Categories
ರಚನೆಗಳು

ಕಾಖಂಡಕಿ ಶ್ರೀಕೃಷ್ಣದಾಸರು

೧೨೪
ಅಂಥವನಲ್ಲಾ ಕಾಣಿರೇ ಸಂತತ ತೃಪ್ತಾ ಪ

ಹಸಿದರೆ ಬಂದು ಬೇಡಿ ತುಸು ಹಾಲು ಕೊಳ್ಳಲರಿಯಾ
ಮೊಸರಾಲು ಕುಡಿಯ ಬಲ್ಲನೇ ನಮ್ಮ ಶ್ರೀರಂಗಾ ೧
ಗಡಿಬಿಡಿಯನ್ನಾಲಾಗ ವಡನೆಂಜಿಸಾರುವ
ಕಡೆವ ಬೆಣ್ಣೆಯ ಮೆಲುವನೇ ೨
ತರಳರ ಕೂಡ ಹೋಗಿ ಬರಲು ಹಾದಿ ತಪ್ಪವ
ಕೇರಿ ಕೇರಿತಿರುಗಬಲ್ಲನೇ ೩
ಹೊಸ ಮೋರೆ ಕಾಣಲು ಕುಸಿದು ತಲೆ ಭಾಗುವ
ವಿಷಯಕ್ಕೆ ನಿಮ್ಮ ಯಳೆವನೇ ೪
ಅಡಿಯಿಡ ವುತ-ಕಾಲ ತೊಡಕಿತಾ ಬೀಳುವಾ
ತುಡುಗದಿ ಓಡ ಬಲ್ಲನೇ ೫
ಹಡೆದಾ ಮಕ್ಕಳು ನಿಮಗ ಪೊಡವಿಯೊಳಿಲ್ಲವೇನೇ
ಬಿಡ ನುಡಿಗವ ಸಲ್ಲನೇ ೬
ಗುರು ಮಹಿಪತಿ ಸ್ವಾಮಿ ಸರಸಾಟಕವತಾಳಿ
ಚರಿಸುವ ಅಂತದೋರನೇ ೭

೧೨೩
ಅಂದೇನಿಂದೆನುತಾ ಪ
ಒಂದು ಮನದಿ ನಿಂದು ನಂಬ ಬಲ್ಲಡೆ ಸಾಕು|ತನ್ನ|
ಹೊಂದಿದವರ ಕಾವಾ ಇಂದಿರೇಯರಸನು ಅ.ಪ.
ಸಗರ ಕಾರ್ತೀಕನು ಭಗೀರಥ ಮೊದಲಾದಾ|
ಸುಗುಣ ರಾಯರನುಧ್ಧರಿಸಿಹ|
ಜಗದೊಳೀ ಪಾಮರ ಲೋಕದ ಕುಂದವ|
ಬಗೆಯದೇಪಾವನ ಮಾಡುವ ಗಂಗೆಗೆ ೧
ರನ್ನಗಣಕು ಪರೀಕ್ಷೆ ಮುಖ್ಯರಾಗಿಹ|
ಮನ್ನೆಣೆಯವರನು ಎಚ್ಚರಿಸಿ|
ಮುನ್ನಿನ ಬೋಧಧಿ ಭಾವಿಕ ಸಾಧಕ|
ರನ್ನು ತಾರಿಸುವ ಸತ್ಸಂಗ ಮಹಿಮೆಗೆ ೨
ಹಿಂದಿನ ಶರಣರ ಸಲಹಿದ ದೇವರಿ|
ಗಿಂದೇನು ಮಹಿಮೆಗೆ ಬಲ್ಲವಿಲ್ಲದೇ|
ತಂದೆ ಮಹಿಪತಿ ಸ್ವಾಮಿಯ ನಾಮವ|
ಛಂದದಿ ನೆನೆಯುತ ಇಹಪರ ಪಡೆವುದಕ ೩

೨೩
ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬ
ಮುಕ್ಕಣ್ಣಗೀವರಂತೆ |
ಮೂರ್ಖನೋ ಗಿರಿರಾಜ ವಿಗಡ ಮುನಿಯ ಮಾತಾ
ಲೆಕ್ಕಿಸಿ ಮದುವೆಯ ಮಾಡಿಕೊಡುವನಂತೆ ೧
ತಲೆಯೆಲ್ಲಾಜಡೆಯಂತೆ | ಅದರೋಳಗ ಜಲವಂತೆ |
ತಿಲಕ ಪಣೆಗೆ ಬಾಲಚಂದ್ರನಂತೆ |
ಹೊಳೆವ ಕಿಡಿಗಣ್ಣಂತೆ | ನಂಜುಗೊರಳನಂತೆ |
ಸಲೆರುಂಡ ಮಾಲೆಯಾ | ಸರವ ಹಾಕಿಹನಂತೆ | ೨
ಉರಗಾಭೂಷಣನಂತೆ | ಭಸ್ಮಲೇಪನನಂತೆ |
ಕರಿಯ ಚರ್ಮಾರಂಬರದುಡಿಗೆಯಂತೆ |
ತಿರಿದು ತಿಂಬುವನಂತೆ | ಬಿಳಿಯ ಮೈಯವನಂತೆ
ನಿರುತ ಡಮರು ಬಾರಿಸುವ ಜೋಗಿಯಂತೆ ೩
ಹಡೆದವಳಿಲ್ಲವಂತೆ | ಎತ್ತನೇರುವನಂತೆ
ಅಡವಿ ಗಿರಿಗಳಲಿ ಇಪ್ಪನಂತೆ |
ಒಡನೆ ಪುಲಿದೊಗಲದ ಹಾಸಿಗೆ ಇಹುದಂತೆ |
ನುಡಿಗೊಮ್ಮೆ ರಾಮ ರಾಮಾಯಂಬ ಸ್ಮರಣೆಯಂತೆ ೪
ಮಾರನಾ ರಿಪುವಂತೆ | ಐದು ಮೋರೆಗಳಂತೆ
ಆರೊ ಇಲ್ಲದ ಪರದೇಶಿಯಂತೆ |
ಧಾರುಣಿಯೋಳು ಮಹಿಪತಿಸುತ ಫ್ರಭು ಭವ |ತಾರಕ ಶಿವನೆಂದು ಮೊರೆಯ ಹೊಗಬೇಕಂತೆ ೫

೪೪೦
ಅಗಾಧ ಗುರುರಾಯನ ಕರುಣೆ |
ಪೊಗಳಲಾಪೆನೆ ಪಾಮರ ಪ್ರಾಣಿ ಪ
ತುಂಬಿದ ಭವ ಮಹಾ ಶರಧಿಯಲಿ |
ಒಂಭತ್ತು ಛಿದ್ರದ ನಾವೆಯಲಿ |
ನಂಬಿದ ಶರಣರದಾಂಟಿಸಲಿ |
ಅಂಬಿಗನಾಗಿಹ ಕರುಣದಲಿ ೧
ವಿಷಮ ಅವಿದ್ಯದಾಭ್ರಮದಿಂದ |
ದಶಮನಪರಿ ತನ್ನತಾಮರೆದಾ |
ಪಶುಮನಕೆಚ್ಚರಿಸುತ ಬೋಧಾ |
ಸ್ವಸುಖ ನೀಡಿದ ನಿಜವಾದಾ೨
ಹರಿಯೆಲ್ಲರೊಳೆಂಬುದು ಸಾರಿ |
ಹರಿಭಕುತಿಯ ಕೀಲವ ತೋರಿ |
ಹರಿಸುವ ಜನುಮ ಮರಣದ ದಾರಿ |
ಗುರುಮಹೀಪತಿ ಸ್ವಾಮಿ ಉದಾರಿ ೩

೧೨೦
ಅಯ್ಯಾಜಗದಯ್ಯಾ ಪ
ಅಯ್ಯಾ ಜಗದಯ್ಯಾ ಜೀಯಾನಂದ ನಿಮ್ಮ ಮಹಿಮೆಯ
ತಿಳಿಯದು ಅಜ ಭವಾದಿಗಳಿಗೆ
ತಾಯಿಯ ಮರೆವ ಶಿಶುವಿನ ಪರಿದಣಿದೆನಾ
ಪ್ರೀಯದಲಿ ಸಲಹವು ಅವಗುಣ ನೋಡದೇ ೧
ಧರೆಯೊಳಗ ಸಕಲಪತಿತರನ್ನು ಉದ್ಧರಿಸಲ್ಕೆ
ಪರಬೊಮ್ಮತಾನೊಂದು ರೂಪನಾಗಿ
ಕರುಣದಿಂದಲಿ ಅವತರಿಸಿದನೆಂದೆನ್ನದೆ
ನರನೆಂದು ಬಗೆವವನು ಗುರುತಲ್ಪಕಾ೨
ಸಾಕಾರ ನಿಮೈಲನಾಗಿ ಕ್ರೀಡಿಸಿದರೆಯು
ಏಕ ಮೇವಾದ್ವಿತಿಯು ಶೃತಿಯೆನುತಿರೇ
ಕಾಕು ಬುದ್ದಿಯಲಿ ಪರತರ ವಸ್ತು ನಿಮಗೆಂದ
ಧಿಕ ಉಂಟೆಂಬುವ ಸುರಾಪಾನಿಯು ೩
ಗಗನದಂದಲಿ ಸಕಲಾತೀತನಾಗಿನೀ
ಮಿಗಿಲೆನಿಸಿ ಸಂಸಾರ ಸ್ಥಿತಿಯಲಿರಲು
ಅಗಣಿತತೆ ಗುಣಬಂದನವ ಕಲ್ಪಿಸುವ
ಜಗದೊಳಗ ಬ್ರಹ್ಮತ್ಯಕಾರನವನು ೪
ಎನಗ ತಾರಕ ವಸ್ತು ಇದೆಯೆಂದು ನಿಶ್ಚೈಸಿ
ತನು ಮನರ್ಪಿಸಿ ನಿಮ್ಮ ಚರಣಾಬ್ಜಕೆ
ಘನನಂಬಿ ಶರಣವನು ಪೊಕ್ಕುನೆಲೆಗೊಂಬುದಕೆ
ಅನುಮಾನ ವಿಡಿವವನ ಸ್ವರ್ಣಸ್ತೇಯಾ೫
ಇಂತು ಪರಿಯಾದಾ ನಾಲ್ವರ ಸಂಗಡದಲಿ ಅ
ತ್ಯಂತ ಹರುಷದ ತಾವ ಬಾಳುತಿಹನು
ಅಂತಿಜನ ಸಮನಾದ ಸರ್ವದ್ರೋಹಿಯವನು
ಸಂತತ ಬುಧ ಜನರು ಯನುತಿರುವರು ೬
ಎಂದೆಂದು ಈ ಪಂಚ ಮಹಾಪಾತಕಿಳಗಳ ಮುಖ
ತಂದೆ ತೋರಿದಿರೆನ್ನ ನಯನಗಳಿಗೆ
ಎಂದು ಬಿಡದೇ ಕಾಯೋ ಮಹಿಪತಿ ಸುತ ಪ್ರಾಣ
ಛಂದದಲಿ ಮಂದಮತಿ ತನ ಹರಸಿಯನ್ನಾ ೭

ಮುಚುಕುಂದವರದ
೧೦೨
ಅರುಣಾನುಜ ವೈರಿಯಾ ಭರಣನ ಮಿತ್ರನ ತೋರೇ ಪ
ಉರಗಾ ಹರಿಧ್ವಜಪಿತನಾ | ಅರಿಪಿತ ಸಂಹಾರಕನಾ |
ಗಿರಿಜಾವಲ್ಲಭರಿಯನಾ | ಶರಗರ್ಭನನುತನ ತೋರೆ ೧
ಶೂರರಾಯನಂದನಾ | ಅರಸಿ ಯಣ್ಣನ ಮದನನಾ |
ಮೈರೋಚನ ಆತ್ಮಜನಾ | ವರದನ ತಂದು ತೋರೆ ೨
ಗಿರಿ ರಿಪುತನು ಸಂಭವನಾ | ಅರಸಿಯಣ್ಣನನುಜನಾ |
ಗುರುವರ ಮಹಿಪತಿ ಪ್ರೀಯನಾ | ಹರಿಣಾನೇತ್ರನೀ ತೋರೆ ೩

೧೨೬
ಅರೋಗಣೆಯ ಮಾಡೋ ವಾರಿಜರಮಣಾ|
ಸಾರಿದವರಿಗೆ ಅಭಯವನೀವಕರುಣಾ ಪ
ಪೊಂಬ್ಹರಿವಾಣದಿ ರನ್ನಬಟ್ಟಲುಗಳು|
ಅಂಬುಜಾನನರಿಸಿ ಲಕುಮಿಯವೆರಸಿ ೧
ಪರಿಪರಿ ಮಾವಿನ ತನಿವಣ್ಗಳ ನೋಡಿ|
ಮೆರೆವ ಸುದ್ರಾಕ್ಷ ದಾಳಿಂಬರ ಸವಿಯಾ ೨
ಶಾಲ್ಯೋದನ್ನದಿ ಸುಘೃತ ಪರಿಪರಿಯ ವಿ|
ಶಾಲ ಶಾಖಂಗಳ ಸವಿಯನೆ ಕೊಳುತಾ ೩
ಪಂಚ ಭಕ್ಷ್ಯವು ಕೆನೆವಾಲು ಸೀಕರಣಿಯು|
ಮುಂಚೆ ಶರ್ಕರದ ಪಾಯಸ ಪರಿಪರಿಯ ೪
ದಧ್ಯೋದನ್ನದಲುಹಗಾಯಿ ಸ್ವಾದಿಸುತಾ|
ಸದ್ವಿದ್ಯದ ಮನ ಕಲ್ಪತರುವೆಲ್ಲಾ ೫
ಪತ್ರಸುಮನ ಫಲತೋಯಭಕ್ತರುಕೊಟ್ಟ|
ರರ್ಥಿಲಿ ಕೊಂಬೊ ದಯಾಳುತನದಲ್ಲಿ೬
ತಂದೆ ಮಹೀಪತಿ ನಂದನ ಸಾರಥಿ|
ಎಂದೆಂದು ಸ್ಮರಣೆಗೊದಗಿ ಮುದ್ದು ಮುಖದಿ೭

೭೪೦
(ಕಾಲಜ್ಞಾನ)
ಅರ್ತುಕೊಳ್ಳರೋ ಹಿತವಾ ಜನರಿನ್ನು |
ಮೈಯ್ಯವ ಮರಿಯ ಬ್ಯಾಡಿರೋ |
ಮತ್ರ್ಯದೊಳಗ ಕಲಿರಾಯ ನರಸುತನ |
ಪ್ರಬಲ ವಾಯಿತು ಕೇಳಿರೋ ಪ
ಬೀಳು ಬಿದ್ದಾವೋ ಧರ್ಮದಾ ಭೂಮಿಯು |
ಅಧರ್ಮವೇ ಹೆಚ್ಚೀತು |
ಹೇಳಲಿನ್ನೇನವಗುಣಿಗಳು ಪ್ರಕಟಿಸಿ | ಕೇಡು ತಂದಾರು ಜಗಕೆ |
ಖೂಳರ ಹಿರಿತನವು ಒಳ್ಳೆವರಾ |ಮಾನ ಮನ್ನಣೆ ಹೋದಾವು |
ಕೀಳು ಮಾತುಗಳಾಡಿ ಬಿಸಿ ನೀರು ಚಲ್ಲಿ |
ಮನೆಯ ಕೊಂಡುಂಬುವರು ೧
ಸತಿಯರು ವೃತ ಗೆಟ್ಟಾರೋ ಪತಿಸೇವೆ |
ಮರ್ಯಾದೆಗಳ ಬಿಟ್ಟಾರೋ |
ಕೃತಕ ಕುಟಿಲ ದುಷ್ಟ ಬುದ್ಧಿಯಲಿ ಬಾಳುತ |
ಕುಲಕ ಮಾತವ ತಾಹರು |
ಪಿತನೊಳು ಗುರುಭಾವ ಹಿಡಿಯದೆ |
ಮಕ್ಕಳು ಹಗೆ ಹಾರೋ |
ಹುಸಿನುಡಿದು ಮನೆ ದೈವವನೇ ಮಾರಿ |
ಹದಗೆಟ್ಟು ಹೋಗುವರೋ ೨
ಒಡಲು ಕಾಮಾಟಿಕೆಯಾ ಎರಡರಿಂದ |
ಕೋಣ-ನಂದದಿ ಬಗಿದು |
ಪಡಿ ಕೊಟ್ಟು ಸಲಹುವ ಒಡಿಯ ನೆಚ್ಚರ ವಿಲ್ಲಾ |
ಮರಹು ಕತ್ತಲೆ ಮುಸುಕಿ |
ಪೊಡವಿಲಿ ಭಕುತಿ ಮಾರ್ಗ ಮುಗ್ಗಿತು |
ಎಲ್ಯಾರಿದ್ದರ ಹೋಲಿಕೆಯು ೩
ಕಡಲ ಶಯನನ ದಾಸನೆಂದರೆ ಬಾಗರು | ನೀಚರಿಗೆರಗುವರು
ಕನ್ಯರೈದು ವರುಷಕ ಗಂಡನ | ಸಂಗವ ಬಯಸುವರು |
ಇನ್ನೇನು ಏಳು ಬರುಷದ ಬಾಲೇರು |
ಗರ್ಭವ ಧರಿಸುವರು |
ಅಣ್ಣಾ ತಂಗಿಗೆ ಮದುವೆ ಮುಂದಕ |
ಆದಾವೋ ಜಗದೊಳಗ |
ಅನ್ನವು ಒಂದೇ ಠಾವಿಲಿಯಲ್ಲಾ ಉಣುತಲಿ |
ಜಾತಿ ಸಂಕರ ವಾಹುದು ೪
ಎರಡು ಸಾವಿರ ವರುಷಕೆ ದೇವಾಲಯ |
ಯಾತ್ರೆಯು ನಿಲ್ಲುವವು |
ಮರಳೈದು ಸಾವಿರ ವರುಷಕೆ ಭಾಗೀರಥಿಯ |
ನೀರು ತೋರವೆಲ್ಲಿ ೫
ಎರಡೈದು ಸಾವಿರ ವರುಷಕೆ ಹರಿಕಥೆ |
ಶಾಸ್ತ್ರಗಳು ಮರೆವುದು |
ಹುಸಿಯಲ್ಲ ಗುರುವರ ಮಹೀಪತಿ
ಸಾರಿದಾ ಬೋಧವಿದು೬

೫೫೧
ಅಲ್ಲೇ ನಿಲ್ಲೇನು | ಯೋಗಿಗೆ | ಅಲ್ಲೇ ನಿಲ್ಲೇನು ಪ
ಎಲ್ಲಿ ನೋಡಿದರಲ್ಲಿ ಘುಲ್ಲನಾಭನೇ ಇಹ | ಅಲ್ಲೇ ನೀಲ್ಲೇನು |
ನಿಲ್ಲದ ಮನಸಿನ ಕಾಲಾಟ ಒದಗಿತು | ಅಲ್ಲೇ ನಿಲ್ಲೇನು ೧
ನೀರೊಳಗಾನಂದಲ್ಯಾಡುವ ಮೀನಕ | ಅಲ್ಲೇ ನಿಲ್ಲೇನು |
ಹರುಷದಿ ಕಾನನ ತಿರುಗವ ಎರಳೆಗೆ | ಅಲ್ಲೇ ನಿಲ್ಲೇನು ೨
ತಳಿತಿಹ ಬನದೊಳು ತಿರುಗುವ ಪಕ್ಷಿಗೆ | ಅಲ್ಲೇ ನಿಲ್ಲೇನು |
ನೆನೆನುಡಿ ಸಾರಿದ ಮಹಿಪತಿ ನಂದನ | ಅಲ್ಲೇ ನಿಲ್ಲೇನು ೩

೫೧೪
ಅಲ್ಲೇನಿಲ್ಲೇನು ಮತ್ತಿಲ್ಲೇನು ಪ
ಗುರುವಿನಂಘ್ರಿಯ ಕಂಡು ಗುರುತವ ಕೇಳದೇ |
ಅಲ್ಲೇ ನಿಲ್ಲೇನು |
ಹರಿರೂಪಗಾಣದೇ ಡಂಭದಿ ತಿರುಗಿದ | ಅಲ್ಲೇ ನಿಲ್ಲೇನು ೧
ಕರ್ಮಧರ್ಮವ ಮಾಡಿ ಸ್ವರ್ಗವ ಪಡೆದನು | ಅಲ್ಲೇ ನಿಲ್ಲೇನು|
ಮರ್ಮವ ಗಾಣದ ವಿಷಯದ ಸಂಭ್ರಮ | ಅಲ್ಲೇ ನಿಲ್ಲೇನು ೨
ಮನೆವಾರ್ತಯ ಬಿಟ್ಟು ಮಠದಾಶೆ ಹಿಡಿದನು |
ಅಲ್ಲೇನಿಲ್ಲೇನು |
ವನಿತೆ ಮಕ್ಕಳ ಬಿಟ್ಟು ಶಿಷ್ಯರ ನೆರಹಿದ | ಅಲ್ಲೇ ನಿಲ್ಲೇನು ೩
ಎಲ್ಲ ಶಾಸ್ತ್ರವನೋದಿ ಪ್ರಾಕೃತಹಳಿದನು | ಅಲ್ಲೇ ನಿಲ್ಲೇನು |
ಬಲ್ಲವ ನಾನೆಂಬ ಗರ್ವವು ಸೇರಿತು | ಅಲ್ಲೇ ನಿಲ್ಲೇನು ೪
ಮನದಲ್ಲಿ ನೆನೆವಂಗೆ ಮನೆಯೇನು ಮಠವೇನು |
ಅಲ್ಲೇ ನಿಲ್ಲೇನು |
ಮನದಲೆಚ್ಚರವಿಲ್ಲ ಕವಾಟಹೊಕ್ಕನು ಅಲ್ಲೇ ನಿಲ್ಲೇನು ೫
ಮಹಿಪತಿ ನಂದನ ಸಾರಿದ ಸ್ವಹಿತ ಅಲ್ಲೇ ನಿಲ್ಲೇನು |
ಶ್ರೀಹರಿ ನಾಮದ ನಂಬುಗೆ ಇರಬೇಕು | ಅಲ್ಲೇ ನಿಲ್ಲೇನು ೬

೫೫೪
ಅವ ಸಂತನಲ್ಲಾ ಸಂತರ ವೇಷದಿ ತಿರುಗಲೇನು ಪ
ಸಂತರಲ್ಲಿ ಹೋಗು | ಅಂತರ ಸುಖವರಿಲಿಲ್ಲಾ |
ತಂತುವಿಡಿಯದೇ ಸ್ಥಿತಿ | ಭ್ರಾಂತತನಲ್ಯಾಡುವವ ೧
ಮಂಜುಜ್ಞಾನದಿಂದ ಬಹು | ರಂಜನೆಯಾ ಮಾಡಿ |
ಬಂಜೆ ಹೂವಿನಂತೆ ಒಣ | ಭಂಜನೆಯಾ ದೋರುವವ ೨
ನಿಷ್ಠೆಯಿಂದ ಪರವಸ್ತು | ಮುಟ್ಟಿಗಾಣಲಿಲ್ಲಾ |
ಭ್ರಷ್ಟ ಬೂಟಿಕೆಯ ಮಾಡಿ | ಹೊಟ್ಟೆಯನೇ ಹೊರೆವನವ ೩
ಮ್ಯಾಲ ಸಾಧುವೇಷ | ಒಳಗೆ ಖಳದೋಷ |
ತಾಳಿ ಗರ್ವದಿಂದ ಸಾಧು | ಶೀಲ ಕುಂದ ನೀಡುವವ ೪
ಗುರು ಮಹಿಪತಿಸುತ | ಸಾರಿದ ನೋಡಾ |
ಶರಣರಿಗೇ ಬಾಗಿ ಅವರ ಚರಿತೆಯ ಕೊಂಡಾಡದವ ೫

೫೧೭
ಅವಗೆಲ್ಲಿಹುದೋ ನಿಜ ಮುಕ್ತಿ |
ದಾವಗಿಲ್ಲವೋ ಗುರುಪಾದ ಭಕ್ತಿ ಪ
ತಂದಿ ತಾಯಿ ಗುರು ಬಂಧು ಬಳಗಾ |
ಎಂದು ಹಂಬಲಿಡದೆ ಮನಲೀಗಾ ೧
ಗುರು ಕಂಡಾಗಳೆವೆ ಶರಣೆಂಬಾ |
ತಿರುಗಿ ನೋಡಲು ಮರವನು ಡೊಂಬಾ೨
ಹೊರಗ ದೋರುವ ಡೊಂಬ ಅನೇಕ |
ಗುರುಸೇವೆಗೆ ಹೋದನು ಹೋಕಾ ೩
ಪೂಜೆ ಸರ್ವೋಪಚಾರದಿ ಮಾಡಿ |
ತ್ಯಾಜ ಪಡಿಯನು ಗುರುದಯ ಕೂಡಿ೪
ಪರಮ ಗತಿಗಿದೇ ಕಾರಣವೆಂದು |
ಗುರುಮಹಿಪತಿ ಬೋಧಿಸಿದನಿಂದು೫

೧೧೫
ಅವತಾರ ಹರಿಯ ವಿವರಿಸೆ ಬ್ರಹ್ಮಗಳ ಅಳವಲ್ಲಾ ಪ
ಸುರಿವ ಮಳೆ ಹನಿ ಎಣಿಸಬಹುದು
ಧರಣಿಯ ರಜ ಕಡಗಣಿಸ ಬಹುದು
ಪರಮಾಣು ವರ ವೆಣಿಸಬಹುದು ೧
ತಾರೆಯ ಲೆಖ್ಖವ ಹಿಡಿಯಲು ಬಹುದು
ನೀರಸ್ವಿಯ ಮಾಪವ ಮಾಡಬಹುದು
ಮೇರುಗಿರಿ ತೂಗಿ ನುಡಿಯ ಬಹುದು ೨
ಅನಂತ ಗುಣಗಣ ನಿಲಯನುಯನಿಸಿ
ಘನಗುರು ಮಹಿಪತಿ ಪ್ರಭು ಅವತರಿಸಿ
ಅನುಚರರ ಹೊರೆವನು ಕರುಣಿಸಿ ೩

೫೫೨
ಅವನೆವೆ ದಾನವನು ನೋಡಿರೋ |
ಅವನವೇ ದಾನವನು ಪ
ದಾವನು ಸಾಕುವ ದೇವರ ಮರೆದು |
ಅವಿವೇಕತನದಲಿ ಜೀವಿಸುತಿಹಾ ಅ.ಪ

ವಿಷಯದ ಸಂಭ್ರಮದಾ ಸ್ಥಿರಪಟ್ಟಾ |
ವಸುಧಿಲಿ ಬಗದಾವಾ |
ಆಶನ ವ್ಯಸನದೊಳು ಪಶುವಿನ ಪರಿಯಲಿ |
ನಿಶಿದಿನ ಗಳೆವುತ ದೆಶೆಗೆಟ್ಟು ಹೋದಾ ೧
ಸಾಧು ಸಂಗಕ ದೂರಾ ಶ್ರವಣದ |
ಹಾದಿಗೆಂದಿಗೆ ಬಾರಾ |
ಸಾಧಿಸಿ ಕುವಿದ್ಯಾವಾದಾ ಆಟಗಳನು |
ಸಾದರ ನೋಡುತಾ ತಾ ದಿನಗಳೆವಾ ೨
ಗುರು ಮಹಿಪತಿ ಬೋಧಾ ನಂದನು |
ಸಾರಿದನಾ ಹಿತವಾದಾ |
ಹರಿನಾಮಾವೆಂದಿಗೆ ಸ್ಮರಿಸು ಮುಖದೊಳು |
ನರದೇಹವೆಂಬುದು ಬಾರದು ನೋಡಿ ೩

೧೧೪
ಅವನೆವೆ ಧನ್ಯ ನೋಡಿ
ಅವನ ದರುಶನ ಮಾಡಿ ಪ.
ಹರಿಧ್ಯಾನ ಹೃದಯದಲ್ಲಿ |
ಹರಿನಾಮ ಜಿವ್ಹದಲಿ |
ಹರಿಕಥೆ ಶ್ರವಣದಲ್ಲಿ|
ಹರಿಯಾ ಸೇವೆ ಅಂಗದಲ್ಲಿ೧
ಹರಿಭಕ್ತಿಯೊಳು ಕೂಡಿ |
ಹರಿ ಕೀರ್ತನೆಯ ಮಾಡಿ |
ಹರಿ ಪ್ರೇಮ ತುಳಕಾಡಿ |
ಹೊರಳುವ ನಲಿದಾಡಿ ೨
ತಂದೆ ಮಹಿಪತಿ ದಯಾ
ದಿಂದ ಪಡೆದು ವಿಜಯಾ
ಹೊಂದುವ ತಿಳಿದು ನೆಲಿಯಾ
ಛಂದವಾದಾ ಪುಣ್ಯಕಾಯಾ ೩

೫೫೩
ಅವನೆವೆ ಯೋಗ್ಯ ನೋಡಿರೈ ಭಕುತಿಗೆ |
ಸಾಯಾಸವಿಲ್ಲದ ಯೈದನವನಿಯೊಳಗ ಮುಕುತಿಗೆ ಪ
ದಾವ ನಿತ್ಯ ಶ್ರವಣ ಮಾಡಲೆಂದು ಬ್ಯಾಸರಾ |
ಹ್ಯಾವ ಹೆಮ್ಮೆಯಲ್ಲಿ ಕಳಿಯ ವ್ಯರ್ಥವಾಸರಾ |
ನೋವ ಮಾಡುತಿರಲು ತಾಪತ್ರಯದ ತೂರಾ | ಬಳಲ
ಆವಗಿರುವ ಕೂಡಿಕೊಂಡು ಹರಿಯ ದಾಸರಾ ೧
ನ್ಯೂನ ನೋಡದೆ ಪರರ ಸದ್ಗುಣವನೆ ಕೊಂಬನು | ದಂಭ |
ಮಾನ ತೊರೆದು ಸ್ತುತಿಯ ನಿಂದ್ಯ ಸರಿಯ ಕಾಂಬನು |
ಜ್ಞಾನದಿಂದ ಪಡೆದು ಗುರುಹಿರಿಯರಿಂಬನು | ತ್ವರಿತ |
ಸ್ವಾನುಭವದ ಸೌಖ್ಯಸಾರ ಸವಿಯನುಂಬನು ೨
ಬಲಿದು ಭಾವನಿಂದ ತಿಳಿದು ಸ್ವಹಿತುಪಾಯನು ದೃಢದಿ |
ಹುಲು ಮನಿಜರಿದಿರ ಹೋಗಿ ದೆರಿಯ ಬಾಯನು |
ತಳೆದು ವೇಷದಿಂದ ದಣಿಸವಾವ ಕಾಯನು | ಹೃದಯ |
ದೊಳನವನ ನಲುವ ಗುರುಮಹಿಪತಿ ಪ್ರೀಯನು ೩

*
ಅವನೆವೆ ಶರಣಾ ಪ
ಗುರುಗರಡಿಯ ಮನಿಯೊಳು ಬೆರೆದು |
ಗುರುದಾಸರ ಸಂಗವ ಬಲಿದು |
ಅರಿತಾವಿನಾ ಅಲ್ಲಿಯ ಕಳೆಗಳ ತಿಳಿದು ೧
ಹರಿದಾಡುವ ಚಂಚಲ ನೀಗಿ |
ಗುರುಸೇವೆಯಲಿ ತತ್ಪರನಾಗಿ |
ಕರುಣವ ಬೀರ್ವನು ಅರಿಸಖರೊಳಗಾಗಿ೨
ಆರಿಗೆ ಹೊಲ್ಲೆಯ ತಾ ನುಡಿಯಾ |
ಆರಿಂದು ನಿಷ್ಟುರ ಪಡಿಯಾ |
ಧರಿಯೊಳು ಸನ್ಮತ ಮಾರ್ಗದಿ ತಾ ನಡಿಯಾ೩
ದೋರಗಡುದೆ ಬಲ್ಲವಿಕೆಯನು |
ಪರರವಗುಣವನು ಅರಿಸನು |
ನೀರು ಹಾಲಿನ ಸಖ್ಯಕ ಪರಿಲಿಹನು೪
ತನುಧನ ಮದದೊಳು ಬೆರಿತಿರದೇ
ಘನದೆಚ್ಚರಿಕೆಯ ಮರೆದಿರದೇ
ನೆನೆವನು ಗುರುಮಹಿಪತಿಸ್ವಾಮಿಯ ಬಿಡದೇ೫

೫೧೫
ಅವನೇ ನಿಜಯೋಗಿ | ವಿರಾಗಿ |
ಶಿವಸುಖ ಕಂಡಿಹ ಭೋಗಿ ೧
ದಾವನ ನೋಟದಲಿ | ಸಮ ವಿಷಮಾ |
ಭಾವನೆಗಾಯಿತು ಸೀಮಾ ೨
ಮಾಯಾ ಕಲ್ಪಿತದಾ | ಜಗಮರೆತಾ |
ನ್ಯಾಯದಿ ಚಿದ್ಘನವರಿತಾ ೩
ಮಂದಗೆಡನು ಚರಸೀ | ತಾನಾಗಿ |
ಬಂದದನುಂಬನು ತ್ಯಾಗಿ ೪
ಬಲ್ಲವಿಕಿಲಿ ಬಿಗಿಯಾ | ದಾವನು |
ಎಲ್ಲರಿಗ್ಯಾಗಿಹ ಹರಿಪ್ರಿಯನು೫
ಮಹಿಪತಿ ಸುತ ಪ್ರಿಯನಾ | ತಿಳಿವಿಕೆಯಾ |
ಸೋಹ್ಯವ ತಿಳಿದನು ನೆಲಿಯಾ೬

೧೨೧
ಅಹುದಹುದನಾಥ ಬಂಧು
ಅಹುದಹುದನಾಥ ಬಂಧು|ಅನುಪಮ್ಯ|
ಮಹಿಮೆ ಕಾರುಣ್ಯಸಿಂಧು|
ಏನೆಂದು ಪೇಳೆಲೆಮ್ಮಾ|ಈ ದಯಕ|
ತಾನು ಪಮೆ ಇಲ್ಲವಮ್ಮಾ|
ನ್ಯೂನಾರಿಸದೆ ಬಂದನು,ಕ್ಷಮೆಯಿಂದ|
ತಾನಾಗಿ ಸಲಹುತಿಹನು|
ಜ್ಞಾನವಿಲ್ಲದೆ ತರಳನೆಂದಪೇಕ್ಷಿಸದೆನ್ನ|
ಮನ ನೆನೆವಿನೊಳಗಿಟ್ಟು ತನ್ನ ಅಂಘ್ರಿಯದಾ ೧
ಪತಿತರೊಳು ಪತಿತ ಅಧಮಾ|ಅಮೂಲ್ಯ|
ಪತಿಹೀನ ಮೂಢ ಪರಮಾ|
ಸುತ್ತ-ಭಕುತಿ ಮಾಡಲರಿಯೆ|ಚತೆರ ಸಂ|
ಸ್ರ‍ಕತ ಮಾತನಾಡಲರಿಯೇ|
ಗತಿಗೈದರೊಂದೊಂದು ವೃತದಿ ಮೊದಲಾದವರು|
ಕ್ಷಿತಿಯೊಳಗೆ ಎನ್ನಂಥ ಶೂನ್ನರಾರಮ್ಮ ೨
ನೆಲಿಗೆ ಮುಯ್ಯಕ ಮುಯ್ಯವು|ಈ ತೆರದಿ|
ಸಲೆ ನಡೆತಿ ಉಂಟು ಕೆಲವು|
ಕೊಳದೆ ಕೊಡುವವರಿಂದಿಗೆ|ಆರಿಲ್ಲಾ|
ನಳಿನಜೇಂದ್ರಾದ್ಯರೊಳಗೇ
ಒಲಿದು ಮಹೀಪತಿ ಸುತನ ಕರವಿಡಿದು ತನ್ನ|
ದಾಸರ ದಾಸ ದಾಸನೆನಿಸಿದ ಬಿರದಿಗಿಂದು ೩

೧೨೨
ಅಹುದಹುದು ದೀನ ಬಂಧು
ಅಹುದಹುದು ದೀನಬಂಧು|ಶ್ರೀ ಕೃಷ್ಣ|
ಸಹಕಾರಿ ಶರಣ ಜನರಾ ಹರಿಯೇ ಪ
ಕಪ್ಪೆಮರಿ ಅಂದರೇನು|ಕಾಯ್ದಿರುವಾ|
ಅಪ್ಪವಿನೋಳು ಬಳಲುತ|ಹರಿಯೇ|
ಸರ್ಪಶಯನೆಂದು ಕರೆಯೆ|ಬಂದೊದಗಿ|
ಒಪ್ಪಿಕೊಳ್ಳಬೇಕು ದಯದಿ ಹರಿಯೇ ೧
ಪಕ್ಷಿತತ್ತಿಯು ಬೀಳಲು|ಭಾರತ ಮಹಾ|
ಅಕ್ಷೋಹಿಣಿ ರಣದಲಿ ಸಲವೆಂದು|
ಲಕ್ಷಣದಿ ಗಜ ಘಂಟೆಯಾ|ನೀ ಕೆಡಹಿ|
ರಕ್ಷಿಸಿದ ಮುಸುಕಿ ಅವರ ಹರಿಯೇ ೨
ಕಬ್ಬುಲಿಗ್ಯಾತದ ರೂಪದೀ ಕಪಟದಲೀ|
ಒಬ್ಬರಾಯನ ಕನ್ಯೆಯಾ ಭೋಗಿಸುತ|
ನಿಬ್ಬುರಕ ನಿನ್ನ ನೆನೆಯೇ|ಗತಿಗೊಟ್ಟು|
ಉಬ್ಬುಸವ ಕಳೆಯಲಿಲ್ಲದೇ ಹರಿಯೇ೩
ವ್ಯಭಿಚಾರಿ ಗಣಿಕೆ ತಾನು|ಧನವೀವ|
ಪ್ರಭುಗಳೊಂದಿನ ಕಾಣದೇ ವಿರಕ್ತಿಯಲಿ|
ವಿಭುನಿನ್ನೀ ಕೀರ್ತನೆಗಳಾ ಮಾಡಲಿಕ್ಕೆ|
ಅಭಯ ಪದವಿತ್ತೆ ಬೇಗ ಹರಿಯೇ೪
ಹಿಂದಾದ ಕಥಿಗಳಿವನು|ಅಹುದಲ್ಲೋ|
ಎಂದಾರು ಬಲ್ಲರಯ್ಯಾ ಮಹಿಪತಿ|
ಕಂದರೊಡೆಯನೇ ಎನ್ನ ಕೈ ಪಿಡಿದ|
ರಿಂದು ನಿಜವೆಂಬೇ ನಾನು ಹರಿಯೇ ೫

೫೦೦
ಆಡುವರೇಚಕ ಪೂರಕ ನಂದಿಯ |
ಜೋಡಿಸಿ ಎರಡನು ಮೆರೆವಸುಷಮ್ನಿಯ |
ನಾಡಿಯ ರಥಿಕರ ಹೂಡುತ ಮೆಲ್ಲನೆ |
ನಿಜಮನ ಸಾರಥಿಯಾ |
ಕೂಡಿಸಿ ಹರುಷಲೇರಿ ನಡೆಸುತ ಸ |
ವಾಡಿಕಿಯಿಂದಲಿ ಮೇಲ್ಗುರಿಯಾತ್ರೆಯ |
ಮಾಡಿ ವಿಲಾಸದಲಾಡಿದ ಮಹಿಪತಿ |
ಗುರುಮೂರ್ತಿಗೆ ಶರಣು

೧೧೦
ಆನಿ ಬಂತಿದೆಕೋ ಮಹ ಮದ್ದಾನಿ ಬಂತಿದಕೋ|
ಸ್ವಾನಂದದಲಿ ಮೆಲ್ಲಮೆಲ್ಲನೆ ಅಡಿಗಳ|
ತಾನಿಡುವುತೊಲಿವುತಲಿ ನೋಡಮ್ಮಾ ಪ
ಕರಿಯ ಬಣ್ಣದ ಲೊಪ್ಪತಾ | ಕಿರಿಗುದಲು |
ಸಿರದಲೀ ಹೊಳೆವುತಾ |
ಪೆರೆನೊಸಲೊಳು ಕೇಶರದ ಕಸ್ತೂರಿ ರೇಖೆ |
ಕರುಣ ಭಾವದ ಕಂಗಳು ನೋಡಮ್ಮಾ ೧
ಝಳ ಝಳಿಪಂಬರದೀ | ಝಣ ಝಣಲೆಂಬಾ |
ಚೆಲುವ ಘಂಟೆಯರವದೀ |
ವಲಿದು ತನ್ನಯನಿಜ ಶರಣರ ಅನುಮತ |
ದಲಿ ನಲಿದಾಡುತಲೀ | ನೋಡಮ್ಮಾ ೨
ದುಷ್ಟಜನರು ತೊಲಗೀ | ಯನುತ ಮುಂದ |
ಶಿಷ್ಟಭಟಿರುವದಗೀ |
ಅಟ್ಟಹಾಸದಿ ಬಂದರಿದೇ | ಮಹಿಪತಿ ಜನ |
ಇಷ್ಟ ದೈವತ ಎನಿಪಾ ನೋಡಮ್ಮಾ ೩

೪೮೭
ಆರತಿ ಗುರುರಾಯಾ :ಸ್ವಾನಂದ ಚಂದ್ರೋದಯಾ
ದೋರಲು ಭವತಾಪಾ :ಹೋಯಿತು ನಿಶ್ಚಯಾ ಪ
ಚಿತ್ತಚಕೋರಕಿಂದು :ಬೋಧಾಮೃತವನುಣಿಸೀ
ಮತ್ತಹೃದಯನೈದಿಲಿಗೆ :ಸುಖವಿತ್ತೆ ಕರುಣಿಸಿ ೧
ಜ್ಞಾನಚಂದ್ರ ಕಾಂತಿಯಲ್ಲಿ :ರಾಮರಸವಿಸೀ
ತಾನೇಪದ ರೂಪದಿಂದಾ :ನೆಲಿಸಿತು ಧನ್ಯಗೈಸಿ ೨
ಛಂದದಿ ಪ್ರೇಮ ಶರಧಿ :ಹೊರಚೆಲ್ಲಿ ತೈಯಿಂದು
ತಂದೆ ಮಹಿಪತಿ ಸ್ವಾಮಿ :ಕಂದನುದ್ಧರಿಸೆಂದು ೩

೪೮೬
ಆರತಿ ಬೆಳಗುವೆ ನಾ ಸದ್ಗುರುವಿಗೆ ಪ
ಭಾವದ ಪೊಂಬ್ಹರಿವಾಣ ಭಕುತಿಯಾ
ತೀವಿದ್ಯಾರತಿಜ್ಞಾನ ಜ್ಯೋತಿಯಲಿತ್ತಿ೧
ಮುಖದಲಿ ನುಡಿಯುತ ನಾಮಾವಳಿಯೂ
ಸಕಲರು ಪ್ರೇಮದಿ ಹಾಕಿ ಚಪ್ಪಾಳಿಯಾ೨
ನಯನದಿನೋಡಿ ಶರಣವ ಮಾಡೀ
ಭಯವನೀಡಾಡಿ ಸ್ತುತಿಗಳ ಪಾಡಿ೩
ಇಂದಿನ ದಿನದಾನಂದವು ನಮಗ
ಹಿಂದಿನ ಪುಣ್ಣ್ಯಿದಿರಿಟ್ಟಿತು ಈಗ ೪
ಒಡಲ್ಹೊಕ್ಕು ಮಹಿಪತಿನಂದನೊಡಿಯನಾ
ಪಡೆಯ ಬನ್ನಿರೀಬ್ಯಾಗ ಮುಕುತಿಯ ಸಾಧನಾ೫

೪೮೮
ಆರತಿ ಬೆಳಗುವೆನಾ :ಮಹಿಪತಿ ಗುರುವಿನಾ
ದೋರುವ ಪಾದುಕಿಗೆ :ಒಪ್ಪಿಸಿ ಜೀವಪ್ರಾಣ ಪ
ಜಡಜೀವತಾರಿಸಲಿ :ವಸ್ತುಗುರುರೂಪತಾಳಿ
ಪೊಡವಿಲಿನ್ನು ಮಹಿಮೆದೋರಿ
ನಿಂತ ವಿಶ್ವಾತ್ಮದಲ್ಲಿ ೧
ಇದ್ದಲ್ಲೆ ಭಾವಿಸಲಿ ಗುರುಜ್ಞಾನದಾಕೀಲಿ
ಬುದ್ಧಿಪ್ರೇರಕನಾಗಿ
ಹೇಳುವನು ಮೌನದಲಿ೨
ಉದ್ಧವಗಯದುರಾಯಾ
ನೀಡಿದಂತೆ ನಮ್ಮಯ್ಯಾ
ಮುದ್ದು ಪಾದುಕೆಯಾಕೊಟ್ಟು
ಮಾಡೆಂದು ಪೂಜೆಯಾ ೩

೭೭
ಆರತಿ ಬೆಳಗುವೆನಾ | ಅಸುರವಂದ್ಯಗೆ
ಕಾರುಣ್ಯ ವೇದವ್ಯಾಸ ಮುಕುಂದಗೆ ಪ
ಸತ್ಯವತೀ ಸುತನಾಗ್ಯವತರಿಸಿದ |
ಸತ್ಯ ಸನಾತನ ಮೂರುತಿಗೆ ೧
ಅಖಿಲದೋಳಗೆ ಭಾರತ ಭಾಗವತವ
ಸಕಲ ಪುರಾಣವ ರಚಿಸಿದವಗೆ ೨
ಜ್ಞಾನ ಭಕುತಿ ವೈರಾಗ್ಯವ ತೋರುತ
ತಾನಿಜಗತಿ ಪದ ದೋರಿದಗೆ ೩
ಶರಣಜನರಿಷ್ಟಾರ್ಥವ ನೀಡುತ
ಗುರುಮಹೀಪತಿಸುತ ಸಾರಥಿಗೆ ೪

೩೭೬
ಆರತಿಯತ್ತಿರೆ ಆರತ ಭಕುತಿಲಿ | ಆರತಿ ಪತಿ ಪಿತ |
ಅರವಿನುತಗೆ (ಮಾರುತನುತಗೆ) ೧
ಕಾಲಜನನುಜಗ ಕಾಕಾದಲಯ
ಕಾಲದುರಿತರಿದ ಕಾಲಕಾಲಗ ೨
ಕಾಲಿಂದಿ ನದಿ ಯೊಳು ಕಾಳಿಯಸಿರದಲಿ
ಕಾಲಲಿ ಕುಣಿದ ಲೋಕಾವಳಿ ವ್ಯಾಪಕಗ ೩
ಕಾಳರೂಪದಿ ಗಜಕಾಲ್ವಿಡಿದ ಮಕರಿ
ಕಾಲಪುರಕಟ್ಟಿದ ಕಾಲ ಜಲದ ಭಗ ೪
ಇಂದಿರೆ ಪತಿ ಜನಗ ತಂದೆ ಮಹಿಪತಿನಂದನ ಪಾಲ ಮುಕುಂದ ಶ್ರೀಹರಿಗೆ ೫

೫೫೫
ಆರಾದರಾಗಲಿ ಮೂರ್ಖರ ಮನಸಿನ
ಮೋಡಿಯ ಅಸಗೊಳದೈ ಪ
ಆರಾದರಾಗಲಿ ಮೂರ್ಖರ ಮನಸಿನ
ಮೋಡಿಯ ಅಸಗೊಳದೈ |
ಧೀರರು ಪಾಯವ ಗಾಣದೆ ಸುಮ್ಮನೆ
ಕುಳಿತರು ಕೈದೆಗೆದೈ ೧
ಕುಡತಿಯ ಹಾಲದಿ ಕ್ಷಾರ ಸಮುದ್ರವ
ಸಿಹಿಮಾಡಲು ಬಹುದೈ |
ಬಡಿದೆಬ್ಬಿಸಿ ಸಿಂಹನ ಮರಿಯೊಡನೆ
ಸೆಣಸುತ ಗೆಲಬಹುದೈ ೨
ಧರಿಯೊಳು ನೃಪರಿಗೆ ಬಗಿಯದ
ಮದದಾನೆಯ ಭೇದಿಸಬಹುದೈ |
ಸಿರಸಿನ ಹೂವಿನ ಯಸಳದಿ ವಜ್ರವನೆರೆ ಛೇದಿಬಹುದೈ ೩
ಮೇರುಪರ್ವತವನ್ನು ಸೂರ್ಯನಡಗದ
ಮುನ್ನ ಸುತ್ತಿರಬಹುದೈ |
ಆ ರಾವಣ ದುರ್ಯೊಧನ ತಿದ್ದದೆ
ಹೋದರು ಜನವಹುದೈ ೪
ಕರಿಕಂಬಳಿ ಬಿಳಿದಾಗುವದೆಂಬುದ ಮರಳವನಲ್ಲೈ |
ಗುರು ಮಹಿಪತಿ ನಂದನು ಸಾರಿದ
ನುಡಿ ಸಿದ್ದಾಂತಹುದೈ ೫

೭೩೨
ಆರಿಲ್ಲಿಲ್ಲೋ ಮನುಜಾ | ಅರಿಲ್ಲಿಲ್ಲೋ |
ಹರಿಭಕ್ತರಿಗೆ ಸರಿ ಉಂಟೇನಣ್ಣಾ |
ಆರಿಲ್ಲಿಲ್ಲೋ ತಮ್ಮಾ | ಬಿರದಿನ ಘಲಗಳ ನಡೆಸುವರಯ್ಯಾ ಪ
ಕಂಭದೊಳಗ ಹರಿ ಬಿಂಬವ ತೋರಿಸಿ |
ಬೆಂಬಲವನೆಕೊಂಡು ಹಿರಣ್ಯ ಕನಾ |
ವೆಂಬ ಶಾರ್ದೂಲ ಕರಳವ ಹಾರಿಸಿದ |
ನಂಬಿದ ಪ್ರಲ್ಹಾದ ಮಾಸಾಳ ನಮಾ ೧
ಕಂಡು ಸೀತಾಪತಿ ನೊಯ್ದು ರಾವಣ ನೆಂಬಾ |
ಖಂಡಿಸಿ ಮದ ಸೊಕ್ಕಿದಾನಿಯನು |
ತುಂಡ ಮುಂಡ ಮಾಡಿ ಪದವಿಯ ಪಡದಾ |
ಚಂಡ ವಿಭೀಷಣ ಮಾಸಾಳ ನಮಾ ೨
ಖಂಡ ದಾಸನಬೇಡಿ ಹೊಂದಿದ್ದ ಕಾಯನ |
ಸಂದ ಬಿಡಿಸಿ ಮಲ್ಲಯುದ್ಧದಲಿ |
ಮಂದರ ಧರನತಿ ಮೆಚ್ಚಿಸಿ ಮೆರೆದಾ |
ನಂದ ಭೀಮಶೇನ ಮಾ-ಸಾಳ ನಮಾ ೩
ತರಣಿಂದು ಗಾಲಿಲಿ ರಥ ಬೊಮ್ಮ ಸಾರಥಿ |
ಉರಗಸ ಹದಿ ಮೇರು ಗಿರಿ ಪಾಪವು |
ಹರಿಶರದಿಂದಲಿ ತ್ರಿಪುರವ ಕೆಡಹಿದ |
ಸುರ ರಕ್ಷ ಮಹೇಶ ಮಾಸಾಳನಮಾ ೪
ಹಿಂದಿನ ಮಾತಿಂದು ಇಂದಿಲ್ಲ ವೆನಬ್ಯಾಡಿ |
ಎಂದೆಂದು ಸ್ವರ್ಗದ ಸುಖಗಳಿಗೆ |
ಕುಂದವ ನಿಡುವರು ಮಹಿಪತಿ ಸುತ ಪ್ರಭು |
ಹೊಂದಿದ್ದ ದಾಸರು ಮಾಸಾಳರೈಯ್ಯಾ ೫

೧೨೮
ಆರು ನಿನ್ನಂಘ್ರಿ ಭಜಿಸುವರೈಯ್ಯಾ
ಸಾರಹೃದಯರ ಪ್ರೀಯ ಸುರಮುನಿಜನ ಧ್ಯೇಯಾ ಪ
ಕಮಲಭವಶಿವ ಇಂದ್ರ ನೀನಾಗೇನು
ರಮೆ ಧರಾದೇವಿ ರಮಣಾದರೇನು
ಯಮದೂತರೊಳಗಾದ ಆಜಮಿಳ ಪೆಸೆ ರ್ಗೊಳೆ
ಸುಮನಿಸುರ ನಯ್ಯವನ ಕಾಯದಿದ್ದೊಡೆ ೧
ಜಗದುತ್ಪತ್ತಿ ಸ್ಥಿತಿಲಯ ಕರ್ತನಾಗೇನು
ಮಗುಳಿ ಸೂತ್ರಧಾರಿಯಾದರೇನು
ಸುಗುಣ ಪ್ರಲ್ಹಾದಂಬರೀಷ ಕರಿವರ
ಧ್ರುವಾದಿಗಳನುದ್ದರಿಸಿ ತಾರಿಸದಿದ್ದಡೆ ೨
ಎಂದೆಂದು ಅರ್ತಜನ ಬಂದು ದೀನಾನಾಥ
ತಂದೆ ಮಹಿಪತಿ ಸ್ವಾಮಿಯಂದಡೇನು
ಮಂದಮತಿ ಕುಂದಘನವಂದು ನೋಡದ್ದೆ
ಇಂದು ನಂದನಗೆ ಸೇವೆ ಪದಲಿಡದಿದ್ದರೆ ೩

೧೨೫
ಆರೇ ಸುಳಿದವನಿಂದು|ನೀರೇ ತಂದುವನ ತೋರೇ ಪ
ನೀಲಮೇಘದ ಕಾಂತಿಮೈಯ್ಯಾ|ನೋಡೇಮದನಯ್ಯಾ|
ಕಾಲಲುಂದಿಗೆ ಹೆಜ್ಜೆಘಿಲು ಘಲುಕೆನುವಾ|
ಮೇಲು ಪಿತಾಂಬರ ಝಳ ಝಳಿಸುವ ನವನಾರೇ ೧
ಮೆರೆವ ವಡ್ಯಾಣ ಘಂಟೆಸಿರಿಯಾ|ಕವಿಹೊಗಳಲರಿಯಾ|
ಬೆರಳುಂಗುರ ಕಡಗ ಕೇಯೂರಾ|
ಕೊರಳ ಕೌಸ್ತುಭ ಮಾಲೆಯ ಹೊರವನಾರೇ ೨
ಕಡೆಗಣ್ಣನೋಟ ಪದುಮದೆಲಿಯೋ|ಮೋಹನದಾಬಲೆಯಾ|
ಎಡಬಲ ಕುಂಡಲ ಹೊಳೆವ ಕಪೋಲಾ|
ಇಡಿದನೇ ನಗೆಯ ಸುನಾಶಿಕ ಸರಳವನಾರೇ ೩
ಮೃಗದ ಪಣಿಯಾಲುಂಗುರ ಗುರುಳೋ|ಕಾವನಸರಳೋ|
ಝಗಝಗಿಸುವ ರನ್ನ ಮುಕುಟದ ಚೆಲುವಾ|
ಬಗೆ ಬಗೆ ಸೊಬಗಿನ ನವರಸಗರೆವನಾರೇ ೪
ತರುಣೀ ಮುನ್ನಿನಸುಕೃತಬಂದು|ವದಗಿ ತಾ ಇಂದು|
ಗುರು ಮಹಿಪತಿ ಪ್ರಭು ಚರಣವದೋರಿ|ಮರುಳೆನ್ನಾ ಮಾಡಿದ ದೀನೋದ್ಧಾರಿವನಾರೇ ೫

೧೨೭
ಆರೋಗಣೆಯ ಮಾಡೋ ಮುಕುಂದಾ ಪ
ಆರೋಗಣೆಯ ಮಾಡೋ ವಾರಿಜರಮಣಾ
ಸಾರಿದವರಿಗೆ ಭಯನಿವಾಕರದಿ ೧
ಪೊಂಬ್ಹರಿವಾಣದಿರನ್ನ ಬಟ್ಟಲುಗಳು
ಅಂಬುಜಾನನಸಿರಿ ಲಕುಮಿಯವೇರಿಸಿ ೨
ಶಾಲ್ಯೋದನಸೂಪಘೃತ ಪರಿಪರಿಯಾ
ಶಾಲ್ಯಾಶಾಖಂಗಳಸವಿಯನೆ ಕೊಳುತಾ೩
ಪಂಚಭಕ್ಷವು ಕೆನೆಹಾಲು ಸೀಖರಿಣಿಯಾ
ಮುಂಚೆ ಪಾಯಸಪರಿಪರಿಶರ್ಕರದಲಿ೪
ದದ್ಯೋದನದಲುಪಗಾಯಿಸ್ವಾದಿಸುತ
ಸದ್ವಿದ್ಯ ದಮನ ಕಲ್ಪಿತರುವೆಲ್ಲಾ೫
ಪತ್ರಸುಮನತೋಯ ಭಕ್ತರು ಕೊಟ್ಟು
ದರ್ಥಲಿ ಕೊಂಬ ದಯಾಳುತನದಲಿ೬
ತಂದೆ ಮಹಿಪತಿ ನಂದನ ಸಾರಥಿ
ಎಂದೆಂದು ಸ್ಮರಣೆ ಗೊದಗಿ ಮುದ್ದು ಮುಖದಿ೭

೪೪೧
ಆವ ಜನುಮ ಸಖನೇ ನಮ್ಮಯ್ಯಾ ಪ
ಅವಿದ್ಯ ಬಲಿಯೊಳು ಸಿಲುಕಿ ಬಳಲುವನ |
ಸುವಿದ್ಯ ನೋಟದ ಕರುಣವ ಬೀರಿದನಾ೧
ಏನರಿಯದಲಿರೆ ವಿಷಯ ಮದಾಂಧದಿ |
ಜ್ಞಾನಾಂಜನವ ಮಾಡಿ ಕಂಗಳದೆರಿಸಿದನಾ ೨
ಹೃದಯ ಭೂಮಿಗೆ ಹರಿ ನಾಮಬೀಜವ ಬಿತ್ತಿ |
ಸದಮಲ ಭಕುತಿಯ ಬೆಳೆಗಳ ನುಣಿಸಿದನಾ ೩
ಕೇಳದ ನುಡಿಗಳ ಹೇಳುತ ಕಿವಿಯೊಳು |
ಕಾಲ ಕಾಲಕ ಎನ್ನ ಹಿತವನೆ ಯೋಜಿಪನಾ೪
ತಂದೆ ಮಹಿಪತಿ ಕಂದನೆನಿಸಿತ್ತ ನಾ |
ಛಂದದಲಿಹ ಪರ ಭಾಗ್ಯವ ನೀಡಿದನಾ೫

೧೨೯
ಆವ ಪುಣ್ಯವ ಮಾಡಿದಳೋ ಮುನ್ನ ಗೋಪಿ ನೋಡಮ್ಮಾ ಪ
ಆವ ಪುಣ್ಯ ಮಾಡಿದಳೋ ಮುನ್ನ ಗೋಪಿ ನೋಡಮ್ಮಾ
ದೇವ ದೇವೋತ್ತಮನಾದ ಕೇವಲ ಪರಬ್ರಹ್ಮ|
ದೇವಿಮಗನಾಗಿ ಬಂದಿಹನೆ ನರರಂದದಿ ನಮ್ಮಾ
ಭಾವಿಸಿ ಬ್ರಹ್ಮನ ಜನಕನ ಶಿಶುವೆಂದು
ಮುದ್ದಾಡಿಸುವಾ ಸಂಭ್ರಮಾ೧
ಮುಖಸಾರಭೋಕ್ತನಿಗೆ ಮೊಲೆ ಹಾಲನುಣಿಸಿ|
ಅಕಳಂಕ ಮೂರುತಿಯ ಸಲೆ ಮಜ್ಜನ ಗೈಸಿ|
ಪ್ರಕಟಿದಿ ಶೇಷಶಾಯಿಗೆ ತೊಟ್ಟಿಲದಿ ಮಲಗಿಸಿ|
ಸುಖಯೋಗ ನಿದ್ರೆಯುಳ್ಳಂಗೆ ಮಲಗೆಂದು
ಜೋ ಜೋ ಎಂಬಳಾಕೆ ೨
ಆವ ಯೋಗ ಮಾಯದಲಿ ಮೂಜಗವಾಡಿಸುವ|
ಆವ ಮುಂಜರಗ ಸಿಡಿದು ಬೆಣ್ಣೆ ಬೇಡುತ ಕುಣಿವಾ|
ಆವನುದರದಿ ಬ್ರಹ್ಮಾಂಡವು ಗೋಪಿ ಕೈಯೊಳಾಡುವಾ|
ಆವನಲಿ ಮಹಿಪತಿ-ಸುತ ಪ್ರಭು ಲೀಲೆಯ ಕಣ್ಣಲಿ
ನೋಡಿ ಸುಖಿಸುವಾ ೩

೪೪೨
ಆವ ಸೇವೆಯಿಂದ ನಿನ್ನುತ್ತೀರ್ಣಾಗುವರೋ |
ಭಾವ ಭೋಕ್ತ ಗುರು ಮಹಿಪತಿ ನಿಮ್ಮ ಶರಣರು ಪ
ಒಡಲೊಳಗಿದ್ದ ಶಿಶು ಹೊರಗ ಬಂದ ಮ್ಯಾಲ
ಒಡ ಮೂಡುವದು ನೋಡಿ ಜನನಿ ಮೋಹಾ
ಪೊಡವಿಯೊಳಿಹನ ಕರೆದೊಡಲೋಳಿಟ್ಟುಕೊಂಡು
ಕುಡಿಸಿ ಬೋಧಾಮೃತವ ಸಲಹುವ ಗುರುಮಾತಾ ೧
ಸತಿಯಲಿ ವೀರ್ಯವನಿಟ್ಟು ಬೆಳಸಿ ಘನ
ಯುತನಾದರಾಗ ತಂದೆಯ ಮೋಹವು
ಕ್ಷಿತಿಯೊಳು ನಿಜವೀರ್ಯ ಕಳಿಯದೆ ಮೂಢ
ಭಕ್ತಿರಿಗೊಲಿದು ಬೀರುವ ದಯ ಗುರು ತಂದೆ ೨
ತನುವ ನಿರ್ಮಿಸಲು ತಾ ತನುವಿನೊಡೆಯ ನೀನು
ಮನವ ನೀಡಲು ಚೇತನಾತ್ಮ ನೀನು
ಧನವ ನೀಡಲು ಇಹ ಪರವೀವ ಧೊರಿ ನೀನು
ನೆನೆವರ ಶ್ರಯಧೇಯ ಕಾಯೋ ನಂದನ ಪ್ರಭು೩

೫೫೬
ಆವದಿದು ಜ್ಞಾನ ಪ
ಆವದಿದು ಜ್ಞಾನಾ ಬಲ್ಲವಿಕೆ ಜಾಣಾ |
ಭಾವದುಗಮ ವರಿಯದೆವೆ ಜರಿದಿ ನಿಜ ಖೂನಾ ೧
ಅರಹು ಆಗಲೆಂದು ಕುರುಹ ದೋರಿದೊಂದು |
ಕುರುಹವಿಡದ ಕೊಡ ತಿರುಗಿ ಅರಹು ಮರದಿಂದ ೨
ಕಲಿತು_ವಾಡುದು ಸೊಲ್ಲಾ ಗುಣಕ ಬಾಹುದಲ್ಲಾ |
ಕಳೆದು ಅನುಮಾನ ಶಾಂತಿ ಸುಖವ ಪಡೆಯಲಿಲ್ಲಾ ೩
ಅರಿಯದಿದ್ದರ ಕೀಲು ಸಾಧು ಸಂತರು ಕೇಳು |
ಗರುವತನವ ನೀಗಿ ಯಲ್ಲರ ಕಿರಿಯನಾಗಿ ಬಾಳು ೪
ತಂದೆ ಮಹಿಪತಿ ನಂದನ ಸಾರಥಿ |
ಹೊಂದಿದವರ ನೋಡಿ ಕೊಡುವ ಮತಿ ಸ್ಫೂರ್ಥಿ ೫

೫೫೭
ಆಶಾ ಪಾಶದಲಿ ಬಿದ್ದು ಘಾಸಿಯಾಯಿತು ಜೀವ
ವಾಸುದೇವನೆ ನಿಮ್ಮ ಆಶೆಗೆನ್ನ ಮನವಿಲ್ಲ ಪ
ಮಡದಿಯಾಗಲು ಮತ್ತೆ ಮನೆಯಾ ಮಾಡುವದಾಶಾ
ಒಡಗೂಡಲದು ಮಕ್ಕಳಾಗುವಾಶಾ
ಬಿಡದೆ ಕುಟುಂಬ ಪೋಷಣೆಯಾಗುವಾದಾಶಾ
ಕಡಲ ಶಯನಾ ನಿಮ್ಮ ಆಶೆಗೆನ್ನ ಮನವಿಲ್ಲ ೧
ಅನ್ನವಾಗಲು ವಸ್ತ್ರ ಅಲಂಕಾರದಾಶಾ
ಇನ್ನು ಮಕ್ಕಳ ಮುಂಜಿ ಮದುವಿಯಾಶಾ
ತನ್ನ ನೆಂಟರಸರಿಯಾ ಮಾಡುವದಾಶಾ
ಪನ್ನಗಾಶನವಾಹನಾಶೆಗೇ ಮನವಿಲ್ಲ ೨
ನಡೆವಕಾಲಕೆ ದೊಡ್ಡ ಕುದುರೆ ಏರುವದಾಶಾ
ಅಡರಲು ರಥದಿಂದ ಆಂದಣಾಶಾ
ಕಡಿಗೆ ತೀರದ ಹೊನ್ನು ಹಣದ ಸಂಗ್ರಹದಾಶಾ
ಪೊಡವಿಧರನೇ ನಿಮ್ಮ ಆಶೆಗೆ ಮನವಿಲ್ಲ ೩
ಒಂದೊದಗಲು ಮತ್ತೆ ಒಂದು ಬಯಸುದಾಶಾ
ಎಂದಿಗೇ ಸರಿಯದು ವಿಷಯದಾಶಾ
ಕುಂದಿದ ತನುವಿನ ಬಲವಾಗುವದಾಶಾ
ಇಂದಿರೇಶನ ಆಶೆಗೆನ್ನ ಮನವಿಲ್ಲ ೪
ಆಶೆಯೆಂಬಾ ನದಿಯ ಸುಳಿಯ ಬಿಡಿಸಿ ನಿಜ
ದಾಸರಾ ಸಂಗ ಮನವ ತಿದ್ದೀ
ಲೇಸಾಗಿ ಮಹಿಪತಿ ಸುತ ಪ್ರಭು ಭಕುತಿಯಾ
ಆಶೆ ಹೆಚ್ಚಿಸಿ ಎನ್ನ ದಯದಿ ಪಾಲಿಸೋ ದೇವಾ ೫

೧೩೮
ಇಂತುಯನ್ನಾ ಬಯಕೆ ಕೈಗೂಡಿಸೋ ದೇವಾ
ಅಂತರ, ಗಲಿದೇ ಹಂಬಲಿಸುತಿದೇ ಜೀವಾ ಪ
ನಿನ್ನ ಸಿರಿಪದಾ ಸಖಚಂದಿರದಲಿ
ಎನ್ನ ಕಂಗಳು ಚಕೋರಾಗಿ ನೋಡಲಿ
ನಿನ್ನ ಕಥೆಯಾ ಘನ ಗರ್ಜನೆಯಲಿ
ಘನ್ನ ಶ್ರವಣ ಮಯವಾಗಿ ನಲಿಯಲಿ ೧
ನಿನ್ನ ನಾಮಾ ಮೃತ ಫಲ ಸೇವಿಸಲಿ
ಎನ್ನ ನಾಲಿಗೆ ಶುಕವಾಗಿರಲಿ
ನಿನ್ನ ಚರಣಾರ್ಪಿತ ತುಲಸಿ ಕುಸುಮದಲಿ
ಎನ್ನ ಪ್ರಾಣವು ಮಧುಪಾಗಿ ಕೂಡಲಿ ೨
ನಿನ್ನ ಮನೆಯಾಶೆಯಾ ಊಳಿಗದಲಿ
ಎನ್ನಂಗ ನಿರುತ ಮಾರಿಸಿ ಕೊಳ್ಳಲಿ
ಘನ್ನ ಗರು ಮಹಿಪತಿ ಪ್ರಭು ಯಚ್ಚರದಲಿ
ನಿನ್ನಂಕಿತದಾ ಜನ್ಮಗಳೇ ಬರಲಿ ೩

೧೩೭
ಇಂದರೆ ರಮಣಾ ಇಟ್ಟಾಂಗಿರಬೇಕು ಪ
ಒಮ್ಮಿಗೆ ಕದಶನ ಶಾಖಾ ಆಹಾರವ ನೀಡುವನು
ಒಮ್ಮಿಗೆ ಷೆಡ್ರಸದ್ದನ್ನವ ಸಾರುಣಿಸುವನು ೧
ಒಮ್ಮಿಗೆ ಜೀರ್ಣ ಕಂಥಾಧಾರಿಯೆನಿಸುವನು|
ಒಮ್ಮಿಗೆ ದಿವ್ಯಾಂಬರಗಳ ನುಡಿಸಿ ನೋಡುವನು ೨
ಒಮ್ಮಿಗೆ ಧರಿಯಲಿ ತೋಳತಲೆದಿಂಬದಲಿಡುವಾ|
ಒಮ್ಮಿಗೆ ಪರ್ಯಾಂಕಾಸನ ಸಂಪದ ಕೊಡುವಾ ೩
ಒಮ್ಮಿಗೆ ಕವಡಿ ಲಾಭಕ ಕೃತ-ಕೃತ್ಯೆಯೆನಿಸುವನು
ತಂದೆ ಮಹಿಪತಿ-ಕಂದಗ ಸಾರಿದ ನಿಜ ಖೂನಾ ೪
ತಂದೆ ಮಹೀಪತಿ-ಕಂದಗ ಸಾರಿದ ನಿಜ ಖೂನಾ|
ದ್ವಂದ್ವ ಗೆಲಿದು ಸ್ವಾನಂದದಲಿರುವವನೇ ಜಾಣಾ ೫

೧೬೫
ಇಂದಿನ ದಿನವೇ ಶುಭದಿನವು |
ಇಂದಿರೇಶನ ಕೀರ್ತಿಯ ಕೊಂಡಾಡಿದೆವೆಂದು ಪ
ಮುನ್ನ ಮಾಡಿದ ಜನ್ಮಾಂತರದ ದುಷ್ಕ್ರತವೆಂಬ |
ಘನ್ನ ಕೆಸರಸೋಸಿ ಹೃದಯ ಶುದ್ದಾಯಿತೆಂದು ೧
ಗುರುಕರುಣವೆಂಬ ತರಣಿ ಉದಯವಾಗಿ |
ಪರಿಹಾರಾಯಿತು ಅಜ್ಞಾನವೆಂಬ ಕತ್ತಲೆಯಿಂದು ೨
ಎಂದೆಂದು ಮರೆಯದಂತೆ ದಯದಿಂದ ಮಹೀಪತಿ |
ಕಂದ ನೊಡೆಯ ತನ್ನ ಸ್ಮರಣೆ ಕೊಟ್ಟನೆಂದು೩

೧೩೬
ಇಂದಿರೆಯರಸನಾಡಿದ ಆಟನೋಡಿ|ನಲಿದಾಡಿ|
ಬಂದರಜಮುಖ್ಯರೋಡಿ|ಬಹುಜನ ಕೂಡಿ ಪ
ಅರುಣ ತಳದಿರಂಜಿಪ ದ್ವಯ|ಚರಣದಿಂದ ಕಾಳಿ ಅಹಿ|
ವರನಸಿರವ ಮೆಟ್ಟಿಸೂರ್ಯ|ಕಿರಣದಂತೆ ಪೊಳೆವಾ|
ಸ್ಪುರಣಗೆಜ್ಜಯ ಝಣ ಝಣ|ಝಣಕು ಝಣಕೆಂಬ ತೆರದಿಂದ|
ಕರುಣ ಧಿಗಿ ಧಿಗಿಯೆಂದು|ವಾರುಣದಲಿ ಕುಣಿಯೇ ೧
ವೀಣೆಯಲಿತಾಸರಿಗ ಮಪಧನಿ|ಸೆಂಬಮೆಟ್ಟಿಕೆಯೊಳ|
ತ್ರಾಣದಿಂದ ಝಿಂ ಝಿಂ ಝಿಂ ಝಿಂ ಕೆನಿಪ ದ್ವನಿಯಗಳನು|
ಮಾಣುತಲಿ ಸಿರಿರಾಗ ಘನಮಲಾಹರ ಮೊದಲು|
ವಾಣಿಪತಿಸುತ ಪಾಡಿದ ನಾನಾ ರಾಗದಲಿ ೨
ಅಂಬುಜಾಕ್ಷಪ್ರಿಯನಾದ|ಅಂಬುಜಭವ ಪದ ಕರ್ತ|
ಕುಂಭಿಯೊಳಹಸ್ತಿನಿಕು|ರಂಬಾರಿ ಕೋಟಿ ದ್ವನಿ|
ವೆಂಬಂತೆ ಕಹಳೆಗಳು|ತುಂಬಿ ಪೂರೈಸಿದನು|
ಭುಂ ಭುಂ ಭುಂ ಭುಂ|ಭುಂ ಮೆಂದು ಗಂಭೀರ ಸಪರದಿ ೩
ತತ್ತಥೈಯ್ಯಾ ಥೈಯ್ಯಾ ಥರಿಕೆಂದು|ಧತ್ತೆರಿಕುಥಲಿ|
ಒತ್ತಿ ಖಿಣಿ ಖಿಣಿ ಖಿಣಿಲೆಂಬ|ಮೊತ್ತತಾಳು ವಿಡಿದು|
ಮತ್ತ ಏಕತಾಳ ಝಂಪೆ|ತಾಳ ಅಟ್ಟತಾಳಗಳು|
ಉತ್ತುಮದಾ ಕರದಿ ಹರ ಅರ್ಥಿಯಲಿ ನಿಂದಾ ೪
ಇಂದೀವರಜ ಮದ್ಯಸ್ಥಲ ಒಂದು ನೆಗೆದು ಜವದಿಂದಾ|
ದಂ ದಂ ದಂ ದಂ ದಮುಕೆಂದು|ಛಂದದಿ ಮುಟ್ಟಿದನು|
ಧಿಂಧಿಂಧಿಂಧಿಂಧಿಮಿಕೆಂದು|ದುಂಧುಂಪೊಡದರು ಸುರರು|
ತಂದೆ ಮಹಿಪತಿ ನಂದನ ವಂದ್ಯನೊಲುವಂತೆ ೫

೧೪೩
ಇಂದು ಕಂಡೆ ಚರಣಾ ಶ್ರೀಕೃಷ್ಣನಾ ಪ
ಕೊಳಲ ದ್ವನಿಗೈದನಾ ಚಲುವಿಗೆ ಗೆದ್ದ ಕಾವನಾ ೧
ಹೆಡೆಯಲಿ ಕಾಳಿಂಗನಾ ಒಡನೆ ಕುಣಿದ ರಂಗನಾ ೨
ಗೋವರ್ಧ ನೆತ್ತಿದನಾ ಗೋವಳಕ ಕಾಯದನಾ ೩
ಬಾಲಕ ಲೀಲಾ ಲೋಲನಾ ಮೂರುಲೋಕ ಜೀವನ ಪಾಲನಾ ೪
ಮಹಿಪತಿ ನಂದನ ಜೀವನಾ ಸಹಕಾರಿ ಪಾವನ್ನನಾ ೫

೧೪೦
ಇಂದು ಕಂಡೆನಾ ಇಂದು ಕುಲಮಣಿ
ನಂದ ಕಂದ ಮುಕ್ಕುಂದನಾ|
ಬಂದು ವದಗಿಹ ಬಹಳ ಪುಣ್ಯದಿ ಛಂದವಾಯಿತು
ಚಲುವನಂಘ್ರಿಯ ಪ
ಬಲಿಗೆ ಭೂಮಿಯ ಬೇಡಿ ಹೆಜ್ಜೆಯಾ|
ಅಳತೆಯರಡಲಿ ಅಡಗಿಸಿ|
ನಳಿನ ಜಾಂಡಕ ಸಖವ ಸೋಂಕಿಸಿ|
ನೆಲಿಗೆ ಸುರನದಿ ಪಡೆದ ನಂಘ್ರಿಯಾ ೧
ಶಿಲೆಯು ಆಗಿರೆ ಶಾಪದಲಿ ಸೋಂ|
ಕಲು ನಿಜಾಂಗದ ಕಾಣಿಸಿ|
ನಲಿದು ಕಾಳೀಂದಿಯೊಳುರುಗನಾ|
ತಲೆಯಳಾಟದಿ ತುಳಿದ ನಂಘ್ರಿಯಾ ೨
ಮುನಿಜನ ಹೃದಯ ಮನೆಯ ದೀಪವು|
ಯನಿಪ ಶ್ರೀದೇವಿ ಯರಸನಾ|
ಮನದಿಗುರುವರ ಮಹಿಪತಿ ಪ್ರಭು|
ನೆನೆವವರೊಳಗೆ ನೆಲೆಸಿಹನ ಪದ ೩

೨೬
ಇಂದು ಕಂಡೆನಾನು | ಶಂಕರನಾ |
ನಿಂದಿಹ ಕೋಟೇಶ್ವರನಾ ಪ
ಅವದುಂಬರ ಮುನಿಯಾ | ತಾಪಕೊಲಿದು
ತಾವದಗಿದೇ ನಡೆತಂದು ೧
ಕೃಷ್ಣ ವೇಣಿಯಾ ಮಧ್ಯಾ ಜಲದೊಳಗ |
ವಿಷ್ಣು ಸಹಿತ ಸಲುವನೀಗ ೨
ವರ ಶೂರ್ಪಾಲಯದೀ | ತಾಮೆರೆವಾ |
ಗುರುಮಹಿಪತಿ ಸುತ ಜೀವಾ ೩

೧೪೧
ಇಂದು ಧನ್ಯನಾ ಪ
ಇಂದು ಧನ್ಯನ ಇಂದಿರೇಶನಾ|
ಇಂದುವದನವ ಕಂಡೇನಾ|
ಕಂದರೊಳಗುದ್ಧಂಡನಾ|
ಬಂದು ಪಾಲ್ಬೆಣ್ಣೆ ಉಂಡನಾ ೧
ಅರ್ನವೊಪಮ ವರ್ಣಕಾಯಸು|
ಪರ್ಣ ವಾಹನ ಕರುಣನಾ|
ನಿರ್ನಸುವರಣ ನಿಪುಣನಾ|
ಸ್ವರ್ಣವಸನಾ ವಿರ್ಣನಾ ೨
ಮಹಿಯ ಭಾರವನಿಳುಹಲೋಸುಗ|ದಯ|
ಗೃಹದೊಳಗ ತಾಬೆಳೆದನಾ|
ಇಹಪರ ಜನ ಹೊರೆದನಾ|
ಮಹಿಪತಿಸುತ ವರದನಾ ೩

೧೪೪
ಇಂದು ನಮ್ಮ ಸಲಹಯ್ಯಾ ಸಿರಿರಮಣಾ|
ಬಂದ ದುರಿತ ನಿವಾರಿಸು ಪೂರ್ಣ|
ಮಂದಮತಿಗಳಾ ನೋಡದೆವೆ ನ್ಯೂನಾ|
ಛಂದದಿಂದ ಕೊಡು ನಿನ್ನ ಚರಣ ಧ್ಯಾನಾ ಪ
ಹಿಂದ ವ್ಯಾಧನೊಬ್ಬ ಹರಿಣಿ ಹಿಡಿಯಲಿ|
ನಿಂತು ಚತುರ್ವಿಧ ಬಲಿಯಾನೊಡ್ಡಿರಲಿ|
ಅಂದು ನಿನಗಾಗಿ ಮೃಗ ಮೊರೆಯಿಡಲಿ|
ಬಂದು ಕರುಣಿಸಿ ರಕ್ಷಿಸಿದ ಪರಿಲಿ ೧
ಬಸಿರೊಳಗಿದ್ದ ಪರೀಕ್ಷಿತಗೆಂದು|
ಎಸೆಯಲು ಬಾಣಗಳ ದ್ರೋಣಿ ಮುಳಿದು|
ಬಿಸಜಾಕ್ಷ ನಿನ್ನ ಚಕ್ರ ಮರೆವಿಡಿದು|
ಶಿಶುವಿನ ರಕ್ಷಿಸಿದ ಪರಿ ಬಂದು ೨
ದಿನ ವತ್ಸಲ ದಯಾನಿಧಿ ಎನುವಾ|
ಖೂನದೋರಿಸಯ್ಯಾ ಬಿರುದಿನ ಅನುವಾ|
ನಿನೇ ತಾಯಿ ತಂದೆ ಬಂಧು ಸಖದೈವ|
ಘನಗುರು ಮಹಿಪತಿ ಸುಖ ಜೀವಾ ೩

