Categories
ರಚನೆಗಳು

ಕಾಖಂಡಕಿ ಶ್ರೀಕೃಷ್ಣದಾಸರು

೫೪೩
ಮೋಕ್ಷವಿಲ್ಲಾ | ಗುರು ಕೃಪೆ ವಿನಾ ಪ
ಮಾನ್ಯ ಸ್ವದೇಶದಿ ಧನ್ಯ ವಿದೇಶದ |
ಉನ್ನತ ಕುಲದುತ್ಪನ್ನ ನೋಡಲು |
ಸನ್ನುತ ಕರ್ಮಗಳನ್ನಸುವ ಸಂ |
ಪನ್ನನು ಗುಣದಲಿ ಮುನ್ನಾಗೇನು ೧
ಪುಸ್ತಕ ಹಿಡಿಯಲು ವಸ್ತು ಬೃಹಸ್ಪತಿ |
ವಿಸ್ತರಿಸ್ಹೇಳುವ ಶಾಸ್ತ್ರದರ್ಥವ |
ದುಸ್ತರ ಯೋಗದ ನಿಸ್ತರಿಸುವ ಘನ |
ಪ್ರಸ್ತುತ ತಪಸಭ್ಯಸ್ತ್ರಾಗೇನು ೨
ಸುಂದರಿ ಮಾನಿನಿಗೊಂದೇ ಮಂಗಳ |
ಹೊಂದದೇ ಆಭರಣೆಂದೇನು ಫಲ |
ಇಂದಿರೆ ಪತಿ-ವಲುವಂದದಿ ಭಾವದಿ |
ತಂದೆ ಮಹಿಪತಿಗೊಂದಿಸದನಕಾ ೩

೬೭೦
ಮೋಹ ಬೇಡಣ್ಣಾ ಸಂಸಾರದೊಳು ಪ
ಎರವಿನ ಕಂಗಳು ಎರವಿನ ಶ್ರುತಿಯೊಳು |
ಎರವಿನ ನಾಸಿಕ ಎರವಿನ ನಾಲಿಗೆ |
ಎರವಿನ ಕರಗಳು ಎರವಿನ ಪಾದವು |
ಎರವಿನ ಬುಧ್ಯರವಿನ ಬದುಕು ೧
ಎರವಿನ ಹಣಗಳು ಎರವಿನ ಭೂಷಣ |
ಎರವಿನ ವಾಹನ ಎರವಿನ ಸಿರಿಸುಖ |
ಎರವಿನ ತರುಣಿಮದ್ಯೆರವಿನ ಸುತರು |
ಎರವಿನ ಬಂಧು ಎರವಿನ ಬಳಗಾ ೨
ಹರಿಯೇ ಕರ್ತನು ಹರಿ ಸೂತ್ರಾತ್ಮನು |
ಗುರುಮಹಿಪತಿ ಪ್ರಭು ಹರಿ ಪರವೆಂದು |
ಹರಿಯನೆ ಸ್ಮರಿಸಿ ಹರಿಯನೇ ಧ್ಯಾನಿಸಿ |
ಹರಿಯನೆ ಪೂಜಿಸಿ ಹರಿ ಪದಹೊಂದು ೩

೩೦೧
ಯಾಕ ವದಗಲೊಲ್ಲೆಯನ್ನಯ ಬಿನ್ನಹಕ
ಲೋಕ ರಕ್ಷಕ ಬಂದು ಯನ್ನ ನುದ್ದರಿಸಯ್ಯಾ ಪ
ಅರಿಯದ ಶಿಶು ಮಹಾನದಿ ಜಲದೊಳು ಪೋಕ್ಕು
ತರಿಸಲರಿಯದಸು ದೊರೆಯುತಿದೆ
ಇರಲು ತಾರಕದಡಿಯಲಿ ಸುಮ್ಮನೇದಯಾ
ಜರಿದು ನೆಲಿಯಾ ನೋಡುತಹುದೇನಯ್ಯಾ ೧
ಅರಿಗಳು ಪಟಳದಿಂದೋರ್ವ ಮನುಜಾ
ಅರತು ನೃಪರಬೆನ್ನಬೀಳಲು
ಭರದಿಂದಾ ಪಡಿತಂದವರಾಕೈಯ್ಯಲಿಕುಡೆ
ಧರೆಯೊಳುಸಕಲ ಜನರು ಏನೆಂಬು ವರೈಯ್ಯಾ ೨
ಪತಿತರ ಪಾವನ ಮಾಡುವಾಧೊರಿಯೆಂದು
ಶೃತಿ ನಾಲ್ಕರಲಿ ಕೊಂಡಾಡುತಿರೆ
ಮತಿಹೀನ ನೆಂದು ಕೈಯ್ಯಾ ಬಿಡದಿರೋ ಮಹೀ |
ಮತಿ ಸುತಪ್ರಭು ಪರಿಚರೆನಿಸುವ ಬಳಿಕಾ೩

೬೭೧
ಯಾಕ ಸ್ಮರಸದೀ ಮನಸಿಗೇ ಪ
ಯಾಕ ಸ್ಮರಸದೀ ಮನಸಿಗೆ |
ಲೋಕದೊಳು ತನ್ನ ಸುಖಗೆ |
ಮಾಕಾಂತ ನಡಿಗಳ ಮರೆಹೊಕ್ಕು | ವಿ
ವೇಕ ಸೌಖ್ಯ ಪಡಿಯದೀಗ ೧
ಉತ್ತಮ ಸಂಗವ ನೆರೆಮಾಡಿ ತನ್ನ |
ಚಿತ್ತದ ಚಂಚಲ ನೀಡ್ಯಾಡೀ |
ನಿತ್ಯದಿ ಗುರು ಹಿರಿಯರ ಶೇವೆಯಲಿ|
ಹೊತ್ತು ಸಾರ್ಥಕ ಕಳಿಯದು ನೋಡು ೨
ಸಣ್ಣ ದೊಡ್ಡವರಿಂದ ಭಲರೇಯಾ ಯಂದು |
ಮನ್ನಿಸಿಕೊಳ್ಳದೇ ಅವರ ಕೈಯ್ಯಾ |
ಕುನ್ನಿಯ ಛೀ ಸುಡು ಸುಡು ಯಂದು |
ನಿನ್ನ ಜನ್ಮಕೆನಿಸುವದು ಬಲು ಕುಂದು ೩
ವಿಹಿತವೇ ಅಹಿತವೆಂದು ಬಗೆವದು ತನ್ನ |
ಸ್ವಹಿತವೇ ಅಹಿತೆಂದಾಚರಿಸುವುದು |
ಇಹಪರ ಲೋಕಕ ಸಲ್ಲದು ಆಗಿ |
ಕುಹಕ ಬುದ್ಧಿಯಿಂದಲೇ ಬಾಳುದು ೪
ಜನಲಜ್ಜಾ ಮನಲಜ್ಜಾ ವೆರಡಿಲ್ಲಾ ಇದ |
ಕೇನೋ ಮುಂದಣಗತಿ ಶಿವಬಲ್ಲಾ |
ಅನುಮಾನ ವಿಲ್ಲಿದರೊಳು ಕಂಡು ಕೇಳಿ |
ಘನಗುರು ಮಹಿಪತಿ ಜನ ಸೊಲ್ಲಾ ೫

೪೯೧
ಯಾಕೆ ಮೈದೋರೆ ಗುರುರಾಯಾ | ನಮ್ಮ |
ಸಾಕಿಸಲಹುವಾ ಮಹಿಪತಿ ಭಕ್ತ ಪ್ರೀಯಾ ಪ
ಶರಣರುಪಚಾರ ಭಕುತಿಯ ಮನಿಲಿ ಸಿಲುಕಿದೆಯೋ |
ಸ್ಮರಿಸುವರ ದುರಿತ ಪರಿಹರಿಸಲಿಕ್ಕೆ ತೊಡಗಿದೆಯೋ |
ಅರಿತವರ ಬೋಧ ಕೇಳಿಸಿದೆಯೋ ಪೂರ್ವ |
ಜರ ಮುಕುತಿಗಾಣಿಸಲು ಹೋಗಿ ಆಲಿಸಿದೆಯೊ ೧
ಕಂಗೆಡುತಲಿವೇ ನಿಮ್ಮ ಕಾಣದೀ ನಯನಗಳು |
ಭಂಗು ಬಡುತಿವೇ ನುಡಿಯ ಕೇಳದೆ ಶ್ರವಣಗಳು |
ಅಂಗ ಸಂಗಕ ಸಿರಕರಗಳು ಮರುಗಿ \
ಮುಂಗಾಣ ವೆದೆಗೆಟ್ಟು ಕರಣ ವೃತ್ತಿಗಳು ೨
ಮಂದ ಭಾಗ್ಯರಿಗೆ ನಿಧಾನ ಮರಿಯಾದಂತೆ |
ಇಂದು ಮಾಡಲಿ ಬ್ಯಾಡಾ ನ್ಯೂ ನಾರಿಸುದುಚಿತವೇ |
ಎಂದೆಂದು ನೀನೆ ಗತಿಯಂತ ನೆನೆವ
ನಂದನರ ಸಲಹು ದಯದಿಂದ ಮೋದಲಂತೆ ೩

೩೦೦
ಯಾಕೆ ರಂಗ ನಿನಗೆ ಮಾಕಾಂತೆಯೊಳು ಗರ್ವ |
ಲೋಕದೊಳು ಅಬಲೆಯೇನೋ ಕೇಳಯ್ಯಾ ನೀನು ಪ
ಮೀನಾವತಾರವ ನೀನಂದು ವಿಡಿದರೆ |
ಮೀನಾಂಬಕಿ ತಾನಾದಳೋ೧
ಬೆಟ್ಟವ ಬೆನ್ನಿಲಿ ಕಷ್ಟದಿ ನೆಗೆದರೆ |
ಬಟ್ಟ ಕುಚಗಳ ಹೊತ್ತಳೋ ೨
ಧರೆಯ ಭಾರವ ತಾಳಿದರ ನಿನ್ನಾಭಾರವನು |
ಧರಿಸಿದಳಂದಗಲದಲೆ ೩
ಸಿಂಹಾನನನಾಗಿ ಮಹಿಮೆ ದೋರಿಸಿದರೆ |
ಸಿಂಹದಂತೆ ನಡು ನಡುವಾದಳೋ ೪
ಬಲಿ ಬಾಗಿಲಕಾಯಿದರೆ ನೆಲೆಸಿಹಳವಳಲ್ಲಿ |
ಬಲಿಯಾ ಭಾಗ್ಯ ರೂಪವಾಗಿ೫
ಸುರರ ಹೊರಿಯಲಿಕ್ಕೆ ಪರಶವ ಪಿಡಿದರೆ |
ಪರಸಗೈಯ್ಯ ತಾನಾದಳೋ ೬
ಹರನಾ ಚಾಪವನೆಗೆದರೆ ಅದನೆವೆ ಮುನ್ನೆ |
ಕರೆದಲೆ ತ್ಯಾಡಿದಳೊ ೭
ಸೆರೆಹರಿದು ಸ್ತ್ರೀಯರಾ ತಂದರೆ ನಾರದರಿಂದ |
ಸೆರೆವಿಡಿಸೆ ಕೊಂಡಳೋ ೮
ಮುಪ್ಪರ ಹೊಕ್ಕರೆ ನೀವಪ್ಪುತಲಿ ಹನಿನ್ನಾ |
ಮುಪ್ಪುರದಲಿ ಮೆರೆದಳೋ ೯
ತುರುಗವ ಏರಿಕೊಂಡು ತಿರುಗಲು ನಿನ್ನಾಕೂಡ |
ತುರಗಮನಿ ತಾನಾದಳೋ ೧೦
ಕಡೆಯಕಾಲಕ ನೀರೊಳೊಡಗೂಡಿ ಮಲಗಲು |
ಒಡನೆ ವಟದೆಲೆ ಯಾದಳೋ೧೧
ಗುರು ಮಹಿಪತಿ ಪ್ರಭು ಚರಿತೆಯಾ ನಿಮ್ಮೀರ್ವರ |
ಭರದಿ ಹೇಳಲೆನ್ನಳವೇ ೧೨

೬೭೨
ಯಾಕೆಲೋ ಮಾನವಾ ಯಚ್ಚರ ಮರೆದು ಭ್ರಮಿಸುವರೇ |
ಲೋಕ ರಕ್ಷಕನಾ ಸ್ಮರಣೆ ಬಿಟ್ಟು ವಿಷಯ ಕೆಳಸುವರೇ ಪ
ಪೊಂಗಡ ವಿಟ್ಟಿರಲು ತುಂಬಿ ಮುಂದೆ ಇದಿರಿಟ್ಟು |
ಮುಂದೆ ಇದಿರಿಟ್ಟು |
ಕಂಗಳವನು ಮುಚ್ಚಿ ಪೋಗುವಂತೆ ಅದನು ಬಿಟ್ಟು ೧
ತನ್ನ ಕೊರಳಾಭರಣಲಿರಲು ಮುಗುತಿ ಸುದತಿ ತಾನು
ಮುಗುತಿ ಸುದತಿತಾನು |
ಅನ್ಯರ ಬ್ರಾಂತಿಲಿ ಕೇಳುವಂತೆ ನೀನು ೨
ಬೊಂಬೆಯಾಟದಲ್ಲಿ ಮಕ್ಕಳು ಆಪ್ತರಾಗುವಂತೆ |
ಆಪ್ತರಾಗುವಂತೆ |
ನಂಬಬ್ಯಾಡೋ ಇದನು ಸಂಸಾರವೇನು ನಿತ್ಯೆ ೩
ಚಿತ್ರ ಬರೆದಿರಲು ಕನಕರಾಶಿ ಸರ್ವವನು |
ರಾಶಿ ಸರ್ವವನು |
ಆರ್ತುನೋಡಲು ಬಲ್ಲರಿಗದರ ಸುಖ ದುಃಖವೇನು ೪
ಗುರು ನರನೆಂದು ಬಗೆಯ ಬ್ಯಾಡಾ ಮರವ್ಹಿಂದಾ |
ಬ್ಯಾಡಾ ಮರವ್ಹಿಂದಾ |
ಪರವಸ್ತು ಬಂದಿದೆ ನೋಡು ಮನುಜ ವೇಷದಿಂದ ೫
ನಮ್ಮ ನಿಮ್ಮ ತೆರದಿಂದಾ ಚರಿಸುತಿಹರು ಖರೆಯಾ |
ಚರಿಸುತಿಹರು ಖರೆಯಾ |
ರಮ್ಯ ಅಂಗನೆ ರೂಪ ಕೊಂಡಾಡುವ ಪರೋಪರಿಯಾ ೬
ಭಾವದಿ ನಂದನಸ್ವಾಮಿ ಮಹಿಪತಿಯ ಬಲಗೊಂಡು |
ಮಹಿಪತಿಯ ಬಲಗೊಂಡು |
ಭಾವದಿ ತರಿಸೋ ಭಾಗ್ಯ ಆತ್ಮ ಸವಿಸುಖನುಂಡು ೭

೨೯೯
ಯಾಕೆಲೋ ರಂಗಾ | ನಿನ್ನರಸಿಯೊಳುಮುನಿದಿರುವೆ |
ಲೋಕವೀರೇಳು ರಕ್ಷಿಪ ಮುದ್ದು ರಂಗಾ ಪ
ನಾಲ್ಕನೆಯ ಅವತಾರದಲಿ ಉಗ್ರವಾಗಿರೆ |
ಆ ಕಮಲಜ ಮುಖ್ಯ ಬೆದರುತಿರಲು |
ಲಕುಮಿ ತಾಕಂಡು ತೊಡೆಮೇಲೆ ಕುಳ್ಳಿರಲು |
ಈ ಲೋಕದೊಳು ಶಾಂತನೆನಿಸಿದಳೊ ನಿನ್ನರಿಸಿ ೧
ಗುಂಜೆಯಮಾಲೆ ಕೊರಳಿಗೆ ಹಾಕಿ ಗೋವಳರ |
ಎಂಜಲ ತಿನುತ ಗೋಗಳ ಕಾಯುತಿರಲು |
ಕಂಜನಯನೆಯು ಬಂದು ಸಕಲ ಶಿರಿಯಿಂದಲಿ |
ರಂಜಿಸಿದಳೊ ಜಗದೊಳಗೆ ನಿನ್ನ ಅರಿಸಿ ೨
ಇಂತರಿದು ನಾನಾಪರಿಯಿಂದ ನಿನ್ನ ಮೇಲೇ |
ಸಂತತ ಉಪಕಾರ ಮಾಡಿರೆ ನೀನು |
ಕಂತುಮಾತೆಯ ತಪ್ಪು ನೋಡುವರೇನೋ | ಆ-
ನಂತನೇ ಏಳು ಮಹೀಪತಿನಂದನೊಡೆಯಾ ೩

೬೭೩
ಯಾತಕಿದೆಲೋ ಪ್ರಾಣಿ ಪ್ರೇಮದ |
ರೀತಿಲ್ಲದ ಭಜನೀ ಪ
ಪ್ರೇಮವಿಲ್ಲದ ಸ್ನಾನ ಸಂಧ್ಯಾನಾ |
ಪ್ರೇಮವಿಲ್ಲದ ಜಪವೃತ ಅನುಷ್ಠಾನಾ ೧
ಪ್ರೇಮವಿಲ್ಲದ ಶೃತಿ ಶಾಸ್ತ್ರಜ್ಞಾನಾ |
ಪ್ರೇಮವಿಲ್ಲದ ಕವಿತ್ವದ ತ್ರಾಣಾ ೨
ಬೆರೆತರೆ ಹರಿಭಕುತಿಗೆ ಸುಪ್ರೇಮಾ |
ಗುರುಮಹಿಪತಿ ಪ್ರಭು ವಲಿವನು ನೇಮಾ ೩

೬೭೪
ಯಾತರ | ಜನುಮಾ |
ಶಿರಿನಾಥನ ವಲುಮೆಗೆ ದೂರಾದ ನರನಾ ಪ
ಉಂಡುಂಡು ವರಗುತ ಕಂಡಲ್ಲಿ ತಿರುಗುತ |
ಭಂಡ ಮಾತುಗಳಾಡಿ ದಿನನೂಕುತಾ |
ಮಂಡಲೇಶನ ಭಕ್ತಿ ಮಂಡಿಸಿ ಮನದೊಳು |
ಖಂಡ ವಿಷಯದಾಶೆ ಗಂಡಲುವವನಾ ೧
ಸ್ನಾನ ಸಂಧ್ಯಾನಿಲ್ಲಾ ಧ್ಯಾನ ಮೌನಗಳಿಲ್ಲಾ |
ಮಾನುಭಾವರ ಸೇವೆ ಯಂದಿಗಿಲ್ಲಾ
ಹೀನ ವೃತ್ತಿಲಿ ಭವ ಕಾನನವನು ಸೇರಿ |
ಶ್ವಾನ ಸೂಕರನಂತೆ ಬಾಳುತಲಿಹನಾ ೨
ಹಿಂದಿನ ಪುಣ್ಯದೀ ಬಂದದೀ ನರದೇಹ |
ಮುಂದ್ಯಾವ ಗತಿಯೆಂಬ ಬೆಜ್ಜರದೀ |
ತಂದೆ ಮಹಿಪತಿ ನಂದನ ಪ್ರಭು ಗೋ |
ವಿಂದ ಮುಕ್ಕುಂದೆಂಬ ನಾಮವ ನೆನಿಯದೆ ೩

೩೧೪
ರಂಗ ಬಂದಾ ನಮ್ಮ ಭಂಗಿಸಿ ಕಾಳಿಯ ಫಣಿಯಲಿಂದು ಪ
ವಿಷಧರನುರಿಯಿಂದ ನಿಸಿದಿನಿ ಕುದಿಯುತಿಹ |
ವಿಷಮಡುವನೆ ಪೊಕ್ಕು ಕುಶಲದಿಂದಲಿ ರಂಗ ಬಂದಾ ೧
ಉರಗೇಂದ್ರ ಬಂದನದಿ ಶರೀರ ಬೆಳಿಸಿ ತನ್ನ |
ಬಿರಿವಂತವನತನು ಹರಿಸಿ ಮದವಾ೨
ನೂರೊಂದು ಹೆಡೆಗಳ ಚರಣದಲೊತ್ತಿ ತುಳಿದು |
ಸುರರಾ ಗೀತದಿ ನೃತ್ಯ ಚರಿತವ ದೋರಿ ೩
ಸತಿಯರ ಮೊರೆಕೇಳಿ ಪತಿದಾನವನೆ ಕೊಟ್ಟು |
ಕ್ಷಿತಿಯೊಳು ಗೋಕುಲದುನ್ನತ ಭಾಗ್ಯದಲಿ ೪
ತಂದೆ ಮಹಿಪತಿ ನಂದನ ಪ್ರಭು ಸ್ವಾ |
ನಂದವ ಸುರನರ ವೃಂದಕ ಬೀರಿ ೫

೩೧೩
ರಂಗನಟ್ಟುಳಿ ಕೇಳಿ ಗೋಪೆಮ್ಮಾ ರಸಗನಾಹಲ
ವಂಗದಿಂದ ಕಾಡುವನಮ್ಮಾ ಬಾಲನೇ ಗೊಪಾಲನೇ ಪ
ಹಾಲು ಮೊಸರು ಬೆಣ್ಣೆ ಮಾರಲು ಬಂದರಾ ಚಿಕ್ಕ
ಬಾಲೆರ ನೋಡುತ ಮೊಗಚಂದಿರಾ ಅವರಾ
ಶಾಲೆಯ ಸೆಳೆದು ಸುಮ್ಮನೇ ನಿಂದಿರಾ ಬಟ್ಟ
ಮೊಲೆಯನು ಚಂಡು ಕುಡೆಂಬಾ
ಮಂದರಾಧರ ಸುಂದರಾ ೧
ನೀರೋಳಾಡುವಲ್ಲಿ ಬಂದು ಕಂಡ ನಮ್ಮಾ
ನಾರೇರಾ ಸೀರೆಯಾ ಕದ್ದಾ ಪುಂಡನೇ ಮರ
ನೇಚಾಳಿಸಿ ನುಡಿದ ಪ್ರಚಂಡನೇ ಕೈಯ್ಯ
ದೋರಿಯರಡು ಎಂದು ಲಜ್ಜೆಯ
ಕೊಂಡನೇ ಬಲು ಭಂಡನೇ ೨
ಕಂಸನರಮನೆ ಬಲಗುಂದಿತೇ ನಂದ
ನಂಶಕ ವಡೆತನ ಬಂದಿತೇ ಮುರ
ಧ್ವಂಶಿಗೆ ದುರುಳ ತನವು ಸಂದಿತೇ ಇನ್ನು
ಸಂಶಯಾತಕ ಮಹಿಪತಿ ಸುತ
ವಂದಿತೇ ಮನಕ ಬಂದಿತೇ ೩

೩೦೪
ರಕ್ಷಿಸೆನ್ನ ನೀ ಲಕ್ಷುಮೀಪತಿ | ಅಕ್ಷಯಾನಂದ
ಅಧೋಕ್ಷಜನೇ | ಸಿರಿ |
ವಕ್ಷ ಕಮಲದಳಾಕ್ಷ ಕೇಶವ | ಪಕ್ಷಿವರಗಮನಾ
ರಕ್ಷಿಸೋ ಎನ್ನಾ ಪ
ಕಂಗಳೆಂಬಿಂದ್ರಿಯಂಗಳೆನ್ನನು | ಭಂಗ
ಬಿಡಿಸಿದ ವಂಗ ವಿಷಯಕ |
ರಂಗ ತಿರುವೆಂಗಳೇಶನೆ | ಇಂಗಿತವನರಿದು |
ಮಂಗಳಾಂಘ್ರಿಯುಗಂಗಳೆನ್ನಂತ | ರಂಗದಲಿ
ದೋರಿ ಭವ ಭಯ |
ಹಿಂಗಿಸುವ ಸಾಧು ಸಂಗವನುದಿನ |
ಸಂಗಡಿಸು ಎನ್ನಗೆ ೧
ಜ್ಞಾನ ಭಕುತಿ ನಿಧಾನ ವಿರಕುತಿ |
ಧ್ಯಾನ ಮೌನಗಳೇನು ಅರಿಯದ |
ಹೀನ ನಾನೆಂದು ಅನತಾದ ಮಾನ | ನಿನ್ನದಲೈ |
ದೀನರಕ್ಷ ದಯಾನಿಧಿಶ್ರಯ |
ಧೇನುಯೆಂಬಾ ಅನಾದಿ ಬಿರುದವು |
ಖೂನಿಡುವ ಶೃತಿಗೇನು ಗತಿಯಮ್ಮ | ನೀನುದ್ಧರಸದೇ ೨
ನಂದ ಕಂದ ಗೋವಿಂದ ಸಚ್ಚಿದಾ |
ನಂದ ಅನಿಮಿತ್ತ ಬಂಧು ಯೆಂಬುವಾ |
ನಂದ ನಾಮವು ಸಂದಿಸಲಿ ರಸ |
ನೇಂದ್ರಿಯದ ನೆಲಿಗೇ ||
ಮಂದಮತಿಯೊಳು ಕುಂದ ಕೊರತೆಯಾ |
ಒಂದು ನೋಡದೆ ಇಂದು ಪಾಲಿಸು |
ತಂದೆ ಮಹಿಪತಿ ನಂದನೊಡಿಯ ಮು |
ಕುಂದ ಮುನಿವಂದ್ಯನೆ ೩

೩೦೨
ರಘುನಾಥ ದೀನಾನಾಥ ಸದ್ಗತಿದಾತ ನೋಡಿರ್ಯೋ
ಭವ ಭಿತರಾ ಪತಿತರಾ ಪುನಿತ ಮಾಡುವ ನೀತನೇ ಪ
ಹವಣದಿ ತಾನರೆ ಸವಿದ್ಹಣ್ಣುಗಳನು ತವಕದಿ
ಜಾನಕಿ ಧವಗರ್ಪಿತವೆನೆ
ಅವನಿಯೊಳಗೆ ಶಬರಿ ಘವಘವಿಸುತಿಹ
ಅವಿರಳ ಪದದನುಭವ ನೀಡಿದಾ೧
ದಾವನು ಶೃತಿಗಳು ಭಾವಿಸೆ ನುಡಿಯದು
ದೇವನು ಹಿತಗುಜ ಕೇವಲ ವನಚರ
ಜೀವರೊಳಾಡುತ ಸೇವೆಗೆ ನಲಿಯುತ
ಕೈವಿಡಿ ಬಿತ್ತನು ಕೈವಲ್ಯಾದಾ ೨
ಕುಂದದೆ ಬಾಂಧವ ನಿಂದಿಸಿ ನೂಕಲು
ನೊಂದು ವಿಭೀಷಣ ಬಂದರ ಶರಣವ
ತಂದೆ ಮಹಿಪತಿ ನಂದನ ಪ್ರಭು ಆ
ನಂದದ ಸ್ಥಿರಪದ ಹೊಂದಿಸಿದಾ ೩

೭೪
ರಘುಪತಿಯಾ ತೋರಮ್ಮಾ |
ರಾಜೀವಾಂಬರೆ ಬಾರಮ್ಮಾ ಪ
ಭಕುತರಾ – ಭೀಷ್ಟೇಯನು | ಪೂರಿಸುವನಾ
ಅನುದಿನ ಕಾವನಾ | ನಿನ್ನಯ ಜೀವನಾ ಅ.ಪ

ಸರಸಾ ಕೋಕಿಲಾಲಾಪೆ | ಸಕಲಾ ಮಂಗಳ ರೂಪೆ ||
ದುರಿತ ಭಂಜನಗೈವಾ | ಪುಣ್ಯನಾಮನಾ
ಸದ್ಗುಣ ಧಾಮನಾ | ದಶರಥ ರಾಮನಾ ೧
ವಸುಧಾಕಾಯ ಸಂಭೂತೆ | ವರದೇವೇದ ವಿಖ್ಯಾತೆ ||
ಅಸಮಧನು ವನೆತ್ತ್ಯಭಯವಿತ್ತನಾ |
ನಿನಗೊಲಿದಾತನಾ | ರಘುಕುಲಜಾತನಾ ೨
ಶರಣೆಂಬೆ ಮಹಾಮಾಯೆ ಸಲಹಬೇಕೆನ್ನತಾಯೆ
ಗುರು ಮಹಿಪತಿಸ್ವಾಮಿ | ಜಗದಯ್ಯನಾಪವನಜ ಪ್ರಿಯನಾ ಸುರಮುನಿಧೇಯನಾ ೩

೩೦೩
ರಘುರಾಯ ಯನ್ನಮನವ ನಿಲಿಸಲಾಗದೇ
ನಿನ್ನ ಚರಣ ಕಮಲಲಿದ್ದು ತನ್ನ ಹರಿ ಬೀಳದಂತೆ ಪ
ಹನುಮನೊಡನೇ ಕಾಂತ ಮಾತ
ಅನುವರದಲಿ ಆಡುತಿರಲು
ವನಧಿ ಘೋಷವನ್ನೆ ಕಂಡು
ವನಜ ಕರವನೆತ್ತಿಕೊಂಡು ನಿಲ್ಲಲು
ಎನಲು ತ್ಯಜಿಸಿ ತನ್ನದರ್ಪನು ಆಸ್ಥಳದಿ
ಧರೆಯದೋರಿ ಸುಮ್ಮನಿಪ್ಪನು
ಆಂದಿಗಿಂದಿಗಿನಿತು ವಾಕ್ಯ ಮೆರೆದಪ್ಪನು ೧
ಶರಧಿ ಮಥನದಲ್ಲಿ ಮುಣುಗು ತಿರಲು ಗಿಲಿಯನೆತ್ತಿ ನಿಳಹಿ |
ಹೊರೆದೆ ಸುರರ ಬಳಿಕಧರಣಿ ಹಿರಣ್ಯಾಕ್ಷ ವಯ್ಯಲಾಗ
ವರಹರೂಪದಿಂದ ಮೂಡಿದೇ ಈ ಜಗವ
ಕೊರೆದಾಡಿ ಲೆತ್ತಿ ಆಡಿದ ಅಧೃವನ
ತಿರಗದಂತೆ ಅಢಳ ನೀಡಿದೆ ೨
ನಿನ್ನ ಕಥೆಯ ಶ್ರವಣಮಾಡಿ ನಿನ್ನ ನೋಡಿ ಕೂಡಿ ಪಾಡಿ
ನಿನ್ನ ನಿರ್ಮಾಲ್ಯ ಘ್ರಾಣಿಸುತಲಿ ನಿನ್ನದಾಸ ನೆನಿಸಿ
ಧನ್ಯಗತಿಯ ಪಡೆವ ತೆರದಲಿ ನಿಲಿಸಬೇಕು
ಎನ್ನ ಮನವ ಕರುಣದಿಂದಲಿ ಮಹಿಪತಿಸುತನ್ನ
ಸ್ವಾಮಿ ಸಲಹು ಜಗದಲಿ ೩

೪೯೨
ರಾಜ ರಾಜ ಮಹಾರಾಜ ಮಹಿಪತಿ
ರಾಜನೆಂಬೋನಾಮವು ನೆಲಿಗೆ |
ಸಾಜ ಸಾಜವಿದು ನೋಡಲು ಗುರುವಿಗೆ ವಿರಾಜಿಸು
ತಿಹುದು ಜಗದೊಳಗೆ ೧
ಸಾದರ ಗುರುಭಕ್ತಿಯ ನಿಜಕ್ಕೆಯು |
ಸಾಧನದಳ ಚತುರಂಗಗಳು |
ಸಾಧಿಪ ಅನಾಹತದ ಘನ ಭೇರಿಯು |
ಊದುವ ಬೋಧದ ಕಹಳೆಗಳು ೨
ಹರಿಕೀರ್ತನೆ ಗಜ ರಥಗಳ ನಡೆಸುತ |
ಮೆರೆವ ಸುಪ್ರೇಮ ಸಚಿವನಿಂದ
ಹರಿನಾಮಾಯುಧದಲಿ ಪುಂಡರಾರಿ |
ಸೆರೆ ವಿಡಿಯುತ ದುರಿತವ ತರಿದಾ ೩
ತನುಕರಣೇಂದ್ರಿಯಧಿಪ ತಾನೆನುತಲಿ |
ಕೊನರುವ ದೇಹಾಭಿಮಾನಿಗಳ |
ಚಿನುಮಯದರುವಿನ ಅಸ್ತದಿ ಭಂಗಿಸ್ಯ |
ವನನಿಜ ಸ್ಥಳವನು ಬಿಡಿಸಿದನು ೪
ಪರದೇಶ ವಿಜಯ ಸಾಮ್ರಾಜ್ಯನುಭವ |
ಮೆರೆವ ಸಿಂಹಾಸನವೇರಿದನು |
ಚರಣಕೆರಗಿ ಕೈ ಮುಗಿಯುತ ನಂದನು |
ಹರುಷದಿ ಕೀರ್ತಿಯ ಪಾಡಿದನು ೫

೩೦೫
ರಾಮ ಕೃಷ್ಣ ಗೋವಿಂದ ಗೋಪಾಲಾ ಜಯ
ಜಗಜೀವನಾ ಪ
ಶಾಮಸುಂದರ ಮುನಿಜನ ಮಾನಸ
ರಂಜನ ಪಂಕಜ ಲೋಚನಾ
ದಾಮೋದರ ಗೋಪೀಜನ ಮೋಹನಾ
ಅಹಿಲ್ಯಾ ಶಾಪ ವಿಮೋಚನಾ ೧
ಕೇಶವ ನಾರಾಯಣ ಮಾಧವ ಹರಿ
ಶ್ರೀ ವತ್ಸಾಂಕ ಜನಾರ್ಧನಾ
ಯಶೋದಾ ನಂದನ ಯದುಕುಲ ಮಂಡಲಾ
ಕಂಸ ಚಾಣೂರ ಮರ್ದನಾ೨
ಸರಸಿಜ ಭವಭೆವ ಸುರಪತಿ ಪೂಜಿತ
ಪಾವನ ಪದ ನಿರಂಜನಾ
ಗುರುವರ ಮಹಿಪತಿ ನಂದನ ಸಾರಥಿ
ಶರಣಾಗತಾ ಭವ ಭಂಜನಾ೩

೧೧೨
ರಾಮ ಬಂದನೇನೆ | ಶ್ರೀ ರಘು
ರಾಮ ಬಂದನೇನೆ||
ಪ್ರೇಮಿಕ ಜನರನು ಪೊರೆಯಲಾಗಿ|ಶ್ರೀರಘು ಪ
ಜಾನಕಿ ಸಹಿತ ಲಕ್ಷಣರೊಡಗೂಡಿ |
ಸ್ವಾನಂದದಿ ದಿಗ್ವಿಜಯಮಾಡಿ | ೧
ಈರೇಳು ವರುಷಕೆ ಬರುವೆನೆಂದು ಮುನ್ನ |
ಸಾರಿದ ನುಡಿ ಸತ್ಯಮಾಡಿ ದೋರಲು ೨
ಹಾರೈಸಿ ನೋಡಲು ಕಣ್ಣಿಗೆ ಹಬ್ಬ |
ದೋರಲು ಮೋಹದ ಮುದ್ದು ಮೊಗದಾ೩
ಅವಧಿಯ ಮೀರಲು ಅಸುವ ತೊರೆವೆಸಿಂದು |
ತವಕದಿ ಭರತನ ಪಾಲಿಸಲಿಕ್ಕೆ ೪
ಸಾಕೇತ ಪುರಪತಿ ಸಾಮ್ರಾಜ್ಯಲೋಲನಾಗಿ |
ಸಾಕುವ ಜಗಗುರು ಮಹೀಪತಿ ಪ್ರಭು ೫

೩೧೧
ರಾಮ ರಘೋತ್ತಮ ಕೃಷ್ಣ ಘನ |
ಶಾಮಸುಂದರ ತ್ರಿಭುವನ ಜೀವನ ಪ
ದಶರಥ ನಂದನ ಭೂಮಿಸುತಾ ಪತಿ |
ವಸುದೇವ ಸುತ ರುಕ್ಮಿಣಿ ರಮಣಾ ೧
ಋಷಿ ಮಖದಾಲನ ಸಾಂದೀಪ ತೋಷಣ |
ದಶಶಿರ ಕಂಸಾಸುರ ದಮನಾ ೨
ಅಹಲ್ಯೋದ್ದಾರಣ ಕುಜಕೃತ ಪಾವನ |
ಮಹಿಪತಿ ಸುತ ಪ್ರಭು ಶುಭಚರಣಾ೩

೩೦೯
ರಾಮ ರಸಾಯನವಾ ಬನ್ನಿರಯ್ಯ ಸೇವಿಸುವಾಪ
ಅವನಿಲಿ ನಾನಾವಿಪತ್ತದ ಪಡುವಾ |
ಭವರೋಗ ಮೂಲ ಛೇದಿಸುವಾ ೧
ಭ್ರಮೆಗೊಂಡು ಮತ್ತೆ ಜನ್ಮಕ ಬಾರದಿರುವಾ |
ಅಮರತ್ವವನು ಬ್ಯಾಗ ಪಡೆವಾ ೨
ಗುರು ಮಹಿಪತೀ ಪ್ರಭು ದಾಸರು ಮೆರೆವಾ |
ವರಸಂಗದಲಿ ಸುಖಿಸುವಾ ೩

೩೧೨
ರಾಮ ಸಲಹಯ್ಯ ಪುಣ್ಯನಾಮ |
ಶ್ರೀ ರಾಘವೇಂದ್ರಾ ಪೂರಿತಕಾಮಾ ನೇಮಾ |
ಶಾಮ ಪರಮಾ ಗುಣರತ್ನ ಧಾಮಾ ಪ
ವನಜಾಂಬಕ ಕುಂದರದನಾ |
ಅನುಪಮ ಸುಂದರ ವದನಾ |
ರಣದಲಿ ಜಿತ ದಶವದನಾ |
ಅನಂತವದನಾ ಲಾವಣ್ಯ ಸದನಾ ೧
ಕರುಣಾ ಶರಣಾ ಭರಣಾ |
ಧರಣಿ ಧರಣೋದ್ಧರಣಾ |
ಸ್ಪುರಣ ಕಿರಣ ದೋರಣ ಚರಣಾ |
ಅರುಣಾಂಬುಜಾಲಯ ರಮಣಾ ೨
ವೀರಾಗುಣ ಗಂಭೀರಾ |
ಕ್ರೂರಾಸುರ ಸಂಹಾರಾ |
ಶೂರಾ ಜನ್ಮ ವಿದೂರಾ |
ಮಹಿಪತಿ ಧೀರಾ ಕೃಷ್ಣನೊಡೆಯ ಉದಾರಾ ೩

೩೦೭
ರಾಮಚಂದ್ರನೇ ಪರದೈವನೋ ನಮ್ಮ |
ಶಾಮ ಸುಂದರ ಕೃಷ್ಣ ಪರದೈವನಯ್ಯ ಪ
ರಾಮಭಕ್ತ ನಿದ್ದೆಡೆಗಾಗಿ ಯದುಕುಲ |
ಸ್ವಾಮಿಯ ಶರಣನು ಬಂದ ಕೀರ್ತಿಸುತ |
ಪ್ರೇಮದಲೀರ್ವರ ಭಕ್ತಿಯವಾದವು |
ನೇಮದಿ ಬೆಳೆಯಿತು ಕೇಳಿ ಸಜ್ಜನರು೧
ಚಿಕ್ಕ ತನದಿ ತಾಟಿಕೆಯನು ಕೊಂದು ಮುನಿಮುಖ |
ಅಖರದಲಿ ಕಾಯದನಾರು ಹೇಳಯ್ಯ |
ಠಕ್ಕಿಸಿ ಬಂದ ಪೂತನಿಅಸುಹೀರಿಜ |
ನಕ್ಕಭಯ ನಿತ್ತ ಕೃಷ್ಣ ನೋಡಯ್ಯ೨
ಚರಣ ಸೋಕಿಸಿ ಶಿಲೆ ಹೆಣ್ಣವ ಮಾಡುತ |
ಹರಧನು ಮುರಿದವ ನಾರು ಹೇಳಯ್ಯಾ |
ಮರಗಳಾದವರ ನುದ್ಧರಿಸುತ ಕಂಸಾ |
ಸುರಧನು ಹಬ್ಬವ ಗೆದ್ದ ರಂಗೈಯ್ಯಾ೩
ನೆರದಿಹ ದೇವ ದಾನವರೋಳುದ್ದಂಡದಿ |
ಧರಣಿ ಜೆಯ ತಂದನಾರು ಹೇಳೈಯ್ಯಾ |
ವರಚೈದೈ ಘೋಷರ ಭಂಗಿಸಿ ರುಕ್ಮಿಣಿ |
ಕರವಿಡಿದೊಯ್ದಿದ ಕೃಷ್ಣ ನೋಡಯ್ಯಾ ೪
ವನದೊಳು ಹಣ್ಣವ ನಿತ್ತಂ ಶಬರಿಗೆ |
ಚಿನುಮಯ ಪದವಿತ್ತ ನಾರು ಹೇಳಯ್ಯಾ |
ಅನುವರದಲಿ ದ್ರೌಪದಿಯ ಶಾಕದಳ |
ವನೆ ಕೊಂಡು ಸುಖವಿತ್ತ ಕೃಷ್ಣ ನೋಡಯ್ಯಾ೫
ಜಲ ನಿಧಿಯೊಳಗ ಸೇತುಗಟ್ಟಿಸಿ ವಾನರ |
ದಳನಡಿಸಿದ ವೀರನಾರು ಹೇಳಯ್ಯಾ |
ಗಳಿಗಿಯೊಳರಿಯದಂದದಿ ಮಧುರ ಜನ |
ನೆಲೆಮಾಡಿ ನೀರೋಳಗಿಟ್ಟ ರಂಗೈಯ್ಯಾ೬
– ಅಪೂರ್ಣ

೩೦೮
ರಾಮನಾಮವನು ನೆನಿಯಬಾರದೆ |
ನೇಮದಿ ಮನವೆ ಸದ್ಗತಿಯ ತೋರದೆ ಪ
ಘೋರತರ ಹೃತ್ತಾಪ ಸ್ಮರರಿಯಾ |
ದೂರಮಾಡಿ ಶಾಂತಿಸುಖವಿತ್ತದರಿಯಾ ೧
ಜಲದೊಳು ತೇಲಿಸಿದನು ಅಚಲಗಳ |
ಸುಲಭದುದ್ದರಿಸಿತು ವಿಪಿನಚಾರಿಗಳಾ ೨
ಈ ಮಹಿಯೊಳು ಮಹಿಪತಿ ಪ್ರೀಯನಾ |
ನಾಮನಿಧಾನಕ ಸರಿಯ ಕಾಣೆ ನಾ ೩

೩೦೬
ರಾಮಾ ಕೃಷ್ಣಾ ಗೋವಿಂದಾ ಗೋಪಾಲ ಕೇಶವಾ |
ವಾಮನಾಕಾಯೋ ಬಿಡಿಸಿ ಭವ ಪಾಶವಾ ಪ
ಅಹಂಮಮತಾವೆಂಬಾ ಸಂಚಾರ ವಾಯಿತು |
ಸೋಹಂವೆಂಬಾ ತಿಳಿವಾದೆಚ್ಚರ ಹೋಯಿತ್ತು |
ನಾಹಂಕರ್ತಾನೆಂದು ಸುವಿಚಾರ ಸೇರಿದಾ |
ಸೋಹಂ ಎಂದು ನುಡಿಯದಾ ಕುಮತಿ ಮೀರಿದಾ ೧
ಅನಾತ್ಮದಲ್ಲಿ ಆತ್ಮ ಭಾವನೆ ಮೂಡಿದೇ |
ಸನಾತನ ಚೈತನ್ಯ ತಾನೆಂದು ನೋಡದೆಲ |
ಮನದಿಂದ ಈ ಕ್ಷಣ ತ್ರಯವಕೂಡಿದೇ |
ಕನಸಿನಂದದಿ ಸಂಸಾರ ದೊಳಾಡಿದೇ೨
ಮರಹು ಬಿಡಿಸಿ ನಿನ್ನೆಚ್ಚರ ದೋರಿಸೀ |
ಚರಣದ ಭಜನೆಗೆ ಕಣ್ಣ ದೆರೆಸೀ |
ಗುರುಮಹಿಪತಿ ಪ್ರಭು ದಯಬೀರಿಸೀ |
ಹೊರೆವದೆನ್ನಯ ಅಪರಾಧ ಕ್ಷಮಿಸಿ ೩

೩೧೦
ರಾಮಾಯನ್ನಿ ರಾಮಾಯನ್ನಿ ರಾಮಯನ್ನಿರೈ |
ನೇಮದಿಂದ ನೆನೆವರಾ ಕಾವಿತಾರ್ಥಫಲನೀವಾ ಪ
ವಿಷವಾಧರಿಸಿ ಶೆಖೆ ಘಸಣೆಗಾರದೇ ಶಿವಾ |
ವಸೆದು ಜಪಿಸಲು ನಾಮಾ ಸ್ವಖಾನಂದವ ನಿತ್ತಾ ೧
ಗಿಳಿಯ ನುಡಿಸುವ ನೆವದಲಿ ಗಣಿಕಾನನದಲಿ |
ವಳಿದು ಬರಲು ನಿಂದಾಚಲ ಪದವಿಯಿತ್ತಾ ೨
ಒಂದು ಗ್ರಾಮದಿ ದೈತ್ಯರಿಂದಾ ದಂಪತಿಗಳಾ |
ಬಂದು ಬಾಧೆ ಬಿಡಿಸಿ ಛಂದದಿ ಸಲುಹಿದಾ ೩
ಕುಂದು ಕೊರತೆಗಳಾ ಒಂದು ನೋಡದೇ ಬಂದು |
ತಂದೆ ಮಹಿಪತಿಸ್ವಾಮಿ ಹೊಂದಿದ್ದವರ ಕಾವಾ ೪

೩೧೫
ವದನದಲಿ ಮನವೇ ನೆನಿನಾಮ ಶ್ರಿಹರಿಯಾ |
ಸದಮಲದಲಿ ಮರೆಯದೆ ಬಾವದಲಿ ಪ
ದಾವನು ದಾಸರ ದಾಸರ ಪದರಾ |
ಜೀವ ಯುಗಳ ದರುಶನದಲಿ |
ತೀವಿಕೊಂಡಿಹ ಬಹುಜನ್ಮದು ಷ್ರ‍ಕತ |
ಲಾವಡಗುತಿಹವು ನಿಮಿಷದಲಿ ೧
ನಾಮದ ಮಹಿಮೆಯ ತಿಳಿಯಲು ಅರಸಲು |
ಅಮಹಾನಿಗಮಾಗಮದಲಿ |
ವ್ಯೋಮ ಕೇಶನಾರದಾಹನುಮರೆ ಬಲ್ಲ |
ನಾಮದ ಸುಖವೆಂತೋ ಭುವನದಲಿ೨
ಸರ್ವಧರ್ಮಾನ್ ಪರಿತ್ಯಜ್ಯಂಬ ವಾಕ್ಯವಾ |
ಅರ್ವವ ಹಿಡದು ತ್ರಿಕರ್ಣದಲಿ |
ಸರ್ವಭಾವದಿ ಗುರು ಮಹಿಪತಿ ಸ್ವಾಮಿಯ |
ಮೆರ್ಪಪಾದುಕ ವಿಟ್ಟು ಹೃದಯದಲಿ ೩

೭೨
ವನರುಹಾಕ್ಷೀ ವನಮಾಲಿಂಗೇ ಏನು ಮರುಳಾದೆ ನೀ |
ಅನುದಿನ ತನ್ನ ತನುಮನ ವಚನದಿ ನೆನೆವನ ಪುನರಪಿ
ಜನುಮಕ ತಾರ್ದವನಾ ಪ
ಬಿಡದೇ ವಿಷದಾ ಭರಿತಾದಾಕಾ | ಲೊಡಲಂಗಾ ಮ್ಯಾಲಿಪ್ಪನಾ
ವಡಗೋಡಲುಗೊಗ್ಗು ಮೈಯ್ಯವೆ ಗೂಡದು | ಒಡನೋಡ
ನುಡುಗಿಪಾ ಒಡಲೋಳು ಚರಣಾ | ವಡಮೂಡಿ ಬಂದ |
ಕೋಡಗಲ್ಲೋಲ್ಪಲ್ಲವು | ಘುಡು ಘುಟಿಸುವ ಮಹಾ
ಘೋರರೂಪನವ ೧
ಸೃಷ್ಟಿಲಿ ಮಾವನುದರೋಳು | ತ್ಕುಂಠವಗ್ನಿಯ ನಿಟ್ಟನು |
ಲುಟುಲುಟು ನಡೆದಾಡುತಲಿಹ ಗುಜ್ಜನು | ಥಟನೆಟ ನಿಳಹಿದ
ಜನನಿಯ ಶಿರವಾಬಿಟ್ಟು | ಪಟ ಪಾಟವಿಯ
ಕಪಿ ಸಂಗತಿರುಗಿದಾ
ಮಟಮಟ ಬೆಣ್ಣಿಯ ಕದ್ದುಮೆಲ್ಲುವನಾ೨
ದೆಶೆಗಳ್ಗೆ ಪಾರ್ವಕ್ಕಿಯ ಹರುಷಲೇರಿ ಮೆರೆವನಾ |
ಹಸುಶಿಶುವಾಗಿ ಸುದತಿ ವೃತವಳಿದನು ಹಿಸದಸುಯವನರ |
ತರಿದಿ ನಿರ್ದಯದೀ | ಪಸರಿಸುತಿಹ ಕಾರ್ಮುಗಿಲ ಬಣ್ಣದ|
ಲೆಶೆವನು ಮಹೀಪತಿ ನಂದ – ನೊಡಯನು ೩

೭೩೬
ವಾರಿಜ ಸಂಭವ ತನಯ ತುಂಬುರ ಮಾಳ್ವಾ
ಚಾರು ಗಾಯನ ರತನಾ |
ಮಾರನಾ ಪಡೆದ ಲಾವಣ್ಯಾ ರಾಶಿ
ಸಾಕಾರನ ತಂದು ತೋರೇ ಪ
ಚರಣರು ಉಳ್ಳನ ಪೋರವದ ಪೆಸರಿನಾ
ಇರುವ ದಿಕ್ಕಿನೋಳಿಹನಾ
ಪರಮ ಮಿತ್ರನಾಹಾರಾ ಮಾಳ್ವೆರಿಯಣ್ಣನಾ ನಿರುತ ಸೇವೆಯ
ಕೊಂಬನಾ | ಶರೀರದಿ ಜನಿಸಿದಾವಳ ಕೂಡಿಕೊಂಡಳ ಅರಸನ
ತನುಭವನಾ | ಧರಿಸಿದವನಕೂಡಾ
ಸ್ನೇಹವ ಮಾಳ್ವನಾ ಹರಿಣಾಕ್ಷಿ ತಂದು ತೋರೇ ೧
ಎರಡು ಮೂರೈದನೆಯಾ ರಾಶಿ
ಯೊಡಲೊಳು ತ್ವರಿತದಿ ಜನಿಸಿದನಾ |
ಭರ ಕೋಪಕ ಉದರವ ಪೊಕ್ಕು
ಬಂದನಾ ಶರದೆಚ್ಚ ಸ್ಥಳ ಕೊಂಡನೇ |
ಕರದನು ನೆಗೆದಾಡಿದಳಾಕೃತಿ ವೈದ
ಅಸುರನ ಕಂದನಾ ಕೊಂದನಾ |
ಇರುಳೊಳು ಪ್ರಾಣವ ಪಡೆದ ನೊಡೆಯಾ
ಜಗ ದರಿಯನ ತಂದು ತೋರೇ ೨
ಒಂದು ಇಪ್ಪತ್ತಾರನೆಯಾ ತಾರೆ ಅಭಿದಾನಾ
ಮಂದಗಮನಿ ಪ್ರಿಯನಾ |
ಛಂದುಳ್ಳ ತಂಗಿಯಾಗರ್ಭದಿ ಬಂದನಾ
ಮುಂದ ಗಾಣದ ಲೊಲ್ಲನಾ |
ಅಂದು ಪಗಲಿರುಳು ಮಾಡಿ ನರನ
ಕೈಯಿಂದ ಕೊಲಿಸಿದನಾ |
ತಂದೆ ಮಹೀಪತಿ ನಂದನ ಪಾಲಿಪಾ
ನಂದನ ತಂದು ತೋರೆ ೩

೩೪
ವಾರಿವದನ ಗೇಹ ವಾಸಮಾಡಿಹನ ಕು
ಮಾರಿ ಗಂಡನ ತಲೆ ಕಡಿದಾ ನತ್ತಿಗೆವ್ಯಯ
ತೋರಿಕೀ ನಾಮದಿಂ ಕರೆಸಿಗೊಂಬ
ಸೊಸೆಮಾನ ಕಾಯ್ವನ ತಂದಿಗೆ
ಸಾರೂಪದೆಶವಾನೊರದ ನಪ್ಪನ ಪೆತ್ತ
ನಾರೀ ಸಖನ ಸೂತನಣ್ಣನ ಪಿತಸಹ
ಮೂರು ಮೂವತ್ತುಕೋಟಿ ವಿಭುಧರಿಂಸ್ತುತಿಗೊಂಬ
ಶಂಭುರಕ್ಷಿಸುದೆಮ್ಮನು ೧
ಶರಣು ಹೈಮಪತೀಶ ಶಿವಶಂಭು ಅವಿನಾಶ
ಶರಣು ಧನಪತಿಮಿತ್ರ ಪಾವನತರಚರಿತ್ರ
ಶರಣು ಶ್ರೀ ಕಮಲಾಕ್ಷ ಪ್ರೀಯನೇ ವಿರೂಪಾಕ್ಷ
ಶರಣು ದಾನವ ವಿಪಕ್ಷಾ
ಶರಣು ಕರ್ಪುರಗೌರ ವಂಗಗುಣ ಮಂದಾರ
ಶರಣು ಶೃತಿ ಪ್ರತಿಪಾದ್ಯ ಯೋಗಿ ಮನಕಾ ಭೇದ್ಯ
ಶರಣು ಮಹಿಪತಿನಂದ ಮುನಿಜನ ವಂದ್ಯಶರಣು
ಆನಂದ ಕಂದ ೨

೩೧೬
ವಾಸುದೇವನ್ನಾ ಪಾದವ ನಂಬಬಾರದೇ |
ಈಶನೊಲಮಿಂದಾ ಸದ್ಗತಿ ಸುಖವು ದೊರದೇ ಪ
ವನಜಭವಾದಿಗಳು ದೋರುವೆನಾ ಮುಕುತಿಯು ಪಾಯಾ |
ಯನುತ ಬಂದರೆಯುನೊಡದಿರು ಅವರ ಕಡೆಯಾ ೧
ಜಠರ ಬಾಗಿಲವಾ ಕಾವಾಶ್ವಾನನ ಪರಿಯಂತೆ |
ನಿಷ್ಠೆಯೊಂದನೆ ಬಿಟ್ಟು ತಿರುಗಬ್ಯಾಡ ಕಂಡಂತೆ೨
ಇಂದಿಗೆ ನಾಳಿಗೇ ಹ್ಯಾಂಗೆಂದು ಚಿಂತಿಸದಿರು |
ಛಂದದಿ ಗೀತೆಯಲಿ ಸಾರಿದ ವಾಕ್ಯಾ ಮರೆಯದಿರು ೩
ಶಿಲೆಯೊಳಗಿರುತಿಹಾ ಕಪ್ಪಿಗಾಹಾರ ನೀಡುವರಾರೋ |
ತಿಳಿದು ನೀನೀಗ ಹಲವ ಹಂಬಲವ ಹಿಡಿಯದಿರು ೪
ಎರಡು ದಿನದಿದು ಸಂಸಾರವೆಂಬುದು ನೋಡಿ |
ಅರಿತು ಇದರೋಳಗ ಸಾರ್ಥಕ ಸಾಧನವ ಮಾಡಿ ೫
ಒಂದು ಭಾವದಲಿ ತ್ವರಿತದಿ ಹೊಕ್ಕರ ಶರಣವನು |
ತಂದೆ ಮಹಿಪತಿ ಸುತ ಸನ್ಮಾರ್ಗ ಕೂಡಿಸುತಿಹನು ೬
ಏನೆಂದರಿಯದಾ ಕಂದಗೆ ಉದ್ದರಿಸಿದ ನೋಡೀ |
ತಂದೆ ಮಹಿಪತಿಯು ದಾರಿಯ ದೋರಿದ ದಯಮಾಡಿ ೭

೪೩೮
ವಿದ್ಯಾವಿದ್ಯಕಮೀರಿದಾಗುಣತ್ರಯಾ ದಾವನು ಹೊಂದಾದಿಯಾ
ಬುದ್ಧ್ಯಾವಿಂದ್ರಿಯ ಪ್ರಾಣಭೂತ
ನಿಚಯಾಸರ್ವಕ್ಕುದಾವಾಶ್ರಯಾ
ಶುದ್ಧಾತ್ಮಾ ಸುಖದಾಲಯಾ ಸತುಚಿದಾನಂದೈಕರಸನಿಶ್ಚಯಾ
ಸಿದ್ಧಾಂತ ಪ್ರತಿಪಾದ್ಯದಾವನುದಯಾ ಶ್ರೀ ದೇವ ದತ್ತಾತ್ರಯಾ ೧
ಜಗದೋಳಾವನಸದುಗುಣಾ ನಿರಗುಣಾ ಸ್ವಾರೂಪದಾ ಲಕ್ಷಣಾ
ಬಗೆ ಬಗೆಯಲಿ ಮಾಡಲು ವಿವರಣಾ ನೇತಿನೇತಿ ಶೃತಿ ವಚನಾ
ಯುಗತಿಯಿಂದಲಿ ಕಾಮತಾ
ಮುನಿಜನಾ ನಿಶ್ಚೈಸದಿಹ ರಾವನಾ
ಪ್ರಗಟೀಸಿಹನು ನೋಡಿದೇ ನಿಜಘನಾ ಶ್ರೀದತ್ತ ನಿರಂಜನಾ ೨
ಸ್ತ್ರೀ ಪುರುಷನೋಷಂಡನೋಯನುತಲಿ
ನಿಶ್ಚಯಿಸದಿಹದಾವನಲಿ
ತಾಂಪೌರಾಣಿತಿಹಾಸ ಭೇದಿಸುತಲೀ ನೆಲೆ ಗಾಣದೇ ನಿಲ್ಲಲೀ
ಅಪದಿಂದ ಮೀಮಾಂಸತರ್ಕವರಲೀ ಬೆಂಡಾದವು ನೋಡಲೀ
ಅಪರ ಘನ ಬಂದಿದೇಧರಿಯಲೀ ಬೆಂಡಾದವು ನೋಡಲೀ ೩
ಪಾತಾಳಾದಿಯ ಲೋಕವೇಳುಸರಳು ದಾವನ ಪದ ಕಟಗಳು
ಖ್ಯಾತಿಂದೇಭುವನೇಳು ಊಧ್ರ್ವಕಿರಲು ನಾಭಿಂದ ಸಿರವಾಗಲು
ಸೀತಾಂಶು ರವಿದಾವನಂಬಕಗಳು ಅಶಾವೆ ಶ್ರೀತಂಗಳು
ಅತೀ ಜೋನ್ನತಿ ಬಂದಿದೆ ಧರಿಯೊಳು ಶ್ರೀದೇವ
ದತ್ತೆನಿಸಲು೪
ದಾವ ನಿಂದ್ರಿಯ ಶ್ರೇಣಿ ಬ್ರಹ್ಮಪವನಾ ರುದ್ರಾದಿ
ಅಮರಂಗಣಾ
ದಾವನುದರ ವಿಶ್ವಕಾಗಿ ಭುವನಾ ಶ್ರೀಮದ್ರಮಾರಮಣಾ
ಕಾವಾ ಕೊಲ್ಲುವ ನಿರ್ಮಿಸೂವ ತ್ರೀಗುಣಾ ದಾವನ
ನಖದಾಧೀನಾ
ಆ ವಸುವಿದೆ ನೋಡಿ ಪಾವನ ಘನಾ
ಶ್ರೀದತ್ತ ಮನ ಮೋಹನಾ ೫
ಸರ್ವಾತ್ಮಾ ಸುಖದಾಯಕಾ ನಿರುಪಮಾ
ಸರ್ವೆಶ ಸರ್ವೋತ್ತಮಾ
ಸರ್ವಾಧಾರನುದಾವ ದೇವಗರಿಮಾ ಪೂಜ್ಯನು ಸಕಲಾಗಮಾ
ಸರ್ವಾತೀತನು ದಾವನಂಘ್ರಿ ಕಮಲಾ ಸೇವಿಸುವಳು ಶ್ರೀರಮಾ
ಸರ್ವಾನಂದ ಸುಪೂರ್ಣ ಚಿತ್ರ ಮಹಿಮಾ
ಶ್ರೀದತ್ತ ಗುರುವೇನಮಃ ೬
ಅನಸೂಯಾ ಕರರತ್ನನಾಗಿಜನಿಸೀ ಇಷ್ಟಾರ್ಥವನು ಪೂರಿಸೀ
ಅನುದಿನದಲಿ ಯೋಗಿರಾಜನೆನಿಸೀ
ಯೋಗಾಂಗವನು ಪ್ರಕಟಿಸಿ
ಮನಿ ಸಿಂಹ್ಯಾದ್ರಿಯ ಮಾಡಿ ನಿಂದು
ಸ್ಮರಿಸೀದವರಲ್ಲಿ ಬಹುಕರುಣಿಸೀ
ಅನುಮಾನಿಲ್ಲಿದಕಿನ್ನು ಭಾವ ಬಲಿಸಿ
ಶ್ರೀ ದತ್ತಪದ ಧ್ಯಾಯಿಸೀ ೭
ಆಯ ಸ್ಥಾನವ ಮುಟ್ಟಿಮುಂದ
ಮೆರೆವಾ ಮುಪ್ಪುರದಿಂದೇರುವಾ
ಸಾರೀ ಸಾವಿರದಳ ಪದ್ಮದಿರುವಾ ಸ್ವಾನಂದ ಭೋಗಿಸುವಾ
ಚಾರೂ ದ್ವಾದಶನಾಮ ಮಂತ್ರ ಮುಡಿವಾ
ಮುದ್ರಾಂಕುರವ ಬೀರುವಾ
ದಾರೀ ದೋರಿಸಿಯೋಗಿಜನರ್ಹೊರೆವಾ
ಶ್ರೀದತ್ತ ಗುರು ಎನಿಸುವಾ೮
ಧರಿಯೊಳಾದಿಲಿ
ಕಾತ್ರ್ಯವೀರ್ಯವರವಾಯದುರಾಯನುದ್ಧರಿ ಸಿದಾ
ಸಿರಿದತ್ತಾಷ್ಟಕ ಶ್ಲೋಕ ಚಾರುತರದಾ
ಗುರುಮಹೀಪತಿ ನುಡಿಸಿದಾ
ಗುರುತಾಕೆನ್ನನು ಮಾರಿ ಪೂರ್ಣ ಹೊರದಾ
ಸ್ವಾನಂದ ಸುಖ ಬೀರಿದಾ
ಮರಿಯದೇ ಸ್ಮರಿಸೂವದಾವನು
ಸದಾ ಪಡೆವನು ಗತಿಸಂಪದಾ ೯

೩೧೭
ವಿವೇಕದಿಂದಾ ಮತಿಯುಕ್ತನಾಗಿ
ಕುವಿದ್ಯದಾದಾ ಗುಣವೆಲ್ಲ ನೀಗಿ
ಭಾವಾರ್ಥದಿಂದಾ ಸ್ಮರಿಸೋದು ನೀತಿ
ಗೋವಿಂದದಾಮೋದರ ಮಾಧವೇತಿ ೧
ತ್ರಿವಿಧ ತಾಪದೊಳು ಮಗ್ನನಾಗಿ
ನೀವ್ಯರ್ಥದಿನಗಳಿಯದೆ ಹೋಗಿ
ಭಾವಾರ್ಥದಿಂದಾ ಸ್ಮರಿಸೋದು ನೀತಿ
ಗೋವಿಂದ ದಾಮೋದರ ಮಾಧವೇತಿ ೨
ಈ ವಿಷಯದಾಸುಖ ನಿತ್ಯವಲ್ಲಾ
ನೀವಾತು ಕೇಳಿಗುರುವೀನ ಸೊಲ್ಲಾ
ಭಾವಾರ್ಥದಿಂದ ಸ್ಮರಿಸೂದು ನೀತಿ
ಗೋವಿಂದ ದಾಮೋದರ ಮಾಧವೇತಿ ೩
ಆವದು ತನ್ನ ಹಿತವನು ನೋಡಿ
ಸಾವಧನಾಗೀ ಶ್ರವಣ ಮಾಡಿ
ಭಾವರ್ಥದಿಂದ ಸ್ಮರಿಸೋದು ನೀತಿ
ಗೋವಿಂದ ದಾಮೋದರ ಮಾಧವೇತಿ ೪
ಅವಾವ ಯೋನಿಯಲಿ ಬಂದಹಿಂದಾ
ಅವದುಗತಿಯಂದು ನೋಡಿವಂದಾ
ಭಾವರ್ಥದಿಂದ ಸ್ಮರಿಸೋದು ನೀತಿ
ಗೋವಿಂದ ದಾಮೋದರ ಮಾಧವೇತಿ ೫
ತಾವಂದೇ ಆಶ್ರೈಸದೆ ಕಾಮಧೇನು
ಸಾವಿರ ಸಾಧನಕ ಬೀಳುದೇನು
ಬಾವಾರ್ಥದಿಂದಾ ಸ್ಮರಿಸೋದು ನೀತಿ
ಗೋವಿಂದ ದಾಮೋದರ ಮಾಧವೇತಿ ೬
ಜೀವಾತ್ಮರಾಗಿ ಸಚ ರಾಚ ರಾವ
ಈ ವಸುಧೀಲಿ ಜಗವಾಡಿ ಸೂ ವಾ
ಬಾವರ್ಥದಿಂದಾ ಸ್ಮರಿಸೋದು ನೀತಿ
ಗೋವಿಂದ ದಾಮೊದರ ಮಾಧವೇತಿ ೭
ಗೋವಿಂದ ಅಷ್ಟಕವ ದಾವಪ್ರಾಣೀ
ಸೇವಿಸುವನು ಕಾವನು ಚಕ್ರಪ್ರಾಣೀ
ಭಾವಾರ್ಥದಿಂದಾ ಸ್ಮರಿಸೋದು ನೀತಿ
ಗೋವಿಂದ ದಾಮೋದರ ಮಾಧವೇತಿ ೮

೪೯೩
ವೃಂದಾವನಿ ದೇವಿ ತಂದೆ ಮಹಿಪತಿ ಪಾದಾ |
ದ್ವಂದ್ವವೆನಗೆ ತೋರಮ್ಮಾ ಪ
ತಪ್ಪಿ ತನ್ನವರಗಲಿಪ್ಪ ಶಿಶುವ ತಾಯಿ |
ಗೊಪ್ಪಿಸು ವಂದದ ಲೀಗ
ಸಪ್ಪುಳಾಗದೆ ನಿನ್ನೊಳಿಪ್ಪ ಸದ್ಗುರುವಿನಾ |
ಒಪ್ಪುವಂಘ್ರಿಯಾ ಬಿಗಿದಪ್ಪುವೆ ಮನದಿಂದೆ ೧
ಚಾತಕ ನಲಿದು ಜೀಮೂತ ಬಯಸುವಂತೆ |
ಶೀತಾಂಶುವಿಗೆ ಚಕೋರಾ |
ಆತುರಗಡ ನಿಜನಾಥನ ಗಮನಕೆ ಪಾತಿವೃತೆಯ
ಪರಿಧಾತು ವಾಗಿದೆಯನ್ನ೨
ಸುರನರೋರಗರೆಲ್ಲಾ ನಿರುತ ಭಜಿಸಿ ನಿನ್ನಾ |
ಹರಿದಯ ಪಡೆದರಂತೆ |
ಮರೆಯದೆ ಹೃದಯ ಮಂದಿರದಿ ಚಿದ್ಘನ ಗೋ |
ಚರಿಸುವಾ ಪರಿಯಲಿ ಕರುಣಿಸೆನಗೆ ತಾಯೆ ೩

೬೭೭
ವ್ಯರ್ತವಾಯಿತು ಜನುಮಾ | ಹರಿಭಕ್ತಿ |
ಅರ್ಥಿಯ ನೆಲೆಗೊಳ್ಳದೇ ಪ
ನೊಣ ಮಧು ಬಿಂದುದಲೀ ಕುಳಿತಂತೆ |
ವಣ ವಿಷಯದ ಸುಖಕ |
ಹೆಣಗುತ ನಿಶಿದಿನದೀ | ತಾಪತ್ರಯ |
ಕುಣಿಯೊಳು ಹೊರಳುತಲೀ ೧
ಅವನಿಲಿ ಸಂಸಾರದೀ ಸಂಟರ್ಘಾಳಿ |
ರವದಿಯಾ ತೆರೆ ಶಿಲುಕೀ |
ಹವಣಿಸಿ ವಶವಾಗದು | ವಿಧಿ ಬರ |
ಹ್ಯಾವ ತಿಳಿಯದೆ ಮರುಗೀ ೨
ಭೋಗಿನಾ ತ್ಯಾಗಿಯಾಗಿ ಆಯುಷ್ಯ |
ನೀಗಿ ಯಚ್ಚರವಿಲ್ಲದೇ |
ಶ್ರೀ ಗುರುಮಹಿಪತಿ ಸುತಪ್ರಭು |
ಭಾಗವತರ ಕೂಡದೇ ೩

೬೭೬
ವ್ಯರ್ಥ ದೂರುವರೀಶನಾ ವ್ಯರ್ಥದೂರುವರೈಯ್ಯಾ
ಮರ್ತು ತಮ್ಮವಗುಣ ಮರ್ತ್ಯಲಾಭಾ ಲಾಭಾ
ಕರ್ತ ಮಾಡುವೆನೆಂದು ಪ
ಕಣ್ಣು ಕಿವಿ ನಾಲಿಗಿನ್ನು ನಾಶಿಕಕೊಟ್ಟು
ಚೆನ್ನಾಗಿ ಧ್ಯಾನಿಸು ಸನ್ನುತ ಹರಿಕಥೆ ಕೇಳು
ಯನ್ನಸ್ತುತಿ ಸುನಿರ್ಮಾಲ್ಲ್ಯುನ್ನತ ತುಳಸಿ
ವಾಸನಾಘ್ರಾಣಿಸೆಂದು ಮುನ್ನೆಂದನಲ್ಲದೇ
ಆನ್ಯದೈವ ನೋಡೆಂದನೇ ಪಿಶುನರ
ಅನ್ಯಾಯವ ಕೇಳೆಂದನೇ ಉದರಕಾಗಿ
ಮಾನವ ಹೊಗಳೆಂದನೇ ಭೋಗದ
ತನ್ನಗೋಸುಗ ದ್ರವ್ಯ ಆಘ್ರಾಣಿಸೆಂದನೆ ೧
ಮಂಡಿತ ಸಿರಸದೋರ್ದಂಡ ಕರಚರಣ
ಚಂಡ ಮನಗಳಿಂದಾ ಖಂಡ ನಮಿಸಿ ಸೇವೆ
ಪುಂಡಲೀಕದ ಪರಿಗಂಡು ನೃತ್ಯಾದಿಯ
ಕೊಂಡು ಬೋಧ ಮನನ ಪಂಡುಂಡ ಮಾಡೆಂದ
ಮಂಡಿ ಬಿಗಿದರೆಂದನೇ ಜನರಿಗು
ದ್ವಂದದಿ ಹೊಡಿಯಂದನೇ ಧನಿಕರ
ಕಂಡು ಭ್ರಾಂತಿಗೆ ಬಿದ್ದು ಚಿಂತಿಸುಯಂದನೆ ೨
ನಿತ್ಯಾ ನಿತ್ಯ ವರಿತು ಸತ್ಯಜ್ಞಾನೌಷದ
ಉತ್ತಮ ರಸಾಯನ ಅತ್ತಿತ್ತಲಾಗದೇ ಕೊಂಡು
ಇತ್ತ ಭವರೋಗ ವಿಪತ್ತದ ಕಳೆಯೆಂದ
ಮತ್ತ ಮಹಿಪತಿ ಸುತ ಹೃತ್ತಾಪಹಾರಿ ಕು
ಪಥ್ಯವ ಮಾಡೆಂದನೇ ಚಂಚಲ
ಚಿತ್ತ ನೀನಾಗೆಂದನೇ ಸತ್ಸಂಗ
ನಿತ್ಯ ಮಾಡಿರೆಂದನೇ ಬರಿದೆನೀ
ಮೃತ್ಯು ದೇವತೆ ಬಾಯ ತುತ್ತಾಗುಯಂದನೆ ೩

೬೭೫
ವ್ಯರ್ಥ ನುಡಿವುದೇನು |
ಅರ್ತು ಕೊಂಡಿರು ನೀ ಪ್ರಾಣಿ ಪ
ಮುಕ್ತಿ ಮಾರ್ಗರಿಯದೇ ಬ್ರಹ್ಮ ನಾನೆಂದು |
ಭಕ್ತಿ ಬಿಡುದು ಕುಂದು ೧
ಕೂಲಿ ಮಾಡುತ ತಾ ಅರಸನೆಂದರ |
ಇಳೆಯೊಳೆಲ್ಲರು ನಗರೇ ಪ್ರಾಣಿ ೨
ಈಸಲರಿಯದವ ತೆಪ್ಪ ಬಿಡಲು |
ಘಾಸಿಯಾಗನೇ ಹೇಳು ಪ್ರಾಣಿ ೩
ಹೆಚ್ಚು ಕುಂದಿನ ಬಡಿವಾರಗಳಿಲ್ಲ |
ಇಚ್ಚೆಯಗಳವಿಲ್ಲಾ ಪ್ರಾಣಿ ೪
ಮಹಿಪತಿ ಸ್ವಾಮಿಯ ಕಂಡಿರು ಹೀಂಗ
ಸಿಹಿಗಂಡ ಮೂಕನ್ಹಾಂಗ ಪ್ರಾಣಿ ೫

೩೧೮
ಶರಣಜನೋದಧಿಚಂದ್ರಾ ಸಿರಿ
ಯರಸ ದೇವ ದೇವ ಕರುಣಿ ಮುಕುಂದಾ ಪ
ಹಾರದ ನಿಗದಿಯ ಬಿಟ್ಟು ಸೋತವನಾಗಿ
ವ್ಯಾಸ ಭೀಷ್ಮನ ಗೆಲಿಸಿದೆ ಮುಕುಂದಾ ೧
ಹಗಲೇ ಇರಳ ಮಾಡಿ ಸೈಂಧವನಸುವನು
ತೆಗಿಸಿ ನರನ ವಾಸಿ ಕೊಂಡ್ಯೋ ಮುಕುಂದಾ ೨
ಶರಧಿಯಂಜಿಸಿಕೊಂಡು ಪಕ್ಷಿಯ ಶಿಶುವಾಗಿ
ಗರುಡನ ವಾಸಿಯ ಕೊಂಡ್ಯೊ ಮುಕುಂದಾ ೩
ದಶಜನುಮವತಾಳಿ ಮುನಿಯ ಬೆದರಿಸ್ಯಂಬ
ರಿಕ್ಷಣ ಫಲನಡಿಸಿದೆ ಮುಕುಂದಾ ೪
ಗುರು ಮಹಿಪತಿ ಸ್ವಾಮಿ ಭಕ್ತ ವತ್ಸಲನೆಂಬ
ಬಿರುದುವಾಳಿದರೆಂದು ಸಲಹೋ ಮುಕುಂದಾ ೫

೬೭೯
ಶರಣರ ಕಾಯಕವೇ ಮಾಡಿ |
ಗುರುಧರ್ಮ ಕಾಯಕವನೆ ಮಾಡಿ ಪ
ಕಂದೋಪಮನ್ಯಾನಂದವ ಪಡೆದಾ ೧
ಐದು ವರುಷದ ಮಗವಿಡಿದ ದೃಢಾ ೨
ಇಳೆಯೊಳು ಕರಿರಾಜ ನೆಲೆಗೊಂದು ವಿಡಿದಾ ೩
ಐವರಂಗನೆ ಭಾವದಿ ನುಡಿದಾ ೪
ಭಾರವಪ್ಪಿಸಿ ಕೊಟ್ಟಾ ಕೀರಿಟಿ ಜಡಿದಾ ೫
ಅಂದಿಗಿಂದಿಗೆ ಸಾಧುವೃಂದವು ನಡದಾ ೬
ಮಹಿಪತಿಜ ಹೇಳಿದ ವಿಹಿತಾವಿಡಿದಾ ೭

೩೧೯
ಶರಣರೆಳಕಂದಿ ನೀನ್ಯಾಕೆ ಕರುಣಿಸಲೊಲ್ಲಿ |
ದುರಿತ ಭಯ ಪರಿಹರಿಸಿ ಸಲಹೆನ್ನ ತಂದೆ ಪ
ಹಿಂದೆ ವಾತ್ಸಲ್ಯತನ ಪ್ರಹ್ಲಾದನಲಿ ತೋರಿ
ಬಂದರ ವಿಭೀಷಣಗ ಅಭಯಕರವಿತ್ತೇ |
ಬಂಧನಕ್ಕೋಳಗಾದ ಗಜರಾಜನನು ನೆಗಹಿ |
ಛಂದದಭಿಮಾನುಳಿಹಿ ದ್ರೌಪದಿಯ ಕಾಯ್ದೆ ೧
ಕಲುಷವಾರಿಸಿ ಮುನಿ ಸತಿಯ ನೀನುದ್ದರಿಸಿ |
ಒಲಿದು ಧ್ರುವಗಾನಂದ ಪದವಿತ್ತೆ ಧರಿಲಿ |
ಸಿಲುಕಿರಲು ಲಾಕ್ಷಗೃಹದಿ ಪಾಂಡವರನುಳುಹಿ |
ಲಲನೆ ಗರ್ಭದಿ ಪರೀಕ್ಷಿತನ ಕಾಯ್ದೆ ಸ್ವಾಮಿ ೨
ಅವರ ದಾಸಾನುದಾಸರ ಭಾಗ್ಯವೆಮಗಿಲ್ಲಾ |
ತವನಾಮಧಾರಕೆನಿಸಿದ ಬಿರುದಿಗಿಂದು |
ಕುವಲಯ ಶ್ಯಾಮ ಗುರು ಮಹಿಪತಿ ಸುತ ಪ್ರಭುವೆ |
ಯಮನ ಬಾಧೆಯ ಬಿಡಸೋ ಬ್ಯಾಗೊದಿಗಿ ಬಂದು ೩

೬೭೮
ಶರಣಾರ್ಥಿ ಶಿವಶರಣಾರ್ಥಿ |
ಹರಿಹರ ಎಂದು ಶಿವಪದ ಕಂಡವಗೆ ಪ
ಗುರುವಿಗೆರಗೆ ನಿಜ ಗುರುತಕೆ ಬಂದಿನ್ನು |
ಧರೆಯೊಳು ಪುಣ್ಯ ಜಂಗಮನೆ ವಾಸಿ |
ಅರಹುಮರಹು ಮೀರಿ ಸಹಜಾವಸ್ಥಿಗೆ | ಬೆರದಿಹ ಶರಣಗೆ ೧
ಎದೆಸೆಜ್ಜೆಯೊಳಗಿಹ ಘನಲಿಂಗ ಪೂಜಿಸಿ |
ಮುದದಿಂದ ಭಕ್ತಿಯ ಪಾವುಡದೀ |
ಸದ್ಭಾವ ಸೂತ್ರದಿ ಆವಗುಧರಿಸಿಹ | ವಿದಿತ ಲಿಂಗಾಂಗಿಗೆ ೨
ಆಶೆಯಸುಟ್ಟು ವಿಭೂತಿಯ ಹಚ್ಚಿದ |
ಧ್ಯಾಸದಂಡ ಕೈಲಿ ಪಿಡಿದು |
ಲೇಸಾದ ಸುಗುಣ ರುದ್ರಾಕ್ಷಿಯ ತೊಟ್ಟು | ಭಾಸಿಪ ಸಂತಗೆ ೩
ಶಾಂತಿಯ ತೊಡರವ ಕಟ್ಟಿ ವಿವೇಕದ |
ಮುಂತಾದ ಕಾಷಾಯ ಪೊದ್ದಿಹನಾ |
ಸಂತತ ಗುರುಧರ್ಮ ಭಿಕ್ಷೆಯನುಂಡು |
ವಿಶ್ರಾಂತಿಯ ಮಠ ಹಿಡಿದ ವಿರಕ್ತಗೆ ೪
ಶರಣನೆನುತಾ ಅನ್ಯರ ಶರಣರ ಮಾಡೀ |
ಶರಣ ತಾನೆಂಬ ವೃತ್ತಿಯನುಳಿದು |
ನಿರುತದಿ ಗುರುಮಹಿಪತಿಯಾಗಿ ನಂದನು |
ದ್ಧರಿಸಿದ ಮೂರ್ತಿಗೆ ೫

೧೧
ಶರಣು ಕೃಷ್ಣವೇಣಿ ಶರಣು ಪುಣ್ಯಾಭರಣಿ
ಶರಣು ಇಹಪರದಾಯಿನೀ ಪ
ಸರ್ವವ್ಯಾಪಕನಿರಂಜನನೆನಿಪ ಶ್ರೀವಿಷ್ಣು
ಉರ್ವಿಯೊಳು ದ್ರವರೂಪದೀ
ಹರ್ವಿತಿಹಸಂದೇಹವಿಲ್ಲದಕೆ ಭಕುತಿಯಲಿ
ಅರ್ವವನೆ ಗತಿಯ ಪಡದಾ ಮುದದಿ ೧
ಅಚ್ಯುತನು ಕೃಷ್ಣನದಿ ಹರಿವುತಿಹನೆಂದು
ಮೆಚ್ಚಿವೇಣಿಯ ನಾಮದಿ
ನಿಚ್ಚ ಸತ್ಸಂಗವೆಂದರಿತು ಕೂಡಿದ ಶಿವನು
ಸಚ್ಚರಿತನಾಮಮಹಿಮಾನೇಮಾ ೨
ನಿನ್ನ ಪೂರೆಲುದಿತ ಪವನದಿ ದುರಿತವೋಡಿದವು
ಇನ್ನು ಮಿಂದವನ ಗತಿಯಾ
ಬಣ್ಣಿಸುವ ನಾವನೆಲೆ ಜನನೀತಾರಿಸುಯನ್ನ
ಮನ್ನಿಸು ಗುರುವಿನಾಸುತನಾ ೩

೪೩೭
ಶರಣು ಚಿನ್ಮಯರೂಪ ಅತ್ರಿಮುನಿ ಕುಲದೀಪ
ಶರಣು ವಿಶ್ವಂಭರನೇ ದತ್ತ ದಿಗಂಬರನೆ
ಶರಣು ನೆನುವರ ಸಾರಿ ಸುಳಿದು ಹೊರೆವ ಉದಾರಿ
ಶರಣು ದುರಿತಾಪಹಾರಿ
ಶರಣು ಸಿಂಹಾದ್ರೀಶ ಯೋಗ ಮಾರ್ಗ ಪ್ರಕಾಶ
ಶರಣು ಸರ್ವರ ಗುರುವೆ ಎನಿಸಿ ಲೋಕದಿ ಮೆರೆವೆ
ಶರಣು ಮಹಿಪತಿ ನಂದನನ ನೋಡದವೆ ಕುಂದಾ
ಸಲಹು ಪದ ದೋರಿ ದ್ವಂದ್ವಾ ೧

೩೨೦
ಶರಣು ವೆಂಕಟ ರಮಣ ಭಕ್ತ ಸಂಕಟ ಹರಣ
ಶರಣು ಶೇಷಾದ್ರೀಶ ಪರಿಹೃತನೆ ಭವಪಾಶ
ಶರಣು ಸರ್ವರಿಗಾದ್ಯ ಅಜಭವಸುರಾರಾಧ್ಯ
ಶರಣು ವೇದಾಂತ – ವೇದ್ಯ ಪ
ಶರಣು ನಿರ್ಜಿತ ದುರಿತ ನಾಮ ವಿಶ್ವಂಭರಿತ
ಶರಣು ಘನಕಾರುಣಿಯೆ ದೇವ ಚೂಡಾಮಣಿಯೆ
ಶರಣು ಮಹಿಪತಿ ನಂದ ನೋಡಿಯ ಪರಮಾನಂದ ಶರಣು
ಶ್ರೀ ಹರಿಮುಕುಂದಾ ೧

೭೩
ಶರಣು ಶರಣು ಪರ್ವಾತೀತೆ ಸುರ ಬ್ರಹ್ಮಾದಿವಂದಿತೆ
ಕರುಣಿಸೋಜ್ವಲ ಭರಿತೇ
ಶೃತಿ ಸ್ರ‍ಮತಿ ವಿಖ್ಯಾತೆ ಅತಿಶಯ ಸುಖ ಚರಿತೆ
ನುತ ಗುಣ ಗಣ ಮಂಡಿತೆ
ಮಹಾಪಯೋನಿಧಿಸುತೆ ಶ್ರೀ ಹರಿ ಮನೋವ್ರತೆ
ಮಹಿಪತಿಸುತ ದೈವತೆ ||

೪೩೬
ಶರಣು ಶರಣು ಶ್ರೀ ದತ್ತಾತ್ರೇಯಾ
ಶರಣು ಸಕಲಾ ಭುವನಾಶ್ರಯಾ
ಶರಣೆಂಬೆ ಸಿಂಹಾಚಲ ನಿಲಯಾ
ಸುರಜನ ರೇಯಾ ಸಲಹಯ್ಯಾ ೧
ವನರುಹ ಸಂಭವ ತ್ರಿಲೋಚನ
ಸನಕಾದಿ ಮುನಿ ವಂದಿತ ಚರಣ
ಜನವನ ವಿಜನ ವ್ಯಾಪಕ ಘನ
ಅನಸೂಯಾ ನಂದನ ಯೋಗೀಶಾ ೨
ತತ್ವಯೋಗ ಸಿದ್ಧಿ ಬುದ್ಧಿ ದಾತಾರಾ
ಸತ್ವ ಗುಣಾಲಂ ಕೃತ ಜ್ಞಾನ ಸಾಗರಾ
ಸತ್ಯ ಸನಾತನೇ ಮುನಿ ದಿಗಂಬರಾ
ಭಕ್ತ ಸಹಕಾರಾ ಅವಧೂತಾ ೩
ಕಂದರ್ಪ ಕೋಟಿ ಸುಂದರಾಕಾರಾ
ಹೊಂದಿದಾಭರಣಾನೇಕ ಶೃಂಗಾರಾ
ಇಂದು ಸೂರ್ಯಾನಳ ತೇಜ ವ್ಯಾಪಾರಾ
ಎಂದೆಂದೆಚ್ಚರಾ ಕಂಡು ನಿನ್ನಾ ೪
ಮಂದಮತಿ ಬಾಲನ ಬಿನ್ನಾಹದ ಸ್ತುತಿ
ಬಂದು ಅರ್ಪಿಸಿಕೋ ದುದಿ ಶ್ರೀಪತಿ
ಇಂದು ಮೊರೆ ಹೊಕ್ಕೆನು ಅನನ್ಯಾಗತಿತಂದೇ ಮಹಿಪತಿ ಸುತ ಸ್ವಾಮೀ ೫

ನುಡಿ-೧: ಸುಧಾ ನಿರ್ಮಾಣ
೩೬
ಶರಣು ಶರಣು ಹರ ಸುಂದರ ಶಂಕರ |
ಹೊರೆಯೋ ನಾ ನಿಮ್ಮ ಬಾಲನು ಪ
ಶರ್ವ ಸದಾಶಿವ ಶಾರ್ವರಿ ಪತಿ – ಧರ |
ಸರ್ವ ಜನರ ಸಹಕಾರೀ ||
ಪರ್ವತಾಲಯ ಅಘ ಪರ್ವತ ಕುಲಿಶ ನೆ |
ಪರ್ವತ ಸುತೆ ಮನೋಹಾರಿ ೧
ಪಂಚಶರಾಲಿ ಪ್ರಪಂಚದ ಭವ ಭ್ರಮ |
ಪಂಚಾಕ್ಷರ ಸುಖದಾತಾ ||
ವಂಚನಿಲ್ಲವದರ ವಾಂಛಿತ ಪೂರಿತ |
ಅಂಚೆ ಗಮನೆ ಸನ್ಮತಾ ೨
ಮಹಿತಳ ವ್ಯಾಪಕ ಮಹಿಮನು – ಪಮ್ಯನೆ |
ಮಹಿಪತಿ ನಂದನ ಪ್ರಭೋ |
ಅಹಿಯಾ ಭರಣನೆ ಅಹವರಾನಳವಿದು |
ವಿಹಿತಾಂಬಕ ತೃಯ ಶಂಭೋ || ೩

೭೨೭
ಶರಣು ಶರಣುರಾಯಾ | ಸರಸಿ-ಜಾಲಯ ಪ್ರೀಯಾ |
ಶರಣು ಪಾವನಕಾಯಾ | ಸಲಹುನಮ್ಮಾ ಪ
ಸ್ತುತಿಯ ಮಾಡಲರಿಯೇ | ಯತಿ ಛಲಗುಣ ವರಿಯೇ |
ಮತಿವಂತನ ಮಾಡನುಡಿಸೈಯ್ಯ | ತರಳನ | ಪತಿತ
ಪಾವನ ದೇವ ದಯಾನಿಧಿಯೇ ೧
ಶಿರಿವಧು ರಮಣನಾ ಚರಿತವ ಪೇಳುವೆ |
ಕರುಣದಿ ಶ್ರೀಹರಿ ನುಡಿಸಿದಂತೆ | ಕೇಳಿ |
ಧರಿಯೊಳು ಭಾಗವತರು ಯಲ್ಲಾ ೨
ಬನ್ನಿ ಸಾತ್ವಿಕ ಗುಣ ಸಂಪನ್ನ ಮುತ್ತೈದೇರು |
ಅನ್ಯ ಭಾವನೆಗಳಿಗೆ ತೊಡಕದೇ | ಯನುತಲಿ |
ಉನ್ನತ ಸಂಭ್ರಮದಿ ನೆರೆದರು ೩
ದಿವ್ಯಾಂಬರವನುಟ್ಟು ದಿವ್ಯಾಭರಣನಿಟ್ಟು |
ದಿವ್ಯಾಕೃತಿಯಲಿ ವಪ್ಪುತಿಹಾ | ಮುನಿ |
ಸೂರ್ಯಕೋಟಿ ಮದನ ಲಾವಣ್ಯನು ೪
ಅನಾದಿ ಮಹಿಮ ಮೋಹನನಾದ ಕೃಷ್ಣನು |
ಜ್ಞಾನಾಂಗನೇ ರುಕ್ಮಣಿ ವಧುವಿನಾ | ಈರ್ವರಾ |
ಅನುಭವ ದೂಟಣಿಯನ್ನು ಮಾಡಲಾರಿ ೫
ಸಡಗರದಿಂದಾ ಹೃದಯಾ ಪೊಡವಿಯೊಳೊಪ್ಪುದಾ |
ದೃಢ ವಜ್ರದಿಂದಲಿ ರಚಿಸಿದಾ | ಜಗದಲಿ |
ಒಡನೆ ರತಿ ರತ್ನಾಸನ ಹಾಕಿ ೬
ಮ್ಯಾಲ ಭಾವಕಿಯರು ಮೂಲೋಕವಂದ್ಯರಾ |
ಲೋಲವಧು ವರರನು ಕುಳ್ಳಿರಿಸಿ | ಹರುಷದಿ |
ಮೇಲೆನಿಸಿ ಊಟಣಿಯ ಮಾಡಿಸಲು ೭
ಶುದ್ಧ ಮತಿವಂತಿಯರು ಅಧ್ಯಕ್ಷರತರಾಗಿ |
ಆಧ್ಯಾತ್ಮ ಸಾಮಗ್ರಿನಿಟ್ಟುಕೊಂಡು | ಸಿರಿ |
ಮುದ್ದು ಶ್ರೀ ಕೃಷ್ಣನು ವಲಿವಂತೇ ೮
ನಾನಾ ಗಂಟಗಳುಳ್ಳಾ ಕಠಿಣವಾದಾ ಅಭಿ |
ಮಾನ ಅರಿಷಿಣವನು ಸಣ್ಣ ಮಾಡೀ | ಈಗಾ |
ಏನುಳಿಯದ್ಹಾಂಗ ವಿವೇಕದಿಂದ ೯
ಹಮ್ಮಿನರಿಷಿಣವನು ಸಮ್ಯಜ್ಞಾನದ ಕದಿ |
ಕಮ್ಯ ದೋರುವಂತೆ ಕಲಿಸುತಾ | ಶ್ರೀವರ |
ಬ್ರಹ್ಮನ ಪಾಪಕ ಅರ್ಪಿಸಿದರು ೧೦
ತ್ವರಿತ ಲಕ್ಷ್ಮೀ ಕಾಲಾ ಪರವಾ ವಪ್ಪಿಲೆ ಹಚ್ಚಿ |
ಭರದಿಂದಾಕ್ಷಣ ಕ್ಷಣಕ ರುಕ್ಮಣಿ ಯಾಮುಖದಿಂದ |
ಹರಿಯಾ ನಾಮಗಳನು ನುಡಿಸುತಾ ೧೧
ಭಾವನಿಂದ ರಂಜಿಸುವ ಕುಂಕುಮ ಮ್ಯಾಲೆ |
ಆ ವಿಮಲ ಮುಕ್ತಿಯ ಶೇಶೇ ನಿಟ್ಟು ಧ್ಯಾನಾ |
ಲೇವಿಗಂಧವಾ ಲೇಪಿಸಿದರು ೧೨
ಪರಿಮಳ ಸುವಾಸನೆಯ ಬೇರದ ಸುಮನ ಸರವಾ |
ಕೊರಳಿಗೆ ಹಾಕಿದೆ ಪರಿಯಿಂದಾ ಕೃಷ್ಣನಾ |
ಕರದಿ ನೇಮಿಸಿದರು ರುಕ್ಮಣಿಗೆ ೧೩
ಆರ್ತ ಜಿಜ್ಞಾಸನು ಧನಾರ್ಥಿಯು ಬೈಲಿ ಘಳಿಗೆ |
ಅರ್ತು ಮುಖದಲಿ ಕೊಟ್ಟು ಬಿಸುಡಿದರು ಬುಧರು |
ನಿರ್ತದಿಂದಲಿ ನೋಡಿ ಇಬ್ಬರಿಂದ ೧೪
ಮಗುಳೆ ಸಂಕಲ್ಪಾದಾ ಬಗೆದಾ ಕುಪ್ಪಸಿನ |
ಬಿಗಿ ಬಿಗಿದು ಕಟ್ಟಿದಾ ಗಂಟವನು ಒಂದೇ |
ಜಗದೀಶನಾ ಕೈಯಿಂದ ಬಿಡಿಸಿದರು ೧೫
ಹರಿಯಾ ತೊಡೆಯ ಮ್ಯಾಲ ನಿಂದಿರಿಸಿ ರುಕ್ಮಿಣಿಯನು |
ಕರದಿ ಶಾಂತಿ ಅಂಬಿ ಬಿಂಬಿಸಿದರು | ನೋಡಿ |
ಧರಿಯೊಳಾನಂದವ ತೋರುವಂತೆ ೧೬
ತನುವಿನಾರತಿಯೊಳು ಘನದೆಚ್ಚರ ದೀಪದಿ |
ಮನದಿಂದಾ ಜಯಾ ಜಯಾವೆಂದೂ ಬೆಳಗೀ | ಮರಹು |
ಅನುವಾಗಿ ತಾವು ನಿವಾಳಿಸಿದರು ೧೭
ಮರೆವಾ ಪ್ರಕೃತಿ ಪುರುಷರ ಶರಗಂಗಳಾ ಯರಡಾ |
ಭರದಿಂದ ಕಟ್ಟಿ ಸುವೃತ್ತಿಂದಾ | ಬಳಿಕಾ |
ತ್ವರಿತ ನಿಜ ಮಂದಿರವ ಸಾರಿದರು ೧೮
ಇಂತಿ ಪರಿಯಾಗಿಹ ಅಂತರನು ಭವದಾ |
ಕಂತುಪಿತ ಲಕ್ಷ್ಮಿಯ ಚರಿತವನು | ನೋಡಿ |
ಸಂತತ ಸುಖವನು ಪಡೆದರೆಲ್ಲಾ ೧೯
ಇನಿತು ಸುಖ ಕರವಾದಾ ಅನುಭವ ದೂಟಣಿಯನು |
ಅನುವಾಗಿ ನುಡಿಸಿದಾ ಯನ್ನ ಮುಖದೀ | ಈಗಾ |
ಘನ ಗುರು ಮಹಿತಪಿ ಸುತ ಸ್ವಾಮಿ ೨೦
ತಂದೆ ತಾಯಿ ಮಿತ್ರ ಬಂಧು ಬಳಗನಾದಿ |
ಎಂದೆಂದೂ ಶರಣರ ಸಲಹುವಾ | ದೇವನೇ |
ಇಂದೆನ್ನ ನುದ್ಧರಿಸು ದತ್ತಾತ್ರೇಯಾ ೨೧

೬೬
ಶರಣು ಶಾರದೆ ವಾಣಿ
ಪಡರಮಾನಂದದ ಕೇಣಿ
ಸುರಸಕಲ ಕೀರ್ವಾಣಿ ಕಲ್ಯಾಣಿ ೧
ವಿದಿತ ಸುವಿದ್ಯದಾನಿ
ಸದಮಲ ಸುಪ್ರವೀಣಿ
ಮದಮತ್ತಗಜಗಾಮಿನಿ ಕಲ್ಯಾಣಿ ೨
ಸ್ಪಹಿತ ಸುಖಕಾರಿಣೀ
ಸಹಕಾರಿ ನಿರಂಜನ
ಮಹಿಪತಿಸುತ ಸ್ವಾಮಿನೀ ಕಲ್ಯಾಣಿ ೩

೬೭
ಶರಣು ಶಾರದೆ ವಾಣೀ ಸರಸಿ ಜಾಸನ ರಾಣಿ
ಶರಣು ವಿದ್ಯಾಂಬುಧಿಯೆ ಸರ್ವಗುಣಗಣನಿಧಿಯೇ
ಶರಣು ಧೀನೋದ್ಫರಣಿ ಶುಭ್ರಾಂಬರಾವರಣಿ
ಶರಣ ಜನ ಭವ ತಾರಣೀ
ಶರಣಿ ಶೃತಿ ವಿಖ್ಯಾತೆ ಸಲೆ ಜಗತ್ರಯ ಮಾತೆ
ಶರಣು ಶ್ರೀ ಧವಳಾಂಗೆ ಸುರವರಾರ್ಜಿತ ತುಂಗೆ
ಶರಣು ಮಹಿಪತಿ ಕಂದ ನಾಸ್ಯದಿ ನೆಲಿಸಿಛಂದ
ಸಲಹಮ್ಮ ಕರುಣದಿಂದ ೧

೩೨೨
ಶರಣು ಶಿರೀಶ ಹರೇ ಪ
ಭುವನದಲಿ ಶೃತಿ-ಯಡಗೇ|
ಯವಿಗಳಾಡಿಸದೇ|
ಜವದಲಿ ಬಂದು ನೀ ತಮನನು ಕೊಂದೇ|
ಕಾವೋದೋ ಎನ್ನಾ ಮತ್ಸ್ಯರೂಪಾ ೧
ಸುರಸುರರು ಕೊಡಿ|
ಶರಧಿಯ ಮಥಿಸುದಕಿ|
ಕರುಣದಿ ಬೆನ್ನವನಿತ್ತೆ ನೀನಗತಿ|
ಕಾವೋದು ಎನ್ನ ಕಮಠೆ ರೂಪಾ ೨
ಹಿರಣ್ಯಾಕ್ಷನ ಕೊಂದು|
ಧರೆಯನು ದಂತದಲೆ|
ಧರಿಸಿದೆ ನೀ ಅನವರತಗಳಿಂದಲೇ|
ಕಾವುದೋ ಎನ್ನ ವರಹಾ ರೂಪ ೩
ಛಲದಿ ಪ್ರಹ್ಲಾದ ಕರಿಯೇ|
ಕುಲಿಶ ಸಮುಗುರುದಲೆ|
ಮೆಳೆತನ ಸೀಳಿದೆ ಕರಳ್ಳೊನಮಾಲೆ|
ಕಾವುದೋ ಎನ್ನ|ನರಹರಿ ರೂಪ ೪
ಚಂಡ ಬಲಿವವರದನೇ|
ದಂಡ ಕಾಷ್ಟಕರನೇ|
ಕುಂಡಲ ಸುಕಮಂಡಲ ಭೂಷಿತನೇ|
ಕಾವುದೋ ಎನ್ನ ವಾಮನ ರೂಪ ೫
ಸುಜನರ ಪ್ರತಿ-ಪಾಲಾ
ರಾಜಾಕುಲಾಂತಕನೇ|
ರಾಜಿಸುತಿಹ ವರ ಪರಶುಧರನೇ|
ಕಾವುದೋ ಎನ್ನಾ ಭಾರ್ಗವರೂಪಾ೬
ಋಷಿಯ ಮಖ ಕಾಯಿದು
ಶಶಿಧರಧನು ಮುರಿದೇ|
ದಶಮುಖ ಕುಂಭಕರ್ಣರ ಮರ್ದಿಸಿದೆ|
ಕಾವುದೋ ಎನ್ನಾ ರಾಘವ ರೂಪ೭
ಎಣೆಗಾಣದ ಮಡುವಿನಲಿ|
ಫಣಿವರ ಫಣಿಮ್ಯಾಲ|
ಕುಣಿದೆ ಆನಂದದಿ ಕೊಳಲನೂದುತ್ತಲೇ|
ಕಾವುದೋ ಎನ್ನಾ ಯಾದವ ರೂಪ೮
ಮೂರೆನಿಪ ಪುರದಲಿ|
ನಾರೇಶ ದೃತವಳಿದೇ|
ಭೂರಿ ಸಜ್ಜನ ಹೃದ್ವ ನಜ್ಜದೊಳಾಡಿದೇ|
ಕಾವುದೋ ಎನ್ನಾ ಬೌದ್ದ ಸ್ವರೂಪಾ೯
ಸಲಹಬೇಕೆಂದು ಜಗವಾ|
ಇಳೆಯಾ ಭಾರರ ತರಿದೇ|
ಸುಲಲಿತ ಕುದುರೆಯ ಏರಿ ಮೆರೆದೆ|
ಕಾವಿದೋ ಎನ್ನ ಕಲ್ಕಿಸ್ವರೂಪ ೧೦
ಸಹಕಾರಿ ಭಕ್ತರಿಗೇ|
ಮಹಿಮೆ ದೋರಿದೆ ಹೀಗೆ|
ಮಹಿಪತಿ ಸುತ ಪ್ರಭು ಸಲಹು ನೀಯೆನಗೆ|
ಕಾವುದೋ ಎನ್ನಾ ಅನಂತರೂಪ ೧೧

೩೨೧
ಶರಣು ಶಿರೀಶ ಹರೇಗೋವಿಂದಾ ಪ
ದಾನವ ಕುಲಸಂಹಾರಕಾ ದೀನ ತಾರಕಾ
ದೀನ ತಾರಕಾ ಪರಮ ಪಾವನ ರೂಪಾ ೧
ಈರೇಳು ಲೋಕದ ಜೀವನಾ ವರಪಾವನಾ
ವರಪಾವನಾ ಭರಣ ವಿನುತ ದಯಚರಣಾ೨
ಭಯಹರ ಆನಂದಸಾಗರಾ ದಯ ಸಾಗರಾ
ದಯಸಾಗರಾ ಗರುಡಗಮನ ವರ ಫಣಿಶಯನಾ೩
ದುರಿತ ಕುಲಾಂಬುಧಿ ಶೋಷಣಾ ಖರದೋಷಣಾ
ಖರದೋಷಣಾ ತನು ಪರ್ವತ ಕುತಿಲಿಶಾ೪
ಸುರವರ ಮುನಿಜನ ಪಾಲನಾ ಧರಿಲೋಲನಾ
ಧರಿ ಲೋಲನಾ ರಾಯಣ ಸರಜ ನೇತ್ರಾ೫
ರವಿಕೋಟಿ ನಿಧನಂದ ನಂದನಾ ಭವಬಂಧನಾ
ಭವ ಬಂಧನಾ ಛೇದನ ರತಿ – ಪತಿ ಜನಕಾ೬
ಅಸಮ ಪಯೋಧರ ಸುಂದರಾ ದಶಕಂಧರಾ
ದಶಕಂಧರಾ, ಮರ್ಧನ ನಿರುಪಮ ಚರಿತಾ೭
ಸಕಲ ವ್ಯಾಪಕ ಯದುನಾಯಕಾ ಸುಖದಾಯಕಾ
ಸುಖದಾಯಕಾ ಮಹಿಪತಿ ನಂದನ ಪ್ರೀಯಾ೮

೧೯
ಶರಣು ಶ್ರೀ ಗಣನಾಥ ಮೂಷಿಕೇಂದ್ರ ವರೂಢ
ಶರಣು ವಿದ್ಯದ ಸತ್ರ ಲಂಬೋದರ ಶುಭಗಾತ್ರ
ಶರಣು ವರದೋರ್ದಂಡ ಶುಂಡ ಮಂಡಿತ ಗಂಡ
ಕುಂಡಲ ವಕ್ರತುಂಡಾ
ಶರಣೂ ಸುರನರಧೇಯ ಸಿದ್ದೀಂದಿರಾ – ಪ್ರೀಯ
ಶರಣು ವಿಘ್ನವಿನಾಶ ಏಕದಂತ ಪ್ರಕಾಶ
ಶರಣು ಮಹಿಪತಿ ನಂದನಗ ನೀಡುವಾನಂದ
ಶರಣು ಪಾರ್ವತಿಯ ಕಂದಾ

೪೯೪
ಶರಣು ಶ್ರೀ ಗುರುರಾಯ | ಶರಣು ಬುಧ ಜನಪ್ರೀಯ |
ಶರಣು ಪಾವನ | ಶರಣು ನಮ್ಮಯ್ಯ ಪ
ಧರಣಿಯೊಳಗ ವಿದ್ಯ ದಾವರಣವಿಕ್ಷೇಪದಿ ಹರಿಯ
ಸ್ಮರಣೆ ಮರೆದು ಭವ ಜನುಮ ಮರಣ ಬಲಿಗೆ ಸಿಲುಕಿ |
ಹರಣ ಹಾಕುತಿದೆ ನೋಡೀ ಕರುಣದಿಂದ ಭಯ ನೀಡಿ |
ತರಣೋಪಾಯ ದೋರಿ ದೀನೋದ್ಧರಣ ಮಾಡಿ ಹೊರೆದೇ ೧
ನರದ ಹುಳುವ ತಂದು ಮಂದಿರದೊಳಿಟ್ಟು |
ತನ್ನಂಗ ತೆರದಿ ಮಾಳ್ಪಾ ಭೃಂಗಿಯ ತೆರದೆ ನಂಬಿದವರಾ |
ಕರೆದು ಬೋಧಾಮೃತದ ನುಡಿವೆರದು ಚಿನುಮಯಾನಂದ
ಮರದ ಠಾವ ತಪ್ಪಿಸಿ ಎಚ್ಚರದೊಳು ನಿಲಿಸಿದೇ ೨
ಮುಕುತಿ ಸಾಧನವಾದಾ ಭಕುತಿ ನವ ವಿಧ ಶಾಸ್ತ್ರ |
ಯುಕುತಿ ಪ್ರಾಬಲ್ಯ ವಿರಕ್ತಿಯನಗಿಲ್ಲಾ |
ಶಕುತ ಗುರು ಮಹಿಪತಿಯ ಭಕುತ ನೆನಿಸಿದಕಿನ್ನು
ಅಕುತೋ ಭಯ ಹೊಂದುವಾ ಶಕುತಿ ನೀಡಯ್ಯಾ೩

ನುಡಿ-೫: ನಿನ್ನಯ ಗುಣಸ್ಪೂರ್ತಿ
೩೫
ಶರಣು ಶ್ರೀ ಗುರುಲಿಂಗ ಶರಣು ಮುನಿಜನಸಂಗ
ಶರಣುಭವ ಭಯ ವಿಭಂಗಾ ಪ
ಪರಮ ಪಾವನಿ ಜಾನ್ಹವಿಯ ತೀರದಲಿ ಕಾಶೀ |
ಪುರ ವಿಶ್ವನಾಥನೆನಿಸೀ |
ಹರುಷದಲಿ ನಿಂದು ಮತ್ತೊಂದು ರೂಪದಲಿ ತೆರಳಿ |
ಧರೆಯ ದೇಶವ ನೋಡುತಾ ಬರುತಾ ೧
ಮೊದಲೆ ತಾ ಕೃಷ್ಣ – ವೇಣಿ ಮ್ಯಾಲುತ್ತರವಾಹಿನಿ |
ಸದಮಲ ಸುಖ ಕಾರಿಣೀ |
ಇದ ನರಿತು ನಡಿ ಮಧ್ಯೆ – ಉತ್ತರೇಶ್ವರ ನೆನಸಿ |
ಮುದದಿಂದ ಬಂದು ನಿಂದು || ೨
ಸಖನ ದರುಶನ ನೆವದಿ ಬರುತಿರಲು ನಾ ನಿಮ್ಮ
ಪ್ರಕಟದಲಿ ಕಂಡೆ ನಿಂದು |
ಭಕುತಿಯಚ್ಚರ ನೀಡು ಗುರು ಮಹೀಪತಿ ಸ್ವಾಮಿ |
ಸಕಲ ಸುರರಾಜ ಮಾದ್ಯ ಧನ್ಯಾ || ೩

೩೭
ಶರಣು ಹೈಮವತೀಶ ಶಿವಶಂಭು ಅವಿನಾಶ |
ಶರಣು ಧನಪತಿ ಮಿತ್ರ ಪಾವನತರಚರಿತ್ರ |
ಶರಣು ಶ್ರೀ ಕಮಲಾಕ್ಷ ಪ್ರೀಯನೆ ವಿರೂಪಾಕ್ಷ
ಶರಣು ದಾನವವಿಪಕ್ಷಾ ||
ಶರಣು ಕರ್ಪೂರ ಗೌರಾಂಗ ಗುಣಮಂದಾರ |
ಶರಣು ಶೃತಿಪೃತಿಪಾದ್ಯಯೋಗಿಮನಕಾಭೇದ್ಯ |
ಶರಣು ಮಹೀಪತಿ ನಂದ ಮುನಿಜನವಂದ್ಯ
ಶರಣು ಆನಂದ ಕಂದಾ ||

೪೯೫
ಶರಣೆಂದು ಗುರು ಮಹಿಪತಿ ಶುಭ
ಚರಣಕೆ ಹೊಯ್ಯಂದ ಹಂಗುರವ |
ಗುರುವಿನ ಬಿರುದವ ಸಾರಿ ಹೇಳ್ಯಾಡುತ
ಹೊಯ್ಯಂದ ಡಂಗುರವ
ವರಮುಖ ಜಾಂಗಟೆ ನಾಲಿಗಿ ಗುಣಿಯಿಂದಾ
ಹೊಯ್ಯಂದ ಡಂಗುರವ
ಗುರುನಾಮ ನಾದದ ಝಂಕಾರ ಗುಡುವಂತೆ
ಹೊಯ್ಯಂದ ಡಂಗುರವ ಪ
ಸಂತರೊಳಗ ಮಹಂತನು ಈತನೇ |
ನಿಂತರೆ ನೆರೆಯಲಿ ಸ್ವರ್ಗದ ಸುಖವುಂಟು |
ಇಂತಿಪ್ಪ ಪ್ರಪಂಚ ಪರಮಾರ್ಥವೆನಿಸಿದ |
ವೇದಾಂತವ ಕರತಲ ಮಲಕಂತೆ ತೋರಿದ ೧
ಗುರು ಎಂದರೆ ಹಗದೊಳು ತಾನೇ ತಾನೇ |
ಮರಳು ಮಂಕಗಳಿಗೆ ಗುರುತನ ಥರವೇ |
ನÉರೆಯಂತ್ರ ಮಂತ್ರದಿ ಸಿಂತ್ರಗೆಡಹುದಲ್ಲಾ |
ಪರಬ್ರಹ್ಮ ಇದೆಕೋ ಯಂದಯ್ಯ ತೋರುವ೨
ನರ ನಲ್ಲಾ ನರನಲ್ಲಾ ಅವತಾರ ದೇಹೆಂದು |
ಧರೆಯೊಳು ಮುಂಡಿಗೆ ಹಾಕುವೆ ಇದಕಿನ್ನು |
ಗುರುತಿನ ಮಾತವ ಅರಿತನು ನಂದನ ಘನ |
ನೆರೆ ಸಂಶಯಾತ್ಮಗ ದುರ್ಗತಿ ತಪ್ಪದು

೬೦
ಶರಣೆಂಬೆ ಗುರುರಾಯಾ ಶರಣ ಜನರಾಶ್ರಯಾ
ಶರಣು ಸಮೀರ ಕುಮಾರ ಉದಾರನೆ
ಶರಣು ಪಾವನ ಕಾಯಾ ಪ
ಹರಿ ಪೂರ್ಣಾಂಶದಿ ಜನಿಸಿ ಹರಿ ಕುಲೋದ್ಬವ ನೆನಿಸಿ
ಹರಿಯತುಡಕಿ ಬಂದು ಹರಿತೇಜದಿ ನಿಂದು
ಹರಿಸೆ ಧನುಜ ಮೃಗವಾ
ಹರಿರೂಪದಲಿ ನಿಂದೆಹರಿಮಂದಿರದಲಿನಲಿದೆ
ಹರಿಬರಲು ನಮಿಸಿ ಹರಿದಶ್ವಜ ಗೊಲಿಸಿ
ಹರಿಹಯಜಗ ಮುನಿದೇ ೧
ಗೋಪೆಂದ್ರ ನಾಜÉ್ಞಯಲಿ ಗೋಪದಾಂಬುಧಿ ಪರಿಲಿ
ಗೋಪನಲಂಘಿಸಿ ಗೋಪುತ್ರಿಯ ಕಂಡು
ಗೋಪೀಡಕರ ಮುರಿದೇ
ಗೋಪಾಲಗಿದಿರಾಗಿ ಗೋಪಾಸ್ತ್ರವಶವಾಗಿ
ಗೋಪುರವ ನುರುಹಿ ಗೋಪಾನ್ವಯ ಗುರುಹಿ
ಗೋಪದವಿಯ ಪಡೆದೆ ೨
ಮಹಿದರಾನೇಕವತಂದು ಮಹೋದಧಿಯನೆ ಜಿಗಿದು
ಮಹಿಭಾರಕೆ ಅಹಿ ಮಹಿರಾವಣಾನ್ವಯ
ಮಹಿರುಹದಲಿ ತರಿದೇ
ಮಹಿಯೋಳು ಮೂರವತಾರಿ ಮಹಿಮಾನೆಕವಬೀರಿ
ಮಹಿಪತಿ ಸುತಪ್ರಭು ಮಹಿಜಳ ಕೂಡಿಸಿ
ಮಹದಾ ಗ್ರಣಿಯಾದೆ ||

೨೦
ಶರಣೆಂಭೆ ತನುಮನದಿಂದ ಗಣರಾಯಾ
ಕರುಣಿಸೆನಗ ನರಮೃಗ ಕಾಯಾ
ಸುರಾಸುರರ ಕೈಯ್ಯ ಸೇವೆ ಕೊಳುವ ಚರಣವನು
ಮೊರೆಯ ಹೊಕ್ಕೆನು ಕೇಳಿ ಕೀರುತಿಯಾ
ಕೊಂಡಾಡುವಂತೆ ಪದ ಪದ್ಯದಿ ನಿನ್ನ ಚರಿಯಾ
ಶುಂಡಾಲ ಶುಭ ಮುಖ ಕೊಡುಮತಿಯನಾ
ಎಂದೆಂದು ನೊಡಲು ಅಪರಾಧಿನಾ ಮೊದಲು
ಕುಂದನಾರಿ – ಸದೇ ನೋಡೆನ್ನ ಮ್ಯಾಲಿನ್ನಾ
ಅಗಜ ನಂದನ ಗುರು ಮಹೀಪತಿ ಸುತ ಸ್ವಾಮಿ
ಭಕುತ ರಕ್ಷಕ ಮುನಿಜನ ಪ್ರೇಮೀ

೬೮೦
ಶರಣೆನ್ನಿ ಸಾಧುರಿಂಗೆ |
ಹರಿ ಮೆಚ್ಚುಪರಮ ಭಾಗವತರಿಂಗೆ ಪ
ತೀರ್ಥ ಕ್ಷೇತ್ರಂಗಳಲ್ಲಿ ಮಿಂದು ಘನ |
ಯಾತ್ರೆಯನು ಮಾಡಿ ಬರಲಿ |
ಧಾತ್ರಿಯಲಿ ಕೆಲವು ದಿನಕೆ ಆ ಪುಣ್ಯ |
ವರ್ಥಿ ಬಹುದಯ್ಯ ಜನಕ |
ಅರ್ತು ಸದ್ಭಾವದಿಂದ್ಹೋಗಿ ಸಂತರ ಕಂಡ |
ಮಾತ್ರದಲಿ ಸರ್ವ ಸುಖ ಇದಿರಿಡುವದೆಂದು ೧
ಮೆರೆವ ಭಾಗವತದಲ್ಲಿ ಉದ್ಭವಗೆ |
ಹರಿತಾನೆ ಬೋಧಿಸುತಲಿ |
ನೆರೆಯೋಗ ಯಾಗ ವೃತವು ಯನ್ನಹಿಡಿ |
ಲರಿಯದಿದು ಸಾಂಖ್ಯ ತಪವು |
ನಿರುತೆನ್ನ ಸತ್ಸಂಗ ತೋರಿ ಕೊಡುವಂತನ್ಯ |
ಧರಿಯೊಳಗ ಸಾಧನಗಳಿಲ್ಲ ಕೇಳೆಂದಾ ೨
ಚಲಮೂರ್ತಿ ಸಂತರುಗಳು ನೋಡಲಾ |
ಚಲಮೂರ್ತಿ ಪ್ರತಿಮೆಯಗಳು |
ನಲಿದವರ ಪೂಜೆಯಿಂದಾ ಪ್ರೀಯನಾಗಿ |
ಸಲಹುವನು ಶ್ರೀ ಮುಕುಂದಾ |
ತಿಳಿಯ ದೆಂದಿಗೆ ಅಭಾವಿಕ ವರ ಮಹಿಮೆಗಳು |
ವಲಿದು ಗುರುಮಹಿಪತಿ ಸುತಗೆಚ್ಚರಿಸಿದಾ ೩

೪೯೬
ಶರಣೇ ಅಜಭವ ಮುಖ್ಯ ಸುರಾರ್ಚಿತ |
ಶರಣೇ ವಿಧು ಬಿಂಬಾನನ ಚಂಪಕ |
ವರಣೇ ತ್ರಿಭುವನ ಜೀವನ ರಕ್ಷಕ ಶರಣೇ ದುರಿತಚಯಾ |
ಹರಣೇ ಶ್ರೀದೇವಿ ಜಾಂಬೂನದಾಂಬರ |
ವರಣೇ ಫಣಿವರಶಯನ ಚಿತ್ತನ |
ಹರಣೇ ಕುಶಲದಿ ಮಹಿಪತಿ ನಂದನುದ್ಧರಸೆ ಜಯ ಜಯತು

೬೮೧
ಶರೀರ ಜರಿಯಬೇಡಾ | ಬೆರಿಯಬೇಡಾ |
ಸ್ಥಿರವಿದ್ದ ಕೈಯಲಿ ಗುರು ಶರಣವ ಹೊಕ್ಕು |
ತಾರಿಸೋ ಭವದಿಂದ ನೀ ಮರಳು ಜೀವವೇ ಪ
ಲೋಕದೊಳು ವಾರಿಜೋದ್ಭವ ನಿನ್ನ ಜನ್ಮ ಕೊಟ್ಟು |
ನೂಕಲಾಗ ತಾಯಿ ಗರ್ಭದೊಳಾವರಿಸಿ ತಾನು ಧರಿಸಿ |
ರೇಖೆ ರೂಪ ಲಾವಣ್ಯ ಅವಯವಂಗಳಿಂದ |
ಸಾಕಾರವಾಗಿ ಸುಂದರೆನಿಸಿ ವರನೆನಿಸಿ |
ಬೇಕಾದ ವಿದ್ಯವನು ಸರ್ವ ಸಂಪಾದಿಸಲು |
ತಾ ಕಾರ್ಯವಾಗಿ ಅಭ್ಯಾಸದಿಂದಾ ಧ್ಯಾಸದಿಂದಾ |
ವಾಕ್ಪಟುದಲಿ ಸಮರ್ಥನೆಂಬನಾಮ ಪಡೆದು |
ಪ್ರಖ್ಯಾತವಾದೆ ಈ ಕಾಯದಿಂದ ೧
ಸ್ನಾನವನು ಮಾಡಿ ತ್ರಿಕಾಲ ಸಂಧ್ಯಾನ ವಿಧಿಯನು |
ಮೌನ ಜಪಗಳವನು ತಪಗಳನು |
ಸ್ವಾನುಭಾವ ಸೂರ್ಯಾಡಲಾಗಿ ನೇಮವನುಷ್ಠಾನ ಮೊದಲಾದ |
ಧ್ಯಾನ ಧಾರಣವನು ಕಾರವನು |
ಜ್ಞಾನ ಭಕ್ತಿ ವೈರಾಗ್ಯ ಶಮದಮ ಕರುಣನು ದಿನಮಾಳ್ಪಾ |
ಕರ್ಮ ನೈಮಿತ್ಯವಾದಾ ನಿತ್ಯವಾದಾ |
ತಾನು ತನ್ನ ಉದ್ಧರಿಸಿಕೊಳಲಿಕ್ಕೆ ಭಾವದಿಂದಾ |
ಮಾನುಭಾವಗ್ ದಯ ಪಡೆವುದರಿಂದಾ ೨
ತಾನು ಕುಣಿಯಲಾರದೆ ಅಂಕಣವು ಡೊಂಕು ಎಂದು |
ಹೀನೋಯಿಸಿ ನುಡಿವ ನಟ ವೇಷಿಯಂತೆ |
ನೀನು ನೀಟ ನಡಿಯದ್ಹೋಗಿ ದೇಹ ಕಶ್ಮಲವೆಂದು |
ಜ್ಞಾನ ರಹಿತನಾಗಿ ಹಳಿವುದು ಉಚಿತ ಇದು ಪ್ರಾಚೀತ |
ಈ ನಾಲ್ಕೆರಡು ವೈರಿಗಳ ದಂಡಿಸದೇ ಬರಿದೇ |
ಹೀನ ವೈರಾಗ್ಯವಾ ಶಣಸಬೇಡಾ ದಣಿಸಬೇಡಾ |
ಕಾನನದ ಹುತ್ತಮ್ಯಾಲ ಬಡಿದರೇನು ವರಗಿರುವಾ |
ಆ ನಾಗದರ್ಪಗುಂದದು ಕಂಡಾ ೩
ಪರಿಪರಿ ಮುಮ್ಮುಳಿ ವಳಗಾಗಿ ಜೀವಿಸುವ |
ತೆರನಂತೋಯಂದು ಚಿಂತಿಸಬಹುದು ಸುರಿಸಬಹುದು |
ನೂರು ಭಂಡಿಗಳ ತÀುಂಬಿ ಬಂದರೇನು ತಾ |
ಧರೆಯೊಳು ಸೂಲ ತಾ ಹಾವುದೊಂದೇ ನೋವುದೊಂದೇ |
ಬರೆದ ಬರಹವೇ ಪಣಿಯಾಲಿದ್ದಪರಿ ತಪ್ಪದೈ |
ವರ ಕೂಡಿ ಕೊಟ್ಟಡವಿ ಮಾಡುವದೇನು ನೋಡುದೇನು |
ತ್ವರಿತ ಮೊಸರಿನೊಳಗಿನ ಬೆಣ್ಣೆ ತೆಗೆದುಕೊಂಬ ಪರಿ |
ಪರಗತಿ ಇದರಿಂದ ಪಡಿ ನೀನು ೪
ಸಾಕ್ಷರಾವೆಂಬ ಮೂರಕ್ಷರವ ಬರೆದು ತಾ |
ರಾಕ್ಷಸಾವೆಂಬುದೇ ಅರ್ಥವಹುದು ಅನರ್ಥ ವಹುದು |
ಈ ಪೋಣಿಯೊಳು ದೇಹ ಇದೇ ಪರಿ ವಳಿತು ಹೊಲ್ಲೆ |
ಪಕ್ಷದ್ವಯಕ ಬಾಹುದು ಮಾಡಿದಾಂಗ ಕೂಡಿದಾಂಗ |
ರಕ್ಷಿಸೆಂದು ಮಹಿಪತಿಸುತ ಜೀವನಾದಿ ವಿಶ್ವಾ |
ಕುಕ್ಷಿಯನು ನೆನೆದು ಭವ ಹಿಂಗು ಬ್ಯಾಗ ೫

೬೮೨
ಶಾಂತಿಯ ಬಲಿಯಣ್ಣಾ | ಮನದಲಿ ಪ
ಕೋಪ ತಾಪದ ತಾಮಸ ಗುಣದ ಮನಿ |
ತಾಪತ್ರಯ ಮೂಲಾನಳ ಶಮನಿ ೧
ಸ್ವಾನಂದ ವಾರಿಧಿ ಉಕ್ಕೇರುವದು
ಜ್ಞಾನ ನಿಧಾನವು ಕೈ ಸೇರುವದು ೨
ಪ್ರಪಂಚ ಪರಮಾರ್ಥದ ಹಿತಕಾರಿ |
ಕೃಪೆಯಲಿ ಸರಿಸಮ ಬಗೆ ಮುರಾರಿ ೩
ಸಾಧು ಸಂತರು ಸಂಧಿಪ ಘನವು |
ಸಾಧಿಸಿ ಕೊಡುವದು ತಾ ಚಿದ್ಘನವು ೪
ಗುರು ಮಹಿಪತಿ ಸಾರಿದ ಬೋಧಾ |
ಅರಿತವಗೆಲ್ಲಿಹುದು ಭವ ಬಾಧಾ ೫

೪೧
ಶಿವ ಶಿವಯನ್ನಿ ಮನದೊಳೂ ಹರಹರಯನ್ನಿಪ
ಸಾಂಬಸದಾಶಿವ ಶಂಭುವೆಯನ್ನಿ ಅಂಬಿಕಾರಮಣ
ತೃಯಂಬಕ ನೆನ್ನಿ ೧
ಗಂಗಾಧರ ಜಿತ – ನುಂಗನುಯನ್ನಿ ಮಂಗಳಮಹಿಮ
ಸಿತಾಂಗನುಯನ್ನಿ೨
ಅದ್ರಿನಿವಾಸ ಕಪರ್ದಿಯೆಯನ್ನಿ ರುದ್ರಗುಣದ ಸಮುದ್ರನೆಯನ್ನಿ೩
ಆಗಮ ವೇದ್ಯ ವಿರಾಗಿಯೆಯನ್ನಿ ಭೋಗ ಭೂಷಣ
ಮಹಾಯೋಗಿಯೆಯನ್ನಿ೪
ಸುರಮುನಿಧೇಯ ಸುಚರಣನುಯನ್ನಿ
ಗುರುಮಹಿಪತಿಪ್ರಭು ಕರುಣನುಯನ್ನಿ ೫

೪೦
ಶಿವನಾ ಭವನಾ ಮನವೇ ನೀನೆನೆ ಗಿರಿಜಾಧವನಾ ಪ
ಸರ್ಪ ಭೂಷಣ ಶರ್ವ ಸಂಕರನಾ | ಇರು
ತಿರ್ಪ ಕೈಲಾಸ ಮಂದಿರನಾ | ಕಂ
ದರ್ಪನ ಗರ್ವದ ದರ್ಪವ ಮುರಿದಿಹ |
ಕರ್ಪುರ ಗೌರವನಾ |೧
ಕೆಂಜೆಡೆಯೊಳು ನಂದಿಷನಿಯಳಿಟ್ಟಿ ಹನಾ | ಸಲೆ|
ಕುಂಜರ ಚರ್ಮವ ನುಟ್ಟಿಹನಾ | ತೇಜ |
ಪುಂಜರ – ಸಂಜಯ ಕಂಜ ಬಾಂಧವ ಶಶಿ
ರಂಜಿತ ಮೌಳೀಯನಾ || ೨
ಇಹಪರ ದಾಯಕ ಚಿನುಮಯನಾ | ಗುರು
ಮಹಿಪತಿ ನಂದನ ಪ್ರೀಯನಾ | ಭವ |
ರಹಿ – ತನಮಾಡಿ ಸ್ವಹಿತ ವದೋರಿ
ಮಹಿಮೆಯ ಹೊಗುಳುವನಾ ||೩

೩೮
ಶಿವಾ ಶಿವಾ ಮಹಾದೇವಾ | ಶಂಕರಾ | ಹರಹರ
ಮಹಾದೇವಾ ಪ
ಗಿರಿಜೆ ರಮಣ ವೃಷಬೇಂದ್ರ ವಾಹನಾ |
ಸರಸಿ ಜಾರಿ ಮಿತ್ರಾನಲ ನಯನಾ ೧
ಕರ್ಪುರ ಗೌರವ ಪಂಚಾನನಾ |
ಸರ್ಪ ಭೂಷಣಂಗಜ ಮದಹರಣಾ ೨
ಕರಿಚ – ರ್ಮಾಂಬರ ಸುರ ನದಿ ಧರಾ |
ಗುರು ಮಹಿಪತಿ ಸುತ ಭಯ ಹರಣಾ ೩

೩೨೩
ಶಿಶುಗಳಪರಾಧಕೆ ಶಿಕ್ಷೆ ಕಣ್ಣೀಲಲ್ಲದೇ
ಯಶವ ಬಡಿಗೋಲವನು ಎತ್ತುವರೇ ರಂಗಾ ಪ
ಇಲಿಗೆ ಹೆಬ್ಬುಲಿಯಾಕೆ|ಮೊಲಕೆ ಮದಗಜವ್ಯಾಕೆ|
ಕಳೆತ ಹಣ್ಣಿಗೆ ಮತ್ತೆ ಕರಗಸ್ಯಾಕೆ|
ಕಲೆ ಬಿದ್ದ ಕನ್ನಡಿಗೆ ಗುದ್ದಲಿಯ ತರಲೇಕೆ|
ಗುಳಲಿ ಕಾಯಿಗೆ ಹೊತ್ತಗಲ್ಲ ವ್ಯಾಕೆ ೧
ಹಳ್ಳಗೆ ಹಡಗವ್ಯಾಕೆ|ಕೊಳ್ಳಿಗೆ ಕೊಡ ಜಲವ್ಯಾಕೆ|
ಮುಳ್ಳು ಮುರಿದುದಕ ಮೊನೆ ಹಾರಿ ಯಾಕೆ|
ಮಲ್ಲಿಗೆ ಹೋವಿಗೆ ಬಂಧ ಹಗ್ಗದಲ್ಯಾಕೆ|
ಹಲ್ಲಿ ಬೆದರಿಸೆ ಹೊಡೆವ ಭೇರಿಯಾಕೆ ೨
ಜ್ಞಾನಹೀನರ ನಮ್ಮ ತಪ್ಪನೆಣಿಸಿದುರಿತ|
ಮೊನೆಗಾಣಿಸುತ ಬನ್ನಿ ಬಡಿಸುವುದುಚಿತವೇ|
ದೀನವತ್ಸಲ ತಂದೆ ಮಹಿಪತಿ ಸುತ ಪ್ರಭುವೇ|
ನ್ಯೂನಾರಿಸದೇ ನಿನ್ನವನೆಂದು ಸಲಹೋ ೩

೩೨೪
ಶಿಶುವಿನ ಯಾತಕ ದೂರವಿರೆ|
ನಿಶಿದಿನ ನೋಡಲು ಮಾತವರಿದವಾ|
ಮರಳನೆ ಮಾಡುವರೆ ಪ
ಅತಿ ಮೋಹದಿಂದಲಿ ಮೊಲೆಯನು|
ಬಾಯೊಳಗಿಟ್ಟರೆ ಸೇವಿಸನು|
ಮಿಲೆ ಯಿಲ್ಲದ ಪಾಲ್ಮೊಸರನು|
ಕುಡಿಯಲು ತಕ್ಕವನೆ ೧
ಪರಿಪರಿಯಿಂದಲಿ ಮುಂದಕೆ ಕರೆದರೆ|ಸರಕನೆ ಹೆಜ್ಜಿಡನು|
ಹರಿ ನಿಮ್ಮುಡುಗೆಯ ಸೆಳೆದು ಕೊಳುತಲಿ|
ಮರವನೆ ಏರುವನೆ ೨
ಸುರಜನ ಪಾಲಕ ಮಹಿಪತಿ ನಂದನ|ಜೀವನ ಮೂರುತಿಯಾ|
ಕುರುಪಿಡಬಹುದೆನೆ ಮಾನವನೆಂದು|
ಲೀಲೆಯ ದೋರುತಿಹ ೩

೭೨೬
ಶೋಭಾನವೆನ್ನಿರೆ ಶುಭಕರ ಸಾವಿತ್ರೇರು |
ಪ್ರಭುಗುರು ಆತ್ಮಾ ಶ್ರೀರಾಮಗ ಪ
ರಾಮರಾವಣ ಕ್ರೋಧನಿಸ್ಸೀಮ ಕುಂಭಕರ್ಣಾದಿ |
ತಾಮಸದವರಾ ಮದಮುರಿದು |
ತಾಮಸದವರ ಮದಮುರಿದು ಹೃದಯಕ |
ಪ್ರೇಮ ಜಯೋತ್ಸವದಿಂದೈ ತಂದಾ ೧
ಒಡನೆ ಶಾಂತಿ ಸೀತೆಯಾ ಬಿಡಿಸಿ ತಂದನು ಸೆರೆಯಾ |
ದೃಢವಿಭೀಷಣನ ಸ್ಥಾಪಿಸಿದನಾ |
ದೃಢವಿಭೀಷಣನ ಸ್ಥಾಪಿಸಿ ಆಶಾಪಾಶ |
ಕಡಲ ಮಧ್ಯ ಪೂರದೊಳು ಈಗ ೨
ವಿವೇಕ ಹರಿವಾನದಿ ಭಾವದಾರತಿಯೋಳು |
ತೀವಿದ ಸಮ್ಯಜ್ಞಾನ ಜ್ಯೋತಿ |
ತೀವಿದ ಸಮ್ಯಜ್ಞಾನಜ್ಯೋತಿಯಿಂದ |
ದೇವದೇವೇಶಗ ತಿಂದೀಗ ೩
ಅರಿಗಳ ಶಿಕ್ಷಿಸು ಶರಣರ ರಕ್ಷಿಸು |
ಧರೆಯೊಳುಯೆಂದು ಹರಸುತ |
ಧರೆಯೊಳು ಎಂದು ಹರಸುತ ಮುತ್ತಿನ |
ಪರಮಶಾಶಯ ನೊಸಲೊಳಿಟ್ಟು ೪
ಇಹಪರಸುಖದಾತಾ ಬಾಹ್ಯಾಂತ್ರ ಸದೋದಿತಾ
ಮಹಿಪತಿಸುತ ಪ್ರಭು ರಘುನಾಥ |
ಮಹಿಪತಿಸುತ ಪ್ರಭು ರಘುನಾಥ ನೆನೆವರ
ಸಹಕಾರಿ ನಮ್ಮ ಸದೋದಿತ ೫

೩೨೫
ಶ್ರೀ ಕೃಷ್ಣನಾ ಚರಣಾ ನಂಬಿ ಭಜಿಸುವುದು ಬಲು ಲೇಸು ಪ
ಭಾವನೆ ದೇವಕಿ ಉದರದಿ ಬಂದಾ|
ದೇವ ಹೃದಯ ಗೋಕುಲದಲಿ ಬೆಳೆದಾ|
ಅವಿದ್ಯ ಪೂತನಿಯನು ಕೊಂದಾ ೧
ಭವರೂಪದ ಸಗಟಾಸೂರನೊದೆದಾ|
ಅವಗುಣಿಬಕ ಕೇಶಾದ್ಯರ ತರಿದಾ|
ಅವಿವೇಕಿ ಕಾಳಿಂಗನ ತುಳಿದಾ ೨
ಭಕ್ತಿಯ ಗೋರಸ ಕಳವಿಲಿ ಸುರಿದಾ|
ಮುಕ್ತಾಂಗದ ಗೋಪೀಜನ ನೆರೆದಾ|
ಸಕ್ತಿಯ ಗೋವರೋಳು ನಲಿದಾ೩
ಭ್ರಾಂತಿಯ ಹಮ್ಮಿನ ಕಂಸನ ಬಡಿದಾ|
ಸ್ವಾಂತ ಸುಖ ದ್ವಾರಕೆಯಲಿ ನಿಂದಾ|
ಶಾಂತಿಯ ರುಕ್ಮಿಣಿ ಕೈವಿಡಿದಾ ೪
ತಂದೆ ಮಹಿಪತಿ ಗುರುವಾದಾ
ಕಂದುದ್ಧವನನು ತೋರಿಸಿ ಹೊರೆದಾ|
ಛಂದದಿ ಪಾದುಕವಿತ್ತನು ಪದದಾ ೫

೪೨೬
ಶ್ರೀ ಗಜಾನನ ದೇವ ಸುರಾರ್ಚಿತಾ |ನಾಗಭೂಷಣ ಸಿಂಧೂರ ಚರ್ಚಿತಾ ||
ಬಾಗಿ ಭಾವದಿ ಸ್ತುತಿಸಿದ ಮಾನವಾ | ಸಾಗಿ ವಿಘ್ನದಿ
ಪಡೆವನು ಜ್ಞಾನವಾ ೧
ಶರಣು ಶಾರದೆ ಸನ್ಮತಿದಾಯಕೆ |
ಸಿರಿಸರಸ್ವತಿ ಕಾಮಿನಿ ನಾಯಕೆ ||
ಸುರ ನರೋರಗ ದಾನವ ಪೂಜಿತೆ | ಪರಮ ಸುಂದರಿ
ಲೋಕ ವಿರಾಜಿತೆ ೨
ಛಲಭಕ್ತಿಗೆ ಕೃಷ್ಣ ಜಾನಕಿ ಸಹಿತ |
ಸಲೆ ರಾಮರೂಪವ ತೋರಿದ ವಿಹಿತ |
ಇಳೆಯೊಳು ಆ ಹನುಮನಂಘ್ರಿ ಕಮಲ |
ಬಲಗೊಂಡು ಸನ್ಮತಿ ನೀಡಲು ವಿಮಲಾ ೩
ಮುನಿಜನರಾಧ್ಯೇಯ ಶ್ರೀಪಾದಪದ್ಮಾ |
ಅನುದಿನ ಸೇವಿಸುತಿಹಳು ಪದ್ಮಾ ||
ವನಜಾಕ್ಷ ಕೃಪಾನಿಧಿ ಕೃಷ್ಣರಾಯಾ |
ನೆನುವದಕ ತಾರದಿರಂತರಾಯ ೪
ರಾಜಯೋಗದ ಪದವಿಯ ದೋರಿಸಿ |
ರಾಜ ತೇಜದ ಭಕ್ತರ ತಾರಿಸಿ ||
ರಾಜಿಸುತಿಹ ಸದ್ಗುರು ಮಹಿಪತಿ |
ತ್ಯಾಜದೀವುದು ಜ್ಞಾನದ ಸಂಪತಿ ೫

೩೯
ಶ್ರೀ ಗಿರೀಶಾ ನಮೋ ಮಹಾದೇವಾ
ನಾಗ ಚರ್ಮಾಂಬರ ಸದಾಶಿವ ನಾಗ ಭೂಷಣ ದೇವನೆ ಪ
ನೀಲ ಲೋಹಿತ ನಿರುಪಮಚರಿತಾ |
ಬಾಲಚಂದ್ರನ ವೆತಾಳಿಲಿಟ್ಟಿ ಹಿಮಾಲಯತ್ಮಜಾ ಲಾಲನಾ
ಭಾಲಲೋಚನ ಭಕ್ತರ ಪ್ರೀಯಾ |
ಕಾಲಜಲಧರ ನೀಲ ಗ್ರೀವಕ | ಪಾಲಿಮೂಲೋಕ ಪಾಲನಾ ೧
ಗಂಗಾಧರ ಗೋವರ ಗಮನ |
ಅಂಗಜನಾ ಮದ ಭಂಗ ಮಾಡಿದಾ |
ತುಂಗಮುನಿ ಮನೋ ಸಂಗನೇ |
ಮಂಗಳಾತ್ಮಕ ಮಹಿಮ ಅಪಾರಾ |
ಹಿಂಗ ದಂತರಂಗಲ್ಯಾಡುತಾ ಸಂಗರಹಿತ ಸಿತಾಂಗನೇ ೨
ಕರುಣಾಸಿಂಧು ಕೈಲಾಸ ವಾಸೀ |
ಶರಣ ಜನರಿಗೆ ತರಣೋಪಾಯವ
ಧರಣೀಯೊಳಗ ಬೀರುವೇ ||
ಗುರು ಮಹಿಪತಿ – ಸುತ ಸಹಕಾರೀ |
ಹರಹರಾಯನೇ ಹಾರಿಸಿ ಕಲುಷವ|
ಪರಗತಿಯನೀ ತೋರುವೇ || ೩

೫೦೧
ಶ್ರೀ ಗುರು ಮೂರ್ತಿಯ ನೋಡಿ ನೋಡಿ |
ಭಕುತಿಲಿ ನಮನವ ಮಾಡಿ ಮಾಡಿ |
ಬೇಗನೆ ವರಗಳ ಬೇಡಿ ಬೇಡಿ ಪ
ಜನುಮ ಜನುಮದಲಿ ಅನುದಿನ ತಪವನು |
ಘನತರ ಮಾಡಿದ ಜನರುದ್ದೇಶದ
ವನಿಯೊಳಗುದಿಸಿದ ನೋಡಿ | ನೋಡಿ ೧
ನಡೆ ನುಡಿ ಗಡಣರಿಯದೆ ಜಡ ಮೂಢರು |
ದೃಢದಲಿ ಒಡಲ್ಹುಗೆ ಒಡನುದ್ಧರಿಸುವ |
ಅಡಿಗಡಿಗೊಲಿವುತ ನೋಡಿ ನೋಡಿ ೨
ನಗೆ ಮೊಗ ಮಹಿಪತಿ ಸುತ ಪ್ರಭು ಬಗೆ ಬಗೆ |
ನಿಗಮಾರ್ಥಗರದು ಭಕುತರ ಸುಗಮದಿ |
ತಗಬಗಿ ನಲಿಸುವ ನೋಡಿ ನೋಡಿ೩

೫೪೪
ಶ್ರೀ ಗುರು ಮೂರ್ತಿಯನು ನಂಬಿ ಧ್ಯಾನಿಸಿ ಜನರು |
ನೀಗಿ ಚಂಚಲ ಚಿತ್ತದಾ
ಭಾಗವತ ಧರ್ಮದಿಂದರ್ಚಿಸಲು ಕರುಣ ಮಳೆ |
ತಾಗದು ಸಲಹುವನು ಭವ ಪಾಶದೆಶೆಯಿಂದ ಪ
ಎಳೆಯ ಮಾದಳಿರ ಸೋಲಿಸುವ ಮೃದುತರ ಬೆರಳ
ಹೊಳೆವ ನಖ ಚಲುವ ಪಾದಾ |
ನಳ ನಳಿಪ ಪವಳ ಮಣಿಯಂತೆ ಹರಡಿನ ಸೊ….
ವಿಲಸಿತದ ಜಂಘೆದ್ವಯದಾ |
ಬೆಳೆದ ಬಂಗಾರ ಕದಳಿಯ ಸ್ತಂಭ ಪೊಳವ
ನಿಚ್ಚಳದ ಜಾನೂರದ ಸ್ಪುರದಾ |
ವಲುಮೆಮಿಗೆ ತನು ಮಧ್ಯ ಸಂಪಿಗೆಯ ಗಂಭೀರನಾಭಿ ಕಿರು
ಡೊಳ್ಳು ತ್ರಿವಳಿ ವಾಸನೆಯ ಛಂದಾ ೧
ಪುತ್ಥಳಿಯ ಹಲಗಿ ಕಾಂತಿಯ ಲೊಪ್ಪುತಿಹ ಉರದ |
ವತ್ತಿಡದ ಕೊರಳ ಮಾಟಾ|
ದ್ವಿತ್ತಕರ ಕೆಂದಾರವರೆಯ ಸೊಂಪು ಮಣಿ ಬಂಧ |
ಮತ್ತ ಊರ್ಪರಿಯಕಟಾ |
ಮೊತ್ತದೋರ್ವಂಡ ಭುಜ ಶ್ರವಣ ನುಣ್ಗದಪುಗಳು |
ಹೆತ್ತ ಪಲ್ವಧರ ನೀಟಾ |
ಉತ್ತಮದ ನಾಶಿಕವು ಶಶಿ ಸೂರ್ಯ ಪರಿನಯನ |
ವೆತ್ತ ಭ್ರೂಲತೆ ಪೆರ್ನೊಸಲ ಸುಕೇಶಿಯ ಜೂಟಾ ೨
ನವ ಸುವರ್ಣದ ಮುಕುಟ ಮಣಿ ತೇಜದೊಳೆ
ಸೆವ ಯುಗ್ಮ ಕುಂಡಲಗಳು |
ನವರತ್ನ ಹಾರ ಮಂಡಿತ ಪದಕ ವಡ್ಯಾಣ |
ಠವ ಠವಿಸುತಿಹ ಸರಳು |
ಬವರದೊಳು ಚಿತ್ತ ತೆತ್ತೀಸ ತಾಯಿತ ಕಡ
ಗವೆ ವಜ್ರ ದುಂಗುರಗಳು |
ತವಕದೊಳ್ ನಿರೆ ಹಾಕಿ ದಂಬರವ ಮೌಲಿಕದ |
ರವದ ಸಾಲಗೆಜ್ಜೆ ಕಾಲ ಕಡಗ ಅಂದುಗೆಗಳು ೩
ದ್ವಿನಯನ ಮಧ್ಯ ರಾಜಿಸುವ ಮಂಟಪದೊಳಗ
ಧ್ಯಾನ ಸಿಂಹಾಸನದಲಿ |
ಸಾನು ರಾಗದಲಿ ಕುಳ್ಳಿರಿಸಿ ಚರಣ ದ್ವಯವ
ಜ್ಞಾನ ಗಂಗೋದಕದಲಿ |
ಮಾನಸದಿ ಅಭಿಷೇಕವನೆ ಮಾಡಿ ಸಲೆ ಪೂಸಿ
ಆನಂದ ವಸ್ತ್ರ ಗುಣಲಿ |
ಮೌನದಲಿ ಲಯಲಕ್ಷಿ ಗಂಧಾಕ್ಷತೆಯ ಸುಮನ
ತಾನಿಟ್ಟು ಬೆಳಗಿ ಧೂಪದಿ ಏಕಾರತಿಗಳಲಿ ೪
ಬಳಿಕ ಕಸ್ತೂರಿಯ ಕೇಶರದ ಚಂದನ ಪೂಸಿ |
ಕಳೇವರಕ ವಪ್ಪಿಲಿಂದಾ |
ಥಳ ಥಳನೆ ರಂಜಿಸುವ ಬಟ್ಟ ಮುತ್ತಿಶಾಶೆ
ಗಳನಿಟ್ಟು ಬೇಗ ಛಂದಾ |
ಚಲುವ ಮಲ್ಲಿಗೆ ಕುಂದರ್ಕೆ ಜಾಜಿ ಕೇತಕಿಯು
ನಳಿನ ಮೊದಲಾದರಿಂದಾ |
…..ರ ಮಾಲೆಯಾ ಹಾಕಿ ಪರಿಮಳದಿ ಧೂಪವನು |
…..ಸಂಚಿತ ದಶಾಂಗದಿ ಚಕ್ಷು ಜ್ಯೋತಿಯಿಂದಾ ೫
ವರಶಾಂತಿ ಶಕ್ತಿ ಯರ್ಚಿಸಿ ಕುಳ್ಳಿರಿಸಿ
ಪುರುಷಾರ್ಥ ದೀಪಂಗಳು |
ಮೆರೆಯುತ ಪ್ರಜ್ವಲಿಸಿ ತರುವಾಯ ಕನಕಮಯ |
ಹರಿವಾಣ ಬಟ್ಟಲುಗಳು |
ಪರಮಾನ್ನ ಪಂಚಭಕ್ಷಗಳನ್ನ ಸೂಪಘೃತ
ಪರಿ ಪರಿಯ ಶಾಖಂಗಳು |
ಸುರಸ ಪಾಲು ಮೊಸರು ತನಿವಣ್ಣಲುವಗಾಯಿಕೇಸರ |
ಧರಿಯೊಳಗ ಲೇಹ ಪೇಹ ಮೊದಲಾದ ಭೋಜ್ಯಂಗಳು ೬
ಇನಿತು ಅರ್ಪಿಸಿ ಸ್ವಾದುದಕ ಕೈದೊಳೆದು |
ಗುಣದಿತ್ತು ತಾಂಬೂಲವಾ |
ಅನುಭವದಾರತಿಯು ಪುಷ್ಪಾಂಜುಳಿ ನಮನ ಪ್ರದ
ಕ್ಷಿಣ ಗೀತ ನೃತ್ಯ ಮುದವಾ |
ಘನ ತೀರ್ಥಸು ಪ್ರಸಾದವ ಕೊಂಡು ಸೂರ್ಯಾಡಿ
ಅನುವಾಗಿ ಸಖ್ಯದನುವಾ |
ಮನುಜ ಜನ್ಮಕ ಬಂದು ಗುರು ಮಹಿಪತಿ ಸ್ವಾಮಿ |
ಘನದಯವ ಪಡಕೊಂಡು ಪಡೆಯೋ ಮುಕ್ತಿಯ ಸ್ಥಳವಾ ೭

೫೦೨
ಶ್ರೀ ಗುರುಯನ್ನ ಕಾಯೋ ಕರುಣಿಸಿ |
ಬ್ಯಾಗನೆ ಪಾದವ ದೋರಿಸಿ ನಯನಕ |
ಭವ ಬಲಿಯನು ಬಿಡಿಸಿ ಪ
ಶರಣೆಂದು ಸಕಲರು ಬಂದು ಪೋಗುವಾ |
ಆ ಮಹಾದ್ವಾರದಲಿ |
ಇರುತಿಹ ನಿನ್ನಯ ಭಕ್ತರ ಬಳಿಯಲಿ |
ಇಟ್ಟು ನೀ ಅಚಲದಲಿ ೧
ಸಂಬಳವಿನಿತಿನಿತವ ನೊಲ್ಲೆ ಕೇಳೈಯ್ಯಾ |
ಬೇಡುವೆ ನಾನೊಂದನು |
ಹಂಬಲಂದಣುವಂತೆ ನಾಮ ಭಾಂಡಾರವ |
ಮಾಡೆನ್ನಾಧೀನವನು ೨
ತೊಡಿಸಿ ಕರುಣ ಕವಚವ ಸರ್ವಾಂಗ |
ಅಭಯ ಮಕುಟವನು |
ಇಡು ಶಿರದಲಿ ಕೊಟ್ಟು ಬೆಳಗುವ ಕೀರ್ತನಿ |
ಶ್ರವಣ ಕುಂಡಲವನು ೩
ಕರದಲಿ ಧೃತಿ ಬೆತ್ತವನಿತ್ತು ಅನುದಿನಾ |
ಚಲ್ವಾದ ಸದ್ಭಕ್ತಿಯಾ |
ಮೆರೆವ ಮಂಟಪದೊಳು ನಿಲಿಸೆನ್ನ ದುರಿತದ |
ತಟ್ಟದಂದದಿ ಶಖಿಯಾ ೪
ಇಹ ಪರದಲಿ ಏಕೋ ದೇವನೆಂಬ ಮುದ್ರಿಯಾ |
ಭಾವದ ಬಲುಪಿಂದಾ
ಮಹಿಪತಿ ಸುತ ಪ್ರಭು ಕೊರಳಿಗೆ ಹಾಕೆನ್ನ |
ಸಲಹು ನೀ ಕೃಪೆಯಿಂದಾ೫

೫೦೩
ಶ್ರೀ ಗುರುವೇ ನೀ ತೋರಿಸೋ ದಯದಿಂದ ಲೆನಗೆ |
ಬೇಗದಿ ಬಂದೆನ್ನ ದೇವನೀಗ ಪ
ತೈಲ ಯಂತ್ರ ದೊಳಿಪ ಪಶುವಿನಂದದಿ ಜೀಯಾ |
ಹಲವು ಜನ್ಮವ ತಾಳಿದೆನಯ್ಯಾ ೧
ನಿನ್ನ ಸ್ಮರಣೆ ಮರೆದು ನಾನಾ ಉಪಾಸನೆ ವಿಡಿದು |
ಬನ್ನ ಬಟ್ಟೆನೋ ಯಚ್ಚರ ಜರಿದು೨
ದೂರ ಮಾಡಿ ಅಭಾವಾ ಭವ ಬಂಧನ ಹರಿವಾ |
ಸೂರೆಗೊಳಲಿಲ್ಲಾ ಭಕ್ತಿ ಸುಖವಾ೩
ಸರ್ವಾಪರಾಧವಾ ಕ್ಷಮಿಸಿ ಯನ್ನುದ್ಧಾರವಾ |
ಉರ್ವಿಲಿ ಮಾಡು ಪಿಡಿದು ಕರವಾ ೪
ಇಹಪರ ಸಹಕಾರ ಕರುಣಾಬ್ದಿ ಪಾರಾವಾರಾ |
ಮಹಿಪತಿ ಸುತ ಪ್ರಭು ಉದಾರಾ೫

೫೦೪
ಶ್ರೀ ಮತ್ಸು ಬೋಧ ಘನ ಗಂಭೀರ ಗುಣಸುಜನ |
ಸ್ತೋಮ ವಂದಿತ ಪಾದ ಯೋಗ ಸಾಂಖ್ಯಗಳಾದ
ಸೀಮೆಯಲಿ ನಲಿದಾಡಿ ತುರ್ಯದಲಿ ಮನೆಮಾಡಿ |
ಸಹಜಾವಸ್ಥೆ ಗೂಡಿ |
ಆ ಮಹಾ ಪದದಿಂದ ಪರಿಹರಿಸಿ ಭವಬಂಧ |
ಕಾಮಿತಾರ್ಥವ ನೀವ ದೀನರುದ್ಧರಿಸುವ |
ಶ್ರೀ ಮಹಿಪತಿ ಸ್ವಾಮಿ ನಂದನೋಡಿಯನು ನೇಮಿ
ಹರಿಕಥಾನಂದ ಪ್ರೇಮಿ |


ಶ್ರೀ ರಮಣಿಯರಸ ಕಂ ಜೋದ್ಬವಾರ್ಚಿತ ಪುಣ್ಯ |
ಚಾರುತರ ಯುಗ್ಮಪದ ರಂಜನಾಸುರ ಸಂ |
ಹಾರ ಸುರ ಜನ ಪಾಲ ಪರಮಾನಂದ ಸಾ |
ಕಾರನಲಿದುಪ್ಪವಡಿಸಾ ಹರಿಯೇ ಪ
ಹರಿವೇಗ ಮಂಮೀರ್ವ ಹರಿಗಳೇಳಂಗಳದಲಿ |
ಹರಿಯಾಗ್ರಜನನಿಂದ ಹರಿಪದದೊಳಗ ಜವದಿ
ಹರಿವುತಿಹ ಝಗ ಝಗಿಪ ಹರಿಮಯದ ರಥದೊಳಗ |
ಹರುಷಾದೊಳಡರ್ದು ಬಳಿಕಾ ||
ಹರಿದಿಕ್ಕಿ ಲಿಂದೊಗೆದು ಹರಿಜಗಳ ವಿಸ್ತರಿಸಿ |
ಹರಿಯುಮೊದಲಾದವರ ಹರಿಸಿ ತೇಜವ ಜಗಕ |
ಹರಿಸ ಕತ್ತಲೆಯ ಪರಿ ಹರಿಸಿ ಉದಿಸಿದಹರಿಯು ನರಹರಿಯೆ
ಉಪ್ಪವಡಿಸಾಹರಿಯೇ೧
ನಿಜಸು ಪ್ರಲ್ಹಾದ ಪವನಜ ಫಣಿಪ ಖಗರಾಜ |
ಭಜಿಪಧ್ರುವದ ಶಶಿರಾನುಜ ಭಿಷ್ಮಾ ತನ್ನ ಆ |
ತ್ಮ ಜರಿತ್ತ ರಿಕ್ಷಪತಿ ರಜನೀಶ ವಾನ್ನರ |
ಧ್ವಜ ವಿಧುರ ಅಂಬರೀಷಾ ||
ದ್ವಿಜ ಪುಂಡಲೀಕ ಪದ್ಮಜ ಮುಖ್ಯರಾದ ನಾ |
ಕಜರು ಶುಕ ಉದ್ಧವ ಬಲಿ ಜಯ ವಿಜಯರ ಕೂಡಿ |
ಸುಜನರೈ ತಂದ | ರಂಬುಜ ಪದಕ ನಮಿಸೆ ವಾ |
ರಿಜನಾಭ ಉಪ್ಪವಡಿಸಾ ಹರಿಯೇ ೨
ಪಾಕ ಶಾಸನ ಅಗ್ನಿ ಆಕಾಳ ನೈಋತಿರ |
ತ್ನಾಕರ ಪ್ರಭಂಜನಪಿ ನಾಕಿವರ ಕೌಬೇರ |
ನಾಕೆರಡು ದಿಕ್ಕಿನವರೇಕೋ ಭಾವದಲಿಂದ
ಅಕೇ ವಾಳದ ಸಂಗದಿ |
ನಾಕ ಪುರಗಜ ಅಜಮಹಾ ಕೋಣ ಮನುಜ ಮಕ |
ಹಾಕುರಂಗಂದಣವು ಗೋಕುಲೆಂದ್ರನು ಇಂತು |
ಬೇಕಾದ ವಾಹನ ವಿವೇಕದೇರಿ ಬಂದಿದೆ |
ಲೋಕೇಶ ಉಪ್ಪವಡಿಸಾ ಹರಿಯೇ೩
ಶ್ರೇಷ್ಠ ಕಶ್ಯಪ ಋಷಿ ವಶಿಷ್ಠ ಗಾರ್ಗೇಯ ತಪೋ |
ನಿಷ್ಠ ವಿಶ್ವಾಮಿತ್ರ ಸೃಷ್ಠಿಯೊಳ ಜಲದ ಸಂ |
ದಷ್ಟ ವರುಣನ ಗರ್ವ ಭಷ್ಟ ಮಾಡಿದಗಸ್ತಿ |
ಶಿಷ್ಟ ಭಾರದ್ವಾಜನು ||
ಅಷ್ಟಾದಶ ಧ್ವಯ ಬಾರಿ ಸೃಷ್ಟಿರ ಚನೆಯ ಕಂಡ |
ತುಷ್ಟ ಬಕದಾಲ್ಪ್ಯ ಉತ್ರ‍ಕಷ್ಟ ಸನಕಾದಿಗಳು |
ದೃಷಮಾನಿಸರಾಗಿ ಮುಟ್ಟಿಸ್ತುತಿ ಸುತಲಿದೇ |
ಕೃಷ್ಣ ನೊಲಿ ದುಪ್ಪವಡಿಸಾ ಹರಿಯೇ ೪
ವರ ವಾಮ ದೇವಾತ್ರಿ ಪರಮಗಾಲ ವನುಸೌ |
ಭರಿಯ ಕೌಡಿಣ್ಯ ಸುಖ ಭರಿತ ಕೌಸಿರ ಮತಿ |
ಪರಿಪೂರ್ಣ ಜಯಾಮುನೀರ್ವರು ಭರತರುಸುಗುಣ
ಶರಧಿ ವೈಶಂ ಪಾಯನಾ||
ಸುರಪುರೋಹಿತ ಮಹಾ ಸುರರ ವಂಶಾವಳಿಯು |
ಗುರುಭದ್ರ ಪೆಸರಿನಾ ತರಣಿಜ ಬುಧಾದಿಗಳ |
ಕರದೊಳು ಸುಫಲವಿರಿಸಿ ಹರುಷಾದಲಿ ನಿಂದಿದೆ ||
ಪರಬೊಮ್ಮ ಉಪ್ಪ ವಡಿಸಾ ಹರಿಯೇ ೫
ಡಮರುಧರ ಜಡೆಯೊಳಗ ಸಮುಲ್ಲಾಸದಲಿ ಮೆರೆವ
ಅಮರ ನದಿ ಪಾಪಹರ ಸಮಕೃಷ್ಣ ವೇಣಿ ಸು |
ವಿಮಲ ಗೋದಾವರಿ ಕುಮುದ್ವತಿ ಕಾವೇರಿ |
ಶ್ರಮಹಾರಿ ತುಂಗ ಭದ್ರಿ ||
ಯಮುನಿ ಫಲ್ಗುಣಿ ಮಹೋತ್ತಮ ಸರಸ್ವತಿ-ಕಪಿಲ |
ನರ್ಮದಿ ಮೊಲಾಗಿ ಅಮಲಗ್ರೋದ ಕವ |
ಕ್ರಮದಿಂ ಕೊಂಡು ನದಿ ಚಮು ಬಂದಿದೇ ಪೊರಗ |
ಕಮಲಾಕ್ಷ ಉಪ್ಪವಡಿಸಾ ಹರಿಯೇ೬
ದಾರುಣೀ ಚರರಾದಾ ಚಾರುಗೋ ಬ್ರಾಹ್ಮಣರು |
ಸಂರಕ್ಷಣೆಯ ಮಾಳ್ವ ಧೀರಯ ಯಾತಿ |
ಮೇರು ಸಮ ಹರಿಶ್ಚಂದ್ರ ವೈರಾಟ ಪತಿಜನಕ |
ಆರಾಯ ನಳ ನಹುಷನು ||
ಶೂರ ಹಂಸಧ್ವಜನು ಸಾರಿ ವಿಷ್ಟಕ್ಸೇನ |
ವೀರ ಪಾಂಚಾಲನ – ಕ್ರೂರ ಚಂದ್ರಹಾಸ ಮ |
ಯೂರ ಧ್ವಜ ಪ್ರಮುಖರಾರತದಿ ಬಂದರಿದೆ |
ಕಾರುಣನೆ ಉಪ್ಪಾವಡಿಸಾ ಹರಿಯೇ ೭
ವಾರಿಯೋಳ್ ನಡೆವಹತೇರಗಜ ಶೃಂಗರಿಸಿ |
ಏರಿಬಂದಿಳಿದು ಮಹಾ ವೀರ ಭಟರೋಗ್ಗೀನೊಳು |
ಬಾರಿ ಬಾರಿಗೆ ನಿಮ್ಮ ಚೀರುತ ಬಿರುದಂಗಳನು
ಭೂರಿಜನ ಸಚಿದಣಿಸುತಾ ||
ಪಾರವಿಲ್ಲದ ಪಟಹ ಭೇರಿ ನಿಸ್ಸಾಳತಹ |
ಳಾರವರಿದು ಊದುತಲಿ ಈ ರೀತಿ ನೃಪರದಳ |
ಚಾರುವಾಲಗವ ಮನವಾರಗುಡುತಿದೆ ಪರಮ
ಶೌರಿ ವಲಿದು ಪ್ಪವಡಿಸಾಹರಿಯೇ ೮
ಕೇಣವನು ಗೊಳ್ಳದಿಹ ಜಾಣ ಕಲೆಯಿಂದ ಗೀ |
ರ್ವಾಣ ಸ್ತ್ರೀಯರು ನೃತ್ಯ ಮಾಣುತಲಿ ಬರೆಕರದಿ |
ವೀಣೆಯನು ತಾಂ ಪಿಡಿದು ವಾಣಿ ತುಂಬರ ಸುಪ್ರ
ವೀಣನಾರದ ಗಣಪನು ||
ಶ್ರೇಣಿಯಿಂ ತೊಡಗೂಡಿ ತ್ರಾಣದಿಂದಲಿ ನಾಮ |
ವಾಣಿಯಲಿ ವಚಿಸುತಿದೆ ಕಾಣಲ್ಕೆ ನಿಂದಿದೆ |
ಏಣಾಂಕನುಜೆ ಮುಗಿದು ಪಾಣಿಯನು ಗುರು ಮಹಿಪತಿ
ಪ್ರಾಣನೊಲಿದುಪ್ಪವಡಿ ಸಾ ಹರಿಯೇ ೯

೩೨೬
ಶ್ರೀ ರಾಮನಾಮ ಸ್ಮರಿಸೀಕ್ಷಕಾರಿ
ಘೋರಾವತಾಪಗಳದಾಗಳದಾ ಪುರಾರಿ
ಆರಾದರೇನು ಜಪಿಸೀ ಜಪಸೀದ ಯೋಗಿ
ಸಾರುವೆ ನೊಡಿ ಸುಖವಾ ಸುಖವನು ನೀಗಿ೧
ಸೋಕಲು ರಾಮಪದವಾ ಪದವನು ನೀಗಿ
ತಾಕನ್ಯಳಾದಳರಿಯಾ ಅರಿಯಾದ ಹೋಗಿ
ನೀ ಕೇಳಿ ಕೇಳಿ ಮರವೇ ಮರವೇನೋ ನೀನು
ಲೋಕೇಶಗ್ಹೋಗುಶರಣಾ ಶರಣಾಗುವನು ೨
ಏನಿತ್ತಳಂದು ಶಬರಿ ಬರಿಯಹಣ್ಣಾ
ತಾನುಂಡುಕೊಟ್ಟು ಭವವಾಭವವಾರಿಸಣ್ಣಾ
ಅನಾಥಬಂದು ಮರಿಯಾಮರಿಯಾದಹೋಗಿ
ಸ್ವಾನಂದಸಾಖ್ಯಗರೆವಾಗರೆವಾಗೊವಲ್ಲಿ ೩
ಇಂದಿರೆ ಸುದ್ದಿ ಸುಧಿಯಾ ಸುಧಿಯಾದಲಿಂದಾ
ತಂದಾರೆಪದ್ಮಭವನಾ ಭವಸಾದರಿಂದಾ
ಆದನೇವೆ ಕೊಟ್ಟುಕರದೀ ಕರದೀಶನಾಥಾ
ಮುಂದಿನಭಾವ್ಯ ಹನುಮಾ ಹನುಮಾವಿಧಾತಾ೪
ರಾಮೆಂದುಕೂಗಿ ಗಿಳಿಯಾ ಗಿಳಿಯಾಗಣಿಕೆ
ನೇಮದಲಿ ಮುಗುತಿಯಾ ಗತಿಯಾಬೇಕೆ
ಪ್ರೇಮದಿ ಮಾನವರುತಾ ವರತಾತನೆಂದಾ
ಕಾಮಾರ್ಥನೀವ ಚಲುವಾ ಚಲುವಾ ಮುಕುಂದಾ೫
ಸುಗ್ರೀವ ಬಂದು ಅಡಿಯಾ ಅಡಿಯಾಗಲೆಂದು
ಶೀಘ್ರದಿಶೀಳಿತರುವಾ ತರುವಾಯಲಿಂದು
ಅಗ್ರಜನೊತ್ತಿ ಅವನೀ ಅವನೀಯ ರಾಮಾ
ನುಗ್ರಹ ಮಾಡದರಿಯಾದರಿಯಾಗು ವಾತ್ಮಾ೬
ಶುಭವಾಕ್ಯ ದೂರಿದನು ಜಾಣನು ಜಾಣನಾಗಿ
ವಿಭೀಷಣಬಂದ ಕಣವೀಕ್ಷಣದಲಿ ಸಾಗಿ
ವಿಭುಕೊಟ್ಟಲಂ ಕಾಶ್ರಯವಾಶ್ರಯವಾಗಿ ರಾಮಾ
ಅಭಿವರ್ಣಿಸುದುರಸನಾ ರಸನದಿ ನೇಮಾ೭
ಶೇವೆಯನು ಮಾಡಿ ತಣಲೀತಣಲೀಯ ನೋಡಿ
ತಾವರಿ ಕೈಯ್ಯಳೆಳದಾಲೆಳದಾದಯ ಮಾಡಿ
ಭಾವಾರ್ಥಿಯಾದ ನರನಾ ನರನಾಥವೇಷಾ
ಕಾವನುಲೋಕಜನ ಕಾಜನಕಾತ್ಮಜೇಶಾ ೮
ರಾಮಾಷ್ಟಕಾದ ಕವಿತಾ ಕವಿತಾನೆ ಆಗೀ
ಶ್ರೀ ಮಹಿಪತಿ ವರದಾ ವರದಾತ ಯೋಗಿ
ನಾಮಕ್ಕ ಕುಂದ ಗುರುತಾಗುರುತಾತ ಮಾಡಿ
ನೇಮದಿ ಕಾವಕರುಣೀಕರುಣೀಯ ನೋಡಿ೯