Categories
ರಚನೆಗಳು

ಕಾಖಂಡಕಿ ಶ್ರೀಕೃಷ್ಣದಾಸರು

೨೫೯
ನಂಬು ಮನವೆ ರಾಮಚಂದ್ರನಾ ದ |
ಯಾಂಬು ನಿಧಿ ಸದ್ಗುಣ ಸಾಂದ್ರನಾ||
ನಂಬಿದ ಭಕ್ತ ಕುಟುಂಬಿಯೆನಿಸುವ|
ಅಂಬುಜನಾಭನ ಹಂಬಲವಿಡಿದು ಪ
ದಶರಥ ಕೌಸಲ್ಯ ಬಸುರಿಲಿ ಬಂದು|
ಋಷಿಮಖ ರಕ್ಷಿಸಿ ಶರದಿ||
ಅಸುರೆಯ ಭಂಗಿರಿಸಿ ನಡೆಯಲಿ|ಮುನಿ|
ಅಸಿಯಳುದ್ದರಿಸಿ ಉಂಗುಟದಲಿ|
ಅಸಮ ಧನುವೆತ್ತಿ ವಸುಧಿಯ ಮಗಳ ವ
ರಿಸಿಕೊಂಡು ಬಂದನು ಕುಶಲವಿಕ್ರಮನಾ೧
ಜನಕನ ವಚನಕ ಮನ್ನಿಸಿ|ಸತಿ|
ಅನುಜನೊಡನೆ ವಿಹರಿಸಿ|
ವನಚರ ಭೂಚರ ನೆರಹಿಸಿ|ದಾಟಿ|
ವನಧಿಯೊಳಗ ಗಿರಿಬಂಧಿಸಿ||
ಮುನಿದು ಮರ್ದಿಸಿ ದಶಾನನ ಮುಖ್ಯ|
ದನುಜರಾ ವನಸಿರಿ ಪದವಿ ವಿಭೀಷಣಗ ನೀಡಿದಾ೨
ಸುರರಿಗೆ ನೀಡಿದಾನಂದನು|ಸೀತೆ|
ವರಿಸಿ ಅಯೋಧ್ಯಕ ಬಂದನು|
ಧರಿಸಿ ಸಾಮ್ರಾಜ್ಯದಿ ಹೊರೆದನು|ಗುರು|
ವರ ಮಹಿಪತಿ ನಂದನೊಡೆಯನು||
ಅರಿತು ಸದ್ಬಾವತಿ ಸರಿಸಲಿ ಸದ್ಗತಿ|
ಶೆರೆವಿಡಿದೆಳೆತಹದರಿಯಲೋ ನಾಮಾ೩

೨೬೦
ನಂಬು ಹರಿಯ ಎನ್ನ ಮನವೇ ಪ
ಸುರಪತಿ ಮುಳಿಯಲು ಸಕಲ ಗೋವಳರನು|
ಹೊರೆದನು ಕರದೆತ್ತಿ ಗಿರಿಯಾ ೧
ಭಕುತಿಲಿ ಶರಣು ಬರಲು ಸುದಾಮನು|
ಸಕಲ ಸುಖವನಿತ್ತಾ ದೊರೆಯಾ೨
ಗುರುಮಹಿಪತಿ ದೀನೋದ್ಧಾರನು|
ಕರುಣಾಸಾಗರ ಮುರ ಅರಿಯಾ೩

೨೫೫
ನಂಬುಗೆ ಪಡಿಯಿರೋ ದೇವರ ದೇವನಾ ಪ
ರಾಮಸಾಸಿರ ನಾಮ ಸದ್ಗುಣ ಧಾಮ ಸಾರ್ವಭೌಮ
ತಾಮರಸ ಸಖ ಆ ಮಹಾಕುಲೋದ್ದಾಮ ಆಹವ ಭೀಮ|
ಸ್ವಾಮಿ ಸಕಲರ ಕಾಮಿತಾರ್ಥವ ನೇನಿ ಮುನಿಜನ ಪ್ರೇಮಿ|
ಭೂಮಿ ಅಹಿತಳ ವ್ಯೊಮ ಜಗದಂತರ್ಯಾಮಿ
ಚರಿತ ನಿಸ್ಸೀಮಿಯಾ೧
ಧಾಟಿಯಲಿ ನರನಾಟಕ ವಿಡಿದ ಆಟವಾಡಲು ನೀಟಾ|
ಕೋಟಿ ಕೋಟಿ ನಿಶಾಟ ದರ್ಪೋಚ್ಚಾಟ ಮಾಡಿದ ಸ್ಪೋಟಾ|
ನೀಟ ಶರಣ ಮುಕುಟಿಗಿತ್ತನು ಪೀಠಾ|
ಧೀಟ ಶ್ರೀ ಜಟೆ ಜೂಟ ವಂದಿತ ಪಾಟರಹಿತ ಸ್ಪರಾಟನಾ ೨
ಅಂದು ಇಂದೇ-ನೆಂದಿಗಾದರ ವಂದೇ ದಯದಿಂದ|
ಛಂದ ಛಂದದ-ಲಿಂದ ಭೋಕ್ತರ ಬಂಧು ಭಕ್ತರ ವೃಂದ|
ಸುಂದರಾನನ ಕುಂದರದನ ಸುಮಂದ ಹಾಸಾನಂದ|
ಇಂದಿರೈರಸ ತಂದೆ ಮಹಿಪತಿ ಕಂದ ಪ್ರೀಯ ಮುಕುಂದನಾ ೩

ಪಲ್ಲವಿ: ದಶಮತಿ ಗುರುಗಳು
೨೯
ನಕ್ಷತ್ರ ರಮಣ ನಯ್ಯನಿಗೊಲಿದು ಶರವನಿತ್ತೆ |
ನಕ್ಷತ್ರ ದೊಲ್ಲಭನ ತಮ್ಮನ ಸುತನ ಸುಟ್ಟೆ |
ನಕ್ಷತ್ರ ಇಲ್ಲದವನ ವೈರಿಗಮನನ ತಾತ |
ನಕ್ಷತ್ರ ಕಾಂತಧರನೇ ||
ನಕ್ಷತ್ರ ಜಾತ – ನಗ್ರಜನ ಮಸ್ತಕವ ತರಿದೇ |
ನಕ್ಷತ್ರ ಸಹಸ್ರ ಉಳ್ಳವನ ದ್ವಾರವನು ಕಾಯ್ದೆ |
ನಕ್ಷತ್ರ ನೀನೇ ಇಂದ್ರಾದಿ ದೇವತೆಗಳಿಗೆ ಗುರುಮಹಿಪತಿಸ್ವಾಮಿ |
ನಕ್ಷತ್ರ ಭೂಷಸಲಹೋ ೧

೨೧೬
ನಡಿ ನೀರೇ ಪೋಪಾ ದೇವಿ ಇದ್ದೆಡೆಗೆ|
ಕಡು ಕೋಪವ್ಯಾಕ ಶ್ರೀರಮೆ ಕೂಡ ಎನಗೆ ಪ
ಫುಲ್ಲ ಲೋಚನೆ ಕುಂದರದನೆ ಸುಫಣಿ ವೇಣಿ|
ಮಲ್ಲಿಕಾ ಮಂದಸ್ಮಿತೆ ಚಲ್ಪಕದಪು|
ಬಿಲ್ಲು ಕಾಮನ ಸೋಲಿಪ ಭ್ರೂಲತೆಯುಳ್ಳ|
ಸಲ್ಲಲಿತಾಂಗಿಯಾವಾಗ ಕಂಡೆಪೆನೆ ೧
ಹುಣ್ಣಿಮೆ ಚಂದ್ರನ ಮಂಡಲ ಪೊಳೆವಾ|ಪೊಂ|
ಬಣ್ಣವದನೆ ಮಹಾಸಿಂಹನ ಜರೆವಾ|
ಸಣ್ಣ ನಡುವಿನಿಂದೊಪ್ಪುವ ಸಿರಿಯನು|
ಕಣ್ಣಾರೆನೋಡಿ ಮತಾಡುವೆ-ನೇಳೆ ೨
ಬರಬಾರದು ದೇವಿಯಗಲಿ ಬಂದರ|
ಸ್ಥಿರವಾಗದು ಅರಫಳಿಗೆನ್ನ ಮನಸು|
ಗುರುಮಹಿಪತಿ ಸುತ ವರದ ದೇವತೆಯಾಗಿ|
ಧರೆಯೊಳು ಮೆರವಾ ಶ್ರೀ ಲಕ್ಷೀಯ ತೋರೆ೩

೪೭೧
ನಡೀರೇ ನೋಡುವಾ ಗುರುಮೂರ್ತಿಯಾ | ಮಹಿಪತಿಯಾ |
ತಡೆಯದೇ ಸಖಿಯರು ಪ
ಪೊಡವಿಯೊಳಾನಂದ ಸ್ಥಿತಿಯಾ | ವರ ಯತಿಯಾ |
ಅಡಿ ಕಮಲವ ಪಿಡಿದು | ಜಡಿದಿಟ್ಟು ಸದ್ಭಾವರತಿಯಾ |
ಪ್ರೇಮ ಪ್ರೀತಿಯಾ | ದೃಢದಲಿ ಕರ ಮುಗಿದು ೧
ಷೋಡಶ ಪರಿಸೇವೆ ಮಾಡುವಾ | ಪಾಡುವಾ |
ನೋಡದೆಲೆ ಎಡ ಬಲವಾ |
ಒಡಿಯನ ಒಡಲ್ಹೊಕ್ಕು ಕೂಡುವಾ |
ಪಡ ಕೊಂಬಷ್ಟು ಸುಖವಾ ೨
ಶರಣ ಬಂದ ವರಂಗೀಕಾರವಾ |ಮಾಡಿ ಹೊರವಾ |
ದೋರಿ ಸನ್ಮಾರ್ಗ ಪೂರ್ಣಾ | ವರನಿಗಮದರ್ಥ ಸಾರವಾ |
ನೋಡಿ ಬೀರುವಾ | ಕರುಣಿಪ ಕೃಷ್ಣನ ಪ್ರೀಯನಾ೩

೧೧೧
ನಡೆಯ ಬೇಕೆಲ್ಲೋರಂಗಾ ವಳಮನಿಗೆ |
ತಡವಾಯಿತು ಬಂದು ಸಭೆಯೊಳಗೆ ಪ
ಭಕುತರು ತಾಳ ಮೃದಂಗ ವೀಣೆಗಳಿಂದ |
ನಿಗಮಗೋಚರ ನಿಮ್ಮಚರಿತವನು |
ಬಗಿ ಬಗಿಯಲಿ ಪಾಡುವದಕೆ ಮರುಳಾಗಿ |
ನಗಧರನಿಂತೀ ಸಕಲ ಮರೆದು ೧
ಹೊನ್ನು ಮಯದ ತೂಗು ತೊಟ್ಟಿಲ ವಂಬರ |
ಬಣ್ಣಬಣ್ಣದ ಪುಷ್ಪವಹಾಸಿ |
ರನ್ನ ದೀಪದ ಎಡಬಲಲಿಂದಿರೆದೇವಿ |
ನಿನ್ನ ಮಾರ್ಗವ ನೋಡುತಿಹಳಯ್ಯಾ | ೨
ಬಂದ ಭಾಗವತರಿಗೆಲ್ಲ ಬೇಡಿದ್ದು ಕೊಟ್ಟು |
ಮಂದ ಹಾಸದ ಉಚಿತದಿ ಕಳುಹಿ |
ತಂದೆ ಮಹಿಪತಿ ನಂದನ ಸಾರಥಿ |
ಛಂದದಿ ಬಿನ್ನಹ ಅವಧರಿಸಿ ೩

೪೭೨
ನಮಗಿನ್ಯಾತರ ಚಿಂತೆಗಳು | ವಿಮಲ ಸದ್ಗುರು
ದಯದೊಲವಿರಲು ಪ
ದ್ಯುಮಣಿಯ ಪ್ರಭೆಯೊಳಗಿದ್ದವಗ |
ತಮದಳುಕಿನ ಬಳಲಿಕೆ ಯೋಗ
ಸುಮನ ತರುವೇ ನೆಳಲಾದವಗ |
ಭ್ರಮಿಸುವುದರ ಕಳವಳಹಂಗಾ ೧
ಬೆಮರಿರುವದೇ ಬೆಳದಿಂಗಳಲಿ |
ಹಿಮ ನಿಲುವುದೇ ಅನಲನಿದಿರಿನಲಿ |
ಶ್ರಮ ಇಹುದೇ ಚಿಂತಾಮಣೀಯಿರಲು |
ಕುಮತಿರುವದೆ ಸಜ್ಜನ ನೆರಲಿ ೨
ಕರ್ಪುರ ದೀವಿಗೆ ಬೆರೆದಂತೆ | ಅಪ್ಪುವಿನೊಳು ಲವಣದಂತೆ |
ಇಪ್ಪ ಪವನ ಪರಿಮಳದಂತೆ | ನಮ್ಮಪ್ಪ
ಮಹಿಪತಿಯನ್ನೊಳಗಿರುತ ೩

೭೦
ನಮೊ ಶ್ರೀ ರಮಣಿ ಜಯ ತ್ರಿಭುವನ ಜನನೀ ಪ
ಅಂಬುಜ ನಾಭ ಪ್ರೀಯೇ ಗುಣ ಸದನೀ |
ಜಾಂಬೂನದಾಂಬರ ವರಣೀ | ೧
ಸುರಮನಿ ವಂದ್ಯ ಪದದ್ವಯ ಪಾವನೀ
ನರಸೀರುಹದಳ ನಯನೀ೨
ಗುರುವರ ಮಹಿಪತಿ ನಂದನೋದ್ದರಣೀ
ಶರಣ ರಕ್ಷಕ ಘನ ಕರುಣೀ ೩

೧೮
ನಮೋ ನಮೋ ಗಣೇಶಾ |
ನಮೋ ಸಂಕಟನಾಶಾ |
ನಮೋ ದುರಿತವಿನಾಶಾ ಪ
ಸಿಂಧುರ ಚರ್ಚಿತ ಸಿಂಧುರ ವದನಾ |
ಸುಂದರ ಗುಣಸದನಾ ಗಣೇಶಾ ೧
ತ್ರೀಶೂಲ ಅಂಕುಶ ಧೃತಕರ ಕರುಣಾ |
ಕಿಸಲಯೋಪಮ ಚರಣಾ ಗಣೇಶಾ ೨
ಮಹಿಪತಿ ಸುತ ಪ್ರಭು ವಿಮಲೇಕದಂತಾ
ಇಹಪರ ಸುಖದಾತಾ ಗಣೇಶಾ | ೩

೨೧೮
ನಮೋ ನಮೋ ನಮೋ ಎಂಬೆ ನಿನಗೆ ಸ್ವಾಮಿ ರಘುರಾಮಾ|
ಶಮಲ ಹಾರಿಸಿ ವಿಮಲ ಮತಿಯ ಕೊಡುವ ಪುಣ್ಯ ನಾಮ ಪ
ಮುನ್ನ ಮಾಡಿದ ಕೋಟಿ ಜನುಮದ ಪುಣ್ಯ ಒದಗಿತೆಂದು|
ನಿನ್ನ ಚರಣ ಕಮಲ ಕಂಡೆ ಧನ್ಯನಾದೆನಿಂದು ೧
ಪರಮ ಪುರುಷನೆಂಬುದರಿಯ ಮಾಡಿದಪರಾಧವ
ಕರುಣದಿಂದ ಕ್ಷಮಿಸಿ ಹೊರಿಯಬೇಕು ಪೂರ್ಣಬೋಧಾ ೨
ತಂದೆ ಮಹಿಪತಿ ಪ್ರಭು ಭಕ್ತವತ್ಸಲನೆಂದು
ಇಂದು ಮೊರೆಯಹೊಕ್ಕೆ ಸಲಹು ನಿಮ್ಮ ಸೇವೆಯಿಂದು ೩

೫೭
ನಮೋ ನಮೋ ಮುಖ್ಯ ಪ್ರಾಣ ನಾಥನೇ
ನಮೋ ಜಗದೊಳು ಪ್ರಖ್ಯಾತನೇ ಪ
ಧರಣಿ ಸುತೆಯ ಮುಖ ಚಂದ್ರಚಕೋರನಾ
ಸಿರಿ ಚರಣಾಂಬುಜ ಭೃಂಗಾ
ಸುರವರರಿಯ ತಂದೆಯ ಮಾವನ ಸಂ
ಹರಿಸದೆ ವಾನರ ತುಂಗಾ೧
ದುರ್ಯೋಧನಾದಿ ನೂರೊಂದು ಮಂದಿಯ ತನು
ಪರ್ವತ ವಜ್ರದಂಡಾ
ಕರಿ ಏರಿ ಬಹ ಭಗದತ್ತನ ಗದೆಯಿಂದ
ಹರಿಸದೆ ಭೀಮ ಪ್ರಚಂಡಾ೨
ಧರಿಯೊಳುತಾನವ ಗುಣ ಕರಿಯಾವಳ
ನರಸಿಂಹನು ಮಧ್ವರೇಯ
ಪರಮರೂಪವ ಮೂರಾಗಿ ದೊರಿದೆ
ಗುರು ಮಹಿಪತಿ ಪ್ರಭು ಪ್ರೀಯಾ || ೩

೨೧೯
ನಮೋ ನಮೋ ವೆಂಕಟೇಶ ಪ
ವೈಕುಂಠ ಮಂದಿರವನು ಬಿಟ್ಟು ಶೇಷಾಚಲದಲಿ
ಬೇಕೆಂದು ಮಾಡಿದೆ ನೆಲೆವಾಸಾ ೧
ಶ್ರೀದೇವಿ ಸಂಗಡಸ್ವಾಮಿ ಪುಷ್ಕರಣಿ ತೀರದಲಿ
ಮೋದದಿ ಕ್ರೀಡಿಸುವ ವಿಲಾಸ ೨
ಗುರು ಮಹಿಪತಿಪ್ರಭು ಚರಣವ ನಂಬಿದವರ
ಧರೆಯೊಳು ಪೂರಿಪೆ ಮನದಾಶಾ ೩

ನಮ್ಮ ಗುರುರಾಯನೇ |
ನುತ ಜನಾಶ್ರಯನೇ | ಸಮ್ಯ ಜ್ಞಾನ ಪ್ರಿಯನೆ |
ಸ್ಮರಿಸಿದಾಗಲಿಹನೇ ಪ
ಮನುಜನಾಗಿ ಬಂದನೇ | ಮತ್ರ್ಯದೊಳು ನಿಂದನೇ |
ಜನನ ಮರಣ ಸಂದನೇ | ಜರಿಸಿ ಕೊಟ್ಟಾ ನಂದನೇ೧
ಚಿತ್ತದ ಮೈಲಿಗೆ ಕಳಿಸಿದನೇ | ಚಿದ್ಘನಾಮೃತ ಗರದನೇ |
ಸತ್ಯ ವಾಕ್ಯಾ ಬಿತ್ತಿದನೇ ಸತ್ವದ ಹೊಲ ಬೆಳಸಿದನೇ೨
ಮಹಿಪತಿ ನಂದನ ಪ್ರಾಣನೇ | ಮಹಾಪ್ರಜ್ಞಾಪೂರ್ಣನೇ |
ಇಹಪರ ಕೊಡುವ ತ್ರಾಣನೇ | ಮಹಿಮೆಗೆ ಎಣೆಗಾಣೆನೇ ೩

೪೭೫
ನಮ್ಮ ಗುರುರಾಯಾ | ಪೊಡವಿಗೆ ನಡೆ ತಂದನು ಪ
ಪೊಡವಿಗೆ ನಡೆ ತಂದನು|
ಎಡ ಬಲದಲಿ ಭಾಗವತರ ಮೇಳದಿಂದಲಿ |
ಒಡನೆ ಸುಜ್ಞಾನ ಪರಿ ಪರಿಯಾಟವ |
ಆಡುತ ಪಾಡುತ ನಲಿದಾಡುತಲಿ ೧
ಧಾರುಣಿಯೊಳು ಭವ ರೋಗಿಗಳೆಲ್ಲರು |
ತ್ವರಿತದಿ ಬನ್ನಿರೋ ಯನುತಲಿ ಹರಿನಾಮಾ |
ಭೇರಿಯ ಹೊಯ್ಸುತ ತತ್ವೋಪದೇಶದ |
ಕರದಲಿ ಔಷಧವನೆ ಹಿಡಕೊಂಡು೨
ಬಂದವರಿಗೆಲ್ಲ ಬೇಡಿದ್ದು ಕೊಡುತಲಿ |
ಮಂದ ಮತಿಗಳವಗುಣವನೆ ಬಿಡಿಸುತ |
ತಂದೆ ಮಹಿಪತಿ ನಂದನ ಸಾರಥಿ |
ಎಂದೆಂದು ಶರಣರಿಗಾಧಾರಿಯಾಗಿ೩

