Categories
ರಚನೆಗಳು

ಗುರು ತಂದೆ ವರದ ಗೋಪಾಲವಿಠಲರು

೨೮೧
(ಆರೋಹಣ ಕ್ರಮದಲ್ಲಿ ದಾಸ-ಗುರು-ದೇವತಾನಮನ)
ಅಕ್ಕ ನೋಡೆ ನಾನಾ ನಿನ್ನ ದಯದಿಂದ ಗುರು ರಂಗವಲಿದದಾಸರ ಕನುಷಿನೊಳಗುಳ್ಳ ರಕ್ಕಸರಿಗೆಲ್ಲ ಕಕ್ಕಸವಾಗುತಿದೆ ದಕ್ಕಲಾರದು ಇನ್ನು ರೊಕ್ಕ ರೊಕ್ಕಕ್ಕೆ ಸಿಕ್ಕಿ ಬಲುಪರಿಯಿಂದ ಸೊಕ್ಕಿ ಧಕ್ಕೆ ತಿನ್ನುತ ಇದ್ದು ಶಕ್ಕುತಿಯಿಲ್ಲದೆ ಯನಗೆ ಪುಕ್ಕಟೆ ಸಿಕ್ಕಿತುಯೆನ್ನ ಕಕ್ಕನು ಇವರಕ್ಕಮುಕ್ಕಿ ಮಹ ಪಕ್ಕಿವಾಹನ ತಂದೆವರದಗೋಪಾಲವಿಠಲನ ತೋರುವಾ ೧
ಮಂಗಳ ಮಹಿಮವರ ತುಂಗ ತೀರದಿ ನಿಂದ ತುಂಗಮಹಿಮ ಗುರು ರಾಘವೇಂದ್ರನ ಅನುಜನೆ ಇವನು ವಂದನೆ ಇಲ್ಲದೆ ವಿಪ್ರವೃಂದಗಳಿಗೆ ಬಹು ಕುಂದು ಮಾಡುವೊ ಮನದಿಂದ ಮರೆವುತಿರೆ ಅಂದು ವಂದು ವತ್ಸರ ತಿರುವೇಂಗಳೇಶನ ಯಾತ್ರಿಗೆ ಬಂದಾನೆಂದು ವರ ವೀರವಿಜಯಾಖ್ಯ ರಾಯನು ಬಂದಿರೆ ಅಂದು ತಂಬೂರಿ ಮೀಟುತ ಇಂದಿರೆ ರಮಣನ ತುತಿಸುತಿರೆ ಮಹಾ ಮಂದಭಾವದಿ ದಾಸರ ನಿಂದಿಸೆ ಅವರು ವಂದನೆಯಲ್ಲದೆ ಛಂದಾಗಿ ಕುಳಿತಿರೆ ಕುಂದುಬಂದು ಕೊರತೆ ಆಯಿತು ಕ್ಷೀಣವೃದ್ಧಿಗೆ ಬಂದು ಕ್ಷಯರೋಗ ಪ್ರಾಪುತವಾಗಲು ಬಂದು ಮತ್ತೆ ದಾಸರ ದ್ವಂದ್ವಕೆ ಬಾಗೆ ನಿನ್ನ ಉದ್ಧರಿಪಾ ಕರ್ತು ನಾನಲ್ಲ ಚಂದ್ರ ಪುರಕೆ ಪೋಗು ಭಾಗಣ್ಣನೆಂಬುವನುಂಟು ಶಿರಿ ಅರಸ ವರದಗೋಪಾಲವಿಠಲನ ದಯದಿಂದಾ ಬಂದು ಸೇರಿದರು ೨
ಕಾಲವ ಮೀರುತ ವಿಪ್ರರ ಪಾಲಿಪ ಗೋಪಾಲದಾಸರು ಶೀಲದಿಕರದು ಬಾಲಗೆ ಬೋಧಿಸಿ ಎಲ್ಲರ ಭೇದಿಸಿ ಸುರರೆಲ್ಲರ ಮೋದಿಸಿ ತನು ಮೆಲ್ಲನೆ ಪೋಷಿಸಿ ಕಲಶದಿ ಸುಧಿಯಿತ್ತು ಅಪರೋಕ್ಷ ಪಾಲಿಸಿ ಮಂತ್ರಗಳುಪದೇಶಿಸಿ ಚರಣಂಗಳ ಲಯ ಮಾಡಿಸಿ ನಿರುತದಿ ಪಾಲಸಾಗರಶಾಯಿ ತಂದೆವರದಗೋಪಾಲವಿಠಲನ ನಿಲ್ಲಿಸಿ ಕೊಟ್ಟುಬಿಡದೆ೩
ತರುವಾಯ ತಾನು ಮಾನವಿ ಪುರದಲ್ಲಿ ವಾಸವ ಮಾಡುತ ದಾಸರ ಪೋಷಿಸಬೇಕೆನುತ ಆಶೆಯುಕ್ತ ದೋಷರಹಿತಭಾವಿ ವಾಯುಪದಸ್ಥ ಸ್ವಾದಿರಾಜರ ಆಜ್ಞಾವ ಧರಿಸಿ ಶೇರಿ ಅರಸನ ಮಹಿಮೆಯ ಶೋಧಿಸಿ ಭಾಗವತಾದಿ ಶಾಸ್ತ್ರ ಅರ್ಥಸಮ್ಮತ ಕವನದಿ ರಚಿಸಿ ಹರಿಕಥಾಮೃತಾಖ್ಯ ಗುಣಸಾಗರ ಸಾರವೆಂದು ನಾಮವೆನಿರ್ಮಿಸಿ ಕುಮತವ ಭೇದಿಸಿ ಹಾನಿ ವೃದ್ಧಿಯ ಭೇದಿಸಿ ನೀತಿ ಹಿತನ ದ್ವಾರ ಜಗನ್ನಾಥವಿಠಲನೆಂಬೊ ಪೆಸರು ಪಡೆದು ತೀರ್ಥಕ್ಷೇತ್ರಾದಿಯಾಟಿಸಿ ಗಾತ್ರವ ಘೋಟಿಸಿಸೂತ್ರವ ಮೀಟುತ ಪಾತ್ರರ ಸಂಗಡ ಚಿತ್ರವೇಷವ ಧರಿಸಿ ವರ್ತನೆಗ್ಯಯ್ಯುತ ಸೂತ್ರನಾಮಕ ಕೃಷ್ಣನಂತರ್ಯಾಮಿ ಸೂತ್ರವಂದಿತ ತಂದೆವರದಗೋಪಾಲವಿಠಲನ ಭಜಿಸಿ ಮಹಪದವೈದ ೪
ಆನಂದ ಆನಂದ ಮಹಾಸಾಗರದೊಳಗೆ ಮುಳುಗಿ ಶಿಂಧುಶಯನ ಅರವಿಂದನಯನನ ಪೊಂದಿ ಮಹ ಪೊಂಗೊಳಲನೂದುತ ಜಗಂಗಳ ಪೋಗುತ ಗಂಗಾಜನಕ ಹರಿ ಗೋವಿಂದನಾಶ್ರಯಿಸಿ ದ್ವಂದ್ವಾವ ಭಜಿಸುತ ಮಂಗಳ ಮೂರುತಿ ಸ್ವಪನದಿ ಬಂದು ನಂದಾದಿ ಕವನ ಪೇಳಿ ಪವಿತ್ರನ ಮಾಡಿದಿ ಭಾವಿ ಭಾರತಿ ವರನ ಮಹಿಮೆಗೆಣೆಯುಂಟೆ ಹನುಮ ಭೀಮ ಮಧ್ವಾತ್ಮಕ ರೂಪಧಾರಿಗುರುರಾಜಾಂತರ್ಗತ ತಂದೆವರದಗೋಪಾಲವಿಠಲನು ಬಂದು ವದಗಿದ ವಾಸನಾಮಯದಿ ೫
ಜತೆ :ಪಾತಕ ಪೋಯಿತು ಪೂತಾತ್ಮಕನ ಸೇವಿಪ ಜಗನ್ನಾಥರಾಯನ ಕಂಡೇ ಹರಿರೂಪಧಾರಿ ಗುರು ತಂದೆವರದಗೋಪಾಲವಿಠಲನ ದಯದಿಂದಾ ೬

೨೮೨
ರುದ್ರದೇವರು
ಕರುಣ ಬಾರದೇ ನಿನಗೆ ಅಕಟಕಟಪಾರ್ವತೀ ಧೊರೆಯೇ ಕಾಳಿಯ ಮರಿಯೇ ಪ
ತರುಳನಾ ತರುಳಿಯ ಭವದೊಳಗೆ ಬಲು ದಿವಸ ಬಹು ವ್ಯಾಧಿಯಲಿ ನೊಂದು ಬಾಯ್ತೆರದು ಮೊರೆಯಿಡುವುದಕಂಡು ೧
ಆರು ಗತಿಯಿಲ್ಲೆಂದು ನಿನ್ನ ಸುಖ ಸಾರ ಚರಣಕ್ಕೆ ಬಿದ್ದಿಹನೆಂದು ಉದಾಸಿಸದೆ ಸಲಹೋ ಕರುಣೀ ೨
ಏಸೇಸು ಜನುಮದೊಳು ದಾಸ ನಾನಿನಗಯ್ಯ ಈಶ ನೀನೆಂದು ಮರೆಪೊಕ್ಕೆ ಜೀಯ್ಯಾ ೩
ಅಭಯ ನೀನಿತ್ತು ಭಯ ಪಾಲಿಸದಿರೆ ಗತಿ ಯಾರೋ ಎನಗೆ ಇಂದ್ರಾದ್ಯಮರ ಗಣಗಳಿಗೆ ದಾತನೆನಿಪ ಗುರು-ತಂದೆವರದಗೋಪಾಲವಿಠಲನ ದೂತಾ ೪

೨೮೯
(ಋಜುಗಣದ ಪಟ್ಟಿ)
ಗುರುರಾಜ ಗುರುರಾಜ ನೀ ಕಲ್ಕಿಯಿಂದೊಂದಿತ ಗುರುರಾಜಸುತೇಜನಿಂದೊಂದಿತ ಗುರುರಾಜ ದಾಸನಿಂದೊಂದಿತ ಗುರುರಾಜ ಧರ್ಮನಿಂದೊಂದಿತ ಗುರುರಾಜ ಅಧರ್ಮ ಖಂಡನಿಂದೊಂದಿತ ಗುರುರಾಜ ವರ್ಚಸ್ವಿಯೊಂದಿತ ಗುರುರಾಜ ಖಷಣನಿಂದೊಂದಿತ ಗುರುರಾಜ ಸಾಧುಯಿಂದೊಂದಿತ ಗುರುರಾಜ ಮಹಿಪತಿಯಿಂದೊಂದಿತ ಗುರುರಾಜ ಸದ್ಧರ್ಮಜ್ಞನಿಂದೊಂದಿತ ಗುರುರಾಜ ಧರ್ಮಜನಿಂದೊಂದಿತ ಗುರುರಾಜ ಸಂಪೂರ್ಣನಿಂದೊಂದಿತ ಗುರುರಾಜ ಶುಚೆಯಿಂದೊಂದಿತ ಗುರುರಾಜ ವೈಕೃತನಿಂದೊಂದಿತ ಗುರುರಾಜ ಅಂಜನನಿಂದೊಂದಿತ ಗುರುರಾಜ ಸರ್ಷಪನಿಂದೊಂದಿತ ಗುರುರಾಜ ಖರ್ಪಟನಿಂದೊಂದಿತ ಗುರುರಾಜ ಶ್ರದ್ಧಾಹ್ವನಿಂದೊಂದಿತ ಗುರುರಾಜ ಸಂಧ್ಯಾತನಿಂದೊಂದಿತ ಗುರುರಾಜ ವಿಜ್ಞಾನದಿಂದೊಂದಿತ ಗುರುರಾಜ ಮಹಾವಿಜ್ಞಾನನಿಂದೊಂದಿತ ಗುರುರಾಜ ಕೀರ್ತನನಿಂದೊಂದಿತ ಗುರುರಾಜ ಸಂಕೀರ್ಣಾಖ್ಯನಿಂದೊಂದಿತ ಗುರುರಾಜ ಕತ್ಥನಿಂದೊಂದಿತ ಗುರುರಾಜ ಮಹಾಬುದ್ಧಿಯಿಂದೊಂದಿತ ಗುರುರಾಜ ಮಹತ್ತರನಿಂದೊಂದಿತ ಗುರುರಾಜ ಸುವೀರ್ಯನಿಂದೊಂದಿತ ಗುರುರಾಜ ಮೇಧಾವಿಯಿಂದೊಂದಿತ ಗುರುರಾಜ ವಿಜಯನಿಂದೊಂದಿತ ಗುರುರಾಜ ಜಯನಿಂದೊಂದಿತ ಗುರುರಾಜ ರಂತಿಮ್ನನಿಂದೊಂದಿತ ಗುರುರಾಜ ಪ್ರಮೋದನಿಂದೊಂದಿತ ಗುರುರಾಜ ಸಂತಸನಿಂದೊಂದಿತ ಗುರುರಾಜಆನಂದನಿಂದೊಂದಿತ ಗುರುರಾಜ ಸಂತುಷ್ಟನಿಂದೊಂದಿತ ಗುರುರಾಜ ಚಾರ್ವಾಂಗನಿಂದೊಂದಿತ ಗುರುರಾಜ ಚಾರುಯಿನಿಂದೊಂದಿತ ಗುರುರಾಜ ಸುಬಾಹುಯಿನಿಂದೊಂದಿತ ಗುರುರಾಜ ಚಾರುಪದನಿಂದೊಂದಿತ ಗುರುರಾಜ ಸುಲೋಚನನಿಂದೊಂದಿತ ಗುರುರಾಜ ಸಾರಸ್ವತನಿಂದೊಂದಿತ ಗುರುರಾಜ ಸುವೀರನಿಂದೊಂದಿತ ಗುರುರಾಜ ಪ್ರಾಜ್ಞನಿಂದೊಂದಿತ ಗುರುರಾಜ ಕಪಿಯಿಂದೊಂದಿತ ಗುರುರಾಜ ಅಲಂಪಟನಿಂದೊಂದಿತ ಗುರುರಾಜ ಸರ್ವಜ್ಞನಿಂದೊಂದಿತ ಗುರುರಾಜ ಸರ್ವಜಿತನಿಂದೊಂದಿತ ಗುರುರಾಜ ಮಿತ್ರನಿಂದೊಂದಿತ ಗುರುರಾಜ ಪಾಪ ವಿನಾಶಕನಿಂದೊಂದಿತ ಗುರುರಾಜ ಧರ್ಮವಿನೇತನಿಂದೊಂದಿತ ಗುರುರಾಜ ಶಾರದನಿಂದೊಂದಿತ ಗುರುರಾಜ ಓಜನಿಂದೊಂದಿತ ಗುರುರಾಜ ಸುತಪಸ್ವಿಯಿಂದೊಂದಿತ ಗುರುರಾಜ ತೇಜಸ್ವಿಯಿಂದೊಂದಿತ ಗುರುರಾಜ ದಾಸಸುಶೀಲನಿಂದೊಂದಿತ ಗುರುರಾಜ ಯಜ್ಞ ಸುಕರ್ತನಿಂದೊಂದಿತ ಗುರುರಾಜ ಯಜ್ವೀಯಿಂದೊಂದಿತ ಗುರುರಾಜ ಯಾನವರ್ತಕನಿಂದೊಂದಿತ ಗುರುರಾಜ ಪ್ರಾಣನಿಂದೊಂದಿತ ಗುರುರಾಜ ಅಮರ್ಷಿಯಿಂದೊಂದಿತ ಗುರುರಾಜ ಉಪದೇಷ್ಯನಿಂದೊಂದಿತ ಗುರುರಾಜ ತಾರಕನಿಂದೊಂದಿತ ಗುರುರಾಜ ಕಾಲಕೀರ್ತನಿಂದೊಂದಿತ ಗುರುರಾಜ ಸುಕರ್ತನಿಂದೊಂದಿತ ಗುರುರಾಜಸುಕಾಲಜ್ಞನಿಂದೊಂದಿತ ಗುರುರಾಜ ಕಾಲಸುಸೂಚಕನಿಂದೊಂದಿತ ಗುರುರಾಜ ಕಲಿ ಸಂಹರ್ತನಿಂದೊಂದಿತ ಗುರುರಾಜ ಕಲ್ಕಿಯಿಂದೊಂದಿತ ಗುರುರಾಜ ಕಾಲಕನಿಂದೊಂದಿತ ಗುರುರಾಜ ಶ್ಯಾಮರೇತನಿಂದೊಂದಿತ ಗುರುರಾಜ ಸದಾರತನಿಂದೊಂದಿತ ಗುರುರಾಜ ಸುಬಲನಿಂದೊಂದಿತ ಗುರುರಾಜ ಸಹೋಯಿಂದೊಂದಿತ ಗುರುರಾಜ ಸದಾಕೃಷ್ಣಿಯಿಂದೊಂದಿತ ಗುರುರಾಜ ಜ್ಞಾನನಿಂದೊಂದಿತ ಗುರುರಾಜ ದಶಕಲನಿಂದೊಂದಿತ ಗುರುರಾಜ ಶ್ರೋತವ್ಯನಿಂದೊಂದಿತ ಗುರುರಾಜ ಸಂಕೀರ್ತಕನಿಂದೊಂದಿತ ಗುರುರಾಜ ಮಂತವ್ಯನಿಂದೊಂದಿತ ಗುರುರಾಜ ಕವ್ಯನಿಂದೊಂದಿತ ಗುರುರಾಜ ದ್ರಷ್ಟವ್ಯನಿಂದೊಂದಿತ ಗುರುರಾಜ ಸಖ್ಯನಿಂದೊಂದಿತ ಗುರುರಾಜ ಗಂತವ್ಯನಿಂದೊಂದಿತ ಗುರುರಾಜಕ್ರವ್ಯನಿಂದೊಂದಿತ ಗುರುರಾಜಸ್ಮರ್ತನಿಂದೊಂದಿತ ಗುರುರಾಜ ಸ್ತವ್ಯನಿಂದೊಂದಿತ ಗುರುರಾಜ ಸುಭವ್ಯನಿಂದೊಂದಿತ ಗುರುರಾಜ ಸ್ವರ್ಗವ್ಯನಿಂದೊಂದಿತ ಗುರುರಾಜ ಭಾವ್ಯನಿಂದೊಂದಿತ ಗುರುರಾಜ ಜ್ಞಾತವ್ಯನಿಂದೊಂದಿತ ಗುರುರಾಜ ವಕ್ತವ್ಯನಿಂದೊಂದಿತ ಗುರುರಾಜ ಗವ್ಯನಿಂದೊಂದಿತ ಗುರುರಾಜ ಲಾತವ್ಯನಿಂದೊಂದಿತ ಗುರುರಾಜ ವೃಂದಾವನದಾಕಾರನಾಗಿರುವೆ ಗುರುರಾಜ ವಾಯು ಬ್ರಹ್ಮ ಬ್ರಾಹ್ಮಣಪ್ರಿಯನಾಗಿರುವೆ ಗುರುರಾಜಸರಸ್ವತಿ ಪತಿಯಾಗುವೆ ಗುರುರಾಜ ಮಾಂಪಾಹಿ ಮಾಂಪಾಹಿ ಶ್ರೀ ಗುರುರಾಜ ಎಮ್ಮ ಹಿರಿಯರಾಡಿದ ನುಡಿಗಳಿಂದಲೇ ನಿನ್ನ ನಾ ಕೊಂಡಾಡುವೆನೋ ಗುರುರಾಜಎನ್ನಪರಾಧ ಅನಂತ ಕ್ಷಮಿಸು ಕ್ಷಣ ಕ್ಷಣಕೆ ಗುರುರಾಜ ವಾರುಣೀಪತಿ ಬಿಂಬ ಹನುಮ ಭೀಮಾನಂದ ಮುನಿ ನಿಲಯ ಗುರು ತಂದೆ ವರದಗೋಪಾಲವಿಠಲನ ಉದ್ದಂಡ ದೂತ ಎನಗೆ ತಂದೆ ತಾಯಿ ಸಕಲ ಬಂಧು ಬಳಗವು ನೀನೆ ಗುರುರಾಜ ವಂದು ಕಾಣದ ಮಂಗ ನಾನಾದೆಯಿಂದು ಗುರುರಾಜ ಹೊತ್ತು ಹೋಯಿತು ವ್ಯರ್ಥ ನಿನ್ನ ಕಾಣದಲೆ ಎನಗೆ ಗುರುರಾಜ ಯತ್ತಿದ್ದರೇನು ನಿನಗಲ್ಲದವನು ಗುರುರಾಜ ಶ್ರೀ ಮಧ್ವಶಾಸ್ತ್ರವ ತಿಳಿಸಿ ಉದ್ಧರಿಸು ಎನ್ನ ಗುರುರಾಜ ಸದ್ಭಕ್ತರಲಿ ಇಟ್ಟು ಕಾಪಾಡು ಎನ್ನ ಗುರುರಾಜ ತ್ವದ್ಭಕ್ತನಾ ಮಾಡಿಕೊ ತವ ದಾಸ್ಯ ಕೊಟ್ಟೆನಗೆ ಗುರುರಾಜ ಹೇಡಿ ಜೀವನನಾಗಿ ನಾ ನಿನ್ನ ಮರೆತೆ ಗುರುರಾಜ ಏನು ಮಾಡಲು ಒಲಿವೆನೀ ಎನಗೆ ಗುರುರಾಜ ನಾನೆಂಬೊ ಭಗವದ್ರೂಪದಾ ಸಂಸ್ರ‍ಕತಿಯ ನೀಡೆಲೊ ಎನಗೆ ಶ್ರೀ ಗುರುರಾಜ ನಾನೆಂಬೊ ಸ್ರ‍ಮತಿಯ ನೀಡದಿರೆನಗೆ ಗುರುರಾಜ ನಾನು ನನ್ನದುಯಲ್ಲ ನಿನ್ನ ಪರವಾಗಲಿ ಗುರುರಾಜ ಎಂದು ಶ್ರೀಹರಿಯ ಶಿರಿ ಸಹ ತೋರಿವಿ ಎನಗೆ ಗುರುರಾಜ ಯೆಂದೆಂದು ನೀನೆ ನಿಜ ಬಂಧು ಎನಗೆ ಗುರುರಾಜ ಎಂದೆಂದು ಸ್ರ‍ಮತಿಯಲಿ ನೀನಿದ್ದು ತಿಳಿಸುತಿರು ಗುರುರಾಜ ನಿನ್ನ ನಿನ್ನವರಲ್ಲಿ ಯೆಂದೆಂದು ದ್ವೇಷವಾ ಕೊಡದಿರೆನಗೆ ಗುರುರಾಜನಿನ್ನ ಶ್ರೀಪಾದ ರಜದಲ್ಲಿ ನೀ ತೋರು ಎನಗೆ ಗುರುರಾಜ ಶ್ರೀಕೃಷ್ಣಾರ್ಯ ಗುರುವಿನಲ್ಲಿ ನೀ ತೋರು ಎನಗೆ ಗುರುರಾಜ ಸತತ ಎಲ್ಲೆಲ್ಲೂ ಪೊಳೆಯುತಿರು ಎನಗೆ ಗುರುರಾಜ ಯಾಕಿಷ್ಟು ನಿರ್ದಯ ಎನಮ್ಯಾಲೆ ನಿನಗೆ ಗುರುರಾಜ ತಂದೆವರದರಾಜರ ಅತ್ಯಾಪ್ತಸಖನೆಂದು ಸಲಹೋ ಗುರುರಾಜ ಗುರುತಂದೆವರದಗೋಪಾಲವಿಠಲನ ಸಹ ಪರಿವಾರ ಸಹ ಬಂದು ತೋರೆನ್ನ ಮನದಲ್ಲಿ ಗುರುರಾಜ

