Categories
ರಚನೆಗಳು

ಗುರುಗೋವಿಂದವಿಠಲರು

೪೪
ಕಾರಣಾತ್ಮಕ ಭಕ್ತವತ್ಸಲ | ಪೊರೆವುದೆನ್ನನು || ಕರುಣಾರ್ಣವನೆ ಪ
ಸೃಷ್ಟಿ ಸ್ಥಿತಿ ಲಯ | ಅಷ್ಟಕರ್ತೃ ನಿ | ರ್ದುಷ್ಟ ಮಹಿಮ ಸು | ಪ್ರೇಷ್ಟ ಮೂರುತಿವ್ಯಷ್ಠಿರೂಪಿ ಸ | ಮಷ್ಟಿ ತನು ಭವ | ಕಷ್ಟ ಕಳೆದು ಸಂ | ತುಷ್ಟಿ ಗೈಸೆನ್ನ ೧
ಪಕ್ಷಿವಾಹನ | ಅಕ್ಷರೇಡ್ಯ ಸು | ಪಕ್ಷಪಾತಿಯ | ಲಕ್ಷ್ಮೀವಕ್ಷನೆ ||ಇಕ್ಷುಶರ ಪಿತ | ಲಕ್ಷಣಾಗ್ರಜ | ರಾಕ್ಷಸರ ಬಹು ಶಿಕ್ಷಕ | ಜಗ ರಕ್ಷಕ ೨
ಜೀವರಂತರ | ಭಾವ ಪ್ರೇರಕ | ಓವಿ ತುತಿಪರ | ಭಾವಕೊಲಿಯುವನೆ ||ನೀವೊಲಿದು ಭವ | ನೋವ ಕಳೆವುದು | ಶ್ರೀ ವರನೆ ಗುರು | ಗೋವಿಂದ ವಿಠಲ ೩

೪೬
ಶ್ರೀ ಧನ್ವಂತ್ರಿ ಸ್ತೋತ್ರ(ನಾರಾಯಣಾಚ್ಯುತ ವಿಠಲ ದಾಸಿಗಾಗಿ)
ಕಾರುಣ್ಯ ನಿಧಿ ತವಾ | ಪಾರ ಮಹಿಮೆಯ ಕೇಳಿಸಾರಿದೆನೊ ಪಾದಾಬ್ಜ ಶರಣೆಂದು | ಶರಣೆಂದೆಶ್ರುನಾಥಪಾರು ಮಾಡಾಕೆಯ ವೃಜಿನವ ೧
ಆಂತ್ರಕೆಟ್ಟಿಹುದೆಂದು | ತಾಂತ್ರಿಕರು ಪೇಳುವರುಆಂತ್ರ ಸರಿಮಾಡುವ ಕಾರ್ಯವ | ಕಾರ್ಯನಿರ್ವಹಿಸಿ ಸ್ವಾ-ತಂತ್ರ ಪುರುಷಾ ದಯತೋರೋ ೨
ಆರಿಗೋಸುಗವಲ್ಲ | ನಾರಾಯಣ್ಯಚ್ಯುತನೆಸಾರಿ ತವ ಪಾದ ಭಜಿಸೂವ | ಭಜಿಸೂವ ದಾಸಿಗೆಈ ರೀತಿ ಭವಣ್ಯಾಕೊ ಧನ್ವಂತ್ರಿ ೩
ಆರೋಗ್ಯ ಆಯುಷ್ಯ | ಆರಾಧಕರ್ಗೀವೆಈರನುತ ಧನ್ವಂತ್ರಿ ಕರುಣಾಳು | ಕರುಣಾಳು ಸರ್ವಜ್ಞಆರೋಗ್ಯ ದಾಸಿಗೆ ಕೊಡು ಎಂಬೆ೪
ಧಂ ಎಂದು ಉಚ್ಛರಿಸೆ | ಧ್ವಂಸ ಮಾಡುವೆ ರೋಗಧನಂತ್ರಿಯೆನ್ನೆ ಭವರೋಗ | ಭವರೋಗ ವಾರಿಸುವಧನ್ವಂತ್ರಿ ರೂಪಿ ನಮೊ ಎಂಬೆ ೫
ಕರದಲ್ಲಿ ಸುಧೆ ಕಲಶ | ಧರಿಸಿರುವ ಬಗೆಯೇನೊಶರಣರ್ಗೆ ಸುಧೆಯಾನುಣಿಸುತ್ತ | ಉಣಿಸುತ್ತಲಮರತ್ವಕರುಣಿಸುವಿ ಎಂದೂ ಶ್ರುತಿ ಸಿದ್ಧ ೬
ಇಂತಿರಲು ದಾಸಿಸ | ತ್ಪಂಥಗಳನ್ನುದ್ದರಿಸೊಅಂತು ತವ ಚರಣಾಬ್ಜ ಬೇಡುವೆ | ಬೇಡುವೆನೋಪಾದಾಕ್ರಾಂತಳಿಗೆ ಸುಧೆಯಾ ನೂಣೀಸೊ೭
ಚಂದ್ರ ನಿವಹದ ಕಾಂತಿ | ಯಿಂದಮೃತ ಕಿರಣದಿಂಹೊಂದ್ಯಮಿತ ಸುಖರೂಪಿ ಉಲ್ಲಾಸವೀವುತ್ತಚಂದುಳ್ಳ ಸುಧೆ ಕಲಶ ಪಿಡಿಯುತ್ತ ೮
ಆತು ಜ್ಞಾನಾಂಕವನು | ಆತ್ಮಸ್ಥಶೀತಾಂಶುಧೌತ ಮಂಡಲಗ ಲಕ್ಷ್ಮೀಶ | ಲಕ್ಷ್ಮೀಶ ಹರಿಯನ್ನುಮಾತು ಮಾತಿಗೆ ನಾನು ಸ್ಮರಿಸೂವೆ ೯
ಉತ್ತಮಾಂಗದಲಿರುವ | ಹತ್ತೆರಡು ದಳ ಕಮಲಪ್ರಸ್ಥಿತನು ಧನ್ವಂತ್ರಿ ಮಕರಂದ | ಮಕರಂದ ಸ್ರವಿಸುವನಭಕ್ತಿಯಲಿ ಸ್ಮರಿಸೋದು ರೋಗಾರ್ತೆ ೧೦
ಅಲ್ಲಿಂದ ಭ್ರೂ ಮದ್ಯ | ಚೆಲ್ವನಾಲ್ದಳ ಪದ್ಮಅಲ್ಲಿಂದ ಲಾಲುಸ್ಥ ದ್ವಿದಳಾಬ್ಜ | ದ್ವಿದಳಾಬ್ಜ ಮುಂದಕ್ಕೆಚೆಲ್ವಾಷ್ಟ ದಳ ಕಮಲ ಹೃದಯಸ್ಥ ೧೧
ಹೃದಯದಿಂದಲಿ ನಾಭಿ | ಸದನ ಷಟ್ದಳ ಕಮಲಗುದವು ಮೂಲಾಧಾರಾನಾಲ್ದಳವುನಾಲ್ದಳ ಕಮಲಸ್ಥಬದಿಗನು ಧನ್ವಂತ್ರಿ ರೂಪೀಯು ೧೨
ರೂಪೀ ಈ ದೇಹವನು | ವ್ಯಾಪಿಸುತ ತಾನಿದ್ದುಕಾಪಾಡಲೋಸುಕದಿ ಮಕರಂದ | ಮಕರಂದ ಸುರಿಸುವವ್ಯಾಪಾರದಿಂ ಜೀವರುದ್ಧಾರ ೧೩
ಹತ್ತಿರುವ ಅಜ್ಞಾನ | ವತ್ತಿಬಹ ಭಯದುಃಖಮತ್ತೆ ಮಹವಿಷವು ಇದರಿಂದ | ಇದರಿಂದ ಪರಿಹಾರ ಭಕ್ತಿಯಿಂ ಭಜಿಸೇ – ಸುಖ ಸೌಖ್ಯ ೧೪
ಶರಣರ್ಗೆ ತಪ್ಪದೆಲೆ | ಗೆರೆವೆ ಸೌಖ್ಯಂಗಳನುಗುರು ಗೋವಿಂದ ವಿಠಲಾ | ವಿಠ್ಠಲ ಧನ್ವಂತ್ರಿಮರುತಾಂತರಾತ್ಮಾ ಸಲಹಯ್ಯ೧೫

೪೫
ಕಾರ್ತ ಸ್ವರೇತ್ಯಾದಿ ವಿತ್ತ ಅಸಾರ್ಥಕತೆಯ ತಿಳಿದು ಪುರುಷಾರ್ಥ ಪ್ರದನು ಶ್ರೀ | ಹರಿಯ ಪ್ರಾರ್ಥಿಸೋ ಪ
ಮಡದಿ ಮನೆ ಮಕ್ಕಳೆಲ್ಲ | ಬಿಡದೆ ನಿನ್ನ ಸೇವಿಸೋರುಹಿಡಿಯ ತುಂಬ ಹೊನ್ನು ಹಣವು | ಬಿಡದೆ ಬರುತಿರೇ ೧
ಪ್ರಾಣ ಉತ್ಕ್ರಮಣ ಸಮಯ | ಮಾನಿನೀಯು ರೋದಿಪಾಳುಪ್ರಾಣ ಪೋದ ತನುವ ಸೋಕೆ | ತಾನೆ ಒಲ್ಲಳು ೨
ಹಿಂದೆ ಬಪ್ಪುದಲ್ಲ ದ್ರವ್ಯ | ಮುಂದೆ ಗೈದ ಪುಣ್ಯ ಪಾಪಒಂದು ಬಿಡದೆ ಉಣಬೇಕೊ | ಮಂದ ಮಾನವ ೩
ಬಿಂಬ ಚಲಿಸೆ ತಾನು ಪ್ರತಿ | ಬಿಂಬ ಚಲಿಪ ಮತಿಯೆ ನಿಜವುಉಂಬು ಕೊಂಬ ಕೊಡುವುದೆಲ್ಲ | ಬಿಂಬದೆನ್ನೆಲೋ ೪
ಇಂದಿರೇಶನರ್ಚಿಸೂತ | ಇಂದೆ ಗಳಿಸೊ ಪುಣ್ಯ ದ್ರವ್ಯನಂದ ಕಂದಗರ್ಪಿಸೋದು | ದ್ವಂದ್ವ ಕರ್ಮವ ೫
ತನುವು ಮನವು ನಿನ್ನದಲ್ಲ | ಗುಣದ ಕಾರ್ಯ ನಿನ್ನದಲ್ಲನಾನು ನನ್ನದೆಂಬ ಮತಿಯು | ಹೀನ ತಿಳಿಯೆಲೋ ೬
ನಿತ್ಯ ಬದ್ಧ ಜೀವಿ ನೀನು | ಸತ್ಯ ಸ್ವಾತಂತ್ರ ಹರಿಯುದತ್ತ ಕರ್ತೃತ್ವವಿಹುದು | ಕೃತ್ಯ ಉಂಬಲು ೭
ಹರಿಯ ರೂಪ ಹೃದಯದಲ್ಲಿ | ಪರಿಕಿಸಾದೆ ಗತಿಯು ಇಲ್ಲಕರುಣಿಸಿಹನು ಮನುಜ ದೇಹ | ಹರಿಯ ಕಾಣಲು ೮
ಮಧ್ವ ಮತದಿ ಜನ್ಮವಿರಲ | ಅವಿದ್ಯೆಗಳನ ನೀಗಿಕೊಂಡುಮಧ್ವಮುನಿಯ ಕರುಣ ಪಡೆದು | ಸಿದ್ಧನಾಗೆಲೋ ೯
ಭಾವಿ ಮಧ್ವ ಚರಣ ಕಮಲ | ಭಾವದಿಂದ ಪೂಜಿಸಾದೆಸಾವು ಹುಟ್ಟು ತಪ್ಪೊದಿಲ್ಲ | ಕೋವಿದನಾದರು೧೦
ಅಂಶದಿಂದ ಇರುತ ತಾವು | ಹಂಸ ಮಂತ್ರ ಸರ್ವರಲ್ಲಿವಿಂಶತ್ಯೇಕ ಸಾಸಿರಾವು | ಅಂತೆ ಷಟ್ಯತ ೧೧
ದಿನಕೆ ಇಂತು ಜಪವ ಚರಿಸಿ | ವಿನಯದಿಂದನಿರುದ್ದನೀಗೆಎಣಿಕೆ ಮಾಡಿ ಅನಿಲ ಸಹಿತ | ತಾನೆ ಅರ್ಪಿಪ ೧೨
ಪರ್ವಕಾಲದಿದನು ತಿಳಿದು | ಶರ್ವ ವಂದ್ಯ ಶೇಷಶಾಯಿಸರ್ವ ಕಾರ್ಯಗಳನು ಲಾ | ತವ್ಯ ಗಿತ್ತಿಹ ೧೩
ದೈತ್ಯ ಜನರು ಅರಿಯದಂತೆ | ಯುಕ್ತನಾಗಿ ಬ್ರಹ್ಮ ವಾಯುಆಪ್ತ ವಾಕ್ಯ ಮೀರದಂತೆ | ಗುಪ್ತ ಚರಿಸುವ ೧೪
ತತ್ವಕಿದು ವಿರುದ್ಧವಲ್ಲ | ವ್ಯಕ್ತ ವಿಹುದು ಲೋಕದಲ್ಲಿಮತ್ತೆ ಕ್ಷಣಕೆ ಒಪ್ಪೆನೆಂದು | ಇತ್ತು ಸ್ಥಾನವ ೧೫
ಗೊತ್ತು ಮಾಡಿ ಪೋಗುವಂತೆ | ಭ್ರಾತೃ ವಾದಿರಾಜರೀಗೆಇತ್ತು ಪದವಿಗಳನು ತಾವು | ಸೂಕ್ತ ಪೇಳ್ವರು ೧೬
ಭಾವಿ ಭಾರತೀಶ ದ್ವಾರ | ಸರ್ವ ಕರ್ಮ ವೀಯೆ ಗುರುಗೋವಿಂದ ವಿಠಲ ಗತಿ ಇತ್ತು | ಕಾವ ಬಿಡದಲೆ ೧೭

೪೭
ಕಾಲ – ನಾಮಕಾ | ತ್ರಿಸಂಧ್ಯಾಕಾಲ – ಚಾಲಕಾ ಪ
ಕಾಲ ಕರ್ಮಗಳಿ | ಗಾಲಯ ರೂಪನೆಬಾಲನ ಬಿನ್ನಪ | ಪಾಲಿಸಬೇಕೈ ಅ.ಪ.
ಲಿಂಗಾ – ಕುಪಚಯ – ಗೈಯ್ಯುತಲೀರಂಗಾ – ಜೀವರಾ ||ಅಂಗ ಸೃಜಿಸೆ ಭವ | ಭಂಗದೊಳಗೆ ಮಹಮಂಗನ ತೆರನಹೆ | ಶೃಂಗಾರ ಮೂರ್ತೇ ೧
ಕಾಯಾ – ನಿ ಹಿತಾ | ನಾಡಿಗಳಲಿಧೇಯಾ – ವಿಹಿತಾ ||ಆಯಾ ನಾಡಿಗತ | ಧೇಯ ತೀರ್ಥ ಧ್ಯಾನೊಪಾಯ ತಿಳಿಸಿ ಕಾಯೊ | ವಾಯು ಬೃಹತಿ ಪ್ರಿಯ ೨
ಸ್ನಾನಾ ಪಾವನಾ | ತವ ಮಹಿಮಾಧ್ಯಾನೋಪಾಸನಾ ||ತ್ರಾಣವೀಯೊ ನಿತ್ರಾಣನೆನಗೆ ಜಗತ್ರಾಣ ಪ್ರಾಣ ಗುರು ಗೋವಿಂದ ವಿಠಲ ೩

೪೮
ಕಾಲನೇಮಿ ಕಾಡುತಿರುವನೊ | ಕೇಳೊ ಶೌರಿಕಾಲನೇಮಿ ಕಾಡುತಿರುವನೊ ಪ
ಕಾಲನೇಮಿ ಕಾಡುತಿಹನು | ಶೀಲಗೆಡಿಸಿ ಮನದ ಚರ್ಯತಾಳಲಾರೆ ಅವನ ಬಾಧೆ | ಕೊಲ್ಲು ಬೇಗ ಅವನ ಹರಿಯೇ ಅ.ಪ.
ಸ್ನಾನಗೈದು ನಿನ್ನ ಪೂಜೆಯ | ಧ್ಯಾನವು ಆವಾಹನಾದಿಯಏನು ನೋಡಿದೆ ತ್ವರ್ಯ ಬರುವ | ಧೀನಪಾಲ ಕಾಯೊ – ನೀನೆ ೧
ದೈತ್ಯ ಪರಿವಾರದೊಡನೆಯ |ಕೃತ್ಯ ಮನದಿ ಚರಿಸಿ ಪೋಪನುದೈತ್ಯ ಹರನೆ ಹಯವದನ | ಸತ್ಯ ಮಾಡೊ ನಿನ್ನ ವಚನ ೨
ಮುರುಳಿ ಧರನೆ ಮಾನಸಾಂಡದ | ಧೊರೆಯೆ ನೀನು ದೂರ ನೋಳ್ಪುದೆಗುರು ಗೋವಿಂದ ವಿಠಲ ನಿನ್ನ | ಚರಣ ದಡಿಗೆ ಸೇರಿಸೆನ್ನ ೩

೨೩೧
ಕಾಲಾಭಿಮಾನಿಯೇ ಕೇಳೆನ್ನ ಬಿನ್ನಪವಾ ಪ
ಕೀಲಿಸಿತು ಯೆನ್ನಾಯು | ಕಾಲಾತ್ಮಕನ ತೋರೋ ಅ.ಪ.
ಖೇಟಪತಿ ನೀ ನನ್ನ ಪಾ | ಪಾಟವಿಯ ಕುಡಿನೋಟದಿಂದಲೆ ದಹಿಸಿ | ಶ್ರೇಷ್ಠ ನೆನಿಸೋ |ಸಾಟಿಯುಂಟೇ ನಿನಗೆ ಮೂ | ರ್ಕೋಟಿ ರೂಪಧರಖೇಟ ಮುಖ್ಯ ಪ್ರಾಣ | ಪ್ರೇಷ್ಟ ಸುತನೆನಿಸಿ ೧
ಬಲಿಯು ವಂಚನೆಯಿಂದ | ಹರಿಯ ಮುಕುಟಾಭರಣಸುಲಭದಲಿ ಕದ್ದು ತಾ | ಕೆಳ ಲೋಕ ಪೊಗಲು |ಬಲದೊಳವನನ ನೂಕಿ | ಕಲಿತನವ ತೋರ್ಯವಗೆಲಲಿತ ವಹ ಶಿರದೊಡವೆ | ಸುಲಭದಲಿ ತಂದೇ ೨
ವರ ಕಶ್ಯಪಾತ್ಮಜನೆ | ಹರಿಗೆ ವಾಹನನಾಗಿಚರಿಪೆ ತ್ರೈಜಗವನ್ನು | ಶರಣ ಪರಿಪಾಲಾ |ಗುರು ಗೋವಿಂದ ವಿಠಲನ | ಕರುಣ ನಿನ್ನೊಳಗೆಂತೊಹರಿಯೊಡನೆ ನೀನಾಗಿ | ದರುಶನವನೀಯೊ ೩

೪೯
ಶ್ರೀ ವಿಷ್ಣ್ವಾಷ್ಟಕ (ಪಾಲಯಾಚ್ಯುತ ಎಂಬತೆ)
ಕಾವುದೋ ಹರಿ | ಕಾವುದೋ ಹರಿಕಾವುದೊ ಕರುಣಾರ್ಣವ ಪ
ಜೀವರಂತರ ಬಾಹ್ಯ ನೆಲಸಿಹಶ್ರೀವರಾ ಶ್ರೀ ಭೂಧರಾ ಅ.ಪ.
ನಿತ್ಯ ನೂತನ | ನಿರ್ವಿಕಾರನೆ | ಸತ್ಯನೆ ನೀ ನಿತ್ಯನೇಭೃತ್ಯ ವತ್ಸಲ | ಭವವನಾನಲ | ಕೃತ್ಯನೆ ದಯ ಪೂರ್ಣನೇ ||ಮೃತ್ಯು ವರ್ಜಿತ | ಪ್ರತ್ಯಗಾತ್ಮನೆ | ಕರ್ತನೇ ನಿರ್ಲಿಪ್ತನೇಸತ್ಯ ಕಾಮ ಶರಣ ಶಾಶ್ವತ | ಸ್ತುತ್ಯನೇ ಜಗ ವ್ಯಾಪ್ತನೇ ೧
ಸರ್ವ ಪ್ರೇರಕ ಸರ್ವ ಚೇಷ್ಟಕ | ಸರ್ವ ನಿಯಮನ ಮಾಳ್ಪನೇಸರ್ವ ವಾಚ್ಯನೆ ಅಮಿತ ತೇಜನೆ | ಸರ್ವರನ ಸಲಹೂವನೇ ||ಸರ್ವ ಶಬ್ದ ಪ್ರವೃತಿ ಕಾರಣ | ಸರ್ವಗುಣ ಪರಿಪೂರ್ಣನೆಸರ್ವತೊಮುಖ ಬಾಹು ಚರಣನೆ | ಶರ್ವ ವಂದ್ಯ ಸುಮಹಿಮನೆ೨
ವೀತಭಯ ವಿಶ್ವೇಶ ವಿಧಿಪಿತ | ಮಾತುಳಾಂತಕ ಪಾಲಕಾಭೂತ ಭಾವನನಂತ ಭಾಸ್ಕರ | ದ್ಯೋತಕ ಮಹಕೌತುಕ ||ಗೌತಮ ಪ್ರಿಯ ಮಡದಿ ಕಾಯ್ದಾ | ನಾಥ ರಕ್ಷಕ ಶಿಕ್ಷಕಾಖ್ಯಾತ ರಾವಣ ಕುಂಭಕರ್ಣನ | ಹಂತಕ ವಿಶ್ವಾಸಕ ೩
ಪ್ರಣತ ಕಾಮದ ಮಣಿ ವಿಭೂಷಿತ | ಭಕ್ತ ಭಯಹರ ಶ್ರೀಧರಘೃಣಿ ಗುಣತ್ರಯ ದೂರ ವರ್ಜಿತ | ಬಂಧಕ ಭವ ಮೋಚಕಅಣು ಮಹದ್ಗತ ವ್ಯಾಪ್ಯವ್ಯಾಪಕ | ಸಾಧಕ ಖಲ ಬಾಧಕ |ತೃಣ ಮೊದಲು ಬ್ರಹ್ಮಾಂತ ಜೀವರ | ಪಾಲಕ ಪರಿಪೋಷಕ ೪
ಮೀನ ಕಮಠನೆ ಕೋಲ ನರಹರಿ | ವಾಮನಾ ಸುಭಾಮನಾರೇಣುಕಾತ್ಮಜ ರಾವಣಾಂತಕ | ದಾಶರಥಿ ನರ ಸಾರಥೀ ||ಧೇನುಕಾಸುರ ಮಥನ ತ್ರಿಪುರವ | ಹಾನಿಗೈದನೆ ಬುದ್ಧನೆಮಾನುಷಾಕೃತಿಲ್ಹಯವನೇರಿದ | ಕಲ್ಕಿಯೇ ಕಲಹ ಪ್ರಿಯೆ ೫
ಉದಿತ ಭಾಸ್ಕರನಂತ ತೇಜನೆ | ಉದರ ನಾಮಕ ಪಾಚಕಸುದತಿಯರು ಹದಿನಾರು ಸಾವಿರ | ವಾಳ್ದನೇ ಬ್ರಹ್ಮಚರ್ಯನೇ||ಮಧು ವಿರೋಧಿಯೆ ಮಧ್ವಮಾನಸ | ಮಂದಿರ ಬಹುಸುಂದರಹೃದಯದಲಿ ನೀ ಬದಿಗನೆನಿಸುತ | ಪೂಜಿತ ಸುರ ಪೂಜಿತ ೬
ಸೃಷ್ಟಿ ಸ್ಥಿತಿ ಮೊದಲಾದ ಅಷ್ಟಕ | ಕರ್ತೃಕ ಪ್ರಾವರ್ತಕಅಷ್ಟದಳ ಸತ್ಕಮಲಧಿಷ್ಠಿತ | ಪ್ರಾಜ್ಞಾನೇ ವಿಶ್ವಜ್ಞನೇಜಿಷ್ಣು ಸಖ ಶ್ರೀಕೃಷ್ಣ ಕೃಷ್ಣೆಯ | ಭೀಷ್ಟದಾ ಶಿಷ್ಟೇಷ್ಟದಾಪುಷ್ಟ ಮಹಿಮಾ ಪ್ರವಿಷ್ಟ ರೂಪನ | ವಿಷ್ಟನೇ ನಿವಿಷ್ಟನೇ ೭
ಗೋವಿದಾಂಪತಿ ಗೋವಪಾಲಕ | ಮಾವ ಮಾರಕ ಕಾರಕ ||ಭೂವರಾಹ ಸುಭಾವಜಾರಿಜ | ಷಣ್ಮುಖ ಪರಿಪಾಲಕ ||ಗೋವಿಂದ ಗುರು ಗೋವಿಂದವಿಠಲ | ಗೋವ್ಗಳ್ವರ್ಧನ ಗಿರಿಧರಪಾವಮಾನಿಯ ಪ್ರೀಯ ಸಿರಿಧರ | ಕಾವ ಶರಣರ ಭವಹರಾ ೮|

ನದಿಗಳ ಸ್ತೋತ್ರ
ಕಾವೇರಿ
ಕಾವೇರೀ – ಕಲುಷ ಸಂಹರಳೆ ಕಾವೇರಿ ಪ
ಕಾವೇರಿ ಲೋಕೋಪಕಾರಿ | ಬಂದುಸೇವಿಸುವರ ದುರಿತಾರಿ | ಆಹಭೂವಲಯದಿ ನಿನ | ಗಾವಲ್ಲಿ ಸರಿಗಾಣೆಶ್ರೀ ವಿಧಿ ಸುತೆ ನಮ್ಮ | ಕಾವುದು ಬಿಡದಲೆ ಅ.ಪ.
ಅಮಿತಾಭ ಕವೇರ ನೃಪನು | ಪುಣ್ಯಶಮದಮದಿಂದಯುತನು | ಸಾರಿಹಿಮನಗ ತಪ್ಪಲುಗಳನು | ದಿವ್ಯಸಮಶತದಶ ವರ್ಷಗಳನು | ಆಹಸುಮನ ಸೋತ್ತಮನಾದ | ಬೊಮ್ಮನ ಧೇನಿಸಿಅಮಮಸುಘೋರವು | ವಿಮಲ ತಪವ ಗೈದ ೧
ಮೆಚ್ಚುತ ತಪಸೀಗೆ ಚತುರ | ಮುಖಇಚ್ಛಿಸಿದನು ಕೊಡೆ ವರ | ಭಕ್ತನಿಚ್ಛೇಸಲು ಮುಕುತಿ ವರ | ಅದುಅಚ್ಚ್ಯುತ ಕೊಡುವಂಥ ವರ | ಆಹಉಚ್ಚರಿಸಿದ ಬೊಮ್ಮ | ಅಚ್ಚ್ಯುತ ಮಾಯ ತನ್‍ಇಚ್ಛೆಯ ಸುತೆ ನಿನ | ಮೆಚ್ಚು ಪುತ್ರಿಯಹಳು ೨
ಸ್ಮರಣೆ ಮಾತ್ರದಿ ವಿಷ್ಣುಮಾಯಾ | ದಿವ್ಯತರುಣಿ ರೂಪದಿ ಬ್ರಹ್ಮರಾಯ | ನೆದುರುಕರವ ಮುಗಿದು ಪೇಳು ಜೀಯಾ | ಎನೆಬರೆದನಾ೫ದು ಕವೇರ್ಕನ್ಯಾ | ಆಹಸರಿತು ರೂಪದಿ ಮೋಕ್ಷ | ವಗ್್ವ೫ರ ವಹುದು ನೀಸರುವ ತೀರಥ ಮಯಿ | ಪರಿವುದು ಈ ಪರಿ ೩
ಎರಡು ಅಂಶವು ನಿನಗಿಹುದೂ | ಒಂದುಸರಿತಾಗಿ ಪ್ರವಹಿಸುವೂದು | ಮತ್ತೆತರುಣಿ ರೂಪದಿ ಪತ್ನಿಯಹುದು | ಮುನಿವರ ಕುಂಭ ಸಂಭವಗಹುದು | ಆಹಕರೆಸಿ ಲೋಪಾಮುದ್ರೆ | ಮೆರೆವುದು | ಪತಿವ್ರತೆಶಿರೋಮಣಿ ಎನಿಸಿ ನೀ | ಮೆರೆವುದು ಭುವಿಯಲ್ಲಿ ೪
ವರವಿತ್ತು ಮರೆಯಾಗೆ ಅಜನು | ನೃಪವರ ಸುತೆಯೊಡನೆ ಪೊರಟನು | ಕಾಲಕರ ಮರತನದಿ ಕಳೆದಾನು | ಮುಂದೆವ್ಯೆರಾಗ್ಯದಿಂ ಪೇಳಿದಾನು | ಆಹಪರಿಶುದ್ಧನಿಹೆ ನಿನ್ನ | ದರುಶನ ಮಾತ್ರದಿಪರಮ ನಿಷ್ಕಾಮದ | ಕರ್ಮವನೆಸಗುತ್ತ ೫
ಹರಿಧ್ಯಾನದೊಳು ಬಲುರತ | ನಿರೆನರಪತಿ ಹರಿಲೋಕ ಗತ | ನಾಗೆತರುಣಿ ಕಾವೇರಿಯು ಸ್ಥಿತ | ಘೋರವರ ತಪವನ್ನು ಗೈಯ್ಯುತ್ತ | ಆಹಇಗ್5ರಲೀ ಪರಿ | ಹರಿ ದರುಶನ ವೀಯೆವರ ಮುಕ್ತಿ ಮಾರ್ಗವ | ಪರಿ ಪರಿ ಬೇಡಿದಳ್ ೬
ಸರಿದ್ರೂಪಳಾಗಿನ್ನು ಪರಿದೂ | ಹರಿಶರಣರ ಪಾಪವ ತರಿದೂ | ಮತ್ತೆಸರುವರ ತಾಪವ ಕಳೆದೂ | ಇನ್ನುಸರಿತು ಗಂಗಾದಿಗೆ ಹಿರಿದೂ | ಆಹವರ ಕೀರ್ತಿಯಿಂದಲಿ | ಮೆರೆಯುತ ಲೋಕೋಪಕರಳೆನಿಸಿ ಪ್ರವಹಿಸಿ | ಶರಧಿಯ ಸೇರ್ವಂಥ ೭
ಸ್ಮರಣೆ ಮಾತ್ರದಿ ಪಾಪನಾಶಾ | ಮಾಳ್ಪಗಿರಿಯುಂಟು ಸಹ್ಯ ಆದ್ರೀಶ | ಅಲ್ಲಿತರು ರೂಪಮಲಕ ದೊಳ್ವಾಸಾ | ನಿನ್ನಚರಣ ಕಮಲವ ವಾಣೀಶಾ | ಆಹವಿರಜೆ ಪುಣ್ಯದ ಜಲ | ವರ ಕಂಬುವಿಲಿ ತುಂಬಿಎರದಭಿಷೇಚಿಸೆ | ಪರಿವುದದರ ಸಹ ೮
ವರ ದತ್ತಾತ್ರೇಯ ನೆಂದೆನಿಸಿ | ತವಶಿರ ಸ್ಥಾನದಲ್ಲಿ ವಾಸೀಸಿ | ಎನ್ನಶರಣರ ಅಘಗಳ ಹರಿಸೀ | ನಿನ್ನವರ ದಕ್ಷಗಂಗೆಂದು ಕರೆಸೀ | ಆಹವರ ತವೋತ್ಸಂಗದಿ | ಶಿರವಿಟ್ಟು ಮಲಗುತ್ತಸರಿದ್ವರಳೆನಿಸುತ್ತ | ಮೆರೆಸುವೆ ನಿನ್ನನು ೯
ಮಂಗಳ ಜಪತಪ ಸ್ನಾನ | ಮಿಕ್ಕಗಂಗಾದಿ ತೀರ್ಥಾನುಷ್ಠಾನ | ನಾಲ್ಕ್ಯುಗಂಗಳೊಳಗೆ ಮಾಳ್ಪ ನಾನಾ | ಕರ್‍ಮಂಗಳ್ತವೋತ್ಸುಂಗ ಶಿರಸ್ಥಾನ | ಆಹಮಂಗಳಾಮಲಕ ಜಲಂಗಳಿಗ ಸಮ ಕ-ಳೆಂಗಳ್ಷೋಡಶಕ್ಕೊಂದಂಗ ಸರಿ ಬರೆದು ೧೦
ಆ ಮುನಿವರನು ಅಗಸ್ತ್ಯ | ಬಂದುನೇಮದಿಂ ತಪಸಿನೋಳ್ ಸ್ಥಿತ | ಆಗಬೊಮ್ಮನಿಂ ದ್ವರಗಳು ದಾತ | ತನ್ನಕಾಮಂಡುಲಿನೊಳ್ ನಿನ್ನ ಧೃತ | ಆಹನೇಮದಿಂದೊಂದಂಶ | ಲೋಪಾ ಮುದ್ರೆಯು ಆಗಿಆ ಮಹ ಮುನಿಯನ್ನ | ಪ್ರೇಮದಿ ವರಿಸುವೆ ೧೧
ವರವಿತ್ತು ಮರೆಯಾಗೆ ಹರಿಯು | ಅತ್ತವರ ಮುನಿ ತಪಸಿನ ಧಗೆಯು | ಕಂಡುಸುರಜೇಷ್ಠ ಅವನೆದುರು ಹೊಳೆಯು | ಆಗಬರೆದನು ಜೀವನ ಧೊರೆಯು | ಆಹಹೊರಲಾರದವ ತಾನು | ವರ ಸನ್ಯಾಸದಿ ಮನವಿರಸಿರುವುದು ನಿರಾ | ಕರಿಸುತ್ತ ಪೇಳ್ದನು ೧೨
ಸಂಭ್ರಮದಲಿ ಪತಿವ್ರತೆಯಾ | ಕೂಡಿಇಂಬಾಗಿ ಸಂಸಾರ ಧೊರೆಯಾ | ಪೊತ್ತುಅಂಬು ಜಾಂಬಕ ಪದ ಸೇವೆಯ | ಫಲದಲಿಂಬಿಡದಲೆ ಗೈದುದೆಯಾ | ಆಹಕಂಬು ಚಕ್ರಧರ | ತುಂಬಿದ ಮನದಿಂದಹಂಬಲಿಸಿ ಕೈಗೊಂಡು | ಬೆಂಬಿಡದೆ ಸಲಹುವ ೧೩
ಮುನಿವರಗಸ್ತ್ಯನು ಅಜನ | ಮಾತಮನವಿಟ್ಟು ಕೇಳುತ್ತ ವಚನ | ಪೇಳ್ದಅನುಕೂಲ ಭಾರ್ಯಳಾಳ್ವುದನ | ಯೋಗಅನುಕೂಲಿಸುವುದೆಂಬ ಹದನ | ಆಹವನಜ ಗರ್ಭನು ತನ್ನ | ತನುಜೆಯ ಸುಕನ್ಯಾಮಣಿಯ ಕಾವೇರಿಯ | ವಿನಯದಿ ವರಿಸೆಂದ ೧೪
ಜಗದನುಗ್ರಹಕಾಗಿ ನಾರಿ | ತನ್ನಮಗಳಿಹಳು ತಪದಿ ಕಾವೇರಿ | ಕಂಡುಮಗುಳೆ ವರಗಳನಿತ್ತು ಭಾರಿ | ಸಹ್ಯಾದ್ರಿಗೆಗಾಗಿ ಪೋಗುದು ಏರಿ | ಆಹಅಘಹರಳ್ವೊಂದಂಶ | ನಗ ಶೃಂಗದಿರಿಸುತ್ತಮಿಗೆ ಚೆಲ್ವ ಸರಿತಾಗಿ | ಪೋಗಲನುಗ್ರಹಿಸು ೧೫
ಮೊಗ ಚತುರ ಮರೆಯಾಗಲಾಗ | ಮುನಿಅಗಸ್ತ್ಯನು ಚರಿಸುತ್ತ ವೇಗ | ಹಿಮನಗ ಪಾಶ್ರ್ವದೊಳು ತಪಯೋಗ | ದಿಹಆಘಹರಳ ಕಂಡನು ಆಗ | ಆಹಮೊಗದ ಲಾವಣ್ಯಕ್ಕೆ | ಮಿಗೆ ಮೋದ ತಾಳುತ್ತಸುಗುಣೆಯ ಬೆಸಸೀದ | ನಗು ಮುಖದಿಂದಲಿ ೧೬
ಹೊರ ಮುಖಳಾದಳ್ ಕಾವೇರಿ | ಮುನಿವರನ ಸತ್ಕರಿಸಲು ನಾರಿ | ದ್ವಿಜವರ ಪೇಳೆ ಬ್ರಹ್ಮಗನುಸಾರಿ | ಆಕೆವರಗಳ ಬೇಡಲು ಭಾರಿ | ಆಹಸುರಜೇಷ್ಠ ನ್ವೊರೆದಂತೆ | ವರಗಳ ನೀಯಲುಸುರಕನ್ಯಾಮಣಿಯಾಗ | ವರಿಸಿದಳಾ ಮುನಿಯ ೧೭
ಹಂಸ ವಾಹನ ಪತ್ನಿ ಸೇರಿ | ಶಿರಿಕಂಸಾರಿ ಗರುಡನ್ನ ಏರಿ | ಕ್ರತುಧ್ವಂಸಿ ಉಮಾ ನಂದಿ ಏರಿ | ಇಂದ್ರಶಂಸಿ ಸೈರಾವತನೇರಿ | ಆಹಸಾಂಶರು ಯೋಗ್ಯ ನಿರಂಶರು ಸೇರಿ ಪ್ರ-ಶಂಸನ ಗೈಯುತ್ತ ವೈವಾಹ ನಡೆಸಿದರ್ ೧೮
ಮದುವೆ ವೈಭವ ಪೇಳಲಾರೆ | ಜಗದುದಯಾದಿ ನಡೆಪರಿಹಾರೆ | ಹರಿಮುದ ಪೊಂದಲಿನ್ನೆದುರ್ಯಾರೆ | ಎಲ್ಲರ್ವೊದಗಿ ಆಶೀರ್ವದಿಶ್ಯಾರೆ | ಆಹವಿಧ ವಿಧ ದುಡುಗೊರೆ | ಅದ ಪೇಳಲಳವಲ್ಲಅದುಭುತ ಜರುಗಿತು | ಉದ್ವಾಹ ಕಾರ್ಯವು ೧೯
ವೈವಾಹ ಕಾರ್ಯ ಪೂರಣ | ಸರ್ವದೇವತೆಗಳು ಋಷಿ ಗಮನ | ಮತ್ತೆಕಾವೇರಿ ಸಹ ಮುನಿ ಹಿಮನ | ಕೇಳ್ಕೆಭಾವಿಸುತಲ್ಲೆ ಕೆಲದಿನ | ಆಹಆವಾಸಿಸಿರೆ ಋಷಿ | ಸಾರ್ವರ ಮನ ತಿಳಿದುಆಹ್ವಾನ ವಿತ್ತಳು | ಸಹ್ಯಾದ್ರಿ ಸನಿಯಕ್ಕೆ ೨೦
ಕುಂಭ ಸಂಭವ ತನ್ನ ಪಯಣ | ಕಾಗಿಅಂಬುಜಾಕ್ಷಿಗೆ ಪೇಳೆ ಅವÀನ | ತೀರ್ಥತುಂಬಿದ ಕಾಮಂಡುಲಿನ | ಒಳಗೆಸಂಭ್ರಮ ದೊಂದಂಶ ಗಮನ | ಆಹಇಂಬಿಟ್ಟನ್ನೊಂದಂಶ | ಲೋಪಾಮುದ್ರೆಯು ಕುಂಭಸಂಭವ ಸಹ ಸಹ್ಯ ಅದ್ರಿಗೆ ಗಮಿಸಿದಳ್ ೨೧
ಉತ್ತರ ಹಿಮನಗ ಬಿಡುತ | ವನಸುತ್ತುತ ವಿಂಧ್ಯ ಮೀರುತ್ತ | ಹಾಂಗೆಉತ್ತಮ ಸಹ್ಯಾಚಲೇರುತ್ತ | ಅಲ್ಯುನ್ನತ್ತ ಬ್ರಹ್ಮಗಿರಿ ಸಾರುತ್ತ | ಆಹಉತ್ತಮ ಕ್ಷೇತ್ರದಿ ಜತ್ತಾಗಿ ಕಮಂಡಲಒತ್ತಟ್ಟಿಗಿರಿಸುತ್ತ ಪತ್ನಿಗೆ ಬೆಸಸಿದರ್ ೨೨
ಇದುವೆ ಬ್ರಹ್ಮಗಿರಿ ನಾಮ | ಮತ್ತೆಇದರೊಳ್ ತವೋತ್ಪತ್ತಿ ಕಾಮ | ಎಂದುವಿಧಿಯು ಪೇಳಿಹ ಮುನ್ನ ನೇಮ | ಕಾಲಮುದದಿ ಪ್ರತೀಕ್ಷಿಸು ಭಾಮಾ | ಆಹವದಗಿ ಬರಲು ಕಾಲ ಮುದದಿ ಕರಕದಿಂದಅದುಭೂತವೆನೆ ಸರಿದ್ವರಳಾಗಿ ಪ್ರವಹಿಸು ೨೩
ಈ ಪರಿ ಪೇಳುತ್ತ ಸತಿಗೆ | ಸಾಮೀಪದ ಶಿಷ್ಯರುಗಳಿಗೆ | ಕುಂಡಜೋಪಾನದಲಿ ನೋಳ್ಪ ಹಾಗೆ | ಪೇಳಿತಾಪಸಿ ಸೂವರ್ಣ ಮುಖಿಗೆ | ಆಹಪ್ರಾಪಿಸಿ ಸ್ನಾನಾದಿ ವ್ಯಾಪಾರದೋಳಿರೆಆ ಪರ್ವ ಕಾಲ ಸಮೀಪವಾಗಲು ಸುರಪ ೨೪
ಹರಿ ಮನೋಭಾವಾನು ಸಾರಿ | ಮಳೆಗರೆಯಲನ್ಯತರುವ ಸಾರಿ | ಶಿಷ್ಯರುಗಳಾಶ್ರಯಿಸಲು ಮೀರಿ | ಕುಂಡಸರುವೆ ತೀರಥಗಳು ಉಸುರಿ | ಆಹಪರ್ವ ಕಾಲವು ಇದು | ಪೊರಮಡು ಕಾವೇರಿಪರಿವೆವು ನಿನ ಪಿಂತೆ | ತೀರ್ಥಗಳಗ್ರಣಿಯೆ ೨೫
ವಿಧಿ ಬಂದ ಹಂಸವನೇರಿ | ಆವಮುದದಿಂದ ವನಗಳ್ ಸಂಚಾರಿ | ಇನ್ನುಅದುಭೂತಾಮಿತ ತೀರ್ಥ ಗಿರಿ | ಕಂಡುಒದಗಿ ಕರಕದ ಜಲ ಭಾರಿ | ಆಹಮುದದಿ ಮೀಯುತ ಜಪ ಅದುಭೂತಾಷ್ಟಾಕ್ಷರಪದುಮ ಸಂಭವ ಹರಿಧ್ಯಾನದಿ ರತನಾದ ೨೬
ಮಂದ ಮಾರುತ ಬೀಸೆ ವಿಮಲ | ಧಾತ್ರಿಗಂಧ ವೆಂದೆನುತಲಿ ಬಹಳ | ಮುದದಿಂದೆಚ್ಚರಗೊಂಡು ಕಂಗಳ | ಮುಂದೆಸುಂದರಾಮಲಕಾ ಕೃತಿಗಳ | ಆಹಎಂದು ಕಾಣದ ದೃಶ್ಯ | ವೆಂದೆನುತಲಿ ಮನದಿಂದ ಧೇನಿಸೆ ಅದು | ಛಂದದಿ ಮರೆಯಾಯ್ತು೨೭
ಅಚ್ಚರಿ ಗೊಳ್ಳುತ್ತ ವಿಧಿಯು | ಕಣ್ಣಮುಚ್ಚಿ ಧೇನಿಸೆ ಸಿರಿ ಹರಿಯು | ಸಿರಿವತ್ಸಾಂಕಿತನು ಬಾಹು ದ್ವಿದ್ವಯು | ಇಂದಮೆಚು೫Àೂಪವ ತೋರೆ ವಿಧಿಯು | ಆಹ |ಸಚ್ಚರಿತೆಯ ಪಾಡೆ | ನಿಚ್ಚಳಾಮಲಕದಉಚ್ಚರೂಪವ ಕಂಡು | ಅರ್ಚಿಸಿದನು ಬಹಳ ೨೮
ವಸುಧೆಯೊಳಿದು ಹರಿಕ್ಷೇತ್ರ | ಇಲ್ಲಿಅಸುರಾರ್ಯಾಮಲಕದ ಗಾತ್ರ | ದಿಂದವಸಿಸಿ ಸೇವಿಪರ ಪವಿತ್ರ | ಗೈವಅಶರೀರ ವಾಕ್ಯಾಯ್ತು ಚಿತ್ರ | ಆಹಕುಸುಮನಾಭನ ಪಾದ | ಬಿಸಜಗಳ್ವಂದಿಸಿಬಿಸಜ ಸಂಭವ ಗೈದ | ಅಸಮ ಸಂಪೂಜೆಯ ೨೯
ಧಾತಾ ಸ್ವ ಕುಂಡಿಕಾಸ್ಥಿತ | ವಿಮಲ ತೀರ್ಥವು ವಿರಜೆಯಿಂ ಹೃತ | ಶಂಖಪೂರ್ತಿಸಿ ಪೂಜಾ ಪದಾರ್ಥ | ಪ್ರೋಕ್ಷಿಸಿಪೂತಾತ್ಮಾಮಲಕದಿ ಸ್ಥಿವ್5 ಆಹಶ್ರೀ ತರುಣೀಶನ | ದತ್ತಾತ್ರೇಯನ ರೂಪಖ್ಯಾತ ಪೂಜಿಸುತಿರಲಶರೀರ ವಾಕ್ಕಾಯ್ತು ೩೦
ಸರಿದ್ವರ ರೂಪದಿ ನಿರ್ಗಮ | ಚಿಂತೆಪರಿ ಪರಿ ಗೈಯ್ಯುವ ಭಾಮಾ ಮಣಿಕುರಿತು ಪೇಳಿತು ವಾಣಿ ನೇಮ | ನೀನುಶರಧೀ ಸೇರುವ ಮನೋ ಕಾಮಾ | ಆಹಪರಿಪೂರ್ಣವಹುದೀಗ | ವರ ತುಲಾಪರ್ವದಿಶರತ್ಕಾಲ ಮುಕ್ತಿದ | ಪರಿವುದು ಕಾವೇರಿ೩೧
ತತುಕ್ಷಣ ಮುನಿಯ ಕಮಂಡ್ಲು | ದೊಳುಸ್ಥಿತ ಸರ್ವ ತೀರ್ಥಮಾನಿಗಳೂ | ಪೇಳೆತುತುಕಾಲ ಕವೇರ ತನುಜಳೂ | ಶೀಘ್ರಉತು ಪತ್ತಿ ತಾಳಿ ಪರಿದಾಳೂ | ಆಹಇತರ ತೀರಥಗಳು | ಸರಿತು ರೂಪದಿ ಹಿಂದೆಅತಿ ತ್ವರೆಯಲಿ ಪ್ರವ | ಹಿತರಾಗಿ ಪೋದರು ೩೨
ಋಷಿವರ್ಯ ಸ್ನಾನವ ಮಾಡಿ | ಪರಿಕ್ಷಿಸಲಾಗ ವಿಸ್ಮಯ ಕೂಡಿ | ಶಿಷ್ಯರಿಗುಸರಲಾಕ್ಷೇಪದ ನುಡಿ | ಅವರುಸಿರಿದರ್ ಮಳೆಯ ಗಡಿಬಿಡಿ | ಆಹರಸ ರೂಪದಲಿ ಪರಿವ | ಅಸಮ ಪತ್ನಿಯ ಕೂಗೆಋಷಿಗೆ ಶಾಂತಿಯ ಸೊಲ್ಲ | ಒಸೆದು ಪೇಳಿದಳವಳೂ ೩೩
ಸುರವರ ಪೂಜ್ಯ ಧಾತ್ರಿಯು | ಇನ್ನುತರುವು ಆ ಮಲಕದ ಬಳಿಯು | ತೀರ್ಥವರ ಶಂಖ ಸಂಜ್ಞಿತ ತಿಳಿಯು | ಇಲ್ಲಿವಿರಜೆಯ ದೊಂದಿಹ ಕಳೆಯು | ಆಹವರ ನಭೊ ಗಂಗೆಯು | ಸರಿ ಸಹ್ಯಾಮಲಕವುವರಣಿಸಲಳವಲ್ಲ | ಸರಿದ್ವರ ಮಹಿಮೆಯ ೩೪
ಪಿತರ ಕಾರ್ಯವು ತೀರ್ಥಸನಿಯ | ಶ್ರದ್ಧೆಮತಿಯಿಂದ ಮಾಡಲು ಗಯಾ | ಶ್ರಾದ್ಧಾಯುತ ಫಲ ಪಿತೃಗಳಿಗಯ್ಯಾ | ಇನ್ನೀತೀರ್ಥ ಸ್ನಾನವು ವಿರಜೆಯ | ಆಹಪೂತುರೆ ಫಲವಿಹುದು | ಯಾತರ ಸಂಶಯಮಾತಿಗೆ ಕೈವಲ್ಯ | ದಾತನ ಒಲಿಮೆಯು ೩೫
ಗಂಗಾನದೀಗಗಳು ತಮ್ಮ | ಪಾಪಹಿಂಗಿಸಲೋಸುಗವಮ್ಮ | ತುಲಾಮಂಗಳ ಮಾಸದಲಮ್ಮ | ಒಂದುತಿಂಗಳಿಹರಿಲ್ಲಿ ಸಂಭ್ರಮ್ಮಾ | ಆಹಗಂಗೆ ದಕ್ಷಿಣಾಖ್ಯೆ | ಮಂಗಳೆ ಜನಗಳಘಂಗಳ ಕಳೆಯುತ್ತ | ತುಂಗೋಪಕಾರಿಯೆ ೩೬
ಕಾವೇರಿ ಪ್ರವಹಿಸಿ ಭರತ | ವರ್ಷಪಾವಿಸುತಿಹಳು ತಾ ನಿರುತ | ಬಂದುಸೇವಿಸೂವರ ಪಾಪ ತ್ವರಿತ | ದೂರಗೈವಳೆಂಬುವದೆ ನಿಶ್ಚಿತ | ಆಹಈ ವಿಧ ಮಹಿಮೆಯ ಓವಿ | ಪಾಲಿಸಿದನು |ಶ್ರೀವರ ಶ್ರೀ ಗುರು | ಗೋವಿಂದ ವಿಠಲಯ್ಯ ೩೭

೨೨೧
ಕೃತ್ತಿವಾಸ ಪೂಜ್ಯ ಚರಣೇ | ಮಹತತ್ವಮಾನಿ ಸತಿಯೆ ಸುಗುಣೆ ||ಅ||
ಭೃತ್ಯ ಭೀಷ್ಟ ದಾನ ಜಾಣೇ | ನಿತ್ಯ ನೀಡೆ ಹರಿಯ ಸ್ಮರಣೆ ಅ.ಪ.
ವಿಧ್ಯುದ್ವಾಕ್ ದಿಙËಮಾನಿಯೆ | ಹೇದ್ಯುಪೃಥಿವಿ ಭಾರತೀಯೇಪ್ರದ್ಯುಮ್ನ ಕೃತಿಗೆ ಕುಮಾರಿಯೆ | ಬುಧ್ಯಾಭಿಮಾನಿಯೇ ಕಾಯೆವಿದ್ಯುತಿಸ್ಥಿತಿ | ಬುಧ್ಯಾಬ್ದಿಯೆ | ವಿಧ್ಯೇತರ | ಅವಿಧ್ಯೆಯ ಕಳೆಸದ್ಯೋಜನ | ಶ್ರದ್ದಾಂಬಾ | ಮದ್ದೇಹದಿ | ಸಿದ್ಧಿಸು ಹರಿ ೧
ಇಂದ್ರಸೇನೆ ದ್ರೌಪದೀಯೇ | ಕಂದು ಗೊರಳ ಖಗಪ ತಾಯೇಚಂದ್ರ ಪ್ರಕಾಶೆ ಕುಂದರದನೆ | ಮಂದ ಭಾಗ್ಯನ ನೀನೆ ಪೊರೆಯೆ ||ಇಂದೀವರ | ಮಂಸದಿರೆಯಳ | ನಂದನೆ ಎನ | ಕುಂದೆಣಿಸದೆಸಿಂಧುಜೆ ಪತಿ | ಸುಂದರ ಪದ | ಸಂಧಿಸು ಮನ | ಮಂದಿರದಲಿ ೨
ಭಕುತಿ ಭಿಕ್ಷೆ ನೀಡೆ ತಾಯೇ | ಯುಕುತಿ ಶಾಸ್ತ್ರ ಒಂದನರಿಯೇಸೌಖ್ಯ ತೀರ್ಥ ಮತವನ್ವೊರೆಯೇ ಮುಕುತಿ ಮಾರ್ಗ ತೋರಿ ಪೊರೆಯೇ ||ತೋಕನು ಎನೆ | ಸ್ವೀಕರಿಸುತ | ಲೋಕರುಗಳ | ವಾಕನು ದೂ-ರೀಕರಿಸು ಪ | ರಾಕೆನ್ನುವೆ | ಭೀಕರಭವ | ನೀ ಕರಗಿಸು ೩
ಕಡಗ ಕಂಕಣ ದ್ವಾರ ಧಾರೆ | ಜಡಿತ ದುಂಗುರ ದೋಷ ದೂರೆಮುಡಿದ ಮಲ್ಲಿಗೆ ಕುಂಚುಕಧಾರೆ | ಉಡುಗೆ ಬಿಳುಪಿನಂಬರೆ ನೀರೇ || ಒಡ ನಡುವು | ನಿಡಿತೋಳೂ | ತೊಡೆಕದಳೀ | ಬಡುವು ಪರೀ |ಅಡಿಗೆರಗುವೆ | ಪೊಡ ವೀಶನ | ಧೃಡ ಭಕುತಿ | ತಡೆಯದೆ ಕೊಡು೪
ಶರಣು ಮುಂದಣ ವಾಣಿ ಕರುಣ | ಗುರು ಗೋವಿಂದ ವಿಠಲ ಚರಣಾ |ಭರಣವೆನಿಪ ಸುಗುಣ ಗಣಾ | ಒರೆದು ಕಳೆಯೆ ಭವದ ಬಂಧನ |ಮಾರಯ್ಯನ | ಆರಾಧನೆ | ಚಾರೀಸದೆ | ಧಾರಾಣಿಗೆಭಾರಾದೆನು | ಕಾರುಣ್ಯವ | ತೋರೂವುದು ಭಾರತಿಯೇ ೫

೪೪೫
ಕೃಪೆಯ ತೋರಬಾರದೇನೋ | ಗೋಪಾಲರಾಯ ಪ
ತಾಪತ್ರಯ ಬಲು ದೀಪನವಾಗಿದೆನೀ ಪರಿಹರಿಸದೆ ಮತ್ತೋರ್ವರನರಿಯೆ ಅ.ಪ.
ಮರಣೋನ್ಮುಖ ನಾದಾ | ವರ |ನರಸಪ್ಪನ ಸೂನು ಶ್ರೀನಿವಾಸಾ |ಸಾರುತ ತವಪದ ಸೇವಿಸಿ ಭಕುತಿಲಿ |ದೂರೋಡಿಸಿದನು ಜವನವರಾ ೧
ಗಿರಿಜಾತೆಯ ಪ್ರಿಯ ಕುವರಾ | ನೃಪವರದಶರಥ ಸುತ ಭರತಗೆ ಅವರಾ |ಮಾರುತಿ ಮತವನು ಅರುಹುತ ನೀ ಸಂಸಾರಕೆ | ತಾರಕ ನೆನಿಸಿದ ಧೀರಾ ೨
ತ್ಯಾಗಿ ಭೋಗಿ ಶೀಲಾ | ನೀನಘದೂರ ಕಳೆಯೊ ಮೋಹಜಾಲಾ |ಭೋಗಿಶಯನ ಗುರು ಗೋವಿಂದ ವಿಠಲನಬಾಗಿ ಭಜಿಸುವಂಥ ಭಾಗ್ಯವ ನೀಯೋ ೩

ಸೋದಾ ಕ್ಷೇತ್ರದಲ್ಲಿ ವಿರಾಜ ಮಾನರಾಗಿರುವ
೩೭೨
ಭಾವೀ ಸಮೀರ ಶ್ರೀವಾದಿರಾಜರು
ಕೃಪೆಯಲಿಂದಲಿ ಕಾಯ ಬೇಕಯ್ಯ | ಶ್ರೀಸೋದೆ ನಿಲಯ ಕೃಪೆಯಲಿಂದಲಿ ಕಾಯ ಬೇಕಯ್ಯ ಪ
ಕೃಪೆಯಲಿಂದಲಿ ಕಾಯ ಬೇಕೈ | ವಿಪ ಅಹಿಪ ಸುರಪಾದಿ ವಂದ್ಯವೆ |ವಿಪುಲ ಪಾಪಾಳಿಗಳ ಹರಿಸೀ | ಸುಪಥ ಸದ್ಗತಿಗೆನ್ನ ಒಯ್ದು ಅ.ಪ.
ಗೌರಿದೇವಿಯ ಉದರಸಂಭವನೆ | ಹಯಾಸ್ಯನಂಘ್ರಿಸರಸಿರುಹದಲಿ ಮಧುಪ ನೆನಿಸಿದನೆ ||ದ್ವಾರಕಾದಿ ಕ್ಷೇತ್ರ ಚರಿಸುತ | ಥೋರ ಹಿಮಗಿರಿ ಸೇತುಯಾತ್ರೆಯಸಾರಿ ಸತ್ತೀರ್ಥ ಪ್ರಬಂಧವ | ಧೀರ ನೀ ರಚಿಸುತ್ತ ಮೆರೆದೆಯೊ ೧
ಲಕ್ಷಿಸುತ್ತಲಿ ಮಾತೆ ಬಿನ್ನಪವ | ಮಹ ಭಾರತಸ್ಥಲಕ್ಷಪದ ಬಹು ಕ್ಲಿಷ್ಟವೆನಿಸೂವ ||ಲಕ್ಷಣದಿ ಸದ್ಯುಕ್ತ ಪದಗಳ | ಈಕ್ಷಿಸುತ ಅವಕರ್ಥ ಪೇಳುತಲಕ್ಷಸದ್ದಾಭರಣ ಮಾಲಿಕೆ | ಲಕ್ಷ್ಮಿಪತಿ ಹಯಾಸ್ಯಗರ್ಪಿತ ೨
ಸೇವಿಸುತ್ತಿಹ ವಿಪ್ರನಾದವನ | ಕೌಟಿಲ್ಯ ಕಂಡುತೀವ್ರದಿಂದಲಿ ಶಾಪವಿತ್ತವನ ||ಭಾವ ತಿಳಿದು ಬೊಮ್ಮರಾಕ್ಷಸ | ಭಾವತಾಳೆಂದೆನುತ ಪೇಳಲುತೀವ್ರ ಯಾಚಿಸೆ ಕ್ಷಮೆಯ ಮಂತ್ರವ | ಆವ ಆಕಾಮ್ಮೈವ ನೊರೆದೆ ೩
ಮರಳಿ ಉತ್ತರ ಯಾತ್ರೆಯಲ್ಲಿರಲು | ಗುರು ವಾದಿರಾಜರಅರಿಯದಲೆ ತನ್ಮಂತ್ರ ಪೇಳಲು ||ಒರೆದರೂ ರಂಡೇಯ ಮಗ ನೀ | ನಿರುತಿರುವೆನ ಸ್ನಾತ ಕಾರ್ತಿಕಮರಳಿ ಮಾಘಾಷಾಢ ವಿಶಿಖದಿ | ಹರಿಯಿತೂ ನಿನ ಶಾಪವೆಂದರು ೪
ಆತುಗುರುಪದ ಕ್ಷಮೆಯ ಪ್ರಾರ್ಥಿಸಲು | ಗುರುರಾಜರಾಗಭೂತ ರಾಜನು ನೀನೆ ಎನ್ನುತಲು ||ಖ್ಯಾತಿ ಪೊಂದುತ ಭಾವಿರುದ್ರನೆ | ಪೊತ್ತು ಎನ್ನಯ ಮೇನೆ ಮುಂಗಡೆಕೌತುಕವ ತೋರುತ್ತ ಮೆರೆವುದು | ಪೋತ ಭಾವದಿ ತಮಗೆ ಎಂದರು ೫
ಆಖಣಾಶ್ಮಕೆ ಸಮವು ನಿಮಚರಣ | ಭಾವಿ ಮರುತರೆಪಾಖಂಡ ಮತ ವೆಲ್ಲಿರಲು ಖಂಡನ ||ಸ್ವೀಕರಿಸಿ ಅರಸಪ್ಪ ರಾಜನ | ಕಾಕು ಶೈವನ ಖಂಡಿಸುತ್ತಲಿಆಕೆವಾಳರ ಪೊರೆದು ದಶಮತಿ | ತೋಕನೆಂದೆನಿಸುತ್ತ ಮೆರೆದೇ ೬
ಭೂವಲಯದೊಳು ಕಾರ್ಯ ಪೂರೈಸಿ | ಬದರಿಯಿಂದಲಿಭಾವಿ ಶಿವನಿಂ ಪ್ರತಿಮೆ ರಥತರಿಸೀ ||ದೇವ ಗೃಹ ಸಹ ವಿರುವ ವಿಗ್ರಹ | ತ್ರೈವಿಕ್ರಮನ ಸಂಸ್ಥಾಪಿಸುತ್ತಭಾವ ಭಕ್ತಿಯಲಿಂದ ಉತ್ಸವ | ತೀವರದಿ ರಚಿಸುತ್ತ ಮೆರೆದೆ ೭
ಹಂಚಿಕಿಂದಲಿ ಪೂರ್ವರಚಿತೆನ್ನ | ವೃಂದಾವನಂಗಳುಪಂಚ ಸಂಖ್ಯೆಯಲಿಂದ ಮೆರೆವನ್ನೆ ||ಮುಂಚೆಯೇ ಸ್ಥಾಪಿತವು ಎನ್ನುವ | ಪಂಚರೂಪೀ ವ್ಯಾಸ ಸಮ್ಮುಖಸಂಚುಗೊಳಿಸೀ ಸ್ಥಾಪಿಸುತ್ತ | ಕೊಂಚವಲ್ಲದ ಕಾರ್ಯ ರಚಿಸಿದೆ ೮
ಯುಕ್ತಿಮಲ್ಲಿಕೆ ರುಕ್ಮೀಣೀಶ ಜಯ | ಗುರ್ವರ್ಥ ದೀಪಿಕೆಮತ್ತೆ ಪರಿಪರಿ ಶಾಸ್ತ್ರ ಗ್ರಂಥಗಳ ||ವಿಸ್ತರಿಸಿ ಭುವನದಲಿ ಮೆರೆದೆ | ಉತ್ತಮೋತ್ತಮ ದೇವ ದೇವನುಕರ್ತೃ ಶ್ರೀಹಯ ಮುಖನು ಎನ್ನುತ | ವತ್ತಿ ಪೇಳುತ ವ್ಯಾಪ್ತಿಸಾರಿದೆ ೯
ಶಿಷ್ಟ ಜನ ಸಂಸೇವ್ಯ ಧೀವರನೆ | ಶಮದಮಾನ್ವಿತಕಷ್ಟಹರ ಕಾರುಣ್ಯ ಸಾಗರನೇ ||ಕುಷ್ಟ ಅಪಸ್ಮಾರ ರೋಗದ | ಅಟ್ಟುಳಿಯ ಕಳೆಯುತ್ತ ಮೃತ್ತಿಕೆಸುಷ್ಠುಸೇವನೆಯಿಂದ ಭಕ್ತರ | ಇಷ್ಟವನೆ ಸಲಿಸುತ್ತ ಮೆರೆವೆ ೧೦
ಕಡೆಯ ಮಾಸಾಸಿತವು ತೃತಿಯದಲಿ | ನೀನೆ ಸ್ವೇಚ್ಛೆಲಿನಡುವೆ ವೃಂದಾವನವ ಪೊಕ್ಕಲ್ಲಿ ||ಧೃಡದಿ ಬಿಂಬ ಹಯಾಸ್ಯ ಗುರುಗೋ | ವಿಂದ ವಿಠಲ ಧ್ಯಾನದಿರುತಲಿಇಡುತ ಅಂಶವ ಸುರಪ ವಾಹನ | ಬಿಡದೆ ಏರುತ ಸಾರ್ದೆ ಹರಿಯನು ೧೧

೫೦
ಕೃಷ್ಣಾ – ಶ್ರೀಕೃಷ್ಣಾ ಪ
ಕೃಷ್ಣ ಕೃಷ್ಣ ಹರಿವೃಷ್ಟಿ ಕುಲೋದ್ಭವಸೃಷ್ಟಿ ಕರ್ತ ಹೃತ್ಪುಷ್ಕರ ನಿಲಯ ಅ.ಪ.
ವಲಲ ಸಂರಕ್ಷಕ | ಅಲವ ಭೋದನುತಕಲಿಮಲ ಕಲುಷಹ | ನಳಿನೇಕ್ಷಣಪಾಹಿ ೧
ನಂದನ ಕಂದ ಮು | ಕುಂದನೆ ಮಾಧವಸಿಂಧು ಶಯನ ಕೃಷ್ಣ | ಮಂದರೋದ್ಧಾರಿ ೨
ಮುರ ನರಕರ ಸಂ | ಹರ ಶತದ್ವ್ಯಷ್ಟಸಾಸಿರಿ ವಧುಗಳ ಕರ | ಪರಿಗ್ರಹಿಸಿದನೇ ೩
ಚಿತ್ತಜಾರಿ ಸಖ | ವಿತ್ತವನೊಲ್ಲೆನೊಭೃತ್ಯನ ಗೈ ಸ | ರ್ವೋತ್ತಮ ದೇವ ೪
ಪಾಪಿಯು ಎನೆ ನಾ | ಶ್ರೀಪತಿ ನಿನ್ನನುನಾಪೊಂದಲು ಆ | ಪಾಪೆಲ್ಲಿ ಹುದೋ ೫
ಕಾಮಪಿತನೆ ಸ | ದ್ಭೂಮ ಗುಣಾರ್ಣವಪಾಮರ ಮನುಜನ | ಪ್ರೇಮದಿ ಸಲಹೋ೬
ಶಿರಿ ಸಹ ಗುರು ಗೋ | ವಿಂದ ವಿಠಲ ಹೃತ್‍ಸರಸಿಜ ಪೀಠದಿ | ದರುಶನ ವೀಯೋ೭

೫೧
ಕೈಕೊಂಡ – ನೃಹರಿ ಕೈಕೊಂಡ ಪ
ಕೈಕೊಂಡ ಪೂಜೆಯ ನೃಹರಿ | ತ್ರೈಲೋಕ್ಯಕನಾಥನು ಅಸುರಾರಿ | ಆಹತೋಕನ ಸಲಹಲು | ಏಕಮೇವನ ಲೀಲೆಕೈಕೊಂಡ ಅವತಾರ | ಆ ಕಂಬೋದ್ಭವನಾಗಿಅ.ಪ.
ಭಕ್ತಿ ಭಾವದಿ ಪರಾಶರ | ಬಹುತಪ್ತ ಭಾವದಿ ಕೃಷ್ಣೇ ತೀರ | ದಲ್ಲಿಸಕ್ತನಿರೆ ಧ್ಯಾನ ಗೋಚರ | ನಾಗಿವ್ಯಕ್ತನು ಷೋಡಶಕರ | ಆಹದೃಪ್ತ ದಾನವ ಧ್ವಂಸಿ | ದೀಪ್ತಾನಂತ ತೇಜಮೂರ್ತಿ ಕಾಣಿಸಿದನ | ವ್ಯಕ್ತನಾಗಿದ್ದಂಥ ೧
ಸುರ ಸಿದ್ಧ ನಿಚಯ ಸುಸೇವ್ಯ | ಪದಪರಿಪರಿ ನೂಪುರ ದಿವ್ಯ | ಶೋಭಿವರ ಕಟಿಸೂತ್ರ ಸುಭವ್ಯ | ಪರಿಪರಿ ಕಂಕಣಗಳ ರಮ್ಯ | ಆಹವರ ಪೀತಾಂಬರ ಭೂಷ | ಸ್ಮರ ಕೋಟಿ ಲಾವಣ್ಯಕರ ಪಾಶ ಅಸಿಕುಂತ | ವರದಾ ಭಯವು ಹಸ್ತ ೨
ಕಂಬು ಚಕ್ರ ಚರ್ಮಕರ | ಮತ್ತೆಅಂಬುಜ ಶಾಂಙÁ್ರ್ಞದಿಧರ | ಗದಸಂಭೃತ ತುಳಸಿಯ ಹಾರ | ಮತ್ತೆಇಂಬಿನ್ವ್ಯೊ ಜಯಂತಿ ಹಾರ | ಆಹಅಂಬುಜದಳ ನೇತ್ರ | ಇಂಬಾಗಿ ಕರಪಾತ್ರತುಂಬ ಪೀಯುಷಧಿ | ಪೊಂಬಸಿರ ವಂದ್ಯನು ೩
ಶ್ರೀವತ್ಸ ಲಾಂಛನ ಭೂಷ | ತನ್ನಭ್ರೂವಿಲಾಸದಿ ಬ್ರಹ್ಮ ಈಶ | ರಿಗೆತಾವೊಲಿದೀವ ಆವಾಸ | ಯೆನುತವ ವೇದಂಗಳು ಅನಿಶ | ಆಹಮಾವಿನೋದಿಯ ಗುಣ | ಸಾವಕಾಶಿಲ್ಲದೆಸಾರ್ವದ ಪೊಗಳುತ್ತ | ಭಾವದೊಳ್ಹಿಗ್ಗುವವು ೪
ಪೊತ್ತು ರೂಪವ ಬಲಪಾದ | ಚಾಚುತ್ತ ರಕ್ಕಸನೊಡಲಗಾಧ | ಇಟ್ಟುವತ್ತುತ ತೊಡೆಯಲ್ವಿನೋದ | ದ್ವಯಹಸ್ತ ನಖದಿ ಉದರ ಬಗೆದ | ಆಹಕಿತ್ತುತ ಕರುಳನ್ನ | ಕತ್ತಿನೊಳ್ಹಾಕುತಭಕ್ತನ ಸಂಬಂಧ | ಎತ್ತಿ ತೋರ್ದ ಜಗಕೆ ೪
ಪಂಚ ಮೋಕ್ಷಪ್ರದ ಹರಿ | ಆಯ್ತುಪಂಚಾಮೃತಭಿಷೇಕ ಅವಗೆ | ಮತ್ತೆಪಂಚಕಲಶಾರ್ಚನವು ಆವಗೆ | ಆಯ್ತುಪಂಚ ಕುಂಭಾಭಿಷೇಕವಗೆ | ಆಹಸಂಚಿಂತಿಸುತ ಹೃ | ತ್ಪಂಕಜದೊಳು ನೋಡೆಸಂಚಿಂತಾಗಮ ನಾಶ | ಕೊಂಚವು ಪ್ರಾರಬ್ಧ ೬
ಶಾಲಿಗ್ರಾಮದ ಶಿಲ ಏಕ | ಪೊತ್ತುಪೋದಕ ಬಾಹು ಅಲೀಕ | ಶತಶಾಲೀವಾಹನವೆಂಬ ಶಕ | ದೊಳುಜ್ವಾಲಾ ನರಹರಿ ನಾಮಕ | ಆಹಯೇಳು ಐದೊರ್ಷದ | ಭಾಳ ತಪಕೆ ಮೆಚ್ಚಿಶೀಲ ದ್ವಿಜ ದಂಪತಿ | ಗೊಲಿದು ಪೇಳಿದ ಹೀಗೆ ೭
ಭೀಮಕ ರಾಜಗೆ ಪೇಳು | ತೃಣಜಾಲವ ಹಾಕೆ ನೀರೊಳು | ಅಲ್ಲಿಜ್ವಾಲೆ ಉದ್ಭವಿಸಲು ಬಲು | ನೀರಮೇಲಕ್ಕೆ ಒಳಗಿಂದ ಬರಲು | ಆಹತೋಳೆರಡಲಿ ರಾಜ | ಮೇಲೆತ್ತೆ ಬರುವನುತಾಳ ಮೇಳ್ವೈಭವ | ದೊಳಗೆ ಸ್ಥಾಪಿಸಲೆಂದು ೮
ಅಂಗಹೀನರೆ ಕೇಳಿ ಆವ | ನಿಮ್ಮಭಂಗಿಪ ಮೂಕಾಂಧ ಭಾವ | ನೀಗಿಶೃಂಗಾರ ರೂಪ ಸ್ವಭಾವ | ನರಸಿಂಗ ಕೊಡುವೆನು ಸೇವ | ಆಹ ಹಿಂಗದೆ ಕೊಡುವೆನು | ಅಂಗಜ ಪಿತ ನರಸಿಂಗಪುರವೆಂದು | ಸಂಗೀತವಾಗಲಿ ೯
ವತ್ಸರ ಸೌಮ್ಯವು ಪುಷ್ಯ | ದಿನದರ್ಶ ವ್ಯಾಸತೀರ್ಥ ಶಿಷ್ಯ | ಆದರ್ಶ ದಾಸರ ದಿನ ಭವ್ಯ | ಭಕ್ತವತ್ಸಲ ಸ್ವೀಕಾರ ಆಲ್ಪ್ಯ | ಆಹಉತ್ಸವ ಕೊಳ್ಳುತ | ಉತ್ಸಾಹವೆನಗಿತ್ತುಮತ್ಸ್ಯಾದಿ ದಶರೂಪಿ | ಕೃತ್ಸ್ನ ಕಾರುಣ್ಯನು ೧೦
ಪರಾಶರಗೊಲಿದ ಸುಶೀಲ | ಖಗವರನು ಭೂದೇವಿಯು ಬಲ | ಎಡವರಲಕ್ಷ್ಮೀ ಪ್ರಹ್ಲಾದ ಬಾಲ | ಸುರವರರಿಂದ ಸ್ತುತ್ಯ ವಿಶಾಲ | ಆಹಗುರು ಗೋವಿಂದ ವಿಠ್ಠಲ | ಗುರು ಬಿಂಬ ನರಸಿಂಗಶರಣರ ಅಪಮೃತ್ಯು | ಹರಿಸಿ ಸಂತತ ಕಾಯ್ವ೧೧

೫೨೭
ಕೈವಲ್ಯಪತಿ ವಿಠಲ | ಇವಳ ನೀ ಸಲಹೋ ಪ
ದೇವದೇವೊತ್ಮತವ | ದಾಸ್ಯಕಾಂಕ್ಷಿಪಳಾ ಅ.ಪ.
ಗುರುಗಳೊಂದಗೆ ಯಾತ್ರೆ | ಭರದಿ ಸ್ವಪ್ನದಿಗೈದು |ಮರಳಿ ಕೊಲ್ಹಾಪುರದ | ಶಿರಿರಮೆಯ ಕಂಡೂ |ಮರುತ ದರ್ಶನದಿಂದ | ವರಸು ಉಪದೇಶಕ್ಕೆತರುಣಿ ಶುದ್ಧಳು ಇಹಳು | ಉರಗಾದ್ರಿವಾಸಾ ೧
ತೈಜಸನು ನೀನಾಗಿ ನೈಜದಂಕಿತ ಪ್ರಾಪ್ತಿಮಾಜದಲೆ ಸೂಚಿಸಿಹೆ | ಭ್ರಾಜಿಷ್ಣು ಮೂರ್ತೇ|ಯೋಜಿಸಿದೆ ಅದಕಾಗಿ | ತರಳೆಗಂಕಿತವನ್ನುರಾಜಿಸೋ ಮನದಿ ತವ | ನೈಜರೂಪವನೂ ೨
ತರತಮದ ಸುಜ್ಞಾನ | ಹರಿಗುರೂ ಸದ್ಭಕ್ತಿಮರುತ ಮತ ದೀಕ್ಷೆಯನು | ಪರಮ ವೈರಾಗ್ಯಕರುಣಿಸುತ ಸಂಸಾರ ಶರಧಿಯನೆ ದಾಂಟಿಸೊಅರವಿದೂರನೆ ಹರಿಯೆ | ಪ್ರಾರ್ಥಿಸುವೆ ನಿನ್ನಾ ೩
ಕರ್ಮ ನಿಷ್ಕಾಮದಲಿ | ಪೇರ್ಮೆಯಲಿ ಚರಿಪಂತೆಭರ್ಮಗರ್ಭನ ಪಿತನೆ | ಸನ್ಮನವನಿತ್ತೂ |ನಿರ್ಮಮತೆ ನೀಡಿ | ಕರ್ಮನಿರ್ಲೇಪದಲಿಹಮ್ರ್ಯ ವೈಕುಂಠವನು | ಗಮಿಪ ತೆರಮಾಡೋ ೪
ಭಾವುಕರ ಪರಿಪಾಲ | ಭೂವೈಕುಂಠಲೋಲದೇವದೇವೋತ್ತಮನೆ | ಗೋವಿಂದ ಮೂರ್ತೇ |ನೀ ವೊಲಿಯದಿಲ್ಲ ಗುರು | ಗೋವಿಂದ ವಿಠ್ಠಲನೆಸೇವಕಳ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ ೫

೨೨೨
ಕೊಡುಮತಿ ದಿವ್ಯಮತಿ ಭಾರತೀ ಪ
ಮೃಡನ ಸಖನ ಪಾದ | ಬಿಡದೆ ಭಜಿಪ ಮತಿಅ.ಪ.
ಅಜ್ಞಾನ ತಮದೊಳು | ಪ್ರಜ್ಞೆ ರಹಿತನಾದೆಸುಜ್ಞಾನ ಕರುಣಿಸೀ | ತಜ್ಞನೆನಿಸೆ ತಾಯೇ ೧
ನೊಂದೆನೀ ಭವದೊಳು | ಮಂದ ಜನರ ಸೇರಿಕುಂದು ನೋಡದೆ ಕಾಯೇ | ಗಂಧವಾಹನ ಜಾಯೇ ೨
ಕೋವಿದರೊಡನಾಡೀ | ಕಾವ ಕರುಣಿ ಗುರುಗೋವಿಂದ ವಿಠಲನ | ಭಾವದಿ ನೋಡುವ ೩

೧೭೧
ಕೊಲ್ಹಾಪುರದ – ವಾಸಿನೀ | ಹೇ ಮಹಾಲಕ್ಷ್ಮಿಸೊಲ್ಲ ಲಾಲಿಸೇ ಮಾನಿನೀ ಪ
ಬಲ್ಲವರಲ್ಲಿಗೆ ನಿಲ್ಲದೆ ತೆರಳಿಸೆಖುಲ್ಲರ ದಲ್ಲಣ | ನಲ್ಲರಿಸೆ ಮನ ಅ.ಪ.
ಭೃಗುಮುನಿಯೂ ತಾ ಬರುತಾ | ವಕ್ಷಘಾತವಾಗಲು ತವ ತಾಣ – ತಾಡಿತ |ಅಗಡ ಮುನೀಗೆ ಪ್ರೀತಾ | ನಾಗುತಲಕುಮಿಗೆ ಅವನು – ಆದ್ರುತದೃಗಜಲಜಿಗಿಸುತ | ಹಗರಣಗೆಯ್ಯುತಜಗಳವ ನಟಿಸುತ | ನಗಧರನಲಿ ನೀನುಜಗದೊಡೆಯನ ಮನ | ಬಗೆಯನು ತಿಳಿಯುತಸೃಗಾಲ ಪುರಕಾಗಿ ಆಗಮ ನಿನ್ನದೂ ೧
ಇಂಥಹ ನಿಮ್ಮ ಆಟವೂ | ಭಕ್ತರ ಮುಕ್ತಿಪಂಥವೆನಿಪ – ಮಾರ್ಗವೂಸಂತರ ಅಂತರಂಗವೂ | ನಿರ್ಮಲಿನ ಮುಕ್ತಿಕಾಂತೆಯೊಡನೆ ಆಟವೂ |ಅಂತರಂಗದಲಿಪ್ಪ ಗ್ರಂಥಿಸು ಭೇದನಸಂಚಿತಗಳು ನಾಶ | ಮುಂಜೆನ ನಿರ್ಲೇಪಅಂತರಂಗದಿ ಹರಿ | ಕಾಂತಿಯ ದರ್ಶನಎಂತು ನಾ ಪೇಳಲಿ | ಪಂಥಕೀರ್ತಾಳೀ ೨
ಲೋಲ ಕುಂಡಲ ಕಪೋಲೆ | ಕಿರೀಟ ಮೌಳೇತಿಲಾಲಜ ಕರೆ ಕೋಮಲೇ ||ಕೇಳಿಲಿ ಯಮುನಾ ಕೂಲೇ | ಹರಿಯೊಡನೆ ಲೀಲೇತೂಳಿದಾನಂದ ಸುಜಾಲೇ ||ಕಾಲಕೂಟ ಸಮ | ಕೀಳು ವಿಷಯದಲಿಬೀಳುವುದೆನ ಮನ | ಲಾಲಿಸು ಹೇ ತಾಯೇಶೀಲನೆನ ಹರಿ ಗುರು | ಗೋವಿಂದ ವಿಠಲನ ||ಲೀಲೆಯ ತೋರು | ವಿಶಾಲ ಹೃದಯಳೇ ೩

೫೨೮
ಕೋನೇರಿ ವಾಸ ವಿಠಲ | ನೀನೆ ಪೊರೆ ಇವನ ಪ
ಕಾಣೆ ನಿನ್ಹೊರತು ಕಾ | ರುಣ್ಯ ಮೂರುತಿ ಹರಿಯೆ೦ಜ್ಞಾನಗಮ್ಯನೆ ಸಲಹೊ | ಮಾಣದಲೆ ಇವನಾ ಅ.ಪ.
ಯೇಸೊ ಜನ್ಮದ ಸುಕೃತ | ರಾಶಿ ಫಲಿಸಿತೊ ಇವಗೆ ದಾಸ ದೀಕ್ಷೆಯಲಿ ಬಹು | ಆಶೆ ತೋರುವನೋವಾಸವಾನುಜ ನಿನ್ನ | ದಾಸತ್ವ ಪಾಲಿಸುತಪೊಷಿಸೂವುದು ಬಿಡವೆ | ಶೇಷಾದ್ರಿವಾಸಾ ೧
ತೈಜಸನು ಗುರುವಾದಿ | ರಾಜಾಖ್ಯ ರೂಪದಲಿಮಾಜದಲೆ ಪೇಳ್ವ ವಿ | ಭ್ರಾಜದಂಕಿತವಾವಾಜರೂಪಯು ಹರಿಯೇ | ಯೋಜಿಸಿಹೆ ಇವಗೆನಿವ್ರ್ಯಾಜ ಕರುಣಿಯೆ ಪೂರ್ಣ | ತೇಜೌಜ ನಿಧಿಯೇ ೨
ಮಧ್ವ ಸಮಯದ ಜ್ಞಾನ | ವೃದ್ಧಿ ಗೈಸಿವನಲ್ಲಿಅದ್ವೈತ ತ್ರಯದರಿವು | ಬುದ್ಧಿಗೇ ನಿಲುಕೀಅಧ್ವಯನು ಹರಿಯೆಂಬ | ಸಿದ್ಧಾಂತ ಮನಸಿನಲಿಬದ್ಧವಾಗುವ ತೆರದಿ | ಸಿದ್ಧಿಸೋ ಹರಿಯೇ ೩
ಕಂಸಾರಿ ತವನಾಮ | ಶಂಸನ ಪ್ಲವದಿಂದಸಂಸಾರ ನಿಧಿ ತರಣ | ಸಂಶಯವು ರಹಿತಾಅಂಶ ಅವತಾರ ಆ | ವೇಶ ವಿಷಯಗಳ ನಿಸ್ಸಂಶಯದಿ ತಿಳಿಸಿ ಪದ | ಪಾಂಸು ಸೇವೆ ಈಯೋ ೪
ಸರ್ವಜ್ಞ ಸರ್ವೇಶ ಸರ್ವಮೂಲನೆ ದೇವದುರ್ವಿಭಾವ್ಯದೆ ಹರಿಯೆ | ಶರ್ವವಂದ್ಯಾಸರ್ವಾಂತರಾತ್ಮ ಗುರು | ಗೋವಿಂದ ವಿಠ್ಠಲನೆದರ್ವಿ ಜೀವಿಯ ಪೊರೆಯೆ | ಪ್ರಾರ್ಥಿಸುವೆ ಹರಿಯೆ ೫

೪೦೩
ಕ್ಷಮಾಸಮುದ್ರನೆ ನಮಾಮಿ ಗುರು ನಿನ್ನ ಸಮಾನರ್ಯಾರಿನ್ನೂ |ಪ||
ರಮೇಶ ಪದದ್ವಯ | ಕಮಲ ಪುಷ್ಪಕೆ ಭ್ರಮರ ತವಪದ | ನಮಿಸುವೇ ಅ.ಪ.
ತತ್ವ ಪ್ರದರ್ಶಕ ಶೃತ್ಯರ್ಥ ಬೋಧಕಗೀತಾರ್ಥ ಸಂಗ್ರಹ ಕೃತೇ ನಮೋ |ಪ್ರತ್ಯರ್ಥಿಮತ್ತೇಭ ಪಂಚಾಸ್ಯ ನಿನ್ನಯಭೃತ್ಯನ ಅಪಮೃತಿ ತಪ್ಪಿಸಿದೇ ೧
ಅದ್ವೈತ ದುಸ್ಸಹ ವಾಸನ ನಿರಸನಖದ್ಯೋತ ಸಮ ವ್ಯಾಪ್ತ ಪರಿಮಳಾ |ಸದ್ವೈಷ್ಣ್ವ ಕುಮುದೇಂದು ವಿದ್ವಾಂಸನತ ಪದದ್ವಂದ್ವಾ ವಿಮಲ ಕಮಲಾ ೨
ಕುಷ್ಠಾದಿ ರೋಗಹರ ಕಷ್ಟ ನಿವಾರಣಶ್ರೇಷ್ಠ ನಿಮ್ಮಯ ಸ್ಮರಣಾ |ನಿಷ್ಟೇಲಿ ಭಜಿಪರ ಇಷ್ಟಾರ್ಥ ಸಲಿಸುವ ದುಷ್ಟವಾದಿಯ ದಮನಾ೩
ಪ್ರಹ್ಲಾದ ಬಾಲನೆ ವಿಮಲಾ ವಿಭೀಷಣಬಾಹ್ಲೀಕ ಸೂನಾದೆ ಪ್ರತೀಪಗೆ |ವಿಹ್ವಲ ಹೃದಯರ ಚಂದ್ರಿಕೆಯಿಂದಲಿಆಹ್ಲಾದ ಪಡಿಸಿದ ಸಲ್ಹಾದಾಗ್ರಜನೇ ೪
ಗ್ರಂಥೀಯ ಹರಿಸುವ ಮಂತ್ರಾರ್ಥ ಬೋಧಿಸಿಮಂತ್ರ ಸದನ ಗುರುವೇ |ಮಂತ್ರಾಗಮ್ಯ ಗುರು ಗೋವಿಂದ ವಿಠಲನಅಂತರದಿ ತೋರಿಸಿ ರಕ್ಷಿಸಯ್ಯಾ ೫

೧೬೪
ಕ್ಷಿತಿಭಾರ ಹರಣನೇ ಶ್ರೀಜಾನಕೀ ಪತಿಯೇ |ಶಿತಿಕಂಠ ಸಖ ಹರಿಯೇ ಪ
ಅತಿ ವಿಮಲನಂತಾರ್ಕ ನಿಭ ಪದಾಗತಿ ವಹನೆ ಪೊರೆ ಶ್ರೀರಾಮಚಂದ್ರಾನೇ ಅ.ಪ.
ಪರಮ ಮಂಗಳ ನಾಮ | ಪರಿಹರಿಸಿ ಸಂಸೃತಿಯನಿರುತ ಮಹದಾನಂದ | ಪ್ರದವೆನಿಪುದೋ ||ಮರುತಾಂತರಾತ್ಮ ತವ | ನಾಮ ಸುಧೆ ಸುಖ ಸವಿದುಇರುವಂತೆ ಮಾಡಯ್ಯ | ಕರುಣ ನಿಧಿಯೇ ೧
ಕಮಲ ಸಂಭವನಯ್ಯ | ಸುಮನಸರಿಗತಿ ಪ್ರೀಯಕಮಲದಳ ನೇತ್ರನೇ | ಕಾಮಿತ ಪ್ರದನೇ ||ಭ್ರಮ ಮೂರ ಪರಿಹರಿಸೊ | ಕಮಲಾಪ್ತ ಕುಲಜನೇಶಮದಮಾನ್ವಿತನೆನಿಸಿ | ವಿಮಲ ಮತಿ ಈಯೋ ೨
ದಶಕಂಠ ಹರ ನಿನ್ನ | ಯಶವನ್ನೆ ಪೊಗಳಲುಶೇಷ ವಿಪ ರುದ್ರಾದಿ | ಗಸದಳವು ಇಹುದೂ |ಕಸರು ಕರ್ಮಾದಿಗಳ | ಕೆಸರು ಕಳೆ ಪ್ರಾರ್ಥಿಸುವೆಅಸಮ ಮಹಿಮನೆ ಗುರು | ಗೋವಿಂದ ವಿಠಲಾ ೩

೧೬೫
ಕ್ಷೀರಸಾಗರ – ಶಯನ | ಕ್ಷೀರಾಬ್ದಿಜೆಯ ರಮಣಮಾರ ಜನಕ – ಸಿರಿ | ಉರಗಾದ್ರಿ ವಾಸಾ ಪ
ಸಾರ ಶ್ರುತಿನುತ | ಧೀರ ಕರುಣಾ | ಪಾರಮಹಿಮಾ | ಸಾರಿದೆನೊ ತವಚಾರು ಚರಣವ | ಭೋ ದಯಾನಿಧೆ | ತಾರಿಸೋ ಭವ | ವಾರಿಧೀಯ ಅ.ಪ.
ಕಮಲನೇತ್ರನೆ ರಾಮ | ಕಾಮಿತ ಫಲದಾತಕಮಲ ಭವನ ಪಿತ | ಕಮನೀಯ ರೂಪಾ ||ಧೃತ – ಶ್ಯಾಮಸುಂದರ | ಭೂಮ ಗುಣ ಗಣ |ಸ್ತೋಮ ವಾರಿಧೆ | ಶ್ರೀ ಮನೋರಮಸೀಮೆಗಾಣದೆ | ರಮ್ಮೆ ತುತಿಪಳುಭೌಮ ಹರ ಸುತ್ರಾಮ ವಂಧ್ಯಾ ೧
ಭಕ್ತ ವತ್ಸಲ ಕೃಷ್ಣ | ಮುಕ್ತಿದಾಯಕ ಹರಿಯೆ |ಸಕ್ತವಾಗಿಸು ನಿನ್ನ ಪ್ರಸಕ್ತಿಲೀ |ದೃತ – ಭೋಕ್ರ‍ತ ಭೋಗ್ಯಗ ಮುಕ್ತರಾಶ್ರಯ |ಭಕ್ತಿ ಪುಟ್ಟಿಸಿ ನಿನ್ನ ಪದದಲಿಯುಕ್ತ ರೀತಿಲಿ ವ್ಯಕ್ತವಾಗ್ವುದು |ಭಕ್ತವತ್ಸಲ ಅವ್ಯಕ್ತ ಮೂರ್ತೇ ೨
ಊರು ಒಂದೆನಗಿಲ್ಲಾ | ಗಾರಗಳ್ಮಿತಿಯಿಲ್ಲಮರಳಿ ಬರುವ ರೋಗ | ಪಾರ ಗಾಣಿಸೊ ದೇವ ||ದೃತ – ಬಾರಿ ಬಾರಿಗೆ | ಮೊರೆಯ ನೀಡುವೆನು |ಧೀರ ಗುರು ಗೋವಿಂದ ವಿಠಲನೆಸೂರಿಗಮ್ಯ | ಸುಖಾತ್ಮ ಚಿನುಮಯಚಾರು ರೂಪವ | ತೋರೊ ಬೇಗ೩

೧೬೬
ಕ್ಷೇತ್ರವೆಂದರೆ ಉಡುಪಿ ಕ್ಷೇತ್ರ ಪ
ಸೂತ್ರಾಂತರಾತ್ಮ ಹರಿ ಯಾತ್ರೆ ಮಾಳ್ಪನಿಗೆ ಅ.ಪ.
ವಾಸುದೇವ ಮುನಿಯು ಪುಟ್ಟಿ ಪಾಜಕದಲ್ಲಿವಾಸುದೇವ ಕೃಷ್ಣನ್ನ ನಿಲ್ಲಿಸಿಹರೋ ||ಕಾಸು ವೀಸಕೆ ವರದನಲ್ಲವೊ ಭಕುತಿಪಾಶಗಳಿಗೇ ಒಲಿವ ಶ್ರೀ ಕೃಷ್ಣ ನಿಲಯಾ ೧
ವಟುತನ ದೊಳಾಶ್ರಮ ಸ್ವೀಕರಿಸಿ ಸನ್ಯಾಸಿಅಷ್ಟ ಮಠದವರಿಂದ ಇಷ್ಟ ಪೂಜೆಗಳಾ ||ಸೃಷ್ಟಿಯೊಳಗಪ್ರತಿಮ | ಕೃಷ್ಣಕೊಳ್ಳುತ ಮನಮುಟ್ಟಿ ಭಜಿಸುವರ | ಇಷ್ಟಾರ್ಥಗಳ ಕೊಡುವಾ ೨
ದಿನಕನೇಕಲಂಕಾರ | ಅನವರತ ಸಂಪೂಜೆಎಣಿಸಲೆನ್ನಳವಲ್ಲ ರುಕುಮಿಣಿಯನಲ್ಲಾ ||ದೀನನಾಥ ನಾಥ ಗುರು | ಗೋವಿಂದ ವಿಠ್ಠಲನಮನದಣಿಯ ನೋಳ್ಪುದಕೆ | ಘನವಾದ ಸದನಾ ೩

೫೨೯
ಖಗವರಧ್ವಜ ವಿಠಲ ಪೊರೆಯ ಬೇಕಿವನ ಪ
ಭಾಗವತ ಸುಶ್ಲೋಕ್ಯ ಬಗೆಬಗೆಯಲಿಂದಿವನಮಿಗಿಲಾಗಿ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ ಅ.ಪ.
ವಿತ್ತಪತಿಯೊಲಿಮೆಗಳು | ಕತ್ತರಿಸಿ ಪೋಗಿ ಕೃತಕೃತ್ಯತಾನೆಂಬ ಉ | ತ್ರ‍ಕಷ್ಟಮತಿಯೊದಗೇಕೃತಿವಾಸನ ತಾತ | ಇತ್ತುದಕೆ ಸಂತೃಪ್ತಿಪೊತ್ತು ತವದಾಸ್ಯವನು | ಅರ್ಥಿಸುವ ಹರಿಯೇ ೧
ಪೋರನಾ ಮಯಕಳೆದು | ತಾರತಮ್ಯ ಜ್ಞಾನ ಮೂರೆರಡು ಭೇದಗಳ | ಸಾರವನೆ ಅರುಹೀಕಾರಣಿಕ ನೀನೆ ಉ | ದ್ದಾರವನೆ ಮಾಡೊ ಹರಿಬೇಕೊಂದ ಪ್ರಾರ್ಥಿಪೆನೊ | ಕಾರುಣ್ಯ ಮೂರ್ತೇ ೨
ಅನೇಕ ಜನ್ಮದಲಿ | ಹೀನಯೋನಿಲಿ ನೊಂದುಜ್ಞಾನ ಸಾಧನ ವಿರದೆ | ದೀನ ನಾದವಗೇಮಾನ ನಿಧಿ ಶಾಸ್ತ್ರ ಸಂ | ಧಾನ ವೀಯುತ ತ್ವರ್ಯಧ್ಯಾನ ಸಾಧನ ವೀಯೊ | ಪ್ರಾಣಾಂತರಾತ್ಮಾ ೩
ಲೌಕಿಕವನೆಲ್ಲ ವೈ | ದೀಕ ವೆಂದೆನಿಸೊ ಹರಿಕಾಕು ಸಂಗವ ಕೊಡದೆ | ನೀ ಕೊಡೊ ಸತ್ಸಂಗಏಕಮೇವನೆ ಸ್ವಾಮಿ | ಮಾಕಳತ್ರನೆ ನಿನ್ನ_ನೇಕ ಬಗೆಯಲಿ ತುತಿಪ | ವಾಕ್ಸಿದ್ಧಿ ಈಯೋ ೪
ಪದ್ಮನಾಭನೇ ಹೃ | ತ್ಪದ್ಮದಲಿ ತವರೂಪಸಿದ್ಧಿಸುತ ಸಂಚಿತವ | ಪ್ರಧ್ವಂಸ ಗೈದೂಅದ್ವೈತ ತ್ರಯದರಿವು | ಬುದ್ದಿಗೆ ನಿಲುಕಿಸೆನೆಹೃದ್ಯ ಗುರು ಗೋವಿಂದ ವಿಠಲ ಬಿನ್ನವಿಪೇ ೫

೨೩೨
ಖಗವರನೇ ಪಾಲಿಸೋ ಪ
ಪೆಗಲೊಳು ಹರಿಯನು | ಮಿಗೆ ಭಕುತಿಲಿ ಪೊತ್ತುನಗಧರ ಬಿಂಬವ | ನಗುತ ನಖದಿ ನೋಳ್ಪ ಅ.ಪ.
ವೇದೋದಿತ ಕ್ರಿಯ | ಕಾದ್ಯಭಿಮಾನಿಯೆವೇದಮಯನೆ ಹರಿ | ಗಾದೆಯೊ ವಾಹನಸಾಧಿಸಿ ಶ್ರೀಹರಿ | ಪಾದಾಂಬುಜಗಳಹಾದಿಯ ತೋರೊ ಅ | ಗಾಧ ಮಹಾತ್ಮಾ ೧
ಸಾಸಿರ ಬೃಹತಿಯ | ಸೂಸಿ ನೀ ಪೊಗಳುತಸಾಸಿರ ನಾಮನು | ಕೇಶವ ನೊಲಿಮೆಯಪೋಷಿತ ನಾಗಿಹೆ | ಆಶುಗ ಹೃದಯಾಕಾಶದೊಳಿರುತಿಹ | ಶ್ರೀಶನ ತೋರಿಸಿ ೨
ಪಾವಮಾನಿಸುತ | ಪಾವಿಸಿ ಮನ್ಮನಭಾ೫¥೫ | ಗೋವಿಂದ ವಿಠಲನ |ಪಾವನ ನಾಮ ಸು | ಭಾವನ ಉಣಿಸುತಕೋವಿದ ಸಂಗತಿ | ಈವುದು ನೀ ಸದ ೩

೧೮೮
ಖೇಟ ಕುಕ್ಕುಟ – ಜಲಟಾ | ತ್ರೈರೂಪಿನಿಶಾಟ ಸಂಕುಲ ರೋಟಾ ಪ
ಸಾಟಿಯುಂಟೆ ವೈರಾಟದಿ ಹರಿ ಕೈಟಭಾರಿ ಪದ ಓಲೈಸುವಗೆ ಅ.ಪ.
ಪವಮಾನ ಸತ್ರಾಣಾ | ಜೀವೋತ್ತಮ | ಸವನಾಭಿಧ ಪ್ರಾಣಜೀವರೊಳ್ಕರ್ತು ಕರ್ಮ ಕರಣಾ ||ರಾವಣ ಮದ ಭಂಜನ | ಭವ ಬಂಧನ | ನಿರ್ಮೋಚನಪಾವನ ಪದ ಪೂಜಕ | ಅಘ ಶೋಧಕ | ಶುಚಿ ಶರಣೂ ೧
ಭುವನತ್ರಯವನಳೆದಾ | ದಿವ್ಯವಾದ | ಪಾವನ್ನ ಪಾದಾ ||ಆ ವ್ಯೋಮವೆಲ್ಲಕೆ ವಾಮಪಾದಾ ||ಸುವ್ಯಾಪಿಸಿ ಬಲಿ | ಭಾವಕೆ ಒಲಿದಿಹ ಸಿರಿ ಹರಿತ್ರೈವಿಕ್ರಮ ಪದ ಪೂಜಕ | ನಿಷ್ಕಾಮಕ | ಸೇವಕ ಶರಣೂ | ೨
ಹರಿ ಪಾದಾಂಗುಷ್ಠದುಗುರೂ | ಖರ್ಪರದೊಳೂ | ಮಾಡೆ ಡೊಗರೊ ಹರಿಯಿತು ಹೊರ ಜಲಜಾಂಡದೊಳೊ ||ಕರುಣಾರ್ಣವ ಗುರು | ಗೋವಿಂದನ | ಪದ ತೊಳೆದನವರ ಪದವನ | ಸಾರುವನ | ಚರಣವನ | ಶರಣೂ ೩

೫೩೦
ಗಂಗಾ ಜನಕ ವಿಠಲ | ಅಂಗನೆಯ ಪೊರೆಯೋ ಪ
ಮಂಗಳಾಂಗನೆ ದೇವ | ರಂಗ ಭವಹಾರೀ ಅ.ಪ.
ವೈರಾಗ್ಯ ಭಾಗ್ಯಗಳ | ಹಾರೈಸುವಂತೆಸಗೋಸಾರಸುಖ ಸಾಂದ್ರ ಹರಿ | ಮಾರಮಣ ದೇವಾ |ಘೋರ ಭವವೆನಿಪ ಕೂ | ಪಾಠ ದಾಟಿಸೊ ಹರಿಯೆಕಾರುಣ್ಯ ಶರಧಿತವ | ಓರೆ ನೋಟದಲೀ೧
ಗಣನೆಗೊಳಗಾಗದಿಹ | ಜನನ ಮರಣವು ಬರಲಿತನು ಮನದ ಸಂತಾಪ | ಅಣು ಬೃಹತು ಇರಲೀಗುಣ ಪೂರ್ಣ ಶ್ರೀಹರಿಯೆ | ಗಣನೆಗದು ಸಿಗದ ತೆರಅನನುತನೆ ನಿನ್ನ ಕಾರುಣ್ಯ ಒಂದಿರಲೀ ೨
ಅಂಗನೆಗೆ ಸ್ವಪ್ನದಲಿ | ಗಂಗೆ ಮೀಯಿಸಿ ಬಾಲಸಂಗದಲಿ ಧವಳಾಖ್ಯ | ಗಂಗೆ ಸೋಪಾನಾಭಂಗ ವಿಲ್ಲದೆ ಯೇರಿ | ಮಂಗಳಾಂಗೆರ ಕಂಡುಶಿಂಗರದಿ ಪೂಜಿಸಿಹ | ಅಂಗನಾ ಮಣಿಯಾ ೩
ಉಚ್ಚ ನೀ ಚಂಗಳನು | ಸ್ವಚ್ಛ ತಿಳಿಸುತ್ತಿವಳಕೃಚ್ಛ್ರಕೇ ಒಲಿಯುತ್ತ | ಲಕ್ಷ್ಮೀ ರಮಣಾಅಚ್ಚ ಭಕುತಿ ಜ್ಞಾನ | ನಿಚ್ಚಳದ ಮನವಿತ್ತುಸಚ್ಚಿದಾನಂದಾತ್ಮ | ಉಚ್ಚಳೆಂದೆನಿಸೋ ೪
ವಿಷ್ಣು ಪದಿಧರಸಖನೆ | ದಶರಥಾತ್ಮಜ ಹರಿಯೆಯಶವಂತೆ ಗೃಹಿಣಿ ತವ | ಎಸೆವಪದ ಬಿಸಜವನು ಹಸನು ಸೇರಿಸೊಗುರೂ ಗೋವಿಂದ ವಿಠಲಾ ೫


ಗಜಮುಖ ಗಣನಾಥಾ | ಬೇಡುವೆಸುಜನರ ಪೊರೆ ಎಂದೂ ಪ
ಅಜನಯ್ಯನು ಶ್ರೀರಾಮನು ನಿನ್ನನುಪೂಜಿಸಿ ಪ್ರಥಮದಿ ಜಗಕೆ ತೋರಿದನುಅ.ಪ.
ದಶಮುಖ ರಾವಣನು ನಿನ್ನಹಸನಾಗಿ ಪೂಜಿಸದೇ |ವಶನಾದ ಮರಣಕೆ ರಣರಂಗದೊಳುಬಿಸಜ ಸಂಭವವರ ಬಹುವಾಗಿದ್ದರೂ ೧
ಯಮಸುತ ಮೊದಲಾಗಿ ನಿನ್ನನಮಿಸಲು ಅಧ್ವರದೀ |ಅಮಮ ಪಾಪಾತ್ಮಕರ ಮಿತರಸವರುತಸ್ವಾಮಿ ಎನಿಸಿದನು ಅಪಾರ ರಾಜ್ಯಕೆ ೨
ಗುರುಗೋವಿಂದ ವಿಠಲನಾ | ಕರುಣಭರಣವಮಿತ ಪಡೆದಾ |ವರದಾಯಕ ವಿಘ್ನವ ಕಳೆಯುತಅರವಿದೂರ ಪದರಜವನೆ ಕಾಣಿಸೋ ೩


ಗಣಪತೇ – ಪಾಹಿ – ಗಣಪತೇ ಪ
ಗಣಪತಿ ಪಾರ್ವತಿ ತನಯಾ | ಭಕ್ತಜನಕೆ ಕೊಡುವುದು ವಿನಯಾ | ಆಹಮನದೊಳು ನೀನಿಂತು | ಅನುಗಾಲ ಹರಿಗುಣಗಣಗಳ ಪೊಗಳುವ | ಮನವ ನೀ ಪಾಲಿಸೋ ಅ.ಪ.
ಬಾಲೇಂದು ಮೌಳಿಯ ತನುಜ | ವರಶೈಲಜೆ ಶರೀರ ಮಲಜಾ | ಪುಟ್ಟಿಶ್ರೀಲೋಲ ಕೃಷ್ಣ ರುಕ್ಮಿಣಿಜ | ನೆಂದುಪೇಳುವರು ಮಾರನನುಜಾ | ಆಹಕಾಳಗದೊಳು ಬಲು | ಅಸುರರ ಅಸುಗಳಕೀಲಿಸುತಲಿ ಬಹು | ಭೂಭಾರ ನಿಳುಹಿದ ೧
ಸುಜ್ಞ ಭಕ್ತಾಧೀನ ಗಣಪಾ | ಬಂದವಿಘ್ನಗಳ್ಹರಿಸುವೆ ಭೂಪ | ನೀನುಭಗ್ನ ಗೈಸೋ ಮನಸ್ತಾಪಾ | ಇಂಗಿತಜ್ಞ ಬೇಡುವೆ ತವ ಕೃಪಾ | ಆಹಮಗ್ನ ಮಾಡಿಸು ಮನ | ಮೊದಲಾದ ಕರುಣವಯಜ್ಞೇಶ ಶ್ರೀಹರಿ | ಪದದ್ವಯ ವನಜದಿ ೨
ಸಿಂಧುರಾಸ್ಯನೆ ಬಹು ಗುಣ | ಪೂರ್ಣಮಂದರೋದ್ಧಾರಿಯೆ ಕರುಣ | ಪಾತ್ರನೆಂದು ಹೊಕ್ಕನೊ ತವ ಚರಣ | ಕಂದನೆಂದು ಕಾಯೆಲೊ ಬಹು ಕರುಣ | ಆಹನಂದ ನಂದನ ಗುರು | ಗೋವಿಂದ ವಿಠಲನಬಂಧುರ ಚರಣವಾ | ನಂದದಿ ತುತಿಪಂತೆ ೩

೫೨
ಗರುಡ ಶೇಷಾದಿ ಮನೊ ಮಾನಿ | ಪ್ರೇರಕನೆ ಹರಿಯೇ ||ಸಿರಿ ಜಾನಕೀ ಪತಿ | ನೀನಿವನ ಕಾಯೋ ಪ
ಮಂದ ಜನರುದ್ಧಾರಿ | ತಂದೆ ಮುದ್ದು ಮೋಹನ್ನನಂದನರ ದ್ವಾರದಿಂ | ಪೊಂದಿ ಅಂಕಿತವಾಅಂದ ಸತ್ಸಾಧನವು | ಮುಂದುವರಿವಲಿಕಾಂಕ್ಷೆ |ಯಿಂದ ಸತ್ಕಾರ್ಯ | ಪ್ರತಿಬಂಧ ಪರಿಹರಿಸೊ ೧
ಮನಸಿನ ಮೈಲಿಗೆಯ | ಅನುನಯದಿ ಪರಿಹರಿಸಿಗುಣರೂಪ ಕಾರ್ಯ ತವ | ದಿನ ಪ್ರತಿದಿನ ಚಿಂತಿಪ |ಮನವ ನಿತ್ತಾದರಿಸೊ | ಗುಣನಿಧಿಯೆ ಪ್ರಾರ್ಥಿಸುವೆಅನಘ ನಿನ್ನಯ ಪಾದ | ವನಜ ಆಶ್ರಿತಗೇ ೨
ಭಾವಜಾರಿಯ ಮಿತ್ರ | ಭಾವುಕರ ಪರಿಪಾಲಗೋವಿದಾಂ ಪತಿಯೆ ಗುರು | ಗೋವಿಂದ ವಿಠಲಾ |ಪಾವಮಾನಿಯ ಪ್ರೀಯ | ನೀ ವೊಲಿದು ಭಕ್ತನ್ನತೀವರುದ್ದರಿಸೆಂದು | ದೇವ ಬಿನ್ನವಿಪೇ ೩

೨೩೩
ಗರುತ್ಮಂತ – ಗರುತ್ಮಂತ ಪ
ಸೂತ್ರಾಭಿಧನಿಗೆ | ಪುತ್ರನೆಂದೆನಿಸಿದಅ.ಪ.
ಅಮೃತಕಲಶಾಮೃತ | ಹಸ್ತವು ನಿನ್ನದುಕೃತಕೃತ್ಯನ ಗೈ | ಸುತ ಕಶ್ಯಪಗೇ ೧
ಹರಿಪದ ಯುಗ್ಮವ | ಕರದಲಿ ಧರಿಸಿರೆವರ ತವ ನಖದಲಿ | ಹರಿ ಬಿಂಬೋದ್ಛವ೨
ಓಂಕಾರಾಭಿಧ | ಏಕಾತ್ಮನ ವಹನೀ ಕಾಯ್ವುದು ಎನ | ಓಕರಿಸದಲೆ ೩
ಖಗವರ ಪನ್ನಗ | ನಗಧೀಶಾಖ್ಯಗೆಬಗೆ ಬಗೆ ಸೇವೆಯ | ಲಕುಮಿಗೆ ಗೈವೆ ೪
ವೇದೋದಿತ ಕ್ರಿಯ | ಕಾದ್ಯಭಿಮಾನಿಯೆಪಾದ ಭಜಕ ಗುರು | ಗೋವಿಂದ ವಿಠಲನ ೫

೧೮೯
ಗಾಡಿ ಪಾಳ್ಯ ಹನುಮಾ | ತವ ಪದಬೇಡಿ ಭಜಿಪೆ ಭೀಮಾ ಪ
ಈಡು ರಹಿತ ತವ | ಮಹಿಮೆಗಳನು ಕೊಂ-ಡಾಡ ಬಲ್ಲನೇ | ಪಾಮರನು ನಾಅ.ಪ.
ಅತಿಶಯದೊಳಗಿರಲೂ | ವಿಪ್ರನು | ಸತಿ ಸಹ ವಿಹಿತದಲೂ ||ಶತ ಮತ್ತರೆ ಶತ | ವತ್ಸರ ಪೂರ್ವದಿಹಿತಧಾಗಮನವ | ಸೂಚಿಸಿ ಸ್ವಪ್ನದಿ ೧
ದ್ವಿಜ ಬಿಂದ್ವಾಚಾರ್ಯಾ | ಸತಿ ಸಹ | ನಿಜ ನಿದ್ರೆಯೊಳಿಹ ಚರ್ಯಾ ||ಗಜ ಬಜಿಸೇಳುತ ತೈಜಸ ಪೇಳಿದನಿಜ ಭಾವವ ತಾ | ಸುಜನರಿಗ್ವೊರೆದು೨
ಹುಣಸೂರೊಳು ಬುಧನೂ | ಕನ್ಯಾ | ಮಣಿ ಸಹ ವಿರಲವನೂ ||ಘನ ಸಂತಾನವು ಇರದಿರೆ ದಂಪತಿಮನವನು ಹರಿಪದ | ವನಜದಲಿರಿಸೀ ೩
ಒಡಗೂಡಿ ಸೇವಕರಾ | ತರಿದನು | ಗಿಡ ಗಂಟಿಯ ವಿವರಾ ||ಅಡವಿಯೊಳೊಡ | ಮೂಡಿದ ಬರಿ ಶಿಲೆಕಂಡು ಮನದಿ ಬಯ | ಲಾಶೆಯೊಳಿರಲೂ ೪
ಮಲಗಿರೆ ಮನನೊಂದೂ | ಸ್ವಪ್ನದಿ | ಬಲ ಹನುಮಂತನು ಬಂದೂ ||ಚೆಲುವ ತನ್ನಯ ರೂಪ | ತೋರಿಸಿ ಪೇಳಲುಒಲಿಸಿ ಗಂಧದಲಿ | ಲಿಖಿಸಿ ಪೂಜಿಸಿದ ೫
ಮೊಗವನು ದಕ್ಷಿಣಕೆ | ತಿರುಗಿಸಿ | ನಗವನು ಮೇಲಕ್ಕೇ ||ನೆಗಹಿ ತನ್ನ ಎಡ | ಹಸ್ತದೊಳಗೆ ಬಲಭಾಗ ಕೈಯ್ಯ ತಾ | ನಿರಿಸಿಹ ಕಟಿಯಲಿ ೬
ಯಾರಗೊಡವಿಯೇಕೇ | ಎಂದು | ಊರ್ಹೊರಗಿರಲಿಕ್ಕೆ ||ಸಾರ ಸುಜನರೆಲ್ಲ ವಾರ ವಾರಕ್ಕೆ ನಿನ್ನಸಾರಿ ಭಜಿಸುವರು | ಚಾರು ಮತಿಯಲಿ ೭
ಸ್ಥಿರ ಚರ ಸುವ್ಯಾಪ್ತಾ | ಮರುತ | ಶರಣ ಜನರ ಆಪ್ತಾ ||ಸುದತರು ಭಕುತರ | ಹರಕೆ ಪೂರೈಸುವೆನಿರುತ ಹರಿಯ ಪದ | ರತಿಯನೆ ಕೊಡುವುದು ೮
ಕೋವಿದರರಸನ್ನಾ | ಗುರು | ಗೋವಿಂದ ವಿಠಲನ್ನಾ ||ಓವಿ ತೋರೊ ಮಮ | ಹೃದ್ವನಜದೊಳಗೆ ಪಾವಮಾನಿಯೆ ಮ | ತ್ಪ್ರಾರ್ಥನೆ ಸಲಿಸೀ ೯

ಸರಸ್ವತಿದೇವಿ
೨೧೩
ಗಾಯಿತ್ರಿ – ಶುಭಗಾತ್ರಿ ಪ
ಮಾಯಾಭಿಧೆ ಪತಿ | ವೀರ್ಯಜಾತ ಶುಭಕಾಯ ಪುಮಾಭಿಧ | ಆರ್ಯನ ಪ್ರಿಯಸತಿಅ.ಪ.
ವೀಣೆ ಧರಳೆ ಹರಿ | ಗಾನ ಗುಣಂಗಳಜಾಣೆಯೆ ಈ ತನು | ವೀಣೆಯಂತೆಸಗು ೧
ನೀರಜಾಕ್ಷಿ ನಿನ | ಗಾರಿಲ್ಲವು ಸಮಮೂರು ಲೋಕದಲಿ | ಮುರಾರಿಯನುತೆ ೨
ಕಾವ ಕೊಲ್ವ ಗುರು | ಗೋವಿಂದ ವಿಠಲನಓವಿ ಹೃದಂಬರ | ಠಾವಿಲಿ ತೋರಿಸು ೩

೫೩೧
ಗಿರಿಜೆಪತಿ ಪ್ರಿಯ ವಿಠಲ | ಪೊರೆಯ ಬೇಕಿವನಾ ಪ
ದುರಿತ ವಾರಿಧಿ ಪೋತ | ಹರಿಯೇ ವಿಖ್ಯಾತ ಅ.ಪ.
ಹಿಂದಿನ ಪರಾಧಗಳ | ತಂದೆ ನೀನೆಣಿಸದಲೆಕಂದನನು ಸಲಹುವುದು | ಇಂದಿರಾರಾಧ್ಯಾನೊಂದಿದ್ದರು ಭವದಿ | ಮಂದ ಮಾನವ ನೀದಯಎಂದಿಗೊ ಗತಿ ನೀನೆ | ಯೆಂದು ನಂಬಿಹೆನೋ ೧
ತೈಜಸನು ಶ್ರೀ ಹರಿಯೆ | ವಾಜಿವದನನು ಆಗಿನೈಜರೂಪವ ತೋರಿ | ಸೋಜಿಗವ ಬೀರಿ |ಭ್ರಾಜಿಷ್ಣು ಭಯ ತೋರೆ | ಓಜಸವ ಕಳಕೊಂಡುಮಾಜದಲೆ ದುಷ್ಕರ್ಮ | ಗೋಜಿದೊಳಗಿಹನಾ ೨
ಹರಿಯ ಸಖರುದ್ರನನ | ವರಸು ವೈವಾಹಿಕವತರಳನಿಗೆ ಸ್ವಪ್ನದಲಿ | ತೋರೆ ಬೆರಗಾಗೀಅರಿಯು ವಂತಾಯ್ತವಗೆ ಗಿರಿಜೆ ಪತಿ ಕಲ್ಯಾಣನಿರುತ ಭಕ್ತರು ಗೈವ | ಪರಮ ಸೇವೆಗಳಾ ೩
ತಾರತಮ್ಯ ಜ್ಞಾನ | ಮೂರೆರಡು ಭೇದಗಳಸಾರವನೆ ತಿಳಿಸುತ್ತ | ಪೋರನ್ನ ಸಲಹೋ ಮಾರಾರಿ ಸಖ ನಿನ್ನ | ಸಾರ ನಾಮಾ ಮೃತವಬಾರಿ ಬಾರಿಗೆ ಉಣಿಸಿ | ತಾರಿಸೋ ಭವವಾ ೪
ಸತಿ ಸುತರು ಹಿತರಲ್ಲಿ | ವ್ಯಾಪ್ತನಿಹ ಶ್ರೀ ಹರಿಯೇಅತುಳ ಮಹಿಮೆಯ ತಿಳಿಸಿ ವಾತಸುತ ವಂದ್ಯಾ |ಕೃತ ಕೃತ್ಯನೆಂದೆನಿಸಿ | ಭಕ್ತನ್ನ ಪೊರೆಯೆಂದುಹಿತ ಗುರೂ ಗೋವಿಂದ | ವಿಠಲ ಪ್ರಾರ್ಥಿಸುವೇ ೫

೩೯೨
ಗುರವೆ ಪೊರೆಯೊ ಯನ್ನ | ಆವಗುಣಮರೆದು ರಾಘವೇಂದ್ರಾ ಪ
ನೆರೆನಂಬಿದರ ಸುರತರುವೇ ಹೇಪುರಟ ಕಶಿಪುಜ ಗರುಡವಹನ ಪ್ರೀಯ ಅ.ಪ.
ಬಲುಕರ್ಮ ಜಾಲಗಳ | ಮಾಡುತ ಬಳಲಿಹೊಲಬು ತಪ್ಪದೆ ಬಹಳ ||ಚಲುವ ಚನ್ನಿಗನಾದ || ಬಲರಾಮನನುಜನಸಲೆ ನಾಮ ಒಲಿಸದೆ | ಮಲಿನನಾದವನ ||ಕಳೆದು ಬಿಡುವರೆ ಸುಜನ ವತ್ಸಲ | ಗೆಲುವ ಕಾಣೆನೊ ಕರ್ಮನಿರ್ವಹದಿಜಲಜನಾಭನ ಚರಣ ಪುಷ್ಕರ | ಸುಲಭ ಷಟ್ಟದ ಸೆನಿಸೊ ಗುರುವರ ೧
ಯತಿಕುಲ ಸಾರ್ವಭೌಮ | ನಿಮ್ಮಯ ನಾಮಾಮೃತವನುಣಿಸಲು ನಿಸ್ಸೀಮಾ ||ಪತಿತ ಪಾವನ ಹರಿಯ | ಸತತದಿ ನುತಿಸುವಮತಿಯಿತ್ತು ಪಾಲಿಸೊ | ಶತಕ್ರತು ಪಿತ ಪಿತನೆ ||ರತಿಪತಿಯ ಪತನೆನಿಸಿದಾತನ | ನತಿಸಿ ನುತಿಸುತ ಕರೆಯುತಲಿ ಗತಿ ಪ್ರದಾಯಕ ಹರಿಯ ವ್ಯಾಪ್ತಿಯ | ಪಿತಗೆ ತೋರಿದ ಅತುಳ ಮಹಿಮಾ ೨
ಮಂತ್ರ ನಿಕೇತನನೆ ಯತಿಕುಲರನ್ನ ಮಂತ್ರಾರ್ಥ ರಚಿಸಿದನೇ ||ಗ್ರಂಥೀಯ ಹರಿಸೂವ | ತಂತ್ರವ ತೋರೋ ಅತಂತ್ರವಾಗಿದೆಯನ್ನ | ಮಂತ್ರ ಸಾಧನವೂ || ಪ್ರಾಂತಗಾಣದೆ ಚಿಂತಿಸುವೆ ಸರ್ವಸ್ವ | ತಂತ್ರ ಗುರುಗೋವಿಂದ ವಿಠಲನ ಅಂತರಂಗದಿ ತೋರಿ ಸಲಹೋ | ಕ್ರಾಂತನಾಗುವೆ ನಿಮ್ಮ ಪದಕೇ೩

ಅಬ್ಬೂರು ವ್ಯಾಸರಾಜ ಮಠದ
೪೧೬
ಗುರು ಚರಣವನು ಸಂಸ್ಮರಿಸಿರೋ ಪಗುರು ಲಕ್ಷ್ಮಿ ವರಜಾತ |
ಗುರು ಲಕ್ಷ್ಮಿಪ್ರಿಯ ತೀರ್ಥ ಚರಣ ಸರಸಿಜ ಭಜಿಸೆ | ಕರಣದಂತರ ಬಾಹ್ಯ ಪರಿಶುದ್ಧಿಯನೆ ಗೈದು | ಜ್ಞಾನ ಭಕ್ತಿಯನಿತ್ತು ಹರಿ ಪೊರೆವ ಸಂತತದಲಿ ಅ.ಪ.
ಪೂರ್ವಾಶ್ರಮಾ ನಾಮ | ಭೂವಿಬುಧ ಕೃಷ್ಣಾಖ್ಯ ದೇವರಾಯನ ದುರ್ಗ | ದಾವ ನರಸೀಪುರದಿಆವಾಸಿಸುತ್ತಿರಲು | ಓರ್ವ ಸಖನಿವರ ಜ್ಞಾನಾನುಸಂಧಾನದಾ |ಭಾವ ತಿಳಿಯುತ ಮನದ | ಯಾವ ದೊಂದಭಿಲಾಷೆನೀವು ಸಲಿಸುವುದೆನ್ನೆ | ಆವುದೆನುತಲಿ ಕೇಳೆಯಾವ ಪನಸದ ಫಲವ | ಆಸ್ವಾದು ಮಧು ಒಡನೆಓವಿ ಕರಡಿಯು ಕಲಸಿದ ೧
ಅದರ ಪ್ರಾಪುತಿಗಾಗಿ | ಬದಿವನನೊಂದಿನವುಬೆದರದಲೆ ಪೊಗುತಿರಲು | ಎದುರೊಂದು ಶಿಲೆ ಮೇಲೆವದಗಿ ಕಲಸಿದ ಕಂಡು | ಅದರೊಡನೆ ಮರನೇರೆ ಬಂದಿತದು ಮರಿಗಳೊಡನೆ |ಅದಕು ಇವರಿಂಗಾಯ್ತು | ಕದನವೂ ಕೆಲಕಾಲ ಒದಗೆ ಜಯ ವಿಬುಧರಿಗೆ | ಹದುಳದಲಿ ಗೃಹಸೇರಿಮುದದಿಂದ ಶ್ರೀಹರಿಯ | ಪದ ಸ್ಮರಣೆಯಲ್ಲವರು ದಿನಗಳನೆ ಕಳೆಯುತಿಹರು ೨
ಯತಿ ಲಕ್ಷ್ಮಿ ವರರಿಂದ | ಯತಿಗಳಾಶ್ರಮ ಪೊಂದಿಹಿತದಿಂದಲಾ ಬೂದಿ | ನೆತ್ಯಾಖ್ಯ ಗ್ರಾಮದಲಿಸ್ಥಿತರಾಗಿ ಶಿಷ್ಯರಿಗೆ | ಹಿತದ ಉಪದೇಶವ ಪ್ರೀತಿಯಲಿ ಮಾಡುತಿರಲು |ಯತಿಗಳಾಶ್ರಮದಲ್ಲಿ | ಮತಿ ವಂತ ವಿಪ್ರೋರ್ವಕ್ಷಿತಿಯೊಳಾ ನಾಕನಿಭ | ಮಂತ್ರ ಮಂದಿರ ಸೇವೆ ಅತಿಹಿತದಲೆಸಗುತಿರೆ | ಯತಿಗಳಾಶೀರ್ವದಿಸೆ ಪಥವಾಯ್ತು ಪ್ರಿಯರಲ್ಲಿಗೇ ೩
ಭಕುತಿಯಿಂ ಭರಿತ | ಭಾವುಕನಾಗಿ ಪರಮಗುರುಲಕುಮಿ ಪ್ರಿಯ ತೀರ್ಥಪದ | ಪಂಕರುಹಕಭಿನಮಿಪೆರುಕುಮಿಣಿಯ ಪತಿ ಸೇವೆ | ಯುಕುತನಾಗಿರಲ್ವೊರೆದು ನಾಲ್ವತ್ತು ದಿನ ಮಿತಿಯಲಿ |ಕಕುಲಾತಿ ತೊರೆದು ನಿಜ | ಭಕುತಿಯಿಂ ಗೈವುತಿರೆಲಕುಮಿ ಪ್ರಿಯರಾಚಾರ | ಉಕುತಿಯಲಿ ದುರ್ಭಾವಪ್ರಕಟವಾಗಲು ಮನದಿ | ಬಂಕಪುರ ಮಾರ್ಗವನೆ ತೆರಳಲನುವಾದನೂ ೪
ಮತ್ತೆ ನರಹರಿ ತಾನು | ವ್ಯಕ್ತಯಿಂತೈಜಸನುಒತ್ತಿಪೇಳಲು ಬುಧನು | ಮತ್ತೆ ಗುರುಪದಕೆರಗಿಬಿತ್ತರಿಸೆ ತನ್ನಸ್ವಪ್ನ | ವಾರ್ತೆಗಳ ವಿಶ್ವಮಿತ್ರನ ಭಾವವನೆ ತೋರುತ |ಇತ್ತಲಿಂದೆರಡೊರ್ಷ | ಕಿತ್ತಪೆವು ಆಶ್ರಮವಆರ್ಥಿಯಿಂದಿರುತಿರ್ದು | ಹಸ್ತಿವರದನ ಸೇವೆಉತ್ಸಹದಲೆಸಗುವುದೆ | ನುತ್ತಲಾಶೀರ್ವದಿಸಿ ಚಿಂತಿಸುತ್ತಿರೆ ಹರಿಯನು ೫
ಗ್ರಾಮದೊಳಗುಳ್ಳ ಖಲ | ಸ್ತೋಮ ಬಂದಡರುತ್ತಭೂಮಿ ಗೋಸುಗ ಕಲಹ | ಸೀಮೆ ಮೀರುತ ಗೈಯ್ಯೆಅ ಮಹಾಯತಿವರ್ಯ | ಭೂಮಿ ಕೃಷ್ಣಾಂಕಿತವುಕಾಮನೆಯ ಬಿಡಿರೆನುತಲಿ | ನೇಮದಲಿ ಘರ್ಜಿಸಲು |ಆ ಮಹಾ ದುಷ್ಟಜನ ಈ ಮರದ ಸಂಪದವ ಕಾಮಿಸುತ ಮನದಲ್ಲಿನೇಮದಿಂ ಪತ್ರೋರ್ವ | ಪಾಮರನ ಒಡನವರು ಯಾಮ ಸಂಜೆಲಿ ಕಳುಹಲು ೬
ಪರಿವಾರ ಜನಕೆಲ್ಲ | ಇರುವ ನೆಲೆ ಬಿತ್ತರಿಸಿಸರಿಯುತಲಿ ಸುಕ್ಷೇಮ | ನೆರೆಯ ಸಾರುವುದೆನುತಒರೆಯಲೂ ಕೆಲವರು | ಮರೆಮಾಡಿ ತೃಣ ಬಣವಿ ನೆರೆ ಬಿಡದೆ ಸಾರುತಿರಲು |ವರನಿಶೀ ಸಮಯದಲಿ | ದುರುಳರೆಲ್ಲರು ಮಠಕೆಬರಬರುತ ಕವಣೆಕಲ್ | ನೆರೆಬೀರ್ವ ಜನಗಳೂಉರಿವ ತೃಣ ಬಣವಿಯಂ | ದುರೆ ಜ್ವಾಲೆ ಪರಿಕ್ರಮಣ ಭಯ ಭ್ರಾಂತಿಯಿಂದಿರುತಿರೆ ೭
ಹೊರಗೆ ಪುಂಡರಳೊಬ್ಬ | ಉರಿಯೊಳಗೆ ತಾಸಿಲ್ಕಿನೆರೆ ಚೀರಿ ಬೀಳಲವ | ದುರುಳರವನಂ ಕೊಂಡುಪುರವಿಡಿದು ಪೊರಮಡಲು | ಪರಯತುಯಗೊಡವೆ ನಮಗೇಕೆಂದು ಬಹು ಬೆದರುತ |ಹರಿಗಿಡುವ ಆಭರಣ | ವರ ವಸನ ಭಂಡಾರವರ ಪೇಟ ಕದತೆರೆದು | ಸರಿಸಿ ದ್ವಾರದಲಿಟ್ಟುಹರಿಗೆ ಆರತಿಯೆತ್ತಿ | ವರಶಿಷ್ಯ ನೊಡವೆರಸಿ ಸಿರಿ ಹರಿಯ ನಮಿಸುತಿರಲು ೮
ಹರಿಕೃಷ್ಣ ನಾರೆಯಣ | ನರಹರೇ ತವ ಕರುಣವಿರೆ ಭಯವು ಏಕೆನುತ | ನೆರೆಪಾಡಿ ಪೊಗಳುತಿರೆ ಪರಿವಾರ ಬರುತ ಗುರು | ಚರಣಕಭಿನಮಿಸುತ್ತ ಅಚ್ಚರಿಯ ಚಕಿತರಾಗೆ |ಗುರು ಲಕ್ಷ್ಮಿ ಪ್ರಿಯರು ಪರಿ | ಚರರಿಘರಸುತ್ತ ಬಲುಪರಿಯ ಹರಿ ಮಹಿಮೆಗಳ | ಒರೆಯುತಾನಂದಾಶ್ರೂ ಸುರಿಸುತವ ಶೇಷನಿಶಿ | ಹರಿಕರುಣ ಸ್ಮರಣೆಯಲಿ ಸರಿಸಿದರು ಶಿಷ್ಯರೊಡನೇ ೯
ಪ್ರಥಮ ವಾಸಸ್ಥಾನ | ದಕ್ಷಿಣ ಪಿನಕಿತಟವಸ್ತಿಯಂತೊರೆದು ಕ್ರಮಿ | ಸುತ್ತ ಬರುತ್ತಬ್ಬುರೋಳ್‍ಸ್ಥಿತರಾಗಿ ಪರಿಸರನ ಮತ ಬೋಧೆಲಿರಲೊಂದು ದಿನ ನತ್ತೆ ಮತ್ಸರಿಗಳೂ |ಹುತಭುಕೂ ಶೇಷ ಮೆಲೆ | ಮತಿ ಮಾಡಿ ಕುಳಿತಿರಲುಅತಿಕ್ರೂರ ಗರ ಮಿಶ್ರ | ಯತಿಗೆ ಬಡಿಸೇ ಜೀರ್ಣಿಸುತ ಪಾಪಿ ವಿಪ್ರರ್ಗೆ | ಗತಿಸಿದವು ಅಕ್ಷಿಗಳು ಮೃತ್ಯಂತಲಂದರಾಗಿ ೧೦
ಮತ್ತೊಂದು ದಿನ ಚೆನ್ನ | ಪತ್ತನದಿ ಹರಿಪೂಜೆಅರ್ಥಿಯಿಂ ಗೈದನ್ನ | ದತ್ತ ಮಾಡಲು ಹರಿಗೆಯತ್ನಿಸಲು ಗರ ಮಿಶ್ರ | ಸತ್ಯವಾದುದ ಕಂಡು ಪ್ರೋಕ್ಷಿಸಲು ಶಂಖದುದಕ |ವ್ಯಕ್ತವಾಯಿತು ಇವರ | ಉತ್ತುಂಗ ಮಹಿಮೆಗಳುಹಸ್ತಿವರದನು ಭೋಜ್ಯ | ವಸ್ತುಗಳ ಸ್ವೀಕರಿಸಿದತ್ತ ಮಾಡಲು ಪುನಃ | ಮತ್ತೆ ಜೀರ್ಣಿಸಿಕೊಂಡು ಹರಿಯನ್ನೆ ಚಿಂತಿಸುತಲಿ ೧೧
ನೆಲೆಸಿರಲ್ಲಬ್ಬುರೊಳು | ಗಳ ಗ್ರಾಹಕರು ಮತ್ತೆಮಿಳಿತರಾಗುತ ರಾತ್ರಿ | ಛಲವ ಸಾಧಿಸೆ ನಿಶಿತಅಲಗು ಕತ್ತಿಯ ಪಿಡಿದು | ನೆಲಕೆ ಯತಿ ಶಿರವನ್ನು ಇಳಹುವ ಮತಿ ಮಾಡಲೂ |ಒಲವಿನಿಂ ಯತಿಯಕುಲ | ತಿಲಕ ವೃಂದಾವನವ ಬಳಸಿ ನಮಿಸಲು ಸಂಜೆ | ಯಲಿ ಪೇಳ್ದ ಬ್ರಹ್ಮಣ್ಯಒಳ ಪೊಗುತಲಾರಾಮ | ನೆಲೆಸೇರಿ ಮಠಸಾರಿ ಎಂದೆನುತ ಎಚ್ಚರಿಸಿದರ್೧೨
ಮತ್ಸರಿಗಳಿನ್ನೊಮ್ಮೆ | ಕುತ್ಸಿತದ ಬುದ್ಧಿ ಮಹಉತ್ಸವದ ಸಮಯದಲಿ | ಹೆಚ್ಚು ಜನ ಸಂಧಿಸಿರೆನೆಚ್ಚಿದ್ದ ಪಾಚಕರು | ಉಚ್ಚಳಿಸಿ ಕೆಲಸಾರೆ ಕೆಚ್ಚಿದೆಯನೇ ತೋರುತ |ಮುಚ್ಚಿಮಠದ್ವಾರಗಳ | ಹೆಚ್ಚುತಲಿ ಪಲ್ಯಗಳ ಮತ್ಸಕೇತನ ಪಿತನು | ಮೆಚ್ಚುವಂದದಿ ಪಾಕಪೆಚ್ಚಿಸುತಲಿ ಹರಿಯ | ಅರ್ಚನೆಯ ಕೈಕೊಂಡು ಮೆಚ್ಚಸಿದರು ಸುಜನರ ೧೩
ಜ್ವರತಾಪದಿಂದೊಮ್ಮೆ | ನೆರೆ ಬಳಲು ವಂತಿರ್ಪಗುರುವರರ ಕಂಡೋರ್ವ | ವರ ಶಿಷ್ಯ ಪ್ರಶ್ನಿಸಲುನೆರೆ ಬದುಕ ಬೇಕೆಂಬ | ಶರಿರವನೆ ತೊರೆವೆ ನೆಂಬೆರಡುಕ್ತಿ ಸಲ್ಲದಿದಕೊ |ನರರಾಡಿ ಕೊಳದಂತೆ | ವರ ಭಿಷಜ ತಾಕೊಟ್ಟವರಗುಳಿಗೆ ನುಂಗುವೆವು | ಹರಿ ಪೂಜೆ ವಿರುದ್ಧಜ್ವರ ಕುಂಟಿ ಧನ್ವಣತ್ರಿ | ವರಮಂತ್ರ ಕೈ ಸೇರಿ ಪರಿಪರಿ ಮೆರೆಯುತಿರಲು ೧೪
ಯತಿವರರ ಮಹಿಮೆಗಳ | ತುತಿಸಲೆನ್ನಳವಲ್ಲಯುಕ್ತಿಯಲಿ ಅಪವಾದ | ಹೊತ್ತು ಕೊಳದಲೆ ಅವರು ಜಿತ ಇಂದ್ರಿಯತ್ವವನು | ಮತಿಮತಾಂ ಸುಜನಕ್ಕೆ ಪ್ರತಿರಹಿತದಿಂ ತೋರುತ |ಹಿತದಿಂದ ಲಾರಾಮ | ಸೇತು ಯಾತ್ರೆಯ ಗೈದುಕ್ಷಿತಿ ಚರಿಸಿ ಬರಬರುತ | ಹಿತಶಿಷ್ಯ ವ್ಯಾಜದಿಂಸತ್ಯ ಧೀರ್ರನು ಚರರ | ಕೃತ ಬಹಿಷ್ಕರ ಗೆಲ್ದು ಶಾಂತತೆಯನೇ ತೋರ್ದರು ೧೫
ವರಲಕ್ಷ್ಮಿ ಪ್ರಿಯ ತೀರ್ಥ | ಕರಗಳಿಂದರ್ಚಿತವುಪರಿಸರಾರ್ಚಿತ ಯೋಗ | ನರಹರಿಯು ವ್ಯಾಸಮುನಿವರದ ಗೋಪತಿ ಕೃಷ್ಣ | ಸಿರಿವ್ಯಾಸಯತಿ ರಚಿತ ಎರಡೇಳು ರಜತ ಪ್ರತಿಮೆ |ಗುರುವರ ಬ್ರಹ್ಮಣ್ಯ | ವರದ ವಿಠ್ಠಲದೇವಸರ್ವಜ್ಞರರ್ಚಿಸಿದ | ವರ ಶರಣ್ಯ ವಿಠಲನುನಿರುತ ಪೂಜಿತವಾಗಿ | ಶರಿರ ಭೌತಿಕ ಬಿಡುವ ವರ ಸಮಯ ತಾನುಸುರಿರೆ೧೬
ಇಂತಿಪ್ಪ ಗುರುವರರ | ಶಾಂತತೆಯೇನೇನೆಂಬೆಅಂತಿಮದ ಸಮಯದ ಭೂ | ಕಾಂತ ತಾ ಕಳುಸಿರ್ದಪಿಂತೆ ತಾ ದೂರಿಟ್ಟ | ದಂತವಗೆ ಯತಿಪಂಥ ರಾಹಸ್ಯ ಉಪದೇಶಿಸಿ |ಮುಂತವಗೆ ಪೀಠಾದಿ | ಚಿಂತೆಯಿಲ್ಲದೆ ಇತ್ತುಅಂತೆ ಮತ್ತೋರ್ವ ತಮ | ಪಂಥಗಳ ನಡೆಸುವಗೆಕಾಂತ ವಿಠಲ ಶರಣ್ಯ | ಮೂರ್ತಿಯನೆ ಕೊಟ್ಟು ಸಂತೈಸಿ ಇತ್ತರಾಶಿಷವ ೧೭
ಎರಡು ಕಂಗಳು ನೀಲ | ವರರೇಖೆಗಭಿಮಾನಿಸುರವಿಶ್ವ ಮಿತ್ರಾಖ್ಯ | ಅರ್ಕಂಶ ತಾನೆಂಬಗುರುತೋರ್ವ ಶಿಷ್ಯನಲಿ | ದರ್ಶ ದಿನದಲಿ ತೋರಿ ಇರುತಿರರು ಕೆಲವು ಕಾಲ | ವರುಷವನು ಪೈಂಗಳವು | ಎರಡೊಂದನೇ ಮಾಸವರಶುಕ್ಲ ಹರಿದಿನದಿ | ಸರಿತು ವರ ಕಣ್ವತಟಪರಮ ಸುಕ್ಷೇತ್ರದಲಿ | ವರಯೋಗ ಮಾರ್ಗದಲಿ ದೇಹ ಹರಿಗರ್ಪಿಸಿದರು ೧೮
ಜಯ ಜಯತು ಶುಭಕಾಯ | ಜಯಜಯತು ತಪಶೀಲಜಯ ಶಮೋದಮವಂತ | ಜಯ ಶಾಪನುಗ್ರಹನೆಜಯಲಕ್ಷ್ಮಿ ವರಜಾತ ಜಯಲಕ್ಷ್ಮಿ ಪ್ರಿಯ ತೀರ್ಥ ಜಯ ಜಯತು ವಿಶ್ವಮಿತ್ರ |ಪ್ರಿಯ ಗುರುಗಳಾಂತರ್ಯ | ಜಯ ದೇವ ನೋಳ್ಪರಮಪ್ರಿಯನಾದ ತಂದೆ ಮುದ್ದು | ಮೋಹನ್ನ ವಿಠಲಾತ್ಮಜಯ ಗುರೂ ಗೋವಿಂದ | ವಿಠ್ಠಲನ ಭಜಿಸಿದರೆ ನಯಸುವನು ಪರಮಗತಿಗೆ ೧೯

೫೩೨
ಗುರು ಜಗದೀಶ ವಿಠಲ | ಪೊರೆಯ ಬೇಕಿವನ ಪ
ಮರುತಾಂತರಾತ್ಮ ಹರಿ | ಪ್ರಾರ್ಥಿಸುವೆ ನಿನಗೇ ಅ.ಪ.
ಲೌಕಿಕದಿ ಸಂಘಟಿಪ | ಕಾಕು ಸಂಗವ ಕೊಡದೆ ಮಾಕಳತ್ರನೆ ಕಾಯೊ | ಜೋಕೆಯಿಂದಿವನವಾಕು ಮನ್ನಿಸಿ ಎನ್ನ | ಬೇಕಾದಭೀಷ್ಟಗಳತೋಕನಿಗೆ ಕೊಡು ನೀನೆ |ಶ್ರೀಕರಾರ್ಚಿತನೇ ೧
ಶರ್ವಾದಿ ದಿವಿಜೇಡ್ಯ | ಪರ್ವಕಾಲದಿ ಬಪ್ಪಸರ್ವ ವಿಘ್ನಗಳ್ಹರಿಸಿ | ಪೊರೆಯೊ ಇವನದುರ್ವಿಭಾವ್ಯನೆ ಹರಿಯೆ | ದರ್ವಿಜೀವಿಯ ಕಾದಸರ್ವ ಭಾರವು ನಿನದೊ | ಸರ್ವಾಂತರಾತ್ಮ ೨
ಪೂರಿ ಜಗದೀಶ ಹೇ ಕಾರುಣ್ಯ ಮೂರುತಿಯೆಪೋರನಿಗೆ ಸ್ವಾಪದಲಿ | ತೋರಿ ಕೊಂಡಿರುವೇಮಾರಾರಿ ಸಖನೆ ಅನು | ಸಾರ ಅಂಕಿತವಿತ್ತುಧೀರ ನೀ ಪೊರೆಯೆಂದು | ಪ್ರಾಥಿಸಿಹೆ ಹರಿಯೇ ೩
ಕೃಷ್ಣೆಗಕ್ಷಯ ವಸನ | ಕೊಟ್ಟು ರಕ್ಷಿಸಿದಂಥಕೃಷ್ಣ ಮೂರುತಿ ಇವನ | ಸುಷ್ಠುಷ್ಟು ಪಾಲಿಪುದೋಶ್ರೇಷ್ಠ ಹರಿ ಗುರು ಭಕ್ತಿ | ಮತ್ತೆ ತರತಮ ಜ್ಞಾನಕೊಟ್ಟು ಕಾಪಾಡೊ ಹರಿ | ವಿಷ್ಠರಶ್ರವನೇ ೪
ಆವ ಸಂಸ್ರ‍ಕತಿ ಜಲಧಿ | ನಾನೆ ಎಂದೆನಿಪ ತವಭವ್ಯ ನಾಮಾಮೃತವ | ಸಾರ್ವಕಾಲದಲೀತಾವಕಗೆ ಉಣಿಸುತ್ತ | ಭಾವದಲಿ ಮೈದೋರೊಗೋವಿದಾಂಪತಿಯೆ ಗುರು | ಗೋವಿಂದ ವಿಠಲ೫

೫೩೪
ಗುರು ಪಾಂಡುರಂಗ ವಿಠಲ | ಪರಿಪಾಲಿಸಿವನಾ ಪ
ಕರಣ ನೀಯಾಮಕನೆ | ಕರುಣವನೆ ತೋರೀ ಅ.ಪ.
ತತ್ಥಳಿಪ ನಿನರೂಪ | ಸುಪ್ತಿಯಲಿ ತಾ ಕಂಡುಅತ್ಯಂತ ಆನಂದ | ತೃಪ್ತನಾಗಿಹೆನೋ |ಮತ್ತದನೆ ಅನುಸರಿಸಿ | ಇತ್ತಿಹೆನೊ ಉಪದೇಶಕರ್ತೃ ಕರ್ಮ ಸ್ವಾಮಿ | ಎತ್ತಿಕರ ಪಿಡಿಯೋ ೧
ಭರಿತ ಭಾವುಕನಿವನು | ನಿರುತ ಸತ್ಕರ್ಮದಲಿಪರಮ ರತಿಯನು ಮಾಳ್ಪ | ಸುರಸಾರ್ವ ಭೌಮವರಜ್ಞಾನ ಯುತ್ ಕರ್ಮ ನೆರವಾಗಲಿವನೀಗೆಪರಮ ಪಾವನ ಮೂರ್ತೆ ಹರಿ ಪಾಂಡುರಂಗಾ ೨
ಉಚ್ಚ ನೀ ಚಂಗಳನು ಸ್ವಚ್ಛೈದು ಭೇದಗಳಕೃಧ್ರ ವ್ರತಗಳನರುಪಿ | ಅಚ್ಚ ಕರ್ಮದಲೀಮೆಚ್ಚಿಗೆಯ ನೀನಿತ್ತು ಉಚ್ಚತವನಾಮ ಸ್ರ‍ಮತಿಹೆಚ್ಚಾಗಿ ಮಾಡಿಸುತ | ತುಚ್ಚ ಭವ ಕಳೆಯೋ ೩
ಪದ್ಧತಿಯ ತಪ್ಪದಲೆ | ಮಧ್ವಮತದಂಗವನುಉದ್ಧರಿಸೊ ಇವನಲ್ಲಿ | ಪದ್ಮನಾಭಾಖ್ಯಾಈ ಧರೆಯ ಸಂಸಾರ | ಬದ್ಧ ಲೌಕೀಕಗಳತಿದ್ದಿ ವೈದಿಕವೆನಿಸೋ | ಹದ್ದು ವಾಹನನೇ೪
ಕೃದ್ಧಖಳ ಸಂತತಿಯ | ಒದ್ದು ಕಳೆಯುತ ಹರಿಯೆಹೃದ್ಗುಹದಿ ಮೈದೋರೊ | ಶಬ್ಧಗೋಚರನೇಮಧ್ವಾಂತರಾತ್ಮ ಗುರು | ಗೋವಿಂದ ವಿಠ್ಠಲನೆಮದ್ವಚನ ಸಲಿಸೆಂದು | ಪ್ರಾರ್ಥಿಸುವೆ ಹರಿಯೇ ೫

೫೩೩
ಗುರು ಪ್ರಸನ್ನ ವಿಠಲ | ಪೊರೆಯ ಬೇಕಿವನಾ ಪ
ದುರಿತ ದುಷ್ರ‍ಕತ ನಿಚಯ | ಪರಿಹರಿಸಿ ವರ್ಯಾ ಅ.ಪ.
ಮಧ್ವ ಮತದಲಿ ಶ್ರದ್ಧೆ | ವೃದ್ಧಿಗೈ ಸಿವನಲ್ಲಿಶ್ರದ್ಧೆ ಪತಿನುತ ಹರಿಯೆ | ಮಧ್ವಾಂತರಾತ್ಮಾಬುದ್ಧಿ ಜೀವಿಯು ಇವನು | ಸಾಧನದಿ ಶಕ್ತನಿಹನಿದ್ರೆಯಿಂದೆಚ್ಚರಿಸಿ | ಉದ್ಧರಿಸೊ ಇವನಾ ೧
ಅಂಕಿತದ ಉಪದೇಶ ಕಾಂಕ್ಷಿಸುತ್ತಿಹ ಇವಗೆಬಿಂಕದಲಿ ತೈಜಸನು | ಗುರು ರೂಪಿಲಿಂದಾಲೆಂಕಕನ ಸ್ವೀಕರಿಸಿ | ಆಶಿಷವ ನಿತ್ತಿಹನುಪಂಕಜಾಸನ ವಂದ್ಯ | ಅಂಕಿತವ ನಿತ್ತೇ ೨
ಸಂಸಾರ ಕ್ಲೇಶಪದ | ಪಾಂಸು ಭಜಿಪುದರಿಂದೆಸಂಶಯವು ರಹಿತಾಗಿ | ದೂರ ಓಡುವುದೋಕಂಸಾರಿ ನಿನ ಅಂಶಿ | ಅಂಶಾವತಾರಗಳಶಂಸನದಿ ಸಾಧನವ | ಗೈಸೊ ಶ್ರೀಹರಿಯೇ ೩
ಕರ್ಮಾ ಅಕರ್ಮಗಳ | ಮರ್ಮಗಳ ತಿಳಿಸುತ್ತಧರ್ಮಗೋಪ್ತನೆ ಕಾಯೊ | ನಿರ್ಮಲಾತ್ಮಕನೇಕರ್ಮನಾಮಕ ಹರಿಯೆ | ನಿರ್ಮಮತೆ ಫಲದಲ್ಲಿಪೆರ್ಮೆಯಲಿ ಕೊಡು ಕೃಷ್ಣ ಬ್ರಹ್ಮ ಭವ ವಂದ್ಯಾ ೪
ಯೋಗೀಶ ಶ್ರೀ ಕೃಷ್ಣ | ಯೋಗ ಸಾಧನೆಯಿತ್ತುನೀಗು ಭವವನು ಇವಗೆ | ಭಾಗವತರೊಡೆಯಬಾಗಿ ಬೇಡುವೆ ದಯಾ | ಸಾಗರನೆ ಉದ್ಧರಿಸೊಯೋಗಿ ಜನ ವಂದ್ಯ ಗುರು | ಗೋವಿಂದ ವಿಠಲಾ ೫

೧೯೦
ಸುಂದರ ಕಾಂಡ ರಾಮಾಯಣ
ಗುರು ಭಕ್ತಿದ್ವಾರ ಸಿರಿ | ಹರಿಭಕ್ತಿ ಉದಯಿಸಲುಗುರು ಜಗದ್ಗುರು | ಸಿರಿ ಹನುಮನಾ ||ಮೆರೆವ ಸಚ್ಚರಿತೆ ಮಮ | ಗುರುವೆ ನುಡಿಸೀದಷ್ಟುಒರೆವೆ ಕೇಳ್ಪುದು ಸಜ್ಜನಾ ಪ
ಗೃಹ ಮೇಧಿ ಇರುವ ಬಗೆ | ಬಹು ಪರೀಯಲಿ ತೋರಿಗುಹ ವನಂಗಳನೆ ಚರಿಸೀ |ಗೃಹಿಣಿಯನು ಕಾಣದಲೆ | ಬಹು ನಟಸಿ ನರರಂತೆಮಹ ಮಹಿಮ ರಾಮ ಬರಲೂ ೧
ಪ್ರಥಮಾಂಗ ಮಾರುತನೆ | ಸುತನಾಗಿ ಅಂಜನಿಗೆದ್ವಿತಿಯುಗದಿ ಅವತರಿಸುತಾ ||ಪೃಥಿವಿ ಪತಿ ದಶರಥನ | ಸುತನ ಕಂಡೆರಗಿ ರವಿಸುತಗೆ ರಾಜ್ಯವನೆ ಕೊಡಿಸೀ ೨
ರಾಮನಾಣತಿ ಪೊತ್ತು | ಭೂಮಿಜೆಯ ವಾರ್ತೆಯನುನೇಮದಲಿ ತರುವೆ ನೆನುತಾ ||ಆ ಮಹಾ ಶರಧಿಯನು | ಧೀಮಂತ ಲಂಘಿಸುತಭೂಮಿಜೆಯ ಕಂಡು ಎರಗೀ ೩
ರಾಮಾಂಗುಳೀಯಕವ | ತಾ ಮುದದಿ ತೆಗೆದು ಸಂಪ್ರೇಮದಲ್ಲಿ ಮುಂದಿಡುತಿರೇ ||ಭಾಮಿನಿಯು ಕೊಂಡು ಪತಿ | ರಾಮನ್ನ ಕಂಡ ಪರಿಆಮೋದದಲ್ಲಿರುತಿರೇ ೪
ಶ್ರೀ ಲೋಲ ರಾಮನಿಗೆ | ಆಳಾಗಿ ಇರಲೊಂದುವಾಲುಳ್ಳ ಕಪಿಯು ಬಂದೂ ||ಕೇಳುವರು ಇಲ್ಲದಲೆ | ಪೋಲಾಗಿ ಹೋಯ್ತೆಂಬಕೀಳು ನುಡಿಗವಕಾಶ ಕೊಡದೇ ೫
ವಂದೆರಡು ಹಣ್ಣಾನು | ತಿಂದ್ಹೋಗುವೇನೆಂದುಇಂದೀವರಾಕ್ಷಿಯ ಬೇಡುತಾ ||ನಂದೀಸಿ ಅಶೋಕ | ನಂದನ ವನವ ಮದಸಿಂಧೂರ ನಂತೆಸಗಿದೇ ೬
ಕೋಟ್ಯಶೀತಿಯು ನಿ | ಶಾಟ ಯೂಥಪ ಸಹಸಾಷ್ಟ ಕಾಯುತ ಮುಖ್ಯರಾ ||ಖೇಟ ರಾವಣ ಸೇನೆ | ಕೂಟ ಮೂರರಲೊಂದುರೋಟಿಸುತ ನೀ ಮೆರೆದೆಯೋ ೭
ಅಕ್ಷೋಹ್ಣಿ ಬಲ ಸಹಿತ | ರಾಕ್ಷಸಾಧಿಪ ಸುತನುಅಕ್ಷಯ್ಯ ಕುವರ ಬರಲೂ ||ಪಕ್ಷೀಂದ್ರ ತೆರ ಪಿಡಿದು | ಈ ಕ್ಷಿತಿಗೆ ಅಪ್ಪಳಿಸೆತಕ್ಷಣದಲಸು ನೀಗಿದಾ ೮
ಮಂದಜಾಸನ ವರದಿ | ಇಂದ್ರಜಿತು ಮದವೇರಿಬಂದೆಸೆಯೆ ಬ್ರಹ್ಮಾಸ್ತ್ರವಾ ||ಛಂದದಲ್ಯೋಚಿಸುತ | ಬಂಧನಕೆ ನೀನಾಗಿನಂದದ ಲ್ವೊಳಗಾದೆಯೋ ೯
ತೆತ್ತೀಸ ಕೋಟಿ ದೇ | ವತ್ತೀಗಳಿಗೆಲ್ಲಾಉತ್ತೂಮನಾದ ನೀನೂ ||ಸುತ್ತೀಸಿ ಬಾಲವನು | ಹತ್ತೂತಲೆಯವನನೆತ್ತೀಯ ಮೇಲ್ ಕುಳಿತೆಯೋ ೧೦
ನಾರೀಯ ಚೋರ ನಿ | ನ್ನಾರೆಂದು ಕೇಳಾಲುಮಾರುತ್ತರವಿತ್ತು ಜರಿದೇ ||ಮಾರೀಚ ಮೊದಲಾದ | ನೂರಾರು ರಕ್ಕಸರದೂರೋಡಿಸೀದವನ ದೂತಾ ೧೧
ಕೋಟಲೆಗಳ ಕೊಟ್ಟ | ತಾಟಕಾದೀ ದೈತ್ಯಕೂಟಗಳ ಸಂಹರಿಸಿದಾ ||ಕೂಟಸ್ಥ ಲೋಕಗಳ | ನೋಟದಲಿ ದಹಿಪ ವೈರಾಟ ಪ್ರಭುವಿನಾಳೂ ೧೨
ಕೇಳೆಲೋ ರಾವಣನೇ ತಿಳಿಯಯಾ ನೀನು ನಿನ್‍ಹುಳುವೆಂದು ನಿಜ ಬಾಲದೀ |ಸಿಲುಕಿಸಿ ಜಲನಿಧಿ | ನಾಲಕ್ಕು ಮುಳುಗಿದವಾಲಿ ಪೆಸರನು ಮರೆತೆಯಾ ೧೩
ತಾಲಮರಗಳ ಶೀಳಿ | ವಾಲೀಯನೆ ಕೊಂದರ್ಕಬಾಲಗೇ ರಾಜ್ಯ ಕೊಡಿಸೀ ||ಕೋಲಿನಿಂ ನಿಮ್ಮೆಲ್ಲ | ಹೂಳುವ ರಾಮನಆಳು ನಾನೆಂದು ತಿಳಿಯೋ ೧೪
ರಕ್ಕಸ ಪತಿಯಾಜ್ಞೆ | ಇಕ್ಕಿ ತಲೆಯಾ ಮೇಲೆರಕ್ಕಸರೆಲ್ಲ ತವ ಪುಚ್ಛ ||ಕಿಕ್ಕಲೂ ಉರಿ ಲಂಕೆ | ಪೊಕ್ಕು ಪುರವನೆ ದಹಿಸಿಅಕ್ಕರದಿ ವನದಿ ಹಾರೀ ೧೫
ಪ್ರಾಯೋಪವಿಷ್ಟ ಕಪಿ | ಕಾಯ ಸಹಿತರ ನೋಡಿಪ್ರೀಯ ದ್ವಾರ್ತೆಯ ನರುಹಲೂ ||ಗೇಯ ಹನುಮನ ತುತಿಸಿ || ರಾಯಗೆರಗುವ ವನದಿಕಾಯ ಕುಪ್ಪಳಿಸುತಿರಲೂ ೧೬
ಕಾತುರತೆಯ ಕಪಿ | ಜಾತೆಗಳ ಸಂತೈಸಿಪ್ರೀತಿಯಿಂ ಮಧುವನವನಳಿದ ||ಸೀತೆಯನು ಕಂಡಂಥ | ವಾರ್ತೆಯನು ಪೇಳೆ ರಘುಜಾತ ನಿನ್ನನು | ಅಪ್ಪಿದಾ ೧೭
ಎರಡೇಳು ಭುವನದೊಳು | ಇರುವರೇ ನಿನ್ಹೊರತುಹರಿಗೆ ಪ್ರೀತ್ಯಾಸ್ಪದನು ಎನಿಸೀ ||ಮೆರೆವ ಭಕ್ತಾಗ್ರಣಿಯೆ | ಎರಗುವೆನು ತ್ವತ್ವದಕೆಹರಿಭಕ್ತಿ ಕರುಣಿಸಯ್ಯಾ ೧೮
ಉದಯಕಾಲದಲೆದ್ದು | ಮುದದಿಂದಲೀ ಪದವಸದಯ ಹೃದಯರು ಪಠಿಸಲೂ ||ಬದಿಗ ಗುರು ಗೋವಿಂದ | ವಿಠಲನೋಳ್ ಸದ್ಭಕ್ತಿವದಗಿ ಪಾಲಿಪ ಹನುಮನೂ ೧೯

೫೩೫
ಗುರು ಭಾರತೀಶ ಪ್ರಿಯ | ವಿಠಲ ಪೊರೆ ಇವಳ ಪ
ನೆರೆನಂಬಿ ಬಂದಿಹಳ | ಪೊರೆಯೊ ಶ್ರೀಹರಿಯೇ ಅ.ಪ.
ದಾಸ ದೀಕ್ಷೆಯ ಜ್ಞಾನ | ಲೇಸು ಪಡೆದವಳಲ್ಲಆಶೆಪಳು ತವದಾಸ್ಯ | ಮೇಶ ಮಧ್ವೇಶಆಶೆ ಮಾತ್ರಕೆ ಒಲಿದು | ಪೋಷಿಸಲಿ ಬೇಕಯ್ಯಹೇ ಸದಾಶಿವ ವಂದ್ಯ | ವಾಸ ವಾನುಜನೆ ೧
ಪತಿಸುತರು ಬಾಂಧವರ | ಹಿತದಲ್ಲಿ ಮತಿಯಿತ್ತುಅತುಳ ವಿಭವದಿ ಮೆರೆಸಿ | ಕೀರ್ತಿಕೊಡಿಸೋಕೃತಿ ಪತಿಯೆ ತವಚರಣ | ಸತತ ನೆನೆಯುವ ಭಾಗ್ಯಪಥದಲ್ಲಿ ಇರಿಸಿ ಕೃತ | ಕೃತ್ಯಳೆಂದೆನಿಸೋ ೨
ಕದರ ಮಂಡಲಿಗೀಶ | ಕಾಂತೇಶ ಸನ್ನುತನೆವಿದುರ ಶಬರೀ ವರನ | ಉದಧಿ ಶಯನಾ |ಹದುಳದಲಿ ಮೂರೆರಡು | ಭೇದ ತರತಮಜ್ಞಾನವದಗಿಸುತ ಪೊರೆ ಇವಳ | ಮಧು ಮಥನ ಹರಿಯೇ ೩
ನಿನ್ನ ನಾಮವ ಬಿಟ್ಟು | ಅನ್ಯ ಸಾಧನ ಕಾಣೆಚೆನ್ನ ಈ ಕಲಿಯುಗದಿ | ಅನ್ನಂತ ಮಹಿಮಾಘನ್ನ ದಯವನಧಿ ಆ| ಪನ್ನ ಜನರಕ್ಷಕನೆನಿನ್ನೊಲಿಮೆ ಉಳ್ಳನಕ | ಇನ್ನಾವ ಭಯವೋ ೪
ಪಾವನಾತ್ಮಕ ದೇವ | ಪಾವಮಾನಿಯ ಪ್ರೀಯಜೀವ ಅಸ್ವಾಂತಂತ್ರ್ಯ | ಭಾವವನೆ ತಿಳಿಸೀ |ದೇವ ದೇವೇಶ ಗುರು | ಗೋವಿಂದ ವಿಠಲಯ್ಯ ಭಾವಜ್ಞ ನೀನಾಗಿ | ಪಾವಕಳೆ ಸಲಹೋ೫

೫೩೬
ಗುರು ಮಧ್ವೇಶ ವಿಠಲ | ಪೊರೆಯ ಬೇಕಿವಳ ಪ
ಪರಮ ಭಕುತಿಲಿ ನಿನ್ನ | ದಾಸ್ಯ ಕಾಂಕ್ಷಿಪಳ ಅ.ಪ.
ಹರಿಗುರೂ ಸದ್ಭಕ್ತಿ | ಹಿರಿಯರಲಿ ಅಸಕ್ತಿನಿರುತ ಕರುಣಿಸಿ ಇವಳ | ಪೊರೆಯೊ ಹರಿಯೇ |ಅರುಹ ಲೇನಿಹುದಿನ್ನು | ಸರ್ವಜ್ಞ ನೀನಿರುವೆಕರುಣದಲಿ ಪೊರೆಯೆಂದು | ಪ್ರಾರ್ಥಿಸುವೆ ಹರಿಯೇ ೧
ಕೃದ್ಧಖಳ ಜನರನ್ನು | ಪ್ರಧ್ವಂಸ ಮಾಡುತಲಿಬುದ್ಧಿಯೊಳು ನೀ ನಿಂತು | ವಿದ್ಯೆ ಪ್ರದನಾಗೋಮಧ್ವಮತ ಪದ್ಧತಿಗಳುದ್ಧರಿಸಿ ಇವಳಲ್ಲಿಪದ್ಮನಾಭನೆ ಪೊರೆಯೊ | ಮಧ್ವಾಂತರಾತ್ಮಾ ೨
ಹಂಸ ವಾಹನನಾದಿಪಾಂಶದೇವರ ಪಾದಪಾಂಸುವನೆ ತರತಮದಿ | ಶಂಸಿಪಂತೆಸಗೋಅಂಶ ಅವತಾರ ಆವೇಶಗಳ ತಿಳಿಸುತ್ತಸಂಸಾರ ಉತ್ತರಿಸೊ | ಕಂಸಾರಿ ಹರಿಯೇ ೩
ನಿನ್ನ ಪ್ರೇರಣೆಯಂತೆ | ಕನ್ಯೆಗಂಕಿತವಿತ್ತೆನನ್ನೆಯಿಂ ಪೊರೆಯಿವಳ ಪನ್ನಂಗ ಶಯನಾ |ನಿನ್ನಂಥ ಕರುಣಾಳು | ಅನ್ಯರಾರಿಹರಯ್ಯಪನ್ನಗಾರಿಯ ವಾಹ | ಅನ್ನಂತ ಮಹಿಮಾ ೪
ಪಾವನಾತ್ಮಕ ದೇವ | ಸಾರ್ವಕಾಲದಿ ನಿನ್ನಪಾವನ ಸ್ರ‍ಮತಿಯಿತ್ತು | ಶರ್ವವಂದ್ಯಾ ಭಾವದೊಳು ಮೈದೋರಿ | ಕಾವ್ಯದನೆ ಬಿನ್ನಪವಾನೀ ವೊಲಿದು ಸಲಿಸೊ ಗುರು | ಗೊವಿಂದ ವಿಠಲಾ ೫

೫೩೭
ಗುರು ಮೋಹನ ವಿಠಲ ಸಲಹಬೇಕಿವನಾಕರುಣಾ ಪಯೋನಿಧಿಯೆ ಮರುತಾಂತರಾತ್ಮ ಪ
ನಿಗಮವೇದ್ಯನೆ ಹರಿಯೆ | ರಘುರಾಮ ದಾಸರೊಳುಮಿಗೆ ಸುಪ್ರೇರಕನಾಗಿ | ಮಗನ ಮದುವೆಯಲೀಅಘಹರವು ತವನಾಮ | ಸದ್ಗುರೂ ಕರುಣೆಯಲಿನಗುನಗುತ ಒದಗಿಸಿದೆ | ನಗಧರನೆ ದೇವಾ ೧
ಭೇಧ ಪಂಚಕ ತಿಳಿಸಿ | ಮೋದ ತೀರ್ಥರ ಮತದಿಸಾಧನವ ಗೈಸಿವಗೆ | ಸಾಧು ವಂದಿತನೇಮೋದದಾಯಕನಾಗಿ | ಐದಿಪುದು ಸದ್ಗತಿಯಬಾದರಾಯಣ ದೇವ | ಪಾದ ಕಾ ನಮಿಪೇ ೨
ಹರಿಗುರೂ ಸದ್ಭಕ್ತಿ | ತರತಮದ ಸುಜ್ಞಾನಕರುಣಿಸೀ ಪೊರೆ ಇವನ | ಗುರುವಂತರಾತ್ಮ |ಪರಮ ಗುರು ಕಾರುಣ್ಯ | ದರುಶನವ ಪಡೆದಿಹನುಪರಿಪರಿಯ ಸೌಖ್ಯಗಳ | ಕರುಣಿಸೋ ಹರಿಯೇ ೩
ಎಲ್ಲ ಬಲ್ಲವ ನಿನಗೆ ಪೇಳ್ವದುಂಟೇ ಎನಗೆಕಲ್ಲು ಕಾಂಚನದಲ್ಲಿ | ಚೆಲ್ವ ಸಮಬುದ್ಧೀನಿಲ್ಲಿಸುತ ನೀನಾಗಿ ಗೆಲ್ಲಿಸೀ ಸಂಸಾರಮಲ್ಲ ಮರ್ಧನನೆ ಎನ್ನ | ಸೊಲ್ಲು ಲಾಲಿಸುತಾ ೪
ದಾವಾಗ್ನಿಯನೆ ನುಂಗಿ | ಗೋವಳರ ಪಾಲಿಸಿದೆಪಾವಮಾನಿಯ ಪ್ರೀಯ | ನೀ ವೊಲಿದು ಇವಗೇಭಾವದಲಿ ತವರೂಪ | ತೋರೆಂದು ಭಿನ್ನವಿಸೆದೇವದೇವನೆ ಗುರು ಗೋವಿಂದ ವಿಠಲಾ ೫

೫೩೯
ಗುರು ರಾಘವೇಂದ್ರ ವಿಠಲ | ಪೊರೆಯ ಬೇಕಿವಳಾ ಪ
ದುರಿತ ದುಷ್ರ‍ಕತ ಕಳೆದು | ವೈರಾಗ್ಯ ಕೊಡುತಾಅ.ಪ.
ಪ್ರಾಚೀನ ದುಷ್ಕರ್ಮ | ಮೋಚಕೇಚ್ಛೆಯ ಮಾಡಿಕೀಚಕಾರಿಯ ಮತದಿ | ದೀಕ್ಷೆಯನೆ ಕೊಟ್ಟುನೀಚೋಚ್ಛ ತರತಮವೆ | ವಾಚಿಸುತ ಇವಳಲ್ಲಿವಾಚಾಮಗೋಚರನ | ಭಕ್ತಿಯನೆ ಕೊಡುತಾ ೧
ಸಾಧುಸಂಗವ ಕೊಟ್ಟು | ಸಾಧನೆಯ ಗೈಸುವುದುಯಾದವೇಶನ ಪ್ರೀತಿ | ಸಾಧನೆಯ ಗುರಿಯಾಮಾಧವನೆ ಪರನೆಂಬೋ ಬೋದ ಸಂತತಕೊಟ್ಟುಕಾದುಕೋ ಶ್ರೀಹರಿಯೆ | ಬಾದರಾಯಣನೆ ೨
ಸರುವ ಕರ್ಮಗಳೆಲ್ಲ ಹರಿ ಮಾಡಿ ಮಾಡಿಸುವಬರುವ ತತ್ಸುಖ ದುಃಖ | ಸಮತೆಯಲಿ ಎಂಬಾವರಮತಿಯ ಕರುಣಿಸುತ | ಪರಿಹರಿಸು ಭವಬಂಧಕರುಣಾಳು ಗುರುರೂಪಿ | ಪೊರೆಯ ಬೇಕಿವಳಾ ೩
ಮನಸೀನ ಚಾಂಚಲ್ಯ | ವನೆ ನೀನು ಕಳೆಯುತ್ತಕ್ಷಣಕನಂತಪರಾಧ | ಎಣಿಸದಲೆ ಹರಿಯೆದೀನನಾಥನಾದ ಹರಿ | ಜ್ಞಾನ ದಂಕುರವಿತ್ತುಘನ ದಯಾವಾರಿಧೇ | ಪೊರೆಯ ಬೇಕಿವಳಾ ೪
ನಂದ ಗೋಪನ ಕಂದ | ನಂದ ವ್ರಜ ಪರಿಪಾಲಇಂದಿರಾನಂದ ಮುಚ | ಕುಂದ ವರದ ಹರಿಯೇನೊಂದವಳಿಗಾನಂದ | ಸಂಧಿಸಲು ಪ್ರಾರ್ಥಿಸುವೆಇಂದಿರಾರಾಧ್ಯ ಗುರು | ಗೋವಿಂದ ವಿಠಲಾ ೫

೫೩೮
ಗುರು ರಾಜ ಹರಿ ವಿಠಲ | ಪೊರೆಯ ಬೇಕಿವಳಾ ಪ
ಗರುಡ ಗಮನನೆ ದೇವ | ಸರ್ವಾಂತರಾತ್ಮ ಅ.ಪ.
ಪತಿಯೆ ಪರದೈವ ವೆಂ | ಬತಿಶಯದ ಮತಿಯಿತ್ತುರತಳೆನಿಸು ಗುರು ಹಿರಿಯ | ಹಿತಸೇವೆಯಲ್ಲೀಕೃತ ಕೃತ್ಯಳೆಂದೆನಿಸೊ | ಗೃಹ ಮೇಧಿ ಎಂಬಲ್ಲಿಕೃತಿ ರಮಣ ಪ್ರದ್ಯುಮ್ನ | ವಿತತ ಮಂಗಳನೇ ೧
ಮಧ್ವಮತದನುಯಾಯಿ | ಶುದ್ಧ ಭಕುತಿ ಜ್ಞಾನ ಉದ್ಧರಿಸಿ ಇವಳಲ್ಲಿ | ಸಾಧನವ ಗೈಸೋಅಢ್ಯರೇಡ್ಯನೆ ಹರಿಯೆ | ಶ್ರದ್ಧಾಳು ತನದಲ್ಲಿಬುದ್ಧಿ ಓಡಲಿ ದೇವ | ಮಧ್ವಾಂತರಾತ್ಮಾ ೨
ಹರಿಕಥಾಮೃತ ಸಾರ | ತರಳೆ ಬುದ್ಧಿಗೆ ನಿಲುಕಿಪರಮ ಸತ್ಸಾಧನವ | ಚರಿಸುವಂತೆಸಗೋಮೊರೆಯಿಡುವೆ ನಿನ್ನಲ್ಲಿ | ಕರುಣಿಸೀ ಬಿನ್ನಪವಗುರುವಂತರಾತ್ಮ ಗುರು | ಗೋವಿಂದ ವಿಠಲಾ ೩

೫೪೦
ಗುರುರಾಜ ನುತ ವಿಠಲ | ಪೊರೆಯ ಬೇಕಿವಳಾ ಪ
ಕರುಣ ಪಯೋ ನಿಧಿಯೆ | ಶರಣು ಬಂದವಳಾ ಅ.ಪ.
ಮರುತ ಮತದಲ್ಲಿದ್ದು ಗುರು ಹಿರಿಯರಾ ಸೇವೆನಿರುತ ಗೈಯುವ ಮನವ | ಉಳ್ಳವಳೊ ಈಕೇಕರುಣಾ ಪಯೋ ನಿಧಿಯೇ | ಮರುತಾಂತರಾತ್ಮಕನೆಕರಪಿಡಿದು ಪೊರೆಯೋ | ಪ್ರಾರ್ಥಿಸುವೆ ಹರಿಯೇ ೧
ಕಂಸಾರಿ ತವನಾಮ | ಅಮೃತವನೆ ಉಣಿಸುತ್ತಸಂಸಾರ ಶರಧಿಗೆ | ಪ್ಲವವೆನಿಸೊ ದೇವಸಂಶಯವು ರಹಿತಾಗಿ | ಹರಿಯೆ ಸರ್ವೋತ್ತಮನೆಶಂಸನದಿ ಮತಿಕೊಟ್ಟು | ಕಾಯೊ ಕಮಲಾಕ್ಷ ೨
ಕೋವಿದೋತ್ತಂಸ ಹರಿ | ಗೋವರ್ಧನೋದ್ಧರನೆಗೋವಿದಾಂಪತಿಯೆ ಗುರು | ಗೋವಿಂದ ವಿಠಲಾನೀವೊಲಿಯದಿನ್ನಿಲ್ಲ | ತ್ರೈಭುವನದಿ ದೇವಭಾವುಕಳ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ ೩

೫೪೧
ಗುರುರಾಜ ವರದ ವಿಠಲ | ಪೊರೆಯ ಬೇಕಿವಳಾ ಪ
ಮರುತಂತರಾತ್ಮಕನೆ | ಪ್ರಾರ್ಥಿಸುವೆ ಹರಿಯೇ ಅ.ಪ.
ಸೃಷ್ಟಾದಿ ಸತ್ಕರ್ಮ | ಸುಗುಣಮೂರುತಿದೇವಕಷ್ಟಗಳ ಪರಿಹರಿಸಿ ಕಾಪಾಡೋ ಹರಿಯೇಕೃಷ್ಣಮೂರುತಿ ದೇವ | ಅಷ್ಟ ಸೌಭಾಗ್ಯಗಳಕೊಟ್ಟು ಸಂತೈಸುವುದು | ಕಾರುಣ್ಯ ಮೂರ್ತೇ ೧
ಆ ಪನ್ನ ಜನಪಾಲ | ಗೋಪಿಜನಪ್ರಿಯತಾಪತ್ರಯ ಕಳೆದು | ಕಾಪಾಡೊ ಹರಿಯೇಶ್ರೀಪತಿ ನೀನಾಗಿ | ಕೋಪಾದಿಗಳ ಕಳೆದುಕೈಪಿಡಿದು ಸಲಹೆಂದು | ಪ್ರಾರ್ಥಿಸುವೆ ಹರಿಯೇ ೨
ಪತಿಸುತರು ಹಿತರಲ್ಲಿ | ಹರಿಯುವ್ಯಾಪ್ತನು ಎಂಬಮತಿಯನ್ನೆ ಕರುಣಿಸುತ | ಕಾಪಾಡೊ ಹರಿಯೇಸುಪ್ತಿಜಾಗ್ರತ ಸ್ವಾಪ | ಮಾರವಸ್ಥಾ ಸ್ವಾಮೀಆಪ್ತ ಗುರು ಗೋವಿಂದ | ವಿಠಲೆಂದು ತಿಳಿಸೊ ೩

೩೯೧
ಗುರುರಾಯರ ನಂಬಿರೋ | ರಾಘವೇಂದ್ರಗುರುರಾಯರ ನಂಬಿರೋ ಪ
ಗುರುರಾಯರ ನಂಬಿ | ದುರಿತ ದುಷ್ಕ್ರತ ಹರಿಸಿಪುರುಷಾರ್ಥ ಪರಮವ ಕರಗತ ಕೈಗೊಳ್ಳಿ ಅ.ಪ.
ಪರಿಮಳೇತ್ಯಾದಿ ಸಂದ್ಗ್ರಂಥ | ವಿರಚಿಸಿವರಮೋಕ್ಷ ಪ್ರದವೆನಿಸುವಂಥ |ಎರಡೆರಡ್ಹತ್ತು ಮತ್ತೆ | ಎರಡೈದು ಗ್ರಂಥವಧರಣಿ ಸುರರಿಗಿತ್ತು | ಕರುಣವ ತೋರಿದ ೧
ರಾಮಕೃಷ್ಣ ನರಹರೀ | ವೇದವ್ಯಾಸಮಾಮನೋಹರ ವೃಂದಾವನದಿವಾಮಾಂಗ ಎನಿಸೀಹ | ಶ್ರೀಮಹಿಳೆಸಹಿತಾಗಿಕಾಮಿತಾರ್ಥದ ಹರಿ | ನೇಮದಿ ನೆಲಸೀಹ ೨
ಕೂಸೆರಡರ ವಯದೀ | ಮಂತ್ರಾಲಯದೇಶಕೆ ಪೋಗಿ ಮುದದೀ |ಲೇಸು ಸೇವೆಯ ಗೈಯ್ಯೆ | ಕಾಸರೋಗವನೀಗಿಮೇಶ ಗುರುಗೋವಿಂದ | ದಾಸನ್ನಾಗಿಸಿದ ೩

ಚೀಕಲಪರಿವಿಯಲ್ಲಿ ಜನಿಸಿ ಕೂಸಿ ಮಗ
೪೩೫
ಗುರುವಂತರ್ಗತ ವಿಜಯ ದಾಸಾ ಕಾಯೋಶರಣರ ಹೃತ್ಸನ್ನಿವಾಸಾ ಪ
ಸುರಮುನಿ ಸುತನಾದ ವರ ಭೃಗ್ವಂಶಜನೆಂದುರೆ ಮೆರೆವನೀಯೊಳ್ ವರದ್ವಿಜನೆನಿಸೀದ ಅ.ಪ.
ಶ್ರೀಪಾದರಾಜ ಯೋಗೀಂದ್ರ | ರಿಂದಸ್ಥಾಪಿಸಿದಶ್ವತ್ಥ ಛಂದ |ಆ ಪುರ ಪ್ರಸಿದ್ಧವ ವರಹಜೆ ತಟಚೀಕನಾಪರಿ ಗ್ರಾಮದಿ ರೂಪಿಸಿದವತಾರ ||ತಾಪತ್ರಯ ಪ್ರದೀಪವಿರೆ ಸು | ರಾಪಗವ ಸಾರುತ್ತ ಮಲಗಿರೆಆ ಪುರಂದರ ದಾಸ ರೂಪಿಯ | ಸ್ವಾಪದಲಿ ಕಾಣುತ್ತನಲಿದ ೧
ದಾಸ ರೂಪಿಯು ಕೊಂಡು ನಿನ್ನ | ವ್ಯಾಸಕಾಶಿಯಲಿರುವ ದೇವನ್ನ |ವ್ಯಾಸರೂಪನ ಪಾದ | ದಾಸನ್ನ ಮಾತೆ ವಿಶ್ವಾಸದಲೀ ಪಡೆದೆ | ಭಾಸುರ ಉಪದೇಶ ||ಶ್ರೀಶನನುಗ್ರಹಿಸಿ ತನ್ನಯ | ದಾಸ ರೂಪವ ಮರೆಯಗೈಯ್ಯಲುಲೇಸು ಎಚ್ಚರಗೊಂಡು ಪುಳಕೀತ | ಭಾಸುರದ ಸುಸ್ತೋತ್ರಗೈದು ೨
ಪಾವನ ವಾನಂದ ತೀರ್ಥ | ಭಾಷ್ಯಭಾವ ಕನ್ನಡದಿ ಪೇಳುತ್ತ |ಜೀವರುದ್ಧರ ಕಾರ್ಯ | ತೀವರ ನಡೆಸುತ್ತಕಾವಕೊಲ್ಲುವ ಗುರು | ಗೋವಿಂದ ವಿಠಲದೇವ ಸರ್ವೋತ್ತಮನು ಪವನನು | ಜೀವರುತ್ತಮನೆಂದು ಸ್ಥಾಪಿಸಿದೇವತತಿ ತರತಮದ ಭಾವವ | ಓವಿ ಪೇಳ್ದ ಮಹಾನುಭಾವ ೩

೫೪೨
ಗುರುವರ ಹರಿ ವಿಠಲ | ಪೊರೆಯ ಬೇಕಿವಳಾ ಪ
ನಿರುತ ನಿನ್ನಯ ಪಾದ | ಸ್ಮರಿಸಿ ಭಜಿಸುವಳಾ ಅ.ಪ.
ಹರಿಯು ಕೊಟ್ಟದನುಂಡು | ಪರಿ ಪರಿಯ ಸಂತಸದಿಇರುವ ಈ ಪತಿವ್ರತೆಯ | ದುರಿತಗಳ ಕಳೆದೂ |ಹರಿಯೆ ನಿನ್ನಲಿ ಭಕ್ತಿ | ವರಜ್ಞಾನ ವೃದ್ಧಿಸುತಜರುಗಿಸೋ ಸಾಧನವ | ಕರುಣ ಸಂಪನ್ನಾ ೧
ಪತಿಸುತರು ಹಿತರಲ್ಲಿ | ವ್ಯಾಪ್ತ ಹರಿಯನು ಭಜಿಸಿಮತಿ ಮತಾಂವರರಂಘ್ರೀ | ಶತಪತ್ರ ಸೇವಿಸುತಾ |ಕೃತ ಕೃತ್ಯಳನು ಮಾಡಿ | ಗತಿ ಪ್ರದನು ನೀನಾಗೊವಿತತ ಅಚ್ಯುತ ಮೂರ್ತಿ | ಪ್ರತಿ ರಹಿತ ದೇವಾ ೨
ದೇಶ ಕಾಲಾ ತೀತ | ವಾಸುದೇವನೆ ಇವಳಆಶೆ ಪೂರೈಸುತಲಿ | ಹೃದ್ಗುಹದಿ ತೋರೀಮೇಶ ಗುರು ಗೋವಿಂದ | ವಿಠಲ ಪದ ಆನಂದರಾಶಿಯೊಳು ಸುಖಿಪಂತೆ | ಪೋಷಿಸೊ ಇವಳಾ ೩

೩೭೩
ಗುರುವಾದಿರಾಜ ತವ | ಚರಣಗಳಿಗಭಿನಮಿಪೆದೊರಕಿಸೆನಗ್ಹರಿಪಾದ | ಸರಸಿರುಹ ಗುರುವೇ ಅ.ಪ.
ಯತಿ ಕುಲಾಗ್ರಣಿ ದ್ವೈತ | ಮತ ಜನರ ಉದ್ಧಾರಸತತ ನೀ ನೆಸಗುತಲಿ | ಪ್ರತಿರಹಿತ ನೆನಿಸೀ |ಮತ ಗ್ರಂಥ ವಿಸ್ತರಿಸಿ | ಯುಕ್ತಿಗಳ ಬೋಧಿಸುತಹಿತದಿಂದ ಸಜ್ಜನಕೆ | ಗತಿ ತೋರಿ ಮೆರೆದ ೧
ತವ ಪಾದಾರಾಧನೋ | ತ್ಸವಕೆ ಕಾತುರನಾಗಿಹವಣಿಸಿರೆ ಜ್ವರದನೂ | ಭವವನ್ನೆ ಕೊಡಿಸೀ |ನೆವನದಲಿ ವಾರಿಸಿದೆ | ತವ ಪಾದ ಪೂಜೆಯನುಹವಣೆಗಳ ತಿಳಿಯೊ ನಾ | ದೈವಗತಿಯಂತೋ ೨
ಭಾವಿ ಮಾರುತ ನಿಮ್ಮ | ಭಾವ ತಿಳಿವರು ಯಾರುಓವಿ ನಿಮ್ಮಡಿಗಳನು | ಸ್ತವನ ಗೈದೂ |ಗೋವಳರ ಪ್ರೀಯ ಗುರು | ಗೋವಿಂದ ವಿಠ್ಠಲನಭಾವದಲಿ ಕಾಣ್ವಂಥ | ಭಾವ ಕೊಡು ಸಂತ ೩

೩೯೩
ಗುರುವೆ ವರಹಜೆ ತಟವಾಸಾ | ಗುರುವೇ ಪುರಿ ಮಂತ್ರಾಧೀಶಾ ಪ
ಆರು ಮೊರೆ ಇಡುವೆನೊ | ವರಪದ ಪದುಮಕೆಕರುಣದಲೆಮನ | ಹರಿಯಲಿ ಇರಿಸೋ ಅ.ಪ.
ಬಾಗಿ ಭಜಿಪೆ ಗುರುವೇ | ಎನ್ನಯರೋಗ ಹರಿಸು ಪ್ರಭುವೇ ||ರಾಘವೇಂದ್ರ ದುರಿತೌಘ ವಿದೂರನೆ |ಭೋಗಿ ಶಯನ ಪದ | ರಾಗದಿ ಭಜಿಸುವ ೧
ಭೂತ ಪ್ರೇತ ಬಾಧೇ | ಬಿಡಿಸುವಖ್ಯಾತಿ ನಿಮ್ಮದು ತಿಳಿದೇ ||ದೂತರೆನಿಪ ಜನ | ಆತುನಿಮ್ಮ ಪದ |ಪ್ರೀತಿ ಸೇವೆಯಲಿ | ಕಾತುರರಿಹರೋ ೨
ಮೌನಿವರ್ಯ ನಿನ್ನ | ಬೇಡುವೆಜ್ಞಾನ ಭಕುತಿಯನ್ನ ||ದಾನ ಮಾಡಿ ಅಜ್ಞಾನವ ನೋಡಿಸೆ |ಹೀನ ಯೋನಿ ಬರಲೇನು ಅಂಜೆನೂ ೩
ಪರಿಮಳಾರ್ಯರೆಂದೂ | ನಿಮ್ಮಯಬಿರಿದು ಕೇಳಿ ಬಂದೂ ||ಮೊರೆಯ ನಿಡುವೆ ತವ | ಚರಣಾಂಬುರುಹಕೆ |ಅರಿವ ನೀಯೊ ತವ | ಪರಿಮಳ ಸೊಬಗನು ೪
ಗುರು ಸುಧೀಂದ್ರ ಕರಜ | ತೋರ್ಪುದುಹರಿಯ ಪಾದ ಬಿಸಜ ||ವರ ಸುಹೃದ್ಗ ಗುರು | ಗೋವಿಂದ ವಿಠಲನಚರಣ ಸರೋಜವ | ನಿರುತ ಭಜಿಪ ಗುರು ೫

೫೪೩
ಗೋಪಗೋವಿಂದ ವಿಠಲ | ನೀ ಪಾಲಿಸಿವಳಾ |ಸ್ವಾಪಜಾಗ್ರತ್ಸುಪ್ತಿ ಸರ್ವ ಕಾಲದಲೀ ಪ
ಪತಿಸುತರು ಭಾಂದವರು | ಹಿತದಿಂದ ಸೇವಿಸುತಕೃತಿಸರ್ವ ನಿನಸೇವೆ | ಮತಿ ನೀಡೊ ಹರಿಯೇ |ಅತುಳ ವೈಭವ ತೋರಿ | ಕೃತಕಾರ್ಯಳೆಂದೆನಿಸುಕ್ಷಿತಿರಮಣ ನಿನಗಿದುವೆ ಪ್ರಾರ್ಥಿಸುವೆ ದೊರೆಯೇ ೧
ಮೋದಮುನಿ ಮತ ದೀಕ್ಷೆ | ಸಾದರದಿ ಕೊಟ್ಟೈದುಭೇದಗಳ ತಿಳಿಸುತ್ತ | ಕಾದುಕೊ ಇವಳಾನೀದಯದಲಂಕಿತವ | ಓದಿಸಿಹೆ ತೈಜಸನೆಸಾದಿಸುವೆ ಅದನೀಗ | ಹೇ ದಯಾವರನೇ ೨
ಕರ್ಮ ಸಂಚಿತ ಕಳೆವ | ಧರ್ಮ ನಿನ್ನದೊ ಸ್ವಾಮಿಭರ್ಮ ಗರ್ಭನ ಪಿತನೆ | ಕರ್ಮನಾಮಕನೇ ನಿರ್ಮಮತೆ ಮನದಿ ನಿ | ಷ್ಕಾಮ ಕರ್ಮದಲಿವಳಪೇರ್ಮೆಯಲ್ಲಿರಿಸೆಂದು | ಸ್ವಾಮಿ ಪ್ರಾರ್ಥಿಸುವೇ ೩
ಸರ್ವಜ್ಞ ಸರ್ವೇಶ | ಸರ್ವದಾ ತವನಾಮಸರ್ವತ್ರ ಸ್ರ‍ಮತಿಯಿತ್ತು | ಸರ್ವಾಂತರಾತ್ಮದುರ್ವಿಭಾವ್ಯನೆ ದೇವ | ದರ್ವಿ ಜೀವಿಯ ಕಾವಸರ್ವ ಕರ್ತೃವು ನೀನೆ | ಶರ್ವ ಸನ್ನುತನೇ ೪
ಸೃಷ್ಟಿಕರ್ತನೆ ದೇವ | ಕಷ್ಟಗಳ ಪರಿಹರಿಸಿಶಿಷ್ಟಳ್ರ‍ಹತ್ಕಂಜದಲಿ | ಇಷ್ಟ ಪ್ರದನಾಗೀಇಷ್ಟ ಮೂರ್ತಿಯ ಕೋರಿ | ಹೃಷ್ಟಳನ ಮಾಡೆಂದುಕೃಷ್ಣ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ ೫

೫೪೪
ಗೋಪಾಲ ಹರಿ ವಿಠಲ ನೀ ಪಾಲಿಸಿವಳಾ ಪ
ಪಾಪೌಘಗಳ ಕಳೆದು ಸುಪವಿತ್ರಳನೆ ಮಾಡಿಕೈ ಪಿಡಿದು ಪೊರೆಯಿವಳ | ಗೋಪಾಲ ಬಾಲ ಅ.ಪ.
ನಿನ್ನ ಸೇವಿಸೆ ದಾಸ | ಘನ್ನ ದೀಕ್ಷೆಯ ಮನದಿಕನ್ಯೆ ಬಹು ಭಕ್ತಿಯಲಿ | ಬಿನ್ನವಿಸಿ ಇಹಳೊಮನ್ಯು ಸೂಕ್ತೋದಿತನೆ | ಚೆನ್ನ ತೈಜಸನಾಗಿಇನ್ನು ಪೇಳ್ದಂಕಿತವ | ಕನ್ಯೆ ಗಿತ್ತಿಹನೋ ೧
ಪತಿಸೇವೆ ದೊರಕಿಸುತ | ಪತಿವ್ರತೆಯಳೆಂದೆನಿಸಿಅತುಳ ವೈಭವ ತೋರಿ | ಹಿತದಿಂದ ಪೊರೆಯೋವ್ರತತಿ ಜಾಸನ ಪಿತನೆ | ಗತಿಗೋತ್ರ ನೀನೆನಿಸಿಸುತೆಸಮಳ ಪೊರೆವುದಕೆ | ಮತಿ ಮಾಡೊ ಹರಿಯೇ ೨
ತಾರತಮ್ಯ ಜ್ಞಾನ ಮೂರೆರಡು ಭೇದಗಳಸಾರತತ್ವಗಳುರುಹಿ | ಸಾರತಮ ನಿನ್ನಾಪಾರುಗಾಣದ ಮಹಿಮೆ | ಚಾರುಕೀರ್ತಿಸುವಂತೆತೋರೊ ಸನ್ಮಾರ್ಗವನು | ವಾರಿನಿಧಿ ಶಯ್ಯಾ ೩
ಹರಿಗುರೂ ಸದ್ಭಕ್ತಿ | ಹಿರಿಯರಲಿ ಆಸಕ್ತಿಸರ್ವ ಕಾರ್ಯವು ಹರಿಯ ವರಸೇವೆಯೆಂಬಾವರಮತಿಯ ಕರುಣಿಸುತ | ಹರಿಯು ತಾನಿತ್ತುದನಹರುಷದಲಿ ಉಂಬಂಥ | ಅರಿವು ಕೊಡು ಸತತ ೪
ಭಾವಜಾರಿಯ ತಾತ | ಪಾವಮಾನಿಯ ಪ್ರೀತಕೇವಲಾನಂದಮಯ | ಜೀವ ಪರತಂತ್ರಾಈ ವಿಧವು ಇರಲಾಗಿ | ನೀವೊಲಿಯಲಿನ್ಯಾರುಕಾವರನು ಕಾಣೆ ಗುರು | ಗೋವಿಂದ ವಿಠಲಾ ೫

೫೩
ಗೋಪಾಲಕೃಷ್ಣ ಪಾಲಿಸೋ – ತವ ಭವ್ಯವೆನಿಪಶ್ರೀಪಾದಾ ತೋರಿಸೋ ಪ
ಪಾಪಿಯ ಭವ ಕೂಪಾರ ಹರಿಸಿಕೈಪಿಡಿದೆನ್ನನು ಕಾಪಾಡುವುದು ಹರೆ ಅ.ಪ.
ಸೂರ್ಯ ಕೋಟಿ ಸಂಕಾಶ | ಶ್ರೀ ರುಕುಮಿಣೀಶಪ್ರೇರ್ಯ ಪ್ರೇರಕ ಸರ್ವೇಶಕಾರ್ಯಾ ಕಾರ್ಯ ವನರಿಯದವನು ನಾ – ಸುಖವೀರ್ಯ ಸಾರ ಔದಾರ್ಯನೆ ಪಾಲಿಸೊಕಂಸಾರಿ ಬಕವೈರಿ ಮುರ ವೈರಿ | ನಿಜ ಜನ ಭವಹಾರಿ೧
ಗೋಕುಲ ಪಾಲಾ ಹೇ ಬಾಲ – ಸತ್ಯಭಾಮೆ ಲೋಲಶ್ರೀಕರ ಗುಣ ಬಹು ಜಾಲ ಶ್ರೀಕಮಲಜ ಭವ | ನಾಕೇಶ ವಿನುತ ಶ್ರೀಕರ ಪದ ಪಲ್ಲವನವ | ಲೋಕನ ಕೊಡು ಕರಿವರದ | ಧೃವ ವರದ | ಜಿತ ಖಲ ಕುಲ ಸರ್ವಮದ ||೨
ವೇದಾಂತ ವೇದ್ಯಾ – ವೇದ ವೇದ್ಯಾ ವೇದಾತ್ಮಿಕಾರಾಧ್ಯಾ |ಆದಿ ಹರಿಯೇ ಗುರು ಗೋವಿಂದ ವಿಠಲಮೋದ ಪ್ರಮೋದ ಸಂ | ಮೋದವ ನೀಯೋಗೋವಿಂದ | ಮುಕುಂದ | ಮುನಿ ವಂದ್ಯ |ಧೃತ ವ್ರಜಗಿರಿ ಆನಂದ ೩

ರಾಯಚೂರು ಜಿಲ್ಲೆಯ ಮೊದಲಕಲ್ಲು
೪೪೬
ಗೋಪಾಲದಾಸರ ಸ್ಮರಣೆ | ಬಹುತಾಪತ್ರಯದ ನಿವಾರಣೆ ಪ
ಶ್ರೀಪತಿ ವೇಂಕಟೇಶನ | ಸಾಪರೋಕ್ಷದಿ ಕಂಡುಹಿಗ್ಗುತವ್ಯಾಪ್ತದರ್ಶಿಗಳಾಗಿ ಭಕ್ತಿಲಿ | ಆಪರಂತಪನೊಲುಮೆಗಳಿಸಿದ ಅ.ಪ.
ಬಾಲ್ಯತನದಿ ವೇದಮಾತಾ | ಎಂಬಗಾಯತ್ರಿ ಮಂತ್ರವು ಜಪ್ತಾ |ಸೂರ್ಯಾಂತರ್ಗತನಾದ | ಹರಿಯನ್ನು ಕಾಣುತಾಕಾರ್ಯೋನ್ಮುಖನು ಆದ | ಪ್ರಶ್ನೆಗಳ ಪೇಳಲು ೧
ಇರಲೊಂದು ಕಾಲಕ್ಕೆ ವಿಜಯಾ | ದಾಸರ್ ಬರವಾಯ್ತು ಕೇಳಿರಿ ಚರ್ಯಾ || ವರ ವಿಜಯ ದಾಸಾರ್ಯರೆಂಬರ | ಪ್ರತಿಭೆಯಾವರಣ ಮುಸುಕಿಲಿನಿರುತ್ತರರು ಆಗಿಹರ್ | ಪ್ರಶ್ನೋತ್ತರಗಳ ಕೇಳಲು೨
ಗುರುಗೋವಿಂದ ವಿಠಲನ ಕರುಣ | ದೊರಕಿ ಹರಿಯು ಗೋಪಾಲ ವಿಠಲನಂಕಿತದ || ವರಸು ಉಪದೇಶಗಳಕೊಳ್ಳುತ |ಪರಮ ಸದ್ಭಕ್ತರನುಪಾಲಿಸಿ ಪರಮ ಮೋಕ್ಷವ ತೋರ್ದ ಮೂಷಕ | ವರಸುವಾಹನನಂಶ ಸಂಭವ ೩

೫೪೫
ಗೋಪಿನಾಥ ವಿಠಲ | ನೀ ಪಾಲಿಸಿವಳಾ ಪ
ಶ್ರೀಪತಿಯೆ ಕರುಣಾಳು | ಕೈ ಪಿಡಿದು ಸಲಹೊ ಅ.ಪ.
ಭಕ್ತಿಯುತೆ ಈ ಹಸುಳೆ | ಸಕ್ತಿಯಲಿ ಹರಿದಾಸ್ಯಅರ್ಥಿಪಳು ಹೇ ಸ್ವಾಮಿ | ನಿತ್ಯ ಮಂಗಳನೆಯುಕ್ತಿಯಲಿ ನಿನ್ನಿಂದ | ಸ್ವಪ್ನ ಸೂಚಿಸಿದಂತೆಇತ್ತಿಹೆನು ಅಂಕಿತವ | ಸಾರ್ಥಕವ ಪಡಿಸೊ ೧
ಶೃಂಗಾರ ಮೂರುತಿಯೆ | ಮಂಗಳಾಂಗನೆ ದೇವಹೆಂಗಳೀಗೆ ಸುಜ್ಞಾನ | ಭಕ್ತಿಯನೆ ಇತ್ತೂಅಂಗನಾಮಣಿಯಂತೆ | ಸಿಂಗರಿಸುತಿವಳನ್ನುಭಂಗಗೈ ಅಜ್ಞಾನ | ಭ್ರಾಂತಿ ಜ್ಞಾನವನು ೨
ಭಾಗವತರೊಡನಾಟ | ಯೋಗಕರುಣಿಸು ದೇವನಾಗಾರಿವಾಹನನೆ | ಯೋಗಿಜನವಂದ್ಯಾಆಗುಹೋಗುಗಳೆಲ್ಲ | ನೀನಿಚ್ಛೆ ಸಂಕಲ್ಪಆಗು ಮಾಡೈ ದೇವ | ಮನದಭೀಷ್ಟಗಳಾ ೩
ತತ್ವ ಪತಿಗಳಿಗೆಲ್ಲ | ಮರುತನೆ ಅಧಿಕೆಂಬತತ್ವವನೆ ತಿಳಿಸುತ್ತಾ | ಕಾಪಾಡೊ ಇವಳಾಪ್ರತ್ಯಹತ್ ತವನಾಮ | ಸಂಸ್ತುತಿಯ ಕರುಣಿಸುತಉತ್ತಾರಿಸೋ ಭವವನ್ನು | ಪ್ರತ್ಯಗಾತುಮನೆ ೪
ಗೋವುಗಳ ಪರಿಪಾಲ | ಗೋವರ್ದನೋದ್ದರನೆಗೋಪಿಜನಪ್ರಿಯ | ಗೋಪಾಲ ಬಾಲಾಗಾವಲ್ಗಣೀವರದ | ಬಿನ್ನಪವ ಸಲಿಸಯ್ಯಕಾವುದಾನತರ ಗುರು | ಗೋವಿಂದ ವಿಠಲಾ ೫

೫೪೬
ಗೋಪೀಶ ವಿಠ್ಠಲನೆ | ನೀ ಪಾಲಿಸಿವಳಾ ಪ
ನೀ ಪೊರೆಯದೇ ಇನ್ನು | ಕಾಪಾಡು ನರಹರಿಯೆಗೋಪಗೋಪಿಯರೊಡೆಯ | ಗೋಪಾಲ ಕೃಷ್ಣಾ ಅ.ಪ.
ಹೇ ದಯಾಂಬುಧಿ ಹರಿಯೆ | ಭೇದ ಪಂಚಕ ಜ್ಞಾನಮೋದದಲಿ ಕರುಣಿಸುತ | ಸಾಧನವ ಗೈಸೀಶ್ರೀಧರಾ ದುರ್ಗೇಶ | ಕಾದುಕೋ ಈ ಶಿಶುವಸಾಧುವಂದಿತ ಹರಿಯೆ | ಸಾಧ್ಯ ನೀನಲ್ಲೇ ೧
ಭೋಗ ಭಾಗ್ಯಗಳಿತ್ತು | ಭೋಗ ನಿನ್ನದು ಎಂಬಭಾಗ್ಯವನೆ ಪಾಲಿಸೋ ಭೋಗಿ ಶಯನಾಆಗುಹೋಗುಗಳೆಂಬ | ಯೋಗ ಸಮತೆಲಿ ಉಂಬಯೋಗ ಕೊಟ್ಟುದ್ದರಿಸೋ ಭಾಗವತ ಪ್ರೀಯಾ ೨
ಹರಿಗುರೂ ಸದ್ಭಕ್ತಿ | ಹಿರಿಯರ ಸತ್ಸೇವೆನಿರತ ಪಾಲಿಸುತಿವಳ | ಪೊರೆಯಬೇಕೊ |ಮರುತಾಂತರಾತ್ಮ ಗುರು | ಗೋವಿಂದ ವಿಠ್ಠಲನೆಕರುಣಿಸೆನೆ ಬಿನ್ನಪವ | ನಿರತ ಪ್ರಾರ್ಥಿಸುವೇ ೩

೫೪
ಗೌತಮ ಗೊಲಿದನೆ ರಂಗನಾಥದಾತನೆ ನಮಿಸುವೆ ರಂಗನಾಥ ಪ
ಕಾವೇರಿ ತೀರಗ ರಂಗನಾಥ ಮಾವಾರಿ ಸಲಹೆನ್ನ ರಂಗನಾಥ ೧
ಭಕುತಾಭೀಷ್ಟ ಪ್ರದ ರಂಗನಾಥಮುಕುತರೊಡೆಯ ಶ್ರೀರಂಗನಾಥ ೨
ವಕ್ಷದಿ ಲಕ್ಷ್ಮಿಯು ರಂಗನಾಥಕುಕ್ಷಿಯೊಳ್ಬ್ರಹ್ಮಾಂಡ ರಂಗನಾಥ ೩
ರಂಗಧಾಮನೆ ಶಿರಿ ರಂಗನಾಥಮಂಗಳ ಮಹಿಮಾನೆ ರಂಗನಾಥ ೪
ಅಜಭವ ಸುರವಂದ್ಯ ರಂಗನಾಥನಿಜ ಗುರು ಗೋವಿಂದ ರಂಗನಾಥ ೫

೨೮೯
ಗೌರಿದೇವಿ ಪದಕೇ | ನಾರೇರು | ಆರುತಿಯನು ಬೆಳಗೀ ಪ
ಆರುತಿಯನು ನಮ್ಮ | ಕಾರ್ತಿಕೇಯನ ಮಾತೆಸಾರ ಸಾಕ್ಷಿಗೇ ……..| ಭೂರಿ ಕರುಣಿಗೇಅ.ಪ.
ಶ್ರೀ ಷಣ್ಮುಖ ಮಾತೇ | ಸುರಪತಿ | ಲೇಸು ಗುರುವೇ ಖ್ಯಾತೇವಾಸುಕಿ ಶಯನನ | ಹಾಸಿಗೆನಿಪ ನಾಗಭೂಷಣ ಪ್ರಿಯ ಸತಿ | ಪೋಷಿಸು ಸನ್ಮತಿ ೧
ಮಂಗಳಾಂಗೆ ಗೌರೀ | ಹರಿಪದ | ಭೃಂಗಳೆ ಮುರ ವೈರೀರಂಗನ ಶುಭಗುಣ | ಹಿಂಗದೆ ಪಾಡುವಮಂಗಳ ಮನವೀವ | ಶೃಂಗರ ಕಾಯೇ ೨
ಶರಧಿಜೆ ರುಕುಮಿಣಿಯಾ | ಪತಿ ಗುರು ಗೋವಿಂದ ವಿಠ್ಠಲನಾವರನಾಮ ನುಡಿಸಲು | ಪರಮ ಸಮರ್ಥಳುಶಿರಬಾಗಿ ನಮಿಸುವ | ಶರಣರ ಪಾಲಿಪ ೩

೨೫೨
ಗೌರೀವರನೇ ಪಾಲಿಸೋ – ನಿನ್ನ ಶ್ರೀಪಾದವಾರಿಜವ ತೋರಿಸೋ ಪ
ಘೋರವೆನಿಪ ಭವ ವಾರಿಧಿ ಯೊಳು ನಾಪಾರವ ಕಾಣದೆ ಧೀರನೆ ಶರಣು ಅ.ಪ.
ಪ್ರಮಥ ಗಣಗಳ ಪೋಷಾ – ಪಾರ್ವತೀಶಾ ಉಮಾದೇವಿಯ ಪ್ರಾಣೇಶ ||ಅಮರೋತ್ತಮ ಶಿವ | ಅಮರೇಂದ್ರ ವಂದ್ಯರಮೆಯರಸನ ಹೃ | ದ್ವ್ಯೋಮದಿ ತೋರೋ |ಸತಿ ಸದನ | ಪಂಚ ವದನ | ಜಿತಮದನ ಕೃತ – ಅಧ್ವರ – ಭಂಜನ ೧
ಪಕ್ಷಿವಾಹನ ಮಿತ್ರಾ – ಸುಚರಿತ್ರಾ ಯಕ್ಷಪತಿ ಧನಪ ಮಿತ್ರಾ ||ದಕ್ಷಿಣಾಕ್ಷಿ ಅಧ್ಯಕ್ಷ ಸೇವಕ ಗೋ-ವತ್ಸ ಭಕ್ತಿ ದಯದೀಕ್ಷೆಸೆನ್ನ ಶಿವನೇ |ಮರುತ ಸುತಾ ಜಿಷ್ಣು ಹಿತಾಪಾಶುಪತಾ ವರ ಅಸ್ತ್ರಸುದಾತಾ ೨
ಮಹದೇವ ಮೋಹ ಶಾಸ್ತ್ರಾ – ಸುಕರ್ತಾಅಹಿಶಯ್ಯ ಪ್ರೀತಿ ಪಾತ್ರ ||ಅಹಿ ಪದಕೆ ಯೋಗ್ಯ | ಮಹ ಮಹಿಮ ಹೃ-ದ್ಗುಹದಿ ಗುರು | ಗೋವಿಂದ ವಿಠಲನತೋರೆಂಬೆ – ಗುರುವೆಂಬೆ – ದಯ ಉಂಬೆತವದಯದಿ ಹರಿ ಕಾಂಬೆ ೩

೫೫
ಘನವೇನೋ ನಿನಗಿದು ಗುಣವನದೀ | ಮಾನದ ಮಾನ್ಯ ||ಮನವ ನಿನ್ನಲಿ ನಿಲ್ಲಿಸೋ ಪ
ತನುಮನ ಸಕಲ ಸಾಧನವೆಲ್ಲ ಎನಗಿತ್ತುಮನ ಆದಿ ಕರಣವ ಎನಗೊಶಪಡಿಸದೆ ಅ.ಪ.
ತತುವೇಶರೆಲ್ಲರೊಂದಾಗೀ | ಗೋವಿಂದಾ |ಮತಿ ಭ್ರಾಂತಿ ಬಡಿಸುವರೋ ||ವಿತತ ಅಚ್ಯುತ ಮೂರ್ತಿ | ಸತತ ಎನ್ನಲ್ಲಿ ಇದ್ದುಹಿತವ ಮಾಡಿದೆ ಎನ್ನ | ಹತಭಾಗ್ಯನೆನಿಪುದು ೧
ಹೀನ ಬುದ್ಧಿಯ ಕಳೆಯದೇ | ಮುನಿಜನ ವಂದ್ಯಾ |ವಾನರ ನಾನಾದೆ ಹರಿಯೇ ||ಶ್ವಾನ ಮತಿಯ ನೀಗಿ | ಧ್ಯಾನ ಸಾಧನ ನೀಡೋ |ಗಾನ ಲೋಲನೆ ನಿಧಾನ ಮಾಡಲಿ ಬೇಡ ೨
ತಂದೆ ಮುದ್ದು ಮೋಹನರೂ | ಮಂದನು ಎನ್ನ |ತಂದೆ ನಿನ್ನಡಿಗ್ಹಾಕಿದರೊ ||ಇಂದಿರೆಯರಸ ಗುರು | ಗೋವಿಂದ ವಿಠಲಯ್ಯ |ಛಂದಾಗೀಯೆನ್ನ ಮನ | ಮಂದಿರದೊಳು ನಿಲ್ಲೊ ೩

೫೪೭
ಚಂದ್ರಭಾಗ ಹರಿ ವಿಠಲ | ಸಲಹ ಬೇಕಿವಳಾ ಪ
ಇಂದೀವರಾಕ್ಷ ಹರಿ | ಮಂದರೋದ್ಧಾರೀ ಅ.ಪ.
ಸಾಧಕ ಸುಜೀವಿಗಳ | ಮೋದ ಬಡಿಸುವ ಭಾರಮೋದ ಮಯ ನಿನಗಲ್ಲ | ದಧಾರಿಸಿಹುದೋಆದಿ ಮೂರುತಿ ಹರಿಯೆ | ಸಾಧನ ಸಾಧ್ಯವಾಗಿಕಾದುಕೋ ಬಿಡದಿವಳ | ಮಾಧವನೆ ದೇವಾ ೧
ತರತಮಾತ್ಮಕ ಜ್ಞಾನ | ಅರುಹುತಿವಳಿಗೆ ಭೇದಎರಡು ಮೂರರ ಅರಿವು | ನೆರೆ ಕೈಗೂಡಲೀಹರಿಯೆ ಸರ್ವೋತ್ತಮನು | ಸುರಪಾದಿ ಸುರರೆಲ್ಲಹರಿಯ ಕಿಂಕರರೆಂಬ | ವರಜ್ಞಾನ ವಿರಲಿ ೨
ಆಗು ಹೋಗುಗಳಲ್ಲಿ | ವೇಗ ಸಮತೆಯು ಬರಲಿಜಾಗು ಮಾಡದೆ ದ್ವಂದ್ವ | ಸಹನೆ ಬರುತಿರಲೀನಾಗಾರಿ ವಾಹನನ | ನಾಮ ಸುಧೆ ಸರ್ವದಾಸಾಗಿ ಮನ ಸವಿವಂತೆ | ಹಗಲಿರುಳು ಇರಲೀ ೩
ಸಾಧು ಸಂಗದಿ ಕಾಲ | ಮೋದದಿಂ ಕಳೆವಂತೆನೀ ದಯದಿ ಪಾಲಿಸುತ | ಕಾದುಕೋ ಇವಳಾಬೋಧ ಮೂರುತಿಯಾಗಿ | ಹೇ ದಯಾಕರ ಕೃಷ್ಣಾಆದರದಿ ಸುಜ್ಞಾನ | ಭಕ್ತಿಯನ್ನೀಯೋ ೪
ಜೀವರಂತರ್ಯಾಮಿ | ಸರ್ವಜ್ಞ ಸರ್ವೇಶಭಾವ ಮೈದುನ ಪಾಲ | ಗೋವಳರ ಈಶಾಭಾವದಲಿ ಮೈದೋರಿ | ಭವ ಬಂಧ ಬಿಡಿಸುವುದುಶ್ರೀವರನೆ ಶ್ರೀಗುರೂ | ಗೋವಿಂದ ವಿಠಲ ೫

೨೯೦
ಚಂಪಕನಾಸೇ ವಿರೂಪಾಕ್ಷಜಾಯೆನೋಂಪಿಗೈವೆನಮ್ಮ | ಕರುಣದಿಂದ ಕಾಯೆ ಪ
ಇಂಪು ಹರಿಯ ನಾಮ | ಸ್ಮರಣೆ ಕರುಣಿಸುತ್ತಮಾಂ ಪಾಹಿ ಗೌರೀ | ಅನ್ಯ ಬೇಡೆ ದೇವಿ ಅ.ಪ.
ಅಂಗನಾಮಣೀ | ನುಡಿಗಭಿಮಾನೀಸಂಗೀತ ಲೋಲೆ | ವಿಸ್ರ‍ತತ ಸುಫಾಲೆಕಂಗಳು ವಿಶಾಲೆ | ಕೊರಳೊಳು ಸುಮಾಲೆಅಂಗಜನ ವೈರೀ | ಶಿವ ಮನೋಹರೀ ೧
ಧವಳಗಂಗೆ ಪೊತ್ತ | ಶಿವನ ಸ್ಮರಿಸುತ್ತಸವನ ಮೂರು ಕಳೆವ | ಭುವಿ ಪಾಲಿಸುವಭುವಿಧರಭಿಧಶಯೈ | ಕವನ ನುಡಿಸಮ್ಮಶರ್ವಳೆ ನಿನ್ನನು | ಸರ್ವದ ಸ್ಮರಿಸುವೆ ೨
ಮಾವಾರಿ ಎನಿಪ | ಗೋವುಗಳ ಪಾಲಗೋವ್ರಜ ಸುಪೋಷ | ಗೋವತ್ಸ ಧ್ವನಿಗೇಧಾವಿಪಂತೆ ಗುರು | ಗೋವಿಂದ ವಿಠಲನತೀವ್ರದುಪಾಸನ | ನೀ ಪಾಲಿಸಮ್ಮ

೨೩೯
ಚಕ್ಷು ಶ್ರ್ಯವನೆ ಶೇಷಾ – ಪಾಲಯ ಪ
ಕುಕ್ಷಿಯೆ ಪಾದವೆಂಬ ಲಕ್ಷಣ ನಿನದಯ್ಯ |ಈಕ್ಷಿಸೊ ಕರುಣ ಕ | ಟಾಕ್ಷದಿ ನಾಗನೆಅ.ಪ.
ಅಕ್ಷಾರಿಪದಪಾಂಸು ಧರನೇ | ವಾಯುಪುಚ್ಛಾಶ್ರಯಿಸಿ ಜಗಧಾರನೇ ||ಪಕ್ಷಿ ವಾಹಗೆ ಶಯ್ಯ | ಪಕ್ಷೀಯ ಸಮ ಪೂರ್ವತ್ರ್ಯಕ್ಷನೆ ಸೋಮರ್ಕ | ಅಕ್ಷಿ ಅನಲ ಕಾಯೊ ೧
ತಾಮಸ್ಸಾಹಂ ತತ್ವ ಮಾನಿಯೇ || ಕಾಯೊಭೂಮಿ ಧರನೆ ಬಹು ಮಾನಿಯೇ |ಆಮಹ ಪಂಚರಾ | ತ್ರಗಮಗಳ್ ಮಾನಿಕಾಮಿತ ಪಾಲಿಸೊ | ಸ್ವಾಮಿ ನಿಮಗೆ ನಮೊ ೨
ವಾಸವ ವಂದಿತ ವಾತಾಶನಾ | ನಿನ್ನಆಸನ ಮಾಡಿಹ ರಮೇಶನಾ ||ಹಾಸಿಗೆ ಎನಿಸುತ್ತ | ಲೇಸು ಸೇವಿಸಿ ಹರಿಸಾಸಿರ ನಾಮನ | ದಾಸನೆಂದೆನಿಸಿದೆ ೩
ಮುಕ್ತಿಗೆ ಯೋಗ್ಯರ ಮಾರ್ಗದಾ | ಹರಿಭಕ್ತಿಯ ಪಾಲಿಸೊ ದೀರ್ಘದಾ ||ಸಕ್ತಿಯಾಗಲಿ ಮನ | ಸೂಕ್ತಮೇಯನಲ್ಲಿಉಕ್ತಿ ಇದೊಂದನ | ಇತ್ತು ಪಾಲಿಸು ಶೇಷ ೪
ಕಾಳೀಯ ಮಡುವಿಗೆ ಹಾರ್ದನ | ಮತ್ತೆಕಾಳೀಯ ನೆಡೆಯಲಿ ಕುಣಿದನಾ ||ಕಾಳಿರಮಣ ಗುರು | ಗೋವಿಂದ ವಿಠಲನಭಾಳ ತುತಿಪ ಮನ | ಪಾಲಿಸೊ ಶೇಷ ಗುರು ೫

೧೭೨
ಚಾರು ದೇಷ್ಣನ ಜನನಿಯೇ | ಪಾಹೀಅಂಭ್ರಣಿಯೆ | ಪರಿ ಪೋಷಿಸುತ ಎನ್ನ ಪ
ಕುಕ್ಷಿಯೊಳು ಜಗ | ರಕ್ಷಕನ ಸತಿ | ಅಕ್ಷರಳೆ ಕೃಪೆ ಈಕ್ಷಣೇಯಲೆತ್ರ್ಯಕ್ಷ ಸುರಮುಖ | ರಕ್ಷೆ ಭಕುತಿಯ | ಬಿಕ್ಷೆ ಪಾಲಿಸಿ | ರಕ್ಷಿಸೆನ್ನನು ೧
ಸ್ತವ್ಯನನ ಶ್ರೋ | ತವ್ಯನನ ಧ್ಯಾ | ತವ್ಯನನ ಮಂ | ತವ್ಯ ಭವ್ಯನನ |ಅವ್ಯಯನ ಅನ | ವದ್ಯ ರೂಪನ | ಸುವ್ಯಕ್ತಿಗೈ | ಅವ್ಯಕ್ತಮಾನಿಯೆ ೨
ಭಾವ ಜಾರಿಯ | ಭಾವ ಕೊಲಿದು ವಿ | ಭಾವ ಸುಪ್ರಭೆ | ಭಾವ ತೋರಿದೆಗೋವಳನು ಗುರು | ಗೋವಿಂದ ವಿಠಲನ | ತಾವಕಗೆ ತೋರೂವುದೆಲೆ ತಾಯೆ ೩

೩೦೬
ಚಿಂತಯಾಮಿ | ರಘುರಾಮಂ | ಸುತ ಕೌಸಲ್ಯೋದರಜಂ |ಸಂತತ ಶರಣರ ಕೃಪಾ | ಪಾಂಗವೀಕ್ಷಾ ಹಸಿತಂ ಪ
ಸರಿ ಗ ಸರೀ | ಮಪ ಧಪ ಧಾ | ರಿಸ ನಿಧ ನಿಧ | ಪಮ ಗರಿ ಸದದ್ರುತ – ಸರಿಮಾ ಗರಿ | ಮಪ ದಾಪಮ | ಪಧಸಾ ನಿಧ | ನಿಧ ಪದಪಧ ||ಗರಿ ಸಧ | ”ರಿ ಸ ಧಾ ಸ | ಧಾ ಗ ರಿ ನಿಧಮ | ಗರಿಸಧ |
ರಾಗ – ನಾಟಕುರಂಜಿ
ರವಿ ಕುಲಾನ್ವಯತಿಲಕಂ | ಋಷಿ ವಿಶ್ವಾಮಿತ್ರ ಕೃತಹವನ ಹೋಮ, ಬಾಧಾಗ್ರಸ್ತ | ವಿಮೋಚನ, ಶೀಲಂಅವನಿಜೆ ವೈವಾ, ಹಕ್ಕಾನೀತಂ | ಲಕ್ಷ್ಮಣ ಸಹ, ವಿಧಿಲಾಗ೫ನಂ |ಶಿವಧನುವಂ, ಮುರಿದು ರಾಜ | ರುಗಳ ಗರ್ವಹರ | ಶ್ರೀರಾಮಂ ೧
ಚಿಟ್ಟೆಸ್ವರ
ಮಗ ಸಾ ನಿóದ | ನಿóಸಾ ರಿಗಮ | ನಿಧ ಮಾಗರಿ | ಗಮ ಪಗರಿಸದ್ರುತ – ನಿಧನಿಸ ರಿಗಮ ಧನಿಪಧ | ನಿಸ ನಿಧ ನಿಸರಿಗ ಮಗಸನಿ ||ಗರಿಸಧ, ರಿಸ ಧಾ, ಸ ಧಾಆ, ಗರಿ || ನಿದಮ | ಗರಿಸಧ ||
ರಾಗ – ಧನ್ಯಾಸಿ :
ಕನ್ಯಾಮಣಿ | ಪಾಣಿಗ್ರಹ | ಅಹಲ್ಯಾಶಾಪಹಂ | ಭಾರ್ಗವನಿಂ | ಪ್ರಕಟೈಕ್ಯಅಯೋಧ್ಯಾ | ಗಮನಂ | ಪಿತೃವಚನ | ಅನುಸರಿಸುತವನಗಮನಂ | ಅನುಜ ಸತಿಸಹ | ವನವಾಸಂ |ನಿಶಿಚರ ಹನನ | ಶೂರ್ಪನಖಿ | ನಾಸಛೇದಂ | ಚರಿತಂ ೨
ಚಿಟ್ಟೆಸ್ವರ
ರಾಗ :ಧಾನಿಸಿ :ನಿಸ ಗಾಮ ಪ | ಗಮ ಪಾನಿಸ | ರಿಸ ರಿನಿ ಸಪ | ಧಪಗಾರಿಸನೀ ಸ ಗ ಮಪ ಗಾ ಮಪನಿಸ | ಪಾ ನಿಸ ಗರಿ ಸನಿಧಪ ನಿಸಗರಿಸಧಾ, ಆರಿಸ ಧಾಸ, ಧಾ, ಗರಿ ನಿಧಮ ಗರಿಸದ ||
ರಾಗ –
ಮೋಹನ ವಿರಾಧಾದಿ | ಶಾಪ ವಿಮೋಚನ | ತರಳೆ ಶಬರಿ ಅನುಗ್ರಹಮರಳಿ ಮಾರೀಚನ ವಂಚನ | ದುರುಳನಿಂ | ಸೀತಾಪಹರಂಶರಧ್ಯೋಲ್ಲಂಘಿಸಿ | ಸೀತಾ ವಾರ್ತಾನೀತರಿ |ಹನುಮಂತಾಲಿಂಗನ ಪರ | ಮಾನುಗ್ರಹ ಶೀಲಂ ರಾಮಂ ೩
ಚಿಟ್ಟೆಸ್ವರ
ಗಾ ಪ ಗರಿ, ಗರಿ ಸಧಸರಿ | ಗಾಪ ದಸದಪ ಗರಿ ಸರಿಗಪಗಗ, ರಿಸ | ರಿಗ, ರಿರಿಸ ಧ | ಸರಿಗರಿ ನಪಗಪ ಧಪಧಸ |ಗರಿಸಧಾ, ಆರಿಸ ಧಾ, ಸದಾ, ಗರಿನಿಧಮ, ಗರಿಸದ ||
ರಾಗ ಪೂರ್ವಕಲ್ಯಾಣಿ :
ಲೇಸು ಕಪಿಗಳ ನಿಚಯ | ಸೀತಾಕೃತಿ ಹುಡುಕುತ |ಆ ಸಮೀರನು | ವಾರಿಧಿಯನು | ಹಾರಿ ಲಂಕೆಯ ಪುರದಲ್ಲಿಅಣುರೂಪದಿ ಹುಡುಕುತ | ಸೀತಾಕೃತಿಯ | ಕಂಡನುದೇಶ ಪುಚ್ಛಾಗ್ನಿಯಲಿ | ದಹಿಸಿ ಸೀತೆ | ವಾರ್ತೆ ಪೇಳಿದನು ೪
ಚಿಟ್ಟೆಸ್ವರ
ಗಾಮಗರಿಸ | ಧ ಸರಿ ಗಮ | ಪಾ ಧಪಸ | ನಿಧಪ ಮಗರಿ |ಗಮಪ ಮಾಪಗಾ | ಮರೀಗ | ಸಾರಿಗಆಮ ಪಧ ಪಸಾ ನಿ |ಗರಿಸಧಾ, ಆಸಧಾ ಸಧಾ ಗರಿ ನಿಧ ಮ ಗರಿಸಧ ||
ರಾಗ :ಮುಖಾರಿ :
ಅನಘ ಹರಿ | ಸಖನೊಡನೆ | ಕಪಿವೆರಸಿ | ಬರುತಿರಲುಸೇತು ಬಂಧಿಸಿ | ಹನುಮನೊಡ ವೆರಸಿ | ಅರಿಪುರಸಾರ್ದಂ |ಘನ ಸುಯದ್ವಹಿ | ದಶಶಿರನ ಸಂಹರಿಸುತ | ಸೀತಾ ಕೃತಿನನಿತೆ ಸತಿ ಪರಿವಾರ ಪುಷ್ಪಕವಿ | ಸ್ವಪುರ ಖೊರಟ ೫
ಚಿಟ್ಟೆಸ್ವರ
ಪಾ ಮಗರಿ | ಸಾ ನಿಧ ಸರಿ | ಮಾಗರಿಸ | ರಿಮ ಪದ ನಿಧ ಸಾ ಸನಿ ಧಪ ಪಾ | ಮಗರಿಸ | ನಿಧಸರಿ ಮಪನಿಧ ಮಪಧಸ ||ಗರಿಸಧಾ ಆರಿಸ ಧಾಅಸ | ಧಾಅ ಗರಿ ನಿಧಮ ಗರಿಸಧ ||
ರಾಗ ಮಧ್ಯಮಾವತಿ :
ಭರತನಿಗೆ | ವಾರ್ತೆ ಕಳುಹಿ | ಸ್ವಪುರ ಸೇರಿ | ಮಾತೆ ಗೊಂದಿಸಿ ಪುರವಲಂಕೃತ | ಮಂತ್ರಿಯಿಂದ | ಸುರರು ವೇದ | ಪಠಿಸುತಿರೆ ಪಟ್ಟಾಭಿಷಕ್ತ | ಪುರದಿ ಸಂಭ್ರಮ | ದಿಂದ ಜನರು ಶಂಸಿಸೆ ಹನುಮಗ ಸಹ ಭೋಗವಿತ್ತು | ಭೂ ಭಾರ ಕಳೆದ೫ುರು ಗೋವಿಂದ ವಿಠಲ ೬
ಚಿಟ್ಟೆಸ್ವರ
ರೀ ಮರಿ ಮಪ | ನೀ ಪಮ ಪನಿ ಸಾ ರಿಸನಿ | ಪಪ ಮಮರಿ ಸ || ರೀಪಮ ರಿಸನಿಪ ರಿಮಪಾ ||
ರಾಗ :ಪೂರ್ವಕಲ್ಯಾಣಿ || ಧಪ ಸಾ ನಿಧಪಮ | ಮಪಗರಿರಾಗ :ಮೋಹನ || ಸರಿಮಾ ಗರಿ ಸರಿಗಾ | ಪಗರಿ ಸರಿ ಪದಸ ರಾಗ :ಮುಖಾರಿ | ರೀ ಸದಾ ಪದಪ ಗಾರಿ ಸರಾಗ :ನಾಟಿಕುರಂಜಿ || ನಿಸ ಮಗ ಧನಿ ಪಧನಿಸ
ರಾಗ : ಸಾವೇರಿ || ಗರಿ ಸದಾ ರಿಸ ಧಾ ಸ | ಧಾ ಗ ರಿ ನಿದಮ ಗರಿಸದ

೫೬
ಚಿಂತಿಸೋ – ಶ್ರಿಹರಿಯ ನೀ ಚಿಂತಿಸೋ ಪ
ಚಿಂತಿಸೊ ನೀ ವೈಶ್ವಾನರನ | ಹೃದಯದಂತರ ದೊಳಗಿರುವನ | ಆಹಸಂತತ ಜೀವರು ಭುಂಜಿಪಗಳನೆಲ್ಲಮಂಥಿಸಿ ಜಠರದಿ ಹಂಚಿಪ ಹರಿಯನುಅ.ಪ.
ಮುಖದೊಳಾಹವ ಅಗ್ನಿಯಲ್ಲಿ | ಪ್ರಾಣಮುಖನು ತಾ ಹೋತೃವು ಅಲ್ಲಿ | ಪೂರ್ವಮುಖ ದ್ವಾರ ಪಾಲನೆಯಲ್ಲಿ | ಕಂಜಸಖನು ಪ್ರಾಣಾಭಿಧನಲ್ಲಿ | ಆಹಮುಖದೊಳಗೀಪರಿ | ಕ್ರಮವರಿತು ಮಾಡುವಮಖದಿ ತೃಪ್ತನು ಆಹ | ಪ್ರಾಣಾತ್ಮ ಅನಿರುದ್ಧ ೧
ಕುಕ್ಷಿಯೊಳಗೆ ಸುರಮುಖನು | ಅವದಕ್ಷಿಣಾಭಿಧ ಪಾವಕನು | ಅಲ್ಲಿದಕ್ಷನು ವ್ಯಾನ ಮಾರುತನು | ಅಗ್ನಿದಕ್ಷಿಣ ವ್ಯಾನ ಚಂದ್ರಮನು | ಆಹಭಕ್ಷಭೋಜ್ಯಂಗಳ | ಕೊಡಲು ಈ ಪರಿಯಿಂದಪಕ್ಷಿವಾಹನ ವ್ಯಾನ | ಪ್ರದ್ಯುಮ್ನ ಪೊರೆವನು ೨
ಹೃದಯದೊಳಗೆ ಗಾರ್ಹಸ್ಪತ್ಯ | ನಾಮಾಭಿಧನೆಂಬ ವಹ್ನ್ಯಾಧಿಪತ್ಯ | ನೆನಿ ಪದುಪಾನುದ್ಗಾತ್ರಾಧಿ ಪತ್ಯ | ಈತಗಿಹುದು ಪ್ರತೀಚಾಧಿಪತ್ಯ | ಆಹಬದಿಗನಿಗೀ ಪರಿ | ಅನ್ನವನರ್ಪಿಸೆಮುದದೊಳಪಾನಾತ್ಮ | ಸಂಕಷ್ರ್ಣ ಪಾಲಿಪ ೩
ಪೊಕ್ಕಳೆಡಗಡೆ ಅವಸಥ್ಯಾ | ಅಗ್ನಿದಕ್ಕ ಪನಹರಂಗಳ ನಿತ್ಯಾ | ಅಲ್ಲಿಸಿಕ್ಕಿಹ ಸಮನಾಧಿಪತ್ಯ | ಬಡಗದಿಕ್ಸಮ ನಿಂದ್ರಾಧಿಪತ್ಯ | ಆಹಪಕ್ಷಿವಾಹನ ಸಮಾನಾತ್ಮ ವಾಸುದೇವಮಕ್ಕಳಂದದಿ ಕಾಯ್ದ ಈ ಪರಿ ಯಜಿಪರ ೪
ನಾಭಿ ಬಲಕೆ ಸಭ್ಯವೆಂಬ | ಅಗ್ನಿಶೋಭಿಪನ ಧ್ವರ್ಯ ಎಂಬ | ಅನಿಲಆಭಿಧ ಊಧ್ರ್ವಗನೆಂಬ | ಉದಾನಾಭಿಧ ರಮ್ಯಾಶ್ರೈನೆಂಬ | ಆಹನಾಭಿಜಾಪತಿ ಉದಾನಾತ್ಮಾ ನಾರಾಯಣಲೋಭದಿ ಕೈಕೊಂಬ ಈ ಪರಿ ಇತ್ತುದನು ೫
ಸರ್ವ ಸದ್ಗುಣ ಪೂರ್ಣ ವೈಶ್ವಾ | ನಾಶವಿರಹಿತ ನರನೆಂದು ಮೆರೆವಾ | ವೈಶ್ವಾನರನೆಂದು ತಾನು ಕರೆಸುವಾ | ಸರ್ವವರನೆನಿಸಿ ಅಗ್ನಿ ಎನಿಸುವಾ | ಆಹವರ ಪಂಚ ಪ್ರಾಣಾಖ್ಯ ಯಜ್ಞಾಭಿಧನು ವಾಯುಸುರ ಮೊಗಸ್ಥಿತ ಹರಿಯನ್ಯಜಿಪ ನೀ ಪರಿಯೆಂದು ೬
ಮರುತ ಪಂಚಾತ್ಮಕ ಅನಿಲಾ | ಜೀವವರರಿಗಾಗಿ ಇತ್ತ ಸಕಲಾ | ಭೋಜ್ಯಹರಿಯ ಪಂಚರೂಪ ಅನಿಲಾ | ಕೊಂಡುಪರಿಪಾಲಿಪನೆಂಬ ಸೊಲ್ಲಾ | ಆಹಪರಿಪರಿ ಚಿಂತಿಸೆ ವೈಶ್ವಾನರ | ಗುರುಗೋವಿಂದ ವಿಠ್ಠಲ ಸಲಹದೆ ಬಿಡನೆಂದು ೭

೩೦೮
ಚಿಂತಿಸೋ ಭಾರತವ ನೀ ಚಿಂತಿಸೊ ಪ.
ಚಿಂತಿಸೊ ಭಾರತ ಮಹಿಮಾ | ಸಿರಿಕಾಂತನೆ ಉತ್ತಮೋತ್ತಮಾ | ಆಹಪಂಕ್ತಿಪಂಕ್ತಿಯೊಳಂತೆ | ಚಿಂತಿತ ಫಲದನಸಂಗ್ತಿ ಪೇಳುವ ಶ್ರುತಿ | ಅರ್ಥ ಭೋಧಿಪುದೆಂದು ಅ.ಪ.
ವಾಸುದೇವನ ಬಹು ಮಹಿಮಾ | ನಿರ್ಣಯೀಸಲು ಕಥೆಗಳ ಸ್ತೋಮಾ | ಜರಾಕೂಸಿನ್ನ ವಧಿಸಲು ನೇಮಾ | ವನವಾಸುವು ಯುದ್ಧದ ಸ್ತೋಮ | ಆಹದೇಶ ದೇಶವು ಮಿಳಿತು | ವಾಸರÀಪ್ಟಾದಶಲೇಸು ಕಾಳಗ ಸರ್ವ | ಧೀಶನ ಮಹಿಮೆಯ ೧
ಅಧಿಭೂತ ಅಧ್ಯಾತ್ಮ ಉಂಟು | ಮತ್ತೆಅಧಿದೈವವೆಂಬುದು ಉಂಟು | ಕೇಳುವಿದಿತವಾಗುವುದಲ್ಲ ಗಂಟು | ಗುರುಮುದದಿಂದ ಬಿಡಿಸಲೀ | ಗಂಟು | ಆಹಅದುಭುತಾರ್ಥಗಳೆಲ್ಲ | ವಿದಿತವಾಗುತ ಹರಿಹೃದಯಾಂತರಂಗನ | ನಿಧಿಧ್ಯಾಸನಕ್ಕವಕಾಶ ೨
ಮೂರ್ಬಗೆ ಭಾಷೆಗಳಲ್ಲಿ | ಉಕ್ತಸಾರ ಪ್ರಮೆಯಂಗಳಲ್ಲಿ | ಹರಿ ಉ-ದಾರ ಗುಣಂಗಳು ಅಲ್ಲಿ | ಉಕ್ತಮೀರದೆ ಸ್ಪಷ್ಟತ್ವದಲ್ಲಿ | ಆಹನೇರವಾಗಿಯೆ ಪೇಳ್ದ | ಕಾರಣ ಕರೆವರುಮೂರರೊಳ ಗೊಂದು | ಸಾರಸಮಾಧ್ಯೆಂದು ೩
ದರ್ಶನಾಂತರ ಸಿದ್ಧವಾದ | ವೈಷ್ಣ್ವದರ್ಶನ ಪ್ರತ್ಯುಕ್ತವಾದ | ಶೈವದರ್ಶನಾದಿ ಸಿದ್ಧವಾದ | ವಸ್ತುದರ್ಶಿತ ಶಿವನರ್ಚಿಸೀದ | ಆಹ ವಿ-ಮರ್ಶನ ಯೋಗ್ಯ ಸ | ದೃರ್ಶನ ದಿಂದಲಿದರ್ಶನ ಭಾಷೆ ದಿ | ಗ್ದರ್ಶನ ವಿದು ತಿಳಿ ೪
ಶೂಲಾಟ್ಟ ಜನಪದವೆಂಬ | ಶಿವಶೂಲವು ಚತುಷ್ಪಥವೆಂಬ | ಕೇಶಶೂಲಿಗಳ್ಪ್ರಮದೇರು ಎಂಬ | ಯುಗಕಲಿಯೊಳಗಿಹರು ಎಂಬೆಂಬ | ಆಹಮೇಲಾದ ಗೂಢಾರ್ಥ | ಜಾಲಗಳೆಲ್ಲವುಓಲೈಸು ಗುಹ್ಯದ | ಭಾಷೆ ಎಂದೆನುತಲಿ ೫
ವೇದಾದಿ ಶಾಸ್ತ್ರದೊಳಂತೆ | ಇನ್ನುಆದಿಯಲ್ಲಿ ಮಧ್ಯ ಅಂತ | ವಿಷ್ಣುಭೋದಿತನಲ್ಲಿ ಸರ್ವತ್ರ | ನೆಂಬುಧೋದಿಸಿ ಕೊಂಬನು ಎಂತ | ಆಹಸಾಧಿಸು ಪರಿಚರೇ | ತ್ಯಾದಿ ವಾಕ್ಯಂಗಳಮಾಧವ ಪರ ಪಾಂಡವಾದಿಗಳ್ಪೆಸರೆಂದು ೬
ಸ್ವರವರ್ಣ ವಾಕ್ಯ ಭಾರತ | ಗ್ರಂಥಸರ್ವವು ಮುಖ್ಯ ಪ್ರವೃತ್ತ | ಹರಿಸರ್ವೋತ್ತಮನೆಂಬ ತತ್ವ | ಪೇಳೆಸಿರಿ ವೇದವ್ಯಾಸ ವಿರಚಿತ | ಆಹಪರಮ ಭಕ್ತರು ಪೃಥೆ | ವರ ಉದರೋದ್ಭವಧರ್ಮಾದ್ಯರ ಚರಿತೆ | ಅರುಹುವುದೆನುತಲಿ ೭
ಗುಣಗಳು ಭಕ್ತ್ಯಾದಿ ದಶವು | ಇನ್ನುಕರ್ಣದಿಂ ಕೇಳ್ವುದೆಲ್ಲವು | ಹಾಗೆಗುಣಗಳು ಶೀಲ ವಿನಿಯಾವು | ಮತ್ತೆಗುಣಸುವುದು ಮೂರು ವೇದವು | ಆಹಮನು ಪದ ವಾಚ್ಯಗ | ಳೆನಿಸುವುದೀ ಪಂಚಗುಣಧರ್ಮ ವಾಚ್ಯರು | ಪಾಂಡವರೆನಿಪರು ೮
ಅಭಿಮಾನಿ ಧರ್ಮಕ್ಕೆ ಎಂದು | ಮನುಅಭಿಧನು ಧರ್ಮಜನೆಂದು | ಇನ್ನುಅಭಿಮಾನಿ ಭಕ್ತ್ಯಾದಿಗೆಂದು | ಭೀಮನಭಿಧನಾಗಿಹನವ ಎಂದು | ಆಹಅಭಿಧನರ್ಜುನ ಶ್ರುತ | ಕಭಿಮಾನ ಎನುತಲಿಶುಭ ಶೀಲ ವಿನಯಕ್ಕೆ | ಅಭಿಮಾನಿಯಮಳರು ೯
ಔಷನಿಷದಾದಿ ವೇದ | ಮಾನಿದ್ರೌಪದಿ ಮನುಪದ ಭೋಧ | ಕೇಳುಈ ಪರಿ ಪರಲೋಕ ಸದಾ | ಇನ್ನುಶ್ರೀ ಪತಿ ಇರುವ ಸರ್ವದಾ | ಆಹಾಈ ಪರಿ ಜ್ಞಾನುಳ್ಳ | ಆ ಪೃಥೆ ಸುತರೆಲ್ಲನೀ ಪರಿಭಾವಿಸು | ಆಸ್ತೀಕರೆನುತಲಿ ೧೦
ದ್ರುಪದಜೆ ಧರ್ಮಾದಿ ಐದು | ಜನಸುಪುಣ್ಯ ಶ್ಲೋಕರ ಕಥೆ ಇದು | ಇನ್ನುಉಪರಿಚರಾಭಿಧನೆಂದು | ವಿಷ್ಣುಸುಪ್ರತಿಪಾಧ್ಯನು ಎಂದು | ಆಹಇಪ್ಪರಿ ಮಹಿಮೆಯು | ಪೇತವು ಭಾರತಸುಪ್ರತಿಷ್ಠಿತವಿದು | ಅಬ್ಜಜಾಂಡದಲೆಂದು೧೧
ಭಕ್ತಿವೈರಾಗ್ಯವು ಜ್ಞಾನಾ | ಮತ್ತೆಧೃತಿಯು ಸುಮೇಧಾ ಸುಪ್ರಜ್ಞಾ | ಇನ್ನುಸ್ಥಿತಿ ಬಲಯೋಗವು ಪ್ರಾಣಾ | ಭೀಮಹತ್ತು ಗುಣಾತ್ಮಕ ಮಾನಾ | ಆಹಉತ್ತಮ ಗುಣಿಪರ | ನಾತ್ಮನಾ ಅದರಿಂದತತ್ತನು ಎನಿಸೀಹ | ಪೃಥ್ವಿಪ ಭೀಮನು ೧೨
ಸರ್ವ ವಿಧ್ಯಾಭಿಧೆ ದ್ರೌಪದೀ | ಅಂತುಕರೆಸಿಹಳವಳೆ ಸರಸ್ವತಿ | ಕಲಿದುರ್ಯೋಧನ್ನ ಜ್ಞಾನ ಮೂರ್ತಿ | ಇನ್ನುಅರಿ ದುಶ್ಯಾಸನ್ವಿಪರೀತ ಮೂರ್ತಿ | ಆಹಕರೆಸಿಹ ಶಕುನಿಯು | ಮೂರುತಿ ನಾಸ್ತಿಕ್ಯಸರ್ವದೋಷಾತ್ಮಕ | ರೆನಿಪರಂಧಜರೆಲ್ಲಾ ೧೩
ಹರವನಾತರನು ಎಂದು | ದ್ರೌಣಿಕರೆಸುವನಹಂಕಾರನೆಂದು | ಇನ್ನುಕರಣಗಳ್ಪ್ರಾಣಾದಿ ಎಂದು | ಮತ್ತೆವರ ಸೈನ್ಯ ಪಾಪಗಳೆಂದು | ಆಹಅರಿವುದರ ಪುಣ್ಯ | ಪರವೆಂದು ಪಾಂಡವರಇರುತಿಹ ವಿಷ್ಣುವು | ಅವರ ನಿಯೋಜಕ ೧೪
ಸರ್ವವು ಅಧ್ಯಾತ್ಮನಿಷ್ಟ | ಗ್ರಂಥದುರ್ವಿಜ್ಞೇಯ ಸರ್ವರ್ಗೆ ಎನುತ | ವ್ಯಾಸಸರ್ವಜ್ಞ ತಾನೆಲ್ಲ ಜ್ಞಾತ | ನಿಹಪೂರ್ವ ಮಾರುತ ಹರಿದೂತ | ಆಹಅರಿವ ಗುರು ಗೋವಿಂದ | ವಿಠಲಾನುಗ್ರಹದಿಂದಮರುತಾನುಗ್ರಹದಿಂದ | ಅರಿವರು ಇತರರು ೧೫

೫೭
ಚಿಕ್ಕ ತಿರುಪತಿವಾಸ – ಶ್ರೀ ವೆಂಕಟೇಶ ಪ
ಅಕ್ಕರದಿ ನೀನೆನ್ನ – ತಕ್ಕೈಸಬೇಕೋ ಅ.ಪ.
ಕಕ್ಕಸದ ಭವದೊಳಗೆ | ಸಿಕ್ಕಿ ಬಲು ನೊಂದೆನೋರಕ್ಕಸಾಂತಕ ಕೃಷ್ಣ | ಚಕ್ರಧರ ದೇವಾಚೊಕ್ಕ ಮೂರುತಿ ಅಜನ | ಪೊಕ್ಕಳಾದಲಿ ಪಡೆದುಲಕ್ಕುಮಿಗೆ ಮೀರ್ದ ಪೊಂ | ಬಕ್ಕಿ ಧೇರನ ಕಾಯೋ ೧
ಸಪ್ತ ಪ್ರಕಾರದಲಿ | ಆಪ್ತ ನೀ ನೆಲಿಸಿದ್ದುಗುಪ್ತ ಮಹಿಮನೆ ಜಗಕೆ | ವ್ಯಕ್ತನಾಗದಲೇ |ಕ್ಲುಪ್ತಿಯಿಂದದಿ ಹವಿ | ಭೋಕ್ರ‍ತ ಯಜ್ಞನಿವೊಲಿದುವ್ಯಕ್ತನಾದೆಯೊ ಜಡದಿ | ಅವ್ಯಕ್ತ ಮೂರ್ತೇ ೨
ಕ್ಷಿತಿಪ ಜನಮೇಜಯನು | ವಿಸ್ತರಿಸಿ ಮಂಟಪವಕ್ಷಿತಿಯ ಮರರೊಡಗೂಡಿ | ಅತುಳ ವಿಭ್ರವದಲೀಕೃತಿಪತಿಯೆ ನಿನ್ನನೂ | ಸ್ತುತಿಗೈದು ಗತಿ ಪಡೆದವಿತತ ಮಂಗಳ ಮೂರ್ತಿ | ಪ್ರತಿರಹಿತ ದೇವಾ ೩
ಭೂಮಿಪತಿ ವರಾಹ | ಸ್ವಾಮಿ ಪುಷ್ಕರಿಣ್ಯಾದಿಆ ಮಹಾ ತೀರ್ಥಗಳ | ವಿಮಾನ ಸ್ಥಿತನಾ |ಈ ಮನೋರೂಪದಲಿ | ನೇಮಾನು ಸಂಧಾನಕಾಮಿಸುವೆ ಶ್ರೀರಮಣ | ಭೂಮಿಗ್ವಲ್ಲಭನೇ ೪
ಸರ್ವಜಗ ಸೃಜಿಸುವನೆ | ಸರ್ವವನು ಲಯಿಸುವನೆಸರ್ವಕುತ್ತಮನೆನಿಪೆ | ಶರ್ವವಂದ್ಯಾಸರ್ವ ಪ್ರೇರಕ ನೀನೆ | ಸರ್ವ ಚೇಷ್ಟಕ ನೀನೆಸರ್ವ ಸುಂದರ ಗುರು | ಗೋವಿಂದ ವಿಠಲಾ ೫

೫೮
ಚಿತ್ತಾವೆ ಚಿಂತಿಸು ಶ್ರೀ ಹರಿಯನ್ನ | ಗುಣಗಣ ಮಣಿಯನ್ನ ಪ
ದ್ರುತ :ಕೃತ್ತಿವಾಸನುತ ಹೃತ್ಕಮಲಸ್ಥನ |ಸುಸ್ಥಿರ ಚಿತ್ತದಿ ನೀ ನಿಲಿಸುತ್ತ ಅ.ಪ.
ನಾರಾಯಣ ಪರ ವೇದಗಳೆಲ್ಲಾ | ಪ್ರತಿಪಾದಿಪುದೆಲ್ಲಾನಾರಾಯಣಾಂಗಜ ದೇವತೆಯೆಲ್ಲ | ಆಶ್ರಿತರಿಹರೆಲ್ಲಾ |ನಾರಾಯಣ ಪರ ಲೋಕಗಳೆಂದುನಾರಾಯಣ ಪರ ಮಖಗಳೆಂದು ೧
ನಾರಾಯಣ ಪರಯೋಗಗಳೆಲ್ಲ | ಅಷ್ಟಾಂಗಗಳೆಲ್ಲಾನಾರಾಯಣ ಪರ ತಪಸುಗಳೆಲ್ಲ | ತದ್ವಿಷಯವು ಎನುತೆಲ್ಲ |ನಾರಾಯಣ ಪರ ಜ್ಞಾನಗಳೆಂದು |ನಾರಾಯಣ ಪರ ಗತಿಗಳಿಗೆಂದು ೨
ನಾರಾಯಣನೊಬ್ಬೊಬ್ಬರಲಿ ನಿಂದು | ಪೂಜ್ಯ ಪೂಜಕನೆಂದೂನಾರಾಯಣ ಸೇವ್ಯ ಸೇವಕನೆಂದು | ಪ್ರೇರ್ಯ ಪ್ರೇರಕನೆಂದೂ |ಕಾರಣ ಕಾರ್ಯಗಳಲಿ ನಾರಾಯಣ |ಪೂರಣನಹುದೆಂದು ನೀ ನಮಿಸುತ್ತ ೩
ಸೃಷ್ಟ್ಯಾದ್ಯಷ್ಟಕ ಕಾರಣ ಕರ್ತ | ಇಚ್ಛಾ ಮಾತ್ರ ಸಮರ್ಥಶಿಷ್ಟೇಷ್ಟ ಪುಷ್ಟ ಮಹಿಮನು ಎನುತ | ಹೃಷ್ಟ ನೀನಾಗೊ ಸತತಾ | ಕಷ್ಟ ಕ್ಲೇಶಹರ ಭೃತ್ಯಾಭೀಷ್ಟದ | ವೃಷ್ಟಿಕುಲೇಶನ ನಿಷ್ಠೆಯಲಿಂದ ೪
ಉಂಬೂವ ಉಡುವ ಕ್ರಿಯೆಗಳನೆಲ್ಲ | ಹಂಬಲಿಸುವುದೆಲ್ಲಚುಂಬೀಸಿ ಮಕ್ಕಳ ಮುದ್ದಿಪುದೆಲ್ಲ | ಬಿಂಬನದೆಂಬ ಸೊಲ್ಲ |ಬಿಂಬನು ಗುರು ಗೋವಿಂದ ವಿಠಲ – ಸೂಕ್ಷ್ಮಾಂಬರದಲಿ ಮಾಡಿ ಮಾಡಿಪನೆಂದು ೫

೫೪೯
ಜಗತ್ಸಾರ ವಿಠಲ | ನೀನಿವಳ ಸಲಹೊ ಪ
ಬಗೆಬಗೆಯಲಿಂ ನಿನ್ನ | ದಾಸ್ಯಕಾಂಕ್ಷಿಪಳಅ.ಪ.
ಭಯದೋರಿ ಸ್ವಪ್ನದಲಿ | ಜಯದೇವಿಸುತ ಪ್ರಾಣದಯೆ ಪಡೆಯಲನುವಾಗ್ಯೆ | ಭಯವನು ತೋರ್ದೇಹಯಮೊಗನೆ ನಿನ್ನಂಥ | ದಯೆ ಪೂರ್ಣರಿನ್ನುಂಟೆನಯವಿನಯ ದಿಂದಿರ್ಪ | ಕನ್ಯೆಯನು ಸಲಹೊ ೧
ತೈಜಸನೆ ನೀನಾಗಿ | ಸೂಚಿಸಿದೆ ಅಂಕಿತವಯೋಜಿಸಿಹೆ ಇವಳಿಗೆ | ವ್ಯಾಜ ಕರುಣೇಗೋಜು ಸಂರ‍ಸತಿಯಳಿಯೆ | ಬಾಜಿಸುತ ಮನದಲ್ಲಿನೈಜರೂಪವ ತೋರೊ | ಹೇ ಜನಾರ್ದನನೇ ೨
ನೂಕಿ ಸಂತಾಪಗಳ | ಲೌಕಿಕ ಸುಭೋಗ ವೈದೀಕ ವೆನಿಸೋ ಹೇ ಕೃ | ಪಾಕರನೇ ದೇವಾಜೋಕೆಯಿಂದಿವಳ ನೀ ಸಾಕಬೇಕೆಂದೆಂಬವಾಕು ಮನ್ನಿಸಿ ಕಾಯೊ | ಶ್ರೀ ಕರಾರ್ಚಿತನೇ ೩
ನೀಚೋಚ್ಚ ತರತಮದ | ಸೂಕ್ಷ್ಮ ಸುಜ್ಞಾನಗಳವಾಚಿಸಿವಳಲಿ ನಿಂತು | ಕೀಚಕಾಂತಕನುತಪ್ರಾಚೀನ ಕರ್ಮಗಳ | ಮೋಚಕನು ನೀ ಸವ್ಯಸಾಚಿ ಸಖನೇ ಇವಳ | ಪೇಕ್ಷೆಗಳ ನೀಯೋ ೪
ದೇವವರ ಭವ್ಯಾತ್ಮ | ಪಾವನವು ತವ ಸ್ರ‍ಮತಿಯನೀ ವೊಲಿದು ಸರ್ವತ್ರ | ಸರ್ವ ಕಾಲದಲೀಈ ವುದನೆ ಬಿನ್ನವಿಪೆ | ಬಾವಜ್ಞ ಸಲಿಸುವುದುಕಾವ ಕರುಣಾಳು ಗುರು | ಗೋವಿಂದ ವಿಠಲಾ೫

೫೪೮
ಜಗದೀಶ ವಿಠ್ಠಲನೆ | ಮಗುವ ಕಾಯೋ ಪ
ಹಗಲಿರುಳು ಬೆಂಬಲಿಗ | ನಾಗಿ ನೀ ಕರುಣದಲಿಬಗೆಬಗೆಯ ಸುಖವಿತ್ತು | ಹಗರಣವ ಕಳೆಯೋ ಅ.ಪ.
ಮರುತ ಮತ ತತ್ವಗಳ | ಅರಿವಿಕೆಯ ಕೊಡು ಇವಗೆಹರಿಗುರೂ ಸತ್ಸೇವೆ | ಪರಮ ಹರುಷದಲೀನಿರುತ ಗೈಯ್ಯು ಮನವ | ಕರುಣಿಸುವುದೆಂದೆನುತಪರಿಪರಿಯ ಪ್ರಾರ್ಥಿಸುವೆ ಶರಧಿಜೆಯ ರಮಣಾ ೧
ಕಾಕು ಸಂಗವ ಕೊಡದೆ | ನೀ ಕೊಟ್ಟು ಸತ್ಸಂಗತೋಕನನು | ಪೊರೆಯೆಂದು | ನಾ ಕೇಳ್ವೆ ಹರಿಯೇಬೇಕಾದ ವರ ಇವಗೆ | ನೀ ಕೊಡುತ ಕಾಯುವುದುಶ್ರೀಕಾಂತ ಬೇಡುವೆನೊ ನೀ ಕರುಣಿ ಎನುತಾ ೨
ಪಾವಪಾನಿಯ ಪ್ರೀಯ | ಝಾವ ಝಾವಕೆ ನಿನ್ನಪಾವನ ಸ್ರ‍ಮತಿಯಿತ್ತು | ಕಾವುದೈ ಹರಿಯೇಪಾವು ಮದ ಹರ ಗುರೂ | ಗೋವಿಂದ ವಿಠ್ಠಲನೆನೀವೊಲಿವುದಿವಗೆಂದು | ಭಾವದಲಿ ಬೇಡ್ವೆ ೩

೫೫೦
ಜಯ ಗೋಪಾಲ ವಿಠಲ | ದಯೆ ತೋರೋ ಇವಗೇ ಪ
ನಯ ವಿನಯದಿಂ | ನಿನ್ನ | ದಾಸ್ಯಕಾಂಕ್ಷಿಪಗೇ ಅ.ಪ.
ಜ್ಞಾನ ವಿರಹಿತನಾಗಿ | ಅನೇಕ ಜನುಮಗಳುಹೀನಯೋನಿಯ ಪೊಂದಿ | ಜನಿಸಿಹನು ಇವನೂಮಾನನಿಧಿ ಮೋಹನ್ನ | ದಾಸರರೊಲಿಮೆಯಲಿಂದಆನಂದ ಮುನಿ ಮತದಿ | ತನುವ ಪೊತ್ತಿಹನೊ೧
ಲೇಸು ಮೋಹನರಾಯ | ದಾಸವಂಶದಿ ಬಂದುಆಶುಗಾಧ್ಯಾತ್ಮರಾ | ಹಸ್ಯ ವರಿಯದಲೇದಾಸ ದೀಕ್ಷೆಯ ನಡೆಯೆ ಆಶಿಸುತ್ತಿಹಗೆ ಉಪದೇಶವಿತ್ತೆ ನಿನ್ನಾ | ದೇಶ ಸುಸ್ತೀಶಾ ೨
ಲೌಕಿಕದ ಬಹು ಮೋಹ | ನೀ ಕಳೆದು ಸುಜ್ಞಾನಭಕುತಿ ವೈರಾಗ್ಯಗಳ | ನೀ ಕೊಡುವುದ್ಹರಿಯೇಮಾಕಳತ್ರನೆ ತವಾ | ಲೌಕಿಕಸುಮಹಿಮೆಗಳಸಾಕಷ್ಟು ತಿಳಿಸುತ ಲೋಕದಲಿ ಮೆರೆಸೊ ೩
ಬಲ್ಲವರೊಳತಿ ಬಲ್ಲ | ಚೆಲ್ವ ರುಕ್ಮಿಣಿ ಲೋಲಎಲ್ಲೆಡೆಯು ತವವ್ಯಾಪ್ತಿ | ಸೊಲ್ಲು ಸ್ಪುರಿಸುತಲೀಬಲ್ಲಿದನ ಗೈಯ್ಯೆಂಬ | ಸೊಲ್ಲು ಸಲಿಸುವುದ್ಹರಿಯೆಖುಲ್ಲ ಜನದಲ್ಲಣನೆ | ಗೊಲ್ಲ ಗೋಪಾಲಾ ೪
ಭಾವ ಮೈದುನ ಬಂಡಿ | ಬೋವ ಶ್ರೀಹರಿ ಇವನಶೈವಲಾವರಣ ಕಳೆ | ದೀವುದೋಜ್ಞಾನಾಕೈವಲ್ಯದಾತ ಗುರು | ಗೋವಿಂದ ವಿಠ್ಠಲನೆನೀವೊಲಿಯದಿನ್ನಿಲ್ಲ | ದೇವ ದೇವೇಶಾ ೫

೫೫೧
ಜಯ ಪಾಂಡುರಂಗ ವಿಠಲ | ದಯದಿ ಪೊರೆ ಇವನಾ ಪ
ಭಯ ಕೃತೂ ಭಯನಾಶ | ಹಯಮೊಗನೆ ಹರಿಯೇ ಅ.ಪ.
ಹಿಂದಿನ ಸುಸಂಸ್ಕಾರ | ಛಂದದಲಿ ಅನುಭವಿಸಿಇಂದು ತವದಾಸ್ಯವನು | ಕಾಂಕ್ಷಿಸುವ ಹರಿಯೇಅಂದ ಪುಣ್ಯದರಾಶಿ | ಬಂದೊದಗಿತೋ ಎನೋಇಂದಿರಾ ನಂದದಾ | ನಂದವನೆ ಈಯೋ ೧
ಕರ್ಮಾಕರ್ಮಗಳ | ಮರ್ಮವನೆ ತಿಳಿಸುತ್ತಧರ್ಮನಾಮಕ ನಿನ್ನ | ಪೇರ್ಮೆ ಸನ್ನಾಮಾಒಮ್ಮನದಿ ಸರ್ವದಾ | ಸುಸ್ಮರಣೆ ಈಯುವುದುದುಮ್ಮಾನಗಳ ಕಳೆದು | ಸಲಹಬೇಕಿವನಾ ೨
ಪಂಚ ಭೇದ ಜ್ಞಾನ | ಸಂ ಚಿಂತನೆಯ ಕೊಟ್ಟುವಾಂಛಿತಾರ್ಥವನೀಡೋ | ಪಂಚ ಪಂಚಾತ್ಮಾಹೆಂಚು ಹಾಟಕದಿ ಸಮ | ಚಿಂತನೆಯು ಬರುತಿರಲಿಅಂಚೆವಾಹನ ಪಿತನೆ | ಸಂಚಿತಾಗಮ ಕಳೆಯೋ೩
ತಾರತಮ್ಯ ಜ್ಞಾನ | ಧಾರಾಳವಾಗಿ ಕೊಡುವಾರುತಿಗಳೆಲ್ಲವೂ | ದೂರ ದೂರಾಗಲೀಸೇರುವಂತಾಗಲೀ | ಸಾಧು ಜನಸಂಗಗಳುಕೋರುವಂತಾಗಲೀ | ಭೂರಿ ಭಕ್ತಿಗಳಾ ೪
ಧೀವರರ ಆಶಿಷವು | ತೀವರಾಗಲಿ ಇವಗೆಮಾವಾರಿ ಪದಚಿಂತೆ | ಯಾವಾಗ್ಯೂ ಇರಲೀಕೇವಲಾನಂದಗಳು | ಭಾವದಲಿ ಮೈದೋರೆದೇವಗುರು ಗೋವಿಂದ | ವಿಠಲ ಪ್ರಾರ್ಥಿಸುವೆ ೫

೬೦
ಜಯ ಮಂಗಳಂ ನಿತ್ಯ ಶುಭ ಮಂಗಳಂ ಪ
ಮತ್ಸ್ಯಾವತಾರಿಗೆ | ವೇದ ಉದ್ಧಾರಿಗೇ ಪೊತ್ತ ಬೆನ್ನಲಿ ಗಿರಿಯ | ಮುದ್ದು ಕೂರ್ಮನಿಗೇ೧
ದನುಜ ಸಂಹಾರಿಗೇ | ಮಧು ಕೈಟಭಾರಿಗೇ ವನದಿ ವಸನೆಯ ಪೊತ್ತ | ವರಹಾವತಾರಿಗೇ ೨
ಪೋರನ್ನ ಪೋಷಕಗೆ | ಧಾರುಣಿಯ ಬೇಡ್ಡವಗೆಮೂರು ಲೋಕವನಳೆದ | ಮೂರ್ವಿಕ್ರಮ ನಿಗೇ ೩
ಕೊಡಲಿಯ ಪಿಡಿದಗೇ | ಅಡವಿಯನೆ ಸೇರ್ದಗೇ ಮೃಡ ಸಖನು ಕಾಳೀಯ | ಹೆಡೆಯ ಮೆಟ್ಟಿದಗೇ ೪
ಬೆತ್ತಲೆ ನಿಂತವಗೆ | ಬುದ್ದಾವತಾರಿಗೇಉತ್ತಮ ಕಲ್ಕಿ ಗುರು | ಗೋವಿಂದ ವಿಠಲಗೇ ೫

೩೪೮
ಜಯತೀರಥ ಭವ ವನಧಿಗೆ ನವಪೋತ | ಪಾಲಿಸು ವಿಖ್ಯಾತ ಪ
ವಿಯದಧಿಪನೆ ಎನ್ನ ಕೈಯ್ಯನು ಪಿಡಿಯೋ | ಜ್ಞಾನ ಭಿಕ್ಷ ಈಯೋ ಅ.ಪ.
ಮಾಯಾಪತಿ ಪದ ಪದ್ಮಯುಗಳ ಭಜಿಪಾ | ಉತ್ತಮ ಪಥತೋರ್ಪಾಶ್ರೇಯಸು ಸಾಧನ ವೆನಿಸಿ ಮೆರೆಯುರ್ತಿರ್ಪಾ | ಹರಿಪರಮನು ಎನಿಪಾ ||ಮಾಯಾಮತ ತಮ ಸೂರ್ಯನೆನಿಸಿ ಮೆರೆವಾ | ಸುಜನಸುರದ್ರುಮವಾನ್ಯಾಯ ಸುಧೆಯನೇ ತಾರಚಿಸಿರುವಾ | ಮುಕುತಿ ಮಾರ್ಗ ತೋರ್ವಾ ೧
ಕಾಕು ವೃತ್ರನಿಂದಾವೃತ ಜಗವಿರಲೂ | ಜ್ಞನರಹಿತ ವಿರಲೂಲೋಕ ಮಹಿತ ಮಂತ್ರವು ನಿನಗಿರಲೂ | ಜಪಿಸುತಾಸ್ತ್ರ ಬಿಡಲೂ ||ಆ ಕುಯೋನಿಗತ ಚಿತ್ರಕೇತು ಮೋಕ್ಷ | ಆಯಿತು ಸುರರಾಧ್ಯಕ್ಷಲೋಕಾಮಯವನು ಹರಿಸಿ ಜಗದಿ ಮೆರೆದೇ | ಮಹಾನ್ನು ಎನಿಸೀದೇ೨
ತ್ರ್ಯಕ್ಷಾಂಶರು ಅಕ್ಷೋಭ್ಯರ ಕರಜಾತಾ | ಇಕ್ಷು ಚಾಪ ಜೇತಾಕುಕ್ಷಿಯೊಳಗೆ ಬಲು ಬಲು ವಿಖ್ಯಾತಾ | ಕಾಗಿನಿ ತಟದಿಸ್ಥಿತ ||ಅಕ್ಷರೇಡ್ಯ ಗುರುಗೊವಿಂದ ವಿಠ್ಠಲನಾ ತನ ಹೃದ್ಗನಾಗಿರುವವನ ||ಅಕ್ಷಿಯೊಳಗೆ ಕಂಡು ಮೋಕ್ಷ ಪಧವ ಸೇರ್ದ | ಆನಂದವ ಬೀರ್ದ ೩

೫೫೨
ಜಯಶ್ರೀ ನರ ಹರಿ ವಿಠಲ | ಕಾಯ ಬೇಕಿವಳಭಯ ಕೃತು ಭಯನಾಶ | ದಯದೋರೊ ಶ್ರೀಶ ಪ
ವಾದೀಭ ಮೃಗರಾಜ | ವಾದಿರಾಜರ ದಯದಿಸಾಧನಕೆ ಹೆದ್ದಾರಿ | ನೀ ದಯದಿ ತೋರೀಮೋದ ತೀರ್ಥರ ಸಮಯ | ಧ್ಹಾದಿಯಲಿ ನಡೆವಂತೆಹೇ ದಯಾಂಬುಧಿ ಚೆನ್ನ | ಆದರಿಸೋ ಘನ್ನ ೧
ಚಂದ್ರ ಸಮ ಸಂಕಾಶ | ಸಂಧಿಸಲು ಸ್ವಪ್ನದಲಿಇಂದು ಭಾಗ ನಿವಾಸ | ಸಂದರ್ಶನಿತ್ತೂ ಕಂದಿದ್ದ ಕನ್ಯೆಗೇ | ನಂದ ದಾಯಕನಾಗಿಸುಂದರನೆ ನರರೂಪಿ | ಸಂಧಿಸಿದೆ ಭಾಗ್ಯ ೨
ಚಂದ್ರ ವದನೆಯು ಲಕುಮಿ | ಮಂದಿರಕೆ ಬರುತಲ್ಲೆನಿಂದಿರಲು ಸೌಭಾಗ್ಯ | ಸಂಧಿಸದೆ ಇಹುದೇಇಂದಿರಾರಾಧವಪದ | ಮಂದಸ್ಮಿತಾನನನೆಮಂದಿಯೊಳಗೀ ಶಿಶುವ | ಛಂದಾಗಿ ಸಲಹೋ ೩
ಹರಿಗುರು ಸದ್ಭಕ್ತಿ | ಪರತತ್ವ ಸುಜ್ಞಾನ ಕರುಣಿಸುತ್ತ ಸಂತೈಸು | ಸುರ ವರೇಣ್ಯಾ |ಮರುತಾಂತರಾತ್ಮ ನಿ | ನ್ಹೊರತು ಅನ್ಯರ ಕಾಣೆಪರಿ ಹರಿಸೊ ಪ್ರಾಚೀನ | ಕರ್ಮಾಂಧ ಕೂಪಾ ೪
ಸರ್ವತ್ರ ಸರ್ವದಾ | ದೇವ ತವ ಸ್ರ‍ಮತಿಯಿತ್ತುಭವದ ಬಂಧನ ಕಳೆಯೆ | ಓವಿ ಪ್ರಾರ್ಥಿಸುವೆ ಭಾವಜ್ಞ ನೀನಾಗಿ | ಭಾವದೊಳು ಮೈದೋರೊಗೋವಿದಾಂ ಪತಿಯೆ ಗುರು | ಗೋವಿಂದ ವಿಠಲ ೫

೫೫೩
ಜಾಂಬುವತಿ ಪ್ರಿಯ ವಿಠಲ | ಅಂಬುಜದಳಾಕ್ಷ ಪ
ನಂಬಿ ಬಂದಿಹನ ಮನ | ದಂಬಲವ ಸಲಿಸೋ ಅ.ಪ.
ಲೌಕಿಕಾನೇಕದಲಿ | ಸಿಲ್ಕಿ ನೊಂದವನಾಗಿಏಕಾಮೇವಾದ್ವಿತೀಯ | ನೀನೇವೆಯಂಬಾವಾಕು ನುಡಿವಾ ಇವಗೆ | ಪ್ರಾಕ್ಕು ಕರ್ಮವ ಕಳೆದುತೋಕನ್ನ ಸಲಹೆಂದು | ಪ್ರಾರ್ಥಿಸುವೆ ಹರಿಯೇ ೧
ನೀಚೋಚ್ಛ ಸುಜ್ಞಾನ | ದಾಸ್ಯಕಿದುವೇ ಮೂಲವಾಚಿಸೋ ಇವನಲ್ಲಿ | ಕೀಚಕಾರಿಪ್ರಿಯಾವಾಚಾಮಗೋಚರನೆ | ಖೇಚರೋತ್ತಮಸವ್ಯಸಾಚಿ ಸಖನೇ ಇವನ | ಕಾಪಾಡೊ ಹರಿಯೇ ೨
ಸಂಗೀತ ಲೋಲ ಹರಿ | ಮಂಗಳಾಂಗನೆ ಸಾಧುಸಂಗವನು ಇವಗಿತ್ತು | ಕಾಪಾಡೊ ಹರಿಯೇಇಂಗಿತಜ್ಞನೆ ವಿಷಯ | ನಿಸ್ಸಂಗನೆಂದೆನಿಸಿಸಂಗೀತದಲಿ ತವ ಪ್ರ | ಸಂಗವಿತ್ತು ಕಾಯೋ ೩
ಮೂರೆರಡು ಭೇದಗಳ | ತಾರತಮ್ಯ ಜ್ಞಾನವಾರವಾರಕೆ ತಿಳಿಸಿ | ಕಾಪಾಡೊ ಇವನಾಸೂರಿಜನ ಸಂಪ್ರೀಯ | ಸೂರಿಸಂಗವನಿತ್ತುಪಾರುಗೈ ಭವದ ಕೂ | ಪಾರ ಹರಿಯೇ ೪
ಗರುಡವಾಹನ ಕೃಷ್ಣ | ಗರುವಗಳ ಪರಿಹರಿಸಿಸರ್ವಾಂತರಾತ್ಮಕನೆ | ಕಾಪಾಡೊ ಹರಿಯೇ |ನಿರವಧಿಕ ಗುಣ ಪೂರ್ಣ | ಸರ್ವೇಷ್ಟ ಪ್ರದನಾಗಿಪೊರೆಯ ಬೇಕಿವನ | ಗುರು ಗೋವಿಂದ ವಿಠಲಾ ೫

೫೫೪
ಜಾನಕೀಶ ವಿಠಲ ನೀನಿವನ ಪೊರೆಯೋ ಪ
ಮೌನಿಕುಲ ಸನ್ಮಾನ್ಯ | ಆನತೇಷ್ಟಪ್ರದನೆಆನಮಿಸಿ ಪ್ರಾರ್ಥಿಸುವೆ | ಭಿನ್ನಪವ ಪಾಲಿಸೋ ಅ.ಪ.
ಇವನ ಸತಿ ಸ್ವಪ್ನದಲಿ | ಅವನಿಜೆಯ ವಲ್ಲಭನೆ ತವನಾಮ ಸೂಚಿಸಿಹೆ | ಎನ್ನ ರೂಪದಲೀಭವವನಧಿ ದಾಟಲ್ಕೆ | ತವನಾಮ ಸಂಸ್ಮರಣೆನವಪೋತವೆನಿಸಿಹುದು | ಪವನಾಂತರಾತ್ಮಾ ೧
ಸತ್ಯ ಶೌಚಾಚಾರ | ಕೃತ್ಯ ನಡೆಸಿವನಲ್ಲಿಭೃತ್ಯ ಇವ ದಾಸತ್ವ | ದೀಕ್ಷೆ ಕಾಂಕ್ಷಿತನೂಸತ್ವ ಜೀವರಿಗಿನ್ನು | ಅತ್ಯಧಿಕ ಪ್ರಿಯತಮನೆ ನಿತ್ಯ ತವ ಪದದಲ್ಲಿ | ಭಕ್ತಿ ಕರುಣಿಸೋ ೨
ಮಧ್ವಮತ | ಸಾಕಷ್ಟು ತಿಳಿಸುತ್ತಾಮಾಕಳತ್ರನೆ ಇವನಾ | ವ್ಯಾಕುಲದಲ್ಹರಿಸೀಲೌಕಿಕವೆಲ್ಲ ವೈ | ದೀಕ ವೆಂದೆನಿಸುತ್ತಪ್ರಾಕ್ಕು ಕರ್ಮವ ಕಳೆಯೊ | ಲೋಕ ಲೋಕೇಶಾ ೩
ತಾರತಮ್ಯ ಜ್ಞಾನ | ಮೂರೆರಡು ಭೇದಗಳಸಾರತಮ ಹರಿಯು ನಿ | ಸ್ಸಾರ ಜಗವೆಂಬಾಚಾರುಮತಿಯನೆ ಇತ್ತು | ಪಾರಗಾಣಿಸು ಭವವಧೀರ ನೀನಲ್ಲದಲೆ | ಆರು ಕಾಯುವರೋ ೪
ಜೀವ ಬಹು ಪರತಂತ್ರ ದೇವ ನಿಜ ಸ್ವತಂತ್ರಈ ವಿಧದ ಸುಜ್ಞಾನ | ಸಾರ್ವಕಾಲದಲೀದೇವ ನೀ ದಯದಿ ಈ | ಜೀವಂಗೆ ಕರುಣಿಸೇಭಾವದಲಿ ಬೇಡ್ವೆ ಗುರು | ಗೋವಿಂದ ವಿಠಲಾ ೫

೨೪೦
ಜೀವ ಮಾನಿ ಸಂಕರುಷಣ ಪಾಹಿ | ಜೀವ ಮಾನೀ ಪ
ಜೀವಮಾನಿ ವರ ಶ್ರೀವರ ಶಯ್ಯನೆತೀವರ ಪಾಲಿಸು ಪಾವನ ಗಾತ್ರ ಅ.ಪ.
ಶ್ರದ್ದೆಯ ಸುತ ನೀ | ನಿದ್ದುದೆ ಸರಿ ಹರಿಶ್ರದ್ದೆಯ ನೀಯುತ | ಉದ್ದರಿಸೆಮ್ಮ ೧
ಬಲನೆನಿಸುತ ಗೋ | ಕುಲದೊಳಗುದಿ ಸುತಅಲವ ಪೂರ್ಣ ಹರಿ | ಒಲವನು ಪಡೆದೇ ೨
ತಾಮಸ ಹರ ಪಿತ | ತಾಮಸ ಕಳೆ ಸು-ತ್ರಾಮ ವಂದ್ಯ ತ್ರೈ | ಧಾಮಗೆ ಪ್ರೀಯ ೩
ರಾಮಾಭಿಧ ಹರಿ | ಸೋಮಾಸ್ಯನ ಸಂ-ಪ್ರೇಮಾಸ್ಪದ ಗುರು | ಸೌಮಿತ್ರೀಯೆ ೪ |
ಮಾವ ವೈರಿ ಗುರು | ಗೋವಿಂದ ವಿಠಲನಭಾವವ ನೋಳ್ಪ ಸು | ಭಾವವ ನೀಯೋ ೫

೩೯೪
ಜೋ ಜೋ ಪ
ಜೋ ಜೋ ಜೋ ಜೋ ಜೋ ಗುರುರಾಜಾಜೋ ಜೋ ಜೋ ಜೋ | ಯತಿ ಮಹರಾಜಾ | ಜೋಜೋಅ.ಪ.
ಬೋಧವ ಗೈಯ್ಯುತ್ತ | ಮೋದ ಮುನಿ ಮತವವಾದಿಗಳ ಜಯಿಸುತ್ತ | ವೇದಾರ್ಥ ಪೇಳಿ |ಸಾಧು ಸಮ್ಮತವೆನೆ | ಗ್ರಂಥ ಬಹು ರಚಿಸೀ ಆದುದಾಯಾಸವು | ಮಲಗೊ ಗುರುರಾಯ | ಜೋ ಜೋ ೧
ಯೋಗಿಗಳೊಡೆಯನೆ | ಯೋಗೀಂದ್ರ ವಂದ್ಯಾಭೋಗಿ ಶಯ್ಯನ ಭಕ್ತ | ಗುರುರಾಘವೇಂದ್ರ |ಭಾಗವತರ ಬಯಕೆ | ಸಲಿಸಿ ವೇಗದಲಿಂದಯೋಗ ನಿದ್ರೆಯ ಮಾಡೆ | ಮಲಗೊ ಮುನೀಂದ್ರಾ | ಜೋಜೋ ೨
ಎರಡೆರೆಡು ಮುಖದಿಂದ | ವೃಂದಾವನದಿಂದಶರಣರಿಗಾನಂದ | ಸುರಿಸಿ ಹರಿಯಿಂದ |ಗುರು ಗೋವಿಂದ ವಿಠಲನ | ಧ್ಯಾನ ಆನಂದಪರವಶದಲಿ ಮಲಗೊ | ಗುರು ರಾಘವೇಂದ್ರ | ಜೋಜೋ ೩

೫೫೫
ಜ್ಞಾನಪ್ರದ ನರಸಿಂಹ ವಿಠಲ ನೀ ಸಲಹೊ ಪ
ಧೇನು ವತ್ಸದ ಧ್ವನಿಗೆ ತಾನೇವೆ ಬರುವಂತೆ ಅ.ಪ.
ಕರ್ಮ ಪೂರ್ವಾರ್ಜಿತವ ನಿರ್ಮಲವ ಗೊಳಿಸುತ್ತಭರ್ಮ ಗರ್ಭನ ಜನಕ ಪೇರ್ಮೆಯಲಿ ಇವನಧರ್ಮ ಮಾರ್ಗದಿ ನಡೆಸು ಸುಜ್ಞಾನ ಮತಿಯಿತ್ತುಕರ್ಮನಾಮಕ ಹರಿಯೆ ಶರಣಜನ ಧೊರೆಯೆ ೧
ಹರಿಯು ಸರ್ವೋತ್ತಮನು ಶಿರಿಯು ಆತನರಾಣಿಗುರು ವಾಯು ಸುರರೆಲ್ಲ ಹರಿಭೃತ್ಯರೆಂಬವರಮತಿಯನಿತ್ತವಗೆ ಸಂಸ್ರ‍ಕತಿಯ ಕ್ಲೇಶಗಳಪರಿಹರಿಸಿ ಪಾಲಿಪುದು ಪರಮ ಕರುಣಿಕಾ ೨
ಬೇಕೆಂಬ ವರವನೀವ ಲೋಕೇಶ ಪತಿ ಇರುವೆ ಮೂಕ ಪುರುಷರ ನೀನು ವಾಕ್ಪತಿಯ ಮಾಳ್ಪೆನಾಕೇಳ್ಪುದರಿದೇನೊ ಪಂಚ ಮುಖ ಭವವಂದ್ಯತೋಕನಿವ ಶರಣಗಿಹ ವ್ಯಾಕುಲವ ಕಳೆಯೋ ೩
ಮಗುವಿನೊಚನವ ಕೇಳಿ ಜಿಗಿವೆ ಕಂಬದಲಿಂದನಗೆ ಮೊಗನೆ ತರಳೆಯಾ ಹಗರಣವ ಕಳೆದೇಖಗವರಧ್ವಜ ನಿನ್ನ ಬಗೆಬಗೆಯ ಲೀಲೆಗಳಮಿಗಿಲಾಗಿ ತೋರಿವಗೆ ನಗಧರನೆ ಹರಿಯೇ ೪
ನಿತ್ಯತವ ಸ್ರ‍ಮತಿಯಿತ್ತು ಭೃತ್ಯನತಿ ಕಷ್ಟಗಳಕಿತ್ತೊಗೆದು ಮಧ್ವಮತ ತತ್ವ ತಿಳಿಸುತ್ತಾಗುಪ್ತ ಮಹಿಮನೆ ಗುರುಗೋವಿಂದ ವಿಠ್ಠಲನೆಭಕ್ತನುದ್ಧರಿಸೆಂದು ಪ್ರಾರ್ಥಿಸುವೆ ನಿನ್ನಾ ೫

೬೧
ಜ್ವರಹರಾಹ್ವಯನೆ ಶ್ರೀನಾರಸಿಂಹಪೋರನಾಮಯ ಕಳೆದು – ಆರೋಗ್ಯವೀಯೊ ಪ
ರೋಗ ಹರ ನೀನೆಂದು _ ಆಗಮವು ಪೇಳುವುದುಯೋಗ ಭೋಗದ ರೂಪಿ _ ಭೋಗಿ ಗುರು ಬಿಂಬಾ |ವಾಗೀಶ ಮುನಿವಂದ್ಯ _ ಭೋಗಿ ಶಯನನೆ ದೇವರೋಗ ಹರಿಸುವುದರಿದೆ _ ರೋಗಾರ್ತ ಶಿಶುಗೇ ೧
ನಾಗ ಗಿರಿಯಲಿ ವಾಸ – ನಾಗಭೂಷಣ ಸೇವ್ಯನಾಗಾರಿ ವಾಹನನೆ – ಯೋಗಿ ವಂದ್ಯಾ | ಶೀಘ್ರದಲಿ ಶಿಶುವ ನಿ – ರೋಗಿಯೆನಿಸುವುದಯ್ಯಬಾಗಿ ಬೇಡುವೆ ಹರಿಯೆ – ಭಾಗವತ ಪ್ರಿಯ ೨
ಈ ವಸುಮತಿಯ ಸಕಲ – ಜೀವರಂತರ್ಯಾಮಿದೇವ ನರಹರಿ ಜ್ವರ ಹ – ರಾಹ್ವಯನು ಯೆನಿಸೀ |ಕಾವುತಿರೆ ಭಯವೇನು _ ತೀವ್ರ ಪಾಲಿಪುದಿವನಗೋವ ಪಾಲಿಪ ಗುರು – ಗೋವಿಂದ ವಿಠಲ ೩

೩೪೯
ಟೀಕಾರ್ಯ – ಟೀಕಾರ್ಯ ಪ
ಕಾಕು ಮತಗಳ ವಿ | ವೇಕದಿ ಖಂಡನ ಅ.ಪ.
ಎತ್ತಾಗಿರುತಿರೆ | ಶಾಸ್ತ್ರಬೋಧ ಶ್ರುತಉತ್ತಮ ಸಂಸ್ರ‍ಕತಿ | ಪೊತ್ತು ಜನಿಸಿದೆ ೧
ಲಕ್ಷವಿತ್ತನೀ | ಲಕ್ಷಿಸದಲೆ ಮುನಿತ್ರ್ಯಕ್ಷನಂಶರಿಂ | ಭಿಕ್ಷುಕನಾದವ ೨
ಮಧ್ವಶಾಸ್ತ್ರ ದು | ಗ್ದಾಬ್ಧಿ ಮಥಿಸಿ ಬಹುಶುದ್ಧ ಸುಧೆಯ ನೀ | ಮೆದ್ದು ಉಣಿಸಿದೆ ೩
ಮೌನಿ ಮಧ್ವಕೃತ | ಮಾನ ಲಕ್ಷಣಕೆಗಾನ ಮಾಡ್ದೆ ಪ್ರ | ಮಾಣ ಪದ್ಧತಿಯ ೪
ಪದ್ಧತಿಯಿಂದಲಿ | ವಿದ್ಯಾರಣ್ಯರಸದ್ದಡಗಿಸಿದೆಯೊ | ಬುದ್ಧಿ ಚಾತುರ್ಯ ೫
ನಾಗಾವೇಶಿತ | ಯೋಗಿ ವರೇಣ್ಯನೆಕಾಗಿನಿ ತೀರಗ ಭಾಗವತರ ಪ್ರಿಯ ೬
ಮಾವಿನೋದಿ ಗುರು | ಗೋವಿಂದ ವಿಠಲನಭಾವ ಕುಸಮದಿಂ | ದೋವಿ ಪೂಜಿಸುವ ೭

ಉತ್ತರಾದಿ ಮಠದ ಪರಂಪರೆಯಲ್ಲಿ
೪೦೫
ತಂಗಳೊಡೆಯರು
ತಂಗಳೊಡೆಯರೇ ನಿಮ್ಮ | ಮಹಿಮೆಗೇನೆಂಬೆಅಂಗವನೆ ಮರೆಮಾಚಿ | ಮಂಗಳವಕೊಂಡಾ ಪ.
ನಾಮ ನಿರ್ದೇಶ ಜನ | ಸ್ತೋಮಕಾಕರವೆಂದುನಾಮವನೆ ತೊರೆಯುತ್ತ | ಗೂಢಭಾವದಲೀ |ಭೀಮ ತೀರದಿ ನಿಂದು | ತಪವ ಗೈಯ್ಯುತಲಿರುವೆಸೀಮೆ ಮೀರಿದ ಮಹಿಮ | ದಯೆದೋರೊ ಎನಗೆ ೧
ವೇದೇಶ ತೀರ್ಥ ಗುರು | ಮಾಧವಸುತೀರ್ಥಬಳಿಸಾದರದಿ ವಾಸಿಸುತ | ಸಾಧಿಸಿಹೆಗತಿಯಾ |ಬಾದರಾಯಣ ಬೋಧ | ಮೋದದಿಂ ತಿಳಿಸುತ್ತಸಾಧನವ ಗೈಸೆನಗೆ | ಹೇದಯಾ ಪೂರ್ಣ ೨
ವೈರಾಗ್ಯ ಹರಿ ಭಕುತಿ | ವೀರಮೂರುತಿ ಎನಿಸಿಮಾರನ್ನ ನೀ ಗೆಲಿದು | ಮೋಕ್ಷಕಾಮೀಸಾರತಮನೂ ಗುರೂ | ಗೋವಿಂದ ವಿಠಲೆಂದುಬಾರಿಬಾರಿಗೆ ಸ್ಮರಿಸಿ ಆನಂದ ಗೊಳ್ವಾ ೩

೪೮೩
ತಂದೆ ಮುದ್ದು ಮೋಹನರ ಪೊಂದಿ ಭಜಿಸಲು ನಿತ್ಯ ಇಂದಿರಾಧವನೊಲಿಮೆ | ಸಂಧಿಸುವುದೂ ಪ
ಪರಮ ಪ್ರಿಯ ಗುರುವರ್ಯ ನರಸಿಪುರ ದಾಸರಪರಮ ಮಂಗಳ ನಾಮ ಸುಸ್ತವನದೀ ||ಉರುತರದ ಸಂಚಿತವು ಮಿಂಚಿನಂದದಿ ಕರೆಗುಗರುವ ವೇತಕೊ ಮನುಜ ಭಜಿಸೊ ನಿತ್ಯಾ ೧
ಪತಿತರುದ್ಧಾರಕರು | ಕ್ಷಿತಿಯೊಳಾರುಂಟಿನ್ನುಮತಿ ವಿಕಳರಾದವರ | ಸಂತ್ಯೆಪರ್ಯಾರೊ ||ಹತಭಾಗ್ಯನಾಗಿದೆ | ತವ ಸೇವೆ ದೊರಕದಲೆಗತಿ ಗೋತ್ರರೊದಗಿರಲು | ಪಥ ದೊರಕಿತೆನಗೆ೨
ಶ್ರೀದಾಸಗುರುತಿಲಕ | ಮೋದತೀರ್ಥರ ಪ್ರೀಯಭೇದಾಗಮಜ್ಞಾನಿ ಪ್ರಾಜ್ಞ ಮೌಳೀ ||ಆದರಿಸಿ ಉದ್ಧರಿಸು | ಮೋದಮಯ ರತ್ನನೇವಾದಿಗಜ ಪಂಚಾಸ್ಯ | ಬುಧಜನರ ಪ್ರೀಯಾ ೩
ಜ್ಞಾನ ಪ್ರಕಾಶನೇ | ಜ್ಞಾನ ಮಾರ್ಗವ ತೋರ್ವಪೂರ್ಣೇಂದು ಮತ್ತುದಯ | ಘನಗುಣಜ್ಞಾ ||ಮೌನಿವರ ಕರುಣಿಸಿ | ನಿನ್ನಕಾಂಬುವ ಹದನನೀನೆ ತಿಳಿಸಲಿ ಬೇಕು | ಆ ನಮಿಪೆ ನಿನ್ನ ೪
ಮುದ್ದು ಮೋಹನ ದಾಸ ಪದಕಮಲ ಭೃಂಗನೇಸಿದ್ಧಜನ ಸನ್ಮೌಳಿ | ತಿದ್ದಿ ಮನ್ಮನವಾಮಧ್ವಾಂತರಾತ್ಮಗುರು | ಗೋವಿಂದ ವಿಠಲನಮದ್ಗುರುವೆ ಮನ್ನನದಿ | ಸಿದ್ಧಿಸೋ ಜೀಯಾ ೫

೪೮೦
ತಂದೆ ಮುದ್ದು ಮೋಹನಾ | ನಿನ್ | ಅಂದ ಪಾದವ ಭಜಿಸುವೆ ಪ
ನಂದ ಕಂದನ ತಂದು ತೋರಿಸಿ | ಬಂಧನವ ಪರಿಹರಿಸು ನೀ ಅ.ಪ.
ನರಸಿ ಪುರದೊಳು ಉದಿಸಿ ನೀ | ನರಹರಿಯನೇ ಭಜಿಸಿದೇಎರಡು ಹತ್ತು ಆರು ವತ್ಸರ | ತರಳನಾಗಿರುವಾಗಲೇ ೧
ಹರಿಯ ವ್ಯಾಪ್ತಿಯ ಕಂಡು ನೀ | ಗಿರಿ ಗುಹೇಯಲಿ ಚರಿಸುತಾತೊರೆದು ಮಮತೆಯ ಚರಿಸಿದೇ | ಕರೆಕರೆಯ ಸಂಸಾರದೀ ೨
ತಪವನಾಚರಿಸುತ್ತಲೀ | ವಿಪಿನವಸಿ ಸಂಚರಿಸುತಾವಿಪವರಸ ಪೆಗಲೇರಿದವನ್ನ | ಅಪರೋಕ್ಷದಿ ಕಾಣುತಾ ೩
ನಡುನಡುವೆ ಮನೆಗೈದುತಾ | ಮಡದಿಯನೆ ತಕ್ಕೈಸುತಾ ಎಡ ಬಲದ ಒಡನಾಡಿ ಜನ ಕಡು | ಮೋಹಬಡುವಂತಾಡುತಾ ೪
ಇಭಗಿರೀ ರಥೋತ್ಸವಕ್ಕೇ | ಪ್ರಭು ಮುದ್ದು ಮೋಹನ ದಾಸರುವಿಭವದಿಂದಲಿ ಬಂದು ನಿಮಗೆ | ಶುಭದ ಅಂಕಿತವಿತ್ತರು ೫
ಶಾಂತ ಚಿತ್ತದಿ ಜಪಿಸುತಾ | ಮಂತ್ರ ಸಿದ್ಧಿಯ ಪಡೆಯುತಾ ಭ್ರಾಂತ ಜನರನು ಭಕ್ತಿ ಪಂಥದಿ | ನಿಂತು ನಲಿವಂತೆ ಮಾಡುತಾ೬
ಸಾಹಸ್ರಾರಂಕಿತವನಿತ್ತೂ | ಮಾಹಿತಾಂಘ್ರಿಯ ಭಜಿಸಿದಾ ಸಾಹಸಿಗ ಶೇಷಾಂಶ ಭಕ್ತರ | ಮೋಹ ಕಳೆದುದ್ಧರಿಸಿದಾ ೭
ನಕ್ರಹರಗತಿ ಪ್ರೀತನಾ | ವಿಕ್ರಮದಿ ಸಂಸ್ಥಾಪಿಸೀಚಕ್ರಿಪುರಿಗಾ ರಾಮನವಮಿಲಿ | ವಿಕ್ರಮದಿ ನೀ ಹೊರಡುತಾ ೮
ಗರುಡ ಅಹಿ ಭವ ವಂದ್ಯನಾ | ಗುರುಗೋವಿಂದ ವಿಠಲನನಿರುತ ಭಜಿಸುವ ಜ್ಞಾನವಾ | ಕರುಣಿಸೀ ಸಲಹೆನ್ನನು ೯

೪೮೨
ತಂದೆ ಮುದ್ದು ಮೋಹನ್ನ | ನೀ ಕಾಯಬೇಕೆನ್ನವಂದಿಸಿ ಬೇಡುವೆ | ಭಕ್ತ ಪಾವನ್ನ | ಜೋ ಜೋ ಪ
ಕರಿಗಿರಿ ಕ್ಷೇತ್ರದಲಿ | ನೀ ಈಗ ನೆಲಿಸೀಗುರವಾರ ಪಂಚಮೀ | ಮಾರುತಿಯ ನಿಲಿಸೀ | ಜೋ ಜೋ೧
ಭೂಸುರರ ಉದ್ಧಾರ | ಗೈಯ್ಯ ಬೇಕೆಂದೂದಾಸ ಭಾವವ ತೋರಿ | ನೀಮೆರೆದೆ ಜಗದೀ | ಜೋ ಜೋ ೨
ಸೂಸಿ ಬಹ ದಾಸರಿಗೆ | ಅಂಕಿತಗಳಿತ್ತೂದಾಸ ಪಂಥವ ತೋರ್ದಿ | ಸಜ್ಜನರಿಗೆಲ್ಲಾ | ಜೋ ಜೋ ೩
ಏಸು ಜನುಮದ ಪುಣ್ಯ | ರಾಶಿ ಒದಗಿತೊ ಎನಗೇಕ್ಲೇಶನಾಶನ ಗುರು | ಪಾದವಾ ಶ್ರೈಸಿದೇ | ಜೋ ಜೋ ೪
ಕಂದರ್ಪ ಜನಕ ಗುರು | ಗೋವಿಂದ ವಿಠ್ಠಲನೇತಂದೆ ಮುದ್ದು ಮೋಹನ್ನ | ವಿಠ್ಠಲನೆ ಎಂದೂ ಜೋ ಜೋ ೫

೪೮೧
ತಂದೆ ಮುದ್ದು ಮೋಹನ್ನಾ ನಿನ್ನಯದ್ವಂದ್ವ ಪಾದವ ತೋರಣ್ಣಾ ಪ
ಕಂದನ ಕುಂದನು ಒಂದನು ಎಣಿಸದೆಬಂದು ನಿಲ್ಲೊ ಮನ ಮಂದಿರದೊಳು ನೀ ಅ.ಪ.
ವಾಕು ಮನ್ನಿಸಿ ಕೇಳೋ ಪರಾಕು ಪೇಳುವೆ ಓಹೋ |ಸಾಕು ಮಾಡು ಈ ಭವದ ಸಂಗವನು |ಸ್ವೀಕರಿಸೆನ್ನ ಕೃಪಾಕರ ಮೂರುತಿ ೧
ಆಸುರಿ ಮಾನಿಗಳೂ ಬಲು ಘಾಸಿಸುವರು ಕೇಳೊ | ವಾಸವ ಗುರವೇ ಪೋಷಿಸು ಎನ್ನನು ಮೀಸಲೆನಿಸಿ ಮನ ಶ್ರೀ ಶನ ಪದದಲಿ ೨
ಉರುಗಾದ್ರಿ ವಾಸನ್ನ ತದಾತ್ಮಕಗುರುಗೋವಿಂದ ವಿಠಲನ್ನ |ಚಾರು ಪದವ ತೋರೊ ಹೃತ್ಸರಸಿಜದಲಿಸಾರಿದುದಕೆ ತವ ಚಾರು ಚರಣವನು ೩

೩೦೧
ತಂದೆಯಿಂದಲಿ ತಾಯಿ ಗರ್ಭಕೆ ನೂಕಿದ್ವಂದ್ವ ಜನ್ಮಕೆ ಕರ್ತ ಇಂದ್ರ ರಕ್ಷಿಪುದೆಂದೋ ಜನ್ಮದಿಂದ |ಇಂದ್ರಾದಿ ಪ್ರಾವರ್ತಕನಿಂದು ಪ್ರಲಯಾದಲ್ಲಿನಂದಕರ ಮುಕ್ತರಿಗೆ ಮಂದಿರವು ಸಿತ ದ್ವೀಪ ಗುರು ಗೋ-ವಿಂದ ವಿಠಲಾತ್ಮಕ ಸಂಕ್ಷೇಪ್ರ‍ತ ಶರಣು ||ಹರಣ ಹೋಗದ ಮುನ್ನ | ಹರಿ ನಿನ್ನ ಹಂಬಲನ್ನಕರುಣಿಸಿ ಕಾವುದೆನ್ನ | ಕರುಣಾನಿಧಿಯೆ ಘನ್ನಸ್ವರ್ಣ ಗರ್ಭನನಯ್ಯ | ಅರ್ಣ ಸಂಪ್ರತಿಪಾದ್ಯಕರ್ಣರಹಿತ ಶಯ್ಯ | ವರ್ಣಿಸೆ ನಿನ್ನನಯ್ಯಮರುತನ ಮತದಲ್ಲಿ | ಕರೆ ತಂದು ಎನ್ನನುತರತಮ ಜ್ಞಾನವನ್ನ | ಅರುಹುವುದೊಳಿತಲ್ಲೆಹರಿಯೆ ಸರ್ವೋತ್ತಮ | ಮರುತ ಜೀವೋತ್ತಮಹರ ವೈಷ್ಣವೋತ್ತಮ | ವರ ಜ್ಞಾನ ಪಾಲಿಸಿಪನ್ನಗಾಚಲವಾಸ ಪ್ರ | ಸನ್ನ ರಘನಾಶಘನ್ನ ಗುರು ಗೋವಿಂದ ವಿಠಲಾ ಗೋ ಪ್ರಸನ್ನ ||

೬೨
ತನು ತೇರನಾಶ್ರಯಿಸುತ್ತ ನೀನುಮಾನಿಗಳಿಗಾಜ್ಞೆ | ಮಾಡಿ ನಡೆಸುತಾ ಪ
ಗುಣವೆ ವಾಕು ಮಾನಿ | ರೋಹಿಣೀ ಶಕಾಂಕಕರ್ಣದೋಳು ತಾವು | ಪಾಶಪಾಣಿಯಾಗಿ ಅ.ಪ.
ಅಶ್ವರೂಪರಾಗಿ | ಸೂರ್ಯ ಸಂಜ್ಞೆದೇವಿಅಶ್ವಿನೇಯ ಸಮ | ಗಣಪತಾತ ಸೂತಅಶ್ವಮೊಗನು ತಾ | ಪ್ರಾಣ ನಾಮಕಾಅಶ್ವ ಐದು ಎರಡ | ಚೋದಿಸೂವ ಹರಿಯೇ ೧
ಕರ್ಮಾಅನಾದಿಗನು | ಗುಣ್ಯವಾಗಿ ನೀನುಕಾರ್ಮಿಕನು ಆಗಿ | ಜೀವ ಋಣವನೂಧರ್ಮ ಮಾರ್ಗದಿಂದ | ತಿದ್ದಿ ಭೋಗವಿತ್ತುನಿರ್ಮಲನ್ನ ಗೈದು | ಪೇರ್ಮೆಯಿಂದ ಪೊರೆವೆ ೨
ಜೀವರೂಪನಾಗಿ | ಜೀವ ಕರ್ಮ ಮಾಡಿಶಾತ್ವೀಕರ ಸಹ | ಜೀವನಿಂದಲೂದೇವಗೈಸಿ ಗುರು | ಗೋವಿಂದ ವಿಠಲಶಾಶ್ವತದ ಸುಖ | ವೀವ ಕಾರುಣೀಕ ೩

೬೩
ತನು ಸದನದಿ ಪೀಠವಯ್ಯ | ಭಾನು ಕುಲೋದ್ಧೀಪಕ ಪ
ಅನಿಲನೆ ಜೀವನಾ ಮಹಾ | ಮಂಚನವು ರಮಾ ಶಯ್ಯಕೆ ಬಾ ಅ.ಪ.
ಸುರ ಪರಿವೃತನಾಗಿ ಹರಿಯೆ | ಸಾರಾಮೃತ ತವ ಸುನಾಮ ಶರಣರೀಗೆ ಉಣಿಸುತ ದಯಾ | ಪರಿಪೂರ್ಣ ಪೊರೆವುದು ||ನಿರತಿಶಯಾನಂದ ಮೂರ್ತಿ | ಕರವ ಪಡಿದೂರ್ಮಿಗಳೆರಡು ಮೂರನು ಪರಿಹರಿಸು ಹರಿಯೆ | ವರ ರಮಾರ್ಚಿತ ಪಾದ ೧
ಮಧು ವಿರೋಧಿ ವೇದಾಂತ | ವೇದ್ಯ ಸುಧಾ ಕಲಶ ಪಾಣಿವಿಧಿ ಭವಾದಿ ವಂದ್ಯ ಚರಣ | ಅದುಭುತ ಚರ್ಯ ಹರಿಯೆಪದದಿ ಸುರನದಿಯ ಪಡೆದವ | ನದಿಸುತ ಗೊಲಿದ ಮಹಿಮಯದುಕುಲೋತ್ತಮ ಶ್ರೀ ಕೃಷ್ಣನೇ ಹದುಳದಲಿ ಪೊರೆ ಬಾ ೨
ತರಳ ದ್ರೌಪದಿಗೊಲಿದವನೆ | ಶೌರೀ ವರ ಅಹಲ್ಯಾ ವರದಗುರು ಮಡದಿ ತಾರಾವರದ | ಶರಣರ್ಗೆ ಸುರಧೇನು ||ಪರಮ ಪಾತಕಿಯಾದವರ | ಪೊರೆದ ಮಹಾದಯವಂತ ಪರಿಸರಾಂತರ್ಗತನೆ ಪೊರೆಯೊ | ಗುರು ಗೋವಿಂದ ವಿಠಲ ೩

೬೪
ತಮ್ಮಾ ನೀ ನೋಡಿದ್ಯಾ | ಒಮ್ಮನದಿಂದಬೊಮ್ಮ ಮೂರುತಿ ಶ್ರೀ | ವಲ್ಲಭ ರಂಗನಾ ಪ
ಹಿಂಡು ದೈವರ ಗಂಡ | ಚಂಡ ವಿಕ್ರಮ ನಮ್ಮಕೊಂಡಜ್ಜಿ ಬಳಿಲಿರುವ | ಪುಂಡರೀಕಾಕ್ಷನ ೧
ನೂಪುರ ಗೆಜ್ಜೆಪೆಂಡ್ಯ | ಆಪಾದ ಸೊಬಗಿಂದಶ್ರೀಪತಿ ಮೆರೆಯುವ | ಭೂಪತಿ ವರದನ ೨
ಇಕ್ಷು ಚಾಪನ ಪಿತನ | ಅಕ್ಷಯ ಫಲದವನವಕ್ಷದೋಳ್ ಧರಿಸೀಹ | ಲಕ್ಷ್ಮೀ ಉಳ್ಳವನ ೩
ಕೊರಳಲ್ಲಿ ಕೌಸ್ತುಭ | ಕರ್ಣದಿ ಕುಂಡಲಶಿರದಲ್ಲಿ ಕಿರೀಟ | ಧರಿಸಿ ಮೆರೆವವನ೪
ಪವನಾಂತರಂಗನ | ಪಾವನ ಚರಿತನಭುವನ ಮೋಹನ ಗುರು | ಗೋವಿಂದ ವಿಠಲನ ೫

೨೮೩
ಶ್ರೀ ತುಳಸಿ ದೇವಿ
ತಾಯಿ ಶ್ರೀ ತುಳಸೀಯೆ | ಕಾಯೆ ಭಕ್ತರ ಪ್ರೀಯೆಕಾಯೆ ಶ್ರೀಹರಿ ಜಾಯೆ | ತಾಯೆ ವರವ ನೀಯೇ ಪ
ತಾಯೆ ಶ್ರೀ ಹರಿ ಪಾದ | ತೋಯಜ ಕಾಂಬುವದಾಯವಿತ್ತೆನ್ನ ನೀ | ಪ್ರೀಯದಿಂದಲಿ ಕಾಯೇ ಅ.ಪ.
ಶರಧಿಮಥನದೊಳಂದು | ಧರಿಸಿ ಅಮೃತ ಕಲಶಹರಿಯು ಉದುಭವಿಸಲು | ವರ ಧನ್ವಂತ್ರೀಯೂ ||ಹರುಷೋದ್ರೇಕದಿ ನಯನ | ವರಬಿಂದು ಉದುರಲುಶಿರಿ ತುಳಸಿ ಎನಿಸೀದೆ | ಶರಣರ್ಗೆ ಗತಿ ಕೊಡುವ ೧
ಶ್ರೀ ಲೋಲನಾಜ್ಞದಿ | ಮೂಲದಾಶ್ರಯದಲ್ಲಿಭಾಳ ತೀರ್ಥಗಳು ಸಂ | ಮೇಳವಿಸಿಹವೂಮೇಲೆ ಮಧ್ಯದಿ ನದಿ | ಜಾಲ ಮತ್ತಮರರುಆಲಯ ಗೈದ್ಹರಿ | ಓಲಗ ಗೈವರು ೨
ದಳ ದಳ ದಳದೊಳು | ಕಲುಷ ದೂರನು ದಯದಿನೆಲಸಿ ಸೇವಿಪ ಸುಜನ | ಮಲಗಳ ಕಳೆದೂ |ಆಲವ ಭೋದರೆ ಶಾಸ್ತ್ರ | ವಲಿಸಿ ಕೀರ್ತಿಪ ನರಗೆನೆಲೆಯ ಕಾಣಿಪ ತನ್ನ | ಚೆಲುವ ವೈಕುಂಠದಿ ೩
ಕರುಣಿಸು ಹರಿಪಾದ | ವರ ಪದ್ಮ ದ್ವಯದಲ್ಲಿನಿರುತ ಭಕುತಿಯನ್ನೆ | ವರಗುಣ ಸಂಪನ್ನೆ |ಕರವೀರ ಪುರದರಿಸಿ | ವರ ಸನ್ನಿಧಾನಕ್ಕೆನಿರುತದಿ ಸತ್ಪಾತ್ರೆ | ಪರಮ ಪಾವನ ಗಾತ್ರೆ ೪
ಹಂಬಲೊಂದೆನಗುಂಟು | ಜಾಂಬುವತಿಯೆ ತುಳಸಿಇಂಬಿಟ್ಟು ಸಲಹುವೆ | ನೆಂಬ ಮತಿಯು ಇರೇ |ಬಿಂಬನು ಗುರು ಗೋ | ವಿಂದ ವಿಠಲ ಪಾದಅಂಬುಜದ್ವಯ ತೋರಿ | ಸಂಭ್ರಮದಲ್ಲಿ ಇರಿಸೆ ೫

೧೭೩
ತಾಯೆ ಲಕ್ಷುಮಿ ದೇವಿಯೇ | ನೀನೇ ಗತಿತಾಯೆ ಲಕ್ಷುಮಿ ದೇವಿಯೇ ಪ
ಕಾಯ ಮಮತೆಯ ಕಳೆದು ಬೇಗನೆ | ತೋಯಜಾಕ್ಷನ ತೋರಿ ಪೊರೆಯುವದಾಯ ನಿನ್ನದು ತಾಯೆ ಶ್ರೀಹರಿ | ಪ್ರೀಯೆ ನಿನ್ನನು ನಮಿಸಿ ಬೇಡುವೆ ಅ.ಪ.
ಗೋಪಿ ನಂದನೆ ಹೇ ದುರ್ಗೇ | ಕಠೋರೆ ಉಗ್ರೆತಾಪತ್ರಯಗಳ ವಿನಾಶೇ | ಮೋಕ್ಷ ಪ್ರದಾತೇ ||ಶ್ರೀಪತಿಯ ಪಾದಾಬ್ಜ ಮಧುಪೆ | ಪಾಪಹರ ತವ ಪತಿಯ ನಾಮವಪ್ರಾಪಿಸುತ ದಿನದಿನದಿ ಯನ್ನನು | ಕೈ ಪಿಡಿದು ಕಾಪಾಡು ದೇವಿ ೧
ಸರಸಿಜ ಭವ ವಂದಿತೇ | ತ್ರಿಜಗನ್ಮಾತೆಹರಿಗೆ ಸಮಾಸಮವ್ಯಾಪ್ತೆ | ಹರಿಯಂಕ ಸಂಸ್ಥೇ ||ಅರಿದರಾಂಕುಶ ಪರಶು ಶಕ್ತಿ | ಧರಿಸಿ ಮೆರೆಯುವ ಹರಿಯ ರಾಣಿಯೆವಾರೆ ನೋಟದಿ ಬ್ರಹ್ಮ ಭವರಿಗೆ | ವರ ಸುಪದವಿಗಳಿತ್ತು ಪೊರೆವಳೆ ೨
ಮಾರ ಜನನಿ ಸುಂದರೀ | ಎನ್ನನು ಪೊರೆವಭಾರ ನಿನ್ನದು ಅಸುರಾರೀ | ಕೇಳಮ್ಮ ದೇವೀ ||ಕ್ರೂರ ದೈತ್ಯರ ಬಾಧೆ ಹರಿಸಿ | ಘೋರ ಭವ ದುರಿತಾಬ್ದಿ ದಾಟಿಸಿಧೀರ ಗುರು ಗೋವಿಂದ ವಿಠಲನ | ಚಾರು ಚರಣವ ತೋರು ಎನಗೆ ೩

೬೫
ತಾರಕ – ಹರಿ – ಪೊರೆಯೋ | ಹೇ ನರಹರಿತಾರಕ – ಹರಿ – ಪೊರೆಯೋ ||ಅ||
ಸಾರಾಸಾರವ ಕಾಣೆನೊ ನರಸಿಂಗಸಾರಿದೆ ತವ ಪದ ಸರಸಿಜ ರಂಗ ಅ.ಪ.
ಆರಿಗ್ಯಾರೆಲೊ ದೇವ | ಭಾರ ಕರ್ತೃವೆ ಹರಿ ಭರಿಸುವೆ ಸಕಲರ | ಭರ್ತೃವೆಂದೆನಿಸೀಹರಣ ಬಾಂಧವರನ | ಪೊರೆವೆನೆಂಬ ಹಮ್ಮತಿಯಹರಿಸಿ ಎನ್ನಯ ದುಷ್ಟ | ಕಾರಕ ಭ್ರಮ ಬಿಡಿಸೊ ೧
ಇತ್ತು ಇಂದ್ರಿಯಗಳ | ತತ್ವರ ಜೋಡಿಸಿಹೊತ್ತು ಹೊತ್ತಿಗೆ ತುತ್ತು | ಇತ್ತು ರಕ್ಷಿಸುತಿರೇ |ಮತ್ತೆ ಮದಿಂದ್ರಿಯವೇ | ಕರ್ತೃ ಎಂತೆಂದೊಂಬಮತಿ ಭ್ರಮ ಬಿಡಿಸುತ್ತ | ಹರಿಸೊ ಕ್ರಿಯಾ ಭ್ರಮ ೨
ಕಾಯ ಬಂಧುಗಳೆಲ್ಲ | ಪ್ರೀಯರೆನಿಸಿಗೊಂಬದ್ರವ್ಯ ವಿಭ್ರಮ ಬಿಡಿಸೋ | ಕಾಯಜ ಪಿತನೇದಿವ್ಯ ಮೂರುತಿ ಗುರು | ಗೋವಿಂದ ವಿಠಲನೇಭವ್ಯ ರೂಪವ ತೋರಿ | ದರ್ವಿ ಜೀವನ ಕಾಯೊ ೩

೬೬
ತಾಸು ಬಾರಿಸುತಿದೆ ಕೇಳೋ ಮನುಜತಾಸು ಬಾರಿಸುತಿದೆ ಕೇಳೋ ಪ
ಮೋಸ ಹೋಗಲು ಬೇಡ | ಆಶಪಾಶಕೆ ಶಿಲ್ಕಿವಾಸುದೇವನ ಮನ | ಒಲಿಸುವುದೆಂದೂ ಅ.ಪ.
ಶ್ರೀ ತರುಣೇಶನ ಜಗಕೇಕನೆನಿಪನಮಾತು ಮಾತಿಗೆ ನೆನೆ ಮನುಜಾ |ಗಾತುರಗೋಸುಗ ಆತುರ ಪಡದಲೆಪ್ರೀತಿ ಬಿಡಿಸೊ ಸಂಕೀರ್ತಿಸಿ ಎಂದು ೧
ಕಾಲಾಖ್ಯ ಮಹ ವ್ಯಾಳನು ಕಾದಿಹನೂಹಾಳು ಹರಟೆಲಿ ಕಾಲ ಕಳೆಯ ಬೇಡ ||ವ್ಯಾಳ ಶಯ್ಯ ಶ್ರೀ ವೆಂಕಟ ನಿಲಯನ |ವ್ಯಾಳೆ ವ್ಯಾಳೆಕೆ ನೆನೆ ಅಲಸದಲೆಂದು ೨
ಹೆಣ್ಣು ಹೊನ್ನು ಮಣ್ಣುಗಳ ನೆಚ್ಚಿಬನ್ನ ಬಹಳವ ಪಡವಿಯೊ ಮನುಜಮುನ್ನವೆ ಯೋಚಿಸಿ ಎಚ್ಚರದಲ್ಲಿ |ಪನ್ನಗಶಯ್ಯನ ನೆನೆವುದೆಂದೂ ೩
ನಂದತೀರ್ಥಮತ ಸಿಂಧುವಿನೋಳ್ ನಲಿಯೊಎಂದೆಂದಿಗು ಭವ ಸಿಂಧುವ ಕಳೆಯೋನಂದವನೀಯುವ ಇಂದಿರೆಯರಸನಚಂದದ ಚರಣಾರವಿಂದತುತಿಪುದೆಂದು ೪
ತನುವು ಅಸ್ಥಿರ ಮನವು ಚಂಚಲವೊಧನವೂ ಸಾಧನಗಳು ಬಲು ದುಷ್ಟಾ |ಘನ ಮಹಿಮನು ಗುರು ಗೋವಿಂದ ವಿಠಲನದಿನ ದಿನ ನೆನೆದು ಸುಖಿಸುವುದೆಂದೂ೫

೫೫೭
ತಿರುಮಲೇಶ ಹರಿ ವಿಠ್ಠಲ | ಪೊರೆಯ ಬೇಕಿವನಾ ಪ
ಕರುಣಾಳು ನೀನೆಂದು | ಪ್ರಾರ್ಥಿಸುವೆ ಹರಿಯೇಅ.ಪ.
ತರಳನಿವ ಸಾಧನದ | ಸತ್ಪಥವ ಸಾಧಿಸಲುಹರಿದಾಸ ದೀಕ್ಷೆಯನು | ಕಾಂಕ್ಷಿಸುವ ಹರಿಯೇ |ಸರ್ವಬಗೆಯಲಿ ಇದಕೆ | ಪರಿಪರಿಯ ವಿಘ್ನಗಳಪರಿಹರಿಸಿ ಪೊರೆ ಇವನಾ | ಸರ್ವಾಂತರಾತ್ಮಾ ೧
ಮರುತಮತ ದೀಕ್ಷೆಯಲಿ | ಇರುವಂತೆ ಕರುಣಿಸುತಪರತತ್ವ ಸಾರವನೆ | ಅರುಹುತಲಿ ಪೊರೆಯೋ |ವರಪಂಚ ಭೇಧಗಳ | ತರತರಾತ್ಮಕದರಿವುನೆರವಾಗಲಿವನೀಗೆ | ಗುರುದಯದಿ ಹರಿಯೇ ೨
ಕಾಕುಸಂಗವ ಕೊಡದೆ | ಸತ್ಸಂಗ ಪ್ರಾಪಿಸುತಲೌಕಿಕೋನ್ನತಿ ಕೊಟ್ಟು | ನೀಕಾಯೊ ಹರಿಯೇ |ಪ್ರಾಕ್ಕು ಕರ್ಮವ ಕಳೆದು | ಬೇಕಾದ ವರಗಳನುನೀ ಕೊಟ್ಟು ಕಾಯೊ ಹರಿ | ಸಾಕಾರ ಮೂರ್ತೇ ೩
ಗುರು ಹಿರಿಯ ಸೇವೆಯಲಿ | ಪರಮರತಿಯನೆ ಕೊಟ್ಟುಹರಿಗುರು ಚರಿತೆಗಳ | ಬರೆವ ಕೌಶಲವಾ |ಕರುಣಿಸೀ ಸತ್ಪಥದ | ಚರಿಪಂತೆಯ್ಯುಪ್ಪುದುಮರುತಾಂತರಾತ್ಮಕನೆ | ಉರುಗಾದ್ರಿ ನಿಲಯಾ ೪
ಸರ್ವೇಶ ಸರ್ವಜ್ಞ | ಸರ್ವವ್ಯಾಪ್ತನೆ ಸ್ವಾಮಿನಿರ್ವಿಕಾರನೆ ದೇವಾ | ಶರ್ವಾದಿ ವಂದ್ಯಾ |ದರ್ವಿಜೀವಿಯ ಪೊರೆಯೆ | ಪ್ರಾರ್ಥಿಸುವೆ ಶ್ರೀಹರಿಯೇಸರ್ವ ಸುಂದರ ಗುರೂ ಗೋವಿಂದ ವಿಠಲಾ ೫

೫೫೬
ತಿರುಮಲೇಶವಿಠಲಾ | ಪೊರೆಯ ಬೇಕಿವಳಾ ಪ
ನಿರುತ ನಿನ್ನಯ ನಾಮ | ಸ್ಮರಣೆ ಸುಖ ಕೊಡುತಾ ಅ.ಪ.
ಸ್ವಪ್ನದಲಿ ತವರೂಪ | ಕನ್ಯೆತಾ ಕಾಣುತ್ತಾಉನ್ನಂತ ಹರ್ಷದಲಿ | ಭಿನ್ನವಿಸಿ ಇಹಳೋ |ಪನ್ನಗಾರಿಧ್ವಜನೆ | ಮನ್ನಿಸುತ ಮನ್ಮಾತಕನ್ಯೆಗಭಯದನಾಗಿ | ನನ್ನೆಯಿಂ ಸಲಹೋ ೧
ಆದಿಮದ್ಯದಿ ಶೂನ್ಯ | ಭೋಧಾತ್ಮ ಶ್ರೀ ಹರಿಯೆಭೇದಪಂಚಕ ವರುಹಿ | ಮಧ್ವಮತ ದೀಕ್ಷಾ |ಸಾಧಿಸುವುದಿವಳಲ್ಲಿ | ಹೇದಯಾಂಬುದೆ ಪೂರ್ಣಭೋದಮುನಿಯ ಸನ್ನುತನೆ | ವೇದಾಂತ ವೇದ್ಯಾ ೨
ಭೌತಿಕದ ಸುಖಃದುಃಖ | ವ್ರಾತ ಸಮತೆಲಿಯುಂಬಭೂತಿಕರುಣಿಸು ಹರಿಯೆ | ವಾತಾಂತರಾತ್ಮಾ |ಧಾತಾಂಡ ಸೃಜಿಸಿ ಹರಿ | ಓತ ಪ್ರೋತನು ಇರಲುಮಾತನೊಪ್ಪಿಸೆ ನಿನಗೆ | ಏತರವ ನಾನೂ ೩
ಹರಿಗುರೂ ಸದ್ಭಕ್ತಿ | ಹಿರಿಯರಾ ಸತ್ಸೇವೆಕರುಣಿಸುತ ಸಾಧನದ | ವರಮಾರ್ಗ ತೋರೋ |ಶರಣಜನ ವಾತ್ಸಲ್ಯ | ಬಿರಿದು ಪೊತ್ತಾಮೇಲೆಕರುಣಾಬ್ಧಿಪೂರ್ಣೆಂದು | ಕರಪಿಡಿಯೊ ಇವಳಾ ೪
ಸಾಮಗಾನವಿಲೋಲ | ಭಾಮೆರುಕ್ಷ್ಮಿಣಿಲೋಲಸಾಮಾಜಾವರವರದ | ಭೂಮಗುಣಪೂರ್ಣ |ಕಾಮಾರಿಸನ್ನುತನೆ | ಕಾಮಿತಪ್ರದನಾಗೊಕಾಮನಯ್ಯನೆ ಗುರು | ಗೋವಿಂದ ವಿಠಲಾ ೫

೩೨೧
ಶ್ರೀ ಹರಿಹರೇಶ್ವರನ ಸ್ತೋತ್ರ
ತುಂಗಭದ್ರೆ ಸುತರಂಗಿಣಿ ತೀರಗನ್ಯಾರೇ ಪೇಳಮ್ಮಯ್ಯ ಪ
ಮಂಗಳ ಮಹಿಮ ಶುಭಾಂಗ ಮೂರುತಿ | ಶ್ರೀ ಹರಿಹರ ಇವ ಕಾಣಮ್ಮ ಅ.ಪ.
ಬಹು ಕಂಟಕಿ ಆ ಗುಹನ ತಪಸಿಗೆ | ಮೆಚ್ಚಿದ ಹರ ನೋಡಮ್ಮಮ್ಮ |ಅಹಿ ಭೂಷಣ ತಾ ವರವನು ಕೊಟ್ಟನು | ಬಹು ಬೇಗನೆ ನೋಡಮ್ಮಮ್ಮ|ವಿಹಗವಾಹ ಹರಿ ಮತ್ತೆ ರುದ್ರನಿಂ | ಇವನ ಜೇಯ ನೋಡಮ್ಮಮ್ಮ |ಮಹಿಯೊಳು ಸುರರಾಹವ ಕೆಡಸುತ | ಬಹು ಹಿಂಸಕ ನೋಡಮ್ಮಮ್ಮ ೧
ಸುರಲೋಕಕು ಈ ಅಸುರನ ಬಾಧೆಯು | ತಟ್ಟಿತು ನೋಡಮ್ಮಮ್ಮ |ಸುರ ಭೂಸುರರೆಲ್ಲರು ಮೊರೆಯಿಟ್ಟರು | ಹರಿಯಲಿ ನೋಡಮ್ಮಮ್ಮ |ಸಿರಿಯರಸನು ತಾನಭಯವನಿತ್ತವರನು | ಕಳುಹಿದ ನೋಡಮ್ಮಮ್ಮ | ಕರುಣಾಕರ ತಾ ಹರಿಹರ ರೂಪದಿ | ದುರುಳನ ತರೆದ ನೋಡಮ್ಮಮ್ಮ ೨
ಕೃತ್ತಿವಾಸ ತಾ ನಿತ್ತ ವರವ ಹರಿ | ಪಾಲಿಸಿದನು ನೋಡಮ್ಮಮ್ಮ | ದಿತಿಸುತನಾಯುವು ದಶಶತಕಳೆಯಲು | ವತ್ತಿದ ಕೆಳಗವನಮ್ಮಮ್ಮ |ಹಿತದಿಂದಲಿ ತಾ ಭಕುತರ ಪೊರೆಯುವ | ಹರಿಹರನ ನೋಡಮ್ಮಮ್ಮ | ದೈತ್ಯನ ಪೆಸರಿಲಿ ಪಾವನವಾಯಿತು | ಈ ಕ್ಷೇತ್ರವು ಕಾಣಮ್ಮಮ್ಮ ೩
ದಕ್ಷಿಣ ಪಾಶ್ರ್ವದಿ ಅಭಯ ಹಸ್ತ | ತ್ರಿಶೂಲ ಧರನ ನೋಡಮ್ಮಮ್ಮ | ಅಕ್ಷಿಯ ಮಾನಿಯು ದಕ್ಷಿಣ ಶಿರದಲಿ | ಮೆರೆಯುವನು ನೋಡಮ್ಮಮ್ಮ | ದಕ್ಷಸುತೆಯು ತಾ ವಿರೂಪಾಕ್ಷನ | ಸೇವಿಪಳೂ ನೋಡಮ್ಮಮ್ಮ |ಪಕ್ಷಿವಾಹಗೆ ತಾನರ ಮೈಯ್ಯಾದನು | ತ್ರ್ಯಕ್ಷನು ಕಾಣಮ್ಮಮ್ಮ ೪
ವಾಮಾಂಕದಿ ನಿಂದಿಹ ಚಕ್ರ ಕಂಬು | ಧರನಾ ನೋಡಮ್ಮಮ್ಮ ಲಕ್ಷ್ಮೀವನಿತೆಯು ಕಾಮನ ಜನಕನ | ಸೇವಿಪಳೂ ನೋಡಮ್ಮಮ್ಮ ಶುಮಲಾಂಗ ವನಮಾಲೆಗಳನು | ಧರಿಸಿಹ ನೋಡಮ್ಮಮ್ಮ |ಸಾಮಸನ್ಮುತ ಗುಣಧಾಮನ ಲೀಲೆ | ಇದೆಲ್ಲವು ಕಾಣಮ್ಮಮ್ಮ ೫
ಕ್ರೋಶ ಪಂಚ ನಾಲ್ಕಾರದಿ ಮೀಸಲು | ಸುಕ್ಷೇತ್ರವ ನೋಡಮ್ಮಮ್ಮ | ಭಾಸಿಸುವವು ಇಲ್ಲೆಕಾದಶ ವರ | ತೀರ್ಥಂಗಳು ನೋಡಮ್ಮಮ್ಮ | ಈ ಸುಕ್ಷೇತ್ರವು ಆ ಮಹಕಾಶಿಗೆ | ಸಮವೆನಿಸಿದೆ ನೋಡಮ್ಮಮ್ಮ |ಅಸಮ ಮಹಿಮ ಹರಿ ಅಸುರಗೆ ಕೊಟ್ಟನು | ಈ ಪರಿವರ ಕಾಣಮ್ಮಮ |೬|
ಆದುದೀ ಕೃತಿ ಮಹ ಕೃತ ಯುಗದೊಳು | ಕೇಳಮ್ಮಮ್ಮ |ಬಾದರಾಯಣರುಸಿರಿದ ಸ್ಕಾಂದ | ಪುರಾಣವ ನೋಡಮ್ಮಮ್ಮ | ಶ್ರೀದ ಮಿತ್ರನಿಗೂ ವಿಧಿ ಜನಕನಿಗೂ | ಭೇದವೆ ಸರಿ ಕೇಳಮ್ಮಮ್ಮ ಮೋದಮಯ ಗುರು ಗೋವಿಂದ ವಿಠಲನ | ಲೀಲೆಗಳಿವು ಕಾಣಮ್ಮಮ್ಮ ೭

೫೫೮
ತುಲಸಿ ವಂದಿತ ವಿಠಲ | ಕಾಪಾಡೊ ಇವಳಾ ಪ
ಕಲುಷ ಸಂಹಾರಕನೆ | ಶ್ರೀ ಕೃಷ್ಣಮೂರ್ತೇ ಅ.ಪ.
ಸಾಂಶಯಿಕ ಮತಿ ಕಳೆದು | ಕಂಸಾರಿ ತವಪಾದಪಾಂಸುವನೆ ಭಜಿಪಂಥ | ಮಾರ್ಗದಲ್ಲಿರಿಸೀಹಂಸ ವಾಹನನಾದಿ | ಮುಕ್ತಿ ಯೋಗ್ಯರ ವರ್ಗಶಂಸನವು ತರ ತಮದಿ | ಮಾಡಿಸೋ ಹರಿಯೇ ೧
ಹರಿನಾಮ ಕವಚವನು | ತರುಣಿ ಮಣಿಗಳವಡಿಸಿಪರಿ ಹರಿಸೋ ಭವ ತಾಪ | ಕಾರುಣ್ಯ ಮೂರ್ತೇಹರಿ ಗುರೂ ಸದ್ಭಕ್ತಿ | ವೈರಾಗ್ಯವಿಷಯದಲಿಕರುಣಿಸುತ ಪೊರೆ ಇವಳ | ಕರಿವರದ ಕೃಷ್ಣಾ ೨
ಪತಿಸೇವೆ ಪ್ರಾಮುಖ್ಯ | ಮತಿಯನಿತ್ತಿವಳೀಗೆಹಿತದಿಂದ ಸಲಹೆಂದು | ಭಿನ್ನವಿಪೆ ಹರಿಯೇಹಿತ ವಹಿತ ವೆರಡರಲಿ | ವ್ಯಾಪ್ತ ಶ್ರೀ ಹರಿಯೆಂಬಮತಿಯ ಕರುಣಿಸು ಗುರೂ | ಗೋವಿಂದ ವಿಠಲ ೩

೨೮೪
ತುಳಸಿ ದೇವಿ ನಮಿಸಿ ಬೇಡುವೇ | ನಿಮ್ಮ ಪಾದಒಲುಮೆಯಿಂದ ಭಜಿಸಿ ಪಾಡುವೇ ಪ
ಅಲವ ಬೋಧರ ಹೃದಯ ವಾಸ | ಸುಲಭ ನಮ್ಮ ಹರಿಯ ರೂಪಫಲಿಸಿ ಎನ್ನ ಹೃದಯದಲ್ಲಿ | ಗೆಲಿಸು ಎನ್ನ ಭವದ ತಾಪ ಅ.ಪ.
ಹರಿಯ ನಯನಧಾರೆ ಸಂಭವೇ | ಕಾಯೆ ತಾಯಿಸಿರಿಯ ರಮಣ ನಮಿತ ಪ್ರೀಯಳೇ ||ವರ ಸುವರ್ಣ ಪುಷ್ಪವಮಿತ | ಎರ೫Àಮಿಸಿ ಬೇಡಿದಾರುಹರಿಯು ಒಪ್ಪ ನಿಮ್ಮದಳ | ವಿರಹಿತವಾದ ಪೂಜೆಯನ್ನ ೧
ಸರಸಿಜಾಕ್ಷಿ ನಿನ್ನ ಮೃತ್ತಿಕಾ | ಫಾಲದಲ್ಲಿಧರಿಸುವರ ಅಘಕೆ ಪಾವಕಾ ||ಕರಣ ತೀರ್ಥಾದಿಗ¼೫ | ವರದಳಗಳ್ ದ್ವಿನವಗಳನ್ನಧರಿಪ ಜನರ ಭಿ್ಟ೫ವಿತ್ತು | ಘೋರ ಪಾಪವನ್ನು ಕಳೆವೆ ೨
ಶ್ರೀರಮಣಿ ಆವಿಷ್ಟಯೇ | ನಮಿಪೆ ತಾಯೆಕರುಣಿಸೆನಗೆ ಸುಜನ ಸೇವಿತೇ ||ಗುರುಗಳಂತರ್ಯಾಮಿಯಾದ | ಗುರು ಗೋವಿಂದ ವಿಠಲಾನಚರಣ ವನಜ ತೋರಿ ಎನಗೆ | ಹರಿಸು ಎನ್ನ ತ್ರಿವಿಧ ತಾಪ ೩

೨೮೫
ತುಳಸಿದೇವಿ ಪದಕೇ | ನಾರೇರು | ಬೆಳಗಿರಿ ಆರುತಿಯಾ ಪ
ಬೆಳಗುವುದೂ ನಮ್ಮ | ಅಳಗಿರಿ ರಂಗನಲಲನೆ ಶ್ರೀ ತುಳಸಿಗೆ | ಕಲಿಮಲ ಹಾಗೆ ಅ.ಪ.
ದಳಪ್ರತಿ ದಳದಲ್ಲಿ | ಶ್ರೀಹರಿ | ನೆಲಸಿಹ ತಾನಲ್ಲಿಒಲಿಮೆಲಿ ಭಕುತರ | ಹಲವು ಸೇವೆಗಳಿಗೊಲಿದು ಅಭೀಷ್ಟವ | ಸಲಿಸುವ ದೇವಿಗೆ ೧
ಶರದಿ ಮಥಿಸೆ ಅಮೃತ | ಕಲಶವ | ಧರಿಸುತ ಧನ್ವಂತ್ರಿಬರಲು ನಯನದಿಂ | ಮರುಳೆ ಆನಂದಕೆವರ ಬಿಂದೋದ್ಭವೆ | ಹರಿ ಪ್ರಿಯೆ ತುಳಸೀ ೨
ಜಾಂಬುವತಿಯು ದೇವಿ | ನಿನ್ನಲಿ | ಇಂಬು ತೋರಿ ಇರಲುಅಂಬುಜಾಕ್ಷ | ಗುರು ಗೋವಿಂದ ವಿಠಲನ |ತುಂಬಿ ದ್ವೈಭವದಿ | ಸಂಭ್ರಮ ಸೇವಿಪ ೩

೪೮೪
ತೆರಳಿದರೋ ತಂದೆ ಮುದ್ದು ಮೋಹನರೂಮರಳಿ ಬಾರವ ಪುರಿ ನರಹರಿ ಪೂರಕೇ ಪ
ತರಳತನಾರಭ್ಯ ದ್ವಾದಶ ವತ್ಸರಪರಿಸರಾಗಮ ಪಠಿಸಿ ನಿಪುಣನೆನಿಸೀ |ಇರಲು ಬಂದರು ಮುದ್ದು ಮೋಹನ್ನದಾಸರುಕರಿಗಿರಿ ನರಹರಿ ರಥವ ಉತ್ಸವಕೇ ೧
ಕರಿಗಿರಿ ಸನಿಯದ ನರಸಿಪುರದೊಳಿದ್ದವರಸುಬ್ಬರಾಯಾಖ್ಯ ಭರದಿಂದ ಬರುತಾ |ಗುರು ಮುದ್ದು ಮೋಹನರ ಪದಪಾಂಸು ಶಿರದಲ್ಲಿಧರಿಸಿ ಬಿನ್ನವಿಸಿದರುಪದೇಶ ಕೊಂಡಿರೆಂದೂ ೨
ಪರಿಕಿಸಲೋಸುಗ ಅರುಣ ಉದಯ ಮುನ್ನಕರಿಗಿರಿ ಪುರಬಿಟ್ಟು ತೆರಳಲು ಅವರೂ |ಭರದಿ ಅಡ್ಡೈಸುತ ಗುರುಪಾದದಲಿ ಬಿದ್ದುವರ ಉಪದೇಶವ ಕೈಗೊಂಡ ಧೀರಾ ೩
ಅಂದೇ ಬರುತ ನರಹರಿಯ ಸಮ್ಮುಖ ಭೂವೃಂದಾರಕನಿಗೆ ಶುಭ ಅಂಕಿತವಾ |ತಂದೆ ಮುದ್ದು ಮೋಹನ್ನ ವಿಠ್ಠಲನೆಂದುಛಂದೋಗಮ್ಯನೆ ದಿವ್ಯ ನಾಮವನಿತ್ತರು ೪
ದಾಸ ದೀಕ್ಷೆಯ ಪೊತ್ತು ದಾಸ ಕೂಟವ ನೆರಸಿಶೇಷಗಿರೀಶನೆ ಸರ್ವೇಶನೆನುತಾಎಸೆವ ಅಂಕಿತ ಮಂತ್ರ ಉಪದೇಶಗೈಯ್ಯುತ್ತದಾಸರ ಕ್ಲೇಶವ ಹರಿಸೀದ ಗುರುವೇ ೫
ವರಚೈತ್ರ ಪಂಚಮಿ ವರುಷವು ವಿಕ್ರಮಶರಣರ ಪೊರೆಯಲು ಕರಿಗಿರಿಯಲ್ಲೀ |ಗುರು ಮುಖ್ಯ ಪ್ರಾಣ ಪ್ರತೀಕವ ನಿಲಿಸುತಆರು ಮೂರನೆ ದಿನ ಹರಿಯ ಸೇರುವೆ ನೆನುತಾ ೬
ನರಲೀಲೆ ಕೊನೆಗೈದು ಪರಮ ಪುರುಷಹರಿಶಿರಿಯರಸಗೆ ಪ್ರೀತೆ ಪಾತ್ರನೆನಿಪಾನೂ |ವರ ಗುರು ಗೋವಿಂದ ವಿಠಲನ ಚರಣವಸ್ಮರಿಸಿ ಹಿಗ್ಗುತ ಪೊರಟ ನೀರಿಕ್ಷಿಸುತಾ೭

೨೫೩
ತ್ರಿಶೂಲಧರ ಶಿವನೆ | ತ್ರಿಪುರಾಂತಕ ಹರನೇತವ | ವಶ ಮಾಡಿಕೊ ಎನ್ನ | ಪಶುಪತಿ ಶಂಭೋ |ಅಸುಪತಿಯನೆ ತೋರೋ || ಕರುಣವ ನೀ ಬೀರೋ ಪ
ಮನಸೀನ ಒಡೆಯನೆ | ಕನಸು ಮನಸಿನಲಿಅನಘ ಹರಿಯ ಪದ | ನೆನೆವ ಮತಿಯನಿತ್ತುಎಣಿಸು ಭಕ್ತನೆಂದು || ಬೇಡುವೆ ಇನಿತೆಂದು ಅ.ಪ.
ಮಾಹಿತಾಂಘ್ರಿಯ | ವಾಹಕನ ಸಮಮೋಹಶಾಸ್ತ್ರ ಪ್ರ | ವಾಹ ರಚಿಸುತ ||ದ್ರೋಹಿಗಳ ಬಲು | ಮೋಹ ಪಡಿಸುತಶ್ರೀ ಹರಿಯ ಸಖ | ಪಾಹಿ ಸುಖಪ್ರದ೧
ಸರ್ಪ ಶಯ್ಯ ಪ್ರಿಯ | ಸರ್ಪ ಭೂಷಣಸರ್ಪ ಕಟಿ ಸೂತ್ರ | ಒಪ್ಪೊತವ ಸುತ ||ಸರ್ಪಾರಿ ಸಮಪದ | ಕಪ್ಪೊಗೊರಳ ಹರತಪ್ಪೊಗಳನು ಎಲ್ಲ | ಒಪ್ಪಿಕೊಳ್ಳಯ್ಯ ೨
ಕೈಲಿ ಕರ್ಪರ | ಮೈಲಿ ಭಸ್ಮವು |ಶೂಲ ಪಾಣಿಯೆ | ಶೈಲಜಾಪತೆ ||ಕಾಲಕಾಲಕೆ | ಕಾಲನಾಮನಶೀಲ ಸ್ರ‍ಮತಿಯನು | ಪಾಲಿಪುದು ಹರ ೩
ವಾಸ ಮಶಣವು | ಕೇಶ ವ್ಯೋಮವುಹೇ ಸದಾಶಿವ | ನೀ ಸಲಹೊ ಎನ್ನ ||ಮೀಸಲದ ಮನ | ಕಾಶಿಸುವೆ ಹರಹೇ ಸದಾಗತಿ ಕೂಸು ನೀ ನಲ್ಲೆ ೪
ದೇವ ವರ ಶಿವ | ಮಾವ ವೈರಿಯಹಾವ ಭಾವಕೆ | ಓದಿ ಮೋಹಿಸುತ ||ಧಾವಿಸಲು ಹರಿ | ತೀವ್ರ ಕಾಯ್ದನುಗೋವಳನು ಗುರು | ಗೋವಿಂದ ವಿಠಲ ೫

೩೫೦
ತ್ರ್ಯಕ್ಷಾಂಶ ಸಂಭೂತ | ಅಕ್ಷೋಭ್ಯ ಕರಜಾತಕುಕ್ಷಿಯೊಳಗೆ ಖ್ಯಾತ | ಟೀಕಾರ್ಯರೆಂಬಾತ ಪ
ಮರುತ ಮತಾಬ್ಧಿ ಸೋಮ | ಹರಿಗುಣ ಗಣಸ್ತೋಮಬರೆದು ವಿಬುಧಸ್ತೋಮ | ಪೊರೆದ ನಿಸ್ಸೀಮಾ ಅ.ಪ.
ಎರಗೋಳ ಗುಹೆಯಲ್ಲಿ | ಮರುತ ಮತ ಗ್ರಂಥದಲಿನಿರುತ ಬಹು ಆಸಕ್ತ | ಟೀಕೆಗಳ ಕರ್ತಾ ೧
ವೃಷಭದಾಕೃತಿ ಧರಿಸಿ | ಅಸುಪತಿಯ ಸೇವಿಸೀಎಸೆವ ಗ್ರಂಥಗಳ್ಹೊತ್ತು | ಜನ್ಮ ಸ್ರ‍ಮತಿ ಪೊತ್ತೂ ೨
ಕಾಗಿಣಿಯ ತೀರಗನೆ | ಭೋಗಿ ಆವೇಶಿತನೆಯೋಗಿ ಕುಲ ಕಮಲಾಪ್ತ | ಮಾಯಿ ಮತ ಹರ್ತಾ ೩
ವೇನ ಮತ ದುಧ್ರ್ವಾಂತ | ಕಳೆಯಲ್ಕೆ ಸುಧೆ ಗ್ರಂಥಜ್ಞಾನ ಸೂರ್ಯನೆ ಇತ್ತೂ | ಕಳೆದೆ ಆಪತ್ತೂ೪
ಗೋವುಗಳ ಪಾಲ ಗುರು | ಗೋವಿಂದ ವಿಠಲದೇವ ಗುಣಗಳ ಜಾತ | ಬರೆದ ವಿಖ್ಯಾತಾ ೫

೫೫೯
ದಧಿವಾಮನ ವಿಠಲ ಉದ್ಧರಿಸೊ ಇವನ ಪ
ಅಧಿ ಭೂತ ಅಧ್ಯಾತ್ಮ ಅಧಿದೈವಗತ ದೇವವಿಧಿ ಜನಕ ವಿಶ್ವಾತ್ಮ ಮಧು ಮಥನ ಹರಿಯೆ ಅ.ಪ.
ವಿದ್ಯಾಯುಗಳನಿತ್ತು ಮಧ್ವಮತ ದೀಕ್ಷೆಯಲಿಶ್ರದ್ಧೆ ಬುದ್ಧಿಯ ನೀಯೊ ಮಧ್ವಾಂತರಾತ್ಮಾ |ಕೃದ್ಧಖಳರ್ಹಾವಳಿಯ ಒದ್ದು ಪೋಷಿಸುತಿಪನಶುದ್ಧಗೈವುದು ಮನವ ಸಿದ್ಧಜನ ವಂದ್ಯಾ ೧
ತಾರತಮ್ಯ ಜ್ಞಾನ ಮೂರೆರಡು ಭೇದಗಳವಾರ ವಾರಕೆ ತಿಳಿಸಿ ಪೊರೆಯಬೇಕೋ |ಸಾರತಮ ನಿನ್ಹೊರತು ಆರು ಕಾಯುವರಯ್ಯಪೋರಗಿಹ ದುರಿತಾಳಿ ಪಾರುಮಾಡೈದೇವ ೨
ಕಾರಣಿಕ ಕರುಣಾಬ್ಧಿ ತಾರೇಶ ಶ್ರೀ ಹರಿಯೆನೀರ ಜಾಸನವಂದ್ಯ ನೀರಜಾಕ್ಷಾ |ತಾರಕನು ಕುಭವ ಕೂಪಾರ ದಾಟಿಸಲುಧೀರ ಗುರು ಗೋವಿಂದ ವಿಠಲ ಪ್ರಾರ್ಥಿಸುವೇ ೩

೬೭
ದಯ ಬಾರದೇಕೋ ಹರೀ | ಹೇ ಮುರಾರೀ ಪ
ದಯಾ ಪೂರ್ಣನೆಂದೂ | ತ್ರಯ ಪೇಳ್ವುದಯ್ಯ ಅ.ಪ.
ಕಾಮದಿಂದಲೀ ಹತ | ನಾಗಿಹೆ ತಾತ |ಸೋಮಶೇಖರ ನುತ | ಬಕ ವೈರಿ ಪ್ರೀತ ||ಯಾಮ ಯಾಮಕೆ ತವ | ನಾಮ ಸ್ರ‍ಮತಿಯನಿತ್ತುಕಾಮ ಜನಕ ಸಾರ್ವ | ಭೌಮನೆ ಕಾಯೋ೧
ವಸ್ತುವೆಂದರೆ ನೀನೆ ಸರಿ | ನೀನೆ ದೈತ್ಯಾರಿಸ್ವಸ್ತಿವಾಚಕ ಶ್ರೀ ಹರೀ | ಹೇ ಶೌರೀ ||ವಾಸ್ತು ದೇವರೊಳು | ಶಿಸ್ತಿಗೆ ಬಿಂಬಿಸೆವಾಸ್ತು ನಿರ್ಮಾಣಕೆ | ಅಸ್ತು ಎಂದೆನಿಸೋ೨
ಧಾನ್ಯದನಾಗೀಹ | ಧಾರುಣಿ ಎನಿಸೀಹಮಣ್ಣಿಗೆ ಪರ್ಯಾಯ | ಹೊನ್ನನಿತ್ತಿಹೆ ಜೀಯನಿನ್ನರ್ಚನೆಯ ಗೃಹ | ವನ್ನೂ ನಿರ್ಮಿಸಿ ಪೊರೆಮಾನ್ಯ ಮಾನದ ಗುರು | ಗೋವಿಂದ ವಿಠಲನೆ ೩

Leave a Reply

Your email address will not be published. Required fields are marked *