Categories
ರಚನೆಗಳು

ಕರ್ಕಿ ಕೇಶವದಾಸ

ಕರ್ಕಿ ಚೆನ್ನಕೇಶವ ಸ್ತುತಿ
೧೪೮
ಅನ್ಯರನು ಬೇಡೆನು ಚನ್ನಕೇಶವನೇ
ಪನ್ನಗಾಶನ ಸೇವ್ಯ ಸರ್ವಾತ್ಮನೇ ಪ
ತರಳ ಧೃವನನು ಕಾಯ್ದು ಧರಣಿಯನ್ನವಗಿತ್ತ
ಸುರಸೇವ್ಯನಾಕೇಶವಂದ್ಯ ಹರಿ ಜೊರತು ೧
ದುರುಳ ಕುರುಪತಿಯನುರೆಜೆ ಭಾಮೆ ದ್ರೌಪದಿಮಾನ
ತರಿಯತಿಣಿಸಲ್ಕವಳ ಕಾಯ್ದ ಹೊರತು ೨
ದುಷ್ಟ ಕಂಸನ ಬಾಧೆಯಿಂ ಲೋಕ ತತ್ತರಿಸೆ
ಭ್ರಷ್ಟನನು ಕೊಂದ ಜಗ ಪೊರೆದ ಹರಿ ಹೊರತು ೩

ಆತ್ಮನಿವೇದನೆ
೨೨೦
ಆತನೇ ದಾತನು ಯೆತ್ತಿಕೊಡುವವನು
ಭೂತದಯೆಯುಳ್ಳಂಥ ಪುಣ್ಯಾತ್ಮನು ಪ
ನಿಂದು ಕೀರ್ತಿಯೆ ಪಾಡೆ ದೇಹಿಯನ್ನುತ ಬೇಡೆ
ಸಿಂಧು ಜಲದಲಿ ಮಿಂದು ಭಜಿಸಲಾಗ
ಬಂಧನವ ಪರಿಹರಿಸಿ ಬಹು ಪ್ರೀತಿಯಿಂದೆನಗೆ
ಬಂದಿರುವ ಕಷ್ಟಗಳ ನೀಗುವರು ಯಾರೋ ೧
ನಿತ್ತು ಶ್ರೀ ಹರಿಭಜಿಸೆ ಕೂತು ಶ್ರೀ ಹರಿಸ್ಮರಿಸೆ
ತಾತನೇ ಗತಿಯೆಂದು ಪಾದದಲಿ ಬೀಳೇ
ಹೊತ್ತು ನೋಡದೆ ಮುದದಿ ಭಿನ್ನವೆಣಿಸದೆಯನಗೆ
ಯೆತ್ತಿ ಮೋಕ್ಷವ ಬೇಗನೀವ ನಾರೋ ೨
ನಾನು ಬಡವನು ಜಗದಿ ದೀನಹೀನನು ಹರಿಯೆ
ಏನು ಗತಿಯೆಂದೆನುತ ಚರಣ ಮರೆ ಹೊಕ್ಕೇ
ಪಾನ ಮಾಡುತಲೆನ್ನ ಅವಗುಣವ ನೀಗೆನಗೆ
ತಾನೆ ಭಿಕ್ಷವು ಬೇಗನೀವ ನಾರೋ ೩
ಭಜನೆ ಸ್ತೋತ್ರಗಳರಿಯೆ ಪೂಜೆ ವಿಧಿಯನು ತಿಳಿಯೇ
ಅಜನ ಪಿತ ಶ್ರೀಹರಿಯ ಮೆಚ್ಚಿಸಲು ಅರಿಯೇ
ತ್ಯಜಿಸಿ ದಾಸ್ಯತ್ವವನು ಹರಿಗೆ ಶರಣೆಂಬೆನಲು
ಸುಜನರನು ಪೊರೆವಂತೆ ಸಲಹುವನು ಯಾರೋ ೪
ನಾನು ಪಾಪಿಯು ಋಣಿಯು ಕ್ಲೇಶವನು ತೊರೆದೀಗ
ಇನ್ನು ಮರೆಯದೆ ನಿನ್ನ ದಾಸನಾಗುವೆನು
ಚನ್ನಕೇಶವ ಸ್ವಾಮಿ ರಕ್ಷಿಸೆಂದೊದರುತಿರೆ
ಪ್ರಾಣವನು ಯತ್ತೆನ್ನ ಸಲಹುವನು ಯಾರೋ ೫

೨೨೧
ಆದದ್ದ ಮರೆತು ಶ್ರೀ ರಂಗನ ಭಜಿಸಿರಿ
ಮೋದದಿ ಹರಿಯ ಸೇವೆಯ ಮಾಡಿರಿ ಪ
ಮುಕುಟವೆ ವಂದಿಸು ಮತ್ಸ್ಯಾವತಾರನ
ಮುಖವೆ ನೀ ಕೀರ್ತಿಸು ಮುದ್ದು ಕೂರ್ಮನ
ಸುಕಟಯೆ ಮುದ್ದಿಸು ಸೂಕರ ರೂಪನ
ನಖವೆ ನೀನಪ್ಪಿಕೊ ನರಸಿಂಹತನ ೧
ವಕ್ಷವೆ ಹೊರು ನೀನು ಗಿಡ್ಡ ವಾಮನನನ್ನು
ಪಕ್ಷವೇ ಪಿಡಿದಾಡು ಭಾರ್ಗವನನ್ನು
ಕಕ್ಷವೆ ಯೆತ್ತು ಶ್ರೀ ರಾಮಚಂದ್ರನನ್ನು
ಕುಕ್ಷಿಯೆ ಬೇಡು ಶ್ರೀ ಕೃಷ್ಣಾಮೃತವ ೨
ಹರುಷದಿ ತೊಡೆಯೆ ನೀ ಬುಧನ ಕೂಡ್ರಿಸಿಕೊಳ್ಳು
ಚರಣವೆ ಕಲ್ಕ್ಯಾನ ಮನೆಗೆ ನೀ ಪೋಗು
ಸರುವಾಂಗವೆ ನಿತ್ಯ ದಶನಾಮ ಸ್ಮರಿಸಿರಿ
ಸರಿಚನ್ನಕೇಶವ ನೊಲಿದು ಪಾಲಿಸುವಾ ೩

ಲೋಕನೀತಿಯ ಹಾಡುಗಳು
೨೦೭
ಆರು ಹಿತರಾದಾರು ಈ ವಿಶ್ವದೊಳಗೆ
ಭೂರಿ ಭಕ್ತಿಲಿಗೈದ ಪುಣ್ಯ ಕೃತಿ ಹೊರತು ಪ
ಪಿತನಲ್ಲ ಸುತನಲ್ಲ ರತಿಯಲ್ಲ ಸುತೆಯಲ್ಲ
ಅತಿ ಪ್ರೀತಿಯಿಂ ಪೊರೆದ ನಿಜಮಾತೆಯಲ್ಲಾ
ಸುತನಪೇಕ್ಷಿಸಿ ಹೆದರಿ ಅಜಮಿಳನು ಕರೆಯಲ್ಕೆ
ಪತಿತ ಪಾವನ ಹರಿಯ ನಾಮ ಹಿತವಾಯ್ತು ೧
ಧನವಲ್ಲ ಸಿರಿಯಲ್ಲ ಬಹು ಬೆಳೆದ ಮೈಯಲ್ಲ
ಹಣ ರಾಶಿ ಗಳಿಸುವ ದುರ್ಬುದ್ಧಿಯಲ್ಲ
ಮನ ಮತ್ಸರಗಳಲ್ಲ ಕಾಮಕ್ರೋಧಗಳಲ್ಲ
ತನುವಲ್ಲ ಡಂಬರದ ವೇದಾಂತವಲ್ಲ೨
ತರಳನಾಗಿಹ ಧೃವಗೆ ತರುಣ ಪ್ರಲ್ಹಾದನಿಗೆ
ಕರಿರಾಜ ಹನುಮಾದಿ ನಿಜ ಭಕ್ತರಿಂಗೇ
ವರಧರ್ಮ ಪುತ್ರನಿಗೆ ಮಧ್ಯ ಪಾಂಡವನಿಗೇ
ಪರಮ ಪತಿವ್ರತಾ ರಮಣಿ ದ್ರೌಪದಿಗೇ ೩
ಧರಣಿಯನು ಹೊತ್ತಿರುವ ಆದಿಶೇಷಗೆ ಮತ್ತೆ
ನಿರುತವೂ ಭಜಿಸಿದ ಪರಮ ದಾಸರಿಗೆ
ಕರುಣಾಳು ಮೆಚ್ಚಿತಾ ಸಾಯುಜ್ಯವನ್ನಿತ್ತ
ಸಿರಿಯರಸ ಶ್ರೀಹರಿಯ ಭಜನೆಯೊಂದುಳಿದು ೪
ಜನ್ಮಬಂಧವ ನೀಗಿ ಪರಮ ಪದವಿಯ ಕೊಡುವ
ಸನ್ನುತವು ನಿಜ ಸೌಖ್ಯವನ್ನು ಕರುಣಿಸುವ
ಪ್ರಾಣಿಯಲಿ ಆತ್ಮನಲಿ ಶ್ರಧ್ಧೆ ಹುಟ್ಟಿಸುವಂಥ
ಚನ್ನಕೇಶವ ಸ್ವಾಮಿ ಭಕ್ತಿಯೊಂದುಳಿದು ೫

೨೨೨
ಇನ್ನಾದರೂ ದಯಬಾರದೇ ದಾಸನಮೇಲೆ
ಇನ್ನಾದರೂ ದಯಬಾರದೇ ಪ
ಪನ್ನಗ ಶಯನನೇ ಚೆನ್ನಕೇಶವನೇ
ನಿಂನ್ನನು ನಂಬಿದ ಶರಣನಮೇಲೇ ಅ.ಪ
ಹಲವು ಯೋನಿಗಳಲ್ಲಿ ನೆರೆ ಪುಟ್ಟಿ ಬಂದೇ
ಹಲವು ಯಾತನೆಗಳ ಸಹಿಸುತ್ತ ಬಂದೇ
ಹಲವು ರೀತಿಗಳಿಂದ ದುಃಖವ ತಿಂದೇ
ಸಲೆ ನಂಬಿ ಹರಿಗೀಗ ಶರಣೆಂದು ಬಂದೇ ೧
ಆರು ವೈರಿಗಳೆನ್ನ ತಿವಿದು ತಿಕ್ಕುತಲಿವೆ
ಸೇರಿ ಬಗೆಯುತಲಿವೆ ಪಂಚ ವ್ಯಾಘ್ರಗಳೂ
ಗಾರು ಮಾಡುತಲಿದೆ ಅಹಂ ಎಂಬ ಸಿಂಹವು
ಶೆರಿಯ ಭಜಿಸುತ್ತ ಬಲೆದಾಟಿ ಬಂದೇ ೨
ಬಂಧು ಬÁಂಧವರೆಂಬ ಕ್ರೂರವರ್ಗಗಳೆನ್ನ
ತಿಂದು ಸುಲಿಯುತಲಿವೆ ವಂಚಿಸಿ ಹರಿಯೇ
ಅಂದದಿ ದೂರ್ವಾ ಪಟ್ಟಣದಿ ನಿತ್ತಿರುವಂಥ
ಸಿಂಧು ಶಾಯಿಯೇ ರಂಗ ಸಲಹೆನ್ನ ತಂದೇ ೩

೨೨೩
ಎಂದಿಗೂ ಮರುಳಾಗೆನೋ ಸಂಸಾರಕ್ಕೆ
ಎಂದಿಗೂ ಮರುಳಾಗೆನೋ ಪ
ಬಂಧವ ತರಿವ ಕೇಶವನ ದಾಸನಾಗಿ
ಇಂದಿರಾಪತಿ ಪಾದ ಸೇರುವೆನಯ್ಯ ಅ.ಪ
ನಾರಿಯರನು ನೆಚ್ಚಿಸೀ ಧರ್ಮವ ಬಿಡಿಸಿ
ಮಾರಿಯರ ಸಾಕಿಸೀ
ಆರರ ವಶಮಾಡಿ ರತಿಕ್ರೀಡೆ ನಂಬಿಸಿ
ಮಾರಿಯ ಗೃಹಕೆನ್ನ ಗುರಿಮಾಡ್ವ ಭವಕೇ ೧
ಹÉೂನ್ನುಗಳಿಗೆ ಮೆಚ್ಚಿಸೀ ಸತ್ಯವ ಬಿಡಿಸಿ
ಮಣ್ಣುಗಳಿಗೆ ಸೊಕ್ಕಿಸೀ
ಬಣ್ಗೆಣ್ಣಿಸಲಾಗದ ಪಾಪವ ಮಾಡಿಸಿ
ಚಿನ್ನನ ಮರೆಸುವ ಪುಸಿಯಾದ ಭವಕೇ ೨
ಕರಗಳನ್ನೇ ಜೋಡಿಸಿ ಸರ್ವಾತ್ಮನ
ಸ್ಮರಣೆಗಳನ್ನೇ ಮಾಡಿ
ಸರಸದಿ ಪಾಲಿಪ ಭಕ್ತರ ಪರಿಯನ್ನು
ಭರದಿ ಸೇರಿಸಿ ಚನ್ನಕೇಶವಾ ಗತಿಯೆಂಬೇ ೩

೧೪೯
ಎಲ್ಲಿ ನೋಡಿದರಲ್ಲಿ ಚನ್ನಕೇಶವನು
ಪುಲ್ಲಲೋಚನನಾದ ಶ್ರೀ ಕೃಷ್ಣನು ಪ
ಭೂತಳ ಪಾತಾಳ ಸಕಲ ಲೋಕಗಳಲ್ಲಿ
ಭೂತ ಪ್ರೇತಾಳ ಕ್ರಿಮಿ ಜಂತುಗಳಲ್ಲಿ
ಮಾತು ಚೇಷ್ಟಗಳಲ್ಲಿ ಕೆರೆ ಭಾವಿ ವನದಲ್ಲಿ
ಕೋತಿ ಖಗವೃಂದ ಪಶುವರ್ಗಂಗಳಲ್ಲಿ ೧
ವೇದ ಶಾಸ್ತ್ರಗಳಲ್ಲಿ ಸರ್ವ ಧರ್ಮಗಳಲ್ಲಿ
ಬೋಧಕ ಮೊದಲಾದ ಗುರು ವರ್ಗದಲ್ಲಿ
ಪಾದ ಪಾದಗಳಲ್ಲಿ ಸಾಧು ಸಜ್ಜನರಲ್ಲಿ
ವಾದ್ಯ ಮೃದಂಗಾಗಿ ನಾದಂಗಳಲ್ಲಿ ೨
ಕಣ್ಣುಗಳಿಗೆಸೆಯುವ ಸಕಲ ವಸ್ತುಗಳಲ್ಲಿ
ಮಣ್ಣಿನಲಿ ಸರ್ವತ್ರ ಘನ ಸೃಷ್ಟಿಯಲ್ಲಿ
ಬಣ್ಣಿಸಲ್ಕಾಗದ ಹರಿ ಕೀರ್ತನೆಗಳಲ್ಲಿ
ಹೆಣ್ಣು ಹೊನ್ನು ಮಣ್ಣು ತ್ರಿವರ್ಗದಲ್ಲಿ ೩
ಸಕಲ ಚರ ಪ್ರಾಣಿಯಲಿ ಅಚರ ಜೀವಗಳಲ್ಲಿ
ಸಕಲ ಸ್ತ್ರೀ ಪುರುಷರಲಿ ಸುರದನುಜರಲ್ಲಿ
ಸಕಲ ಧಾನ್ಯಗಳಲಿ ತಿಂಡಿ ತಿನಸುಗಳಲ್ಲಿ
ಸುಖ ದುಃಖ ಬಹಿರಂಗ ಅಂತರಂಗದಲಿ ೪
ದಿನದಲ್ಲಿ ನಿಶೆಯಲ್ಲಿ ಅನ್ನಪಾನಗಳಲ್ಲಿ
ಅಣುರೇಣು ತೃಣಕಾಷ್ಟ ಸರ್ವ ದಿಕ್ಕಿನಲೀ
ಕನಸಿನಲಿ ಮನಸಿನಲಿ ಪಂಚ ಭೂತಗಳಲ್ಲಿ
ಜನನ ಮರಣಾತೀತ ಚನ್ನಕೇಶವನು ೫

೧೫೦
ಏನೇನು ಬೇಕಯ್ಯ ಶ್ರೀ ಹರಿಯೆ ನಿನಗೇ
ನೀನೆ ಗತಿಯೆಂದು ಸರ್ವಸ್ವವೊಪ್ಪಿಸುವೇ ಪ
ತರಳನಾಗಿಹ ಧೃವನು ಘೋರ ತಪವಂಗೈಯ
ಹರುಷದಿಂ ಬಾಲಕಗೆ ವರ ಪದವಿಯಿತ್ತೇ
ಕರುಣಾಳು ಶ್ರೀ ಹರಿಯೇ ನಿಂನ ಮೆಚ್ಚಿಸಲಿಕ್ಕೆ
ಉರುತರದ ತಪವು ಬೇಕೇನೊ ನಾನರಿಯೇ ೧
ದೊರೆಯು ರುಕುಮುಂಗದನು ಯೇಕಾದಶೀವ್ರತವ
ಸರಸದಿಂದಾಚರಿಸೆ ನಿಜಭಕ್ತಗೊಲಿದೇ
ಕರುಣಾಳು ಶ್ರೀಹರಿಯ ನಿನ್ನ ಮೆಚ್ಚಿಸಲಿಕ್ಕೆ
ಉರುತರದ ವ್ರತವು ಬೇಕೇನೊ ನಾನರಿಯೇ ೨
ತರಳ ಪ್ರಲ್ಹಾದ ತಾ ಹರಿನಾಮ ಕೀರ್ತಿಸಲು
ದುರುಳ ತಾತನ ಕೊಂದು ಕಂದನನು ಪೊರೆದೆ ಕರುಣಾಳು
ಶ್ರೀ ಹರಿಯೆ ನಿಂನÀ ಮೆಚ್ಚಿಸಲಿಕ್ಕೆ
ಉರುತರದ ಕೀರ್ತನೆಯು ಬೇಕೋ ನಾ ನಾನರಿಯೇ ೩
ಭರದಿ ದುಶ್ಯಾಸನನು ಮಾನವಂ ಕಳಯುತಿರೆ
ಸರಳೆಗೇ ನೀನೊಲಿದು ಅಕ್ಷಯವನಿತ್ತೇ
ಕರುಣಾಳು ಶ್ರೀಹರಿಯೆ ನಿನ್ನ ಮೆಚ್ಚಿಸಲಿಕ್ಕೆ
ಉರುತರದ ಸ್ತೋತ್ರಗಳು ಬೇಕೋ ನಾನರಿಯೇ೪
ಧರಣಿಸುತೆ ಜಾನ್ಹಕಿಯೆ ಹುಡುಕಲ್ಕಿ ವಿಕ್ರಮದಿ
ಶರಧಿಯನು ದಾಟಿದಗೆ ಭರದಿಂದಲೊಲಿದೇ
ಕರುಣಾಳು ಶ್ರೀಹರಿಯ ನಿನ್ನ ಮೆಚ್ಚಿಸಲಿಕ್ಕೆ
ಉರುತರದ ದಾಸ್ಯತ್ವ ಬೇಕೋ ನಾನರಿಯೇ ೫
ನಿರುತದಾಸರು ನಿನ್ನ ಸೇವೆಯನು ಮಾಡಲ್ಕೆ
ಕರುಣದಿಂ ದಾಸರಿಗೆ ಪ್ರತ್ಯಕ್ಷನಾದೇ
ಕರುಣಾಳು ಶ್ರೀ ಹರಿಯ ನಿನ್ನ ಮೆಚ್ಚಿಸಲಿಕ್ಕೆ
ಉರುತರದ ಸೇವೆ ಬೇಕೇನೊ ನಾನರಿಯೇ ೬
ವರ ದುರ್ವಾಪುರದಲ್ಲಿನಿತ್ತು ಮೆರೆಯುವಿಯೆಂದು
ಸಿರಿ ಚನ್ನಕೇಶವನೆ ಪರಮಾತ್ಮನಂದೂ
ಕರುಣಾಳು ಶ್ರೀ ಹರಿಯೆ ನಿನ್ನ ನಂಬುತಲಿಂದು
ಮರೆಹೊಕ್ಕೆ ಕಾಯೋ ಶ್ರೀ ಈಶ ಸರ್ವೇಶಾ ೭

೧೫೧
ಏಳು ಏಳು ಕೇಶವಾ ಶ್ರೀಮಾಧವಾ
ಏಳು ಏಳು ಕೇಶವಾ ಪ
ಏಳಯ್ಯ ಮಧುಸೂದನ ಚಕ್ರಧಾರೀ
ಏಳಯ್ಯ ನಿಜಶೌರಿ ದಶರೂಪಧಾರೀ
ಏಳಯ್ಯ ದೇವಕಿಕಂದ ಉದಾರೀ
ಏಳಯ್ಯ ಮುರಹರ ಕೌಸ್ತುಭಧಾರೀ೧
ತ್ರಿಜಗವನ್ನು ಬೇಗ ಪಾಲಿಸಲೇಳು
ಭಜಕರ ಕರುಣದಿ ರಕ್ಷಿಸಲÉೀಳÀು
ಸುಜನರ ಮರೆಯದೆ ವರದೆತ್ತಲಿಕೆ ಯೇಳು
ಕುಜನರ ಹರುಷದಿ ತರಿಯಲೇಳು ೨
ದಾಸದಾಸರು ಬಂದು ಸೇವಿಸುತಿಹರೇಳು
ತಾಸು ತಾಸಿಗೆ ತತ್ವವರುಹಲೇಳು
ದಾಸಗೆ ನಿತ್ಯದಿ ಭಾಸವಾಗಲೇಳು
ದಾಸಗೆ ಮುಕ್ತಿಯ ಪಾಲಿಸಲೇಳು ೩
ಅರುಣೋದಯವಾಯ್ತು ಕಿರುಣೋದಯವಾಯ್ತು
ಭರದಿಂದ ಸೂರ್ಯನು ಮೇಲೇರುತಿಹನು
ಚರಣ ಕಿಂಕರರೆಲ್ಲ ಸಂಸಾರ ಶರಧಿಯ
ಸರಸದಿ ದಾಂಟಿ ನಿಂನನು ಸೇರುತಿಹರು ೪
ವಿದ್ಯೆಯರುಹಲು ಯೇಳು ಜÁ್ಞನವೀಯಲು ಯೇಳು
ಬುದ್ದಿಯ ಕಲಿಸಿ ಆತ್ಮವ ಸೇರಲೇಳು
ಮದ್ದು ಭವರೋಗಕ್ಕೆ ಬೇಗನೀಯಲು ಯೇಳು
ಎದ್ದು ಲೋಕಕ್ಕೆ ನೀ ಬೆಳಗಲೇಳು ೫
ಸನ್ನುತ ವರ ದೂರ್ವಾಪುರಕೆ ದಿಗ್ದೇಶದಿಂ
ದೀನದಾಸರು ಬಂದು ಘನಭಕ್ತಿಯಿಂದ
ನಿಂನಯ ಸೇವೆಯೆ ನಿತ್ಯ ಮಾಡುವರಯ್ಯ
ಚನ್ನಕೇಶವಾ ಸೇವೆ ಸ್ವೀಕರಿಸೇಳು ೬

೨೨೪
ಒಲಿಸಬೇಕು ಹರಿಯ ನಾವೀಗ ಕೇಶವನನ್ನು
ಒಲಿಸಬೇಕು ಹರಿಯ ನಾವೀಗ ಪ
ಒಲಿಸಬೇಕು ಹರಿಯ ನಾವು ಪರಮ ಭಕ್ತಿಯ ಸೇವಿಯಿಂದ
ಒಲಿಸಬೇಕು ರಂಗನನ್ನು ಮೋಕ್ಷವೀವ ಹರಿಯನು೧
ಭಕ್ತಿರಹಿತವಾದ ಪೂಜೆ ಸ್ತೋತ್ರ ಸ್ಮರಣೆ ಭಜನೆಯಿಂದ
ಭಕ್ತಿರಹಿತ ಶ್ರವಣದಿಂದ ಹರಿಯು ತಾನು ಒಲಿಯನಯ್ಯ ೨
ಭಕ್ತಿಯಿಂದ ಪೂಜೆಮಾಡಿ ಭಕ್ತಿಯಿಂದ ಸ್ತೋತ್ರಪಾಡಿ
ಭಕ್ತಿಯಿಂದ ಶ್ರವಣ ಮಾಡಿ ಸೇವೆ ಮಾಡಲೊಲಿಯುತಾನೆ ೩
ದೂರ್ವಾಪುರದಿ ನಿತ್ತ ಹರಿಗೆ ಆತ್ಮ ನೇವೇದ್ಯವನು ಮಾಡೆ
ಗರ್ವರಹಿತನಾದ ಕೇಶವ ಬೇಗದಿಂದಲೊಲಿಯುತಾನೆ ೪

೧೫೩
ಕಂಡೆ ಕಂಡೆನು ಕೇಶವಾ ನಿನ್ನಯ
ಪಾದ ಕಂಡೆ ಕಂಡೆನು ಕೇಶವಾ ಪ
ಪದ್ಮದಳಾಕೃತಿಯಲ್ಲಿರುತಿರುವಂಥ
ಮಂದಹಾಸದಿ ನಿತ್ಯ ನಿಲಿದಾಡುವಂಥ
ಪದ್ಮಾಕ್ಷಿ ಶ್ರೀದೇವಿ ಸೇವಿಸುತಿರುವಂಥ
ಮೋದದಿ ಹೃದಯದಿ ನೆಲೆಸಿರುವಂಥ ೧
ದುಷ್ಟರ ತಲೆಯನ್ನು ಪಿಡಿದೊತ್ತಿ ತರಿದಂಥ
ಭ್ರಷ್ಟರ ಯೆದೆ ಮೇಲಿಟ್ಟುರುವಂಥ
ಶಿಷ್ಟರೆಲ್ಲರು ನಿತ್ಯ ಪೂಜಿಸುತಿರುವಂಥ
ಶಿಷ್ಟರ ಕಷ್ಟವ ಸಿಗಿದೊಗೆವಂಥ ೨
ಅಂಧಕಾರವ ಬೇಗ ಹರಿದು ಪಾಲಿಸುವಂಥ
ಮಂದಮಾರುತ ಸೂನು ಇಚ್ಛಿಸಿದಂಥ
ಚಂದದಿ ಬಲಿಯ ಪಾತಾಳಕ್ಕೆ ತುಳಿದಂಥ
ಅಂದದಿ ನರನ ಸಾರಥಿಗೊಪ್ಪುವಂಥ ೩
ಸುರರು ಕಿಂನರರು ಕಿಂಪುರುಷರೇ ಮೊದಲಾದ
ಸುರಗಣ ಸೇವಿಪ ಭಜಿಪ ಪಾದವನು
ಸರಸದಿ ಭಕ್ತರ ಸಲಹೆ ರಕ್ಕಸರನ್ನು
ತರಿದ ಶ್ರೀ ಚನ್ನಕೇಶವನ ಪಾದವನು ೪

೧೫೨
ಕಂಡೆ ಕೇಶವನನ್ನು ದೂರ್ವಾಪುರದ ಪುಂಡರೀಕಾಕ್ಷನನ್ನು ಪ
ಶಂಖವ ಚಕ್ರವ ಗದೆಯ ಪದ್ಮವ ನಿತ್ಯ
ಶಂಕೆಯಿಲ್ಲದೆ ನಾಲ್ಕು ಕರದೊಳು ಪಿಡಿದಾ
ಪಂಕಜ ಲೋಚನ ಪರಮ ಪಾವನನನ್ನು
ಲಂಕೇಶನ ವೈರಿ ಮಾಧವನನ್ನು ೧
ಕಾಲಿಗುಂದುಗೆ ಗೆಜ್ಜೆ ಮೇಲಾದ ಭಾಪುರಿ
ನೀಲ ಮೇಘಶ್ಯಾಮ ತ್ರಿಗುಣ ರಹಿತನ
ತೊಳೆವ ರತ್ನಾಭರಣದಿಂದ ಪದ್ಮ ದಂಡ
ಚಲುವಿನಿಂದಲೆ ಊರಿ ನಿತ್ತ ಸ್ವಾಮಿಯನು ೨
ಭಜಕರ ಸಲಹುವ ಭಕ್ತವತ್ಸಲನ
ಸುಜನರ ಪೊರೆಯುವ ಶ್ರೀಧರನ
ಅಜನನ್ನು ಪಡೆದಿಂಹ ಮುರಲೀಧರನ
ಭಜಕರ ಮಧ್ಯದಿ ಮೆರೆವ ಕೇಶವನ ೩

೧೫೪
ಕಂಡೆ ಕೇಶವರಾಯನ ನಂಮಾ
ಪುಂಡರೀಕಾಕ್ಷನನ್ನಾ ಪ
ನೀರಜಾಸನ ಪಿತನಾ ನಂಮಾ
ಶ್ರೀ ರಂಗ ಶ್ರೀಹರಿಯಾ
ಮಾರನ ಪಡೆದವನಾ ನಂಮಾ
ಶೂರ ವಿಶ್ವಂಭರನಾ ೧
ಕಾಮಿತ ಫಲದಾತನಾ ಭಕ್ತರ
ಪ್ರೇಮದಿ ಪೊರೆವವನಾ
ಭೀಮ ಪರಾಕ್ರಮನಾ ತುಲಸೀ
ಧಾಮ ವಿಭೂಷಣನಾ ೨
ಶರಣರ ಸಲಹುವನಾ
ದಾಸರ ಮರುಸವತರಿವವನಾ
ಗಿರಿಪುರ ಮಾಧವನಾ
ದೂರ್ವಾ ಪುರದ ಶ್ರೀ ಕೇಶವನಾ ೩

೧೫೬
ಕಣ್ಮುಟ್ಟ ನೋಡಿರಯ್ಯಾ ಈ ಜಗದಲ್ಲಿ
ಮನ್ಮಥ ಪಿತ ರಂಗನ ಪ
ಶಂಖ ಚಕ್ರಗಳನ್ನು ಕೈಯೊಳಿರಿಸಿಕೊಂಡು
ಬಿಂಕದಿ ಮೆರೆವ ಗೋವಳರಾಯ ಹರಿಯ
ಪಂಕಜ ಲೋಚನ ಪರಮ ಪುರುಷ ನಿಃ
ಶಂಕದಿ ಭಕ್ತರ ಪೊರೆವ ಮಾಧವನ ೧
ಮಂದರಧರ ಮಧುಸೂದನಾಚ್ಯುತನ
ಕಂದನ ಸಲಹಿದ ನರಸಿಂಹ ಹರಿಯ
ನಂದಗೋಕುಲದಲ್ಲಿ ಮೆರೆದ ಶ್ರೀಲೋಲನ
ಅಂದದಿ ದಾಸರ ಪೊರೆವ ಶ್ರೀಧರನ ೨
ಪೂರ್ವದಿ ಶರಣರ ಪೊರೆದ ಶ್ರೀ ಕೃಷ್ಣನ
ಗರ್ವರಹಿತನಾಗಿ ಬೆಳಗುವ ಹರಿಯ
ಸರ್ವೇಶ ತಾನಿದ್ದು ಭಜಕರ ಸಲಹಲು
ದೂರ್ವಾಪುರದಿ ನಿತ್ತ ಚನ್ನಕೇಶವನ ೩

೨೨೫
ಕರುಣದಿ ಕಾಯೋ ಗೋವಿಂದಾ ಯಂವ
ದುರಿತಗಳಿಂದ ನೀನೀಗೊ ಮುಕುಂದ ಪ
ಹರಿಸೇವೆ ಮಾಡುತ್ತ ಬಂದೆ ಮುಂದೆ
ಚಿರ ಸಾಯುಜ್ಯವನ್ನು ನೀಡೋ ಶರಣಂದೆ ಅ.ಪ.
ಲಕ್ಷಯೆಂಬತನಾಲ್ಕು ಜನ್ಮಯೆತ್ತಿ
ಭಕ್ಷಿಸಿ ಬಂದೆನು ಕೋಟಿ ದುಃಖಗಳಾ ೧
ಸಾಕ್ಷಿಯಾಗಿರುವಂಥ ಜೀವಾತ್ಮನನು
ಲಕ್ಷಕೆ ತಂದೆ ಮನುಜ ಜನ್ಮದಲೀ ೨
ಪಾಪ ಪುಣ್ಯಕೆ ಕರ್ತೃವಾಗಿ ಭವದಿ
ಕೂಪದಿ ನಿಂದೆನು ಬೋಕ್ರ‍ತವು ಆಗೀ ೩
ಪಾಪವ ಕ್ಷಮಿಸೋ ಸರ್ವಾತ್ಮಯಂನ
ತಾಪವ ನೀಗುತ್ತ ಜನ್ಮ ಪರಿಪರಿಸೋ೪
ಜನ್ಮ ತಾಳಲಾರೆ ಹರಿಯೇ ತಾಳಿ
ಜನ್ಮದಿ ಹರಿಪಾದ ನಾ ಬಿಡಲಾರೆ ೫
ಸನ್ನುತವರ ದೂರ್ವಾಪುರದ ನಂಮ
ಚನ್ನಕೇಶವನೇ ಭಕ್ತಿಯನು ನೀ ಕೊಡೆಲೋ೬

೧೫೫
ಕರುಣಾಳುವೈ ನಿಂನ ಭಜನೆಯೊಂದೇ ಸಾಕು
ಭರದಲಿ ಪಾಪಿಯ ಶುದ್ಧ ಮಾಡಲಿಲೇ ಪ
ಅಜಮಿಳ ಜನ್ಮದಿ ಘೋರ ಪಾಪವ ಗೈದು
ಭಜನೆ ಮಾಡಲು ತನುನೀಗು ಕಾಲದಲೀ
ಭಜಕರ ಲೋಲನೆ ಹೀನನಿಗೊಲಿದು ನೀ
ಕುಜನನ ಪರೆದು ಮೋಕ್ಷವನಿತ್ತೆ ಹರಿಯೇ೧
ದುರುಳ ವಾಲ್ಮೀಕನು ಹೀನ ಕೃತ್ಯವಗೈದು
ಸುರಮುನಿಯಾಜÉ್ಞಯಿಂ ನಾಮವಭಜಿಸೇ
ದುರಳನ ಸರಸದ ಭಕ್ತಿಗೆ ವಲಿಯುತ
ಪರಮ ಙÁ್ಞನವನು ನೀ ನಿತ್ತೆ ಶ್ರೀಹರಿಯೆ ೨
ತರಳ ದಾಸರುಕೂಡಿ ಹರಿ ನಿಂನ ಸ್ತುತಿಸಲು
ನಿರುತ ಭಕ್ತರಿಗೆ ನೀನೊಲಿದೆ ಶ್ರೀಕಾಂತಾ
ಪರಮ ಆದರದಿಂದ ಹರಿಯಂನ ಮನವನ್ನು
ಪರಿ ಶುದ್ಧಮಾಡಿ ದೀನನ ಸೇರೋ ಹರಿಯೇ ೩
ರಂಗನ ಮಹಿಮೆಯ ನುಡಿಯಲಾರೆನು ನಾನು
ಅಂಗಜ ಪಿತನಾದ ದಶರೂಪಧರನ
ಮಂಗಳಾತ್ಮನು ನಿತ್ಯ ದೂರ್ವಾಪುರದಿನಿತ್ತುಮಂಗಳ ಪದವೀವ ಚೆನ್ನಕೇಶವನೆ ೪

೨೨೬
ಕರುಣಿಸು ಕರುಣಿಸು ಚನ್ನಕೇಶವನೇ
ಕರುಣಿಸು ನಾ ನಿನ್ನ ದಾಸನೆಂತೆಂದು ಪ
ಅಹೋ ರಾತ್ರಿ ಹರಿ ನಿನ್ನ ಧ್ಯಾನವ ಮಾಳ್ಪೇ
ಸಹÀಸ್ರನಾಮಗಳೀಶ ಬೇಗ ಮುಕ್ತಿಯನು ೧
ನಂಬಿದೆ ಹರಿ ನಿನ್ನ ಚರಣವ ದೇವಾ
ಅಂಬುಜ ನಯನನೆ ನಿನ್ನ ಭಕ್ತಿಯನು ೨
ಬಹಳ ನೊಂದೆನು ಸಂಸಾರ ಜಾಲದಲೀ
ಇಹ ಯಾತ್ರೆ ಮುಗಿಸುತ್ತ ಪರಗತಿಯನ್ನು ೩
ವರ ದೂರ್ವಾಪುರದಲ್ಲಿ ನಿರುತನಾಗಿದ್ದು
ಸರಸದಿ ಭಕ್ತರ ಪೊರೆವ ಶ್ರೀ ಹರಿಯೇ ೪

೨೨೭
ಕಷ್ಟಗಳ ಪರಿಹರಿಸೊ ಶ್ರೇಷ್ಠ ಮಾರುತಿಯೇ
ಭ್ರಷ್ಟನಾದೆನು ಭಂಡ ಸಂಸಾರದಲ್ಲೀ ಪ
ಸ್ವಾರ್ಥವೆನ್ನುವ ದುಃಖ ಸಾಗರದಿ ಮುಳುಗಿದ್ದು
ಸ್ವಾರ್ಥಕೋಸುಗ ಹೀನ ಕೃತ್ಯಗಳ ಗÉೈದೂ
ಅರ್ಥವನು ಗಳಿಸುತ್ತ ತುಂಬಿದೆನು ಈ ವಡಲ
ವ್ಯರ್ಥವಾಯಿತು ಜನ್ಮ ಸಾರ್ಥವನು ಮಾಡೋ೧
ನರಜನ್ಮ ಸ್ಥಿರವೆಂದು ಪುನರ್ಜನ್ಮವಿಲ್ಲೆಂದು
ನಿರುತದೀ ಧರ್ಮ ಕರ್ಮಗಳ ತೊಲಗಿದೆನು
ಭವದಿ ಸುಖವೆಲ್ಲವೂ ಮಾಯವಾಯಿತು ದೇವಾ
ಶರಣರಿಗೆ ತಂದೆ ನೀನೆಂದು ಮೊರೆಹೊಕ್ಕೇ ೨
ಪರಹಿತವ ಬಯಸದಲೆ ಕೇಡು ಬಗೆದೆನು ನಿತ್ಯ
ಪರಸತಿಯಪೇಕ್ಷಿಯಲಿ ನಿರುತನಾಗಿದ್ದೇ
ಅರಿತೆನೀಗಲೆ ನಾನು ಸರ್ವ ನಶ್ವರವೆಂದು
ನರಹರಿಯ ನೀರೆರೆಯೊ ಈ ಬಾಡು ಶಶಿಗೇ ೩
ಭಕ್ತವತ್ಸಲನೆಂಬ ಬಿರುದ ಪೊತ್ತಿಹೆ ನೀನು
ಭಕ್ತಿಯಲಿ ನಾ ನಿಂನ ಸೇವೆ ಮಾಡುವೆನು
ಭಕ್ತದಾಯಕಯಂನ ಹಸಿವೆ ತೃಷೆಗಳ ನೀಗಿ
ಮುಕ್ತಿಯನು ನೀಡೆನಗೆ ಚನ್ನಕೇಶವನೇ ೪