೨೮೦
ದಯ ಮಾಡು ದಯಾನಿಧೇ ಹನುಮ ನಿಲಯ ವಾತಾತ್ಮ ವಿಠಲ ಗುರುತಂದೆವರದಗೋಪಾಲವಿಠಲನಲ್ಲಿ ಅತಿ ಶೀಘ್ರ ಕರಿ ಬಲಿ ಧ್ರುವ ಪ್ರಹ್ಲಾದನಲ್ಲಿ ಬಂದಂತೆ ಎನ್ನಲ್ಲಿ ಪ
ನಿನ್ನಾಗಮನಕೆ ಹೃದಯ ಮನ ಬುದ್ಧಿ ಅರಳುವುದು ಸರ್ವದಾ ನಿನ್ನಾಗಮನಕೆ ಸರ್ವ ಮಾನಿಗಳೆಲ್ಲ ಕಾದು ನಿಂದಿಹರು ನಿನ್ನಾಗಮನಕೆ ಸರ್ವ ಕಾಲಾಕರ್ಮ ಅನುಕೂಲವಾಗಿಹವು ನಿನ್ನಾಗಮನಕೆನೇನೆ ಸರ್ವತ್ರ ಅನುಕೂಲ೧
ಯಾಕೆ ಯೋಚಿಪೆ ನೀನು ಬಲ್ಲ ಮುನಿ ಹೃದ್ದೈವ ಸೊಲ್ಲು ಲಾಲಿಸಬೇಕು ಶೀಲರುಕ್ತಿಬಲ್ಲಿದ ಮಹದೇವನೊಡೆಯ ಶುಕತಾತ ಹಲ್ಲಲ್ಲು ಕಿರಿದು ಕಾದು ನಿಂದಿಹರೊ೨
ಕರಿಗಿರಿ ಮುದಮಯ ಗುರುತಂದೆವರದಗೋಪಾಲವಿಠಲಹೆದ್ದೈವ ಪಾಂಡುರಂಗಾ ವೆಂಕಟತಡವ್ಯಾಕೆ ಬರಲು ಯೋಚಿಪುದು ಏಕೆ ಬಾರಯ್ಯ ಭಕ್ತ ಬಂಧು ನಿನ್ನವರೆ ನಿಜ ಬಂಧೊ ೩

೨೮೭
ನಿನ್ನ ಸ್ಮರಿಸುವ ಮನ ಕೊಡು ನೀ ಎನಗೆ ನಿರುತಎನಗೆ ತಂದೆ ತಾಯಿ ಸಕಲ ಬಂಧು ಬಳಗವು ನೀನೆಒಂದು ಕಾಣದ ಮಂಗನಾದೆ ಇಂದುಹೊತ್ತು ಹೋಯಿತು ವ್ಯರ್ಥ ನಿನ್ನಾ ಕಾಣದಲೆ ಎನಗೆಯತ್ತಿದ್ದರೇನು ನಿನಗಲ್ಲದವನುಶ್ರೀ ಮಧ್ವಶಾಸ್ತ್ರವ ತಿಳಿಸಿ ಉದ್ಧರಿಸು ಎನ್ನಸದ್ಭಕ್ತರಲಿ ಇಟ್ಟು ಕಾಪಾಡು ಎನ್ನತದ್ಭಕ್ತನ ಮಾಡಿಕೋ ತವ ಧ್ಯಾನ ಕೊಟ್ಟೆನಗೆಹೇಡಿ ಜೀವನನಾಗಿ ನಾ ನಿನ್ನ ಮರೆತೆನಾನೆಂಬೊ ಭಗವದ್ರೂಪವ ನೋಡುನಾನೆಂಬೊ ಭಗವದ್ರೂಪದ ಸಂಸ್ರ‍ಕತಿಯ ನೀಡೆಲೊ ಎನಗೆನಾನೆಂಬೊ ಸ್ರ‍ಮತಿಯ ನೀಡದಿರೆನಗೆನಾನು ನನ್ನದು ಎಲ್ಲ ನಿನ್ನ ಪರವಾಗಲಿಎಂದು ಶ್ರೀಹರಿಯ ಸಿರಿಸಹ ತೋರುವಿ ಎನಗೆಎಂದೆಂದು ನೀನೆ ನಿಜ ಬಂಧು ಎನಗೆಎಂದೆಂದು ಸ್ರ‍ಮತಿಯಲ್ಲಿ ನೀನಿದ್ದು ತಿಳಿಸುತಿರುನಿನ್ನವರಲ್ಲಿ ಎಂದೆಂದು ದ್ವೇಷವಕೊಡದಿರು ಎನಗೆನಿನ್ನ ಶ್ರೀಪಾದ ರಜದಲ್ಲಿ ನೀ ತೋರು ಎನಗೆಸತತ ಎಲ್ಲೇಲ್ಲಾ ಎನಗೆ ನೀ ಪೊಳೆಯುತಿರುಯಾಕಿಷ್ಟು ನಿರ್ದಯ ಎನಮ್ಯಾಲೆ ನಿನಗೆತಂದೆವರದರಾಜರ ಅತ್ಯಂತ ಕೃಪೆ ತೋರಿಸುಗುರುತಂದೆವರದಗೋಪಾಲವಿಠಲನ ಸಹ ಪರಿವಾರ ಸಹ ನೀ ಬಂದು ತೋರೆನ್ನ ಮನದಲ್ಲಿ

೨೮೩
ಪಾಲಿಸೈಯ್ಯ ಇವಳಾ ಶ್ರೀ ಭೂತರಾಜರ ಹೃನ್ಮಂದಿರ ನಿಲಯ ಧವಳ ಗಂಗಾವಾಸಿ ಹಯಮುಖನ ತನಯ ವಾಗೀಶಗುರು ಅರ್ಚಕಾ ಪ
ಹರಿಸಿರಿಯ ಕಿರಿಪುತ್ರ ಸಿರಿದೇವಿ ಗುರು ನಿನಗೆ ಹಯವದನ ಸ್ವಾಮಿ ವೇದವ್ಯಾಸಾ ಪ್ರಭುತ್ರಿವಿಕ್ರಮನ ಮುಖ್ಯ ಪ್ರತಿಬಿಂಬ ನಿತ್ಯ ನಿನ್ನಲ್ಲಿಶ್ರೀಹರಿಯು ಅನುಗಾಲ ಕೋಲಾಹಲದೆ ಮಾಳ್ಪ ಆನಂದ ಕ್ರೀಡೆಗಳ ಕಾರುಣ್ಯರೂಪದಲಿ ೧
ವರಶುಕ್ಲನೊನನು ನಿನ್ನ ಸತಿ ಭಾರತಿಯು ಪರುಶುಕ್ಲಳೊ ಸತತ ಧ್ವನ್ತದುರಾಗಮಾ ನೀನೆಂದು ಸಾರುತಿದೆ ಶೃತಿಯು ಶೃತಿವೇದ್ಯ ನೀನೈಯ್ಯ ಶೃತಿಯಿಂದ ನೀ ಗಮ್ಯ ಶೃತ್ಯರ್ಥರೂಪ ನೀನೆನಗೆ ಸತತಾ ೨
ನಾ ಪಾಮರಕೆ ಪಾಮರನು ಎಂದೆಂದು ಮಮಸ್ವಾಮಿ ನಾನು ತುತಿಸಲಾಪೆನೆ ನಿನ್ನ ನಿರ್ದೋಷಗುಣರಾಶಿಯಾ ಗಾನಮಾಡಿ ವೈರಾಗ್ಯ ಶಕ್ತಿ ಭಕ್ತ ಯುಕ್ತಿ ರಾಘವ ಎಮಗಿಲ್ಲವೆನುತಾ ಬಾಗಿ ಬಗ್ಗಿ ಹಾರುವುದು ಪೀಠಕೆ ಸತತ ಶಿವಶೇಷ ಗುರುತಾದಿ ಸುರಕೋಲಿನಿಕರಾ ೩
ಒಂದು ಅರಿಯದಾಕಂದ ಇಂದಿರೆಯು ನಂಬಿಹಳು ಗತಿದಾತನೆಂದು ಸತತ ಅಂತರಂಗದಿ ನಲಿವ ಮಮತೆ ನಾನಿನ್ನ ನಿಜ ದೂತನೆಂದು ಹೌದಾದರವಳ ಮನ ಸೆಳೆದು ನಿನ್ನಲ್ಲಿ ಶ್ರೀಕೃಷ್ಣನಲಿ ಬಿಡು ಅವಳ ವಾಜಿವದನಾರ್ಚಿಶ್ರೀವಾದಿರಾಜ ೪
ಲೌಕಿಕ ಮನ ತೊರೆಸು ಲೌಕಿಕರ ತೊರೆಸು ಲೌಕೀಕ ವಿಷಯ ಸುಖವ ವಮನ ಸದೃಶವೆನಿಸು ನಿದ್ರಾ ಜಾಗರ ಸ್ವಪ್ನ ಅರ್ಶನ ಕೂಕದಿರಲೆ ಇವಳ ಚಿತ್ಸುಖದ ನಿಜ ಅನ್ನ ನೀ ನಿತ್ತು ರಕ್ಷಿಸು ಭದ್ರ ಮೂರುತಿ ನಮ್ಮ ಗುರುತಂದೆವರದಗೋಪಾಲವಿಠಲನ ಪ್ರಥಮಾಂಗ ಭಾವೀ ಭಾರತೀಶ ೫

೨೮೫
ಮಂಗಳಾವೆನ್ನಿರೊ ಜಗಮಂಗಳ ನಾಯಕಗೆ ಶುಭ ಮಂಗಳಾ ಎನ್ನಿರೋ ಶುಭ ನಿಧಿಗೆ ಪ
ಮಂಗಳಾ ಗುರುವಾದಿರಾಜರಿಗೆ ಜಯಮಂಗಳಾ ಭಾವಿ ಮುಖ್ಯಪ್ರಾಣರಾಜನೀಗೆಅ.ಪ.
ಮಾಯಾವಾದಿಗಳಾ ಗೆದ್ದ ಸ್ವಾದಿಪುರವಾಸಿಯಾದ ವಾದಿರಾಜಾ ಮಧ್ವಮುನಿಗೆ ಜಯಮಂಗಳಾ ೧
ಭೂತರಾಜಾರಿಂದ ಸೇವ್ಯಾಭೂತ ಪತಿಗೊಲಿದ ಗುರು ಲಾತವ್ಯ ರಾಜರಿಗೆ ಜಯಮಂಗಳಾ ೨
ಧವಳಗಂಗಾವಾಸಿಯಾದ ಹಯಗ್ರೀವ ತ್ರಿವಿಕ್ರಮಾ ವೇದವ್ಯಾಸರ ಪೂಜಿಪಗೆ ಜಯಮಂಗಳಾ ೩
ಹಂಸವಾಹನಾರೂಢರಾದ ಭಾವಿ ಭಾರತಿ ಪತಿ ರಮಣ ಹರಿಯಾ ಪ್ರಥಮಾಂಗ ಮುಖ್ಯಪ್ರತಿಬಿಂಬಾಣೆಗುರುತಂದೆವರದಗೋಪಾಲವಿಠ್ಠಲನಾ ವೀಹಾರಕ್ಕಾ-ವಾಸನಾದ ಸುವ್ರೇತಾ ಘನದೂತಾ ಗುರುವಾದಿರಾಜಗೆ ೪

೨೮೬
ಯಚ್ಚರಿಕೆ ಯಚ್ಚರಿಕೆ ಶ್ರೀ ಸೋದೆಪುರಯಚ್ಚರಿಕೆ ಯಚ್ಚರಿಕೆ ಶ್ರೀ ಸೋದೆಪುರವಾಸಿ ಗುರುಪಾದ ಯಚ್ಚರಿಕೆ ಯಚ್ಚರಿಕೆ ಪ
ಶ್ರೀ ತ್ರಿವಿಕ್ರಮ ಲೋಕನಾಥನ ತಂದೆ ಶ್ರೀಪಾದಯಚ್ಚರಿಕೆ ಯಚ್ಚರಿಕೆ ಅ.ಪ.
