾಮ ಭಾರ್ಗವನೆಂಬ ಮಾಸಾಳಮ್ಮ ೬
ಜನಕ ಸುತೆಯನು ಕದ್ದೊಯ್ಯಲು ಲಂಕೆಗೆಗಣಿತಾತೀತ ಶರಧಿಯ ಕಟ್ಟಿಘನ ಕೋಪದಿ ದಶಿಶಿರನ ಕತ್ತರಿಸಿದಇನಕುಲ ರಾಮನೆಂಬ ಮಾಸಾಳಮ್ಮ ೭
ದೇವಕಿ ಬಸುರೊಳು ಬಂದು ಗೋಕುಲದಿಆವ ಕಾವ ಗೊಲ್ಲರ ಸಲಹಿಮಾವನ ಕೊಂದು ಮತ್ತೈವರ ಸಲಹಿದದೇವ ಕೃಷ್ಣನೆಂಬ ಮಾಸಾಳಮ್ಮ೮
ಪತಿವ್ರತೆಯರ ವ್ರತವಳಿಯಬೇಕೆನುತಲಿಅತಿಶಯದಿ ತ್ರಿಪುರದ ಸ್ತ್ರೀಯರನುತ ಬೌದ್ಧ ರೂಪದಿ ಬಹು ಭಂಗಪಡಿಸಿದರತಿಪತಿಪಿತನೆಂಬ ಮಾಸಾಳಮ್ಮ ೯
ಖುಲ್ಲ ಮನುಜರನು ಕೊಲ್ಲಬೇಕೆನುತಲಿಭಲ್ಲೆ ಹಿಡಿದು ತುರಗವನೇರಿಅಲ್ಲಲ್ಲೆ ಸೊಲ್ಲಡಗಿಸಿ ವಲ್ಲಭನೆನಿಸಿದಬಲ್ಲಿದ ಕಲ್ಕಿಯೆಂಬ ಮಾಸಾಳಮ್ಮ ೧೦
ಮಂಗಳ ಮಹಿಮ ಭುಜಂಗ ಶಯನ ಕಾ-ಳಿಂಗ ಮರ್ದನ ದೇವೋತ್ತುಂಗಅಂಗಜಪಿತ ನೆಲೆಯಾದಿಕೇಶವ ಅಂತ-ರಂಗದೊಳಿರುವ ಮಾಸಾಳಮ್ಮ ೧೧

ತೀರ್ಥಯಾತ್ರೆಯಿಂದ ಜನ್ಮ ಸಾರ್ಥಕವಾಯಿತೆಂದು
೧೬೩
ತಿಳಿಯ ಬರದೆಲೆ ಮನವೆ, ತೀರ್ಥ ಯಾತ್ರೆಯ ಫಲವು ಪ
ಸುಲಭದಲಿ ಸದ್ಗತಿಯ ಸೂರೆಗೊಂಬುವರಿಗಲ್ಲದೆ ಅ
ನೂರೆಂಟು ತಿರುಪತಿಯ ಯಾತ್ರೆಯನು ನಾನೊಲ್ಲೆವಾರದೊಂದ್ಹೊತ್ತು ಉಪವಾಸವನು ನಾನೊಲ್ಲೆಸಾರ ರೇಣುವೆಯುಂಡು ಕಡೆಯ ಬಾಗಿಲ ಕಾಯ್ವನೀರ ಗೌಡಿಯ ಮಗನ ಮಗನ ಮಗನೆನಿಸೆನ್ನ೧
ಪಂಚಾನ್ನ ಪರಮಾನ್ನವಾವುದನು ನಾನೊಲ್ಲೆಚಂಚಲಗೊಳಿಸುವ ಭೋಗ ಭಾಗ್ಯವ ನಾನೊಲ್ಲೆಹಿಂಚದೆ ದಾಸೋಹ ಮಾಳ್ಪವರ ಮನೆಯ ಕಾಯ್ವಉಂಚ ಗೌಡಿಯ ಮಗನ ಮಗನ ಮಗನೆನಿಸೆನ್ನ೨
ಪಟ್ಟೆ ಪಟ್ಟಾವಳಿ ದುಕೂಲವನು ನಾನೊಲ್ಲೆಪಟ್ಟೆ ನಾಮದ ಬರಿಯ ಪ್ರದರ್ಶನ ನಾನೊಲ್ಲೆಸೃಷ್ಟಿಯೊಳು ನಿನ್ನ ಭಜಿಪ ಭಕ್ತರ ಮನೆ ಕಾಯ್ವಮುಟ್ಟುಗೌಡಿಯ ಮಗನ ಮಗನ ಮಗನೆನಿಸೆನ್ನ ೩