೧೪೨
ಇಂದು ಪರಮಾನಂದ|ನಮಗ ಮುಕುಂದನ ಕೃಪೆಯಿಂದಾ|
ಮಂದರಧರ ಪದದ್ವಂದ್ವ ಕಮಲ ಮಕ|
ರಂದ ಭ್ರಮರ ಸಂಗ ಛಂದದಲಾಯಿತು ೧
ವೇಗದಿಂದಲಿ ನೋಡೀ|ಸಕಲರು|ಭಾಗವತರು ಕೂಡಿ|
ಭಾಗಿರಥೀ ಪಡೆದ ನಾಗಶಾಯಿಯ|
ನಿಗ ಮಾಗ ಮಯುಕ್ತದಿ|ಈಗ ಪಾಡಿದೆವೆಂದು ೨
ಹಿಂದಣ ಜನ್ಮದೊಳು|ಮಾಡಿದ |
ಸಂದಿದ ದೋಷಾದಿಗಳು ಚೂಕಿ|
ಕುಂದಿ ತೊಲಗಿದವು ತಂದೆ ಮಹಿಪತಿ|
ನಂದನ ಪ್ರಿಯನಾನಂದ ಕರುಣದೀ ೩

೧೪೫
ಇಂದು ಸಲಹಿದೇ
ಇಂದು ಸಲಹಿದೇ ಆರ್ತರ ಬಂಧು
ಕುಂದ ನೋಡದೇ ಕರುಣಾ ಸಿಂಧು ಪ
ಅಂದು ಪ್ರಲ್ಹಾದ ನೆಂಬುಧಿಯೊಳಗ
ಬಂದು ಉಳುಹಿದ ತರದಿಂದಲೆನಗೆ ೧
ಹಿಂದ ಪ್ರಳಯ ಜಲದಿ ಸತ್ಯ ವ್ರತನಾ
ಸಂಧಿ ಸ್ಯೊರದಗಿದ ಪರಿ ಸಿರಿರಮಣಾ೨
ಕುದಿ ವೆಣ್ಣೆ ಗೊಪ್ಪರಿಗೆಯೋಳಿಹ
ಸುಧನ್ವನಾ ಪ್ರಾಣನುಳಹಿದ ಪರಿಯಾ೩
ತಂದೆ ಮಹಿಪತಿ ಪ್ರಭು ದತ್ತಾತ್ರೆಯಾ
ಬಂದದುರಿತದಿ ಬಿಡಿಸುತ ಕಾವಾ ೪

೧೩೯
ಇಂದುಕುಲುಮಣಿಯಾ|ಎಂದು ಕಾಂಬೆ
ಮನೋದಣಿಯಾ ಕುಲಮಣಿಯಾ ಪ
ಎಳೆಬಿಸಿಲೊಳು ಥಳ ಥಳಿಸುವಾ ಬೆಳಗಿನಾ|
ಬಳದ ಒಬ್ಬುಳಿಯಂತೆ ದಿನಮಣಿಯಾ|
ಕಳೆಶತ ಮಡಿಯೊಳು ಹೊಳೆವ ರನ್ನಮುಕುಟಾ|
ಝಳ ಝಳಿಸುವ ರಳ ಕಾವಳಿ ದೋರಣಿಯಾ ೧
ಚಲಾಚಲ ಭೂತಾವಳಿಗಳ ಸಲಹುವ
ಭ್ರೂಲಲಿತ ಮೃಗಮದಾಂಕಿತದ ಫಣಿಯಾ|
ವಿಮಲತರ ಕಮಲದೆಸಳ ಸುಗಂಗಳ|
ರಂಜಿಪ ನಾಸಿಕ ಸಂಪಿಗಿ ನೆನಿಯಾ ೨
ಎಳೆನಗೆ ಚುಬುಕಾಗ್ರ ಚೆಲುವಾ ಕುಂದರದನಾ|
ಇಳೆಯೊಳು ಕಾಣೆ ಕುಂಡಲಕ ಎಣಿಯಾ|
ಕಳ ಕಳಿಪ ಕದಪು ವದನ ಮೋಹನಾರಾಯ|
ಒಲಿವ ಮಹಿಪತಿ ಜನ ಪ್ರಭು ಗುಣಖಣಿಯಾ ೩

೧೩೫
ಇಂದ್ಯಾಕ ಬಾರನಮ್ಮಾ|ಎನ್ನೊಳು ದಯಾ
ಎಂದಿಗೆ ಕಾಂಬೆನಮ್ಮಾ|ಎನ್ನೊಡೆಯನಾ ಪ
ಕಾಲಿಲಂದುಗೆ ಗೆಜ್ಜೆ ಲೀಲಾಘನ ನೀತಾಗೊ|
ಪಾಲಾ ವಿಶಾಲ ಭಾಲಾ ೧
ಮಾರನಾ ಪಡೆದ ಸುಂದರಾಕಾರಾ ಮನೋ|
ಹಾರಾ ಗುಣ ಗಂಭೀರಾ ೨
ತಂದೆ ಮಹಿಪತಿ ಸ್ವಾಮಿ ಬಂದಾ ಗೋ|
ವಿಂದಾ ಮುಕ್ಕುಂದಾ ನಂದನ ಕಂದಾ ೩

೫೫೮
ಇದರೊಳಾರೈಯ್ಯ ನೀನು ಆತ್ಮಾ
ವದಗಿ ನಾನೆಂದ ಹಂಕರಿಸಿ ಓಯಂದೆಂಬೆ ಪ
ನೋಡುವವನೊಬ್ಬ ತಾ ಕೇಳಲರಿಯನು ನುಡಿಯ
ನೋಡಲರಿಯನು ಕೇಳುವವ ರೂಪವಾ
ಆಡುವವ ನುಡಿಯೊಬ್ಬ ಪರಿಮಳಂಗಳ ತಿಳಿಯಾ
ಅಡಲರುವಿಲ್ಲ ಘ್ರಾಣೇಂದ್ರಿಯವನೆ ೧
ಕೊಡುವವಗೆ ನುಡಿಯಿಲ್ಲ ನಡೆವವಗೆ ಕರವಿಲ್ಲಾ
ಬಿಡದೆ ಚೇಷ್ಟಿಸುವವಗ ರೂಪವಿಲ್ಲಾ
ಒಡನಾರು ಮೂರು ಇಪ್ಪತ್ತೈದು ಕೂಟದಲಿ
ಗಡಣದಿಂದಿಹ ಮನೆಗೆ ಕ್ಷೇತ್ರಜ್ಞನೊಬ್ಬನಿಹ ೨
ತನ್ನ ನಿಜ ತಾನರಿಯ ಧನ್ಯ ತಾನೆಂತೆಂಬೊ
ನಿನ್ನ ಬಲ್ಲವಿಕಿಗಿದು ನೋಡುಚಿತವೆ
ಇನ್ಯಾರೆ ತಂದೆ ಮಹಿಪತಿ ಬೋಧವನು ಸವಿದು
ಕಣ್ಣದರೆದಚ್ಯುತನ ನೆನೆದು ತಿಳಿಯೋ ೩

೮೦
ಇದಿರುಗೊಂಡಳು ಇಂದಿರಾದೇವಿ |
ಮದನ ಮೋಹನ ದಿವ್ಯ ಮೂರುತಿಯಾ ||
ಸದಮಲಾನಂದ ಕೀರುತಿಯಾ ಪ
ನವ ಸ್ವರ್ಣ ಹರಿವಾಣದಿ ಕಂಚ ಕಲಶನಿಕ್ಕಿ |
ಹವಳದಾರತಿ ರನ್ನ ಜ್ಯೋತಿಯಲಿ ||
ತವಕದಿಂದಲಿ ಎತ್ತಿ ಮುತ್ತಿನಾಕ್ಷತೆ ಇಟ್ಟು |
ನವರತ್ನ ನಿವಾಳೆಯ ಕೊಡುತಾ೧
ಜಯ ಮತ್ಸ್ಯ ಕೂರ್ಮನೆ ಜಯ ಕ್ರೋಢ ನರಸಿಂಹ |
ಜಯ ಮುನಿವಟು ಭಾರ್ಗವ ರೂಪನೆ ||
ಜಯ ರಾಮ ಶ್ರೀ ಕೃಷ್ಣ ಜಯ ಬೌದ್ಧ್ಯ ಕಲ್ಕಿಯೆ |
ಜಯವೆಂದು ಬೆಳಗಿ ಪಾದಕೆ ನಮಿಸಿ ||೨
ಕರೆದೊಯ್ದು ತೂಗು ಮಂಚದಿ ಕುಳ್ಳರಿಸಿ |
ಕರ್ಪೂರದ ವೀಳ್ಯ ಕೊಟ್ಟು ಹರುಷದಲಿ ||
ಗುರು ಮಹೀಪತಿ ಸುತ ಪ್ರಭುವಿನ ಸವಿ ಸವಿ |
ಕರುಣ ಮಾತುಗಳಾಡಿಸುತಾ ಹರಿಯಾ ||೩

೫೧೯
ಇದು ನಿಜ ಮತವೇ ನಿಜ ಮತವೇ
ಆವನ ಪದ ಜಲ ಮೌಳಿಯಲ್ಲಿಟ್ಟ ಮಹ ಪ
ದೇವನು ಹರಿಸಮನೆಂತು
ಆವನಿಚ್ಛೆಯ ಪರಿ ಜಗದೊಳಾಡುವ ಶಕ್ತಿ ೧
ಭುವನೇಶ ಸರಿಯೆ ಹೇಳೆಂತು
ಅವನ ಗ್ರಂಥದ ಲೇಖಕ ಗಣಪನು ೨
ಕಾವನಯ್ಯನ ಸಮನೆಂತು
ಅವನ ತೇಜದಿ ಬೆಳಗುವ ದಿನಪನು
ಗೋವಿಂದ ಸರಿಯನೆಂತು ೩
ಗುರು ಮಹಿಪತಿ ಪ್ರಭು ಹರಿಪರವೆನ್ನದ
ನರರಿಗೆ ಮುಕ್ತಿಯಹದೆಂತು೪

೫೬೧
ಇದು ಯಾತರ ಜ್ಞಾನಾ ಪ
ವೇದವನೋದಿ ವಿವಾದವ ಮಾಡಿ |
ಸಾಧಿಸಿದ್ಯಭಿಮಾನಾ ೧
ಬೆಟ್ಟವ ಶೋಧಿಸಿ ಕಷ್ಟದಿ ಇಲಿಯಾ |
ನೆಟ್ಟನ ತೆಗೆದೇನಾ ೨
ಘನಗುರು ಮಹಿಪತಿ ಸ್ವಾಮಿಯ ನೆನೆದು |
ಅನುದಿನವಿಡೀ ಧ್ಯಾನಾ ೩

೫೬೦
ಇದು ಯಾತರ ಬಾಳೋಣಾ |
ಮನವೇಗತಿ ಹಾದಿಯಾ ನೆನೆದೇನಾ ಪ
ನರಜನ್ಮದಲಿ ಬಂದು ಪರಿಪರಿಯಲಿ ನೊಂದು |
ಬರಿಯಾವಡಲ ಹೊರೆದೇನಾ ೧
ತಲೆವೂರಿ ತಪಗೂಡಿ ಹಲವ ಕಾಲವ ಮಾಡಿ |
ನೆಲೆಯ ಲೇಶವ ಪಡೆದೇನಾ ೨
ತಂದೆ ಮಹಿಪತಿ ನಂದನ ಸಾರಥಿ
ಹೊಂದುವದು ಇನ್ನಾರೇನು ೩

೫೬೨
ಇದು ವಿವೇಕವಲ್ಲಾಪ
ಸತ್ಸಂಗವಾರೇ ನೀ ಬಯಸುವಿ ಮದಾ | ಮತ್ಸರಗಳಿದಿಲ್ಲಾ ೧
ಬೆಲ್ಲೊಳಗಿನ ಕಲ್ಲಿನಂತಂಗದೊಳಗೆ ಖುಳ್ಳತಣವೇವೆಲ್ಲಾ ೨
ಮಹಿಪತಿಜನ ನುಡಿಮನ್ನಿಸಿನ್ನಾರೇ | ಅಹಿತವಗುಣ ಸಲ್ಲಾ ೩

೫೬೪
ಇದು ಹೊಂದಿಕೆಯಲ್ಲಾ ಭಕುತಿಗೆ ಪ
ಗುರುವೆಂದಾಡುತ ನೆರೆನರನಂಬಿ |
ಪರಗತಿ ಮಾರ್ಗವ ಎಂತು ನೀ ಕಾಂಬಿ ೧
ಕಲ್ಲಿನೊಳಗ ಹರಿಭಾವಿಸಿ ನುಡಿವೀ |
ಇಲ್ಲಿ ನೋಡೆಂದರ ಸಂಶಯ ಹಿಡಿವೀ ೨
ನುಡಿಯಾಪಸಾರ ಸಂಗಡಿಯೊಳು ಬೆರೆದು |
ಧೃಡಗೊಳ್ಳಲಿಲ್ಲ ವಿವೇಕದ ಸಂದು ೩
ಹಮ್ಮಿಲಿ ಕೇಳದೇ ಜ್ಞಾನದ ಗುಟ್ಟು |
ಧರ್ಮ ಜರಿದು ಜನ ಹೋಯಿತು ಕೆಟ್ಟು ೪
ತಂದೆ ಮಹಿಪತಿ ಕರುಣಿಸದನಕಾ |
ಎಂದಿಗೆ ದೊರೆಯದು ಸ್ವಾತ್ಮದ ಸುಖಾ ೫

೫೧೮
ಇದುವೆ ಕೈವಲ್ಯವು | ಸದ್ಗುರುವೇ |
ನಿಮ್ಮಿಂದೆವೆ ಕೈವಲ್ಯವು |
ನಂದನ ಕಂದ ಮುಕುಂದನ |
ಛಂದದಿ ನೆನೆವುತಾನಂದದಲಿಪ್ಪರಾ ಪ
ಭಂಗ ಬಡುವಾ ಭವದಾ |
ಚಿರಳಿಯೆನಿಸ್ಸಂಗ ಶಸ್ತ್ರವ ವಿಡಿದಾ |
ಹಂಗವಳಿದು ದೇಹದಾ ಪ್ರಪಂಚದ
ರಂಗನೊಳಗ ಬೆರೆದಾ |
ಹಿಂಗದೆ ಸಂತರ ಸಂಗದಿ ಅನುದಿನ |
ಮಂಗಳ ಹರಿಚರಿತಂಗಳ ಕೇಳುವಗಿಂದೇ ೧
ಕಂತು ಪಿತನ ಧ್ಯಾಯಿಸೀ ಮನಸಿನಿಂದಾ |
ಅಂತರಂಗದಿಪೂಜಿಸೀ |
ಶಾಂತಿಯ ಗುಣ ಧರಿಸೀ |
ತಂತು ವಿಡಿದು ನಿಶ್ಚಿಂತದಿ ಇಹಪರ
ಭ್ರಾಂತಿಯಳಿದು ವಿಶ್ರಾಂತಿಯ ಪಡೆದವಗಿದೇ೨
ಮುಂದಾಗುವ ಮುಕ್ತಿಯನು ಗುರುದಯದಿ |
ಇಂದೇಕಾಣುತ ಧನ್ಯನು |
ಸಂದೇಹ ವಳಿದನು ತುರ್ಯಾತೀತಾ |
ವಂದಿಸಿ ಭಾವದಿ ತಂದೆ ಮಹೀಪತಿ |
ದ್ವಂದ್ವ ಚರಣವನು
ಹೊಂದಿದ ನಂದನಗಿದೇ ೩

೫೬೩
ಇದುವೇ ಸಾಧಕ ವೃತ್ತಿಗಳು |
ಇದೇ ಅಬಾಧಕ ಯುಕ್ತಿಗಳು ಪ
ಸದ್ಗುರು ಪಾದಕ ಸದ್ಭಾವದಿ ನಂಬಿ |
ಹೃದ್ಗತ ಗುಜವನು ಪಡೆದಿಹನು |
ಸದ್ಗತಿಕಾಂಕ್ಷಿತ ಹರಿ ಕೀರ್ತನೆಗಳ |
ಉದ್ಗಾರ ಪ್ರೇಮದ ಮಾಡುವನು ೧
ಬಲ್ಲವನು ಕಂಡೆರಗಿ ಸಿದ್ಧಾಂತದಾ |
ಉಳ್ಳಸದ್ಭೋಧವ ಕೇಳುವನು |
ಮೆಲ್ಲನೆ ಮನನದಿ ಧ್ಯಾಸವು ಬಲಿಯುತ |
ಕ್ಷುಲ್ಲರ ಮಾತಿಗೆ ಮನ-ವಿದನು ೨
ಅನ್ಯರ ಸದ್ಗುಣ ವಾರಿಸಿ ಕೊಳುತಲಿ |
ತನ್ನವಗುಣಗಳ ಜರಿಸಿದವನು |
ಸನ್ನುಡಿ ಬಿರುನುಡಿಗಳಕದೆ ಕುಜನರ |
ಮನ್ನಿಸಿ ಶಾಂತಿಯನು ಜಡಿದಿಹನು ೩
ಬುದ್ಧಿಯ ಹೇಳಿದರೆ ನೀ ಹಿತ ಬಗೆಯದೆ |
ತಿದ್ದುದರಂದದಿ ತಿದ್ದುವನು |
ಇದ್ದಷ್ಟರೊಳಗೆ ಸಾರ್ಥಕದಲಿ ದಿನ |
ಗದ್ದಿರ ಹೊರಿಯಲು ಉದರವನು ೪
ಸರ್ವರೊಳಗೆ ಬಾಗಿ ಶಮೆ ದಮೆಯಿಂದಲಿ |
ಗರ್ವವ ತ್ಯಜಿಸಿಹ ಜನರೊಳಗೆ |
ಸರ್ವಭಾವದಿ ಗುರು ಮಹಿಪತಿ ಸ್ವಾಮಿಯು |
ಅರ್ವವ ಜಗಸನ್ಮತನು ೫

೫೨೦
ಇದೆ ಪರಿಗುರು ನೋಡಿ ನರನಲ್ಲಾ |
ಸದ ಮಲ ಘನ ಕೈವಲ್ಯಾ ಪ
ಸುರ ತರು ಮರದೊಳಗ ಸರಿಯಹುದೇ |
ಪರಸವು ಪಾಷಾಣಹುದೇ ೧
ಸುರಭಿಯು ಆವಿನೊಳು ಸಮವಲ್ಲಾ |
ಸುರನದಿ ಸಲಿಲದೊಳಲ್ಲಾ ೨
ಧರಿಯೊಳು ದೋರುತಿಹಾ ಕೃಷ್ಣನ್ನಾ |
ಪೊರೆವನು ಮಹಿಪತಿ ರನ್ನಾ ೩

೧೩೦
ಇದೇನಿದೇನು ನಿನ್ನ ಪದವ ನಂಬಿದವ ಗೆಡರು
ಬಾಧಿಸು ವದೇನು ಪ
ಅವನ ಬದಿಯಲಿ ಗರುಡ ಮಣಿಯಿರೆ|
ಹಾವಿನ ಗರಳವ ಏರುವದೇ|
ಆವಾಗು ಅಮೃತ ಕಲಶ ಮನೆಯೊಳಿರೆ|
ಸಾವಿನ ಭಯದಿಂಬಳಲುವರೇ ರಂಗಯ್ಯಾ ೧
ಹನುಮನ ಪರಿಚಾರಕರಿಗೆ ಬೆಂಬತ್ತಿ
ಬಿನಗು ಭೊತಂಗಳು ತಟ್ಟುವವೇ
ಅನಳನ ಹೊರಿಯಲಿ ಕುಳಿತಿರೆ ಹಿಮದಿಂದ
ತನುಗುಗ್ಗರಿಸಿ ಬಿದ್ದು ಎರಗುವ ದೇನಯ್ಯಾ ೨
ನಿನ್ನವ ನೆನಿಸಿರೆ ಎನಗ ದುರಿತ ಬಂದು|
ಬನ್ನ ಬಡಿಸೆ ಕುಂದ ನಿನಗಲ್ಲವೇ
ಎನ್ನವ ಗುಣಗಳ ನೋಡದೆ ರಕ್ಷಿಸು
ಸನ್ನುತ ಮಹಿಪತಿ ನಂದನ ಜೀವನ ೩

೪೪೩
ಇದೇನೈ ಛಂದಾ | ಗುರುವೇ | ಇದೇನೈ ಛಂದಾ ಪ
ಸರೂಪದಲಿ ನಿಂದು ಹೊರೆಯದೆ ನಮ್ಮ |
ಅರೂಪದಲಿ ಗೋಚರಿಸಿತು ಪ್ರೇಮ೧
ಮನೆವಾರ್ತೆಯಲಿ ಸಂಗದನುವುದೋರದೇ |
ವನದೊಳು ವೃಂದಾವನದೊಳು ನಲಿದೆ೨
ಮಾತು ಮಾತಿಗೆ ಸವಿಧಾತು ತೋರದೇ |
ಯಾತಕೆ ಮೌನದ ರೀತಿಯ ಹಿಡಿದೆ ೩
ಏನೆಂದು ಅರಿಯದ ಜ್ಞಾನಿಯುನಾನು |
ನ್ಯೂನಾರಿಸದೆ ನೀಡು ಸ್ವಾನಂದವನು ೪
ತಂದೆ ಮಹಿಪತಿ ನಂದನ ಪ್ರಾಣಾ |
ಎಂದೆಂದು ಕರಿಯೆ ‘ಓ’ ಎಂದನು ಕರುಣಾ೫

೫೬೫
ಇದೇವೆ ನರ ಪಶು ಕಾಣಿರ್ಯೋ |
ಇದೇ ಮನದ ಸ್ಥಿತಿ ನೋಡಿರ್ಯೋ ಪ
ಉದಯದಲೇಳುತ ಉದರದಿ ಧಾವತಿ |
ಉದರ ತುಂಬಲು ನಿದ್ರಿಯ ಭರವು |
ಮದದಲಿ ಭಯ ಕೊಟ್ಟಿಗೆಯಲಿ ಮಾಯದ |
ಸದಮಲ ಪಾರದ ಬಂಧನವು ೧
ಮುನ್ನಿನ ಸಂಚಿತ ನೊಗ ಹೆಗಲಲಿ ಪೊತ್ತು |
ಘನ್ನದುರಿತ ಘಸಣೆಯ ತಳೆದು |
ತನ್ನ ಹಿತಾ ಹಿತ ಲೇಶವ ನರಿಯದೆ |
ಕಣ್ಣೆವೆಯಿಕ್ಕದೆ ಡೋಕುವನು ೨
ಗುರುವರ ಮಹಿಪತಿ ನಂದನ ಸ್ವಾಮಿಯು |
ಹೊರೆವ ವಡಿಯನೆಂಬ ಗುರುತರಿದೇ |
ಧರಿಯೊಳು ತನ್ನನು ಅನುದಿನ ಕಾವವ |
ಸಿರಿಯ ಮದಾಂಧನ ನಂಬಿಹುದು ೩

೫೬೬
ಇದೇವೆ ಬಂದದಾ ಖೂನವು |
ಇದೇವೆ ಸಾರ್ಥಕ ಜನುಮವು ಪ
ಹೊತ್ತು ಹೋಗದ ಬೀದಿ ಮಾತುಗಳಾಡದೆ
ಚಿತ್ತಕ ಆಲೇಶ ತರಗುಡನು
ಉತ್ತಮರೊಳುಕೂಡಿ ಶ್ರೀಹರಿ ಮಹಿಮೆಯಾ
ನಿತ್ಯ ಕಥಾಮೃತ ಸೇವಿಪನು ೧
ಹಾಲವನೆರೆದರೆ ಸರಕನೆ ಕುಡಿಯದ
ಬಾಲಕನಂದದಿ ಈ ಮನವು
ಕಾಲಕಾಲಕ ಸದ್ಭೋದವ ಕೇಳಿಸಿ
ಮ್ಯಾಲ ಸ್ವಹಿತ ಕೊಡುವನು ೨
ಉದರದ ಧಾವತಿಗನುದಿನ ಬೆರತಿರ
ಇದರೊಳಗೆಚ್ಚರ ಹಿಡಿದಿಹನು
ಮದಮತ್ಸರಳಿದು ಗುರುಮಹಿಪತಿ ಪದ
ಪದುಮದಹಿಷ್ಠೆಯ ಜಡಿದಿಹನು ೩

೧೩೧
ಇದೋ ಬಂದಾನೇಳೇ ಭಾವೇ ನಿನ್ನರಸಾ|
ಮುದದಿ ಪ್ರಾರ್ಥನೆಯ ಮಾಡಿ ಕರೆತಂದೆನೀಗ ಪ
ನೊಸಲಲಿ ಇಟ್ಟ ಕಸ್ತೂರಿ ರತ್ನಮಯದಿಂದ|
ಪೊಸಪರಿಯ ಕಿರೀಟವಧರಿಸಿ|
ಎಸೆವ ಕುಂಡಲದಿಂದ ಪೊಳೆವಾಕದಪುಗಳು|
ಬಿಸಿರು ಹದಳ ನೇತ್ರಲೊಪ್ಪುತ ನಮ್ಮ ೧
ತುಂಬಿಯಂತೆ ವಳೆಕಾವಳಿ ಶೋಬಿ|
ತುಂಬಜ ಮುಖ ಅತಿ ಸುಂದರ ರೂಪಾ|
ಕಂಬುಕಂದರದಲಿ ಹಾರದಾ ಕೌಸ್ತಭ ಮಾಲೆ|
ಅಂಬುಜಧರ ನೋಡು ಅರನಗೆ ನಗುತ್ತಾ ೨
ಗರುಡನ ಮ್ಯಾಲೇರಿ ಕೊಂಡುತಾಹರುಷದಿ|
ಪರಮ ಪಾವನೆ ಕೇಳು ಸದ್ಭಕುತಿಂದ|
ಧರೆಯೊಳಾರಾರು ಕರೆದರೆ ಬಷ್ಟುವೆನೆಂಬ|
ತೆರ ತೋರಿಸಲು ಮಹಿಪತಿ ನಂದ ನೊಡೆಯಾ ೩

೨೫
ಇದೋ ಶಿವ ಬಂದಾ ವೇದಾಂತ ವೇದದಯೋದದಿ ಬಂದಾ ಪ
ಇಂದುಧರನು ಬಂದಾಕಂದುಗೋರಳ ಬಂದಾ
ನಂದಿವಾಹನ ಚಿದಾನಂದನು ಬಂದಾ೧
ಶಂಭುಶಂಕರ ಬಂದಾ ಜಂಭಾರಿಸುತ ಬಂದಾ
ಅಂಬಿಕಾರಮಣ ತ್ರಯಂಬಕ ಬಂದಾ೨
ಕಂತುಹರನು ಬಂದಾ ಅಂತರಾತ್ಮನು ಬಂದಾ
ಚಿಂತಿತಾರ್ಥೀವ ತ್ರಿಪುರಾಂತಕ ಬಂದಾ ೩
ಗಂಗಾಧರನು ಬಂದಾ ಮಂಗಳಾಂಗನು ಬಂದಾ
ಸಂಗ ರಹಿತ ಮಹಾಲಿಂಗನು ಬಂದಾ೪
ಉರಗ ಭೂಷಣ ಬಂದಾ ಸುರರ ಪೋಷಣ ಬಂದಾ
ಗುರು ಮಹಿಪತಿ ಪ್ರಭು ಕರುಣದಿ ಬಂದಾ೫

೫೫೯
ಇದ್ದರಿರಬೇಕು ಅನುದಿನಾ | ಒಳ್ಳೆವರ ಸಹವಾಸಾ ಪ
ಅಂಗಸಂಗಗಳಿಂದ | ಮಂಗಳೋತ್ಸಾಹವಾಗಿ |
ಕಂಗಳಿಗಿದಿರಿಡುವದು ಉಲ್ಹಾಸಾ೧
ಸಾರಿ ಬೀರಿ ಬೋಧವಾ | ದಾರಿದೋರಿ ಭಕ್ತಿಯಾ |
ದೂರ ಮಾಡುವರು | ಭವಭಯ ಕ್ಲೇಶಾ ೨
ಗುರುವರ ಮಹಿಪತಿಸುತಪ್ರಭು ಸ್ಮರಣೆಯಾ |
ಮರಹು ಮರೆಸುವರದರುದ್ದೇಶಾ ೩

೫೨೧
ಇನ್ನಾದರೆಚ್ಚರೇಳಿನ್ನು ಸಾಲದೆನಿದ್ರೆ ಬನ್ನ
ಬಡಿಸುವುದು:ಖನೀಗುವಂತೆ ಸಿರಿ
ಪನ್ನಗಾದ್ರೀ ಶಪದವನ್ನೆನೆದು ಸುಖಿಯಾಗಿ
ಮನ್ನಣೆಯ ಪಡಿಯ ಕಂಡ್ಯಾಮನವೆ ಪ
ಘನ್ನವಿದ್ಯದಮಬ್ಬಿಲಿನ್ನ ಖಳಜಗದ ಜೀ
ವನ್ನ ಮಲಗಿದೆರೊಳಗ ಮುನ್ನ ಮಾಡಿದ ಸುಕೃತ
ಪುಣ್ಯ ತಂಗಾಳಿ ಸಂಪನ್ನ ಗುರು ಕರುಣೋದಯ
ದುನ್ನತೆಯ ಬೆಳಗು ಕಂಡು
ಸನ್ನುತುದಯರಾಗಸ್ತವನ್ನು ಪಡುತಜ್ಞಾನ
ಚನ್ನ ನದಿಯೊಳುಮಿಂದು ತನ್ನ ಸಂಚಿತದ ತ್ರೈಯ
ಘ್ರ್ಯನ್ನೆರದು ಮೆರುವುತಿಹ ನಿನ್ನ ಸಿರಿಕರ ನೋಡು
ಇನ್ನು ನಾಚಿಕೆ ಬಾರದೇ ೧
ಬಂದು ನರದೇಹದಲಿ ನಿಂದಾಗ್ರ ಜನ್ಮದಲಿ
ಹೊಂದುಪಥವನೆ ಬಿಟ್ಟು ಛಂದ ಹೊಲಬದಿ ಕೆಟ್ಟು
ಮಂದಮತ ತನವೆರಿಸಿ ಮಂದಿಯೊಳಗಲ್ಲೆನಿಸಿ
ನೊಂದು ಪರಿ ಪರಿಯ ಬಯಸೀ
ಬೆಂದ ವಡಲನೆ ಹೊರೆದಿ ಕುಂದದಾಟಕೆ ಬೆರೆದಿ
ತಂದಾಯುಷವ ಹೊತ್ತು ಇರದಯೇರಿತು ಬೆರೆತು
ಮುಂದ ನಿನ್ನಯ ಗತಿಯ ಯಂದು ಘಳಿಸುವೆ ಸ್ಥಿತಿಯಾ
ಇಂದಿರೇಶನ ವಲುಮೆಯಾ ೨
ಮರಹು ಮುಸುಕವ ತೆಗೆದು ಅರಹುನಯನವ ತೆರೆದು
ಪರಮ ಭಾವನೆ ಬಲಿದು ವರ ಭಕುತಿಗಳ ಜಡಿದು
ತರಣೋಪಾಯವ ಕೂಡು ಹರಿಯ ಸೇವೆಯ ಮಾಡು
ನೆರೆ ಸಾಧು ಸಂಗ ಬೇಡು
ಸುರಸ ಬೋಧವ ಕೇಳು ಸರಕುಮಾತನೆ ಕೀಳು
ಧರಿಯೊಳಗ ಸಾರ್ಥಕಲಿ ಪರಿಬಾಳುತಲಿರಲಿ
ಗುರು ಮಹಿಪತಿಸ್ವಾಮಿ ಹೊರೆವದಯದಲಿ ನೇಮಿ
ಶರಣ ಜನರಂತರ್ಯಾಮೀ ೩

೧೪೬
ಇನ್ನಾರ ಭಜಿಸಲೈಯ್ಯಾ|ಯನ್ನ ಗತಿ
ಮುಕುತಿದಾಯಕ ರಂಗ ನೀನಿರಲು ಪ
ಸ್ನಾನಪಾನಕಬಪ್ಪ ಸುರನದಿಯನೇ ತ್ಯಜಿಸಿ
ಹೀನ ಸರಿತೆಗಳಲ್ಲಿ ಮುಣುಗುವರೇ
ಏನ ಬೇಡಿದ ನೀವ ಸುರ ಭೂಜ ಇದಿರಿಡಲು
ಕಾನನದ ಶಾಲ್ಮಲಿಯ ಫಲವ ನರಸುವಂತೆ ೧
ಕಾಮಧೇನು ಮನಿಗೆ ಬರಲು ಕರೆ ಕೊಳ್ಳದೇ
ಆ ಮೊಲದ ಹಾಲವನು ಬಯಸುವಂತೆ
ಕಾಮಿತಾರ್ಥವ ನೀವ ಚಿಂತಾ ಮಣಿಯಿರಲು
ಪ್ರೇಮದಿಂದಲಿ ಕಾಜು ಮಣಿಯ ನರಸುವಂತೆ೨
ತಾಯ ಮಾರಿಯ ತೋತ್ತು ಕೊಂಬಂತೆ ಸಿರಿಯಸುಖ
ದಾಯಕ ನಿನ್ನ ಮರದನ್ಯಕೆರಗೀ
ಹೇಯ ವೃತ್ತಿಗೆ ಬೆರೆವದುಂಟೇ ನಿನ್ನವನೆನಿಸಿಕಾಯೋ ಭಕುತಿಯ ನಿತ್ತು ಗುರು ಮಹಿಪತಿ ಸ್ವಾಮಿ೩

೫೬೭
ಇನ್ನಾರೆ ತಿಳಿದು ನೋಡು ಮನರಾಯಾ |
ನಿನ್ನ ಕಣ್ಣದೆರೆದು ಸ್ವ ಹಿತದ ಉಪಾಯಾ ಪ
ನಾನಾ ಜನ್ಮದಲ್ಲಿ ಬಂದು ಧರೆಯಲ್ಲಿ ಸುಖ |
ವೇನು ಪಡೆದಿ ಹರಿಯ ಸ್ಮರಣೆ ಮರೆದಿಲ್ಲಿ ೧
ಶರಗೊಡ್ಡಿ ಬೇಡಿಕೊಂಬೆ ನಾನೀಗಾ |
ಸ್ಥಿರವಾದರಿಲ್ಲ ದೂರ ಶಿವಯೋಗಾ ೨
ಇಂದು ನಾಳೆವೆನ್ನಬೇಡಿ ನಿಶ್ಚಯಾ ನಿನಗ |
ಮುಂದ ಮತ್ತ ದೊರೆಯದಿದ ನರದೇಹಾ ೩
ತಂದೆ ಮಹಿಪತಿಸ್ವಾಮಿ ದಯದಿಂದ |
ನಂದವ ಪಡೆದು ಗೆಲಿಯೋ ಭವದಿಂದಾ ೪

೫೬೮
ಇನ್ನಾರೆ ನೆರೆ ತಿಳಿ ನಿಜ ಹಿತವನು ಪ
ಇನ್ನಾರೆ ನೆರೆ ತಿಳಿ ನಿಜ ಹಿತವನು |
ನಿನ್ನೊಳು ನೀನು ಮರಳು ಮನವೇ |
ತನ್ನ ಹಿತವ ತಾ ನರಿಯದೆ ಮರೆದು |
ದಣ್ಣನೆ ದಣಿವುದು ಸುಖದನುವೇ ೧
ಸಂತರಿಗೆರಗಿ ಶರಣವ ಮಾಡಿ |
ಸದ್ಭೋಧ ಕೇಳಲು ಬೇಸರಿಕೆ |
ಪಂಥದಿ ಲೆತ್ತ ಪಗಡಿ ಜೂಜೂ ಮಂಡಿಸಿ |
ಎಂದಿಗೆ ದಣಿಯೇ ನೀ ವಂದಿನಕೆ ೨
ಒಂದರೆ ಘಳಿಗೆಯ ಹರಿಕಥೆ ಮಾಡುವ |
ಸ್ಥಳದಲಿ ಕೂಡಲು ತೂಕಡಿಕೆ |
ಛಂದದಿ ಹಾಸ್ಯ ಕುವಿದ್ಯಗಳಾಟವ |
ನೋಡುದರಲಿ ಮಹಾ ಎಚ್ಚರಿಕೆ ೩
ಅನುದಿನ ಸಲಹುವ ಗುರು ಹಿರಿಯರ ಪಥ |
ಅನುಸರಣಿಯೊಳಗೆ ನಿರ್ಭಯವು |
ಧನ ಧರ್ಮದಂಧರ ಮನಸವ ಹಿಡಿಯಲು |
ಕಾಶಿನ ಆಶೆಗೆ ಬೆಜ್ಜರವು ೪
ತೃಷೆಯದ ಕಾಲಕೆ ಬಾವಿ ತೋಡುವೆನೆಂಬಾ |
ವನ ಪರಿಯಲಿ ಮತಿವಿಡಿಯದಿರು |
ವಸುಧಿಲಿ ಮಹಿಪತಿ ನಂದನ ಪ್ರಭುವಿನ |
ಶರಣ ಹುಗಲು ದಿನ ಗಳೆಯದಿರು ೫

೪೪೪
ಇನ್ನೇನು ನೋಡುವಿ ನೆಲಿಯಾ |
ಬನ್ನ ಬಿಡಿಸಿ ಕಾಯೋ ಶ್ರೀ ಗುರುರಾಯಾ ಪ
ದಾಸಿಗೆ ಕರುಣಿಸಿ ರಾಯರಂಭೆಯ ಮಾಡಿ |
ದೋಷವೆಣಿಸುವನೆ ಮುನ್ನಿನ ನೋಡಿ ೧
ಸರಿ ತಾ ಹರಿದು ಬಂದು ಗಂಗೆಯಾ ಕೂಡಲಿ |
ತಿರುಗಿ ನೂಕುವದೇನು ಜರೆಯುತಲಿ೨
ತಂದೆ ಮಹಿಪತಿ ನಿಮ್ಮ ನಂದನನೆನಿಸುತ |
ಕುಂದ ನಾರಿಸುವದು ಬಿರುದಿಗುಚಿತಾ ೩

೫೨೨
ಇನ್ನೇನು ನೋಡುವಿ ನೆಲಿಯಾ | ಭವ |
ಬನ್ನ ಬಿಡಿಸಿ ಕಾಯೋ ಅಜಭವರಯ್ಯ ಪ
ಆಶೆಯೆಂಬ ನದಿಯಲ್ಲಿ | ಘನ |
ಸೂಸುವ ಮನೋರಥವ ಸೆಳವಿನಲಿ |
ವಾಸನೆ ತೆರೆಗಳಿ ಬರಲಿ | ಬಲು |
ಘಾಸಿಯಾಗುವೆ ಸಿಕ್ಕಿ ಮೋಹ ಸುಳಿಯಲಿ ೧
ಉಲಿವ ಕುತರ್ಕ ಪಕ್ಷಿಗಳು | ನುಂಗ |
ಲೆಳೆವ ಮೊಸಳೆ ನಕ್ರ ಕಾಮಕ್ರೋಧಗಳು |
ಬಲಿದು ವಿವೇಕ ಧಡಿಗಳು | ಕೋರೆ |
ಯಲಿ ಬೀಳೆ ಧೃತಿ ಶಾಂತಿಯೆಂಬಾ ವೃಕ್ಷಗಳು೨
ಇಂತು ಹೆರಿಗೆ ಬಿದ್ದೆ ಬಂದು | ಸಿರಿ |
ಕಾಂತ ನಿನ್ನಯ ನಾಮ ಹಡಗ ತಂದು |
ಪಂಥಗಾಣಿಸೋ ಗತಿಗಿಂದು | ದಯ |
ವಂತ ಗುರು ಮಹಿಪತಿ ಪ್ರಭು ದೀನ ಬಂಧು೩

೧೩೨
ಇನ್ಯಾಕೆ ದೇವಿ ಮುನಿಸು ಮಾತಾಡೇ|
ನಿನ್ನ ಹಿಡಿದ ಛಲ ಗೆಲಿಸಿದ ಬಳಿಕ ಪ
ಘನ ಮಳೆಗರವ ಜೀಮ್ಯೂತಮ್ಯಾಲೇ|ತಾ|
ಮುನಿಪ ಕೋಪದಿ ಪೋಗುತಲಿಹ|
ಮನ ದೊಳಗಿದ್ದ ಚಾತಕನಂತೆ ನಿನ್ನ ಮ್ಯಾಲೆ|
ವನರುಹ ನೇತ್ರ ನಾ ಮುನಿದುದು ಕಾಣೆ ೧
ಸಂಗತಿಲ್ಲದೆ ನಿನ್ನಾಂಗ ನಟ್ಟುಳಿಯಿಂದ|
ಹಿಂಗದೆ ಮನಸೆನ್ನ ಭಂಗ ಗೊಂಡಿಹುದು|
ತುಂಗ ಪಯೋಧರೆನ್ನಂಗ ತೋಷಿಸುವ ತಾ|
ಲಿಂಗನ ಗೈಯೆ ನೀ ಮಂಗಳವದನೇ ೨
ನಿನ್ನಿಂದಾಗಲಿ ಮತ್ತ ನನ್ನಿಂದಾಗಲಿ ಇನ್ನು
ಮುನ್ನಾದ ಮನದ ಗಂಟು ಬಿಟ್ಟು|
ಪನ್ನಗವೇಣಿ ಮಾತಾಡೇ ಸದ್ಗುಣದ ಸಂ|
ಪನ್ನೇ ಮಹಿಪತಿ ಸುತಗೊಲಿದ ಶ್ರೀದೇವಿ ೩

೧೩೪
ಇವ ನೋಡಮ್ಮಾ ಮಾನವನೆ|ಅವತರಸಿಹ ತ ಮಾಧವನೇ ಪ
ಹಲವು ನಾರೇರೊಳಗ ಕೂಡಿ|ಹಲವು ರೂಪಾದನು ನೋಡಿ|
ಕೊಳಲೊಳು ಬೋಧ ಸ್ವರದಿ ಪಾಡಿ|
ನಲಿದಾಡುವ ಸ್ವಸುಖ ನೀಡಿ ೧
ಅವಿದ್ಯ ವಿಷಮಡುವನೆ ಕಲಕಿ|ಬವರದಿ ಹಮ್ಮಿತುರಗ ತುಡಕಿ|
ತವೆ ವಾಸನೆ ಹಡೆಗಳ ಕುಸುಕಿ|
ಜೀವನಮೃತ ಮಾಡಿದ ಬಳಿಕಿ ೨
ಭವಭಜಗರ ಮುಖದೊಳಗಾದಾ|ನವವಿಧ
ಗೋವಳರನು ತೆಗೆದಾ|
ಕವಿಗುರು ಮಹಿಪತಿಜನ ಹೊರದಾ|
ಭುವನದಿ ಗೋಕುಲದಲಿ ಮೆರೆದಾ ೩

೧೩೩
ಇವನಾ ನೆಲೆಗಾಣೆ ನಮ್ಮಯ್ಯಾ ಸಣ್ಣವನೇ ಪ
ಒರಳವನೆಳೆದೊಯ್ದು ಮರಗಳ ಕೆಡೆಹಿಡಿದ|
ಭರದಿ ಪೂತನಿಯಸುವ ಹೀರಿದಾ ನಮ್ಮಯ್ಯಾ ೧
ಬೇರಳಲಿ ಗಿರಿಯೆತ್ತಿ ತುರುಗಳ ಕಾಯ್ದಾ|
ತೆರೆದು ಬಾಯೊಳು ಜಗವ ತೋರಿದ ನಮ್ಮಾಯ್ಯಾ ೨
ವೇಣುನಾದ ಮಾಡಿ ತೃಣಪಶು ಮೊದಲಾದ|
ಏಣಾಕ್ಷಿಯರ ಮನವಾ ಭ್ರಮಿಸಿದಾ ನಮ್ಮಯ್ಯಾ ೩
ಕಾಳಿ ಮಡುವ ಹೊಕ್ಕು ಕಾಳಿಂಗನೆಳೆತಂದಾ|
ಲೀಲೆ ತೋರಲು ಹರಿ ಉದಿಸಿದ ನಮ್ಮಯ್ಯಾ ೪
ಗುರುಮಹಿಪತಿ ಸ್ವಾಮಿ ಸುರುತರು ಎನಗಾದಾ|
ನರನೆಂಬವರ ಬಾಮಾ ಬಿಗಿಸಿದ ನಮ್ಮಯ್ಯಾ ೫

೫೬೯
ಇವನೆವೆ ಮಾನವನು ನೋಡಿರೋ ಇವನೆವೆ ಮಾನವನು ಪ
ದಾವನು ಶ್ರಿ ಹರಿ ಪಾವನ ನಾಮವ
ಆವಾಗ ನೆನೆವುತ ಸಾವಧನಾದಾ ಅ.ಪ
ಹಿಂದಿನ ಪುಣ್ಯದಲಿ ನಾನೀಗ ಬಂದೆನು ನರದೇಹದಲಿ |
ಮುಂದಾವ ಗತಿಗಳೋ ಛಂದದ ತಿಳಿಯದು |
ಮಂದರ ಧರ ಸಲಹೆಂದು ಮೊರೆಯಿಡುವ ೧
ಇದ್ದಷ್ಟರೊಳುದಾವ ಶೇವೆಗೆ ಕದ್ದಿರ ತನುಮನವಾ |
ಸಿದ್ಧರ ನೆರೆಯಲಿ ಶಿದ್ಧ ಬೋಧಾಮೃತ |
ಬುದ್ಧಿಲಿ ಸೇವಿಸಿ ಗದ್ದಳವಾಗಾ ೨
ಗುರು ಮಹಿಪತಿ ಸ್ವಾಮಿ ಚರಣಕ ಶರಣೆಂದವನು ಪ್ರೇಮಿ |
ಗುರು ವಚನವನಂದದಿ ಧರೆಯೊಳು ನಡೆಯುತ |
ಗುರು ಭಕ್ತಿ ಜಾಗಿಸಿ ಗುರುತನಕ ಬಂದಾ ೩

೫೭೦
ಇವರೆವೆ ಧನ್ಯರಲ್ಲವೆ ಈ ಶರಣರು | ಈ ಶರಣರು |
ಇವರೆವೆ ಧನ್ಯರಲ್ಲವೆ ಅವನಿಲಿ ಶರಣರು ಪ
ಗುರುವಿಗೆ ಶರಣೆಂದು | ಅವರ ಘನ |
ಕರುಣಾನಂದವ ಪಡೆದು |
ಗುರುವಚನದಿ ನಡೆದು | ಸದ್ಭಾವದಿಂದ |
ತರಣೋಪಾಯವನರಿದು |
ಜರಿವನ್ಯ ಹಂಬಲವ ಬೆರೆದು | ಭಕ್ತಿರಸದೊಳು |
ನಿರಪೇಕ್ಷ ವೃತ್ತಿಯಿಂದಾ | ಚರರಿಸುತಿಹ ಶರಣರು ೧
ನಾನು ನನ್ನದುಯನುವಾ | ಮರದು ಭವ |
ಕಾನನವನೆ ತೊರೆವಾ |
ಮಾನುಭಾವರ ಸಂಗವಾ | ಪಡೆದು ನಿತ್ಯ |
ತಾನಾರೆಂಬುದು ನರಿವಾ |
ಸ್ವಾನಂದಬೋಧವನು ಮಾನ | ನೀಗಿ ಶ್ರವಣದಿ |
ಸಾನುರಾಗದಲಿಂದ ತಾನುಂಬ ಶರಣರು ೨
ಹರಿಯೇ ಪರದೈವವೆಂಬುದು | ದೃಢ ಬಲಿದು |
ಹರಿಯಲ್ಲರೊಳಗರಿದು |
ಹರಿನಾಮ ನೆನೆನೆನೆದು | ಸುಪ್ರೇಮದಿ |
ಶರೀರ ಭಾವನೆ ಮರೆದು |
ಹರುಷದ ಗುಡಿಗಟ್ಟಿಬರುವ | ನಯನೋದಕದಿ |
ಗುರುಮಹಿಪತಿಸ್ವಾಮಿ ಚರಣದ ಶರಣರು ೩

೨೭
ಇಷ್ಟಲಿಂಗಾರ್ಚನವಾ | ಮಾಡುವರಾ |
ಎಷ್ಟೆಂದ್ಹೇಳಲಿ ಭಾಗ್ಯವಾ |
ಕಟ್ಟಿ ಉಡಲಾಗದೇನಟ್ಟುತ್ತ ಮಾಂಗದಿ |
ಕಟ್ಟಲಿಲ್ಲದ ತೇಂಜಾಂಗುಷ್ಟದ ಲಿಪ್ಪಾ ಪ
ಹೃದಯವೇ ಮಂದಿರವು | ಅಷ್ಟದಳ |
ಪದುಮವೇ ಮಂಟಪವು |
ವದಗಿ ಮರುಹು ಎಂಬುವದೇ ನಿರ್ಮಾಲ್ಯವ ಬಿಟ್ಟು |
ಸದಮಲ ಅರುಹಿನಾ ಉದಕದ ಮಜ್ಜನದೀ ೧
ವಿವೇಕ ವಸ್ತ್ರ ಕೊಟ್ಟು | ಶುದ್ಧಸತ್ವ
ಶ್ರೀ ವಿಭೂತಿಯ ನಿಟ್ಟು |
ಭಾವಗಂಧ ಭಕ್ತೀವ ತಿಲಾಕ್ಷತೆ |
ಸಾವಧಾನದಿ ತ್ರಿಗುಣವೇ ತ್ರಿದಳ ಬಿಲ್ವದಿ ೨
ಪುಣ್ಯಗಂಧವೇ ಧೂಪವು ಸುಜ್ಞಾನದ |
ರನ್ನ ಜೋತಿಯ ದೀಪವು |
ತನ್ನನುಭವ ಸಂಪನ್ನ ನೈವೇದ್ಯವು |
ಮುನ್ನೆ ತಾಂಬೋಲವಾನನ್ಯ ಚಿಂತನೆಯಂಬಾದಿ ೩
ಕರಣ ದಾರತಿಗಳನ್ನು | ಬೆಳಗುವಾ |
ಪರಿಚಾರ ಪ್ರಾಣಗಳು |
ಸ್ಪುರಿತ ನಾಹತದ ವರವಾದ್ಯ ಘೋಷವು |
ಪರಿಪರಿಯಾದ ಝೆಂಕರಿಸುವ – ರವದಿಂದಾ ೪
ವೃಂದದಿ ಷಡ್ಡಸ್ಥಳದೀ ನುಡಿವ ಮಂತ್ರ |
ವೆಂದು ಅಜಪ ಸೂತ್ರದೀ |
ತಂದೆ ಮಹಿಪತಿ ನಂದನ ಪ್ರಭು ನಮೋ |
ಯಂದು ನಿಷ್ಕಾವ್ಯದಾದ ಸಂದಿ ಸುಖಸುತ ೫

೧೧೬
ಈತ ಸೀತಾನಾಥನೇ|ವಾತಾಜಾತ ಪ್ರೀತನೇ|
ಧಾತು ಮಾತು ರಹಿತ ಖ್ಯಾತ|ಭೂತವ್ರತದಾತನೆ ಪ
ಸುಗ್ರೀವಗೆ ಸಾಮಗ್ರನೆ|ಶೀಘ್ರಗೈದನುಗ್ರಹನೆ|
ನಿಗ್ರಹಿಸಿದಾ ವಾಘ್ರದಶಾ|ಗ್ರೀವನುಗ್ರಹ ವಿಗ್ರಹನೆ೧
ಕಾಮನಿವಾನೇಮನೆ|ನಾಮಸಾರ್ವಭೌಮನೆ|
ರಾಮಶ್ಯಾಮ ಮಹೀಪತಿನಂದನ|ಹೃತ್ಕುಮುದಾ ಸೋಮನೆ೨

೫೪
ಈತನೆನೇ ಹನುಮನು ಈತನೆನೇ ನಮ್ಮಗುರು
ಲಂಕೆಯ ಸಖಗ ನಿಶ್ಯಂಕೆಯಲುಣಿಸಿದಾ
ಕೌರವ ಬಲದ ಕುಠಾರಿಯಂದೆನಿಸಿದಾ
ಮೂರೇಳು ದುರ್ಭಾಷ್ಯ ಹಾರಿಸಿದಾ ಮುನಿ
ಹರಿ ಮತ ಸ್ಥಾಪನ ಬಿರುದಾಂಕ ದೇವನು
ಗುರುಮಹಿಪತಿ ಜನುದ್ಧರಿಸದ ದೇವನು ||

೫೭೧
ಉತ್ತೀರ್ಣವಾಗಲರಿಯರು | ತಮ್ಮ |
ನಿತ್ಯನಿಂದಕ ದುರ್ಜನರಿಗೆ ಸುಜನರು ಪ
ಕೂಲಿಯ ಕೊಂಡು ವಸ್ತ್ರಂಗಳ ರಜಕನು |
ಇಳಯೊಳು ವಗೆವನು ಕೈಗಳಿಂದಲ್ಲದೇ |
ಮಲಿನವಗುಣ ಮೈಲಿಗೆ ಕಾಸು ಕೊಳದೇ |
ಚಲಿಸದೆ ನಾಲಿಗೆಯಿಂದ ತೊಳೆವರಾಗಿ ೧
ತ್ರಯದ ಬಾಡಿಗಿಕೊಂಡು ಹೆಚ್ಚುಗಂಟವ ಕೊಳ್ಳ |
ವೈವನು ಹೆಜ್ಜೆಯ ಪಯಣದ ಮುಂದಕ |
ನಯದಿಂದಿವರ ನಿಂದೆ ದೋಷ ಭಾರವ ಹೊತ್ತು |
ಭಯವಹಾನಂತ ಜನ್ಮವ ಸೋಸುವರಾಗಿ ೨
ಧರೆಯೊಳು ತಮ್ಮನ್ನ ತಾ ಉಂಡು ಬುಧರಿಗೆ |
ಪರಮಸುಖವ ಕೊಟ್ಟು ದುಃಖವ ಕೊಂಬರು |
ಗುರು ಮಹಿಪತಿಸುತ ಪ್ರಭು ಸ್ಮರಣೆಯನು ಬಿಟ್ಟು |
ಇರಳ್ಹಗಲುದ್ಯೋಗ ಇದೇ ಮಾಡುವರಾಗಿ ೩


ಉದಯದಲೆದ್ದು ಶ್ರೀಹರಿಯ ನಾಮಂಗಳನು |
ವದನದಿಂದುಚ್ಚರಿಸಿ ಪಾಡುವ ನರರು ದುರಿ |
ತದ ಫಸಣಿಗಳ ನೀಗಿ ಪಡಕೊಂಬರತಿ
ಮುದದಿಸದಮಲಾನಂದ ಸುಖವ ಪ
ಕೃಷ್ಣ ಕಮಲೇಶ ಕಂಜಾಕ್ಷ ಕರುಣಾಬ್ಧಿ ಶ್ರೀ |
ವಿಷ್ಣು ವಿರಂಚಿಪಿತ ವಿಮಲ ವಿಶ್ವೇಶ ಭ್ರಾ |
ಜಿಷ್ಣು ಜಗಪಾಲ ಜಗಜೀವನ ಜನಾರ್ಧನ,
ತುಷ್ಣಿಕರ ಕೋಟಿತೇಜಾ ||
ವೃಷ್ಣಿ ಕುಲತಿಲಕ ವೃಂದಾವನ ವಿಹಾರಿ ಗೃಹ |
ಜಿಷ್ಣು ಸುರಸೇವೆ ಸಜ್ಜನ ಪ್ರಿಯ ಸರ್ವೇಶನ |
ಜಿಷ್ಣು ಸುತ ಸೂತ ಸಂಕರುಷಣ ಪ್ರದ್ಯುಮ್ನ ವೈಷ್ಣವ
ಅಭಿಮಾನಿ ಎಂದು೧
ಪರಮ ಪುರುಷೋತ್ತಮ ಪರಂಧಾಮ ಪರಬ್ರಹ್ಮ |
ಪರಮಾತ್ಮ ಪರಂಜ್ಯೋತಿ ಪರತರಾನಂದ ಗುಣ ಪರಿಪೂರ್ಣ |
ಪರಮೇಷ್ಠಿ ಪದದಾತ ಫಣಿಶಯನ ಪರಶುಧರ ಪದ್ಮನಾಭ |
ಮುರಮಥನ ಮದನಮೋಹನ ಮುರಲಿಲೋಲ ಮಧು |
ಹರಹಲಾಯುಧ ಹಯವದನ ಸ್ಮರಹರಾರ್ಚಿತ |
ಚರಣ ಸಚರಾಚರ ವ್ಯಾಪ್ತ ಚಿದ್ವನರೂಪ ಚಾರುಚರಿತ
ಚಲರದಹಿತನೆಂದು ೨
ಕಾಮಜಿತರೂಪ ಕೌಸ್ತುಭಧಾರಿ ತ್ರಿ |
ಧಾಮ ತ್ರಿವಿಕ್ರಮ ತ್ರಿಕಾಲಙ್ಞ ತ್ರಿಜಗನುತ |
ಶ್ರೀ ಮಚ್ಛಕೂರ್ಮ ವರಹನರಹರೇ ವಾಮನ ಕ್ಷೇತ್ರ ಹರಣ ||
ರಾಮರಾಘವ ರಾವಣಾರಿ ರಾಜೇಂದ್ರ ಶುಭ |
ನಾಮ ನಾರದ ಪ್ರಿಯ ನಾರಾಯಣ ಜನಕ |
ಜಾಮನೋಹರ ಜಾನ್ಹವೀಜನಕ ಶಬರಿಮನ
ಕಾಮಪೂರಿತನೆಂದ ೩
ಅಜನಯ್ಯ ಅಚ್ಯುತಾನಂತ ಅನಿರುದ್ಧ ಧೋ
ಕ್ಷಜಾಕ್ಷರತೀತಕ್ಷಯ ಗದಾಂ |
ಬುಜಪಾಣಿ ಬೌದ್ಧ್ಯ ಕಲ್ಕಿ ಬಲಿವರದ ಪವನಜ
ಪ್ರಿಯ ನರಕಾಂತಕಾ |
ಗಜಗತಿಪ್ರದ ಗರುಡಗಮನ ಗೋವಿಂದ ಗೊ |
ವ್ರಜಪಾಲ ವನಮಾಲಿ ವಸುದೇವಸುತ ಶಾರಂಗಿ |
ಕುಜಹರ ಕಿರೀಟಧರ ಜಂಭಾರಿಧೃತ ಚತುರ್ಭುಜ ಭುವನ
ಭರಿತನೆಂದು೪
ಶ್ರೀರಂಗ ಮುನಿಸಂಗ ಸುರತುಂಗ ಗೋಪಾಂಗ |
ನಾರಿಮಣಿ ನೀಲಾಂಗ ಕಾಳಿಂಗ ಮದಭಂಗ |
ಧೀರಯದುವೀರ ಗಂಭೀರ ಉದಾರ ಸುಕುಮಾರ
ಸಹಕಾರನೆಂದು |
ನೂರೆಂಟು ನಾಮಾವಳಿಯ ರತ್ನಮಾಲಿಕೆಯ |
ನಾರುಧರಿಸುವರವರ ಇಷ್ಟಾರ್ಥಗಳ ಕೊಟ್ಟು |
ಕಾರುಣ್ಯದಲಿ ಹೊರೆವ ಗುರುಮಹೀಪತಿಗೆ
ಸಹಕಾರ ನಿಜಪದವಿತ್ತು ೫

೭೩೪
ಉದೋ ಉದೋ ಉದೋ ಉದೋ ಉದೋ ಯನ್ನಲು
ಉದ ಮುದೋ ಪ
ತಮ್ಮನು ಪೊಗಳಿ ಪಾಲೆನೆ ಅಮ್ಮೊಮ್ಮಾ |
ಮೊಮ್ಮನ ಪಡೆದಿಹ ಜಗದಯ್ಯಾ |
ಸುಮ್ಮನ ಹೊಂದಿಹ ಬಾಲಕ ನಿಮ್ಮಾ |
ಝಮ್ಮನೆ ಸ್ಮರಣೆಗೆ ಬಾನಮ್ಮಾ ೧
ಛಂದ ವಿವೇಕದ ಚೌಡಕಿ ಹಿಡಿದು |
ಒಂದೇ ನಿಷ್ಠೆಯ ತಂತಿಯ ಬಿಗಿದು |
ಸುಂದರ ಭಕ್ತಿಯ ರಂಗಕ ಬಂದು |
ಗೊಂದಳ ಹಾಕುವೆ ನಾನಿಂದು ೨
ನಾಮಾವಳಿ ಕವಡೆಯ ಸರಥರಿಸಿ |
ಪ್ರೇಮದ ಬಂಡಾರವ ಸುರಿಸಿ |
ಆಮಹಾಜ್ಞಾನದ ಹೊತ್ತ ಪ್ರಜ್ವಲಿಸಿ |
ನಾಮಗೆಜ್ಜಿಲಿ ಕುಣಿವೆನು ಘಲಿಸಿ ೩
ಆವನಿಯ ಸುಜನರ ಮೊರೆಯನು ಕೇಳಿ |
ಅವತಾರವ ಹೊಸ ಪರಿ ತಾಳಿ |
ಭವ ಮಹಿಷಾಸುರ ನಸುವನು ಹೋಳಿ |
ಜವದಲಿ ಮಾಡಿದೆ ತುನುಶೀಳಿ ೪
ಮುನಿ ಮಾನಸ ತುಳಜಾಪೂರ ಗೇಹಿ |
ಖೂನದೊರಿಸೀ ನಿಜ ಸೋಹೀ |
ಏನೇ ನರಿಯದವನೆಂದರಿತು ಕಾಯೀ |
ಘನಗುರು ಮಹಿಪತಿ ವರದಾಯಿ ೫

೬೯
ಉಪಕಾರವೇನಾ ಹೇಳಲಿ | ಮಾಯಾದೇವಿಯಾ ||
ಅಪರ ಮಾತನ ರೂಪಕೆ ಮರೆಯಾಗಿ |
ವ್ಯಾಪಿಸಿಕೊಂಡಳು ಅನುದಿನ ಜನರಿಗೆ |
ಅಪರಾಧ ದಾರಿಗೆ ದೂರವಿಟ್ಟಳು ಪ
ಸೂರಿಯ ನಾರಾಯಣೆಂಬರು |
ಶರಣೆಂದು ಬಾಗರು ತಲೆಯನು ಒಬ್ಬರು ||
ಹರಿಯು ಪ್ರತ್ಯಕ್ಷವಾಗಿದ್ದರದೇ ಪರಿ |
ಧರೆಯೊಳುದಾಸೀನ ಮಾಡುವರೈಯಾ೧
ಅಗ್ನಿದೇವರ ಮುಖವೆಂದು |
ಸುಜ್ಞಾನಿಗಳಿದು ಹೇಳುತಲಿಹಲು ||
ಅಜ್ಞಾನಿಗಳು ಅಲ್ಲೆ ಕಾಲವ ಕಾಸುತ |
ವಜ್ಞೆಯ ಮಾಡುವ ಉಗುಳುತಿಹರು೨
ಎಂದೆಂದು ನಿಲುಕದ ಚಿದ್ರೂಪ ಘನವಾದ |
ತಂದೆ ಮಹೀಪತಿ ನಂದನ ಪ್ರಾಣನ ||
ಛಂದದಿ ಭಕ್ತಿಯ ಮಾರ್ಗದಿ ನಡೆಸುತ |
ಇಂದೆನ್ನ ಹರಿಮೆಚ್ಚು ಮಾಡಿದಳೈಯ್ಯಾ ೩

೫೭೨
ಉಬ್ಬುವದ್ಯಾಕೋ ಮದದಲಿ ಪ
ಎರಡು ದಿನದ ಛಂದ ಮರನ್ಯಾಡಿ ತೋರುತ
ಜರೆ ಬಂದು ನೂಕಲು ಮರಳುವ ಪ್ರಾಯದಿ ೧
ಲೆಕ್ಕವಿಲ್ಲದೆ ಗದ್ದಿಗಿಕ್ಕಿದ ಜಲದಂತೆ
ಪುಕ್ಕಟೆ ಜಾರುತ ದಕ್ಕದ ಧನದಿಂದ ೨
ಬುದ್ಧಿಲಿ ಬಹುಜನ ಗೆದ್ದನು ಮದದಿ
ಬಿದ್ದೋಗು ಕಾಲಕ ಸದ್ದಿಲ್ಲ ವಿದ್ಯದಿ ೩
ಉಬ್ಬುವ ಕೊಬ್ಬುವ ಹಬ್ಬುವ ಸುಖದಿಂದ
ಜಬ್ಬರ ಮಾಡುತಾ ರುಬ್ಬುವ ಕಾಲನು ೪
ತಂದೆ ಮಹಿಪತಿ ನಂದನು ಸಾರಿದಾ
ದ್ವಂದ್ವಗಳೆದು ಗೋವಿಂದನ ನೆನೆಯದೆ ೫

೫೭೬
ಎಂತು ಎನ್ನ ತಾರಿಸುವಿಯೋ ತಿಳಿಯದಿಂದಿಗೆ
ಕಂತುಪಿತನೆ ಮುಕುತಿ ಮಾರ್ಗ ಹೊಂದುವೆನೆಂದಿಗೆ ಪ
ಓದಿತತ್ವ ಶಾಸû್ರಗಳನು ಜನರಿಗ್ಹೇಳುವೆ ನಾನು
ಮೇದನಿಯೊಳು ಬಲ್ಲವನೆಂಬ ಗರ್ವ ತಾಳುವೆ
ಸಾಧು ಸಂತರ ನಡಿಯ ನುಡಿಯ ಮಹಿಮೆ ಕೇಳುವೆ ಮತ್ತೆ
ಹಾದಿತಪ್ಪಿ ಕುಜನ ವೃತ್ತಿಯಲ್ಲಿ ಬಾಳುವೆ ೧
ಸ್ವಾದ ಲಂಪಟ ದುರ್ವಿಷಯ ಬಿಡದ ಸಕ್ತನು
ಸಾಧುನಿಂದಕನಾದ ಕಪಟ ಕಲುಷ ಚಿತ್ತನು
ಸಾಧಕಗುರು ಹಿರಿಯರ ಅನುಸರಿಸಿದ ಭಕ್ತರು
ಸಾಧಿಪಕರ್ಮ ವೃತ್ತಗಳಲ್ಲಿ ಡಂಭಯುಕ್ತನು ೨
ಒಂದು ಎರಡು ಹೇಳಲೇ ಎನ್ನತಪ್ಪವಾ ಹೃದಯ
ಮಂದಿರ ಮೊಳಗಿಲ್ಲವಾಯಿತು ಜ್ಞಾನ ದೀಪವಾ
ನೊಂದು ಬೆಂದು ತಾಪತ್ರಯದಿ ಸುಖದ ರೂಪವಾ ಬಗೆವೆ
ನಿಂದು ಒಮ್ಮಿಗ್ಯಾರ ವಿಡಿಯೆ ಪಶ್ಚಾತ್ತಾಪವಾ ೩
ಪತಿತಪಾವನ ದೀನೋದ್ಧರಣನೆಂಬ ಬಿರುದವಾ
ಕ್ಷಿತಿಯೊಳಿನ್ನು ತಾಳಿದುದರ ಕೇಳು ಮಾಧವಾ
ಮತಿವಿವೇಕದಿಂದೆ ಹಚ್ಚಿ ಭಕುತಿ ಸ್ವಾದವಾ
ಗತಿಯ ಕೊಟ್ಟ ಕರಿಯೆ ನಾನು ನಿನ್ನ ಮರೆದವಾ ೪
ನಿನ್ನ ಭಕ್ತರ ಮನಿಯ ನಾಯಿ ಯಂದು ಎನ್ನನು
ಮುನ್ನಿನವರು ಉಂಡ ವೆಂಜಲ ಶೇಷವನ್ನನು
ಇನ್ನು ಇಕ್ಕಿಸಿ ಸಲಹಬೇಕು ಮೂಢ ಚಿನ್ನನು
ಘನ್ನ ಗುರು ಮಹಿಪತಿಸ್ವಾಮಿದಯ ಸಂಪನ್ನನು ೫

೫೭೭
ಎಂತು ದೊರೆವುದೋ ಇಂತು ನರದೇಹ
ಮುಂದೆ ಬಾಹ ದಿನ್ನೆಂದಿಗೆ
ಇಚಿದು ಕರುಣಿಸಿ ಸಲಹುಯನ್ನ ಮು|
ಕುಂದ ನಿನ್ನಂಘ್ರಿಗಳ ತೋರಿಸಿ ೧
ಮೊದಲೇ ದುರ್ಲಭ ಮನುಷ್ಯಾಂಗವು
ಅದರೊಳುತ್ತಮ ವರ್ಣದಿ
ಉದಿಸಿ ಭಗವಂತಾಂಘ್ರಿ ದರುಶನ
ವದಗಿ ಗತಿಗೈದಿಸುವ ಜನುಮವು ೨
ಗುರುಹಿರಿಯರೆಂದೆರಿಸಿ ಅವರನು
ಸ್ಮರಿಸಿ ಭಕ್ತಿಗೆ ಸೇರಿಸಿ
ಮರೆಸಿ ಅನ್ಯವ ಬೆರೆಸಿ ನಿಜದೊಳು
ತರಿಸಿ ತಾರಿಸುತಿಹ ಜನುಮವು ೩
ಹರಿಯ ಲಾಂಛನ ಪೌಂಡ್ರವು
ಕೊರಳು ತುಳಸಿಯ ಮಾಲೆಯಾ
ಧರಿಸಿದಂಡಿಗೆ ವಿಡಿದು ಮಾಧವ
ಚರಿತ ಪಾಡುತ ನಲಿವ ಜನುಮವು ೪
ತನ್ನವರ ಪರಿಚಾರಕೆನಿಸುವ
ಘನ್ನ ಬಿರದಿಗೆ ಪಾಲಿಸೀ
ಸನ್ನುತನೆ ಗುರುಮಹಿಪತಿ ಪ್ರಭು
ನಿನ್ನ ವಲುಮಿಂದಾದರಾಗಲಿ ೫

೧೫೭
ಎಂತು ನೋಡುವಿಯನ್ನ ಅಂತ ಹರಿಯೇ|
ಕಂತುಪಿತ ಕೈವಿಡಿದು ಕಡೆಗಾಣಿಸಯ್ಯಾ ಪ
ಆಶೆಯೆಂಬಾ ಮಹಾ ಹೆಸರುಳ್ಳ ಆ ನದಿಯು|
ಲೇಶ ಅಂತಿ-ಲ್ಲದಾ ಚಿಂತೆ ಥಡಿಯು|
ಸೂಸುತಿವೆ ಇದರೊಳಗ ಮನೋರಥವೆಂಬ ಜಲ|
ಘಾಸಿ ಮಾಡುವ ಬಯಕೆ ಲಹರಿ ಬರುತಿದೆ ೧
ದೋರುತಿದೆ ಸಂಸಾರ ತಾಪದಾವಾನಳವು |
ಹರಿದು ಬರುತಿದೆ ಕಾಳಸರ್ಪ ತಾನು |
ಅರಿಷಡ್ವರ್ಗಗಳನು ಉತ್ತುಂಗ ಜಲ ಚರವು |
ತೆರಗಾಣೆ ಮೋಹಸುಳಿಯಲಿ ಬಿದ್ದ ಬಳಿಕಾ ೨
ನಿನ್ನ ನಾಮವೆಂಬ ಸಂಗಡಿಯನು ಕಟ್ಟಿ|
ಮುನ್ನಿನ ಪರಾಧಗಳ ಕ್ಷಮೆಯ ಮಾಡಿ|
ಸನ್ನುತನೆ ಮಹಿಪತಿ ಸುತ ಪ್ರಾಣದೊಡಿಯನೆ|
ನಿನ್ನ ದಾಸರ ದಾಸನೆಂದು ದಯಮಾಡಿ೩

೪೪೮
ಎಂತು ಮರೆಯಬಹುದು ನಿಮ್ಮ ಹೇಳು ಗುರುರಾಯ |
ಅಂತರಂಗದೀ ನೆನೆದು ಪಡೆಯಬೇಕು ಸುಖಾಶ್ರಯಾ ಪ
ತಂದೆ ನೀನೇ ತಾಯಿ ನೀನೇ ಬಂಧು ಬಳಗ ನೀನೇ |
ಹೊಂದಿ ಹರುಷಬಡುವಗತಿಯ ಗುರು ದೈವ ನೀನೇ ೧
ತಂದು ಜಠರದಲ್ಲಿ ಜನುಮ ಉಣಿಸಿ ಉಡಿಸಿ ಬೆಳೆಸೀ |
ಛಂದದಿಂದಲಿ ಹೊರೆವೆಯಿನ್ನು ಬೇಡಿದನು ಸಲಿಸಿ ೨
ಮರೆಯಲಿಕ್ಕೆ ದೇಶಗ್ರಾಮ ವೃತ್ತಿಗೃಹಗಳಲ್ಲಾ |
ಎರಡು ದಿನದ ಕಾಯ ಸುಖದ ದ್ರವ್ಯ ಧನವಲ್ಲಾ೩
ಮರಹು ಮರಸಿ ಅರವ್ಹಿಲಿರಿಸಿ ಇರಹು ಘನವನರಸಿ |
ಗುರು ಮಹಿಪತಿ ಸ್ವಾಮಿ ಕಾಯಿದೇ ಕಂದನುದ್ಧರಿಸಿ೪

೧೫೮
ಎಂಥವ ನಿವನಮ್ಮಾ ಬಾಲಕನಂತಿಹ ಗೋಪೆಮ್ಮಾ
ಎಂಥವನಿವ ತನ್ನಂತತ ನ್ನಂತದೋರ ಗುಡದ
ನಂತ ಮಹಿಮ ನರಕಾಂತಕ ದೇವಾ ಪ
ವಾರಿಯೊಳಗ ಮನವಾರಿ ಕ್ರೀಡಿಸುತಿರೆ
ಘೋರ ಪ್ರವಾಹದಿ ತೀರದಲೆಮ್ಮಾ
ಆರು ಅರಿಯದಂತೆ ಸೀರೆನೆಗೆದು ಕೊಂಡು
ಗಾರು ಮಾಡಿದ ಮರ ಸೇರಿದ ಕಾಣಮ್ಮಾ
ನಾರೇರೆಲ್ಲರು ಕೂಡಿ ಸೀರೆ ಬೇಡಲು ಬಿಟ್ಟು
ನೀರ ಮುಗಿದು ಕೈಯ್ಯದೋರೆರಡೆನವಾ ೧
ಪುಣ್ಯ ಚರಣೆಸಳ ಗಣ್ಣ ಜಲಧರದ
ಬಣ್ಣದ ಲೋಪ್ಪವ ಸಣ್ಣಪನೆಂದು
ಬಣ್ಣಿಸಿ ಕರುವುತ ಹೆಣ್ಣೆಂದೊಪ್ಪುವ
ತಿಣ್ಣ ಮೊಲೆಗಳನು ಉಣ್ಣೆಂದೂಡಿದಾ
ಹೆಣ್ಣು ಪೂತನಿಯಾ ಕ್ಷಣದಿ ಅಸುವನು
ಸಣ್ಣಿಸಿ ಕಳೆದ ಮುಕ್ಕಣ್ಣನ ಸಹಿನು೨
ಇಂದು ವದನೆಯರು ಮುಂದಕ ಕದವನು
ತಂದಿಕ್ಕಿ ಪೋಗೆರೆ ಮಂದಿರದಿಂದಾ
ಸಂದಿಸ್ಯಾಗಳೆ ಆಂದದಿ ಗೋವಳ
ವೃಂದ ನೆರಹಿಕೊಂಡು ಬಂದು ನೋಡಮ್ಮಾ
ಛಂದದಿ ಬೆಣ್ಣೆಯನಿಂದು ಸೇವಿಸುತಿಹ
ತಂದೆ ಮಹಿಪತಿ ನಂದನೋಡಿಯನು೩

೫೨೪
ಎಂಥಾ ದಯಾ ನಿಧಿಯೇ | ಸದ್ಗುರು |
ಎಂಥಾ ದಯಾ ನಿಧಿಯೇ |
ಸಂತತ ಭಕ್ತಿ ವಿಶ್ರಾಂತಿಯ ದೋರಿದ ಪ
ಕಾಣದಾ ಕಂಗಳಿಗೇ | ನೋಡಮ್ಮಾ |
ಜ್ಞಾನಾಂಜ ನುಡಿದಾ |
ಪ್ರಾಣಕ ಗೋಚರ ವಾಗಿಹ ನಿಜಘನ |
ಕಾಣಿಸಿ ಇದರ್ಹಿಡಿದಾ ೧
ಆಲಿಸದಿಹ ಶಬ್ದವಾ | ಕಿವಿಯೊಳು |
ಮೂಲ ಮಂತ್ರದಳುದಿಂದಾ |
ಹೇಳಲಿನ್ನೇನದ ಸ್ವಾನುಭವದ ಘೋಷಾ |
ಫೇಳಗುಡಿಸಿ ನೋಡಿದಾ೨
ಮಂದ ಮತಿಯ ಕರೆದು | ಶುಭಕರ |
ಮುಂದತಿಯೊಳು ನೀಡಿದಾ |
ತಂದೆ ಮಹಿಪತಿ ಕಂದನೆನಿಸಿ |
ತನ್ನ ಇಂದು ಧನ್ಯನ ಮಾಡಿದಾ೩

೧೫೯
ಎಂಥಾ ಬಾಲಕನಿವನು ಎಷ್ಟೆಂದ್ಹೇಳಲಿ ನಾನು
ಪಂಥಗಾರಿಕೆಯಂಗ ಪರಮ ಪುರುಷರಂಗ
ಅಂತವ ತಿಳಿಗುಡನು ಗೋಪೆಮ್ಮಾ ಪ
ನೋಟಾವೇಟದಿ ನಲುವಾ ನಡೆಯಾಲೊಲ್ಲದೆ ನಿಲುವಾ
ಸ್ಫೋಟ ಹೃದಯವಾಗುವ ಪರಿಯಂಜಿಸುವ ಮಗು
ನೀಟ ಘಾತಪಾತಕನಮ್ಮಾಗೋಪೆಮ್ಮ
ನೀಟ ಹಾದಿಯೆ ಹಿಡಿದು ನಿತ್ಯ ಬೆಣ್ಣೆಯ ಸವಿದು
ಕಾಟಕಾರವೆ ಭಂಡಾ ತುರುಗಾವರೋಳು ಪುಂಡಾ
ಆಟಕೆ ಗುಣವೇನ ಗೋಪೆಮ್ಮಾ ೧
ನಯ ಮಾತಿಲಿ ಬರುವಾ ನೋಡಲು ಕಠಿಣಿರುವಾ
ತಾಯಡಬಲ ನೋಡಾ ತರುಣಿಯರನ ಬಿಡಾ
ಬಾಯಾದೆರೆದು ಬೇಡವಾ ಗೋಪೆಮ್ಮಾ
ತಾಯಿಂಗಂಜನು ನಿನಗೆ ತಡೆದುರೋಗವ ಹೊರಗೆ
ಮಾಯಾಗಾರನೆ ಗೋವಾ ಮತಿಯ ಕಡುವನಿವ
ಸಾಯಸ ಕಲಿಯಮ್ಮ ಗೋಪೆಮ್ಮಾ ೨
ಇದರೇರಿ ಚಿನ್ನವರಾ ಇಕ್ಕಿ ಅಂಗವ ತೋರಾ
ಕದನ ವೆಂದರ ಕಾಲ ಕೆದರಿ ಪೊರೆವ ಬಾಲಾ
ಅದ್ಭುತ ವಿಕ್ರಮನೆ ಗೋಪೆಮ್ಮಾ
ಉದ ಧಿಗಂಜನು ಧುಮುಕಿ ಉಲುವಾ ಬುದ್ದಿಯ ಸೊಕಿ
ಮುದದಿ ವಾಜಿರಿಸೇ ಮಹಿಪತಿಸುತ ಪ್ರಭು
ಬುಧ ಜನರೊಲುವಂತೆ ಗೋಪೆಮ್ಮಾ೩

೧೬೦
ಎಂಥಾ ಮಾಯಾಗಾರನೇ ತನ್ನಂತವ
ದೋರನು ಬ್ರಹ್ಮಾದಿಕರಿಗೆ ಪ
ದುಷ್ಟತನವ ಮಾಡಲು ಮನಿಮನಿ ಪೊಕ್ಕು|
ಸಿಟ್ಟಿಲೆ ಕಣ್ಣಿಲೆ ಚರಣವನು|
ಕಟ್ಟಲು ಒರಳನೆಳೆದುಕೊಂಡು ಹೋಗಿ|
ನೆಟ್ಟನೆರಡಮರಕೆಡಹಿದ ಕೃಷ್ಣಾ ೧
ಮಣ್ಣವನುಂಗಲು ಮುಳಿಯಲು ಗೋಪಿ|
ಚಿಣ್ಣರ ಕೇಳೆ ನಾನಿಲ್ಲೆನುತ|
ಸಣ್ಣ ಚೆಲುವಾ ಬಾಯಾ ನೋಡೆಂದು ತೆರೆದು ತಾ|
ಉನ್ನಂತ ಬ್ರಹ್ಮಾಂಡ ದೋರಿದಾ ಕೃಷ್ಣಾ೨
ನೋಡು ಬಾಲಕ ರೂಪ ತಾನಾಗಿಹಾ|
ಪ್ರೌಢತನದಿ ಕೊಳಲನೂದಿ|
ರೂಢಿಲಿ ಗೋಪಿಕ ಮನಸೆಳೆದು ನಲಿ|
ದಾಡುವ ಮಹಿಪತಿ ಸುತಪ್ರಿಯ ಕೃಷ್ಣಾ೩