Categories
ರಚನೆಗಳು

ಕೇಶವವಿಠ್ಠಲರು

೧೬೬
ವಾಯುದೇವರ ಸ್ತೋತ್ರ
ಕೇಳಿರೀತನ ಗಾಥ ಚರಿತೆಯ ಚಲ್ವ ಜಾಲಿಕಾಪುರದಿದ್ದ ಧೊರೆಯಾ ಪ
ಕಾಳಾಹಿ ವೇಣಿಯಳು ದ್ರುಪದಜೆಶಾಲೆ ಸೆಳಿಯುತ ಖೂಳ ಸಭೆಯೊಳುಗೋಳಿಸಿದ ದುರ್ಯೋಧನನ ಕುಲಹಾಳು ಮಾಡಿದ ಬಹಳ ಬಗೆಯಲಿಅ.ಪ
ಕಟಕೆಲ್ಲ ಕುರುಕ್ಷೇತ್ರದಲ್ಲೀ ಬಹುಳ-ದ್ಧಟಿತವಾಗಿ ನೆರದಿತಲ್ಲೀಕುಟಿಲ ದುಶ್ಶಾಸಿದ್ದನಲ್ಲೀ ಭೀಮಾ-ರ್ಭಟಿಸುತಲವನ ಕಾಣುತಲಿಕಟಕಟನೆ ಪಲ್ಗಡಿದು ಅಸುರನ ಪಟಪಟನೆ ಕರುಳನ್ನು ಹರಿಯುತಪುಟಿ ಪುಟಿದ ಹಾರುತಲಿ ರಣದೊಳು ಛಟ ಛಟಾ ಛಟಿಲೆಂದು ಸೀಳಿದ ೧
ಗಡಬಡಿಸುತ ಭೀಮನಾಗೇ ಎದ್ದು ನಡೆದನು ತುಡುಗರ ಬಳಿಗೇ ತಡ ಮಾಡದಲೆ ಬಹು ಬ್ಯಾಗೆ ದೊಡ್ಡಗಿಡ ಕಿತ್ತಿ ಪಿಡಿದ ಕೈಯೊಳಗೇಘುಡು ಘುಡಿಸಿ ರೋಷದಲಿ ಅಸುರರಬಡಿ ಬಡಿದು ಮಕುಟವನೆ ಕಿತ್ತುತ ಕಡಿ ಕಡಿದು ರಥಗಳನೆ ತರಿವುತಧಡ ಧಡಾ ಧಡಲೆಂದು ಕೆಡಹಿ ೨
ಪೂಶರ ಜನಕ ತಾನೊಲಿದು ಉಪ-ದೇಶ ಕೊಟ್ಟನು ಭೀಮಗೊಂದುದ್ವೇಷಿ ದುರ್ಯೋಧನನ ಹಿಡಿದು ತೊಡೆ ನಾಶ ಮಾಡಲೊ ಎಂದು ನುಡಿದುರೋಷದಲಿ ಬೊಬ್ಬಿರಿದು ಅವನಾ-ಕಾಶಕೊಗೆಯುತ ಭಾಪುರೇ ಗದೆಬೀಸಿ ಬಡಿಯುತ ಕಡಿದೆ ತೊಡೆಗಳಕೇಶವ ವಿಠಲೇಶನಾಜ್ಞದಿ ೩

 

೧೬೫
ಪ್ರಾಣದೇವರ ಸ್ತೋತ್ರ
ನೋಡಿದ್ಯಾ ಸೀತಮ್ಮ ನೀ ನೋಡಿದ್ಯಾ || ಪ ||
ನೋಡಿದ್ಯಾ ಹನುಮನಾರ್ಭಟವ – ಹಾಳುಮಾಡಿದ ಕ್ಷಣದಲಿ ವನವಾ ||ಆಹಾ|| ಝಾಡಿಸಿ ಕಿತ್ತು ಈಡ್ಯಾಡಿ ವೃಕ್ಷಂಗಳ ಕೊಂ-ಡಾಡುವ ನಿನ್ನಯ ಕೋಡಗನ್ಹರುಷವಾ || ಅ.ಪ. ||
ಮಾತೆ ನಿನ್ನಾಜ್ಞೆಯ ಕೊಂಡು – ಆರಭೀತಿಯಿಲ್ಲದೆ ಫಲ ಉಂಡು -ದೈತ್ಯದೂತ ಬರಲು ಭಾರಿ ಹಿಂಡೂ||ಆಹಾ||ವಾತ ಜಾತ ಬಂದ ಪಾತಕಿಗಳನೆಲ್ಲತಾ ವಕದಿ ಕೊಂದು ಭೂತಳಕ್ಹಾಕಿದಾ ೧
ಸೊಕ್ಕಿ ರಾವಣನೆಂಬ ಗಂಡ – ಮಹ ಲಕುಮಿಯನೆ ಕರಕೊಂಡ – ರಾಮ ರಕ್ಕಸಾಂತಕ ಆಕೆ ಗಂಡ – ಕಪಿ-ಗಿಕ್ಕಿರೆಂದ ಯಮದಂಡ ||ಆಹಾ||ಮಿಕ್ಕ ಖಳರು ಕೂಡಿ ಲೆಕ್ಕಿಸಿ ಮಾತಾಡಿಸಿಕ್ಕರೆ ಬಿಡನೆಂದು ದಿಕ್ಕು ಪಾಲಾದ ೨
ಎಷ್ಟೇಳ್ಹಲವನ ಪ್ರತಾಪ – ನೋಡುಸುಟ್ಟನೆಂಬ ಲಂಕಾ ದ್ವೀಪ – ಎಂಥಗಟ್ಟಿಗ ನೋಡೆ ನಮ್ಮಪ್ಪ ||ಆಹಾ||ಸೃಷ್ಟೀಶ ಕೇಶವ ವಿಠ್ಠಲರಾಯನ ಮುಟ್ಟಿ ಭಜಿಸಲಜ ಪಟ್ಟಾಳೆನೆಂದ್ಹೋದಾ

 

೧೬೭
ವಿಜಯದಾಸರ ಸ್ತೋತ್ರ
ವಿಜಯರಾಯರ ಪಾದಕಮಲ ಭಜಿಸಲಾಕ್ಷಣ ದಿ- |ಗ್ವಿಜಯ ಮಾಡಿ ಸುಜನರನ್ನು ಪೊರೆವನನುದಿನ ಪ
ದಾಸಪ್ಪನೆಂಬ ನಾಮದಿಂದ ಕರೆಸುತ ಉದರ ಗೋಸುಗದಿ ಪರರ ಬಳಿಯ ಆಶ್ರಿಸುತ ||ಯೇಸುಪರಿಯ ಬಡತನವು ಸೋಸಿ ದಣಿವುತ |ಕ್ಲೇಶಗೊಂಡು ಸುಲಿಸಿಕೊಂಡು ಕಾಶಿಗ್ಹೋಗುತ ೧
ವಾಸವಾಗಿ ಸನ್ಯಾಸಿ ವೇಷ ಧರಿಸುತ ನಿತ್ಯ ಬ್ಯಾಸರದಲೆ ವ್ರತಗಳು ಉಪವಾಸ ಮಾಡುತ ||ರಾಶಿ ರಾಶಿ ಜನರ ಕೂಡಿ ದೇಶ ಚರಿಸುತ ಮ್ಯಾಲೆಕಾಶಿ ಬಿಟ್ಟು ಸೇತು ರಾಮೇಶನ್ನ ಹುಡುಕುತ ೨
ತಿರುಗಿ ತಿರುಗಿ ಚೀಕಲಾಪರಿಗೆ ಬಂದನು ಕಂಡುಗುರುತು ಹಿಡಿದು ಆ ಕ್ಷಣದಿ ಕರೆದು ವೈದ್ಯರು ||ಪರಮ ಸಂತೋಷದಿಂದ ಭರಿತರಾದರು ಮೈನೆರೆದ ಶೋಭನಾದಿಗಳನು ತ್ವರಿತ ಮಾಡ್ದರು ೩
ನಿತ್ಯ ಸಂಸಾರದಲ್ಲಾಸಕ್ತರಾಗುತ ದೊಡ್ಡ ಹತ್ತು ಎಂಟು ಗ್ರಾಮವನ್ನು ವತ್ತಿ ಆಳುತಾ ||ಗುತ್ತಿಗೆಯ ಹೊತ್ತ ರೊಕ್ಕ ಮ್ಯಾಲೆ ಬೀಳುತ ಯಿನ್ನುಎತ್ತ ಸೇರಲೆಂದು ಭಾಗೀರಥಿಗೆ ಹೋಗುತ ೪
ಕಾಶಿಯೊಳಗೆ ಮಲಗಿರಲು ಸ್ವಪ್ನ ಕಂಡರು ಪುರಂದರ-ದಾಸರೇವೆಂಬುದು ವ್ಯಾಸ ಕಾಶಿಗೊಯ್ದರು ||ಶ್ರೀಶನಿಂದಲಿವರಿಗೆ ಉಪದೇಶ ಕೊಡಿಸೋರು ವಿಜಯ ದಾಸರೆಂದು ಕರೆಸಿರೆನ್ನೆ ಎದ್ದು ಕುಳಿತರು ೫
ಕನಸಿನೊಳಗೆ ದೇವರ ದರುಶನಾಗುತ ಶ್ರೀ-ಮನಸಿಜನ ಪಿತನ ದಯವು ಘನ ಘನಾಗುತ ||ಜಿನಸು ಜಿನಸು ಪದ ಸುಳಾದಿಗಳನು ಪೇಳುತ ಆಗನೆನಿಸಿದಾಕ್ಷಣದಲಿ ಮುಖದಿ ಕವಿತ ಹೊರಡುತಾ ೬
ಮತ್ತೆ ಹೊರಟು ಆದವಾನಿ ಸ್ಥಳಕೆ ಬಂದರು ಏನುಹತ್ತು ಜನರಿಗೆ ಪೇಳಿದ ವಾಕ್ಯ ಸತ್ಯವೆಂದರು ||ಸುತ್ತು ಮುತ್ತು ನೂರಾರು ದಾಸರು ನೆರೆದರು ಆನಿಸತ್ತಿಗಿ ಪಲ್ಲಕ್ಕಿಯವರೆ ಶಿಷ್ಯರಾದರು ೭
ಯಾತ್ರಿ ತೀರ್ಥಗಳನು ಬಹಳ ಚರಿಸಿ ನೋಡುತ ಸ-ತ್ಪಾತ್ರರಲ್ಲಿ ನೋಡಿ ಧರ್ಮಗಳನೆ ಮಾಡುತ ||ರಾತ್ರಿ ಹಗಲು ವಿಜಯ ವಿಠ್ಠಲನೆಂದು ಪಾಡುತ ಜನರಶ್ರೋತ್ರಿಯಿಂದ್ರಿಯಗಳ ಉದ್ಧಾರ ಮಾಡುತ ೮
ಪೂರ್ತಿ ಎ್ಞÁನದಿಂದ ಕರ್ಮವೆಲ್ಲ ಕಡಿದರು ಸ-ತ್ಕೀರ್ತಿವಂತರಾಗಿ ಬಹಳ ಖ್ಯಾತಿ ಪಡೆದರು ||ಕಾರ್ತಿಕ ಶುದ್ಧ ದಶಮಿ ದಿವಸ ನಡೆದರು ಶ್ರೀಸತ್ಯರಮಣ ಕೇಶವ ವಿಠಲನ್ನ ಕಂಡರು೯

 

೧೬೮
ಉಗಾಭೋಗ
ಮಡದಿ ಮಕ್ಕಳ ಬಿಟ್ಟು ಚಲಿಸಿದವನೆ ಹೊಲಿಯಾಹಡದ ತಾಯಿ ತಂದಿ ಬಳಲಿಸಿದವ ಹೊಲಿಯಾಒಡಹುಟ್ಟಿದವರಿಗೆ ಭಾಗಾ ಕೊಡದವ ಹೊಲಿಯಾಒಡಿಯಾಗ ಅವಸರ ಬರಲು ಬಿಟ್ಟುಹೋಗುವ ಹೊಲಿಯಾಕಡಲಾಶಾಯಿ ನಾಮ ನೆನಿಯಾದವ ಹೊಲಿಯಾಬಡವರ ಬಗ್ಗರ ಕಂಡರೆ ಮಿಡಕದವನೆ ಹೊಲಿಯಾದೃಢಗನಾಗಿ ಯಾತ್ರಿ ಚಲಿಸದವನೆ ಹೊಲಿಯಾಕಡಿತನಕ ಏಕಾದಶಿ ಮಾಡದವನೆ ಹೊಲಿಯಾಬಿಡದೆ ದ್ವಾದಶಿ ದಿವಸ ದ್ವಿಭುಕ್ತದವ ಹೊಲಿಯಾಸಡಗರದಲ್ಲಿ ಪರನಾರಿಯರ ವೊಲಿಸಿಗೊಂಬವ ಹೊಲಿಯಾಹೊಡದಾನು ಯಮನೆಂದು ತಿಳಿಯಾದವನೆ ಹೊಲಿಯಾಪೊಡವಿಪಾಲ ನಮ್ಮ ಕೇಶವ ವಿಠಲನ್ನಕಡುನಾಮಾಮೃತವನ್ನು ಸವಿಯದವ ಹೊಲಿಯಾ ೧

 

ನೋಡಿದ್ಯಾ ಸೀತಮ್ಮ ನೀ
೧೬೫
ಪ್ರಾಣದೇವರ ಸ್ತೋತ್ರ
ನೋಡಿದ್ಯಾ ಸೀತಮ್ಮ ನೀ ನೋಡಿದ್ಯಾ || ಪ ||
ನೋಡಿದ್ಯಾ ಹನುಮನಾರ್ಭಟವ – ಹಾಳುಮಾಡಿದ ಕ್ಷಣದಲಿ ವನವಾ ||ಆಹಾ|| ಝಾಡಿಸಿ ಕಿತ್ತು ಈಡ್ಯಾಡಿ ವೃಕ್ಷಂಗಳ ಕೊಂ-ಡಾಡುವ ನಿನ್ನಯ ಕೋಡಗನ್ಹರುಷವಾ || ಅ.ಪ. ||
ಮಾತೆ ನಿನ್ನಾಜ್ಞೆಯ ಕೊಂಡು – ಆರಭೀತಿಯಿಲ್ಲದೆ ಫಲ ಉಂಡು -ದೈತ್ಯದೂತ ಬರಲು ಭಾರಿ ಹಿಂಡೂ||ಆಹಾ||ವಾತ ಜಾತ ಬಂದ ಪಾತಕಿಗಳನೆಲ್ಲತಾ ವಕದಿ ಕೊಂದು ಭೂತಳಕ್ಹಾಕಿದಾ ೧
ಸೊಕ್ಕಿ ರಾವಣನೆಂಬ ಗಂಡ – ಮಹ ಲಕುಮಿಯನೆ ಕರಕೊಂಡ – ರಾಮ ರಕ್ಕಸಾಂತಕ ಆಕೆ ಗಂಡ – ಕಪಿ-ಗಿಕ್ಕಿರೆಂದ ಯಮದಂಡ ||ಆಹಾ||ಮಿಕ್ಕ ಖಳರು ಕೂಡಿ ಲೆಕ್ಕಿಸಿ ಮಾತಾಡಿಸಿಕ್ಕರೆ ಬಿಡನೆಂದು ದಿಕ್ಕು ಪಾಲಾದ ೨
ಎಷ್ಟೇಳ್ಹಲವನ ಪ್ರತಾಪ – ನೋಡುಸುಟ್ಟನೆಂಬ ಲಂಕಾ ದ್ವೀಪ – ಎಂಥಗಟ್ಟಿಗ ನೋಡೆ ನಮ್ಮಪ್ಪ ||ಆಹಾ||ಸೃಷ್ಟೀಶ ಕೇಶವ ವಿಠ್ಠಲರಾಯನ ಮುಟ್ಟಿ ಭಜಿಸಲಜ ಪಟ್ಟಾಳೆನೆಂದ್ಹೋದಾ

ಹಾಡಿನ ಹೆಸರು:ನೋಡಿದ್ಯಾ ಸೀತಮ್ಮ ನೀ
ಹಾಡಿದವರ ಹೆಸರು:ಶಂಕರ ಶಾನುಭಾಗ್
ರಾಗ:ದುರ್ಗಾ
ತಾಳ:ಭಜನ್ ಠೇಕಾ
ಶೈಲಿ:ಹಿಂದೂಸ್ತಾನಿ
ಸಂಗೀತ ನಿರ್ದೇಶಕರು:ಸಂಗೀತಾ ಕಟ್ಟಿ
ಸ್ಟುಡಿಯೋ:ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *