Categories
ರಚನೆಗಳು

ಕವಿ ಪರಮದೇವದಾಸರು

೧೪
ಹರತನ್ನ ಕರದಲಿ ಪ್ರಾಣಲಿಂಗವನು
ಧರಿಸಿಪ್ಪನೆಂಬುದ ಕೇಳಿ ರಾವಣನು
ತರುವೆನೆನುತ ಪೋಗಿ ಭಜಿಸೆ ಶಂಕರನ
ಕರುಣಿಸಲಾತನ ಮನದಭೀಷ್ಟವನು
ದುರುಳ ಖಳತಾ ಕೊಂಡು ಲಿಂಗವ
ಪುರಕೆ ಗಮಿಸುವ ವ್ಯಾಳ್ಯದಲಿ ವಿಧಿ
ಸುರಪ ಮುಖ್ಯ ಅಮರರು ನಿಮ್ಮಯ
ಸ್ಮರಿಸೆ ಮೆಚ್ಚಿದ ಪಾರ ಮಹಿಮನೆ
ಮೊರೆ ಹೊಕ್ಕೆ ನಿಮ್ಮ ಪಾದವನು ವಿಘ್ನೇಶ ೧
ಕರುಣಿಸೋ ಎನ್ನ ವಾಂಛಿತವ ಸರ್ವೇಶ
ಪರಮ ಪಾವನ ವೇಷ ಮುನಿ ಜನರ ಪೋಷಾ
ನಿರುತ ಭಕ್ತ ವಿಲಾಸ ನಿರೂಪ ಮಹೇಶ
ಹರಿ ಮುಂತಾದವರೆಲ್ಲ ನುತಿ ಸುತ್ತಲಿಂದು
ಕರಿವಕ್ತ್ರ ನೀ ಕೇಳು ಪರಮೇಶನಂದು
ಕರದ ಲಿಂಗವ ನಿತ್ತನಾ ದಶಶಿರಗೆ
ವರ ದೈವ ದ್ರೋಹಿ ರಕ್ಕಸನಾತನಿಂಗೆ
ವರ ಮಹಾಲಿಂಗವದು ಸೇರಲು
ಹರಣಗೊಂಬುದು ನಮ್ಮನಿದನು
ತಿರುಗಿಡುವಯತ್ನವನು ಪೇಳಿಯೋ
ಪೊರೆಯ ಬೇಕೆನಲ ಭಯನಿತ್ತ ನಾ ಮೊರೆಹೊಕ್ಕೆ ೨
ಇವಗೆ ಚಕ್ರವನಾಗಹರಿ ಪಿಡಿದಿರಲು
ಧನುಜೇಶ ಸಂಧ್ಯಾವಂದನೆಗೆ ಯೋಚಿಸಲು
ಘನ ಮಹಿಮನೆ ನೀನು ವಟುರೂಪಿನಿಂದ
ಮಣಗುತ್ತಿರಲು ಕಂಡು ಖಳ ಕರದಿಂದ
ಅಣುಗನಿಮ್ಮಯ ಮಹಿಮೆಯರಿಯದೆ ಪೇಳೆ
ವಿನಯದಿಂ ಲಿಂಗವನು ಖಳಬರುವ
ತನಕ ಕರದಲಿ ಪಿಡಿದಂತಹ ಪರಮ ಮಹಿಮನೆ ೩

೭೨
ಹರನೆ ಗಂಗಾಧರನೆ ಶರಣ ಶಶಿಶೇಖರನೆ ಶರಣು
ಮೃತ್ಯುಂಜಯನೇ
ಶರಣು ಶಂಕರನೆ ಶರಣು ಶರಣು ಪ
ವಾಸವೇ ಕೈಲಾಸ ವಸನವೇ ದಿಕ್ಕುಗಳು
ಪೂಸಿಹುದು ಸರ್ವಾಂಗವೆಲ್ಲ ಭಸ್ಮ
ನೇಸರಿನ ತೇಜ ಶಶಿಜೂಟ ಗಂಗಾಧರನ
ಪಾಸಟಿಯು ನಿನಗೊಬ್ಬರಿಲ್ಲ ಗೌರೀಶ ೧
ಪಂಚ ವಿಂಶತಿ ತತ್ವದೂರ ವಿಶ್ವಾಧಾರ
ಪಂಚ ಶರಹರ ವಿರಂಚ್ಯಾದಿ ಸಂಸ್ತುತಾ
ಪಂಚ ವದನನೆ ಪ್ರಣವ ರೂಪ ನಿರ್ಮಲ ನಿತ್ಯ ಪ್ರ
ಪಂಚ ಮಯನಾದ ಗಿರಿಜೇಶ ವಿಶ್ವೇಶ ೨
ಪರಮ ಪುರುಷ ಪರೇಶ ಪರಮ ಗುಣಗಣ ನಿಲಯ
ಶರಣ ಜನ ಸುರಧೇನು ವಿಶ್ವವಂದ್ಯಾ
ಸರ ಸಿರುಹ ಭವ ಪೂಜ್ಯಸೂರ್ಯ ಕೋಟಿಪ್ರಕಾಶ
ಉರಗ ಭೂಷಣ ವೃಷಭಾರೂಢ ಗೌರೀಶ ೩
ಭೂತಪತಿ ಭುವನೇಶ ಪ್ರೇತ ನಿಲಯ ನಿವಾಸ
ನೂತನದ ಗಜಚರ್ಮ ನಿನಗೆ ವಿಖ್ಯಾತ
ಗೀತ ನೃತ್ಯ ವಿಲಾಸ ಮಾತುಳಾಧ್ವರನಾಶ
ಭಾತಿ ಕಂಠದಿ ವಿಷವು ಗೌರೀಶ ೪
ಧರೆಯೊಳಧಿಕತರ ವರದ ಮೂಲನಿವಾಸ
ಕರಿವದನ ನಂದೀಶ ಶಕ್ತಿ ಉಮೆ ಸಹಿತ
ಭರದಿಂದ ನೆಲಸಿ ಸೊಪ್ಪಿನ ಸುಬ್ಬಗೆವರವಿತ್ತೆ ದುರಿತವನು ಪರಿಹರಿಸೋ ಶಂಭುಲಿಂಗೇಶ ೫

೭೬
ಹರಿ ಭಕುತರಿಗೊಂದು ಶರಣಾರ್ಥಿ ಸಾಂಬ ಶಿವ
ಶರಣರಿಗೊಂದು ಶರಣಾರ್ಥಿ ಪ
ನರಲೋಕದೊಳಗೆ ಸಂಚಾರವ ಮಾಡುವ
ಹರಿದಾಸರಿಗೊಂದು ಶರಣಾರ್ಥಿ
ಪರಮಾತ್ಮ ಪರಿಪೂರ್ಣ ಎಲ್ಲ ಜೀವದೊಳೆಂದು
ಅರಿತಂಥವನಿಗೊಂದು ಶರಣಾರ್ಥಿ
ಮರೆಹೊಕ್ಕ ದೀನರನು ರಕ್ಷಿಪ ಪುಣ್ಯ ಪುರು
ಷರಿಗೊಂದು ಶರಣಾರ್ಥಿ
ಪುರುಷ ಪ್ರಯತ್ನದಿಂದುದ್ಯೋಗವನು ಮಾಳ್ಪ
ಸರಿವಂಥವರಿಗೊಂದು ಶರಣಾರ್ಥಿ ೧
ಧಾರಣಿಯೊಳು ಪೆಸರೊಡೆದು ರಂಜಿಸುವಂಥ
ಕಾರುಣಿಕರಿಗೊಂದು ಶರಣಾರ್ಥಿ
ಹೆದ್ದಾರಿ ಮಾರ್ಗದೊಳು ಸಾಲ್ಮರಗಳ ನೆಟ್ಟು ನೀರೆರೆ
ದವರಿಗೊಂದು ಶರಣಾರ್ಥಿ
ಮೂರು ಕಾಲದಿ ನಿತ್ಯ ಕರ್ಮವ ರಚಿಸುವ
ಚಾರು ಶೀಲರಿಗೊಂದು ಶರಣಾರ್ಥಿ
ಪಾರ ಮಾರ್ಥಿಕವನ್ನು ತಿಳಿದು ಸಂಸಾರ ನಿ
ಸ್ಸಾರ ಮಾಡಿದಗೊಂದು ಶರಣಾರ್ಥಿ ೨
ಕೆರೆಭಾವಿ ದೇವಾಲಯಗಳ ಕಟ್ಟಿಸಿ ದೇವರುತ್ಸವವನು ಬರಿಸುವಗೆ
ಹರಿದಿನತ್ರಯವ ಮನ್ನಿಸಿ ದ್ವಾದಶಿಯನು
ದ್ಧರಿಸಿ ಭುಂಜಿಪಗೊಂದು ಶರಣಾರ್ಥಿ
ಪರದಾರ ಪರದ್ರವ್ಯ ಪರದ್ರೋಹವಿಲ್ಲದ ಮಹಾ
ಪುರುಷರಿಗೊಂದು ಶರಣಾರ್ಥಿ
ಹರಿಹರರೊಳಗೆ ಭೇದವ ಮಾಡಿ ನಡೆಯದ
ದುರಿತ ದೂರರಿಗೊಂದು ಶರಣಾರ್ಥಿ ೩
ಸತ್ತು ಹುಟ್ಟುವ ಭವಶರಧಿಯ ಗೆಲುವಂಥ
ಉತ್ತಮರಿಗೊಂದು ಶರಣಾರ್ಥಿ
ನಿತ್ಯ ಸಾಲಿಗ್ರಾಮಂಗಳನು ಪೂಜಿಸಿ ಹರಿ
ತೀರ್ಥಗೊಂಬನಿಗೊಂದು ಶರಣಾರ್ಥಿ
ಕೃತ್ತಿ ವಾಸನ ಆಗಮೋಕ್ತದಿ ಪೂಜಿಪ
ಭಕ್ತಿವಂತರಿಗೊಂದು ಶರಣಾರ್ಥಿ
ತತ್ವ ವಿಚಾರ ವೇದಾಂತದ ಅರ್ಥವ ಯಾ
ವತ್ತರಿದವಗೊಂದು ಶರಣಾರ್ಥಿ ೪
ಅರವಟ್ಟಿಗೆಯನು ಚೈತ್ರದೊಳಿಕ್ಕಿ ಜನರಿಗೆ
ನೀರೆರಸಿದವರಿಗೊಂದು ಶರಣಾರ್ಥಿ
ಸಿರಿ ತುಳಸಿಯನ್ನು ನೇಮದಲಿ ಪೂಜಿಸುವಂಥ
ಹರಿ ಶರಣರಿಗೊಂದು ಶರಣಾರ್ಥಿ
ತರಣಿಯೆ ತ್ರಿಗುಣಾತ್ಮಕನೆಂದು ಹೃದಯದೊಳರಿ
ದೆರಗುವಗೊಂದು ಶರಣಾರ್ಥಿ
ಮರುಸುತನ ಕೋಣೆ ವಾಸ ಲಕ್ಷ್ಮೀಶನ
ಚರಣ ಪಂಕಜಕೊಂದು ಶರಣಾರ್ಥಿ ೫

೭೩
ಹರಿ ಹರಿ ನರಹರಿ ಎನ್ನಿಜನರು
ಹರಿ ಹರಿ ಎಂದು ಕೊಂಡಾಡಿ ಸಜ್ಜನರು ಪ
ನಂದನಂದನನಾ ಮಂದರಧರನಾ
ಇಂದ್ರಾದಿ ಸನಕ ಸನಂದನ ವಂದಿತನಾ ೧
ತಾಳಭಂಜನನಾ ವ್ಯಾಳಶಯನನÀ
ಕಾಳಿಯ ಪೆಡೆಯ ಮೇಳ್ ಕುಣಿದ ಗೋವಳನ ೨
ಗರುಡವಾಹನನ ಶರಧಿ ಶಯನನ
ವರ ಶಂಖಚಕ್ರಗದಾಬ್ಜ ಶ್ರೀಧರನ ೩
ಮಾವ ಮರ್ದನನ ರಾವಣಾಂತಕನ
ಗೋವರ್ಧನವನೆತ್ತಿ ಗೋವಕಾಯ್ದವನ ೪
ಮಕರ ಕುಂಡಲನ ಮುಕುತಿದಾಯಕನ
ಬಕನ ವೈರಿಯ ಕೋಣೆ ಲಕ್ಷ್ಮೀ ರಮಣನ ೫

೧೩೯
ಹರಿದಾಡುವಂಥ ಮನವ ನಿಲಿಸುವುದು ಬಲುಕಷ್ಟ ಪ
ಉರಿಯನಪ್ಪಲು ಬಹುದು
ಗರಳವನು ಕುಡಿ ಬಹುದು
ಕರಿಯ ದಾಡೆಗೆ ಸಿಕ್ಕು ಮರಳಿ ಜೀವಿಸ ಬಹುದು ೧
ಗಗನ ಕೇಣಿಯ ಸಾರ್ಚಿ ಮುಗಿಲ ಮುಟ್ಟಲು ಬಹುದು
ಅಗಜೆಯರಸನ ಉರಿಯ ನಯನ ಕಾನಲು ಬಹುದು
ಹೊಗರು ಧೂಮವ ಹಿಡಿದು ಹಸುಬೆ ತುಂಬಲು ಬಹುದು ೨
ಮಳಲ ಗಾಣಕೆಯಿಕ್ಕಿ ತೈಲಗಾಣಲು ಬಹುದು
ಹುಲಿಯ ಹಿಡಿದು ಕಟ್ಟಿ ಹಾಲ ಕರೆಯಲು ಬಹುದು
ಬಿಳಿಗಲ್ಲ ಬೆಣ್ಣೆವೋಲ್ ಜಗಿದು ನುಂಗಲು ಬಹುದು ೩
ಅಸಿಯ ಧಾರೆಯ ಮೇಲೆ ನಾಟ್ಯ ವಾಡಲು ಬಹುದು
ಬಸಿದ ಶೂಲಕೆ ಮೈಯ ಚಾಚಿ ಜೀವಿಸ ಬಹುದು
ವಿಷದ ಉರುಗನ ಕೂಡೆ ಸರಸವಾಡಲು ಬಹುದು ೪
ಮರುತ ಸುತನ ಕೋಣೆ ವಾಸ ಲಕ್ಷ್ಮೀಶನ
ಸ್ಮರಣೆ ಮಾತ್ರದಿ ಸಕಲ ದುರಿತ ನಾಶನವಹುದು
ಮರಳಿ ಜನ್ಮಕೆ ಬಾರದಂಥ ಪದವಿಯಹುದು೫

೭೪
ಹರಿಯೆ ನೀನೆ ರಕ್ಷಿಸಲು ಬೇಕು ಎನಗೆಗತಿ
ಬೇರೊಬ್ಬರನು ಕಾಣೆನೋ ಪ
ನೆತ್ತರೆಲು ಮಾಂಸ ಮಲಮೂತ್ರ ಜನನಿಯ
ಗರ್ಭದೊತ್ತಿನಲಿ ಇರಿಸಿದವರಾರೋ
ಮತ್ತಲ್ಲಿ ಕಾಯುವನು ನಿರ್ಮಿಸುತ
ಕೈಕಾಲಸುತ್ತಿನರದಲಿ ಬಿಗಿದವರಾರೋ
ಹತ್ತಿರೆ ಕುಳಿತು ಕಿವಿ ಮೂಗು ಬಾಯ್ಗಳ ಬೆರಳ
ನೇತ್ರವನು ರಚಿಸಿದವರಾರೋ
ಹುತ್ತಿನಹಿಯಂತಿದ್ದು ಜೀವ ಕಳೆಯನು ತುಂಬಿ
ತುತ್ತುಗಳ ನಡಸಿದವರಾರೋ ೧
ಆವಾವ ಠಾವಿನಲಿ ಆವಾವರೋಮಗಳ
ನೇಮದಲಿ ಕಲ್ಪಿಸಿದವರಾರೋ
ಈ ವಿಧದಿ ಕೇಶವನು ರಚಿಸಿ ದಂತಕೆ
ಪಲ್ಲವೋರಣದಿ ಪವಣಿಸಿದವರಾರೋ
ಭಾವಿಸಲು ಉಗುರು ಮೊದಲಾಗಿ
ನಿರ್ಮಿಸಿ ನವದ್ವಾರವನು ತಿದ್ದಿದವರಾರೋ
ಪೂರ್ವದಲಿ ತಾನು ಮಾಡಿದ ಪುಣ್ಯ
ಪಾಪಗಳ ಕಾವಲನೆ ಮಾಡಿದವರಾರೋ ೨
ಅಲ್ಲಿ ನವಮಾಸ ತುಂಬಿದ ಬಳಿಕ ಕ್ಷಣ
ಮಾತ್ರದಲಿ ನೀಲ ಕುರುಳಿಸಿದವರಾರೋ
ಮೆಲ್ಲ ಮೆಲ್ಲಗೆ ನಡೆಸಿ ಶಿಶುಗಳಲಿ ಕೈಕಾಲು
ಪಲ್ಲವಿಸಿ ಪಸರಿಸಿದರಾರೋ
ಎಲ್ಲವನು ಸಂತೋಷದಿಂದ ಜೋಗುಳಪಾಡಿ
ಅಲ್ಲಿ ತೊಟ್ಟಿಲೊಳಿಕ್ಕಿದವರಾರೋ
ಎಲ್ಲ ದೈವಾಧೀನವೆಂದು ನೋಡದೆ ಜನವಿದೆಲ್ಲ
ಮೈಮರೆತಿಹರು ಮೂಢಜನರು ೩
ಎಂಬತ್ತು ನಾಲ್ಕು ಜೀವರಾಶಿಗಳ ಬೊಂಬೆಯನು
ಮಾಡಿ ಸೂತ್ರದಿ ಕುಣಿಪರಾರೋ
ತುಂಬಿ ತುಳುಕಾಡಿ ತೃಣ ಅಣು ಮಹತ್ತಿನೊಳು
ಪ್ರತಿಬಿಂಬಿಸುತ ಪರಿಪೂರ್ಣನೆನಿಸಲಾರೋ
ಸಂಭ್ರಮದಿ ಸೃಷ್ಟಿ ಸ್ಥಿತಿಲಯಕೆ ನೀ ಚೈತನ್ಯ
ನೆಂಬುದಲ್ಲದೆ ಮತ್ತದಾರೋ
ನಂಬಿರ್ದ ಭಕ್ತರ ಕುಟುಂಬಿ ಎಂಬುದಕಿನ್ನು
ಅಂಬರೀಶನೆ ಸಾಕ್ಷಿಯಲ್ಲದಾರೋ ೪
ಈ ಪರಿಯಲಿ ಲೋಕ ಪಾಲಕ ನೀನಾಗಲೆಲ್ಲಾ
ಪತ್ತು ಬಿಡಸದೇನೋ
ನೀ ಪರೀಕ್ಷಿಸಿದ ಮಾತ್ರದಿಂದೆನ್ನ ಪಾಪಗಳು ಪೋಗವೇನೋ
ಪಾಪ ಪೂರ್ವಾರ್ಜಿತವೆ ಆಗಿರಲಿ ನಿನ್ನ ನಿಜರೂಪವನು
ಚಿಂತಿಸಲು ಜಾರದೇನೋ
ನೀ ಪರಂಜ್ಯೋತಿ ಸ್ವರೂಪ ಭೀಮನಕೋಣೆ
ಶ್ರೀ ಲಕ್ಷ್ಮೀ ರಮಣಗರಿದೇನೋ ೫

