Categories
ರಚನೆಗಳು

ಗುರುಗೋವಿಂದವಿಠಲರು

೪೯೭
ಅಂಜನಾಸುತ ವರದ | ವಿಠಲ ಪೊರೆ ಇವನಾ ಪ
ಕಂಜಜನಯ್ಯ ಹರಿ | ಸಂಜೆ ಚರಹರನೇ ಅ.ಪ.
ತತುವರೊಳು ನೀನಿಂತು | ಯತನಜ್ಞಾನೇಚ್ಛಾದಿಸತತ ಪ್ರೇರಿಸಿ ಕರ್ಮ | ಮಾಡಿ ಮಾಡಿಸುತಾಮತಿರಹಿತ ಜೀವನಿಗೆ | ಫಲ ಎಂಬ ತೆರಮಾಳ್ವೆಕೃತುಭುಜನೆ ಈ ತರಳ | ನುದ್ಧಾರಗೈಯ್ಯೊ ೧
ಆದ್ಯಂತರಹಿತ ಸ | ದ್ಬುದ್ಧಿಗಳ ಪ್ರೇರಕನೆಶ್ರ್ರದ್ಧಾಳು ಎನಿಸಿವನ | ಮಧ್ವಮತದಲ್ಲೀಪದ್ಧತಿಯ ಪ್ರಕಾರ | ಬದ್ದನಾಗಿಹದಾಸಶುದ್ಧ ದೀಕ್ಷೆಯಲಿವನ | ಉದ್ಧರಿಸೋ ದೇವ ೨
ಉತ್ತಮಾಧಮರೆಂಬ | ತತ್ವ ತರತಮ ತಿಳಿಸಿಆರ್ಥಿಯಿಂದಿವನ ಭಾವ | ಉತ್ತರಿಸೊ ಹರಿಯೇ |ಕತೃ ಸರ್ವಕೆ ನೀನೆ | ಅತ್ಯಂತ್ಯ ಆಪ್ತ ತಮಮತ್ತೊಬ್ಬರಿಲ್ಲಿವಗೆ | ಸ್ತುತ್ಯ ಶ್ರೀಹರಿಯೇ ೩
ಸಂಸಾರಯಾತ್ರೆಯಲಿ | ಕಂಸಾರಿ ತವತಾಮಶಂಸನಕೆ ಎಡೆಗೊಟ್ಟು | ಸಲಹ ಬೇಕಿವನಾಅಂಶ ಅವತಾರಗಳ | ಶಂಸನದಿ ತವಪಾದಪಾಂಸುವನೆ ಭಜಿಪಂಥ | ಸನ್ಮತಿಯನೀಯೊ ೪
ಸತ್ಸಂಗ ದೊರಕಿಸುತ | ಕುತ್ಸಿತರ ದೂರಗೈಮತ್ಸ್ಯಧ್ವಜ ಪಿತ ಶ್ರೀ | ವತ್ಸಲಾಂಛನನೇನಿತ್ಯ ತವ ಸಂಸ್ಮರಣೆ | ಇತ್ತುಪಾಲಿಪುದಿವನಚಿತ್ಸುಖಪ್ರದ ಗುರು | ಗೋವಿಂದ ವಿಠಲಾ ೩

೪೯೮
ಅಂತರಾತ್ಮಕ ವಿಠಲ | ಪೊರೆಯ ಬೇಕಿವಳಾ ಪ
ಶಾಂತಮೂರುತಿ ಹೃದಯ | ಚಿಂತನೆಗೆ ವದಗೀ ಅ.ಪ.
ಪತಿಸುತರು ಹಿತರಲ್ಲಿ | ವ್ಯಾಪ್ತನಾಗಿಹ ನಿನ್ನಾವಿತತ ಮಂಗಳರೂಪ | ಚಿಂತನೆಗೆ ಬರುತಾಮತಿ ಮತಾಂವರರಂಘ್ರಿ | ಶತಪತ್ರ ಸೇವಿಸುತಕೃತಕಾರ್ಯಳೆಂದೆನಿಸೊ | ಪತಿತ ಪಾವನ್ನ ೧
ಜ್ಞಾನ ಸದ್ಭಕುತಿ ವೈ | ರಾಗ್ಯ ಭಾಗ್ಯಗಳಿತ್ತುನೀನಾಗಿ ಪೊರೆಯೊ ಹರಿ | ವತಾನಿ ಜನವಂದ್ಯವೇಣುಗಾನಪ್ರಿಯನ | ಗಾನಕಲೆ ತಿಳಿಸುತ್ತಾಧ್ಯಾನಾನು ಸಂಧಾನ | ಮಾಣದಲೆ ಈಯೋ ೨
ದೇವತವಗುಣ ರೂಪ | ಆವಕ್ರಿಯಗಳನೆಲ್ಲಾಭಾವಭಕ್ತಿಲಿತುತಿಪ | ತಾವಕಳು ಎನಿಸೋಆವತ್ರಯ ಅದ್ವೈತ | ಭಾವಕ್ರಿಯ ದ್ರವ್ಯಗಳಓವಿ ತಿಳಿಸುತ ಹರಿಯೆ | ಭವಭಂಧ ಕಳೆಯೋ ೩
ಮಂಗಳಾಂಗನೆ ದೇವ | ಶೃಂಗಾರ ಮೂರುತಿಯೆಅಂಗನಾಮಣಿ ಹೃದಯ | ಅಂಗಳದಿ ದಿವ್ಯರಂಗ ತವ ರೂಪವನು | ಕಂಗಳಿಂದಲಿ ಕಂಡುಭಂಗವಾಗಲಿ ಕರ್ಮ | ಸಂಚಿತಗಳೆಲ್ಲಾ ೪
ಸ್ರ‍ಮತಿಯೆ ವಿಧಿಯೆಂತೆಂದು | ವಿಸ್ರ‍ಮತಿಯೆ ನಿಷೇಧಮತಿಯ ಅಂಕೆಯ ಕೊಟ್ಟು | ಮಡಿ ಮೈಲಿಗೆಯೊಳುಗತಿಗೋತ್ರ ನೀನಾಗಿ | ಸತತ ಪೊರೆಯಲಿ ಬೇಕೋಹಿತಗುರು ಗೋವಿಂದ | ವಿಠಲ ಬಿನ್ನವಿಪೆ ೫

ದೇವತಾಸ್ತುತಿಗಳು

ಅಂಧನೋ ನಾ ಬಲು ಅಂಧನೊ ಪ
ಸುಂದರವಾದ ಹೃನ್ಮಂದಿರದಲಿ ನಿನ್ನಸುಂದರಮೂರ್ತಿಯ ಕಣ್ದೆರದು ಕಾಣದ ಅ.ಪ.
ಬಹಿರದಲ್ಲಿ ಬಹು ಪರಿಯ ಅಂಗಡಿ ನೆರಹಿಬಹುಜನರ ಮೆಚ್ಚಿಸಿ ಕುಹಕ ಚಿಂತಿಸುವಅಹುದು ಸಜ್ಜನನೆಂದು ಬಹುಜನ ನುಡಿಯಲುಮಹಮೋದ ಮಡುವಿನೊಳ್ ಮಹದಜ್ಞನೆನಿಸಿದ ೧
ವಿಷಮ ದುರ್ವಿಷಯಗಳಲಿ ಮನ ಹೊಗಿಸೀವಿಷವೆಂದು ತಿಳಿದು ವಿಷಯ ಸೇವಿಸೀಅಸಮ ಮಹಿಮ ನಮ್ಮ ಝಷಕೇತು ಜನಕನವಿಷಯಗಳ ಬಹು ವಿಷಯೀಕರಿಸಿದಂಥ ೨
ಹೃದಯ ಮಂದಿರ ಮಧ್ಯ | ಸದಮಲ ಪೀಠದಿಸುದತೇರಿಂದೊಡಗೂಡಿ | ವಿಧಿಭವ ಸನ್ನುತಮದನ ಜನಕ ಗುರು | ಗೋವಿಂದ ವಿಠಲನಮುದದಿ ನೋಡದ ಬಲು | ಮದಡು ಮಾನವ ನಾ೩

೨೪೩
ಅಂಬಾ ರಮಣ ಶಂಭೋ – ಪಾಲಯ ಪ
ಬಿಂಬ ನೃಹರಿಪಾದ | ಬೆಂಬಿಡದೆಲೆ ಭಜಿಪ |ಶಂಭೋ ನಿನ್ನಯ ಚರಣಾಂಭೋಜ ವಂದಿಪೆ ಅ.ಪ.
ವಾಸ ಮಶಣ | ವಿಭೂತಿ ಭೂಷನೆಈಶ ಗಿರಿ ಕೈಲಾಸ ವಾಸನೆಹೇಸದಾ ಶಿವ | ಪಾಹಿ ವೃಷಭಧ್ವಜನೀ ಸದಾ ಗತಿ | ಪ್ರಾಣ ಶಿಶುಪಾಹಿ ೧
ತ್ರ್ಯಕ್ಷ ಸುರಾಧ್ಯಕ್ಷ | ವೃಷಭೇಕ್ಷಾಪಕ್ಷಿ ವಹ ಪ್ರಿಯ | ದಕ್ಷ ಯಜ್ಞಹಅಕ್ಷಿ ಇನ ಅನಲೇಕ್ಷಣ ಸೋಮೇಕ್ಷಪಕ್ಷಿ ಸಮಪದ | ಹರ್ಯಕ್ಷ ಗುರುಪಾಹಿ ೨
ಈಂಟಿ ನೀ ವಿಷ | ವಿಷಕಂಠನೆನಿಸಿದೆಭಂಟನಿಹೆದಶ | ಕಂಠ ಹರನಿಗೆನೆಂಟ ಗುರು ಗೋ | ವಿಂದ ವಿಠಲನಭಂಟನ ಗೈದು ಭವ | ದಾಂಟಿಸೋ ಹರನೇ ೩

೨೪೪
ಅಂಬಾರಮಣ ಶಿವನೇ | ಚತುರಾಸ್ಯ ಭವನೆ |ನಂಬಿ ಬಂದಿಹೆನಯ್ಯ | ಕಂಬು ಕಂಧರ ಹರಿಯಬೆಂಬಿಡದಲೆ ಕಾಂಬ || ಹಂಬಲ ನೀ ತುಂಬು ಪ
ಮನಸೀನ ಅಭಿಮಾನಿ | ಕನಸು ಮನಸಿನಲಿಅನಘ ಅನಂತನ | ಗುಣಗಣ ಪೂರ್ಣನನೆನಸುವಂತೆನ್ನನು | ಮಾಳ್ಪುದಯ್ಯ ಸ್ಥಾಣು ಅ.ಪ.
ಮಂಗಳ ಸನ್ಮುಖ | ಅಂಗಜ ಪಿತ ಸಖ೫೫ಳ್ಳ ಶಿಖ | ತವಸುತ ಷಣು೫ಭಂಗ೫ಪ ದುಃಖ | ೫ಸು ಭವ ದುಃಖಇಂಗಿತಜ್ಞರ ಪ್ರಮುಖ | ಸಂಗದಿ ಕೊಡು ಸುಖ ೧
ಭೂಷಿತ ವಿಭೂತಿ | ನೊಸಲು ನಿನ್ನದು ಖ್ಯಾತಿ ಭಾಸಿಸುತಿಹ ಜ್ಯೋತಿ | ಈಶ ಚಕ್ಷು ಜ್ರ್ಯೋತಿಲೇಸು ಸದಾಗತಿ | ಆ ಸಮೀರನ ಪ್ರೀತಿವಸು ನಿನ್ನೊಳತಿ | ಈಶ ಪಾಲಿಸೊ ಗತಿ ೨
ಗರ್ವರಹಿತ ದೇವ | ದರ್ವಿ ಜೀವನ ಕಾವಸರ್ವ ಭಾರವು ದಾವ | ಶರ್ವ ನಿನ್ನದೊ ಭವಗುರ್ವಂತರಾತ್ಮಗುರು | ಗೋವಿಂದ ವಿಠಲನಸರ್ವದ ಸ್ಮರಿಸೂವ | ಶಿವ ಕೊಡು ಈ ಭಾವ ೩

೨೯೯
ಅಂಬೆ ಶಿರಿ ವಿಹಾರಾ | ಜಗದಂಬೆ ಶಿರಿ ವಿಹಾರಾ | ಜಯ | ಶ್ರೀ ಬಿಂಬ ಪ್ರಾಣಾದಿ ರೂಪಿ ಬಹುರೂಪಿ ಪ
ಅಂಬುಜ ಜನಿತ ದೇವ | ವೃಂದಾದಿಯ ಸೇವಿತ ಪಾದ | ಶ್ರೀ ಕುಮದಾಪ್ತ ಕುಲಜ | ಭೋಸುದೀಪ್ತ ಅನಂತ ಅಚಿಂತ್ಯ ೫ುಹಿಮೋಪೇತ ಸುವ್ಯಾಪ್ತಅ.ಪ.
ತುಂಬಿದಾಂಗ | ಸಿಂಧುಜೆ ಶಿರಿ ಸು | ಞ್ಸ್¿ | ಪ್ರತಿಬಿಂಬ ನೆನಿಪ | ಜಂಭಾರಿಯಾ | ಪ್ರೇಮಾ | ಸ್ಪದಕಂಬುಧರ ಘನ | ಶ್ಯಾಮಾ ವರ್ಣ ಸ | ನ್ನಾಮಾಜಾಂಬೂನದ | ದಾಮಧರ ಸು | ವೇಷಾ | ದು-ರ್ಗಾಂಬೆ ರಮಣ | ಭಕುತ ಸಂ | ತೋಷಾ | ನೀ-ಲಾಂಬುದಾಭ | ಸತಿರಕ್ಷಕ | ದಯೆ ಭೂಷಾ | ಭೂಮಾಂಬೆ ಸುತನ | ಹರಣ ಹರ ಸು | ವಿಶೇಷಾ | ಶ್ರೀಅಂಬುಜನಾಭ ಗೋವಿಂದ | ಅಂಬೆಯ ಅಗ್ರಜ ಮುಕುಂದನಂಬೀದವರನು ಕಾವ | ಗುರು ಗೋವಿಂದ ವಿಠಲ ೧

೪೯೯
ಅಕ್ರೂರ ವರದ ವಿಠಲ | ಕಾಪಾಡೊ ಇವಳಾ ಪ
ಶ್ರೀಕೃಷ್ಣ ನಿನದಾಸ್ಯ ಚೊಕ್ಕ ಪಾಲಿಸುತಾ ಅ.ಪ.
ವಿನಯಾದಿ ಗುಣ ಭರಿತೆ ಜನನಿ ಜನಕರಪ್ರೀತೆಮನೊ ಮೈಲಿ ಕಳೆಯುತಲಿ ಮನೊಮಾನಿ ಒಡೆಯಾ ಗುಣ ಉಳ್ಳವಳ ಮಾಡಿ | ಜಾಣ್ಮೆಯಲಿ ಸಂಸಾರಅನುಸರಿಸುವಂತೆಸಗೊ | ಅನಿಲಾಂತರಾತ್ಮಾ ೧
ಭಕುತರಾ ಸುರಧೇನು | ಭಕುತಿ ಜ್ಞಾನವನಿತ್ತುಮುಕುತಿ ಪಂಥದಿ ಹಾದಿ | ಯುಕುತಳೆನಿಸೋಕಕುಲಾತಿಯನೆ ಕಳೆದೂ | ಶಕುತಿ ಇದ್ದುದ ತಿಳಿಸಿಸುಕರ ಸತ್ಸಾಧನವ | ಪ್ರಕಟವನೆ ಮಾಡೋ ೨
ಪತಿಸುತರು ಹಿರಿಯರಾ | ಸತ್ಸೇವೆ ಕೈಕೊಂಡುಅತುಳ ಹರಿ ಆವರಲ್ಲಿ | ಸ್ಥಿತನೆಂದು ತಿಳಿದೂಹಿತದಿಂದ ಸೇವಿಸಲು | ಗತಿಯ ಆಹುದೆಂದೆಂಬಮತಿಯನೇ | ಕರುಣಿಸುತ | ಕೃತ ಕೃತ್ಯಳೆನಿಸೋ ೩
ಕಷ್ಠ ನಿಷ್ಠುರಗಳಲಿ | ಇಷ್ಟಸಂತುಷ್ಠಿಯಲಿದೃಷ್ಟಿ ಸಮತೆಯ ಕೊಟ್ಟು | ಕಾಪಾಡೊ ಹರಿಯೇಸೃಷ್ಠಿ ಕರ್ತನು ಹರಿಯು | ಶ್ರೇಷ್ಠ ದೇವತೆಯೆಂಬ ಸ್ಪಷ್ಟಮತಿ ಕರುಣಿಸುತ | ಪ್ರೇಕ್ಷ ನೀನಾಗೋ ೪
ಗಾಮಲ್ಗಣಿ ವರದ | ನೀವೊಲಿಯದಿನ್ನಿಲ್ಲಭಾವದಲಿ ಮೈದೋರಿ | ಭವದ ಸುತ್ತರಿಸೋಈ ವಿಧದ ಭಿನ್ನಪವ | ನೀ ವೊಲಿದು ಸಲಿಸೋದುದೇವ ಪ್ರಾರ್ಥಿಪೆ ಗುರೂ | ಗೋವಿಂದ ವಿಠಲಾ ೫

ಅಂಕಿತವಿಲ್ಲದ ದೇಹ ನಿಷಿದ್ಧ ಅಂಕಿತವಿಲ್ಲದ
ಅಂಕಿತನಾಮ ಪದಗಳು
೪೯೬
ಅಚ್ಯುತಾನಂತವಿಠಲ | ಸಲಹ ಬೇಕಿವನಾ ಪ
ಸ್ವಚ್ಛಶಪಥದಿ ಹರಿಯ | ನಾಮ ನಂಬಿಹನಾ ಅ.ಪ.
ಜೀವಕಾರಣವೆನೆ | ಆವನ ವಿದ್ಯಾಪಟಲಓವಿಕಡಿಯಲು ಸಾಧ್ಯ | ನಾಮ ಸಾಧನದೀಈ ವಿಧದ ಸಂಪ್ರಜ್ಞೆ | ಭಾವ ಉಳ್ಳವನೀತತೀವರದಿ ಕೈಪಿಡಿದು | ಕಾಯೋ ಕೃಪ ಸಾಂದ್ರ ೧
ಗುರು ಭಕ್ತಿಯುಳ್ಳವನು | ಸುಜ್ಞಾನಕಾಂಕ್ಷಿತನುಇರುವನೀತನು ಎಂದು | ವರ ಸು ಉಪದೇಶಹರಿಯ ನಾನಿತ್ತಿಹೆನು | ಸ್ವಪ್ನ ಸೂಚೀಯಂತೆಕರುಣದಿಂ ನಿಜತೋರೊ | ಮರುತಂತಾರಾತ್ಮ ೨
ಹರಿ ನಾಮ ವೆಂಬಂಥ | ವಜ್ರಾಂಗಿ ತೊಡಿಸಿವಗೆದುರಿತರಾಶಿಗಳಳಿದು | ಪೊರೆಯ ಬೇಕಿವನಾಸುರು ಭೂರಹವು ಆಗಿ | ಪರಿಪರಿಯ ವರಗಳನುಗೆರೆಯುತ್ತ ಹರ್ಷವನೆ | ಸುರಿಸೊ ಶ್ರೀಹರಿಯೇ ೩
ಸತ್ಸಂಗವನೆ ಕೊಟ್ಟು | ದುಸ್ಸಂಗವನೆ ಕಳೆಯೊಮತ್ಸಕೇತನ ಜನಕ | ಸಚ್ಚಿದಾನಂದಾತ್ಮಾವತ್ಸಾರಿ ಕೃಷ್ಣ ಗೋ | ವತ್ಸ ದನಿಗಾವು ಬಹುಉತ್ಸವದಿ ಬರುವಂತೆ | ನೀನೆ ಪೊರೆ ಇವನಾ೪
ಭಾವಜ್ಞ ನೀನಿರುವೆ | ಪೇಳ್ವದೇನಿಹುದೆನಗೆದೇವ ದೇವೇಶನೆ | ಹರಿ ಸಾರ್ವಭೌಮಗೋವರ್ಧನೊದ್ಧಾರನೆ | ಗೋವಿಂದ ಪತಿಯೆ ಗುರುಗೋವಿಂದ ವಿಠಲ ಮದ್ | ಭಿನ್ನಪವ ಸಲಿಸೊ ೫

೧೬೭
ಅಜಭವಾದಿ ವಂದ್ಯ ಚರಣೇ | ತಾಯಿನಿಜ ಜನರ ಪೊರೆವ ಕರುಣೇ ಪ
ರಜತಮನ ಕಳೆವ ಹೊಣೇ | ಅಜನಮ್ಮ ನಿನ್ನ ಹವಣೇ ಅ.ಪ.
ಪದ್ಮಜಾದಿ ದಿವಿಜ ಪದದೇ | ಪದ್ಮನಯನೆ ಆಯು ಕಳೆವೇಪದ್ಮಜಾತೆ ಮೋಕ್ಷಪದವೇ | ಪದ್ಮಗಂಧಿನಿ ಭಕ್ತವರದೇ ||ಪದ್ಮಾನನೇ | ಪದ್ಮಭವೇ | ಪದ್ಮನಿಲಯೇ | ಪದ್ಮಾಕ್ಷೀಸದ್ಮದ ಹೃ | ತ್ಪದ್ಮದಿ ಪತಿ | ಪದ್ಮ ಪದಹವ | ನುದ್ಭವ ಗೈ ೧
ಗುಣ ಮೂರ ಮಾನಿನಿಯೆ | ಗುಣ ದೊರೆ ಅಂಭ್ರಣೀಯೆಗುಣ ಜಡವ ಕಳೆಯದಿರೆಯೆ | ಘನವೇನೆ ನಿನಗೆ ತಾಯೇ ||ವಾನರನು | ನಾನಾ ದುರ್ | ಯೋನಿಯಲಿ | ಜನೀಸಿಹೆಮಾನೀಸನು | ಧ್ಯಾನಿಲ್ಲವು | ಏನುಗತಿ | ನೀನೇ ಪೊರಿ ೨
ಯುಕ್ತಾ ಅಯುಕ್ತವರಿಯೆ ಭಾಮೆ | ಮುಕ್ತಾ ಅಮುಕ್ತ ಜನರ ಪ್ರೇಮೆವ್ಯಕ್ತಾ ಅವ್ಯಕ್ತ ನಿನ್ನ ಮಹಿಮೆ | ಭಕ್ತನೆನಿಸಿ ಎನ್ನ ರಮೇಭಕುತಿಲ್ಲವು | ಶಕುತಿಲ್ಲ ವಿ | ರಕುತಿಲ್ಲವು | ಯುಕುತಿಲ್ಲವುಮುಕುತಿಚ್ಛೆಗೆ | ಪ್ರಕಟಿಸಿ ದಯ | ಭೀಕರ ಭವ ನೀ ಕಳೆರಮೆ ೩
ಅವ್ಯಕ್ತಾಭಿಮಾನಿ ಕಾಯೋ ಭವ್ಯಮೂರ್ತಿ ಹರಿಯ ಜಾಯೇ |ತ್ರಯ್ಯ ಗೋಚರ ಶ್ರೀ ಹರಿಯೇ | ಗಮ್ಯನೆಂಬುದ ತೋರಿ ಪೊರೆಯೆಶ್ರೋತವ್ಯನ | ಮಂತವ್ಯನ | ಧ್ಯಾತವ್ಯನ | ಸ್ಮರ್ತವ್ಯನಅಗಮ್ಯನೆ | ಪೂಜ್ಯನನೆ | ಶ್ರೀ ಸ್ತವ್ಯನ | ತೋರಯ್ಯೆನ ೪
ಪುರುಷ ಸೂಕ್ತ ಮೇಯನೆನಿಪ | ಸಿರಿಯೆ ನಿನ್ನ ಭರ್ತೃ ಎನಿಪಾಗುರು ಗೋವಿಂದ ವಿಠಲ ರೂಪ | ತೋರಿ ಕಳೆಯೆ ಹೃದಯ ತಾಪ ||ಸಿರಿ ಇಂದಿರೆ | ಸಿರಿ ಭೂಮಿಯೆ | ಸಿರಿ ದುರ್ಗೆಯೆ | ಸಿರಿ ಶಾಂತಿಯೆ ಸಿರಿ ಕೃತಿಯೆ | ಸಿರಿ ಜಯೆಯೆ | ಸಿರಿ ಮಾಯೆ | ಶ್ರೀ ಪೊರೆಯೇ… ೫


ಗಣಪತಿ ಪ್ರಾರ್ಥನೆ
ಅಜ್ಞಾನ ಪರಿಹರಿಸು ಅಂಬರಾಧೀಶಸುಜ್ಞಾನ ಭಕ್ತಿ ಶ್ರೀ ಹರಿಯಲ್ಲಿ ನೀಡೋ ಪ
ವಿಘ್ನರಾಜನೆ ನಿನ್ನ ನುತಿಸಿ ಬೇಡುವೆನಯ್ಯಭಗ್ನಗೈಸೆನ್ನ ಮನ ಸಂದೇಹವನ್ನೂ |ತಜ್ಞರೊಡನಾಡಲು ನಿರ್ವಿಘ್ನ ನೀಡಯ್ಯಾಲಗ್ನಗೈಸೆನ್ನ ಮನ ದೋಷಘ್ನನಲ್ಲೀ ೧
ಏಕದಂತನೆ ಗುರುವೆ ಮೈನಾಕಿ ತನಯನೇನೋಕ ನೀಯನ ಗ್ರಂಥ ಲಿಖಿಸಿದ ಮಹಾತ್ಮ |ವಿಕೃತ ಗಾತ್ರನೆ ಎನ್ನ ವಕ್ರ ಗುಣ ವೆಣಿಸದಲೆಸುಖತೀರ್ಥ ಮತ ಜಲಧಿ ಮೀನನೆನಿಸಯ್ಯಾ ೨
ಚಾರುದೇಷ್ಣನು ಎನಿಸಿ ದ್ವಾಪರದಲವತರಿಸಿಶೌರಿಯಾಜ್ಞದಿ ತರಿದೆ ಬಹು ರಕ್ಕಸರನೂ |ಸರ್ವೇಶ ಶ್ರೀ ಗುರು ಗೋವಿಂದ ವಿಠ್ಠಲನಚರಣ ಸರಸಿಜಕಾಂಬ ಮಾರ್ಗವನೆ ತೋರೋ ೩

೫೦೧
ಅನಂತ ಗುಣ ಪೂರ್ಣ | ವಿಠಲ ಪೊರೆ ಇವನಾ ಪ
ವಿನಯದಲಿ ತವದಾಸ್ಯ | ವನು ಕಾಂಕ್ಷಿಸುವನಾ ಅ.ಪ.
ಸ್ವಪ್ನದಲಿ ದೇವ ಗೃಹ | ಒಪ್ಪವೋ ಹರಿರೂಪಅಪ್ಪ ಸಮ್ಮುಖದಿ ಸ್ತುತಿ | ವಪ್ಪಿಸುತ್ತಿರುವಾ |ನೆಪ್ಪಿನ ಗುರೂ ರೂಪ | ತಪ್ಪದಲೆ ತಾ ಕಂಡುಸೊಪ್ಪಿನಾ ಭಾವದಲಿ | ಅಪ್ಪಿದನು ನೆಲವಾ ೧
ವಿತತ ಮಹಿಮನ ಗುಣನ | ತುತಿಸುತಿಹ ಗುರುವಿನೆಂಹಿತದಿ ಅಂಕಿತಯುಕ್ತ | ತುತಿಯ ಉಪದೇಶಾಕೃತವಾಯ್ತು ಭಾವುಕಗೆ | ಅತಿ ಚಿತ್ರ ಪೇಳಿಲ್ಕೆಮತಿಗೆ ಸಿಲುಕದೆ ಹೋಯ್ತು | ಮತ್ತೆ ಎಚ್ಚರದೀ ೨
ಸುಪ್ರೀಶ ಚರ್ಯವನು | ಅಪ್ಪಿ ಇವಗಂಕಿತವಗೊಪ್ಪದಲಿ ಇತ್ತಿದೆನೊ | ಅಪ್ಪ ಹಯವದನಾ |ಅಪ್ರಮೇಯಾ ನಂತ | ಸ್ವ ಪ್ರಕಾಶಕ ಹರಿಯೆಕೃಪೆಯಿಂದಲಿ ಇವನ | ಒಪ್ಪಿ ಕೈ ಪಿಡಿಯೋ ೩
ನಿದ್ರೆಯಲ್ಲಿಹನ ಪ್ರ | ಬುದ್ಧನನ ಗೈಯ್ಯುತ್ತಮಧ್ವಮತ ದೀಕ್ಷೆಯನು | ತಿದ್ದಿ ಇವನಲ್ಲೀಶ್ರದ್ಧಾಳು ಎಂದೆನಿಸೊ | ಸಿದ್ಧಾಂತ ಪಂಥದಲಿಅಢ್ವದೇಡ್ಯನೆ ಹರಿಯೆ | ಮುದ್ದು ನರಹರಿಯೇ ೪
ಶ್ರೀವತ್ಸ ಸದೃಕ್ಷ ಕೈವಲ್ಯ ಪ್ರದ ಹರಿಯೆಆವ ತವನಾಮ ಸ್ರ‍ಮತಿ | ಸಾರ್ವ ಕಾಲದಲೀತಾವಕಗೆ ನೀನಿತ್ತು ಕಾವುದೆಂಬೆನೊ ಗುರೂಗೋವಿಂದ ವಿಠಲಯ್ಯ | ಗೋವುಗಳ ಪಾಲಾ ೫

೫೦೪
ಅನಂತ ಹರಿ ವಿಠಲ | ಕಾಪಾಡೊ ಇವನಾ ಪ
ಅನಘ ಕರುಣಾಳು ಹರಿ | ನಿನಗೆ ಭಿನ್ನೈಪೇ ಅ.ಪ.
ಪಿತೃಮಾತೃ ಸೇವೆಯಲಿ | ರತಿಯ ಕರುಣಿಸು ಇವಗೆಹಿತ ವಹಿತ ವೆರಡರಲಿ | ಪ್ರೀತಿ ಸಮ ವಿರಲೀಮತಿ ಮತಾಂವರರಂಘ್ರಿ | ಹಿತದಿಂದ ಸೇವಿಸುವಮತಿಯನೇ ಕರುಣಿಸುತ | ಕಾಪಾಡೋ ಹರಿಯೇ ೧
ಭಕುತಿ ಸುಜ್ಞಾನಾದಿ | ವ್ಯಕುತಿಗೈ ಇವನಲ್ಲಿಕಕುಲಾತಿ ಇರದಂತೆ | ಮುಕುತಿ ಸತ್ಪಥದೀಪ್ರಕಟಗೈ ಸ್ಥಿರಬುದ್ಧಿ | ಅಕಳಂಕ ಶ್ರೀಹರಿಯೆನಿಖಿಲಾಗಮ ಸುವೇದ್ಯ | ಭಕುತ ಪರಿಪಾಲಾ೨
ಸ್ಮರಣೆ ಸುಖ ಸುಧೆ ಸುರಿದು | ಶರಧಿಭವ ಉತ್ತರಿಸೊಮರುತಾಂತರಾತ್ಮಕನೆ | ಕಾರುಣ್ಯ ಮೂರ್ತೇಆರುಹಲೇನಿಹುದಿನ್ನು | ಸರ್ವಜ್ಞ ನೀನಿರಲುಮೊರೆಇದನ ಸಲಿಸು ಗುರು | ಗೋವಿಂದ ವಿಠಲ೩

೫೦೦
ಅನಂತಗಿರಿವಿಠಲ | ಪಾಲಿಸೋ ಇವಳಾ ಪ
ಗುಣಪೂರ್ಣ ಶ್ರೀಹರಿಯೆ | ಬೇಡುವೆನು ಧೊರೆಯೇ ಅ.ಪ.
ಸಿದ್ಧಿಸುತ ಶಿಷ್ಯತ್ವ | ಶುದ್ಧ ಸ್ವಪ್ನದೊಳೀಕೆಉದ್ಧಾರಕೆಂದೆನುತ | ಪ್ರಾರ್ಥಿಸುತ್ತಿಹಳೋ |ಮಧ್ವರಮಣನೆ ದೇವ | ಸಿದ್ದಾಂತ ಸಾರವನುಬುದ್ದಿಗೇ ನಿಲುಕಿಸೋ | ಭದ್ರಮೂರುತಿಯೆ ೧
ಪ್ರಾಚೀನ ದುಷ್ಕರ್ಮ | ಮೋಚನೆಗೆ ಮನಮಾಡೋವಾಚಾಮ ಗೋಚರನೆ | ಖಚರಾರಿ ವಂದ್ಯನೀಚೊಚ್ಚ ತರತಮವ | ವಾಚಿಸುತ ಕರ್ಮಗಳಪಾಚಿಯನೆ ಕಳೆಸವ್ಯ | ಸಾಚಿ ಸಖದೇವಾ ೨
ಹರಿಪಾದ ರತಿ ಕೊಟ್ಟು | ಹರಿ ಗುರು ಸೇವೆಗಳನಿರುತಗೈಯುವ ಮನವೆ | ಪರಿಪಾಲಿಸ್ಹರಿಯೇಅರವಿಂದನಾಭಹರಿ ಸರ್ವ ಸತ್ಸಾಧನವನೆರವೇರಿಸೆಂದೆನುತ | ಪ್ರಾರ್ಥಿಸುವೆ ಹರಿಯೇ ೩
ಜ್ಞಾನಾನು ಸಂಧಾನ | ಮಾಣದಲೆ ಇತ್ತಿವಳಧ್ಯಾನ ಮಾರ್ಗಕೆ ತಂದು | ಮೌನಿ ಜನ ವಂದ್ಯಾಸಾನುರಾಗದಿ ನಿನ್ನ | ಹೃದಯ ಗಹ್ವರದಲ್ಲಿಕಾಣುವ ಸುಸಾಧನವ | ನೀನೇ ಮಾಡಿಸೊ ಹರಿಯೇ ೪
ಸರ್ವಾಂತರಾತ್ಮಕನೆ | ದುರ್ವಿ ಭಾವ್ಯನೆ ದೇವಸರ್ವಕರ್ಮದಿ ನಿನ್ನ | ಸಂಸ್ರ‍ಕತಿಯ ನಿತ್ತುದರ್ವಿಜೀವಿಯ ಕಾಯೋ ಸರ್ವೇಶ ಶ್ರೀಹರಿಯೆಶರ್ವನೊಡೆಯನೆ ಗುರು | ಗೋವಿಂದ ವಿಠಲಾ ೫

೫೦೨
ಅನಂತಪದ್ಮನಾಭ | ವಿಠ್ಠಲನೆ ನೀನಿವನಅನಂತ ಜನ್ಮದ ಪಾಪ | ಕಳೆದು ಸಲಹೋ ಪ
ಗುಣಗಣಾರ್ಣವ ಸ್ವಾಮಿ | ಪೂರ್ಣಕರುಣೆಯೆಂದುನಿನಗೆ ನಾ ಬಿನ್ನೈಪೆ | ಸತತ ಹರಿಯೇ ಅ.ಪ.
ಪಂಚ ಪರ್ವಾಖ್ಯ | ಅಜ್ಞಾನ ಮೋಹಗಳ ತವಸಂಚಿಂತನೆಯ ಕೊಟ್ಟು | ಹಂಚಿ ದೈತ್ಯರಿಗೇ |ಸಂಚಿತಾಗಮ ಕಳೆವ | ಸಂಚುಗಳ ನೀ ತೋರಿವಾಂಛಿತಪ್ರದನಾಗೊ | ಅಂಚೆವಹ ಪಿತನೇ ೧
ಕಾಮ ಜನಕ ಸ್ವಾಮಿ | ಮಾಮನೋಹರ ದೇವಕಾಮ ಕ್ರೋಧಗಳಳಿದು | ಕಾಪಾಡೊ ಇವನಾ |ಭೀಮ ಭವ ತಾರಕವು | ನಾಮಸ್ರ‍ಮತಿಯೆಂಬಮೃತಯಾಮಯಾಮಕೆ ಉಣಿಸಿ | ರಾಮನೇ ಸಲಹೋ ೨
ಮೂರೆರಡು ಭೇದಗಳು ತಾರತಮ್ಯ ವನರುಹಿಸಾರತಮ ನೀನೆಂಬ | ಸುಜ್ಞಾನವೀಯೋ |ಕಾರಣಿಕ ಶ್ರೀಹರಿಯೆ | ವೈರಾಗ್ಯ ಧನದಿ ಸಂಸಾರ ನಿಸ್ಸಾರೆಂಬ | ಸನ್ಮತಿಯ ನೀಯೋ ೩
ದಾಸನಿವನೆಂದೆನುತ | ನೀ ಸಲಹ ಬೇಕಿವನಈಶಾದಿ ದಿವಿಜೇಡ್ಯ | ಶೇಷಶಾಯೀಕ್ಲೇಶ ಆನಂದಗಳು | ಶ್ರೀಶ ನಿನ್ನಿಂದೆಂಬಈಸು ಸನ್ಮತಿ ಕೊಟ್ಟು | ನೀ ಸಲಹಬೇಕೊ೪
ಸರ್ವವ್ಯಾಪ್ತ ಸ್ವಾಮಿ | ನಿರ್ವಿಕಾರನೆ ದೇವಸರ್ವಜ್ಞ ನೀನಿರಲು | ನಾ ಪೇಳ್ವುದೇನೋದರ್ವಿ ಜೀವನ ಕಾವ | ಸರ್ವಭಾರವು ನಿಂದುಸರ್ವ ಸುಂದರ ಗುರು ಗೋವಿಂದ ವಿಠಲಾ ೫

೫೦೩
ಅನಂತಶಯನ ವಿಠಲಾ | ಕಾಪಾಡೊ ಇವಳಾ ಪ
ಗುಣಪೂರ್ಣ ನಿತ್ಯಾತ್ಮ | ಸೌಂದರ್ಯ ಸಾರ ಅ.ಪ.
ತಾಪತ್ರಯಗಳು ಎಂಬ | ಕೂಪಾರದಲಿ ಬಿದ್ದು ಶಾಪಕೊಳಗಾಗಿ ಹಳ ಕಾಪಾಡಬೇಕೊದ್ರೌಪದಿಯವರದ ಕರು | ಣಾಪಯೋನಿಧಿಹರೆಯೆನೀ ಪೊರೆಯದಿರಲನ್ಯ | ಕಾಪಾಡ್ವರ್ಯಾರೊ ೧
ತೈಜಸನೆ ನೀನಾಗಿ | ಸೂಚಿಸಿಹ ಅಂಕಿತವಯೋಜಿಸಿಹೆ ಇವಳೀಗೆ | ಅವ್ಯಾಜ ಕರುಣೀಪ್ರಾಜ್ಯ ಎನ ಸಂಸಾರ | ಗೌಜು ಕಳೆಯಲ್‍ವೆನ್‍ತ್ರ್ಯಜಗದ್ವಾಪನೆ | ವಾಜಿವದನಾಖ್ಯ ೨
ಕರ್ಮಾಕರ್ಮಗಳ | ಮರ್ಮಗಳ ತಿಳಿಸುತ್ತಪೇರ್ಮೆಯಲಿ ಪತಿಸೇವೆ | ಕರ್ಮಪ್ರಾಧಾನ್ಯಧರ್ಮವನೆ ತಿಳಿಸುತ್ತ | ಭರ್ಮಗರ್ಭನ ಪಿತನೆಕರ್ಮಬೀಜವ ಕಳೆಯೊ | ಬ್ರಹ್ಮಣ್ಯದೇವಾ೩
ಮರುತಾಂತರಾತ್ಮನೆ | ಮೂರೆರಡು ಭೇದಗಳತರತಮಂಗಳನರುಹಿ | ಪೊರೆಯೊ ಇವಳಾಅರುಹುವೆನೊ ಸರ್ವಜ್ಞ | ತರುಳೆಬಹುಭಕ್ತಿಯಂತೆಕರುಣಿಸೆಲೊ ಕೃಪಾಸಾಂದ್ರ | ಕಂಜಜಾನಯ್ಯ ೪
ಗಾವಲ್ಗಣೀ ವರದ | ಭಾವದಲಿ ಮೈದೋರಿನೀ ವೊಲಿಯೆ ಬಿನ್ನಪದೆ | ಗೈಯೆ ಶ್ರೀಹರಿಯೆಕೋವಿದೊತ್ತಂಸ ಗುರು | ಗೋವಿಂದ ವಿಠಲನೆಕಾವ ಕರುಣಿ ಎಂದು | ಪ್ರಾರ್ಥಿಸುವೆ ಹರಿಯೆ ೫

೧೧
ಅನಿಲ ಹೃತ್ಕಮಲಸ್ಥ | ಮುನಿ ವೇದವ್ಯಾಸಎನಗಿನ್ನು ತವಧ್ಯಾನ | ಸುಖವೀಯೊ ಶ್ರೀಶಾ ಪ
ಚಿದಚಿದ್ವ ಲಕ್ಷಣನೆ | ಚಿತ್ರ ಚಾರಿತ್ರನೇಚತುರಾಸ್ಯ ಪಿತ ನೀನು | ಸುರ ಚಕ್ರವರ್ತೀ |ಚತುರ ರೂಪವ ಧರಿಸಿ | ಚತುರ ವ್ಯೂಹವ ರಚಿಸಿಚತುರ ವಿಧ ಸೃಷ್ಟಿಯನು | ಚತುರ ವಿರಚಿಸಿದೇ೧
ಮುನಿ ಪರಾಶರ ತನುಜ | ಶ್ರೀನಿಕೇತನ ಹರಿಯೆಎನಗರುಹು ವೇದಾರ್ಥ | ವೇದವೇದ್ಯಾ |ಘನ ಮಹಿಮ ಕೋಟಿ | ನಿಖಿಲಾಂಡ ನಾಯಕನೆಅನಘ ನೀ ಸಲಹಯ್ಯ | ಕಪಿಲ ರೂಪಾತ್ಮ ೨
ಸಚ್ಛಾಸ್ತ್ರ ಕರ್ತೃ ಸತ್ | ಸೂತ್ರಗಳ ನಿರ್ಮಾತೃಸಚ್ಛಾಸ್ತ್ರ ಭಾವಗಳ | ಅರುಹೆ ವಿಬುಧರಿಗೇ |ಮತ್ಸ್ಯಾದಿ ರೂಪನಿ | ನ್ನಿಚ್ಛೆಯಿಂದಲಿ ಪೊಂದಿವತ್ಸರ್ಗೆ ಭೋದಿಸಿದೆ | ಸಚ್ಚಿದಾನಂದಾ ೩
ಮೂಲ ಪ್ರಕೃತಿಯ ಮಾನಿ | ಮಹಾಲಕ್ಷ್ಮಿ ನಿನ್ನಯಶೀಲಗಳನನುಸರಿಸಿ | ಸೇವಿಸುವಳೂ |ಪ್ರಲಯ ಕಾಲದಿ ನಿನ್ನ | ಒಲುಮೆಗೋಸುಗ ವಟದಎಲೆಯ ರೂಪದಿ | ಮಲಗಲನು ವಾದಳಯ್ಯ ೪
ಬಾದರಾಯಣ ಮೂರ್ತಿ | ಬದರಿ ಕ್ಷೇತ್ರದಿ ಪೂರ್ಣಭೋದರ ಸುಸೇವೆಯನೆ | ಸತತ ಕೊಳುತಾ |ಮೋದ ಗುಣ ಪೂರ್ಣ ಗುರು | ಗೋವಿಂದ ವಿಠ್ಠಲನೆಹೇ ದಯಾಂಬುಧೆ ನಿನ್ನ | ಪಾದಾಬ್ಜ ತೋರೋ ೫

ಎಲ್ಲ ಯತಿಗಳಿಗೂ ಮಾರ್ಗದರ್ಶಕರಾಗಿರುವ
೩೩೮
ಅನಿಲ ಹೃತ್ಕುಮುದೇಂದು | ವೇದ ವ್ಯಾಸಾಎನಗಿನ್ನು ತವ ಧ್ಯಾನ | ಸುಖವೀಯೊ ಶ್ರೀಶಾ ಪ
ಚಿದ ಚಿದ್ವಿಲಕ್ಷಣನೆ | ಚಿತ್ರ ಚಾರಿತ್ರನೇಚತುರಾಸ್ಯ ಪಿತ ನೀನು | ಸುರ ಚಕ್ರವರ್ತೀ |
ಚತುರ ರೂಪವ ಧರಿಸಿ | ಚತುರ ವ್ಯೂಹವ ರಚಿಸಿಚತುರ ವಿಧ ಸೃಷ್ಟಿಯನು | ಚತುರ ವಿರಚಿಸಿದೇ ೧
ಮುನಿ ಪರಾಶರ ತನುಜ | ಶ್ರೀನಿಕೇತನ ಹರಿಯಎನಗರುಹು ವೇದಾರ್ಥ | ವೇದ ವೇದ್ಯಾ |ಘನ ಮಹಿಮಕೋಟಿ | ನಿಖಿಲಾಂಡ ನಾಯಕನೆಅನಘ ನೀ ಸಲಹಯ್ಯ | ಕಪಿಲ ರೂಪಾತ್ಮಾ ೨
ಸಚ್ಛಾಸ್ತ್ರ ಕರ್ತೃಸತ್ | ಸೂತ್ರಗಳ ನಿರ್ಮಾತೃಸಚ್ಛಾಸ್ತ್ರ ಭಾವವರುಹೆ | ಬುಧ ಜನರಿಗೇ |ಮತ್ಸ್ಯಾದಿ ರೂಪ ನಿ | ನ್ನಿಚ್ಛೆಯಿಂದಲಿ ಪೊಂದಿವತ್ಸರ್ಗೆ ಬೋಧಿಸಿದೆ | ಸಚ್ಚಿದಾನಂದಾ ೩
ಮೂಲ ಪ್ರಕೃತಿಯ ಮಾನಿ | ಮಹಲಕ್ಷ್ಮೀ ನಿನ್ನಯಶೀಲಗಳನನುಸರಿಸಿ | ಸೇವಿಸುವಳೂ |ಪ್ರಳಯ ಕಾಲದಿ ನಿನ್ನ | ಒಲುಮೆಗೋಸುಗ ವಟದಎಲೆಯ ರೂಪದಿ ಮಲ | ಗಲನುವಾದಳಯ್ಯ ೪
ಬಾದರಾಯಣ ಮೂರ್ತಿ | ಬದರಿ ಕ್ಷೇತ್ರದಿ ಪೂರ್ಣಬೋಧರ ಸುಸೇವೆಯನು | ಸ್ವೀಕರಿಸುವೇ |ಮೋದಗುಣ ಪೂರ್ಣ ಗುರು | ಗೋವಿಂದ ವಿಠಲನೇಹೇ ದಯಾಂಬುಧೇ ನಿನ್ನ | ಪಾದಾಬ್ಜ ತೋರೋ ೫

೧೦
ನೈವೇದ್ಯ ಸಮರ್ಪಣೆ ಸುಳಾದಿ
ಅನ್ನಾಭಿಮಾನಿ ಚಂದ್ರನಲ್ಲಿ ವೀರ್ಯ ಹಿ-ರಣ್ಯಾ ದೇವಿಯವರೊಳಗೆ ಸಿರಿ ಕೇಶವನ್ನ ರೂಪ ಚಿಂತಿಸುತಲಿ ಮುಂದೆ ಪರಮಾನ್ನದೊಳು ಭಾರತಿ ಮುಖ್ಯ ಪ್ರಾಣ – ಹರಿಣಿದೇವಿ ನಾರಾಯಣನು ಇಹ ಮುನ್ನ ರವೆ ಭಕ್ಷದೊಳಿನ ದ್ಯುತಿ ಸತ್ಯಾ – ಮಾಧವನ್ನ ಘೃತಕೆ ಲಕ್ಷ್ಮೀ ಪವನ ನಿತ್ಯಾ ಗೋವಿಂ-ದನ್ನ ನೆನೆದು ಕ್ಷೀರಕೆ ಸರಸ್ವತಿ ಜೀವೊತ್ತು-ಮನ್ನ ತಿಳಿ ನಂದಾದೇವಿಯು ಅಲ್ಲಿವಿಷ್ಣು ಮಂಡಿಗೆಯೊಳಿನ ವಾಯು ಬ್ರಹ್ಮ ಮಾದೇವಿಯನ್ನ ತಿಳಿಯೊ ಅಲ್ಲಿ ಮದುಸೂಧನನು ಇಹಬೆಣ್ಣೆಯೊಳ್ಮಾರುತ ಆನಂದ ವಾರಿಧಿ-ಯನ್ನೂ ಸುಖ ತ್ರಿವಿಕ್ರಮ ದಧಿ ವರುಣಧನ್ಯ ಸುಗಂಧಿನೀ ವಾಮನ್ನರೂಪವನ್ನು ಚಿಂತಿಸು ಸೂಪಕೆ ಗರುಡ – ನೀರನ್ನ ತಿಳಿದು ಸುಂದರಿ ಶ್ರೀಧರನೆನ್ನುಪನ್ನಂಗಶಯ್ಯ ಗುರು ಗೋವಿಂದ ವಿಠಲನುಮನ್ನಿಸಿ ಕೈಗೊಂಡು ಉನ್ನತ ಪದ ಕೊಡುವ ೧
ಹುಳಿ ತೊವ್ವೆಯಲಿ ಸೌಪರಣಿ ಮತ್ತೆ ಪ್ರತಾಪಓಲೈಸು ಸುಂದರೀ ಶ್ರೀಧರ ದೇವನ್ನತಿಳಿ ಪತ್ರ ಶಾಖಕೆ ಮಿತ್ರನೆಂಬಿನನಗಾಳಿ ದೇವನೆ ಸಾಧು ಅವನೊಳಗೆ ವಿದ್ಯಾಒಲಿಸು ಹೃಷಿಕೇಶ ದೇವನ್ನಫಲಶಾಖಕೆ ಶೇಷ ಶೂರಾಧಭಿನ ಸು-ಶೀಲಾದೇವಿ ಪದ್ಮನಾಭನ್ನ ತಿಳಿದುಹುಳಿ ಸೊಪ್ಪು ಗೊಜ್ಜು ಸಾರು ಇವುಗಳೊಳ್‍ಶೈಲಜೆ ಕಪಿ ಸಲಕ್ಷಣಾ ದಾಮೋದರತಿಳಿ ಅನಾಮ್ಲ ಸಪ್ಪೆ ಭಕ್ಷಗಳಲ್ಲಿ ರುದ್ರ – ಅ-ನಿಲನು ಜಗತ್ಪತಿ ಜಯಲಕ್ಷ್ಮೀ – ಇವಳಲ್ಲಿ ಶ್ರೀ ಜಯಾಪತಿಯ ಚಿಂತಿಸೆವಲಿವ ಗುರುಗೋವಿಂದ ವಿಠಲ ಆನಂದ ೨
ಶರ್ಕರ ಗುಡ ಭಕ್ಷ ಇಂದ್ರನು ಮಹಾಬಲಲಕ್ಕೂಮಿಯಾ ರೂಪ ಶ್ರೀ ವಾಸುದೇವನು ಸೋ-ಪಸ್ಕರಕೆ ಗುರು ಆಕಾಶಾಶ್ರಯ ಮನೋಜವರಲೆಕ್ಕಿಸು ಕಮಲೆಯ ಪ್ರದ್ಯುಮ್ನ ದೇವನಮಿಕ್ಕ ಕಟು ದ್ರವ್ಯವು ಖಾರಕೆ ಯಮಧರ್ಮಸತ್ಕರಿಸೆ ಜಿತನ ಪದ್ಮಾನಿರುದ್ದರಸೊಕ್ಕವರರಿ ಗುರು ಗೋವಿಂದ ವಿಠಲಯ್ಯಸಿಕ್ಕಾ ಸುಳಿವ ಮುಂದೆ ಕಕ್ಕುಲಾತಿಯ ಸಲ್ಲ ೩
ಸಾಸಿವೆ ಜೀರಿಗೆ ಏಲಾದಿ ಪರಿಮಳ ಇಂಗು – ಮೆ-ಣಸಿನಲಿ ಮನ್ಮಥ ಮಹೋತ್ಸಾಪ ಚಿತ್ರಕರ್ಮವಾಸವು ಕಮಲೆಯು ಅಧೋಕ್ಷಜನು ಅಲ್ಲಿಮಾಷ ತಿಲ ಕೂಷ್ಮಾಂಡ ಚಣಕ ಬೋಂಡವುಭಕ್ಷ ಬುರಿ ಬುರಿಯೊಳು ದಕ್ಷ ಪ್ರಜೇಶ ಪ್ಲವಹರ್ಷಭ ಸುರ ವೀಕ್ಷಿತ ಲಕ್ಷ್ಮೀನರಸಿಂಹನುಮಾಷ ಪಿಷ್ಠವು ದೋಸೆ ಹಪ್ಪಳ ಸಂಡಿಗೆಲೇಸು ಮೋದಕದೊಳ್ಮನು ಮಹಯೋಗ – ಮಹವಪುಷ ವೃಷಾಕಪಿ ಅಚ್ಯುತ ದೇವನ್ನ ಚಿಂ-ತಿಸು ಉಪ್ಪು ಉಪ್ಪಿನಕಾಯಿ ನಿರಋತಿ ಚಿರಚೀವಿವಾಸುವು ಧನ್ಯಾದೇವಿ ಜನಾರ್ಧನನು ಫಲರಸವು ಫಲೋದಕ ಶೀಕರಣೀತ್ಯಾದಿರಸದೊಳ ಹಂಪ್ರಾಣ ಣ್ರಾಣನು ಆದ್ವಯರುಭಾಸಿಸುವಳು ವೃದ್ಧೀದೇವಿ ಉಪೇಂದ್ರನುದೋಷದೂರನು ಗುರು ಗೋವಿಂದ ವಿಠಲ ಪ್ರ-ಕಾಶಿಸುವನು ಬಿಡದೆ ಈಪರಿ ಗುಣಪರ್ಗೆ ೪
ಮಂಗಳ ವೀಳೈಯೋಳ್ ಗಂಗಾದೇವಿಯ ಪ್ಲವಂಗ ಶುಚೀ ಸದನ ಯಜ್ಞಾದೇವಿಯರರಂಗನು ಹರಿ ರೂಪದಲ್ಲಿರುವನು ಉತ್-ತುಂಗ ಸ್ವಾದೋದಕದೊಳಗಿರುವನು ಬುಧನುಪಿಂಗ ಕಣ್ಣಿನ ಮತಿಮತನ ಸುಧಾದೇವಿಅಂಗಜನಯ್ಯ ಶ್ರೀಕೃಷ್ಣನ್ನಧೇನಿಸೆಗಂಗಾಜನಕ ಗುರು ಗೋವಿಂದ ವಿಠಲನುಮಂಗಳ ಕೊಡುವನು ಸಂದೇಹವಿಲ್ಲದೆ೫
ಭೋಜನ ದ್ರವ್ಯದಿ ಯೋಚಿಸ್ಯಭಿಮಾನಿಗಳಭೋಜ್ಯ ಗುರು ಗೋವಿಂದ ವಿಠಲನೆ ಭೋಜಕ೬

೧೨
ಅಪಮೃತ್ಯು ಪರಿಹರಿಸೊ ನಾರಸಿಂಹಕೃಪಣ ವತ್ಸಲ ಹರಿಯೆ ಬಿನ್ನವಿಪೆ ನಿನಗೇ ಪ
ಅನ್ಯರಿಗೆ ಮೊರೆ ಇಡೆನೊ | ನಿನ್ಹೊರತು ಇನ್ನಿಲ್ಲಮನ್ಯು ಸೂಕ್ತೋದಿತನೆ | ಎನ್ನ ಶಿಷ್ಯನಿಗೇಬನ್ನ ಬಡಿಸುವ ರೋಗ | ವನ್ನು ಮೋಚಿಪುದಯ್ಯಅನ್ನಂತ ಮಹಿಮ ಹರಿ | ನಿನ್ನ ಕೃಪೆ ತೋರೋ ೧
ಜ್ವರ ಹರಾ ಹ್ವಯನೆಂದು | ವರ ವೇದಮಾನಿಗಳುಪರಿಪರಿಯಲಿಂ ನಿನ್ನ | ಸ್ತೋತ್ರ ಗೈವುದನಅರಿತು ನಿನ್ನಲಿ ನಾನು | ಮೊರೆಯ ಇಡುವೆನೊ ಹರಿಯೆಪರಿಪೊಷಿಸೋ ಇವನ | ಕರುಣರಸ ಪೂರ್ಣ ೨
ತಂದೆ ತಾಯಿಯು ನೀನೇ | ಬಂಧು ಬಳಗವು ನೀನೇಇಂದು ಅಂದಿಗು ನೀನೇ | ಎಂದೆಂದು ನೀನೇ |ಕಂದನನು ಸಲಹೆಂದು | ಸಿಂದುಶಯನನೆ ಬೇಡ್ವೆಇಂದಿರಾಪತಿ ಗುರು | ಗೋವಿಂದ ವಿಠಲಾ೩

೧೩
ಅಪವಾದ ವದಗಿಹುದು | ಕೃಪಣ ಶಿಷ್ಯನಿಗೇಅಪವರ್ಗಪ್ರದ ಹರಿಯೆ | ಅಪವಾದ ಕಳೆಯೋ ಅ.ಪ.
ದಾಸನಾದವನು ನಿ | ರ್ದೋಷಿ ಎನುವುದು ನಿಜದಾಸನೆನೆ ಹನುಮಂಗೆ | ಲೇಸು ಸಲ್ಲುವುದೋ |ದಾಸರನುಯಾಯಿ ನರ | ದೂಷಣೆಗೆ ಒಳಗಾಗಿಕ್ಲೇಶ ಪಡುವುದು ಉಚಿತೆ | ಶ್ರೀಶ ಸರ್ವೇಶಾ ೧
ಫಲವು ತುಸು ಕೆಟ್ಟಿರಲು | ಆ ಉಪಭಾಗವ ಬಿಸುಟುಮೆಲುವುದಿಲ್ಲವೆ ಫಲವ | ಹಲವು ಜನರೂಕಲಿಮಲಘ್ನನೆ ಹರಿಯೆ | ಕಲುಮಷವನೆ ಕಳೆಯುತ್ತಕಲುಷ ದೂರನ ಗೈಯ್ಯೋ | ಬಲು ದಯಾ ಪೂರ್ಣಾ ೨
ಶಿರಿಮಾಧವಾ ಭಿನ್ನ | ಗುರು ಗೋವಿಂದ ವಿಠಲಕರುಣಾಪಯೋನಿಧಿಯೆ | ಸರ್ವಾಂತರಾತ್ಮತರಳಗೊದಗಿಹ ವಿಪದ | ಪರಿಹರವ ಗೈಯ್ಯುತ್ತಕರುಣಿಸೆನೆ ಮನಶಾಂತಿ | ಹರಿಯೆ ಭಿನ್ನವಿಪೇ ೩

೧೪
ಅಬ್ಜಭವಪಿತ | ಮದ್ಗುರ್ವಂತರ್ಯಾಮಿ | ಸಲಹಯ್ಯ ಕುಬ್ಜ ಮೂರುತಿ | ಯಾದ ಗುರು | ಗೋವಿಂದ ವಿಠಲಯ್ಯ ||ಪ|
ಈಶ ತಂದೆ ವೆಂಕ | ಟೇಶ ವಿಠಲನ | ದಾಸ ಸಹವಾಸ |ದೋಷ ರಾಶಿಯ | ನಾಶ ಗೈಸಿತು | ಶ್ರೀಶ ಕೇಶವನೇ ೧
ಮರಣ ಸಮಯದಿ | ಚರಣ ಪುಷ್ಕರ | ಭಜಿಸಿದ ಜಮಿಳನ |ಕರುಣದಿಂದಲಿ | ಮರೆದ ವೋಲ್ | ಎನ್ನ ಮನಕೆ ಬಾ ನಾರಾಯಣ ೨
ಭೇದ ಮತವೆಂ | ಬಬ್ಧಿಯಲಿ | ಉದಿಸಿವೆನು ಕಾಣಯ್ಯ |ಮಧ್ವಪತಿ | ಮದ್ಭಾರ ನಿನ್ನದು | ಸಲಹೊ ಮಾಧವನೆ ೩
ಗೋವಿದಾಂಪತಿ | ಗೋಪ ಪಾಲಕ | ಶ್ರೀಶ ಗೋವಿಂದಮಾವ ಕಂಸನ | ಕೊಂದಸಿರಿ | ಗೋವಿಂದ ಸಲಹಯ್ಯ ೪
ಜಿಷ್ಣು ಸಖ ಸಿರಿ | ಕೃಷ್ಣ ಬೇಡುವೆ | ಕಷ್ಟ ಬಿಡಿಸಯ್ಯ |ವೃಷ್ಟಿಕುಲ ಸಂ | ಪನ್ನ ಪಾವನ | ವಿಷ್ಣು ಮೂರುತಿಯೆ ೫
ವೇದಗಮ್ಯ | ದಯಾಪಯೋನಿಧಿ | ಸಾಧು ವಂದಿತನೆ |ಮೋದದಿಂ | ತವಪಾದ ಪೂಜಿಪೆ | ಪಾಲಿಸೈ ಮಧುಸೂಧನ ೬
ಸವೆದು ಪೋಗುವ | ಕಾಯ ಮಮತೆಲಿ | ಕಟ್ಟೆ ಧರ್ಮಾತ್ಮ |ಭವದ ಭವಣೆಯ | ಬಿಡಿಸುವುದು | ಬಲಿವರದ ತ್ರಿವಿಕ್ರಮ ೭
ವಿಮಲ ಸತ್ಕಲ್ಯಾಣ | ಗುಣ ನಿಸ್ಸೀಮ | ಸುಜ್ಞಾನಾಅಮರಾರಿಯ ಧ್ವರ | ಕೆಡಿಸಿ ಉಳಿಸಿದೆ | ಶೀಲ ವಾಮನ ೮
ಹೃದಯ ಶೋಭಿತ | ಮೋದಮಯ | ಮಧ್ವಾಂತರಾತ್ಮಕನೇ |ಆದಿಮೂರುತಿ | ಸಾಧು ವಂದಿತ ಕಾಯೋ ಶ್ರೀಧರನೇ ೯
ಅಸುರ ಭಂಜನ | ಬಿಸಜ ಭವ ಪಿತ | ಈಶ ಸರ್ವೇಶಾ |ಒಸೆದು ಬೇಡುವೆ | ಕಸರು ಕರ್ಮವ | ಹರಿಸೋ ಹೃಷಿಕೇಶ ೧೦
ಬದ್ಧ ಜೀವನ | ಅಬದ್ಧ ಮಾಡಲು | ತಿದ್ದಿ ಸೃಜಿಸಿದೆಯೋ |ಸದ್ಗುರುವೆ ಮತ್ | ಪೊದ್ದಿಕೆಯ ಕಳೆ | ಪದ್ಮನಾಭನೆ ೧೧
ಪ್ರೇಮ ಪೂರ್ಣನೆ | ಸಾಮ ಸನ್ಮುತ | ಸಿರಿ ಮನೋಹರ |ಧಾಮತ್ರಯ ಸು | ತ್ರಾಮ ವಂದಿತ | ಪಾಲಿಸೈ ದಾಮೋದರ ೧೨
ಪಂಕಜಾಸನ | ವಿನತ ಎನ್ನಮನ | ಪಂಕ ಕಳೆಯಯ್ಯ |ವೆಂಕಟಾ ಬಿರು | ದಾಂಕ ಜಯ ಜಯ | ಸಂಕರುಷಣ ೧೩
ವಾಸವಾದಿ ದ್ವಿ | ಜೇಶ ಪೂಜ್ಯನೆ | ವಿಶ್ವ ವ್ಯಾಪಕನೇಶ್ರೀಶ ಸದ್ಮನೆ | ವಾಸುದೇವನೆ | ಪೋಷಿಸೈ ಪರಮಾತ್ಮನೇ ೧೪
ಮುದ್ದು ಮೋಹನ | ಹೃದ್ಯು ನೀನನ | ವದ್ಯ ನಿರವದ್ಯ |ಸದ್ಯದಲಿ | ಆಪನ್ನ ಪಾಲನೆ | ಪೊರೆಯೊ ಪ್ರದ್ಯುಮ್ನ ೧೫
ಅನಘ ನಿನ್ನಯ | ಚರಣ ಕೆರಗುವೆ | ಗುಣವನಧಿ ಪೊರೆಯಯ್ಯಾ |ಮನವಹರ್ನಿಸಿ | ನಿಲ್ಲಿಸೈ ನಿನ್ನಲ್ಲಿ ಅನಿರುದ್ಧ ೧೬
ಕರಿವರನು ತವ | ಚರಣ ಸರಸಿಜ | ನಂಬಿ ಮೊರೆಯಿಡಲು |ಕರದ ಚಕ್ರದಿ | ತರಿದು ನಕ್ರನ | ಬಿಸುಟ ದೊರೆ ಪುರುಷೋತ್ತಮ ೧೭
ವಿಧಿಭವಾದಿ | ಸುರೇಂದ್ರ ವಂದಿತ | ಪಾಹಿ ಪದ್ಮಾಕ್ಷ |ಬದಿಗ ನೀಯನ | ದಣಿಪರೇ ದರ ಚಕ್ರಧರ | ಅಧೋಕ್ಷಜ೧೮
ತರಳ ಕರೆಯಲು | ಭರದಿ ಕಂಬದಿ | ಬಂದ ತ್ರಿಪದಾಹ್ವದುರುಳ ಹಿರಣ್ಯನ | ತರಿದು ಭಕ್ತನ | ಸಲಹಿದ್ಯೋ ನರಸಿಂಹನೆ ೧೯
ನಿಚ್ಚತವ | ಸಚ್ಚರಿತೆಯನು | ಉಚ್ಚರಿಸಿ ಪೊರೆಯಯ್ಯ |ಮಚ್ಛ ಕಚ್ಛಪ | ರೂಪಿ ಅಚ್ಯುತ | ಸಲಹೊ ಚ್ಯುತಿ ದೂರ | ೨೦
ಸಾನುಕೂಲವು | ಸಕಲ ಸಾಧನ | ನಿನ್ನ ಭಜಿಸುವಗೇ ಜ್ಞಾನಗಮ್ಯ | ಅನಾದಿ ರೋಗವ | ನೀಗೋ ನೀ ಜನಾರ್ಧನ ೨೧
ಸಾಂದ್ರ ನೀಲವ | ಮೇಘ ವರ್ಣನೆ | ಕಾಯೊ ಕೃಪೆ ಸಾಂದ್ರ |ಚಂದ್ರ ರವಿ | ಸ್ಮರ ಕೋಟಿ ಸುಂದರ | ಪಾಹಿ ಉಪೇಂದ್ರ ೨೨
ಮರದಿ ಎಂಜಲ | ಸವಿದು ಶಬರಿಯ | ಕಾಯ್ದೆ ಮುರವೈರಿ ತ್ವರದಿ ತ್ವತ್ಪದ | ವನಜ ಕಾಂಬುವ | ಹದನರುಹು ಶ್ರೀಹರಿ ೨೩
ಜಿಷ್ಣು ಸಖ | ಶಿಷ್ಟೇಷ್ಟಪರಿ | ಹರಿಸಯ್ಯ ಮುತೃಷ್ಣಾ |ಕೃಷ್ಣೆ ಗಕ್ಷಯ | ವಸನ ದಾತನೆ | ಕಾಯೊ ಶ್ರೀ ಕೃಷ್ಣ ೨೪
ನಿರುತ ನಿನ್ನಯ | ಚರಣ ಪುಷ್ಕರ | ಮಧುಪನೆನಿಸಯ್ಯಸ್ಮರಿಪರಘ | ಪರಿಹರಿಪ ಗುರು | ಗೋವಿಂದ ವಿಠಲಯ್ಯಾ | ೨೫

೩೦೦
ಅಭಿಮಾನ ಕಳೆವಂಥ | ಸುಲಭ ಮಾರ್ಗವನೇ |ಪ್ರಭುವೆ ಹರಿ ನಿನ್ನ ಸ್ರ‍ಮತಿ | ಸರ್ಬದಲಿ ಈಯೋ ಪ
ಸೃಷ್ಟಿಯಲಿ ತಂದೆನ್ನ | ಇಷ್ಟ ಸಾಧನ ಗೈಯ್ಯೆಕೊಟ್ಟು ಕಾಯವ ಕರ್ಮ | ಸೃಷ್ಟಿ ನಡೆಸುವಲಿ |ಇಷ್ಟು ತತ್ವೇಶರನು | ಸುಷ್ಠು ಕರ್ಮವ ನಡೆಸೆಭ್ರಷ್ಟ ಎನ್ನಿಂದೆಂಬ | ಕರ್ತೃತ್ವದಲ್ಲಿರುವಾ ೧
ಅಮಿತ ಜನ ತತ್ವೇಶ | ರಮಿತ ಕರ್ಮವ ಗೈದುಪ್ರಮಿತರಾಗಿರಲವರು | ಕರ್ಮ ಫಲಗಳಿಗೇ |ಭ್ರಮಿತನಾಗುತ ಸರ್ವ | ಕರ್ಮಫಲ ಭೋಕ್ರ‍ತತ್ವಭ್ರಮವ ಪರಿಹರಿಸಯ್ಯ | ಕರ್ಮ ನಾಮಕನೇ ೨
ತನುನಿಷ್ಠ ತತ್ವೇಶರ | ಗಣಿತದ ಕರ್ಮಗಳತನು ತಮ್ಮ ಇಂದ್ರಿಯದಿ | ಅನುನಯದಿ ಗೈಯ್ಯೋ |ಎನ ತನುವು ಇಂದ್ರಿಯವೆ | ಕಾರಣವು ಎಂಬಂಥಹೀನ ಕಾರಕ ಸ್ವಾಮ್ಯ | ಮಾನವೆಂಬಂಥಾ ೩
ಹಲವು ತತ್ವರು ದೇಹ | ದಲಿ ನಿಂತು ಕರ್ಮಗಳಹಲವು ಗೈಯುತ ಹರಿಗೆ | ಒಲಿದು ಅರ್ಪಿಸುತಿರೇ |ಫಲವು ಹಂಚಿಪ ಹರಿಯ | ಫಲಸ್ವಾಮ್ಯ ತಿಳಿಯದಿಹತಿಳಿಗೇಡಿ ಯೆನ್ನ ಭ್ರಮ | ಒಲಿದು ನೀ ಕಳೆಯೋ ೪
ಅಹಿಕ ಪಾರತ್ರಿಕವು | ವಿಹಿತ ಸುಖವೆರಡರಲಿಅಹಿಕ ದುಃಖದ ವಿರಲು | ಬಹುದು ಮೋಕ್ಷೆರಿ ಬಾ |ಅಹಿತ ಮತಿ ಕಳೆಯುತ | ಶ್ರೀಹರಿಯೆ ನಿನ್ವೊಲಿಮೆಮಹಿತ ಮೋಕ್ಷದವೆಂಬ | ವಿಹಿತ ಮತಿ ಈ ಯೋ ೫
ವಿಷಯದಲಿ ಮೈ ಮೆರೆತು | ವಿಷಯೋಪ ಭೋಗಗಳೆಅಸಮ ಪುರುಷಾರ್ಥಗಳ | ಲೇಸು ಪ್ರದವೆಂಬಾ |ವಿಷಯಾಭಿಮಾನಗಳು | ನಶಿಪಂತೆ ನೀ ಮಾಡಿವಿಷಯಾದಿಗಳಿಗೆಲ್ಲ | ಈಶ ನೀವೆನೆ ತಿಳಿಸೋ ೬
ಕಕ್ಕಸದ ಅಭಿಮಾನ | ಷಟ್ಕಗಳ ನೀ ಕಳೆದುಅಕ್ಕರದಿ ತಾಯ್ತನ್ನ | ಮಕ್ಕಳನು ಪೊರೆವಂತೇ |ಲೆಕ್ಕಿಸದಲೆನ್ನಯ | ಲಕ್ಷ ಅಪರಾಧಗಳ ಕ್ಷಮಿಸಿಚೊಕ್ಕ ಗುರು ಗೋವಿಂದ | ವಿಠ್ಠಲನೆ ಸಲಹೋ ೭

೨೪೬
ಅರಣೀ ಗರ್ಭದಿಂ ಸಂಭವ | ಸುರ ಜೇಷ್ಠ ಭ್ರಾತಾಸುರಪತಿ ನುತ ವೈಭವ ಪ
ಶರಣರ ವರಪ್ರದ | ಪರಾಶರ ಭವ ಭವಸಿರಿವರ ವರ ಪ್ರಿಯ | ಪರಿ ಹರಿಸಾಮಯೆ ಅ.ಪ.
ಅಂಬಾರ ಮಣಾ – ಶಂಕರಾ | ಗೌರಿವರಾ |ಜಂಭಾಸುರ ಹರ – ಸುರ ವರ ||ಅಂಬುಜಾಸನ – ಕುವರಾ – ಗಂಗಾಧರಾ |ಹಂಬಲಿಸುವ – ಭಕ್ತರ ||ಶುಂಭ ನಿಶುಂಭರ | ಸಂಹರ ರಾಮನಅಂಬುಜ ಪದ ದ್ವಯ | ನಂಬಿದ ಭಕ್ತನೆ |ತುಂಬಿದ ಭಕುತಿಯ | ಹಂಬಲ ಹರಿಯಲಿಸಂಭ್ರಮದಲಿ ಕೊಡು | ಶಂಭು ವಂದಿಸುವೆ ೧
ಪ್ರಮಥರ ಪೋಷ-ಭೂತೇಶ-ಭುವನೆ೫ವ್ಯೋಮಕೆ೫-ಉಗ್ರೇಶ ||¸೫Àುನಸ ಮುನೀಶ – ಕೈಲಾಸ ವಾಸೇಶಅಮರಾರಿ ನಾಶ ಸತೀಶ ||ಕುಮತಿಗಳ್ಮೋಹಕ | ಕುಮತವ ವಿರಚಿಸಿರಮೆಯರಸಗೆ ಬಹು | ಪ್ರಮುದವ ಪಡಿಸಿದೆ |ಅಮರೋತ್ತಮ ನಿಮ | ವಿಮಲ ಪದಾಬ್ಜಕೆನಮಿಸುತ ಬೇಡುವೆ ಸನ್ಮತಿ ಪ್ರದನೇ ೨
ವಟು ವೇಷವಾ ಧರಿಸೀ – ಭಸ್ಮವ ಪೂಸಿಕುಟಲರಹಿತ ತೇಜಸೀ ||ಜಟೆ ನಿಚಯವ ಧರಿಸಿ – ಮಂಜುವಾಸೀಹಸ್ತದಿ ಪುಸ್ತಕ ಭೂಷೀ ||ರಚಿಸುತ ವೇದವ | ಕಟಗಳ ಧೂರ್ಜಟಿನಿಟಿಲಾಕ್ಷ ಸ್ವಪ್ನದಿ | ಎಟಕರ ಬೀಸುತಕುಟಲರಹಿತ ಗುರು | ಗೋವಿಂದ ವಿಠಲನ |ವಟುವೆನಿಸಿಹ ಶುಕ | ಶುಕಿ ಭವನೆನಿಸೀ ೩

೧೫
ಅರಿಯೆನೋ ನಿನ್ಮಾಯ | ಸದ್ವಪುಷ ಚಿನ್ಮಯ ಪ
ತೆರೆದ ಕಣ್ಣನು | ಗಿರಿಯಧರಿಸಿಹೆ | ಧರಣಿಕೆದರುವೆ | ತರಳನುಳುಹಿದೆವರಸು ವಟುವೇ | ಪರಶುರಾಮನೆಧರಣಿಜೆಯ ಪತಿ | ಗುರುಸುತ ಪ್ರದ | ಹರಿಯೆ ಬೌದ್ಧನೆ | ಪರಿ ಮಿಗಿಲು ಇಲ್ಲವೊಚೆಲ್ವ ಹಯವೇರುತ್ತ ಮ್ಲೇಂಛರ ಸದೆವವನೆ ಅ.ಪ.
ಎಂಥ ಮಹಿಮನೋ ನೀನು | ಶಿರಿರಮೆಯ ಮನಸಿಗುಕ್ರಾಂತಿಕಾರಕ ನೀನು | ಮಿಕ್ಕವರು ತಿಳಿವರೆ |ಸಂತನಲ್ಮೊಗ ನಿನ್ನ | ಇದು ನಿನ್ನ ಖೂನು ||ಕಂತುಜನಕನೆ ಪಂಥಭಿದ ಹರಿ ನಿಂತು ಓಡುವೆಅಂತ ಗಾಣದ | ನಂತ ಮಹಿಮನೆಸಂತ ಜನ ಪರಿ | ಪಂಥಿ ಬಾಧಕಕಂತುಹರ ಸಖ ಸೃಷ್ಟಿಕರ್ತನೆ | ಪ್ರಾಂತಗಾಣದ ಶಿರಿಸ್ತವನ ಕೊಂದನೆ ೧
ಸಮರು ನಿನಗ್ಯಾರು | ಹೇ ಶಿರಿರಮಣ ಮಮಕಾರವನು ಬಿಡಿಸಯ್ಯ | ವಿಮಲಮತಿ ನೀನೆ ಕೊಡಿಸಯ್ಯನಿಮಿನೃಪನ ಪೊರೆವಂತೆ ಪೊರೆಯಯ್ಯಕಮಲಜಾದಿಗಳಿಂದ ಸ್ತುತ್ಯನೆ | ಅಮಿತ ಮಹಿಮೋಪೇತ್ ಶಿರಿಹರಿ |ಸುಮತಿ ಸುಜನಾಂಬೋಧಿ ಚಂದಿರ | ಪ್ರಮಿತ ಜಗ ಸತ್ಕರ್ತ ಪ್ರಾಣನೇ ೨
ಹರಿಯೆ ನಿನ್ನಯ ರೂಪ | ನೋಡುವುದಕೆ ಇರುವುದವು ಅಪರೂಪ |ದೇವಾದಿ ವರ್ಣಿಸೆ | ಇರುತಿರುವೆ ಬಹುರೂಪ | ಆರು ಅರಿಯದ ರೂಪ ನೀರೊಳಿರುತಿಹೆ | ಭಾರಪೊತ್ತಿಹೆ | ಕೋರೆದಂತನೆ ನಾರಸಿಂಹನೇ ಪೋರ ವಟುವೆ | ವೀರರಾಮನೆ | ಕ್ರೂರ ಖಳಹನ ನಾರಿಯರ ವ್ರತವಳಿದು ತೇಜಿಯನೇರ್ದ ಗುರು ಗೋವಿಂದ ವಿಠಲ ೩

೨೪೫
ಅರ್ಚಿಸೊ – ಮನುಜ – ನೀನರ್ಚಿಸೊ ಪ
ಅರ್ಚಿಸೊ ಮನುಜ ನೀ ಶಿವನಾ | ನಮ್ಮಅಚ್ಯುತ ಪ್ರಿಯ ಸಖ ಹರನಾ | ಆಹಪೆಚ್ಚ ಪೇರ್ಮೆಲಿ ನಮ್ಮ | ಅಚ್ಯುತಾನಂಘ್ರಿ ಸ-ದಾರ್ಚಿಪ ಗುಣನಿಧಿಯೆ | ನಿಚ್ಚಟ ಮರೆಯದೆ ಅ.ಪ.
ವಾರಿಧಿ ಮಧ್ಯದಿ ಅಂದೂ | ಮಹಾಗರಳ ಉದ್ಭವಿಸಿತು ಮುಂದೂ | ನೋಡುಸುರಾಸುರರೆಲ್ಲರು ಬಂದೂ | ಭಾಳಮೊರೆಯ ನಿಟ್ಟರು ಕೇಳೊ ಅಂದೂ | ಆಹಭರದಿಂದ ಬರುತಲೆ | ಗುರು ಪವನನ ಪಾದಸ್ಮರಿಸದೆ ಗರಳವ | ಭುಜಿಸಲು ಬಂದನ ೧
ಉದುಭೂತ ವಿಷದ ಪಾತ್ರೆಯನೂ | ಹರಮುದದಿ ಹಸ್ತದಿ ಕೊಂಡು ಅವನು | ನೋಡಿಅದುಭೂತ ವಿಷದ ಜ್ವಾಲೆಯನು | ತಾನುಬೆದರಿ ಯೋಚಿಸಿದನು ಶಿವನು | ಆಹಅದನರಿತು ಶಿರಿಯರಸ ಪದುಮಾಕ್ಷ ಕೃಷ್ಣನುಮುದದಿ ಅಭಯವಿತ್ತು | ಸದಯವ ತೋರಿದ ೨
ಅಂತರಂಗವ ತಿಳಿದು ದಿವ್ಯ | ರಾಮಮಂತ್ರವನರುಹಿದ ಭವ್ಯ | ರೂಪಿಚಿಂತಿತ ಫಲದನೊ ಸೇವ್ಯ | ಕೇಳೊಮಂತ್ರೋದ್ಧಾರಗೆ ಪೇಳ್ದತ್ವರ್ಯ | ಆಹಮಂತ್ರಿ ಹನೂಮಂತ | ಮರ್ಧಿಸಿ ಇತ್ತಂಥಸ್ವಂತ ವಿಷವನುಂಡು | ಪಂಥವಗೆಲಿದನ ೩
ಕಂಟಕ ಕಳೆದನು ಶಿವನು | ವಿಷಕಂಠನೆನೀಸಿದನವನು | ದಶಕಂಠ ಹರನ ನಾಮವನ್ನು | ಅವಕುಂಠಿತನಾಗದೆ ಇನ್ನು | ಆಹಕುಂಟಿಸಿ ಈಂಟಿಸಿ | ಧಿಮಿಧಿಮಿಕೆನ್ನುತಸೊಂಟದಿ ಕೈಯಿಟ್ಟು | ನಾಟ್ಯವನಾಡ್ವನಾ ೪
ಪವನ ಮತಾಬ್ಧಿಲಿ ಚರಿಪ | ಗುರುಗೋವಿಂದ ವಿಠಲನಾಶ್ರಯಿಪ | ಗೌರಿಧವನ ಸಂಜೆಯಲ್ಲಿ ಭಜಿಪ | ನರಭವವ ಕಳೆದು ಹರಿ ಸಮೀಪ | ಆಹಜವದಿ ಸೇರುವ ಅವ | ಸಂದೇಹ ಸಲ್ಲದುಸವನ ತ್ರಯಾದಲ್ಲಿ | ಶಿವನ ಈ ಪರಿ ಸ್ಮರಿಸೆ೫

ಶ್ರೀಭೂತರಾಜರು (ಭಾವೀರುದ್ರರು)
೨೭೩
ಅಲಘು ಮಹಿಮ ಭಾವೀ | ತ್ರಿನಯನಾಮಲಿನ ಮನವ ಕಳೆಯೋ ಪ
ಅಲಘು ಮಹಿಮ ಭಾವೀ ಮರುತಜಲಜ ಪಾದಕ್ಕಳಿಯೆ ಮುಖ್ಯ ಅ.ಪ.
ಶಿರಸು ಭೂಷ ರಕ್ತ ವಸನಕರ್ಣಗಳಲಿ ಮಣಿಯ ಕುಂಡಲಕರ ಅಧರ ಪಾಣಿ ಪಾದವರಸು ಕುಸುಮ ಬಂಧೂಕ ಭಾಸ ೧
ಉದಿತ ರವಿಯ ಅರುಣ ದೇಹವಿಧ್ರುತ ಚಾಪ ಶರವು ಕರದಿಅದುಭುತಾತ್ಮ ನಾರಾಯಣನವಿಧಿತ ಮಹಿಮನಾಗಿ ನಮಿಪ ೨
ಕರ್ಣ ಭೂತ ಮುಖ್ಯಗಣಗಳಿಂದ ಕೂಡಿ ಭೂತಗಣಧೀಶನಾಗಿ ನಾರಾಯಣನ ನಾಮ ಧರಿಸಿ ಮೆರೆವ ೩
ಮಣಿಯನೇಕ ಚೀರ್ಣ ಮೌಳಿಅನುಣಾರ್ಣವೇಂದು ಮೌಳಿಕ್ವಣಿತ ಢಮರು ಕರ ತ್ರಿಶೂಲಿಮಣಿವೆ ಹರಿಯ ಭಕ್ತ ಮೌಳಿ೪
ಸ್ವಾಪ ಮುನ್ನ ಮುಂದೆ ಕುಳಿತುಉಪಾಂಸ್ವನೇಕ ಉಚ್ಚರೀಸಿಗೋಪತಿ ಗುರು ಗೋವಿಂದ ವಿಠಲಸುಪಾದ ಭಜಿಸೆ ಪೋದೆತ್ವರ್ಯ ೫

೫೦೬
ಅಸಾಧಾರಣ ವಿಠಲ ನೀ ಸಲಹೊ ಇವಳಾ |ಈಶಾದಿ ದಿವಿಜೇಡ್ಯ | ಶ್ರೀರಾಮಚಂದ್ರಾ ಪ
ದಾಸತ್ವ ದೀಕ್ಷೆಯಲಿ | ಆಶೆಯುಳ್ಳವಳಾಗಿಲೇಸು ಪ್ರಾರ್ಥನೆ ಸಲಿಸೆ | ವಿಶ್ವ ಮೂರುತಿಯೇ |ಮೀಸಲ ಮನದಲಿರೆ | ನೀ ಸ್ವಪ್ನ ಸೂಚಿಸಿದೆಏಸು ಕರುಣವೊ ನಿನಗೆ | ದಾಸ ಜನರಲ್ಲೀ೧
ಪರಿಪರಿಯ ಭವಣೆಗಳ | ಪರಿಹರಿಸಿ ಭಕ್ತಳಿಗೆಪೊರೆಯೊ ಕರುಣಾವನಧಿ ನರಹರಿಯೇ ಸ್ವಾಮೀ |ತರತಮದ ಜ್ಞಾನ ಸ | ದ್ವೈರಾಗ್ಯ ಭಕುತಿಯನುಕರುಣಿಸೀ ಪೊರೆ ಇವಳ | ಮರುತಾಂತರಾತ್ಮ ೨
ಪಂಚಾತ್ಮಕನೆ ಪ್ರಾ | ಪಂಚ ಸುಖದೊಳಗೆ ತವಸಂಚಿಂತನೆಯ ಕೊಟ್ಟು | ಕಾಪಾಡೊ ಹರಿಯೇಪಂಚಭೇದವು ಅಂತೆ | ನೀಚೋಚ್ಚ ಕ್ರಮ ತಿಳಿಸೀವಾಂಛಿತಾರ್ಥದ ಕಳೆಯೊ | ಸಂಚಿತಾಗಮವಾ ೩
ಸೃಷ್ಟಾದಿಕರ್ತನೇ | ಕೃಷ್ಣ ಮೂರುತಿ ದೇವಭ್ರಷ್ಟಸಂಗವ ಕೊಡವೆ | ಶಿಷ್ಟರಲ್ಲಿಡಿಸೋ |ಇಷ್ಟ ಮೂರ್ತಿಯ ಮನದಿ | ಸ್ಪಷ್ಟ ತೋರುತ ಸಲಹೋಶಿಷ್ಟ ಜನ ಸದ್ವಂದ್ಯ | ವಿಷ್ಣು ಪ್ರಾರ್ಥಿಸುವೇ ೪
ಗೋವರ್ಧನೋದ್ದರಗೆ | ಭಾವುಕರ ಪರಿಪಾಲಪಾವನಕೆ ಪಾವನನೆ | ಕಾವುದೀಕೆಯನುದೇವನೀನಲ್ಲದಲೆ | ಕಾವರನ್ಯರನ ಕಾಣೆಗೋವಿದಾಂಪತಿ ಗುರು ಗೋವಿಂದ ವಿಠಲಾ ೫

೫೦೮
ಆನಂದ ಗಿರಿ ಪತಿ ವಿಠಲ | ಶ್ರೀನಿವಾಸ ಪ
ದೀನ ಜನ ಮಂದಾರ | ನೀನಿವನ ಸಲಹೋ ಅ.ಪ.
ಮಾಧವನೆ ಭಿನ್ನವಿಸೆ | ಸಾಧನ ಸುಜೀವಿ ಇವಹಾದಿ ಹೋಕರ ಉದಯ | ತೋರ್ವ ಸ್ವಭಾವವೇದೋಕ್ತ ಕರ್ಮದಲಿ | ಮೋದವನೆ ತೋರುತಿಹಹೇ ದಯಾಂಬುಧೆ ಘನ್ನ | ಮೋದ ಉಣಿಸಿವಗೇ ೧
ಪ್ರಾಚೀನ ಕರ್ಮಾಂಧ | ಕೂಪದಲಿ ಬಿದ್ದಿಹೆನೊಖೇಚರೊತ್ತಮ ಪ್ರಾಣ | ಮತದಿ ಬಂದಿಹನೋವಾಚಿಸುತ ಇವನಲ್ಲಿ | ನಿಚೋಚ್ಚ ತರತಮನಮೋಚಿಸೋ ದುಷ್ಕರ್ಮ | ಕೀಚಕಾರಿ ಪ್ರಿಯಾ ೨
ದಾಸ ದೀಕ್ಷೆಯಲಿ ಮನ | ದಾಶಿ ಬಲು ಇಟ್ಟಿಹೆನೊಶ್ರೀಶ ತ್ಯೆಜಸನೀನೆ | ಲೇಸು ಸತ್ಪಂಥಾ |ಸೂಸಿ ತೋರಿಹೆ ಹರಿಯೇ | ಹೇ ಸದಾಶಿವ ವಂದ್ಯಕ್ಲೇಶ ನಾಶನ ಕಾಯೊ | ವಾಸವಾನುಜನೇ ೩
ತೈಜಸನೆ ನೀ ತೋರ್ದ | ತೇಜರೂಪೋಪಾಸಾಮಾಜದಲೆ ಪೇಳಿರುವೆ | ವಾಜಿವದನಾ |ಸೋಜಿಗದ ತರಳನಿಗೆ | ಓಜಸ್ಯ ಪಾಲಿಸುತರಾಜಿಸೋ ಇವನಲ್ಲಿ | ಮೂಜಗತ್ಪತಿಯೇ ೪
ಸರ್ವಾಂತರಾತ್ಮ ತವ | ದಿವ್ಯ ಸಂಸ್ರ‍ಕತಿಯನ್ನಸರ್ವತ್ರ ಸರ್ವದಾ | ಓವಿ ಪಾಲಿಪುದೋ |ದುರ್ವಿ ಭಾವ್ಯನೆ ಗುರೂ | ಗೋವಿಂದ ವಿಠಲಯ್ಯದರ್ವಿ ಜೀವಿಯ ಕಾಯೊ | ಬಿನ್ನವಿಪೆ ಹರಿಯೇ ೫

೧೭
ಆನಂದ ಗಿರಿ ರಾಯನೆ ಪಿಡಿಕೈಯ್ಯಾ | ನಾ ನಿನ್ನ ಪಾದಕ್ಕಾನಮಿಸುವೆ ಶರಣರ ಪ್ರಿಯ | ಭಕುತರ ಭವಣೆಯನೀ ನೋಡುತಲಿಹುದೊಳಿತೇನಯ್ಯ | ಬಂಧನ ಬಿಡಿಸಯ್ಯ ಪ
ಮಾನದ ಮಾನ್ಯ ಭೂದಾನವ ಬೇಡ್ವನೆಕಾಣಿಸೊ ಮನದೊಳು ದೀನನ ಮೊರೆಗೇಅ.ಪ.
ಕಲ್ಯಾಣ ಪುರಿಯಿಂದಲಿ ಪೋಗೀ | ಸಜ್ಜನರವೆರಸೇ ಕಲ್ಯಾದಿಗಳೆಲ್ಲ ದೂರಿದೆ ಸಾಗೀ | ಪೋಗುತ್ತಲಿರಲೂ ಬಲ್ಯಾದಿಗಳೊಡೆಯನ ಪುರಕಾಗೀ | ಮೂಡಬಾಗಿಲಲಿರುವಾ ವೇಳ್ಯಾದರು ನರಹರಿತೀರ್ಥವ |ಓಲೈಸುತ ಸರಿ ನಿರ್ಮಾಲ್ಯ ಪಡೆದೆವು ೧
ನಿಟಲಾಕ್ಷನ ಬಿಂಬನು ನೆಲೆಸಿರುವಲ್ಲಿ | ಮತ್ತೊಂದು ಬೆಟ್ಟದಿ ಪಟು ಭಟ ತಾ ಯೋಗಾಸನದಲ್ಲಿ | ಕುಳಿತಿಹನಲ್ಲಿ ಚಟುಲ ವಿಕ್ರಮನ ಧ್ಯಾನಿಸುತಲ್ಲಿ | ಹನುಮಂತನಲ್ಲಿ ಘಟಕಾಚಲದೊಳು ಸೇವಿಸಿ ಭಕುತರ |ತಟಕ ಪೊರಟಿತು ವೆಂಕಟಗಿರಿಗೆ ೨
ಹದಿನಾಲ್ಕು ಲೋಕಾಧಿಪನರಸಿ | ಪುರದೊಳು ಪೋಗಿಪದುಮ ಸರಸೋದಕ ಪ್ರೋಕ್ಷಿಸಿ | ಅಲ್ಲಿಂದ ಬಂದುಪದುಮಾವತಿ ಪಾದಾಬ್ಜಕೆ ನಮಿಸಿ | ಕುಂಕುಮಾರ್ಚಿಸಿ ||ಪದುಮೆ ಮನೋಹರ ಗೋವಿಂದ ಪುರಿಯಲಿವದಗಿ ವಸಿಸಿ ನಾವ್ ನಿಶಿಯನೆ ಕಳೆದೆವು ೩
ಉದಯವಾಗದ ಮುಂದೇಳುತಲಾಗ | ಮಜ್ಜನವ ಗೈದೂಪದಚಾರಿಗಳಾಗುತಲೀ ಬೇಗಾ | ಒಡಗೂಡಿ ಗಿರಿಯಮುದದಿಂದಲೇರುವ ಯೋಗಾ | ಕೈ ಸೇರಲು ಬೇಗಾ ||ಪದತಲದಲಿ ಪಾಪತ್ಮಕ ತನು ಕ-ಳೆದಾತನ ನೆನೆದು ಸೋಪಾನವ ಕ್ರಮಿಸಿದೆ ೪
ಗೋವಿಂದ ಗೋವಿಂದನೆಂಬುವ ನಾಮ | ಅಂಬರವು ತುಂಬೆಅವುಗಳ ಕಾವವನ ಗುಣ ನಾಮಾ | ಕೀರ್ತಿಸಿ ಮುದದಿಭಾವದೊಳ್ ಮೈಮರೆದು ಬ್ರಹ್ಮಾ | ಭವಸುರ ಪಾದ್ಯಾರ ||ಅವಾಗಲು ಅವರವಗುಣವೆಣಿಸದೆಕಾವನು ಎನುತಲಿ ಪಾವಟಿಗೇರೋ ೫
ಶಿಲೆಯು ಶಾಲಿಗ್ರಾಮವು ನೋಡಾ | ಈ ಪರಿ ತಿಳಿದೂತುಳಿದೂ ತುಳಿಯಲಿಲ್ಲವು ನೋಡಾ | ಸಲ್ಲುವುದೀದುತಿಳಿ ವಾದಿರಾಜರಿಗೆ ಗೂಢಾ| ನಾ ಬಲು ಮೂಢಾ |ಮಲವನು ಕಳೆಯುತ ಹುಲು ಮನುಜನ ಭವವಳಿದು ಸಲಹೊ ಹೇ ತಿರುಪತಿ ನಿಲಯ ೬
ಮೆಟ್ಟಲು ಮೆಟ್ಟಲುಗಳನೇರುತ್ತಾ | ತಾಳಂಗಳನುತಟ್ಟಿ ಹರಿ ಹರಿ ಎಂದೊದರುತ್ತಾ | ಪಾಪಂಗಳ ತಲೆಮೆಟ್ಟಿ ತಂಬೂರಿಯ ಮೀಟುತ್ತಾ | ಕಾಲೊಳು ಗೆಜ್ಜೆಗಳ ||ಕಟ್ಟುತ ಘಲು ಘಲು ಘಲಿರೆನ್ನುತ ಜಗಜಟ್ಟಿ ಹನುಮನ ನೆನೆಯಲೊ ಮನವೆ ೭
ಸುರರೆಲ್ಲಾ ಅವತರಿಸಿಹರಯ್ಯ | ಗಿರಿಯೊಳು ನೆಲೆಸಿತರು ಗುಲ್ಮ ಮೃಗ ಪಕ್ಷಿಗಳ ದಿವ್ಯಾ | ರೂಪಂಗಳ ಧರಿಸಿನಿರುತ ಗೈವರು ತವ ಸೇವೆಯು ಭವ್ಯಾ | ಅವುಗಳ ವರ್ಣಿಸಲು || ಉರಗರಾಜ ತನ್ನ ಸಾಸಿರ ನಾಲಿಗೆಸರಿಯಾಗದು ಎನೆ ಶಿರವನೆ ತೂಗುವ ೮
ಏರೋ ಪಾವಟಿಗೆಗಳನು ಏರೋ | ಮೊಳಕಾಲು ಮುರಿಯನೇರೋ ಕುಳಿತೊಮ್ಮೆ ತುತಿಸುತ ಸಾರೋ | ಹರಿಯ ಮಹಿಮೆಯಸಾರೋ ಬಾರಿ ಬಾರಿಗೆ ನೀ ಸಾರೋ | ಗಾಳಿ ಗೋಪುರವ ||ಮೀರಿ ಬರಲು ದಿವ್ಯ ಗೋಪುರ ಕಾಣುತ |ಚೀರೊ ಚೀರೊ ಹರಿ ಗೋವಿಂದನೆನ್ನುತ ೯
ಸ್ವಾಮಿ ಪುಷ್ಕರಣಿಯಲೀ ಮಿಂದೂ | ಶ್ರೀ ಭೂವರಹಾಸ್ವಾಮೀಯನೆ ಪ್ರಾರ್ಥಿಸಿ ಬಂದೂ | ಪ್ರಾಕಾರದೊಳಗಿಹವಿಮಾನ ಶ್ರೀನಿವಾಸನ ಕಂಡಂದೂ | ನಮಿಸುತ ಬಂದೂ |ಭೂಮಿಜೆವಲ್ಲಭ ವೆಂಕಟನನು ಕಂಡುಕಾಮಿಸೊ ಜ್ಞಾನ ವೈರಾಗ್ಯ ಭಕುತಿಯ ೧೦
ದೇವಾದಿದೇವಾ ಜಗದ್ಭರ್ತಾ | ವೆಂಕಟನೆ ನಾನಾನಾಜನುಮದ ಸುಕೃತಾ | ಪೊಂದುತಲಿ ನಿನ್ನಸೇವಾ ದೊರಕಿದುದೆ ಪುರುಷಾರ್ಥಾ | ಹರಿಪುದು ಸುಜನಾರ್ತಾ | ಭಾವನ ಕಾಯ್ದ ಸದ್ಭಾವಕೆ ವಲಿವನೆಕಾವುದೆನ್ನ ಗುರು ಗೋವಿಂದ ವಿಠ್ಠಲ ೧೧

೫೦೭
ಆನಂದ ಗಿರಿ ವಿಠಲ | ಕಾಪಾಡೊ ಇವಳಾ ಪ
ನೀನೊಲಿಯದಿನ್ನಿಲ್ಲ | ಕಾರುಣ್ಯ ಮೂರ್ತೆ ಅ.ಪ.
ಸಾಧನ ಸುಜೀವಿಗಳ | ಮೋದ ಪಡಿಸುವ ಭಾರಾಶ್ರೀಧರನೆ ನೀನದಲ್ಲೆ | ಹೇ ದಯಾಪರನೇ |ಮಾಧವನೆ ತವದಾಸ್ಯ | ಸಾದರದಿ ಬಯಸುವಳುಹೇ ದಯಾಂಬುಧೆ ಚೆನ್ನ | ಉಪದೇಶಿಮನ್ನಿಸೋ ೧
ಕಾಮಾದಿ ಅರಿಗಳನ | ನೇಮದಿಂದಲಿ ಸವರಿಭೂಮಗುಣಿತವ ಸ್ತವನ | ಕಾಮದಲಿ ಇರಿಸೀನೇಮ ಸಾಧನೆಗೈಸೀ | ಕಾಮಿತಾರ್ಥವನೀಗೋಶ್ರೀ ಮಹೀಸೇವಿತನೆ | ರಾಮಗುಣಧಾಮಾ ೨
ಭೇದ ಪಂಚಕ ತಿಳಿಸಿ | ಆದರದಿ ತರತಮದಬೋಧಿಸೀ ಉದ್ಧರಿಸೋ | ಮೋದ ಮುನಿ ವಂದ್ಯಾ |ಬೇಧ ಸುಖದ್ವಂದಾದಿ | ಸಾದರದಿ ಅನುಭವಿಪಹಾದಿಯಲ್ಲಿರಿಸೊ ಗುರು | ಗೋವಿಂದ ವಿಠಲಾ ೩

೫೧೨
ಆನಂದನಿಲಯ ವಿಠ್ಠಲನೆ | ನೀನಿವಳ ಸಲಹಬೇಕೊಜ್ಞಾನಗಮ್ಯನೆ ದೇವ | ಮೌನಿಮಧ್ವರ ಹೃದಯಾ ಪ
ದಾಸದೀಕ್ಷೆಯಲಿ ಬಹು ಆಶೆಯುಳ್ಳವಳಾಗಿಶ್ರೀಶ ನಿನ್ನಯ ಪಾದ ಸೂಸಿ ಸೇವಿಪಳೋ |ವಾಸುಕೀಶಯನ ಮ | ಧ್ವೇಶ ತವಪದ ಕಮಲದಾಸಳೆಂದೆನಿಸುತ್ತ | ನೀ ಸಲಹೊ ಹರಿಯೇ ೧
ಉದ್ಯೋಗ ವ್ಯವಹಾರ | ವಿದ್ಯೆಯಲಿ ಚಾತುರ್ಯಮಧ್ಯೆ ಮಧ್ಯೇ ಬರುವ | ಹೃದ್ರೋಗಗಳು ಸರ್ವಪ್ರದ್ಯುಮ್ನ ತವ ಸೇವೆ | ಎಲ್ಲ ಇವು ಎಂಬಂಥಶುದ್ಧ ಜ್ಞಾನವಿತ್ತು | ಉದ್ಧರಿಸೊ ಹರಿಯೇ ೨
ತಾರತಮ್ಯ ಜ್ಞಾನ | ಮೂರೆರಡು ಭೇದಗಳಸಾರತತ್ವವ ತಿಳಿಸಿ | ಘೋರ ಭವ ಕಳೆಯೋಈರ ಕರುಣಾ ಪಾತ್ರ | ಗೌರಿಪತಿ ಶಿವವಂದ್ಯಗೌರಿದೇವಿಯ ಅಭಯ | ತೋರ್ದೆ ಸ್ವಪ್ನದಲೀ೩
ಪತಿಸೇವೆ ಇತ್ತಿವಳ | ಕೃತಕಾರ್ಯಳೆಂದೆನಿಸುಹಿತಮಿತ್ರ ಪಿತೃಮಾತೃ | ಬಂಧು ಬಳಗದಲೀ |ಕೃತಿಪತಿಯು ಸರ್ವರಲಿ | ವ್ಯಾಪ್ತನಾಗಿಹನೆಂಬಮತಿಯಿತ್ತು ಸಲಹಿವಳ | ಗತಿ ಪ್ರದನೆ ಹರಿಯೇ ೪
ಗುರುಧರ್ಮ ಗುರುಸೇವೆ | ಪರಮ ಭಕುತಿಯಲಿಂದಚರಿಪ ಸನ್ಮತಿಯಿತ್ತು ಕರುಣದಲಿ ಕಾಯೋಗುರುವಂತ ರಾತ್ಮನನ | ತೋರೆಂದು ಪ್ರಾರ್ಥಿಸುವೆಪರಮ ಪುರುಷನೆ ಗುರು | ಗೋವಿಂದ ವಿಠಲಾ೫

೫೧೩
ಆನಂದವಾಹನ ವಿಠಲ ನೀನಿವಳ ಕಾಯಬೇಕೋ |ಜ್ಞಾನಪೂರ್ಣನೆ ನಿನ್ನ ಸುಜ್ಞಾನ ಪಾಲಿಸುತ ಹರಿಯೆ ಪ
ನಿಗಮವೇದ್ಯನೆ ದೇವ ಜಗದಂತರಾತ್ಮನೆಬಗೆಬಗೆಯ ಲೀಲೆಗಳ ನಗುನಗುತ ತೋರೀ ಬಗೆಹರಿಸು ಭವರೊಗ ಭಿನ್ನೈಪೆ ನಾನಿದನನಗಚಾಪ ಪರಿಪಾಲ ಖಗವಹನೆ ದೇವಾ೧
ಪಂಚರೂಪಾತ್ಮಕನೆ ಪಂಚ ಬಾಣನ ಪಿತನೆಪಂಚ ಭೇದ ಜ್ಞಾನ ಸಂಚಿಂತನೆಯನಿತ್ತು |ವಾಂಚಿತಾರ್ಥದ ಹರಿಯೆ ವೈರಾಗ್ಯ ಸದ್ಭಕುತಿವಾಂಚಿಪಳಿಗೀಯೊ | ನಿಷ್ಕಿಂಚನರ ಪ್ರೀಯಾ ೨
ಪತಿಸುತರು ಹಿತದಲ್ಲಿ ಮತಿ ಮತಾಂವರರಲ್ಲಿಕೃತಿಪತಿಯೆ ನಿನವ್ಯಾಪ್ತಿ ಅತಿಶಯದಿ ತೋರುತಲಿಹಿತದಿಂದ ಸೇವಿಸುವ ಮತಿಯಿತ್ತು ನೀನಿವಳ ಗತಿಗೆ ಸಾಧನನೆನಿಸು ಪ್ರತಿರಹಿತ ದೇವಾ ೩
ನಾಮ ಮಹಿಮೆಯ ತಿಳಿಸಿ ಪ್ರೇಮದಿಂದಲಿ ನಿನ್ನನಾಮದುಚ್ಛಾರಣೆಯ ನೇಮವನೆ ಪಾಲಿಸುತ |ಕಾಮಿತವ ಸಲಿಸುವುದು ಭೂಮ ಗುಣ ನಿಸ್ಸೀಮರಾಮಚಂದ್ರನೆ ಸರ್ವ ಸ್ವಾಮಿ ಎನಿಸುವನೇ ೪
ಶ್ರೀವರನೆ ಭವವನಧಿ ನಾವೆ ಎಂದೆನಿಸಿಹನೆಕಾವುದಿವಳನು ಸತತ ಸರ್ವಾಂತರಾತ್ಮ |ನೀವೊಲಿಯದಿನ್ನಾರು ಕಾವವರ ನಾಕಾಣೆದೇವವರ ವಂದ್ಯ ಗುರು ಗೋವಿಂದ ವಿಠಲಾ ೫

೫೧೧
ಆನಂದಾದ್ರಿ ವಾಸ | ವಿಠಲ ಪೊರೆ ಇವನಾ ಪ
ಮಾನಮೇಯ ಜ್ಞಾನ | ಸಾನುಕೂಲಿಸಿ ಇವಗೆನೀನಾಗಿ ಪೊರೆಯೊ ಹರಿ | ಕೋನೇರಿವಾಸಾ ಅ.ಪ.
ಚಿತ್ರ ಚಾರಿತ್ರ | ಶುಭಗಾತ್ರನೇ ಶತಪತ್ರನೇತ್ರಕರವಾದ ದ್ವಂದ್ವ | ಸೂತ್ರಾಂತರಾತ್ಮ |ಮಿತ್ರನಾನುಗ್ರಹಕೆ | ಪಾತ್ರನ ಸಲಹೊ ಮಾಕಳತ್ರನೇ ನಿನ್ನ ಸುಪ | ವಿತ್ರ ಪದ ನಮಿಪೇ ೧
ಕರುಣವೆಂತುಟೊ ನಿನಗೆ | ಶರಣಜನ ವತ್ಸಲನೇಕರೆದೊಯ್ದು ಸ್ವಪ್ನದಲಿ | ಹರ ಗಿರಿಜೆ ತೋರೀ |ಮರಳಿ ಬ್ರಹ್ಮನ ಲೋಕ | ದರುಶನಾನಂದದಲಿಕರೆದೊಯ್ದು ಕರುಣಾಳು | ಸುರಸೇವ್ಯ ಬದರಿಗೆ ೨
ದಶಮತಿಗೆ ಬೋಧಿಸುವ | ವ್ಯಾಸದರ್ಶನ ಭಾವಿದಶಮತಿಯ ಸಹವಿರುವ | ವ್ಯಾಸ ಭಕ್ತನ್ನಾ |ಹಸನಾಗಿ ತೋರಿ ನೀ | ವಸುಮತಿಗೆ ಕರೆತಂದುಬೆಸಸಿದೆಯಾ ಫಲದೈವ | ದರ್ಶನಕೆ ಇವನಾ ೩
ಬದ್ಧನಾದರು ಇಹದಿ | ಶುದ್ಧ ಸಂಸ್ರ‍ಕತನಿಹನುಮಧ್ವಮತ ದಾಸತ್ವ | ಶ್ರದ್ಧೆಯುಳ್ಳವನೇಬುದ್ಧಿಯಲಿ ಎನಗೆ ಉ | ದ್ಬುದ್ಭವನೆ ಮಾಡ್ದ ಪರಿತಿದ್ದಿ ಅಂಕಿತವಿತ್ತು | ಬುದ್ಧಿ ಪೇಳಿಹೆನೋ ೪
ಮಾವಿನುತ ತವರೂಪ | ಓವಿಹೃದಯದಿ ತೋರಿಆವ ಸಂಚಿತ ಕರ್ಮ | ತೀವ್ರದಲಿ ದಹಿಸೇಗೋವುಗಳ ಪಾಲ ಗುರು | ಗೋವಿಂದ ವಿಠ್ಠಲನೆಭಾವದಲಿ ಬಿನ್ನವಿಪೆ | ನೀ ವೊಲಿದು ಸಲಿಸೋ ೫

೫೧೦
ಆನಂದಾದ್ರಿವಿಠಲ | ನೀನೇ ಪೊರೆ ಇವಳಾ ಪ
ಜ್ಞಾನಿಜನವಂದ್ಯ ಹರಿ | ಶ್ರೀನಿವಾಸಾಖ್ಯ ಅ.ಪ.
ತರಳೆ ಬಹುನೊಂದಿಹಳೊ | ಕರುಣಾ ಮಾಳ್ಪುದು ದೇವದುರಿತವನ ದಾವಾಗ್ನಿ | ಶರಣಜನರೊಡೆಯಾ | ಮರುತ ಮತದಲ್ಲಿರುತೆ | ನೆರೆ ನಂಬಿಬಂದಿಹಳೊಕರುಣದಿಂ ಕೈಗೊಟ್ಟು | ಪರಿಪಾಲಿಸಿವಳಾ ೧
ಅನ್ಯದೇವರ ಪೂಜೆ | ಇನ್ನಾದರು ಬಿಡಿಸಿನನ್ನೆಯಿಂ ನಿನ್ನನ್ನೆ | ಪೂಜಿಸುವ ಭಾಗ್ಯಾಇನ್ನಾದರೂ ಕೊಟ್ಟು | ಪನ್ನಂಗಶಯನಹರಿಮನ್ನಿಸೊ ಇವಳ ಹರಿ | ಅನ್ನಂತ ಮಹಿಮಾ ೨
ಸಾಧುಜನ ಸದ್ವಂದ್ಯ | ಸತ್ಸಂಗವನೆ ಕೊಟ್ಟುಮಾಧವನೆ ನೀನಾಗಿ | ಕಾದುಕೊ ಹರಿಯೇಭೇಧಮತ ತತ್ವಗಳ | ಬೋಧಿಸುತ ಇವಳೀಗೆಸಾಧನವ ಗೈಸುವುದೋ | ಬಾದರಾಯಣನೇ ೩
ಪತಿಸುತರು ಹಿತರಲ್ಲಿ | ವ್ಯಾಪ್ತ ನೀನೆಂಬಂಥಾಮತಿಯನೇ ಕೊಟ್ಟು ಸ | ದ್ಗತಿಯನೆ ಕರುಣಿಸೋ |ಸತತ ನಿನ್ನಯ ನಾಮ | ರತಿಯನೆ ಕರುಣಿಸುತಮತಿಮತಾಂವರರಂಘ್ರಿ | ಭಕ್ತಿಯನೆ ಈಯೋ ೪
ಸರ್ವತ್ರ ಸರ್ವದಾ | ತವಸ್ರ‍ಮತಿಯ ಕರುಣಿಸುತಭವಭಂದ ಪರಿಹರಿಸೊ | ಭಾವಜನಯ್ಯ ಎನೆಓವಿ ಬಿನ್ನವಿಪೆ ಹರಿ | ಸಲಿಸುವುದು ಇವನೇವೆಗುರ್ವಂತ ರಾತ್ಮಗುರು | ಗೋವಿಂದ ವಿಠಲಾ ೫

೫೦೯
ಆನಂದಾನಂತ ವಿಠಲ ನೀನಿವನ ಸಲಹೊ ಪ
ಜ್ಞಾನಿಜನ ಸುಪ್ರೀಯ ನೀನೆಂದು ಭಿನ್ನವಿಪೆ ಅ.ಪ.
ಪ್ರಾಚೀನ ದುಷ್ಕರ್ಮ ನಿಚಯದಿಂದಲಿ ಬಳಲಿಸ್ವೋಚಿತ ಸುಕರ್ಮಕ್ಕೆ ಅವಕಾಶ ವಿರದೇ |ವಾಚಿಸುತಲೀ ನಿನ್ನ ನಾಮಾಮೃತವ ಸವ್ಯಸಾಚಿ ಸಖನೇ ನಿನ್ನ ಮೊರೆಯ ಹೊಕ್ಕವನಾ ೧
ಆದಿ ವಿರಹಿತ ಕರ್ಮ ಆಧೀನ ನಿನದಲ್ಲೆ |ನೀದಯದಿ ಸಂಚಿತವ ಮೋದದಲಿ ಕಳೆದು |ವೇದಗಮ್ಯನೆ ಹರಿಯೆ ಭೇದಮತ ಸುಜ್ಞಾನ ಭೋದಗೈವುದು ಎಂದು ಪ್ರಾರ್ಥಿಸುವೆ ನಿನ್ನಾ ೨
ಮಂತ್ರನಿಲಯರ ನಿರುತ ಸ್ವಾಂತದಲಿ ಭಜಿಸುತ್ತಸಂತ್ರಸ್ತಸಜ್ಜನರ ಪೊರೆಯೆ ಮೊರೆಯಿಡುತ |ಭ್ರಾಂತ ಮಾಯಾತ್ಮ ತೊರೆದು ಅಂತರಂಗದಿ ಮಧ್ವಅಂತರಾತ್ಮನ ಭಜಿಪ ಸಂತದಾಸನ್ನಾ ೩
ಅಂಬರ ಸುವಾಣಿಯಿಂದಂಬೆ ರಮಣನು ರುದ್ರಬಿಂಬ ನರಹರಿ ನೀನೆ ಇಂಬಿನಂಕಿತವನಂಬಿ ಬಂದಿಹಗಿತ್ತು ಸಂಭ್ರಮದಿ ಕರುಣಿಸಿಹೆಬಿಂಬ ಕ್ರಿಯ ಸುಜ್ಞಾನ ತುಂಬು ಇವನಲ್ಲೀ ೪
ದೋಷದೂರನೆ ಹರಿಯೆ ದಾಸನ ಸದ್‍ಹೃದಯ ದಾಶಯದಿ ತವರೂಪ ಲೇಸು ತೋರೆಂಬಾ |ಮೀಸಲು ಪ್ರಾರ್ಥನೆಯ ಸಲಿಸೆಂದು ಭಿನ್ನವಿಪೆವಾಸುಕೀ ಶಯನ ಗುರು ಗೋವಿಂದ ವಿಠಲಾ೫

೩೧೬
ತಾಯಿತಂದೆಯರಿಗೆ ನಮನ (ವಾರ್ಧಕ ಷಟ್ಪದಿ)
ಆನಮಿಪೆ ಮಾತೆ ಪಿತರರ್ಗೆ ಪ
ಆನಮಿಸಿ ಈರ್ವರಿಗೆ | ಜ್ಞಾನ ಸಾಧನ ದೇಹದಾನ ಮಾಡ್ದದಕವರ | ಧೇನಿಸುತ ಪದವನಜಗಾನ ಮಾಡುವೆ ವಂಶದ ಅಕ್ಷೀಣ ವಾರ್ತೆಗಳ ಕೇಳ ಬಯಸುವರಾಲಿಸಿ ಅ.ಪ.
ವಿಸ್ತರದ ಕೀರ್ತಿಯುತ | ಚಿತ್ತೂರು ಕೃಷ್ಣಾಖ್ಯರಿತ್ತ ಮಹಿ ಶೂರೊಳಗೆ | ನೆಲೆಸುತ್ತ ತಮ ಧರ್ಮಪತ್ನಿಯಲಿ ಚತುರ ಕುವ | ರರ ಪಡೆದು ಚತುರರಂಗೆಅಯ್ಯುತಿರೆ ವಿಧಿವಶದಲಿ |ಪೆತ್ತ ಪಿತ ಪರಪುರಕಡರೆ ಮಾತೆ ಕಡೆ ಕುವರಗೆತ್ತಣದು ವಿದ್ಯೆ ಎಂ | ದೆನ್ನಿಸದೆ ಸಲಹುತ್ತಉತ್ತಮರು ಬಕ್ಷಿತಿರು | ಮಲರ ವಂಶೋದ್ಭೂತ ಸುಬ್ಬರಾಯರ ಕುವರಿಯ ೧
ಶಿರಿ ರಂಗನಾಥಾಖ್ಯ | ವರ ಕುವರಗೀಯುತ್ತವರಲಗ್ನ ಜರುಗಿಸಿರೆ | ದಾಂಪತ್ಯ ಸುಖದೊಳಗೆಇರುತಿರಲು ಇಭರಾಮ | ಪುರದ ಮುನಿಸುತರ ಬರವಾಯ್ತು ಚಿಕ್ಕಮಗಳೂರಿಗೆ |ವರಮುನಿಯನುಗ್ರಹದ | ಲೋರ್ವಸುತನುದಯವನೆನೆರೆತಿಳುಪಿ ಪೊರಮಡಲು | ಸತಿಯು ಲಕ್ಷ್ಮೀಬಾಯಿವರ ಕುವರನಂ ಪ್ರಸವಿಸುತ ಪತಿಯೊಡನೆ ಸಂತಸದಿ ಕಾಲ ಕಳೆಯುತಿರಲು ೨
ನಾರಿಮಣಿ ಮನ್ಮಾತೆ | ಶಿಶುವಲಾಲಿಸುತಿರಲುಮೂರೊಂದು ವಯದಲ್ಲಿ | ಪತಿ ವಿಯೋಗವು ಆಯ್ತುಮಾರಿ ಕೋಪದ್ರವದಿ | ಮಾರಿ ಕಣಿವೆಲಿ ಪ್ರಥಮ ಅಪಮೃತ್ಯು ಸಂಭವಿಸಲು |ತಾರುಣ್ಯ ಉರುತರ | ವ್ಯಸನದಿಂ ನೂಕುತ್ತಪೋರನಭಿವೃದ್ಧಿಗಿ | ನ್ನೇನುಗತಿ ಎಂದೆನುತನಾರಾಯಣ ಸ್ಮರಣೆ | ಪರಿಪರಿಯಗೈಯ್ಸುತ್ತ ನಿಟ್ಟುಸಿರ ಬಿಡುತ್ತಿದ್ದಳು ೩
ನಾಲ್ಕಾರು ವರುಷಗಳು | ದಾಯಾದ್ಯರೊಳು ದುಡಿದುನಾಲ್ಕೆಂಟು ಕಡುಕ್ರೂರ | ವಾಕ್ಕುಗಳ ಸಹಿಸುತ್ತಪ್ರಾಕ್ಕು ಕರ್ಮದ ಫಲವ | ಮುಕ್ಕಲೇಬೇಕೆಂಬ ವಾಕ್ಕುಗಳ ಮನ್ನಿಸುತಲಿ ||ನೂಕುತಿರೆ ಕೆಲಕಾಲ | ತೋಕಗಾಯ್ತುಪನಯನಕಾಕು ಮಾತುಗಳಾಡಿ | ನೂಕಲೂ ಗೃಹದಿಂದಆ ಕುಮಾರ ಧೃವನ | ನೂಕಿದಾಪರಿಯಾಯ್ತು ಎಂದೆನುತ ಹೊರ ಹೊರಡಲು ೪
ಧೃವ ವರದ ನಂಘ್ರಿಯನೆ | ಪವಿತರದು ಮನದಿ ಸು-ಸ್ತುವನಗೈಯ್ಯುತ ಬರಲು | ದಿನದಲ್ಲಿ ಪೊಳಲೊಳಗೆನವರತುನ ಕುಲ ಬಂಧು | ನವವೆರಡು ವಯಸಿನ ಕುವರನಂ ಮಾತೆಯೊಡನೆ |ಸವಿ ನುಡಿಯಲಾದರಿಸಿ | ತವಕದಲಿ ಸಲಹುತಿರೆಧವ ರಹಿತೆ ಮಾತೆ ಮಾ | ಧವನ ಅನವರತ ಸು-ಸ್ತವನದಲಿ ಭವ ತರಣ | ಧವಣೆಯಲಿ ಕುವರಂಗೆ ವೈವಾಹ ತಾವಿರಚಿಸಿ ೫
ವ್ರತನೇಮ ಉಪವಾಸ | ವಿತತ ಶಾಸ್ತ್ರ ಶ್ರವಣರತಳಾಗಿ ದೇಹವನೆ | ಆತಿಯಾಗಿ ದಂಡಿಸುತಹಿತದಿ ಪರರುಪಕಾರ | ಅತಿಶಯದಿ ಗೈಯ್ಸುತ್ತ ತನುಮನವ ಹರಿಗರ್ಪಿಸಿ |ಕೃತಕಾರ್ಯ ಸಪ್ತದಶ ಮತ್ತಾರು ವಯದಲ್ಲಿಶೃತಗೈದು ಭಾಗವತ ಸಪ್ತಾಹ ಕ್ರಮದಿ ವಿ-ಕೃತಿ ವತ್ಸರ ವಸಿತ ದ್ವಿತಿಯ ತೃತಿಯ ತಿಥಿ ಹರಿ ಸ್ರ‍ಮತಿಲಿತನು ವಪ್ಪಿಸಿದಳು ೬
ನಮೋ ನಮೋ ಜಪತಪಾನುಷ್ಠಾತೆ ವಿಖ್ಯಾತೆನಮೋ ನಮೋ ಶಾಂತಾತ್ಮೆ ಸುದಾಂತೆಯೇನಮೊ ನಮೋ ಪರರಿಗುಪಕಾರಿ ವ್ರತಚಾರಿ ಹಸಿತೃಷಗಳಂ ಗೆಲ್ದಳೇ ||ನಮೊ ನಮೋ ಪತಿವ್ರತೆಯೆ ಹರಿಗುರೂ ಭಕ್ತಿಯುತೆನಮೊ ನಮೋ ಭಾರತೀಶ ಪ್ರಿಯಗಭಿನ್ನಾತ್ಮನಮೊ ಗುರು ಗೋವಿಂದ ವಿಠ್ಠಲನ ದಾಸ ದಾಸಿಯರಿಗೇ ನಮೊ ಎಂಬೆನು ೭

ಮಂತ್ರಾಲಯ ಪ್ರಭುಗಳಾದ
೩೯೦
ಶ್ರೀ ಶ್ರೀ ರಾಘವೇಂದ್ರತೀರ್ಥರು
ಆನೆಂತು ತುತಿಪೆ ನಿನ್ನ – ಮಂಚಾಲಿ ರನ್ನ ಪ ಆನೆಂತು ತುತಿಪೆ ನಾ – ಮಾನಮೇಯದಿನಿಪುಣಗಾನ ವಿಶಾರದ – ಶ್ರೀನಿವಾಸನ ದೂತ ಅ.ಪ.
ಕೃತಯುಗದಲಿ ನೀನು | ದಿತಿಜ ವಂಶದಿ ಬಂದುವಿತತ ವಿಶ್ವಾಧಾರ | ಕೃತಿಪತಿಯ ತುತಿಸಿ ಮುಕುತಿ ಪಥಕೆ ಸತ್ತರ ತಮ ಪಂಚಭೇದಮತಿಯೆ ಸಾರ್ಥಕವೆಂದು | ಹಿತದಿಂದ ಸಾಧಿಸೆಮತಿಭ್ರಾಂತನಾದಂಥ | ದಿತಿಜ ಗುರುವು ತಾನುಖತಿಯಿಂದ ನೋಡುತ್ತಲೀ || ಬಾಲಕರೆಲ್ಲಹತಭಾಗ್ಯರೆನ್ನುತ್ತಲೀ | ನೃಪಗೆ ಪೇಳೆಖತಿ ನಿನ್ನೋಳ್ ತೋರುತ್ತಲೀ | ದಂಡಿಸೆ ನಿನ್ನಪಿತಗೆ ಬುದ್ಧಿಯ ಪೇಳ್ದ | ಅತುಳ ಪರಾಕ್ರಮೀ ೧
ಕಡು ವೇಗದಲಿ ಬಂದ | ಶಂಡ ಮರ್ಕನ ಕಳುಹಿಒಡ ಹುಟ್ಟಿದವನನ | ದಾಡೆದಂತಗಳಿಂದಬಿಡದೆ ಶೀಳಿದ ಹರಿಯ | ದೃಢದಿ ಪೂಜಿಪೆ ನೀನುಬಿಡು ಬಿಡು ಈ ಮತಿ | ಮೃಡನೆ ನಮ್ಮಯ ದೇವಪುಡುಕಿ ಆ ಹರಿಯನ್ನೆ | ಖಡುಗದಿಂದಲಿ ಅವನಕಡಿದು ಹಾಕುವೆನೆನ್ನುತ್ತ || ಕರೆದು ನಿನ್ನಕಡು ಭಾಗ್ಯ ಕೋ ಎನ್ನುತ್ತ | ಪೇಳಲು ನೀನುಮಿಡುಕದೆ ಬೇಡೆನ್ನುತ್ತ | ಬುದ್ದಿಯ ಮಾತದೃಢದಿ ಪಿತಗೆ ಪೇಳ್ದೆ | ಬಿಡೆನು ಹರಿಯ ಎನ್ನುತ್ತ ೨
ಹಿರಣ್ಯ ಕಶ್ಯಿಪು ನೋಡಿ | ವರಣ ಬೇರೆಯಾಗಿಕರೆಸಿ ಕ್ರೂರಿಗಳನ್ನ | ಪರಿಪರಿ ವಿಧದಿಂದತರಳನ್ನ ಹಿಂಸಿಸೆ | ಮರಳಿ ಜೀವಿಸುವಂಥವರ ತನಯನ ಕಂಡು | ಗರಳವ ಕುಡಿಸಲುಗರಕೆ ಸಹೋದರಿ | ವರಲಕ್ಷ್ಮಿ ಮಾತೆಯಸ್ಮರಿಸಿ ಜೀವಿಸೆ ಅವನೂ || ರಕ್ಕಸ ನೋಡಿಭರದಿ ಖಡ್ಗವ ಸೆಳೆದೂ | ತೋರೊ ಕಂಬದಿಹರಿಯ ಎಂದು ಒದೆದೂ | ನಿಲ್ಲಲು ಪಿತಗೆನರಹರಿ ರೂಪವ ತೋರ್ದೆ | ಕ್ರೂರನ ಜರಿದೂ ೩
ದಿಟ್ಟ ತರಳನ ಸಲಹೆ | ಗಟ್ಟಿ ಕಂಬದಿ ಬರೆಛಟ ಛಟ ಶಬ್ದಾ | ಜಾಂಡ ಕಟಹ ಬಿಚ್ಚೆಕಠಿಣ ಖಳನ ಪಿಡಿದು | ಜಠರವ ಭೇದಿಸಿಹಠದಿ ಕರುಳಿನ ಮಾಲೆ | ಕಂಠದಿ ಧರಿಸುತ್ತತೃಟಿಯು ಬಿಡದೆ ತನ್ನ | ಹಠದಿ ಭಜಿಪನಿನ್ನಸ್ಫುಟದಿ ಕರದೋಳತ್ತಿದ || ಮುದ್ದಿಸಿ ಬಲುದಿಟ ಭಟ ಎನೆ ಎನಿಸೀದ | ಮಗನ ಮಾತುದಿಟವ ಜಗಕೆ ತೋರಿದ | ವೆಂಕಟನ್ನಪಟುತರ ವ್ಯಾಪ್ತಿಯ | ಮಹಿಮೆ ಸ್ಫುಟದಿ ತೋರ್ದ ೪
ದ್ವಿತಿಯುಗದಲಿ ನೀನು | ಭ್ರಾತ ದಶಕಂಠನಕೃತಿಗೆ ಮೆಚ್ಚದೆ ಬಲು | ಪತಿವ್ರತೆ ಸೀತೆಯಾಕೃತಿಯನೆ ಕೊಂಡ್ಹೋಗಿ | ವಿತತ ಮಹಿಮ ದಶರಥ ಸುತಗೆ ಕೊಡು ಎನೆ | ಹಿತವಾಕ್ಯ ಪೇಳಲುಮತಿ ಹೀನ ದಶಶಿರ | ದೂತ ಹನುಮನ್ನವ್ಯಥೆಯ ಪಡಿಸೆ ಪೋಗಲೂ || ಖತಿಯಲಿ ಲಂಕೆಹುತವಹನಿಗೆ ಈಯಲೂ | ವಾತನ ನೀಪ್ರೀತಿಯಲ್ಲಾಶ್ರಯಿಸಲೂ | ಲಂಕೆಯ ಪುರನೀತಿಯಿಂದಲಿ ಆಳ್ದ | ಖ್ಯಾತ ದೂತನೆನಿಸಲೂ ೫
ದ್ವಾಪರದೊಳು ಪ್ರ | ತೀಪನ ಸುತನಾಗಿಆ ಪರಮ ಕಲಿಯ | ರೂಪನಾದ ಕುರುಭೂಪನೀಗೆ ಋಣ | ರೂಪವಾದ ಸೇವೆಭಾಪೆಂದು ಸಲ್ಲಿಸಿ | ಪಾಪಿ ನಿಕರವನ್ನುಕೋಪದಿಂಛೇದಿಸಿ | ಶ್ರೀ ಪತಿಯೊಲಿ ಮೇಲಿಭೂಪ ಭೀಮನ ಪಾದದಿ || ವಪುವ ತ್ಯಜಿಸಿಕಾಪಾಡೆನ್ನ ದಯದಿ | ಕಲಿಯಲಿ ಯತಿರೂಪತಾಳೆನೆ ಮುದದಿ | ಕೈಕೊಳ್ಳುತಶ್ರೀ ಪಾದರಾಯರ | ಶ್ರೀ ಪಾದ ಭಜಿಸಿದಿ ೬
ಶೇಷಾವೇಶದಿ ಪುಟ್ಟಿ | ವ್ಯಾಸ ತೀರ್ಥರಾಗಿಮೀಸಲಾದ ಮತ | ದಾಶಯಗಳನೆಲ್ಲಸೂಸಿ ಪೇಳುತ್ತಲಿ | ಶೇಷಾಚಲದಿ ಶ್ರೀನಿವಾಸನ ದ್ವಾದಶ | ವರ್ಷ ಸೇವಿಸಿ ನೃಪತೀಶನ ಕುಹುಯೋಗ | ಲೇಸಾಗಿ ಕಳೆಯುತಆಶುಗತಿಯ ತತ್ವ ಮತವ || ಸ್ಥಾಪಿಸಿ ಬಲುಮೀಸಲು ತರ್ಕತಾಂಡವ | ನ್ಯಾಯಾಮೃತಭೂಸುರರ್ಗಿತ್ತು ನಾಯಕರ | ಪುರಂದರದಾಸರಾಯರ ಮಾಡ್ದ | ದಾಸ ಪಂಥೋದ್ಧಾರ ೭
ತುಂಗ ಮಹಿಮ ಶ್ರೀ | ರಂಗನ ಸೇವೆಯಹಿಂಗದೆ ಮಾಡಲು | ಅಂಗಜನ್ನೋಡಿಸಿಸಂಗ ರಹಿತ ಯತಿ | ಪುಂಗ ಸುಧೀಂದ್ರರಮಂಗಳ ಚರಣ ಕಮ | ಲಂಗಳಾಶ್ರಯಿಸಿ ದೇಶಂಗಳ ಚರಿಸುತ್ತ | ಭಂಗಿಸಿ ಮಾಯ್ಗಳ ವಿಹಂಗ ವಾಹನ ಶ್ರೇಷ್ಠನೂ || ಎಂದೆನಿಸುತ್ತತುಂಗ ತೀರದಲಿ ನೀನೂ | ರಾಮರ ಪಾದಭೃಂಗನೆಂದೆನಿಸಿ ಇನ್ನೂ | ವ್ಯಾಖ್ಯಾನದಿಶೃಂಗರಿಸಿದೆ ನಿನ್ನ | ಬಿಂಬ ಮೂರುತಿಯನ್ನೂ ೮
ಎರಡು ಮೂರನೆ ಮಾಸ | ಎರಡನೆ ದಿನವಸಿತವರಸು ವೃಂದಾವನ | ಸೇರಿ ಅಲ್ಲಿರುತಲಿನಿರುತ ನಿಮ್ಮಯ ಚರಣ | ಸೇವಿಪ ಭಕುತರದುರಿತ ದುಷ್ರ‍ಟತವೆಲ್ಲ ಕರಿಯು | ಸಿಂಹನ ಕಂಡತೆರನು ಮಾಳ್ಪಿರಿ ನೀವು | ನರರ ಮನೋರಥಧರೆಯೊಳು ಪಾಲಿಸುತ್ತ || ಭವ ವನಧಿಯತರಣೋಪಾಯವ ತೋರುತ್ತ | ಪವನಾಂತಸ್ಥಗುರುಗೋವಿಂದ ವಿಠಲನೆಂಬಾತ | ಗುಣ ಪೂರ್ಣಸರ್ವೋತ್ತಮನೆನ್ನುತ್ತ | ಕೀರ್ತಿಪೆ ನೀನು ನಿರುತ೯

೫೨೪
ಆಪದ್ಭಾಂಧವ ವಿಠಲ | ಕಾಪಾಡೊ ಇವಳಾ ಪ
ಶ್ರೀಪತಿ ಶೀರಂಗ ಸ | ಮೀಪಗನೆ ಹರಿಯೇ ಅ.ಪ.
ದುರಿತ ರಾಶಿಗಳಳಿದು | ಹರಿನಾಮ ಸುಧೆ ಸವಿಯೆವರಮಾರ್ಗ ತೋರಿ ಪೊರೆ | ಶ್ರೀದ ನರಹರಿಯೇ |ತರುಣಿಮಣಿ ಹರಿದಾಸ್ಯ | ನೆರೆಸುಕಾಂಕ್ಷಿಸಲಾಗಿವಿರಚಿಸಿಹೆ ಉಪದೇಶ | ಪರಿಪಾಲಿಸಿವಳಾ ೧
ತಾರತಮ್ಯಾಂತರದಿ | ಹರಿಯ ಉತ್ಕರ್ಷತ್ವಸುರಸಾದಿ ಸುರರೆಲ್ಲ | ಹರಿದಾಸರೆಂಬಾ |ಎರಡು ಮೂರ್ಭೇದ ಸಹ | ವರ ಜಗದ ಸತ್ಯತೆಯಅರುಹಿ ಪಾಲಿಸು ಇವಳ | ಕರಿವರದ ಹರಿಯೇ೨
ಸೀಮೆ ಮೀರಿದ ಮಹಿಮ | ಭೂಮ ಗುಣ ಸಂಪೂರ್ಣಕಾಮಾರಿ ಸಖಕೃಷ್ಣ | ಕಾಮಿತಾರ್ಥದನೇನೇಮ ನಿಷ್ಠೆಗಳಿತ್ತು | ಸಾಧನಗಳಳವಡಿಸಿಕಾಮಿನಿಯ ಪೊರೆಯೊ ಹರಿ ಸ್ವಾಮಿ ಭೂವರಹಾ ೩
ಜಲಜಾಕ್ಷನಮಲ ಗುಣ | ತಿಳಿಯಲ್ಕೆ ಸಾಧನವುಕಲಿಯುಗದಿ ಸತ್ಸಂಗಾ | ಬಲ ಉಳ್ಳದೋಹಲವು ಮಾತೇಕೆ ನಿನ್ನ | ಮಲಗುಣ ನಾಮಗಳತಿಳಿಸಿ ಪೊರೆ ಇವಳನ್ನು | ಕಲಿಮಲಧ್ವಂಸೀ ೪
ಪಾವ ಮಾನಿಯ ಪ್ರೀಯ ದೇವ ದೇವೋತ್ತಮನೆಭಾವುಕಳ ಪೊರೆಯಲ್ಕೆ | ತೀವ್ರ ಭಿನ್ನವಿಪೇಕಾವ ಕರುಣಾಳು ಗುರು | ಗೋವಿಂದ ವಿಠ್ಠಲನೆಈ ವಿಧದ ಭಿನ್ನಪವ | ನೀ ವೊಲಿದು ಸಲಿಸೋ೫

೫೦೫
ಆಮಿತ ಮಹಿಮೋಪೇತ ವಿಠಲ ಸಲಹೋ ಪ.
ವಿಮಲಮತಿ ಇತ್ತಿವಗೆ ಕಾಮಿತಾರ್ಥವನೇಅ.ಪ.
ತೈಜಸನೆ ನೀನಾಗಿ ನಿಜಯಾರ್ಯನುಗ್ರಹವಯೋಜಿಸಿಹೆ ಸ್ವಪ್ನದಲಿ ಕಾರುಣ್ಯಮೂರ್ತೇಭ್ರಾಜಿಷ್ಣು ಸುಜ್ಞಾನ | ವೈರಾಗ್ಯ ಭಾಗ್ಯಗಳಮಾಜದಲೆ ಕರುಣಿಸೆಂದಾನಮಿಪೆ ಹರಿಯೇ ೧
ಹೇ ಸದಾಶಿವ ವಂದ್ಯ | ಕ್ಲೇಶತೋಷಗಳಲ್ಲಿಭಾಸಿಸಲಿ ತವನಾಮ | ಮೀಸಲದ ಮನದೀ |ಆಶುಗತಿಮತ ಪೊಂದಿ | ದಾಸದೀಕ್ಷಾಕಾಂಕ್ಷಿವಾಸವಾನುಜ ಇವನ | ದಾಸನೆಂದೆನಿಸೋ ೨
ಶುದ್ಧ ಬುದ್ಧಿಯನಿತ್ತು | ಮಧ್ವಮತ ಪದ್ಧತಿಯಉದ್ಧರಿಸು ಇವನಲ್ಲಿ | ಸಿದ್ಧ ಜನ ವಂದ್ಯಾಕೃದ್ಧಖಳ ಬಾಧೆಗಳ | ಗೆದ್ದು ಭವ ಉತ್ತರಿಪಸದ್ವಿದ್ಯ ಪಾಲಿಪುದು ಮಧ್ವಾಂತರಾತ್ಮಾ ೩
ಹರಿಗುರೂ ಸದ್ಭಕ್ತಿ | ದುರ್ವಿಷಯನಾಸಕ್ತಿಎರಡು ಮೂರ್ಭೇದಗಳ | ಅರಿವ ನೀನಿತ್ತೂತರತಮದ ಸುಜ್ಞಾನ | ಕರುಣಿಸುವುದೆಂದೆನುತಕರಿವರದ ಭಿನ್ನವಿಪೆ ಪ್ರಾರ್ಥನೆಯ ಸಲಿಸೋ ೪
ಬೇಕಾದ ವರಗಳನು | ನೀ ಕೊಡುವ ಮಹಿಮೆಗಳನಾ ಕೇಳಿ ಬೇಡಿದೆನೋ | ನಾಕನದಿ ಪಿತನೇನೋಕನೀಯನೆ ಗುರೂ | ಗೋವಿಂದ ವಿಠ್ಠಲನೆಕೋಕವನ ಕೈಪಿಡಿದು | ನೀ ಕಾಯ ಬೇಕೋ ೫

ಭಜನೆ
೩೧೩
ಶ್ರೀ ರಾಮ ಭಜನೆ
ಆಮ್ನಾಯ ವಿಸ್ತರ | ಭೂಮಾ ಗುಣಾರ್ಣವಶ್ರೀ ಮನ್ನಾರಾಯಣ | ರಾಮ್ ರಾಮ್ ರಾಮ್ ಪ
ಶ್ರೀಶನೇ ವಿಭುದೇಶನೇ ||ಅಸುರಿ ವೃಷಹರ | ಶೇಷಾದ್ರಿ ಮಂದಿರಶ್ರೀ ಮನ್ನಾರಾಯಣ | ರಾಮ್ ರಾಮ್ ರಾಮ್ ಅ.ಪ.
ಪೃಥ್ವಿಧರಾಧರ | ಸತ್ಯ ಮನೋಹರಭಕ್ತಾರ್ತಿ ಪರಿಹರ | ರಾಮ್ ರಾಮ್ ರಾಮ್‍ನಿತ್ಯನೇ ನಿರ್ಲಿಪ್ತನೇ ||ಶಕ್ತ್ಯಾದಿ ರೂಪಧರ | ಆಪ್ತರೊಳಗೆ ವರಭೃತ್ಯರ್ಗ ಭೀಷ್ವದ | ರಾಮ್ ರಾಮ್ ರಾಮ್ ೧
ದಾನವ ಧ್ವಂಸನೆ | ಆನಂದ ಪೂರ್ಣನೆಆನಂದ ಮುನಿನುತ | ರಾಮ್ ರಾಮ್ ರಾಮ್‍ಶ್ರೀ ನಿಧೇ ಕರುಣಾಂಬುಧೇ ||ಮಾನುನಿ ವರದನೆ | ಮೌನಿಯ ಕಾಯ್ದನೆಜ್ಞಾನ ಸುಗಮ್ಯನೆ | ರಾಮ್ ರಾಮ್ ರಾಮ್ ೨
ಈಶಾಹಿ ವಂದ್ಯನೆ | ವಾಸಿಷ್ಠ ಕೃಷ್ಣನೆವಸುದೇವ ತನಯನೆ | ರಾಮ್ ರಾಮ್ ರಾಮ್‍ಈಶನೇ ವರದೇಶನೇ ||ದಶಾಸ್ಯ ಕುಲವನ | ಕೃಶಾನು ಎನಿಪನೆದಾಶರಥಿüಯೆ ಪಾಹಿ | ರಾಮ್ ರಾಮ್ ರಾಮ್ ೩
ತ್ರಯೀ ವಿರೋಧಿಯ | ಕಾಯ ವಿಧ್ವಂಸಕಮಾಯಾಪತಿ ಪಾಹಿ | ರಾಮ್ ರಾಮ್ ರಾಮ್‍ಆರ್ಯನೆ ಬಹು ವೀರ್ಯನೇ ||ಕಾರ್ಯ ಕಾರಣ ವ್ಯಾಪ್ತ | ಸೂರ್ಯ ವೀರ್ಯದಾತಪ್ರೇರ್ಯ ಪ್ರೇರಕ ಪಾಹಿ | ರಾಮ್ ರಾಮ್ ರಾಮ್ ೪
ನೀರದ ನಿಭಕಾಯ | ವಾರಿಜಾಕ್ಷಿಗೆ ಪ್ರಿಯನಾರಿ ಚೋರಾರಿಯೆ | ರಾಮ್ ರಾಮ್ ರಾಮ್‍ಧೀರನೆ ಗಂಭೀರನೇ ||ಮೂರು ಲೋಕಗಳಲ್ಲಿ | ಆರುಂಟು ನಿನ್ನ ಸರಿಕಾರುಣ್ಯ ಮೂರುತಿ | ರಾಮ್ ರಾಮ್ ರಾಮ್೫
ಬಿಂಬರೂಪಿಯೆ ಪ್ರತಿ | ಬಿಂಬರಿಗೆಲ್ಲ ಜೀವಅಂಬಾರಮಣ ಪಾಹಿ | ರಾಮ್ ರಾಮ್ ರಾಮ್‍ಕುಂಭಿಣೀ ಪರಿಪಾಲನೇ ||ಅಂಭ್ರಣಿ ದೇವಿ ಪತಿ | ನಂಬೀದ ಭಕ್ತರಬೆಂಬಿಡದಲೆ ಕಾವ | ರಾಮ್ ರಾಮ್ ರಾಮ್ ೬
ಜಗ ಪ್ರಾಣನೊಳಗೆ ಇದ್ದು | ಜಗವನ್ನು ಸೃಜಿಸುವಿಜಗದೇಕ ಕಾರಣ | ರಾಮ್ ರಾಮ್ ರಾಮ್‍ಪ್ರಾಣನೇ ಜಗತ್ತ್ರಾಣನೇ ||ಅಗಜೆ ಪತಿಯೊಳಿದ್ದು | ಜಗವೆಲ್ಲ ಲಯಿಸುವಿಜಗದೇಕ ಕಾರಣ | ರಾಮ್ ರಾಮ್ ರಾಮ್ ೭
ಪ್ರಾಣನೀತಾನುಜ | ಪ್ರಾಣದಾತೃ ಹರಿಪ್ರಾಣಂಗೆ ಪ್ರಾಣನೆ | ರಾಮ್ ರಾಮ್ ರಾಮ್‍ಪ್ರಾಣನಾ ಆಲಿಗಂನಾ ||ನೀನಾಗಿ ಮಾಡಿ ಅವಗೆ | ಸಾಷ್ರ್ಣಿ ಮುಕ್ತಿಯನಿತ್ತೆಕಾಣೆ ಕಾರುಣ್ಯ ಕೆಣೆ | ರಾಮ್ ರಾಮ್ ರಾಮ್ ೮
ಅಂಜನಿ ಸುತನಾಗಿ | ಕಂಜಸಖನಿಗ್ಹಾರ್ದಸಂಜೀವ ಧರ ಧರ | ರಾಮ್ ರಾಮ್ ರಾಮ್‍ದೈತ್ಯನಾ ಪ್ರಭಂಜನಾ ||ಸಂಜೆಯ ಚರರನು | ಭಂಜಿಸಿ ಅರ್ಪಿಸಿದಸಂಜೀವರಾಯ ಪಿತ | ರಾಮ್ ರಾಮ್ ರಾಮ್ ೯
ಪದ್ಮಾಕ್ಷಿ ಸೀತೆ ಪತಿ | ಪದ್ಮಾಸನನ ಪಿತಪದ್ಮನಾಭನೆ ಪಾಹಿ | ರಾಮ್ ರಾಮ್ ರಾಮ್‍ರುದ್ಧನೇ ಅನಿರುದ್ಧನೇ ||ಮುದ್ದಿನ ಮೊಗದವ | ಗೆದ್ದು ಕುಜನ ತತಿಸದ್ಮದೊಳಗೆ ತೋರೊ | ರಾಮ್ ರಾಮ್ ರಾಮ್ ೯
ಇಂದಿರೆ ರಮಣನೆ | ಚಂದಿರ ವದನನೆಮಂದರೋದ್ಧಾರಿಯೆ | ರಾಮ್ ರಾಮ್ ರಾಮ್‍ಸುಂದರಾ ಬಹು ಸುಂದರಾ ||ಕಂದರ್ಪ ಕೋಟಿ ಬಹು | ಸುಂದರ ಗುರು ಗೋ-ವಿಂದ ವಿಠಲ ಪಾಹಿ | ರಾಮ್ ರಾಮ್ ರಾಮ್೧೦

೧೮
ಆರ ಮೊರೆ ಇಡಲೊ – ಹರಿ ಎನ್ನ ಪೊರೆವ ಭಾರ ನಿನ್ನದೆಲೊ ಪ
ಈರ ಪತೆ ಭವ ವಾರಿಧೀಯನು | ಪಾರು ಮಾಡುವರಾರು ಪೇಳೋಅ.ಪ.
ಈಶ ನೀನಹುದೋ | ಉಮೇಶ ಸಖ -ಲಕ್ಷ್ಮೀಶ ನೀನಹುದೋ ||ವೀಶ ಶೇಷ ಗಿರೀಶ ವಾಸವ | ಪೋಷಕನೆ ಮಧ್ವೇಶ ಪೊರೆ ೧
ವಿಶ್ವೇಶ ನೀನಹುದೋ | ವಿಧಿಯ ಪಿತ ವಿಶ್ವಾಧಾರ ನೀನಹುದೋ |ವಿಶ್ವ ವ್ಯಾಪಕ ವಿಶ್ವವಂದ್ಯನೆ | ವಿಶ್ವ ಮೋಹೈಶ್ವರ್ಯ ರೂಪೀ೨
ವಿತತ ನೀನಹುದೋ ವಿಸ್ತರದ ಮಹಿಮ | ವೀತ ಭಯನಹುದೋ ||ಯತನ ಜ್ಞಾನೇಚ್ಛಾದಿ ಪ್ರೇರಕ | ಸ್ಥಿತಿ ಮೃತಿ ಸತ್ತಾದಿ ಪ್ರದನೇ ೩
ಸುರ ತರುವೆ ನೀನಹುದೋ | ಶರಣ ಪೋಷಕ | ಸುರಧೇನು ನೀನಹುದೋ |ಶರಣ ಜನ ಕರ್ಮಾದಿ ಋಣಹರ | ಮೊರೆಯಿಡುವೆ ಚರಣಕ್ಕೆ ಎನ್ನ ಪೊರೆ೪
ಬಿಂಬ ನೀನಹುದೋ | ಸಿರಿ ಬೊಮ್ಮ ಮುಖ್ಯ | ಬಿಂಬ ನೀನಹುದೋ |ಬಿಂಬ ಗುರು ಗೋವಿಂದ ವಿಠ್ಠಲ | ಇಂಬು ತವಪದ ಅಂಬುಜದಿ ಕೊಡು ೫

೧೯
ಆರೀಗೆ ಮೊರೆ ಇಡಲೋ | ನಿನ್ಹೊರತಿನ್‍ಆರೀಗೆ ಮೊರೆ ಇಡಲೋ ಪ
ಆರೀಗೆ ಮೊರೆ ಇಟ್ಟು | ಚೀರಿ ಕೂಗಿದರೇನುಆರೂ ಕಾಯುವರಿಲ್ಲ | ಮಾರ ಜನಕೆ ಹರೇ ಅ.ಪ.
ನೀರಲಿ ಮುಳುಗಿ ನೀ | ಭಾರ ಬೆನ್ನಿಲಿ ಪೊತ್ತುಧಾರುಣಿಯನೆ ಚಿಮ್ಮಿ | ದುರುಳನ ತಂದೆಯೋ ೧
ಸಾರಿ ವಿರೋಚನ ವರಪುತ್ರ ಬಲಿಯನ್ನಮೂರಡಿ ಧರಣಿಗೆ ಕರವ ಚಾಚಿದೆ ದೇವಾ ೨
ಪರಶುವ ಸಿಡಿದು ನೀ | ತರಿದೆಯೊ ತಾಯ್ ಕೊರಳಶರದಿಯ ಬಂಧಿಸಿ | ದುರುಳರ ತರಿದೆಯೋ ೩
ಪೂಥಣಿ ಶಕಟ ಧೇನುಕ ವತ್ಸ ಭಂಜನಮಥಿಸಿ ಕಂಸನ ನಿನ್ನ ಮಾತಾಪಿತರ ಕಾಯ್ದೆ ೪
ಬೆತ್ತಲೆ ತಿರುಗಿ ನೀ | ಉತ್ತಮ ಹಯವೇರಿವತ್ತಿ ದುರುಳನ ಶಿರ | ಕತ್ತರಿಸಿದೆ ದೇವಾ ೫
ಆರತ ಜನ ನಿನ್ನ | ಈ ರೀತಿ ಪೇಳ್ವರುವಾರುತೆ ಕೇಳಿ ನಾ | ಮೊರೆಯಿಟ್ಟು ಅರುಹುವೆ ೬
ಮುರಹರ ಶ್ರೀಕೃಷ್ಣ | ಗುರು ಗೋವಿಂದ ವಿಠಲಸರುವ ದೇವೋತ್ತಮ | ಕರುಣದಿ ಸಲಹೆನ್ನ ೭

೧೬
ಆರ್ತನಾಭೀಷ್ಟವನು | ಪೂರ್ತಿಗೊಳಿಸೊ ಪ
ಕಾರ್ತಸ್ವರ ಮೊದಲಾದ | ವಾರ್ತೆ ನಾನೊಲ್ಲೇ ಅ.ಪ.
ಫಲ ಗಿಡೆಲೆ ಮರ ಬಳ್ಳಿ | ಜಲ ಬಿಂದು ನವ ನದಿಯುಜಲ ನಿಧಿಯು ವನಗಿರಿಯು | ಜಲ ಚರಾಚರಧೀ ||ಒಳ ಹೊರಗೆ ಸಂವ್ಯಾಪ್ತ | ಚಲಿಪೆ ನೆಲೆಯಿಲ್ಲದಲೆತಿಳಿಸೊ ತವ ಮಹಿಮೆಗಳ | ಅಲವ ಭೋದಾತ್ಮಾ ೧
ಕಂಡ ನೀರೊಳು ಮುಳುಗಿ | ಅಂಡಲೆದು ಬೆಂಡಾದೆಪುಂಡರೀಕಾಕ್ಷ ಪದ | ಬಂಡುಣಿ ಎನಿಸದೇ ||ಹಿಂಡು ತೀರದ ಗತ | ಪಾಂಡುರಂಗನ ರೂಪಕಂಡು ಹಿಗ್ಗುವುದೆಂದೊ | ಕುಂಡಲಿಯ ಶಯನಾ ೨
ಜ್ಞಾನಾಯು ರೂಪಕನೂ | ಪ್ರಾಣಾಂತರಾತ್ಮ ನಿನಜ್ಞಾನ ಕೊಟ್ಟು ಧರಿಸೊ | ಗಾನ ಪ್ರಿಯನೇ ||ಪ್ರಾಣನಿಗೆ ಪ್ರಾಣ ಗುರು | ಗೋವಿಂದ ವಿಠ್ಠಲನೆನೀನಾಗಿ ಒಲಿಯದಲೆ | ಅನ್ಯಗತಿ ಕಾಣೇ೩

೪೩೩
ಶ್ರೀ ವಿಜಯದಾಸರು
ಆಲಿಸೀ ಸಜ್ಜನರೆಲ್ಲ | ಆಲಿಸಿಅಲಿಸಿ ಶಿಷ್ಯ ಸಂಪತ್ತಿ | ಬಹುಮೇಳವಿಸಿತು ದಾಸ ವೃತ್ತಿ | ಆಹಲೀಲೇಲಿ ಚರಿಸುತ ಪಾಲಿಸಿ ಸುಜನರಮಾಲೋಲ ಧ್ಯಾನದಿ ಕಾಲವ ಕಳೆವಂಥ ಅ.ಪ.
ಸತ್ರಯಾಗದ ನೆವದಿಂದ | ಒಬ್ಬಪುತ್ರನಿರೆ ಮುದದಿಂದ | ಕಾಳತ್ರ ಮಡಲಿಘಾರೆ ನಿಂದ ಪುತ್ರಗೆ ಮೋಹನನೆಂದಾ | ಆಹಹಸ್ತವ ಶಿರದೊಳಿಡುತ್ತಲಿ ಹರಸೀದವಿಸ್ತಾರ ತವ ಕೀರ್ತಿ ಆಗಲೆಂದೆನುತಲಿ ೧
ಈ ಪರಿಯಲಿ ಬಹು ಸುಜನ | ಶಿಷ್ಯತಾ ಪೊಂದುತಂಕಿತಗಳನ | ಕೊಟ್ಟುಗೋಪಾಲ ವಿಠಲಾಂಕದವನ | ಗೈದುಆ ಪಂಗನಾಮ ತಿಮ್ಮಯ್ಯನ | ಆಹಆ ಪರಿಯಲಿ ವೇಣುಗೋಪಾಲ ವಿಠಲನಶ್ರೀಪಾದದಾಸನ್ನ ಮಾಡುತ್ತ ಪೊರೆದಂಥ ೨
ಒಪ್ಪುವೊ ಭಾಸ್ಕರ ಕ್ಷೇತ್ರ | ನಾಮ ಚಿಪ್ಪಗಿರಿ ಬಹು ಪವಿತ್ರ | ಸೇವೆಅರ್ಪಿಪ ಜನರ ತಾಪತ್ರ್ಯ | ನೀಗೆಒಪ್ಪುತಲಿದ್ದು ಸೂತ್ರ | ಆಹಅಪ್ಪನಾದ ಗುರು ಗೋವಿಂದ ವಿಠಲಗೆಕಪ್ಪ ತೆರದಿ ದೇಹ ನರ್ಪಿಸಿ ಮೆರೆದನ ೩

೨೦
ಇಂದಿರೆಯರಸನ ಛಂದದಿಂದ ಭಜಿಸೋ | ಮನದಲಿ ನೀ ನಿಲಿಸೊ ಪ
ಕುಂದನು ಎಣಿಸದೆ ಬಂದು ಕಾಯ್ವ ನಿನ್ನಾ |ನೆಂದು ಕಂದ ಬಲು ಘನ್ನಾ ಅ.ಪ.
ಪಾದದ ಮೂಲವು | ಪಾತಾಲವು ಎಂದೂ | ಉಪರಿ ರಸಾತಲವೆಂದುಪಾದದ ಪರ್ವವು | ಮಹಾ ತಲಾಖ್ಯ ಲೋಕ | ಉಪರಿ ತಲಾತಲ ಲೋಕ ||ಸಾಧಿಸು ಜಂಘೆಗಳ್ | ದ್ವಯವೆ ಸುತಲ ಲೋಕ |ಚಿಂತಿಸಿ ಕಳೆ ಶೋಕ ||ಮೋದದ ಊರು ದ್ವಯ | ವಿತಲಾತಲವೆನ್ನೂ | ಮುಂದೆ ಸಾಗುತಲಿನ್ನು ೧
ಸಾರು ಕಟಿಯಧರನೇ | ಮಹೀತಲವೆಂದೂ | ನಾಭಿಯು ಭುವರೆಂದೂಚಾರು ಉರಸಿನಲ್ಲಿಹ | ಸ್ವರ್ಗ ಲೋಕವೆನ್ನೂ | ಸುರಪನಾಳ್ವನೆನ್ನೂ ||ಮೀರಿ ಕಂಠದಲ್ಲೀ | ಚಿಂತಿಸು ಮಹಲೋಕ | ಮುಖವೇ ಜನ ಲೋಕ ಭೂರಿ ಲಲಾಟವೆ | ತಪಸಿಗಳಾಸ್ಥಾನಾ | ಶಿರ ಬ್ರಹ್ಮನ ಸ್ಥಾನ ೨
ಮುನ್ನ ಸೂಕ್ಷ್ಮ ಚಿಂ | ತನೆಯೇ ಬಲು ಕಷ್ಟ | ಎಂದೆನುತ ವಿಶಿಷ್ಟಘನ್ನ ಮಹಿಮ ಹರಿ | ತಾಳಿದ ಬೃಹದ್ರೂಪ | ಅದುವೆ ವಿರಾಟ್ರೂಪಾ ||ನಿನ್ನ ಬಿಂಬ ಗುರು | ಗೋವಿಂದ ವಿಠಲನ್ನ | ಮತ್ತೆ ಸ್ಥೂಲವನ್ನಾ ನನ್ನೆಯೆಂದೈಕ್ಯವೆ | ಚಿಂತಿಸೋದು ಮುನ್ನ | ಒಲಿವನು ಗುಣ ಪೂರ್ಣ ೩

೫೧೫
ಇಂದು ಭಾಗ ಹರಿ ವಿಠಲ | ಪೊರೆಯ ಬೇಕಿವಳಾ ಪ
ನೊಂದಿಹಳೊ ಬಹುವಾಗಿ | ಹೇಸಿ ಸಂಸ್ರ‍ಕತಿಲೀ ಅ.ಪ.
ಕರುಣಾಸಾಗರ ವಿನುತ | ಪರಿಪರಿಯ ಶಾಸ್ತ್ರಗಳುವರಲುತಿದೆ ಶ್ರೀಹರಿಯೆ | ಮೊರೆ ಕೇಳದೇನೋತರುಣಿ ದ್ರೌಪದಿವರದ | ಕರಿವರದ ನೀನೆಂದುಮರಳಿಮಹಪಾಪಿ ಆ | ಅಜಾಮಿಳವರದಾ ೧
ಉಸಿರಿದ್ದು ಭಾರವನು | ಹೊರುಎಂದು ಪೇಳ್ಬಹುದುಉಸಿರಳಿವ ಪರಿಮಾಡೆ | ಮೊರೆ ಆವನಿಡುವಾಬಸಿರಿನಿಂ ಬಂದಂಥ | ಶಿಶುಗಳೆಲ್ಲವೂ ಪೋಗಿಯಶವ ವರ ಮೆರೆಸಲ್ಕೆ | ಹಸುಮಗನಸಲಹೋ ೨
ಸಂಸಾರ ಕ್ಲೇಶಗಳ | ಶಿಂಸಿಸಲು ಅಳಿವಲ್ಲಕಂಸಾರಿ ನಾವಾಗಿ | ಪೊರೆಯ ಬೇಕಿವಳಾವಂಶ ಉದ್ದರಿಸೆ ಪದ | ಪಾಂಸು ಬೇಡ್ವಳೊ ನಿನ್ನಸಂಶಯವು ಯಾಕಿನ್ನು | ಕರುಣಿಸೋ ಹರಿಯೆ ೩
ನಂದಮುನಿ ಮತವನ್ನು | ಪೊಂದಿ ಜೀವಿಪಳೊ ಸಂಕ್ರಂದ ನಾದಿಗಳಿಂದ | ವಂದ್ಯ ಶ್ರೀಹರಿಯೇಅಂದ ಈ ಕಾರಣದಿ | ನಂದವನು ಈಯದಿರೆಅಂದುಕೊಂಬರೆ ಸುಜನ | ತಂದೆ ಕೈಪಿಡಿಯೋ ೪
ಜ್ಞಾನ ಸದ್ಭಕುತಿ ವೈ | ರಾಗ್ಯ ಕೊಟ್ಟವಳೀಗೆಕಾಣಿಸೋ ಸದ್ಗತಿಯ | ಕಾರುಣ್ಯ ಮೂರ್ತೇಏನೊಂದು ಅನ್ಯವನು | ನಾನು ಬೇಡುವುದಿಲ್ಲಜಾಣಗುರು ಗೋವಿಂದ | ವಿಠಲಾ ಪೊರೆ ಇವಳಾ ೫

೨೧
ಇತರೆಯಳ ಸುತನೆನಿಪ ಐತರೇಯ |ಗತಿಪ್ರದ ಶ್ರೀ ವಿಷ್ಣು ಸರ್ವಾಂತರಾತ್ಮಾ ಪ
ಪಂಥಾದಿ ಪದವನ್ನೇ ಸರ್ವ ಶಬ್ದ ಸುವಾಚ್ಯಎಂತೊ ತವ ಮಹಿಮೆಗಳು ಶೃತಿ ಭೋದ್ಯವೋಸಂತ ಜನ ತವ ಭೂತಿ ವಿಭೂತಿ ನೆನೆಯುತಿರೆ ಅಂತೆ ಶೃತಿ ಮಹ ಭೂತಿ ಪ್ರತಿ ಪಾದ್ಯ ಹರಿಯೇ ೧
ಅಕಳಂಕ ಹರಿ ಪರವು ಅಲ್ಲದಿಹ ಕ್ರಿಯೆಯೋಗಸಕಲವೂ ಬಹು ವ್ಯರ್ಥ ಎಂಬುದನು ಅರುಹೆ |ನಿಖಿಲಾತ್ಮ ನೀನಾಗಿ ಕರ್ಮ ಕರ್ಮಾಂಗದಲಿಪ್ರಕಟವಾಗಲು ಅಲ್ಲಿ ಸನ್ನಿಹಿತನಿರುವೇ ೨
ಭೂತ ಪಂಚಕದಲ್ಲಿ ಪಂಚಾತ್ಮ ನೀನಿದ್ದುಭೂತ ವಾಯುವಿನಲ್ಲಿ ಮತ್ತೆ ಪಂಚಾತ್ಮಾ |ಈ ತೆರದಿ ನೀನಿದ್ದು ಭೂತೇಂದ್ರಿ ಮಾನಿಸಹವಾತನಡೆಸುವುದೆಲ್ಲ ಯಜ್ಞವೆನಿಸುವುದು ೩
ಇಂತಿಪ್ಪ ಯಜ್ಞದಲಿ ಸಂತ ಶ್ರೀಪಾದಾರ್ಯಅಂತೆ ತಮ ಶಿಷ್ಯ ಸಹಕೃತ ಸುಮಂಗಳದಲಿ |ಧ್ವಾಂತ ಹರ ಶ್ರುತಿಯನ್ನೆ ಐತರೇಯದಿ ವಾಚ್ಯಪಂಥಬಿಧ ಸರ್ವರಿಗೆ ಒಲಿಯೆ ಪ್ರಾರ್ಥಿಸುವೇ ೪
ಪರಮ ಹಂಸರು ಎನಿಪ ವಿಶ್ವೇಶ ತೀರಥರವರ ಸುನೇತೃತ್ವದಲಿ ಮಂಗಳದ ಕಾರ್ಯ |ಪರಕಿಸುವ ಸೌಭಾಗ್ಯ ದೊರಕಿದವನಿಗೆ ಭಾಗ್ಯಹರಿ ಗುರು ಗೋವಿಂದ ವಿಠಲ ಕರುಣಿಸುವ ೫

೪೫೧
ಶ್ರೀ ಮೋಹನದಾಸರು
ಇನ್ನಾದರು ಎನ್ನ ಪೊರೆಯೊ | ಮೋಹನರಾಯನಿನ್ನವನಲ್ಲವೇನೋ ಪ
ಎನ್ನನೀಪರಿ ಬನ್ನ ಬಡಿಪದುಚಿತವೇನೋಚೆನ್ನ ಶ್ರೀ ವಿಜಯ ದಾಸಾರ್ಯರ ಚಿಣ್ಣಾ ಅ.ಪ.
ಎನ್ನ ಪಾಲಿಸಿದಂದದೀ | ಸಕಲ ಪ್ರಪನ್ನರ ಸಲಹುವುದೆಂದೂ ಬಿನ್ನಪಗೈದು ಮೋಹನ್ನ ವಿಠಲನೀಗೆ ಘನ್ನುಪಕಾರವ ಮಾಡಿದ ಧೀರಾ ೧
ಮನ್ನವಚ ಕಾಯದಿ | ನಿನ್ನಯ ಚರಣ |ವನ್ನು ಪೂಜಿಪೆ ಮೋಹನ್ನ |ಮನ್ನಿಸಿಯೆನ್ನಯ ಅವಗುಣವೆಣಿಸದೆಕುನ್ನಿಯ ಕಾಯೊ ಸದ್ಗುರುವೆ ಪ್ರಸನ್ನ ೨
ಯುಕ್ತಿ ಕಥೋಕ್ತೀಲಿ ಪವನ | ಮತದ ಸಾರ |ಭಕ್ತರಿಗರ್ಥಿಲಿ ಸ್ತವನ |ಮುಕ್ತಿದಾಯಕ ಗುರುಗೋವಿಂದ ವಿಠಲನವ್ಯಕ್ತಮಾಡಿಸೊ ಗುರು ಮೋಹನ್ನರಾಯಾ ೩

೧೮೨
ವಾಯು ದೇವರು
ಈರಾ – ಹರಿಪದ ಸೇವಕ ಧೀರಾ |ಹರಿರಿಪುವನ ಪಾವಕ ಘೋರಾ | ಭಾರತೀಶ ಮಹ ಶೂರಾ ಪ
ಅರಿಕರಿ ಸಂಕುಲ ಕೇಸರಿ ರೂಪನೆಶರಣೆನ್ನುವೆ ತವ ಚರಣಾಬ್ಜಗಳಿಗೆ ಅ.ಪ.
ಪ್ರಾಣಾ-ಜಗಧರ ಕೂರ್ಮ ಸತ್ರಾಣ | ಮಾನ ಪ್ರಮೇಯದಿ ನಿಪುಣಪಠಿಸಿ ಮೆರೆದ ನವ ವ್ಯಾಕರಣ | ಜಡ ಜೀವ ನಿಯಾಮಕ ಪ್ರಾಣಜ್ಞಾನ ಜ್ಞೇಯ ಜ್ಞಾತ್ರ ಅಭಿಧಾನದಕ್ಷೋಣೀಶಗೆ ಕರ್ತೃ ಕರ್ಮ – ಕರಣ ೧
ಭೀಮಾ – ಕೌರವರಳಿದ ನಿಸ್ಸೀಮ | ಪ್ರಥಮಾಂಗ ಹರಿಗೆ ಸುಧಾಮಅಸಮ ನಿನ್ನೊಳು ಹರಿಪ್ರೇಮ | ನಿನಗೊಂದಿಪೆ ಮುಂದಿನ ಬೊಮ್ಮಶ್ಯಾಮಸುಂದರ ಹರಿ ಪ್ರೇಮ ಸಂಪೂರ್ಣನಿಮ್ಮೋಲಗೆ ಬಯಸುವೆ ಭೂಷ ಲಲಾಮ೨
ಮಧ್ವಾ – ಬಹುಶ್ರುತಿ ಪ್ರತಿಪಾದ್ಯ | ಮಧ್ವಾಖ್ಯ ತತ್ರ್ಯತಿ ಸಿದ್ಧಶುದ್ದ ಸತ್ವಾತ್ಮಕ ತನು ಬದ್ಧ | ಬದ್ದ ತ್ವವು ನಾಮಮಾತ್ರ ಸಿದ್ದಅದ್ವಿತೀಯ ಗುರು ಗೋವಿಂದ ವಿಠಲನಸಿದ್ಧಾಂತಿಸಿ ಬಹು ಹಳಿದೆ ವಿರುದ್ಧ ೩

೩೧೯
ಕ್ಷೇತ್ರ ದರ್ಶನ
ಉಡುಪಿಯ ಯಾತ್ರೆಯ ಮಾಡಿ – ಉಡುಪಿಯಾ ಪ
ಉಡುಪಿಯ ಯಾತ್ರೆಯನ್ನೆ ಮಾಡಿ | ಭಕ್ತಿಮುಡುಪಿತ್ತು ಪ್ರಮೋದ ಬೇಡಿ | ಆಹನಡುದೇಹ ದೋಳೀಹ | ನಡುನಾಡಿ ಕಮಲದಿಒಡೆಯ ಶ್ರೀ ಕೃಷ್ಣನ್ನ | ಧೃಡ ಭಕ್ತಿಯಿಂ ಭಜಿಸಿ ಅ.ಪ.
ಆನಂದ ತೀರಥ ಸರಸಿ | ಯೊಳುಮೀನನಾಗಿ ಬಹು ಈಸಿ | ಹರಿಧ್ಯಾನದಿ ಸ್ನಾನ ಪೊರೈಸಿ | ಮತ್ತೆಮೌನವೆಂಬಾಸನ ಹಾಸಿ | ಆಹಮೂಧ್ರ್ನಿ ಲಲಾಟದೋಳ್ | ಗೋಣು ಮಧ್ಯೋದರಸ್ಥಾನಾದಿಯಲಿ ಹರಿ | ಧ್ಯಾನ ನಾಮವ ಹಚ್ಚಿ ೧
ಮಧ್ವ ಕಿಂಕರನೆಂಬೊ ದೊಂದು | ಹರಿವಿದ್ವೇಷಿಗಳ ಬಡಿವೊದೆಂದು | ಮತ್ತೆಸದ್ವೈಷ್ಣವರ ಸೇರ್ವೋದೊಂದು | ಇನ್ನುಬುದ್ಧಿಪೂರ್ವಕ ಹರಿ ಪರನೆಂದು | ಆಹಶ್ರದ್ಧಾಳು ವೆಂದೆನಿಪ | ಮುದ್ದು ಮುದ್ರೆಗಳೈದುತಿದ್ದಿ ವಿಸ್ತರಿಸೂತ | ಕೃದ್ದೋಲ್ಕಾದಿಯನೆನೆ ೨
ಸಂಧ್ಯಾ ಮೂಡಿಹುದು ನೀ ನೋಡು | ಕಾಲಮುದ್ಹಿಂದಾಗದಲೆ ನೀ ಮಾಡು | ಯಾವದೊಂದು ಮಂತ್ರಾರ್ಥವ ನೋಡು | ಇನ್ನುಸಂಧ್ಯಾ ನಾಮಕನ ಕೊಂಡಾಡು | ಆಹಛಂದದಿ ನಿನ ಜ್ಞಾನ | ಮುಂದು ಮುಕ್ಕಿಲು ಒಪ್ಪಮಂದೇಹ ದೈತ್ಯರ | ಮಂದಿಯ ಕೊಲ್ಲುತ ೩
ಕಂಟಕ ಕಳೆದು ಶರೀರ | ಮಧ್ಯಮಂಟಪ ಚಿಂತಿಸೊ ಧೀರ | ಅದಕೆಎಂಟರ್ಧ ಮತ್ತೊಂದು ದ್ವಾರ | ಕಾಯ್ವಭಂಟ ಮಾರುತನ ವ್ಯಾಪಾರ | ಆಹಎಂಟ್‍ಟಾರು ನಾಲ್ಕು ಸ್ತಂಭ ಮಧ್ಯದಿ ಲಕ್ಷ್ಮಿಮಂಟಪ ಚಿಂತಿಸಿ ಒಂಟಿಯಾಗೊ ಮನದಿ ೪
ಕೆಳ ಮುಖಾಬ್ಜವನೇ ನೀ ನೋಡೀ | ಮಂತ್ರಮೂಲದಿಂದ ಮೇಲು ಮಾಡಿ | ಅಲ್ಲಿಇಳೆಯಾಣ್ಮನನ ಚಿಂತೆ ಮಾಡಿ | ಸರ್ವಅಲಂಕಾರ ದಿಂದೊಡಗೂಡೀ | ಆಹನೆಲೆಸೀಹ ಕೃಷ್ಣನ್ನ | ಒಲಿಸೆ ಭಕ್ತಿಯಿಂದಸ್ಥಳ ತನ್ನ ಅರಮನೆ | ಯೊಳು ಕೊಟ್ಟು ಸಲಹುವ ೫
ಕಂಬು ಚಕ್ರ ಗದಧರನ | ಪದನಂಬುತಲಘ್ರ್ಯ ಆಚಮನ | ಸರ್ವಸಂಭ್ರಮದಲಿ ಕೊಟ್ಟು ಅವನ | ಜ್ಞಾನಧಂಬಲಿನೊಳು ನಿತ್ಯ ಸ್ತವನ | ಆಹಇಂಬಿಟ್ಟು ಸ್ತೋತ್ರದಿ | ಉಂಬುಡುವೋ ಸರ್ವಬಿಂಬನೋಳರ್ಪಿಸಿ | ಸಂಭ್ರಮದಲ್ಲಿರು ೬
ಮಧ್ವ ಸರೋವರ ಸ್ನಾನ | ಭಕ್ತಿಶುದ್ಧದಿ ಶ್ರೀಕೃಷ್ಣಧ್ಯಾನ | ಮಾಡೆಹೃದ್ಯನು ಹೃದ್ಯದಿಷ್ಠಾನ | ದಲ್ಲಿಸಿದ್ಧಿಸೂವನು ಗುಣ ಪೂರ್ಣ | ಆಹಮುದ್ದು ಕೃಷ್ಣನು ಗುರು | ಗೋವಿಂದ ವಿಠಲನುಶ್ರದ್ಧೆ ಸತ್ವಕ್ಕೊಲಿವ | ಸಿದ್ಧ ಕನಕನ ನೋಡಿ ೭

ತೀರ್ಥ ಕ್ಷೇತ್ರ ಮಾಲಾ
೧೯೫೨ ರಲ್ಲಿ ಇಡೀ ಭರತ ವರ್ಷದಲ್ಲಿ ಪ್ರದಕ್ಷಿಣಾಕಾರವಾಗಿ ಹೊರಟು ಆಸೇತು ಹಿಮಾಚಲ ಪರ್ಯಂತವಿರುವ ಅನಂತ ತೀರ್ಥ ಕ್ಷೇತ್ರಗಳಲ್ಲಿ ಈ ಅಲ್ಪಾಧಿಷ್ಠಾನದ ಯೋಗ್ಯತಾಪ್ರಕಾರ ಬಿಂಬನು ಮಾಡಿ ಮಾಡಿಸಿದ ಯಾತ್ರಾ ಪ್ರಕರಣವೂ, ಮತ್ತೆ, ೧೯೫೪ ರಲ್ಲಿ ಉಡುಪಿ ಇತ್ಯಾದಿ ಪಶ್ಚಿಮ ಕ್ಷೇತಗಳ ಮತ್ತು ೧೯೫೭ ರಲ್ಲಿ ಮಲಖೇಡದಲ್ಲಿ ಬೃಹತೀ ಸಹಸ್ರವಾದಾಗ ಆಕಡೆ ಹೋದಾಗ ನೋಡಿದ ಅನೇಕ ಕ್ಷೇತ್ರಗಳ ಮತ್ತು ೧೯೬೧ ರಲ್ಲಿ ಸ್ವಾದಿ, ದ್ವಾರಕ, ಪುಷ್ಕರ, ಬದರಿ (ದ್ವಿತೀಯಾವರ್ತಿ) ಹೋಗಿ ಬಂದಾಗ ನೋಡಿದ ಯಾತ್ರಾ ಪ್ರಕರಣಗಳ ಜ್ಞಾಪಕಾರ್ಥವಾಗಿ ಈ ತೀರ್ಥಕ್ಷೇತ್ರಮಾಲಾ ಅಸ್ಮದ್ಗುರ್ವಂತರ್ಗತ ಬಿಂಬ ಮೂರುತಿ ಪ್ರೇರಿಸಿದಂತೆ ಬರೆಯಲ್ಪಡುತ್ತೆ.

ಉತ್ತರಾದಿ ಮಠದ
೪೧೫
ಉತ್ತರಾದಿಯ ಮಠದ ಪೀಠವಾಸಾ ಪ
ಸತ್ಯಧರ್ಮಾಖ್ಯ ಯತಿ ಭಕ್ತ ಜನ ಪೋಷಾ ಅ.ಪ.
ಪಂಚಮುಖ ಪ್ರಾಣನೂಪಾಸಕನೆ ಎನ್ನವಂಚಿಸದೆ ಭವದೊಳಗೆ ಕಾಯೊ ಬೇಗಾ |ಸಂಚಿತವ ಪರಿಹರಿಸೊ ವಾಂಛಿತಾರ್ಥದ ಹರಿಯಮಂಚ ಪದ ಯೋಗ್ಯಾಂಶ ಸಂಭೂತ ಯತಿಯೇ ೧
ಭದ್ರೆ ತೀರದಿ ವಾಸ ಭವದುಪದ್ರವ ಕಳೆಯೊಕಾದ್ರ ವೇಯನ ಪದವು ಭದ್ರ ನಿನಗೇ |ಮಾದ್ರ ವೇಯಾಗ್ರಜಗೆ ವಲಿದಿತ್ತೆ ಅಸ್ತ್ರವನುರೌದ್ರ ಮೂರುತಿ ಕಾಯೋ ಗುರು ವರೇಣ್ಯಾ ೨
ಪ್ರಾಜ್ಞ ಮೂರುತಿ ಹರಿಯ ಆಜ್ಞೆಯನು ಸ್ವೀಕರಿಸಿಸುಜ್ಞ ನೀ ರಚಿಸಿದೆಯೊ ಭಾಗವತ ವ್ಯಾಖ್ಯಾ |ಸಜ್ಜನೋದ್ಧಾರಿಯನ್ನ ಜ್ಞಾನ ಪರಿಹರಿಸಿವಿಜ್ಞಾನಮಯ ಹರಿಯ ತೋರೈಯ್ಯ ಜೀಯಾ ೩
ಸತ್ಯವರ ಕರಜಾತ ಶ್ರೀ ಸತ್ಯ ಧರ್ಮಾಖ್ಯನಿತ್ಯ ತವ ಸಚ್ಚರಣ ಸ್ತುತಿಪ ಜನರಾ |ಅತ್ಯಧಿಕ ಪ್ರೀತಿಯಲಿ ಹತ್ತಿರಕೆ ಕರೆಯುತ್ತಸತ್ಯ ಮೂರುತಿ ಪುರಕೆ ಎತ್ತೊಯಿವ ಗುರುವೇ೪
ವತ್ಸರ ಸುವಿಕೃತವು ಅಸಿತ ಶ್ರಾವಣದಲ್ಲಿಮತ್ಸ್ಯಾದಿ ದಶ ಮತ್ತೆ ಮೂರನೆಯ ದಿನದೀ |ವತ್ಸಾರಿ ಶ್ರೀ ಗುರು ಗೋವಿಂದ ವಿಠ್ಠಲನಹೃತ್ಸರೋಜದಿ ಭಜಿಸಿ ತನುವ ತ್ಯಜಿಸಿದನೇ ೫

೫೧೮
ಉದಯಾದ್ರೀಶ ವಿಠಲ ಮುದವನಿತ್ತವನೀಗೆಉದ್ಧರಿಸ ಬೇಕೆಂದು ಪ್ರಾಥಿಸುವೆ ಹರಿಯೇ ಪ
ಸದಯ ನೀನಿರೆದೇವ ಸಂಸ್ರ‍ಕತಿಯ ಶೃಂಖಲೆಗೆಬೆದರಿಕಿಲ್ಲವೊ ಇವಗೆ ನರಹರಿಯೆ ಸ್ವಾಮಿಅ.ಪ.
ಸ್ವಾಪದಲಿ ನಭದಲ್ಲಿ ರೂಪವನೆ ತೋರಿದ ಯೊಪಯೋನಿಧಿಯಾಗಿ ಮೆರೆವೆ ವೆಂಕಟೇಶ |ಆಪಯೋಜಾಸನ ವಿಷಾದ್ಯರಿಗೆ ನಿಲುಕದಅಪಾರ ತವಮಹಿಮೆ ನಾ ಪೇಳಲೊಶವೇ ೧
ಸಾರನಿಸ್ಸಾರವೆನೆ ಜಗದೊಳಗೆ ನೀನೊಬ್ಬಸಾರತಮನೆಂದೆಂಬ ಪಾರಮಾರ್ಥಿಕವ |ತಾರತಮ್ಯ ಜ್ಞಾನ ಮೂರೆರಡು ಭೇಧಗಳಸಾರವನೆ ತಿಳಿಸಿ ಸಂಸಾರ ನಿಧಿ ದಾಟಿಸೋ ೨
ಗರ್ವರಹಿತನು ಇವಗೆ ಕವನ ಶಕ್ತಿಯನಿತ್ತುಸರ್ವತ್ರ ಸರ್ವದಾ ಸರ್ವಕಾರ್ಯಗಳಲ್ಲಿಸರ್ವೇಶ ತವನಾಮ ಸ್ರ‍ಮತಿಯನ್ನೆ ಕರುಣಿಸುತದರ್ವಿ ಜೀವನಕಾಯೊ ಸರ್ವಾಂತರಾತ್ಮಾ ೩
ಶ್ರೀದ ಶ್ರೀ ವೆಂಕಟನ ನೋಡಿದೆ ಎಂಬಂಥಮೋದದಾಯಕ ಪದವು ಉದಯ ವಿಠಲಾಂಕಿತವಾದಿರಾಜರ ಶಿಷ್ಯ ಪಾಡಿ ಪೂರೈಸುತಿರೆನೀದಯದಿ ತವರೂಪ ತೋರ್ದುದನು ಮರೆ ಮಾಡಿದೆ೪
ಪಾವಮಾನಿಯ ಪ್ರೀಯ ಭಾವುಕರ ಪರಿಪಾಲಗೋವತ್ಸ ಧ್ವನಿ ಕೇಳಿ ಧಾವಿಸೀ ಬರುವಂತೆತೀವ್ರುಪಾಸನೆ ಇತ್ತು ಇವನ ಹೃತ್ಕಂಜದಲಿದೇವ ಗುರು ಗೋವಿಂದ ವಿಠಲ ತವರೂಪ ತೋರೊ೫

೪೩೪
ಉದಿಸೀದಾ ರವಿಯು ತಾನುದಿಸಿದ ಪ
ಉದಿಸಿದ ರವಿಯು ತಾನೆನಿಸೀ | ಗುರುಮುದಮುನಿ ಮತವ ವಿಸ್ತರಿಸೀ | ಆಹಬುಧಜನರಂತಸ್ಥ ಬಹು ವಿಧ ತಿಮಿರವಒದೆದು ಛೇದಿಸುವಂಥ ವಿಜಯಾರ್ಯ ತರಣಿಯು ಅ.ಪ.
ಸುರಮುನಿ ಪಾದವ ಭಜಿಸೀ | ಯುಗವೆರಡರೊಳ್ ಸುರಲೀಲ ನೆನಿಸೀ | ಯುಗಮೂರರೊಳ್ ನಿಕಂಪನೆನಿಸೀ | ಯುಗಮೂರೊಂದರಲಿ ಕರುವೆನಿಸೀ | ಆಹಪುರಂದರ ದಾಸರ ಗೃಹದೊಳಗುದಿಸುತ ೧
ಕರಣೀಕ ಶೀನಪ್ಪ ತನು | ತನ್ನವರಪ್ರಿಯ ಸತಿಕೂಸಮ್ಮನು | ಬಲುಪರಿಪರಿ ಸೇವಿಸಿ ವರವನು | ಪೊಂದಿಎರಡೊಂದು ತನಯರುಗಳು | ಆಹಪರಿ ಪಾಲಿಸುತ್ತಲಿ ಪರಿಪರಿ ಭವಣೇಲಿಪೊರೆಯವು ಉದರವ ಸರಿಯಿತು ಕಾಲವು ೨
ಬಡತನ ಭವಣೇಲಿ ಬಂದೂ | ಒಂದುಕುಡಿತೆ ಗಂಜಿಗಾಗಿ ನೊಂದೂ | ಛಾಗಿಒಡೆಯನ ಮನೆಯೊಳಗಂದೂ | ಮೆದ್ದುಒಡಲ ತುಂಬಿಕೊಂಡು ಬಂದೂ | ಆಹಬಡಗ ದಿಕ್ಕಿನ ಗಂಗೆ ಮಡುವ ಕಾಣುವೆನೆಂದುಸಡಗರದಲಿ ಪೋದ ಬಡ ಕೂಸೀಮಗದಾಸ ೩
ಎರಡೆಂಟು ವತ್ಸರ ತರಳ | ತನ್ನಹಿರಯರಿಗ್ಹೇಳದೆ ಪೊಳಲ | ಬಿಟ್ಟುತಿರುಗುತ ತೀರ್ಥ ಕ್ಷೇತ್ರಗಳ | ಮಿಂದುಮರಳಿ ತಾ ಮಾತಾ ಪಿತೃಗಳ | ಆಹಬೆರೆದು ಮಾನವರಂತೆ ಸಂಸಾರ ವೃತ್ತಿಲಿಚರಿಸಿದವೆರಡುಂಟು ವರುಷವ ಕಳೆಯುತ ೪
ಮತ್ತೆ ತಾ ವೈರಾಗ್ಯದಲ್ಲಿ | ಹರಿಪೆತ್ತ ಗಂಗೆಯ ಸ್ನಾನದಲ್ಲಿ | ಮನತೆತ್ತು ಗಯಾದೇಶದಲ್ಲಿ | ಪಿಂಡವಿತ್ತು ವಾರಣಾಸಿಯಲ್ಲಿ | ಆಹಉತ್ತಮರ ಸಂಗ ನಿತ್ಯಸ್ನಾನ ಸಂಧ್ಯಕೃತ್ಯವನೆಸಗಿ ಸುಚಿತ್ತದಿ ಮಲಗಿರೆ ೫
ಸತ್ಯ ಸ್ವಪ್ನದಿ ನರಹರಿಯು | ತನ್ನಪುತ್ರನೆಬ್ಬಿಸಿದಂತೆ ಪರಿಯು | ದಾಸರಂತೆ ರೂಪವ ತಾಳಿ ಹರಿಯು | ತನ್ನಹತ್ತಿರ ಕರೆಯುತ ಧೊರೆಯು | ಆಹಚಿತ್ತಜ ಪಿತ ಪೆತ್ತ ಸರಿತವ ದಾಂಟಿಸಿಉತ್ತಮ ಕಾಶಿಯ ವ್ಯಾಸರ ಕಂಡವ ೬
ಎಚ್ಚೆತ್ತು ಮನಸೀನ ಪರಿಯ | ಕಂಡುಹೆಚ್ಚಿನ ಸಂತೋಷಧೊರೆಯ | ಹೊತ್ತುನಿಚ್ಚಟ ಭಕುತಿಯಿಂಧರಿಯ | ಮನಮೆಚ್ಚುವಂತೆ ಪರಿ ಪರಿಯ | ಆಹಅಚ್ಚ ಕವನ ಪೇಳಿ ನೆಚ್ಚಿನ ಮನದವರಸ್ವಚ್ಛತನಕೆ ತಿದ್ದಿ ಅಚ್ಚ್ಯುತಗಿಂತವ ೭
ಎರಡೊಂದನೇ ಬಾರಿ ಪೋಗಿ | ಕಾಶಿಪುರದಿ ಗಂಗಾಸ್ನಾನಕಾಗಿ | ಕೂಡೆಸುರನದಿ ಪೆಚ್ಚಿ ಮೇಲಾಗಿ | ಸಿರಿವರದ್ವಿಜಗಭಿಷೇಕವಾಗಿ | ಆಹಸರಿತವು ಮುಂಚಿನ ಪರಿಯಂತೆ ಪ್ರವಹಿಸೆಸುರನರೋರುಗರೆಲ್ಲ ಪರಿಪರಿ ಕೊಂಡಾಡೆ ೮
ತುತಿಸುತಲಲ್ಲಿಂದ ಸೇತು | ಸ್ನಾನರತಿಯಿಂದ ಗೈಯ್ಯುತ ಹೊತ್ತು | ಹರಿಕಥೆಗಳ ಪೇಳಿ ಯಾವತ್ತು | ಜನತತಿಗೆ ಸನ್ಮಾರ್ಗವನಿತ್ತು | ಆಹತೀರ್ಥ ಕ್ಷೇತ್ರಂಗಳ ನತಿಸುತ ದಶಮತಿಮತವ ಬೀರಿದನೀತ ಸುಜನರ ಪೊರೆಯಲು ೯
ವೇದಾದಿ ಸಕಲಾರ್ಥ ಸಾರ | ಸೊಳ್ಹಾದಿಗಳ್ ಮೊದಲಾದ ಹಾರ | ದಿಂದಭೇದ ವಾದಿಯ ಮತೋದ್ಧಾರ | ಗೈದುಶ್ರೀಶ ಗೊಪ್ಪಿಸೀದ ಧೀರ | ಆಹನಾದ ಮೂರುತಿ ಗುರು ಗೋವಿಂದ ವಿಠಲನಪಾದವ ಸ್ಮರಿಸುತ್ತ ಮೋದವ ಪಡುತ್ತಿದ್ದ ೧೦

೫೧೬
ಉಪೇಂದ್ರ ವಿಠ್ಠಲನೆ ಕೃಪೆಯಿಂದ ಕೈಯ್ಯ ಪಿಡಿಯೊ ಪ
ಅಪವರ್ಗ ಪ್ರದಹರಿಯೆ | ನಿಪುಣವೆನಿಸುತ ಶಿಶುವವಿಪುಲ ಮತಿಯನೆ ಕೊಟ್ಟು | ಕಾಪಾಡೊ ಹರಿಯೇ ಅ.ಪ.
ವರುಷ ಕಾರಣವಲ್ಲ ಹರಿಭಜನೆಗೆಂಬುದನಪರಿಕಿಸುತ ಇವನಲ್ಲಿ| ಪ್ರಾರ್ಥಿಸುವೆ ನಿನಗೇ |ನಿರುತ ನಿನ್ನಯ ಪದದಿ | ಮೆರೆವ ಭಕುತಿ ಜ್ಞಾನಕರುಣಿಸುವುದೆಂದೆನುತ | ಪರಿಪರಿಯಲಿಂದ ೧
ಪ್ರಾಕ್ಕು ಕರ್ಮವ ಕಳೆದು | ಕಾಕು ಮತ ದಿಕ್ಕರಿಪವಾಕು ವೈಖರಿಯಿತ್ತು | ತೋಕನ್ನ ಸಲಹೋ |ಲೌಕಿಕದಿ ಸತ್ಕೀರ್ತಿ | ಬೇಕಾದವರವಿತ್ತುನೀ ಕರುಣಿಸುವೆನೆಂದು | ನಾ ಕೇಳ್ವೆ ಹರಿಯೇ೨
ದೇವದೇವೇಶ ತವ| ಪಾವನ್ನಸ್ರ‍ಮತಿಯಿತ್ತು ಗೋವತ್ವದ ನಿಗಾವು | ಧಾವಿಸುವ ತೆರದೀಕೋವಿದೋದ್ಗೀತ ಗುರು ಗೋವಿಂದ ವಿಠ್ಠಲನೆಭಾವುಕನ ನೀಪೊರೆಯೊ | ಗೋವಿದಾಂಪತಿಯೇ ೩

೫೧೭
ಉಪೇಂದ್ರ ಹರಿ ವಿಠಲ ಕೃಪೆಯಲಿಂದಲಿ ಇವನಕಾಪಾಡ ಬೇಕೆಂದು ಪ್ರಾರ್ಥಿಸುವೆ ಹರಿಯೇ ಅ.ಪ.
ಹರಿಗುರೂ ಭಕ್ತಿಯುತ | ತರಳ ನಿರುವನು ಹರಿಯೆಸುರರಾಜ ಭೋಗಗಳ | ಕರುಣಿಸುತ ಇವಗೇ |ಒರೆದು ತತ್ವ ಜ್ಞಾನ | ಮರಳಿ ಭಕ್ತ್ಯಭಿವೃದ್ಧಿಕರುಣಿಸುತ ಕಾಪಾಡೊ | ಕರಿವರದ ಹರಿಯೆ ೧
ವಿಯದಧಿಪ ಸುತನಿಗೆ | ಭಯವ ಪರಿಹರಗೈದುದಯದಿಂದ ಪೊರೆದಂತೆ | ಕಾಯಬೇಕೋಹಯವೇರಿ ಇಂದ್ರಿಯದ | ಜಯಸೂಚಿ ಸ್ವಪ್ನದಲಿಭಯಕೃತೂ ಭಯನಾಶ | ಅಭಯನೀಯೋ೨
ಪಿತೃ ಮಾತೃ ಸೇವೆಯಲಿ | ರತನನ್ನ ಮಾಡುತಲಿಹಿತ ಆಹಿತ ವೆರಡನ್ನು | ಸಮತೆಯಲಿ ಉಂಬಾಮತಿಯನ್ನೆ ಕರುಣಿಸುತ | ಕೃತಕಾರ್ಯನೆಂದೆನಿಸಿಸತತ ತವ ಸಂಸ್ರ‍ಕತಿಯ | ಇತ್ತು ಪೊರೆ ಇವನಾ ೩
ಲೌಕಿಕದಲ್ಲಿದ್ದರೂ | ಕಾಕು ಮಾಯ್ಮತ ಹಳಿಚಾಕ ಚಕ್ಯತೆ ಕೊಟ್ಟು | ನೀ ಕಾಯಬೇಕೋ |ಬೇಕಾದಭೀಷ್ಟಗಳ | ತೋಕನಿಗೆ ಕರುಣಿಸುತಶ್ರೀಕರಾರ್ಚಿತ ಪಾದ | ಪಂಕಜವ ತೋರೋ ೪
ಪಾವಮಾನಿಯ ಪ್ರೀಯ | ಶ್ರೀವರನೆ ಈಶಿಯವಕೋವಿದನ ಗೈಯ್ಯತ್ತ | ಭುವಿಯೊಳಗೆ ಮೆರೆಸೋಗೋವಿದಾಂಪತಿಯೆ ಗುರು | ಗೋವಿಂದ ವಿಠ್ಠಲನೆನೀ ವೊಲಿಯದಿನ್ನಾರು | ಕಾವರನು ಕಾಣೇ ೫

೨೮೮
ಪಾರ್ವತಿ ದೇವಿ
ಉಮಾ – ನಿನಗೆ ಸರಿಯಾರೇಕಮ್ಮಗೋಲ್ವೈರಿಯ ಪ್ರೇಮ ಪಾತ್ರಳಾದ ಪ
ಆಡೂವ ನುಡಿಗಳ – ಜೋಡಿಸಿ ಹರಿಯಲಿಮಾಡೀಸು ಸತ್ಸಾಧನಾ ||ಬೇಡಿಕೊಂಬೆನು ದೇವಿ – ರೂಢಿಗೊಡೆಯನ ತಡಮಾಡದೆ ತುತಿಪಂಥ – ಜೋಡಿಸು ಮನಾ ೧
ಸುರಪಾದಿ ದೇವತೆ ಕರಗಳ ಜೋಡಿಸಿಶರಣೆಂದು ಪೇಳುವರೇ ||ಹರ್ಯಕ್ಷ ಯಕ್ಷನ ಈಕ್ಷಿಸಿ ಬರುತಿರೆಹರಿ ಪೇಳೆ ಸುರಪಗೆ ಬೋಧಿಸಿದೆ ೨
ಮೃತ್ಯುಂಜಯನ ಸತಿ – ವ್ಯತ್ಯಸ್ತ ಮನವನುಸತ್ಯಾತ್ಮನಲಿ ನಿಲಿಸೇ ||ಅರ್ಥೀಲಿ ಹರಿಯ – ಅತ್ಯರ್ಥ ಪ್ರಸಾದಕ್ಕೆಪಾತ್ರನೆಂದೆನಿಸಿ – ಪಾಲಿಸೇ ೩
ಪ್ರಾಣಂಗೆ ಪ್ರಾಣನ – ಗಾನ ಮಾಡಲು ಗುಣಶ್ರೇಣಿಗಳ ಜೋಡಿಸೇ ||ಗಾನ ವಿನೋದಿ – ಪ್ರ – ದಾನ ಪುರೂಷನಮಾಣದೆನಗೆ ತೋರಿಸೇ ೪
ಹಿಮಗಿರಿಸುತೆತವ – ವಿಮಲಪದಾಬ್ಜಕೆನಮಿಸುವೆ ನೀ ಪಾಲಿಸೇ ||ಅಮಿತಾರ್ಕ ನಿಭ ಗುರು ಗೋವಿಂದ ವಿಠಲನಕಮನೀಯ ಪದ ಕಾಣಿಸೇ ೫

೨೪೭
ಉಮಾರಮಣ ಶಂಭೋ – ಪಾಲಯಉಮಾರಮಣ ಶಂಭೋ ಪ
ರಮಾ ರಮಣ ಪದ | ಕಮಲ ಮಧುಪನೆಯಮ ನಿಯಮ ಶಮ | ದಮಾದಿ ಗುಣ ಕೊಡುಅ.ಪ.
ಕಮಲ ಭವ ಭವ ಶಂಕರಾ | ವಿಮಲ ರೂಪಳು ಗಂಗಾಧರಾಅಮರ ಸನ್ನುತ ಹರ ಹರಾ | ನಮೊ ನಿನ್ನ ಪದ ಪುಷ್ಕರಾ೧
ದೂರ್ವಾಸ ಮಹ ಮುನಿ ರುದ್ರನೆ | ಪೂರ್ವ ದಿವಿಜ ಪ್ರಿಯ ಉಗ್ರನೇಮೌರ್ವಿ ಪಿನಾಕಿಧರ ಶೂರನೇ | ಶರ್ವಾನೆ ತುತಿಸಲಾಪನೇ ೨
ಗುರು ಗೋವಿಂದ ವಿಠಲಾ | ಪೊರೆವನೆಂಬಂಧ ನಿಶ್ಚಲಾವರಮತಿಯನೀಯೊ ತ್ರೈಶೂಲ | ಧರ ಹರಿಸೊ ಮಾಯ ಪಟಲಾ ೩

೫೧೯
ಉರಗಗಿರಿವಾಸ ವಿಠಲ | ಪೊರೆಯ ಬೇಕಿವಳಾ ಪ
ಪರಮಕರುಣಾಮೂರ್ತಿ | ಪ್ರಾರ್ಥಿಸುವೆ ಹರಿಯೇ ಅ.ಪ.
ನಿರತ ನಿನ ಸ್ಮರಿಪರಘ | ಪರಿಹರಿಪೆ ನೆಂಬನುಡಿಪರಮ ಸಾರ್ಥಕ ಗೊಳಿಸೊ | ತರಳೇ ಇವಳಲ್ಲಿಕರುಣ ಸಾಗರ ನಿನ್ನ | ಬೇರೊಂದಪೇಕ್ಷಿಸದೆ |ಸರಸದಲಿ ತವರೂಪ | ಚಿಂತೆಯಲ್ಲಿಹಳೋ ೧
ಮರುತ ಮತವನೆ ಪೊಂದಿ | ತರತಮದ ಸುಜ್ಞಾನ ಪರಪಂಚಬೇಧಗಳ | ಅರಿತು ಭಜಿಸುವಳೋನೆರೆನಂಬಿ ತವಪಾದ | ಹಾರೈಸುತಿರುತಿಹಳವರ ಸುಸಾಧನವನ್ನೆ | ಅಭಿದೃದ್ಧಿಗೊಳಿಸೊ ೨
ಪತಿಸುತರು ಹಿತರಲ್ಲಿ | ವ್ಯಾಪ್ತ ಶ್ರೀಹರಿಯೆಂಬಮತಿಯಿಂದ ಸೇವಿಸುತ | ದ್ರವ್ಯ ವಿಭಮನಾಹತಗೈದು ಕತೃಪ್ವ | ಅಂತಕಾರಕ ಭ್ರಮವಕ್ಷಿತಿರಮಣ ಪರಿಹರಿಸಿ | ಆರ್ತಳುದ್ಧರಿಸೋ೩
ಜ್ಞಾನ ಸದ್ವೈರಾಗ್ಯ | ಅನುವಂಶಿಕವಾಗಿನೀನಾಗಿ ಕರುಣಿಸಿಹೆ | ಜ್ಞಾನಾತ್ಮಹರಿಯೆಮೌನಿಕುಲ ಸನ್ಮಾನ್ಯ | ಜ್ಞಾನಿ ಜನಸಂಗವನುನೀನಾಗಿ ಕೊಟ್ಟಿವಳ ಉದ್ಧರಿಸೋ ಹರಿಯೆ ೪
ಸರ್ವಜ್ಞ ಸರ್ವೇಶ | ಸರ್ವಾಂತಾರಾತ್ಮಕನೆದರ್ವಿ ಜೀವಿಯ ಹೃದಯ | ಗಹ್ವರದಿ ನಿನ್ನಾಭವ್ಯರೂಪವ ತೋರಿ | ಉದ್ದಾರ ಗೈ ಇವಳಾಶರ್ವವಂದ್ಯನೆ ಗುರು | ಗೋವಿಂದ ವಿಠಲಾ ೫

೫೨೦
ಋಗ್ವೇದ ಪ್ರಿಯ ವಿಠಲ | ಸದ್ಗುಣಾರ್ಣವನೇ ಪ
ಋಗ್ವಿನುತ ನೀನಾಗಿ | ಈಕೆಯನು ಪೊರೆಯೋ ಅ.ಪ.
ವೇದಾಧಿಕಾರವನು | ನೀ ದಯದಿ ತ್ಯಜಿಸದೆಮೋದದಿಂ ತೋರಿ | ಋಗ್ವೇದ ವಾಚಿಸಿದೇ |ಮೋದ ಮುನಿ ಮತದಲ್ಲಿ | ಸಾಧಿಸಿವಳಲಿ ದೀಕ್ಷೆಭೇದ ಪಂಚಕ ತಿಳಿಸಿ | ಉದ್ಧರಿಸೊ ಇವಳಾ ೧
ಹರಿದಾಸ್ಯ ಕಷ್ಟವೆನೆ | ಹಿರಿಯರ ಮತವಿಹುದುತರಳೆ ಆದ ಕಾಂಕ್ಷಿಪಳು | ಪೂರ್ವ ಪುಣ್ಯದಲೀಮುರವೈರಿ ನೀನಾಗಿ ಕರುಣಿಸುತ ತವದಾಸ್ಯಪರಿಹರಿಸು ಭವನೋವ | ಕಾರುಣ್ಯಮೂರ್ತೇ ೨
ವಾಚಾಮ ಗೋಚರನೆ | ಖೇಚರೋತ್ತಮವಂದ್ಯನೀಚೋಚ್ಛ ತರತಮನ | ವಾಚಿಸಿವಳಲ್ಲೀಕ್ರಂಚಾರಿ ಸನ್ನುತನೆ | ಕೀಚಕಾರಿ ಪ್ರಿಯನೆಮೋಚಕೇಚ್ಛೆಯಲಿ ಭವ | ಮೋಚನವ ಗೈಯ್ಯೋ ೩
ಲೌಕಿಕವು ವೈದಿಕವು | ಸಕಲವರ್ಣಾತ್ಮಕನೆವಾಕು ಸಕಲವು ತವ ಆ | ಲೌಕಿಕದ ಮಹಿಮಾವಾಕಾಗಿ ವರ್ತಿಸುತ | ಬೇಕಾದ ವರ ನೀಡಿನೋಕ ನೀಯನೆ ಕಾಯೊ | ಈಕೆಯನು ಹರಿಯೇ ೪
ಭಾವಿ ಮರುತರ ಪ್ರೀಯ | ಆವಾವ ಕಾಲಕ್ಕುದೇವ ತವ ಸ್ರ‍ಮತಿಯಿತ್ತು | ಕಾವುದೀಕೆಯನೂನೋವು ಸುಖಗಳ ಸಮತೆ | ಭಾವದಲಿ ಅನುಭವಿಪಭಾವ ಕೊಡುವುದು ಗುರೂ | ಗೋವಿಂದ ವಿಠಲಾ ೫

೫೨೧
ಋಜುರಾಜ ಸನ್ನುತ | ವಿಠಲ ಪೊರೆ ಇವಳಾ ಪ
ಯಜನ ಯಜ್ಞಾಭಿದನೆ | ಗಜವರದ ಹರಿಯೇ ಅ.ಪ.
ಗುರು ಹಿರಿಯರ ಸೇವೆ | ಈ ನೆರೆಮಾಳ್ವಳೇಕನ್ಯೆಕರ ಪಿಡಿದು ಪೊರೆ ಇವಳ | ಕಾರುಣ್ಯ ಸಿಂಧೋತರತಮಾತ್ಮಕ ಜ್ಞಾನ | ಮೂರೆರೆಡು ಭೇದಗಳಅರಿವಾಗುವಂತೆಸಗೊ | ಮರುತಾಂತರಾತ್ಮಾ ೧
ದುರಿತ ರಾಶಿಗಳಳಿದು | ವರಸುವೈರಾಗ್ಯವನುಕರುಣಿಸುತ ಪೊರೆ ಇವಳ | ಧರೆಯಮರ ವಂದ್ಯಾಇರಿಸಿ ಸತ್ಸಂಗದಲಿ | ನೆರೆಸು ಸಾಧನಗೈಸೊಪರಮಾತ್ಮ ಪರಮೇಶ ಪರಿಪೂರ್ಣ ಹರಿಯೇ ೨
ಶರ್ವಾದಿ ದಿವಿಜೇಡ್ಯ | ಸರ್ವಸ್ವಾಮಿಯೆ ದೇವಭವ ವನಧಿ ಉತ್ತರಿಸೊ | ಭವದೂರ ಹರಿಯೇಸವನತ್ರಯದಲಿ ನಿನ್ನ | ತವ ನಾಮ ಸ್ರ‍ಮತಿಯಿತ್ತುಅವನತಳ ಪೊರೆಯೊ ಗುರು | ಗೋವಿಂದ ವಿಠಲಾ ೩

೨೨
ಎಂತು ಶೋಭಿಪ ನೋಡೀ – ಶ್ರೀವ್ಯಾಸ ವಿಠಲಸಂಪುಟವ ಮನೆ ಮಾಡೀ – ವಿಶ್ವಜ್ಞ ತೀರ್ಥರಶಾಂತ ಸೇವೆಯ ಗೂಡೀ – ಮೆರೆಯುತಿಹ ನೋಡೀ ಪ
ದ್ರುತ – ಎಂತು ಶೋಭಿಪ ಕಂತು ಪಿತ ಸಿರಿ | ಕಾಂತ ವಿಠಲ ಶಾಂತಮೂರುತಿಸಂತ ಯತಿವರರಂತರಂಗದಿ | ಚಿಂತಿಸುತಲೇಕಾಂತ ಪೂಜೆಗೆ ಅ.ಪ.
ಉತ್ತಮ ಮತಿ ಸುದತೇರು – ಛತ್ರಿ ಚಾಮರಗಳಎತ್ತಿ ಬೀಸುತಲಿಹರೋ ||ದ್ರುತ – ಕೃತಿವಾಸನ ಸಖನ ಪರಮ – ಸು | ಹೃತ್ತಮೋತ್ತಮ ಚಿತ್ಸುಖಪ್ರದಚಿತ್ತವಿಸು ಚಿತ್ತಾಖ್ಯ ಪೀಠಿಕೆ | ಸತ್ಯಕಾಮ ಶರಣ್ಯ ಮೂರುತಿ ೧
ಕಾಯ ವಾಚಾ ಮನಸಾ – ಮಾಡಿದ ಸರ್ವಕಾರ್ಯವೆಲ್ಲವು ನಿನ್ನಯ |ಸೇವಾನು ಸಂಧಾನದಾ ಭವವ ಕೊಟ್ಟುಕಾಯೊ ಶ್ರೀಧರ ಶ್ರೀವರ ||ದ್ರುತ – ಕಾಯ ಭವಪಿತ ತೋಯಜಾಕ್ಷನೆ | ದಾಯ ನಿನ್ನದು ಎನ್ನ ಗತಿಗೇಪ್ರೇರ್ಯ ಪ್ರೇರಕ ಶ್ರೀಗುರು | ಗೋವಿಂದ ವಿಠಲನೆ ಕಾಯೋ ಬೇಗ ೨

೨೩
ಎಂತು ಶೋಭಿಪ ನೋಡೀ ಶ್ರೀವ್ಯಾಸ ವಿಠ್ಠಲಸಂಪುಟನ ಮನೆ ಮಾಡೀ | ವಿಶ್ವಜ್ಞ ತೀರ್ಥರಶಾಂತ ಸೇವೆಯ ಗೂಡೀ | ಮೆರೆಯುತಿಹ ನೋಡಿ ಪ
ಎಂತು ಶೋಭಿಪ ಕಂತುಪಿತ ಶಿರಿ | ಕಾಂತ ವಿಠ್ಠಲ ಶಾಂತಿ ಮೂರುತಿಸಂತ ಯುತಿವರ ರಂತರಂಗದಿ | ಚಿಂತಿಸುತಲೇಕಾಂತ ಪೂಜೆಗೆ ಅ.ಪ.
ಶ್ರೀಮಧ್ವಮುನಿಗಳ ಕರಜ | ಶ್ರೀವಿಷ್ಣು ತೀರಥರಾ ಮಹಾಮುನಿ ಪೂಜಾ | ಗೊಂಡಿರುವ ಶ್ರೀರಾಮ ನರಹರಿ ಪೂಜಾ | ಶ್ರೀ ವ್ಯಾಸ ವಿಠ್ಠಲ ಪ್ರೇಮ ಗುರುಗಳ ಕರಜ | ಶ್ರೀವಿಶ್ವಜ್ಞ ತೀರ್ಥ ||ಪ್ರೇಮದಲಿ ಗೈವ ಸುನೇಮದಲಿ | ಸೀಮೆ ಸುಬ್ರಹ್ಮಣ್ಯದಲ್ಲಿ ಝಾವ ಝಾವಕೆ ಭಜಿಪ ಭಕ್ತರ | ಕಾಮಿತಾರ್ಥಗಳೀಯುತಿರೆ ಹರಿ ೧
ವತ್ಸರ ಸುವಿಕ್ರಮದೀ | ಎರಡೊಂದು ಮಾಸದ ಸಿತ ಪಕ್ಷದಲಿ ಹರಿ ದಿನದೀ | ರವಿವಾರದೊಳು ಶ್ರೀಯತಿವರರು ಸ್ವಗೃಹದೀ | ಆಗಮಿಸಿ ಪೂಜೆಯ ಶೃತಿ ಉಕುತ ಮಾರ್ಗದೀ | ಗೈಯ್ಯೆ ಭಕುತರೂ ಕೃತಿಪತಿಯ ಚರಣಾಬ್ಜಗಳ ಸಂ | ಸ್ತುತಿಸುತ ಸುವೇದ ಘೋಷದಿ ಕೃತ ರಜತ ಪೀಠಸ್ಥ ನರಹರಿ |ಪ್ರತಿ ರಹಿತ ಮಹ ಅತುಳ ವಿಭವದಿ ೨
ಪಾವನ್ನರಾದೆವು ನಾವು | ಸಂಯಮಿ ವರರ ಪಾವನ್ನ ಪದ ರಜಕಾವು | ದ್ವಾದಶಿಯ ದಿನಶ್ರೀವರನ ಮಹ ಅರ್ಚನವು ಗೈದ ವೈಭವವೂ ||ಕಾವ ಕರುಣೆಯ ಸ್ಮರಣೆ ತವಕದಿಂದಲಿ ಮಾಡ್ದತಾವಕನ ಪರಮಾಲ್ಪವೆನಿಪ | ಸೇವೆಯನೆ ಸ್ವೀಕರಿಸಿ ನರಹರಿ ದೇವ ಗುರು ಗೋವಿಂದ ವಿಠಲ | ಕಾವ ಕರುಣಾಳುಗಳ ಒಡೆಯ೩

೧೮೩
ಎಂಥಾ ದಯವಂತ ನೀತನೊ | ಭಾರತಿ ಕಾಂತಅಂತರ್ಬಹಿ ವ್ಯಾಪ್ತನೋ ಪ
ಸಂತತ ಶ್ವಾಸೋಚ್ಛ್ವಾಸ | ಮಂತ್ರ ತಾ ಜಪಿಸುತ ಶಾಂತೀಶ ಪಾದದಲ್ಲಿ | ಕ್ರಾಂತನಾಗಿಹ ನೀತ ಅ.ಪ.
ಆರ್ಮೂರೆಡಡೊಂದು ಸಾವಿರ | ಷಟ್ಯತ ಮಂತ್ರ | ಸರುವರಲ್ಲಿದ್ದು ಜಪಿಸುವ ||ಸರುವ ತಾಮಸರಲ್ಲ್ವಿ | ರುವ ಜಪಿಸಿ ಮಂತ್ರಹರಿಗೆ ಅರ್ಪಿಸುತಿಪ್ಪ | ಪರಮ ಪುರುಷ ಪ್ರಿಯ ||ಆರು ನಿನಗೆ ಸರಿ | ಮೂರು ಜಗದ ಧೊರೆ | ವೀರ ಮಾರುತ ಹರಿ ಚರಣಾರಾಧಕಸೂರಿಗಮ್ಯ ಸರ್ವೋತ್ತಮ ಹರಿಯನು ಸೂರ್ಯ ಕೋಟಿ ಸಂಕಾಶದಿ ಪರಿಕಿಪ ೧
ಪ್ರಾಣಾ – ಅಪಾನ – ಸಮಾನ | ಮತ್ತೆರಡು | ವ್ಯಾನಾ ಉದಾನರಲ್ಲಿರುತಾ ||ಪ್ರಾಣಿಗಳೊಳಗಿದ್ದು | ಜಾಣ ತನದಿ ತಾನುನಾನಾ ಕರ್ಮವ ಮುಖ್ಯ | ಪ್ರಾಣಾ ತಾನೇವೆ ಮಾಳ್ಪ ||ಪ್ರಾಣನ ಮಹಿಮಾನಂತವೆ | ವಾಣಿ ಮುಖಾದ್ಯರು ಎಣಿಸಲಸು ಅಳವೇ ನಾನಾ ರೂಪದಿ ಶ್ರೀನಿವಾಸ ಪದಧ್ಯಾನಾರಾಧಕ ನೆನಿಸುತ ಮೆರೆವಾ ೨
ಸುರರಾ ಮೊರೆಯ ಕೇಳುತ | ಪರಿಸರ | ಹರಿಯ ಮತವ ಸಾರಿದ ||ಗುರು ಗೋವಿಂದ ವಿಠಲ | ಸರ್ವಾಧಿಕನು ಎಂದುಸರ್ವ ಶಾಸ್ತ್ರವ ನಿರ್ಣ | ಯವ ಮಾಡಿದ ನೀತ ||ಸರ್ವನಾಮಾಭಿಧ | ಸರ್ವ ನಿಯಾಮಕ | ಸರ್ವ ವ್ಯಾಪ್ತಹರಿ | ಕರುಣವಿಲ್ಲದಲೆಹರಿ ಚರಣಾಂಬುಜ | ದೊರಕದೆಂದನುತಲಿಸರ್ವಾಗಮಗಳ | ಸಾರವ ನ್ವೊರೆದ ೩

೨೪
ಕೊಂಡಜ್ಜಿ ಶ್ರೀ ಜನಾರ್ದನ ಸ್ವಾಮಿ ಸ್ತೋತ್ರ
ಎಂಥಾ ಸುಂದರನೊ ಶ್ರೀಕಾಂತನೂ ||ಅ||
ಸಂತರ ಮನೋರಥ ಸಂತತ ಪಾಲಿಸಿಪಂಥಾವ ಗೆಲಿಪ ಮಹಾಂತನೋ – ಶ್ರೀಕಾಂತನೂ ಅ.ಪ.
ಮಾನಿನೀಯಳ ಬಿಟ್ಟು | ಮೌನಿಯಂದದಿ ನೀನುಕಾನನವನೆ ಸೇರಿ ನೆಲೆಸೀರ್ಪುದೂ | ಮುನಿಜನ ವಂದ್ಯಾ ೧
ತೊಂಡ ಜನರು ನಿನ್ನ | ಬಂಡುಣಿಯಂದದಿಪುಂಡು ಮಾಡುವರೆಂದು ಬಂದೆಯಾ | ಪುಂಡರಿಕಾಕ್ಷಾ ೨
ಹಿಂಡು ಭಕ್ತರು ತಮ್ಮ | ದಿಂಡು ಮಂಡಿಪರೆಂದು ಕೊಂಡಜ್ಜಿಯಲಿ ನೆಲಿಸೀದ್ಯಾ | ಪಾಂಡವ ಪ್ರೀಯಾ ೩
ವೇಲಾಪುರಿಗೆ ಪೋಗ | ಲೊಲ್ಲೆನೆಂದೆನುತಲಿಇಲ್ಲೇ ನೆಲಸಿ ಪೂಜೆಗೊಂಬುದು ಫಾಲಾಕ್ಷ ಪ್ರಿಯನೇ ೪
ಎಲ್ಲಿಪೋದರೂ ಬಿಡ | ಲೊಲ್ಲರೂ ನಿನ್ನ ಜನಸಲ್ಲಿಸೆನ್ನಯ ಮನೋಭೀಷ್ಟವ | ಹೇ ಜನಾರ್ಧನಾ ೫
ಆರು ಕಾಯುವರಿಲ್ಲ | ಸಾರಿದೆ ತವ ಚರಣಪೋರನಾಮಯ ಹರಿಸಯ್ಯಾ | ನಾರದ ವಂದ್ಯಾ ೬
ಗುರುಗಳಂತರ ಗುರು | ಗೋವಿಂದ ವಿಠಲನೆಪರಿಪರಿ ನಿನ ಕೀರ್ತಿ ನುಡಿಸಯ್ಯಾ | ಸುರವರ ವಂದ್ಯಾ೭

೨೫
ಎಂದು ಕಾಂಬೆನೊ ತಂದೆ ಪಂಡರಿ ವಿಠಲರಾಯನೆ |ಬಂದು ನಿನ್ನಯ | ಸುಂದರಾ ಕೃತಿ | ಎಂದು ನೋಡುವೆ ಪ
ದಾಸ ಜನರಾ | ಕ್ಲೇಶ ಹರಿಪಾ | ದೋಷ ದೂರಾನೇದೋಷಿ ಎನ್ನನು | ಪೋಷಿಸೂವುದು | ಸಹಸ್ರನಾಮಾನೇ ೧
ಶ್ರೇಷ್ಠ ಭಕ್ತನು | ಕೊಟ್ಟ ಇಟ್ಟಿಯ | ಮೆಟ್ಟಿ ನಿಂತಾನೇಪುಟ್ಟನಾಗುತ | ಮೆಟ್ಟಿ ಒಲಿಯನು | ಕಷ್ಟ ಕಳೆದಾನೇ ೨
ಕಾವ ಕೊಲ್ಲುವ | ಬೋವ ಬಂಡಿಗೆ | ಯಾವನೀತನೇಓವಿ ಭಜಿಸಲು | ಕಾವ ಗುರು | ಗೋವಿಂದ ವಿಠಲನೇ ೩

೧೮೪
ಎದುರ್ಯಾರೋ ಗುರುವೇ ಸಮರ್ಯಾರೋ ಪ
ವಿಧಿ ಪದ ಅರ್ಹನೆ | ಮಧುಸೂದನ ಸುತ ||ಅ. ಪ||
ಕೇಸರಿಯ ಸತಿಯಲಿ ಉದಿಸಿದ ವೀರ | ರವಿಜಗೊಲಿದಧೀರದಾಶರಥಿ – ಚರಣಕೆ ಮಣಿದ ಗಂಭೀರ | ವಾಲಿಯ ಸಂಹಾರ ||ಸಾಸಿರ ದೈವತ್ತು | ಗಾವುದ ಸಾಗರಗೋಷ್ಪದ ಗೈಯುತ | ವಸುಧಿಜೆಗೆರಗಿದ ೧
ಹರಿಯ – ಸೇವಕತನ ಮಾದರಿಯ | ತೋರಿದ ಹೊಸ ಪರಿಯಅರಿಯಾ – ಲಂಕೆಯ ದಹಿಸಿದ ಪರಿಯ | ಸೇತು ಬಂಧನ ದೊರೆಯಾ ||ಅರಿ ಕುಲ ಸವರಿ ಸಂ | ಜೀವನ ಗಿರಿ ತಂದುಧುರವ ಜಯಿಸಿ ಹರಿ | ಮಡದಿಯ ತಂದಗೆ ೨
ಪ್ರಥಮಾಂಗನು ಕುಂತಿಯ ಸುತನೆನಿಸೀ | ದೃಪದಾತ್ಮಜೆ ವರಿಸೀಅತಿಖ್ಯಾತ ಜರೆಸುತನನ ವಧಿಸೀ | ಕೌರವರನು ಅಳಿಸೀ ||ತತುವ ಮತವ ಸಂ | ಸ್ಥಾಪಿಸುತವನಲಿವಿತತ ಮಹಿಮ ಹರಿ | ರತಿಯನೆ ಪಡೆದಗೆ ೩
ಆರೂ – ಅಕ್ಷೋಹಿಣಿ ಸೈನ್ಯವ ತರಿದೊ | ಅರಿ ಉರವನೆ ಬಗಿದೂನಾರೀಯ – ತುರಬನು ಬಿಗಿದೂ | ನರ ಮೃಗನಂತೆಸೆದೊ ||ನೀರೊಳು ಅಡಗಿದ | ಕೌರವ ಮೇಲ್ಬರೆಊರು ತಾಡನದಿಂದ | ಮಾರಕನಾದಗೆ ೪
ಕಲಿಯೂ ಹೆಚ್ಚಿದ ಕಲಿಯುಗದಲ್ಲಿ | ಮಣಿಮಾನನು ಇಲ್ಲಿಮಲಿನವ ಮಾಡಲು ಬಲು ವೇದದಲೀ | ಕಲುಷಿತ ತರ್ಕದಲೀ||ಅಲವ ಬೋಧರಾಗಿ | ಹುಲುಮತವಳಿಯುತಕಲುಷಹ ಗುರು ಗೋ | ವಿಂದನೆ ಪರನೆಂದೆ ೫

೨೬
ಎಲರುಣಿಯ ಶಯ್ಯ ಪವನಾ |ಕಾವೇರಿ ಕೂಲಗ ಚೆನ್ನಾ | ಬಾಬಾರನ್ನಾ ಪ
ಕಾಳಿರಮಣನುತ | ಕಾಳಿಂದಿಯ ಮನಕೀಲಾಲಜ ರವಿ | ಬಾಲ ಗೋಪಾಲಾ ಅ.ಪ.
ಜಾಣಾ | ನೀರದವರ್ಣಾ | ಜಟೆ ಹೇಮವರ್ಣಾ | ಭಕ್ತ ಪಾವನ್ನಾ |ಮೌನಿ ಕುಲಕೆ ಸನ್ಮಾನ್ಯ ಪರಾಶರಮುನಿ ಸಂಭವ ತವ ಚರಣಕೆ ಶರಣು ೧
ನಂದಾ | ಗೋಪಿಯ ಕಂದಾ | ಪೂತನಿಯ ಕೊಂದು | ಲೋಕಾನಂದಾ | ಇಂದ್ರ ಖಗಪ ಅಹಿ | ಪೇಂದ್ರ ವಂದ್ಯ ಮನಮಂದಿರ ಚಂದಿರ ನಂದವನೀಯೋ ೨
ಹೃದ್ಯಾ | ಅಚ್ಛೇದ್ಯ ಭೇದ್ಯಾ | ಹೇ ಅನವದ್ಯಾ | ಇಂದಿರಾರಾಧ್ಯ ಭಾಧ್ಯ ಭಾದಕ ಸನ್ಮೋದ ಪ್ರಮೋದನೆವೇದ ವೇದ್ಯ ಗುರು | ಗೋವಿಂದ ವಿಠಲ ೩

೨೭
ಏಕಮೇವಾ | ಅದ್ವಿತೀಯನೆ ಪಾಹಿ | ಏಕಮೇವ ಪ
ಏಕಮೇವ ತ್ರೈಲೋಕ ಜನಕ ಕರುಣಾಕರ ಹರಿಯೇ ಅ.ಪ.
ಮಾನ್ಯ ಮಾನದ | ನಾನ್ಯಪ ಹರಿ ಸತ್‍ಶೂನ್ಯಾಭಿಧ ಸರಿ | ವಾಣ್ಯಾದಿಯ ಹರ ೧
ಅರ ವಿದೂರ ಹರಿ | ಪರಮ ಪುರುಷ ಶಿರಿಸರಸಿಜ ಭವ ಸುರ | ಕರಣಶಕ್ತಿ ಹರ ೨
ಉದರದೊಳಗೆ ಜಗ | ಹುದುಗಿಸಿ ಸರ್ವವಅದುಭುತ ತಮದಲಿ | ವಿಧಿಸಿದ ಹರಿಯೇ ೩
ಪ್ರಲಯೋದಧಿ ಶಯ | ಚೆಲುವ ಬಾಲ ಬಲ್‍ಒಲವಿನಿಂದ ಪದ ಬೆ | ರಳನೆ ಸವಿದಾ ೪
ಸೃಷ್ಟಿಗೊಡೆಯ ಲಯ | ಅಷ್ಟ ಭಾಗವಿರೆಚೇಷ್ಟಿಸಿ ದುರ್ಗೆಯ | ಹೃಷ್ಟಳ ಮಾಡಿದೆ ೫
ಮೃತ್ಯು ಮೃತ್ಯು ಹರಿ | ಸತ್ಯ ಕರ್ಮ ತವಕೃತ್ಯವನಂತವು | ಭೃತ್ಯರ ಸುದತರು ೬
ಕಮಲಾರಮಣನೆ | ಕಮಲಜಾದಿ ನುತನಿಮಿಷೋನ್ಮಿಕರ | ಸುಮನಸಕಪ್ಪುದೆ ೭
ದುರ್ಗೆ ತುತಿಸೆ | ಕರ್ಗತ್ಲೆ ಕುಡಿದು ನಿಜಸರ್ಗಕೆಣಿಸಿದೇ | ದುರ್ಗಮ ಮಹಿಮ ೮
ಮುಕ್ತರೊಡನೆ ಸೇ | ವ್ರ್ಯಕ್ತಿಗಳಲಿ ಅಭಿವ್ಯಕ್ತನು ಲೀಲಾ | ಸಕ್ತ ಸುಪುರುಷಾ ೯
ಗೂಹಿಸಿ ಸರ್ವವ | ವ್ಯೂಹ ಚತುರಕೆಮೋಹಿಸಿ ಪುಮಜನ | ಬಾಹಿರ ತೆಗೆದ ೧೦
ಕೃತಿ ಪತಿ ತಾ ಸರ | ಸ್ವತಿ ಭಾರತಿ ಎಂಬಸುತೆಯರ ಪಡೆದು | ಸುತರೊಡನೈರಸಿದ೧೨
ಪುಮಜಗೆ ಪ್ರಕೃತಿಯಿಂ | ಸುಮನಸ ಶೇಷನುಕ್ರಮದಿ ಸೂತ್ರನಿಂ ಜ | ನುಮವು ಕಾಲಿಗೆ ೧೩
ಎರಡು ಒಂದು ತನು | ಹರನಿಗೆ ಬಂದವುಸರಸಿಜ ಸಂಭವ | ಮರುತೋರಗದಿಂ೧೪
ಹರನ ಮಡದಿ ತಾ | ನೆರದೊಂದು ರೂಪದಿಹರನೊಡ ಜನಿಸಿದಳ್ | ವರ ಪತಿ ಸೇವೆಗೆ ೧೫
ವಿಧ ವಿಧ ಜೀವರು | ಉದುಭವವಾದರುವಿಧಿ ಪಿತ ಮಹಿಮೆಯ | ಅದು ಭುತ ಕೇಳೀ ೧೬
ಮುದದಿ ಇಟ್ಟ ತನ್ | ಉದರದೊಳೆಲ್ಲರಅದುಭುತ ಚರಿತ ಅನಿ | ರುದ್ಧ ಮೂರುತಿ ೧೭
ಗುಣೋಪಾದಾನದಿ | ತನು ಸೂಕ್ಷ್ಮಗಳನುಅನಿರುದ್ಧನು ನಿ | ರ್ಮಾಣವ ಮಾಡಿದ ೧೮
ಈ ಪರಿ ಬಹು ಲಿಂ | ಗೋಪ ಚಯಿವಗೈದಾಪರ ಬೊಮ್ಮನು | ಸ್ಥಾಪಿಸಿದನು ಜಗ ೧೯
ಪದುಮ ಕಲ್ಪ ಮುನ್ | ಉದುಭವಿಸಿತು ಮತ್‍ತದನನು ಸಿತವರ | ಹದ ಕಲ್ಪೋದಯ ೨೦
ಸರಸಿಜ ಭವನಿಂ | ವಿರಚಿಸಿದನು ಜಗವೈಡೇಳ್ಭುವನವು | ಭರಿತವು ಜೀವರಿಂ ೨೧
ಈ ವಿಚಿತ್ರ ಸ | ರ್ಗಾವವ ತಿಳಿಯಲುಸೇವಿಸುವುದು ಸತ್ | ಕೋವಿದ ಜನಪದ ೨೨
ಪಾವಮಾನಿ ನಿಜ | ಭಾವಕೆ ಸರಿಯಾಹಸೇವೆಗೊಲಿದ ಗುರು | ಗೋವಿಂದ ವಿಠ್ಠಲ ೨೩

೩೧೦
ಸಂಪ್ರದಾಯ
ಏಕಾಂತ ಭಕ್ತ ಪ್ರಿಯ ಜೋಜೋ | ಹರಿಯೇಏಕಮೇವಾದ್ವಿತೀಯ ಜೋಜೋ ಪ
ಮತ್ಸ್ಯಕೂರ್ಮನೆ ಕೋಲ ಜೋಜೋವತ್ಸ ಪರಿಪಾಲ ನೃಹರಿ ಜೋಜೋ ೧
ಕಾಶ್ಯಪಿಯನಳೆದವನೆ ಜೋಜೋಕಾಶ್ಯಪಿಯ ಪ್ರದಾತ ಜೋಜೋ ೨
ದಶಗ್ರೀವ ಸಂಹಾರ ಜೋಜೋಅಸುರ ಪೂಥಣಿ ಹರನೇ ಜೋಜೋ ೩
ತ್ರಿಪುರೆಯರ ವ್ರತಭಂಗ ಜೋಜೋನಿಪುಣ ಹಯವೇರಿದವಗೆ ಜೋಜೋ ೪
ಗುರುರಾಜವರದಾಶ್ವ ಮುಖ ಜೋಜೋಗುರು ಗೋವಿಂದ ವಿಠ್ಠಲನೆ ಜೋಜೋ೫

೧೮೫
ಮೋತಂಪಲ್ಲಿ ಪ್ರಾಣದೇವರ ಸ್ತೋತ್ರ
ಏನು ಕರುಣವೊ ನಿನಗೆ ಮೋತಪಲ್ಲಿಶಾ ||ದೀನ ದ್ವಿಜಗೊಲಿದು ಬಂದಿಲ್ಲಿ ನಿಂತೇ ಪ
ವಿಪ್ರವರ ತಪಗೈಯ್ಯೆ | ನೀನೊಲಿದು ಅವನಿಗೆಕ್ಷಿಪ್ರದಿಂ ಕಿಂಪುರುಷ | ಖಂಡದಿಂಧ್ಹೊರಟೂ |ಅಪ್ರತಕ್ರ್ಯೊರು ಸ | ದ್ಗುಣ ಪೂರ್ಣ ಹರಿದೂತಸುಪ್ರಸನ್ನನು ಆಗಿ ಬಂದಿಲ್ಲಿ ನಿಂತೇ ೧
ಮುಸಲರ್ಹಾವಳಿಯಲ್ಲಿ | ತಸ್ಕರರು ಬಂದಿಲ್ಲಿಅಸುಪತಿಯೆ ನಿನಗಧಿ | ಷ್ಠಾನವೆಂದೆನಿಸಿದಾ |ಅಶ್ಮವನ್ನೊಡೆದು | ಪುಷ್ಕರಣಿಯೊಳಗವರುಎಸೆದು ಪೋದುದ ತಿಳಿದು | ಸುಜನ ಜನರಂದೂ ೨
ದ್ವಿಜರೆಲ್ಲ ಸೇರಿ ಸ | ತ್ಸಭೆಯ ತಾವೆ ರಚಿಸಿಭಜಿಸುತಿರೆ ತವ ಪಾದ | ಪದ್ಮಯುಗವಾ ||ದ್ವಿಜಗುರೂ ಪ್ರಾಣಪತಿ | ತೈಜಸನು ತಾನಾಗಿ |ಭಜಕರಿಗೆ ಪೇಳಿದನು | ಸ್ವಪ್ನ ಸೂಚಿಸುತಾ ೩
ಭಿನ್ನವಾಗಿದ್ದಂಥ | ಅಂಗಗಳ ಜೋಡಿಸುತನನ್ನೆಯಿಂ ತೈಲವನು | ಪೂಸೆನ್ನುತಾ |ತನ್ನ ಸದನದ ಕದವ | ನಾಲ್ವತ್ತು ಮತ್ತೊಂದುದಿನ್ನ ತೆಗೆಯದೆ ಲವಣ | ವ್ರತ ಮಾಳ್ಪುದೆಂದಾ ೪
ಮೈಮರೆಯುತರ್ಚಕನು | ದಿನ ಒಂದು ಉಳಿದಿರಲುಆ ಮಾರುತಿಯ ಸದನ | ಕದ ತೆಗೆಯುತಿರಲೂ |ನೇಮ ಮೀರಿದ ಫಲವು | ತೋರುವನೊ ಎಂಬಂತೆಕೀಮು ರಕ್ತವ ಸ್ರವಿಸೆ | ವಕ್ಷದಲಿ ಕಂಗಳಲೀ ೫
ತಪ್ಪು ತಪ್ಪೆಂದವನು | ದವಡೆಯನೆ ತಟ್ಟುತ್ತಅರ್ಪಿಸಲು ತನುಮನವ | ಭಕುತಿಯಿಂದಾ |ವಪ್ಪಿಕೊಳ್ಳುತ ಹನುಮ | ಸ್ವಪ್ನದಲಿ ಪೇಳಿದನುಅರ್ಪಿಸುವುದಲ್ಲಿಲಿ | ಶಾಲಿಗ್ರಾಮಗಳಾ೬
ಹರಿಮಹಿಮೆ ಕೊಂಡಾಡಿ | ಬರದಂತೆ ತಾವ್ ಮಾಡಿನರಸಿಂಹ ವಸುದೇವ | ಸುತ ಶಾಲಿಗ್ರಾಮಗಳಾ |ಸ್ಥಿರಪಡಿಸಲಲ್ಲಿಲಿ | ಕರುಣದಿಂದಲಿ ದಿವ್ಯವರ ರೂಪದಿಂ ನಿಂತೆ | ಗುರು ಮಾರುತೀಶಾ ೭
ಎಂಟೊಂದನೇ ಮಾಸ | ಎಂಟೈದನೇ ದಿನದಿನೆಂಟರೆಲ್ಲರು ಸೇರಿ | ಬಹು ಉತ್ಸವಗಳಾ |ಭಂಟರಾಮರ ನಿನಗೆ ಉಂಟು ಮಾಡಲು ಭಕ್ತಕಂಟಂಕಗಳ ನೀಗಿ | ವಾಂಛಿತವ ನೀನೇ ೮
ಗುರುಗೋವಿಂದ ವಿಠಲ | ಪರಮ ಸೇವಕ ಹನುಮಪರಿ ಪರೀಯಲಿ ನಿನ್ನ | ಚರಣ ಯುಗ್ಮಗಳಾ |ಪರಮ ಭಕ್ತಿಲಿ ಸೇವೆ | ನೆರೆ ಮಾಳ್ಪ ಸುಖವಿತ್ತುಪರಮ ಪುರುಷನ ಕಾಂಬ | ವರ ಮಾರ್ಗ ತೋರೋ ೯

೨೮
ಏನು ಕರುಣವೊ ಸ್ವಾಮಿ | ಧೇನುಕ್ಹನನಾ ಪ
ಮಾನ ನಿಧಿ ತೈಜಸನೆ | ಕಾಣಿಸಿದೆ ಪುಷ್ಕರವಾಅ.ಪ.
ಉಜಯಿನಿಯ ಮುಂಧೋಗಿ | ಅಜಮೀರ ಸೇರದಲೆಬಿಜಯಿಸುತ ನರ್ಮದೆನೆ | ಮಜ್ಜನವ ಗೈದು |ನಿಜ ಮನದಿ ಮಾಧವ | ತ್ರಿವೇಣಿಯನೆ ಮೀಯುತ್ತಅಜ ಜನಕ ಶ್ರೀವ್ಯಾಸ | ಕಾಶಿ ನೋಡಿದೆವೋ ೧
ಗಯ ಗದಾಧರನೊಲಿಸಿ | ಪ್ರಿಯ ಬಂದು ಮಿತ್ರರಿಂವ್ರಯ ಗೈದು ದ್ರವ್ಯವನು | ಅಗ್ರದಲಿ ನೆಲೆಸೀ |ಪ್ರಿಯ ಮಧುರ ವ್ರಜ ಸಾರಿ | ದೆಹಲಿ ಪುರವನು ಸೇರಿಭಯ ರಹಿತ ಕುರುಕ್ಷೇತ್ರ | ಸೇರಿ ಚಿಂತಿಸದೇ ೨
ರೊಕ್ಕ ರೂಪನು ಹರಿಯ | ಅಕ್ಕರವ ಕಾಣದಲೆಪುಷ್ಕರ್ವೊರ್ಜಿತ ಮನದಿ | ಚಕ್ರಿಧ್ಯಾನದಿ ಮಲಗಿರೇ |ಚೊಕ್ಕ ತೈಜಸನನ್ನ | ಚಿಕ್ಕ ಲಿಂಗವು ಸ್ತಂಭಪುಷ್ಕರದಿ ಪೂಜಿಸುತ | ಸ್ನಾನ ಸೂಚಿಸಿದೇ ೩
ಕೌರವರು ಪಾಂಡವರು | ವೀರರಾದಾಚಾರ್ಯಘೋರ ಸಂಗರ ಬಯಸಿ | ಸಾರಿ ಈ ಕುರುಕ್ಷೇತ್ರವಾಭಾರಿ ಕಾಳಗ ಗೈದು | ವೀರ ಸ್ವರ್ಗವ ಸೇರ್ದೆಸ್ಮಾರಕಗಳಂ ತೋರ್ದೆ | ಶ್ರೀರಮಾಪತಿಯೇ ೪
ಸೂರ್ಯ ಕುಂಡದಿ ಪಿತರ | ಕಾರ್ಯಗಳ ನಿರ್ವಹಿಸಿಆರ್ಯರುಕ್ತಿಯಗೊಂಡು | ಕಾರ್ಯ ಮುಂಬರಿಸೇ |ಪ್ರೇರ್ಯ ಪ್ರೇರಕ ಗುರು | ಗೋವಿಂದ ವಿಠ್ಠಲನ ವೀರ್ಯಗಳ ಸ್ತುತಿಸಿ ಮನ | ಸ್ಥೈರ್ಯ ಸಾಧಿಸಿದೇ ೫

೨೪೮
ಏನು ಸೋಜಿಗವಯ್ಯ ಪಂಪಾಪತೇ ಪ
ನೀನೆ ಪರನೇಂಧ್ಹೇಳ್ವ | ದೀನ ಜನಗಳನೆರಹೀ ಅ.ಪ.
ಹರಿಯಾಜ್ಞೆಯನುಸರಿಸಿ | ದುಶ್ಯಾಸ್ತ್ರ ಬಿತ್ತರಿಸಿಹರಿಪರನು ಎಂತೆಂಬ | ವರ ಜ್ಞಾನ ಮರೆಸೀ |ಸರ್ವ ತಮೋ ಯೋಗ್ಯ | ನರರಿಗ್ವರಗಳನಿತ್ತುಉರುತರೈಹಿಕ ಸುಖದಿ | ಮೆರೆಸುವಿಯೊ ಪರವಾ ೧
ಜಂಗಮರು ಜೋಗಿಗಳು | ಲಿಂಗಗಳ ಧರಿಸಿಹರುಮಂಗಳಾತ್ಮಕ ನಿನ್ನ | ಅಂಗದೊಳಗೈಕ್ಯಾ |ಮಂಗನಂದದಿ ಬಯಸಿ | ಮಂಗಳವ ಕಳಕೊಂಡುಭಂಗ ಪಡುವರು ಪರದಿ | ಶೃಂಗಾರ ಮೂರ್ತೇ ೨
ಹರಿಕಾರ್ಯ ಸಾಧಕರ೫ಲೆರಡನೇ ಇ೫ನಾಗಿಪರಮ ವೈ೫ವನೆನಿಸಿ | ಭೂ ಭುಜರಿಗೇಹರಿ ಪುರದ ದಾರಿಯನು | ತೋರಿಸುತ ಮೆರೆಯುತಿಹವಿರೂಪಾಕ್ಷ ನಿನಚರಣ | ಸರಸಿಜಕೆ ನಮಿಪೇ ೩
ಮರುತಾತ್ಮ ಸಂಭೂತ | ವೈರಾಗ್ಯನಿಧಿ ಶಿವನೆಗಿರಿಜೆಯಳ ಪರಿಗ್ರಹಿಪ | ಕಾರ್ಯ ನಿರ್ವಹಿಸೀ |ಶರಣ ಜನ ಸಂದೋಹ | ನೆರಹಿ ವೈಭವದಿಂದಪರಮ ಮುದವನು ಈವೆ | ಹರಿಯ ಭಕುತರಿಗೆ ೪
ಬಿಂದು ಮಾಧವ ಗುರು | ಗೋವಿಂದ ವಿಠ್ಠಲನಸಂದರ್ಶನಾದಿಯಲಿ | ಛಂದದಲಿ ಗೈದೂ |ಬಂದು ನಿನ್ನಂಘ್ರಿಗಳ | ದ್ವಂದ್ವ ಕೆರಗುವ ಭಕ್ತವೃಂದಗಳಿಗೀವೆಯಾ | ನಂದ ಸಂದೋಹ ೫

೨೯
ಏನೆಂದು ಕೊಂಡಾಡಿ ಸುತ್ತಿಸೆಲೊ ನಿನ್ನಾ ಪ
ದಾನವಾಂತಕ ಕೃಷ್ಣ ಆನಂದ ಗುಣ ಪೂರ್ಣ ಅ.ಪ.
ಮತ್ಸರೂಪಿಯೆ ನಿನ್ನ ಉತ್ಸಹದಿ ಕರೆಯಲಾಕುತ್ಸಿತನ ಸೊಲ್ಲ ನೀನೆತ್ತ ಕೇಳುವಿಯೋ |ಮತ್ಸ್ಯಕೇತನ ಜನಕ | ಮತ್ಸರವ ಕಳೆಯಯ್ಯಸಚ್ಚಿದಾನಂದಾತ್ಮ | ಚಿತ್ಸುಖಪದನೇ ೧
ಕೂರ್ಮರೂಪಿಯೆಂದು | ಪೇರ್ಮೆಯಲಿ ಕರೆಯಲಾಭರ್ಮ ಗರ್ಭನ ಪಿತನೆ | ಗಿರಿಯ ಧರಿಸಿರುವೇ |ನಿರ್ಮಲಾತ್ಮಕನೆ ಯೆನಗೆ | ನಿರ್ಮಮತೆ ನೀಡಯ್ಯಾ ಊರ್ಮಿಳಾಪತಿ ಭ್ರಾತೃ | ಪರಮ ಮಂಗಳನೇ ೨
ವರಹ ರೂಪಿಯೆ ನಿನ್ನ | ಕರೆಯುವುದು ಹೇಗಯ್ಯಾ ಕೋರೆ ದಾಡಿಯ ಮೇಲೆ | ಧರೆಯೆ ಧರಿಸಿರುವೇ | ವಾರೆ ನೋಟದಿ ಯೆನ್ನ | ಪರಿಕಿಸೀ ಪೊರೆಯಯ್ಯಾಧೀರ ಭೂವರಹ ವರ | ಧರಣಿ ಪರಿಪಾಲಾ ೩
ನಾರಸಿಂಹನೆ ನಾನು | ಕರೆಯಲಾಪನೆ ನಿನ್ನಘೋರರೂಪವ ನೋಡಿ | ದೂರ ಸಾರುವರೋವಾರಿಜಾಕ್ಷಿಯು ಬಂದು | ಘೋರ ಪ್ರಹ್ಲಾದನ್ನಚಾರು ತವ ಚರಣದಲಿ | ಇರಿಸಬೇಕಾಯ್ತು ೪
ವಾಮನನೆ ಬಾರೋ ದಧಿ | ವಾಮನನೆ ಬಾರೆಂದುಸಾಮಸನ್ಮುತ ನಿನ್ನ | ನಾಮಗಳ ನೆನೆಯೆಲಾ |ಭೂಮಿ ಬೇಡುವ ನೆವದಿ | ಬಲಿಯ ಭೂಮಿಗೆ ತುಳಿದೆಸೀಮೆ ಮೀರಿದ ಮಹಿಮ | ಮರ್ಮವಿನ್ನೆಷ್ಟೋ | ೫
ಪರಶುರಾಮನೆ ನಿನ್ನ | ಕರೆಯಲಾರೆನು ನಾನುದುರುಳ ಕ್ಷತ್ರಿಯರ | ಶಿರಗಳನೆ ತರಿದೂ |ಭಾರಿ ಪರಶುವಿನಿಂದ | ವರಮಾತೆ ಶಿರ ತರಿದಿಸರಿ ಕಾಣೋ ಇದು ನಿನಗೆ | ಪರಮ ಪಾವನ್ನಾ ೬
ರಾಮ ರೂಪಿಯೆ ನಿನ್ನ | ಆ ಮಹಾ ಮಹಿಮೆಗಳಸೀಮೆಗಾಣಳು ಲಕುಮಿ | ಪಾಮರನಿಗಳವೇ |ಆ ಮರಾ ಈ ಮರಾನೆಂದ ಆ | ಪಾಮರನ ಪೊರೆದುಆ ಮಹಾತ್ಮನ ಗೈದ | ಪರಿಯೆನ್ನ ಮಾಡೋ ೭
ಕೃಷ್ಣ ಕೃಷ್ಣಾ ಎಂದು ಕರೆಯುವೆನೆ ನಾ ನಿನ್ನಕಷ್ಟದೊಳು ಸಿಲುಕಿರುವೆ | ಗಿರಿಯನ್ನೆ ಪೊತ್ತು |ವೃಷ್ಟಿಕುಲ ಸಂಪನ್ನ | ಕೃಷ್ಣ ಮೂರುತಿ ನೀನುಇಷ್ಟ ಭಕುತರ ಮನೋ | ಭೀಷ್ಟ ಸಲಿಸುವಿಯಾ ೮
ಬುದ್ಧ ದೇವನೆ ಎನಗೆ ಸ | ದ್ಭುದ್ಧಿ ಕೊಡು ಎಂದುಬುದ್ಧಿ ಪೂರ್ವಕವಾಗಿ ನಿನ್ನ ಕರೆಯಲಾ |ಬುದ್ಧಿಯಿಂದಲಿ ನೀ | ಭೋಧಿಸಿದೆ ದುಶ್ಯಾಸ್ತ್ರಬೌದ್ಧ ನಿನ್ನನು ಪೊದ್ದು | ಬುಧರ ಪಾಡೇನೊ ೯
ಕಲ್ಕಿ ಕಲ್ಕೀ ಎಂದೇ ಕರೆಯಲಾಪೆನೆ ದೇವಾಶುಲ್ಕ ಮೇಲಾಗಿಹುದು ಕಲಿಯುಗದೊಳು |ಉಲ್ಕ ಮುಖ ಮೊದಲಾದ | ಕಲ್ಕಿರಾಜರು ನಿನ್ನಕಲ್ಕ್ಯಾತ್ಮ ಸತ್ಯ ತವ | ವ್ರತವ ಮಾಳ್ಪರು ಬಿಡದೆ ೧೦
ಸರ್ವರೂಪಾತ್ಮಕನೆ | ಸರ್ವ ವ್ಯಾಪಕ ಸ್ವಾಮಿಸರ್ವಜಿತು ಸರ್ವಾತ್ಮ ಸರ್ವೇಶನೇ |ಶರ್ವಾರಿ ವಂದ್ಯ ಗುರು | ಗೋವಿಂದ ವಿಠಲನೇಗುರು ಹೃದಂಬರದಲ್ಲಿ | ತೋರಿ ಪೊರೆಯನ್ನ ೧೧

ಪ್ರಹ್ಲಾದ ರಾಜರ ಅಂಶ ಸಂಭೂತರೆಂದೆನಿಸಿ
೩೬೩
ಶ್ರೀ ವ್ಯಾಸರಾಜರು
ಏಸು ಮಹಿಮ ನೋಡೋ | ಶ್ರೀ ವ್ಯಾಸಮುನಿಯು ತಾನೂ ಪ
ದಾಸಜನರ ಹೃದ್ದೊದ್ದೋಷ ಕಳೆದು ಸಂ | ತೋಷ ಕೊಡುವ ದೊರೆ ಅ.ಪ.
ರಾಮಾಚಾರ್ಯರ ಗೃಹದಿ | ಭೂಮಿ ಸೋಕದೆ ಪುಟ್ಟಿಪ್ರೇಮದಿಂದಲಿ ಪುರು | ಷೋತ್ಮ ತೀರ್ಥರ ಗುಹದಿಯಾಮ ಯಾಮಕೆ ಪಾಲು | ಆಮಹಾಮುನಿ ಕೂಡೆಸೀಮೆ ಮೀರಿದ ತೇಜ | ಕೋಮಲ ಕಾಯನು ೧
ಪೂರ್ಣ ಬೋಧರ ಪೀಠ | ಬ್ರಹ್ಮಣ್ಯರಿಂಗೊಂಡುಭವಾರ್ಣ ತಾರಿಸುವಂಥ | ನ್ಯಾಯ ಗ್ರಂಥವ ಮಾಡಿಕರ್ಣ ರಹಿತನ ಸುಶಯ್ಯನ ಮಾಡಿಕೊಂಡಅರ್ಣ ಸಂಪ್ರತಿಪಾದ್ಯ | ಕೃಷ್ಣನ್ನ ಮೆರೆಸೀದ ೨
ಸುಜನ ಕುಮುದ ಚಂದ್ರ | ನಿಜಭಕ್ತ ಪರಿಪಾಲ ಪರಿವ್ರಾಜಾಕಾಚಾರ್ಯ | ವಿಜಯ ನಗರಿಲಿ ನೆಲೆಸೀಅಜನನಯ್ಯನ ನಾಮ | ಭಜನೆ ಪ್ರಾಕೃತದೊಳುನಿಜಜನ ಕೊರೆಯುತ | ಅಜೇಯನೆನಿಸಿದಂಥ ೩
ಮಿಥ್ಯಾಮತವಗೆದ್ದು | ತಥ್ಯಾವು ಜಗವೆಂದುಸ್ತುತ ಶ್ರೀಹರಿಯ ಸರ್ವೋತ್ತುಮನೆನುತಸತ್ಯವು ಪಂಚ ಭೇದ | ನಿತ್ಯವು ತಾರತಮ್ಯಭೃತ್ಯರು ಬ್ರಹ್ಮ ದೇವತೆಗಳೆಂದೊರೆದ ೪
ಶೇಷಾವೇಶದಿ ಪುಟ್ಟಿ | ದೇಶ ದೇಶವ ತಿರುಗಿಭೂಸುರರಿಗೆ ಜ್ಞಾನ | ಸೂಸಿ ಪೇಳುತಲೀದಾಸ ಪೀಠದಿ ಶ್ರೀನಿ | ವಾಸ ನಾಮಕಗುಪದೇಶಿಸಿ ಪುರಂದರ | ದಾಸರೆಂದೆನಿಸೀದ ೫
ಅಹಿಪರ್ವತಾಧೀಶ | ಅಹಿತಲ್ಪನ್ನಾಸೇವೆವಿಹಿತದಿ ದ್ವಿಷಡಾಬ್ದ | ಬಹುಗೈದು ಅರಸಿನಕುಹುಯೋಗವಾರಿಸಿ | ಮಹಿಯ ಸುರರಿಗೆಲ್ಲಸಹಸ್ರಾರು ಗ್ರಾಮಗಳ್ | ಜಹಗೀರುಗಳನಿತ್ತ ೬
ಛಂದದಿಂದಲಿ ನವ | ವೃಂದಾವನಕೆ ಬಂದುವೃಂದಾವನದಿ ನಿಂದು | ಇಂದೀವರಾಕ್ಷನುನಂದ ಕಂದ ಗುರು ಗೋ | ವಿಂದ ವಿಠಲನ ಹೃನ್‍ಮಂದಿರದಲಿ ನೋಡಿ | ನಂದವ ಪಡುತಿರ್ಪ೭

ಕರ್ಣಾಟಕ ಸಂಗೀತ ಪಿತಾಮಹರು
೪೨೬
ಶ್ರೀ ಪುರಂದರದಾಸರು
ಏಸು ಮಹಿಮೆಯೋ | ಪುರಂದ್ರದಾಸರ್ಮಹಿಮೆಯೋ ಪ
ಭಾಷೆ ಕನ್ನಡದೇಸೋ ಶಾಸ್ತ್ರಸೂಸಿ ರಚಿಸಿ ಕೊಟ್ಟು ಇರುವ ಅ.ಪ.
ಗ್ರಂಥನೇಕ ರಚಿಸಿ ಹೃದಯಗ್ರಂಥಿ ಭೇದಿ ಶಾಸ್ತ್ರ ತುಂಬಿಮಂಥನಾವ ಮಾಡಿ ಸುಖದಸಂತತೀಯ ಉಣಿಸಿ ಇರುವ ೧
ಅಂದುದೆಲ್ಲ ವೇದವೃಂದಎಂದು ಮೆರೆವ ಗಾನವೃಂದಸಂದಣೀಸಿ ಗ್ರಂಥವೃಂದನಂದದಿಂದ ದಾನಮಾಡ್ದ ೨
ಗುರುಗೋವಿಂದ ವಿಠ್ಠಲಾನಚರಣ ಭಜಕರಾಗಿ ಚರಿಸಿನರರ ದುರಿತ ಪೋಗಗೊಡಿಸಿವರಸುಮೋಕ್ಷ ಪಥವ ತೋರ್ದ ೩

೧೮೬
ಏಳಯ್ಯ ಏಳಯ್ಯ ಬೆಳಗಾಯಿತೂ ಪ
ವ್ಯಾಳಾದ್ರಿ ನಿಲಯ ಸುಳಿ | ನಾಭಿ ಸಂಭವ ಸುತನೆ ಅ.ಪ.
ಸಾಮಗಾನ ಪ್ರೀಯ | ಸಾಮಜ ವರದ ಶ್ರೀರಾಮ ಬಂದಿಹನಯ್ಯ | ಭೂಮಿಜೆಯ ಪುಡುಕಲ್ಕೆ |ನೇಮದಿಂದಲಿ ನೀನು | ಶ್ಯಾಮಲಾಂಗನ ಕಂಡುಭೂಮ ಗುಣನಿಧಿ ಸು | ಪ್ರೇಮ ಪಡೆ ಹೊತ್ತಾಯಿತು ೧
ತಾಲಸಪ್ತವ ಹಣಿಸು | ವಾಲಿ ಮಥನ ಗೈಸುನೀಲ ಜಾಂಬವ ಸುಷೇ | ಣಾದಿಗಳ ಕರೆ ಕಳಿಸು |ಶ್ರೀಲೋಲನಾಜ್ಞೆಯಲಿ | ಕಾಲಮೀರುವ ಮುನ್ನಲೋಲ ಲೋಚನೆ ವಾರ್ತೆ | ತಿಳುಹ ಬೇಕಯ್ಯಾ ೨
ತೆಂಕ ಶರಧೀಯನ್ನು | ಲಂಘಿಸಲಿ ಬೇಕೂಲಂಕಿಣಿ ರಕ್ಕಸಿಯ | ಬಿಂಕ ಮುರಿಯಲಿ ಬೇಕು |ಲಂಕಾಪುರದೊಳು ಮಾತೆ | ಗಂಕವೀಯಲಿ ಬೇಕುಅಂಕಕಾರನು ರಾಮ | ನಂಕೆ ಸಲಿಸಲಿ ಬೇಕು ೩
ಶರಧಿ ಬಂಧಿಸಬೇಕು | ಧುರವ ಜೈಸಲು ಬೇಕುವರ ಭೂಮಿ ಜಾಕೃತಿಯ | ತ್ವರ ತರಲಿ ಬೇಕುವರ ವಿಭೀಷಣನಿಗೆ | ಅರಸುತನ ಕೊಡಬೇಕುಮರಳಿ ಅಯೋಧ್ಯಗೆ | ತೆರಳ ಬೇಕಯ್ಯಾ ೪
ಕುರು ಕುಲದಿ ಉದ್ಭವಿಸಿ | ಜರೆಸುತನದ ಸೀಳ್ಬೇಕುಧುರದೊಳರ್ಜುನಗೆ ನೀ | ನೆರವಾಗಲೀ ಬೇಕುದುರುಳ ದುಶ್ಯಾಸನನ | ಉರ ರಕ್ತ ಕುಡಿಬೇಕುಧರಣಿ ಭಾರವ ನಿಳುಹಿ | ತರುಣಿ ಶಿಖೆ ಬಿಗಿಬೇಕು ೫
ಮಧ್ಯಗೇಹರ ಗೃಹದಿ | ಮುದದಿ ಜನಿಸಲಿ ಬೇಕುಭೇದಮತವನೆ ಸಾರಿ | ಅದ್ವೈತ ಗೆಲಬೇಕುಬುದ್ಧಿಪೂರ್ವಕವಾಗಿ | ಸಿದ್ದ ಮುನಿ ಜನರಿಂದಮುದ್ದುಕೃಷ್ಣನ ಪೂಜೆ | ವಿಧಿಸಲೀ ಬೇಕೂ ೬
ಆರ್ಮೂರು ಯೆರಡೊಂದು | ಸಾರ ಗ್ರಂಥವ ರಚಿಸಿಮೂರ್ಮೂರು ಭಕುತಿಲಿ | ಹರಿಯ ಪೂಜಿಸಬೇಕು |ಮೂರ್ಲೋಕ ದೊರೆ ಗುರು | ಗೋವಿಂದ ವಿಠಲನಸಾರ್ವಕಧಿಪತಿಯೆಂದು | ಸಾರಲೀ ಬೇಕೂ ೭

೩೦
ಏಳು ನಾರಾಯಣನೆ – ಏಳು ವಾಸುದೇವಏಳು ಕೃಷ್ಣಾಚ್ಯುತನೆ _ ಏಳು ಹೇ ಮಾಧವಾ ಪ
ಏಳು ವೈಕುಂಠನೇ – ಏಳು ಕಾರುಣ್ಯನೇಏಳು ಲಕ್ಷ್ಮೀಶನೇ – ಏಳು ಭಗವಂತ ನಮಿಪೇ ೧
ಏಳು ಮಧ್ವೇಶನೇ _ ಏಳು ಪ್ರಾಣೇಶನೇಏಳು ರುದ್ರೇಶನೇ – ಏಳಾಂಬಿಕೇಶಾ ೨
ಏಳು ಇಂದ್ರೇಶನೇ – ಏಳು ಶಚಿಗೀಶನೇಏಳು ವಿಪ್ರೇಕ ಭ – ಕೇಶನೆ ಗೋಪತೇ ೩
ಏಳು ಶಾಸ್ತ್ರ ಪ್ರಿಯನೆ – ಏಳು ಹೇ ಋತ್ರಿಯನೇಏಳು ಯಜ್ಞ ಪ್ರಿಯನೆ – ಏಳು ಕಾರುಣಿಕ ಮೂರ್ತೇ೪
ಏಳು ಸಾಮ ಪ್ರಿಯನೆ – ಸರ್ವ ಕಾರಣ ಮೂರ್ತೆಏಳು ವೇದಾರ್ಥ ಪ್ರಿಯ – ಸರ್ವದಾ ಇಹನೇ ೫
ಏಳು ಗದ್ಯ ಪ್ರಿಯನೆ – ಪುರಾಣ ಪುರುಷನೇಏಳು ಸ್ತೋತ್ರ ಪ್ರಿಯನೆ – ಸರ್ವದಾ ವಿಶ್ವಮೂರ್ತಿ ೬
ಏಳು ಗುರು ಹೃದಯನೇ – ಪವನಾಂತರಾತ್ಮನೇಏಳು ಗುರು ಗೋವಿಂದ – ವಿಠಲ ಹಯವದನ ೭

೩೧
ಒಡಲಿಗೊಡೆಯನೆ | ಬೇಡಿಕೊಂಬೇಮಡದಿ ಮಕ್ಕಳ ಮೋಹ | ನೀನಾಗಿ ಬಿಡಿಸೋ ಪ
ಚತ್ವಾರಿಂಶತ್ ಸಪ್ತ | ವರುಷ ಸಂದವು ಇಂದುಚತುರಾಸ್ಯ ಪಿತ ನೀನೆ | ಸಲಹೋ ಎನ್ನಚತುರ ಮೂತ್ರ್ಯಾತ್ಮಕನು | ಹರಿ ನಿನ್ನ ನೆನೆಯದಲೆಚತುರ ನಾರಿಯ ರೂಪ | ನೆನೆಸುತ್ತಲಿರುವೇ ೧
ತತುವಾಭಿಮಾನಿ ದೇ | ವತೆಗಳೆಲ್ಲರು ಎನಗೆಮತಿ ಭ್ರಾಂತಿ ಬಡಿಸುವರೊ | ಹೃಷಿಕೇಶನೇ |ವಿತತ ಮೂರುತಿ ನಿನ್ನ | ಸತತ ನೆನಸೂವಂಥಮತಿಯನಿತ್ತಾದರಿಸೊ | ಕೃತಿರಮಣ ದೇವ ೨
ಹೃದಯಾಬ್ದ ಸದನ ಗುರು | ಗೋವಿಂದ ವಿಠಲಯ್ಯಮುದದಿಂದ ನೀ ಪೊಳೆಯೊ | ನೇಕ ತಟಿತ್ಕಾಂತಿ |ಬದಿಗ ನೀನಾಗಿರಲು | ಭೀತಿ ಏತರದಯ್ಯಸದಮಲ ಶ್ರೀರಂಗ | ಮಾಡು ಭವ ಭಂಗ ೩

೩೨
ಒದಗಿ ಪಾಲಿಸೊ ಸಿರಿ ಹರಿಯೇ | ಎನ್ನ ದೊರೆಯೇ ಪ
ಎದುರಾಳಿ ಜನ ಬಂದು | ಹದನ ಗೆಡಲು ಮನಬದಿಗ ನಾಗಿಹ ನಿನ್ನ | ಹುದುಗಿಸುತಿಹರಯ್ಯ ಅ.ಪ.
ಎನ್ನ ಕಂಗಳು ನಿನ್ನಯ | ರೂಪಂಗಳಚೆನ್ನಾಗಿ ನೋಡದೆಲೆ | ವಿಷಯಾನ್ಯವ |ನನ್ನೆಯಿಂದಲಿ ನೋಡಿ | ಧನ್ಯರಾದೆವು ಎಂದುಮನ್ನಿಸುತಿಹವಯ್ಯ | ಘನ್ನ ಗೋಪಾಲನೆ೧
ಕರ್ಣಗಳ್ಹದನ ಕೇಳೋ | ಶ್ರೀಹರಿ ನಿನ್ನಗುಣಗಳ ಕೇಳದಲೇ | ಯುವತೀಯರ ||ತನುಗಳೊರ್ಣನೆ ಕೇಳಿ | ಕ್ಷಣ ಕ್ಷಣಕಾನಂದಸೊನೆಯಿಂದ ತೊಯ್ದಂತೆ | ಎಣಿಸುತಿಹವು ಅಯ್ಯ ೨
ಪ್ರಾಣ ಛಾದಿಯ ಪೇಳ್ವೆನೊ | ನೀ ಮುಡಿಧೂವಾಘ್ರಾಣಿಸದೆಲೆ ಕನ್ಯೇರು | ಮುಡಿದಿಹ ಪುಷ್ಪ |ಘ್ರಾಣಿಸುತ್ತಲಿ ಬಹು | ಆನಂದ ಪಡುತಲಿನಾನಾ ಜನ್ಮದಿ ದುಷ್ಟ | ಯೋನಿಗೆ ತರುವೋದು ೩
ವದನದ ಪರಿಯ ಕೇಳೊ | ನಿನ್ನಯ ಗುಣಮುದದಲಿ ವರ್ಣಿಸದೆ | ಧನಿಕರ ಸ್ತುತೀ ||ವದಗಿ ಪೇಳುತ ಮುಂದೆ | ಉದರ ಕೋಸುಕವಾಗಿವಿಧಿಯ ಮಾರುತ ದುಷ್ಟ | ಸಾಧನವಾಯ್ತಯ್ಯ ೪
ಸ್ಪರಿಶೇಂದ್ರಿಯರ ಸಾಧನ | ಕೇಳೆಲೊ ಹರಿಹರಿಭಕ್ತರಾಲಿಂಗನ | ಮಾಡದಲಿದ್ದುಪರಸ್ತ್ರೀಯ ಸ್ಪರಿಶಕ್ಕೆ | ಹರಿಯುವಂತಿಹುದನ್ನಪರಿಹಾರ ಗೈ ಗುರು | ಗೋವಿಂದ ವಿಠಲಯ್ಯ ೫

೪೫೨
ಒಪ್ಪಿಕೊಳ್ಳಲಿಬೇಕು ಅಪ್ಪ ಮೋಹನ್ನ ಪ
ತಪ್ಪನೆಣಿಸದೆ ಕರ್ಮ | ಕಪ್ಪಕೊಳ್ಳಲಿ ಬೇಕೋ ಅ.ಪ.
ಸುತೆಯ ವೈವಾಹದುತ್ಸವಕೆ ಬಂದ ಶ್ರೀಯುತರು ಉರುಗಾದ್ರಿ ವಾಸಾಖ್ಯರಾ |ಸತು ಮುಖದಿ ತವ | ಆರಾಧನೋತ್ಸವವಸತುವ ಮಾರ್ಗದಿ ಗೈವ ಮತಿ ಮರೆತನಯ್ಯಾ ೧
ಅಂದು ಗೈಯ್ಯುವ ಕರ್ಮ | ಕಿಂದೆನ್ನ ನೆಚ್ಚರಿಸೆತಂದೆ ವೆಂಕಟೇಶ | ವಿಠಲ ದಾಸರ್ಯರಾ |ಮುಂದು ಮಾಡೀ ನೀನು | ಅಂದ ಪತ್ರವ ಬರೆಸಿ ಸಂದಿಸಿ ಕೊಂಡೆಯೋ ಮಂದ ಶಿಷ್ಯನ ಸೇವಾ ೨
ಅಪರಾಧ ಅಪರಾಧ | ಅಪರಾಧವಾಯಿತೋಕುಪಿತನಾಗಲಿ ಬೇಡ | ಕೃಪಣ ವತ್ಸಲನೇ |ಆಪಾರ ಕರುಣಿ ಗುರು ಗೋವಿಂದ ವಿಠ್ಠಲನಕೃಪೆ ಮಾಡಿ ತೋರಯ್ಯ | ಶಫರಕೀತನ ತೇಜಾ ೩

೨೪೯
ಓಂಕಾರಾ ಕಾರಾ ಶಿವನೇ | ಪಾಲಯ ಮಾಂ ಪ
ವೈಕಾರಿಕಾದಿ ತ್ರ್ಯಾಕಾರ ಹರನೆಸ್ವೀಕರಿಸುವುದೀ ತೋಕನ ಬಿನ್ನಪ ಅ.ಪ.
ನರ್ಮದೆ ಕಾವೇರೀ ಸಂಗಮಾ | ಶೈಲವಾಸಾ |ಹಮ್ರ್ಯ ದೊಳಗೆ ಇಹ | ಬೊಮ್ಮನಯ್ಯಾ ಪದಕಮ್ಮಲ ಕಾಂಬ ಸು | ಹಮ್ಮ ನೀಯೊ ಹರ ೧
ಜ್ಯೋತೀ ರೂಪಕಾ – ರುದ್ರನೇ | ಕೈಲಾಸವಾಸಾ |ಖ್ಯಾತಿ ಕೇಳಿ ಸುರ | ವ್ರಾತ ತುತಿಸೆ ಬಲುಪ್ರೀತಿಲಿ ತ್ರಿಪುರಾ | ರಾತಿ ಎನಿಸಿದೇ ೨
ಬದರೀಯಾ ವಾಸವಾ | ನಾರಾಯಣನಾ |ಪದದ ಉದಕ | ಅಭಿಷೇಚಿಸುವೆನುಮುದದಿ ಕೊಳ್ಳೊ ಗುರು | ಗೋವಿಂದ ಪೌತ್ರಾ ೩

೩೩
ಶ್ರೀ ದೇವರ ಸ್ತೋತ್ರ
ಓಡೋಡಿ ಬಾರೋ ಶ್ರೀ ಹರಿಯೇ | ಯನ್ನಯ ದೊರೆಯೇ ಪಕಾಡುವ ರೋಗವ ನೋಡಿಸೆ ಬಾರೋಜೋಡು ಕುಂಡಲ ಧಾರಿ ಹರಿಯೆ ಮುರಾರಿಅ.ಪ.
ಮಾಡಿದ ಅಪರಾಧ ಅನಂತ | ಹೇ ಮಹಾಂತಜೋಡಿಸಿ ಕರ ಮುಗಿವೆ ಕ್ಷಮೆ ಕಾಂತ | ಕಳೆವುದು ಧ್ವಾಂತ ||ನಾಡೊಳಗಾದೆಡೆ ನೋಡಲು ನಿನಗೇಈಡು ಕಾಣೆನೊ ಬಲು ಗೂಢ ಮಹಿಮ ಹರಿ ೧
ಕರ ಕರ್ಮ ಚಿತ್ತ್ವಕ್ಕು ರಸನ | ಕಾಯವು ಮನ್ಮನಕರಣಾಹಂಕಾರವು ಫ್ರಾಣ | ಬುದ್ಧಿಯು ನಯನಾ ||ಕರಣ ಸರ್ವೋದ್ಭವ ಉರುತರ ಪಾಪವಪರಿಹರಿಸುತ ಪೊರೆ ತ್ವರಿತದಿ ಮಾಧವ ೨
ಕರುಣಾಕರ ಹರಿಯೆ ಮಾಲೋಲ | ಪರಿಪಾಲಿಸು ಕೋಲಎರಡೇಳು ಲೋಕಗಳ್ಪಾಲಾ | ಬಹು ಪರಿ ಲೀಲಾ ||ಗುರು ಗೋವಿಂದನ | ಚರಣ ಪಂಕಜ ತೋರಿಪರಿಹರಿಪುದು ಭವ | ಪರಮ ದಯಾನಿಧೆ ೩

೩೪
ಕಂಜ ನಿಲಯ ವಾಸಾ | ಹೃತ್‍ಕಂಜ ನಿಲಯ ವಾಸಾ | ಜಯ | ಶ್ರೀ ಬಿಂಬ ಪ್ರಾಜ್ಞಾದಿ ರೂಪಿ | ಬಹುರೂಪಿ ಪ
ಕುಂಜಜ | ಜನಕದೇವ | ವೃಂದಾದಿಯ | ತಾರಕರೂಪ ಶ್ರೀಕುಮುದಾಪ್ತ ಕುಲಜ || ಭೋಸುವ್ಯಾಪ್ತ ಮಹಂತ ಅಚಿಂತ್ಯ | ಮಹಿಮೋಪೇತ | ಸದಾಪ್ತ ಅ.ಪ.
ಮಂಗಳಾಂಗ | ಜಲಜಧರ ತ್ರಿ | ಧಾಮಾ | ಪದಭೃಂಗನು ಎನೆ | ಗಂಗಾಧರ | ಭೀಮಾ – ಭಿಧಸಂಗತಿಗನ | ಕಾಮಾ ಹರ ನಿ | ಸ್ಸೀಮಾ |ಗಾಂಗೇಯನ | ತೋಷಕ ವರ | ವೇಷಾ ಶೇ-ಷಾಂಗಶಯನ | ಶರಣ ಸಂ | ತೋಷಾ | ವೇ-ದಾಂಗ ವೇದ್ಯ | ಭಯ ನಿವಾರಣ | ಕೃಪೆ ಭೂಷಾ | ಅ-ಪಾಂಗ ನೀ | ಕ್ಷಣದಿ ಸೃಷ್ಟಿಪೆ | ವಿಶೇಷಾ | ಶ್ರೀದ್ರುತ _ ಅಂಗಜ ಪಿತನೆ ಗೋವಿಂದ | ಮಂಗಳ ಮಹಿಮ ಮುಕುಂದ |ಭಂಗೀಸುವ ಭವ ಭಂಗಿಸು | ಗುರು ಗೋವಿಂದ ವಿಠಲನೆ ೧

೩೫
ಕಂಡೆ ಕಂಡೆನು ಕೃಷ್ಣ ನಿನ್ನಯ | ಭವ್ಯ ಭಾವದ ಮೂರ್ತಿಯ ಪ
ಪುಂಡರೀಕ ದಳಾಯತಾಕ್ಷನ | ಹಿಂಡು ದೈವರ ಗಂಡನ ಅ.ಪ.
ಬಲಿಯ ಮೆಟ್ಟಿದ ಪಾದ ಶೋಭಿಸೆ | ಘುಲು ಘುಲೆನ್ನುವ ಪೈಜಣ |ಉಲಿವ ಗೆಜ್ಜೆಯಲಿಂದ ಮೆರೆಯುವ | ಚಲುವ ಕೃಷ್ಣನ ಸೊಂಟವ ೧
ಲಕ್ಷ್ಮೀ ವಕ್ಷಸ್ಥಿತನು ಎನಿಪನ | ಅಕ್ಷಯಾಂಬರವಿತ್ತನ |ಕುಕ್ಷಿಯೊಳು ಜಗ ಧರಿಸಿ ಮೆರೆವನ | ಪಕ್ಷಿವಾಹನ ದೇವನ ೨
ವೃಷ್ಣಿಕುಲ ಸಂಭೂತನೆನಿಪನ | ಜಿಷ್ಣುವಿಗೆ ಸಖನೆನಿಪನ |ವಿಷ್ಣು ಮೂರುತಿ ವಿಷ್ಠರ ಶ್ರವ | ಕೃಷ್ಣನ ಮಹಮಹಿಮನ ೩
ಕೊರಳ ಕೌಸ್ತುಭ ಹಾರ ಶೋಭಿತ | ಸರಸಿ ಜಾಸನಧಿಷ್ಟಿತ ||ಮೆರೆವ ತ್ರಿವಳಿಯ ಕಂಠ ಶೋಭಿತ | ಸರ್ವ ವೇದಗಳುಧೃತ ೪
ತೋಳ ಬಾಪುಕಿ ಬಾಹು ಕೀರ್ತಿಯ | ಕೈಲಿ ಕಡಗೋಲ್ಬಲದಲಿ |ಮೇಲೆ ರಜ್ಜುವ ತಾನೆ ಪಿಡಿದಿಹ | ಕೈಲಿ ವಾಮದ ಪಾಶ್ರ್ವದಿ ೫
ಕರದಿ ಕಂಕಣ ರತ್ನ ಖಚಿತವು | ಹರಳು ವಜ್ರದ ಉಂಗುರ ಬೆರಳೊಳಿಟ್ಟಹ ದೇವ ಮಹಿಮೆಯ | ಸುರರು ಬಲು ಪರಿ ತುತಿಪುದ ೬
ಫಣೆಯಲೊಪ್ಪುವ ತಿಲಕ ವಿಧೃತ |ಕರ್ಣ ಕುಂಡಲ ಭೂಷಿತ |ಮಣಿಯು ಮೌಕ್ತಿಕ ಮುಕುಟ ರಂಜಿತ | ಫಣಿ ವಿಭೂಷಣ ಸೇವಿತ ೭
ಭುವನ ಮೋಹನ ದೇವ ದೇವನ | ಪವನನಯ್ಯನು ಎನಿಪನ |ಮಧ್ವ ಸರಸಿಯ ತಟದಿ ಮೆರೆವನ | ಮಧ್ವಮುನಿ ಸ್ತುತಿಗೊಲಿದನ ೮
ಅಷ್ಟ ಮಠಗಳ ಯತಿಗಳಿಂದಲಿ | ಸುಷ್ಠು ಪೂಜಿತ ಚರಣನದಿಟ್ಟ ಗುರು ಗೋವಿಂದ ವಿಠಲನ |ಸೃಷ್ಟಿ ಸ್ಥಿತಿ ಲಯ ಕರ್ತನ ೯

ಇಂದ್ರಾಂಶ ಸಂಭೂತರಾಗಿ ಕಾಗಿಣಿ
೩೪೬
ಜಯತೀರ್ಥರು
ಕಂಡೆ ಕಂಡೇ ಗುರುಗಳ – ಕಂಡೆ ಕಂಡೇ ಪ
ಕಂಡೆ ಕಂಡೆನು ಕರುಣ ನಿಧಿಯನುತೊಂಡರನು ಬೆಂಬಿಡದೆ ಕಾಯ್ವರ ಅ.ಪ.
ತಂದೆ ವೆಂಕಟೇಶ ವಿಠಲ ದಾಸರ | ಮಂದಿರದಿ ವಾತದ್ವಿತಿಯ ಪೆಸರಿನವಂದನೀಯರು ಗೈಯ್ಯುತಿರ್ಪುದ | ಅಂದ ಪುಜೆಯ ಛಂದದಿಂದಲಿ ೧
ಕಾಗಿನೀ ಸರಿತ್ತಟದಿ ಮೆರೆಯುವ | ರಾಗರಹಿತಕ್ಷೋಭ್ಯ ಕರಜರಖಗವರ ಧ್ವಜನಂಘ್ರಿ ಭಕುತರ | ಯೋಗಿ ಕುಲಮಣಿ ಟೀಕಾಚಾರ್ಯರ ೨
ಕಾಯಜನ ಶರ ಭಯವಿದೂರನ | ಮಾಯಿಮತ ಮಹತಿಮಿರ ಸೂರ್ಯನಪಾವಮಾನಿ ಮತಾಬ್ಧಿ ಚಂದ್ರನ | ಜಯ ಮುನೀಂದ್ರನ ವೀತ ಶೋಕನ ೩
ತೊಂಡಜನಕತಿ ಪ್ರೀಯ ದೇವನ | ತಾಂಡವ ಶಿರಿ ಕೃಷ್ಣ ದೂತನಥಂಡ ಥಂಡದಿ ಸೇವೆಗೊಳ್ಳುವ | ಹಿಂಡು ಮಾಯ್ಗಜ ಗಂಡು ಸಿಂಹನ ೪
ಭೂತಪತಿಗತಿ ಅಧಿಕನೆನಿಸಿದ | ವಾತ ಸುತನಲಿ ಸೀತೆ ಪತಿಯನುಪ್ರೀತಿಯಿಂದಲಿ ಭಜಿಪ ಯತಿಗಳ | ದೂತ ಗುರು ಗೋವಿಂದ ವಿಠಲನ ೫

೩೪೧
ಕಂಡೆಯಾ – ಮನವೇ – ನೀನಿಂದು – ಕಂಡೆಯಾ ಪ
ಕಂಡೆಯ ಮನವೆ ನೀನಿಂದು – ತನ್ನತೊಂಡರ ಸಲಹುವ ಬಂಧು – ಆಹಮಂಡೆಯ ಬೋಳಿಸಿ | ಪುಂಡರೀಕಾಕ್ಷನೆಹಿಂಡು ದೈವಂಗಳ | ಗಂಡನೆಂದೇಳ್ವರ ಅ.ಪ.
ಅರುಣ ಪಲ್ಲವ ಪಾದ ಸೊಬಗು – ವೇಗತೆರಳುತ್ತಿದ್ದರದು ಮೆಲ್ಲಗು – ನಖವರರತ್ನ ಕೆಂಪಿನ ಬೆಡಗು – ಊರುಕರಿಯ ಸೊಂಡಿಲಿನಂತೆ ಬೆಳಗು _ ಆಹ ಪರಿಶುದ್ದ ಕಟಿಯಲ್ಲಿ | ಸುರಚಿರಾಂಬರನುಟ್ಟುವರಕಂಠ ಫಣೆಯುದರ | ತ್ರಿವಳಿಯಂ ಮೆರೆವರ ೧
ಮೃದುರೋಮ ಶಾಲು ಪ್ರಾವರಣ – ನೋಡಲದು ಭಾಸ ಉದಯಾರ್ಕ ವರಣ – ಪೋಲ್ವದದು ಮೇರು ಗಿರಿಯಂತೆ – ವರ್ಣ ನೋಡುಎದೆಯ ವಿಸ್ತರಾ ಭರಣ – ಆಹಸದಮಲುನ್ನತಾಂಸ | ಉರುಟು ನೀಳದ ತೋಳುಪದುಮ ರಾಗದ ಭಾಸ | ಧ್ವಜರೇಖೆ ಹಸ್ತವ ೨
ಮಂದ ಹಾಸದಿ ಬಪ್ಪ ಮಧ್ವಾ – ಚಾರ್ಯರಂದ ನೋಡಲು ಬಲು ಪೊಳೆವಾ – ಪೂರ್ಣಚಂದ್ರನಂತೆ ಮೋದ ಪೋಲ್ವ – ಮತ್ತೆಮಂದ ದೂರನು ಅತಿ ಚೆಲ್ವಾ – ಆಹಕುಂದಾಭ ರದನವು | ಸುಂದರಾರುಣ ಓಷ್ಠಮಂದಜೇಕ್ಷಣ ನೋಟ | ದಿಂದ ಬೀರುವ ಮುದ ೩
ಕಿವಿಗಳಲೊಪ್ಪುವ ತುಳಸೀ – ಮೂರುಭುವನ ಭೂತಿ ಭ್ರೂವಿಲಾಸಿ – ಮತ್ತೆಅವನೆ ಅಭೂತಿದನೆನಿಸೀ – ಚೆಲ್ವದವಡೆಯಿಂದೊಪ್ಪುವ ಶಿರಸಿ – ಆಹಅವಯವ ಲಕ್ಷಣ | ಪ್ರತಿ ಪ್ರತಿ ಜನ್ಮದಿವಿವರವೀತೆರವೆಂದು | ವಿಭುದರು ತಿಳಿದರು ೪
ಈ ವಿಶ್ವವೆಲ್ಲವೂ ಸತ್ಯ – ಮತ್ತೆಸಾರ್ವ ಭೇದವು ತಾರತಮ್ಯ – ವಿಧಿಪೂರ್ವಕಲ್ವೊರೆಯುತ್ತ ದಿವ್ಯ – ತತ್ವಸಾರ್ವವ ಪೇಳುತ್ತ ಭವ್ಯ – ಆಹಕಾವ ಕೊಲ್ಲುವ ಗುರು ಗೋವಿಂದ ವಿಠಲನೆಸರ್ವೋತ್ತುಮಾನೆಂದು | ಈ ವಿಧ ಮೆರೆವರ ೫

೩೬
ಕಣ್ಮನಕೆ ಆನಂದ ಇಂದಿನದಿ ಕೇಳೀ |ಮನ್ಮನೋರಥ ಮುಂದೆ | ಪೋಗಿ ಸೇರಿಹುದು ಪ
ಮಧ್ವ ಸರಸಿಯ ತಟದಿ | ಮಧ್ವಮುನಿ ಸದ್ವಂದ್ಯಮಧ್ವೇಶ ಶಿರಿ ಕೃಷ್ಣ | ನರ್ಚಿಸುತ ನಿತ್ಯಮಧ್ವಮತ ಸಾಮ್ರಾಜ್ಯ | ಪೀಠದಲಿ ಭೂಷಿತರುವಿಶ್ವೇಶ ತೀರ್ಥರಿಗೆ | ವಂದಿಪೆನು ಸತತ ೧
ಮಧ್ವ ಸಿದ್ಧಾಂತಗಳ | ಉತ್ಕರ್ಷ ಭೋದಿಸುತವಿದ್ವಜ್ಜನಾರಾಧ್ಯ | ಪಾಠಶಾಲಾವರ್ಧಂತಿ ಹತ್ತಾರು | ನಾಲ್ಕೊರ್ಷ ಉತ್ಸವದಿಅದ್ಯಕ್ಷ ವಿಶ್ವೇಶ | ತೀರ್ಥರನುಗ್ರಹಿಸೇ ೨
ಅನಂತೇಶ ಸನ್ನಿಧಿಲಿ | ಅನುಮಾನ ತೀರ್ಥರಿಂದಾನಂತ ಸತ್ ಜ್ಞಾನ | ರಶ್ಮಿ ಸೂಸುತಲೀ |ಜ್ಞಾನ ಕಾರ್ಯವು ಗುರು | ಗೋವಿಂದ ವಿಠಲನಪ್ರೀಣನಕೆ ಜರುಗಿಹುದ | ನೋಡವನೆ ಧನ್ಯ ೩

೧೮೭
ಕದರ ಉಂಡಲಿಗಿಯ ಹನುಮಾ | ಕಾಯೊಉದಧಿ ಶಯನಗೆ ಬಲು ಪ್ರೇಮಾ ಪ
ಸದಮಲಾಂತಃಕರಣದೊಳು ತವ | ಪದವನಜ ದ್ವಯ ಸೇವಿಸೂವರಮುದದಿ ಪಾಲಿಪ ಗುರು ದಯಾಕರ | ವದಗಿ ಭಾಸಿಸೊಮ ಮಹೃದಾಗರ ಅ.ಪ.
ಪ್ರಥಮಾಂಗ ಹರಿಗೆ ನೀನೆನಿಸೀ | ಜೀವ ತತಿಯೊಳಂತರ ಬಾಹ್ಯ ನೆಲಸೀ |ತತುವ ಮಾನಿಗಳ್ಕಾರ್ಯ ನಡೆಸೀ | ಹರಿಗೆ ಪೃಥಕ್ರ‍ಪಥಕ್ಕವುಗಳರ್ಪಿಸೀ |ವಿತತ ಹರಿ ಸತ್ಪಾತ್ರನೆನಿಸುತ | ಯತನ ಜ್ಞಾನೇಚ್ಛಾದಿ ನಡೆಸುತಸತತ ವಿಶ್ವವ ಪಾಲಿಸುವ ಶ್ರೀ | ಪತಿಯ ಪದಕರ್ಪಿಸುತಲಿರುವ ೧
ಶರಧಿ ದಾಟುವ ಲಂಕಾಪುರವ | ಸೇರಿವರ ಮಾತೆಗಿತ್ತೆ ಉಂಗುರವಾ |ಪುರದೊಳಗಶೋಕ ವನವಾ | ಕಿತ್ತುತರಿಯಲಕ್ಷನು ತೆತ್ತ ದೇಹವಉರು ಪರಾಕ್ರಮಿ ಇಂದ್ರ ಜಿತುವಿನ ವರಸುಅಸ್ತ್ರಕೆ ತಾನೆ ಸಿಲುಕುತಪರಿಪರಿಯಲಸುರನನು ಹಿಂಸಿಸಿ | ಉರಿಸಿ ಲಂಕೆಯ ಹರಿಗೆ ಎರಗಿಞ್ ೨
ಹದಿನೆಂಟು ಕ್ಷೋಹಿಣಿ ಬಲವಾ | ನೆರಸಿಸದೆದು ಹಾಕಿದ್ಯೊ ದೈತ್ಯಕುಲವಾ |ಮುದದಿ ದ್ರೌಪದಿಗಿತ್ತ ವರವಾ | ಸಲಿಸಿವಧಿಸಿದ್ಯೋ ದುರಳರ ಕುಲವಾ |ಮಧುಮಥನ ನರಹರಿಯ ಸ್ಮರಿಸುತ | ಅದುಭುತವು ಎಂದೆನಿಪ ಕಾರ್ಯವವಿಧಿಸಿ ಭೂಭಾರವನೆ ಕಳೆಯುತ | ಮುದದೊಳಚ್ಯುತಗಿತ್ತೆ ಭೀಮ ೩
ವೇದ ವಾದಿ ಜನ ಕೊರಗೀ | ಹರಿಪಾದದ್ವಯವು ವನಜಕೆರಗೀ |ಮೋದದಿ ಸ್ತುತಿಸೈವ ಮರುಗೀ | ಕಳುಹೆ ವೇದಗಳುದ್ಧಾರಕ್ಕಾಗೀ |ಬೋಧಿಸುತ ಬುಧ ಸ್ತೋಮಗಳಿಗಾ | ವೇದಗಳ ಸಾರಾರ್ಥವೆಲ್ಲವವಾದಿಗಳ ಜೈಸುತಲಿ ಪೂರ್ಣ | ಭೋದಯತಿ ಪಾಲಿಸುವುದೆಮ್ಮ ೪
ಶಾಂತ ಸಾಧುಗಳನುದ್ಧರಿಸೇ | ನೀನುಕಾಂತೇಶನೆನುತಲ್ಲಿ ವಸಿಸೇ |ಭ್ರಾಂತರಮನ ಪಂಕ ಹರಿಸೇ | ನೀನೇಕಾಂತತತ್ವಗಳ ಭೋದಿಸೇಪ್ರಾಂತಗಾಣದೆ ಕರ್ಮ ಪಂಕದಿ | ಶ್ರಾಂತರಾಗಿಹರನ್ನೆ ಪೊರೆಯುವಕಾಂತ ಗುರು ಗೋವಿಂದ ವಿಠಲನ | ಸ್ವಾಂತ ದೊಳಗನವರತ ಕಾಣುವ ೫

೫೨೩
ಕದರಿ ನರಹರಿ ವಿಠಲ | ಮುದದಿ ಪೊರೆ ಇವಳಾ ಪ
ಬೆದರಿ ಬೆಂಡಾಗಿ ತವ | ಪದಕೆ ಬಿದ್ದಿಹಳಾ ಅ.ಪ.
ಘನ್ನ ಮಹಿಮನೆ ದೇವ | ನಿನ್ನ ಪದ ಕಮಲಗಳನನ್ನೆಯಿಂ ಭಜಿಪಳಿಗೆ | ಬನ್ನ ಬವಣೆಗಳೇ ?ಇನ್ನು ಪೇಕ್ಷಿಸದೆ ಕಾ | ರುಣ್ಯ ವೀಕ್ಷಣ ತೋರೊಪನ್ನಂಗಶಯ್ಯ ಹರಿ | ಮನುಜ ಮೃಗವೇಷಾ ೧
ಸ್ವಾಪದಲಿ ನೀ ತೋರ್ದ | ಆಸನಿಯ ಅಂಕಿತವ ಪ್ರಾಪಿಸಿಹೆ ಇವಳಿಗೆ | ಶ್ರೀಪತಿಯೆ ಕೇಳೋ |ನೀ ಪಾಲಿಸುತ್ತಿವಳ | ತಾಪತ್ರಯಗಳ ಕಳೆಯೆಹೇ ಪಯೋಜ ಭವನುತ | ಪಾಪಾತಿದೂರಾ ೨
ಸದ್ವಂಶದಲಿ ಬಂದು | ಮಧ್ವಮತದಲ್ಲಿಹಳುಶ್ರದ್ಧೆಯಿಂ ತವ ಪಾದ | ಪದ್ಮಗಳ ಭಜಿಪಾಮುಗ್ದೆಯನು ಪೊರೆಯೆಂದು | ಮಧ್ವಾಂತರಾತ್ಮಕನೆಬುದ್ಧಿ ಪೂರ್ವಕ ಬೇಡ್ವೆ | ಶ್ರದ್ಧೆ ಪತಿಸುತನೇ ೩
ಐಹಿಕಾಮುಷ್ಮಿಕದ | ಬಹು ಪರಿಯ ಸುಖ ಸೌಖ್ಯಶ್ರೀಹರಿಯೆ ಕರುಣಿಸುತ | ಕಾಪಾಡೊ ಇವಳಾಸ್ನೇಹ ಸತ್ಸಂಗದಲಿ | ಪಾಲಿಸುತ ನೀನಾಗಿಮೋಹ ಮಮತೆಯ ಕಳೆದು | ಸಾಧನವ ಗೈಸೋ ೪
ತರಳ ಪ್ರಹ್ಲಾದನನ | ಪೊರೆಯಲಿಲ್ಲವೆ ಹರಿಯೆವರ ಧ್ರುವನನ ಪಾಂಚಾಲಿ | ಅಜಮಿಳರ ಪೊರೆದೆಮರುತಾಂತರಾತ್ಮ ಗುರು | ಗೋವಿಂದ ವಿಠ್ಠಲನೆಪೊರೆಯ ಬೇಕಿವಳ ಬಹು | ಕಾರುಣ್ಯದಲಿ ಹರಿಯೇ ೫

೫೨೨
ಅಂಕಿತ ಪದ
ಕನಕಾದ್ರಿ ಹರಿ ವಿಠಲ | ಕಾಪಾಡೊ ಇವಳಾ ಪ
ಅನಘನಿನ್ನಯ ಪಾದ | ವನಜ ಸೇವಿಪಳಾ ಅ.ಪ.
ಭಕ್ತಿಯುವ ಸೂಕನ್ಯೆ | ಆರ್ಥಿಪಳ ಹರಿದಾಸ್ಯಸತ್ಯಕಾಮ ಶರಣ್ಯ | ನಿತ್ಯ ಮಂಗಳನೆ |ಅತ್ತ ತೈಜಸ ಸೂಚ್ಯ | ಇತ್ತಿಹೆನೊ ಅಂಕಿತವಸಾರ್ಥಕೆನಿಪುದು ಇದನ | ಭಕ್ತನಾಭಯದನೇ ೧
ಪತಿಸೇವೆ ದೊರಕಿಸುತಾ | ಮುಕ್ತಿ ಮಾರ್ಗದಿ ನಡೆಸಿಕೃತಕೃತ್ಯಳೆಂದೆನಿಸೊ | ಕೃತಿರಮಣದೇವಾ |ಹಿತವಹಿತ ವೆರಡುಗಳಾ | ಸಮತೆಯಲಿ ಉಂಬಂಥಧೃತಿಯನ್ನೆ ನೀಕೊಟ್ಟು | ಸತತ ಕೈ ಪಿಡಿಯೋ ೨
ಮಧ್ವಮತ ತತ್ವಗಳ | ಶುದ್ಧಭಾವದಿ ತಿಳಿದುಅಧ್ವಯನು ಹರಿಯೆಂಬ | ಬುದ್ಧಿವೃದ್ಧಿಸುತಾಶ್ರದ್ದೆ ಭಕ್ತಿ ಜ್ಞಾನ | ಸಿದ್ಧಾಂತ ಅನುಸರಿಪಶುದ್ಧ ಬುದ್ಧಿಯನಿತ್ತು | ಉದ್ಧರಿಸೊ ಹರಿಯೇ ೩
ಕಾಮಿತ ಪ್ರದನಾಗಿ | ಕಾಮಿತಂಗಳನಿತ್ತುಭೂಮಿಯೊಳು ಸದ್ರ‍ವಂದ್ಯ ಸ್ತೋಮದಲಿ ಮೆರೆಸೋಶ್ಯಾಮಸುಂದರ ಹರಿಯೆ | ಶ್ರೀಮಹೀ ಸೇವಿತನೆನೀ ಮನವ ಮಾಡೆ ಹರಿ | ಆವುದಾ ಸಾಧ್ಯಾ ೪
ಭಾವ ಜ್ಞಾನೀನಿರಲು | ಪೇಳ್ವುದೇನಿಹುದಿನ್ನುಭಾವುಕಳ ಪೊರೆಯಿಂದು | ಓವಿ ಪ್ರಾರ್ಥಿಸುವೆ |ಭಾವಜನಯ್ಯಗುರು | ಗೋವಿಂದ ವಿಠ್ಠಲನೆ ನೀವೊಲಿಯದಿನ್ನಿಲ್ಲ | ಕಾವಕೊಲ್ಲುವನೆ ೫

೧೬೮
ಕನ್ಯೆ ಕುವರಿ ಕರುಣಿಸೆಮ್ಮನೂ | ಕಮಲನಯನೆಅನ್ಯ ದೇವತೆಯನ್ನ ಭಜಿಸೆನೇ ಪ
ಮನ್ಯು ಮಿಕ್ಕ ದೋಷ ಹರಿಸಿ | ನಿನ್ನ ಪತಿಯ ಚರಣ ಕಮಲವನ್ನೆ ಭಜಪ ಮತಿಯ ಕೊಟ್ಟು | ಘನ್ನ ಪದಕೆ ದಾರಿ ತೋರೆ ಅ.ಪ.
ಕುಂಭ ಬಾಣರೆಂಬ ದೈತ್ಯರೂ | ಅಜನ ಒಲಿಸಿಕುಂಭಿಣೀಯೆಲ್ಲಜೇಯರಾದರೊ ||ಕಂಬು ಚಕ್ರಧರನ ಪದವಿ | ಇಂಬು ಇಟ್ಟ ನಿನಗೆ ಅನ್ಯಬೆಂಬಲಾರು ಸರ್ವರಿಂದ | ಡಿಂಬ ಪೋಗದವರವ ಪಡಿಯೆ ೧
ಖುಲ್ಲ ಕಂಸ ತನ್ನ ಭಗಿನಿಯ | ಒಯ್ದ ಬೇಗನಲ್ಲನೊಡನೆ ಗೈದ ಖೈದಿಯ |ಅಲ್ಲಿ ಉದಿಸೆ ಚೆಲ್ವ ಕೃಷ್ಣ | ನಲ್ಲೇ ನೀನು ದುರ್ಗೆ ಎನಿಸೆವಲ್ಲದವರ ಬಿಡದೆ ನೀನು | ಕೊಲ್ವೆನೆಂದು ಹಾರಿ ಪೋದೆ ೨
ದಂತಿಗಮನೆ ಮತ್ತೆ ಧರೆಯೊಳ್ | ವ್ಯಕ್ತವಾಗೆಎಂತು ತಪದ ಸಿದ್ಧಿ ನೋಡಲೂ ||ಅಂತಕರು ಯುದ್ದಗೈದು | ಅಂತೆ ತನುವ ನೀಗಿ ಪೋಗೆಕಂತು ಮಾತೆ ತೆಂಕ ಶರಧಿ | ನಿಂತೆ ಅಲ್ಲಿ ಕನ್ಯೆಯಾಗಿ ೩
ಮದುವೆ ನಿನಗೆ ಮಾಳ್ಪ ಮನದೊಳೂ ವರುಣ ಬೇಡೆರುದ್ರ ಅಜರು ಬಂದು ನಿಲ್ಲಲೂ ||ಒದಗಿ ಕಲಿಯ ಯುಗವು ಆಗ | ವಿಧಿಯು ಹರರು ತಾವು ಬೇಗಸುಧಿಯ ಇಂದ್ರ ಪುರದಿ ನಿಲ್ಲೆ | ಮುದದಿ ನಿಂತೆ ಶರಧಿಯಲ್ಲೇ೪
ಬಂದು ಹರಿಯ ಭಕ್ತ ಜನಗಳೂ | ತೀರ್ಥನವದಿಮಿಂದು ನಿನ್ನ ಪತಿಯೆ ತುತಿಸಲೂ ||ಬಂದು ಗುರು ಗೋವಿಂದ ವಿಠಲ | ಇಂದಿರೆ ತವ ಮಾತಿನಂತೆ ಬಂಧ ಹರಿಸಿ ಮುಕ್ತಿ ಸುಖವ | ಛಂದದಿಂದ ಕೊಟ್ಟು ಕಾಯ್ವ ೫

೫೨೫
ಕಮಲಾ ರಮಣ ಹರಿ ವಿಠಲ | ಕಾಪಾಡೊ ಇವಳಾ ಪ
ವಿಮಲ ಮತಿ ಕರುಣಿಸುತ ಮಮತೆಯನೆ ಕಳೆದೂ ಅ.ಪ.
ಗುರುರೂಪಿ ತೈಜಸನೆ | ಪರಮನುಗ್ರಹ ಪೊಂದಿಗುರುವಿನಿಂದ ಶಿಷ್ಯನ | ಪಡೆಯುತಲಿ ಮತ್ತೇಪರ್ವತವ ಅಡಿಯಲ್ಲಿ | ಪರಮ ಗುರು ತದ್ಗುರುವವರ ಅಂಕಿತಗಳ ಕಂಡು | ಮರಮಾಶ್ಚರ್ಯ ಪೊಂದೀ೧
ಹರ ವಿರಿಂಚಾದಿಗಳು | ಹರಿಯ ಸೇವಕರೆಂಬವರಮತಿಯ ಪೊಂದುತ್ತ | ಚರಾಚರಗಳಲ್ಲಿಹರಿಯಧಿಷ್ಠಿತನೆಂಬ | ವರ ಜ್ಞಾನದಿಂದಲ್ಲಿಹರುಷದಿಂ ಸೇವಿಸುವ | ಸಾಧನವ ಗೈಸೋ ೨
ಹರಿ ಗುರೂ ಸದ್ಭಕ್ತಿ | ಹಿರಿಯರ ಸತ್ಸೇವೆಕರುಣಿಸುತಲೀ ಕಾಯೋ | ಕಮಲಾಕ್ಷ ಹರಿಯೇಕರುಣ ನಿಧಿ ನೀನೆಂದು | ಒರಲುತಿದೆ ವೇದಗಳುಪರಿಪಾಲಿಸಿವಳ ಗುರು | ಗೋವಿಂದ ವಿಠಲಾ ೩

೫೨೪
ಕಮಲಾಲಯ ವಿಠಲ | ಕಾಪಾಡೊ ಇವಳಾ ಪ
ಬ್ರಹ್ಮಾದಿ ಸುರ ವಂದ್ಯ | ಅಮಿತ ಮಹಿಮಾತ್ಮಾ ಅ.ಪ.
ಹಿಂದಿನ ಸುಕೃತದಿಂ | ಕೈ ಹಿಡಿದು ವೈಷ್ಣವನನಂದತೀರ್ಥರ ಪಾದ | ವಂದನೆಯ ಬಯಸೀಬಂದಿಹಳು ಎನ್ನಲ್ಲಿ | ಕಂದರ್ಪಪಿತ ನಿನ್ನ |ಅಂದ ದಾಸ್ಯವ ಬಯಸಿ | ಪ್ರಾರ್ಥಿಸುತ್ತಿಹಳೋ ೧
ಮನ್ನಿಸುತ ಮನ್ಮನದ | ಬಿನ್ನಪವ ಸಲಿಸುತ್ತನನ್ನೆಯಿಂ ತೈಜಸನು | ನೀನೇವೆ ಆಗೀಚೆನ್ನಮುತ್ತೈದುಳ್ಳ |ಹೆಣ್ಣೆನ್ಯ ರೂಪದಲಿಸನ್ನಿಹಿತ ದಂಕಿತವೆ ಸೂಚಿಸಿದೆ ಹರಿಯೇ ೨
ದುಷ್ಟ ಸಂಸ್ಕಾರಗಳ | ಸುಷ್ಠು ಕಳೆಯುತ ನೀನುಕಷ್ಟ ಸಂತೋಷಗಳ | ಸಮತೆಯನೆ ತಿಳಿಸೀವಿಠಲನ ನಾಮ ಸುಧೆ | ವಜ್ರ ಕವಚವ ತೊಡಿಸಿಶ್ರೇಷ್ಠಭಕುತಳ ಗೈಯ್ಯೊ | ವಿಷ್ಠರ ಶ್ರವನೇ ೩
ಎಲ್ಲೆಲ್ಲೂ ನೀನಿದ್ದು | ಬೆಲ್ಲದಚ್ಚಿನ ಪರಿಯಮಲ್ಲ ಮರ್ಧನ ಕೃಷ್ಣ | ಕೈಪಿಡಿದು ಇವಳಾಬಲ್ಲವರ ಸಂಗದಲಿ | ಚೆಲ್ವತವ ಮಹಿಮೆಗಳಸಲ್ಲಲಿತ ಮನದಲ್ಲಿ ಕೇಳುವಂತೆಸಗೋ ೪
ಪತಿಸುತರುಹಿತರಲ್ಲಿ | ವಿತತ ನಿನ್ನಯಮೂರ್ತಿಅತಿಶಯಂಗಳ ಕಂಡು | ಮರುತಮಾರ್ಗದಲೀಹಿತ ಗುರು ಗೋವಿಂದ | ವಿಠಲನ್ನ ಸೇವಿಸುವಮತಿಯನೇ ಕೊಡು | ಪ್ರಾರ್ಥಿಸುವೆ ಹರಿಯೇ ೫

೧೬೯
ಕಮಲೋದ್ಭವನ ತಾಯೇ | ನಮಿಸುವೆನ್ನನು ಕಾಯೇ ಕಮಲಾಕ್ಷ ಹರಿ ಪ್ರೀಯೆ | ಚಿತ್ಪ್ರಕೃತೇ ಪ
ಓಂಕಾರ ವಾಚ್ಯನ | ಶಂಕೆ ಇಲ್ಲದೆ ಭಜಿಸೇಸಂಖ್ಯೆ ರಹಿತ ರೂಪಳೇ |ಯಂಕಾಮಯೇ ತಂತಮು | ಗ್ರಂ ಕೃಣೋಮೆಂದು ಬಿಂಕದಿ ಶ್ರುತಿ ಪೇಳ್ವುದೇ ೧
ಆಪಾಂಗ ವೀಕ್ಷಣ ಸೃಷ್ಠಿ | ವ್ಯಾಪಾರಂಗಳ ಹರಿಕೃಪೆಯಿಂದ – ಗೈಯ್ಯುವಳೇ |ಅಪವಿತ್ರರಿಗೆ ಯೋಗ್ಯ | ವಿಪರೀತ ಮತಿಯಿತ್ತು ಕುಪಥಾಂಧಂತದು ಪ್ರಾಪಕೇ ೨
ಕಂಬು ಚಕ್ರಾಂಕಿತನ | ಅಂಬುಜಾಕ್ಷನ ಹೃದಯಾಂಬರದಲಿ – ತೋರಿಸೇ |ಇಂಬಿಟ್ಟು ಮನ ಬಯಕೆ | ತುಂಬಿಸುವುದು ಅನ್ಯಹಂಬಲ ನೀ ಕೊಡದೇ೩
ತ್ರ್ಯಕ್ಷಾದಿ ಸನ್ನುತ | ಮೋಕ್ಷದಾಯಕ ಪರಮಾಕ್ಷರ ಶ್ರೀ ಹರಿಯ |ಈಕ್ಷಿಪ ಸುಖ ಕೊಡು | ಪೇಕ್ಷಿಸದಲೆ ತಾಯೆಲಕ್ಷಣವಂತೇ – ಗುಣವಂತೇ ೪
ಕರವೀರ ಪುರದರಿಸಿ | ಶರದಿ ಸಂಭವೆ ಎನಿಸಿವರವ ನೀಡುತ ಪೊರೆವೇಗುರು ಗೋವಿಂದ ವಿಠ್ಠಲ | ಚರಣ ನೀರೇರುಹಕರುಣಿಸಿ ಸಲಹೇ – ಮಾತೇ ೫

೩೭
ಕರಿಗಿರಿ ದುರ್ಗ ನಿವಾಸಾ | ದಯಾಪರಿಪೂರ್ಣ ಪೊರೆಯನ್ನ ಅನಿಶ ಪ
ಶಿರಿ ಅಜಭವ ವಿಪಗೇಶಾ | ಹೃತ್‍ಸರಸಿಜ ವಾಸ ಲಕ್ಷ್ಮೀಶಾ ಅ.ಪ.
ಕುಸುಮಾಹ್ವಯ ಯಶ ಕುಧರವೆ ಸದನಅಸಮ ತವ ಯಶ ವಿಸರಣಾಜ ಯಜನಋಷಿ ಶಾಪಕೆ ಗಜ ಅಸುವ ಧರಿಸಿದವನದಶರಥಸುತ ದಯ ರಸದಿ ಗಂಧರ್ವನವಸುಧೆಯೊಳುದ್ಧರ ಗೈಸಿ ಪೊರೆದೆ ತವಯಶವನರಿಯ ಸುವಿಶಾಲ ಹೃದಯರನನುಸರಿಸಿ ತಿಳಿದ ಪದ ಬಿಸಜ ಕಿಂಜಲ್ಕದ ಯಸಳು ರಜವ ಶಿರಸಿಯೊಳಗೆ ನೀನಿರಿಸೋ ೧
ಮೇಶ ಬ್ರಹ್ಮೇಶ ನಾಶವ ಗೈವೆ ಸಶೇಷಶೇಷಶಯ್ಯ ಜೀವಾದ್ಯರ ಪೋಷಾಈ ಸಮಸ್ತ ಜಗ ನಿನ್ನುದರದಿ ವಾಸಾಕೇಶಾಸುರಪಾದೀಶ ಪರೇಶನೆ ವ್ಯಾಸಾಈಶಿತವ್ಯ ತವ ದಾಸರಿಗೆಲ್ಲ ಉಪದೇಶಿಸು ಶಾಸ್ತ್ರ ವಿಶೇಷ ರಹಸ್ಯ ಮಹಿದಾಸ ಕುಶೇಶಯ ವಿಷಯ ವಿಲಾಸದಿಪೋಷಿಸು ಮನ ಮಧ್ವೇಶ ಮಹಾಪ್ರಭೋ ೨
ಕರಿವರ ವರ ಶರಣಾಗತ ಪಾಲಾತರಳೆಗಿತ್ತೆ ನವ ನವ ಸೀರೆಯ ಜಾಲಾವರಸ್ತಂಭೋದಿತ ಹರಿಭಕ್ತಿ ಸುಪಾಲಾಗುರು ಗೋವಿಂದ ವಿಠ್ಠಲಾ ಕಾಲಾಸುರಪಾದಿಯ ತನು ವರ ರಥ ರೂಢ ಪು-ರಾರಿ ಭಯಹರ ಮುರಾರಿ ಮಹ ಭವತರಿ ಎನಿಸಿಹ ಸುಖ ತೀರಥ ಸನ್ಮತಧರಿಸಿಹೆ ಕಣ್ಣೆದುರಿಲಿ ನೀ ಕುಣಿಯೋ ೩

೨೫೦
ಕರಿಗೊರಳಾ ಪಾಲಿಸೋ ಪ
ಕರಿವರದನ ದಯ | ನಿರುತ ನಿನ್ನೊಳಗಿದೆಸುರಜೇಷ್ಠಾನುಜ | ಶರಣನ ಕರಪಿಡಿಅ.ಪ.
ಅಸುರಾಮರ ತತಿ | ವಿಷಧಿಯ ಮಥಿಸಲುವಿಷ ಉದ್ಭವಿಸಲು | ಅಸುಪತಿ ಸಂಸ್ರ‍ಕತ |ವಿಷವ ನುಂಡ | ವಿಷಕಂಠನಾದೆಅಸಮ ಸಾಹಸಿಯೆ | ಪಶುಪತಿ ಎನಿಸಿಹೆ ೧
ಆರು ನಿನಗೆ ಸರಿ | ವೈರಾಗ್ಯಾಧಿಪಕೋರುವೆನೋ ತವ | ಕರುಣಾ ರಸವನುಭೂರಿ ದಯದಿ ಮಮ | ಕಾರವ ಹರಿಪುದುಬೇರೊಂದನೊಲ್ಲೆ | ಕಾರುಣ್ಯಾಂಬುಧಿ ೨
ದೇವ ದೇವ ಹರಿ | ದಾವಾಗ್ನಿಯ ಭಯತೀವರ ಹರಿಸುತ | ಗೋವ್ಗಳನುಳುಹಿದ |ಭಾವಜ ಪಿತ ಗುರು | ಗೋವಿಂದ ವಿಠಲನಪಾವನ ಪದ ದ್ವಯ | ಭಾವದಿ ತೋರಿಸಿ ೩

೫೨೬
ಕರಿವರದ ಗೋಪಾಲ ವಿಠಲ ಸಲಹೋ ಪ
ತರಳನನು ನಿನ್ನಡಿಗೆ ಒಪ್ಪಿಸಿಹೆ ಹರಿಯೇ ಅ.ಪ.
ಸ್ವಾಪದಲಿ ನರಸಿಂಹ ರೂಪದಲಿ ಕರವೆತ್ತಿಶ್ರೀಪತಿಯೆ ಅನುಗ್ರಹಿಸಿ ಕರುಣಿಸಿರುವೇಈ ಪರಿಯ ಮಹಿಮೆಗಳ ನಾ ಪೇಳಲಳವಿಲ್ಲಕೈಪಿಡಿದು ತರಳನ್ನ ಕಾಪಾಡೊ ಹರಿಯೇ ೧
ಸಿದ್ಧಾಂತ ಜ್ಞಾನಗಳು ಸಿದ್ಧಿಯಾಗಲಿ ಇವಗೆಮಧ್ವ ಮತ ದೀಕ್ಷೆಯಲಿ ಶುದ್ಧವಾಗಿರಲೀಶುದ್ಧಭಕ್ತಿಯಲಿಂದ ವೃದ್ಧರನು ಸೇವಿಸಲಿಮಧ್ವ ವಲ್ಲಭ ನಿನ್ನ ಪ್ರಾಧ್ಯಾನ ವಿರಲೀ ೨
ಅರ್ಥಿಯಲಿ ಗುರುರಚಿತ ಕೀರ್ತನೆಯ ಭಜಿಪಂಥಚಿತ್ತಕೊಡು ಇವಗೆ | ಜಗಕರ್ತಾ ಸಂಹರ್ತಾಮತ್ತೆ ಲೌಕಿಕದಲ್ಲಿ ಸತ್ಕೀರ್ತಿ ವೈಭವವಇತ್ತು ಪಾಲಿಸು ಹರಿಯೆ | ನಿತ್ಯ ಮಂಗಳದಾ ೩
ಪರಿಪರಿಯ ಮಹಿಮೆಗಳ | ತೋರುತಲಿ ಇವನಲ್ಲಿಧರೆಯ ಜನಗಳಿಗೆಲ್ಲ | ತೋರಿ ಕೌತುಕವಾಮೆರೆವ ಸಂಪದವಿತ್ತು | ಮರೆಸಿದೆ ತವಸ್ರ‍ಮತಿಯಪೊರೆಯ ಬೇಕೆಂದೆನುತ | ಮೊರೆ ಇಡುವೆ ಹರಿಯೇ ೪
ಅಷ್ಟ ಸೌಭಾಗ್ಯಗಳು | ಅಷ್ಟು ಸ್ಥಿರವಲ್ಲೆಂಬಸುಷ್ಠು ಮತಿಯಿಲ್ಲವಗೆ | ನಿಷ್ಠೆ ಇರಲೆಂಬಶೇಷ್ಠ ಭಿನ್ನಪಕೃಷ್ಣ | ದ್ವೈಪಾಯ ನಾತ್ಮಕನೆಕೃಷ್ಣ ಗುರು ಗೋವಿಂದ ವಿಠ್ಠಲನೆ ಸಲಿಸೋ ೫

೩೮
ಕರಿವರದಾ ಪಾಲಿಸೋ | ಪಾಲಿಸೋಶರಣಾಗತ ಪರಿ ಪೋಷಕ ತ್ವಂ ಪ
ಮಾ ಕಮಲಾಸ ದಿವೌಕಸ ಪ್ರೇರಕ ಏಕಮೇವ ಜಗದಾಧಾರಕಾ ೧
ತುಂದಿ ಚತುರದಳ ಮಂದಿರ ಶೋಭಿತಮಂದಹಾಸ ಅನಿರುದ್ಧ ಮುಕುಂದಾ ೨
ನಾಭಿ ಪದ್ಮ ಸುನಿಕೇತನ ಪ್ರದ್ಯುಮ್ನಾಭಿಧ ಷಣ್ಮಹಿಷಿಯರರಸಾ ೩
ಅಷ್ಠ ದಳಗಳಲಿ ವಸುದಿಕ್ಷತಗಳಅಷ್ಟ ನಿಯಂತ ಸಂಕರುಷಣನೇ ೪
ಎರಡು ದಶವು ದಳ ಸರಸಿವಾಸನೆಎರಡಾರರ್ಕರ ನಿಯಾಮಕ ಹರಿಯೆ ೫
ಎರಡೆಂಟರ ದಳ ಇಂದ್ರ ಯೋನಿಯಲಿಉರಗೇಶಣ ನಾರಾಯಣನೇ ೬
ಮಧು ಸುಮವರ್ಣದ ದ್ವಿದಳ ಸುಪದುಮದಿವಿಧಿವಾಯು ಪೂಜಿತ ಖಗ ವಾಹನನೇ ೭
ಪದುಮ ಸಾಸಿರ ದಳ ವಸನೆ ಈಶಾಪದುಮಜ ಪೋಷಕ ವಾಸುದೇವಾ ೮
ಸಪುತ ಚಕ್ರದಲಿ ವ್ಯಾಪಿಸಿ ಪೊರೆಯುವಖಪತಿಗಮನ ಗುರು ಗೋವಿಂದ ವಿಠಲಾ ೯

೩೯
ಕರುಣದಿ ಕಾಯೊ ಗೋಪಾಲಾಚರಣವ ಸ್ಮರಿಸುವೆ ಶರಣರ ಪಾಲಾ ಪ
ಹರಣ ಹೋಗದ ಮುನ್ನ | ಹರಿ ನಿನ್ನ ಹಂಬಲನ್ನಕರುಣಿಸಿ ಕಾವುದೆನ್ನ | ಕರುಣ ನಿಧಿಯೆ ಘನ್ನಮೊರೆಯಿಡುವೆನು ನಿನ್ನ | ಚರಣ ಸರೋಜವನ್ನಶಿರದೊಳಗಿರಿಸೆನ್ನ | ಪರಮ ಪಾವನ್ನ ೧
ಮರುತನ ಮತದಲ್ಲಿ | ಕರೆ ತಂದು ಎನ್ನನುತರತಮ ಜ್ಞಾನವ | ಅರುಹುವುದೊಳಿತಲ್ಲೆ |ಹರಿಯೆ ಸರ್ವೋತ್ತಮ | ಮರುತ ಜೀವೋತ್ತಮಹರ ವೈಷ್ಣವೋತ್ತಮ | ವರ ಜ್ಞಾನ ಪಾಲಿಸಿ ೨
ಪನ್ನಗಾಚಲವಾಸ | ಪ್ರಸನ್ನರಘನಾಶನಿನ್ನ ನಾಮವ ಅನಿಶ | ಎನ್ನಿಂದ ನುಡಿಸೀಶ |ಅನ್ನಂತ ಗುಣ ಗುರು | ಗೋವಿಂದ ವಿಠಲನೆಎನ್ನ ಬಿನ್ನಪ ಸಲಿಸು | ಮನ್ನಿಸಿ ಕುಂದುಗಳ ೩

೪೭೦
ಶ್ರೀ ತಂದೆ ಮುದ್ದು ಮೋಹನದಾಸರು
ಕರುಣದಿ ಕಾಯೊ ಮದ್ಗುರುವೆ | ಬೇಡುವೆ ನಿಮ್ಮಚರಣ ಸೇವಕನು ನಾನೂ ಪ
ಮೊರೆ ಹೊಕ್ಕವರ ಆರ್ತ | ಸ್ವರವ ಕೇಳುತ ನೀವುಕರುಣ ರಹಿತರಂತೆ | ಇರುವುದು ಉಚಿತೇ ಅ.ಪ.
ಮುದ್ದು ಮೋಹನ ಕರ | ಪದುಮ ಸಂಭವ ಗುರುವಿದ್ವದಾರ್ಯನೆ ತಂದೆ | ಮುದ್ದು ಮೋಹನ್ನ |ಮಧ್ವ ಶಾಸ್ತ್ರದಿ ನಿಪುಣ | ಅದ್ವೈತ ಗಜಸಿಂಹಮದ್ಗುರುವೆ ತೋರೆನ್ನ | ಹೃದ್ಗುಹಸ್ಥಿತನಾ ೧
ಯಕುತಿ ಶಾಸ್ತ್ರವನರಿಯೆ | ಮುಕುತಿ ಮಾರ್ಗದಿ ಸಿರಿಲಕುಮಿ ಪತಿಯ ನಾಮಕೆದುರೇ |ಭಕುತಿಯಿಂದಲಿ ತವ | ಉಕುತಿಯ ಚಿಂತಿಪಶಕುತಿ ಇತ್ತೆನ್ನ | ನೀ ಕಾಯೊ ಗುರುವೆ ೨
ಗುರುವೆ ನಿಮ್ಮಯ ಕರುಣ | ಕವಚ ತೊಟ್ಟಮೇಲೆಕರೆಕರೆ ಸಂಸಾರ ಭಯ ವೇತಕೋ |ಗರುಡ ಗಮನನು ಗುರು | ಗೋವಿಂದ ವಿಠಲನಚರಣ ಪುಷ್ಕರ ಭೃಂಗ | ಪೊರೆಯೊ ಕೃಪಾಪಾಂಗಾ ೩

೪೧
ಕರುಣಿಸುವುದೆನಗಿತು | ಕರಿವರದ ಕೃಷ್ಣಾ |ನಿರುತ ನಿನ್ನಯ ಸ್ಮರಣೆ | ವೆರಕವಾಗಲಿ ಮನಕೆ ಪ
ಪರಸತಿಯರೊಲಿಮೆಗೇ |ಎರಗುವೀ ಮನವನ್ನು ಬರ ಸೆಳೆದು ನಿನ್ನಂಘ್ರಿ | ಸರಸಿಜದೊಳಿರಿಸೋ |ಶರಣ ವತ್ಸಲನೆಂಬೊ | ಬಿರಿದು ನಿನ್ನದು ಇರಲುಬರಿದೇಕೆ ತಡಗೈವೆ | ಮರುತಾಂತರಾತ್ಮಾ ೧
ಮುದಿತನದ ತನುವಿನಲಿ | ಮದಡಾಗಿ ಮೈಮರೆವೆಹೃದಯ ಸದನದಿ ನಿನ್ನ | ಪದವ ನೋಡದಲೇಎದುರಾಳಿ ತತ್ವೇಶ | ರಧಿಕಾರ ತಪ್ಪಿಸುತಪದುಮನಾಭನೆ ನಿನ್ನ | ಪದ ತೋರೊ ಘನ್ನಾ ೨
ಪುಂಡಲೀಕನಿಗೊಲಿದೆ | ಪಾಂಡವರ ಪಾಲಿಸಿದೆಪುಂಡರೀಕಾಕ್ಷ ದೃಹಿ | ಣಾಂಡಗಳ ವಡೆಯಾ |ಅಂಡಜಾಧಿಪ ತುರಗ | ಕುಂಡಲಿಯ ಶಯನ ಹೃತ್‍ಪುಂಡರೀಕದಿ ತೋರೊ | ಗುರು ಗೋವಿಂದ ವಿಠಲಾ ೩

೪೦
ಕರುಣಿಸುವುದೆನಗಿನಿತು | ಕಮಲ ನಯನ |ಬರಿದೆ ಬಳಲಿಸಬೇಡ | ಮರುತ ಪ್ರಿಯ ದೇವ ಪ
ಧನಕನಕ ವಸ್ತ್ರಗಳ | ಮಣಿ ಭೂಷಣಾದಿಗಳುಇನಿತು ಯೇನೇನುಂಟೊ | ವನಜ ಜಾಂಡದಲೀಎಣಿಸಿಹೆನೊ ನಶ್ವರವು | ಎನಿತೆಂದು ಶ್ರೀಹರಿಯೆಘನ ಜ್ಞಾನ ಕೊಡು ಎಂದು | ಮಣಿದು ಬೇಡುವೆನೋ ೧
ವಸ್ತು ನಿನ್ನದು ಎನಿಪ | ಸತಿಯನೆ ಕೊಂಡ್ವೈದೆಮತ್ತೆ ಸುತ ಪರಿವಾರ | ವಿಸ್ತರ ಪ್ರವಿಷ್ಟಾ |ಹೊತ್ತು ಹೊತ್ತಿಗೆ ನೀನು | ತುತ್ತನುಣಿಸುತ ಕಾಯ್ವೆವಿತ್ತಪನ ಸಖನೆನಿಪ | ಕೃತ್ತಿ ವಾಸನ ತಾತ ೨
ಶಿಷ್ಟ ಜನ ಪರಿಪಾಲ | ಎಷ್ಟೊ ನಿನ್ನದು ಕರುಣವಿಷ್ಠರ ಶ್ರವ ನಿನ್ನ | ಸುಷ್ಠು ಭಕ್ತಿಯ ನೀಯೋ |ದುಷ್ಟ ನಿಗ್ರಹ ಶೀಲ | ಅಷ್ಟ ಮಹಿಷೆರ ಲೋಲದಿಟ್ಟ ಗುರು ಗೋವಿಂದ | ವಿಠಲ ಭವ ನೀಗೋ೩

೩೪೭
ಕಾಗಿಣಿ ತೀರದ ಯೋಗಿವರ್ಯ ಗುರುವೇ | ನಿನ್ನಲಿ ಮೊರೆಯಿಡುವೆ ಪ
ಭೋಗಿಶಯನ ಗುಣ ಯೋಗದಿಂದ ಭಜಿಪಾ | ಹರಿ ಪದಾಬ್ಜ ಮಧುಪಾ ಅ.ಪ.
ಸಿಂಗರವೆನಿಸಿದ ಮಂಗಳವೇಡಿಯಲಿ |ನೀನುದಿಸುತಲಲ್ಲೀಸಿಂಗರಿಸಿಹ ಬಲು ರಂಗ ಕುದುರೆ ನೇರಿ | ರಾವುತರೊಡಸೇರೀ ||ಕಂಗೆಡುತಲಿ ಬಲು ತುಂಗೆ ಕಾಗಿಣೀಯಾ | ಸಾರುತ ತನಹಯಾ ಹಿಂಗದೆ ನದಿಯಲಿ ಮಂಗಳ ಹಯವೇರಿ | ನೀರ್ಗುಡಿದ ಬಾಯಾರಿ ೧
ಆಚೆ ತಟದಿ ಅಕ್ಷೋಭ್ಯಮುನಿಪ ನೋಡಿ | ಸ್ವಪ್ನದರ್ಥ ಮಾಡೀಸೂಚಿಸಿದನು ತವ ಶಿಷ್ಯನ ಕೈಯಲ್ಲೀ | ಬಂದ ಸಾದಿ ಅಲ್ಲೀ ||ಯಾಚಿಸಿದನು ಮುನಿ ಪದಕೇ ಬಾಗೀ | ತುರ್ಯಾಶ್ರಮಕಾಗೀಖೇಚರ ವಹನಾಜ್ಞೆಯೆಂದು ತ್ವರ್ಯಾ | ಮಾಡ್ದ ಸಾದಿ ಯತಿಯಾ ೨
ತಂದೆ ಬಹು ಕೋಪದಿಂದ ಬಂದೂ | ಯತಿಯ ನಿಂದಿಸ್ಯಂದೂತಂದು ಮಗನ ಏಕಾಂತ ಗೃಹಕೆ ಆಗ | ಸತಿಯನು ಕೂಡಿಸಿ ವೇಗ ||ಅಂದು ಕಂಡು ಸರ್ಪಾಕೃತಿ ಪತಿಯಾ | ಚೀರಿದಳ್ ಬಲ್ಪರಿಯಾತಂದೆ ಕೊಂಡು ಮಗನರ್ಪಿಸಿದನುಯತಿಗೇ | ಕ್ಷಮೆ ಬೇಡಿದನಾಗೇ ೩
ತ್ರ್ಯಕ್ಷನಂಶ ಅಕ್ಷೋಭ್ಯ ಮುನಿಪ ಆಗ | ಸನ್ಯಾಸ ವೇಗಭಿಕ್ಷುಕ ಮಧ್ವರ ಗ್ರಂಥ ಪೊತ್ತ ವೃಷಭ | ಎನುತೀತನ ಪ್ರಭಾ ||ಲಕ್ಷಿಸಿವರ ಕರೆದನೂ ನಾಮಾನ್ವರ್ಥ | ಯತಿಯನೆ ಜಯತೀರ್ಥಕುಕ್ಷಿಲಿ ಮೆರೆವರಗೋಳ ಗುಹೆಯು ಅಲ್ಲೀ | ರಚಿಸಿದ ಟೀಕೆಗಳಲ್ಲೀ೪
ಮಧ್ವಭಾಷ್ಯಕೇ ರಚಿತ ಟೀಕಾ ಗ್ರಂಥಾ | ನೋಡಿದ ಮುನಿ ಮತ್ತವಿದ್ಯಾರಣ್ಯರ ಗೆದ್ದ ಆರ್ಯ ಧೀರಾ | ಅಕ್ಷೋಭ್ಯರ ಕುವರ ||ಅದ್ವೈತಾದಿಗಳೇಕವಿಂಶ ಪಂಥ | ಗೆಲ್ಲುತ ಸುಧೆ ಗ್ರಂಥಅದ್ವಿತೀಯ ಗುರುಗೋವಿಂದ ವಿಠ್ಠಲಗೇ | ಅರ್ಪಿಸಿದನು ಆಗೇ ೫

ಮುಳಬಾಗಿಲಿನಲ್ಲಿ ನೆಲೆಸಿರುವ
೩೬೦
ಶ್ರೀ ಶ್ರೀಪಾದರಾಜರು
ಕಾಪಾಡು – ಕಾಪಾಡು ಶ್ರೀ ಪಾದರಾಯ ಪ
ಪಾಪೌಘಗಳನಳಿದು ಶ್ರೀಪತಿಯ ತೋರೀ ಅ.ಪ.
ನಾಡಿನೊಳು ಪೆಸರಾದ ಮೂಡಲಾದ್ರಿಗೆ ಪೋಪಮೂಡಬಾಗಿಲ ಕಾಯ್ವ ಪ್ರಾಣನಾಶ್ರಯಿಸೀ |ಮೂಡಬಾಗಿಲ ಪುರದಿ ನರಸಿಂಹ ಕ್ಷೇತ್ರದಲಿ |ಈಡು ಇಲ್ಲದೆ ಮೆರೆವ ಯತಿ _ ಸಾರ್ವಭೌಮಾ ೧
ಹತ್ತಾರು ನಾಲ್ಕಾದ ಶಾಕಪ್ರತಿ ದಿನದಲ್ಲಿಉತ್ತಮೋತ್ತಮಗಿತ್ತು ಉಂಬ ಮಹಿಮಾ |ಕೃತ್ರಿಮ ಸ್ವಭಾವ ನೃಪ ಪರಿಕಿಸಲು ಪೋಗೆ ಹರಿಮತ್ತೊದಗಿಸಿದ ವ್ಯಾಳ್ಯಕ್ಕೆ ಹರಿಕೃಪಾ ಪಾತ್ರ ೨
ವಿಪ್ರ ಬ್ರಹ್ಮತ್ಯವನು ಶಂಖದುದಕದಿ ಕಳೆಯೆಅಪ್ರಬುದ್ಧರು ನಗಲು ಗೆರೇಣ್ಣೆ ವಸನಾ |ಕ್ಷಿಪ್ರ ಶುದ್ದಿಯಗೈದೆ ಪ್ರೋಕ್ಷಿಸುತ ಶಂಖದಲಿಅಪ್ರಮೇಯನ ಕರುಣ ನಿನ್ನೊಳೆಂತುಂಟೋ ೩ |
ಅಹವು ರಾತ್ರಿಗಳಭಿಧ ಆದಿತ್ಯ ಸಂಸ್ಥಿತನುಅಹರ್ನಿಶೀ ನರನಾಡಿ ಸ್ಥಿತನಾಗಿಹಾ |ಬೃಹತಿ ನಾಮಕಗನ್ನ ಋಗ್ರಹಸ್ಯವನರುಪಿಬೃಹತಿ ಸಾಸಿರಗಳಿಪ ಸಂಧಾನವಿತ್ತೂ ೪
ವಾದಿಗಳ ಎದೆಶೂಲ ವಾದ ಗ್ರಂಥದಿ ಪೂರ್ಣಬೋಧ ಶಿಷ್ಯರ ಹಿತವ ಕಾದು ಜಗದೀ |ವೇದ ವೇದ್ಯನು ಗುರು ಗೋವಿಂದ ವಿಠ್ಠಲನಪಾದ ಧೃವ ಧ್ಯಾನದಲಿ ಮೆರೆಯುತಿಹ ಗುರುವೇ ೫

೪೪೪
ಶ್ರೀ ಗೋಪಾಲದಾಸರು
ಕಾಪಾಡು ಕಾಪಾಡು | ಗೋಪಾಲರಾಯಾ ಪ
ತಾಪತ್ರಯಗಳ ಕಳೆದು | ಶ್ರೀ ಪತಿಯ ತೋರಿಅ.ಪ.
ಕಾಮಮದ ಮಾತ್ಸರ್ಯ ಸೀಮೆ ಮೀರುತ ಚರ್ಯಕಾಮಿಸುತ ಮನ್ಮನದ ಸೀಮೆಯೊಳು ನೆಲೆಸೀ |ನೇಮ ನಿಷ್ಠೆಗಳಳಿದು ಭೂಮಗುಣಿ ಸುಸ್ತವನಕಾಮನಕೆ ಪ್ರತಿ ಬಂಧ ಸ್ತೋಮದಂತಿಹುದೊ ೧
ವಿಶ್ವವ್ಯಾಪಕಗೆ ಸಾದೃಶ್ಯ ರೂಪವ ಧರಿಸಿವಿಶ್ವಪಾಲಿಪ ಮಾತರಿಶ್ವನನೆ ಕಂಡೂ |ವಿಶ್ವನಾಮಕ ಹರಿಯ ಭಾಸ್ವದಪರೋಕ್ಷದಲಿಹ್ರಸ್ವಗೈಸಿದೆ ಕರ್ಮ ಕೆಸರ ಕಳೆಯುತಲೀ ೨
ಭಕ್ತಿಸಾಕಾರಿ ಹರಿ | ಭಕ್ತಿ ಗುರು ಭಕ್ತಿಗಳವ್ಯಕ್ತಗೈವುದು ಮನದಿ ತ್ಯಕ್ತದೋಷಾದಿ |ಗುಪ್ತ ಮಹಿಮಾ ಗುರು ಗೋವಿಂದ ವಿಠ್ಠಲನವ್ಯಕ್ತ ಕಾಣುವ ಹದನ ಬಿತ್ತರಿಸೊ ಕರುಣಾ ೩

೪೩
ಕಾಮಕೋಟಿ ಸುಂದರಾ | ತಿರುಪತಿಯಸ್ವಾಮಿ ತೀರ್ಥಮಂದಿರಾ ಪ
ಕಾಮಜನಕ ಭಕ್ತಪ್ರೇಮಿ ಭವಾಟವಿಧೂಮಕೇತು ಹೃತ್ | ಧಾಮದಿ ನೆಲಿಸೋ ಅ.ಪ.
ವೃಷಭಾಚಲಾ | ಸನ್ನಿಲಯನೆವೃಷಭಾ – ಬಲಾ ||ಒಸೆದು ಪರಿಕಿಸುತ || ಅಸುರನ ಸವರುತಅಸಮಗಿರಿಗೆ ನೀ | ಅಸುರನ ಪೆಸರಿತ್ತೆ ೧
ಅಂಜನಾ – ಚಲಾ | ನಿವಾಸನೆ ಪ್ರಭಂಜನಾ – ಬಲಾ ||ಸಂಜೆ ಚರರ ಕುಲ | ಭಂಜನ ಶರದಿಜೆಕಂಜಜಾಕ್ಷಿ ಪ್ರಿಯ | ಅಂಜನಿವರದಾ ೨
ಶೇಷಾ _ ಭೂಧರಾ | ಮನಸಿನ ಬಹುಕ್ಲೇಶಾ _ ಅಪಹರ ||ಶೇಷದೇವ ಮದ | ಲೇಸು ಹರಿಸಿ ಅವನಾಶೆ ಸಲಿಸಿ ಹರಿ | ಶೇಷಾಚಲನಾದೇ ೩
ವೆಂಕಟಾಚಲಾ | ಮಾಧವನಾಸಂಕಟಾಗಳಾ ||ಅಂಕುರಿಸದೆ ನಿ | ಷ್ಪಂಕನೆಂದೆನಿಸಿಕಿಂಕರ ತನಯಳ | ಕಂಕಣ ಕಟ್ಟಿದೆ ೪
ಶ್ರೀವರ – ಭೂವರಾ | ಪೊರೆಯುವೆ ನೀಜೀವರಾ – ಅಂತರಾ ||ಜೀವನಾಮಕನಾಗಿ | ಜೀವ ಭಿನ್ನ ಹರಿಕೈವಲ್ಯದ ಗುರು | ಗೋವಿಂದ ವಿಠಲ ೫

೨೫೧
ಕಾಮಾರಿ ಕಾಮಿಪೆ ಕಾಮನ ಪಿತನಾ | ಕಮನೀಯ ರೂಪನ ಪ
ಉಮೆಯರಸನೆ ಮಮ ವಿಷಯ ಸ್ತೋಮವನೀ ಮಾಣಿಪುದಲೊ ಹೇ ಮಹದೇವ ಅ.ಪ.
ಗೌರೀ ವರ ತವ ಸುಂದರ ಚರಣಾ | ಸ್ಮರಿಸುವೆ ಪ್ರತಿದಿನಾವೈರಾಗ್ಯ ಹರಿಭಕ್ತಿ ಜ್ಞಾನಾ | ಹರಬೇಡುವೆ ನಿನ್ನಾ |ಮಾರಹರನೆ ಮುರವೈರಿಯ ಪ್ರೀಯನೆಶೌರಿಯ ತೋರಿಸೊ ಹೃದ್ವಾರಿಜದಲಿ ೧
ಮೈನಾಕಿ ಹೃತ್ಕುಮುದಕೆ ಚಂದ್ರಾ | ಗುಣಗಣ ಸಾಂದ್ರಾವಾಣ್ಯಾದ್ಯರ ಪೂಜಿಪ ಫಣೀಂದ್ರ | ಗುಣಸಾಮ್ಯವೀಂದ್ರಫಣಿಯ ಕುವರ ನೀ ಫಣಿ ಪದ ಯೋಗ್ಯನೆಫಣಿಯ ಶಯ್ಯನ ಕಾಣಿಸೊ ಬೇಗನೆ ೨
ವೈಕಾರಿಕ ತಾಮಸ ತೈಜಸ ಹರನೇ | ಸುಖಕರ ಶಿವನೇವಾಕು ಲಾಲಿಸು ಗಜ ಚರ್ಮಾಂಬರನೇ | ಶಿಖಿವಾಹನ ಪಿತನೇ |ಶ್ರೀಕರ ಗುರು ಗೋವಿಂದ ವಿಠಲನಸಖ ಸ್ವೀಕ೫ನ್ನನು ಓಕರಿಸದ ೩

೧೭೦
ಕಾಯೇ – ಕಮಲಾಲಯೆ ಶ್ರೀ ಲಕುಮೀ | ಭಕುತ ಸುಪ್ರೇಮಿ ಪ
ಕಾಯಜ ಜನನಿಯೆ | ಮಾಯ ಭವದೊಳೆನ್ನಕಾಯ ಮುಳಗದೂ | ಪಾಯವ ಕಲ್ಪಿಸಿ ಅ.ಪ.
ಪುಟ್ಟೀದೆ ದ್ವಿಜ ಜನ್ಮದಲ್ಲಾನು | ಎಟ್ಟೆ ಮಾನವನುಕೊಟ್ಟು ಪುಣ್ಯಂಗಳಗಳಿಸಾಲೇನು | ಹುಟ್ಟು ದರಿದ್ರನುನಷ್ಟ ಸ್ರ‍ಮತಿ ಇರೆ ಸಾಧನವೇನು | ಮಾರ್ಗವರಿಯೆ ನಾನುಕೃಷ್ಣನ ಸತಿ ಸತ್ಯ ರುಕ್ಮಿಣಿ ಯನ್ನನು | ಶಿಷ್ಟ ಜನರೊಳಿಟ್ಟು ಶ್ರೇಷ್ಠ ಸಾಧನವೀಯೆ ೧
ಯಾತ್ರೆ ತೀರ್ಥಂಗಳ ಮಾಡರಿಯೇ | ಕೈ ಮುಗಿವೆನು ಸಿರಿಯೇಪಾತ್ರಾ ಪಾತ್ರಂಗಳ ನಾನರಿಯೇ | ದಾನೆಂಬುದನರಿಯೇಮಾತ್ರಾ ಸ್ಪರ್ಶಂಗಳ ಗೆಲಲರಿಯೇ | ಮನನಿಲ್ಲದು ಸರಿಯೇ |ಗಾತ್ರಗಳಿಸಿತಿದು ವಿಧಾತೃಜನನಿಯೇ | ಸೂತ್ರಗತನ ಈ | ಗಾತ್ರದಿ ತೋರಿಸಿ ೨
ಸಿಂಧೂ ಜಾತೆಯೆ ಹೇ ಸೀತೇ | ಸದ್ಗುಣ ಗಣವ್ರಾತೇಮಂದರೋದ್ದಾರಿಯ ಸುಪ್ರೀತೆ | ತ್ರಿಭುವನಗಳ ಮಾತೆಮಂದಜಾಸನ ಮುಖಸುರ ವಿನುತೆ | ನಿಂದಿತ ಜನಹಂತ್ರೆಕುಂದುಗಳೊಂದನು ಎಣಿಸದೆ ಪಾಲಿಸೆ | ಇಂದಿರೆ ಗುರು ಗೋವಿಂದ ವಿಠಲನರಸಿ ೩

Leave a Reply

Your email address will not be published. Required fields are marked *