Categories
ರಚನೆಗಳು

ಕಾಖಂಡಕಿ ಶ್ರೀಕೃಷ್ಣದಾಸರು

೩೮೨
ಜಯದೇವ ಜಯದೇವ ಜಯ ರಾಘವ ರಾಮಾ
ದಯದಲಿಯಚ್ಚರನೀವದು ಸ್ಮರಿಸಲುತವನಾಮಾ ಪ
ಹಭವ ಭವಮುಖರಮೊರೆಯನು ಕೇಳುತಲಿ
ದಶರಥ ಕೌಲಸ್ಯರಾ ಬಸಿರಿಂದುದಿಸುತಲಿ
ರುಷಿ ಮುಕರಕ್ಷಿಸಿ ತಾಟಕಿ ದೇಹದಿಬಿಡಿಸುತಲಿ
ವಸುಧಿಲಿ ಶಿಲೆಯನು ಪಾದದದಿಮೆಟ್ಯುದ್ಧರಿಸುತಲಿ ೧
ಹರುಷದಿ ಕೌಶಿಕನೊಡನೆ ಮಿಥಿಲೆಗೆ ಪೋಗುತಲಿ
ಹರದು ಮುರಿದು ಜನಕಜೆ ಮಾಲೆಯ ಧರಿಸುತಲಿ
ಬರಲಾನಂದದಿ ಭೃಗುಪತಿ ದಶರಥ ದರಶನ ಪಾಡುತಲಿ
ಅರಸುತನಕ ಕೈಕೆಯು ಬ್ಯಾಡೆನೆ ನಡೆದೈತ್ವರಿಲಿ ೨
ವನದಲಿ ಭಂಗಿಸಿಶೂರ್ಪನಖಿಖರ ದೂಶಣರಾ
ಅನುವರ ಕಾಂಚನ ಮೃಗವಾ ಬೆಂಬೆತ್ತಲು ದೂರಾ
ಜನಕಜೆಯಾಕೃತಿ ವೈಯ್ಯಲು ಕಪಟದಿದಶಶಿರಾ
ಅನುಭಜಟಾಯುವಿನಿಂದಲಿ ಕೆಳಿ ನಡದೆ ಧೀರಾ ೩
ಪಥದಲಿ ಮುರಿದುಕಬಂಧವ ಶಬರಿಗೆ ಗತಿನೀಡಿ
ಪ್ರಥಮದಿ ಹನುಮನ ಕಂಡು ವಾಲಿಯ ಹತಮಾಡಿ
ರತಿಯಲಿ ಸುಗ್ರೀವಜಾಂಭವ ಸೈನ್ಯದ ಲೋಡಗೂಡಿ
ಕ್ಷಿತಿಜೆಯಾ ಸುದ್ದಿಯತರಿಸಿ ನಡೆದೈನಲಿದಾಡಿ ೪
ಸೇತುವೆ ಗಟ್ಟಿಸಿ ಶರಣವ ಬರಲು ವಿಭೀಷಣನು
ಭೀತಿಯ ಹಾರಿಸಿಸೈನ್ಯದಿ ದಾಟಿದೆ ಶರಧಿಯನು
ನೀತಿಯ ತಪ್ಪಿದ ರಾವಣ ಕುಂಭಶ್ರವಣರನು
ಖ್ಯಾತಿಲಿ ಮಡಹಿದೆ ಅವರಾಸಂತತಿ ಸಂಪದನು ೫
ಶರಣಗಸ್ಥಿತಪರಪದವಿತ್ತು ದೇವರ ಶೆರೆಬಿಡಿಸಿ
ಮರಳಿದಯೋಧ್ಯಕಪುಷ್ಪಕದಿಂ ಸೀತೆಯವರೆಸೀ
ಮೆರೆವತ್ಸಜರಜನನಿಯರ ಸಕಲರಸುಖಬಡಿಸಿ
ಸುರಮುನಿಜನರನುಸಲಹಿದೈ ಸಾಮ್ರಾಜ್ಯವನು ೬
ನಾಮದಮಹಿಮೆ ಹೊಗಳಲು ಶೃತಿಗಳಿಗಳವಲ್ಲಾ
ಪ್ರೇಮದಿಸವಿಸದುಂಬುವ ಶಿವ ಸೀತಾಬಲ್ಲಾ
ನೇಮದಿಸುರನಂದಾನ್ನರ ಬವ ತರಿಸಿದರಲ್ಲಾ
ಕಾಮಿತ ದಾಯಕ ಗುರುಮಹಿಪತಿ ಪ್ರಭುಶಿರಿನಲ್ಲಾ ೭

೩೭೯
ಜಯದೇವ ಜಯದೇವ ಜಯ ವೆಂಕಟೇಶಾ|
ಶ್ರಯ ಸುಖದಾಯಕ ಸ್ವಾಮಿ ಉರಗಾಚಲವಾಸಾ ಪ
ಕರುಣಾಕರ ರತ್ನಾಕರ ಕನ್ಯಾ ಮನೋಹಾರಿ|
ಸುರವರ್ಧನ ಮುರಮರ್ದನ ಗೋವರ್ಧನಧಾರಿ|
ವರಮಂದಿರ ಧೃತಕುಂದರ ಸುಂದರ ಸಹಕಾರಿ|
ಕರಿವಾಹನನುತ ಮೋಹನ ಖಗವಾಹನ ಶೌರಿ ೧
ಜಗಕಾರಣ ಪರಿಪೂರಣ ಸುಂದರಸಾಕಾರಾ|
ಅಘಹರಣಾ ಮುನಿ ಸ್ಫರಣಾತ್ರಯ ಭುವನಾಧಾರಾ|
ನಗಧರಣಾ ತವಶರಣಾಭರಣಾ ಮಯೂರಾ|
ಭೃಗುಚರಣಾಂಕಿತ ಚರಣಾಂಬುಜ ಶೋಭಿತ ಧೀರಾ ೨
ಸುಖಕರ್ತಾ ದುಃಖಹರ್ತಾ ಸರಸೀರುಹ ನಯನಾ|
ಸಕಲಾತ್ಮ ಪರಮಾತ್ಮಾ ಫಣಿಕುಲವರ ಶಯನಾ|
ನಿಖಿಲಾಸುರ ತಮಭಾಸುರ ದುರಿತಾವಳಿ ಶಮನಾ|
ಮಕರಾಂಕಿತ ಪಿತಮಹೀಪತಿ ನಂದನಪಾಲನಾ ೩

೪೯
ಜಯದೇವ ಜಯದೇವ ಜಯ ಶಂಕರ ಮೂರ್ತಿ
ಜಯ ಜಯವೆಂದು ಬೆಳಗುವೆ ಮನದಲಿ ಭಾವಾರ್ತಿ ಪ
ಸಾಧನ ಕೆಂಜೆಡೆಯೊಳಗೆ ಜ್ಞಾನಗಂಗೆಯ ನಿಲಿಸಿ
ಸಾದರದಲಿ ಚಿಜ್ಯೋತಿಯ ಚಂದ್ರನ ಕಳೆಧರಿಸಿ
ನಾದಬಿಂದು ಕಳಾನಯನ ತ್ರಯವೆರಿಸಿ
ಮೋದಿಪೆ ಅಪರೋಕ್ಷನುಭವ ಮುಖದೆಳೆ ನಗೆಬಳಿಸಿ ೧
ಧವಲಾಂಗದಿ ಸಲೆ ಶುದ್ಧ ಸತ್ವದ ಶೋಧಿಸಲಿ
ತವಕದಿ ಶಮದಮವೆಂಬಾ ಬಾಹುದ್ವಯದಲಿ
ಅವಯವದಲಿ ನಿಜಭಕ್ತಿ ಶೇಷಾಭರಣದಲಿ
ಶಿವತಾನೆಂದು ಬೆಳಗುವೆ ಸಹಜಾನಂದದಲಿ ೨
ವಿವೇಕ ವೈರಾಗ್ಯದಾ ಕರಚರ್ಮಾಂಬರಣಾ
ಅವನಿಲಿಸುರನರಪೂಜಿತ ಪಾವನಶ್ರೀ ಚರಣಾ
ಕುವಲಯ ಲೋಚನ ಶಾಂತಿಯ ಪಾರ್ವತಿ ಸಹಕರುಣಾ
ಭವತಾರಕ ಗುರುಮಹಿಪತಿ ಪ್ರಭುದೀನೋದ್ದಾರಣಾ ೩

೫೦
ಜಯದೇವ ಜಯದೇವ ಜಯಗುರು ಮಹೇಶಾ
ಭಯವನಿವಾರಿಸಿ ಶ್ರಯಕುಡು ನೋಡದೆ ಗುಣದೋಷಾ ಪ
ಶಿವಶಿವಶಿವಶಿವಯೆಂದು ನೆನಿಯಲು ದೃಡವಾಗಿ
ಅವನಿಲಿಹಿಂಗುದು ಪೂರ್ವದ ದುಷ್ರ‍ಕತಗತವಾಗಿ
ಭವಭವ ಭವಭವಯನಲಾಮ್ಯಾಲನಿಶ್ಚಲನಾಗಿ
ಜವದಲಿ ಹರಿವುದುದುರ್ಧರ ಭವಭಯಭಯಾಗಿ ೧
ಅನನ್ಯ ಭಾವದಿಹೊಕ್ಕು ಶರಣವ ನಿಮ್ಮಡಿಗೆ
ತನುಮನಧನವನು ಅರ್ಪಿಸಿ ವಂಚನೆ ನಿಲದ್ಹಾಗೆ
ಅನುದಿನ ಮಾಡಿಲು ಧ್ಯಾನಾಸ್ವರೂಪಹೃದಯದೊಳಗೆ
ಘನ ತರದಿಹನಿಜಸ್ಥಾನವು ಸುಲಬಾಗುವದೀಗೆ೨
ನಿನ್ನಾ ಮಹಿಮೆಯುತಿಳಿಯದು ನಿಗಮಕ ಶ್ರೀಗುರವೇ
ಇನ್ನು ಅಂತಿಂತೆಂಬುದು ನರಗುರಿಗಳಿಗಳವೇ
ಎನ್ನಾನಯನದಿನೋಡಿ ಸುಮ್ಮನು ಸುರದಿರುವೇ
ಭಿನ್ನವಿಲ್ಲದೆ ಸಲಹು ಮಹಿಪತಿ ಸುತಪ್ರಭುವೇ ೩

೩೯೩
ಜಯದೇವ ಜಯದೇವ ಜಯಗೋಪಾಲಕೃಷ್ಣಾ |
ಜಯ ಜಯಯೋಗೀ ಮಾನಸ ಮೋಹನ ಘನಕರುಣಾ ಪ
ದೇವಕಿವಸುದೇವರ ಭಾವನೆ ಪೂರಿಸಲಿ |
ಶ್ರಾವಣ ಕೃಷ್ಣಪಕ್ಷದ ಅಷ್ಟಮಿರೋಹಿಣಿಲಿ ||
ತೀವಿದ ಚಂದ್ರೋದಯ ರಾತ್ರಿಯ ಕಾಲದಲಿ |
ಭುವನದಿ ಅವತಾರವ ಮಾಡಿದೆನೀ ವೇಗದಲಿ ೧
ಸೊಕ್ಕಿದ ಕಂಸನ ಕೊಂದು ದುಷ್ಕ್ರತನಾಶನವಾ |
ಮುಖ್ಯಮಾಡು ಕಾರಣ ಧರ್ಮ ಸ್ಥಾಪನವಾ ||
ಸಖ್ಯದಿ ಕಟ್ಟಲು ಉಗ್ರಶೇನಗೆ ಪಟ್ಟವಾ |
ಅಕ್ಕರದಿಂದಲಿ ಬೆಳೆದೆ ಗೋಕುಲದಲಿ ದೇವಾ ೨
ಕುರುಕುಲಾನ್ವಯ ಜೀವನರೆಲ್ಲರ ಸೆಬಡಿದೆ |
ಚರಣವನಂಬಿದ ಪಾಂಡವರನು ಸ್ಥಾಪನಗೈದೆ |
ಪರಪರಿಯಿಂದಲಿ ಭಜಿಸುವ ಭಕ್ತಾವಳಿ ಪೊರೆದೇ |
ಗುರುವರಮಹೀಪತಿ ಸುತ ಪ್ರಭುಸಲಹೆನ್ನನು ಬಿಡದೇ ೩

೬೪
ಜಯದೇವ ಜಯದೇವ ಜಯಜಯ ಹನುಮಂತಾ |
ದಯದೊಲವಿಂದಲಿ ಸಲಹು ಜಯ ಕೀರುತಿವಂತ ಪ
ಅಂಜನೆ ಉದರದಿ ಬಂದು ಮೌಂಜೀಬಂಧನದಿ |
ಕಂಜ ಸಖನ ಮಂಡಲ ತುಡಕಲು ಹವಣಿಸಿದಿ |
ಭಂಜನೆ ಇಲ್ಲದೆ ರಾಮರ ಸೇವೆಗೆ ತತ್ಪರದಿ |
ರಂಜಿಸುವಂದದಿ ಮಾಡಿದೆ ಇಳೆಯೊಳು ತನುಮನದಿ ೧
ರಘುಪತಿ ಮುದ್ರೆಯ ಕೊಂಡು ಸಾಗರ ಲಂಘಿಸಿದೆ|
ಭುಕುತಿಲಿ ಜಾನಕಿದೇವಿಗೆ ಅರ್ಪಿಸಿ ಕೈಮುಗಿದೆ |
ಯಕುತಿಲಿ ವನವನೆ ಕಿತ್ತಿ ಲಂಕೆಯ ಸದೆಬಡಿದೆ|
ಮಗುಳೆ ಪ್ರತಾಪದಿ ಬಂದು ಅಜಪದವಿಯ ಪಡೆದೆ ೨
ಮೂರವತಾರ ನೀ ಆಗಿ ಪರಿಪರಿ ಚರಿತೆಯನು |
ದೋರಿದೆ ಜಗದೊಳು ಅನುಪಮ ಹರಿಪ್ರಿಯನಾದವನು |
ಚಾರು ಭಕ್ತೀಭಾವ ಪ್ರೇಮವ ಕಂಡವನು |
ಹೊರೆವದು ಅನುದಿನ ಮಹೀಪತಿನಂದನು ನಿಮ್ಮವನು ೩

೪೯೦
ಜಯದೇವ ಜಯದೇವ ಜಯದೀನದಯಾಳಾ
ಜಯಜಯ ಶ್ರೀಗುರು ಮಹಿಪತಿ ಭವತಾರಕ ಲೀಲಾ ಪ
ಮರವಿನ ಕತ್ತಲಿಯೊಳಗೆ ಮುಂದುಗಾಣದಲಿರಲಿ
ಅರವಿನದೀಪವ ಹೆಚ್ಚಿ ದೋರುತಲೀ
ಸ್ಥಿರವನು ಗೊಳ್ಳದ ಚಿತ್ತವ ಭಜನಿಗೆಲಿಸುತಲಿ
ಹರಿಸಿದ ವಿದ್ಯದಗೃಂಥಿಯ ಸಂಶಯ ಬಿಡಿಸುತಲಿ ೧
ಪರಿಪರಿಯಿಂದಲಿಗರದು ಬೋಧನಾಮೃತನುಡಿಯಾ
ಅರಹಿಸಿಯೋಗದ ಮಾರ್ಗವ ಸಾಂಖ್ಯದನಿಲ್ಲ ಕಡಿಯಾ
ಕರಣೀಂದ್ರಿಯಗಳ ವಡದಾಸ್ವಾನಂದದಯಡಿಯಾ
ಕರುಣಿಸಿ ವಿಶ್ವಂಭರಿತದ ತೋರಿದೆ ಇತ್ಥಡಿಯಾ ೨
ನಿನಗುತ್ತೀರ್ಣವಕಾಣದೇ ತನುವಾರತಿ ಮಾಡೀ
ಮನವೇದೀಪವು ಸದ್ಭಾವನೆ ಆಜ್ಯನೀಡಿ
ಅನುದಿನ ಬೆಳಗುವ ನಂದನುಮಹಿಮೆಯ ಕೊಂಡಾಡಿ
ಚಿನುಮಯಸುಖದೊಳು ಬೆರೆದಾಹಂಭ್ರಮ ಈಡಾಡಿ೩

೫೧
ಜಯದೇವ ಜಯದೇವ ಜಯರಾಮಲಿಂಗಾ
ಜಯಜಯವೆಂದು ಬೆಳಗುವೆ ಆರತಿ ಸುರತುಂಗಾ ಪ
ಸ್ವಾನಂದದ ನಿಜಕಾಶೀಪುರದಿಂದ ಅತ್ಯರಳಿ
ನಾನಾಸ್ಥಳಗಳ ನೋಡುತ ಬಂದು ನೀತೀರ್ಥದಲಿ
ದೀನೋದ್ದಾರ ಕಾಪಾಪನಾಶನಿ ಹರಿಸುತಲಿ
ಖೂನವ ತೋರಿದೆ ಓಂಕಾರೇಶ್ವರನೆನಿಸುತಲಿ ೧
ಕೆಲವು ಕಾಲ ಕೆರಾಘವಸುಖದರುಕ್ಷಣಲೆಂದು
ತಳಿಯೊಳುಖ್ಯಾತಿಗೆ ಬಂದು ರಾಮೇಶ್ವರನೆಂದು
ನಲಿದರುಗಿರಿಜಾನಂದಿಸರ್ವದೇವರು ಬಂದು
ಸಲುಹುವೆ ಭಕ್ಷರಿಗಿಷ್ಟಾರ್ಥವ ನೀಡುತಲಿಂದು ೨
ನಿನ್ನಯ ಮಹಿಮೆಯ ಹೊಗಳಲು ಮನುಜರಿಗಳವಲ್ಲಾ
ಮುನ್ನಾಭರಣವ ಆಗಿಹಶಶಿನೇತಾಬಲ್ಲಾ
ಎನ್ನೊಳು ಬೀರುತರಕ್ಷಿಸುಘನ ತಾರಕನೊಲ್ಲಾ
ಸನ್ನುತ ಮಹಿಪತಿ ನರದನ ಪ್ರಭು ಪಾರ್ವತಿನಲ್ಲಾ ೩

೭೬
ಜಯದೇವಿ ಜಯದೇವಿ ಜಯ ಆದಿಶಕ್ತಿ|
ಜಯಜಯಚಂದ್ರಲೆಮಾತೆ ರವಿಶತ ನಿಜದೀಪ್ತಿ ಪ
ಸುರಮುನಿ ಸೇವಿತವಾದಾ ಚಾರುವಿಲಾಸದಲೀ |
ಇರುತಿರೆ ನಾರಾಯಣಮುನಿ ಭಕುತಿಗೆ ಪ್ರೇಮದಲೀ |
ಕರುಣದಿಭೀಮರಥಿಯಾ ಬಂದು ನೀ ತೀರದಲಿ |
ದಾರಿ ತಪ್ಪಿದ ದುರುಳನ ಮರ್ದಿಸಿ ಭೃಮರದಲಿ ೧
ಅಂದಿಗಿಂದಿಗೆ ನಿಂತು ಪ್ರಸನ್ನತಿ ಗ್ರಾಮದಲಿ |
ದ್ವಂದ್ವಚರಣವ ದೋರಿ ಮುಕುತಿಗೆ ಖೂನದಲಿ |
ಬಂದವ ದರ್ಶನ ಸ್ಪರ್ಶನ ಪೂಜನ ಮಾಡುತಲಿ |
ಚಂದದಿ ಇಹಪರ ಸುಖವಾ ಪಡೆದರು ಸುಲಭದಲಿ೨
ವಿವೇಕ ಹರಿವಾಣದಿ ಭಾವದಾರತಿ ನಿಲಿಸಿ |
ತೀವಿದ ಸಮ್ಮಜ್ಞಾನದ ಜ್ಯೋತಿಯ ಪ್ರಜ್ವಲಿಸಿ |
ಆವಗುಬೆಳಗುವ ಮಹೀಪತಿ ನಂದನತಾನಮಿಸಿ |
ಕಾವುದು ಶರಣರ ಅನುದಿನ ಅಪರಾಧವ ಕ್ಷಮಿಸಿ ೩

ಹರಿಭಕ್ತಿ ಸಾಧನೆಯಲ್ಲಿ
೧೩
ಜಯದೇವಿ ಜಯದೇವಿ ಜಯ ಪಾವನಗಂಗೇ |
ಜಯಜಯ ತ್ರಿಪಥಗಾಮಿನಿ ಜಯ ತುಂಗತರಂಗೇ ಪ
ಆದಿಲಿ ಶ್ರೀಹರಿ ಕೋಮಲ ಪದನಖದಿಂದೊಗದು |
ಸಾಧಿನಿ ವಾರಿಜಭವನಾ ಕರಪಾತ್ರಕೆ ಬಂದು |
ಸಾದರದಿಂದಾಶಿವನ ಕೆಂಜೆಡೆಯೊಳು ನಿಂದು |
ಮೇದಿನಿಗಿಳಿದು ನೀಬಂದೆ ಭಗೀರಥನೃಪಗೊಲಿದು ೧
ಕಾಶಿಪ್ರಯಾಗದಿ ನಿಂದು ಉದ್ದರಿಸುತ ಕೆಲರಾ |
ಆಶೆಯ ಪೂರಿಸಲಾಗಿ ದಕ್ಷಿಣ ದಿಶೆದವರಾ |
ರಾಶಿಯ ಕನ್ಯಾ ಮೆಟ್ಟಲು ಸುರಗುರು ಗಂಭೀರಾ |
ಭಾಶಿಶಿ ತೋರಿದೆ ಬಂದು ಕೃಷ್ಣವೇಣಿಲಿ ಸದರಾ ೨
ಹರಿಹರ ದೇವರು ದ್ರವರೂಪದಿ ಹರಿವುತಲೀ |
ನೆರೆನೀಕೂಡಿದ ಸಂಭ್ರಮ ಏನೆಂದುಸುರಲಿ |
ದರುಶನ ಮಾತ್ರದಲಾದೆನು ಮುಕ್ತನು ಭವದಲಿ |
ಗುರು ಮಹೀಪತಿಸುತ ಎನ್ನನು ರಕ್ಷಿಸು ಕರುಣದಲಿ |೩