೭೫
ಹರಿಯೇ ವೀರ ನಾರಾಯಣ ನಾರಾಯಣ
ಎಂಬ ನಾಮವನು ಉಚ್ಚರಿಸೆ
ಸಾರುವರು ಭಕುತರಾದವರು ವೈಕುಂಠವನು
ಆರಾದರೇನು ಮರೆಯದೆ ಹರಿಯಧ್ಯಾನಿಸಲು
ಸಿರಿಯರಸ ಕಾಯ್ದು ಕೊಂಬ ಪ
ಅರಸಕೇಳೈ ಬಳೀಕ ಪಾಂಡ್ಯದೇಶದೊಳೋರ್ವ
ಧರಣಿ ಪತಿ ಪೆಸರು ಇಂದ್ರ ದ್ಯುಮ್ನಧರಾತ್ಮ
ಹರಿ ಪರಾಯಣನೆನಿಸಿ ನಿರುತಸತ್ಯ ಸುಶೀಲ
ಪರಮಾತ್ಮನೊಳಗಾಡುತಾ ಧರಣಿ ಧನಕನಕ
ಕರಿತುರಗದಾಸೇಯ ತೊರೆದು
ವಿರತನಾಗಿಯೆ ಪುರವ ಪೊರಟು ಸುಸ್ಥಿರನಾಗಿ
ಚರಿಸಿ ತಪವನು ಮಾಡುತಿರಲಿತ್ತ
ಬರವಾಯ್ತ ಗಸ್ತ ಶಿಷ್ಯವೆರಸಿ ೧
ಸದಮಳಾತ್ಮರನ ಚಿಂತೆಯಿಂದ ಭೂಪೇಳದಿರೆ
ಮದಮುಖನ ತಪವ ನೋಡುವೆನೆನುತ ಮುನಿ ಮುನಿದು
ತದುಬಿಗರ್ಜಿಸಿ ಶಾಪವೀಯಗಜವಾಗೆನುತ
ಸದು ಹೃದಯನೆದ್ದು ಬಳಿಕ ಪಾದಕ್ಕೆ ವಂದಿಸಿ ಶಾಪ
ವೆಂದು ಬಿಗುಗಡೆಯೆನಲು ಸಾದರದಿಂ ಮುನಿಪನೆಲ
ತೆಂದನರಸನ ಕೂಡೆ ಅದರುದಕದಿ ನೆಗಳು ಪಿಡಿಯೆಗತಿನಿನ
ಗೆಂದು ಹೋದ ಮುನಿಪತಿ ಇತ್ತಲು ೨
ಇಂತು ಭೂಮೀಶ ಶಾಪವ ತಾಳ್ದು ಬಿಸುಸುಯ್ದು
ಕಂತು ಜನಕನೆ ಬಲ್ಲನೆಂತು ಗೆಲಿದಪೆನ್‍ನುತ
ದಂತಿ ಮುಖವಾಗಿ ಭೂಕಾಂತೆಯೊಳು ಜನಿಸಿ
ಕಾಂತಾರದೊಳ್ ಚರಿಸುತಿರ್ಧಗೊಂತೆನಿಸಿವರ
ತ್ರಿಕೂಟಾದ್ರಿ ಮಧ್ಯದೊಳೆಸೆವನಂತ ಋಷಿನಿವಹ
ಸುರ ಸಂತತಿಗಳಲ್ಲು ಮಾ
ಕಾಂತನಿಹ ಸಂತತು ನೆಲೆಸಿ ಲಕ್ಷ್ಮೀಕಾಂತ ಮುಂತಿರಲು
ಇಂತೆಸೆದನು ೩
ಕ್ಷೀರ ಸಾಗರ ತಡಿಯ ಗಿರಿಗಳೊಪ್ಪಿರಲಿಂತು
ತರುನಿಕರ ಚೂತಾಮಲಕ
ನೇರಿಲು ಬಕುಳ ಸುರಗಿ ಸಂಪಿಗೆ ಜಾಜಿ
ಸುರಹೊನ್ನೆ ಪುನ್ನಾಗ ಮೆರೆವಬಿಲ್ವಶ್ವತ್ಥಮಾ
ಕಿರುಗಿಡುವಿನೊಳಗೆ ಚರಿಸುವ ಕರಡಿ ಸೀಳ್ನಾಯಿ
ಮೊರೆವ ಪುಲಿಸಿಂಹ ಭೇರುಂಡ ಮುಂತಿರುತಿರಲು
ಗರುಡ ಗಂಧರ್ವ ಚಾರಣರು ಸುರಕಿನ್ನರರು
ಇರುತಿಹರು ಕಿಂಪುರುಷರು ೪
ತ್ರಿಜಗದೊಳಗೆಣೆ ಗಾಣೆ ಭುಜಗಶಯನನೆ ಬಲ್ಲ
ಗಜರಾಜ ಬೆಳೆದು ಕುಜನರ ಮಾರ್ಗವಂ ಪಿಡಿದು
ಸುಜನರ ಬಾಧಿಸುತ ಮೂಜನವ ಗೋಳಿಡಿಸಿ
ಅಜಸೃಷ್ಟಿ ಬಿರಿಯೆ ಒದರಿ
ನಿಜಪುತ್ರ ಮಿತ್ರಸ್ತ್ರೀಜನ ಸಹಿತಲೊಡಗೊಂಡು
ಬುಜ್ಜಸತ್ವದಿಂದ ವನವನು ಮುರಿದು ಸಂಹರಿಸಿ
ಗಜ ಬಜಿಸಿ ಅಬುಜ ಮಿತ್ರನ ಜಳಕೆ ತೃಷೆಯಿಂದ
ಭೂಜಲವ ನರಸಿ ಬಂದ ೫
ಗಂಡು ಹೆಣ್ಣಾನೆಗಳ ತಂಡ ಸಹಿತಲೆ ಬಂದು
ಕಂಡು ಜಲವನು ಈಂಟಿಗುಂಡಿ ಮಡುವನುಸಾರಿ
ಸೊಂಡಿಲಿಂ ಜಲವ ಭೂಮಂಡಲಕೆ ಬೀಸಾದಿ
ಚಂಡಿಗೊಳಿಸುತ ಧರಣಿಯ
ಅಂಡೆಲೆವ ಮದದ ಸ್ತ್ರೀಯರ ಕೂಡಿ
ಖಂಡಿಸುತೆ ಪುಂಡಗಜವಿರಲು ಶಾಪದ
ನೆಗಳು ಖತಿಗೊಂಡು
ಭಂಡು ಮಾಡಲು ಕಾಲಪಿಡಿದಾಕ್ಷಣಕೆ ಗುಂಡಿ
ಮಡುವಿನೊಳಗೆಳೆಯಲು ೬
ಮತ್ತೆ ಅತ್ತೆಳೆಯೆ ನೆಗಳು ಬಳಿಕಿತ್ತೆಳೆವುದುಗಜವು
ಸುತ್ತಲಿಹ ಕರಿಘಟೆಗಳೇನಿದದ್ಬುತವೆಂದು
ಮತ್ತೆ ಸತ್ವದಲೆಳೆಯೆ ತೆತ್ತಿಗನು ಬಾರದಿರೆ
ಚಿತ್ತದೊಳ್ ನೊಂದು ನಿಂದು ಅತ್ತಹಾಯ್ದವು
ತಮ್ಮಗುತ್ತಿಗುಳಿದಿಹ ಹಸ್ತಿ
ಇತ್ತ ಗಜರಾಜ ಕಾದುತಿರಲು ಹಲಕಾಲ ಬತ್ತಿ ಅಸುಗುಂದಿ
ಚಿತ್ತದಿ ತಿಳಿದು ಧ್ಯಾನಿಸುತ ಮತ್ತಾರು ಕಾಯ್ವರೆನುತ ೭
ಇಕ್ಕರ್ತರಿಂತು ಕಾದುತ್ತಿರಲು ಕರಿವರನ
ಸೊಕ್ಕು ಮುರಿದುದು ತಮವುಚೊಕ್ಕಿ ಮುಖವನು ನಭಕೆ
ಇಕ್ಕಿ ಕಿಕ್ಕಿರಿದು ಚಿರ್ರನೆ ಚೀರಿ ಬಸವಳಿಯೆ
ಸೊಕ್ಕಿದುದುನೆಗಳು ಬಳಿಕ
ಮುಕ್ಕುರು ದಿವ್ಯಸಾಗರ ವರುಷ ಪರಿಯಂತ
ಸಿಕ್ಕಿ ನಗಳೊಳು ಕಾದಿ ಕುಕ್ಕುರಿಸಿ ನೀರಿನೊಳು ದಿಕ್ಕನೊಡುತ್ತ
ಕಕ್ಕನೆ ಕರಗಿ ಜÁ್ಞನದಲಿ ಭಕ್ತವತ್ಸಲನ ನೆನೆದ ೮
ರಕ್ಷಿಸೆನ್ನನು ಬಿಡದೆ ಪಕ್ಷಿವಾಹನಗಮನ
ಯಕ್ಷಕಿನ್ನರ ಸೇವ್ಯ ರಾಕ್ಷಸಾಂತಕ ಜಗವ
ಕುಕ್ಷಿಯೊಳಗಿಂಬಿಟ್ಟು
ರಕ್ಷಿಸುವೆ ಭಜಕರನು ಮೋಕ್ಷದಾಯಕನೆ ಕಾಯೋ
ಲಕ್ಷ್ಮೀಶ ಕೇಶವ ಉಪೇಕ್ಷಿಸದೆ ನೀ ಬಂದು
ಭಕ್ಷಿಸುವ ನೆಗಳನೀ ಶಿಕ್ಷಿಸಲು ಬೇಕು
ಪಕ್ಷದನುಜಾಧ್ಯಕ್ಷ ಈಕ್ಷಿಸೆನ್ನಯ ಮೇಲೆ
ಅಕ್ಷಿಯನು ಇಟ್ಟುಬಂದು ೯
ಮುರಹರ ಮುಕುಂದ ನಾರಾಯಣಾಚ್ಯುತ
ಸರಸಿರುಹದಳನಯನ
ಪರಮ ಪಾವನ ಮೂರ್ತಿ ಕರುಣಿಸೆನ್ನನು
ನೆಗಳ ಬಂಧನವ
ಪರಿ ಹರಿಸೋ ಕ್ಷೀರಾಬ್ಧಿ ಶಯನನೆಂದು
ಪರಿ ಪರಿಯ ಸ್ತುತಿಸಲಾಕ್ಷಣ ಮಹಿಮ ಧ್ವನಿಗೇಳ್ದು
ಸಿರಿ ಮುಡಿಯ ನೇವರಿಸಿ ಗರುಡವಾಹನ
ನಾಗಿಕರದಿ ಚಕ್ರವ ಕೊಂಡು
ಭರದಿ ಭಕುತನ ಕಂಡು ಕರಿರಾಜಗಭಯವಿತ್ತ ೧೦
ಎಳೆನಗೆಯ ಸಿರಿ ಮೊಗದ ನಳಿನಾಯತೇಕ್ಷಣದ
ತೊಳಪ ಕದಪಿನ ಮಿಸುಪ ನವರತ್ನ ಕುಂಡಲದ
ಲಲಿತ ಕಂದರದ ಕೌಸ್ತುಭ ಹಾರದುರಸ್ಥಳದ
ಸುಳಿನಾಭಿ ಜಗಜಗಿಸುವ ಹೊಳೆ
ಹೊಳೆವ ಮಣಿಮಕುಟ
ತಿಲಕ ನಿಡುಹುಬ್ಬುಗಳ ಮುಕ್ತಾಫಲವ
ನೇಳಿವದಂತಪಂಕ್ತಿಯ
ಲಲಿತ ಚುಬುರದ ಚಾರು ಪೀತಾಂಬರನ ಆಲಿ
ಕೋರವಿಸೆ ಕಂಡ ೧೧
ಮೇಲೆ ಕೈವಾರಿಸುವ ಸುರರ ದುಂದುಭಿ ಮೊಳಗೆ
ಹೊಳೆಯ ಎತ್ತಿದ ತೋರ ಸತ್ತಿಗೆಯ ತೋರಣದ
ಸಾಲುಗಳ ಸಂದಣಿಯ ಸಂಭ್ರಮದ ಜಾಲವನು ಕಂಡುಗಜವು
ಪಾಲಿಸೈ ಗೋವಿಂದನಾಥ ಬಂಧು ತ್ರಾಹಿ
ಪಾಲಿಸೈ ಸುರವಂದ್ಯ ತ್ರಾಹಿ ಪಾಲಿಸೈ ಭಕ್ತರ
ಭವಾಬ್ಧಿಸಾರ ತ್ರಾಹಿ
ಪಾಲಿಸೈ ತ್ರಾಹಿ ಎನುತ ೧೨
ಗಡಗಡನೆ ನಡುಗತಿರೆ ಕಡಲಶಯನನು ಕಂಡು
ಕಡುಕೃಪೆಯೊಳೈ ತಂದು ಮಡುವ ಧುಮುಕಿಯ ಗಜವ
ಪಿಡಿದಾಗ ವಾಮಕರದಿಂದಳೆಯನೆಗಳು ಸಹತಡಿಗೆ ಬರಲಾಗಕಂಡು
ಘುಡು ಘುಡಿಸಿ ಕೋಪದಿಂ ತುಡುಕಿ ಚಕ್ರವತೆಗೆದು
ಪಿಡಿದು ನೆಗಳನು ಕಡಿಯೆ ಒಡನಾಗ ನಿಜರೂಪ
ವಿಡಿದು ಗಂಧರ್ವಪತಿ ಪೊಡಮಟ್ಟು ಶಾಪ
ಬಿಡುಗಡೆಯಾಯಿತೆಂದು ನಡೆದು ೧೩
ಹರಿ ಬಳಿಕ ಕರಿವರಗೆ ವಿಶ್ವರೂಪವತೋರಿ
ತರಣಿಕೋಟಿ ಸಹಸ್ರತೇಜದಿಲ ರಂಜಿಸಿಯೆ
ಕರಿವರನ ಮೈದಡಹಲಾಕ್ಷಣಕೆ ಕರಿಚರ್ಮ
ಪರಿದುಹರಿವೋಲೆಸೆದನು
ಕರವಿಡಿದು ಭಕುತನನು ಬೋಳೈಸಿ ನೀರಿನೋಳು
ಬಳಲಿದೆಯಾ ಎಂದು
ಕರುಣಾಕಟಾಕ್ಷದಿಂ ಕರಿವರನ ಸಹಿತ
ಗರುಡನ ನಡರಿ ಗಮಿಸಿದನು ಹರಿತನ್ನ
ವಾಸ ದೆಡೆಗೆ ೧೪
ಅವನುದಯ ಕಾಲದೊಳೆದ್ದು ಪೇಳುವನು
ಆವರಿದ ಭಕ್ತಿ ಭಾವದಲಿದನು ಕೇಳುವರು
ಅವರಿದನನು ಭವವ ಸ್ಮರಿಪರವರುಗಳು
ಪಾವನರು ಪುಣ್ಯಾತ್ಮರು
ಕೋವಿದರು ಧರಗೆ ಗಜರಾಜೇಂದ್ರ ಮೋಕ್ಷವನು
ಸಾವದಾನ ದಲಿದನು ನೇಮದಲಿ ಕೇಳ್ವವರ
ಮಾವಧೂರಮಣ ಚಿಪ್ಪಳಿಯ ಗೋಪೀನಾಥ
ನೆನೆದವರ ಕಾಯ್ವನೆಂದು ೧೫

೧೪೦
ಹಿಂದಿನ ದಿನದಂತಿದಲ್ಲಣ್ಣ ಈಗ ಬಂದಿಹ ದಿನವತಿ ಹೊಸದಣ್ಣ ಪ
ಹೆಂಡಿರು ಮಕ್ಕಳ ಕರೆದರೆ ಒಳಗೆ
ತಂಡುಲವಿಲ್ಲ ಗಂಜಿಗೆಶರೆ
ಉಂಡೆವೆನುತ ಬಾಯ ಬಿಡುತಾರೆ ಇದ
ಕಂಡು ನಾಕ್ಷಣವು ಜೀವಿಸಲಾರೆ ೧
ಕಡಕಟ್ಟು ಹುಟ್ಟಿತೆಂಬುದು ಹುಸಿಯಿನ್ನು
ಕೊಡುವರು ಕೊಡುವುದಿಲ್ಲವೋ ರೋಸಿ
ಉಡಲು ತೊಡಲಿಕ್ಕಿಲ್ಲ ಕೈ ಬೀಸಿ ಎದೆ
ನಡುಗಿ ಸಾವೆನು ನಾನು ಪರದೇಶಿ ೨
ಅತಿಥಿಗಿಕ್ಕಲಿಕೆ ತನಗೇ ಇಲ್ಲ
ಪ್ರತಿಮೆ ಲಿಂಗ ಪೂಜೆಗಳು ಜನ್ಮದೊಳಿಲ್ಲ
ವ್ರತನೇಮ ದಾನ ಧರ್ಮಗಳಿಲ್ಲ ಪರ
ಗತಿಗೇನು ಮುಂದೆ ಸಾಧನವಿಲ್ಲ ೩
ಸಂಸಾರದೊಳಗೇನು ಸುಖವಿಲ್ಲ ಪರಮ
ಹಂಸನಾಗಲು ಮುಂದೆ ಪಥವಿಲ್ಲ
ಕಂಸಾರಿ ಸ್ಮರಣೆ ಎಂದಿಗೂ ಇಲ್ಲ ತಮ
ಧ್ವಂಸಿ ಯಣುಗನ ಕೈವಶರೆಲ್ಲ ೪
ಕಾಲಗತಿಯು ಬಲು ಬಿರುಸಣ್ಣ ಜನ
ಬಾಳುವ ಪರಿಯಿನ್ನು ಹೆಂಗಣ್ಣ
ಕೂಳಿಗೆ ಬಗೆಯಿಲ್ಲದಾಯ್ತಣ್ಣ ಲಕ್ಷ್ಮೀ
ಲೋಲನ ಮೇಲೆ ಭಕ್ತಿಯಿಲ್ಲಣ್ಣ ೫

೧೪೧
ಹೊನ್ನು ಹೆಣ್ಣು ಮಣ್ಣು ಮೂರನು ಬಿಟ್ಟು ಚರಿಸುವವ ಯೋಗಿ
ಬಣ್ಣ ಸಣ್ಣ ಸರ್ವಾಭರಣವಿಟ್ಟು ಮೆರೆವನು ಬೋಗಿ ಪ
ನಾರಿಯರದನು ಕಂಡು ಥೂ ಎಂದುಗುಳಿ ತೊಲಗುವಯೋಗಿ
ವಾರಿ ಜಾಕ್ಷಿಯರನು ನೋಡಿ ಮರುಳುಗೊಂಬನು ಭೋಗಿ
ಘೋರ ತಪವ ಚರಿಸಿ ಅಡವಿಸೇರಿ ಕೊಂಬನು ಯೋಗಿ
ಭೂರಿ ವಿಷಯದೊಳಗೆ ಸಿಕ್ಕಿ ತೊಳಲುತಿಹನು ಭೋಗಿ ೧
ಮಾಯೆಯಳಿದು ವಸ್ತುವರಿತು ಚರಿಸುತಿಹನು ಯೋಗಿ
ಜಾಯೆ ಸುತರ ಸಿರಿಯ ನೆಚ್ಚಿ ಹಿಗ್ಗುತಿಹನು ಭೋಗಿ
ಬಾಯ ಬಿಡದೆ ಮೌನಿಯಾಗಿ ಜಪಿಸುತಿಹನು ಯೋಗಿ
ಕಾಯದೊಳಗೆ ಬೆಳೆದು ಪರರನರಿಯದಿಹನು ಭೋಗಿ ೨
ಕುಲದಲಾವನೆಂದು ಜನಕೆ ತಿಳಿಯ ಬಾರದವನು ಯೋಗಿ
ಹೊಳಲಿನೊಳಗೆ ಸುಳಿದು ಸುಳಿದು ನಲಿಯುತಿಹನು ಭೋಗಿ
ಚಲನ ಭವನ ಕೋಣೆ ಲಕ್ಷ್ಮೀರಮಣನು ತಾನೆಯಾಗಿ
ಒಳಗು ಹೊರಗು ಬೆಳಗುತಿಹನು ಯೋಗಾನಂದನಾಗಿ ೩

೧೪೨
ಹೋದ್ರೆ ಹೀಗೆ ಹೋಗಬೇಕು ಗೂಡಿನಿಂದ ಜೀವನ
ಸಾಧನೆಯನ್ನು ಮಾಡಿದಾತ ಲಾಗವನ್ನು ಹಾಕಿದಂತೆ ಪ
ಬೇನೆ ಮೈಯೊಳೇನು ಇಲ್ಲದೆ ಜÁ್ಞನವಿದ್ದು ಎಚ್ಚರಿದ್ದು
ಕಾನ ಕಪಿಯ ಮೇಲ‌ ಮನಸು ಹೀನವೃತ್ತಿಗೆ ಹೊಗದಂತೆ ೧
ಹುಚ್ಚುಗೊಳದೆ ಭಂಗಿಯನ್ನು ಹಚ್ಚದಾತ ಕುಣಿಯುವಂತೆ
ಸ್ವಚ್ಛವಾಗಿ ಕಾಯದೊಳಗೆ ತುಚ್ಛಮನವು ಇಲ್ಲದಂತೆ ೨
ಅತ್ತಲಿತ್ತ ಹೊಡೆಕಣಿಲ್ಲದೆ ಸುತ್ತ ಮುತ್ತ ಕಾದುಕೊಂಡ
ಪುತ್ರಮಿತ್ರ ಕಳತ್ರದಲ್ಲಿ ಮತ್ತೆ ಮಮತೆಯಿಲ್ಲದಂತೆ ೩
ನಾರಾಯಣ ಹರಿ ನರಕಾಂತಕ ರಾಮಕೃಷ್ಣ
ವಾರಿಜ ನಾಭ ಹರಿಯೆ
ಎನ್ನ ಸಲಹೋ ಬಿಡದೆ ಎನ್ನುತ ೪
ವಾಂತಿ ಬ್ರಾಂತಿಯೆರಡು ಇಲ್ಲದೆ ಉತ್ಕ್ರಾಂತಿ ಕಾಲದಲ್ಲಿ ಲಕ್ಷ್ಮೀ
ಕಾಂತ ನಾಮ ಸ್ಮರಣೆ ಜಿಹ್ವೆ ನಿರಂತರದಲ್ಲಿ ನುಡಿಯುತಿರ್ದ ೫

ಮರಾಠಿಗರ ದಂಡು ಬಂದು ಇಕ್ಕೇರಿ

೭೭
ಹೋಯಿತು ಪರಶುರಾಮನ ದಂಡಿಲಿ ನಷ್ಟ
ವಾಯಿತು ಜನರೆಲ್ಲ ಹೊಡೆತ ಕಡಿತದಿ ಪ
ಮೇಧಿನಿಯೊಳಗಣ ಜನರಿಂಗೆ ದಂಡಿಂದ
ಹೋದುದು ಮನೆಮಾರು ದನಕರು ಮಣಿ ಮುತ್ತು
ತೀರ್ದುದು ಕಂಚು ತಾಮ್ರಗಳು ಬಹುಕಾಲ
ಸಾಧಿಸಿದೊಡವೆ ಸಾಧನ ಸಂಪತ್ತುಗಳೆಲ್ಲ ೧
ಉಡುವ ತೊಡುವ ಜವಳಿ ಅಡಕೆ ಮೆಣಸು ಭತ್ತ
ಕಡಿತ ಕಂಠಗಳಾಬ್ರ ಮುಡಿ ಉಪ್ಪುಗುಢಕಲ್ಲು
ಗಡಿಗೆ ಮಡಕೆ ಎಣ್ಣೆ ಕೊಡವು ಕಬ್ಬಿಣದ ಕತ್ತಿ
ಅಡಿಯಿಟ್ಟ ಚಿಟ್ಟು ಪಾಟ್ಟಿಗಳೊಂದುಳಿಯದಂತೆ ೨
ಕೊಟ್ಟದೊಳಗೆ ಇಟ್ಟವಸ್ತು ವಡವೆಯೆಲ್ಲ
ನಷ್ಟವಾಯಿತು ಹಾರೆ ಕೊಡಲಿ ಗುದ್ದಲಿ ಕುಳ
ಬಟ್ಟಲು ಹಂಡೆ ಕೊಪ್ಪರಿಗೆ ಇಕ್ಕುವ ಗುಂಡಿ
ಹುಟ್ಟು ಚಲುಕದ ಮಣಿ ಮರಿಗೆ ಸರ್ವಸ್ವವು ೩
ಮುತ್ತಿನ ಸರ ಕೆಂಪುಗೆತ್ತಿಗೆ ನಗ ಮುದ್ರೆ
ಯೊತ್ತು ಉಂಗುರ ಜಪಮಣಿ ಮಾಲೆ ಹವಳ ಯಾ
ವತ್ತು ಪೂಜಿಪ ಪಂಚ ಮೂರ್ತಿಯಾರತಿ ಸೊಡ
ರೆತ್ತುವ ನಗನಾಣ್ಯವೆಲ್ಲ ಸುಲಿಗೆಯಿಂದ ೪
ಅಂಧಕಾರಕೆ ನೆರವಾದಂತೆ ದುರ್ಭಿಕ್ಷ ಬಂದಿತು ಸಂಗಡ
ತಂಡುಲ ಗದ್ಯಾಣವೊಂದಕೈದಾಗಿ ಮುಗಿತು
ಹರಿನಂದನ ಕೋಣೆ ಲಕ್ಷ್ಮೀಶನೊಬ್ಬನೆ ಬಲ್ಲ ೫

ಇನ್ನೇತರೊಳಗಾಸೆ ಎನಗಿಲ್ಲವೋ
ಇನ್ನೇತರೊಳಗಾಸೆ ಎನಗಿಲ್ಲವೋ ಈಗಳಿನ್ನು ಹರಿನಾಮ
ಸಂಕೀರ್ತನೆಯೊಂದು ಹೊರತಾಗಿ ಪ
ನೋಡಿ ಸಾಕಾಯ್ತು ಲೋಕದ ಪ್ರಪಂಚವನು ಪೇ
ಚಾಡಿ ಸಾಕಾಯ್ತು ದರಮಂ ಪೊರೆಯಲು
ಆಡಿ ಸಾಕಾಯ್ತು ಸುಜನರೊಳ ನೃತಗಳನು ಒಡ
ನಾಡಿ ಸಾಕಾಯ್ತು ಕುಜನರ ಸಂಗದೊಳಗೆ ೧

ಉಂಡು ಸಾಕಾಯ್ತು ಸಂಸಾರ ಸುಖ ದುಃಖವನು ನಾ
ಕಂಡು ಸಾಕಾಯ್ತು ಸುಜನರ ಭಂಗವನು
ತಂಡಿ ಸಾಕಾಯ್ತು ಪರಸೇವೆಯನು ಮಾಡಿ ಜನ
ರಂಡಲೆದು ಬೇಡಿ ಸಾಕಾಯ್ತು ಈ ಭವಕೆ ೨
ತಿರು ತಿರುಗಿ ಸಾಕಾಯ್ತು ತಲೆ ಹುಳಿತ ನಾಯಂತೆ
ಪರಿ ಪರಿಯ ದುಃಖಗಳನುಣ್ಣುತ
ಚರಿಸಿದೆನು ಮರುತಸುತ ಕೋಣೆ ಲಕ್ಷ್ಮೀರಮಣ
ಇರಿಸಿದಂತಿರ ಬೇಕು ಸಕಲಜನರು ೩

ಹಾಡಿನ ಹೆಸರು :ಇನ್ನೇತರೊಳಗಾಸೆ ಎನಗಿಲ್ಲವೋ
ಹಾಡಿದವರ ಹೆಸರು :ವಿಜಯಲಕ್ಷ್ಮಿ ಮೋಹನ್
ಸಂಗೀತ ನಿರ್ದೇಶಕರು :ಸುಂದರಮೂರ್ತಿ ಎ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಏನ ಮಾಡಿದರಿಲ್ಲವೋ ನೀ ಪಡೆಯದ
೮೮
ಏನ ಮಾಡಿರಿಲ್ಲವೋ ನೀ ಪಡೆಯದ ಮೇಲಿನ್ನೇನ
ಮಾಡಿದರಿಲ್ಲವೋ ಪ
ಆಸೆ ಮಾಡಿದರಿಲ್ಲ ದೇಶ ತಿರುಗಿದರಿಲ್ಲ
ಈಶರೀರವ ದಣಿಸಿ ಘಾಸಿ ಮಾಡಿದರಿಲ್ಲ ೧
ಮೊಟ್ಟೆಯನು ಹೊತ್ತರಿಲ್ಲ ಕಷ್ಟ ಮಾಡಿದರಿಲ್ಲ
ಘಟ್ಟ ಬೆಟ್ಟವ ಹತ್ತಿ ಕುಟ್ಟಿ ಕೊಂಡರು ಇಲ್ಲ ೨
ಟೊಂಕ ಕಟ್ಟಿದರಿಲ್ಲ ಲಂಕೆಗೆ ಹೋದರೂ ಇಲ್ಲ
ಬೆಂಕಿ ಬಿಸಿಲೊಳು ತಿರುಗಿ ಮಂಕು ಮರುಳಾದರಿಲ್ಲ ೩
ಊರನೀ ಬಿಟ್ಟರಿಲ್ಲ ಪರ ಊರಿಗೆ ಹೋದರಿಲ್ಲ
ಆರಿಗ್ಹೇಳಿದರಿಲ್ಲವಾರಸೇರಿದರಿಲ್ಲ ೪
ವಾತಸುತನ ಕೋಣೆ ಲಕ್ಷ್ಮೀಶನು
ಆತ ಕೊಟ್ಟರೆ ಉಂಟು ಆತ ಕೊಡದರಿಲ್ಲ ೫

ಹಾಡಿನ ಹೆಸರು :ಏನ ಮಾಡಿದರಿಲ್ಲವೋ ನೀ ಪಡೆಯದ
ಹಾಡಿದವರ ಹೆಸರು :ಉದಯ್ ಅಂಕೋಲ
ರಾಗ :ದುರ್ಗಾ
ತಾಳ :ಆದಿ ತಾಳ
ಶೈಲಿ :ತತ್ವಪದ
ಸಂಗೀತ ನಿರ್ದೇಶಕರು :ಜಯಶ್ರೀ ಅರವಿಂದ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಒಂದು ಕೊಟ್ಟರೆ ಶಿವ ಮತ್ತೊಂದು
೯೫
ಒಂದು ಕೊಟ್ಟರೆ ಶಿವ ಮತ್ತೊಂದು ಕೊಡನಯ್ಯ
ಆನಂದ ವಸ್ತುವಿಗೊಂದು ಲೀಲೆ ಇದಯ್ಯ ಪ
ರೊಕ್ಕವಿದ್ದವರಿಗೆ ಮಕ್ಕಳೆಂಬವರಿಲ್ಲ
ಮಕ್ಕಳಿದ್ದರೆ ತಕ್ಕವನಿತೆಯಿಲ್ಲ
ಚೊಕ್ಕಸತಿಯು ಸಿಕ್ಕಿತಾನುರೂಪದೊಳಿರೆ
ಪಕ್ಕನೆ ಅಗಲಿ ಪೋಗುವರಯ್ಯ ೧
ಚೆಲುವ ಹೆಣ್ಣೆಗೆ ತಕ್ಕ ಚೆಲುವ ಪುರುಷನಿಲ್ಲ
ಚೆಲುವ ನಾದವ ಗೊಳ್ಳೆಲಲನೆಯಿಲ್ಲ
ಹಲವು ಜನ್ಮದ ಪುಣ್ಯ ಫಲದಿಂದ ಸೇರಲು
ಹೊಳೆದು ಹೋಗುವರಿದರೊಳಗೊಬ್ಬರಯ್ಯ ೨
ಸತಿ ಸುತರು ಇರುತಿರಲು ದಾರಿದ್ರ ತಿಂಬುವುದಕಿಲ್ಲ
ಗತಿಯಿಲ್ಲದವನಿಗೆ ನರಕವಿಲ್ಲ
ಅತಿಶಯವಾಗಿ ತಿಂಬುದಕ್ಕಿದ್ದ ನರರಿಗೆ
ಸತತ ಶಾರೀರ ಸುಖವಿಲ್ಲವಯ್ಯ ೩
ಉಂಬಲೂಡಲು ಸರ್ವಸಕಲ ಸಂಪತ್ತೆಲ್ಲ
ತುಂಬಿರಲು ತನ್ನ ಗೃಹದೊಳೆಲ್ಲ
ಬೆಂಬಿಡದೆ ರೋಗವು ಪುಟ್ಟಿತನುವಿನೊಳ್
ತಿಂಬುದಕವಗೆ ಬಾಯಿಗಳಿಲ್ಲವಯ್ಯ ೪
ಸಕಲ ಜೀವರಿಗು ಚಿಂತೆಗಳಿಲ್ಲದವರಿಲ್ಲ
ಸುಖವು ಸ್ವಪ್ನದೊಳು ಕಾಣುವುದಿಲ್ಲವಯ್ಯ
ಬಕನ ವೈರಿಯ ಕೋಣೆಯ ಲಕ್ಷ್ಮೀಪತಿ ಪ್ರಿಯ
ಮಕರ ಕೇತನ ವೈರಿಯಾಟವಿದಯ್ಯ ೫

ಹಾಡಿನ ಹೆಸರು :ಒಂದು ಕೊಟ್ಟರೆ ಶಿವ ಮತ್ತೊಂದು
ಹಾಡಿದವರ ಹೆಸರು :ಶ್ರೀಕಾಂತ್ ಕಾರವಾರ, ಉದಯ ಅಂಕೋಲ, ಶ್ರೀನಿವಾಸ್ ಹೆಚ್., ವೆಂಕು ಸಾ
ರಾಗ :ಮಧ್ಯಮಾವತಿ
ತಾಳ :ಆದಿ ತಾಳ
ಶೈಲಿ :ತತ್ವಪದ
ಸಂಗೀತ ನಿರ್ದೇಶಕರು :ಜಯಶ್ರೀ ಅರವಿಂದ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಗಜಮುಖದವಗೆ ಗಣಪಗೆ

ಗಜ ಮುಖದವಗೆ ಗಣಪಗೆ ಚಲ್ವ ತ್ರಿಜಗ ವಂದಿತಗಾರತಿ ಎತ್ತಿರೆ ಪ

ಒಳ್ಳಿತಾದ ಬಲು ತೆಂಗಿನ ಕಾಯಿ ಕಡಲೆಯ
ಎಳ್ಳುಂಡಲಿಗೆ ಕಬ್ಬು ಮೆಲುವವವಗೆ
ಬೆಳ್ಳಿಯ ಹುರಿಗೆಜ್ಜೆಗಳ ಕಟ್ಟಿನಲಿವಗೆ
ಡೊಳ್ಳಿನ ಗಣಪಗಾರತಿ ಎತ್ತಿರೆ೧
ಕರದಲಿ ಪರಶು ಪಾಶಾಂಕುಶವ ಧರಿಸಿಹ ಹರುಷದಿ
ಭಕ್ತರ ಪೊರೆವವಗೆ
ಉರಗ ಕುಂಡಲನ ಕುಮಾರ ಗಜವದನಗೆ
ಶರಣ ಜನಕಗಾರತಿ ಎತ್ತಿರೆ ೨

ದೇವತೆಗಳ ಕೈಯ ಕಪ್ಪವ ಕೊಂಬುವಗೆ
ದಾವಾಗ್ನಿಯಿಂದ ಮೀರಿರುವಗೆ
ಯಾವಾಗ ಜನರಿಗೆ ಬೇಡಿದಿಷ್ಟಾರ್ಥವ ನೀವ
ಗಣೇಶಗಾರತಿ ಎತ್ತಿರೇ ೩

ಹಾಡಿನ ಹೆಸರು :ಗಜಮುಖದವಗೆ ಗಣಪಗೆ
ಹಾಡಿದವರ ಹೆಸರು :ಜಯಶ್ರೀ ಎಂ. ಕೆ., ಶ್ರೀರಕ್ಷಾ ಅರವಿಂದ್
ರಾಗ :ಅಭೇರಿ
ತಾಳ :ಆದಿ ತಾಳ
ಶೈಲಿ :ತತ್ವಪದ
ಸಂಗೀತ ನಿರ್ದೇಶಕರು :ಜಯಶ್ರೀ ಅರವಿಂದ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ದೇವ ಬಂದ ಭಕ್ತರ ಕಾವ ಬಂದ
೩೬
ದೇವ ಬಂದ ಭಕ್ತರ ಕಾವ ಬಂದ
ರಂಗ ಬಂದ ಕೋಮಲಾಂಗ ಬಂದ ಪ
ದೇವರ ದೇವ ಬಂದ ದೇವಕಿಯ ಕಂದ ಬಂದ
ಮಾವ ಕಂಸನ ಕೊಂದು ಮದನ ಗೋಪಾಲ ಬಂದ ೧
ಅಚ್ಯುತಾನಂತ ಬಂದ ಸಚ್ಚಿದಾನಂದ ಬಂದ
ಹೆಚ್ಚಿನ ತಮವಗೆಲಿದು ವೇದತಂದವ ಬಂದ ೨
ನಂದನಂದನ ಬಂದ ಸಿಂಧುಶಯನ ಬಂದ
ಇಂದ್ರವಂದಿತ ಬಂದ ಇಂದಿರಾ ರಮಣ ಬಂದ ೩

ಹಾಡಿನ ಹೆಸರು :ದೇವ ಬಂದ ಭಕ್ತರ ಕಾವ ಬಂದ
ಹಾಡಿದವರ ಹೆಸರು :ಶ್ರೀರಕ್ಷಾ ಅರವಿಂದ್
ರಾಗ :ವೀಣಾವಾದಿನಿ
ತಾಳ :ಆದಿ ತಾಳ
ಶೈಲಿ :ತತ್ವಪದ
ಸಂಗೀತ ನಿರ್ದೇಶಕರು :ಜಯಶ್ರೀ ಅರವಿಂದ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ದೇವರ ಪೂಜೆಯ ಮಾಡಿರೂ ಮಾಡಿ
೧೦೬
ದೇವರ ಪೂಜೆಯ ಮಾಡಿರೋ ಮಾಡಿ ಬಿಟ್ಟರು ಬಿಡಿ
ಭೂದೇವರ ಪೂಜೆ ಮಿಗಿಲು ಬಿಡಬೇಡ ಪ
ಉಂಬೋ ದೇವರ ನೋಡಿ ಕರೆತಂದೊಯ್ಯನೆ
ಶಂಭು ಶ್ರೀಹರಿ ಎಂದು ಮನತಂದು ಕರು
ಣಾಂ ಬುಧಿ ಮಣಿಯೊಳೇರಿ ಎಂದು ಹರು
ಷಾಂಬುಧಿಯೊಳು ಪಾದ ತೊಳೆದು೧
ಮಾತನಾಡುವ ದೇವನಿವನೆಂದು ಸಂಪ್ರೀತಿಯಿಂದಲೆ
ಈತ ಶಿವನೆಂದು ಜಾತಿ ಶ್ರೀ ಗಂಧ ಪುಷ್ಪವ ತಂದುಮನ
ವೊತು ಪೂಜೆಯನು ಮಾಡಿರೋ ಎಂದು ೨
ಎಡೆಮಾಡಿ ಷಡುರಸಾನ್ನವ ನಂದು ಉಣ
ಬಡಿಸೆ ನಾರಿಯರಟ್ಟುದನುತಂದು
ಕಡುಬು ಕಜ್ಜಾಯ ಘೃತವನಂದು ಜಗ
ದೊಡೆಯ ನುಂಡನು ಸಾಕು ಬೇಕೆಂದು ೩
ಉತ್ತರಾಪೋಶನವನು ಕೊಟ್ಟು
ಹಸ್ತವ ತೊಳೆದ ಮೇಲ್ವೀಳ್ಯವ ಕೊಟ್ಟು
ಮತ್ತೇನಾ ಪೋಪೆನೆಂದರೆ ಪೊಡಮಟ್ಟು
ಚಿತ್ತೈಸಿ ಮರಳಿಬರಬೇಕು ದಯವಿಟ್ಟು ಎಂದು ೪
ಪ್ರತಿಮೆಗಿಕ್ಕಿದರಲ್ಲೆ ಇಹುದು ಮತ್ತೆ
ಕ್ಷತಿಗೆ ಹಾಕಲುಬೇಕು ಬೇಡೆನ್ನಾದಿಹುದು
ಅತಿಥಿಗಿಕ್ಕಲು ಸಾಕು ಬೇಕೆನ್ನುತಿಹನು ಲಕ್ಷ್ಮೀ
ಪತಿಗಿದು ಪೂಜೆ ಸಂಪೂರ್ಣವಾಗಿ ೫

ಹಾಡಿನ ಹೆಸರು :ದೇವರ ಪೂಜೆಯ ಮಾಡಿರೂ ಮಾಡಿ
ಹಾಡಿದವರ ಹೆಸರು :ಶ್ರೀನಿವಾಸ್ ಹೆಚ್.
ರಾಗ :ಮೋಹನ
ತಾಳ :ಆದಿ ತಾಳ
ಶೈಲಿ :ತತ್ವಪದ
ಸಂಗೀತ ನಿರ್ದೇಶಕರು :ಜಯಶ್ರೀ ಅರವಿಂದ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ನಂಬಿದೆ ನಾ ನಿನ್ನ ಚರಣಾಂಬುಜಗಳ
೩೯
ನಂಬಿದೆ ನಾ ನಿನ್ನ ಚರಣಾಂಬುಜಗಳ
ಶ್ರೀ ಮೂಕಾಂಬ ದೇವಿ
ಬೆಂಬಿಡದನುದಿನ ಬೇಡಿದ ವರವೀವ
ಶ್ರೀ ಮೂಕಾಂಬ ಪ
ಕಪಟ ನಾಟಕಿ ನಿನ್ನ ಮಹಿಮೆಯ
ನರಿವರೆ ಶ್ರೀ ಮೂಕಾಂಬ
ಕುಪಿತ ಮಹಿಷ ದುಷ್ಟದಾನವ ಸಂಹಾರಿ
ಶ್ರೀ ಮೂಕಾಂಬ ೧
ವಾರಾಹಿ ನಿಜವೇಣಿ ಶ್ರೀ ಮೂಕಾಂಬ
ಸಾರ ಗೋಪಮವಾಣಿ ಶ್ರೀ ಮೂಕಾಂಬ
ಧ್ರುತ ಸಾರಂಗ ಗಾಮಿನಿ ಶ್ರೀ ಮೂಕಾಂಬ ನೀರಂಗ
ರೂಪಿಣಿ ಮೂಕಾಂಬ ೨
ಧರೆಯೊಳಧಿಕವೆಂಬ ಕೊಲ್ಲೂರು ಪುರದೊಳು
ಸ್ಥಿರವಾಸಿ ಶ್ರೀ ಮೂಕಾಂಬ
ಪರಿಪರಿ ಭಕ್ತಗೆ ಬೇಡಿದ ವರವೀವ ಶ್ರೀ ಮೂಕಾಂಬ ೩

ಹಾಡಿನ ಹೆಸರು :ನಂಬಿದೆ ನಾ ನಿನ್ನ ಚರಣಾಂಬುಜಗಳ
ಹಾಡಿದವರ ಹೆಸರು :ವಿದ್ಯಾ ಎಂ. ಎಸ್.
ಸಂಗೀತ ನಿರ್ದೇಶಕರು :ಶೀಲಾ ಎಂ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಪಾಲಿಸೆನ್ನನು ಪಾಹಿ ಪಾರ್ವತೀ±
೪೬
ಪಾಲಿಸೆನ್ನನು ಪಾಹಿ ಪಾರ್ವತೀಶ ಈಶ
ಕಾಲಕರ್ಮವಿದೂರಪಾಪನಾಶ ಪ

ಪರಮ ಪುರುಷ ಪರೇಶ ಪರಮಾತ್ಮ ಪರಿಪೂರ್ಣ
ವರ ಪರಂಜ್ಯೋತಿ ರೂಪಾತ್ಮನೇ
ಕರಿ ಚರ್ಮಧರ ಭಸ್ಮ ಭೂಷಣ ದಿಗಂಬರನೇ
ಶರಣು ಜನಸುರಧೇನು ನಿಸ್ಸಂಗನೇ ೧
ಉಮೆಯರಸ ಪಂಚವದನ ನಿರ್ಮಲನೆ
ವಿಮಲತರ ಗಂಗಾಜೂಟಧರನೇ
ಅಮಿತಬಲ ವೃಷಭವಾಹನನೆ ಶಾಶ್ವತನೆ
ಕಮಲ ಪಿತ ಸುತ ಹರನೇ ಶಿವರೂಪನೇ ೨

ವರವ್ಯಾಘ್ರ ಚರ್ಮಧರ ಇಂದುಶೇಖರ ಹರನೆ
ಕರದಿ ಡಮರುಗಧರನೇ ಶೂಲ ಪಾಣಿ
ಮೆರೆವ ನಾಗಾಭರಣ ಗಿರಿಜೆವರ ಯೋಗೀಶ
ವರ ವರದ ಮೂರ್ತಿ ಶ್ರೀ ಶಂಭು ಶಂಕರನೆ ೩

ಹಾಡಿನ ಹೆಸರು :ಪಾಲಿಸೆನ್ನನು ಪಾಹಿ ಪಾರ್ವತೀ±
ಹಾಡಿದವರ ಹೆಸರು :
ಸಂಗೀತ ನಿರ್ದೇಶಕರು :ಶಂಕರ ಶಾನುಭೋಗ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಬಾರೋ ವೆಂಕಟರಮಣ ಭವದುರಿತ
೫೩
ಬಾರೋ ವೆಂಕಟರಮಣ ಭವದುರಿತ ಸಂಹರಣ ಪ
ನೀರಜದಳಾಂಬಕನೇ ಪುರುಷೋತ್ತಮ ವರನೇ
ಘೋರ ದುರಿತ ಸಂಹರನೆ ಶರಣರ ಸಲಹುವ
ಬಿರುದಿನಭಿಮಾನಿ ನಿಸ್ಸೀಮ ೧
ಕಲಿಯುಗದಿ ನಿನ್ನ ನಾಮ ಹಲವುರೂಪದಲಿಹುದು
ಬಲು ಬಗೆಯ ಭಕುತ ಜನರನು ಸಲಹುತ
ಒಲುಮೆಯಿಂದಲಿ ಕಾಣಿಕೆಯನು ಕೊಳ್ಳುತ ೨
ಚಲದಂಕ ನೀನೆಂದು ಒಲುಮೆಯಿಂದಲಿ ಬರಲು
ಚಲಿಸದೆ ವರಗಳನಿತ್ತೆಯೋ ಅವರಿಗೆ
ಚಲುವ ಶ್ರೀ ತಿರುಪತಿ ವೆಂಕಟರಮಣ ೩

ಹಾಡಿನ ಹೆಸರು :ಬಾರೋ ವೆಂಕಟರಮಣ ಭವದುರಿತ
ಹಾಡಿದವರ ಹೆಸರು :
ಸಂಗೀತ ನಿರ್ದೇಶಕರು :ಸುಂದರಮೂರ್ತಿ ಎ.

ನಿರ್ಗಮನ

ಬಿಡದೆ ರಕ್ಷಿಸೊ ಎನ್ನನ್ನು ಜಗದೊಡೆಯ
೮೦
ಬಿಡದೆ ರಕ್ಷಿಸೊ ಎನ್ನನ್ನು ಜಗದೊಡೆಯ ನಂಬಿದೆ
ನಿನ್ನಚರಣಾರವಿಂದವ ಪ
ಪರಮ ಪುರುಷನಿನ್ನ ಚರಣ ಪಂಕಜವನ್ನು
ನಿರುತ ನಂಬಿದೆ ಎನ್ನದುರಿತ ಪರ್ವತವನ್ನು
ಸುರಪ ವಜ್ರದಿ ಗಿರಿಗಳನು ಖಂಡಿಸಿದವೋಲ್
ತರಿದು ರಕ್ಷಿಸೋ ಮುರಹರನೆ ಸ್ಮರಣೆಯಿತ್ತು ೧
ಮಕ್ಕಳಾಟಿಕೆಯಿಂದ ಕೆಲವು ದಿವಸಸಂದು
ಸೊಕ್ಕಿ ಜವ್ವನ ಕಾಲ ಬರಲುಸ್ತ್ರೀಯರಿಗೆ ಕ
ಣ್ಣಿಕ್ಕಿ ಮುದದಿ ದಿನಗಳೆದು ಮರೆತೆನೀಗಳು
ಸೀತಾ ರಮಣ ಸ್ಮರಣೆಯಿತ್ತು ೨
ಚಿಂತೆಯೊಳಗೆ ವಿಧಿ ಬರೆದ ಲಿಖಿತವೆಲ್ಲ
ಸಂತು ದರ್ಜನರೊಡನಾಟದೊಳಗೆ ಕಾಲ
ವಿಂತು ಸವೆದು ಜರೆ ಮುಸುಕಿತೆನೆಗೆ ಲಕ್ಷ್ಮೀ
ಕಾಂತ ನಿನ್ನಯ ನಾಮ ಸ್ಮರಣೆಯಂತ್ಯದೊಳಗಿತ್ತು ೩

ಹಾಡಿನ ಹೆಸರು :ಬಿಡದೆ ರಕ್ಷಿಸೊ ಎನ್ನನ್ನು ಜಗದೊಡೆಯ
ಹಾಡಿದವರ ಹೆಸರು :ಶಂಕರ್ ಎಸ್.
ಸಂಗೀತ ನಿರ್ದೇಶಕರು :ಶೀಲಾ ಎಂ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಬೇಡುವೆ ನಿಮ್ಮ ಪಾದಕ್ಕೆ ಕರಗಳ
೧೮
ಬೇಡುವೆ ನಿಮ್ಮ ಪಾದಕ್ಕೆ ಕರಗಳ ನೀಡಿ
ಶಾರದಾಂಬ ದಯ
ಮಾಡಿ ಪಾಲಿಸು ಮನದಿಷ್ಟಾರ್ಥವ
ಹರುಷದಿ ಶಾರದಾಂಬ ಪ
ಕರದಿ ಪುಸ್ತಕ ವೇಣಿ ಕಮಲ ಭವನ ರಾಣಿ ಶಾರದಾಂಬ
ಕರುಣದಿ ಸಲಹೆನ್ನ ಕಾಮಿತ ಫಲದಾಯಕಿ ಶಾರದಾಂಬ ೧

ಸುರಮುನಿವಂದಿತೆ ಸಕಲ ಜಗನ್ಮಾತೆ ಶಾರದಾಂಬ
ಪರಮ ಮಂಗಳ ಮೂರ್ತಿ ಪಾವನ
ಕೀರ್ತಿ ಶಾರದಾಂಬ ೨
ಸೃಷ್ಟಿಗಧಿಕವಾದ ಶೃಂಗೇರಿ ಪುರವಾಸಿ ಶಾರದಾಂಬ
ಮುಟ್ಟಿ ಭಜಿಪೆ ನಿಮ್ಮ ದಯವಿಟ್ಟು
ಕೃಪೆಮಾಡು ಶಾರದಾಂಬ ೩

ಹಾಡಿನ ಹೆಸರು :ಬೇಡುವೆ ನಿಮ್ಮ ಪಾದಕ್ಕೆ ಕರಗಳ
ಸಂಗೀತ ನಿರ್ದೇಶಕರು :ಶಂಕರ ಶಾನುಭೋಗ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಯಾರಿಗಾದರು ಬಿಡದು ಪೂರ್ವಾರ್ಜಿತ
೧೨೯
ಯಾರಿಗಾದರು ಬಿಡದು ಪೂರ್ವಾರ್ಜಿತ ಬೆನ್ನ
ಸಾರಿಹುದು ಭವಭವದೊಳದು ಕಾಡುತ ಪ
ಇಂದ್ರ ದೊಡ್ಡವನೆಂದರವಗೆ ಮೈಕಣ್ಣೆಲ್ಲ
ಚಂದ್ರ ದೊಡ್ಡವನೆನಲು ಹೆಚ್ಚು ಕುಂದು
ಇಂದ್ರ ಜಾಲೆಯು ಲಕ್ಷ್ಮೀದೇವಿ ದೊಡ್ಡವಳೆನಲು ಮ
ಹೇಂದ್ರ ಜಾಲೆಯು ಒಂದು ಕಡೆ ನಿಲ್ಲಳು ೧
ಸರಸಿರುಹಭವ ದೊಡ್ಡವನೆನಲು ನಡುತಲೆಯಿಲ್ಲ
ತರುಣಿ ದೊಡ್ಡವನೆನಲು ಸಂಚಾರವು
ಉರಿಯು ದೊಡ್ಡವ ನೆನಲು ಮೈಯೆಲ್ಲ ಧೂಮಮಯ
ಉರಗ ಮಿಗಿಲೆನೆ ಶಿರದಿ ಪೊತ್ತಭಾರ ೨
ಮೇರು ದೊಡ್ಡವ ನೆನಲು ಏಳಲಿ ಬಗೆಯಿಲ್ಲ
ವಾರಧಿಯು ದೊಡ್ಡಿತೆನೆ ಪಾನಕಿಲ್ಲ
ಮಾರುತಾತ್ಮಜ ಕೋಣೆ ವಾಸ ಲಕ್ಷ್ಮೀರಮಣ
ಯಾರಿಗೂ ಸ್ವತಂತ್ರವನು ಕೊಟ್ಟುದಿಲ್ಲ ೩

ಹಾಡಿನ ಹೆಸರು :ಯಾರಿಗಾದರು ಬಿಡದು ಪೂರ್ವಾರ್ಜಿತ
ಸಂಗೀತ ನಿರ್ದೇಶಕರು :ಶಂಕರ ಶಾನುಭೋಗ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಸ್ವಾಮಿಯ ನೋಡುವ ಬನ್ನಿ ನಮ್ಮ
೬೯
ಸ್ವಾಮಿಯ ನೋಡುವ ಬನ್ನಿ ನಮ್ಮ
ಸುಪ್ರೇಮೀಯ ನೋಡುವ ಬನ್ನಿ ಪ
ಎಂಟು ಮೈಯವನಂತೆ ಎಸೆವೈದು ಮುಖವಂತೆ
ಎಂಟನ ದೇಶದಿ ನೆಲಸಿಹನಂತೆ ನೀರೆ
ಯರ್ದಾಂಗಿಯ ಪಡೆದಿಹನಂತೆ
ಅಂತ ಸ್ವಾಮಿಯ ನೋಡುವ ಬನ್ನಿ ೧
ಮಾಧವನೆ ಶರವಂತೆ ಭೂಧರನೆ ಧನುವಂತೆ
ಭೂಮೀಯೇ ರಥವಂತೆ ಸೊಮ ಸೂರ್ಯರೇ
ಗಾಲಿಗಳಂತೆ ಅಂತ ಸ್ವಾಮಿಯ ನೋಡುವ ಬನ್ನಿ ೨
ವಾಜಿ ವೇದಗಳಂತೆ ಒದನೊದಗಿ ಬಹವಂತೆ
ಆದಿ ಶೇಷನೆ ಬಲುಹೆದೆಯಂತೆ ಅಮೃತ ಶರಧಿಯ
ಅಲ್ಲಿ ಬತ್ತಳಕೆಯಂತೆ ಅಂತ ಸ್ವಾಮಿಯ ನೋಡುವ ಬನ್ನಿ ೩
ಹರಿಯವರ ಶರವಂತೆ ಅಜನು ಸಾರಧಿಯಂತೆ
ದುರುಳ ತಾರಕ ಸುತರ ಪುರವ ಮುರಿದಿಹನಂತೆ
ಅಂತ ಸ್ವಾಮಿಯ ನೋಡುವ ಬನ್ನಿ ೪
ಇದುವೆ ಭೂ ಕೈಲಾಸವೆಂದು ತೋಷದಿ
ಬಂದು ಸಾಕಾರವಾಗಿಲ್ಲ ನೆಲಸಿಹರಂತೆ
ಮುದದಿ ಲೋಕಗಳೆಲ್ಲ ಕೈವಶವಂತೆ ಅಂತಸ್ವಾಮಿಯ
ನೋಡುವಬನ್ನಿ ೫

ಹಾಡಿನ ಹೆಸರು :ಸ್ವಾಮಿಯ ನೋಡುವ ಬನ್ನಿ ನಮ್ಮ
ಹಾಡಿದವರ ಹೆಸರು :ಶ್ರುತಿ ಬಿ. ಆರ್
ಸಂಗೀತ ನಿರ್ದೇಶಕರು :ಸುಂದರಮೂರ್ತಿ ಎ.

ನಿರ್ಗಮನ

ಹರಿ ಹರಿ ನರಹರಿ ಎನ್ನಿಜನರು
೭೩
ಹರಿ ಹರಿ ನರಹರಿ ಎನ್ನಿಜನರು
ಹರಿ ಹರಿ ಎಂದು ಕೊಂಡಾಡಿ ಸಜ್ಜನರು ಪ
ನಂದನಂದನನಾ ಮಂದರಧರನಾ
ಇಂದ್ರಾದಿ ಸನಕ ಸನಂದನ ವಂದಿತನಾ ೧
ತಾಳಭಂಜನನಾ ವ್ಯಾಳಶಯನನ
ಕಾಳಿಯ ಪೆಡೆಯ ಮೇಳ್ ಕುಣಿದ ಗೋವಳನ ೨
ಗರುಡವಾಹನನ ಶರಧಿ ಶಯನನ
ವರ ಶಂಖಚಕ್ರಗದಾಬ್ಜ ಶ್ರೀಧರನ ೩
ಮಾವ ಮರ್ದನನ ರಾವಣಾಂತಕನ
ಗೋವರ್ಧನವನೆತ್ತಿ ಗೋವಕಾಯ್ದವನ ೪
ಮಕರ ಕುಂಡಲನ ಮುಕುತಿದಾಯಕನ
ಬಕನ ವೈರಿಯ ಕೋಣೆ ಲಕ್ಷ್ಮೀ ರಮಣನ ೫

ಹಾಡಿನ ಹೆಸರು :ಹರಿ ಹರಿ ನರಹರಿ ಎನ್ನಿಜನರು
ಸಂಗೀತ ನಿರ್ದೇಶಕರು :ಶಂಕರ ಶಾನುಭೋಗ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