೧೫೭
ಕಾಕುತ್ಸ ರಘುನಾಥ ಶ್ರೀರಾಮಚಂದ್ರ
ಭೂಕಾಂತೆ ಸಿರಿವಂತೆ ಜನಕಾತ್ಮಜೇಂದ್ರ ಪ
ಪಾಕ ಶಾಸನ ಕಾಯ್ದ ದಶರಥ ಕಂದ
ಲೋಕನಾಯಕ ಸ್ವಾಮಿ ಭಕ್ತರಾನಂದಾ
ನಂಬಿದೆ ಹರಿ ನಿನ್ನ ಚರಣಯುಗ್ಮಗಳ
ನಂಬಿದ ಶ್ರೀ ಹರಿ ದಿವ್ಯ ರೂಪಗಳಾ
ನಂಬಿದೆ ನಿನ್ನ ಹರಿಲೀಲೆ ಮಹಿಮ ಕೀರ್ತಿಗಳ
ನಂಬಿದೆ ಪಾಲಿಸೋ ತರಿದು ಕಷ್ಟಗಳ ೧
ಸ್ಮರಿಸುವೆ ಭಜಿಸುವೆ ಶುಭ್ರ ನಾಮಗಳ
ಪರಿಪರಿ ಪೊಗಳುವೆ ನಮಿಸುವೆ ಹರಿಯ
ನಿರುತದಿ ಪಾಡುವೆ ನಿನ್ನ ಸ್ತೋತ್ರಗಳ
ವಿರಚಿಸಿ ಮಾಡುವೆ ಹರಿ ಕೀರ್ತನೆಗಳ ೨
ಭಕ್ತನ ಲಾಲಿಸೋ ದಾನವಾಂತಕನೇ
ಭಕ್ತಿಯ ಪಾಹಿಸೂಕರ ರೂಪಧರನೇ
ಭಕ್ತನ ಪಾಲಿಸೋ ದೇವ ನಿರ್ಮಲನೇಮುಕ್ತಿಯ ಪಾಲಿಸೋ ಚನ್ನಕೇಶವನೇ ೩

೧೫೮
ಕಾಣಿಸುವೆ ಶ್ರೀಹರಿಯ ಮುಂದೆ ಬನ್ನಿ
ಕಾಣಿಸುವೆ ನಿಜವಾಗಿ ಚನ್ನಕೇಶವನ ಪ
ಸಡಗರದಿ ನಿಂತಿಹನು ವರ ದೂರ್ವಾಪುರದಲ್ಲಿ
ಪೊಡವಿಯೊಳು ದಾಸರಿಗೆ ವಲಿಯಬೇಕೆಂದು
ಬಿಡದೆ ನೋಡಿರಿ ಹರಿಯ ಕಾಯಕಾಂತಿಯ ನೀಗ
ಕಡು ಶ್ಯಾಮ ವರ್ಣದಲಿ ಯೆಸೆಯತ್ತಲಿಹುದು ೧
ಮೇಲಿನ ಬಲ ಹಸ್ತದಲ್ಲಿ ಶಂಖವ ನೋಡು
ಕೆಳಗಿನ ಬಲ ಹಸ್ತದಲ್ಲಿ ಪದ್ಮವನೂ
ಮೇಲಿನ ಯಡ ಹಸ್ತದಲ್ಲಿ ಚಕ್ರವ ನೋಡು
ಕೆಳಗಿನ ಯಡ ಹಸ್ತದಲ್ಲಿ ಗದೆಯನ್ನೂ ೨
ಸೊಂಟದಲಿ ವಡ್ಯಾಣ ಕಿರುಗೆಜ್ಜೆಗಳ ನೋಡು
ಕಂಠದಲಿ ಹಲವು ವಿಧದಾಭರಣಗಳನೂ
ಎಂಟು ರತ್ನಗಳಿಂದ ಯೆಸೆವ ಕೌಸ್ತುಭ ನೋಡು
ಬಂಟರನು ಸಲಹುವ ಪಾದಯುಗ್ಮವನೂ ೩
ಬಲ ಯಡದ ಕಂಣುಗಳು ಸೂರ್ಯ ಚಂದ್ರಮಂತೆ
ಇಳೆಯೊಳಗೆ ರಮಣೀಯವಾಗಿ ಶೋಭಿವವು
ತಲೆಯ ಮೇಲಿರುವ ವಜ್ರದ ಕಿರೀಟವ ಮತ್ತೆ
ಬಲಯಡದ ಶ್ರೋತೃಗಳ ಕುಂಡಲವ ನೋಡು ೪
ಉದರ ಮಧ್ಯದೊಳಿಪ್ಪ ನಾಭಿಕಮಲವ ನೋಡು
ಮದನಪಿತ ಶ್ರೀಹರಿಯ ತುಲಸಿ ಮಾಲೆಯನೂ
ಸದನ ಪೀಠವನುಟ್ಟ ಪಿಂತಾಂಬರವÀ ನೋಡು
ಮೃದು ಪಣೆಯೊಳಿಟ್ಟಿರುವ ಶ್ರೇಷ್ಠ ತಿಲಕವನೂ ೫
ಚಿನ್ಮಯ ರೂಪವ ಮೌಕ್ತಿಕದ ಸರಗಳನು
ಕಂಣಿಗೆಯುವ ಪುಷ್ಪಮಾಲೆಗಳ ನೋಡು
ಸನ್ನುತನು ಭಕ್ತರನು ಪೊರೆವ ಮೂರ್ತಿಯ ಬಿಡದೆ
ಮನ್ನಿಸುತ ಭಜಕರನು ಕಾವ ರಂಗನನೂ ೬

೨೦೮
ಕಾಯಬೇಕೆನ್ನ ಕೇಶವನೇ ಬಂದು
ಪಾಯವನರಿಯೆನು ಹರಿಯೇ ಮಾಧವನೇ ಪ
ಭವಸಾಗರವÀ ದಾಟಿ ಬಂದೇ ಇನ್ನು
ಭವವನ್ನು ಬಂಬಿದೆ ಹರಿಯೇ ಶರಣೆಂದೆ ಅ.ಪ.
ಜವನ ಬಾಧೆಗೆ ಅಂಜಿ ಬಂದೇ
ಭವರೋಗ ವ್ಯೆದ್ಯನೇ ರಕ್ಷಿಸೋ ತಂದೇ ೧
ಯೋನಿಗೆ ಬರಲಾರೆ ಹರಿಯೇ ಬಂದು
ಮೌನದಿ ವೇಳೆಯನನ್ಯರೊಳ್ತಳೆಯೇ ೨
ಜನ್ಮವ ಕಳದೆನು ಬರಿದೇ
ಗಾನಲೋಲನೆ ಎನ್ನ ರಕ್ಷಿಸೋ ತಂದೇ ೩

೧೫೯
ಕಾಯೋ ಕೇಶವ ದೇವ ದೂರ್ವೆಶಾ
ಪಾಯವ ನರಿಯೆನು ಪೊರೆಯೊ ಸರ್ವೇಶಾ ಪ
ಸುಜನರ ರಕ್ಷಿಸಿ ಭಜಕರ ಸಲಹುವ
ಅಜಪಿತ ಶ್ರೀಹರಿ ಸೇವೆಯ ಗೈವೆ ೧
ಸಾಸಿರ ನಾಮಗಳಿಂದ ರಂಜಿಪ ದೇವ
ವಾಸುಕಿಶಯನನ ಸೇವೆಯ ಗೈವೆ ೨
ವೇದವ ಪಾಲಿಸಿ ಧರಣಿಯ ಸಲಹಿದ
ಮಾಧವ ಶ್ರೀಹರಿ ಸೇವೆಯ ಗೈವೆ ೩