ಮುತ್ತಿನಾಭರಣ ತಾಳಿ ಪದಕವ ನಾನೊಲ್ಲೆಸತ್ತಿಗೆಯ ನೆರಳಿನಲಿ ಸಾಗುವುದ ನಾನೊಲ್ಲೆನಿತ್ಯ ನಿನ್ನ ನೆನೆವರ ಮನೆಯ ಬಾಗಿಲ ಕಾಯ್ವತೊತ್ತುಗೌಡಿಯ ಮಗನ ಮಗನ ಮಗನೆನಿಸೆನ್ನ ೪
ಆಶೆ ಪಾಶಗಳೆಂಬ ಜಂಜಾಟ ನಾನೊಲ್ಲೆದೇಶಾನುದೇಶಗಳ ತಿರುಗಾಟ ನಾನೊಲ್ಲೆಶ್ರೀಶಾದಿಕೇಶವನ ಭಜಿಪರ ಮನೆಯ ಕಾಯ್ವಕಸಗೌಡಿಯ ಮಗನ ಮಗನ ಮಗನೆನಿಸೆನ್ನ ೫

ಯಾವುದೇ ಮತಧರ್ಮದ ಅಂತಃಸತ್ತ್ವವನ್ನು
೨೦೪
ತೀರ್ಥ ಪಿಡಿದವರೆಲ್ಲ ತಿರುನಾಮಧಾರಿಗಳೆ – ಜನ್ಮ ಪ
ಸಾರ್ಥಕವಿಲ್ಲದವರೆಲ್ಲ ಭಾಗವತರೆ ಅ
ಮೂಗ್ಹಿಡಿದು ನೀರೊಳಗೆ ಮುಳುಗಿ ಜಪತಪ ಮಾಡಿನಿಗಮಾಗಮ ಪುರಾಣಗಳನೋದಿ ತಿಳಿದುಬಾಗಿ ಪರಸ್ತ್ರೀಯರನು ಬಯಸಿ ಕಣ್ಣಿಡುವಂಥಯೋಗ ಭ್ರಷ್ಟರೆಲ್ಲ ದೇವ ಬ್ರಾಹ್ಮಣರೆ ? ೧
ಪಟ್ಟೆ ನಾಮವ ಬಳಿದು ಪಾತ್ರೆ ಕೈಯಲಿ ಹಿಡಿದು ಗುಟ್ಟಿನಲಿ ಜಪಿಸುವ ಗುರುತರಿಯದೆಕೆಟ್ಟ ಕೂಗನು ಕೂಗಿ ಹೊಟ್ಟೆಯನು ಹೊರೆವಂಥಪೊಟ್ಟೆಗುಡುಮಗಳೆಲ್ಲ ಪರಮ ವೈಷ್ಣವರೆ ? ೨
ಲಿಂಗಾಂಗದೊಳಗಿರುವ ಚಿನ್ಮಯವ ತಿಳಿಯದೆಅಂಗಲಿಂಗದ ನೆಲೆಯ ಗುರುತರಿಯದೆಜಂಗಮ ಸ್ಥಾವರದ ಹೊಲಬನರಿಯದ ಇಂಥಭಂಗಿಮುಕ್ಕಗಳೆಲ್ಲ ನಿಜ ಲಿಂಗವಂತರೆ ? ೩
ಅಲ್ಲಾ ಖುದಾ ಎಂಬ ಅರ್ಥವನು ತಿಳಿಯದೆಮುಲ್ಲ ಶಾಸ್ತ್ರದ ನೆಲೆಯ ಮುನ್ನರಿಯದೆಪೊಳ್ಳು ಕೂಗನು ಕೂಗಿ ಬಗುಳಿ ಬಾಯಾರುವಂಥಕಳ್ಳ ಸುಳ್ಳರಿಗೆಲ್ಲ ವೀರ ಸ್ವರ್ಗವುಂಟೆ ?೪
ವೇಷ ಭಾಷೆಯ ಕಲಿತು ಗೋಸಾಯಿ ಉಡೆದೊಟ್ಟುಆಸೆಯನು ತೊರೆಯದೆಯೆ ತಪಕೆ ಕುಳಿತುವಾಸನೆಯ ಗುರುತಿನಾ ಹೊಲಬನರಿಯದ ಇಂಥವೇಷಧಾರಿಗಳೆಲ್ಲ ಸಂನ್ಯಾಸಿಗಳೆ ? ೫
ಆರು ಚಕ್ರದ ನೆಲೆಯ ಅಷ್ಟಾಂಗ ಯೋಗದಲಿಮೂರು ಮೂರ್ತಿಯ ಮೂರು ಕಡೆಯೊಳಿರಿಸಿಮಾರ ಪಿತನಹ ಕಾಗಿನೆಲೆಯಾದಿ ಕೇಶವನಸಾರಿ ಭಜಿಸಿದವರಿಗೆ ಕೊರೆವ ಕೊರತೆಯುಂಟೆ ? ೬

ಭಕ್ತನಾದವನು ಎಲ್ಲವನ್ನೂ ಬಿಟ್ಟು ಜೀವಿಸಬಲ್ಲ
೧೧೬
ತೊರೆದು ಜೀವಿಸುಬಹುದೆ ಹರಿ ನಿನ್ನ ಚರಣವನುಬರಿಯ ಮಾತೇಕಿನ್ನು ಅರಿತು ಪೇಳುವೆನಯ್ಯ ಪ
ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದುದಾಯಾದಿ ಬಂಧುಗಳ ಬಿಡಲುಬಹುದುರಾಯ ಮುನಿದರೆ ಮತ್ತೆ ರಾಜ್ಯವನು ಬಿಡಬಹುದುಕಾಯಜಪಿತ ನಿನ್ನಡಿಯ ಬಿಡಲಾಗದು ೧
ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದುಪಡೆದ ಕ್ಷೇತ್ರವ ಬಿಟ್ಟು ಪೋಗಬಹುದುಮಡದಿ ಮಕ್ಕಳ ಕಡೆಗೆ ತೊಲಗಿಸಿಯು ಬಿಡಬಹುದುಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು ೨
ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದುಮಾನಾಭಿಮಾನ ತಗ್ಗಿಸಲು ಬಹುದುಪ್ರಾಣನಾಯಕನಾದ ಆದಿಕೇಶವರಾಯಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು ೩

ಗಳಿಸಿದ್ದನ್ನು ತನ್ನಲ್ಲೇ ಇಟ್ಟುಕೊಳ್ಳದೆ
೧೮೨
ದಾನಧರ್ಮವ ಮಾಡಿ ಸುಖಯಾಗು ಮನವೆ ಪ
ಹೀನ ವೃತ್ತಿಯಲಿ ನೀ ಕೆಡಬೇಡ ಮನವೆ ಅ
ಎಕ್ಕನಾತಿ ಯಲ್ಲಮ್ಮ ಮಾರಿ ದುರ್ಗಿ ಚೌಡಿಯಅಕ್ಕರಿಂದಲಿ ಪೂಜೆ ಮಾಡಲೇಕೆಗಕ್ಕನೆಯೆ ಯಮನ ದೂತರೆಳೆದೊಯ್ಯುವಾಗಶಕ್ತೇರು ಬಿಡಿಸಿಕೊಂಡಾರೇನೊ ಮರುಳೆ ೧
ಸಂಭ್ರಮದಲಿ ಒಂದ್ಹೊತ್ತು ನೇಮದೊಳಗಿದ್ದುತಂಬಿಟ್ಟಿನಾ ದೀಪ ಹೊರಲೇತಕೆಕೊಂಬು ಹೋತು ಕುರಿ ಕೋಣಗಳನ್ನು ಬಲಿಗೊಂಬದೊಂಬಿ ದೈವಗಳ ಭಜಿಸದಿರು ಮನವೆ೨
ಚಿಗುರೆಲೆ ಬೇವಿನ ಸೊಪ್ಪುಗಳ ನಾರಸೀರೆಬಗೆಬಗೆಯಿಂದ ಶೃಂಗಾರ ಮಾಡಿನೆಗೆನೆಗೆದಾಡುತ ಕುಣಿಯುತಿರೆ ನಿನಗಿನ್ನುಮಿಗಿಲಾದ ಮುಕ್ತಿಯುಂಟೇ ಹುಚ್ಚು ಮನವೆ ೩
ದಾನಧರ್ಮ ಪರೋಪಕಾರವ ಮಾಡುದೀನನಾಗಿ ನೀ ಕೆಡಬೇಡವೊಜ್ಞಾನವಿಲ್ಲದೆ ಹೀನ ದೈವವ ಭಜಿಸಿದರೆಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ ೪
ನರಲೋಕದಲಿ ಯಮನ ಬಾಧೆಯನು ಕಳೆಯಲುವರ ಪುಣ್ಯ ಕಥೆಗಳನು ಕೇಳುತಲಿಸಿರಿ ಕಾಗಿನೆಲೆಯಾದಿ ಕೇಶವನ ನೆರೆ ನಂಬಿಸ್ಥಿರ ಪದವಿಯನು ಪಡೆ ಹುಚ್ಚು ಮನವೆ೫

‘ನನಗಿಂತ ಕಿರಿಯರಿಲ್ಲ ಶಿವಶರಣರಿಗಿಂತ ಹಿರಿಯರಿಲ್ಲ’
೬೧
ದಾಸ ದಾಸರ ಮನೆಯ ದಾಸಿಯರ ಮಗ ನಾನುಸಾಸಿರ ನಾಮದೊಡೆಯ ರಂಗಯ್ಯನ ಮನೆಯ ಪ
ಶಂಕು ದಾಸರ ಮನೆಯ ಮಂಕುದಾಸನು ನಾನುಮಂಕುದಾಸನು ನಾನು ಮರುಳುದಾಸಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ ಬಿಂಕದಿ ಬಾಗಿಲ ಕಾಯ್ವ ಬಡ ದಾಸ ನಾನಯ್ಯ ೧
ಕಾಳಿದಾಸರ ಮನೆಯ ಕೀಳುದಾಸನು ನಾನುಆಳುದಾಸನು ನಾನು ಮೂಳದಾಸಫಾಲಾಕ್ಷ ಸಖ ನಿನ್ನ ಭಜಿಪ ಭಕ್ತರ ಮನೆಯಆಳಿನಾಳಿನ ದಾಸ ಅಡಿದಾಸ ನಾನಯ್ಯ ೨
ಹಲವು ದಾಸರ ಮನೆಯ ಹೊಲೆಯ ದಾಸನು ನಾನುಕುಲವಿಲ್ಲದ ದಾಸ ಕುರುಬ ದಾಸಛಲದಿ ನಿನ್ನ ಭಜಿಪರ ಮನೆಯ ಮಾದಿಗ ದಾಸಸಲೆ ಮುಕ್ತಿ ಪಾಲಿಸೆನ್ನೊಡೆಯ ಕೇಶವನೆ ೩

ಬೂಟಾಟಿಕೆ ದಾಸರನ್ನು ತರಾಟೆಗೆ
೨೦೫
ದಾಸ ಪಟ್ಟವೋ ಸನ್ಯಾಸ ಪಟ್ಟವೋ ಪ
ಆಸೆಯಿಂದ ನೆಲೆಯಾದಿಕೇಶವನ್ನ ನೆನೆಯದವಗೆಅ
ಮಂಡೆ ಬೋಳು ಮಾಡಿ ನಾಮದುಂಡೆಯನ್ನು ಬರೆದು ಕೆಡಿಸಿಕಂಡಕಂಡವರನು ಕೂಡಿಭಂಡ ಜನ್ಮ ಹೊರೆಯುವವಗೆ ೧
ಅವರಿವರ ಕೈಯ ನೋಡಿ ಹ-ಲವು ಕೆಲವು ಮಾತನಾಡಿ ಹ-ಲವ ಹಂಬಲಿಸಿ ದಿ-ನವ ಕಳೆದು ಉಳಿದು ಬಾಳುವಗೆ ೨
ಬೆಂದ ಸಂಸಾರವೆಂಬಬಂಧನದೊಳಗೆ ಸಿಲುಕಿಕೊಂಡುಚೆಂದಾದಿಕೇಶವನ್ನಒಂದು ಬಾರಿ ನೆನೆಯದವಗೆ ೩