Categories
ರಚನೆಗಳು

ಗುರುಗೋವಿಂದವಿಠಲರು

೬೮೧
ವಿಘ್ನೇಶ ಪ್ರಿಯ ವಿಠಲ | ಸದ್ಗುಣಾರ್ಣವನೇ ಪ
ಭಗ್ನ ಗೈಯ್ಯುತ ದುರಿತ | ಉದ್ಧರಿಸೊ ಇವನಾ ಅ.ಪ.
ಮೂಲ ಕಾರಣ ಜಗಕೆ | ಪಾಲಾಬ್ಧಿಶಯ ನಿನ್ನ ಲೀಲೆಗಳ ತೋರುತ್ತ | ಸಲಹೊ ಇವನಾಕೀಲಾಲ ಜಾಸನುತ | ಮಾಲೋಲ ಶ್ರೀ ಹರಿಯೆವ್ಯಾಳ್ಯ ವ್ಯಾಳ್ಯಕೆ ಪಾಪ | ಜಾಲಗಳ ಹರಿಸೋ ೧
ಆಪ್ತ ಸತಿಸುತರಲ್ಲಿ | ವ್ಯಾಪ್ತ ನಿಹ ಹರಿಯೆಂದುಸೂಕ್ತೋಪಚಾರಗಳ | ಪ್ರಾಪ್ತಿಗೈಸುತಲೀ |ಮೌಕ್ತಿಕೋ | ಪಾಯವೇ | ದೋಕ್ತಸಮನಿಸುತಕೀರ್ತಿಕೊಡಿಸಿವಗೆ ಶ್ರೀ | ಕಾಂತ ಮೂರುತಿಯೇ೨
ಪಾಂಚ ಭೌತಿಕ ದೇಹ | ಪಂಚತ್ವ ಪಡೆವುದನೆಸಂಚಿಂತನೆಯ ಕೊಟ್ಟು | ಪಂಚ ಪಂಚಾತ್ಮಾಮುಂಚೆ ತಿಳಿಸಿವಗೆ ಸ | ತ್ಪಂಚ ಭೇದ ಜ್ಞಾನವಾಂಛಿತಾರ್ಥದನಾಗೊ | ಅಂಚೆವಹಪಿತನೇ ೩
ನಂದ ಮುನಿ ಮತದ ಮಕ | ರಂದ ಉಣಿಸುತ ಇವಗೆಸಂದೇಹ ಕಳೆದು ಆ | ನಂದಗಳ ನೀಯೋಇಂದಿರಾರಾಧ್ಯ ಪದ | ಮಂದಾಕಿನೀ ಜನಕಕಂದನನು ಕಾಪಾಡು | ಯೆಂದು ಪ್ರಾರ್ಥಿಸುವೇ ೪
ಆವದೇಶವು ಕಾಲ | ಯಾವ ಸಮಯದಲಿರಲಿದೇವತವ ಸಂಸ್ಮರಣೆ | ಭಾವದಲಿ ಮಾಳ್ವಾಭಾವ ಪಾಲಿಸುತಿವಗೆ | ನೀವೊಲಿಯ ಬೇಕೆಂದುದೇವ ಪ್ರಾರ್ಥಿಪೆ ಗುರೂ | ಗೋವಿಂದ ವಿಠಲಾ ೫


ವಿಘ್ನೇಶಾ – ಪಾಲಿಸೊ – ಎನ್ನ – ವಿಘ್ನೇಶಾ ಪ
ವಿಘ್ನೇಶ ಪಾಲಿಸೊ ಯೆನ್ನಾ | ದೋಷಭಗ್ನವ ಗೈಸಯ್ಯ ಮುನ್ನಾ | ಆಹಲಗ್ನವಾಗಲಿ ಯೆನ್ನ ಮನ ಆದೀಂದ್ರಿಯಗಳುಯಜ್ಞೇಶ ಶ್ರೀಹರಿ ಪದದ್ವಯ ವನಜದಿ ಅ.ಪ.
ಶಿರಿವ್ಯಾಸ ಹೃದ್ಗತ ಅರ್ಥಾ | ನೆರೆಅರಿತು ಲಿಖೀಸಿದೆ ಗ್ರಂಥಾ | ನೋಡುಕರುಣಾಳು ಹರಿಕೃಪಾ ಪಾತ್ರಾ | ಬಾಗಿಶರಣೆಂಬೆ ತಿಳಿಸ್ಯದರರ್ಥಾ | ಅಹತಾರಕಾಂತಕನನುಜ | ವೀರ ವೈಷ್ಣವ ನಿನ್ನಪರಮಾನುಗ್ರಹವನ್ನ | ಕರುಣಿಸಿ ಕಾಯೆನ್ನ ೧
ಚಾರುದೇಷ್ಣನ ನಾಮದಲ್ಲೀ | ಅವತಾರ ಮಾಡಿದೆ ರುಕ್ಮಿಣೀಲಿ | ಸಿರಿಅರಸನಾಜ್ಞೆಯ ಪೊತ್ತು ಅಲ್ಲೀ | ದೈತ್ಯದುರುಳರ ತರಿದ್ಯೋಧುರದಲ್ಲೀ | ಅಹಧರೆಯ ಭಾರವ ನಿಳುಹಿ | ಮೆರೆದಂಥ ಗುರುವರಪರಮ ಕಾರುಣ್ಯದಿ | ಹರಿಸೆನ್ನ ಭವತಾಪ ೨
ಶೇಷಶತ ದೇವೋತ್ತಮಾ | ಬಾಪುಶ್ರೀಶನ ನಾಭಿಯೆ ಧಾಮಾ | ವಿಶ್ವೋಪಾಸಕ ಖೇಶ ನಿಸ್ಸೀಮಾ | ಪ್ರಾಣಾವೇಶಯುತನೆ ಗುಣಧಾಮಾ | ಅಹಮೂಷಕ ವರವಾಹ ಭೇಶ ಗರ್ವಹರಶ್ರೀಶನ್ನ ಹೃದಯಾವ | ಕಾಶದಲಿ ತೋರೊ ೩
ಮೋದಕೇಕ ವಿಂಶಾದ ಗಣಪಾ | ಪಂಚಭೇದಜ್ಞ ಹರಿಪಾದ ಮಧುಪಾ | ಬೇಡ್ವೆಮೋದ ತೀರ್ಥರ ಮತದಿ ಸುಖಿಪಾ | ನಂದಸಾಧನ ಕೋಡು ವೇಗ ವಿಘ್ನಪಾ | ಆಹಮೃದ್ಬವ ಪ್ರಾರ್ಥಿಪೆ | ಸಿದ್ಧಿದಾಯಕ ಕಾಯೋಬುದ್ಧಿ ವಿಧ್ಯಾ ಪರಿ | ಶುದ್ಧ ಭಕ್ತಿಯನಿತ್ತು ೮
ತ್ರಿವಿಧ ತಾಪವ ಕಳೆಯೊ ಯೆನ್ನಾ | ಮನಭವನದಿ ಸಿರಿ ರಮಣನಾ | ಗುರು ಗೋವಿಂದ ವಿಠಲಾಭಿಧನ್ನಾ | ನಿಲ್ಲಿಸಿಅವಿರತವನ ಧ್ಯಾನವನ್ನಾ | ಆಹಗೈವಂಥ ಸೌಭಾಗ್ಯ | ಪಾಲಿಸೊ ವಿಘ್ನೇಶಶ್ರೀವರನಂಘ್ರಿ ಸರೋಜ | ಭೃಂಗನೆ ಕರುಣೀ ೫

೪೫೬
ವಿಜಯ ಗುರು ಕರಜಾತ | ಮೋಹನ್ನರಾಯಾ ಪ
ನಿಜ ಪಾದ ರಜಕಾಗಿ | ಭಜಿಪೆ ತವ ಚರಣಾ ಅ.ಪ.
ಸುಖತೀರ್ಥ ಸಿದ್ಧಾಂತ | ಪ್ರಾಕೃತದಿ ರಚಿಸಿ ಅಜಭೃಕುಟ ಸಂಜಾತ | ಸುರಮುಖರು ಹರಿಪದಕೇ |ಮುಕುಟಗಳ ಚಾಚಿ ಸದ್ | ಭಕುತಿ ಬೇಡುವರೆಂಬಉಕುತಿ ತರತಮ ಪೇಳಿ | ಮುಕುತಿ ಪಥತೋರ್ದ ೧
ಗುರು ಚರಣ ಸರಸಿಜ | ದ್ವಯಕೆರಗಿಬಿನ್ನವಿಸಿ |ಶರಣಜನ ಸಂತತಿಯ | ನೆರೆ ಪೊರೆಯಲೂ |ವರಅಭಯದಿಂ ಚಿನ್ನಿ | ವರದ ಕುಲಸ್ಥಿರ ಮಾಡ್ದಪರಿಸರ ಕುಲೋತ್ಪನ್ನ | ಪೊರೆಯೊ ಮೋಹನ್ನಾ ೨
ಕಾಯ ಭವ ಪಿತಪಾದ | ತೋಯಜವ ಕಾಣದಲೆಆಯುಗಳು ವ್ರಯವಾಗಿ | ಕಾಯ ಬಳಲಿಹುದೂ |ಶ್ರೀಯರಸ ನಮ್ಮ ಗುರು | ಗೋವಿಂದ ವಿಠಲಪದಪ್ರೀಯದಲಿ ತೋರಯ್ಯ | ಜೀಯದಮ್ಮಯ್ಯಾ ೩

೪೩೮
ವಿಜಯ ಗುರು ಜಯ ಜಯವು ನಿಮ್ಮಪದಕೇ ಪ
ವಿಜಯ ಸಖನನ ಪಾದ ಅಬುಜ ನಿಜ ಮಧುಪಾ ಅ.ಪ.
ಮೋದತೀರ್ಥರ ದಿವ್ಯ | ಪಾದಗಳನಾಶ್ರಯಿಸಿಬೋಧಿಸುತ ತಿಳಿ | ಯಾದ ಪ್ರಾಕೃತದಲೀ |ವೇದಾದಿ ಶಾಸ್ತ್ರ ಸೂ | ಧಾದಿ ಟೀಕೆಗಳ ಸೂಳ್ಹಾದಿಯಲಿ ರಚಿಸುತ್ತ | ಮೋದ ಪಡಿಸಿದೆಯೋ ೧
ಅಡಿಗಡಿಗೆ ನಿಮ್ಮಯಾ | ಅಡಿಗಳಿಗೆ ಎರುಗುವೆನುಬಿಡದಲೇ ನೀವಿನ್ನು | ಕೈ ಪಿಡುವುದೂ |ಕಡು ದಯಾನಿಧಿ ಗುರುವೆ | ಪೊಡವಿ ಪತಿ ಹರಿಯಂಘ್ರಿಜಡಜದಲಿ ಕಡು ಭಕುತಿ | ದೃಢಮಾಡಿ ಪೊರೆಯೊ ೨
ಏಸೇಸೊ ಜನ ನಿಮ್ಮ | ನಾಶ್ರಯಿಸುತೀ ಭವದಪಾಶವನೆ ಕಳೆದು ಸಂ | ತೋಷಿಸಿದರೋ |ಮೇಶ ಗುರುಗೋವಿಂದ | ವಿಠ್ಠಲನ ಪಾದ ವಾರಾಶಿಜವನೇ ತೋರಿ | ಸಲಹಯ್ಯ ಕರುಣೀ ೩

೪೩೯
ವಿಜಯ ದಾಸರ ಭಜಿಸಿರೋ | ಸುಜನರೆಲ್ಲ ನೀವೂ ಪ
ವಿಜಯ ದಾಸರ ಭಜಿಸೇ | ಕುಜನ ಮರ್ದನ ನಮ್ಮವಿಜಯ ವಿಠಲ ತಾನೇ | ನಿಜವ ತೋರುವ ಮನದೀ ಅ.ಪ.
ಮುನ್ನ ಸುರಲೀಲಾ ನೆನಿಸಿ ತಾ |ಜನಿಸಿದ ತ್ರೇತಾಯುಗದಿ |ವನಧಿಜೆ ರಮಣ ಶ್ರೀ | ಹನುವ ಸೇವಿತನಾದಶ್ರೀನಿವಾಸನ ಚರಣ | ವನಜವ ಸೇವಿಸಿದಾ ೧
ಸಕಲ ಸದ್ಗುಣ ಆಕರಾ |ನಿಖಿಲ ಲೋಕದ ಧಾರಕಾ |ಪಾಕಶಾಸನ ಪೂಜ್ಯ | ಗೋಕುಲರೊಡೆಯನನಿಕಂಪಾನೆನಿಸಿ ಜನಿಸಿ | ಕೃಷ್ಣನ್ನ ಪೂಜಿಸಿದ ೨
ಸುರ ಪುರ ಮುನಿ ನಾರದಾ |ವರಕಲಿಯಲ್ಲಿ ಜನಿಸೇ |ತುರುಕರುವಾಗಿ ಅವರಾ | ಚರಣವ ಸೇವಿಸಿದಮರಳಿ ಅವರ ಪುತ್ರಾ | ಗುರುಮಧ್ವಪತಿ ಭೃಗುವಾ ೩
ಪದಪಂಚ ಲಕ್ಷ ಗ್ರಂಥಕೇ |ಪಾದವೇ ನ್ಯೂನವಿರಲೂ | ಪದಪದ್ಯ ಸುಳ್ಹಾದಿಯಲಿ |ಪಾದ ಪೂರ್ತಿಯ ಮಾಡೆಮೋದದಲುದಿಸಿದಾ | ಬುಧನು ದಾಸಪ್ಪ ನೆನಿಸೀ ೪
ಪರಮ ಕಾರುಣ್ಯ ಗುರುವೇ |ಕರವ ಪಿಡೀರಿ ಎನ್ನಾ |ಮರುತಾಂತಾರಾತ್ಮಾ ಗುರು | ಗೋವಿಂದ ವಿಠ್ಠಲನಚರಣವ ತೋರಿಸೀ | ಕರುಣದಿ ಪೋಷಿಸಿ೫

೪೪೨
ವಿಜಯ ರಾಯರ ಭಜಿಸದವ ನಿರ್ಭಾಗ್ಯ ಕಾಣೋ ಪ
ಅಜಭವರಕಿಂತಧಿಕ ಗಜವರದ ಪರನೆಂದಾ ಅ.ಪ.
ಋಷಿಗಳೆಲ್ಲರು ಕಲೆತು ಸತ್ರಯಾಗವ ಮಾಡೆಹೃಷಿಕೇಶ ಚತುರಾಸ್ಯ ಕೈಲಾಸ ವಾಸಾ |ಈಸು ಮೂರ್ತಿಗಳಲ್ಲಿ ಮಿಗಿಲಾರು ಎಂದೆನ್ನೆಸೂಸಿ ಮೂರ್ಲೋಕಗಳ ಶ್ರೀಶ ಪರನೆಂದಾ ೧
ದೇವಮುನಿ ನರನಾಗಿ ಭುವಿಯಲ್ಲಿ ಜನಿಸುತಾದೇವದೇವನ ಸ್ತೋತ್ರ ಕವನವನೆ ಗೈದಾ |ಆವ ಲಕ್ಷವು ಪಂಚಕೆ ನ್ಯೂನ ಪಾದವ ಮಾಡ್ದದೇವ ಮುನಿ ಸುತ ಗುರು ಮಧ್ವಪತಿ ವಿಠಲಾ ೨
ಜವನವರು ಕೊಂಡ್ಯೋಗೆ ಜವಪುರಿಗೆ ತನಯನಾಜವನೊಡನೆ ಶೆಣೆಶಾಡಿ ಹರಿಗೆ ಮೊರೆಯಿಡಲು |ಜೀವದಾನವ ಪೊಂದಿ ಚಿಪ್ಪಗಿರಿಗೆ ತೆರಳಲುಜೀವಂತ ನಾದನೈ ತನಯ ಮೋಹನ್ನಾ ೩
ಪೂರ್ಣಬೋಧರ ಮತವ ಗಾನ ರೂಪದಿ ಪೇಳಿಪೂರ್ಣಗುಣ ಹರಿಯೆಂದು ಸ್ಥಾಪಿಸುತಲೀ |ಪೂರ್ಣ ಸಂಪ್ರೀತಿಯಲಿ ನೆಲೆಸಿ ಚಿಪಗಿರಿಯಲ್ಲಿಪೂರ್ಣನಂಘ್ರಿಯ ಭಜಿಸಿ ಭಕ್ತರನೆ ಪೊರೆದಾ ೪
ಯುವ ಸಂವತ್ಸರದ ಸುಕಾರ್ತಿಕದ ಸಿತಪಕ್ಷಯಾದು ಗುರುದಿನ ದಶಮಿ ಮೊದಲ್ಯಾಮದಿ |ಪವನಾಂತರಾತ್ಮ ಗುರು ಗೋವಿಂದ ವಿಠ್ಠಲನಸ್ತವನದಿಂದಲಿ ಪೊರಟ ಹರಿಯ ಪುರಕಾಗಾ ೫

೪೪೦
ವಿಜಯರಾಯ | ಗುರು | ವಿಜಯರಾಯ ಪ
ವಿಜಯರಾಯ | ಗುರು | ವಿಜಯರಾಯ ಅ.ಪ.
ಎರಡನೆ ಯುಗದೊಳು | ವಿ | ಸುರಲೀಲ ಕಪಿಯಾದ್ನೊ |ವಿ|ಹರಿಕಾರ್ಯಕನುವಾಗಿ | ವಿ | ಹರಿಕರುಣ ಪಾತ್ರನೆ | ವಿ | ೧
ಶಕಟ ಭಂಜನ ಪಾದ | ವಿ | ಸುಕಮಲವ ಸೇವಿಸೆ | ವಿ |ಪ್ರಕಟಿ ಯಾದವರಲ್ಲಿ | ವಿ | ನಿಕಂಪಾನೆನಿಸೀದೆ | ವಿ | ೨
ವರ ಕಲಿಯುಗದೊಳು | ವಿ | ಪುರಂದರ ದಾಸರೋಳ್ ತುರುಕರು ನೀನಾಗಿ | ವಿ | ಹರಿಚರಿತೆ ಕೇಳಿದೆ | ವಿ |೩
ಧರೆ ಸುರ ಜನುಮದಿ | ವಿ | ಗುರು ಮಧ್ವಪತಿಯಾಗಿ | ವಿ |ಗುರು ಚರಣ ಸೇವಿಸಿ | ವಿ | ಪರ ವಿದ್ಯಾರ್ಜಿಸಿದ್ಯೊ | ವಿ | ೪|
ಗುರು ವಾಜ್ಞದಿ ಮತ್ತೆ | ವಿ | ತಿರಿಪಾದ ಪೂರೈಸೆ ವಿ |ವರ ಭೂಸುರನಾಗಿ | ವಿ | ಹರಿಚರಿತೆ ಪೇಳಿದೆ | ವಿ | ೫
ವರಯುವ ವತ್ಸರ | ವಿ | ಎರಡು ನಾಲ್ಕರ ಮಾಸ | ವಿ |ಎರಡು ಐದನೆ ದಿನ | ವಿ | ಗುರುವಾರ ಪ್ರಹರದಿ | ವಿ | ೬
ವರಯೋಗ ಮಾರ್ಗದಿ | ವಿ | ಗುರು ಗೋವಿಂದ ವಿಠಲನ | ವಿ |ಚರಣಾಬ್ಜ ಸೇರುತ | ವಿ | ಮೆರೆವೆ ಭಕ್ತರ ಮನದಿ | ವಿ |೭

೪೪೧
ವಿಜಯರಾಯರಂಘ್ರಿ ಕಮಲ | ಭಜಿಸಿ ಬದುಕಿರೋನಿಜ ಸುಜ್ಞಾನ ಹರಿಭಕ್ತಿ | ನಿಜಕೆ ತರುವರೋ ಪ
ಸಂತ ಶ್ರೀನಿವಾಸನಹಂ | ಮತಿಯ ವಿಚಾರಾಚಿಂತಿಸದೆ ಒಲಿದಂಥ | ಶಾಂತ ಚಿತ್ತರಾ ||ಕಂತುಹರ ಸುತನಂಶ | ಜಾತರಿಹರಾಅಂತೆ ತೋರಿ ದಾಸ ದೀಕ್ಷೆ | ಪಂಥ ವಿತ್ತರಾ ೧
ಮಂಗಳದುತ್ಸವಕಾಗಿ | ಸಂಘ ಬರ್ಲಾಗಿಮಂಗಳ ಭಕ್ಷವು ಮಂಡಿಗಿ | ಮಾಳ್ಪರಿಲ್ಲಾಗಿಭಂಗ ಭೀತಿ ಅಧಿಪಗೊದಗಿ | ಚಿಂತಿಸಲಾಗಿಅಂಗ ವೇಷ ಬದಲಾಗಿ | ಬಂದ ತಾನಾಗಿ೨
ಗ್ರಂಥ ಸುಧಾಭಿಧ ಬಲ್ಲ | ಸಂತ ಸುಬ್ಬಣ್ಣಸಂತ ವಿಜಯದಾಸಗಿಂಥ | ಗ್ರಂಥವೆಲ್ಲಣ್ಣಅಂತೆ ದಾಸಗಪರೋಕ್ಷ | ಕಂತೆ ಕಾಣಣ್ಣಚಿಂತಿಸುತ್ತ ಪ್ರವಚನ | ಭ್ರಾಂತ ನಿದ್ದನ ೩
ಬಂದು ವಿಜಯದಾಸರಾಗ | ತೊಂದರೆ ಯೋಗ ಛಂದದಿಂದ ನೀಗಿ ಭಕ್ಷ | ಮಾಡಿದ ರಾಗ |ಬಂದು ಸುಧಾ ಕೇಳುತಿರಲು | ಆಚಾರ್ಯರಾಗ ಸಂದೇಹವ ಪಡುತಲಿ | ಮೌನವಿರಲಾಗ ೪
ಪಾಚಕನ ತೆರ ಬಂದ | ಭೃಗುವಿನಂಶನುನೀಚ ನೀರಿನವನ ಶಿರದಿ | ಚಾಚಿ ಕೈಯ್ಯನ್ನುಬಾಚಿ ಬಿಡಿಸೆಂದ ಅವರ | ಸಂಶಯವನ್ನುವಾಚೀಸೀದ ಅನುವಾದ | ನೀರಿನವನೂ೫
ಪೇಚಿಗೆ ಸುಬ್ಬಣ್ಣ ಸಿಕ್ಕಿ | ಮನದಿ ತಪಿಸೀ |ಯಾಚಿಸೀದ ಕ್ಷಮೆಯನ್ನು | ಬಹಳ ಪ್ರಾರ್ಥಿಸಿ ||ಸೂಚಿಸಲು ಶೈವನಿದ್ದ | ಬೇಲೂರು ವಾಸಿಪ್ರಾಚೀನದ ಸ್ರ‍ಮತಿ ಬಂತು | ನಂಜುಂಡ ನೆನಿಸಿ ೬
ಪಾಣಿ ಇಟ್ಟು ಶಿರದಲ್ಲಿ | ಆಶೀರ್ವದಿಸಿವೇಣುಗೋಪ ದಾಸರಲ್ಲಿ ಅಂಕಿತ ಕೊಡಿಸಿ ||ಸಾಣೆ ಇಟ್ಟಂತಾಯಿತವನ | ಜ್ಞಾನದ ಅಸಿಮಾಣದಲೆ ವಿಜಯ ಕವಚ | ಮಾಡಿದ ಸೂಸಿ ೭
ದಾಸಕೂಟ ಜನರೆಲ್ಲ | ಬಿಡದೆ ಪಾಡುವವ್ಯಾಸವಿಠಲ ರಚಿತೆನ್ನ | ವಿಜಯ ಕವಚವಲೇಸು ನೆರೆ ನಂಬಿದೆನ್ನ | ವಿಠಲ ಸ್ತೋತ್ರವಮೀಸಲಾಗಿ ಪಾಡುವರು | ಸ್ತೋತ್ರವೆಲ್ಲವ ೮
ವರ್ಷ ಸೌಮ್ಯ ಕಾರ್ತೀಕದಿ | ಸೇವಿಸುತ್ತಿರೆದರ್ಶನಿತ್ತು ಸ್ವಪ್ನದಲ್ಲಿ | ಧೈರ್ಯಕೊಟ್ಟಾರೆಹರ್ಷವಿತ್ತು ದಾಸಕಾರ್ಯ | ಸಾಗಿಸುತ್ತಾರೆದರ್ಶದಿನ ಪುಷ್ಯ ನೃಹರಿ | ಯಾತ್ರೆಯಿತ್ತಾರೆ ೯
ಕಾರ್ತಸ್ವರೇತ್ಯಾದಿ ವಿತ್ತ | ಒಂದು ನಾನೊಲ್ಲೆಪಾರ್ಥಸಾರ್ಥಿ ಸೇವೆ ನಿತ್ಯ | ಇಲ್ಲದಿನ ವೊಲ್ಲೆ ||ಮೂರ್ತಿ ಬಿಂಬ ತೋರಿ ಎಂದು | ಕೇಳುವ ಸೊಲ್ಲೆಸಾರ್ಥಕವ ಮಾಡಿರೆಂದು | ಪ್ರಾರ್ಥಿಸೆ ಬಲ್ಲೆ ೧೦
ಭಾವಭಕ್ತಿ ಸುಜನ ಸಂಗ | ವಿತ್ತು ಸುಶೀಲಕಾವ ದಾಸ ಜನರನ್ನು | ಹೃದಯ ವಿಶಾಲಗೋವ ಪರಿಪಾಲ ಗುರು | ಗೋವಿಂದ ವಿಠಲನತೀವರದಿ ಭಜಿಸಿ ಕಳೆದ | ಮಾಯಾಪಟಲ೧೧

೧೩೫
ವಿಠಲಯ್ಯ – ವಿಠಲಯ್ಯ ಪ
ಧಿಟನಿಹೆ ನೀ | ಷ್ಕುಟಲ ಗುರು ಗೋವಿಂದಅ.ಪ.
ಜಿಗಿದು ಜಲದಿ ನಗ ಮಂದರ ನೆಗಹುತವಿಗಡಾಸುರ ಹಯಮೊಗನನ ಕಡಿದೆ ೧
ಪಟುತರ ನರಮೃಗ | ವಟು ವೇಷದಿ ನಿನ್‍ಎಟಪದದಂಗುಟ ಸುರ | ತಟನಿಗೆ ಕಾರಣ ೨
ನೃಪಕುಲ ಛೇದನ | ವಿಪಿನದಿ ಶಬರಿಯಸುಫಲವ ಮೆ | ದ್ದ ಪವರ್ಗಗಿತ್ತೆ ೩
ಕ್ರೂರರ ತರಿದು | ವರ ಸತಿಯರ ವ್ರತನೆರೆ ಅಳಿಸುತ ತಾ | ತುರಗವನೇರ್ದಾ ೪
ಭಾವದಿ ಮೈಮರೆ | ದಾವನು ತವಪದಸೇವಿಸೆ ಸಲಹುವಿ | ಗುರು ಗೋವಿಂದ ೫

೧೩೬
ವಿಠಲಾ ಕಳೆಮದವಿದ್ಯಾ ಪಟಲಾ |ನಿಟಲಾಕ್ಷನ ಸಖಸಂ | ಕಟ ಕಳೆ ನಿಮ್ನಟಲನ ಮಾಡುತ ಪ
ತುರಗ ಗ್ರೀವಾಭಿಧನೆಂಬಸುರಾ | ವೇದಾಪಹಾರನೆರೆವೇರಿಸೆ ಸ್ವೀಕರಿಸವತಾರಾ | ಹಯಮುಖನಾಕರ |ಅರಿಶಿರ ಸರಸದಿ ತತ್ತರಿಸುತ ನೀಸುರರುಗಳನು ಬಹು ಪರಿಪೋಷಿಸಿದ್ದೆ ೧
ಧರೆಯನಪಹರಿಸಲು ಸುರವೈರೀ | ವರಾಹಾವತಾರಿತ್ವರದಿ ಹಿರಣ್ಯಾಕ್ಷನ ಸಂಹಾರೀ | ನೀನಾದೆ ಮುರಾರಿ |ಧರಣಿಯ ಕೋರೆಯ ದಾಡಿಯಲೆತ್ತುತ್ತಸುರ ಜೇಷ್ಠಗೆ ತಂದೊಪ್ಪಿಸಿದ್ಯೆಯ್ಯ | ೨
ತುರಗವ ನೀನೇರುತ ಬಂದೂ | ನಿನಪುರದೊಳಂದುಇರೆ ಧೇನೂಪಲಾರ್ಯರು ಅಂದು | ನೋಡಿ ಚಕಿತರಂದೂಗುರು ಗೋವಿಂದ ವಿಠಲಾಲೇನಾಹಿ ಎಂದುಬರಿದೋಡಿದೆ ನೀ ದರುಶನ ಕೊಡದೇ ೩

೧೩೪
ವಿಠ್ಠಲ ವಿಠ್ಠಲ ವಿಠ್ಠಲ ಎನು ಮನವೇ ಪ
ವಿಠ್ಠಲ ಎನೆ ಹೃದದಿಷ್ಠಿತನಾಗುವದುಷ್ಟ ಕುಲಾಂತಕ ಕಷ್ಟವ ನೀಗುವ ಅ.ಪ.
ಲಿಂಗ ಶರೀರವ | ಭಂಗಿಸೆ ಸಜ್ಜನಸಂಗ ಮಾಡು ದು | ಸ್ಸಂಗವ ನೀಗೋ |ಅಂಗನೆಯರ ಬೆಳದಿಂಗಳ ನಗೆಗೆಮಂಗನಾಗಿ ಭವ | ಭಂಗಕೆ ಸಿಲುಕದೆ ೧
ಹಸಗೆಡಿಸುವ ದು | ರ್ವಿಷಯದಾಸೆಯ ಬಿಡುಬಿಸಜನಾಭನ ಪದ | ಬಿಸಜವ ನೆನೆಯೋ |ಶಶಿ ಶತ ನಿಭ ಹರಿ | ವಶವ ಮಾಡೆ ಮನಎಸೆವ ಪದ ಪ್ರದ | ಹರ್ಷವ ಪಡಿಸುವ ೨
ಗರ್ವ ಬಿಟ್ಟು ನೀ | ಗುರ್ವಂತರ್ಗತಶರ್ವ ವಂದ್ಯನನು | ಪರ್ವ ಪರ್ವ ನೆನೆಯೋದರ್ವಿ ಜೀವಿ ನಿನ | ಸರ್ವದ ಪೊರೆಯುವದುರ್ವಿ ಭಾವ್ಯ ಗುರು | ಗೋವಿಂದ ವಿಠಲ ೩

೧೩೭
ವಿತತ ಮಹಿಮನೆ ಘನ್ನ – ಯತಿಕುಲ ಶಿರೋರನ್ನಪ್ರತಿ ರಹಿತ ಸಂಪನ್ನ – ಸರ್ವ ಗುಣ ಪೂರ್ಣ ಪ
ಅಚ್ಚ ಕರುಣಿಯೆ ರಂಗ – ಕೊಚ್ಚಿ ಕುಜನರ ಸಂಗಸ್ವಚ್ಛ ಸುಜನರ ಸಂಗ – ಈಯೊ ಕರುಣಾಪಾಂಗ ||ಮಚ್ಛ ಮೂರುತಿ ಹರಿಯೆ – ಭವ ಕರಿಗೆ ನೀ ಹರಿಯೆಕುತ್ಸಿತನ ಸೊಲ್ಲನ್ನ – ಲಾಲಿಪುದು ಘನ್ನ೧
ವೇದ ವಿಭಜನೆ ಗೈದೆ – ಮೋದದಲಿ ಭೋದಿಸಿದೆಹೇ ದಯಾಂಬುಧೆ ವ್ಯಾಸ – ಕಾಯೊ ಮಹಿದಾಸ ||ಬಾದರಾಯಣ ಪೂರ್ಣ – ಭೋದಾರ್ಯನುತ ಚರಣಸಾಧನದಿ ಸಂಪನ್ನ – ಎನಿಸೆನ್ನ ಘನ್ನಾ ೨
ಸಾವಧಾನದಿ ಕೈಯ್ಯ – ಪಿಡಿಯನ್ನ ಅಹಿಶಯ್ಯಜೀವ ಬಹು ಪರತಂತ್ರ – ನೀನೆ ಸ್ವಾತಂತ್ರ ||ಗೋವ ಕಾಯುವ ಗುರು ಗೋವಿಂದ ವಿಠಲನೆನೀ ವೊಲಿದು ಕಾಯದಿರೆ – ಕಾವರಿನ್ನಾರೋ ೩

೬೮೪
ವಿದುರ ವಂದ್ಯ ವಿಠಲನೆ ಕಾಯ ಬೇಕಿವನಾ |ವಿಧಿ ಪಿತನೆ ತವ ಪಾದ ಪದುಮ ದಾಸ್ಯವನಿತ್ತು ಪ
ಸಂಸಾರದಲಿ ನೊಂದು | ಕಂಸಾರಿ ತವ ಪಾದಪಾಲಿಸುವನೆ ಶಿರದೊಳಗಸಂಶಯದಿ ಧರಿಸೀ |ವಿಂಶತಿಯ ಮತ್ತೊಂದು ಭಾಷ್ಯ ದೂಷಕ ಮರು-ತ್ತಂಶ ಸಂಭೂತ ಶ್ರೀ ಮಧ್ವ ಮತದವನಾ ೧
ಆವ ಭವರೋಗ ಹ | ಭಾವ ಕ್ರಿಯ ದ್ರವ್ಯಾಖ್ಯಅದ್ವೈತ ತ್ರಯಗಳನು ಸಂಧಾನವಿತ್ತೂ |ದೇವ ದತ್ತದಿ ತೃಪ್ತಿ ಭಾವವನೆ ನೀನಿತ್ತುಭಾವದಲಿ ತವರೂಪ ಓವಿ ತೋರುವುದೂ ೨
ಆಗಮಸುವೇದ್ಯ ಭವರೋಗ ವೈದ್ಯನೆ ದೇವನಾಗಾರಿ ವಾಹನನೆ | ಯೋಗಿಧ್ಯೇಯಾಆಗು ಹೋಗುಗಳೆರಡು | ನೀನಿತ್ತುದೆಂಬಂಥಜಾಗ್ರತೆಯ ನೀನಿತ್ತು ಕಾಪಾಡು ಹರಿಯೇ ೩
ಕುಡುತೆ ಪಾಲನು ಭಕ್ತ ಕೊಡಲದನು ಕುಡಿಯುತ್ತಕಡಲಂತೆ ಹಾಯಿಸಿದೆ ಬಡವರಾಧಾರೀ |ಧೃಡಭಕ್ತಿ ಸುಜ್ಞಾನ ವೈರಾಗ್ಯ ಭಾಗ್ಯಗಳಕಡು ಕರಣಿ ನೀನಿತ್ತು ಕಡೆಹಾಯ್ಸು ಭವವಾ ೪
ಸರ್ವಜ್ಞ ಸರ್ವೇಶ ಸರ್ವಾಂತರಾತ್ಮಕನೆದರ್ವಿಜೀವನ ಕಾಯೊ ದುರ್ವಿಭಾವ್ಯಾ |ಗುರ್ವಂತರಾತ್ಮ ಮತ್ಪ್ರಾರ್ಥನೆಯ ಸಲಿಸಯ್ಯಶರ್ವವಂದ್ಯನೆ ಗುರು ಗೋವಿಂದ ವಿಠಲಾ ೫

೬೮೩
ವಿಧಿಮಾತೆ ಪತಿ ವಿಠಲ | ಬುಧಜನೇಡ್ಯಾಮುದದಿಂದ ಲೀಕೆಯನು | ಸಲಹೊ ಶ್ರೀ ಹರಿಯೇ ಪ
ನೊಂದು ಭವದಲಿ ಬಹಳ | ಇಂದಿರಾರಮಣ ತವಅಂದ ಪದದಾಸ್ಯ ಮನ | ಮಂದಿರದಿ ಬಯಸೀ |ಬಂದು ಬೇಡ್ದಳಿಗೆ ನಾ | ನೊಂದು ಅಂಕಿತವಿತ್ತೆತಂದೆ ತೈಜಸನೆ ನೀ | ನಂದೆ ಪೇಳ್ದಂತೇ ೧
ಬಹಳ ಭಕ್ತಿಯಲಿಂದ | ವಿಹಿತ ಕರ್ಮಾಸಕ್ತೆಅಹಿಶಯ್ಯ ಕೃಪೆಯಿಂದ | ಮಹಿಮೆ ತೋರೀ |ಅಹಿತ ವಿಹಿತಗಳೆರಡ | ಸಹನೆ ದಯಪಾಲಿಸುತಮಹಮಹಿಮ ಪೊರೆ ಇವಳ ಸುಹೃತ ಜನರ ಬಂಧೋ೨
ಜ್ಞಾನಾಯು ರೂಪನಿಗೆ | ನೀನಿವಳನೊಪ್ಪಿಸುತಸಾನುಕೂಲಿಸು ಮುಕುತಿ | ಜ್ಞಾನ ಭಕುತಿಗಳಾ |ಕಾಣೆ ತವ ಕಾರುಣ್ಯ | ಕೆಣೆಯು ತ್ರೈಭುವನದಲಿಮಾಣದಲೆ ಪೊರೆ ಇವಳ | ದೀನ ಜನ ಪಾಲಾ ೩
ಕಾಳೀಯನ್ಹೆಡೆಯಲ್ಲಿ | ತಾಳ ಮೇಳಕೆ ಕುಣಿದುಕಾಳ ಸರ್ಪದ ಮದವ | ಮೇಲಾಗಿ ಕಳೆದಕಾಳಿಂದಿ ಪತಿ ಕೃಷ್ಣ | ಕಾಳಿಪತಿನುತ ಹರಿಯೆಕಾಳಘಾವಳಿಗಳನು | ಕಳೆದು ಪೊರೆ ಇವಳಾ೪
ಪಾವನಾತ್ಮಕ ದೇವ | ಪಾವಮಾನಿಯ ಪ್ರೀಯಜೀವ ಪರತಂತ್ರತೆಯ | ಭಾವ ಅನುಭವದೀದೇವ ಸಾಧನಗೈಸಿ | ಜೀವಿ ಇವಳನು ಪೊರೆಗೋವಿಂದಾಂಪತಿ ಗುರು | ಗೋವಿಂದ ವಿಠಲಾ ೫

೨೨೯
ವಿಪಾಹಿ ಶಿವ ನುತೆ | ಭಾರತಿ ಮಾತೆವಿಪಗಮನು ಎನೆ | ಅಪವರ್ಗ ಪ್ರದಹರಿಸುಪವಿತ್ರ ಪದ ತೋರು || ಕರುಣವ ನೀ ಬೀರು ಪ
ಅಪರೋಕ್ಷ ಮಾನಿಯೆ | ವಿಪರೀತ ಮತಿಕಳೆಗುಪಿತ ಸಾಧನ ಗೈಸಿ | ಸಫಲ ಮಾಡಿಸಿ ಜನ್ಮಅಪರೋಕ್ಷ ಕೊಡಿಸಮ್ಮ | ನಮಿಪೆ ಪದವು ನಿಮ್ಮ ಅ.ಪ.
ದೇವ ಮಾನಿ ಸ | ದಾನು ರಾಗದಿ | ಹಾದಿ ತೋರಿ ಸ | ದಾಗಮಜ್ಜಳೆಛೇದಿಸುತಲಜ್ಞಾನ ನಿಚಯವ | ಭೋದಿಪುದು ಸದ್ಭೋದ ಭಾರತಿ ೧
ಸಾರವೆನಿಪ ಸ | ಮೀರ ಸತಿ ಜಗ | ಭಾರ ನಿಳುಹಲು | ವೀರ ಹರಿ ಅವತಾರ ಅಂಶ ವಿ | ಚಾರದಲೈನ | ಪಾರವೆನಿಪ ಅ | ಜ್ಞಾನ ಕಳೆಯಮ್ಮಾ ೨
ಭಾವಿ ವಾಣಿ ಸು | ಭಾವ ದೊಳು ಹರಿ | ಮಾವಿನೋದಿಯ ಭಾವತೋರ್ವುದುದೇವ ಗುರು | ಗೋವಿಂದ ವಿಠಲನ | ಭಾವ ತಿಳಿದಿಹ | ದೇವಿ ಪಾಲಿಸು ೩

೬೮೨
ವಿಬುಧ ಪ್ರಿಯ ವಿಠಲ | ಶುಭದ ಪೊರೆ ಇವನಾ ಪ
ಅಬುಜ ಜಾಂಡೋದರನೆ | ಕುಬುಜೆ ಸದ್ ವರದಾ ಅ.ಪ.
ದಾಸನಾಗಲು ಇವಗೆ | ಆಶೆ ಪ್ರೇರಕನಾಗಿವಾಸು ದೇವಾಖ್ಯ ತೈ | ಜಸನೆ ಕಾರ್ಯರೂಪಿಸೂಸಿತವ ರೂಪವನು | ಲೇಸಾಗಿ ತೋರಿಸೆಹೆಕೇಶವನೆ ಅದನೆ ಉಪ | ದೇಶಿಸಿಹೆ ಹರಿಯೆ ೧
ಪ್ರೀಯ ಅಪ್ರೀಯ ಉ | ಭಾಯಾನು ಭವದಲ್ಲಿಆಯುತನು ನೀನಾಗಿ | ಉದ್ವೇಗ ಕೊಡದೇನಿಯುತಕರ್ಮದಿ ರತನ | ದಯದಿಂದ ನೀಮಾಡಿಹಯಮೊಗಾಖ್ಯ ಹರಿಯೆ | ಕೈಯಪಿಡಿ ಇವನಾ ೨
ಲೋಕವಾಕ್ಯದಿ ವಿರಸ | ಲೋಕೈಕನಾಥನುವಾಕ್ಯದೊಳು ರತಿಯನ್ನೆ | ನೀ ಕೊಟ್ಟಿ ಕಾಯೋ |ಮಾಕಳತ್ರನದಾಸ | ಸಂಕುಲದಿ ಸದ್‍ಭಕ್ತಿಶ್ರೀಕರನೆ ನೀನಿತ್ತು | ಸಾಕ ಬೇಕಿವನಾ ೩
ಮಧ್ವಮತದಲಿ ದೀಕ್ಷೆ | ಶುದ್ಧ ಹರಿ ಗುರುಭಕ್ತಿಅದ್ವೈತ ಕ್ರಯವರಿಯೆ | ವಿದ್ಯೆ ಸಂಘಟಿಸೀಕೃದ್ಧಖಳ ನಿವಹಗಳ | ಪ್ರಧ್ವಂಸಗೈಯುತಲೀಉದ್ದರಿಸೋ ಇವನನ್ನು | ಮಧ್ವಾಂತರಾತ್ಮ ೪
ವೇದ ಕದ್ದೊಯ್ದವನ | ಬಾಧೆ ನೀ ಪರಿಹರಿಸಿಸಾದುಗಳ ಪೊರೆದಂತೆ | ಆದರಿಸಲಿವನಾಮೋದಿ ಗುರು ಗೋವಿಂದ | ವಿಠಲನೆ ಬಿನ್ನವಿಪೆಮೈದೊರಿ ಸಲಹುವುದು | ಸಾಧುವಂದಿತನೇ ೫

೨೭೯
ವಿವಸ್ವಾನ್ನಾಮಕ ಸೂರ್ಯ ಪುತ್ರೀ |ತ್ರಿವಿಧ ತಾಪಂಗಳನು ಕಳೆವ ಶುಭಗಾತ್ರೀ ಪ
ಕಾಳಕೂಟವ ಮೆದ್ದು ದೇವತತಿ ಸಲಹಿದಗುಕಾಲಾಖ್ಯ ಗರುಡಂಗು ಕಾಳ ಉರಗನಿಗೂ |ನೀಲಾಖ್ಯೆಯಂದದಲಿ ಪಂಚಗುಣದಿಂ ನ್ಯೂನಕಾಳಿಂದಿ ದೇವಿಯರಿಗಾ ನಮಿಪೆ ಸತತ ೧
ಸಂಚಿತ ಸುಪಾಪಕ್ಕೆ ಅನುತಾಪವೆಂಬುವುದುಚಿಂತಿಸುವ ತತ್ವಗಳ ನಿರ್ಣಯಾದಿಗಳ |ಇಂತಪ್ಪ ಸತ್ಕರ್ಮ ಸಂತರಿಂ ತಿಳಿಸುತ್ತಚಿಂತಿಪುದೆ ಸತ್ತಪವು ಚಿತ್ತ ನಿಗ್ರಹವೆಂಬ ೨
ಹರಿಮೂರ್ತಿ ಇಹ ಕ್ಷೇತ್ರ ದರ್ಶನಕೆ ಪೋಗದಿಹಚರಣಗಳು ಇದ್ದಾಗ್ಯು ದಗ್ಧವೆಂತಣಿಪೇ |ಹರಿ ಪ್ರತಿಮೆ ಪೂಜಿಸದ ಕರಗಳಿದ್ದರು ವ್ಯರ್ಥಹರಿ ಮೂರ್ತಿ ಕಾಣದಿಹ ಕಂಗಳಿನ್ನೇಕೇ ೩
ಹರಿ ಕಥೆಯ ಕೇಳದವ ಬಧಿರನೇಸರಿ ಅವನುಹರಿಯೆ ನಿರ್ಮಾಲ್ಯ ಮೂಸದಿಂದ್ರಿಯ ವ್ಯರ್ಥ|ಹರಿಯ ನೈವೇದ್ಯಗಳ ರುಚಿಸದಿಹ ನಾಲಗೆಯುಹರಿಯಂಗ ಸ್ಪರ್ಶಿಸದ ಇಂದ್ರಿಯವು ವ್ಯರ್ಥ ೪
ಮನ ಮೂರ್ತಿ ಧ್ಯಾನಿಸದ ಮನಿಸಿನಿಂದ್ರಿಯ ವ್ಯರ್ಥಇನಿತು ದಶ ಕರಣಗಳ ವ್ಯಾಪಾರವಾ |ಗುಣಿಸಿ ತಪವೆಂದೆನುತ ಹರಿಯರ್ಪಣೆಂಬುವುದೆಘನ ತಪವು ಎಂದೆನುತ ಚಿಂತಿಪ ಸುಗಾತ್ರೀ ೫
ಹರಿಯೆ ತವ ಮುಖ ಕಮಲ ದರ್ಶನವು ಎನಗೆಂದುಪರಿ ಪರಿಯ ಚಿಂತಿಸುತ ಚರಿಸಿ ಸತ್ತಪವಾ |ಹರಿಯ ದರ್ಶನ ಪಡೆದು ಹರಿಯನುಗ್ರಹದಿಂದಹರಿ ಮಡದಿ ನೀನಾಗಿ ಹರಿಗೆ ಪ್ರಿಯಳಾದೇ ೬
ಚಿತ್ಸುಖಂಗಳನಿತ್ತು ಭಕ್ತರನು ಪಾಲಿಸಲುಸತ್ಸಂಗವೇ ಮುಖ್ಯ ಅದನ ಪ್ರಾರ್ಥಿಸುವೆ |ವತ್ಸಾರಿ ಹರಿ ಗುರು ಗೋವಿಂದ ವಿಠ್ಠಲನಚಿತ್ತದಲಿ ತೋರೆಂದು ನಿತ್ಯ ಭಿನ್ನವಿಪೇ ೭

೪೧೪
ವಿಶ್ವಕ್ಕೆ ಪ್ರಿಯ ಗುರುವರ್ಯ | ಕಾಯೊವಿಶ್ವಪ್ರಿಯಾಭಿಧ ಯತಿವರ್ಯ ಪ
ಧೃತ – ವಿಶ್ವದೊಳಗಾವೆಲ್ಲಿ ನಿಮಗೆಣೆ | ಸುಸ್ವಭಾವ ವಿರಾಗಭೂಷಣವಿಶ್ವ ವಾಯುಪದಾರ್ಹವಂಶಜ ಹ್ರಸ್ವಗೈವುದು ಎನ್ನಕರ್ಮ ಅ.ಪ.
ವಿಶ್ವಾಧೀಶ್ವರ ಮುನಿ ಕರಜ | ಯತಿ | ವಿಶ್ವೇಶ ತೀರ್ಥರ ಕರಜವಿಶ್ವಪ್ರಿಯಾಭಿಧ ದಿವಿಜ | ಧೃತ | ಅಶ್ವಗ್ರೀವನ ಪಾದರಜ |ವಿಶ್ವ ಗುರು ಮಧ್ವಾರ್ಯ ಶಾಸ್ತ್ರದ | ನಿಸ್ವನವ ನಿಮ್ಮಿಂದ ಕೇಳಲುವಿಷ್ಟಕುದೇಶಗಳ ಸಜ್ಜನ | ಸತ್ವರದಿ ಉಡಪಿಯನೆ ಸಾರ್ದರು ೧
ಸ್ವಪ್ನ ವೃಂದಾವನಾಖ್ಯಾನ | ನಿಮ್ಮ | ಗೊಪ್ಪಿದ ಶಿಷ್ಯರ್ಗೆ ಬೋಧನ |ಅಪ್ಪಂದದಲಿ ಮಾಡ್ದ ಕಾರಣ | ಅದು | ಒಪ್ಪಿತು ಬಹು ವಿಧ ಪ್ರಕರಣ ||ಸ್ವಪ್ನ ದ್ರಷ್ಟ್ರು ದ್ವಿಜವರೇಣ್ಯರೆ | ಅಪ್ಪ ಅಶ್ವಗ್ರೀವ ದೇವನಕೃಪ್ಪೆಯಿಂದಲಿ ಜಾತಿ ಸ್ರ‍ಮತಿಯನು | ಅಪ್ಪಿವ್ಯಕ್ತಿಯ ಜ್ಞಾನವಿತ್ತಿರಿ ೨
ಮಧ್ಯವಾಟ ಪುರಟ ಸಂಪುಟ | ತಂದು | ವಿದ್ಯುಕ್ತ ಹಯಮೊಗ ನಿಕಟ |ಸದ್ಯ ಸ್ಥಾಪಿಸಿ ರಜತ ಪೀಠ | ದಲ್ಲಿ | ಪರ್ಯಾಯ ಗೈದೆಯೊ ಪಟುಭಟ ||ಆಯ್ ಗುರು ರಾಜೋಕ್ತಿಯಂದದಿ |ಕಾರ್ಯಳು ಬಹು ಭಾವಿ ನಡೆಸಿದೆಆರ್ಯ ಭಾವೀ ಇಂದ್ರ ಪದದಲಿ | ಯೋಗ್ಯರೆನಿಸಿದ ಯೋಗಿವರ್ಯ ೨
ನಿರಶನಾದಿಯ ವ್ರತ ಚರಣ | ಆರು ಎರಡೊತ್ಸರ ಗೈದು ಸಜ್ಜನನೆರೆದವರಿಗೆ ಸುಧಾ ಪ್ರವಚನ | ಗೈದು | ವಿರಚಿಸಿದ್ಯೊ ಮುಕ್ತಿ ಮಾರ್ಗಣ |ಮರಳಿ ಕೇರಳ ಭೂಷ ವಿರಚಿತ | ವರ ಸು ಶಿಬಿಕಾರೋಹ ಗೈಯ್ಯುತತೆರಳಿ ಪರ್ಯಾಯೋತ್ಸವಕೆ ಬಹು | ಮೆರೆದ ಗುರು ವಿಶ್ವ ಪ್ರಿಯಾರ್ಯ ೪
ಜಯ ಜಯ ಜಯ ವಿಶ್ವಪ್ರಿಯ | ಮುದ್ದು |ಹಯ ಮೊಗಗತ್ಯಂತ ಪ್ರೀಯ |ದಯದೃಷ್ಟಿಯಲಿ ನೋಡು ಜೀಯ | ಭವ | ಭಯವನೆ ಕಳೆವುದು ರಾಯ |ದಯವನಧಿ ಕರುಣವನೆ ದೊರಕಿಸಿ | ಜಯ ಗುರು ಗೋವಿಂದ ವಿಠಲನದ್ವಯ ಪದಾಂಬುಜ ತೋರಿ ಸಲಹೊ | ವಿಯದಧಿಪ ಪದ ಪೊಂದುವವನೆ ೫

೪೧೨
ವಿಷ್ಣು ತೀರ್ಥರಪಾದ | ನಿಷ್ಠೆಯಿಂದಲಿ ಭಜಿಸೆಇಷ್ಟಾರ್ಥ ಸಲಿಸೂವರ್ | ಕೃಷ್ಣಪೂಜಕರೂ ಪ
ಜಿಷ್ಣುಸಖ ಶ್ರೀ | ಕೃಷ್ಣ ಭಕುತರುಶ್ರೇಷ್ಠ ದಂಪತಿ | ಗರ್ಭಜಾತರುಸುಷ್ಠಜಯಮುನಿ | ಸೇವೆಯಿಂದಲಿಇಷ್ಟವರದಿಂ | ದುದಯರಾದರು ೧
ಬಾಲ್ಯದಲ್ಲು ಪನೀತ | ಆರ್ಯರಿಂದು ಪದಿಷ್ಟಆರ್ಯ ಐಜೀವರ್ಯ | ಗುರುಕುಲವಸಿತ |ಕ್ರೌರ್ಯ ಹರಿಜಪ | ದೈರ್ಯದಿಂದಲಿವೀರ್ಯವತ್ತರ | ಜಪಿಸಿ ಗುರುಸುತವರ್ಯನಪಮೃತಿ | ಕಳೆದು ಗುರುವಿಂಮಾನ್ಯವಂತನು | ಎನಿಸಿ ಮೆರೆದ ೨
ಮಲದ ಅಪಹಾರಿಯ | ಜಲಪ್ರವಾಹದಿ ನಿಂದುಘಳಿಗೆ ಇರಲು ಉದಯ | ವಲಿಸಿ ಮಧ್ವವಿಜಯಒಲಿಮೆಯಿಂದಲಿ | ಸೂರ್ಯನಘ್ರ್ಯವಕಾಲಮೀರದೆ | ತಾನು ಕೊಡುತಲಿಮೂಲಗ್ರಂಥವ | ತಿಳಿಯ ಬೋಧವಇಳೆಯ ಸುರರಿಗೆ | ಪೇಳ್ದ ಮಹಿಮಾ ೩
ಅವಧೂತ ಚರ್ಯದಿ | ಅವನಿಯೊಳ್ಚರಿಸುತ್ತಭುವನ ಪಾವನ ಸುಧೆ | ದಿವಿಜರಿ ಗುಣಿಸೀ |ಶ್ರವಣ ಗೈಸುತ | ಸುಧೆಯ ಗ್ರಂಥವಅವನಿಯೊಳು | ತತ್ವಾರ್ಥಬೋಧಿಸಿಪ್ರವರ ಭೂಸುರ | ಮುಕ್ತಿಮಾರ್ಗದಹವಣೆ ಗೈದಿಹ | ಭುವಿಯದಿವಿಜ ೪
ವನವನಚರಿಸುತ್ತ | ಮುನಿವಳ್ಳಿಯಲಿಮುನಿಯೋಗ್ಯವೆನಿಸುವ | ವಾನಪ್ರಸ್ಥಾಶ್ರಮದಿ |ಘನಸುವ್ರತವನೆ | ಅಸಿಯಪತ್ರದಿಮನವನಿರಿಸುತ | ಗಣ್ಯನಾದೆಯೊಅನಘ ಹರಿಕಾ | ರುಣ್ಯ ನಿನ್ನಲಿಗಣನೆಗೈಯ್ಯಲು | ಮನುಜಗಸದಳ ೫
ಯತಿ ಸತ್ಯವರರಿಂದ | ಯತಿ ಆಶ್ರಮವ ಪೊಂದಿಕ್ಷಿತಿಯ ಸಂಚರಿಸುತ್ತ | ಅನ್ನಾಳಿಗಾಗಮೀಸೀ |ಹಿತನು ದೇಶಾದಿ | ಪತಿಯ ರೋಗವಹತಗೈದು ಅನ್ನವ | ಜೊತೆಲುಂಬುವಯತನ ಸಾಧಿತ | ಪ್ರಾಪ್ತಕ್ಷಾಮವಹತವ ಗೈಸಿದೆ | ರಮೆಯನೊಲಿಸೀ ೬
ಮೇದಿನಿಯೊಳು ಖ್ಯಾತ | ಮೋದಾಪುರದಿ ನೆಲೆಸಿಮೋದ ಮುನಿ ಮತ ಬೋಧ | ಗ್ರಂಥಗಳ್ರಚಿಸೀ |ಮೋದದಿಂ ವೃಂದಾವನಸ್ಥರುಸಾದು ಸೇವೆಗೆ ಅಭಯನೀಡುತನಾದಗುರು ಗೋವಿಂದ ವಿಠಲನಮೋದ ಧ್ಯಾನಾಸಕ್ತರಾಗಿಹ೭

೪೦೯
ಶ್ರೀ ಶ್ರೀಸತ್ಯಪ್ರಿಯ ತೀರ್ಥರು
ವೃಂದಾವನ ನೋಡಿದೆ | ಸತ್ಯ ಪ್ರೀಯರವೃಂದಾವನವ ನೋಡಿದೇ ಪ
ಸತ್ಯ ಪೂರ್ಣ ಕರಜರೆನಿಸಿ | ಸುತ್ತಿಕ್ಷೇತ್ರಗಳನೆಲ್ಲಮತ್ತೆ ಬರಲು ಶ್ರೀರಂಗಕ್ಕೆ | ಫತ್ತೇಸಿಂಗ ಭೇಟಿಯಾದ ೧
ಶತೃಗಳ ಗೆದ್ದು ಬಂದು | ಸತ್ಯಪ್ರಿಯರಿಗೆರಗಿ ಅವನೂ ಇತ್ತು ಊರುಗಳನೆರಡು | ನೆತ್ತಿ ಚಾಚಿ ನಮಿಸೀದ ೨
ಮಾನಮಧುರಿ ಊರಿನಲ್ಲಿ | ಪ್ರಾಣೋತ್ಕ್ರಮಣ ಸಮಯದಲ್ಲಿಜ್ಞಾನಿ ರಾಮಾಚಾರ್ಯರಿಗೆ | ದಾನ ಮಾಡ್ದ ತುರ್ಯಾಶ್ರಮ ೩
ಮಾಧವನ ದಯದಿಂದೆ | ಸಾಧಿಸುತ ಬದರಿ ಯಾತ್ರೆವೇದವತಿ ತೀರದಲ್ಲಿ | ಸಾಧುಗಳ ವೃಂದಾವನ ೪
ವೇದ ವೇದ್ಯನಾದ ಗುರು | ಗುರುಗೋವಿಂದ ವಿಠಲನಮೋದದಿಂದ ಭಜಿಸುತ್ತ | ಆದರದಿ ಧ್ಯಾನಾಸಕ್ತ ೫

೩೬೬
ವೃಂದಾವನದಲಿ ನಿಂದಿಹನ್ಯಾರೆ ಪೇಳಮ್ಮಯ್ಯ ಪ
ಕುಂದು ರಹಿತ ಬಹು ಸುಂದರ ಹರಿಪದದ್ವಂದ್ವ ಭಜಕ ಯತಿ ಪುಂಗ ಕಾಣಮ್ಮ ಅ.ಪ.
ಮಂಗಳ ಪಂಪಾ ಕ್ಷೇತ್ರ ಸನಿಯ ಮುನಿಪುಂಗರು ಯಾರೇ ಪೇಳಮ್ಮಯ್ಯ |ಅಂಗಜನನು ಬಲು ಹಿಂಗಳೆಧರಿ ಪದಭೃಂಗರೇನಿಪರ್ಯಾರೇ ಪೇಳಮ್ಮಯ್ಯ |ತುಂಗಭದ್ರ ಸುತರಂಗಿಣಿ ಮಧ್ಯಗಮಂಗಳಾಂಗ ವ್ಯಾಸೇಂದ್ರ ಕಾಣಮ್ಮ ೧
ಮಾಯಾಮತ ವಿಧ್ವಂಸಕರೆನಿಸುವನ್ಯಾಯಾಮೃತ ರಚಕರ ನೋಡಮ್ಮಮ್ಮ |ಸಾಯಣಾದಿ ಕುಭಾಷ್ಯದಲಿಹ ಅನ್ಯಾಯವ ಜರಿದ ನೋಡಮ್ಮಮ್ಮ |ಕಾಯಜ ಪಿತನನ ಹೇಯನೆಂದು ಬಹುಗಾಯನ ಮಾಡ್ದ ಮಹಾತ್ಮ ಕಾಣಮ್ಮ ೨
ಪದುಮನಾಭ ಕವೀಂದ್ರ ವಾಗೀಶರಮಧ್ಯದಲಿಹರ ನೀ ನೋಡಮ್ಮಯ್ಯ |ಸುಧೀಂದ್ರ ಶ್ರೀನಿವಾಸರು ರಾಮತೀರ್ಥರಮಧ್ಯದಲಿಹರ ನೀ ನೋಡಮ್ಮಯ್ಯ |ಯದುರಿಲಿ ಪ್ರಾಣ ಸುಪಾಶ್ರ್ವದಿ ರಘುವರ್ಯಗೋವಿಂದ ತೀರ್ಥರ ನೋಡಮ್ಮಮ್ಮ ೩
ಆರು ಕೋಣೆಗಳ ಮೇಲಾಕಾರ್ವೊಲಯದಿ ಧೀರ ವಾನರರಾ ನೋಡಮ್ಮಯ್ಯಮೂರು ಕೋಟಿ ಜಪದಾಧಾರದಿ ಸಮೀರ ನಿಂದಿಹ ನೋಡಮ್ಮಯ್ಯ |ಧೀರ ನಿಲಿಸಿದಾಧಾರ ಭಕ್ತಿ ಯಂತ್ರೋದ್ಧಾರರ ನೀ ನೋಡಮ್ಮಮ್ಮ ೪
ವಾದಿರಾಜ ವಿಜಯೀಂದ್ರರು ಮೊದಲಾದವರ್ಗುರುಗಳ ನೋಡಮ್ಮಮ್ಮ |ವಾದಿನಿರಸನವ ಸಮ್ಮೋದದಿ ಗೈದು ಸುಭೇದ ಸ್ಥಾಪಿಸಿದ ನೋಡಮ್ಮಮ್ಮ |ಮೋದ ಬೋಧ ಗುರು ಗೋವಿಂದ ವಿಠಲನಪಾದ ಸೇವಕ ವ್ಯಾಸಾರ್ಯ ಕಾಣಮ್ಮ ೫

೩೫೮
ವೃಂದಾವನವ ನೋಡಿರೊ – ನೀವೆಲ್ಲಾನಂದವನ್ನೇ ಪೊಂದಿರೊ ಪ
ರಾಮಾಚಾರ್ಯರ ಪುತ್ರರೊ – ಅವರುಮಾಮನೋಹರ ನೃಹರಿ ದಾತರೋ |ಜನ್ಮ ಅಷ್ಟಕೆ ಬ್ರಹ್ಮಚರ್ಯ – ಪೊಂದಿಬ್ರಹ್ಮ ವಿದ್ಯೆಯ ಪಡೆದರೋ |ಧೃತ – ಪ್ರೇಮದಿಂದಲಿ ಬಂದು ತಾವ್ ಪುರುಷೋತ್ಮ ತೀರ್ಥರ ಸಾರ್ದರಾ ೧
ಕಾಯಜ ಪಿತನ ತಾನ್ವಲಿಸೀ – ದೇಶಂಗಳಪ್ರೀಯದಿಂದಲಿ ಸಂಚರಿಸೀ |ಮಾಯಾರಮಣನು ಜೀವನೂ – ಒಂದೆಂಬಮಾಯಾವಾದೀಗಳ ತರಿದೂ |ಧೃತ – ವಾಯುಮತ ಪ್ರೀತಿಯಲಿ ಅರುಹುತಪ್ರೀಯ ಅಬ್ಬೂರಲ್ಲಿ ನೆಲೆಸಿದ ೨
ವಿಠಲ ನೃಹರಿ ಪೂಜೆಗೇ – ನೇಮಿಸಿತಮ್ಮಪಟ್ಟ ಶಿಷ್ಯರು ವ್ಯಾಸತೀರ್ಥರ |ಅಟ್ಟ ಹಾಸದಿ ಸರ್ವಜಿತೂ – ಸಂವತ್ಸರಕೃಷ್ಣೈಕಾದಶಿ ವೈಶಾಖ |ದಿಟ್ಟ ಗುರುಗೋವಿಂದ ವಿಠಲನದೃಷ್ಟಿಸೀ ತನು ಬಿಟ್ಟು ಪೊರಟನ ೩

೬೮೫
ವೆಂಕಟ ಕೃಷ್ಣವಿಠಲ | ಲೆಂಕನನ ಸಲಹೋ ಪ
ಪಂಕಜೋದ್ಭವ ಪಿತನೆ | ವೆಂಕಟೇಶಾ ಅ.ಪ.
ಅಬುಜ ಜಾಂಡೋದರನೆ | ಶಬರಿ ಎಂಜಲನುಂಡೆಕುಬುಜೆಗಂಧಕೆ ಒಲಿದು | ಸದ್ಗತಿಯನಿತ್ತೆಇಭವರದ ನೀನಾದೆ | ಕುಲಶೀಲನೆಣಿಸದಲೆವಿಭುವೆ ಈ ಭಕುತಂಗೆ | ವೈಭವವ ತೋರೋ ೧
ಮಧ್ವಮತ ತತ್ವದಲಿ | ಶುದ್ಧ ಭಕುತಿಯ ತೋರ್ಪಶ್ರದ್ಧಾಳು ಎನಿಸಿಹನು | ಬುದ್ಧಿ ಪೂರ್ವಾಸಿದ್ಧಾಂತ ತಾತ್ಪರ್ಯ | ಬುದ್ಧಿಗೆಟಕೂವಂತೆಉದ್ಧರಿಸ ಬೇಕಿವನ | ಅಬ್ದಿಜೆಯ ರಮಣ ೨
ನೀಚೋಚ್ಚ ತರತಮದ | ಸ್ವಚ್ಛ ಜ್ಞಾನವ ನೀಯೊಮತ್ಸ್ಯಕಚ್ಛಪರೂಪಿ | ಸಚ್ಚಿದಾನಂದಾನಿಚ್ಚ ನಾಮಸ್ಮರಣೆ | ಸ್ವಚ್ಛ ಪೇರ್ಮೆಲಿ ಗೈವಉತ್ಸಾಹ ಇವಗಿತ್ತು | ಉದ್ಧರಿಸೊ ಹರಿಯೇ ೩
ತೈಜಸನೆ ನೀನಾಗಿ | ತೇಜೊರೂಪವ ತೋರಿಸೋಜಿಗದಿ ಗುರೂರೂಪ | ಮಾಜದಲೆ ತೋರ್ದೇಈ ಜೀವಿಗುನ್ನತದ | ಉಪದೇಶವಿತ್ತಿಹೆನೊಜಗತ್ಪತಿಯೆ ಅ | ವ್ಯಾಜ ಕರುಣೀ೪
ಪಾಕ್ಕು ಕರ್ಮವ ಕಳೆದು | ಲೋಕದಲಿ ಸತ್ಕೀರ್ತಿಬೇಕಾದ ವರಗಳನೆ | ತೋಕನಿಗೆ ಈಯೋನಾಗನದಿ ಪಿತ ಗುರೂ | ಗೋವಿಂದ ವಿಠ್ಠಲನೆವಾಕು ಮನ್ನಿಸಿ ಕಾಯೋ | ಶ್ರೀ ಕರಾರ್ಜಿತನೇ ೫

೬೮೬
ವೆಂಕಟ ಗಿರಿ ವಿಠಲ | ಲೆಂಕಳನ ಪೊರೆಯೋ ಪಪಂಕಜಾಸನ ವಂದ್ಯ | ಆಕಳಂಕ ಮಹಿಮಾ ಅ.ಪ.
ಸಾಧ್ವಿಮಣಿ ತವದಾಸ್ಯ | ಬುದ್ದಿಯಲಿ ಮೊರೆಯಿಟ್ಟುಉದ್ಧರಕೆ ಕಾದಿಹಳೊ | ಅಧ್ವರೇಡ್ಯ ಹರೀ |ಮಧ್ವಮತ ಪೊತ್ತಿರುವ | ಶುದ್ಧಕಾರಣದಿಂದಉದ್ಧಾರ ಗೈಯ್ಯುವುದೊ | ಶ್ರದ್ಧ ಪತಿನುತನೇ ೧
ಖೇಚರೋತ್ತಮ ದೇವ | ವಾಚಾಮ ಗೋಚರನೆಪ್ರಾಚೀನದುಷ್ಕರ್ಮ | ಮೋಚನವಗೈಸೇಯಾಚಿಸುವೆ ನಿನ್ನಲ್ಲಿ | ಕೀಚಕಾರಿ ಪ್ರಿಯನೇಮೋಚಕೇಚ್ಛೆಯ ಮಾಡಿ | ಸೂಚಿಸೋ ಕರುಣಾ ೨
ತರತಮದ ಸುಜ್ಞಾನ | ವರಭಕ್ತಿ ವೈರಾಗ್ಯಸ್ಥಿರ ಪಡಿಸೊ ಇವಳಲ್ಲಿ | ವರ ವೆಂಕಟೇಶಾ |ಗುರು ಕರುಣವಿಲ್ಲದಲೆ | ಹರಿಯೊಲಿಯನೆಂದೆಂಬಸ್ಥಿರ ಮತಿಯನೇ ಕೊಟ್ಟು | ಕರ್ಮ ಪಥಸವೆಸೋ ೩
ಹರಿನಾಮ ಸ್ರ‍ಮತಿಗಿಂತ | ಪರಮ ಸಾಧನ ಕಾಣೆವರಕಲೀಯಲಿಯೆಂದು | ಸಾರತಿವೆ ಶಾಸ್ತ್ರಾತುಣಿಗಂತೆಯೆ ಮತ್ತೆ | ವರ ಸ್ವಪ್ನವನುಸರಿಸಿಬರೆದಿಹೆನೊ ಅಂಕಿತವ | ಕರುಣ ರಸ ಪೂರ್ಣಾ ೪
ಗೋವರ್ಧನೋದ್ಧರನೆ | ಕೈವಲ್ಯ ಫಲದಾತಸೇವಕಳ ಕೈಪಿಡಿಯೆ | ಓವಿ ಪ್ರಾರ್ಥಿಸುವೇ |ಭಾವುಕರ ಪಾಲ ಸಂ | ಭಾವಿಸೀಕೆಯ ಕಾಯೊಗೋವಿದಾಂ ಪತಿಯೆ ಗುರು | ಗೋವಿಂದ ವಿಠಲಾ ೫

೬೮೭
ವೆಂಕಟ ನರಹರಿ ವಿಠಲ | ಪಂಕಕಳೆದಿವಳಾ ಪ
ಸಂಕಟವ ಪರಿಹರಿಸಿ | ಕಾಪಾಡ ಬೇಕೋ ಅ.ಪ.
ಸಾರವಿರಹಿತವು ಸಂ | ಸಾರ ಶರಧಿಯು ಎಂಬವೀರವೈರಾಗ್ಯ ಕಂ | ಸಾರಿ ಕೊಡುತಿವಳಾಪಾರುಗೈ ಭವದಕೂ | ಸಾರವನು ಎಂದೆನುತಮಾರಾರಿಸ್ವದ್ವಿನುತ | ಪ್ರಾರ್ಥಿಪೆನೊ ಹರಿಯೆ ೧
ಪತಿಸುತರು ಭ್ರಾತೃ ಶ್ರೀ | ಪತಿಯೆ ನೀನಾಗಿ ಹರಿಮತಿ ಮತಾಂವರರಂಘ್ರಿ | ಹಿತಸೇವಕಳೆನಿಸಿಪಥವು ಸಾಗಲಿ ದೇಹ | ಯಾತ್ರೆಯ ಸುಮಾರ್ಗದಲಿಗತಿಗೋತ್ರ ನೀನೆಂಬ | ಮತ್ತಿಯಿತ್ತು ಪೊರೆಯೊ ೨
ನಾಮಸ್ಮರಣೆಯೆಂಬ | ವಜ್ರಕವಚವ ತೊಡಿಸಿಈ ಮಹಾಕಲಿಯುಗದಿ | ಸಾದನೆಯ ಗೈಸೀರಾಮ ಗುರುಗೋವಿಂದ | ವಿಠಲ ತವ ಪಾದ ಕಮಲನೇಮ ಸೇವೆಯನಿತ್ತು | ಉದ್ದರಿಸೊ ಹರಿಯೇ ೩

೧೩೮
ವೆಂಕಟರಮಣ ಶ್ರೀ ವೆಂಕಟರಮಣ ಶ್ರೀವೆಂಕಟರಮಣನೇ ||ಅ||
ಪಂಕಜೋದ್ಭವ ಪಿತ ಪಿಳ್ಳಂಕೇರಿಯ ವಾಸವೆಂಕಟರಮಣನೇ ಅ.ಪ.
ಭದ್ರ ಮೂರುತಿ ಸಣ್ಣ | ಆದ್ರಿಯಾಶ್ರಯಿಸಿ ನಿಂತಿದ್ದಿ ಕಾರಣವೇನೋ |ಶುದ್ಧ ಜನರು ಮಾಳ್ಪ | ಶುದ್ಧ ಸೇವೆಯ ಗೊಂಡುದ್ಧರಿಸಲು ಯೋನೋ ೧
ನೀರೊಳು ಮುಳು ಮುಳಿಗಿ | ಭಾರಿ ಗಿರಿಯ ಪೊತ್ತುಕೋರೆಹಲ್ಲನು ತೋರೇನೋ |ಧೀರ ಕಂದನ ಕಾಯ್ದ | ನಾರಸಿಂಹನೆ ಬಲಿಯದ್ವಾರ ಕಾಯ್ದಿಹದೇನೋ ೨
ಕ್ರೂರ ನೃಪರ ಸವರಿ | ನಾರಿ ಚೋರನ ಕೊಂದುಚಾರ ಗೋಪೆರ ಕೂಡೇನೊ |ಸಾರಿ ತ್ರಿಪ್ಪುರವನ | ನಾರೇರ ವ್ರತ ಕೆಡಿಸಿವೀರ ರಾವುತನಾದದ್ದೇನೋ ೩
ಪಂಚ ರೂಪದಿ ಪ್ರ | ಪಂಚವ ವ್ಯಾಪಿಸಿಪಂಚಾತ್ಮಕ ನಾದದ್ದೇನೋ |ಅಂಚೆ ಗಮನನಾದಿ | ಪಂಚ ಪಂಚರಲ್ಲಿಸಂಚು ಗೊಳಿಪುದೇನೋ | ೪
ಇಂದ್ರಾ ವರಜ ದೇ | ವೇಂದ್ರ ಗಭೀಷ್ಟದಬಂದಲ್ಲಿ ನಿಂದಿರ್ಪುದೇನೋಇಂದು ಕುಲಜ ರಾ | ಜೇಂದ್ರ ಜನಮೇಜಯಗಂದು ಒಲಿದು ನಿಂತಿಲ್ಲೇನೋ ೫
ಪಾಂಡವಭೀಷ್ಟದ | ಪುಂಡರೀಕಾಕ್ಷನೆತೊಂಡರಾಶ್ರಯದಾತಾ |ಭಾಂಡಕಾರಕ ಭೀಮ | ತೊಂಡ ಮಾನಾನಂದಅಂಡಜವಾಹ ವಿಖ್ಯಾತಾ೬
ಭಾವ ಶುದ್ಧೀಲಿ ಸ್ತವನ | ದೇವ ಶರ್ಮನು ಮಾಡೆಭಾವಕ್ಕೊಲಿದು ಮೋಕ್ಷವಿತ್ಯೋ |ಗೋವ ಕಾವ ಗುರು | ಗೋವಿಂದ ವಿಠಲ ಭಕ್ತಿಭಾವ ನಿನ್ನಯ ಪದದಲ್ಲಿಯೋ೭

೬೮೯
ವೆಂಕಟಾ ಹರಿವಿಠಲ | ಪಂಕಕಳೆದಿವನಾ ಪ
ಪಂಕಜಾಕ್ಷನೆ ದೇವ | ಕಾಪಾಡ ಬೇಕೋ ಅ.ಪ.
ಅಂಧಕಾರದಲಿಪ್ಪ | ಮಂದಮತಿಯುದ್ಧರವಮಂದರೋದ್ಧಾರಿ ಹರಿ | ಮಾಡಿ ಪೊರೆಯಿವನಾ |ನಂದಮುನಿ ಮತ ತಿಳಿಸಿ | ಸಂದೇಹಗಳ ಕಳೆದುಸಂದೋಹ ಸಂಸ್ಥಿತನ | ಉದ್ಧರಿಸೊ ಬೇಕೋ ೧
ಸೃಷ್ಟ್ಯಾದಿ ತವ ಮಹಿಮೆ | ನಿಷ್ಠೆಯಿಂದಲಿ ಭಜಿಪಸುಷ್ಠುಮನವನೆಯಿತ್ತು | ಕಾಪಾಡೊ ಹರಿಯೇಕೃಷ್ಣಮಾರುತಿ ಇವನ | ಕಷ್ಟ ಸಂಚಯ ಕಳೆದುಶ್ರೇಷ್ಠ ತವದಾಸ್ಯದಲಿ | ಇಟ್ಟು ಪೊರೆ ಇವನಾ ೨
ಸತ್ಸಂಗ ಸದ್ವ್ಯಸನ | ಸನ್ಮಾರ್ಗದಲಿ ಇಟ್ಟುಕುತ್ಸಿತರ ಸಂಗವನು | ದೊರಗೈ ಹರಿಯೇ ಮತ್ಸ ಕೇತನ ಜನಕ | ಭಕ್ತವತ್ಸಲನಾಗಿವತ್ಸನ್ನ ಪೊರೆವವರು | ಮತ್ತಾರು ಇಹರೋ ೩
ಹರಿಗುರುಗಳಾ ಸೇವಾ | ಪರಮ ಪ್ರೀತಿಲಿ ಮಾಳ್ವವರಮತಿಯನೇ ಕೊಟ್ಟು | ಪೊರೆಯ ಬೇಕಿವನಾ |ಹರಿಯ ನಾಮಾಮೃತವ | ನಿರುತದಲಿ ಸವಿದುಂಬಪರಮ ಸೌಭಾಗ್ಯವನೆ | ಕರುಣಿಸೋ ಹರಿಯೇ ೪
ಸರ್ವಜ್ಞ ಸರ್ವೇಶ | ಸರ್ವ ಸ್ವಾತಂತ್ರನೇಭವವನದಿ ಉತ್ತರಿಸಿ | ಪೊರೆಯ ಬೇಕಿವನಾ |ದುರ್ವಿಭಾವ್ಯನೆ ಗುರು | ಗೋವಿಂದ ವಿಠಲನೇದರ್ವಿಜೀವಿಯ ಪೊರೆಯೆ | ಪ್ರಾರ್ಥಿಸುವೆ ಹರಿಯೆ ೫

೧೩೯
ವೆಂಕಟೇಶ – ಭವ – ಸಂಕಟ ಕಳೆ – ವೆಂಕಟೇಶ ||ಅ||
ಶಂಕೆ ಇಲ್ಲದೆ ನಿಷ್ಕಂಚನ ಜನ | ಪಂಕ ಕಳೆವ ಸಿರಿ ವೆಂಕಟೇಶ ಅ.ಪ.
ಮಹ ವೇದಗಳನು ಕದ್ದ ದೈತ್ಯನ ಕೊಂದೆ ವೆಂಕಟೇಶಮಹ ಮೀನನಾಗಿ ನೀ ಸತ್ಯವ್ರತಗೆ ಒಲಿದೆ ವೆಂಕಟೇಶ ೧
ಸಿಂದು ಮಥನದಿ ಕೂರ್ಮ ನೀನಾಗುತ – ವೆಂಕಟೇಶಮಂದರಗಿರಿ ಪೊತ್ತು ಭಕ್ತರ ಸಲಹಿದೆ ವೆಂಕಟೇಶ ೨
ಮತ್ತರಾದ ಮಧುಕೈಟಭರ – ಕೊಂದೆ ವೆಂಕಟೇಶಮತ್ತೆ ಭೂ ಚಾಪೆಯ ಮಾಡಿದವನ ಕೊಂದೆ ವೆಂಕಟೇಶ ೩
ಕನಕ ಕಶಿಪು ಬಾಧೆ ಕಳೆಯಲು – ತರಳಗೆ ವೆಂಕಟೇಶಕ್ಷಣದಿ ಕಂಭದಿ ಬಂದು ದುರುಳನ ಸವರಿದೆ ವೆಂಕಟೇಶ ೪
ಮೂರು ಪಾದವ ಬೇಡಿ – ಬಲಿಯ ಭಂಜಿಸಿದೆ ವೆಂಕಟೇಶಪಾರಗಾಣದ ಮಹಿಮೆ ಬಾಗಿಲ ಕಾಯ್ದೆ ವೆಂಕಟೇಶ ೫
ಕೊಡಲಿಯಿಂದಲಿ ದುಷ್ಟ ಕ್ಷತ್ರೇರ ತರಿದ್ಯೊ ವೆಂಕಟೇಶಪೊಡವಿಯ ದ್ವಿಜರಿಗೆ ಹಂಚಿ ಮೆರೆದೆ ವೆಂಕಟೇಶ ೬
ಮಡದಿಯ ಕದ್ದೊಯ್ದ ದೈತ್ಯನನ್ನಳಿದೆ ವೆಂಕಟೇಶಧೃಢ ಭಕುತಗೆ ಲಂಕೆಯ ಪಟ್ಟಣವಿತ್ತೆ ವೆಂಕಟೇಶ ೭
ಗೋಪಿ ಜನರ ಪ್ರಿಯ | ಸುಪರ್ಣವರವಾಹ ವೆಂಕಟೇಶಪಾಪಿ ಕೌರವ ಕುಲಹರ ಧರ್ಮ ಸ್ಥಾಪಿ ವೆಂಕಟೇಶ ೮
ಬೆತ್ತಲೆ ನೀ ನಿಂತು ಕುತ್ಸಿತ ಅಸುರರಸದೆದ್ಯೋ ವೆಂಕಟೇಶಕುತ್ಸಿತ ಅಸುರರ ಮೋಹಿಸುತಳಿದೆಯೊ ವೆಂಕಟೇಶ ೯
ತುರಗನೇರಿ ಕಲ್ಕಿ ಎನಿಸಿಕೊಂಡೆಯೊ ವೆಂಕಟೇಶಉರಗಾದ್ರಿ ವಾಸ ಗುರು ಗೋವಿಂದ ವಿಠಲ ವೆಂಕಟೇಶ ೧೦


ವೆಂಕಟೇಶ ವಿಠ್ಠಲನೆ ಉದ್ಧರಿಸೊ ಇವಳಾಪಂಕಜಾಸನ ವಂದ್ಯ ಪಂಕೇರು ಹಾಕ್ಷ ಪ
ಪತಿ ವಿಯೋಗದ ದುಃಖ | ಅತಿಯಾಗಿ ತವಪಾದಗತಿಗಾಗಿ ಗಿರಿಯೇರಿ | ತುತಿಸುತಿರೆ ನಿನ್ನಾಗತಿಗೋತ್ರ ತೈಜಸನೆ ಪತಿರೂಪ ನಿನ್ನನುಪತಿಕರಿಸ ನಿನ್ನ ಮೃತ ಹಸ್ತ ನೆತ್ತಿಲಿ ಇಟ್ಟೇ ೧
ಇಂದಿವಳ ಪ್ರಾರ್ಥನೆಯ ಛಂದದಲಿ ಮನ್ನಿಸುತಅಂದು ನೀನಾಗಿತ್ತ | ನಂದದಂಕಿತವಾಇಂದು ಊರ್ಜಿತ ಪಡಿಸಿ | ವಂದಿಸಿಹೆ ತವಪಾದವೃಂದಾರ ಕೇಂದ್ರ ಗುರು ನಂದ ಮುನಿ ವಂದ್ಯಾ ೨
ಪಕ್ಷಿವಾಹನ ದೇವ | ದಕ್ಷಾರಿ ಪ್ರಿಯ ಸಖನೆದೀಕ್ಷಿತಳ ದಾಸಪಥ | ಲಕ್ಷಿಸುತಲಿದನಾಈಕ್ಷಿಪುದು ಕರುಣಾಕ | ಟಾಕ್ಷದಲೆಂದನುತಅಕ್ಷಾರಿ ವಂದ್ಯ ಹರಿ ಪಾರ್ಥಿಸುವೆ ನಿನ್ನಾ ೩
ದೇಶ ದೇಶದ ಜನರ | ಆಶೆಗಳ ಪೂರೈಪ ಕೇಶವನೆ ಶ್ರೀ ವೆಂಕಟೇಶಾಖ್ಯ ಹರಿಯೇ |ದಾಸಿಯಳ ಹೃದಯಾ | ಕಾಶದೊಳು ತೋರೆಂದುಲೇಸು ಭಿನ್ನಪ ಸಲಿಸೊ | ಮೇಶ ಮಧ್ವೇಶಾ೪
ಊರ್ವಿಯೊಳು ನಿನ್ಹೊರತು ಕಾವರನು ನಾಕಾಣೇಸರ್ವೋತ್ತಮೋತ್ತಮನೆ | ಶರ್ವ ವಂದ್ಯಾದರ್ವಿ ಜೀವಿಯ ಕಾವ | ಹವಣೆ ನಿನ್ನದಲ್ಲೇನೊ ಗುರ್ವಂತರಾತ್ಮ ಗುರು | ಗೋವಿಂದಾ ವಿಠಲಾ ೫

೧೪೦
ವೆಂಕಟೇಶ ಸಂಕಟಹರ ನಿರ್ಭೀತ |ಕುಂತಿಯಸುತ ಸೂತ | ಭವ ವನಧಿಯ ಪೋತ ಪ
ಬಿಂಕದಿಂದ ಪೊರೆ | ಕಿಂಕರ ಎನ್ನನು ಮಂಕುಮತಿಯ ಕಳೆ | ಪಂಕಜ ಪಾಣಿಯೆ ಅ.ಪ.
ಮಂದರೋದ್ಧಾರಿ ಸುಂದರ ಮುರವೈರಿ | ಬಾರಯ್ಯ ಶೌರಿಎಂದೀಗೆ ಕಾಂಬೆನೊ ಕಂಸಾರೀ | ದನುಜ ಸಂಹಾರೀ ||ಸಿಂಧುಶಯನ ಅರ | ವಿಂದ ನಯನ ಹೃನ್ಮಂದಿರದಲಿ ಆ | ನಂದವನೀಯೋ ೧
ಬಿಂಬಾನೆ ಭವ ಬಂಧನವ ಬಿಡಿಸೊ | ಸ್ಮರಿಸುವರಘ ಹರಿಸೋಶಂಬರಾರಿಯ ಪಿತ ಮನವನೆ ನಿಲಿಸೋ ನಿನ್ನೊಳು ನೆಲೆಗೊಳಿಸೋ ಶಾಂಭವಿ ಧನುವನು ಭಂಜಿಸಿದಾತನೆಶಂಭು ನಿಶುಂಭರ ಸವರಿದ ರಾಮನೆ ೨
ಬಿಂಬಾನೆ ಗುರು ಗೋವಿಂದ ವಿಠಲಯ್ಯ | ನೀಯನ್ನ ಸಲಹಯ್ಯ| ತುಂಬೀಹ ಷಡ್ವೈರಿಯ ಕಳೆಯಯ್ಯ | ನಿನ್ನಯ ಮಹಿಮೆಯ ||ಹಂಬಲ ಹೃದಯಾಂಬರದೊಳು ತುಂಬಿಸಿಪೊಂಬರಿಸಯ್ಯನೆ ತವಪದ ತೋರಿಸೊ ೩

೧೪೧
ವೇಣು ಗಾನಪ್ರಿಯ – ಗೋವಿಂದ ನಮ್ಮಮಾನ್ಯ ಮಾನದನೇ – ಗೋವಿಂದ ಪ
ದಕ್ಷಿಣಾಕ್ಷಿಯಲಿಹ – ಗೋವಿಂದ | ನಮ್ಮ | ಪಕ್ಷಿಯ ವಾಹ – ಮುಕುಂದ ||ಕುಕ್ಷಿಲಿ ತ್ರಿಭುವನ – ಗೋವಿಂದ | ನಮ್ಮ | ಅಕ್ಷರ ಕ್ಷರವರ _ ಮುಕುಂದ೧
ಪೂರ್ಣ ಗುಣಾರ್ಣವ – ಗೋವಿಂದ | ನಮ್ಮ | ಪೂರ್ಣ ಭೋದನುತ ಮುಕುಂದಪೂರ್ಣಾನಂದ ಪ್ರದ – ಗೋವಿಂದ | ಕುಭ | ವಾರ್ಣವ ದಾಟಿಸು ಮುಕುಂದ ೨
ರಾಜ ರಾಜಾಪ್ತನೆ – ಗೋವಿಂದ | ವಾದಿ | ರಾಜರದ್ವರದನೆ – ಮುಕುಂದಭೋಜಕುಲೋದ್ಭವ – ಗೋವಿಂದ | ಭವ | ಗೋಜನೆ ಬಿಡಿಸೊ – ಮುಕುಂದ ೩
ಕಾರಣ ಕಾರಣ – ಗೋವಿಂದ | ಜಗ | ಕಾರಣ ನೈಮಿತ್ಯ – ಮುಕುಂದಈರಣ ಜಗಕೆಲ್ಲ – ಗೋವಿಂದ | ಮದ ವಾರಣ ಮಾರಣ – ಮುಕುಂದ ೪
ಶಿರಿ ಹಯವದನನೆ – ಗೋವಿಂದ | ನಮ್ಮ | ಶಿರಿ ಕೃಷ್ಣ ರಾಮನೆ – ಮುಕುಂದಶಿರಿ ವೇದವ್ಯಾಸ – ಗೋವಿಂದ | ಕಾಯೊ | ಗುರು ಗೋವಿಂದ – ವಿಠಲ ಮುಕುಂದ ೫

೬೯೧
ವೇಣು ವಿನೋದ ವಿಠಲ | ನೀನೆ ಪೊರೆ ಇವನಾ ಪ
ದೈನ್ಯದಲಿ ತವ ದಾಸ್ಯ | ಕಾಂಕ್ಷೆಯಲಿ ಹಯಮೊಗನೆಗಾನ ಮಾಡಲು ನಿನ್ನ | ಪಾಸು ಕೂಲಿಸಿದೇ ಅ.ಪ.
ಖಂಡೀ ಭವದ್ ಬಹುಲ | ಡಿಂಡೀರ ಜೃಂಬಣಸುಚಂಡೀ ಕೃತೋ ಎಂಬ | ಶೌಂಡಪದಯತಿಯಿಂಗೊಂಡು ಸುಸ್ವಪ್ನದಲಿ | ದಂಡವತ್ತರಗಿ ಮುದ-ಗೊಂಡು ತವ ಪಾಪಗಳ | ಖಂಡಿಸೀದವನಾ ೧
ತೀರ್ಥಾಭಿಷೇಕದಿ ಪು | ನೀತನಾದಗೆ ಭಾವಿವಾತಾತ್ಮ ಮಹಿಮೆಗಳ | ದ್ಯೋತಕ ಸುಗ್ರಂಥಾಪ್ರೀತಿಯಿಂ ಪಡೆದಿಹನೊ | ಮಾತುಳಾಂತಕ ಹರಿಯೆಆತು ಕೈಪಿಡಿ ಇವನ | ಧಾತಾಂಡದೊಡೆಯಾ ೨
ಲೌಕೀಕವನ್ನೆಲ್ಲ ವೈಧೀಕವೆಂದೆನಿಸಿ ಈತೋಕನಿಗೆ ಸುಜ್ಞಾನ | ಭಕುತಿ ಸಂಪದನಾನೀ ಕರುಣದಿಂ ಕೊಟ್ಟು | ಪ್ರಾಕ್ಕುಕರ್ಮಾವಳಿಯನೀ ಕಳೆಯೊ ಕರುಣಾಳು | ನಾಕನದಿ ಪಿತನೆ ೩
ಮೋದಮುನಿ ಸಮ್ಮತವು | ವೇದೋಪನಿಷದರ್ಥಸಾದರದಿ ಪ್ರಾಕೃತದಿ | ಬೋಧ ಸತ್ಶಕ್ತೀ |ನೀ ದಯದಿ ಕರುಣಿಸುತ | ಬುಧರ ಮಧ್ಯದಿ ಮೆರೆಸೊ ವೇದಾಂತ ವೇದ್ಯ | ಹರಿ | ಬೋಧ ಮೂರುತಿಯೇ ೪
ಭಾವ ಕ್ರಿಯವೂ ದ್ರವ್ಯ | ಅದ್ವೈತ ತ್ರಯ ಜ್ಞಾನಕೈವಲ್ಯ ಪಡೆವುದಕೆ | ಕೇವಲಾವಶ್ಯಾಭಾವುಕಗೆ ತಿಳಿಸಿ ಭವ | ನೋವ ಪರಿಹರಿಸಯ್ಯಗೋವಳ ಪ್ರೀಯ ಗುರು | ಗೋವಿಂದ ವಿಠಲಾ ೫

೬೯೦
ವೇಣುಧರ ವಿಠಲಾ | ನೀನೆ ಪೊರೆ ಇವಳಾ ಪ
ಕಾಣೆ ನಿನ್ಹೊರತು ಕಾ | ರುಣ್ಯ ಮೂರುತಿಯೆ ಅ.ಪ.
ಸ್ವಾಪದಲಿ ಗುರುರೂಪ | ರೂಪ ಸಮ್ಮುಖದಲ್ಲಿಗೋಪಕೃಷ್ಣಾಕೃತಿಯ | ಪಡೆದಿಹಳು ಇವಳುಶ್ರೀಪತಿಯೆ ನಿನ್ನೊಲಿಮೆ | ಆಪಾರವಿರುತಿರಲುಪ್ರಾಪಿಸುತ ಅಂಕಿತವ | ಒಪ್ಪಿಸಿಹೆ ನಿನಗೇ ೧
ಪತಿ ಸೇವೆ ದೊರಕಿಸುತ | ಕೃತ ಕಾರ್ಯಳೆಂದೆನಿಸೊಹಿತ ಹಿತ ದ್ವಂದ್ವಗಳ | ಧೃತಿಗೆಡದೆ ಸಹಿಸೀಮತಿಮತಾಂ ವರರಂಘ್ರಿ | ಶತಪತ್ರ ಸೇವಿಪಭಾಗ್ಯಕೃತಿಪತಿಯೆ ಪಾಲಿಸುತ | ಪಥ ತೋರೋ ಹರಿಯೇ೨
ಭಾರತಿ ಪತಿ ಸುತನೆ | ಕಾರುಣ್ಯ ತೋರಿ ಆ-ಪಾರ ದುಷ್ಕರ್ಮಗಳ | ಪಾರಗಾಣಿಪುದೋ |ಮಾರುತನ ಮತದಲ್ಲಿ | ಧೀರೆ ಎಂದೆನಿಸಿ ಸಂ-ಸಾರ ಸಾಗರವನ್ನು | ದಾಟಿಸೋ ಹರಿಯೇ ೩
ಸೃಷ್ಟಿ ಸ್ಥಿತಿ ಲಯ ಕರ್ತ | ಕೃಷ್ಣಮಾರುತಿ ದೇವಅಷ್ಟಸೌಭಾಗ್ಯಗಳ | ಕೊಟ್ಟು ಕಾಪಾಡೋವಿಷ್ಟರಶ್ರವ ಹರಿಯೆ | ನಿಷ್ಠೆ ಆಚಾರದಲಿಕೊಟ್ಟು ಕೈಪಿಡಿ ಇವಳ | ಜಿಷ್ಣುಸಖ ಹರಿಯೇ ೪
ಸರ್ವದಾ ತವ ಮಹಿಮೆ | ಶ್ರವಣ ಸುಖ ಸಾಧನವಹವಣೀಸಿ ತವನಾಮ | ವಜ್ರಾಂಗಿ ತೊಡಿಸೀಭವವನುತ್ತರಿಸತ್ಕಿ | ಬಿನೈಪೆ ಶ್ರೀ ಹರಿಯೆಸರ್ವ ಸುಂದರ ಗುರು | ಗೋವಿಂದ ವಿಠಲಾ ೫

೬೯೨
ವೇದನಿಧಿ ಹರಿ ವಿಠಲ | ಕಾದುಕೋ ಇವಳಾ ಪ
ಮೋದತೀರ್ಥರ ಮತದಿ | ರಾಜಿಸುತ್ತಿಹಳಾ ಅ.ಪ.
ವಾದೀಭ ಕೇಸರಿಯು | ವಾದಿರಾಜರು ಮತ್ತೆವೇದವೇದ್ಯರ ಕಂಡು | ಶುಭಸ್ವಪ್ನದೊಳಗೇಭೋದವಗದೆ ಸಾಗಿ | ವೇದನಿಧಿಗಳ ಹಸ್ತಸಾದರದಿ ಅಕ್ಷತೆಯು | ಪುಷ್ವ ಸ್ವೀಕಾರವು ೧
ಯತಿವರೇಣ್ಯರ ಕರುಣಾ | ಸತತವಿರಲೀಕೇಗೇಪತಿಸುತರು ಹಿರಿಯಾ | ಹಿತಸೇವೆಯಲ್ಲೀಮತಿಯ ಕರುಣಿಸಿ ನಿನ್ನ | ವ್ಯಾಪ್ತತ್ವ ತಿಳಿಸೀಅತಿಶಯದ ಸೇವೆಯಿಂ | ಉದ್ದಿರಿಸೊ ಇವಳಾ ೨
ಸುರರು ನರರೊಳಗೆಲ್ಲ | ತರತಮಾತ್ಮಕರೆಂಬ ವರಸುಜ್ಞಾನವ ಕೊಟ್ಟುಕಾಪಾಡೊ ಹರಿಯೇಗುರು ಭಕ್ತಿ ಹರಿಭಕ್ತಿ | ಪರಮ ಸಾದನವೆಂಬಅರಿವನೇ ನೀಡುವುದು | ಗರುಡ ಧ್ವಜಾತ್ಮ ೩
ಧರ್ಮಮಾರ್ಗದಲಿರಿಸಿ | ಪೇರ್ಮೆಯಲಿ ಪೊರೆ ಇವಳಾಭರ್ಮಗರ್ಭನ ಪಿತನೆ | ನಿರ್ಮಾತೃ ಜಗಕೇನಿರ್ಮಮದ ಸಾದನೆಯ | ಮರ್ಮವನೆ ಅರುಹುತ್ತಕರ್ಮನಾಮಕ ಹರಿಯೆ | ಕಾಪಾಡೊ ಇವಳಾ ೪
ಕೋವಿದೋತ್ತಂಸ ಭವ | ನೋವುಗಳ ಪರಿಹರಿಕೆಪಾವನಾತ್ಮಕ ನಿನ್ನ | ನಾಮ ಸುಧೆ ಉಣಿಸೀಭಾವದಲಿ ಮೈದೋರಿ | ಪೊರೆಯಲ್ಕೆ ಬಿನ್ನವಿಪೆಭಾವುಕರ ಪತಿ ಗುರು | ಗೋವಿಂದ ವಿಠಲಾ ೫

೬೯೩
ವೇದವತಿ ಪತಿ ವಿಠಲ | ಉದ್ದರಿಸೊ ಇವಳ ಪ
ಮೋದದಾಯಕನಾಗಿ | ಶ್ರೀದ ಶ್ರೀಹರಿಯೇ ಅ.ಪ.
ದಾಸರಾಯರ ಕರುಣ | ವಾಶ್ರಯಿಸಿ ದಿನದಿನದಿಲೇಸು ಕೊಂಡಾಡುತಲಿ | ಮೇಶ ದಾಸರನೂಭಾಸುರ ಸುಗಾನ ಉ | ಲ್ಲಾಸದಲಿ ಮೈಮರೆದುಕೇಶವನ ಗುಣವನಧಿ | ಈಸುವಂತೆಸಗೋ ೧
ತೇಜೊರೂಪಿಯು ಪ್ರಾಣ | ತೇಜವನು ಸ್ವಪ್ನದಲಿತೈಜಸನು ತೋರೆ ಅ | ವ್ಯಾಜ ಕರುಣೀಮಾಜದಲೆ ವೆಂಕಟನ | ನೈಜ ರೂಪವ ಕಂಡವ್ಯಾಜದಲ್ಲಿಂಕಿತಳು | ವಾಜಿ ಮುಖ ಹರಿಯೇ ೨
ವಲ್ಲಭೆಯು ಶ್ರೀ ತುಳಸಿ | ಚೆಲ್ವಶಿಲೆ ಸುತ್ತುತಲಿನಲ್ಲ ಹರಿಪರಿ ಪೂರ್ಣ | ಎಲ್ಲೆಡೆಯಲೆಂಬಾಸೊಲ್ಲನಿವಳಿಗೆ ತೋರಿ | ಸಲ್ಲಿಸಿಹ ಹರಿಸೇವೆಬಲ್ಲವರ ಬಲ್ಲರೋ | ಘುಲ್ಲಕರಿಗಲ್ಲಾ ೩
ಹರಿಗುರೂ ಸದ್ಭಕ್ತಿ | ಗುರು ಹಿರಿಯರ ಸೇವೆ ಕರುಣಿಸುತ ಕನ್ಯೆಯನು | ಪೊರೆಯುವುದು ಸತತಗಿರಿಜೆ ದರ್ಶನ ಫಲಕೆ | ಸರುವ ಮಂಗಳವಿತ್ತುನಿರುತ ಸಲಹೆಂದಿವಳ | ಪ್ರಾರ್ಥಿಸುವೆ ಹರಿಯೇ ೪
ಮಧ್ವರಾಯರ ಮತದಿ | ಶುದ್ಧ ಬುಧಿಯನಿತ್ತುಮಧ್ವೇಶ ಹರಿಪಾದ | ಹೃದ್ಗುಹದಿಕಾಂಬಅಧ್ಯಾನಲ್ಲಿವಳ | ಬದ್ಧಳನೆ ಮಾಡಿ ಪೊರೆಮಧ್ವಾಂರಾತ್ಮ ಗುರು | ಗೋವಿಂದ ವಿಠಲಾ೫

೩೪೦
ವೇದವ್ಯಾಸಾ ಶ್ರೀ ಹರೇ | ನಿನ್ನ ಶ್ರೀಪಾದಉದಕೇಜ – ತೋರಿಸೋ ಪ
ವೇದೋದ್ಧರಣ ಪ್ರಭೇದ ರಚನ – ವಿವಾದ ಹರಣ ಪ್ರಬೋಧ ಮುದ್ರಾಂಕನ ಅ.ಪ.
ಹೇಮಲೋಚನ ಕಾಲ | ಸಕಲ ಸದ್ಗುಣಧಾಮ – ಶ್ರೀ ಭೂಮಿ ದುರ್ಗೆ ಲೋಲ ||ಧೃತ – ಕಾಮ ಜನಕ ನಿಸ್ಸೀಮ ಮಹಿಮ – ತ್ರಿಧಾಮದಲಿ ಭಕ್ತಸ್ತೋಮ ವಿರಿಸಿದೆ – ಶ್ರೀರಾಮಾ – ಸುಧಾಮ – ರಿಪು ಭೀಮಾ | ಸುರಸಾರ್ವಭೌಮ ೧
ಆತ್ರಿಜ ದತ್ತಾತ್ರೇಯ | ಕೈಲಾಸ ವಾಸಮಿತ್ರ ಸುಮನ ಮುಖಗೇಯ ||ಧೃತ – ಅತ್ರಿ ಪ್ರಮುಖ ವಿಧಿ ಪುತ್ರಾನ್ವಿತಗೋತ್ರಾರಿ ಪ್ರಿಯ ಸತ್ಯಾವಲ್ಲಭಚಿತ್ರಾ – ಸುವಿಚಿತ್ರಾ – ಸಮಗಾತ್ರಾ | ತೋರಿಸುತವಗಾತ್ರ ೨
ಚಿನುಮಯಗುಣ ವಪುಷಾ | ಅನಂತ ಶೀರ್ಷಾಅನಿಲ ಹೃದಯಾಂತರ್ಗತ ||ಧೃತ – ಮನಸಿಜ ಪಿತ ಗುರುಗೋವಿಂದ ವಿಠಲನೆತನುಮನಧನವೆಲ್ಲ ನಿನದಾಗಿರುವುದೊಮುನಿವಂದ್ಯಾ – ಮುಕುಂದ – ಗೋವಿಂದ | ಕೊಡು ಎನಗಾನಂದ೩

೬೯೪
ವೈಕುಂಠ ವಿಠ್ಠಲನೆ ನೀನಿವನ ಸಾಕಬೇಕಯ್ಯ ಶ್ರೀ ಹರಿಯೆ ಪ
ನಾಕಪತಿಯೆ ನಿನ್ನ ತೋಕನೆಂದೆನಿಸಿ ಕೃಪಾಕರುಣೆ ಕಾಪಾಡ ಬೇಕೊ ಹರಿಯೆ ಅ.ಪ.
ಪುಂಡಲೀಕ ವರದ ಪಾಂಡುರಂಗನೆ ನಿನ್ನತೊಂಡನಾಗಿಹನ ಕೈಗೊಂಡು ಕಾಪಾಡೊ ಹರಿಯೆ |ಅಂಡಜಸುವಾಹನನೆ ಮಾರ್ತಾಂಡ ಶತತೇಜಭಾಂಡ ಕಾರಕ ಭೀಮ ಗೊಲಿದಂತೆ ಒಲಿಯಬೇಕು ೧
ಇಹಪರಗಳೆರಡಕ್ಕೂ ಅಹಿಶಯ್ಯ ನಿನ ಪಾದವಹಿಸೆ ಸೇವಿಪನಯ್ಯ ಸಹಜ ಭಕ್ತಿಯಲಿವಿಹಗೇಂದ್ರ ವಾಹನನೆ ಐಹಿಕದ ಭಯಹರಿಸಿವಿಹಿತ (ಕರುಣ)ದಿಂದಿವನ ಕಾಪಾಡು ಬೇಕು ಹರಿಯೇ ೨
ವಿಘ್ನಹರ ನಿನ್ನಲ್ಲಿ | ಲಗ್ನ ಗೈಸಿಹಮನವ ನಿ-ರ್ವಿಘ್ನತೆಯ ನೀಡಯ್ಯ ಸರ್ವಕಾಲದಲಿಯಜ್ಞೇಶ ಯಜ್ಞ ಭುಗ್ ಯಜ್ಞಸಾಧನ ಯಜ್ಞಯಜ್ಞಾನು ಸಂಧಾನ ಸರ್ವಕಾರ್ಯದಲೀಯೊ ೩
ವೃಂದಾರ ಕೇಂದ್ರ ರಿಂ | ವಂದ್ಯ ಹಯಮುಖ ಪಾದಭೃಂಗರೆಂದೆನಿಸುವ ಭಾವಿ ಮರುತರ ಚರಣದೀಸಂಧಿಸುತ ಧೃಡಭಕ್ತಿ ವೃಂದಾವನಾಖ್ಯಾನಸಂದೋಹ ಸುಜ್ಞಾನ ನೀನಿತ್ತು ಸಲಹೊ ಹರಿಯೇ ೪
ಅಂಭ್ರಣೀ ಪತಿ ನಿನ್ನ ಹಂಬಲಿಸಿ ಬೇಡುವೆನುಇಂಬಿಟ್ಟು ತವ ಪಾದದ್ಹಂಬಲವ ನೀಯೋಉಂಬುಡುವ ಕ್ರಿಯೆಗಳಲಿ ಬಿಂಬ ಕ್ರಿಯೆಗಳ ತಿಳಿಸಿಬಿಂಬ ತವರೂಪ ಹೃದಯಾಂಬರದಿ ತೋರಿ ಸಲಹೋ ೫
ಪಂಚಪಂಚಸುತತ್ವ | ಪಂಚ ಭೇದದಜ್ಞಾನಸಂಚಿಂತೆಯ ನೀಯೋ ವಾಂಛಿತಾರ್ಥದನೇಪಂಚ ಅವಿದ್ಯೆಯ ಕಳೆದು ಪಂಚಸು ಪರ್ವದಲಿಪಂಚಾಸ್ಯನಲಿ ನಿನ್ನ ಪಂಚರೂಪವ ತೋರಿಸೋ ೬
ಸರ್ವ ಸ್ವಾತಂತ್ರನೇ ಸಾರ್ವಭೌಮನೆ ಸ್ವಾಮಿಸರ್ವಾಂತರಾತ್ಮಕನೆ ಶರ್ವಾದಿ ದಿವಿಜ ವಂದ್ಯಮಧ್ವಾಂತರಾತ್ಮ ಗುರು ಗೋವಿಂದ ವಿಠಲ ತವದಿವ್ಯ ರೂಪವ ತೋರಿ ಕಾಪಾಡೊ ಹರಿಯೆ ೭

೩೬೭
ವ್ಯಾಸತೀರ್ಥರ ಪಾದ | ಲೇಸಾಗಿ ಭಜಿಸಲುಕೇಶವ ನೊಲುಮೆಗೆ ಅವಕಾಶವೊ ಪ
ಆಸದಾಶಿವ ವಂದ್ಯ ಶ್ರೀಶನ ಪದ ಪದುಮಸೂಸಿ ಸೇವಿಸುವಂಥ ದೈಶಿಕರೊಡೆಯರ ಅ.ಪ.
ಯತಿವರ ಬ್ರಹ್ಮಣ್ಯ ವರದಿಂದುದ್ಭವ ವಸುಮತಿಯ ಸ್ಪರ್ಶದ ಮುನ್ನ ಕನಕಪಾತ್ರ ಧೃತನೆ |ಮತಿವಂತನೆನಿಸುತಬ್ಬೂರೊಳು ನೆಲೆಸುತ್ತಯತಿಯಾಗಿ ಮೆರೆದೆ ಬ್ರಹ್ಮಣ್ಯರ ಕರಜನೆ ೧
ಶ್ರೀಪಾದರಾಯರಲ್ಲೋದಿ ಸುಧಾದಿಯಆ ಪಂಪಾ ಕ್ಷೇತ್ರವ ಪ್ರಾಪಿಸಿ ನೆಲಿಸೀ |ತಾಪಸೀಗಳು ವಿಜಯೀಂದ್ರ ವಾದಿರಾಜಗಾಪಾರ ಮಹಿಮನ ತತ್ವಗಳೊರೆದಂಥ ೨
ವಿದ್ಯಾನಗರಿಯ ಭವ್ಯ ಗದ್ದುಗೆಯನೆ ಯೇರ್ದತಿದ್ದೀದ ಪೃಥುವೀಪ ಕುಹುಯೋಗವಾ |ಮಧ್ವ ಸಮಯ ವರ ದುಗ್ದಾಭ್ಧಿ ಪೂರ್ಣೇಂದುಅದ್ವೈತ ತಮಸೂರ್ಯ ವರ ಚಂದ್ರಿಕಾಚಾರ್ಯ ೩
ಮಾಯಾ ಸಮಯ ಮದಕರಿಗೆ ಕಂಠೀರವನ್ಯಾಯಾಮೃತವು ತರ್ಕ ತಾಂಡವ ರಚಿಸೀ |ಮಾಯಾ ಮತಂಗಳ ಛೇದಿಸಿ ಬಹುವಿಧರಾಯ ಕೃಷ್ಣನೆ ಪರಾತ್ಪರನೆಂದು ಪೇಳಿದ ೪
ವರುಷವು ಸುವಿಳಂಬಿ ಮಾಸ ಫಾಲ್ಗುಣ ವದ್ಯಎರಡೆರಡನೆ ದಿನವು ಶನಿವಾರದೋಳ್ ವರ ಗುರು ಗೋವಿಂದ ವಿಠಲ ಧ್ಯಾನಾನಂದ ಪರನಾಗಿ ತನು ಕಳೆದ ನವ ವೃಂದಾವನದೊಳು ೫

೨೦೬
ವ್ಯಾಸತೀರ್ಥರಿಗೊಲಿದು | ವಶನಾಗಿ ನಿಂದಿರುವದಾಸಾಂಜನೇಯ ಪದ | ಬಿಸಜ ಕಾನಮಿಪೇ ಪ
ವಾತಸುತನೆನ್ನಿಸುತ | ಸೀತೆ ರಮಣನ ಕಂಡುಸೀತೆ ವಾರ್ತೆಯ ನರುಹಿ | ಖ್ಯಾತ ನೀನಾದೇ |ಮಾತರಿಶ್ವನೆ ಹರಿಯ | ಪ್ರೀತಿ ನಿನ್ನೊಳಗೆಂತೋಪೋತ ಭಾವ ದೊಳಾಂತೆ | ಪ್ರೀತಿ ಅಪ್ಪಿಗೆಯಾ ೧
ಮಡದಿ ಶಿಖೆ ಪಿಡಿದೆಳೆದ | ಕಡು ದುರುಳನನು ಪಿಡಿದುಕೆಡಹಿ ಅವನನು ಧುರದಿ | ಘುಡಿ ಘುಡಿಸಿ ಬಗೆದೊಡಲನುಒಡನೆ ಉರ ರಕ್ತವನು | ಕುಡಿದಂತೆ ತೋರಿ ಜಗನಡುಗುವಂತೆಸಗಿವೆಯೊ | ಕಡುಗಲಿಯ ಭೀಮಾ ೨
ಸನ್ಯಾಸದಾಶ್ರಮವ ಅ | ನ್ಯಾಯದಲಿ ಗೊಂಡುಶೂನ್ಯ ಮತ ತತ್ವ ಪ್ರ | ಚ್ಛನ್ನದಲಿ ಪೇಳ್ದಾಅನ್ಯಾಯ ಕಳೆವುದಕೆ | ಜನ್ಯನಾಗುತ ಮಧ್ವಚೆನ್ನ ಪೆಸರಲಿ ಪೇಳ್ದ | ಘನ್ನ ತತ್ವಗಳಾ ೩
ಆರು ಕೋಣ್ಯು ಪರಿಯಾ | ಕಾರದಲಿ ವಲಯಾಮೂರು ಕೋಟಿಯ ಸಂಖ್ಯೆ | ವಾನರಾಕೃತಿ ಬದ್ಧವೂ |ಚಾರು ಯಂತ್ರದಿ ಸೌಮ್ಯ | ದಾಕಾರದಲಿ ಜಪದಹಾರ ಪಿಡಿಯುತ ವ್ಯಾಸ | ತೀರಥಿರಿಗ್ವೊಲವೇ ೪
ವಕ್ರ ಮನವನು ತ್ಯಜಿಸಿ | ಚಕ್ರತೀರ್ಥದಿ ಮಿಂದುವಕ್ರ ಬಕರಿಪು ನಿನ್ನ | ಚೊಕ್ಕ ರೂಪವ ಸೇವಿಸೀಅಕ್ರೂರ ವರದ ಗುರು | ಗೋವಿಂದ ವಿಠ್ಠಲನಅಕ್ಕರದಿ ಭಜಿಸುವಗೆ | ಚಕ್ರಿಪುರ ವೀವೇ೫

೩೬೮
ವ್ಯಾಸರಾಜ ಗುರುವೇ | ಎಮ್ಮನು | ಪೋಷಿಸುವುದು ಬಿಡದೇ ಪ
ಈ ಸಮೀರ ಸಮಯವನುಪದೇಶಿಸಿ | ಸಲಹುದು ಸತತಾ ಅ.ಪ.
ಹೆಂಚು ಹಾಟಕ ಸಮ ಬುದ್ಧೀ | ಹರಿಗುಣ | ಸಂಚಿಂತಿಪ ಬುದ್ಧೀಮುಂಚೆ ಇತ್ತು ಮನ | ಅಂಚೆ ಗಮನ ಪಿತ | ವಾಂಛಿತ ಪ್ರದನಲಿ ೧
ಕಾಯಗಳಿತವಾಯ್ತು | ಬಂದ ಕಾರ್ಯವಾಗಧೋಯ್ತುಮಾಯಾ ಸಂಸಾರದಿ ಮುಳುಗಿ ಬಳಲಿಹೆ | ತೋಯ ಜಾಕ್ಷನ ತೋರೋ ೨
ತರ್ಕ ತಾಂಡವನರಿಯೇ | ಗುರುವೇ ಕರ್ಕಶ ಭವ ಕಳೆಯೇಶರ್ಕ ರಾಕ್ಷ ಗುರುಗೋವಿಂದ ವಿಠಲನ ಚೊಕ್ಕ ಚರಣ ತೋರೀ ೩

೩೭೦
ವ್ಯಾಸರಾಯ ನಿನ್ನ ಅನುದಿನಾ | ಸ್ಮರಿಪ ಜನಕೆತೋಷದಿಂದ ಲೀವೆ ಸಾಧನಾ |ವಾಸುದೇವ ಕೃಷ್ಣಲೀಲೆ | ರಾಶಿಗುಣವ ಬೋಧಿಸುತ್ತಶ್ರೀಶ ಪಾದಪದುಮ ಕಾಂಬ | ಲೇಸು ಮುಕ್ತಿ ಮಾರ್ಗತೋರ್ವೆ ಅ.ಪ.
ಏಸೊ ಮುನಿಗಳಿದ್ದು ಮಾಡದಾ | ಶಾಸ್ತ್ರವೆಂಬ ಭೂಷಣಂಗಳ್ಹರಿಗೆ ತೊಡಿಸಿದಾ |ಕೇಶವನೆ ಸರ್ವೋತ್ತಮನು | ದೋಷದೂರನೆಂದು ತಿಳಿಸಿಮೋಸಪಡಿಪ ಮಾಯಿ ಮತವ | ಘಾಸಿಮಾಡಿ ಜಯವ ಪಡೆದೆ ೧
ಕಾಶಿ ಗದಾಧರ ಸುಮಿಶ್ರನ | ಸೋಲಿಸುತ್ತ ದಾಸನನ್ನ ಮಾಡಿಕೊಂಡನ | ಕಾಶಿ ಮಿಶ್ರಪಕ್ಷಾಧಾರ | ವಾಸುದೇವ ವಾಲೀಲೆಯಏಸೊ ವಾದಿ ಜಯದ ಪತ್ರ | ಭೂಷಣಗಳ್ ಶ್ರೀಶಗಿತ್ತೆ ೨
ಶೇಷನಾವೇಶದಿಂದಲಿ | ಪುಟ್ಟಿ ನೀವುವ್ಯಾಸರಾಯರೆಂಬ ಪೆಸರಲಿ |ದೇಶ ಪತಿಗೆ ಬಂದ ಕುಹು | ದೋಷಯೋಗ ಹರಿಸುತ ಸಿಂಹಾಸನೇರಿ ಜಗದಿ ಬಹಳ | ಭಾಸುರ ಸುಕೀರ್ತಿ ಪಡೆದೆ ೩
ನ್ಯಾಯ ಗ್ರಂಥವೆಂದು ಕರೆಸಿಹ | ಚಂದ್ರಿಕಾದಿನ್ಯಾಯಾ ಮೃತವು ತರ್ಕ ತಾಂಡವ |ಗೇಯದಿಂದ ತುಚ್ಛ ಭಾಷ್ಯ | ಗಾಯನ ಮಾಡ್ದದುರ್ಮತೆನ್ನ ಮಾಯಿಮತವ ಗೆದ್ದು ಮಧ್ವ | ಧೇಯ ಸಾಧಿಸೀದ ಗುರುವೆ ೪
ಪರಮ ಶಿಷ್ಯರೆಂದು ಮೆರೆವರಾ | ವಿಜಯಿಂದ್ರವರ ಸುವಾದಿರಾಜರೆಂಬರಾ |ಗುರುಗಳಾಗಿ ಯತಿ ಸುರೇಂದ್ರ | ವರ ಸುಪುತ್ರ ಭಕ್ಷೆ ಬೇಡೆಪರಮ ಹರುಷದಿಂದ ವಿಜಯ | ಇಂದ್ರರನ್ನ ಕಳುಹಿ ಪೊರೆದೆ ೫
ಜ್ಞಾನಿಯರಸ ವ್ಯಾಸ ಮುನಿಗಳಾ | ಮನುಜರೆಂದುಹೀನ ಜನರು ಪೇಳೆ ಆವರ್ಗಳಾ |ಭಾನುಸೂನು ನರಕ$ನೇಕ | ಕಾಣಿಸುತ್ತ ಹಿಂಸಿಸೂವಶ್ರೀನಿವಾಸ ಹರಿಯ ಮುಂದೆ | ಗಾನ ಗೈದು ಆಡುತಲಿಪ್ಪ ೬
ಪರಮಹಂಸ ಮುನಿಯು ಮನದಲಿ | ಪೂಜೆಗೈದುಹರಿಯ ಕಾಂಬ ಹೃದಯ ಗುಹೆಯಲಿ |ಗುರುವರ ಬ್ರಹ್ಮಣ್ಯ ಪೂಜ್ಯ | ಗುರು ಗೋವಿಂದ ವಿಠ್ಠಲಾನಚರಣ ವನಜ ಧ್ಯಾನಾಸಕ್ತ | ವರ ಸುನವ ವೃಂದಾವನಸ್ಥ ೭

೩೬೯
ವ್ಯಾಸರಾಯರ ಚರಣವನೆ ಸೇವಿಸಿ ಪ
ವ್ಯಾಸರಾಯರ ಚರಣ ಸರಸಿಜದ ಸೇವೆ ಬಲು ಮೀಸಲ ಮನದಿ ಮಾಡೆ ಆಶೆಪಾಶೆಯ ತೊರೆದು ಕ್ಲೇಶವೆಲ್ಲವ ಹರಿಸಿ ಭಾಸಿಸುವ ಬಿಡದಲೇ ಹೃದ್ದೇಶ ಖೇಶದೊಳಗೇ ಅ.ಪ.
ಬನ್ನೂರು ಪುರದಲ್ಲಿ ಮುನ್ನೋರ್ವ ಬ್ರಾಹ್ಮಣನಮನ್ನೆಯೋಳ್ಳುದಿಸಲೂ ಸ್ವರ್ಣ ಪಾತ್ರೆಲಿ ತರಿಸಿಘನ್ನ ಮಹಿಮನ ತಂದು ಬ್ರಹ್ಮಣ್ಯ ಯತಿವರರು ತಮ್ಮ ಆಶ್ರಮದಿ ಪೊರೆಯೆ ||ಉನ್ನತದ ಗುಡ್ಡದಲಿ ಗವಿಯ ಮನೆಯಾಗಿರಲು ಚಿಣ್ಣನಾ ತೊಟ್ಟಿಲಿನ ಮೇಲಿನ ಗವಾಕ್ಷದಿಂಚೆನ್ನಗೋವ್ ದಿನದಿನದಿ ಪಾಲ ಕರೆಯುತ ಚಿಣ್ಣನನು ತಾ ಬಲು ಸಲಹಿತು ೧
ತಾಪಸೋತ್ತಮರಾದ ಶ್ರೀಪಾದರಾಯರ ಸ-ಮೀಪದೊಳು ಆ ಪರಮ ಶಾಸ್ತ್ರ ವ್ಯಾಸಂಗದೀಭಾಪು ಭಾಪನೆ ಮೆರೆದು ಭಕ್ತಿ ಸುಪಥವ ಪಿಡಿದು ಮೈ ಮರೆದು ಕುಣಿಯುತಿರುವ ||ಶ್ರೀಪಾದ ಮುನಿಪ ತಾ ಮುಚ್ಚಳವ ತೆರೆಯದಿಹ ಸಂಪುಟವ ತೆರೆಯುತ್ತ ಶ್ರೀ ಪತಿಯನೆ ನೋದುತಶ್ರೀಪ ಶ್ರೀ ವೇಣುಗೋಪಾಲ ಕೃಷ್ಣನ್ನ ಕಾಣುತ್ತ ಕುಣಿ ಕುಣಿದಾಡಿದ ೨
ಶಾಲಿಗ್ರಾಮವ ಪಿಡಿದು ತಾಳವನೆ ಹಾಕುತ್ತಬಲುಭಕ್ತಿ ಭರದಿಂದ ಘಲ್ಲು ಘಲ್ಲನೆ ಕುಣಿಯೆಖುಲ್ಲ ಜನರಿದರ ವಳ ಮರ್ಮವನೆ ತಿಳಿಯದಲೆ ಗುಲ್ಲುಗುಲ್ಲೆಂದು ನಗಲೂ || ಬಲ್ಲಿದ ಶ್ರೀಪಾದರಾಯರಿದ ಕೇಳಿ ಕಂಗಳಲಿ ಗಂಬನಿ ಗಲ್ಲದಲಿ ಕೈಯಿಡುತ ಸೊಲ್ಲ ಕೇಳಿರಿ ಸುಜನರೆಲ್ಲರು ಶ್ರೀ ಕೃಷ್ಣ ನಮ್ಮ ವ್ಯಾಸರೋಶನಾದನು ೩
ವಿಜಯ ನಗರಿಗೆ ಬಂದು ವಿಜಯ ಸಾರಥಿ ಹರಿಯನಿಜ ಮತವ ಬೋಧಿಸುತ ನಿಜ ಜನರ ಪೊರೆಯುತ್ತಕುಜನ ಕುತ್ಸಿತ ಮಾಯಿಮತ ಜೈಸಿಅಜನನಯ್ಯನ ಪ್ರೀತಿ ಸಂಪಾದಿಸಿ ||ಸುಜನ ಪಾಲಕ ಕೃಷ್ಣರಾಜನಿಗೆ ಕುಹುಯೋಗಗಜಬಜಿಸಿ ಬರುತಿರ್ಪುದನು ನಿಜ ಮನದಿ ತಿಳಿದುಗಜವರದ ನಂಘ್ರಿಯನೆ ಭಜಿಸುತ್ತ ವಿಜಯ ಪುರಿ ಸಿಂಹಾಸನವನೇರ್ಧರ ೪
ಕಳೆದು ಕುಹುಯೋಗವನು ಶೀಲ ಭೂಪಾಲನಿಗೆಒಲಿದು ಬಲು ದಾನ ಧರ್ಮಂಗಳನೆ ಮಾಡುತಾಏಳಲವ ಮಾಡದಲೆ ಶೀಲ ಸುಬ್ರಾಹ್ಮರಿಗೆ ಸನ್ನದುಗಳಿತ್ತು ಪೊರೆದ ||ಅಲವ ಬೋಧರ ಮತವ ನೆಲೆಗೊಳಿಸಿ ರಾಜ್ಯದಲಿಬಲು ಪರಿ ಗ್ರಂಥ ರಚನೆಯಲಿ ಕಳೆಯೆ ಕಾಲವಕಲು ಮನದ ಜನರಿವರ ಬಲು ಪರಿಯ ಮಹಿಮೆಗಳನೂ ತಾವ್ ತಿಳಿಯಲೊಶವೆ ೫
ಇಂಪುಗೊಳ್ಳುತ ಮನದಿ ತಂಪಿನಿಂದಲಿ ಮೆರೆವಪಂಪೆ ಸುಕ್ಷೇತ್ರದಲಿ ಬಾಂಬೊಳೆಯ ಜನಕನ್ನಸಂಪ್ರೀತಿಯನೆ ಪಡೆದಿರುವ ಯಂತ್ರ ಉದ್ಧಾರರನ ಸ್ಥಾಪಿಸುತಲಿ||ನೋಂಪಿನಿಂದಲಿ ಬ್ರಾಹ್ಮಲಕ್ಷ ಗುಂಪಿಗೆ ಉಣಿಸಿ |ಸಂಪುಲ್ಲ ಲೋಚನನ ಶಂಫಲಿಯ ಪುರಗನನುಸಾಂಪ್ರದಾಯಕದಿಂದ ಸಂಪ್ರೀತಿ ಬಡಿಸಿದರ ಪದ ಪಾಂಸುವನೆ ಸಾರಿರೋ ೬
ಶೇಷನಾವೇಶ ಶ್ರೀ ವ್ಯಾಸರಾಜರು ತಾವುಶೇಷ ಪರ್ವತ ವಾಸ ವೆಂಕಟೇಶನ ದ್ವಾದಶಾಬ್ದಿಯೊಳೊಸೆದು ಬಲು ನೇಮದಿಂ ಪರಿ ಪರಿಯ ಪೂಜೆಯನೆ ಗೈಯ್ಯುತಲಿ ||ಶ್ರೀಶನ ಸುಪೂಜಾ ವಿಧಾನವನೆ ಗೈಸುತ್ತದೋಷದೂರನ ಸೇವೆ ಮೀಸಲಳಿಯದ ಮನದಿ ಒಸೆದು ತಾವ್ ಗೈಯ್ಯುತ ಭಾಸಿಸುವ ಸತ್ಕೀರ್ತಿಯುತರಾಗಿ ಮೆರೆಯುತಿಹರ ೭
ದಾಸ ಪಂಥವ ಸಾರಿ ನಿಜ ದಾಸನೆನೆ ಶ್ರೀನಿವಾಸನಿಗೆ ಪುರಂದರ ವಿಠಲ ದಾಸನೆಂದೂದಾಸ ಪೀಠದಿ ನಿಲಿಸಿ ದಾಸ ಕೂಟವ ರಚಿಸಿ ಸತ್ಪಂಥವನೆ ಸಾರಿದ ||ಆಶುಕವಿತೆಯ ರಚಿಸಿ ಪ್ರಾಕೃತ ಸುಭಾಷೆಯಲಿಕೇಶವನ ಗುಣಧಿಯಲಿ ಲೇಸಾಗಿ ಈಸುತಲಿದಾಸರೊಡನಾಡುತಲಿ ಮೀಸಲಾಗಿರಿಸಿ ತನು ಕೇಶವನ ಗುಣ ಪೊಗಳಿದ ೮
ಜಯ ಜಯತು ಶುಭಕಾಯ ಜಯ ಜಯತು ವ್ಯಾಸಾರ್ಯಜಯ ಮಧ್ವಮುನಿ ಪ್ರೀಯ ಜಯ ಚಂದ್ರಿಕಾಚಾರ್ಯಜಯತು ವಿದ್ವದ್ದಾರ್ಯ ಜಯತು ಸುರಮುನಿ ಪ್ರೀಯ ಜಯ ಜಯತು ಯತಿವರ್ಯನೆ ||ಕಾಯಭವ ಪಿತ ಗುರೂ ಗೋವಿಂದ ವಿಠ್ಠಲಗೆಪ್ರೀಯ ಗುರು ವ್ಯಾಸಾರ್ಯ ಸ್ತೋತ್ರವನು ಭಾವ ಶುದ್ಧಿಯೊಳಾವ ಭಜಿಸುವನವಗೆ ಭವವನಧಿ ಉತ್ತರಿಸೆ ನಾವೆಯೆನಿಸುವುದಿದು ೯

೩೭೧
ವ್ಯಾಸಾರ್ಯಾ – ವ್ಯಾಸಾರ್ಯ ಪ
ದೈಶಿಕಾರ್ಯ ಬ್ರಹ್ಮಣ್ಯರ ಕರಜನೆ ಅ.ಪ.
ಭುವಿ ಸ್ಪರ್ಶಿಲ್ಲದೆ | ಆವನಿಜನಿತ ಗುರುತವ ಪದ ಭಜಕಗೆ | ಭವ ಪರಿಹರಿಸುವೆ ೧
ಭೀಕರವೆನೆ ನೃಪ | ಗಾಕುಹುಯೋಗವತಾಕುವ ಮುನ್ನವೆ | ನೀ ಕಳೆದೆಯೊ ಗುರು ೨
ಹನ್ನೆರೆಡೊರ್ಷವು | ಪನ್ನಗ ನಗಪ ಪ್ರಪನ್ನ ಭಜಕ ನಿನ | ಗಿನ್ನುಂಟೇ ಸಮ ೩
ಮಂದ ಜನರೋದ್ಧರ | ವೆಂದು ರಚಿಸಿದೇಚಂದ್ರಿಕಾದಿ ತ್ರಯ | ಸುಂದರ ಗ್ರಂಥ ೪
ವ್ಯಾಸ ತ್ರಯಾಭಿಧ | ಲೇಸು ಗ್ರಂಥ ಸಂಕಾಶಿಸೆ ಬಹು ವಿಧ | ಆಸುರಿ ಮತ ಹನ೫
ದಾಸ ಪಂಥ ಉಪ | ದೇಶಿಸೆ ಶ್ರೀನಿವಾಸ ನಾಯಕರ | ದಾಸರೆಂದೆನಿಸಿದೆ ೬
ವಾಸವ ನಾಮಕ | ದಾಸರಿಂದ ದಿಗ್ದೇಶ ಪ್ರಸರ ಮಹಿ | ದಾಸನ ನಾಮವು ೭
ಶ್ವಸನನ ಮತ ವಿ | ದ್ವೇಷಿವಾದ ಹರದೇಶ ದೇಶ ಹನು | ಮೇಶ ಪ್ರತಿಷ್ಠಿತ ೮
ಸಾರ್ವ ಭೌಮ ಗುರು | ಗೋವಿಂದ ವಿಠಲನತೋರ್ವುದೆನ್ನ ಹೃದ | ಯಾ ಕಾಶದಲಿ ೯

೩೫೯
ಶರಣು ಗುರು ಬ್ರಹ್ಮಣ್ಯ | ಶರಣು ಶಿರಿ ಸುರಮಾನ್ಯಪರಿಹರಿಸು ಭವತಾಪ | ಬಿನ್ನವಿಪೆ ಮುನಿಪ ಪ
ಪುರುಷೋತ್ಮ ಕರಜಾತ | ಕಣ್ವತಟದಲಿ ಖ್ಯಾತನರಹರಿಯ ಪದಕಮಲ | ಭಜಕಶೀಲಶರಣ ಜನ ಸುರಕಲ್ಪ | ತರುವೆ ಎನ್ನಯ ಪಾಪಪರಿಹರಿಸೊ ಮುನಿಮೌಳಿ | ನಾನು ಪದಧೂಳಿ ೧
ಯೋನಿ ಅನೇಕದಲಿ | ಬಂದಿರುವೆ ನಾಬಳಲಿಮಾನ ನಿಧಿ ನೀಯನ್ನ | ಕಾಯೊ ದಯ ಪೂರ್ಣ |ಜ್ಞಾನಾರ್ಕನೆನಿಸಿರುವ | ಮೌನಿ ತವ ಸದ್ಭಾವಪೂರ್ಣ ಹರಿ ಸುಜ್ಞಾನ | ಪಾಲಿಸೈ ನಿಪುಣ ೨
ವಿಕಳ ಮತಿಯನು ಹರಿಸು | ಅಕಳಂಕನೆಂದೆನಿಸುಸುಖತೀರ್ಥ ಮತ ಸುಧೆಯ | ಉಣುವ ಪರಿಯ |ಸುಖದಿಂದ ಕರುಣಿಸುತ | ಸುಖ ಹರಿಯ ನೋಳ್ಪಂಥಪ್ರಕರಣದಲಿರಿಸೆನ್ನ | ಮೌನಿ ಕುಲರನ್ನ ೩
ವ್ಯಾಸರಾಯರ ಗುರುವೆ | ಕೈಗಳನು ನಾ ಮುಗಿವೆಲೇಸು ಹೊಲ್ಲೆಗಳೆಂಬ | ದ್ವಂದ್ವಗಳ ಉಂಬಮೀಸಲದ ಮನವಿತ್ತು | ವೈರಿಗಳನೆಗ್ಗೊತ್ತುಈ ಸುಕೃತ ಒಂದಿರಲಿ | ನಿನ್ನ ದಯವಿರಲಿ ೪
ವಿಠ್ಠಲ ಸುಪೂಜಕನೆ | ಕಷ್ಟಗಳ ಕಳೆಯುವನೆಶಿಷ್ಟ ಸಜ್ಜನ ಪಾಲ | ಹರಿಪದ ವಿಲೋಲ ಕೃಷ್ಣ ಗುರು ಗೋವಿಂದ | ವಿಠ್ಠಲನ ಪದದ್ವಂದ್ವಸುಷ್ಠು ಹೃದ್ಗುಹದಲ್ಲಿ | ಕಾಣಿಪುದು ಅಲ್ಲಿ ೫

೧೪೩
ಶರಣು ಭಾರ್ಗವರಾಮ | ಶರಣು ಭಕುತ ಪ್ರೇಮಶರಣು ಭವ ಭಯ ಪರಿಹರಾ ಪ
ಸನಕಾದಿ ಮುನಿವಂದ್ಯ | ಕನಕ ಗರ್ಭಜ ಜನಕಅನುನಯದಿ ಗೀತೆ ಫ | ಲ್ಗುಣಗೆ ಭೋಧಿಸಿದೇಎಣೆಯೆ ತವ ಕರುಣ | ಘನವರ್ಷಣಕೆ ಹರಿಅನಘ ನಿನ್ನಡಿ ನೆಳಲ | ನಾಶ್ರಯಿಪೆ ಎಂದೆಂದೂ ೧
ಭುವನ ಮೋಹನ ದೇವ | ಭವಗು ಮೋಹಿಪ ಭಾವದಿವಿಭವರು ತವರೂಪ | ಯುವಗಳಿಕ್ಕದಲೇ |ಸುವನ ತ್ರಯದಲಿ ಕಂಡು | ಪವನಾಂತರಾತ್ಮಮಾಧವನೆ ಹಿಗ್ಗುತಲಿ | ಹವಿಷನರ್ಪಿಪರೋ ೨
ಸರ್ವಶಬ್ಧಾಭಿಧನೆ | ಸರ್ವ ದೇವೋತ್ತಮನೆಪರ್ವ ಪರ್ವದಿ ಇದ್ದು | ಪರ್ವ ವಾಚ್ಯಾ |ದರ್ವಿಯಂದದಲಿಪ್ಪ | ಜೀವನ್ನ ಪೊರೆಯುವಸರ್ವಭಾರವು ನಿನ್ನದೊ | ಶರ್ವನೊಡೆಯಾ ೩
ಬಿಂಬನೆಂದೆನಿಸಿ ಪ್ರತಿ | ಬಿಂಬರುಗಳ ಜ್ಞಾನಧಂಬಲವ ಕೊಡಿಸುತ್ತ | ಇಂಬು ನಿನ್ನಡಿ ಕಮಲದಿ |ಕಂಬು ಅರಿ ಗದಧರನೆ | ತುಂಬಿ ಎನ್ನೊಳು ನೀನುಸಂಭ್ರಮದಿ ಕಾಯುವುದು | ಕುಂಭಿಣಿಯ ರಮಣಾ ೪
ವಿಶ್ವರೂಪಿಯ ನಿನ್ನ | ನಿಶ್ವಸನ ವೇದಗಳುಸ್ವಸ್ವರೂಪದಿ ಮುಖ್ಯ | ತವ ಮಹಿಮೆ ಪ್ರತಿಪಾದ್ಯವೂ | ವಿಶ್ವ ತೈಜಸ ಪ್ರಾಜ್ಞ | ತ್ರೈಯವಸ್ಥೆ ಪ್ರವರ್ತಕನೆವಿಶ್ವ ವ್ಯಾಪಿಯೆ ಗುರು | ಗೋವಿಂದ ವಿಠಲಾ ೫

೧೪೨
ಶರಧಿ ತೀರಗ ಸಿಂಹಪುರಿ ನಿಲಯ ದೇವಾ |ಪರಮ ಕರುಣಾ ಸಿಂದು ಹರಿಸೊ ಭವ ನೋವಾ ಪ
ಹರಿಯೆ ಪರದೈವ ವೆಂ | ಮೊರೆಯುತಿಹ ಬಾಲಕನಪರಿ ಪರೀ ಹಿಂಸಿಸಲು | ಪರಿಚರರಿಗ್ವೊರೆಯೇತರಳ ಪ್ರಹ್ಲಾದವನ | ಕರದೊಯ್ದು ಕಬ್ಬಿಯಲಿಹೊರದೂಡಿ ಪರಿಶಿಲೆಯ | ಶಿರದ ಮೇಲಿಡಲೂ ೧
ವರಹ ಲಕ್ಷ್ಮೀನರ | ಹರಿಯ ರೂಪದಲಿಂದಭಾರವಾದ್ ಶಿಲೆಯ ನೊ | ತ್ತರಿಸುತಲಿ ನೀನೂವರ ಭಕ್ತನನು ಕಾಯ್ದೆ | ಸರುವ ವ್ಯಾಪಕ ದೇವಕರುಣಿಸು ಗುಣಾನಂತ | ವರಲಕ್ಷ್ಮಿಕಾಂತ ೨
ಹರಿಗೆ ನಿನ್ನಯ ರೂಪ | ವಿರದೆಂಬ ಸುಜ್ಞಾನಮರೆಸಿ ಮೋಹಕನಾಗಿ | ಸುರ ವಿರೋಧಿಗಳಾನರಕ ಭಾಜನರೆನಿಸಿ | ಪರಿ ಪರಿಯ ಹಿಂಸೆಗಳಿಗೆರವು ಮಾಡುವೆ ಗುರೂ | ಗೋವಿಂದ ವಿಠಲಾ ೩

೬೯೫
ಶರ್ವೇಡ್ಯ ಮೋಹನ ವಿಠಲ ಪೊರೆ ಇವನ ಪ
ಸರ್ವತ್ರ ಸರ್ವದಾ | ಸರ್ವ ಮಂಗಳನೇ ಅ.ಪ.
ಏಸೊ ಜನ್ಮದ ಸುಕೃತ | ರಾಶಿ ಫಲಿಸಿತೋ ಇವಗೆದಾಸ ದೀಕ್ಷೆಯಲಿ ಮನ | ಲೇಸುಗೈದಿಹನೋ |ವಾಸವಾದೀ ವಂದ್ಯ | ಭಾಸುರಾಂಗನೆ ದೇವದೋಷಾಗಳನಳಿದು ಸಂ | ತೋಷವನೆ ಪಡಿಸೋ೧
ಹರಿದಾಸ ರೊಲಿದಿವಗೆ | ದರುಶನವನಿತ್ತಿಹರುಗುರು ರಘೋತ್ತಮರಂತೆ | ಬೃಂದಾವನಸ್ಥಾನರಹರಿಯು ಸ್ವಪ್ನದಲಿ | ಹರಿಹಯಾಸ್ಯವ ತೆರದಿದರುಶನಕೆ ಕಾರಣವು | ಪರಮ ಪ್ರಿಯರ್ದಯವೂ ೨
ರುದ್ರ ಗೀತೋಕ್ತ ಹರಿ | ಭದ್ರ ಮೂರುತಿ ಸ್ತೋತ್ರಉದ್ಧರಿಸಿ ಇವನಲ್ಲಿ | ಶ್ರದ್ಧಾಳು ಎನಿಸೋ ಅದ್ವೈತ ತ್ರಯಜ್ಞಾನ | ಸಿದ್ಧಿಸುತ ಸಂಸಾರಅಬ್ಧಿಯನೆ ಉತ್ತರಿಸೊ | ಮಧ್ವಾಂತರಾತ್ಮಾ ೩
ಕಿಂಕಿಣಿಯ ಶೋಭಿತನೆ | ಶಂಕರೇಡ್ಯನೆ ನಿನ್ನಅಂಕಿತವ ನಿತ್ತಿಹೆನೊ | ಲೆಂಕತನದವಗೇವೆಂಕಟ ಕೃಷ್ಣ ಹೃತ್ | ಪಂಕಜದಿ ತವರೂಪಕಿಂಕರಗೆ ತೋರೆಂದು | ಶಂಕಿಸದೆ ಬೇಡ್ವೇ ೪
ಸರ್ವಜ್ಞ ಸರ್ವೇಶ | ದುರ್ವಿಭಾವ್ಯನೆ ಹರಿಯೆದರ್ವಿಜೀವನ ಕಾವ | ಹವಣೆ ನಿನದಲ್ಲೇ |ಪರ್ವ ಪರ್ವದಿ ಇವಗೆ | ನಿರ್ವಿಘ್ನ ನೀಡಯ್ಯಗುರ್ವಂತರಾತ್ಮ ಗುರು | ಗೋವಿಂದ ವಿಠಲಾ ೫

೨೧೬
ಶಾರದೆ ಪೊರೆಯೆನ್ನಾ – ಮಾತೆಯೆತೋರಿಸಿ ತವ ಚರಣಾ ಪ
ಶಾರದೆ ತವ ಪದ | ಸಾರಿ ಭಜಿಸುವೆನುದೊರಗೈವುದೆನ್ನ | ಭಾರಿ ಅಜ್ಞಾನವ ಅ.ಪ.
ವೀತ ದುರಿತೆ ಖ್ಯಾತೇ | ಶಿವಮಾತೆಯೆ ಸದ್ಗುಣ ಗಣ ವ್ರಾತೇ ||ಶಾತಕುಂಭೋಧರ | ಪ್ರೀತಿ ವಿಷಯ ಜಗನ್‍ಮಾತೆಯೆ ಹರಿಗುಣ | ಗಾಥೆಯ ಗೀತೆಯೆ ೧
ಜಯಾ ತನುಜೆ ವಾಣೀ | ವೇದಾತ್ಮಿಕೆಗಯಾ ಅ | ಸುರಾರೀ ಭಜನೀ ||ಪ್ರಯಾಸರಹಿತದಿ | ಕ್ರಿಯಾ ಸು ಪೂರ್ಣಳೆನಿಯೋಜಿಸೆನ್ನ ಮತಿ | ಹಯಾಸ್ಯ ಪದದಲಿ ೨
ಈಶಾಹಿ ವಿಹಗೇಂದ್ರಾ | ಸ್ವರ್ಗಾಧೀಶಾಧಿಪರು ಛಂದಾ ||ಮೀಸಲು ಮನದಲಿ | ಕ್ಲೇಶಗಳಿಲ್ಲದೆತಾಸು ತಾಸಿಗೆ ನಿನ್ನೆ | ಸೂಸಿ ಭಜಿಸುವರು ೩
ನರಹರಿ ಗುರುಭಕ್ತೀ | ಬ್ರಾಹ್ಮೀಸರಸ್ವತಿ ಗಾಯಿತ್ರೀ ||ಅರ ವಿದೂರ ನರ | ಹರಿಯನು ಭಜಿಸುವಸುರ ಚಿರ ವಾಣಿಯ | ಕರುಣಿಸು ವಾಣೀ ೪
ಕಾವ ಕರುಣಿ ನಮ್ಮಾ | ಗೋಗಳಕಾವ ಹರಿಯು ಪರ ಬೊಮ್ಮಾ |ಭಾವಜ ಪಿತ ಗುರು | ಗೋವಿಂದ ವಿಠಲನಓವಿ ಭಜಿಸುವಂಥ | ಭಾವವ ನೀಯೇ ೫

೨೧೭
ಶಾರದೇ ಮಜ್ಜನನಿಯೆ – ಶಾರದೇ ಪ
ಶಾರದೆ ಶರಣೆಂಬೆ ನಿನ್ನ | ಚರಣನೀರಜ ದ್ವಂದ್ವಕೆ ಯನ್ನ | ಆಹಕಾರುಣ್ಯದಲಿ ಹೃದಯ | ವಾರಿಜದೊಳು ಮೆರೆವಮಾರಮಣನ ದಿವ್ಯ | ಮೂರುತಿ ತೋರಿಸು ಅ.ಪ.
ವಾಣಿ ನಿಲ್ಲ್ವುದು ಎನ್ನ ವದನಾ | ದಲ್ಲಿನೀ ನುಡಿಸೇ ಹರಿ ಗಾನಾ | ಕರವೀಣೆ ನುಡಿಪಂತೆ ಯೆನ್ನಾ | ದೇಹವೀಣೆ ನುಡಿಸೇ ನೀ ಮುನ್ನಾ | ಅಹವೇಣಿ ಮಾಧವನಾದ | ಶ್ರೀನಿವಾಸನ ಕಾಂಬಜ್ಞಾನಾನು ಸಂಧಾನ | ಮಾಣದೆ ಎನಗೀಯೇ ೧
ಅಜ್ಞರೊಳಾಗ್ರಾಣಿ ನಾನು | ಇಂಗಿತಜ್ಞಳೆ ನಾ ಪೇಳ್ವುದೇನೂ | ಆಭಿಜ್ಞರೊಳಿರಿಸುವುದಿನ್ನೂ | ಸರ್‍ವಜ್ಞರ ಮತ ತಿಳಿಸಿನ್ನೂ | ಆಹವಿಜ್ಞಾನ ಸುಸಖ ಬ್ರಹ್ಮ | ಯಜ್ಞಾನೆ ಜಗಕೆಂಬಸುಜ್ಞಾನ ಸುಖವಿತ್ತು | ಪ್ರಾಜ್ಞನ ಕಾಣಿಸೇ ೨
ವ್ರತನೇಮ ಉಪವಾಸ ಒಂದೂ | ಮಾಡಿಕೃತಕೃತ್ಯನಲ್ಲಮ್ಮ ಬಂಧೂ | ಕೃತಿಪತಿಯೆ ಎನಗೆ ಗತಿ ಎಂದೂ | ದ್ವಂದ್ವಕೃತಿಗಳ ನರ್ಪಿಪ ಸಂದೂ | ಆಹಹಿತದಿ ತಿಳಿಸಿ ಗುರು | ಗೋವಿಂದ ವಿಠಲನಸುತನಾಗಿ ಮೆರೆವಂಥ | ಚತುರಾಸ್ಯ ಪ್ರಿಯರಾಣಿ ೩

೨೯೬
ಶಾರ್ವರೀಕರ ಶೇಖರನ ಸತಿ | ಹರಿ ಸ್ತುತಿಯ ಮತಿಈಯೆ ಪಾರ್ವತಿಯೇ || (ಮನ ಕಲ್ಮಷವ ಕಳೆಯೆ) ಪ
ದುಡುಕುವುದು ಮನ | ಜಡ ವಿಷಯದೊಳುಕಡೆಗೈಸುತಿದ | ಧೃಡ ಮಾಡು ಮನ ||ಪೊಡವಿಪತಿ ಪದ | ಜಡಜದಲಿ ತ್ವರಧೃಡಮತಿಯ ಕೊಡು | ಮೃಡ ಪ್ರಿಯೆಳೆ ಪಾಹಿ ೧
ಶಂಭು ಪ್ರಿಯೆ ಸತಿ | ಅಂಬೆ ಶಚಿಪತಿಬಿಂಬೆ ಹರಿಯನು | ಕಾಂಬ ಸುಜ್ಞಾನ ||ಉಂಬ ಉಡುವದ | ಕೊಂಬ ಕೊಡುವದ ಬಿಂಬ ಕ್ರಿಯೆಗಳ | ಹಂಬಲವ ಕೊಡು ೨
ಸರ್ವ ಮಂಗಳೆ | ದರ್ವಿ ಜೀವಗೆನಿರ್ವಿಕಾರನ | ದುರ್ವಿಭಾವ್ಯನನ ||ಸರ್ವೇಶ ಗುರು | ಗೋವಿಂದ ವಿಠಲನಸರ್ವಕಾಲದಿ | ಸ್ಮರಣೆ ಸುಖ ಕೊಡು ೩

೬೯೮
ಶಿರಿ ಮಾಧವ ವಿಠಲ | ಪೊರೆಯ ಬೇಕಿವನನಿರುತ ನಿನ್ನಯ ಪಾದ | ದಾಸ್ಯ ಬೇೀಡುವನ ಪ
ಭೂಮಿಜೆಯ ರಮಣ ತವ | ನಾಮಸ್ರ‍ಮತಿ ಸರ್ವತ್ರ ನೇಮದಿಂ ಪಾಲಿಪುದು ಕಾಮಜನಕಾಈ ಮಹಾ ಕಲಿಯುಗದಿ | ಅನ್ಯ ಸಾಧನ ಕಾಣೆಸಾಮ ಸನ್ನುತ ಹರಿಯೆ | ಭೂಮಗುಣ ಪೂರ್ಣಾ ೧
ಮೂರೆರಡು ಭೇದಗಳ | ಸಾರವನೆ ತಿಳಿಸಿವಗೆತಾರತಮ್ಯ ಜ್ಞಾನ | ದರಿವನಿತ್ತೂಪಾರಗೈಭವದ ಕೂಪಾರವನು ಶ್ರೀ ಹರಿಯೇಮಾರುತಾಂತರ್ಯಾಮಿ | ಮಾರಮಣ ದೇವಾ ೨
ಕಾಲನಾಮಕ ಸ್ವಾಮಿ | ವ್ಯಾಳ ವ್ಯಾಳಕೆ ಬರುವಭಾಳ ವಿಘ್ನಗಳ್ಹರಿಸಿ | ಲಾಲಿಸೋ ಇವನಕೀಲಿಸುತ ಬಲು ಕರ್ಮ | ಜಾಲಗಳ ತವಪಾದಓತೈಪ ಭಾಗ್ಯವನೆ | ಪಾಲಿಸೋ ಹರಿಯೇ ೩
ಬುದ್ಧಿಯೊಳು ನೀನಿಂತು ಮಧ್ವ ಸಿದ್ಧಾಂತಗಳವೃದ್ಧಿಗೈಸುತ ಹರಿಯೆ | ಸಿದ್ಧನೆನಿಸೋಅದ್ವಾನ ಇದ ಹೊರತು ಶುದ್ಧ ಸಾಧನ ಕಾಣೆಕೃದ್ಧಖಳ ಹರನೆ ಅನಿ | ರುದ್ಧ ಒಲಿ ಇವಗೇ ೪
ಜೀವ ಅಸ್ವಾತಂತ್ರ | ದೇವ ನಿಜ ಸ್ವಾತಂತ್ರಈ ವಿಧದ ಸುಜ್ಞಾನ | ನೀ ವೊಲಿದು ಇತ್ತೂ |ಭಾವುಕರ ಪರಿಪಾಲ | ಮಾವಿನೋದಿಯೇ ಗುರು ಗೋವಿಂದ ವಿಠಲನೆ | ಭಾವದೊಳು ತೋರೋ ೫

೬೯೯
ಶಿರಿ ಮುದ್ದು ಕೃಷ್ಣವಿಠಲ | ಪೊರೆಯ ಬೇಕಿವಳಾ ಪ
ನಿರುತ ನಿನ್ನಯ ಪಾದ | ಸಾರಿ ಭಜಿಸುವಳಾ ಅ.ಪ.
ಪರಿಪರಿಯ ವಿಧದಿಂದ | ತೈಜಸನೆ ನೀನಾಗಿವರಸೂ ರೂಪಗಳಿಂದ | ವಸುದೇವ ಸುತನೇತರಳೆಗತಿ ಆಶ್ಚರ್ಯ | ತೋರಿ ಅಡಗಿದೆ ದೇವಶಿರಿಮುದ್ದು ಕೃಷ್ಣನೇ | ಮರುತಂತರಾತ್ಮ ೧
ಸುಪ್ತಿಯಲಿ ಗುರುಪಾದ | ಭಕ್ತಿಯಲಿ ನಮಿಸುತ್ತತೀರ್ಥವನೆ ತಕ್ಕೊಂಡು | ಧನ್ಯನಾನೆಂದುಅತ್ಯಂತ ಹರ್ಷದಲಿ | ಸ್ತೋತ್ರವನೆ ಮಾಡುತ್ತಸಕ್ತಿಯನೆ ತೋರಿಹಳು | ದಾಸಪಂಥದಲೀ ೨
ಭುವನ ಪಾವನವೆನಿಪ | ಮಧ್ವಮತದಾಸಕ್ತಿಶ್ರವಣಕಾನಂದವೆನೆ | ಕವನ ಸಂಸ್ಪೂರ್ತೀಜೀವೊತ್ತಮರ ಭಕುತಿ | ವಿಷಯದಲಿ ವಿರಕ್ತಿಹವಣಿಸೋ ಶ್ರೀಹರಿಯೆ | ಭವಕರಿಗೆ ಹರಿಯ ೩
ಪತಿಸುತರು ಹಿತರಲ್ಲಿ | ಮತಿಮತಾಂವರರಲ್ಲಿರತನು ಶ್ರೀಹರಿಯೆಂಬ | ಸುಜ್ಞಾನವನ್ನುಕೃತಿಪತಿಯ ಕರುಣಿಸುತ | ಸಾಧನವ ಗೈಸುವುದುಚತುರಾಸ್ಯಪಿತ ಹರಿಯೆ | ದುರಿತವನ ದಾವಾ ೪
ಮಾನನಿಧಿ ಶ್ರೀಹರಿಯೆ | ಧ್ಯಾನಾನುಕೂಲಿಸುತಸಾನುರಾಗದಿ ನಿನ್ನ | ರೂಪಹೃದ್ಗುಹದೀಕಾಣಿಪಂತಸಗೊ ಗುರು | ಗೋವಿಂದ ವಿಠಲನೆಆವಾದದನ್ಯವನು | ಬೇಡ ಬಂದಿಲ್ಲ೫

೪೦೮
ಶ್ರೀಸತ್ಯವ್ರತರು
ಶಿರಿ ಸತ್ಯವ್ರತಸುರ ತರುವೆ ನಿಮ್ಮಯಪಾದವರಶತ ಪತ್ರಕ್ಕೆಭಿನಮಿಪೇ ಪ
ಪರಮ ದುರ್ಮತದ್ವಾಂತ ಭಾಸ್ಕರವರಸುಜ್ಞಾನಾಕಾಂಕ್ಷಿಯಾಗಿಹೆನಿರತ ಶ್ರೀ ಮದಾನಂದ ತೀರ್ಥರವರಸು ಭಾಷ್ಯಾಮೃತವ ನುಣಿಸೋ ಅ.ಪ.
ಪೊಗಳಲೆನ್ನಳವೆ ನಿಮ್ಮಗಣಿತ ಮಹಿಮೆಯಜನದಿ ವಿಖ್ಯಾತರೆ ಗುರುವೇ |ಸುಗುಣಿತವ ಭಕ್ತರ್ಗೆ ಕಾಡುವವಿಗಡ ಅಪಸ್ಮಾರ ಕುಷ್ಠವುಮಿಗಿಲು ರೋಗಾದಿಗಳ ಕಳೆಯುತಬಗೆ ಬಗೆಂದಲಿ ಸ್ತುತ್ಯರಾಗಿಹ ೧
ಸರಿತು ಪ್ರವಹದಿ ಎರಡೆರಡು ಸುತರ್ಗಳಹರಣ ಪೋಗಲು ಖೇದದೀ |ವರದ್ವಿಜನು ರಘುನಾಥಾಖ್ಯ ಭಕ್ತಿಲಿಶಿರಿಸತ್ಯವ್ರತರನು ಸೇವೆಗೈಯ್ಯುಲುಅರಿತು ಸಂತಾನಾಷ್ಟ ಕಂಗಳತ್ವರಿತ ಕರುಣಿಸಿ ಪೊರೆದಗುರುವರ೨
ಶಿರಿಸತ್ಯ ಸಮಧರೀ ವೃಂದಾವನದ ಬಳಿಶಿರಿಮನ್ಯಾಯಾಸುಧೆ ಪಠಿಸೇ |ಗುರುವರರು ಸಂತುಷ್ಟ ಪಡುತಲಿಶಿರವತೂಗಲು ಅಂತರಂಗದಿವರಸುವೃಂದಾವನವು ತನ್ನಯಶಿರವ ತೂಗುತ ತೋರಿತಚ್ಛರಿ ೩
ವಾದಿಭಹರ್ಯಕ್ಷ ಮೇಧಾವಿ ವಿಭುಧೇಡ್ಯಸುಧಾಪಿವೃತಿ ಕರ್ತಾರ |ಮೇಧಿನಿಯ ಸಂಚರಿಸಿದುರ್ವಾದಿಗಳ ಬಲು ಖಂಡಿಸುತಭೋಧಿಸುತ ತತ್ವಗಳ ಸುಜನಕೆಹಾದಿಮೋಕ್ಷಕೆ ತೋರ್ದ ಯತಿವರ ೪
ವೇದವಿದ್ಯಾಖ್ಯ ಸತ್ಕರಜರೆಂದೆನಿಸುತ್ತಮೋದ ತೀರ್ಥರ ಸೇವೆಗೈದೂ |ಹಾದಿ ಚರಿಸುತ ಸಾಂಗ್ಲಿಕ್ಷೇತ್ರದಿಆದರದಿ ವೃಂದಾವನವ ಪೊಕ್ಕುನಾದಗುರು ಗೋವಿಂದ ವಿಠಲನಮೋದ ಧ್ಯಾನಾಸಕ್ತ ಗುರುವರ ೫

೬೯೭
ಶಿರಿಪ್ರಾಣ ಪತಿ ವಿಠಲ ನೀನಿವಳ ಕಾಯಬೇಕೊ ಪ
ಕರುಣಾದ್ರ್ರ ಹೃದಯ ನಿನ್ನಡಿಗೆ ಮೊರೆಯಿಡುವೇ ಅ.ಪ.
ಮಾನವ ಸುಜನ್ಮದಲಿ ನೀನಿವಳ ತಂದಿರುವೆಜ್ಞಾನಸಾಧನವ ಮಾರ್ಗ ಕಾಣದಲೆ ಬರಿದೇ |ಮಾನಿನಿಯ ಆಯುಷ್ಯ ಬರಿದೆ ಪೋಯಿತು ಹರಿಯೆನೀನಾಗಿ ಸಲಹಿವಳ ದೀನಜನ ಬಂಧೋ ೧
ಪಂಚಭೂತಾತ್ಮಕದ ಈ ದೇಹ ಸ್ಥಿರವಲ್ಲಕೊಂಚಮತಿಯನು ಕಳೆದು ಸರ್ವಾಂತರಾತ್ಮ |ಪಂಚಭೇದವನರುಹಿ ಮುಂಚೆ ತರತಮ ತಿಳಿಸಿಪಂಚ ಪಂಚಾತ್ಮಕನೆ ಸಲಹ ಬೇಕಿವಳಾ ೨
ಹರಿಗುರೂ ಸದ್ಭಕ್ತಿ ಮರಳಿ ವೈರಾಗ್ಯವನೆ ಕರುಣಿಸೂವುದು ಹರಿಯೆ ದುರಿತಾಂಧ ರವಿಯೆ ಹರಿಗೋಲುಭವನಿಧಿಗೆ ಎಂದೆನಿಪ ತವನಾಮ ಸ್ಮರಣೆ ಸಂತತವಿತ್ತು ಪೊರೆಯ ಬೇಕಿವಳಾ ೩
ಜೇನು ಸವಿಯಂತಿಪ್ಪ ಆನಂದಕರ ಶಾಸ್ತ್ರಮಾನನಿಧಿ ಮಧ್ವಾಖ್ಯ ಸಾನುರಾಗದಲೀ |ಕ್ಷೋಣಿಸುರರುದ್ಧಾರ ಕಿತ್ತಿಹುದ ನೀನರುಹಿಜ್ಞಾನಗಮ್ಯನೆ ಕಾಯೊ ಪ್ರಾಣಾಂತರಾತ್ಮ ೪
ಇಂದೀವರಾಕ್ಷಹರಿ ದ್ವಂದ್ವಗಳ ಸಹನೆಯನುತಂದೆ ಕರುಣಿಸಿ ಕಾಯೊ ಕಂಜದಳ ನೇತ್ರಅಂದು ಇಂದಿಗು ಮುಂದೆ ಎಂದೆಂದು ಗತಿ ನೀನೆಎಂದು ನಂಬಿಹೆ ಗುರು ಗೋವಿಂದ ವಿಠಲಾ ೫

೨೬೯
ಶಿವ ದರುಶನ ವೆನಗಾಯಿತೂ | ನಮ್ಮಭವ ಭಯ ಪರಿಹರ ವಾಯಿತು ಪ
ಹತ್ತು ಮತ್ತೊಂದೆಂಬ | ಇಂದ್ರಿಯದಭಿಮಾನಿಭಕ್ತರಿಗ್ಹರಿಯಲಿ | ಸಕ್ತಿಯ ಕೊಡುವಾ |ಉತ್ತಮ ತ್ರಯ ವೇದ | ಗ್ರಂಥವ ಪಠಿಸುತ್ತಹಸ್ತಗಳಭಿನಯ | ವಿಸ್ತರಿಸಿರುವಂಥ ೧
ಕೃತ್ತಿವಾಸನ ಸಖ | ಉತ್ತಮೋತ್ತಮನೆಂಬಭೃತ್ಯರ ಸತ್ಸಂಗ | ಇತ್ತು ಸಲಹೊದೂ |ನಿತ್ಯ ಮಂಗಳ ಮೂರ್ತಿ | ಕರ್ತು ಶ್ರೀ ಹರಿ ಎಂಬಉತ್ತಮೋತ್ತಮ ಮತಿ | ಇತ್ತು ಪಾಲಿಪುದಯ್ಯ ೨
ಹರಿಪದ ಜಲ ಸದಾ | ಧರಿಸಿಹ ಹರನಿಗೇಹರಹರನೆಂಬ ನರ | ದುರಿತ ನಿಚಯವಪರಿಹರವರಿದಲ್ಲ | ಕರುಣಿ ಮೃತ್ಯುಂಜಯಕರುಣದಿ ತೋರೊ ಗುರು | ಗೋವಿಂದ ವಿಠಲನ ೩

೨೭೦
ಶಿವ ಶಿವ ಶಿವ ಶಿವ – ಶಿವರಾಯ | ನಮ್ಮಭವ ಭಯ ಪರಿಹರ ಮಹರಾಯ ಪ
ಮಂಗಳರೂಪಿ ಗೌ | ರಾಂಗನೆ ದೂರ್ವಾಸತಿಂಗಳ ಧರಿಸಿಹ | ಅಂಗಜ ಮದಹಾ |ಭಂಗ ಬಡಿಪ ಭವ | ಭಂಗಿಸಿ ಸುಜನರಸಂಗವ ಕೊಡಿಸೊ ನೀ | ಲಾಂಗನ ಪ್ರಿಯ ಸಖ ೧
ಪರಿಸರ ಸಂಸ್ರ‍ಕತ | ಗರಳವ ಭುಂಜಿಸಿಸುರರನು ಪೊರೆಯುವೆ | ಕರಿಗೊರಳಾ |ಮುರಳಿಯ ಧರ ಸಿರಿ | ಕರಿವರದನ ದಯನಿರುತ ನಿನ್ನೊಳಗುಂಟು | ಪೊರೆಯೊ ಮೃತ್ಯುಂಜಯ ೨
ಸ್ವಾಪದಿ ಗರಸಹ | ರೂಪವ ತೋರ್ದೆ – ಸು-ರಾಪಗಧರ ಹರ | ತಾಪಸಿ ಶುಕನೇ |ಗೋಪತಿ ಗುರು ಗೋ | ವಿಂದ ವಿಠಲನರೂಪವ ತೋರಿಸಿ | ನೀ ಪರಿಪೋಷಿಸು ೩

೨೩೦
ಶಿವಕನ್ಯೇ ಗುಣರನ್ನೇ ಪ
ತವಪದ ಪದುಮವ | ಜವದಲೆ ತೋರಿಸುಅ.ಪ.
ಕಾಲಕೆ ಮಾನಿಯೆ | ಓಲೈಸುವೆ ಪದಕೀಲಾಲಜವನು | ಪಾಲಿಸು ಎನಗೇ ೧
ಪವನ ಮತಾನುಗ | ರವನೆಂದೆನಿಪಗೆಭವ ಪರಿಹಾರಿಕ | ನವ ಭಕುತಿಪ್ರದೆ ೨
ಮುಕುತಿಗೆ ಮಾರ್ಗವ | ಭಕುತಿಗೆ ಆಕರೆವ್ಯಕುತಿಯಗೈ ಹರಿ | ಭಕುತಿಗಳೆನ್ನಲಿ ೩
ಸ್ತವ ಪ್ರಿಯ ನರಹರಿ | ಸ್ತವನವ ಗೈಯ್ಯುವಹವಣೆಯ ತೋರಿಸು | ಭವನಿಗೆ ಜನನಿಯೆ ೪
ಗೋವ ಕಾವ ಗುರು | ಗೋವಿಂದ ವಿಠಲನಭಾವದಿ ತೋರಿಸು | ನೀ ಒಲಿದೆನಗೆ ೫

೧೪೮
ಶೃತಿ ಪ್ರತಿಪಾದ್ಯನೆ | ಕೃತಿದೇವಿ ರಮಣನೆವಿತತ ವಿಶ್ವದಪಾಲ | ಮೃತ ಶಿಶು ಪರಿಪಾಲ ಪ
ಮತ್ರ್ಯರ ಬೀಷ್ಟವ | ಸಾರ್ಥಕಗೊಳಿಸುವಪಾರ್ಥ ಸಾರಥಿಯೆ | ಕೀರ್ತಿಸಲರಿಯೆಮೂರ್ತಿಯ ಕಾಣುವ | ವಾರ್ತೆ ಇರಲಿ ದೇವಸೂಕ್ತ ಮೇಯ ಅ | ಸಕ್ತಿ ಪ್ರದಾತಾ ಅ.ಪ.
ಗುರು ಬಿಂಬ ಸುಲೀಲ | ಸ್ಮರಿಸುವ ಗುಣಶೀಲ |ಕರುಣಿಸು ಶಿರಿಲೋಲ | ಕೀರ್ತಿ ವಿಶಾಲಾಪರಿ ಪರಿ ಗುಣ ಜಾಲ | ದರಿವನೆ ಕೊಡು ಕೋಲಧರಿಸಿಹೆ ವನಮಾಲಾ | ಶರಣರ ಪಾಲ೧
ತರಳ ಪ್ರಹ್ಲಾದನ | ವರಧ್ರುವ ಬಾಲನದುರುಳನೆನಿಸಿದನ | ವರ ಅಜಾಮಿಳನಕರೆಯಲು ಬಂದನ | ನರವರ ಅಕ್ರೂರನಪರಿ ಪರಿ ಭಕ್ತರನ | ಪೊರೆದ ಮೋಹನ್ನ ೨
ಪಟು ಭಟಗಾನಂದ | ಘಟಿಸಲು ಮುಕುಂದಕುಟಿಲ ರಹಿತ ಛಂದ | ಪಟುತರ ವ್ಯಾಪ್ತಿಂದಛಟ ಛಟ ಕಂಬದಿಂದ | ಪುಟ ನೆಗೆಯುತ ಬಂದದಿಟ ಗುರು ಗೋವಿಂದ | ವಿಠಲ ಆನಂದ ೩

೧೪೭
ಶೃತಿನಾಥ ಸ್ರ‍ಮತಿಯಿತ್ತು ಸತತ ಪೊರೆಯೋಗತಿ ಗೋತ್ರ ನೀನೆಂದು | ಸತತ ತುತಿಸುವೆನೋ ಪ
ಸ್ವಚ್ಛ ಭಕುತಿಲ್ಲದವ | ಮೆಚ್ಚಿಪುದು ಎಂತೋ ನಿನ್ನಅಚ್ಚ ಕನ್ನಿಕೆ ರಮಣ | ಲಕ್ಷ್ಮೀಲೋಲಾ |ಮುಚ್ಚ ಕಾಣಿಕೆ ಕೊಡಲು | ಕುತ್ಸಿತನು ನಾನಿಹೆನುಉಚ್ಛ ಭಕುತಿಯನಿತ್ತು | ನಿಚ್ಚ ಸೇವೆಯ ಕೊಳ್ಳೋ ೧
ಧ್ಯಾನ ಶೂನ್ಯನು ನಾನು | ಮಾಣದಲೆ ಪೊರೆಯೆನ್ನಮೌನಿ ಜನ ಸನ್ಮಾನ್ಯ | ದಾನ ಪತಿ ಸಖನೇ |ನ್ಯೂನಾತಿರೇಕಗಳ | ನೀನಾಗಿ ಮನ್ನಿಸುತಮಾನನಿಧಿ ಗುಣಪೂರ್ಣ | ನೀನೆನ್ನ ಪೊರೆಯೋ ೨
ಭಾವದಲಿ ನೀನಿರಲು | ಅವ ಭಯವಿಲ್ಲೆನಗೆಶ್ರೀವರನೆ ಸರ್ವೇಶ | ಸರ್ವಜ್ಞ ಮೂರ್ತೇ |ಕಾವ ಕರುಣಿಯೆ ಗುರು | ಗೋವಿಂದ ವಿಠಲ ಬಾಗೋವತ್ಸ ಧ್ವನಿ ಕೇಳಿ | ಧಾವಿಸುವ ಪರಿಯಂತೆ ೩

೭೧೬
ಶೇಷ ಗೀರೀಶ ವಿಠಲ | ಪೋಷಿಸೊ ಇವಳಾ ಪ
ಕಾಸು ವೀಸಕ್ಕೆ ಮನ | ಕ್ಲೇಶಗೊಳಿಸದಂತೆ ಅ.ಪ.
ಸುಪ್ತಿಯಲಿ ಅಭಯದಾ | ಹಸ್ತವನೆ ಗುರುದೈವಎತ್ತ್ಹಿಡಿದು ತವರೂಪ | ದರ್ಶನವ ಗೈಸೀಮುಕ್ತಿ ಪಥ ಮಾರ್ಗಕ್ಕೆ | ಸದ್ಗುರು ಕಟಾಕ್ಷವೆಉತ್ತಮೋತ್ತಮ ಹಾದಿ | ಎಂದು ಪೇಳಿದರೂ ೧
ಹರಿಗುರೂ ಸದ್ಭಕ್ತಿ | ತರತಮ ಜ್ಞಾನವನುಕರುಣಿಸೀ ಕಾಪಾಡೊ | ಕರಿವರದ ಹರಿಯೇಕರುಣಾಳು ನಿನ್ಹೊರತು | ಆರಿಯೆ ನಾ ಅನ್ಯರನುಮರುತಾಂತರಾತ್ಮಕನೆ | ಆನಂದ ನಿಲಯಾ೨
ಎರಡು ಮೂರರಿಗಳನು | ಪರಿಹರಿಸಿ ವೈರಾಗ್ಯವರಜ್ಞಾನ ಸಂಪದವ | ಕರುಣಿಸುತ ಹರಿಯೇಕರಪಿಡಿದು ಉದ್ಧರಿಸೊ | ಶರಣ ಜನ ಕಾರುಣ್ಯಮರುತಾಂತರಾತ್ಮ ಗುರು | ಗೋವಿಂದ ವಿಠಲಾ ೩

೭೧೭
ಶೇಷ ಪರ್ಯಂಕ ಶಯನ ವಿಠಲ ಪೊರೆ ಇವಳ ಪ
ವಾಸುದೇವನೆ ನಿನ್ನ | ದಾಸಿ ಎಂದೆನಿಸಿ ಭವಪಾಶವನೆ ಕಳೆಯೊ ಸುವಿ | ಶೇಷ ಹರಿಯೇ ಅ.ಪ.
ಪತಿಸುತರು ಹಿತರಲ್ಲಿ | ವಿತತವಾಗಿರುವಂಥಅತಿಶಯದ ತವರೂಪ | ಸತತ ಚಿಂತಸುವಾ |ಮತಿಯನೇ ಕರುಣಿಸುತ | ಕೃತ ಕಾರ್ಯಳೆಂದೆನಿಸೊಕ್ಷಿತಿರಮಣ ಭಿನ್ನವಿಪೆ | ಪತಿಕರಿಸೊ ಇದನಾ ೧
ಬುದ್ಧಿಯಲಿ ಸನ್ನಿಹಿತ | ವೃದ್ಧಿಗೈಸಿವಳಲ್ಲಿಮಧ್ವಮತ ಸಿದ್ಧಾಂತ | ಪದ್ಧತಿಗಳಾಅಧ್ವರೇಡ್ಯನೆ ಅನಿ | ರುದ್ಧ ಮೂರುತಿ ಹರಿಯೇಕೃದ್ಧಖಳ ಸಂಹಾರಿ | ಪದ್ಮನಾಭಾ ೨
ಕೀಚಕಾರಿ ಪ್ರಿಯನೆ | ಮೋಚಕೇಚ್ಛೆಯ ಮಾಡಿಪ್ರಾಚೀನ ಕರ್ಮದಿಂ | ಮೋಚನವ ಗೈಸೋ |ಯಾಚಿಸುವೆನೋ ಸವ್ಯ | ಸಾಚಿಸಖ ನೀನೆಂದುಈಕ್ಷಿಪುದು ಕರುಣ ಕಟಾಕ್ಷದಲಿ ಹರಿಯೇ ೩
ತಾರತಮ್ಯ ಜ್ಞಾನ | ಮೂರೆರಡು ಭೇದಗಳಸಾರತತ್ವಗಳರುಹಿ | ಆರು ಅರಿವರ್ಗಾದೂರಗೈತ್ರೈತಾಪ | ಪಾರು ಮಾಡೋ ಹರಿಯೆಮಾರಾರಿ ಮಿತ್ರನೇ | ಸಾರ ಸುಖಸಾಂದ್ರಾ ೪
ಕಾವ ಕರುಣಿಗಳರಸ | ಭಾಮಕರ ಪರಿಪಾಲಾಓವಿತವ ಸಂಸ್ಮರಣೆ | ಸಾರ್ವಕಾಲಿದಲೀಈವುದಿವಳಿಗೆ ಎಂದು | ಭಾವದಲಿ ಭಿನ್ನವಿಪೆಗೋವಿದಾಂ ಪತಿಯೆ ಗುರು | ಗೋವಿಂದ ವಿಠಲಾ ೫

೭೧೯
ಶೇಷ ವಂದ್ಯ ಶಿರಿನಾರಾಯಣ ವಿಠಲ ದಾಸನೆನಿಸೋ ಇವನಾ ಪ
ದೋಷ ದೂರ ಸುವಿಶೇಷ ಮಹಿಮ ಬ್ರಹ್ಮೇಶ ವಂದ್ಯ ಚರಣ ಅ.ಪ.
ಸಾಧಕ ಜೀವ ಸಮೂಹವ ಸೃಜಿಸುತ್ತಸಾಧನ ಬಗೆ ಬಗೆ ನಿರ್ಮಿಸುತಾ |ಭೋದಕ ವೇದ ವಿಭಾಗವ ಗೈದಾ ಅ-ಗಾಧ ಮಹಿಮ ಪೊರೆಯೊ ೧
ಕಾರುಣ್ಯಾಂಬುಧಿ ತಾರತಮ್ಯ ಜ್ಞಾನಮೂರೆರಡಿಹ ಭೇದವನೆ ತಿಳಿಸೊಸಾರಾಸಾರದಿ ಸಾರತಮನು ನೀನೆಂ-ದಾರಧಿಪ ಮತಿ ತಿಳಿಸೋ ೨ |
ಸೇವ್ಯಸೇವಕ ಭಾವ ತಿಳಿಸುತನಿವ್ರ್ಯಲೀಕ ನೆನಿಸೊ |ಪೂಜ್ಯ ಪೂಜಕನೆ ಮಾಳ್ಪುದೆಲ್ಲ ತವಭವ್ಯ ಪೂಜೆ ಎನಿಸೋ ೩
ಗುರ್ವನುಗ್ರಹವೆ ಬಲವೆಂದೆನಿಸುತಸರ್ವಕಾರ್ಯ ನಡೆಸೊ |ದುರ್ವಿಭಾವ್ಯ ಸರ್ವೋತ್ತಮ ಹರಿಸರ್ವೇಷ್ಟ ಪ್ರದ ನೆನಿಸೊ ೪
ತಂದೆ ತಾಯಿಯೋಳ್ಬಂಧು ಮಿತ್ರರಲಿಸಂದುಗೊಂದು ತವವ್ಯಾಪ್ತಿ |ಛಂದದರಹಿ ಪೊರೆನಂದಕಂದ ಗುರು ಗೋವಿಂದ ವಿಠಲ ೫

೭೨೦
ಶೇಷ ವಿನುತ ಸಿರಿ | ರಾಮ ವಿಠಲ ಕಾಯೋ ಪ
ಈ ಸತೀ ಮಣಿಯ ನೀ | ಸಲಹಬೇಕೆಂದುಶೇಷ ಸಂಜ್ಞಿತ ಹರಿಯೆ | ಪ್ರಾರ್ಥಿಸುವೆ ಧೊರೆಯೇ ಅ.ಪ.
ಉಪದೇಶ ಅಮೃತ ಸ | ಮೀಪ ವಿಹುದೆಂತೆಂದುಕೃಪಣ ವತ್ಸಲ ಕೂರ್ಮ | ರೂಪದಿಂದರುಹೀಉಪದೇಶ ನೀಡ್ವಗುರು | ರೂಪವನೆ ತೋರಿಸುತಅಪರಿಮಿತ ಕಾರುಣ್ಯ | ರೂಪನಾಗಿರುವೆ ೧
ಪರಮ ಗುರು ನಿಜ ರೂಪ | ಎರಡು ಬಾರಿಯು ತೋರಿಸರಸನಾಬ್ಯಾದಿ ಹರುಷ | ಬೀರ್ದೆ ಭಯಹಾರೀಕರುಣವೆಂತುಟೊ ನಿನಗೆ | ಸುರಸಿದ್ಧ ಸಂಸೇವ್ಯಶಿರಿ ರಮಣ ಶ್ರೀರಾಮ | ಪರಮ ಪುರುಷನೆ ೨
ಈ ಸತೀಮಣಿ ಬಯಕೆ | ನೀ ಸಲಿಸಿ ಲೌಕಿಕದಿಲೇಸು ಹೊಲ್ಲೆಗಳೆಂಬ | ಪಾಶಗಳ ಬಿಡಿಸೀದೋಷ ದೂರನೆ ಹರಿಯೆ | ನೀ ಸಲಹೆ ಪ್ರಾರ್ಥಿಸುವೆದಾಶರಥೆ ಪೊರೆ ಇವಳ | ಮೇಶ ಮಧ್ವೇಶಾ ೩
ಮಧ್ವಮಾರ್ಗದಿ ಇಹಳು | ಶುದ್ಧ ಭಕ್ತಿಜ್ಞಾನಸಿದ್ಧಿಸುತ ಇವಳಲ್ಲಿ | ಉದ್ಧರಿಸೊ ಹರಿಯೇ |ಕೃದ್ಧ ಖಳ ಸಂಹಾರಿ | ಸದ್ಧರ್ಮ ಪಥತೋರಿಅಧ್ವಯನೆ ತವ ನಾಮ | ಶುದ್ಧ ಸುಧೆ ಉಣಿಸೋ ೪
ಸರ್ವವ್ಯಾಪ್ತನೆ ದೇವ | ಪವನಾಂತರಾತ್ಮಕನೆದರ್ವಿ ಜೀವಿಯ ಕಾಯೊ | ಶರ್ವವಂದ್ಯಾ |ಸರ್ವ ಸುಂದರ ಗುರು | ಗೋವಿಂದ ವಿಠ್ಠಲನೆಈ ವಿಧದ ಬಿನ್ನಪವ | ನೀವೊಲಿದು ಸಲಿಸೋ ೫

೭೨೧
ಶೇಷನುತ ಗೋಪ ವಿಠ್ಠಲ | ನೀ ಸಲಹೊ ಇವಳಾ ಪ
ವಾಸದೇವನೆ ನಿನ್ನ | ಪ್ರಾರ್ಥಿಸುವೆ ಹರಿಯೇ ಅ.ಪ.
ಕನ್ಯೆ ಬಹು ಭಾವುಕಳು | ನಿನ್ನೆಯಿಂ ಪ್ರಾರ್ಥಿಪಳುಘನ್ನ ಹರಿದಾಸ್ಯದಲಿ | ಮುನ್ನಮನವಿರಿಸೀ |ಇನ್ನು ತೈಜಸರೂಪ | ಚೆನ್ನ ಶೇಷನು ಆಗೆಮಾನ್ಯರೂ ಪರಮಗುರೂ | ವನ್ನೆ ಕಂಡಿಹಳೋ ೧
ಗುರುತರೂಪಿ ತೈಜಸನು | ವ್ಯಾಸಪೀಠದ ಮುಂದೆಇರುತ ಗುರು ರಾಜರ | ಮಹಿಮೆ ಪೇಳುತಲೀ |ಹರಿಸುತಲಿ ಕನ್ಯೆಗೇ | ಫಲಪುಷ್ಪ ತಾಂಬೂಲದೊರಕಿಸಿಹ ಅದರಿಂದೆ | ಉಪದೇಶವಿತ್ತೇ ೨
ಪತಿಸೇವೆ ದೊರಕಿಸುತ | ಕೃತ ಕಾರ್ಯಳೆಂದೆನಿಸೊಹಿತವಹಿತವೆರಡರಲಿ | ರತಿ ಇಡದೆ ಉಂಬಾ |ಮತಿಯನ್ನೇ ಕರುಣಿಸುತಾ | ಮತಿಮತಾಂವರರಂಘ್ರಿಶತಪತ್ರ ಸೇವೆಯಲಿ | ರತಳು ಎಂದೆನಿಸೊ ೩
ಮರುತ ಮತ ತತ್ವಗಳು | ಅರಿವಾಗುತಿವಳೀಗೆಪರಮ ಸಾಧನ ಮಾರ್ಗ | ಭಕುತಿ ಜ್ಞಾನಗಳೂ |ನೆರವಾಗುತಿವಳ ಭವ | ಸಾಗರದ ಬತ್ತಿಪುದುಮರುತಾಂತರಾತ್ಮ ಹರಿ | ವೇಣುಗೋಪಾಲಾ ೪
ಭಾವ ಮೈದುನಗೊಲಿದ | ಶ್ರೀವರನೆ ಮೈದೋರಿಭಾವುಕಳೆ ಪೊರೆಯೆಂದು | ಪ್ರಾರ್ಥಿಸುವೆ ಹರಿಯೇ |ಸಾರ್ವಭೌಮನೆ ಹರಿಯೆ | ಕೋವಿದೋತ್ತಂಸ ಗುರುಗೋವಿಂದ ವಿಠ್ಠಲನೆ | ನೀವೊಲಿಯ ಬೇಕೋ ೫

೭೧೮
ಶೇಷವಂದ್ಯ ಹರಿ ವಿಠಲ | ನೀ ಸಲಹೊ ಇವಳಾ ಪ
ವಾಸುದೇವನೆ ಕೃಷ್ಣ | ಶ್ರೀಶ ಪುರುಷೋತ್ತಮ ಅ.ಪ.
ಶ್ವಾನ ಸೂಕರ ನೀಚ | ಯೋನಿಗಳಲಿ ಜನಿಸಿಜ್ಞಾನಾನು ಸಂಧಾನ | ಕಾಣದಿದ್ದಾಗ್ಯೂಅನೇಕ ಪೂರ್ವವೆನೆ | ಪುಣ್ಯ ಸಂಚಿತದಿಂದಮಾನವ ಸುಜನ್ಮದೊಳು | ಜನುಮ ಪೊತ್ರಿಹಳೊ ೧
ಪರಿಸರ ಕುಲೋತ್ಪನ್ನೆ | ನರರಲನುರಾಗಿಣಿಯುಹರಿದಾಸ್ಯ ಕಾಂಕ್ಷಿಪಳೊ | ದುರಿತವನ ಕುಠಾರೀಕರುಣೆ ತೈಜಸ ಸೂಚಿ | ವರ ಅಂಕಿತವನಿತ್ತೆಮರುತಾಂತರಾತ್ಮಕನೆ | ಮದ್ಬಿಂಜ ಪೊರೆಯಿವಳಾ ೨
ವರಸು ಸೌಭಾಗ್ಯವನೆ | ಪರಿಹರಿಸಿ ದುಷ್ಕರ್ಮನಿರುತ ನಿನ್ನಯ ನಾಮ | ಸ್ಮರಣೆ ಸುಖವಿತ್ತೂಮರುತ ಮತ ತತ್ವಗಳ | ಅರಿವಾಗುವಂತೆಸಗೋಕರಿವರದ ಕಮಲಾಕ್ಷ | ಕಾರುಣ್ಯ ಮಾರ್ತೇ ೩
ಪತಿಸುತರು ಹಿತರಲ್ಲಿ | ಕೃತಿರಮಣ ಸುವ್ಯಾಪ್ತಮತಿಇತ್ತು ಪೊರೆ ಇವಳ | ಕ್ಷಿತಿರಮಣ ದೇವಾಮತಿಮತಾಂ ವರರಂಘ್ರಿ | ಹಿತಸೇವೆ ದೊರಕಿಸುತಕೃತ ಕೃತ್ಯಳೆಂದೆನಿಸೊ | ಅತಿ ಚಿತ್ರ ಚರಿತಾ ೪
ಕಾವ ಕರುಣಿಯೆ ದೇವ | ಭಾವುಕರ ಪರಿಪಾಲನೀವೊಲಿಯ ದಿನ್ನಿಲ್ಲ | ಆವತ್ರೈ ಜಗದೀನೋವುಸುಖ ದ್ವಂದ್ವಗಳ | ಸಮತೆಯು ಉಂಬಂತೆನಿವೊಲಿಯೊ ದೇವ ಗುರು | ಗೋವಿಂದ ವಿಠಲಾ ೫

೧೪೯
ಶೇಷಾದ್ರಿ ವಾಸಾ ಪಾಲಿಸೋ | ನಿನ್ನ ಶ್ರೀಪಾದದಾಸ ಜನರೊಳಗಾಡಿಸೊ ಪ
ಕ್ಲೇಶ ಪಡಿಪ ಭವ | ಪಾಶಗಳಳಿಯುತವಾಸಿಸೊ ಮನದಾ | ಕಾಶದೊಳಗೆ ಶ್ರೀಶಾವೃಷ್ಣೀಶ ಸರ್ವೇಶ – ಕೃತ ಖಳಕುಲ ಬಹುನಾಶ ಅ.ಪ.
ಮದನ ಕೋಟಿ ಲಾವಣ್ಯಾ | ಶ್ರೀ ಭೂ ವರೇಣ್ಯಾಪದುಮೆ ಮನಮೋಹನಾ |ಮುದ ಮನದಲಿ ಮನದವಕಾಶದಿ ಪೊಳೆಸುರಭೂಜ | ರವಿತೇಜ | ಮಹ ಓಜ ವೈರಾಜಾ ೧
ತರುಜಾತಿ ಫಲ ಸುಮನಾ | ಸುರರೀ ಭವನಾಧರಿಸಿ ಮೆರೆವ ಸುಜನಾ |ಗಿರಿಯೊಳು ನೆಲೆಸುತ – ಸುರರ ಸೇವೆ ವಿಸ್ತಾರಗಂಭೀರ ಮನೋಹಾರ – ಕೃತಕ್ರತು ಸಮ ಅಪಾರ ೨
ಭಾರತೀಶ ಪ್ರಾಣಾಂತರ್ಗತ | ಕಾಮಿತದಾತಾಸಾರ ಸದ್ಗುಣ ಭರಿತಾ ||ನೀರಜಾಕ್ಷ ಗುರು | ಗೋವಿಂದ ವಿಠಲನೆಮೈದೋರೊ | ಮುದಬೀರೊ | ನಿನಗೆಲ್ಲು ಸರಿಯಾರೋ ೩

೨೧೮
ಶ್ರದ್ಧಾ ಪಾಲಿಸೇ ಮಾತೇ | ನಂಬಿದೆ ಶೇಷಾರುದ್ರಾದಿ ಸುರ | ವಿನುತೇ ಪ
ಉದ್ಧರಿಸುವುದೆನ್ನ | ಅವಿದ್ಯವ ನೀಗಿ ಹೇಬುದ್ಯಭಿಮಾನಿ ಸ | ದ್ಬುದ್ಧಿ ಪ್ರದಾತೇ ಅ.ಪ.
ವೇದಾದಿಗಳ ಮಾನೀ | ಚತುಃ ಷಷ್ಟಿಕಲಾವಿದ್ಯಾದಾಯಿನಿ | ಮಧು ಪಾನೀ ||ಮೋದತೀರ್ಥ ಮತ | ಭೋದಿಸಿ ಎನ್ನ ಕುಮೋದ ಕಳೆದು ಸ | ನ್ಮೋದವ ಪಾಲಿಸುಎಂಬೆ ಸುನಿತಂಬೆ | ಜಗದಂಬೆ | ಚಿನ್ನ ಪುತ್ಥಳಿ ಬೊಂಬೆ ೧
ಮಂಞ್ಸÀಗಮನೆ ಕೃತಿ ಕುಮಾರಿ | ಬ್ರಹ್ಮಮಾನಸಮಂದಿರೆ ಸಜ್ಜನೋದ್ಧಾರಿ ||ಚಂದಿರೆ ಎನ ಮನ | ಮಂದಿರದಲಿ ಬಲುಸುಂದರ ಶ್ರೀ ಗೋ | ವಿಂದ ಪಾದಾಬ್ಜವತೋರೆ – ಹೇ ನೀರೆ – ವೈಯ್ಯಾರೆ | ಸದ್ಗುಣಗಣ ಗಂಭೀರೆ ೨
ಚತುರವದನನ ರಾಣೀ | ದೀರ್ಘಾಹಿ ವೇಣೀಧೃತ ವೀಣಾ ಪಾಣಿ – ನಿತ್ಯ ಕಲ್ಯಾಣೀ ||ಚತುರ ಮೂರುತಿ ಗುರು | ಗೋವಿಂದ ವಿಠಲನಸತತ ಭಜಿಪ ಮತಿ | ಸುಸ್ಥಿರದಲಿ ಕೊಡುನೀನೆ – ಬಲು ಜಾಣೆ :ಎನ್ನಾಣೆ | ಪತಿತ ಪಾವನ್ನೇ ೩

೬೯೬
ಶ್ರವಣಾನಂದ ವಿಠಲ | ಭುವನ ಪಾವನನೇ ಪ
ಪವಿತರಗೈ ಇವಳ | ತವಗುಣ ಗಾನದೀ ಅ.ಪ.
ಸುಪ್ತಿಯಲಿ ಗುರುದತ್ತ | ಉತ್ತುಮಾಂಕಿತ ಕೇಳಿಇತ್ತಿಹೆನೊ ಉಪದೇಶ | ಭಕ್ತವತ್ಸಲನೇಎತ್ತಿ ಭವದಿಂದವಳಾ | ಉತ್ತರಿಸ ಬೇಕಯ್ಯಚಿತ್ತಜಾಪಿತ ಸರ್ವ | ಕರ್ತೃಕಾರಕನೇ ೧
ಪತಿಸುತರು ಹಿತರಲ್ಲಿ | ವ್ಯಾಪ್ತ ನಿನ್ನನು ತಿಳಿದುಹಿತದಿಂದ ಸೇವಿಸುತ | ಮತಿಯ ಕರುಣಿಸುತಾ |
ಗತಿ ಗೋತ್ರ ನೀನಾಗಿ | ಮತಿ ಮತಾಂವರರಂಘ್ರಿಶತ ಪತ್ರ ಪೂಜಿಸುವ | ಪಥದಲ್ಲಿ ಇರಿಸೋ ೨
ಹರಿಗುರೂ ಸದ್ಭಕ್ತಿ | ನಿರುತ ವೃದ್ಧಿಸುತಿವಳಪರಿಪರಿಯ ಸತ್ಕಾಮ | ಪರಿಪೂರ್ಣಗೊಳಿಸೀನೆರೆಯವರಿಗಾಶ್ಚರ್ಯ | ತೆರೆದಂತೆ ನೀ ಮಾಡಿಮೆರೆಸೊ ಈ ಭುವದಲ್ಲಿ | ಪರಮ ಕೃಪೆ ಸಾಂದ್ರ ೩
ವೇಣುಗೋಪನೆ ನಿನ್ನ | ಗಾನಕಲೆ ವೃದ್ಧಿಸುತಸಾನುರಾಗದಿ ಕಾಯೊ | ಜ್ಞಾನಿ ಜನ ವಂದ್ಯಾ |ಮಾನಾಭಿ ಮಾನಗಳು | ನಿನ್ನದೆಂದೆನಿವಮತಿನೀನಾಗಿ ಕರುಣಿಪುದು | ಮಾನನಿಧಿ ದೇವಾ ೪
ದುರಿತ ದೂರನೆ ಹರಿಯೆ | ವರಜ್ಞಾನ ಭಕ್ತಿಗಳಕರುಣಿಸುತ ತರಳೆಯನು | ಪೊರೆಯ ಬೇಕಯ್ಯಗುರುವಂತರಾತ್ಮ ಗುರು | ಗೋವಿಂದ ವಿಠ್ಠಲನೆಅರಿಕೆ ಎನ್ನದು ಸಲಿಸಿ | ಪರಿ ಪಾಲಿಸಿವಳಾ ೫

೬೫೭
ಶ್ರೀ
ಲಕ್ಷ್ಮೀಶ ವಿಠಲಾ | ರಕ್ಷಿಸೋ ಇವನಾ ಪ
ಕುಕ್ಷಿಯೊಳಗನ್ಯರನೆ | ರಕ್ಷಕರ ಕಾಣೇ ಅ.ಪ.
ಮಧ್ವ ಮತದಲ್ಲಿವನು | ಶ್ರದ್ಧೆ ಭಕ್ತಿಯುತನುಪದ್ಧತಿಗಳಳವಡಿಸಿ | ಶುದ್ಧ ಸಾಧನದಾ |ಅಧ್ಯಯನಕೆಳೆ ತಂದು | ಬದ್ಧನನ | ಮಾಡುತ್ತಾಉದ್ಧರಿಸೋ ಶ್ರೀ ಹರಿಯೇ ಪದ್ಮನಾಭಾಖ್ಯಾ ೧
ಭಂಗವಿಲ್ಲದೆ ಇವಗೆ | ಮಂಗಳವು ಎಂದೆನಿಪಶ್ರೀ ಶೃಂಗಾರ ನಾಮಸ್ರ‍ಮತಿ | ಶ್ರೀ ರಂಗನಾಥಾಸಂಘಟಿಸಿ ಉದ್ಧರಿಸೋ | ಸ್ವಾಂಗಾಯ ನಾಮಕನೆಸಂಗೀತ ಲೋಲ ಹರಿ | ರಂಗ ಭವ ಹಾರೀ೨
ಆರೋಗ್ಯ ಭಾಗ್ಯವನು ಕರುಣಿಸುತ ಇವನೀಗೆದ್ವಾರವಾಗಲಿ ಅದುವೇ | ಸಾರ ಸಾಧನಕೇಚಾರು ನಿನ್ನಯ ನಾಮ | ಸಾರ ಸವಿ ಸವಿದುಂಬಭಾರಣಯಲಿರಿಸಯ್ಯ | ಮಾರಪಿತ ಹರಿಯೇ ೩
ಕರ್ಮಗಳ ಮಾಳ್ಪುವಲಿ | ಮರ್ಮಗಳ ತಿಳಿಸಯ್ಯನಿರ್ಮಮತೆ ನೀಡುತ್ತ | ಧರ್ಮ ಸಾಧಕನೇಕರ್ಮನಾಮಕ ಹರಿಯೇ | ಪೇರ್ಮಣಯಲಿ ಇವನನ್ನುಕ್ರಮ್ಮಿಸೋ ಕರುಣದಲಿ | ಧರ್ಮಗುಪಾಧರ್ಮಿ ೪
ಧಾವಿಸಿ ಬಂದಿಹನು | ದೇವ ತವ ದಾಸ್ಯಕೆನೆಭಾವಕನಿಗಿತ್ತಿಹೆನೊ | ಓವಿ ಉಪದೇಶಾಗೋವಳರ ಪ್ರಿಯ ಗುರು | ಗೋವಿಂದ ವಿಠಲನೆನೀ ವೊಲಿದು ಪೊರೆ ಇವನ | ದೇವ ದೇವೇಶಾ ೫

೭೦೨
ಶ್ರೀ ಗೋವಿಂದ ವಿಠಲನೆ | ಕಾಪಾಡ ಬೇಕಿವಳಾ ಪ
ಹೇ ಗರುಡ ಧ್ವಜನೆ ಹರಿ | ನಿನ್ನ ಮೊರೆ ಹೊಕ್ಕವಳಾ ಅ.ಪ.
ಸ್ವಾಪದಲಿ ಸೂಚಿಸಿದ ಪರಿ | ಶ್ರೀ ಪತಿಯೆ ನಿನ್ನಂಕಿತವಉಪದೇಶಿಸಿರುವೆನೋ | ಮನ್ನಿಸಿ ಕಾಯೋಕಾಪಟ್ಯ ರಹಿತಳೂ | ಹರಿ ದರ್ಶನಾಕಾಂಕ್ಷೆಕೈಪಿಡಿದು ಕಾಪಾಡೊ | ಆಪನ್ನ ಪರಿಪಾಲಾ ೧
ಲೌಕಿಕದ ಮಮತೆಗಳ | ನೀ ಕಡಿದು ಕಾಪಾಡೊಏಕಮೇವನ ದೇವ | ಪ್ರಾಕ್ಕು ಕರ್ಮವ ಕಳೆದುಭಕುತಿ ಜ್ಞಾನವನಿತ್ತು | ಕಾಪಾಡೊ ಹರಿಯೇಯುಕುತಿಯಲಿ ನಿನ್ನಂಥ | ದೇವರನ ಕಾಣಿಸಯ್ಯ ೨
ಪಾಂಚ ಭೌತಿಕ ದೇಹ | ಅಸ್ಥಿರತೆ ತಿಳಿಸುತ್ತಪಂಚಾತ್ಮ ನಿನ ಧ್ಯಾನ | ಮಗ್ನಳೆಂದೆನಿಸೊ |ಸಂಚಿತಾಗಾಮಿಗಳ | ನಾಶ ಗೈಸುತಲಿತ್ತಕೊಂಚಮಾಡೊ ಪ್ರಾರಬ್ಧ | ಗುರು ಗೋವಿಂದ ವಿಠಲ ೩

೭೦೩
ಶ್ರೀ ನರಸಿಂಹ ವಿಠಲ | ಕಾಪಾಡೊ ಇವಳಾ ಪ
ದೀನ ಜನ ಮಂದಾರ | ಕಾರುಣ್ಯ ಮೂರ್ತೆ ಅ.ಪ.
ತೈಜಸನೆ ನೀನಾಗಿ ಯೋಜಿಸಿದ ರೂಪವನುಮಾಜದಲೆ ಇತಿಹೆನೊ | ವಾಜಿ ವದನಾಖ್ಯಮೂಜಗಕ್ಕೊಡೆಯ ಹರಿ | ಗೋಜುಗಳ ಬಿಡಿಸುತ್ತವ್ಯಾಜ ರಹಿತನೆ ಕಾಯೊ | ಭ್ರಾಜಿಷ್ಗು ಮೂರ್ತೇ ೧
ಹರಿ ಗುರೂ ಸದ್ಭಕುತಿ | ವರಜ್ಞಾನ ಕರುಣಿಸುತನಿರುತ ಪೊರೆ ಇವಳನ್ನ | ವೈರಾಗ್ಯವಿತ್ತೂ |ದುರಿತ ರಾಶಿಗಳಳಿದೂ | ಕರುಣಿಸೋ ನರಹರಿಯೇಮರುತಾಂತರಾತ್ಮಕನೆ | ಶರಣ ವತ್ಸಲನೇ ೨
ನಾಮ ಸುಧೆ ಉಣಿಸುತ್ತ | ಈ ಮಹಾಕಲಿಯುಗದಿಪಾಮರಗಳ ಉದ್ಧರಿಸೋ | ಶ್ರೀ ಮನೋರಮನೇಯಾಮ ಯಾಮಕೆ ಪಾದ | ಕಮಲ ರತಿಯನೆ ಈಯೋಸಾಮ ಸನ್ನುತ ಗುರೂ | ಗೋವಿಂದ ವಿಠಲಾ೩

೩೦೭
ಶ್ರೀ ಮದ್ಭಾಗವತ
ಚಿಂತಯಾಮಿ | ಶಿರಿಕೃಷ್ಣ | ಸತತ ಸುಗುಣೋ | ಪೇತಂ ಪ
ಸಂತತ ಭಕುತರ ಕೃಪಾ | ಪಾಂಗ ವೀಕ್ಷಾ ಹಸಿತಂಅ.ಪ.
ಚಿಟ್ಟೆಸ್ವರ –
ಸರಿ ಗಸರೀ | ಮಪ ದಪ ಧಾ | ರಿಸ ನಿಧ ನಿಧ | ಪಮ ಗರಿ ಸಧ |ದ್ರುತ :- ಸರಿಮಾ ಗರಿ | ಮಪ ದಾಸಮ || ಪದ ಸಾ ನಿಧ | ನಿಧ ಪಮಪಧ |ಗರಿ ಸಧ | ರಿಸ ಧಾ ಸ | ಧಾ ಗರಿ ನಿಧಮ ಗರಿಸಧ ||
ರಾಗ – ನಾಟಿಕುರಂಜಿ
ನಿಶಿಕರಾನ್ವಯ ತಿಲಕಂ ಸುಶಂಖಾರಿ, ಗದಾದಿಧೃತ |ನಿಶಿಯೊಳುದಿತ, ಕಾರಾಗೃಹ | ನಂದ ಗೋಕುಲ, ಕಾನೀತಂ | ಯಶೋದೆಯ ಶಿಶು, ಮಧುರಾ ನೀತಂ, ಶಿಶುವಸುಹರ ದುರುಳ ಬಂಧಂ | ವಸುಮತಿಯೆಂ, ಗಗನಖಾರಿ, ಕಂಸಗರ್ವಹರ, ದುರ್ಗಾಂಬಂ ೧
ರಾಗ – ಚಿಟ್ಟೆಸ್ವರ
ಮಗ ಸಾ ನಿóಧ | ನಿ ಸಾ ರಿಗಮ | ನಿಧ ಮಾಗರಿ | ಗಮ ಪಗರಿಸ |ದ್ರುತ – ನಿóಧನಿ ಸ ರಿಗಮನಿ ಧ ನಿಪಧ | ನಿಸನಿಧ ನಿಸರಿಗ ಮಗಸ ನಿ | ಗರಿ ಸಧಾ, ನಿಸ ಧಾ, ಸ || ಧಾ, ಗರಿ ನಿದಮ ಗರಿಸಧ ||
ರಾಗ – ಧನ್ಯಾಸಿ
ವಿಗತಾ ಅಸು, ಪಾಲುಣಿಸಿದ, ರಕ್ಕಸಿ, ಪೂಥಣಿಯುಮಿಗೆ ಊರ್ವಶಿ ಸುರೆ ಶಾಪಹರಂ | ಶಕಟಾಖ್ಯಾಸುರವಿಗಡ ಪ್ರಾಣಹರ | ಶೀಲಂ ತೃಣ ವತ್ಸಾಹರ | ಬಕ ಧುನಿ ಚಮುಮಿಗಿಲಾದವರ ಅಸುಹರಣಂ | ಮಣಿಗೊರಳರ ಶಾಪಹರಂ |ಮದ ವಿಭಂಜನ ಕಾಳೀಯನ | ವನ್ಹಿಯ ಪಾನಂ ಚರಿತಂ ೨
ಚಿಟ್ಟೆಸ್ವರ –
ನಿಸ ಗಾ ಮಪ | ಗಮ ಪಾ ನಿಸ | ರಿ ಸ ರಿ ನಿ ಸಸ | ಧಪ ಗಾರಿಸ |ನೀ ಸಗ ಮಪ ಗಾ ಮಪನಿಸ | ಪಾನಿಸ ಗರಿಸನಿ ಧ ಪನಿಸ |ಗರಿಸಧ, ಆರಿಸ ಧಾ, ಸ || ಧಾ, ಗರಿ ನಿಧಮ ಗರಿಸಧ ||
ರಾಗ ಮೋಹನ :
ಹನನ ಅಸುರ | ವಿಷತರು ರೂಪಿ | ಘನ ಧೇನುಕ ಭಂಜನಹನನ ಪ್ರಲಂಬನು ಬಲ ನಿಂ | ಪುನರಪಿ ವನ್ಹಿಯ ಪಾನಂಮುನಿ ಪತ್ನ್ಯಾನೀತಾನ್ನ | ಸುಭೋಜನ ಶೀಲಂ |ತೃಣಸಮ ಗಿರಿಧರ ಶಂಖನ | ಮಣಿಹರ ಅರಿಷ್ಠಾ ಅಸುರ ಹರ ೩
ಚಿಟ್ಟೆಸ್ವರ
ಗಾ ಅಪ ಗರಿ, ಗರಿ ಸಧ ಸರಿ | ಗಾಪ ಧಸ, ಧಪ ಗರಿ ಸರಿ |ಗಪ ಗಗ ರಿಸ, ರಿಗ ರಿರಿಸ ಧ | ಸರಿಗರಿ ಗಪಗಪ ಧಪ ಧಸ |ಗರಿಸಧ, ಆರಿಸ, ಧಾ ಸ || ಧಾ, ಗರಿ ನಿಧಮ ಗರಿಸಧ ||
ರಾಗ – ಪೂರ್ವಿಕಲ್ಯಾಣಿ
ಕೇಶಿ ಅಸುರನ ಅಂತೆ ವ್ಯೋಮಾಸುರ ಹನನದಕ್ಲೇಶ ವಾರ್ತೆಯ ಕೇಳಿ ಕಂಸನು ದಾನಪತಿಯನುಯಶೋದೆ ಕಂದನ ಕರೆಯೆ ಅಜ್ಞಾಪಿಸಿದ ಬಿಲ್ಲು ಹಬ್ಬಕೆಲೇಸೆನುತ ಬರವಾಯ್ತು ಸಖ ಅಕ್ರೂರ ಗೋಕುಲಕೆ ೪
ಚಿಟ್ಟೆಸ್ವರ –
ಗಾ ಮಗರಿಸ | ಧಸ ಅರಿ ಗಮ | ಪಾಧಪಸ | ನಿಧಪಮಗರಿಗಮಪ ಮಾಪ, ಗಾಮರೀಗ, ಸಾರಿಗಾ ಮ, ಪದ ಪ, ಸಾನಿ ||ಗರಿ ಸಧಾ, ರಿ ಸಧಾ ಸದಾ ಗರಿ ನಿಧಮ, ಗರಿ ಸಧ ||
ರಾಗ – ಮುಖಾರಿ
ಅನಘ ಹರಿ ಸಖನೊಡನೆ | ರಥವೇರಿ ಬರುತಿರಲುಯಮುನೆಯಲ್ಲಿ | ದಾನ ಪತಿ | ಸ್ನಾನದಲಿ ಹರಿ ವೀಕ್ಷಣಂಮನ ಕಲಕಿ ಹರಿ ಮಹಿಮೆ ಆಶ್ಚರ್ಯದಿ ಮಧುರೆ ಸೇರಿವನದಿ ಪರಿವಾರ ನಿಲೆ ಬಲ ಸಹಿತ ಪುರಖೊರಟ ೫
ಚಿಟ್ಟೆಸ್ವರ
ಪಾ ಮಗರಿ | ಸಾ ನಿಧ ಸರಿ | ಮಾ ಗರಿಸ | ರಿಮ ಪಮನಿಧ |ಸಾ ಸನಿ ಧಪ ಪಾ ಮಗರಿಸ | ನಿಧ ಸರಿ ಮಪನಿಧ ಮಪಧಸ |ಗರಿ ಸಧ ಆರಿ ಸ ಧಾ ಸ || ಧಾ ಗರಿ ನಿಧಮ, ಗರಿಸಧ ||
ರಾಗ :ಮಧ್ಯಮಾವತಿ
ರಜಕನಸು | ನೀಗಿ ಹರಿಯು | ಸ್ರಜ ನಿರ್ಮಾತೃಗೊಲಿದು ಮುಂದೆ |ಕುಬ್ಜೆವಕ್ರ | ತಿದ್ದಿ ಧನುವ | ಮುರಿದು, ಆನೆ | ಬರಲದರ | ಜಜ್ಜಿ ಹುಲ್ಲು | ಹನನ ಮಲ್ಲರ | ಕೊಂದು ಕಂಸನುಗ್ರಸೇನ | ನಿಜ ಪಟ್ಟಾಭಿಷಕ್ತ ಧರಣಿ | ಭಾರ ಕಳೆದ ಗುರು ಗೋವಿಂದ ವಿಠಲ ೬
ಚಿಟ್ಟೆಸ್ವರ
ರೀ, ಮರಿ ಮಪ | ನೀ ಪಮ ಪನಿ | ಸಾರಿಸನಿ | ಪಪ ಮಮ ರಿಸ |ರೀ ಪಮ ರಿಸ ನಿಸ ರಿಮಪಾ ||
ರಾಗ :ಪೂರ್ವಿಕಲ್ಯಾಣಿ :ಧಪಸಾ ನಿಧಪಮ | ಪಮಗರಿ
ರಾಗ :ಮೋಹನ :ಸರಿಮಾ ಗರಿ ಸರಿಗಾ | ದಪಗರಿ ಸರಿ ಗಪದಸರಾಗ :ಮುಖಾರಿ :ರೀ ಸದಾ ಪ ದಪ ಗಾರಿಸ |
ರಾಗ :ನಾಟಿ ಕುರಂಜಿ :ನಿಸ ಮಗ ಮನಿ ಧನಿ ಪದನಿಸ |
ರಾಗ :ಸಾವೇರಿ :ಗರಿ ಸಧಾ ರಿಸ ಧಾ ಸ || ಧಾ ಗರಿ ನಿದಮ ಗರಿ ಸಧ

೭೦೮
ಶ್ರೀ ಮುದ್ದು ಮೋಹನ್ನ | ವಿಠಲ ಪೊರೆ ಇವನಾ ಪ
ನಾಮ ಸಂಸೃತಿ ಇವಗೆ | ಸತತ ನೀನಿತ್ತು ಅ.ಪ.
ವೇಣುಲೋಲನ ಮಹಿಮೆ | ಗಾನಮಾಡಲು ಇವಗೆಜ್ಞಾನವಂಕುರಿಸಲ್ಕೆ | ಜ್ಞಾನಿಸಂಗವಕೊಡೊ |ಮಾನನಿಧಿ ಮಧ್ವಾಖ್ಯ | ಸನ್ಮತದಲುದಿಸಿಹನೊ ಮೌನಿಜನ ವೃಂದ ಸ | ನ್ಮಾನ ಮಾಳ್ವವನಾ ೧
ಭವವನದಿ ನವಪೋತ | ಶ್ರವಣ ಸಾಧನವಿತ್ತುನವನವ ಸುವಿಶೇಷ | ಮಹಿಮಯುತ ಹರಿಯಾಪ್ರವರ ಗುಣರೂಪಗಳ | ಸ್ತವನ ಮಾಳ್ವಂತೆಸಗಿಪವನಾಂತರಾತ್ಮಕನೆ | ಪಾಲಿಸೊ ಇವನಾ ೨
ಲೌಕಿಕೋನ್ನತಿಯಿತ್ತು | ಕಾಕು ಸಂಗವಕೊಡದೆಮಾಕಳತ್ರನದಾಸ | ಸಂಕುಲದಲಿರಿಸೋವ್ಯಾಕುಲಾರ್ಥಿಕ ಕಳೆಯೆ | ಬೇಕಾದ ವರಗಳನೆನೀ ಕೊಟ್ಟುಕಾಯೊ ಕೃ | ಪಾಕರನೆ ಹರಿಯೇ ೩
ತೈಜಸನೆ ನೀನಾಗಿ | ಯೋಜಿಸಿದ ಅಂಕಿತವ ಮಾಜದಲೆ ಇತ್ತಿಹೆನೊ | ನೈಜ ಮಾರ್ಗದಲೀಮಾಜಗಜನ್ಮಾದಿ ನಿ | ವ್ಯಾಕಜ್ಯ ಕಾರುಣಿಕವಾಜಿವದನನೆ ಪೊರೆಯೊ | ವೃಜನಾರ್ಥನೆನಸೀ ೪
ಸಂತ ಸಂಗವನಿತ್ತು | ಅಂತರಾತ್ಮಕ ನಿನ್ನಚಿಂತೆಯಲ್ಲಿರುಸುತಲಿ | ಭ್ರಾಂತಿಯಿರದೊಂದುಅಂತ ಗೈಯುವಮಾರ್ಗ | ಕಂತುಪಿತ ನೀನಿತ್ತುಕಾಂತ ಗುರು ಗೋವಿಂದ | ವಿಠಲಾ ಪೊರೆ ಇವನಾ ೫

ಯತಿಕಕ್ಷೆ ಮತ್ತು ದಾಸಕಕ್ಷೆಯಲ್ಲಿ
೪೯೪
ಶ್ರೀ ರಮಾ ವಿನುತ ಪದ ತಾಮರಸ ಪಲ್ಲವನೆಸಾರಶೃತಿ ಪ್ರತಿಪಾದ್ಯ ವೇದಾಣಿ ಸನ್ನುತನೆನೀರಜಜ ವಿಧಿ ಈರ ಖಗಪಾಹಿ ರುದ್ರಸುರ ಪೂಜ್ಯ ತ್ರೈಧಾಮ ಹರಿಯೆ || ಭೂರಿ ಕರುಣಾಪೂರ್ಣ ಶರಣರಿಗೆ ಫಲದಾತವೀರ ವೈಷ್ಣವನು ಗಂಗಾಧರಾಪ್ತ ಸುದೀಪ್ತ ಚಾರುದೇಷ್ಣ ಪಿತನೆ ಶ್ರೀಮಧ್ವ ಹೃತ್ಕುಮುದ ಪೂರ್ಣೇಂದು ಪಾಹಿಪಾಹಿ ೧
ಪರಮ ಪ್ರಿಯ ಶ್ರೀ ತಂದೆ ಮುದ್ದು ಮೋಹಾಭಿಧರಪರಮಗುರು ಮುದ್ದು ಮೋಹನಗುರು ಶ್ರೀವರರಹರಿಕಥಾಮೃತಸಾರ ಸವಿಸಿದ ಶ್ರೀಜಗನ್ನಾಥ ದಾಸರಿಗೆ ನಮಿಸಿ ಕರುಣದಿಂದರ್ಧಾಯುವಿತ್ತ ಭಾಗಣ್ಣರಿಗೆಗುರುವೆನಿಸಿ ಸಛ್ಛಾಸ್ತ್ರಪದ ಸುಳಾದಿಯಲಿ ಪೇಳ್ದಶಿರಿ ವಿಜಯ ದಾಸರಿಗೆ ತದ್ಗುರುವು

೭೧೧
ಶ್ರೀ ವರದ ಗೋಪಾಲ | ವಿಠಲ ಪ್ರಾರ್ಥಿಪೆ ನಿನ್ನದೇವ ತವ ದಾಸ್ಯವನು | ಬವಿಕಾಂಕ್ಷಿಪನ ಪ
ನೀವೊಲೀದಿವನ | ಸ್ವೀಕರಿಸುವುದಯ್ಯಪಾವಮಾನಿ ಪ್ರಿಯ ಶು | ಭಾವಹ ಪ್ರದನೇ ಅ.ಪ.
ವಿಶ್ವ ವ್ಯಾಪಕ ಹರಿಯೆ | ಅಶ್ವಮೊಗ ನಿನ್ನಂಘ್ರಿಸುಸ್ವರದಿ ಕೀರ್ತಿಸುವೆ | ಶಾಶ್ವತಾನಂದಾನಶ್ವರ ಜಿಹಾಸೆಯನು | ವಿಶ್ವಾಸದಿಂದಿತ್ತುವಿಶ್ವಕುಟುಂಬಿಕನೆ | ಹ್ರಸ್ವಗೈ ಕರ್ಮಾ ೧
ಅನುವಂಶಿಕವಾಗಿ | ಗಾನಕಲೆ ಇವನೀಗೆನೀನೇವೆ ಕರುಣಿಸಿಹೆ | ವೇಣುಗೋಪಾಲಮಾನನಿಧಿ ಮಧ್ವ ಕಾ | ರುಣ್ಯ ಪಾತ್ರನು ಎನಿಸಿಜ್ಞಾನ ಭಕ್ತ್ಯಭಿವೃದ್ಧಿ | ಮಾಣದಲೆ ಗೈಯ್ಯೋ ೨
ಏಸೇಸೋ ಜನುಮಗಳ | ರಾಶಿ ಪುಣ್ಯದ ಫಲವುಕೈಸೇರಿ ಆಶಿಸುವ | ದಾಸದೀಕ್ಷೆಯನುಲೇಸಾಗಿ ತೈಜಸನ | ಆಶಿಷವ ಕೈಕೊಂಡುಮೀಸಲ ಮನದಿ ಉಪ | ದೇಶವಿತ್ತಿಹನೋ ೩
ತೃಕ್ಷಾದಿ ದಿವಿಜೇಡ್ಯ | ಪಕ್ಷಿವಹ ಕೃಷ್ಣ ಹೃ-ತ್ಕುಕ್ಷಿಯೊಳು ತವರೂಪ | ಈಕ್ಷಿಸುವ ಭಾಗ್ಯಭಿಕ್ಷೆಯನು ಇತ್ತು ಉ | ಪೇಕ್ಷಿಸದೆ ಪೊರೆ ಇವನಅಕ್ಷೀಣ ದಯಸಾಂದ್ರ | ಲಕ್ಷುಮಿಯ ರಮಣ ೪
ಭಾವದ್ರವ್ಯ ಕ್ರಿಯವು | ಈ ವಿಧಾದ್ವೆತತ್ರಯ ಆವ ಸುಜ್ಞಾನವನು | ಈವುದಿವನೀಗೆ |ದೇವದೇವೇಶ ಗುರು | ಗೋವಿಂದ ವಿಠಲನೆಈ ವಿದಧ ಭಿನ್ನಪವ | ನೀ ವೊಲಿದು ಸಲಿಸೋ೫

ಶ್ರೀ ಮಧ್ಭಾಗವತ ಸಾರೋದ್ಧಾರ
೪೧೧
ಶ್ರೀ ವಿಷ್ಣು ತೀರ್ಥರು (ಮಾದನೂರು)
ಶ್ರೀ ವಿಷ್ಣು ತೀರ್ಥರೆ ನಮೋ ಪ
ಶ್ರೀ ವಿಷ್ಣುಪದ ತಾಮರಸ ಭ್ರಮರರೆಂದನಿಸೂವಲೌಕಿಕ ಸುವೈದಿಕ ಸುಶಬ್ದ ಜಾತವಸಾರ್ವಭೌಮ ಹರಿಗನ್ವಯಿಪರಂ ಭಜಿಸುತ್ತ ಇಷ್ಟಾರ್ಥವಂ ಪಡೆಯಿರೊ ಅ.ಪ.
ಸವಣೂರು ಸನಿಯ ಸಿದ್ಧಾಪುರದ ಸೀಮೆಯಲಿಅವಸಿತರು ಬಾಲ ಆಚಾರ್ಯ ಭಾಗೀರ್ಥಿ ಎಂಬುವರು ಸದ್ಧರ್ಮರತರೆನಿಸಿ ಜಯತೀರ್ಥರಂ ಸೇವಿಸಲು ಬಹು ಭಕುತಿಲಿ |ಅವರನುಗ್ರಹ ಜಾತ ವರಶಿಶುವಿಗವರ ನಾಮವನಿಟ್ಟು |ಕಾಲದೊಳಗುಪನಯ ನವಂ ಮಾಡಿ ಸರ್ವ ವೇದ ವೇಂದಾಗ ಪಾರಂಗತರು ಐಜಿ ಆಚಾರ್ಯರಲಿ ಬಿಡಲು ೧
ಕುಶಲತೆಯು ಮತ್ತೆ ಸೌಶೀಲ್ಯ ಗುಣನಿಧಿ ಎನಿಪಶಿಷ್ಯನಿಗೆ ಸಚ್ಛಾಸ್ತ್ರ ಪಾರಂಗತನು ಎನಿಸಿಒಸೆದು ದ್ವಿತಿಯಾಶ್ರಮಕೆ ಚೋದಿಸಿ ಕಳುಹಲವ ಗೃಹಧರ್ಮ ಸ್ವೀಕರಿಸುತ |ಎಸೆವ ಕೀರ್ತಿಲಿ ಮೆರೆದು ಶಿಷ್ಯರಿಗೆ ಶಾಸ್ತ್ರ ಬೋ-ಧಿಸುತಲಿರಲು ಸತ್ಸಂತಾನವಂತರಾಗುತಎಸೆವ ಹಂಸತೂಲಿಕ ತಲ್ಪದೊಳು ಪವಡಿಸಿರೆ ಅಪರಾಹ್ನ ರೋಗಾರ್ತರು ೨
ಅಂತರ ಗೃಹ ಚತುರ ದಿಗ್ವಲಯ ದಾದರ್ಶದೂತರದಿ ಪ್ರತಿಫಲಿತ ತಮರೂಪವಿರೆ ಸತಿಯುಸಂತಸದಿ ಪತಿ ಚರಣ ಸೇವಿಸಿರೆ ಹೊರ ಬಾಗಿಲೊಳು ಓರ್ವ ಭಿಕ್ಷಾರ್ಥಿಯು |ಸಂತ ಪುರಂದರ ಸುದಾಸಾರ್ಯ ನುಡಿದುದನುಅಂತೆ ಮಂಚ ಬಾರದು ಮಡದಿ ಬಾರಳು ಎಂಬಪಿಂತಿನ್ವಚನವ ಕೇಳಿ ಚಿಂತಿಸುತ್ತಿರೆ ತಮಗೆ ಜಾತಿ ಸ್ರ‍ಮತಿ ಒದಗುತಿರಲು ೩
ಘನವಾದ ಐಶ್ವರ್ಯ ಸತಿಸುತರು ಬಂಧುಗಳತೃಣಕೆ ಸಮ ತಿಳಿಯುತ್ತ ಜಯ ಗುರೂ ಹೃದ್ಗತವಅನು ಸರಿಸೆ ಅಜ್ಞಾತ ಬಗೆಯಲಿರುತಿಹನೆಂದು ವೈರಾಗ್ಯವನೆ ಪೊಂದುತ ||ಮನೆಯಿಂದ ಹೊರ ಹೊರಟು ಅನತಿ ದೂರವಸಾಗೆಘನ ಸರ್ಪ ರೂಪದಿಂ ತೋರಿ ಕೊಳೆ ಜಯತೀರ್ಥ ಮುನಿವರ್ಯ ಹೃದ್ಗತವ ತಿಳಿದು ವಸುಮತಿ ವ್ಯರ್ಥ ಸಂಚರಣೆ ಸಂತ್ಯಜಿಸುತ ೪
ಶೃತಿ ಸ್ರ‍ಮತಿಗೆ ಸಮ್ಮತವು ದಶಮತಿಯ ಸಮಯವೆನುತತಿ ಹಿತದಿ ಪ್ರವಚನೆಗೆ ಪ್ರೇರಿಸಿಹ ಗುರುಮತವ ಸತ್ಕರಿಸಿ ಕಾರುಣ್ಯ ಕೊಂಡಾಡಿ ಸಾಧಿಸಲು ತೃತಿಯಾಶ್ರಮವನು ||ಹಿತದಿ ಕೈಕೊಂಡು ಮಲವ ತಾನಪಹರಿಪಸರಿತೃತಟದಲಿ ಇರುವ ಮನುವಳ್ಳಿ ಪಳ್ಳಿಯಲಿ ನೆಲಿಸುತಲಿ ವಿಹಿತ ಕರ್ಮಾಚರಿಸಿ ಸಿರಿಮತ್ಸು ಮಧ್ವ ವಿಜಯವ ಪಠಿಸುತಿಹರು ೫
ಗುರುಮಧ್ವ ಕರುಣದಿಂ ಸಂಚಿತ ಸುಕೃತದಲ್ಲಿವರು ಮಧುಕರೀ ವೃತ್ತಿಯಿಲಿ ಶಿಷ್ಯರಂ ಸಲಹಿಸಿರಿನ್ಯಾಯ ಸುಧೆ ಪ್ರವಚಿಸುತ ಜ್ಞಾನವನೆ ಬೀರುತಲಿ ಯೋಗ್ಯ ಜನಗಳಿಗೆ ||ಇರುತ ಕೆಲಕಾಲ ಶಿರಿ ಸತ್ಯಸಂಧರ ಕರಜಗುರು ಸತ್ಯವರ ತೀರ್ಥ ಕರಜರೆಂದನಿಸುತ್ತಮೆರೆವ ಚತುರಾಶ್ರಮದಿ ಸಿರಿ ವಿಷ್ಣುತೀರ್ಥರೆಂಬಂಕಿತದಿ ಮೆರೆಯುತಿಹರು ೬
ಅಂತೆ ವಾಸೀಜನರ ಅಭಿಮತವನನುಸರಿಸಿಅಂತ್ಯ ಕಾಲದ ಸ್ಮರಣೆ ಸರ್ವಕರ್ಮಾರ್ಪಣವುಕಂತು ಪಿತ ಸ್ತೋತ್ರ ಸಿರಿಗೀತೆರತ್ನ ಬಿಂಬೋಪಾಸನಾಜ್ಞಾಪತ್ರವ ||ಅಂತೆ ಶಿರಿ ಭಾಗವತ ಸಾರದುದ್ಧಾರವನುಮುಂತಾದ ಮುಕುತಿ ಸತ್ಪಂಥಗಳ ಬೋಧಿಪಗ್ರಂಥಗಳ ರಚಿಸಿ ಸುಜನೋದ್ಧಾರವನೆ ಗೈದು ಶೋಭಿಸುವರವನಿಯಲ್ಲಿ ೭
ಲಕ್ಷುಮಿಯು ನರೆಯಣರನುಗ್ರಹವನೇ ಪಡೆದುದಕ್ಷಿಣದಿ ಬದರಿಕಾಶ್ರಮವೆನುತಿರೆ ಮೆರೆವತ್ರಕ್ಷ್ಯ ಮೋದೇಶ್ವರ ಪುರದಲಿ ನೆಲಿಸಿ ನೂರೆಂಟು ಸಲ ಸುಧೆ ಪ್ರವಚಿಸುತಲಿ ||ಕುಕ್ಷಿಯೊಳಗುಳ್ಳ ಸು ಕ್ಷೇತ್ರಗಳ ಸಂಚರಿಸಿ ಲಕ್ಷಿಸುತ || ಯೋಗ್ಯ ಜನಕುಪದೇಶ ಚರಿಸಲುಸ್ವಕ್ಷೇತ್ರಕೇ ಮರಳಿ ಕುಶಸರಿತು ತೀರದಲಿ ಪರ್ಣ ಶಾಲೆಯಲಿ ವಸಿಸಿ ೮
ಹರಿನಿಯುತ ಕಾಲ ತಾ ತಿಳೀಯುತ್ತ ಶಿಷ್ಯಜನಕರಿವಿತ್ತು ಶಾಲಿವಾನ ಸಹಸ್ರ ಷಟ್ಯತೊತ್ತರವಷ್ಟಸಪ್ತತಿಯು ಮಾಘಾಸಿತ ಪಕ್ಷ ತ್ರಯೋದಶಿ ಸುಮೂಹೂರ್ತದಿ ||ಸುರರು ಭೂಸುರರೆಲ್ಲ ಜಯಘೋಷ ಗೈಯ್ಯುತಿರೆವರ ಮಹಾತ್ಮರು ಆಗ ಹೊಗಲು ವೃಂದಾವನವಪರಿಜನರು ಮುಳುಗಿದರು ದುಃಖ ಆನಂದ ಸಾಗರದಲದನೇನೆಂಬನು ೯
ಅವತಾರಮಾರಭ್ಯ ಐದು ದಶ ವರ್ಷಗಳುಅವನಿಜನ ದೃಗ್ವಿಷಯರೀ ಮಹಾತ್ಮರು ತಾವುಅವಧೂತ ವೇಷದಿಂ ಭವನ ಪಾವನವೆನಿಸಿ ಪಿಂತೆ ಶುಕಮುನಿಯಂದದಿ ||ಪವನ ಮತ ಶರನಿಧಿಗೆ ಶಶಿಯು ಇಪ್ಪತ್ತೆಂಟುಪವಿತರ ಸುಲಕ್ಷಣ ಸುತನುವಿಂದುರೆ ಮೆರೆದುಅವನಿಸುರ ಶಿಕ್ಷಣ ಸದುಪದೇಶನುಷ್ಠಾನದಿಂ ಗೈದ ಕೀರ್ತಿಯುತರು ೧೦
ಇವರ ನಾಮಸ್ಮರಣೆ ಕಲಿಮಲದ ಅಪಹರಣೆಇವರ ಸೇವೆಯ ಫಲವು ಸರ್ವಾಮಯ ಹರವುಇವರುನುಗ್ರಹವಿರಲು ವಾದಿನಿಗ್ರಹವಹುದು ಇದಕೆ ಸಂಶಯ ಸಲ್ಲದು ||ಇವರಿಹರು ಸುರತರುವಿನಂದದಲಿ ಶರಣರಿಗೆಇವರೆ ಚಿಂತಾಮಣಿಯು ಸರ್ವ ಭಯ ಹರಿಸುವರು ಇವರ ಗುಣಕೊಂಡಾಡಿ ಇವರೊಲಿಮೆ ಅರ್ಜಿಸಲು ಸರ್ವಕಾಮವು ಲಭ್ಯವು ೧೧
ಸರ್ವಕ್ಷೇತ್ರಾಧಿಕದಿ ಭೂವರಹ ನಿಲ್ಲಿರುವಸರ್ವಭಯ ನಾಶನಕೆ ನರಹರಿಯು ಅರಿರೂಪಸರ್ವಭಕ್ತರ ಭೀಷ್ಟ ವರ್ಷಣಕೆ ಗೋಪಾಲಕೃಷ್ಣರೂಪದಿ ಇರುವನು ||ಇವರ ವೃಂದಾವನದೊಳೀ ಪರೀ ಹರಿರೂಪಪವನ ರೂಪಗಳಿಹವು ಶಿರದೊಳಗೆ ಜಯ ಮುನಿಯುಸರ್ವಋಷಿ ದೇವತೆಗಳಿಹರು ವೃಕ್ಷರೂಪದಿ ಈ ಪವಿತರ ಕ್ಷೇತ್ರದಿ ೧೨
ನಮೊ ನಮೋ ಜಯತೀರ್ಥ ಮುನಿಯನುಗ್ರಹಜಾತನಮೊ ನಮೋ ಅವಧೂತ ಚರ್ಯ ಬಹು ನಿಷ್ಣಾತನಮೊ ನಮೋ ಶುಕರಂತೆ ಭಗವದ್ವಿಭೂತಿಯೇ ಭಾಗವತ ನಿಷ್ಠಾತರೆ ||ನಮೊ ನಮೋ ಭಕ್ತಜನ ಕಾಮಧುಕ್ ಭವ್ಯಾತ್ಮನಮೋ ಶ್ರೀ ಮದಾನಂದ ಮುನಿಚರಣ ಮಧುಪರೆನಮೊ ಗುರೂ ಗೋವಿಂದ ವಿಠಲ ಪಾದಾಶ್ರಿತರೆ ನಮೊ ವಿಷ್ಣುತೀರ್ಥ ಪಾಹಿ ||

೪೬೩
ಶ್ರೀ ಶ್ರೀ ವರವಿಠಲದಾಸರು
ಶ್ರೀವರ ದಾಸರ್ಯಾ | ತವಗುಣಭಾವದೊಳ್ವರ್ಣಿಸುವಾ ಪ
ಭಾವ ಭಕುತಿ ನಿತ್ತು | ನೀವೊಲಿಯೋ ಗುರುದೇವ ತಾಂಶರೆಂದು | ಅವನಿಯೊಳ್ಖ್ಯಾತಾ ಅ.ಪ.
ಶ್ರೀನಿವಾಸ ಹರಿಯಾ | ಸೇವಿಸಿಜ್ಞಾನಿಗಳೆನಿಸಿರುವಾ |ಶ್ರೀನಿಧಿ ವಿಠಲನ | ಗಾನವ ಮಾಡುವಜ್ಞಾನಿಶ್ರೇಷ್ಠರಿಂ | ದಂಕಿತ ಪಡೆದ ೧
ಇಂದು ಭಾಗ ವಾಸಾ | ಎನಿಸಿಹಚಂದ ಹರಿಯ ರೂಪಾ |ನಂದ ತುತಿಸಿ ಹೃ | ನ್ಮಂದಿರದಲಿ ನೋಡಿಬಂಧ ಕಳೆದೆ ಭೂ | ವೃಂದಾರಕವರ ೨
ಗರ್ವ ರಹಿತನಾಗಿ | ಹರಿಯನುಸೇರ್ವ ಮಾರ್ಗ ಪಿಡಿದೀ |ಸರ್ವೋತ್ತಮ ಗುರು ಗೋವಿಂದ ವಿಠಲನು ಶರ್ವ ಮುಖ್ಯರಾ | ದೇವಾ ಸೇವ್ಯನೆಂದೇ ೩

೭೦೭
ಶ್ರೀ ಶ್ರೀನಿವಾಸ ಹರಿ ವಿಠಲ | ಜ್ಞಾನ ರೂಪೀ ಪ
ದಾಸನನ ಮಾಡಿವನ | ಪೋಷಿಸಲಿ ಬೇಕೋ ಅ.ಪ.
ಸಾಧನಜೀವಿಗಳ | ಕಾದು ಕೊಳ್ಳುವ ಭಾರಮಾಧವನೆ ನಿನದಲ್ಲೆ | ಯಾದವೇಶಾ |ಆದರದಿ ಕೈಪಿಡಿದು ಭೋಧಿಸು ಸುಜ್ಞಾನಮೋದ ಮುನಿ ಸದ್ವಂದ್ಯ | ಬಾದರಾಯಣನೇ ೧
ಪರಮಾತ್ಮ ನರಹರಿಯ | ದರುಶನಕೆ ಮುಮ್ಮೊದಲುಪರಿಸರನು ಪ್ರಾಣನ್ನ | ಪರಮಗುರುದ್ವಾರಾದರುಶನನ ಗೈಸುತ್ತ | ಹರುಷವನೆ ನೀಡಿರುವೆಕರುಣಾ ಪಯೋನಿಧಿಯೆ | ಸರ್ವಾಂತರಾತ್ಮ ೨
ಕಾಕು ಜನ ಸಂಗವನು | ಸೋಕಿಸದೆ ಸತ್ಸಂಗನೀ ಕೊಟ್ಟು ಲೌಕೀಕದಿ | ಸತ್ಕೀರ್ತಿಲಿರಿಸೋಮಾಕಳತ್ರನೆ ಸಕಲ | ಪ್ರಾಕ್ಕು ಕರ್ಮವ ಕಳೆದುಲೌಕೀಕಗಳೆಲ್ಲ ವೈ | ದೀಕ ವೆಂದೆನಿಸೋ ೩
ಮಧ್ವಮತ ಪದ್ಧತಿಗ | ಳುದ್ಧರಿಸಿ ಇವನಲ್ಲಿಹೃದ್ಗುಹದಿ ತವರೂಪ | ಉದ್ಭವವ ಗೈಯ್ಯೋ |ಉದ್ಧವ ಪ್ರಿಯನೆ ಸಿರಿ | ಪದ್ಮನಾಭನೆ ದೇವಶ್ರದ್ಧೆಯಿಂದರುತಿಹನ | ಉದ್ಧರಿಸೊ ಹರಿಯೇ೪
ಸರ್ವವ್ಯಾಪ್ತಸ್ವಾಮಿ | ನಿರ್ವಿಕಾರನೆ ದೇವದರ್ವಿ ಜೀವಿಯ ಮೊರೆಯ | ಶರ್ವಾದಿ ವಂದ್ಯಾನಿರ್ವಿಘ್ನ ಪೂರೈಸೆ | ಪ್ರಾರ್ಥಿಸುವೆ ಶ್ರೀ ಹರಿಯೆಸರ್ವ ಸುಂದರ ಗುರೂ | ಗೋವಿಂದ ವಿಠಲಾ ೫

೭೧೪
ಶ್ರೀ ಹಯಗ್ರೀವ ವಿಠಲ | ಮೋಹ ಕಳೆದಿವನಾ ಪ
ಸಾಹಸಿಗಗಾಭೀಷ್ಟ | ದೋಹನನು ಆಗೋ ಅ.ಪ.
ಮಾಣವಕ ಭಕ್ತಿಯಲಿ | ಮಾನ್ಯರನು ಸೇವಿಸುವಜ್ಞಾನವಂತನ ಮಾಡಿ | ಪ್ರಾಜ್ಞನೆಂದೆನಿಸೋ ಜ್ಞಾನ ನಿಧಿ ನಿನ್ನೊಲಿಮೆ | ಕಾಣದಲೆ ಪರಿತಪಿಸಿಜ್ಞಾನದಂಕುರಕಾಗಿ | ಬಿನೈಸುತಿಹೆನೋ ೧
ಸುಜನ ಸಂಗದಿ ಹರಿಯ | ಭಜನೆಯೊದಗಲಿ ಇವಗೆಋಜು ವಾದಿರಾಜರಲಿ | ನಿಜ ಭಕ್ತಿ ಬರಲೀಗಜ ವರದನಂಘ್ರಿಗಳ | ನಿಜ ಮನದಿ ಕಾಂಬಂಥಯಜನ ಭಜನೆಗಳೊದಗಿ | ಪ್ರಜೆಗಳಲಿ ಮೆರೆಸೋ ೨
ಮತ್ಸ್ಯ ಸಾಲಿಗ್ರಾಮ | ಮತ್ತೆ ಶ್ರೀ ಹಯಗ್ರೀವಉತ್ತಮ ಸ್ವಯಂ ವ್ಯಕ್ತ | ವ್ಯಕ್ತ ಸ್ವಪ್ನದಲೀಉತ್ತಹದಿ ತವದಾಸ್ಯ | ಪ್ರಾರ್ಥಿಸುತ್ತಿಹವಟುಗೆಇತ್ತಿಹೆನೊ ಅಂಕಿತವ | ಭೃತ್ಯ ವತ್ಸಲನೇ ೩
ನಾನು ನನ್ನದು ಎಂಬ | ಹೀನ ಭಾವವ ಕಳೆದುಏನೇನು ತಾ ಮಾಳ್ಪ | ಮಾನಸಾದಿಗಳಾಪ್ರಾಣಾಂತರಾತ್ಮಕಗೆ | ದಾನ ಮಾಳ್ಪಂತೆಸಗಿಜ್ಞಾನಾಯು ರೂಪಕನ | ಮಾನ್ಯಮತ ತಿಳಿಸೋ ೪
ಜೀವ ಜಡ ಭಿನ್ನ ತಾಂ | ಡವ ಕೃಷ್ಣ ಶ್ರೀ ಹರಿಯೆಮಾವಿನುತ ನೀನಾಗಿ | ಕೈವಲ್ಯ ಪ್ರದನೇತಾವಕನ ಸಲಹೆಂಬ | ಆವ ಭಿನ್ನಪ ಸಲಿಸೆಓವಿ ಪ್ರಾರ್ಥಿಪೆ ಗುರೂ | ಗೋವಿಂದ ವಿಠಲಾ ೫

೧೪೪
ಶ್ರೀಕರ ಮೂರ್ತಿ ಕೃಪಾಕರ ಈತೋಕನಿಗೊಲಿಯೆ ಬಿನ್ನೈಸುವೆ ಹರಿಯೆ ಪ
ಲೋಕದೊಳುಳ್ಳಖಿಳಜನಾಳಿಗೆಬೇಕೆನಿಸಿದ ವರ ನೀ ಕೊಡೊದಿಲ್ಲನೆ ಅ.ಪ.
ಮಲ್ಲರ ದಲ್ಲಣ – ವಲ್ಲಭ ಲಕುಮಿಗೆಸೊಲ್ಲನು ಲಾಲಿಸಿ ಕಾಯೊ ಕೃಪಾಳು ೧
ಆರ್ತೇಷ್ಟದ ಹರಿ – ಅರ್ಥ ಸಾಧನವೋ ಕಾಮ ರೂಪ ವರ್ತಿಸಲೈಕ್ಯವು – ಆವುದಸಾಧನೆ ೨
ಬಿಸಜ ಸಂಭವ ಪಿತ – ವಶವಿರೆ ಜಗವೆಲ್ಲಹಸುಳೆಯ ಕಾಯ್ವ – ದಸಾಧ್ಯದೆ ನಿನಗೆ ೩
ನಿಗಮಾವಳಿ ನಿನ್ನ – ಅಗಣಿತ ಮಹಿಮೆಯಪೊಗಳುವುದನು ಕೇಳೀ – ಮಿಗೆ ಶರಣೆಂಬೆನೊ೪
ಗೋವತ್ಸ ಧನಿ ಕೇಳಿ – ಆವು ಧಾವಿಸುವಂತೆನೀ ವೊಲಿಯೋ ಗುರು – ಗೋವಿಂದ ವಿಠಲ ೫

೭೦೦
ಶ್ರೀಕರಾರ್ಚಿತ ವಿಠಲ | ಸಾಕ ಬೇಕಿವಳಾ ಪ
ನೋಕನೀಯನೆ ಎನ್ನ | ವಾಕು ಮನ್ನಿಸುತಾ ಅ.ಪ.
ಸಂಸಾರದಲಿ ನೊಂದು | ಕಂಸಾರಿ ತವಪಾದಪಾಂಸು ಸೇವಾ ಸಕ್ತೆ | ಸಂಶಯ ನಿರಹಿತಾಅಂಶ ಆವೇಶ ಅವ | ತಾರಗಳ ತಿಳಿಸುತಲಿಶಂಸನದಿ ತವನಾಮ | ಸಂಪ್ರೀತನಾಗೊ ೧
ದುಷ್ಕರ್ಮಗಳ ಭಾದೆ | ದೂರಾಗುವಂತೆಸಗೊನಿಷ್ಕಾಮ ಕರ್ಮಕ್ಕೆ | ಮಾರ್ಗವನೆ ತೊರೋ |ಶುಷ್ಕ ಆಚಾರಗಳ | ತ್ಯಜಿಸುತ್ತ ತವನಾಮಅಕ್ಕರದಿ ಭಜಿಪಂಥ | ಚೊಕ್ಕಮನವೀಯೊ ೨
ಶರ್ವವಂದ್ಯನೆ ದೇವ | ತವನಾಮ ಸಂಸ್ರ‍ಕತಿಯಸರ್ವದಾ ಸರ್ವತ್ರ | ಇವಳಿಗೊದಗಿಸುತಾಭವವನದಿ ಉತ್ತರಿಸೊ | ಭವರೋಗ ಭೇಷಜನೆದರ್ವಿಜೀವಿಯ ಕಾಯೊ | ಪವನಂತರಾತ್ಮ ೩
ಸೃಷ್ಟಾದಿಕರ್ತನೇ | ಸುಗುಣಮೂರುತಿ ದೇವಕಷ್ಟಂಗಳ ಪರಿಹರಿಸಿ | ಕಾಪಾಡೊ ಹರಿಯೇಕೃಷ್ಣಮೂರುತಿ ದೇವ | ಕಾರುಣ್ಯ ಸಾಗರನೆಸುಷ್ಠಮನ ನಿಲಿಸೊ ತವ | ಚರಣದೊಳು ಹರಿಯೆ ೪
ಸೂಚಿಸಲು ತೈಜಸನು | ಯೋಚನೆಯ ಕೈಕೊಂಡುವಾಚಿಸಿಹೆ ಅಂಕಿತದಿ | ದಾಸ ಸದ್ವೀಕ್ಷಾ |ಮೋಚ ಕೇಚ್ಛೆಯ ಮಾಡಿ | ಕೈಪಿಡಿಯೊ ಈಕೆಯನುಖೇಚರಾಂತಕ ಗುರು | ಗೋವಿಂದ ವಿಠಲಾ ೫

೭೦೧
ಶ್ರೀಕೃಷ್ಣ ಹರಿ ವಿಠಲ | ಕಾಪಾಡೊ ಇವಳಾ ಪ
ಹೇ ಕೃಪಾಕರ ಮೂರ್ತೆ | ಪ್ರಾರ್ಥಿಸುವೆ ಇದನಾ ಅ.ಪ.
ಪತಿತ ಪಾವನರಂಗ | ಮತಿಮತಾಂವರರಂಘ್ರಿಶತಪತ್ರ ಸೇವೆಗಳ | ಸತತ ದೊರಕಿಸುತಾಸತತ ತವ ಸ್ಮರಣೆ ಸುಖ | ರತಿ ಪಾಲಿಸಿವಳೀಗೆಗತಿಗೋತ್ರ ನೀನೆಂದು | ಪ್ರಾರ್ಥಿಸುವೆ ಹರಿಯೇ ೧
ಪತಿಸೇವೆ ದೊರಕಿಸುತ | ಕನನಗಭಯದನಾಗಿಪಥತೋರೋ ಸದ್ಗತಿಗೆ | ಕೃತಿರಮಣ ದೇವಾಹಿತವಹಿತ ದ್ವಂದ್ವಗಳ | ಸಮತೆಯಲಿ ಕಾಂಬಂಥಮತಿಯ ನೀ ಕರುಣಿಸುತ | ಕಾಪಾಡೊ ಹರಿಯೇ ೨
ಪವನ ಮತ ಸುಜ್ಞಾನ | ದ್ರುವ ವರದ ಭಕ್ತಿಯನುದಿವಸ ದಿವಸದಿ ಕೊಟ್ಟೆ | ಉದ್ದರಿಸೊ ಇವಳಾಪವನಂತರಾತ್ಮ ಗುರು | ಗೋವಿಂದ ವಿಠಲನೆಇವಳ ಕೈಯನೆ ಪಿಡಿಯೆ | ಭಿನ್ನವಿಪೆ ಹರಿಯೇ ೩

೭೦೪
ಶ್ರೀದ ನರಹರಿ ವಿಠಲ | ಕಾದುಕೊ ಇವಳಾ ಪ
ಸಾಧು ವಂದಿಯ ಹರಿಯೆ | ವೇದಗೋಚರನೆಅ.ಪ.
ವೃದ್ಧನಿಹ ಪತಿಸೇವೆ | ಶ್ರದ್ಧೆಯಿಂಗೈದು ಪರಿಶುದ್ಧಳಿವಳಿಗೆ ದಾಸ | ಸದ್ಧರ್ಮ ಬೋಧಾ |ಹದ್ದು ವಾಹನ ಹರಿಯ | ನಿರ್ಧಾರವನು ಸರಿಸಿಬದ್ದೆಳೆನಿಸಿಹೆ ದಾಸ | ಪದ್ದತಿಯ ಅವಳಾ ೧
ಕರ್ಮನಿಷ್ಕಾಮನದಿ | ಪೇರ್ಮೆಯಲಿ ಗೈಯುತ್ತಭರ್ಮಗರ್ಭನ ಪಿತನ | ನಾಮ ಸುಧೆಯುಣುತಾಕರ್ಮಕ್ಷಯವನು ಪೊಂದಿ | ನಿರ್ಮಲಾತ್ಮಕಳಾಗಿಧರ್ಮಾಖ್ಯ ತವಪಾದ | ಪದ್ಮರತಳೇನಿಸೋ ೨
ಪತಿಸೇವೆ ಮಾಡುವುದೆ | ವಿತತ ಮಹಿಮನ ಸೇವೆಇತರ ಕರ್ಮಗಳೆಲ್ಲ | ಪತಿ ಸೇವೆ ಹಿಂದೇಈತರದ ಸುಜ್ಞಾನ | ಮತಿಯಿತ್ತು ಪಾಲಿಸುತಕೃತಕಾರ್ಯಳೆಂದೆನಿಸೊ | ನತಜನ ಸುಪಾಲ ೩
ಗುರು ಕರುಣವಿಲ್ಲದಲೆ | ಹರಿಯೊಲಿಯ ನೆಂದೆಂಬಪರಮತತ್ವಾರ್ಥಗಳ | ಅರಿವ ಕರುಣಿಸುತಾಹರಿಸ್ಮರಣೆ ಎಂದೆಂಬ | ವರ ವಜ್ರ ಕವಚವನೆಕರುಣಾದಿಂ ತೊಡಿಸೊ ಹರಿ | ಮರುತಂತರಾತ್ಮ ೪
ನಡು ಪುರೀಶನ ಭಕ್ತ | ಮಡದಿಯುದ್ಧರಕಾಗಿಅಡಿಗಡಿಗೆ ಬೇಡುವೆನೊ | ಮೃಡ ವಂದ್ಯ ಹರಿಯೇಕಡು ಕರುಣಿಮನ್ಮಾತ | ಬಿಡದೆ ನೀ ಸಲಹಯ್ಯಬಡವಿಪ್ರಗೊಲಿದ ಗುರು | ಗೋವಿಂದ ವಿಠಲಾ ೫

೭೧೨
ಶ್ರೀದೇವಿ ಪ್ರಿಯ ವಿಠಲ | ಮೋದವಿತ್ತಿವನೀಗೆ ||ಕಾದುಕೋ ನೀ ದಯದಿ | ವೇದಾಂತ ವೇದ್ಯಾ ಪ
ಮಾಧವನೆ ಬೇಡುತಿಹ | ಆದರದಿ ತವದಾಸ್ಯಸಾಧಿಸೋ ಇವನಲ್ಲಿ | ತದ್ಧರ್ಮ ಬಿಡದೇ ಅ.ಪ.
ಗುರು ಧರ್ಮ ಗುರುಸೇವೆ | ಗುರು ಭಕುತಿ ಸುಜ್ಞಾನನಿರುತ ನಿನ್ನಯ ಸ್ಮರಣೆ | ಕರುಣಿಸೋ ಹರಿಯೇ |ಮರುತ ಮತ ತತ್ವಗಳ | ನರುಹಿ ಭವದಿಂದೆತ್ತುಸರುವಾಂತರಾತ್ಮಕನೆ | ದುರಿತ ಗಜ ಸಿಂಹಾ ೧
ಪ್ರಾಚೀನ ಕರ್ಮಾಳಿ | ಯೋಚಿಸಲು ಅಳವಲ್ಲವಾಚಾಮ ಗೋಚರನೆ | ಮೋಚ ಕೇಚ್ಛೆಯನೂಯಾಚಿಸುವೆ ಇವಗಾಗಿ | ಖೇಚರೋತ್ತಮ ಸವ್ಯಸಾಚಿ ಸಖನೇ ಹರಿಯೇ | ಸಚ್ಛಿದಾನಂದಾ ೨
ಜಡಜ ಸಂಭವ ಜನಕ | ಎಡರು ತೊಡರುಗಳಿಂದಹುಡುಗನನು ದಣಿಸದಲೆ | ಮೃಡ ಮತನೆ ದೇವಾಕಡೆ ಹಾಯ್ಸು ನೀನೆಂದು | ಅಡಿಗೆರಗಿ ಬೇಡ್ವೆ ಕಂ-ಗೆಡುತ ಮೊರೆ ಇಟ್ಟ ಕರಿ | ಎಡರ ಪರಿಹರ್ತಾ ೩
ಮೃತ್ಯುವಿಗೆ ಮೃತ್ಯು ಅಪ | ಮೃತ್ಯು ಪರಿಹರವರಿದೆಸತ್ಯಭಾಮೆಯ ಲೋಲ | ನಿತ್ಯ ಮಂಗಳನೇ |ಅತ್ಯರ್ಥ ಫಲದಾತ | ನಿತ್ಯ ನಿಗಮಾತೀತಭೃತ್ಯರೊಳು ವಾತ್ಸಲ್ಯ | ಪೊತ್ತ ನಗಧೀಶ೪
ದೇವಕಿಯ ಸುತ ಬಂಡಿ | ಬೋವ ನೀನಾಗುತಲಿಭಾವ ಮೈದುನಗೊಲಿದೆ | ದೇವ ದೇವೇಶಾ |ಭಾವುಕರ ಪಾಲಗುರು | ಗೋವಿಂದ ವಿಠ್ಠಲನೆತಾವಕನ ಪೊರೆಯೆಂಬ | ಭಾವ ಸಲಿಸುವುದೋ ೫

೭೦೫
ಶ್ರೀನಾಥ ವಿಠಲ ಹರಿ | ನೀನೆ ಪೊರೆ ಇವನಾ ಪ
ಮಾನನಿಧಿ ಮಧ್ವಾಖ್ಯ | ವಂದಿತ ಸಂಚರಣಾ ಅ.ಪ.
ಯೋನಿ ಆನೇಕದಲಿ | ಜನುಮಗಳ ತಾಪೊತ್ತುಮೌನಿ ಜನ ಸಂಯೋಗ | ಸತ್ಸಂಗಗಳ ಪಡೆದೂಧ್ಯಾನ ಸಾಧನಕಾಗಿ | ಮೌನಿರಾಯರ ಸೇವೆಸಾನುರಾಗದಿ ಗೈಯ್ಯೆ | ಶ್ರೀನಾಥ ಒಲಿದೇ ೧
ದಾಸ ಸತ್ಪಂಥಾನು | ವಾಸಿಪೆನು ಎಂದೆನುತವಿೂೀಸಲದ ಸನ್ಮನದಿ | ಪ್ರಾರ್ಥಿಸುತ್ತಿಹಗೇಲೇಸು ತೈಜಸನಾಜ್ಞೆ | ಪೋಷಿಸುತ ವಿಠಲನ ಸಸೂಸಿ ಸೇವಿಸಿ ಇತ್ತೆ | ಅಂಕಿತವನಿವಗೇ ೨
ಮಾರಾರಿ ಸದ್ವಿನುತ | ತಾರತಮ್ಯವ ತಿಳಿಸಿಮಾರೆರಡು ಭೇಧಗಳ | ಅರಹುತಲಿ ಇವಗೇಪಾರಗಾಣಿಸು ಭವವ | ನೀರೋಜೋದ್ಭವನಯ್ಯಕಾರುಣಿಕ ಶ್ರೀಹರಿಯೆ | ಕಾರುಣ್ಯ ಮೂರ್ತೇ ೩
ಸಖನಾಗಿ ಇವನಲ್ಲಿ | ಸುಖ ಕವನ ಪೇಳಿಸುತ ಪ್ರಕಟ ಗೈ ತವರೂಪ | ನಿಕಟ ಹೃದ್ಗುಹದೀವಿಖನಸಾಂಡದ ಓಡೆಯ | ಸಕಲ ಪ್ರೇರಕ ನಿನ್ನಅಕುಟಿಲದೆ ಮನದಿಂದ | ಪ್ರಾರ್ಥಿಸುವೆ ಹರಿಯೇ ೪
ಗರುಡವಾಹನ ದೇವ ಸಿರಿ ಭೂಮಿ ರಮಣನೇಅರಹಲೇನಿಹುದಿನ್ನು | ಸರ್ವಜ್ಞ ಮಾರ್ತೇಕರುಣ ದೃಷ್ಟಿಲಿ ನೋಡಿ | ಪರಿಹರಿಸೊ ದುಷ್ಕರ್ಮಹರಿಯೆ ಗುರು ಗೋವಿಂದ | ವಿಠಲ ಮಾರುತಿಯೆ ೫

೭೦೬
ಶ್ರೀನಿವಾಸಾದ್ರಿ ವಿಠಲ | ನೀನೆ ಪೊರೆ ಇವಳಾ ಪ
ಗಾನಲೋಲನೆ ಕೃಷ್ಣ | ದೀನಮಂದಾರಅ.ಪ.
ಕಲುಷ ಕರ್ಮದಿನೊಂದು ಇಳೆಯೊಳಗೆ ಮಧ್ವಮತಜಲಧಿಯಲ್ಲುದಿಸಿಹಳೊ | ಜಲಜಾಕ್ಷ ಹರಿಯೇಒಲವಿನಿಂದಿವಳನ್ನು | ಸಲಹಲ್ಕೆ ಪ್ರಾರ್ಥಿಸುವೆಕಲಿಮಲಾಪಹ ಕೃಷ್ಣ | ಚೆಲುವ ಮಾರುತಿಯೇ ೧
ಸುಪ್ತೀಶ ತೋರ್ದಪರಿ | ಇತ್ತಿಹೆನೆ ಅಂಕಿತವಆಪ್ತ ಲಕ್ಷ್ಮೀಕಾಂತ | ದೀಪ್ತಿಮಾರುತಿಯೇಭಕ್ತಿವೈರಾಗ್ಯಗಳ | ಪ್ರಾಪ್ತಿಗೈಸಲಿ ಬೇಕೊನಿತ್ಯ ಮಂಗಳ ಮೂರ್ತಿ | ಪಾರ್ಥ ಸಾರಥಿಯೇ ೨
ಹರಿ ಗುರು ಸದ್ಭಕ್ತಿ | ಗುರು ಧರ್ಮರತಿಯಿತ್ತುಮರಳಿ ಪತಿ ಸೇವೆಯಲಿ | ಎರಗಲೀಕೆಯ ಮನಸುದುರಿತ ದುಷ್ರ‍ಕತ ಹರವು | ಗುರು ಸೇವೆ ಎಂದೆಂಬಅರಿವಿತ್ತು ಈಕೆಯನು | ಸಾಧನದಲಿರಿಸೋ ೩
ಸರ್ವಕಾರ್ಯಗಳಲ್ಲಿ | ಹರಿನಾಮ ನುಡಿಯಲ್ಕೆಎರಕವಾಗಲಿ ಜಿಹ್ವೆ | ಶ್ರೀ ಪುರುಷೋತ್ತಮಾನಿರುಪಾದಿಕ ಹಿರಿಯರ | ಚರಣ ಸೇವೆಗೆ ಮನವುತ್ವರೆಗೊಳ್ಳುವಂತೆಸಗೂ | ಶಿರಿ ವೆಂಕಟೇಶಾ ೪
ಕರಿವರದ ಧ್ರುವವರದ | ತರಳೆ ದ್ರೌಪದಿವರದಕರುಣಾಳು ನೀನೆಂದು | ಮೊರೆ ಬಿದ್ದು ಪೇಳ್ವೆಕರುಣೆಯನು ಪೊರೆ ಎಂಬ | ಬಿನ್ನಪವ ಸಲಿಸಯ್ಯಶಿರಿಯಿಂದ ವಂದ್ಯ ಗುರು | ಗೋವಿಂದ ವಿಠಲಾ ೫

೩೬೧
ಶ್ರೀಪಾದ ರಾಜರ ಸ್ಮರಣೇ | ಭವತಾಪ ಪರಿಹರ ವೆಂದು ಗಣನೆ ಪ
ಧೃತ – ಶ್ರೀಪತಿ ಶ್ರೀರಂಗವಿಠಲನ | ಅಪರೋಕ್ಷದಿ ಕಂಡು ಕುಣಿಯುವತಾಪಸೀಗಳ ದಯದಿ ದುರಿತವು | ಪೋಪುದೇನಿದು ನಮಗೆ ಅಚ್ಚರ ಅ.ಪ.
ಲಕ್ಷ್ಮೀನಾರಾಯಣ ದಿವಿಜ | ಮುನಿ | ಹೇಮವರ್ಣ ತೀರ್ಥ ಕರಜಕಾಮಾದಿ ದೋಷದಿಂ ವಿರಜ | ಯತಿ | ನೇಮ ಸಾಧಿಸಿದರು ಸಹಜ |ಧೃತ – ಈ ಮಹಿಮ ಸಂಚರಿಸಿ ಯೋಗ್ಯರ | ರಾಮಾಪಾದಾಶ್ರಿತರ ಗೈಸುತಸಾಮ ಸನ್ನುತ ಹರಿಯ ಕೀರ್ತನೆ ಸ್ತೋಮ ವಿರಚಿಸಿ ತತ್ವನೊರೆದ ೧
ಷಷ್ಠ್ಯುತ್ತರ ನಾಲ್ಕು ಶಾಖ | ದಿನ್ನ | ಸುಷ್ಠು ಹರಿಗರ್ಪಿಪ ಪಾಕಕಷ್ಟ ಕ್ಲೇಶ ರಹಿತ ಸುಖ | ಭೋಗ | ಶ್ರೇಷ್ಠಾನುಭವವು ಆಲೋಕ |ಧೃತ – ನಿಷ್ಠೆಯಲಿ ಪೂಜಾದಿ ಗೈಯ್ಯುತ | ವಿಠ್ಠಲನ ಉತ್ಕರ್ಷ ತಿಳಿಸುತನೆಟ್ಟಮನ ಹರಿಯಲ್ಲಿ ಇರುವರ | ದಿಟ್ಟ ಭಕುತರ ಗೈವ ಸುಕೃತ ೨
ತೀರ್ಥಕ್ಕೆ ಗಂಗೆಯ ತಂದ | ವಿಪ್ರ | ಹತ್ಯದಘ ನೃಪಗಿಲ್ಲೆಂದಮತ್ತೆ ತೋರ್ದ ಮಹಿಮೆ ವೃಂದ | ಧ್ರುವ | ಕೃತ್ಯ ಹರಿಗರ್ಪಿಸಿನಿಂದ |ಧೃತ – ಭೃತ್ಯರಿಗೆ ತತ್ವಾರ್ಥ ನೊರೆಯುತ | ಸತ್ಯ ಗುರುಗೋವಿಂದ ವಿಠಲನನಿತ್ಯಸಂಕೀರ್ತನದಿ ನೃತ್ಯದಿ | ತೃಪ್ತಿ ಬಡಿಸಿದ ಯತಿ ವರೇಣ್ಯ ೩

೩೬೨
ಶ್ರೀಪಾದರಾಯ ನಿಮ್ಮ | ಆಪಾದ ಮೌಳಿ ಭಜಿಪಾಪಾಪಿಯಾದರು ಅವ | ಪಾಪವನೆಲ್ಲ ಕಳೆವಾ ಪ
ಧೃತ – ಶ್ರೀಪತಿಯೊಲಿಮೆಯ | ಪ್ರಾಪಿಸುತೆನ್ನನುವ್ಯಾಪುತ ದರ್ಶಿಯ ಮಾಡೊ ಮಹಾತ್ಮಾ ಅ.ಪ.
ಗುರುರಾಯ ನಿಮ್ಮ ಚರಣ | ವಿರಲಿ ಮಸ್ತಕಾಭರಣಕೋರುವ ತವ ಕರುಣ | ವಾರಿಧಿ ಭವ ತರಣ ||ಕೀರುತಿ ತವ ಸ್ಮರಣ | ಬಾರಿಬಾರಿಗೆ ಶ್ರವಣಸೂರೆಗೊಂಬುವ ನರನ | ಸಾರಿ ಉದ್ಧರಿಪೆ ಅವನಾ ||ಧೃತ – ವಾರವಾರಕೆ ನಿನ ಪರಿವಾರದಲಿಡುಸೂರಿ ಸುವರ್ಣರ ಕರಜ ಉದಾರಾ ೧
ವಾದಿಗಳೆದೆ ಶೂಲಾ | ಮೋದ ಮುನಿ ಪದದಿ ಲೋಲಅದ್ವೈತ ಕಾಲಾನಳಾ | ಬುಧಜನ ಕೋಲಾಹಲಾ ||ಉದರ ಪಾದಾದ ಶೈಲಾ | ಸದನಕ್ಕೆ ಪುರಿ ಮೂಡಲಕದವಾಗಿ ಮೆರೆವ ವಿಮಲ | ಅದುಭುತ ಪುರಿಲೋಲಾ ||ಧೃತ -ಆದರಿಸುವುದಯ್ಯ | ಮಾಧವ ಪ್ರಿಯ ನಿನಪಾದವ ನಂಬಿದೆ | ಬುಧ ಜನ ವಂದ್ಯಾ ೨
ವರರಂಗ ವಿಠಲನಾ | ಚಾರು ಚರಿತೆಯ ನಾನಾಪರಿಪರಿಯಲಿ ಗಾನಾ | ವಿರಚಿಸಿ ಜನರ ಅಜ್ಞಾನಾ ||ಹರಿಸಿ ಅವರಿಗೆ ಜ್ಞಾನಾ |ಭರಣ ಪಾಲಿಸಿ ಕರುಣಬೀರಿದೆ ಸುಸಾಧನ | ಗುರು ಪರಮ ಪಾವನಾ ||ಧೃತ – ಗುರುಗೋವಿಂದ ವಿಠಲನ | ಚರಣವ ಭಜಿಸುವವರಧೃವ ಮೂರುತಿ | ನಿರುತದಿ ಕೀರ್ತಿ ೩

೭೦೯
ಶ್ರೀರಂಗಶಾಯಿ ವಿಠಲ ಪೊರೆಯ ಬೇಕಿವಳ ಪ
ವಾರಿಜೋಧ್ಭವ ವಂದ್ಯ | ನೀರ ಜಾಕ್ಷನೆ ಸ್ವಾಮಿಪಾರು ಮಾಡಿವಳ ಭವ | ಶರಧಿ ದಾಂಟಿಸುತ ಅ.ಪ.
ಕಾರಾಣಾತ್ಮಕ ನಿನ್ನ | ಗುಣರೂಪ ಕ್ರಿಯೆಗಳಧಾರಣೆಗಳಿಲ್ಲದಲೆ | ಧ್ಯಾನರತಳಾಗಿಮೂರಾರು ದ್ವಾರಗಳ | ಬಂಧಿಸುತ ಯೋಗದಲಿಆರಾಧ್ಯ ಮೂರ್ತಿಯನೆ | ಮರೆತ ಯೋಗಿಣಿಯ ೧
ಉತ್ತಮ ಸು ಸಂಸ್ರ‍ಕತಿಯ | ಪೊತ್ತು ಜನಿಸಿಹಳೀಕೆಪೊತ್ತನ್ಯ ಉಪದೇಶ | ಸದ್ಗುರುವು ದೊರಕದಲೆಸಕ್ತಳಾಗಿಹಳು ಸ್ಥಿರ | ಚಿತ್ತ ನಿನ್ನಲ್ಲಿಡಲುಇತ್ತಿಹೆನು ತೈಜಸ ಸು | ವ್ಯಕ್ತ ಅಂಕಿತವಾ ೨
ತಾರತಮ್ಯ ಜ್ಞಾನ | ಮೂರೆರಡು ಭೇದಗಳಸಾರತತ್ವಗಳರುಹಿ | ಪೊರೆಯ ಬೇಕಿವಳ |ಕಾರುಣಿಕ ಕಂಕಣಾ | ಕಾರ ಚಕ್ರಾಕೃತಿಯತೋರಿರುವೆ ತನ್ಮಹಿಮೆ | ಅರಿಯ ಕಾತುರಳಾ ೩
ಗುರುವಂತರಾತ್ಮಕನೆ | ಸಿರಿ ಸತ್ಯ ನರೆಯಣನೆಪರಿಪರಿಯಲಿಂದಿವಳ | ಪೊರೆಯ ಬೇಕೋಗರುಡಗಮನನೆ ದೇವ | ಸರ್ವಜ್ಞ ನೀನಿರಲುಒರೆವೆನೆಂಬಪರಾಧ | ಮರೆದು ಪಾಲಿಪುದೋ ೪
ಅದ್ವೈತ ಉಪದೇಶ | ತಿದ್ದಿನಿನ ಪದದಲ್ಲಿಶುದ್ಧ ಭಕ್ತಿಜ್ಞಾನ | ವೃದ್ಧಿಯನೆ ಗೈಸೀಮಧ್ವಾಂತರಾತ್ಮ ಗುರು | ಗೋವಿಂದ ವಿಠ್ಠಲನೆಅದ್ವಿತೀಯನು ಯೆಂಬ | ಬುದ್ಧಿ ಸ್ಥಿರ ಮಾಡೋ ೫

೭೧೦
ಶ್ರೀವರ ಹರಿ ವಿಠಲ | ಕಾಪಾಡೋ ಇವಳಾ ಪ
ಭಾವುಕರ ಪಾಲ ನೆಂ | ದೇವೆ ಶ್ರುತಿ ಸಿದ್ಧ ಅ.ಪ.
ಹರಿಸೇವೆ ಕೈಕಂರ್ಯ | ನಿರತಳಾಗಿ ಹಳೀಕೆಹರಿಗುರು ದಾಸ್ಯದಲಿ | ದೀಕ್ಷೆಕಾಂಕ್ಷಿಪಳೋ |ಹರಿಯ ತೈಜಸರೂಪಿ | ವರಮಾರ್ಗ ತೋರ್ಪಪರಿಹರಿಯ ನಿನ್ನಂಕಿತವ | ಇತ್ತಿಹೆನೊ ದೇವಾ ೧
ಸಾರತಮ ಹರಿಯ ಜಗ | ನಿಸ್ಸಾರವೆಂದು ಸಂ |ಸಾರ ಶರಧಿಯ ಹಾಯೋ | ವಾರಿಜ ಸುನಾಭಾ |ಆರು ಮಾರ್ಭಕುತಿಗಳ | ವೈರಾಗ್ಯ ಸುಜ್ಞಾನಧೀರ ನೀ ಕರುಣಿಸುತ | ಕಡೆ ಹಾಯ್ಸೊ ಇವಳಾ ೨
ಮೋದ ತೀರ್ಥರ ಮತದಿ | ಸಾಧನ ಸುಮಾರ್ಗದಲಿಹಾದಿ ಕ್ರಮಿಸುತ್ತಿಹಳೂ | ವೇದಾಂತ ವೇದ್ಯಾಹೇ ದಯಾ ಪೂರ್ಣಹರಿ | ಸ್ವಾಧ್ವಿಗೆ ತವನಾಮಸುಧೆಯನೆ ಉಣಿಸೊ ಸ | ರ್ಪಾರ್ದಿಗೇ ಓಡೆಯ ೩
ಶಮದ ಮಾದಿಯನಿತ್ತು | ಭ್ರಮಮಾರ ಪರಿಹರಿಸೊಅಮಿತ ಮಹಿಮೋಪೇತ | ಸುಮನಸಾರಾಧ್ಯಕರ್ಮನಿಷ್ಕಾಮನದಿ | ರಮೆಯರಸಗರ್ಪಿಸುವಸುಮನೊಭಾವದಲಿ | ಕ್ರಮಿಪ ತೆರಮಾಡೋ ೪
ನಿತ್ಯ ನಿಗಮಾತೀತ | ದೈತ್ಯ ಜನ ಸಂಹರ್ತಭೃತ್ಯಳಿಗೆ ಮೈದೋರಿ | ಹೃತ್ರ‍ಕಕ್ಷಿಯೊಳಗೇಪ್ರತ್ಯಕ್ಷನಾಗೆಂಬ | ಪ್ರಾರ್ಥನೆಯ ಸಲಿಸೋಹರಿಕರ್ತೃ ಕರ್ಮಾಖ್ಯ ಗುರು | ಗೋವಿಂದ ವಿಠಲಾ ೫

೧೪೬
ಶ್ರೀವರನೆ ದಯ ಮಾಡೋ ನಿನ್ನ | ಸೇವಕ ಸೇವಕನ ನೋಡೋ ಪ
ಚಾಚುವೆ ಶಿರ ತವ ಪದಕೆ ಶ್ರೀಹರಿ | ಖೇಚರೋತ್ತಮ ಪ್ರಾಣಗೆ ಪೇಳಿನೀಚ ಭವ ಕೂಪಾಕಿ ದಾಟಿಪ | ಮೋಚಕೇಚ್ಛೆಯ ನೀ ಮಾಡಿಸೊ೧
ಹೆತ್ತ ತಾಯಿಗೆ ತೊತ್ತು ಭಾರವೇ | ಪೆತ್ತು ಈ ಜಗವನ್ನೆಲ್ಲ ಪೊತ್ತುಕರ್ತನೆಂದೆನಿಸಿದವಗೆ ನಿನ್ನ | ಭೃತ್ಯನ ಪಾಲಿಪ ಕೃತ್ಯ ನಿನದಲ್ಲೇ ೨
ಭಾವುಕ ಜನ ಪರಿ ಪೋಷಕ ಗುರು | ಗೋವಿಂದ ವಿಠಲರೇಯ ಎನ್ನಭಾವದೊಳಗೆ ತೋರಿಕೊಂಡು ಭವ | ನೋವ ಕಳೆವುದೆಂದು ಬಿನ್ನವಿಪೆ ೩

೭೧೫
ಶ್ರೀಶ ಕೇಶವ ವಿಠಲ ಸಲಹೊ ಇವನಾ ಪ
ದೋಷದೂರನೆ ದೇವ | ರಾಶಿಪಾಪಂಗಳನುನಾಶಗೊಳಿಸುತ್ತ ನಿರ್ದೊಷನ್ನ ಗೈಯ್ಯೋ ಅ.ಪ.
ಮೋದತೀರ್ಥರ ಮತದಿ | ಮೋದವನೆ ಪಡುತಿಪ್ಪಸಾಧುಜೀವಿಯು ನಿನ್ನ | ಪಾದಾಬ್ಜ ನಮಿಪವೇದೋದಿತವು ಎನ್ನೆ | ಬೋಧಗಳ ತಿಳಿಸುತ್ತಸಾಧನದಲ್ಲಿರಿಸಿವನ | ಕಾದುಕೋ ಹರಿಯೇ ೧
ದಾಸದೀಕ್ಷೆಯಲಿ ಮಹ | ದಾಸೆ ಉಳ್ಳಂಥವಗೆಲೇಸಾಗಿ ತೈಜಸನು | ಸೂಸಿ ತೋರ್ದಂತೆದಾಶರಥೆ ಹರಿ ನಿನ್ನುಪಾಸನಕೆ ಮೂರ್ತಿ ಉಪ-ದೇಶಿಸಿಹೆನೋ ಸ್ವಾಮಿ | ಶ್ರೀಶ ನರಹರಿಯೇ ೨
ಸರ್ವಜ್ಞ ಸರ್ವೇಶ | ದುರ್ವಿಭಾವ್ಯನೆ ಹರಿಯೆದರ್ವಿಜೀವನ ಕಾಯೋ | ಶರ್ವವಂದ್ಯನಿರ್ವಿಘ್ನತೆಯಲಿವಗೆ | ಸರ್ವಶಾಸ್ತ್ರಾರ್ಥಗಳಸರ್ವಸಾರವ ತಿಳಿಸೊ | ಸರ್ವಾಂತರಾತ್ಮ ೩
ಸತ್ಯ ಸತ್ಸಂಕಲ್ಪ | ಸತ್ಯನಾರಾಯಣನೆಹೃತ್ಕಂಜದಲಿ ಇವಗೆ | ಚಿತ್ಸ್ವರೂಪವನೂಅರ್ಥಿಯಿಂದಲಿ ತೋರಿ | ಸಾರ್ಥಕವಗೈಜನ್ಮಆರ್ತಜನರುದ್ಧರಣ | ನಿತ್ಯ ಮಂಗಳನೇ ೪
ಆವ ಸಂಸೃತಿಯೆಂಬ | ದಾವಾಗ್ನಿ ಪರಿಹರಿಸೆಶ್ರೀವರನೆ ನಿನ್ನ ಸ್ರ‍ಮತಿ | ಸರ್ವಕಾಲದಲಿದೇವ ಹಯ ಮುಖ ಗುರು | ಗೋವಿಂದ ವಿಠ್ಠಲನೆಈವುದೆನೆ ಬಿನ್ನಪವ | ಮಾವಿನುತ ಸಲಿಸೋ ೫


ಶ್ರೀಶಪದ ಕಮಲಕ್ಕೆ ಮಧುಪ | ನಿನ್ನದಾಸನೆಂದೆನಿಸುವುದು ಧನಪ | ಸಖ ಮ-ಹೇಶನ ಸುತ ಪೇಳ್ವೆ ಭಿನ್ನಪ | ನೀ ಪ್ರ-ಕಾಶಿಪುದು ಮನವಿ ವಿಘ್ನಪ ೧
ವ್ಯಾಸದೇವನ ಕರುಣ ಪಾತ್ರ | ಘನಾಕಾಶ ಪತಿ ಕರುಣಿ ಶುಭಗಾತ್ರ | ಗ್ರಂಥಲೇಸೆನಿಸಿ ಲಿಖಿಸಿದೆ ಪವಿತ್ರ | ಮೂರ್ತಿಪಾಶಾಂಕುಶ ಪಾಣಿ ಸುಚರಿತ್ರ ೨
ಇಭೇಂದ್ರ ಮುಖ ಏಕದಂತಾ | ಎನ್ನಕುಭವ ಪರಿಹರಿಸೊ ಮಮ ಕಾಂತ | ಕರ್ಮಉಭಯವರ್ಪಿಪ ಸಂದು ಸ್ವಾಂತ | ದಲ್ಲಿಅಭಯ ನೀ ತಿಳಿಸು ನಿಶ್ಚಿಂತ ೩
ವಿಘ್ನಪನೆ ದುರ್ವಿಷಯದಲ್ಲಿ | ಬಹಳಮಗ್ನವಿಹ ಮನವ ಹರಿಯಲ್ಲಿ | ನಿರತಲಗ್ನ ಮಾಡಿಸು ತ್ವರ್ಯದಲ್ಲಿ | ಇನ್ನೂ ವಿಘ್ನಗಳಿಗಂಜಿಕೆಯು ಎಲ್ಲಿ ? | ೪
ಧನಪ ವಿಶ್ವಕ್ಸೇನ ಯಮಳ | ಆ ಅ-ಶ್ವಿನೀಗಳ್ಗೆ ಸಮ ಕರಿಗೊರಳ | ಪುತ್ರನನುಜನೇ ಶೇಷ ಶತಗರುಗಳ | ರಲ್ಲಿಗುಣೋತ್ತಮನೆ ಕಾಯೊ ನಮ್ಮಗಳ | ೫
ಚಾರುಮತಿ ರುಕ್ಮಿಣಿಯ ಕುವರ | ನೀನುಚಾರುದೇಷ್ಣಾಭಿಧನೆ ಬವರ | ದಲ್ಲಿಗೌರಿಪತಿ ವರದಿ ಉದ್ಧಟರ | ಆದಕ್ರೂರಿ ಜನ ಸಂಹಾರಿ ಶೂರ | ೬
ಶೂರ್ಪಕರ್ಣನೆ ರಾಜಿಪಾ | ಇಂದುದರ್ಪಾಪ ಹರನೇ ವಿಘ್ನಪ | ಕಟಲಿಸರ್ಪವರ ಸೂತ್ರ ಅಪರೂಪ | ಖಳರದರ್ಪ ಭಂಜನನೆ ಶುಭರೂಪ | ೭
ಶ್ರೀಶನತಿ ನಿರ್ಮಲವು ಎನಿಪ | ನಾಭಿದೇಶಗತನಾಗಿಹನೆ ಗಣಪ | ರಕ್ತವಾಸೆರಡು ಶೋಭಿತನೆ ಸುರಪ | ಮಿತ್ರಮೂಷಕಾ ವರವಹನ ರೂಪ | ೮
ಶಂಕರಾತ್ಮಜ ದೈತ್ಯ ಜನಕೆ | ಅತಿ ಭ-ಯಂಕರ ಗತಿಯ ನೀಡಲ್ಕೇ | ನೀನುಸಂಕಟ ಚತುರ್ಥಿಗ ಎನೆಲ್ಕೆ | ಹಾಗೆಮಂಕು ಜನಾವೃತವು ಮೋಹಕ್ಕೆ ೯
ಸಿದ್ಧಿ ವಿಧ್ಯಾಧರರು ಎಂಬ | ಗಣಾರಾಧ್ಯ ಪದಕಮಲ ನಿನದೆಂಬ | ಜನಕೆಸಿದ್ಧಿದಾಯಕ ವೇಗ ಎಂಬ | ಮಹಿಮಬುದ್ಧಿ ವಿದ್ಯೆಗಳ ಕೊಡು ತುಂಬ ೧೦
ಭಕ್ತವರ ಭವ್ಯಾತ್ಮ ಪರಮ | ಶಾಸ್ತ್ರಸಕ್ತವಾಗಲಿ ಮನವು ಅಧಮ | ವಿಷಯಸಕ್ತಿರಹಿತನ ಮಾಡಿ ಪರಮ | ಶುದ್ಧಭಕ್ತನೆಂದೆನಿಸು ನಿಸ್ಸೀಮ | ೧೧
ಶಕ್ರ ಪೂಜಿಸುತ ಗುರು ನಿನ್ನ ವೈರಿಶುಕ್ರ ಶಿಷ್ಯರ ಕೊಂದ ನಿನ್ನ | ಆ ಉ-ರುಕ್ರಮ ರಾಮ ಪೂಜಿಸೆನ್ನ | ತೋರ್ದವಕ್ರ ತುಂಡನೆ ಕರುಣವನ್ನ ೧೨
ಕೌರವನು ಭಜಿಸದಲೆ ನಿನ್ನ | ಆಸಮೀರನ ಗದೆಯಲಿಂದಿನ್ನ | ಹತನುತಾರಕಾಂತಕನನುಜ ಯೆನ್ನೆ | ಧರ್ಮಪ್ರೇರಕನೆ ಸಂತೈಸು ಎನ್ನ ೧೩
ಮೂಕರನ ವಾಗ್ಮಿಗಳ ಗೈವ | ಗುರು ಕೃ-ಪಾಕರನೆ ಕಾಮಗಳ ಕೊಡುವ | ಪರಮಲೇಖಕನೆ ಮನ್ಮನದಲಿರುವ | ಬಹುವ್ಯಾಕುಲವ ಪರಿಹರಿಸು ದೇವ | ೧೪
ಸತ್ತೆ ವೃತ್ತಿಯು ಮತ್ತೆ ಪ್ರಮಿತಿ | ಜಗಕೆಇತ್ತು ತಾ ಸೃಷ್ಟ್ಯಷ್ಟಕತ್ರ್ರೀ | ಎನಿಪಚಿತ್ತಜ ಪಿತನ ದಿವ್ಯ ಸ್ರ‍ಮತಿ | ಇತ್ತುನಿತ್ಯ ನೀ ಪಾಲಿಪುದು ಸದ್ಗತಿ ೧೫
ಪಂಚವಕ್ತ್ರನ ತನಯ ಕೇಳೊ | ಎನಗೆಪಂಚಭೇದದ ಜ್ಞಾನ ಪೇಳೊ | ಹರಿಯುವಾಂಛಿತ ಪ್ರದನ ದಿಟ ಆಳೊ | ಭವದಿವಂಚಿಸದೆ ಕಾಯೊ ಕೃಪಾಳೊ | ೧೬
ಏನು ಬೇಡುವುದಿಲ್ಲ ನಿನ್ನ | ದುಷ್ಟಯೋನಿಗಳು ಬರಲಂಜೆ ಘನ್ನ | ಲಕುಮಿಪ್ರಾಣಪತಿ ತತ್ವರಿಂದಿನ್ನ | ಕಾರ್ಯತಾನೆಂಬ ಮತಿಯ ಕೊಡು ಮುನ್ನ ೧೭
ಭಕ್ತ ಜನ ಕಲ್ಪ ತರುವೆನಿಪ | ಉಮೆಯಪುತ್ರ ಮಮ ಮಮತೆಯನು ಹರಿಪ | ದಾಯಹತ್ತಿಹುದು ನಿನ್ನಲ್ಲಿ ಗಣಪ | ಕಳೆಯೊಎತ್ತಿ ಕೈ ಮುಗಿವೆ ಭವರೂಪ ೧೮
ಜಯ ಜಯವು ಎಂಬೆ ವಿಘ್ನೇಶ | ತಾಪತ್ರಯಗಳಿನು ನೀನೇ ವಿನಾಶ | ಗೈದುಭಯ ಶೋಕರಹಿತ ವಿದ್ಯೇಶ | ಜನ್ಮಾಮಯ ಮೃತಿ ಹರಿಸೊ ನಭಕೀಶ | ೧೯
ನಮಿಸುವೆನೊ ಹೇರೊಡಲ ನಿನ್ನ | ಕರುಣಿಕಮಲಾಕ್ಷ ಹರಿನಾಮವನ್ನ | ನಿರುತವಿಮಲ ಮನದಿ ನುಡಿವಂತೆ ಎನ್ನ | ಮಾಡಿಕಮಲೇಶ ಪದ ತೋರೊ ಘನ್ನ೨೦
ಎರಡು ನವ ಮೂರು ಪದಗಳನ್ನ | ಗೌರಿತರಳನಲಿ ಇರುವಂಥ ಪ್ರಾಣ | ಪತಿಯುಗುರು ಗೋವಿಂದ ವಿಠ್ಠಲನಾ | ಪದದಿಇರಿಸುವರ ಹರಿ ಪೊರೆವ ಅವರನ ೨೧

೭೧೩
ಶ್ರೀಹರಿ ಪ್ರಿಯ ವಿಠಲ | ಸಲಹ ಬೇಕಿವನಾ ಪ
ಸ್ನೇಹ ಸದ್ಭಕ್ತರಲಿ | ಸಾಹಸದಿ ಕೊಡಿಸಿ ಅ.ಪ.
ಪಾಪಾಟವಿಗೆ ಪವಿಯು | ಶ್ರೀಪತಿಯ ನಾಮವನುಲೇಪಿಸುವುದೋ ಸ್ವಾಮಿ | ಗೋಪಾಲ ಮೂರ್ತೇವ್ಯಾಪಕನು ನೀನಾಗಿ | ಪ್ರಾಪಕಾಭಿಷ್ಟಗಳಪಾವನಕೆ ಮನ ಮಾಡಿ | ಎರ್ಷಿಸೋ ಹರಿಯೇ ೧
ಸೃಷ್ಟಾದಿಕರ್ತನೇ | ಕೃಷ್ಣ ಮೂರುತಿ ದೇವಕಷ್ಟಗಳ ಪರಿಹರಿಸಿ | ಕಾಪಾಡೊ ಹರಿಯೆಇಷ್ಟಮೂರುತಿ ದೇವ | ಸುಷ್ಠು ಭಜನೆಯ ನೀಡಿಹೃಷ್ಟನ್ನ ಮಾಡಿವನ | ಜಿಷ್ಣು ಸಖ ಹರಿಯೆ ೨
ಪಂಚಭೇದ ಜ್ಞಾನ | ಸಂಚಿಂತನೆಯ ಕೊಟ್ಟುವಾಂಚಿತಾರ್ಥದನಾಗೊ | ಪಂಚ ಪಾಂಚಾತ್ಮಕಾಂಚನವು ಲೋಪ್ಠವು | ಸಮವೆಂಬ ಮತಿಯಿತ್ತುಅಂಚೆ ವಹ ಸದ್ವಂದ್ಯ | ಮಿಂಚಿ ನಂದದಿ ಪೊಳೆದು ೩
ಭವ ಬಂಧದಲಿ ಸಿಲ್ಕಿ | ಬಲು ನೊಂದಿಹನು ಅಯ್ಯಭವರೋಗ ವೈದ್ಯನೇ | ಕೈ ಪಿಡಿದು ಕಾಯೋ ಅವನಿಯೊಳು ಶ್ರೀ ಹರಿಯೆ ಪ್ರಿಯನಾಗಿ ಮೆರೆಯಲಿಂ-ದಿವನ ಸ್ವಪದಿ ಪೇಳ್ದೆ | ಗುರು ಮೂರ್ತಿಯಾಗೀ ೪
ಸುಪ್ತೀಶ ಪೇಳ್ದಪರಿ | ಇತ್ತಿಹೆನೊ ಅಂಕಿತವಆಪ್ತ ನೀನಿದ್ದವಗೆ | ದಾಸ್ಯ ಸದ್ಧರ್ಮಪ್ರಾಪ್ತಿ ಗೈಸುತ ಭವವ | ಉತ್ತರಿಸ ಬೇಕೆಂದುಗೋಪ್ತ ಗುರು ಗೋವಿಂದ | ವಿಠಲ ಪ್ರಾರ್ಥಿಸುವೆ ೫

೨೦೭
ಶ್ವಾಸಮಾನಿಯೆ ನಿನ್ನ – ಆಶ್ರಯಿಸಿರುವವನಕೋಶದೊಳಿರುವಂಥ – ದೋಷಗಳಳಿಯೋ ಪ
ಹಂಸೋಪಾಸನೆಯಿಂದ | ಶಂಸಿಸಿ ಹರಿಪದಪಾಂಸುವ ಧರಿಸುವನೇ ||ವಿಂಶತ್ಯೇಕವು ಸಾ | ಹಸ್ರದಾರುನೂರುಹಂಸ ಮಂತ್ರ ಗಳ್ಜಾಪಕಾ ೧
ಶ್ವಾಸೋಚ್ಛ್ವಾಸಾಶ್ರಯ | ಕೋಶಗತಗಳಾದದೋಷಗಳನೆ ಕಳೆದೂ ||ವಾಸರ್ವಾಸರಕ್ಷಯ | ದೋಷಕಾರಣ ಕ್ರಿಮಿನಾಶವ ಗೈಯ್ಯುವುದೋ ೨
ಜಾಣೆ ಕೋಮಲ ಭಾವಿ | ವಾಣಿಯ ಪತಿ ನಿನ್ನಅಣತಿಯಿಂ ಸುರರೂ ||ತ್ರಾಣ ಪೊಂದುತ ಜಗ ತ್ರಾಣರಾಗಿಹರಯ್ಯಪ್ರ್ರಾಣ ಭಕ್ತನ ಪೊರೆಯೋ ೩
ಮೊರೆ ಹೊಕ್ಕಿರುವನನ್ನ | ಪೊರೆವಂಥ ಸಂಪನ್ನಮರಳಿ ಅನ್ಯರ ಕಾಣೆನೋ |ಮರುತ ಪ್ರಾಣಗಳೊಡೆಯ | ನಿರುತಿಹೆನೀನೆಂದುಅನು ಮೊರೆಯನಿಡುವೆನೋ ೪
ನೊಂದಿಹ ಶರಣನ್ನ | ಚಂದದಿ ಸಲಹಯ್ಯನಂದ ಕಂದನ ದೂತನೋ ||ಸುಂದರ ಗುರು ಗೋ | ವಿಂದ ವಿಠ್ಠಲ ಭಕ್ತಮಂದಾರ ಸುರ ತುರುವೇ ೫

೪೦೭
ಶ್ರೀ ಸತ್ಯಸಂಧರು
ಸತ್ಯ ಬೋಧರ ಕಂಡ | ಯತಿವರ್ಯ ಸತ್ಯಸಂಧ ಕೃತ್ಯ ನಿಮ್ಮದು ಆನಂದಾ ಪ
ಸ್ತುತ್ಯುಯತ್ಯಾಶ್ರಮವ ವಹಿಸುತಪ್ರತ್ಸಹತ ಸಚ್ಚಾಸ್ತ್ರ ಬೋಧಕಪ್ರತ್ಯರ್ಥಿ ಮಾಯ್ಗಳ ಖಂಡಿಸುತಭೃತ್ಯ ಜನಕಭೀಷ್ಟ ಗರೆವಾ ಅ.ಪ.
ಗಂಗೆಮೀಯಲು ಸಾಧು ಸಂಗದಿ ತೆರಳುತ್ತಅಂಗಜಾರಿಯ ಪುರದೀ |ಮಂಗಳಾಂಗನು ಹರಿಪದಾಬ್ಜದಿಬೃಂಗರೆನಿಸುತ ಪೂಜೆಯ ಗೈಯ್ಯಲುರಂಗ ಹರಿಪಾದಾರವಿಂದವಕಂಗಳಿಂದಲಿ ಕಂಡಯತಿಯ ೧
ಗಯ ಗಧಾದರ ನಂಘ್ರಿಪ್ರಿಯವಿಂದ ಭಜಿಸಲುನಯಸುತ್ತ ಪರಿವಾರವಾ |ಮಾಯಿಗಳ ದುರ್ವಾದ ಖಂಡಿಸಿಹೇಯಮತವಿದ್ವಂಸ ಗೈಯ್ಯುತರಾಯದಶರಥ ಸುತನು ರಾಮಗೆಜಯಪತ್ರಾರ್ಪಿಸಿದ ಮಹಿಮ ೨
ವಿಷ್ಣುಪಾದವ ಮನ ಮುಟ್ಟಿ ಭಜಿಸಲು ಪೋಗೆದುಷ್ಟಗಯಾಳವಾರರು |ದಿಟ್ಟತನದಲಿ ಕದವಮುಚ್ಚಲು |ಶ್ರೇಷ್ಠ ಯತಿಗಳ ಭಕ್ತಿಗೊಲಿಯುತಥಟ್ಟನೇ ಕದತೆರೆಯಲಂದಿನಅಟ್ಟಹಾಸದಿ ಪೂಜೆಗೈದ ೩
ಬಾಳಲಜ್ಜೆಲಿಗಯ | ವಾಳರು ಶರಣೆನ್ನೆಲಾಲಿಸುವರ ಭಿನ್ನ ಪ |ಮೂಲರಾಮರ ಸೇವೆಯನುಗಯೆವಾಳರೆಲ್ಲರು ಮಾಡಲೆನುತಲೀಲೆಯಿಂ ಮುದ್ರಾಂಕಗೈದಘಜಾಲವನು ತಾ ಕಳೆದ ಯತಿಯ ೪
ತುಂಗ ವಿಕ್ರಮ ನಮ್ಮ ಸಂಗೀತಲೋಲನಮಂಗಳುಡುಪಿಲಿ ದರ್ಶಿಸಿತುಂಗ ತಟಪಿನೆ ಮಹಿಷಿ ಕ್ಷೇತ್ರದಿಅಂಗವೃಂದಾವನವ ಪೊಗಿಸುತರಂಗಗುರು ಗೋವಿಂದ ವಿಠಲನಮಂಗಳ ಧ್ಯಾನದಲಿರುತಿಹ ೫

೨೦೮
ಸತ್ಯ ಭಕ್ತೇಶ | ನತೋಸ್ಮ್ಯಹಂ | ಸತತಂ ಪ
ಪ್ರತ್ಯುಹರರ್ಥಿತ ಸಜ್ಜನ ನಿವಹಂಸ್ತುತ್ಯ ಸದ್ವೈಷ್ಣವ ಸನ್ಮತ ಪ್ರಚುರಂ |ದೈತ್ಯಹರಂ | ಪೃಥೆ ಕುವರಂ || ಆರ್ತಿದ ಮಾಯ್ಮತ ಧ್ವಂಸಕರಂಪ್ರಾರ್ಥಿತ ಫಲ್ಗುಣ ರಥ ಸ್ಥಿತಂ | ಭೋ ಸುಮತಿ ಜ್ಞಂ ಅ.ಪ.
ಕೇಸರಿ ಗೃಹ ಗರ್ಭಾಂಬುಧಿ ಸೋಮಂ |ನೀರುತೇಕ್ಷಿತ ಶ್ರೀ ರಾಮಚಂದ್ರಂ |ವಾಯು ಕುಮಾರಂ | ಜ್ಞಾನ ಸ್ವರೂಪಂ |ನರಹರಿ ಚರಣ ಸರೋರುಹ ಮಧುಪಂ |ಕಪಿವರ ರೂಪಂ ವಿಪನ ಸಂಚಾರಂ |ಮತ್ತೇಭಾಹ್ವಯ ಪಂಚಸುಆಸ್ಯಂ | ದೈತ್ಯ ಧ್ವಂಸಕಂ |ದುರ್ಗಮ ಭವ ಭಯ ನಿರ್ಗಮೋಪಾಯಂ |ಕರ್ಗಳು ಶೀರ್ಷ ಸಮಗ್ರೋಪಾಂಗ ನಿ |ರರ್ಗಳ ವ್ಯಾಪ್ತ ಶ್ರೀ ಹರಿ ರೂಪಂ ||ವಿತತ ಸಂದರ್ಶನ ಸಚ್ಚಿತ್ಸುಖಮಯ ದೇಹಂ | ನಮಾಮಿ ಧರ್ಮಂ ೧
ಕುಂತೀ ಕುಲ ಕುಮುದೋದಯ ಚಂದ್ರಂ |ಕರಧೃತ ಅರಿಭಂಜನ ಸುಗದಂ |ಜೀರ್ಣತಗರ ಚೂರ್ಣಿತ ಶತ ಶೃಂಗಂ |ಕೀಚಕ ಬಕ ಜರೆಜಾದ್ಯಸುರ ಛೇದಂ |ಅರ್ಜುನಾಗ್ರಜಂ | ಹತಕುರುಸಕುಲಂಆಯುತ ಹಸ್ತಿ ಸುಬಲಾಡ್ಯ ಶರೀರಂ | ಪ್ರಫುಲ್ಲ ಗುಣಂಸಜ್ಜನ ಪೋಷ ಅಸಜ್ಜನ ನಾಶನ |ಆರ್ಜರೂಪಧರ ಋಜುಗಣದೊಳ್ವರ |ಭರ್ಜ ಭವಾರ್ಣವ ಊರ್ಜಿತ ಸ್ವಜನಗರ್ಜನೆ ಮಿಶ್ರರ ಲಿಂಗಪಸರಣಂ |ಕಲಿವಪು ಹರಣಂ | ಭೋಪ್ರಥಮಾಂಗಂ ೨
ರಜತ ಪೀಠ ಪುರವರ ದಾಸಂ |ಹೃತ್ಸರೋಜದೃತ ವೇದವ್ಯಾಸಂ |ತತ್ವ ? ವಿಚಾರೆ ಅಸದೃಶ ಮಹಿಮಂ |ಭಕ್ತಾಭಯ ಪ್ರದ ವಿತತ ತ್ರೈಭುವಂ |ಕರ್ಮೆಂದೀಂದ್ರಂ | ಮುಕ್ತ ಸುಸೇವ್ಯಂ ದೋಷ ರಹಿತ ಹರಿ ತೋಷಿತ ಹೃದಯಂ | ಸದ್ಗುಣಾರ್ಣವಂ |ವಿತತಾತಥ್ಯ ಸಚಾದ್ಧ ಜೈನ | ದುರ್ಮತನಿವಹ ವಿಧ್ವಂಸನ ಶೀಲಂ |ಆಸ್ತಿಕ ಹರಿಮತ ಸುಸ್ಥಿರ ಸ್ಥಾಪಿಸುವ್ಯಕ್ತ ಭಕ್ತ ಹೃತ್ಸರಸಿಜ ಪೀಠ ವಿನ್ಯಸ್ತ | ಸುರೂಪ |ಗುರು ಗೋವಿಂದ ವಿಠಲಜ | ಮಹಿಮಾ ಗಾಧಂ | ಸ್ತೋತ್ರಾ ಸೌಧ್ಯಂ ೩

೪೧೮
ಸತ್ಯಧ್ಯಾನರ ಪಾದ | ನಿತ್ಯದಿ ಭಜಿಸುವ ಭೃತ್ಯನೆ ಬಲು ಧನ್ಯನೋ ಪ
ತತ್ವವಾದವ ಸ್ಥಾಪಿಸುತ | ಅತ್ಯಧಿಕ ಸಂತೃಪ್ತಿಯಿಂದಲಿನಿತ್ಯಹರಿ ಸರ್ವೋತ್ತುಮತ್ವವ | ಭೃತ್ಯ ಜನಕೊತ್ತೊತ್ತಿ ಪೇಳುವ ಅ.ಪ.
ಮುನಿಕುಲ ಸನ್ಮಾನ್ಯ ಸತ್ಯಜ್ಞಾನರ ಕರಜಮಾನ ಮೇಯ ಜ್ಞಾನ ನಿಪುಣಾಹೀನ ಮಾಯ್ಗಳ ಗೋಣ ಮುರಿಸು | ಸ್ವಾನುಭಾವದಿ ಬ್ರಹ್ಮ ಸತ್ಯಜ್ಞಾನ ಆನಂದನೆನುತಲಿ | ಆನುಪೂರ್ವ ವೇದಾರ್ಥ ಪೇಳ್ದ ೧
ಈ ಮಹಿಯೊಳು ಭರತ | ಭೂಮಿಯೊಳಖಿಳ ಸುಸೀಮೆಯ ಚರಿಸುತಲೀ ||ನೇಮದಿಂದಲಿ ವಾದ ಭಿಕ್ಷೆಯ | ಪ್ರೇಮದಿಂದಲಿ ಬಯಸಿ ಬರುತಗ್ರಾಮ ಗ್ರಾಮದ ಭ್ರಾಮಕ ಜನ | ಸ್ತೋಮವ ನಿಸ್ತೇಜ ಗೈಸಿದ ೨
ಪರಮ ಹಂಸೋತ್ತಮ | ಪರವಾದಿ ಗಜಸಿಂಹಗರುವ ರಹಿತ ಸಾರ್ವಭೌಮಾ ||ವರ ಸುವತ್ಸರ ಚಿತ್ರ ಭಾನುವು | ಚೈತ್ರ ಶುಕ್ಷದಿ ಅಷ್ಟಮೀ ದಿನಸಿರಿ ಗುರು ಗೋವಿಂದ ವಿಠಲನ | ಚರಣ ಸರಸಿಜ ಸೇರಿ ಮೆರೆದ ೩

೭೨೨
ಸತ್ಯನಾರಾಯಣ ವಿಠಲ | ನಿತ್ಯ ನೂತನ ಮಹಿಮಭೃತ್ಯನನು ಪೊರೆಯೆಂದು | ಪ್ರಾರ್ಥಿಸುವೆ ಹರಿಯೇ ಅ.ಪ.
ನಿತ್ಯ ಜೀವನಕಾಗಿ | ವಿತ್ತ ಪತಿವೊಲಿಮೆಯನುಅರ್ಥಿಸುತ್ತಿಹ ನೀಗ | ಸತ್ಯ ಮೂರುತಿಯೇಭರ್ತು ನೀ ಜಗಕಿದ್ದು | ಕರ್ತು ನೀನಾಗಿರಲುಆರ್ತರುದ್ಧರ ಕಾರ್ಯ | ಪೂರ್ತಿಗೊಳಿಸೋ ೧
ಪದುನೆ ರಮಣನ ಭಕ್ತ | ಉದರಕಳುವುದು ಒಳಿತೆಇದು ನಿನಗೆ ಸರಿಯೇನೊ | ಉದಧಿ ಶಯನಾ ವಿಧಿ ಜನಕ ವಿಶ್ವೇಶ | ಮುದ ಮುನಿಯ ಸದ್ವಂದ್ಯವದಗಿ ವರಪ್ರದನಾಗಿ | ಮುದವನ್ನೆ ಬೀರೋ ೨
ಯೇಸೊ ಜನ್ಮದ ಪುಣ್ಯ | ರಾಶಿ ವದಗಿತೊ ಇವಗೆಆಶಿಸುವ ಹರಿದಾಸ್ಯ | ವಾಸವಾನುಜನೇ ಆಸುರೀ ಭಾವಗಳ | ನಾಶನವ ಗೈಯ್ಯುತ್ತಪೋಷಿಸುವುದಿವನ ಹರಿ | ದಾಸ್ಯ ಕರುಣಿಸುತಾ ೩
ನಾನು ನನ್ನದು ಎಂಬ | ಹೀನ ಮತಿಯನೆ ಕಡಿದುದಾಸವಾಂತಕ ಸಲಹೊ | ಜ್ಞಾನ ಪ್ರದನಾಗೀಮೌನಿ ಮಧ್ವರ ಮತದಿ | ಸಾನು ಕೂಲಿಸಿ ದೀಕ್ಷೆಮಾನನಿಧಿ ಗುಣಪೂರ್ಣ | ನೀನಾಗಿ ಪೊರೆಯೋ ೪
ಸರ್ವವ್ಯಾಪ್ತ ಸ್ವಾಮಿ | ನಿರ್ವಿಕಾರನೆ ದೇವಸರ್ವಜ್ಞ ಸರ್ವೇಶ | ಸರ್ವಸಮ ಮೂರ್ತೇಗುರ್ವಂತರಾತ್ಮಕನೆ | ದರ್ವಿಜೀವಿಯ ಕಾಯೊದುರ್ವಿ ಭಾವ್ಯನೆ ಗುರು | ಗೋವಿಂದ ವಿಠಲಾ ೫

೪೧೯
ಶ್ರೀ ಶ್ರೀ ಶ್ರೀಸತ್ಯಪ್ರಮೋದತೀರ್ಥರು
ಸತ್ಯಾಭಿಜ್ಞ ಕರಜ ಶ್ರೀ | ಸತ್ಯಪ್ರಮೋದಾ |ತೀರ್ಥ ನಿಮ್ಮಯ ಚರಣ ದ್ವಂದ್ವಕಾ ನಮಿಪೆ ಪ
ವೈರಾಗ್ಯ ಸದ್ಭಾಗ್ಯ | ಪರಮ ನಿಧಿಯೆನಿಸುತಲಿಶ್ರೀರಾಮ ಪದತುಂಗ | ಸರಸಿರುಹ ಭೃಂಗಾ |ಊರೂರು ಚರಿಸುತಲಿ | ಆ ರಾಮ ಪದದ್ವಂದ್ವಆರಾಧಕರಿಗ್ವೊರೆದ | ಪರಮ ತತ್ವಗಳಾ ೧
ವಾದಿಗಳ ಹೃದಯ ನಿ | ರ್ಭೇದ ಗೈಸುವ ನಿಮ್ಮವಾದಗಳ ಗಡಣೆಗಳ | ವಾದಿಗಳು ಕೇಳೀ |ಪಾದವನು ಕ್ರಮಿಸುತ್ತ | ಗೈದರು ಪಲಾಯನವಮೋದ ಪ್ರಮೋದ ಹರಿ | ಕಾರುಣ್ಯ ಪಾತ್ರಾ ೨
ಕಲ್ಯಾಣ ಪುರಿಯೊಳಗೆ | ಎಲ್ಲ ವೈಷ್ಣವರ್ನೆರೆದುಪುಲ್ಲನಾಭನು ಶ್ರೀ ವೇದವ್ಯಾಸರನೂ |ಚೆಲ್ವಗಜ ವಾಹನದಿ | ಕುಳ್ಳಿರಿಸಿ ಐತರಲುಎಲ್ಲ ಭಕ್ತರು ಮೊರೆಯೆ | ಅಂಬರವು ಬಿರಿಯೇ ೩
ಖರನಾಮ ವತ್ಸರ ಸು | ಮೂರೆರಡನೆ ಮಾಸಆರೆರಡನೇ ದಿನದಿ | ಚಾರು ನಿಮ್ಮಯ ಮಠದಲೀ |ಧೀರ ನೀ ಸ್ಥಾಪಿಸಿದೆ | ಎರಡು ವೃಂದಾವನವಶ್ರೀ ರಘೋತ್ತಮ ಸಿರಿ | ಸತ್ಯಧ್ಯಾನರ ಭಕ್ತಿಲೀ ೪
ನವರತ್ನ ಮಂಟಪದಿ | ಶ್ರೀ ವರನ ಕುಳ್ಳಿರಿಸಿವಿವಿಧ ವಿಧಿವತ್ಪೂಜೆ | ಹವಣೆಯಲಿ ಮಾಡೇ |ಅವನಿ ಸುರರುಗಳಿಂದ | ಸ್ತವನ ವೇದಗಳಿಂದಶ್ರವಣ ಸುಖವಾನಂದ | ಕಳಗು ಭವ ಬಂಧಾ ೫
ಕೋಪರಹಿತರುಯೆನಿಸಿ | ಶ್ರೀ ಪತಿಯ ಧ್ಯಾನಿಸುತತಾಪಸೀಗಳು ತೀರ್ಥ | ಪ್ರಾಪಿಸುತ್ತಿರೆ ಭಕುತರೂ |ಪಾಪ ಕಳೆದೆವು ಯೆಂಬ ಸ | ಲ್ಲಾಪದೊಳು ತಪನತಾಪ ಮರೆತರು ನೋಡಿ | ಪಾಪ ಹೊರದೂಡೀ ೬
ಹತ್ತಾರು ಸಾಸಿರಕೆ | ಮತ್ತೆ ಭೋಜನಗೈಸಿಕೃತಿವಾಸನ ತಾತ | ಉತ್ತಮೋತ್ತಮನೆನ್ನುತಾ |ಸತ್ಯವಲ್ಲಭ ಗುರೂ | ಗೋವಿಂದ ವಿಠಲನಪ್ರತ್ಯಹರ್ ಅರ್ಚಿಸುವ | ಸತ್ಯ ಪ್ರಮೋದಾರ್ಯ ೭

೨೭೧
ಸದಾಶಿವನೆ ರುದ್ರಾ | ಕಳೆವುದ ಭದ್ರಾ |ಸದಾಗತಿಯ ಪದ | ಮಧುಕರ ನೆನಿಸುತಸುಧಾ ರಸವನೆರೆ || ಭಜಿಸುವವರ ಪೊರೆ ಪ
ಗಜ ಅಜಿನಾಂಬರ | ಭುಜಗ ಭೂಷ ವರವಿಜಯಗಿತ್ತೆ ಶರ | ವೃಜಿನ ವೃಂದ ಹರಬಿಜಯಿಸಿ ಮನದಿ | ರಜವ ಕಳೆಯೊ ತ್ವರ ಅ.ಪ.
ಕೃತ್ತಿವಾಸನೆ | ಭಕ್ತರಾರ್ತಿಹ | ಚಿತ್ತದಲಿ ನೆಲೆ | ಸುತ್ತ ಪಾಲಿಸೋ ||ಎತ್ತೆ ಈ ಭವ | ತಪ್ತನಾಗಿಹ | ಗುತ್ತಮೋತ್ತಮ | ವಿತ್ತ ಕೊಡು ಹರ ೧
ರೂಪ ವೈಕೃತ | ರೂಪ ತೈಜಸ | ರೂಪ ತಾಮಸ | ಈ ಪರಿಯ ಕೊಂಡ ||ಶ್ರೀಪ ಪದಕ | ಲಾಪದಲ್ಲಿಡು | ವೈಪರೀತ್ಯ ಪ್ರ | ಲಾಪ ಕಳೆ ಶಿವ ೨
ಹೇ ಪವನಜನೆ | ತಾಪಸ ಪ್ರಿಯ | ತಾಪಕಳೆ ಗೌ | ರೀಪನೇ ಭವಕೂಪ ಕಳೆವ ದ | ಯಾ ಪಯೋ ನಿಧಿ | ಗೋಪ ಗುರು ಗೋವಿಂದ ವಿಠಲಾಪ್ತ ೩

೧೫೦
ಸಪ್ತ ಗಿರಿಯ ವಾಸ | ಶ್ರೀ ವೆಂಕಟೇಶ | ನಿನ್ನಮರೆತವಗೀವೇ ಬಹುತರ ಕ್ಲೇಶ ಪ
ಅಸ್ತಿತ್ವಕ್ಚರ್ಮಾದಿ ಮಾಂಸ | ಧಾತುಸಪ್ತಾವರಣ ಕಾಯದೊಳಗೆ ಆ ವಾಸ |ಲಿಪ್ತನಾಗದೆ ಇದ್ದು ಶ್ರೀಶ | ಜೀವರಾಪ್ತ ಸಾಧನ ಮಾಡಿ ಮಾಡಿದೆ ಅನಿಶಾ ೧
ಸಪ್ತವು ದಶದ್ವಯ ಸಹಸಾ | ನಾಡಿಸಪ್ತಾಬ್ಜದೊಳು ಸನ್ನಿವಾಸ |ಭಕ್ತರಿಗೊಲಿವೆಯೊ ಮೇಶ | ನಿನ್ನಗುಪ್ತ ಮಹಿಮೆ ನೀನೆ ತಿಳಿಸೊ ಸರ್ವೇಶ ೨
ಸುಪ್ತಿ ಸ್ವಾಪವು ಮತ್ತೆ ಜಾಗ್ರತ | ತ್ರಯಾವಸ್ಥೆ ಪ್ರೇರಕನಿಹೆ ಗುಣಗಣ ಭರಿತ | ಮತ್ತೆಚತ್ತುರಾವಸ್ಥೇಯ ಭೋಕ್ತ | ನಾಗಿಮುಕ್ತಾನಂದದಲಿದ್ದು ಮೆರೆವೆ ವಿಧಾತಾ ೩
ಆರ್ತನಾಗುತ ಬೇಡ್ವೆ ಹರಿಯೇ | ನಿನ್ನವ್ಯಾಪ್ತಿ ತೋರೋ ಸರ್ವ ಲೋಕದ ಧೊರೆಯೆಮೂರ್ತಿ ನಿಲ್ಲಲಿ ಮನದಿ ಹರಿಯೇ | ನಿನ್ನಕೀರ್ತಿ ಕೊಂಡಾಡಿಸು ಸತತದಿ ಶೌರೀ ೪
ತಪ್ತ ಕಾಂಚನದಂತೆ ಹೃದಯ | ದಲ್ಲಿದೀಪ್ತನಾಗಿದ್ದರು ಕಾಣದ ಪರಿಯೆ |ಸುಪ್ತಿಯ ಕಳೆ ತವ ಮೂರ್ತಿಯ | ತೋರೊಗೋಪ್ತ ಗುರು ಗೋವಿಂದ ವಿಠಲಯ್ಯ ೫

೧೭೯
ಸಮಾಸಮಳೆ ಸೀತೆ | ಹರಿಗೆ ಭುವಿ ಜಾತೆಬ್ರಹ್ಮೋದ್ಭವನ ಧನು | ಹಮ್ಮೀನ ನೃಪ ಮಂದಿದಮ್ಮು ಹಿಡಿದು ಎತ್ತೇ | ಹಮ್ಮು ಅಡಗಿತು ಪ
ಅಮ್ಮಾ ನಿಮ್ಮಯ್ಯನ | ಒಮ್ಮನ ಪಣವನುಬ್ರಹ್ಮರ್ಷಿ ವಿಶ್ವಮಿತ್ರ | ಹಿಮ್ಮೇಳನಾಗಿ ಬಂದರಮ್ಮೆರಮಣ ರಾಮ | ಒಮ್ಮೇಲಿ ಪೂರೈಸಿದ ಅ.ಪ.
ಬಾಲೆರಡ ಬಲ | ಮೇಳವಿಸಿ ಬರೆಮಾಲೆ ಪೂವಿನ | ಕೈಲಿ ಧರಿಸುತನೀಲವೇಣಿ ವಿ | ಶಾಲ ಕೀರ್ತಿಯಬಾಲ ಕೊರಳೊಳು | ಹಾಕಿ ನಿಂತಳು ೧
ಕೃತಿವಾಸನಾ | ದತ್ತಧನು ಮೇಲೇತ್ತ ಲಾಗದ | ಪೊತ್ತು ಮುರಿದುದಇತ್ತ ಹರ ಕೇ | ಳುತ್ತ ಯುದ್ಧಕೆವತ್ತಿ ಬರೆ ಕ್ಷಣ ದೃಷ್ಟಿಗವ ಸ್ಥಾಣು ೨
ಮಾರ್ಗ ನಡು ಬರೆ | ಭಾರ್ಗವನು ರಣಮಾರ್ಗ ವ್ಯಾಜ ಅ | ಮಾರ್ಗ ಅತುಳನ್ನಮಾರ್ಗಣದಿ ಹನ | ಗೈದು ಸುಜನಕೆಭಾರ್ಗವೈಕ್ಯವ | ತೋರ್ದ ತನ್ನೊಳಗೆ ೩
ಕಾನನಕೆ ಪಿತ | ನಾಣತಿಗೆ ರಾಮಮಾಣದಲೆ ಸತಿ | ಸಾನುಜ ಪೊರಟಏಣತೆರ ಕ್ರೂರ | ಕಾಣಿಸಲು ಸತಿತಾನಪೇಕ್ಷಿಸೆ | ಬಾಣ ಪಿಡಿಧ್ಹೋದ ೪
ಮಾರೀಚ ವಂಚಿಸಿ | ಚೀರೆ ಲಕ್ಷ್ಮಣನದೂರುತ್ತ ಕಳಿಸಿ | ರಾಮನಾ ಬಳಿಗೇ ಕ್ರೂರ ಯತಿ ವೇಷ | ಧಾರಕನು ಬಂದುನಾರಿ ಸೀತಾ ಕೃತಿ | ಸೇರಿ ಪುರಕ್ಹೊರಟ೫
ವಾತ ಅಬ್ಧಿ ವೇ | ಗಾತಿಶಯ ಹಾರಿಮಾತೆಗುಂಗುರವಿತ್ತು | ವಾರ್ತೆ ಪೇಳೆ ಪ್ರಭುಸೇತು ಕಟ್ಟುತ | ಖ್ಯಾತ ಖಳ ಹನಸೀತೆಯೊಡ ಸೇರಿ | ಭ್ರಾತನನು ಪೊರೆದ ೬
ಸಂಚೆ ಚರರ್ಹನ | ಸಂಜೀವ ಗೊಲಿಯುತಕಂಜ ಸಂಭವ ಪದ | ಅಂಜನಿ ಸುತಗಿತ್ತುಮಂಜುಳ ಸತಿ ಸಹ | ರಂಜಿಸಿ ರಾಜ್ಯ ಪ್ರಭಂಜನ ಗುರು ಗೋ | ವಿಂದ ವಿಠಲ ಮೆರೆದ೭

೨೦೯
ಸಮೀರ ಶುಭಗಾತ್ರ | ರಮಾಧವನ ಪುತ್ರನಿಮ್ಮ ತಾಯಿ ಎನೆ | ಸಮಾಸಮಳ ಪದಕಮಲ ಭಜಿಸುತ || ಬೊಮ್ಮ ಪದವಿ ಕೊಂಡೆ ಪ
ಕೂರ್ಮರೂಪನಾಗಿ | ಬೊಮ್ಮಾಂಡ ಧರ ಪರಬೊಮ್ಮನ ಪರಿಮಿತ | ಪೇರ್ಮೆ ನಿನ್ನೊಳೆಂತೂಅಮ್ಮಮ್ಮ ನಿನಸಮ | ಸುಮ್ಮನಸರೊಳಿಲ್ಲ ಅ.ಪ.
ವೇದದಲ್ಲಿ ಪ್ರತಿ | ಪಾದ್ಯ ಮುಖ್ಯದಿ |ನಾದ ಮೂರ್ತಿ ಸು | ಪಾದ ಭಜಕ ವಿನೋದ ದಿಂದಲಿ | ಭೋದಿಸುವೆ ಶೇ |ಷಾದಿಗಳಿಗೆ ಅ | ಗಾಧ ಮಹಿಮನೆ ೧
ಗಾನಲೋಲನ | ಗಾನ ಮಾಡ್ಡ ಮ |ಹಾನುಭಾವ ಸು | ಶ್ವಾಸ ರೂಪದಿಮೌನಿ ಸುರರಿಗೆ | ಗಾನ ಅನು ಸಂ |ಧಾನ ಗೋಪ್ಯದಿ | ಪ್ರಾಣ ಸಲಹೋ ೨
ವ್ಯಾಪ್ತ ಜಗಹರಿ | ವ್ಯಾಪ್ತಿ ಎಲ್ಲೆಡೆಪ್ರಾಪ್ತ ನಿನ ಸಮ | ಆಪ್ತರಿಲ್ಲವೊಗೋಪ್ತ ಗುರು ಗೋವಿಂದ ವಿಠಲನವ್ಯಾಪ್ತಿ ತಿಳಿಸು ಸು | ದೀಪ್ತ ಮಾರುತಿ ೩

೨೧೯
ಸರೋಜದಳ ನೇತ್ರೀ | ಅಜಸತಿ ಗಾಯತ್ರೀಪದ | ಸರೋರುಹವ ನಮಿಪೆ | ಸುರ ಜೇಷ್ಠನ ಪ್ರಿಯೆಮುರಾರಿ ಪದ ತೋರು || ಕರುಣವ ನೀ ಬೀರು ಪ
ಭಕ್ತ್ಯಾಭಿಮಾನಿಯೆ | ಚಿತ್ತವ ವ್ಯಾಪಿಸಿಭೃತ್ಯನ ಪೋಷಿಸು | ನಿತ್ಯ ಹರಿಯ ಪದಚಿತ್ತದೊಳಗೆ ಇರಸು | ಗುಣವ ಪೊಗಳಿಸು ಅ.ಪ.
ವೀಣೆ ಹಸ್ತಳೆ | ಗಾನಲೋಲ ಪ-ದಾನುರಾಗದಿ | ಗಾನ ಗೈವೆ ವೇ |ದಾನುಸಾರ ಬ್ರ | ಹ್ಮಾಣಿ ತುತಿಸುತವೇಣುಗೋಪನ | ಪ್ರೀಣ ನವ ಗೈವೇ ೧
ಹಂಸವಾಹಳೆ ಹಂಸ ಹರಿಪದ ಪಾಂಸು ಶಿರದಿ ಅ | ಸಂಶಯದಿ ಧೃತ ಅಂಶ ಅವತಾ ರಾಂಶದೊಳು ನಿ-ಸ್ಸಂಶಯಳೆ ಪಞ್ಸÀ | ಪಾಂಸು ಯಾಚಿಪೆ ೨
ನಾಲಿಗಿಂದಲಿ | ಬಾಲ ಗೋಪನ |ಶೀಲ ಗುಣಕ್ರಿಯ ಜಾಲ ನುಡಿಸು ವಿಶಾಲಫಣೆ ಕಮ | ಲಾಸನನ ಪ್ರಿಯೆ |ಪೇಳಲಳವೆ ವಿ | ಶಾಲ ತವಗುಣ೩
ವೇದವಾದ ವಿ | ನೋದಿ ಸರ್ವದಮೋದತೀರ್ಥರ | ಭೋದದಲಿಸನ್ಮೋದವಿತ್ತು ಭ | ವಾಬ್ಧಿ ದಾಟಿಸುಹೇ ದಯಾಂಬುಧೆ | ಪಾದ ನಂಬಿದೆ ೪
ಕಾವ ಕೊಲ್ವನು | ಮಾವಿನೋದಿಯಭಾವ ಬಲ್ಲಳೆ | ದೇವ ಮಾತೆಯ |ಭಾವದೊಳು ಗುರು | ಗೋವಿಂದ ವಿಠಲನಪಾವನದ ಪದ | ಭಾವವನು ಕೊಡು ೫

೭೨೩
ಸರ್ಪಾದ್ರಿ ವಾಸ ವಿಠಲ | ಅರ್ಪಿಸುವೆನಿವಳಾ ಪ
ಶೂರ್ಪಕರ್ಣನ ಪಿತಗೆ | ಸಖ ನೆನಿಪ ಹರಿಯೇ ಅ.ಪ.
ನೊಂದು ಸಂಸಾರದಲಿ | ಬಂಧನವ ಕಳೆಯಲ್ಕೆನಂದ ನಂದನನನ್ನು | ವಂದಿಸುತ ಬಹಳಾಕಂದರ್ಪನುಪಟಳವೇ | ಛಂದದಿಂ ದೂರಿರಿಸಿನಂದಾದ್ರಿ ನಿಯಲ ತವ | ಪಾದಕಾಂಕ್ಷಿಪಳಾ ೧
ಚಿತ್ರಕಲೆ ಸದ್ ಜ್ಞಾನ | ಸತ್ರದಲಿ ಬಹುಕಾಂಕ್ಷಿಪುತ್ರ ಪೌತ್ರರು ಇದ್ದು | ಅತಿ ಮಮತೆ ಪೊರೇಮತ್ತೆ ಅಧ್ಯಾತ್ಮಗಳ | ಚಿತ್ರಿಸುತ ಪತ್ರದಲಿಚಿತ್ರ ಚರಿತನ ಪಾದ | ಶತಪತ್ರಕೀವಾ ೨
ಮಧ್ವಮತ ತತ್ವಗಳ | ಬುದ್ಧಿಗೇ ನಿಲುಕಿಸುತಅಧ್ಯಾತ್ಮ ಸದ್ಜ್ಞಾನ | ವೃದ್ಧಿಗೈ ಹರಿಯೇಶುದ್ಧ ವೈರಾಗ್ಯದಲಿ | ಶ್ರದ್ಧೆಯಿತ್ತಿವಳನ್ನುಉದ್ದರಿಸ ಬೇಕಿವಳಾ | ಶ್ರದ್ಧೆ ಪತಿ ಪ್ರೀಯಾ ೩
ಬಿಂಬ ಪ್ರತಿಬಿಂಬಾದಿ | ಹಂಬಲಿಸುತಿಹಳೀಗೆಅಂಭ್ರಣಿ ಪತಿ ನಿನ್ನ | ಸಂಭ್ರಮದಿ ಕಾಂಬಬಿಂಬೊ ಪಾಸನ ಕರ್ಮ | ತುಂಬಿಸೆಂದಿವಳಲ್ಲಿಪೊಂಬಸಿರ ವಂದ್ಯ ಮ | ದ್ಭಿಂಭ ಪ್ರಾರ್ಥಿಸುವೆ ೪
ಭಾವದ್ರವ್ಯ ಕ್ರಿಯವು | ಈ ವಿಧಾದ್ವೈತತ್ರಯತೀವ್ರುಪಾಸನೆ ಪಲಿಸಿ | ಹೃದ್ಗುಹದಿ ನಿನ್ನಾಆವ ತವ ಭವ್ಯ ಸ | ದ್ರೂಪ ತೋರಿಸು ಎಂದುಓವಿ ಪ್ರಾರ್ಥಿಪೆ ಗುರು | ಗೋವಿಂದ ವಿಠಲಾ ೫

೧೫೨
ಸರ್ವತಂತ್ರ ಸ್ವತಂತ್ರ | ನಿರ್ವಿಕಾರನೆ ದೇವ ಅವ್ವ ಲಕುಮಿಗು ಪ್ರೇರಕ ಪ
ದುರ್ವಿಭಾವ್ಯನೆ ಜಗಕೆ | ದರ್ವಿ ಜೀವನ ಕಾವಹವಣೆ ನಿನದಲ್ಲೇ ಸ್ವಾಮಿ ಅ.ಪ.
ಆಯುರ್ಯಜ್ಞದಿ ಪ್ರಥಮ | ಸವನಾಧಿಪತಿ ನಿನ್ನಗಾಯಿತ್ರಿ ಪ್ರತಿಪಾದ್ಯದ |ವಾಯು ವಂದಿತ ರೂಪ | ದಿಂದೆನ್ನ ರಕ್ಷಿಸಿದೆಭಾರ್ಯಳಿಂದೊಡಗೂಡುತ |ಅಯುರ್ಯಜ್ಞದಿ ದ್ವಿತೀಯ | ನಿಯಮ ನವ ಮಾಳ್ಪುದಕೆಜಾಯೆಯಿಂದೊಡಗೂಡಿ | ಕಾಯ ರಕ್ಷಿಸಿದೇ ೧
ಮಾಧ್ಯಂದಿನದಿ ದೇವ | ಅಭಿಮಾನಿ ತ್ರಿಷ್ಟುಪುಆಯಾಯ ದಿವಿಜರಲ್ಲಿನೀ ಯಜ್ಞ ಭುಕು ಎನಿಸಿ | ವರ್ಷ ನಾಲ್ವತ್ನಾಲ್ಕುಆಯೆತಾಪತ್ತು ಹರಿಸೀ | ಕಾಯ ಭವನಿಗೆ ವೈರಿ | ದೇವತೆಗಳಿಂದೆನ್ನಕಾಯವನು ರಕ್ಷಿಸುತಲೀ ||ಜಯದೇವಿ ಪತಿ ನೀನೆ | ಜಾಯೆಯಿಂದೊಡಗೂಡಿಗೇಯ ಸಂಕರುಷಣನೆ | ಆಯತನ ಪೊರೆದೇ ೨
ಸಾಯಮಭಿಧಾನದ | ಸವನ ಮೂರಲಿ ದಿವ್ಯಗಾಯಿತ್ರಿ ದ್ವಯ ಮಾತೃಕಾ |ಆಯತನದೊಳಗಿದ್ದು | ಆದಿತ್ಯ ದೇವಕಿಂಆಯುರ್ಹವಿಷವ ಗೊಳ್ಳುತಾ |ಜೀಯ ನೀ ಪೊರೆಯುತಿರೆ | ಧಾತು ಸಪ್ತಕ ತನುವಧಾರ್ಯವಾಗಿಹುದೊ | ದ್ಯುಮ್ನ |ಗೇಯ ಗುರು ಗೋವಿಂದ | ವಿಠಲನೆ ತವ ಪದಕೆಕಾಯ ಇದನರ್ಪಿಸುವ | ದೇಯ ಕೊಡು ಸತತ ೩

೭೨೫
ಸರ್ವಾಧಾರ ವಿಠಲ | ಶರ್ವ ನೊಡೆಯ ಪ
ಸರ್ವವಿಧದಲ್ಲಿವನ | ಪೊರೆಯ ಬೇಕಯ್ಯ ಅ.ಪ.
ಮಧ್ವಸಿದ್ದಾಂತದಲಿ | ಅಂಕುರವ ಪುಟ್ಟಿಹುದುಶುದ್ಧಭಾವದಲದನ | ವೃದ್ಧಿಗೈಸುತಲೀಮಧ್ವಸನ್ಮಾರ್ಗದಲಿ | ಪದ್ಮನಾಭನ ಪಾದಪದ್ಮವನೆ ಭಜಿಪಂಥ | ಅಧ್ಯಾನ ತೋರೋ ೧
ಲೇಸು ಸಾಧನ ಹರಿಯ | ದಾಸ್ಯದಲಿ ಮನವಿರಿಸಿಆಶೆ ಪೂರೈಸಲ್ಕೆ | ಆಶಿಸುತ್ತಿಹನೋ |ವಸುದೇವಭಿದ ತೈ | ಜಸನ ರೂಪದಲಿ ಉಪದೇಶವಿತ್ತಂತೆ ಉಪ | ದೇಶವಿತ್ತಿಹೆನೋ ೨
ಹರಿಗುರು ಸದ್ಭಕ್ತಿ | ವೈರಾಗ್ಯ ವಿಷಯದಲಿಕರುಣಿಸಿ ಪೊರೆಯೊ ಹರಿ | ಮರುತಂತರಾತ್ಮನಿರುತ ಸಜ್ಜನ ಸೇವೆ | ದೊರಕಿಸುತ ಸಾಧನವಪರಿಪರಿಯಲಿಂಗೈಸಿ | ಪೊರೆಯೊ ಸರ್ವೇಶಾ ೩
ಅಂಶಾಂಶಿ ತೇಚ್ಛೆಯಲಿ | ಕಂಸಾರಿ ಮನಮಾಡಿವಂಶ ಉದ್ದರಿಸಿವಗೆ | ಹಂಸಜನ ವಂದ್ಯಹಂಸೋಪಸನೆ ಮಾಳ್ವ | ಶ್ವಾಸ ಮಾನೀ ವಾಯುಶಂಸನವ ಕೈಗೊಂಡು | ಜೀವರೋದ್ಧಾರೀ ೪
ಕ್ಲೇಶಮೋದದಿ ಸಮತೆ | ಲೇಸಾಗಿ ಕೊಟ್ಟಿವಗೆಪೋಷಿಸೋ ಹಯವದನ | ಬಾಸುರಾಂಗ ಹರೀಮೇಶ ಮಧ್ವೇಶ ಉಪ | ದೇಶ ಸಾರ್ಥಕ್ಯವನುಆಶಿಸುವೆ ಕರುಣಿ ಗುರು | ಗೋವಿಂದ ವಿಠಲಾ ೫

೭೨೪
ಸರ್ವಾಮಯ ಹರ ವಿಠಲನೇ | ಸರ್ವದಾನೀನಿವರ ಸಲಹ ಬೇಕೊ ಪ
ಶರ್ವಾದಿ ಸುರವಂದ್ಯ ಸಾರ್ವಭೌಮ ಸ್ವಾಮೀಅ.ಪ.
ಭವಜನಿತ ಕ್ಷೇಶಗಳನನುಭವಿಸಿ ಅನುಭವಿಸೀಭವದಿ ಬಲು ಬಳಲಿರುವನಿವಗಮೃತ ವೀಕ್ಷಣವಾ |ತವಕೃಪೆಯ ಧಾರೆಯಲಿ ತ್ರಿವಿಧ ತಾಪವ ಕಳೆದುತವಪಾದ ಪದುಮದಲ್ಲಿರಿಸೋ ಭವ ಹಾರೀ ೧
ಸರ್ವಸೃಷ್ಟೀಶನೇ ಸರ್ವಪಾಲಕ ಹರಿಯೇಸರ್ವ ಸಂಹಾರಕನೇ ಸರ್ವೋತ್ತಮಾಸರ್ವಾಂತರಾತ್ಮ ಶ್ರೀ ವೆಂಕಟೇಶನೆ ನಿನ್ನಸರ್ವದಾ ಭಜಿಸುವಗೆ ಸರ್ವಮಂಗಳವೀಯೋ ೨
ಭಾವಿಮರುತಲೀತ | ಭಾವ ಭಕುತಿಗಳಿಂದಸೇವಿಸುವ ಹಯಮೊಗನ | ತವ ದಿವ್ಯ ರೂಪಾಆವ ತನುಕರಣ ಮನ | ಸರ್ವಾರ್ಪಣೆಂಬ ಮತಿಓವಿನೀನಿವಗಿತ್ತು | ಪಾವನವಗೈಯ್ಯೊ ೩
ಪಂಚಬೇಧದ ಜ್ಞಾನ | ಸಂಚಿಂತನೇ ಇತ್ತುಅಂಚೆವಹ ಮತ್ತೆ ಹರಿ | ಮಂಚವಿಪಗೇಂದ್ರಾ |ಮುಂಚೆ ತರತಮ ತಿಳಿಸಿ | ವಾಂಛಿತಾರ್ಥದ ನಿನ್ನಸಂಚಿಂತನೆಯಲೇ ಇರಿಸೊ ಪಂಚಾಸ್ಯ ಪ್ರಿಯನೆ ೪
ಭಾವಕ್ರಿಯ ದ್ರವ್ಯೆಂಬ | ಅದ್ವೈತ ಚಿಂತನೆಯನೀವೊಲಿದು ಇವಗಿತ್ತು | ಭಾವದಲಿ ತೋರೊ ತವರೂಪ |ಈ ವಿಧದಿ ಬಿನೈಪೆ ಪವನಾಂತರಾತ್ಮ ಗುರುಗೋವಿಂದ ವಿಠಲಯ್ಯ ಪಾಲಿಸೋ ಜೀಯಾ ೫

೩೮೪
ಸಾಧನಕೆ ಸಾಧನಾಖ್ಯಾನ ವೃಂದಾವನಾ ಪ
ಸೋದೆ ಪುರವಾಸಿ ಶ್ರೀ ವಾದಿರಾಜರ ಕರುಣಾ ಅ.ಪ.
ಕುರುಡು ಶುನಕವು ತಾನು ನೆರೆದ ಸಂತೆಗೆ ಬಂದುಸರಕು ವಿನಿಮಯ ಮಾಡಿ ಮರಳಿ ಬರುತಿರುವಾ |ಪರಿಯ ಮಾಡದಲೆನ್ನ ಇರುವ ಸ್ವಪ್ನದಿ ತಿಳುಹಿಕರುಣಿಸಿಹೆ ಮಹ ಮಹಿಮ ಗುರು ಸಾರ್ವಭೌಮಾ ೧
ಕಾರ್ಯ ವೃಂದಾವನಚಾರ್ಯರೊಡೆವೆರಸುತ್ತಧೈರ್ಯದಿಂದಲಿ ಗೈಸಿ ಭಾರ್ಯಸಹಕೃತದಿ |ಪ್ರೇರ್ಯ ಪ್ರೇರಕ ಹೃದಯ ಧಾರ್ಯಮಾರ್ಗವನರುಪಿಸ್ಥೈರ್ಯವನು ಎನಗಿತ್ತ ಆಯ್ ಲಾತವ್ಯಾ೨
ಜೀವ ಅಸ್ವಾತಂತ್ರ ದೇವ ನಿಜ ಸ್ವಾತಂತ್ರನೀವೆ ಎಮ್ಮೊಳು ನಿಂತು ಸರ್ವ ಕಾರ್ಯಗಳಾ |ಓವಿ ಗೈವುತ ದೇವ ದೇವ ಹಯ ಮೊಗ ಗುರುಗೋವಿಂದ ವಿಠಲಂಗಿತ್ತು ತಾವಕನ ಸಲಹುವುದು ೩

೭೨೬
ಸಾಮಗಾಯನ ಲೋಲ ವಿಠ್ಠಲನೆ ಸಲಹೋ ಪ
ಕಾಮಿತಾರ್ಥಗಳಿವಗೆ ಪ್ರೇಮದಲಿ ಕೊಡುತಲಿಶ್ರೀ ಮನೋಹರ ಹರಿಯೆ ಕಾಪಾಡೊ ಇವನಾ ಅ.ಪ.
ಹರಿಗುರೂ ಸದ್ಭಕ್ತಿ | ತರತಮದ ಸುಜ್ಞಾನನಿರುತ ಕರುಣಿಸಿ ಅರಿಪು | ಮೂರೆರಡು ಭೇದಾಹರುಷ ಕ್ಷೇಶಾದಿಗಳು | ಹರಿಯಧೀನಗಳೆಂಬಅರಿವಿನಿಂದಲಿ ದ್ವಂದ್ವ | ಸಹನೆಗಳನೀಯೊ ೧
ಲೌಕಿಕದಿ ನಿನ್ನಾನೇಕ ಬಗೆ ವ್ಯಾಪ್ತಿಗಳ ತೋಕನಿಗೆ ತಿಳಿಸುತ್ತ ಸಾಕಬೇಕಿವನಾಪ್ರಾಕ್ಕು ಕರ್ಮವ ಕಳೆದು ಗೋಕುಲಾನಂದ ಹರಿನೀಕೊಡು ಸತ್ಸಂಗ | ಏಕಾಂತಿಕರ ಪ್ರಿಯನೆ ೨
ಎಲ್ಲ ಬಲ್ಲವಗಿನ್ನು ಸೊಲ್ಲುಂಟೆ ನಾಪೇಳಿಮಲ್ಲ ಮರ್ಧನ ದೇವ | ಪ್ರಹ್ಲಾದ ವರದಾಕ್ಷುಲ್ಲಕನ ಕರಪಿಡಿದು | ಬಲ್ಲಿದನ ಮಾಡೆಂದುಚೆಲ್ವ ಗುರು ಗೋವಿಂದ ವಿಠಲ ಪ್ರಾರ್ಥಿಸುವೇ ೩

೪೯೩
ಸಾಮಜಾದ್ರಿ ನಿವಾಸ | ಮಮ ಹೃದಯ | ಸದ್ದಾಮದಲಿ ಆವಾಸ |ಸೌಮನಸ್ಯವ ಕಾಮಿಸುವೆ ಮನಕೀಶ | ನಾ ನಿಮ್ಮ ದಾಸಾ ಪ
ಶ್ರೀ ಮನೋಹರನಂಘ್ರಿ ಕಮಲವ | ಯಾಮ ಯಾಮಕೆ ಭಜಿಸಿ ಹಿಗ್ಗುವ ಆಮಹಾತ್ಮರ ಚರಣ ರಜವನು | ಕಾಮಿಸುವೆ ಕರುಣಾಳು ಗುರುವರ ಅ.ಪ.
ಘಾಸಿ ಪಡುತಲಿ ಬಂದ | ಪಾಪಾತ್ಮಯೆನ್ನಯಕ್ಲೇಶ ಹರಿಸಲು ಛಂದ | ಅಂಕಿತವನುಪದೇಷಿಸಿದೆ ನೀ ನಲವಿಂದ | ಕರುಣಾಳು ನಿನ್ನಯದಾಸ ಜನಗಳ ವೃಂದ | ಸೇವೆ ಕೊಡು ಆನಂದ || ವಿಷಯ ದಾಸೆಯ ಹರಿಸೊ ಗುರುವರ | ಬಿಸುರುಹಾಂಬಕನಂಘ್ರಿ ಕಮಲವ ಒಸೆದು ಸ್ಮರಿಸುವ ಮತಿಯನಿತ್ತು | ಎಸೆವ ಹರಿಯಪರೋಕ್ಷ ಪಾಲಿಸೊ ೧
ಕರಿಗಿರಿಯಲಿ ನಿಂದು | ಪ್ರಾಣಪ್ರತೀಕವಗುರು ದಿನದಿ ಸ್ಥಾಪಿಸು ತಂದೂ | ವತ್ಸರ ಸುವಿಕ್ರಮವರ ನವಮಿ ಮಧ್ಯದಿನಂದೂ | ನಿಶ್ಚಯಿಸಿ ಮನದಲಿನರನಟನೆ ಉಪರಮಿಪೆನೆಂದೂ | ತನುವ ತ್ಯಜಿಸಿದೆ ಅಂದೂ ||ಸಾರ ಭಕುತರು ಸೇವೆ ಗೈಯಲು | ಕರಿಗಿರೀಯಲಿ ಒಂದು ಅಂಶದಿವರವ ಪಾಲಿಪುದಕ್ಕೆ ನೆಲೆಸಿದೆ | ಧೀರ ಕರುಣಾಪಾರ ಗುರುವೇ ೨
ಆರಿಗುಸುರೆಲೊ ನಾನೂ | ನಿನ್ನಂಘ್ರಿ ಕಮಲವಸಾರಿ ಭಜಿಸುವೆ ನಿನ್ನೂ | ಜ್ಞಾನಾರ್ಕ ನಿನ್ನಯಕರುಣ ದೊರಕಿಸೊ ಇನ್ನೂ | ಮೊರೆಹೊಕ್ಕ ಜನರದೂರ ನೋಳ್ಪದೆ ನೀನು | ಆರ್ತರ್ಗೆ ಸುರಧೇನು ||ಬಾರಿ ಬಾರಿಗೆ ಬೇಡ್ವೆ ನಿನ್ನನು | ಮಾರುತಾಂತರ್ಗತನು ಎನಿಪ ಧೀರ ಗುರು ಗೋವಿಂದ ವಿಠಲನ ಚಾರು ಚರಣವ ತೋರು ಗುರುವೇ ೩

Leave a Reply

Your email address will not be published. Required fields are marked *