ಗುರುಹಯವದನ ಮನಮುಟ್ಟಿ ಸ್ಮರಿಸಿ ಪೂಜಿಪಶ್ರೀ ಗುರುಪಾದ ಯಚ್ಚರಿಕೆ ಯಚ್ಚರಿಕೆ ೧
ಶತಷಣ್ಣವತಿ ಸಪ್ತ ಬ್ರಹ್ಮ ಕಲ್ಪಗಳಲ್ಲಿ ಶ್ರೀಹರಿಯೆ ಮಹ ಮಾರೆತವ ಚರಿಸಿದ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ ೨
ತಪಚರಿನಿಯರ ಡೃವತ್ತೂ ಷಣ್ಣವತಿ ಲಿಷ್ಟನೇ ಕಲ್ಪದ-ಲಿಲಾತವ್ಯ ವಾಯುಸಾಧನ ಮಾಡುವಾನಂದ ಜ್ಞಾನ ಯೋಗ ಸಿದ್ಧಿಸಿ ಕೊಡುವ ಉದಾರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ ೩
ಗುರುಪಿತಾಮಹ ಸಹಿತ ನದಿ ವಿರಜತೆಯಲಿ ಪ್ರಥಮ ಸ್ನಾನವಗೈದು ಶತಷಣ್ಣವತಿ ನವಮ ಕಲ್ಪದಲಿ ಪ್ರಧಾನ ವಾಯು ಪದ ಸ್ವೀಕರಿಪ ಹಂಸವಾಹನ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ೪
ಹಿಂದೆ ವಿರಜಸ್ನಾನದಿ ಅಜ್ಞಾನಾತ್ಮಕ ಲಿಂಗದೋಷನಿಶ್ಶೇಷ ಹೊಂದಿದ ಗುರುವಿರಾಜರ ವಾದದ್ವಯ ಯಚ್ಚರಿಕೆ ಯಚ್ಚರಿಕೆ ೫
ನಿರ್ಜೀವ ನಿಷ್ಕ್ರಿಯಾ ದಗ್ಧಪಟದಪ್ಪಂತಿರುವ ದೇಹ ಲಿಂಗವ ನಿಮಿತ್ತ ಮಾತ್ರಕೆ ಹರಿಯಿಭಯಿಂ ಧರಿಸಿರುವ ಲಾತವ್ಯ ಗುರುಪಾದ ಯಚ್ಚರಿಕೆ ಯಚ್ಚರಿಕೆ೬
ಮುಕ್ತ ಅಮುಕ್ತಿ ಭೇದ ತೋರ್ಪದಕೆ ಶಿರಿಯಿಂದನದಿ ಶಾಲ್ಮಲ ವಾಸಿಯ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ ೭
ದ್ವಸ್ತ ದುರಾಗಮಿ ಶ್ರೀರಾಜಗುರು ಪಾದಕೆಚ್ಚರಿಕೆ ೮
ಅಜ್ಞಾನ ಅಹಂಕಾರ ಭಯ ಮೋಹ ವಿಸ್ರ‍ಮತಿ ದುಃಖಾದಿಬಂಧನ ಕಳೆವ ಪ್ರಭುವಾದಕೆಚ್ಚರಿಕೆ ೯
ಆನಂದ ಮಯದವುಷಾರಾಗಿದ ಭಾವಿ ಭಾರತಿ ಪತಿ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ ೧೦
ಬ್ರಹ್ಮಾಂಡಗತ ತ್ರಿವಿಧ ಜೀವರ ಚತುರ್ವಿಧಶರೀರದಿಯಿದ್ದವರ ಸಾಧನವಾ ಮಾಡಿಸಿ ಜೀವರ ಸುಖದುಃಖಗಳಿಂತಾ ಬದ್ಧರಾಗದೆ ಪೂರ್ಣ ನಿರ್ಲಿಪ್ತರಾಗಿರುವಶ್ರೀಪಾದ ಯಚ್ಚರಿಕೆ ಯಚ್ಚರಿಕೆ೧೧
ತ್ರಿವಾರ ವಿರಜ ಸ್ನಾನವ ಮಾಡ್ವ ಸೌಭಾಗ್ಯ ಪ್ರಾರಬ್ಧಪೊಂದಿರುವ ಗುರು ವಾದಿರಾಜರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ ೧೨
ಸತ್ವ ಜೀವರ ಮೋಕ್ಷ ಪ್ರಾಪ್ತಿಗೆ ವಿರಜ ನದಿಯಲಿಸ್ನಾನ ಮಾಡಿಸಿ ಜೀವಸತ್ವರ ಮೋಕ್ಷಕ್ಕಿಡುವ ನಿವ್ರ್ಯಾಜ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ ೧೩
ಸುಜೀವರ ಅನಾದಿ ಲಿಂಗ ಅಜ್ಞಾನ ಸ್ವರೂಪ ದೇಹ-ಭಂಗಿಸುವ ಶ್ರೀರಮಾತ್ಮಕ ವಿರಜ ನದಿಯಲಿ ಸ್ನಾನ-ಮಾಡಿ ಸ್ವಲಿಂಗ ವಿಶಿಷ್ಟವಾದ ಅಜ್ಞಾನದಿಂ-ವಿರಹಿತರಾದವರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ ೧೪
ಆನಂದವ ವೃಷಭಾವಿ ಆನಂದ ತೀರ್ಥ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ ೧೫
ತ್ರಿವಿಧ ಜೀವರಲಿಯಿದ್ದು ತ್ರಿವಿಧಸಾಧನ ಮಾಡಿಸುವ ಭಾವಿ ವಾಯುನಾಮಕ ನತ್ತಾ ಪ್ರದ ಲಾತವ್ಯವಾಯು ವಾದಿರಾಜ ಮಧ್ವ ಮುನಿ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ ೧೬
ಆಯಾಯರ ಜೀವರ ಚಲನವಲನಾದಿ ವ್ಯಾಪಾರ ಮಾಡಿಸುವ ಭಾವಿ ಪ್ರಾಣನಾಮಕ ಭೀಷ್ಟಾಪ್ರದ ವಾದಿರಾಜಗುರುಪಾದಯಚ್ಚರಿಕೆ ಯಚ್ಚರಿಕೆ ೧೭
ಚತುರ್ವಿದ ಶರೀರಗಳಲಿದ್ದು ಸಂರಕ್ಷಿಸುವ ಭಾವಿ ಧರ್ಮನಾಯಕಧಾರಣಪ್ರದ ಶ್ರೀ ಗುರುರಾಜರಶ್ರೀಪಾದ ಯಚ್ಚರಿಕೆ ಯಚ್ಚರಿಕೆ ೧೮
ಪ್ರಭುತ್ವವಾರ್ತೈಸಿಜೀರರ ಅವರವರ ಸ್ವರೂಪಯೋಗ್ಯಗತಿ ಕೊಡುವ ಭಕ್ತಿ ಮುಕ್ತಿ ಪ್ರದ ಭಾವಿ ಭಾರತೀ ರಮಣ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ ೧೯
ದೇವೋತ್ತಮ ಲಾತ ವಾಯುಸ್ವನಾಮಕೆ ಭಗವಂತಗೇ ನಿತ್ಯನ್ವ ಭಕ್ತರ ಪಾಪ ಮನ್ನಿಸುವಂತೆ ಪ್ರಾರ್ಥಿಸಿ ತಾವು ಮನ್ನಿಸಿ ಕ್ಷಮಿಸುವಲ್ಲಿ ಕ್ಷಮಾ ಸಮುದ್ರರಾದ ಶ್ರೀಗುರುಪಾದಯಚ್ಚರಿಕೆ ಯಚ್ಚರಿಕೆ ೨೦
ಪುಣ್ಯ ಪ್ರದಾನ ಮಾಡುವಲ್ಲಿ ಜೀವರಿಗೆ ಪರಮ ದಯಾಳು ಆರ್ತರಿಗೆ ದಯತೋರುವ ಕೃಪಾನಿಧಿ ಸಜ್ಜನರ ದೋಷ ವಿಚಾರದಿ ಮಹಾ ಸಹಿಷ್ಣುಗಳಾದವರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ ೨೧
ಸಾತ್ವಿಕ ಶಿಖಾಮಣಿ ಸಕಲ ತಾತ್ವಿಕ ದೇವತಾ ರಂಜಕ ಆಹ್ಲಾದಕರ ದಾನವ ಭಂಜಕ ಸಂಹಾರ ಕರ್ತರಾದ ಕಾರಣ ಭಾವಿ ಪ್ರಭಂಜನ ವರವಾಜ್ಯರಾದವರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ ೨೨
ಸರ್ವದಾ ಅನ್ಯ ಜೀವರು ಕಾಣದಾ ಅಸಾಧಾರಣ ಗುಣ ಕ್ರಿಯಾ ಸ್ವರೂಪರಾದ ವೇದ ಪ್ರತಿಪಾದ್ಯರಾದುದರಿಂದ ಮಹಂತರೆಂದು ಕರೆಸುವ ಭಾವಿ ವಾಯುವಿನ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ೨೩
ಅವರವರ ಸಾಧನಗಳ ಪೂರೈಸಿ ಕೊನೆಗವರ ನಿಜಗತಿ ಪ್ರವರಾದ ಸರ್ವ ಜೀವರಂತರ್ಯಾಮಿ ಸಕಲ ಗುಣ ಸದ್ಧಾಮ ಭಾವಿ ಮರುತ ಗುರುವಾದಿರಾಜರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ ೨೪
ಬರುವ ಜಗತ್ತಿನ ಸರ್ವ ಜೀವರಿಗೆಲ್ಲ ಜೀವನ ಪ್ರಾಣ- ವಾಗಿರುವ ಜೀವೋತ್ತಮ ಶ್ರೀ ಭಾವಿ ಬ್ರಹ್ಮ ಮರುತ ವಾದಿರಾಜರ ಶ್ರೀಪಾದದ್ವಯ ಯಚ್ಚರಿಕೆ ಯಚ್ಚರಿಕೆ ೨೫
ಸಕಲ ಜೀವರ ಸಂಜೀವರಾದ ಯಲ್ಲ ಜೀವರ ಜೀವ ಯಲ್ಲಪ್ರಾಣಿಗಳ ಪ್ರಾಣರಾಗಿ ಪ್ರಾಣೆಂದು ಕರೆಸುವ ಭಾವಿ ಮುಖ್ಯ ಪ್ರಾಣ ವಾದಿರಾಜರ ಗುರುಪಾದಕೆಚ್ಚರಿಕೆ ೨೬
ಸದಾಸರ್ವತ್ರ ಭಗವದ್ರಷ್ರ‍ಟಗಳಾದ ಬ್ರಹ್ಮದೇವರ ಭೃತ್ಯಣ ಜೀವ ಪರ್ಯಂತ ವ್ಯಾಪ್ತರಾದ ಆಯಾ ಸ್ಥಳದಿದ್ದು ಆಯಾ ಜೀವರ ತಕ್ಕ ವ್ಯಾಪಾರ ಮಾಡುವ ಭಾವಿ ಪೂರ್ಣಪ್ರಜ್ಞರೆನಿಸಿರುವ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ ೨೭
ನಾರಾಯಣನ ತೆರದಿ ಬ್ರಹ್ಮಾಂಡದಲಿ ವಿಶಿಷ್ಟ ಚೇಷ್ಟಾದಿಗಳ ಮಾಡಿ ತದರ್ಥಾ ಅಂದರೆ ಅರ್ಥನಾರಾ-ಯಣನೆಂದು ಕರೆಸಿ ಆತ್ಮಾವೈಪುತ್ರ ನಾಮಾಸಿಯಂಬಶ್ರುತ್ಯೋಕ್ತಿಯಂತೆ ತನ್ನಿಂದ ಜನಿಸಿದ ಶ್ರೀ ವಾಸುದೇವ-ನೆಂಬ ಪ್ರಸಿದ್ಧ ನಾಮವ ಪಡೆದು ಶ್ರೀವಾಸುದೇವನು ತಾನೇ ಅಷ್ಟಾಂಶಗಳಿಂದ ಯಿವರಲ್ಲಿ ಸ್ಥಿರ ಸ್ಥಾಯಿಯಾಗಿದ್ದು ಇವರಿಂದ ಅಷ್ಟು ಕಾರ್ಯಗಳ ಮಾಡಿಸುವ ಮುಂದೆ ಭಾವಿ ವಾಯಾವೆನಿಸಿದವರ ಶ್ರೀವಾಸುದೇವಗೆಯಿವರು
ಸಾಕ್ಷಾತ್ರ್ಪತಿಬಿಂಬರಾದ ಕಾರಣ ಭಾವಿ ಮುಖ್ಯ ಪ್ರತಿಬಿಂಬ-ರೆಂದೆನಿಸಿಕೊಂಡ ಗುರುವಾದಿರಾಜ ವಿಭುಪಾದಕೆಯಚ್ಚರಿಕೆ ಯಚ್ಚರಿಕೆ ೨೮
ಇಂಥ ಶ್ರೀ ಭಾವಿ ಮಸರುತ ಶ್ರೀ ವಾದಿರಾಜರ ಶ್ರೀ ಹರಿಯು ಇಂದಿರಾದೇವಿಯಲಿ ಬಹುಪ್ರೇಮದಿಂದಲಿ ಪಡದು ತನ್ನ ಬಲ ತೊಡೆಯ ಮೇಲೆ ಏರಿಸಿ ಕೊಂಡಿವರಿಗೆ ನಿತ್ಯ ಸಹ ಭೋಜನ ವೀವಾ ಈ ಸಹ ಭೋಜನ ಭಾವಿ- ವಾಯು ಬ್ರಹ್ಮಪದ ಪ್ರಾಪ್ತರಿಗೂ ಮೋಕ್ಷದಲಿ ಶ್ರೀಹರಿಯ ಸರ್ವಾಂಗ ಸಾಯುಜ್ಯಭೋಗ ಪೊಂದುವರಿಗೂ ಶ್ರೀಗುರು ವಾದಿರಾಜರಿಗೆ ಶ್ರುತಿಯಲ್ಲಿ ಈ ಚಿನ್ಹೆಕಂಡ ಕಾರಣದಿಂದ ಸರ್ವಾಂಗ ಸಾಯುಜ್ಯ ಸಹ ಭೋಜನದ ಭೋಗ ಹೊಂದುವ ಭಾವಿ ಮರುತ ಶ್ರೀಲಾತವ್ಯ ವಾಯು ಗುರು ಮಧ್ವ ಮುನಿಯ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ ೨೯
ಈ ಲಾತವ್ಯವಾಯು ಶ್ರೀ ಜಯಾವತಿ ಸಂಕರ್ಷಣ – ಸಂಭೂತ ರಾಗುವರು ಪಿತನಂತೆ ಅಸಾಧಾರಣ ಸೌಂದರ್ಯ ಶರೀರ ಉಳ್ಳವರು ಬಿಂಬ ಸೌಂದರ್ಯಗಳೆಲ್ಲ ಪ್ರತಿಬಿಂಬ – ದಲೀಲಿ ಪ್ರಕಾಶಮಾನವಾಗಿ ಸದದ ಕಂಗೊಳಿಸುವದು ಅದರಿಂದ ಭಗವದಪರೋಕ್ಷಗಳು ಶ್ರೀಮಾನ್ಮಧ್ವಮತ-ದ್ಧಾರಕರು ಗುರು ಸಾರ್ವಭೌಮರು ಧೀರರು ಸಂಪೂರ್ಣ ಲಕ್ಷಣ ಚಣ ಸೌಂದರ್ಯ ಸಮುದಯ ಸದನ ಪೂರ್ಣ ಚಂದ್ರವದನರು ಮೋಕ್ಷ ಸಾಮ್ರಾಜ್ಯ ನಿರ್ದುಷ್ಟ ಆನಂದ ಸುಖಸ್ವರೂಪರು ಪರಮ ಪುರುಷಾರ್ಥ ಪಾತ್ರಗಳು ಪುಣ್ಯ ಸ್ವರೂಪ ಪಂಚ ರೂಪಾತ್ಮಕ ಹರಿಯೆ ಪಂಚ ವೃಂದಾವನ ಸ್ವರೂಪದಿಯಿರುವ ರಂಜಪುಣ್ಯ ವೃಂದಾವನದಿ ವಿರಾಜಿಸಿ ಪಂಚ ಪುಣ್ಯ ಧಾರೆಯೆರೆವ ಪಂಚಪ್ರಾಣರಾದ ವಾದಿಗಳ ಪಲ್ಮುರಿವ ವಾದಿರಾಜಮಧ್ವ ಮುನಿಯ ಶ್ರೀ ಭಾವೀ ಭಾರತೀದೇವಿ ತನ್ನ ಮೃದು ಕೋಮಲ ತೊಡೆಯ ಮೇಲೆ ಪತಿಯ ಶ್ರೀಪಾದಪದ್ಮದ್ವಯವಿಟ್ಟು ವತ್ತೂವ ಅಜ್ಞಾನ ತಿಮಿರಕೆ ಮಾರ್ತಾಂಡ ವಾದ ಜ್ಞಾನಾನಂದ ದಾಯಕ ಶ್ರೀಗುರುಪಾದ ಯಚ್ಚರಿಕೆ ಯಚ್ಚರಿಕೆ೩೦
ಜಗಜ್ಜೀವನಗಳಿಗೆ ಮುಖ್ಯ ಕಾರಣ ಪ್ರಾಣ ಆ ಪ್ರಾಣವಿಲ್ಲದಿರೆ ಸ್ವತಃ ಚಲಿಸಲು ಅಸಮರ್ಥ ಸರ್ವ ಜಗತ್ತಿಗೆ ಪ್ರಾಣ ವಿಜ್ಞಾನ ಪ್ರಾಣಾಗ್ನಿ ಶಬ್ದವಾಜ್ಯ ಈ ಭಾವಿಮುಖ್ಯ ಪ್ರಾಣ ಜಗಜ್ಜೀವನಗಳಿಗೆ ತಾನೇ ಮುಖ್ಯ ಪ್ರಾಣರೂಪ ಹೀಗೆಂದು ಬಳಿತ್ಥಾ ಸೂಕ್ತ ಅಗ್ನಿ ಸೂಕ್ತದಲಿ ಉಕ್ತ ಈ ಸೂಕ್ತಿಗಳಿಂದ ಪ್ರತಿಪಾದ್ಯರಾದ ಜಗನ್ನೇತ್ರಜಗಜ್ಜೀವನರಾದ ಪಂಚಪ್ರಾಣ-ರೂಪಾತ್ಮಕ ಶ್ವಾಸನಿಯಾಮಕ ಸೋದೆಪುರವಾಸಿ ಭೂತರಾಜರ ಹೃನ್ಮಂದಿರ ವೇದ್ಯ ವೇದ್ಯನುತ ಅಹಿಪ ಖಗಪ ಉಮೇಶಾದಿ ಸುರರಿಗೆ ಚಿಂತಿಸಲು ಅಳವಲ್ಲದ ಅಗಮ್ಯ ಮಹಿಮ ಶ್ರೀ ಪ್ರಭು-ವಾದಿರಾಜರ ನಿರ್ದೋಷ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ ೩೧
ಜಿತಣಮ ಸರ್ವಜ್ಞ ಅಶೇಕ್ಷ ಸಂಪದ್ವಿಶಿಷ್ಟ ಸದ್ಗುಣ ಭರಿತ ಪೂರ್ಣ ತೃಪ್ತ ನಿಶ್ಚಲ ಭಕ್ತ ದೃಢವ್ಯೆರಾಗ್ಯಶಾಲಿಚಿರಂಜೀವಿ ಶ್ರೀ ಗುರುವಾದಿರಾಜರ ಶ್ರೀಪಾದ ಪದ್ಮ ನಖರೇಣುಗಳಿಗೆ ಯಚ್ಚರಿಕೆ ಯಚ್ಚರಿಕೆ ೩೨
ಸರ್ವದಾ ಸ್ತ್ರೀರೂಪ ಧರಿಸಿ ಹರಿಯೊಡನೆ ಪರಿ ಪರಿ ಕ್ರೀಡೆ-ರಮಿಸಿ ಆ ಆನಂದ ಶ್ರೀ ಹರಿಗೆ ಅರ್ಪಿಪ ಗುರುವಾದಿರಾಜಶ್ರೀಪಾದಂಗಳ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ ೩೩
ಕರುಣಾಳು ತಾ ನಿತ್ಯ ತನ್ನ ಪದ ಜೀವಿಗಳಲಿ ಶ್ವಾಸೋಚ್ಛ್ವಾಸ ಚರಿಸಿ ಆಚರಿಸಿ ದಾರ್ವಾನಾತ್ಮಕ ಶ್ರೀ ತುಳಸಿದಳಗಳು ನಿತ್ಯ ಶ್ರೀವರ ಮಾಲೇಶೆಗೆ ಅರ್ಪಿಪ ಭಾವಿಲಾಳೂರ ಶ್ರೀ ಗುರುರಾಜರ ಪಾದಕೆ ಯಚ್ಚರಿಕೆ ಯಚ್ಚರಿಕೆ೩೪
ತನ್ನ ಶ್ರೀಪಾದ ರಜ ಧೆಣಿಯಲಿ ಧರಿಸಿ ಜೀವಿವರ ಹಯವದನ ಪಾದಕರ್ಪಿಸುವೆನೆಂದು ಪಣತೊಟ್ಟು ಜೀವನ್ಮುಕ್ತರನು ಮಾಡಿ ಪರಿಪಾಲಿಪೆನೆಂದು ಧೀರ ವೃಂದಾವನದಿ ಮೆರೆವ ಶ್ರೀಗುರು-ವಾದಿರಾಜರ ಶ್ರೀಪಾದಕೆ ಯಚ್ಚರಿಕೆ ಯಚ್ಚರಿಕೆ ೩೫
ಶ್ರೀ ತ್ರಿವಿಕ್ರಮನ ರಥೋತ್ಸವಕೆ ಬಂದವರಲಿ ಒಂದೊಂದಂಶ ಸುರರ ಪ್ರವೇಶಿಸಿ ಅವರಲ್ಲಿ ತನ್ನೊಂದಂಶದಿಂದ ಸುರರ ಸಾಧನ ಮಾಡಿ ಸುರನರರ ಕೃತ ಕೃತ್ಯರೆನಿಸಿ ಶಿರಿ ಹಯ-ವದನನ ಕಾಣ್ವ ಜ್ಞಾನ ಭಕುತಿ ವೈರಾಗ್ಯ ನಿಷ್ಠಿಯನಿತ್ತು ಬ್ರಹ್ಮ ನಿಷ್ಯ್ಠೆ ಕರೆನು ಮಾಳ್ವ ಶ್ರೀ ಗುರು ಶ್ರೀಪಾದಕೆಯಚ್ಚರಿಕೆ ಯಚ್ಚರಿಕೆ ೩೬
ಶ್ರೀ ಧವಳ ಗಂಗೆಯ ಸ್ನಾನ ಮಾಡುವ ಜ್ಞಾನವೀವ ಶ್ರೀ ಗುರು-ಪಾದಕೆ ಯಚ್ಚರಿಕೆ ಯಚ್ಚರಿಕೆ ೩೭
