Categories
ರಚನೆಗಳು

ಕಮಲಪತಿವಿಠ್ಠಲರು

೧೭೦
ಜಗನ್ನಾಥದಾಸರ ಸ್ತೋತ್ರ
ಅಂಬುಜಾಕ್ಷಿ ಸ್ತಂಭದಿಹನ್ಯಾರೇ – ಸಾರೇ ಪ
ನಂಬಿ ಭಜಿಸುವ ಭಕುತರ ಮನದಹಂಬಲ ನೀಡುವರೆ – ನೀರೇ ಅ.ಪ
ಸುರರೊಡೆಯನೋಲ್ ಪರಿಪರಿಯಲೈ- ಶ್ವರ್ಯದಿಂ ರಾಜಿಸುವರ್ಯಾರೇಹರಿಕಥಾಮೃತ ಗ್ರಂಥ ವಿರಚಿಸಿಧರಣಿ ಸುರರುದ್ಧರಿಸಿದವರೆ ೧
ಫುಲ್ಲಲೋಚನೆ ಬಲ್ಲೆಯಾ ಇವ -ರಿಲ್ಲಿರುವ ಕಾರಣವಿದೇನೆಫುಲ್ಲನಾಭನ ಪುಡುಕುತಲೀಪ್ರಹ್ಲಾದನನುಜ ಸಹ್ಲಾದರಿವರೆ ೨
ಜಲಜ ತುಳಸಿಮಣಿ ಸುಮಾಲಿಕೆಗಳದಿ ಧರಿಸಿಹನ್ಯಾರೆ – ನೀರೇಕಲಿಯುಗದಿ ಕಮಲಾಪತಿ ವಿ- ಠಲನ ಒಲಿಸಿದಿಳೆಯೊಳಗೆ ಮೆರೆವರೆ ೩

೧೬೯
ಗುರು ವಿಜಯರಾಯರ ಪದಸರಸಿಜ ಸೇವಿಪ ನರನೇ ಜಗನ್ಮಾನ್ಯ ಧನ್ಯಾ ಪ
ನಿರುತ ಸ್ಮರಿಸುವರ ದುರಿತ ತರಿಯಲವತರಿಸಿ ನರಹರಿಯ ಪರಿಚರಿಸುವ ನಿಜ ಅ.ಪ
ಭೂಕಾಂತನ ಬಹು ಬಾಧಿಗೆ ತಾಳದೆಈ ಕರುಣಿಕನ ತನವಾಬೇಕಿಲ್ಲೆಂದರು ತಾಕಿಕದ ಸ್ಥಿತಿಸಾಕುವ ಶ್ರೀ ದೇವಾಶ್ರೀ ಕಳತ್ರನ ಕೃಪಾ ಕಟಾಕ್ಷದಿಂ-ದೇಕ ಮನೋಭಾವಾಸ್ವೀಕರಿಸುತ ಪರಲೋಕ ಸಾಧನವನೀ ಕರಿಸಿದರಾನೇಕ ದುರ್ವಿಷಯವ ೧
ಇಂತುಪಯ ನಿಶ್ಚಿಂತನಾಗಿ ಗುರು-ವಂತರಾತ್ಮ ಹರಿಯಾಸ್ವಾಂತತಿ ಭಜಿಸುತ ಚಿಂತವರೇವಲಿ ಹನು-ಮಂತನ ಪರಮದಯಾಎಂತು ಪೇಳಲಿ ಬಲು ಶಾಂತರಾಗಿ ಶ್ರೀ-ಕಾಂತನ ಪರಿಪರಿಯಾಅಂತರಂಗದೊಳನುಭವಿಸುತ ಗುಣ-ವಂತರಿವರಿಗೆ ದಿಗವಂತದಿ ಸರಿಯಾ ೨
ಲೇಸು ಎ್ಞÁನವ ಬಯಸುವ ಜನರೋಲ್‍ಆ ಸೋಮಪುರದಲಿವಾಸವಾದ ರಾಮದಾಸರಿಂದುಪ-ದೇಶವ ಕೊಳ್ಳುತಲೀಹೇಸಿ ವಿಷಯದಿಂದೋಷಿಯಾದ ಶ್ರೀನಿ-ವಾಸರಾಯರಲ್ಲೀ ಯೇಸು ಜನ್ಮದ ಸುಕೃತವು ಇವರನು ನಿ-ರ್ದೊಷಿಗಳನು ಗೈದಿಸಿದರು ತ್ವರಿತದಲಿ ೩
ವೇದ ವೇದ್ಯನ ಗುಣಂಗಳ ಪದ ಸು-ಳಾದಿ ಪ್ರಮೇಯವನೂ ಸಾದರದಿಂದಲಿ ಭೂದೇವರಿಗೆ ಬೋಧಿಸಿ ತತ್ವವನೂಸಾಧಿಸಿ ಭೇದವ ಜೀವೇಶ್ವರ ಮತಭೇದಿಸಿ ವಾದಿಯನೂಆದಿ ವ್ಯಾಧಿ ಅನಾದಿ ಭೂತಗಣ ಭೇದಿಸಿ ಮಾಡಿ ಪರೋದರ ಗತವನೂ ೪
ಮಿತಿ ಇಲ್ಲವರ ಚರಿತೆಗಳ ಪೊಗಳುವಅತಿಶಯ ಸಮ್ಮೋದಾಗತಿದಾಯಕ ಪಾರ್ವತಿ ಪತಿ ಅಚಲ ವ-ಸತಿಯನೆ ಮಾಡೀದಾಕೃತಿ ರಮಣನ ಒಲಿಸುತನಶನ ವ್ರತ ಪಥದಿಂದಾಗಾಧಾನುತಿಸುತ ಕಮಲಾಪತಿ ನರಸಾರಥಿ ಪ್ರತಿಮೆಯಪ್ರತಿಷ್ಠಿಯ ಹಿತದಿಂದಗೈದಾ ೫

೧೭೧
ಹರಿಕಥಾಮೃತಸಾರದ ಫಲಶ್ರುತಿ
ಶ್ರೀ ಮದಶ್ವಗ್ರೀವನೊಲುಮೆಗೆ ಧಾಮರೆನಿಪ ಶ್ರೀ ವಾದಿರಾಜರುಪ್ರೇಮದಲ್ಲಿ ಜಗನ್ನಾಥದಾಸರ ಸ್ವಪ್ನದಲಿ ಬಂದುಶ್ರೀ ಮನೋರಮನರಿಪ ತತ್ವ ಸು ಸೌಮನದ ಮಾಲಿಕೆಯನಿತ್ತು-ದ್ದಾಮ ಗ್ರಂಥವ ರಚಿಸಿರೆನುತಲಿ ನುಡಿದ ಕಾರಣದೀ ಪ
ಭಾರತವು ಭಾಗವತ ವಾಮನ ಗಾರುಡ ಭವಿಷ್ಯೋತ್ತರ ಪುರಾಣಚಾರು ವಿಷ್ಣು ರಹಸ್ಯ ಪಂಚರಾತ್ರಾಗಮ ವಾಯುಸಾರ ಗುರವೃತ್ಪ್ರವೃತ್ತವು ಈರ ಸಂಹಿತಾದಿತ್ಯವಾಗ್ನೇಯಪಾರ ರಸಗಳ ತೋರ್ಪ ಶ್ರೀ ಗುರು ಮಧ್ವ ಶಾಸ್ತ್ರದಲೀ ೧
ಭಾರಿ ಭಾಗ್ಯವಲೋಕಿಸಿದರಲಿ ಸಾರ ಕ್ರೋಢೀಕರಿಸಿ ದೀನೋ-ದ್ಧಾರಗೋಸುಗ ಹರಿಕಥಾಮೃತ ಸಾರವನು ರಚಿಸೀಸ್ಥೈರ್ಯ ಮಾನಸದಿಂದ ಭಾವೀ ಭಾರತೀಪತಿ ವಾದಿರಾಜರಭೂರಿ ತೋಷಕೊಪ್ಪಿಸುತಲಾಪಾರ ಮುದ ಪಡೆದೂ ೨
ಸಾಸಿರಾರ್ಥಗಳೊಂದು ಪದಕವಕಾಶವಿರುವೋ ಶ್ರೀದ ವಿಷ್ಣುಸಾಸಿರದ ನಾಮವನು ಯೋಚಿಸಿ ಇಹರು ಗ್ರಂಥದಲೀಈಸು ರಹಸ್ಯವನರಿತು ಪಠಪಗೆ ಏಸು ದೂರವೊ ಮುಕ್ತಿಬರಿದಾ-ಯಾಸ ಬಟ್ಟುದರಿಂದ ಫಲವೇನಿಲ್ಲವೀ ಜಗದೀ ೩
ಹ ಯೆನಲು ಹರಿಯೊಲಿಯುವನು ತಾ ರಿ ಯೆನಲು ರಿಕ್ತತ್ವ ಹರಿಸುವಕ ಯೆನಲು ಕತ್ತಲೆಯೆಂಬಾಎ್ಞÁನವನು ಪರಿಹರಿಪಾಥಾ ಯೆನಲು ಸ್ಥಾಪಿಸುವ ಎ್ಞÁನ ಮೃಯೆನಲು ಮೃತಿಜನಿಯ ಬಿಡಿಸುವತ ಯೆನಲು ಹರಿ ತನ್ನ ಮೂರ್ತಿಯ ತೋರುವನು ನಿತ್ಯಾ ೪
ಸಾ ಯೆನಲು ಸಾಧಿಸುವ ಮುಕ್ತೀ ರ ಯೆನಲು ರತಿಯಿತ್ತು ರಮಿಪನುಕಾಯ ವಾಙ್ಮನದೆಂಟು ಅಕ್ಕರ ನುಡಿದರದರೊಳಗೇಶ್ರೀಯರಸು ವಿಶ್ವಾದಿ ಅಷ್ಟೈಶ್ವರ್ಯ ರೂಪದಿ ನಿಂತು ತಾ ಪರ-ಕೀಯನೆನಿಸದೆ ಇವನ ಮನದೊಳು ರಾಜಿಪನು ಬಿಡದೇ ೫
ಹರಿಯೆನಲು ಅನಿರುದ್ಧ ಧರ್ಮವು ದೊರಕಿಸುವ ಪರಮ್ಹರುಷದಲ್ಲಿ ಸ-ತ್ವರ ಕಥಾಯೆನೆ ಕೃತಿರಮಣನರ್ಥಗಳ ಹನಿಗರೆವಾವರ ಅಮೃತಯೆನಲಾಗ ಶ್ರೀ ಸಂಕರುಷಣನು ಕಾಮವನು ಯೋಜಿಪಸರಸ ಸಾರೆನೆ ವಾಸುದೇವನು ಮೋಕ್ಷ ಕೊಡುತಿಪ್ಪಾ ೬
ಈ ರಹಸ್ಯವನರಿತು ಪ್ರತಿದಿನ ಸಾರಸಾಕ್ಷನ ಪಾದಕಮಲಕೆಆರು ಪದದಂತಿರುವ ನರರಿಗೆ ಮೇಲೆ ನುಡಿದ ಫಲಾಸಾರಿ ಸಾರಿಗೆ ಒದಗಿ ಬರುತಲೆ ಸೇರಿಸುವರೈ ವಿಷ್ಣು ಮಂದಿರತೋರುವನು ನಿಂದಕರ ನಿಕರಕೆ ನಿರವಯನು ನಿತ್ಯ ೭
ಚಾರುತರದೀ ಹರಿಕಥಾಮೃತ ಸಾರಕೃತ ಋಷಿ ಭಾರದ್ವಾಜರುಸಾರ ಹೃದಯದಿ ನಿಂತು ಸಕಲ ಸು ಶಾಸ್ತ್ರದಾಲೋಕಾಸಾರಿ ಸಾರಿಗೆ ಮಾಡಿ ಮಾಡಿಸಿ ಸೂರೆಗೊಟ್ಟಾನಂದ ಚಿನ್ಮಯಪಾರವಾರಾಶಯನ ಶ್ರೀ ಕಮಲಾಪತಿ ವಿಠಲಾ ೮

ಸುಳಾದಿಗಲು
೧೭೨
ಧ್ರುವತಾಳ
ಮನವೆ ಚಿತ್ತೈಸುವದು ಭೋಜನ ಪ್ರಕ್ರೀಯವುಅನುವಾಗಿ ಪೇಳುವೆನು ವಿವರದಿಂದ ಘನ ಘನ ವಾಕು ಕಾಯ ಮನದಿಂದ ನೀವಂಧಾಅನ್ನಾದ್ಯ ಚೌಷ್ಯ ಲೇಹ್ಯ ಪೇಯವೆಂಬ ಚತುರನ್ನಮನುಜರಿಗೊಪ್ಪುವದು ನಿತ್ಯದಲ್ಲಿತೃಣ ಫಲವೆಂಬೋದನ ಪಶುಪಕ್ಷಿಗಳಿಗೆನ್ನುಮಿನುಗುವ ಸುರರಿಗೆ ಸ್ವಹಾವೆನ್ನು ಮನದಿಂದಲಾ ಸ್ವಧಾ ಪಿತೃಗಳಿಗನ್ನವೆನ್ನು ಭು-ವನದೊಳಗೆ ಇದೆ ಸಪ್ತಾನ್ನವೂ ಇನಿದು ಓದನದೊಳು ಚತುರ ವಿಧಅನ್ನವನು ಸುಜನರಿಗೆ ನೀಡಬೇಕಾದಡೆಸು ನರರಲ್ಲಿರುತಿಪ್ಪ ಹರಿ ಮೂರ್ತಿಗಳುಕ್ಷಣ ಕ್ಷಣಕೆ ಚಿಂತಿಸಿ ಅನ್ನವನಿತ್ತವಗೆವನಜನಾಭನ ಲೋಕ ಕರತಳಸ್ಥ ಸಿದ್ಧಅನುಮಾನ ಮಾಡದಿರು ಹರಿಯಾ ಸಾಕ್ಷಿ ವನಜಾಕ್ಷ ಕಮಲಾಪತಿ ವಿಠಲ ಎನ್ನ ಹೃದಯವನರುಹದಲ್ಲಿ ನಿಂತು ನುಡಿಸಿದ್ದು ನುಡಿವೆನು ೧
ಮಟ್ಟತಾಳ
ಸಿರಿ ಅಜಿತಾದ್ಯಾನಂತಾ ಪರಮುಖ ಬಹುರೂಪ ವರ ಸಾಸಿರ ರೂಪ ನಾರಾಯಣ ಶತವುಅರಿ ಧರ ಅಜ ಏಕ ಅರ್ದ ಶತರೂಪಸ್ಮರಿಸು ಕೇಶವ ಮುಖ್ಯ ಚತುರ ವಿಂಶತಿಪರಮ ಶಕ್ತ್ಯಾ ದ್ವಾದಶರೂಪಗಳುಹರಿಯ ಮಚ್ಛಾದಿ ದಶ ಭಗವನ್ಮೂರ್ತಿಗಳುನಿರುತದಿ ಪೂರ್ವೊಕ್ತ ಕ್ರಮದಿಂದ ಸ್ಥೂಲ ಶರೀರಕ್ಕೆ ಕವಚಾ ಕೃತಿಯಾಗಿಪ್ಪೋದುಮರಳೆ ಈ ಕವಚದ ವೊಳಗೆ ವಾಸುದೇವವಿರಜೆ ಸಂಕರುಷಣ ಪ್ರದ್ಯುಮ್ನನಿರುದ್ಧಗಳಿ-ರುವರೆ ಮೋದದಿ ಪಂಚಾವರಣವಾಗಿ ಹೋರು ಅರಿವದು ಇವರೊಳಗೆ ತ್ರಿಗುಣಾತ್ಮಕ ತತ್ವ ವಿರಿಂಚಿ ಮೃಡನಭವು ಮರುತಾಗ್ನಿ ಉದಕಸರಸದಿ ತಿಳಿ ಸಪ್ತ ತತ್ವಗಳಾವರಣಾನರರಾ ತನುವೆಂಬ ಪಿಂಡಾಂಡಕ್ಕೆಲ್ಲಬೆರದಿಹುದು ವೊಳಗೆ ದಶಗುಣ ಕಡಿಮ್ಯಾಗಿನರಸಖ ಕಮಲಾಪತಿ ವಿಠಲನ ದಯದಿಂದ ಮೆರವುತಲಿಹ್ಯನೊ ವರಣೆಂದು ೨

ತ್ರಿವಿಡಿತಾಳ
ಪದವಿಡಿದು ಶಿರತನಕ ಇಪ್ಪ ರೋಮಗಳಲ್ಲಿ ಹುದುಗಿಪ್ಪೊದಯ್ಯಾ ನವ ಕೋಟಿ ರೂಪಇದು ಕೇಳು ಕಟಿಯಿಂದ ಶಿರತನಕ ಇಹೊ ರೋಮ ಸದನಗಳಲ್ಲಿ ಒಂದೊಂದು ತೀರ್ಥ ಒದಗಿಪ್ಪೊರಲ್ಲಿ ಸುರರು ಮಾನಿಗಳೆನಿಸುತ್ತಪೆದರಾದೆ ಸಾರ್ಧತ್ರಯ ಕೋಟಿ ಜನರುಚದುರ ಮಾನಿಗಳಲ್ಲಿ ತೀರ್ಥದಲ್ಲಿ ಸಹಚದರಾದೆ ಏಳು ಕೋಡಿ ರೂಪವಿಹುದುಮೇದಸ್ಸು ಮುಖ ಸಪ್ತ ಧಾತುಗಳಲ್ಲಿ ನಿತ್ಯಮದನನಯ್ಯಾ ಸಪ್ತ ರೂಪದಿಂದಿಹನೊಇದರಾನಂತ ಸಪ್ತ ಧಾತುಗಳಲ್ಲಿ ಬಿ-ಡದೆ ತತ್ವ ಸಹಿತ ಪಂಚ ಕೋಶವಿಹುದುಇದರಲ್ಲಿ ಪಂಚಲಕ್ಷ ಪಂಚಾಶತಿ ಸಹಸ್ರಚತುಃಶ ಶತರೂಪದಿಂದಿಹದೊಸುದತಿ ಸಹಿತ ಮೂವತ್ತು ನಾಲ್ಕು ಲ-ಕ್ಷದಾ ಐವತ್ತಾರು ಸಾವಿರದ ನೂರಾವೊಂದು ಹದವರಿತುನಾಡಿಯಲಿ ರೂಪಗಳಿಹವೆಂದುಬುಧರು ಸ್ಮರಿಸಿ ಸುಖ ಬಡುವರೈಯ್ಯಾಸದಯದಿಂದಲಿ ಕೇಳು ದೇಹಸ್ಥ ನವಕೋಟಿ ತತ್ವ ತತ್ವಾಭಿಮಾನಿಗಳಲ್ಲಿಪ್ಪಪದುಮಜ ಪಿತ ಅಷ್ಟಾ ದಶಕೋಟಿ ರೂಪ-ದಿಂದ ನಲಿ ನಲಿದಾಡುತಿಪ್ಪ ದೇಹದಲ್ಲಿಮುದದಿಂದ ಸಾವಿರದ ಎಂಭತ್ತು ರೂಪ-ದಿಂದ ಅಸ್ಥಿಪರ್ವ ಸಂಧಿಯಲಿ ವ್ಯಾಪಿಸಿಪ್ಪಮಧುಸೂದನ ನಿತ್ಯ ಕರಣೋಪಕರಣದಲಿ ವಿ-ಬುಧೇಶ ಐವತ್ತೆರಡು ಸಾವಿರದ ಅಧಿಕಾ-ವಾದಾ ನೂರಾ ಮುವ್ವತ್ತಾರು ರೂಪ ಸಿದ್ಧವಾಗಿಪ್ಪವಯ್ಯಾ ನಿರುತದಲಿಪದುಮ ಬಾಂಧವ ಸಪ್ತ ವಿಂಶತಿಪದುಮದಲ್ಲಿ ಮುನ್ನೂರಾ ಎಂಭತ್ತೆರಡು ರೂ-ಪದಿಪ್ಪ ಹೃದಯದಲ್ಲಿಹ್ಯ ಪಂಚ ಕಂ-ಜದಲಿಪ್ಪೊ ರೂಪ ಅಗಣಿತವಯ್ಯಾ ಸತತ ವಿ-ಬುಧರಿಂದ ಮದಮತ್ಸರ ಬಿಟ್ಟು ಸ್ಥೂಲ ದೇಹದ ಕ್ರಮಹದನವನು ತಿಳಿವಯವಗೆ ಹರಿವೊಲಿವಇದರ ನಂತರ ಒಳ ಒಳಗೆ ಆವರಣಗಳುಪದರ ಪದರವಾಗಿ ಇರುತಿಪ್ಪೊವುಅದರ ವಿಚಾರವನು ಕಮಲಾಪತಿ ವಿಠಲಸದಯಾದಿಂ ಪೇಳಿಸಿದ್ದು ಪೇಳುವೆನು ೩

ಝುಂಪಿತಾಳ
ಅನ್ನ ಪ್ರಾಣ ಚಕ್ಷು ಶ್ರೋತ್ರ ವಾಂಙ್ಮನೊ ವಿ-ಎ್ಞÁನ ಆನಂದಮಯ ನಾರಾಯಣರನ್ನ ವಾಸುದೇವ ಆವರಣತನಕ ಇವು ಈರೈದು ಆವರ್ಣವೆನಿಸುತಲಿವುಘನ್ನ ಸ್ಥೂಲ ದೇಹ ಅದಿರುದ್ದ ದೇಹಗಳ ಮಧ್ಯದಲ್ಲಿಚನ್ನಾಗಿ ಮಿನಗುವವು ಕವಚದಂತೆತನ್ನಾಮ ತದ್ರೂಪದಿಂದ ಆವರಣದಲಿಅನ್ನ ನಾಮಕ ಹತ್ತು ರೂಪದಿಹನೊಚಿನ್ನ ಅನಿರುದ್ಧ ದೇಹದಲಿ ದೈತ್ಯರು ಎಲ್ಲಸನ್ನಿಹಿತರಾಗಿಹರು ತ್ರಿದಶರಲ್ಲಿಹನ್ನೆರಡು ನೂರಾ ಹತ್ತು ಅಧಿಕವೊಂದು ಲಕ್ಷಸಣ್ಣ ಬಿಂದುಗಳಿಹವೊ ಅನಿರುದ್ಧದಿಕನ್ಯ ಲಕುಮಿಯು ಅಭಿಮಾನಿಯೆನಿಸುತ ಲಕ್ಷಹನ್ನೆರಡು ನೂರು ಹತ್ತು ರೂಪದಿಹ್ಯಳೊಪನ್ನಗಾಶಯನ ಲಕುಮಿಯಲ್ಲಿ ಬಿಂದುಗಳಲ್ಲಿಮುನ್ನೆ ಪೇಳಿದ್ದ ದ್ವಿಗುಣ ರೂಪದಿಹನೊಇನ್ನು ಈ ದೇಹದಲಿ ಅನಿರುದ್ಧ ಪ್ರ-ದ್ಯುಮ್ನ ಎರಡೆರಡು ಆವರಣದಿಂದೊಪ್ಪೊರೊಪುಣ್ಯವಂತರು ಸಪ್ತ ಆವರಣದಲಿ ಸ್ಮರಣೆ-ಯನ್ನೆ ಮಾಳ್ಪವದೇಳು ರೂಪಗಳನುಚೆನ್ನಾಗಿ ತಿಳಿವೊದೆ ಏಳು ಆವರ್ಣದಲ್ಲಿಘನ್ನ ನಾಲ್ಕೊಂದು ಕೋಶ ಇಹದು ನಿತ್ಯ ಅ-ಯಿನೂರು ಎಂಭತ್ತೈದು ಸಾವಿರ ಮ್ಯಾಲೆನನ್ನೂರು ರೂಪ ಈ ಕೋಶದಿಹದುಮನ್ನಿಪುದು ಇಪ್ಪತ್ತನಾಲ್ಕು ತತ್ವಗಳುತನ್ಮಾನಿ ಸುರರು ಸಹ ಅಲ್ಲಿಪ್ಪರುಅನ್ವಯಿಸು ಒಬ್ಬೊಬ್ಬ ತತ್ವ ದೇವತೆಯಲ್ಲಿ ಮುನ್ನೆ ಚತುರ್ವಿಂಶತಿ ತತ್ವಇಪ್ಪವೆಂದುಇನ್ನಿದೇ ರೀತಿಯಲಿ ಹರಿರೂಪ ಗುಣಿಸಲದುಅನ್ನಂತ ರೂಪಗಳುವೆನಿಸುತಿಹವು ತನ್ನ ನಂಬಿದ ಜನಕೆ ಈ ಪರಿಯ ತಿಳಿಸುತಲಿಬನ್ನ ಬಡಿಸದೆ ಪೊರೆವ ಕ್ಷಣ ಬಿಡದಲೆಪನ್ನಗಾಚಲವಾಸ ಕಮಲಾಪತಿ ವಿಠಲತನ್ನನಾಡುವನೆಂದು ಶ್ರುತಿ ಸ್ರ‍ಮತಿಯು ಪೊಗಳುತಿದೆ ೪

ರೂಪಕತಾಳ
ಮುದ್ದಾಗಿ ತಿಳಿವದು ಅನಿರುದ್ಧ ಪ್ರದ್ಯುಮ್ನಸಿದ್ಧ ಸಂಕರುಷಣ ವಾಸುದೇವ ನಾರಾಯಣಬದ್ಧಾಗಿ ವೊಳಗೆ ಆವರಣ ರೂಪದಲಿಪೊದ್ದಿಹರೊ ನಿರುತದಿ ಪರಮ ಮೋದದಲಿಚದ್ದುರಾ ಪರಮಾ ಜೀವಾಚ್ಛಾಧಿಕ ದ್ವಯದಲ್ಲಿಸದ್ದು ಮಾಡದೆ ಅಷ್ಟಾದಶ ರೂಪದಿಹ್ಯನೊಬುದ್ಧಿವಂತರು ಕೇಳಿ ಕಮಾವರಣದಲಿಇದ್ದು ಅಷ್ಟ ಷಷ್ಟಿರೂಪದಲ್ಲಿ ಮೆರೆವಹೆದ್ದೈವ ಶ್ರೀ ಹರಿಯು ಕಾಮಾವರಣದಲ್ಲಿ ತ್ರಯ ಷಷ್ಠಿಸದ್ದರ್ಶನೇಯ ರೂಪದಲ್ಲಿಹ್ಯನೊ ಅ-ವಿದ್ಯಾವರಣದಲ್ಲಿ ಏಳು ವಿಂಶತಿಮದ್ದಾನೆ ತೆರ ಮೆರೆವ ರೂಪದಲಿ ತಾನುಶುದ್ಧ ಮನದಲಿ ತಿಳಿಯೊ ಅನಿರುದ್ಧ ತನುವಿನಿಂದಖದ್ಯೋತ ವರ್ಣಾಭ ಅವ್ಯಕ್ತ ತನಕಇದ್ದದ್ದು ನೋಡಲು ದಶ ಆವರಣ ಇಹವುಮುದ್ದು ಮೋಹನ ಸ್ವಾಮಿ ಕಮಲಾಪತಿ ವಿಠಲನಿದ್ದುರ (ನಿದ್ರಾ) ದಲ್ಲಿರೆ ತಾ ತಿಳಿಸುವ ತನ್ನವಗೆ ೫

ಅಟ್ಟತಾಳ
ಈರ ವಿಧಿ ವಾಣಿ ಭಾರತಿ ಇವರಿಂದಬಾರಿ ಬಾರಿಗೆ ಸ್ತೋತ್ರ ಧೀರನು ಕೊಳ್ಳುತ್ತಸಾರ ಅವ್ಯಕ್ತ ಸುಶರೀರದಲ್ಲಿ ಶತಚಾರು ಸಪ್ತತಿ ನವ ಸ್ವರೂಪದಲ್ಲಿಪ್ಪಮೀರಿದ ಲಿಂಗದಿ ನಾರಾಯಣ ತಾನುನಾರಿ ಸಹಿತ ಅರವತ್ತಾರೊಂದು ರೂಪದಿಸೇರಿಪ್ಪನಿದರೊಳಗೆ ಮಾರ ಜನಕ ತನ್ನಸ್ವರೂಪ ಜೀವಕ್ಕೆ ತೋರದಂತೆ ಈಶ್ವರೇಚ್ಛಾವರ್ಕವುಹಾರೈಸಿ ಮಾಡಿಹ ನೀರಜಾಕ್ಷ ತನ್ನ ಸಾರಿಗೆ ಬಂದಾಗಭೂರಿ ಕೃಪೆಯ ಮಾಡಿ ತಾರತಮ್ಯದಿಂದಥೋರ ಆವರ್ಕವು ತೀರ ಕಡಿಗೊತ್ತುವಸಾರಸದಳಾಕ್ಷ ಕಮಲಾಪತಿ ವಿಠಲಪಾರು ಮಾಳ್ಪ ಭವ ಕೂಪಾರದಿಂದ ೬

ಆದಿತಾಳ
ದಾವ ಸ್ಥೂಲದಿಂದ ಸ್ವರೂಪ ಪರಿಯಂತರಆವರ್ಕ ಯಿಪ್ಪತ್ತೈದು ಎನಿಸುವದರೊಳಗೆಜೀವ ದೇಹದಲ್ಲಿ ಎರಡು ಅರ್ಬುದ ಶತ ನವಪಾವನ್ನವಾದಂಥ ನರಸಿಂಹ ರೂಪವುತವಕದಲ್ಲಿ ನಿಂತು ಮೃತ್ಯುವಿಗೆ ಮೃತ್ಯುವೆನಿಸಿಜೀವೋತ್ತಮನಿಂದ ಸೇವ್ಯ ಮಾನ್ಯನಾಗಿಆವಾವ ಕಾಲದಲ್ಲಿ ಇರುತಿಪ್ಪನಲ್ಲದೆಶ್ರೀವರನೆಂಬೊ ಅಂತರಾತ್ಮನು ಇಹೊ ಹೃದಯಾದೇವೇಂದ್ರಾಭಿದ ವೈಕುಂಠವೆನಿಪದುಆವರಿಸಿಪ್ಪವಲ್ಲಿ ಭಾಗತ್ರಯಂಗಳುದೇವೋತ್ತುಮನಾದ ಮುಕ್ತ ಬ್ರಹ್ಮಾದಿಗಳಿಗೆಆವ ಸ್ಥಳವೆಂದು ಶೃತಿಯು ಪೊಗಳುತಿದೆಈ ವಿಧ ಸುರರೆಲ್ಲ ಇದ್ದ ಬಳಿಕ ಅಲ್ಲಿದೇವವರೇಣ್ಯನ ರೂಪಗಳೆಂತು ಅರಿದುಅವಗಣನೆ ಮಾಳ್ಪ ಅಗಣಿತವೆನಿಪದುಜೀವ ತನುವಲಿಪ್ಪ ಮಹಿಮೆಯ ತಿಳಿಸೋದಕ್ಕೆಕೋವಿದನೊಬ್ಬನಿಗೆ ಅನ್ನೋದಕವನುಭೂವರ ಧರ್ಮನಿಂದ ಕೊಡಿಸಿ ತದನಂತರ ಆ ವಿಪ್ರನುಚ್ಛಿಷ್ಟ ತೆಗೆಯೆಂದು ಪೇಳಿದ್ದಕ್ಕೆಧಾವಿಸಿ ತೆಗೆದದು ಕೊನೆಯಗಾಣದಿರೆಹಾವಭಾವ ನೋಡಿ ಧರ್ಮರಾಜನ ಬಿಡಿಸಿತಾ ವೊಲಿದು ತೆಗೆದು ಮಹಫಲ ತಂದಿತ್ತನುಈ ವಿಧ ಮತಿಯಿಂದ ಆವರ್ಕಗಳರಿತುಕೋವಿದರಲ್ಲಿಪ್ಪ ರಮಾಯುತ ರೂಪಗಳುಝಾವ ಝಾವಕೆ ತಿಳಿದು ಚಿಂತನೆ ಪೂರ್ವಕಸಾವಧಾನದಿ ಉದಕ ಅನ್ನಾದಿ ಕೊಟ್ಟರು ಮೌನದಿ ಮನೆಯಲ್ಲಿ ನಿತ್ಯ ತಾ ವುಂಡರುಆ ವಿಪ್ರನ ಪುಣ್ಯ ಇಷ್ಟೆಂದು ಗಣನಿಗೆಆವಂಗು ಬಾರದು ತಿಳಿ ಕಂಡ್ಯಾ ಮನವೆ ನೀ-ಸಾರ್ವಭೌಮ ಹರಿ ಎಡಬಿಡದಿಪ್ಪವನಲ್ಲಿಜೀವೇಶ ಕಮಲಾಪತಿ ವಿಠಲ ಪ್ರಾಂತ್ಯಕ್ಕೆತಾ ವೀವ ತನ್ನ ನಿಲಯ ಪರಮ ಸಂತೋಷದಿಂದ ೭
ಜತೆ
ಭೋಜನೆಂಬ್ಯಾಜನಾ ನಿವ್ರ್ಯಾಜದಿಂದಲಿ ನಡಿಸೆಭೋಜ ಕಮಲಾಪತಿ ವಿಠಲನವರಲ್ಲಿಪ್ಪ ||

ಅಂಬುಜಾಕ್ಷಿ
೧೭೦
ಜಗನ್ನಾಥದಾಸರ ಸ್ತೋತ್ರ
ಅಂಬುಜಾಕ್ಷಿ ಸ್ತಂಭದಿಹನ್ಯಾರೇ – ಸಾರೇ ಪ
ನಂಬಿ ಭಜಿಸುವ ಭಕುತರ ಮನದಹಂಬಲ ನೀಡುವರೆ – ನೀರೇ ಅ.ಪ
ಸುರರೊಡೆಯನೋಲ್ ಪರಿಪರಿಯಲೈ- ಶ್ವರ್ಯದಿಂ ರಾಜಿಸುವರ್ಯಾರೇಹರಿಕಥಾಮೃತ ಗ್ರಂಥ ವಿರಚಿಸಿಧರಣಿ ಸುರರುದ್ಧರಿಸಿದವರೆ ೧
ಫುಲ್ಲಲೋಚನೆ ಬಲ್ಲೆಯಾ ಇವ -ರಿಲ್ಲಿರುವ ಕಾರಣವಿದೇನೆಫುಲ್ಲನಾಭನ ಪುಡುಕುತಲೀಪ್ರಹ್ಲಾದನನುಜ ಸಹ್ಲಾದರಿವರೆ ೨
ಜಲಜ ತುಳಸಿಮಣಿ ಸುಮಾಲಿಕೆಗಳದಿ ಧರಿಸಿಹನ್ಯಾರೆ – ನೀರೇಕಲಿಯುಗದಿ ಕಮಲಾಪತಿ ವಿ- ಠಲನ ಒಲಿಸಿದಿಳೆಯೊಳಗೆ ಮೆರೆವರೆ ೩

ಹಾಡಿನ ಹೆಸರು :ಅಂಬುಜಾಕ್ಷಿ
ಹಾಡಿದವರ ಹೆಸರು :ವಸುಧಾ ಕೇಶವ
ರಾಗ :ವಾಸಂತಿ
ತಾಳ :ರೂಪಕ ತಾಳ
ಸಂಗೀತ ನಿರ್ದೇಶಕರು :ವಾಗೀಶ್
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