Categories
ದಾಸ ಶ್ರೇಷ್ಠರು

ಕಾಖಂಡಕಿ ಶ್ರೀ ಮಹಿಪತಿರಾಯರು

ದಾಸರ ಹೆಸರು : ಕಾಖಂಡಕಿ ಶ್ರೀ ಮಹಿಪತಿರಾಯರು ;
ಜನ್ಮ ಸ್ಥಳ : ಐಗಳಿ(ಅಥಣಿ ತಾಲೂಕು: ಬೆಳಗಾವಿ ಜಿಲ್ಲೆ ;
ತಂದೆ ಹೆಸರು : ಕೋನೇರಿರಾಯರು ;
ಕಾಲ : 1640- ;
ಅಂಕಿತನಾಮ : ಮಹಿಪತಿ, ದೀನಮಹಿಪತಿ, ತರಳಮಹಿಪತಿ, ದಾನಮಹಿಪತಿ, ಮೂಢಮಹಿಪತಿ, ನರಕೀಟಕಮಹಿಪತಿ, ಬಾಲಕಮಹಿಪತಿ, ಪುತ್ರಮಹಿಪತಿ ಮಹಿಪತಿಗುರು, ಮಹಿಪತಿತಂದೆ ಮಹಿಪೆಮ್ಮ ;
ಲಭ್ಯ ಕೀರ್ತನೆಗಳ ಸಂಖ್ಯೆ : 850 ;
ಗುರುವಿನ ಹೆಸರು : ಭಾಸ್ಕರಸ್ವಾಮಿಗಳು ( ಸಾರವಾಡ) ;
ರೂಪ : ಕಾಖಂಡಕಿ ಶ್ರೀ ಮಹಿಪತಿರಾಯರು ;
ಪೂರ್ವಾಶ್ರಮದ ಹೆಸರು : ಗುರುರಾಯರು ;
ಮಕ್ಕಳು ಅವರ ಹೆಸರು : ಕೃಷ್ಣರಾಯರು ದೇವರಾಯರು ;
ಪತ್ನಿಯ ಹೆಸರು : ತಿಮ್ಮವ್ವ ; ಒಡಹುಟ್ಟಿದವರು : ಒಬ್ಬರಿದ್ದರು ಹೆಸರು ಗೊತ್ತಿಲ್ಲ ;
ವೃತ್ತಿ : ಪ್ರಾರಂಭದಲ್ಲಿ ಪುರಾಣಿಕ ವೃತ್ತಿ ನಂತರ ಆದಿಲಶಾಹಿ ಆಸ್ಥಾನದಲ್ಲಿ ಅಧಿಕಾರ, ಅದನ್ನು ತ್ಯಾಗ ಮಾಡಿ ಹರಿದಾಸರಾದರು. ಕೊನೆಗೆ ಸಂನ್ಯಾಸ ಸ್ವೀಕಾರ ಮಾಡಿದರು.
ಕಾಲವಾದ ಸ್ಥಳ ಮತ್ತು ದಿನ : ಕ್ರಿಶ. 1700 ರ ಕಾರ್ತೀಕ ಅಮಾವಾಸ್ಯದಂದು ಬಿಜಾಪುರ ಜಿಲ್ಲೆಯ ಮತ್ತು ದಿನ ಕೊಲ್ಹಾರದಲ್ಲಿ ;
ವೃಂದಾವನ ಇರುವ ಸ್ಥಳ : ಕಾಖಂಡಕಿ (ಬಿಜಾಪುರ ಜಿಲ್ಲೆ) ;
ಕೃತಿಯ ವೈಶಿಷ್ಟ್ಯ : ಧರ್ಮ ಸಮನ್ವಯದ ಸಂದೇಶ ಮೂರೂವರೆ ಮೊಳದ ದೇಹ ಶುದ್ಧಿಯನ್ನು ಪಡೆಯದೆ ದ್ವೆತ ಅದ್ವೆತ ಎಂದು ಯಾಕೆ ಬಡಿದಾಡುತ್ತಿದ್ದೀ ಎಂದು ಕೇಳಿದರು. ನಮಕಾಳೀನ ಸಮಾಜರೊಂದಿಗೆ ಜಾತಿ ಮತಕುಲಗಳ ಭೇದವಿಲ್ಲದೆ ಬೆರೆದು ಅಕ್ಕೋನ್ನತಿಯ ಮಾರ್ಗವನ್ನು ತೋರಿದರು. ಧರ್ಮ ಹಾಗೂ ಸಂಸ್ಕ್ರತಿಯನ್ನು ಪುನರುಜ್ಜೀವಿಸಿದರು ;
ಇತರೆ : ಕನ್ನಡ ಭಾಷೆಯಲ್ಲಿ ಅಲ್ಲದೆ ಮರಾಠಿ, ದರಾಣಿ, ಉರ್ದು ಮತ್ತು ಬಹು ಭಾಷಾ ಕೃತಿಗಳನ್ನು ರಚಿಸಿದ್ದಾರೆ.

Leave a Reply

Your email address will not be published. Required fields are marked *