೭೮
ಜಯದೇವಿ ಜಯದೇವಿ ಜಯಭಗವದ್ಗೀತೆ |
ಶ್ರಯ ಸುಖದಾಯಕಮಾತೇ ಶೃತಿ ಸ್ರ‍ಮತಿ ವಿಖ್ಯಾತೇ ಪ
ಮೋಹ ಕಡಲೋಳಗರ್ಜುನ ಮುಳುಗುತ ತೇಲುತಲಿ |
ಸೋಹ್ಯವ ಕಾಣದೆತನ್ನೊಳು ತಾನೇ ಮರೆದಿರಲೀ|
ಶ್ರೀಹರಿ ಮುಖದಿಂದುದಿಸಿ ಬೋಧ ಪ್ರತಾಪದಲೀ|
ಮಹಾ ಸುಜ್ಞಾನದ ತೆಪ್ಪದಿ ದಾಟಿಸಿದವನಿಯಲಿ ೧
ಅಂದಿಗಿಂದಿಗೆ ಋಷಿ ಮುನಿ ಸಜ್ಜನ ಮೊದಲಾಗಿ |
ಕುಂದದಿ ಪಂಡಿತರೆಲ್ಲರು ಮತಿ ಯುಕ್ತಿಯಲೊದಗಿ |
ಸುಂದರ ಟೀಕೆಯ ಮಾಡುತ ಪಾಡುತ ಅನುವಾಗಿ |
ಚಂದದಿ ನಿಂತರು ಅನುಭವದಲಿ ವಿಸ್ಮಿತರಾಗಿ ೨
ಆವನು ಭಾವದಿ ಪೂಜಿಸಿ ಓದಿಸಿ ಕೇಳುವನು|
ಸಾವಿರ ಸಾಧನವೇತಕೆ ಜೀವನ್ಮುಕ್ತವನು |
ದೇವಮನುಜರಿಗೆ ತಿಳಿಯದು ಪದಪದ ಮಹಿಮೆಯನು |
ಆವಗು ಸ್ಮರಿಸುವ ಮಹೀಪತಿ ನಂದನು ನಿಮ್ಮವನು ೩

೩೯೫
ಜಯರಘುರಾಮಾ | ಸದ್ಗುಣ ಧಾಮಾ |
ದಯದಾಗರ ಘನಶಾಮಾ ಪ
ಜಯರಘರುರಾಮಾ | ಸದ್ಗುಣ ಧಾಮಾ
ದಯದಾಗರ ಘನ ಶಾಮಾ |
ಭಯಹರನೇಮಾ ರಣನಿಸ್ಸೀಮಾ |
ತ್ರಯಂಬಕ ವಿಶ್ರಾಮಾ |
ಪ್ರಿಯಕರ ನಾಮಾ ಪೂರಿತ ಕಾಮಾ |
ಶ್ರಯಸುದಾಯಕ ಮಹಿಮಾ ೧
ಸುರಸಹಕಾರ ಇನಕುಲೋದ್ದಾರಾ |
ಧರಣೀಸುತೆ ಮನೋಹಾರಾ |
ಶರಯುತೀರಾಯೋಧ್ಯ ವಿಹಾರಾ |
ಚರಿತಪಾರಾ ವಾರಾ |
ಪರಮೋದಾರಾ ಸರ್ವಾಧಾರಾ |
ದುರತಾವಳಿವಿದಾರಾ ೨
ವನರುಹಾಸನ ವಂದಿತಚರಣಾ |
ಜನನಿ ಕೌಶಲ್ಯಾ ನಿಧಾನಾ |
ಅಣುರೇಣು ಜೀವನಾ ವ್ಯಾಪಕಪೂರ್ಣ |
ಕನಕಾಂಬರ ಭೂಷಣ |
ಮುನಿಜನ ರಂಜನಾ ದೈತ್ಯವಿಭಂಜನಾ |
ಮಹಿಪತಿ ನಂದನ ಪ್ರಾಣಾ ೩

೩೭೮
ಜಯರಾಘವ ಜಯರಾಘವ ಜಯರಾಘವ ರಾಮಾ|
ಶ್ರಯಕಾರಣಸುಖಪೂರಣ ಭವತಾರಣ ನಾಮಾ ಪ
ಜಗಪೋಷಣ ಮೃದುಭಾಷಣ ಸುರತೋಷಣಕಾರಿ|
ಅಘಶೋಷಣ ಕುಲಭೂಷಣ ಖರದೂಷಣ ಹಾರಿ ೧
ಅತಿಸುಂದರ ಗುಣ ಮಂದಿರ ದಶಕಂದರ ಹರಣಾ|
ಧೃತಮಂದಿರ ಗಜೇಂದರ ಪ್ರಯಾ ಸಾಂದರ ಕರುಣಾ ೨
ಗಿರಿಜಾ ಪತಿ ವಾಣೀಪತಿ ದಿವಸಾಪತಿ ಧೇಯ|
ಗುರುಮಹೀಪತಿ ಸುತಸಾರಥಿ ಸೀತಾಪತಿರೇಯಾ ೩

೩೯೯
ಜೋ ಜೋ ಜೋ ಜೋ ದೇವರದೇವನೆ ಜೋ ಜೋ ಪ
ಶರಣ ಹೃತ್ಕು ಮುದನಿಶಾಮಣ ಜೋ ಜೋ
ದುರಿತಾವಳಿತಮದ್ಯುಮಣೀ ಜೋ ಜೋ
ಸುರಮುನಿಜನ ಚಿಂತಾಮಣಿ ಜೋ ಜೋ
ಮೆರೆವಗೋಪಾಳ ಚೂಡಾಮಣಿ ಜೋ ಜೋ ೧
ಬಾಲಕಲೀಲಾಲೋಲನೆ ಜೋ ಜೋ
ಮೂಲೋಕಜೀವನಪಾಲನೆ ಜೋ ಜೋ
ಕ್ಷುಲ್ಲಕರಿಪುಕುಲ ಶಾಲನೆ ಜೋ ಜೋ
ತಿಲಕಸ್ತೂರಿ ಬಾಲನೆ ಜೋ ಜೋ ೨
ಮೋಹನ ಮಾನಸ ಮೂರ್ತಿಯೆ ಜೋ ಜೋ
ಮಹಿಮನುಪಮ್ಯದ ಕೀರ್ತಿಯೆ ಜೋ ಜೋ
ಇಹಪರದಲಿ ಭಕ್ತ ಸಾರ್ಥಿಯೆ ಜೋ ಜೋ
ಮಹಿಪತಿನಂದ ನಿಷ್ಟಾರ್ಥಿಯೆ ಜೋ ಜೋ ೩

೩೯೬
ಜೋ ಜೋ ನಿಜಕಂದ | ಮುಕುಂದಾ |
ಜೋ ಜೋ ಪರಮಾನಂದ ಪ
ಆಲದೆಲೆಯಲಂದು | ಮಲಗಿರಲು |
ಲಾಲಿಯಂದರು ಆರಲ್ಲಿ ೧
ಇಂದಿರೆಪತಿ ನರರ | ಸುಖಬಯಸಿ |
ಬಂದ ಫಣೀಂದ್ರನ | ತ್ಯಜಿಸಿ ೨
ಗುರುಮಹೀಪತಿ ಸ್ವಾಮಿ | ರಘುವೀರಾ |
ಸುರಮುನಿಜನ ಸಹಕಾರಾ ೩

೩೯೮
ಜೋ ಜೋಯನುತಲಿ ಗೋಪಿ
ವಾಣಿಲಿತೂಗಿದಳು ಕೃಷ್ಣನ್ನ ಜೋ ಜೋ ಪ
ರನ್ನ ಖಚಿತ ತೊಟ್ಟಿಲದೊಳಗ
ಚಿನ್ನಾಂಬರದ್ಹಾಸಿಗಿ ಹಾಕಿ
ಉನ್ನತ ಮಹಿಮನ ತಂದಿರಿಸಿ
ಚೆನ್ನಾಗಿ ಪಿಡಿದ್ಹೆಡೆಯಾಡಿಸುತಾ ೧
ದುಷ್ಟ ಸೋದರ ಮಾವನ ತಲೆಯಾ
ನೆಟ್ಟನೆ ಕತ್ತರಿಸಲು ಜೀಯ್ಯಾ
ಅಷ್ಟಮಿ ದಿವಸದ ರಾತ್ರಿಯಲಿ
ಸ್ಪಷ್ಟದಿ ಪ್ರಕಟಿಸಿದೈಧರಿಲಿ ೨
ಸುರರ ಮನೋಬಯಕೆಯವೃಕ್ಷಾ
ತ್ವರಿತದಿಫಲಿಸಿತು ಪ್ರತ್ಯಕ್ಷಾ
ಗುರುಮಹಿಪತಿಸುತ ಗಧ್ಯಕ್ಷಾ
ಗಿರುವೆನೀ ಮಾಡು ಸಂರಕ್ಷಾ ೩

೪೩೩
ಜೋಗಿ ಬಂದ ಕಾಣೇ ಈತ ಮಹಾಯೋಗಿ ಬಂದ ಕಾಣೇ
ಗಗನ ಮಣಿಯ ಮೀರುವ ತೇಜದ ದತ್ತ
ದಿಗಂಬರ ನೆನಿಪೆ ನೋಡಮ್ಮಾ ಪ
ತವೆ ಸಂಜೆ ಧಾರೆಗಳು ಹೊಳೆವ ಲೊ
ಪ್ಪುವ ಕೆಂಜೆಡಿಯಗಳು
ಕುವಲಯ ಶಾಮನು ಕಿರೀಟ ಕುಂಡಲದಿಂದ
ಠವಠವಿಸುವ ಮೊಗದಾ ನೋಡಮ್ಮಾ ೧
ಕೇಶರ ಗಂಧವನು ನುಂಪಿಟ್ಟು
ತ್ರಿಸರೋಜ ಮಾಲೆಯನು
ಭೂಷಿತ ದಿವ್ಯಾಂಬರ ಕಾಂಚಿ ಧಾಮದಿ
ಘೋಷಿಪ ಘಂಟೆಗಳು ನೋಡಮ್ಮಾ ೨
ಮೆಟ್ಟಿದ ಪಾದುಕೆಯಾ ರತನದ
ಬೊಟ್ಟಿಲಿ ಜಪ ಮಾಲೆಯಾ
ನೆಟ್ಟನೆ ನೆನೆವ ರುದ್ಧರಿಸಲು ತಾರಕ
ಸೃಷ್ಟಿಗೆ ಗುರುವಾಗಿಹ ನೋಡಮ್ಮಾ ೩
ಆದಿ ಯೋಗವನು ಪ್ರಕಟಿಸಿ
ಹಾದಿಯ ತೋರುವನು
ದ್ವಾದಶ ನಾದದ ಭೇದ ತೋರುವ ಶಂಖ
ನೂಡುತ ನಲಿಯುತಲಿಹ ನೋಡಮ್ಮಾ ೪
ತ್ರಿ ಮೂರ್ತಿ ಚಿ-ಹ್ನವನು ದೋರುವಾ
ಶ್ರೀ ಮನೋರಮ ದೇವನು
ನೇಮದ ಮಹಿಪತಿ ನಂದನ ಪ್ರಭು ಭಕ್ತ
ಕಾಮಿತಾರ್ಥವ ನೀಡುವ ನೋಡಮ್ಮಾ ೫

೧೯೫
ಜೋಗಿ ಬಂದನೋಗೋವಿಂದಾ | ನಮ್ಮ |
ಬಾಗಿಲಿಗೆ ನಡೆತಂದಾ ||
ಬೇಗನೇ ಪವಡಿಸು ಕಂದಾ | ನಾನು |
ಜೋಗುಳಪಾಡುವೆ ಛಂದಾ ||
ಗೋಗಮನನಾಗಿ ಶ್ರೀ ಗಿರಿಜೆಯ ಕೂಡಿ |
ಯೋಗಿಗಳರಸನು ಝಗ ಝಗಿಸುವ ಪ
ಜಡೆಯಲಿಗಂಗೆಯಧರಿಸಿ ಮುಂ | ಗುಡಿಯಲಿ ಚಂದ್ರನನಿಲಿಸಿ |
ಕಿಡಿಗಣ್ಣಮೂರನೆವೆರೆಸಿ ಫಣಿ | ಮಿಡಿಗಳ ಕುಂಡಲ ವಿರಿಸಿ|
ಬಿಡದೆ ವಿಷವನುಂಡು ಕಡುಗಪ್ಪುಗೋರಳಲಿ |
ಒಡನೆರುಂಡಮಾಲೆಯ ಗಡಬಡಿಸುವ ೧
ಇಟ್ಟವಿಭೂತಿಯತನುವಾ | ಶಿವ | ತೊಟ್ಟರುದ್ರಾಕ್ಷದಿ ಮೆರೆವಾ |
ಸೃಷ್ಟಿಗೆ ಕೌತುಕನೆನುವಾ | ಬಿಗಿ |
ದುಟ್ಟಿಹಹುಲಿಚರ್ಮಾಂಬರವಾ |
ನೆಟ್ಟನೆ ಡವರವ | ಮುಟ್ಟಿ | ನುಡಿಸುತಲಿ |
ಛಟ ಫಟ ಧ್ವನಿಯಾರ್ಭಟದ ವೈರಾಗಿ೨
ಶ್ರೀ ರಾಮನಾಮವ ಬಲಿದು | ತಾನು |
ಕರದಿಕಪಾಲವ ಪಿಡಿದು |
ಧರೆಯೊಳುಭಿಕ್ಷನೆವದಿಂದು | ಹರ |
ತಿರುಗುವ ವಿಜ್ಞಾನ ಸಿಂಧು |
ಗುರುಮಹಿಪತಿ ಪ್ರಭು | ನರನಾಟಕದಲವತರಿಸಿಹ
ಗೋಕುಲದ ಶಿರಿನೋಡಲಾಗಿ ೩

೨೪
ಜೋಗಿಯ ನೋಡಿರೇ ತಾಪಸ ಯೋಗಿಯ ನೋಡಿರೇ
ಆಗಮನುತ ಗುಣಸಾರಸ್ವಾನಂದಶರವಾ ಭುವನದಿಮೆರವಾ ಪ
ಸುರಮುನಿಪೂಜಿತ ಅಂಘ್ರಿಸರೋಜಯುಗಳವೋ
ಚಿತ್ಸುಕ ಸ್ಥಳವೋ
ಪುರಹರನುಟ್ಟಿಹ ಕರಿಚರ್ಮಾಂಬರ ನಿಲವೋ
ಯಮುನಾ ಜಲ ; ವೋ
ಗಿರಿಜೇಶನು ಧರಿಸಿಹ ರುಂಡಮಾಲಾಕೃತಿಯೋ ;
ವಿದ್ಯುಲ್ಲತಿಯೋ
ಹರಿನಂಗದಿ ಮಂಡಿತ ಫಣಿರತ್ನ ಭೂಷಣವೊ
ಭೂಷಣವೋ ; ತಾರಾಗಣವೋ ೧
ಶ್ರೀ ಮಹಾದೇವನ ನಂಜು ಗೊರಳಠವಠವಿಯೋ :
ಮೇಘ ಚ್ಛವಿಯೋ
ಹೈಮವತೀ ನಯನಾಂಬುಜ ತೋಷಿಪವದನೋ
ತರಣಿಯ ಸದನೋ
ಕಾಮಶಲಭನುಹಿದ ಭಾಲಾಕ್ಷದ ಇರವೋ; ದೀಪಾಂಕುರವೋ;
ವ್ಯೋಮನದಿಯ ಆವರಿಸಿಹ ಭವನ ಕಂಜೆಡಿಯೋ:
ಹವಳದ ಕುಡಿಯೋ ೨
ವಿರೂಪಾಕ್ಷನ ಕರ ಡಮರದ ನಾದಸ್ಪರಣೋ :
ಘನವ್ಯಾಕರಣೋ:
ತರುಣೀಂದುಧರನ ಕಾಯವ ಕ್ರಾಂತಿ ಲಹರಿಯೋ;
ಕರ್ಪುರ ಗಿರಿಯೋ;
ಚರಣದ ಭಕ್ತರ ಭಾವನೆ ಪೂರಿಪ ಧೋರಿಯೋ;
ಸುರಕುಜ ಪರಿಯೋ:
ಗುರವರ ಮಹಿಪತಿ ನಂದನ ತಾರಕ ಶಿವನೋ:
ನಿಜ ಬಾಂಧವನೋ ೩

೩೯೭
ಜೋಜೋಜೋ ಬಾಲ ಮುಕುಂದಾ |
ಜೋಜೋ ಯೋಗಿ ಹೃದಯಾನಂದ |
ಜೋಜೋ ನಮ್ಮ ಗೋಪಿಯ ಕಂದಾ |
ಜೋಜೋ ಗೋಪಾಲ ಗೋವಿಂದಾ | ಜೋ ಜೋ ಪ
ಉರಗರಾಜನ ಹಾಸಿಗೆ ಮೇಲೆ |
ಶಿರಿದೇವಿ ಕೈಯಲಿ ಶೇವೆಯ ಕೊಳ್ಳುತಲಿ |
ಭರದಿ ನಾರದ ಗಾಯನದಲಿ | ಇಂಥಾ |
ಮೆರೆವ ಯೋಗದ ನಿದ್ರೆಯಲೀ || ಜೋಜೋ ೧
ಆದನೆಲ್ಲವ ಬಿಟ್ಟು ಶ್ರೀಹರಿ |
ವಿದಿತ ಬಾಲಕ ವೇಷವದೋರಿ |
ಪುದುಳದಿಂದಲಿ ತೊಟ್ಟಿಲ ಸಾರಿ |
ಮುದದಲ್ಲಾಡುವ ಸುರ ಸಹಕಾರಿ || ಜೋಜೋ ೨
ಏನು ಪುಣ್ಯವೋ ಗೋಕುಲ ಜನರ |
ಶ್ರೀ ನಂದಾತ್ಮಜ ನಾದವಿನೋದಾ |
ಧ್ಯಾನ ಮೌನಕೆ ಗೋಚರಪಾದ | ಮಹಾ |
ದಾನಿ ಮಹೀಪತಿಸುತ ಪ್ರಿಯನಾದಾ | ಜೋ ಜೋ ೩

೭೨೨
ಜ್ಞಾನ ಮಾರ್ಗದ ಬೋಧ ನುಡಿಗಳು |
ಹೀನ ಮನುಜರಿಗ್ಯಾತಕೆ |
ಶ್ರಿನಿವಾಸನ ಪಾದ ಕಮಲಧ್ಯಾನವುಳ್ಳ ಸುಜನರಿಗಲ್ಲದೇ ಪ
ಕಾಣದವಗ ಕನ್ನಡಿ ಅದ್ಯಾತಕೆ |
ರಾಣಿ ಯಾತಕೆ ಷಂಡಗೆ |
ಗೋಣಿಗ್ಯಾತಕೆ ಗವಸಣಿಕೆ ಗೀ |
ರ್ವಾಣಗಳೇಕೆ ಗೊರವಗ ೧
ಶ್ವಾನಗ್ಯಾತಕ ಇಕ್ಷುದಂಡವು |
ಈ ನರಿಗೆ ಊರ್ಯಾತಕೆ |
ದೀನಗ್ಯಾತಕೆ ಧರ್ಮವಾರ್ತೆಯು |
ವಾನರಕ ಸರ ಮುತ್ತು ಯಾತಕೆ ೨
ಬುತ್ತಿಗಳ್ಳರಿಗ್ಯಾಕೆ ವೃತಗಳು |
ಕತ್ತಿಗ್ಯಾತಕೆ ಕಸ್ತೂರಿ |
ಕರ್ತ ಮಹಿಪತಿ ನಂದನುಸುರಿದ |
ಚಿತ್ತ ಶುದ್ಧಿಯ ಪಡಿಯದವರಿಗೆ ೩

೩೭೫
ಜ್ಞಾನ ಸಖೀಕೇಳೆ ಜ್ಞಾನಿಗಳಾರಾಧಿಸುವಾ |
ಶ್ರೀನಿವಾಸನಾ ತಂದುತೋರೆ ತನುವಿನೋಳು ಪ
ಹಲವು ಸಾದಿನದಿಂದ ಬಳಲಿ ಹಂಬಲಿಸಿದೆ |
ಜಲ ಜಾಕ್ಷ ಮೈಯ್ಯ ದೋರನೇ ೧
ಕಣ್ಣಿಗೆ ಕಣ್ಣಾಗದನಕಾ ಬಣ್ಣ ಬಣ್ಣದ ಚಿತ್ಸುಖಾ |
ಕನ್ನಿಕಾ ರನ್ನಳೆ ತಂದು ತೋರೇ ೨
ಸೋಹ್ಯ ಸೊನ್ನಿಯ ದೋರಿಸಿ ಬಾಹ್ಯರಂಗ ಮರೆಸಿ |
ಸಹ ಜಾನಂದದ ಕೂಡಿಸೇ ೩
ಗುರು ಮಹಿಪತಿ ಸ್ವಾಮಿ ಸ್ಮರಿಸುವರಂತರ್ಯಾಮಿ |
ನೆರೆದು ತಾನೇ ತಾನಾದನೇ ೪

೭೨೧
ಜ್ಞಾನಕಿದೇ ನಡಿ ಕುರುಹು |
ಶ್ರೀ ರಮಾನಾಥಾಂಘ್ರಿಯ ಕಾಣುವದರಿತು ಪ
ಕೋಪ ತಾಪವ ಬಿಡಬೇಕು ಪಶ್ಚಾ |
ತ್ತಾಪದಿ ವೈರಾಗ್ಯ ಘನ ಬಲಿಬೇಕು |
ಪಾಪವಿರಹಿತಾಗಬೇಕು | ಗತಿ |
ಸೋಪಾನವಾದಾ ಶಾಂತಿಯ ಜಡಿಬೇಕು ೧
ಕರುಣ ಮೂರುತಿ ಆಗಬೇಕು ಸರ್ವ |
ಧರೆಯು ಜನಕ ಪ್ರಿಯವಾಗಿರಬೇಕು |
ನೆರೆ ಲೋಭವನು ಜರಿಬೇಕು ತನ್ನ |
ತೆರನರಿ ತನ್ನವ ನೀಡಲಿಬೇಕು ೨
ದುರಿತ ಭಯವ ಬಿಡಬೇಕು | ದುಃಖ |
ದುರ್ವಾಣಿಯಲಿ ತಾ ಬಳಲದಿರಬೇಕು |
ಹರಿಭಕ್ತಿ ದೃಢಗೊಳ್ಳಬೇಕು ಗುರು |
ವರ ಮಹಿಪತಿ ಬೋಧ ನಿಜವೆನಬೇಕು ೩

೧೯೬
ಡಂಭಕ ಹರಿದೂರ ಪ್ರಾಣೀ ಪ
ಅಂಬುಜನಾಭನ ಇಂಬನ ಪಡಿಯದೇ|
ಡೊಂಬನ ಪರಿಯಾಚಾರ ಪ್ರಾಣೀ ಅ.ಪ
ಅಬ್ಧಿಶಯನ ಸಿರಿನಾಥನ ಒಲುಮೆಯ|
ಲಬ್ಧ ದೊರೆಯದೆ ವಿಚಾರಾ||
ಲಬ್ಧನಾಗಿ ಧನ ಮಾನಕಬಿಟ್ಟಿನೀ|
ಶಬ್ದದಂಗಡಿ ಪ್ರಸರಾ|ಪ್ರಾಣೀ ೧
ಪೊಡವಿಯೊಳಗ ಉಗ್ರಸಾಧನದಿಂದಲಿ|
ಬಿಡದೆವೆ ತವಶರೀರಾ||ಒಡನೆ ಮರೆದು ರಿಧ್ಧಿಸಿಧ್ಧಿಯ ಬಲದಲಿ|
ಹಿಡದಿ ಮನದಿ ಅಹಂಕಾರ|ಪ್ರಾಣೀ ೨
ಅದಿತತ್ವದಾಗಲೆ ಸಾಧಿಸೇನೆಂದರೆ|
ಸಾಧನ ಕೇಳು ಸುಸಾರಾ||
ಭೇದಿಸು ಮಹಿಪತಿ ನಂದನ ಸಾರಿದ|
ಸಾಧು ರಾಶ್ರಯ ಮನೋಹರ|ಪ್ರಾಣೀ ೩

೭೯
ತಂದು ತೋರೆ ಮಂದ ಹಾಸನಾ | ತಂದು ತೋರೇ
ಮಂದಹಾಸನಾ ನಂದ ಕಂದ ಶ್ರೀ ಮುಕುಂದ |
ವಂದಿತಾ ಮುರೆಂದ್ರ ವೃಂದಾನ ಕಾಮಿನಿ ಪ
ಹರನ ಹೊದಿಯ ಅರಿಯ ಶಾಪದಿ | ಹರಿಯರಾದ
ರೊಡೆಯನಿಂದ ಭರದಿಯಜ್ಞ ಕಾಯ್ಸಿ
ಕೊಂಡನಾ ||ಕೋಪಕ ||
ವರವನಿತ್ತು ಗುರು ಮೊಮ್ಮನು |
ದರಲಿ ಬಂದ ಮಾತೆ ಮಗನಿ
ಶರದ ಭರಕ ಪಣಿ ಲಿ ತಾಳ್ದನಾ ೧
ಸರಳ ಮಂಚದವನ ತಲಿಗೆ | ಸರಳದಿಂಬು ಕೊಟ್ಟನವನ|
ಸರಳದಿಂದ ಪ್ರಾಣ ತೊರೆದನಾ || ಪ್ರೀತಿಯಾ ||
ಸರಳಕಾತು ಆಳಿದ ನೈಯ್ಯನ | ಸರಳಗದೆಯ
ಕೈಯ್ಯಲಿಂದ | ಸರಳ ತೃಯನ ಕೊಲಿಸಿ ದಾತನಾ೨
ಶರತ್ ಮೃಗನ ಭೋಜ್ಯ ವಾಹನ | ಸಖನ ಉರಬಕಾಗಿ
ನಿಲದೇ | ಅಖಿಲ ದೊಳಗನು ಸಳಿತೀಹನಾ ||ರಾಶಿಯಾ ||
ಸುಖವ ನಲಿದ ನರಿಯ ಸುತರ | ಕ್ಷೇತ್ರ
ಮಹಿಪತಿನಂದನ | ಮುಖದಿ ತನ್ನ ಚರಿತ ನುಡಿಪನಾ೩

೧೦೫
ತಂದು ತೋರೆ ಮಂದಹಾಸನ | ಕಾಮಿನಿ |
ತಂದು ತೋರೆ ಮಂದಹಾಸ | ನಂದ ಕಂದ ಶ್ರೀಮುಕುಂದ |
ವಂದಿತಾಮರೇಂದ್ರ ವಂದ್ಯನ | ಕಾಮಿನಿ ಪ
ಹರನ ಹೊದಯ ಅರಿಯಶಾಪದಿ |
ಹರಿಯರಾದರೋಡಯನಿಂದ
ಭರದಿಯಜ್ಞಕಾಯ್ಸಿಕೊಂಡನಾ | ಕೋಪಕೆ
ಉರವನಿತ್ತಗುರುಮೊಮ್ಮನುದರಲಿ ಬಂದ ಮಾತೆ ಮಗನ |
ಶರದ ಭರಕೆ ಫಣಿಲಿ ತಾಳ್ದಾನಾ | ಕಾಮಿನಿ ೧
ಸರಳಮಂಚದವನ ತಲೆಗೆ | ಸರಳದಿಂಭಕೊಟ್ಟನವನ
ಸರಳದಿಂದ ಪ್ರಾಣ ತೊರಿದನಾ | ಪ್ರೀತಿಯಾ |
ಸರಳಕಾದು ಅಳಿದನಯ್ಯನ | ಸರಳಗದೆಯ ಕೈಯ್ಯಲಿಂದ |
ಸರಳತ್ರಯನ ಕೊಲಿಸಿದಾತನ | ಕಾಮಿನಿ ೨
ಶತಕಮೃಗನ ಭೋಜ್ಯವಾಹನ | ಸಖಉರಭಕಾಗಿ ನಿಲ್ಲದೇ |
ಅಖಿಲದೋಳಗೆನುಸಲುತಿಹನಾ | ರಾಶಿಯ |
ಪಕವನಳಿದನರಿಯಸುತನ | ರಕ್ಷಕಮಹೀಪತಿನಂದನ|
ಮುಖದಿ ತನ್ನ ಚರಿತೆನುಡಿಪನ ಕಾಮಿನಿ ೩

೧೯೭
ತಪ್ಪಗಳೆಣಿಸದೆ ಸಿದ್ದೇಶಾ ಯನ್ನಪ್ಪ ಶ್ರೀನಿವಾಸ
ಕಾಯೋ ಸಿದ್ದೇಶಾ ಪ
ಸಕ್ತನಾಗಿ ವಿಷಯದಿ ಸಿದ್ದೇಶಾ ಜ್ಞಾನ
ಯುಕ್ತಿಮತಿ ಹೊಂದಲಿಲ್ಲಾ
ಭಕ್ತಿಯ ಗುಣಂಗಳಿಲ್ಲಾ ವಿರಕ್ತಿಯ ಅಂಕುರವಿಲ್ಲಾ ೧
ಸಾಧು ಜನಸಂಗ ಮಾಡೀ ನಿಜ ಬೋಧಾಮೃತ ಸವಿಯಲಿಲ್ಲಾ
ವಾದ ಗುಣ ಹಿಂಗಲಿಲ್ಲಾ ಕಾಮ, ಕ್ರೋಧ ಸುಳಿಯಲಿ ಬಿದ್ದೆ೨
ಪಂಥ ಪರಮಾರ್ಥದೋರೋ ಶ್ರೀ ಕಾಂತ ಗುರು ಮಹಿಪತಿ
ಶಾಂತಿ ಶಮದಮಕೊಟ್ಟುಸಿದ್ದೇಶಾ ವಿಶ್ರಾಂತಿ
ಸುಖವ ನೀಡಬೇಕು ಸಿದ್ದೇಶಾ ೩

೧೯೮
ತಪ್ಪು ಕ್ಷಮೆ ಮಾಡೋ ಕೃಪೆಯಿಂದ ನೋಡೋ ಪ
ನೀನೆದಯಾನಿಧಿ ನಾನು ಅಪರಾದಿ
ಖೂನದೋರೋ ಹಾದಿ ಸ್ಥಾನ ನಿಜಾನಾದಿ ೧
ಅನಾಥನೆಂದು ನೋಡಿ ಸನಾಥನೆನ್ನಮಾಡಿ
ಸ್ವಾನಂದ ಸುಖನೀಡಿ ಮನ್ನಾಥ ನಿಜಗೂಡಿ೨
ಹೇಳಲಾರೆ ಬಹಳಾ ಕೇಳೋನೀದಯಾಳಾ
ತಾಳಿಯನ್ನ ತೋಲಾಬಾಲವಿಶ್ವಷಾಲಾ ೩
ಸೇವಿ ಇದೇನಮ್ಮ ಭಾವಿಸುದು ನಿಮ್ಮ
ಪಾವನ್ನಗೈಸು ವರ್ಮಾ ಸುನಿತ್ಯ ಪರಬ್ರಹ್ಮಾ ೪
ಬಂದ ಮ್ಯಾಲೆ ಶರಣಾ ಕುಂದವ್ಯಾಕೋ ಪೂರ್ಣ
ಕಂದ ಮಹಿಪತಿಗುಣಾ ಛಂದ ಮಾಡೋಕರುಣಾ ೫

೭೪೯
ತಮ್ಮ ಮಾತಿನರಹು ತಮಗಿಲ್ಲಾ |
ಸುಮ್ಮನಾಡುತಲ್ಯೆದ ಜಗವೆಲ್ಲಾ ಪ
ನಾನೇ ಆ ಬ್ರಹ್ಮನೆಂದುಸುರುವನು |
ತಾನುದಾರು ಮತ್ತಾರಿಗ್ಹೇಳುವನು ೧
ನಿಸ್ತರಗಾಂಬೋಧಿಯೆನಿಸಿದಾ |
ವಸ್ತುವಿಗೆ ದೃಶ್ಯವಿವಾದಾ ೨
ಬೆಲ್ಲ ಸವಿದ ಮೂಕನಂತಾಗಿ |
ನಿಲ್ಲುವವನೇ ಜಗದೊಳು ಯೋಗಿ೩
ದ್ವೈತಾದ್ವೈತ ಮೀರಿಹ ಖೂನಾ |
ತಾತ ಮಹಿಪತಿ ಗುರುಜ್ಞಾನಾ ೪

೧೯೯
ತಾನೇ ತಾನು ಜಗದಂತರ್ಯಾಮಿ ವಿಶ್ವಂಭರಿತಾ
ತಾನೇ ತಾನು ಹರಿಧ್ಯಾನ ಧನ ದಾನ ಮಾನ
ಅಣುರೇಣುಗಳಲ್ಲಿ ಪ
ವಬ್ಬಸೂರ್ಯಜಗ ಸರ್ವ ಚಕ್ಷಗಳ
ಮಬ್ಬುಹಾರಿಸುವಂತೆ ಅ.ಪ
ಘಟ ಮಠಾದಿಗಳ ಚದುಳ ಬ್ರಹ್ಮಘಟಿ
ನೆಟಗೆ ವ್ಯಾಪ್ತ ನಿಚ್ಚಲ ಗಗನದಂತೆ ೧
ಕಂಭಸೂತ್ರದ ಬೊಂಬೆಯಾಟದಲಿ
ಇಂಬುಗೊಂಡ ಕುಳೆ ಬಿಂಬಿಸುವಂತೆ೨
ಕಂದ ಕುಂದದಾನಂದ ಚಂದ ಘನ
ತಂದೆ ಮಹಿಪತಿ ನಂದನ ಪ್ರೀಯಾ೩

೨೦೦
ತಾರಿಸಬೇಕೋ ಎನ್ನಾ|ಯಾದವ ರನ್ನಾ ಪ
ತಾರಿಸಬೇಕೋ ಎನ್ನಾ | ಯಾದವ ರನ್ನಾ|
ಸಾರಿದೆ ನಾನು ನಿನ್ನಾ|ಘೋರ ಭವಾಂಬುಧಿಯಾ|
ಪಾರಗಾಣೆನೋ ಜೀಯಾ | ವಾರೆ ಕಂಗಳೆನ್ನಾ ನೋಡಿ|
ದಯಮಾಡಿ ಒಡಮೂಡಿ ಅಭಯವ ನೀಡಿ೧
ತಾನಾರೆಂಬುದು ನೋಡದೇ ತನುವಿನೊಳು|
ನಾ ನನ್ನದೆಂದು ಪಾಡಿದೇ|
ಶ್ರೀನಾಥ ನಿನ್ನ ನಾಮಾ|ನೆನೆಯದೆ ಮನದೊಳೊಮ್ಮಾ|
ನಾನಾ ವಿಷಯದೊಳು ಬೆರೆದು|ಮೈಮುರಿದು|
ಹಿತಜರಿದು ಕೆಡುವಾದೇನರಿದು ೨
ಶರಣರಾ ಸಂಗದೋರಿಸಿ|ಸ್ವರೂಪವಾ|
ಮರೆದ ವಿಭ್ರಮ ಹಾರಿಸೀ|
ಗುರುಮೂರ್ತಿ ಪ್ರಭು|ಅರಹು ನೀಡೋ ಭಕ್ತಿಯಾ|
ಸುರಸಾ ಸಾರಾಯದ|ಸುಖನುಂಬೆ|ಬಲಗೊಂಬೆ|
ನಮೋಯೆಂಬೆ ಎನ್ನಿಂಬ ಬಿಂಬವೇ ೩

೨೦೧
ತಾಳಲಾರೆನಮ್ಮಾ ಬಾಲಕನಟ್ಟುಳಿ ಗೋಪೀಘನವಮ್ಮ
ಕೇಳಿದುಳವಿಲ್ಲಾ ಕೇಳಿದುಳವಿಲ್ಲಾ
ಕಾಲಕಾಲದಲಿಟ್ಟ ಬೆಣ್ಣೆ ಮೂಲವಿರಲಿಕ್ಕಿಲ್ಲಾ ಪ
ಅತ್ತನೋಡ ಲಿಹಾ ಇತ್ತ ನೋಡಲಿಹಾ
ಸುತ್ತಸೂಸುತ ಬಾಲೆಯರಾ ಚಿತ್ತಮೋಹಿಸುತಿಹಾ೧
ಹಿಡಿದೇನೆಂದರೆ ಸಿಕ್ಕಾ ತುಡುಗ ಬಲುದಕ್ಕಾ
ಹಿಡಿದು ನಿಲ್ಲಿಸುವರಿಲ್ಲಾ ಪೊಡವಿಲಿವನ ತುಕ್ಕಾ೨
ಆರಿಗೇ ವಿಚಾರಾ ಸಾರಬೇಕು ದೂರಾ
ಸೂರೆಹೋಗುತಿದೆ ಸಂಸಾರಾ ಸುಖಸಾರ ೩
ತಂದೆಮಹಿಪತಿ ನಂದನ ಸಾರಥಿ
ಇಂದು ನಮ್ಮ ಕಾಡಿದರ ಮುಂದಾರುಗತಿ ೪

೫೯೯
ತಿಳಿದವನೇ ಪೂರ್ಣಾ |
ತಿಳಿವಿಕೆಯೊಳು ತನ್ನಯ ಖೂನಾ ಪ
ತಿಳಿವಿಕೆ ತಿಳಿವದು ಯರಡಿಲ್ಲೆಂದು |
ತಿಳಿದೇ ನರ ಬಾಹಂಭ್ರಮ ಜರಿದು ೧
ವೇದಾಂತ ಸಾರದ ವಾಜ್ಯನು-ಭವನು |
ಸಾಧು ಜನರ ದಯದಲಿ ಪಡೆದನು ೨
ಜಲಧಿಯೊಳಗ ಲಹರಿಗಳೇಳ್ವೆಂತೆ |
ಸಲೆ ಆತ್ಮನಿಂದಲಿ ಜಗದುದ್ಭವಂತೆ ೩
ಪೂರ್ವಾರ್ಧದ ಬಿಸಿಲಿನ ನೆರಳೆಂದು |
ದೋರ್ವ ಸಂಸಾರವು ಸ್ಥಿರವಲ್ಲೆಂದು ೪
ಗುರುಮಹಿಪತಿ ಚರಣಕ ತಲೆವಾಗಿ |
ಬೆರೆದು ಸತ್ವದೊಳಗ ರಜತಮ ನೀಗಿ ೫

೨೦೨
ತಿಳಿಯದು ಅಟಾ ಶ್ರೀಹರಿ ನಿನ್ನಾ|
ನಳಿನ ಸಂಭವ ಮೊದಲಾದ ನಿರ್ಜರರಿಗೆ ಪ
ಮೊತ್ತವೆನಿಪ ಕ್ಷೀರ ಸಾಗರ ಮಧ್ಯಲಿ|
ಉತ್ತಂಗವಾದ ಶೇಷನ ಮಂಚದ ಮ್ಯಾಲೆ|
ಸುತ್ತಸನಕಾದಿ ಭಾಗವತರ ಸಂಗ|
ನಿತ್ಯವೆರಸಿ ಕ್ರೀಡಿಸುವದ ಬಿಟ್ಟು|
ಮತ್ತೆ ವನದೊಳಾಡುವರೇ ತೃಣಗಳ|
ಕಿತ್ತಿ ಹಾಸಿಕೆ ಮಾಡುವರೇ ಕಪಿಸಂಗ
ಅತ್ಯಂತ ದಲ್ಹಿಡುರೇ ಕುಬ್ಸಿಯಾ|
ವತ್ತಿನೀ ಅಳುವರೇ೧
ಗಂಭೀರವಾದ ಸುರವರದಿಂದ ನಾರದ|
ತುಂಬುರ ಮಾಳ ಗೀತವ ಕೈಕೊಂಡು|
ಕಂಬು ಕಂದರದಲ್ಲಿ ಕೌಸ್ತುಭ ಮಾಲೆಯ ಹಾಕಿ|
ಪೊಂಬಟ್ಟೆಯನುಟ್ಟು ಗರುಡ ವಾಹನ ಬಿಟ್ಟು|
ಕೊಂಬು ಕೊಳನ ನೂದುರೇ ಗುಂಜಿಯಾ ವಣಿ
ಬಿಂಬಸರವ ಹಾಕುತೀ ಕಲಿಯಾದಾ|
ಕಂಬಳಿ ಯನುರೆ ಪೊದ್ದು ವಸ್ತ್ರದಿ ಮರ|
ಸಂಭ್ರಮ ವೇಸರೇ ೨
ನಯದಿಂದ ಸುಜನ ಸಮರ್ಪಿಪ ಊಟವ|
ದಯದಿಂದ ಕೈಕೊಂಡು ತೃಪ್ತನಾಗಿ|
ಶ್ರೀಯಾ ಕುಚ ಕೊಡಮ್ಯಾಲ ಕರವನಿಟ್ಟು|
ಜಯವಿಜಯ ವೆಂಬದ್ವಾರ ಪಾಲರಿರೆ|
ಗೋವಲ್ಲರೆಂಜಲ ತಿಂಬುದೇ ಸರಗಹಗ|
ಕೈಯ್ಯಲಿಂದ ತೊಳೆವರೇ ಮುದದಿ|
ಬಲಿಯ ಬಾಗಿಲ ಕಾವುರೇ ಮಹಿಪತಿ
ನಂದನ ಜೀವನ-ನೋ೩

೨೦೩
ತಿಳಿಯದೈ ಶ್ರೀ ಹರಿಯೆ ನಿನ್ನ ಮಹಿಮೆ
ನಳಿನ ಸಂಭವ ಮುಖ್ಯನಿಗಮನಾಗ ಮಂಗಳಿಗೆ ಪ
ಒಂದು ಯಜ್ಞಕೆ ಪೋಗಿ ಇರುಳ್ಹಗಲು ಕಾಯ್ದಿ ಮ
ತ್ತೊಂದು ಯಜ್ಞಕೆ ಕರ್ತನಾಗಿ ಮಾಡಿ
ಒಂದು ಯಜ್ಞಕೇ ಪೋಗಿ ವಿಧ್ವಂಸ ಮಾಡಿ ಮ
ತ್ತೊಂದು ಯಜ್ಞವ ಕೆಡಸಿದನ ಮಿತ್ರನಾದೇ೧
ಒಬ್ಬರಸನನ ಕುಲವ ಪರಿಪರಿ ಸಂಹರಿಸಿ
ಒಬ್ಬರಸನನ ನೆಲಿಗೆ ನಿಲಿಸಿದೈಯ್ಯಾ
ಒಬ್ಬರಸನನ ಕರಗಸದಿ ಕೊಯಿದು ಪರೀಕ್ಷಿಸಿದೆ
ಒಬ್ಬರಸನನ ಸಭೆಯೊಳಗೆ ಶಿರವ ತರಿದೇ ೨
ಒಂದಾನೆ ಏರಿದನು ಪಾಯದಲ್ಲಿ ಮರ್ದಿಸಿದೆ
ಒಂದಾನೆ ಏರುವನ ಮಗನ ಕಾಯಿದೇ
ಒಂದಾನೆಯನುಕೊಂದು ರಜಕನಸುವನು ತೆಗೆದೆ
ಒಂದಾನೆಗೊಲಿದೆ ಮಹಿಪತಿನಂದ ನೋಡಿಯಾ ೩

೬೦೧
ತಿಳಿಯೋ ಮನವೇ ನಿಜ ಘನವಾ |
ಕಳಿಯೋ ಹಮ್ಮಿನ ಅವಗುಣವಾ ಪ
ಸದ್ಗುರು ಶರಣವ ನೀ ಬ್ಯಾಗ |
ಸದ್ಗುಣದಲಿಹುದು ಜಗದೊಳಗ |
ತದ್ಗತ ಬೋಧವರೆದು ಈಗ |
ಸದ್ಗತಿ ಕಾಣಿಸುವದು ನಿನಗ ೧
ಪಿಡಿಯದೆ ನಾನಾ ಬಯಕೆಯನು |
ತಡೆಯದೆ ಬಿಡು ಕುಜನಾಶ್ರಯನು |
ಇಡು ಗುರು ಪದ ಭಕುತಿಯನು |
ಪಡೆ ದೃಷ್ಟಿಯ ಘನ ಸಮತೆಯನು ೨
ಬ್ಯಾರೆ ಬ್ಯಾರೆ ನಗದಾಕಾರಾ |
ತೋರಿದರೇನದು ಬಂಗಾರಾ |
ಈ ರೀತಿ ಮಾಯದ ವ್ಯವಹಾರಾ |
ಈರೇಳು ಜಗ ಚಿನ್ಮಯ ಸಾರಾ ೩
ಗೋಡಿಯಿಂದಲಿ ಚಿತ್ರಗಳೆಲ್ಲಾ |
ರೂಢಿಸಿ ದೋರಿತು ಜನರೆಲ್ಲಾ |
ಆಡಲು ಯರಡಕ ಹೊರತಿಲ್ಲಾÀ |
ನೋಡಲಾಯಿತು ತಾನೇಯಲ್ಲಾ ೪
ಹಾಲುಕ್ಕಿದ ಸೋರೆಯ ಪರಿಯಾ |
ಜ್ಯಾಳಿಸಬ್ಯಾಡಾ ಯುವ ಬರಿಯಾ |
ಕೇಳಿಕೋ ಮಹಿಪತಿ ಸುತ ಧೋರಿಯಾ |
ಬಾಳು ಗಳೆದು ದುಸ್ತರಿಯಾ ೫

೬೦೦
ತಿಳಿವಿಕೆ ನೋಡಣ್ಣಾ ಪ
ಉಬ್ಬುಸಗೊಳುತಲಿ ಹುಡುಕುತ ತಂದು |
ಒಬ್ಬರ ಪದ ಪದ್ಯಗಳನೇ ಹಳಿದು |
ಉಬ್ಬುಬ್ಬಿ, ಹೇಳುವ ತನ್ನದೆಂದು ೧
ಹಂಬಲಿಸದೆ ಮೃದು ತಂಪಿನ ಯಲಿಯಾ |
ಬೆಂಬಿಸ ದಾರಿಸಿ ಮುಳ್ಳಿನ ಕೊನೆಯಾ |
ತಿಂಬುವ ಒಂಟೆಯ ಮತಿಪರಿಯಾ ೨
ಪರಿಪರಿ ಶೃಂಗಾರದ ಕಲೆಯಂಗಳು |
ನೆರೆ ವೇಷಿಯ ಪರಿ ಅರೆಯದೆ ಇರಲು |
ಕೊರತೇನು ಪತಿವ್ರತೆ ಗುಣಗಳು ೩
ಕಬ್ಬಿನ ಸಾರಸ ತಿಳಿಯದೇ ನೋಡಾ|
ನಿಬ್ಬಿರೆನುತಾ ಬಿಟ್ಟವ ಬಲು ಮೂಢಾ |
ಹಬ್ಬುವಾ ಚಾತುರತನ ಕೂಡಾ ೪
ಬರೆ ಬೀರುತ ಮಾತುಗಳನೆ ಬಚ್ಚಾ |
ಧರೆಯೊಳು ಹೆಮ್ಮಿಗೆ ಬಿದ್ದನು ಹುಚ್ಚಾ |
ಗುರು ಮಹಿಪತಿ ಸುತ ಪ್ರಭು ಮೆಚ್ಚಾ ೫

೨೦೪
ತೋರವ್ವಾ ಕೇಳದೀ ಶ್ರೀನಿಧಿಯಾ|ಕಾರುಣ್ಯಂಬುಧಿಯಾ ಪ
ಹರಿಯಾ ಸಕಲ ಜಗಧೊರಿಯಾ||
ಸುರಮನಿ ಜನಸಿರಿಯಾ|ಅನಂತಾನಂತ ಚರಿಯಾ|
ಕರುಣ ಹೊಕ್ಕಾಕರಿಯಾ|
ಕೇಳುತ ಘನ ಮೊರಿಯ ಬಂದೊದಗಿದಧೊರಿಯಾ ೧
ಸ್ಮರನಾ ಲಾವಣ್ಯಾ ಮಂದಿರನಾ|
ಸಿರಿದೇವಿ ಮನೋಹರನಾ ಪರಕ ಪರಾತ್ಪರನಾ|
ಶಂಖಚಕ್ರದ ಕರನಾ|
ಸಾರಥಿಯಾದಾ ನರನಾ|ಪೀತಾಂಬರ ಧರನಾ ೨
ನಂದಾನಂದನ ಶ್ರೀ ಮುಕುಂದಾ|
ದೀನವತ್ಸಲದಿಂದಾ|ಹೊರಿಯಲಯನ್ನದೊಂದಾ|
ನೋಡದೇ ಮುನ್ನಿನ ಕುಂದಾ|
ಗುರು ಮಹೀಪತಿ ಪ್ರಭುಬಂದಾ ನೀಡಿದಾನಂದಾ|| ೩

೨೦೫
ತೋರವ್ವಾ ಗೆಳತಿ ಶ್ರೀರಂಗನ ಭವಭಂಗನಾ|
ತೋರೆ ಕೋಮಲಾಂಗನಾ ಪ
ಅನಾದಿ ಬಾಂದವನೆನುತಲಿ|ಶೃತಿ ಹೊಗಳಲಿ|
ಶರಣನೀಗ ಬಂದಾ|
ಶ್ರೀನಿಧಿ ತುಷ್ಟನು ಭಕ್ತಿಲಿ|ಯಂದು ಕೇಳಲಿ|
ಮುಂದ ಗಾಣದೆ ನಿಂದಾ೧
ಜಗಗದಂತರ್ಯಾಮಿಯನಿಸುವ|ಮನೆಮುರಿಲಿಹ|
ಕಂಗಳಿಗೆ ದೋರನಮ್ಮಾ|
ಮುಗಧಿಯೊಡನೆ ಠಕ್ಕವಳಿಯಾ|ದೋರುವರೇಕೈಯ್ಯಾ|
ಬಿರುದಿಗೆ ಛಂದೇನಮ್ಮಾ೨
ಹಂಬಲಿಸುತ ಕಾವನೆನೆಯಲುಛಂದಾ|ಸ್ವಾನುಭಾವದಿಂದ|
ಡಿಂಬಿನೊಳು ಒಡಮೂಡಿ|
ನಂಬಿದವರ ಕಾವಾ ಮಹಿಪತಿ ಸುತಸಾರಥಿ|
ಕೊಟ್ಟನಿಂಬವ ಕೂಡೀ೩

೧೦೦
ತೋರಿಸೇ | ಗೋಪಿ | ತೋರಿಸೇ ||
ಅವನ ದೂರಿಂದ ಸಾಕಾರ | ನೋಡುವೆ ಜೋಗಿಯಾ ಪ
ಚಿಕ್ಕ ಮಕ್ಕಳು ಅಂಜಿ | ಪಕ್ಕನೆ ಒಳಮನೆ ||
ಪೊಕ್ಕರು ನೋಡುತಾ || ಮುಕ್ಕಣ್ಣಿನವನ ೧
ಎಂದ ಮುದ್ದಿನ ನುಡಿ | ಚೆಂದದಿ ಕೇಳುತ ||
ಕಂದನೆತ್ತಿಕೊಂಡು | ಬಂದಳೆಶೋದಾ ೨
ಇಂದು ಮೌಳಿಯ ನೋಡಿ | ಮಂದಹಾಸದಲಿಂದಾ |
ನಂದವ ನಿತ್ತನು | ಬಂದ ಮಹೇಶಗೆ || ೩
ಸಿರಿಯರಸನ ಶುಭ | ಚರಣಕೆ ಎರಗುತ ||
ತೆರಳಿದ ಸಾಂಬನು | ಹರಷದಲಿಂದ ೪
ಗುರುಮಹೀಪತಿಪ್ರಭು | ಚರಿತೆಯ ಅನುದಿನ |
ಧರೆಯೊಳು ಕಾಂಬುವರ | ಸುಕ್ರತವೆಂತೋ ೫

೪೯೮
ತೋರುವ ದೃಶ್ಯವ ಕಾಂಬುವ ನಯನಕ |
ಸಾರಿಯ ಮನವನು ನೋಡುವ ಬುದ್ಧಿಗೆ |
ಮೀರಿಹ ನಿತ್ಯ ನಿರಂಜನ ವಸ್ತುವೆ |
ವಿಶ್ವಭರಿತನೆಂದು |
ಸಾರುವ ಶೃತಿಯಿಂದಾತ್ಮ ಪ್ರಚೀತಿಯ |
ಸೇರಿಸಿ ಭಜನಿಯ ಕ್ರಮವನರಸಿ ಭವ |
ವಾರಿಸಿ ಚಿತ್ಸುಖಲಿರಿಸಿದ ಮಹಿಪತಿ |
ಸದ್ಗುರು ಜಯ ಜಯತು

೪೩೫
ದತ್ತಾತ್ರೇಯ ಸ್ವಾಮೀ ಕೃಪೆ ಮಾಡೈ ನೀಯನ್ನ ಮ್ಯಾಲ ಪ
ಅನಿಮಿಷಮಾನಸ ಸಂಚಾರಾ
ಅನಾಥ ಜನ ಸಂಕಟ ಪರಿಹಾರಾ
ದೀನ ದಯಾಲ ರಮಾವರಾ ನೆನೆವರ ಸಹಕಾರಾ ೧
ಅನಸೂಯಾಕರ ಸಂಪುಟರನ್ನಾ
ಘನತರ ಚರಿತ ಪರಮ ಪಾವನ್ನಾ
ಅನುಪಮ ತ್ರೈಜಗ ಜೀವನ್ನಾ ವನರುಹವದನಾ೨
ಸರಸಿಜೋದ್ಭವ ನುತ ಮನ್ನಾಥಾ
ವರ ನಿಗಮಾ ಗೋಚರ ಅನಂತಾ
ಕರುಣಾಂಬುಧಿಯೇ ಸರ್ವಾತೀತಾ ಗುರು ಮಹಿಪತಿ ದಾತಾ೩

೪೩೪
ದತ್ತಾತ್ರೇಯನ್ನಮೋ ದತ್ತಾತ್ರೇಯಾ
ಅತ್ರಿ ವರದಾಯಕನೇ ದತ್ತಾತ್ರೇಯಾ ಪ
ಭಕುತಿ ಮಾಡಲು ಮೆಚ್ಚಿ ಅನಸೂಯಾ ಕರದೊಳಗ
ಸುಕುಮಾರ ವೇಷದವತಾರ ತಾಳಿ
ಸಕಲ ಸಜ್ಜನರಿಗೇ ಮುಕುತಿ ಪಥ ದೋರಲಿಕೆ
ಅಕಳಂಕ ಯೋಗ ರೂಪವ ಭರಿಸಿದೆ ೧
ಉದಯದೊಳು ವಾರ್ಣಾಸಿಸುರನದಿಯಲಿ ಸ್ನಾನ
ವದಗಿ ಕೊಲ್ಹಾಪುರಕ ಮಧ್ಯಾಹ್ನದೀ
ವಿದಿತ ಭಿಕ್ಷವನುಂಡು ಪೋಗಿ ಸಂಜೆಗೆ ಮಾಹು
ರದಿ ಶಯನ ನಿತ್ಯ ವಿಧಿಯಲಿ ಚರಿಸುವೇ೨
ದತ್ತಹರಿ ಸಾಕ್ಷಾತ ಉನ್ಮದೋನಂದದಾಯಕ
ದತ್ತವರ ಮುನಿ ದಿಗಂಬರ ಬಾಲಕಾ
ನಿತ್ಯ ಪ್ರಕಾಶಮಯ ಜ್ಞಾನಸಾಗರನೆಂಬರ
ಹತ್ತು ಪೆಸರಂಗೊಳಲು ದುರಿತ ಭಯವಾರಿಸುವೆ೩
ಆವನಾಗಲಿ ಮರೆದು ನಿಮ್ಮ ನಾಮವ ನೆನೆವ
ಠಾವಿನಲಿಸುಳಿವ ಪ್ರತ್ಯಕ್ಷದಿಂದಾ
ಭಾವದಿಂದಲಿ ಸ್ಮರಿಸಿದವಗ ಇಹಪರ ಸುಖವ
ನೀವ ಕರುಣಾಳು ದೀನೋದ್ಧಾರಕಾ ೪
ಇಪ್ಪತ್ತು ನಾಲ್ಕು ಗುರುಗಳ ಕ್ರಮವ ದೋರಿಭವ
ಮುಪ್ಪು ಬಿಡಿಸಿದೆ ಯದುರಾಯಗಂದು
ಒಪ್ಪಿನಿಂದಲಿ ಗುರು ಮಹಿಪತಿ ಪ್ರಭುಯನಿಸಿ
ತಪ್ಪ ನೋಡದೆ ನಂದ ನುದ್ಧರಿಸಿದೆಲೆ ದೇವಾ೫

೨೦೬
ದಯಮಾಡೈ ಶ್ರೀ ಹರಿಯನಗಿಂದು
ದಯಮಾಡೈ ಶ್ರೀಹರಿಯನಗಿಂದು ಪ
ನಿಗಮಾಗಮ ಪೌರಾಣದ ಕತೆಯಾ
ಬಗೆಯಲಿಯದ ಪಾಮರ ಪಾಥರಿಗೆ ೧
ವಿಷಯಾ ಸಕ್ತಿಲಿ ನೆನೆಯದೆ ಹಿತವಾ
ಪಶುಪಕ್ಷಿಯ ಪರಿ ದಿನಗಳಿದೀಗ ೨
ಗುರುಮಹಿಪತಿ ಪ್ರಭು ಬಂದೆನು ಶರಣಾ
ಬಿರುದವು ದೀನರ ಹೊರೆವುದು ನಿನಗೇ ೩

ಅಂಕಿತ-ತಾತ ಮಹಿಪತಿ
೭೫೦
ದಯಾಕರಾ | ಶ್ರೀಕರಾ |
ಭಯ ಪರಿಹಾರಾ | ಜಗದೋದ್ಧಾರಾ ಪ
ವನಜನಯನ ಪಾವನ ಕೃತಲೀಲಾ |
ವನ ನಿಧಿ ಶಯನ ಸುವನ ಜಾಲೋಲಾ |
ವನಜ ಸುಚರಣಾ ವನನರಪಾಲಾ |
ವನಜ ಭವಾರ್ಚಿತ ವನಶುಭ ಮಾಲಾ೧
ಹರಿಕೇಶವ ನರಹರಿ ಸರ್ವೇಶಾ |
ಹರಿಸುಂದರ ಕರಿ ಹರಮುನಿ ಪೋಷಾ |
ಹರಿಕುಲ ತಿಲಕ ವಿಹರಿಜಿತ ಭಾಸಾ |
ಹರಿಚರರಿಪು ಸಂಹರ ಜಗದೀಶಾ೨
ಗಿರಿಧರ ವಾಮನ ಗಿರಿರಿಪು ತಾತಾ |
ಗಿರಿಧರ ಪರಿಶತ ಗಿರಿವರ ಪ್ರೀತಾ |
ಗಿರಿಧರ ತನುಭವ ಗುರುವಿಖ್ಯಾತಾ |
ಗಿರಿಮಾ ವೆಂಕಟ ಗಿರಿಧರ ದಾತಾ ೩
ಅಂಕಿತ-ವೆಂಕಟ ಗಿರಿಧರ (?)

೬೦೨
ದಹಿಸಲು ಮುನ್ನಿನ ದೋಷವ ನೆಲ್ಲವ ನಡೆದನು
ವಾರಣಾಶಿಗೆ ಓಡಿ |
ಮಹಸ್ಥಳ ಹುಶಿಯಾಡುತ ವಿಪ್ರರ ವಂಚಿಸಿ
ಅಲ್ಲಿಯ ಯಾತ್ರೆಯ ಮಾಡಿ |
ವಹಿಲದಿ ವಂದಾರಾದರ ಆಡಿದರುಂಬುದಿಲ್ಲೆಂಬುರು
ಹೆಮ್ಮಿಯ ಕೂಡಿ |
ಮಹಿಪತಿ ನಂದನ ಸಾರಿದ ಸ್ವಹಿತಕ ವ್ಯರ್ಥ ಜನಕ
ಸಾಧನ ನೋಡಿ ೧

೨೦೭
ದಾರಿ ದೋರೆನಗ ಮುಕುಂದಾ ಪ
ದಾರಿ ತೋರೆನಗೆ ಶ್ರೀ ಹರಿ ನಿನ್ನ ಭಕುತಿಯಾ|
ಸಾರಿದೆ ನಿನ್ನವನಾನು ಮುಕುಂದಾ ಅ.ಪ
ಜನುಮಾನುಜನುಮದಲಿ|ನಾಮವಾ|
ನೆನೆಯದ ತಪ್ಪಿನಲಿ||
ಜ್ಞಾನದೃಷ್ಟಿಯಲಂಧನಾದೆನು ಹರಿ ನಿಮ್ಮ|
ಕಾಣದ ಕಂಗಳನಾ ಮುಕುಂದಾ೧
ಭ್ರಾಂತತನವ ಬಿಡಿಸಿ|ವಿವೇಕ|
ಶಾಂತಿಯ ನೆಲೆಗೊಳಿಸಿ|
ಅಂತರಂಗದ ನಿಜ ಸುಖವ ಸೂರ್ಯಾಡುವ|
ಸಂತರೊಳಗ ಕೂಡಿಸೋ ಮುಕುಂದಾ೨
ಅರಹುನಯನ ದೆರಿಸಿ|ನಿಜರೂಪ|
ಗುರುತದ ನೆಲೆ ತೋರಿಸೀ|
ಗುರುವರ ಮಹಿಪತಿ ನಂದನ ಪ್ರಭು ನಂದನ ಪ್ರಭು ನಿಮ್ಮ|
ಸ್ಮರಣೆ ಪಡೆಯ ನಡಿಸೋ ಮುಕುಂದಾ೩

೬೦೩
ದಾರಿಯ ವಿಡಿರಣ್ಣ | ಸ್ವಹಿತದ ದಾರಿಯ ಹಿಡಿರಣ್ಣಾ ಪ
ದಾರಿಯ ವಿಡಿನಿಜ ಸಾರಿಹ ಶೃತಿಗಳ |
ಸಾರವರಿತು ಹರಿ ಚಾರು ಭಕುತಿಯಾ ಅ.ಪ
ಬಲ್ಲವರಿಗೆ ಬೆಸಗೊಳ್ಳುತ ಮನಸಿನ |
ಖುಳ್ಳತನದ ಗುಣವೆಲ್ಲವು ಹೋಗಿ |
ಬಲ್ಲವರನು ಕಂಡು ಮೆಲ್ಲಡಿಗಳ ವಿಡಿ |
ದುಳ್ಳ ಸಿದ್ಧಾಂತದ ಸೊಲ್ಲವ ಕೇಳಿ |
ಉಲ್ಹಾಸದಿಂದಲಿ ಮೆಲ್ಲನ ಭ್ಯಾಸವ |
ಮೆಲ್ಲನೆ ಮಾಡುತ ಸುಲ್ಲಭ ತೆರದಾ ೧
ಕಂಡ ಪಥಕ ಹರಿದಂಡಲೆಯದೆನೆರೆ |
ತಂಡಿಸುತಿಹ ಪಾಷಾಂಡ ಹೋಗಿ |
ಚಂಡ ಸುಜ್ಞಾನದ ಲುಂಡನು ಭವದೃಢ |
ಗಂಡು ಸದ್ಭೋಧದಿ ಪಂಡಿತನಾಗಿ |
ಹಿಂಡ ಭಾಗವತರ ಮಂಡಲದೊಳು ಕೂಡಿ |
ಪುಂಡರೀಕಾಕ್ಷನ ಕೊಂಡಾಡುತ ನಿಜ ೨
ಹಿಂದಿನ ಸುಕೃತಗಳಿಂದ ನೃದೇಹದಿ |
ಬಂದೆನು ನಾನಿನ್ನು ಮುಂದಣ ಗತಿಯಾ |
ಹೊಂದುವೆ ನಾವದುಯಂದು ವಿಚಾರವಾ |
ತಂದು ಸದ್ಭಾವಲಿಂದೇ ನಿಷ್ಠೆಯಲಿ
ತಂದೆ ಮಹಿಪತಿ ಪ್ರಭುಪದ
ದ್ವಂದ್ವ ಬಲದಿ ಭವ ಬಂಧನ ಹರಿವಾ ೩

೨೦೮
ದಾರೇನೆಂಬುರೈ|ಹರಿ ಭಕ್ತರಿಗೆ|ದಾರಲ್ಲವೆಂಬುರೈ ಪ
ಗುರುವಿನಂಘ್ರಿವಿಡಿದು|ಗುರುತುಕೀಲವರಿತು ನಿಜಾ|
ಪರಮಾನಂದ ಸುಖಾ|ಸುರಸನುಂಬುವರಿಗೇ ೧
ಕುತ್ಸಿತ ಮಾರ್ಗವನೆಲ್ಲಾ|ಕೊಚ್ಚಿಜರಿದು ಧರಿಯೊಳು|
ಅಚ್ಯುತ ಪರದೈವನೆಂದು|ನೆಚ್ಚಿದ ಮಹಿಮೆಗೆ ೨
ಮಾಧವ ಮುದ್ರೆಯಿಂದ|ದ್ವಾದಶ ನಾಮವನಿಟ್ಟು|
ಪದುಮಾ ತುಳಸೀಸರ|ಹೃದಯದಲ್ಲಿ ಮೆರೆವಂಗೆ ೩
ನಷ್ಟನೃಪರಾ ಮನೆಯಾ|ತನಿಷ್ಟೆಯೊಳು ಲೆಕ್ಕಿಸದೆ|
ಹುಟ್ಟಿದ ಲಾಭದಲ್ಲಿ|ತುಷ್ಟಿ ಬಟ್ಟಿರುವಂಗೆ ೪
ಅವರವರಂತೆ ಲೋಕ|ದವರಿಗೆ ತೋರುತಾ|
ವಿವರಿಸಿ ವಿವೇಕ ಹಾದಿ|ಭವದಾ ಬೇರಿಳಿದಂಗೆ ೫
ತಾಳದಂಗಡಿಗೆಯ ಸಿಡಿದು|ಮೇಳ ಭಾಗವತರೊಳು|
ಶ್ರೀಲೋಲನನು ಪಾಡಿ|ನಲಿದಾಡುತಿಹರಿಂಗೆ ೬
ತಂದೆ ಮಹಿಪತಿ ನಿಜಾ|ನಂದನ ಸಾರಿದ ನುಡಿ|
ಹೊಂದಿ ಭಾವಭಕ್ತಿಯಿಂದ|ಛಂದವಾಗಿಪ್ಪರಿಂಗೆ೭

೬೦೪
ದಾವನು ನಿತ್ಯನಿರಂಜನ ಜನ್ಮನು |
ದೇವಕಿ ಗರ್ಭದಿ ಮೂಡೀ |
ಅವನ ಮನಿ ಪಾಲ್ಗಡಲು ಯಶೋದೆಯ
ಮೊಲೆವಾಲಿಗೆ ಬಾಯಿದೆರೆಯುವವ ನೋಡಿ |
ಕೇವಲ ಜ್ಞಾನಮಯನು ಸಕಲೇಂದ್ರಿಯ
ಖೂನಿಸಿ ತೋರುವ ಸನ್ನೆಯ ಮಾಡೀ |
ಶ್ರೀ ವತ್ಸಾಂಕನು ಗುರುಮಹಿಪತಿ ಪ್ರಭು
ಬಾಲಕನಾಗ್ಯಾಡುವ ನಲಿದಾಡೀ ೧

೫೪೧
ದಾಸ ನಾನೆಂಬೇ ಗುರು ಭಕುತರಾ ಪ
ಗುರುವೇ ಜನಕ ಘನ ಗುರುವೇ ಜನನಿಯ |
ಗುರುವೇ ಗೆಳೆಯ ನಿಜ ಗುರುವೇ ಆತ್ಮನು |
ಗುರುವೇ ಬಂಧುವು ಗುರುವೇ ಇಷ್ಟನು |
ಗುರುವೇ ಗತಿಮತಿ ಗುರುವೆಂದವರಾ ೧
ಗುರುವೇ ಚತುರ್ಮುಖ ಗುರು ಕಮಲಾಂಬಕ |
ಗುರುವೇ ಸದಾಶಿವ ಗುರುವೇ ಸಂತರು |
ಗುರುವೇ ಸುರಭಿಯ ಗುರು ಚಿಂತಾಮಣಿ |
ಗುರು ಧನದ್ರವ್ಯನು ಗುರುವೆಂದವರಾ ೨
ಗುರು ವಚನವೇ ಶೃತಿ ಗುರುದಯ ಮುಕ್ತಿಯು |
ಗುರು ಗೃಹ ಕ್ಷೇತ್ರವು ಗುರು ನೋಟ ಪರಸವು |
ಗುರು ಸ್ಮರಣೆಯೇ ಜಪ ಗುರು ಮಹಿಪತಿ ಪ್ರಭು |
ಗುರು ಭಕ್ತಿಯೇ ತಪ ಗುರುವೆಂದವರಾ ೩

೨೦೯
ದಾಸನಾಗುವೆನು ಹರಿಯೇ ನಿಮ್ಮ ಪ
ದಂಡಿಗೆ ಹಿಡಿದು ಊಧ್ರ್ವ|
ಪೌಂಡ್ರ ತುಳಸೀಮಾಲೆಯಿಂದಾ
ಪುಂಡಲೀಕ ವರದ ಶ್ರೀ|
ಪಾಂಡುರಂಗ ವಿಠಲನೆಂಬಾ ೧
ಲಜ್ಜೆಯಳಿದು ನೃತ್ಯ|
ಹೆಜ್ಜೆಗೊಮ್ಮೆ ತೋರಿಸುತ|
ಗರ್ಜಿಸುತ ಹರಿನಾಮ|
ಸಜ್ಜನರ ಒಲಿಸುವಾ ೨
ಹಲವು ಪುಷ್ಪ ತುಲಸಿಯಿಂದಾ|
ನಳಿನಾಂಘ್ರಿಯಪೂಜೆಮಾಡಿ|
ನಲಿದು ನವವಿಧ ಭಕ್ತಿ|
ಕಲೆಗಳಾ ತೋರಿಸುವಾ೩
ಎನ್ನ ತನುಮನಧನ-
ವನ್ನು ನಿನಗರ್ಪಿಸುತ|
ಅನ್ಯಯಾರ ಭಜಿಸಿದೆ|
ನಿನ್ನವನೆಂದೆನಿಸುವಾ ೪
ತಂದೆ ಮಹಿಪತಿ ನಿಜ|
ನಂದನ ಸಾರಥಿ ನಿನ್ನ|
ಹೊಂದಿದ ಭಕ್ತರ ಪುಣ್ಯ|
ಮಂದಿರದಿ ಜನಿಸುವಾ ೫

೬೦೫
ದÁಸನಾಗುವೆನು | ಹರಿಯೇ ನಿಮ್ಮಾ ಪ
ದಂಡಿಗೆವಿಡಿದು ಊಧ್ರ್ವಪೌಂಡ್ರ ತುಳಸೀ ಮಾಲೆಯಿಂದಾ |
ಪುಂಡಲೀಕವರದ ಶ್ರೀ ಪಾಂಡುರಂಗ ವಿಠಲೆಂಬಾ ೧
ಲಜ್ಜೆಯನಳಿದು | ನೃತ್ಯ ಹೆಜ್ಜೆಗೊಮ್ಮೆ ತೋರಿಸುತ |
ಗರ್ಜೀಸುತ ಹರಿನಾಮ ಸಜ್ಜನರ ವೆಲಿಸುವಾ ೨
ಹಲವು ಪುಷ್ಪ ತುಳಸಿಯಿಂದಾ |
ನಳಿನಾಂಘ್ರಿಯಾ ಪೂಜೆಮಾಡಿ |
ನಲಿದು | ನವವಿಧ ಭಕ್ತಿಕಲೆಗಳಾ ತೋರಿಸುವಾ ೩
ಎನ್ನ | ತನುಮನಧನವನ್ನು ನಿನಗರ್ಪಿಸುತಾ |
ಅನ್ಯದಾರ | ಭಜಿಸದೆ ನಿನ್ನವೆನೆಂದೆನಿಸುವಾ ೪
ತಂದೆ ಮಹಿಪತಿ ನಿಜ ನಂದನ | ಸಾರಥಿ ನಿನ್ನ |
ಹೊಂದಿದ ಭಕ್ತರ | ಪುಣ್ಯ ಮಂದಿರದಿ ಜನಿಸುವಾ ೫

೬೦೬
ದಾಸರ ಸಂಗವನಾ |
ದಾಸರ ಸಂಗವ ಬೇಡುವೆ ನಾ |
ಹರಿದಾಸರ ಸಂಗವನಾ ಪ
ದಾಸರ ಸಂಗವ ಬೇಡುವೆ ನಾನಿನ್ನಾ |
ಧ್ಯಾಸದಿ ಅನುದಿನ ಲೇಶನಿಸೀ
ವಾಸುದೇವಚ್ಚುತ ಹರಿಯಂದು ನೆನೆಯುತ |
ಹೇಸಿ ಜನರ ಮನಿ ಆಶೆಯ ಜರಿದಾ ೧
ತಾಳ ಮೃದಂಗ ವೀಣಾದಿಯ ಸುಜನರ |
ಮೇಳದಿ ಶ್ರೀಹರಿ ಚರಿತವನು |
ಹೇಳುತ ಕೇಳುತ ಆನಂದ ಬಾಷ್ಪದಿ |
ಆಳಿಯ ಹರುಷದಿ ತನುವನೆ ಮರೆವಾ ೨
ವಂದ್ಯರು ಎಂದರಾನಂದವ ಬಡುತಲಿ |
ಇಂದಿರೇಶನ ವಲುಮೆಯಂತಿಹದೋ |
ಎಂದು ಮನದೊಳು ಸಂದೇಹ ಬಗಿಯದೆ |
ವಂದಿಸಿ ಮುಂದಕ ಬಂದಪ್ಪಿಕೊಳುವಾ ೩
ಸರ್ವರೊಳಗ ಹರಿ ಇರ್ವನು ಯನುತಲಿ |
ಉರ್ವಿಲಿ ನಿಂದೆಯ ಜರಿದಿಹನು |
ಗರ್ವವ ಹಿಡಿಯದೆ ಬಾಗಿದ ಭಕುತಿಯ |
ಸುರ್ವಸಾರಾಯದ ಪರ್ವವನುಂಬಾ ೪
ನಡಿಲೇಸು ನುಡಿಲೇಸು ಹಿಡಿದ ನೆರೆಲೇಸು |
ವಡಗೂಡಿದವರಿಂಗೆ ಭವ ನಿಲ್ಲದು |
ಪೊಡವಿಲಿ ಮಹಿಪತಿ ನಂದನ ಸಾರಥಿ |
ದೃಢದಲಿ ಕಂಡು ನನಗಿದೆ ಲೇಸು ೫

೫೪೨
ದಾಸಿಯಾಗುವೆನೇ ಗುರುವಿನ ಮನೆಯಾ | ನಿ |
ರ್ದೋಷ ಪದವಿ ಈವ ನಿಜ ದೊರೆಯಾ ಪ
ಮನೋಮಂಟಪದೊಳಗೆ ಅನುಮಾನ ಕಸನೀಗಿ |
ಅನುದಿನ ನಿಶ್ಚಲದ ತಳಿಯಾ ಬಿಂಬಿಸಿ |
ಮುನಿಯ ಸೇವೆ ಹಾರೈಸುವೆ ಬಿನಗು ಶಬ್ದಜ್ಞಾನಿಗಳ |
ಮನಿಲಿ ನಿಂತು ಹೊತ್ತಂಗಳಿಯೆ ನೆನವಿಲಿರುತಾ ೧
ವಿವೇಕದ ಕೊಡದೊಳು ಭಾವವೆಂಬ ಜಲವ ತುಂಬಿ |
ಸಾವಧಾನ ಸಿಂಬಿಲಿರಿಸಿಕೊಂಡು ಬರುತಾ |
ದೇವ ಗುರುರಾಯ ನಡಿದಾವರೆಯ ಊಳಿಗಕ |
ಆವಾಗ ತಂದೆರೆವೆನು ಹರುಷದಲಿ ೨
ಅರಹು ಎಂಬ ಸೀರೆಯುಟ್ಟು ಕುರುಹುವೆಂಬ ಕುಪ್ಪಸದಲಿ |
ಗುರುಕೊಟ್ಟ ಬೋಧ ಪಡಿಯದನ್ನ ಉಣುತಾ |
ವರದ ತಂದೆ ಮಹಿಪತಿ ಚರಣವ ನೋಲೈಸಿ ಇಹಪರ |
ವೆರಡು ಗೆಲಿದು ನಿಜಗತಿ ಪಡೆವೆನೋ ೩

೭೫೧
ದೀನ ಜನ ಅಭಿಮಾನವನು ನೀನು ಅನುದಿನದಲಿ |
ರಕ್ಷಿಸುವೆ ಸಾನುಕೂಲದಿ | ಶ್ರೀ ನಿಧಿಯೆ ಧೀರ ಎಂದು |
ವೀರ ಹರಿಮಾರ ಸಂಹಾರಸಖ ಕ್ರೂರ ಫಣಿದರ್ಪಹರನೇ |
ಆನಂದ ನಂದ ವರಕಂದ ಗೋವಿಂದ
ಮುಕುಂದ ಮುಚಕುಂದ |
ಪ್ರೀಯ ವರದನಾ ಮಾನಸದಿ ಅರಿತು ತವ ಕುರಿತು |
ಭಕ್ತಿರತನಾಗಿಹ ಅನವರತ ಸುಖದಲಿಡುತಿಹ |
ಕೃಷ್ಣಾ ಸಲಹು ಒಲವಿಂದ ೧
ಅಂಕಿತ-ಕೃಷ್ಣ

೨೧೩
ದೀನ ದಯಾಳು ಹರೀ ಕೃಪಾನಿಧಿ ಪ
ಜಲಚರ ಬಾಧೆಗೆ ನೆನೆಯಲು ನಾಮಾ|
ಸಲಹಿದೆ ರಾಜ ಕರಿ|ಕೃಪಾನಿಧಿ ೧
ನೊಂದು ಸಂಸಾರದಿ ಬರಲು ಸುದಾಮಾ
ಕುಂದದೆ ಕೊಟ್ಟೆ ಸಿರಿ ಕೃಪಾನಿಧಿ೨
ಮಹಿಪತಿ ಪ್ರಭು ಕೈರವ ಶಾಮಾ|
ಇಹಪರನೀವ ದೊರೆ ಕೃಪಾನಿಧಿ ೩

೭೩೧
ದುಮು ದುಮು ಬಸವಂತನ ಹಬ್ಬಾ ಪ
ರಾಮಕೃಷ್ಣ ಗೋವಿಂದ ಮುರಾರಿ | ಶಾಮ ಸುಂದರ
ಸುರಜ ಸಹಕಾರಿ |
ಕಾಮಿತ ಫಲಗಳ ನೀವ ಉದಾರಿ | ಶ್ರೀ ಮಾಧವನೇ
ಕಾಯೋ ಚರಣವ ದೋರಿ ೧
ನಿನ್ನ ಮರ್ತದ ಕಾರ್ಯದಲಿ ನೊಂದೆ | ಬನ್ನ ಬಡುತಲಿ ಬಲು
ಭವದಲಿ ಬಂದೆ |
ಮುನ್ನಿನ ತಪ್ಪವನೆಣಿಸದೆ ತಂದೆ | ಚೆನ್ನಾಗಿ ರಕ್ಷಿಸು
ನಮೋ ನಮೋ ಎಂದೆ ೨
ಈ ರೀತಿಯಿಂದಲಿ ಹರಿಯ ಕೊಂಡಾಡಿ | ಆ ರಾಧಿಪ
ನವವಿಧದಲ್ಲಿ ಕೂಡಿ |
ನಾರಕ ಭಯಗಳುವನು ಮೂಲದೀಡ್ಯಾಡೀ | ಸೂರ್ಯಾಡು
ಸ್ವ ಸುಖ ಎಲೊ ಹುಚ್ಚು ಖೋಡಿ ೩
ಮುನ್ನಿನ ಪುಣ್ಯದಿ ನರದೇಹ ತಾಳಿ | ಮಾನವನಾಗಿ
ಹರಿಕಥೆ ಕೇಳಿ | ಚೆನ್ನಾಗಿ ವಿಷಯದಲನುದಿನ ಬಾಳೀ |
ನಿನ್ನ ವೈರಿ ನೀನಾದೆ ಗೈಯ್ಯಾಳಿ ೪
ಮೃಗಜಲ ಹೋಲುವ ವಿಷಯಾ ನಂದಾ | ಬಗೆದೆಲೋ
ಶಾಶ್ವತವೆಂದು ನಿನ್ನಿಂದಾ |
ಭಕುತಿಯ ಮಾರ್ಗವ ಬಿಟ್ಟೆಲೋ ಛಂದಾ | ಜಗ
ದೊಳಗಾದೆಲೋ ನೀ ಮತಿ ಮಂದಾ ೫
ಹೆಂಡರು ಮಕ್ಕಳು ಮಮತೆಯ ಸ್ಥೂಲಾ | ಖಂಡದಿ
ಬಿದ್ದಿದೆ ಕಾಲಿಗೆ ಕೋಳಾ |
ಕಂಡವರಿಗೆ ಹಲ್ಲದೆರುವುತ ಖೂಳಾ |
ಅಂಡಲೆವುತ ಹೊಟ್ಟೆಹೊರೆದೆಲೋ ಮೂಳಾ ೬
ಸಂಸಾರ ತಾಪತ್ರಯ ಖಣಿಯೆಂದು | ಭ್ರಂಶನೆ
ಸುಖವಿಲ್ಲ ಇದರೊಳಗಿಂದು |
ಕಂಸಾರಿ ಪದವಿಡಿ ಜನ್ಮಕ ಬಂದು |
ಅಂಶಿಕ ದೇಶಿಕನ ಪಾದ ಹೊಂದು ೭
ಶರಣ್ಹೋಕ್ಕು ಗುರುವಿನ ಪಾದದಲಿಟ್ಟು |
ತ್ವರಿತದಿ ಭಾವಭಕ್ತಿಗೆ ಗಮನವಿಟ್ಟು |
ಅರಿತುಕೊಳ್ಲೆಲೋ ಪರಮಾರ್ಥಗುಟ್ಟು |
ತರಳನಾಗಿ ಹೋಗದಿರೆಲೋ ಕೆಟ್ಟು ೮
ತನು ತಾನೆಂಬುದು ವಿಡಿದ ಅಹಂತಾ |
ಚಿನುಮಯ ಗೆಚ್ಚರಗಳೆದೆಲೋ ಭ್ರಾಂತಾ |
ಅನುವಾಗಿ ಚರ್ಮದ ಬೊಂಬಿ ಮಾಡಿತಾ |
ಕುಣಿಸ್ಯಾಡುತಿ ಹನು ಅಚ್ಯುತಾನಂತಾ ೯
ಒಬ್ಬರು ಇದರೊಳು ಧನಮದ ಹಿಡಿದು
ಒಬ್ಬರು ಶಾಸ್ತ್ರದ ಮದದಲಿ ಬಿಗಿದು
ಒಬ್ಬರು ಗಾಯನ ವಿದ್ಯದಿ ಮೆರೆದು |
ಉಬ್ಬುಬ್ಬಿ ಕುಣಿದರು ಹೇಳಲೇನಿಂದು ೧೦
ಸೃಷ್ಟಿಯೊಳು ಸಿರಿಸಂಪದ ನೆಚ್ಚಿ |
ಅಷ್ಟಮದದಿಂದ ಕಣ್ಣು ಮುಚ್ಚಿ |
ಶಿಷ್ಟರ ಕಂಡರ ಬಾಗನು ಹಚ್ಚಿ |
ಕುಟ್ಟುವಾಗ ನೆಲ್ಲಿಕಾಲನು ಘಟ್ಟಿಸಿ ೧೧
ಸಂತರರೂಪ ಕಣ್ಣಿಲಿ ನೋಡಲಿಲ್ಲಾ |
ಸಂತರ ಕಥೆ ಕಿವಿಯಲಿ ಕೇಳಲಿಲ್ಲಾ |
ಸಂತರ ಪಾದಕ ನಮನ ಕೊಡಲಿಲ್ಲಾ |
ಭ್ರಾಂತನೆ ನಾಳೆ ಮುರಿವನು ಹಲ್ಲಾ ೧೨
ಮರ್ಹವೆಂಬಾ ಹೋಳಿಯ ಅರವ್ಹಾಗ್ನಿಯಲ್ಲಿ |
ನೆರೆದಹಿಸುತ ದುರ್ಮದ ಬೂದಿ ಚೆಲ್ಲಿ |
ಗುರು ಕೃಪೆ ಗಂಗೆಯ ಸ್ನಾನ ಮಾಡುತಲಿ |
ನರಜನ್ಮ ಸಾರ್ಥಕ ಮಾಡೆಲೊಹುಳ್ಳಿ ೧೩
ತಂದೆ ಮಹಿಪತಿ ಘನದಯದಿಂದ |
ಕಂದನು ಸಾರಿದಾ ಹೋಳಿಯಾ ವಂದಾ |
ತಂದರ ಮನದಲ್ಲಿ ಮಡಿಯಾರ್ಥ ಛಂದಾ
ಇಂದಿರೆಪತಿ ತಾರಿಸುವ ಭವ ಬಂದಾ ೧೪

೭೩೦
ದುಮ್ಮ ಬಸವಂತನ ಹಬ್ಬಾ |
ದುಮ್ಮ ದುಮ್ಮೆನ್ನಿ ದುಮ್ಮ ಸಾಲವೆನ್ನಿ ಪ
ನರಜನ್ಮ ಫಾಲ್ಗುಣ ಪೌರ್ಣಿಮೆ ಬಂದಿದೆ | ಮರಿಯ
ಬ್ಯಾಡಿ ತನು ಧನ ಮನದೀ |
ಹರಿದಾಸ ರಾಹವರೆಲ್ಲರು ಹೋಳಿಯ | ಪರಮಾನಂದದ
ಲ್ಯಾಡುವ ಬನ್ನಿರಣ್ಣಾ ೧
ಝಮ್ಮನೆ ವಿವೇಕ ಕುಂಡವನೇ ಮಾಡಿ | ಸಮ್ಯ
ಜ್ಞಾನಾಗ್ನಿಯ ಪ್ರಜ್ವಲದಿಂದಾ |
ಹಮ್ಮೆಂಬ ಕಾಮನ ಹೋಳಿಯದಹಿಸಿ | ಒಮ್ಮನದಿ
ನಲಿದಾಡಿರಣ್ಣಾ ೨
ಹರಿನಾಮ ಕುಂಕುಮ ಸಾರಿ ಚಲ್ಯಾಡುತ | ಧರಿಸುತ ಹೃದಯ
ಶಿರಸದಲಿ |
ಕರದಲಿ ವಿಚಾರ ಬೆತ್ತ ಹೊಯ್ದಾಡುತ | ಹರುಷದಿಂದಲಿ
ಕುಣಿದಾಡಿರಣ್ಣಾ ೩
ಗುರುರಾಯಾ ಸಹಕಾರಿ ತಾನಾಗಿ ನಮಗಿನ್ನು | ಪರಿ ಪರಿ
ಸಾಧನ ದೋರಿಸುತಾ |
ಕರುಣದಿ ಆಡಿಸುತಿಲ್ಲಿ ನಿಂದಿರಲು | ದುರಿತಭಯಕ ಅಂಜ
ಬ್ಯಾಡಿರಣ್ಣಾ ೪
ಮೊದಲ ಸಂಚಿತ ಬೂದಿಯ ಚಲ್ಲಿ ಪರಮಾ | ರ್ಥದ
ಗಂಗಿಯೊಳು ಮಿಂದು ಶುಚಿಯಾಗಿ |
ಸದಮಲ ಮಹಿಪತಿ-ನಂದನ ಪ್ರಭು ಪದ |
ಪದುಮಾಶ್ರಯದಿಂದ ಗತಿಪಡಿರಣ್ಣಾ ೫

೨೧೦
ದೇವ ತನದ ಮಹಿಮೆಯಗಳೆದೇ
ಅವಲೀಲೆಯೋ ನರನಾಗಿ ಗೋಪಾಲಕೃಷ್ಣಾ ಪ
ಕುಂಡ ಗೋಳಕರರ ಸನ ಮನಿಯಲಿ ಜನ
ಉಂಡ ವೆಂಜಲ ಬಳಿದು
ಹಿಂಡ ರಾಯರ ಮುಂದ ಕುದುರೆಯ ತೊಳೆವುತ
ಭಂಡಿಯ ಹೊಡೆವುತ ಪಾರ್ಥನವಶವಾಗಿ೧
ಗೊಲ್ಲತೆಯೊಬ್ಬಳು ನೀರಕೊಡುವ ಪೊತ್ತು
ನಿಲ್ಲದೇ ಮಾರ್ಗದಿ ಬರುತಿರಲು
ಮುಳ್ಳು ಮುರಿಯವಳ ಕಾಲವ ಹಿಡಿವುತ
ಹಲ್ಲಿಲಿ ತೆಗೆಯುತ ಸಂತೈಸಿ ಕಳುಹಿದ ೨
ಧರೆಯೊಳು ನೋಡಲು ಜಾರ ಚೋರನೆನಿಸಿ
ನಿರುತ ಗೋವಳರುಂಡನ್ನ ಸವಿದು
ಗುರುವರ ಮಹಿಪತಿ ಪ್ರಭು ಜನ್ಮರಹಿತನವ
ತರಿಸಿ ಯಶೋಧೆಯ ಮೊಲೆ ಪಾಲವನುಂಡು೩

೨೧೨
ದೇವ ದೇವ ದೇವ ದೇವ ದೇವಾದಿದೇವ|
ಶ್ರೀ ದೇವನೇ ದೇವಾ|ಸಲಹೆನ್ನ ಸದಾ ಪ
ವಸುಧಿಯ ತನುಭವ ತನುಗಿರಿ ಕುಲಿ|ಶಾ|
ಮರರಿಗಡಿಗಡಿಗೆ ನೀ ಸಲಹುವೆ ಕರುಣದಿ|
ಬಿಸರುಹ ಲೋಚನ ದೇವ ದೇವಾ|
ಪತಿ ಜನೋದ್ಧಾರ ದೇವಾ ಭಕ್ತರ ಸುರತರು ದೇವದೇವ೧
ನಗವರಧರ ಮೃಗಕುಲದಧಿಪತಿ|
ವೈರಿಯ ಕುಲವರ ವರದನೇ ಕೇಶವಾ|
ಉಡಗಣ ಪತಿಯನ ಪಡೆದನ ತನುಜೆಯ|
ರಮಣನೆ ಮಹಿಪತಿ ನಂದನ ಜೀವನಾ|
ಪೊಡವಿ ಮನೋಹರ ದೇವ ದೇವಾ ೨

೬೦೭
ದೇವರಲ್ಲೇ ಸಜ್ಜನವರವನಿ | ಪ
ಸುಖವಾಗಲಿ ಬಹು ದುಃಖವಾಗಲಿ ನೆರೆ
ಅಕುಲ ತನ್ನಂತಖಿಳದಿ ನೋಡುತಾ |
ಸಕಲರ ಹಿತದಲಿ ಪ್ರಕಟದಿ ಬಾಳುತಾ |
ಮಕ ಮಾವುಗಳ ವಿಕಳರಿಯರು ೧
ಶಾಂತಿ ಶಮೆದಮೆದಾಂತಿ ತಿತಕ್ಷಾ |
ಅಂತರ್ಬಹಿಯವಂತರು ಭಕ್ತಿಯ |
ಪಂಥದಿ ನಡೆಯುತ ನಂತನ ಮೂರುತಿ |
ಚಿಂತಿಸಿ ಮನ ವಿಶ್ರಾಂತಿಯಲಿಹರು ೨
ಅಣುಪರಿ ಸದ್ಗುಣ ಮನುಜನ ಕಂಡರ |
ವನಪರ್ವತ ಸಮವೆನೆ ಕೊಂಡಾಡುವ |
ತನುಮನ ವಚನದಿ ಘನ ಪುಣ್ಯಾಮೃತ |
ಮನಿಗುರು ಮಹಿಪತಿ ತನು ಭವಗಂದಾ ೩

೬೦೮
ದೇವರಿಂದಲಿ ಭಕ್ತಧಿಕನು |
ಭಾವ ಭಕುತಿಯಲಿ ಬಲ್ಲಿದನು ಪ
ಅವನ ಉದರದಲಿ ಜಗವಿಹುದು |
ಅವನ ತನ್ನೆದೆಯಲ್ಲಿ ನಿಲಿಸಿಹನು ೧
ದಾವನಿಂದಲಿ ಜಗಹುಟ್ಟುತಲಿಹುದು |
ಅವನ ಜನುಮಕಿವ ತಾರಿಸಿದನು ೨
ಕಾಳಗದಲಿ ನಿಸ್ಸೀಮನ ದಾವನು |
ಸೋಲಿಸಿದವನೆನು ನದಿಸುತನು ೩
ಸಾಗರ ಜಲ ಘನ ತುಂಬಿಕೊಂಡಿಹುದು
ಮೇಘ ಮುಖದಿ ಬೆಳೆಯಾಗುವದು ೪
ಬಾಳಿಗಿಡವು ಸ್ವಾನಂದದಲಿಹುದು |
ಬಾಳೆಹಣ್ಣವು ಜನ ನಲಿಸುವುದು ೫
ಸಂಗರಹಿತ ಗುರು ಮಹಿಪತಿ ಸ್ವಾಮಿಯ |
ಹಂಗಿಗನನು ತನ್ನ ಮಾಡಿದನು ೬

೨೧೧
ದೇವಾ ದೇವಾ ಸಾರಂಗ ಪಾಣಿ
ದೇವಾ ದೇವಾ ಸಾರಂಗ ಪಾಣೀ ಪ
ದೇವ ದೇವ ಘನ ಶ್ರೀ ವಧುವಲ್ಲಭ
ಸಾವಿರ ನಾಮದ ಪಾವನ ರೂಪಾ ೧
ಭುವನವ ಪಿಡಿದೊಯ್ದನುಜನ ಹರಿ
ದವನಾ ಸುತಗೊರದ ಪವನಜ ಪ್ರೀಯಾ೨
ಕುಂಜರ ಧ್ವಜಜನ ರಂಜಿಪ ಕದಲಿಗೆ
ಅಂಜಿಕೆ ಹಾರಿಪ ಕುಂಜದ ಕರನೇ ೩
ಸುಮನದಿ ಧರೆಯೊಳು ನಮನ ಕೃತಕ ಭಯ
ಶಮನ ಉರಗರಿಪು ಗಮನ ಸುರೇಶಾ೪
ಸುತನ ಧರಿಯ ಕೃತ ಮಥನ ವಿಧಿ ತ್ರಿಪುರ
ಮಥನ ವಿನುತ ಪದ ಮಿಥುನದಯಾಳಾ೫
ಹರಿಯೆಂದೊದರಲು ಸರಿಯಾದಿಗಳಿಗೆ
ಅರಿಯ ದಂದದಿ ಬಂದು ಕರಿಯನು ಕಾಯ್ದೆ೬
ನಂದನ ನಂದನ ಮಂದರಗಿರಿಧರಾ
ನಂದನೆ ಮಹಿಪತಿ ನಂದನ ಪ್ರೀಯಾ||೭

೬೦೯
ದೈತ್ಯರಲ್ಲೆ ದುರ್ಜನ ಸೇವೆ ಪ
ಪರರ ಲಾಭವನು ಧರಿಯೊಳು ನೋಡುತ |
ಧರಿಸಲಾರ ಧಿಕ್ಕರಿಸುತ ನುಡಿವನು |
ಪರರ ಹಾನಿಯಲಿ ಮರುಗದೆ ಮನದೊಳು |
ಹರುಷ ಬಡವುತ ಚರಿಸು-ನೈಯ್ಯಾ ೧
ಖಳ್ಳೆದೆಯೊಳು ಮನದಲ್ಲಿ ಕಪಟವು |
ಸೊಲ್ಲಿತೆ ನೋಡಲು ಬೆಲ್ಲನೆ ಬೀರುವಾ |
ಒಳ್ಳಿತು ಗುಣಗಳ ಯಳ್ಳಿಲಿ ನಿತೈಣಿಸದೆ |
ಕ್ಷುಲ್ಲತನದಿ ಕುಂದಲ್ಲಿಡುವ-ಕೈಯ್ಯಾ ೨
ಎನ್ನ ಕುಲವೆಕುಲ ಯನ್ನ ಸತಿಯೆ ಸತಿ |
ಎನ್ನ ಮಗÀನೆ ಮಗ ಯನ್ನ ಗುಣವೇಗುಣ |
ಎನ್ನ ವಿದ್ಯೆಯೆ ಘನ ಧನ್ಯನಾನೆನುತಲಿ |
ತನ್ನನೆ ಹೊಗಳುತ ಅನ್ಯಕ್ಹಳಿವರೆ ೩
ಆವದು ಅರಿಯದ ಭಾವಿಕ ಜನರನು |
ತಾವೀಗ ಕಂಡರೆ ಆವನನುಗ್ರಹ |
ಆವ ಮಂತ್ರ ನಿನಗಾವ ನ್ಯಾಸವೇ |
ದಾವಾಗ ಛಲಣಿಯ ಭಾವಿಪರವರೇ ೪
ತಂದೆ ಮಹಿಪತಿ ನಂದನ ಪ್ರಭುವಿನಾ |
ಒಂದರಗಳಿಗೆಯ ಛಂದದಿ ಸ್ಮರಿಸದೆ |
ನಿಂದೆಯ ಮನೆಯೊಳು ಸಂದಿಸಿ ಅನುದಿನಾ |
ನಂದದಿಗಳೆವಾ ಮಂದ ಮತಿಯರೇ ೫

ನುಡಿ-೧: ನಾಗೇಂದ್ರಶಯನ
೫೫
ದ್ಯುಮಣಿ ಮಂಡಲವ ತುಡುಕಲು ಹವಣಿಸಿದ ಹಸ್ತ
ವಿಮಲ ಮುದ್ರಿಕೆ ಜನನಿಗಿತ್ತ ಹಸ್ತ
ಕ್ರಮದಿ ಚೂಡಾಮಣಿಯ ಹರಿಗೆ ತೋರಿದ ಹಸ್ತ
ಸುಮನ ಸಾರ್ಚಿತ ಹನುಮಾ ನಿಮ್ಮಹಸ್ತವನು ದೋರೈ ೧
ಹಿಡಿಗಲ್ಲಿನಂತೆ ಪರ್ವತಗಳ ನೆರೆದ ಹಸ್ತ
ಪಿಡಿದ ರಘುಪತಿ – ಪಾದ ಪುಣ್ಯಹಸ್ತ
ವಡನೆ ಭೂಭಾರವ ನೀ ಳಹಿದ ಶ್ರೀ ಗದೆ ಹಸ್ತ
ಕಡುಗರುಣಿ ಭೀಮಶೇನಾ ನಿಮ್ಮ ಹಸ್ತವನು ದೊರೈ ೨
ಹರಿ ಪರಂದೈವೆಂದು ತತ್ವ ಭೋಧಿಪ ಹಸ್ತ
ಧರೆಯಲಿ ಕುಶಾಸ್ತ್ರಂಗಿ ವಜ್ರ ಹಸ್ತ
ಸಿರಿ ವೇದ ವ್ಯಾಸರು ತಂದು ತೋರಿದ ಹಸ್ತ
ಗುರು ಪೂರ್ಣ ಪ್ರಜ್ಞ ನಿಮ್ಮ ಅಭಯ ಹಸ್ತವನು ದೋರೈ ೩

೪೭೦
ಧನ್ಯ ಧನ್ಯವಾಯಿತು ಜನುಮಾ |
ಆವಪುಣ್ಯವೋ ಅರಿಯೇ ನಮ್ಮಾ ಪ
ನಾನಾ ಜನ್ಮದ ಬಲಿಯನೆ ಗೆದ್ದು ಸಲೆ |
ಮಾನುಷ ದೇಹದಲಿಂದು |
ಮಾನುಭಾವರ ವಂಶದಿ ಬಂದು | ಅವರ |
ಸಾನಿಧ್ಯ ಸೇವೆಯ ಪಡೆದು ೧
ಗುರುಕ್ಷೇತ್ರವೇ ಯನಗಿದೇ ಕಾಶೀ | ಗಂಗೆ |
ಮೆರೆವುದು ಗುರುತೀರ್ಥವೆನಿಸಿ |
ಗುರು ವಿಶ್ವೇಶ್ವರ ನೆನೆವಾಸೀ | ಕಂಡು |
ಪೂರಿತಾಯಿತು ಮನದಾಸಿ ೨
ಛಂದ ದೋರಿಸಿ ಭಕ್ತಿಯವರ್ಮ | ಭವ |
ಬಂಧಗಳಿಸಿದ ಕರ್ಮ |
ತಂದೆ ಮಹಿಪತಿ ಶ್ರೀ ಪಾದ ಧರ್ಮಾ | ನಿಜ |
ನಂದನ ಗಾನಂದೋಬ್ರಹ್ಮಾ೩

೬೧೦
ಧನ್ಯ ಧನ್ಯಾ | ಜಗದೊಳವನೇ | ಧನ್ಯ ಧನ್ಯಾ |
ಧನ್ಯ ಧನ್ಯ ಅವ ತನ್ನೊಳು ಸ್ವಹಿತದ |
ಕಣ್ಣದೆರೆದು ಗುರುವಿನ್ನರಿತಿಹ ನಿಜ |
ಸಣ್ಣ ದೊಡ್ಡದರೊಳು ಘನ್ನವ ನೋಡುತಾ |
ಮನ್ನಿಸಿ ಶಾಂತಿಯಲಿನ್ನಿಳಿದವನೇ ೧
ವಾದಗಳಳಿದು ಕ್ರೋಧವ ಕಳೆದು |
ಸಾಧುರ ಕಾಣುತ ಪಾದಕ ಯರಗುತ |
ಮೋದವ ಕುಡುವ ಬೋಧವ ಕೇಳುವ |
ಸಾಧನ ನಾಲ್ಕರ ಹಾಧ್ಹಿಡಿದವನೇ ೨
ಎಲ್ಲರಿಗೇ ಕಿರಿದೊಳ್ಳಿತೆನಿಸಿ |
ಬಲ್ಲತನದ ಗರ್ವೆಲ್ಲವ ತ್ಯಜಿಸಿ |
ಸೊಲ್ಲು ಸೊಲ್ಲಿಗೆ ಸಿರಿ ಫಲ್ಲನಾಭನ ಪದ |
ದಲ್ಲೆವೆ ಮನರತಿ ನಿಲ್ಲಿಸಿದವನೇ ೩
ಹಂಬಡೆಡಂಬಕ ನೊಬ್ಬರಕೂಡದೇ |
ಒಬ್ಬರು ಹೊಗಳಿದರುಬ್ಬದೆ ಮನದಲಿ |
ನಿಬ್ಬರ ಮಾತಿಗೆ ಉಬ್ಬಸಗೊಳ್ಳದೇ |
ಕೊಬ್ಬಿದ ಹಮ್ಮುವ ಲೆಬ್ಬಿಸಿದವನೇ ೪
ಒಂದೇ ನಿಷ್ಠಿಯು ಒಂದೇ ಮಾರ್ಗದಿ |
ದಂದುಗ ವೃತ್ತಿಗಳೆಂದಿಗೆ ಹೊಂದದೆ |
ತಂದೆ ಮಹಿಪತಿ ನಂದನ ಸಾರಿದ |
ಬಂದದ ಸಾರ್ಥಕದಿಂದಿದ್ದವನೇ ೫

ಭಗವಂತನ ಅಧಿಷ್ಠಾನ ಎಂದರೆ
೧೬
ಧನ್ಯನಾದೆನು ಗುರು ನಿಮ್ಮಯ ದಯದೀ ಪ
ಹಿಂಗಿತು ಮುನ್ನಿನಂಗವದೋಷವು
ಸಂಗಡಿಸಿತು ಪುಣ್ಯಗಳು ಜೀವಕ
ಮಂಗಲವಾಗಲು ಇಂಗಿತ ಸುಖದಾ ೧
ಸಾರಾಸಾರ ವಿಚಾರದ ತತ್ವದ
ದಾರಿಯ ಸುಜನಕ ದೋರುತ ಕರುಣದಿ
ಪ್ರೇರಿಸಿ ಸುಮತಿಯ ಶ್ರೀ ರಘುಪತಿ ಸಾ
ಕಾರವ ತೋರಿಸಿ ತಾರಿಸಲಾಗಿ ೨
ಕರುಣಿ ಅಭಿನವ ತೀರ್ಥ ಮುನಿಕರ
ವಾರಿಧಿ ಶ್ರೀ ಸತ್ಯ ಪೂರಣ ಚಂದ್ರರ
ಸಾರಲು ಹೋಯಿತು ಮೂರು ತಾಪಗಳು
ದೋರಲು ಕಂದಗ ಪಾರದ ಸುಖವು ೩

೬೧೧
ಧÀರಿಯೊಳು ಸಂತ ಚರಿಯ ಅಗಾಧಾ ಪ
ನಾನಾ ಕಲ್ಪನೆಗಳೆದು ವಿಚಾರದಿ |
ತಾನಾದನು ನಿಜಬೋಧಾ ೧
ಭಗವಧ್ಯಾನದಿ ಜನಸ್ತುತಿ ನಿಂದೆಗೆ |
ಬಗಿಯನು ಹರುಷವಿಷಾದಾ ೨
ಗುರುಮಹಿಪತಿ ಪ್ರಭುನಾಮಕೀರ್ತನೆಯಲಿ |
ಗರೆವರು ಪರಮಾಹ್ಲಾದಾ ೩

೭೨೪
ಧೀಂಧೀಧೀಂಧೀಮ ಧೀರು ಮಜರೆ ಸಂಭ್ರಮದ |
ಧೀಂಧೀಂಧೀಂಧಿಂ ಧೀರು |
ಮಜರೆ ಸಂಭ್ರಮದ | ಅಂದು ಶ್ರೀಕೃಷ್ಣ ರುಕ್ಮಿಣಿಯ ಪಾಣಿ |
ಗ್ರಹಣ | ದಿಂದ ದ್ವಾರಕೆಯ ಹುಗುವ ಸಮಯದಲಿ ಪ
ಸುರ ಗಜಕ ಮೂದಲಿಸುವಾನೆಗಳು ಪಟಹದಿಂ |
ದಿರದೆ ಶೃಂಗರ
ಗಳಿಂದಾ ನಡಿಯೇ | ಧರಣಿಗಚ್ಚರಿ ಯಾದಾ
ಚಪಳ ವಾಜಿಗಳು |
ಬೆರೆಬೆರೆದು ಕುಣಿವಾಟಾದಿಂದಾ ಇಡಿಯೇ | ತೆರೆಹಿಲ್ಲ |
ಪಾಯದಳದಿಂದ ರಥಿ ಸಿಂಧು ಸೀ |
ಗುರಿ ಪತಾಕೆಗಳ ಹೊಳೆವ |
ರೂಪಿಯೇ | ಮೆರೆವ ತಮ್ಮಟ ಭೇರಿನಾದ ಕಹಳೆಗಳಿಂದ |
ಹರಿಪದದಿ ಪ್ರತಿ ಶಬ್ದವು ನುಡಿಯೇ ೧
ಭಟ್ಟರು ಗಾಯಕವಂದಿ ಬಿರುದು ಕೊಂಡಾಡು ತಲಿಹ | ನಟನೆ
ದಿವ್ಯಾಂಗ-ನೆಯರಾ ಮುಂದ | ಘಟನೇ ಪುಟುವೆರಸೀ
ಋಷಿಯರು ಶ್ರೇಷ್ಠರೆಡಬಲಕ | ತೃಚಿಲೀವ ಸ್ವಸ್ತಿ ವಚನಾದಿಂದ
ನಟನುಗ್ರಶೇನ ತಾಯಿ | ತಂದಿ ದಂಪತಿಗಳ ಕುಟಿಲೀರ್ವ
ರಂದಗಣಗಳು ಹಿಂದ | ಶಠಸಿ ಶಠನ ಕ್ರೂರ ಸಾಂಬ ಕೃತ
ವವರ್ಮನಾ | ರ್ಭಟೆಯ ಬಲರಾಮ ನೋಡನೀ ವೃಂದ ೨
ಹೃದಯ ಮಧ್ಯದ ಪದಕದಂತೆ ಬರಿತಿಹ ನಡುವೆ ವಧು
ವೆರೆಸಿ ರಥದ ಮ್ಯಾಲ ಹರಿಯು |
ಇದಿರು ಗೊಂಬುವ ಸಂಭ್ರಮದ
ಪಟ್ಟಣದಲಾರು ತುದಿ ಮೊದಲ ಬಣ್ಣಿಸುವಾ ಸಿರಿಯಾ | ವದಗಿ
ಮುಂದಕ ಹೋಗಿ ಮಂಗಳಾರುತಿಗಳನು ಸುದತಿಯರು ತಂದೆ
ತ್ತಲು ತ್ವರಿಯು | ಮುದದಿಂದ ಗೃಹ ಪ್ರವೇಶವ ಮಾಡಿದನು
ಸರ್ವಾ | ವಿದಿತ ಮಹಿಪತಿ ನಂದನಾ ಧೂರೆಯು ೩

೬೧೨
ಧೀಮಂತರ ದಯಪಡೆದು ಮಾಧವನ ಪದ ವಿಡಿದು |
ಪ್ರೇಮದಿ ಭಜಿಸೆನ್ನ ಮನವೇ | ಪ
ಕಾರ್ಮುಗಿಲದುಗ್ಧರಾಶಿಯನು ಶೃತಿಗೆ ಬೀಳಲ್ಪ |
ಯೋರ್ಮನದಿ ಸಂತೋಷಿಪಂತೇ
ನಿರ್ಮಳಾಂಗಣ ಕಥೆಯ ಘೋಷವೇನು ಕೇಳಿ ಅತಿ |
ಪೆರ್ಮೆಯಿಂದಲೆ ನಲಿದು ಬಾಳು ೧
ನೋಡಲಾಕ್ಷಣ ತನ್ನ ಮಾತೆಯನು ಮುದದಲಿಂ |
ಲೋಡಿ ಬಪ್ಪುವ ಶಿಶುವಂತೆ |
ರೂಢಿಯೊಳು ಸಜ್ಜನರ ಕಂಡಾಕ್ಷಣಕ ತನುವ |
ನೀಡಿ ಸಾಷ್ಟಾಂಗದಿಂದೆರಗು ೨
ಮಿಗಿಲಾಸೆಯನು ತ್ಯಜಿಸಿ ದಾಗಸದ-ಲಿಂಬರ್ವ |
ನಿಗಳುಂಬ ಚಾತಕನ ತೆರದಿ |
ಮುಗಳೆ ದಯದಿಂದ ಸಜ್ಜನ ಮುಖದಿ ಬಪ್ಪಬೋ |
ಧೆಗಳ್ಪೊತನು-ವಾನುಗ್ರಹಿಸು ಧರಿಸು ೩
ಕತ್ತಲೆಯ ಮನೆಗೆ ಮಣಿ ದೀಪವಾದಂತೆ ಸ |
ರ್ವೋತ್ಮನ ಪಾದ ಕಮಲಗಳಾ |
ಅತ್ಯಧಿಕ ಹರುಷದಿಂ ಹೃದಯದೊಳ್ ಧರಿಸಲ್ಕೆ |
ಮೊತ್ತದ ಜ್ಞಾನ ತೊಳಗುವದು ೪
ಸಿರಿಯು ಬಂದಾಗ ಮದಕರಿಯಂತೆ ಗರ ಹೊಡೆದು |
ಧರಿಯೊಳಗ ಗರ್ವಿಸಲಿ ಬ್ಯಾಡಾ |
ಸಿರಿಯು ತೊಲಗಲು ಕುನ್ನಿಯಂತನ್ನ ದಾಸಿಂಗೆ |
ಪರರು ಮನವಡಿದು ಬಳಲದಿರು ೫
ಕಮಲಜನ ಪದಕ ಕತ್ತದೀವರ ಅನುಮತದ |
ವಿಮಲಮಾರ್ಗ ಹೊಲಬ ನರಿದು |
ಅಮಲೂಧ್ರ್ಪ ಪೌಂಡ್ರ ಹರಿ ಲಾಂಛನವು ತುಳಸಿ ಸರ
ಕ್ರಮದಿಂದ ಧರಿಸಿ ಸುಖಿಯಾಗು ೬
ಹರಿಪರದೈವವೆಂದು ಅರಿತು ಭಾವದಿ ನಿಂದು |
ಹರಿ ಕೋಟಿ ನಿಭಕ ಮಿಗಿಲೆನಿಸಿ |
ಮೆರೆವ ಮಹಿಪತಿ ನಂದನೋಡಿಯ ನಾಮಂಗಳನು |
ಸ್ಮರಿಸಿ ಇರಳ್ಹಗಳ ಕೊಂಡಾಡು ೭

೭೨೮
ಧುಮ್ಮಸಾಲೆನ್ನಿರೈಯ್ಯಾ | ಒಮ್ಮೆ ಸಾಧು ಜನರು |
ಬೊಮ್ಮನ ಪದವಪಡದ | ನಮ್ಮ ಮುಖ್ಯ ಪ್ರಾಣನ ಪ
ನಷ್ಟರಾವಣನ ಬಾಲಕ್ಕಿಟ್ಟ ಬೆಂಕಿಯಿಂದ ಲಂಕಾ |
ಪಟ್ಟಣವ ಸುಟ್ಟು ಬೊಬ್ಬೆ ನಿಟ್ಟ ಹನುಮಪ್ಪನಾ ೧
ಪಾಪಕರ್ಮಕೀಚಕಾದಿ | ಕಾಪುರುಷ ಕೌರವರಾ |
ಕೋಪಾಗ್ನಿಯಲಿ ಸುಟ್ಟ | ಭೂಪ ಭೀಮನಾ ೨
ಉದ್ಧಟ ದುರ್ವಾದಿಗಳಾ | ಸಿದ್ಧಾಂತವೆಂಬ ವಹ್ನಿಯಲ್ಲಿ |
ಬುದ್ಧಿಯಿಂದ ಉರಹಿದಾಪ್ರ | ಸಿದ್ಧಮಧ್ವರಾಯನಾ ೩
ಮೂಲ ಗುರುವಾಗಿ ಜಗ | ಪಾಲಿಸುವಾ ಮಹಿಪತಿ |
ಬಾಲನ ಪ್ರಿಯ ಸಿರಿ | ಲೋಲನಿಜ ದಾಸನಾ ೪

೭೨೯
ಧುಮ್ಮಸಾಲೆಯ ನೋಡಿ ಧುಮ್ಮಸಾಲೆಯಾ ಪ
ಧುಮ್ಮಸಾಲೆಯ ನೋಡಿ ಘಮ್ಮವಾದ ಪ್ರಾಣಿಗಳು |
ತಮ್ಮ ಸುದ್ದಿ ತಮಗಿಲ್ಲಾ ಹಮ್ಮಿನಿಂದಲಿ |
ಧಿಮ್ಮಹಿಡಿದು ಭವದೊಳು ಸುಮ್ಮನೆವೆ ಕೆಟ್ಟು ಹೋದ |
ಗ್ಯಾದರೆಯು ಪರಬೊಮ್ಮನಾಮ ನೆನೆಯಿರೋ ೧
ವಿದ್ಯೆಯಿಂದ ವಾದಿಸುತ ಮುದ್ದಿಯಿಂದ ಕಣ್ಣು ಮುಚ್ಚಿ |
ಸದ್ಯ ಶಕ್ತಿ ಯೌವನದಿ ಗುದ್ದಿ ಹೆಟ್ಟು ತಾ |
ಮದ್ದು ಗುಣಿಕೆಯ ನೆರೆ ಮೆದ್ದವನ ಪರಿ ನಿಜ |
ಬುದ್ಧಿ ಹೋಗಾಡಿಸಿ ಅನಿರುದ್ಧನನ ಮರೆತಿರೋ ೨
ಒಂದು ಕವಡಿಯಲಾಭ ತಮಗೆ ಹೊಂದದಿದ್ದರೆ ಸರಿ |
ಬಂದು ನಿಂದು ಒಳ್ಳೆವರಾ ನಿಂದೆ ಮಾಡುತಾ |
ಮತಿಗಳನೂ ಹೊಂದು ಕುಲಗಳ ತಮ್ಮ ಇಂದು |
ಕೊಚ್ಚಿ ಕೆಡಹಿ ಅಂಥಃ ಕೂಪ ಲಿಟ್ಟರೋ ೩
ಉಡಗಿ ಬಿಟ್ಟು ಹುಡಿಯಹಚ್ಚಿ ಜಡಿಯಬಿಟ್ಟು ಸಿದ್ಧಗಾಗಿ |
ಪೊಡವಿಲಿನ್ನು ಲಾಭಾ ಲಾಭಾ ನುಡಿಯ ಹೇಳುವಾ |
ತುಡುಗರಿಗೆ ಹೋಗಿಕಾಲ ವಿಡಿದು ಗೋಂದಲ್ಹಾಕುವರು |
ಕಡಲಶಯನನ ಭಜಿಸದೆವೆ ಅಡಲು ಬಿಟ್ಟು ಹೋದರೋ ೪
ಸಿರಿಯ ಸುಖಗೀಪರಿ ಪರಿಯ ವೃತ ತಪದಿಂದಾ |
ಚರಿಸಿ ನೋಡು ಕಣ್ಣು ವಿದ್ದು ಕುರುಡರಾದರೋ |
ಗುರುಮಹಿಪತಿ ಸ್ವಾಮಿ ಚರಣ ನಂಬಿಯಚ್ಚರದಿ |
ನಿರಪೇಕ್ಷ ಭಕ್ತಿಯಿಂದಾ ತರಣೋಪಾಯ ನೋಡರೋ ೫

೨೧೫
ಧೂಪಾರತಿಯ ನೋಡುವ ಬನ್ನಿರಯ್ಯಾ|
ಶ್ರೀ ಪರಬ್ರಹ್ಮ ಮೂರುತಿಯಾದ ಹರಿಯಾ ಪ
ವಿವೇಕದಾರತಿ ಜ್ಞಾನನಾಳದಲಿ|
ತೀವಿದಶಾಂಗದಿ ಪುಷ್ಟಗುಧಿಡುವಾ ೧
ತಾಳಕಂಸಾಳ ಝೇಂಗಟೆ ಶಂಖರವಗಳು|
ಮೇಲಾದ ಅನುಹಾತ ವಾದ್ಯ ಮಂಜುಳವಾ ೨
ಕರುಣತ್ರಿವಾರ್ತಿಯು ವಿಶ್ವಸದಾಜ್ಯದಿ|
ಮೆರೆವ ಚಿಜ್ಷ್ಯೋತಿ ಏಕಾರತಿ ಹೊಳೆವಾ ೩
ಗುರು ಮಹಿಪತೀಸ್ವಾಮಿ ಚರಣಕಿರಣ ನೋಡಿ|
ಹರುಷದಿ ಪಾಡುತ ಸುಖವ ಸೂರ್ಯಾಡಿ೪

೨೧೪
ಧ್ಯಾನ ಮೌನಗಳೆಂಬ ಜ್ಞಾನಸಾಧನಗಳನು|
ಏನು ಅರಿಯದತಿ ದೀನನಾಭವಕಂಜಿ|
ನಿನ್ನನೇ ಮೊರೆಯಹೋಕ್ಕಿಹನೋ||
ನಿನ್ನ ನಂಬಿದ್ದವರ ಘನ್ನಭಯ ಹರಿವೆಂದು|
ನಿನ್ನನೇ ಮೊರೆಯಹೊಕ್ಕಿಹೆನೋ||
ಜಲದೊಳಗೆ ಎದ್ದೆನ್ನ ಪಾಲೊಳಗೆದ್ದೆನ್ನ|
ತಿಳಿದಂತೆ ಮಾಡೋ ನೀ ಮಹಿಪತಿಸುತ ಪ್ರಾಣ||
ನಿನ್ನನೇ ಮೊರೆಯ ಹೊಕ್ಕಿಹೆನೋ

೨೪೯
ನಂದ ಕಂದನೇ ಇವಸುರವೃಂದ ವಂದ್ಯನೇ
ಧರೆಯ ಮರೆಗಿಂದು ಬಂದನೇ
ಹಿಂದೆವೇದವನೆ ರಕ್ಷಿಸಿದವನೇ ಮಂದರಗಿರಿ ಪೊತ್ತವನೇ
ಸುಂದರಿ ಶರಯನೆ ಬಿಡಿಸಿದ ದೇವನೇ
ಛಂದದಿ ಮಗು ಕಾಯ್ದವನೇ ೧
ನಾನಾ ರೂಪನೇ ಧರಿಸಿ ಧರ್ಮವನೆ ಸ್ಥಾಪನೇ
ಮಾಡುವದುಷ್ಟ ಜನ ಲೋಪನೇ
ತುನಾಭಿಲಾಷನೇ ನೆಗೆಹಿದ ಪರುಷನೇ
ಮಾನಿನೀ ಕೃತ್ಕೂಲುಷನೇ ಮಾನಿನೀ ಹೃತ್ಕಲುಷನೇ
ಬಾನುಜೆ ತೋಷನೇ ಬುದ್ಧ ಕಲ್ಕೇಶನೇ
ದಾನವ ಜಗದಂಕುಶನೇ ೨
ಮಾನುವೆನ್ನಲೆ ಗಿರಿಯ ಪೊತ್ತದೇನು ಕಣ್ಣಿಲೇ
ಕಾಣದೇ ಜನ ತಾನು ತನ್ನಲೇ
ಸ್ವಾನಂದ ಲೀಲೆ ದೋರಲು ಬಾಲೇ
ನಿಜಗುಣ ಮಾತೇ ಮಹಿಪತಿಜ ಪ್ರಿಯನ ಬಲೆ೩

೨೪೮
ನಂದಕಂದನ ನೋಡಿರೇ|
ಅಂದದಿ ಛಂದದಿ ಪಾಡಿರೇ ಪ
ದುಡುದುಡುಕೆಂದು ಕಡೆಯಲು ಗೋಪಿ|
ಒಡನೊಡನಾಲಿಸಿ ಶಬ್ದವಾ||
ದುಡುದುಡು ಬಂದ ಕಡಗೋಲ ಪಿಡಿದು
ಬಿಡದೆವೆ ಬೆಣ್ಣೆಯ ಬೇಡುವಾ೧
ಝಳಝಳಿಸುವ ಅಂದುಗೆ ಗೆಜ್ಜೆಗಳಾ|
ಘಿಲು ಘಿಲುಕೆಂದು ನುಡಿಸುವಾ|
ಎಳೆಯಳೆಗೆಳೆರ ಮೇಳದಲಾಡಿ|
ನಲಿನಲಿದಾಡುತಲೊಪ್ಪುವಾ ೨
ಅಚ್ಚರಿ ಬಗೆಯಲಿ ಗುರುಮಹಿಪತಿ ಪ್ರಭು
ಸಚ್ಚರಿತಾಮೃತ ಬೀರುವಾ||
ಪಟ್ಟದ ಬೊಂಬೆಯ ನಿಚ್ಚಳ ಭಾಸುವ|
ಅಚ್ಯುತನಾಕೃತಿ ದೋರುವಾ ೩

೨೫೦
ನಂದನಂದನ ಪದ್ಮಾನಂದನ ವಂದ್ಯನೇ|
ತಂದೆ ಮಹಿಪತಿಸುತ ಪ್ರಭುವೇ ಮುಕುಂದ ಕೃಷ್ಣ ಪ
ಸಿರಿಯಾ ಸೌಖ್ಯ ದಿಂದುಬ್ಬಿ ಮದದಿಂದ|
ಸರಿಯನಗಾರು ಇಲ್ಲೆಂಬ ತಾಮಸದಿಂದ|
ಮರದೆನೋ ಹರಿನಿಮ್ಮಾ ಸ್ಮರಣೆಯಾ ಮರವಿಂದ|
ತಿರುಗಿ ದಣಿದೆ ನಾನು ನಾನಾಯೋನಿಗಳಿಂದ|
ತರಹರಿಸಲಾರೆ ತಾಪತ್ರಯದುಃಖಗಳಿಂದ|
ಶಿರಿಕೃಷ್ಣ ಸಲಹೆನ್ನ ಪರಮ ಕರುಣದಿ|೧
ಮುನ್ನ ಮಾಡಿದಪರಾಧ ಸಕಲವ ನೀನು ಕ್ಷಮೆಯನುಮಾಡಿ
ಚಿನ್ನ ಕಿಂಕರನೆಂದು ದಯದಲಿ ಅಭಯಕರವನು ನೀಡಿ
ನಿನ್ನ ಸ್ಮರಣೆಯಕೊಟ್ಟು ಕರುಣ ಕಟಾಕ್ಷದಿಂದಲಿ ನೋಡಿ
ಚಿನ್ನ ಶ್ರೀಕೃಷ್ಣ ಭವದಿಂದುದ್ಧರಿಸಯ್ಯಾ ತಾರಿಸಯ್ಯಾ ನೀನು೨
ಪತಿತ ಪಾವನ ನೆಂಬಾಬಿರುದು ಸಾರುತಿದೆ
ಗತಿಗೆಟ್ಟ ಅಜಮಿಳನ ತಾರಿಸಲಿಲ್ಲವೇ
ಸತಿಯಾದಾ ಪಾಷಾಣ ಉದ್ದರಿಸಲಿಲ್ಲವೇ
ಕ್ಷಿತಿಯೊಳೆನ್ನ ತಾರಿಸುವದೊಂದರಿದೇ ಶ್ರೀಕೃಷ್ಣಾ೩
ಕರಿರಾಜನಂದದಿ ಹರಿತವಸ್ಮರಣೆ ಮಾಡಲರಿಯೇ
ಶರಣ ಪ್ರಲ್ಹಾದನಂತೆ ಕರೆಯ ಬರಿಯೇ
ನರೆನಂತೆ ನಾನಿನ್ನ ವಲಿಸಿಕೊಳ್ಳಲರಿಯೇ
ತರಳ ಧ್ರುವನಂತೆ ಧ್ಯಾನಿಸಲರಿಯೇ
ಶಿರಿಕೃಷ್ಣಾ ಗತಿಯಂಬದುವಿನಾ ಮತ್ತೊಂದರಿಯೇ ೪
ನಿನ್ನ ನಾಮವನು ಕೊಂಡಾಡುವೆ ಪೊಗಳುವೆ
ಚನ್ನಾಗ್ಯನುದಿನದಲನವರತಾ
ತನ್ನಯಕರುವಿಗೆ ಕರುಣಿಪಗೋಪಂತೆ
ಎನ್ನ ನೀಸಲಹುದು ಶಿರಿಕೃಷ್ಣರೇಯಾ೫

೨೫೧
ನಂಬಬೇಕು ಹರಿಯ ನಾಮಾ ಪ
ನಾಮವೇ ಸ್ನಾನವು ನಾಮವೇ ಸಂಧ್ಯಾನವು|
ನಾಮವೇ ಜಪ ತಪ ನಾಮವೇ ಖೂನವು|
ನಾಮವೇ ಜ್ಞಾನಾ ನಾಮವೇ ಧ್ಯಾನಾ|
ನಾಮವೇ ಧಾರಣ ನಾಮ ನಿಧಾನಾ ೧
ನಾನಾ ಸಾಧನ ಕಾನನ ಮಾರ್ಗದಿ|
ಗುಣದ ಪಶುಪರಿ ಕಾಣದೇ ತಿರುಗುವಿ|
ಏನು ಪಲವೋ ಮತಿ ಹೀನ ಗುರು|
ಜ್ಞಾನದ ಮನಿ ನಿಧಾನದಿ ಕೇಳು೨
ಪೋಡವಿಲಿ ಗಂಗೆಯ ತಡಿಯೋಳು ಕುಳಿತಿರೆ|
ಕುಡಿಯಲು ಜಲವನು ಹುಡುಕುವ ಭಾವಿಯ|
ನಡತಿದು ಛಂದವೆ ಬಿಡು ಬಿಡು ಸಂಶಯ|
ಹಿಡಿಗುರು ಮಹಿಪತಿ ಒಡಿಯನ ಬೋಧಾ೩

೪೭೮
ನಂಬಿ ಗುರುರಾಯ ನಂಘ್ರಿಯಾ | ಸಲಹುತಾನೆ
ಶರಣು ಬಂದವರನು ಕರುಣದಿಂದಲಿ ನೋಡಿ|
ತರಣೋಪಾಯದ ನಿಜವಾ ಬೀರುತಾ ೧
ಜಡಮತಿ ತನವನು ಬಿಡಿಸಿ ಸ್ಮರಣೆಕೊಟ್ಟು |
ಒಡನೆ ಸದ್ಗತಿ ಸುಖಾದೋರುತಾನೆ ೨
ತಂದೆ ಮಹಿಪತಿ ಕುಂದ ನಾರಿಸದೇ ದೀನ |
ಬಂಧುವೆಂಬುದು ಖರೆ ಮಾಡುತಾನೆ೩

೫೧೩
ನಂಬಿ ನಡಿಯಿರೋ | ನಂಬಿ ನಡಿಯಿರೋ |
ಗುರುಪಾದವಾ
ನಡಿಯಿರೋ ನಂಬಿ ನಡಿಯಿರೋ | ನೇಮದಲಿ ಅತಿ |
ಪ್ರೇಮದಲಿ ಪ
ಗುರುವೇ ಗರಿಯಂದರಿಯದೆ ಮೆರೆದು |
ತಿರುಗುವರೇ ನೀ ಮರಗುವರೇ |
ತರಣೋಪಾಯದ ಸಾಧನ ಪಡೆಯದೆ |
ಇಹದೇನೋ ಗುಣವಹುದೇನೋ |
ಗುರುವಿಂದಲಿ ಜನರಿಗೆ ಅನ್ಯರು |
ತಾರಕರಿಲ್ಲ ಪೋಷಕರಿಲ್ಲಾ |
ತರಣಿಯ ಹೊರತಾ ಚರಣಿಯ ದಿನ ನಡೆ
ಸುವರುಂಟೆ ಬೆಳಗುವರುಂಟೆ೧
ಪೊಡವಿಲಿ ನಾನಾ ಜನ್ಮವ ತಾಳಿ |
ಬಾಳಿ ತೊಳಲಿ ಘನ ಬಳಲಿ |
ಕಡೆಯಲಿ ಪುಣ್ಯಾಂಶದಿ ನರ ಶರೀರದಿ |
ಬಂದೀಗ ನೀ ನಿಂದೀಗ |
ಒಡನೆ ಮುಂದಣ ಗತಿಯ ವಿಚಾರಿಸಿ |
ಹಾದಿಯನು ತಿಳಿ ಭೇದಿಯನು |
ತಡೆಯದೆ ಭಾವದಿ ಸದ್ಗುರುವಿಗೆ ಹೋಗು |
ಶರಣವನು ಪಿಡಿ ಚರಣವನು ೨
ಗುರುವೆ ನಿರ್ಜರ ತರುವೆ ಸರ್ವರ |
ನಿಜದರುವೆ ಕರುಣವಗರವೇ |
ಭರದಲಿ ಈ ಪರಿಯಿಂದಲಿ ಸ್ತುತಿಗಳ |
ಪಾಡುತಲೀ ನಲಿದಾಡುತಲಿ |
ಕರದಂಡಯುಗಳ ನೀಡಿ ತನುವ ನೀ |
ಡ್ಯಾಡಿ ನಮನವನೇ ಮಾಡಿ |
ವರಗಳ ಬೇಡಿ ಪ್ರೇಮವ ಕೂಡಿ |
ಸ್ವಾನಂದದ ಸುಖ ಸೂರ್ಯಾಡಿ | ೩
ಈ ಮಾರ್ಗವನೆ ತ್ಯಜಿಸಿ ಕಾಳಿ |
ಮೌಳಿ ಉಚ್ಛಿಷ್ಟ ಚಾಂಡಾಳಿ |
ತಾಮಸ ಶಕ್ತಿ ಭೂತ ಪ್ರೇತಗ |
ಳೆಂಬೋಪಾಸನ ಧ್ಯಾಸನಾ |
ಕಾಮನವಿಡಿದು ವೇದ ವಿರುದ್ಧದ |
ಹಾದಿಲಿ ನಡೆವರೇ ನೋಡುವರೇ |
ಆ ಮಹಾ ಅಮೃತ ಕೊಟ್ಟು ಗಂಜಿಯ |
ಕೊಂಡಂತಾಯಿತು ಗುಣಹೇತು ೪
ಕಾಶೀ ರಾಮೇಶ್ವರ ಯಾತ್ರೆಯ ಭ್ರಾಮ |
ತಿಗಳ್ಯಾಕೆ ಚಿಂತಿಗಳ್ಯಾಕೆ |
ಭೂಸುರ ಪುಂಡರೀಕನ ಭಕ್ತಿಯಲಿ |
ಆಚರಿಯಾ ನೀ ಕೇಳರಿಯಾ |
ವಾಸವಾದನು ಅವನಿದ್ದೆಡೆಯಲಿ |
ಗೋವಿಂದಾ ಶ್ರೀ ಮುಕ್ಕುಂದಾ |
ಆ ಸದ್ಗುರು ಭಜನೆಯ ದೊರಕೊಂಬುದು |
ಇಹಪರವು ನಿಜ ಸುಖದರವು ೫
ಲೇಸಾಭಕ್ತಿಯ ಮೋಡಿಗಳಿಲ್ಲದೆ |
ಮನದೊಳಗೆ ಈ ಜÀನದೊಳಗೆ |
ಆ ಸಂತರ ನಡೆನುಡಿಗಳ ಕಲಿತು |
ಡಂಭವ ದೋರುತ ಎರೆಯುತ |
ಕಾಷಾಯಾಂಬರ ಮಾಡಿ ವೇಷವ |
ತೋರುವುದಲ್ಲಾ ಗುಣಸಲ್ಲಾ |
ಈ ಸಬಕಾರವ ಬಿಟ್ಟು ಕ್ಯಾವಿಯ |
ಕಿಡಿಸುವರೇ ನೀ ಧರಿಸುವರೇ೬
ನಾನಾ ಸಾಧನದಿಂದಲಿ ಯೋಗದ |
ವಾರ್ತೆಗಳಾ ಮನೆವಾರ್ತೆಗಳಾ |
ಮೌನವವಿಡಿದು ವಾಯು ವಿರೋಧಿಸಿ |
ಪ್ರಾಣವನು ಅಪಾನವನು |
ತಾನಿದ್ದಾಸನ ಸಹಿತದಿ ಗಗನಕೆ |
ಹಾರಿಸಿದೀ ನೀ ತೋರಿಸಿದೀ |
ಏನಾದರೂ ಏನಿಲ್ಲಾ ಸಮ್ಯಕ್ | ಜ್ಞಾನವಾಗದೆ ಸಿಲ್ಕುವದೀ ೭
ಮನಸಿನ ಹಂಬಲ ಸಕಲವ ಬಿಟ್ಟು
ಸೌಮ್ಯದಲಿ ನಿಷ್ಕಾಮ್ಯದಲಿ |
ಘನಗುರು ಶ್ರೀಪಾದದಲಿ ವಿಶ್ವಾ |
ಸವನಿಟ್ಟು ರತಿಗಳನಿಟ್ಟು |
ತನುಮನ ಧನವನು ಅರ್ಪಿಸಿ ವಂಚನೆ |
ನಿಲದ್ಹಾಂಗ ಚಲಿಸದಲ್ಹಾಂಗ |
ಅನುದಿನದಲೀಪರಿ ಬಾಳುತಲಿರು
ಗುರುವಾಜ್ಞೆಯಲಿ ಅಭಿಜ್ಞೆಯಲಿ ೮
ಈ ನಿಜಬೋಧಾಷ್ಟಕವನು ಸ್ಮರಿಸಿ |
ಭಕ್ತಿಯಲಿ ನಿಜವೃತ್ತಿಯಲಿ |
ಸಾನುರಾಗದಿ ನಂದನ ಪ್ರಭುಗುರು |
ಮಹೀಪತಿಯಾ ಸುಚರಿತೆಯಾ |
ಸ್ವಾನಂದದ ನಿಜದಯವನು
ಪಡಕೊಂಡವರನವರಿತಾ ಸುಖಭರಿತಾ |
ನೀನಾಗಿರುತಲಿ ಭವ ಶರಧಿಯ ದಾಟುವಿ
ಸುಗಮದಲಿ ನೀ ಬೇಗದಲಿ ೯

೨೫೨
ನಂಬಿ ನೆನೆಯೋ ಹರಿಯನಾಮ|ವಿಡಿದು ಘನ ಪ್ರೇಮಾ|
ಭಾವಿಸೆಲೋ ನಿಷ್ಕಾಮಾ|
ಇಂಬಾಗಿ ಹೊರೆವನು ನೇಮಾ ಮಂಗಳ ಧಾಮಾ ಪ
ಹೆಸರಿಟ್ಟು ಹೋಲಿಸಿ ಕರೆದಾಜಮಿಳಗ ವರದಾ|
ನೋಡೆಲೋ ಹರಿ ಬಿರುದಾ|
ವಸುಧಿಲಿ ಭಕುತಿಂದ ಬೆರೆದಾವಗೆ ನೆರದಾ ೧
ಸಕಲಧರ್ಮಗಳಿಂದವ ಜಾರಿ ಯನ್ನ ಚರಣವ ಸಾರಿ|
ಭಜಿಸೆಂದು ಉದಾರಿ|
ಪ್ರಗಟದಿ ಅರ್ಜುನಗ ಸಾರಿದನೋ ಮುರಾರಿ೨
ಇನ್ನೊಂದು ಸಾಧನವು ಸಲ್ಲಾ ಇದರಿಂದಧಿಕಿಲ್ಲಾ|
ತಂದೆ ಮಹಿಪತಿ ಸೊಲ್ಲಾ|
ಮನ್ನಿಸಿ ನಡೆಯಲು ಸುಲಭ ಕೈವಲ್ಯಾ ೩

೨೫೩
ನಂಬಿ ಭಜಿಸಿರೈಯ್ಯಾ ಶರಣರು ಪ
ನಂಬಿ ಭಜಿಸಿರೈಯ್ಯಾ ಶರಣರು|ಅಂಬುಧಿವಾಸ ಶ್ರೀ ದೇವನಾ|
ಹಂಬಲ ಬಿಡಿ ಅನ್ಯ ಮಾರ್ಗದಾ|
ಅಂಬುಜಾಂಬಕ ಪರದೈವನು ಗಡಾ| ೧
ತ್ರಿಮೂರ್ತಿಯೊಳು ಮಿಗಿಲಾರೆಂದು ನೋಡಾ|
ಲಾ ಮುನಿಯಮರರು ಕಳುಹಲು|
ಪ್ರೇಮದಿ ಭಾರ್ಗವರಿತು ಬಂದು|ತ್ರಿಧಾಮನೇ
ಪರದೈವವೆಂದನು ಗಡಾ|೨
ನೆರೆದಿಹ ಶರಧಿಹ ಮಥನದಲ್ಲಿ
ದೇವಾ|ಸುರರೆಲ್ಲ ತವಕದಿ ಕುಳಿತಿರೇ|
ಜರಿದು ಸರ್ವರ ನೋಡಿ ಇಂದಿರೆ ಬಂದು|ಹರಿಗೆ
ಮಾಲೆಯ ಹಾಕಿದಳು ಗಡಾ ೩
ಒಡಿಯನೆಂದಜಕರ ಪಾತ್ರದಿ ಜಲ|ವಿಡಿದು
ಶ್ರೀ ಚರಣವ ತೊಳೆಯಲು|
ವಡನೆ ತೀರಥವಾಗಿ ಸುರನದಿ ಬರೆ|
ಮೃಢ ಶಿರಸದಿ ಧರಿಸಿದ ಗಡಾ೪
ಮೂರಕ ಮೂರ ಮೂರುತಿಯಾಗಿ ಗುಣ|
ಮೂರಕದೂರವದೆನಿಸುವಾ|
ಸಾರಿದವರಾ ಕಾವಾ ಮಹಿಪತಿಸುತ|
ಸಾರಥಿಯಾಗಿ ರಕ್ಷಾಪ ಗಡಾ೫

೨೫೪
ನಂಬಿ ಭಜಿಸು ಹರಿಯಾ|
ಅಂಬುಜನಾಭನ ಹಂಬಲದಿಂದಾ ಪ
ಶ್ರವಣ ಕೀರ್ತನ ಮೊದಲಾಗಿಹ ನವವಿಧ|
ಹವಣದ ಭಕುತಿಯ ಸವಿಸವಿಯಿಂದಾ ೧
ಏನೂ ಇಲ್ಲದ ಮೂರು ದಿನದ ಸಂಸಾರಕ|
ನಾ ನನ್ನದು ಯಂದೆನುತಲಿ ಶ್ರಮಿಸದೆ ೨
ಶರೀರಿಂದ್ರಯಗಳು ಸ್ಥಿರವಿದ್ದ ಕೈಯಲಿ|
ಜರೆ ಬಂದೆರಗುತ ಮರೆಸದೆ ಮುನ್ನಾ ೩
ಕೇಳೀಕೋ ಗುರುವಿನಾ ತಿಳಿಯದಿದ್ದರೆ ಕೀಲರಿ|
ಹೇಳುವ ಸ್ಪಹಿತವ ಜಾಳಿಸಿ ಸಂಶಯ೪
ಹೊಂದಿದವರ ಕೈಯ್ಯಾ ಎಂದೆಂದು ಬಿಡನೆಂದು|
ತಂದೆ ಮಹಿಪತಿ ಕಂದಗ ಸಾರಿದ೫

೬೩೩
ನಂಬಿಗಿಲ್ಲಾ ಈ ಮನಸಿನಾ ಪ
ಒಂದು ನೆನೆಯೆ ಮತ್ತೊಂದು ನೆನೆಯುತಾ |
ಒಂದರೆ ಘಳಿಗೆ ಹೊಂದದೆ ಸದ್ಗುಣ |
ಅಂಧ ಕೂಪ ಹೋಗುವಂದದಿ ವಿಷಯ | ಮ |
ದಾಂಧದಿ ಜೀವನ ಬಂಧಿಸುದೈಯ್ಯಾ ೧
ಧೀರ ಶಾಸ್ತ್ರ ವಿಚಾರ ಕರ್ಮದಿ |
ಶೂರರ ತಪ ವಿಹಾರರ ಜಗದೊಳು |
ಆರಾದರಾಗಲಿ ಕ್ರೂರ ಕರ್ಮದಾ |
ಗಾರ ಹುಗಿಸಿ ಘನ ಹೊರುವದೈಯ್ಯಾ ೨
ಪುಣ್ಯದ ದಾರಿಗೆ ಕಣ್ಣವ ದೆರಿಯದು |
ಅನ್ಯಾಯದಿ ಒಡಲನೇ ಹೊರುವದು |
ಸನ್ನತ ಮಹಿಪತಿ ಚಿನ್ನನ ಪ್ರಭುದಯ |
ಮುನ್ನಾದರ ಇನ್ನಾನರಿಯೇ ೩

೨೫೭
ನಂಬಿದವರ ಇಂಬಾದಾ ಕಮ
ಲಾಂಬಕನೇ ನಿನ್ನ ನಾಮ ಮಹಿಮೆಯಂತೋ ಪ
ಪಾತ-ಕವ ಮಾಡಿಯಮ ದೂತರೆಳೆತರುತಿರಲು
ಧಾತುಗಂದಿ ಅಜಮಿಳ ಭೀತಿಯಲಿ
ಸುತನಾರಾಯಣ ನೆನಲು ಬಂದು
ಖ್ಯಾತಿ-ನಾಮ ಹರಿಯಿತೋ ನೀಹೊರೆದೆಯೋ ೧
ಪ್ರೇಮದಿಂದೋದಿ ಪಗಿಳಿಯಾ ವ್ಯಾಮೋಹ ಅಂತ್ಯದಲಿ
ಕಾಮಿನಿ ಗಣಿಕೆ ದೇಹ ಬಿಡಲಾರದೇ
ರಾಮರಾಮಾ ಮಾತಾಡೋಯನ್ನೆ
ನಾಮವೇ ಗತಿ ನಿಡಿತೋ ನೀನೀಡಿದೆಯೋ ೨
ಅಂದಿಗಿಂದಿಗ್ಯಾದ ಭಕ್ತ ವೃಂದ ದವಸರದಲ್ಲಿ
ಛಂದದಿಂದ ಬಂದು ಕಾಮ್ಯ ಪೂರಿಸುವ
ತಂದೆ ಮಹಿಪತಿ ಸ್ವಾಮಿ ನಾಮಾ
ನಂದಬಲ್ಲ ನಲ್ಲದೇ ನಿನ್ನಾರು ಬಲ್ಲರೋ||೩

೬೩೪
ನಂಬಿರೋ ಮನವನುದಿನಾ ಪ
ನಂಬಿರೋ ಮನವನುದಿನಾ |
ನಂಬಿದರಿಂಬಾಗುವನಾ ೧
ಸುರಮುನಿರಂಜನು ಸುರರಿಪು ಭಂಜನಾ |
ನಿರುಪಮ ಕಂಜನಯನ ವದನಾ ೨
ಈರೆರಡಾಸ್ಯನ ಪಿತ ಪದ್ಮಾಸ್ಯನೆ |
ಈ ರೈದಾಸ್ಯನ ಕೊಂದವನಾ ೩
ಅಸುರನ ಕಂದನ ನುಳಹಿದಾ ನಂದನ |
ವಸುದೇವ ಬಂಧನ ಹರಿಸಿದನಾ ೪
ಇಹಪರ ವಂದ್ಯನ ದೇವಕಿ ಕಂದನ |
ಮಹಿಪತಿ ನಂದನ ಜೀವನಾ ೫

೨೫೬
ನಂಬು ದಯಾನಿಧಿ ರಾಮನಾ ಪ
ಶಬರಿಯ ಭಾವಕೆ ಮೆಚ್ಚಿ ಉಂಡನು ಬದರಿ ಫಲಾ|
ವಿಭು ನೀಡಿದನು ಪದಾಚಲಾ ೧
ತೃಣ ಪಶು ಪಿಪ್ಪೀಲಿಕಾ ನಗಾದಿಗಳಾ|
ಸುಗತಿಗೆ ವೈದನು ಘನ ನೀಲಾ ೨
ಗುರು ಮಹಿಪತಿ ಪ್ರಭು ನೀರೊಳು ತಾರಿಸಿದ ಶಿಲಾ|
ಚರಿತವ ದೋರಿದ ಸಿರಿಲೋಲಾ ೩

೨೫೮
ನಂಬು ನರಮೃಗನಾ|ಮನುಜಾ|
ಅಂಬುಧಿವಾಸ ಶ್ರೀ ದೇವನಾ ಪ
ಕುಟಿಲ ಶಠಸುರನುಪಟಳ|ಘಟಿಸೆ
ಖಟಮ ನವ್ಯಾಟಪ್ತ ಬಾಯೆನೆ ಶರಣಾ|
ಖಟಖಠಾನೆಂದು ವಿಸ್ಫುಟವಾಗಿ|ಸ್ತಂಬ|
ಛಟಛಟಾನೆನೆ ಬ್ರಮ್ಹಾಂಡ |
ಘಟಪಟುವಂತೆ ಯಾರ್ಭಟದಿಂದಲೊಗೆದನಾ೧
ಅರಿಯನರದವನ ಕರಳು ಸರಧರಿಸಿ|
ಭರದಿ ಪೊರೆದೆ ಡಂಗುರನಾ ಹರನಾ
ಗುರುಮಹೀಪತಿ ಪ್ರಭು ಚರಣಚರನೆನಿಸಿದ|
ಸ್ಮರಹರ ಅಜಸುರ ಪರರೊಡೆಯನಾ೨