Categories
ರಚನೆಗಳು

ಕೋಸಲ ಪುರೀಶರ

೪೫೧
ಕಲಯ ರಘುವಂಶಾಬ್ಧಿಸೋಮಂ ಕಲ್ಯಾಣರಾಮಂ
ಸಲಲಿತ ಗುಣಾಭಿರಾಮಂ ಸಕಲದಾನವವಿರಾಮಂ ಪ
ಮರಕತನೀರದ ಮಂಜುಳಗಾತ್ರಂ
ಹರಿಹಯ ಸನ್ನುತಮಂಬುಜನೇತ್ರಂ
ಹರಮುಖಸೇವಿತಂ ಮಾಸುರ ಸಂಸ್ತುತಂ
ಪರಮಪವಿತ್ರಂ ಬಾನುಜ [ಸಖ]ಮಿತ್ರಂ ೧
ಕಮಲಜ ನಾರದ ಗಾನವಿಲೋಲಂ
ಕಮನೀಯಾನನ ಕಾಂಚನಚಲಂ
ಸುಮನಾಶ್ರಿತಜನ ಸುರತರುಮೂಲಂ
ದ್ಯುಮಣಿಕುಲಂ ರಣದೋರ್ಬಲಶೀಲಂ ೨
ಅನಿಶಂವೇಮನನಿಜಕಾಮಂ
ಹನುಮತ್ಸೇವಿತ ಆಹವಭೀಮಂ
ಜನಕಾರ್ಚಿತಮತಿ ಸಾರ್ವಭೌಮಂ
ಘನ [ಕೋಸಲಪುರ] ಕಲ್ಯಾಣರಾಮಂ ೩

ತಾತ್ವಿಕ ಕೃತಿಗಳು
೪೬೨
ವಿಧಿನಿಷೇಧ ನಿನ್ನವರಿಗೆಂತೊ ಹರಿಯೆ
ನಾನಾವಿಧ ನರರಿವರಿಗೆ ಸರಿಯೆ ಪ
ವಿಧಿನಿನ್ನ ಸ್ಮರಣೇವಿನಾನಿಷೇಧ ವಿಸ್ರ‍ಮತಿಯೆಂಬ
ವಿಧಿಯನೊಂದನೆಬಲ್ಲರಲ್ಲದೆ ಮತ್ತೊಂದು ಅ.ಪ
ನಡೆಯಲ್ಪಡುವುದೆಲ್ಲವು ಲಕ್ಷಪ್ರದಕ್ಷಣೆ
ನುಡಿವುದೆಲ್ಲ ಗಾಯಿತ್ರಿಮಂತ್ರಗಳು
ಕೊಂಡುದೆಲ್ಲವು ವಿಷಯೇಂದ್ರಿಯಜ್ಞ ಹೋಮ
ದೃಢ ಪ್ರಾಜ್ಞರೇನ ಮಾಡಿದರದೆ ಮರಿಯಾದೆ ೧
ಕಂಡಕಂಡದ್ದೆಲ್ಲ ನಿನ್ನ ಮೂರ್ತಿಗಳು ಭೂ
ಮಂಡಲಶಯನವೇ ನಮಸ್ಕಾರ
ಕಂಡಕಂಡಸುಕ್ರಿಯೆಯೆ ಯಜ್ಞಹೋಮ
ಮಂಡಿಯಾಗಿ ಬಿದ್ದುದೆ ಬಲಯುತರಿಗೆ ೨
ಮಿಂದುದೆ ಗಂಗಾದಿ ತೀರ್ಥಗಳು
ಬಂದುದೆ ಪುಣ್ಯಕಾಲ ಸುಜನರು
ನಿಂದುದೆ ಗಯೆ ವಾರಣಾಸಿ ಕುರುಕ್ಷೇತ್ರ
ಸಂದೇಹವೇಕೆ ಮದ್ದಾನೆ ಹೊದ್ದುದೆ ಬೀದಿ ೩

