Categories
ರಚನೆಗಳು

ಗುರುಇಂದಿರೇಶರು

೧೬೬
ಅವತಾರತ್ರಯ
ಚರಣ ಸೇವಕರನ್ನು ಪೊರೆದ ಪ್ರಾಣೇಶನ್ನಹರುಷಾದಿ ವಂದಿಸಿ ವರಬೇಡಿರೈ ಪ
ಕರುಣ ಸಾಗರ ಕಲ್ಪತರು ಭಕ್ತ ಕುಮುದ ಚಂದಿರನೆನಿಸುತಭೀಷ್ಟ ಸುರಿಸುವ ನೋಡಿರೈ ಅ.ಪ.
ಪದುಮನಾಭನ ದಿವ್ಯ ಪದಶೇವಕನು ಪೋಗಿಉದಧಿ ಲಂಘಿಸಿ ಲಂಕಾ ಸದನದೊಳುಬೆಡಗಿದ ಒಡಲನೋಳ್ಹುದುಗಿ ರೂಪದಚಂದ್ರವದನೀಯಾ ರಾಜಿಪ ಕಂದರದನೀಯಾವಲ್ಲಭನೊಕ್ಷ ಸದನೀಯಾವನದೊಳಗೆ ನೋಡುತ ಚದರೆ ಸುಂದರಿ ಸುದತಿ ಜಾನಕಿಯಾಪದಕೆರಗಿ ಪೇಳಿದ ಮುದದಿ ರಾಮನಹೃದಯ ವಾರುತಿಯಾಮುದ್ರಿಕೆಯ ಸಲಿಸುತ ವದಗಿದಸುರತ ಒಡೆದ ಕೀರುತಿಯಾಪಿಡಿಯಲ್ಕೆ ಕ್ಷಣದೊಳು ಕದನಕಂಠಕನೆನಿಪರಾವಣನೆದುರಿಸಿ ಗರ್ವ ಶಿಕ್ಷಿಸಲುಪುಚ್ಛದಲಿ ಪಟ್ಟಣ ಸುಟ್ಟು ದಹಿಸಿದಸದಯಕಾಮನ ಕಾರ್ಯ ಪೂರ್ತಿಯಾ ೧
ಮದನಜನಕನ ಸಂದರುಶನಗೋಸುಗನೆರೆ ದ್ವಾಪರಡೊಳಗವತರಿಸಿದನೂವರ ಧರ್ಮಜನ ಸಹೋದರನೆಂದೆನಿಸಿ ಗದ ಧರಿಸಿದಾಕೃಷ್ಣನೊಳ್ ಭಾವ ಬೆರಿಸಿದಾಮೋಹಿನಿಯ ವೇಷದಿ ದುರುಳ ಕೀಚಕನೊರಿಸಿ ಸುಖ ಸುರಿದಗಾಂಧಾರಿತನಯನ ಧುರದಿ ತೊಡೆಗಳ ತರಿದು ಬೊಬ್ಬಿರಿದಾಕಡುಕೋಪದಿಂದಲಿ ಜರಿಯ ಸುತನಾ ಭರದಿ ಮದ ಮುರಿದಾಕರಿವರದ ಕರುಣಾಕರನ ವಲಿಸಿದಾಪರಮಮಂಗಳ ಚರಿತ ಸದ್ಗುಣಭರಿತಭವಭಯ ಹರಣ ಸಂನುತ ಚರಣ ಕಮಲ ಧರೆಯೊಳಗೆ ಪರಿಪರಿ ಮೆರೆದಾ ೨
ಮರಳಿ ಭೂಸುರನು ಮಂದಿರದೊಳು ಜನಿಸಿತಾಗುರು ಮಧ್ವಮುನಿಯೆಂದು ಕರೆಸೀದನುವರವೇದವ್ಯಾಸರಾ ಕರುಣಪಡೆದು ದೇಶ ಸಂಚರಿಸಿದಾನಿಂದಕರ ಧಿಕ್ಕರಿಸಿದಾ ಸೇವಕರನುದ್ಧರಿಸಿದಾಗ್ರಂಥಗಳ ರಚಿಸಿ ಭರದಿ ಕಲಿ ಸಂಕರನೋಳ್ವಾದಿಸಿದಾಗುರು ಇಂದಿರೇಶನೆ ಧರೆಗೆ ಪಿತನೆಂದರುಹಿ ಸಾಧಿಸಿದಾಕರಕಂಜಜಾತದಿ ಕರಕೆ ಶಾಸ್ತ್ರದರಿವ ಬೋಧಿಸಿದಾನವರತ್ನ ಭಾಸಿತ ಕರಣಕುಂಡಲಮಕುಟ ಸಕಲಾಭರಣ ಭೂಷಿತಸುಮನಸೋತ್ತುಮ ಮುನಿಪ ಮಾನಂದಾತ್ಮಬುಜಗುಣದರಸೆ ಘನಸುಂದರ ಸುಖಪ್ರದ ೩

 

೧೬೮
ಪಟುತರಂಗನೆ ಕರಪುಟದಿ ನಮಿಸುವೆನುಘಟಿಕಾಚಲನಿಲಯಾಕಟಕಟನೆ ಪಲ್ಗಡಿಯುತಸುರರ
ಕಟಹತರಿದಾರ್ಭಟದಿ ಭಕುತರಪಟಲ ಪಾಲಿಪ ರಘುವರಪ್ರೀಯಭಟನೆನಿಪ ಮರ್ಕಟ ಕುಲೋತ್ತಮಗುರು ಕುಲೋತ್ತಮನೆ ಭೂಸುರರ ಜಠರದೊಳುಮರಳಿ ನೀನವತರಿಸೀಹರಿವಿರೋಧಿಗಳನ್ನು ಮುರಿಯೆ ಸನ್ಯಾಸ ತಾಳಿಪರಮ ಗುರುಗಳೆನಿಸೀಗುರು ಇಂದಿರೇಶನೆ ಪರನೆಂದರುಹಿನಿಂದುವರ ಮಾಯಿಗಳ ಜಯಿಸೀ ಧಿಕ್ಕರಿಸೀಧರಣಿಯೊಳು ಸುಗುಣೇಂದ್ರಯತಿಗಳಕರದಿ ಪೂಜಿತ ಮೂಲರಾಮರದರುಶನದಿ ಸುಖ ಸುರಿಸಿ ಸರ್ವರಧರೆಯೋಳ್ ಪಾಮರ ನರರ ಪಾಲಿಪೆ

 

೧೬೭
ರಾಘವೇಂದ್ರರು
ಸುಂದರ ಗುರು ರಾಘವೇಂದ್ರರೆಂತೆಂಬುವೋ ಕರ್ಮಂದಿಗಳರಸನೆ ವಂದಿಸುವೆ ಪ
ಬಂಧ ಭಕ್ತರ ಅಘವೃಂದ ಕಳೆವೊ ಗುಣಸಾಂದ್ರ ಸನ್ನುತ ಮಹಿಮರೆಂದು ನಾ ಬೇಡುವೆ ಅ.ಪ.
ಪರಮ ಕರುಣೀ ನಿಜ ಚರಣ ಸೇವಕರನ್ನು ಉದ್ಧರಿಸುತಲನುದಿನ ಪೊರೆವನೆಂದೂಕರವ ಪಿಡಿದು ತ್ವರ ಪರಿಪರಿಯಲಿ ನಿನ್ನಾತಪೊರೆಯುವೆ ಕೈ ಪಿಡಿಯೆಂದು ಕರೆಯುವೆಧರೆಯೊಳಗೆ ನಿಮ್ಮಯ ಸರಿ ಧ್ವರೆಗಳ ಕಾಣೆ ಮ-ದ್ಗುರುವೆ ಯನ್ನಂಥ ಪಾಮರ ನರನ ಕಾಯೋದು ನಿಮಗಾಶ್ಚರ್ಯವೇವರಯೋಗಿವರ್ಯನೆ ನಿರುತ ಬೃಂದಾವನದಿ ರಾಜಿಪೊಮೆರೆವ ಮಂಗಳ ಚರಣ ತವಪದಸ್ಮರಿಪೆ ಸಂತತ ನೀಡು ತ್ವರಿತದಿಹರುಷದಲಿ ನಿರ್ಜರರ ತರುವೆ ೧
ಘೋರಾ ದುರಿತವೆಂಬೊ ವಾರುಧಿಯೊಳಗೀಸಲಾರೆನೋದಯ ಬಾರದೇನೋಪೋರನೆನ್ನದಲೆ ತಾತ್ಸಾರ ಮಾಡದಲೆ ದಡ ಸೇರಿಸೊಬಿನ್ನಪವ ವಿಚಾರಿಸೊ ಮನ್ನಿಸಿ ಮಾರ್ಗ ತೋರಿಸೊನಿನ್ನೊಳು ನಿರಂತರ ಪಾದ ಭಕ್ತಿಯ ದಾರಿಯನೆ ಹಿಡಿಸೊಕುರು ಪಾಪ ಸಂಚಯ ಕ್ರೂರ ಕುಜನರ ಕುಠಾರದಿಂದುಳಿಸೊಮನ್ಮಥದಭೀಷ್ಟೆಯ ಚಾರು ಸಲಿಸುವ ಭೂರಿ ಕಿಟೀತಜಧೀರ ನಿನ್ನನು ಸಾರಿದವರನು ಪಾರುಗಾಣಿಪನೆಂದು ಡಂಗುರಸಾರುತಲಿದೆಯದು ವೀರಸಲಿಸೊ ೨
ಏಸೇಸು ಜನ್ಮದಿ ಕ್ಲೇಶವನನುಭವಿಸಿಘಾಸಿ ಮಾಡೆನೊ ಮನದಾಶೆಯಿಂದಾಹೇಸಿ ವಿಷಯಂಗಳು ಲೇಸುತಿಳಿದು ಮರೆಮೋಸಾದಿ ದುಷ್ಟರ ಸಹವಾಸದಿ ಸೇರಿದೆಮಂದಹಾಸಾದಿ ಸಂತೈಸು ರವಿ ಸಂಕಾಶಜನಹೃದೋಷ ಸಾಗರದಿಕಾಷಾಯವಸನ ಭೂಷಿತಾಂಗ ವ್ಯಾಸಮುನಿ ಭರದೀಗಜರಾಮಪುರದೀಶ ಮುಖರಿಗೆ ತೋಷ ನೀ ಗರದಿಈ ಸಮಯ ಸ್ತುತಿಸುವೆನುಶ್ರೀ ಸಮೀರ ಮತಾಬ್ಧಿ ಚಂದಿರಈಶಗೆದುರ ರತೀಶ ಸನ್ನುತಶ್ರೀಶ ಗುರು ಇಂದಿರೇಶನಂಘ್ರಿಗೆದಾಸ್ಯ ಭಾವ ರಹಸ್ಯ ತೋರಿದೆ ೩

Leave a Reply

Your email address will not be published. Required fields are marked *