Categories
ರಚನೆಗಳು

ಗುರುಗೋವಿಂದವಿಠಲರು

೪೪೩
ಸಾರಿ ಭಜಿಸಿರೋ | ವಿಜಯ ಗುರುಗಳೆಂಬರಾ ಪ
ಮಾರ ಜನಕನಾ ಚಾರು | ಚರಣ ತೊರ್ಪರಾ ಅ.ಪ.
ಸತ್ರಯಾಗದೀ ಗಂಗೆ | ಕ್ಷೇತ್ರ ತೀರದಿಭ್ರಾತೃವರ್ಗವೂ ಅವರ ತುತಿಸಿ ಕಳುಹಲೂ ೧
ಗಿರಿಜೆ ರಮಣನಾ ಪುರವ | ಸಾರಿ ಬೇಗನೇಮಾರ ಕೇಳಿಯಾ ನೋಡಿ | ಗಿರಿಯ ತ್ಯಜಿಸಿದಾ ೨
ಚತುರವದನನಾ ದಿವ್ಯ | ಸತ್ಯಲೋಕವಾಚತುರ ಸೇರುತಾ ಅವನ | ಸ್ತುತಿಯ ಮಾಡಿದ ೩
ವೇದ ಪಠಿಸುತಾ | ಬಧಿರನಂತಿರೇವದಗಿ ಸಾಗಿದಾ | ನಾರ್ದ ದೂತನೂ೪
ಹರಿಯೆ ಕಾಣುವೆ ಎಂದು | ತ್ವರದಿ ಬಂದನೂಹರಿಯ ಮಾಯವಾ ಜಗದಿ | ಯಾರು ಅರಿವರು ೫
ನಿದ್ರೆ ಬಂದವಾ | ನಂತೆ ಮಲಗಿಹಾಭದ್ರ ಮೂರ್ತಿಯಾ ತಾನು ಕಾಲಿಲೊದ್ದನು ೬
ವೇದಗಮ್ಯನು ಮುನಿಯ | ಪಾದ ಒತ್ತುತಾಮೋದ ಬಡಿಸಿದಾ ತಾನು | ಸಾಧು ಮುನಿಯನು ೭
ಹರಿಯೆ ಪರನೆಲ್ಲಾ | ಹರಿಯ ಸರ್ವಜ್ಞಾಹರಿಗಿನ್ನಿಲ್ಲವೋ | ಸಮರು ಅಧಿಕರವಾ ೮
ಎಂದು ಸ್ಥಾಪಿಸೀ | ತಾನು ಬಂದು ನಿಂತನುಛಂದದಿಂದಲಿ ಯಜ್ಞ | ಸಾಂಗಗೈಸಿದಾ ೯
ಪದಸುಳ್ಹಾದಿಯಾ | ರಚಿಸಿ ಮೋದದಿಂದಲೀವೇದ ಸಾರವಾ | ಜನಕೆ ಬೋಧಿಸೀರುವಾ ೧೦
ಪವನನಯ್ಯನಾ ಗುರು | ಗೋವಿಂದ ವಿಠಲನಾಸ್ತವನ ಮಾಡುತ ತಾನು | ಭವವ ಕಳದನಾ ೧೧

೧೫೫
ಸಿಂಧು ಶಯನ ಬಾರೆಲೋ – ಮಂದರೋದ್ಧಾರೀಇಂದಿರೆಯರಸ ಮುಕುಂದನೇ ಪ
ದ್ರುತ – ಸುಂದರ ಅರವಿಂದ ನಯನ ಗೋ – ವಿಂದ ಎನಭವ ಬಂಧ ಬಿಡಿಸೆಲೊಬಿಂದು ಮಾಧವ ಹೇ ದಯಾಂಬುಧೆ – ವಂದಿಸುವೆ ತ್ವತ್ಪಾದ ದ್ವಂದ್ವಕೇ ಅ.ಪ.
ಹೃದಯ ಮಧ್ಯದಿ ಮಂಟಪಾ – ಬುಧ ಜನ ವಂದ್ಯಸಿದ್ಧವಾಗಿಹುವು – ಮಾಧವಾ |ಸಿದ್ಧ ಸಾಧನ ಪವನ – ಉದಾನಾದಿಗಳೆಲ್ಲಹೆದ್ವಾರಗಳ ಕಾದಿಹರೋ ||ಮಧು ವಿರೋಧಿಯೆ ನಿನ್ನ ಪದ – ಸದ್ವನಜ ಕೀರುತಿ ಸುಧೆಯ ಸವಿಯುವಮುದವ ಕರುಣಿಸು ಶ್ರೀದ ನರಹರಿ – ಹೃದಯ ಸದನಕೆ ವದಗಿ ಬೇಗ ೧
ಚಿತ್ತ ಸಿಂಹಾಸನವೂ – ಚಿತ್ತ ಜನಯ್ಯಾಸ್ತೋತ್ರ ರತುನ ಖಚಿತವೂ ||ಉತ್ತಮ ಮತಿ ಸುದತೇರೂ – ಛತ್ರಿ ಚಾಮರಗಳಎತ್ತಿ ಬೀಸುತಲಿಹರೋ ||ಕೃತ್ತಿವಾಸನ ಸಖನೆ ಪರಮ ಸು – ಹೃತ್ತಮೋತ್ತಮ ಚಿತ್ಸುಖ ಪ್ರದಚಿತ್ತವಿಸು ಚಿತ್ತಾಖ್ಯ ಪೀಠಕೆ – ಸತ್ಯಕಾಮ ಶರಣ್ಯ ಶಾಶ್ವತ ೨
ಕಾಯಾ ವಾಚಾ ಮನಸಾ – ಮಾಡಿದ ಸರ್ವಕಾರ್ಯವೆಲ್ಲವು ನಿನ್ನಯಾ |ಪ್ರೀಯ ಸೇವೆಯು ಎಂಬ ಭಾವನ ಕೊಟ್ಟುಕಾಯೊ ಶ್ರೀಧರ ಶ್ರೀವರಾ ||ಕಾಯ ಭವ ಪಿತ ತೋಯ ಜಾಕ್ಷನೆ -ದಾಯ ನಿನ್ನದು ಎನ್ನ ಗತಿಗೇ ಪ್ರೇರ್ಯ ಪ್ರೇರಕ ಶ್ರೀಗುರು – ಗೋವಿಂದ ವಿಠಲನೆ ಕಾಯೊ ಬೇಗ ೩

೧೫೬
ಸಿತಗಿರೀಶ ಶ್ರೀಪತಿಯೆ ಕಾಯೋ ಯನ್ನಾ | ಕರುಣಾರಸ ಪೂರ್ಣ ಪ
ಶೃತ ವಸಿಷ್ಠ ಮುನಿಗ್ಹಿತದಿ ಒಲಿದ ರಂಗಾ | ಆಶ್ರಿತ ಭವ ಭಂಗಾ ಅ.ಪ.
ಬಂದೆ ಬಳಲಿ ಬಹು ಜನ್ಮ ಧರಿಸಿ ಇಂದೂ | ಮನುಜನಾಗಿ ನಿಂದೂ |ಸಂದವು ಆಯುಷ ಷಟ್ದಶೇಕ ವರುಷಾ | ಕಾಣಲಿಲ್ಲ ಹರುಷಾ ||ಇಂದಿರೇಶ ತವ ಚರಣ ಸನ್ನಿಕರ್ಷಾ | ಎಂದಾಗುದೊ ಶ್ರೀಶಾ ||ವಂದಿಸೂವೆನೊ ನಾನು ನಿನ್ನ ಅನಿಶಾ | ಶ್ವೇತಾದ್ರಿ ವಾಸಾ ೧
ಪನ್ನಗಾರಿ ವಹನ್ನ ನಿನಗೆ ಶರಣೂ | ಆಶ್ರಿತ ಸುರಧೇನೂ ||ಎನ್ನ ಮನದ ಅಭಿಲಾಷೆ ಸಲ್ಲಿಸಯ್ಯಾ | ತ್ರೈಲೋಕಗಳೊಡೆಯಾ ||ಘನ್ನ ಮಹಿಮನೆ ಸರ್ವಾಂತರ್ಯಾಮೀ | ಮದಂತರ್ಯಾಮೀ |ನಿನ್ನ ಪದ ಕಮಲ ಕಾಂಬುವಂಥ ಹದನಾ | ತೋರಿಸೊ ಜಿತ ಮದನಾ ೨
ಸುರುಚಿರಾಂಗ ಶ್ರೀ ಬಿಳಿಗಿರಿಯ ರಂಗಾ | ಎನ್ನಂತರಂಗಾ ||ಮುರ ವಿರೋಧಿ ಸುರ ಸಾರ್ವಭೌಮ ಹರಿಯೇ | ಕರಿರಾಜನು ಕರಿಯೇ ||ತ್ವರದೊಳುದಿಸ್ಯವನ ಕಾಯ್ದ ದೊರೆಯೇ | ಹೀಗೆನ್ನ ಪೊರೆಯೆ ||ಗುರು ಗೋವಿಂದ ವಿಠಲ ಶ್ರೀಹರಿಯೇ | ನಿನ್ನುಪಕೃತಿ ತಾ ಮರೆಯೆ ೩

೭೨೮
ಸಿರಿಕೃಷ್ಣ ವಿಠಲನೆ | ಪೊರೆಯ ಬೇಕಿವಳಾ ಪ
ಮರುತಾಂತರಾತ್ಮಕನೆ | ಶರಣ ಸುರಧೇನೂ ಅ.ಪ.
ಹರಿಗುರೂ ಸತ್ಕರುಣ | ವರಪಾತ್ರಳೆಂದೆನಿಸಿಪರಿಪಾಲಿಸಿವಳ ಭವ | ಕರಿಗೆ ಕೇಸರಿಯೇ |ಮರುತ ಮತ ತತ್ವಗಳ | ಅರಿವು ಕೊಡುತಲಿ ಇವಳಕರುಣನೋಟದಿ ನೋಡೊ | ಸರ್ವದೇವೇಡ್ಯಾ ೧
ಕಂಸಾರಿ ತವದಾಸ್ಯ | ಶಂಸನಾರ್ಹತೆಯರಿತುಸಂಶಯವುರಹಿತೆಪದ | ಪಾಂಸು ಬಯಸುವಳೋ |ಹಂಸವಹ ವಂದ್ಯ ವೀ | ಪಾಂಸಗನೆ ಸಿರಿಲೋಲವಂಶವೃದ್ಧಭಿಲಾಷೆ | ಹಂಸಪೂರೈಸೋ ೨
ಕಾಕುಸಂಗವೆ ತೊರೆದು | ಏಕಾದಶೇಂದ್ರಿಯದಿಏಕಮೇವನ ಭಜಿಸಿ | ನೂಕಿ ಸಂತಾಪಾ |ಶ್ರೀಕರನೆ ನಿನ್ನಯ ಅ | ಲೌಕಿಕಸು ಮಹಿಮೆಗಳವಾಕು ಸ್ಫುರಿಸುತ ಇವಳ | ನೀ ಕಾಯ ಬೇಕೋ ೩
ಪವನ ವಂದಿತ ದೇವಾ | ಭವವನಧಿ ನವಪೋತತವನಾಮ ಸಂಸ್ರ‍ಕತಿಯ | ಪವನ ಮೂರರಲೀ |ಅವಶದಲಿ ಕೀರ್ತಿಸುವ | ದಿವ್ಯಭಕ್ತಿಯ ಜ್ಞಾನಹವಣಿಸುತ ಶ್ರೀಹರಿಯೆ | ತಾವಕಳ ಪೊರೆಯೇ ೪
ಕಟುವು ಸವಿಗಳನುಂಬ | ದಿಟತವಿದಿ ಮೆರೆಸಿವಳಪಟುತರಾಂಗನೆ ದೇವ | ಕುಟಿಲಾತಿ ದೂರಾ |ನಿಟಿಲಾಕ್ಷಸಖನೆ ಕರ | ಪುಟವ ಜೋಡಿಸಿ ಬೇಡ್ವೆಧಿಟಗುರೂ ಗೋವಿಂದ | ವಿಠಲ ಪೊರೆ ಇವಳಾ ೫

೭೨೯
ಸಿರಿಜಾನಕೀಪತಿ ವಿಠಲ ನೀನಿವನ ಕಾಯೋಗರುಡ ಶೇಷಾದಿ ಮನೋ ಮಾನಿ ಪ್ರೇರಕನೆ ಹರಿಯೇ ಪ
ಮಂದ ಜನರುದ್ಧಾರಿ | ತಂದೆ ಮುದ್ದು ಮೋಹನ್ನನಂದನರ ದ್ವಾರದಿಂ | ಪೊಂದಿ ಅಂಕಿತವಾ |ಅಂದ ಸತ್ಸಾಧನವ | ಮುಂದುವರಿಪಲಿಕಾಂಕ್ಷೆಯಿಂದ ಸತ್ಕಾರ್ಯ ಪ್ರತಿ | ಬಂಧ ಪರಿಹರಿಸೋ ೧
ಮನಸಿನ ಮೈಲಿಗೆಯ ಅನುನಯದಿ ಪರಿಹರಿಸಿಗುಣರೂಪ ಕಾರ್ಯತವ | ದಿನಪ್ರತಿದಿನ ಚಿಂತಿಪ |ಮನವನಿತ್ತಾದರಿಸೊ | ಗುಣ ನಿಧಿಯೆ ಪ್ರಾರ್ಥಿಸುವೆಅನಘ ನಿನ್ನಯ ಪಾದ | ವನಜ ಆಶ್ರಿತಗೇ ೨
ಭಾವಜಾರಿಯ ಮಿತ್ರ | ಭಾವುಕರ ಪರಿಪಾಲಗೋವಿದಾಂ ಪತಿಯೆ ಗುರು | ಗೋವಿಂದ ವಿಠಲಾ |ಪಾವಮಾನಿಯ ಪ್ರೀಯ | ನೀವೊಲಿದು ಭಕ್ತನ್ನತೀವರುದ್ಧರಿಸೆಂದು | ದೇವ ಭಿನ್ನವಿಪೇ೩

೭೩೦
ಸೀತಾಪತಿ ಹರಿ ವಿಠಲಾ | ಪ್ರೀತ ನಾಗೊ ಇವಗೇ ಪ
ಮಾತಿಗೆ ಗತಿ ಪ್ರದ | ಖ್ಯಾತಿ ಉಳ್ಳವನೇ ಅ.ಪ.
ಉಚ್ಛ ಸಂಸ್ರ‍ಕತಿ ಪೊತ್ತು | ಮೆಚ್ಚಿ ಹರಿಪಾದ ದಾಸ್ಯದೀಕ್ಷೆ ಕಾಂಕ್ಷಿಸುತಿಹನು | ಅಚ್ಯುತಾನಂತಾಕುಚ್ಛಿತನು ಇವನಲ್ಲ | ಅಚ್ಚ ಭಕುತನು ಇವಗೆಮೆಚ್ಚಿ ತವದಾಸ್ಯ ಕೊಡು | ಸಚ್ಚಿದಾನಂದಾ ೧
ಸಾಧನ ಸುಜೀವಿ ಇವ | ಉದುಭವಿಸಿ ಬಂದಿಹನುಮೋದ ತೀರ್ಥರ ಮತದಿ | ಹೇ ದಯಾಕರನೇಬೋಧಾನುಸಾರಿ ಸಿರಿ | ತೈಜಸಾಭಿಧನಿಂದಬೋದಿಸಿಹೆ ಅಂಕಿತವ | ಶ್ರೀದ ಶ್ರೀ ರಾಮ ೨
ಮಧ್ವಮತ ಪದ್ದತಿಯ | ವೃದ್ಧಿಗೈಸಿವನಲ್ಲಿಬುದ್ಧಿ ಚತುರತೆ ಇತ್ತು | ಉದ್ದರಿಸೊ ಇವನಾಕೃದ್ಧ ಖಳ ಜನರಿವನ | ಸ್ಪರ್ಧಿಸದ ತೆರಮಾಡೊಮಧ್ವಾಂತರಾತ್ಮಕನೆ | ಅದ್ವಯನೆ ದೇವಾ ೩
ಬಿಂಬೈಕ್ಯ ಚಿಂತನೆಯ | ಹಂಬಲವನೇ ಹಚ್ಚಿತುಂಬಿಸೋ ಸಾಧನವ | ಅಂಬುಜಾಂಬುಕನೇಉಂಬುಡುವ ಕ್ರಿಯೆಗಳನು | ಬಿಂಬ ಮಾಡಿಸೆ ಪ್ರತಿಬಿಂಬ ಮಾಳ್ಪನು ಎಂಬ | ನಂಬುಗೆಯ ನೀಯೋ ೪
ಶ್ರೀವರನೆ ತವನಾಮ | ಸರ್ವದಾಸ್ಮರಿಪಂಥಭಾವವೀಯುತ ಹೃದಯ | ಗಹ್ವರದಿ ತೋರೀತಾವಕಗೆ ಭವವನಧಿ | ದಾಂಟಿಸಲು ಪ್ರಾರ್ಥಿಸುವೆಪಾವು ಮದ ಹರ್ತ ಗುರು | ಗೋವಿಂದ ವಿಠಲಾ ೫

೭೩೧
ಸೀತಾಮನೋಹರ ವಿಠಲಾ | ಕಾಪಾಡೊ ಇವಳಾ ಪ
ಮಾತುಮಾತಿಗೆ ನಿನ್ನ | ಸ್ಮರಣೆ ಸುಖ ಕೊಟ್ಟು ಅ.ಪ.
ಮಂಗಳಾಂಗನೇ ಹರಿಯೇ | ಶೃಂಗಾರ ಮೂರುತಿಯೇಭಂಗಗೈ ಅಜ್ಞಾನ | ಸತ್ಸಂಗವನೆ ಕೊಟ್ಟುಸ್ವಾಂಗಾಯ ನಾಮ | ನೀಲಾಂಗ ಶ್ರೀ ಹರಿಯೆಕಂಗಳಿಂದಲಿ ಕಾಂಬ | ಹವಣೆಯನು ತಿಳಿಸೋ ೧
ತರತಮಾತ್ಮಕ ಜ್ಞಾನ | ಹರಿಗುರು ಸದ್ಭಕ್ತಿಮರುತ ಮತ ದೀಕ್ಷೆಯನು | ಕರುಣಿಸೋ ಹರಿಯೇದುರಿತಾಳಿ ದುಷ್ಕರ್ಮ | ಪರಿಹರಿಸಲೀವಳಿಗೆಪರಮ ಆನಂದವನೆ | ಕರುಣಿಸೊ ಹರಿಯೇ ೨
ಪೇಳ್ವುದೆನಿಹುದೆನಗೆ | ಸರ್ವಜ್ಞ ನೀನಿರುವೆಭವದಿಂದ ಕಡೆಗಿತ್ತು | ಪವನಂತರಾತ್ಮಈ ವಿಧದಭಿನಿಪವ | ನೀವೊಲಿದು ಸಲಿಸೆಂದುದೇವ ಪ್ರಾರ್ಥಿಪೆ ಗುರು | ಗೋವಿಂದ ವಿಠಲಾ ೩

೧೮೦
ಸೀತೆ ಸದ್ಗುಣ ಗಣಗಳ ವ್ರಾತೇ ಪರಿಪಾಲಿಸು ಮಾತೇ ಪ
ವಾತ ಜನನಿ ನಿರ್ಧೂತ ಕಲ್ಮಷೇ ಅ.ಪ.
ನೀರೋಳು ಓಲ್ಯಾಡುತ ಹರಿ ಬರಲೂ | ವೇದಾಭಿಧೆ ಇರಲೂವಾರಿಜಾಕ್ಷನು ಭಾರವನ್ಹೊರಲೂ | ವೇದವತಿ ನೀನಿರಲುಭೂರಿ ವರಹ ರೂಪವ ಕೊಳ್ಳಲು | ಧಾತ್ರಿ ರೂಪಿ ಇರಲುಸಾರಸಾಕ್ಷಿ ನೀ ಲಕುಮಿ ರೂಪದಲಿ | ನಾರಸಿಂಹನನ ಆರಾಧಿಸಿದೇ ೧
ಬಲಿಯನ್ನು ವಂಚಿಸಿ ಹರಿ ಬಂದೂ | ಸುಖಾಭಿಧೆಯಂದೂತಲೆಯ ಗಡಿಕಾನು ಅವನೆಂದು | ಹರಿಣಿಯಾದೆ ಅಂದೂತಲೆ ಹತ್ತರವನ ಅಳಿಯಲು ಬಂದು | ಜನಕಾತ್ಮಜೆ ಅಂದೂಕಳುವಿನಿಂದಪಾಲ್ ಬೆಣ್ಣೆಯಮೆಲ್ಲುವ |ಗೊಲ್ಲನ ವಲಿಸಿದಿ ಚೆಲ್ವ ರುಕ್ಮಣೀ ೨
ತ್ರಿಪುರರ ವ್ರತವನಳಿದವಗೇ | ವಲ್ಲಭೆ ದೇವತಿಯಾಗೇಸುಫಲಾ ರಾವುತನಾದವನಿಗೇ | ರಾಣಿ ಪ್ರಭಾ ಆಗೇವಿಪುಳ ರೂಪಗಳ ತೋರ್ದವಗೇ | ವಿಪುಳ ರೂಪಿಯಾಗೇಚಪಲಾಕ್ಷಿಯೆ ಗುರು ಗೋವಿಂದ ವಿಠಲನ | ಸಫಲಗೈಸು ಮಮ ಹೃತ್ಕಮಲದಲಿ ೩

೭೩೩
ಸುಂದರಾಂಗ ವಿಠಲ | ತಂದೆ ಪೊರೆ ಇವಳಾ ಪ
ಕಂದರ್ಪನಯ್ಯ ಭವ | ಸಿಂಧು ಉತ್ತರಿಸೀ ಅ.ಪ.
ಕಾರುಣ್ಯ ನಿಧಿಯೆ ಭವ | ವಾರಿಧಿಗೆ ನವ ಪೋತಚಾರುತವನಾಮ ಸ್ರ‍ಮತಿ | ಆರೈಸುವಂತೇಮೂರೆರೆಡು ಭೇದಗಳು | ತಾರತಮ್ಯದ ಬಗೆಯತೋರಿಪೊರೆ ಕನ್ಯೆಯನು | ಮಾ ರಮಣ ದೇವಾ ೧
ಆವ ಸ್ವಪ್ನದಿ ವೃದ್ಧ | ಭಾವದ್ಯತಿಗಳ ಕಂಡುಭಾವಿ ಮರುತರು ಎಂಬ ಭಾವದಲಿ ನಮಿಸೀಭಾವ ಭಕುತಿಲಿ ಭೀತಿ | ಭಾವವನೆ ತೋರುತ್ತತೀವರದಿ ಸಂಸ್ತಬ್ಧ | ಭಾವದಿರುತಿಹಳಾ ೨
ಪತಿತ ಪಾವನ ರಂಗ | ಕೃತ ಪೂರ್ವ ಪುಣ್ಯದಿಂಮತಿಮಾಡಿ ಹರಿದಾಸ್ಯ | ಹಿತದಿಕಾಂಕ್ಷಿಪಳೋ |ಪತಿಸೇವೆ ದೊರಕಿಸುತ | ಕೃತಕಾರ್ಯಳೆಂದೆನಿಸೊಕ್ಷಿತಿಯೊಳಿವಳನು ಮೆರೆಸೊ | ಪ್ರತಿರಹಿತ ದೇವಾ ೩
ಕರ್ಮಪ್ರಾಚೀನಗಳ | ನಿರ್ಮಲಿನ ಮಾಡುತ್ತಧರ್ಮ ಸಾಧನ ಮಾರ್ಗ | ಪೇರ್ಮೆಯಿಂಕೆಡಿಸೋ |ಭರ್ಮಗರ್ಭನನಯ್ಯ | ಹಮ್ಮು ಕಳೆದಿವಳ ತವಸೊಮ್ಮು ನಾಮಾಮೃತದ | ಉಮ್ಮು ನೀ ಕೊಡಿಸೋ ೪
ಗಾಮಲ್ಲಗಣಿಗೊಲಿದು | ಧೀವರಗೆ ದೂರಸ್ಥಆವಸಂಗದ ವಿವರ | ಕಾಣ್ವ ಬಲವಿತ್ತಾಮಾವಾರಿಯಾದ ಗುರು | ಗೋವಿಂದ ವಿಠ್ಠಲನೆನೀವೊಲಿಯ ದಿನ್ನಾರ | ಕಾವರನಕಾಣೇ ೫

೨೧೦
ಸುಂದರೇಶ ಸಲಹೊ ಕರಿಗಿರಿವಾಸ | ಸುಜನರ ಪರಿ ಪೋಷ ಪ
ಇಂದಿರೆಯರಸನ ದ್ವಂದ್ವ ಪಾದದಲಿಅಂದ ಭಕುತಿಯಿತ್ತು ಛಂದದಿ ಸಲಹೋ ಅ.ಪ.
ಆರೂ ಕಾಯುವರಿಲ್ಲವೊ ದೊರೆಯೇ | ನಾ ನಿಗೊಂದ್ಹೊರೆಯೇಮೂರು ಜಗಗಳ ಪೊತ್ತಿಹೆ ಧೊರೆಯೇ | ನಿನಗಾರೆಣೆಯೇ ||ಅಪಾರ ಗುಣಗಳಿಂದ | ಸಾರಿ ಭಜಿಸುವಂತೆ ೧
ತಂದೇ ಮುದ್ದು ಮೋಹನರಿಂದ | ಆರಾಧನೆ ಛಂದದಿಂದ ಕೈಗೊಳ್ಳುತ ಆನಂದ | ತೀರ್ಥರೆ ನಲವಿಂದ ||ಬಂದ ಸುಭಕುತರ | ವೃಂದಕೆ ಪರಮಾನಂದವ ಕೊಡುತಲಿ | ಛಂದದಿ ಮೆರೆವ ೨
ಪರ್ವತವ ನೆಗಹಿ ತುರು ಕರು ಪೊರೆದ | ಸುರರೊಡೆಯನ ಗರ್ವಪರಿಹರಿಸೀ ವ್ರಜ ಜಂಗುಳಿ ಕಳೆದ | ಸರ್ವೋತ್ತಮನಾದ ||ಗುರು ಗೋವಿಂದ ವಿಠಲನ | ಚರಣ ಸರೋಜದಿಉರುತರ ಭಕುತಿಯ | ಕರುಣಿಸಿ ಕಾಯೋ ೩

೭೩೨
ಸುಖ ಪೂರ್ಣ ವಿಠಲನೆ | ಸಲಹ ಬೇಕಿವಳಾ ಪ
ವಿಖನ ಸಾಂಡವ ಬಾಹ್ಯ | ಒಳಗೆಲ್ಲಾ ವ್ಯಾಪ್ತ ಅ.ಪ.
ನಾರಿಮಣಿ ಪತಿಸೇವೆ | ಸಾರತರದಲಿಗೈದುಭೂರಿಭಕ್ತಿಯಲಿಂದ | ಸಂತಾನಕಾಗೀಶ್ರೀ ರಮಣ ತವಪಾದ | ದಾರಾಧನೆಯಗೈದುಭೋರಿಟ್ಟು ಪ್ರಾರ್ಥಿಪಳು ಕಾರುಣ್ಯ ಮೂರ್ತೇ ೧
ಭಕುತರ್ಗಭೀಷ್ಟಗಳ | ನೀ ಕೊಡುವಿ ಎಂತೆಂಬಉಕುತಿಯನೆ ನಾ ಕೇಳಿ | ಅರಿಕೆಯನೆ ಮಾಳ್ವೇಈಕೆಯ ಮನೋರಥವ | ನೀ ಕೊಟ್ಟು ಸಾಧನವವೈಖರಿಯಲಿಂದೆಸಗೊ | ರುಕುಮಿಣೀ ಪತಿಯೇ ೨
ಉಚ್ಛನೀಚಾದಿಗಳು | ಸ್ವಚ್ಛ ತಿಳಿಸಿವಳೀಗೆಅಚ್ಛ ಕನ್ನಿಕೆ ರಮಣ | ಅಚ್ಯುತಾನಂತಾಮುಚ್ಚು ಕಾಣಿಕೆಗೊಂಡು | ಇಚ್ಛೆ ಪೂರೈಸುವುದುಸಚ್ಚದಾನಂದಾತ್ಮ | ಚಿತ್ಸುಖಪ್ರದನೇ೩
ಹರಿಗುರು ಸದ್ಭಕ್ತಿ | ದುರ್ವಿಷಯ ವೀರಕ್ತಿಹರಿಯ ವಿಷಯಕ ಜ್ಞಾನ | ಕರೋಣಿಸೋ ದೇವಾನಿರುತನಾಮ ಸ್ಮರಣೆ | ಇರಲಿವಳ ಮುಖದಲ್ಲಿಮರುತಾಂತರಾತ್ಮಕನೆ | ಶಿರಿ ರಮಣ ಹರಿಯೇ ೪
ಶ್ರೀವತ್ಸಲಾಂಚನನೇ | ಭಾವುಕರ ಪರಿಪಾಲಗೋವತ್ಸದನಿ ನಾವು | ತೀವ್ರ ಬರುವಂತೇಶ್ರೀವರ ಶ್ರೀಗುರೂ | ಗೋವಿಂದ ವಿಠಲನೆನೀವೊಲಿಯ ಬೇಕೆಂದು ಬೇಡ್ವೆ ಗೋಪಾಲ ೫

೭೩೪
ಸುಧಾಮ ಪ್ರಿಯ ವಿಠಲ | ಬದಿಗ ಪೊರೆ ಇವಳಾ ಪ
ವಿಧಿ ಭವಾದ್ಯರ ಜನಕ | ಮುದ ಪ್ರದನೆ ದೇವಾ ಅ.ಪ.
ಹೀನ ಸಂಸ್ರ‍ಕತಿ ದೋಷ | ನೀನಾಗಿ ಕಳೆ ಇವಳದಾನವಾಂತಕ ಕೃಷ್ಣ | ಧೀನ ಜನ ಬಂಧೋ |ಹೀನಾಯ ಕಳೆದು ಮುನಿ | ಮಾನಿನಿಯ ಸಲಹಿದೆಯೋ ಜ್ಞಾನಿಜನ ನಿನ್ನ ಕಾ | ರುಣ್ಯ ಸ್ಮರಿಸುವರೋ ೧
ಜ್ಞಾನ ಸದ್ದಾರ್ಜನೆಗೆ | ಮೌನಿ ಪ್ರಹ್ಲಾದಾಂಶಸಾನು ಕೂಲಿಪರೆಂದು | ಸ್ವಪ್ನ ಸೂಚಿಸುತಾ |ಮಾನಿನಿಗೆ ವಿಠಲಾಭಿ | ಧಾನ ಪತ್ರವ ತೋರಿಜ್ಞಾನದಂಕುರಕೆ ಪಥ | ನೀನೆ ತೋರಿರುವೆ ೨
ಸಾಧುಜನ ಸಂಗವನು | ನೀದಯದಿ ಕೊಟ್ಟಿವಳಆದಿ ವಿರಹಿತ ಭವದ | ಬಾಧೆ ಪರಿಹರಿಸೋಮೋದ ತೀರ್ಥರ ಮತದಿ | ಉದಿಸಿಹಸುಕಾರಣದಿಭೇದ ಪಂಚಕ ತಿಳಿಸಿ | ಸಾಧನವಗೈಸೋ೩
ಪತಿಸೇವೆ ಶತಳೆನಿಸೊ | ಹಿತವಹಿತಸಮವೆನಿಸೊಮತಿ ಮತಾಂವರರಂಘ್ರಿ | ನುತಿಪ ಮನವಿತ್ತೂ |ಸತತ ತವ ನಾಮ ಸಂ | ಸ್ರ‍ಮತಿಯನೇ ಕರುಣಿಸುತಕೃತ ಕೃತ್ಯಳೆಂದೆನಿಸೊ | ಕೃತಿ ರಮಣ ದೇವಾ ೪
ಆರ್ತಳಾಗಿಹ ಸ | ತ್ಪಾರ್ಥನೆಯ ಕೈಕೊಂಡುಪೂರ್ತಿಗೈ ಆಭೀಷ್ಟ | ಪಾರ್ಥಸಖ ದೇವಾ |ಗೋಪ್ತ ಗುರು ಗೋವಿಂದ | ವಿಠಲ ಮದ್ಬಿನ್ನಪನಸಾರ್ಥಕವ ಮಾಡೆಂದು | ಪ್ರಾರ್ಥಿಸುವೆ ಹರಿಯೇ ೫

೭೩೫
ಸುಮನಪ್ರಿಯ ಗೋಪ ವಿಠಲ | ಕಾಪಾಡೊ ಇವಳಾ ಪ
ವಿಮಲ ಗೋಪಿ ವೃಂದ | ಆಲ್ಲಾದಕರನೇ ಅ.ಪ.
ಅಕುಟಿಲಾತ್ಮಕನೆ ಹರಿ | ತೈಜಸೀ ರೂಪದಲಿಸಖನಂತೆ ಪ್ರಿಯನಂತೆ | ಮೋಹವನೆ ಗೊಳಿಸೀಪ್ರಕರಣವ ರಚಿಸುತ್ತ | ವ್ಯಾಕುಲಂಗಳ ಕಳೆದೆರುಕುಮಣಿ ಪತಿ ಹರಿಯ | ವ್ಯಕುತ ಲೀಲಾತ್ಮ ೧
ನೀಕೂಗಿದಂಕಿತವ | ನಾಕೊಟ್ಟು ಹರಿಸಿಹೆನೊಶ್ರೀಕಾಂತ ಪತಿಕರಿಸಿ | ಕಾಪಾಡೊ ಇವಳಾಬೇಕಾದಭಿಷ್ಟಗಳ | ಸಾಕೆನಿಸಿ ನೀಡುವುದುಕಾಕುಮತಿಗಳ ಕಳೆಯೊ | ಶ್ರೀ ಕರಾರ್ಚಿತನೇ ೨
ಮಧ್ವಮತದೊಳು ರತಿಯ | ವೃದ್ಧಿಗೈಸಿವಳಲ್ಲಿಪ್ರಧ್ವಂಸ ಗೈಯುವುದೊ | ಅವಿದ್ಯೆಗಳ ನಿವಹಾಕೃದ್ಧಬಳ ಸಂಹಾರಿ | ಶ್ರದ್ಧೆ ಪತಿ ಸುಪ್ರೀಯಶ್ರದ್ಧೆ ಭಕುತಿಯನಿತ್ತು | ಉದ್ಧರಿಸೊ ಇವಳಾ ೩
ಕಲಿಯುಗದಿ ಹರಿನಾಮ | ಒಲಿಸೆ ಭಕುತೀಯಿಂದಕಳೆವುದು ಭವರೋಗ | ವೆಂಬ ಸನ್ಮತಿಯೂನಿಲುಕಲೀಕೆಯ ಮನಕೆ | ಅಕಳಂಕ ಸುಚರಿತ್ರವಿಖನ ಸಾಂಡದ ಪತಿಯೆ | ಗೋಕುಲ ಸುದೀಪ್ತಾ ೪
ಭೂ ವಿಬುಧ ಸದ್ವಂದ್ಯ | ಭಾವಜ್ಞ ನೀನಿರುವೆಒವಿನಾ ಪೇಳಲ್ಕೆ | ಆವನೊ ನಾನುನೀವೊಲಿದು ಇವಳಿಗೆ | ಕೈಪಿಡಿದು ಸಲಹುವುದುದೇವ ಬಿನ್ನವಿಸೆ | ಗುರು ಗೋವಿಂದ ವಿಠಲಾ ೫

೨೩೭
ಸೂತ್ರಾತ್ಮ ಜಾತ ನಮೋ | ಸಿರಿಹರಿಪೌತ್ರ ಕೃಪೆಯ ಪಾತ್ರ ನಮೋ ಪ
ಸ್ಮರ್ತವ್ಯ ಹರಿ ಪಾದ | ಕೀರ್ತನೆಗಾಗಿ ವೇದಶಾಸ್ತ್ರಕಭಿಮಾನಿ | ಸ್ತೋತ್ರಕ್ಕೆ ಪಾತ್ರನಾದೆ ಅ.ಪ.
ಸರ್ಪಾರಿ ಸ್ವರೂಪನೆ | ಭಕ್ತರುಅರ್ಪೀಪ ಸದ್ಭಾವನೆ ||ಕಪ್ಪಾವ ಕೊಂಡು ಭವ | ಸರ್ಪಾರಿ ಎನಿಸುತ್ತಸರ್ಪಾಶಯ್ಯನು ಕೃಷ್ಣಂಗರ್ಪಿಸಿ ಮುದಭೀರ್ವೆ ೧
ವಿಕಾರ ರಹಿತಾತ್ಮಕಾ | ತಿಮಿರಾದ್ರಿಪ್ರಖರಾ ಸಮ ರೂಪಕಓಂಕಾರ ವಾಚ್ಯ ಪಾದ ಸ್ವೀಕೃತ ಹಸ್ತದ್ವಯಏಕಮೇವನ ವಾಹ | ನೀ ಕಾಯೊ ವಿಹಂಗಮ ೨
ಶ್ರೀವರ ಶಯ್ಯ ಸಮರೂಪಕ | ಸಿರಿ ಗುರುಗೋವಿಂದ ವಿಠಲಾರ್ಚಕ |ಭಾವಿ ಬ್ರಹ್ಮನ ಸುತ | ದೇವರಾಜ ನುತಸಾವಧಾನದಿ ಕಾಯೊ | ಮಾವಾರಿ ಸುಪ್ರೀತ ೩

೩೮೫
ಸೋದೆ ರಾಜರ ಭಜಿಸೋ | ಮಾನವ ನೀನುವಾದಿರಾಜರ ಪೂಜಿಸೋ ಪ
ಮೋದ ತೀರ್ಥರ ಮ | ತೋದ್ಧಾರ ಮಾಡಿದ ಧೀರಸಾಧು ಹೃದ್ವನ ಚಾಪ್ತ | ಬುಧ ಜನವಂದ್ಯರ ಅ.ಪ.
ಶಾರ್ವರಿ ವತ್ಸರದೀ | ಜನಿಸಿ ಗೌರಿಗರ್ಭ ಸುಧಾಂಬುಧಿಲೀ ||ಪುರಬಾಹ್ಯ ಪುಟ್ಟಿದ | ಕಾರಣದಿಂದಲಿವರಯತಿ ವಾಗೀಶ | ಕರಜನೆನಿಸಿ ಮೆರೆದ ೧
ವೇದಾದಿ ಶಾಸ್ತ್ರಗಳಾ | ಓದಲು ಹಂಪೆಸಾಧು ವ್ಯಾಸರ ಬಳಿಗೇ ||ಮೋದದಿ ಬಂದು ಮಧ್ವಾಗಮ ಪಠಿಸುತ್ತವೇದ ವಿನುತ ಸಿರಿ ಹರಿಯ ಪೂಜಿಸಿದ ೨
ವಾಲಿ ಭಂಡಾರವನೂ | ಶೋಧಿಸೆ ಅಲ್ಲಿಶೀಲ ಇನಜಾರ್ಚಿಸಿದ ||ಲೀಲ ವಿಗ್ರಹ ರಾಮ | ವಿಠಲ ಮೂರ್ತಿಗಳನ್ನಕೋಲಾಹಲದಿ ತಂದು | ಭಾಳ ಪೂಜಿಸಿದ ೩
ವ್ಯಾಸರಾಜಾರ್ಚಿತನಾ | ದೇವನವೇದವ್ಯಾಸರಿಂದಲಿ ಗಳಿಸಿದಾ |ವ್ಯಾಸಮುಷ್ಠಿಕೆಯ ವಿ | ಶ್ವಾಸದಿಂದಲಿ ಪೊಂದಿಶ್ರೀಶ ಉಡುಪಿನ ಕೃಷ್ಣ | ವಾಸ ಸ್ಥಾನಕೆ ಬಂದ ೪
ಕವಿಕುಲ ಸಭೆಯೊಳಗೇ | ಪೂಣೆಯ ಪುರದಿನವರಸಲಂಕಾರದೀ ||ಕವನ ರಚಿಸಿ ರುಕ್ಮಿ | ಣೀಶ ವಿಜಯ ಗ್ರಂಥಕವಿ ಕುಲೋತ್ತಂಸ | ತಾನೆನಿಸುತ್ತ ಮೆರೆದಂಥ ೫
ಪಂಢರಿ ಪುರ ಮಾರ್ಗವ | ಸವೆಸುತ ಬರೆಪುಂಡು ಸೈನಿಕರ್ ಬರಲೂ ||ಪುಂಡಲೀಕಗೆ ವರದ | ಪುಂಡರೀಕಾಕ್ಷನಹಿಂಡು ಶ್ವೇತಾಶ್ವಗಳಿಂದ ವಾರಿಸಿದಾ ೬
ಹಯಗ್ರೀವ ಪದಾರಾಧಕಾ | ಶಿರದಿ ಧೃತದಿವ್ಯ ಹರಿವಾಣ ಪೂರಣವ ||ಹಯವದನನು ಬಂದು | ಜಯ ಘೋಷದಲಿ ಮೆದ್ದುದಯ ದೃಷ್ಟಿ ತೋರಿದ | ಭಾವಿ ಮಾರುತರ ೭
ಶ್ರೀಶನ್ನ ಪ್ರಯಾಗದಿ | ಚಿಂತಿಸುತಿರೆಕೇಶವ ನೊಲಿಯುತಲೀ ||ವಾಸವಾನುಜ ಶ್ರೀಶ | ವ್ಯಾಸರದಯ ಪೊಂದಿದಶಮತಿಗಳ ಪಾದ | ಬಿಸಜವ ಕಂಡರ ೮
ವಾದಿರಾಜರ ಶಿಷ್ಯನು | ಪಂಡಿತನೆಂಬಮದದಿಂದ ಗರ್ವಿತನೂ ||ಸಾಧಿಸೆ ಕುಟಿಲವ | ಸೋದೆ ರಾಜರಲ್ಲಿಪೋದ ಶಾಪದಿ ಅವ | ಬೊಮ್ಮ ರಕ್ಕಸನಾಗೀ ೯
ಸಕಲ ಶಿಷ್ಯರವೆರಸಿ | ರಾಜರು ಬರೆರಕ್ಕಸ ಕರೆದ ವಾದಕ್ಕೇ ||’ಆಕಾಮವೈ’ ಕೋ ನಸ್ನಾತನೆಂದೆನೆ ಅವಕಾಕು ರಂಡೆಯ ಪುತ್ರ | ತೋಕ ನೀನೆಂದ ೧೦
ಮೇನೆ ಪಾಲಕಿ ಹೊರುವ | ನರೆಯಣ ಭೂತಯಾನ ವಾಹಕನಾದನೂ ||ಆನೆಂತು ಬಣ್ಣಿಪೆ | ಮುನಿಕುಲ ದಿನಮಣಿವೇಣುಗಾನ ಪ್ರಿಯ | ಕೃಷ್ಣ ಸೇವಕರಾ ೧೧
ಆ ಮಹ ನೇತ್ರಾವತಿ | ಸಂಗಮವೆನ್ನಕೌಮಾರ ನದಿ ಸನಿಯದಿ ||ಈ ಮಹಾ ಮಹಿಮರು | ಸಾಸಿರ ಲಿಂಗದನೇಮದ ಪೂಜೆಗೆ | ನಿರ್ಮಿಸಿದರು ತೀರ್ಥ ೧೨
ಋಣದಿ ಪೀಡಿತ ದ್ವಿಜನು | ನತಿಸೆ ಇವರಸ್ವರ್ಣ ವೃಷ್ಟಿಯ ಪಡೆದ ||ಅರ್ಣ ಸಂಪ್ರತಿ ಪಾದ್ಯ | ಸ್ವರ್ಣ ಗರ್ಭನ ಪಿತಪೂರ್ಣಗೆ ಸುಪ್ರೀಯ | ಗಸದಳವೇನಿದು೧೩
ಗರಳ ಮಿಶ್ರಿತ ನೈವೇದ್ಯ | ಪಾಚಕತೆರೆಹರಿಗೆ ಸಮರ್ಪಿಸಿದಾ ||ಸಿರಿಪತಿ ಕಂಠದೋಳ್ | ಕರಿಯ ವರ್ಣವ ಕಂಡುಅರಿತು ಸೇವಿಸಿದನು | ಹರಿಯ ಪ್ರಸಾದವ ೧೪
ರಜತ ಪುರಿಯ ಮಠದಿ | ಪರ್ಯಾಯದಪೂಜೆಯ ವಿಸ್ತರಿಸೀ ||ಅಜಜನಕನ ದಿವ್ಯ | ಭಜನೆ ಪದ್ಧತಿಗಳಗಜಪಾಲ ಸಿರಿ ಕೃಷ್ಣ | ನಂಘ್ರಿಗರ್ಪಿಸಿದ ೧೫
ಅರಿಯು ಮುತ್ತಲು ಪುರವ | ಸೋದಾಧಿಪಮೊರೆಯ ಹೊಕ್ಕನು ರಾಜರ ||ಭರದಿ ನಾರಾಯಣ | ವರ ಭೂತನನ ಕಳುಹಿಅರಿಭಯ ವಾರಿಸಿ | ಪೊರೆದ ನಾಯಕನಾ ೧೬
ಸೋದೆಯಲ್ಲೋರ್ವ ಶೈವ | ಬಲುಗರ್ವದಿವಾದ ಮಾಡುತಲವನೂ ||ವೇದ ಮತವ ಬಲು | ವಿಧದಿ ದೂಷಿಸಿ ಕಡುಬಾಧೆ ಪಡಿಸುತಲಿದ್ದ | ಬುಧಜನ ವೃಂದವ ೧೭
ಬಿಜಯ ಗೈಯ್ಯುತ ಅಲ್ಲಿಗೆ | ಗುರು ರಾಜರುವಿಜಯ ಉತ್ಸವ ರಚಿಸೇ ||ನಿಜ ಭೃತ್ಯ ಭಾವದಿ | ವಿಜಯ ಪತ್ರವನಿತ್ತುನಿಜ ಬಿರುದುಗಳವರ | ಪದಕೆ ಅರ್ಪಿಸಿದ ೧೮
ತ್ರಿವಿಕ್ರಮಾಲಯ ಸ್ಥಾಪನೆ | ರಚಿಸಿ ಮೆರೆದ ದಿವ್ಯ ಶಾಲೀವಾಹನ್ನ ||ಸಾವಿರೈನೂರ್ನಾಲ್ಕು | ಚಿತ್ರ ಭಾನುವಿನಲ್ಲಿರವಿಯು ಮೇಷಾರ್ಧದಿ | ಚರಿಸುವ ದಿನದಿ ೧೯
ರಥದಿಮೂರ್ತಿಯ ಸೇರಿಸಿ | ಬದರಿಯಿಂದಭೂತ ನರೆಯಣ ಬರುತಿರೆ ||ಪಥದಿ ರಕ್ಕಸ ಸೆಣೆಸೆ | ಪೃಥುಕು ಆಯುಧ ಬಿಟ್ಟುರಥದ ಗಾಲಿಯಲಿಂದ | ಹತಗೈದನವನ ೨೦
ವೇದಾರ್ಥ ಬೃಂಹಿತದ | ಬಹು ಗ್ರಂಥಗಳ್‍ಪದ ಪದ್ಯ ಸೂಳ್ಹಾದಿಯ ||ಸೋದೆ ಮಠದಿ ನಿಂದು | ವಾದಿರಾಜರು ರಚಿಸಿಬುಧರಿಗಾನಂದವ | ಮುದದಿ ಪಾಲಿಸಿದ ೨೧
ತ್ರಿವಿಕ್ರಮ ರಥೋತ್ಸವದಿ | ಕರೆಯಲು ಬಂದದಿವಿರಾಜ ಜನರು ಕಳುಹಿ ||ಭವ್ಯ ಸು ಪಂಚ ವೃಂದಾವನಗಳ ರಚಿಸಿದಿವಿರಾಜ ಗರುಹಿದರ್ ತಮ್ಮಯ ಬರವನು ೨೨
ಶಾರ್ವರಿ ವತ್ಸರದೀ | ಫಾಲ್ಗುಣ ವದ್ಯಮೂರನೆ ದಿವಸದಲ್ಲೀ ||ವರ ವೃಂದಾವನ ಪೊಕ್ಕು | ಗುರು ಗೋವಿಂದ ವಿಠಲನನಿರುತ ಧ್ಯಾನದೊಳಲ್ಲಿ | ವರವ ಪಾಲಿಸುತಿಹರ ೨೩

೧೪೫
ಸ್ತ್ರೀರೂಪಿ ಶ್ರೀ ಗಾಯತ್ರೀ ನಾಮಕನ ಸ್ತೋತ್ರ
ಶ್ರೀಗಾಯತ್ರೀ – ನಮಸ್ತುಭ್ಯಂ – ಗತಿಪ್ರದೇಉ- ದ್ಗೀಯೇಕಪದೇ – ದ್ವಿಪದೇ | ತ್ರಿಪದೇ – ಚತುಷ್ಪದೇ ಪದೇ ಪ
ನಾಗಹ – ರಥಿಕಾ – ನಾಗಶಯನಾ – ಹಿರಣ್ಯಾ ವರ್ಣಾಗಗನಮಣಿ ಕೋಟಿ ಭಾಸಮಾನಾ – ಭಕ್ತ ಶರಣ್ಯಾನೀಗುವ ಭವರೋಗವ | ಹೃತ್ಕಮಲದಿ ತೋರುವಬಾಗುವ ಜನ ಕಾಯುವ | ಶ್ರೀ ಹರಿ ಮುದ ಬೀರುವ ಅ.ಪ.
ಜ್ಯೋತಿರ್ಮಯಾವೂ – ಮಂಡಲದಿಂ – ತವರೂಪಜ್ಯೋತಿಯಲಿ ಮುಸುಕಿಹುದು – ಭಕ್ತಗದೂನೀ ತೋರ್ವುದು – ಮಹ ಮಹಿಮನೆ – ಹೇ ಪೂರ್ಣಈ ತೋಕನ ಸ್ವಾರೂಪಿಕ – ಜ್ಞಾನಧನ ಪ್ರಾಪಕ
ದ್ರುತ – ಪಾತಕಾ ಛೇದ ನಿಪುಣಾ – ಪ್ರಾಣ ಸನ್ನುತ ಚರಣಭೌತಿಕ ವಿಶರಣ ಧನ | ಪಾಲಿಸು ಸುಮನಾ ೧
ವೇದಮಾತೆಯೇ – ಆದಿಕತ್ರ್ರೇ ಗುಣಾಪಾರೇಮೋದ ದಕ್ಷಿಣ ಪಕ್ಷೇ – ಪ್ರಮೋದ ಉತ್ತರ ಪಕ್ಷೇಭೇದಾದಿರಹಿತೇ – ಆವಯವಾದಿಯಲಿ – ಸುಮಹಾರೇಭೋದಿಪೆ ಬ್ರಹ್ಮಾದಿಗೆ ಕಪಿ | ಲಾದಿ ರೂಪಿ ಹರೇ
ದ್ರುತ – ಕಾದುಕೋ | ಅಭಯಕರೇ | ಪುಸ್ತಕ ಭೂಷಿತ ಕರೆಸಾಧುಗಳಘಗಳ್ಹರೇ- ಕಾಯುವುದೆನ್ನ ಶ್ರೀಹರೇ ೨
ಗಾಯತ್ರೀ – ಭೂತ – ವಾಕೊ | ಪೃಥಿವೀ ಶರೀರಾ – ಹೃ-ದಯ ಭೇದದಿಂದಲಿ | ಷಡ್ವಿದ ನಾಮಕೇಈ ಯಾವ ಭೂತೇಶ ಪದ | ಮಾ ಸ್ವಾರೂಪದಆ ಯಾವ ವೈಕುಂಠ ಪದ | ಶ್ವೇತ ದ್ವೀಪಾದಿ ಪದದ್ರುತ – ಗೇಯ ಗುರು ಗೋವಿಂದ ವಿಠಲ | ಸೂರ್ಯನೋಳ್ದೇಯ ನೆಲ ಗಾಯ ಕರ್ಮಾಯ ಪಟಲ | ಪರಿಹರಿಸುವ ವಿಠಲ೩

೧೫೩
ಸ್ಮರಿಸಿ ಬದುಕಿ ಸಾರ್ಥಕೆನಿಸಿ | ವ್ಯರ್ಥ ಆಯು ಕಳೆಯದಂತೆಕರುಣಿಯಿಂದ ಶರಣರನ್ನ | ಪೊರೆವ ಹರಿಯನು ಪ
ಅಜಭವಾದಿ ವಂದ್ಯ ಪಾದ | ದ್ವಿಜ ಸುಧಾಮಗೊಲಿದ ಪಾದಭಜನೆ ಮಾಳ್ಪ ಸಾಧು ಜನರ | ನಿಜದಿ ಪೊರೆಯುವಾ ೧
ಭೂಮಿಯಳೆದು ಬಲಿಯ ತುಳಿದ | ಸುಮನದಿಂದ ಬಾಗಿಲಕಾಯ್ದಭೂಮಿರಮಣನಾದ ಹರಿಯ | ಭೂಮಗುಣನ ಭವ್ಯ ಪಾದವಾ ೨
ಮುನ್ನ ಪದದಿ ಕಲ್ಲ ತುಳಿದ | ಮುನಿಯ ಸತಿ ಅಹಲ್ಯ ಶಾಪವನ್ನು ಮೋಚಿಸೀದ ಪಾದ | ವನ್ನೂ ಬಿಡದೆ ಸತತಾ ೩
ರಕ್ಕಸಾರ ಸೊಕ್ಕ ಮುರಿದ | ತರ್ಕಕೆ ಗೋಚರಿಸಲೊಲ್ಲಪಕ್ಷಿವಾಹ ಪನ್ನಗಶಯನ | ಮಕ್ಕಳ ಮಾಣಿಕ್ಯ ಪಾದವ ೪
ಪರಮ ಭಕ್ತರೆನಿಸಿಕೊಂಡು | ಸುರರು ತಮ್ಮ ಹೃದಯದಲ್ಲಿಹರುಷದಿಂದ ಪೂಜಿಪಾ | ಗುರು ಗೋವಿಂದ ವಿಠಲನಾ ೫

೪೦೧
ಸ್ಮರಿಸಿ ಬದುಕಿರೊ | ಗುರುರಾಘವೇಂದ್ರರಾಚರಣ ಕಮಲವಾ | ದುರಿತ ತರಿಯುವಾ ಪ
ಯಂತ್ರೋದ್ಧಾರರಾ | ಅಂತರಂಗರಾಮಂತ್ರ ಮಂದಿರಾ | ಕಾಂತಿ ಭೂತರಾ ೧
ಕುಂತಿ ಜಾತರಾ ಏ | ಕಾಂತ ಭಕ್ತರಾಸಂತ ಗುರಗಳ ನೀ | ವಿಂತು ನಂಬಿರೊ ೨
ಪಂಕಜಾಕ್ಷನಾ | ಅಣಕ ಧರಿಸಿಹಾಬಿಂಕ ಗುರುಗಳಾ | ಲಂಕೇಶನನುಜರಾ ೩
ಖಂಪಾತಾಳ ಭೂ | ವ್ಯಾಪಿಸಿರುವರಾಅಪಾರ ಮಹಿಮರಾ | ಕೋಪ ರಹಿತರಾ ೪
ಮೂಕ ಬಧಿರರಾ | ನೇಕ ರೋಗಿಯರಾನೂಕಿ ತಾಪವಾ | ದುಃಖ ಕಳೆಯುವಾ ೫
ಮಾಯಿ ಮತಗಳಾ | ಸಾಯ ಒಡೆದರಾಆರ್ಯ ಮಧ್ವರಾ | ಪ್ರೀಯ ಶಿಷ್ಯರಾ ೬
ಗುರುಗೋವಿಂದ ವಿಠಲನಾ | ಚರಣ ಸರಸಿಜಾನಿರುತ ಸ್ಮರಿಪರಾ | ವರವ ಕೊಡುವರಾ ೭

೪೦೨
ಸ್ಮರಿಸುವರಘಹರ ರಾಘವೇಂದ್ರ ಗುರುಆರುಮೊರೆ ಇಡುವೆನು ತವಪದದಲ್ಲೀ ಪ
ಸುರತರು ನಿನ್ನನು | ನಿರುತದಿ ನುತಿಸುವವರವನೆ ಕರುಣಿಸು | ಗುರು ರಾಘವೇಂದ್ರ ಅ.ಪ.
ಕೃತ ಯುಗದೊಳು ತಾ | ಮುನಿ ಕಶ್ಯಪನಸುತನಲಿ ಮೋದದಿ | ಸುತನಾಗಿ ಜನಿಸುತ |ಪಿತನತಿ ಬಾಧೆಗೆ | ಅಳುಕದೆ ಮನ್ಮಥಪಿತನಧಿಕೆಂದು ಬಹು | ಸಾರಿದೆ ಗುರುವರ ೧
ಜನಪ ಪ್ರತೀಪನ | ಸುತ ವರನೆನಿಸುತಜನಿಸುತ ಪ್ರೀತಿಲಿ | ದ್ವಾಪರದಲ್ಲೀ |ಘನಬಲ ಬಾಹ್ಲೀಕ | ನೆನಿಸುತ ನೀನೂಅನಿರುದ್ಧ ಮೂರ್ತಿಯ | ಸೇವಿಸಿ ಮೆರೆದೆ ೨
ನ್ಯಾಯಾ ಮೃತ ಚಂ | ದ್ರಿಕೆಗಳ ರಚಿಸುತಮಾಯ ಮತವನು | ಪರಿಪರಿ ಜೆರೆಯುತ |ಕಾಯ ಜನಯ್ಯನ | ಕೀರ್ತಿಯ ಬೀರುತತೋಯಜಾಕ್ಷ ಹರಿ | ಅಧಿಕೆಂದು ಸಾರಿದೆ ೩
ಸಂಗವ ತೊರೆದು | ಸುಧೀಂದ್ರರ ಕರಜನೆತಂಗಾತೀರದಿ | ಮಂತ್ರಾಲಯದಲಿ |ಮಂಗಳ ಮಹಿಮನ | ಧ್ಯಾನವ ಗೈಯುತತುಂಗ ವಿಕ್ರಮ ಹರಿ | ಪರನೆಂದು ಸಾರಿದೆ ೪
ವಾತನ ಮತ ವಿ | ಸ್ತರಿಸಿದ ಧೀರನೆದ್ವೈತ ದುಂದುಭಿಯ | ಮೊಳಗಿಸಿದಾತನೆ |ದೂತರ ಪ್ರಿಯ ಗುರು | ಗೋವಿಂದ ವಿಠಲನಪ್ರೀತಿಲಿ ಭಜಿಸುವ | ದಾಸಾಗ್ರಣಿಯೇ ೫

ಪ್ರೊದಟೂರಿನಲ್ಲಿ ಶ್ರೀ ಲಕ್ಷ್ಮೀವೇಣುಗೋಪಾಲ
೪೨೩
ಸ್ಮರಿಸುವುದು ಗುರು ಸಂತತಿಯನೂ ಪ
ಸ್ಮರಿಸಿ ನಮಿಪಲು ನಿತ್ಯ | ಗುರುವರ್ಯ ಸಂತತಿಯ ಹರಿಕರುಣವೂ ದೊರಕಿ | ಸರ್ವ ಆಮಯ ಹರವು ಪರಮ ಪುರುಷಾರ್ಥಕ್ಕೆ ವರ ಮಾರ್ಗವೆಂದೆನಿಪ ಸದ್ಭಕ್ತಿ ಜ್ಞಾನಪ್ರದವು ಅ.ಪ.
ಆದಿ ಮೂರುತಿ ಹಂಸ | ಪಾದಾನುವರ್ತಿ ವಿಧಿಆದಿವಿಧಿ ಸುತರು ಸನ | ಕಾದಿ ಪದ ಪದ್ಮಗಳಮೋದದಿಂ ಭಜಿಪ ದೂ | ರ್ವಾಸ ತತ್ಕರಜ ಸುಜ್ಞಾನ ನಿಧಿಗಳ ಪಾದವ ||ಆದರದಿ ಗರುಡವಾಹನ ತೀರ್ಥ ಕೈವಲ್ಯರಾದರಿಸಿ ಜ್ಞಾನೇಶ ತತ್ಕರಜ ಪರತೀರ್ಥಪಾದಾಬ್ಜ ಸೇವಿಸುವ ಸತ್ಯ ಪ್ರಾಜ್ಞ ಕರಜ ಪ್ರಾಜ್ಞ ತೀರ್ಥರು ಯತಿಗಳ ೧
ಯತಿ ಅಚ್ಯುತ ಪ್ರೇಕ್ಷ | ತತ್ಕರಜ ವಾಯ್ವಂಶಪ್ರಥಮಾಂಗ ಹರಿಗೆನಿಪ | ಆನಂದ ತೀರ್ಥರಪ್ರಥಮ ದಾಸ್ಯದಿ ಮೆರೆವ ಯತಿಪದುಮನಾಭಾಖ್ಯನೃಹರ್ಯಾಭಿಧ ತೀರ್ಥರ ||ಯತಿಯು ಮಾಧವ ತೀರ್ಥ | ಆಕ್ಷೋಭ್ಯ ತೀರ್ಥರೂತತ್ಕರಜ ಪರವಾದಿ | ಗಜಸಿಂಹ ಜಯತೀರ್ಥಯತಿಗಳಾ ವಿದ್ಯಾಧಿ | ರಾಜ ಸತ್ಕವೀಂದ್ರರು ವಾಗೀಶ ರಾಮಚಂದ್ರ ೨
ಅತ್ಯಂತ ಮಹಿಮರೆನೆ | ವಿಭುದೇಂದ್ರ ವಿದ್ಯೆನಿಧಿಮತ್ತವರ ಕರಜಾತ | ರಘುನಾಥ ರಘುವರ್ಯಭೃತ್ಯ ವೇದವ್ಯಾಸ | ತೀರ್ಥ ವಿದ್ಯಾಧೀಶ ವೇದನಿಧಿ ಸತ್ಯವ್ರತರ ||ಸತ್ಯನಿಧಿ ಸತ್ಯನಾಥಾಖ್ಯ ಸತ್ಯಾಭಿನವಸತ್ಯ ಪೂರ್ಣಾಖ್ಯ ಯತಿ | ಸತ್ಯ ವಿಜಯಾರ್ಯ ವರಸತ್ಯ ಪ್ರಿಯ ತೀರ್ಥಾಖ್ಯ | ಸತ್ಯ ಬೋಧಾಖ್ಯಮಹ ಸತ್ಯ ಸಂಧಾಖ್ಯ ಮುನಿಯ ೩
ಸತ್ಯವರ ಸತ್ಯಧರ್ಮಾಖ್ಯ ಸತ್ಯಸಂಕಲ್ಪಸತ್ಯ ಸಂತುಷ್ಟಾಖ್ಯ | ಸತ್ಯ ಪರೆಯಣ ತೀರ್ಥ ಸತ್ಯ ಕಾಮಾಖ್ಯ ಯತಿ | ಸತ್ಯೇಷ್ಟ ಕರಜರೆನೆ ಸತ್ಯ ಪರಾಕ್ರಮ ತೀರ್ಥರ || ಸತ್ಯ ವೀರಾಖ್ಯಯತಿ | ಸತ್ಯಧೀರಾಖ್ಯರಂತತ್ಕರಜ ಶಿರಿಸತ್ಯ | ಜ್ಞಾನಾಖ್ಯ ಅಗ್ನ್ಯಂಶದುಸ್ತಿಮಿರ ಮಾಯ್ಮತದ | ಮಾರ್ತೆಂಡರೆಂದೆನಿಪ ಶಿರ ಸತ್ಯ ಧ್ಯಾನಾಖ್ಯರ೪
ಕೃತ್ತಿವಾಸನ ತಾತ | ಉತ್ತಮೋತ್ತಮನೆಂದುಪ್ರತ್ಸಹರ್ಬೋಧಿಸಲು | ಸ್ತುತ್ಯಯತ್ಯಾಶ್ರಮದಿವರ್ತಿಸುತ ಸದ್ಗ್ರಂಥ | ವ್ಯಾಖ್ಯಾನ ಪೀಯಾಪ ಉತ್ತಮರಿಗುಣಿಸುತಿಹರ ||ಸ್ತುತ್ಯ ನಾಮಂಗಳನು | ಹೊತ್ತು ಹೊತ್ತಿಗೆ ಪಠಿಸೆಚಿತ್ತ ನಿರ್ಮಲವಾಗಿ | ವತ್ತಿ ಬಹ ವಿಘ್ನಕ್ಕೆಮೃತ್ಯವೆಂದೆನಿಸುತ್ತ | ನಿತ್ಯ ಗುರು ಗೋವಿಂದ ವಿಠಲ ತಾ ಪೊರೆವ ಸತ್ಯ ೫

೪೨೫
ಸ್ವಾಗತವು ಸ್ವಾಗತವು | ಯೋಗಿ ವರ್ಯಾ ಪ
ಯೋಗಿ ದಶಮತಿ ಬ್ರಾತೃ | ವಂಶ ಸಂಭೂತಾ ಅ.ಪ.
ಭಾವಿ ವಾಯ್ದೆನಿಸಿದ್ದು | ಆವಿಪರು ಶೇಷಾದಿದೇವ ಸದ್ವಂದ್ಯರೆನೆ | ಶ್ರೀ ವಾದಿರಾಜಾ |ಆವ ವಂಶಾಬ್ದಿಯಲಿ | ದಿವ್ಯ ಸೋಮನು ಎನಿಸಿ |ದೈವ ವಿಭವದಿ ಮೆರೆವ | ವಿಶ್ವೋತ್ತಮಾಖ್ಯಾ ೧
ಉದಿತ ಭಾಸ್ಕರನಂತೆ | ಮೆರೆದು ಸದ್ಬಾಲ್ಯದೊಳುಅದುಭುತವು ಎಂದೆನಿಪ | ಸುಧೆಯ ಪ್ರವಚನವಾ |ಸದಯಯತಿ ಕಾಣ್ಯೂರು | ಪದದಲ್ಲಿ ಅಭ್ಯಸಿಸಿಮುದದಿ ಮಂಗಳ ಮಾಡ್ದ | ವಿಭವ ನಾನೋಡ್ದೆ ೨
ನಂದಮುನಿಮತ ಸುಜನ | ವೃಂದದಲಿ ಭೋಧಿಸುತಇಂದಿಲ್ಲಿ ಸಿದ್ದಾರ್ಥಿ | ಸಂದ ಅಯ ನವಮೀ |ಮಂದಿರಕೆ ಬಂದುತವ | ನಂದ ಪದ ಪೂಜಿಸುವಸಂದು ಇತ್ತಿಹ ಗುರೂ | ಗೋವಿಂದ ಭಜಕಾ ೩

ಉತ್ತರಾದಿ ಮಠದ ಗುರು
೪೨೧
ಸ್ವಾಗತವು ಸ್ವಾಗತವು | ಯತಿವರ್ಯರೇಯೋಗೀಶ ಶ್ರೀಕೃಷ್ಣ | ಮೂತ್ರ್ಯುಪಾಸಕರೇ ಪ
ವಿಶ್ವಭಿಧರಂತಸ್ಥ | ವಿಶ್ವರೂಪಿಯ ಹರಿಯವಿಶ್ವಸರ್ಜನ ಸ್ಥಿತೀ | ವಿಶ್ವಸಂಹರವಾ |ವಿಶ್ವತೊಮುಖವಾಗಿ | ಗುಣ ಕ್ರಿಯವ ಕೊಂಡಾಡೆವಿಶ್ವೇಶ ತೀರ್ಥರೆಂದುರು | ಕೀರ್ತಿಯುಕ್ತರೇ ೧
ಮಧ್ವರೆಂಬಭಿಧದಿ | ಗ್ದೇಶ ವ್ಯಾಪಿಸುವಂತೆವಿದ್ಯೆ ಪ್ರಸರಣ ಕಾರ್ಯಶುದ್ಧ ವ್ಯಾಜದಲೀ |ವಿದ್ಯೆ ಪೀಠವ ರಚಿಸಿ | ವಿದ್ವಾಂಸರನ್ನಿರಿಸಿಮಧ್ವಶಾಸ್ತ್ರದ ಬೋಧ | ಸಿದ್ಧ ಪಡಿಸಿದರೇ ೨
ಶರಣ ಜನರಭಿಲಾಷೆ | ನಿರುತ ಪಾಲಿಸಿ ಪೊರೆವಸರಳ ಹೃದಯರೆ ನಿಮ್ಮ | ಚರಣದ್ವಂದ್ವಗಳಾ |ವರ ರಜವ ಶಿರದಲ್ಲಿ | ಧರಿಸುತ್ತ ಧನ್ಯನೆಹೆಮರಳಿ ಮಮಕುಲವೆಲ್ಲ | ಉದ್ಧಾರವಾಯ್ತು ೩
ಕ್ಷಾಮಡಾಮರ ಕಾಲ | ಸೀಮೆ ಮೀರಿದ ಸಮಯನೇಮ ಮೀರದೆ ವೈಶ್ವ | ಹೋಮಾದಿ ಶೇಷಾ |ಪ್ರೇಮದಿಂ ವಿದ್ಯಾರ್ಥಿ | ಸ್ತೋಮ ಕುಣಿಸುತ ನಿತ್ಯಸಾಮ ಸನ್ನುತನ ನಿ | ಷ್ಕಾಮ ಭಜಿಸುವರೇ ೪
ಕಾಣ್ವೋಪ ನಿಷದರ್ಥ | ಕನ್ನಡ ಸುಪದ್ಯದಲಿಇನ್ನು ರಚಿಸಿರ್ಪುದಕೆ | ಮುನ್ನುಡಿಯನಿತ್ತೂ |ಅನ್ನಂತ ಗುಣ ಗುರೂ | ಗೋವಿಂದ ವಿಠ್ಠಲನನನ್ನೆಯಿಂ ಭಜಿಸೆ ಪ್ರ | ಸನ್ನ ಮಾರ್ಗದರೇ ೫

ಅಷ್ಟಮಠದ ಯತಿಗಳಲ್ಲಿ ಒಬ್ಬರಾದ
೪೨೪
ಸ್ವಾಗತವು ಸ್ವಾಗತವು ಯೋಗಿವರ್ಯರಿಗೆ ||ವಿಶ್ವೇಶ ತೀರ್ಥ ಶ್ರೀ ವಿದ್ಯ ಮಾನ್ಯರಿಗೇ ಪ
ಪ್ರೊದಟೂರು ಜನನಿಮ್ಮ | ಮೋದಮಯ ಆಗಮಕೆಆದರದಿ ಕಾದಿಹರು | ವೇದ ಘೋಷಿಸುತ |ಹೇದಯಾ ಪರಿಪೂರ್ಣ | ಸಾದುಗಳೆ ನಮಿಸುವೆವುಮೋದ ಪ್ರಮೋದ ಗುಣ | ಬೋಧಿಪುದು ನಮಗೇ ೧
ಸಿರಿವೇಣು ಗೋಪಾಲ | ಸಿರಿ ಲಕುಮಿ ವಿಗ್ರಹವುಮರಳಿ ನವಗ್ರಹ ಮೂರ್ತಿ | ಗುರುರಾಘವೇಂದ್ರಾ |ವರಸು ಬೃಂದಾವನವ | ಸ್ಥಿರ ಪಡಿಸಿ ನಿಮ್ಮಾಮೃತಕರದಿಂದಲಿಂದೀಗ | ವರ ಮಹೂರ್ತದಲೀ ೨
ವತ್ಸರವು ಆನಂದ | ವೈಶಾಖ ಸ್ಥಿತ ದಶಮಿವಾತ್ಸಲ್ಯ ಯತಿಗಳು | ಸುಸ್ಥಿರವು ಆಗೀ |ವತ್ಸಾರಿ ಹರಿಭೃತ್ಯ | ವತ್ಸಲತಯಿಂನಿಂದುಸುಸ್ಥಿರವು ಆಗಿಹುದು | ಭೃತ್ಯರಿಗೆ ವರದಾ ೩
ಮಂಟಪಾಲಂಕೃತವು | ಭಂಟರಿಂದಲಿ ಬಹಳನೆಂಟರಿಷ್ಟರು ಮತ್ತೆ | ಸಂತಜನ ಕೂಟಾ |ಊಟ ಉಪಚಾರದಿಂ | ಸಂತೃಪ್ತಿ ಹೊಂದುತಲಿವೈಕುಂಠ ಪತಿ ಮಹಿಮೆ | ಈಂಟಿ ಮುದ ಹೊಂದೇ ೪
ಪಾವನವು ಈ ಕ್ಷೇತ್ರ | ಪಾವನರು ನಾವೀಗಆವನಿಮ್ಮಯ ಪಾದ | ಪಾಂಸುಗಳ ಧರಿಸೀಕೇವಲಾನಂದಮಯ | ಭಾವದೊಳು ಇಹೆವುಗುರುಗೋವಿಂದ ವಿಠಲ ಪವ ತಾವರ್ಯಾ ಶ್ರೀತರೇ ೫

೪೨೦
ಶ್ರೀ ಶ್ರೀ ಶ್ರೀ ಸತ್ಯಪ್ರಮೋದ ತೀರ್ಥರು
ಸ್ವಾಗತವು ಸ್ವಾಗತವು ಯೋಗಿವರ್ಯಾ ಪ
ಬಾಗಿ ಭಜಿಸುವೆ ನಿಮ್ಮ ಪಾದ ಪಂಕಜವಾ ಅ.ಪ.
ಯೋಗಿ ಜನ ವಂದ್ಯ ಭವರೋಗಾಹಿ ಖಗನೆನಿಪನಾಗ ಭೂಷಣ ಸಖನ ಯೋಗ ನಿರತಾ |ಆಗು ಹೋಗುಗಳೆರಡು ಸಹಿಸುವಲಿ ನಿಷ್ಠಾತಕಾಗಿನಿಯ ತಟವಾಸ ರಚಿತ ಸುಧೆ ಭರಿತಾ ೧
ಸತ್ಯ ಪ್ರಮೋದಾರ್ಯ ನಿತ್ಯ ನಿಜಯತಿ ಚರ್ಯಸ್ತುತ್ಯ ಪರಮೌದಾರ್ಯ ಯೋಗ ಧುರ್ಯಾ |ಸತ್ಯಾತ್ಮ ಪರಯುಗ್ಮ ಭಕ್ತಿಯಲಿ ಚಾತುರ್ಯಪ್ರತ್ಯಹರ್ರಾಮ ಪದ ಅರ್ಥ ಕೈಂಕರ್ಯಾ ೨
ಭಾವಜನಯ್ಯ ಗುರು ಗೋವಿಂದ ವಿಠಲ ಪದಭಾವದಲಿ ಭಜಿಪಂಥ ಗುರುವರೇಣ್ಯಾ |ಪಾವನವು ನಿಮ್ಮ ಪದ ತೊಳೆದುದಕ ಶಿರಧೃತವುಪಾವಿಸಿತು ನಮ್ಮ ಕುಲ ನಾ ಪರಮ ಧನ್ಯಾ ೩

೭೨೭
ಸ್ವಾಮಿ ಗುರು ಗೋವಿಂದ ವಿಠಲ ಪೊರೆ ಇವನಾ ಪ
ಶ್ರೀಮನೋಹರನಂಘ್ರಿ | ಕಮಲಕಾಂಕ್ಷಿಪನಾ ಅ.ಪ.
ಏಸೋ ಜನ್ಮದ ಪುಣ್ಯ | ರಾಶಿವದಗಿತೋ ಇವಗೆದಾಸನಾಗಲು ಹರಿಗೆ | ಸೂಸಿ ಬೇಡುವನೊ |ವಾಸುದೇವನೆ ನಿನ್ನ | ದಾಸತ್ವ ಪಾ ಅಸುತಶೊಷಿಸೋಭವ ಶರಧಿ | ಮೇಶ ಮಧ್ವೇಶಾ ೧
ತುಂಗೆ ತೀರದಿ ಧವಳ | ಗಂಗೆ ತಟವಾಸಯತಿಪುಂಗವರ ಕರುಣಾ | ಪಾಂಗ ವೀಕ್ಷಣವಾಮಂಗಳ ಸ್ವಪ್ನದಲಿ | ಕಂಗಳಿಂದಲಿ ಕಂಡುಸಂಗ ಸಾಧುಗಳ ಉ | ತ್ತುಂಗ ಬಯಸುವನೋ ೨
ಜಲಜನಾಭನ ಭಜಿಸೆ | ಕುಲವು ಪ್ರಾಧಾನ್ಯಲ್ಲಹಲವಾರು ದೃಷ್ಠಾಂತ | ಕೇಳಿ ಬರುತಿಹುದೋಸುಲಭ ನೀನೆಂತೆಂದು | ಬಲವಿನಿಂ ಪ್ರಾರ್ಥಿಸುವೆತಿಳಿಪುವುದು ಮರುತಮತ | ಹಲವು ತತ್ವಗಳಾ ೩
ವೇಣುಗಾನ ಪ್ರಿಯನೆ | ಗಾನಕಲೆ ಇವನಲ್ಲಿಜ್ಞಾನಯುತವಾಗಲೆನೆ | ವೇಣುಪ್ರಾರ್ಥಿಸುವೇಅರ್ಣಸಂಪ್ರತಿ ಪಾದ್ಯ | ಚೀರ್ಣ ಸತ್ಕತಿಯವನುಪೂರ್ಣಗೈಸಿವನ ಪ್ರಾಚೀನ ಕರ್ಮಗಳಾ ೪
ನಾಮಾಧಿಕಾರಿ ಇವ | ನಾಮಸ್ರ‍ಮತಿ ಸರ್ವದಾನೇಮದಿಂ ಫಲಿಸಿವಗೆ | ಸೋಮಧರನುತನೇಕಾಮಜನಕನೆ ಗುರೂ | ಗೋವಿಂದ ವಿಠಲಯ್ಯಈ ಮಾತು ಸಲಿಸೆಂದು | ಸ್ವಾಮಿ ಪ್ರಾರ್ಥಿಸುವೇ ೫

೨೨೦
ಹಂಸವಾಹನ ಜಾಯೆ ಕಾಯೆ ಪ
ವಿಪಾಂಸಗನ ಪದಪಾಂಸು ಧರಿಸುವಳೆ ಮನ ಸಂಶಯವ ಕಳೆ ಅ.ಪ.
ವಿಜ್ಞಾನ ತತ್ವಭಿಮಾನಿ ಸತಿ | ಅ-ಜ್ಞಾನ ನೀಗಿ ಸುಜ್ಞಾನ ವೀಯುತ |ಜ್ಞಾನ ಪೂರ್ಣ ಪ್ರಜ್ಞಾನ ಘನಗುಣಗಾನ ಮಾಳ್ಪ ವಿಜ್ಞಾನ ವೀವುದು ೧
ಭಕ್ತಿರೂಪಿ – ಸುವ್ಯಕ್ತಿಗೈ ಹರಿಸಭಕ್ತಿಯನು ಗುರುಭಕ್ತಿಯೆನ್ನಲ್ಲಿ |ಶಕ್ತಿ ಕೊಟ್ಟಾಸಕ್ತಿಯಲಿ ವೇ-ದೋಕ್ತದಲಿ ಎನ ಯುಕ್ತ ನೆನಿಸಮ್ಮ ೨
ವಾಣಿಯೇ ಬ್ರಹ್ಮಾಣಿಯೇ ವೇ-ದಾಣಿಯೇ ಸುಜ್ಞಾನಿಯೇ ಪೊರೆವೀಣೆ ಧರಿಸಿಹ ಪಾಣಿಯೇ ಸು-ಶ್ರೋಣಿಯೇ ಚತು | ರಾನನ ಪ್ರಿಯೆ ೩
ನೆಲಸಿ ರಸನದಿ | ವಿಲಸಿತಾಮಲಲಲಿತ ಹರಿಗುಣ | ಫಲಿಸಿ ಕೀರ್ತಿಸುಅಲವ ಭೋದರ | ಲಲಿತ ಉಕ್ತಿಲಿಪುಳಕ ಪುಳಕದಿ | ನಿಲಿಸು ಮನ್ಮನವಾ ೪
ಋೂಕ್ಷ ಸನ್ನುತ | ರಾಕ್ಷಸೀ ಪ್ರಿಯಶೀಕ್ಷಕಾಂತರ | ಸಾಕ್ಷಿರೂಪನನಮೋಕ್ಷದನ ಗುರು | ಗೋವಿಂದ ವಿಠಲನಈಕ್ಷಿಸಲು ಕ | ಟಾಕ್ಷ ತೋರಿಸು ೫

೭೪೪
ಹನುಮ ವರದ ವಿಠಲ | ಪೊರೆಯ ಬೇಕಿವಳಾ ಪ
ಗುಣಪೂರ್ಣ ಶ್ರೀ ಹರಿಯ | ದಾಸ್ಯಕಾಂಕ್ಷಿಪಳಾ ಅ.ಪ.
ವಿನಯ ಸದ್ಗುಣ ಭರಿತೆ | ಸುಜನಾಳಿಸೇವೇಷ್ಟೆಅನಿಲಮತ ಸದ್ಭೋದೆ | ಗಾನಂದ ಜಾತೇಅನಲಾಕ್ಷಾ ಸಖ ಹರಿಯ | ಗಾನಕಲೆ ಚತುರೆ ಎಂದೆನಿಸಿರುವ ಈ ಕನ್ಯೆ | ಮಣಿಯ ನೀ ಪೊರೆಯೋ ೧
ಬೇಕಾದ ವರಗಳನು | ನೀ ಕರುಣಿಸೀಕೆಯನುಲೋಕ ಸಜ್ಜನರಲ್ಲಿ | ವಿಖ್ಯಾತಳೆನಿಸೋಕಾಕು ಮಾಯ್ಮತವ ನಿ | ರಾಕರಿಸುವಂತೆಸಗೊಶ್ರೀ ಕರಾರ್ಚಿತ ಪಾದ | ವೈಕುಂಠ ರಮಣ ೨
ಸಲ್ಲಲಿತ ಸನ್ಮಾರ್ಗ | ದಲ್ಲಿ ವಿಹರಿಸುವಂಥವಲ್ಲಭನ ದೊರಕಿಸುತ | ನಲ್ಮೆಯಿಂದಿವಳಾಸಲ್ಲಿಸೊ ಮನದಾಶೆ | ಮಲ್ಲಮರ್ಧನ ಕೃಷ್ಣಾಚೆಲ್ವ ಹಯಮುಖಹರಿಯೆ | ಪ್ರಾರ್ಥಿಸುವೆ ದೇವಾ ೩
ಮಧ್ವಮತ ಸಿದ್ದಾಂತ | ಪದ್ದತಿಯ ತಿಳಿಸುತ್ತವಿದ್ಯವಂತಳು ಎನಿಸೊ | ಶ್ರದ್ಧೆ ಪತಿ ಗೊಡೆಯಾಶೌದ್ದೋದನೀಯ ಮತ | ಪ್ರಧ್ವಂಸಗೈದವನೆಬುದ್ದಾವತಾರಿ ಹರಿ | ಉದ್ದರಿಸೊ ಇವಳಾ ೪
ಜೀವ ಅಸ್ವಾತಂತ್ರ್ಯ | ಭಾವದಲಿ ನಿಲ್ಪಪರಿದೇವ ನೀ ಗೈಯುತ್ತ | ಭಾವುಕಳ ಪೊರೆಯೊ

೨೧೨
ಹನುಮಂತ – ಹನುಮಂತ ಪ
ಗುಣನಿಧಿ ಹರಿಪದ | ವನಜ ಸದಾರ್ಚಕ ಅ.ಪ.
ಅಂಜನಿ ಕುವರ ಧ | ನಂಜಯ ರಕ್ಷಕಭಂಜಿಸಿ ದೈತ್ಯ ಪ್ರ | ಭಂಜನಾಖ್ಯ ೧
ಬಕ ಮುಖ ಹನ ಕೀ | ಚಕ ಧ್ವಂಸಕವಿಕಳರ ಗೈದರಿ | ದುಷ್ಕುಲ ನಾಶಕ ೨
ಮತ್ತ ಮಾಯಿಗಜ | ಕುತ್ತಿದ ಕೇಸರಿವತ್ತಿ ಪೇಳ್ದೆ ಹರಿ | ಉತ್ಕರ್ಷಗಳನು ೩
ಇನಜನ ಪಾಲಕ | ಇನಜ ಗರ್ವ ಹರಮಣಿಮನ ಮತ | ವನ ಅನಲ ದಾವಾಖ್ಯ ೪
ಹರಿ ಪ್ರಥಮಾಂಗನೆ | ಉರಗ ವಿಪ ಗುರುಗುರು ಗೋವಿಂದ | ವಿಠಲನ ಸೇವಕ೫

೭೪೧
ಹನುಮಂತ ವಿಠ್ಠಲಾ | ಪೊರೆಯ ಬೇಕಿವಳಾ ಪ
ಘನ ಮಹಿಮ ನಿನ್ಹೊರತು | ಅನ್ಯರನು ಕಾಣೇ ಅ.ಪ.
ಸ್ವಾಪದಲಿ ಗುರುದರ್ಶ | ಅಂತೆ ಅಂಕಿತ ಪತ್ರತಾ ಪಿಡಿದು ನಿಂತಿಹಳೊ | ಶ್ರೀಪ ಸೀತಾಪತೇ |ಕಾಪಟ್ಯರಹಿತಳನು | ಕೈಪಿಡಿದು ಸಲಹೆಂದುನಾ ಪ್ರಾರ್ಥಿಪೆನೊ ನಿನ್ನಾ | ತಾಪಸ ಸುವಂದ್ಯಾ ೧
ಕನ್ಯೆಯಗಭಯದನಾಗಿ | ಮುನ್ನಪತಿ ಸೇವೆಯನುಚೆನ್ನಾಗಿ ದೊರಕಿಸುತ | ಕಾಪಾಡೊ ಹರಿಯೇ |ಅನ್ನಂತ ಮಹಿಮ ಕಾರುಣ್ಯ | ಸಾಗರನೆ ಹರಿನಿನ್ನನೇ ನಂಬಿಹಳೊ | ಭಾವಜ್ಞಮೂರ್ತೇ ೨
ಕಾಮಜನಕನೆ ನಿನ್ನ | ನಾಮ ಸಂಸ್ಮರಣೆಯನುನೇಮದಲಿ ಗೈವಂಥಾ | ಮನವ ನೀನಿತ್ತೂ |ಈ ಮಹಾ ಭವ ಶರಧಿ | ಪಾಲಿಸೋ ಶ್ರೀ ಹರಿಯೆಸಾಮ ಸನ್ನುತ ಸ್ವಾಮಿ | ಭೂಮಗುಣ ಧಾಮಾ ೩
ಮರುತ ಮತ ತತ್ವಗಳು | ಸ್ಛುರಿಸಲಿವಳಿಗೆ ಹರಿಯೇತರತಮಾತ್ಮಕ ಜ್ಞಾನ | ದರಿವು ವೃದ್ಧಿಸಲೀ |ಹರಿಯ ಸರ್ವೋತ್ತಮತೆ | ಸ್ಥಿರವಾಗಿ ಇವಳೀಗೆಪರಮಸಾಧನ ಮಾರ್ಗ | ಕ್ರಮಿಸುವಂತೆಸಗೋ ೪
ಕಾಮಿತಪ್ರದ ದುಷ್ಟ | ಆಮಯವ ಪರಿಹರಿಸಿಈ ಮಹಿಳೆಯುದ್ಧರಿಸೊ | ಸ್ವಾಮಿ ರಾಮಚಂದ್ರಾ |ನಾಮಾಂತ ಇತ್ತುದಕೆ | ಸಾರ್ಥಕವ ಮಾಡೆಂದುಸ್ವಾಮಿ ಗುರು ಗೋವಿಂದ | ವಿಠಲ ಭಿನ್ನವಿಪೆ ೫

೨೧೧
ಹನುಮಂತಾ | ಮದ್ಗುರುವೆ | ಹನುಮಂತ ಪ
ಹನುಮಂತ – ಗುಣಗಣ ನಿಲಯ | ಮುನಿಸನಕಾದಿ ಜನ ಮನಾಲಯ | ಆಹಮನ ಆದೀಂದ್ರಿಯ ನಿಯ | ಮನವನೆ ಮಾಡುತ್ತಅನುನಯದಿಂದಲಿ | ಪಾಲಿಪೆ ಸರ್ವರ ಅ.ಪ.
ಅಂಜನೆ ಕುವರನೆ ಹನುಮ | ಚಿಣ್ಣಕಂಜ ಸಖಗೆ ಹಾರ್ದನಮ್ಮಾ | ಇಂದ್ರಸಂಜಯನನ ಹೊಡೆದನಮ್ಮಾ | ಶಿಶುಅಂಜಲಿಲ್ಲವು ನೀ ನೋಡಮ್ಮಾ | ಆಹಸಂಜಯಪಿತ ತನ್ನ | ಶ್ವಾಸ ನಿರೋಧಿಸೆಅಂಜಲು ಮೂರ್ಜಗ | ಕಂಜಾಕ್ಷ ಸಲಹೀದ ೧
ರಾಮರ ಭಂಟ ಧೀಮಂತಾ | ಬಲಭೀಮ ಭಯಂಕರ ಅಮಿತಾ | ರೂಪನಾಮಗಳ್ ಪೊಂದುವ ಸತತಾ | ನೋಡುಕಾಮನಯ್ಯನ ಕಾಣ್ವ ನಿರತಾ | ಆಹಭೀಮ ಪ್ರಾಣಾನಂದ | ಮುನಿಯೆಂದು ಕರೆಸುತ್ತಬೊಮ್ಮನ ಪದವಿಯ | ಸಮ್ಮುದದಿ ಪಡೆವಂಥ ೨
ಹರಿಯೆ ನೀನು ಪ್ರತಿಬಿಂಬಾ | ಪುರಹರಿಗೆ ನೀನು ಗುರು ಬಿಂಬಾ | ಸುರಾಸುರರ ನೀದಂಡಿಪಾ ಡಿಂಬಾ | ನಿನ್ನವರಣ ವರ್ಣಿಸುವುದು ಗುಂಭಾ | ಆಹಹರ ಮುಖಾದ್ಯರು ನಿನ್ನ | ನಿರುತದಿ ಸುತ್ತಿಸುತ್ತಪರಿಪರಿ ಗುಣರೂಪ | ಕ್ರಿಯೆಗಳ ನೋಳ್ಪರು ೩
ನಿನಗೆಣೆ ಯಾರೊ ಸಮೀರ | ಮಹವನಧಿಯ ದಾಟಿದ ಧೀರ | ದೈತ್ಯಜನರ ನೀ ಸವರಿದ್ಯೋ ವೀರ | ದಶಾನನನ ನೀ ಸದದೆಯಾ ಶೂರ | ಆಹಜನಕಜ ರಮಣನ | ನೆನೆ ನೆನೆ ನೆನೆಯುತಅನುಗಾಲ ಕಿಂಪುರುಷ | ಖಂಡದಲಿರುವಂಥ ೪
ಕುರುಕುಲ ವನಕೆ ಕುಠಾರ | ದುಷ್ಟಜರೆಯ ಸುತನ ಸೀಳ್ದ ಧೀರ | ಸತಿತರಳೆ ದ್ರೌಪದಿ ಕಾಯ್ದ ವೀರ | ದುರುಳದುರ್ಯೋಧನನ ಅಸು ಹರ | ಆಹಕುರುವಂಶಕನಳನೆ | ಧರಣಿ ಭಾರವ ನಿಳುಹನರಮೃಗ ಲೀಲೆಯಂ | ದರಿಗಳ ತರಿದಂಥ ೫
ಯತಿಕುಲ ಕುಮುದಕೆ ಸೋಮ | ದಶಮತಿಯೆ ಮಾಯ್ಗಳ ತರಿದ ಭೀಮ | ಅಹಂಮತಿಯ ಕಳೆ ಸಾರ್ವಭೌಮ | ಜಗತ್ಪತಿಗೆ ನೀ ಸುಪವಿತ್ರ ಧಾಮಾ | ಆಹವಿತತ ಶ್ರೀ ಹರಿಯೆ ಸ | ರ್ವೋತ್ತಮನೆಂಬಂಥಸೂತ್ರಾರ್ಥ ರಚಿಸಿ ಸ | ಚ್ಛಾಸ್ತ್ರವನರುಹಿದ ೬
ಪವಮಾನ ಪೊಗಳುವೆ ನಿನ್ನ | ಭವಭವಣೆಯ ಪಡಲಾರೆ ಘನ್ನ | ಗುರುಗೋವಿಂದ ವಿಠಲಾನ | ಚರಣ | ತೋರೊತವಕದಿ ನಿನ್ನೊಳು ಪವನ | ಆಹನವ ವಿಧ ಭಕುತಿಗೆ | ನೆಲೆಯು ನೀನಾಗಿಹೆತವಕೀರ್ತಿ ಪೊಗಳಲು | ಶಿವನಿಗು ಅಳವಲ್ಲ ೭

೭೪೨
ಹನುಮವಂದಿತ ವಿಠಲ | ಅಣುಗನನ ಪೊರೆಯೋಮಣಿದು ಪ್ರಾರ್ಥಿಪೆನಯ್ಯ | ಪಿಡಿ ಇವನ ಕೈಯ ಪ
ಯೇಸೋ ಜನ್ಮದ ಪುಣ್ಯ | ರಾಶಿವದಗುತ ನಿನ್ನದಾಸತ್ವ ಪ್ರಾರ್ಥಿಸುವ | ಯೆನ್ನೊಳಗೆ ಹರಿಯೇ |ಕೇಶವನೆ ಸ್ವಪ್ನದೊಳು | ಸೂಸಿಸೂಚಿಸಿದ ಉಪ-ದೇಶವಿತ್ತಿಹೆ ಇವಗೆ | ಶ್ರೀಶಉದ್ಧರಿಸೋ ೧
ತೀರ್ಥಕ್ಷೆತ್ರವ ಚರಿಸಿ | ಗಾತ್ರಪಾವಿತ್ರತೆಲಿಅರ್ಥನಾಗಿಹ ಭಕ್ತ | ಪ್ರಾರ್ಥನೆಯ ಸಲಿಸೇ |ಕೀರ್ತಿಸಿಹೆ ರಾಮತವ | ಮೂರ್ತಿಜಪಿಸಲು ನಿತ್ಯಗೋತ್ರಾರಿಸುಪ್ರಿಯ | ಸೂತ್ರಾಂತರಾತ್ಮಾ ೨
ಶ್ರವಣಸಾಧನವಿತ್ತು | ಭವವನದಿ ಉದ್ಧರಿಸುಪವನ ಮೂರಲಿ ನಿನ್ನ | ಪಾವನಸ್ರ‍ಮತಿಯಾ |ಹವಣಿಸುತ ತ್ರೈತಾಪ | ಬವಣೆಗಳ ಕಳೆಯೊತ್ರೈಭುವನಗಳ ಒಡೆಯ ಮಾಧವನೆ ಭಿನ್ನವಿಪೇ ೩
ಸುಪ್ತಿಜಾಗರತ್ರಯಾ | ವಸ್ಥೆಗಳ ಪ್ರೇರಕನೆಉತ್ತಮನು ಸಾಧನದಿ | ಯುಕ್ತನೆನಿಸಿವನಾ |ಕರ್ತೃಕರ್ಮವುಕರಣ | ಎತ್ತನೋಡಿದರುತವಾವ್ಯಾಪ್ತಿಯನೂ ತಿಳಿಸೂ | ಸರ್ವೋತ್ತಮನೆ ಹರಿಯೇ ೪
ಶರ್ವಾದಿ ದಿನಿ ಜೇಡ್ಯ | ನಿರ್ವಿಕಾರನೆ ದೇವಗುರ್ವಂತರಾತ್ಮಗುರು | ಗೋವಿಂದ ವಿಠಲಾ |ಸರ್ವಜ್ಞ ನೀನಿರಲು | ಪೇಳ್ವುದೇನಿಹುದಿನ್ನುದುರ್ವಿಜೀವಿಯ ಕಾವ ಹವಣೆನಿನದಲ್ಲೇ ೫

೭೪೫
ಹನುಮೇಶ ವಿಠ್ಠಲನೆ ಸಲಹ ಬೇಕಿವಳಾಗುಣಪೂರ್ಣ ನಿರ್ದೋಷ ಚಿದ್ಭವನೆ ಹರಿಯೇ ಪ
ನಾಗಕಾಳೀಯ ಮದ ಭಂಜನನೆ ಶಿರಿಕೃಷ್ಣನೀಗಿ ಹೃದ್ರೋಗವನು ಆಗು ಹೋಗುಗಳಾ |ನಾಗಶಯನನೆ ನೀನೆ ಮಾಳ್ಪುದನೆ ತಿಳಿಸುತ್ತಾಭೋಗ ವಿಹ ಪರಧ್ವಂಸ ಭೋಗ ತಿಳಿಸುವುದೋ೧
ಮಧ್ವ ಶಾಸ್ತ್ರಜ್ಞಾನ ಉದ್ಭೋಧ ಕೊಟ್ಟಿವಳಶುದ್ಧ ತರತಮ ಭೇದ ಪಂಚಕವ ತಿಳಿಸಿ |ಅದ್ವಿತೀಯನೆ ಭಾವ ದ್ರವ್ಯ ಕ್ರಿಯಗಳು ಎಂಬಅದ್ವೈತ ತ್ರಯಜ್ಞಾನವಿತ್ತು ಪಾಲಿಪುದು ೨
ಖಗವರಧ್ವಜದೇವ ಗೋವಿಂದ ಮೂರುತಿಯೆಬಗೆಬಗೆಯ ತವಲೀಲೆ ಮಿಗಿಲು ಸ್ರ‍ಮತಿಯಿತ್ತು |ಹಗರಣದ ಸಂಸಾರ ಸಾಗರವ ದಾಟಿಸುತನಿಗಮ ವೇದ್ಯನೆ ತೋರೊ ಹೃದ್ಗುಹದಿ ಹರಿಯೇ ೩
ಪತಿಸೇವೆಯಿತ್ತಿವಳ ಕೃತಕಾರ್ಯಳೆಂದೆನಿಸೊಪಿತೃ ಮಾತೃ ಬಂಧುಗಳು ಹಿತ ಜನಾಂತಸ್ಥಕೃತಿ ಪತಿಯೆ ನಿನವ್ಯಾಪ್ತಿ ಮತಿಯಿತ್ತು ಪಾಲಿಸುತಹಿತದಿ ಸಾಧನಗೈಸೊ ವಾತಾತ್ಮ ಹರಿಯೇ ೪
ನಿರುತ ತವ ದಾಸತ್ವ ಅರ್ಥಿಯಲಿ ಇರುವಂಥತರಳೆಯನು ಸ್ವೀಕರಿಸಿ ದಾಸಳೆಂದೆನಿಸೊಶರಣ ಜನ ವತ್ಸಲನೆ ಕರುಣಿ ಭಿನ್ನಪ ಸಲಿಸೊಮರುತಾಂತರಾತ್ಮ ಗುರು ಗೋವಿಂದ ವಿಠಲಾ ೫

೩೮೬
ಹಯ ಮುಖ ಪದಾಬ್ಜ ಮಧುಪಾ | ದುರ್ಭವಭಯವ ತಾರಿಸು ಮುನಿಪಾ ಪ
ವ್ರಯವಾಯಿತು ಮಮ | ಆಯುವು ಎಲ್ಲವುಪ್ರಿಯ ನೀನಲ್ಲವೆ | ಭಯ ಪರಿಹರಿಸೈ ಅ.ಪ.
ರಜತ ಪುರಿಲಿ ನಿಂದೂ | ವಿಧಿಸಿದಿಅಜಪಿತ ಭಜನೆಯ ನಂದೂ |ಋಜಗಣದಲಿ ಬಹು | ರಾಜಿಪ ಗುರುವೇಅಜನ ಸುಪದವಿಗೆ | ನಿಜದಿ ಬರುವ ಯತಿ ೧
ಸೋದೆ ಪುರದಿ ವಾಸಾ | ಭಕ್ತರ$ಗಾಧ ದೋಷ ನಾಶಾ ||ವಾದಿ ಜನರ ಮದ | ಛೇದನ ದಶಮತಿಬೋಧಪ್ರೀಯ ಗುರು | ಮೋದವ ಪಾಲಿಸು ೨
ಪಂಚ ವೃಂದಾವನವಾ | ರಚಿಸುತಪಂಚರೂಪಿ ಹರಿಯಾ ||ಸಂಚಿಂತಿಸಿ ಭಕ್ತ | ವಾಂಛಿತ ಗರೆಯಲುಸಂಚುಗೊಳಿಸಿ ಪ್ರ | ಪಂಚವ ತೊರೆದೇ ೩
ಅಮರೇಂದ್ರ ನಾಳ್ಬರಲೂ | ತ್ರೈವಿಕ್ರಮ ದುತ್ಸವದೋಳೂ ||ಸಮಯವಲ್ಲವಿದು | ನಿಮಗೆಂದೆನುತಲಿಕ್ರಮಿಸುವ ತೆರ ನೀ | ಮಾಡಿದೆ ಯತಿವರ ೪
ಪೂವಿಲ್ಲನ ಪಿತನಾ | ಗುರುಗೋವಿಂದ ವಿಠ್ಠಲನಾ ||ಭಾವದಿ ಕಾಣುತ ಮೈಮರೆದ್ಹಿಗ್ಗುವಈ ವಿಧ ಸುಖ ಯಾವಾಗಲೂ ಕಾಣುವ ೫

೭೪೬
ಹಯಗ್ರೀವ ವಿಠಲ | ಪೊರೆಯ ಬೇಕಿವನಾ ಪ
ಭಯ ಭರಿತ ಭಕ್ತಿಯಿಂ | ಪ್ರಾರ್ಥಿಸುತ್ತಿಹನು ಅ.ಪ.
ಗುರುತಂದೆ ಮುದ್ದು ಮೋಹ | ನರಿತ್ತಂಕಿತ ಪದಮರೆಯಾಗಿ ಕಾಣದಲೆ | ಪೋದುದಕ್ಕಾಗೀಪರಿತಪಿಸಿ ಬಹುವಾಗಿ | ಮೊರೆಯನಿಡುತಿಹ ಹರಿಯೆಕರುಣಿಗಳು ಗುರು ಪರವು | ಪದರಚಿಸಿ ಇತ್ತೇ ೧
ಪ್ರಾಚೀನ ಕರ್ಮಗಳ | ಮೋಚಿಸುತ ಪರಿ ಪರಿಯಸೂಚಿಸೋ ಸನ್ಮಾರ್ಗ | ಸಾಧನಕೆ ಹರಿಯೇ ವಾಚಾಮ ಗೋಚರನೆ | ನೀಚೋಚ್ಚ ತರತಮವವಾಚಿಸುತ ಇವನಲ್ಲಿ | ಮೋಚಕನು ಆಗೋ ೨
ಪವಮಾನ ಸನ್ನುತನೆ | ಭವ ಶರಧಿ ದಾಟಿಸಲುತವನಾಮ ಸಂಸ್ರ‍ಮತಿಯ | ಶ್ರವಣ ಸುಖವಿತ್ತೂಭವರೋಗ ವೈದ್ಯ ಗುರು | ಗೋವಿಂದ ವಿಠ್ಠಲನೆಹವಣದಲಿ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ ೩

೧೫೭
ಹಯವದನಾ ಪಾಲಿಸೋ | ಹಯ ದೈತ್ಯ ನಿಧನಾ ಪ
ಭಯಕೃತು ಭಯಹರ | ದಯದೃಶ ತೋರಯ್ಯ ಅ.ಪ.
ಅಜ ಜನಕನೆ ಹರಿ | ದ್ವಿಜವರ ವಂದ್ಯನೆನಿಜಪದ ಹೃದಯಾಂ | ಬುಜದಲಿ ತೋರುತ೧
ವಾದೀಭ ಮೃಗರಾಜ | ವರ ವಾದಿರಾಜರ ಕರ ಆದರದಲಿ ಪಿಡಿ | ದಾದರಿಸಿದನೇ ೨
ಅರಿದರ ವರ ಗ್ರಂಥ ಜಪಸರ ಧರವರ ಉರಗಾತಪ | ಧರಿಸಿಹೆ ಶಿರಿಯನು ೩
ಶತಾನಂದ ಕೌಸ್ತುಭ | ಶತ ಪತ್ರಾಸನಶತ ಪತ್ರ ಕರ ಪಾದ | ಶತ ಪತ್ರ ನೇತ್ರಾ ೪
ಭಾವಕೆ ಒಲಿವನೆ | ಭಾವದೊಳಗೆ ನಿಲ್ಲುಗೋವಿದಾಂಪತಿ ಗುರು | ಗೋವಿಂದ ವಿಠಲಾ ೫

೭೪೭
ಹಯಾನನ ವಿಠಲಾ ನೀ ದಯದಿ ಸಲಹೊ ಇವಳಾ |ದಯಾಪಯೋನಿಧಿ ಎಂದು ನಿನಗೆ ಭಿನ್ನೈಪೇ ಪ
ಕುಕ್ಷಿಯೊಳು ಜಗಧರಿಪ ಪಕ್ಷಿವಾಹನದೇವಲಕ್ಷಿಸದಲೇ ದೋಷ | ಲಕ್ಷವನು ಇವಳಾಈಕ್ಷಿಪುದು ಕರುಣಾಕಟಾಕ್ಷದಲ್ಲೆಂದೆನುತಲಕ್ಷ್ಮೀರಮಣನೆ ಹರಿಯೆ ಪ್ರಾರ್ಥಿಸುವೆ ನಿನಗೇ ೧
ಯೋಗಿಜನ ವಂದ್ಯಭವ | ರೋಗಾಹಿವಿಪ ಹರಿಯೆಭೋಗಿ ಭೂಷಣ ವಿನುತ | ಬಾಗಿ ಬೇಡುವೆನೋ |ಜಾಗುಮಾಡದೆಲೆ ವೈ | ರಾಗ್ಯ ಭಕ್ತಿಜ್ಞಾನಯೋಗ ಕೊಟ್ಟುದ್ದರಿಸು | ಸಾಗರಜೆ ರಮಣಾ ೨
ವಾಚಾಮ ಗೋಚರನೆ | ನೀಚೋಚ್ಚಕ್ರಮ ತಿಳಿಸಿಮೋಚ ಕೇಚ್ಛೆಯ ಮಾಡೊ | ಪಾಚಕಸುವಂದ್ಯಾಪ್ರಾಚೀನ ಕರ್ಮಾಳಿ ಯೋಚಿಸಲು ಅಳವಲ್ಲಆಚರಿತ ಸಂಚಿತವ | ಮೋಚಿಸಾಗಾಮೀ ೩
ಎಲ್ಲವನು ಬಲ್ಲ ಸಿರಿ | ನಲ್ಲ ನಿನಗೀಪರಿಯಸೊಲ್ಲ ಪೇಳುವುದುಚಿತೆ | ಚೆಲ್ವ ಹಯವದನಾಬಲ್ಲಿದನೆ ನೀನಾಗಿ | ಚೆಲ್ವ ರೂಪವ ತೋರೆಸಲ್ಲಲಿತ ಅಂಕಿತವ | ಸಲ್ಲಿಸಿಹೆ ದೇವಾ ೪
ಭಾವುಕಾರ್ಜುನ ಬಂಡಿ | ಬೋವನಾಗುತ್ತ ಭವನೋವಕಳೆವೋಪಾಯ | ನೀವಲಿದು ಪೇಳೀತಾವಕರ ಪೊರೆದಂತೆ | ಭಾವುಕರ ಪೊರೆ ಬೇಡ್ವೆಗೋವುಗಳ ಪಾಲ ಗುರು ಗೋವಿಂದ ವಿಠಲ ೫

೩೮
ಹರಿ ಗೋಪಾಲ ವಿಠಲ | ಪೊರೆಯ ಬೇಕಿವಳಾ ಪ
ದುರಿತ ದುಷ್ರ‍ಕತವೆಲ್ಲ | ದೂರ ಓಡಿಸುತಾ ಅ.ಪ.
ತರಳೆ ದ್ರೌಪದಿ ವರದ | ಮರಳ್ಯಹಲ್ಯಯ ಪೊರೆದತರಳ ಪ್ರಹ್ಲಾದನನ | ಪೊರೆದ ನರಹರಿಯೇ |ವರುಷ ಐದರ ಧೃವಗೆ | ವರದನಾಗೀ | ತೋರ್ದೆಕರುಣಾಳು ನಿನ್ಹೊರತು | ಬೇರನ್ಯಕಾಣೇ ೧
ಸಂಸಾರದಲಿ ನೊಂದು | ಕಂಸಾರಿ ನಿನ್ನ ಪದಪಾಂಸುವನೆ ಶಿರದಿ ನಿ | ಸ್ಸಂಶಯದಿ ಧರಿಸೀಶಂಸಿಸಲು ಮಹಿಮೆ ತವ | ದಾಸ್ಯ ಪಾಲಿಸುತಿನ್ನುಹಂಸವಾಹನ ಪಿತನೆ | ವಂಶ ಉದ್ಧರಿಸೋ ೨
ಕರ್ಮ ಪ್ರಾಚೀನಗಳ | ಮರ್ಮ ತಿಳಿದವರ್ಯಾರೊಕರ್ಮನಾಮಕನೆ ದು | ಷ್ಕರ್ಮ ಪರಿಹರಿಸೀ |ಪೇರ್ಮೆಯಿಂದಿವಳ ಪೊರೆ | ನಿರ್ಮಲಾತ್ಮಕ ದೇವಧರ್ಮ ಗೋಪ್ತ ಸ್ವಾಮಿ | ಬ್ರಹ್ಮಾಂಡದೊಡೆಯಾ ೩
ಮಧ್ವಮತ ಸಿದ್ಧಾಂತ | ಪದ್ಧತಿಗಳರುಹೃತ್ತಶುದ್ಧಸಾಧನ ಗೈಸೊ | ಮಧ್ವಾಂತರಾತ್ಮಾಅಧ್ವಯನು ನೀನೆಂಬ | ಶುದ್ಧ ಬುದ್ಧಿಯನಿತ್ತುಉದ್ಧರಿಸೊ ಈಕೆಯನು | ಪ್ರದ್ಯುಮ್ನ ದೇವಾ ೪
ಸರ್ವಜ್ಞ ಸರ್ವೇಶ | ನಿರ್ವಿಕಾರನೆ ದೇವಸರ್ವದ ತವನಾಮ | ಸ್ಮರಿಪ ಸುಖವಿತ್ತುದುರ್ವಿ ಭಾವ್ಯನೆ ದೇವ | ಅಸ್ವತಂತ್ರಳ ಕಾಯೊಗುರ್ವಂತರಾತ್ಮ ಗುರು | ಗೋವಿಂದ ವಿಠಲಾ ೫

೭೩೯
ಹರಿ ಗೋವಿಂದ ವಿಠಲ | ಪೊರೆಯ ಬೇಕಿವಳಾ ಪ
ನಿರುತ ಹರಿ ಗುರುದಾಸ್ಯ | ಅರ್ಥಿಸುತ್ತಿಹಳಾ ಅ.ಪ.
ಸುಪ್ತೀಶತೋರ್ದಪರಿ | ಪ್ರಾಪ್ತಿ ಪ್ರಾಣನ ವಶವುಕ್ಲಪ್ತವಾಯ್ತಿವಳೀಗೆ | ಮುಕ್ತಿ ಸಾಧನಕೆ |ಎತ್ತ ನೋಡಿದರತ್ತ | ಆಪ್ತಮುಖ್ಯ ಪ್ರಾಣಪೊತ್ತಿಹನು ಸರ್ವತ್ರ | ವ್ಯಾಪ್ತಿ ಮೂರುತಿಯೇ ೧
ಮಂಗಳಾಂಗನೆ ಹರಿಯೆ | ಶೃಂಗಾರ ಮೂರುತಿಯೆಅಂಗನೆಯ ಕೈಪಿಡಿದು | ಕಾಪಾಡೊ ಹರಿಯೇ |ಸ್ವಾಂಗಾಯ ನಾಮ ನಿ | ನ್ನಂಗ ವೈಭವ ತಿಳಿಸಿಲಿಂಗಾಂಗ ಕಳೆಯಿವಳ | ರಂಗ ಭವ ಹಾರೀ ೨
ಭುವನ ಪಾವನ ನಿನ್ನ | ಸ್ತವನ ವೈಭವ ಕೇಳೆಸರ್ವದಾ ಸರ್ವತ್ರ | ಶ್ರವಣ ಸುಖದಲ್ಲೀನಿರ್ವಿಕಾರದ ತಿರಗಲೀಕೆಯ ಮನಸುಸರ್ವಾಂತರಾತ್ಮಕನೆ | ಸಾರ್ವಭೌಮ ೩
ಅಧಿಭೂತ ಅಧ್ಯಾತ್ಮ | ಅಧಿ ದೈವ ತಾಪ ಭಯಅಧ್ಯಕ್ಷ ಶ್ರೀಹರಿಯೆ ನೀನಾಗಿ ಕಳೆದೂ |ಮಧ್ವಾಂತರಾತ್ಮಕನ | ಹೃದ್ಗುಹದಿ ತೋರೆಂದುಬುದ್ಧಿ ಪೂರ್ವಕ ಬೇಡ್ವೆ | ಪದ್ಮನಾಭಾ ೪
ಸಾಧನದ ಜೀವಿಗಳ | ಸಾಧನದ ಪ್ರತಿಭಂಧಸಾದರದಿ ವಾರಿಸುತ | ಮೋದಮನ ನೀಯೋ |ಮೋದಮುನಿ ವಂದ್ಯ ಗುರು | ಗೋವಿಂದ ವಿಠಲನೆನೀದಯದಿ ಪೊರೆ ಇವಳ | ಪ್ರಹ್ಲಾದ ವರದಾ ೫

೭೩೬
ಹರಿಕೃಷ್ಣ ವಿಠಲಾ | ಕರುಣಿಸಿವಳೀಗೆ ಪ
ಕರುಣಾನಿಧಿ ಎಂದೆನುತ | ಮರೆಹೊಕ್ಕೆ ದೇವಾ ಅ.ಪ.
ಜ್ಞಾನವರ್ಜಿತಳಾಗಿ | ಆಜ್ಞೆಳೆಂದೆನಿಸಿಹಳುಮಾನನಿಧಿ ನೀನಾಗಿ | ಜ್ಞಾನ ಸಾಧನವಾಸಾನುಕೂಲಿಸೆ ಕಾಯೊ | ಮೌನಿಜನ ಸದ್ವಂದ್ವನೀನೆಗತಿ ಎಂದೆನುತಾ | ತನುವನರ್ಪಿಪಳೊ ೧
ಭಕ್ತಿಭರಿತಳು ಆಗಿ | ಆರ್ಥಿಪಳು ಸದ್ಗತಿಯಾನಿತ್ಯ ನಿಗಮಾತೀತ | ಭಕ್ತವತ್ಸಲನೇಕೃತ್ಯ ಸರ್ವಕ್ಕೆಲ್ಲ | ಕತೃ ನೀನೆಂಬಂಥಾಉತ್ತಮದ ಮತಿಯಿತ್ತು | ಬೃತ್ಯಳನು ಪೊರೆಯೋ ೨
ಕ್ಲೇಶಮೋದಗಳು ಸಮ | ಭಾಸವಾಗಲಿ ದೇವವಾಸವಾದ್ಯಮರನುತ | ವಾಸುದೇವಾ ಖ್ಯಏಸೇಸು ಜನ್ಮಗಳ | ರಾಶಿ ಪುಣ್ಯದ ಫಲದಿದಾಸ ದೀಕ್ಷೆಗೆ ಮನವ | ಆಶಿಸಿಹಳಯ್ಯಾ ೩
ತೈಜಸನ ಸೂಚನೆಯ | ವ್ಯಾಜದಲಿ ಹರಿದಾಸ್ಯಮಾಜದಲೆ ಇತ್ತಿಹೆನೊ | ಅವ್ಯಾಜಮೂರ್ತೇಮಾಜಗಜ್ಜನಕನೆ | ರಾಜೀವ ನಯನ ಹರಿಓಜಸ್ಸುಗಳ ಕೊಟ್ಟು ಕಾಪಾಡೊ ಇವಳಾ ೪
ಸರ್ವಜ್ಞ ಸರ್ವೇಶ | ಸರ್ವಕಾರಣ ಮೂರ್ತಿಊರ್ವಿಯಾಳಿವಳೊಬ್ಬ | ದರ್ವಿಯಂತಿಹಳೋಸರ್ವದಾ ತವಸ್ಮರಣೆ | ಕೃಪೆಗೈದು ಪೊರೆ ಇವಳಾಗುರ್ವಂತರಾತ್ಮ ಗುರು | ಗೋವಿಂದ ವಿಠಲಾ ೫

೭೩೭
ಹರಿಗುರು ಪ್ರಸನ್ನ ವಿಠಲ | ಪೊರೆಯ ಬೇಕಿವಳಾ ಪ
ದುರಿತ ರಾಶಿಯ ಕಳೆದು | ಕಾಪಾಡೋ ಇವಳಾ ಅ.ಪ.
ಕಾಮಪಿತ ನಿನ್ನ | ನಿಷ್ಕಾಮ ಪೂಜೆಯಲಿಸಾಮರಸ್ಯವನಿತ್ತು | ಕಾಪಾಡೋ ಹರಿಯೇತಾವರಸ ಭವ ವಂದ್ಯ | ಕೋಮಲಾಂಗನೆ ದೇವಕಾಮಿತಾರ್ಥದವನಾಗಿ | ಕಾಪಾಡ ಬೇಕೋ ೧
ಸಾಧನದ ಹಾದಿಯನು | ನೀ ದಯದಿ ತಿಳಿಸುತ್ತಮೋದ ತೀರ್ಥರ ತತ್ವ | ಬೋಧ ತಿಳಿಸುತಲೀಸಾಧನವ ಗೈಸಿ ಸ | ಮ್ಮೋದ ಕೊಡು ಇವಳೀಗೆಹೇ ದಯಾನಿಧಿ ಹರಿಯೇ | ಬಾದರಾಯಣನೇ ೨
ಪತಿಸುತರೊಳು ಹರಿಯೇ | ವ್ಯಾಪ್ತಿಯನೆ ತಿಳಿಸುತ್ತಹಿತದಾದ ಸೇವೆಯಲಿ | ರತಳೆನಿಸೊ ಹರಿಯೇಹಿತವಹಿತವೆರಡನ್ನು | ಸಮತೆಯಲಿ ಉಂಬಂಥಮತಿಯ ನೀ ಕರುಣಿಸುತ | ಅತಿಹಿತದಿ ಪೊರೆಯೋ ೩
ಭವವನದಿ ನವಪೋತ | ತವದಿವ್ಯಸ್ರ‍ಮತಿ ಇತ್ತುಶ್ರವಣ ಸುಖ ವದಗಿಸುತ | ಸಾಧನವ ಗೈಸೋಭುವನ ಪಾವನ ದೇವ | ತವನಾಮ ಜಪಗಳನುಸರ್ವದಾ ಕರುಣಿಸುತ | ಉದ್ಧರಿಸೋ ಇವಳಾ ೪
ಕೋವಿದೋತ್ತಂಸ ಹರಿ | ಗೋವರ್ಧನೋದ್ಧರನೆಕಾವ ಕೊಲ್ಲುವ ನೀನೆ | ಶರ್ವಾದಿ ವಂದ್ಯಾನೀ ಒಲಿದು ಪೊರೆಯೆಂಬ | ಬಿನ್ನಪವ ಸಲಿಸಯ್ಯಗೋವಿಂದ ಪತಿ ಗುರು | ಗೋವಿಂದ ವಿಠಲಾ ೫

೭೪೦
ಹರಿತ್ರಿವಿಕ್ರಮ ವ್ಯಾಸವಿಠಲ | ಪೊರೆ ಇವಳಾ ಪ
ದುರಿತ ದುಷ್ರ‍ಕತವೆಲ್ಲ | ದೂರಮಾಡುತಲೀ ಅ.ಪ.
ಗುರುವನುಗ್ರಹ ಸೂಚಿ | ವರಸು ತೈಜಸಪೇಳ್ದಎರಡೇಳು ಮತ್ತೇಳು | ವರುಷ ಪೂರ್ವದಲೀಗುರು ರೂಪಿ ನಿಂ ತೋರಿ | ಪರಮ ವೇದದ ಸಾರಹರಿಕಥಾಮೃತ ಸಾರ | ಪಠಿಸೆಂದು ಪೇಳ್ದಾ ೧
ವರುಷ ಪೈಂಗಳ ಪುಷ್ಯ | ಆರಾಧನೆಯದಿನದಿಗುರುಗಳನು ಕಂಡೀಕೆ | ಅವರೆ ಇವರೆಂದುಭರದಿ ನಿಶ್ಚಯಿಸುತಲಿ | ಹರಿದಾಸ್ಯ ಕಾಂಕ್ಷಿಸುತಗುರುವೆಂದು ಎನ್ನ ಬಳಿ | ಪ್ರಾರ್ಥಿಸುತ್ತಿಹಳಾ ೨
ಸಂಸಾರ ಕ್ಲೇಶಗಳ | ಕಂಸಾರಿ ಕಳೆದು ಭವಸಂಸಕ್ತಳಾಗಿಸದೆ | ಉದ್ದರಿಸೊ ಇವಳಾಶಂಸಿಸೀ ತವಪಾದ | ಪಾಂಸುವನೆ ಧರಿಸಿ ನಿ-ಸಂಶಯದಿ ತವದಾಸ್ಯ | ಸಿದ್ದಿಸೊ ಹರಿಯೇ ೩
ಪತಿತ ಪಾವನ ರಂಗ | ಪತಿವ್ರತೆಗೆ ಸುಜ್ಞಾನಭಕ್ತಿ ಹರಿಗುರುಗಳಲಿ | ಇತ್ತು ಅಧಿಕಧಿಕಾವತ್ತಿ ಬಹ ವಿಘ್ನಗಳ | ಹತ್ತಿಕ್ಕಿ ಪೊರೆಯೆಂದುಅರ್ಥಿಯಲಿ ಬಿನೈಪೆ | ಮರುತಂತರಾತ್ಮ ೪
ದರ್ವಿ ಜೀವಿಯ ಪೊರೆಯೊ | ದುರ್ವಿಭಾವ್ಯನೆ ಹೃದಯಗಹ್ವರದಿ ತವರೂಪ | ತೋರ್ವ ಮನಮಾಡೀಸರ್ವತ್ರ ತವನಾಮ | ದಿವ್ಯ ಸಂಸ್ರ‍ಕತಿ ಈಯೊಸರ್ವೊತ್ತಮನೆ ಗುರು | ಗೋವಿಂದ ವಿಠಲಾ ೫

೭೪೩
ಹರಿನಾರಾಯಣ ವಿಠಲ ಸಲಹೊ ಇವನಾದುರಿತ ರಾಶಿಗಳಳಿದು | ಕರ ಪಿಡಿಯೊ ಬೇಗಾ ಪ
ಸಾಧನ ಸುಜೀವಿಗಳ | ಕಾದುಕೊಳ್ಳುವ ಭಾರಆದಿ ಮೂರುತಿ ಹರಿಯೆ | ನಿನ್ನದಲ್ಲೇವೇದಾಂತವೇದ್ಯ ಸಿರಿ | ಮಾಧವನೆ ಭಿನ್ನವಿಪೆಕಾದುಕೊ ಬಿಡದಿವನ | ಹೇ ದಯಾಪೂರ್ಣ ೧
ಪ್ರಾಚೀನ ಕರ್ಮಗಳ | ಯೋಚಿಸಲು ಯನ್ನಳವೆಮೋಚ ಕೇಚ್ಛೆಯ ತೋರೊ | ಕೀಚಕಾರಿ ಪ್ರೀಯನೀಚೋಚ್ಛ ತರತಮವ | ವಾಚಿಸಿವನಲಿ ನಿಂತುವಾಚಾಮ ಗೋಚರನೆ ಸಾಕ್ಷಿ ವೇದ್ಯಾ ೨
ಭಾಗವತ ಪೀಯೂಷ | ವೇಗ ಉಣಿಸುತಲಿವನನೀಗೊ ಭವರೋಗವನು | ನಾಗಾರಿವಾಹಾಜಾಗರ ಸ್ವಪ್ನದಲಿ | ನೀಗಿ ಭ್ರಮವೆರಡನ್ನುಜಾಗು ಮಾಡದೆ ಸಲಹೋ ಭೊಗಿಶಯನಾ ೩
ಪೊಂಬಸಿರ ವಂದ್ಯ ಭವ | ಅಂಬುಧಿಯ ದಾಂಟಿ ನೀ-ಲಾಂಬು ದಾಭ ಹರಿ ಹೃದಯಾಂಬರದಿ ತೋರಿಇಂಬಿಟ್ಟು ಭಕ್ತನ್ನ | ಸಲಹೆ ಬಿನ್ನವಿಪೆ ಕೃ-ಪಾಂಬುಧಿಯೆ ತವ ಪಾ | ದಾಂಬುಜದಲಿಡುವೆ ೪
ಭಾವ ಕ್ರಿಯ ದ್ರವ್ಯದೊಳು | ಅದ್ವಯನು ನೀನೆಂಬಭಾವದನುಭವವಿತ್ತು | ಇವನ ಪಾಲಿಪುದುಕಾವ ಕರುಣಿಯೆ ಗುರು | ಗೋವಿಂದ ವಿಠ್ಠಲನೆಗೋವತ್ಸಧ್ವನಿದಾವು | ಧಾವಿಸೂವಂತೆ ೫

೩೨೪
ತೊರವಿ ನರಹರಿ ಸ್ತೋತ್ರ
ಹರಿಯು ನಿಂದಿಹ ನೋಡೀ | ಭೂತಳದಿ ತೊರವಿಲಿಹರಿಯು ಇಂದಿರೆಗೂಡಿ | ಒಡವೆರೆಸಿ ಸರ್ವದಶರಣ ಜನರೊಡನಾಡೀ | ಸುಖವೀವ ನೋಡೀ ಪ
ಹರಿಯೆ ಪರನೆಂಧ್ಹೇಳ್ಪ ಬಾಲಕೆದುರುಳ ಕಾಶ್ಯಪು ಪರಿಪರೀಯಲಿಕರ ಕೆರೆಯ ಗೊಡಲಾಗ ನರಹರಿತರುಳನುದ್ಧರ ಗೈದ ಶ್ರೀಹರಿ ಅ.ಪ.
ಉದರ ಪೋಷಕ ಬೋಧಾ ಗುರುಶಂಡಮರ್ಕರು ಮುದದಿ ತಿಳುಹಲ ಗಾಧ | ಸರಿಸುತ್ತ ದೂರದಿಹದನ ಪೇಳಿದ ವೇದ | ಪ್ರತಿಪಾದ್ಯ ಶ್ರೀಹರಿವಿಧ ವಿಧವು ಕಾರ್ಯಗಾಧ | ಸೃಷ್ಠಿ ಲಯ ಮೊದಲಾದಅದುಭೂತವು ಎನೆ ಕಾರ್ಯ ಬಹಳವಗೈದು ಲೀಲೆಯ ತೋರಿ ಜಗದೊಳುಮುದವ ಬೀರುತ ಸಾಧು ಸಜ್ಜನಮೋದ ಬಡಿಸುವೆ ನೆಂದು ಪೇಳಿದ ೧
ಕರಿಯಪದತಳ ತುಳಸೀ | ಪ್ರಹ್ಲಾದ ಬಾಲನಹಿರಿದು ಶರಧಿಯೊಳಿರಿಸೀ | ಮತ್ತವನು ಉಳಿದಿರೆಧರೆಯ ಗುಹೆಯೊಳಗಿರಿಸೀ | ಮೇಲ್ಕಿಲೆಯ ಮುಚ್ಚಲುಮರಳಿ ಬಂದನು ಜೀವಿಸೀ | ಹರಿಯ ವಿಶ್ವಾಸೀ ತರಳನಿಗೆ ಅಹಿಯಿಂದ ಕಚ್ಚಿಸಿಕರುಣಿ ಮಾತೆಯು ವಿಷವನೂಡಿಸೆಗರಸಹೋದರಿ ಪೊರೆಯಲವನನುತರಳನಿಂಧ್ಹರಿವರನುಯೆಂದ ೨
ಬಂದ ಚಿಮ್ಮಲಿಗಿಂದ | ಭಕುತಂಗೆ ಪೇಳುತನಂದ ಹುಲ್ಲೆಸೆಯಂದ | ಅದು ಹತ್ತಿ ಉಳಿಯಲುನಿಂದಿಹೆ ತಾ ನಲ್ಲೆಂದ | ಅದರಂತೆ ಗೈಯಲುನಿಂದ ತೋರವಿಲಿ ಛಂದ | ಹರಿಯು ಬಹು ಆನಂದನಂದ ನಂದನನಾದ ಗುರು ಗೋ-ವಿಂದ ವಿಠಲನ್ನಕೇಸರಿಯುಚಂದದಿಂ ದೂವ್ರ್ಯಾಸ ಪೂಜಿತನಂದ ಕಂದ ಮುಕುಂದ ಶ್ರೀಹರಿ ೩

೧೫೮
ಹರಿಯೆ | ಕರುಣ ವಾರಿಧಿಯೆ | ಧೊರೆಯೇ |ವರ ಚರಣ ಸೇವೆಯನು ಕೊಡು ಹರಿಯೇ ಪ
ಸರಸಿಯಲಿ ಕರಿರಾಜ | ಕರೆಯಲಂದೂತ್ವರದಿಂದ ನೀ ಬಂದು | ಪೊರೆದೆ ಮುಂದೂ ||ಧುರದಲ್ಲಿ ಗಾಂಗೇಯ | ಶರದಿ ಸೆಣೆಸಲು ಅಂದುಸರಸದಲಿ ನೀ ಅವನ | ಪೊರೆಯಲಿಲ್ಲವೆ ಎಂದು ೧
ದುರುಳ ದುಶ್ಯಾಸನ | ಸೀರೆ ಸಭೆಯಲಿ ಸೆಳೆಯೇತರಳೆ ಪಾಂಚಾಲೆ | ಓಲೆ ಕಳುಹಿದಳೆ ಹರಿಯೆತರುಳೆ ಕೈಗಾಯ ಬೇಕೆಂದು | ನಿನ್ನ ಧೊರೆಯೇಎರಳಾಕ್ಷಿಗಕ್ಷಯ್ಯ | ವಸನಿತ್ತೆ ಹರಿಯೇ ೨
ಅಂದು ಬಲತಾಯಿ ಬಾಲಕನ | ತೊಡೆಯಿಂದ ನೂಕೇ |ಬಂದು ಕಾನನಕೆ ತಪಗೈದ | ತರಳನನು ಕಾಯ್ದೇ |ಇಂದು ನಾ ಮಾಡಿದಪರಾಧ | ವೇನಯ್ಯ ಹರಿಯೇ |ಕಂದನಪರಾಧ ಎಣಿಸುವಳೆ | ತಾಯಿ ಧೊರೆಯೇ೩
ಗೌತಮರ ಮಡದಿಯನು | ಕಾಯಲಿಲ್ಲವೆ ಹರಿಯೆಔತಣವ ಕೊಟ್ಟು ಬರ | ಹೇಳಿದಳೆ ಧೊರೆಯೇ ||ವೀತಶೋಕನೆ ಎನ್ನ | ಮೊರೆ ಕೇಳಿಸದೆ ಹರಿಯೇಔತಪ್ರೋತ ನೀನೆಲ್ಲವನು | ತಿಳಿದಿರುವೆ ಧೊರೆಯೇ ೪
ಬಲಿಯ ಯಾಚಿಸುತ | ನೀ ಅವನ ವಂಚಿಸಿದಿ ಹರಿಯೆತಲೆ ಬಾಗಲಲಿ ನಿಂದು | ನೀ ಅವನ ಪೊರೆದೆ ಧೊರೆಯೆಸಲೆ ಬೀದಿ ಬೀದಿಯಲಿ | ನಾ ಕೀರ್ತಿಸುವೆ ಹರಿಯೇಬಲು ದಯಾಪರ ಗುರು | ಗೋವಿಂದ ವಿಠಲೆಂದು ಧೊರೆಯೆ ೫

೧೫೯
ಹರಿಯೆ ನಿನಗೆ ಮೊರೆಯನಿಡುವೇ ಪ.
ದುರಿತ ಪರಿಹಾರ ನಿನ್ನ | ಸ್ಮರಣೆ ಎನಗೀಯೋ ಅ.ಪ.
ಜ್ಞಾನ ಜ್ಞೇಯ ಜ್ಞಾತೃವೆಂಬಭಿಧಾನದಿಂದ ಕರೆಸುವಿಯೋನಾನು ನನ್ನದು ಎಂಬ ದುರಭಿ | ಮಾನವನ್ನೆ ಪರಿಹರಿಸೋ ೧
ಅನಘ ತ್ರಿಜಗಕ್ಕೊಡೆಯ ನೀನು | ಕ್ಷಣಕೆ ಜನಿ ಸ್ಥಿತಿ ಮೃತಿಯ ನೀನೆಮನುಜನ ದಣಿದಣಿಪುದಿನ್ನ | ಘನವೆ ನಿನಗೆ ಪಾವನ ಮೂರ್ತಿ ೨
ಆಳು ನಿನ್ನವನೆಂದು ತಿಳಿಯೋ | ಪಾಲಿಸೊಲಿಮೆ ನಿನ್ನ ಪದದಿಪಾಲ ಸಾಗರ ಶಯ್ಯ ಕೃ | ಪಾಲು ಗುರು ಗೋವಿಂದ ವಿಠಲ ೩

೧೬೦
ಹರಿಯೆ ನಿನ್ನ ಭಜಿಸುವಂಥ | ಶರಣ ಸಂಗವಾನಿರುತ ಇತ್ತು ಕಾಯೊಯೆನ್ನ | ಅಘವ ಕಳೆಯುವ ಪ
ಮೇರುಗಿರಿಯ ಪೋಲ್ವದುರಿತ | ರಾಶಿ ನಿಚಯವಾಸಾರಿ ತೂಲರಾಶಿಗನಳ | ಪರಿಯ ಮಾಡುವಾ |ಸೂರಿ ಜನ ಸಂಗ ಫಲವ | ಪೇಳಲಳವಾತೋರಿ ಪೊರೆ ಅಂಥವರ | ದೇವರ ದೇವಾ ೧
ನಿನ್ನ ಸಂಕಲ್ಪಾನುಸಾರ | ನಡೆವ ಭಕ್ತರಮನ್ನುಜರು ಅವರೆಂದು | ತಿಳಿವ ಕುಜನರಇನ್ನ ತನಯ ಶಿಕ್ಷಿಸುವ | ಬಿಡದಲವರಬೆನ್ನು ಹುರಿಯ ಕೀಳಿಸುವ | ಮನ್ಯುಲವರ ೨
ತನುವು ಮನ ಧನ ನಿನಗೆ | ಅರ್ಪಿಸುವರೋಗಣನೆ ಮಾಡರೊ ನಿಂದ್ಯಾನಿಂದ್ಯ | ಎಂದಿಗವರೋತೃಣಕೆ ಬಗೆದು ಧನ ಧಾನ್ಯ | ದಾನ ಮಾಡುವರೋಘೃಣಿಯೆ ನಿನ್ನ ಧ್ಯಾನಿಸುತ | ಕಾಲ ಕಳೆವಾರೋ ೩
ಸತಿಸುತಿರೊಡನೆಯಿದ್ದು | ಮಮತೆ ದೂರರೋಹಿತವು ಅಹಿತವೆರಡು ಸಹಿಸಿ | ನಿನ್ನಿಂದೆಂಬೋರೋ |ಕ್ಷಿತಿಯೊಳುಳ್ಳ ತೀರ್ಥಕ್ಷೇತ್ರ | ಪಾವಿಸುವರೋಗತಿಯು ನೀನೆ ಸತತ ಎಂದು | ಅನ್ಯ ಬಗೆಯಾರೋ ೪
ದರ್ವಿಯಂತೆ ಜೀವನೆಂದು | ಅರಿತು ಅನುದಿನದುರ್ವಿಭಾವ್ಯ ವ್ಯಕ್ತಾಅವ್ಯಕ್ತ | ಅನಂತಗುಣಶರ್ವ ವಂದ್ಯನಾದ ಗುರು | ಗೋವಿಂದ ವಿಠಲನಸರ್ವಕಾಲ ತುತಿಸುತ್ತ | ತಿಳಿವರಾಧೀನ ೫

೨೪೨
ಹರಿಶಯ್ಯ – ಹರಿಶಯ್ಯ ಪ
ಪೂರ್ವ ತ್ರಿಯಂಬಕ | ಜೀವರ ಮಾನಿಯೆ ಅ.ಪ.
ವಾರುಣಿ ಪತಿ ನಿನ | ಚಾರು ಚರಣವನುಆರಾಧಿಪೆ ಭವ | ವಾರಿಧಿ ದಾಟಿಸು ೧
ದಾತನೆ ಪ್ರಾರ್ಥಿಪೆ | ವಾತೋದ್ಭವ ಎನಪ್ರೀತಿಲಿ ಕರಪಿಡಿ | ವಾತಾಶನ ಗುರು೨
ಶೇಷ ಶೇಷ ಎನ | ದೋಷ ನಿಕರ ನಿ-ಶ್ಯೇಷ ಗೈಸಿ ಸಿರಿ | ಕೇಶವನಲಿ ಬಿಡು ೩
ಖಗವರ ಸಮ ಪ | ನ್ನಗ ಜಗಧರ ಹರಿನಗಧರ ಮಂಚನೆ | ಬಗೆ ಹರಿಸೀ ಭವ ೪
ಪಕ್ಷಿಯ ವಹ ಹರಿ | ಪಕ್ಷಸಾಧಕ ಗುರುಚಕ್ಷುಶ್ರ್ಯವ ಎನ | ಈಕ್ಷಿಸು ಕರುಣದಿ ೫
ಸ್ವಪ್ನದಿ ಇತ್ತಿಹ | ಆಜ್ಞೆಯಂತೆ ಗುರುಸ್ವಪ್ನಾಖ್ಯಾನದಿ | ಪ್ರಜ್ಞೆಯ ನಿರಿಸೋ ೬
ಸಾವಿರ ಮುಖದಲಿ | ಭುವಿಧರಭಿಧ ಗುರುಗೋವಿಂದ ವಿಠಲನ | ಸೇವಿಪೆ ಭಕುತಿಲಿ ೭

೮೦
ಹರಿಸೇವೆ ಕೈಂಕರ್ಯ ಪರಮ ನಿಷಾತೆ |ಪರಿಹರಿಸು ಭವತಾಪ ಜಾಂಬುವತಿ ಮಾತೇ |೫
ಸೋಮಸುತೆ ಎಂದೆನಿಸಿ ಪೂರ್ವಸರ್ಗದಿ ನೀನುಸೋಮಕುಲ ಭೂಕ್ಷ ಶಿರಿ ಕೃಷ್ಣನವತರಿಸೇ |ಸ್ವಾಮಿ ರಾಮನ ಭೃತ್ಯ ಜಾಂಬುವಂತನ ತನುಜೆಶ್ರೀ ಮಹಿಳೆಯಂದದಲಿ ಕೃಷ್ಣ ಪ್ರಿಯಳಾದೇ ೧
ಮಿಕ್ಕ ಮಹಿಳೆಯರಿಂದ ಲಕ್ಕುಮಿಯ ಆವೇಶಪೊಕ್ಕು ನಿನ್ನಲಿ ಅಧಿಕ ಸರ್ವಕಾಲದಲೀ |ಅಕ್ಕರದಿ ಇದಕೆ ಮಿಗೆ ಲಕ್ಕುಮಿಯು ಇರಲಾಗಚೊಕ್ಕ ಮಾತೆಯು ನೀನು ಶೇಷ ಸಮಳೆನಿಪೇ ೨
ಆವೇಶ ನಿನ್ನಲ್ಲಿ ಇಲ್ಲದಿಹ ಸಮಯದಲಿದೇವಿಯರು ಮಿಕ್ಕೈದು ಮಂದಿ ಸಮ ನೀನು |ದೇವಿ ಶಿರಿ ಆವೇಶ ಅಲ್ಪವಿಹ ಸಮಯದಲಿದೇವ ಕಾಮಾದಿಗಳಿಗಧಿಕ ವಿಂಶತಿ ಗುಣದೀ ೩
ನಿರ್ಮಲೈ ಕಾಂತಿತ್ವ ವಿಮಲ ಭಕ್ತ್ಯಾದಿಗುಣಅಮಮ ನಿನ್ನಲಿ ಇಹುದು ನೈಜರೂಪಾ |ವಿಮಲ ಸಚ್ಚಾರಿತ್ರೆ ಈ ಮಹಿಯ ಸಂಚಾರನಿರ್ಮಮದಿ ಗೈದಿರ್ಪೆ ಬಧಿರಾಂಧರಂತೇ ೪
ದೇಹ ಮಮತೆಯಲಿಂದ ಮನಸೋತು ಕಷ್ಟಕ್ಕೆವಾಹನಾದಿಗಳೇರಿ ತೀರ್ಥಯಾತ್ರೆಗಳಾ |ಬಹುವಾಗಿ ಗೈದಾಗ್ಯು ಪುಣ್ಯ ಹೀನವು ಎಂದುಮಹಿಳೆ ನೀ ವರ್ಣಿಸಿಹೆ ಭಕುತರುಪಕಾರೀ ೫
ದೇವಿ ಜೈಗೀಷವ್ಯ ಶಿವನಿಂದ ಕೇಳುತ್ತಶ್ರೀ ವೆಂಕಟೇಶನ ಮಹಿಮೆ ಅಪರಿಮಿತವ |ಆವಕಾಲದಿ ಅವನ ಪಾದ ದರ್ಶನವೆಂದುಸಾರ್ವಕಾಲದಿ ನೀನು ಚಿಂತಿಸುತಲಿರಲೂ ೬
ಕಂಡು ಶ್ರೀಹರಿಯನ್ನು ಅಪರೋಕ್ಷದಲಿ ನೀನುಬಂಡುಣಿಯು ಹರಿಪಾದ ಕಮಲಕ್ಕೆ ಆಗೀ |ಹಿಂಡು ದೈವರ ಗಂಡ ಪಾಂಡುರಂಗನೆ ಎಂದುಮಂಡಿಸಿದೆ ಪರತತ್ವ ತೊಂಡರುಪಕಾರೀ ೭
ಕರದಲ್ಲಿ ಧನ್ವಂತ್ರಿ ಪಿಡಿದಮೃತ ಕಲಶದಲಿಹರಿನಯನ ಆನಂದ ಜಲಬಿಂದು ಉದರೇ |ತುರರೂಪಿಯಾದ ಶ್ರೀ ತುಳಸಿಯಲಿ ನೀನರಲುಹರಿ ನಿನ್ನ ಅಗಲದಿಹ ಸರ್ವ ಪೂಜೆಯಲೀ ೮
ಶಾಂಭವಿಯುನುತೆ ದೇವಿ ಜಾಂಬುವತಿ ಶ್ರೀ ಹರಿಯಕಾಂಭಂಥ ಸುಜ್ಞಾನ ಭಕುತಿ ವೈರಾಗ್ಯ |ಹಂಬಲದಿ ನಿನ್ನಂಘ್ರಿ ನಮಿಪೆ ತೋರ್ವುದು ಹೃದಯಅಂಬರದಲಿಹ ಗುರು ಗೋವಿಂದ ವಿಠ್ಠಲನ ೯

೧೬೧
ಹರಿಹರಾ | ಪಾಲಿಸೊ ಎನ್ನ | ಭವಹರಾ ಪ
ಹರಿಹರ ಪಾಲಿಸೊ ಎನ್ನಾ | ತವಶರಣರ ಪೊರೆವುದು ಚೆನ್ನಾ | ಆಹಉರುಗಾಯನೆಂದೆನುತ | ಸುರರು ಭೂಸುರರೆಲ್ಲಕರವ ಮುಗಿದು ನಿನ್ನ ವರಗಳ ಬೇಡೋರು ಅ.ಪ.
ದಿತಿಜರಿಗರಸು ರಕ್ಕಸನೂ | ಗುಹನತುಳ ಪರಾಕ್ರಮ ಯೂತನೂ | ಪಶುಪತಿಯ ಪಾದಕೆ ನಮಿಸಿದನೂ | ವರವತುಳ ತಾನೇ ಬೇಡಿದನೂ | ಆಹಚತುರ ಮೊಗನು ಸಿರಿ | ಪತಿಯು ಮತ್ತೆ ಪಶುಪತಿಯಿಂದಲೂ ತಾನೂ | ಹತನಾಗದವನಂತೆ ೧
ಕೊಟ್ಟನು ಹರನು ತಾನ್ವರವ | ಬಲುದಿಟ್ಟರಕ್ಕಸ ತಾಳ್ದ ಮುದವ | ಅತಿಕಷ್ಟವೀಯಲು ಸುರನಿವಹ | ಬಂದುಘಟ್ಯಾಗ್ಹಿಡಿದರು ಹರಿಪದವ | ಆಹಜಿಷ್ಣು ಸಖನೆ ಪರ | ಮೇಷ್ಠಿ ಪಿತನೆ ನಮ್ಮಕಷ್ಟವ ಕಳೆದು ಸಂ | ತುಷ್ಟಿಯ ಪಡಿಸಯ್ಯ ೨
ಸುರರ ಭೂಸುರರ ಜಂಗಳಿಯ | ನೋಡಿಪೊರೆವೆನೆಂದವರಿಗೆ ಅಭಯ | ವಿತ್ತುಹರಿಯು ತಾನೇ ರೂಪದ್ವಯ | ದಿಂದಹರಿಹರಾಭಿಧತಾನೆ ಖರೆಯ | ಆಹಸುರರು ರೂಪವ ನೋಡಿ | ಉರುತರದಾಶ್ಚರ್ಯಭರವಾ ಮೈಮರೆಯುತ | ಕರವನೆ ಮುಗಿದರು ೩
ಕಾಲ ನಿರೀಕ್ಷಿಸುತ್ತಿದ್ದು | ಬಲ್ಕರಾಳ ರೂಪನ ತಾನು ಗೆದ್ದು | ತಲೆಕಾಲಿನೊಳಗೆ ಮೆಟ್ಟುತಿದ್ದೂ | ಪಾ-ತಾಳಕ್ಕವನ ತಾನು ಒದ್ದು | ಆಹಕಾಲಮೀರುವ ಮುನ್ನ | ಕೇಳಲೊ ವರವನ್ನೆಫಾಲಾಕ್ಷ ಹರಿಯನ್ನು | ಕೇಳಿದನೀಪರಿ ೪
ನಿಲ್ಲಲಿ ಹರಿಹರ ರೂಪಾ | ಭೇದಸೊಲ್ಲಿನಿಂದಲಿ ದ್ವಯ ರೂಪಾ | ಕ್ಷೇತ್ರಚೆಲ್ವ ಕಾಶಿಗೆ ಮಿಗಿಲೆನಿಪಾ | ಭಕ್ತ ರೆಲ್ಲರ ಕಾಯೂವ ರೂಪಾ | ಆಹ ಮಲ್ಲಮರ್ದನ ಗುರು | ಗೋವಿಂದ ವಿಠಲನು ಸಲ್ಲೀಸೂವ ಭಕ್ತ | ರೆಲ್ಲರಭೀಷ್ಟವ ೫

೨೭೨
ಹರ್ಯಕ್ಷ | ನಿಟಿಲಾಕ್ಷ ಪ.
ಹರ ರುದ್ರಾಕ್ಷನೆ ಕರುಣದಿ ರಕ್ಷಿಸು ಅ.ಪ.
ಪವನನ ಸುತ ಬಹು | ಶ್ರವಣ ಭೂಷ ಭಾ-ಗವತವನರುಹಿದೆ | ಅವನಿ ಪಾಲಕಗೆ ೧
ದೂರೆಂದೆನಿಸಿದ | ಮಾರುತ ನಿಂದಲಿಸಾರತತ್ವ ಶ್ರುತ | ದೂರ್ವಾಸಾಭಿಧ ೨
ತೈಲ ಧಾರೆ ಪರಿ | ಲೋಲಾಯತ ಮನಪಾಲಿಸು ಹರಿಯಲಿ | ಶೈಲಜೆ ರಮಣಾ ೩
ದೈತ್ಯಾರಾಧಿತ | ದೈತ್ಯವರದ ಶಿವತೊತ್ತಿನ ಪಾಲಿಸಿ | ಮೃತ್ಯುಂಜಯಾಭಿದ೪
ಗುಪ್ತ ಮಹಿಮ ಗುರು | ಗೋವಿಂದ ವಿಠಲನಭೃತ್ಯನ ಸುತನು | ಚಿತ್ತವ ಪಾಲಿಸು ೫

೩೦೩
ಹಿಂಡು ಕರ್ಮಗಳ್ಯಾಕೆ | ಬಂಡಿ ದೈವಗಳ್ಯಾಕೆಪಂಡರಿ ದೊರೆಯು ಇರಲು ಪ
ಕಂಡ ಕಂಡವರ ಮನೆ | ಗಂಡಲೆಯುತಲಿ ತನುದಿಂಡುಗಳ ಚಾಚುತ್ತಲೀಭಂಡ ತೆರಳೆನುತ ಮುಂ | ಕೊಂಡು ಪೇಳುವ ನುಡಿಗೊಂಡು ಮುಂದಕೆ ತೆರಳುತಾ |ಅಂಡಜಾಧಿಪ ವಾಹ | ಪುಂಡರೀಕಾಕ್ಷ ಪದಬಂಡುಣಿಯವೋಲ್ ತುತಿಸಲಿಲ್ಲಾ | ಬಲ್ಲಾ ೧
ನರಜನ್ಮ ನೀನೆತ್ತಿ | ಧರಣಿ ಸುರ ಕುಂದಲ್ಲಿಪರಿಸರನ ಮತವ ಚರಿಸೀ |ಅರಿ ಕಂಬು ಗದೆ ಪದ್ಮ | ಧರಿಸಿ ಅಂಗಾಂಗದಲಿಹರಿಯು ಪರನೆಂದೆನ್ನೂತಾ |ನರನಂತೆ ನಟಿಸುತಿಹ | ನರನ ಸಾರಥಿ ಕೃಷ್ಣಚರಿತೆಗಳ ಪೊಗಳುತಿರಲೋ | ಕೇಳೋ ೨
ಮಿಂದೊಮ್ಮೆಯಾದರೂ | ಇಂದು ಭಾಗದಿ ಭಕ್ತಸಂದಣೀಯಲಿ ಸೇರುತಾ |ತಂದೆ ತಾಯಿಯ ಸೇವೆ | ಮುಂದು ಮಾಡಿದಗೊಲಿದುನಿಂದು ಇಟ್ಟಿಗೆ ಮೆಟ್ಟಿಹಾ |ನಂದ ನಂದನ ಗುರೂ ಗೋ | ವಿಂದ ವಿಠಲನವಂದಿಸೆಲೊ ಮುದದಿ ಸತತಾ | ವಿತತಾ ೩

೩೦೪
ಹಿತದಿಂದ ಪೊರೆಯೆನ್ನ | ವಿತತ ಮಹಿಮ ಹರಿಯೇ ಹಿತ ಅಹಿತವೆರಡನ್ನು | ಸಹಿಸುವಂತೇ ಪ
ಅತಿ ದಯಾಪರನೆಂದು | ಖತಿದೂರನೆಂದೆನುತಶ್ರುತಿ ನಿಚಯ ಸಾರುತಿದೆ | ಗತಿ ಪ್ರದನೆ ದೇವಾ ಅ.ಪ.
ವೇದ ವೇದ್ಯನೆ ದೇವ | ಆದ್ಯಂತ ರಹಿತನೇಕಾದುಕೋ ಎನ್ನನು | ಮೋದಗಳನಿತ್ತೂ ||ಸಾಧನ ಸುಮಾರ್ಗದಲಿ | ಹಾದಿಯನು ಕಾಣದಲೆಬಾಧೆಗೊಳಗಾಗಿಹನ | ಆದರಿಸು ದಯವನಧೀ ೧
ಪ್ರಾಣಪತಿಯೇ ಎನ್ನ | ಪ್ರಾಣಗಳು ವಶವಿಲ್ಲಧ್ಯಾನ ಮಾಡುವೆನೆನ್ನ | ಮನನಿಲ್ಲಧ್ಹರಿಯೇ ||ಜ್ಞಾನ ಕರ್ಮೇದ್ರಿಗಳು | ಏನೊಂದು ನಿನ್ನಯಾಧೀನವಿರಲೂ ನಾನು | ಏನು ಮಾಡಲು ಸಾಧ್ಯ ೨
ಗೋವರ್ಧನೋದ್ಧರನೆ | ಗೋವುಗಳ ಪರಿಪಾಲಕಾವ ಕರುಣೀ ನಮ್ಮ | ದೇವರ ದೇವಾ ||ಗೋವಿದಾಂಪತಿ ಗುರು | ಗೋವಿಂದ ವಿಠಲನೆನೀವೊಲಿಯದಿನ್ನಾರು | ಕಾವರನು ಕಾಣೆನಯ್ಯಾ ೩

೩೦೫
ಹುಚ್ಚು ಹಿಡಿಯಿತು ಎನಗೆ | ಹುಚ್ಚು ಹಿಡಿಯಿತು ಪ
ಸ್ವಚ್ಛ ಭಾಗವತವ ಕೇಳಿ | ಅಚ್ಯುತನ್ನ ಮಹಿಮೆ ಎಂಬಮೆಚ್ಯಮದ್ದು ಶಿರಕೆ ಏರಿ | ಹುಚ್ಚು ಹಿಡಿಯಿತು ಅ.ಪ.
ಶ್ರವಣ ಸ್ತವನ ಸ್ಮರಣೆ ಸೇವೆ | ಅವನ ಅರ್ಚನೆ ವಂದನೆ ಸಖ್ಯಅವ ದಾಸ್ಯ ಆತ್ಮ ಅರ್ಪಣ | ನವವು ವಿಧದ ಭಕ್ತಿಗಳಿಪ ೧
ಸಪ್ತ ದಿನದ ಕ್ಲುಪ್ತಿಯಿಂದ | ಸರ್ಪಶಯನ ಮಹಿಮೆ ಶ್ರವಣಶೃತಿ ಬಧಿರ ವಾಯ್ತು ಆತ್ಮ | ರಿಕ್ತ ವಿಷಯ ಶ್ರವಣಕೆಲ್ಲ ೨
ಸ್ತವನ ಮಾಳ್ಪ ಶುಕರ ದೇಹ | ಭವಣೆ ಮರೆತು ಕೀರ್ತಿಸಿದರುಅವರ ಕಂಡು ಲೋಕವಾರ್ತೆ | ಸ್ತವನ ಗೈವರ ದೂಡುವಂಥ ೩
ಹರಿಯ ಸ್ಮರಿಸಿ ಪ್ರಹಲ್ಲಾದ | ಹರಿಯ ಕಂಡು ಭವವ ಗೆದ್ದಸ್ಮರಿಸಿ ಸ್ಮರಿಸಿ ಅದನ ನಾನು | ನರರ ನಡುವೆ ಮೂಕನಾಗ್ದ ೪
ಪೊತ್ತನೇಕ ರೂಪ ಲಕುಮಿ | ನಿತ್ಯ ಮಾಳ್ಪ ಹರಿಯ ಸೇವೆಅರ್ತುಸಂತರ ಸೇವೆ ವ್ಯತಿ | ರಿಕ್ತಕೆಲ್ಲ ಪ್ರತಿಯ ಭಟಿಪ ೫
ಅಂಬೆ ರಮಣನರ್ಚಿಸೀದ | ಕುಂಬಾರ ಭೀಮನ ಕೇಳಿ ನಾನುಅಂಬುಜಾಕ್ಷನರ್ಚನೆಗಲ್ಲದ | ತುಂಬಿದ್ವ್ಯೊಭವ ಚೆಲ್ಲುವಂಥ ೬
ಕೃಷ್ಣ ವಂದನ ಅಕ್ರೂರ ಗೈದು | ಸುಷ್ಠು ಹರಿಯ ರೂಪ ಕಂಡಜಿಷ್ಣು ಸಖನ ನಮಿಸದವರ | ಭ್ರಷ್ರ್ರರೆಂದು ಬೈಯ್ಯುವಂಥ ೭
ಹನುಮ ದಾಸ್ಯ ಭಕ್ತಿಗೆಲ್ಲು | ಎಣೆಯ ಕಾಣೆನೆಂದು ಜಗದಿ ಮನದಿ ನಿತ್ಯ ನೆನೆಯದವರ | ಕ್ಷಣವು ಅವರ ಸಂಗಜರಿವ ೮
ಪಾರ್ಥ ಸಖ್ಯತನದಿ ಪರಮ | ಅರ್ಥ ಪಡೆದುದನ್ನ ಕೇಳಿನಿತ್ಯ ಸಖನ ಮರೆತ ಜನರು | ವ್ಯರ್ಥರೆಂದು ಅರ್ಥಿಲಿ ನಗುವ೯
ನಿತ್ಯ ತೃಪ್ತ ದಾನ ಬೇಡೆ | ಭೃತ್ಯ ಬಲಿಯು ತನ್ನನಿತ್ತಸತ್ಯ ವಾರ್ತೆ ಕೇಳಿ ಕೇಳಿ | ಪ್ರವೃತ್ತಿ ಗೈದಿನ್ಯತ ನೆದಿ ೧೦
ಸ್ವಚ್ಛ ಹರಿಯ ಭಕುತಿ ನವದ | ಹುಚ್ಚು ಬೇಕು ಎಂಬುವಂಥಅಚ್ಯುತನ್ನ ದಾಸ ಗೊಲಿದವ | ನಿಚ್ಚ ಗುರು ಗೋವಿಂದ ವಿಠಲ೧೧

೩೧೫
ಗೋವಿಂದಾಷ್ಟೋತ್ತರ ನಾಮಾವಳಿ
ಹೃದ್ಗತ ತಮನಾಶ ಗೋವಿಂದ | ಎನ್ನಹೃದ್ಗುಹದೊಳು ತೋರೋ ಗೋವಿಂದ ಪ
ಅಲವ ಮಹಿಮ ಹರಿ ಗೋವಿಂದ | ನಮ್ಮಅಲವ ಭೋದರ ಪ್ರೀಯ ಗೋವಿಂದ ||ಆಲಯದೊಳು ನಿಲ್ಲೊ ಗೋವಿಂದ | ಹೃ-ದಾಲಯದಲಿ ತೋರೊ ಗೋವಿಂದ ೧
ಇಕ್ಷುಚಾಪನ ಪಿತನೆ ಗೋವಿಂದ | ನೀನಿಕ್ಷುಧನ್ವಾರಿ ನುತ ಗೋವಿಂದ ||ಈಕ್ಷಿಸೋ ಕರುಣದಿ ಗೋವಿಂದ | ನಿ-ನ್ನೀಕ್ಷಿಸ ಲೋಶವೇನೊ ಗೋವಿಂದ ೨
ಉರಗ ಶಯನನೆ ಗೋವಿಂದ | ನಮ್ಮಉರಗಾಯಿ ವೈಕುಂಠ ಗೋವಿಂದ ||ಊರೂರು ಚರಿಸಿದೆ ಗೋವಿಂದ | ನಿ-ಮ್ಮೂರಿಗೆ ಕರೆದೊಯ್ಯೊ ಗೋವಿಂದ ೩
ಋಗಾದಿ ತ್ರಯಿಮಯಿ ಗೋವಿಂದ | ಹರಿಋಗ್ವಿನುತನೆ ಗುರು ಗೋವಿಂದ ||ಈೂಕ್ಷ ಸದ್ವಿನುತನೆ ಗೋವಿಂದ | ಹರಿಈೂಕಾರ ಪ್ರತಿಪಾದ್ಯ ಗೋವಿಂದ ೪
ಏತತ್ತೆನಿಸಿಯು ಹೃದ್ಗ ಗೋವಿಂದ | ನೀ ನೇತಕೆ ಕಾಣಿಯಾಗಿಹೆ ಗೋವಿಂದ ||ಐತದಾತ್ಮ್ಯಕ ಸರ್ವ ಗೋವಿಂದ | ನೀನೈತರುವುದು ಮನಕೆ ಗೋವಿಂದ ೫
ಓತ ಪ್ರೋತನೆ ಜಗದಿ ಗೋವಿಂದ | ನಿನ್ನೋತತ್ವವನೆ ತಿಳಿಸೊ ಗೋವಿಂದ ||ಔತಣಿತ್ತಳೆ ಸತಿ ಗೋವಿಂದ | ನೀನೌತು ಕೊಂಡಿಹದೇಕೊ ಗೋವಿಂದ ೬
ಅಂಗಾಂಗಿ ಭಾವದಿ ಗೋವಿಂದ | ನೀನಂಗಾಂಗದಿ ಕ್ರೀಡಿಪೆ ಗೋವಿಂದ ||ಅಹರರ್ಹಮನದಲಿ ಗೋವಿಂದ | ನೀಅಹರಹರ್ವಿಹರಿಸೋ ಗೋವಿಂದ ೭
ಕಪಿಲಾತ್ಮ ಶ್ರೀ ಹರಿ ಗೋವಿಂದ | ನಮ್ಮಕಪಿವರ ಪೂಜ್ಯನೆ ಗೋವಿಂದ ||ಖಪತಿಗಮನ ಗುರು ಗೋವಿಂದ | ಜಗಖರ್ಪರ ಸೀಳಿದ ಗೋವಿಂದ ೮
ಗರುಡಧ್ವಜನೆ ಬಾರೋ ಗೋವಿಂದ | ಜಗಗರುವವ ಕಳೆಯೊ ಗೋವಿಂದ ||ಘರ್ಮಾಸ ಸಮಂತಾತು ಗೋವಿಂದ | ಸೂಕ್ತಘರ್ಮಕ್ಕೆ ವಿಷಯನೆ ಗೋವಿಂದ ೯
ಓಂಕಾರ ಪ್ರತಿಪಾದ್ಯ ಗೋವಿಂದ | ಪಾ-ಙ್ತವು ಜಗವೆಲ್ಲ ಗೋವಿಂದ ||ಚರ್ಮದೊಳುದ್ಗೀಥ ಗೋವಿಂದ | ಇದ್ದುಚರ್ಮ ಲಾವಣ್ಯದ ಗೋವಿಂದ ೧೦
ಛಂದಸ್ಸಿನಿಂಛನ್ನ ಗೋವಿಂದ | ನಾಗಿಛಂದೋಭಿಧನೆನಿಪೆ ಗೋವಿಂದ ||ಜಂಗಮ ಚರವ್ಯಾಪ್ತ ಗೋವಿಂದ | ಎಮ್ಮಜಂಗುಳಿಗಳ ಕಳೆಯೊ ಗೋವಿಂದ ೧೧
ಝಷ ರೂಪಿ ಕಮಠನೆ ಗೋವಿಂದ | ನಮ್ಮಝಷ ಕೇತುಪಿತ ಕಾಯೊ ಗೋವಿಂದ ||ಜ್ಞಾನ ಜ್ಞೇಯ ಜ್ಞಾತೃ ಗೋವಿಂದ | ಪ್ರ-ಜ್ಞಾನ ಘನನೆನಿಪೆ ಗೋವಿಂದ ೧೨
ಟಂಕಿ ಎಂಬುವನೆ ಗೋವಿಂದ | ನಮ್ಮಾಟಂಕವ ಕಳೆಯೋ ಗೋವಿಂದ ||ಠಕ್ಕು ಠವಳಿಗಾರ ಗೋವಿಂದ | ನಮ್ಮಠಕ್ಕಸಿ ಹಾಕದಿರು ಗೋವಿಂದ ೧೩
ಡರಕೊ ಡರ್ಯಾಭಿಧ ಗೋವಿಂದ | ನಮ್ಮೆಡರನು ಪರಿಹರಿಸೊ ಗೋವಿಂದ ||ಢಣ ಢಣ ನಾದದಿ ಗೋವಿಂದ | ಬಲುಢಣಿರೆಂಬೊ ವಾದ್ಯದಿ ಗೋವಿಂದ ೧೪
ಣನಾಮ ವಾಚ್ಯನೆ ಗೋವಿಂದ | ಪ್ರ-ಣಮನ ಮಾಡುವೆನೋ ಗೋವಿಂದ ||ತರುಣಾರ್ಕ ಪ್ರಭೆಯ ಗೋವಿಂದ | ನಮ್ಮತರುಣಿ ದ್ರೌಪದಿ ವರದ ಗೋವಿಂದ ೧೫
ಥರಥರವರ್ಣನೆ ಗೋವಿಂದ | ಬಲ್ಪ್ರಮಥನ ಶೀಲನೆ ಗುರು ಗೋವಿಂದ ||ದರ ಕಂಬುಧರನೆ ಗೋವಿಂದ | ತ್ರಿ-ದಶರ ಪರಿಪಾಲ ಗೋವಿಂದ ೧೬
ಧರ್ಮಸು ಗೋಪ್ತನೆ ಗೋವಿಂದ | ಸ-ಧ್ದರ್ಮ ನಾಮಕ ಗುರು ಗೋವಿಂದ ||ನರೆಯಣಾಭಿಧ ಗುರು ಗೋವಿಂದ | ನಮ್ಮನರಸಖನೆನಿಸಿಹೆ ಗೋವಿಂದ ೧೭
ಪರಮ ಪುರುಷ ಗುರು ಗೋವಿಂದ | ಕಾಯೊಪರಮಾನಂದ ಪ್ರದನೆ ಗೋವಿಂದ ||ಫಲರೂಪನು ನೀನೆ ಗೋವಿಂದ | ಇದೆಫಲಿತಾರ್ಥವೊ ಗುರು ಗೋವಿಂದ ೧೮
ಬಗೆ ಬಗೆ ಕರ್ಮಗಳ್ ಗೋವಿಂದ | ಮಾಡಿಬಗೆ ಬಗೆ ಲೀಲನೆ ಗೋವಿಂದ ||ಭರ್ಗ ರೂಪಿಯೆ ಗುರು ಗೋವಿಂದ | ನಮ್ಮಭರ್ಮ ಗರ್ಭನ ಪಿತ ಗೋವಿಂದ ೧೯
ಮದಜನಕಮಜ್ಜದಿ ಗೋವಿಂದ | ನಮ್ಮಮದನ ಗೋಪಾಲನೆ ಗೋವಿಂದ ||ಯಜ್ಞ ಭುಗ್ಯಜ್ಞನೆ ಗೋವಿಂದ | ಮತ್ತೆಯಜ್ಞ ಸಾಧನ ನೀನೇ ಗೋವಿಂದ ೨೦
ರಣದೊಳರ್ಜುನ ಪಾಲ ಗೋವಿಂದ | ಹಗರಣವನೆ ಕಳೆಯೊ ಗೋವಿಂದ ||ಲವಕುಶ ಪಿತನೆನಿಪೆ ಗೋವಿಂದ | ನೀನಲವಪೂರ್ಣ ಮಹಿಮ ಗೋವಿಂದ ೨೧
ವರ್ಣಗಳ್ಧ್ವನಿಗಳು ಗೋವಿಂದ | ಸರ್ವವರ್ಣಿಪುದು ನಿನ್ನ ಗೋವಿಂದ ||ಶರೊ ಆಭಿಧ ಜೀವನ್ನ ಗೋವಿಂದ | ಮೀಟಿಶರೀರಾಖ್ಯನೆನಿಸುವೆ ಗೋವಿಂದ ೨೨
ಷಡ್ಗುಣ ಪರಿಪೂರ್ಣ ಗೋವಿಂದ | ನೀನೆಷಡ್ವಾದಿ ಸ್ವರ ವ್ಯಾಪಿ ಗೋವಿಂದ ||ಸತ್ತಾದಿ ಪ್ರದ ರೂಪಿ ಗೋವಿಂದ | ನೀನೆಸತ್ತತ್ವ ಪ್ರತಿಪಾದ್ಯ ಗೋವಿಂದ ೨೩
ಹರಿ ಹರಿ ಎಂದರೆ ಗೋವಿಂದ | ಪಾಪಹರಿ ಸೂವಿ ನೀನೇ ಗೋವಿಂದ ||ಳಾಳೂಕ ಆಭಿಧ ಗೋವಿಂದ | ಕಾಯೊಳಕಾರ ಪ್ರತಿಪಾದ್ಯ ಗೋವಿಂದ ೨೪
ಕ್ಷಮಿಸೆನ್ನ ಅಪರಾಧ ಗೋವಿಂದ | ಬಲಿಕ್ಷಮೆಯನಳೆದ ಗುರು ಗೋವಿಂದ ||ಕ್ಷಮಕ್ಷಾಮಾಭಿಧ ಗುರು ಗೋವಿಂದ | ನೀಲಕ್ಷುಮಿ ಸಹ ನೆಲಸೊ ಗೋವಿಂದ ೨೫
ಜ್ಞಾನಗಮ್ಯನೆ ಗುರು ಗೋವಿಂದ | ತತ್ವಜ್ಞಾನವ ಪಾಲಿಸೋ ಗೋವಿಂದ ||ಜ್ಞಾನಿಗೆ ಪ್ರಿಯತಮ ಗೋವಿಂದ | ನಿನಗೆಜ್ಞಾನಿ ಜನರು ಪ್ರಿಯರು ಗೋವಿಂದ ೨೬
ಏಕ ಪಂಚಾಶತು ಗೋವಿಂದ | ವರ್ಣಏಕಾತ್ಮ ಮಾಲೇಯ ಗೋವಿಂದ ||ಲೋಕೈಕನಾಥ ಗುರು ಗೋವಿಂದ | ವಿಠಲಸ್ವೀಕರಿಸೆನ್ನ ಕಾಯೋ ಗೋವಿಂದ ೨೭

೧೬೨
ಹೇಮವತಿಯ ತೀರವಾಸನೇ | ನಾರಸಿಂಹಪ್ರೇಮದಿಂದ ಕಾಯೋ ಬೇಗನೇ ಪ
ನಾಮಮಾತ್ರ ಸಲಹುತಿರುವ | ಸ್ವಾಮಿ ನಿಮ್ಮ ಕಂಡು ಭಜಿಸೆಕಾಮಿತಾರ್ಥವಿತ್ತು ಪೊರೆವೆ | ಕಾಮ ಜನಕ ಕಮಲನಾಭ ಅ.ಪ.
ಭವದೊಳಾನು ಬಳಲಿ ಬಂದೆನೋ | ಭವ್ಯರೂಪಿಹವಣೆ ತಿಳಿಸಿ ಭವವ ಕಳೆಯಲೋಪವನ ಮತದಿ ಉದಿಸಿಹೇನು | ಭುವನ ಧರಿಸಿ ಮೆರೆಯುವಾನರವಿಯ ಕಂಡು ಹಾರಿದವನ | ಪವನರಾಯನ ಕಾಣೆ ನಾನು ೧
ತನುವು ಮನವು ಧನದ ಆಶೆಯೂ | ಪೋಗಲಿಲ್ಲಘನ ಸುಜ್ಞಾನ ಭಕ್ತ್ಯಿ ಭಾವವೂಕನಸಿಲಾದರೊಮ್ಮೆ ಎನ್ನ | ಮನಸ್ಸು ನಿಮ್ಮ ಚರಣ ದ್ವಂದ್ವವನಜದಲ್ಲಿ ನೆಲೆಸಲಿಲ್ಲ | ಅನಘ ನೀನೇ ದಯವ ಬೀರೊ ೨
ವರ ಸುಕಂಜ ಗದೆಯು ಶಂಖವಾ | ಚಕ್ರಧಾರಿವರ ಸುಪಟ್ಟಕ ಯೋಗ ಚಿನ್ಹಿತಾ | ನೆರೆ ಸುಜ್ಞಾನ ಭಕ್ತಿ ನಿನ್ನ | ಚರಣದಲ್ಲಿ ಸ್ಥಿರದಿ ಕೊಟ್ಟು ಪೊರೆಯೊ ಕರುಣ ವನಧಿ ಹರಿಯೆ | ಗುರು ಗೋವಿಂದ ವಿಠ್ಠಲಾನೆ ೩

೧೬೩
ಹೇಸಿಕಿಲ್ಲವೊ | ಎನಗೆ ಹೇಸಿಕಿಲ್ಲವೋ ಪ
ಮೀಸಲೆನಿಸಿ ಮನವ ನಿನ್ನ | ಆಶೆಯಲ್ಲಿ ಇರಿಸದಾಲೆ ಅ.ಪ.
ಸವನ ದ್ವಯದಿ ಮೃತ್ಯುವದಗೆ | ಪವನನಯ್ಯ ನೀನೆ ಕಾಯ್ದಸವನತ್ರಯದಿ ದೇಹವಿರಲು | ಶಿವನ ವೈರಿ ಕಾಡುತಿಹನು ೧
ವಿಷಯದಾಶೆ ಪೋಗಲಿಲ್ಲ | ಹಸಿವು ತೃಷೆಯು ಮೀರಲಿಲ್ಲಕುಸಿಯುತಿದೆ ದೇಹವೆಲ್ಲ | ಎಸೆವ ವ್ರತವ ಚರಿಸಲಿಲ್ಲ ೨
ನಾನು ನನ್ನದೆಂಬ ಮಮತೆ | ಹೀನವೆಂದು ತಿಳಿದು ತಿಳಿದುಗೇಣು ಎಂಟು ದೇಹಕಾಗಿ | ಹೀನ ವಿಷಯದಾಶೆ ಇಹುದು ೩
ಸಂದು ಪೋದ ಜನ್ಮ ತಿಳಿಯೆ | ಮುಂದೆ ಬಾಹುದೆಂತೊ ಕಾಣೊಇಂದಿರೇಶ ನೀನೆ ಗತಿಯೊ | ಮಂದಹಾಸ ಬೀರಿ ಪೊರೆಯೊ ೪
ನಿನ್ನ ಕಾಣಧಾಂಗೆ ದೇಹ | ಇನ್ನೂ ಪೋಗದಂತೆ ಮಾಡಿ |ಘನ್ನ ಮಹಿಮ ರೂಪ ತೋರೊ | ಚೆನ್ನ ಗುರು ಗೋವಿಂದ ವಿಠಲ೫

೧೫೧
ಉಗಾಭೋಗ
ಸಲ್ಲದಭಿಮಾನವನು | ಎಲ್ಲರೊಳುಪೆಚ್ಚಿಸುವೆ ಸಿರಿನಲ್ಲ ಈ ಮಮಕಾರ ವಳಿಸಿ ಪರಿವಾರದಲಿ ಇದು ಇಲ್ಲವೆಂದಬರಿವಿತ್ತು ಕರುಣಿಸೋ ಗುರು ಗೋವಿಂದ ವಿಠಲಾ

೧೫೪
ಉಗಾಭೋಗ
ಸಾಧನದ ದೇಹವಿದು | ನೀ ದಯದಿ ಕೊಟ್ಟಿದ್ದು | ಬಾಧೆಗೊಳಗಾಗಿಹುದು |ಆದಿಮೂರುತಿಯೇ | ಸಾಧನಕೆ ಪ್ರತಿಬಂಧ | ವೇದಗೋಚರ ಹರಿಯೇ |ನೀದಯದಿ ನೀಗೆಂದು | ಮಾಧವನೆ ಭಿನ್ನೈಪೆ |ಅನ್ಯ ಸಾಧನೆ ಕಾಣೆ |ನಿನ್ನ ಸ್ರ‍ಮತಿ ಹೊರತಿನ್ನೂ | ನನ್ನೆಯಿಂ ಕೈ ಪಿಡಿಯೊ | ಪನ್ನಂಗ ಶಯನಾ |ಜೀರ್ಣವಾಯಿತು ದೇಹ | ಮುನ್ನಾವ ಗತಿಯೆನಗೆ | ಕಣ್ಣಿಗೇ ಕಾಣೊ ಗುರು | ಗೋವಿಂದ ವಿಠಲಾ ೧

ಅಜ್ಞಾನ ಪರಿಹರಿಸು

ಗಣಪತಿ ಪ್ರಾರ್ಥನೆ
ಅಜ್ಞಾನ ಪರಿಹರಿಸು ಅಂಬರಾಧೀಶಸುಜ್ಞಾನ ಭಕ್ತಿ ಶ್ರೀ ಹರಿಯಲ್ಲಿ ನೀಡೋ ಪ
ವಿಘ್ನರಾಜನೆ ನಿನ್ನ ನುತಿಸಿ ಬೇಡುವೆನಯ್ಯಭಗ್ನಗೈಸೆನ್ನ ಮನ ಸಂದೇಹವನ್ನೂ |ತಜ್ಞರೊಡನಾಡಲು ನಿರ್ವಿಘ್ನ ನೀಡಯ್ಯಾಲಗ್ನಗೈಸೆನ್ನ ಮನ ದೋಷಘ್ನನಲ್ಲೀ ೧
ಏಕದಂತನೆ ಗುರುವೆ ಮೈನಾಕಿ ತನಯನೇನೋಕ ನೀಯನ ಗ್ರಂಥ ಲಿಖಿಸಿದ ಮಹಾತ್ಮ |ವಿಕೃತ ಗಾತ್ರನೆ ಎನ್ನ ವಕ್ರ ಗುಣ ವೆಣಿಸದಲೆಸುಖತೀರ್ಥ ಮತ ಜಲಧಿ ಮೀನನೆನಿಸಯ್ಯಾ ೨
ಚಾರುದೇಷ್ಣನು ಎನಿಸಿ ದ್ವಾಪರದಲವತರಿಸಿಶೌರಿಯಾಜ್ಞದಿ ತರಿದೆ ಬಹು ರಕ್ಕಸರನೂ |ಸರ್ವೇಶ ಶ್ರೀ ಗುರು ಗೋವಿಂದ ವಿಠ್ಠಲನಚರಣ ಸರಸಿಜಕಾಂಬ ಮಾರ್ಗವನೆ ತೋರೋ ೩

ಹಾಡಿನ ಹೆಸರು :ಅಜ್ಞಾನ ಪರಿಹರಿಸು
ಹಾಡಿದವರ ಹೆಸರು :ರಮಾ ಪಿ.
ರಾಗ :ಗೌರಿಮನೋಹರಿ
ತಾಳ :ಖಂಡಛಾಪು ತಾಳ
ಸಂಗೀತ ನಿರ್ದೇಶಕರು :ರಮಾಮಣಿ ಆರ್. ಎ.
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ತಾಯೆ ಲಕ್ಷುಮಿ ದೇವಿಯೇ
೧೭೩
ತಾಯೆ ಲಕ್ಷುಮಿ ದೇವಿಯೇ | ನೀನೇ ಗತಿತಾಯೆ ಲಕ್ಷುಮಿ ದೇವಿಯೇ ಪ
ಕಾಯ ಮಮತೆಯ ಕಳೆದು ಬೇಗನೆ | ತೋಯಜಾಕ್ಷನ ತೋರಿ ಪೊರೆಯುವದಾಯ ನಿನ್ನದು ತಾಯೆ ಶ್ರೀಹರಿ | ಪ್ರೀಯೆ ನಿನ್ನನು ನಮಿಸಿ ಬೇಡುವೆ ಅ.ಪ.
ಗೋಪಿ ನಂದನೆ ಹೇ ದುರ್ಗೇ | ಕಠೋರೆ ಉಗ್ರೆತಾಪತ್ರಯಗಳ ವಿನಾಶೇ | ಮೋಕ್ಷ ಪ್ರದಾತೇ ||ಶ್ರೀಪತಿಯ ಪಾದಾಬ್ಜ ಮಧುಪೆ | ಪಾಪಹರ ತವ ಪತಿಯ ನಾಮವಪ್ರಾಪಿಸುತ ದಿನದಿನದಿ ಯನ್ನನು | ಕೈ ಪಿಡಿದು ಕಾಪಾಡು ದೇವಿ ೧
ಸರಸಿಜ ಭವ ವಂದಿತೇ | ತ್ರಿಜಗನ್ಮಾತೆಹರಿಗೆ ಸಮಾಸಮವ್ಯಾಪ್ತೆ | ಹರಿಯಂಕ ಸಂಸ್ಥೇ ||ಅರಿದರಾಂಕುಶ ಪರಶು ಶಕ್ತಿ | ಧರಿಸಿ ಮೆರೆಯುವ ಹರಿಯ ರಾಣಿಯೆವಾರೆ ನೋಟದಿ ಬ್ರಹ್ಮ ಭವರಿಗೆ | ವರ ಸುಪದವಿಗಳಿತ್ತು ಪೊರೆವಳೆ ೨
ಮಾರ ಜನನಿ ಸುಂದರೀ | ಎನ್ನನು ಪೊರೆವಭಾರ ನಿನ್ನದು ಅಸುರಾರೀ | ಕೇಳಮ್ಮ ದೇವೀ ||ಕ್ರೂರ ದೈತ್ಯರ ಬಾಧೆ ಹರಿಸಿ | ಘೋರ ಭವ ದುರಿತಾಬ್ದಿ ದಾಟಿಸಿಧೀರ ಗುರು ಗೋವಿಂದ ವಿಠಲನ | ಚಾರು ಚರಣವ ತೋರು ಎನಗೆ ೩

ಹಾಡಿನ ಹೆಸರು :ತಾಯೆ ಲಕ್ಷುಮಿ ದೇವಿಯೇ
ಹಾಡಿದವರ ಹೆಸರು :ಚೈತ್ರ ಹೆಚ್. ಜಿ.
ಸಂಗೀತ ನಿರ್ದೇಶಕರು :ನಾಗರಾಜರಾವ್ ಹವಾಲ್ದಾರ್
ಸ್ಟುಡಿಯೋ :ವಿಷನ್ ಟೆಕ್ನಾಲಜಿ, ಬೆಂಗಳೂರು

ನಿರ್ಗಮನ

ಪಾಲಿಸೆ ಕೃಷ್ಣ ರಮಣೀ
೧೭೫
ಪಾಲೀಸೆ ಕೃಷ್ಣ ರಮಣೀ | ರುಕ್ಮಿಣಿಪಾಲೀಸೆ ಕೃಷ್ಣ ರಮಣಿ ಪ
ಲೋಲಾ ಲೋಚನೆ ಸೀತೆ | ಕೀಲಾಲ ಜಾತನುತೆವಾಲೀ ಭಂಜನ ಪ್ರೀತೆ | ಫಾಲಾಕ್ಷಪಿತ ಮಾತೆ ಅ.ಪ.
ಆರೀಗುಸುರಲಿ ನಾನೂ | ಕಳೆಯಲಿಭಾರಿ ಭವಣೆಗಳನ್ನೂ ||ಸಾರಸಾಕ್ಷಿ ನಿನ್ನ | ಚಾರು ಚರಣ ಸರೋರುಹ ಕೆರಗುವೆ | ಚಾರುಮತಿಯ ಕೊಡೆ ೧
ಮೂರು ಗುಣಾಭಿಮಾನೀ | ಮಾಳ್ಪುದುಮೂರು ಗುಣಗಳ್ಹಾನೀ ||ವಾರೀಸಿ ತ್ರೈಗುಣ | ಪಾರು ಮಾಡಿಸು ಭವತಾರಕೆ ನೀ ನೆಂದು | ಬಾರಿ ಬಾರಿಗೆ ಪೇಳ್ವ ೨
ಗುರು ಗೋವಿಂದ ವಿಠಲಾ | ನಿನ್ನೊಡವೆರಸಿ ಸೃಜಿಪ ಜಗಗಳಾ ||ಎರಡೆರಡು ವ್ಯೂಹಕಾಗಿ | ಎರಡೆರಡು ರೂಪ ತಾಳೆಎರಡೆರಡು ನೀನು ಆಗಿ | ಹರಿ ಕಾರ್ಯಕನುವಾದೆ ೩

ಹಾಡಿನ ಹೆಸರು :ಪಾಲಿಸೆ ಕೃಷ್ಣ ರಮಣೀ
ಹಾಡಿದವರ ಹೆಸರು :ದೀಪ್ತಿ ಶ್ರೀನಾಥ್
ಸಂಗೀತ ನಿರ್ದೇಶಕರು :ರಮಾ ಪಿ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಬಾರನೇಕೆ ಬಾಲಕೃಷ್ಣನೂ
೧೦೫
ಬಾರನೇಕೆ ಬಾಲಕೃಷ್ಣನೂ | ಎನ್ನ ಮನಕೆಪೋರ ಶೀಲ ಗೋಪ ಕೃಷ್ಣನೂ ಪ
ಸಾರಿ ಸಾರಿ ಕೂಗಿದಾರೂ | ದೂರವಿರುವನಂತೆ ನಟಸಿತೋರಗೊಡನು ತನ್ನ ರೂಪ | ಅರಿಗ್ಹೋಗಿ ಪೇಳಲಮ್ಮ ಅ.ಪ.
ಗೊಲ್ಲರೊಡನೆ ತಾನು ಸೇರುತಾ | ಗೋವುಗಳನೆಲ್ಲಮೇಯ್ಯೆ ವನವ ಸಾರುತಾ ||ಚೆಲ್ವ ಕೃಷ್ಣ ಗೋಪಿ ಕೊಟ್ಟ | ಕಲ್ಲಿ ಬುತ್ತಿಯೊಡನೆ ಪೋಗಿಹಳ್ಳ ಕೊಳ್ಳದಲ್ಲಿ ಕುಳಿತು | ಮೆಲ್ಲುತಿರುವನೇನೊ ಅಮ್ಮ ೧
ಚೆಂಡು ಬುಗರಿ ಚಿಣ್ಣಿ ಕೋಲನೂ | ಆಡಲ್ಹೋಗಿಕಂಡ ಕಂಡ ಬೀದಿ ವನವನೂ ||ಹಿಂಡು ಹಸುಳೆರೊಡನೆ ಸಾರಿ | ಗುಂಡು ಗೋವಿಯಂತೆ ಆಡಿಭಂಡು ಮಾಡಿ ಗೋಪಿ ಜನರ | ಕಂಡು ಕಾಣಧಾಂಗೆ ಇಹನೆ ೨
ತಂದೆ ಮುದ್ದು ಮೋಹನ ಗುರುಗಳೂ | ನಿನ್ನ ರೂಪತಂದು ತೋರಿ ಮನದಿ ನಿಲ್ಲಲೂ ||ಅಂದು ಕೇಳಿಕೊಂಡು ಇಹರು | ಅಂದ ವಚನ ಮರೆತೆಯೇನೋತಂದೆ ಗುರು ಗೋವಿಂದ ವಿಠಲ | ಇಂದೆ ನೀನೆ ಮನಕೆ ಪೊಳೆಯೊ ೩

ಹಾಡಿನ ಹೆಸರು :ಬಾರನೇಕೆ ಬಾಲಕೃಷ್ಣನೂ
ಹಾಡಿದವರ ಹೆಸರು :ಕುಸುಮಾ ಕೆ. ಎಂ.
ರಾಗ :ಅಭೇರಿ
ತಾಳ :ರೂಪಕ ತಾಳ
ಸಂಗೀತ ನಿರ್ದೇಶಕರು :ಮಾಲತಿ ಶರ್ಮ

ನಿರ್ಗಮನ

Leave a Reply

Your email address will not be published. Required fields are marked *