Categories
ರಚನೆಗಳು

ಕಾಖಂಡಕಿ ಶ್ರೀಕೃಷ್ಣದಾಸರು

೩೨೭
ಶ್ರೀ ಲತಾಂಗಿಯ ವಲ್ಲಭಾ|ಎನ್ನ|
ಪಾಲಿಸೋ ಭಕ್ತರ ಸುಲಭಾ ಪ
ಇಂದೀವರದಳ ನಯನಾ ಮು|
ಕುಂದ ಉರಗರಾಜ ಶಯನಾ|
ಮಂದರೋದ್ಧರ ಪಾಪ ಶಮನಾ|ಗೋ|
ವಿಂದ ಖಗೇಶ್ವರ ಗಮನಾ ೧
ಶರಣ ಜನರಾಭರಣಾ|ಮುರ|
ಹರ ಜಗದೀಶನೇ ಕರುಣಾ|
ಪರಮಾನಂದ ಜೀತ-ದೂಷಣಾ|ಮ|
ಕರಕುಂಡಲ ಸುಭೂಷಣಾ ೨
ಸರಸಿಜ ಭವನುತ ಸ್ವಾಮಿನ್ನಾ|ಶ್ರೀ|
ಹರಿ ಪೂರಿತ ಮನೋಕಾಮನ|
ಸುರವರದ ಶರಧಿ ಕೀಲನಾ|ಗುರು|
ವರ ಮಹಿಪತಿ ಸುತ ಪಾಲನಾ ೩

೩೨೯
ಶ್ರೀ ವಧುರಮಣನ ಚರಿತಾಮೃತವನು ಸೇವಿಸಬಾರದೆ ಜಿವ್ಹೆ|
ಆವಾಗು ವಿಷಯಾಸಕ್ತಿಲಿ ಬಾಳುವ ದಾವರಸಜ್ಞದ ಗುಣವೇ ಪ
ಆರತಿಯಿಂದಲಿ ಷಡರಸದನ್ನದ ಸಾರಾಯಕ ಮರುಳಾದೆ ನೀ|
ನರೆರಧರಕ್ಕೊಲಿದೇ ಸುಧಾರಸವೆಂದು ಬಗೆದೇ|
ಧಾರಣಿ ಕಳ್ಳಿಯ ಹಾಲೆಂದೆನಿಸಲು ಗೋರಸದ್ಹಂಬಲ ಮರೆದೆ ೧
ಜ್ಞಾನವ ಸಾಧಿಸಿ ಬಹು ಸಾಯಾಸದಿ ನಾನು ಶಾಸ್ತ್ರವ ನೋಡಿ|
ಪ್ರವೀಣತೆಯಲಿ ಮನ ಮಾಡಿ ಧನ
ಮಾನದ ಕಾಂಕ್ಷಿಯ ಕೂಡಿ|
ಅನೃತ್ಯಾಂಗನೆ ಪರಿ ಕುಣಿದಾಡುವ ಹೀನ ಮನುಜರಾ ಪಾಡಿ೨
ಮರೆದರೆದಾದರೆ ವಮ್ಮಿಗೆ ಭಾವದಿ
ಸ್ಮರಿಸಲು ಶ್ರೀಹರಿಯಾ ಲೋಹ|
ಪರಸವ ಮುಟ್ಟಿದ ಪರಿಯಾ ಧನ್ಯರು ತಮನೆನಿಸುವನರಿಯಾ|
ಗುರುವ್ಕ ಮಹಿತಪಿ ನಂದನು ಸಾರಿದ ಮೊರೆ ಹೋಗು|
ಮೂಜಗ ಧೊರಿಯಾ ೩

೪೦೦
ಶ್ರೀಮತ್ಕಾಂಚನ ಕೋಟಿರನ್ನತನಯಾ |
ಕ್ಷೀರಾಂಬುನಿಧಿ ಮಧ್ಯದಿ |
ನೇಮದಿಂ ನಿಜಧಾಮದಲ್ಲಿ ರಮೆಯಾ |
ಒಡಗೂಡಿ ಸುರಸಿದ್ಧದೀ |
ಸಾಮಗಾಯನ ಪ್ರಿಯನಾಗಿನಿರುತಾ |
ಪಾಲಿಪ ಲೋಕಂಗಳಂ |
ಶ್ರೀ ಮಾಧವ ದಯಾನಿಧೇ ವಧುವರಾ |
ಕುರ್ಯಾತ್ಸದಾ ಮಂಗಳಂ | ೧
ಭಾನುಕೋಟಿಯ ತೇಜದಿಂ ಬೆಳಗುವಾ |
ಮುಕಟವು ಮಸ್ತಕದಿ |
ಶ್ರೀ ನೀಲಾಳಕ ಭಾಲಮಧ್ಯಮೆರೆವಾ |
ಕೇಶರ ಪೌಂಡ್ರಕದಿ |
ಸೂನಾಸಿಕದಿ ವಾರಜಾಕ್ಷಅಧರಿಂ |
ದೊಪ್ಪುವ ಕರ್ಣಂಗಳಂ |
ತಾನೀಕುಂಡಲ ಭೂಷಣಾ ವಧುವರಾ |
ಕುರ್ಯಾತ್ಸದಾ ಮಂಗಳಂ ೨
ಶ್ರೀ ಲಕ್ಷ್ಮೀ ನಿಜಶಾರದಾಗಿರಿಸುತೇ |
ಭಾರತೀ – ಶಚಿ- ಭಾಮಿನೀ |
ಕಾಲಿಂದೀವರ ನರ್ಮದಾ ಸರಸ್ವತೀ |
ಗಂಗಾ ತ್ರಿಪಥಗಾಮಿನೀ |
ಪಾಲಿಸುವ ಗೋದಾವರೀ ಭೀಮರಥೀ |
ಶ್ರೀ ಕೃಷ್ಣ ವೇಣಿಂಗಳಂ |
ಮೇಲೆ ಕಾವೇರಿತುಂಗೆ ತಾವಧುವರಾ |
ಕುರ್ಯಾತ್ಸದಾ ಮಂಗಳಂ ೩
ವಾರಿಜಾಸನ ವಾಯು ಶಂಕರಗುರು |
ತ್ವಂಹೇಂದ್ರ ವಸಿಷ್ಠನು |
ಭಾರದ್ವಾಜ ಪರಾಶರಾತ್ರಿ ಭೃಗು ಕ-
ಶ್ಯಪ ಕೌಶಿಕ ಶ್ರೇಷ್ಠನು |
ಕಾರುಣೀ ಜಮದಗ್ನಿ ರಾಮ ಮರಿಚೀ |
ವ್ಯಾಸಾದಿ ಋಷಿ ಪುಂಗಳಂ |
ನಾರದಾದಿ ಮುನೀಂದ್ರರೀ ವಧುವರಾ |
ಕುರ್ಯಾತ್ಸದಾ ಮಂಗಳಂ ೪
ಇಂದ್ರೋವಹ್ನಿ ಪಿತೃಪತಿ – ನಿಋಋತಿ |
ಮಕರೇಶ ಪ್ರಭಂಜನಾ |
ಸಾಂದ್ರೈಶ್ವರ್ಯ ಕುಬೇರ ಈಶದಿಕ್ಪಾ
ಲಾದಿತ್ಯಶಶಿರಂಜನಾ |
ಚಂದ್ರಾತ್ಮಜನುಭೌಮದೇವಗುರುತಾ |
ಕವಿಮಂದ ಗ್ರಹಂಗಳಂ |
ಸಾಂದ್ರಾಗೀಹ ಸಮಸ್ತಗಿರೀ ವಧುವರಾ |
ಕುರ್ಯಾತ್ಸದಾ ಮಂಗಳಂ ೫
ಶ್ರೀ ಮತ್ಸ್ಯಾಕೃತಿ ಕೂರ್ಮನಾಗಿ ವರಹಾ |
ನರಸಿಂಹನೆಂದೆ ನಿಸಿದಾ |
ವಾಮನಾಭೃಗುವರ್ಯರಾಮರಘುಪಾ |
ಯದುವಂಶದಲಿ ಜನಿಸಿದಾ |
ತಾ ಮತ್ತೇ ನಿಜ ಬೌದ್ಧಕಲ್ಕಿ ಎನಿಸೀ |
ತಾಳ್ದಾವತಾರಂಗಳಂ |
ಶ್ರೀ ಮನೋಹರ ದೇವಕೀ ವಧುವರಾ |
ಕುರ್ಯಾತ್ಸದಾ ಮಂಗಳಂ ೬
ಕಾಶೀ ಕಂಚಿ ಅವಂತಿಕಾ ವರಪುರೀ |
ದ್ವಾರಾವತೀ ಮಥುರಾ |
ದೋಷನಾಶಿಕ ಪುಣ್ಯಕ್ಷೇತ್ರ ಬದರೀ |
ಶೇಷಾದ್ರಿವರ ಸೇತುಬಧ ತುಹಿನಾ |
ರಜತಾದ್ರಿ ಸೈಲಂಗಳಂ |
ಈ ಸಪ್ತಾಂಬುಧೀ ಸರ್ವದೀ ವಧುವರಾ |
ಕುರ್ಯಾತ್ಸದಾ ಮಂಗಳಂ ೭
ದಶರಥಾತ್ಮಜನಾದ ರಾಮಜಗದೀ |
ಜನಕಾತ್ಮಜಾ ಸೀತೆಯಾ |
ಕುಶಲದೀ ನರಲೀಲೆಯಿಂದ ಮೆರೆವಾ
ವೈಭವ ಸಂಗಸ್ತಿಯಾ
ಉಸರೀದಾ ಗುರುಮಹಿಪತಿಸುತ ಕ-
ನ್ನಡ ಭಾಡೆ ಶ್ಲೋಕಂಗಳಂ |
ವಸುಧೆಯಲಿ ಸ್ಮರಿಸುವವರಿಂಗೆ ಕೊಡುವಾ |
ರಘುನಾಥ ಜಯಮಂಗಳಂ ೮

೭೫೬
ಶ್ರೀಮಹಾಲಕ್ಷಮಿತಾಯೇ | ಶ್ರೀ ಮಹಾಮಾಯೆ |
ಹೇಮಾಯಾ ಕರುಣಾಬ್ದಿಯೇ | ಕಾಮಿತ ಫಲನೀಯೇ |
ಸಾಮಜಗಮನಿಯೇ | ಹೇಮಾಯಾ ಕೋಟಿ ಸಮಕಾಯೇ |
ಶುಭಚರಿಯ | ಬಹುಪರಿಯೇ | ಹರಿಪ್ರೀಯೇ | ಅರಿಯೇ ಪ
ಶರಧಿಸುತವನೇ | ಸರಸಿಜಸದನೆ |
ಸುರಚಿರದವರಾನೆ | ಕರಿಸರ್ಪವೇಣೆ |
ದುರಿತಾದೌಘಪಹರಣೆ | ಕರುಣದಾಗಾರೆ ಶರಣೆ |
ನೆರೆನಿನ್ನನಂಬಿದೆನೆ ಮಾತೆ | ಅದ್ಭುತೆ |
ರವಿನಮಿತೆ | ಪ್ರಖ್ಯಾತೆ | ದಾತೆ ೧
ಹೊಳೆವ ಸೌಂದರ್ಯ ಸಲಹೆ | ಸಲೆಕುಲದೈವೆ |
ಚಲುವ ಸುಜನ ಸೇವೆ | ಮಲಿನರ ಭಾವೆ |
ಹಲವು ಮಾತೇನು ಫಲವೇ | ಬಲುನಾಹಂಬಲಿಸುವೆ |
ಒಲಿದು ಕರುಣಿಸು ಭಾಗ್ಯವಂತೆ | ಗುಣವಂತೆ |
ಬಹುಶಾಂತೆ | ದಯವಂತೆ ಕಾಂತೆ ೨
ಕರವೀರ ಪುರಧೀಶೆ | ಶರಣರುಲ್ಹಾಸೆ |
ಸುರಮುನಿಜನತೋಷೆ | ಶಿರಸ್ವಪ್ರಕಾಶೆ |
ಪರತರ ಸುವಿಲಾಸೆ | ಗುರುಕೃಷ್ಣಸುತನೀಶೆ |
ವರಕೊಲ್ಹಾಸುರನ ವಿನಾಸ | ಜಗದೀಶೆ | ಮೃದುಭಾಷೆ |
ಅವಿನಾಶೆ | ಈಶೆ ೩
ಅಂಕಿತ-ಗುರುಕೃಷ್ಣಸುತ

೩೨೮
ಶ್ರೀವಧು ನಯನಾಬ್ಜ ವಿಲೋಚನಾ
ದಾವನಾಗಿಹ ಪಂಕಜಲೋಚನಾ
ದೇವನಂಘ್ರಿಯ ಚರಿತದ ಸೂಚನಾ
ಶ್ರಾವಿಸಲ್ಕಾಹುದು ಪಾತಕ ಮೋಚನಾ ೧
ಮತಿ ಮಂತಾಂಭುನಿಧಿ ದ್ವಿಜರಾಜ
ದಿತಿ ಸುತಾಹಿ ಕುಲದ್ವಿಜರಾಜಾ
ಸುತ ಮುನಿಹೃದಯಾಬ್ಜದಿನೇಶಾ
ಸತತ ದುಷ್ರ‍ಕತ ತರುರದನೇಶಾ೨
ಆವನೀಭುವ ನತ್ರಯವ ಪಾಲಕಾ
ದೇವಕೀತಪದಲಾದನು ಬಾಲಕಾ
ದೇವನಾಡಿದ ಮನಿಲಿಯ ಶೋದಾ
ಭಾವಿಸಲ್ಕವಗ ಗತಿ ಶ್ರೀಯಶೋದಾ೩
ಪರಮ ಸುಂದರ ನಂದ ಕುಮಾರಾ
ಅರಿತು ಬಂದನುಗರ್ಭದಿ ಮಾರಾ
ಧರಿಯೊಳಾವನ ಮನಿ ಕಾಪುರದ್ವಾಶಕಾ
ಸ್ಮರಸಲೀ ಜಗದ ಪಾವಿದಾರಕಾ೪
ಭಹುತಿ ಮಾಡುನೀ ಮಾನವ ತಂದಿಯಾ
ಸುಗಮದಿಂದರಿದ ಬಂಧನ ತಂದಿಯಾ
ಮಗನ ಕಾಯಿದಾ ಶಿಕ್ಷಿಸಿ ತಂದಿಯಾ
ಮಗನ ಶಿಕ್ಷಿಸಿ ಕಾಯಿದಾತಂದಿಯಾ೫
ವನಧಿ ವಂಧಿಸಿ ತೇಲಿಸಿ ಪರ್ವತಾ
ಜನಪದಾಟಿಸಿ ವಾನರ ಪರ್ವತಾ
ಘನಮಹಿಮನು ಜಾನಕಿ ಕಾಂತಾ
ನೆನಹುತಿಹನು ಸಹಶಿವಕಾಂತಾ ೬
ಸೇವಿಗಂಡೊಲಿದು ರಾಘವ ತಮ್ಮನಾ
ರೇವತೀರಮಣಗೆಂಬನುತಮ್ಮನಾ
ಜೀವಗಾಯಿದಾ ಭೀಮನತಮ್ಮನಾ
ಪಾವನಂಘ್ರಿಯ ನೆನಿಸತತಂಮನಾ೭
ಕುದಿಪುತಿರ್ಪುದು ಮಡು ಪವನಾಶನಾ
ವಿದಿತೆ ಘಾಳಿಗೆ ಜೀವನ ನಾಶನಾ
ಅದರೊಳಗಡಲು ತಾಜಗ ಜೀವನಾ
ಸುಧಿಯ ರೂಪವ ಆಯಿತು ಜೀವನಾ೮
ಜಲದಲೀ ನೆನಿಯಲು ಮದವಾರಣಾ
ವಲಿದು ಮಾಡಿದ ಬಂಧ ನಿವಾರಣಾ
ಸತಿಸ್ವರೂಪದ ನೀಡಿದ ಮುಕ್ತಿಯಾ
ನಲಿದು ಮಾಡಲಿ ಶ್ರೀ ಹರಿ ಭಕ್ತಿಯಾ೯
ದಾವ ತೇಲಿಸಿದ ನಚ್ಚಿಲಿ ಗೋಕುಲಾ
ದೇವ ಕಾವನು ನೋಡಿರಿ ಗೋಕುಲಾ
ಜೀವಜಾಲದ ಬೇಡಿ ಪ ಗೋಕುಲಾ
ತಾವಿಹರಿಸುತಿಹನು ಗೋಕುಲಾ ೧೦
ಸ್ಮರಿಸಿ ಗೋಕುಲಲ್ಯಾಕಳ ಕಾವನಾ
ಧರೆಯೊಳೊಪ್ಪುವ ಕಾಟಿಯ ಕಾವಳಾ
ಚರಣ ಗೋಚರ ಮುನಿಮನ ಕಾವನಾ
ಶರಣ ಹೋಗದು ಸಕಲಿ ಕಾವನಾ೧೧
ಅವನಂಘಿಯ ಸೇರೆ ವನೌಕಸಾ
ಜೀವರಾದರು ಸಾಮದಿವೌಕಸಾ
ಭಾವಿಸಲ್ಕಾರಿಯದಾದಳು ಶ್ರೀರಮಾ
ದೇವನಾಸ್ತುತಿಸಿ ಬಣ್ಣಿಪ ರಾರಮಾ೧೨
ಮುನಿ ಬಂದನೆಂದು ಸ್ಮರಿಸಲು ಕೃಷ್ಣಾ
ಮನಸ್ನೇ ಹದಿಂದೋಡಿ ಬಂದನು ಕೃಷ್ಣ
ಅನೇಕ ಪದಾರ್ಥದಿಂ ದುಣಿಸುತಾ
ಘನಾನಂದ ನೀಡಿದ ಪಾರ್ಥನ ಸೂತಾ೧೩
ಸುರಗಂಗಿಯ ಪಡದ ದಾವನ ಚರಣ
ಅರಿಮರ್ದನಾಗಿಹ ದಾಪಾಣಿ ಚರಣಾ
ಸರಿಜಾರ ನಖದಾ ತೇಜಕ್ಕ ತರಣೀ
ಪದದೈವವೆಂದಳು ಇಂದಿರೆ ತರುಣಿ೧೪
ಚರಣಧ್ಯಾಯಿಪದಾವನು ಮಾಧವಾ
ಸುರನರೋರಗ ಪೂಜಿ ಮಾಧವಾ
ಧರಿಯೊಳಾದನು ಬಾಲಕ ನಂದನಾ
ಚರಿತ ಪಾಡಿದ ಮಹಿಪತಿ ನಂದನಾ೧೫

೩೪೫
ಸಂಗಮಾಡೆಲೋ ಶ್ರೀಹರಿ ದಾಸರಾ
ಹಿಂಗಿ ಹೋಹುದು ತಾಭವದಾಸರಾ
ಮಂಗಳ ಮಂಗಳಾತ್ಮಕ ಕೈಗೂಡಿ ಬಾಹನು
ಅಂಗಜ ಜನಕ ಸಚತುರ್ಬಾಹನು ೧
ಅವರ ವಾಕ್ಯ ಸುಧಾರಸ ಪಾನವಾ
ಶ್ರವಣದಿಂದಲಿ ಮಾಡೆಲೊ ಪಾನವಾ
ಭವದ ಜನ್ಮ ಜರಾಲಯ ಜಾರುವೀ
ತವಕದಿಂದ ಚಿತ್ಸುಖ ಸೇರುವಿ ೨
ಹಲವು ಸಾಧನಭರಿಗೆ ಬೀಳದೇ
ಕಲಿತ ವಿದ್ಯತ್ವ ಗರ್ವವ ತಾಳದೇ
ಬಲಿದು ಭಕ್ತಿಯ ಹೋಗದೆ ಸಿಂತರಾ
ನೆಲಿಯ ಕೇಳೆಲೋಭಾವದಿ ಸಂತರಾ ೩
ಮರಹು ಕತ್ತಲಿವೆಂಬುದು ಹಾರಿಸೀ
ಅರಿಗಳಾರರೆ ಸಂಕಟ ಹಾರಿಸೀ
ಅರಹು ಭಾಸ್ಕರ ತೋರುವ ಬೋಧಿಸಿ
ಹೊರವ ಸಜ್ಜನ ಸಂಗವ ಸಾಧಿಸಿ ೪
ನೆಲಿಯ ಹೊಂದುವ ಪರಿಯನಿಲ್ಲದೇ
ಸುಲಭಸಾಧನ ತೋರಿಪರಲ್ಲದೇ
ಬಳಲುವಾಬಾಹಳ ಸಾಪೇಳರು
ಬಲಿದು ಪಾಯವ ಸಂತರ ಕೇಳರು ೫
ಹರಿಕಥಾ ಮೃತಸಾರಸ ಪೇಳುತಾ
ದುರಿತ ದುಷ್ರ‍ಕತ ತರುಗಳ ಶೀಳುತಾ
ಪರಮ ಭಕ್ತಿಯ ಭಾಗ್ಯವ ಕುಡುವರು
ಅರಿತು ಸಂತರ ಸಂಗವ ಬಿಡುವರು ೬
ಏಳು ಭೂಮಿಕಿ ಮಾರ್ಗವ ತೋರಿಸಿ
ಮಾಲ ಚಿತ್ಸುಖ ಮಂದಿರ ಸೇರಿಸಿ
ಕಾಲಕರ್ಮದ ಕೋಟಲೆ ವಾರಿಸೀ
ಪಾಲಿಸುವರು ಭವದಿಂತಾರಿಸಿ ೭
ಸಂಗದಿಂ ಚಂದನಾಹದು ಪಾಮರಾ
ಜಂಗಮೊತ್ತಮನಾಗನೇಪಾಮರಾ
ಅಂಗದಿಂಮಾಡು ಸಂತರ ವಂದನಾ
ಇಂಗಿಥೇಳಿದ ಮಹಿಪತಿ ನಂದನಾ ೮

೭೦೧
ಸಂತ ಚರಣಕೆ ಭಾವದಿ ಮಣಿಯೋ |
ಅಂತ ರಂಗದಿ ಬಹಯದುಕುಲಮಣಿಯೋ ಪ
ಬಿಡದೇ ಮಾಡಲು ಅವರನುಸರಣಿಯೋ |
ಕೊಡುವನು ನಾಮದಿ ಕನಿಭರಣಿಯೋ ೧
ವರವರದ್ಹೇಳಲು ಬೋಧಕ ಹಣಿಯೋ |
ದೊರೆವುದು ಸುಜ್ಞಾನತನದ ಖಣಿಯೋ ೨
ಗುರುಮಹಿಪತಿ ಪ್ರಭು ವಶವರ್ತಣಿಯೋ |
ಕರುಣಿಸಿ ಪುನರಪಿ ಭವದಲ್ಲಿ ದಣಿಯೋ ೩

೭೦೨
ಸಂತಚರಿಯ ಗೂಢಾ | ತಿಳಿಯದು |
ಭ್ರಾಂತರಿಗಿದು ನೋಡಾ ಪ
ವೇಷವ ಸಂತರು ದೋರುವದಿಲ್ಲಾ |
ಆಶಾಪಾಶಕ ಶಿಲಕುವರಲ್ಲಾ ೧
ಹೊರಗಾಚರಿಯು ಲೋಕದ ಸರಿಯಾ |
ಇರುತಿಹ ಏನೇನರಿಯದ ಪರಿಯಾ ೨
ವಿಷಯ ರೂಪವ ಬ್ರಹ್ಮ ಭಾವನೆ ಬಗೆವಾ |
ಬಿಸಿಲು ನೀರಿನ ಪರಿ ಕೇಡಿಹ ಜಗವಾ ೩
ತೋರನು ವಾಗ್ವಿಸ್ತಾರ ಬಹಳಾ |
ಮೀರಿನೆರಿಹಿಕೊಳ್ಳ ಡಿಂಗರ ಮೇಳಾ ೪
ದಾವ ಮಾನವರೆಂದು ಸಂತರ ತಿಳಿವಾ |
ರವರವ ನರಕದ ಕುಂಡದಲಿಳಿವಾ ೫
ಕೋಟ್ಯಾನುಕೋಟಿಗೊಬ್ಬಿಹನು ಸಾಧು |
ಸಾಟಿಲ್ಲವರಿಗೆ ಧರಿಯೊಳಗಿಂದು ೬
ಮಹಿಪತಿನಂದನ ಪ್ರಭುವಿನ ದಯವಿನಾ |
ಮಹಿಮೆಯ ತಿಳಿಯದು ಹೇಳಲಿನ್ನೇನಾ ೭

೭೦೩
ಸಂತರ ನೆರೆಯಲಿರುವದು ಇಳೆಯೊಳು ಬಲುಪುಣ್ಯ ಪ
ಚಂದನ ಗಾಳಿಯಲನ್ಯಗಿಡ ಬೆಲೆಗಾಣುವಂತೆ |
ಕುಂದದೆ ಪಾಮರನಾಗುವನು ಮಾನ್ಯಾ ೧
ಶ್ರವಣ ಮಾಡಲು ಹರಿಕಥೆ ನಿಜಬೋಧವನು |
ಭವದುರಿತ ಸೇರುವದು ಅರಣ್ಯಾ ೨
ತಂದೆ ಮಹಿಪತಿಸುತ ಪ್ರಭುವಿನ ಖೂನಾ |
ಚಂದದಲಾಗುವದೇ ತಾರ್ಕಣ್ಯಾ ೩

೭೦೪
ಸಂತರ ನೋಡಿರೈ ಅನಂತನ ಪಾಡಿರೈ |
ತಂತುವಿಡಿದು ನಿಶ್ಚಂತದಿ ಮುಕ್ತಿಯ |
ಪಡೆದವರಾ ನಿಂದವರಾ ಪ
ದುರಿತಘನೂಕುವ ಸಂತರ ಚರಣ |
ದ್ವಿತಿಯೋ ಭಾಗೀರಥಿಯೋ |
ಹರಿಪ್ರಸಾದವಕೊಂಬುವ ಸಂತರ |
ಉದರೋ ಶ್ರೀ ಕೇದಾರೋ |
ಸರಸಧ್ಯಾತ್ಮದ ವಿದ್ಯಮ ತುಂಬಿಹ |
ಹೃದಯೋ ವೇದದ್ಭುಧವೋ |
ಹರಿನಾಮಾವಳಿ ಜಪಿಸುವ ಶರಣರ |
ಕಂಠೋ ಭೂವೈಕುಂಠೋ ಮ ೧
ಪರಗತಿಗಭಯವ ದೋರುವ ಸಂತರ |
ಕರವೋ ಕಾಶಿಪುರವೋ |
ಸಿರಿಸುಖಸಕಲವ ನೀಡುವ ಸುಕಳೇ |
ವರವೋ ರಾಮೇಶ್ವರವೋ |
ಹರಿಚರಿತಾಳಾಪಗಳ ಕೇಳುವ |
ಕಿವಿಯೋ ಶಾಸ್ತ್ರದ ಗವಿಯೋ |
ಪರಿಪರಿತತ್ವದ ವಚನವ ಬೀರುವ |
ವದನೋ ಅಮೃತ ಸದನೋ ೨
ಹರಿಪದಧ್ಯಾಯಿಸಿ ನೋಡುವ ಸಂತರ |
ನಯನೋ ಸ್ವಸುಖದಯನೋ |
ಹರಿನಿರ್ಮಾಲ್ಯವನಾಘ್ರಾಣಿಪನಾ | ಶಿಕವೋ ಆವಂತಿಕವೋ |
ಧರೆಯೊಳು ಮತ್ತೊಂದನ್ಯಕ ಯರಗದ |
ಹಣಿಯೋ ಮುತ್ತಿನ ಮಣಿಯೋ |
ಹರಿಚರಣಕ ಬಿಡದ್ಹೊಂದಿದ ಸಂತರ |
ಶಿರವೋ ಕಂಚಿಪುರವೋ ೩
ಪರರುಪಕಾರ ಬಾಳುವ ಸಂತರ | ಇರವೋ ಕಲ್ಪತರುವೋ |
ಧರೆಯೊಳು ಮಾಡುವ ಸಂತರ ವ್ಯವಹಾ |
ರಗಳೋ ಹರಿಶೇವೆಗಳೋ |
ಹರುಷದಿ ಸಹಜದಲಾಡುವ ಸಂತರ |
ನುಡಿಯೋಭವದಿಕ್ಕೆಡಿಯೋ |
ಹರಿಪ್ರೇಮದಿ ತುಳಕ್ಯಾಡುವ ಜಲಬಿಂ |
ದುಗಳೋ ಭಕ್ತಿಯ ಮುಗಳೋ ೪
ಸಮಭಾವನೆ ನೆಲೆಗೊಂಡಿಹ ಸಂತರ |
ನುಡಿಯೋ ಸದ್ಗತಿಯಡಿಯೋ |
ಭ್ರಮವಿಷಯಕ ಹಚ್ಚದೆ ಕುಂದದಲಿಹ | ಮನವೋ
ನಂದನವನವೋ |
ಕಮಲಾಕ್ಷನು ಸಂತರ ಆಜ್ಞಾ | ಧಾರಕನೋ ನೆರೆಪಾಲಕನೋ |
ಕ್ರಮವರುಹಿದ ಗುರುಮಹಿಪತಿ ನಂದನ |
ಪ್ರಿಯನೋ ಕರುಣಾಲಯನೋ ೫

೭೦೫
ಸಂತರ ಸಹವಾಸ ಮಾಡು ಮನುಜ ನೀ |
ಭ್ರಾಂತ ಜನರ ಸಂಗ ವೀಡ್ಯಾಡು |
ಅಂತರಂಗದಲಿ ಸುಖವ ಸೂರ್ಯಾಡು | ಅ |
ನಂತನ ನಾಮವ ಕೊಂಡಾಡು ಪ
ದಾವ ಗ್ರಾಮದಲ್ಲಿ ಧನ ಧಾನ್ಯ ಬನವು |
ತೀವಿಕೊಂಡಿಹ ಸಂದಣಿ ಜನವು |
ಆವೂರೊಳಿಲ್ಲದಿರೆ ಸಂತರನವು |
ನೀ ವಾಸ ಮಾಡಬ್ಯಾಡ ಅರಕ್ಷಣವು ೧
ಎಲ್ಲಿ ನೋಡಲು ದಿವ್ಯ ಪಟ್ಟಣಲ್ಲಾ |
ಚಲ್ಪಗೋಪುರ ಮನುಧೊರೆರಿಲ್ಲಾ |
ಅಲ್ಲಿ ಸಾಧುರ ನರಹಳಿದಲ್ಲಾ |
ನಿಲ್ಲು ಕಾಲೂರಿ ಸುಖವಿಹುದೆಲ್ಲಾ ೨
ಅವರಿದ್ದುದೆ ಸ್ಥಳ ವಾರಣಾಸೀ |
ಅಚರ ದರುಶನ ಪುಣ್ಯದ ರಾಶೀ |
ಅವರ ನೆರೆಯಲ್ಲಿ ಸ್ವರ್ಗ ಸುಖದಾಶಿ |
ಈ ವಾಕ್ಯ ಮಹಿಪತಿ ಜ ನಾಲಿಸಿ ೩

೭೦೬
ಸಂತರಾ ಕೂಡ ಬಾರದೇ |
ಏ ಮನುಜಾ ಪ
ಸಂತರಾ ಕೂಡಲಾಗೀ | ಭ್ರಾಂತತನವು ಹೋಗಿ |
ಅಂತರ ಸುಖದೋರದೇ ೧
ಭೃಂಗಿ ಕೀಟಕ ಕೂಡೀ | ಸಂಗದಿ ಧ್ಯಾನ ಮಾಡಿ |
ಭೃಂಗಿ ತಾನಾಗಿ ಹಾರದೇ ೨
ಗುರು ಮಹಿಪತಿ ಪ್ರೀಯಾ | ದೊರೆವನು ನಿನ್ನಕೈಯ್ಯಾ |
ಮರಳುತನವ ಸೇರದೇ ೩

೭೦೭
ಸಂತರಾ ಪದವಿಡಿಯೋ ಪ
ಸಂತರಾ ಪದವಿಡಿಯೋ |
ಭ್ರಾಂತಿಗಳೆಲ್ಲಾ ಕಡಿಯೋ |
ಅಂತಭಾವನೆಯಿಂದ ತಂತುವಿಡಿದು ನಿಜ |
ಶಾಂತಿಸುಖವ ಪಡಿಯೋ ಮನುಜಾ | ಶಾಂ | ೧
ಡಾಂಭಿಕಾತನಗಳೆದು |
ಬೆಂಬಲಗುಣವಳಿದು |
ಹಂಬಲಿಸದೇ ಮನ ಸ್ತಂಭಪರಿಯ ಮಾಡಿ |
ನಂಬುಗೆ ದೃಢ ತಳೆದು ಮನುಜಾ | ನಂ | ೨
ನಾನಾರೆಂಬುದು ಮರೆದೀ |
ಜ್ಞಾನದೆಚ್ಚರ ತೊರೆದೀ |
ಕಾನನ ಹೊಕ್ಕಂತೆ ನಾನಾ ಸಾಧನದಿಂದ |
ಏನ ಸುಖವ ಪಡೆದೀ ಮನುಜಾ | ಏ | ೩
ಸುಲಭವೇ ಮಾನುಷ ಜನ್ಮ |
ಮ್ಯಾಲ ಅಗ್ರಜ ಧರ್ಮಾ |
ಚಲಿಸಲಿ ಪರಿಮತ್ತೆ ಇಳೆಯೊಳು ದೊರಕುದೇ |
ತಿಳಿನಿಜಗತಿ ವರ್ಮಾ ಮನುಜಾ | ತಿ| ೪
ಕೋಟಿ ಮಾತಿಗೆ ವಂದೇ |
ನೀಟ ಸುಪಥವಿದೇ |
ಧಾಟಿಲಿ ಮಹಿಪತಿ ಸುತ ಪ್ರಿಯನೊಲುಮೆಯಿಂದ |
ಕೋಟಿಳಗಳಿನಿಳದೇ ಮನುಜಾ | ಕೋ | ೫

೭೦೮
ಸಂತರೆನ ಬಹುದೈಯ್ಯಾ ಇಂಥವರಿಗೇ |
ಅಂತರಂಗದ ಹರಿ ಏಕಾಂತ ಭಕುತರೀಗೇ ಪ
ಸುಖಕ ಮೈಯ್ಯವ ಮರಿಯಾ |
ದುಃಖಗಳಿದಿಂದೇ ನೋಯ |
ಚಕಿತನಾಗನು ಕುಮತಿ ವಿಕಳ ನುಡಿಗೆ |
ಪ್ರಕಟ ಸೌಖ್ಯಕ ಹಿಗ್ಗ |
ಸಕಲರೊಳು ಹರಿಯೇ ವ್ಯಾಪಕ ವರಿದು ನಿರ |
ಹಂಕೃತಿಯನುಳ್ಳರಿಗೇ ೧
ಪರಮ ಭಾಗವತೆನಿಸಿ |
ಪರರ ಮನಿಗಳಿಗ್ಹೋಗಿ |
ಪಿರಿದು ವಿದ್ಯವ ತೋರಿ ಪೊರೆಯ ನೋಡಲಾ |
ಪರಧನಕ ಕರವಿಕಲ |
ಪರಸತಿಯರಿಗೆ ಕುರುಡ |
ಪರರ ನಿಂದೆಗೆ ಮೂಕ ಪರವಶ್ಯಾದರಿಗೆ ೨
ವೇಷಡಂಭಕವಿಲ್ಲಾ |
ಕ್ಲೇಶ ಕರ್ಮಗಳಿಲ್ಲಾ |
ಈ ಸಿರಿಯ ಸುಖದ ಮನದಾಶೆಯಿಲ್ಲಾ |
ವಾಸುದೇವನ ಪದ |
ಧ್ಯಾಸದನುಭವದಿ ನಟ |
ವೇಷ ಪರಿ ಸಂಸಾರ ಲೇಶ ದೋರ್ವರಿಗೆ ೩
ಹರಿಯ ನಾಮವ ನೆನೆದು |
ಹರಿಯ ಕೀರ್ತನೆಯಲ್ಲಿ |
ಹರುಷಗುಡಿಗಟ್ಟಿ ತನು ಮರದು ನಿಂದು |
ಬರುವ ಪ್ರೇಮಾಂಜಲಿಯ |
ಭರಿತಲೋಚನನಾಗಿ |
ತರಿಸಿ ತಾರಿಸುವ ಘನಕರುಣವಂತರಿಗೆ ೪
ಇಂತು ದುರ್ಗಮವಿರಲು |
ಸಂತರಾವು ನೀವೆಂದು |
ಸಿಂತರವ ಹೋಗಿ ಜನ ಸಿಂತರಿಸುವಾ |
ಭ್ರಾಂತ ಮೆಚ್ಚುವನಲ್ಲಾ |
ಶಾತಗುರು ಮಹಿಪತಿ ಸ್ವಂತನುಜಗೆಂದಾ ೫

೭೦೯
ಸಂತೆಯ ನೋಡಲು ಬಂದವನಾ |
ಭ್ರಾಂತತನವ ನೋಡಿ ಮಾನವನಾ ಪ
ಪರಿ ಪರಿ ವಾಸನೆಕಾರರು ವಿಷಯದ |
ಸರಕಿನ ಚಟ್ಟೆಯ ರಂಗಡಿಯು |
ದುರುಳತ ನವಗುಣ ಭೂಸಿನ ರಾಶಿಯು |
ನೆರೆದಿಹ ಸಂದಣಿ ಜನದೊಳಗ ೧
ಇಂತಿಹ ನರದೇಹ ಪ್ಯಾಟೆಯ ಸಡಗರ |
ಪ್ರಾಂತವ ಕಾಣದೆ ಮರುಳಾಗಿ |
ನಿಂತಲ್ಲಿ ನಿಲ್ಲದೆ ನೋಡುತ ತಿರುಗುತ |
ಕಂಥಿಯ ಕಳೆದನು ಹೆಗಲಿನಾ ೨
ಗುರುಮಹೀಪತಿ ಸ್ವಾಮಿಯ ಗಡಚಿನ |
ಶರಣಿರವಳಿಹುಗದೆವೆ ಮರೆದು |
ಧರಿಯೊಳು ಉಣಲಿಲ್ಲ ಉಡಲಿಲ್ಲ ಬಂದಿವ |
ಬರುದೆವೆ ಮುಮ್ಮಳಿ ಘಳಿಸಿದನು ೩

೩೩೦
ಸಖಿ ಕೇಳೇ ಇನ್ನು ಹರುಷದ ಮಾತಾ|
ಸಕಲ ಜನರಿಗೆ ಆನಂದ ವೀವಾ| ಪ
ಇಂತೆಂದು ಹರಿಯು ನಾನಾಪರಿ ವಿರಹದ|
ಸಂತಾಪ ಮಾತವ ನುಡಿಯಲು ಕೇಳಿ|
ಅಂತರಂಗದ ಕೋಪವಬಿಟ್ಟು ಎದ್ದು|ಅ|
ನಂತನ ಬಿಗಿದಪ್ಪಿದಳು ಅಂಬುಜಾಕ್ಷಿ ೧
ಲಲಿತಾಂಗಿ ಆಲಿಂಗನವ ನೀಯೇ ಹರಿಗಾಗಾ|
ಒಲಿದು ಉಕ್ಕೇರಿತು ಆನಂದ ಉದಧಿ|
ಬಳಿಕಲ್ಲಿ ಸತಿ ಮಾತಾಡುವ ದೇವ ಶ್ರೀ|
ಲಲನೇಯಾ ಸದ್ಬುವನೆಯಾ ಪೂರಿಸಿದನು ೨
ಈ ಪರಿಯಾಡಿದ ಶ್ರೀ ಹರಿ ಚರಿತೆಯಾ|
ನಾ ಪೇಳಿದುದು ಭಾವ ಭಕುತಿಯಲಿಂದಾ|
ಆ ಪದಿಂದಲಿ ಕೊಂಡಾಡುವ ಮನುಜನ|
ತಾ ಪಾಲಿಸುವಾ ಮಹಿಪತಿ ಸುತ ಪ್ರೀಯಾ೩

೩೩೧
ಸಖಿಬಾರೆ ಸುರಮೋಹನ ನೀಕರತಾರೆ ಪ
ಮಕರಾಂಕನಯ್ಯನ ಕಾಣದೇ ನಾ ನಿಲ್ಲಲಾರೆ|
ಯುಕುತಿಲೇ ತಂದು ನೀತೋರೇ|
ಕ್ಷಣಯುಗವ ನೋಡುವರೇ|
ಪ್ರಕಟದಲಿ ಕಣ್ಣಾರೆ ಕಾಂಬೆನೆಂದು ೧
ದೀನಬಂಧು ಮೊರೆಹೊಕ್ಕವರ ಬಿಡನೆಂದು|
ಮುನಿಜನ ಸಾರುವನೆಂದು|ನಂಬಿದೆನಾಮಕಬಂದು|
ವನಜಾಕ್ಷ ಎನ್ನೊಳು ಕುಂದು|ನೊಡುವ ದುಚಿತವೇನಿಂದು|
ಸನುಮುಖಕ ಮಾನವನು ತಂದುಕೂಡಿಸೇನಿಜಾ೨
ನರಹರಿ ಶರಣಾಗತ ಸಹಕಾರಿ|ಬಿರುದವ ತಾಳಿದಾಪರಿ|
ಮೊರೆಗೇಳಿದನು ದುರಿತಾರಿ|ಉರಗಾರಿ ಚಿನ್ನವನೇರಿ|
ಬಂದ ನೋಡ ದಯಬೀರಿ|
ಗುರು ಮಹಿಪತಿ ಪ್ರಭು ಉದಾರ|ನೆರೆದನೇತಾ೩

೩೪೩
ಸಖಿಸು ವರದ ಕೊಂಡು ಉಂಡು ನಾಮಾಮೃತವನು ಪ
ಅಂಬರಲಿ ಧೃವ|ಕುಂಬಿನಿಲಿ ಜಾಂಬವ|
ಅಂಬುಧಿಯೊಳು ವಿಭೀಷಣನು ೧
ಸುತಳದಿ ಬಲಿನೋಡಿ ನುತ ಪ್ರಹ್ಲಾದೊಡಗೂಡಿ|
ಅತಿಶಯಾನಂದದಿ ತಾನು ೨
ಗುರು ಮಹಿಪತಿಸುತ ಗರುಹಿದ ನಿಜಹಿತ|
ಹರಿಶರಣರ ನೋಡೋ ನೀನು ೩

೩೩೨
ಸಣ್ಣವನೆ ಘನಲೀಲಾ|ಗೋಪಿ|ಸಣ್ಣವನೆ ಘನಲೀಲಾ ಪ
ಶಿಶುವೆಂದು ಪೂತನಿ ಮೊಲೆಯನು ಕೊಟ್ಟರೆ|
ಅಸುವನು ಹೀರಿದ ಕಾಲ ಗೋಪಿ ೧
ಚರಣವ ಕಟ್ಟಲು ಒರಳೆಳೆದೊಯ್ದಾ|
ಮರಗಳ ಕೆಡಹಿದ ಬಾಲ೨
ತಂದೆ ಮಹಿಪತಿ ಪ್ರಭು ನರನೆಂಬರೆ|
ಇಂದಿರೆ ಪತಿ ಗೋಪಾಲಾ ೩

೬೮೫
ಸತ್ಸಂಗ ವಿಡಿಯೋ ಮನುಜಾ ಪ
ಹರಿಕಥಾ ಶ್ರವಣದಿ ಮನ ಜಡಿಯೋ |
ದುರಿತಾಂಕುರ ಕಡಿಯೋ ೧
ಘನಗುರುರಾಯನ ಕರುಣವ ಪಡಿಯೋ |
ಅನುಭವಾಮೃತ ಕುಡಿಯೋ ೨
ಮಹಿಪತಿಸುತ ಪ್ರಭು ನಾಮವ ನುಡಿಯೋ |
ಸ್ವಹಿತದಲೀ ನಡಿಯೋ ೩

೬೮೩
ಸತ್ಸಂಗದ ಫಲ ಸದ್ಭಾವಿಯಾದವ ಸೇವಿಸಿಕೊಂಬುವನೈ |
ಮತ್ಸರ ಮದದಲಿ ಯಚ್ಚರಗೊಳದಾಧಮ ಬದಿಲಿದ್ದೆ ನೈ ಪ
ಕಮಲದ ಸವಿ ಭ್ರಮರವೇ ಕೊಂಬುದು |
ಬದಿಲಿಹ ಮಂಡೂಕಗೇನೈ |
ಶ್ರೀಮಂತರು ಹಾಲವಕರಕೊಂಬರು | ಉಣ್ಣಿಗೆ ಫಲವೇನೈ ೧
ಶ್ರೀಗಂಧ ಗಾಳಿಗೆ ಸಕಲ ವೃಕ್ಷಾದರ |
ಬಿದಿರು ಬೊಬ್ಬುಹಳಿಗೇನೈ |
ಆಗಮಜ್ಞರ ವಿದ್ಯಾ ವ್ಯುತ್ಪನ್ನಗಲ್ಲದೇ ಜಡಮತಿಗಳಿಗೇನೈ | ೨
ಭೂಗತ ಧನವದು ವಂಶಜಗವಲ್ಲದೇ | ಕಾದಿಹ ಫಣಿಗೇನೈ |
ಶ್ರೀ ಗುರು ಮಹಿಪತಿ ಬೋಧದ
ನುಡಿಯಿದು ನಂದನು ಸಾರಿದನೈ ೩

೬೮೪
ಸತ್ಸಂಗವಿನಾ ಏನಸಾಧಿಸುವದೇನರದು ಪ
ರಾಜಸೂಯಾಶ್ವಮೇಧಾ | ಮುಖ್ಯಯಾಗಗಳಿಂದಾ |
ತ್ಯಾಜ್ಯಾ ಲೋಕಂಗಳ ಪಡೆಯಬಹುದು ೧
ಮೆರೆವ ರಾಜಯೋಗದಿ | ಹಲವುಯೋಗಗಳಿಂದಾ |
ಪರಿಪರಿ ಸಿದ್ಧಿಯಾ ಪಡಿಯಬಹುದು ೨
ಗುರು ಮಹಿಪತಿ ಸುತಪ್ರಭು | ಮಾರ್ಗವರಿಯದೇ
ನಿರರ್ಥಕ ಸಾಯಾಸವಾ ಬಡುವುದು ೩

೬೮೬
ಸದಾ ಹರಿಭಕುತಿಯ ಶರಣರಿಗೀವುದು ಮುಕುತಿ ಪ
ವೃತ ತಪದಾನದ ಹೊಕಬವನರಿಯದ |
ಶೃತಿ ಸ್ರ‍ಮತಿ ವಾಕ್ಯದ ಸುಮತಿ ೧
ಯಮನಿಯಮದ ನಿಜ ಯೋಗವನರಿಯದ |
ಶಮದಮ ಜ್ಞಾನದ ವಿರತಿ ೨
ಗುರು ಮಹಿಪತಿ ಪ್ರಭು ನಂಬುಗೆ ಅಲ್ಲದೇ |
ಅರಿಯರು ಸಾಧನ ಯುಗತಿ ೩

೫೪೬
ಸದ್ಗುರು ದಯಾ ಸಾಧ್ಯವಾಗದೇ ಜ್ಞಾನವಿಲ್ಲಾ |
ಸದ್ಗತಿ ಕೀಲರಿತವನೇ ಬಲ್ಲಾ ಪ
ಖಟಪಟ ವೃತದೊಳಿಲ್ಲಾ |
ಘಟಮಟ ಶಬ್ದದೊಳಿಲ್ಲಾ |
ಥಟ್ಟನೆ ಸಂಸಾರ ತೊರೆದರಿಲ್ಲಾ ೧
ಬಹೂನಾಂ ಜನ್ಮನಾ ಜಾಯಂತೆ |
ಜ್ಞಾನವಾನ್ ಮಾಂ ಪ್ರಪದ್ಯತೆ |
ಶ್ರೀ ಹರಿ ಹೇಳಿದ ಗಾದಿಮಾತೆ ೨
ವಸುಧಿಯೊಳೆಲ್ಲಾ ಜನಕೆ |
ಹಿಂಗಾದರ ಸಾಧನ ಬೇಕು |
ಋಷಿಮುನಿಗಳು ಸಾಹಸಬಡುವರ್ಯಾಕ ೩
ಮನುಷ್ಯಣಾಂ ಸಹಸ್ರೇಷು |
ವೆಂಬಾ ಗೀತೆಯ ನುಡಿಲೇಸು |
ಜನದಲಿ ಗರ್ವಾಭಿಮಾನಿಗೆ ಬಿರುಸು ೪
ಗುರಿಯಿಲ್ಲದ ಅಂಬು ತಾನು |
ಎರಗುದೇ ಗುರಿಯಾ ಸ್ಥಳವನು |
ಗುರುಮಹಿಪತಿ ನಂದನು ಸಾರಿದ ನಿಜನು ೫

ಸದ್ಗುರುವಿನ ದಯವಾಗಬೇಕು | ತನ್ನ |
ಸದ್ಗತಿಗೆ ಅನ್ಯ ಸಾಧನ ಹೋಕು ಪ
ಕನ್ನಡಿಯ ಕಿಲುಬು ಹತ್ತಿ ಮುನ್ನ | ಮಾಸಿರಲು | ಮತ್ತ
ದನ್ನೇ ಜಾಣ ಬಂದು ಬೆಳಗಲಾಗಿರುಹು |
ತನ್ನ ತೋರುವಂತೆ ನಿಜವಾಗೀ |
ಮನಸಿನ್ನ ಕದಡು ಗಳಸುವನು ಯೋಗೀ ೧
ಓದಿ ಕೇಳಿ ತಿಳಿದರೇನು ಭೇದಿಸದು ನಿಜ ಸುಖ |
ಸಾಧಿಸಿ ಬಯಲ ಗಂಬಾರನಲ್ಲಿ |
ಮುತ್ತು ಇದ್ದರೇನು ಯಜ್ಞವಾಗದಲ್ಲಿ | ಅದಕ ಸಾಧು |
ಜೋಹರೆನೆವೆ ಬುದ್ಧಿಯಲ್ಲಿ ೨
ಗರಡಿಲಿಟ್ಟು ಹುಳುವ ತನ್ನ ಗುರುತ ತೋರುವದು ಭ್ರಂಗೀ |
ಅರಿಯದೇನು ಜನಾ ಗಾದಿಯಲ್ಲಾ |
ಗುರು ಚರಣ ನಂಬದೆವೆ ಮುಕ್ತಿಯಿಲ್ಲಾ |
ಇದು ಸಾರಿದನು ಮಹಿಪತಿ ಸೊಲ್ಲಾ ೩

೫೦೫
ಸದ್ಭಾವದಿಂದ ಗುರುವೇ ಗುರುವೆಂದು ಬಾಗಿ
ಸದ್ಭಕ್ತನಾಗಿ ಮರಿಯಾ ಮರಿಯಾದೆ ಹೋಗಿ
ಸದ್ಭೋಧಸಾರ ಗರವಾ ಗರವಾಮೃತಾದಾ
ಚಿದ್ಭಾನುದೋರಿ ಹೊರೆವಾ ಹರಿವಾಭವಾಂಧಾ ೧
ಗುರುಪಾದ ಕಾಣದನಕಾದನ ಕಾವನಾಗೀ
ಮರದೆನ್ನ ತನ್ನದೆನುತಾದೆನುತಾಂನರಾಗಿ
ಅರಿತೀಗ ಮಾಡಿ ಗುರುತಾಗುರು ತಾತನಂಘ್ರಿ
ಪರಮಾರ್ಥವಸ್ತು ವರ ದೇವರ ದೇಶಸಾರಿ ೨
ಗುರುಮಾರ್ಗ ಬಿಟ್ಟು ಬರುದೇ ಬರುದೇನೊ ಪ್ರಾಣಿ
ಅರತೇನುಶಾಸ್ತ್ರ ಪರಮಾಪರಮಾರ್ಥಗಣೀ
ಧರಿಸುದೆ ಅಂಜನವನೀ ನವನೀತವೆಂದು
ದೊರಿಯದುರಂಜನದ ತೀ ನದಲೀಸುದು ಇಂದು ೩
ಗುರುಹಸ್ತಮಸ್ತಕದಲೀ ಕದಲೀತೆ ಕ್ಲೇಶಾ
ದೊರವನು ಹೃತ್ಕಮಲದಾಮಲದಾತ್ಮ ಈಶಾ
ಗುರುಮಿತ್ರ ಮಾತೃ ಜಕನಕಾಜನಕಾರ್ತಬಂಧು
ಶರಣ್ಹೋಕ್ಕು ನೋಡಿ ಸುಖವಾ ಸುಖವಾಗದೆಂದು೪
ಇರುತಿಪ್ಪನೆಲ್ಲಿ ಗುರುತಾ ಗುರುತಾದ ಕಾಶೀ
ನೆರೆಗಂಗಿ ಪಾದತೀರ್ಥತೀರಥಾಧರಾಶಿ
ಗುರು ವಿಶ್ವನಾಥನೆನುವಾನೆನುವಾವನೆಲ್ಲಿ
ನರರೋಳು ಧನ್ಯ ತಮನುತ್ತ ಮನೊರ್ವಿಯಲ್ಲಿ೫
ಕಾಣದೆ ಕಂಗಳಲಿತಾ ಲಲಿತಾದ ನೋಟಾ
ಜಾಣೀಸಿ ಕೋಟಿ ತರಣೀ ತರುಣೀಯ ಕೂಟಾ
ಕಾಣೀಸಿ ಉನ್ನಮನೆಯಾ ಮನಿಯಾವೆ ನೋಡಿ
ಪ್ರಾಣವಕಾವ ಗುರುವೀ ಗುರುವೀನ ಪಾಡಿ ೬
ಮನಮುಟ್ಟಿಮುದ್ರಿ ಸಲಿತಾಸತಿತಾಳಭೇರಿ
ಅನುಹಾತ ಘೋಷಶ್ರವಣಾಶ್ರವಣಕ್ಕೆ ಬೀರಿ
ತನುಭಾವವನ್ನು ಮರಸೀ ಮೆರಸೀದನೆಂದು
ನೆನಿಬೇಕು ಸದ್ಗುರುವಿನಾರೂವ್ಹಿನಾಗತಂದು ೭
ಗುರುಮೂರ್ತಿಗೆಂದನರನೇ ನರನೇವನವನು
ಗುರುಭಕ್ತಿ ಗಳ್ಳಕುಶಲಾಕುಶಲಾದವನು
ಗುರುನಾಮ ಕೂಗದವನೈದುವನೇ ಗತಿಯಾ
ಗುರುಪಾದಪೂಜಿಮರತಾ ಮರತಾವನೀಯಾ ೮
ಗುರುಅಷ್ಟಕದ ಮಹಿಮಾ ಮಹಿಮಗೇಬಲಾ
ಸ್ಮರಿಸೀದನ್ನು ಭಕುತೀಭಕುತೀವದೆಲ್ಲಾ
ಗುರು ಮಹೀಪತಿ ಕರುಣಾ ಕರುಣ ನುಪಾಡೀ
ಕರಕೊಂಡುಜ್ಞಾನಸುಧೆಯಾ ಸುಧಿಯಾದೆ ನೋಡಿ೯

೩೩೫
ಸರಸಿಜಾಸನೆ ಉಚಿತವಲ್ಲದು ಬರಿದೆ
ನೀ ಮುನಿದು ಇಳೆಯೊಳಗೇ|
ಸುರಮುನಿ ಜನಪಾಲನ ಮನದಲಿ ಬಂದದಿ
ನೆರೆಯದೇ ಸಾರುವದೀಗ ಪ
ನಿನ್ನಯ ಒಪ್ಪುವ ಮಾರ್ಗವ ನೋಡುತ|
ಮುಚ್ಚನು ಕುಡಿಗಂಗಳ ಯವಿಯಾ|
ಪನ್ನಗವೇಣೀ ನಿನ್ನವಿಯೋಗ ದುಗುಡದೀ|
ಕುಳಿತನುಡಗಿ ಅವಯವ ಸೋಹ್ಯಾ ೧
ನಿನ್ನ ಕಾಣುವೆ ನೆಂಬಂಥ ವಾಣಿಯಲೆದ್ದು ಲಜ್ಜಿಸಿ
ಹಿಂದಕ ಕಾಲೆಳೆದಾ|
ಘನ್ನ ವಿರಹ ತಾಪದ ದೆಶೆಯಿಂದಲಿ ಕಿಡಿ ಕಿಡಿ
ಜ್ವಾಲಾಂಗನು ಆದಾ ೨
ಕಪಟದಿ ಬಂದು ನೋಡುವೆ ನಿನ್ನೆನುತಲಿ
ಯಾಚಕ ರೂಪತಾಳಿದನು|
ವಿಪುಳಾಂಗ ತಾಳಲಾದರದೇ ನಿನ್ನ ಕುವರಿಯ
ತೊರೆಂದೆ ಚಂದನು ಶರಧಿಯನು೩
ದಿನದೊಳಗರಗಳಗಿ ಗಮಿಸದು
ಯನುತಲಿ ವನದೋಳು ಪೋಗಿ
ಹೊತ್ತುಗಳೆವಾ|ಮನಿ ಮನಿ ಪೊಕ್ಕು
ಗೋಕುಲದಲಿ ನಿನ್ನನು
ಅರಸುತಿಹನು ಪಾವನ ದೇವಾ೪
ಕ್ಷತ್ರೀಯರು ನಿಷ್ಠುರರೆಂದು ನಿನ್ನಮ್ಯಾಲಿನ
ಕೋಪದಿ ಕಂಡ ವೃತವಳದಾ|
ಅತಿತವನೋಡದೇ ತಾನಾಗಿ ಬಂದನು
ಹಯವೇ ನೋಡೆ ಜೀವನ ಜಗದಾ ೫
ಕುವಲಯ ಲೋಚನೆ ಕೂಡಿದ ನಿಮ್ಮಿರ್ವರ
ಹಾಸ್ಯದ ಮುಖವನು|
ಜವದೀ ಅವನಿಲಿ ಕಂಡೆನು ಧನ್ಯಧನ್ಯಾದೆನು
ಮಹಿಪತಿ ಸುತ ಪ್ರಭುವಿನ ದಯದೀ೬

೩೩೬
ಸರಸೀಔಂಬಕಿ ನೀರೇ ಎನಗ|ತ್ವರತದಿ ತೋರೆ|
ಸರಸಿರುಹ ವಂದ್ಯನಾ ಪ
ಪಲ್ಲವಧರದಲಿಂದಾ|ಕೊಳಲು ನಾನಾ ಪರಿಯಾ|
ಬಲ್ಲತನದಲಿ ಊದಲು|
ಹುಲ್ಲೆಯಂದದಿ ಮನಸು|ಮರಳು ಗೊಂಡಾಥನಿಗೆ|
ಭುಲ್ಲವಿಸುತಿಹುದಮ್ಮಾ ನಮ್ಮಾ ೧
ಕೈರವ ಸರ್ವೋದಯವ ಕಂಡು|ಮುದದಿಂದ|
ಚಕೋರ ಸಂತೋಷಿಸುವಂತೆ|
ನೀರಜಾನನ ನೋಡ ಲಕ್ಷಣದಿ ನೋಟಕ|
ಪಾರಣೆ ಯಾಗುದಮ್ಮಾ ನಮ್ಮಾ ೨
ಪರಮ ಜ್ಞಾನಾಂಗನೆಒಂದೊಂದು ಘಳಿಗೆ ವತ್ಸರ|
ದಂತೆ ಪೋಗುತಿಹುದು|
ತರಿತ ಮಹಿಪತಿ ನಂದ|ನೋಡಿ ಯನನು ತೋರೆದಡೆ|
ಹರನ ನಿಲ್ಲದಮ್ಮಾ ನಮ್ಮಾ ೩

೭೨೩
ಸರ್ವ ವಿದ್ಯದಾಗರಾ | ಪಾರ್ವತಿ ಕುಮಾರಾ |
ದೋರ್ವ ವಿಘ್ನ ಸಂಹಾರಾ | ಶ್ರೀಗಣ ನಾಯಕನೇ |
ಊರ್ವಿಲಿ ನಿನ್ನ ಬಲಗೊಂಬೆ ೧
ಸರಸಿಜಾಸನ ರಾಣೀ | ಸುಭೋಜ
ತರುವಾಣಿ ಕರುಣಾ ಸಾಗರೆ |
ಅಹಿವೇಣಿ | ಸಲಹೆನ್ನ ತಾಯೆ |
ಶರಣು ಶರಣು ಕಲ್ಯಾಣಿ ೨
ಕ್ಷೀರ ಸಾಗರ ವಾಸಾ | ಈ ರೇಳು ಜಗದೀಶಾ |
ಸಾರಸ ಲೋಚನ |
ಅವಿನಾಶಾ | ಶ್ರೀ ಲಕ್ಷ್ಮೀ ವಲ್ಲಭಾ |
ಕಾರುಣ್ಯ ನಿಧಿಯೇ ಸಲಹಯ್ಯಾ ೩
ಶ್ರೀ ರಾಘವನ ದಿವ್ಯಾ | ಅರಮನೆಯ ಮದ್ದಾನಿ |
ಮೂರಾವ ತಾರಿ
ಸಹಕಾರೋ | ಶ್ರೀ ಹನುಮಂತಾ | ತಾರಿಸೋ ಭವದಿಂದಾ ೪
ಗಜ ಚರ್ಮ ಧಾರನೇ | ಸುಜನೋದ್ಧಾರನೇ |
ರಜನೀಶ ಮೌಳಿ |
ಮಹಾದೇವಾ | ಪಾರ್ವತಿ ವಲ್ಲಭಾ |
ನಿಜ ದೋರಿ ಎನ್ನ ಸಲಹಯ್ಯಾ ೫
ಮಂದ ಮುಗ್ಧೆಯರು | ಯಂದು ದಯದಿಂದಲಿ |
ಛಂದಾಗಿ ಸಲಹು
ನಮ್ಮಯ್ಯಾ | ತಪ್ಪ ನೋಡದೆ |
ತಂದೆ ಗುರು ಮಹಿಪತಿ ರಾಯಾ ೬
ತಂದಿ ಸರ್ವೋತ್ಮನಾ ನಂದ ದಾರಾಧನೆ |
ಇಂದು ನಮ್ಮನಿಯಲಿ
ಮಾಡಿರೇ | ಕೇಳೆನ್ನ ಮಾತಾ |
ಮುಂದಾಗಿ ನೀವು ವದಗೀರೇ ೭
ಬನ್ನಿ ಭಾವಕಿಯರು ಮುನ್ನಿನಾಗುಣಬಿಟ್ಟು | ಅನ್ಯ ಕೆಲಸಕೆ
ತೊಡಗದೇ | ನೈವೇದ್ಯಕೀಗ | ಸನ್ನೆಲ್ಲಕ್ಕಿ ಮಾಡೀರೇ ೮
ಅವನೀಲಿ ದೃಢವಾದ ವಿವೇಕ ವರಳದಿಂದ |
ಸೇರಲಿ ಅನುಮಾನಾ
ಕಸವಾ | ಆಸನ ಬಲಿದು |
ತವಕದಿ ನೀವು ಕುಳ್ಳಿರೆ ೯
ದೋರ್ವ ನೆಲ್ಲವಗುಣ ಸರ್ವ ವಬ್ಬುಳಿ ಮಾಡಿ |
ಉರ್ವಿಲಿ ನೀವು |
ಕುಟ್ಟರೆ | ಜ್ಞಾನ ವಿಜ್ಞಾನದಿ | ಮೆರ್ವ ವನರೆಯಾ ಧರಿಸೀಗಾ ೧೦
ಶೃತಿ ಶಾಸ್ತ್ರ ಪೌರಾಣ ಪ್ರತಿಪಾದ್ಯ ವಾದಾ |
ಅಮೃತ ನಾಮವಾ
ನೆನವುತ | ಮರೆಯದಿ ನಿಜಸ್ಥಿತಿಯೊಳು
ನೀವು ಬೆರೆಯಿರೇ ೧೧
ಸಮಭಾವ ಯಾರಿಯಾ ಕ್ರಮಗೊಂಡು ಹಾಕುತಾ | ದಮಿಸಿ
ಅಭಿಮಾನ ಹಸಕವಾ | ಏನುಳಿಯಧ್ಹಾಂಗ |
ಕ್ರಮ ಈಡ್ಯಾಡಿ ಕುಟ್ಟಿರೆ ೧೨
ಕುಟ್ಟಿದ ಬಳಿಕಿನ್ನು ಬಿಟ್ಟು ದೋರುವದಾ |
ಕೆಟ್ಟ ಹೊಟ್ಟವ ಹಾರಿಸಿ |
ಶುದ್ಧ ಅಕ್ಕಿಯ ನೆಟ್ಟನೆ ನೀವು ವಡಗೂಡೀ ೧೩
ಏ-ಕಾನ್ನವ ಮಾಡೀ ಸಾಕಾರ ವಾಗಿಹಾ |
ಏಕೋ ದೇವಗೆ ಅರ್ಪಿಸ |
ದಯದಿಂದ ದೇವ | ಬೇಕಾದ ಸುಖ ಕೊಡುವನು ೧೪
ತಂದೆ ಮಹೀಪತಿ ನಂದನ ಸಾರಥಿ |
ಬಂಧು ಬಳಗವು ಯನಗಾಗಿ |
ಸಲಹುವಾ ನಮ್ಮ ಎಂದೆಂದು ಸಿಂಹಾದ್ರೀಶನು ೧೫

೩೩೭
ಸಲಹಯ್ಯಾ ನಿನ್ನ ಸಾರಿದೇ|ಶ್ರೀ ರಮಣನಾ ಪ
ಮರುಹು ಮರಸಿ ಎನ್ನ|ಅರಹು ಕೊಡಿಸಿ ನಿನ್ನಾ|
ಸ್ಮರಣೆಯೊಳಿಡಬಾರದೇ ೧
ನಿನ್ನ ಚರಣವದೋರಿ|ಘನದಯವ ಬೀರಿ|
ಧನ್ಯನ ಮಾಡಬಾರದೇ ೨
ತಂದೆ ಮಹಿಪತಿ|ನಂದನ ಸಾರಥಿ|
ಇಂಧುದ್ಧರಿಸಬಾರದೇ ೩

೫೦೬
ಸಲಹು ಶ್ರೀ ಗುರುರಾಯಾ | ಸಲಹು ಬುಧ ಜನಪ್ರೀಯಾ |
ಸಲಹೆನ್ನ ಪರಮ ಗೇಹ್ಯಾ ಪ
ಚಿಕ್ಕವನು ನಾ ಮೊದಲು | ಸೊಕ್ಕಿ ಭವಸುಳಿಯೊಳಗೆ |
ಸಿಕ್ಕಿ ಬಹು ನೊಂದೆನೆಂದು |
ಹೊಕ್ಕೆ ಮೊರೆ ನಿನ್ನ ಹಿಂದಿಕ್ಕಿಕೋ ದಯದಿಂದ |
ಮಕ್ಕಳಂದದಲಿ ಚೆನ್ನಾಗೆನ್ನಾ ೧
ಪಿಂತಿನಾ ಭವಣೆಗಳು | ಎಂತಾದರಾಗಲೀ |
ಶಾಂತ ಮೂರುತಿಯೇ ಎನ್ನಾ |
ಅಂತರಂಗದಲಿನ್ನು ನಿಂತು ನಿನ್ನಯ ರೂಪ |
ಸಂತತವಾಗಿ ದೋರೋ ಬೀರೋ ೨
ಅನ್ಯಪಥಕೆಳಿಸಿದಾ ಘನ್ನ ತಪ್ಪವ ಕ್ಷಮಿಸಿ |
ನಿನ್ನ ಪದಯುಗಳ ದೋರಿ |
ಸನ್ನುತವೆ ಮಹಿಪತಿ ಚಿನ್ನ ಕೃಷ್ಣನ ಸ್ವಾಮಿ |
ಇನ್ನಾರೆ ದಯಮಾಡೋ ನೋಡೋ ೩

೩೩೮
ಸಲಹು ಸಲಹು ಸಲಿಲಜನಯನಾ|ಎನ್ನಾ|
ಇಳೆಯೊಳು ಮೊರೆಯ ಹೊಕ್ಕಿಹೆ ನಿನ್ನಾ ಪ
ಕರುಣ ನೋಟಗಳಿಂದಲಿ ನೋಡಿ|ಸರ್ವ|
ಭಾರ ಒಪ್ಪಿಸಿಕೊಂಡು ನಿಜ ನೀಡಿ|
ದಾರಿದೋರುವ ಸುಮತಿಯ ನಿಲಿಸಿ|ಅತಿ|
ತರಳನೆನುತ ಭಯವನೆ ಹರಿಸಿ ೧
ಹರಿದುರಿತದ ಬಂಧನ ಬಲಿಯಾ|ತವ|
ಚರಣದ ಭಕುತಿ ಕೊಡಲಿ ದೊರಿಯಾ|
ಹರಿಗುಡದರಸನ ದಶಮುಖದಾ ಸಂಗ|
ಲಿರಿಸು ದಾಸರ ಸಗಟವನೊದೆದಾ೨
ತ್ರಿಪುಟಿಯ ಸಂಗ ಬಿಡಿಸು ಮನದಿ|ಎನ್ನ|
ವಿಪುಳ ವಾಜಿಯೊಳಿರಿಸು ಧೃಡದಿ
ಕೃಪೆಯಲಿ ಮಹಿಪತಿ ಸುತ ಪ್ರಾಣಾ|ಎನ್ನ|
ಅಪರಾಧ ಕ್ಷಮಿಸಿ ಹೊರಿಯೊ ಪೂರ್ಣಾ೩

೩೪೧
ಸಲಹು ಸಲಹು ಸಲಿಲಜಾಂಬಕ ಸಲಹು ತ್ರಿಭುವನ ಜೀವನಾ|
ನಳಿನ ಸಂಭವ ಜಲಧರೇಂದ್ರಾವಳಿ ವಿನುತ ಪದಪಾವನಾ|
ಹೊಳೆವ ಭೂಷಣ ಚೆಲುವಿಕೆಯ ಘನ
ನೆಲಿಗೆ ಪಡೆದಿಹೆ ಕಾವನಾ|
ಸುಲಭನಾಗ್ಯತಿ ಸಲಿಸುತಿರುತಿಹ|ಒಲಿದು ಭಕ್ತರ ಭಾವನಾ ೧
ಮೊರೆಯ ಹೊಕ್ಕರ ಕರವ ಬಿಡನೆಂ |
ದರಿತು ಶರಣವ ಬಂದೆನಾ|
ಧರೆಯೊಳೆನ್ನಯ ಮರೆದ ತರಳತೆ |
ಕೊರತೆ ನೋಡದೆ ಹಿಂದಿನಾ|
ಸ್ಮರಣೆ ಚಿಂತನೆ ತರುಣೋಪಾಯದ|
ಅರಹು ಮತಿಯಲಿ ಮಂದನಾ|
ಹರಿಯ ಸಾರ್ಥಕ ನರಜನುಮವನು |
ಭರದಿ ಮಾಡು ನೀ ಇಂದಿನಾ ೨
ಸತಿಯ ಪತಿ ಸಖಗತಿಗೆಳೆಯ ಸುತ|ಪಿತನ ಪರಿಯಲಿ ಲಾಲಿಸಿ|
ಶೃತಿ ವಿಹಿತ ತವ ಸ್ತುತಿಸ್ತವ ಪಾಡುತಿಹೆ ನೆರೆಯಲಿ ಬಾಳಸೀ|
ಹಿತವನರಿಯದ ಮತಿ ವಿಹೀನೋ|ನ್ಮತರ ಸಂಗವ ಜಾಳಿಸೀ|
ಪತಿತನು ದ್ಧರಿಸ್ಸತುಳ ಮಹಿಪತಿ | ಸುತ ಪ್ರಭುವೇ ದಯಪಾಲಿಸಿ ೩

೩೪೦
ಸಲಹು ಸಲಹು ಹರಿಯೇ ದಯದಿಂದಲಿ|
ಇಳೆಯೊಳು ನಾನತಿ ದೀನನು ಪ
ಸನ್ಮತಿದಾಯಕ ಸನ್ಮನ ಮುನಿಜನ|ಸನ್ಮತ ಮಾ ಮನೋಹಾರಿ|
ಮನ್ಮಥನಯ್ಯನೇ ಉನ್ಮತ ಸುರಹರ|
ಚಿನ್ಮಯ ರೂಪ ಉದಾರಿ೧
ವಾರಣ ಲೋದಗಿ ನಿವಾರಣ ಭಯದ
ನಿವಾರಣ ಮಾಡಿದೆ ಶೌರಿ|
ವಾರಣ ಹರಣ ಸಹದಾರುಣ
ವಲ್ಲಭ ಕಾರುಣ ಸುರಸಹಕಾರಿ೨
ಅಹಿಪತಿ ಶಯನ ಸು ಅಹಿರಿಪುವಾಹನ |
ತುಹಿನ ಕಿರಣ ಕುಲಮೌಳಿ|
ಮಹಿಪತಿ ನಂದನ ಹೃದಯ ಸರೋವರ|
ಹಂಸಪರಮ ವನಮಾಲಿ ೩

೩೩೯
ಸಲಹುದೈ ಸಲಹುದೈ ಸಲಹುದೈ ಎನ್ನಾ| ನೀ ಸಲಹುದೈ ಪ
ಖಚರಜನುತ ರಜನೀಚರ ಕುಲಾರಿ|
ಸುಚರಣಾರಾಧಿಪಾನುಚರ ಸಹಕಾರಿ ೧
ಕುಮರ ಗೋಪಿಯ ಅಘತಮರವಿ ಶೌರಿ|
ಅಮರೇಶಾ ಶ್ರೀ ಮುಖಾಬ್ಜು ಭ್ರಮರ ಶ್ರೀ ಹರಿ ೨
ಪರಮ ಸುಖದಾಯಕ ಗಿರಿವರಧಾರೀ|
ಗುರು ಮಹಿಪತಿ ಜನ ಪೊರೆವ ಉದಾರಿ ೩

೬೮೭
ಸಲ್ಲಾ ಸಲ್ಲಾ ಭಕುತಿಗೆ ಸಲ್ಲಾ ಸಲ್ಲಾ |
ಸಲ್ಲ ಸಲ್ಲನೊ ಪ್ರಾಣದೊಲ್ಲಭನೊಳು
ರತಿಯಿಲ್ಲದೆ ಡಾಂಭಿಕನು |
ಬೆಲ್ಲದೊಳಗಿನ ಕಲ್ಲಿನಂದದಲಿಹನು |
ಪರಿಪಾಕದಲ್ಯವ ದೂರಾಹನು | ಅವನೀಗ ಪ
ಗುರುವಿನಂಘ್ರೀಯ ಕಂಡು | ಗುರುತಕ ಬಾರದೆ |
ಧರಿಯೊಳು ವ್ಯಭಿಚಾರಿತೆರನಂದದಿ |
ಗುರುಭಕ್ತನೆನುಸುವ ಗುರಶೇವೆಘೋದಲುವ |
ಗುರುನಾಮ ಜಾಗಿಸುವನು ಯಲ್ಲರೊಳು |
ಗುರುದಯ ದೋರಿಸು | ನಿಷ್ಠಿಗೆ |
ಹುರುಳಿಲ್ಲ ಮಾನಿಸನು ೧
ಎಲ್ಲಾ ಶಾಸ್ತ್ರವ ಕಲೆ ಬಲ್ಲವ ನಾನೆಂದು |
ಸೊಲ್ಲು ಸೊಲ್ಲಿಗೆ ತನ್ನ ಹೊಗಳುತಲಿ |
ಒಳ್ಳೆವರನು ಕಂಡು ಮನ್ನಿಸಿಕೊಳ್ಳದೆ |
ನಿಲ್ಲದೇ ವಾದಿಸುವ ಅವರಾಚು ಸೊಲ್ಲಿಗೆ |
ಸೊಲ್ಲಿಗೆ ಕುಂದಿಡುವ | ಆಚಾರ |
ಕ್ಷುಲ್ಲಕತನದಿ ನೋಡುವಾ ಅವನಿಗೆ ೨
ಘನ ಗುರು ಮಹಿಪತಿ ಸ್ವಾಮಿಯ ಸೂತ್ರದಿ |
ಅನುವಾದಾ ಲಾಭಾ ಲಾಭಗಳೆನ್ನುತ |
ಜನರಿಗೆ ಹೇಳುವಾತಾ ಹಾದಿತಪ್ಪುವಾ |
ಧನ ಮದಾಂಧರ ಮನವಾ | ಹಿಡಿವುತ |
ತನುಪರವಶ ಮಾಡುವಾ | ಸಿದ್ಧಾಂತ |
ಅನುಭವ ನುಡಿಮರವಾ ಅವನೀಗ ೩

೪೩
ಸಾಂಬಶಿವಾ ಜಯ ಸಾಂಬಶಿವಾ ಪ
ಸುರರ ತೋರಿಕೆಗೆ ಬಂದು ಕೈಲಾಸ ಮಂದಿರ ಮಾಡೀ |
ಧರೆಯೊಳು ಸರ್ವರ ಮನದಿರುವಾ ೧
ತನ್ನವರನ್ನಯರು ಎಂಬಾ ಭಾವ ಭೇದವಿಲ್ಲದಲೆ
ಉನ್ನಂತ ಸಂಪದ ಸಲಿಸುವಾ ೨
ತಂದೆ ಮಹಿಪತಿ – ಪ್ರಭು ಶರಣೂ ಹೊಕ್ಕವರ ಚಿದಾ |
ನಂದ ಸುಖಾಲಯ ಸೇರಿಸುವಾ ೩

೬೮೮
ಸಾಧಕರೊಳು ಸಿದ್ಧನು |
ಹರಿಪಾದಕಮಲ ಕಾಣಬೇಕೆಂದು ಬಯಸುವವ ಪ
ಭಕ್ತಿಯ ಹಡಗವ ಸಾರಿ ಭವಾಂಬುಧಿ |
ಯುಕ್ತಿಲಿ ದಾಟಿ ಮನೋರಥದಾ |
ಮುಕ್ತಿಯ ಪಟ್ಟಣದಲ್ಲಿಹ ನಿಜಘನಾ |
ಸಕ್ತಿಲಿ ಪಡಕೊಂಡು ಸುಖದಲಿ ಕುಳಿತಾ ೧
ಉಣಲಾಡುವಲ್ಲಿ ಸರ್ವ ಅನುಭವದಲಿ ಹರಿ |
ನೆನೆಯದೆ ಅರ್ಪಣೆಯಾಗುವದು |
ಜನದೊಳು ಅವರವರಂತೆ ಸೋಪಾಧಿಕ |
ಮಣಿಯಂತೆ ತೋರುವ ಸನ್ಮತ ಯೋಗಿ ೨
ಕ್ಷೀರ ನೀರ ಭೇದ ಮಾಡುವ ಹಂಸ ವಿ |
ಚಾರದಿ ಸಾರಾಸಾರವ ತಿಳಿದು |
ಪ್ರಾರಬ್ಧ ಗತಿಯಲಿ ಸ್ವಾನಂದದಿಂದಿಹ |
ಧಾರುಣಿ ಜನರನು ತಾರಿಸುವಾ ೩
ಪುಣ್ಯದ ಫಲದಾಶೆಯಾತಕ ಬಾಲಗ |
ಹೊನ್ನ ತಾ ಗುಂಬೆಂಬ ತ್ಯರನಂದದಿ |
ಇನ್ನು ಯಮನ ಭೀತಿ ಗುಮ್ಮನೆಂ ಬುವ ಪರಿ |
ಚೆನ್ನಾಗಿ ತಿಳಿದಿಹ ನಿದ್ವಂದಿಯೋ ೪
ಬಲ್ಲವಿಕೆಯ ದೋರಿ ಸೊಲ್ಲಿಗೆ ಬಾರದೆ |
ಬೆಲ್ಲಸವಿದ ಮೂಕನಂದದಲಿ |
ಪುಲ್ಲನಾಭನು ಇರುವೆಲ್ಲರೊಳಗೆ ನೋಡಿ |
ನಿಲ್ಲವ ಗುರು ಮಹಿಪತಿ ಪ್ರಭು ಶರಣಾ ೫

೬೮೯
ಸಾಧು ಆದವ ಸಾಧುರ ಬಲ್ಲನೋ |
ಸಾಧು ವೇಷದಿ ಮೆರೆವವ ಸಲ್ಲನೋ ಪ
ಧರಿಯೊಳು ಲೋಕದಿ ಸರೀ |
ಹೊರವಳಿ ನಡತಿಯ ತೋರಿ | ಅವ |
ತೋರಿ ತೋರದಲಿಹನೋ ೧
ಯೋಗಿಯ ಮನಸಿನ ಯೋಗಿ |
ಭೋಗಿಗೆ ಭೋಕ್ತನೂ ಆಗಿ | ಆವ |
ಆಗಿ ಆಗದಲಿಹನೋ ೨
ಗುರುವರ ಮಹಿಪತಿಸ್ವಾಮಿ
ಅರಿತಾ ನಂದದ ಪ್ರೇಮಿ | ಅವ |
ಪ್ರೇಮಿ ಪ್ರೇಮಿಗೆ ವಲಿವನೋ ೩

೬೯೨
ಸಾಧು ಸಂಗವ ಮಾಡಿ ಪ
ಜ್ಞಾನ ಸಾಧನೆಗಳ ಏನ ಬೇಡಿದದೆಲ್ಲಾ |
ತಾನಿದಿರಿಡುವದಿ ನೋಡಿ ೧
ಹವಣಕ ಮನ ತಂದು ನೆವನವೆಲ್ಲ ಬಿಡಿಸಿ |
ಶ್ರವಣ ಮಾಡಿಸುವರು ಕೂಡಿಮ ೨
ತಂದೆ ಮಹಿಪತಿ ನಂದನ ಸಾರಥಿ |
ಬಂದು ಕೂಡುವ ವಡಮೂಡಿ ೩

೬೯೩
ಸಾಧು ಸಂತರಾಶ್ರಯ ಮಾಡಿ |
ಇದೇ ಮಾಡಿ ಹಿತ ನೋಡಿ ಪ
ಅವರ ವಚನಕಾಗಿ ಅಗೋಚರನಾದಾ |
ದೇವ ಬಹನು ಒಡಮೂಡಿ ೧
ಎಡಬಲದಲಿ ರಿದ್ದಿ ಶಿದ್ಧಿ ನಿಂದಿರಲು |
ನೋಡಲು ನುಡಿಸರು ಕೂಡೀ ೨
ಮಹಿಪತಿ ನಂದನು ಸಾರಿದ ನಿಜವಾ |
ಇಹಪರ ಸುಖವ ಸೂರ್ಯಾಡಿ ೩

೬೯೦
ಸಾಧುರ ಪಾದ ಕೂಡು | ಸಾಯಾಸಗಳನೇ ಬಿಡು ಪ
ಸಾಧುರ ಪಾದ ಕೂಡು ಸಾಯಾಸಗಳನೇ ಬಿಡು |
ಸಾಧಿಸುವದು ನೋಡು ಸದ್ಗತಿಯ ಸುಖಾಡು ೧
ತನುವಿಟ್ಟು ಧನವಿಟ್ಟು ಚರಣಕ ಮನಕೊಟ್ಟು |
ಅನುವಾಗಿ ತಿಳಿಗಟ್ಟು ಮದಗರ್ವಗಳ ಬಿಟ್ಟು ೨
ನಿನ್ನಾ ನೀ ತಿಳಿಯಣ್ಣಾ ಮ್ಯಾಲ ದೋರುದ್ಯಾಕ ಬಣ್ಣಾ |
ಇನ್ನಾರೆ ದೆರಿಕಣ್ಣಾ ಆಗದಿರು ಮಸಿಮಣ್ಣಾ ೩
ತನಗ ತಾನೇವೇ ಬಂಧು ತನಗೆ ತಾನೇ ಹಗೆಯೆಂದು |
ವನಜಾಕ್ಷ ಹೇಳಿದುದು ಅನುಮಾನಿಲ್ಲಿದಕಿಂದು ೪
ಇನ್ನೊಂದು ಸಾಧನಿಲ್ಲಾ ಇದರಿಂದಧಿಕವಿಲ್ಲಾ |
ಮನ್ನಿಸಿ ಕೇಳಿರೆಲ್ಲಾ ಮಹಿಪತಿಜನ ಸೊಲ್ಲಾ ೫

೬೯೧
ಸಾಧುರ ಸಂಗವ ಮಾಡೋ ಪ್ರಾಣಿ |
ಸಾಧುರ ಸಂಗಾ ಮಾಡಲು ಯೋಗಾ |
ಸಾಧಿಸಿ ಬಾಹುದು ನೋಡೋ ಪ್ರಾಣಿ ಪ
ಅತಿ ಬಳಲಿಸುವ ತಾಪತ್ರಯದೊಳಗ |
ಮತಿಗಾಣದೆ ನೋಯ ಬ್ಯಾಡೋ ಪ್ರಾಣೀ |
ಮತಿಯುತನಾಗಿ ಭವಖೋರೆ ದಾಟುವ |
ಪಥವಾನರಿತು ಬ್ಯಾಗ ಕೂಡೋ ಪ್ರಾಣೀ ೧
ಕ್ಷೀರ ನೀರ ವಿಭೇದವ ಮಾಡುವ ಮುಕ್ತಾ |
ಹಾರನ ಗುಣ ಭರಣೀ ಮಾಡೋ ಪ್ರಾಣೀ |
ಚಾರು ವಿವೇಕದಿ ಸೇವಿಸಿ ಸಾರಾವ |
ಸಾರಾ ತ್ಯಜಿಸಿ ನಲಿದಾಡೋ ಪ್ರಾಣಿ ೨
ವನಜದೆಲಿಯು ನೀರೊಳಿಹ ಪರಿ ಜನದಲಿ
ಮನವನು ಸಂಸಾರಲಿಡೋ ಪ್ರಾಣೀ
ತನುಧನ ಬೆರಿಯದೆ ಮಹಿಪತಿಸುತ ಪ್ರಭು
ವಿನ ಸ್ತುತಿ ಸ್ತವನವ ಪಾಡೋ ಪ್ರಾಣೀ ೩

೬೯೪
ಸಾಯಸವೇ ವ್ಯರ್ಥಾ | ಆಯೋಗ್ಯಜನ ತಿದ್ದುವ ಕುರ್ತಾ ಪ
ಏನು ಹೇಳಿದರೇನು | ಮನಸಿಗೇ ತುಸು ಬಂತ |
ಅನುದಿನ ಹಾಲವನು ಬೇವಿನ ಮರಗಳಿಗೆರೆದಂತೆ ೧
ಕರಿ ಕಲ್ಲಿನ ಮ್ಯಾಲ ಮೇಘದ ಘನಮಳೆ ಕರೆದರೆ |
ತೊರೆದು ಕಠಿಣತನವಾ ನೆನೆಯುವೆ ಎಂದಿಗೆ ಏನಾರೆ ೨
ಕತ್ತೆಯ ಮರಿ ತೊಳೆದು ಪರಿಪರಿಶೃಂಗರಿಸಿದರಿಂದೆ |
ಉತ್ತಮ ಕುದುರೆಯ ದಶಾಂಶಕ ಬಾಹುದೇ ೩
ಲಳಗಿಯೊಳಗ ಹಿಡಿದು ನಾಯಿ ಬಾಲವ ಹಾಕಿದ ಗುರುತ |
ಸುಲಲಿತ ವಹುದೆಂದು ತೆಗೆದು ನೋಡಲು ಮೊದಲಂತೆ ೪
ಅರವ್ಹಲ್ಲಾ ಮರವ್ಹಲ್ಲಾ ಅರಹು ಮರಹಲಿರುತಿಹುದಲ್ಲಾ |
ಹರಿಯೇ ರಕ್ಷಿಸಬೇಕು ನಿಜ ಮಹಿಪತಿನಂದನ ಸೊಲ್ಲಾ ೫

೬೯೫
ಸಾರವಲ್ಲ ಸಂಸಾರವಿದು ಪ
ತನುವಿನ ಪಾಶವು ವನಿತೆರ ಪಾಶವು |
ಉಣಲುಡುಪಾಶಾ ಹಣಗಳ ಪಾಶವು |
ಮನೆ ಪಶು ಪಾಶಾ ಇನಿತಿಹ ಪಾಶದ |
ಮನುಜಗ ಸುಖವೆ ೧
ಭ್ರಾಂತಿಯ ಮಂದಿರ ಚಿಂತೆಯ ಮಡುವು |
ಪಂಥವು ನರಕದ ಕಂತುವಿನಾಶ್ರಯ |
ಖಂತಿಯ ನೆಲೆಭವ ಜಂತುರ ನೋಡಲು |
ಸಿಂತರ ಬೀಳುವಂತಿನಾ ಜನುಮಾ ೨
ತಾಪತ್ರಯ ನಾನಾ ಪರಿಯಿಂದಲಿ |
ವ್ಯಾಪಿಸಿಕೊಂಡಿಹ ದೀಪರಿ ಭವಣಿ |
ಆ ಪರಗತಿ ನಿನಗಾಪೇಕ್ಷಾದರ |
ನೀ ಪಡಿ ತಂದೆ ಮಹಿಪತಿ ಬೋಧಾ ೩

೬೯೬
ಸಾರವೆಂದು ನಂಬಬ್ಯಾಡವೋ ಸಂಸಾರ
ಸಾರವೆಂದು ನಂಬಬ್ಯಾಡವೋ ಪ
ಸಾರವೆಂದು ನಂಬದೇ ಸಂಸಾರ ಸುಖವೆಲ್ಲ ಅ
ಸಾರವೆಂದು ತಿಳಿದು ಕಂಸಾರಿ ಚರಣ ಸಾರಿರೋ ಅ.ಪ
ಇಂದ್ರಜಾಲ ದೊಡ್ಡವಣ ಗಂಧರ್ವ ಪುರದ ಮಾಟಾ
ಸಾಂದ್ರಜಲ ಪೂರಾ ಛಂದವಿದು ನೋಡಿರ್ಯೋ
ಕನಸಿನಲಿ ಕೆಂಯ್ಯಾ ಬೆಳೆಯ ಘನವಕಂಡು ನೆಚ್ಚಿ ತನ್ನ
ಮನಿಯೊಳಿಹ ಧಾನ್ಯವೆಲ್ಲಾ ಜಿನುಗು ಮಾಡಿದಂದದಿ ೧
ತನುವುತನ್ನನಳಿದರೆ ತನು ಸಂಬಂಧಿಗಳಾರು
ಕ್ಷಣಿಕವಾದಾ ಸತಿಸುತ ಧನದ್ರವ್ಯ ಕಾಣಿರ್ಯೋ
ಮರ್ಕಟವು ಕೀಲುದೆಗೆದು ಪುಕ್ಕಟೆವೆಸಿಕ್ಕಿದಂತೆ
ಅಕ್ಕರದ ಸುಖವೆಲ್ಲಾ ದುಃಖ ರೂಪ ಕಾಣಿರ್ಯೋ ೨
ಕುತ್ತಿನ ಮಡಹು ತಾಪತ್ರಯ ತಾರುಮನೆ
ಮೃತ್ಯುಬಾಯ ತುತ್ತುರೋಗ ಹುತ್ತವಿದು ಕಾಣಿರ್ಯೋ
ಮರಹು ನೀಗಿ ಹರಿಯಭಕ್ತಿ ಬೆರೆದು ನಿತ್ಯರಾಗಿರೆಂದು
ಗುರು ಮಹಿಪತಿ ಭೋದಗರೆದ ವಾಕ್ಯನೋಡಿರ್ಯೋ ೩

ನುಡಿ-೧: ಆನಕ ದುಂದುಭಿ
೬೧
ಸಾರಿರೈಯ್ಯಾ ಜನರು ಗಂಭೀರ ಗುಣನಿಧಿ ಮುಖ್ಯ ಪ್ರಾಣನ ಪ
ರೋಷದಿಲಂಕೆಯವಳಿಸಿ ವಿಭೀಷಣ ನಾಮವೇ ಉಳಿಸಿ ||
ಔಷಧಗಿರಿ ತಂದಿಳಿಸಿ ಕಾಯದಾ ಸೌಮಿತ್ರಿಯ ಪ್ರಾಣವೆನುಳಿಸಿ೧
ಅರಗಿನ ಮನೆಯಿಂದಾ ಐವರನು ಹೊರಡಿಸಿ ತಂದಾ |
ಪುರ ಬೋಧನಕ ಬಂದಾ |
ಸುರರಾ ಕಾಯದಾ ಕರುಣ ದಿಂದಾ ೨
ಹರಿಪರಂ ದೈವೆಂದರಸೀ | ದುರುಳರ ಮತವನು ಪರಿಹರಿಸಿ |
ಹೊರೆದನು ಜಗ ಉದ್ಧರಿಸೀ ಎಂ |
ದೆರಗಿದ ಮಹಿಪತಿ ನಂದನುದ್ಧರಿಸೀ ೩

೭೩೮
ಸಾರೋ ಅಭಿಮಾನೀ ವಾದೀ ಬೋಧ ಬಂದನು ಮಾ |
ಪ್ರಪಂಚ ಗೆಲುವವ ನಾರೆಲಮಾ ನಮ್ಮ |
ಶ್ರೀ ಪತಿ – ಭಕ್ತರು ಕಾಣಿಲಮಾ ಪ
ಎನಗಾರು ಇದಿರಿಲ್ಲ ಸ್ವರಾಜ್ಯದೊಳಗಿಂದು |
ನೀನಾರೋ ಪರದೇಶಿ ಹೇಳಲಮಾ |
ನಾನೆಂಬ ಹಮ್ಮಿನ ಬಿರುದನ ಬಿಡಿಸುವ |
ನಾನೆಂಬ ಹಮ್ಮಿನ ಬಿರುದವ ಬಿಡುಸುವ |
ಜ್ಞಾನ ಶಸ್ತ್ರಧಾರಿ ಬೋದನುಮಾ ೧
ಸರಸಿದ ಭವರುದ್ರ ಇಂದ್ರರ ಬಗೆಯದ |
ನೆರೆ ಕಾಮ ಗೆಲುವವ ರಾರೆಲಮಾ |
ಪರಮ ಭಾಗವತ ಶುಕ ಹನುಮಂತನು
ಮೆರೆವ ಭೀಷ್ಟ ದೇವ ನಲ್ಲೇನುಮಾ ೨
ವೈಕುಂಠದೊಳು ಸನಕಾದಿಕರೊಳು ಹೊಕ್ಕ |
ಆ ಕೋಪ ಕಾನುವ ನಾರೆಲಮಾ |
ಸಾಕಿ ಬೆಳೆಸಿದ ಶಾಂತಿಯ ನೆಲೆಯಿಂದ |
ಪ್ರಖ್ಯಾತ ಕದರಿಯು ಕೇಳಲಮಾ ೩
ಧರಿಯಿತ್ತ ರಾಮಗ ಸ್ಥಳ ವಿಲ್ಲೆಂದರು ಬ್ರಾ |
ಹ್ಮರು ಲೋಭಗೆದ್ದ ವನಾರೆಲಮಾ |
ಮರುಳ ಕೇಳು ಧನ ತೃಣ ಸಮ ಬಗೆದರು |
ಹರಿಶ್ಚಂದ್ರ ಕರ್ಣ ರಲ್ಲೇನು ಮಾ ೪
ಬೆಟ್ಟದಿ ಉಡಿಹಾಕಿ ಕೊಳ್ಳಲು ಹೋದನ |
ಶಿಷ್ಯ ಮೋಹನ ಗೆಲುವ ನಾರೆಲ ಮಾ |
ಮುಟ್ಟಿ ಬೇಡಲುಳಿವ ಮಹನ ತಂದಿಟ್ಟನು |
ಸೃಷ್ಟಿ ಮನುಜ ಚಿಲ್ಹಾಳಲ್ಲೇನು ಮಾ ೫
ಭ್ರಗು ಮುನಿದಕ್ಷನು ಕಾರ್ತೃ-ವೀರ್ಯಾದಿಯ |
ಬಗೆಯದ್ದ ಮದ-ವಳಿ ದಾರೆಲ ಮಾ |
ಜಗ ಹೊಡೆತನವಿದ್ದು ಬಾಗಿ ನಡೆದ ನಮ್ಮ |
ಸುಗುಣ ಜನಕರಾಯ ನಲ್ಲೇನು ಮಾ ೬
ಹುಚ್ಚಾದ ವಶಿಷ್ಟನೊಳು ವಿಶ್ವಾಮಿತ್ರನು |
ಮತ್ಸರಿಲ್ಲದವ ನಾರೆಲ ಮಾ |
ಎಚ್ಚರಿಸಿದ ಸುಯೋಧನಗ ವಿಜಯತನ |
ಸಚ್ಚರಿತ ಧರ್ಮ ನಿಲ್ಲೇನು ಮಾ ೭
ಬಗೆ ಬಗೆ ವಿಷಯ ದುಪಾಯಗಳೆನಗುಂಟು |
ನಿಗದಿಯ ನಡೆನುಡಿ ಕೇಳೆಲ ಮಾ |
ಭಗವದ್ಭಾವ ಸರ್ವ ಭೂತದಿ ನೋಡಲು |
ವಿಗುಣವೆ ಸದ್ಗುಣ ಭಾಸುದ ಮಾ ೮
ನಿನ್ನ ಬಲವ ಕಂಡೆ ಶರಣವ ಹೊಕ್ಕೆನು |
ಎನ್ನ ರಕ್ಷಿಸು ಬೋಧ ಕೇಳೆಲ ಮಾ |
ಸನ್ನುತ ಮಹಿಪತಿ ಸುತ ಪ್ರಭು ನೆಲೆದೋರಿ
ಮನ್ನಿಸಿ ಹೊರೆವನು ಬಾರೆಲಮಾ ೯

೬೯೭
ಸಾವಧನಾಗಿ ಮನುಜಾ | ಕೇಳು | ನಿಜ ಸ್ಥಿತಿಯಾ ಪ
ಕೇಳು ನಿಜ ಸ್ಥಿತಿಯಾ | ಪಡೆದೇನೆಂದರೆ ಗತಿಯಾ |
ಬೀಳದೆ ನೀ ಕವಳದಾರಿಗೆ | ನಂಬು ಗುರು ಮೂರ್ತಿಯಾ ೧
ಗಗನ ಮುರಿದು ಬೀಳಲಿ | ಸಾಗರ ಮೇರೆದಪ್ಪಲಿ |
ಬಾಗದೇ ನೀ ಅನ್ಯದೈವಕ | ಭಾವ ದೃಢ ವಿರಲಿ ೨
ದಾಸರ ಕಂಡರೆ ರಂಗಯ್ಯಾ | ಜಂಗಮ ಕಂಡರೆ ಲಿಂಗಯ್ಯಾ |
ವೇಷಿಯಂತೆ ತಿರುಗಬ್ಯಾಡಾ |
ಹಿಡಿಯೋ ಒಂದೇ ನಿಷ್ಠೆಯಾ ೩
ಕಂಡ ಮಾರ್ಗ ನೋಡದೆ |
ಕಂಡ ಮಾತನಾಡದೆ |
ಗಂಡನೊಬ್ಬನ ಮಾಡದೆ ನಾರಿ | ಪತಿವೃತೆ ಮೆರಿವದೇ ೪
ಎಲ್ಲಿ ಒಂದೇ ನಿಷ್ಠೆಯು | ಅಲ್ಲಿ ಶ್ರೀ ಹರಿ ಕೃಪೆಯು |
ನಿಲ್ಲದೆ ಮಹಿಪತಿ ನಂದನಸ್ವಾಮಿ |
ಇದಿರಿಡುವನು ಸಂಗತಿಯಾ ೫

೫೪೭
ಸಾವಧಾನಾಗಿ ಮಾಡೆಲೋ ಗುರುಭಕ್ತಿ |
ಕಾವಕರುಣಾಳುದೋರಿ ನಿಜ ಮುಕ್ತಿ ಪ
ಗುರುನಾಮ ಸ್ಮರಣೆ ಅನುದಿನಾ |
ಗುರುಮೂರ್ತಿಯ ಮಾಡಿ ನಿಜಧ್ಯಾನಾ |
ಗುರುಚರಣವ ಪೂಜಿಸು ನಿಧಾನಾ |
ಗುರು ನಮನದಿ ಹಾಕಿ ಲೋಟಾಂಗಣಾ ೧
ಗುರುಭಕ್ತರ ಸಂಗವನು ಮಾಡಿ |
ಗುರು ಕರುಣದ ಮಹಿಮೆಯ ಪಾಡಿ |
ಗುರುವಾಕ್ಯ ಪ್ರಸಾದವನು ಬೇಡಿ |
ಗುರು ಅಭಯವ ಕೊಂಡು ನಲಿದಾಡಿ ೨
ಗುರುವಿನಲ್ಲಿ ಹಿಡಿಯದೆ ನರಭಾವಾ |
ಗುರುವಿಗರ್ಪಿಸಿ ತನುಧನ ಮನ ಜೀವಾ |
ಗುರುದಯದಿಗೆಲಿದು ಭವ ಬಂಧನವಾ |
ಗುರುಮಹಿಪತಿ ಬಾಲನಾಗಿರುವಾ ೩

೬೯೮
ಸಿಕ್ಕಲು ನೋಡೇ ಸತ್ಸಂಗ | ಯನ |
ಗಕ್ಕಿತು ಸ್ವಾನುಭವದಂಗ |
ಮಿಕ್ಕಿನವಿಷಯದಿ ಹಂಗಿಲ್ಲಾ | ಒಳ |
ವಕ್ಕಲವಾದನು ಶ್ರೀನಲ್ಲಾ ಪ
ಜ್ಞಾನಾಂಜನವನು ತಂದಿಡಲಿ | ಅ |
ಜ್ಞಾನದ ಕಣ್ಣಿನ ಪರಿ ಬಿಡಲಿ |
ನಾನಾ ಪರಿ ಭಾಸುವ ಕೋಶದಲೀ |
ತಾನೇ ದೋರುವ ಜಗದೀಶಾ ೧
ಭವ ಬಂಧವ ತಿಳಿಯಲು ನೆಲೆಯಾ | ತಾ |
ಅವನಿಲಿ ಶುಕನಳಿ ಕನ್ಯಾಯಾ |
ವಿವರಿಸಿಯನ್ನೊಳಗೆಚ್ಚರಿಸಿತೆ | ನಾ |
ತವಕದಿ ಚಿದ್ಘನದೊಳು ಬೆರೆತೇ ೨
ಏನೆಂದ್ಹೇಳಲಿ ಅಮ್ಮಮ್ಮಾ |
ಯನ್ನಾನಂದದ ಸುಖ | ಸಂಭ್ರಮಾ |
ಶ್ರೀನಿಧಿಗುರು ಮಹಿಪತಿ ಬೋಧಾ | ಸಲೆ |
ತಾ ನಳಿಯಿತು ಕಲ್ಪನೆ ಬಾಧಾ ೩

೩೪೨
ಸಿರಿದೇವ ನಮ್ಮ ನಿದೈವನು ಶರಣರಕ್ಷಕವಾವನು ಪ
ಪಾಲವು ಬೇಡುತ ಹಸುಶಿಶುತಾನತಿ |
ಆಲಯದೊಳುಛಲವಿಡಿದರೆ|
ಕೇಳುತ ದಯದಲಿ ಬಂದು ನೆಗೆದುಕೊಂಡು
ಪಾಲಗಡಲದೊಳಗಿಟ್ಟೀ ಹಾ ೧
ವರದ ಮದದಿ ಭಸ್ಮಾಸುರ ಬೆನ್ನಟ್ಟಿ|ಗಿರಿಜೇಶನ ಪೀಡಿಸುತಿರೇ
ಭರದಿಂದೊದಗಿ ಬಂದು ಮೋಹಕ ರೂಪದಿ|
ದುರುತಳನ ಭಸ್ಮವ ಮಾಡಿದಾ ೨
ಅಖಳ ದೊಳಗೆ ಅರಾರಾಧಿಸುವರು|
ಭಕುತಿಯಂದದಿ ತನೊಲಿವನು
ಪ್ರಕಟಿದಿ ಮಹಿಪತಿ ನಂದನಮುಖದೊಳು
ಸಕಲಚರಿತೆಯನು ನುಡಿಸುವಾ ೩

೫೪೮
ಸುಖದಕ್ಕಿತೇ | ಸುಖದಕ್ಕಿತು ಗುರುದಯ ಲೆಕ್ಕಾ ಪ
ಕಂಡವರ ಮಾತಿಗೆ ಮನವಿಟ್ಟು ಜಗದೊಳು |
ಹಿಂಡದೈವಕ ಬಾಯಿದೆರುತ್ತಿದ್ದೆನೆ |
ಮಂಡಿಯ ಮ್ಯಾಲೆನ್ನಾ ಕರವಿಟ್ಟು ಹೊಳೆವಾ
ಪಿಂಡಾಂಡದಿ ಗಂಡನ ತೋರಿದನಕ್ಕ ೧
ಇಲ್ಲೆಂಬ ಸಂಶಯ ಹೋಯಿತು ಒಳಹೊರ |
ಗೆಲ್ಲೆಲ್ಲಿ ನೋಡಲು ತಾನಾದನೇ |
ಫುಲ್ಲನಾಭನ ಕೂಡಿ ತನುಭಾವ ಮರದು |
ಕೈವಲ್ಯ ಮಂದಿರ ಸಾರಿದೆನಕ್ಕಾ ೨
ಏನ ಹೇಳಲಿ ಆಡು ತಾಡುತಾ ಯಡಹಿನಿ |
ಧಾನವ ಕಂಡಂತಾಯಿತೇ |
ಮಾನುಭಾವರಸಾದ ತಂದೆ ಮಹಿಪತಿ |
ತಾನೊಲಿದೆನ್ನನುದ್ಧರಿಸಿದನಕ್ಕಾ ೩

೫೦೭
ಸುಖಿಯಾದೆನು ಶ್ರೀ ಪಾದಾ ಹೊಂದಿ ಗುರುವಿನಾ ಪ
ಪರಸಕೆ ಕಬ್ಬಿಣ ಸಾರನೆರೆದಂತೆ |
ಸರಿತ ಮಹಾನದಿಯೊಳು ಬೆರೆತಂತೆ |
ನೆರೆ ಕೀಟಕ ಭೃಂಗಿ ಬೆರೆಸಿದಂತೆ ೧
ಬಡವಗ ನಿಧಾನವ ದೊರೆತಂತೆ |
ಪೊಡವಿ ಬೆಳೆಗೆ ಘನ ಮಳೆಗರೆದಂತೇ
ಜಡ ಮತಿಗೇ ಶಾರದೆ ಒಲಿದಂತೆ ೨
ತಂದೆ ಮಹೀಪತಿ ಕಂದಗ ವಲಿದು |
ಛಂದದಿ ಭಕುತಿಯ ದಾರಿಗೆ ತಂದು |
ಬಂದದ ಸಾರ್ಥಕ ಮಾಡಿದೆ ನಿಂದು ೩

೬೯೯
ಸುಡು ಸುಡು ಯಾತರ ಬುದ್ಧಿ ಹರಡುವ ಸಲ್ಲಾ ಪ
ಸಾಧುರ ಮಹುಮೆಯ ಕಂಡವರಂತೆ |
ವಾದಿಸಿ ತಿರುಗುವದಲ್ಲಾ ೧
ಕಾಗೆಯು ಕರ್ರಗೆ ರೂಪದಲ್ಲಿದ್ದರೆ |
ಕೋಗಿಲೆವಾಗುವದಲ್ಲಾ ೨
ಬಕ ಹಂಸನ ಪರಿಯಾದರ ಕ್ಷೀರೋ |
ದಕ ಬೇರಾಗುವದಿಲ್ಲಾ ೩
ನೌಲ ಕಂಡು ಹಕ್ಕಿಯು ಕುಣಿವಂತೆ |
ಹೋಲಿಕಿ ಗುಣ ಬಿಡುಯಲ್ಲಾ ೪
ಮಹಿಪತಿ ನಂದನು ಸಾರಿದ ನೆಚ್ಚರ |
ಸ್ವಹಿತವ ಪಡೆಯಚ್ಚರಾ ೫

೫೪೯
ಸುಮ್ಮನೆ ಗತಿಯ ಬಯಸಿದರಾಹುದೇ |
ಹಮ್ಮ ನೀಗಿ ಕ್ಷಿತಿಯೊಳು ವಮ್ಮನವಾಗಿ ನಿಲ್ಲದೇ ಪ
ಭಕುತಿಯಂಕುರವಿಲ್ಲಾ ಯುಕುತಿ ಸಾಧನವಿಲ್ಲಾ |
ಮುಖದಲಿ ಸ್ತುತಿ ಸ್ತವನಗಳಿಲ್ಲಾ |
ಪ್ರಕಟದಿ ಶೋಡಷ | ಸುಕಲೆಯಾರ್ಚನೆಯಿಲ್ಲಾ |
ಅಕಳಂಕ ದೇವ ನಂಬುಗೆ ದೃಢ ವಿಡಿಯಲಿಲ್ಲಾ ೧
ವೇದ ಪುರಾಣವನು ಓದಿ ಕೇಳಿದರೇನು |
ವಾದಗುಣದಿ ಹಿಂಗಲಿಲ್ಲಾ ತಾನು |
ಸಾಧಿಸಿಕೊಳ್ಳದೇ | ಸಾಧುರ ಬೋಧವನು |
ಗಾರ್ದಭ ಚಂದನ ಹೊತ್ತಂತೆ ಏನಾದರೇನು ೨
ಗುರುಪಾದಕೆರಗದೆ | ಗುರುಮಾರ್ಗವರಿಯದೆ |
ಮೊರೆವಾರು ಅರಿಮದವ ಮುರಿಯದೇ |
ಪರವಸ್ತು ಇದೆಯೆಂದು | ನರಭಾವ ಮರೆಯದೆ |
ಗುರುಮಹಿಪತಿ ಸುತ ಪ್ರಭು ಗುರುತ ದೋರದೇ ೩

೩೪೪
ಸುಮ್ಮನೆ ದೋರೈಯ್ಯಾ | ರಮ್ಮೆಯ ಕರದಲಿ |
ಒಮ್ಮೆಗೆ ಅಗಲದೆ ನಮಿಸಿಕೊಳುತಿಹ ಪಾದಾ ಪ
ಇಳೆಯ ನೆರೆ ಬೇಡುವ ನೆವದಲಿ ಬಂದು ಬಲಿಗುದ್ಧರಿಸೆಂದು |
ಹಲವು ಕಾಲದಿ ಶಿಲೆಯಾದಂಗನೆಗೆ ಸತಿಗತಿ ನೀಡಿದ ಪಾದಾ ೧
ಉರಗಾಶರ ಬರೆ ಉಂಗುಟ ಲೋತ್ತಿನರ ನುಳಹಿದ ಕೀರ್ತಿ |
ಮರುಳ ತನದಿ ಮನ್ನಿಸದ
ಸುಯೋಧನನುರುಳಿಸಿಗೆಡಹಿದಾ ಪಾದಾ ೨
ತಂದೆ ಮಹಿಪತಿ ಪ್ರಭುದಯದಿಂದಲಿ ಎಂದೆಂದು |
ಮುನಿಜನ ನಯನ ಚಕೋರರ ಚಂದಿರವಾಗಿಹ ಪಾದಾ ೩

೭೦೦
ಸುಮ್ಮನೆಲ್ಯದ ತಾ ನೋಡಿ | ನಮ್ಮಯ್ಯನ ಕೃಪೆ |
ಸುಮ್ಮನೆಲ್ಲ್ಯದ ತಾ ನೋಡಿ ವಮ್ಮನಾಗದೇ ಪ
ಅಂದಿಗಿಂದಿಗೇ ಒಂದೆರಡಲ್ಲದೆ |
ಸಂಧಿಸಿ ಬಂದಿಹ ಜನ್ಮಗಳಲ್ಲಿ |
ಕುಂದದೆ ಪುಣ್ಯದ ವೃಂದದ ಪಡೆದಾ |
ನಂದದ ಛಂದದಿ ನಿಂದವರಲ್ಲದೆ ೧
ಗಾಧವ ಸೂಸುವೆ ಸಾಧಕನಾಗಿ |
ಸದರದಲಿ ಗುರು ಬೋಧದ ಲಿಂದಾ |
ಸಾಧಿಸಿ ಸಾಧಿಸಿ ಬೇಧಿಸಿ ತನ್ನೊಳು |
ವೇದಾಂತರಿ-ತಿಹ ಸಾಧುರಿಗಲ್ಲದೆ ೨
ಬಂದದ ನುಂಡು ಬಾರದ ಬಯಸದೆ |
ನಿಂದಿಸಿ ಲೊಂದಿಸಿ ಕುಂದದೆ ಹಿಗ್ಗದೆ |
ತಂದೆ ಮಹಿಪತಿ ನಂದನ ನುಡಿ ನಿಜ |
ವೆಂದನುಭವಕೆ ತಂದವಗಲ್ಲದೇ ೩

೩೩೪
ಸ್ಮರಿಸು ಮನವೇ ನೀ ಪೂರ್ಣ ಕರುಣಾಸಾಗರ ದೇವನ್ನಾ ಪ
ದಾವ ನಿಗಮಾಗಮ ಪೌರಣಿಕ ತಿಳಿಯದು ಮಹಿಮೆದಾವನ್ನ
ಅವನ ನಖಕಾಂತಿಗೆ ಸರಿ ಪೊಲಿರು ಮಿತ್ರೆಂದು ಹವ್ಯವಾಹನ್ನಾ ೧
ಭಕ್ತಿ ಭಾವಕ ಶಿಲ್ಕಅನುದಿನ ಬಲಿಬಾಗಿಲ ಕಾಯಿದಿಹನಾ|
ಯುಕ್ತಿಲಿ ಬೋಧಿಸಿ ಉದ್ದವನನು
ಶಾಪದಿ ವಿರಹಿತ ಮಾಡಿದನಾ ೨
ರಣದಲಿ ಅರ್ಜನ ಸ್ಯಾಂದನ ಕುದುರೆಗೆ
ಹೋ ಹೋ ಎಂದು ಬಯಿವನಾ|
ಎಣಿಕೆ ಇಲ್ಲದೆ ಪರಿಪರಿ ಯಿಂದಲಿ ಅಡಿಗಡಿಗೆ ರಕ್ಷಿಪನ್ನಾ ೩
ಭಗದತ್ತನು ಗಜವೇರಿ ಬಾಣವ ಬಿಡಲಾಗಳೆ ಉರುವಾತನ್ನಾ |
ಗೋಪಾಲರ ರಕ್ಷಿಸಲೋಸುಗ ಬೆರಳಲಿ ಗಿರಿ ಎತ್ತಿದನ್ನಾ ೪
ಏಳದೆ ಗರ್ವದಿ ಕುಳಿತರೆ ದುರ್ಯೋಧನನ ಕೆಳಗೆಡಹಿದನ್ನಾ|
ಶ್ರೀಲಲನೆಯ ಮನೋಭಾವನೆ ಪೂರಿತ
ಮಹಿಪತಿ ನಂದನ ಜೀವನಾ ೫

೩೩೩
ಸ್ಮರಿಸೆನ್ನ ಮನವೇ ಯಾದವ ರಾಯನಾ|
ಸರಸಿಜೊವನುತ ಭಕುತರ ಪ್ರೀಯನಾ ಪ
ವರನಿಗ ಮೋಯಿದವನಾ ಶೀಳಿ ಎಳಹಿದವನಾ|
ಶರಧಿ ಮಥನ ಗೋಸುಗನ ಪೊತ್ತನಾ
ಧರಣಿಯಾ ತನ್ನ ಕೋರೆ ದಾಡಿಲಿರಿಸಿದಿಹನಾ|
ಶರಣ ಪ್ರಲ್ಹಾದನ ಸುಸ್ಮರಣೆ ಗೊಲಿದನಾ೧
ಭೂಸುರೋತ್ತಮನಾಗಿ ದಾನವ ಬೇಡಿದನಾ|
ಹೇಸದೇ ಕ್ಷತ್ರಿಯರ ಕುಲ ಕೊಂದನಾ|
ವಾಸು-ಕ್ಯಾ ಭರಣನ ಧನುವ ಮುರಿದವನಾ|
ವಾಸವಾತ್ಮಜ ಮಿತ್ರ ದೇವಕಿ ಕಂದನಾ೨
ಪತಿವೃತೆ ನಾರಿಯರ ವೃತಭಂಗ ಮಾಡಿದನಾ|
ಸಿತ ಹಯವೇರಿದ ಶ್ರೀ ಜಗದೀಶನಾ|
ಪತಿತ ಪಾವನನಾದಾ ಅನಂತಾವತಾರನ|
ನುತ ಗುರು ಮಹಿಪತಿ ನಂದನ ಪ್ರೀನಾ೩

೭೫೭
ಸ್ಮರಿಸೆಲವೋ ಸ್ಮರಿಸೆಲವೋ ಮನವೇ |
ನಿರುತದಿ ಗುರುಮಹೀಪತಿ ಪಾದಾ ಪ
ಆದ್ಯಾತ್ಮದಘನ ವಿದ್ಯೆಯ ಸಾಧಿಸಿ |
ಸಿದ್ಧರ ನಡುವೆ ಪ್ರಸಿದ್ಧರಾದವರ ೧
ನೆಟ್ಟನೆ ಶರಣರ ಪುಟ್ಟಿಸಿರಧಿಕಾ |
ಬಿಟ್ಟುಪದೇಶವ ಕೊಟ್ಟು ಸಾಕುವರಾ ೨
ಧಾರುಣಿಯೊಳು ಸಂಸಾರ ಮಾಡಿದರ |
ಸಾರಸಜಲದಂತೆ ರಚಿಸಿದರಾ ೩
ಯೋಗಧಾರುಣದಿ ಸಾಗಿಪದಿನಗಳು |
ಭಾಗವತಾಗ್ರಣಿ ಎನಿಪಶ್ರೀಗುರುಪಾದಾ೪
ವಿತ್ತಜನರು ತಂದಿತ್ತರೆ ಹಿಡಿಯದೆ |
ನಿತ್ಯವ್ಯಯವ ಪವಡಿಸುತಿಹರವರಾ೫
ಯುಕ್ತದಿ ವಿಷಯಾಸಕ್ತಿಯತ್ಯಜಿಸಿ | ವಿ
ರಕ್ತಿ ಬೆಳಿಸಿ ಸುಮುಕ್ತಿ ಪಡೆದವರಾ ೬
ಸ್ವಸ್ಥದಿ ನಾಲ್ಕು ಅವಸ್ಥೆಯ ಮೀರಿ | ಸ
ಮಸ್ತರಲಿ ನಿಜ ವಸ್ತು ಕಂಡವರಾ೭
ಕಾಖಂಡಕಿ ಸ್ಥಳ ಶ್ರೀಕರವಂದ್ಯೆ | ನಿ
ರಾಕರಿಸದೆ ಅಂಗೀಕರಿಸಿದರಾ ೮
ಎಂದೆಂದಿಗೂ ಹೊರಗೊಂದಿನ ಹೋಗದೆ |
ಮಂದಿರದೊಳಗಾನಂದದಲಿಹರಾ೯
ತಾಪತೃಯದಾ ಭವಪರಿಹರಿಸುತ |
ತಾಪೋರೆದನು ಗುರು ಶ್ರೀಪತಿಗುರುಪಾದಾ ೧೦
ಅಂಕಿತ-ಗುರುಶ್ರೀಪತಿ

೪೨
ಸ್ಮರಿಸೋ ಎಲೆ ಮನವೇ | ಜಗದಯ್ಯನಾ |
ಸ್ಮರಿಸೋ ಶಿವಸುಖ ಬೆರಿಸೊ ಭವದಿಂದ |
ತರಿಸೊ ಗಿರಿಜಾ ರಮಣನ ಪ
ಫಣಿಯಾಗಣ್ಣಿ ನೋರಣಿಯಾ | ಸದಮಲ |
ಫಣಿಯಾ ಭರಣ ಭೂಷಣಿಯಾ | ಮುಕುತಿಯಾ |
ಹೋಣೆಯಾ ಕೊಡಲಿಕ್ಕೆ ದಣಿಯಾನೆಂದು ಬೇಡುವರಾ ೧
ಒಡಿಯನೆನ್ನದೆ ನಡಿಯಾ | ಅಂಗಜನಾ |
ಹುಡಿಯಾ ಮಾಡಿದ ನಡಿಯಾ ಶರಣೆಂದು |
ಪಿಡಿಯಾಲವರಿಗೆ ಪಡಿಯಾ | ನಿತ್ತು ಹೊರೆವನಾ ೨
ಯತಿಯಾ ಆನಂದ ಸ್ಥಿತಿಯಾ | ಪುಣ್ಯ |
ಮೂರುತಿಯಾ ವಿಮಲ ಕೀರುತಿಯಾ | ಗುರುಮಹೀ |
ಪತಿಯಾ ನಂದನ ಸಾರಥಿಯಾನಾದಿ ಮಹಿಮನಾ೩

೬೨
ಹನುಮಾ ಹನುಮಾಯನ್ನೆ ಉದ್ಧರಿಸುವೆ ನೀ ಜನುಮಾ ಪ
ಅಂಜನಿದೇವಿ ದಿವ್ಯಕುಮಾರಾ | ಪ್ರ | ಭಂಜನ
ಪೂರ್ಣಾವತಾರಾ || ಜನ |
ರಂಜನ ದೇವ ನಿರಂಜನ ತೋರಿಪ | ಕಂಜಿನಯನ
ಎನ್ನ ಗುರುವೇ ೧
ಸಿರಿರಾಮ ಪದಾಂಭುಜ ಭೃಂಗಾ | ಕರುಣಾಲಯ
ಸರ್ವಾಂತರಂಗಾ |
ಸುರವರನರ ಕಿನ್ನರ ಫಣವರ ಯಕ್ಷ ವಿಧ್ಯಾಧರ ವಂದಿತನೇ ೨
ಬಂದು ತೋರಿದಾ ಮೂರವತಾರಿ | ದೈತ್ಯ |
ವೃಂದವನಾಳಿ ಕುಠಾರಿ |
ಛಂದದಿಂದಲಿ ಮಹಿಪತಿ ನಂದನ ಸಲಹುವಾನಂದದ
ಮಾರುತಿ ಮೂರುತಿಯೇ ೩

೫೦೮
ಹಬ್ಬವನು ಮಾಡಿದನು ಗುರುರಾಯ
ಇಬ್ಬರೊಡಗೂಡಿಸುವದಿಂಗಿತದ ನೆಲೆಯರಿದು ಪ
ಶ್ರವಣದಕ್ಷತೆ ಕೊಟ್ಟು ಪರಮಾರ್ಥ ದೌತಣದಿ |
ಅವನಿಯೊಳು ಪರಮ ಕರುಣ ಸ್ನೇಹದಿ |
ಸುವಿವೇಕ ವೈರಾಗ್ಯ ವೆಂಬ ಜಲ ಸಮಬೆರಸಿ |
ತವಕದಲಿ ಮಜ್ಜನವ ಗೈಸಿದನು ಮುದದಿ ೧
ಸ್ಥಿರ ಚಿತ್ತ ದಾಸನದಿ ಕುಳ್ಳಿರಿಸಿ ಸದ್ಭಾವ
ಮೆರೆವ ಹೊಂದಳಿಯೊಳು ಬೋಧ ಸುಧೆಯಾ
ಪರಿ ಪರಿಯಲುಣಿಸಿ ಅಪರೋಕ್ಷದನುಭವ ಕಲಶ
ನೆರೆವಿಡಿಸಿ ಕೈದೊಳಿಸಿ ಭವದೆಂಜಲ ಗೆಳಸೀ ೨
ಸಹಜಾವಸ್ಥೆ ತಾಂಬೂಲವನು ಕರದಿತ್ತು |
ವಿಹರಿಸುತ ನಿರ್ವಿಕಲ್ಪ ಸಮಾಧಿಯಾ |
ವಿಹಿತದುಡುಗೊರೆ ಹೆಗಲಲಿಪೊದಿಸಿ ಪಾಲಿಸಿದ |
ಮಹಿಪತಿ ಸ್ವಾಮಿ ನಂದನಗ ದಯ ಬೀರಿ ೩

೩೫೦
ಹರಿ ನೀನೆವೆ ಸರ್ವ ಚೇತನ ಧೃತಿಯ ಸಕಲವೇ |
ಧರಿಯೊಳು ನಾನೆಂಬುವ ಗುಣವೇ
ವರಶೃತಿ ನೇಹನಾ ನಾಸ್ತಿಯಂದು |
ಸಾರುವದಿದಕನು ಮಾನವೇ ಪ
ಬಯಲೊಳು ಪುಟ್ಟದ ಪರಿಪರಿನಾದದ |
ಹೊಯಿಲಿನ ಮಂಜುಳ ಶಬ್ದವಾ |
ಬಯಲದಿ ಕೇಳಿತಲ್ಲಿನವ ಹೊಂದುವಾ |
ಬಯಲಾಧಾರ ನೀನಲ್ಲವೇ ೧
ಸೃಷ್ಟಿಯೊಳಗ ಕಮನೀಯ ಲಾವಣ್ಯದು |
ತ್ರ‍ಕಷ್ಟತರ ಮೋಹನ ರೂಪವಾ |
ದೃಷ್ಟಿಲಿ ಕಾಣುತ ಸುಖದೋಳಗಾಗುವ |
ದೃಷ್ಟಸ್ವ ತೇಜ ನೀನಲ್ಲವೆ ೨
ಕುಂದ ಕಮಲ ಪಾರಿಜಾತ ಮಲ್ಲಿಗೆ ಮಕ |
ರಂಗದೊಳಗ ಸುಳಿದಾಡುತ |
ಮಂದ ಮಾರುತ ಬಂದು ಸೋಕಲು ನಲಿವಾ |
ಸುಂದರ ರೂಪನು ನೀನಲ್ಲವೆ ೩
ರಸಭರಿತ ಬೇರೆ ಬೇರೆ ದೋರುತಲಿಹಾ |
ಅಸಮತೆರೆದ ಪದರ್ಥವನು |
ರಸನಾದಿ ಕೊಂಡು ಸವಿಗೆ ತಲೆದೂಗುವಾ |
ಕುಶಲ ಭೋಕ್ತನುನೀನಲ್ಲವೇ ೪
ಚೆನ್ನಾಗಿ ಕಸ್ತೂರಿ ಪುಳಕವ ಕೂಡಿಸಿ |
ಪನ್ನೀರವನು ಮೇಲೆದಳಿದು |
ಉನ್ನತ ಚಂದನ ಲೇಪಿಸೆ ಸುವಾ |
ಸನೆ ಕೊಂಬುವ ನೀನಲ್ಲವೇ ೫
ಅಷ್ಟದಳ ಕಮಲದಳ ಗದ್ದುಗಿಯೊಳು ನಿಂದು |
ಅಷ್ಟಮ ಸ್ಥಳಗಳ ಮುಟ್ಟಿಸಿ |
ನೆಟ್ಟಿನೆ ಮುಖದೊಳು ಸವಿಸವಿ ಮಾತವ |
ಸ್ಪಷ್ಟದಿ ನುಡಿಪ ನೀನಲ್ಲವೇ ೬
ಭಜಕನ ಮಾಡಿ ಸೌಮ್ಯತನದಿ ಕರದಿಂದ |
ರಜತಮ ವಿರಹಿತ ದಾನವನಾ |
ದ್ವಿಜರಿಗೆ ಕುಡಿಸಿ ಅದರಶ್ರಯ ಕೊಂಬುವ |
ನಿಜಶಯ ಕರ್ತನು ನೀನಲ್ಲವೇ ೭
ಪವನಭ್ರವ ನಡೆಸುವಪರಿಚರಣದಿ |
ಜವದಿ ಸುಕೇತ್ರ ಯಾತ್ರೆಯಾ |
ಬವರದಿ ಮಾಡಿ ಪುಣ್ಯ ಅರ್ಪಿಸಿ ಕೊಂಬಾ |
ಭುವನ ಪಾವನ ನೀನಲ್ಲವೇ ೮
ರಸನುಂಡು ಕಬ್ಬ ಹಿಪ್ಪಿಯುಗುಳುವಂತೆ |
ಅಸಮತೆ ರಚಿಸಿ ಸರ್ವಾಂಗರ |
ರಸವಿತ್ತು ಮಲವಘ ಮುಖದಿಂದ ಪವನದಿ |
ಬಿಡಸುವನು ನೀನಲ್ಲವೇ ೯
ಅಂಗನೆಯರ ಧೃಡಾಲಿಂಗನವನು ಮನ|
ದಿಂಗಿತದಂದದಿ ಗೈಯ್ಯಲು |
ಅಂಗಸಂಗದ ಲೋದಗುವ ಭೋಗಿಪ |
ಅಂಗಜ ಜನಕ ನೀನಲ್ಲವೇ ೧೦
ಯಂತ್ರವಾಹಕ ನಂದದಿ ಜಗನಿರ್ಮಿಸಿ |
ಚಿತ್ರ ವಿಚಿತ್ರವ ದೋರುವಾ |
ಅಂತ್ರ ಬಾಹ್ಯವ್ಯಾಪಕ ಮಹಿಪತಿ ಸುತ ಪ್ರಭು |
ಸೂತ್ರಧಾರಿ ನೀನಲ್ಲವೆ ೧೧

೩೫೨
ಹರಿ ಪರಮಾನಂದಾ ಗೋವಿಂದಾ ಪ
ಸುರಜನ ಪಾಲನ ಅಸುರ ವಿದಾರಣ |
ವರಯದು ಕುಲನಿಧಿ ಚಂದ್ರಾ ೧
ಅಜಮಿಳ ತಾರಣ ಅಹಲ್ಯೋದ್ಧಾರಣ |
ಅಜಭವನನುತ ಶ್ರೀ ಮುಕುಂದಾ ೨
ಮಹಿಪತಿ ನಂದನ ಅಹಿತ ಸಂಹಾರಣ |
ಸ್ವಹಿತದಾಯಕ ಗೋಪೀ ಕಂದಾ ೩

೩೫೩
ಹರಿ ಭಜನೆಯ ಮಾಡು ಮನವೇ ಪ
ಚರಿತವ ಕೇಳಿ ಹರುಷದಿ ಬಾಳೀ |
ಸ್ಮರಿಸುತ ಜಿಹ್ವದಿ ವನಮಾಲಿ ಮನವೇ ೧
ತನುಧನವಾಣೀ ಇಂದ್ರಿಯ ಶ್ರೇಣಿ |
ಘನಸೇವೆಲಿಟ್ಟು ಕಮಲ ಪಾಣಿ ಮನವೇ ೨
ಗುರುಮಹಿಪತಿ ಪ್ರಭು ಧರಿಯೊಳಿದು |
ಇಹಪರ ಗತಿಮನವೇ ೩

೩೬೦
ಹರಿ ಲೀಲೆಯ ನೋಡೀ ಹರಿಯಾಡುವದೀ ಪ
ಹೊಕ್ಕಳ ಹೂವಿಲಿ ಬೊಮ್ಮನ ಪಡೆದವ |
ಅಕ್ಕರದಲಿ ನಂದನ ಮಗನಾದ ೧
ವಶವಲ್ಲದ ಪಾಲ್ಗಡಲಿನ ಮುನಿಯವ |
ಯಶೋದೆಯ ಮೊಲೆವಾಲುಂಬುವ ೨
ಮಹಿಪತಿ ಸುತ ಪ್ರಭು ಚರಿತೆಯ ಪಾಡಲು |
ಇಹಪರ ಸುಖವನು ನೀಡುವದೀ ೩

೩೬೧
ಹರಿ ವಿಮುಖನಾದ ಮನುಜಶ್ವಪಚ ಶ್ರೇಷ್ಠನು |
ಹರಿವಲುಮೆ ಕಂಡ ನರನು ಪರಮ ಶಿಷ್ಠನು ಪ
ಹರಿಯ ಕಾಣದ ಕಣ್ಣು ನೌಲಗರಿಯಾ ಕಣ್ಣವು |
ಹರಿಯ ಕಥೆ ಕೇಳದ ಶ್ರವಣಾ ಬಧಿರ ಶ್ರವಣವು |
ಹರಿಯ ನಿರ್ಮಾಲ್ಯ ಕೊಳದ ಘ್ರಾಣ ಲೆತ್ತಿ ಘ್ರಾಣವು |
ಹರಿಗೆರಗದಂಗ ತ್ರಾಣ ಬೆಚ್ಚಿನ ತ್ರಾಣವು ೧
ಹರಿಯನ್ನದ ಮುಖವು ರಾಜ ಬಿರದ ಮುಖಗಳು |
ಹರಿಸೇವೆ ಮಾಡದ ಕೈಯ್ಯಾ ಕೀಲಿ ಕೈಗಳು |
ಹರಿಯಾತ್ರೆ ಇಲ್ಲದ ಕಾಲು ಹೊರಸಿನ ಕಾಲ್ಗಳು |
ಹರಿ ವಿಷಯ ವಿಲ್ಲದ ವಿದ್ಯೆದೊಂಬನ ವಿದ್ಯಗಳು ೨
ಹರಿಗರ್ಪಣೆ ಅಲ್ಲದಯಜ್ಞ ವೇಷಿಕ ಕರ್ಮವು |
ಬರುದೇ ಮೌನ ವೃತಗಳೆಲ್ಲ ಬಕನ ಧರ್ಮವು |
ಹರಿಭಕ್ತಿರಹಿತ ತಪದಿ ಬಿಡದು ಜನ್ಮವು |
ಗುರು ಮಹಿಪತಿಸ್ವಾಮಿ ಭೋಧಿಸಿದನು ಮರ್ಮವು ೩

೩೬೨
ಹರಿ ಹರಿ ಎನ್ನಬಾರದೇ ಮನವೇ ನೀನು ಪ
ಕಂಡವರಾ ಬಿಡ ಮಾತುಗಳಾಡುತ |
ಭಂಡತನದಿ ಫಲವೇನು ೧
ಊರಗುದ್ದಲಿ ಕೊಂಡು ನಾಡಗಾವಲಿಯಾ |
ದಾರಿ ತಿದ್ದುವರೇ ತಾನು ೨
ಮಹಿಪತಿ ಸುತ ಪ್ರಭು ನಾಮವ ನೆನೆದರೆ |
ಇಹ ಪರ ಸುಖಕರ ಧೇನು ೩

೩೬೪
ಹರಿ ಹರಿ ಗೋವಿಂದ ಯನಬಾರದೇ ಪ್ರಾಣಿ ಪ
ಹರಿ ಹರಿ ಗೋವಿಂದಯನಲು ಭಕುತಿಯಲಿ |
ಹರಿಸುವ ಪಾಪೌಘವನು ಸಾರಂಗ ಪಾಣೀ ೧
ವೃತ ತಪ ಸಾಧನದಿಂದಲೀ ನಿಲುಕದ ನಿಜಗತಿಯಾ|
ಕ್ಷೀತಿಯೋಳು ಸುಲಭದಿ ಕೊಡುವನು ದೀನಾಭಿಮಾನಿ ೨
ತಂದೆ ಮಹಿಪತಿ ಕಂದಗ ಸಾರಿದ ಯಚ್ಚರ ನೀ |
ಛಂದದಿ ಇಹಪರ ನೀವದು ಯದುರಾಜ ಸ್ಮರಣೀ ೩

೩೬೫
ಹರಿ ಹರಿ ತಾರಿಸೆನ್ನ ಸಹಕಾರಿ | ದಯಬೀರಿ |
ಚರಣ ವಾರಿಜವ ತೋರಿ | ಸಿರಿ ಮನೋಹಾರಿ |
ದಾನವಾರಿ ಶೌರಿ |
ನರಹರಿ ಮರೆಯದೆ ಹೊರಿ ಮನ ಹರಿವಾರು |
ಆರಿ ಸೆರೆಸೇರಿ ಬಳಲುತಲಿದೇ ಪರಿ ಪರಿ ೧
ಸ್ಪುರಿತಾ ಚಕ್ರಗೋಗದಾಬ್ಜ ಭರಿತಾ |
ಯುಧನಿರುತಾ | ಶೋಭಿತಾ |
ಚತುರ್ಭುಜದರ್ತಾತ್ವರಿ ತಾ | ಪಡೆದೇ ನಿರ್ಜರ ಸರಿತಾ |
ಗುರುತದನವರತ ದಲರಿತರ ದುರಿತಪ |
ಹರಿ ಚಿದಾನಂದ ಭರಿತ ಸುಚರಿತಾ ೨
ಪಡೆಗಣ್ಣ ವಾಣೀಶ ಸನ್ನುತ ಮಹಿಪತಿ |
ಅಣುಗನೊಡಿಯಾ ಫಣಿವರ ಶಾಯೀ |
ಎಣೆಗಾಣದಗಣಿತ | ಗುಣಗಣ ಮಣಿಖಣಿ |
ಅಣುರೇಣು ತೃಣಕಣ ವ್ಯಾಪಕ ಪೂರಣ ೩

೩೬೬
ಹರಿ ಹರಿ ಯನ್ನಿರೋ |
ಹರಿ ಹರಿಯಂದು ಸ್ಮರಣಗೆ | ತಂದು ಪರಗತಿ ಪಡೆಯಿರೋ ಪ
ಸಾಧಾಕಗೆರಗೀ ಬೋಧಕವದಗೀ ಭೇದಿಸಿ ನಿಮ್ಮೊಳು ತಿರುಗಿ |
ಸಾಧಕನಾಗಿ ಕ್ರೋಧಕ ಬಾಗಿ ವಾದ ವಿವಾದವ ನೀಗಿ ೧
ಎಚ್ಚರ ವಿಡಿದು ಮತ್ಸರ ಕಡಿದು ತುಚ್ಛರ ಸಂಗದಿ ಸಿಡಿದು |
ಮೆಚ್ಚುದು ನುಡಿದು ನಿಚ್ಚಟ ಜಡಿದು ಮೆಚ್ಚಿನ ಭಕ್ತಿಯ ಪಡೆದು ೨
ಸ್ವಸಿತಕ ನೋಡಿ ವಿಹಿತಿದೆ ನೋಡೀ
ಮಹಿಪತಿಸುತ ಪ್ರಭುಕೂಡಿ |
ಕುಹಕವು ಬ್ಯಾಡಿ ಮಹಿಮೆಯ ಪಾಡೀ
ಇಹಪರಿ ಸುಖವ ಸೂರ್ಯಾಡಿ ೩

೩೬೭
ಹರಿ ಹರಿ ಹರಿ ಹರಿಯಂದು ನೆನೆದವನೆ ಧನ್ಯ |
ಹರಿಯ ಮರದವನೇ ಮೂರು ಲೋಕದೋಳಾಮಾನ್ಯ ಪ
ಹರಿಯ ಬಲಗೊಂಡಾ ಪ್ರಹ್ಲಾದಾ ಸುಖಿಯಾದಾ |
ಹರಿಯ ಕೂಡ ಮರೆತು ಹಿರಣ್ಯಕನು ದುಃಖಿಯಾದಾ ೧
ಹರಿಶರಣನಾಗಿ ವಿಭೀಷಣನು ನೆಲೆಗೊಂಡಾ |
ಹರಿಗೆ ಬಾಗದವೆ ದಶಾನನನು ಕಲುಷವುಂಡಾ ೨
ಹರಿಯ ನಂಬಿದ ಪಾಂಡವರು ಕೀರ್ತಿ ಧರಿಸಿದರು |
ಹರಿಯನ್ನದೆ ವ್ಯರ್ಥ ಕೆಟ್ಟರು ನೋಡು ಕೌರವರು ೩
ಗುರು ಮಹಿಪತಿ ಸ್ವಾಮಿ ಭಕ್ತ ಸಹಕಾರಿ |
ದುರುಳ ದುರ್ಮಾರ್ಗದಲಿ ನಡೆದ ದುಷ್ಟ ಜನವಿದಾರಿ ೪

೩೬೯
ಹರಿ ಹರಿ ಹರೀ ಎನ್ನಿ | ಮನದೊಳು |
ಸ್ಮರಣೆಗೆ ಕರೆತನ್ನಿ | ಪ
ನಂದನ ಕಂದ ಮುಕುಂದನು ಎನ್ನಿ |
ಇಂದಿರೆ ರಮಣ ಗೋವಿಂದನು ಎನ್ನಿ ೧
ಅಂಬುಧಿವಾಸ ವಿಶ್ವಂಭರನೆನ್ನಿ |
ನಂಬಿದ ಸುಜನ ಕುಟುಂಬಿಯೆ ಎನ್ನಿ ೨
ದುರ್ಧರ ದಾನವ ಮರ್ದನ ಎನ್ನಿ |
ಸ್ಪರ್ಧಾಮ ಪತಿಜಯ ವರ್ದನೆ ಎನ್ನಿ ೩
ತೃಪ್ತನು ನಿತ್ಯಹಿ ಸುಪ್ತನು ಎನ್ನಿ |
ಕ್ಷಿಪ್ತನೆನಿಪ ನಿರ್ಲಿಪ್ತನು ಎನ್ನಿ ೪
ಗುರು ಮಹಿಪತಿ ಪ್ರಭು ಅರಿಧೃತ ನೆನ್ನಿ |
ಗರುಡ ಅಜಹರಸುತನೆನ್ನಿ ೫

೩೬೮
ಹರಿ ಹರಿಯೆಂದು ಸ್ಮರಿಸೆಲೋ ಪ್ರಾಣಿ ಪ
ಹರಿ ಹರಿ ಯೆಂದು ಸ್ಮರಿಸೆಲೋ ಪ್ರಾಣೀ |
ಹರಿಸುವ ಬಂಧ ಸಾರಂಗ ಪಾಣಿ ೧
ನರಜನ್ಮದಲಿ ಬಂದು ನೀ ಮುಂದುಗಾಣೀ |
ಮರೆದು ತನಗ ತನ್ನ ಮಾಡುವರೇ ಹಾನಿ ೨
ತರುಣೋಪಾಯ ದೋರುವ ಮೊರೆಹೊಕ್ಕರೆ ನೀ |
ಗುರುಮಹಿಪತಿ ಸ್ವಾಮಿ ನಿಜ ಸುಖದಾನಿ ೩

೩೪೬
ಹರಿಕೃಪೆಯೋಗ್ಯ ಮುಮುಕ್ಷನು
ಧರಿಯೊಳು ಕಾಂಬ ಪರೋಕ್ಷನು ಪ
ಹಿಂದಿನ ಪುಣ್ಯದಿ ಬಂದೆನೈ ದೇಹದಿ
ಮುಂದಾವಗತಿಯಂದು ಮುಮುಕ್ಷನು
ನೊಂದು ಮನದಿ ಪಶ್ಚಾತ್ತಾಪ ವಿರಕ್ತಿಯ
ಹೊಂದಿದ ದಡದಲಿ ಮುಮುಕ್ಷನು
ನಿಂದು ವಿವೇಕದಿ ಪರಮ ಶುಭೇಚ್ಛವ
ಛಂದದಿ ಹಿಡಿವನು ಮುಮುಕ್ಷನು
ಇಂದಿರೆ ಪತಿಗೋವಿಂದ ಮುಕ್ಕುಂದ ಸಲ
ಹೆಂದು ಮೊರೆಯಿಡುವ ಮುಮುಕ್ಷನು ೧
ಅಷ್ಟಮದ ಮುರಿದು ಆರರಿಗಳ
ಇಟ್ಟಣಿ ಗಿಡಿಸುವ ಮುಮುಕ್ಷನು
ದುಷ್ಟತನ ಬಿಡಿಸಿ ಮನನಿನ ಮಲ್ಲನೆ
ಕಟ್ಟಲೆಳಿರಿಸುವ ಮುಮುಕ್ಷನು
ನಿಷ್ಠೆಯಿಂದಲಿ ಗುರುಚರಣ ವಭಕುತಿಲಿ
ಮುಟ್ಟಿಭಜಿಸುವನು ಮುಮುಕ್ಷನು
ಇಷ್ಟಸ್ವಧರ್ಮಪಕರ್ಮಗಳನ್ನು ಕಾಮ್ಯವ
ಬಿಟ್ಟು ನಡೆಸುತಿಹ ಮುಮುಕ್ಷನು ೨

೩೪೭
ಹರಿದಾಸನವನೇ ನೋಡಿ|
ಬರೇ ವೇಷ ದೋರಲ ಬೇಡಿ ಪ
ಒಂದರ ಘಳಗೆಯ ಕುಂದದಿ ಕಳೆಯಾ|ಮು|
ಕುಂದನ ನಾಮವ ಛಂದದಲಿಹ ೧
ಅನ್ಯರ ದೂಷಿಸಿ ತನ್ನನೇ ಹೊಗಳನು|
ಸಣ್ಣ ದೊಟ್ಟದರಲಿ ಘನ್ನರಿತಿಹ ೨
ಹುಲ್ಲ ಮನುಜರಿಗೆ ಹಲ್ಲವದೆರಿಯದೆ|
ಫುಲ್ಲನಾಭನಪದದಲಿಹ ಮನ ೩
ಮುಂದಿನ ಹಾನಿಯು ಇಂದಿವೆ ತೋರಲಿ|
ಮುಂದಿಟ್ಟಟಡಿಯನು ಹಿಂದಕೆಳೆಯ ೪
ನುಡಿವದು ಸಲಭ ನಡೆವುದು ದುರ್ಲಭ|
ನಡೆನುಡಿಯಲಿ ಸಮಧೃಡಗಂಡಿಹ ೫
ಹಂಗವಳಿದು ಸತ್ಸಂಗದಿ ಶ್ರವಣದಿ|
ಕಂಗಳ ಸಿರಿಸುಖ ಮಂಗಳಲಿಹ ೬
ತಂದೆ ಮಹಿಪತಿ ನಂದನ ಪ್ರಭುದಯ|
ದಿಂದ ಭವಾಲಯ ಸಂದ ಜರಿದ ೭

೩೫೧
ಹರಿಪಾದವ ನಂಬಿರೋ | ಮನುಜರೆಲ್ಲ |
ಹರಿಯಲ್ತೆ ಹರಿಗರ್ವ ಹರಿಸಿ ಗೋಕುಲದೀ | ವಿ |
ಹರಿಸಿ ಹರಿಜಳಲ್ಲಿ ಹರಿಮೆಟ್ಟಿನಲಿವಂಥ ಪ
ಸೋಮಜ ಭವನ ಪದಾ | ಸೇವೆಗೆ ಮೆಚ್ಚಿ |
ಸೋಮ ಪುತ್ರಗೆ ನೀಡಿದಾ |
ಸೋಮನಾ ಭಂಡಾರಿಯನೆ ಮಾಡಿ ದಯದಿಂದ |
ಸೋಮಜಾನನಾ ಪೂರ್ಣ ಸೋಮಚಕೋರವಾ ೧
ಕಮಲಾರಿ ಧರ ಸೇವ್ಯನು | ಶಂಖ ಚಕ್ರ |
ಕಮಲಾಗದಾಧರನು |
ಕಮಲಾಂಘ್ರೀಯನಖ ಕಮಲದಿ ಜನಿಸಿದಾ |
ಕಮಲದಿ ಮೂಜಗ ಕಮಲಗತಿಯ ನೀವ ೨
ಗೋಪೆಸರನ ಪಿತನ | ಉದ್ಧರಿಸಲು |
ಗೋಪಾದ ತ್ರಯ ಕೃತನ |
ಗೋಪಾದಿವಿನುತ ಮಹಿಪತಿಸುತ ಪ್ರಭು |
ಗೋಪಕೋಟಿ ತೇಜ ಗೋಪಾಲ ನೆನಿಸುವ ೩

೩೪೮
ಹರಿಯ ನೆನಿಯೋ ಹರಿಯಾ | ಹರಿಯಾ ನೆನಿಯೋ
ಹರುಷದಿಂದಲಿ ಮನವೇ | ಪ
ಹರಿವ ಭವ ಜಲದಿಂದಲಿ ದಾಟಿಸುವನು
ಕಣ್ಣವರಿಸುತಲಿದ್ದು|ಅಚ್ಯುತಾನಂತ ಹರಿ|
ಯನ್ನದೆವೆ ಕಂಡ ಚಿಂತೆಯನು ಮಾಡಿ|
ಬನ್ನ ಬಡುತಲಿ ಉದರ|ಧಾವತಿಯವಳಗಾಗಿ|
ದಣ್ಣನೇ ದಣಿದು ಬಂದು ಬಯಿಗೋರಗುವೇ ೧
ಬಳ್ಳಿನೊರಳಗ ತೊಡರಿದ|ಕಾಲಿನಂತೆ ಭವಾ
ತಳ್ಳಿಯೊಳುಸಿಲ್ಕಿ ಬಳಲುತಾ ಗುಂದುತಾ|
ನಿಲ್ಲದೆವೆ ತಿರುಗುತಿಹೆ ಸಾಧು ಸಂಗಕಬರಲು
ಯಳ್ಳಿಸಿತು ಅವಕಾಶ ಕಾಣೆ ನಾನು ೨
ಕೆರೆಯ ನೀರನು ಕೆರೆಗೆ ಚೆಲ್ಲಿ|ವರವಪಡಿಯಲಿಕ್ಕೆ
ಭರದಿಂದ ಬಂದ ಅಲತ್ಯ ನೋಡ್ಯಾ|
ಹರಿನಾಮ ಹರಿಗರ್ಪಿಸಿ ಗತಿ ಪಡಿಯಲೊಲ್ಲಿ
ಹರ ಹರಾ ನಿನಗೆಂತು ಮತಿ ವದಗಿತೋ ೩
ಹಾಡಿ ಕೊಂಡಾಡಿದರ ಹರಿನಾಮ ನಾಲಿಗ್ಗೆ
ಬಾಡಿಗೆಯು ಬೀಳುವದೋ ನಾನರಿಯೆ ನೋ
ಮೂಢ ಪಾಮರನೆಮರ ಹುಟ್ಟಿ ಮರಬಿದ್ದಂತೆ
ನೋಡು ನರ ದೇಹದಲಿ ಬಂದಾಯಿತು ೪
ಹಿಂದಿನಪರಾಧಗಳಯೇನಾದರಾಗಲಿ
ಮುಂದೆ ಇನ್ನಾರ ಸ್ವಹಿತ ವಿಚಾರಿಸೋ
ತಂದೆ ಮಹಿಪತಿಸ್ವಾಮಿ ದ್ವಂದ್ವ ಚರಣಕ ಹೊಂದಿ
ಇಂದಿರೇಶನ ವಲಮೆ ಪಡೆದು ಸುಖಿಸೋ ೫

*
ಹರಿಯಂದೆನ್ನಿ ಪ
ಕಪಿಲಾ ಗೋ ಸಹಸ್ರವನು ಸಾಲಂಕಾರದಿ ಸಕಲ |
ನಿಪುಣಗ ನೀಡಿದ ಫಲಾ ೧
ರಾಜಸೂಯಾಶ್ವಮೇಧ ಮೊದಲಾದ ಯಜ್ಞಗಳು |
ತ್ಯಾಜ್ಯದಿ ಮಾಡಿದ ಫಲಾ ೨
ಕಾಶಿ ರಾಮೇಶ್ವರದಿ ತೀರ್ಥಂಗಳಾ |
ವಾಸದಿ ಮಿಂದ ಫಲಾ ೩
ಪರಿ ಪರಿ ಯೋಗಂಗಳ ಪರಿ ಪರಿ ತಪಗಳಾ |
ಚರಿಸಿ ತಿರುಗಿದ ಫಲಾ ೪
ತಂದೆ ಮಹಿಪತಿ ಪ್ರಭು ಯಚ್ಚರಿಸಿದ ಸ್ವಕೀಲಾ |
ಬಂದ ಜನುಮಕ ಸಫಲಾ ೫

೩೫೪
ಹರಿಯಾ ಪಾದಕ ಶರಣೆನ್ನಿ |
ಸ್ಮರಣೆಗೆ ಹರಿಯನು ಕರೆತನ್ನಿ ಪ
ಅವನ ನಾಮವನೆನಿಯಲು ಭಕುತಿಲಿ |
ಭವಭಯ ಮೂಲದಿ ನೀಗುವದು |
ಆವಾಗ ಕಂಗಳ ಸಿರಿಸುಖ ದೋರುತ |
ಜೀವನ ಗತಿನೆಲೆ ಹೊಂದುವದು ೧
ಸಿಕ್ಕಿತ್ತು ನರದೇಹ ದೊರಿಯಲು ಪುಣ್ಯದಿ |
ಸರ್ಕನೆ ಸಂತರ ಮೊರೆಹೊಕ್ಕು |
ದಕ್ಕಿಸಿಕೊಳ್ಳದೇ ಬೋಧಾಮೃತವನು |
ಪುಕ್ಕಟೆ ದಿನವನು ಗಳೆವರೇ ೨
ತನುವಿದು ನೋಡಲು ನೆಚ್ಚಿಕೆ ಇಲ್ಲದ |
ಮನಿಗಂಧರ್ವದ ಪುರದಂತೆ |
ತನುವಿಗೆ ಹತ್ತಿದ ಸಂಸಾರ ಸುಖ |
ಕನಸಿನ ಭಾಗ್ಯವ ತೆರೆದಂತೆ ೩
ಇದರೋಳು ನಾ ನನ್ನದು ಎಂದೆನುತಲಿ |
ಮದಮತ್ಸರವಾ ಬಗೆಯಲಿ |
ಕುದಿಕುದಿದೇಳು ತಜ್ಞಾವಿಹೀನದಿ |
ಉದರವ ಹೊರವುತ ತಿರುಗವರೇ ೪
ಈಗಾಗಯನ್ನದೇ ಹರಿನಾಮವ | ನಾ |
ಲಿಗೆ ಕೊನಿಯಲಿ ತಂದಿರಿಸೀ |
ಶ್ರೀ ಗುರು ಮಹಿಪತಿ ನಂದನು ಸಾರಿದ | ಭವ |
ಸಾಗರ ಸುಳಿಯಿಂದಲಿ ತರಸೀ ೫

೩೫೫
ಹರಿಯಾ ಪೂಜೆಯಾ ಮಾಡಿ ಗತಿಗಳ ಬೇಡಿ
ಹರುಷದಿ ಕೂಡಿ ನಲಿ ನಲಿದಾಡಿ ಪ
ಎಲ್ಲರೊಳು ಬಾಗಿ ನಡಿಬೇಕು ಸಾಗಿ
ಖುಳ್ಳತನ ಹೋಗಿ ಏಕೋ ನಿಷ್ಟಾಗಿ
ಬಲ್ಲ ತನನೀಗಿ ಆಗಬೇಕು ತ್ಯಾಗಿ
ನಿಲ್ಲದೇ ವದಗಿ ಸಮದೃಷ್ಟಿ ತೂಗಿ ೧
ನಿತ್ಯಾ ನಿತ್ಯ ತಿಳಿದು ವಿಚಾರ ಬಲಿದು
ಕುತ್ತಾಪಗಳದು ಸತ್ಯಗದಲ್ಲಿದ್ದು
ಸತ್ಯಜ್ಞಾನ ಪಡೆದು ಸದ್ಬಾವ ಜಡಿದು
ಚಿತ್ತ ಚಂದಲ ಜರಿದು ಮದ ಮತ್ಸರ ಜರೆದು ೨
ತನ್ನದಿದಲ್ಲಾ ಸಿರಸೌಖ್ಯವೆಲ್ಲಾ
ಇನ್ನು ತಿಳಿಲಿಲ್ಲಾ ಈ ಮರಹು ಸಲ್ಲಾ
ಸನ್ನು ತನೆಬಲ್ಲಾ ಈ ಸಾಕಾಯ ವೆಲ್ಲಾ
ಮನ್ನಿಸಿ ನೀವೆಲ್ಲಾ ಮಹಿಪತಿ ಜನಸೊಲ್ಲಾ ೩

೩೫೬
ಹರಿಯೇ ಕಾವುದು ಕಾವದು ನೀ ಪ
ಕಾವುದು ಕಾವದು ಸಾದರದಿಂದಲಿ ದೇವನೆ ಯನ್ನ ಸದಾ |
ಶ್ರೀವಧು ವಲ್ಲಭ ದೋರುತ ನಿನ್ನಯ ಪಾದ ಯುಗ್ಮ ಪದಾ ಅ.ಪ
ಸ್ವರ್ಗದ ಸಾಸಿರ ಮಡಿಸುಖ ಭಕ್ತಿಯ ಮಾರ್ಗವ ನರಿಯದೇ |
ದುರ್ಗುಣದಲಿ ತನು ಧನ ಸಿರಿಮದದಿಂ ಆರ್ಗೆಯ ಮನ್ನಿಸದೇ
ಮಾರ್ಗಣವೆಸನುದರವ ಪೊರೆವುತ ಷಡ್ವರ್ಗರ ಬಲಿವಿಡಿದೇ|
ಅರ್ಗಳಿಗೆಯು ನೆನಿಯದೆ ಬಹ ಜನ್ಮದಿ ದುರ್ಗತಿ ಭೋಗಿಸಿದೇ ೧
ನಾ ಪೂರ್ವದಿ ಮಾಡಿದ ಬಹು ದುಷ್ರ‍ಕತ ಆ ಫಲದಿಂದ ಲೀಗ |
ತಾಪತ್ರಯಾನಳ ಸಂಯುತ ಭವದ
ಮಹಾಪಯ ನಿಧಿಯೊಳಗೆ |
ಆಪವಗಾಣದೆ ಶಳವಿಗೆ ಶಿಲ್ಕಿದೆ. ಆಪೊಂದದೆ ಧಡಿಗೆ |
ಶ್ರೀಪತಿನಾವಿಕನಾಗಿ ನೀ ದಾಟಿಸಲೀಪಸುಗಳೆಂದನಗೆ | ೨
ಕಂದನ ಗುಣದೋಷಂಗಳ ಆರಿಸೆ ತಂದೆಗಿದು ಚಿತವೆ |
ಹಿಂದಿನ ತೀತವ ನೋಡದೆ ಕೂಡೋ
ನೀ ಬಂದು ಜಗದ್ಧರುವೆ |
ಎಂದೆಂದಿಗೆ ಇಳೆಯೊಳು ಮಹಾ
ಪತಿತರ ವೃಂದ ಉದ್ದರಿಸುವೆ |
ಮಂದರ ಗಿರಿಧರ ತಂದೆ ಮಹಿಪತಿ ನಂದನವರ ಪ್ರಭುವೆ ೩

೩೪೯
ಹರಿಯೇ ಗತಿ ಭರ್ತನು ಜಗಕೇ|ನರ
ಹರಿಯೇ ನೆಂಟ ಭಕುತ ಜನಕೇ ಪ
ಆರು ಸಲಹುವರ ನಾಥ ದೀನಜನ|
ಘೋರಪಾತಕಿ ಬಧಿರಾಂಧರನು|
ವಾರಿಜಾಸನ ಮುಖ್ಯ ದೇವತೆಗಳಲಿ|ವಿ
ಚಾರಿಸೆ ಅನ್ಯದೊರೆಗಳುಂಟೆ ೧
ಅವನ ವಶ ಮರುತಾಗ್ನಿ ಕಮಲ ಬಾಂ
ಧವ ವರುಣರು ಮೃತ್ಯುಗಳೆಲ್ಲ|
ತಾವಂಜುತ ಮೇರೆದಪ್ಪದೆ ಆಜ್ಞೆಯ|
ಭಾವಿಸೆ ನೇಮದಲಿರುತಿಹರು ೨
ಅವನ ರೋಮರೋಮದಿ ಬ್ರಹ್ಮಾಂಡವು |
ಅವುದುಂಬರ ಫಲದಂತಿಹುದು |
ಭುವನದಿ ಗುರುಮಹೀಪತಿ ಸ್ವಾಮಿಯು ಜಗ
ಕಾವ ಕೊಲುವ ನಿರ್ಮಿಸುತಿಹನು ೩

೩೫೭
ಹರಿಯೇ ದಯಮಾಡು ಮಾಡು ಮಾಡು ಮಾಡು ಪ
ಮರೆತು ಭವಾಟವಿಯಲ್ಲಿ ಬಹು ನೊಂದೆನು |
ಕರುಣ ಕಟಾಕ್ಷದಿ ನೋಡು ನೋಡು ನೋಡು | ನೋಡು ೧
ಹರಿಸಿ ತ್ರಿತಾಪವ ಸ್ವಸುಖ ಬೀರುವಾ |
ಚರಣದ ಭಜನೆಯ ನೀಡು ನೀಡು ನೀಡು ನೀಡು ೨
ಸದ್ಗುರು ಮಹಿಪತಿ ಪ್ರಭು ಪದದೋರುತ |
ಹೃದಯ ಮಂದಿರದೊಳಗಾಡು ಆಡು ಆಡು ಆಡು ೩

೩೫೮
ಹರಿಯೇ ನಮ್ಮ ಪರದೈವಾ ಹರಿಯೇ ತ್ರಿಭುವನ ಕಾವಾ
ಹರಿಯೇ ಇಹಪರ ನೀವಾ ಜಗದೊಳಗೆ ಪ
ಬಿಟ್ಟು ತಾಯ ತಂದೆಗಳ ನೆಟ್ಟನಡವಿಗೆ ಪೋಗಿ |
ಮುಟ್ಟಿ ಭಜಿಸಲಾಗಿ ದಯವಿಟ್ಟು ಬಂದನು |
ವಿಠಲ ನಚಲ ಪದವಿಯ ಕೊಟ್ಟು ಸಲಹಿದಕ |
ಧಿಟ್ಟ ಧ್ರುವರಾಯ ಸಾಕ್ಷಿ ಅಂಬರದಲಿ ೧
ಜರಿದು ನೂಕೆ ದಸಕಂಠ ಶರಧಿ ದಾಟ ಬಂದು ರಘು |
ವರನೆ ಶರಣೆನ್ನೆ ಪತಿ ಕರಿಸಿದನು |
ಧರಿಯದುಳ್ಳನಕಾ ಲಂಕಾಪುರದ ಪದವಿಕೊಟ್ಟು ಕಾಯ್ದಾ |
ಮೆರೆವಾ ವಿಭಿಷಣÁ ಸಾಕ್ಷಿ ಮೃತ್ಯುಲೋಕದೀ ೨
ಧರೆಯ ನೆಳೆದು ಕೊಟ್ಟರಂಘ್ರಿ ವೆರಡರಿಂದ ಮುಚ್ಚಲಾಗಿ |
ಶರಣ ತೃತಿಯ ಪಾದಕ ಶಿರಸವ ನೀಡಲು |
ಗುರು ಮಹಿಪತಿ ಪ್ರಭು ಸುರರಾಸಮ ಪದವಿ ಕೊಟ್ಟು
ಹೊರೆದನೆಂದು ಬಲಿಸಾಕ್ಷಿ ಪಾತಾಳದಲಿ ೩

೩೬೩
ಹರಿಹರಿ ಕೊಡು ನಿನ್ನಯಚ್ಚರನು
ಶರಣವಾ ಧೃಡದಲಿ ಬಂದೆನಾನು ಪ
ಅವಿದ್ಯೆಮಬ್ಬಿನಲಿ ಹರಿಬಂದ ಹಾವಿನ ಪರಿಯಾಗಿ
ವಿವೇಕ ಯವಿಮುಚ್ಚಿಕಂಗಾಣದೆ ಸೇವೆಗೆ ಹೊರತಾದೆ ೧
ನ್ಯೂನವ ನಾಲಿಸಲು ತಪ್ಪಿಗೆ ತಾನೆಣಿಕೆಗಳಿಲ್ಲಾ
ಏನರಿಯದ ಮೂಢಾ ಇವನೆಂದು ನಿನುದ್ಧರಿಸೆನ್ನಾ ೨
ಎಂದೆಂದು ಪ್ರೇಮದಲಿಂದಾ ಗೆಳೆತನಾ ಛೆಂದವೆನಗ ನಿನಗ |
ಎಂದೇ ಮನೆಯೊಳಿದ್ದು ಮಾತಾಡದೇ ನಿಂದುದುಚಿತವಲ್ಲ ೩
ಕಡೆಗಣ್ಣಿಲಿ ನೋಡೋ ಉದಾಸೀನ ನುಡಿಯ ಮಾಡಲಿಬೇಡ |
ಒಡೆಯಾ ನಿನ್ನಂಘ್ರಿಮದಾ ದಾಸರಾ ಅಡಿಗಳಾಶ್ರಯದಲಿಡೋ ೪
ಕಾಲಬಿದ್ದರವು ರಾಕುಡುವರು ಕೆಳೆಲೋ ಗಾದಿಯನು
ಪಾಲಿಸೋಮಹಿಪತಿ ಸುತ ಪ್ರಭು ಒಲುಮೆಯಾ ಸುಖನೀಡೋ ೫