Categories
ರಚನೆಗಳು

ಗುರುಗೋವಿಂದವಿಠಲರು

೨೯೩
ಪಾಹೀ ಪಾಹೀ ಪರ್ವತರಾಜ ಕುಮಾರೀ ಪ
ತ್ರಾಹಿ – ತ್ರಾಹಿ – ತಾಯಿ ತವ ಪದಯುಗಳಕೆದೇಹ ಮಮತೆ ಕಳೆ ದಕ್ಷ ಕುಮಾರೀ ಅ.ಪ.
ಗೌರಿ ಮೃಡಾಣಿಯೆ ಬಲು ಪ್ರಖ್ಯಾತೆಸುರಪತಿ ಷಣ್ಮುಖ ಗಣಪತಿ ಮಾತೆ೧
ತನು ನಿನ್ನದು ತಾಯಿ ಮನದಭಿಮಾನಿಯೆಹೊನ್ನು ಮಣ್ಣಿನಲಿ ಸಮ ಮನವೀಯೇ ೨
ಅಸಮನೆನ್ನುತ ಗುರು ಗೋವಿಂದ ವಿಠಲನಬಿಸರು ಹಾಂಬಕೆ ನೀ ತುತಿಸುವೆ ಪ್ರತಿಕ್ಷಣ ೩

೧೯೯
ಪಿಳ್ಳಂಕೇರಿಯ ವಾಸ ದಾಸ | ಕಾಯೊಮಲ್ಲಾರಿ ಮಹಿದಾಸ ದಾಸಾ ಪ
ಎಲ್ಲ ಸಚರಾಚರದಿ ವ್ಯಾಪ್ತನು | ನಲ್ಲ ಕೃಷ್ಣನ ಸೇವೆ ಬಹಳದ ಸಲ್ಲಿಸಲು ಬಹುರೂಪ ತಾಳ್ದ ಪ್ರ | ಪುಲ್ಲ ವದನಾಂ ಭೋಜ ಹನುಮ ಅ.ಪ.
ದಕ್ಷಿಣಾಕ್ಷಿಯ ವತ್ಸರೂಪಾ | ಸುರತ್ರ್ಯಕ್ಷಾದಿ ಸಂಸೇವ್ಯ ಭೂಪಾ |ಕ್ಷೋಭ್ಯತೀರ್ಥ ಶ್ರೀ ಯತಿಪಾ | ಗೊಲಿದುಅಕ್ಷಾರಿ ತೋರ್ದೆ ಈ ರೂಪಾ |ಕುಕ್ಷಿಯಲಿ ಪಾಪಾತ್ಮ ಪುರುಷನ | ಶಿಕ್ಷಿಸುತ ಶೋಭಿಸುತ ನಿತ್ಯಪಕ್ಷಿವಾಹನನಂಘ್ರಿ ಕಮಲವ | ಈಕ್ಷಿಸಲು ಸಹಕರಿಪ ಪ್ರಾಣಾ ೧
ಬೃಹತಿ ನಾಮಕ ಮುಖ್ಯ ಪ್ರಾಣಾ ಹರಿಬೃಹತಿ ನಾಮಕ ಗಧಿಷ್ಠಾನಾಮಹತಿ ನಾಮಕ ಬೃಹದ್ವೀಣಾ | ಪಾಣಿಮಹಮುನಿ ವಂದಿತ ಚರಣಾ |ಕುಹಕ ಕ್ಷತ್ರಿಯ ಕುಲ ವಿನಾಶಕ | ವಹಿಸಿ ಸ್ತ್ರೀ ರೂಪವನು ನಿಶಿಯಲಿಮಹ ದುರುಳ ಅವನನ್ವಯದ | ಸಹಜಾತರನು ವಧಿಸಿ ಮೆರೆದ ಸ ೨
ಥೋರ ರೂಪದಿ ತವ ಹಸ್ತಾ | ವೆತ್ತಿನಾರಿ ಚೋರನ ಗುದ್ದಿ ರಕ್ತಾ |ಕಾರುವಂತೆಸಗಿ ನೀ | ಮತ್ತಾ | ರಾದಭಾರಿ ರಕ್ಕಸ ಹಾರಿ ಶಕ್ತಾ |ಶೌರಿ ಯಾಜ್ಞದಿ ದುರುಳರಾ | ಕೌರವರ ಸಂಹರಿಸಿ ಧುರದಲಿಚಾರು ಮಾಯ್ಗಳ ಗೆಲಿದು ವಾದದಿ | ಸಾರ ಸಜ್ಜನರನ್ನು ಪೊರೆದ ೩
ಹಂಸನಾಮಕ ಹರಿ ದ್ವಂದ್ವಾ | ಪಾದಪಾಂಸುವ ಧರಿಸಿ ಮೆರೆಯುವಾ |ಹಂಸಾಖ್ಯ ಜಪ ದಿನ ದಿನವಾ | ಪಟ್ಯತವಿಂಶತ್ಯೇಕ ಸಾಸಿರವಾ |ಹಂಸವಾಹನ ತಾತನೆನಿಸುವ | ಕಂಸಮರ್ದನ ಚರಣಕರ್ಪಿಸಿಸ್ವಾಂಶರೂಪವನಂತ ಧರಿಸುತ | ಶಂಸಿಸುವೆ ವೇದೋಕ್ತ ಅನುಕ್ತದಿ ೪
ದೇವ ದೇವರ ದೇವ ದೇವಾ | ಗುರುಗೋವಿಂದ ವಿಠ್ಠಲ್ಲ ದೇವಾ |ಕಾವ ಕೊಲ್ಲುವ ಸ್ಥಿರ ಚರವಾ | ನಂಬುದಾವ ಬಲ್ಲನಿವನ ಮಹಿಮವಾ |ಭಾವಿ ಬೊಮ್ಮನೆ ರಮೆಯ ಮುಖದಿಂ | ಶ್ರೀವರನ ಮಹಿಮೆಗಳ ತಿಳಿದುಭಾವ ಶುದ್ಧಿಯ ಗೈದು ಸುಜನರ | ಸ್ವಾವಲಂಬಿಗಳೆನಿಸಿ ಪೊರೆವ ೫

೫೮೫
ಪುಂಡರೀಕ ವರದ ವಿಠಲ | ಪೊರೆಯಿವನಾ ಪ
ತೊಂಡ ವತ್ಸಲನೆ ಬ್ರಂ | ಹ್ಮಾಂಡಗಳ ಒಡೆಯಾ ಅ.ಪ.
ಅನುವಂಶಿಕವಾಗಿ | ಆಧ್ಯಾತ್ಮ ಪರಿನಿಷ್ಠಧಾನವಾಂತಕ ಕೃಷ್ಣ | ಧೀನವತ್ಸಲನೇ |ನೀನೇಗತಿ ಎಂದೆಂಬ | ಸ್ವಾನುಭಾವದಿಇವಗೆಮಾನನಿಧಿ ತವದಾಸ್ಯ | ಧಾನಮಾಡುವುದೋ ೧
ಪವನವಂದಿತದೇವ | ಕವನಶಕ್ತಿಯು ಇವಗೆದಿವಸದಿವಸಕ್ಕೆ ವೃದ್ಧಿ | ಭಾವವನೆ ಪೊಂದೀ |ಧೃವವರದ ನಿನ್ನಂಘ್ರಿ | ಸ್ತವನಮಾಳ್ವಂತೆಸಗಿಭವವನಿಧಿ ಉತ್ತರಿಸೊ | ಶರ್ವದೇವೇಡ್ಯಾ ೨
ಮಧ್ವಮತ ದೀಕ್ಷೆಯಲಿ | ಶ್ರದ್ಧಾಳು ಎಂದೆನಿಸಿಸಿದ್ದಾಂತ ಪದ್ಧತಿಯ | ಶುದ್ಧಮತಿಯಿತ್ತೂಅಧ್ವೈತತ್ರಯ ತಿಳಿಸಿ | ಉದ್ದಾರ ಗೈಯುವುದೂಕೃದ್ಧಕಶ ಸಂಹಾರಿ | ಮಧ್ವವಲ್ಲಭನೇ ೩
ಕರ್ಮ ಅಕರ್ಮಗಳ | ಮರ್ಮಗಳ ತಿಳಿಸುತ್ತನಿರ್ಮಲನು ಎಂದೆನಿಸೊ | ಪೇರ್ಮೆಯಲಿ ಇವನಾ |ಭರ್ಮಗರ್ಭನನಯ್ಯ | ನಿರ್ಮಮತೆ ವೃದ್ಧಿಸುತಪ್ರಮ್ಮೆಯಂಗಳ ತಿಳಿಸಿ | ಹಮ್ರ್ಯದೊಳು ತೋರೀ ೪
ಭಾವಙ್ಞ ತೈಜಸನೆ | ನೀವೊಲಿದು ಪೇಳ್ದಂತೆಭಾವುಕಗೆ ಇತ್ತಿಪೆನೊ | ಈ ವಿಧಾಂಕಿತವಾ |ನೀವೊಲಿಯದಿನ್ನಿಲ್ಲ | ದೇವದೇವೋತ್ತಮನೆಕಾವಕರುಣೆಯೆಗುರು | ಗೋವಿಂದ ವಿಠಲಾ ೫

೫೮೬
ಪುಂಡರೀಕ ವರದ ಹರಿ | ವಿಠಲ ಪೊರೆ ಇವಳಾ ಪ
ತೊಂಡ ವತ್ಸಲ ದೇವ | ಕಾರುಣ್ಯ ಸಿಂಧೋಅ.ಪ.
ಸತ್ಯಸೂ ಸ್ವಪ್ನದಲಿ | ಪೊತ್ತು ಗುರು ಕರುಣವನುಉತ್ಸಾಹದಲಿ ನಿನ್ನ | ಕೀರ್ತಿಸುವ ಭಾವಾಮತ್ತೆ ತೈಜಸನಿಂದ | ಮೂರ್ತಿ ಸಂದರ್ಶನವಪೊತ್ತುದಕೆ ನಾನೀಗ | ಇತ್ತೆ ಉಪದೇಶಾ ೧
ಚಿತ್ತದಲಿ ನೀನು ಸೂ | ವ್ಯಾಪ್ತನಾಗಿದ್ದವಳಭಕ್ತಿ ಜ್ಞಾನೆರಡರಾ | ವೃತ್ತಿ ವೃದ್ಧಿಸಲೀಆಪ್ತ ನಿನಗಿಂದನ್ಯ | ಮತ್ತೊಬ್ಬರಿಲ್ಲ ಹರಿಕೃತ್ತಿ ವಾಸನ ತಾಪ | ಎತ್ತಿವಳ ಸಲಹೋ ೨
ಪರತಮಾತ್ಮಕ ಜ್ಞಾನ | ಎರಡು ಮೂರ್ಭೇದಗಳಅರಿವಾಗುತಿವಳೀಗೆ | ಸಾಧನವ ಗೈಸೋಹಿರಿಯರಾಶೀರ್ವಾದ | ನೆರವಾಗಿ ಇವಳ ಭವಶರಧಿಯನೆ ಬತ್ತಿಸೈ | ಸುರಸಾರ್ವಭೌಮಾ ೩
ಬೇಕಾದ ವರಗಳನು | ನೀ ಕರುಣಿಸಿವಳೀಗೆಸಾಕುವಾಭಾರ ನಿನ್ನದು | ಶ್ರೀ ಕರಾರ್ಚಿತನೇಶೋಕ ಸುಖ ವೆರಡಕ್ಕು | ನೀಕಾರಣೆಂಬಂಥವಾಕನನುಭವ ವಿರಲಿ | ಶ್ರೀ ಕಾಂತ ಹರಿಯೇ ೪
ಪೂವಿಲ್ಲ ಪಿತ ನಿನ್ನ | ಭಾವದಲಿ ಮೈ ಮರೆದುಸಾವಧಾನದಿ ಹರಿ ಪೊಗಳಿ | ಹಿಗ್ಗುವಂತೆಸಗೋಪಾವನಾತ್ಮಕ ಗುರೂ | ಗೋವಿಂದ ವಿಠ್ಠಲನೆನೀವೊಲಿದು ಪ್ರಾರ್ಥನೆಯ | ಓದಿ ಸಲಿಸುವುದೋ ೫

೩೦೯
ಪುಟ್ಟಿದನು ಜಗದೀಶ | ಜಗಭಾರ ನೀಗಲುವೃಷ್ಣಿಕುಲದಲಿ ಈಶ | ದೇವಕಿಯ ಜಠರದಿಕೊಟ್ಟು ಅವಳಿಗೆ ಹರ್ಷ | ಕರುಣಾಬ್ದಿ ಭೇಶ ಪ
ಅಟ್ಟಹಾಸದಿ ದೇವದುಂದುಭಿ | ಶ್ರೇಷ್ಠವಾದ್ಯಗಳೆಲ್ಲ ಮೊಳಗಲುಅಷ್ಟಮಿಯ ದಿನದಲ್ಲಿ ಬಲು ಉ | ತ್ರ‍ಕಷ್ಟದಲ್ಲಿರೆ ಗ್ರಹಗಳೆಲ್ಲವು ಅ.ಪ.
ಶಂಖಚಕ್ರವ ಧರಿಸಿ | ಅಭಯ ಪ್ರದಾತನುಸೊಕ್ಕಿದವರನು ಅರಸಿ | ನಿಗ್ರಹಿಸಲೋಸುಗಅಕ್ಕರದ ಮನವೆರಸೀ | ನರಮೃಗನ ಪರಿ ದೇ-ವಕ್ಕಿಯಲಿ ಉದ್ಭವಿಸೀ | ಸಜ್ಜನರ ಹರ್ಷೀಸಿ ||ವಕ್ರಮನದವನಾದ ಕಂಸನು | ಕಕ್ಕಸವ ಬಡಿಸುವನು ಎನುತಲಿನಕ್ರಹರ ಪ್ರಾರ್ಥಿತನು ದೇ | ವಕ್ಕಿ ವಸುದೇವರಿಂದಲಿ ೧
ದೇವ ಶಿಶುತನ ತಾಳೀ | ನಗುಮೊಗವ ತೋರಲುದೇವ ವಾಣಿಯ ಕೇಳೀ | ಅನುಸರಿಸಿ ಆದ ವಸುದೇವ ತನಯನ ಕೈಲೀ | ಕೊಂಡಾಗ ಬಂಧನಭಾವ ಕಳಚಿತು ಕೇಳೀ | ಶ್ರೀ ಹರಿಯ ಲೀಲೇ ||ಪ್ರಾವಹಿದ ಸರಿದ್ಯಮುನೆ ವೇಗದಿ | ಭಾವ ತಿಳಿಯುತ ಮಾರ್ಗವೀಯಲುಧೀವರನು ದಾಟುತಲಿ ಶಿಶು ಭಾವದವನನ ಗೋಪಿಗಿತ್ತನು ೨
ನಂದಗೋಪನು ಶಿಶುವ | ತಾ ಕೊಂಡು ಮುದದಲಿಬಂದ ಮಾರ್ಗವ ಹಿಡಿದ | ಮನ ಮಾಡಿ ಮಧುರೆಗೆಬಂದ ತ್ವರ ವಸುದೇವ | ಕಾರಾಗೃಹದ ಕದಬಂಧ ವಾಯಿತು ದೇವ | ಮಾಯಾದಿ ವಿಭವ ||ತಂದು ಶಿಶು ಸ್ತ್ರೀಯಾಗಿ ಮಲಗಿರೆ | ಬಂದು ಕಂಸನು ಕೈಲಿ ಕೊಳ್ಳುತಕಂದನಸು ಹರಣಕ್ಕೆ ಯತ್ನಿಸೆ | ಬಾಂದಳಕ್ಕದು ಹಾರಿ ಪೇಳಿತು ೩
ದುರುಳ ಕಂಸನೆ ತಿಳಿಯ | ನಿನ್ಹನನ ಗೈಯ್ಯುವತರಳನುದ್ಭವ ಪರಿಯ | ಬೇರೆಡೆಯಲಿ ಇರುತಿಹಕರಿಯ ವೈರಿಯ ಪರಿಯ | ಕೊಲ್ಲುವನು ನಿನ್ನನುಮರೆಯದಿರು ಇರು ಖರೆಯ | ತಿಳಿ ರಕ್ಕಸರ ಅರಿಯ ||ಒರೆವುತೀಪರಿ ಶಿಶುವು ಹಾರಲು | ದುರುಳ ಭಯವನೆ ಪೊಂದಿ ತೆರಳುತತರಳರಸುಗಳ ನೀಗ ತನ್ನಯ | ಪರಿಜನಕೆ ಅಜ್ಞಾಪಿಸಿದ ಕಂಸ ೪
ಆರೊಂದನೆಯ ದಿನದಿ | ಗೋಕುಲಕೆ ಬಂದಳುಕ್ರೂರಿ ಪೂಥಣಿ ವಿಷದಿ | ಪೂರಿತದ ಸ್ತನ ಕೊಡೆಹೀರಿ ಅವಳಸು ಭರದಿ | ಮೂರೊಂದು ಮಾಸಕೆಭಾರಿ ಶಕಟನ ಮುದದಿ | ಒದೆದಳಿದೆ ನಿಜಪದದಿ ||ಮಾರಿ ಪೂಥಣಿ ತನುವನಾಶ್ರಿತ | ಊರ್ವಶಿಯ ಶಾಪವನೆ ಕಳೆಯುತಪೋರ ಆಕಳಿಸುತ್ತ ಮಾತೆಗೆ | ತೋರಿದನು ತವ ವಿಶ್ವರೂಪ ೫
ತೃಣನ ವತ್ಸನ ಬಕನ | ತರು ಅರ್ಜುನಾಶ್ರಿತಧುನಿಯು ಚಮು ಅಸುರರನ | ಸಂಹರಿಸಿ ಕೃಷ್ಣನುಮಣಿಗ್ರೀವ ಯಮಳರನ | ಮೋಚಿಸುತ ಕಾಳೀಯನ್ಹೆಡೆಯಲಿ ಸುನರ್ತನ | ಗೈದು ಮದ ಭಂಜನ ||ಪಾನಗೈಯ್ಯುತ ದಾನ ವನ್ಹಿಯೆ | ಹನನ ವಿಷತರುರೂಪಿ ದೈತ್ಯನ ಧೇನುಕಾಸುರ ಮಥನ ಅಂತೆಯೆ | ಹನನ ಬಲದಿಂದಾ ಪ್ರಲಂಬನು೬
ಪುನಹ ವನ್ಹಿಯ ಪಾನ | ಗೈಯುತ್ತ ಹರಿ ಋಷಿಪತ್ನಿಯರು ಕೊಟ್ಟನ್ನ | ಭುಜಿಸುತ ನಗಧೃತತೃಣವ ಪರಿ ಗೋವರ್ಧನ | ಶಂಖ ಚೂಡನ ಶಿರಮಣಿಯು ಬಲು ಅಪಹರಣ | ಅರಿಷ್ಟಾಸುರ ಹನನ ||ಹನನಗೈಯ್ಯಲು ಕೇಶಿ ಅಸುರನ | ಘನಸುವ್ಯೋಮಾಸುರನ ಅಂತೆಯೆ ಮನದಿ ಯೋಚಿಸಿ ಕಂಸ ಕಳುಹಿದ | ದಾನ ಪತಿಯನು ಹರಿಯ ಬಳಿಗೆ ೭
ಬಲ್ಲ ಮಹಿಮೆಯ ಹರಿಯ | ಅಕ್ರೂರ ವಂದಿಸಿಬಿಲ್ಲಹಬ್ಬಕೆ ಕರೆಯ | ತಾನೀಯೆ ಕೃಷ್ಣನುಎಲ್ಲ ತಿಳಿಯುತ ನೆಲೆಯ | ಪರಿವಾರ ಸಹಿತದಿಚೆಲ್ವ ರಥದಲಿ ಗೆಳೆಯ | ಅಕ್ರೂರ ಬಳಿಯ ||ಕುಳ್ಳಿರುತ ಶಿರಿ ಕೃಷ್ಣ ತೆರಳುತ | ಅಲ್ಲಿ ಯಮುನೆಲಿ ಸ್ನಾನ ವ್ಯಾಜದಿ ಚೆಲ್ವತನ ರೂಪಗಳ ತೋರುತ | ಹಲ್ಲೆಗೈದನು ಗೆಳೆಯ ಮನವನು ೮
ಕೊಲ್ಲ ಬಯಸುತ ಇವರ | ಮಾವಟಗನಾನೆಯುಹಲ್ಲ ತೋರುತ ಬವರ | ಗೈವುದಕೆ ಬರ ಹರಿಹಲ್ಲು ಮುರಿಯುತ ಅದರ | ಸಂಹರಿಸಿ ಬಿಸುಡಲುಮಲ್ಲ ಬರೆ ಚಾಣೂರ | ಹೂಡಿದನು ಸಂಗರ ||ಚೆಲ್ವ ಕೃಷ್ಣನು ತೋರಿ ವಿಧ್ಯೆಯ | ಮಲ್ಲನನು ಸಂಹರಿಸುತಿರಲು ಬಲ್ಲಿದನು ಬಲರಾಮ ಮುಷ್ಟಿಕ | ಮಲ್ಲನನು ಹುಡಿಗೈದು ಬಿಸುಟನು ೯
ನೆರೆಯ ಸೇನೆಯ ಜಲಧಿ | ಆವರಿಸಿ ಬರುತಿರೆಹರಿಯ ಬಲ ಸಹ ಭರದಿ | ಸಂಹರಿಸಿ ಅವರನುಕರಿಯ ವೈರಿಯ ತೆರದಿ | ಹಾರುತಲಿ ಮಂಚಿಕೆಲಿರುವ ಕಂಸನ ಶಿರದಿ | ಪದಮೆಟ್ಟಿ ಶಿಖೆ ಪಿಡದಿ ||ಗರುಡನುರಗನ ಪಿಡಿದು ಕೊಲ್ಲುವ | ತೆರದಿ ಕೃಷ್ಣನು ಪಿಡಿದ ಕಂಸನ ಕರದಿ ಖಡ್ಗದಿ ಶಿರವ ನಿಳುಹಲು | ನೆರೆದ ಸುಜನರು ಮೋದಪಟ್ಟರು ೧೦
ಹರನು ಆಗಲು ಮಂದ | ಸುರನಿಕರ ಪೂ ಮಳೆವಿತತ ಭಕ್ತಿಯಲಿಂದ | ಗೈದುಗ್ರಸೇನಗೆಕೃತವು ರಾಜ್ಯವಲಂದ | ಪಟ್ಟಾಭಿಷೇಕವುಪಿತನ ಬಂಧದಲಿಂದ | ಮೋಚಿಸಿದ ಕಂದಹಿತ ಗುರು ಗೋವಿಂದ ವಿಠಲನ | ಕ್ಷಿತಿಯ ಭಾರವನಿಳುಹೆ ಪೀಠಿಕೆ ಪ್ರಥಮ ಸಾಧಿತ ಪಠಿಸೆ ಭಕುತಿಲಿ |ಗತಿಯ ನೀಡುತ ಮೋದ ಪಡಿಸುವ ೧೧

೪೨೯
ಪುರಂದರ ದಾಸರಾಯಾ | ನಮಿಸೆ ನಿಮ್ಮಚರಣ ಸರಸೀರುಹವಾ ಪ
ಮೊರೆಹೊಕ್ಕ ಜನರ ನೀ | ಪೊರೆಯದೆ ಬಿಡುವರೆವರಪ್ರಹ್ಲಾದ್ ಗರುಹಿದಂ | ತರುಹು ಮಂತ್ರಾರ್ಥಿವ ಅ.ಪ.
ದ್ವಾರಕ ಪುರದೊಳಗೆ | ನರ್ತನ ಗೈಯ್ಯೆವಾರ ಕಾಂತೆಯರೆಲ್ಲರೂ |ಭೋರಿಟ್ಟು ಮೊರೆಯುವ | ಸ್ವರಕೇಳಿ ಸುರರೆಲ್ಲಹರಿಯ ಓಲಗವಾರು | ಹೊಗುವರು ಎಂದರು೧
ಬಂದನು ಮುನಿ ನಾರದ | ಪೋಗುವೆ ನಾನೆಂದು ದ್ವಾರಕೆಗೆ ತಾನೆಂದ |ಸಿಂಧು ಶಯನ ಗೋ | ವಿಂದನೆ ಪೊರೆಯೆಂದುಇಂದರೆ ಯರಸನಾ | ನಂದ ಓಲಗ ಸೇರ್ದ ೨
ಷೋಡಶದ್ವಯ ಸ್ವರದಿ | ಮೈ ಮರೆಯುತ್ತಪಾಡಿ ಪೊಗಳಿ ಮುದದೀ |ಮೃಡವಂದ್ಯ ಹರಿಯವನ | ಕಡುಭಕುತಿಗೆ ಮೆಚ್ಚಿನೀಡುವೆ ವರವ ನೀ | ಬೇಡು ಬೇಡನೆ ಪೇಳ್ದ೩
ಎಚ್ಚತ್ತು ಮುನಿ ನೋಡಿದ | ನಗುತಿರ್ಪಅಚ್ಚ್ಯುತನ್ನಾ ಬೇಡಿದ |ಸಚ್ಛಾರಿತ್ರನೆ ಕೇಳು | ನಿಚ್ಚಾಟೆನ್ನಯ ಕೂಡೆಪೆಚ್ಚ ಪೇರ್ಮಲಿ ಆಡು | ಲಕ್ಷಣಾಗ್ರಜನೇ ೪
ಕಲಿ ಪ್ರಾಬಲ್ಯದ ಯುಗದೀ | ನಿನ್ನಯ ಇಷ್ಟಸಲಿಸೂವೆ ತೆರಳೆನಲೂ |ಕಲಿಕಾಲ ಬರುವಂದು | ಒಲಿಮೇಲಿ ನರಜನ್ಮತಾಳುತ ಪುರಂದರ | ಗಡದಲ್ಲುದೀಸಿದ ೫
ಚಿನಿವಾರ ವರದನಲ್ಲೀ | ಜನಿಸುತ್ತಧನ ನವಕೋಟಿಯ ಗಳಿಸೀ |ಘನ ಲೋಭಿ ದ್ವಿಜನ | ಜ್ಞಾನೋದಯ ಮಾಡುತಘನಗುಣ ಸಿರಿಪತಿ | ಅಣುಗನ್ನ ಪೊರೆದ ೬
ಅಂದಿನ್ವೊಚನ ಮನಕೆ | ಶ್ರೀ ಹರಿ ತಾತಂದು ಸಲಿಸಿದ ಅವನಿಗೇ |ಹಿಂದೆ ಮುಂದೆ ಬಂದು | ಪೊಂದಿ ನಿಂದಾಡ್ದ ನಾರಂದ ರೂಪನು ಪುರಂದರ ದಾಸರ ೭
ಹಿರಿಯ ವೈರಾಗ್ಯ ಪೊಂದಿ | ಸಕಲವನ್ನುಸಿರಿಕೃಷ್ಣಗರ್ಪಣೆಂದೀ |ಗುರು ವ್ಯಾಸರಲಿ ಪುರಂ | ದರನೆಂಬಂಕಿತ ಪೊಂದಿಪರಿಸರ ಮತ ಸರ್ವೋತ್ತಮವೆಂದು ಬರೆದಂಥ೮
ಪದಪದ್ಯ ಸೂಳ್ಹಾದಿಯ | ಪಾದೊನದಿಪದಪಂಚ ಲಕ್ಷವ ರಚಿಸೀ |ಮೋದ ತೀರ್ಥರ ಶಾಸ್ತ್ರ | ಸಾರ ವಿಸ್ತಾರದಿವೇದ ಗಮ್ಯಾನಂದ | ಮಯನ ಬೋಧಿಸಿದ ೯ನಾಲ್ಕಾರು ಜನ ಶಿಷ್ಯರ | ಜ್ಞಾನೀಗಳ ಲೋಕೋದ್ದಾರಕೆ ಈಯುತೆ ಕಾಕು ಮಾಯ್ಮತಗಳ | ಸಾಕಷ್ಟು ಖಂಡಿಸಿಮಾಕಳತ್ರನ ಮಹಿಮೆ | ಮನೆಮನೆ ಬೀರಿದ ೧೦
ಮಾಸ ಪುಷ್ಯವದ್ಯದೀ | ಪರಮೋತ್ತಮಶಶಿ ರವಿಗಳ ಮೇಳದೀ |ರಸೆಯ ತ್ಯಜಿಸಿ ಗುರು ಗೋವಿಂದ ವಿಠಲನಎಸೆವ ಪಾದಗಳ್ಬಿಸಜ | ಸೇರುತ ಮೆರೆದಾ ೧೧

ಬ್ರಹ್ಮಣ್ಯತೀರ್ಥರ ಗುರುಗಳಾದ ಪುರುಷೋತ್ತಮ
೩೫೫
ಪುರುಷೋತ್ತಮ ತೀರ್ಥರೇ | ಪಾಲಿಸಿ ಎನ್ನಪುರುಷೋತ್ತಮ ತೀರ್ಥರೆ ಪ
ಧೃತ – ಸಾರಿ ಬಂದೆನು ನಿಮ್ಮ ನೋಡಲುಭೂರಿ ಕರುಣವ ಮಾಡಿ ಪಾಲಿಸಿ ಅ.ಪ.
ಅಲವ ಬೋಧರ ಮತವಾ | ಪೊಂದಿದರಆಲಸಾದೆ ಭಜಿಸುವರ್ಗೇ |ಧೃತ – ಶೀಲ ಮಾರ್ಗವ ತೋರಿ ಸಲಹುತಕೀಳು ಕರ್ಮವ ಕಳೆವ ಮೌನಿಯೆ ೧
ದ್ವಿಜ ಮೌಳಿ ರಾಮಾಚಾರ್ಯ | ತವದಯದಿತೇಜೋ ತನಯನ ಪಡೆಯಲು |ಧೃತ – ದ್ವಿಜನ ಗೈದಾವಿಪ್ರಸುತನನುನಿಜ ಸುಪೀಠದಿ ನಿಲಿಸಿ ಮೆರೆದ ೨
ಜಯ ಧ್ವಜ ಕರಜಾತಾ | ವಾತಗೆ ಪ್ರೀತಕಣ್ವ ತಟದಿ ವಿಖ್ಯಾತಾ |ಧೃತ – ತೋಯ ಜಾಕ್ಷಾನಾದ ಗುರುಗೋವಿಂದ ವಿಠಲನ ಧ್ಯಾನರತನೆ ೩

೩೭೬
ಪೂಂದಿ ಬದುಕಿರೊ ನಿತ್ಯ ಮಂದಾರ ತರುವಂತೆಕುಂದದಲ ಭೀಷ್ಟಗಳ ಗರೆವ | ಸುರ ತರುವಾ ಪ
ವಾಗೀಶ ಕರಜಾತ | ನಿಗಮಾರ್ಥ ಕೋವಿದರಭೋಗಿಶಯನನ ಭಕುತ | ಭಾಗ್ಯ ದಾತೃಗಳ |ಯೋಗಿ ಕುಲವರ್ಯ ಹೃ | ದ್ರೋಗ ನೀಗುವರಜಾಗು ಮಾಡದೆ ಭಜಿಪ | ಭಕ್ತರನು ಪೊರೆವರನು ೧
ಭವರೋಗ ಭೇಷಜರ | ಪದರಜವ ಧರಿಸುವರಅವಗುಣಗಳೆಣಿಸದೆ | ಭವ ಭವಣೆ ಹರಿಸು ವರ |ನವ ನವ ಸ್ತೋತ್ರಗಳ | ಕವನ ರೂಪದಿ ಪೇಳಿಪವನಾಂತರಾತ್ಮಕನ | ಪರಿತೋಷ ಗೈದವರಾ ೨
ನರಹರಿಯ ನೈವೇದ್ಯ | ಗರಳ ಮಿಶ್ರಿತವೆಂದುಅರಿತು ಭುಂಜಿಸಿದ | ಉರುತರದ ಮಹಿಮರನು |ಸಿರಿಹಯವದನನ | ಅಂಘ್ರಿ ಕಮಲಂಗಳನುನೆರೆನಂಬಿ ಸುಖಿಸುವರ | ಸುರವ ಭಯ ವಿರಹಿತರ ೩
ಉಕ್ತಿಯನು ಸ್ವಪ್ನದಲಿ | ಶಕ್ತಹಯಮುಖಪೇಳೆಯುಕ್ತಿಮಲ್ಲಿಕೆ ಮಾಲೆ | ಮೌಕ್ತಿಕವ ನಿತ್ತವರ |ಭಕ್ತಿಪಥ ತೋರಿ | ಕು | ಯುಕ್ತಿಗಳನೇ ಕಳೆದುಮುಕ್ತಿ ಮಾರ್ಗವ ತೋರ್ವ | ಭಕ್ತಿಯೋಗಿಗಳಾ ೪
ಮಾಯಿ ಶೈವರು ಶಾಕ್ತ್ಯ | ಅನ್ಯಮತಗಳಗೆದ್ದುಜಯ ಪತ್ರ ಘಂಟೆಗಳ | ವಿಜಯ ಸಾರಥಿಗಿತ್ತು |ಭಯ ವಿನಾಶನು ನಮ್ಮ | ತೋಯಜಾಂಬಕ ಸಿರಿಹಯ ವದನನರ್ಚಿಸುವ | ವಾದಿರಾಜರನೂ ೫
ಸೋದೆ ಮಠವಾಸ ಸ | ದ್ಭಕುತ ಜನ ತೋಷಮೋದ ತೀರ್ಥರ ಪ್ರೀಯ | ವಿಬುಧಜನ ಗೇಯಾ |ವಾದಿಗಜ ಸಿಂಹ | ಅದ್ವೈತ ತಮ ಸೂರ್ಯಮೇದಿನೀ ಸುರವಂದ್ಯ | ಶ್ರೀವಾದಿರಾಜರನೂ ೬
ಭಾವಿ ಮಾರುತಿಯ | ದಿನ ದಿನದಿ ಪ್ರಾರ್ಥಿಪರಭಾವ ಕೊಲಿಯುತ ತೋರ್ವ | ಹಯ ಮುಖಾತ್ಮಕನು |ಭಾವ ಜನಯ್ಯ ಗುರು | ಗೋವಿಂದ ವಿಠ್ಠಲನಭವ್ಯ ರೂಪವ ಹೃದಯ | ದವಕಾಶದೊಳಗೇ ೭

೩೧೧
ಸಂಕ್ಷಿಪ್ತ ಸದಾಚಾರ
ಪೂಜಾನುಷ್ಠಾನವ ಯೋಚಿಸಿ ಮನದೊಳುಪೂಜೆ ಷೋಡಶಗಳ ಮಾಜದೆ ಮಾಡಿರೋ ಪ
ಉಷಃ ಕಾಲದಲೆದ್ದು | ಝಷಕೇತು ಪಿತ ನಾಮಉಸುರು ತಿಪ್ಪುದೇ ಪೂಜೆಯೋ ೧
ಶೌಚ ಬಾಹ್ಯವು ಮೃತ್ತು ಶೌಚ ಮಾಡಿಕೊಂಡುಶುಚಿಷತ್ತು ನಿನ ನಾಮ ಉಚ್ಚರಿಪುದೆ ಪೂಜೆಯೋ೨
ತುಲಸಿ ಮೃತ್ತಿಕೆ ಹಚ್ಚಿ | ತುಲಸಿ ವಂದನೆ ಮಾಡಿಅಲಸಾದೆ ಕೃಷ್ಣನ ವಲಿಸೂವುದೇ ಪೂಜೆಯೋ ೩
ಗೋವನೆ ಬಳಸುತ್ತ ಗೋಪುಚ್ಛ ಪಿಡಿಯುತ್ತಗೋವ ವಂದಿಪುದೆಲ್ಲ ಗೋಪಾಲ ನಿನ ಪೂಜೆಯೋ೪
ಸ್ನಾನ ಸಂಧ್ಯಾನ ಮೇಣೂಧ್ರ್ವ ಪುಂಡ್ರವ ಧರಿಸಿಭಾನುಗಘ್ರ್ಯವ ನೀಯೆ ಶ್ರೀನಿವಾಸ ಪೂಜೆಯೋ ೫
ಅಂಭ್ರಣಿ ಸೂಕ್ತದಿಂ ನಿರ್ಮಾಲ್ಯವನೆ ತೆಗೆದುಅಂಭ್ರಣಿಪತಿ ಪಾದ ತೀರ್ಥ ಸೇವನೆ ಪೂಜೆಯೋ ೬
ಅಷ್ಟ ಮಹಾಮಂತ್ರ ಶಿಷ್ಪನಾಗುತ ಹೃದಯಅಷ್ಟ ಕಮಲದಲ್ಲಿ ಧ್ಯಾನ ಮಾಳ್ಪುದೆ ಪೂಜೆಯೋ ೭
ಮಂಟಪೋತ್ತಮ ಪೂಜೆ ಸುಷ್ಠು ಕಲಶ ಪೂಜೆಶ್ರೇಷ್ಠ ಪಂಚಾಮೃತ ಪೀಠ ಶಂಖ ಪೂಜೆಯೋ ೮
ಘಂಟನಾದಾ ಅಖಂಡ ಶ್ರೇಷ್ಠ ದೀವಿಗೆ ಪೂಜೆಪೀಠಾವರಣ ಹೃತ್ಪೀಠ ಚಿಂತನೆ ಪೂಜೆಯೋ ೯
ಶಾಂತ ಚಿತ್ತದಿ ಬಾಹ್ಯಾನಂತ ಮೂರ್ತಿಯ ಪರಮಗುರುರ್ವಂತರ್ಗತ ಮೂರ್ತಿ ಗುರುಮೂತ್ರ್ವೆಕ್ಯವೆ ಪೂಜೆಯೋ ||
ಚಿಂತಿಸಿ ಸ್ವಾಂತಸ್ಥ ಬಿಂಬನೋಳೈಕ್ಯವಚಿಂತಿಸುತ್ತಾನೇಕ ಗೈವ ವೈಭವ ಪೂಜೆಯೋ ೧೧
ಹೃತ್ಪುಂಡರೀಕಗೆ ಕಲ್ಪ ತರುವನೆ ಬೇಡುತ್ತಪ್ರೀತ್ಯಾದ ಮಾನಸ ಪದಾರ್ಥಗಳ ಪೂಜೆಯೋ ೧೨
ಪೂರ್ಣ ಶೃತಿಯ ಭಾವ ಚೆನ್ನಾಗಿ ಗ್ರಹಿಸುತ್ತಪೂರ್ಣನ ಕಳೆಯೊಂದು ಪ್ರತಿಮಾದಲ್ಲಿರಿಸೋ ೧೩
ನಿಷುಸೀದ ಶ್ರುತಿಯಂತೆ ವಸುದೇವ ಕೃಷ್ಣನೆಅಸಮ ಪೂಜಕ ಪೂಜ್ಯ ಅವನೇವೆ ತಿಳಿಯೊ ೧೪
ಬಾಹ್ಯದರ್ಚನೆಗಳು ಶ್ರೀ ಹಸ್ತದಿಂದಲಿವ್ಯಾಹರಣೆಂಬೋದೆ ಹರಿ ಪೂಜೆಯೋ ೧೫
ಆವಾಹನಭಿಷೇಕ ನೈವೇದ್ಯಾದಿ ಪೂಜೆದೇವಗಾರುತಿ ಶಂಖ ಭ್ರಮಣಾದಿ ಪೂಜೆಯೋ ೧೬
ಸರ್ವವನರ್ಪಿಸಿ ಅಸ್ವಾತಂತ್ರ್ಯವ ಗ್ರಹಿಸಿಶರ್ವಾದಿ ವಂದ್ಯ ಬಿಂಬಗೆ ಸರ್ವ ಪೂಜೆಯೋ ೧೭
ಸರ್ವಾಪರಾಧವ ಸರ್ವೇಶನಲಿ ಪೇಳಿವೈಶ್ವ ದೇವಾದಿಗಳ್ ಸತ್ಕರ್ಮಗಳೆ ಪೂಜೆಯೋ ೧೮
ಯತಿಗಳರ್ಚನೆಯನ್ನು ಮತಿಯಿಂದ ಗೈಯುತ್ತಸುತ ವಿಪ್ರಾದಿಯ ಸಹ ಹುತಶೇಷ ಮೆಲ್ಲೋದೆ ಪೂಜೆಯೋ ೧೯
ಪ್ರಾಣಾಗ್ನಿ ಹೋತ್ರಾನು ಸಂಧಾನದಲಿ ಮದ್ದುಪ್ರಾಣನ ಪ್ರಾಣ ವೈಶ್ವಾನರಗೀಯೋದೆ ಪೂಜೇ ೨೦
ಅಂತರಂಗದ ಪೂಜೆಗೊಲಿದ ಸಂತತ ಹರಿಕಂತು ಪಿತನು ಗುರು ಗೋವಿಂದ ವಿಠಲಾ ೨೧

೨೩೫
ಪೃಥುಧರನೆ ಸೂತ್ರ ಸುತ ಪ್ರಥಿವ ದೇವ ಪ
ಪೃಥುವ್ಯಾಖ್ಯ ಸೌಪರಣಿ ಪ್ರಿಯ ಗರುಡ ದೇವಾ ಅ.ಪ.
ವಿನತೆಯಲಿ ಜನಿಸಿ ನೀ | ಅವಿನೀತೆ ಕದ್ರುವಿನತನಯರನು ಭಕ್ಷಿಸುತ | ದಿನವ ಕಳೆದೂ |ಪಣದ ವ್ಯಾಜದಿ ಪೋಗಿ | ಘನ ಅಮೃತ ಕಲಶವನುಸನುಮತದಿ ನೀ ತೋರಿ | ನಿನ ತಾಯ ಸೆರೆ ಕಳೆದೇ ೧
ಗರುಡದೇವನೆ ನೀನು | ಹರಿಗೆ ವಾಹನನಾಗಿಹರಿಯ ಪಾದಗಳ್ ಧರಿ೫ ಕ೫À೫Àಡರಲೀ |ಹರಿಬಿಂಬ ಕಾಣುತ್ತ | ಚರಣ ನಖ ಪಂಕ್ತಿಯಲಿಹರಿಯ ಸ್ತೋತ್ರವ ಮಾಳ್ಪ | ಸುರ ಕುಲಾಗ್ರಣಿಯೆ ೨
ಕಾಲಾಭಿಮಾನಿಯೇ ಕಾಲ ನೀಗಿದೆ ನಾನುಕಾಲ ನೀಯಾಮಕನ | ಘಳಿಗೆ ಸ್ಮರಿಸದಲೆಕಾಲಾತ್ಮ ಗುರು ಗೋ | ವಿಂದ ವಿಠಲನ ಸಾರ್ವಕಾಲದಲಿ ನೆನೆವಂಥ | ಶೀಲ ಮನವೀಯೋ ೩

೨೪೧
ಪೋಷೀಸೊ ಹರಿ ಮಂಚಕ | ಪೆಡೆಗಳುಸಾಸೀರ೫ುಭೂಷ೫ಪ||
೫ಷ ಎನ್ನ ದೋಷ ನಿ | ಶ್ಯೇಷವ ಗೈಸುತಸಾಸೀರ ನಾಮವ ಮನಾ | ಕಾಶದೊಳು ತೋರಿ ಅ.ಪ.
ಬೇಡೂವೆ ವಾತಾಶನಾ | ಎನ್ನನ್ನುಕಾಡೂವ ವ್ಯಜಿನಾಹನಾ |ಮಾಡಿ ಮನ್ಮಾನಸದಿ | ರೂಢಿಗೊಡೆಯ ಹರಿಯನೋಡುವ ಸುಖ ತಡ | ಮಾಡದೆ ಕೊಟ್ಟು ಕಾಯೋ ೧
ಚಕ್ಷುವೆ ಶ್ರವ ಕಾಯಾ ಪೂರ್ವದತ್ರ್ಯಕ್ಷಾನೆ ಸುರಗೇಯಾ |ಕುಕ್ಷೀಯೆ ಪಾದವೆಂಬ | ಲಕ್ಷಣ ಶಿರದಲ್ಲಿಲಕ್ಷೀಸದಲೆ ಜಗ | ಸರ್ಪಪಾಯಿತ ನಿನಗೆ ೨
ಜೀವ ನಾಮಕ ನೆನಿಪೆ | ಹರಿಯನುಸೇವಿಸುತಲಿ ಸುಖಿಪೆ ||ಕಾವಕೊಲ್ಲುವ ಗುರು | ಗೋವಿಂದ ವಿಠಲನತೀವರ ತೋರ್ಪುದು | ನೀ ವೊಲಿದೆನಗಿನ್ನು ೩

೫೮೧
ಪ್ರಕಾಶರೂಪಿ ವಿಠಲಾ ತೋಕನ್ನ ಸಲಹೋ ಪ
ಅಕಳಂಕ ಚಾರಿತ್ರ | ನಿಖಿಲಾಗಮಸುವೇದ್ಯಪ್ರಕಟಿಸಿವನಲಿ ಜ್ಞಾನದಂಕುರವ ಹರಿಯೇ ಅ.ಪ.
ಮಧ್ವಮತದಲಿ ದೀಕ್ಷೆ | ಶುದ್ಧ ಭಕುತಿ ಜ್ಞಾನಸಿದ್ದಿಸುವುದಿವನಲ್ಲಿ | ಮಧ್ವಾಂತರಾತ್ಮಾವಿದ್ಯೆಸಂಪದದಲ್ಲಿ | ಸ್ಪರ್ಧಿಸುವ ಮನಕಾಗಿಬುದ್ಧಿ ಪ್ರೇರಿಸು ಹರಿಯೆ ಸಿದ್ಧಮುನಿವಂದ್ಯಾ ೧
ಕಾಮಾದಿ ಷಡ್ವೈರಿ | ಸ್ತೋಮವನೆ ಕಳೆಯುತ್ತನೇಮನಿಷ್ಠೆಯಲಿ ಮನ | ಕಾಮನೆಯ ಕೊಟ್ಟೂಪ್ರೇಮದಲಿ ಹರಿಗುರೂ | ಸ್ವಾಮಿ ಕಾರ್ಯವಗೈಸಿಕಾಮಿತಾರ್ಥದನಾಗೊ | ಕಾಮ ಪಿತ ಹರಿಯೇ ೨
ಅಂಶದಲಿ ತನುವ್ಯಾಪ್ತಿ | ಸಾಂಶದೇವಾದಿಗಳುಸಂಸಾರ ನಿರ್ವಹಣೆ ಮಾಡಿಮಾಡಿಸುತಾಕಂಸಾರಿ ಪೂಜೆ ಎನೆ | ಶಂಸಿಸುತ ಯೋಗ್ಯರಲಿವಂಶ ಉದ್ಧರವೆಂಬ | ಅಂಶವನೆ ತಿಳಿಸೋ ೩
ಕಾಕು ಜನಗಳ ಸಂಗ | ಓಕರಿಸುವಂತೆಸಗಿನೀಕೊಟ್ಟು ಸತ್ಸಂಗ | ಪ್ರಾಕ್ಕರ್ಮ ಕಳೆಯೋಲೌಕಿಕದಿ ಸತ್ಕೀರ್ತಿ | ನೀ ಕರುಣಿಸಿವನಲ್ಲಿಏಕಮೇವನೆ ಇದನೆ | ನಾ ಕೇಳ್ವೆ ಹರಿಯೇ ೪
ಜೀವರಂತರ್ಯಾಮಿ | ಜೀವಕರ್ಮವವೆಸಗಿಆವಫಲ ದ್ವಂದ್ವಗಳ | ಜೀವಕರುಣಿಸುವನೇಭಾವುಕರ ಪಾಲಗುರು | ಗೋವಿಂದ ವಿಠ್ಠಲನೆಕಾವುದಿವನನು ಎಂಬ | ಭಿನ್ನಪವ ಸಲಿಸೋ ೫

೫೮೦
ಪ್ರದ್ಯುಮ್ನ ವಿಠಲ ನೀನಿವಳ ಸಲಹಬೇಕೋ ಪ
ವಿದ್ಯಾಯು ಸಂಪತ್ತು | ಭಕ್ತ್ಯಾದಿಗಳನಿತ್ತುಉದ್ಧರಿಸ ಬೇಕಿವಳ | ಮಧ್ವಾಂತರಾತ್ಮಾ ಅ.ಪ.
ಹರಿದಾಸ್ಯ ಕಾಂಕ್ಷಿತಳು | ಹಿರಿದಾಗಿ ಬೇಡಿಹಳುವರತೈಜ ಸಾಖ್ಯಹರಿ | ವರದ ನಾಗಿರುವೇಕರುಣನಿಧಿ ತವನಾಮ | ಸ್ಮರಿಪ ಸನ್ಮಾರ್ಗವನುಅರುಹಿ ಮಹ ಭವನಿಧಿಯ | ತರಣ ತಿಳಿಸಿರುವೇ ೧
ಸಂಸಾರ ತಾರಕವು | ಕಂಸಾರಿ ತವಪಾದಪಾಂಸುವನೆ ಶಿರದಿ ಅ | ಸಂಶಯದಿ ಧರಿಸೀಮಾಂಸಧಾತುಕ ಸಪ್ತ | ಹೇಸಿಕೆಯ ದೇಹವು – ವಿಪಾಂಸಗನಿಗಧಿಷ್ಠಾನ | ವೆಂಬುದನೆ ತಿಳಿಸೋ೨
ಪಂಚಬೇದಾತ್ಮಕ ಪ್ರ | ಪಂಚವು ಸದಾ ಸತ್ಯಅಂಚೆವಹ ಸುರರಾದಿ | ತರತಮ್ಯದಾಸಂಚಿಂತನೆಯ ಕೊಟ್ಟು | ವಾಂಛಿತಾರ್ಥದ ಹರಿಯೆಮಿಂಚಿನಂದದಿ ಪೊಳೆಯೊ | ಹೃತ್ಪಂಕಜದ ನಡುವೆ೩
ಮತೆ ಈ ಯುಗದಲ್ಲಿ | ಕೃತ್ಯ ವ್ರತನೇಮಾದಿಸತ್ವ ರಹಿತವು ಆಗಿ | ನಿತ್ಯಫಲರಹಿತಾಎತ್ತ ನೋಡಿದ ರತ್ತ | ಕತ್ತಲೆಯು ಕವಿದಿಹುದುಹತ್ತಿರವೆ ಇರುವಂಥ | ಭಕ್ತವತ್ಸಲ ಸಲಹೋ ೪
ದಾವಾಗ್ನಿ ಕುಡಿದವನೆ | ಪಾವಿನಾಮದ ಹರನೆಗೋವುಗಳೊಳುದ್ಗೀಥ | ದೇವಾದಿದೇವಾಕಾವುದಿವಳನು ಎಂಬ | ಭಾವ ಬಿನ್ನಪ ಸಲಿಸೊಮಾವಿನೋದಿಯೆ ಗುರು | ಗೋವಿಂದ ವಿಠಲಾ೫

೫೭೮
ಪ್ರಭು ಪಾಂಡುರಂಗ ವಿಠಲ | ಅಭಯಪ್ರದಾತಾ ಪ
ಇಭವರದ ನೀನಾಗಿ | ಪೊರೆಯ ಬೇಕಿವನಾ ಅ.ಪ.
ಮರ್ಮಗಳ ನರಿಯದಲೆ | ಕರ್ಮೂನುಭವದೊಳಗೆಪೇರ್ಮೆಯಲಿ ಸಿಲ್ಕಿ ಬಲು | ನೊಂದಿಹನೊ ಬಹಳಾಧರ್ಮಕೃದ್ಧರ್ಮಿ ಹರಿ | ಧರ್ಮಸೂಕ್ಷ್ಮವ ತಿಳಿಸಿನಿರ್ಮಮನ ಮಾಡಿವನ | ಕರ್ಮನಾಮಕನೇ ೧
ಮಧ್ವರಾಯರ ಕರುಣ | ಬದ್ಧ ನಿರುವನು ಈತಸಿದ್ದಾಂತ ತತ್ವಗಳು | ಬುದ್ದಿಗೇ ನಿಲುಕೀಅದ್ವಯನು ನೀನೆಂಬ | ಶುದ್ಧಬುದ್ಧಿಯನಿತ್ತುಉದ್ಧಾರಮಾಡೊ ಹರಿ | ಕೃದ್ಧಖಳಹಾರೀ ೨
ನಾನು ನನ್ನದು ಎಂಬ | ಹೀನಮತಿಯನು ಕಳೆದುನೀನು ನೀನೇ ಎಂಬ | ಸುಜ್ಞಾನವಿತ್ತುದಾನವಾರಣ್ಯ ಕೃ | ಶಾನು ಶ್ರೀ ಹರಿಯೇಸಾನುರಾಗದಿ ಪೊರೆಯೊ | ದೀನವತ್ಸಲ್ಲಾ ೩
ಹರಿ ನಾಮ ವೆಂತೆಂಬೊ | ವಜ್ರಕವಚವತೊಡಿಸಿದುರಿತಾಳಿ ಅಟ್ಟುಳಿಯ | ದೂರಗೈ ಹರಿಯೇಸರುವ ಕಾರ್ಯಗಳಲ್ಲಿ | ಹರಿಯು ಓತಪ್ರೋತನಿರುವ ನೆಂಬುದ ತಿಳಿಸಿ | ಪೊರೆಯ ಬೇಕಿವನಾ ೪
ಪಾದನಾತ್ಮಕನೆನಸಿ | ಪಾವ ಮಾನಿಯ ಪ್ರೀಯಧೀವರನೆ ಶ್ರೀವರನೆ | ಕಾವ ಕರುಣಾಳುಗೋವುಗಳ ಕಾವ ಗುರು | ಗೋವಿಂದ ವಿಠಲನೆನೀವೊಲಿಯದಿನ್ನಿಲ್ಲ | ದೇವ ದೇವೇಶಾ ೫

೫೭೯
ಪ್ರವಹ ಸನ್ನುತ ವಿಠಲ | ಇವನ ಪೊರೆಯೋ ಪ
ಅವಿಕಾರಿ ಆದ್ಯ ನಿರ | ವದ್ಯ ಎಲೊ ಹರಿಯೆ ಅ.ಪ.
ತೈಜಸನೆ ನೀನಾಗಿ | ಮಾಜದಲ್ಯುಪದೇಶಯೋಜಿಸುವೆನೆಂದೆನುತ | ಪೇಳ್ದುದಕ್ಕಾಗೀಆರ್ಜವದ ಮನದಲ್ಲಿ | ಪ್ರಾರ್ಥಿಸಲು ಸ್ವಪ್ನದಲಿಯೋಚಿಸಿಹೆ ಅಂಕಿತವ | ಹೇ ನೈಜಮೂರ್ತೇ ೧
ಚಿಣ್ಣನಿರುವನು ಇವನು | ಕಣ್ಣೆಗೆವೆಯಂದದಲಿಇನ್ನೀವನ ಕಾಯುವುದು | ಬನ್ನಬಡಿಸದಲೇಅನ್ನ ಆರೋಗ್ಯಕ್ಕೆ | ನಿನ್ನನೆ ಮೊರೆಯಿಡಲಿಅನ್ಯ ಹಂಬಲ ನೀಗೊ | ಪನ್ನಂಗ ಶಯನಾ ೨
ಎಡರು ತೊಡರು ಬರಲಿ | ಬಿಡದೆ ನಿನ್ನಂಘ್ರಿಯನುಧೃಡಭಕ್ತಿಯಿಂ ಸ್ಮರಿಪ | ಮುದ ಮನವ ನೀಯೋ |ಎಡಬಲದಿ ನೀನಾಗಿ | ಬಿಡದೆ ಬೆಂಬಲ ವಿರಲುಕಡು ಭವಾರ್ಣವವೆಲ್ಲ | ಅಡಿಯ ಪರಿಮಿತಿಯೋ ೩
ಮರುತ ಮತ ತತ್ವಗಳ | ಸರಳ ಭಾವದಿ ತಿಳಿಸಿಹರಿಯೇ ಸರ್ವೊತ್ತಮನು | ಸಿರಿ ವಾಯು ಮೊದಲಾದಸುರರೆಲ್ಲ ಹರಿಯ ಕಿಂಕರರೆಂಬ ಮತಿಯಿತ್ತುಪೊರೆವುದಿವನನ ಎಂದು | ಹರಿಯೆ ಭಿನ್ನವಿಪೆ ೪
ನಾಮ ಸ್ಮರಣೆ ಯೆಂಬ | ವಜ್ರಕವಚವ ತೊಡಿಸಿಈ ಮಹಾ ಕಲಿಯುಗದಿ | ಸಾಧನವ ಗೈಸೋಶ್ರೀ ಮನೋಹರ ಗುರು | ಗೋವಿಂದ ವಿಠಲಯ್ಯಈ ಮಹತ್ತುಪಕಾರ | ನಾ ಮರೆಯನಯ್ಯ ೫

೫೮೨
ಪ್ರಹ್ಲಾದ ವರದ ವಿಠಲ | ಕಾಪಾಡೊ ಇವಳಾ ಪ
ಆಹ್ಲಾದವನೆ ಕೊಟ್ಟು | ಸಂತೈಸೊ ಹರಿಯೇ ಅ.ಪ.
ಸಾಧನ ಸುಜೀವಿಗಳು | ಭೋದನೆಗೆ ಮೊರೆಇಡಲುಆದರಿಸ ಬೇಕವರ | ಸಾಧು ಜನ ಬಂಧೋಸಾಧು ಈ ಕನ್ಯೆ ಮಣಿ | ಉಪದೇಶ ಬೇಡುವಳೋಬೋಧಿಸಿಹೆ ಅಂಕಿತವ | ಶೀದ ಪೊರೆ ಇವಳಾ ೧
ಕಾಮ ಮದ ಮಾತ್ಸರ್ಯ | ಸ್ತೋಮವನೆ ಕಳೆದುಸತ್‍ಕಾಮಗಳ ಪೂರೈಸು | ಸೋಮಧರವಂದ್ಯಾ |ಕಾಮ ಜನಕನೆ ತಾರ | ತಮ್ಯವನೆ ತಿಳಿಸುತ್ತನೇಮದಿಂ ಭೇದಗಳ ಪ್ರೇಮದಲಿ ತಿಳಿಸೋ ೨
ಭಕ್ತ ಭಕ್ತರ ಅಸದ್ | ಭಕ್ತಿ ಮಾಡಲಿ ಇವಳುಮುಕ್ತಿ ಮಾರ್ಗದ ಹಾದಿ | ಯುಕ್ತಿಯಲಿ ಅರಿತೂಗೋಪ ಗುರು ಗೋವಿಂದ | ವಿಠ್ಠಲನ ಕೀರ್ತಿಸುತೆಉತ್ತರಿಸಲೀ ಭವವ | ಉತ್ತಮೋತ್ತಮನೇ೩

೫೯೩
ಪ್ರಾಣ ಗುರು ಜಯ ವಿಠಲ ಕಾಪಾಡು ಇವಳ ಪ
ಪ್ರಣತಾರ್ತಿ ಹರನೆಂದು ಭಿನ್ನವಿಪೆ ಸತತಾ ಅ.ಪ.
ಪತಿವ್ರತಾಮಣಿ ಎನಿಸಿ ಪತಿಸೇವೆಯೊಳುನಿರತೆಸತತ ಸದ್ಭಕ್ತಿ ಶ್ರೀ ಹರಿಗುರುಗಳಲ್ಲೀ |ಅತಿಶಯದಿ ಮಾಡುತಲಿ ವಿಹಿತವನು ತೊರೆಯದಲೆಕೃತಕಾರ್ಯಳಾಗಿಹಳ ಸತಿಯ ಸಲಹುವುದೂ ೧
ಸ್ವಾಪದಲಿ ತೈಜಸ ದಯಾಪಯೋನಿಧಿ ಹರಿಯೆಆ ಪರಿಮಳಾರ್ಯ ಯತಿರೂಪವನೆ ಕೊಂಡುಕೈ ಪಿಡಿದು ಕಾಯ್ವೆನೆಂಬಭಯ ಹಸ್ತವ ತೋರಿರೂಪವನು ಮರೆಮಾಡ್ಡೆ ಬೃಂದಾವನಾಂತ ೨
ಮೋಚಕೇಚ್ಛೆಯೊಳ್ಸವ್ಯ ಸಾಚಿಗೇ ಅತಿಪ್ರೀಯಖೇಚರೋತ್ತಮ ಪ್ರಾಣಗೊಪ್ಪಿಸುತ ಇವಳಾನೀಚೋಚ್ಚತರತಮ ಜ್ಞಾನ ಸ್ಥಿರಪಡಿಸುತ್ತಪ್ರಾಚೀನ ದುಷ್ಕರ್ಮ ಪರಿಹರಿಸೊ ಹರಿಯೇ ೩
ತನುವು ಇಂದ್ರಿಯವೆಲ್ಲ ಕ್ಷಣ ಭಂಗುರೆಂದೆಂಬಘನಜ್ಞಾನ ವೃದ್ಧಿಸುತ ಕಾಪಾಡೊ ಹರಿಯೇ |ಅನಿಮಿತ್ತ ಬಂಧುವೇ ಪ್ರಣತಜನ ಪರಿಪಾಲಎನುತ ಭಿನ್ನೈಸುವೆನೊ ವೇಣುಗೋಪಾಲ ೪
ಬದಿಗ ನೀನಾಗಿರಲು ಭಯವೇನೊ ಬುಧವಂದ್ಯವದಗಿ ಹೃದ್ಗುಹದೊಳಗೆ ತೋರಿತವ ರೂಪಮುದದಿಂದ ಕಳೆ ಇವಳನಾದಿ ರೋಗವನೆಂಬೆಇದನೇವೆ ಸಲಿಸೊ ಗುರು ಗೋವಿಂದ ವಿಠಲ ೫

೫೯೪
ಪ್ರಾಣ ಗುರು ರಾಮ ವಿಠಲ | ನೀನೆ ಪೊರೆ ಇವಳಾ ಪ
ಮೌನಿ ಸದ್ವಂದ್ಯಗೆ | ಶ್ರೀನಿವಾಸದೇವ ಅ.ಪ.
ಅರುಹಳೆನ್ನಳವಲ್ಲ | ಗುರುಕರುಣ ಸತ್ಪಾತ್ರೆವರಸುತ್ಯೆಜಸನಿತ್ತ | ಪಾನಕವ ಕೊಂಡುಸಿರಿ ರಮಣ ಮಂದಿರವ | ಸೇರಿ ನಾರಿಳ ಫಲವುಕರಗತವು ಆಗಲದು | ವರಮೂರ್ತಿಎನಿಸೆ ೧
ಸುಪ್ತೀಶನಾಜ್ಞೆಯಲಿ | ಇತ್ತಿಹೆನೊ ಅಂಕಿತವಕತೃಸಿರಿ ರಾಮನೆ | ವ್ಯಕ್ತ ತೆರನಾದಾಮಕ್ತಗೊಡೆಯನೆ ದೇವ | ಭಕ್ತವತ್ಸಲಹರಿಯೆಆರ್ತರುದ್ಧರತಾ ಹರಿ | ಅರ್ಥಿಯಲಿಸಲಹೊ ೨
ಹರಿದಾಸ್ಯದೊರಕಲ್ಕೆ | ಪೂರ್ವಸುಕೃತವೇ ಮಾರ್ಗತರಳೆ ಅದ ಪಡೆದಿಹಳು | ಕಾರುಣ್ಯ ಮಾರ್ತೆಮರುತಮತದಲ್ಲಿರುವ | ಕಾರುಣದಿ ಪೊರೆ ಇವಳಸರ್ವಜ್ಞಸರ್ವೇಶ | ಸುರ ಸಾರ್ವ ಭೌಮ೩
ಭ್ರೂತ ಪಂಚಕದೇಹ | ಸುಸ್ಥಿರವು ಅಲ್ಲೆಂಬಖ್ಯಾತ ಮತಿಯನೆ ಕೊಟ್ಟು | ಸಲಹ ಬೇಕಿವಳಾಮಾತುಮೂತಿಗೆ ನಿನ್ನ | ನಾಮ ಸಂಸೃತಿಯಿತ್ತುಈ ತರಳೆನುದ್ದರಿಸು | ಮಾತಳಾಂತಕನೆ೪
ಹಲವು ಮಾತೇಕೆ ಹರಿ | ಕಲಿಯುಗದಿ ತವನಾಮಬಲುಮಂದಿ ಜಪಿಸುತ್ತ | ಭವವ ದಾಂಟಿಹರೊಒಲಿಮೆಯಿಂದವಳನ್ನು | ಸಲಹಲ್ಕೆ ಪ್ರಾರ್ಥಿಸಿಹೆಎಲರುಣಿ ಶಯ್ಯ ಗುರು | ಗೋವಿಂದ ವಿಠಲಾ ೫

೫೯೮
ಪ್ರಾಣ ನರಹರಿವಿಠಲ | ಪಾಲಿಸೋ ಇವನಾ ಪ
ಕಾಣೆನೋ ನಿನ್ಹೊರತು | ಅನ್ಯರನು ಹರಿಯೇ ಅ.ಪ.
ಮಧ್ವಮತದೀಕ್ಷೆಯಲಿ | ಶ್ರದ್ಧೆಯುಳ್ಳವನಿವನುಬುದ್ಧಿ ಪೂರ್ವಕ ಶಾಸ್ತ್ರ | ದಧ್ಯಯನದಾಶೇ |ವೃದ್ಧಿಗೈಸುತ ಅದಕೆ | ಅದ್ವಾನ ವೆಸಗುತಲಿಹದ್ದುವಹ ಪೊರೆ ಇವನ | ಮಧ್ವಾಂತರಾತ್ಮ ೧
ವೇದಾಂತ ವೇದ್ಯಹರಿ | ಪಾದಭಜನೆಯ ನಿತ್ತುಮೋದಮುನಿ ಸನ್ಮತವ | ಭೋದ ಚಾತುರ್ಯಆದರಿಸಿ ಇವಗಿತ್ತು | ಸಾಧನವಗೈಸೊ ಹರಿಬಾದರಾಯಣ ದೇವ | ಪ್ರಾರ್ಥಿಸುವೆ ನಿನ್ನಾ ೨
ಸರ್ವಜ್ಞ ಸರ್ವೇಶ | ಸ್ವಾತಂತ್ರ ಪುರುಷನೆಸರ್ವಾಂತರಾತ್ಮಕನೆ | ನಿರ್ವಿಕಾರಾಖ್ಯಾಅದ್ವೆತತ್ರಯದಲ್ಲಿ | ಸರ್ವ ಸಾದನವಿರುವಸದ್ವಾರ್ತೆ ತಿಳಿಸಿವಗೆ | ಶರ್ವ ಸುರವಂದ್ಯಾ ೩
ಧ್ಯಾನೊ ಪಾಸನೆ ತಿಳಿಸಿ | ಮೌನಿಗಳ ಸನ್ಮಾರ್ಗಜ್ಞಾನಿಯೆಂದೆನಿಸಿವನ | ಹೇ ನಾರಸಿಂಹ |ಮಾನಾಭಿ ಮಾನಗಳ | ನಾನಾಸುದ್ವಂದ್ವಗಳಶ್ರೀನಿವಾಸನೆ ತಾಳ್ವ | ಮನಧೈರ್ಯವೀಯೋ ೪
ಗುರ್ವಂತರಾತ್ಮಗುರು | ಗೋವಿಂದ ವಿಠಲನೆದರ್ವಿಜೀವಿಯ ಹೃದಯ | ಗಹ್ವರದಿ ನಿನ್ನಾ |ಚೆಲ್ವರೂಪವ ಕಂಡು | ಭವವನುತ್ತರಿಪಂಥಹವಣೆ ಒದಗಿಸೊ ಎಂದು | ಪ್ರಾರ್ಥಿಸುವೆ ದೇವಾ ೫

೫೮೭
ಪ್ರಾಣ ಪತಿ ಗೋಪಾಲ | ವಿಠಲ ಕಾರುಣಿಕಾ ಪ
ನೀನಾಗಿ ಒಲಿದಿವನ | ಪೊರೆಯೆ ಪ್ರಾರ್ಥಿಸುವೇ ಅ.ಪ.
ಉತ್ತಮ ಸುಸಂಸ್ರ‍ಕತಿಯ | ಪೊತ್ತು ಜನಿಸುತ ಸರ್ವಕರ್ತೃ ನಿನ್ನಯ ಸೇವೆ | ಅರ್ಥಿಯಂ ಗೈವೆ |ಅರ್ಥಿಸುವ ನಿನ್ನ ದಾಸತ್ವ ದೀಕ್ಷೆಯನೂಸುಪ್ರೀಶ ತೋರ್ದಪರಿ | ಇತ್ತಿಹೆನೊ ಅದಗೇ ೧
ಕರ್ಮನಾಮಕನೆ ದುಷ್ಕರ್ಮಗಳ ಪರಿಹರಿಸಿನಿರ್ಮಲ ಸುಸಾಧನಕೆ | ಸನ್ಮಾರ್ಗ ತೋರೋ |ಮನ್ಮಥನ ಜನಕ ತವ | ನಾಮಸ್ಮರಣೆಯ ಕವಚಪೇರ್ಮೆಯಿ ತೊಡಿಸಿ ಸ | ದ್ಧರ್ಮರಥನೆನಿಸೋ ೨
ವೃದ್ಧ ಜನಗಳ ಸೇವೆ | ಬುದ್ಧಿಪೂರ್ವಕಗೈದುಮಧ್ವಮತ ಸಚ್ಛಾಸ್ತ್ರ | ತಿದ್ದಿ ಪೇಳುವಲೀ |ಶುದ್ಧಬುದ್ದಿಯನಿತ್ತು | ಉದ್ದರಿಸಬೇಕಿವನಹದ್ದುವಾಹನದೇವ | ಮಧ್ವಾಂತರಾತ್ಮಾ ೩
ಅಧಿಭೂತ ಅಧ್ಯಾತ್ಮ | ಅದಿದೈವದೊಳು ನಿನ್ನಅದುಭೂತ ವ್ಯಾಪ್ತಿಯನೆ | ವದಗಿಸಿ ಮನಕೇ |ಬುಧ ಜನೇಢ್ಯನೆ ದೇವ | ಸದಯದೀ ತರಳಂಗೆಹೃದಯದಲಿ ಮೈದೋರಿ | ಮುದವನೇ ಬೀರೋ ೪
ದೀರವನು ಎಂದೆನಿಪ | ಪಾವಮಾನೀಯ ಪ್ರಿಯಕೇವಲಾನಂದಮಯ | ಮಾವಿನೋಧೀಸಾವಧಾನದಿ ತರಳ | ಭಾವುಕಗೆ ಒಲಿಯೆಂದುಓದಿ ಭಿನ್ನವಿಪೆ ಗುರು | ಗೋವಿಂದ ವಿಠಲ ೫

೧೯೭
ಪ್ರಾಣ ಬಾರೊ ಜಗ | ತ್ರಾಣ ಬಾರೋ |ಪ್ರಾಣಿ ಸಕಲ ಕರ್ಮ ಮಾಳ್ಪ | ಜಾಣ ಬಾರೋ ಪ
ಪಂಚ ರೂಪದಿ ಪ್ರಾ | ಪಂಚ ವ್ಯಾಪ್ತ ಬಾರೋ |ಹಂಚಿಕೇಲಿ ದೈತೇಯರ | ವಂಚಕನೆ ಬಾರೋ೧
ಪಾಯುಪಸ್ಥ ಕರ್ಮ | ಗೈವಾಪಾನ ಬಾರೊ |ವಾಯುವ ನೀ ನಿರೋಧಿಸೆ | ಕಾಯ್ವರ್ಯಾರೋ ೨
ಗೋಣು ಮುರಿವ ಭಾರ ಹೊರೆವ || ವ್ಯಾನ ಬಾರೋ |ಪ್ರಾಣ ಪಂಚವ್ಯೂಹ ಮುಖ್ಯ | ವ್ಯಾನ ಬಾರೊ ೩
ಉದಕ ಅನ್ನಕ್ಕವಕಾ | ಶುದಾನ ಬಾರೊ |ಮುದದಿ ಶ್ವಾಸಮಂತ್ರ ಜಪ | ಜಾಣ ಬಾರೋ ೪
ವೈದಿಕ ಲೌಕಿಕ ಶಬ್ದ | ನುಡಿಸೆ ಬಾರೊ |ಊಧ್ರ್ವಗತಿ ದಾತನೆ | ಉದಾನ ಬಾರೋ ೫
ಪಾನ ಅನ್ನಗಳ್ಹಂಚೆ ಸ | ಮಾನ ಬಾರೊ |ಧ್ಯಾನ ವಿಂತು ಈವ ಮುಖ್ಯ | ಪ್ರಾಣ ಬಾರೊ ೬
ಕರುಣಸಾಗರ ದೇಹ ವೀಣೆ | ಚರಿಸೆ ಬಾರೊ |ಗುರು ಗೋವಿಂದ ವಿಠಲಾಧಿಷ್ಠಿತ | ಗುರುವೆ ಬಾರೋ ೭

೫೯೭
ಪ್ರಾಣನರಹರಿ ಮೋದ ವಿಠಲ | ಪೊರೆ ಇವಳಾ ಪ
ದಾನವಾಂತಕ ಕೃಷ್ಣ | ದೀನರುದ್ಧಾರೀ ಅ.ಪ.
ದುರಿತಗಳ ಅಟ್ಟಳಿಯ | ಪರಿಹರಿಸಿ ಸಲಹಯ್ಯಕರುಣಾಳು ನರಹರಿಯೆ | ಮರು ತಂತರಾತ್ಮಶರಣಜನ ವತ್ಸಲನೆ | ಅರಿಗಳನೆ ಪರಿಹರಿಸಿಪೊರೆಯ ಬೇಕೀ ಶಿಶುವೆ | ಕಾರುಣ್ಯ ನಿಧಿಯೇ ೧
ಮಧ್ವಮತ ತತ್ವಗಳ | ಪದ್ಧತಿಯ ತಿಳಿಸುತ್ತಶ್ರದ್ಧೆಯಿಂದಾಚರಿಪ | ಶುದ್ಧಮತಿಯಿತ್ತೂಉದ್ದರಿಸ ಬೇಕಿವಳ | ಶ್ರದ್ಧೆ ಪತಿ ಪ್ರಿಯ ಹರಿಯೆಹದ್ದುವಾಹನದೇವ | ಮಧ್ವಾಂತರಾತ್ಮ ೨
ಭಾವಶುದ್ದದಿ ನಾಮ | ಓವಿಭಜಿಸುವಂಥಭಾವಭಕ್ತಿಯನಿತ್ತು | ಕಾಯೊ ಶ್ರೀ ಹರಿಯೇಶ್ರೀ ವರನೆ ಸರ್ವತ್ರ | ತವಸ್ಮರಣೆ ಇತ್ತಿವಳನೀವೊಲಿಯ ಬೇಕಯ್ಯ | ದೇವ ಹಯವದನಾ ೩
ಸಾಧು ಸಜ್ಜನ ಸಂಗ | ಸಾಧಿಸುತ ಇವಳಲ್ಲಿಕಾದುಕೋ ಶ್ರೀ ಹರಿಯ | ಬೋಧ ಮೂರುತಿಯೇಮಾಧವನೆ ಮನದಲ್ಲಿ | ಮೋದ ಬಡಿಸುತ ನಿತ್ಯಆದರಿಸ ಬೇಕಿವಳ | ಮೋದ ನರಹರಿಯೇ ೪
ಸರ್ವಜ್ಞ ಸರ್ವೇಶ | ಸರ್ವಂತರಾತ್ಮಕನೆಶರ್ವಾದಿ ಸುರವಂದ್ಯ | ಹರಿ ಸಾರ್ವಭೌಮದರ್ವಿ ಜೀವಿಯ ಕಾವ | ಭಾರ ನಿನದಿಹುದಯ್ಯಗುರ್ವಂತರಾತ್ಮ ಗುರು | ಗೋವಿಂದ ವಿಠಲಾ ೫

೫೮೯
ಪ್ರಾಣಪತಿ ಶ್ರೀನಿವಾಸ ವಿಠಲ ಪೊರೆ ಇವಳ ಪ
ಆನತೇಷ್ಟ ಪ್ರದನು | ನೀನೆಂದು ಬಿನ್ನವಿಪೆಜ್ಞಾನ ಗಮ್ಯನೆ ದೇವ | ನೀನಾಗಿ ಪೊರೆಯೋ ಅ.ಪ.
ಮಾನ್ಯ ಮಾನದ ಹರಿಯೆ | ಕನ್ಯೆಗಭಯದನಾಗಿಪುಣ್ಯ ಜೀವಿಯ ಸಲಹೆ | ಬಿನ್ನೈಪೆ ನಿನಗೇ |ನಿನ್ಹೊರತು ಜಗದೊಳಗೆ | ಅನ್ಯರನು ಕಾಣೆ ಕಾರುಣ್ಯ ನಿಧಿ ದಾನವಾ | ರಣ್ಯ ದಾವನಲಾ ೧
ಭಾವಿಭಾರತಿ ಪತಿಯ | ಸೇವೆಯನೆ ಕೊಂಬಹಯಗ್ರೀವನೆ ನಿನ್ನ ಪದ | ತಾವರೆಯ ದಾಸ್ಯಾ |ಓದಿ ಬೇಡುತ್ತಿಹಳ | ತೀವರದಿ ಕೈ ಪಿಡಿಯೆದೇವ ನಿನ್ನಡಿಗಾನು | ಧಾವಿಸುತ ಬೇಡ್ವೇ ೨
ಮಾರುತಾಂತರ್ಗತನೆ | ತಾರತಮ್ಯ ಜ್ಞಾನಮೂರೆರಡು ಭೇದಗಳ | ದಾರಿಯನೆ ತೋರೀ |ಸಾರತಮ ನೀನು ನಿ | ಸ್ಸಾರ ಜಗವೆಂತೆಂಬ ಚಾರುಮತಿಯನೆ ಇತ್ತು | ಪಾರು ಮಾಡಿವಳಾ ೩
ವಿಷಯಗಳ ಅನುಭವದಿ | ಎಸೆವ ನಿನ್ನಯ ಸ್ಮರಣೆಹಸನಾಗಿ ನೀನಿತ್ತು | ಕೆಸರ ಕಳೆಯೋ |ಕುಶಲ ಕ್ಲೇಶಾದಿ ನಿ | ನ್ನೊಶವೆಂಬ ಧೃಡವಿರಲಿಬಿಸಜಾಕ್ಷ ಶ್ರೀರಾಮ | ಪ್ರಸರಿಸೋ ಜ್ಞಾನ ೪
ದೇವ ದೇವೇಶ ಗುರು | ಸಾರ್ವಬೌಮರ ಪಾಲಶ್ರೀವರನೆ ಸರ್ವಜ್ಞ | ದುರ್ವಿಬಾವ್ಯಾ |ನೀವೊಲಿಯುತಿವಳಿನ್ನು | ಸಾರ್ವ ಕಾಲದಿ ಪೊರೆಯೊಗೋವಳರ ಪಾಲ ಗುರು | ಗೋವಿಂದ ವಿಠಲ ೫

೫೮೮
ಪ್ರಾಣಪತಿ ಹರಿ ವಿಠಲ | ಪೊರೆಯ ಬೇಕಿವನಾ ಪ
ಕಾಣೆ ನೀನನ್ಯರನು | ಕ್ಷೋಣಿಯೊಳು ಹರಿಯೇ ಅ.ಪ.
ಕೈಶೋರವಯನಿವನು | ಆಶೆಗೈವನು ದೀಕ್ಷೆದಾಸತ್ವದಲಿ ಮಾಳ್ಪ | ವಿಶ್ವಾಸಗಳನೂ |ಕೇಶವನೆ ತೈಜಸೀ | ವೇಷದಲಿ ಗುರುರೂಪಲೇಸಾಗಿ ತೋರಿಸುತ | ಆಶಿಸುತ್ತಿಹನೊ ೧
ಗುರು ಹಿರಿಯರ ಸೇವೆ | ದೊರಕಿಸುತ ಇವನೀಗೆಪರತಮಜ್ಞಾನಾದಿ | ವರಸು ಸಾಧನವಾತರಳಂಗೆ ವದಗಿಸುತ | ಹರಿಯೆ ಉದ್ಧರಿಸಿವನಕರುಣಾ ಪಯೋನಿಧಿಯೆ | ಮರುತಾಂತರಾತ್ಮಾ ೨
ಕಷ್ಟಗಳ ಪರಿಹರಿಸಿ | ಇಷ್ಟಗಳ ಸಲಿಸುತ್ತಕೃಷ್ಣ ಮೂರುತಿ ಹರಿಯೆ | ಕಾಪಾಡೊ ಇವನಾ |ದುಷ್ಠ ಭಕುತನ ಗೈದು | ಶಿಷ್ಟೇಷ್ಟರಲಿ ಇಟ್ಟುಶ್ರೇಷ್ಠ ಸಾಧನಗೈಸೊ | ಜಿಷ್ಣು ಸಖ ದೇವಾ ೩
ಕಲಿಯುಗದಿ ಸಾಧನವು | ಸುಲಭವೆಂದೆನುತಲಲಿತ ವಚನಗಳಿಹವು | ಜಲಜಾಕ್ಷ ಹರಿಯೇ |ಕಲಿಮಲಾಪಹ ನಿನ್ನ | ಸ್ಮರಣೆಯನು ಒದಗಿಸುತಬಾಲಕನ ಸಲಹೆಂದು | ಭಿನ್ನವಿಪೆ ಸತತಾ ೪
ನಿತ್ಯ ತವ ಲೀಲೆಗಳ | ಸ್ತುತಿಯನೇಗೈಸಿಕೃತ್ಸನೆಂದೆನಿಸಿವನ | ಸತ್ಯಾತ್ಮ ಹರಿಯೇ |ಸ್ತುತ್ಯ ಗುರು ಗೋವಿಂದ | ವಿಠಲ ಕರುಣಾಳುವೇಭೃತ್ಯನ್ನ ಪೊರೆಯೆಂದು | ಅರ್ಥಿಸುವೆ ನಿನಗೇ ೫

೫೯೬
ಪ್ರಾಣಮತ ನರಸಿಂಹ | ವಿಠಲ ಪೊರೆ ಇವಳಾ ಪ
ಜ್ಞಾನಗಮ್ಯನೆ ದೇವ | ಅನ್ನಂತ ಮಹಿಮಾ ಅ.ಪ.
ಹಿಂದಿನದ ಸತ್ಸುಕೃತ | ದಿಂದ ವೈಷ್ಣವಪತಿಯಪೊಂದಿಹಳೊ ದೇವೇಶ | ಮಂದರೋದ್ಧಾರಿ |ಚೆಂದುಳ್ಳ ಮಧ್ವಮತ | ಸಂಧಾನ ತಿಳಿಯಲ್ಕೆ |ಇಂದೀವರಾಕ್ಷ ಹರಿ | ಚೋದಿಸೋ ಇವಳಾ ೧
ಸಾಧನ ಸುಸಂಪತ್ತು | ಬೋಧ ಕಾರಣಜೀವಿವೇದ ಸತ್ಪ್ರತಿ ಸಾಧ್ಯ | ನೀ ದಯವ ತೋರೀ |ಮೋದ ತೀರ್ಥರ ಮತದ | ಬೋಧ ದೊರಕಿಸುದೇವಆದಿ ಮೂರುತಿ ಹರಿಯೆ | ಬಾದರಾಯಣನೆ೨
ಪತಿಸುತರು ಹತರಲ್ಲಿ | ವ್ಯಾಪ್ತನಾಗಿಹ ನಿನ್ನಸ್ಥಿತಿಗತಿಯನೇ ತಿಳಿದು | ಚಿಂತಿಸುವ ಪರಿಯಾಹಿತದಿಂದ ತಿಳಿಸುತ್ತ | ಸಾಧನ ಸುಸತ್ಪಥದಿರತಿಯನೆ ಕೊಟ್ಟಿವಳ | ಉದ್ದರಿಸೋ ದೇವಾ ೩
ಎಡರು ತೊಡರು ಬರಲಿ | ಅಡವಿಯಲಿ ತಾನಿರಲಿಮೃಡನುತನೆ ನಿನ್ನ ಸ್ರ‍ಮತಿ | ಬಿಡದಲೇ ಕೊಟ್ಟುಕಡು ಗುಂಭ ಸಂಸ್ರ‍ಕತಿಯ | ಮಡುವಿನಿಂದಡಬಾಕಿಬಿಡದಿವಳ ಪೊರೆಯುವುದು | ಕಡುದಯಾ ಪೂರ್ಣ೪
ಗುರುಭಕ್ತಿ ಹರಿಭಕ್ತಿ | ವೈರಾಗ್ಯ ಭಾಗ್ಯದಲಿಪರಮರತಿಯನೆ ಕೊಟ್ಟು | ಹರಿ ಸ್ಮರಣೆಯೆಂಬಾವರವಜ್ರ ಕವಚವನೆ | ತೊಡಿಸೆಂದು ಪ್ರಾರ್ಥಿಸುವೆಮರುತಾಂತರಾತ್ಮಗುರು | ಗೋವಿಂದ ವಿಠಲಾ೫

೫೯೧
ಪ್ರಾಣಸನ್ನುತ ನರಸಿಂಹ | ವಿಠಲ ಪೊರೆ ಇವಳಾ ಪ
ಕಾಣೆನಾನನ್ಯರನು | ಕಾರುಣ್ಯ ಮೂರ್ತೇ ಅ.ಪ.
ಏಸೊ ಜನ್ಮದ ಪುಣ್ಯ | ರಾಶಿಗೊದಗುವ ದಾಸ್ಯಲೇಸು ಕಾಂಕ್ಷಿಪಳೀಕೆ | ವಾಸುದೇವ ಹರೀ |ಕೇಶವನೆ ಪೂಜಿಸೀ | ವೇಷದಲಿ ಸೂಚ್ಯ ಪರಿಆಶಿಷವನಿತ್ತು ಉಪ | ದೇಶ ಮಾಡಿಹೆನೋ ೧
ಕಾಮಾರಿ ಸಖಕೃಷ್ಣ | ಕಾಮಿತವನೇ ಇತ್ತುಭಾಮಿನಿಯ ಸಲಹೆಂದು | ನೇಮದಲಿ ಬೇಡ್ವೇಶ್ರೀ ಮನೋಹರ ಹರಿಯೆ | ದುರಿತಾಳಿ ಪರಿಹರಿಸಿನಾಮಸ್ರ‍ಮತಿ ಸುಖ ಕೊಟ್ಟು | ಭವವನುತ್ತರಿಸೋ ೨
ಪಾವನಾ ಮದ ಹರನೆ | ಪಾದ ಮಾನಿಯ ಪ್ರೀಯಪಾವನ್ನ ತವನಾಮ | ನಾಲಿಗ್ಯೆ ಒದಗೀಜೀವನದಿ ಸಂತೋಷ | ಒದಗಲೀ ಎನುತ ಹರಿದೇವ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ ೩

೫೯೦
ಪ್ರಾಣಸನ್ನುತ ವಿಠಲ | ನೀನೆ ಪೊರೆ ಇವನಾ ಪ
ಮೌನಿಕುಲ ಸನ್ಮಾನ್ಯ | ದೀನ ಮಂದಾರಾ ಅ.ಪ.
ಯೋನಿ ಅನೇಕ ದೊಳು | ಜ್ಞಾನರಹಿತನಾಗಿಮಾನುಷತ್ವದಿ ಬಂದು | ಜ್ಞಾನ ಬಯಸೀಗಾನ ಲೋಲನ ದಾಸ್ಯ | ಕಾಂಕ್ಷಿಸುತ್ತಿರುವನಿಗೆಶ್ರೀನಿವಾಸನೆ ನಿನ್ನ | ದಾಸ್ಯ ವಿತ್ತಿಹೆನೋ ೧
ಪಂಕೇರುಹಜನು ವಿಇÁ | ನಾಂಕಷಿತನು ಸರ್ವಸಂಖ್ಯೆರಹಿತಾ ದೇವಾ | ಸಂಕುಲಗಳೆಲ್ಲಾಪಂಕಜಾಕ್ಷನು ಹರಿಸಿ | ಕಿಂಕರರು ತಾವಾಗಿಅಂಕೆಯಲ್ಲಿಹರೆಂಬ | ತರತಮನ ತಿಳಿಸೋ ೨
ಸತ್ಯ ಜಗತೀನೊಳಗೆ | ನಿತ್ಯಹರಿ ಸುವ್ಯಾಪ್ತಕರ್ತೃ ಕರ್ಮವು ಕರಣ | ತಾ ಸೇವೇ ಆಗೀನಿತ್ಯರಿಗೆ ಕರ್ಮಗಳ | ತುತ್ತು ಮಾಡ್ಯಣಿಸುತ್ತಾಭತೃವೆಂದೆನಿಸಿಹನೆ | ಉತ್ತಮೋತ್ತಮನೆ ೩
ಸಾಧನಸುಜೀವಿ ಇವೆ | ಬಾಧೆಗೊಳಗಾಗಿಹನುಮೋದತೀರ್ಥರಮತದಿ | ಸಾಧನೇಯ ಗೈಸೀಮೋದಪ್ರದನೆಂದೆನಿಸೊ | ಸಾಮವಂದಿತ ಹರಿಯೆಹೇದಯಾ ಪರಿಪೂರ್ಣ | ಆದಿ ಜಗಕರ್ತಾ ೪
ಲೌಕೀಕ ಸುಖದಲ್ಲಿ | ಕಾಕುಮತಿಯನು ಕೊಟ್ಟಾಬೇಕಾದ ವೈರಾಗ್ಯ | ಭಾಗ್ಯ ಪ್ರದನಾಗೋನಾಕನದಿ ವಂದ್ಯ ಗುರು | ಗೋವಿಂದ ವಿಠಲನೆನೂಕಿಸಂತಾಪಗಳ | ಮೋಕ್ಷಪ್ರದನಾಗೋ ೫

೧೯೬
ಪ್ರಾಣಾ – ದೇವನೇ | ಸಕಲ ಜಗ | ತ್ರಾಣ ನಾದನೇ ಪ
ಗೋಣು ಮುರಿವ ಜನ | ಶ್ರೇಣಿ ಸವರಿ ಯೆನ್ನಪ್ರಾಣ ಪ್ರಾಣ ಪದ | ರೇಣು ವಂತಿರಿಸೊ ಅ.ಪ.
ಪಂಚ – ರೂಪನೇ | ಪ್ರಾಣಾದಿ | ಪಂಚ ಕಾರ್ಯನೇ |ವಂಚಿಸಿ ದೈತ್ಯರ | ಸಂಚುಗೊಳಿಸಿ – ನಿ-ಷ್ಕಿಂಚಿನ ಜನಪ್ರಿಯ ಸಂಚಿಂತನೆ ಕೊಡು ೧
ಹಂಸ ನಾಮವಾ | ಪ್ರತಿದಿನ | ಶಂಸಿಪೆ ಪವನಾ |ಹಂಸ ಮಂತ್ರವೇಕ | ವಿಂಶತಿ ಸಾಸಿರ ಶಂಸಿಸಿ ಷಟ್ಯತ | ಹಂಸನಿಗೀವೆ ೨
ಸರ್ವವ್ಯಾಪಕಾ | ವಿಹಿತಾ ವಿಹಿತ ಸರ್ವ ಪ್ರಾಪಕಾ |ಸರ್ವ ಜೀವ ವಿಧಿ | ಪೂರ್ವಕ ಸಾಧನನಿರ್ವಹಿಸುವ ತೆರ | ತೋರ್ದನು ನೀನೇ ೩
ವಿಶ್ವ-ವ್ಯಾಪಕಾ | ಹರಿಗೆ ಸಾ | ದೃಶ್ಯ ರೂಪಕಾ |ಅಶ್ವರೂಪ ಹರಿ | ವಶ್ಯನೆನಿಸಿ ಬಹುವಿಶ್ವಕಾರ್ಯ ಸ | ರ್ವಸ್ವ ಮಾಳ್ಪೆಯೊ ೪
ದೇವ-ಋಷೀ-ಪಿತ | ನೃಪರು-ನರ | ರೈವರೊಳಗಿರುತಾ |ಜೀವರುಗಳ ಸ್ವ | ಭಾವ ವ್ಯಕುತಿಗೈ ದೀವಿರಿಂಚಾಂಡವ | ನೀ ವಹಿಸಿದೆಯೋ ೫
ಶುದ್ಧ-ಸತ್ವಾತ್ಮದ | ದೇಹದೊ | ಳಿದ್ದರೂ ಲಿಂಗದ |ಬದ್ಧ ವಿಹೀನನೆ | ದಗ್ದ ಪಟದ ಪರಿಸಿದ್ಧ ಸಾಧನ ಅನ | ವವ್ಯ ನೆನಿಸುವೇ ೬
ಹೀನ-ಸತು ಕರ್ಮವಾ | ಪವಮಾನ | ತಾನೇ ಮಾಡುವಾ |ಜ್ಞಾನದಿಂದಲೇ | ನೇನು ಮಾಳ್ಪುದನುಪ್ರಾಣಪಗೊಂಡು ಕು | ಯೋನಿಯ ಕಳೆವ ೭
ಖೇಟಾ-ಕುಕ್ಕುಟಾ | ಜಲಟ ತ್ರಿ | ಕೋಟಿ – ರೂಪಕಾಕೈಟಭಾರಿ ಪುರ ಕ | ವಾಟ ಅಹಿಪವಿಪ ಲ-ಲಾಟ ನೇತ್ರಗೆ | ಸಾಟಿ ಮೀರ್ದನೇ ೮
ವಾಙ್ಮನೋ-ಮಾಯನೇ | ದೇವ | ಸ್ತೋಮ ದೊಳಗಿಹನೇ |ಶ್ರೀ ಮಹಿನುತ ಶ್ರೀ | ರಾಮಚಂದ್ರ ಗುಣಸ್ತೋಮ ಪೊಗಳ ನ | ಮ್ಮಾಮಯ ಹರ೯
ಮೂಲೇಶ ಪದವ | ಪಿಡಿದಿಹ | ಪ್ರಾಣನ ಚರಣಾಕಿಲಾಲಜವನು | ಓಲೈಸುತಲಿಹಕಾಲ ಕರ್ಮದಿಹ | ಕೀಳು ಜೀವನ ಪೊರೆ ೧೦
ಭಾವಿ ಬ್ರಹ್ಮನೇ | ಜೀವರ | ಸ್ವಭಾವ – ವರಿತನೇ ಕಾವ ಕಾಲ್ಪ ಗುರು | ಗೋವಿಂದ ವಿಠಲನಪಾವನ ಚರಣವ | ಭಾವದಿ ತೋರೈ ೧೧

೯೬
ಪ್ರಾಣಾಂತರ್ಗತ ಜ್ಞಾನಾನಂದಾ | ಮಯಶ್ರೀನಿವಾಸನೆ ಗೋವಿಂದಾ ಪ
ಗಾನಲೋಲನೆ ನಿನ್ನ | ಧ್ಯಾನ ಪಾಲಿಸಿ ಇನ್ನುಜ್ಞಾನವಂತರ ಸಂಗ | ಸಾನು ಕೂಲಿಸಿ ಕಾಯೋ ಅ.ಪ.
ಅರುಣಾಬ್ಜೋಪಮ ಚಾರು ಚರಣಾ | ರಂಭತೆರನಂತೆ ಊರುಗಳ್ಹಸನಾ | ಕರಿಯೆ ಸೊಂಡಲು ಪೋಲ್ವ | ಚತುರ್ಭುಜಗಳು ಅರಿದರಾಭಯ ಸುಂ | ದರ ಹಸ್ತ ಶೋಭಿತದ್ರುತ – ಕರಿಯ ವೈರಿಯ ಮಧ್ಯವೊಪ್ಪುವ | ವರ ಕಟಿಯು ಸುಳಿನಾಭಿ ತ್ರಿವಳಿಯುದರ ಹಾರಾ ಕೌಸ್ತುಭದಿ ಬಹು | ಮೆರೆಯುತಿಹ ವರ ಕಂಬು ಕಂಠಾ ೧
ಅಕ್ಷಿಗಳರವಿಂದ ವಿಸ್ತಾರಾ | ಲಕ್ಷ್ಮಿವಕ್ಷದಿ ಮೆರೆವ ಗಂಭೀರ |ಲಕ್ಷ್ಮಣಾಗ್ರಜ ಸ | ಲ್ಲಕ್ಷಣ ಪುರುಷ ಲೋಕಾಧ್ಯಕ್ಷ ಪಾಂಡವ | ಪಕ್ಷ ಸಜ್ಜನ ತೋಷಾ |ದ್ರುತ – ಅಕ್ಷರಗಳ ಕ್ಷರ ಪೂಜ್ಯ ಚರಣನೆ | ಅಕ್ಷಯಾಂಬರ ತರಳೆಗಿತ್ತವಅಕ್ಷರಳ ಲೆಕ್ಕಿಸದೆ ಬ್ರಹ್ಮನ ಕುಕ್ಷಿಕಮಲದಿ ಸೃಷ್ಟಿಸಿದ ಮಹಿಮ ೨
ತಿರುಪತಿ ವೆಂಕಟರಮಣಾ | ಬಲುಶರಣರ ಪಾಲಿಪ ಕರುಣಾ | ಪರಮ ಪೂರುಷ ಮಿತಿ | ವಿರಹಿತ ರವಿಶಶಿಪ್ರಖರನಂತಾ ಕೋಟಿ | ಸ್ಮರ ತೇಜ ಗುಣಪೂರ್ಣಾದ್ರುತ – ಗುರು ಗೋವಿಂದ ವಿಠಲನೆ ನಿನ್ನಯ | ಚರಣ ನೀರೇರುಹವ ಕಾಂಬುವ ಪರಮ ಸುಖ ಸಂದೇಹವೆಂದೋ | ಪರಮ ಪಾತಕಿಯಾದ ಎನಗೆ ೩

೧೯೮
ಪ್ರಾಣೇಶ ಭಾವಿ ಬ್ರಹ್ಮಾಣಿ ಪತಿ ಎನಿಸಿ | ವೀಣೆಯನು ಪಿಡಿಯುತ್ತಲೀ ||ಕ್ಷೋಣಿ ಬೆಳಗಾವಿ ಬ್ರಾಹ್ಮಣ | ಶ್ರೇಣಿಯಲಿ ನೀ ನಿಂತೆಯೋ ||ಕಾಣೆನೊ ನಿನಗೆಣೆಯ | ಕಾಣೆ ಕರುಣಿಗಳರಸ ಜ್ಞಾನಿ ಜನ ಮನೊವಾಂಛಿತಾ |ಮಾಣದಲೆ ನೀ ನೀವೆ | ಪ್ರಾಣ ಪದಕನೆ ಹನುಮಜ್ಞಾನ ಭಕುತಿಯ ಬೇಡುವೇ ೧
ಲಾತವ್ಯರೆಂದೆನಿಸಿ | ವಾತ ಪದ ಅರ್ಹ ಋಜು | ಖ್ಯಾತರಂ ತುತಿಸುತಲಿ ಮೆರೆವಾ ||ದೂರ ವೆಂಕಣ್ಣಾರ್ಯ | ಪ್ರೀತಿಂದ ನಿನ ನಿಲಿಸಿ | ಪೋತ ಭಾವದಿ ಮೆರೆದರೂ ||ವಾತ ಸುತ ನಿನ ಕರುಣ | ವ್ರಾತ ಕಿನ್ನಣೆಯುಂಟೆಮಾತುಳಾರಿಯ ದೂತ ಜಯೆ ಜಾತಾ ||ಸೋತು ಬಲು ಭವದೊಳಗೆ | ಆರ್ತನಾಗುತ ನಿನ್ನ ಕಾತುರೆತಲಿಂ ಪ್ರಾರ್ಥಿಪೇ ೨
ವೃಂದಾವನಾರ್ಯರಿಂದ್ವಂದಿತವು ಎಂದೆನಿಪ ವೃಂದಾವನಿಲ್ಲಿ ಇಹುದೂ |ವೃಂದಾರ ಕೇಂದ್ರ ಜನ | ಬಂದಿಲ್ಲಿ ರಾಜರ |ವೃಂದಾವನರ್ಚಿಸುವರೋ |ನಂದನನು ದಶರಥಗೆ | ನಂದನನು ದೇವಕಿಗೆ | ನಂದನನು ಸತ್ಯವತಿಗೇ |ಒಂದೊಂದು ಹಯಶೀರ್ಷ | ಅಂದರೂಪಗಳಿಂದ ನಂದನನು ಭಕ್ತ ಜನಕೇ ೩
ಜೀವಾಂತರಂಗದಲಿ | ಜೀವಾಂತರಾತ್ಮನನ ದ್ವೈವಿಧ್ಯ ರೂಪ ಸೇವಾ |ತಾವಕದಿ ನೀ ಮಾತರಿಶ್ವಾಖ್ಯನೆಂದೆನಿಸಿ ಸೇವಿಸುವೆ ಘರ್ಮೋಕ್ತದಿ ||ಜೀವ ಸಕಲೋತ್ತಮನೆ | ದಾವ ಶಿಖಿ ಭವವನಕೆದೇವ ಬಲಿಭುಜ ಮಾರುತೀ |ದೇವಾದಿ ವಂದ್ಯ ಗುರು | ಗೋವಿಂದ ವಿಠ್ಠಲನಭಾವದಲಿ ತೋರಿ ಪೊರೆಯೊ ೪

೫೯೨
ಪ್ರಾಣೇಶ ಹರಿ ವಿಠಲ | ಪೊರೆಯ ಬೇಕಿವಳಾ ಪ
ನಿನಲ್ಲದಿನ್ನಿಲ್ಲ | ಪ್ರಾಣಾಂತರಾತ್ಮಾ ಅ.ಪ.
ಮೂರು ಲೋಕಾಗ್ರಣಿಯೆ | ಪಾರುಗಾಣಿಸೊ ಇವಳಾ |ಘೋರ ತರವೆನಿಪ ಸಂ | ಸಾರ ಕೂಪದಿಂದ |ಕಾರುಣ್ಯ ಮೂರುತಿಯೆ | ಆರು ಅನ್ಯರ ಕಾಣೆನೀರ ಜಾಸನ ವಂದ್ಯ | ನಿರ್ಮಲಾತ್ಮಕನೇ ೧
ಕನ್ಯೆಮಣಿ ಇವಳೀಗೆ | ನಿನ್ನ ನಾಮಾಮೃತದಬೆಣ್ಣೆಯನು ಉಣಿಸುತ್ತ | ಕಾಪಾಡೊ ಇವಳಾಚಿನ್ನುಮಯ ಶ್ರೀ ಹರಿಯೆ | ಸಮ್ಮೋದ ಪಾಲಿಸುತಚೆನ್ನಾಗಿ ಪೊರೆ ಇವಳ | ಅನ್ನಂತ ಮಹಿಮಾ ೨
ಸಾಧು ಸತ್ಸಂಗವನು | ನೀ ದಯದಿ ಕೊಟ್ಟವಳಸಾಧನವ ಗೈಸುವುದೊ ಮಾಧವನೆ ದೇವಾ |ಆಧ್ಯಂತ ರಹಿತ ಹರಿ | ವೇದಾಂತ ವೇದ್ಯನೆಕಾದುಕೋ ಬಿಡದಿವಳ | ಮಧ್ವಮುನಿ ವಂದ್ಯಾ ೩
ಕಾಮ ಜನಕನೆ ದೇವ | ಕಾಮಿತವ ಕರುಣಿಸುತನೇಮ ನಿಷ್ಠೆಯನಿತ್ತು | ನೀ ಮುದದಿ ದೇವಾ |ಪಾಮರಳ ಉದ್ಧರಿಸೋ | ಶ್ರೀ ಮನೋಹರ ಹರಿಯೆಸಾಮಜಾಸದ್ವಂದ | ಸಾಮ ಸನ್ನುತನೇ ೪
ಕೇವಲಾನಂದವೆನೆ | ಶಾಶ್ವತದ ಸುಖಕಾಗಿಬಾಳ್ವ ಅಳವಡಿಸುತ್ತ | ಕಾವುದೋ ಇವಳಾ |ಗೋವಿಂದಂ ಪತಿಯೆ ಗುರು | ಗೋವಿಂದ ವಿಠ್ಠಲನೆಈ ವಿಧದ ಭಿನ್ನಪವ | ನೀವೊಲಿದು ಸಲಿಸೋ ೫

೫೯೯
ಪ್ರಿಯ ಪಾಂಡುರಂಗ ವಿಠಲ | ದಯದೋರೊ ಇವಗೆ ಪ
ನಯವಿನಯದಿಂ ಬೇಡ್ವ | ಹರಿದಾಸದೀಕ್ಷಾ ಅ.ಪ.
ಸದ್ವಂಶದಲಿ ಬಂದು | ಮಧ್ವಮತದೀಕ್ಷೆಯಲಿವಿದ್ಯೆಯನು ತಾ ಕಲಿತು | ಹರಿದಾಸ್ಯದಿ ಮನವಬುದ್ಧಿ ಮಾಡ್ಡವ ನೀನೆ | ಮಧ್ವಾಂತರಾತ್ಮಕನೆಸದ್ವಿಧ್ಯೆತರತಮವ | ಬುದ್ದಿಗೆಟಕಿಸೊ ದೇವಾ ೧
ಪಂಚಬೇಧವನರುಹಿ | ಪಂಚಾತ್ಮ ನಿನಕಾಂಬಸಂಚುಗಳ ತಿಳಿಸುತ್ತ | ಕಾಪಾಡೊ ಇವನಾಅಂಚೆಗಮನನೆ ಪಿತನೆ | ನಿಷ್ಕಿಂಚನಾರಾಧ್ಯಹೆಂಚು ಹಾಟಕದಿ ಸಮ | ಬುದ್ದಿಯನೆ ಈಯೋ೨
ಭಕ್ತಿ ವೆಗ್ಗಳವಾಗಿ | ನಿತ್ಯತವ ಪದಮಹಿಮೆಸತ್ಕೀರ್ತಿ ಪಾಡುತಲಿ | ಹರಿಗುರು ಸೇವಾ ಕೃತ್ಯದಲಿ ಸನ್ಮೋದ | ಚಿತ್ತದಲಿ ಆನಂದಬಿತ್ತುತಲಿ ಪೊರೆ ಇವನ | ಚಿತ್ತಜನಪಿತನೆ ೩
ಗುಣರೂಪ ಕ್ರಿಯೆಗಳಲಿ | ಅನಗುತನು ವ್ಯಾಪ್ತನೂಎನುವ ಸುಜ್ಞಾನವನು | ಕರುಣಿಸೊ ಹರಿಯೇಕನುಕರಣ ಮನಮೂಲ | ಗುಣಭೋಗದನುಭವನಉಣಿಸಿ ಸಾಧನಗೈಸಿ | ಪೊರೆ ಇದನ ಹರಿಯೇ ೪
ನೋವು ಸುಖಗಳ ಸಮತೆ | ಭಾವವನೆ ಕರುಣಿಸುತಶ್ರೀ ವರನೆ ಪೊರೆ ಇದನ | ಸರ್ವಾಂತರಾತ್ಮಾಶ್ರೀ ವಲ್ಲಭನೆ ಗುರು | ಗೋವಿಂದ ವಿಠಲನೆಓದಿಮದ್ಭಿನಪವ | ಪಾಲಿಸೊ ಹರಿಯೇ೫

೬೦೦
ಪ್ರಿಯ ಹಯಾಸ್ಯವಿಠಲ | ದಯದಿ ಪೊರೆ ಇವನಾ ಪ
ನಯವಿನಯದಿಂ ಬೇಡ್ವ | ದಾಸತ್ವ ದೀಕ್ಷಾ ಅ.ಪ.
ದಾಸರಾಯರ ಕರುಣ | ಪಾತ್ರ ನಿರುವನು ಈತಸೂಸಿದತಿಭಕುತಿಯಿಂ | ಸೇವೆಯನು ಗೈವಾ |ಏಸೊ ಜನ್ಮದ ಪುಣ್ಯ | ರಾಶಿ ಬಂದೊದಗುತಲಿಆಶಿಸುತ್ತಿರುವನೂ | ದಾಸದೀಕ್ಷೆಯನು ೧
ಅಂಕಿತವ ನಿತ್ತಿಹೆನೊ | ಪಂಕಜಸನ ವಂದ್ಯಶಂಕೆಯಿಲ್ಲದೆ ಸ್ವಪ್ನ | ಸೂಚ್ಯದಂತೇವೆಂಕಟೇಶನೆ ಇವನಾ | ಮಂಕುಮತಿಯನೆ ಕಳೆದುಬಿಂಕದಿಂ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ ೨
ಶ್ರದ್ಧೆಯಿಂದಲಿ ಇವನು | ಮಧ್ವಮತ ದೀಕ್ಷೆಯಲಿಬದ್ಧವಾಗಲಿ ಹರಿಯೆ | ಸಿದ್ದ ಮುನಿವಂದ್ಯಾಶುದ್ದ ತತ್ವಗಳೆಲ್ಲ | ಬುದ್ದಿಗೇ ನಿಲುಕಿಸುತಶುದ್ದೋದ ನೀನು ತವ | ಪ್ರಧ್ವಂಸಗೊಳಿಸೊ ೩
ಹರಿಯರಲಿ ಸದ್ಭಕ್ತಿ | ಕರುಣಿಸುತ ತೋಕನಿಗೆ ಪರಿಪರಿಯಲಿಂ ಕೀರ್ತಿ | ಸಂಪನ್ನನೆನಿಸೋಮರುತಂತರಾತ್ಮ ಹರಿ | ದುರಿತಾಳಿ ಪರಿಹರಿಸಿಕರುಣದಿಂ ಕೈಪಿಡಿದು | ಉದ್ದರಿಸೊ ಹರಿಯೇ ೪
ಕೈವಲ್ಯದರಸಾಗಿ | ಭಾವಮೈದುನಗೊಲಿದುಬೋವ ಬಂಡಿಗೆ ಆದೆ | ಶ್ರೀವರನೆ ಹರಿಯೇಗೋವತ್ಸದನಿ ಕೇಳಿ | ಆವು ಧಾವಿಸುವಂತೆನೀವೊಲಿದು ಪೊರೆಯೊ ಗುರು | ಗೋವಿಂದ ವಿಠಲಾ ೫

೯೭
ಬಂದ ಕೃಷ್ಣ ಚಂದದಿಂದ | ಕೊಳಲನೂದುತ ಪ
ಮಂದಹಾಸ ಬೀರಿ ಸುಜನ | ವೃಂದ ನೋಡುತ ಅ.ಪ.
ಹೃದಯದಾರ್ತಿ ನೀಗಿ ಮನಕೆ | ಮುದವ ತೋರುತಸದಯ ಹೃದಯ ಬದಿಗನಾಗಿ | ಅಭಯ ನೀಡುತ ೧
ತುಡಗ ತಾನು ಪಿಡಿದ ಕೊಳಲ | ಬೆಳಕ ಮಾಡುತಹುಡುಗ ತಾನು ಕಂಡು ಕಾಣ | ಧಾಂಗೆ ತೋರುತ ೨
‘ಸೇವ್ಯ ಮಾನ ಮಾನಸಾಂದ | ಮಾನ ಸಾಂಡಂ’ಕಾವ್ಯ ಭೋದಿ ಗುರು ಗೋವಿಂದ | ವಿಠಲ ವ್ಯಕ್ತಂ ೩

೯೯
ಬಂದ ಬಂದ ವಾಯು ಪೆಸರಿನವ – ರಿಂದಅನಿಮಿತ್ತ ಬಂದು ವೆಂಕಟ ನಿಲಯ ಪ
ದೃತ – ಇಂದಿರೆ ಸುತನೆನೆ | ಸುಂದರನೂ ಮಮ | ಮಂದಿರ ಸೇರಲುನಂದದಿ ಬಂದನು | ಚಂದ್ರ ಭಾಗ ತಟ | ಸುಂದರ ವಿಠಲನುಮುಂದೆ ಬರುವ | ನೆಂದೆಂಬುದ ಸೂಚಿಸೆ ಅ.ಪ.
ರತುನ ಖಚಿತ ವರ ಕಿರೀಟ | ಅತುಳ ಪ್ರಭೆಯ ಮಕರ ಕುಂಡಲವಿಸ್ತಾರದಿಂದಲಿ ಮೆರೆವ | ತಿಲಕ ಕಸ್ತೂರಿ ಫಣೆಯಲ್ಲೊಪಿ ಧರಿಸಿಹ ||ಪೊತ್ತು ಮುಗುಳು ನಗೆ | ನಿತ್ಯಾನಂದನುಕತ್ತಿ ನೊಳ್ಹಾರಗಳ್ | ಮುತ್ತು ನೀಲಮಣಿ ಯುಕ್ತವಾಗಿರುತಿರೆ ಮುತ್ತು ಕೌಸ್ತುಭ ಬ್ರಹ್ಮಾ ಧಿಷ್ಠಿತವಾಗಿರೆ ಹೃತಮ ಕಳೆ ಹರಿ ೧
ಹೇಮದಾಮ ದುಡಿಯ ಗೆಜ್ಜೆ | ಕಾಮನಯ್ಯನು ಧರಿಸಿ ಮೆರೆವ ಸೋಮಕುಲ ಸುಭೂಷ ದಿವ್ಯ | ಧಾಮದಲ್ಲಿ ಶೋಭಮಾನ ||ಶ್ರೀ ಮಹಿಳೆಯು ಎಡ | ಪದ್ಮ ಹಸ್ತ ಬಲಭೂಮಾಂಬೆಯು ಬಲ | ಪದ್ಮ ಹಸ್ತ ಎಡಭೂಮಾರ್ಣವ ಗುಣ | ಸ್ತೋಮ ತುತಿಸುತಲಿಆ ಮಹ ದಿವಿಜರ | ಸ್ತೋಮ ನಿಚಯವಿರೆ೨
ವರ್ಷವು ಪರಿಧಾವಿಯಲ್ಲಿ | ವಿಶಿಖ ಮಾಸ ದಾಸರ ಸೌಮ್ಯ ದಶಮಿ ದಿನದಿ ಅಸಿತ ಪಕ್ಷ | ಬಿಸರುಹಾಂಬಕ ಬಂದ ಮನೆಗೆ ||ಕುಸುಮನಾಭ ಸಿರಿ | ಶೇಷಗಿರೀಶನುಒಸೆದು ಹಸ್ತ ಎಡೆ | ಎಸೆವ ಕಟಯಲಿಟ್ಟುವಸುದೇವ ಸುತ ಬಲ | ಹಸ್ತ ಅಭಯ ತೋರಿಬಸುರಿಲಿ ಬೊಮ್ಮನ | ಪ್ರಸವಿಸಿರವ ಹರಿ ೩
ಇಷ್ಟ ದೈವ ತಾನು ತನ್ನ ಕಟಿಯಲಿಟ್ಟು ಎಡದ ಹಸ್ತಕಟುತರ ಸಂಸಾರ ಶರಧಿ | ಕಟಿಯ ಮಿತವು ಭಕುತಗೆಂದ ||ವಿಠಲಾಗಮನವು | ದಿಟವೆನೆ ಸೂಚಿಸಿಎಟ ಪಾದವು ಸುರ | ತಟನಿಗೆ ಕಾರಣಪಟುಭಟರೆನಿಸುವ | ನಿಟಿಲ ನಯನ ಸುರಕಟಕವ ಪಾಲಿಪ | ಧಿಟ ದೊರೆ ವೆಂಕಟ ೪
ಕುಲದ ದೈವ ವೆಂಕಟಾದ್ರಿ | ನಿಲಯ ಬಂದ ಮೇಲೆ ಅಭಯದೊಲವಿನಿಂದ ಹಲವು ಕಾರ್ಯ | ವಿಲಸಿತಾಮಲ ಪ್ರೇಮದಿಂದ ||ಬಲು ತತ್ವರ ಸಹ | ಕೆಲಸಕ್ಕಾಸ್ಪದ ಬಲ ಹಸ್ತದಿ ಅರಿ | ಹೊಳೆವ ಶಂಖ ಎಡ ನಿಲವು ಮಾಟವಿಗೆ | ಗೆಲವು ಸುರರಿಗೆನೆಕಳೆ ಕಳೆ ನಗು ಗುರು | ಗೋವಿಂದ ವಿಠಲ ೫

೧೦೦
ಬಂದ ಬಂದ ಹಿಮದ ಗಿರೀ | ಯಿಂದ ಅನಿಮಿತ್ತ ಬಂಧು | ಬದರಿವಾಸ | ಬಂದ | ಬಂದ ಪ
ದ್ರುತ – ಇಂದಿರೆ ಅಜ ಭವ | ಇಂದ್ರ ಮುಖ್ಯ ಸುರವೃಂದ ಪೊಗಳುತಿರೆ | ಸುಂದರ ಪಲ್ಲಕಿಚೆಂದ ಪೀಠ ಕ್ಷಿತಿ | ವೃಂದಾರಕ ವಹಬಂದನು ತಾ ಮಮ | ಮಂದಿರಕಿಂದೂ ಅ.ಪ.
ವರ ಕಿರೀಟ ಕರ್ಣಕುಂಡಲ | ಧರಿಸಿ ಕಸ್ತೂರಿ ತಿಲಕ ಫಣಿಯಮೆರೆವ ಉಂಗುರ ತೋಳ ಬಾಪುರಿ | ಕೊರಳ ಕೌಸ್ತುಭ ಹಾರ ಸುಂದರ ||ವರ ವಿಸ್ತರ ಉರ | ಸಿರಿ ವತ್ಸಾಂಕಿತ ಸುರಚಿರೋದರವು | ಮೆರೆವ ತ್ರಿವಳಿಯಿಂವರ ಪಟ್ಟಕ ವಸನವು | ತರ್ಕ ಚಿಹ್ನಿತಕರಸುರ ಭೂಸುರರಿಗೆ | ವರ ಜ್ಞಾನದ ಹರಿ೧
ತಟತ ಕೋಟಿ ನಿಭದ ಕಾಯ | ಪಟುತರಾಂಗ ಸುಮನ ಗೇಯಾಕುಟಲ ರಹಿತರೆನಿಪ ಭಜಕ | ಕಟಕ ಪಾಲಿಪ ವ್ರತವು ಸಂತತ ||ಜಟಿ ಭೂಷಾಂಚಿತ | ನಟಿಸುತ ನರರೊಲ್‍ತೃಟಿಯು ಬಿಡದೆ ಕರ | ಪುಟದಲಿ ಜಪಮಣಿಕಟಕ ಧರಿಸಿ ಸುರ | ತಟನಿ ತೀರಗ ಸುರಕಟಕವೆರಸಿ ಉತ್ | ಕೃಷ್ಟನು ಮಮ ಮಂದಿರಕೆ ೨
ವಿಜಯ ದಶಮಿ ಹೇವಿಳಂಬಿ | ನಿಜಗುರೂ ಪ್ರಸಾದದಿಂದತೈಜಸ ರೂಪಿ ಬದರಿ ವಾಸ | ಬಿಜಯಗೈಸಿ ಕರುಣ ತೋರ್ದ||ಭಜಕಾಭೀಷ್ಟದ | ಸುಜನ ಸುರದ್ರುಮಕುಜನಾರಾತಿಯು | ರಜಮಾರನು ಸುರವ್ರಜವು ಪೊಗಳುತಿರೆ | ಮಝ ಭಾಪೆಸೆ ಮಮರಜವ ಕಳೆಯೆ ಗುರು ಗೋವಿಂದ ವಿಠಲ ೩

೨೦೦
ಬಂದನು ಹನುಮಂತ ಗೃಹಕೇ | ಕಾರ್ಯಸಂಧಿಸಲು ಅನುಗ್ರಹಕೇ ಪ
ಮಂದಿರವು ಒಂಟೀಲು ವಂಶ ಸಿ | ಕಂದರಾಬಾದಿನಿಂದಲಿಸುಂದರನು ಬಹುನಂದ ವೀಯುತ | ಮಂದವಾರದಿ ಬಂದ ಹನುಮ ಅ.ಪ.
ವರ್ಷ ಪರೀಧಾವಿ ಶುಭಾ | ಮಾಸ | ವೈಶಾಖ ನಿಜ ವಿಶಾಖಾಭಾದಾಸನ ಮನೆಗತಿ ಪ್ರಭಾ | ಯುತ | ಆ ಸಮೀರನು ಅಸ್ಮಲ್ಲಾಭಾ ||ಹರ್ಷದಲಿ ಹನುಮಂತರಾಯರ | ವಶದಿ ಇದ್ದವನಲ್ಪ ಕಾಲದಿವಶವ ಪಡಿಸಲು ವೆಂಕಟಾರ್ಯಗೆ | ನಸುಕಿಲೀ ನಸನಗುತ ಬಂದ ೧
ಧರಿಸೀಹ ತುಲಸೀಯ ಮಾಲಾ | ಮತ್ತೆ ಪರಿ ಪರಿ ಪುಷ್ಪಗಳ್ಮಾಲಾಶಿರದಿ ಕಿರೀಟವು ಬಹಳಾ | ಮಣಿ |ವರ ಖಚಿತ ರತ್ನ ವಿಶಾಲಾಪರಿ ಪರಿಯ ಆಭರಣ ಭೂಷಿತ | ಸುರ ವಿರೋಧಿಗಳ್ಹನನ ಶಕುತನೆರೆ ಸುವಾನರ ಸೈನ್ಯ ಪರಿವೃತ | ಹರಿಯಲಿಂ ಪಟ್ಟಾಭಿಷಕ್ತ ೨
ಭಕ್ತಿರಿಂ ಭೂಷಿವ್ಸ ರಜತ | ಕವಚ | ಉತ್ತಮ ಪರಿಯಾಲಂಕೃತಸುಸ್ಥಿರ ದಾಸರ ಆಗತ | ನವರಾತ್ರಿ ಅಷ್ಟಮಿಲಾದ್ರುತಕೃತ್ತಿವಾಸಾದ್ಯಮರ ವಂದಿತ | ಭೃತ್ಯ ದಶರಥ ಸುತಗೆ ಎನಿಸುತ ಕರ್ತೃ ಗುರು ಗೋವಿಂದ ವಿಠಲನ | ನಿತ್ಯ ಸೇವಾಸಕ್ತ ಮಾರುತ ೩

೯೮
ಬಂದಾ ನೋಡೇ – ವಿಠಲಾ ಮನೆಗೇಬಂದಾ ನೋಡೇ – ವಿಠಲಾ ಪ
ನಂದನ ಕಂದನ ಯಶೋದೆಯಾನಂದ ಅರವಿಂದ ನಯನ ಗೋವಿಂದ ಮುಕುಂದನು ಅ.ಪ.
ಇಂದು ಭಾಗದಿ ವಾಸಾ | ಧೂರ್ಜಟಿ | ಇಂದು ಮೌಳಿಯ ಪೋಷಾ ||ತಂದೆ ಸೇವಕ ಭಕ್ತ | ನಿಂದಿರೆ ಪೇಳಲುಅಂದ ಇಟಗಿ ಮೇಲೆ | ನಿಂದ ಆನಂದದಿ ೧
ಪಂಢರ ಪುರೆಯಲ್ಲಿಹ | ತನ್ನಯ | ತೊಂಡ ಜನರ ದೋಷ | ಆಹ |ಪಾಂಡವ ಪ್ರಿಯ ಪದ | ಬಂಡುಣಿಯೆನಿಸಿಹಪುಂಡಲೀಕನಿಗೊಲಿಯೆ | ಗೊಂಡು ಮಾನುಷ ವೇಷ ೨
ಕುಂಡಗೋಳಕರ ಸಖ | ಅವರ್ಗಳ | ದಿಂಡುಗಳ ಪೋಷಕ | ಆಹಭಾಂಡಕಾರಕ ಮಣ್ಣು | ಉಂಡು ಒಡವೇಗಳಗೊಂಡು ಅವನ ಕಾಯ್ದ | ಪುಂಡರೀಕಾಕ್ಷ ಶ್ರೀಶ ೩
ಗೊಂಡು ಮತ್ಸದ ಕಾಯ | ಬೆನ್ನಲಿ | ಅಂಡ ಪೊತ್ತಿಹ ರಾಯ ||ಭೂ _ ಮಂಡಲ ಪೊತ್ತೆದಾಡೆ | ತೊಂಡ ಪ್ರಹ್ಲಾದ ವರದದಂಡ ಕಮಂಡಲಜಿನ | ಭಂಡ ಕ್ಷತ್ರಿಯರ್ಹನನ ೪
ಹೆಂಡತಿಗಾಗಿ ತಿರುಗಿ | ಕಾನನ | ಕೌರವರಸು ನೀಗಿ || ಆಹಶೌಂಡನು ತ್ರಿಪುರರ | ಹೆಂಡರ ವಂಚಿಸ್ಯುದ್ದಂಡ ಹಯವನೇರಿ | ರುಂಡ ಮ್ಲೇಂಛರ ತರಿದೆ ೫
ಮಕರ ಕುಂಡಲಧಾರೀ | ಶೋಭಿತ | ಪ್ರಖರ ಕಿರೀಟ ಮೌಳೀ ||ವಿಖನಸಾಂಡಾಧಿಪ | ವಿಕಸಿತ ಕೌಸ್ತುಭಪ್ರಕಟ ಕೊರಳ ಮಾಲೆ | ನಿಕಟ ಶ್ರೀವತ್ಸಕೆ ೬
ಕೊರಳೊಳು ವೈಜಯಂತೀ | ರೂಪದಿ | ಶಿರಿಯೇ ಶೋಭಿತ ಕಾಂತೀ ||ಧರಸಿಹ ತುಳಸಿಯ | ಪರಿಪರಿ ವನಮಾಲೆಬೆರಳೊಳು ಉಂಗುರ | ವರ ರತ್ನ ಖಚಿತವು ೭
ಗೆಜ್ಜೆ ಸರಪಳಿ ಸುಂದರ | ಸೊಂಟವು | ಗೆಜ್ಜೆ ಕಾಲಲಿ ನೂಪುರ ||ಕಜ್ಜಲ ಕಂಗಳು ಗೆಜ್ಜೆ ನಾದದಿ ಒಪ್ಪಬೊಜ್ಜೇಲಿ ಬ್ರಹ್ಮಾಂಡ | ಸಜ್ಜಗೊಳಿಸಿ ಇಹ ೮
ಚಕ್ರಶಂಖವು ಶೋಭಿತ | ಕೈಗಳು | ನಕ್ರ ಹರಗೆ ಕಟಿತಟವಕ್ರ ಮನದವರ | ಸೊಕ್ಕನು ಮುರಿಯುತಅಕ್ಕರ ಭಜಿಪರ | ಸಿಕ್ಕನು ಬಿಡಿಸುವ ೯
ಮಾಸ ಮಾರ್ಗಶೀರ್ಷವು | ನವಮಿ ತಿಥಿ | ಅಸಿತ ತಾರೆಯು ಚಿತ್ತವು ||ವಾಸರ ಭಾರ್ಗವ | ನಿಶಿಯೋಳ್ನಗುತ ಪ್ರ-ವೇಶಿಶಿದನು ಗೃಹ | ವಾಸವಾನುಜ ಶ್ರೀಶ ೧೦
ಭಾವುಕರ ಪರಿಪಾಲ | ಬಂಡಿಯ | ಬೋವನಿದ್ದ ಸುಶೀಲ || ಆಹಾದೇವಾದಿ ದೇವನು | ಮಾವಿನೋದಿಯು ಗುರುಗೋವಿಂದ ವಿಠಲನು | ತೀವ್ರ ಫಲಪ್ರದ ೧೧

೧೦೧
ಬಂದಾಳು – ಬಂದಾಳು ಕನ್ನಿಕೆಯಾಗ || ಮೋಹನ್ನ ರೂಪದಿ ಪ
ಇಂದಿರೆ ಪತಿ ಸುರವೃಂದ ಪೊರೆಯಲುಮಂದರಧರ ಆನಂದವ ಬೀರುತ ಅ.ಪ.
ಕರದಲಿ ಕಂದುಕ ಪುಟ ನೆಗೆಸುತ್ತ | ಅತ್ತಿತ್ತಲಿ ಬರುತ |ಸುರರು ಅಸುರರೆಲ್ಲರು ಬಡಿದಾಡುತ್ತ | ಇಹಸ್ಥಲ ಗಮಿಸುತ್ತ ||ಕಿರುನಗೆ ನೋಟದಿ | ಬರ ಸೆಳೆಯಲು ಮನವೆರಗಿತು ಹೆಣ್ಣಲಿ | ಪರಿ ಪರಿ ಭಾವದಿ ೧
ಘಲು ಘಲ್ಲು ಘಲಿರೆನ್ನಲು ಗೆಜ್ಜೆಯನಾದ | ಅಸುರರಿಗುನ್ಮಾದ |ಕೆಲಸಾರಿ ಕೆಲ ಸಾರೆನ್ನುತಲೀ ನಾದ | ಆಯಿತು ವಿವಾದ ||ಘಳಿಗೆಯೊಳಮೃತದ | ಕಲಶ ಕನ್ನಿಕೆ ಕರತಲದೊಳಗಿರಿಸುತ | ಬಲು ಬಲು ವಂದಿಸೆ ೨
ಸಾಲು ಸಾಲಾಗಿ ಕುಳ್ಳಿರಲಾಗ | ಕಣ್ಮುಚ್ಚಿರೆಂದಳಾಗ ಕಾಲಾಲಂದಿಗೆ ಝಣಿ ಝಣಿಸುವ ಸೋಗ | ಹಾಕಿದಳ್ ತಾನಾಗ | ಕೈಲಿ ಕಲಶ ಸೌಟು | ಚಾಲಿಸುತಲಿ ಸುರಪಾಳಯ ಕುಣಿಸುತ | ಜಾಲ ಮಾಡಿದ ಹೆಣ್ಣು೩
ದಿವಿಜಾರ ಮಧ್ಯದಿ ರಾಹುವು ತಾನು | ಎತ್ತಲು ತನ ಗೋಣುರವಿಯು ಚಂದ್ರಮರ ಸೂಚನೆಗಳನು | ಅನುಸರಿಸುತ ಪೆಣ್ಣುಹವಣಿಸಿ ಚಕ್ರದಲವನ ಕೊರಳನೂಜವದಿ ಕಡಿಯೆ ಗ್ರಹವೆರಡೇರ್ಪಟ್ಟವು ೪
ಸಾಧನ ಸಾಧ್ಯವು ಸಮವಿಬ್ಬರಿಗೇ | ಸುರರು ಅಸುರರಿಗೇ | ಆದಾವು ಫಲ ಬೇರೊಬ್ಬಬ್ಬರಿಗೆ | ಸ್ವರ್ಯೂಪ್ಯೋಗ್ಯತೆಗೇ ||ವೇದ ವೇದ್ಯ ಗುರು ಗೋವಿಂದ ವಿಠಲನುಸಾಧು ಪೆಣ್ಣು ಸಮ ವೈಷಮ್ಯ ರಹಿತ ೫

೩೦೨
ಬಂಧಕವಾಗದ ಹಾಂಗೆ | ಕರ್ಮಛಂದಾಗಿ ಮಾಡಿಸೊ ಹರಿಯೆ ಪ
ತನುಕರಣ ಮನ ನಿನ್ನಾಧೀನ | ಈಸು | ಜ್ಞಾನವ ಪಾಲೀಸೋ ಪ್ರಾಣ |ನಾನನ್ಯ ನಿನಗೆ ಬೇಡೆ ತ್ರಾಣ | ದಾತ | ನೀನೆನ್ನ ಸಲಹೊ ಸತ್ರಾಣ೧
ಸತಿಸುತ ಧನಧಾನ್ಯ ಅಯ್ಯ | ಎನ್ನ | ಮತಿ ಭ್ರಮಣೆ ಮಾಡಿದ ಪರಿಯಪ್ರತಿಕ್ರಿಯೆ ನೀನೆಲ್ಲ ತಿಳಿಯ | ಎನ್ನ | ಹಿತದಿಂದ ಪಾಲಿಸೋ ಜೀಯಾ ೨
ಸರ್ವ ಕರ್ಮವು ಕ್ರೀಯಗಳಲಿ | ಅಲ್ಲಿ ಸರ್ವಸ್ವಾಮ್ಯವು ನಿನ್ನದಿರಲಿಸರ್ವದ ನಾಮ ನಾಲಿಗೆಲಿ | ನಿಂತು | ಸರ್ವತ್ರ ಎನ್ನ ಪಾಲಿಸಲಿ ೩
ಕಾರಕ ಕ್ರಿಯ ದ್ರವ್ಯವೆಂಬ | ಭ್ರಮೆ | ಮೂರುಗಳನು ಕಳೆಯೆಂಬಸಾರ ಪ್ರಾರ್ಥನೆ ಇದೆಯೆಂಬ | ಎನ್ನ | ದೂರ ವ೫À್ಪುದು ಮಾಣು ಬಿಂಬ ೪
ತನು ಕರಣ ವಿಷಯಾದಿಗಳು | ಜಡ | ಮನದಿಂದಾಗುವ ೫ಇರ್Àುಗಳುಅಣು ಜೀವಕ್ಕಾರೋಪಗಳು | ಮಾಡಿ | ಜನನ ಮರಣದ ಭವಣೆಗಳು ೫
ಇತ್ತೆ ನೀ ಸ್ವಾತಂತ್ರ ಎನಗೆ | ಎಂಬ | ಶಾಸ್ತ್ರದ ಸೊಲ್ಲಿನ ಬಗೆಸುತ್ತು ಹುಟ್ಟುವ ಪರಿಯಾಗೆ | ಕಾಯೊ | ಭಕ್ತವತ್ಸಲ ದಯಾವಾಗೆ೬
ಭರ್ಮ ಗರ್ಭನ ಪಿತ ಹರಿಯೆ | ಕರ್ಮ | ಮರ್ಮವ ತಿಳಿಸಲೋ ಧೊರೆಯೆ |ನಿರ್ಮಲಾತ್ಮನೆ ಮೊರೆಯಿಡುವೆ | ಎನ್ನ | ಕರ್ಮವ ಸುಡುವುದು ಹರಿಯೆ೭
ಏನೇನು ಮಾಡುವ ಕರ್ಮ | ಗುರು | ಪ್ರಾಣಾಂತರ್ಗತಗೀವ ಮರ್ಮಜ್ಞಾನಾನು ಸಂಧಾನ ಪರ್ಮ | ಇತ್ತು ನೀನಾಗಿ ಪಾಲಿಸೊ ಧರ್ಮ ೮
ಭಾವ ಕ್ರಿಯ ದ್ರವ್ಯಾದ್ವೈತ | ಮೂರು | ಭಾವಗಳಿಂದನುಷ್ಠಾತಶ್ರೀವರ ಎನಿಸೆನ್ನ ತಾತ | ಗುರು | ಗೋವಿಂದ ವಿಠಲ ಸುಪ್ರೀತ ೯

೬೦೨
ಬದರೀ ಪ್ರಸನ್ನವಿಠಲ | ಮುದದಿ ಪೊರೆ ಇವನಾ ಪ
ವಿಧಿ ಭವಾದೀ ವಂದ್ಯ | ಸಕಲ ಜಗತ್ರಾಣಅ.ಪ.
ಬುದ್ಧಿಯಲಿ ನೀ ಸ | ದ್ಭುದ್ಧಿ ಪ್ರೇರಕನಾಗಿಮಧ್ವಮತ ದೀಕ್ಷೆಯಲಿ | ಬದ್ಧವೆನಿಸಿವನಾಹೆದ್ದಾರಿ ಮೀರದಲೆ | ಶುದ್ಧ ಸಾಧನಗೈಸಿಉದ್ಧಾರ ಮಾಡೋಹರಿ | ಬದರೀ ನಿವಾಸ ೧
ಗುರುಹಿರಿಯನುಸರಿಪ | ವರಮತಿಯ ಕರುಣಿಸುತತರಳನನು ಕೈಪಿಡಿದು | ತೋರೋ ಸನ್ಮಾರ್ಗಅರಹುಲೇನಿಹುದಿನ್ನು | ಸರ್ವಜ್ಞ ನೀನನ್ನುದರ್ವಿ ಜೀವನ ಕಾವ | ಹವಣೆ ನಿನದಲ್ಲೇ ೨
ಸತ್ಸಂಗ ಇವಗಿತ್ತು | ಕುತ್ಸಿತವ ಹೊರದೂಡಿವತ್ಸಾರಿ ಶ್ರೀಹರಿಯೆ | ವತ್ಸನ್ನ ಪೊರೆಯೇ |ಮತ್ಸಕೇತನ ಜನಕ | ಉತ್ಸವದಿ ಮೆರೆವಂಥಸತ್ಸ್ವಭಾವನೆ ದೇವ | ಭಿನ್ನವಿಪೆ ನಿನಗೆ ೩
ಜ್ಞಾನ ಭಕ್ತಾದಿಗಳ | ನೀನಾಗಿ ಕೊಟ್ಟವಗೆಮಾನನಿಧಿ ಪೊರೆಇವನ | ಧೀನಜನಬಂದೊಕಾಣೆ ಮೂರ್ಲೋಕದೊಳು | ನಿನ್ನಂಥ ಕರುಣಿಗಳಶ್ರೀನಿವಾಸನೆ ತೋರೋ | ಹೃದ್ಗುಹದಿ ಇವಗೇ ೪
ಸುಪ್ತೀಶ ನೀನಾಗಿ | ಗೊತ್ತು ಮಾಡ್ಡಂಕಿತವಇತ್ತಿಹೆನೊ ತರಳನಿಗೆ | ವ್ಯಾಪ್ತ ಮೂರುತಿಯೇಇತ್ತು ಮನದಿಪ್ಟವನಾ | ಎತ್ತು ಭವದಿಂದೆಂದುಗೋಪ್ತ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ ೫

೬೦೧
ಬದರೀನಾಥ ವಿಠಲ | ಪೊರೆಯ ಬೇಕಿವನಾ ಪ
ಸದಯ ಹೃದಯನೆ ಇವಗೆ | ಮುದವನ್ನೆ ಬೀರತಲಿಹದುಳದಲಿ ಕೈಪಿಡಿದು | ಕಾಪಾಡೊ ಹರಿಯೇ ಅ.ಪ.
ಮೇಶ ಮಧ್ವೇಶ ಮಹಿ | ದಾಸ ನಿನ್ನಡಿ ದಾಸ್ಯಆಸಿಸುವ ಬಾಲಕನ | ಆಶೆಯನು ಸಲಿಸೀ |ಕ್ಲೇಶಗಳ ಪರಿಹರಿಸಿ | ನೀ ಸಲಹೆ ಭಿನ್ನವಿಪೆಹೇಸದಾಗತಿ ವಂದ್ಯ | ವಾಸವಾನುಜನೇ ೧
ಲೌಕಿಕದ ಸಂಪತ್ತು | ಬೇಕಾದ ವರವಿತ್ತುಕಾಕು ಸಂಗವ ಕೊಡದೆ | ನೀಕಾಯ ಬೇಕೋ ||ತೋಕನಿಗೆ ನಿನ್ನಲ್ಲಿ | ಭಕುತಿ ಜ್ಞಾನಗಳಿತ್ತುಲೌಕಿಕವನೆಲ್ಲ ವೈ | ದೀಕ ವೆಂದೆನಿಸೋ ೨
ಸಾಧನದ ದೇಹವನು | ವೈದೇಹಿ ಪ್ರಿಯ ಹರಿಯೆನೀದಯದಿ ಕೊಟ್ಟಿರುವೆ | ಸಾಧು ವಂದ್ಯಾ |ಸಾಧನ ಸುಮಾರ್ಗವೆನೆ | ಭೇದ ಪಂಚಕ ತಿಳಿಸಿಮೋದ ತೀರ್ಥರ ಮತದಿ | ಮೋದ ಕೊಡು ಸತತಾ ೩
ಸ್ವಾಪದಲಿ ಮತ್ಸ್ಯಾದಿ | ರೂಪಗಳ ಸ್ತೋತ್ರವೆನೆವ್ಯಾಪಾರ ಮಾಡಿಸುತ | ಕೃಪೆ ತೋರ್ದೆ ಹರಿಯೇವೈಪರೀತ್ಸದ ಮನದ ಚಾಪಲ್ಯ ಕಳೆಯಲ್ಕೆಸ್ವಾಪದಲಿ ಸೂಚಿಸುತ | ನೀಪೇಳ್ದೆ ಧೃಡವಾ ೪
ಭಾರತೀ ಪತಿ ವಿನುತ | ನಾರಾಯಣಾಖ್ಯ ಹರಿಘೋರಭವ ಕೂಪಾರ | ಪಾರಗಾಣಿಸುವಾಭಾರ ನಿನ್ನದು ಎಂದು | ಪೋರನ್ನ ಒಪ್ಪಿಸಿಹೆಧೀರ ಗುರು ಗೋವಿಂದ | ವಿಠಲ ಪೊರೆ ಇವನಾ ೫

೩೨೩
ಶ್ರೀ ಬದರಿ
ಬದರೀಯಾ | ಯಾತ್ರೆಯಾ ಮಾಡಿ | ಬದರೀಯಾ ಪ
ಬದರಿಯ ಯಾತ್ರೆಯ ಮಾಡಿ | ನಿಮ್ಮಮುದ ಶಾಶ್ವತವನ್ನೆ ಬೇಡಿ | ಆಹಸದಮಲ ದೇಹದಾಲಯವೆ | ಸದಾಶ್ರಿತ್ಹಿಮಾಲಯಹೃದಯ ಮಧ್ಯದಲೀಹ | ಬದರೀನಾಥನ ನೋಡೀ ಅ.ಪ.
ಅಪರಿಮಿತದ ಪುಣ್ಯ ಗಳಿಸೀ | ತತ್ವಾದಿಪರ ಒಲಿಮೆ ಸಂಗ್ರಹಿಸೀ | ಕರ್ಮನಿಪುಣತೆಯಿಂದ ಉತ್ತರಿಸೀ | ಮಧ್ವಸುಪಥ ದಾಸತ್ವವ ವಹಿಸೀ | ಆಹವಿಪುಲ ದೇಹದಿ ಶ್ವೇತ | ದ್ವೀಪಾದ್ಯಾಲಯಗಳಸುಪದ ತೀರ್ಥವು ಸ | ರಿತ್ಪ್ರವರಾದಿ ಚಿಂತಿಸಿ ೧
ತನುಮನ ಧನಗಳಾಶೆಯ | ತೊರೆದುಮನ ಆದಿಕರಣಗಳ್ಹರಿಯ | ಪಾದವನಜದಲ್ಲಿಡೆ ಅದು ಅಭಯ | ಸುದತಿಮಣಿ ಸಹ ಪೋಗೋದೆ ಹೃದಯ | ಆಹವನ ಭುವನ ಚರಿಸಿ ಸತ್ಪಾ | ವನ ಕ್ಷೇತ್ರಗಳಮಣಿದು ಸರ್ವತೀರ್ಥ | ಸ್ನಾನಾದಿ ಗೈಯುತ ೨
ಸುರ ನದಿಯನು ನಾಡಿ ಇಡೆಯೊಳ್ | ಮತ್ತೆವರ ಸಿಂಧು ಸರಿತವ ಹಸ್ತ್ನಿಯೋಳ್ | ಇನ್ನುಸರಸ್ವತಿಯನು ಸುಷುಮನದೋಳ್ | ಆತರಣಿಜೆಯನು ಪಿಂಗಳದೊಳ್ | ಆಹಹರಿರೂಪ ಮಾಧವ | ಕ್ಷೀರಾಬ್ಧಿಶಾಯಿಯವರ ಪದ್ಮನಾಭನ | ಸಿರಿ ಕೃಷ್ಣನ ನೆನೆದು ೩
ವಾರುಣಿಯೊಳು ಗೋದಾವರಿಯ | ನೀನುಸ್ಮರಿಸುತ್ತ ಕುಹುವೆ ನರ್ಮದೆಯ ಮುಂದೆವರನಂದ ನಾಡೀಲಿ ಕೃಷ್ಣೆಯ | ಬಹುಮರುಗುವಲ್ಲಿ ಭೀಮರಥಿಯ | ಆಹನಾರಾಯಣ ವಿಷ್ಣು | ಶೌರಿ ಪಾಂಡುರಂಗರಾರಾಧನೆಯ ಗೈದು | ತೋರುತ ಮುದವನು ೪
ಶಾರದ ನಾಡೀಲಿ ಗಂಡಕೀ ಮತ್ತೆಚಾರು ಲಂಬುಶಿಖಿ ಗೋಮತಿ | ಆ ಗಾಂ-ಧಾರಿಯೊಳಗೆ ಮಾರುಧೃತಿ | ನೆನೆಚಾರು ಶಂಕಿನಿ ನಾಡಿ ತಪತೀ | ಆಹವೀರ ರಾಮಾ ಮಧು | ವೈರಿಯು ಶ್ರೀರಂಗನಾರಾಯಣನ ರೂಪ | ಸಾರುತ ತಪತೀಲಿ ೫
ಭರತ ವರ್ಷದಿ ಇಹ ಸರಿತ | ನಾಮೋಚ್ಛರಣ ಅಸಾಧ್ಯವನಂತ | ಮೂರುವರೆ ಕೋಟಿ ದೇಹಾದಿ ಅಂತ | ತೀರ್ಥನರ ರೋಮ ಕೂಪದೋಳ್ಗತ | ಆಹಸರುವ ತೀರಥರಾಜ | ಸಿರಿ ಮಾಧವನ ನೆನೆಯೆಪರಿಹರಿಸುತ ಪಾಪ ಸರುವಾಭೀಷ್ಟವ ನೀವ ೬
ಸ್ತವರನದಲೀಪರಿ ಮಿಂದು | ದೇಹಪವಿತರವಾಯಿತು ಎಂದು | ಕ್ಷೇತ್ರಸರ್ವವ ಸ್ತುತಿಸುತ ಮುಂದೆ | ಪೋಗೆಭವರಹಿತ ಹರಿದ್ವಾರ ಅಂದು | ಆಹಭುವನ ಪಾವನ ಗಂಗಾ | ಪ್ರವಹಮೀಯುತ ಮತ್ತೆಭವಹರ ಹರಿನಾಮ | ಶ್ರವಣ ಮನನಗೈದೂ ೭
ಹೃಷೀಕೇಶವೆ ಆದಿ ಬದರಿ | ಮುಂದೆನುಸುಳಿ ಪೋಗಲು ವೃದ್ಧ ಬದರಿ | ವನವೆಸೆವ ತಪಕೆ ಭಾವಿ ಬದರಿ | ಪಾಂಡುಕೇಶ್ವರವೇ ಯೋಗ ಬದರಿ | ಆಹಎಸೆವ ಮನಸು ಬುದ್ಧಿ | ಶಶಿ ಸೂರ್ಯ ಪ್ರಭೆ ನೇತ್ರಎಸೆವೊ ಲಲಾಟದಿ | ಹೃದಯ ದೋಳ್ವಿಕಾಲ ೮
ಅಗೊ ಅಲ್ಲಿ ಕಾಂಬುದು ಹೇಮ | ಮಯಸುಗೋಪುರವು ಹರಿ ಧಾಮ | ಕಂಡುನೀಗೊ ನೀ ದೇಹದ ಶ್ರಮ | ಓಡಿಪಂಚ ರೂಪಗಳನೆ ತಂದು | ಆಹಪಂಚ ನಾಡಿಯ ಮಧ್ಯ | ಮಿಂಚಿಪ ಗೃಹದಿ ವಿ-ರಂಚಿ ಪಿತನ ನೋಡಿ | ಸಂಚಿತಾದಿಯ ಕಳೆ ೯
ಬದರಿನಾಥನ ದಿವ್ಯ ರೂಪ | ತಂದುಹೃದಯ ಬಿಂಬನಲ್ಲಿ ನೋಳ್ಪ | ಬಲುಮುದವ ಪೊಂದಿದವನೆ ಭೂಪ | ಸಾಧ್ಯವಿದಹುದೆಲೊ ಒಲಿದರೆ ಶ್ರೀಪ | ಆಹಮಧುಸೂದನ ಗುರು | ಗೋವಿಂದ ವಿಠಲನ್ನಹೃದಯ ಕಮಲ ಮಧ್ಯ | ಮುದದಲರ್ಚಿಸುತಲಿ ೧೦

೧೦೨
ಬಯಸೋದು _ ಉತ್ತಮ ಸಂಗ – ಬಯಸೋದು ಪ
ಬಯಸೂವುದುತ್ತಮ ಸಂಗ | ಭವಭಯ ಪರಿಹರಿಸೂವ ಸಂಗ | ಆಹಭಯ ದೂರಾಭಯಪ್ರದ | ದಯ ಪೂರ್ಣ ಹರಿಯ ಹೃ-ದಯ ವ್ಯಾಪ್ತವಾದಂಥ | ವಿಯದೊಳು ಕಾಂಬಂಧ ಅ.ಪ.
ಭುವನ ತ್ರಯಂಗಳ ವಿಭವ | ಹೇತು ಇವರೆಂದು ಖ್ಯಾತಿಲಿ ಇರುವ | ಬೊಮ್ಮದಿವಿಜೇಡ್ಯ ವೈಕುಂಠನವ | ಮೃಗ್ಯನವರಿಂದನಾಗುತಲಿರುವ | ಆಹಅವನ ಪದ ಕಮಲದಿ | ಧೃವ ಚಿತ್ತ ಉಳ್ಳವರವರಿಗೆಂಬರು ವೈ | ಷ್ಣವಾಸ್ಯರೆಂದೆನುತಲಿ ೧
ಉರುತರ ವಿಕ್ರಮ ಚರಣ | ಅವರಬೆರಳಿನ ನಖಮಣಿ ಕಿರಣ | ಚಂದ್ರಕಿರಣದಂತೆ ತಾಪ ಶಮನ | ಸೇವಿಪರ ಹೃದಯಾಂತಃಕರಣ | ಆಹದಿರುತ ತೋರಿಕೊಳ್ಳೆ | ತಾರೇಶನಂದದಿಪರಿತಾಪವಿನ್ನುಂಟಿ | ಮರಳಿ ಅಂಥವನಿಗೆ ೨
ಶುದ್ಧಾಂತಃಕರಣರ ಭಕ್ತಿ | ಪಾಶಬದ್ದನಾಗಿಹ ಹರಿಮೂರ್ತಿ | ಇಂಥಶುದ್ಧರ ವಸ ಹರಿಕೀರ್ತಿ | ಇಂದದಗ್ದ ಪಾಪದ ಮೂಟೆ ಭರ್ತಿ | ಆಹಊಧ್ರ್ವ ಪುಂಡ್ರವು ಶಂಖ | ಮುದ್ರಾದಿ ಚಿನ್ಹಿತಶಬ್ದರಿವರು ಪ್ರ | ಸಿದ್ಧ ಭಾಗ್ವತರೆಂದು ೩
ಕಾಮ ಕಾರ್ಮಾಅವಿದ್ಯದಿಂದ | ದೇಹಭೂಮಿಯೊಳುತ್ಪನ್ನದಿಂದ | ಜಾತಿಬ್ರಾಹ್ಮಣಾಹಂಭಾವದಿಂದ | ಶೂನ್ಯಶ್ರೀಮನೋಹರ ಜೀವರಿಂದ | ಆಹಸಾಮಸನ್ನುತ ಭಿನ್ನ | ನೇಮ ತಿಳಿದು ತಾರ-ತಮ್ಯವ ತಿಳಿದವ | ಪ್ರೇಮ ಭಕ್ತನವನು ೪
ನೋವು ಸಂತೋಷಗಳೆಂಬ | ದ್ವಯಭಾವಗಳ್ಸಮತೇಲಿ ಉಂಬ | ಜ್ಞಾನಿದೇವ ದೇವಗೆ ಪ್ರಿಯನೆಂಬ | ಬುದ್ಧಿಲೋಪಿ ಅವರ ಭಜಿಸೆ ತುಂಬ | ಆಹಗೋವ ಪಾಲಕ ಗುರು | ಗೋವಿಂದ ವಿಠ್ಠಲಕಾವನು ಬೆಂಬಿಡದೆ | ಈ ವಿಧ ಭಕುತರ ೫

೧೦೩
ಬರಬಾರದೇನೋ ಹರಿಯೇ | ಹೇ ದೊರೆಯೆ ಪ
ಕರೆದು ಚೀರುತಲಿರೇ | ಮರೆಯಲಿಪ್ಪುದು ಥರವೇ ಅ.ಪ.
ತರಳೆ – ದ್ರುಪದನ ತನುಜೇ | ಮೊರೆ ಇಡೆ ನಿನಗಂದೂವರವ ಅಕ್ಷಯ ಹಾಕೀ | ಭರದಿ ಸಲಹಿದೆ ಅಂದೂ೧
ಸರಿ ಅಧಿಕರು ನಿನಗೇ | ನರ ಸುರರಲಿ ಯಾರೂಇರರು ಎಂಬುದ ತಿಳಿದು | ಗರುವ ಮಾಡುವಿ ಏನೊ ೨
ಬಂಧು ನೀನಲ್ಲವೇನೋ | ಎಂದೆಂದಿಗೂ ನೀನುಇಂದು ಎನ್ನಯ ಕಣ್ಣಾ | ಮುಂದಕೆ ಬಂದು ನಿಲ್ಲೋ೩
ದೇಹದಿ ಜೀವಾಂತರದೀ | ಬಹಿರಂತರದಿ ವ್ಯಾಪ್ತಮುಹುರ್ಮುಹು ಪ್ರಾರ್ಥಿಸುವೇ | ಮಹ ಮಹಿಮನೆ ಬಾರೊ ೪
ಗುರು ಗೋವಿಂದ ವಿಠಲಾ | ಸುರ ಶತೃಗಳು ಪಟಳಾಹರಿಸೆನ್ನ ವಿದ್ಯಾಪಟಲಾ | ತೋರೋ ನಿನ್ನ ಮುಖ ಕಮಲಾ ೫

೧೦೪
ಬಾ ಗೋಪತಿ ಗೋಪನೆ ಮನ್ಮನಕೆ | ತಡಮಾಡುವುದ್ಯಾಕೆಭೋಗಿ ಮದಾಪಹ | ಆಗಮ ವೇದ್ಯನೆ | ನಮಿಸುವೆ ತವಪದಕೆ ಪ
ನೀಗುವುದೆನ್ನೆಯ ಘಾವಳಿ ನಿಚಯವಬಾಗುತ ಬೇಡುವೆ ಯೋಗಿ ವರೇಣ್ಯಾ ಅ.ಪ.
ದ್ವಾರಾವತಿವಾಸ ಗೋಪೀಶ | ಆನತ ಜನ ಪೋಷಾಸಾರಾ ಅಸಾರ ಜಗದಾಧೀಶ | ತಾರೇಶ ಭಾಸಾ |ವಾರಾಶಿಜೆ ಲಕುಮಿಯು | ನೀರಜ ಸಂಭವಮುರಾರಿಗಳಿಂದಲಿ ಆರಾಧಿಪ ಪದ ೧
ನವನೀತ ಚೋರ | ಪಾವನ ಚರಿತ | ಸ್ವರತ ಅನವರತಭುವನೈಕ ವಂದ್ಯ ವಿಶೋಕದಾತ | ಸಮಅಧಿಕ ರಹಿತಅವನಿಜೆ ವಲ್ಲಭ | ತ್ರಿವಿಧರಿ ಗೋಸುಗವಿವಿಧ ರೂಪಂಗಳ | ತಾಳುವ ಖ್ಯಾತ ೨
ಹಂಸ ಡಿಬಿಕ ಶಕಟಾರಿ ಮುರವೈರಿ | ಮುಷ್ಠಿಕಮಲ್ಲಾರಿಕಂಸಾರಿ ವತ್ಸಾರಿ ಪರಮ ಉದಾರಿ | ಬಾಬಾರೆಲೊ ಶೌರಿಶಿಂಶುಮಾರ ಸುರ ಸಂಶಯ ಹರಿಸಲು |ಸ್ವಾಂಶದಿ ಜನಿಸುತ ಭಕ್ತರುದ್ಧರಿಸಲು ೩
ಕರುಣ ವನದಿ ಶರಣಾಗತ ಪರಿಪಾಲ || ಶಿರಹರ ಶಿಶುಪಾಲತರಳ ದೃವಾದಿಯ ಪೊರೆವುದು ತವಶೀಲ | ಪಾಲಿಸು ಶ್ರೀಲೋಲಕರಣ ನಿಯಾಮಕ ವರ್ಣ ವೇದ್ಯತವಚರಣ ಬಯಸುವೆ ಹೃದಯ ಸದನಕೇ ೪
ಪುಂಡಲೀಕ ಪ್ರೀಯ ಪಾಂಡವ ವರದಾ | ಅನತ ಜನ ಫಲದಚಂಡ ವಿಕ್ರಮ ತೋಂಡ ಮಾನಗೊಲಿದ | ಭಂಡ ಜನರ ಮುರಿವಬಂಡಿ ಬೋವ ಗುರು ಗೋವಿಂದ ವಿಠಲತೋಂಡ ವರದ ಕಳೆ ಮಾಯಾ ಪಟಲ ೫

೪೪೯
ಬಾಗಿ ಭಜಿಸಿರೋ | ಭಾಗಣ್ಣ ದಾಸರನಾ | ನಮಿಪರ ಬೀಷ್ಟದನಾ ಪ
ನಾಗಶಯನ ಪ್ರಿಯ | ಭೋಗಿ ಭೂಷಣ ಸುತನಾ | ಮನ್ಮಥ ಸದೃಶನನಾ ಅ.ಪ.
ಮುರಹರ ನಾಮಕನರಸಿಯುದರದಲ್ಲಿ | ಜನುಮತಾಳಿ ಅಲ್ಲೀಸುರಪುರ ವೈದಲು ತನ್ನ ಪಿತನು ಮುಂದೇ | ಸಂಕಾರ ಪುರಸೇರ್ದೇ | ವರಚಿಂತಲ ವೇಲಿಲಿ ಧ್ಯಾನಕಾಗಿ ನಿಂದು | ಗಾಯಿತ್ರಿ ಜಪಿಸು ತಂದು ವರಮಾರುತಿ ಗುಡಿಯೊಳು ನೆಲಿಸುತ್ತಾ | ವರಪಡೆದೆಯೊ ಜಪಿಸುತ್ತಾ ೧
ತ್ರಿಲಿಂಗಪುರಕೇ ಕವಿಯೈತರಲೂ | ಪಂಡಿತರನು ಗೆಲಲೂಬಲುಚಿಂತಿಸಿ ಜನಸಭೆಯ ಸೇರಿ ಆಗ | ತೀರ್ಮಾನಿಸಿ ವೇಗ |ಕಳುಹಿದರವನ ಭಾಗಣ್ಣನ ಬಳಿಗಾಗೀ | ಬಲವನು ತೋರೆನಲಾಗೀ ನಿಲಲಾರದೆ ತೆರಳಿದ ಭೀತಿಯಲೀ | ವರಕವಿ ಮೆರೆದನು ಕೀರ್ತಿಯಲೀ೨
ಉತ್ತನೂರಿಗೆ ಮಾತೆಯ ಕೂಡೈತರುತಾ | ವೆಂಕಟಪತಿ ಬಳಿಯಿರುತಾ ಸ್ತುತ್ಯ ಸಂಕೀರ್ತನೆ ರಚನೆಯ ಮಾಡುತ್ತ | ಈ ಪರಿ ಸೇವಿಸುತ | ನಿತ್ಯ ಶ್ರೀ ವೆಂಕಟಕೃಷ್ಣನ ಪಾಡುತ್ತಾ | ನರ್ತನ ಗೈಯ್ಯುತ್ತಾ ಸುತ್ತಿ ಬರುವ ಜನರ ದೃಷ್ಠಾರ್ಥಾ | ಪೇಳುತ ಗಳಿಸಿದೆ ಅರ್ಥಾ ೩
ತಿಮ್ಮಣ್ಣ ದಾಸಾರ್ಯರ ಬಳಿಯಲೀ | ಆದವಾನಿಯಲ್ಲೀನೆಮ್ಮದಿಲಿದ್ದಲ್ಲಿಂದಲಿ ತೆರಳಿ | ಕಾಶೀಶನ ಬಳೀಕ್ರಮ್ಮಿಸಿ ದಿನ ಗುರು ಸೇವೆಯಲ್ಲಿ ಬಹಳಾ | ಮೆಚ್ಚಿಸಿ ಗುರುಗಳ | ಹಮ್ಮಿನ ವಿಜಯರಿಂದುಪದೇಶಾ | ಗೋಪಾಲ ವಿಠ್ಠಲದಾಸ ೪
ವೆಂಕಟರಾಮಗೆ ರಾತ್ರಿಕಾಲದಲ್ಲೀ | ಆಘ್ರ್ಯವ ಕೊಡುವಲ್ಲೀ ಪಂಕಜಮಿತ್ರನ ತೋರುತಲವರೀಗೆ | ಸಂಶಯ ಕಳೆದವಗೆ | ವೆಂಕಟೇಶನೊಳ್ ಭಕುತಿ ಪುಟ್ಟುವಂತೆ | ಸೇವೆ ವಿಧಿಸಿ ಅಂತೇ ಪಂಕಜನಾಭನ ಕೀರ್ತನಾದಿಗಳನೂ | ಮಾಡಿ ಕಳೆದ ದಿನಗಳನೂ ೫
ವೆಂಕಟೇಶನ ಪರೋಕ್ಷಿ ದಾಸರೆಂದು | ಪೇಳೆ ಜನರು ಅಂದು ವೆಂಕಟ ನರಸಿಂಹಾಚಾರ್ಯಾ | ದಾಸರೊಳು ಮಾತ್ಸರ್ಯಾ | ಶಂಕೆಪಟ್ಟು ಭಜನೆಯೊಳಿರುವಂದೂ | ಮುಂದಿನ ಪೀಠದಲೊಂದೂ ಲಂಕೆಯ ಪುರವನು ದಹಿಸಿದನಾ | ಕಂಡರು ಕೋಡಗನಾ ೬
ವೆಂಕಟರಾಮಾರ್ಯರು ಬರಲಾಗೀ | ಅಪರೋಕ್ಷವುಹೇಗೆ ನಲಾಗೀ ಶಂಕೆಯಿಲ್ಲದಲೆ ಯತಿಯಾಗೀ | ಎಂದನೆ ಯತಿಯಾಗೀ | ಪಂಕಜಾಕ್ಷ ವಾಸುದೇವ ವಿಠಲನ್ನಾ | ಕಾಣುತಲಿ ಮುನ್ನಾ ಅಂಕಿತ ನಾಮದಿ ಪದಪದ್ಯಾ | ರಚಿಸಿ ಮೆರೆದ ನಿರವದ್ಯಾ೭
ರೋಗದಿ ಶ್ರೀನಿವಾಸಾಚಾರ್ಯಾ | ಬರಲಾಗ ದಾಸಾರ್ಯ ಜಾಗ ಗುಡಿಯಲಿ ಶುದ್ಧಿ ಮಾಡುತಿರಲು | ಕೇಳಿ ಗೃಹಕೆ ಹೋಗಲು | ವೇಗದಿ ಮಂತ್ರಿತ ರೊಟ್ಟಿ ತಿಂದು ಇನ್ನ | ಕಳೆದ ರೋಗವನ್ನ ನಾಗಶಯನ ಶ್ರೀ ಜಗನ್ನಾಥ ವಿಠಲನ್ನಾ | ತೋರ್ಯರ್ಧಾಯು ಇತ್ತವನ್ನಾ ೮
ಮುದದಲಿ ನಿಜಜನರನು ಪೊರೆಯೇ | ಶಾಸ್ತ್ರರ್ಥವ ನೊರೆಯೆ ಪದ ಸುಳಾದಿಯನೆ ಬಲುರಚಿಸೀ | ಭಕುತಿ ಮಾರ್ಗ ಬೆಸಸೀ | ಸುಧೆಸಮವೆನೆ ಹರಿಕಥೆಸಾರ | ರಚಿಸಿ ಜನೋದ್ಧಾರ ಮುದಮುನಿ ಮತಗ್ರಂಥಗಳೊರೆದೇ | ಸಚ್ಛಾಸ್ತ್ರಪೊರೆದೇ ೯
ಹತ್ತೆಂಟು ಒಂದು ಮೊಗದ ರೂಪ | ಶ್ರೀ ವಿಶ್ವರೂಪನಿತ್ಯ ಚಿಂತಿಪ ತನ್ನ ಬಿಂಬರೂಪ | ಅಂಶದಿಹನು ಗಣಪಚಿತ್ರಿಸಿರುವ ಚಕ್ರಾಬ್ಜ ವಲಯವನ್ನ | ಧೇನಿಸಿ ವಿಜಯರನ್ನಕೃತ್ಯ ಪೇಳಲೊಶವೆ ಅಪರೋಕ್ಷಿಗಳ | ಮಂದನು ನಾ ಬಹಳ ೧೦
ಚಿತ್ರಮಾರ್ಗದಿ ಭ್ರಾತೃವರ್ಗವನ್ನ | ದೂರಕಳಿಸಿ ಮುನ್ನಚಿತ್ರಭಾನು ಸಂವತ್ಸರದಲ್ಲಿ | ದಶಮಾಸಾಷ್ಟಮಿಲೀ |ಚಿಂತಿಸುತ ಯೋಗಮಾರ್ಗದಲ್ಲಿ | ದಹಿಸಿ ದೇಹವಲ್ಲೀ |ಚಿತ್ರ ಚರಿತ ಗುರುಗೋವಿಂದ ವಿಠ್ಠಲನಾ | ಪದಕಮಲವ ಸೇರಿದನ ೧೧

೧೦೫
ಬಾರನೇಕೆ ಬಾಲಕೃಷ್ಣನೂ | ಎನ್ನ ಮನಕೆಪೋರ ಶೀಲ ಗೋಪ ಕೃಷ್ಣನೂ ಪ
ಸಾರಿ ಸಾರಿ ಕೂಗಿದಾರೂ | ದೂರವಿರುವನಂತೆ ನಟಸಿತೋರಗೊಡನು ತನ್ನ ರೂಪ | ಅರಿಗ್ಹೋಗಿ ಪೇಳಲಮ್ಮ ಅ.ಪ.
ಗೊಲ್ಲರೊಡನೆ ತಾನು ಸೇರುತಾ | ಗೋವುಗಳನೆಲ್ಲಮೇಯ್ಯೆ ವನವ ಸಾರುತಾ ||ಚೆಲ್ವ ಕೃಷ್ಣ ಗೋಪಿ ಕೊಟ್ಟ | ಕಲ್ಲಿ ಬುತ್ತಿಯೊಡನೆ ಪೋಗಿಹಳ್ಳ ಕೊಳ್ಳದಲ್ಲಿ ಕುಳಿತು | ಮೆಲ್ಲುತಿರುವನೇನೊ ಅಮ್ಮ ೧
ಚೆಂಡು ಬುಗರಿ ಚಿಣ್ಣಿ ಕೋಲನೂ | ಆಡಲ್ಹೋಗಿಕಂಡ ಕಂಡ ಬೀದಿ ವನವನೂ ||ಹಿಂಡು ಹಸುಳೆರೊಡನೆ ಸಾರಿ | ಗುಂಡು ಗೋವಿಯಂತೆ ಆಡಿಭಂಡು ಮಾಡಿ ಗೋಪಿ ಜನರ | ಕಂಡು ಕಾಣಧಾಂಗೆ ಇಹನೆ ೨
ತಂದೆ ಮುದ್ದು ಮೋಹನ ಗುರುಗಳೂ | ನಿನ್ನ ರೂಪತಂದು ತೋರಿ ಮನದಿ ನಿಲ್ಲಲೂ ||ಅಂದು ಕೇಳಿಕೊಂಡು ಇಹರು | ಅಂದ ವಚನ ಮರೆತೆಯೇನೋತಂದೆ ಗುರು ಗೋವಿಂದ ವಿಠಲ | ಇಂದೆ ನೀನೆ ಮನಕೆ ಪೊಳೆಯೊ ೩

೩೯೬
ಬಾರಯ್ಯ ಬಾ ಬಾ ಬುಧಜನಗೇಯಾ | ಹೇ ಗುರರಾಯಾಸಾರಿ ಬರುವ ಭಕುತರೊಡೆಯ | ಕಾಯಯ್ಯ ಜೀಯಾ ಪ
ವಾರಿಜನಾಭನ ವಾರಿಧಿಮಥನನವೈರದಿ ಭಜಿಸಿದ ಪುರಟ ಕಶ್ಯಪನ |ವರ ಉದರೋದ್ಭವ ಹರಿ ಪ್ರಿಯ ಭಕುತನೆಶರಣರ ಪೊರೆಯಲು ತ್ವರ್ಯದಿ ಬಾರೋ ಅ.ಪ.
ಪ್ರಥಮ ಪ್ರಹ್ಲಾದ ದಿತಿಸುತ ದೊರೆಯೇ | ಬಾಹ್ಲೀಕ ದೊರೆಯೇ |ಚತುರ ಚಂದ್ರಿಕೆ ಗುರು ಮಂತ್ರಾಲಯ ಗುರುವೇ | ದೊರೆಬಲು ಮೊರೆಯೇ |ವ್ಯಥೆಯಾಕೆನ್ನುತ | ಹಸ್ತವ ಚಾಚುತಹುತ ವಹ ನೊಳು ಬಲಾ | ಜತನಾಗಿರಿಸಿಹ ರತುನವ ಹಾರವ | ಪ್ರೀತಿಲಿ ಕೊಡುತಅತಿಶಯ ತೋರಿದ | ಯತಿ ರಾಘವೇಂದ್ರ ೧
ಸುಧೀಂದ್ರರ ಕರಜ ಮಂತ್ರಾಲಯ ನಿಲಯ | ಬಲು ಮಂತ್ರಗಳೊಡೆಯಾ |ಬಧಿರ ಮೂಕರ ಅಂಧರ ಹೊರೆಯಾ | ಪರಿಹರಿಸುವ ದೊರೆಯಾ |ಮಧ್ವಾಂತರ್ಗತ ಮಧು ಕೈಟ ಭಾರಿಯಸಿದ್ಧಾಂತದ ಸವಿ ಹೃದ್ಗತ ಮಾಡಿದ |ವಿದ್ವನ್ಮಣಿಗಳ ಸದ್ರ‍ವಂದದ ಖಣಿಸದ್ವಿದ್ಯದ ಸವಿ ಮೋದದಿ ಉಣಿಸಲು ೨
ಮನ್ರೋವಿನ ಮನ ತಿಳಿಯುತಲಿನ್ನೂ | ಮುನಿವರ ತಾನೂ |ಸಾನುರಾಗದಿ ತನುವ ತೋರಿದನೂ | ಘನ ಕರುಣಿಯು ತಾನೂ |ಜ್ಞಾನಿಗಮ್ಯ ಗುರುಗೋವಿಂದ ವಿಠಲನಧ್ಯಾನಿಸೆ ಪೊಗುತಲಿ ವೃಂದಾವನವ |ಆನತ ಜನ ಮನದಿಷ್ಟವ ಸಲಿಸುತಮೌನಿವರೇಣ್ಯನೆ ತುಂಗೆಯ ತೀರಗ ೩

೪೫೦
ಬಾರಯ್ಯ ಭಾಗಣ್ಣನೇ | ಯನ್ನಯ ಮನಕೆ ಬಾರಯ್ಯ ಭಾಗಣ್ಣನೆಕರೆ ಕರೆ ಮನದ ವಿಷಾದವ ಕಳೆದು ಶ್ರೀಹರಿಯಲಿ ಮನವಿತ್ತು ಕರುಣಿಪುದಯ್ಯ ಅ.ಪ.
ಗೋಪಾಲ ವಿಠಲನ ಭಜಕನೇ | ಹೇ ಉಮಾಪತಿಸುತ ಬಲುತ್ಯಾಗ ಶೀಲನೆ |ಶಾಪದಿ ನೊಂದ ಶ್ರೀನಿವಾಸಪ್ಪಗೆಆಪಾರಾಯುಷ್ಯವಿತ್ತು ಸಲಹೀದ ೧
ತಡವು ಇನ್ಯಾತಕಯ್ಯಾ | ಗುರುಮಡದಿಯ ಸಲಹಿದ ಹರಿಯಾ |ಒಡಲೊಳು ತೋರಿಸಿ ಸಲಹೆಂದು ಬೇಡುವೆಕಡು ದಯಾನಿಧೆ ಅಡಿಗೆರುಗುವೆನಯ್ಯಾ ೨
ಸಕಲ ಶಾಸ್ತ್ರದಿ ಬಲು ನಿಪುಣಾ | ಮಂತ್ರಸಕಲವ ಚಕ್ರದಿ ರಚಿಸಿದ ಧಿಷಣಾ |ಲಕುಮಿಯರಸ ಗುರು ಗೋವಿಂದ ವಿಠಲನೆಸಕಲಕ್ಕು ದೇವನೆಂದರುಹಿದ ಗುರುವೇ ೩

೧೦೬
ಬಾರೊ ಬಾರೊ | ಕರುಣಾಕರ ರಂಗನೆ ಬಾರೊ ||ತೋರೊ ತೋರೊ ಚರಣಾರ ವಿಂದವನೆ ಪ
ಮಂದರ ಗಿರಿಧರ ಬಾರೋ | ಇಂದಿರೆ ರಮಣನೆ ಬಾರೊಸಿಂಧು ಶಯನ ಅರವಿಂದ ನಯನ | ಎನ್ನ ತಂದೆ ತಾಯಿ ಬಾರೊ ೧
ಸರ್ಪಶಯನ ಬಾರೊ | ಕಂದರ್ಪನಯ್ಯಾ ಬಾರೋಶೂರ್ಪಕರ್ಣ ಪ್ರಿಯ ಭ | ಕ್ತಾರ್ಪಿತಾಲ್ಪಕೊಳ್ವ ಬಾರೋ೨
ದೋಷ ದೂರ ಬಾರೊ | ಮಧ್ವೇಶ ವದಗಿ ಬಾರೋಶ್ರೀಶ ಮುದ್ದು ಮೋಹಾಭಿಧ | ಗುರು ಗೋವಿಂದ ವಿಠ್ಠಲ ಬಾರೋ ೩

೨೧೫
ಬಾಲಕನ ಮೊರೆಕೇಳು | ಸಿರಿ ಸರಸ್ವತಿಯೇ ಪ
ಏಳಲವ ಮಾಡದಲೆ | ಭಕುತಿ ಭಿಕ್ಷೆಯ ನೀಡೇ ಅ.ಪ.
ಹೃದಯ ಬರಿದಾಗಿಹುದು | ಮಧುಮಥನಸೂನಾಮಸುಧೆಯನುಣಿಸುತ ದಿವ್ಯ | ಯದುವರನ ರೂಪಾ |ಸದಯದಲಿ ನಿಲ್ಲಿಸುವುದು | ಹೃದಯ ಗಹ್ವರದಲ್ಲಿವಿಧಿ ಸತಿಯೆ ಹರಿಸುತೆಯೆ | ಬುಧಜನಾನತೆಯೆ ೧
ನಾರಿಮಣಿಯೇ ಕೇಳು | ಮೂರಾರು ವಿಧ ಭಕುತಿವಾರಿಜಾಕ್ಷನ ಪಾದ | ವಾರಿಜ ದೊಳಿರಿಸೀ |ಸಾರ ತತ್ವವ ತಿಳಿಸಿ | ಘೋರ ಭವ ಉತ್ತರಿಸುಮಾರಾರಿ ವಂದಿತಳೆ | ಚಾರುತರ ಗಾತ್ರೇ ೨
ಅರಸಿ ನೋಡಲು ನಿನಗೆ | ಸರಿಯುಂಟೆ ಭುವನ ಮೂ-ರರ ವಳಗೆ ಗುಣಶ್ರೇಣಿ | ವರ ನೀಲವೇಣೀ |ಗುರುವಂತರಾತ್ಮ ಗುರು | ಗೋವಿಂದ ವಿಠ್ಠಲನ |ಪರಿಪರಿಯ ಚರಿತೆಗಳ | ಸ್ಫುರಿಸುವುದು ಸತತಾ ೩

೬೦೪
ಬಾಲಕೃಷ್ಣ ಹರಿ ವಿಠಲ | ಪಾಲಿಸೋ ಇವಳಾ ಪ
ಲೀಲಾ ಮನೋರೂಪ | ಕಾಳಿಂದಿ ರಮಣಾ ಅ.ಪ.
ಈ ದಾಸತ್ವ ದೀಕ್ಷಾ | ಸಾಧಿಸುವುದತಿ ಕಷ್ಟಸಾಧು ಈ ಕನ್ಯೆ ಬಹು | ಭಕ್ತಿಯಲಪೇಕ್ಷೆಗೈದು ಬೇಡಿಹಳಿವಳು | ಭೋಧಿಸಿಹೆ ಅಂಕಿತವಕಾದುಕೋ ದಯವನಧಿ | ಬಾದರಾಯಣನೇ ೧
ಕಾಮಾದಿಗಳ ಕಳೆದು | ನೇಮದಲಿ ಸಾಧನವನೀ ಮಾಡಿ ಮಾಡಿಸೋ | ಕಾಮ ಪಿತ ಹರಿಯೇಸ್ವಾಮಿ ನೀನಲ್ಲದಲೆ | ಅನ್ಯರನು ನಾ ಕಾಣೆಭೀಮ ಭವಾರ್ಣವವ | ದಾಟಿಸಲು ನಾಕಾಣೆ ೨
ಭವವನಧಿ ನವ ಪೋತ | ತವನಾಮ ಸ್ರ‍ಮತಿಯಿತ್ತುಪವನ ಸದನದಿ ನಿನ್ನ | ನಂದನದಲ್ಲಿರಿಸೋಅವರಿವರ ಮನೆ ವಾರ್ತೆ | ಕಿವಿಗೆ ಕೇಳಿಸಬೇಡಭವನದಲಿ ಸಾಧನವ | ಗೈವಂತೆ ಮಾಡೋ ೩
ಸಾಧು ಸಂಗವ ಕೊಟ್ಟು | ನೀ ದಯದಿ ಕಾಪಾಡೋಮೋದ ತೀರ್ಥರ ಮತವ | ಭೋದಿಸೋ ಮುದದೀಮಾಧವನೆ ಕಾಮಿತವ | ಆದರದಿ ಪಾಲಿಸುತಕಾದುಕೋ ಬಿಡದಿವಳ | ಶ್ರೀದ ನರಹರಿಯೇ ೪
ಭಾವ ಭಕ್ತಿಯಲಿಂದ ಹಿರಿಯರ ಸೇವಿಸುವಭಾವುಕಳ ಕೈಪಿಡಿದು | ಕಾಪಾಡೊ ಹರಿಯೇಗೋವು ಕರುವಿನ ಮೊರೆಗೇ | ಧಾವಿಸೀ ಬರುವಂತೆನೀವೊಲಿದು ಪೊರೆಯೊ ಗುರು | ಗೋವಿಂದ ವಿಠಲಾ ೫

೬೦೩
ಬಾಲಕೃಷ್ಣವಿಠಲ | ಕಾಪಾಡೊ ಇವನಾ ಪ
ನೀಲ ನೀರದ ವರ್ಣ | ಕಾಳಿಂದಿ ರಮಣ ಅ.ಪ.
ಸಾದನ ಸುಜೀವಿ ಇವ | ಮೋದ ತೀರ್ಥರ ಮತದಿಹಾದಿಯಲ್ಲಿರುವವನ | ಕಾದುಕೋ ಹರಿಯೇವೇದಾಣಿ ಸನ್ನುತನೆ | ಭೇದ ಪಂಚಕ ತಿಳಿಸಿಮೋದ ಪಡಿಸುವುದಿವನ | ವೇದಾಂತ ವೇದ್ಯ ೧
ವ್ಯಾಪ್ತೋಪಾಸಕ ಜೀವಿ | ಗಿತ್ರಿಹೆನೊ ಅಂಕಿತವಸುಪ್ತೀಶ ಪೇಳ್ದಪರಿ | ಗೋಪ್ತ ಮಹಿಮಾಆಪ್ತ ನಿವ ನೆಂದೆನುತ | ಗೊತ್ತು ಮಾಡಿಹೆ ದೇವದೀಪ್ತ ಮೂರುತಿ ಹರಿಯೆ | ತೃಪ್ತಿ ಪಡಿಸಿವನಾ ೨
ಸ್ವಾಪದಲಿ ಸತ್ಪಂಚ | ಪುಷ್ಪ ಬಕುಳವನಿತ್ತುಶ್ರೀಪ ನಿನ್ನನುಗ್ರಹ | ಪ್ರಾಪಕದಸೂಚ್ಯಾನೀ ಪಾಲಿಸುತ್ತಿವಗೆ | ಬಾಷ್ವಾವಾನಂದುದರಿಸೋಪಾನ ಮುಕ್ತಿಗೆನೆ | ವ್ಯಾಪಾರ ನಿನದೋ ೩
ಉಂಬುಡುವ ಕ್ರಿಯೆ ಸರ್ವ | ಬಿಂಬ ತಾಗೈಯೈ ಪ್ರತಿಬಿಂಬ ಕುಂಟೆಂಬುವಾ | ಸುಜ್ಞಾನವಿತ್ತುಗುಂಭ ಸಾದನದಿ ಹೃದ | ಯಾಂಬರದಿ ನೀತೋರಿಸಂಭ್ರಮದಲಿರಿಸಿವನ | ಅಂಬುಜದಳಾಕ್ಷ ೪
ಎಲ್ಲೆಲ್ಲೂ ನಿನ್ನ ವ್ಯಾಪ್ತಿ | ಸೊಲ್ಲನುಣಿಸುತ ಹರಿಯೆಬಲ್ಲಿದರ ಸಂಗವನು | ಸಲ್ಲಿಸುತ ಇವಗೇಪಲ್ಲಿವಿಸೆ ಸುಜ್ಞಾನ | ಬೇಡ್ವೆ ನಿನ್ನನು ದೇವಚೆಲ್ವ ಹಯಮುಖ ಗುರು | ಗೋವಿಂದ ವಿಠಲಾ ೫

೨೦೧
ಬೃಹತಿ ನಾಮಾ ಪ್ರಾಣ ಕಾಯೊ ಯೆನ್ನಾ ಪ
ಮಹತಿ ಧಾರೀ ಸ್ತುತ್ಯ ಗುರು ಮುಖ್ಯ ಪ್ರಾಣಾ ಅ.ಪ.
ಕೂರ್ಮರೂಪದಿ ಜಗವ | ಪೇರ್ಮೆಯಿಂದಲಿ ಪೊತ್ತೆನಿರ್ಮಮನೆ ಸಲಹೆನ್ನ | ಧರ್ಮಗೋಪ್ತಾ |ಭರ್ಮ ಗರ್ಭನ ಪಿತನ | ಕೂರ್ಮೆ ಎಂತುಂಟೊ ನಿನಗೆನಿರ್ಮಲಾತ್ಮನೆ ಕಳೆಯೊ | ಕರ್ಮ ಬೀಜವನೂ ೧
ಅನಂತ ಜಡ ಜೀವ | ಗಣಗಳನೆ ಧರಿಸುತ್ತಗುಣಾರ್ಣವನು ಸಿರಿ | ಅನ್ನ ನಾಮಕಗೇ |ಅನ್ನ ದನ್ನಾದನಿಗೆ | ಅನ್ನ ನೆನಿಸುತ ನೀನುಲೀನ ಗೈಸುವಿ ಜಗವ | ಮಾನ ನಿಧಿ ಪ್ರಾಣಾ ೨
ವ್ಯಾಪ್ತೋಪವಾಸಿ ನಿ | ರ್ಲಿಪ್ತ ಬಲದೇವ ಸಂ-ತಪ್ತ ಸುಜನರ್ಗೆ | ಆಪ್ತ ಬಂಧೋ |ಗೋಪ್ತ ನಾಮಕ ಗುರು | ಗೋವಿಂದ ವಿಠಲನಪ್ರಾಪ್ತ ಮಾಡಿಸೊ ದೇವ | ದೀಪ್ತ ಮಾರುತಿಯೇ ೩

೩೯೭
ಬೆಳಕಾ ತೋರಿಸೊ ಯೋಗಿಂದ್ರರ ಜನಕಾ |ಮಂತ್ರಾಲಯ ಪುರ ಪಾಲಕ ಪ
ಫಾಲನಯನ ಪ್ರಿಯ | ಪಾಲಾಬ್ಭಿ ಶಾಯಿಯಶೀಲ ಮೂರುತಿ ತೋರೊ | ಮೇಲು ಕರುಣದಿ ಅ.ಪ.
ಭರ್ಮೋದರಸುತ ಸುರಮುನಿಯಿಂದಾ | ಉಪದೇಶದಿಂದಾಕರ್ಮಜ ದೇವರ್ಕಗಳ ಮಹವೃಂದಾ | ಮಧ್ಯದಿ ನಲವಿಂದಾ |ಊರ್ಮಿಳ ಪತಿ ಭ್ರಾತೃ | ಪೇರ್ಮೆಯಿಂದಲಿ ನಿನ್ನನಿರ್ಮಮತಗೆ ಮೆಚ್ಚಿ | ಪರ್ಮನ ಮಾಡಿದ ೧
ಅನಲಾ ಭೃಗು ಪ್ರಸೂತಿಗಳಿಗೇ | ಅವರಿಗೆ ಸಮನಾಗೇಅನಿಲಾನಂದಾವೇಶಿತ ನಾಗೇ | ಬಾಲ್ಹೀಕನಾಗೇ |ನಿನ್ನ ತನುವು ಭೂಸ್ಪರ್ಶವಾಗಲು ಆಕ್ಷಣದಲಿ ಬಿರಿಯಿತು ತತ್ ಕ್ಷಿತಿ ದೇಶವು ೨
ಸಿರಿಗುರು ಗೋವಿಂದ ವಿಠ್ಠಲನಾ | ಭವ್ಯ ಸುಚರಣಾಸರಸಿಜ ಹೃದ್ವಾರಿಜದಲಿ ಪವನಾ | ನಲಿ ಸ್ಥಿತನಾಗಿಹನಾ |ತೋರಿ ಪೊರೆಯೊ | ಕರುಣಾಕರ ಗುರು ಸಾರಿ ಭಜಿಪೆ ತವ | ಚರಣಾಂಬುರುಹವ ೩

೧೦೭
ಬೇಡ ಬಂದೆನೊ ನಾನು | ನಿನ್ನಯ ಕರುಣಕೀಡು ಇಲ್ಲವೊ ಇನ್ನೂ | ಪ
ಬೇಡ ಬಂದೆನೊ ನಾನು | ಜೋಡು ಕುಂಡಲಧಾರಿಗಾಡಿಕಾರನೆ | ಗೂಢ ಮಹಿಮನೆದೂಡದೆಲೆ ಮನ | ಮಾಡಿ ಕಾವುದುಪಾಡುವವರ ಬಿಟ್ಟಗಲ ಶೀಲ | ನಾಡು ದೈವರ ಕಾಲಶ್ರೀಲಕುಮಿಲೋಲಾ | ಸುರ ತರುವ ಪರಿ ಶೀಲಾಮೂಡಲಗಿರಿವಾಸನೆ ಎನ್ನನು | ಕಾಡುವ ಭವ ಕಳೆ ಶ್ರೀ ಹರೇ ಅ.ಪ.
ರುದ್ರಾದಿಸುರ ಸೇವಿತ | ಪಾದಾಬ್ಜಗಳಕದ್ರುಜ ಶಿರ ಘಟ್ಟಿತಭದ್ರ ಮೂರುತಿ ಸ | ಮುದ್ರಜೆ ರಮಣನೆಅದ್ರಿಯುದ್ದರ | ಮುಗ್ಧರಾರ್ತಿಹಕ್ಷುದ್ರ ಸುರಪನ | ವ ಭದ್ರ ಗರ್ವಹರಶುದ್ಧ ನಿಜಾನಂದ ಪೂರ್ಣ | ಶ್ರದ್ಧೆ – ಜನರ ಘ ಚೂರ್ಣನಿರ್ದಯ ನೀನಲ್ಲಘನ | ಸುಪ್ರಬುದ್ಧ ಗುಣಪೂರ್ಣ ||ವೃದ್ದ್ಯಾದಿಗಳೊರ್ಜನೆ ಎನ್ | ಹೃದ್ಗುಹದಲಿ ನಿಂದುದ್ಧರಿಸೊ ದೇವಾ ೧
ಕನಕಾಕ್ಷಹನ ಹಯಮುಖ | ಕಪಿಲಕೋಲಾನಕ ದುಂದುಭಿ ಬಾಲಕ ||ಮನುಸು ತೆಗೆ ತತ್ವ | ಖಣಿಬೋಧಕಪಿಲಾತ್ಮಘನಸು ಕಂಬದಿ ಖಣಿಲು ಖಣಿಲೆಗೆಅನಘ ನರಹರಿ | ತನುಭವಾಕ್ಷಣಕನಕ ಕಶಿಪುವಿನ್ಹನನ | ವನಜಾಸನನ ವಚನಭೃತ್ಯ ನುಡಿದುದನ | ಸತ್ಯವ ಗೈದಾಕ್ಷಣಅಣುಗನು ಹರಿ ಅಂಕದಿ ಕುಳ್ಳಿರೆ | ಋಣ ನಿಧಿ ಆದೆಯೊ ಶಾಂತ ೨
ಪರಿಪರಿಯಲಿ ಪ್ರಾರ್ಥಿಪೆ | ಶ್ರೀಹರಿ ನಿನ್ನಚರಣಾಬ್ಜವನು ಸೇವಿಪೆ |ಪರಮ ಮಂಗಳ ಮೂರ್ತಿ | ಅರವಿಂದನಾಭನೆಶರಣ ಸುರಜನ | ತರುವೆ ಶ್ರೀಹರಿಪರಮ ಸುಖ ಪರಿ | ಪೂರ್ಣ ಮೋಕ್ಷದನಿರವದ್ಯ ಹರಿ ಅರಿಧರ | ದುರಿತೌಘಗಳ ಪರಿಹರಸಿರಿಭೂಮಿ ಲಕುಮಿಧರ | ವರವೀವ ಶ್ರೀಧರಕರಿವರ ವರದ ಪರೋಕ್ಷವ | ಕರುಣಿಸು ಗುರು ಗೋವಿಂದ ವಿಠಲಾ ೩

೧೦೮
ಬೇಡುವೆನು ಶ್ರೀಕೃಷ್ಣ | ಕಾಡುತಿಹ ಭವರೋಗಓಡಿಸುವುದು ತಡೆಯದೇ ಪ
ನಾಡಾಡಿ ದೈವಗಳ | ಬೇಡ್ವನಲ್ಲವೊ ಕೃಷ್ಣನೋಡೆನ್ನ ದಯದಿಂದ | ಸಾರ್ವಭೌಮಾ ಅ.ಪ.
ಬಿಂಬ ತಾ ಕರ್ತೃ ಪ್ರತಿ | ಬಿಂಬರಿಗೆ ಫಲವುಣಿಪವೆಂಬಂಥ ಸುಜ್ಞಾನವ ||ಬಿಂಬ ಸ್ವತಂತ್ರ ಪ್ರತಿ | ಬಿಂಬ ಪರ ತಂತ್ರ ತಮವೆಂಬಂಥ ಸುಸಾಧನ ||ಹಂಬಲಿಪೆ ನಿನ್ನಲ್ಲಿ | ಕಂಬು ಚಕ್ರಾಂಕಿತನೆನಂಬಿಹೆನೊ ನಿನ್ನ ಪದವ ||ಕುಂಭಿಣಿಯ ಪರಿಪಾಲ | ಅಂಭ್ರಣಿಯ ಸುವಿಲೋಲಇಂಬಿಟ್ಟು ವದಗಿಸುತ | ಸಂಭ್ರಮದಿ ಕಾಯೋ | ಕರುಣೀ ೧
ಪ್ರೇರ್ಯ ಪ್ರೇರಕ ನೀನೆ | ಬಾಧ್ಯ ಬಾಧಕ ನೀನೆಸೇವ್ಯ ಸೇವಕನೆ ಹರಿಯೇ ||ವಾಪ್ಯ ವ್ಯಾಪಕ ಸ್ವಾಮಿ | ಪೋಷ್ಯ ಪೋಷಕ ರೂಪಿಕಾರ್ಯ ಕಾರಣ ರೂಪನೇ ||ಭಾವ್ಯನೇ ನಿನ್ನಿಂದ | ಧಾರ್ಯ ಈ ಜಗವೆಲ್ಲವೀರ್ಯ ಔದಾರ್ಯ ಶೌರ್ಯ ||ಪೂಜ್ಯ ಪೂಜಕನೆನಿಪ | ಬಹಿರಂತರಾತ್ಮಕನೆಪ್ರಾಪ್ಯ ಪ್ರಾಪಕ ನಿನ್ನ | ಪ್ರಾಪ್ತಿಯನೆ ತಿಳಿಸೋ | ಸ್ವಾಮಿ ೨
ತಾರತಮ್ಯ ಜ್ಞಾನ ಸದ್ | ವೈರಾಗ್ಯ ಹರಿ ಭಕುತಿಬಾರಿ ಬಾರಿಗೆ ಬೇಡುವೇ ||ಸೂರಿ ಸಂಗವ ನೀಯೊ | ದೂರಗೈ ದುಸ್ಸಂಗಮಾರಪಿತ ದಯಾಪಾಂಗನೆ ||ಕಾರುಣಿಕ ನೀನೆಂದು | ಸಾರಿರುವ ತವಪಾದದೂರ ಮಾಡಲಿ ಬೇಡವೊ ||ಆರು ಕಾಯುವರಿಲ್ಲ | ವಾರೀಜ ಜಾಂಡದೊಳುಧೀರ ಗುರು ಗೋವಿಂದ | ವಿಠಲ ಬಹು ಆಪ್ತಾ | ಗೋಪ್ತಾ ೩

೩೫೭
ಬ್ರಹ್ಮಣ್ಯ ತೀರ್ಥ ಗುರು ರಾಜಾ | ನಿನ್ನನಮ್ಮಿದೆನೊ ಭಾಸ್ಕರ ಸುತೇಜಾ | ಭಾವಿಬೊಮ್ಮ ಮತವರುಹಿ ಮಹೋಜಾ | ಸಲಹೊಪ್ರಮ್ಮೇಯಂಗಳ ನಿಧಿಯ ಸಹೋಜಾ ಪ
ಓದ್ದಾಡುತಿಹೆನೊ ಈ ಭವದೀ | ಸುಖಗದ್ದುಗೆಯನೇರ್ವಂಥ ಹಾದೀ | ತೋರಿಉದ್ಧರಿಸೊ ಬಲು ಕೃಪಾಜಲಧೀ | ಗುರುವೆಶುದ್ಧ ಬುದ್ಧಿಯ ನೀಯೊ ಮುದದೀ ೧
ಯಾತ್ರೆಗಳ ಮಾಡ್ದೆನೆಂಬ | ಬಿಂಕದ್ವಾರ್ತೆಯೊಂದಲ್ಲದಲೆ ಇಂಬ | ಕಾಣೆಕ್ಷೇತ್ರ ಮೂರ್ತಿಯ ಕಾಂಬನೆಂಬ | ಆಶೆಪೂರ್ತಿ ಮಾಡೆನ್ನ ಗುರು ಬಿಂಬ ೨
ಧನವನಿತೆ ವಿಷಯದಲ್ಲೀ | ಬಹಳ ಮನ ಮಾಡಿ ನೊಂದೆನಲ್ಲೀ | ಹರಿಯಮನ ಮುಟ್ಟೊ ಭಜಿಸು ಎಂಬಲ್ಲೀ | ಇನ್ನುಘನ ಜ್ಞಾನ ಭಕುತಿ ಇಲ್ಲಲ್ಲೀ ೩
ಜೀವಗೆಲ್ಲಿಯ ಸ್ವತಂತ್ರಾ | ಹರಿಗುರುತಾವಲ್ಲಿ ಮಾಡುತಿಹ ತಂತ್ರ | ದಿಟವಿದುಜೀವನೇ ಮಾಳ್ಪುನೆಂಬುದೆ ಕುತಂತ್ರ | ತಿಳಿಸೊಭಾವ ಜಾನಯ್ಯನ ಸ್ವತಂತ್ರ ೪
ನಾನು ನನ್ನದು ಎಂಬ ಮಾತ | ಕಳೆದುನೀನು ನೀನೇ ಎಂಬ ಮಂತ್ರ | ಕೊಟ್ಟುಮಾನ ಮೇಯದ ಸಾರ ವ್ರಾತ | ತಿಳಿಸೊಜ್ಞಾನ ನಿಧಿ ಪುರುಷೋತ್ಮ ತಂತ್ರ ೫
ಕಾರಕ ಕ್ರಿಯ ದ್ರವ್ಯವೆನಿಪ | ಭ್ರಮವುಮೂರರಿಂದಲಿ ದೂರ ಮಾಳ್ಪ | ಮಾರ್ಗತೋರಿಸಲಹುವುದು ಯತಿ ಭೂಪ | ತವಪದವಾರಿ ಜತೆ ಈ ನೀಚ ಬೀಳ್ಪ ೬
ತ್ರ್ಯಕ್ಷಾಂಶ ಭೂತರಾದ | ಸನ್ಯಾಸಿಅಕ್ಷೋಭ್ಯ ಕರಜರಾದ | ಅಜೇಯಇಕ್ಷುಚಾಪನ್ನ ಗೆಲಿದ | ಜಯಾರ್ಯಭಿಕ್ಷುವಿನ ಮಾರ್ಗರಾದ೭
ನ್ಯಾಯ ಸುಧೆ ಕೇಳಿ ಮೋದ | ಪಡೆವದಾಯ ತೋರಿದಿ ನಿರ್ವಿವಾದ | ಇನ್ನುಗಾಯನದಿ ಮಹಿಮೆ ಅಗಾಧ | ಪೇಳ್ವಆಯತವ ನೀಯೋ ಸುಭೋಧ ೮
ಬೃಹತೀ ಸಹಸ್ರ ಮಂತ್ರ | ಜಪಿಪಮಹಯೋಗದಾತ ಮಹಾಂತ | ಬೇಡ್ವೆಬೃಹತಿನಾಮಕನು ಎಂಬಂಥ | ಹರಿಯಮಹ ಮಹಿಮೆ ಕಂಡು ಹಿಗ್ವಂಥ ೯
ಸೃಷ್ಟ್ಯಾದಿ ಅಷ್ಟಕಗಳ | ಗೈವಕೃಷ್ಣನ್ನ ಮಹಿಮೆಗಳ | ಕೇಳಿಹೃಷ್ಟರಾಗುವ ಜನಗಳ | ಸಂಗಕೊಟ್ಟುದ್ಧರಿಸೊ ನಮ್ಮಗಳ ೧೦
ಭಾವ ಜಾರಿಯ ತಾತನ | ಗುರುಗೋವಿಂದ ವಿಠಲನ | ಮನದಿಓವಿ ಕಾಂಬ ಸುಹದನಾ | ತೋರಿಕಾವುದೆನ್ನನು ಕೃಪೆಯ ಸದನ ೧೧

ಶ್ರೀ ಬ್ರಹ್ಮದೇವರ ಸ್ತವನ
೧೮೧
ಬ್ರಹ್ಮಾ ಮಾಂ ಪಾಲಯಸುಬ್ರಹ್ಮಣ್ಯ ಪಿತನ ಪಿತನೇ ಪ
ಲೋಕೇಶಾ ಲೋಕನದಾ | ವಾಕು ಲಾಲಿಸೊ ವರಪ್ರದಾ ಶ್ರೀಕರ ಹರಿಯವ ಲೋಕನ ಮಾರ್ಗವನೀ ಕೊಡುತೆನಗೆ ವಿವೇಕವ ತೋರೋ ೧
ಸುಳಿ ನಾಭೀ ಪದುಮ ಭೂ | ಕಲಿಮಲಘ್ನ ಸ್ವಯಂಭೂಅಳಿಕುಲ ದೇಣಿ ವಾಣಿ ಸಂಸೇವ್ಯನೆ |ಅಳಿದ ಅವಿದ್ಯಗಳ ಸಲಹೊ ಸುರಜೇಷ್ಟಾ ೨
ಋಕು ಯಜು ಸಾಮಾ ಅಥರ್ವಾ | ಭೃಕಟಿ ಭವ ತವ ಶರ್ವಾವ್ಯಕುತಿಗೈದು ಮುಖ ನಾಲ್ಕರಿಂದಸುಖಿಪೆ ಚತುರ ಮುಖ ಪರಮೇಷ್ಠೀ ೩
ದಶದಶಾನಂದಾ ಶೃತ ಧೃತೀ | ಯಶ ಪೊಗಳಲಳವೆ ಸಕಲ ಮತೀವಿಷಧರನುತ ಮಮ ಧೀ ಪ್ರಸರಣವಿಷಯ ವಿರಲಿ ತವ ಮನಸಿನೊಳಗೇ ೪
ವಿಧಾತಾ ವಿಶ್ವ ಸೃಜನೇ | ಬುದ್ಧ್ಯಾಭಿಮಾನಿ ವಂದಿತನೆಮಧು ವೈರಿಯ ಪದ ಸೇವಕ ವಿಧಿಮಧುಕರ ತವ ಪದ ಪಲ್ಲವ ತೋರೋ ೫
ವಾಂಛಿತದಾತಾ ವಿರಂಚೀ | ಸಂಚಿತ ದುರಿತ ವಿಷೂಚೀಅಂಚೆ ಗಮನ ಹರಿಮಂಚ ಯೋಗ್ಯನುತ |ಮುಂಚೆ ಮನವ ಹರಿಚಿಂತನೆಲಿರಸೋ ೬
ಋಜುನಿಕರಕ್ಯಧಿಕನೇ | ನಿಜ ವೈಭವದಿ ಮೆರೆವನೇಅಜ ಗುರು ಗೋವಿಂದ ವಿಠಲನ ಪದಬಿಸಜ ಕಾಂಬ ಋಜು ಮಾರ್ಗದಲ್ಲಿಡು ೭

೬೦೫
ಭಕ್ತಾರ್ತಿ ಹರ ವಿಠಲ | ತೆತ್ತಿಗನ ಪಾಲಿಸೋ ಪ
ಮುಕ್ತೀಶ ಕರುಣಾಳು | ಪ್ರಾರ್ಥಿಸುವೆ ನಿನ್ನಾ ಅ.ಪ.
ತರಳನಿವ ವೈರಾಗ್ಯ | ಭರಣ ಭೂಷಿತನಾಗಿಹರಿ ನಿನ್ನ ಚರಣಾಬ್ಜ | ವರದಾಸ್ಯ ಕಾಂಕ್ಷೀಶಿರಿ ಹರಿಯೆ ನೀನಾಗಿ | ಪ್ರೇರಿಸಿದ ಅಂಕಿತವತರಳಗುಪದೇಶಿಸಿಹೇ | ಕರ ಪಿಡಿದು ಸಲಹೋ ೧
ಮೂರ್ಮೂರು ಅರಿಗಳಿಂ | ಪರಿಹರಿಸಿ ನೀನಾಗಿಮೂರೆರೆಡು ಭೇದಗಳ | ಅರಿವನೇ ಇತ್ತೂತರತಮಾತ್ಮಕ ಜ್ಞಾನ | ಕರುಣಿಸುತ ಶ್ರೀಹರಿಯೆಪರಿಹರಿಸೊ ಭವ ತಾಪ | ಕಾರುಣ್ಯನಿಧಿಯೇ ೨
ಯತಿಗಳ ಕಾರುಣ್ಯ | ಪಾತ್ರನಿರುವನುಯೀತಅತಿಶಯದ ಸೇವೆಗೆ | ಕಾತುರನು ಇರುವಾಮತಿಯಿತ್ತುಸತ್ಪಥಾ | ಪಥರಲ್ಲಿ ನಡಿಸಿವನರತಿಯು ಶ್ರೀ ಹರಿದಾಸ | ಶತ ಪತ್ರದೊಳಗೆ ೩
ಮಧ್ವಗುರುಗಳ ಪಾದ | ಅದ್ದೂರಿಯಲಿ ಭಜಿಪಶುದ್ಧ ಬುದ್ಧಿಯನಿತ್ತು | ಉದ್ಧರಿಸೊ ಹರಿಯೇ |ಅದ್ವೈತ ತ್ರಯದರಿಪು | ಬುದ್ಧಿಗೇ ಸಿಲುಕಲೀಶ್ರದ್ಧಾಳುವಿನ ಸಲಹೋ | ಶಬ್ಧ ಗೋಚರನೇ ೪
ಕಾಮದಾನತಜನವ | ಶ್ರೀ ವರನೆ ಸರ್ವೇಶ ನೀವೊಲಿಯದಿನ್ನಿಲ್ಲ | ಪಾವನ್ನ ಮೂರ್ತೇಭಾವ ಕೋವಿಯುವ ದೇವ | ಭಾವದಲಿ ಮೈದೊಲೊಗೋವಿಂದಾಂಪತಿ ಗುರೂ | ಗೋವಿಂದ ವಿಠಲಾ ೫

೨೨೩
ಭಕ್ತಿಗಭಿಮಾನಿ ಭಾರತೀದೇವಿ ಪ
ಶಕ್ತಿ ಕೊಟ್ಟು ಶುದ್ಧ | ಭಕ್ತಿ ಮಾರ್ಗದಲಿರಿಸೇ ಅ.ಪ.
ಕೃತ್ತಿವಾಸನ ತಾಯೆ | ಶಕ್ತಿ ನಿರ್ಭಯ ವೀಯೆಎತ್ತು ಭವದಿಂದೆನ್ನ | ಇತ್ತು ಜ್ಞಾನಾನ್ನ |ಉತ್ತಮೋತ್ತಮ ಹರಿಯ | ಚಿಂತೆ ಮಾಡುವ ಪರಿಯಬಿತ್ತರಿಸಿ ಮನದಲ್ಲಿ | ಹರಿಯ ತೋರಲ್ಲೀ ೧
ವೇದಾಣಿ ಸತಿ ನಿನ್ನ | ಪಾದಕಮಲಗಳನ್ನಸಾಧು ಸಮ್ಮತವೆನಿಪ | ಮಾರ್ಗದಲಿ ಭಜಿಪ |ಹಾದಿ ತೋರಿಸು ತಾಯಿ | ವೆಸೂೀದ ಮುನಿ ಮತದಾಯಿಕಾದು ಕೋ ನೀ ನಿನ್ನ | ಕಂದ ನೆಂದೆನ್ನ ೨
ಭಾವುಕನ ಮಾಡೆನ್ನ | ಭಾವದಲಿ ತೋರಿನ್ನಭಾವಿ ಬೊಮ್ಮನ ರಾಣಿ | ಅಪರೋಕ್ಷ ಮಾನಿ |ಭಾವ ಜನಯ್ಯ ಗುರು | ಗೋವಿಂದ ವಿಠಲನಪಾವನವು ಪದ ದ್ವಂದ್ವ | ತೋರು ಆನಂದ ೩

೨೯೫
ಭದ್ರಾಣಿ | ಮನೊ ಮಾನಿ ಪ
ಭದ್ರಗತಿಗೆ ಬಹು | ಭದ್ರ ಸುಸಾಧನವೃದ್ಧಿಯ ಗೈವುದ | ಭದ್ರವ ಕಳೆದು ಅ.ಪ.
ಚಂಚಲ ಮನ ನಿ | ಶ್ಚಂಚಲೆನಿಸಿ ನಿ-ಷ್ಕಿಂಚನ ನೆನಿಪುದು | ಪಂಚ ವಕ್ತ್ರ ಸತಿ೧
ಚಂಪಕ ನಾಸಿಕೆ | ಪಂಪಾಭಿಧೆ ಹರಿನೋಂಪಿಗೈವ ಮತಿ | ಗಿಂಪನು ಪಾಲಿಸು ೨
ದೋಷ ದೂರ ಹರಿ | ಕೇಶವನಲಿ ಮನಮೀಸಲೆನಿಸು ಹೇ | ವಾಸವ ಸನ್ನುತೆ ೩
ಮಂಗಳ ಮೃಡನಂತ | ರಂಗಳೆ ಗೌರಿಯೆಹಿಂಗಿಸುಯೆನ್ನ ಅ | ಘಂಗಳ ನಿಚಯವ ೪
ಜಲಧಿಶಯನ ಗುರು | ಗೋವಿಂದ ವಿಠಲನಒಡಲೊಳು ಜಡಜದಿ | ಬಿಡದಲೆ ತೋರಿಸು ೫

೨೬೧
ಭದ್ರಾಣಿ ಪತಿ ಎನಿಪ | ರುದ್ರದೇವನೆ ನಮೋಕಾದ್ರವೇಯನ ಪದ | ಭದ್ರವೋ ನಿನಗೆ ಪ
ವಿರೂಪಾಕ್ಷ ಅಧ್ಯಕ್ಷ | ಹರಿ ಪಕ್ಷ ರುದ್ರಾಕ್ಷಹರ್ಯಕ್ಷ ಹನದಕ್ಷ | ಕರುಣಾ ಕಟಾಕ್ಷನಿಲಕ್ಷ ನಿಟಿಲಾಕ್ಷ | ಶ್ಮಶಾನದಲಿ ದೀಕ್ಷಅಕ್ಷಾರಿ ಪದದೀಕ್ಷ | ಪಕ್ಷಿವಹ ಕೃಪೆ ಈಕ್ಷಾ ೧
ವೃಷನಾಭ ವಶದರ್ಪ | ವೃಷ ಋಷಭ ವೃಷಾಂಕವೃಷಶೃಂಗ ವೃಷದ್ವಜನೆ | ವೃಷಭೇಕ್ಷಣಾ |ವೃಷ ಭೂತ ವೃಷ ಶರನೆ | ವೃಷಪತಿ ವೃಷಾ ವರ್ತವೃಷಾಯುಧ ವೃಷೇಶ್ವರನೆ | ವೃಷಭೋದರಪಾಹಿ೨
ದೂರ್ವಾಸ ಭೂವನೇಶ | ಸುರಪೇಶ ಉಗ್ರೇಶಗೌರೀಶ ಪ್ರಮಥೇಶ | ಅವ್ಯಕ್ತ ಕೇಶಾ |ಚೀರ ವಾಸ ಸುವಾಸ ಸ್ವರ್ಣಕೇಶ ಭೂತೇಶಈರಪತಿ ಗುರು ಗೋವಿಂದ | ವಿಠಲ ಭಜಕೇಶ ೩

೨೯೪
ಭದ್ರಾಣಿ ಪರಿಪಾಲಿಸು ನೀಯೆನ್ನ | ನಾ ಬೇಡುವೆ ನಿನ್ನ ಪ
ಅದ್ರಿಯ ತನುಜೆ ಸಮುದ್ರಜ ಶಿರಧರನರ್ಧಾಂಗಿಯೆ ನೀ ತಿದ್ದುತಲೆನ್ನ ಮನ ಅ.ಪ.
ಆಡೂವ ನುಡಿಗಳೊ ಸರ್ವಾ | ಮಾಡು ಶ್ರೀ ಹರಿ ಪರವಾಬೇಡುವೆನಿದನೊಂದನೆ ಶರ್ವಾ | ಮಡದಿಯೆ ಮನ್ಮನವಾ |ಧೃಡ ಭಕುತಿಲಿ ಹರಿ | ಅಡಿಯುಗ ವನಜದಿಇಡಿಸಿ ಎನ್ನ ಪೊರೆ ಮೃಡ ಪ್ರಿಯೆ ಪ್ರಾರ್ಥಿಪೆ ೧
ತತುವಾಹಂಕಾರಲಿ ನೆಲಸಿ | ಪತಿಯಾಜ್ಞೆಯ ಸಲಿಸೀಹಿತರೂ ಅಹಿತಾರೊಳು ನೆಲಸೀ | ಕೃತಿ ದ್ವಿವಿಧಾಚರಿಸೀ |ಕೃತಕಾರ್ಯಳೆ ತವ | ತತುವವ ವ್ಯಾಪಿಸಿಪತಿಯೊಳಗಿಹ ಸಿರಿ | ಪತಿ ಪದಕರ್ಪಿಸೆ ೨
ಸುರಪ ಗೌರೀಪ ಅಹಿ ಖಗಪ | ಬ್ರಹ್ಮೇಶರ ಯೋಜಿಪ ಸಾರುವ ಜಗ ಕಾರ್ಯಗಳ ನಡೆಪ | ಸರ್ವೋತ್ತಮ ನೆನಿಪಗುರು ಗೋವಿಂದ ವಿಠಲನ ದಹರಾಂಬರದಲಿಪರಿಕಿಪ ಯೋಗವ ಕರುಣಿಸು ಮಾತೆ ೩

೪೪೮
ಭಾಗಣ್ಣಾ | ಗುರು ನಿನ್ನ ಪೊಗಳುವೆನಯ್ಯಾಕರುಣದಿ ಪಿಡಿಕೈಯ್ಯಾ | ಮುರಹರ ಕುವರಯ್ಯಾ ಪ
ನಗಧರ ಮೊಮ್ಮಗ ಮಗನೀ ಯೆನ್ನನುಖಗವರ ವಹ ಪ್ರಿಯ ಪಾಲಿಸೊ ಜೀಯಾ ಅ.ಪ.
ಜ್ಞಾನ ಸದ್ಭಕ್ತಿ ವಿರಕ್ತಿಯ ಮೂರ್ತೀ | ಸಾರುವೆ ತವಕೀರ್ತೀಗಾನ ಲೋಲನ ಸೇವಿಸೆ ಜಾಗರ್ತೀ | ಮಾಡುವೆ ಶರಣಾರ್ತೀ |ಘನ್ನ ಮಹಿಮ ಕಾರುಣ್ಯ ಮೂರುತೀಎನ್ನವ ಗುಣ ಮರೆದು ಸಲಹೊ ವಿಶ್ವಂಭರ ೧
ಕಾಲಜ್ಞಾ ಕಲಿಕಲ್ಮಷವನೆ ಕಳೆಯೊ | ಮನದೋಳು ನೀಸುಳಿಯೋಆಲಸ್ಯಾವ್ಯಾತಕೊ ನೀ ಪೇಳೋ | ಭಕುತಗೆ ನೀನೊಲಿಯೋ |ಅಲವ ಭೋಧರ ಮತ ಜಲಧಿ ವಿಹಾರನೆಸುಲಭದಿ ಸಾಧನ ಪಾಲಿಸೋ ಜೀಯ ೨
ಅರುಹಲೇತಕೊ ಎನದುರಿತ ಸಮೂಹ | ನೀನಲ್ಲವೆ ದುರಿತಹರತುರು ತನ್ನ ಕರುವನೆ ಮರೆವುದೆ ಆಹಾ | ಪಾಲಿಸು ತವನೇಹಾಸಿರಿಪತಿ ಗುರುಗೋವಿಂದ ವಿಠಲನಚರಣಾಂಬುಜದೊಳು ನಿಲಿಸೆಲೊ ಮನವಾ ೩

೨೨೪
ಭಾರತಿ ವಂದಿತೆ ಮನಸಿಜ ಮಾತೇ |ಕೋರುವೆ ತವಪದ ವನಜ ವಿಖ್ಯಾತೇ ಪ
ಕೀರುತಿ ನಿನ್ನದು ತ್ರೈಭುವಿ ವ್ಯಾಪ್ತೇವಾರೆ ನೋಟದಿ ಪದವಿ ಪ್ರದಾತೆವಾರಿಧಿ ಶಯ್ಯಗೆ ನೀನು ಸುಪ್ರೀತೆತೋರು ಪತಿಯ ಪದ ನೀರಜ ಜಾತೆ ಅ.ಪ.
ಹರಿ ಮಡದಿಯೆ ಪತಿ | ನಿರುತ ಸೇವೆರತಿಪರಿ ಪರಿ ವಿಧ ಗತಿ | ಅರುಹಲು ಮನ್ಮತಿಬರಡಾಗೊದು ಸತಿ | ತೆರೆಗೊಳಗಣ್ಣತಿಕರುಣವ ತೋರೆ ಕೃತಿ | ಪ್ರದ್ಯುಮ್ನನ ಸತಿ ೧
ಅಗಣಿತ ಮಹಿಮಳೆ ಖಗ ಗಮನನ ಪ್ರಿಯೆಬಗೆ ಬಗೆ ಹರಿಲೀಲೆ | ಲಗು ಬಗೆಯಲಿ ಪೇಳೆಸುಗುಣ ಮಣಿಯಮಾಲೆ | ಮಿಗಿಲು ಪೇಳೆ ಸುಶೀಲೆ ೨
ಚಿನುಮಯ ಪ್ರಕೃತಿಯೆ | ಅಣು ಮಹದ್ರೂಪಿಯೆಇನಯನಗನುಸಾರಿ | ಕುಣಿಯುವೆ ಸುಂದರಿ |ಪ್ರಣತರ ಪಾಲ ಗುರು | ಗೋವಿಂದ ವಿಠಲನಗುಣಮಣಿ ಮಾಲೆ ಸದಾ | ಎಣಿಸುವೆ ಮೋದಾ ೩

೨೨೫
ಭಾರತೀ ನೀ ಪರಿಪಾಲಿಸೇ ಪ
ನಾರಿ ಶಿರೋಮಣಿ | ನಿರುತ ನಿನ್ನಯ ಪದವಾರಿಜ ಭಕುತಿಯ | ಗಾರು ಮಾಡದೆ ಕೊಡು ಅ.ಪ.
ಉರು ವಿಕ್ರಮನಲಿ | ವರ ಭಕ್ತ್ಯುದಯಕೆಪರಮ ಕಾರಣಳೆಂ | ದರಿತು ನಿನ್ನ ಪದ |ಸರಸಿಜ ಭಜಿಸುವೆ | ಪರಮ ಕೃಪಾಕರೆತ್ವರ ಹರಿ ಭಕುತಿಯ | ಪಾರಿಪಾಲಿಪುದು ೧
ವಿಪರೀತದ ಮತಿ | ಅಪಹರಿಸುತ ಬಲುಕೃಪೆಗೈದೆನ್ನಲಿ | ಅಪ ವರ್ಗದ ಹರಿವಿಪಗಮನನ ಸ | ದ್ದಪರೋಕ್ಷವ ಕೊಡುವಿಪ ಅಹಿಪತಿ ನುತೆ | ಅಪ್ರತಿ ಮಾತೆಯೆ ೨
ಭೂವಲಯದಿ ನಿನಗಾವರಿಲ್ಲ ಸಮನೀ ವೊಲಿಯದಲಿ | ನಿನ್ನಾವರ ಕಾಣೆನುಮಾ ವಿನೋದಿ ಗುರು | ಗೋವಿಂದ ವಿಠಲನಪಾವನ ಪದವನು | ತೀವರ ತೋರಿಸು ೩

೬೦೬
ಭಾರತೀ ಪತಿನುತ ವಿಠಲ ನೀನಿವಳ ಉದ್ಧಾರ ಮಾಡುವುದು ಹರಿಯೇ ಪ
ತಾರಕನು ನಿನಗನ್ಯ ಉಂಟೇ ಈರೇಳು ಲೋಕದಲಿ ಧೊರೆಯೇ ಅ.ಪ.
ಜನ್ಮಜನ್ಮದಲಿ ಬಲುನೊಂದು ಸತ್ಪುಣ್ಯಗಳನೇ ಮಾಡಿಜನ್ಮಪೊಂದುತಲಿ ಸತ್ಕುಲದಿ ಸನ್ಮತದವನ ಕೈಯ ಪಿಡಿದು |ಸನ್ಮಧ್ವಮತ ದೀಕ್ಷೆಗಳ – ಒಮ್ಮನದಿ ತಾಳುತ್ತನಿಮ್ಮಡಿಯ ನಾಶ್ರಯಿಸಿ ಬಂದಿಹಳ ಸಲಹುವುದು ೧
ತರತಮ ಜ್ಞಾನದಲಿ – ಉರುತರೋತ್ಸುಕತೆಯನುನಿರತ ಹರಿಗುರುಗಳಲಿ ಉರುತರದ ಭಕ್ತಿಯನೂ |ಹಿರಿಯರನು ವಿನಯದಿಂ ಪರಿಚರಿಪ ಮತಿಯನ್ನುಕರುಣಿಸೀ ಸಲಹಯ್ಯ ಮರುತಾಂತರಾತ್ಮಾ ೨
ಪಂಚಭೇಧದ ಜ್ಞಾನ ಸಂಚಿಂತನೆಯನೇ ಕೊಟ್ಟುಮಿಂಚಿನಂದದಿ ತೋರೊ – ಹೃತ್ಪಂಕಜನಲೀಅಂಚೆವಹಪಿತ ನಿನ್ನ ಪದಕಮಲ ಭಜಿಪಳಿಗೆವಾಂಛಿತಾರ್ಥದನಾಗಿ – ಸಲಹ ಬೇಕಿವಳಾ ೩
ಪತಿಯೆ ಪರದೈವವೆಂಬತುಳ ಮಾರ್ಗದಲಿವಳಪತಿಕರಿಸು ಶ್ರೀಹರಿಯೆ – ಭವಕರಿಗೆ ಹರಿಯೇ |ಹಿತವಹಿತವೆರಡಕ್ಕು ಪತಿ ನೀನೆ ಎಂಬಂಥಮತಿಯಿತ್ತು ಭವಗಳನ ಉತ್ತರಿಸು ಹರಿಯೇ ೪
ನಿನ್ನ ಪದ ಕಮಲದಲಿ ಜ್ಞಾನಭಕುತಿಗಳಿತ್ತುನನ್ನೆ ಯಿಂದಿವಳ ಚೆನ್ನಾಗಿ ಸಲಹೊ ಹರಿಯೇ |ಸನ್ನುತಿಸಿ ಪ್ರಾರ್ಥಿಸುವೆ – ಮನ್ನಿಸೆನ ಬಿನ್ನಪವಘನ್ನ ಮಹಿಮನೆ ಗುರು ಗೋವಿಂದ ವಿಠಲಾ ೫

೨೦೨
ಭಾರತೀಯ ರಮಣ ಪ್ರಾಣಾ | ಜಗಭಾರ ನಿನ್ನದಯ್ಯ ಪವನಾ ಪ
ಘೋರದುರಿತ ಅಟವಿ ದಹನಾ | ಮಾರನಯ್ಯನ ತೋರೊ ಕರುಣ ಅ.ಪ.
ದುರಿತಾಂಬು ನಿಧಿಯ ಘಟಜ | ಮೊರೆ ಹೊಕ್ಕೆ ಪಾದ ವನಜಮುರವೈರಿ ಪಾದ ಬಿಸಜ | ತೋರಯ್ಯ ಧರ್ಮನನುಜ ||ವಾರಿಧಿ ಭವ | ತಾರಿಸೆ ದಯ | ವಾರಿಧಿ ತವ | ಕಾರುಣ್ಯವಕೋರುವೆ ಮುರ | ವೈರಿಯ ಪದ | ತೋರುತ ಉ | ದ್ಧಾರವಗೈ ೧
ಶ್ವಾಸ ಜಪಗಳ ಮಾಡುತಾ | ಈ ಸಮಸ್ತ ಜಗತು ಭರಿತಾ |ಈಶಾದಿ ದಿವಿಜ ವಿನುತಾ | ನೀ ಸಲಹೊ ಸಕಲ ವ್ಯಾಪ್ತಾ ||ವೀಶ ಶೇಷ | ಈಶಾ ಸುರ | ಪೇಶಾ ರವಿ | ಭಾಸಾ ಸ್ವಪ್ರಕಾಶಕ ಜಗ | ಪೋಷಕ ಚಿ | ತ್ತಾಕಾಶದಿ | ಭಾಸಿಸನಿಲ ೨
ಗುರುವರೇಣ್ಯ ರವಿಜ ಕಪಿಪ | ದ್ರುಪದೀಗೆ ತಂದೆ ಪುಷ್ಪ |ಗುರು ಗೋವಿಂದ ವಿಠಲ ರೂಪ | ತೋರೆಸೂೀ ಹರಿಪದಾಬ್ಜ ಮಧುಪ ||ಅರಿಗಳ ಸಂ | ಹರಿಸಲು ಕರಿ | ತುರಗಾಯುಧ | ಸರಿಯಿಲ್ಲವುಮರುತನಿಗೆಂ | ದೊರೆವುದು ಶೃತಿ | ಪರಿ ಪರಿಯಲಿ | ನಿರಂತರ ೩

೬೦೭
ಭಾರತೀಶ ಕಾಂತ ವಿಠಲ | ಪೊರೆಯ ಬೇಕಿವಳ |ಭೂರಿ ದೈವರ ಗಂಡ | ಮರುತಾಂತರಾತ್ಮಾ ಅ.ಪ.
ಯೇಸು ಜನ್ಮದ ಸುಕೃತ | ರಾಶಿ ಒದಗಲು ಈಗದಾಸ ಪಂಥಕೆ ಮನವ | ಆಶಿಸುತ್ತಿಹಳೋಆಶುಗತಿ ಮತ ಪೊಂದಿ | ದೋಷಗಳ ಕಳೆದಿಹಳಕೇಶವನೆ ಪೊರೆಯೆಂದು | ಲೇಸು ಬಿನ್ನವಿಪೇ ೧
ಮೂರೆರಡು ಭೇದಗಳು | ತಾರತಮ್ಯವ ತಿಳುಹಿಆರು ಮೂರೂಭಕ್ತಿ | ವೈರಾಗ್ಯ ಭಾಗ್ಯಸಾರ ತತ್ವ ಜ್ಞಾನ | ದರಿವ ಇವಳಿಗೆ ಇತ್ತುಪಾರುಗೈ ಭವದ ಕೂ | ಪಾರ ಶ್ರೀ ಹರಿಯೇ ೨
ಲೌಕಿಕ ಸುಸಖ್ಯ | ವೈದೀಕವೆಂದೆನಿಸುತ್ತಕಾಕು ಸಂಗವ ಕೊಡದೆ | ನೀ ಕೊಟ್ಟು ಸತ್ಸಂಗಪ್ರಾಕ್ಕು ಕರ್ಮವ ಕಳೆದು | ಸಾಕ ಬೇಕೆಂದಿವಳಮಾಕಳತ್ರನೆ ಹರಿಯೆ | ನಾಕೇಳ್ವೆ ವರವಾ ೩
ಪತಿಯೆ ಪರದೈವ ವೆಂ | ಬತಿ ಶಯದ ಮನೆಯಿತ್ತುಹಿತದಿ ಹರಿ ಗುರು ಸೇವೆ | ಸತತ ಒದಗಿಸುತಗತಿಗೋತ್ರ ನೀನೆಂಬ | ಮತಿಯನೇ ಕರುಣಿಸುತಕ್ಷಿತಿಯೊಳಿವಳನು ಮೆರೆಸೊ | ಪತಿತ ಪಾವನ್ನಾ ೪
ದೇವ ಹೂತಿಯ ಪೊರೆದ | ಆವ ಕಪಿಲಾತ್ಮಕನೆಭಾವದಲಿ ಮೈದೋರಿ | ನೀವೊಲಿಯಲೆಂದೂಭಾವದಲಿ ಬಿನ್ನವಿಪೆ | ಬಾವಜ್ಞ ಸಲಿಸುವುದುದೇವ ದೇವನೆ ಗುರೂ | ಗೋವಿಂದ ವಿಠಲಾ ೫

೪೩೦
ಭಾಸಿಸುತಿಹ | ದಾಸರ ನೋಡಿ || ವ್ಯಾಸ ತೀರ್ಥರ ದಾಸರು ಪ
ಧೃತ :ಈ ಸಮಸ್ತ ಜಗದಾಶಯ ರಂಜಿಸಿದಾಸ ಪುರಂದರ ಕರ್ಮಜರ ಗುರು ಅ.ಪ.
ಚಾರು ಚರಿತ ಚರಿತ್ರಾ | ಅಕಳಂಕ ದೇವ ದೇವಾ ||ಕಾರುಣೀಕ ಸಾರಸಾಕ್ಷ | ಶ್ರೀ ರಮೇಶನ ಚಾರು ಚರಣ |ಧೃತ :ನೀರಜ ಹೃತ್ಸರೋರುಹದೊಳಾರಾಧಿಸ್ಯಪಾರಸುಖದಿ ಸಮೀರ ಮತ ಪ್ರಸಾರವ ಪಡಿಸೀ ೧
ದಾಸಕೂಟ ಸನ್ಮೌಳಿಮಣಿ ವಿದಿತ ಜ್ಞಾನೀನ್ಯಾಸ ಕೋವಿದ ವ್ಯಾಸತೀರ್ಥ | ದಾಸ ಸುರಪ ದಾಸನೆನಿಸಿ ||ಧೃತ :ದಾಸಪಂಥ ಪೋಷಿಸೀದ ದಾಸವರ್ಯಆ ಸಮೀರ ಶಾಸಿತ ಗೌರೀಶನ ಬಳಿವಾಸಿಸಿ ೨
ನಾಕಪತಿಯ ನಾಮದಾಸ | ಶತ ಚತುರ ವರ್ಷಲೋಕ ಲೋಕ ಪ್ರಕಾಶಿಸಿ | ಆಕೆವಾಳರ ವಾಕಿನಲ್ಲಿ |ಧೃತ :ಸಾಕು ಸಾಕನೆ ಪ್ರಾಕೃತ ಗೀತೆಯ ಝೇಂಕರಿಸಿದಶುಕ ಪಿತ ಗುರುಗೋವಿಂದ ವಿಠಲ ಸ್ವೀಕೃತ ಭಕುತ ೩

೨೨೬
ಭಿಕ್ಷಾವ ನೀಡ್ವುದು ತಾಕ್ರ್ಯನ ಮಾತೇ | ಹರಿ ಭಕುತಿ ಎಂಬಭಿಕ್ಷಾವ ನೀಡ್ವುದು ತಾಕ್ರ್ಯನ ಮಾತೇ ಪ
ತ್ರ್ಯಕ್ಷಸು ಸನ್ನುತೆ | ಮೋಕ್ಷದ ಶ್ರೀಹರಿಶಿಕ್ಷಿಸುಭಕುತಿಯ | ಪಕ್ಷಿಯ ಮಾತೇ ಅ.ಪ.
ವಿಷಯಂಗಳ ಆಸೆಯನೇ ಬಿಡಿಸು | ವಿಷ ಭಾವವ ಕೊಡಿಸುನಿಶಿಯಾಚರರ | ವಶವನೆ ಬಿಡಿಸು | ತತುವರೊಲಿಮೆ ಕೊಡಿಸುವಿಷಧಿಜೆ ಪತಿ ಸಿರಿ | ವಸುದೇವ ಸುತನನಯಶವ ನುಡಿ ಪದ | ಬಿಸಜದಿ ಭಕುತಿಯ ೧
ಜ್ಞಾನ ಭಕುತಿ ವೈರಾಗ್ಯದ ಮೂರ್ತಿ | ಕೇಳ್ವುದು ಶರಣಾರ್ತಿಮಾನಾಭಿಮಾನ ನಿನ್ನದು ಗಾಯತ್ರಿ | ನರಹರಿ ಗುರು ಭಕ್ತಿ ||ಕ್ಷೋಣಿಯೊಳಗೆ ಸ | ತ್ತ್ರಾಣಿ ಭಾರತಿಯೆಮಾಣದೆನಗೆ ಜಗ | ತ್ರಾಣನ ಭಕುತಿಯ ೨
ಮೂರೇಳು ಸಾಸಿರದ ಆರ್ನೂರೂ | ಜಪಗಳ ದಿನದಿನವೂವಾರೀಜ ಜಾಂಡವ ಮೂರ್ಬಗೆಯರಲೀ | ಗೈವನ ಸತಿ ಕಾಳೀ||ಸಾರತ ಮನು ಗುರು | ಗೋವಿಂದ ವಿಠಲನಚಾರು ಚರಣ ಸ | ದ್ಭಕುತಿಯು ಎಂಬ ೩

೬೦೮
ಭೀಮಾ ತಟಗ ವಿಠಲ | ಕಾಪಾಡೊ ಇವಳಾ ಪ
ಸಾಮ ಸನ್ನುತ ದೇವಾ | ಪ್ರಾರ್ಥಿಸುವೆ ಹರಿಯೇ ಅ.ಪ.
ಮರುತದಲ್ಲಿಹಳು | ತರುಣಿ ಬಹು ಭಕ್ತಿಯಲಿಹರಿದಾಸ್ಯ ಕುಂಕ್ಷಿಪಳು | ಕರಿವರದ ದೇವಾ |ಗುರುಕರುಣ ಸ್ವಪ್ನದಲಿ | ಹರಿದಾಗಿ ಪಡೆದಿಹಳುತರಳೆಜ್ರಪತಿ ವರದ | ಪರಿಪಾಲಿಸಿವಳಾ ೧
ಪಂಚ ಪಂಚಿಕೆಯ ಪ್ರ | ಪಂಚ ಸತ್ಯತ್ವವನುಪಂಚ ಭೇದಗಳರುಹಿ | ಕಾಪಾಡೊ ಹರಿಯೇ |ಅಂಚೆ ವಹ ಪಿತನೆ ಸ | ತ್ತರತ ಮತ ತಿಳಿಸುತ್ತಪಂಚರೂಪಾತ್ಮಕನೆ | ಕೈಪಿಡಿಯೊ ಇವಳಾ ೨
ಭೋಗಗಳ ಉಂಬಾಗ | ಭೋಗಿರಥೀ ಪಿತನಜಾಗುಮಾಡದೆ ಸ್ಮರಿಪ | ಭಾಗ್ಯವನೆ ಕೊಟ್ಟೂ |ಆಗುಹೋಗುಗಳೆಂಬ | ದ್ವಂದ್ವ ಸಹನೆಯನಿತ್ತುನೀಗೊ ಭವಸಾಗರವ | ಕಾರುಣ್ಯಮೂರ್ತೇ ೩
ಪತಿಯೇ ಪರದೈವವೆಂ | ಬತುಳ ಶುಭಮತಿಯಿತ್ತುಗತಿಗೋತ್ರ ನೀನೆಂದು | ಸತತ ಚಿಂತಿಸುತಾ |ಮತಿವರಾಂ ವರರಂಘ್ರಿ | ಶತಪತ್ರಸೇವೆಯನುರತಿಯಿಂದ ಗೈವಂಥ | ಮತಿನೀಡೊ ಹರಿಯೇ೪
ಸಂತಾನ ಸಂಪತ್ತು | ಶಾಂತಿಪತಿ ನೀನಿತ್ತುಕಾಂತುಪಿತ ಸೇವೆನೈ | ರಂತರದಿ ಗೈವಾ |ಪಂಥದಲಿ ಇರಿಸು ಗುರು | ಗೋವಿಂದ ವಿಠ್ಠಲನೆಇಂತಪ್ಪ ಪ್ರಾರ್ಥನೆಯ | ಸಲಿಸೋ ಶ್ರೀ ಹರಿಯೇ೫

೬೦೯
ಭೀಮಾತಟ ಹರಿ ವಿಠಲ | ಪೊರೆಯ ಬೇಕಿವಳಾ ಪ
ಸಾಮಸನ್ನುತ ಹರಿಯೆ | ನಿಸ್ಸೀಮ ಮಹಿಮಾ ಅ.ಪ.
ಗುರು ಕರುಣ ಇವಳಿಗಿದೆ | ಮರಳಿ ಹರಿ ಗುರುಭಕ್ತಿನೆರೆ ವೃದ್ಧಿ ಗೈಸುತಲಿ | ಪೊರೆಯೊ ಇವಳಾ |ಕರುಣನಿಧಿ ನೀನೆಂದು | ಆರು ಮೊರೆಯ ನಿಡುವೆನಾಪರಿ ಪರಿಯಲಿಂದಿವಳ | ಕೈ ಪಿಡಿಯೆ ಹರಿಯೇ ೧
ಸಜ್ಜನರ ಸಂಗ ಕೊಡು | ದುರ್ಜನರ ದೂರಿರಿಸುಅರ್ಜುನನ ಸಾರಥಿಯೆ | ಮೂರ್ಜಗಕೆ ಒಡೆಯಾ |ಬೊಜ್ಜೆಯಲಿ ಬ್ರಹ್ಮಾಂಡ | ಸಜ್ಜು ಗೊಳಿಸಿಹ ಹರಿಯೆ |ಅರ್ಜುನಾಗ್ರಜ ವಂದ್ಯ | ಸಜ್ಜನರ ಪಾಲಾ ೨
ತರತಮದ ಸುಜ್ಞಾನ | ಹರಿಯ ಸರ್ವೋತ್ತಮತೆಕರುಣಿಸೋ ಇವಳೀಗೆ | ಪರಮ ಪಾವನ್ನಾ |ಗರುಡ ಗಮನನೆ ಗುರೂ | ಗೋವಿಂದ ವಿಠ್ಠಲನೆಮೊರೆಯ ಲಾಲಿಸಿ ಇವಳ | ಪೊರೆಯೊ ಶ್ರೀ ಹರಿಯೇ ೩

೬೧೦
ಭೂತ ರಾಜನುತ ವಿಠಲ | ಕಾಪಾಡೊ ಇವನಾ ಪ
ದಾತ ನೀನಲ್ಲದಲೆ | ಕಾವರಾರಿಹರೋ ಅ.ಪ.
ಗುರು ರೂಪಿ ತೈಜಸನು | ನೆರವಾಗಿ ಸ್ವಾಪದಲಿವರಸು ಉಪದೇಶವನು | ಇತ್ತು ಪೊರೆದಿಹನೋ |ಮರಳಿ ಇವ ಲಾತವ್ಯ | ಗುರುರಾಜ ಭಕ್ತನಿಹಪೊರೆಯ ಬೇಕಿವನೆನುತ | ಪ್ರಾರ್ಥಿಸುವೆ ಹರಿಯೇ ೧
ನಿಷ್ಕಾಮ ಭಕ್ತನನ | ಮಾಡಿ ನೀ ಸಲಹಯ್ಯಸತ್ಕಾಮಗಳ ಗರೆದು | ಸಾಧನೆಯ ಗೈಸೀದುಷ್ಕಾಮಗಳಿಗೆಡೆಯ | ನೀ ಕೊಡದೆ ಪೊರೆಯಯ್ಯಸತ್ಕರ್ಮ ಸತ್ಸಂಗ | ಸರ್ವದಾ ಕೊಡುತಾ ೨
ಸತಿಸುತರು ಹಿತರಲ್ಲಿ | ದುರ್ಮಮತೆ ಕಳೆಯುತ್ತಮತಿಮತಾಂ ವರರಂಘ್ರಿ | ಶತ ಪತ್ರರತನಾಹಿತದಿಂದ ನೀ ಸಲಹಿ | ಗತಿ ಪ್ರದನು ಆಗಯ್ಯಕೃತಿ ರಮಣ ಪ್ರದ್ಯುಮ್ನ | ಪ್ರತಿ ರಹಿತ ದೇವಾ ೩
ಮಧ್ವಮತ ಪದ್ಧತ್ಯಭಿ | ವೃದ್ಧಿಗೈಸುತಲಿವಗೆಸಿದ್ಧಾಂತ ಜ್ಞಾನದಲಿ | ಸಿದ್ಧ ನೆನಿಸಯ್ಯಾವೃದ್ಧಿಯಾಗಲಿ ಜ್ಞಾನ | ವೈರಾಗ್ಯ ಭಕ್ತಿಗಳುಮಧ್ವರಮಣನೆ ದೇವ | ಬುದ್ಧಿ ಬೋದಕನೇ ೪
ಬದಿಗ ನೀನಾಗಿದ್ದು | ಹೃದಯದವಕಾಶದಲಿಮುದದಿಂದ ತವರೂಪ | ತೋರಿ ಸಲಹಯ್ಯಾ |ಇದಕನ್ಯ ನಾ ಬೇಡೆ | ಯದು ವರೇಣ್ಯನೆ ಕೃಷ್ಣಸದಯ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ ೫

೨೭೪
ಭೂತರಾಜರ ಸ್ತುತಿ
ಭೂತಪತೇ – ಭೂತಪತೇ ಪ
ಭೂತಿ ಮಹತ್ ಶ್ರುತಿ | ಪಾದ್ಯವೆನಿಪ ಹರಿದೂತ ಬ್ರಾತ ಮಹ | ಭೂತ ಗಣಾಧಿಪ ಅ.ಪ.
ಕರ್ಣ ವಿಕರ್ಣರು | ಘನ್ನ ಗುಣಸಂ-ಪನ್ನ ಮಹಿಮ ಮನ | ಬನ್ನವ ಕಳೆಯೋ ೧
ರುಂಡ ಮಾಲೆ ಧರ | ಚಂಡ ಶಿವನ ಪದಕೊಂಡೆ ವಾದಿ ಗಜ | ಸಿಂಹರೆನಿಪರಿಂ ೨
ಗುರುವಾಣತಿ ಧೃತ | ಶಿರದಿ ಬದರಿಯಿಂಹರಿ ಪ್ರತಿಮೆ ಸಹಿತ | ಶಿರನೀತ ವಿಮಾನ ೩
ಬಂದುಕ ಕುಸುಮಗ | ಳಿಂದ ಅಲಂಕೃತಸುಂದರಾಂಗ ಮನ | ಬಂಧಿಸುಹರಿಯಲಿ ೪
ಬಿಂಬನು ಗುರು ಗೋವಿಂದ ವಿಠಲ ಪದಡಿಂಬದಿ ಕಾಂಬುವ | ಹಂಬಲವೀಯೋ ೫

೬೧೧
ಭೂತೇಶನುತ ವಿಠಲ | ಕಾಪಾಡೊ ಇವನಾ ಪ
ಓತ ಪ್ರೋತನು ಆಗಿ | ದಾತನೀನಿರುವೇ ಅ.ಪ.
ಶೀಲಗುಣಸಂಪನ್ನ | ಮೇಲಾಗಿ ವೈರಾಗ್ಯಶಾಲಿ ಎನಿಸುತ ತನ್ನ | ಕಾಲಕಳೆಯುತಲೀ |ಶ್ರೀಲೋಲತವ ಪಾದ | ದಾಸ್ಯವನೆ ಕಾಂಕ್ಷಿಸುವವಾಲಿಭಂಜನ ರಾಮ | ಪಾಲಿಸೋ ಇವನಾ ೧
ತೈಜಸನೆ ನೀನು ಗುರು | ರಾಜರೂಪಿಲಿ ತೋರಿನೈಜೋಪದೇಶವನು | ಪೊಂದುವುದು ಎನುತಾ |ಮಾಜದಲೆ ಪೇಳಿರಲು | ವಾಜಿವದನನೆ ನಿನ್ನಬ್ರಾಜಿಷ್ಣು ನಾಮದಲಿ | ಅಂಕನವ ಗೈದೇ ೨
ದಾಸ ದಾಸರ ಗುಣಾ | ದಾಸನೆಂದೆನಿಸುತ್ತಕೇಶವನ ಗುಣನಾಮ | ಸೂಸಿಕೊಂಡಾಡಿ |ಲೇಸಾದ ಆನಂದ | ಭಾಸಿಸುತ್ತಲಿ ಗುಹಾ ವಾಸನನು ಕಾಂಬಂಥ | ಮಾರ್ಗದನು ಆಗೋ ೩
ಮಧ್ವಮತ ತತ್ವಗಳು | ಬುದ್ಧಿಯಲ್ಲಿ ಸ್ಛುರಿಸುತ್ತಶುದ್ಧಭಾವದಿ ಮನನ | ಸಿದ್ಧಿಸುತಲಿವಗೇ |ಅದ್ವೈತ ತ್ರಯಜ್ಞಾನ | ಶ್ರದ್ಧೆ ಭಕ್ತಿಯ ಉದಿಸೆಮಧ್ವರಮಣನೆ ಹರಿಯೆ | ಉದ್ಧಾರ ಮಾಡೋ೪
ಸರ್ವಜ್ಞಾ ಸರ್ವೇಶ | ಸರ್ವಾಂತರಾತ್ಮಕನೆದರ್ಪಿಜೀವಿಯ ಪೊರೆಯೆ | ಪ್ರಾರ್ಥಿಸುವೆ ಹರಿಯೇ |ದುರ್ವಿ ಭಾವ್ಯನೆ ಗುರು | ಗೋವಿಂದ ವಿಠ್ಠಲನೆಅವ್ಯಾಜ ಕರುಣನಿಧಿ | ಭಿನ್ನಪವ ಸಲಿಸೋ೫

೬೧೨
ಭೂರಮಣ ರಘುರಾಮ ವಿಠ್ಠಲನೆ ನೀನಿವಳಭೂರಿ ಕರುಣದಲಿಂದ ಕಾಪಾಡಬೇಕೊ ಪ
ಆರು ಇಲ್ಲವೊ ಗತಿಯು ನಿನ್ಹೊರತು ಶ್ರೀಹರಿಯೆಸಾರಿ ನಿನ್ನಯ ಪಾದವಾರಾಧಿಸುತ್ತಿಹಳಾ ಅ.ಪ.
ತಾರತಮ್ಯ ಜ್ಞಾನ ಪಂಚಭೇದವನರುಹಿಪಾರು ಮಾಡೀಭವದ ಪರಿತಾಪವಾನೀರೇರುಹಾನಯನ ಕಾರುಣ್ಯ ಮೂರುತಿಯೆಪ್ರೇರಕನೆ ಜಗಕೆಲ್ಲ ಸರ್ವಾಂತರಾತ್ಮ ೧
ಪತಿ ಸೇವೆಯಲಿ ಭಕುತಿ ಅತಿಶಯದಿ ಹರಿ ಭಕುತಿಮತಿಯು ತತ್ವಾರ್ಥಗಳ ಗ್ರಹಿಸುವಲಿ ರತಿಯೂಸತತ ವಿಷಯಾದಿಗಳು ನಶ್ವರವು ಎಂದೆನುತಮತಿಯಿತ್ತು ಇವಳೀಗೆ ಪಾಲಿಪುದು ವೀರಕುತಿ೨
ಪ್ರಾಚೀನ ಕರ್ಮಗಳ ಯೋಚಿಸಲು ಎನ್ನಳವೆಕೀಚಕಾರಿ ಪ್ರೀಯ ಮೋಚಕನು ನೀನೇ |ಚಾಚಿ ಶಿರ ನಿನ್ನಡಿಗೆ ಯಾಚಿಸುವೆ ಶ್ರೀಹರಿಯೆಪಾಚ ಕಾಂತರ್ಯಾಮಿ ಕರ್ಮನಾಮಕನೆ ೩
ಸತತ ತವ ಸ್ರ‍ಮತಿಯಿತ್ತು ವಿತತ ಕರ್ಮವ ಸುಟ್ಟುಪ್ರತಿರಹಿತ ನಿನ್ನಂಘ್ರಿ ಹೃತ್ಕರ್ಣಿಯಲಿಟ್ಟುಕೃತಕಾರ್ಯವೆಲ್ಲ ಶ್ರೀ ಪತಿಯೆ ನಿನ್ನಯ ಸೇವೆಮತಿಯಿತ್ತು ಭವ ಬಂಧ ಕತ್ತರಿಸೊ ಹರಿಯೆ ೪
ಕೃತ್ತಿವಾಸನ ತಾತ ಉತ್ತಮೋತ್ತಮ ದೇವಪುತ್ರಮಿತ್ರನು ನೀನೆ ಸರ್ವತ್ರ ಭಾಂಧವನೆ |ಪುತ್ರಿಯನು ಸಲಹೆಂದು ಪ್ರಾರ್ಥಿಸುವೆ ನಿನ್ನಡಿಗೆಆಪ್ತ ಗುರುಗೋವಿಂದ ವಿಠಲ ಮಮ ಸ್ವಾಮೀ ೫

೬೧೩
ಭೂವರಾಹ ವಿಠಲನೆ | ಸೇವಕನ ಪೊರೆಯೊ ಪ
ಕಾವಕರುಣಿಗಳರಸ | ಭಾವಜಾನಯ್ಯ ಅ.ಪ.
ಏಸೆಸೊ ಜನ್ಮಗಳ | ಸೂಸಿದನುಭವದಿಂದಲೇಸಾದ ಮಧ್ವಮತ | ಪೋಷಿಸುತ್ತಿಹನೊವಾಸವಾದ್ಯಮರನುತ | ಶೇಷಾದ್ರಿವಾಸಹರಿಪೋಷಿಸೊ ಬಿಡದಿವನ | ಆಶೆಪೂರಯಿಸಿ ೧
ತಾರತಮ್ಯಜ್ಞಾನ | ಮೂರೆರಡು ಭೇಧಗಳವಾರವಾರಕೆ ತಿಳಿಸಿ | ಕಾರಣಾತ್ಮಕನೆಸಾರತಮ ನೀನೆಂಬ | ಚಾರುಮತಿಯನೆ ಕೊಟ್ಟುನೀರಜಾಸನ ವಂದ್ಯ | ಪಾರುಗೈಭವವ ೨
ಅಧ್ಯಾತ್ಮ ಅಧಿಭೂತ | ಆದಿಭೌತಿಕತಾಪಭೋದಿಸುತ ಸಾಧನದ | ಹಾದಿಯಲ್ಲಿರಿಸೋಮಧ್ವಾಂತರಾತ್ಮಕನ | ಪಾದರತಿಯಲಿ ಶ್ರದ್ಧೆಉದ್ಧರಿಸು ಇವನಲ್ಲಿ | ಹದ್ದುವಾಹನನೇ ೩
ಸಂಶಯರಹಿತಾಗಿ | ಅಂಶಾವ ತಾರಗಳ ಶಂಸಿಸುವ ಪರಿಮಾಡಿ | ಕಂಸಾರಿ ಪೊರೆಯೊಹಂಸ ವಾಹನನಾದಿ | ತೃಣಾಂತ ಚವರನಹಂಸರೂಪಿಹರಿಯ | ಆಧೀನ ತಿಳಿಸೋ ೪
ಸರ್ವತ್ರ ವಾಪ್ತನಿಹ | ಸರ್ವ ದೋಷ ವಿದೂರಸರ್ವಂತಾರಾತ್ಮಕನೆ | ಸರ್ವೋತ್ತಮಸರ್ವಧಾತನ ಸ್ರ‍ಮತಿಯ | ದರ್ವಿ ಜೀವಿಗೆಯಿತ್ತುಪೊರೆಯೊ ಸುಂದರ ಗುರು | ಗೋವಿಂದ ವಿಠಲ೫

೨೩೬
ಭೋಗಿವರನೇ ಪಾಲಿಸೋ ಪ
ಆಗಸದೊಳು ನೀನಾಗಮಿಸುತಲಿ ಸ-ದಾಗತಿ ಭೋದವ ಭೋಗಿಸಿ ನಿಂದೇ ಅ.ಪ.
ಪಾದೋದರ ತ್ವಚ | ಮೋದದಿ ತ್ಯಜಿಸುತಅಗಾಧ ಶಕ್ತಿಯಲಿ | ಮೋದಿಪ ಪರಿ ಪ್ರಾ |ರಬ್ಧವ ಭೋಗವ | ನಾದರದನುಭವಸಾಧನವೀವುದು | ಹೇ ದಯವಂತ ೧
ಹೃದಯಾಬ್ಜಾಮಲ | ಸದನದಿ ಸುರತರುಹದುಳ ದೊಳಾಶ್ರಿತ | ಬದಿಗನಿನಾದೆಯೊ |ಸದಮಲ ಶಯ್ಯನೆ | ಇದಿರಾವನು ತವಪದವಿಗೆ ಸುರರೊಳು | ಬುಧಜನ ವಂದ್ಯ ೨
ಪೂರ್ವ ತ್ರಿಯಂಬಕ | ಭುವಿಧರಭಿಧನೇಕಾವುದು ಸಿತ ಕೇ | ಶಾವೇಶಿತ ಬಲ |ದೇವನೆ ಬೇಡುವೆ | ಕೋವಿದ ಪತಿ ಗುರುಗೋವಿಂದ ವಿಠಲನ | ಭಾವದಿ ಕಾಣಿಸಿ ೩

೧೦೯
ಭ್ರಷ್ಟ ಸಂಕಲ್ಪನ್ನ | ಮಾಡದಿರೆಲೋ |ಇಷ್ಟ ದೈವವೆ ಎನ್ನ | ಕಷ್ಟದೊಳು ಹಾಕಿ ಪ
ನಿಗಮ ವೇದ್ಯನ ಮಹಿಮೆ | ಖಗ ವರಧ್ವಜ ದಾಸಮಿಗಿಲಾಗಿ ಪೇಳ್ವೆನೆಂದ | ವಘಡಿಸೀ ನುಡಿಸೀಹಗರಣದಿ ಹರಿದಿನದಿ | ಸುಗುಣ ತಾ ಬರದಿರಲುಖಗಗಮನ ನಿನ್ವಚನ | ಲಘುವಾಗಲಿಲ್ಲೇ ೧
ಅಪ್ಪ ವಿಜಯಾರ್ಯ ಪದ | ವಪ್ಪಿ ಪೂಜಿಸಿ ಪೋಗಿಚಿಪ್ಪಗಿರಿಯಲಿ ನೋಡೆ | ಒಪ್ಪಿದವ ಬರದೇಅಪ್ಪಾರ ಮನನೊಂದು | ಅರ್ಪಿಸಿಹೆ ನಿನ್ನಡಿಗೆಕೃಪ್ಪೆಯಿಂ ಬರಮಾಡೊ | ಗೊಪ್ಪ ಶಿಷ್ಯನ್ನಾ ೨
ಮಾನಾಪಮಾನಗಳು | ಯೇನೊಂದು ನಿನ್ನೊಳಗೊಮಾನನಿಧಿಯೆ ಕೇಳೊ | ಮೌನಿ ವರದಾದೀನ ಜನಪಾಲ ಗುರು | ಗೋವಿಂದ ವಿಠ್ಠಲನೆಮಾನ್ಯ ಮಾನದನೆಂಬ | ಸೂನೃತವ ಸಲಿಸೋ ೩

೧೧೨
ಮಂಗಳ ಕರಿಗಿರಿ ನರಹರಿಗೇ | ಜಯಮಂಗಳ ಶರಣರ ಪೊರೆವನಿಗೇ ಪ
ಕಣ್ಣ ತೆರದು ಗಿರಿ ಬೆನ್ನೊಳು ಪೊತ್ತಗೆಮಣ್ಣನು ಅಗಿಯುತ ಚಿಣ್ಣಗೊಲಿದಗೇ ೧
ಚಿನ್ನ ವಟುಪು ಆದ ಘನ್ನ ಪರಶುಧರಮನ್ನು ಜರೂಪಗೆ ಕೃಷ್ಣ ಮೂರುತಿಗೇ೨
ಬೆತ್ತಲೆ ನಿಂತಗೆ | ಉತ್ತಮ ಕಲ್ಕಿಗೇಹತ್ತಾವತಾರ ಗುರು ಗೋವಿಂದ ವಿಠಲಗೇ ೩

೧೧೪
ಮಂಗಳ ಮೂರ್ಜಗದೊಡೆಯನಿಗೇ | ಶುಭಮಂಗಳ ಸ್ಪ್ಟಷ್ಟ್ಯಾದಿ ಕರ್ತನಿಗೇ ಪ
ಮಂಗಳ ರವಿಕುಲ ತಿಲಕನಿಗೇ | ಶುಭಮಂಗಳ ಹನುಮನ ಒಡೆಯನಿಗೇ ||ಮಂಗಳ ಭೀಮನ ಸಲಹಿದಗೇ | ಶುಭಮಂಗಳ ಮಧ್ವ ಹೃದಾಂಬುಜ ರವಿಗೇ ೧
ಮಂಗಳ ದಶಗ್ರೀವ ಛೇದಕಗೇ | ಶುಭಮಂಗಳ ಕೌರವ ಹಂತಕಗೇಮಂಗಳ ವ್ಯಾಸರ ಸೇವಕನೆನೆ | ನಮ್ಮಮಂಗಳ ದಶಮತಿ ಪೋಷಕಗೇ ೨
ಮಂಗಳ ಸೀತೆಯ ತೋಷಕಗೇ | ಶುಭಮಂಗಳ ರುಕ್ಮಿಣಿ ಅರಸನಿಗೇಮಂಗಳ ಮಧ್ವರ ಪೊರೆದವಗೇ | ಶುಭಮಂಗಳ ಗುರು ಗೋವಿಂದ ವಿಠಲಗೇ ೩

೩೭೭
ಮಂಗಳ ಸೋದೆಯ ರಾಜರಿಗೆ | ಜಯಮಂಗಳ ವಾದೀಭ ಮೃಗರಾಜರಿಗೇ ಪ
ಅದ್ವೈತ ಮತವನ | ಪ್ರಧ್ವಂಸಕಾನಳಮಧ್ವ ಮತಾಬ್ಧಿ ಪ್ರ | ಬುದ್ಧ ಚಂದ್ರನಿಗೆ ೧
ಶ್ರೀ ಮದ್ಹಯ ಮುಖ | ಸ್ವಾಮಿ ಸುಪ್ರೀಯಗೆಕಾಮಿತ ಫಲ ಪ್ರದ | ಕಾಮಧೇನುವಿಗೆ ೨
ನಿರತಿ ಶಯನು ಹರಿ | ಸರ್ವಕ್ಕಧಿಕನಾದಗುರು ಗೋವಿಂದ ವಿಠಲ ಭಕ್ತೇಶನಿಗೇ ೩

೩೯೮
ಮಂಗಳಂ ಮಂಗಳಂ ಪ
ಮಂಗಳಂ ಮಂಗಳಂ | ಪರಿಮಾಳಾರ್ಯರಿಗೆ ತುಂಗೆ ತೀರಗ ಯತಿ | ಪುಂಗರೀಗೇ ಅ.ಪ.
ಮಧು ವೈರಿ ಪದ ಭೃಂಗ | ಸುಧೀಂದ್ರ ಚರಣಾಬ್ಜಮಧುಕರರೆನಿಸುತ್ತ | ಸುಧೆಯ ಸೌರಭವ |ಬುಧ ಜನ ಕುಣಿಸುತ್ತ | ವಿಧ ವಿಧ ಮೆರೆಯುವತ್ರಿದಶ ಭೂರುಹವೆನಿಸಿ | ಸದಯದಿ ಪೊರೆವಗೇ ೧
ಮಧ್ವ ಮತಾಬ್ಧಿಗೆ | ಶುದ್ಧ ಪೂರ್ಣೇಂದ್ವಿಗೆಅದ್ವೈತ ಕಲಿಮಲ | ದಾವಾಗ್ನಿಗೇ |ಸದ್ವೈಷ್ಣ್ವ ಕುಮುದೇಂದು | ವಿದ್ವಾಂಸನತ ಪಾದಶೌದ್ಧೋದನಿಯ ಮತ | ವಿಧ್ವಂಸಕಗೇ ೨
ಕರದೆಡೆ ಬರುವಂಥ | ಪರಮ ದಯಾಳುಗೆಧರೆಯೊಳೆಲ್ಲೆಲ್ಲೂ | ಮೆರೆಯುತಿಹಗೇ |ಶರಣರ ಹೃತ್ಕಮಲ | ವರ ಮಿತ್ರನೆಂದೆನಿಸಿಗುರು ಗೋವಿಂದ ವಿಠಲ | ಚರಣಾಬ್ಜಧೇನಿಪಗೇ ೩

೧೧೦
ಮಂಗಳಂ ಮಂಗಳಂ ರಂಗನಿಗೇ | ಜಯಮಂಗಳವೆನ್ನಿ ಶ್ರೀ ವೆಂಕಟಗೇ ಪ
ಬುಧನು ಭೃಗುವು ಪತಿ | ಎದೆಗೆ ತಾಡಿಸಿ ಲಕ್ಷ್ಮಿಯೆದೆಯೋಳಾವಾಸಳು | ಕ್ರೋಧ ನಟಸಿ ಪೋಗಲುಮುದುಪ್ರದ ಬುಧನಿಗೆ | ಹದುಳದಿ ಗಿರಿ ವಿರಿವದಗಿ ಪುತ್ತವ ಸೇರ್ದ | ಮಾಧವ ಹರಿಗೇ ೧
ನೀರಜಜ ಗೋರೂಪಿ | ಸಾರಿ ಪುತ್ತಾಶ್ರಿತಗೆಕ್ಷೀರಾಭಿಷೇಚಿಸಿ | ಸಾರುತಿರೆ ನೃಪ ಗೃಹ |ಮಾರನೆ ದಿನ ಗೋ | ಚಾರ ಕೊಡಲಿ ಹತಿಗೆದೂರ ಸರಿಸಿ ಗೋವ | ಶಿರವನೊಡ್ಡಿದಗೇ ೨
ಬಗೆ ಬಗೆ ನಾಮದಿ | ಯುಗ ನಾಲ್ಕರಲಿ ಮೆರೆವನಗ ಅಂಜನಾಚಲ | ಹಾಗೂ ವೃಷಶೈಲವುನಾಗಾಚಲವು ಮತ್ತೆ | ನಗ ವೆಂಕಟಾದ್ರೀಲಿಅಘಹರ ಲೀಲೆಗಳ್ | ಸೊಗಸಾಗಿ ತೋರ್ವಗೇ ೩
ಆವಾವ ಬಗೆಯಿಂದ | ಜೀವನಧ್ಯಾತ್ಮದಿಓಧಿ ಸಾಧನೆಗೈದು | ದೇವನ ಪದ ಸಾರುವಭಾವವನರುಹುಲು | ಊರ್ವಿಯೊಳವತರಿಸಿಮಾವಾರಿ ನಟಿಸುತ್ತ | ಜೀವರ ಪೊರೆವಗೇ ೪
ದೇವ ದೇವ ನಮ್ಮ | ಗೋವ ಪರಿಪಾಲಕಮಾವಿನೋದಿಯು ಗುರು | ಗೋವಿಂದ ವಿಠಲಭೂವೈಕುಂಠಸ್ಥನು | ಕಾವ ಭಕ್ತರನೆಲ್ಲ ಈ ವಿದಧಿ ತುತಿಪರ್ಗೆ | ಭಾವದಿ ಒದಗುವಗೇ೫

೧೧೧
ಮಂಗಳಂ ಮಧುಕೈಟ ಭಾರಿಗೇ – ಜಯಮಂಗಳ ಯದುಕುಲಾಂಬುಧಿ ಚಂದ್ರಗೇ ಪ
ಗೋಕುಲದೊಳು ಪುಟ್ಟಿ ಗೋಗಣಂಗಳ ಕಾಯ್ದುರಾಕೇಂದು ವದನೇರ ಕೂಡಿದ ಸರಸಿಗೇ ೧
ಸೃಷ್ಟಿ ಪಾಲನ ಲಯ | ಒಟ್ಟಾಗಿ ಮಾಳ್ಪಂಥಕೃಷ್ಣೆ ಗಕ್ಷಯಫಲ ಕೊಟ್ಟಂಥ ಹರಿಗೇ೨
ಬೃಹತೀ ಸಹಸ್ರನ್ನ ಬಹುವಾಗಿ ಉಂಡಗೇಮಹ ಋಷಿಗ್ವರವಿತ್ತ | ಶ್ರೀ ಉಪೇಂದ್ರಗೆ ೩
ಲಕ್ಕುಮಿಯನು ತಾನು | ಲೆಕ್ಕಿಸದಲೆ ವೇಗಪೊಕ್ಕುಳಿಂದಲಿ ಅಜನ | ಪಡೆದ ಶ್ರೀಹರಿಗೇ ೪
ಗರುಡ ಗಮನನಾಗಿ | ಕರಿಯ ಕಾಯಲಿ ಬಂದುಹರುಷವ ಪಡಿಸೀದ | ಗುರು ಗೋವಿಂದ ವಿಠಲಗೇ ೫

೧೧೩
ಮಂಗಳಗಿರಿ ನರಕೇಸರೀ | ಕಾಯೊಶೃಂಗಾರ ಮೂರುತಿ ನರಹರಿ ಪ
ಅಂಗಜ ಪಿತನೆ ಕಾ | ಳಿಂಗಮರ್ಧನ ಸಾದುಸಂಗ ಪಾಲಿಸಿ ಭವ | ಭಂಗವ ಬಿಡಿಸಯ್ಯ ಅ.ಪ.
ಮಣವಕನಾಗಿ ಬಲಿಯಾ | ಭೂಮಿದಾನಬೇಡಿ ಶಿರ ತುಳಿದೆಯಾ ||ದೀನ ವತ್ಸಲ ರಂಗ | ಮೌನಿ ಧ್ಯಾನಗಮ್ಯಪಾನಕ ಕುಡಿದು ಸು | ಜ್ಞಾನವ ಪಾಲಿಸು ೧
ಭಕ್ತ ಪ್ರಹ್ಲಾದನ ಪೋಷಕಾ | ತಪಶಕ್ತಿ ಹಮ್ಮಿನ ಕಶಿಪು ಮಾರಕಾ |ಕರ್ತ ನೀನೇ ಎಂಬ | ಉಕ್ತಿ ಸ್ಪುರಿಸಿ ವಿರಕ್ತಿ ಪಾಲಿಸೊ ರಂಗ | ಭಕ್ತರುದ್ಧರಣ೨
ಗೋವುಗಳೊಳಗೆ ಉದ್ಗೀಥಾ | ಗುರುಗೋವಿಂದ ವಿಠಲ ವರದಾತಾ |ಜೀವರ ಹೃದಯದೊ | ಳಾವಾಗು ನೆಲಿಸುತ್ತಕಾವನೆಂದೆಂಬರ | ಕಾವಾದೆ ಬಿಡನಯ್ಯಾ ೩

೧೧೫
ಮಂಗಳಾರುತಿ ತಂದು ಬೆಳಗಿರೆ | ಅಂಗನೇಯರು ರಂಗಗೇ ||ಅ||
ತುಂಗ ಮಹಿಮ ಶುಭಾಂಗ ಕರುಣಾ | ಪಾಂಗ ಶ್ರೀನರಸಿಂಗಗೇ ಅ.ಪ.
ಪ್ರಳಯ ಜಲಧಿಯೊಳಾಲದೆಲೆಯಲಿ | ಮಲಗಿ ಬೆರಳು ಸವಿದಗೇಶ್ರೀಲತಾಂಗಿಯು ಸ್ತೋತ್ರ ಗೈಯ್ಯಲು |ಒಲಿದು ಜೀವರ ಸೃಜಿಸಿದವಗೆ ೧
ಮೂಲಕಾರಣ ಮಾಡಿ ಪ್ರಕೃತಿಯ | ನಾಲಕ್ಕಿಪ್ಪತ್ತು ತತ್ವದಾಲೀಲೆಯಿಂದಲಿ ಸೃಜಿಸಿ ಬೊಮ್ಮನ ಚೆಲುವ ತನುವನೆ ಮಾಡ್ದಗೇ೨
ಮತ್ತೆ ವಾರಧಿ ಶಯ್ಯನಾಗುತ | ತತ್ವಮಾನಿ ಬೊಮ್ಮನಪೆತ್ತು ತನ್ನಯ ಪೊಕ್ಕಳಿಂದಲಿ | ಕೀರ್ತಿಯನು ಪಡೆದಾತಗೇ ೩
ನೀರೊಳಾಡಿ ನಗವ ನೆಗಹಿ | ಕೋರೆದಾಡೆಯ ತೋರ್ದಗೇನರಸಿಂಹಗೆ ದಾನ ಬೇಡ್ದಗೆ | ಧೀರ ಪರಶುರಾಮ ರಾಮಗೇ ೪
ಗಿರಿಯ ನೆಗಹಿ ನಗಗಳ್ವೈರಿಯ | ಮರುಳು ಮಾಡಿದ ಚೆಲುವಗೇಬರಿಯ ಮೈಯ್ಯಗೆ ತುರಗನೇರಿದ | ಗುರು ಗೋವಿಂದ ವಿಠಲಗೇ ೫

೩೭೮
ಮಂದಾರ ತರುವೇ | ನಾ ಬೇಡುವೇ | ಮಂದಾರ ತರುವೇ ಪ
ಇಂದು ಮೌಳಿನುತ | ಸಂದರುಶನ ತವ ಅ.ಪ.
ಋಜುಗುಣ ಚಕೋರಕೆ ಚಂದಿರ | ಭಜಿಪರಭೀಷ್ಟದ ಮುನಿವರ |ವಿಜಯ ಸಾರಥಿ ಪದ ಬಿಸಜಯುಗಳದಿ ನಿಜಗತಿಯ ಕೊಡುತ ನಡೆಸು ಸುಪಥದಿ ೧
ದಶರಥ ಹರಿ ವಚೋನಯ | ಅಸುಪತಿಪರಿಕೃಷ್ಣ ವಚೋನಯಯಶದಿ ಮೆರೆದು ಮುಂಬರುವ ಅಸುಪತಿ ವಸುದೆಜೆರಮಣನ ಯಶವ ನುಡಿಸು ಯತಿ ೨
ಗುರುಗೋವಿಂದ ವಿಠಲಾರಾಧಕ | ನಿರುತ ಮಂಗಳ ಮಹಿಮದ್ಯೋತವರವಿಷಯ ವರುಹು ಭವ ತಾರಕ ನಿರುತಿಹೆ ಮುದಮುನಿ ಮತೋದ್ಧಾರಕ ೩

೧೧೬
ಮಂದೇಹರ ಹರವೂ | ಕಾಲದಿ | ಸಂಧ್ಯಾ ವಂದನವೂ ಪ
ಎಂದೀಪರಿಯನು | ಸಂಧ್ಯಾನವ ತಿಳಿಮುಂದಾಗ್ವಂದು ಶುಭ | ವೆಂದ್ಹೇಳುವುದು ಅ.ಪ.
ಶಚಿ ನೀನಾಗಿರಲೂ | ಕಾಯೋ | ಶುಚೀ ಎನಿಸಿರಲೂ ||ಶುಚಿಯೆನಿಸುವಿ ಕಿವಿಯು | ಪಚರಿಸುತಲ್ಹರಿವಚ ನುಡಿಸುತ ಶ್ರೀ | ತಾಚಮನದಲೀ ೧
ಕಾಲ ಮುಖ್ಯ ತಿಳಿಯೋ | ಸೂರ್ಯಗೆ ಕಾಲ ಅಘ್ರ್ಯ ಕೊಡಲೋ |ಕಾಲಾಕಾಲದ ಕೀಲು ತಿಳಿದು ಸತ್‍ಕಾಲದಲ್ವಂದಿಸು ಕಾಲ ಮೂರ್ತಿಯನು ೨
ಯುಕುತಿ ತಿಳಿದು ನೀನು | ಆರ್ಯರ | ಉಕುತಿ ಪಾಲಿಸಿನ್ನೂಮುಕುತಿದಾಯಕ ಗುರು ಗೋವಿಂದ ವಿಠಲನುಭಕುತಿಗೊಲಿದು ನಿಜ ಭಕುತರ ಪಾಲಿಪ ೩

೪೨
ಮಗಟಖಾನ ಹುಬ್ಬಳ್ಳಿ ಶ್ರೀಯಾದವಾರ್ಯರ ಕರಾರ್ಚಿತ ಶ್ರೀನರಸಿಂಹ ಸ್ತೋತ್ರ
ಕರುಣವೆಂತುಂಟೋ ನಿನಗೆ | ಶ್ರೀನಾರಸಿಂಹಾ ಪ
ವರತಟನಿ ಮಲಪ್ರಭೆಯ | ತೀರಸ್ಥನೆನಿಸೀ ಅ.ಪ.
ಪೂರ್ವದಲಿ ಋಷಿ ಚ್ಯವನ | ರಿಂದರ್ಚಿತವು ಎನೆಓರ್ವ ಶಿಲೆಯಲಿ ನಿಂದು ಯಾದವಾರ್ಯಾ |ಪಾರ್ವ ಯೋಗೀಶ ರಚಿ | ತಾಕಾರ ಗಂಧದಲಿಆಹ್ವಾನಿತನು ಆಗಿ ನೀನಿಲ್ಲಿ ಇರುವೇ ೧
ಆದಿ ವ್ಯಾಧಿಲಿನೊಂದ | ಬುಧರಿಂದ ಬಹುಸೇವ್ಯಯಾದವಾರ್ಯಾಂತಸ್ಥ | ಶ್ರೀ ನಾರಸಿಂಹಾ |ಬಧಿರ ಮೂಕರು ತಮ್ಮ | ವ್ಯಾಕುಲವ ಕಳೆಯುತ್ತಮುದವಾಂತು ತವ ಮಹಿತಿ ಕೀರ್ತಿಸುತ್ತಿಹರೋ ೨
ವತ್ಸರವು ಕಾಳ್ಯುಕ್ತಿ | ಮಾಸ ನಿಶಿ ಜೇಷ್ಠದಲಿಮತ್ತೆ ಹರಿದಿನದಲ್ಲಿ | ಮಂದವಾರದಲೀ |ಮತ್ಸರಾದ್ವಿರಹಿತರು | ಸತ್ಸುಜನರಿಂದ ಕೂಡಿಉತ್ಸಹದ ಜಾಗರವ | ನೀ ಮಾಡಿ ಮಾಡಿಸಿದ್ಯೊ ೩
ಬೆಟ್ಟದಾಚಾರ್ಯರೆನೆ | ಸುಷ್ಠು ಕೀರ್ತನೆಗೊಂಡಶ್ರೇಷ್ಠ ಹುಚ್ಚಾಚಾರ್ಯ | ರಿಲ್ಲಿ ನೆಲೆಸುತಲೀಇಷ್ಟ ಸಿದ್ಧಿಗಾಗಿ ಶ್ರೇಷ್ಟ | ತಪವನೆ ಗೈದುಇಷ್ಟಾರ್ಥ ಪೊಂದಿತಾ | ಬೆಟ್ಟಕ್ಕೆ ತೆರಳಿದರೋ ೪
ಸುಧಾದಿ ಪ್ರವಚಿಸುತ | ಮೋದ ಪಡಿಸುತ ಬುಧರಯಾದವೇಶನ ನೊಲುಮೆ | ಸಂಧಿಸುತ ಮೆರೆದೂ |ಆದರಿಸಿ ಮಂಗಳ ಸು | ಭೋದಗಳ ಬೀರುತಲಿಮೋದ ಬಡಿಸಿದ ಹರಿಯ | ಭೂದೇವ ಆರ್ಯ ೫
ಪ್ರೇರ್ಯ ಪ್ರೇರಕರಾಗಿ | ಬೆಳಗಾವ್ಕರು ಎಂಬಪಾರ್ವನಲಿ ನೀ ನಿಂತು | ಅಚ್ಚರಿಯನೆಸಗೀಭಾರ್ಯೆ ತವ ಕೊಲ್ಲಾಪುರ | ಮ್ಮ ಸತ್ಯವ್ರತರಆರ್ಯಗೊಡ ದರ್ಶಿಸುವ | ಯೋಗ ನೀನಿತ್ತೇ ೬
ಸೃಷ್ಠ್ಯಾದಿ ಅಷ್ಟಕವ | ದೃಷ್ಟಿ ಮಾತ್ರದಿಗೈವಇಷ್ಟ ಭಕುತಿಗೆ ಮೆಚ್ಚಿ | ಘಟ್ಟಿ ಕಂಬದಿ ಜಿಗಿದೂದುಷ್ಟನ್ನ ಸಂಹರಿಸಿ | ಕಷ್ಟಗಳ ಕಳೆದಂಥಕೃಷ್ಣ ಗುರು ಗೋವಿಂದ ವಿಠಲಾ ಗಾನಮಿಪೇ ೭

೬೧೪
ಮಧ್ವ ವರದ ವಿಠಲ ಕಾಯ ಬೇಕಿವಳಾ ಪ
ಪದುಮನಾಭನೆ ನಿನ್ನ ಸೇವೆ ಕಾತುರಳಾ ಅ.ಪ.
ಏಸುಜನ್ಮದ ಸುಕೃತ ರಾಶಿಗೇ ಫಲರೂಪದಾಸದೀಕ್ಷೆಯ ವಹಿಸೆ ಆಶಿಸುತ್ತಿಹಳೊ |ಕೇಶವನೆ ಹೃದಯಾಬ್ಜವಾಸ ತವ ಸೇವೆಯನುಲೇಸಾಗಿ ಕೊಟ್ಟು ಮನದಾಶೆ ಪೂರೈಸೋ ೧
ನಯವಿನಯ ಗುಣಯುಕ್ತೆ ಕನ್ಯೆ ಬಹು ಭಕ್ತಿಯುತೆವಯಸು ಕಾರಣವಲ್ಲ ಪ್ರಿಯ ನಿನ್ನ ಭಜಿಸೆ |ದಯತೋರಿ ಈ ಶಿಶುವ ಹಯಮೊಗನೆ ಉದ್ಧರಿಸೊವಯನಗಮ್ಯನೆ ಹರಿಯೆ ಭಿನ್ನಯಿಪೆ ನಿನಗೇ ೨
ಮರುತ ಮತದಲಿ ದೀಕ್ಷೆ ಹರಿಗುರೂ ಸದ್ಭಕ್ತಿನೆರೆ ಬಂಧು ಜನ ಪ್ರೇಮ ಮರಳಿ ಆಧಮರಲಿಕರುಣೆಯನು ಮಾಳ್ಪಂಥ ವರಮತಿಯ ಕರುಣಿಪುದುಗರುಡವಾಹನದೇವ ಸರ್ವಾಂತರಾತ್ಮ ೩
ಘೋರಭವ ಶರನಿಧಿಗೆ ತಾರಕವು ತವನಾಮವಾರವಾರಕೆ ನುಡಿಸು ಮರುತಾಂತರಾತ್ಮತಾರತಮ್ಯ ಜ್ಞಾನ ಸಾರವನೆ ತಿಳಿಸುತ್ತತೋರೋ ತವರೂಪವನೆ ಹೃದ್ಗುಹದಿ ಹರಿಯೇ ೪
ಶರ್ವಾದಿ ದಿವಿಜೇಡ್ಯ ದುರ್ವಿಭಾವ್ಯನೆ ಹರಿಯೆಸರ್ವ ದೇಶವು ಕಾಲ ಸರ್ವಗುಣಪೂರ್ಣಸರ್ವಜ್ಞ ಹರಿ ಎನ್ನ ಭಿನ್ನಪವ ಸಲಿಸೆಂದುಸರ್ವಗುರು ಗೋವಿಂದ ವಿಠಲ ಪ್ರಾರ್ಥಿಸುವೆ ೫

೬೧೬
ಮಧ್ವವರದ ಹಯಾಸ್ಯ ವಿಠಲ ಸಲಹೊ |ಶುದ್ಧ ಭಕ್ತನ ಪೊರೆಯೆ ಭಿನ್ನವಿಪೆ ಸತತ ಪ
ಮಧ್ವವಿಜಯದಿ ಸದ್ಬುದ್ಧಿ ಪ್ರದನೀನೆನಿಸಿಮಧ್ವಗುರು ಸತ್ಕರುಣ ಕವಚವನೆ ತೊಡಿಸೀ |ಸಿದ್ಧಾಂತ ಜ್ಞಾನದಲಿ ಶುದ್ಧ ಬುದ್ಧಿಯ ನಿತ್ತುಉದ್ಧರಿಸ ಬೇಕಿವನ ಉದ್ಧವನ ಪ್ರಿಯನೇ ೧
ಮೂಲರಾಮರ ಪಾದ ಆಶ್ರಿತರ ಸೇವೆಯಲಿಕಾಲಕ್ರಮಿಸುತ್ತಿರುವ ಶೀಲ ಭಕ್ತನಿಗೇ |ಮೇಲಾಗಿ ಸತ್ಕಾಮ ಜಾಲಗಳ ಸಲ್ಲಿಸುತಕಾಲಕೂಟಕೆ ಸಮದ ಕೀಳು ಭವ ಹರಿಸೋ ೨
ಗುಣರೂಪ ಕ್ರಿಯ ನಿನ್ನ ಧ್ಯಾನುಪಾಸಾನೆ ಇತ್ತುತನುಸದನ ಹೃದ್ಗಹದಿ ಕಾಣಿಸೀ ಕೊಳುತಾ |ಘನವೆನಿಪ ಸಂಚಿತಾಗಾಮಿಗಳ ಪರಿಹರಿಸಿಅಣುಗನನ ಸಲಹೆಂಬ ಪ್ರಾರ್ಥನೆಯ ಸಲಿಸೋ೩
ಸಂಸೃತಿಯ ಕ್ಲೇಶ ನಿಸ್ಸಂಶಯದಿ ಕಳೆಯುತಿಹಕಂಸಾರಿ ತವಪಾದ ಪಾಂಸು ಭಜಿಪನಿಗೇ |ವಂಶ ಉದ್ಧರಿಸಿ ಸಂತೈಸು ಶ್ರೀ ಹರಿಯೆಅಂಶುಮಾಲೀಕುಲಜ ಶ್ರೀರಾಮಚಂದ್ರಾ ೪
ದೀಕ್ಷೆದಾಸತ್ವದಲಿ ಕಾಂಕ್ಷಿತಗೆ ತೈಜಸನುಈಕ್ಷಿಸುತ ಕರುಣಾಕಟಾಕ್ಷದಲಿ ಪೇಳೇ |ಸಾಕ್ಷಿ ಮೂರುತಿ ಗುರು | ಗೋವಿಂದ ವಿಠಲ – ಅಪೇಕ್ಷೆ ಪೂರ್ತಿಸಿಹೆ | ಋೂಕ್ಷ ಸನ್ನುತನೇ ೫

೬೧೫
ಮಧ್ವವರದಾ ಕೃಷ್ಣಾ ವಿಠಲ ಪೊರೆಯಿವಳ ಪ
ಅಧ್ವರೇಡ್ಯನೆ | ದೇವ ಕಾರುಣ್ಯ ಮೂರ್ತೇ ಅ.ಪ.
ಸುಸ್ತೇಶ ಸೂಚಿಸಿದ ಕ್ಲುಪ್ತಿಯನ್ನನುಸರಿಸಿಇತ್ತಿಹೆನು ಉಪದೇಶ ಚಿತ್ತಜನಪಿತನೆಅರ್ಥಿಯಲಿ ಮನ್ನಿಸುತ ಚಿತ್ತೈಸು ಬಿನ್ನಪವಕೃತ್ತಿವಾಸನ ತಾತ ಸ್ತುತ್ಯ ಸರ್ವೇಶ ೧
ನಾಮಸ್ಮತಿ ಯೆಂಬಂಥ ಆ ಮಹಾ ಕವಚವನುಈ ಮಹಿಳೆಗೀಯುತ್ತ ಸಾಧನವ ಗೈಸೋಸಾಮ ಸನ್ನುತ ಚರಣ ಸೀಮೆ ಮೀರಿದ ಮಹಿಮಭಾಮಿನಿಯ ಪೊರೆಯೆಂದು ಪ್ರಾರ್ಥಿಸುವೆ ಹರಿಯೇ೨
ತರತಮದ ಸುಜ್ಞಾನ ಎರಡು ಮೂರ್ಭೇದಗಳುಅರಿವನೇ ಇತ್ತಿವಳ ಪೊರೆವುದೈ ಹರಿಯೆಮರುತ ಮತದಲ್ಲಿಹಳ ನಿರುತ ಕಾಯಲಿ ಬೇಕುಕರಿವರದ ಧೃವವರದ ತರಳೆಹಲ್ಯಯ ವರದ ೩
ಪತಿಸೇವೆ ಹಿತದಿಂದ ಕೃತನಾಗಿಯಿವಳಿಂದಗತಿಗೆ ಸಾಧನವೆನಿಸೋ ಮರುತಾಂತರಾತ್ಮಹಿತ ವಹಿತವೆರಡರಲಿ ರತಿ ಸಮತೆ ಪ್ರದನಾಗಿಕೃತ ಕೃತ್ಯಳೆಂದೆನಿಸೊ | ಕೃತಿರಮಣದೇವ ೪
ಜೀವ ಅಸ್ವಾತಂತ್ರ ದೇವ ನಿಜ ಸ್ವಾತಂತ್ರಜೀವ ಜಡರೂ ದೇವರಾಧೀನ ವೆಂಬಭಾವನೆ ತಿಳಿಸು ಗುರುಗೋವಿಂದ ವಿಠಲಯ್ಯಸಾವಧಾನದಿಯಿವಳ ಕೈಯನೇ ಪಿಡಿಯೋ ೫

೩೪೪
ಮಧ್ವಾರ್ಯ – ಮಧ್ವಾರ್ಯ ಪ
ಅದ್ವೈತಾರಣ್ಯ | ಪ್ರಧ್ವಂಸಾನಲ ಅ.ಪ.
ಬಡವರು ಎನಿಸಿದ | ನಡುಮನೆ ದ್ವಿಜನಲಿಸಡಗರದಲಿ ಜನ | ಮೃಡನುತ ಗುರುವೇ ೧
ಬಾಲನೆ ವೃಷಭನ | ಬಾಲ ಪಿಡಿದು ದೇ ವಾಲಯ ವನದಲಿ | ಲೀಲೆಯ ತೋರ್ದೆ೨ಹಸು ಕೂಸಾಗಿಯೆ | ಬಿಸಿ ಹುರುಳಿ ಮೆದ್ದೆವೃಷ ವಿಕ್ರಯಿ ಋಣ | ತಿದ್ದಿದೆ ಬೀಜದಿ ೩ಅಚ್ಚ್ಯುತ ಪ್ರೇಕ್ಷರಿಂ | ತಚ್ಚತುರಾಶ್ರಮಸ್ವೇಚ್ಛೇಲಿ ಸ್ವೀಕರ | ಕೃಛ್ರಾದ್ಯಾಚರ ೪
ಇಷ್ಟ ಸಿದ್ದಿಗತ | ಭ್ರಷ್ಟ ವಿಷಯಗಳಎಷ್ಟೊ ತೋರಿ ಸುವಿ | ಶಿಷ್ಟನು ಎನಿಸಿದೆ ೫
ವೇದವ್ಯಾಸರಿಂ | ಬೋಧ ಬದರಿಯಲಿಸಾದರ ಸ್ವೀಕೃತ | $ಗಾಧ ಭಾಷ್ಯಕೃತ ೬
ಮೂಲ ಮೂರು ಹತ್ತು | ಏಳು ಗ್ರಂಥಗಳುಲೀಲೆಯಿಂದ ಕೃತ | ಶೀಲ ಸುಜನರಿಗೆ ೭
ನಾನೆ ದೇವನೆಂ | ದ್ಹೀನ ಮಾಯಿಗಳಗೋಣು ಮುರಿದು ಸು | ಜ್ಞಾನವನಿತ್ತೆಯೊ೮
ಏಕ ವಾಕ್ಯದಿಂ | ದೈತ್ಯವನಳಿಯುತಏಕ ಮೇವ ಹರಿ | ಏಕಾತ್ಮನೆಂದೇ ೯
ಬುದ್ಧ್ಯಾಬ್ಧಿಯು ಬರೆ ಗೆದ್ದು | ವಾದದಲಿಅದ್ವೈತವ ಮುರಿ | ದದ್ವಿತೀಯ ಗುರು ೧೦
ಸೂಕ್ತವ ಜಪಿಸುತ | ಹಸ್ತಗ ಧಾನ್ಯದಿಸತ್ಯ ಕುಸುಮ ಫಲ | ನಿತ್ತು ತೋರ್ದೆ ನಿಜ ೧೧
ಗೋಪಿ ಚಂದನದಿ | ಶ್ರೀಪ ಗೋಪ ಬರೆಶ್ರೀಪತಿ ಸ್ಥಾಪಿತ | ಆಪುರಿ ಉಡುಪಲಿ ೧೨
ಅಷ್ಟಯತಿಗಳಿಂ | ಕೃಷ್ಣ ಪೂಜೆಗಳಸುಷ್ಠು ಗೈಯ್ಯಲೇ | ರ್ಪಟ್ಟಿತು ನಿನ್ನಿಂ೧೩
ಐತರೇಯ ಸುವಿ | ನೀತರೆನಿಪ ತವಛಾತ್ರರಿಗಾಗಿಯೆ | ಕೂತು ಪೇಳ್ದೆ ಗುರು೧೪
ಶೇಷ ಮುಖ್ಯರಾ | ಕಾಶದಿ ನಿಂತುಪದೇಶವ ಕೇಳುತ | ತೋಷವ ಪಟ್ಟರು ೧೫
ತಕಿಟ ತಕಿಟವೆಂ | ದುತ್ಕಟ ನಾಟ್ಯದಿಪ್ರಕಟ ಹರ್ಷ ಸ್ತ್ರೀ | ನಿಕರಾವಳಿಯಿಂ೧೬
ದೇವ ತತಿಯು ತಮ | ದೇವ ವಾದ್ಯದಿಂಪೂವ ಮಳೆಯ ಗರೆ | ಆವೃತನದರಿಂ ೧೭
ಕೃತ ಕಾರ್ಯನೆ ತವ | ಸ್ತುತಿಯಗೈಯ್ಯ ಸುರತತಿಯ ಬದರಿ ಪುರ | ಗತ ನೆಂದೆವಿಸಿದೆ ೧೮
ವ್ಯಾಸಾತ್ಮನು ಗುರು | ಗೋವಿಂದ ವಿಠಲನದಾಸ ಹೃದಯದವ | ಕಾಶದಿ ಭಾಸಿಸು ೧೯

೧೧೭
ಮಧ್ವೇಶ – ಮಧ್ವೇಶಾ ಪ
ಸಿದ್ಧ ಮುನಿಯಲಿಂ | ದುದ್ಬವಿ ಶಾಸ್ತ್ರಗಳಬ್ದಿಯ ರಚಿಸುತ | ಉದ್ದರ ಸುಜನರ ಅ.ಪ.
ವೇದ ವಿಭಾಗಗ | ಳಾದರದಿಂದಲಿಗೈದು ಋಷಿಗಳಿಗೆ | ಭೋದಿಸಿರುವೆ ಹರಿ ೧
ನಿತ್ಯ ವೇದಾರ್ಥದ | ಸತ್ಯವನರಿಯಲುಕೃತ್ಯ ಮೀಮಾಂಸದ ಶಾಸ್ತ್ರ ನಿನ್ನೆಂದೆ ೨
ಸೃಷ್ಟಿಗೀಶ ಹರಿ | ಅಷ್ಟಾದಶವೆನೆಸುಷ್ಠು ಪುರಾಣಗ | ಳಷ್ಟು ವಿರಚಿಸಿದೆ ೩
ಈಶ ಮುಖ್ಯದಿವಿ | ಜೇಶ ನಮಸ್ರ‍ಕತವ್ಯಾಸಾಭಿಧ ಹರಿ | ಪೋಷಿಸು ಎಮ್ಮನು ೪
ಉಂಬುವುಡುವುದು | ಕೊಂಬ ಕೊಡುವದನುಬಿಂಬ ಕೃತಗಳನೆ | ನಂಬಿಗೆ ಈಯೋ ೫
ಮನಚಂಚಲ ತವ | ಗುಣ ರೂಪಗಳನುಗುಣಿಸಲಸಾಧ್ಯವು | ಮನದಿ ನೆಲಸೊ ಹರಿ೬
ಕೀಟನಿಂದ ಭುವಿ | ರೋಟಿಸಿದ ಪ್ರಭುಸಾಟ ರಹಿತ ಹರಿ | ಕೋಟಿ ತಟತ್ಪ್ರಭ ೭
ಸಪ್ತಧಾತು ತನು | ಸಪ್ತ ಕಮಲದಲಿಆಪ್ತನಿದ್ದು ನಿ | ರ್ಲಿಪ್ತನೆಂದೆನಿಸಿದೆ ೮
ಭಾವುಕ ಪ್ರಿಯ ಗುರು | ಗೋವಿಂದ ವಿಠಲನೆವೊಲಿಯದೆ ಭವ | ನೋವನು ಕಳೆಯನು ೯

೨೬೨
ಮನಕಧೀಶನೆನಿಪ ಗುರುವರಾ | ನಿನ್ನ ಪಾದನೆನೆವೆ ಕಳೆಯೊ ಮಲಿನ ಸತ್ವರಾ ಪ
ಅನಿಲ ಸುತನು ಎನಿಸಿ ನೀನು | ಅನಿಲ ನೆನಿಸಿ ಪಾಪತೂಲಘನ ಸುಮೇರುವನ್ನೇ ದಹಿಸೊ | ಅನಲ ಈಕ್ಷಣಾನೆ ಶಿವನೆ ಅ.ಪ.
ಗುಣಗಣಾಂಬು ನಿಧಿಯು ಹರಿಗುಣ | ನೆನಸುವಂಥಮನವನೀಯೊ ನೀನು ಅನುದಿನ ||ಪ್ರಣತ ಕಾಮವ ನಿನ್ನ ಪಾದ | ವನಜ ಭಜಿಪ ಶರಣರೀಗೆತೃಣವು ತೆರನು ಪಾಪ ನಿ೫ಇÀು | ಎಣಿಸಿ ಪೊರೆವುದುಚಿತ೫É್ಲ ೧
ಗೌರಿಧವನೆ ವಿಷಯ ಮೋಹನ | ಕಳೆದು ವೇಗಸೂರಿ ಜನರ ಸಂಗ ಮಾಡುವ ||ಸಾರ ಮನವವಿತ್ತು ಸಲಹೊ | ಕ್ರೂರಿ ಜನರ ದೂರಮಾಡೊಘೋರಾಘೋರ ರೂಪಿ ಹರನೆ | ಮಾರಪಿತನ ಸಖನೆ ರುದ್ರ ೨
ಸುರಜ್ಜೇಷ್ಠ ಭ್ರಾತೃನೆನಿಪನೇ ವ್ಯಾಸ ಕುವರನರಪತೀಗೆ ಭಾಗವತನೇ ||ಅರುಹಿ ಯೇಳು ದಿವಸದಲ್ಲಿ | ಹರಿಯ ಚರಣ ಸೇರಿಸೀದಿಗುರು ಗೋವಿಂದ ವಿಠ್ಠಲಾನ | ಕರುಣ ಪಾತ್ರ ಶುಕ ವಿಭೂತಿ ೩

೬೧೮
ಮನಸಿಜ ಪಿತ ವಿಠಲ | ನೀನಿವನ ಸಲಹೋ ಪ
ಅನುಮಾನ ವಿನ್ನಿಲ್ಲ | ಅಣುಗ ನಿನ್ನವನೋ ಅ.ಪ.
ನೊಂದು ಭವದಲಿ ಬಹಳ | ಇಂದಿರಾರಾಧ್ಯತವದ್ವಂದ್ವಪದ ದಾಸ್ಯಮನ | ಮಂದಿರದಿ ಬೇಡ್ವಾಕುಂದುಗಳ ನೆಣಿಸದಲೆ | ತಂದೆ ಕೈ ಪಿಡಿಯುತ್ತಛಂದದಲಿ ಸಲಹೋ ಕೃಪೆ | ಸಿಂಧು ಮೂರುತಿಯೇ ೧
ಸ್ವಪ್ನ ಸೂಚನೆಯಂತೆ | ಒಪ್ಪಿದಂಕಿತವಿತ್ತುಅರ್ಪಿಸಿಹೆ ನಿನ್ನಡಿಗೆ | ಸರ್ಪ ಶಯನಾ |ಒಪ್ಪಿಡಿಯ ಅವಲಿಗ್ಯೆ | ಅಪ್ಪಾರವಿತ್ತಿರುವೆಇಪ್ಪರಿಯ ಮಹಿಮೆಗಳು | ಇನ್ನಾರಿಗುಂಟೋ ೨
ವಿಷ ಅಮೃತವಾದಂತೆ | ದುಷ್ಕರ್ಮ ಫಲರಹಿತಎಸೆಗುತ್ತ ಸಂತಾಪ | ನಶಿಸುವಂತೆಸಗೋಅಸಮ ಮಹಿಮನೆ ಭಕ್ತಿ | ಪಾಶಕ್ಕಾವಶನಾಗಿಮಿಸುಣಿ ಮೇಲ್ಮಣಿಯಂತೆ | ಭಾಸಿಸೋ ಹರಿಯೇ ೩
ಭೇದ ಪಂಚಕ ತಿಳಿಸು | ಮೋದ ಮುನಿಮತದೀಕ್ಷೆಸಾಧಿಸಿವನಲಿ ಹರಿಯೆ | ಯಾದವೇಶಾನೀದಯಾ ಪೂರ್ಣ ನೆಂ | ದಾದರದಿ ಪೊಗಳುವೆನೊಖೇದ ಮೋದ ದ್ವಂದ್ವ | ಬುದ್ಧಿ ಸಮವೆನಿಸೋ ೪
ಆವದೇಶವು ಇರಲಿ | ಆವಕಾಲವು ಇರಲಿನೀವೊದಗೊ ಸ್ರ‍ಮತಿ ಪಥಕೆ | ಕೋವಿದರ ಒಡೆಯಾಕಾವ ಕೊಲ್ಲುವ ಗುರೂ | ಗೋವಿಂದ ವಿಠ್ಠಲನೆಭಾವದಲಿ ಮೈದೋರೇ | ಓವಿ ಪ್ರಾರ್ಥಿಸುವೆ ೫

೬೧೭
ಮನುಜ ಮೃಗವೇಷ | ವಿಠಲ ಪೊರೆ ಇವಳಾ ಪ
ಅನಘ ಅನಿಲಾಂತಸ್ಥ | ಗುಣಪೂರ್ಣ ಹರಿಯೇ ಅ.ಪ.
ಗುರುಮಹಿಮೆ ಅರಿಯದಲೆ | ಚಿರಕಾಲ ಬಾಳಿಹಳೊಮರುತಾಂತರಾತ್ಮಹರಿ | ವರಭೋಗಿ ಶಯನಾತರತಮದ ಸುಜ್ಞಾನ | ಎರಡು ಮೂರ್ಭೇದಗಳಅರುಹಿ ನೀ ಪೊರೆ ಇವಳ | ಸರ್ವ ಸುಲುಭಾಖ್ಯ ೧
ಬದಿಗ ನೀನಾಗಿದ್ದು | ಮುದುಡ ಜೀವಿಯ ಮನಕೆವದಗಿ ಬಾರದಲೇವೆ | ಅಜ್ಞಾನ ಮುಸುಕೀಸದಮಲಾಂತಃ ಕರಣ | ದುದಯವನೆ ಕಳಕೊಂಡುವಿಧವಿಧದಿ ಪರಿತಪಿಸಿ | ನೊಂದಿಹಳ ಪೊರೆಯೋ ೨
ಸರ್ವ ಬಗೆಯಲಿ ವಂದ್ಯ | ಸರ್ವಂತರಾತ್ಮಕನೆನಿರ್ವಿಕಾರನೆ ನಿನ್ನ | ನಾಮ ಸುಧೆಯಾಸರ್ವದಾ ಉಣಿಸಿ ಪೊರೆ | ಇವಳ ಎನೆ ಬಿನ್ನವಿಪೆಸರ್ವಸುಂದರ ಗುರು | ಗೋವಿಂದ ವಿಠಲಾ ೩

೧೧೮
ಮನ್ನೀಸಯ್ಯಾ – ಮನಸಿಜನಯ್ಯಾ |ಮೌನಿಜನರ ಪ್ರಿಯ ಪಂಡರೀರಾಯಾ ಪ
ತನು ಸದನದಿ ನಿನ್ನ ಚಿನುಮಯ ರೂಪವಅನುಭವಿಸುವ ಪರಿ | ಅನಘ ನೀ ಕರುಣಿಸಿ ಅ.ಪ.
ಎರಡು ನಾಲ್ಕರಿಂದ | ಮೆರೆದು ಗರ್ವಿತನಾಗಿಪರಿಪರಿ ಮೋಹದಿ ಮುಕುಂದಾ |ಶಿರ ಸುಜನರ ಪದ | ಸರಸಿಜ ಕೆರಗದೆಜರೆದೆನವರ ಹರಿಯೇ – ಹೇ – ದೊರೆಯೇ ||ಪರಿಪರಿಯವಗುಣ | ಭರಿತನಾಗಿರುವೆನ್ನಕರಪಿಡಿದೆತ್ತದೆ – ಕೊಸರಿಪುದುಚಿತವೆತುರುಕರು ಕೂಡದ | ಪರಿ ಏನಿದು ಹರಿಮೊರೆ ಕೇಳೆನನ್ನದು | ಪೊರೆವುದು ಜೀಯಾ ೧
ತಾಪತ್ರಯ ಬಲು | ದೀಪನವಾಗಿದೆನೀ ಪರಿ ಪೋಷಿಸು | ನಿನಗ್ವಶನೂ ||ಗೋಪರಿ ಪಾಲಕ | ಗೋಪಿ ಜನರ ಪ್ರಿಯದ್ರೌಪತಿ ಗೋಪ್ತಾ | ಬಲು ಆಪ್ತಾ |ಕೈಪಿಡಿಯುವುದೀ | ಪಾಪಿಯಾದೆನ್ನನುಶ್ರೀಪತಿ ಶ್ರೀಹರೇ | ಮುರಾರೇ ||ಲೇಪಿಸು ಕೀರ್ತಿಕ | ಲಾಪಗಳ್ನಿನ್ನ ಸು-ರಾಪಗಪಿತ ಶ್ರೀ ಪಾವನ ಮೂರ್ತೇ ೨
ಭವ ಶರ ನಿಧಿಯಲಿ | ಭವಣೆಯ ಪಡಲಾರೆಭವ ಜನಕನ ಪಿತಾ | ಹೇ ದಾತಾ |ಹವಣೆಯು ದಾವುದು | ಭವವನುತ್ತರಿಸಲುತವಪದ ಸ್ಮರಿಸುತಾ | ಸ್ಮರಿಸುತ್ತಾ ||ಸವನ ಮೂರರೊಳು | ಅವಶದಿ ಕೀರ್ತಿಸಿಬೆವರೆಂಬ ವಿರಜೆಯ | ಅವಗಾಹಿಸುವನುಭವವ ಕೊಡಿಸು ಹರಿ | ಅವನಿಜೆ ವಲ್ಲಭಪವನ ವಂದಿತ ಗುರು | ಗೋವಿಂದ ವಿಠಲಾ ೩

೬೧೯
ಮನ್ಮಥಪಿತ ವಿಠಲ ನೀನಿವಳ ಸಲಹೊ ಹರಿಯೇಮನ್ಮನೋರಥ ಭಿನ್ನಪವ ಸಲಿಸೋ ಪ
ಜನ್ಮಜನ್ಮಾಂತರದ ಪುಣ್ಯ ಸಂಚಯ ಫಲಿಸಿನಿನ್ನ ದಾಸತ್ವದಲಿ ಕಾಂಕ್ಷೆ ಬಹುಯಿರಿಸೆನನ್ನೆಯಿಂದಲಿ ಪೂಜೆ ಪರಿಕರಂಗಳ ಕೊಂಡುಸ್ವಪ್ನ ಸೂಚಕದಂತೆ ನಿನ್ನರ್ಚನೆಯ ಕಾತುರಳ ೧
ತರತಮದಿ ಸುಜ್ಞಾನ ಹರಿಗುರೂ ಸದ್ಭಕ್ತಿಪರಮ ವೈರಾಗ್ಯವನು ವಿಷಯಾದಿಗಳಲೀಪರತತ್ವ ಹರಿಯೆಂಬ ವರಮತಿಯ ನೀನಿತ್ತುಗುರುಮಧ್ವ ಮತದಲ್ಲಿ ಪರಮದೀಕ್ಷೆಯನೀಯೋ ೨
ಪತಿ ಸುತರು ಹಿತರಲ್ಲಿ | ಗತಿದಾತ ಗುರುವಿನೊಳುಕ್ಷಿತಿರಮಣ ತವವ್ಯಾಪ್ತಿ ಮತಿಯ ಪಾಲಿಸುತಗತಿ ದೋರೊ ಸನ್ಮುಕುತಿ ಪಥವನೀ ಸಲಿಸುತ್ತಹುತವಹಕ್ಷಾಂತರ್ಗತ ಮನದಿ ನೆಲಸುತಲೀ ೩
ಅಂಜನಿಯ ಸುತನೆನಿಸಿ ಸಂಜೆಚರ ಭಂಜನಧಸಂಜಯ ನಿಕೇತನನು | ಸಂಜೀವ ಪಿತನೇ |ನಂಜು ಸಂಸ್ರ‍ಕತಿ ಬಂಧ ಮೋಚಕೇಚ್ಛೆಯ ಮಾಡಿಅಂಜಿಕೆಯನೆ ಕಳೆಯೊ | ಕಂಜಾಕ್ಷ ಹರಿಯೇ ೪
ಪಾವಮಾನಿಯ ಪ್ರೀಯ ಭಾವುಕಳ ಹೃದ್ಗತನೆನೀವೊಲಿದು ತವಸ್ಮರಣೆ ಸರ್ವದಾ ಸರ್ವತ್ರಈವುದಿವಳಿಗೆ ಎನ್ನ ಬಿನ್ನಪವ ಸಲ್ಲಿಪುದುಗೋವಿದಾಂಪತಿಯೆ ಗುರು ಗೋವಿಂದ ವಿಠಲಾ ೫

೧೧೯
ಮಲಗಲೇತಕೆ ಹರಿಯೆ | ಚಲುವ ಚನ್ನಿಗ ದೊರೆಯೆ ಪ
ಎಲರುಣೀವರ ಶಯ್ಯ | ಬಳಲಿಕೇಕಯ್ಯಾ ಅ.ಪ.
ವೇದ ಕದ್ದನ ಹರನೆ | ಭೂಧಾರಿ ಗಿರಿಧರನೆಭೂದರಿಸಿ ಭೊಮ್ಮನಿಗೆ | ಆದರದಿ ಕೊಟ್ಟವನೇ |ಭಾದಿಸೇ ಭಕ್ತ ಪ್ರ | ಹ್ಲಾದನನ ಕಾಯ್ದವನೆಮೋದದಿಂದಲಿ ಬಲಿಯ | ಪಾದವಾ ಮೆಟ್ಟಿದನೆ ೧
ಗಂಡು ಗೊಡಲಿಯ ಪಿಡಿದು | ಭಂಡ ಭೂಭುಜ ತರಿದುಲಂಡ ರಾವಣ ಶಿರ | ಚೆಂಡಾಡಿದ ಧೊರೆಯೇಕಂಡ ಕಂಡವರ ಮನೆ | ಗಂಡಲೆದು ಪಾಲ್ಮೊಸರಉಂಡುಂಡು ಚೆಲ್ಲಾಡಿ | ಭಂಡು ಮಾಡಿದೆ ಕೃಷ್ಣ ೨
ಮುಪ್ಪೊರರ ಸತಿಯರನು | ಅಪ್ಪಿ ವ್ರತ ಭಂಗವನುತಪ್ಪದೇ ಮಾಡಿ ಹಯ | ವಪ್ಪಿ ಏರ್ದವನೇಇಪ್ಪರಿಯ ಚರ್ಯ ದಿಂ | ಸೊಪ್ಪಾಗಿ ಮಲಗಿದೆಯೋಗುಪ್ತ ಮಹಿಮನೆ ದೇವ | ಅವ್ವ ಶ್ರೀರಂಗ ಪುರಗ ೩
ಬದರಿ ಯಾತ್ರೆಯ ಗೈಸೊ | ಮುದದಿಂದ ತಕ್ಕೈಸೊವಿಧಿ ಭವಾದಿಗಳೊಡೆಯ | ಪದ ತೋರೊ ಜೀಯತ್ರಿದಶ ವಂದಿತ ಮಹಿಮ | ಬದಿಗ ನೀನಿರೆ ಯೆಮ್ಮಎದುರಾಳಿ ತತ್ವೇಶರ್ | ಬಡಿಸ ಬಲ್ಲರೆ ಕ್ಲೇಶ ೪
ಪೂರ್ವ ವಾಹಿನಿ ಎನಿಪ | ಕಾವೇರಿ ತೀರಗನೆಪೂರ್ವದಿವಿಜರ ಹರನೆ | ಸಾರ್ವಭೌಮಾಊರ್ವಿ ಯೊಳ್ಪೆಸರಾದ | ಪಾರ್ವ ಗೌತಮ ವರದಕೋರ್ವೆ ತವ ಚರಣ ಗುರು | ಗೋವಿಂದ ವಿಠಲಾ ೫

೧೭೬
ಮಲ್ಲಮರ್ಧನ ರಾಣಿ – ಮಹ ಲಕ್ಷುಮೀ ಪ
ಖುಲ್ಲ ಜನರೆದೆದಲ್ಲಣೆಯೆ | ಕೊಲ್ಲಾಪುರ ನಿಲಯೆ ಅ.ಪ.
ಪ್ರಕೃತಿ ಚೇತಾತ್ಮೆ ಜಡ | ಪ್ರಕೃತಿ ದ್ರವ್ಯದ ಕಾರ್ಯವಿಕೃತಿ ಗೊಳಿಸುತ ಮೊದಲು | ವೈಕೃತವು ತದನಂತರಾ |ವ್ಯಕುತಿ ಗೈಯುತ ಲಿಂಗ | ಪ್ರಕೃತಿ ಕಾರ್ಯವ ಮಾಡಿಸುಕೃತ ತ್ರಿವಿಧರ ಸಹಜ | ಪ್ರಕೃತಿ ಶಬ್ದನಿಗೀವೇ ೧
ಕಾಮಾದಿ ಮಾತ್ಸರ್ಯ | ಸ್ತೋಮ ಪರಿಭವ ಕಾರ್ಯನೀ ಮಾಳ್ಪೆ ಪ್ರಜ್ಞಾಂತ | ಪ್ರೇಮ ರೂಪದಲೀಈ ಮಹತ್ತುಪಕಾರ | ಸಾಮಸನ್ನುತ ಹರಿಯನೇಮದಿಂದಲಿ ಗೈವ | ಭಾಮೆಗಾ ನಮಿಪೇ ೨
ಹರಿಕಾರ್ಯ ಸತ್ಸಾಧ್ಯೆ | ವಿರಜೆ ರೂಪದಿ ಹರಿಯೆ ||ವರ ಮಂದಿರಾವರಣ | ನೆರೆ ವಿರಚಿಸೀ |ಸರುವ ಸಜ್ಜೀವ ತವ | ಸರಿತದೋಲ್ ಅವಭೃತವವಿರಚಿಸಲು ಜಡ ಪ್ರಕೃತಿ | ಹರಿಸುವೆಯೆ ದಯದೀ ೩
ಶ್ರೀ ಸಿತ ದ್ವೀಪಾದಿ | ಆ ಸುರೂಪವ ತಾಳಿವಾಸುದೇವನ ಸೇವೆ | ಆಶೆಯಲಿ ಗೈವೇ |ಈಸು ತವ ಮಹಿಮೆಯನು | ತೋಷದಲಿ ಸ್ತುತಿಪರಭಿಲಾಷೆ ಸಲಿಸುತ ತೋರ್ಪೆ | ವಾಸುದೇವನ ರೂಪ ೪
ಅಮ್ಮ ತವ ಮಹಿಮೆಯನು | ಬ್ರಹ್ಮಾದಿ ಸುರ ನಿಕರನಿರ್ಮಮದಿ ಪೊಗಳುತ್ತ | ಶ್ರಮ್ಮಿಪರು ಜಗವಾ |ಅಮ್ಮಹ ದೈವ ಗುರು | ಗೋವಿಂದ ವಿಠಲನಧರ್ಮ ಸತಿ ಮನ್ಮನದಿ | ನಿಮ್ಮ ಪತಿ ತೋರೇ ೫

೬೨೧
ಮಾಧವ ಭೂ ವರಾಹ | ವಿಠಲ ಪೊರೆ ಇವನ ಪ
ಮೋದ ಮುನಿ ಸನ್ನುತನೆ | ಆದಿ ಮೂರುತಿಯೇ ಅ.ಪ.
ಸ್ವೋಚಿತಸು ಕರ್ಮದಲಿ | ಊಚ ದೀಕ್ಷೆಯನಿತ್ತುನೀಚೋಚ್ಚತರತಮವ | ವಾಚಿಸಿವನಲ್ಲೀಪ್ರಾಚೀನ ದುಷ್ಕರ್ಮ | ಮೋಚನೆಯಗೈಸವ್ಯಸಾಚೀ ಸಖನೆ ಹರಿಯೆ | ಕೀಚಕಾರಿ ಪ್ರೀಯಾ ೧
ಸತಿ ಸುತರು ಬಂಧುಗಳು | ಹಿತ ಅಹಿತರಿವರಲ್ಲಿವ್ಯಾಪ್ತ ಶ್ರೀ ಹರಿಯೆಂಬ | ಮತಿಯ ಕೊಟ್ಟವಗೇ ||ಸತತ ತವನಾಮಾ | ಮೃತದ ಸವಿದೋರೋವಿತತ ಮಹಿಮೋ ಪೇತ | ಪ್ರತಿ ರಹಿತ ದೇವಾ೨
ಸಾರಶೃತಿ ಪ್ರತಿಪಾದ್ಯ | ವೀರ ರಾಮಾರ್ಚಕರುತೋರೆ ಪಥ ಸ್ವಪ್ನದಲಿ | ಸಾರಿ ಬಂದಿಹನೋಹೇ ರಮಾಪತೆ ನಿನ್ನ | ಚಾರು ದಾಸ್ಯವನಿತ್ತುಘೋರ ಭವ ಕೂಪಾರ | ಪಾರು ಮಾಡಯ್ಯಾ೩
ಹರಿಕಥಾಮೃತ ಸಾರ | ವಾರವಾರಕೆ ಉಣಿಸಿದಾರಿ ದೀಪಕನಾಗೊ | ಮಾರಮಣನೆ ದೇವಾತಾರಕನು ನಿನ್ಹೊರತು | ಆರು ಇಲ್ಲವುಯೆಂದುಪ್ರಾರ್ಥಿಸುವೆ ನಿನ್ನಡಿಗೆ | ವೀರರಘು ಪತೆಯೇ೪
ಭೂವಿಬುದ ಸಂಪ್ರೀಯ | ಭೂವರಾಹಾತ್ಮಕನೆಭಾವುಕಗೆ ಮೈದೋರಿ | ಕಾವುದೆಂದೆನುತಾಈ ವಿಧದ ಭಿನ್ನಪವ | ನೀ ವೊಲಿದು ಸಲಿಸುವುದುಗೋವಿದಾಂ ಪತಿ ಗುರೂ | ಗೋವಿಂದ ವಿಠಲಾ ೫

೬೨೦
ಮಾಧವ ವಿಠಲ ನೀದಯದಿ ಕಾಪಾಡೊ ಇವಳ ಪ
ಯಾದವೇಶನೆ ಸ್ವಾಮಿ | ಹೇಸದಾಗತಿವಂದ್ಯಪಾದ ಸೇವಕಳ ಮನದಾಶೆ ಸಲಿಸುತ್ತ ಅ.ಪ.
ಏಸು ಜನ್ಮದ ಪುಣ್ಯ | ರಾಶಿಗಳು ಫಲಿಸುತಿರೆದಾಸದೀಕ್ಷೆಯಲಿ ಮನ | ದಾಶೆ ತೋರಿಹಳದೋಷರಾಶಿಯ ತೂಲ | ರಾಶಿಗಳನ ಪರಿಯಗೈಸಿ ನೀನಾಗಿ ತವ | ದಾಸಿ ಎಂದೆನಿಸೋ ೧
ನೀಚೋಚ್ಚ ತರತಮದಿ | ಯೋಚನೆಯ ನೆಲೆಗೊಳಿಸಿಪ್ರಾಚೀನ ಕರ್ಮಾಳಿ | ಮೋಚನೆಯ ಗೈಯ್ಯೇ |ಖೇಚರೊತ್ತಮ ವಾಹ | ಕೀಚಕಾರಿ ಪ್ರಿಯನೆಯಾಚಿಸುವೆನೋ ಸವ್ಯ | ಸಾಚಿ ಸಖ ಕೃಷ್ಣ ೨
ಜ್ಞಾನಗಮ್ಯನೆ ದೇವ | ಜ್ಞಾನಿಜನ ಸುಪ್ರೀಯಆನಂದ ತೀರ್ಥ ಮತ | ದಾನಂದ ಉಣಿಸೀಗಾನಲೋಲನೆ ಇವಳ | ಗಾನಕೊಲಿಯುತ ನೀನುಧ್ಯಾನ ಗೋಚರನಾಗೊ | ಹೃತ್ಕಂಜದೊಳಗೇ ೩
ಸುಸ್ವತಂತ್ರನೆ ದೇವ | ಅಸ್ವತಂತ್ರಳ ಕಾವಸರ್ವ ಭಾರವು ನಿಂದೆ | ಶರ್ವವಂದ್ಯಾಸರ್ವವ್ಯಾಪಕನಾಗಿ | ಸರ್ವಜ್ಞ ನೀನಿರಲುಅಶ್ವಮೊಗನೇ ಕಾಯೊ | ವಿಶ್ವಸೃಜಿ ದೇವ ೪
ತೈಜಸನೆ ನೀನಾಗಿ | ಯೋಜಿಸಿದ ಪರಿಯಂತೆಭ್ರಾಜಿಸುವ ಅಂಕಿತವ | ನೈಜ ಭಕ್ತಳಿಗೇಯೋಜಿಸಿಹೆ ಮರುತನಿಂ | ಪೂಜ್ಯನೇ ಪರಿಪೂರ್ಣತೇಜಾತ್ಮನಾದ ಗುರು ಗೋವಿಂದ ವಿಠಲಾ ೫

ಇದು ಆಚಾರ್ಯರ ನೇರ ಶಿಷ್ಯರಾದ
೩೪೫
ಶ್ರೀಮಾಧವ ತೀರ್ಥರ ಸ್ತೋತ್ರ
ಮಾಧವ ಸುತೀರ್ಥ ಗುರು | ಭಕ್ತಜನಕಲ್ಪತರುಆದಿ ಗುರುಗಳ ಕರಜ | ಮಾಡೆನ್ನ ವಿರಜ ಪ
ಭೀಮ ಸತ್ತಟವಾಸ | ಕೈಮುಗಿದೆ ಮೌನೀಶಸಾಮ ಸನ್ನುತ ಚರಣ | ಮೌನದಿಂ ಭಜನನೀ ಮಾಡಿ ಆನಂದ ವಾರಿಧೀಯಲಿ ಮಿಂದುಆ ಮಹಿಮೆ ಪೊಗಳಲೂ | ಎನಗಾವ ಅಳಲೂ ೧
ಜ್ಞಾನಾಯು ರೂಪಕನೆ | ಪ್ರಾಣಪತಿ ಎನಿಪನ್ನನೀನಾಗಿ ತೋರುವಲಿ | ನಿನ್ನ ದಯವಿರಲಿ |ಮೌನೀಶ ಇದ ಹೊರತು | ಅನ್ಯಬೇಡೆನು ಒಳಿತುಪ್ರಾಣ ಮುಖ ತತ್ವೇಶ | ರೊಲಿಮೆ ಸಹ ಆಶ ೨
ಆನಂದ ತೀರ್ಥ ಮತ | ಶಿಷ್ಟರಲಿ ಭೋಧಿಸುತದೀನಜನ ಪರಿಪಾಲ | ಹರಿಭಕ್ತ ಲೋಲಾ |ಜಾಣ ಗುರುಗೋವಿಂದ | ವಿಠಲ ಮಹಿಮಾನಂದನೀನಾಗಿ ಕೊಟ್ಟೆನ್ನ ಉದ್ಧರಿಸೊ ಘನ್ನ ೩

೬೨೨
ಮಾಧವ ಸ್ವಾಮಿ ವಿಠಲ | ಪೊರೆಯ ಬೇಕಿವಳಾ ಪ
ಹೇ ದಯಾಂಬುದಿ ಹರಿಯೆ | ಆದಿ ಮೂರುತಿಯೆ ಅ.ಪ.
ಸಾದು ಸಂತರ ಸೇವೆ | ನೀ ದಯದಿಕೊಟ್ಟಿವಳಮೋದಮುನಿನುತದೀಕ್ಷೆ | ಹಾದಿಯಲ್ಲಿರಿಸೋಬೋಧವಾಗಲಿ ತತ್ವ | ತರತಮವು ಪಂಚಕೆಯುಸಾಧುವಂದಿತ ಹರಿಯೆ | ಬಾದರಾಯಣನೇ ೧
ದಾಸತ್ವ ದೀಕ್ಷೆ ಆ | ಯಾಸ ವಿಲ್ಲದೆ ಸಾಗಿಕೇಶವನ ಒಲಿಮೆಗೇ | ಅವಕಾಶವಾಗೀಹೇಸಿ ಸಂಸಾರದಿ ನಿ | ರಾಶಿಯಾಗಲಿ ಎಂದುಆಶಿಸುವೆ ಶ್ರೀ ಹರಿಯೆ | ವಾಸವಾನುಜನೇ ೨
ಇಂದ್ರಿಯವ್ಯಾಪಾರ | ಉಪೇಂದ್ರನದು ಎಂಬುವಚೆಂದುಳ್ಳ ಸ್ರ‍ಮತಿಯಿತ್ತು | ತಂದೆ ಕೈಪಿಡಿಯೋವಂದ್ಯಳೆಂದೆನಿಸು ಸ್ತ್ರೀ | ವೃಂದದೊಳಗೆ ಹರಿಯೆಮಂದಾಕಿನೀ ಜನಕ | ಇಂದಿರಾನಂದ ೩
ಜೀವ ಅಸ್ವಾತಂತ್ರ | ದೇವನಿಜ ಸ್ವತಂತ್ರಜೀವ ಜಡರುಗಳೆಲ್ಲ | ದೇವರಾಧೀನಾಭಾವ ವೃದ್ಧಿಯಗೈಸಿ | ಭವನಾವೆ ಎಂದೆನಿಸೊದೇವದೇವೇಶಗುರು | ಗೋವಿಂದ ವಿಠಲಾ ೪
ದುರಿತ ದುಷ್ರ‍ಕತಹಾರಿ | ಸರ್ವಜ್ಞ ಮೂರುತಿಯೆಹರಿನಾಮ ಕವಚವನು | ತರಳಗೇ ತೊಡಿಸೀಪರಿಹರಿಸೊ ಭವಭಂದ | ಮರುತಾಂತರಾತ್ಮಕನೆಕರುಣಾಳು ಕರಿವರದ | ಮೊರೆ ಕೇಳೊ ಹರಿಯೇ ೫

೪೬೧
ಮಾನವಿ ದಾಸರ | ನಿ ಸೇರೋಹೀನ ಮನುಜ ನಿನ್ನಘವನೆ ನೀಗುವ ಪ
ಕೃತ ಯುಗದಲಿ ಹಿರಣ್ಯಜನೆನಿಸೀವಿತತ ಮಹಿಮ ಹರಿಯನೆ ಭಜಿಸೀ ||ಸತತದಿ ಸುಜನರ ಸಂತವಿಸಿ ಸಿರಿಪತಿಯ ಸೇವಿಸೆ ಸಹ್ಲಾದ ನೆನಿಸಿದಾ ೧
ಎರಡೊಂದ್ಯು ಯುಗದಲಿ ಶಲ್ಯನಾಗಿ ಜನಿಸೀಕುರುಪಗೆ ಋಣರೂಪ ಸೇವೆ ಸಲಿಸಿ ||ಉರುತರ ಭಕುತಿಲಿ ಶೌರಿಯ ನೆನೆಯುತಹರಿಪದ ಸೇರಿದ ನೃಪಕುಲ ಮೌಳೀ ೨
ವರಕಲಿಯಲಿ ದ್ವಿಜನಾಗವತರಿಸೀನರಮೃಗಾಖ್ಯಸುತ ಶ್ರೀನಿವಾಸನೆನಿಸೀ ||ವರದೇಂದ್ರ ಯತಿಯಲಿ ತರ್ಕವ ಕಲಿತುದುರುಳರ ಮುರಿದತಿ ಗರ್ವದಿ ಮೆರೆದಾ ೩
ಭೃಗ್ವಂಶಜ ವಿಜಯಾಖ್ಯ ದಾಸ ಬಂಧೂಋಗ್ವಿನುತನ ಪ್ರಾಕೃತದೊಳು ಪಾಡೆ ||ದಿಗ್ಗಜ ಗರ್ವದಿ ಗೆಜ್ಜೆಯ ಕಟ್ಟಿದಅಗ್ಗದ ನಟನಿವನೆನುತಲಿ ಜರೆದಾ ೪
ದಾಸರ ನಿಂದ್ಯದಿ ಬಂದುದು ಅಪಮೃತ್ಯುದೋಷನೀಗೆ ಗೋಪಾಲರ ಭಜಿಸೆನ್ನ ||ಔಷಧ ಪೇಳಲು ದಾಸರ ನಾಲ್ದಶವರ್ಷಾಯುಷ್ಯವ ಪೊಂದಿದವರನಾ೫
ಇಂದು ಭಾಗದಲಾನಂದದಿ ಮೀಯೇಬಂದೊದಗಿತು ಜಗನ್ನಾಥ ನಾಮಾ ||ಪೊಂದುತ ಅಂಕಿತ ಕುಣಿಯುತ ಪಾಡುತಇಂದಿರೆಯರಸನ ಛಂದದಿ ತುತಿಸಿದ ೬
ಪಾವನತರ ಹರಿಕಥೆ ಸುಧೆ ರಚಿಸೀಪವನ ಮತದವರನ್ನುತ್ತರಿಸೀ ||ಪವನನ ಹೃತ್ಕಂಜದಿ ನೆಲೆಸಿಹ ಗುರುಗೋವಿಂದ ವಿಠಲ ಪದಾಬ್ಜವ ಸೇರಿದ ೭

೧೨೦
ಮಾನಸಾಂಡದಿ ಕಾಂಬೊನ್ಯಾರೇ | ನಮ್ಮಮೌನಿ ಧ್ಯಾನಾಗಮ್ಯ ಕೃಷ್ಣಮೂರುತಿಯೇ ಪ
ಗುಂಗುರು ಕುಂತಲ ಶೋಭಾನೇ | ನಮ್ಮಗಂಗಾ ಜನಕ ಗೋಪಿರಂಗಾನೇ |ಮಂಗಳ ಮಹಿಮ ಶುಭಾಂಗಾನೇ | ಹೃದ-ಯಾಂಗಣದಲಿ ನಿಂತು ಕುಣಿವಾನೇ ೧
ಕೊಳಲ ಕೈಯಲಿ ಧರಿಸ್ಯಾನೇ | ಚಂದ್ರಬೆಳಕಾಮಿತದಲಿ ಕುಣಿದಾನೇ |ಕಲಕುತ್ತಲೆನ್ನಯ ಮನವಾನೇ | ಹರಿಚಳಕದಿ ಕುಣಿವಂತೆ ಮಾಡ್ಯಾನೇ ೨
ಅಗಣಿತ ಮಹಿಮ ಲಾವಣ್ಯಾನೇ | ಹರಿಸುಗುಣಿ ಕಾಲಲಿ ಗೆಜ್ಜೆ ಕಟ್ಯಾನೇಝಗಿ ಝಗಿಸುವ ಹಾರ ಪದಕಾನೇ | ಕೃಷ್ಣಮಘವನಾರ್ಚಿತ ದಿವ್ಯ ಚರಣಾನೇ ೩
ಯಾದವರೊಡೆಯನು ಬಂದಾನೇ | ಗುರುವಾದಿರಾಜರ ಮಾತು ಸಲಿಸ್ಯಾನೇಸಾದರದಲಿ ಕೈಯ್ಯ ಪಿಡಿದಾನೇ | ಎನ್ನಮೋದದಿ ಕುಣಿವಂತೆ ಮಾಡ್ಯಾನೇ ೪
ಗೋವಳರೊಡಯನು ನಗುತಾನೇ | ಹೃದಯನೋವನು ಕಳೆಯಲು ಬಂದಾನೇಸಾವನೀಪರಿ ಕರುಣಿ ಕಳೆದಾನೇ | ಗುರುಗೋವಿಂದ ವಿಠಲ ಹಯಾಸ್ಯಾನೇ ೫

೨೨೭
ಮಾರುತ ಸತಿ ಮದ್ಬಾರ ನಿನ್ನದಮ್ಮಾ | ಕರುಣದಿ ಪೊರೆಯಮ್ಮ ಪ
ಸರಸಿಜಾಕ್ಷ ಹರಿಭಕುತಿ ನೀಡೆ ತಾಯೇ | ಆರತರನು ಕಾಯೇ ಅ.ಪ.
ಕಾಳಿ ದ್ರೌಪತಿ ಶಿವಕನ್ಯೆ | ಮನ್ಮನದಲಿ ನಿಲು ಘನ್ನೆಫಾಲಾಕ್ಷನ ಪ್ರಿಯ ಜನನೀ | ದಯದಲಿ ಪೊರೆ ಕರುಣೀ ||ನಳನಂದಿನಿ ಇಂದ್ರಸೇನೆ ತಾಯೇ | ಕಲಿ ಕಲ್ಮಷ ಕಳೆಯೇಏಳಲ ಮಾಡದೆ ನೀಲವರ್ಣನ ತೋರೇ | ಕರುಣಾರಸ ಬೀರೇ ೧
ತುತಿಸುವ ನಿನ್ನನು ಪನ್ನಗಾರಿದೇವಿ | ವೇದಾತ್ಮಿಕ ದೇವೀ |ಶೃತಿ ಪುರಾಣತತಿಗಳ ನ್ವೊರೆಯೆ | ಭವ ತಾಪವ ಕಳೆಯೇ ||ಸತತ ನಿನ್ನ ಪದರತಿ ಕೊಡುಮಾತೆ | ಖಗ ಪನ್ನಗ ಮಾತೇ ವಿತತ ಮಹಿಮ ಹರಿ ಚ್ಯುತಿ ರಹಿತನ ತೋರೆ ಅಘಹರೆ ಭವ ದೂರೇ೨
ಕೃತಿ ರಮಣನ ಪ್ರಿಯ ಪುತ್ರಿ | ನರಹರಿ ಗುರುಭಕ್ತೀಪ್ರಥಮಾಂಗನ ಪ್ರಿಯರಾಣೀ | ನಮಿಸುವೆ ಬ್ರಹ್ಮಾಣಿ ||ಪತಿತನ ಪಾಲಿಸೆ ಪರಮ ಕಲ್ಯಾಣಿ | ಪಾವನೆಯ ಭಾವಿವಾಣಿಗತಿಪ್ರದ ಗುರು ಗೋವಿಂದ ವಿಠಲನ್ನ | ಪದ ತೋರಿಸೆ ಘನ್ನ ೩

೨೭೮
ಮಾರ್ಗದರ್ಶಕೆ ದೇವಿ ಮಾರ್ಗ ತೋರಮ್ಮ |ಸರ್ವ ಪೂರ್ವದಿ ಕವ್ಯ ಬಾಲನೆಂಬನ ಮಗಳೇ ಪ
ಹರಿದೀಕ್ಷೆ ಹರಿತತ್ವ ನಿರ್ಣಯಾದಿಗಳಿರುವನರರು ಕಲಿಯುಗದಲ್ಲಿ ದುರ್ಲಭರು ಎಂದು |ಪರಿಪರಿಯ ಚಿತ್ರಿಸುತ ಸದ್ಬೋಧ ಮಾಡಿರುವೆಹರಿ ಪದಾಬ್ಜದಿ ಭಕುತಿ ಎಷ್ಟಿಹುದೊ ನಿನ್ನಲ್ಲಿ ೧
ಶೇಷಾಚಲಕೆ ಬಂದು ಆ ಸುತೀರ್ಥವು ಕಪಿಲಲೇಸಾಗಿ ಮಜ್ಜನವಗೈದು ತಪವಾ |ಸಾಸಿರೊರ್ಷವು ದಿವ್ಯ ಏಕ ಚಿತ್ತದಿ ಗೈದುಭಾಸುರ ಸ್ತೋತ್ರದಿ ಹರಿಯ ತೋಷಿಸಿದೇ ೨
ತಂದೆ ತಾಯಿಯು ನೀನು ಬಂಧು ಬಳಗವು ನೀನುಎಂದೆಂದಿಊ5ಭ್ರಾತ ವಲ್ಲಭನು ನೀನೇ |ಇಂದಿರೇಶನ ಹೊರತು ಮಂದಿ ಬೇರಿಲ್ಲೆನಗೆಎಂದು ನೀತುತಿಸಿ ಹರಿ ಸಂದರ್ಶನವ ಪಡೆದೇ ೩
ದ್ವಾಪರದಲಾ ಕವ್ಯ ೫À್ನಜಿತು ನೃಪನಾಗೆರೂಪಲಾವಣ್ಯಾತಿಶಯಗಳಿ೫ |ಭೂಪ ಕುವರಿಯು ಆಗಿ ನೀಲಾಖ್ಯೆ ಎನಿಸುತ್ತಶ್ರೀ ಪತಿಯ ಕೈ ಪಿಡಿಯೆ ಮನವ ನೀ ಮಾಡ್ಡೇ ೪
ದೈತ್ಯ ಸಪ್ತಕರೇವೆ ಗೂಳಿಗಳು ತಾವಾಗಿಸತ್ಯ ಹರಿ ದ್ವೇಷವನೆ ಸಾಧಿಸುವೆವೆಂದೂನಿತ್ಯ ಪುಷ್ಟಾಂಗದಲಿ ಬೆಳೆಯುತ್ತ ನೃಪನಲ್ಲಿಕೃತ್ಯ ಸ್ವಯಂವರ ಕೇಳಿ ಹರ್ಷಿತರು ಆಗೀ ೫
ವಿಪರೀತ ಮತಿಯುಳ್ಳ ಅಪರಿಮಿತ ಬಲತೋರ್ವಸಪುತ ಗೂಳಿಗಳನ್ನೆ ಆರು ಬಂಧಿಪರೋ |ನೃಪನೆಂದ ಸುತೆ ನೀಲೆ ಕನ್ಯೆ ಕೊಡುವೆನು ಅವಗೆನೃಪ ನಿಂತು ಪಣತೊಟ್ಟ ಕೌತುಕವ ಕೇಳೀ ೬
ಆರು ಬಂದವರೆಲ್ಲ ಹೋರಿಗಳ ಪಿಡಿಯಲ್ಕೆವೀರ್ಯ ಸಾಲದೆ ಮರಳಿ ಹೋಗುತಿರಲೂ |ಮಾರ ಪಿತ ಶಿರಿ ಕೃಷ್ಣ ಹೋರಿ ನಾಸಿಕಗಳಿಗೆದಾರಗಳ ಬಿಗಿಯುತ್ತೆ ಬಂಧವನ ಗೈದಾ ೭
ದೇವಿ ಸುಂದರಿ ನೀಲೆ ದಿವ್ಯ ಹಾರವ ಪಿಡಿದು ದೇವ ದೇವೇಶ ಶಿರಿ ಕೃಷ್ಣ ಕಂಠದಲೀಹಾವ ಭಾವದಿ ಬಂದು ಅರ್ಪಿಸಲು ತಕ್ಷಣದಿದೇವ ವಾದ್ಯವು ಮೊರೆಯೆ ಪೂವ ಮಳೆ ಬಿತ್ತು೮
ಕೃಷ್ಣ ಮಡದಿಯರಾರು ಮಂದಿಯೊಳು ನೀಲಾಖ್ಯೆಲಗ್ನದುತ್ಸವ ಕೇಳ್ದ ಭಕುತ ಜನರಾ |ಭಗ್ನ ಗೈಸುತ ಪಾಪ ಮಗ್ನವಾಹುದು ಮನವುಕೃಷ್ಣ ಗುರು ಗೋವಿಂದ ವಿಠಲ ಪದದಲ್ಲೀ ೯

೬೨೩
ಮಾವಿನುತ ಹರಿ ವಿಠಲ ಸಲಹ ಬೇಕಿವನ ಪ
ನೀ ವೊಲಿಯದಿರಲ್ಯಾರುಗತಿ | ಜೀವಿಗಳಿಗಿರುತಿಹರೊ ದೇವ ಅ.ಪ.
ದುರುಳ ಕಶ್ಯಪು ತನ್ನ | ತರಳನನು ಪರಿಪರಿಯಉರುತರದಿ ಭಾದಿಸಲು | ಪೊರೆದ ತೆರದಂತೇಶರಣಜನ ವತ್ಸಲಗೆ | ನರಹರಿಯೆ ಕುಲದೈವಕರುಣದಿಂದಲಿ ನೀನೆ | ಪೊರೆಯ ಬೇಕಿವನ ೧
ಶ್ರೀಕರಾಂಬುಜ ಸೇವ್ಯ | ಪ್ರಾಕ್ಕು ಕರ್ಮವ ಕಳೆದುಲೌಕಿಕಗಳೆಲ್ಲ ವೈ | ದಿಕವು ಎಂದೆನಿಸುವತೋಕನಿಗೆ ಸಾಧನವ | ನೀಕೊಟ್ಟು ಪಾಲಿಪುದುಆ ಕಮಲ ಭವ ಮುಖ್ಯ | ಸಕಲ ಜಗಕರ್ತಾ ೨
ಭಕ್ತಜನ ಸಂಘಕ್ಕೆ | ತೆತ್ತಿಗನು ನೀನೆನಿಪೆಇತ್ತಿವಗೆ ವೈರಾಗ್ಯ | ಭಕ್ತಿ ಜ್ಞಾನಗಳಬತ್ತಿಸಿ ಭವಾಂಬುಧಿಯ | ಎತ್ತು ಕರ ಪಿಡಿದಿವನಮೃತ್ಯುಂಜಯಾರಾಧ್ಯ | ಉತ್ತಮೋತ್ತಮನೆ ೩
ತಾರತಮ್ಯ ಜ್ಞಾನ ಮೂರೆರಡು ಭೇಧಗಳವಾರವಾರಕೆ ತಿಳಿಸಿ | ಮಾರ ಪಿತ ಹರಿಯೇತೋರುತವರೂಪ ಹೃ | ದ್ವಾರಿಜದಲೆಂದೆನುತಮಾರಾರಿ ಬಿಂಬನಿಗೆ | ಪ್ರಾರ್ಥಿಸುವೆ ಹರಿಯೆ ೪
ಪ್ರಿಯತಮನು ನೀನೆಂಬ ಸಥೆಯಿಂದ ಬೇಡುವೆನೊವಯನ ಗಮ್ಯನೆ ಹರಿಯೆ | ವಾಯ್ವಂತರಾತ್ಮಾಹಯಮೊಗಾಭಿಧ ಗುರು ಗೋವಿಂದ ವಿಠ್ಠಲನೆದಯಬೀರಿ ಶರಣನ್ನ ಉದ್ಧರಿಸೊ ದೇವಾ೫

Leave a Reply

Your email address will not be published. Required fields are marked *