೧೧೯
ನಮ್ಮ ರಂಗ ಮಧುರೆಗೆ ನಡೆತರಲು ಪ
ಮಥುರೆಗೆ ನಡೆತರಲು ಅತಿ|ಹರುಷದಲಿ ಅಕ್ರೂರನೊಡನೆ|
ರಥದಲಿ ಕುಳಿತು ಫಡ ಫಡಫಡಲೆಂದು|
ಪಥದಲಿ ನಡಸ್ಯಾಡುತಲಿ ೧
ಬಿಲ್ಲಹಬ್ಬದ ನೆವದಲ್ಲಿ|ಫುಲ್ಲಲೋಚನ ಮೋಹನ ಕೃಷ್ಣ|
ಇಲ್ಲಿಗೆ ಬಂದನು ಎನುತಲಿ ಕೇಳಲು|
ಎಲ್ಲರು ನಡೆದರು ನೋಡಲಾಗಿ ೨
ಆಲಯದೊಳಗೆ ನಿಲ್ಲದೇ|ಬಾಲಕಿಯರು ತಮತಮ್ಮ|
ಚಾಲವರುತಿಹಾ ತೊಟ್ಟಿಲೊಳಗಿನಾ|ಬಾಲಕರಿಗೆ ಮೊಲೆಗುಡದೆ ೩
ಒಬ್ಬಳು ಅರೆಯಣ್ಣೆತಲೆಯಲಿ|ಒಬ್ಬಳು ತಿಗರವ ಹಚ್ಚಿದ ಮೈಯಲಿ
ಒಬ್ಬಳು ಪುಟಬಿಟ್ಟ ಕುಪ್ಪಸನೋಡದೆ|ಉಬ್ಬುಬ್ಬಿ
ನಡೆದರು ಸಂಭ್ರಮದಿಂದ೪
ಅಚ್ಚಮೈಯಲಿ ಕುಳಿತಿರೆ ಒಬ್ಬಳು|ಬಚ್ಚಲೊಳಗೆ ಮಜ್ಜಕನಾಗಿ
ಅಚ್ಯುತನಾತುರದಿಂದಲಿ ಒಬ್ಬಳು ಎಚ್ಚರ
ದೇಹದ ಬಿಟ್ಟು ನಡೆದಳು ೫
ಎಲೆಳುಶಿಶುವೆಂದು ಬಗಲಿಲಿ|ಅಳತೆಯ ಮಾನವನಿರಿಸಿಕೊಂಡು|
ನೆಲೆನೊಡದೇ ನಡೆದಳೊಬ್ಬಳು|ಚೆಲುವ ಕೃಷ್ಣನ ನೋಡಲಾಗಿ೬
ಕದವನು ಒತ್ತಿಮುಂದಕ|ಒದಗದಿ ಕೆಲವರು ಮಾಳಿಗೆ ಏರಿ|
ಸದಮಲಾನಂದಗ ತಲೆಯನು|ಬಾಗಿ ಪದುಮಕರವ ಮುಗಿದು೭
ದಣ್ಣನೆ ನೋಡೀ ನೋಡುತಾ|ಕಣ್ಣುಪಾರಣೆ ಮಾಡಿಕೊಂಡು|
ಮುನ್ನಿನ ದೋಷವ ಕರಗುವ ಪರಿಯಲಿ|
ಪುಣ್ಯ ಸಾಮಗ್ರಿಯ ಮಾಡಿದರಂದು ೮
ಗುರು ಮಹೀಪತಿ ಪ್ರಾಣನಾ|ಹೊರಗೆ
ಕಂಡಾ ಪರಿಯ ರೂಪವಾ|
ಧರಿಸಿಕೊಂಡು ಅಂತರಂಗದಲಿ|ತ್ವರಿತದಿಂದಲಿ ಧ್ಯಾಯಿಸುತಾ೯

೨೧೭
ನಮ್ಮ ರಂಗನ ಕಂಡಿರ್ಯಾ ಹೇಳಿರಿ ನೀವಮ್ಮಾ ಪ
ಅರಳೆಲೆ ಮಾಗಾಯಿ ಕಿರಿಗೂದಲು ಮುತ್ತಿನ|
ವರಮಕುಟ ಪದಕ ಕೊರಳಿನಾ ೧
ಹೊಳೆವ ಕುಂಡಲ ಕುಡಿ-ಗಂಗಳ ಬೆಳಗಿನ|
ಚೆಲುವ ಕದವು ಮುದ್ದು ಸೊಬಗಿನಾ ೨
ಬರಿಮುಗುಳ ನೆಗೆಯಾ ಸುದಂತ ಸಾಲಿನ
ಸಿರಿವತ್ಸಧರ ಹೇಮಚಸನನಾ೩
ಧರೆಯೊಳು ಭಕ್ತರ ಮಾಡುವ ಪಾವನ|
ಮಿರುಪರನ್ನದಂಗುರ ಬೆರಳಿನಾ ೪
ಕೊಳಲನೂದಿ ಗೋಪ್ಯಾರ ಮೋಹಿಪ ಮನಸಿನಾ|
ಒಲಿದು ಪಾಲಿಪ ಮಹಿಪತಿಜನ ೫

೪೭೩
ನಮ್ಮಯ್ಯನಾ | ಎಂದು ಕಾಂಬೆ ನಾನು |
ನಮ್ಮನೋಹರ ಎಂದಿಗಾಹುದಿನ್ನು ಪ
ನಮ್ಮಯ್ಯನ ಯಸಳ ಬೆರಳ ಪಾದಾ ಹೊಳೆವುದು |
ಬಿಸಜ ಕೋಮಲದಾ ೧
ಮುಗುಳು ನಗೆಯ ನಗುವಾ | ದಾಳಿಂಬ |
ಬಗೆಯದತಿ ನಲುವಾ ೨
ಕರುಣ ನೋಟ ಚಲುವಾ | ನಾಶಿಕ |
ಸರಳು ಪುರ್ಬಮಿರುವಾ ೩
ನೊಸಲೊಳು ಮೆರೆವಾ | ಮಾಣಿಕ | ಅಕ್ಷತಿಡುವಾ೪
ಶ್ರವಣ ಭೂಷಣದಲೀ | ಮುಖಕಳೆ ಠವ ಠವಿಸುತಿರಲಿ೫
ದಿವ್ಯ ವಸ್ತ್ರ ತೊಡುವಾ | ಪರಿಮಳ |
ದ್ರವ್ಯ ವಾಸ ನಿಡುವಾ ೬
ಬೆರಳುಂಗುರ ಕೈಯ್ಯಾ | ಬೋಧವ |
ಗರೆವ ವಾಕ್ಯ ಸುಧೆಯಾ ೭
ಗುರುರೂಪದಿ ಬಂದು | ಜಗವನು |
ದ್ಧರಿಸಿದ ನಿಂದು ೮
ಹಂಬಲಿಸುವ ಸುತನ | ಹೃದಯದಿ |
ಬಿಂಬದೋರಿಸಿದನಾ ೯

೨೨೧
ನರ ಹರಿನಾಮವ ನೀ ನೆನೆದರೆ|
ಧರಿಯೊಳು ಸಾಲದೇ ಇಹಪರ ದೋರದೆ|
ಬರದೇ ಸಾಯಾಸ ಬಡುವರೇ ಪ
ಆದಿ ಯುಗಂಗಳಲಿ ತಾಪಸರು|
ಸಾದರ ಬಹುದಿನದಿಂದಾ|
ಸಾಧಿಸುವಗತಿ ಕೊಡುವ ನೊಂದೆ ಕ್ಷಣದಿ|
ಶ್ರೀಧರ ತಾ ದಯದಿಂದಾ೧
ಸಂತರ ಸಂಗದಿ ಶ್ರವಣವ ಮಾಡಿ|
ಆಂತರ್ಭಾವನೆ ಬಲಿಸೀ|
ಭ್ರಾಂತ ನೀನಾಗದೆ ಅನ್ಯ ಸಾಧನದಲಿ|
ಸಂತತ ಕೀರ್ತನೆ ಬೆರೆಸೀ೨
ಸಾವಿರಕೊಂದೆ ಈ ನುಡಿ ನಿಜವೆಂದು|
ಸಾವಧವನಾದವ ಮನುಜಾ|
ಭಾವಿಸು ಗುರುಮಹಿಪತಿ ಪ್ರಭು|ನುಡಿಸಿದ|
ಆವನಂಬವನೇ ದನುಜಾ೩

೬೧೩
ನರಜನ್ಮ ವ್ಯರ್ಥವಲ್ಲವೇ | ಈ ಮೂಢರ |
ನರಜನ್ಮ ವ್ಯರ್ಥವಲ್ಲವೇ ಪ
ಗುರುಗಳ ಶರಣ್ಹೊಕ್ಕು ದಯ ಪಡಿಲಿಲ್ಲಾ |
ತರಣೋಪಾಯದ ನಿಜ ತಿಳಿದವನಲ್ಲಾ ೧
ಘಟ್ಟಿಸಿ ಒಬ್ಬರ ಮನಿಯ ಮುಣಗಿಸಿ |
ಹೊಟ್ಟೆಯ ಬಿಟ್ಟನು ಅನ್ಯಾಯ ಘಳಿಸಿ ೨
ಉತ್ತಮರಲ್ಲಿ ಅರಕ್ಷಣವಕ್ಕುಳ್ಳಿರನು |
ಲೆತ್ತ ಪಗಡಿಯಾಡಿ ಹೊತ್ತು ಗಳೆವನು ೩
ವಾಸುದೇವನ ಸೇವೆಗಾಲಸ್ಯ ಹಿಡಿದಾ |
ಕಾಸಿನ ಆಶೆಗೆ ಎತ್ತಾಗಿ ದುಡಿವಾ ೪
ಮಹಿಪತಿ ನಂದನ ಪ್ರಭುವಿನ ಮರತಾ |
ಸ್ವಹಿತದ ಹಾದಿಗೆ ಅವನು ಹೊರತಾ ೫

೨೨೦
ನರನಾದ ಮ್ಯಾಲ ಹರಿನಾಮ ಜಿವ್ಹೆದಲಿರಬೇಕು ಪ
ಗುರುವಿನ ಬರಣಕ ನಂಬಿರಬೇಕು|
ತರಣೋಪಾಯವನರಿಯಲಿ ಬೇಕು|
ವಿರತಿಯ ಮಾರ್ಗದಿ ನಡೆಬೇಕು ೧
ಭೂತದಯಾ ಪರ ಬೇಕು|
ಪಾತಕ ತನವನು ಜರಿಯಲಿಬೇಕು|
ಮಾತು ಮಾತಿಗೆ ಹರಿಯೆನಬೇಕು ೨
ಶಾಂತಿಯ ಶಮೆದಮೆ ಹಿಡಿಯಲಿಬೇಕು|
ಭ್ರಾಂತಿಯ ಕ್ರೋಧವ ನಳಿಯಲಿಬೇಕು|
ಸಂತರ ಸಂಗದಲಿರಬೇಕು ೩
ತಂದೆ ಮಹಿಪತಿ ದಯ ಪಡಿಬೇಕು|
ಬಂದದನುಂಡು ಸುಖದಿರಬೇಕು|
ಎಂದೆಂದು ಭಕ್ತಿ ಬಲಿಬೇಕು೪

೧೦೮
ನರಹರಿ ತಾರಿಸೊಎನ್ನಾ ದುರಿತಾರಿ
ಮುಕ್ತಿ ದಾರಿ ಸಾರಿ ದೋರಿ ದಯಬೀರಿ ಪ
ಕಮಲಾಯ ತಾಂಬಕ ಕರುಣ ಜಲನಿಧಿಸಿರಿ
ಕಮನೀಯ ಲಾವಣ್ಯ ರೂಪ ಶಂಖಾರಿ
ವಿಮಲಗದಾಂಭುಜಧಾರೀ
ಸುಮನಸಾಧುಜನ ಹೃದಯ ವಿಹಾರಿ ೧
ಎಲೆ ದೇವ ದೇವ ಎಂದ್ಯ ಜೀವ ಕಾವ ಮುರ ಅರಿ
ಚೆಲುವಕಸ್ತೂರಿ ಶ್ರೀಹರೀ
ವಲಿದು ಮಹಿಪತಿ ಜನಪರೋಪರಿಯಲಿ
ಸಲಹುತಿಹ ಮಾಮನೋ ಹಾರಿ೨

೧೦೯
ನರಹರಿ ಬಂದು ಮೂಡಿದಾ
ಶರಣಗದಯವಾ ಮಾಡಿದಾ ಪ
ತಟತಟ ಬಿರಿಯಲು ಕುಂಭವವಳಗಿನ
ಛಟ ಛಟ ಶಬ್ಧವ ತೋರುತಾ
ಕಟ ಕಟ ಬ್ರಹ್ಮಾಂಡೊಡೆಯಿತೋ ನೋಡಲು
ಪಟ ಪಟ ತಾರೆಗಳಾರಲು ತಾ ೧
ಗುಡ ಗುಡ ಗುಟ್ಟಿಬಾಯಾಳಗಗ್ನಿಯ
ಧಡ ಧಡ ಕಿಡಿಗಳನುಗುಳುತಾ
ಗಡ ಬಡಿಸಲು ಸಮುದ್ರಗಳೆಲ್ಲವು
ಬುಡು ಬುಡು ಗುಳ್ಳೆಗಳೇಳಲು ತಾ೨
ಫಳ ಫಳ ಭೂಮಿಯು ಬಿಚ್ಚಿತು ಗಿರಿಗಳು
ಹಳ ಹಳ ಕಲ್ಲುಗಳುದುರಿದವು
ಭಳ ಭಳ ಭಾಸಮ ಗಡಿಶತ ತೇಜನ
ಥಳ ಥಳ ಮಿಂಚುಗಳಾಡಿದವು ೩
ಮಾಗ್ಗಿತು ಧನಿಯನು ಕೇಳುತ ಕೇಳವು
ಮುಗ್ಗಿತು ಕಂಗಾಣದೆ ಹಲವು
ಅಗ್ಗಳ ದೈತ್ಯರು ದೂರದಿ ಬಿಸುಟರು
ನುಗ್ಗಾದವು ಅವರಾಯುಧವು ೪
ಸರಸಿಜ ಭವ ಭವ ಸುರಮುನಿ ಇಂದ್ರರು
ಇರದೆವೆ ಮುರಿಯನು ಸಾರಿದಿರು
ಗುರುವರ ಮಹಿಪತಿ ನಂದನಸಾರಥಿ
ಶರಣಿಂದೆನುತಲಿ ಹೊಗಳಿದನು೫

೪೬
ನವ ಸುವರ್ಣದಾ ಪರಿಯ ಹೊಳೆವ ಕೆಂಜೆಡೆಯಲೀ
ದಿವಿಜ ನದಿಯ ನಿರುತ ಧರಿಸೀ ಮುಂದಲಿಯ ಲೀ
ತವ ಶೀತಾಂಶೂನಾ ಕಳೆಯ ತಿಲಕಾ ಮಾಡಿ ಮೆರೆವಾ
ಶಿವ ಧ್ಯಾನಮಾಡೀ ಭವ ಭಯ ನಿವಾರಿಸಿ ಹೊರೆವಾ ೧
ಕುವಿದ್ಯವಿಬಂದಾ ಮದನ ನಳಿದಾ ಭಾಲನಯನಾ
ಸುವಿಧ್ಯದಿ ಮೊರೆಹುಗಲು ವಲುವಾನಂದನಯನಾ
ಅವಯವದಲ್ಲಿ ಫಣಿ ಭೂಷಣ ಮಾರಿ ಮೆರೆ ವಾ
ಶಿವಧ್ಯಾನಾ ಮಾರಿ ಭವ ಭಯ ನಿವಾರಿಸಿ ಹೊರೆ ವಾ ೨
ಠವ ಠವಿಸುವ ಮುನಿಯ ಮನೋಹರ ಪಂಚ ವದನಾ
ರವಿ ಕೋಟಿ ತೇಜದಿರುವಾಘನ ಕಾರುಣ್ಯ ಸದನಾ
ಭವಾನೀ ಯಡದ ತೋಡಿಯಲಿರಿಸೀ ಕೊಂಡು ಮೆರೆವಾ
ಶಿವ ದ್ಯಾನಾ ಮಾಡೀ ಭವ ಭಯ ನಿವಾರಿಸಿ ಹೊರೆವಾ ೩
ಧವಲೀಸುತಿಹ ತನು ರೂಚಯ ಕರ್ಪೂರ ಪರಿಯಾ
ತವಕದಿಂದುಟ್ಟಾ ಉಡುಗಿ ಹರನಾ ಚರ್ಮ ಕರಿಯಾ
ಸವಿಭೂತಿಯ ಸುಧರಿಸಿ ತಪವೇಷದಿ ಮೆರೆ ವಾ
ಶಿವಧ್ಯಾನಾ ಮಾಡೀ ಭವ ಭಯ ನಿವಾರಿಸಿ ಹೊರೆವಾ ೪
ಭುವನತೃಯದಾ ಸುರನರೋರಗ ಪೂಜಿಸುತಿಹಾ
ಅವನೀಲ್ಬಾವನಾ ಪರಮ ಪಾವನ ಪಾದ ದ್ವಿತೀಯಾ
ಅವಿನಾವಾ ದೇವರ ಜನಗಿರಿ ವಾಸವಿ ಮೆರೆ ವಾ
ಶಿವಧ್ಯಾನಾ ಮಾಡೀ ಭವ ಭಯ ನಿವಾರಿಸಿ ಹೊರೆ ವಾ ೫
ತ್ರಿವಿಧ ತಾಪವಾಹರಿಸುವದು ಹರಯಂದ ಭರವಿದೀ
ಭವಯನ್ನ ಲಾಗಾ ಸುಖಗರೆವ ಸಾನಂದ ವರದೀ
ಶಿವಾಯೋಂ ನಮಾಯಂದೆನಲು ಸುಗತಿ ನೀಡಿ ಮೆರೆ ವಾ
ಶಿವಧ್ಯಾನಾ ಮಾಡೀ ಭವ ಭಯ ನಿವಾರಿಸಿ ಹೊರೆ ವಾ ೬
ಸವಾರೀಧರನಾವರಣದಿರುವಾ ಕಪ್ಪುಗೋರಳಾ
ತ್ರಿವಿಷ್ಟಾಪರಿಯಾ ಪದವ ಮುನಿವಾ ತ್ರಿಶೂಲ ಸರಳಾ
ಕವಿಬೋಧಿಸುವಾ ಡುವರ ಸೂತ್ರದ ಕೈಯ್ಯಾ ಮೆರೆ ವಾ
ಶಿವಧ್ಯಾನಾ ಮಾಡೀ ಭವ ಭಯ ನಿವಾರಿಸಿ ಹೊರೆ ವಾ ೭
ಶಿವಷ್ಟಕವನು ಹೃದಯ ಪತ್ರ ಮ್ಯಾಲ ಬರವಾ
ಅವನಿಷ್ಟಾರ್ಥವಾ ಕುಡುತ ದುಷ್ರ‍ಕತ ಮೂಲಹರಿವಾ
ಅವಿದ್ಯೋಡಿ ಸುವಾ ಗುರು ಮಹಿಪತಿಯಾಗಿ ಮೆರೆ ವಾ
ಶಿವಧ್ಯಾನಾ ಮಾಡೀ ಭವ ಭಯ ನಿವಾರಿಸಿ ಹೊರೆ ವಾ ೮

೧೧೮
ನಾಥದೀನಾನಾಥ ಸದ್ಗತಿ|ದಾತ ನೋಡಿರೋ|ಭವ|
ಭೀತರ ಪತಿತರೆ ಪುನೀತಮಾಡುವ ನೀತನೆ|ರಘು| ಪ
ಹವಣದಿ ತಾನಾರೆ ಸವಿಧ್ಹಣ್ಣುಗಳನ್ನು|
ತವಕದಿ ಜಾನಕಿಧಮಗರ್ಪಿತವೆನೆ|
ಅವನಿಲಿ ಶಬರಿಗೆ ಘವಿಘವಿಸುತ್ತಿಹ|
ಅವಿರಳ ಪದದನುಭವ ನೀಡಿದ|ರಘು…… ೧
ದಾವನ ಶ್ರುತಿಗಳು ಭಾವಸಿ ನುಡಿಯಲು|
ದೇವನ ಹಿತಕುಜ ಕೇವಲ ವನಜರ|
ಜೀವರೊಳಾಡುತ ಸೇವೆಗೆ ನಲಿಯುತ|
ಕೈವಿಡಿದಿತ್ತನು ಕೈವಲ್ಯವ|ರಘು…… ೨
ಕುಂದದೆ ಬಾಂಧವ ನಿಂದಿಸಿ ನೂಕಲು|
ನೊಂದುವಿಭೀಷಣ ಬಂದರೆ ಶರಣವ|
ತಂದೆ ಮಹೀಪತಿ ನಂದನ ಪ್ರಭು ಆ|
ನಂದದ ಸ್ಥಿರಪದ ಹೊಂದಿಸಿದಾ|ರಘು….. ೩

೨೨೨
ನಾಮ ನೆನಯೋ ನೀಲಾಂಗನಾ ಪ
ನಾನಾ ಸಾಧನವ ಮಾಡಿ ಸಾಧಿಸುವದೇನು ಹೇಳಾ|
ಜ್ಞಾನ ಗುರುವಿನ ಕೇಳೋ ಕೀಲಾ ೧
ಕಾಶಿ ರಾಮೇಶ್ವರವಾದಾ ತೀರ್ಥದಲಿ ಮಿಂದ ಫಲಾ|
ಭಾಸುವದಾನಂದ ಘನ ನೀಲಾ ೨
ಗುರು ಮಹಿಪತಿ ಪ್ರಭು ಭಕ್ತಿಗೆ ಸುಲಭನಲಾ|
ಕರುಣದಲಿ ತಾರಿಸುವ ದಯಾಳು ೩

೨೨೩
ನಾರಾಯಣ ನರಹರಿ ಮಾಧವ ನಿಮ್ಮ ಪಾದಾ ದೋರೋ|
ಸಾರಭಕುತಜನ ಸುರತರುವಾಗಿಹ ಪಾದಾದೋರೋ ಪ
ಸಿರಿದೇವಿನಯನ ಚಕೋರ ಚಂದಿರವಾದ ಪಾದಾದೋರೋ|
ಗರುಡನಕರದ್ವಯ ಪಾವುಡ ಮಾಡಿದ ಪಾದ ದೋರೊ ೧
ಗೋಪಿಯ ಮುಂದೋಡಿಯಲಿ
ಕುಣಿದಾಡಿದ ಪಾದಾ ದೋರೋ|
ಆಫಣಿಯಂಗವ ನಿರ್ವಿಷ ಮಾಡಿದ ಪಾದಾ ದೋರೊ೨
ಸರಸಿಜ ಭವಭವರೊಂದಿತ ಪಾವನ ಪಾದಾ ದೋರೋ|
ಗುರುಮಹಿಪತಿ ಪ್ರಭು ಕಂದಗೊಲಿದು ಬಂದು ಪಾದಾದೋರು ೩

೭೩೩
ನಿಂತು ಫುಗಡಿ ಹಾಕ ಭ್ರಾಂತತನವ್ಯಾಕ
ಸಂತ ಜನನಿಯರು ನೋಡಿ ತಲೆಯ ದೂಗಬೇಕ ಪ
ಆಶೆಯಲಿ ತಾನು ಕುಳಿತು ಹಾಕುದೇನು |
ಘಾಸಿಯಾಗುವ ಆರುಮಂದಿಯಾ ಕೂಡಿದರೇ ನೀನು ೧
ಗರುವ ತನ ಬಿಟ್ಟು ತಿರುಗಣೆಯಾ ನುಟ್ಟು |
ಆರಹು ಶರಗಿನಿಂದ ಬಿಗಿದು ಹಾಕ ಮಲಕ ಗಂಟು ೨
ಲಜ್ಜೆ ವಳಿದು ನೋಡೇ ಹರಿಯಸ್ತುತಿ ಮಾಡಿ |
ಘಜ್ಜಿಗೆ ಬಂಡಮ್ಯಾಲ ಯಚ್ಚರ ಮೈಯ್ಯ ಮರೆಯಿಬ್ಯಾಡೇ ೩
ಎರಡು ಸವೆ ನಿನೆಹಾ ಜ್ಞಾನ ಸಖೀ ಕೈಯ್ಯಾ |
ಜರಿಯದಂತೆ ಹಿಡಿದು ತಿರುಗು ನಡವಿಧ ಪರಿಯಾ ೪
ಫುಗಡಿ ಇದೇ ಆಡೀ ಪ್ರೇಮಭಾವ ಕೂಡೀ |
ಮುಗುತಿ ಕೊಡುವ ತಂದೆ ಮಹಿಪತಿ ಸ್ವಾಮಿ ದಯಮಾಡಿ ೫

೬೧೫
ನಿಧಾನವೆ ಕೇಳಿ ಸಜ್ಜನವೇ
ಇಂದು ಜಿನ ಶಕ್ತಿಯಾನಂದದಾರಾಧನ ಪ
ಒಂದು ಮನದಲಿ ವದಗಿನ್ನು
ಒಂದು ಮನದಲಿ ವದಗಿನ್ನು ನೀವೆಲ್ಲಾ
ವಂದದಾರುತಿಯಾ ಬೆಳಗುವಾ ೧
ಒಂದು ಮಾರ್ಗವಿಡಿದು ಬಂದು ಗುರುಮುಖದಿಂದ
ಒಂದನೆ ಭಕ್ತಿ ತಿಳಿದಿನ್ನು
ಒಂದನೆ ಭಕ್ತಿ ತಿಳಿದು ಪರೀಕ್ಷಿತಿಯಂತೆ
ವಂದನಾರುತಿಯಾ ಬೆಳಗುವಾ ೨
ಎರಡಕ ಮೀರದಾ ಎರಡಕ್ಷರದಿಂದ
ಎರಡನೆ ಭಕ್ತಿ ತಿಳಿದಿನ್ನು
ಎರಡನೇ ಭಕ್ತಿ ತಿಳಿದು ನಾರದರಂತೆ
ಎರಡನಾರತಿಯಾ ಬೆಳಗೀರೇ ೩
ಮೂರು ಬಲಿಯನೆದಾಟಿ ಮೂರು ರತ್ನವಗಂಡು
ಮೂರನೇ ಭಕ್ತಿ ತಿಳಿದಿನ್ನು
ಮೂರನೇ ಭಕ್ತಿ ತಿಳಿದು ಪ್ರಲ್ಲಾದನಂತೆ
ಮೂರನಾರತಿಯಾ ಬೆಳಗೀರೇ ೪
ನಾಕುಸ್ಥಾನವ ಮುಟ್ಟಿ ನಾಕರಂತವ ನೋಡಿ
ನಾಕನೇ ಭಕ್ತಿ ತಿಳಿದಿನ್ನು
ನಾಕನೇ ಭಕ್ತಿ ತಿಳಿದು ಜನಕನಂತೆ
ನಾಕನಾರತಿಯಾ ಬೆಳಗೀರೇ ೫
ಐದುಕ್ಲೇಶಗಳ್ಹಿಂಗಿ ಐದರೊಂದನೆ ಮಾಡಿ
ಐದನೇ ಭಕ್ತಿ ತಿಳಿದಿನ್ನು
ಐದನೇ ಭಕ್ತಿ ತಿಳಿದು ಗರುಡನಂತೆ
ಐದನಾರತೀಯ ಬೆಳಗೀರೆ ೬
ಆರನೇ ಭಕ್ತಿ ಆರು ಸಂಗವ ಮೀರಿ ಆರು ಪರಿಯಾಗದೇ
ಆರನೇ ಭಕ್ತಿ ತಿಳಿದಿನ್ನು
ಆರನೇ ಭಕ್ತಿ ತಿಳಿದು ಪುಂಡಲೀಕನಂತೆ
ಆರನಾರತಿಯಾ ಬೆಳಗೀರೆ ೭
ಏಳು ವ್ಯಸನವ ಬಿಟ್ಟು ಏಳು ಧಾತುವ ಕಂಡು
ಏಳನೇ ಭಕ್ತಿ ತಿಳಿದಿನ್ನು
ಏಳನೇ ಭಕ್ತಿ ತಿಳಿದು ಹನುಮಂತನಂತೆ
ಏಳನಾರತಿಯಾ ಬೆಳಗೀರೆ ೮
ಎಂಟು ಮದಗಳ ಜರಿದು ಎಂಟು ಸಿದ್ಧಿಯ ತೊರೆದು
ಎಂಟನೆ ಭಕ್ತಿ ತಿಳಿದಿನ್ನು
ಎಂಟನೇ ಭಕ್ತಿ ತಿಳಿದು ಅರ್ಜುನ ನಂತೆ
ಎಂಟನೇ ಭಕ್ತಿ ಯಾರತಿಯಾ ಬೆಳಗೀರೆ ೯
ಒಂಭತ್ತರನೇ ಬಲಿದು ಒಂಭತ್ತರ ನೆಗೆಲಿದು
ಒಂಭತ್ತರನೇ ಭಕ್ತಿ ತಿಳಿದಿನ್ನು
ಒಂಭತ್ತರನೇ ಭಕ್ತಿ ತಿಳಿದು ಬಲಿಯಂದದಿ
ಒಂಭತ್ತನಾರತಿಯಾ ಬೆಳಗೀರೆ ೧೦
ಗುರು ಮಹಿಪತಿ ಸುತಬ ಹೊರವ ದೇವಿಗೆ
ಧರಿಯೊಳೀಪರಿಯಲಿ ನೀವು
ಧರಿಯೊಳೀಪರಿ ನೀವು ಮಾಡಲಿಕೀಗ
ಪರಮ ಆನಂದಾದೋರುವದು ೧೧

೬೧೬
ನಿನಗಿದು ಹಿತವೇ | ಇದು ಹಿತವೇ ಪ
ಕಂಸಾರಿ ಚರಣವ ನಂಬದೇ ಕ್ಷಣಿಕದ |
ಸಂಸಾರದಲಿ ಬೆರಿಯಬೇಡಾ ೧
ಕನ್ನಡಿಯೊಳಗಿನಾ ಹೊನ್ನಿನಾ ಗಂಟ ನೋಡಿ |
ಕಣ್ಣಗೆಟ್ಟಿರುವರೇ ಮೂಢಾ ೨
ಬಿಸಿಲಿನ ನೀರಿನಿಂದೆ ತೃಷೆಯಾರಿಸುವದುಂಟೆ |
ಹಸಗೆಡದಿರು ವಿಷಯ ಕೂಡಾ | ೩
ಕನಸಿನ ಸಂಪದವನೆನೆಸಿ ತಾ ಹಿಗ್ಗುವರೆ |
ಮನವೇ ನೀ ಮಥನಿಸಿ ನೋಡು ೪
ದಾವನು ಗುರು ಮಹಿಪತಿ ಪ್ರಭು ಭಜಿಸನು |
ಅವಗಿಲ್ಲ ಸುಖಸುರವಾಟಾ ೫

೨೨೪
ನಿನಗೇನಾಯಚ್ಚರಿಲ್ಲೋ|ಕೇಳಾತ್ಮಾ|
ವನಜಾಂಬಕನ ಪಾದ ಭಕುತಿಯ ತೊರೆದಿಪ
ನಾನಾ ಯೋನಿಯಲಿ ತೊಳಲಿ | ಭವದು:ಖ |
ಕಾನನದಲಿ ಬಳಲಿ |
ಏನು ಪುಣ್ಯವೋ ಮುನ್ನ ಮಾಡಿದ ಫಲದಿಂದ
ಮಾನವ ಜನುಮ ಬಂದು ಹರಿ ಹರಿ೧
ವಿಷಯ ಸುಖವ ಬೆರೆದು | ಬೇಕಾದ |
ಸ್ವಸುಖವನೆಗಳದು |
ಅಶನ ವ್ಯಸನದಲಿ ಪಶುವಿನ ಪರಿಯಲಿ |
ನಿಶಿದಿನವನುಗಳೆದೇ ಹರಿ ಹರಿ೨
ಸಾಧು ಸಂಗಕತ್ಯಗಳೀ | ಕುಜನರಾ |
ಹಾದಿಯಿಂದಲಿ ಮರಳೀ |
ಸಾದರ ವಿವೇಕ ದೀಪ ಮನೆಯೊಳಿಟ್ಟು |
ಸಾಧಿಸೋ ನಿಜ ಘನವಾ ಹರಿ ಹರಿ೩
ಅರಗಳಿಗೆಯ ನೋಡಲು ಶ್ರೀಹರಿ |
ಸ್ಮರಿಸದೆ ತಾ ನಿರಲು |
ಕರೆದು ವಡಿಯ ನಿನ್ನ ತನು ಲೇಶವ ಕೇಳಲು |
ತೆರಗಾಣಿ ನುಡಿಗಳಿಗೇ ಹರಿ ಹರಿ೪
ಹಿಂದಾದ ಮತಿಗಳಿಯೋ ಇನ್ನಾರೆ |
ಮುಂದಣ ಪಥ ವರಿಯೋ |
ತಂದೆ ಮಹಿಪತಿ ಬೋಧಾನಂದ ಪಡೆದು ಭವ |
ಬಂದಗೆಲಿದು ಸುಖಿಸೋ ಹರಿ ಹರಿ೫

೬೧೭
ನಿನಗ್ಯಾಕೋ ಜನರಂಜನೆ | ವಣಾ ಭಂಜನೆ ಪ
ಎಲ್ಲವಿದ್ಯವ ಸಾಧಿಸಿ ಮೆರೆಯಬೇಕೆಂಬ |
ಬಲ್ಲವಿಕೆ ಹೆಮ್ಮೆಗೆ ಬೀಳುರೆ |
ಯಳ್ಳಿಗೆ ಬೆಲ್ಲವ ಹುಯಲು ಹೋದಂತವಯ |
ಸುಳ್ಳಿನ ಭ್ರಾಂತಿ ಕಳುವರೇ ೧
ಹೆಣಗುತಿ ದೀಕ್ಷಿತನೆಂಬ ಮನ್ನಣಿಗ್ಯಾಗಿ |
ದಣಿವರೆ ಕರ್ಮದಿ ದಣ್ಣನೆ |
ಮುಣುಗುವವನ ತೆಲಿಮ್ಯಾಲ ಕಲ್ಲನ್ನಿಟ್ಟರೆ |
ಗಣಿಸದೇ ದಾಟಲು ಬಲ್ಲನೆ ೨
ಶರಣ ಕೊಳಬೇಕೆಂದು ಬೂದಿ ರುದ್ರಾಕ್ಷಿಯ |
ಧರಿಸಿ ಕಾವಿಯ ಸೋಗು ಮಾಡುವರೆ |
ಹರುಷದಿ ಖಜ್ಜಿಗೆ ಬಿಸಿನೀರು ಹೊಯ್ದಂತೆ |
ಮರುಳೆ ಜನ್ಮ ಸಾಧನ ಕೂಡುರೇ ೩
ಕಾಲನುಕೂಲವಿದ್ದ ಕೈಯಲಿ ಪರಗತಿ |
ಕೀಲವರಿತು ಜ್ಞಾನ ಪಡೆವುದ |
ಕೊಳ್ಳೆ ಹೋದ ಬಳಿಕ ಕೂಗುವ ಪರಿಯಲಿ |
ಚಾಲವರಿದರಾಗ ಬಾರದು ೪
ಒಂದೇ ನಿಷ್ಠೆ ಒಂದೇ ಮಾರ್ಗದಿ ಮನ |
ದಂದುಗ ಬಿಟ್ಟು ಶರಣ ಹೊಕ್ಕರೆ |
ತಂದೆ ಮಹಿಪತಿ ಸುತ ಪ್ರಭು ಬೀರುವ |
ಮಂದನಾಗದೇ ತಿಳಿ ಇನ್ನಾದರೆ ೫

೨೨೫
ನಿನ್ನ ನಗಲಿದಾ ಮೊದಲು ಪನ್ನಗ ವೇಣಿ | ನಿನ್ನ ನಗಲಿದಾ |
ಮೊದಲಿನ್ನುಕೋಮಲಾಂಗನಾ | ಮುನ್ನಿನೊಲುವನಾಕಾಣೆ |
ಮಂದಗಮನೆ ಪ
ಕಂಗಳೆವಿಯಾ ಸಿಕ್ಕದೆ | ನಿನ್ನನೆನೆದು |
ಅಂಗ ಕಳೆಗಳ ತೋರದೇ |
ರಂಗ ನೆಡಬಲ ನೋಡಾ | ಇಂಗಿತ ಮಾನಿನಿಯರಾ |
ಮುಂಗೋಪಿಯಾದಾ ಕೇಳಮ್ಮಾ ಹೇಳಲೇನಮ್ಮ೧
ವಿರಹ ತಾಪವ ಬರೆದು ವಿರಕ್ತಿಯಿಂದಾ |
ತಿರುಕರ ವೇಷ ತಳೆದು ಧರೆಯಾಧಾರೆಯೆರೆದು |
ಅರಸುತನವ ಬಿಟ್ಟು | ಮರಳ ಗೋಲರಾ ಸೇರಿದಾ |
ಮಾತು ಮೀರಿದಾ ೨
ವರದ ತಂದೆ ಮಹಿಪತಿ | ನಂದನ ಪ್ರಾಣಾ |
ಶರಣ ಜನರಾ ಸಾರಥಿ | ಕರುಣಾಳು ಎಂಬುದಕೆ |
ತುರುಗಾವನಾಗಿ ಬಂದ | ಹರಿಣಾಕ್ಷಿ ಏಳಾಲಿಂಗಿಸೇ೩

೩೦
ನಿನ್ನ ನಾನೇನೆಂದೆ ನಿರ್ಮಲ ರೂಪನೆ |
ಪನ್ನಗ ಭೂಷಣ ಪರಮ ಸದಾಶಿವ ಪ
ಸುರರು ಮೊರೆಯಿಡೆ ವಿಷವ ಧರಿಸಿ ಜಗ |
ಉರಿಯಹದೆನುತ ಕಂಠದಿರಿಸಿದನು ||
ದುರಳ ದೈತ್ಯನ ಕೊಲ್ಲಲಾಗಿ ಅರ್ಧಾಂಗವ |
ಹರಿಗೆ ನೀಡಿದ ದೇವ ಶರಣೆಂದೆನಲ್ಲದೇ ||
ಉರಗಣ್ಣಿನವನೆಂದೇನೇ | ಪರಹೆಣ್ಣವ |
ಶಿರದೊಳಿಟ್ಟವನೆಂದೆನೇ | ಜಗದೊಳು ||
ಅರೆ ಮೈಯ್ಯವನೆಂದೆನೇ | ನಿಜಪದ |
ಶರಣರಿಷ್ಟಾರ್ಥವ ನೀವನೇ ಬಾಯಂದೆ ೧
ಸದ್ಗತಿ ನೀಡಿದ ಬ್ಯಾಡಗ ಮರ ದೊಪ್ಪ |
ಲುದುರಿಸವಗ ನಿಜವ ದೋರಿದ ||
ಮುದದಿಂದ ಪಾಶುಪತವಾನಿತ್ತ |
ಸದಮಲಾ ನಂದನೇ ಶರಣೆಂದೇ ಕಾಲಿಲಿಂ ||
ದ್ವೋದಿಸಿ ಕೋಂಡವನೆಂದೆನೇ | ಬಾಯಿಂದುಗು |
ಳಿದರೆ ತಾಳ್ದದವನೆಂದೆನೇ | ನರಕಾಳ ||
ಗದಿ ಸೋತವನೆಂದೆನೇ | ವರಮುನಿ |
ತ್ರದಶಾಧಿಪತಿ ಮುಖ್ಯ ಸೇವಿತ ಬಾಯಂದೆ ೨
ಸರಸಿಜ ಭವನ ತಲೆಯ ನೊಂದು ಶಳದುಸಾ |
ವಿರಭುಜ ನೀಡಿದ ಬಲಿಸುತಗ ||
ಸಿರಿಯೊಳನ ಕುಟುಂಬಕ್ಕೆ ಕೈವಲ್ಯವ |
ಕರುಣಿಸಿದರಸನೆ ಬಾಯಂದೆ ಕಪಾಲ ||
ಕರದಿ ಪಡಿದವನೆಂದೆನೇ | ನರಮಾಂಸಕ |
ಹರಿದು ಪೋದವನೆಂದೆನೇ | ಬಾಗಿಲಕಾವಾ ||
ಸುರನ ಬಂಟನೆಂದೆನೇ | ಸಲಹುವಾ |
ಗುರು ಮಹಿಪತಿ ಪ್ರಭು ನಮೋ ನಮೋ ನಿನಗೆಂದೇ ೩

೬೧೮
ನಿನ್ನ ನೀ ತಿಳಿದು ನೋಡೋ ಕೇಳಲೋ ಪ್ರಾಣಿ ಪ
ನಿನ್ನ ನೀ ತಿಳಿದು ನೋಡೋ ಪನ್ನಗಾದ್ರೀಶನ ಕೂಡೋ
ಬನ್ನ ಭವಣೆ ಈಡ್ಯಾಡೋ ಕೇಳೆಲೋ ಪ್ರಾಣಿ ೧
ನಾನಾರು ತನುವಾರು ತನುವಿ ನೊಡೆಯನಾರು
ನಾನೀ ನೆಂಬುದರೊಳಾರು ಕೇಳೆಲೋ ಪ್ರಾಣಿ ೨
ಹಿಂದಿನ ಪುಣ್ಯಗಳಿಂದ ಬಂದು ನರ ದೇಹದಿಂದ
ಬಂದೇನಾ ಘಳಿಸಿನಿಂದೇ ಕೇಳೆಲೋ ಪ್ರಾಣಿ ೩
ವಿದ್ಯಾ ವಿತ್ಪತ್ತಿ ತೋರಿ ಗದ್ಯ ಪದ್ಯಗಳ ಬೀರಿ
ಬಿದ್ದಿ ಗರ್ವಾರಣ್ಯದಾರೀ ಕೇಳೆಲೋ ಪ್ರಾಣಿ ೪
ತಂದೆ ಮಹಿಪತಿ ದಯದಿಂದ ಪಡೆಯೋ ವಿಜಯ
ಮುಂದ ಬಾರದು ಈ ಕಾಯ ಕೇಳೆಲೋ ಪ್ರಾಣಿ ೫

೮೫
ನಿನ್ನ ಮೂರುತಿಯ ತೋರಸೋ | ರಂಗಯ್ಯಾ ಪ
ನಿನ್ನ ಮೂರುತಿಯ ತೋರಿಸೆನ್ನ ಕಂಗಳಿಗೆ ದಯ |
ವನ್ನು ಬೀರಿ ಭವಭಯ ಬನ್ನವನು ಬಿಡಸೋ ರಂಗಯ್ಯಾ ಅ.ಪ.
ಅರುಣನಖಾಂಗುಲಿ ಹೊಳೆವಾ | ಕೋಮಲ ಪಾದಾ|
ಎರಡು ಜಂಘೆ ಜಾನುರವಾ |ಕಟಿ ಜಗದು |
ದರನಾಭಿ ಸಿರಿವತ್ಸವಾ | ಕಂಬುಗ್ರೀವದ |
ಕರಚತುಷ್ಟಯ ಮೆರೆವಾ | ಕರುನಗೆದಂತಾ |
ಧರಮಿರುಪಕದಪುಶೃತಿ | ಅರಗಂಗಳನಾಸಾ |
ಪೆರೆ ನೋಸಳಲಳಕದಾ ರಂಗಯ್ಯಾ ೧
ರÀನ್ನಮುಕುಟ ಕುಂಡಲದಾ | ಕೌಸ್ತುಭ ಕೇಯೂ |
ರನ್ನು ತೋಳಬಂದಿ ಸ್ಪುರದಾ | ಕಡಗ ಮುದ್ರಾಂ |
ಬರ ವಡ್ಯಾಣವು ಹೇಮದ | ಅಂದುಗೆ ಗೆಜ್ಜೆ |
ಬಣ್ಣ ತನು ನೀಲ ಮೇಘದಾ | ಮುನ್ನಗಜದವ |
ಸರ ಮನ್ನಿಸ್ಸೊದಗಿದ | ಪರಿ ಧನ್ಯ ಗೈಸೋ |
ಮಂದ ಮತಿಯೆನ್ನದೆ ಕರುಣಿಸಿ ರಂಗಯ್ಯಾ೨
ಕಣ್ಣಿನೋಳು ರೂಪ ನಿಲಿಸಿ | ಬಾಹ್ಯಾಂತರದಿ |
ನಿನ್ನ ಕಳೆಗಳ ತೋರಿಸಿ | ಹಮ್ಮಮತೆಯಾ |
ಮನ್ನೀನವಗುಣ ಬಿಡಸೆ | ಸಂತರ ಕೈಯಾ |
ಲೆನ್ನ ಅನುದಿನ ಒಪ್ಪಿಸಿ |
ಸನ್ನುತ ಮಹಿಪತಿ | ಚಿನ್ನನೊಡೆಯನೇ ಬಹ |
ಜನ್ಮ ಜನ್ಮಾಂತರದಲಿ ತನ್ನವನೆಂದೆನಿಸಿ ೩

೬೨೧
ನಿನ್ನ ಸ್ವಹಿತ ಮಾಡೋ ಪ್ರಾಣಿ |
ನಿನ್ನ ಸ್ವಹಿತ ಮಾಡೋ ಪ
ಶರಣರ ಕೂಡಿ ಸ್ಥಿರ ಮನಮಾಡಿ |
ಹರಿಯ ಕೊಂಡಾಡಿ ಪರಗತಿ ಬೇಡಿ |
ಮರೆದು ಈಡ್ಯಾಡೀ ೧
ಹಳೆಯ ದುಃಸಂಗಾ ಕಳೆದಂತರಂಗಾ |
ದೊಳು ಧ್ಯಾನದಂಗಾ ಬಲಿಯಲು ರಂಗಾ |
ಹೊಳೆವ ಕೃಪಾಂಗಾ ೨
ಸಂದೇಹಲಿಂದು ಧರೆಯೊಳು ಬಂದು |
ಮರೆವದು ಕಂಡು ಗುರುಮಹಿಪತೆಂದು
ಗುರುತಕ ಹೊಂದು ೩

೨೨೯
ನಿನ್ನ ಹಿತವಾ ಪಡಿಯೋ ಹರಿಯ ಭಜಿಸಿ ಪ
ಸನಕ ಸನಂದನ ಮುನಿಜನರಾಡುವ |
ಘನ ಸುಖ ಮಾರ್ಗದಿನಡಿಯೋ ಹರಿಯ ಭಜಿಸಿ೧
ಕುಂಟಿಣಿ ಗಣಿಕಾ ಜ ಮೇಳ ರುದ್ಧರಿಸಿದಾ |
ಕಂಠದಿ ನಾಮವ ಜಡಿಯೋ ಹರಿಯ ಭಜಿಸಿ೨
ಗುರುವರ ಮಹಿಪತಿ ನಂದನು ಸಾರಿದಾ |
ಶರಣರ ಸಂಗವ ವಿಡಿಯೋ ಹರಿಯ ಭಜಿಸಿ ೩

೬೧೯
ನಿನ್ನನೀ ತಿಳಿದು ನೋಡು | ಯನ್ನ ಮನವೇ ಪ
ನಿನ್ನ ನೀ ತಿಳಿದು ನೋಡು |
ಎನ್ನ ಹಿತವು ದಾವುದೆಂದು |
ಮುನ್ನಿನವ ಗುಣ ಜರಿದು |
ಇನ್ನಾರೆ ನೀ ಮನವೇ ೧
ಒಳ್ಳೆವರಾ ಕಂಡು ಬಾಗಿ |
ಸಲ್ಲದಾ ಬಡಿವಾರ ನೀಗಿ |
ಸೊಲ್ಲವ ನಾಲಿಸು ಅವರಾ |
ನಿಲ್ಲದೇ ನೀ ಮನವೇ ೨
ತಂದೆ ಮಹಿಪತಿ ದಯಾ |
ದಿಂದ ಪಡೆಯೋ ವಿಜಯಾ |
ಮಂದ ನಾಗದಿರು ಬಂದಾ |
ಛಂದ ವಿಂದು ಮನವೇ ೩

೨೨೬
ನಿನ್ನನೇ ನಂಬಿದೆನಯ್ಯಾ ಪ
ನಿನ್ನನೇ ನಂಬಿದೆನಯ್ಯಾ | ಎನ್ನ ಬಿಡದಿರು ಕೈಯ್ಯಾ |
ಇನ್ನು ನೋಡದೆ ನೆಲೆಯಾ | ಮನ್ನಿಸಿ
ಬೀರೆಲೋದಯಾ ೧
ತರಳ ತಾಯಿಯಲ್ಲದೆ | ನೆರೆಹೊರೆಯ ಬಲ್ಲದೇ |
ಮರಳು ಮಂದನೆನ್ನದೆ | ಅರಹು ಕೂಡಿಸೋ ತಂದೆ ೨
ಹೋದೆಣಿಕೆಯ ಬಿಟ್ಟು | ಪಾದಸ್ಮರಣೆ ಕೊಟ್ಟು |
ಸಾಧುಸಂಗದಲಿಟ್ಟು | ಬೋಧಾಮೃತವನಿಟ್ಟು ೩
ಜ್ಞಾನ ಭಕುತಿ ಇಲ್ಲಾ ಮೌನ ಸಾಧನವಿಲ್ಲಾ |
ಏನೇನು ಸಾಧನವಿಲ್ಲಾ | ನೀನು ಪೇಕ್ಷಿಸುದಲ್ಲಾ೪
ಗುರು ಮಹಿಪತಿ ಸ್ವಾಮೀ | ಶರಣರ ರಕ್ಷಕ ನೇಮಿ |
ಸುರಮುನಿಜನ ಪ್ರೇಮಿ | ಹೊರಿಯೋ ಸಾಸಿರ ನಾಮಿ೫

೨೨೭
ನಿನ್ನವ ನಾನೆಂದು ಸಿರಿನಲ್ಲಾ ರಕ್ಷಿಸೋ |
ಎನ್ನವಗುಣಗಳ ಎಣಿಸದೆ ದಯದಿಂದ ಪ
ನಿನ್ನ ಚರಿತವ ಕಿವಿಯಲಿ ಕೇಳಿಸಿ |
ನಿನ್ನ ಮೂರುತಿಯ ಬೆಳಗವದೋರಿಸಿ |
ನಿನ್ನ ಪಾದಾಂಬುಜ ಪರಿಮಳ ಸುಳಿಸಿ |
ನಿನ್ನ ನಾಮಾಮೃತ ಸವಿಸವಿ ಉಣಿಸಿ೧
ನಿನ್ನ ಪೂಜಿಸಿಕೊಂಡು ಕರಗಳಿಂದ |
ಚೆನ್ನಾಗಿ ಪ್ರದಕ್ಷಿಣೆಯಾ ಪಾದಗಳಿಂದ |
ಧನ್ಯಗೈಸಿಯೆನ್ನ ಕಾಯ ನಮನದಿಂದ –
ಎನ್ನ ಮನವಿಟ್ಟು ನಿನ್ನ ನೆನುವಿನಿಂದಾ೨
ಅನುದಿನ ಕೊಟ್ಟು ನಿನ್ನ ದಾಸರ ಸಂಗ |
ಕೊನೆದೇಳದಿರಲೆನ್ನಾ ವಿಶ್ರಾಮದಂಗ |
ನೀನಾಗಿರು ತುಂಬಿಯೆನ್ನಾ ಬಾಹ್ಯಾಂತರಂಗ |
ಘನಗುರು ಮಹಿಪತಿ ಪ್ರಭುಶ್ರೀರಂಗ೩

೬೨೦
ನಿನ್ನವಗುಣ ಜರಿದು ಎನ್ನ ಮನವೇ |
ನಿನ್ನವಗುಣ ಜರಿದೆನ್ನ ಮನವೇ | ಶಿರಿ |
ಪನ್ನಗಾದ್ರೀಶನಾ ಕೂಡೋ ಸುಖ ಸೂರ್ಯಾಡೋ ಪ
ಕೆಲವು ಪುಣ್ಯವನೇ ಮಾಡಿ | ನರದೇಹದಲ್ಲಿ |
ಇಳಿಯೊಳಾಗ್ರದಲಿ ಮೂಡಿ |
ಹಲವು ಹಂಬಲಿಂದ ಗೆಳೆಯರೈವರ ಛಂದಾ |
ಬೆಳೆಸಿ ಸದ್ಗುಣ ಬಿಡುವರೇ ಅಂಧರಾಗುವರೇ ೧
ಮರಹು ಮನೆಯನೆ ಸೇರಿ | ಮಂದತನದೀ |
ಅರಿವ ಪಂಥದಲಿ ಜಾರಿ |
ಅರಿಗಳಾರರ ಕೈಯಾ ಶೆರೆಯಾಗಿ ಅನುದಿನ |
ಕೊರವನಾ ಕೋಡಗದಂತೆ ಕುಣಿದುಚಿತೆ ೨
ಒಂದೇ ನಿಷ್ಟೆಯಾ ವಿಡಿದು | ಸದ್ಭಾವದಿಂದಾ |
ದುಂದುಗಾವೃತ್ತಿ ಕಳೆದು |
ತಂದೆ ಮಹಿಪತಿದಯಾ ನಂದ ಪಡೆದು | ನಿನ್ನಾ
ಬಂದ ಸಾರ್ಥಕದಿ ಬಾಳು ಮುನ್ನಿನ ಕೇಳು ೩

೨೨೮
ನಿನ್ನವನೆನಿಸಿದಾ ಮಾನವನಿಂಗೆ ಇನ್ನು ಭವಭಯ ಉಂಟೇ
ಭಕುತ ವತ್ಸಲ ಕೃಷ್ಣಾ ಪ
ಶ್ರವಣ ದರಹು ಇಲ್ಲಾ ನವವಿಧ ಭಜನಿಲ್ಲಾ
ಕವಿತದನುಡಿಯ ಚಾತುಯ್ರ್ಯವಿಲ್ಲಾ
ತವಚರಣವನಂಬಿ ಅವನಿಯೋಳಗನಿಶಿ
ದಿವಸದಿ ಅಚ್ಯುತಾನಂತ ಗೋವಿಂದ ಯನುತಲಿ ೧
ಘನ್ನ ವಿರಕ್ತಿಯಿಲ್ಲಾ ಮನ್ನಣೆಯ ತಪವಿಲ್ಲಾ
ಉನ್ನತ ದ ವ್ಯತಶೀಲ ಕರ್ಮವಿಲ್ಲಾ
ಅನ್ಯದೈವ ಕೆರಗದೆ ನಿನ್ನ ನಾಮ ನಿನ್ನ ಮುದ್ರೆ
ನಿನ್ನವರಪರಿಚಾರ ತನದಲ್ಲಿ ರಮಿಸುತಾ ೨
ಮರೆದೊಮ್ಮೆನೆನೆದರೆ ಸರಿವದಘರಾಶಿ
ಅರಿದೊಮ್ಮೆನೆನೆಯಲು ಗತಿಸಂಪದಾ
ದೊರೆವುದೆನುತಶೃತಿ ನಿರುತ ಸಾರುತಲಿದೆ
ಗುರುಮಹಿಪತಿ ಪ್ರಭು ಎನ್ನನುದ್ದರಿಸುದೈಯ್ಯಾ ೩

೬೧೪
ನಿರ್ತದೊಡ್ಡದೈಯ್ಯಾ |
ಅರ್ತವರಿಗೆಲ್ಲಿದೆ ಭಯವು ಪ
ಗುರುವಿನಂಘ್ರಿಯ ಕಂಡು |
ಗುರುದಯ ಪಡಕೊಂಡು |
ಚರಿಸುವರಾನಂದ ನುಂಡು ೧
ಘನದೆಚ್ಚರುಳ್ಳವಗ |
ಬಿನಗುದೈವದ ಸಂಗ |
ಆನಿಯೇರಿ ಕುನ್ನಿಯ ಹಂಗ ೨
ಮೊಮ್ಮಕ್ಕಳ ಕಂಡಿರೆ |
ಗುಮ್ಮನೆಂದರಂಜುವರೆ |
ತಮ್ಮನುಭವ ಬಿಡುವರೆ ೩
ಮುಂದಾಗುವ-ಹಿತೊಂದು |
ಇಂದಿವೆ ಬಾರದ್ಯಾಕೆಂದು |
ಮುಂದಗಿಡನು ಎಂದೆಂದು ೪
ಮದಿರೆಕೊಂಡವನಂತೆ |
ಮದವೇರಿಹ ನಗುತ |
ಮಧುಹರನ ಕೊಂಡಾಡುತ ೫
ತಂದೆ ಮಹಿಪತಿದಯಾ |
ನಂದ ಕವಚದಿ ಕಾಯಾ |
ಛಂದ ಮಾಡಿದಾ ಉತ್ಸಾಯಾ ೬

೨೩೧
ನಿಲಿಸಯ್ಯಾ ನಿಲಿಸೆನ್ನ ಮನವ ಶ್ರೀ ಹರಿಯೇ ನಿನ್ನಾ |
ಹೊಳೆವ ಚರಣದಲ್ಲಿ ನೆಲೆಗೊಂಬುವಂದದಿ ಪ
ಯರಳಿಯು ಘಂಟಾನಾದಕೆ ಬಲೆ ಹೋಗುವಂತೆ |
ಮರುಳಾಗಿ ತರಣಿಯರಾಳಾಪದಿ |
ಭರದಿಂ ದೀವಿಗೆ ಕಂಡು ಪತಂಗ ಮಡಿವಂತೆ |
ಹರಿದು ರೂಪ ವಿಷಯದಲಿ ಮುಗ್ಗುತಿಹುದೋ೧
ಕರಿ ಅಂಗ ಸಂಗದೀ ಕುಣಿಯಾ ಬೀಳುವಂತೆ |
ಸ್ಪರುಶ ವಿಕ್ಷಯದಲಿ ಮೈಮರೆದು |
ಯರಗಿ ಮಾಂಸಕ ಗೋಣ ನೀವ ಮಚ್ಛದಂತೆ |
ನಿರುತ ಜಿವ್ಹಾಸ್ವಾದಕ ತೊಳಲುತಲಿಹುದೈಯ್ಯಾ೨
ಪರಿಮಳಕಾಗಿ ಬ್ರಮರ ಸೆರೆ ಬಿದ್ದಂತೆ |
ಹರುಷ ಪಡುತ ಭೋಗ ದ್ರವ್ಯದಲಿ |
ತರುವರಿ ತನಲಿಂತು ಮಾಡಿ ವಿಷಯದಿ ಬಂದು |
ದುರಿತ ಮೊನೆಗೆಯನ್ನ ಗುರಿ ಮಾಡಿತಿಹುದೈಯ್ಯಾ೩
ಐದು ಮೋರೆಯಲಂತು ಹರಿಗುಡದೆವೆ ಮತ್ತ |
ಐದು ಪರಿಯ ಕಾವಲಿಯ ನಿರಿಸೋ |
ಮಾಧವ ನಿಮ್ಮ ಸತ್ಕಥೆಗಳ ಶ್ರವಣಕ |
ಪಾದ ಧ್ಯಾನದಿ ಹಿಂಗದಂದದಿ ನಯನದಿ ೪
ನಿನ್ನ ದಾಸರ ಸಂಗ ವನುದಿನ ದೇಹಕ |
ನಿನ್ನ ನಾಮಾಮೃತ ಜಿವ್ಹೆಯಲಿ |
ನಿನ್ನ ನಿರ್ಮಾಲ್ಯ ತುಳಸಿಯಾ ಫ್ರಾಣಿಸುವ ತಾ |
ಯನ್ನನುದ್ದರಿಸು ಮಹಿಪತಿ ಸುತ ಪ್ರಭುವೆ೫

೨೩೦
ನಿಲ್ಲದೋ ನಿಲ್ಲದೋ ಮನವಿದು ಸಲ್ಲದೋ ಸಲ್ಲದೋ ಪ
ಸ್ನಾನ ಸಂಧ್ಯಾದಿ ಮೌನ ವಿಡದು ಅನು |
ಷ್ಠಾನ ಜಪವ ಮಾಡಲಿ ಕುಳಿತರೆ |
ತಾನಾಗ ಹೊರಡುತಲಿ ತಿರಗುತ |
ನಾನಾ ದುರ್ವಿಷಯದಲಿ ತಂದು ಮಹಾನಿದ್ರೆ ಒಡ್ಡುತಲಿ೧
ದೋಷ ಕರ್ಮಗಳಿಂದ ಘಾಸಿ ಬಡುವರೆಂಬ |
ದೀ ಶಾಸ್ತ್ರಗಳ ಬಲ್ಲದು ಸದ್ಗುಣ |
ಧ್ಯಾಸ ವೆಂದಿಗು ಮಾಡದು ದುವ್ರ್ಯತ್ತಿ |
ಹೇಸದಾ ಚರಿಸುವದು೨
ಆವಗತಿಯೋ ಯೆನಗಾವ ಜನುಮವೋ |
ಆವಬವಣೆಯಂಬುದು ತಿಳಿಯದು |
ದೇವನೇ ಸಲಹುವದು ಮನ |
ವಿವೇಕದಿ ತಿದ್ದುವದು |
ಗುರು ಮಹಿಪತಿ ಸುತಗೊಲಿದು ೩

೨೩೮
ನೀ ಯನ್ನ ಸಲಹುತಿಹೆ ಜನುಮ ಜನುಮಗಳಲ್ಲಿ|
ದಾನವಾರಿಯೆ ಉರಗಶಯನ ಸಿರಿರಂಗರೇಯಾ ಪ
ಮುದದಿಂದ ತನ್ನ ಮಕ್ಕಳನು ತಾ ನೆನಿಯಲಿಕೆ|
ಅದರಿಂದ ಪದಳಿಸುವ ಕಮಠದಂತೆ|
ಉದರದಲಿ ನವಮಾಸ ವಾಸಾಗಿ ಬೆಳೆಯುತಿರೆ|
ಪದುನಾಭನೆ ನಿಮ್ಮದಯದಿ ವರ್ಧಿಸಿದೆನಯ್ಯಾ ೧
ಜಲಧಿಯೊಳಗ ತನ್ನ ನೋಟದಿ ನೋಡಲಾಕ್ಷಣ ದಿ|
ಎಳೆಮೀನಗಳು ಬಹಳ ಸುಖಿಸುವಂತೆ|
ಇಳೆಯೊಳಗ ಜನಿಸಿದ ಬಳಿಕ ಕರುಣ ನೋಟದಾ|
ಒಲುಮಿಂದ ಸಕಲ ಸೌಖ್ಯದಲಿರುತಿಹೆನಯ್ಯಾ ೨
ನಂದನನು ಪೋಷಿಸುವ ಮಾತೆಯಂದದದಿ ದುರಿತ|
ಬಂದಡರೆ ಅಡಿಗಡಿಗೆ ಪರಿಹರಿಸುತಾ|
ಕುಂದ ದಾವಾಗ ರಕ್ಷಿಪೆ ತಂದೆ ಮಹಿಪತಿ ಕಂದ ನೊಡಿಯನೇ
ಚಿದಾನಂದ ಮೂರುತಿ ದೇವಾ೩

೬೨೩
ನೀ ಯಾಕ ಮನವೇ ಚಿಂತಿಸಿ ಬಳಲುವೆ ಬರಿದೇ |
ಶ್ರೀಯರಸನ ಮೊರೆ ಹೋಗದೇ ಪ
ಸಾಧುರಾ ಸಂಗ ಜರಿದು ಕುಜನರ ನೆರೆವಿಡಿದು |
ಮೇದಿನಿಯೊಳು ನಿನ್ನ ನೀ ಮರೆದು ೧
ಇರಲು ಮುಳ್ಳಿನಾಗ್ರದಲಿ ಹೀನ ಕೀಟಕಾವಳಿ |
ಪೊರೆವಾನಿತ್ತು ಆಹಾರದಯಲೀ ೨
ಮನುಜರಿಗೆ ತಲೆವಾಗಿ ಗೇಣು ವಡಕಲಾಗಿ |
ಮನಸಾ ಹಿಡಿವರೇ ಪರರು ಹೋಗಿ ೩
ಹುಟ್ಟಿಸಿದಾ ದೇವನು ಹುಲ್ಲು ಮೇಯಿಸುವನೇನು |
ಅಷ್ಟಾಸಾಯಸ ಬಡದಿರು ನೀನು ೪
ಹೊಂದಿರು ಅನುದಿನ ಗುರುಮಹಿಪತಿ ಚರಣಾ |
ತಂದಿದಿರುಡುವ ನಿಧಾನಾ ೫

೨೩೨
ನೀಡೆಲೋ ಶ್ರೀರಂಗಾ ನಿನ್ನ ದಾಸರ ಸಂಗಾ ಪ
ಕೂಡಿಸಿ ತವ ಚರಿತಾಮರ ಗಂಗಾ |
ಮಾಡುವದು ಭವಭಂಗಾ೧
ಮೂಡಲುದಯದಲಿ ಜ್ಞಾನಪತಂಗಾ |
ಓಡುದು ತಮ ಅಂತರಂಗಾ ೨
ಸುಗಮದಿ ಗುರುಮಹಿಪತಿ ಪ್ರಭು |
ಕಂಗಳಿಗೆ ದೋರುವುದು ಸುಖದಂಗಾ೩

೬೨೨
ನೀನೇ ನಿನ್ನ ಮರೆದಿಹುದೇನು ಮನವೇ |
ಸುಜ್ಞಾನದಿಂದ ನಿಜವನೀ ನರಿಯಲಿಲ್ಲವೇ ಪ
ಶ್ವಾನ ಸೂಕರಾದಿ ಅತಿ ಹೀನ ಯೋನಿಯಲಿ ಸುಖದೊಳು |
ನಾನಾ ಪರಿಯಲಿ ಬಾಹುದೇನು ಅನುವೇ ೧
ಹರಿವ ಮೃಗಜಲಕ ಬೆಂಬತ್ತಿ ಪೋಪಾ ಹರಿಣನಂತೆ |
ಹರಿದು ವಿಷಯ ಕೂಡಾ ಕೆಡುದೇನು ಗುಣವೇ ೨
ನಿನ್ನ ಬಯಕೆಯಂತಾದಡೆ ಮನ್ನಿಸುವ ಅಲ್ಲದಡೆ |
ಘನ್ನ ಚಿಂತೆಯೊಳು ಬೀಳುತಿಹುದೇನು ಸುಖವೇ ೪
ನೆನೆದು ತರಿಸು ಮಹಿಪತಿ ಚರಣಾ ಚಿನ್ನ ಕೃಷ್ಣ ನಾ |
ತನುವಿನೊಳಗಾಡುತಿಹ ನಿಜ ಮನವೇ ೫

೨೩೩
ನೀರಜಗಂಧಿಯೇ ಹೇಳೇ ಸುಳಿದವರಾರಮ್ಮಾ |
ನೀರಜ ಶರಪತಿ ಕಾಣಮ್ಮಾ ಪ
ಅರುಣನಖಾಂಗುಲಿ ಗುಲ್ಫ ಗೆಜ್ಜೆ ಕಾ-
ಪುರ ನೂಪುರದ ಲೊಪ್ಪುವನವದಾರಮ್ಮಾ |
ಸರಸಿಯೊಳಗಪೊಕ್ಕು ತಮನಸುವ ಬಗೆದು |
ವರಶೃತಿ ತಂದವ ಕಾಣಮ್ಮಾ ೧
ಕಲಿ ದಶನಂದದಿ ಜಂಘೆ ಪೊಂಬಾಳೆಯ |
ಪರಿಯ ತೊಡೆಯುಳ್ಳುವ ದಾರಮ್ಮಾ |
ಶರಧಿ ಮಥಿಸುವಂದುಗಿರಿನಿಲ್ಲದಿರೆ ಬಂದು |
ಭರದಿ ಬೆನ್ನೆವಿತ್ತವ ಕಾಣಮ್ಮ೨
ಕಾಂಚನ ವಸನನಿರಿಯ ಮ್ಯಾಲ ವಡ್ಯಾಣ
ಮಿಂಚಿನ ಘಂಟೆಯ ದಾರಮ್ಮಾ |
ವಂಚಿಸಿ ಕ್ಷಿತಿ ವಯ್ದದನುಜನ ಶೀಳಿ ವಿ |
ರಂಚಿ ಗುಳಹಿದವ ಕಾಣಮ್ಮಾ೩
ಕಿರಿಡೋಳ್ಳಾತ್ರಿವಳಿಯ ನವರತ್ನ ಪದಕಿಹ |
ಉರಸಿನ ವತ್ಸನವ ದಾರಮ್ಮಾ |
ನರಹರಿ ರೂಪದಿ ಹಿರಣ್ಯಕನನು ಕೊಂದು |
ಶರಣನ ಕಾಯ್ದವ ಕಾಣಮ್ಮಾ೪
ಕೌಸ್ತುಭಹಾರ ಮೌಕ್ತಿಕದ ಕೊರಳಲಿಹ |
ಹಸ್ತ ಕಡಗದವ ನಾರಮ್ಮಾ |
ಸ್ವಸ್ತಿ ಎನುತ ಬಂದು ಬೇಡಿ ಬಲಿಯಾಗರ್ವ |
ಸ್ವಸ್ತಿ ಮಾಡಿವನು ಕಾಣಮ್ಮಾ೫
ತೋಳಬಂದಿ ಕೇಯೂರ ಶ್ರವಣ ಕುಂಡಲದ ಕ |
ಪೋಲ ಹೊಳಹಿನವ ದಾರಮ್ಮಾ |
ಏಳು ಮೂರು ಬಾರಿ ಕ್ಷತ್ರಿಯ ರಾಯರ
ಸೋಲಿಸಿ ಬಂದವ ಕಾಣಮ್ಮಾ೬
ಕರ್ಪೂರ ಕರಡಿಗಿ ಬಾಯಿ ಸಂಪಿಗೆಯಂತೆ |
ತೋರ್ಪ ನಾಶಿಕದವ ದಾರಮ್ಮಾ |
ದರ್ಪ ಮುರಿದು ರಾವಣನ ತಲಿಯ ಧರೆ |
ಗೊಟ್ಟಿಸಿದವ ನಿವ ಕಾಣಮ್ಮಾ೭
ಕುಡಿಗಂಗಳ ಭ್ರೂಲತೆಯ ಪೆರೆನೆಣೆಸಲು |
ನಡುವೆ ಕಸ್ತೂರಿ ರೇಖೆ ದಾರಮ್ಮಾ
ಪೊಡವಿಯೊಳಗ ನಂಬಿದ್ದ ಪಾಂಡವರನು |
ಬಿಡದೆ ಸ್ಪಾಪಿಸಿದವ ಕಾಣಮ್ಮಾ೮
ಕುರುಳು ಗೂದಲು ತಳಕದ ಮಾಲ್ಯ ಮೌಲಿಕ |
ಧರಸಿದ ಮುಕುಟವ ದಾರಮ್ಮಾ |
ತರಳನಾಗಿ ಮುಪ್ಪುರ ನಾರಿಯರ ವೃತ |
ತ್ವರಿತದಿ ಅಳಿದವ ಕಾಣಮ್ಮಾ೯
ನೋಡಲು ಮನಸಿಗೆ ಮೋಹನೆ ಮಾಡುವ |
ಪ್ರೌಡದಿ ಮನವವ ದಾರಮ್ಮಾ |
ರೂಢಿಲಿ ಕುದುರೆಯ ಏರಿ ಕಲಿಮಲವ |
ಝಾಡಿಸಿದವನಿವ ಕಾಣಮ್ಮ೧೦
ಸಹಜದಿ ಸವಿಸವಿ ಮಾತಲಿ ಸೋಲಿಸು |
ತಿಹ ಸರ್ವರಿಗಿವ ದಾರಮ್ಮಾ |
ಮಹಿಪತಿ ಸುತನ ಹೃದಯದಲಿ ನಿಂತು ತನ್ನ|
ಮಹಿಮೆ ಬೀರಿಸುವವ ಕಾಣಮ್ಮಾ೧೧

೨೩೭
ನೀರೆ ತೋರೆಲೆ ಜಗಪಾಲ ಮುಕುಂದನಾ|
ಶೂಲಧರನ ಮಿತ್ರನಾ ಪ
ಪಾಂಡವರಕ್ಷಕನಾ|ಪುಂಡಲೀಕಾಕ್ಷನಾ|
ಚಂಡಕೋಟಿ ಪ್ರಕಾಶನಾ||
ಕುಂಡಲ ವಿಭೂಷಿತ ಗಂಡಸತ್ಕಪೋಲನಾ|
ಪುಂಡಲೀಕಗತಿವರದನ ನಂದಕಿಶೋರನ೧
ಪರಮ ವರಪುರಾಣ ಪುರುಷೋತ್ತಮನಾ|
ಕಂಸಾಸುರ ಮರ್ದನ ಗೋಪಾಲನಾ||
ಉರಗಾರಿ ಗಮನನಾ ನಿರುಪಮ ಚರಿತನಾ|
ಸುರವರಾಗ್ರಜನಾದ ವಾಸುದೇವ ಮುಕುಂದನಾ೨
ಸನಕ ಸನಂದನಮುನಿ ಮಾನಸ ಹಂಸನಾ|
ಅನುಪಮ್ಯನಂತ ಮಹಿಮಾ||
ವನರುಹ ಯೋನಿವಂದ್ಯನ ಮಧು ಸೂಧನ|
ಘನಗುರು ಮಹಿಪತಿ ಸುತಪ್ರಭು ಶ್ರೀ ಕೃಷ್ಣನಾ೩

೨೩೫
ನೀರೇ ತೋರೇ ಪಯೋನಿಧಿ ವಾಸನಾ|
ನೀರ ಜಾಸನಾನಂತ ಸರ್ವೇಶನಾ ಪ
ಹಸ್ತ ವರದನ ಹರಿಮಧುಸೂದನ|
ಹಸ್ತಿ ವಾಹಜನ ಸೂತಾದನಾ ೧
ಕರಿಯೇರಿದಾತನ ಶರಕುರುವಾತನ|
ಕರಿಹರ ಸಖ ಸನಾತನಾ ೨
ಅನಂತ ಮಹಿಮ ಕೇಶವ ಮುಕುಂದನ|
ಅನಂತ ಶಯನ ಗೋವಿಂದನಾ ೩
ಮಕರ ಧ್ವಜ ಪಿತನ ಪರಮಾನಂದನ|
ಮಕರ ಧ್ವಜ ಪಿತ ವಂದ್ಯನಾ೪
ತಂದೆ ಮಹಿಪತಿ ನಂದನ ಜೀವನ|
ಹೊಂದಿದವರ ಕಾವಾ ದೇವನಾ೫

೮೧
ನೀರೇ ದÉೂೀರೆ ದೋರೆ ರಂಗನಾ|
ಕರೆ ತಾರೇ ಮುನಿಜನ ಸಂಗನಾ ಪ
ಶರಣ ರಕ್ಷಕ ನೆಂಬೋ ಬಿರುದವ ಸಾರಲು |
ಮೊರೆಯಾ ಹೊಕ್ಕೆನು ಕೇಳಿ ಬಂದುನಾ೧
ಜ್ಞಾನ ಭಕುತಿಗಳ ಏನೇನರಿಯದ |
ಮಾನಿನಿ ನೋಡುವರೇ ಅವಗುಣಾ ೨
ಗುರುಮಹಿಪತಿ ಸುತ ಪ್ರಭು ಕರುಣಾಕರ |
ನೆನದನು ಮೊರೆಕೇಳಿ ಇಂದಿನಾ ೩

೨೩೬
ನೀರೇ ನೀಕರೆ ತಾರೇ ಪ್ರಾಣದೊಲ್ಲಭನಾ|ಜಾಣ ಸುಜ್ಷಾನೇ ಪ
ಹೃದಯ ಮಂದಿರದೊಳು ಅರುಹುದೀಪವಹಚ್ಚಿ|
ಹಾಡಿ ನೋಡಲಿಹೆ ಮೈದೋರನ್ಯಾಕ|ಮೈದೋರ ನ್ಯಾಕ ೧
ಧ್ಯಾಸಮಂಚದಿ ಭಕುತಿ ಹಾಸಿಕೆಯು ಸು|
ವಾಸನೆಪುಣ್ಯಕ ವಲಿದು ಬಾರನೇ|ವಲಿದು ಬಾರನೇ ೨
ಸಕಲ ನುಕೂಲಿರಲು ಕ್ರೀಡೆಗೆ ಇನಿಯನು
ಪುಕಟ ದೊಲಿಯಭಾಗ್ಯ ಮಂದಳು ಕಾಣೇ|ಮಂದಳು ಕಾಣೇ ೩
ಅರಿದವಳು ಎಂದು ಅರಿತು ಕೈಯ್ಯವಿಡಿದು|
ಮರಳೆನ್ನ ಅಂತ ನೊಡುವರೇನೇ ನೋಡುವರೇನೇ ೪
ಧರೆಯೊಳು ಭೋಗಪದಾರ್ಥಿವು ಸರ್ಪದ|
ಸರಸದ ಓಲಾಯಿತು ಅಗಲಿರಲಾರೇ|ಅಗಲಿರಲಾರೇ ೫
ಬಂದರೊಂದಿನ ನಿಶೆದಲಿ ಕಳೆಗೂಡದೇ|
ಒಂದು ಜಾವ ವ್ಯರ್ಥಿಹೋಯಿತಲ್ಲಮ್ಮಾ|ಹೋಯಿತಲ್ಲಮ್ಮಾ ೬
ಗುರುವರ ಮಹಿಪತಿ ನಂದನ ಪ್ರಭುವಿನ|
ಚರಣವಗಾಣದೇ ಜೀವಿಸಲಾರೆ|ಜೀವಿಸಲಾರೆ ೭

೬೨೪
ನೀವು ಬರಿದೆ ಸಾಯಸ ಬಡ ಬ್ಯಾಡಿ ಪ
ಗುರುವಿಗೆ ಬಾಗದೆ ಗುರುರತವ ಕೇಳದೆ |
ಬರಡ ಸಾಧನವನೇ ಕೂಡಿ ೧
ತನ್ನೊಳು ಕಸ್ತೂರಿ ಮುನ್ನರಿಯದೆ ಮೃಗ |
ಕಣ್ಣಗೆಟ್ಟಂತೆ ತಿರುಗಾಡಿ ೨
ತಂದೆ ಮಹಿಪತಿ ನಂದನು ಸಾರಿದಾ |
ಮಂಧರ ಧರನ ಕೊಂಡಾಡಿ ೩

೨೩೯
ನುಡಿ ಎನ್ನಪ್ರಿಯನಾ ನೀತಂದು ತೋರೆ ಸುಜ್ಞಾನೇ ಪ
ಕನಸಿನೊಳಗ ಕಂಡ ಪರಿಯಾ ರೂಪವ ದೋರಿ|
ನೆನವಿನೊಳಗಿಟ್ಟು ಮಯವಾದನೇ ೧
ಅಂಗಯ್ಯ ಲಿಂಗದಂತೆ ಸುಲಭವಾಗಿ ನಮ್ಮ|
ಸಂಗ ಸುಖವ ಬೀರಿದನೇನೇ ೨
ಗುರುಮಹೀಪತಿ ಸುತಪ್ರಭು ಕರುಣಾಮೂರ್ತಿ|
ತರಳೆಯ ತಪ್ಪ ನೋಡಬಹುದೇನೇ ೩

೨೪೦
ನೆನಿ ಮನವೇ ನೀ ಮುಕುಂದನ ಪ
ನೆನಿ ಮನವೇ ನೀ ಮುಕುಂದನಾ|
ಆನಂದನ ಅಜ ವಂದ್ಯನಾ ೧
ಸಿರಿಲಕ್ಷುಮಿ ಮನೋಹರನಾ|
ಸುರಾಧಾರನಾ ಯದುವೀರನಾ೨
ಶರಣರ ದುರಿತ ನಿವಾರಿಯಾ|
ವರ ಶೌರಿಯಾ ಮುರವೈರಿಯಾ ೩
ಮನೋಹರ ಮೂರುತಿ ರಾಮನಾ|
ಘನ ಶ್ಯಾಮನಾನಂತ ನಾಮನಾ ೪
ಗುರು ಮಹಿಪತಿ ಸುತ ಪ್ರೀಯನಾ|
ಸ್ಮರ ನೈಯನಾ ಕೃಷ್ಣರೇಯನಾ ೫

೬೨೫
ನೆನಿ ಮನವೇ ಪಾವನ ದೇವನ ಚರಿತ ಕಥನುವೇ |
ನಿನಗಿದ-ವನಿಲಿ ನೆಚ್ಚಿರೆ ತನುವೇ ಪ
ಘನ ಶ್ಯಾಮನದಯ ಪಡಿಯದ ಸಾರ್ಥಕ |
ಜನುಮಗಳೇವದಿದು ಗುಣವೇ ಅ.ಪ
ಸುರಲೋಕ ಮೊದಲಾದ ಸುರಪ ವಿಚ್ಛೈಸಿ |
ಪರಿ ಪರಿ ಸಾಧನ ಮಾಳ್ಪರೆ |
ಸುರಭಿಯಿರಲು ವಿಡಿಸದ ಪುಳಿ ಪಾಲವ |
ಕರೆಸುವೆನೆಂದು ಅರಸುವರೇ ೧
ಗುರು ಶರಣ ನಿಷ್ಠೆಯೊಂದ್ಹಿಡಿಯದೇ ಕಂಡಾ |
ಧರೆಯ ದೈವಕ ತಲೆವಾಗುವರೇ |
ಸುರ ತರುವಿನ ನೆರಳವನೇ ತ್ಯಜಿಸಿ | ಬ|
ರ್ಬುರ ದ್ರುಮವನು ಸಾರುವೇ ೨
ವಿಕಳಿತ ಮಾಡುವ ತಾಪತ್ರಯದಾ |
ಸಕಲ ಹಳಾಹಳ ತ್ಯಜಿಸೀ
ಅಖಿಳ ಜೀವನದೊಡಿಯನ ಸದ್ಮೂರ್ತಿಯ |
ಹೃತ್ಕಮಲದೊಳಗಿರಿಸೀ ೩
ಹರಿಮಹಿಮೆಯ ಕೊಂಡಾಡುತ ಪೊಗಳುತ |
ಬೀರುತ ಗುರು ಭಕುತರಿಗೇ |
ಪರಮ ಸದ್ಭಾವದ ಭಕುತಿಲಿ ಮುಣುಗೈನ |
ವರತ ಪ್ರೇಮಾರ್ಣವದೊಳಗೇ ೪
ನಯನದಿಂದಲೀ ಸ್ಮರಿಸುವ ಬಹು ಶರಣರ |
ಭಯವ ನಿವಾರಣ ಮಾಡುವ |
ದಯದಲಿ ಮಹಿಪತಿ ನಂದನ ಪಾಲಿಸು |
ತಿಹಕರುಣಾಕರ ಮಾಧವಾ ೫

೬೨೬
ನೆನಿ ವನಜನಾಭನ ಮನವೇ ಪ
ನೆನಿ ವನಜನಾಭನ ಮನವೇ | ಭವ |
ದಣಿವಿರೆ ಹಿಂಗಿಸು ಮನವೇ |
ಈ ತನುವಾ ಸುಖದನುವಾ |
ನಿಜ ಘನವಾ ಮಾಡರ್ಪಣವಾ ೧
ಶರಣಾಗತರೆಂದಿಗೆ ತೊರೆಯಾ | ಭವ |
ಶರಧಿಲಿ ಕೈಯ್ಯಾ ಜರಿಯಾ |
ಆಕರಿಯ ಕೇಳಿ ಮೊರಿಯಾ |
ಬಂದರಿಯಾ ನೀ ಮರೆಯದೇ ೨
ನುತ ಮಹಿಪತಿ ಸುತ ಸಾರಥಿಯ ಪಾ
ಡುತ ನಿರ್ಮಳ ಕೀರುತಿಯಾ |
ಶ್ರೀಪತಿಯ ಮೂರುತಿಯಾ |
ಪದ ದ್ವಿತಿಯಾದಿ ರತಿಯಾಲಿ ೩

೪೨೭
ನೆನೆದು ಸುಖಿಸಿ ನಮ್ಮ ಆದಿ ಶರಣರಾ
ಅನುದಿನ ಹರಿ ಮೆಚ್ಚಿದ ಪ್ರಿಯರಾ ಪ
ಪ್ರಲ್ಹಾದ ನಾರದ ಪರಾಶರ ಮುನಿ
ವಲ್ಲಭ ರುಕ್ಮಾಂಗದಾ ಧ್ರುವರಾ
ಉಲ್ಹಾಸದಿಂದಲಿ ಅಂಬರೀಷ ಗಜೇಂದ್ರನಾ
ಬಲ್ಲಿದ ಬಲಿ ಗುಣ ಸಾಗರರಾ
ಹನುಮ ವಿಭೀಷಣ ಜಾಂಬವ ಅಜಮಿಳ
ಮುನಿ ಮುಚಕುಂದಾರ್ಜುನ ಮುಖ್ಯರಾ ೧
ಅನುಭವಿಯಾದಾ ಉದ್ಧವ ಉಪಮಾನ್ಯನು
ಜನÀದೋಳಧಿಕರಾದಾ ಪುಂಡಲೀಕ ಭೀಷ್ಮರಾ
ಭಕುತಿ ವನಧಿಯೊಳು ಮೆರೆವರ ತನವಾದಾ ೨
ಶುಕಶೌನಕ ಮುಖ್ಯ ಸಜ್ಜನರಾ |
ಪ್ರಕಟದಿ ಮಹಿಪತಿ ನಂದನು ಸ್ತುತಿಸಿದ |
ಮುಕುತಿಗೆ ಯೋಗ್ಯ-ನಾ ಮಾಡುವರಾ ೩

೨೪೧
ನೆನೆಯೋ ನೀ ಎನ್ನ ಮನವೇ|
ಅನುಪಮ್ಯ ಶ್ರೀ ಮುಕುಂದನಾ|
ಅನಾಥ ಜನ ಚಕೋರ ಸುನಕ್ಷತ್ರೇಶ ಗೋಪಾಲನಾ|
ಶ್ರೀಲೊಲನಾ ನಂದಬಾಲನಾ ಪ
ವರಭಕ್ತ ಧೃವಗ ಸ್ಥಿರಪದ ವಿತ್ತನಾ|
ಧರಣಿಯ ಭಯಹರ ಪುರುಷೋತ್ತಮನಾ|
ಉರಗಾರಿ ಗಮನನಾ ಉರಗ ತುಳಿದವನಾ|
ಉರಗಶಯನುರಗಾ ಭರಣನ ಸಖನಾ|
ಸುನಖನ ಅಬ್ಬ ಮುಖನಾ ೧
ಶರಣ ರಕ್ಷಕನಾ ದುರಿತ ನಿವಾರಕನಾ|
ಕರುಣಾದೀ ಅಹಲ್ಯಯ ನುದ್ಧರಿಸಿದನಾ
ಸರಸಿಜ ಸಮಪದ ಸರಸಿಜನಾಭನಾ|
ಸರಿಸಿಜ ಪಾಣಿಯ ಸರಸಿಜ ನೇತ್ರನಾ ೨
ಸುಚರಿತ್ರನಾ ಮುನಿಸ್ತೋತ್ರನಾ|
ಗುರುವರ ಮಹಿಪತಿ ನಂದನ ಜೀವನಾ|
ಗಿರಿವರಧಾರನಾ ಕಂಸಾಸುರ ಮರ್ಧನಾ|
ಕರಿವ ವರದನಾ ಶರಧಿ ನಿವಾಸನಾ|
ಹರಿಶತ ಕಿರಣ ಹರಿಸುತ ಪ್ರೀಯನಾ|
ಸ್ಮರಸೈಯ್ಯನಾ ಕೃಷ್ಣರೇಯನಾ೩

೨೪೨
ನೆನೆವೆನಾ ನೆನೆವರಿಗೊಲಿವನಾ ಅನುದಿನಾ ನೆನೆವನಾ|
ಕಾವನಾ ಪಾವನಾ ದೇವನಾ ಪ
ಗಜರಾಜ ಧ್ರವ ಪ್ರಲ್ಹಾದಂಬರೀಷನ|
ಅಜಮಿಳ ವಿಭೀಷಣ ರುಕ್ಮಾಂಗದರ್ಜುನ|
ಸುಜನ ಭೀಷ್ಮ ವಿದುರನ|
ನಿಜವ ದೋರಿಧನ್ಯ ಗೈಸಿದವನಾ೧
ಮುರಾರಿ ವಾರಿಜಾರಿ ವಂಶ ವೀರಧೀರನಾ
ಪಾರ ವಾರನಾ ಸುರ ಸಹಕಾರನಾ
ಕರುಣಾಳು ಮೂರುತಿ ಪರಮೋದಾರನ
ಗುರು ಮಹಿಪತಿಜ ಮನೋಹರನಾ೨

೪೭೬
ನೆರೆ ಮಾಡುವೆ ನಮ್ಮೈಯ್ಯಾ ಸಾಧುರಾ ಪ
ಝಮ್ಮನೆ ಹೋಗುವೆ |
ಸುಮ್ಮನದಿ ಬಾಗುವೆ |
ಮುಮ್ಮಳಿ ತ್ರಯಗಳ ನೀಗುವೆ ನಮ್ಮೈಯ್ಯಾ ೧
ಬೋಧಾಮೃತನುಂಬೆ |
ಮಾಧವನಾ ಕಾಂಬೆ |
ಸಾದರ ಪರಗತಿ ಪಡಕೊಂಬೆ ನಮ್ಮೈಯ್ಯಾ ೨
ಘನಗುರು ಚರಿತವಾ |
ನೆನೆಯುತ ನಿರುತವಾ |
ಮನಕ ಮಾಡುವೆ ಪ್ರೇಮ ಭರಿತವಾ ನಮ್ಮೈಯ್ಯಾ ೩
ಶ್ರವಣ ಮಾಡುವೆ |
ತವಕದಿ ಕೊಡುವೆ |
ಹವಣಿಸಿ ವರಗಳ ಬೇಡುವೇ ನಮ್ಮೈಯ್ಯಾ೪
ಮಹಿಪತಿ ಸುತ ಪ್ರೀಯಾ |
ಮಹಿಯೊಳೊಲಿವಪರಿಯಾ |
ವಿಹಿತದಿ ಬಲುವೆನೆ ಭಕ್ತಿಯಾ ನಮ್ಮೈಯ್ಯಾ೫

೬೨೭
ನೆಲಿಗೆ ಬಾರದು ಗುರುವೇ ಮನವಿದು ಪ
ಒಳ್ಳೆಯವರಾ ನಡೆ ಕಂಡು | ಎಳ್ಳನಿತು ನಾಚದು |
ಖುಳ್ಳರ ಮನದಲ್ಲಿ ಬೆರೆಸುವದು ೧
ಚರಟ ಮಾತುಗಳಲ್ಲಿ ಹರುಷವ ಬಡುವರು |
ಪರಮ ಸದ್ಭೋಧದಲ್ಲಿ ತೊಳಗುವದು ೨
ಏನ ಹೇಳಿದರೇನು ಜ್ಞಾನವ ಕೊಳ್ಳದು |
ತಾನೆ ತನ್ನಿಚ್ಛೆಯಲಿ ತಿರುಗುವದು ೩
ಸ್ಥಿರವಾಗುವ ಪರಿಯಲಿ ಕರುಣವ ಮಾಡುವುದು |
ಸರಣೆ ಸರಪಳಿ ನಿಕ್ಕಿ ನಿಲಿಸುವುದು ೪
ಸನ್ನುತ ಮಹಿಪತಿ ಚಿನ್ನನ ಹೊರೆವದು |
ಧನ್ಯಗೈಸಲು ಮನವ ತಿದ್ದುವದು ೫

೨೪೩
ನೋಡಮ್ಮಮ್ಮಾ ಎಂಥವನಿವಾ ಚಿನ್ನನೆ|
ಗೋಪಿಯ ಕಂದಾ ಅಂತವ ದೋರಗುಡನೆ ಪ
ಸಗಟನ ಮುರಿದೊತ್ತಿದ|ಮೊಲೆಯ ಕೊಟ್ಟ|
ಮುಗುದೆಯ ಪ್ರಾಣ ಹೀರಿದಾ ೧
ವಿಷಮಡು ಕಲಕಿದನೆ|ಕಾಳಿಂಗನಾ|
ವಸುಧೆಗೆ ಎಳೆತಂದನೆ ೨
ಪಶುಪಕ್ಷಿ ಮೃಗಾಂಗನೇರು|ಕೊಳಲಧ್ವನಿಗೆ|
ನಿಸಿದಿನಿ ಮರುಳಹರು೩
ತಿನಬ್ಯಾಡಮಣ್ಣವೆಂದರೆ|ಬಾಯೊಳು ಜಗವ|
ದೋರಿದ ಜನ ಬೆದರೆ ೪
ತಂದೆ ಮಹಿಪತಿ ಸ್ವಾಮಿಯ|ಹೇಳಲಿ ನಾನು
ಒಂದೆರಡೆಂದು ಲೀಲೆಯ ೫

೨೪೪
ನೋಡಮ್ಮಾ ಶ್ರೀ ವಾಸುದೇವನಾ ನಮ್ಮ
ಬೇಡಿದಿಷ್ಟಾರ್ಧವ ನೀವನಾ ಪ
ಗೂಢಪರಾತ್ಪರ ಗೂಢನಾ ಪರ ಬ್ರಹ್ಮ
ರೂಢಿಗೆ ನರಲೀಲೆಯಾಡುವ ಬಗೆಯಾಅ.ಪ
ದೇವರ ಅನುಮತ ನೋಡಿದಾ ಅಂವ
ದೇವಕಿ ಉದರದಿ ಮೂಡಿದಾ
ಪಾವನ ಗೋಕುಲ ಮಾಡಿದಾ ಸುಖ
ದೇವಿ ಯಶೋದೆಗೆ ನೀಡಿದಾ
ಆವಾವ ಪರಿಯಲಿ ನೋವ ಬಗೆಯ ಬಂದು
ಗಾಲಿಲ ಅಸುರರ ಜೀವನ ವಳಿದಾ ೧
ಗೊಲ್ಲತೆಯರ ಮನಮೋಹಿಸಿ ಕದ್ದು
ಅಲ್ಲಿಹ ಪಾಲ್ಬಣ್ಣೆ ಸೇವಿಸಿ
ಬಿಲ್ಲ ಹಬ್ಬದ ನೆವತೋರಿಸಿ ಪೋಗಿ
ಮಲ್ಲಚಾಣರರಾ ಭಂಗಿಸೀ
ಬಲ್ಲಿದ ಕಂಸನ ಮಲ್ಲಯದ್ಧಗಳಿಂದ
ಘಲ್ಲಿಸಿದನು ಜನಚಲ್ಲಿ ಬಡಿದನಾ ೨
ನೀರೊಳು ಕಟ್ಟಿಸಿ ಮನೆಯನು
ಬಂಗಾರದ ದ್ವಾರಕಾ ಪುರವನು
ಸೇರಿಸಿ ಯದುಕುಲದವರನು ರುಕ್ಮಿ
ಣೀ ರಮಣಲ್ಲಿಗೆ ಮರೆದನು
ಸಾರಿದ ಶರಣರಾ ತಾರಿಸಿ
ಹೋದನು ಮಹಿಪತಿ ನಂದನ ಪ್ರೀಯನಾ ೩

೬೨೮
ನೋಡಿ ನೋಡಿ ನಿಮ್ಮೊಳು ಪ
ನೋಡಿ ನೋಡಿ ನಿಮ್ಮೊಳು ನಿಜವಾ ನೋಡಿರ್ಯೋ |
ಬ್ಯಾಡಿ ಬ್ಯಾಡಿ ಮೈಯ್ಯ ಮರಿಯ ಬ್ಯಾಡಿರ್ಯೊ |
ಮಾಡಿ ಮಾಡಿ ಸ್ವಹಿತವನು ಮಾಡಿರ್ಯೋ |
ಪಾಡಿ ಪಾಡಿ ಅಚ್ಚುತನ ನಾಮ ಪಾಡಿರ್ಯೋ ೧
ಕೇಳಿ ಕೇಳಿ ಸದ್ಭೋಧವನೆ ಕೇಳಿರ್ಯೋ |
ಬಾಳಿ ಬಾಳಿ ಸತ್ಸಂಗದಲಿ ಬಾಳಿರ್ಯೋ |
ಕೇಳಿ ಕೇಳಿ ಮದಮತ್ಸರವಾ ಕೇಳಿರ್ಯೋ |
ತಾಳಿ ತಾಳಿ ವಿವೇಕ ಗುಣವಾ ತಾಳಿರ್ಯೋ | ೨
ಕೂಡಿ ಕೂಡಿ ತಂದೆ ಮಹಿಪತಿ ಕೂಡಿರ್ಯೋ |
ನೀಡಿ ನೀಡಿ ತನುಮನಧನ ನೀಡಿರ್ಯೋ |
ಬೇಡಿ ಬೇಡಿ ಗತಿ ಮುಕ್ತಿಗಳ ಬೇಡಿರ್ಯೋ |
ಮಾಡಿ ಮಾಡಿ ಸಾರ್ಥಕ ಜನ್ಮ ಮಾಡಿರ್ಯೋ ೩

೨೪೬
ನೋಡಿರೆ ನೋಡಿರೆ ನಂದನ ಕಂದನ|
ಆಡುವ ಆಟದ ಘನ ಮಹಿಮೆಯನು|
ರೂಢಿಲಿ ಶಿಶುವೆಂದವರ ನುಡಿ ಮಾಡುವ ಬಲುಕುಂದಾ ಪ
ದುರುಳತನವ ಬಲು ಮಾಡಲೈಶೋಧೆಯು|
ತರಳನ ಚರಣವ ನೆರೆ ಕಟ್ಟಿದರೆ|
ಒರಳವ ನೆಳೆದೊಯ್ದಾ ಭರದಲಿ ಮರಗಳ ನಡ ಮುರಿದಾ ೧
ಸಿಕ್ಕಿದ ಗೋವಳನೆನುತಲಿ ಬಾಲೇರು|
ಅಕ್ಕರದಲಿ ಹಿಡಿದೆಳೆತರಲವರಾ|
ಮಕ್ಕಳ ರೂಪವನು ಆಗುತೆ ಠಕ್ಕಿಸಿ ಹೋಗುವನು೨
ತಂದೆ ಮಹಿಪತಿ ನಂದನ ಪ್ರಭುವಿನಾ|
ನಂದನ ಲೀಲೆಯ ಹೇಳಲೆನ್ನಳವೇ|
ಒಂದಲ್ಲ ಎರಡಲ್ಲ ನೆಲೆಯನು ಇಂದುಧರನೇ ಬಲ್ಲ೩

೨೪೫
ನೋಡಿರೇ ನಂದ ಕಂದನಾ
ನೋಡಲು ಕಣ್ಣಿನ ಪಾರಣಿ ಮಾಡುವಾ ಪ
ಸೂರಿಯಾ ನಿಳಿಯಲು ಅಪರದ ಜಾವಕ
ಸಾರಿಸಿ ಗೋಧನ ತಿರುಗಿಸುತಾ
ವಾರಿಗ ರೆಲ್ಲರು ವಂದಾಗಿ ಹರುಷದಿ
ಧೀರನು ದಾರನು ಆಡೂತ ಬರುವಾ ೧
ಚಂಡು ಬಗರಿ ಚಿಣಿ ಕೋಲು ಚಪ್ಪಳಿಕೈಯ್ಯಾ
ಹಿಂಡ ನೆರೆದು ಹಂಬಲಿ ಹಾಕುತಾ
ಮಂಡಳದೊಳಗುಳ್ಳ ಆಟವ ನಾಡುತ
ಪಂಡರಿ ಕಾಕ್ಷನು ಲೀಲೆಯ ನಲುವಾ ೨
ಗೋಧೂಳಿ ತುಂಬಿದ ಗುಂಗುರ ಗೂದಲು
ಉದಿಸಿದ ಹಣೆಯಲಿ ಕಿರಿ ಬೆವರು
ಬೆರಿಸಿ ಪರಿಪರಿ ಸ್ವರದಲ್ಲಿ ಕೊಳಲವ
ನೂದುತ ಕುಣಿಯುತ ನಗೆವುತ ಬರುವಾ೩
ಅಲವುತ ಕುಂಡಲ ಹೊಳೆಯುತ ಕಣ್ಣಿನ
ಚಲುವಿನ ಕಸ್ತೂರಿ ರೇಖೆಯಲಿ
ನೌಲಗರಿಯ ವಾರಿ ದುರುಬವ ಕಟ್ಟಿಸಿ
ನೀಲಮಣಿಯ ಮ್ಯಾಲ ಪುತ್ಥಳಿ ಬರುವಾ೪
ಪೇಂದ್ಯ ಉದ್ದದ ಬಲರಾಯ ಸುಧಾಮರ
ವೃಂದದಿ ಮಹಿಪತಿ ಸುತ ಪ್ರೀಯನು
ಇಂದು ವದನೆಯರು ಆರುತಿ ಕೊಳುತಲಿ
ವಂದದಿ ಮಧ್ಯ ನಾಯಕನಾಗಿ ಬರುವಾ೫

೧೦೭
ನೋಡಿರೇ ನೋಡಿರಮ್ಮಾ ಚೆಲುವನಾ ನೋಡಿರೇ || ಇವ||
ರೂಢಿಗೆ ಆವನಿಜೆಯಾ ತಕ್ಕುವರನೇ ಮುದ್ದುಸ್ಮರನೇ ಪ
ಕೆಂದಳಿರ ಹೋಲುವ ಪಾದ ತಳವೇ
ಜಂಘಯಿಂದ ಜಾನೂರುಮಾರಾ
ಪೊಂಬಾಳವೆ ಕಟ ಛಂದದಂಬರ ಉದರ
ತ್ರಿವಳವೇ| ಹಾರ ದಿಯ
ವಪ್ಪುವಯದೆ ಕಂಬುಗಳವೇ ಕರ ಸರಳವೇ ೧
ನಗೆ ಮೊಗದಂತಾಧರ ಹೊಳೆವಾ ಕಡ ಪುಗಳು
ಮಂಡಿತದ ಕುಂಡಲವಾ|
ನಯನಗಳು ಹೋಲುತಿವೇ ಕಮಲವಾ| ಪಣಿ|
ಮೃಗಮದ ಕಿರೀಟ ೨
ಆವರಾಯನಮಗನೋತಾನರಿಯೇ|ಭೂಸು|
ರಾವಳಿಯೊಳಿಂದ್ಧಾರೇನು |ಅಂಗ|
ದಾವ ತೇಜಮುಸುಕಿತು ಧರಿಯೇ|ತ್ರ್ಯೆಭುವನವರಕ್ಷಿಸ
ಬಂದಾಹರಿಯೇ | ಮುಜ್ಜಿಮರಿಯೇ ೩
ಮುಟ್ಟಿಲೀ ತಗಧನುಏಳಲಿ ಝಮ್ಮೆನೇ
ನಾವು ನೆಟ್ಟನೆಪೂಜಿಪೆವು ಗೌರಮ್ಮನೇ ಎಂದು
ಬಿಟ್ಟ ಮಗಳು ಬೇಡಿಕೊಂಡರು ಸುಮ್ಮನೇ
ಆಡಿಯಿಟ್ಟುನಲಿದು ಬರುವ ರಾಮೊ ಘಮ್ಮನೇ ಪರಬೊಮ್ಮನೆ ೪
ಬಂದು ನೋಡಿಬಿಲ್ಲನೆತ್ತಿದ್ದಾಚಕ್ಕನೇ
ಅರುವಿಂದ ಲೋಚನೆ ಮಾಲಿ ಹಾಕಲು ಘಕ್ಕನೇ
ವೃಂದ ಕಾಣುತ ಹೆದರಿತುಧಕ್ಕನೇ
ನಮ್ಮ ತಂದೆ ಮಹಿಪತಿ ನಂದನ ಪ್ರಭು ಠಕ್ಕನೇ ಪಾಲಕ್ಕುನೇ ೫

೬೨೯
ನೋಡಿರೈ ಜನಾ ರಂಜನೆಯಲ್ಲಿ | ನೋಡಿರೈ ಜನಾ |
ಮಾಡದೆ ಹಿರಿಗುರು ಭಕ್ತಿಯ ಶೀಲದಿ |
ರೂಢಿಯ ಡಂಭಕ ಹರಿದಾಡುವದು ಪ
ಸಾಧು ಸಂತರ ಮನೆಯಲ್ಲಿ | ಆದರವಿಲ್ಲಾ ಮನದಲ್ಲಿ |
ಮೇದಿನಿಯಲಿ ನುಡಿಸಿದ್ಧಿಯ ಹೇಳಲು |
ಸಾಧಿಸಿ ಹೋಗುತ ಬಾಗುತಲಿಹುದು ೧
ಚಂದನವಿಡಿದು ತೆಯ್ವಲ್ಲಿ | ಒಂದು ಬಾರದು ನೊಣವಲ್ಲಿ |
ಕುಂದದೆ ಎಂಜಲ ತೊಳೆವಾಸ್ಥಳದಲ್ಲಿ |
ಸಂದಿಸಿ ಮುಕುರುವ ಸಂದಲಿ ಯಂದದಿ ೨
ಪರಗತಿ ಸಾಧನ ವರಿಯರು | ಬರಿದೆ ಭ್ರಾಂತಿಗೆ ಬೆರೆವರು |
ಗುರುಮಹಿಪತಿಸುತ ಪ್ರಭು ಕಲ್ಪತರು |
ಸೇರದೆ ಬೊಬ್ಬುಲಿ ಮರಕೆಳಗಾಡುವ ೩

೬೩೧
ನೋಡು ಗರ್ವ ಹಿಡಿಯ ಬ್ಯಾಡಾ ಪ
ಜಗದೊಳಗ ಹಿತ ಮಾಡಿಕೊ |
ಸಂತರೊಳು ಕೂಡಿ ನೀ ಪ್ರಾಣಿ ಅ.ಪ
ಸುರಪದ ಮದ-ಗಜವೇರಿ ಸುರಸೈನ್ಯದಿಂಬರಲು |
ಕರುಣದಿಂ ದೂರ್ವಾಸ ಸರ್ವ ಕುಡಲು |
ಕೊರಳಿಗಿಕ್ಕದೆ ಬಿಡಲು ಧರೆಗೆರಗುವದ ಕಂಡು |
ಮೊರೆದು ಕೋಪಿಸಲು ಸಿರಿಹರದ್ಹೋಯಿತು ಪ್ರಾಣಿ ೧
ನೃಪತಿ ನಹುಷನನು ಯಜ್ಞ ಅಪರಿಮಿತ ಮಾಡಿ ನಿಜ |
ಉಪಬೋಗಿಸದೆ ತಾ ಸುರಪ ಪದವಿಯಾ |
ವಿಪುಲ ಋಷಿಯರ ಕೂಡ ಅಪಹಾಸ ಮಾಡಲಿಕೆ |
ಶಪಿಸಲಾಕ್ಷಣ ಉರಗಾಧಿಪನಾದ ಪ್ರಾಣಿ ೨
ಗರ್ವ ತಪಸಿಯ ವೈರಿ ಗರ್ವ ವಿದ್ಯಕ ಹಾನಿ |
ಗರ್ವದಿಂ ಕೆಡಬಹುದುರ್ವಿಯೊಳಗ |
ಸರ್ವಥಾ ಬ್ಯಾಡೆಂದು ಹೊರೆಯೊ ಗುರು ಮಹಿಪತಿ |
ಅರ್ವವನು ಕೊಟ್ಟೆನಗ ಸರ್ವರೊಳು ಪ್ರಾಣಿ ೩

೬೩೦
ನೋಡು ನೋಡು ನಿನ್ನ ಹಿತವಾ ಪ
ಇಂದು ನರದೇಹದಲ್ಲಿ ಬಂದುದೇನೋ |
ಒಂದು ಪಥವರಿಯದಾ ಛಂದವೇನೋ ಅ.ಪ
ಗುರುವಿನಂಘ್ರಿಯ ಕಂಡ ಗುರುತ ಅನುಭವನುಂಡ ಸೈಸ್ಯೆ |
ಕರುವೇ ಬಾರೆನ್ನುತಾ ಸೈಸ್ಯೆ | ಶರಣ ಬಾರೆನ್ನುತಾ ಸೈಸ್ಯೆ |
ಹರಿಯ ಭಕ್ತ ನೆನ್ನುತಾ ಧರಿಯೊಳ್ಹೀಂಗ ಹಿರಿಯರಿಂದ |
ಕರಿಸ ಕೊಳ್ಳಲಾಗದೇ | ಬರಿದೆ ಭ್ರಾಂತಿಗೆ ಬಿದ್ದು |
ಬರಡ ಜನ್ಮ ಮಾಡ ಬ್ಯಾಡಾ ೧
ಸಾಧು ಸಂತರಲ್ಲಿಗೆ ಹೋಗಿ ಮದಗರ್ವ
ನೀಗಿ ಕೇಳು ಕೇಳು |
ಬೋಧ ಸಾರಾಯವ ಕೇಳು ಕೇಳು |
ಆದಿ ಸನ್ಮಾರ್ಗವ ಕೇಳು ಕೇಳು |
ಭೇದಿಸುವ ಶೀಲವ ಗಾದಿ ಮಾತುಗಳಲ್ಲಾ
ಸಾಧನವ ಬಲಿಯೋ ನೀ |
ಕಂದ ಭೂಮಿಯ ಮೇಲೆ ಹನಿ ಮಾಡದೇ ೨
ಗುರುಮಹಿಪತಿಸ್ವಾಮಿ ಅರ್ಹವಿನೊಳಗೆರಕವಾದ ಧೀರ ಧೀರ|
ನೀರು ಪದ್ಮ ಹೋಲುವಾ ಎರಡು ಸಮನಿನಿಸಿ ಸುಖ |
ಭರಿತರಾದ ಪರಿಯಲಿ ಹರಿಯ ಧ್ಯಾನ ಬಲಿಯೋ ಮೈಯ್ಯ |
ಮರೆಯಬೇಡಾ ಮನವೇ ೩

೪೭೭
ನೋಡು ಮನವೆ ವರಯತಿಯಾ | ನಡೆ |
ನೋಡು ಸದ್ಭಾವದಿಂದಲಿ ಮಹಿಪತಿಯಾ ಪ
ಶರಣರ ರಕ್ಷಿಸಲಾಗಿ | ಮಹ |
ದುರುಳ ದುರ್ಜನರನು ಶಿಕ್ಷಿಸಲಾಗಿ |
ಧರಿಯೊಳು ರೂಪ ವಂತಾಗೀ | ಅವ |
ತರಿಸಿ ಬಂದಿಹನು ಆನಂದ ಭೋಗಿ ೧
ಹಲವು ಜನ್ಮ ಜನ್ಮಾಂತರದಿ | ನಾನಾ |
ಕೆಲವು ದುಷ್ಕರ್ಮ ಮಾಡಿದಾ ಫಲದಿ |
ಬಳಲುವ ಜನರಾ | ತ್ವರಿತದಿ | ದಯ |
ದೊಲವಿಲಿ ತಾರಿಸುತಿಹನು ಭರದಿ ೨
ಅರಿತ ಜನರ ಹೃದಯದೊಳು | ಬಹು |
ಹರುಷದಿ ಲೋಲ್ಯಾಡುತಿಹಾನಂದದೊಳು |
ಪರಮ ಪರುಷ ಸುಕೃಪಾಳು | ಅತಿ ತರಳಾದ
ಕೃಷ್ಣನ ಜೀವ ಜೀವಾಳು ೩

೩೧
ನೋಡುವ ಬನ್ನಿ ಪೂಜೆ ಮಾಡುವ ಬನ್ನಿ |
ಪಾಡಿ ನಲಿದಾಡುತಲಿ ಎನ್ನೊಡೆಯಾ ಲಿಂಗಗ ಪ
ದೇಹ ದೇವಾಲಯದಲ್ಲಿ ಹೃದಯ ಜಲ ಹರಿಯಲಿ |
ಊಹಿಸಿ ನೆಲೆಯಾಗಿ ಹೊಳೆವ ಆತ್ಮಲಿಂಗಗ ೧
ಜ್ಞಾನದಭಿಷೇಕ ಸಮ್ಯಕ್ ಜ್ಞಾನದಾ ವಸ್ತ್ರ ನೀಡಿ |
ಧ್ಯಾನದೀಪಾ ಸಂಚಿತದ ಧೂಪಾರತಿಯಾ ಲಿಂಗಗ ೨
ಭಾವಭಕ್ತಿ ಗಂಧಾಕ್ಷತೆ ಸುಮನ ಪುಪ್ಪದಲಿಂದು
ಅವಗು ಸುವಾಸನೆಯು ಪರಿಮಳ ಲಿಂಗಗ ೩
ಅನುಭವ ನೈವೇದ್ಯವು ಅನುದಿನಾನಂದ ಸೇವೆ
ಘನ ಗುರು ಮಹಿಪತಿ ಸುತ ಪ್ರಭುಲಿಂಗಗ ೪

೨೪೭
ನೋಡುವರೇ ಅಂತವಾ|ನೋಡುವರೇ|
ಮೂಢ ಪಾಮರನೆಂದುದ್ದರಿಸದೇ ಸುಮ್ಮನೇ ತಾಕೂಡುವುದೇ ಪ
ಜ್ಞಾನ ಧ್ಯಾನ ಮೌನವರಿಯೆ|ಪೂಜೆಯ ನಾ ಮಾಡುವರೇ|
ಗಾನ ಮಾನ ಏನೂ ಅರಿಯೆ|ಸ್ತುತಿ ಸ್ತವನ ಪಾಡುವರೇ?೧
ಚತುರ ಉತ್ತರ ಮಾತುಗಳರಿಯೆ|ಸತ್ಸಂಗದಿ ಕೂಡುವರೇ|
ಇತರ ಯಾತರ ಆತುರನರಿಯೆ|ವರಗಳನಾ ಬೇಡುವರೇ ೨
ಹಾವ ಭಾವ ಭಕ್ತಿಗಳರಿಯೇ|ಛಲ ಬಿಂಕವ ಹಿಡಿವರೇ|
ದೇವಕಾವುದು ಮಹಿಪತಿ ಸುತ ಪ್ರಭುತವ ದಾಸನ ಮಾಡುವರೇ೩

೬೩೨
ನೋಡೊ ನೋಡೋ ನಿನ್ನೊಳು ನಿಜಾ ಪ
ಮೂಢತನವ ಬಿಟ್ಟು ಕೂಡಿ ಭಾವ ಭಕ್ತಿಯಾ |
ಪಾಡಿ ಕೊಂಡಾಡಿ ಸೂರ್ಯಾಡೆಲೋ ಹರಿನಾಮಾ ಅ.ಪ
ನಾನು ನನ್ನದು ಯಂದು ಹೀನ ವೃತ್ತಿಗೆ ಬಿದ್ದು |
ನಾನಾ ಬವಣೆಯಲ್ಲಿ ತೊಳಲುತ ತೊಳಲುತ |
ಗಳೆವರೇ ದಿನವನು ೧
ಸನ್ನುತ ಗುರುಪಾದ ಮನ್ನಿಸಿ ಪಡೆಯಲೋ ಬೋಧಾ |
ಬನ್ನ ಬಡುವದೇನು ಕಣ್ಣದೆರೆನ್ನಾರೆ ತನ್ನತಾ ಮರೆವರೆ ೨
ಗುರುಮಹಿಪತಿ ಸ್ವಾಮಿ ಸುರಮುನಿಜನ ಪ್ರೇಮಿ |
ಮೊರೆ ಹೊಕ್ಕವರ ಕೈಯ್ಯಾ ಜರಿಯೂತಾ ಮರಿಯಾ |
ನೀ ನರಿಯದೆ ಕೆಡಬ್ಯಾಡಾ ೩

೩೨
ಪಾದಕ ನಮಿಸುವೆನಾ ಶಿವನಾ | ಪಾದಕ ನಮಿಸುವೆನಾ ಪ
ಗಿರಿಜಾನನ ಪದ್ಮ ಭ್ರಮರನಾ ಸ್ಮರನಾ ಕಣ್ದೆರ ದುರಹಿದನಾ
ಹರನಾ ಮುರ ಹರನಾ ಶಂಕರನಾ೧
ಅಮಿತ ಗುಣಾಂಬುಧಿ ಅಘಶಮನಾ |
ಸುಮನಾವಳಿ ಸುತ – ಗೋಗಮನಾ |
ಕುಮನಾ ಸುರ ದಮನಾ ಸುಮಹಿಮನಾ ೨
ಗುರು ಮಹಿಪತಿ – ಸುತ ಭಯಹರನಾ |
ಕರುಣಾ ನಂದ ದಯಾಗರನಾ |
ಸುರ ನದಿ ವಿದು ಅಜ ಶಿರ ಧರನಾ ೩

೨೬೧
ಪಾದಾನಂಬು ಮನವೇ|ಶ್ರೀರಂಗಯ್ಯನ|
ಪಾದಾನಂಬು ಮನವೇ ವೇದಕಗೋಚರವಾದಾ ಪ
ಹೆಜ್ಜೆಯರಡರೊಳು ಮೂಜಗವಡಗಿಸಿ|
ಸಜ್ಜನರಿಗೊಸುಗ ನಿರ್ಜರ ನದಿಯ ಪಡೆದಾ ೧
ಬಿಸಜಾಸಖಾ-ತನುಜ ಎಸಿಯೇ ವಾಸು ಕೀಶರಾ|
ವಸುಧೆಯನ್ನು ತೆಗ್ಗಿಸಿ ವಾಸವ ಜನ ಕಾಯ್ದಾ೨
ಪಲವು ಕಾಲದಿ ಮುನಿ ಮುಳಿದ ಕಾರಣದಿಂದ
ನೆಲದೊಳು ಶಿಲೆಯಾದ ಲಲನೆಯ ನುದ್ದರಿಸಿದ ೩
ಮದವೇರಿ ಕುರುರಾಯ ಮೊದಲೇ ತಾಏಳದಿರೆ|
ಬುಧಜನ ನೋಡಲಾಗ ವದಗ ದುರುಳಿಸಿದಾ ೪
ಇಂದು ಧರಜರಕೈಯ್ಯಾ ಮದನೆಯನು ಕೊಳುವಾ|
ತಂದೆ ಮಹಿಪತಿ ಸ್ವಾಮಿ ನಂದನ ಜೀವನವಾದಾ ೫

೪೭೯
ಪಾದುಕವೇ ಗುರು ಪಾದುಕವೇ |
ಪಾದುಕವೇ ಗತಿ ದಾಯಕವೇ ಪ
ಕಲ್ಪತರು ಬೇಡಿದಲ್ಪವ ಕೊಡುವದು |
ಕಲ್ಪಿಸದೀವುದ ಕಲ್ಪಿತ ಫಲಗಳ ೧
ದಾರುಶಿಲೆಯ ವಂದವಾರಿಸ ಲರಿಯದು |
ತೋರುವಫಾದ್ರಿ ವಿದಾರಿಸಿ ನೂಕುವಾ ೨
ತಂದೆ ಮಹೀಪತಿ ದ್ವಂದ್ವ ಪಾದಕ ಹೊಂದಿ |
ವಂದ್ಯ ಸರ್ವರಿಗಾಗಿ ನಂದನ ಸಲಹುವ ೩

೫೩
ಪಾರ್ವತಿಪತಿ ಆರ್ವರಾಭಿಷ್ಟಿಯ
ಸರ್ವಪೂರಿಸಿ ತನ್ನಿಜಪದ ಸೇವಕನಿಗೆ
ಕರುಣವ ಬೀರ್ವನಿಗೆ
ಚರಿತ ಆ ಪೂರ್ವನಿಗಾರತಿಯಾ ಬೆಳಗಿರೇ ಸೋ ೧
ತಾರ್ಕು ಪದೇಶಿತಾ ಸರ್ಕನೆ
ಕರ್ಕಶ ಮಾರ್ಗವ ಬಿಡಿಸುವ ಅತಕ್ರ್ಯನಿಗೆ
ಅಘತಮರ್ಕನಿಗೆ ಸುರಸ
ಪರ್ಕನಿಗಾರತಿಯಾ ಬೆಳಗೀರೇ ಸೋ ೨
ಅಂಬುಶಶಿಬಿಂಬಾಂಕಿತ ಜಟೆ
ಅಂಬಕತ್ರಯ ಶಾಂಭವ ವಾಸೆ ಚಿದಂಬರಗೆ
ಗಜಚರ್ಮಾಂಬರಗೆ ಹರಸಿ
ಶ್ವಂಭರಗಾರತಿಯ ಬೆಳಗಿರೇ ಸೋ೩
ಕರ್ಪುರ ಗೌರವತನು
ತೋರ್ಪುವ ಸರ್ಪಾಭರಣಗಳಲಿ ಶೋಭಿಸುತಿರ್ಪನಿಗೆ
ಹತ ಕಂರ್ದಪನಿಗೆ
ಸುಜ್ಞಾನ ದರ್ಪಣೆಗಾರತಿಯಾ ಬೆಳಗೀರೆ ಸೋ ೪
ಕುಂದದಿ ಆನಂದದಿ ಮಹೀಪತಿ
ನಂದನ ಸಲಹುವ ಘನ ಅಶಿತ
ಕಂದರಿಗೆ ಪೂಜಿತ ಇಂದರಗೆ
ಸದ್ಗುಣ ಸಾಂದರ ಗಾರತಿಯಾಬೆಳಗೀರೆ ಸೋ ೫

೪೧೧
ಪಾಲಯಾ ಉರಗಾರಿ ಗಮನಾ |
ಶ್ರೀ ಲಕ್ಷುಮಿ ರಮಣಾ |
ಕಾಲಿ ಫಣಿಮದ ಭಂಜನ ಸಾಗರ |
ಕೀಲನ ಫಣಿಶಯನಾ |
ಭಾಲಲೋಚನ ವಂದಿತ ಚರಣಾ |
ತ್ರಿಲೋಕ ಜೀವನಾ |
ವಾಲಿ ಮರ್ದನ ಶರಣಾಗತ ಜನ |
ಪಾಲ ಕಮಲ ನಯನಾ ೧
ವಾರಜಾನನ ವಾರಿಜ ಭ್ರಮರಾ |
ಕರಿಭಯ ನಿವಾರಾ |
ನೀರದ ನೀಲ – ಶರೀರಾ |
ಕೇಶವ ಕೇಯೂರ ಕೌಸ್ತುಭಧಾರ |
ನೀರಜಾಸನನುತ ಯದುವೀರಾ |
ಶ್ರೀರಂಗ ಗದಾಧರಾ |
ಸಾರಂಗ ಪಾಣಿ ಸುಜನ |
ಹೃದ್ವನಜ ವಿಹಾರ ಧರಣೀಧರಾ ೨
ಮಂದರೋದ್ದರ ಪತಿತ ಪಾವನ |
ಕುಂದ ಕುಟುಲಮರದನಾ |
ಸ್ಯಂದ ಜನಕ ಸಖಸ್ಮರಪಿತಹರಿ |
ಗೋವಿಂದ ಧುರಿತ ಹರಣಾ |
ನಂದಕಿಶೋರ ಶ್ರೀ ನಾರಾಯಣಾ |
ಸುಂದರ ವದನಾ |
ಮಂದರಕುಲರಿಸಹೋದರ ಮಹಿಪತಿ |
ನಂದನ ಪ್ರಭು ಕೃಷ್ಣಾ ೩