ಈ ಪದವ ಭಕ್ತಿ ಭರಿತದಿಂದಾರು ಪಠಣ ಮಾಡ್ವರೋಸತತ ಬರೆದ ಈ ವಾಲಿ ಆರಮನೆಯಲ್ಲಿಹುದೋ ಸತತನಿರುತ ಪಠಣೆ ವ್ರತ ಮಾಡಿದ ಪುಣ್ಯವು ದೊರೆವುದುಸಂಪೂರ್ಣ ಮನೋರಥ ಸಿದ್ಧಿಪುದು ವರ ಬ್ರಾಹ್ಮಣವೇದವೇದ್ಯ ಶ್ರೀಮಂತನಾಹೋನು ಧುರದಿ ಕಾದೂವ ಕ್ಷತ್ರಿಯನಿಗೆ ವರಪರಾಕ್ರಮ ಬರುವುದು. ವೈಶ್ಯನಿಗೆ ಧನದ ಕೋಶಲಭಿಸುವುದು, ಚರಣ ಶೂದ್ರನಿಗೆ ಮಹಾಕೃಷಿಧನ ಪ್ರಾಪ್ತಿಯಾಗುವುದು. ಮಹಾರೋಗಿ ನರ ಆರೋಗ್ಯನಾಗುವನು. ಪುತ್ರಾರ್ಥಿಗೆ ಪುತ್ರ ಲಾಭವಾಗುವದು. ಯೆರಡೊಂದು ಧರ್ಮಕ್ಕಿಲ್ಲ ಅನುಕೂಲವಾದ ದ್ರವ್ಯಆಗಮಿಸುವುದು. ಪರಮ ಮಂಗಳ ಮೋಕ್ಷಾರ್ಥಿಗೆ ಮೋಕ್ಷ ಲಭ್ಯವಾಗುವುದು. ಸ್ಮರಿಸುತ ವಾದಿರಾಜರ ಶ್ರೀಪಾದಅವರ ನಾಮವನು ಸ್ಮರಿಸುತ್ತ ಪ್ರಯಾಣ ಮಾಡಲು ಸರ್ವದಾವಿಜಯಪ್ರದನಾಗಿ ತಿರುಗಿ ತೀವ್ರದಿಂದ ಬರುವನು. ನರರು ಈ ಪರಿಭಕುತಿಯಿಂದ ಮೂರಾವರ್ತಿ ಓಂ ನಮೋ ಭಗವತೇ ಶ್ರೀ ವಾದಿರಾಜಾಯಯೆಂದು ವರಮಂತ್ರದಿಂದ ಗಂಧಲೇಪನ ಮಾಡಿ ಪಣೆಗೆ, ಸ್ಮರಿಸಿತಿಲಕವನಿಡಲು ಲೋಕರಾಜುವಳತ್ ನಿರುವ ಸದಾಚಾರಿಯಾಗುವನು. ಸರ್ವತ್ರ ಸಭೆಯಲ್ಲಿ ಜಯವು ಬರುವ ವ್ಯವಹಾರ ದ್ಯೂತಾದಿ ವ್ಯಸನದಿಂದ ಮುಕ್ತಾನಾಗುವನು. ಕರೆಕರೆಗೊಳಿಸುವ ಸಿಂಹ, ವ್ಯಾಘ್ರದುಷ್ಟ ಮೃಗಗಳ ಭಯದಿಂದ ದೂರವಿರುವ ಸರ್ವಕಾರ್ಯಗಳಿಂದಸರ್ವತ್ರ ವಿಜಯಶಾಲಿಯಾಗುವನು. ನಿಸ್ಸಂದೇಹವಾಗಿ ಸರ್ವಾಭೀಷ್ಟ ಶಿದ್ಧಿಯಾಗುವುದು. ವರ ಬ್ರಾಹ್ಮಣ ಕ್ಷತ್ರಿಯವೈಶ್ಯ ಶೂದ್ರರಿಗೆ ವಿಶೇಷ ಸಂಪತ್ಕರವಾಗುವುದು. ಪತಿವ್ರತಸ್ತ್ರೀಯರಿಗೆ ನಿರುತ ಜ್ಞಾನ ಭಕ್ತಾದಿಗಳಯೀವುದು ಸತ್ಯ ಸತ್ಯಾ ಹರಿ, ವೇಷ ಧಾರಿ ಶ್ರೀವಾದಿಗುರುರಾಜರ ನಾಮ ಪಠಿಸಲು ಹರಿಯ ಮಂಗಳ ನಾಮದ ಮಹಿಮೆ ತಿಳಿಸಿ ನಿತ್ಯಾ ಹರಿ ವಲಿಮೆ ಯಾಚಿಸಿ ಹರಿಯ-ವಲಿಸುವುದು ಸತ್ಯ. ವರ ವಾಸುದೇವ ಗುರು ತಂದೆವರದಗೋಪಾಲವಿಠಲ ನಿರುತ ವಿಜ್ಞಾನದಲಿ ಚರಿಸಿದ ಈ ಪರಿ ಸ್ತೋತ್ರ ಮಾಡಿರೈ ಜ್ಞಾನಿ-ಗಳಾದವರೆಲ್ಲ ಶ್ರೀ ಗುರುಪಾದದೆಚ್ಚರಿಕೆಯಲಿ ತಂದೆವರದಗೋಪಾಲವಿಠಲ ೩೮

೨೮೮
ಶ್ರೀ ವಾದಿರಾಜರು
ಸಾಗಿ ಬಾರಯ್ಯ ಗುರುರಾಜಾ ನಾ ಬಾಗುವೆ ನಿಮಗೆ ಶಿರವಾ ಗುರುರಾಜಾಭಾಗವತರ ದುರಿತೌಘಗಳ ಕಳೆಯೊ ಗುರುರಾಜಾ ದುರ್ಮಾಯವಾದಿಗಳ ಪಲ್ಮುರಿಯೊ ಗುರುರಾಜಾ ಸುರರೆಲ್ಲ ತವ ಮೇಲೆ ನಿತ್ಯಪೂಮಳೆಗರೆವರೊ ಗುರುರಾಜಾ ತುಂಬುರ ನಾರದರು ನಿತ್ಯಗಾನಗಳಿಂದ ಮೆರೆವೊರೊ ಗುರುರಾಜಾ ಬಲು ಧಿಮಿಕೆಂದು ಅಪ್ಸರರು ನಾಟ್ಯಗಳಿಂದ ಕುಣಿವರೊ ಗುರುರಾಜಾ ನೀನ್ಹೊದ್ದ ಕಾವಿ ಶಾಟಿ ನಿನಗೊಪ್ಪುತಿದೆ ಗುರುರಾಜಾಶ್ರೀ ಮುದ್ರೆ ಗಂಧಾಕ್ಷತಿ ಛಂದನೋಳ್ಪರಿಗೆ ಗುರುರಾಜಾಗಳದಲ್ಲಿ ಶ್ರೀ ತುಳಸಿ ಪುಷ್ಪಮಾಲೆಗಳಿಂದ ಗುರುರಾಜಾಝಗ ಝಗನೆ ಮುಖಕಮಲಗಳ್ಹೊಳೆವದೊ ಗುರುರಾಜಾ ಋಜುಗುಣದವರ ಹೌದೆಂದು ಪೇಳುವನರನ ಗುರುರಾಜಾ ನಿಂದೆ ಮಾಡಿದವರಿಗೆ ದೇಹದಲಿ ಕ್ರಿಮಿಕೀಟ-ಗಳುದುರುವುದು ಗುರುರಾಜಾ ನೀ ಬಂದ ಜನರಿಗೆ ಇಲ್ಲಿ ಹರುಷ ಪಡಿಸುವಿಯೊ ಗುರುರಾಜಾ ನಿನ್ನ ಮಹಿಮೆನಾನಿನ್ನೇನು ಪೇಳಲೊ ಗುರುರಾಜಾನೀ ಪೇಳು ನಿನ್ನ ಮಹಿಮೆಯ ಎನಗೆ ಗುರುರಾಜಾ ನೋಡಲಾಶ್ಚರ್ಯಯೆನಗಾಗಿದೆಯೊ ಗುರುರಾಜಾ ಶ್ರೀ ಭೂತರಾಜರಿಂದ ನೀ ಪೂಜೆಯಕೈಕೊಂಬೆ ಗುರುರಾಜಾ ಅವರು ಧಿಮಿಧಿಮಿಕೆಂದು ಕುಣಿದಾಡುವರೊ ಗುರುರಾಜಾ ಎಡಬಲದಿ ದ್ವಾರಪಾಲಕರಾನಂದದಿಂದಿರುವರೋ ಗುರುರಾಜಾ ಭಕ್ತಿಯಲಿ ಭಜಿಸುವರಿಗೆಲ್ಲ ನೀ ಮುಕ್ತಿಯನೆ ಕೊಡುವೆ ಗುರುರಾಜಾ ನಿನ್ನಂಥ ಕರುಣಿ ಗುರು ಇನ್ನಿಲ್ಲ ಧರೆಯೊಳಗೆ ಗುರುರಾಜಾ ನೀ ಮನ್ನಿಸಿ ಎನ್ನ ಸಲಹಯ್ಯ ಗುರುರಾಜಾ ಘನ್ನ ಸಂಸಾರದಲಿ ಬನ್ನ ಬಟ್ಟು ನಾ ಬಹಳ ನೊಂದೆನೊ ಗುರುರಾಜಾಕೈ ಪಿಡಿಯೆಂದು ಇಲ್ಲಿ ನಾ ಬಂದೆ ಗುರುರಾಜಾಉದ್ಧಾರ ಮಾಡಬೇಕೆಂದು ನಿಂದೆನೊ ಗುರುರಾಜಾ ಮಂದ ಭಾಗ್ಯ ಜೀವನ ಕುಂದೆಣಿಸಬ್ಯಾಡಿಂದು ಗುರುರಾಜಾ ಬಂಧು ನೀನೆಂದು ನಿನ್ನಡಿಗೆ ನಮೋ ನಮೋ ಎನುವೆ ಗುರುರಾಜಾಆನಂದ ಸಿಂಧು ನೀನೆಂದು ಅಡಿಗಡಿಗೆ ಬೇಡುವೆ ಎನ್ನಾನಂದಕೊಡು ಎಂದು ಗುರುರಾಜಾ ರುಕ್ಮಿಣಿ ಕಳುಹಿದ ವಾಲಿಯನು ಶ್ರೀಕೃಷ್ಣಗರ್ಪಿಸಿದೆ ಹಿಂದೆ ಗುರುರಾಜಾ ಸಾಮಾನ್ಯವಲ್ಲವೋ ನೀ ಪವಮಾನರಾಯನೋ ಗುರುರಾಜಾ ಸುರರಿಗಮೃತವುಣಿಸಿದಿಯೋ ನೀ ಗುರುರಾಜಾ ವೃಂದಾವನಾಚಾರ್ಯರಿಂದ ಸೇವೆಯನು ಸ್ವೀಕರಿಸಿ ಸುಖವ ಸುರಿಸಿದೆಯೋ ಗುರುರಾಜಾ ಶ್ರೀ ಸ್ವಾದಿಯ ಮಠದಿ ನೀನಿರುವಿ ಗುರುರಾಜಾ ಧವಳಗಂಗೆಯ ಸ್ನಾನ ಅಮೃತಪಾನವ ಮಾಡಿಸಿ ನೀದಮುಕ್ತಿಯನೆ ಕೊಡುವೆ ಗುರುರಾಜಾ ಜೀವೇಶಕೊಂದೆಂಬೋರ ಪಲ್ಗಳುದರಿಸುವೆ ಗುರುರಾಜಾ ಕಚ್ಛರಕ ಮಣಿಮಂತ ಖಳ ಸಂಕರನ ಶಾಸ್ತ್ರ ಹುಟ್ಟಡಗಿಸಿದೆಯೊ ಗುರುರಾಜಾ ಮಧ್ವಮತವನುದ್ಧಾರ ಮಾಡಿ ನೀ ಕಡಗೋಲಕೃಷ್ಣನ್ನುಡುಪಿಯಲಿ ಪೂಜಿಸಿದ್ಯೊ ಗುರುರಾಜಾ ಲಂಡಮಾಯಿಗಳ ಗುಂಡಿ ವಡೆಯಲುದ್ದಂಡ ಮಾರುತಿ ಪದಕೆ ಬರುವೆಯೋ ಗುರುರಾಜ ಪಂಚಬಾಣನ ಪಿತನ ಸ್ಮರಿಸುತ ಪಂಚ ವೃಂದಾವನದಿ ಮೆರೆವೆ ಗುರುರಾಜಾ ಮಿಂಚಿನಂದದಿ ಪೊಳೆಯುತಿಲ್ಲಿ ಪಂಚನಂದನನೆಂದು ತೋರುವಿ ಗುರುರಾಜಾ ಪಂಚಪಾತಕ ಕಳವಿ ಗುರುರಾಜಾಪಂಕಜಾರಿಯ ವಕ್ತ್ರ ಗುರುರಾಜಆತಂಕವಿಲ್ಲದೆ ಭಜಿಪ ಕುಜನರಶಂಕೆಹಿಡಿಸಿ ಸುಜನರ ಶಂಕೆ ಬಿಡಿಸುವೆ ಗುರುರಾಜಾಪಕ್ಕಿ ರಾಜಾ ರಾಜನಾಗ ಶಂಕರೇಶನೋ ನೀ ಗುರುರಾಜಾ ಭಜಿಸುವೋರಿಗೆ ಭಾಗ್ಯ ಕೊಡುವಿಯೋ ಗುರುರಾಜಾಅಮರೇಂದ್ರ ವಂದಿತ ಋಜುಗಣೇಶ ಭಾವಿಮರುತ ಗುರುರಾಜಾ ಶ್ರೀಶನ ಭಜನೆ ಮಾಡುತ ಭಾಗ್ಯ ಕೊಡುವೆ ಗುರುರಾಜಾ ವಾಜಿವದನಾರ್ಚಕ ಶ್ರೀ ಗುರುರಾಜಾ ರಾಜೀವನಯನ ಶ್ರೀ ಕೃಷ್ಣನಲಿ ಬಿಡು ಎನ್ನ ಗುರುರಾಜಾ ದೇವ ದೇವೇಶನ ಪರಮ ಒಲುಮೆಗೆ ಪಾತ್ರ ಗುರುರಾಜಾ ಪಾವನ್ನ ತಮ ಚರಿಯನೊ ಗುರುರಾಜಾ ಪತಿತ ಪಾಲನೊ ಶ್ರೀ ಗುರುರಾಜಾ ಸಾವಧಾನದಿ ಎನ್ನ ಆದಿರೋಗವ ಕಳೆಯೊ ಗುರುರಾಜಾ ಕೇವಲ ಸದ್ಭಕ್ತಿಶೀಲನ ಮಾಡಯ್ಯ ಗುರುರಾಜಾ ಶ್ರೀ ಭಾರತೀಪತಿ ಪದವನೈದುವ ಮಹಾತ್ಮ ಗುರುರಾಜಾ ಮುರಾರಿ ಸುರ ಪೂಜ್ಯ ಕರುಣಿಕಾಯೊ ಗುರುರಾಜಾ ಸಾರಿದೆನು ತ್ವಚ್ಛರಣ ಸರಸೀ ಯುಗ್ಮಗಳ ಗುರುರಾಜಾ ದೂರ ಮಾಡದೆ ಹರಿಯ ಕರುಣ ಪಾತ್ರನ ಮಾಡೊ ಗುರುರಾಜಾ ಪರಮ ಭಾಗವತ ಶಿರೋರತ್ನರಿಂದರ್ಚಿತನೆ ಗುರುರಾಜಾ ಸಿರಿ ವೇಣುಗೋಪಾಲವೇದ್ಯವೇದ್ಯನ ಮನದಲ್ಲಿ ಬಿಡದಿಪ್ಪ ಪರಮಕೃಪೆ ಬೇಡುವೆ ಗುರುರಾಜಾ ಕರುಣಾಬ್ಧಿ ಕೃಪೆ ಮಾಡೊ ಗುರುರಾಜಾ ವಾದಿರಾಜ ಗುರು ನೀ ದಯವಾಗದೆ ಗುರುರಾಜಾ ಈ ದುರಿತವ ಕಳೆದು ಆದರಿಪರ್ಯಾರೋ ಗುರುರಾಜಾ ಯಮಿವರ್ಯನೆ ತ್ರಿವಿಕ್ರಮನ ರಥೋತ್ಸವ ಸಮಯವಿದೆಂದು ಗುರುರಾಜಾ ಮತ್ಕ್ರಮಣವ ನಿಲಿಸಿದೆ ಏಕಾಂತ ಭಕ್ತ ಹರಿಗೆ ಗುರುರಾಜಾಬಂದು ಕರೆಯೆ ಪುರಂದರನಾಳ್ಗಳು ಗುರುರಾಜಾ ಹಿಂದಟ್ಟಿದೆ ಅವರಕರ್ಮಂದಿಗಳರಸೇ ಗುರುರಾಜಾ ಅರ್ಥಿಗಳಿಗೆ ಪರಮಾರ್ಥ ಕೊಡುವ ಗುರುರಾಜಾ ತೀರ್ಥ ಪ್ರಬಂಧವ ಕೀರ್ತನೆಗೈದೇ ಗುರುರಾಜಾ ಭಾಗೀರಥಿಯಂತ್ಯೋಗಿವರ ಶ್ರೀ ವಾಗೀಶರ ಕರಯುಗ ಸಂಭವನೆ ಗುರುರಾಜಾ ನರ ಮಿಶ್ರಿತ ನರಹರಿ ನೈವೇದ್ಯವ ಅರಿತು ಪೇಳಿ ಉಂಡರಗಿಸಿಕೊಂಡಿ ಗುರುರಾಜಾ ಯಲರುಣಿಯ ಭಯಕೇ ಅಂಜಲಿ ನಿರ್ಮಾಸನ ಕೆಳಗಿರೆ ಕಂಡು ಗುರುರಾಜಾ ಅದನುಳುಹಿದೆ ಕರುಣಿ ಗುರುರಾಜಾ ಹಯವದನ ಪದದ್ವಯ ಭಜಕಾಗ್ರಣಿ ಗುರುರಾಜಾ ನಯದಿ ವಿಪ್ರಗೆ ನಯನವನಿತ್ತೇ ಗುರುರಾಜಾ ಪೂತೋತ್ತಮ ಶ್ರೀ ಶೌರಿಯ ಖ್ಯಾತಿಯ ತುತಿಪನಾಥಜನಾಪ್ತ ಗುರುನಾಥಖ್ಯಾತಿಯ ತೋರಿಸು ಯೆನ್ನಲಿ ನೀ ಯನ್ನ ಗುರುರಾಜಾ ದಾಸ ಸಮೂಹವ ನೀ ಸಲಹೋ ಸದಾ ಗುರುರಾಜಾ ನೀ ಗತಿಯೆಂದನುರಾಗದಿ ನಂಬಿದ ಗುರುರಾಜಾ ಇಳೆಯೊಳು ಕಲಿಬಾಧೆಯು ವೆಗ್ಗಳವಾಗಿದೆಯೊ ಗುರುರಾಜಾ ಜನ್ಮ ಆದಿವ್ಯಾಧಿ ಉನ್ಮಾದ ವಿಭ್ರಮನಿರಹೊಕ್ಕರೆಯನ್ನುಂಟೆ ಗುರುರಾಜಾ ನಿನ್ನೊಶನಾದ ಜಗನ್ನಾಥರಾಯನ ಇನ್ನಾದರೂ ತೋರೆನ್ನಮನದಲ್ಲಿ ಗುರುರಾಜಾ ಹರಿಯ ಯೋಚನೆಯೊಳಗುಳ್ಳ ಭಕುತಿಯ ಕೊಡೆನಗೆ ಗುರುರಾಜಾ ಅನಂತನ ಮುಖ್ಯ ಪ್ರತಿಬಿಂಬನೋ ಗುರುರಾಜಾ ಕ್ಷಣದೊಳಗೆ ಸಿದ್ಧರನು ಮಾಳ್ಪನಂತಮಹಿಮ ನೀ ಗುರುರಾಜಾಅನಂತಗಣಿತ ಕರುಣರಸ ಸುರಿಸೆನಗೆ ಗುರುರಾಜಾ ಕರುಣದ ಆಕಾರನೋ ನೀನು ಗುರುರಾಜಾ ಯಲ್ಲಿ ನೀನಿರುವಿಯೋ ಅಲ್ಲಲ್ಲೆ ಹರಿಯಿರು-ವನೋ ಗುರುರಾಜಾ ಅಲ್ಲಲ್ಲೆ ನೀ ಹರಿವೆ ಮುಖ್ಯ ಪ್ರತಿಬಿಂಬನೋ ಗುರುರಾಜಾ ಹರಿಯ ವಿಹಾರಕ್ಕೆ ಆಲಾಪನೊ ನೀನು ಗುರುರಾಜಾ ಹರಿಯು ಕೋಲಾಹಲದಿ ನಿನ್ನಲ್ಲಿ ಆನಂದಕ್ರೀಡೆ ಮಾಡುವನೊ ಅನುಗಾಲ ಗುರುರಾಜಾ ಶ್ರೀಹರಿಯ ಸುಪ್ರೀತ ಘನ ದೂತನೊ ನೀನು ಗುರುರಾಜಾ ಶ್ರೀಹರಿಯ ನೀ ಸಹಿತ ಯೆನ್ನಲ್ಲಿ ತೋರೆನಗೆ ಸತತ ಗುರುರಾಜಾಭಾವಿ ಭಾರತಿಯ ಮನಕೊಪ್ಪುವೋ ಅತಿ ಚೆಲ್ವ ಸುಂದರ ಗುರುರಾಜಾ ಶ್ರೀಹರಿಗೆ ಅವಸರದ ಆಳೋ ನೀ ಗುರುರಾಜಾ ಶ್ರೀಹರಿಗೆ ಮುಖ್ಯ ಮಂತ್ರಿಯು ನೀ ಗುರುರಾಜಾ ಚತುರ್ದಶ ಭುವನದಲ್ಲಿ ನಿನ್ನ ಪಾದ ವ್ಯಾಪಿಸಿದೆ ಗುರುರಾಜಾ ಚತುರ್ದಶ ಭುವನದಲಿ ಅಡಗಿದೆಯೊ ನಿನ್ಹಸ್ತ ಗುರುರಾಜಾ ಶ್ವಾಸ ನಿಯಾಮಕ ಪ್ರಭುವಾಸವೇ ನಿನ್ನಿಂದ ಗುರುರಾಜಾ ಉಸುರಲೇನಯ್ಯ ನಿನ್ನಲ್ಲಿ ನಾನು ಗುರುರಾಜಾ ಹಯ ಮುಖ ಪಾದದ್ವಯ ಸೇವಕವರ ಜಯಶೀಲನೋ ನೀನು ಗುರುರಾಜಾ ನಿಜ ಭಕ್ತರ ನಿಜ ಭಯಹಾರಕ ನೀ ಗುರುರಾಜಾ ದೂಷಕರಿಗೆ ಬಹು ಘಾಸಿಕೊಟ್ಟು ನಿಜದಾಸರ ಶೋಷಿಪೆ ಗುರುರಾಜಾ ಮೋದತೀರ್ಥಮತ ಸಾಧಿಸಿ ಮೆರೆಸುವ ಗುರುರಾಜಾ ವಾಣೀಶರು ಗುರುಬೋಧರ ಸಮ ನೀ ಗುರುರಾಜಾಇಂದಿರಾಪತಿಯ ಛಂದದಿ ಪೂಜಿಪೆ ಗುರುರಾಜಾನಿಷ್ಕಲುಷ ಚಿತ್ತ ಯತಿಕುಲ ಭೂಷಣಕೇ ಗುರುರಾಜಾ ಕಲಿ ಮುಖ ದಾನವ ಕುಲಕಂಟಕನೋ ಗುರುರಾಜಾ ಯೆನ ತುಂಟತನ ಬಿಡಿಸಿ ನಿನ ಬಂಟನ ಮಾಡಿಕೊ ಗುರುರಾಜಾ ಕಂಸಾದಿ ಮುಖ ಧ್ವಂಸಿ ಸಮೀರಣ ಗುರುರಾಜಾ ನೀ ಹಂಸವಾಹ ಪಂಚಾಂಶಸಹಿತನೊ ಗುರುರಾಜಾ ಲಾತವ್ಯಾತ್ಮಕ ಭೀತಿರಹಿತನೇ ಗುರುರಾಜಾ ಮಹಪಾತಕ ಹರನೇ ಸುರನಾಥ ಮಹಿತನೇ ಗುರುರಾಜಾ ಸುಂದರ ಪಂಚಸು ವೃಂದಾವನದೊಳು ಗುರುರಾಜಾ ವೃಂದಾರಕ ಮುನಿ ವೃಂದವಂದನೇನೋ ಗುರುರಾಜಾ ಭಾವಿ ಭಾರತಿಯ ಕರ ಕಮಲ ಸೇವಿತ ಪದ ರಾಜೀವದ್ವಯನೊ ಗುರುರಾಜಾ ವೃಂದಾವನ ಸದ ಮಂದಾಖ್ಯಾನವ ಭೂ ವೃಂದಾರಕರಿಗೆ ತಿಳಿಸಿದೆ ಗುರುರಾಜಾ ಸಾನುರಾಗದಿ ಪ್ರಾಣಪತಿ ಶೌರಿಯ ಧ್ಯಾನದಿಂದ ನೀ ಸನ್ಮಾನಿತನೊ ಗುರುರಾಜಾ ನಿನ್ನಯ ಆಳರಸುತನಕೆ ನಮೋ ನಮೋ ಗುರುರಾಜಾ ಹೇ ಭಾವಿ ಭಾರತೀಶ ಗುರುರಾಜಾ ಯೆನ್ನಯ ಭವ ಭೀತಿ ಭೇದಿಸೊ ಗುರುರಾಜಾ ಭಾವಕನೆ ನಿನ್ನ ಭಯ ತೋರೊ ಗುರುರಾಜಾ ನಾ ನಿನ್ನ ನಿನ್ನವರದಾಸನೊ ಗುರುರಾಜಾ ನೀ ಭಾರತವ ಭೇದಿಸಿ ಗುರುರಾಜಾ ಭುವನದಳ ಚತುರ್ದಶಕೆ ಭವಸುಧಾಂಬುಧಿಯ ಕಲ್ಪಿಸಿದೆ ಗುರುರಾಜಾ ಜಾಣೆ ಶ್ರೀ ಭಾರತಿ ದೇವಿಯು ಕೈಕೊಂಡು ತೋರುವಿಯೊ ಗುರುರಾಜಾ ಭಾವಿ ಪಾರ್ವತೀಶ ಶ್ರೀ ಭೂತರಾಜರಿಂದೊಂದಿತ ಗುರುವರ ಶ್ರೀ ಗುರುರಾಜಾ ವಂದಿಪೆ ನಾನಿನಗೆ ಶ್ರೀ ಗುರುರಾಜಾ ಕಾಲನಾಮಕ ನೀನಹುದೊ ಶ್ರೀ ಗುರುರಾಜಾ ಕಲಿ ಕುಲ ಮಾರಶೂರನೊ ನೀನು ಗುರುರಾಜಾ ಬಾಲ ಬಲು ಚತುರೇಶನೂ ನೀನು ಗುರುರಾಜಾ ಬಲು ಶೂರನೂ ನೀನಹುದೊ ಗುರುರಾಜಾ ಕಾಲ ಬರಲು ಕೇವಲವು ನೀ ಗುರುರಾಜಾ ಪ್ರಹ್ಲಾದ ರಾಜ ಶ್ರೀವ್ಯಾಸರಲಿ ನೀ ಸೇವಿಸುತಲಿರೇ ಗುರುರಾಜಾಸುರ ಹರ ನಾರಾಯನನು ನಿನ್ನಯ ದ್ರೋಹಿಸೇ ಗುರುರಾಜ ಕುಲಯಾದವಾಧಿಪ ಕೃಷ್ಣ ಪರಿಸರ ನೀನಾಗ ಶಪಿಸಲು ಗುರುರಾಜಅವನು ವೇಗದಿ ತಾಳಿದ ತನುಭೂತ ಗುರುರಾಜಭೂತಗಣದೊಳು ಮಹರಾಜನೆನಿಸಿ ಅವ ಭೂಸುರರ ನೀಗುತಲಿರಲು ಗುರುರಾಜಕೆಲವು ಕಾಲದಿ ಅವನ ನೀ ಸ್ಥಳಕೆ ನೀ ಪೋಗ್ಯವನ ಸೋಲಿಸೆ ಗುರುರಾಜನಿನ್ನ ದಾಸನಾಗ್ಯವನು ನಿನ್ನ ಸೇವಿಸೇ ಗುರುರಾಜ ಸೇವಿಸಿದವಗೆ ನಿಜ ಪದವನಿತ್ಯೋ ನೀ ಗುರುರಾಜ ಫಾಲನಯನನ ಪಾಲನೇ ಗುರುರಾಜ ಶ್ರೀ ತಂದೆವರದರಾಜರ ಹೃತ್ಪದ್ಮ ಪೀಠಕೋಣತ್ರಯ ವಿರಾಜಿತನೋ ಗುರುರಾಜ ನೀಲಿಂಗುಂತರ್ಬಹಿವ್ರ್ಯಾಪ್ತನೊ ಗುರುರಾಜ ಬಹುಪರಿಯಲಿ ಜೀವರ ಹೃದಯಾಕಾಶದಿ ಶೋಭಿಪೆ ಗುರುರಾಜ ಮೂಲ ಮುಕುಟಾಭರಣ ಕೆತ್ತಿದ ರತ್ನ ನವಮಣಿ ವಜ್ರ ಧರಿಸಿ ಗುರುರಾಜ ದನುಜರ ಕೊಂದು ಬಿಸುಟುವಿಯೊ ಗುರುರಾಜ ನೀ ರುದ್ರೇಂದ್ರ ವಂದ್ಯನೊ ಗುರುರಾಜ ನೀ ಸುಂದರಾಂಗನೋ ಗುರುರಾಜ ಸುವಂದ್ಯ ಮಹಿಮನೋ ಗುರುರಾಜ ಶ್ರೀ ವೃಂದಾವನಾರ್ಯ ಗುರುವರನೋ ಗುರುರಾಜ ವೇದ ವಂದ್ಯ ಸುಮಹಿಮನೊ ನೀನು ಗುರುರಾಜ ವೇದಾದಿ ಆಶ್ರಿತಹೋಮನೋ ಗುರುರಾಜ ವೇದಾಭಿಮಾನಿಗಳ ಕಾಮನೋ ಗುರುರಾಜ ವೇದನಿಧಿ ಗುರು ಭೀಮನೋ ಗುರುರಾಜ ವೇದ ವೇದ್ಯ ಸುವಂದ್ಯನೋ ಗುರುರಾಜ ನೀ ವಿಧಿ ಸಖನೋ ಗುರುರಾಜ ವಾದಿಗಳ ಕುಲವದ್ದು ದಶರಥ ಹೇಯನೆನಿಸಿದ ಬೌದ್ಧದೇವನ ಗುರುರಾಜ ಶ್ರದ್ಧೆಯಿಂದಲಿ ಸಿದ್ಧಪಡಿಸುವದೆಂದು ಗುರುರಾಜ ಜನರ ಬುದ್ಧಿ ಭೇದವ ಮಾಡಿ ದಿವದಿ ಕದ್ದು ದೇವನಭಾವದಿಂದಲಿ ಪೂಜಿಸಲು ನೀ ಗುರುರಾಜಅದು ಬಲು ಸುದ್ದಿಯ ತಿಳಿಯಲು ಸದ್ದು ಇಲ್ಲದೆ ಬೌದ್ಧ ಜನರು ಬಂದು ನೋಡೆ ಗುರುರಾಜ ತಿದ್ದಿ ವಿಗ್ರಹ ತೋರಿ ಸರ್ವ ಸುರರನು ಸಲಹಿ ಅಸುರರ ವದ್ದ ಪಲ್ಗಳ ಮುರಿದು ಮೆರೆದೇ ಗುರುರಾಜ ನೀ ಪದ್ಮಜಾತನ ಪದವಿ ಪೊಂದುವಿ ಎಂದು ನಿನ್ನಯಪದ್ಮಪಾದಕೆ ಬಿದ್ದೆನಾ ಗುರುರಾಜ ನೀ ಗುರು ಮಧ್ವವಲ್ಲಭನಿಂದ ರಮಣವ ಕೊಂಡು ಭಜಿಸುವೆ ಗುರುರಾಜ ಸಿದ್ಧ ಶೇಖರ ಸೋಮ ವಂದ್ಯನೊ ನೀ ಗುರುರಾಜ ಹರುಷದಿಂದಲಿ ನಿನ್ನ ದರುಶನವಾದ ದಿನದಾರಭ್ಯ ಗುರುರಾಜ ಮನದಲಿ ಮಿಂಚಿನಂತೆ ಪೊಳೆವೊ ಸುಂದರ ಸುಂದರಾಂಗಿಯ ಸಹಿತ ವಂದಿಪೆನೊ ಗುರುರಾಜ

೨೭೯
ಸಾರ್ಥಕ ಉದ್ದದಕೆ ಸಿರಿ ಪಾರ್ಥಸಖನಾ ಗುಣಕೀರ್ತನೆ ಮಾಡಲು ಪ
ಯಂಟೆಂಟೆರಡುನಾಲ್ಕು ಸಾವಿರ ನುಡಿಯಲಿ ಯಂಟೆಂಟೆರಡು ರೂಪದಲಿ ಯಂಟೆಂಟೆರಡು ಮೂರೈದು ವ್ಯಂಜನದಿ ಯಂಟೆಂಟು ಮತ್ತೆಂಟು ಸ್ವರವ ತಿಳಿ ೧
ಯಂಟೆಂಟೆರಡು ಕೇಸರದಳ ಆರೆಂಟು ಕಮಲ ಕರ್ಣಿಕೆಯಲ್ಲಿ ಯಂಟೆಂಟೆರಡರ ನಾಲ್ಕು ಸ್ತಂಭರಥ ಮಂಟಪದೊಳಗಿನ ವೆಂಕಟನ ನೋಡು೨
ಯಂಟೆಂಟು ಕರಗಳಲಿ ಯಂಟಾಯುಧ ಪಿಡಿದು ಯಂಟು ದಿಕ್ಕಿನಲಿ ತಿರುಗುತಲಿ ಯಂಟು ವಿಧದಿ ಪ್ರೇರಣೆ ಮಾಡುವ ನಮ್ಮಾ ನೆಂಟ ತಂದೆಗುರುಗೋಪಾಲವಿಠಲನು ೩

೨೮೪
ಭಾರತೀಶನೆಯನ್ನ ಭಾರ ನಿನ್ನದೊ ತಂದೆ ಬಲು ಭಾರವಾಗಿದೆ ಎನಗೆ ಈ ಭವರ ತಾಪಾತಾಳಲಾರನೇ ಗುರುವೇ ನಿನ್ನಂಥ ಸ್ವಾಮಿಯಿದ್ದು ನಿರ್ಭಯ ತೋರದಿರೆ ಗತಿದಾರು ಎನ್ನ ಸಾಧನಕ್ಕೆ ಪ್ರಾಣನಾಥನೆ ಪೇಳು ಪ್ರಾಣಸಖನಾಗಿ ಈ ಪ್ರಾಣದೊಳಗೆಯಿದ್ದು ಪ್ರಾಣಮಾರ್ಣನು ಆಗಿ ಪ್ರಾಣಿಗಳ ಪೊರೆವೆ ನಿರ್ವಾನ್ಯದಾದಿ ಪ್ರಾಣ ಪ್ರೇರಕನು ನಮ್ಮ ಗುರು ತಂದೆವರದಗೋಪಾಲವಿಠಲನ ಜ್ಞಾನಪೂರ್ವಕ ತೋರು ಎನ್ನ ಪ್ರಾಣನಾಗಿ ೧
ನಿನ್ನಲ್ಲಿ ಮನವಿರೆ ಗುರು ತಂದೆವರದಗೋಪಾಲವಿಠಲಈಗಲೇ ಸಲುವಾ ೨
ಭೂತರಾಜರ ಪ್ರಾಣ ಈ ಜೀವನ ಪ್ರಾಣ ಭೂತರಾಜರ ಪದಕ ಎನ್ನತ್ರಾಣಪದಕ ಭೂತರಾಜರ ಜನರು ಎನ್ನ ಜನರು ಭೂತರಾಜರ ಪ್ರೀತಿ ಎನ್ನ ಪ್ರೀತಿಭೂತರಾಜರ ಒಲುಮೆ ನಿನ್ನ ಒಲುಮೆ ಭೂತರಾಜರ ಚಿತ್ತ ನಿನ್ನ ಚಿತ್ತ ಭೂತರಾಜರ ಅಗಲಿಕೆ ನಿನ್ನ ಅಗಲಿಕೆ ಭೂತರಾಜರ ಪಾದ ನಿನ್ನ ಪಾದ ಭೂತರಾಜರ ಹೃದಯ ಸದನದ ಮುಖ್ಯ ಪ್ರಾಣ ಎನ್ನ ಪ್ರಾಣ ಗುರುತಂದೆವರದಗೋಪಾಲವಿಠಲನ ಶ್ರೀ ಮುಖ್ಯಪ್ರಾಣನೆ ೩
ಎಂದಿಗೆಂದಿಗೂ ಬ್ಯಾಡ ನಿನ್ನಗಲಿದಾ ಜನರ ಸಂಗ ಎಂದೆಂದಿಗೂ ಬ್ಯಾಡ ನಿನ್ನ ದ್ರೋಹಿಗಳ ಸಂಗ ಎಂದೆಂದಿಗೂ ಬ್ಯಾಡ ನಿನ್ನ ಕಾಣದ ಜನರಿಂದ ಬರುವಿ ಜ್ಞಾನಾದಿ ಅಹಿತತಂದೆ ಎಂದೆಂದಿಗೂ ನಿನ್ನ ಕಂಡವರ ಸಂಗ ಎನಗಿರಲಿ ಗುರು ತಂದೆವರದಗೋಪಾಲವಿಠಲನಾಮೀವಾ ಪ್ರತಿಬಿಂಬಾನೇ ೪
ನೀ ಬಂದು ಪೊಳೆಯಾಬೇಕಿನ್ನು ಎನ್ನ ಹೃದಯದಲಿ ಮಾತ್ಪ್ರಭೂನಾಳ ರೂಪಾದಿ ಶ್ರೀನಿವಾಸನು ಕರುಣಿಸಲೆಂದೆನುತಲಿ ಎನಲ್ಲಿ ಗುರುವೆ ೫
ಜತೆ :ಎಂದೆಂದಿಗೂ ಬಿಡದ ಮಾನ ನಿನ್ನಯ ಪದ ಪದ್ಮದಲ್ಲಿ ಕೊಡು ಎನಗೆ ಗುರು ತಂದೆವರದಗೋಪಾಲವಿಠಲನ ಕುವರನೆಂದು ಮೊರೆಯಿಡುವೆ ೬

ಕರುಣ ಬಾರದೇ ನಿನಗೆ
೨೮೨
ರುದ್ರದೇವರು
ಕರುಣ ಬಾರದೇ ನಿನಗೆ ಅಕಟಕಟಪಾರ್ವತೀ ಧೊರೆಯೇ ಕಾಳಿಯ ಮರಿಯೇ ಪ
ತರುಳನಾ ತರುಳಿಯ ಭವದೊಳಗೆ ಬಲು ದಿವಸ ಬಹು ವ್ಯಾಧಿಯಲಿ ನೊಂದು ಬಾಯ್ತೆರದು ಮೊರೆಯಿಡುವುದಕಂಡು ೧
ಆರು ಗತಿಯಿಲ್ಲೆಂದು ನಿನ್ನ ಸುಖ ಸಾರ ಚರಣಕ್ಕೆ ಬಿದ್ದಿಹನೆಂದು ಉದಾಸಿಸದೆ ಸಲಹೋ ಕರುಣೀ ೨
ಏಸೇಸು ಜನುಮದೊಳು ದಾಸ ನಾನಿನಗಯ್ಯ ಈಶ ನೀನೆಂದು ಮರೆಪೊಕ್ಕೆ ಜೀಯ್ಯಾ ೩
ಅಭಯ ನೀನಿತ್ತು ಭಯ ಪಾಲಿಸದಿರೆ ಗತಿ ಯಾರೋ ಎನಗೆ ಇಂದ್ರಾದ್ಯಮರ ಗಣಗಳಿಗೆ ದಾತನೆನಿಪ ಗುರು-ತಂದೆವರದಗೋಪಾಲವಿಠಲನ ದೂತಾ ೪

ಹಾಡಿನ ಹೆಸರು :ಕರುಣ ಬಾರದೇ ನಿನಗೆ
ಹಾಡಿದವರ ಹೆಸರು :ರಮಾ ಪಿ.
ರಾಗ :ಶುಭಪಂತುವರಾಳಿ
ತಾಳ :ರೂಪಕ ತಾಳ
ಸಂಗೀತ ನಿರ್ದೇಶಕರು :ವಾಗೀಶ್
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *