Categories
ರಚನೆಗಳು

ಗುಂಡಮ್ಮ

ತ್ರೇತ್ರಾಯುಗದಲಿ ಜನಿಸಿ ರಘುನಾಥನ

ಉಡಕ್ಷಯ ಮುಖ್ಯ ಪ್ರಾಣ ನಿನ್ನ ನೋಡಿ
ಹರುಷವಾಯಿತು ಮನಕೆ ಪ.
ನಿರುತದಿ ಎನ್ನಯ ಹೃದಯದಲ್ಲೇ ನಿಂದು ಶ್ರೀ
ಹರಿಯ ಸ್ಮರಣೆಯನು ಕರುಣಿಸು ಅನುದಿನ ಅ.ಪ.
ತ್ರೇತ್ರಾಯುಗದಲಿ ಜನಿಸಿ ರಘುಪತಿಯ ದಾಸನೆಂದೆನಿಸೆ
ಸೀತೆಗೆ ಉಂಗುರವಿತ್ತು ಶರಧಿಯ ಲಂಘಿಸಿ
ಮಾತೆಯ ರತ್ನ ರಘುನಾಥ ಗೊಪ್ಪಿಸಿದೆಯೋ ೧
ದ್ವಾಪರ ಯಗದಲಿ ಕುಂತಿಯ ಕುಮಾರನೆಂದೆನಿಸಿ
ಪಾಪಿ ರಕ್ಕಸರನು ಸಂಹಾರ ಮಾಡಿ
ಪ್ರಖ್ಯಾತಿಯ ಪಡೆದು ಭೀಮನೆಂದೆನಿಸಿ ೨
ಮೂರನೆ ಅವತಾರದಿ ಮುನಿ ಮಧ್ವರೆಂದೆನಿಸಿ
ಮಾರಮಣನ ಗುಣಗಳ ಪೊಗಳುತಲಿ
ಮೂರುತಿ ರುಕ್ಮೀಣೀಶ ವಿಠಲನ ಕರುಣದಿ ೩


ಉಮಾದೇವಿಯೆ ನಿನ್ನ ನಮಿಪೆ ಅನುದಿನ
ಚರಣಕಮಲವ ತೋರಮ್ಮ ನಮ್ಮಮ್ಮಾ ಪ.
ಮನೋಭಿಮಾನಿಯೇ ಎನ್ನವಗುಣಗಳೆಣಿಸದೆ ತ್ವರಿತದಿ
ಬಂದು ಮುತ್ತಿನ ಗದ್ದಿಗೆಯನೇರಮ್ಮ ನಮ್ಮಮ್ಮಾ ಅ.ಪ.
ದಕ್ಷಕುವರಿ ದಾಕ್ಷಾಯಿಣಿ ಗೌರಿ ಪಕ್ಷಿವಾಹನನ ಸೋದರಿ
ಈಕ್ಷಿಸುತಿರುವೆನು ಉಪೇಕ್ಷಿಸದೆ ಎನ್ನ
ರಕ್ಷಿಸಿ ಕಾಯೆ ಪಾರ್ವತಿ ತಾಯೆ ೧
ಶಂಭುದೇವನ ರಾಣಿ ಹೃದಯಾಂಬರದೊಳು ನಿಂದು
ಬಿಂಬವ ತೋರೆ ಜಗದಾಂಬ ಅಂಬರ ಪೂಜಿತೆ
ನಂಬಿದ ಭಕ್ತರ ಪೊರೆವ ಸದ್ಗುಣ ಚರಿತೆ ೨
ಗೆಜ್ಜೆ ಪಾದಗಳಿಂದ ಘಲ್ ಘಲ್ ಎನುತ ಬಾರಮ್ಮ
ಹೆಜ್ಜೆಯನಿಡುತ ಮುಗುಳ್ನಗೆ ನಗುತ ಬಾರಮ್ಮ
ಸುಜ್ಞಾನ ಮತಿಯಿತ್ತು ಕಾಯುವ ತಾಯಿ ಬಾರಮ್ಮ ೩
ಉಟ್ಟ ಪೀತಾಂಬರ ತೊಟ್ಟ ಕಂಚುಕ ಪಟ್ಟೆಯ ಪದಕ
ಕಟ್ಟಿದ ಕಠಾಣೆ ಮುತ್ತಿನಮೂಗುತಿ ಪಚ್ಚೆಯ ಓಲೆ
ಇಟ್ಟ ಕಸ್ತೂರಿತಿಲಕ ಕೆತ್ತಿದ ಕಿರೀಟ ಹೊಳೆಯುತ ೪
ಬೇಡಿಕೊಂಬೆವೆ ತಾಯೆ ನೀ ಎನ್ನ ಆಪತ್ತು ಪರಿಹರಿಸಿ
ಪಾಡಿ ಪೊಗಳಿ ಕೊಂಡಾಡುವೆ ಕಾಯೆ ತಾಯೆ
ಬೇಡಿದ ವರಗಳ ರುಕ್ಮಿಣೀಶವಿಠಲನ ಕರುಣದೆ ನೀಡೆ ತಾಯೆ ೫

ಆಲದೆಲೆಯ ಮೇಲೆ ಮಲಗಿದ ಶಿಶು

ಎಂತು ಪೊಗಳಲಳವೇ ದ್ವಾರಾವತಿಯ ದೊರೆಯನ್ನು
ಕಂತುಪಿತ ಶ್ರೀಕೃಷ್ಣ ಮೂರುತಿಯಾ ಪ.
ಅಂತರಂಗದಲಿ ನಿಂತು ಪೊರೆಯುವ
ಏಕಾಂತ ಮೂರುತಿಯ ಕರುಣಾನಿಧಿಯಾ ಅ.ಪ.
ಆಲದೆಲೆಯ ಮೇಲೆ ಮಲಗಿದ ಸಿಂಧು
ನಲಿಯುತ ಕನಕನ ಕಿಂಡಿಯಲಿ ನಿಂದು
ಒಲಿದು ವರಗಳನೀವ ಗುಣಸಿಂಧು ೧
ಕಂಠದಲಿ ಮುತ್ತಿನಹಾರ ವಜ್ರದಂಗಿಯ ಅಲಂಕಾರ
ಕಂಟೀಪದಕ ವಿಸ್ತಾರ ಕರದಲಿ ವಜ್ರದುಂಗೂರ
ಸೊಂಟಪಟ್ಟಿಯ ಕಟ್ಟಿದಾ ಚಂದ ನಾಭೀ ಕಮಲದಾನಂದ ೨
ಕಡೆಕಣ್ಣು ಕಂಗಳಾ ನೋಟ ಕಸ್ತೂರಿ ಲಲಾಟ
ಕುಡಿಹುಬ್ಬುಗಳ ನೀಟಾ ವಜ್ರಮಾಣಿಕ್ಯದ ಕಿರೀಟ
ಪಿಡಿದಿರುವ ಕಡಗೋಲು ಕರದಿ ರುಕ್ಮಿಣೀಶ ವಿಠಲ ೩


ಪೂಜಾ ಮಾಡೋಣ ಬಾರೆ ಶ್ರೀ ಲಕುಮಿಯ
ಪೂಜಾ ಮಾಡೋಣ ಬಾರೆ ಪ.
ವನಜನ ನೇತ್ರೆಯ ತ್ರಿಜಗನ್ಮಾತೆ ಪ್ರಖ್ಯಾತೆ ಅ.ಪ.
ಮುತ್ತಿನ ತಟ್ಟೆಯೊಳ್ ಅರಿಶಿನ ಕುಂಕುಮ
ಅರ್ಥಿಯಿಂದಲಿ ಇಟ್ಟು
ಚಿತ್ತದೊಲ್ಲಭನ ಸ್ತುತಿಸಿ ಬೇಡಿಕೊಂಡು
ಮತ್ತೆ ನಿಮಗೆ ಕರವೆತ್ತಿ ಪ್ರಾರ್ಥಿಸುತಲಿ ೧
ಗಂಧಪುಷ್ಪ ವಸ್ತ್ರಾಭರಣ ಆನಂದ ದೀಪಗಳಿಂದ
ಸುಂದರ ಪಾದವ ಇಂದು ನಾ ಪೂಜಿಪೆ
ಮಂದಿರದೊಳು ಆನಂದಭರಿತಳಾಗಿ ಬಾ ೨
ರುಕ್ಮೀಶವಿಠಲನ ಪಟ್ಟದ ರಾಣಿ
ವಕ್ಷಸ್ಥಳದಲಿನಿಂತು ನಲಿಯುತ ಬಾ
ಭಕ್ತಜನರ ಮನೋಭೀಷ್ಟವ ಸಲಿಸುತ ಬಾ ೩


ಬಾರೈ ಬಾರೈ ಗುರು ಸಾರ್ವಭೌಮನೇ ಪ.
ಉಟ್ಟವಸನವು ತೊಟ್ಟ ಆವಿಗೆ
ಇಟ್ಟ ದ್ವಾದಶ ಊಧ್ರ್ವ ಪುಂಡ್ರವು
ದಿಟ್ಟತನದಿ ಇಟ್ಟು ಕೊರಳೊಳು
ಕಟ್ಟಿ ತುಳಸೀ ಮಣಿ ಮನೋಭೀಷ್ಠವ ಸಲಿಸುತ ೧
ದಂಡಕ ಮಂಡಲ ಕೈಯಲಿ ಪಿಡಿದು
ಕಂಡ ಕಂಡದ ಪೂಜೆಗೊಂಬುವ
ಕೊಂಡ ಜನರ ಪರಿಪಾಲಿಸುತಲಿ
ಕಂಡ ಕಂಡವರ ಕಾಯುವ ಕರುಣೆ೨
ಭೂತ ಪ್ರೇತ ಭಯ ನಾಶಗೊಳಿಸಿ
ಭೀತಿಯ ಬಿಡಿಸಿ ಮಂತ್ರಾಲಯದಿ
ಖ್ಯಾತಿವಂತ ರುಕ್ಮಿಣೀಶವಿಠಲನ ಕರುಣದಿ
ಪ್ರೀತಿಪ ಜನರ ಮನೋಭೀಷ್ಠವೊಲಿದ ೩


ಮಧ್ವರಾಯರೆ ನಿಮ್ಮ ಮುದ್ದು ಪಾದಗಳಿಗೆ
ಬಿದ್ದು ಬೇಡಿಕೊಂಬೆ ಮನಶುದ್ಧಿಯ ಮಾಡೊ ಪ.
ಮಧ್ವ ಗೇಹದೊಳು ಜನಿಸಿ ಪಾಜಕಾ ಕ್ಷೇತ್ರದೊಳು
ಮುದ್ದು ರೂಪವ ತೋರಿ ಅ. ಪ.
ಪದ್ಮನಾಭನ ಭಜಿಸುತ ಇರುತ ಗುಹೆಯಲಿ
ಶುದ್ಧ ತಪವನೆ ಮಾಡಿ ಪ್ರಸಿದ್ಧಿಯಿಂದಲಿ
ಇದ್ದ ದೈತ್ಯನ ಕೊಂದು ಪೊರೆಯುತಲಿ ೧
ವಾದಿಗಳ ಛೇದ ಭೇದವ ಮಾಡಿ
ಸಾಧಿಸಿನುತವ ಬೋೀಧಿಸಿ ಸುಜನರಿಗೆ
ವ್ಯಾಧಿಗಳ ಕಳೆದು ಪೊರೆವ ಮೆರೆವ ೨
ಸುಜ್ಞಾನ ತೀರ್ಥರೆಂದೆನಿಸಿ ಮಹಿಯೊಳ್
ಅಜ್ಞಾನ ಪರಿಹರಿಸಿ ಪೊರೆವ ಗುರು
ಸುಜ್ಞಾನವೀವ ರುಕ್ಮಿಣೀಶವಿಠಲನ ಭಜಿಪ ೩


ಲೋಕಮಾತೆಯೆ ದಯಮಾಡೆ ತಾಯೆ
ಲೋಕಮಾತೆಯೆ ಈ ಪರಿ ಪೂಜಿಪೆ ಶ್ರೀಪತಿಯ ಸತಿಯೆ
ಪುಲ್ಲನಾಭನ ಕೂಡಿ ಮೆಲ್ಲಡಿ ಇಡುತಲಿ
ಉಲ್ಲಾಸದಿಂದಲಿ ಬಂದು ಕಾಯೆ ತಾಯೆ ೧
ನಿತ್ಯ ಮಂಗಳನಾಗೆ ಅಚ್ಚುತನರಾಣಿ
ನಿಚ್ಚದಿ ಭಕ್ತಿ ಜ್ಞಾನವಿತ್ತು ಕಾಯೆ ತಾಯೆ ೨
ವಕ್ಷಸ್ಥಳದಲಿ ನಿಂತೂ ಕಾಯೆ ತಾಯೆ
ಪಕ್ಷಿವಾಹನ ರುಕ್ಮಿಣೀಶ ವಿಠಲನ ರಾಣಿ ೩

ಉಮಾದೇವಿಯೆ ನಿನ್ನ ನಮಿಪೆ ಅನುದಿನ

ಉಮಾದೇವಿಯೆ ನಿನ್ನ ನಮಿಪೆ ಅನುದಿನ
ಚರಣಕಮಲವ ತೋರಮ್ಮ ನಮ್ಮಮ್ಮಾ ಪ.
ಮನೋಭಿಮಾನಿಯೇ ಎನ್ನವಗುಣಗಳೆಣಿಸದೆ ತ್ವರಿತದಿ
ಬಂದು ಮುತ್ತಿನ ಗದ್ದಿಗೆಯನೇರಮ್ಮ ನಮ್ಮಮ್ಮಾ ಅ.ಪ.
ದಕ್ಷಕುವರಿ ದಾಕ್ಷಾಯಿಣಿ ಗೌರಿ ಪಕ್ಷಿವಾಹನನ ಸೋದರಿ
ಈಕ್ಷಿಸುತಿರುವೆನು ಉಪೇಕ್ಷಿಸದೆ ಎನ್ನ
ರಕ್ಷಿಸಿ ಕಾಯೆ ಪಾರ್ವತಿ ತಾಯೆ ೧
ಶಂಭುದೇವನ ರಾಣಿ ಹೃದಯಾಂಬರದೊಳು ನಿಂದು
ಬಿಂಬವ ತೋರೆ ಜಗದಾಂಬ ಅಂಬರ ಪೂಜಿತೆ
ನಂಬಿದ ಭಕ್ತರ ಪೊರೆವ ಸದ್ಗುಣ ಚರಿತೆ ೨
ಗೆಜ್ಜೆ ಪಾದಗಳಿಂದ ಘಲ್ ಘಲ್ ಎನುತ ಬಾರಮ್ಮ
ಹೆಜ್ಜೆಯನಿಡುತ ಮುಗುಳ್ನಗೆ ನಗುತ ಬಾರಮ್ಮ
ಸುಜ್ಞಾನ ಮತಿಯಿತ್ತು ಕಾಯುವ ತಾಯಿ ಬಾರಮ್ಮ ೩
ಉಟ್ಟ ಪೀತಾಂಬರ ತೊಟ್ಟ ಕಂಚುಕ ಪಟ್ಟೆಯ ಪದಕ
ಕಟ್ಟಿದ ಕಠಾಣೆ ಮುತ್ತಿನಮೂಗುತಿ ಪಚ್ಚೆಯ ಓಲೆ
ಇಟ್ಟ ಕಸ್ತೂರಿತಿಲಕ ಕೆತ್ತಿದ ಕಿರೀಟ ಹೊಳೆಯುತ ೪
ಬೇಡಿಕೊಂಬೆವೆ ತಾಯೆ ನೀ ಎನ್ನ ಆಪತ್ತು ಪರಿಹರಿಸಿ
ಪಾಡಿ ಪೊಗಳಿ ಕೊಂಡಾಡುವೆ ಕಾಯೆ ತಾಯೆ
ಬೇಡಿದ ವರಗಳ ರುಕ್ಮಿಣೀಶವಿಠಲನ ಕರುಣದೆ ನೀಡೆ ತಾಯೆ ೫

ಹಾಡಿನ ಹೆಸರು:ಉಮಾದೇವಿಯೆ ನಿನ್ನ ನಮಿಪೆ ಅನುದಿನ
ಹಾಡಿದವರ ಹೆಸರು:ವಿಶ್ವೇಶ್ವರನ್ ಆರ್., ರಾಜಲಕ್ಷ್ಮಿ ಶ್ರೀಧರ್ ಜಿ., ಸುಧಾ ಕೆ., ಜಮುನಾ ಶ್ರೀನಿವಾಸ್, ರಂಜನಿ ಪಿ. ಎಸ್.
ರಾಗ:ನಾಗಸ್ವರಾವಳಿ
ತಾಳ:ಆದಿ ತಾಳ
ಸಂಗೀತ ನಿರ್ದೇಶಕರು:ವಿಶ್ವೇಶ್ವರನ್ ಆರ್.
ಸ್ಟುಡಿಯೋ:ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *