Categories
ರಚನೆಗಳು

ಕಳಸದ ಸುಂದರಮ್ಮ

೩೦
ಆವ ಮನುಜನು ಒಂದು ಗದೆಯನ್ನು
ಲಲಾಟದಲ್ಲಿ ಇಡುವನೋ
ಕಾವನು ಅವನನು ನಮ್ಮ ಪವಮಾನನೊಡೆಯನು
ಆವಾವನೂ ಒಂದು ಇದೇ ಆಯುಧವನ್ನು
ವಾಮ ಉದರದಲ್ಲಿ
ಯಾವಾನಲೂ ಇಟ್ಟು ಮೆರೆಯುವನೋ ಅವನ
ಗೊವತ್ಸ ನ್ಯಾಯದಿ ಕರವನು ಪಿಡಿವನು ಗಧಾಧರನು
ಹಾವನ್ನೆ ಹಾಸಿಗೆ ಮಾಡಿಕೊಂಡ ಶ್ರೀಧರನ ಸ್ಥಾನದ ಕೆಳೆಗೆ
ಪವಮಾನಿಗುವ ಮತಾ ಎರಡು ಗಧಾಯುಧ ಧರಿಸಲು
ಪಾವನನಂತಾದವನು ಅವರ ದುರಿತಕಾನನಕೆ
ಸಾವು ಹುಟ್ಟಿಲ್ಲದ ಪರಮಪುರುಷನ ಈ ಆಯುಧವ
ಅವನು ವಾಮಸ್ತನದಿ ತಾನೊಮ್ಮೆ ಇಕ್ಕುವನೋ
ಸಾನು ಹುಟ್ಟುಗಳಿಂದ ದೂರಗೈಸುವ
ಗುರು ಕಾಳೀಮರ್ಧನಕೃಷ್ಣ ೪
ಪದ್ಮ ಮುದ್ರೆಯನ್ನು ಭಕುತಿ ಪೂರ್ವಕವಾಗಿ ಹೃತ್
ಪದ್ಮದಿ ಬಂದು ಧರಿಸಲುಬೇಕು ದಕ್ಷ ಭುಜದ ಕೆಳೆಗೆ
ಪದ್ಮಂಗಳೆರಡನ್ನು ದಕ್ಷ ಉದರಕೆಳೆಗೆ
ಪದ್ಮವೆ ಒಂದನ್ನು ವಕ್ಷಸ್ಥಾನದಿ ಒಂದು
ಪದ್ಮವ ಧರಿಸಲು ಭಕ್ತವತ್ಸಲನಾದ
ಪದ್ಮ ರಮಣಗುರು ಕಾಳಿಮರ್ಧನಕೃಷ್ಣ ಪೊಳೆವಾ ೫

ಆತ್ಮನಿವೇದನೆ
೨೩
ಇಂತು ಮರುಳಾದೆನು ಬಲು ಭ್ರಾಂತಿಗೊಳಗಾದೆನು
ಲಕ್ಷ್ಮೀಕಾಂತಾ ಸರ್ವಾಂತರ್ಯಾಮಿ ಪ.
ಕಾಮಪಾಶಕೆ ಶಿಲ್ಕಿದೆನು
ಬಾಯಾರಿ ಬಳಲಿದೆನು
ಹೀನ ಮತವೆನ್ನದೆ
ಆಶಕೆ ಗುರಿಯಾದೆ ೧
ನಾನು ನನ್ನದು ಎಂದೆ
ಧರ್ಮಾಂಧಳಾದೆ ಮೆರೆದೆ
ಗುರುಹಿರಿಯರಿಗೆ ಎರಗದೆ
ಹರಿನಿನ್ನ ಮರೆದೆ ೨
ಹಿಂದೇ ಸುಜನ್ಮಗಳು ಬಂದು ಪೋದವು
ಮುಂದಿನ ಗತಿಯು ಎನಗೆ ತಿಳಿಯದು
ಬಂಧನದೊಳು ಸಿಗಿಬಿದ್ದೆನು
ಬಂದೆನ್ನ ಕಾಯೊ ಕಾಳಿಮರ್ಧನಕೃಷ್ಣಾ ೩


ಇಲ್ಲಿ ಬಾ ಇಲ್ಲಿ ಬಾ ಮೆಲ್ಲ ಮೆಲ್ಲನೆ ಹೆಜ್ಜೆಯನಿಕ್ಕುತ
ಪುಲ್ಲನಾಭ ಗೋಪಾಲಕೃಷ್ಣ ಗೊಲ್ಲರೊಡಗೂಡಿ ಪ.
ಪಾಲು ಮೊಸರು ಬೆಣ್ಣೆ ಕೊಡುವೆ ಬಾ
ಗೋಲಿ ಗುಂಡು ಗಜಗನೀಡುವೆ ಬಾ
ಆಲಯ ಪೊಕ್ಕು ಧೂಳಿ ಮಾಡಲು ಬ್ಯಾಡ ೧
ಅಂಗಳದೊಳು ಬಾ ಬೆಳದಿಂಗ ತೋರುವೆನು
ರಂಗು ಮಾಣಿಕ್ಯದುಂಗರ ನಿಡುವೆನು ಮಂಗಳಾಂಗನೆ ೨
ಮೃದನಯ್ಯನೆ ಬಾ ಸುದತಿಯರೊಡಗೂಡಿ ಬಾ
ಸಡಗರದಿ ನೀ ಬಾ ಕಾಳೀಮರ್ಧನಕೃಷ್ಣ ಬಾ ೩

ಸಂಜೀವನವ ತಂದ ವೀರ
೧೪
ಈತನೇನೆ ಮುಖ್ಯ ಪ್ರಾಣದೇವರು ಪ.
ಖ್ಯಾತಿಯ ಪಡೆದ ರಾಮ ದೂತನು ಅ.ಪ.
ಅಂಜನೆಯ ಕುಮಾರ ರಾಕ್ಷಸರ ಸಂಹಾರ
ಸಂಜೀವನವ ತಂದ ಧೀರ ಸಾಗರವ ದಾಟಿದ ೧
ಕುಂತಿಯಾ ಕಂದ ಕೀಚಕನ ಕೊಂದ
ಸತಿಗೆ ಕುಸುಮವಾ ತಂದೆ ಲೋಕದೊಳಗೆ ಆನಂದ ೨
ಮದ್ಯಗೇಹನಲಿ ಜನಿಸಿ ಪ್ರಖ್ಯಾತನೆನಿಸಿ
ಕಾಳೀಮರ್ಧನಕೃಷ್ಣನಲಿ ಮನಸಿಟ್ಟ ಯತಿಯೆ ೩

ಮತ್ಸಾದ್ಯನಂತಾವತಾರದಿ
೨೪
ಎಂದಿಗು ಕಾಂಬುವೆನೋ ಶ್ರೀನಿವಾಸ
ಬಂಧನ ಬಿಡಿಸು ಶ್ರೀಶಾ ಇಂದಿರೇಶಾ ಪ.
ಇಂದು ಈ ಭವದಲ್ಲಿ ನೊಂದು ನೊಂದೆನೊ ದೇವಾ
ಗೋವಿಂದಾ ಪಾಲಿಸಬೇಕಯ್ಯಾ ಗೋಗಳರಾಯ ಅ.ಪ.
ಇಂದಿರೇಶನೆ ನಿನ್ನ ಒಂದಿನಾದಿ ನಾನು ದೈನ್ಯದಿ ಭಜಿಸದೆ
ಬ್ಯಾಸರದೇ ಮಂದಮತಿಯು ನಾನು
ಸುಂದರ ಮೂರುತಿ ನೀನು
ಯನ್ನ ಹೃದಯ ಮಂದಿರದಲ್ಲಿ ಸಂದರುಶನ ಕೊಡೊ ಇಲ್ಲಿ ೧
ಸದೋಷಿಯು ನಾನು ದೋಷರಹಿತ ನೀನು
ಶೇಷಶಯನ ನಿಮ್ಮ ನಾಮವೇ ಭೂಷಣ
ಸ್ವರಮಣನೀ ನಿನ್ನ ಸ್ಮರಣೆಯಾ ಮಾಡದೆ
ಹಾಳು ಮಾತುಗಳಿಂದ ಹೊತ್ತುಗಳದೆ ಮುಕುಂದಾ ೨
ಮತ್ಗ್ಯಾದ್ಯನಂತವತಾರ ನೀನು ತುಚ್ಛದೈತ್ಯಸ ಸಂಹಾರ
ಇಚ್ಛಾದಿಂದಲಿ ನೀನು ಸುರರಿಗಾಧಾರ
ಕಾಳಿಯಮರ್ದನ ಕೃಷ್ಣಧೀರ ಗಂಭೀರಾಸುತಸುಕುಮಾರಾ ೩


ಏನು ಪೇಳಲಿ ಗೋಪಿ ಇಂಥಾ ಬುದ್ಧಿಯ
ನೋಡಮ್ಮಾ ಗೋಪೆಮ್ಮಾ ಪ.
ಗಡಿಗೆಯ ಒಡೆದಾನು
ಕೊಡಹಾಲು ಕುಡಿದಾನು
ಹುಡುಗರ ಬಡಿದು ಓಡಿ ಪೋದಾನು
ನಿಮ್ಮ ಹುಡುಗಾ ಸಿಕ್ಕಿದ ಮೇಲೆ
ಭಿಡಿಯಾವಿಲ್ಲದೆ ಗಿಡದಾ
ನೆರಳಿಗೆ ಕಟ್ಟುವೆನು ಬೆನ್ನಟ್ಟುವೆನು ೧
ನೆಲವಿನಲ್ಲಿದ್ದ ಪಾಲುಮೊಸರು
ಬೆಣ್ಣೆ ಕದ್ದಾನು ಬಾಲಕರೊದ್ದನು
ಮುದ್ದು ಹೆಣ್ಣು ಬಾಲೆಯರಿಗೆ
ಕಣ್ಣುಸನ್ನೆ ಮಾಡಲಿ ಬಂದಾನು
ಭಂಡು ಮಾಡಿದಾನು ದುಂಡ ಕುಚವ
ಕರದಿ ಪಿಡಿದಾ ಓಡಿ ಪೋದಾ ೨
ಹೆಡೆಯ ಸರ್ಪಾವ ಕರದೊಳು ಹಿಡಿದು
ಸಂಜೀಯ ಹೊತ್ತಿಲಿ ತಂದಾನು
ನಮ್ಮನ್ನಂಜಿಸಲು ಬಂದಾನು
ನಾಗಕನ್ನಿಕೆಯರಿಂದ ಸ್ತೋತ್ರ
ಮಾಡಿಸಿಕೊಂಡಾನು ಕಾಲಿಮರ್ಧನಕೃಷ್ಣಾನು ೩


ಏಳು ಚೆನ್ನಿಗರಾಯ ನನ್ನೀನಾಗರ ಏಳು ಪ.
ಏಳೆನ್ನ ಕಣ್ಮಣಿಯೇ ಕಾಳಿಮರ್ಧನಕೃಷ್ಣ ಅ.ಪ.
ಮಾರನೆಯ ದಿನದಲ್ಲಿ ನೀ ಹಾರುತ್ಯಾರುತ ಬಂದು
ಸೀರೆ ಸೆರಗನು ಪಿಡಿದು ಬೆಲ್ಲವನು ಬೇಡಲು
ಕೇಳಿಕೊಳ್ಳವುದೇಕೆ ಹಗಲುಗಳ್ಳನೆ ಹೋಗು
ಒಳಿತು ಚೋರರಿಗೆಲ್ಲ ಕೇಳಿ ಕೊಳಲೆಂದೆ ೧
ಚೋರ ನೀನೆಂದುದಕ್ಕೆ ಈ ಸೀರೆಯನು ಜರಿವರೇ
ಚೋರನಲ್ಲವೇ ನೀನು ಮಧ್ವರ ಹೃದಯ ಕದ್ದ ೨
ಜಾರ ನೀನೆಂದುದಕೆ ಕರೆಕರೆಗೊಳಿಸುವರೆ
ಜಾರೆಯಾಸಹುದು ನೀನಲ್ಲ ಜಾರರಮಣ ೩
ಕಂಡದನು ಆಡಿದರೆ ಕಡುಕೋಪವ್ಯಾತಕೆ
ಹಿಂಡು ಗೋವಳಲೊಡೆಯ ಪುಂಡನೀನಹುದು ೪
ಮಜ್ಜನವ ಮಾಡಿಸುವೆ ಸುಳಿಗುರುಳ ತಿದ್ದುವೆ
ಸಜ್ಜಾದ ಚಂದನದ ಚಂದ್ರಮನ ಫಣಿಯಲಿಡುವೆ ೫
ಗೊಲ್ಲಬಾಲರು ಈಗ ಕರೆಯಲು ಬರುವರು
ಮೆಲ್ಲಗೆ ಎದ್ದು ನೀ ಬೆಲ್ಲವನು ಮೆಲ್ವ ಬಾಲಕೃಷ್ಣ ೬
ಮಧ್ವೇಶ ನೀನೇಳು ಮುದ್ದು ಮೊಗದವನೆ ಏಳು
ಹದ್ದುವಾಹನ ಏಳೂ ಹಾಲಕುಡಿಯೇಳು ೭
ಹಾಲು ಬೆಲ್ಲವ ಸವೆದು ಸುಧೆಯನು ಸುರಿಸೇಳೋ
ಪಾಲಗಡಲ ಶಯನ ಶಯನದಿಂದೇಳೋ ೮
ಮುನಿಸು ಏಕೇಕೆ ರಮಣ ಮುಸುಕನು ತೆಗೆದೇಳು
ತಿನಿಸು ತಿಂಡಿಯ ಕೊಡುವೆ ತನಿವಣ್ಣ ಕೊಡುವೆ ೯
ಚಿನ್ನದಾ ಒಂಟೆಳೆಯ ರನ್ನಧಾಭರಣ
ಭಿನ್ನ ಭಿನ್ನವಾದ ಆಭರಣಗಳಿಡುವೆ ಕೃಷ್ಣ ೧೦
ಹೆಚ್ಚೇನು ಪೇಳಲಿ ಮಗಸಾಮ್ರಾಜ್ಯದ ದೊರೆತನವು ನಿನ್ನದೊ
ಸ್ವಚ್ಚಾಗಿ ಹೇಳುವೆನು ಫಲಿಸೇಳು ಕೃಷ್ಣಾ ೧೧
ರಾಧೆಯ ಹೃದಯದನುರಾಗ ನೀ ಬಲ್ಲೆ
ಬಾಧಿಸದೆ ಜಾಗವನು ಬಿಟ್ಟೇಳೊ ೧೨
ಏನು ಬಯಸಿದ ಕೊಡುವೆ ಮನಬಯಕೆ ಪೂರೈಸೊ
ಮನದನ್ನನೇ ಎನ್ನ ಕಾಳಿಮರ್ಧನಕೃಷ್ಣ ೧೩


ಗಜವದನಾ ಬೇಡುವೆ
ತ್ರಿಜಗದೊಳ್ ನಿನಗ್ಯಾರು ಸರಿ ಪ.
ಪೊರೆವರೆನ್ನ ಕಾಣಿ ಪುಸಿಯಲ್ಲೆನ್ನಾಣೆ ಅ.ಪ.
ಮೂಷಕ ವಾಹನ ನಮೋ
ಶೇಷಶಯನನ ತಂದು ತೋರಿಸುವೊ ನವೋ ೧
ಚಾರದೇಷ್ಠನೆಂಬೊ ನಾಮದಿಂದ
ರುಕ್ಮಿಣಿ ಉದರದಲ್ಲಿ ಜನಿಸಿದಾತಗೆ ನಮೋ ೨
ಎಷ್ಟು ವರ್ಣಿಪೆ ನಿನ್ನ ಮಹಿಮೆಗೆ ನಮೋ
ದಿಟ್ಟ ಮೂರುತಿ ನಮ್ಮ ಕಾಳೀಮರ್ಧನಕೃಷ್ಣ ದಾಸಗೆ ನಮೋ ೩

ವಂದಿಸುವೆನು ನಿಮಗೆ ನವವೃಂದಾವನದಲ್ಲಿರುವೋರು
ವ್ಯಾಸರಾಯರು
೧೯
ಗೋಪಾಲಕೃಷ್ಣನ ಭಕ್ತಿಯಿಂದಲಿ ಭಜಿಸುವ
ನಮ್ಮ ಗುರು ವ್ಯಾಸಮುನಿರಾಯ ಪ.
ಹೇಸಿ ವಿಷಯಗಳಿಗೆ ಮೋಸ ಹೋದೆನು ನಾನು
ದೋಷ ರಾಶಿಗಳ ನಾಶಗೈಸೊ ಮನದ
ಭಿಲಾಷೆಗಳ ಪೂರೈಸೊ ಅ.ಪ.
ಹಿಂದೇಳ ಜನ್ಮಗಳು ಬಂದು ಪೋದವಯ್ಯಾ
ಇಂದು ವಸುಧಿಯೊಳಗೆ ಬಂದೆನಯ್ಯಾ
ಭವದೊಳಗೆ ನೊಂದೆನಯ್ಯಾ
ಬಹಳ ಬೆಂದೆನಯ್ಯ
ಅಘಕೂಪದೊಳು ಬಿದ್ದೆನಯ್ಯ
ಉದ್ಧರಿಸು ಜೀಯ್ಯಾ ೧
ವಂದಿಸುವೆನು ನಿಮಗೆ ನವವೃಂದ ವನದಲಿ
ಇರುವೋರು ಇಂದಿರೇಶನ ನೋಡುವೋರು
ಆನಂದಪಡುವೋರು
ಸಿಂಧುಶಯನ ತಂದು ತೋರಿಸೋ
ಇಂದು ನಿಮ್ಮಯ ಪಾದವೊಂದೆ ಭಜಿಪೆ
ತಂದೆ ಮಾಡೆಲೊ ಸತ್ರ‍ಕಪೆ ೨
ಯೆಷ್ಟು ಜನುಮದ ಪುಣ್ಯ ಫಲಿಸಿತು ಎನಗೆ
ವೈಷ್ಣವಾ ಜನ್ಮ ದೊರಕಿತು
ಕೊನೆಗೆ ದುಷ್ಟ ಸಂಗವಾ ದೂರದಿ ಮಾಡಯ್ಯ
ಶಿಷ್ಟ ಜನ ಸಂಗದೊಳಗೆನ್ನಿಡಯ್ಯಾ
ಅಭೀಷ್ಟಗಳ ನೀಡಯ್ಯ ಕಾಳಿಮರ್ಧನ
ಕೃಷ್ಣನ ತೋರಿಸಯಾ ಪಾಲಿಸಯ್ಯಾ ೩


ದಣಿಯ ನೋಡಿದೆನೊ ನಿನ್ನ ವೆಂಕಟರನ್ನಾ
ದಣಿಯಾ ನೋಡಿದೆ ನಿನ್ನಾ ಪ.
ಋಜಗಣದೊಡೆಯನೆ ಬಿಡುವಿಲ್ಲದೆ ನಿನ್ನ ಅಡಿಗಳಿಗೆ ವಂದಿಪೆ ಅ.ಪ.
ಮಹದ್ವಾರ ಬಾಗಿಲಾದಲ್ಲಿ ಇರುತಿರುವೋರು
ಜಯವಿಜಯರಿಲ್ಲಿ ವಾರವಾರಕ್ಕೆ ನಿನ್ನ
ಬ್ರಹ್ಮಾದಿ ದ್ವಿಜರು ಹಾರೈಸಿ
ಹರುಷದಿ ಪೂಜೆಗೊಂಬೊರೆ ೧
ಯಡಬಲದಲ್ಲಿ ನಿನ್ನ ಮಡದಿಯರಿಂದ ಒಡಗೂಡಿ
ಸಡಗರದಲ್ಲಿ ಇಂದಿರೇಶ
ಗರುಡವಾಹನೆ ರಂಗಾ ಉರಗಾದ್ರಿನಿವಾಸ
ಶೇಷಾಚಲವಾಸ ಶ್ರೀ ವೆಂಕಟೇಶಾ ೨
ಸೃಷ್ಟ್ಯಾದಷ್ಟ ಕರ್ತಾ
ಶ್ರೀವಿಠಲ ನಿನ್ನಾ ಗುಣಯೆಷ್ಟೆಂದು ವರ್ಣಿಪೆನಾ
ಅಷ್ಟ ಮಹಿಷಿಯರ ಆಳದ ಮದವೆಷ್ಟೊ
ಕಾಳಿಮರ್ದನಕೃಷ್ಣ ಬಲು ಜೋರಾ ದಿಟ್ಟಾ ಆನಂದ ಕೊಟ್ಟಾ೩


ದೂರ ನೋಡದಿರೆಲೊ ರಂಗಯ್ಯಾ ಪ.
ದೂರ ನೋಡದಿರು ಭವ ಮಡುವಿನೊಳಗಿರುವೆನೋ
ಪಿಡಿಯೆನ್ನ ಕೈಯ ತಡಮಾಡ ಬ್ಯಾಡಯ್ಯ ಅ.ಪ.
ಹಿಂದೇಸು ಜನ್ಮಂಗಳು ಬಂದು ಪೋದಾವಯ್ಯ
ಮುಂದಿನಾಗತಿಯು ತೋರದಯ್ಯಾ
ತಂದೆ ತಾಯಿ ಸರ್ವ ಬಂಧು ಬಾಂದವಾ
ನೀನೆ ಸಿಂಧುಶಯನನೆ ಕಂದರ್ಪ ಪಿತನೆ೧
ಆರು ಕಾಯುವರಿಲ್ಲಾ ಮುರಾರಿ ನಿನಗೆ ಸಾರಿದೆನಲ್ಲಾ
ಸೇರಿಸೋ ಸಾಧು ಜನರ ಸಹವಾಸಾ
ಹರಿ ನಿನ್ನಲ್ಲಿ ಮನಸು ನಿಲ್ಲಿಸು
ಶ್ರೀಶಾ ಶ್ರೀನಿವಾಸಾ ೨
ಯೆಷ್ಟು ಹೇಳಲಿ ಯನ್ನ ಕಷ್ಟ ಕೇಳುವರಿಲ್ಲ
ಅರಿಷ್ಟ ಸಂಸಾರದೊಳೂ
ಕೆಟ್ಟು ಪೋಗುವೆನು ದೃಷ್ಟಿಯಿಂದಲಿ
ನೋಡೆನ್ನ ಕಾಳಿಮರ್ಧನಕೃಷ್ಣವಾ ೩

೨೯
ನಾಮ ಮುದ್ರೆಗಳ ಧರಿಸುವ ಕ್ರಮವನ್ನು
ನಾ ಮಂದನಾದರು ಸರಿ ಗುರುಗಳ ಕೃಪೆಯಿಂದ
ನಾ ಎಂಬುದ ಮರೆತು ಅರಿತಷ್ಟು ಪೇಳುವೆನು
ಕಾಮನಯ್ಯ ಕೇಶವನ್ನ ಸ್ಮರಿಸು ಲಲಾಟದಲ್ಲಿ
ಒಮ್ಮನಸಿನಿಂದ ಮೂಲವನ್ನು ಉದರ ಮಧ್ಯದಲಿ
ಸಾನುವಂದಿತಾದ ಮೇಶನನ್ನು ಹೃದಯದಿ ಉ
ಪಮೇರಹಿತನಾದ ಗೋವಿಂದನನ್ನು ಕಂಠ ಮಧ್ಯದಿ
ರಮ್ಮೆ ಪತಿ ಶ್ರೀ ವಿಷ್ಣುವಿನನ್ನುದಷೋದರದಿ
ಸಮ್ಮಾಧಿತ್ಯ ಶೂನ್ಯ ಮಧುರಿಪುವಿನ ದಕ್ಷಭುಜದಿ
ವಾಮ ಪ್ರತಿಕಂಠದಿ ತ್ರಿವಿಕ್ರಮನನ್ನು
ವಾಮನ ಉದರದಿ ವಾಮನ ಮೂರ್ತಿಯನ್ನು
ವಾಮ ಭುಜಕಂಠದಿ ಶ್ರೀಧರ ಹೃಷಿಕೇಶರನ್ನು
ಸ್ವಾಮಿಯಾಗದಿ ಪದ್ಮನಾಭನನ್ನು ಪುಷ್ಟಭಾಗದಿ
ನಿಮ್ಮ ಮಹಿಮ ಗುರು ಕಾಳೀಮರ್ಧಕೃಷ್ಣ ಭಿನ್ನ
ದಾಮೋದರನನ್ನು ಶಿರೋ ಭಾಗದಿ ನೆನೆಯೊ ೧
ಉದರ ಮಧ್ಯದಲಿ ಐದು ಚಕ್ರಂಗಳು
ಹೃದಯಾಕಾಶದಲ್ಲಿ ಮೂರು ಚಕ್ರಂಗಳು
ಹೃದಯ ಮೇಲಿನ ಕಂಠದಲ್ಲಿ ಒಂದು
ಉದರದಕ್ಷ ಕುಕ್ಷಿಯಲ್ಲಿ ಎರಡು
ಮಧುಸೂದÀನ ಸ್ಥಳದಿ ಮೇಲೆ ಎರಡು
ಅಧರ ಭಾಗದಿ ವಾಮ ಬಾಹುವಿನಲ್ಲಿ ಒಂದು
ಅದಲ್ಲದೆ ವಾಮಕಂಠದಿ ತಾ ಒಂದು
ಎದೆಯ ಬಲಪಕ್ಷ ಕಪೋಲದಿ ಮೂರು ಒಂದು
ಇದೇ ಇದೇ ತಿಳಿದು ಚಕ್ರಂಗಳ ಧರಿಸುವರು
ಸದಮಲಗುರು ಕಾಳೀಮರ್ಧನಕೃಷ್ಣನ ಕೊಂಡರು
ದಕ್ಷ ಬಾಹು ಕಂಠದಲ್ಲಿ ಕೆಳಗೆ ಒಂದು ಒಂದರಂತೆ
ಕುಕ್ಷಿವಾಮದಲ್ಲಿ ಭಂಧದಿಕೊಂದು ಪರಂಗಳ
ಪಕ್ಷಿವಾಹನನಾದ ಶ್ರೀಧರಸ್ಥಾನದ ಮೇಲೆ ಎರಡು
ದಕ್ಷವಲ್ಲದ ಕಪೋಲ ಸ್ತನೆಂಗಳಲಿ
ಒಂದು ಮೂರರಂತೆ ಕ್ರಮದಿ
ದಕ್ಷನಾಗಿ ಧರಿಸಿ ಗುರು ಕಾಳೀಮರ್ಧನ ಕೃಷ್ಣನನೆಯೆ ೩

ಅಷ್ಟಮಠದ ಯತಿಗಳು ಉಡುಪಿಯಲಿ
ಅಷ್ಟಮಠದ ಯತಿಗಳು
೨೨
ನೋಡಿ ದಣಿದವೆನ್ನ ಕಂಗಳು ಉಡುಪಿಯಲ್ಲಿರುವ
ಅಷ್ಟಮಠದ ಶ್ರೀಪಾದಂಗಳವರ ಪ.
ಸುಧಿಂದ್ರತೀರ್ಥ ಗುರುವರ್ಯರು
ಬಂದ ಭಕ್ತರಿಗೆ ಕರುಣಾಮೃತ ಮಳೆಗರೆವರು
ಶ್ರೀಹರಿಯ ತೋರುವರು
ನೇಮದಿಂದಲಿ ಇವರ ನಾಮ ನೆನೆದರೆ
ಸ್ವಾಮಿ ಶ್ರೀರಾಮನು ಪ್ರಸನ್ನನಾಗುವನು ೧
ವಿಭುದಪ್ರಿಯತೀರ್ಥ ಗುರುವರ್ಯರು
ಬಂದಾ ದುರ್ಜನರ ಮನವನು ಜಯಿಸುವರು
ಮಹಾನುಭಾವರು ತರ್ಕನ್ಯಾಯ ವೇದಾಂತ ನಿಪುಣರು
ಮಹಾಗುಣವಂತರು ೨
ವಿದ್ಯಾಪುಣ್ಯತೀರ್ಥ ಶ್ರೀಪಾದಂಗಳವರು
ಬಂದ ಸೇವಕರಿಗೆ ಬ್ರಹ್ಮವಿದ್ಯಾ ಪಾಲಿಸುವರು
ರ್ದುಜನರ ದುರ್ಬುದ್ಧಿ ಒದ್ದಿ ಕೆಡಹುವವರು ೩
ವಿಶ್ವೇಂದ್ರತೀರ್ಥರು ಈ ಗುರುವರ್ಯರು
ಸೋದೆಯಲ್ಲಿರುವರು ಶ್ರೀ ಗುರು
ವಾದಿರಾಜರ ಪೂಜಿಸುವರು
ಜಗಕೆ ಸುಖವ ಸುರಿಸುವರು ಭೂತಪ್ರೇತಪಿಶಾಚಾದಿ
ಸರ್ವರೋಗಂಗಳ ದೂರದಿ
ಮಾಡುವರು ಭಕ್ತರಘ ಕಡಿವರು೪
ವಿದ್ಯಾಸಮುದ್ರ ಶ್ರೀಪಾದಂಗಳವರು
ಇವರು ಭವಸಮುದ್ರವ ನೀಗಿಸುವರು
ಶಿಷ್ಯರಿಗ್ಹರುಷ ಪಡಿಸುವುದು
ಆನಂದದಿಂದಲ್ಲಿ ಹೃನ್ಮಂದಿರದಲಿ ಇಂದಿರೇಶನ ನೋಡುವರು ೫
ರಘುಮಾನ್ವತೀರ್ಥ ಗುರುವರ್ಯರು ಲೋಕಮಾನ್ಯರು
ಭಕ್ತರಿಗತಿಪ್ರಿಯರು ಮಹಾನುಭಾವರು
ಅನ್ನದಾನದಲಿ ದೈನ್ಯರು ಆನಂದ ಭರಿತರು ಸುರರಿವರು ೬
ಲಕ್ಷ್ಮೀಂದ್ರತೀರ್ಥ ಶ್ರೀಗಳವರು
ಇವರು ತಮ್ಮ ತುಷೆಯೊಳಗಿಟ್ಟುಕೊಂಡು
ರಕ್ಷಿಸುವರು ಲಕ್ಷ್ಮೀರಮಣನ್ನ ಪಾದಾ
ಅಪೇಕ್ಷೆಯ ಮಾಡುಸುವರು ಹರಿಯ ಭಜಿಸುವರು ೭
ವಿಶ್ವಮಾನ್ಯತೀರ್ಥ ಈ ಗುರುವರ್ಯರು
ಬಂದ ಭೂಸುರರಿಂದ ಅನುವಾದ ಮಾಡುವರು
ನೋಡುವರಿಗಾನಂದ ಪಡಿಸುವರು
ಸುಎ್ಞÁನ ಯತಿವರ್ಯರು ೮
ಅಷ್ಟಮಠದ ಯತಿಗಳ ಮಹಿಮೆಯನ್ನು
ನಿಷ್ಠೆಯಿಂದಲಿ ಪೇಳುವನು ಅವನು ಸುರನು
ಇವರ ದೋಷಿ ಎಂದವರನೇ ನರಕಾಧಿ ಬಾಧಿಸುವುದು
ಸಾಮಾನ್ಯವಲ್ಲವೊ ಇವರು ಕಾಳೀಮರ್ಧನ
ಕೃಷ್ಣನ ಪೂಜಿಸುವರು ೯

ಮಥನ ಮಾಡಲು ಸಮುದ್ರ ವಿಷಪಾನ ಮಾಡಿದೆಯೊ
೧೭
ನೋಡಿದೆ ಹರನಾ ನೋಡಿದೆ ಪ.
ಹರನ ಕೊಂಡಾಡಿದೆ ಪಾದಪಾವನ್ನ ರೂಢಿಯೊಳಗೆ ಇಂಥಾ
ಈಡಿಲ್ಲ ಶಿವನಾ ಜೋಡಿಶಿರವ ಬಾಗುವೆನಾ ಶಿರವಾ ಅ.ಪ.
ಶುಕ ದೂರ್ವಾಸ ರೂಪದ ರುದ್ರಾ ನೀನು
ಅವತಾರ ತಾಳಿದ್ಯೊ ವೀರಭದಾ
ಮಥನವಾ ಮಾಡಲು ಸಮುದ್ರಾ
ನೀನು ವಿಷಪಾನ ಮಾಡಿದ್ಯೊ ಆದ್ರ್ರಾ || ಆಹಾ||
ನೀಲಕಂಠನಾಮವು ಬಂದವು
ನಿನ್ನ ನೋಡುವರ ಮನಕೆ ಆನಂದವ ಕೊಡುವುದು ಜಗಕೆ ೧
ಕರದಲಿ ಡಮರು ತ್ರಿಶೂಲಗಳಿಂದಾ
ನೀನು ಶೋಭಿಪಿಯೋ ಬಲುಛಂದಾ
ಗಳದಲ್ಲಿ ದ್ರಾಕ್ಷಾಮಾಲೆಗಳಿಂದಾ
ನಾಗಭೂಷಣಾಯಿಂದಾ || ಆಹಾ||
ಶಿರದಾ ಜಡಿಯೋಳು ಗಂಗಿಯ ಧರಿಸಿದ
ಧೀರನು ಹರಿಯಾ ರೂಪಕೆ ಮರುಳಾದ ಶಂಕರನ ೨
ಕೈಲಾಸಪುರಧೀಶ ವಾಸಾ
ನೀನು ಸರ್ವರಮನಕೆ ಉಲ್ಲಾಸ
ನೀನು ಸತಿಗೆ ತಾರಕ ಮಂಗಳ ಉಪದೇಶಾ
ಸ್ಮಶಾನವನು ಕಾಯ್ದ ಹರಿದಾಸಾ || ಆಹಾ||
ನಂದಿವಾಹನನಾಗಿ ಆನಂದಾದಿ ಮೆರೆಯುವ
ಸಿಂಧುಶಯನನ ಕಾಳಿಮರ್ಧನಕೃಷ್ಣನ ತಂದು ತೋರಿಸುವನ ೩

೨೫
ಪುಟ್ಟಿಸಿದ್ದೇನು ಕಾರಣವೋ ಸೃಷ್ಟಿಗೋಡೆಯಾ ಪ.
ಶ್ರೀಕೃಷ್ಣ ಮೂರುತಿವೊಂದಿಷ್ಟು ತಿಳಿಯದೋ
ನಿನ್ನ ಮಾಯಾ ಜೀಯಾ ಅ.ಪ.
ಆವಾವ ಸಾಧನವಾಗಲಿಲ್ಲಾ ಯನ್ನಿಂದ ಶ್ರೀದೇವಾ
ಎನ್ನ ಕರವ ಬಿಡುವುದುಚಿತವೇನು ಮಾಧವಾ
ನಿನ್ನ ಮನದಣಿಯ ನೋಡಾದೆ ಹಾಗಾದೆ ೧
ಹರಿಮೂರ್ತಿ ನೋಡಲೊಲ್ಲಾದು ಯನ್ನಮನವು
ಪರಪುರುಷರ ನೋಡಿತು ಮನಸು
ಹೊಲೆಗೆಡಿಸಿತು ಪುರುಷೋತ್ತಮನ ಮರಿತಿತು ೨
ಹರಕಥಾ ಶ್ರವಣ ಕೇಳದು ಎನ್ನ ಕರ್ಣಂಗಳು
ಪರವಾರ್ತೆಗೆ ಹೊತ್ತು ಸಾಲದು ಸರ್ವೋತ್ತಮನೆ
ನಿನ್ನ ಮರೆತೆನು ಉನ್ಮತ್ತಳಾದೆ ೩
ಹರಿನಿರ್ಮಾಲ್ಯವ ಕೊಳ್ಳದು ಯನ್ನ ಮೂಗು
ಪರಪುರುಷರಾ ಮೈಗಂಧವಾ ಆಘ್ರಾಣಿಸುವುದು
ನಿನ್ನ ನಾಮ ಸ್ಮರಣೆಯನು ಮರೆತೆನು ೪
ಹರಿಯಾತ್ರೆಯಾ ಮಾಡಲಿಲ್ಲ ಯನ್ನ ಕಾಲು
ಜಾರಸ್ತ್ರೀಯರ ಮನೆಮನೆ ತಿರುಗುವೆನು
ಈ ಪರಿ ನೀಯನ್ನ ಮರೆಯುವುದುಚಿತವೆ ೫
ಎನ್ನ ಇಂದ್ರಿಯಗಳು ಈ ಪರಿವ್ಯರ್ಥವಾಯಿತು
ಸಾರ್ಥವಾಗಲಿಲ್ಲ ಪಾರ್ಥಸಾರಥಿ
ನಿನ್ನ ನೋಡಿ ಪವಿತ್ರಳಾಗಲಿಲ್ಲ
ಏಕಿನ್ನ ಈ ಪರಿಯ ಮರುಳು ಮಾಡುವಿದೇವಾ
ಧರೆಯೊಳಗೆನ್ನ ತಂದುದಕೆ ಬಂದಕಾರ್ಯವಾಗಲಿಲ್ಲ ೬
ಆವಬಾಧೆಯು ನಾನರಿಯೆ ಪರಜಾತಿಯ ಆ ಮನಸು
ಪೋಗುವುದು ಕೋತಿಯಂದದಿ
ಕುಣಿಸುವರು ಇದು ರೀತಿಯೆ ೭
ಭವಸಾಗರದೊಳು ಇದ್ದು ಸೊರಗಲಾರೆನೊ
ಘಾಸಿಗೊಳಿಸುವುದು ನಿನಗೆ ಧರ್ಮವೆ
ವಾಸುದೇವನೆ ನಿಮ್ಮ ನಾಮವನು ನೆನೆಯದೇ ೮
ಇರುಳು ಹಗಲು ಹೀಗೆ ದುರುಳತನದಲಿ
ತಿರುಗಿದೆನು ಗುರು ಹಿರಿಯರಂಘ್ರಿಗೆ
ಶಿರವ ಬಾಗದೆ ೯
ಎಷ್ಟು ಮೊರೆ ಹೊಕ್ಕರೇನು ಒಂದಿಷ್ಟು ದಯಪುಟ್ಟದು
ನಾನೀಗ ದ್ವೇಷಿಯೇನೋ ಶೇಷಶಯನನೆ
ನಮ್ಮ ಕಾಳೀಮರ್ಧನಕೃಷ್ಣನೆ ೧೦

ಶ್ರೀ ಮಹಾಲಕ್ಷ್ಮೀ
೧೩
ಬಂದು ನಿಲ್ಲೇ ಎನ್ನ ಮಂದಿರದಲ್ಲೇ ಕೊಲ್ಲಾಪುರ ನಿಲಯೇ ಪ.
ಬಂದು ನಿಲ್ಲೇ ಎನ್ನ ಮನಮಂದಿರದಲ್ಲಿ
ಇಂದಿರಲಾರೆನು ಮುಂದರಿಯೇ ಇಂದಿನ ದಿನ ಅ.ಪ.
ನವಮೋಹನಾಂಗಿಯೇ ನೀನು ನೀಲಾಂಬರವನುಟ್ಟು
ಜರತಾರಂಚಿನ ಕುಪ್ಪಸ ಬಿಗಿದು ತೊಟ್ಟು
ಪಾದಕೊಪ್ಪುವ ಪೈಜಣ ಋಳಿ ಕಾಲುಂಗರವಿಟ್ಟು
ಲಲಾಟದ ಕುಂಕುಮ ಬಟ್ಟು ೧
ಕರದಲಿ ಕಂಕಣ ಬೆರಳಲಿ ಉಂಗುರ
ನಿಮ್ಮ ಮುಖದಿ ಸೂರ್ಯನ ಕಿರಣ
ನಾನಾಲಂಕೃತ ಭರಣ
ದೇವಿ ನಾ ಮಾಡುವೆ ಶರಣು ೨
ನಿನ್ನ ಹೊರತಿನ್ನು ಜಗದೊಳಗೆ ಅನ್ಯರ ಕಾಣೆನೊ
ನಿರುತ ನಂಬಿದೆ ನೀಲವೇಣಿ
ಪಂಕಜಪಾಣಿ
ಕಾಳೀಮರ್ಧನಕೃಷ್ಣನ ರಾಣಿ೩

೨೬
ಭೂಮಿಯನೆ ಬಿಡಿಸೋ ಭೂದೇವಿ ರಮಣಾ
ನಾ ಮಾಡುವೆ ನಿನಗೆ ಶರಣಾ ಪ.
ನಾನೊಲ್ಲೆ ನಾನೊಲ್ಲೆ ಈ ಕರಿ ಕರಿಯಾ ಸಂಸಾರ ಥೆರಿಯಾ ಅ.ಪ.
ಯನ್ನಿಂದ ದುಷ್ಟಕಾರ್ಯವನು ಮಾಡಿಸಿದಿಯೋ ನೀನು
ಇಷ್ಟು ನಾನೀಗ ಉದಾಶೀನಳಾಗಿ ಇರುವೊದುಕಿಂತಾ
ವೊಂದಷ್ಟು ಪ್ರಾಣವನು ಬಿಡಿಸೊ ಶ್ರೀಶಾ ಶ್ರೀನಿವಾಸಾ ೧
ಸರ್ವಜ್ಞರ ಮತದೊಳಗೆನ್ನ ಪುಟ್ಟಿಸಿದೆಯೋ
ಅಎ್ಞÁನ ಅಧಃಪತದಲಿ ಮಗ್ನಳಾಗಿರುವೆನು
ಸುಎ್ಞÁನವನು ನಾನರಿಯೆನು ಭವಾಬ್ಧಿಯನು ದಾಟಿಸು ನೀನು ೨
ದುರ್ಜನರ ಸಂಗವಾ ಕೊಡಬ್ಯಾಡ
ಸಜ್ಜನರ ಸಂಗವ ಕೊಡು ಬ್ಯಾಗ
ಮೂರ್ಜಗದೊಡೆಯನೇ ನೀಯನ್ನ ಪಾಲಿಸಯ್ಯ
ಕಾಳಿಮರ್ಧನ ಕೃಷ್ಣರಾಯ ೩

ಮಥುರಾಪುರದಿಂದ ಎಂದು ಬರುವಿಯೋ

ಮಧುರಾಪುರದಿಂದ ಎಂದಿಗೆ ಬರುವಿಯೊ ಕೃಷ್ಣಾ
ಮಧುರಾಪುರದ ಬಾಲೆಯರು ಬಲು ಮೋಸಗಾರರು ಪ.
ಗೋಕುಲದ ನಾರಿಯರು ನಾವು ಏಕವಾಗಿ ಬರುವೆವು
ಅನೇಕ ಬಗಿಯ ಸುಖದಿಂದಾ ಗೋಪಿಯ ತಂದಾ ಅ.ಪ.
ಯೆಂದಿಗೆ ನಿನ್ನ ಮುಖಾರವಿಂದವ ನೋಡುವೆವೋ
ಅಂದಿಗೆ ಸುಖವೋ ಮಾಧವ
ಮಂದರೊದ್ಧರನೆ ಮಾವ ಕಂಸನ ಕೊಂದು
ಸಿಂಧುರನಯನನೆ ನೀ ಬೇಗ ಬರಬೇಕೆಂದು
ನಾವು ಬೇಡುವೆವು ಬಂದು ೧
ಮಧುವನದಲ್ಲಿ ನಿನ್ನಾ
ಮಧುರ ಸ್ವರವನ್ನು ಕೇಳಿ
ಮದನ ತಾಪಕೆಮ್ಮ ಮರುಳು ಮಾಡಿಸಿ
ಮುರಲಿ ನುಡಿಸಿ ಆಧರಾಮೃತ ಪಾನವನ್ನೇ
ಮಾಡಿಸಿದ ನಿನ್ನ ಮಹಿಮೆಯನ್ನು ತೋರಿದಿ೨
ಯೆಷ್ಟು ಮೊರೆ ಪೊಕ್ಕಾರು ಒಂದಿಷ್ಟು
ದಯವ್ಯಾಕೆ ಬಾರದೊ
ನಿನ್ನ ಬಿಟ್ಟು ಒಂದರಘಳಿಗಿರಲಾರೆವು ನಾನು
ಪ್ರಾಣನಾಯಕನೇ ಎನ್ನ ಪ್ರಾಣದೊಲ್ಲಭನೆ ಕೇಳೊ
ಸರ್ವಪ್ರಾಣಿಗಳಿಗೆ ಪ್ರೇರಕನೆ ನಮ್ಮ
ಕಾಳಿಮರ್ಧನ ಕೃಷ್ಣನು ೩

ಪ್ರಳಯಕಾಲದಲ್ಲಿ ಭೂಮಂಡಲವೆಲ್ಲಾ

ಮಧುರೆಗೆ ಪೋಗಬ್ಯಾಡಾ ರಂಗಯ್ಯ ರಂಗಾ ಪ.
ಮಧುರೆಗೆ ಪೋದಾರೆ ಚದುರಿ ನಾರಿಯರು ಬೆದರುತಲಿರುವೆವು
ಹರಿಯೇ ಎನ್ನಯ ದೊರೆಯೇ ಅ.ಪ.
ಮಧುರಾಪುರದಿಂದ ಅಕ್ರೂರ ಕರಿಲಿಕ್ಕೆ ಬಂದಾನು
ಆಹ್ವಾನ ತಂದು ನಿಂದಾನು
ಮಲ್ಲನ ಕೊಂದನು ಕೃಷ್ಣ
ರಜಕನ ಕೊಂದನು ರಕ್ತಾಲಂಕೃತನಾಗಿ
ಕುಬಜಿಯಿಂದ ಗಂಧವಾ ಕೊಂಡನು
ಡೊಂಕನು ತಿದ್ದಿದನು ೧
ಚಾಣಿಕರ ಮುಷ್ಟಿಕರ ಕೂಡಾ
ಮುಷ್ಟಿ ಯುದ್ಧವ ಮಾಡಿ ಕುಟಿಲರ ಕೊಂದು
ರಂಗಮಂಟಪಕೆ ಬಂದು
ನಾನಾಭರರಣ ಭೂಷಿತನಾಗಿ
ರಾಜ ಬೀದಿಯೊಳು ಸಾಗಿ ೨
ಮಧುರಾಪುರದ ನಾರಿಯರು
ಬಲು ಚೆಲುವಿಯರು
ನಿನ್ನನೆ ಮರುಳು ಮಾಡುವೋರು
ಯಮ್ಮನಗಲಿಸುವೋರು ಇವರು ೩
ಕನಿಕರವಿಲ್ಲವೆ ನಾವು ನಿನ್ನನು ಬಿಟ್ಟು
ವೊಂದು ನಿಮಿಷವಾದರು
ಕಾಲಹ್ಯಾಗ ಕಳಿಯೋಣ
ಘನ ಮಹಿಮನ ಅಧರಾಮೃತ ಪರವಶವಾದೆವು ೪
ಮಲ್ಲಯುದ್ಧವ ಮಾಡಿ
ಮಾವ ಕಂಸನ ಕೊಂದು
ಉಗ್ರಸೇನರಿಗೆ ಅನುಗ್ರಹವ ಮಾಡಿ
ಶೀಘ್ರದಿ ಬರಬೇಕೆಂದು ಬೇಡುವೆ ನಾ ಬಂದು
ಕಾಳಿಮರ್ಧನಕೃಷ್ಣ ನಿನಗಿಂದು ೫

ದೇವ ದಾನವರು ಅಮೃತವನ್ನು ಪಡೆಯಲಿಕ್ಕಾಗಿ

ಮೂಲನಾರಾಯಣ ವಟಪತ್ರಶಾಯಿ
ಕಾಲಕಾಲಕೆ ವೊದಗಿ ನೀಯೆನ್ನ ಕಾಯೋ ಪ.
ಎಂದೆಂದಿಗೂ ಎನಗೆ ತಂದೆ ನೀ ದೇವಾ
ಯಿಂದೆನ್ನ ಕರಪಿಡಿಯೋ ಬಿಂದುಮಾಧವಾ ಅ.ಪ.
ಸ್ವಚ್ಛ ಮನವಮಾಡು ಮತ್ಸರೂಪಕನೆ
ತುಚ್ಛ ಮನಕೊಂದ ವಿಶ್ವವ್ಯಾಪಕನೆ ೧
ಮುಂದೆನ್ನ ಉದ್ಧರಿಸು ಮಂಧರೋದ್ದರನೆ
ಇಂದ್ರಾದಿ ಸುರರಿಂದ ವಂದ್ಯಾಸುರವರನೆ ೨
ಹಿರಣ್ಯಾಕ್ಷನ ತರಿದಂಥ ಧೀರ
ಭರಧಿ ವೇದವ ತಂದ ಮಹಿಮೆ ಅಪಾರ ೩
ತರಳ ಪ್ರಹ್ಲಾದನ ತಲೆಗಾಯ್ದ ರೂಪ
ಸರಳ ಮತಿಯನಿತ್ತು ಪಾಲಿಸು ಶ್ರೀಶ ೪
ಬಲಿಯ ಸಿಕ್ಕನು ಮುರಿದೆ ಪ್ರಬು ನಿನ್ನ ಕೀರ್ತಿ
ಯೊಳ ಎನ್ನ ಮನವಿಡು ವಾಮನಮೂರ್ತಿ ೫
ಕ್ಷತ್ರಿಯ ಕುಂಭವ ಸವರಿದ ರಾಮ
ಶತಷಟ್ಯಂದರ ಬಡಿದ ದಿವ್ಯ ನಾಮ ೬
ದಾನವ ಕುಲಕುಟಾರ ಶ್ರೀ ರಾಮ
ಮಾನಾಭಿಮಾನವು ನಿನ್ನದೋ ರಮ ೭
ಮಲ್ಲರ ಗೆದ್ದಂಥ ದೂಕುಳ ವೈರಿ
ಗೊಲ್ಲಬಾಲಕರ ಕೂಡಾಡಿದ ಶೌರಿ
ಸೊಲ್ಲು ಸೊಲ್ಲಿಗೆ ನಿನ್ನ ನಾಮಕೊಡು ಶೌರಿ ೮
ತ್ರಿಪುರರ ಸ್ತ್ರೀಯರ ವ್ರತ ಕೆಡಿಸಿದ ಜಾಣ
ಉಪಗಮನ ವೀಯೋ ವಿಶ್ವೇಶ ಸುಎ್ಞÁನ ೯
ಕಲಿಮುಖದೈತ್ಯರ ಅಳಿಯುವ ಕಲ್ಕಿ
ಸಲಹೋ ಬಳಲುವೆ ನಾನು ಭವದಿಂ ಶಿಲ್ಕಿ೧೦
ಗುರು ಕಾಳೀಮರ್ಧನಕೃಷ್ಣ ಯಾವಾಗ್ಯು
ಶರಣುಜನರಪಾಲ ಏನು ಬಂದಾಗ್ಯು ೧೧

೧೦
ಯಾವ ಪಾಪಿಯ ದೃಷ್ಟಿ ತಾಕೀತೋ ಗೋಪಾಲಕೃಷ್ಣಗೆ ಪ.
ಪಾಲು ಮೊಸರು ವೊಂದನಾದರು
ಯಾವ ಕಾರಣದಿ ಕುಡಿಯಲೊಲ್ಲೆ ಪೇಳೋ
ಯೆನಗೆ ಬಾಲಾ ಭೂಪಾಲ ಗುಣಶೀಲಾ ೧
ದಾವಪುಣ್ಯವತಿಯ ಕಣ್ಣು ಹತ್ತಿತೋ
ನೆಲುವಿಗಿಟ್ಟ ಬೆಣ್ಣೆಯ ಮುಟ್ಟುವುದಿಲ್ಲಾ
ಬಟ್ಟಲಲ್ಲಿಡುವೆವೋ ೨
ಕಪ್ಪವಾದರು ಇಡುವೇನು ಬಾ
ಅಪ್ಪ ವೇಣುಗೋಪಾಲಾ
ತುಪ್ಪ ಸಕ್ಕರಿ ನೀಡುವೆನು
ಚಪ್ಪರಿಸು ನೋಡುವೆನು
ಕಾಳಿಮರ್ಧನಕೃಷ್ಣಗೆ ೩

೧೬
ಯೆಂದಿಗೆ ಬರುತೀಯೆ ಸುಂದರ ಭಾರತಿ
ಮಂದರೋದ್ಧರನ ತೋರಿಸೆಂದೆ ನಾ ಬಂದೆ ಪ.
ಅಂಧಕಾರಣ್ಯದೊಳು ನಿಂದು ತತ್ತರಿಸುವೆನು ತಾಯೆ
ಕುಂದುಗಳೆಣಿಸಾದಿರು ಆನಂದ ತೋರು ಅ.ಪ.
ಹರಿಗೆ ಕಿರಿಯ ಸೊಸಿ ವಾತನಸತಿಯು ನೀನು
ಪ್ರಖ್ಯಾತಿವಂತಳೇ ಏಕಾಂತ ಭಕ್ತಳೇ
ತ್ರಿವಿಧ ಜೀವರೊಳಗೆ ನಿಂತು
ತ್ರೀವಿಧ ಪ್ರೇರಣೆ ಮಾಡುವಿ
ದೇನಿ ನಿನ್ನಾ ಮಹಿಮೆಗೆ
ನಮೋ ಎಂಬೆ ಪುತ್ಥಳಿಯಾ ಬೊಂಬೆ ೧
ಮಂದರೋದ್ಧರನ ಪಾದಸೇವಕಳೇ
ನಿನಗೀಡೆ ನಲಿದಾಡೆ ಒಂದನಾದರೂ ಮಾತನಾಡೆ
ವರಗಳ ನೀಡೆ ದಯಮಾಡಿ ನೋಡೆ
ತವಪಾದವ ಕೊಡೆ
ಕರವ ಜೋಡಿಸಿ ಬೇಡುವೆನಿಂದು ನಾ ಬಂದು ೨
ಗರುಡ, ಶೇಷ ರುದ್ರಾದಿಗಳೊಡೆಯಳೇ
ನೀನು ನಿನ್ನಡಿಗಳಿಗೆರಗುವೆ
ನಾನು ತಡಮಾಡ ಬ್ಯಾಡಮ್ಮಾ
ನಡೆದು ಬಾರಮ್ಮ
ಭವ ಮಡುವಿನೊಳಗಿರುವೆನು
ಗರುಡವಾಹನ ನಮ್ಮ ಕಾಳಿಮರ್ಧನಕೃಷ್ಣ
ತೋರಿಸೋ ದಯಪಾಲಿಸೋ ೩

ಭೂತರಾಜರಿಗೆ ಅನುಗ್ರಹ ಮಾಡಿದ್ದಾ
೨೧
ವಾದಿರಾಜಾ ವಾದಿರಾಜಾ ವಾದಿರಾಜ
ನೀ ಕರುಣದಿ ಕಾಯಬೇಕೀ
ಮನ್ನಿಸಬೇಕು ಯನ್ನ ವಾಕು ಪ.
ನೀ ದೂರ ನೋಡದಿರು ಎನ್ನಾರು ಕರಪಿಡಿಯುವರಿಲ್ಲಾ
ಭವ ಮಡುವಿನೊಳಗಿರುವೆನು ದಡಕೆ ಸೇರಿಸು ನೀನು ಅ.ಪ.
ಆರು ಕಾಯುವರಿಲ್ಲಾ ಸೇರಿದೆ ನಿನಗಲ್ಲಾದೆ
ಸಂಸಾರ ಶರಧಿಯೊಳು ಈಸಲಾರೆನು
ಘಾಸಿಪಡಿಸಲಾಗದು ನೀನು
ಆಶಾ ತೋರಿಸಿ ಮೋಸ ಮಾಡುವದು ಇದು ತರವೇ ಗುರುವೇ ೧
ಯಂದಿಗೆ ಬರುತೀಯೋ
ಸುಂದರ ಮೂರುತಿಯೆ
ಪಂಚ ವೃಂದಾವನ ಛಂದಾನೋಳ್ಪರಿಗೆ
ಆನಂದಾ ಎನ್ನ ಹೃದಯಮಂದಿರದಲ್ಲಿ
ಸಂದರುಶನ ಕೊಡು ಇಲ್ಲಿ ೨
ಅನಾಥನು ನಾನು ಯನ್ನ ಪೊರೆವ ದಾತನು ನೀನು
ಋಜುಗಣಧ್ವರಿಯೇ ಕಾಳಿಮರ್ದನಕೃಷ್ಣನ ಮರಿಯೆ ೩

೧೮
ಶಂಭು ಶಂಕರನೆ ನಿನಗೊಂದಿಸಿ ಬೇಡುವೆ ಬಿಂಬದಲ್ಲಿರುವ
ಮನ ಸ್ವಾಮಿಯ ತೋರೈ ಪ.
ರುದ್ರ ದೇವನೆ ಮನಶುದ್ಧಿಯ ನೀ ಮಾಡಿ
ಶ್ರದ್ದೆಯಿಂದಲಿ ಅನಿರುದ್ಧನ ತೋರೈ ೧
ಸಿದ್ದಗುಣಗಳೊಡೆಯ ಉದ್ದರಿಸೆನ್ನ
ಹದ್ದುವಾಹನ ಪ್ರದ್ಯುಮ್ನನ ತೋರೈ ೨
ಶಂಕರನೇ ನಿನ್ನ ಕಿಂಕರಳನೆ ಮಾಡಿ
ಮಂಕುಬುದ್ದಿಯ ಬಿಡಿಸಿ ಸಂಕರುಷಣನ ತೋರೈ ೩
ವಾಸುದೇವನಿಗೆ ಶಿಶುವಿನ ಶಿಶು ನೀನಾಗಿ
ಹುಸಿಯ ಮಾಡದೆ ವಾಸುದೇವನ ತೋರೈ ೪
ಪಾರ್ವತಿ ಪತಿಹರ ಪಾಪವ ಕಳೆಸೆನೆಗೆ
ಪಾರ್ಥನ ಸಖನ ನಾರಾಯಣನ ತೋರೈ ೫
ನಂದಿವಾಹನ ನಿನಗೊಂದಿಸಿ ಬೇಡುವೆ
ಬಂಧನ ಬಿಡಿಸಿ ಗೋವಿಂದನ ತೋರೈ ೬
ರಮಾವಲ್ಲಭ ವಿಠಲ ನಾಮವ ಅನುಗಾಲ
ನುಡಿವಂತೆ ವರಗಳ ನೀ ನೀಡೈ ೭

೨೮
ಸಹಿಸಲಾರೆನೊ ವ್ಯಥೆಯ ಪವಮಾನ ವಂದಿತನೆ ಪ.
ಅಹೋರಾತ್ರಿಲಿ ಮನ ಕಳವಳ ಪಡುವದೊ
ಆಹಾರ ನಿದ್ರೆಗಳು ತೊಲಗಿ ಪೋದವು ದೇವಾ
ಸಹಿತಾಗಿ ತಾಯಿಯ ಸರ್ವಬಾಂಧವರೆಲ್ಲಾ ಸ
ನ್ನಿಹಿತರಾಗಿ ಎನ್ನ ಬಳಗ ಇದ್ದರೂ ಕೂಡ ಅ
ಸಹ್ಯವಾದ ದುಃಖ ದೂರಾಗಲಿಲ್ಲವೊ
ಆಹಾ ಇರಲಾರೆ ಇರಲಾರೆ ಭಕ್ತ ಜನರ ಬಿಟ್ಟು
ಮಹಿದಾಸ ಮೂರ್ತಿಯ ನಿನ್ನ ಭಕ್ತರ ಪಾದ
ಸಹವಾಸ ಸುಧೆಯ ಸುರಿಸಿ ಬಲುಪರಿ
ಅಹಿಭೂಷಣ ತಾತ ಕಾಳಿಮರ್ಧನಕೃಷ್ಣಾ ೧
ಈಶಭಕ್ತರ ಕೂಡೆ ಕ್ಷಣಬಂದು ಕೂಡದಂಥ
ಏಸು ಜನ್ಮದ ಕರ್ಮ ಅಡ್ಡಬಂದು ಎನ್ನ
ಘಾಸಿ ಮಾಡುತಲಿದೆ ಅರಿಯದಾದೆನೊ ದೇವಾ
ಬ್ಯಾಸರವಾಗಿದೆ ಜನ್ಮವು ಮಹಿಯೊಳು
ಸಾಸುವೆ ಮಾತ್ರವು ಸ್ವತಂತ್ರವಿಲ್ಲದಿಹ
ದೋಷಿಜೀವನ ತಾನೇನು ಮಾಡಬಲ್ಲ
ಸಾಸಿರನಾಮಗುರು ಕಾಳೀಮರ್ಧನಕೃಷ್ಣ೨
ಜಲದ ಮಧ್ಯದಿ ಇರುವ ಮೀನವನು ಕಾವ
ಮಳಲಿನೊಳಗೆ ತೆಗೆದು ಬಿಸುಟಿದಂತಾಯಿತು
ಹೊಳೆಯ ಈಜುವೆನೆಂದು ಬಲು ಹೆಮ್ಮೆಯಿಂದಲಿ
ಸೆಳೆವಿಗೆ ಸಿಕ್ಕು ಬಿದ್ದ ಮನುಜನ ತೆರನಾಯ್ತು
ಬಲವಾಗಿ ಘಾಯವ ಪೊಂದಿದ ಸ್ಥಾನದಲ್ಲಿ
ಸಲೆ ಕಾದ ಆಯಸ ಸೆಳೆಯನೆಳೆದಂತಾಯ್ತು
ಅಳಲನು ನಿನಗಲ್ಲದೆ ಇನ್ನಾರಿಗೆ ಪೇಳಲೋ
ಕೊಳಲಧರನೆ ಗುರು ಕಾಳಿಮರ್ಧನಕೃಷ್ಣಾ ೩
ನಿನ್ನ ಭಕ್ತರಾ ಮಾತು ಯನಗದು ಮನ್ನಣೆ
ನಿನ್ನ ಭಕ್ತರ ಕಥಾಶ್ರವಣ ಯನ್ನ ಕರಣಾಭರಣ
ನಿನ್ನ ಭಕ್ತರ ಸಮೂಹ ಎನ್ನಯ ಕಣ್ಬೆಳಕು
ನಿನ್ನ ಭಕ್ತರ ಪಾದದೂಳಿಯೆ ಶಿರೋಭೂಷಣವೆನೆಗೆ
ನಿನ್ನ ಭಕ್ತರ ಆಶೀರ್ವಾದವೇ ಸರ್ವ ಬಲವೈ
ಇನ್ನು ಈ ಬುದ್ಧಿಯು ಎಂದಿಗೂ ಕೆಡೆದಂತೆ
ಚೆನ್ನಾಗಿ ರಕ್ಷಿಸೊ ಗುರು ಕಾಳಿಮರ್ಧನಕೃಷ್ಣಾ ೪
ಪರಾಧೀನನೆಂದು ಪರಿಪರಿಯಿಂದಲಿ
ಕೊರಗಿಸುವುದು ನಿನಗೆ ಎಂದಿಗೂ ಸರಿ ಅಲ್ಲ
ಪರಾಧೀನನು ಅಹುದು ಪರತಂತ್ರನಾನಹುದು
ಸರ್ವತಂತ್ರ ಸ್ವತಂತ್ರ ನೀನೆಂಬುದು ಸಿದ್ಧ
ಶರಣಾಕರ ಆದರಿಷ್ಟು ಮಾತ್ರ ಕೇಳೋ
ನರನ್ಯಾವನಾದರೂ ಸತಿ ತನ್ನಧೀನಳೆಂದು
ಶಿರಶಿಡಿಯುವ ಊರಿ ಬಿಸಿಲಿನೊಳು ನಿಲ್ದಪನೆ
ಸರಿಬಂದಿದ್ದು ಮಾಡೋ ಇದರ ಮೇಲಿನ್ನು ದೇವಾ
ಉರಗಶಯನ ಗುರು ಕಾಳೀಮರ್ಧನಕೃಷ್ಣಾ ೫
ನೀನು ನುಡಿಸಿದಂತೆ ನುಡಿದು ನುಡಿವೆನಯ್ಯ
ನಿನ್ನ ಚಿತ್ತವು ಗುರು ಕಾಳೀಮರ್ಧನಕೃಷ್ಣಾ

ವಾದಿರಾಜರು
೨೦
ಸಾಗಿಬಾರಯ್ಯ ಗುರುವೆ ವಾದಿರಾಜೇಂದ್ರಾರ್ಯ
ಬಾಗುವೆ ನಾ ನಿನಗೆ ಶಿರವಾ ಪ.
ಭಾಗವತರ ದುರಿತಾಘಂಗಳನೆ ಕಳೆದು
ಬಂದಾ ದುರ್ವಾದಿಗಳನೆ ಮರೆದು
ಸುರರೆಲ್ಲ ಇವರೆ ಮೇಲ್ ಪೂ ಮಳೆಯಗರೆದು
ತುಂಬುರರು ನರದರು ಗಾನಗಳಿಂದ ಮೆರೆದು
ಘಲುಘಲು ಘಲುರೆಂದು, ಅಪ್ಸರರು ನಾಟ್ಯಗಳ ಕುಣಿದು ಅ.ಪ.
ಹೊದ್ದ ಕಾವೆ ಶಾಟಯಲೊಪ್ಪುವಾ
ಶ್ರೀ ಮುದ್ರಿ ಗಂಧಾಕ್ಷತೆಯಿಂದಾ
ಗಳದಲ್ಲಿ ಶ್ರೀ ತುಳಸಿ ಪುಷ್ಪಮಾಲೆಗಳಿಂದಾ
ಝಗಝಗನೆ ಮುಖಕಮಲಳ್ಹೋಳವೋದು ಯೆಂದಾ
ಋಜುಗಣದವರಹುದೆಂದು ಪೇಳುವಾನರನಿಂದಾ
ಮಾಡುವವರಿಗೆ ಕ್ರಿಮಿಕೀಟಗಳು ದುರುವುವುದೇಹದಿಂದಾ
ಬಂದ ಜನರಿಗ್ಹರುಷ ಬಡಿಸುವದರಿಂದಾ ಮುದದಿಂದಾ ೧
ಏನುಪೇಳಲಿ ಗುರುವೆ ನಿನ್ನ ಮಹಿಮೆಯು
ನೋಡಲಾಶ್ಚರ್ಯವೋ ಭೂತರಾಜರಿಂದ
ಪೂಜೆಗೊಂಬುವ ಛಂದವೋ
ಧಿಂ ಧಿಮಿ ಧಿಮಿಕೆಂದು ಕುಣಿದಾಡುವಾನಂದವೊ
ಯಡಬಲದಿ ದ್ವಾರ ಪಾಲಕರಿರುವಾನಂದವೋ
ಬಂದ ಜನರು ಭಕ್ತಿಯಿಂದ ಭಜಿಸುವರಿಗೆ
ಮುಕ್ತಿಯನೆ ಕೊಡುವಾ ೨
ನಿನ್ನಂಥಾ ಕರುಣಿ ಗುರು ಇನ್ನಿಲ್ಲ ಧರೆಯೊಳು
ಮನ್ನೀಸಿ ಸಲಹಯ್ಯ ಮಹರಾಯ
ಘನ್ನ ಸಂಸಾರದೊಳು ಬನ್ನಪಟ್ಟು ಬಹಳ ನೊಂದೇನೀ
ಕೈಪಿಡಿದು ಎಂದು ನಿಂದೀನೀ
ಉದ್ಧಾರ ಮಾಡಬೇಕೆಂದು ಬಂದೀನಿ
ನಿನ್ನಂಥ ಮಂದ ಭಾಗ್ಯ ಜೀವನ
ಕುಂದುಗಳೆಣಿಸಿದಾಗೊದೊ ಇಂದು
ಅಡಿಗಡಿಗೆ ನಮೋ ಬೇಡುವೆನೋ ಬಂಧೊ ೩
ರುಕ್ಮಿಣಿ ಕಳುಹಿದಾ ವಾಲೆಯು ತಾನು
ಶ್ರಿ ಕೃಷ್ಣಗರ್ಪಿಸಿದನು ದ್ವಿಜನು
ಸಾಮಾನ್ಯವಲ್ಲವೋ ಈತ
ಗುರುರಾಜನೆಂದೆನಿಸೀದಾ
ದುರ್ವಾದಿಗಳು ಜಯಸೀದಾ
ಪವಮಾನರಾಯನೆಂದೆನಿಸಿದಾ
ಸುರರಿಗಮೃತವನುಣಿಸೀದಾ ವೃಂದಾವನ
ಚಾರ್ಯರಿಂದ ಸೇವೆ ಸ್ವೀಕರಿಸೀದಾ ಸುಖವಸುರಿಸೀದಾ ೪
ಸ್ವಾದೀಯಪುರದಲ್ಲಿ ಇರುವರೋ ಗುರುರಾಜರು
ಧವಳಗಂಗೆಯ ಸ್ನಾನ ಅಮೃತ ಪಾನ
ಬಂದ ಸೇವಕರಿಗಭೀಷ್ಟವ ಕರೆದು ತಾ ಕೊಡುವ
ದ್ರಷ್ಟ ಜನರಾ ಫಲ್ಗಳ ಮುರಿವಾ
ಸರ್ವೇಶನಲ್ಲದೆಂಬೋರ ಅಳಿವಾ
ಮಧ್ವಮತವನ್ನುದ್ದಾರ ಮಾಡುವ
ಕಾಳೀಮರ್ಧನಕೃಷ್ಣನೊಲಿವಾ ೫

ಕಾಳೀಯಮರ್ಧನ ಕೃಷ್ಣನೇ
೨೭
ಸಾಧನದ ಚಿಂತೆ ಎನಗ್ಯಾಕೊ ಹರಿಯೇ ಪ.
ಮಾಧವಾ ನೀಯನ್ನಾ ಮನಸಿಲಿದ್ದು ಮಾಡಿಸುವಿ ಧೊರಿಯೇ ಅ.ಪ.
ಹಿಂದೇಸು ಜನ್ಮಗಳು ಬಂದು ಪೋದವು
ಒಂದು ತೃಣವಾದರೂ ನಾ ಗಳಿಸಲಿಲ್ಲ
ಮುಂದಿನ ಗತಿಯು ತಿಳಿಯದು
ಬಿಂದು ಮಾಧವಾ ಯಾದವಾ ೧
ನಿನ್ನ ಹೊರತು ಎನಗೆ ಮನ್ನಿಸುವರು ಯಾರೋ
ಬೇರೆ ಗತಿ ಕಾಣೆ ಪುಸಿಯಲ್ಲಿ ಯನ್ನಾಣೆ
ಪಾದಸ್ಮರಣೆ ಮಾಡಿಸುವ ಬಾರಾ
ಉದಾರ ಭಕ್ತರಾಧಾರಾ ೨
ಯೆಷ್ಟು ಪೊಗಳಿದರು ನಿನ್ನ ಕರುಣಕೆ
ಇನ್ನು ಕೇಡು ಉಂಟೇ ಸ್ವಾಮಿ
ದಯಾ ದೃಷ್ಟಿಯಿಂದಲಿ ನೋಡು ಪ್ರೇಮಿ
ದುಷ್ಟ ಅಘರಾಶಿ ದೂರ ಮಾಡೋ
ಕಣ್ತೆರೆದು ನೋಡೋ ಕಾಳಿಮರ್ಧನ
ಕೃಷ್ಣನೆ ಮಧ್ವಮುನಿ ಪ್ರಿಯನೆ ೩

ಕಂಜಾಕ್ಷಿಮುಖಿಗೆ ಉಂಗುವನಿತ್ತೆ
೧೫
ಸುಂದರಮೂರುತಿ ಇಂದು ನಿನ್ನಯ ಪಾದಾ
ವಂದಿಸುವೆ ನಾನು ಛಂದದಿಂದಾ ಪ.
ಮಂದಾರೊದ್ಧರನ ಪಾದಾ ಸೇವಕರೆಂದೆನಿಸಿದಿ
ದುರ್ಮಾಯವಾದಿಗಳನು ಜಯಸಿದಿ
ಬ್ರಹ್ಮರಾಯನೆಂದೆನಿಸೀದಿ ಅ.ಪ.
ಅಂಜನಿಸುತನೆಂದೆನಿಸಿದೆ
ಸಂಜೀವನವ ತಂದಿ
ಕಂಜಾಕ್ಷಿಮುಖಿಗೆ ಉಂಗುರವನ್ನಿತ್ತಿ
ವನವ ಕಿತ್ತಿ ಸಂಜೀವರಾಯನೆ
ದುರುಳ ರಾವಣನ ಸಂಹರಿಸಿದಿ
ವಿಭೀಷಣನಿಗೆ ರಾಜ್ಯಭಾರದಲ್ಲಿ ನಿಲ್ಲಿಸಿದಿ
ಸೀತಾಸಹಿತ ರಾಮಲಕ್ಷ್ಮಣಾದಿಗಳಿಂದ
ಅಯೋಧ್ಯನಗರಿಗೆ ತೆರಳಿದಿ ೧
ಕುಂತಿಯಾ ಕಂದಾ ಕೌರವಾದಿಗಳ ಕೊಂದ
ಯುದ್ಧದಲ್ಲಿ ಪ್ರಚಂಡಾ ಭಾರತಿಗೆ ಗಂಡಾ
ಲಂಡದುಷ್ಯಾಸನನ ತುಂಡು ತುಂಡುಮಾಡಿ ಸೀಳಿದ
ವಿರಾಟ ನಗರದಿ ಸಂಚರಿಸಿದಾ
ಕೀಚಕಾದಿಗಳ ಸಂಹರಿಸಿದಾ
ಪಾಂಚಾಲಿಗೆ ಸೌಗಂಧೀಕುಸುಮವನೆ ತಂದಾ ಆನಂದಾ ೨
ಮಧ್ಯಗೇಹನಲ್ಲಿ ಉದ್ಭವಿಸಿದೆಯೋ ನೀ ಇಲ್ಲಿ
ಪದ್ಧತಿಯಲಿ ಅದ್ವೈತ ಮತವೆಲ್ಲಾ ಕಾಲಿಲೆ ವದ್ಯೋ
ಗೆದ್ಯೋ ಮಧ್ವಮತವೆಲ್ಲ ಉದ್ಧಾರ ಮಾಡಿದಾ
ಬದರಿಕಾಶ್ರಮಕೆ ಪುನರಪಿ ಪೋದಾ
ವ್ಯಾಸಮುನಿ ಪಾದಕೆ ಅಭಿವಂದಿಸಿದಾ
ಉಡುಪಿಯೊಳು ಕಾಳಿಮರ್ಧನಕೃಷ್ಣನು ನಿಲ್ಲಿಸಿದಾ ೩

೧೧
ಸುಂದರಾಂಗನೆ ನಿನ್ನ ಇಂದು ಶ್ರೀರೂಪವ ಛಂದಾದಿಂದಲಿ
ನೋಡುವೆನು ಆನಂದ ಪಡುವೆನು ಪ.
ಭರದಿಜರಿ ಪೀತಾಂಬರವನುಟ್ಟಳು ಇವಳು
ಬಿಳಿಯ ಕುಪ್ಪುಸವಾ ತೊಟ್ಟಳು
ಲಲಾಟದಿ ಕುಂಕುಮ ತಿಲಕವನಿಟ್ಟಳು ವಾರೆ
ನೋಟವ ನೋಡುವಳು ೧
ಪಾದಾಕೊಪ್ಪುವ ಋಳಿ ಪೈಜಣಿ ಕಾಲುಂಗರದಂದಾ
ನೋಳ್ಪ ಜನಕ್ಕೇ ವಿನೋದಾ ದೈವ ದೈತ್ಯ
ಸಾಲಿನೊಳಗೆ ಅಘಾದ ಪರಿಪೂರ್ಣ ೨
ಗಳದಿ ಕಠಾಣೆಯಕಟ್ಟಿ ಅದರ ಮೇಲ್ ಗೆಜ್ಜೆಯ ಟೀಕಿ
ಪುಥಲಿಸರ ಚಂದ್ರಹಾರಗಳು ವೈಯಾರದಿ ಬರುವೋಳೂ ೩
ಮುದ್ದು ಮುಖಕ್ಕೆ ತಕ್ಕ ಮುಖುರೆ ಬುಲಾಕು ದ್ರಾಕ್ಷಝೂಲರ
ಬುಗುಡಿಯ ಬೆಳಕು ಆನಂದ ಸುರಿಯೋಳು ಇವಳು ಮನಕ ೪
ಚವರಿ ಚಂದ್ರಾ ಜಡಿ ಭಂಗಾರದ ರಾಗುಟಿ ಬೈತಲ ಮುತ್ತನಿಟ್ಟ
ಹೇಳ ಭಂಗಾರ ಗೊಂಡೆವ ಕಟ್ಟಿ ಇವಳ್ಯಾರು ಧಿಟ್ಟಿ ೫
ಮಂದರ ಮಲ್ಲಗಿ ಸುಗಂಧಿಯು ತ್ಯಾದಿಗಿ ನೂತನದ ಪಾರಿಜಾತವನ್ನು
ಇಂದು ತಾಂಬೂಲ ಮೆಲುವುತ ಮುಗುಳು ನೆಗಿಯು ನಗುತ ೬
ತರುಣಿಯೆನ್ನದಿರು ಹರಿಯಾ ರೂಪಾವ ವ್ಹಾ ನೋಡು
ಈ ಶ್ರೀ ರೂಪದಿಂದ ಹರನು ಮೋಹಿಸಿದನು
ಛಂದಾಮನ ಕಾನಂದಾ ೭
ಮಂಗಳಾಂಗನೆ ಎನ್ನುತ ರಂಗಾನಲ್ಲಿರು
ನೀನು ಶ್ರೀರಂಗನಾಯಕನೆ
ಕಾಳಿಂಗಶಯನನೆ ನರಶಿಂಗನೋ ೮
ಯೇಷ್ಟುನೋಡಿದರು ಈ ಧಿಟ್ಟ ಮೂರುತಿಯ ದೃಷ್ಟಿ ತಾಕುವ
ದಯ್ಯ ಕಾಳಿಯ ಮರ್ಧನ ಕೃಷ್ಣರಾಯಾ ೯

ಗೋಪಿಚಂದನದಿಂದ ಆನಂದತೀರ್ಥರು
೧೨
ಸೃಷ್ಟಿಯೊಳಗೆ ಶ್ರೀ ಕೃಷ್ಣಮೂರುತಿ ಇನ್ನೆಷ್ಟು ಸ್ತುತಿಸಲಿ ನಾನು
ದೃಷ್ಟಿಯಿಂದಲಿ ನೋಡು ಮನಮುಟ್ಟಿ ಭಜಿಸುವೆನು
ಸೃಷ್ಟ್ಯಾದಷ್ಟ ಕರ್ತಾ ವಿಠಲಗುಣಶೀಲ
ಅಷ್ಟಯತಿಗಳಿಂದ ಇಷ್ಟದಿ ಪೂಜೆಗೊಂಡ ಮದವೋ
ಅಟ್ಟಹಾಸದಿಂದಲಿ ಬೆಟ್ಟ ಬೆರಳಿನಿಂದಲಿನೆತ್ತಿದ ಮದವೊ
ದಿಟ್ಟಮೂರುತಿ ನಮ್ಮ ಕಾಳೀಮರ್ಧನಕೃಷ್ಣ
ಮನೋಭೀಷ್ಟೆಯ ಕೊಡೋ ೧
ಇಂದಿರೇಶನೆ ನಿನ್ನ ಒಂದಿನವು ನಾನು
ಗೋವಿಂದ ನಿನ್ನಯ ಪಾದಾರವಿಂದವ
ಭಜಿಸಲಿಲ್ಲ ಆನಂದ ಮೂರುತಿ ನಿನಗಿಂತ
ಸಮಾನ ಅನಿಮಿತ್ತ ಬಂಧುಗಳು ಯನಗಿಲ್ಲ
ಎನ್ನಂಥ ಭಕುತರು ನಿನಗನಂತರರಿರುವರು
ನಿನ್ನಂಥ ಕರುಣೆ ಇನ್ನಿಲ್ಲ ಜಗದೊಳು
ಸರ್ಪಶಯನ ನಮ್ಮ ಕಾಳೀಮರ್ಧನಕೃಷ್ಣ
ನಿರುತದಿ ವೊಲಿಯೇ ೨
ಸುಂದರಿಯರ ಸೇರಿ ಆನಂದದಿಂದ ಕಳೆದ ಮದವೋ
ಮೇದಿನಿಯೊಳಗೆ ದಾಸಾರ್ಯರಿಂದ
ಸೇವೆಗೊಂಬುವ ಮದವೋ
ಸೋಳಸಾಸಿರ ಸುದತಿಯರೊಪ್ಪುವ ಮದವೊ
ಮುರಳೀಧರ ನಮ್ಮ ಕಾಳೀಮರ್ಧನಕೃಷ್ಣ ಇಷ್ಟದಿ ಒಲಿಯೆ ೩
ಮುಕುಂದ ನಿನ್ನ ಪಾದ ಎಂದಿಗೆ ಲಭ್ಯವೊ ಕಂದನ ನುಡಿ ಕೇಳಿ
ಕಂಬದಿಂದಲಿ ಬಂದ ಕರುಣಿ ನೀನು ಅಂದು ಧೃವಗೆ
ಆನಂದ ಪದವಿಯನಿತ್ತು
ಬಂದು ದ್ರೌಪದಿಯ ಮಾನವ ಕಾಯ್ದು ವಸುದೇವ ದೇವಕಿಯ
ಬಂಧನವ ಬಿಡಿಸಿದಿ ಆನಂದದಿಂದಲಿ ಅಜಮಿಳಗೊಲಿದು
ಮಡುವಿನೊಳಗಿರಲು ಗಜರಾಜ ಮಡದಿಗೆ ಹೇಳದೆ
ಗರುಡವಾಹನನಾಗಿ ಬಂದು ಮಕರಿಯನ್ನು ಕೊಂದ
ಸಿಂಧುಶಯನ ನಮ್ಮ ಕಾಳೀಮರ್ಧನಕೃಷ್ಣ ಆಪತ್-ಬಂಧೋ ೪
ಬಾಲಕತನದಲ್ಲಿ ಏನೇನು ಲೀಲೆಯ ಮಾಡಿದ್ಯೊ
ಗೋಪಾಲಕೃಷ್ಣ ಮೂರುತಿ ಎಂದು ವರ್ಣಿಸಲೋ ನಿನ್ನ ಕೀರುತಿ
ಗೋವುಗಳ ಕಾಯ್ದುಕೊಂಡು ಎಂದಿಗೆ ಬರುತಿ
ನಿನಗೇಕೋ ಇಂಥಾ ಮದವು ಪಾರ್ಥಸಾರಥಿ
ಕ್ಷೀರಸಾಗರದಲ್ಲಿ ಲಕ್ಷ್ಮೀ ಸಹಿತವಾಗಿ
ಆಲದೆಲೆಯ ಮೇಲೆ ಮಲಗಿರುತ್ತೀ
ಥರವಲ್ಲವೋ ನಿನಗಿಂಥ ಮದವು
ಬ್ರಹ್ಮಾದ್ಯಮರ ಒಂದಿತ ಮದವು
ಜಾರಚೋರ ನಮ್ಮ ಕಾಳೀಮರ್ಧನಕೃಷ್ಣ ಕರುಣಾಸಾಗರ ೫

ಇಲ್ಲಿ ಬಾ ಇಲ್ಲಿ ಬಾ ಮೆಲ್ಲ ಮೆಲ್ಲನೆ

ಇಲ್ಲಿ ಬಾ ಇಲ್ಲಿ ಬಾ ಮೆಲ್ಲ ಮೆಲ್ಲನೆ ಹೆಜ್ಜೆಯನಿಕ್ಕುತ
ಪುಲ್ಲನಾಭ ಗೋಪಾಲಕೃಷ್ಣ ಗೊಲ್ಲರೊಡಗೂಡಿ ಪ.
ಪಾಲು ಮೊಸರು ಬೆಣ್ಣೆ ಕೊಡುವೆ ಬಾ
ಗೋಲಿ ಗುಂಡು ಗಜಗನೀಡುವೆ ಬಾ
ಆಲಯ ಪೊಕ್ಕು ಧೂಳಿ ಮಾಡಲು ಬ್ಯಾಡ ೧
ಅಂಗಳದೊಳು ಬಾ ಬೆಳದಿಂಗ ತೋರುವೆನು
ರಂಗು ಮಾಣಿಕ್ಯದುಂಗರ ನಿಡುವೆನು ಮಂಗಳಾಂಗನೆ ೨
ಮೃದನಯ್ಯನೆ ಬಾ ಸುದತಿಯರೊಡಗೂಡಿ ಬಾ
ಸಡಗರದಿ ನೀ ಬಾ ಕಾಳೀಮರ್ಧನಕೃಷ್ಣ ಬಾ ೩

ಹಾಡಿನ ಹೆಸರು :ಇಲ್ಲಿ ಬಾ ಇಲ್ಲಿ ಬಾ ಮೆಲ್ಲ ಮೆಲ್ಲನೆ
ಹಾಡಿದವರ ಹೆಸರು :ಮೋಹನ್ ಜೆ.
ರಾಗ :ಮೋಹನ
ತಾಳ :ರೂಪಕ ತಾಳ
ಸಂಗೀತ ನಿರ್ದೇಶಕರು :ಫಲ್ಗುಣ ಹೆಚ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಈತನೇನೆ ಮುಖ್ಯ ಪ್ರಾಣದೇವರು
೧೪
ಈತನೇನೆ ಮುಖ್ಯ ಪ್ರಾಣದೇವರು ಪ.
ಖ್ಯಾತಿಯ ಪಡೆದ ರಾಮ ದೂತನು ಅ.ಪ.
ಅಂಜನೆಯ ಕುಮಾರ ರಾಕ್ಷಸರ ಸಂಹಾರ
ಸಂಜೀವನವ ತಂದ ಧೀರ ಸಾಗರವ ದಾಟಿದ ೧
ಕುಂತಿಯಾ ಕಂದ ಕೀಚಕನ ಕೊಂದ
ಸತಿಗೆ ಕುಸುಮವಾ ತಂದೆ ಲೋಕದೊಳಗೆ ಆನಂದ ೨
ಮದ್ಯಗೇಹನಲಿ ಜನಿಸಿ ಪ್ರಖ್ಯಾತನೆನಿಸಿ
ಕಾಳೀಮರ್ಧನಕೃಷ್ಣನಲಿ ಮನಸಿಟ್ಟ ಯತಿಯೆ ೩

ಹಾಡಿನ ಹೆಸರು :ಈತನೇನೆ ಮುಖ್ಯ ಪ್ರಾಣದೇವರು
ಹಾಡಿದವರ ಹೆಸರು :ಶಂಕರ ಶಾನುಭಾಗ್
ಸಂಗೀತ ನಿರ್ದೇಶಕರು :ರವೀಂದ್ರ ಹಂದಿಗನೂರ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಏನು ಪೇಳಲಿ ಗೋಪಿ ಇಂಥಾ ಬುದ್ಧಿಯ

ಏನು ಪೇಳಲಿ ಗೋಪಿ ಇಂಥಾ ಬುದ್ಧಿಯ
ನೋಡಮ್ಮಾ ಗೋಪೆಮ್ಮಾ ಪ.
ಗಡಿಗೆಯ ಒಡೆದಾನು
ಕೊಡಹಾಲು ಕುಡಿದಾನು
ಹುಡುಗರ ಬಡಿದು ಓಡಿ ಪೋದಾನು
ನಿಮ್ಮ ಹುಡುಗಾ ಸಿಕ್ಕಿದ ಮೇಲೆ
ಭಿಡಿಯಾವಿಲ್ಲದೆ ಗಿಡದಾ
ನೆರಳಿಗೆ ಕಟ್ಟುವೆನು ಬೆನ್ನಟ್ಟುವೆನು ೧
ನೆಲವಿನಲ್ಲಿದ್ದ ಪಾಲುಮೊಸರು
ಬೆಣ್ಣೆ ಕದ್ದಾನು ಬಾಲಕರೊದ್ದನು
ಮುದ್ದು ಹೆಣ್ಣು ಬಾಲೆಯರಿಗೆ
ಕಣ್ಣುಸನ್ನೆ ಮಾಡಲಿ ಬಂದಾನು
ಭಂಡು ಮಾಡಿದಾನು ದುಂಡ ಕುಚವ
ಕರದಿ ಪಿಡಿದಾ ಓಡಿ ಪೋದಾ ೨
ಹೆಡೆಯ ಸರ್ಪಾವ ಕರದೊಳು ಹಿಡಿದು
ಸಂಜೀಯ ಹೊತ್ತಿಲಿ ತಂದಾನು
ನಮ್ಮನ್ನಂಜಿಸಲು ಬಂದಾನು
ನಾಗಕನ್ನಿಕೆಯರಿಂದ ಸ್ತೋತ್ರ
ಮಾಡಿಸಿಕೊಂಡಾನು ಕಾಲಿಮರ್ಧನಕೃಷ್ಣಾನು ೩

ಹಾಡಿನ ಹೆಸರು :ಏನು ಪೇಳಲಿ ಗೋಪಿ ಇಂಥಾ ಬುದ್ಧಿಯ
ಹಾಡಿದವರ ಹೆಸರು :ಶ್ರೀಕೃಪಾ ಎಂ. ಎಸ್.
ರಾಗ :ಚಾರುಕೇಶಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಫಲ್ಗುಣ ಹೆಚ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ದೂರ ನೋಡದಿರೆಲೊ ರಂಗಯ್ಯಾ

ದೂರ ನೋಡದಿರೆಲೊ ರಂಗಯ್ಯಾ ಪ.
ದೂರ ನೋಡದಿರು ಭವ ಮಡುವಿನೊಳಗಿರುವೆನೋ
ಪಿಡಿಯೆನ್ನ ಕೈಯ ತಡಮಾಡ ಬ್ಯಾಡಯ್ಯ ಅ.ಪ.
ಹಿಂದೇಸು ಜನ್ಮಂಗಳು ಬಂದು ಪೋದಾವಯ್ಯ
ಮುಂದಿನಾಗತಿಯು ತೋರದಯ್ಯಾ
ತಂದೆ ತಾಯಿ ಸರ್ವ ಬಂಧು ಬಾಂದವಾ
ನೀನೆ ಸಿಂಧುಶಯನನೆ ಕಂದರ್ಪ ಪಿತನೆ೧
ಆರು ಕಾಯುವರಿಲ್ಲಾ ಮುರಾರಿ ನಿನಗೆ ಸಾರಿದೆನಲ್ಲಾ
ಸೇರಿಸೋ ಸಾಧು ಜನರ ಸಹವಾಸಾ
ಹರಿ ನಿನ್ನಲ್ಲಿ ಮನಸು ನಿಲ್ಲಿಸು
ಶ್ರೀಶಾ ಶ್ರೀನಿವಾಸಾ ೨
ಯೆಷ್ಟು ಹೇಳಲಿ ಯನ್ನ ಕಷ್ಟ ಕೇಳುವರಿಲ್ಲ
ಅರಿಷ್ಟ ಸಂಸಾರದೊಳೂ
ಕೆಟ್ಟು ಪೋಗುವೆನು ದೃಷ್ಟಿಯಿಂದಲಿ
ನೋಡೆನ್ನ ಕಾಳಿಮರ್ಧನಕೃಷ್ಣವಾ ೩

ಹಾಡಿನ ಹೆಸರು :ದೂರ ನೋಡದಿರೆಲೊ ರಂಗಯ್ಯಾ
ಹಾಡಿದವರ ಹೆಸರು :ಭಾರತಿ ಪ್ರತಾಪ್
ರಾಗ :ಖದ್ಯೋತ್‍ಕಾಂತಿ
ತಾಳ :ಮಿಶ್ರ ಛಾಪು
ಶೈಲಿ :ವಿಶ್ವಚಾಪು
ಸಂಗೀತ ನಿರ್ದೇಶಕರು :ಸುಂದರಮೂರ್ತಿ ಎ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಸಾಧನದ ಚಿಂತೆ ಎನಗ್ಯಾಕೊ
೨೭
ಸಾಧನದ ಚಿಂತೆ ಎನಗ್ಯಾಕೊ ಹರಿಯೇ ಪ.
ಮಾಧವಾ ನೀಯನ್ನಾ ಮನಸಿಲಿದ್ದು ಮಾಡಿಸುವಿ ಧೊರಿಯೇ ಅ.ಪ.
ಹಿಂದೇಸು ಜನ್ಮಗಳು ಬಂದು ಪೋದವು
ಒಂದು ತೃಣವಾದರೂ ನಾ ಗಳಿಸಲಿಲ್ಲ
ಮುಂದಿನ ಗತಿಯು ತಿಳಿಯದು
ಬಿಂದು ಮಾಧವಾ ಯಾದವಾ ೧
ನಿನ್ನ ಹೊರತು ಎನಗೆ ಮನ್ನಿಸುವರು ಯಾರೋ
ಬೇರೆ ಗತಿ ಕಾಣೆ ಪುಸಿಯಲ್ಲಿ ಯನ್ನಾಣೆ
ಪಾದಸ್ಮರಣೆ ಮಾಡಿಸುವ ಬಾರಾ
ಉದಾರ ಭಕ್ತರಾಧಾರಾ ೨
ಯೆಷ್ಟು ಪೊಗಳಿದರು ನಿನ್ನ ಕರುಣಕೆ
ಇನ್ನು ಕೇಡು ಉಂಟೇ ಸ್ವಾಮಿ
ದಯಾ ದೃಷ್ಟಿಯಿಂದಲಿ ನೋಡು ಪ್ರೇಮಿ
ದುಷ್ಟ ಅಘರಾಶಿ ದೂರ ಮಾಡೋ
ಕಣ್ತೆರೆದು ನೋಡೋ ಕಾಳಿಮರ್ಧನ
ಕೃಷ್ಣನೆ ಮಧ್ವಮುನಿ ಪ್ರಿಯನೆ ೩

ಹಾಡಿನ ಹೆಸರು :ಸಾಧನದ ಚಿಂತೆ ಎನಗ್ಯಾಕೊ
ಹಾಡಿದವರ ಹೆಸರು :ನಿತಿನ್ ರಾಜಾರಾಮ ಶಾಸ್ತ್ರಿ

ಸಂಗೀತ ನಿರ್ದೇಶಕರು :ರವೀಂದ್ರ ಹಂದಿಗನೂರು
ಸ್ಟುಡಿಯೋ :ಅರವಿಂದ್ ಸ್ಟುಡಿಯೋ, ಬೆಂಗಳೂರು

ನಿರ್ಗಮನ