೧೬೧
ಹಿರಣ್ಯಾ ಸುರಹರÀನೇ ಪ
ದುರುಳ ದೈತ್ಯನು ಧಾರುಣಿಯನು ಬಾಧಿಸಲಾಗ
ಹಿರಣ್ಯನ ಕೊಂದು ದೇವಿಯನು ಪಾಲಿಸಿದೇ ೧
ತರಳ ಪ್ರಲ್ಹಾದನು ಮೊರೆಯಿಡುತಿರಲಾಗ
ನರಸಿಂಹರೂಪದಿ ಬಂದು ಪಾಲಿಸಿದೇ ೨
ಕನಕಾಸುರನು ತನ್ನ ಕಂದನ ಕೆಣಕಲು
ದನುಜನ ಬಗೆದ ಶ್ರೀ ಚೆನ್ನಕೇಶವನೇ ೩

೧೬೦
ಕಾರುಣ್ಯಸಾಗರನೇ ನಾ ಸೇರುವೆ
ಮಾರನ ಪಡೆದವನೇ ಪ
ಭಾವಾತೀತನೆ ಯೆನ್ನ ಅವಗುಣವೆನಿಸದೆ
ಸೇವಕನಿಗೆ ನಿನ್ನ ಭಕ್ತಿಯ ನೀಡೋ ೧
ದೇವಕಿ ಕಂದನೇ ಸನಕವಂದಿತನೇ
ಸೇವೆಯ ಮಾಡುವೆ ಚರಣವ ನೀಡೋ ೨
ಅಜನಿಗೆ ಪಿತನಾಗಿ ದ್ವಿಜರಿಗೊಡೆಯನಾಗಿ
ಗಜನನ್ನು ಪೊರೆದ ಶ್ರೀ ಲಕ್ಷ್ಮೀ ಸೇವಿತನೇ ೩
ಭಜಿಸುವೆ ಶ್ರೀ ಹರಿ ಪಾದ ಯುಗ್ಮಗಳನ್ನು
ಭಜಕನ ಸಲಹಯ್ಯ ಚನ್ನಕೇಶವನೇ ೪

೧೬೩

ಕೇಶವ ಚರಣವಭಜಿಪÉ ಭಕ್ತಿಯಲೀ ಪ
ಶ್ರೀಹರಿ ಕಥೆಗಳ ಲಾಲಿಸುವೆನು ನಿತ್ಯ
ಶ್ರೀಹರಿ ಕೀರ್ತನೆ ಮಾಡುವೆ ನಿತ್ಯ
ಶ್ರೀಹರಿ ಸ್ಮರಣೆಯ ಗೈಯುತಿಪ್ಪೆನು ನಿತ್ಯ
ಶ್ರೀಹರಿ ಚರಣವ ಸೇವಿಪÉ ನಿತ್ಯ ೧
ಶ್ರೀಹರಿ ರೂಪವ ಪೂಜಿಸುವೆನು ನಿತ್ಯ
ಶ್ರೀಹರಿ ಚರಣವ ವಂದಿಪೆ ನಿತ್ಯ
ಶ್ರೀಹರಿ ದಾಸ್ಯತ್ವ ವಹಿಸುವೆನೂ ನಿತ್ಯ
ಶ್ರೀಹರಿ ಸಖ್ಯವ ಬೆಳೆಸುವೆ ನಿತ್ಯ ೨
ಶ್ರೀಹರಿಗಾತ್ಮವನರ್ಪಿಸುವೆನು ನಿತ್ಯ
ಶ್ರೀಹರಿ ಚರಣದೊಳುರುಳುವೆ ನಿತ್ಯ
ಶ್ರೀಹರಿಯೆಂದು ನಾ ತೊಲಗುವ ಭವ ಭಯ
ಶ್ರೀಹರಿ ಚನ್ನಕೇಶವನೆ ಗತಿಯೆಂಬೇ ೩

೧೬೨
ಕೇಶವದಾಸಗೆ ಚರಣವ ನೀಡೋ
ವಾಸುದೇವನೇ ನಿನ್ನ ಪಾದವ ನೀಡೋ ಪ
ಚರಣವ ಗಂಗಾಮೃತದಿಂದ ತೊಳೆಯುವೇ
ಚರಣಕ್ಕೆ ಶ್ರೀಗಂಧವನ್ನು ಲೇಪಿಸುವೆ
ಚರಣಕ್ಕೆ ಪರಿಮಳ ಪೂಗಳ ಮುಡಿಸುವೇ
ಚರಣಕ್ಕೆ ಆರತಿ ಬೆಳಗುವೆ ಹರಿಯೇ ೧
ಪಾದದೊಳೆನ್ನಯ ಶಿರವಿತ್ತು ಬೇಡುವೆ
ಪಾದತೀರ್ಥವ ನಿತ್ಯ ಕುಡಿಯುತ್ತಲಿರುವೇ
ಪಾದಧೂಳಿಗಳನ್ನು ಬಿಡದೆ ನಾ ಹÉೂರುವೇ
ಪಾದದೊಳೀ ತನುವನ್ನು ನಾ ಬಿಡುವೇ ೨
ಅಡಿಯನ್ನು ನೋಡಿ ಸಂತೋಷಗೊಳ್ಳುವೆನು
ಅಡಿಯನ್ನು ಸೇವಿಸಿ ಭಕ್ತನಾಗುವೆನು
ಅಡಿಯನ್ನು ಪೂಜಿಸಿ ಭಜಿಸಿ ಪಾಡುವೆನು
ಅಡಿಯನ್ನು ಸೇರಿ ನಾ ಮುಕ್ತನಾಗುವೆನು ೩

೨೦೯
ಕೇಶವನೆಂದು ಕ್ಲೇಶವ ನೀಗಿರಿ
ಕೇಶವನೆಂದು ಭವವನ್ನು ಪ
ಮಾಧವನೆಂದು ಪಾಪವ ಕಳೆಯಿರಿ
ಶ್ರೀಧರನೆಂದು ಶ್ರಮವನ್ನು ೧
ರಘುಪತಿಯೆಂದು ಪಾಶವ ಕಡಿಯಿರಿ
ನಗಧರನೆಂದು ಭಯವನ್ನು ೨
ಶ್ರೀಪತಿಯೆಂದು ಮತ್ಸರ ತ್ಯಜಿಸಿರಿ
ಮಾಪತಿಯೆಂದು ಖಲರನ್ನು ೩
ವಾಮನನೆಂದು ಕಾಮವ ತ್ಯಜಿಸಿರಿ
ರಾಮಯೆಂದು ಸುಳ್ಳನ್ನು ೪
ಶ್ರೀ ಸಖನೆಂದು ಸ್ವಾರಾಜ್ಯ ಪಡೆಯಿರಿ
ದಾಶರಥೇಯಂದು ಮುಕ್ತಿಯನು ೫

೧೬೪
ಕೇಶವಾಯೆನ್ನಿರಯ್ಯ ಹಾಗಂದೂ
ಪಾಶವ ಕಡಿಯಿರಯ್ಯ ಪ
ಕೇಶವ ನಾಮವ ಭಜಿಸುತ್ತಲೀಗ
ಆಸÉ ಕ್ಲೇಶಗಳನ್ನು ನೀಗಿರಿ ಬೇಗ ಅ.ಪ.
ವರದೂರ್ವಾಪುರದಲ್ಲಿ ನಿರುತನಾಗಿದ್ದು ತಾ
ಪರಮ ದಾಸರಿಗೆಲ್ಲ ಹರಿ ಭಾಸವಪ್ಪಾ
ಶರಣರ ಪಾಲಕ ಚನ್ನಕೇಶವರಾಯ
ಪರಬ್ರಹ್ಮ ರೂಪದಿ ಮೆರೆವ ಗೋಪಾಲ ೧
ತರಳ ಪ್ರಲ್ಹಾದ ಕೇಶವನನ್ನು ಸ್ಮರಿಸಲು
ದುರುಳ ತಾತನ ಕೊಂದು ಕಂದನ ಪೊರೆದಾ
ಸರಳೆ ಪಾಂಚಾಲೆಯು ಸಭೆಯಲ್ಲಿ ಮೊರೆಯಿಡೆ
ತರುಣಿಗಕ್ಷಯವಿತ್ತು ಶ್ರೀಹರಿ ಪೊರೆದಾ ೨

೧೬೫
ಕೊಡು ಕೊಡು ಕೊಡು ಭಕುತಿ ಲಕ್ಷ್ಮೀಪತಿ
ಕೊಡು ಕೊಡು ಕೊಡು ಭಕುತಿ ಪ
ಕೊಡು ಕೊಡು ತವ ಭಕ್ತಿ ಬಿಡಲಾರೆ ಶ್ರೀಪತಿ
ಬಿಡದೆ ಭಜಿಪ ನಿನ್ನ ದೃಢ ಚಿತ್ತ ಕೊಡು ರಂಗ ೧
ದೇವಕಿ ಸುತ ನಿನ್ನ ಸೇವಿಸಲರಿಯೆನು
ಭಾವಾತೀತನೆ ದುಷ್ಟ ಭವದಿಂದ ದಾಟಿಸೊ ೨
ಸುಜನರ ಪಾಲನೇ ಕುಜನರಾಂತಕÀನೇ
ಭಜಕರ ಪೊರೆವನೇ ಅಜಪಿತ ಹರಿಯೇ ೩
ಚಿನ್ಮಯ ರೂಪನೇ ಸನ್ನುತ ಸ್ಮರಿಸುವೆ
ಮನ್ನಿಸಿ ರಕ್ಷಿಸೋ ಚನ್ನಕೇಶವನೇ ೪

೧೬೬
ಚನ್ನ ಕೇಶವ ನಮೋ ನಮೋ
ಭಿನ್ನ ರೂಪನೆ ನಮೋ ನಮೋ ಪ
ಅಜಮಿಳರಕ್ಷಕ ನಮೋ ನಮೋ
ಭಜಕರ ಪಾಲಕ ನಮೋ ನಮೋ
ಸುಜನರ ಸೇವಕ ನಮೋ ನಮೋ
ಕುಜನರ ನಾಶಕ ನಮೋ ನಮೋ೧
ಸುರಮುನಿ ವಂದಿತ ನಮೋ ನಮೋ
ಸುರಗಣ ಸೇವಿತ ನಮೋ ನಮೋ
ತರಳರ ಪಾಲಕ ನಮೋ ನಮೋ
ಶರಣರ ರಕ್ಷಕÀ ನಮೋ ನಮೋ ೨
ದಾಶರಥೆ ಹರಿ ನಮೋ ನಮೋ
ವಾಸುಕಿಶಯನನ ನಮೋ ನಮೋ
ಈಶ ಪರಾತ್ಪರ ನಮೋ ನಮೋ
ಕೇಶವ ಮಾಧವ ನಮೋ ನಮೋ ೩

೨೨೮
ಚನ್ನಕೇಶವ ಚನ್ನಕೇಶವ
ಚನ್ನಕೇಶವ ತ್ರಾಹಿಮಾಂ ಪ
ಮನ್ನಿಸೆನ್ನನು ರಕ್ಷಿಸೆನ್ನನು
ಸನ್ನುತಾಂಗನೆ ಪಾಹಿಮಾಂ ಅ.ಪ.
ಭವದಿ ನೊಂದೆನು ಸವೆದು ಬೆಂದೆನು
ಜವದಿ ಬಂದೆನು ತ್ರಾಹಿಮಾಂ
ಭವಣೆಯನು ಪರಿಹರಿಸಿ ದೇವನೆ
ಭವ ವಿದೂರನೆ ಪಾಹಿಮಾಂ೧
ನಾನು ಏನನು ನಿನ್ನ ಮರತೆನು
ನಾನು ಬಡವನು ತ್ರಾಹಿಮಾಂ
ಗಾನ ಲೋಲನೆ ಬಿಡದೆ ಭಜಿಸುವೆ
ದೀನ ವತ್ಸಲ ಪಾಹಿಮಾಂ ೨
ಭಕ್ತವತ್ಸಲ ಭಕ್ತದಾಯಕ
ಭಕ್ತಿಯರಿಯೆನು ತ್ರಾಹಿಮಾಂ
ಮುಕ್ತಿದಾಯಕ ಶಕ್ತಿ ಮೂರುತಿ
ಮುಕ್ತಿ ಪಾಲಿಸಿ ಪಾಹಿಮಾಂ೩

೨೨೯
ಚನ್ನಕೇಶವ ನಿನ್ನ ಭಜನೆಯೊಂದುಳಿದು ನಾ
ನನ್ಯರ ನಂಬೆನು ಸಲಹಯ್ಯ ಹರಿಯೇ ಪ
ತರಳಾ ಧೃವನಂತೆ ತಪಸ ನಾನರಿಯೆನು
ಸರಳೆ ದ್ರೌಪದಿಯಂತೆ ಸ್ತೋತ್ರವನರಿಯೇ
ಸರಸ ಜಾಂಬುಕಿಯಂತೆ ಸೇವೆಯನರಿಯೆನು
ಕರಿಯಂತೆ ಸ್ಮರಣೆಯ ಮೊದಲು ನಾನರಿಯೇ ೧
ದಾಸ ಕನಕನಂತೆ ಭಕ್ತಿಯ ನರಿಯೆನು
ವಾಸುಕಿಯಂತೆ ನಾ ಯಾಚನೆಯರಿಯೇ
ದಾಸ ಮಾರುತಿಯಂತೆ ದಾನತ್ವವರಿಯೆನು
ವಾಸವನಂತೆ ನಾ ಕೀರ್ತನೆಯರಿಯೇ ೨
ಹರಿಯ ಲೀಲೆಗಳನ್ನು ಒಂದಿಷ್ಟನರಿಯೆನು
ಹರಿ ಪೂಜೆ ಸೇವೆಯ ಸ್ಮರಣೆಯನರಿಯೇ
ಹರಿಯ ಮನೆ ಘಂಟೆಯ ಬಾರಿಸಲರಿಯೆನು
ಸಿರಿ ಚನ್ನಕೇಶವ ಮಹಿಮೆಯನರಿಯೇ ೩

೨೪೧
ಜಯ ಮಂಗಳ ನಿತ್ಯ ಶುಭಮಂಗಳಂ ಪ
ಮಂಗಳಂ ಆದ್ಯಂತರಹಿತಗೆ
ಮಂಗಳಂ ದಶರೂಪಧರನಿಗೆ
ಮಂಗಳಂ ವರ ದೂರ್ವಾಪುರದಲಿ ನಿತ್ತ ಕೇಶವಗೇ ಅ.ಪ.
ಹರಿಕಥೆಯ ಶ್ರೋತ್ರಗಳು ಆನಂದದಿಂ ಕೇಳೆ
ಹರಿಯ ಕೀರ್ತನೆಯನ್ನು ನಾಲಿಗೆಯು ಮಾಡೇ
ಹರಿನಾಮ ಸ್ಮರಣೆಯನು ಮನವು ತಾ ಮಾಡುತಿರೆ
ಚರಣಗಳ ಭಕ್ತಿಯಲಿ ಭಜಿಸುತ್ತಲಿರಲು ೧
ಹರಿಯೆ ಮಹಿಮೆಯ ನಂಬಿ ವಂದನೆಯ ಮಾಡುತಿರÉ
ಹರಿಯೆ ರೂಪವ ಕಂಡು ಪೂಜೆಯನು ಮಾಡೇ
ಹರಿಯೆ ದಾಸ್ಯತ್ವವನು ಶ್ರದ್ಧೆಯೊಳು ಗಳಿಸುತಿರೆ
ಹರಿಯೆ ಮಿತ್ರತ್ವವನು ಪಡೆಯುತ್ತಲಿರಲು ೨
ಹರಿ ಚರಣದಲ್ಲಾತ್ಮವನ್ನು ಅರ್ಪಿಸುತಿರಲು
ಹರಿ ಸೇವೆ ದಾಸರೀರೀತಿ ಗÉೈಯುತಿರೇ
ಹರುಷದಿಂ ಕಾರ್ಯವನು ನೆರವೇರಿಸುತಲೀಗ
ಹರಿಯ ಪ್ರೀತಿಗೆ ಸಿಲುಕಿ ಮುಕ್ತಿಯನು ಪಡೆಯೇ ೩