೨೬೨
ಪಾಲಯಾನಂತ ಶಯನಾ|
ಶ್ರೀ ಲೋಲಂಬುಜ ನಯನಾ ಪ
ಸರಸಿಜಾಸನ ಜನಕಾ
ವರ ಯದುಕುಲ ತಿಲಕಾ|
ಸುರಮುನಿಜನ ಪ್ರೀಯ ಪಾಂಡವ ರಕ್ಷಕ|
ಶರಣಾಗತ ವತ್ಸಲಾ ವಿಶ್ವವ್ಯಾಪಕಾ ೧
ಪರಿಹೃತ ಭವ ಪಾಶಾ|
ಮುರಹರ ಸರ್ವೇಶಾ|
ಕರುಣಾ ಸಾಗರ|
ಮುಕುಂದ ಹೃಷಿಕೇಶಾ|
ಸರಸಿರುಹ ಸಖ|
ಕೋಟಿ ಪ್ರಕಾಶ೨
ಹರಿ ನವನೀತ ಚೋರಾ|
ಗಿರಿವೈರಿ ಸೋದರಾ|
ದುರಿತ ನಿವಾರಣ|
ಪೀತಾಂಬರ ಧರಾ|
ಗುರುವರ ಮಹಿಪತಿ|
ಸುತ ಮನೋಹರಾ ೩

೨೬೩
ಪಾಲಿಸಯ್ಯ ಎನ್ನ ಪಾದಪದ್ಮದೋರಿ ನೀ|
ಬಾಲಲೀಲೆ ದೋರ್ವೆ ಗೋಪಾಲ ಬಾಲರನ್ನನೇ ಪ
ನಂದ ನಂದ ನಂದು ಓಡಿ ನಂದನೆಯಾ ಭಾವಕಾಗಿ|
ಬಂದ ಬಂದು ದುರಿತವನು ಬಂದು ಬಂದು ಹರಿಸಿ|
ಛಂದ ಛಂದದಿಂದ ಭಕ್ತರೈವರನು ಕಾಯ್ವೆ ಮು
ಕುಂದ ಕುಂದರದನ ದಯಸಿಂಧು ಸಿಂಧು ವಾಸನೆ ೧
ನಾಗನಾಗ ಶಯನ ಯನ್ನ ರಕ್ಷಿಸೆಂದು ಕರೆಯ ಕೇಳಿ|
ನಾಗ ನಾಗದವನ ಬಿಟ್ಟು ಓರ್ವನೇ ಮಾರುತಿಯಾ|
ವೇಗ ವೇಗದಿಂದ ಬಂದು ಪ್ರಾಣನುಳಹಿದೇ ನಿಗ|
ಮಾಗ-ಮಾಗೋಚರ ಭೋಗ ಭೋಗಗನ ವ್ಯಾಪ್ತನೇ೨
ಸುಂದ್ರ ಇಂದ್ರ ಚಾಪದಂತೆ ಪೊಳೆವ ಭ್ರೂಲತೆಯು||
ಪೇಂದ್ರ ಚಂದ್ರ ಧರನುತ ಮಂದ್ರಗಿರಿಧರ ಗುಣ|
ಸಾಂದ್ರ ಚಂದ್ರಕುಲ ಸಿರೋಮಣೀ ವಾರಜಾಕ್ಷಯಾದ|
ವೇಂದ್ರ ಇಂದ್ರನುತ ಮಹಿಪತಿ ನಂದ ನೋಡೆಯನೇ೩

೨೬೪
ಪಾಲಿಸೆನ್ನಾ ದೀನ ದಯಾಳಾಪ
ಪಾಲಿಸೆನ್ನ ಸಂವಿಶಾಲ ನಯನಾ|
ಶ್ರೀಲತಾಂಗಿಯ ಲೋಲ ಮುಕುಂದಾ ೧
ಅಂಬುರುಹ ಪಾಣ್ಯಾಂಬುಜ ಭವನುತ|
ಕುಂಭಿನಿ ಭಯಹರ ಅಂಬುಧಿವಾಸ೨
ನಂದ ನಂದನಾನಂದ ಸ್ವರೂಪಾ|
ನಂದಿವಾಹನಾ ವಂದ್ಯನೆ ಕೃಷ್ಣಾ೩

೨೬೫
ಪಾಲಿಸೋ ಎನ್ನ ನೀ ಘನಕರುಣದಲಿ ಗೋ|
ಪಾಲ ಭಕ್ತಜನ ಜಾತಕ ಮುದಿರಾ ಪ
ಅಚ್ಯುತಾನಂತ ಮಹಿಮ ಸರ್ವಾಧಾರಾ|
ಇಚ್ಚಾಪೂರಿತ ಮಾಡುವೆ ಸುರಜನರಾ|
ನಿಚ್ಚಟ ಹೃತಯರಿಗೊಲಿವೆ ಸತ್ಪರಾ|
ಸಚ್ಚಿದಾನಂದನೆ ಮಾ ಮನೋಹರಾ ೧
ಸುರನದಿ ಪಿತ ವಸುದೇವ ಕುಮಾರಾ|
ಸರಸಿಜ ಪಾಣಿ ಗೋವರ್ಧನೋದ್ದಾರಾ|
ಉರಗಾಂತಕಾರೂಢ ದುರಿತ ನಿವಾರಾ|
ವರ ಚತುರ್ಭುಜ ನರಕಾಸುರ ಹರಾ ೨
ವಿಷ್ಣು ನಾರಾಯಣಾಂಬುಜ ನಯನಾ|
ವಾಷ್ರ್ಣೇಯಾ ಪರಮಪಾವನ ಮೂರ್ತಿದೇವಾ|
ಜಿಷ್ಣುನಾತನು ಸಂಭವನ ರಥಬೋವಾ|
ಕೃಷ್ಣ ಗುರು ಮಹಿಪತಿ ನಂದನ ಜೀವನಾ೩

೨೬೬
ಪಾಲಿಸೋ ರಘುರಾಯಾ ಪ
ಜಾನಕಿ ಮನೋಹರಾ|
ಇನಕುಲ ಶೇಖರಾ ೧
ಭರತಾಗ್ರಜವರ|
ಸುರಸಂಕಟ ಹರ ೨
ದಶರಥ ನಂದನ|
ಋಷಿಮುಖ ಪಾಲನಾ ೩
ಪ್ರಮಥಾಧೀಪ ಧ್ಯೇಯ|
ವಿಮಲ ಗುಣಾಲಯಾ ೪
ತಂದೆ ಮಹಿಪತಿ|
ನಂದನ ಸಾರಥಿ೫

೪೮೦
ಪಾಲಿಸೋ ಶ್ರೀ ಗುರುವೇ ಯನ್ನ ನೀ ಪ
ಮರವಿನ ಕತ್ತಲಿ ಮನೆಯೊಳಗಿರುವೇ |
ಅರವಿನ ಬೆಳಗಿಗೆ ಯಂತು ನಾ ಬರುವೆ ೧
ವಿಷಯದ ಸುಖದಲಿ ಅನುದಿನ ಬೆರೆವೇ |
ಕುಸುಮನಾಭನ ಸೇವೆಯಲಿ ಜರೆವೇ ೨
ತಂದೆ ಮಹಿಪತಿ ಸುತ ಸುರ ತರುವೇ |
ಛಂದದಿಯಚ್ಚರಿಸೈ ಸುಖ ತರುವೇ ೩

೭೫೩
ಪಾಹಿಮಾಂ ತೀರ್ಥಧಾಮಾ |
ಪಾಹಿಮಾಂತ್ರಿಜಗಾದಿ | ಪಾಹಿಮಾಂ ತನುಜಧವ |
ಹೇಹಿಮರಾಚೂಡ | ದೇಹಿ ಮನೋಭೀಷ್ಮ |
ಮಹೀಶಾಯಿಸುಖ ಆಕಾಶ | ವಾಹಿನಿ ಧರಾ |
ಮೋಹನ ಚರಿತ ರಜತಗೇಹ ಸಾಂಬಾ ಪ
ಈಶ ಅಘನಾಶ ಸರ್ವೇಶ ಸುರಕೋಶ ಮುನಿ |
ತೋಷಗಜಾಸುರ ವಿನಾಶ ಭವಪಾಶ ಹರ |
ವಾಸವಾದ್ಯನುತ ನಿರ್ದೋಷ ಶ್ರೀ ಭಸಿಶಿತ | ವಿ
ಭೂಷಿತ ವಿನಾಶ ರಾಮೇಶ ಶಿವಶಂಭೋ ೧
ವೀರ ರಣಧೀರ ಗಂಭೀರ ಸಾಕಾರವರ |
ಪ್ರಾರ ಸಂಹಾರ ಭಯ ಪೂರಿತ ಪುರಾರಿ | ಮೌ
ದಾರ ಚಿರಚಿರಂಡ ಜಾರಿವಿಹಾರಿ | ಶ್ರೀ
ಹೇರಂಬ ತಾತದಯ ಪಾರಾವಾರ ಶಂಭೋ ೨
ನೀಲಕಂಧರ ರುಂಡಮಾಲೆ ಶೋಭಿತ ದುರಿತ |
ಕಾಲಹರ ಗೋಗಮನ ಭಾಲನಯನಾರ್ತಜನ |
ಪಾಲ ವಿಶಾಲಾ ತ್ರಿಶೂಲಧೃತನಿರುತ ಶುಭ
ಲೀಲ ಶ್ರೀ ಗುರುಕೃಷ್ಣ ಬಾಲಕ ಪ್ರಭು ಶಂಭೋ೩
ಅಂಕಿತ-ಶ್ರೀಗುರುಕೃಷ್ಣ

೩೩
ಪಾಹಿಮಾಂ ಪಾಹಿ | ಶಿವಹರ ಮೃಡ ಶಂಭೋ | ಪ
ಅದ್ರಿಧರ ಪ್ರಿಯ ಅದ್ರಿ ಕೃತಾಲಯ |
ಅದ್ರಿಜಾಮಾತಾದ್ರಿ ರಿಪುನುತ |
ಅದ್ರಿಜೆ ಪತಿ ಪಾಪಾದ್ರಿ ಕುಲಿಶಕನ |
ಕಾದ್ರಿಶರಾಸನ ಮುದ್ರಿತ ಪಾಣೇ೧
ಉನ್ನತದಿಂದಲಿ ಮನ್ಮಥ ಬರಲುದ |
ಹನ್ಮಾಡಿದ ಷಣ್ಮುಖ ಜನಕನೆ |
ಉನ್ಮನಯೊಗಿ ಸನ್ನುತ ಲೀಲಾ |
ಜನ್ಮರಹಿತ ಘನ ಚಿನ್ಮಯ ರೂಪಾ || ೨
ಬರಿಸಿದೆ ಗಂಗೆಯ ನಿರಿಸಿದೆ ಜಡೆಯೊಳು |
ಧರಿಸಿದೆ ಚಂದ್ರನ ಮೆರೆಸಿದೆ ಭಕ್ತರ |
ಗುರುಮಹೀಪತಿ ಯಂಕುರಿಸಿದ ಬಾಲನ |
ಸಿರಸದಲಿಡು ನಿಜ ಪರಸದ ಕೈಯಾ | ೩

೨೬೭
ಪೂಜೆಯ ನಾನೇನ ಮಾಡುವೆ|ವಇಹಾ
ರಾಜರಾಜ ಕುರುಣಾನಂದ ಮೂರುತಿ ಹರಿಯೇ ಪ
ಧ್ಯಾನಧಾರಣ ಮಂಗಳ ಮೂರ್ತಿಯ ಮಾಡುವೆನೆಂದರೆ|
ನಿನ್ನ ಸುಖದ ನೆಲೆಯ ಇಂದಿರಾ ದೇವಿಯರಿಯಳು ಹರಿಯೇ ೧
ಶಂಖೋದಕದಿ ಅಭಿಷೇಕ ಮಾಡುವನೆಂದರೆ|ನಿನ್ನಪದ
ಪಂಕಜದಲಿ ಭಾಗಿರಥಿ ಬಂದಳೂ ಹರಿಯೇ೨
ವಸ್ತ್ರವನುಡಿಸುವೆನೆಂದರೆ ದ್ರೌಪದಿಯವಸರದಿ|ನಿನ್ನಯ
ವಸ್ತ್ರದಿಂಡಿನ ಎಣಿಕೆಯ ದೋರದೆನಗೆ ಹರಿಯೇ೩
ಗಂಧಪುಷ್ಪವನೀವೆನೆಂದರೆ ನಿನ್ನ ಚರಣಾಬ್ಜದಾ|ಮಕ
ರಂದಕೆ ಭ್ರಮರ ಅಜಭವರಾದರು ಹರಿಯೇ ೪
ಆರೋಗಣೆಯ ಮಾಡಿಸುವೆನೆಂದರೆ ನಿನ್ನಕೈಯದಿ|ಸುರರು
ಆರೋಗಣೆಯ ಮಾಡಿ ಅಮರರಾದರು ಹರಿಯೇ ೫
ನೀರಾಂಜನ ಮಾಡುವನೆಂದರೆ ಕೋಟಿ ಸೂರ್ಯಪ್ರಭೆಯತೇಜ|
ಮೀರಿತು ಸ್ತುತಿಗಿನ್ನು ಶ್ರುತಿಗಳು ನಿಂತವು ಹರಿಯೇ೬
ಗುರುವರ ಮಹೀಪತಿನಂದನ ಸಾರಥಿ|ನಿನ್ನ
ಸ್ಮರಣೆಯ ಕೊಟ್ಟನುದಿನದಿ ರಕ್ಷಿಸುಹರಿಯೇ೭

೫೮
ಪ್ರಾಣನ್ನೋಡೀರೇ ಮುಖ್ಯ ಪ್ರಾಣನ್ನೋಡಿರೇ ಪ
ಕ್ಷೋಣಿಯೊಳಗ ಸುಖ ಬೀರುವ ಪಾದನ
ಚರಿತಾ ಸದ್ಗುಣ ಭರಿತಾ ಅ.ಪ.
ನರಲೀಲೆಯಲವ – ತರಿಸದ
ಅಂಜನಿ ಸುತ-ನೊ ಮಹಾದ್ಬುತನೋ
ತರಣಿಯ ಮುಟ್ಟಲು ಹಾರಿದ ಬಾಲಕ
ಮಲೆಯೊ ವಿಕ್ರಮ ಸ್ಥಿತಿಯೋ ೧
ಸುರರಾಯುಧವನೆ ಲೆಕ್ಕಿಸ ಕಪಿ
ಯಾಗ್ರಣಿಯೊ ವಜ್ರದ ಖಣಿಯೋ
ಶರಣರ ವಾಂಛಿತ ಪೂರಿಪ ಮೂಲೋಕ
ಗುರುವೋ ಕಲ್ಪ ತರುವೋ೨
ರಾಮ ಪದಾಂಬುಜ ಕೊಂಬ ಪರಾಗ
ಮಧುಪನೋ ದೇವಾಧಿ ಪನೋ
ಪ್ರೇಮದಿ ರಣದಲಿ ಹರಿರಥವಾದ
ಮೂರುತಿಯೋ ಪುಣ್ಯ ಮೂರುತಿಯೋ೩
ತಾಮಸ ರಾವಣ ನೆದಿಗೊತ್ತದ
ಕರಮೋ ಸಿಡಿಲದ ಧರಮೋ
ಮ್ಯೋಮಕ ಮೀರುವ ಹನುಮನ ಬಾಲದ
ಸರುಳೋ ದೈತ್ಯರ ಉರುಳೋ೪
ಕ್ಷಣದಲಿ ಸಂಜೀವನ ಗಿರಿ ತಂದಿಹ
ಪದವೋ ಸಾಧುರ ಮುದಮೋ
ವನಜ ಭವನ ಪದವಿಯ ಪಡಕೊಂಡಾ
ತಪಮೋ ತಾ ಅಪರೂಪಮೋ ೫
ನೆನಿಯಲು ದುರಿತ ನಿವಾರಿಪ ಕರುಣಾ
ನಿಧಿಯೋ ಭಕ್ತರ ಸುಧೆಯೋ
ಅನುದಿನ ಮಹಿಪತಿ ನಂದನ ಸಲಹುವ
ದಯಮೋ ಗತಿ ಆಶ್ರಯಮೋ ||೬

೨೬೮
ಫಲಹಾರವ ಮಾಡೋ ಪದುಮಲೋಚನನೆ|
ಒಲಿದು ಶ್ರೀ ಭೂದೇವಿ ಅರಸಿಯರೊಡನೆ ಪ
ಕದಳೀ ಕಪಿಥ್ಥಶರ್ಕರ ಮೋದದಿಂದಲೀ|
ಒದಗಿ ಬೆಂಡುಖರ್ಜೂರಿ ಘೃತಮೋಪ್ತದಿಂದಲಿ೧
ಕಳೆದ ಸಿಗುರಿಯಾ ಕಬ್ಬಿನ ಪೇರು ಬದರಿಯಾ|
ಬಲಿದ ಪರಿಮಳ ರುಚಿಗಳ ಒಪ್ಪನಿಂದಾ ೨
ವಸುಧೆಯೊಳುಳ್ಳ ಸಕಲ ಫಲಸಾರವಾ|
ಬಿಸಿಯಾದ ಪಲ್ಗೆನೆಯ ಮಧುಸಹಿತಾ ೩
ಗುರುಮಹೀಪತಿಸ್ವಾಮಿ ಶರಣ ರಕ್ಷಕನೇಮಿ|
ಸುರರಿಗಮೃತವೆರೆದಾನಂದ ಕರದಲಿ೪

೨೭೮
ಬಂದ ಜನ್ಮ ಬರಲಂಜಲ್ಯಾತ ಕಗೋ
ವಿಂದ ನಿನ್ನೆಚ್ಚೆರ ವೆನಗಿದ್ದರ ಸಾಕು ಗೋವಿಂದ ಗೋವಿಂದ ಪ
ಒಂದೆರಡಲ್ಲಾ ಶತ ಸಹಸ್ರವಾಗಲಿ
ಛಂದದಿನಿನ್ನ ನಾಮಾ ಜಿವ್ಹೆಯ ಲಿರಲಿ೧
ಹರಿಪರಂದೈವೆಂದು ಅರುಹಿನಾ ಮನೆಲಿದ್ದು
ಹರಿಯದಿರಲಿ ಮನ ವಿಷಯಕ ಬಿದ್ದು ೨
ಮುಕುತಿಗಿ ಕುತಿಯಂಬಾ ಹಂಗಿನ ನೆಲೆಯಾಕ
ಭಕುತಿ-ಯನಿ ಪನಿಜ ಸುಖವಿರಲಿಕ್ಕೆ ೩
ಗುರುಮಹಿಪತಿ ಸ್ವಾಮಿ ನಿನ್ನ ಶರಣರಾ
ಕರದೊಳಾಡುವ ಬಗೆ ಮೃಗ ಪಶುವಾ೪

೪೮೩
ಬಂದ ದುರಿತಗಳ ಪರಿಹಾರ ಮಾಡಯ್ಯಾ |
ತಂದೆ ಶ್ರೀ ಗುರು ಮಹೀಪತಿರಾಯಾ ಪ
ಕಾಲತುಂಬಿದ್ದರೆ ಆಲಸ್ಯವೇಕಯ್ಯಾ |
ಕಾಲ ಕರ್ಮಗಳಿಂದ ಶ್ರಮಿಸುತಿಹನು |
ಬಾಲಕನ ಕೈಯ ಸೇವೆ ಬೇಕಾದರೆ |
ಆಲಸ್ಯ ಮಾಡದೆ ಬಲು ದುರಿತ ಛೇದಿಸು ೧
ಮುನ್ನಿನ ಕರ್ಮಗಳ ಬಹಳ ಭೋಗಿಸಿದೆನು |
ಇನ್ನು ನಿನ್ನ ಕೃಪೆ ಅವಿಚ್ಛಿನ್ನ ಮಾಡಯ್ಯ |
ನಿನ್ನ ಕರದಿಂದಲಿ ಚನ್ನ ಚಕ್ರವಪಿಡಿದು |
ಮುನ್ನೆ ದಾಸರ ಶ್ರಮ ಹರಿಗಡದಂತೆ ೨
ಪರವಸ್ತು ದತ್ತಾತ್ರೇಯ ಸೂರ್ಯಕೋಟಿ ಪ್ರಕಾಶ |
ಗುರು ಮಹೀಪತಿಯಾಗಿ ಜನಿಸಿದೈಯ್ಯ |
ತರಳ ದೇವಗಿನ್ನಾರುಗತಿಯು ಇಲ್ಲ |
ಪೂರ್ಣಾಯುಷ್ಯವ ಕೊಟ್ಟು ರಕ್ಷಿಸಯ್ಯಾ೩