೪೫೫
ಗೋವಿಂದ ಗೋಪಾಲಕಾ ಮಮಪ್ರಸೀದ
ಗೋವರ್ಧನೋದ್ಧಾರಕ ಪ
ನಂದಗೋಪ ಕುಮಾರಂ ಗೋಪಾಂಗನಾ
ಬೃಂದದುಕೂಲ ಚೋರಾ
ಸೌಂದರ್ಯ ಕೋಟಿ ಮದನಾ ಹರೆ ಶರ
ದಿಂದುಸಮಾನವದನಾ
ಮಂದರಧರ ಸಂಕ್ರಂದನ ಸನಕ ಸ
ನಂದನ ಮುನಿಮುಖವಂದಿತ ಚರಣಾ ೧
ಚಾಣೂರಮದದಮನಾ ಗೋಪಾಲಬಾಲ
ಬಾಣಗರಳದಮನಾ ವೇಣುನಾದ ವಿನೋದ ಕೋದಂಡಪಾ
ರೀಣ ಸಹಸ್ರಪಾದಾ ವೇಣಿ ಪಿಂಚ ಪುರಾಣ ಪುರುಷ ಪರ
ಮಾಣು ದೇಹಿ ವರಪಾಣಿ ಸುವಿನುತಾ ೨
ಅಂಗದ ಗುರುಖಂಡನಾ ಕಿಂಕಿಣಿ ಕಂಕ
ಣಾಂಗದ ಮಣಿಮಂಡನ
ಗಂಗ ಸಂಜಾತಾಭರಣಾ ಗೋಪಾಲ ಬಾಲಂಗನಾಂತ
ರಂಗಮುನೀಂದ್ರಭರಣಾ
ಅಂಗಜ ಜನಕ ವಿಹಂಗ ತುರಂಗ
ರಂಗದನುಜಹರ ಸಂಗರವಿಜಯಾ ೩
ಪಾಂಡವ ವರದಾಯಕಾ ಅಖಿ
ಳಾಂಡಕೋಟಿ ಬ್ರಹ್ಮಾಂಡನಾಯಕ
ಕಂಡೇಂದು ಸಮಫಾಲ ಗೋಪಾಲಬಾಲ ಕಂಡಿತೇಂದು ಜಾಲ
ಖಂಡಪರಶು ಕೋದಂಡದಳನ ಮಣಿ
ಕುಂಡಲರಾಜಿತ ಗಂಡಉಗ್ರಸ್ಥಳಾ ೪
ಕಾರುಣ್ಯ ಸದ್ಗುಣಯತಾ ಗಂಧರ್ವ ಸಿದ್ಧ
ಚಾರಣ ಸರಿತಾ ಶೌರೆ ಕೋಸಲಪುರವಾಸ ಸಂಸಾರ ಸಿಂಧು
ಕಾರಣ ಮಂದಹಾಸ
ರಾವಣ ವೈರಿ ನಿವಾರಣತಾಂಸ ವಿದಾರಣ
ಕುವಲಯ ಕಾರಣ ಪಾಹಿ ೫

೪೪೯
ಜಯ ಜಯ ಸುಗುಣಾಲಯ
ಜಯಜಯ ಹರೇ ಶ್ರೀನರಸಿಂಹ
ಜಯ ಜಯ ಶಶಿಧರಕೋಟಿ ಸದೃಶದೀಪ್ತಿ
ಶರಣ್ಯ ಶ್ರೀನರಸಿಂಹ ಪ
ವಿತತಕೇಸರ ಹತಜಲಮಹೋನ್ನತರೂಪ ಶ್ರೀನರಸಿಂಹ
ಕನಕ ಕಶಿಪು ವಿದಳನಚರಣ ಕಾರುಣ್ಯನಿಧಾನ ಶ್ರೀನರಸಿಂಹ
ಘನಭಕ್ತಿ ನಿಕ್ಷೇ[ಪ ದಯಾಕರ ಜ]ನವಂದ್ಯ ಶ್ರೀನರಸಿಂಹ
ಅಘಮದಜೀಯ ಶಾಲನುತರಾಶ್ರಯನಗಚರಿತ ಶ್ರೀನರಸಿಂಹ
ಅಖಿಲಮೌನಿ ಸುರಸುಖದಾಯಕ ಕರನಖಜಾಲ ಶ್ರೀನರಸಿಂಹ
ಅಸದೃಶಮಹಿಮೆ ವಿಲಸಿತ ವಿಮಲ ಮಾನಸಗಮ್ಯ ಶ್ರೀನರಸಿಂಹ
ಅನವದ್ಯ ತಪೋಧನ ಸನಕಸನಂದನವಂದ್ಯ ಶ್ರೀನರಸಿಂಹ
ದುರಿತತಿಮಿರಭಾಸ್ಕರ ಕೋಸಲಪುರನರನಾಥ ಶ್ರೀನರಸಿಂಹ

೪೫೨
ಜಾನಕೀ ಮನೋಹರಾಯ ಜಯಮಗಳಂ
ಸೂನು ಪವನ ವಿಹಿತಾದರಾಯ ಶುಭಮಂಗಳಂ ಪ
ಮಕರ ಕುಂಡಲಯುಗಳ ಮಂಡಿತಗಂಡಸ್ತಳಾಯ
ಚಕಿತ ಮುನಿ ಶರಣ್ಯಾಯ ಜಯ ಮಂಗಳಂ
ಅಕಳಂಕ ಶಶಾಂಕ ಸಂನಿಭಾನನಾಯ ಜಲದನಿಲ
ಸುಕುಮಾರ ಶರೀರಾಯ ಶುಭಮಂಗಳಂ ೧
ಗರ್ವಿತ ರಾವಣ ಕುಂಭಕರ್ಣ ವಿದ್ರಾವಣಾಯ
ಸರ್ವಲೋಕ ಶರಣ್ಯಾಯ ಜಯಮಂಗಳಂ
ಗೀರ್ವಾಣ ವಂದಿತಾಂಘ್ರಿಯುಗಾಯ ಸುಜ್ಞಾನ ಚ
ಕ್ಷುರ್ವಿದ್ಯಾ ಸ್ವರೂಪಾಯ ಶುಭಮಂಗಳಂ ೨
ಜಲದಮೂಲ್ಯಮಣಿಸಿಂಹಾಸನ ಸಂಸ್ಥಿತಾಯ ಕೋ
ಸಲನಗರ ನಿಲಯಾಯ ಜಯ ಮಂಗಳಂ
ಜಲಜದಳಲೋಚನಾಯ ಸಪರಿವಾರಾಯ ಭಕ್ತ
ಸುಲಭ ಶ್ರೀ ರಾಮಾಯ ಶುಭಮಂಗಳಂ ೩

ಆಳ್ವಾರಾಚಾರ್ಯಸ್ತುತಿಗಳು
೪೬೦
ನಾಥವಾನಸ್ಮಿ ವಿಪ್ರನಾರಾಯಣೇನ ನಾಥವಾ
ರಂಗನಾಕೈಂಕರ್ಯರಚನ ಪರಾಯಣೇ ನಾಥವಾ ಪ
ದಿನದಿನ ಪ್ರವಾರ್ದಿತ ತುಲಸೀವನ
ಘನ ಸುಮ ತರುಲತಿಕಾ ಮಿತಾನನ|
ವನ ಮಾಲಿಕಾಂಶಪ್ರಭವ ನಾದಿ
ತ ನಿಗಮೆ ನಾ ಶಾಂತಿ ನಿಧಾನೇ ನಾಥವಾ ೧
ಶರಣಾಗತರಕ್ಷಕ ರಂಗೇಶ್ವರ
ವಿರಚಿತವಿಸ್ಮಯ ಕರದೌತ್ಯೆನಾ-
ಹರಿಭಕ್ತ ಚೋಳ ನರವರವಂದಿತಪಾದ
ಸರಸಿಜನ ಬುಧಸಂಸ್ತುತ್ಯೇ ನಾಥವಾ೨
ಅತುರಿತಾಶ್ರೀಮಾಲಿಕಾರಿ ದ್ರಾವಿಡ
ಕೃತಿರಚನಾಕಾರಿತ ಲೋಕೇನಾ
ಅತಿವಿಚಿತ್ರ ಮಾಲ್ಯ ಸಮರ್ಪಣ ಹಾ-
ರ್ಷಿತ ಕೋಸಲನಗರಿ ನಾಯಕೇನ ನಾಥವಾ ೩

ಕೃತಿಗಳು
(ಅ) ಶ್ರೀಹರಿಸ್ತುತಿಗಳು
೪೪೭
ನಾರಾಯಣ ವಾಸುದೇವ ಸಖ ಯೋಗಾನಂದ
ಶ್ರೀ ರಮಾಪಪಾಲಯಮಾಂ
ವಾರಿಜಾಸನಪ್ರಮುಖಾಮರಗಣ ವಂದ್ಯ
ಶೌರಿ ಕೋಸಲಪುರೀಶ ನರ ಸಂಕರ್ಷ ಅ.ಪ
[ಶ್ರೀಧರ]ಶೇಷಶಯನ ವಿಠಲ ರಮಾಸಖ
ಯಾದವೇಂದ್ರ ಪಾಂಡವದೂತ
ಮಧುರಾನಗರ ಗೋವಿಂದ ವೀರರಾಘವ
ಗದಾಧರ ಪೂರ್ಣಹರೇ ೧
ಪರಮೇಶಪುರಾಶ್ರಯ ಪುರುಷೋತ್ತಮ
ಸುರಪ್ರಿಯ ಪದ್ಮಲೋಚನಸಂಗ
ಪರಮ ಸ್ವಾಮಿನ್‍ನಾಥ ಹಿರಣ್ಯಾ
ಸುರಮರ್ದನ ಭಾರ್ಗವಮಹಾವಿಷ್ಣೋ ೨
ಮಧುಸೂದನ ಪದ್ಮಲೋಚನ ಹರ
ಮಾಧವ ತ್ರಿವಿಕ್ರಮ ಸಂಕರುಷಣ
ಮಧುರದ್ವಿಜರವನಿಪತೇ ಪರಬ್ರಹ್ಮಂ
[ಮದರಿಪು] ಪಾಪಹರಮಹಾವಿಷ್ಣೋ ೩
ಭಕ್ತಿಪ್ರದಾಯಕ ಗೋಪವೇಷ
ಭಕ್ತವತ್ಸಲ ಪ್ರದ್ಯುಮ್ನಾಚ್ಯುತ
ಭಕ್ತಸಖ ಮಹಾಸಿಂಹಮಣಿ ವ್ರತ
ಭಕ್ತ ಪ್ರಿಯ ಕೃಷ್ಣ ಭೋಗಿಶಯನ ಶೌರೆ ೪
ಕಾಳಮಘಮಲ್ಲಾರ ನಿಬಿಡಾಕಾರ[ಲೋಲ]
ಸುವರ್ಣ[ಸೀತಾ]ಶರಣ್ಯ ರಘುದ್ವಹ
ಸಾಲಗ್ರಾಮ ಗರ್ಭಜ್ಞ ಸುದರುಶನ
ಪಾತೋನಂದಸೂನೊ [ಸಲಾಪುರಾಧಿ]೫

೪೫೮
ಪರಿತೋಷಸರ್ವಸನ್ನುತಾ ಆತ ವಸುಧಾತನೆ ಯಾದವ
ಪವನ ತನೂಭವ ಮಾಮವ ಸ್ವರ್ಭಾನುಭಯಾವಹ
ಬಾಲ್ಯ ಪಲಪನ್ನಗಾಸನ ಪೂಜಾವಹ ಪ
ಘೋರ ಸಿಂಹಾಕಾರಾಂಬುಧ ಜಂಝ್ಝಾನಿಲ
ಗೋಷ್ಪದೀಕೃತ ಮಹಾರ್ನವಾ
ಖಿಲ ಜಂಬುಮಾಲಿ ಪಣಿ ಮಯೂರ
ದಶಕಂಠ ಕಿಂಕರವನೀದವಾ ೧
ಕುಟಿಲ ಕಂಡನ ಚ್ಚೈಕ ಪನ್ನಗ ನಿಕುಂಭ ಕುಂಭಿ ಕಂಠೀರವಾ
ಅತಿಬಲಯೂಪಾ ಕ್ವೀದಿತುವಿಶ ಧೂರ್ಮಾಕ ಕಾಲಕೂಟ ಭವಾ೨
ತ್ರಿಶೀರ್ಷಾಗ್ನಿ ವಾರಿದ ದೇವಾಂತಕ
ತಿಮಿರ ತಾಮರಸಾಬಾಂಧವಾ
ಶ್ರೀಕೋಸಲನಗರೀಶ ದಾಸ ಸುರ ಸಿದ್ಧ ಸಾಧ್ಯವಿನುತಾರ್ಹವಾ ೩
ಪನ್ನಗಶಯನ ವಿನುತ ಶರಣ್ಯ ನಿನ್ನನೋಲೈಸಿದೆ ಅನ್ಯವನುಳಿದು
ಮನ್ನಿಸಿ ಮನದಿಷ್ಟಾಸ್ರ್ಥವನಿತ್ತು ಸಲಹೆನ್ನ
ಚಿನ್ಮಯಾತ್ಮಕ ಸುಪ್ರಸನ್ನ ವೆಂಕಟಸ್ವಾಮಿ ೪

೪೪೮
ಮಾಧವ ನಾರಾಯಣ ಪುರುಷೋತ್ತಮ
ಮಧುಸೂದನ ಪಾಲಯಮಾಂ
ಶ್ರೀಧರ ಕೇಶವ ರಾಘವ ವಿಷ್ಣೋ [ಕೋಸ
ಲಾಧೀಶ] ಮೋಹನ ರಂಗಾಧಿಪ ಶೌರೇ ಪ
ಪರಮಪುರುಷಾನತ ಕಲುಷವಿದಾರಣ
[ವರ] ಪಾಲಿತನಕ್ರ ಭಯಾರ್ಧಿತವಾರಣ
ಸುರವರಮುನಿನಿಕರ ಭಯವಿದಾರಣ
ಸುರುಚಿರರುಚಿ ಕೌಸ್ತುಭಧಾರಣ ೧
ವನಧಿಶಯನ ಸರಸಿಜದಳಲೋಚನ
ವಾನವಮುಖ್ಯ ಶುಭಾಷಿತ ಸೂಚನ
ಘನವಿವಿಧಾ ನಿರುಪಮಾಗಮ ಧರ್ಮಾ
ರ್ಚನ ಗೌತಮತರುಣಿ ಶಾಪವಿಮೋಚನ ೨
ಚರಣವಿನತಜನ ಬಹುಸುಖದಾಯಕ
ಸರ್ವ ಸುರಾರಿಭಯಾವಹನಾಯಕ
ದರಹಸಿತಾನನ ಭುವನವಿದಾಯಕ
ಶರಧಿಸುತ ರಮಣೀಮಣಿ ನಾಯಕ ೩

೪೫೩
ಮಾಮವ ರಘುವೀರ ಮಾನಿತ ಮುನಿವರ
ಭೂಮಿಸುತ ನಾಯಕ ಭಕ್ತಜನ
ಕಾಮಿತ ಫಲದಾಯಕ ಗರ್ವಿತ ಸು
ತ್ರಾಮ ತನಯವಿರಾಮ ನೃಪತಿ ಲ
ಲಾಮ ದಶರಥರಾಮ ಸಮರೋ
ದ್ದಾಮ ದಶಮುಖ ಸಾಮಜ
ಮೃಗೇಂದ್ರ ಕೋಸಲಪುರೀಂದ್ರ ೧
ದಿನಕರಕುಲದೀಪ ದ್ರುತದಿವ್ಯ ಶರಚಾಪ
ವನಜ ಸನ್ನಿಭಗಾತ್ರಾ ಯೋಗಿವರ್ಯ
ಸನಕಾದಿಮತಿಪಾತ್ರ ನಭೋಮಣಿ
ತನುಜಶರಣ ಪವನಜಮುಖ ಪರಿ
ಜನ ಜಗದಹಿತ ದನುಜ ಮದಹಾರ
ಮನುಜ ತನುಧರ ವನಜದಳ ನಯನ ಅಗಣಿತಗುಣಗಣಾ ೨
ಭಂಡನೋದ್ಗತ ರೋಷಪಾಲಿತ ಗೌತಮಯೋಷ
[ದಂಡಿತ ಮಾರೀಚ ಅಮಿತ ಯತಿವಿರಸವನಅಬ್ದಿಗರ್ವ
ಖಂಡಕನಾರಾಚ ಕುಂಡಲಕವಿತ
ಗಂಡ ಯುಗವೇ ದಂಡ ಕರಭುಜ
ದಂಡ ಹಿಮಕರ ಖಂಡಧರ ಕೋ
ದಂಡ ದಳ ಚರಣಾ ಅಗಣಿತ ಗುಣಗಣ ೩
ಘಟಿತ ನಾನಾಭೂಷ ಕವಿತಾಶ್ರಿತ ಪೋಷ
ಕಟಿದೂಪಮಿತವಾಸನ ಶ್ರೀಕೋಸಲೇಶ
ಮಠಬೇಧನ ನಿವಾಸನ ಇಂದ್ರನೀಲಾಭ
ಕುಟಿಲ ಕಚವೃತ ನಿಟಿಲತಟಮಣಿ
ಪಟಲ ಖಚಿತಮಕುಟಲಸಿತ ಮೃದು
ಚಟುಲಪಿತನತಜಟಿಲ ಮೂಲಧನ ದರಹಸಿತವದನ ೪
ಮಾಮವ ರಘುವೀರ ಪರಮ ಪುರುಷ ಹರಿ
ಗೋವಿಂದಂ ಸಿರಿಧರ ನಾರಾಯಣ

೪೫೬
ರಂಗನಾಯಕ ಭುಜಂಗಶಯನ ಸಾರಂಗವರದ ಸಾರಕ್ಷಮಾಂ
ಪುಣ್ಯಚರಿತ ಕಾರುಣ್ಯ ಸಾಗರ ಹಿರಣ್ಯಾಚಲ ಸಂರಕ್ಷಮಾಂ ೧
ನೀರದೋಜ್ವಲ ಶರೀರ ನೀಳಾಧರಾ ರಮೇಶ ಸಂರಕ್ಷಮಾಂ
ಪಂಕಜಾಪ್ತ ಹರಿಣಾಂ ತನಯನ ಮಕ
ರಾಂಕ ಜನಕ ಸಂರಕ್ಷಮಾಂ೨
ಬಾಧಿಕಾಮರ ವಿರೋಧಿಜನ ಬುಧಾರಾಧನೀಯ ಸಂರಕ್ಷಮಾಂ
ಸೂರಿಬೃಂದ ಸರಸೀರುಹಾಸನಪುರಾರಿವಂದ್ಯ ಸಂರಕ್ಷಮಾಂ ೩
ಬ್ರಾಜಿತೇಂದ್ರಮಣಿ ವೈಜಯಂತಿ ವಿರಾಜಮಾನ ಸಂರಕ್ಷಮಾಂ
ಪ್ರಾಣಿಪಾಲನಧುರೀಣ ಕೇಶವ ಪುರಾಣಪುರುಷ ಸಂರಕ್ಷಮಾಂ
ಶ್ರೀಧರ ಪ್ರಣವಾಸ್ವಾದ ಕೋಸಲಪುರಾಧಿನಾಥ ಸಂರಕ್ಷಮಾಂ ೪

೪೫೭
ರಂಗೇಶಾಯ ಜಯ ಮಂಗಳಂ ಸುಗುಣ
ಸಂಗತಾಯ ಶುಭಮಂಗಳಂ ಪ
ಶ್ರೀರಂಗೇಶ ಮಂದಸ್ಮಿತ ಮುಖಾರವಿಂದಾಯ
ಪ್ರಣವ ಮಂದಿರಾಯ ಜಯಮಂಗಳಂ
ನಿಜಾದಯಾಜಿತ ಕೋಟಿ ಕಂದರ್ಪಾಯ
ಧೃತಮಂದರಾಯ ಶುಭಮಂಗಳಂ ೧
ಫಾಲಾಕ್ಷ ಕಥಿತ ಪ್ರಭಾ ಆವಾಹನಾಯ ದೃತವನ
ನೂಲಿಕಾಯ ಜಯಮಂಗಳಂ
ಪರಿಪಾಲಿತ ಭಕ್ತಾಯ ಭಾವಿ ಜಿತಾಪಾಂಶು
ಮಾಲಿಕಾಯ ಶುಭಮಂಗಳಂ ೨
ಕಾವೇರಿ ಪರಿಪೂರಿತಸಾಲಾಯ
ರಮಾವರಾಯ ಜಯಮಂಗಳಂ
ರಕ್ಷೋವಿಭಂಜನಾಯ ಕೋಸಲ ನಗ
ರಾಕ್ಷ ಮಾವರಾಯ ಶುಭಮಂಗಳಂ ೩

೪೫೦
ಶೌರೆಯದೊತ್ಕರಾರಿ ನೃಸಿಂಹ ಜಾನ
ಕಿಪ್ರಿಯಾಷ್ಟಭುಜ ಮಹಾಬಲ
ನಾರಾಯಣ ಸುಂದರತರ
ಚಾಪಘ್ನಪ್ರವಾಳ ವರ್ಣನೃಹರಿ ಶಾಂತ ಮೂರ್ತೇ ೧
ಶಾರ್ಙನೃಪಾಶ್ರಯ ವಿಜಯರಾಘವ
ಜಗತ್ಪತೆ ರಾಕ್ಷಸಾಘ್ನ ಮಾಧವ
ಶಾರ್ಙಪಾಣೆ ಜಗನ್ನಾಥ
ಪೂರ್ವಜಗದೀಶ್ವರ [ಸಿಂಹರೂಪಿ] ವಿಷ್ಣೋ ೨
ಪದ್ಮಲೋಚನ ಮಹಾನಂದ ಗದಿರನಿ
ರುದ್ಧಾ ಬಲಾಢ್ಯವಿಶ್ವರೂಪಾ
ಪದ್ಮಪ್ರಿಯ ದೇವದೇವೇಶ ಜಗ
ಉದ್ದಾನಿ ಸಿಂಹ ಕೂರ್ಮ ಶೌರೆ ೩
ಗೋಪೀಜನಪ್ರಿಯ ಮಹಾವರಾಹ
ಗೋಷ್ಟಪತೆ ತುಂಗಶಯನ ರಾಘವ
ಗೋಪಜಾತೇ ಗಜಾಮುಕುತಿ ಸುದರ್ಶನ
ಗೋಪೀವಂದ್ಯ ಸಿಂಹರೂಪಿ ವಿಷ್ಣೋ ೪
ಹನುಮಂತಂ ಚಿಂತಯಹಂ ಪಾ
ವನಶಾಂತ ಕುಂಭರಂಭಾವನಗೇಹಂ
ಅನಮಿತ ಮುಷ್ಠಿಪ್ರಹಾರವಹಂ
ಹನನಂದಶಗ್ರೀವಂ ಸಿಂಹರೂಪಿ ರಾಮಂ ೫
ಪ್ರತಿಭಟ ಭೀಕರ ನಿಜಸೈನ್ಯ
ಸತತ ಮೋದಕರ ಸಂಹಾರಂ
[ನುತ] ಸಂಕಾಶ, ಕೋಸಲಪುರ
ಜಿತಶೌರ್ಯಂ ಬಾಲಭಾಸ್ಕರೊಭಾಸಂ ೬

೪೬೧
ಶ್ರೀ ಮಾನಸಚಿಂತಯ ಮೌನೀದಂ
ರಾಮಾನುಜಯತಿ ಕರುಣಾಸಾದಂ ಪ
ದ್ರುತ ಕಷಾಯ ವಸನ ತ್ರಿದಂಡಂ
ಶ್ರೀಪತಿಮತ ಸಂಸ್ಥಾಪನ ಶಾಂಡಂ ಅಪ
ಉಪವೀತಾ ಶಿಖಾ ವಿರಾಜಮಾನಂ
ಉಲ್ಲಸಿತ ಊಧ್ರ್ವಪುಂಡ್ರ ವಿತಾನಂ
ಅಧಿಗತ ಯಾಮುನಿ ಸಂಪ್ರದಾಯಂ
ಅಮಿತದುರಿತಹರ ನಿಜನಾಮಧೇಯಂ೧
ಗೋಷ್ಠೀಪೂರ್ಣ ಗುರುದಯಾಪಾತ್ರಂ
ಗುರುತರ ಕಳಾಧುನಿ ನಿಜಗೋತ್ರಂ
ಮಾನುಷವೇಷೋಪಗತಾನಂತಂ
ಮುನಿಯಾದವ ಪದಯುಗ ನಿಹಿತಾಸ್ವಾಂತಂ೨
ವಿದಿತಾ ಶ್ರೀಭಾಷ್ಯಾದಿ ವಿರಚನಂ
ವೇದಸದೃಶ ಮಹಿಮೋಜ್ವಲ ರಚನಂ
ದ್ವಯಮಂತ್ರ ವಿರತರಣೀತ ಧುರೀಣಂ
ವಾಗ್ವಶಗತ ವೇದ ಶಾಸ್ತ್ರ ಪುರಾಣಂ ೩
ಪರವಾದಿ ಮಹಾಗಜಂ ಮುಗ್ರರಾಜಂ
ಸರಸಹೃದಯ ಬುಧಜನ ಸಂರಾಜಂ
ಶ್ರೀಕೋಸಲ ಪುರವರ ಭಕ್ತವತಂಸಂ
ಕುಟಿಲಮತ ಮಹಾಂಧತಮಸಹಂಸಂ ೪

(ಆ) ಲಕ್ಷ್ಮೀ ಸ್ತುತಿ
೪೫೯
ಸೀತೆ ವಸುಮತಿ ಸಂಜಾತೆ ರಮಣೀಯ ಗುಣ
ಜಾತೆ ರಕ್ಷಿತ ಸರ್ವಭೂತೆ ಪರಿಪಾಹಿಮಾಂ ಪ
ಧನ್ಯೆ ವೈದೇಹಿರಾಜಕನ್ಯೆ ಪರಿವೃತ ಭಕ್ತದೈನ್ಯೆ ತ್ವ
ದನ್ಮಧ್ಯೆ ಮಾನ್ಯೆ ಪರಿಪಾಹಿಮಾಂ ೧
ಧೀರೆ ಸಂವರಾನಿ ಹೃದಯಧಾರೆ ಕರಧೃತ ಕಲ್ಹಾರೆ
ಘನೋಪಮಿತ ಕುಚಭಾರೆ ಪರಿಪಾಹಿಮಾಂ ೨
ಶಾಂತೆ ಕಾರುಣ್ಯ ಮನಸಿ ಸಾಮು
ನ್ಮಾತೆ ಶ್ರೀನಿಧಾನಲೋಚನಾಂತೆ
ಕೋಸಲ ರಮಣನ ಕಾಂತೆ ಪರಿಪಾಹಿಮಾಂ೩
ಶ್ಯಾಮೆ ಲಾವಣ್ಯವಿಭವಸೀಮೆ ವದನನಿರ್ಜಿತಸೋಮೆ
ಸದಾನುಗತೆ ರಘುರಾಮ ಪರಿಪಾಹಿಮಾಂ ೪
ಶರದೆ ಲವಿತೆ ದಿವ್ಯಾಭರಣ ಸಮುಜ್ವರಿತೆ
ಕೋಸಲನಗರಿವಂತೆ ಸುರವನಿತಾಜನ ಸಂಯ್ಯುತೆ ೫

ವಿಧಿನಿಷೇಧ ನಿನ್ನವರಿಗೆಂತೊ
ತಾತ್ವಿಕ ಕೃತಿಗಳು
೪೬೨
ವಿಧಿನಿಷೇಧ ನಿನ್ನವರಿಗೆಂತೊ ಹರಿಯೆ
ನಾನಾವಿಧ ನರರಿವರಿಗೆ ಸರಿಯೆ ಪ
ವಿಧಿನಿನ್ನ ಸ್ಮರಣೇವಿನಾನಿಷೇಧ ವಿಸ್ರ‍ಮತಿಯೆಂಬ
ವಿಧಿಯನೊಂದನೆಬಲ್ಲರಲ್ಲದೆ ಮತ್ತೊಂದು ಅ.ಪ
ನಡೆಯಲ್ಪಡುವುದೆಲ್ಲವು ಲಕ್ಷಪ್ರದಕ್ಷಣೆ
ನುಡಿವುದೆಲ್ಲ ಗಾಯಿತ್ರಿಮಂತ್ರಗಳು
ಕೊಂಡುದೆಲ್ಲವು ವಿಷಯೇಂದ್ರಿಯಜ್ಞ ಹೋಮ
ದೃಢ ಪ್ರಾಜ್ಞರೇನ ಮಾಡಿದರದೆ ಮರಿಯಾದೆ ೧
ಕಂಡಕಂಡದ್ದೆಲ್ಲ ನಿನ್ನ ಮೂರ್ತಿಗಳು ಭೂ
ಮಂಡಲಶಯನವೇ ನಮಸ್ಕಾರ
ಕಂಡಕಂಡಸುಕ್ರಿಯೆಯೆ ಯಜ್ಞಹೋಮ
ಮಂಡಿಯಾಗಿ ಬಿದ್ದುದೆ ಬಲಯುತರಿಗೆ ೨
ಮಿಂದುದೆ ಗಂಗಾದಿ ತೀರ್ಥಗಳು
ಬಂದುದೆ ಪುಣ್ಯಕಾಲ ಸುಜನರು
ನಿಂದುದೆ ಗಯೆ ವಾರಣಾಸಿ ಕುರುಕ್ಷೇತ್ರ
ಸಂದೇಹವೇಕೆ ಮದ್ದಾನೆ ಹೊದ್ದುದೆ ಬೀದಿ ೩

ಹಾಡಿನ ಹೆಸರು :ವಿಧಿನಿಷೇಧ ನಿನ್ನವರಿಗೆಂತೊ
ಹಾಡಿದವರ ಹೆಸರು :ಅಮೃತ ವೆಂಕಟೇಶ್
ರಾಗ :ಕಾನಡ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ವಸಂತ ಮಾಧವಿ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *