Categories
ರಚನೆಗಳು

ಗುರುಗೋವಿಂದವಿಠಲರು

೬೮
ದಯ ಬೀರೋ | ದಯಾ ನಿಧೆ | ದಯ ಬೀರೋ ಪ
ದಯ ಬೀರೆ ದುರ್ಭವ | ಭಯ ಪರಿಹರ ನಿರ್‍ಭಯನಾಮಕ ಹರಿ | ಹಯಮುಖ ಕೃಷ್ಣಯ್ಯ ಅ.ಪ.
ಪಾಪಿ ನಾನಹುದೋ | ಹೇ ಪಾವನ ಮೂರ್ತೇನೀ ಪೋಷಿಸದಿರೆ | ಕಾಪಾಡೋರ್ಯಾರೋ ೧
ದಿನದಿನಕನೇಕ | ಲಂಕಾರ ಭೂಷಿತದಿನ ಮಣಿ ಅಮಿತಾಭ | ಘನ ಮಹಿಮನೆ ಕೃಷ್ಣ ೨
ದಶಮತಿ ಮುನಿ ಕರ | ಬಿಸಜ ಸಂಪೂಜ್ಯನೆಹಸಗೆಡಿಸುವ ದುರ್ | ವಿಷಯವ ಹರಿಸೀ ೩
ನಿರ್ಮಲ ಮಹಿಮ ಕು | ಕರ್ಮಗಳೆಲ್ಲ ಸುಕರ್ಮವೆಂದೆನಿಸಯ್ಯ | ಕರ್ಮ ನಾಮಕನೇ ೪
ಕಡಗೋಲು ನೇಣನು | ಪಿಡಿದು ಭಕ್ತೀ ಎಂಬಮುಡುಪ ಕೊಳ್ಳುವ ಗುರು | ಗೋವಿಂದ ವಿಠಲಯ್ಯ ೪

೩೫೧
ದಯದಿ ಎಮ್ಮನು ಸಲಹ ಬೇಕಯ್ಯ | ಮಳಖೇಡ ನಿಲಯ ದಯದಿ ಎಮ್ಮನು ಸಲಹ ಬೇಕಯ್ಯ ಪ
ದಯದಿ ಎಮ್ಮನು ಸಲಹ ಬೇಕೈ | ವಿಯದಧಿಪ ಸದ್ದಂಶ ಸಂಭವ ಭಯ ವಿದೂರನ ತೋರು ಎನುತಲಿ | ಜಯ ಮುನೀಂದ್ರನೆ ಬೇಡ್ವೆ ನಿನ್ನನು ಅ.ಪ.
‘ಇಂದ್ರಸ್ಯನು ವೀರ್ಯಾಣ’ ಎಂದೆನುತ | ಇತ್ಯಾದಿಋಕ್ಕುಗಳಿಂದ ಬಹುತೆರೆ ನೀನು ಪ್ರತಿಪಾದ್ಯ ||ಅಂದು ಮೇಘದ ಜಲವು ಬೀಳದೆ | ಬಂಧಗೈದಹಿನಾಮ ದೈತ್ಯನಕೊಂದು ಉದ್ಧರಿಸಿರುವ ಪರಿಯಲಿ | ಮುಂದೆ ದುರ್ವಾದಿಗಳ ಖಂಡಿಪೆ ೧
ವಾಲಿಯಂದದಿ ದೃಷ್ಟಿಮಾತ್ರದಲಿ | ಶತೃಗತಬಲಲೀಲೆಯಿಂದಪಹರಿಪೆ ನಿಮಿಷದಲಿ ||ಕಾಲ ತ್ರೇತೆಯಲಂದು ದುಷ್ಟರ | ವಾಲಿರೂಪದಿ ವಾರಿಸಿದ ಪರಿಕಾಲ ದ್ವಾಪರದಲ್ಲಿ ಪ್ರಾರ್ಥನೆ | ಲೀಲೆ ರೂಪಿಯು ಕೃಷ್ಣಸೇವಕ ೨
ದೃಷ್ಟಿ ಮಾತ್ರದಿ ಕರ್ಣಗತ ಬಲವ | ಅಪಹರಿಸಿ ನೀನುಕ್ಲಿಷ್ಟ ಯುದ್ಧದಿ ಗಳಿಸಿ ನೀ ಜಯವ ||ಶ್ರೇಷ್ಠ ಕರ್ಣನ ಅಸುವ ಕೊಳ್ಳುತ | ಸುಷ್ಠು ಅರಿಬಲ ನಾಶಮಾಡುತಭ್ರಷ್ಟ ಕೌರವನೀಗೆ ದುಃಖದ | ಕೃಷ್ಣಗರ್ಪಿಸಿ ಕೈಯ್ಯ ಮುಗಿದೆಯೊ ೩
ಕಾಲ ಕಲಿಯುಗದಲ್ಲಿ ಬಲ ಭೀಮ | ಮಧ್ವಾಭಿಧಾನದಿಮೂಲ ಮೂವತ್ತೇಳು ಸೂನಾಮ ||ಭಾಳ ಗ್ರಂಥಗಳನ್ನೆರಚಿಸೀ | ಕಾಲಟಿಜಕೃತಮಾಯಿ ಮತವನುಲೀಲೆಯಿಂದಲಿ ಖಂಡಿಸುತ್ತ | ಪಾಲಿಸುತ್ತಿರೆ ಸುಜನರನ್ನು ೪
‘ವೃಷಾಯ ಮಾಣೆಂಬ’ ಋಕ್ಕಿನಲಿ ದೇವ ಇಂದ್ರಗೆವೃಷಭದಾಕೃತಿ ಪೇಳಿಹುದು ಅಲ್ಲಿ ||ವೃಷಭ ನೀನಾಗಂತೆ ಕಲಿಯಲಿ | ಎಸೆವ ಶ್ರೀ ಮನ್ಮಧ್ವ ಗ್ರಂಥದಹಸಿಬೆ ಚೀಲವ ಹೊತ್ತು ತಿರುಗುತ | ಅಸುಪತಿಯ ಸೇವಿಸಿದ ಮಹಿಮ೫
ಅಗಸ್ತ್ಯ ಮುನಿ ಸಕಲ ತೀರ್ಥಗಳ | ಸಂಗ್ರಹಿಸಿ ಕರದಿಸಾಗಿ ಗಿರ್ಯಾನಂತ ಕಮಂಡೂಲ ||ವೇಗ ಕೆಳಗಿಟ್ಟಾಚಮನ ಅಲ್ಪ | ಕಾಗಿ ಸ್ವಲ್ಪವುದೂರ ಪೋಗಲುಕಾಗೆ ರೂಪದಿ ಬಂದು ಇಂದ್ರನು | ವೇಗ ಉರುಳಿಸೆ ಜಲವು ಹರಿಯಿತು ೬
ದೆವರಾಜನು ಕಾಣಿಸಿ ಕೊಳಲು | ಮುನಿಯು ಆಕ್ಷಣದೇವ ಕಾರ್ಯದ ಭಾವ ತಿಳಿಯಲು ||ಓವಿ ತತ್ಕಾಗಿಣಿಯ ನಾಮದಿ | ಭೂವಲಯದೊಳ್ಬಾತಿಸಲಿ ಎನೆತೀವರಾಶೀರ್ವಾದ ದಿಂದಲಿ | ಪಾವನವು ತತ್ ಕ್ಷೇತ್ರ ವಾಯಿತು ೭
ಪಾಂಡು ಮಧ್ಯಮನಾದ ಅರ್ಜುನನು | ಇಲ್ಯುದಿಸಿ ಪೊತ್ತಧೋಂಡು ರಘುನಾಥ ಪೆಸರನ್ನು || ಗೊಂಡು ನಾಯಕ ತನವ ಅಶ್ವಕೆ | ಅಂಡಲೆದು ಬರುತಿಲ್ಲಿ ಬಿಸಿಲಲಿ ಉಂಡು ಉಂಬುದ ಜಲವ ಪಶುಪರಿ | ಕಂಡು ಮುನಿ ಅಕ್ಷೋಭ್ಯ ಬೆಸಸಿದ ೮
ಸ್ವಪ್ನ ಸೂಚಿಸಿದಂತೆ ಮುನಿಶ್ರೇಷ್ಠ | ನೀರ್ಗುಡಿದವ ನರೆ ಬಪ್ಪುವನು ತಮ ಪೀಠಕೆನ್ನುತ್ತ || ಸ್ವಲ್ಪ ಹಾಸ್ಯದಿ ಪಶುವು ಪೂರ್ವದಿ | ಒಪ್ಪುವೆಯಾ ನೀನೆನ್ನ ಸಾದಿಗೆ ನೆಪ್ಪು ಬಂದುದು ವೃಷಭ ಜನ್ಮದಿ | ಕೃಪ್ಪೆಗೈದಿಹ ಮಧ್ವರನುಗ್ರಹ ೯
ಸಾದಿ ಭೂಪನು ಕಳುಹಿ ತನ್ನ ಸೈನ್ಯ | ಅಕ್ಷೋಭ್ಯ ಮುನಿಪರ ಪಾದಕೆರಗುತ ಆಶ್ರಮವು ತುರ್ಯ ||ಮೋದದಿಂದ್ಯಾಚಿಸಲು ಮುನಿವರ | ಆದಿಯಿಂದಲಿ ಬಂದ ಪೀಠಕೆಸಾದರದಿ ಪಟ್ಟಾಭಿಷಕ್ತನ ಗೈದು ಆಶೀರ್ವಾದ ಮಾಡಿದ ೧೦
ಸುತನು ತುರ್ಯಾಶ್ರಮವ ಪೊತ್ತುದನ | ಕೇಳುತ್ತ ತಂದೆಅತುಳ ಕೋಪದಿ ನಿಂದಿಸಿದ ಮುನಿವರನ |ಸುತನ ಗೃಹ ಕೆಳತಂದು ಪತ್ನಿಯ | ಜೊತೆಯಲಿಡೆ ಏಕಾಂತ ಗೃಹದಲಿಅತುಳ ಸರ್ಪಾ ಕೃತಿಯ ಕಾಣುತ | ಭೀತಿಯಲಿ ಚೀರಿದಳು ಕನ್ಯೆಯು೧೧
ಸೋಜಿಗದ ತನಯನ್ನ ಕೊಳ್ಳುತ್ತ | ಮುನಿವರರ ಬಳಿಗೆ ಯೋಜಿಸೀದನು ಕ್ಷಮೆಯ ಬೇಡುತ್ತ ||ಆರ್ಜವದ ಮುನಿ ಕ್ಷಮಿಸಿ ತಂದೆಯ | ಮಾಜದಲೆ ತಮ್ಮ ಶಿಷ್ಯಭೂಪಗೆಯೋಜಿಸಿದರನ್ವರ್ಥನಾಮವ | ಶ್ರೀ ಜಯಾಭಿಧ ತೀರ್ಥರೆನ್ನುತ ೧೨
ತ್ರ್ಯಕ್ಷನಂಶದಿ ಜಾತರೆನಿಸುತ್ತ | ಸನ್ಯಾಸ ಕೋವಿದ ಅಕ್ಷೋಭ್ಯ ಕರಜಾತರೆನಿಸುತ್ತ ||ಶಿಕ್ಷಿತರು ಶುಕನಂತೆ ಅವರಿಂ | ದಕ್ಷರಾಗುತ ವಾದಿಜಯದಲಿಕುಕ್ಷಿಯನೆ ಚರಿಸುತ್ತ ಬಹು ಪರ | ಪಕ್ಷ ಕರಿ ಹರ್ಯಕ್ಷರಾದಿರಿ ೧೩
ಮಧ್ವಭಾಷ್ಯಕೆ ಟೀಕೆ ರಚಿಸುತ್ತ | ಯರಗೋಳ ಗುಹೆಯಲಿಶುದ್ಧ ಭಾವದಿ ಇರಲು ಮದಮತ್ತ ||ವಿದ್ಯ ಅರಣ್ಯಭಿಧ ನೋಡೀ | ಮಧ್ವಕೃತ ಸನ್ಮಾನ ಲಕ್ಷಣಬುದ್ಧಿಗೇ ನಿಲುಕದಲೆ ಟೀಕೆಯ | ಪದ್ಧತಿಯ ಕಂಢರ್ಷಪಟ್ಟನು ೧೪
ಮಾಧ್ವಭಾಷ್ಯವ ನೇರಿಸಿ ಗಜವ | ತಟ್ಟೀಕೆ ಅಂತೆಯೆಅದ್ಧುರೀಯಲಿ ಗೈದು ಉತ್ಸವವ ||ವಿದ್ಯವನ ಮುನಿಪೋತ್ತುಮನು ಬಹು | ಶುದ್ಧಭಾವದಿ ಗೈದು ಸಂತಸಬುದ್ಧಿಯಲಿ ಪರಿವಾರ ಸಹಿತದಿ | ಸದ್ದುಯಿಲ್ಲದೆ ಪೋದನಂದಿನ ೧೫
ಹತ್ತೆರಡು ಮತ್ತೊಂದು ಕುಭಾಷ್ಯ | ವಿಸ್ತರದಿ ಖಂಡಿಸೆಕೃತ್ಯವೂ ಮಧ್ವಕೃತವನುವ್ಯಾಖ್ಯಾ ||ಮತ್ತಿದಕೆ ಸೂಧಾಖ್ಯ ಟೀಕವ | ವಿಸ್ರ‍ತತವು ನಿಮ್ಮಿಂದ ಜಯಮುನಿಮೊತ್ತದಿಂಧ್ಹತ್ತೆಂಟು ಗ್ರಂಥಕೆ | ಕೃತ್ಯವಾಯಿತು ನಿಮ್ಮ ಟೀಕೆಯು೧೬
ಚಂದ್ರಸಮ ಮಧ್ವಾಗಮಾಬ್ಧೀಗೆ | ಆರ್ತಜನಮಂದಾರ ಸುರಧೇನು ಎನಿಪರಿಗೆ ||ವಂದಿಸುವ ಸದ್ಭಕ್ತಿ ಪೂರ್ವಕ | ದ್ವಂದ್ವ ನಿಮ್ಮಯ ಪಾದ ವನಜಕೆನಂದಮುನಿ ಸದ್ವಂದ್ಯ ಗುರುಗೋ | ವಿಂದ ವಿಠಲನ ಪಾದ ತೋರ್ವುದು ||

೩೭೪
ದಯದಿ ಪಾಲಿಸೋ ವಾದಿರಾಜ ಗುರುವೇ | ನತಜನ ಸುರತರುವೇ ಪ
ಹಯಮುಖ ಪದ ಸದ್ವನಜ ಸುಭೃಂಗಾ | ಪಾಲಿಸು ದಯಾಪಾಂಗಾ ಅ.ಪ.
ರಜತ ಪೀಠದೊಳು ಕೃಷ್ಣ ಪೂಜೆಗಳನ್ನು | ಪರಿಪರಿ ರಚಿಸಿನ್ನೂ |ಕುಜನರ ಭೇದಿಪ ಭಜನೆ ಪದಗಳನ್ನೂ | ಸುಜನಕಿತ್ತೆ ನೀನೂ ||ಭಜಿಸೆ ಬಂದವರಿಗನ್ನೋದಕಗಳನೂ | ಏರ್ಪಡಿಸಿನ್ನೂ |ನಿಜ ಜನರ ಪೊರೆವ ಸುವ್ಯವಸ್ಥೆಗಳನ್ನೂ | ರಚಿಸಿ ಮೆರೆದೆ ನೀನೂ ೧
ಅಂತರಂಗದಿ ಪೂಜಿಪೆ ಹಯವದನನ್ನ | ಭಾವಿ ಮರುತ ಎನ್ನ|ಅಂತರಂಗದೊಳು ನೆಲಿಸುತ ನೀಯೆನ್ನ | ಸಂಚಿತಾದಿಯನ್ನ ||ಅಂತಗಾಣಿಪ ಶ್ರೀ ಅಂತರಾತ್ಮನನ್ನ | ಚಿಂತೆ ಪಾಲಿಸು ಮುನ್ನ |ಯೆಂತು ವರ್ಣಿಸಲಿ ತವ ಮಹಿಮೆಗಳನ್ನ | ನಿಂತು ನಲಿ ವದನದೊಳೆನ್ನ ೨|
ಭರತ ಖಂಡದಿ ತೀರ್ಥ ಕ್ಷೇತ್ರ ಚರಿಸೀ | ತತ್ಪ್ರಂಬಂಧ ರಚಿಸೀ |ವಿರಚಿಸಿದೆಯೋ ರುಕ್ಮಿಣೀಶ ಕಾವ್ಯಾ | ಯುಕ್ತಿಮಲ್ಲಿಕೇಯಾ ||ಸುರಸ ಪದಗಳಲಿ ತತ್ವ ಪುಂಜವನ್ನ | ರಚಿಸಿ ಮೆರೆದೆರನ್ನ |ನಿರಣಯಾದಿಗಳ ಭಾವಗಳನ್ನ | ಕನ್ನಡದಿ ರಚಿಸದೆ ಘನ್ನ ೩
ಸ್ವಾದಿ ಪುರದಿ ಬಲು ಮುದದಲಿ ಮೆರೆದಾ | ಬಿರಿದು ಪೊತ್ತ ಶೈವಾವಾದಿಸೆ ನಿನ್ನೊಳು ಸೋತು ನಿಂತನವ | ಪಾದದಿ ಬಿದ್ದು ಅವ || ಮೇದಿನಿಯೊಳ್ ನಿಮಗೆ ಸಮರು ಆವ | ಎಂದೊಪ್ಪಿಸಿದನು ಅವ |ಮೋದದಿಂದಲಿ ಬಸವ ಚಿನ್ಹಿತನಾದ | ತವ ಚರಿತೆ ಆಗಾಧಾ ೪
ಪಂಚ ಸುವೃಂದಾವನಗಳ ರಚಿಸುತ್ತಾ | ತಾವ್ನಡುವಿರ ಬೇಕೆನುತಾ |ಅಂಚೆಗಮನ ಪ್ರಾಣ ಗಂಗಾಧರನಾ | ಗುರು ಗೋವಿಂದ ವಿಠಲನಾ ||ಸಂಚಿಂತಿಸಿ ನಿಲಿಸುತ ನಾಲ್ಕರಲ್ಲೀ | ಚತುರ ದಿಕ್ಕಿನಲ್ಲೀ |ಪಂಚರೂಪಿ ನಿಷ್ಕಿಂಚಿನ ಪ್ರಿಯ ಹರಿಯಾ | ಪುರವ ಸೇರಿದಯ್ಯಾ ೫

೫೬೦
ದಾಮ ಶೋಭಿತ ವಿಠಲ | ಸಾಮ ಸನ್ನುತನೇ ಪ
ಪ್ರೇಮದಿಂದಿವಳ ಮನ | ಕಾಮ ಪೊರೈಸೋ ಅ.ಪ.
ಯೇಸೊ ಜನ್ಮದ ಪುಣ್ಯ | ರಾಶಿ ಫಲ ಒದಗುತಲಿದಾಸತ್ವ ದೀಕ್ಷೆಯನು | ಆಶಿಸುತ್ತಿಹಳೋ |ದಾಸವರ್ಯರು ವಿಜಯ | ದಾಸರುತ್ಸವದಿ ಸಂ-ತೋಷದಲಿ ಬಿನ್ನಹವ | ಲೇಸು ಗೈದಿಹಳೋ ೧
ಭಾರಿ ತವ ಕಾರುಣ್ಯ | ಬೀರಿ ತವರೂಪವನುತೋರಿಸು ಸ್ವಪ್ನದಲಿ | ಮಾರಪಿತ ಕೃಷ್ಣಾಸಾರ ನಿಸ್ಸಾರ ಸಂ | ಸಾರ ಸಾಗರದಾಟಿಹಾರಿ ತೋರಿದಿ ಉಡುಪಿ | ಚಾರು ಮೂರುತಿಯೇ ೨
ಆನಂದ ಮುನಿ ಮತದಿ | ಸ್ವಾನುಭವ ದೀಕೆಯನುಜ್ಞಾನ ಭಕ್ತ್ಯಾದಿ ಸಂ | ಧಾನ ತಿಳಿಸುತಲೀ |ಮಾನನಿಧಿ ಕೈ ಪಿಡಿದು | ದೀನಳನು ಪೊರೆಯೆಂದುಪ್ರಾಣ ಪ್ರಾಣನೆ ಬೇಡ್ವೆ | ದೀನ ವತ್ಸಲನೇ ೩
ಸಾಧನದಿ ಸತ್ವತೆಯ | ಹಾದಿಯಲ್ಲಿಹಳೀಕೆಸಾಧುಗಳ ಕಂಡು ಹೃದ | ಯಾದ್ರ್ರ ಭಾವದಲೀ |ಮೋದ ಬಡಿಸುತ ಸೇವೆ | ಶ್ರೀಧರನಿಗರ್ಪಿಪಳುಹೇ ದಯಾಂಬುಧೆ ಸಲಹೊ | ಸಾಧು ಜನ ವಂದ್ಯಾ ೪
ಸರ್ವಕಾಲವು ದೇಶ | ಸರ್ವಗುಣದ್ರವ್ಯದಲಿದುರ್ವಿಭಾವ್ಯನ ವ್ಯಾಪ್ತಿ | ಸ್ಛುರಣೆಯನು ಕೊಡುತಾ |ಸರ್ವಾಂತರಾತ್ಮಗುರು | ಗೋವಿಂದ ವಿಠ್ಠಲನೆದರ್ವಿ ಜೀವಿಯ ಹೃದಯ | ಗಹ್ವರದಿ ತೋರೋ ೫

೫೬೧
ದಾಮೋದರ ವಿಠಲನೆ | ಸಲಹ ಬೇಕಿವಳಾ ಪ
ಈ ಮಹಿಳೆ ತವದಾಸ್ಯ ಕಾಮಿ ಸುತ್ತಿಹಳಯ್ಯಸಾಮ ಸನ್ನುತ ಹರಿಯೆ | ಸ್ವಾಮಿ ಪಾಲಿಪುದೊ ಅ.ಪ.
ತರಳೆ ದ್ರೌಪತಿ ವರದ | ಕರಿಯು ಮೊರೆಯಿಡೆ ಕಾಯ್ದವರ ಅಹಲ್ಯೆಯ ಪೊರೆದ | ತರಳ ಧ್ರುವ ವರದಕರುಣದಿಂದಲಿ ಮನದ | ಪರಿಪರಿಯ ಸತ್ಕಾಮಗರೆದು ಪಾಲಿಪುದಿವಳ | ಶಿರಿ ರಾಮಚಂದ್ರಾ ೧
ಪತಿ ಸೇವೆ ಪರಳೆನಿಸು | ಗತಿಗೋತ್ರ ನೀನೆನಿಸುಸತತ ನಿನ್ನಯ ನಾಮ | ಸ್ರ‍ಮತಿಗೊದಗಿಸೊತತುವೇಶರೊಲಿಮೆಯಲಿ | ಸತತ ಗೈಯ್ಯುವ ಕಾರ್ಯವಿತತವಾಗಲಿ ನಿನ್ನ | ಹಿತಸೇವೆ ಎಂದೂ ೨
ಓಲೆಯಲಿ ತೈಜಸನು | ಶೀಲನಾಮವನರುಹೆಪಾಲಿಸಿಹೆ ಅದನೇವೆ | ಬಾಲ ಗೋಪಾಲಾ |ಕಾಳಿ ರಮಣನೆ ಕೃಷ್ಣ ಕಾಲ ಕಾಲಕೆ ನಿನ್ನಓಲಯಿಪ ಭಾಗ್ಯದಲಿ | ಕೀಲಿಪುದು ಮನವಾ ೩
ಮೂರೆರಡು ಭೇದಗಳ | ತಾರತಮ್ಯವನರುಹಿತೋರೊ ತವರೂಪ ಹೃ | ದ್ವಾರಿಜದನಡುವೇಕಾರುಣಿಕ ನೀನೆಂದು | ಸಾರುತಿವೆ ವೇದಗಳುಮಾರಾರಿ ಸಖ ನಿನ್ನ | ಕಾರುಣ್ಯ ತೋರೋ ೪
ಪಾವಮಾನಿಯ ಪ್ರೀಯ | ಭಾವದಲಿ ಪ್ರಾರ್ಥಿಸಲುಪೂವನಿತ್ತಭಯವನು | ಓದಿ ಪಾಲಿಸಿಹೇಕೇವಲಾ ನಂದಮಯ | ಗೋವಿದಾಂಪತಿಯೆ ಗುರುಗೋವಿಂದ ವಿಠ್ಠಲನೆ | ಭಿನ್ನಪವ ಸಲಿಸೋ ೫

೪೨೭
ದಾಸ ಜನರ ಹೃತ್ ತೋಷನೆ ಪುರಂದರದಾಸರಾಯ ಪರಿಪೋಷಿಸೋ ಪ
ಅಂಡಜವಾಹ ಬ್ರ | ಹ್ಮಾಂಡ ದೊಡೆಯನಪಿಂಡಾಂಡದಿ ಕಂ | ಢಿಗ್ಗುವ ಮೂರ್ತೇ ೧
ಮಹತಿ ನಾಮಕ ವೀಣಾ | ಧರಿಸಿ ಶ್ರೀಹರಿಮಹಿಮೆ ಪೊಗಳಿ ಲೋಕ | ತಿರುಗುವನೇ ೨
ಅನ್ನಂತ ಗುಣ ಗುರು | ಗೋವಿಂದ ವಿಠಲಎನ್ನಂತ ರಂಗದೀ | ಕಾಣಿಸೋ ೩

೬೯
(ಕಂಗಳಿದ್ಯಾತಕೋ…….. ಎಂಬಂತೆ)
ದಾಸನೆಂದೆನಿಸೊ ಎನ್ನಾ | ಶ್ರೀಶ ಹೇ ಸರ್ವೇಶ ಪ
ಹೇಸಿ ವಿಷಯದಿ ಬಹು | ಕ್ಲೇಶಗಳಿಗೊಳಗಾಗಿಘಾಸಿ ಪಟ್ಟಿಹೆನೊ ಹರಿ | ಪೋಷಿಸೂವುದು ಧೊರಿಅ.ಪ.
ಏಸು ಜನ್ಮದ ಸುಕೃತದಿಂದಲಿಲೇಸಾದ ಮಧ್ವ ಮತದಿ ಬಂದು ||ಭಾಸುರ ತತ್ವ ಪ್ರಕಾಶಿಸಿ ಮಹಿದಾಸ ದಾಸರ ಪ್ರೀಯ ಪಿಡಿಕೈಯ್ಯ ೧
ಜ್ಞಾನ ದಾನವ ಬೇಡ್ವೆ | ಭಾವವನಜ್ಞಾನದಿಂದಲೆ ಕಡಿವೆ ಹರಿಯೆ ||ಮೌನಿಕುಲ ಸನ್ಮಾನ್ಯ ಮಾನವಜ್ಞಾನಾನಂದನೆ ವ ಪುಷ ಕಾಯೊ ೨
ಬಾದರಾಯಣ ಭವ್ಯ ರೂಪಾಪಾದಕೆ ನಮಿಪೆನೊ ಶ್ರೀಪಾಮೋದಮುನಿಯ ನುತ | ಪ್ರಮೋದನೆಮೋದವೀಯೋ ಗುರು | ಗೋವಿಂದ ವಿಠಲ೩

೪೮೫
ದಾಸರ ಭಾಗ್ಯವಿದು ಪ
ತಂದೆ ಮುದ್ದು ಮೋಹನ ದಾಸರ ಭಾಗ್ಯವಿದು ಅ.ಪ.
ಕರಿಗಿರಿ ನರಹರಿ ಸಂದರ್ಶನವು | ನರಹರಿ ಭಕುತರ ವಿಹಿತದಸೇವೆ |ಪರಿಪರಿ ಗೈಯ್ಯುತ ಹಿಗ್ಗುತ ನಾನು | ಧರಿಸಿರುವಂಕಿತ ಭಾಗ್ಯವು ಎಲ್ಲಾ ೧
ಉರುಗಾದ್ರಿವಾಸನ ಶರಣರ ಕೂಡೆ | ಸರಸದಿ ಕೇಳುತ ಹರಿ ಮಹಿಮೆಯನುಉರುತರ ಸುಖಸಂತೋಷದಿ ಕೀರ್ತನೆ | ಹಿರಿದಾಗಿ ಪಾಡುತ ನರ್ತಿಪುದೆಲ್ಲ೨
ಭವನಿಧಿ ದಾಟಿಪ ಹವಣೆಯು ಎನಿಸುವ | ಭುವನ ಮೋಹನನ | ಗುಣರೂಪಗಳನವನವ ಕೀರ್ತನೆ ಸ್ತವನದಲಿ ಗುರು | ಗೋವಿಂದ ವಿಠಲ ನುಡಿಸುವುದೆಲ್ಲಾ ೩

೪೫೮
ದಾಸರ ಭಾಗ್ಯವಿದೂ | ಮಾನವೀದಾಸರ ಭಾಗ್ಯವಿದೂ || ಪ
ಸುರಭೂಸುರ ಸೇವ್ಯವು | ಹರಿಕಥೆ ಅಮೃತವನೆರೆದು ಜನಾಳಿಯ | ಪೊರೆದಿಹುದೆಲ್ಲ ಅ.ಪ.
ವೇದೋಪನಿಷದೆಲ್ಲ | ಶೋಧಿಸಿಬೋಧಿಸಿಹರು ಗ್ರಂಥ ||ವಾದಿಗಳನು ತಾ | ವಾದದಿ ಜಯಿಸುತಶ್ರೀದನೆ ಪರೆನೆಂಧ್ಹೇಳಿದುದೆಲ್ಲ ೧
ಪಾತ್ರರ ಸಹವೆರಸೀ | ಭುವಿಯಲಿತೀರ್ಥ ಕ್ಷೇತ್ರ ಚರಿಸೀ ||ಗಾತ್ರ ಮಜ್ಜನದಿ | ತೀರ್ಥಂಗಳ ಪಾವಿತ್ರ್ಯ ಗೈಸಿದ ಮಹಿಮೆಗಳೆಲ್ಲ ೨
ಇಂದು ಭಾಗದಲ್ಲೀ | ಅಂಕಿತಸಂದಿತು ಪಂಢರಿಲೀ ||ನಂದ ನಂದನ ಗುರು ಗೋವಿಂದ ವಿಠಲನೆಛಂದ ಬಂಧುರದಿಂದ ವಂದಿಪುದೆಲ್ಲ ೩

೪೨೮
ದಾಸರಾಯ ಪಾದ ವನಜ | ಸೂಸಿ ಭಜಿಸಿರೋ |ವ್ಯಾಸ ತೀರ್ಥ ಶಿಷ್ಯರೆಂದು | ಭಾಸಿಸಿದ್ದರೋ ಪ
ಭರತ ವರ್ಷಕ್ಕಧಿಷ್ಠಾತೃ | ಜ್ಞಾನ ದಾತರಾಸುರರ ಮುನಿ ನಾರಾದಾಂಶ | ಜಾತರೆನಿಪರಾ||ಪುರವು ಪುರಂದರ ಗಡದಿ | ವಾಸರಿದ್ದರಾಪರಮ ಲೋಭಿ ನವ ಕೋಟಿ | ದ್ರವ್ಯವಿದ್ದರಾ ೧
ಬಂದ ಕಾರ್ಯ ಮರೆತನೆಂದು | ಹರಿಯು ಚಿಂತಿಸೀಇಂದಿರೇಶ ದ್ವಿಜನಾಗಿ | ಹುಡುಗನಾವೆರಸೀ ||ಬಂದು ಮಗನ ಮುಂಜಿಗಾಗಿ | ಧನವನು ಬಯಸೀ ||ನಂದ ಕಂದ ತಿರುಗುತ್ತಿದ್ದ | ಅಂಗಲಾಚಿಸೀ ೨
ಭಿಕ್ಷುಕನ್ನ ಬಿಡದಂತೆ | ಅಂಗಡಿಯಲ್ಲಿಶಿಕ್ಷಿಸೀದ ಆಳುಗಳ | ಲೋಭಿ ತಾನಲ್ಲಿ ||ತ್ರ್ಯಕ್ಷಸೇವ್ಯ ತಿಂಗಳಾರು | ತಿರುಗಿದನಲ್ಲೀಲಕ್ಷಿಸಾದೆ ಮೆರೆಯುತಿದ್ದ | ಕಾಣದಂತಲ್ಲಿ೩
ಕಟ್ಟಕಡೆಗೆ ಸವೆದ ನಾಣ್ಯ | ಚೀಲ ವೆಸೆಯುತ್ತಕಟ್ಟು ಮಾಡ್ದ ದುಡ್ಡೊಂದನ್ನು | ಕೊಳ್ಳೆಂದೆನುತ್ತ ||ಅಟ್ಟುಗಳಿಗೆ ಬೇಸರಿಸಿ | ಮುಂದೆ ಹೋಗುತ್ತ |ಥಟ್ಟನ್ಹೋದ ಹಿತ್ತಲಿನ | ಕದವ ಸಾರುತ್ತ ೪
ಅಲ್ಲಿನಿಂತ ಲೋಭಿ ಸತಿಯ | ಬಳಿಗೆ ಪೋಗುತ್ತಬಲ್ಲ ಹರಿಯ ಧನವ ಬೇಡ್ದ | ಮುಂಜಿಗೆನ್ನುತ್ತ ||ನಲ್ಲ ಬೈವನೆಂದು ಬೆದರಿ | ಇಲ್ಲವೆನ್ನುತ್ತಚೆಲ್ವ ಸತಿಯು ಪೇಳೆ ಅವಳ | ಮೂಗ್ತಿ ನೋಡುತ್ತ ೫
ತವರು ಮನೆಯ ದ್ರವ್ಯದಾನ | ಮಾಡು ನೀನೆಂದಅವಳು ತನ್ನ ಮೂಗುತಿಯ | ಕೊಟ್ಟುದೆ ಛಂದ ||ಇವನು ಅದನ ಸಾಹುಕಾರ್ನ | ಮುಂದಾಕಿ ಅಂದಜವದಿ ನಾನೂರ್ಪಾಕಿ ಹಣ | ತನಗೆ ಬೇಕೆಂದ ೬
ನಾಯಕನು ಕೈಲಿ ತೆಗೆದು ನೋಡುತ್ತಲಿರೇಶ್ರೀಯರಸ ಪೋದತಾನು | ಕಣ್ಣಿಗೆ ಮರೇ ||ಕಾಯುತ್ತಿದ್ದ ಆಳು ಹಿಡುಕಿ | ಸಿಗದೆತಾಬರೇನಾಯಕನದ ಭದ್ರಮಾಡಿ | ಸತಿಬಳಿಗೆ ಬರೇ ೭
ಬರಿಯ ನಾಸಿಕವ ನೋಡಿ | ಮೂಗ್ತಿ ಎಲ್ಲೆನಲುಸರಿಯ ಪಡಿಸಲಿಕ್ಕೆ ಕೊಟ್ಟು | ಇರುವೆ ನೆನ್ನಲುತ್ವರದಿ ತೋರದಿರೆ ನಿನ್ನ | ಅರೆವೆ ನೆನ್ನಲು |ಬರುವೆ ಬೇಗ ಎಂದು ಪೋಗಿ | ಗರದ ಬಟ್ಟಲು ೮
ಕರದಿ ಪಿಡಿದು ತುಳಸಿ ಮುಂದೆ | ಮೊರೆಯ ನಿಡುತಿರೇಗರದ ಬಟ್ಟಲೊಳು ಬಿದ್ದ | ಶಬ್ದವು ಬರೇ ||ಹರುಷದಿ ದಿಗ್ಗನೆ ಎದ್ದು | ಪತಿಗೆ ತಾತೋರೇಗರ ಹೊಡೆದಂತವನಾಗಿ | ಮೋರೆಯ ತೋರೇ ೯
ಹೆಂಡತಿಯ ಕೇಳಿ ತಿಳಿದ | ಆದ ಪರಿಯಾಮಂಡೆ ಬಾಗಿ ತಾನು ಆದ | ಹೊಸ ಪರಿಯಾ ||ಕೊಂಡಾಡಿದ ಪತ್ನಿ ಚರ್ಯ | ಹರಿಯ ಭಕ್ತಿಯಬಂಡುಣಿ ಹರಿಪಾದಾಬ್ಜದಿ | ತೊರೆದ ಮನೆಯ ೧೦
ಸೂರೆ ಮಾಡಿ ಧನವೆಲ್ಲ | ದ್ವಿಜರಿಗರ್ಪಿಸೀನಾರಿಮಣಿ ಸುತರೊಡನೆ | ಹಂಪೇಗಾಗಮಿಸೀ ಸಾರಿ ವ್ಯಾಸ ತೀರ್ಥ ಯತಿಯ | ಪಾದ ನಮಿಸೀಬಾರಿ ಬಾರಿ ಹರಿಯ ತತ್ವ | ಕೇಳಿ ಸುಖಿಸೀ ೧೧
ದಾಸ ಪಂಥಕ್ಕಧಿಕಾರಿ | ಎಂದು ಈಕ್ಷಿಸೀವ್ಯಾಸ ತೀರ್ಥರೊಲಿದವಗೆ | ಉಪದೇಶಿಸೀ ||ಶ್ರೀಶ ಪುರಂದರ ವಿಠಲ | ದಾಸನೆನಿಸೀವ್ಯಾಸ ಗ್ರಂಥ ಸಾರ ಭಾಷೆ | ಪ್ರಾಕೃತ ವೆನಿಸೀ ೧೨
ಅಂಡಾನಂತಕ್ಕೀಶನಾದ | ಮೂರ್ತಿ ಸುಂದರತೊಂಡನಾದ ಮೇಲೆ ತನ್ನ | ಹೃದಯ ಮಂದಿರ ||ಪಿಂಡ ಅಂಡದೊಳಗೆ ಕಂಡು | ಹಿಗ್ಗಿದ ವಿವರ |ಕಂಡವನೆ ಪೇಳ ಬಲ್ಲ | ಅದರ ವಿಸ್ತಾರ ೧೩
ಪೊಂದಿ ಅಪರೋಕ್ಷವನ್ನು | ಸುಜನರುದ್ಧಾರಛಂದದಿಂದ ಮಾಡಿದಂಥ | ದಾಸವರ್ಯರ ||ಅಂದ ಚರಿತೆ ಕೇಳಿ ತೋಷ | ಪೊಂದಿದವರನಂದ ಕಂದ ಪಾಲಿಸುವ | ಬಿಡದೆ ಅವರಾ ೧೪
ಗೋವ ಕಾವ ಗೊಲ್ಲರೊಡೆಯ | ಗೋಪಿಯ ಬಾಲತಾವಕ ಭಕ್ತರ ಪೊರೆವ | ಪಾಂಡವ ಪಾಲಆವ ದಾಸರ ಪೊರೆದಂತೆ ಮೈದುನ ಪಾಲದೇವ ದೇವ ಪೊರೆವ ಗುರು | ಗೋವಿಂದ ವಿಠಲ ೧೫

ರಂಗವಲ್ಲಿ ದಾಸರು ಎಂದು
೪೫೯
ದಾಸರಾಯರ ಪಾಡಿರೋ | ರಂಗನೊಲಿದ ಶ್ರೀ |ದಾಸರಾಯರ ಪಾಡಿರೋ ಪ
ದಾಸರಾಯರ ಪಾಡಿ | ದೋಷಗಳೀಡಾಡಿಶಾಶ್ವತ ಲೋಕಗ | ಳಾಶಿಪ ಜನರೆಲ್ಲಾ ಅ.ಪ.
ಮಾನವಿ ಕ್ಷೇತ್ರಸ್ಥಿತನೂ | ಘನಕರ್ಣೀಕ ನರಸಪ್ಪನೆಂಬ ದ್ವಿಜನೂ |ಜ್ಞಾನಿ ತಿಮ್ಮಣ್ಣನ ಸತಿಸಹಿತ ಸೇವಿಸೆಮಾನ್ಯ ಸಹ್ಲಾದ ತಾ ಸುತನಾಗಿ ಜನಿಸಿದ ೧
ಶಾಲಿವಾಹನ ಶಕವೂ | ಮತ್ತೇಗಾಳಿಗಣಯುತ ಹತ್ತಾರ್ನೂರು |ಕೀಲಕವತ್ಸರ ಶುಕ್ಲ ಶ್ರಾವಣದಲ್ಲಿಶೀಲ ವೆರಡೆನೆ ದಿನ ಜನಿಸಿಹರನ್ನಾ ೨
ಈತನು ಹರಿಭಕ್ತನೊ | ಪ್ರಹ್ಲಾದಗೆಪ್ರೀತಿಯ ಸೋದರನೋಧಾತ ಜನಕ ಹರಿ ಮಾತಿನಿಂದಲಿ ಇವಖ್ಯಾತನಾಗಿ ಶ್ರೀನಿವಾಸನೆಂದೆನಿಸಿದ ೩
ಆದ ಸಕಾಲದಿ ದ್ವಿಜನು | ಸದ್‍ಬೋಧಿತ ವರದೇಂದ್ರರಿಂ |ಭೇದ ಮತದೊಳದ್ವಿತೀಯ ನೆಂದೆನಿಸುತ್ತವಾದಿ ನಿಗ್ರಹದೊಳತ್ಯಾದರವನೆ ಪೊತ್ತ೪
ಒದಗಲುದ್ಧರ‍ುತ ಕಾಲವೂ | ಪ್ರಾಪ್ತಸಾಧು ವಿಜಯ ದಾಸರು | ಮುದದಿ ನರ್ತವಗೈದು ಕೀರ್ತನೆ ಪಾಡಲುಹದಗೆಟ್ಟನಿವನೆಂದು ಬಿರುನುಡಿ ನುಡಿದಂಥಾ೫
ಒದಗಲುದರ ರೋಗವೂ | ಮುಂದೆಹದನ ಕಾಣದೆ ತಪಿಸಾಲು |ಮೋದ ತೀರ್ಥರ ರೂಪ ಆದರದಲಿ ಭಜಿಸಿಸಾಧು ಸೋತ್ತಮ ದ್ರೋಹ ಕಳವ ಮಾರ್ಗವ ತಿಳಿದ೬
ವಿಜಯ ದಾಸರ ಪಾದವಾ | ತಮ್ಮಯನಿಜ ಶಿರದೊಳು ಪೊತ್ತು ಮೆರೆವಾ |ನಿಜ ಶಿಷ್ಯ ಗೋಪಾಲದಾಸರಲ್ಲಿಗೆ ಬಂದುಭಜಿಸೆ ಅವರ ಆಯು ನಾಲ್ವತ್ತು ಪಡೆದಂಥ ೭
ಮಂತ್ರಿತ ಭಕ್ಕರಿಯಾ | ಭುಜಿಸೆ ದೇಹಯಂತ್ರ ಸಾಧನ ಕೊದಗಲೂ |ಮಂತ್ರೋಪದೇಶವ ಗೊಳ್ಳುತ ಮುದದಿಂದೆಯಂತ್ರೋದ್ಧಾರಕ ಪ್ರಿಯ ರಂಗನ ಒಲಿಸಿದ ೮
ಇಂದು ಭಾಗದಿ ಸ್ನಾನವೂ | ಮಾಡುತಲಿರೆಸ್ಕಂಧಾ ರೋಹಿತ ಶಿಲೆಯಸ್ಥ |ಇಂದಿರಾ ರಮಣ ಶ್ರೀ ಜಗನ್ನಾಥ ವಿಠಲನಸುಂದರಾಂಕಿತವನ್ನು ಧರಿಸಿದ ಶಿರದಲ್ಲಿ ೯
ಪಾಂಡುರಂಗನ ಕಾಣುತ | ತನ್ನಯದಿಂಡುಗೆಡಹಿದ ಆಕ್ಷಣಾ |ಅಂಡಜಾಧಿಪನುದ್ದುಂಡ ದೇವರ ದೇವಪುಂಡರೀಕಾಕ್ಷನ ಪಾದಕೆ ಶರಣೆಂದ ೧೦
ಸ್ವಾದಿ ಕ್ಷೇತ್ರಕ್ಕ ಪೋಗೀ | ಪೂಜ್ಯರಾದವಾದಿರಾಜರ ಪೂಜಿಸೀ |ಸಾಧು ವರ್ಯರ ಆಜ್ಞಾಧಾರಕರಿವರಾಗಿಬುಧರಿಗೆ ಹರಿಕಥಾ ಸುಧೆಯ ಸಾರವನಿತ್ತ ೧೧
ಪದ ಸುಳಾದಿಗಳಿಂದಲಿ | ಹರಿಯ ಪಾದಸದ್ವನಜವ ಸ್ತುತಿಸುತಲೀ |ಹೃದಯ ಸದ್ಮದಿ ತದ್ಧಿಮಿ ಧಿಮಿ ಧಿಮಿಕೆಂದುವಿಧಿಪಿತ ಹರಿಯನ್ನ ಕುಣಿಸಿ ಮೋದಿಸಿದಂಥ ೧೨
ಸುವತ್ಸರವು ಶುಕ್ಲದೀ | ಸಿತಭಾದ್ರನವಮಿ ತಾರೆಯು ಮೂಲದೀ |ರವಿಯ ವಾರವು ಸಂದ ಶುಭದಿನದಲಿ ಗುರುಗೋವಿಂದ ವಿಠಲನ ಸೇರಿ ತಾಮೆರೆದಂಥ ೧೩

೪೮೬
ದಾಸರಾಯಾ ತಂದೇ ಮುದ್ದು ಮೋಹನ | ದಾಸರಾಯ ಪಶೇಷನ ಸಮ ನೀ ದಾಸರ ಪಾಲಿಸೆಭಾಸುರ ಕರಿಗಿರಿ ವಾಸಿಸಿದೆ ನೀ ಅ.ಪ.
ಕರಿಗಿರಿ ಗುಹೆಯಲಿ ಎರಡೈದ್ವತ್ಸರವರ ತಪ ಗೈದ ಪರೋಕ್ಷವ ಪಡದೇ ೧
ಪಾಪಿಗಳುಸುರುವ ತಾಪದ ವಚನಕೆಕೋಪಿಸದಲೆ ನೀ ಪಾಲಿಸುವೀಯಾ ೨
ಇಂದಿಗೆ ಸಂದವು ವಿಂಶದ್ವತ್ಸರಕುಂದದೆ ಸಾಕಿದೆ ಪರಮಾರ್ಥೇಂದುವ ೩
ಪ್ರಮಾಥಿ ವತ್ಸರ ವದ್ಯ ಸುಫಾಲ್ಗುಣ ಪಂಚಮಿಯಲಿ ಮಾರುತಿಯನು ಸ್ಥಾಪಿಸಿದೇ ೪
ಭಾರತೀಶ ಮುಖ್ಯ ಪ್ರಾಣಾಂತರ್ಗತಗುರು ಗೋವಿಂದ ವಿಠ್ಠಲ ಪರನೆಂದು ಸಾರಿದೆ ೫

೪೩೬
ದಾಸರಿವರ ನೋಡಿರೊ | ಗುರು ವಿಜಯ |ದಾಸರಿವರ ಪಾಡಿರೋ ಪ
ವ್ಯಾಸರಾಜ್ಞೆಯಲಿಂದ | ವ್ಯಾಸ ಕಾಶಿಗೆ ಪೋಗಿ |ಶ್ರೀಶಾನುಗ್ರಹದಲಿ | ಭಾಸಿಸೀ ಮೆರೆದಂಥ ಅ.ಪ. ಎರಡನೆ ಯುಗದೊಳಗೆ | ಸುರಲೀಲ | ವರಕಪಿ ಎಂದೆನೆಸಿ |ಶಿರಿ ರಾಮಚಂದ್ರನ್ನ | ಚರಣ ಸೇವಕರಾಗಿಸುರ ವಿರೋಧಿಗಳ ಬಹಳ ಸಂಹರಿಸಿದ ೧
ಯಾದವರಲಿ ಜನಿಸಿ | ನಿಕಂಪಾಖ್ಯ | ಶ್ರೀದಕೃಷ್ಣನ ಭಜಿಸಿ |ಮಾಧವ ಗೆದುರಾಂತ | ದೈತ್ಯರ ಸದೆಬಡಿದುಯಾದವೇಶನ ಪದ | ಕರ್ಪಿಸಿ ಮೆರೆದಂಥ ೨
ವರಕಲಿಯುಗದೊಳಗೆ | ತುರುಕರು | ವರಜನ್ಮದಲಿ ಉದಿಸಿ | ಪುರಂದರ ದಾಸರ | ವರ ಗೃಹದಲಿ ಇದ್ದುಹರಿಚರಿತೆ ಶ್ರವಣದಿ | ವಿಪ್ರನಾಗ್ಯುದೀಸಿದ ೩
ಮಧ್ವಪತಿಯ ನಾಮದಿ | ಭೃಗ್ವಂಶದಿ | ಮುದ್ದು ಮಗನೆನಿಸಿಮಧ್ವೇಶ ಹರಿಪಾದ | ಶ್ರದ್ಧೆಯಿಂದಲಿ ಭಜಿಸಿಮಧ್ವರಾಯರ ಮತ | ತುತಿಸಿ ಮೋದಿಸಿದಂಥ ೪
ಚೀಕನಪರಿ ಕ್ಷೇತ್ರದೀ | ದಾಸಪ್ಪನು | ಆ ಕೂಸಮ್ಮನ ಉದರದಿಬೇಕಾಗಿ ಜನಿಸುತ್ತ | ಪ್ರಾಕು ಪ್ರಾರಬ್ದವನೇಕ ಬಗೆಯಲಿ ಉಂಡ | ಮಾಕಳತ್ರನ ಕಂಡ ೫
ದಾಸನಾಗುತ ಸ್ವಪ್ನದಿ | ಪುರಂದರ | ದಾಸರೂಪಿಯಲಿಂದ |ಸೂಸಿ ಶಾಸ್ತ್ರವ ಮಧ್ವ | ಭಾಷ್ಯಾನು ಸಾರದಿ |ಭಾಷೆ ಕನ್ನಡದಲ್ಲಿ | ಮೀಸಲೆನಿಸಿ ಪೇಳ್ದ ೬
ಧ್ಯಾನೋಪಾಸನೆ ಕರ್ಮವ | ಯೋಗ್ಯರಿಗೆ | ಗಾನಗೈದಿಹ ಸುಜ್ಞಾನೀ | ಮಾನ್ಯ ಮಾನದ ದುಷ್ಟ | ಗಾನಕೆ ಮನ ಕೊಡದೆಮೌನಿಯಾಗುವ ಮಾರ್ಗ | ದಾನವ ಮಾಡೀದ ೭
ಸ್ವಪ್ನದಲ್ಲೆನಗವರೂ | ದರ್ಶನದಿ | ಕೃಪ್ಪೆಯಲನುಗ್ರಹಿಸಿ |ಅಪ್ಪಾರ ಮಹಿಮರು | ತಪ್ಪದೆ ತ್ರಯ ಬಾರಿಒಪ್ಪಿ ತೀರ್ಥವನಿತ್ತು ಕಳುಹಿದ ಮಹಾಂತ ೮
ಯುವ ವತ್ಸರ ಕಾರ್ತೀಕ | ಸಿತ ದಶಮಿ | ಆವಗುರುವಾಸರದಿಭಾವಜ ಪಿತ ಗುರು | ಗೋವಿಂದ ವಿಠಲನಭಾವದಿ ಕಂಡು ಸುಯೋಗದಿ ಪೊರಟಂಥ ೯

೫೬೩
ದಾಸವರವರದ ವಿಠಲ | ಸಲಹೊ ಇವಳಾ ಪ
ಈಶಾದಿ ದಿವಿಜೇಡ್ಯ | ವಾಸವಾನುಜನೇ ಅ.ಪ.
ಕ್ಲೇಶನಾಶನನೆ ಮ | ಧ್ವೇಶ ನಿನ್ನಡಿ ದಾಸ್ಯಆಶಿಸೂವಳ ಬಿಡದೆ | ಶ್ರೀಶ ಕೈಪಿಡಿದೂದೋಷರಾಶಿಯ ಕಳೆದು | ಪೋಷಿಸಲು ಬಿನ್ನವಿಪೆಹೇಸದಾಶಿವ ವಂದ್ಯ | ಮೇಶ ಮಹಿದಾಸಾ ೧
ಪತಿಸೇವೆ ಗುರುಸೇವೆ | ಹಿತದಿಂದ ಮಾಳ್ಪಂಥಮತಿಯನೆ ಕರುಣಿಸುತ | ಕ್ಷಿತಿರಮಣ ನಿನ್ನಾಸ್ರ‍ಮತಿಯ ಕೊಡು ಸತತ ಸಂ | ಸೃತಿಯನೇ ಕಳೆಯಲ್ಕೆಗತಿಗೋತ್ರ ನೀನಾಗಿ | ಪಥದೋರೊ ಹರಿಯೇ ೨
ಏಕಮೇವನೆ ದೇವ | ಪ್ರಾಕ್ಕು ಕರ್ಮವ ಕಳೆದುನೀ ಕೊಡುತ ಸುಜ್ಞಾನ | ಭಕುತಿ ವೈರಾಗ್ಯಕಾಕು ಸಂಗವ ಕೊಡದೆ | ನೀಕೊಟ್ಟು ಸತ್ಸಂಗಮಾಕಳತ್ರನೆ ಸಲಹೊ | ಈಕೆ ಕೈ ಪಿಡಿದೂ ೩
ಖೇಚರೋತ್ತಮ ವಾಹ | ಕೀಚಕಾರಿ ಪ್ರಿಯನೆಮೋಚಕೇಚ್ಛೆಲಿ ಸವ್ಯ | ಸಾಚಿಸಖಕೃಷ್ಣಾ |ವಾಚಾಮಗೋಚರನೆ | ನೀಚೋಚ್ಚ ತರತಮವವಾಚಿಸುತ ಇವಳಲ್ಲಿ | ಮೋಕ್ಷಪ್ರದನಾಗೋ ೪
ದೇವವರ ಭವ್ಯಾತ್ಮ | ಭಾವಕೊಲಿಯುವ ಹರಿಯೆನೀವೊಲಿಯದಿನ್ನಿಲ್ಲ | ಆವ ಈ ಜಗದೀ |ಕಾವುದಿವಳನು ಎಂದು | ಭಾವದಲಿ ಭಿನ್ನೈಪೆಭಾವುಕರ ಪಾಲ ಗುರು | ಗೋವಿಂದ ವಿಠಲಾ ೫

೭೦
ದೂರ ಮಾಡುವರೇ ಶ್ರೀಶ ಪ
ದೂರ ಮಾಡುವರೇದೂರ ಮಾಡುವರೇನೋ ಶ್ರೀಶದಾರಿ ಕಾಣದೆ ಮೊರೆಯನಿಡುವೆಆರು ಕಾಯುವರಿಲ್ಲ ಶ್ರೀಶಸಾರಸಾಕ್ಷ ಸಲಹೆ ಬೇಡುವೇ ಅ.ಪ.
ಸಕ್ತಿ ಇಲ್ಲವೋ | ನಿನ್ನೊಳಾಸಕ್ತಿ ಇಲ್ಲವೋ |ಸಕ್ತಿ ನಿನ್ನಲ್ಲಿಲ್ಲದೇಲೇಮುಕ್ತಿ ಇಲ್ಲವೆಂದು ಶೃತಿಯಉಕ್ತಿ ಕೇಳಿ ಕೇಳಿದಾಗ್ಯೂ ವಿ-ರಕ್ತಿ ಪುಟ್ಟಲಿಲ್ಲ ಎನಗೆ ಭಕ್ತಿಮಾರ್ಗ ದೂರವಾಯ್ತೊ ೧
ದುಷ್ಟ ವಿಷಯದೀ | ಮನವುಅಟ್ಟಿ ಪೋಗೋದೋ |ಎಷ್ಟು ಪೇಳಿದಾರೂ ಮನವುನೆಟ್ಟಗಾಗೋ ಪರಿಯ ಕಾಣೆಸೃಷ್ಠಿಗೀಶ ಮನವ ಅಭಿಧಸೊಟ್ಟ ಮನವ ಸರಿಯ ಪಡಿಸಿ | ಶ್ರೇಷ್ಠ ನನ್ನ ಮಾಡದ್ಹಾಂಗೆ ೨
ಕೈಯ್ಯ ಬಿಡುವರೇ | ದಯಾಳು ವಿಷಯಧುಯ್ಯಲು ಕಳೆಯದೇ |ಪ್ರೇರ್ಯ ಪ್ರೇರಕನಾಗಿ ನೀನುಮಯ್ಯ ಮರೆಸಿ ಧೈರ್ಯಗೆಡಿಸೆಆರ್ಯರಿದನ ಸಯ್ಯೆಂಬೊರೇನೋಅಯ್ಯ ಕೈಯ್ಯ ಬಿಡದೆ ಕಾಯೋ | ಗುರು ಗೋವಿಂದ ವಿಠಲ ೩

೨೩೪
ದೇವರಾಜ ನುತನೆ ಖಗಪಾ | ಬಲ | ದೇವ ಚರಣ ಮಧುಪ ಪ
ಭಾವಜಾರಿ ಸಮನು ಎನಿಪ | ತಾವಕನ್ನ ಸಲಹೊ ಕಾಶ್ಯಪ ಅ.ಪ.
ಸುರಪುರದಿಂ ಸುಧೆಯ ತರಲೂ | ತ್ವರಿತ ದಿಂದ ಹಾಕುತಿರಲೂ |ಉರು ವಿಶಾಲ ಜಲಧಿ ಪೊಗಲೂ | ಗರುವ ನಿಷಾಧರ ನುಂಗಲೂ ||ಸೇರಲು ಬಡ | ಹಾರುವ ತನ | ಭಾರ್ಯಳ ಸಹ | ಗಾರುಡ ಮುಖ ಕಾರುಣ್ಯದಿ | ಹೊರಡೂಡುತ | ಹಾರಿದೆ ವಿ | ಸ್ತಾರಾಮೆಗೆ ೧
ಕರಿಯು ಕೂರ್ಮ ದ್ವೇಷದಿಂದಾ | ನೆರೆಹೊರೇಯ ದುಃಖದಿಂದಾ |ಇರಲು ಕಳೆಯೆ ಗರುಡನಿಂದಾ | ವರಮುನಿ ಪೇಳ್ದ ಮುದದಲಿಂದಾ ||ಭಾರಿಲಿ ಇಹ | ಕೂರಮ ಕರ್ಯ | ಹರವ ಮೇಲೆ | ಢೋರದ ತರುಕ್ಹಾರಲದೂ | ದಾರಿತ ವಿ | ಸ್ತಾರದ ಮಹಿ | ಮೋರುಗುಣಿ೨
ಗುರು ಗೋವಿಂದ ವಿಠಲನಿಂದಾ | ಸರ್ವವೇದ್ ಬಲದಲಿಂದಾ ||ತರದು ದೇವ ಸೈನ್ಯ ವೃಂದಾ | ಕರದಿ ಅಮೃತ ಕಲಶ ತಂದಾ ||ಕಾರುಣಿ ದಿತಿ | ಜಾರಿಗೆ ಮಾತೆ | ಕಾರಾಗೃಹ | ತಾರಣ ಮುರವೈರಿಯ ವಹ | ತೋರೈ ಹೃ | ದ್ವಾರಿಜದಿ | ಶ್ರೀಹರಿಪದ ೩

೨೯೮
ದೇವಿ ನರ್ಮದೆ ಪಾಲಿಸಮ್ಮಾ ಪ
ಕಾವನಯ್ಯನ ಚರಣ ತೋರಿಕಾವುದೆಮ್ಮ ಪಾವನಾತ್ಮಕೆ ಅ.ಪ.
ದಣಿದು ಬಂದೆ ನಿನ್ನ ಅಡಿಗೆ | ಘನಗಿರಿ ಸಂಜಾತೆ – ದೇವಿಮಣಿದು ನಿನ್ನ ತೀರ್ಥ ಸೇವನ | ಜನರ ಕಲುಷ ಹರಣವಮ್ಮ ೧
ವರ ವಿಸ್ತಾರ ಪಾತ್ರವಮ್ಮ | ನರರಾಯಾಸ ಶಾಂತವಮ್ಮಅರುಣ ಉದಯದಿಂದ ನಿನ್ನ | ಸುರನರಾದಿ ಸೇವಿಸುವರು ೨
ವರ ಸುಜಪದಮಾಲೆ ಕರದಿ |ದರವು ಪದುಮ ಗ್ರಂಥಪಾಣಿಗುರು ಗೋವಿಂದ ವಿಠಲ ಚರಣ |ನಿರತ ಧ್ಯಾನಾನಂದ ಮಗ್ನೆ೩

೨೭೭
ದೇವಿ ಭದ್ರಾ ಎಮ್ಮ ಪಾಲಿಸಮ್ಮ |ದೇವ ದೇವೇಶ ಹರಿ ಮಹಿಷಿ ಎನಿಸಿಹಳೇ ಪ
ವಸುದೇವ ಭಗಿನಿ ಕೈಕೆಯೀ ಉದರದಲಿಅಸುವ ನೀಧರಿಸುತ್ತ ಅವತರಿಸುತಾ |ವಸುಧೆಯೊಳು ಸುಗುಣ ಗಣಯುತೆಯು ನೀನಾಗಿಪೆಸರಾಂತೆ ‘ಭದ್ರೆ’ ಎಂದೆನುತ ಅವನಿಯಲೀ ೧
ಪಿತನು ನಳನೆಂಬನಿಗೆ ಪ್ರೀತಿಯಲಿ ನೀ ಪೇಳ್ದೆಹಿತವು ಶ್ರೀ ಹರಿಗೆಂದು ನುತಿಸುವ ಸುಕರ್ಮ |ಅತಿಶಯದೆ ಪೂಜೆಯಿಂದಧಿಕದಲಿ ಶ್ರೀ ಹರಿಯುನುತಿಗೆ ಪ್ರೀತಿಸುವನೆಂದೊರೆದೆ ಭಕುತಿಯಲೀ೨
ಹರಿನಾಮ ಸ್ಮರಿಸುತ್ತ ಹರಿ ಚರಣ ನಮಿಸುವರದುರಿತರಾಶಿಗಳಿರದೆ ಪರಿಹಾರವೆನುತಾ |ಒರೆಯುತೀಪರಿ ನಮನ ಭಕ್ತಿಗೇ ಪ್ರಾಶಸ್ತ್ಯಪರಿಪರಿಯ ಪೇಳಿಹಳೆ ನಮಿಪೆ ನಿನ್ನಡಿಗೇ೩
ಈ ಪರಿಯ ತಪಗೈದು ದ್ವಾಪರದ ಯುಗದಲ್ಲಿಶ್ರೀ ಪತಿಯ ದರ್ಶನದಿ ತಾಪತ್ರಯ ಕಳೆದೂ |ಆ ಪರಮ ಪುರುಷನ್ನ ಕೈ ಪಿಡಿದ ಮಹ ಭದ್ರೆಕಾಪುರುಷನಾದೆನ್ನ ಪಾಪ ಪರಿಹರಿಸೇ ೪
ಭದ್ರಾಣಿ ಪತಿಗಿನ್ನು ಕಾದ್ರವೇಯನು ಮತ್ತೆಆದ್ರಿ ಮಂದಿರ ತಂದ ಅವಿಕಾರಿ ವಿಪಗೇ |ಸಿದ್ಧೈದು ಗುಣದಿಂದ ಹೀನಳೆಂದೆನಿಸುತ್ತಭದ್ರ ಗುರು ಗೋವಿಂದ ವಿಠಲ ಪ್ರಿಯೆ ಪಾಹೀ ೫

೨೭೬
ದೇವಿ ಲಕ್ಷಣೆ ಎಮ್ಮ ಸಲಹ ಬೇಕಮ್ಮಭಾವದಲಿ ನೀನಿದ್ದು ಭಾವನಯ್ಯನ ತೋರೀ ಪ
ಪಿತನು ಬೃಹತ್ಸೇನ ನಿನಗಾಗಿ ಸ್ವಯಂವರವಹಿತದಿಂದಲೆಸಗುತ್ತ ಲಕ್ಷ್ಯವನೆ ಬಿಗಿದೂ |ಅತಿಶಯದ ಧನುವಿಗೆ ಸಜ್ಜಿಸುತ ಬಾಣವನುಚತುರತೆಲಿ ಭೇದಿಪಗೆ ಸುತೆಯ ಪಣವೆಂದ೧
ದ್ರೌಪದಿಯ ವೈವಾಹ ಮತ್ಸ್ಯ ಯಂತ್ರವಿದಲ್ಲಔಪಚಾರಿಕವೆಲ್ಲ ಸರ್ವವಿಧ ಛನ್ನಾ |ವೈಪರೀತ್ಯದಿ ದ್ವಾರ ಉಪರಿ ಇರುವುದು ಕೇಳಿಕಾಪುರುಷಗಿದು ಕಾಂಬ ಮಾರ್ಗವೇ ಇಲ್ಲ ೨
ಸೂತನುತ ಮಾಗಧನು ಕೌತುಕದ ಕೌರವರುಪಾರ್ಥನೂ ಅವನಣ್ಣ ಭೀಮಸೇನಾ |ಆತು ಧನುವನು ಲಕ್ಷ್ಯ ಭೇದಿಸಲೆ ಬೇಕೆಂದುಪೃಥಿವಿಪರು ಮತ್ತಿತರು ಬಂದು ಸೇರಿದರು ೩
ಸಜ್ಜುಗೈಯಲು ೫ನುವ ಆರಿಂದಲಾಗದಿರೆಲಜ್ಯೆಯಿಂದಲಿ ಮರಳಿ ೫ೀಗುವರೆ ಬಹಳ |ಅರ್ಜುನನು ತಾನೊಬ್ಬ ಲಕ್ಷ್ಯವೀಕ್ಷಣ ಶಕ್ತಅರ್ಜುನಾಗ್ರಜ ಹರಿಗೆ ಅಪರಾಧವೆನೆ ಸರಿದ ೪
ನೆರೆದ ಸಭೆಯಲ್ಲಿ ಪುಷ್ಪಹಾರವನೆ ಪಿಡಿಯುತ್ತಬರುತ ವೈಯ್ಯಾರದಲಿ ಶಿರಿ ಕೃಷ್ಣ ಕಂಠದಲ್ಲಿ |ಇರಿಸಿ ಪರಮಾನಂದ ಭರಿತಳಾಗಲು ಹರಿಯುಕರಪಿಡಿದು ಹೊರವಂಟ ತನ್ನ ದ್ವಾರಕಿಗೇ ೫
ಮೊರೆಯುತಿರೆ ಬಗೆ ಬಗೆಯ ಸುರವಾದ್ಯ ವೈಭವದಿಸುರರು ಪರಿ ಪರಿ ಪುಷ್ಪ ವೃಷ್ಟಿಗಳ ಗರೆಯೇ |ದುರುಳರೆದುರಾಗಿ ಸಂಗರಕೆ ಬರುತಿರಲುಹರಿ ಭೀಮರೆದುರಿಸದೆ ದುರುಳರೋಡಿದರು ೬
ದೇವಿ ಲಕ್ಷಣೆಯ ವೈವಾಹದುತ್ಸವವಆವ ವಿಬುಧರು ಕೇಳಿ ಮೋದ ಬಡುವಂಥ |ಧೀವರರ ಮನೋಭೀಷ್ಟ ಪೂರ್ಣವನೆ ಗೈಯ್ಯುವನುದೇವ ಗುರು ಗೋವಿಂದ ವಿಠಲ ಕೃಪೆಯಿಂದ ೭

೨೧೪
ದೇವಿ ಶ್ರೀಸರಸ್ವತಿಯೆ ಕಾಯೇ ಪ
ಮಾವಿನುತ ಹರಿನಾಮ ಸಂತತದಿ | ನುಡಿಸೀ ಅ.ಪ.
ಶೈಲಜೆಯ ಪತಿ ಮಾತೆ | ನಾಲಗೆಯಲೀ ನಿಂತುಕಾಲ ಕಾಲಕೆ ಹರಿಯ | ಲೀಲಾತಿಶಯವಾ |ಪೇಳಿಸುತ ಜಿಹ್ವಾಂಗ | ಸಾರ್ಥಕೆನಿಪುದು ಎಂದುಕೇಳುವೆನು ವರ ನಿನ್ನ | ಪಾಲಿಪುದು ಅದನ ೧
ವಿದೈಗಳಿಗಭಿಮಾನಿ | ಬುದ್ಧಿ ಪೂರ್ವಕ ಬೇಡ್ವೆತಿದ್ದಿ ಎನ್ನಲಿ ಇಹ ಅ | ವಿದ್ಯೆಗಳನೆಲ್ಲಾ |ಮಧ್ವೇಶ ಹರಿಯೊಲಿವ | ಶುದ್ಧ ಸಾಧನವಿತ್ತುನಿದ್ರೆಯಿಂದೆಚ್ಚರಿಸಿ | ಬುದ್ಧಿ ಪ್ರದಳೆನಿಸೇ ೨
ಅಜನ ಅರ್ಧಾಂಗಿನಿಯೆ | ಪ್ರಜ್ವರವ ಕಳೆವಂಥಸುಜನ ಸಂಗವನಿತ್ತು | ರಜ ದೂರನೆನಿಸು |ಅಜನ ಜನಕನು ಗುರು | ಗೋವಿಂದ ವಿಠಲ | ಪದಅಬ್ಜವನು ತೋರವ್ವ | ನಿಜ ಹೃದಾಬ್ಜದಲೀ೩

೫೬೨
ದ್ವಾರಕಾನಾಥ ವಿಠಲ | ಪೊರೆಯ ಬೇಕಿವಳಾ ಪ
ಕಾರುಣಿಕ ಶ್ರೀ ಹರಿಯೆ | ಸರ್ವ ಮಂಗಳನೇ ಅ.ಪ.
ಶೀಲ ಗುಣ ಸಂಪನ್ನೆ | ಮಾಲೋಲ ತವ ಪಾದಓಲೈಪಜನರಲ್ಲಿ | ಲಾಲಿಸೋ ಇವಳಾ |ಮೇಲಾಗಿ ಭಿನ್ನವಿಪೆ | ಪಾಲಿಸಲಿ ಬೇಕೆಂದುಶ್ರೀ ಲೋಲ ಕಮಲಾಕ್ಷ | ಬಾಲ ಗೋಪಾಲ ೧
ಕಾಮ ಜನಕನೆ ದೇವ | ಕಾಮಿತವ ಸಲಿಸುತ್ತವಾಮಾಂಗಿಯನು ಪೊರೆಯೊ | ಕಾಮಿತಾರ್ಥದನೇ |ಯಾಮ ಯಾಮಕೆ ನಿನ್ನ | ನಾಮಸ್ರ‍ಮತಿ ಕರುಣಿಸುತನೀ ಮಾಡಿ ಮಾಡಿಸೊ ನೇಮ ಸಾಧನವಾ ೨
ಮಧ್ವ ಮತ ಪದ್ಧತಿಯ | ವೃದ್ಧಿಗೈಸಿವಳಲ್ಲಿಪದ್ಮನಾಭನೆ ದೇವ | ಮಧ್ವರಮಣಾ |ಶುದ್ಧ ಭಕ್ತಿ ಜ್ಞಾನ | ಸಿದ್ಧಿಸುತ ಇವಳಲ್ಲಿಮುದ್ದು ಗುರು ಗೋವಿಂದ | ವಿಠಲ ಉದ್ಧರಿಸೋ ೩

೭೧
ಧನ್ವಂತ್ರಿ ನಾ ನಿನ್ನ ಅಣುಗನೋ – ತ್ರೈಗುಣದೂರ ಅಣುಗಣು ಘನಘನಾ ಪ
ಆಲಯ ತ್ಯಜಿಸೆಂದು ಧನ್ವಂತ್ರಿ | ಚಿಕಿತ್ಸಾಲಯ ಪೋಗೆಂದು ಧನ್ವಂತ್ರಿವ್ಯಾಳೆ ನೋಡಿ ಪೇಳ್ದೆ ಧನ್ವಂತ್ರಿ | ಎನ್ನಮೇಲೆ ಕರುಣವ ಮಾಡ್ಹೆ ಭವ ಹಂತ್ರಿ ೧
ಅಪಮೃತ್ ಕಳೆದೆಯೊ ಧನ್ವಂತ್ರಿ | ಬಲುತಪಸಿ ಮಾತೆ ಶೋಕ ಧನ್ವಂತ್ರೀ |ಅಪಹರಿಸಿ ಸುಖ ತೋರ್ದೆ ಧನ್ವಂತ್ರಿ | ಬಲುಕೃಪಣ ವತ್ಸಲನಹುದೊ ಭವ ಹಂತ್ರೀ ೨
ಸ್ನಾನ ಸಂಧ್ಯಾವಿಲ್ಲ ಧನ್ವಂತ್ರೀ | ಸೂಕ್ಷ್ಮಸ್ನಾನಾನು ಸಂಧಾನ ಧನ್ವಂತ್ರೀ |ಜ್ಞಾನಾವೆ ಪಾಲಿಸೊ ಧನ್ವಂತ್ರೀ | ಈಸುಜ್ಞಾನವೇ ಸ್ಥಿರವಿರಲಿ ಭವಹಂತ್ರೀ ೩
ಸತಿಸುತರ ಪ್ರಾರ್ಥನೆಗೆ ಧನ್ವಂತ್ರೀ | ಅತಿಹಿತದಿಂದ ಸಲಹೀದೆ ಧನ್ವಂತ್ರೀ |ಗತಿಪ್ರದ ಬಿರುದಾಂಕ ಧನ್ವಂತ್ರೀ | ಮಮರತಿ ಇರಲಿ ತವ ಪದದಿ ಭವಹಂತ್ರೀ ೪
ಭವರೋಗ ಭೇಷಜ ಧನ್ವಂತ್ರೀ | ಎನ್ನಅವಗುಣವೆಣಿಸೋರೆ ಧನ್ವಂತ್ರೀ |ಧೃವ ಬಲಿ ಕರಿವರದ ಧನ್ವಂತ್ರೀ | ಗುರುಗೋವಿಂದ ವಿಠಲನೇ ಧನ್ವಂತ್ರೀ ೫

೪೪೭
ಧೇನುಪಾಲ ದಾಸಾರ್ಯಾ | ನುತಿಸುವೆಮಾನವೀಶನ ಪೊರೆದಾರ್ಯಾ ಪ
ಕಾಣೆ ನಿನಗೆ ಸಮ ಕರುಣಾಳುಗಳನುಶ್ರೀನಿವಾಸರ ಪೊರೆದಾರ್ಯಾ ಅ.ಪ.
ಯತಿವರ ವರದೇಂದ್ರರ ವರಬೋಧ ಪಡೆದು ಸಚ್ಛಾಸ್ತ್ರಗತಿಯನೆ ತಾ ಗಳಿಸುತಹಂ ಮತಿ ವಿಶಿಷ್ಟ ತಚ್ಛಾತ್ರ |ಹಿತವ ನುಡಿಯೆ ವಿಜಯಾರ್ಯಾಗತ ತಿಳಿದು ಸುಪಾತ್ರಕೃತಕನಟಿಸಿ ತಾ ಕಳುಹಿದವರ ಉಪಚಾರದಿ ಮಾತ್ರ ೧
ಉತ್ತಮ ನಿಂದೆಯ ಕೃತಿಗೆ ಪ್ರಾಪ್ತಿ ಇವಗೆ ಅತಿರೋಗಇತ್ತ ಮಾತೆಗರಿವಾಯ್ತು ಸುತನ ಕ್ಷೀಣಾರ್ಯುರ್ಯೋಗ |ಅತ್ತ ಅನಿಲಾಜ್ಞೆ ಪೊತ್ತು ವಿಜಯಾರ್ಯಪದ ಸುಯೋಗಪ್ರಾಪ್ತಿಗೈಸಿ ಕ್ಷಮೆಯಾಚಿಸಿ ಆಯ್ತಿವಗೆ ತವಪದ ಯೋಗ ೨
ಬಂದ ದ್ವಿಜಗೆ ಗುರು ಅಣತಿಯಿಂದಲಿ ನಂದ ತೋರ್ದೆ ಆಗಛಂದದಿ ಮಂತ್ರಿತ ರೊಟ್ಟಿಯ ನೀಯಲು ತಿಂದು ಕಳೆದರೋಗ |ಕಂದಗಿತ್ತು ನಿನ್ನರ್ಧಾಯುವೆ ರವಿನಂದನ ಪರಿ ಯೋಗದಿಂದ ಮೆರೆದೆ ಸುರ ಭೂಸುರ ವೃಂದವು ಪೊಗಳುತಿರಲು ಆಗ ೩
ಸಂಗತೊರೆದು ವಿಷಯಂಗಳ ಬಹುತೆರ ದೂರಗೈದ ದೇವಅಂಗದೊಳಗೆ ತವ ಮಂಗಳ ಬಿಂಬವ ಮೂರ್ತಿ ಕಂಡದೇವ |ರಂಗನೊಲಿಮೆಯಿಂದಂಗ ಜನಸ್ತ್ರದ ಸಂಗರಹಿತ ಭೂದೇವಇಂಗಿತಜ್ಞ ಎನಗೀಯೊ ಗುರುವೆ ದ್ವಂದ್ವ ಸಮರ್ಪಣ ಭಾವ ೪
ಹೊತ್ತಿಹೆ ಬಿರುದನು ಭಕ್ತಿರೂಪಿ ಎನೆ ಗುರು ಭಾಗಣ್ಣಹತ್ತು ಎಂಟು ಮತ್ತೊಂದು ಮೊಗದವನ ವಿಶ್ವಮೂರ್ತಿಯನ್ನ |ಪೊತ್ತು ನೀನು ಹೃತ್ಕಂಜದೊಳಗೆ ಬಹು ತುತ್ತಿಪೆಯೊ ಅವನಕೃತ್ತಿವಾಸ ಸಖ ಸರ್ವೋತ್ತಮನೆನುತೊತ್ತಿ ಪೇಳ್ದ ಅಣ್ಣ ೫
ಯೋಗದಿಂದ ಗಾಯತ್ರಿ ಮಂತ್ರ ಜಪಗೈಯುತಿರಲು ಅಂದುಭೋಗಿ ಅಡರಿ ಶಿರಭಾಗದಿ ಅದು ಹೆಡೆಯ ತೆರೆದು ಅಂದು |ನಾಗಸೂತ್ರ ಕಟಿಭಾಗ ಭೂಷ ಪರಿ ಮೆರೆದೆ ನೀನು ಅಂದುಯೋಗ ಇದನ ಕಂಡಾಗ ಜನರು ಭಯ ಭ್ರಾಂತರಾದರಂದು೬
ವೇದವ್ಯಾಸ ಪಾದಾರವಿಂದ ಸನ್ಮೋದದಿಂದ ಭಜಿಪಮೋದ ತೀರ್ಥಮತ ಬೋಧಿಸಿರುವೆ ಸೂಳ್ಹಾದಿ ಪದ ಸುರೂಪ |ಐದಿಹೆ ಹರಿಪುರ ಗೈದು ಯೋಗ ಲಯ ಸಚ್ಛಿಂತನೆರೂಪ ನಾದ ಮೂರ್ತಿ ಗುರು ಗೋವಿಂದ ವಿಠಲನ ಪಾದತೋರೊ ಭೂಪ ೭

೭೨
ಧ್ಯಾನ ಮಾಳ್ಪುದು ಮನಸಾ | ಹೃದಯಾರವಿಂದದಿಸಾನು ಕೂಲಿಪ ಅರಸ | ವಿಸ್ತರಿಸಿ ಗುಣಗಳಮೌನಿಯಾಗುತ ಸಹಸ | ಚಿಂತಿಸೆಲೊ ಅನಿಶಾ ಪ
ಸಾನು ರಾಗದಿ ರೂಪಗುಣಗಳ | ಮಾನಮೇಯ ಜ್ಞಾನ ಸಹಿತದಿಏನು ಫಲದನು ರಾಗವಿಲ್ಲದೆ | ಶ್ರೀನಿವಾಸನ ಭಕುತಿಯಿಂದಲಿ ಅ.ಪ.
ಮೃಗದ ಚರ್ಮವ ಹಾಸಿ | ಕುಶದುಪರಿ ಅನ್ಯವಓಗೆದ ವಸನವ ಹಾಸಿ | ಪದುಮಾಸನಾದಲಿಒಗೆಯ ಸುಖಪ್ರದವೆನಿಸಿ | ಇರುವಂಥ ಆಸನಹಗರಣಿಲ್ಲದೆ ರಚಿಸಿ | ಅಲ್ಲಿ ಸುಖವಾಸೀ ||ಕೈಗಳ್ಕೆಡಿಡುತಲ್ಲಿ ತನ ಉ | ತ್ಸಂಗ ವಾಶ್ರಯಿಸುತ ಸಮತನುಕಂಗಳೆರಡರ ನಡುವೆ ನತ ನಾ | ಸಾಗ್ರದಲಿ ದೃಷ್ಟಿಯನೆ ಇಡುತ ೧
ಪ್ರಾಣ ಪ್ರಾಣನ ಪ್ರೀತಿ | ಇಚ್ಚಿಸುವ ಮಾನವ ಪ್ರಾಣ ನಿಯಮನ ವಾರ್ತಿ | ತಿಳಿಯುತ ಮನದಲಿಪ್ರಾಣ ರೇಚಕ ನೀತಿ | ಪೂರಕವು ಕುಂಭಕಜಾಣ ತನದಲಿ ಪೂರ್ತಿ | ಗೈದೋಂಕಾರ ಕೀರ್ತಿ ||ಪ್ರಾಣ ನಿರುತದಿ ಮಾಳ್ಪ ಅನು ಸಂಧಾನ ತಿಳಿದಾ ಚರಿಸೆ ವಿಹಿತದಿಪ್ರಾಣ ಸಂಯವ ಭಕ್ತಿ ಪೂರ್ವ ವಿ | ಧಾನ ಮಾಡಲು ವೇಗ ವಲಿದನು|೨|
ಹತ್ತು ಸಲ ಪ್ರತಿಸವನ | ಪ್ರಾಣನ್ನ ಸಂಯವ ಕರ್ತೃ ಹೀಗೆ ತ್ರಿಸದನ ಮಾಸಕ್ಕೆ ಮುಂಚೆಯೆಭರ್ತೃವಾಗಿಹ ಪ್ರಾಣ | ವಶನ ಹನು ಅವಗೆಂದುಉಕ್ತವಿದು ಸನ್ಮಾನ | ತಿಳಿದಾ ಚರಿಸು ಧ್ಯಾನ ||ಪೊತ್ತು ಕದಳಿಯ ಮೊಗ್ಗಿನಾಕೃತಿ | ಮತ್ತೆ ನಡು ಸತ್ಕರ್ಣಿಕವು ಇಹಹೃತ್ಸ ಅಷ್ಟದಳಾಖ್ಯ ಕಮಲವ | ಎತ್ತುವುದು – ಉದಯಾರ್ಕ ಮಂತ್ರದಿ |೩|
ಚಿಂತೆ ಕರ್ಣಕೆಯಲ್ಲಿ | ಮಾರ್ತಾಂಡ ಮಂಡಲಅಂತೆ ಅದರುಪರೀಲಿ | ತಾರೇಶ ಮಂಡಲಚಿಂತೆ ತದ್ದುಪರೀಲಿ | ಮಂಡಲ ವಿಭಾವಸುಅಂತೆ ತನ್ನಡುವೀಲಿ | ಹರಿಪದಾಜ್ಜಾಳಿ ||ಯಂತೆ ಚಿತ್ತ ಸ್ಥೈರ್ಯದಿಂದಲಿ | ಚಿಂತಿಸುತ ಗುಣರೂಪ ಕ್ರಿಯೆಗಳಕ್ರಾಂತನಾಗುವ ಹರಿಯ ಚರಣದಿ | ಶಾಂತ ಸತ್ಸಮಾಧಿಯನು ಪಡೆ ೪
ಸಾರತಮ ಸುಂದರ | ಮಂದಸ್ಮಿತಾನನವೀರ ಚತುರ್ಭುಜಾಧಾರ | ಬಾಹುಗಳು ಧೀರ್ಘವುಚಾರು ಕಂಬು ಕಂಧರ | ಸುಂದರ ಕಪೋಲವುಚಾರು ಕುಂಡಲ ಮಕರ | ಶೋಭಿ ಕರ್ಣಾಪಾರ ||ಮಾರಪಿತ ಶಿರಿವತ್ಸ ಲಾಂಛನ | ಶ್ರೀ ರಮಾಪತೆ ಶ್ಯಾಮಸುಂದರಕಾರಣಿಕ ಕನಕಾಂಬರಾಧರ | ಹಾರ ಸುಮನ ವಿಶಾಲ ವಕ್ಷನ ೫
ಹಸ್ತ ಬಲ ಮೇಲ್ ಗದವು | ಎಡದಲ್ಲಿ ಪದ್ಮವು ಮತ್ತೆ ಕಂಬು ಚಕ್ರವು | ವನಮಾಲೆ ಭೂಷಿತ ಕೌಸ್ತುಭದ ಪ್ರಭೆಯುತವು | ನೂಪುರ ಸಂಶೋಭಿತವ್ಯಕ್ತ ಪ್ರಭೆಯುತ ಪದವು | ಸರ್ವ ಸುಂದರವೂ ||ಮಸ್ತಕದಿ ಕಿರೀಟ ಕಾಂತಿಯು | ಹಸ್ತದಲಿ ಆಭರಣ ಕಟಕಮತ್ತೆ ಕಟಿ ಸೂತ್ರಾಂಗದೈರ್ಯುತ | ವಸ್ತು ಸರ್ವಾಧಾರ ಹೃದ್ಯನ ೬
ಧ್ಯಾನ ಬಹು ದುರ್ಭಾವ್ಯ | ಶ್ರೀಹರಿ ವಿಭೂತಿಯುಮನಕೆ ದುರ್ವಿಜ್ಞೇಯ | ಪೆಸರಿಹುದು ಕಾರಣಅನಘನಂಗವು ದೇಹ | ಒಂದೊಂದು ಸ್ಥಿರ ಪಡೆಪುನಹ ಸರ್ವಾವಯದ ಸ್ಥಿರ ತೆರದಿ ಧೇಯ ||ಎಣಿಸು ಪ್ರತ್ಯಾಹರಣ ಕಾರ್ಯವ | ವಿನಹವಿದು ಮನಸ್ಥೈರ್ಯವಾಗದುಅನಿಲದಯ ಸಂಪಾದಿಸುತ್ತಲಿ | ಗುಣಿಸು ನೈರಂತರ್ಯವೀತೆರ ೭
ಶಿಷ್ಟನಾಗುತಲಿನ್ನು | ಅನ್ಯತ್ರ ಮನವನುಸುಷ್ಠು ಸೆಳೆಯುತಲಿನ್ನು | ಹರಿಪಾದ ವನಜದಿಘಟ್ಟ ಇಡುತಲಿ ಮುನ್ನ | ಸುಸ್ಥಿರದ ಚಿತ್ತದಿ ||ಪ್ರೇಷ್ಟ ತಮ ಅವನೆನ್ನು | ಸರ್ವಕಧಿಕೆನುನಷ್ಟವಾಗುತ ಭ್ರಾಮಕ ತ್ರಯ | ಶ್ರೇಷ್ಠ ಧ್ಯಾನಾಸಕ್ತನಾಗಲು ದೃಷ್ಟಿಸುತಲಿ ತತ್ವಪತಿಗಳ | ಇಷ್ಟ ಮೂರ್ತಿಯ ಕಾಂಬೆ ಕೊನೆಗೆ೮
ಯೋಗವಿಹುದು ಸಮಾಧಿ | ಅಭ್ಯಾಸ ಸಾಧ್ಯ ನಿಯೋಗಿಸಿದನ ನಿರುತದಿ | ಸುಸ್ಥಿರದಿ ಚಿತ್ತವಯೋಗಿಸ್ಹರಿ ಚರಣದಿ | ಏನೊಂದು ಬೇಡದೆವೇಗ ಹರಿ ರೂಪದಿ | ನೋಡವನ ದಯದಿ ||ಆಗಮೈಕ ಸುವೇದ್ಯ ಭಕ್ತಿಯ | ಯೋಗ ಕೊಲಿಯುತ ಸಾಧಕಂಗೆಯೋಗಿ ಗುರು ಗೋವಿಂದ ವಿಠ್ಠಲ | ವೇಗತನ ದರ್ಶನವ ಪಾಲಿಪ ೯

೨೫೪
ನಂದಿವಾಹನಾ ಪಾಲೀಸೊ ನೀ | ಕಂದ ನೆಂದನಾ ಪ
ಕಂದು ಗೊರಳ ಮೌ | ಳೆಂದು ಶಿಖರ ಅಮರೇಂದ್ರ ಮುಖರು ಸುರ | ವೃಂದ ವ್ಯಂದ್ಯ ಪದಅ.ಪ.
ನಂದ – ನಂದನಾ – ಪ್ರಿಯ ಸಖ | ಮಂದಜಾಸನಾಕಂದ ನೆನಿಸಿ ದುರ್ | ವೃಂದ ತ್ಯಜಿಸಿ ತವತಂದೆ ಯಾಜ್ಞೆಯಲಿ | ನಿಂದು ಸರಿದ ಹರ ೧
ವಾಮದೇವನೇ – ದಿತಿಸುತ | ಸ್ತೋಮ – ಪ್ರೀಯನೇ ||ಶಾಮ ಸುಂದರ ಹರಿ | ಪ್ರೇಮಾನ್ವಿತ ಸುತಕಾಮಾರಿಯೆ ಹರ | ಸಾಮಜವಾಸಾ ೨
ಭವ್ಯ – ರೂಪನೇ – ಶೇಷನ ಪದ | ದಿವ್ಯ ಯೋಗ್ಯನೇ ||ಅವ್ಯಯಾತ್ಮ ಸುರ | ಸೇವ್ಯ ನಂಘ್ರಿ ದಶದಿವ್ಯ ಕಲ್ಪ ತಪ | ಗೈಯ್ಯೆ ಶಯ್ಯನಾದೆ ೩
ನಾಗ – ಭೂಷಣಾ – ಪರಮ ವಿ | ರಾಗ – ಭಾವನಾ ||ಚೈಗಿಷವ್ಯ ಮಹ | ಯೋಗಿ ರೂಪ ಭವರೋಗ ವೈದ್ಯ ಹೃ | ದ್ರೋಗ ಕಳೆಯೊ ಶಿವ೪
ಗೌರಿ ಮನೊ – ಹರಾ – ಕೈಲಾಸವಾಸ | ಕೈರಾತಾ ಕೃತಿಧರಾ ||ಗಿರಿ ಇಂದ್ರ ಕೀಲದಿ | ಘೋರ ತಪಸಿ ನರಸಾರೆ ನಿನ್ನ ಪದ | ಶೂರ ಪಡೆದ ಶರ ೫
ಗಂಗೆಯ – ಧರನೇ – ಶ್ರೀ ಶುಕ | ಲಿಂಗಾಕಾರನೇ ||ತುಂಗ ಮಹಿಮ ನಿ | ಸ್ಸಂಗ ಹರಿಯ ದ್ವಿತಿಯಂಗ ಡಮರು ಶೂ | ಲಿಂಗಳ ಪಿಡಿದಿಹ ೬
ವೈಕಾರಿಕಾ – ತೈಜಸ – ತಾಮಸ | ಸಾಕಾರಿ – ಓಜಸಾ ||ನೀ ಕುಶಾಸ್ತ್ರದಲಿ | ಭೀಕರರನು ಅವಿವೇಕರ ಮಾಡ್ದೆ | ಪಿ | ನಾಕಿ ಧರ ಹರ ೭
ರುಂಡ – ಮಾಲನೇ – ಮುನಿಜ ಮೃ | ಕಂಡ – ಪಾಲನೇ ||ಅಂಡಜ ಮಹ ಬ್ರ | ಹ್ಮಾಂಡ ದೊಡೆಯ ಪದಪುಂಡರೀಕದೊಳು | ಬಂಡುಣಿ ಎನಿಸಿಹೆ ೮
ಶಂಭೊ – ಶಂಕರ – ಧೂರ್ಜಟೆಯೆ | ಅಂಚೆ – ಮನೋಹರಾ ||ಕಂಬು ಪಾಣಿ ಪದ | ಹಂಬಲಿಸುವೆ ಹೃದಯಾಂಬರದೊಳು ಎನ | ಬಿಂಬನ ತೋರಿಸು ೯
ಸೋಮರ್ಕಾನಲ – ಈಕ್ಷಣಾ | ಭೀಮ – ಕೈಕಪಾಲ ||ಭೀಮ ಭವಾಟವಿ | ಧೂಮಕೇತು ಸಿರಿರಾಮ ಪದಾಶ್ರಿತ | ವೈಮನ ಕಳೆಯೊ ೧೦
ಭಾವ – ಜಾರಿಯೇ – ಮುರುಹರ | ರಾವಣಾದಿ – ಪ್ರಿಯಾ ||ಸಾವಧಾನದೊಳು | ಭಾವ ಶುದ್ಧಿಸುತತೋರ್ವುವೆನಗೆ ಗುರು | ಗೋವಿಂದ ವಿಠಲನ ೧೧

ಶ್ರೀ ವಿಜಯ ದಾಸರ ಸಾಕು ಮಗನಾಗಿ
೪೫೩
ನಂಬಿದೆ ನಿನಪಾದ ಅಂಬುಜಾಕ್ಷನ ಪ್ರಿಯಬೆಂಬಿಡದಲೆ ಯೆನ್ನ | ಕಾಯೋ |ಬೆಂಬಿಡದಲೆ ಯನ್ನ ಕಾಯೆಂದು ನಿನ್ನನುಹಂಬಲಿಸೂವೆ ಮೋಹನ್ನರಾಯಾ ಪ
ದೋಷರಾಶಿಯನೀಗಿ | ದಾಸನ್ನ ಮಾಡಿದಋಷ್ಯಂಶರಾಗಿಹ ನಿಮ್ಮಾ |ಋಷ್ಯಂಶರು ವಿಜಯ ದಾಸರ ಪ್ರೇಮಕ್ಕೆಆಶ್ರಯನಾಗಿಪ್ಪ ಮೋಹನ್ನ ೧
ಹೆಮ್ಮೆಯ ಪಡುವೆ ನಾ ನಿಮ್ಮವರವನೆಂದುದುರ್ಮಮತೆಯ ನೀಗೋ ಎನ್ನಾ |ದುರ್ಮಮತೆಯು ನೀಗಿ | ಭರ್ಮಗರ್ಭನ ಪಿತನಪೇರ್ಮೆ ದೊರಕಿಸೊ ಎನಗೆ ಮುನ್ನಾ ೨
ಅಂಬುಜಾಂಬನಂಘ್ರಿ | ಅಂಬುಜ ತೋರೆಂದುಹಂಬಲಿಸಿ ಬೇಡುವೆ ನಿನಗೆ |ಹಂಬಲಿಸಿ ಬೇಡುವೆ | ಶಂಬರಾರಿಯ ತೇಜನಂಬಿ ಬಂದಿಹೆ ನಿನ್ನ ಅಡಿಗೇ ೩
ವಿಷಯಧುಯ್ಯಲಿನಿಂದ | ಕ್ಲೇಶವಧಿಕವಯ್ಯ ವಿಷದಂತೆ ಕಾಣಿಸೊ ಜೀಯ |ವಿಷದಂತೆ ಕಾಣಿಸಿ | ಶೇಷವಿಲ್ಲಾಧಾಂಗೆ |ದೋಷವಳಿಸಿ ಕಾಯೊ ಜೀಯಾ ೪
ನಿನ್ನ ವಂಶಜನಾಗಿ | ನಿನ್ನವರವನಾಗಿಉನ್ನಂತ ಮಹಿಮ ಶ್ರೀಹರಿಯಾ |ಉನ್ನಂತ ಮಹಿಮನು | ಅನ್ನಂತನ ಪಾದಕಾಣದಿದ್ದವನಿರೆ ವ್ಯರ್ಥ ೫
ಪಂಚಾಶದ್ವತ್ಸರ | ಹಂಚಿಪೋಗುವ ಮುನ್ನಪಂಚರೂಪಾತ್ಮಕ ಹರಿಯಾ |ಪಂಚರೂಪಾತ್ಮ ವಿ | ರಿಂಚಿಪಿತನ ಪಾದಹಂಚಿಕಿಂದಲಿ ತೋರೊ ಮೋಹನ್ನ ೬
ಉರುಗಾದ್ರಿವಾಸ ವಿಠಲಾತ್ಮಕನು ಶಿರಿಗುರುಗೋವಿಂದ ವಿಠ್ಠಲನ |ಗುರಗೋವಿಂದ ವಿಠಲನ ಚರಣಾರವಿಂದವತೋರಿ ಪೊರೆ ನಮ್ಮ ಹಿರಿಯಾ ೭

ಷಣ್ಮಹಿಷಿಯರು
೨೭೫
ನಗ್ನ ಜಿತು ನೃಪ ಭಗಿನಿ ತನುಜೆ ಕಾಯೇ |ಲಗ್ನ ಗೈಸೆನ್ನ ಮನ ದೋಷಘ್ನನಲ್ಲೀ ಪ
ಮಿತ್ರಾಖ್ಯ ಹರಿಪ್ರಾಪ್ತಿ ನಿತ್ಯದಲಿ ಚಿಂತಿಸುತಮಿತ್ರವಿಂದಾಭಿಧೆಯು ನೀನು ಆಗೀ |ಎತ್ತ ನೋಡಿದರತ್ತ ಶ್ರವಣ ಭಕ್ತಿಗೆ ಮುಖ್ಯಪಾತ್ರವೆಂದರುಹುತ್ತ ಅಂತೆ ಆಚರಿಪೇ ೧
ಹರಿಕಥಾಮೃತ ಸರಿತು ಹರಿಯದಿಹ ಸ್ಥಳವೇನುಹರಿ ಪದಾಶ್ರಿತರಹಿತ ಮತ್ತೆ ಉತ್ಸವವೂ |ವಿರಹಿತದ ಪಾತ್ರಗಳ ತ್ವರಿತದಲಿ ತ್ಯಜಿಸುತ್ತಸರಿಯುವುದೆ ಲೇಸೆಂದು ಭೋದಿಸಿಹೆ ದೇವಿ೨
ಹರಿಕಥೆಯ ಕೇಳುವುದೆ ಕರ್ಣಕ್ಕೆ ಭೂಷಣವುಹರಿಕಥೆಯ ಪೇಳುವುದೆ ವಾಗ್ಭೂಷಣಾ |ಪರಿಪರಿಯ ಅಂಗಗಳ ಹರಿಪರವ ಗೈಯ್ಯುವುದೆಪರಮ ಸತ್ಸಾಧನವು ಎಂತೆಂದು ಪೇಳ್ದೇ ೩
ಈ ಪರಿಯ ತಪದಿಂದ ಶ್ರೀ ಪತಿಯ ಮನ ಒಲಿಸಿಸಾಪರೋಕ್ಷಿತೆಯಾಗಿ ಶ್ರವಣ ಭಕ್ತಿಯಲೀ |ಆ ಪರಮ ಪುರುಷನ್ನ ಕೈಪಿಡಿದು ಕೃತಕೃತ್ಯೆನೀ ಪರಮ ಕೃಪೆಯಿಂದ ಕಾಪಾಡು ಎಮ್ಮ ೪
ಇಂದಿರಾ ರಮಣಂಗೆ ಎಂದೆಂದು ವೈರಿಗಳುವಿಂದಾನುವಿಂದರೆಂಬೀರ್ವ ಭ್ರಾತೃಗಳ |ಸಂದು ದುರ್ಯೋಧನಗೆ ನಿನ್ನನರ್ಪಿದ ಹದನಮಂದಿ ಎದುರಿಲಿ ಕೃಷ್ಣ ಭಗ್ನವನೆ ಗೈದ ೫
ಶ್ರವಣ ಭಕ್ತ್ಯಭಿಮಾನಿ ಚಿತ್ತದಲಿ ನೀನಿದ್ದುಪವನ ಮತ ತತ್ವಗಳ ಶ್ರವಣ ಗೈಸೀ |ಭವವನಧಿ ಉತ್ತರಿಪ ಹವಣೆ ನೀ ತೋರಿ ತವಧವಗೆ ಭಿನ್ನೈಸುವುದು ಎಮ್ಮ ಹಂಬಲವ ೬
ಸವನ ಮೂರಲಿ ಆಯು ವಿವಿಧ ಭವಣೆಗಳಿಂದಪ್ರವಹಿಸುತ ಸಾಧನೆಗೆ ವಿಘ್ನವಾಗಿಹುದುಪವನಾಂತರಾತ್ಮ ಗುರು ಗೋವಿಂದ ವಿಠಲನಪಾವನ್ನ ಪದಕಾಂಬ ಹವಣೆ ತಿಳಿಸಮ್ಮಾ ೭


ನಭಕೀಶ – ನಭಕೀಶ ಪ
ಇಭಮೊಗ ನಿನ್ನಡಿ | ಗಭಿ ವಂದಿಸುವೆನುಇಭವರದನ ಮನ | ನಭದಲಿ ತೋರೋ ಅ.ಪ.
ಮೂಷಕ ವಾಹಾಹಿ | ಭೂಷನೆ ತ್ರೈಜಗತೋಷ ಗಣಾಧಿಪ | ಪಾಶಾಂಕುಶಧರ ೧
ಕುಬುಜೆ ವರದ ಪದ | ಶುಭ ಗುಣ ಭಜನೆಯಸುಭಗನೆ ಪಾಲಿಸಿ | ಕುಭವನೆ ಹರಿಸೋ ೨
ಅಂಬುಜಾಂಡದಿ ತವ | ಶುಭಗುಣ ಪ್ರಸರಣಸುಭುಜಾಹ್ವಯ ಗೈ | ದ ಭಯವ ನಿತ್ತನು ೩
ಅಬುಧಿಗೆ ಸೇತುವೆ | ವಿಭವದಿ ಗೈವಾಗಬುಜಾಂಡೋದರ | ಭಜಿಸಿದ ನಿನ್ನಾ ೪
ಯಮಸುತನಧ್ವರ | ಸಮಯದಿ ತವಪದನಮಿಸಿ ಪೂರೈಸಿದ | ಕ್ರತು ರಾಜಸೂಯ ೫
ರಕ್ತವಾಸ ಅನು | ರಕ್ತ ಹರಿಯಲಿಭಕ್ತಿಯ ಪಾಲಿಸೋ | ಭಕ್ತಾಶ್ರಯನೇ ೬
ಅಸಮಾಧಿಕ ಪ್ರಿಯ | ಶಶಿಭೂಷಣ ಸುತಶಶಿ ದ್ವಿಟ್ ಮರ್ಭವ | ಪಾಶವ ಕಳೆಯೋ ೭
ಎಕಮೇವ ನಲಿ – ವಿ | ವೇಕವ ಕೊಡುವುದುಏಕದಂತ ಚಾ | ಮೀಕರ ಕೃತ ಭೂಷಾ ೮
ಮೋದಕೇಕವಿಂಶ | ಸಾದರ ಸ್ವೀಕೃತಮೋದ ತೀರ್ಥ ಮತ | ಭೋದಿಸು ಗುರುವೇ ೯
ಚಾರುದ್ವೇಷ್ಣಾಭಿಧ | ಚಾರ್ವಾಂಗನೆ ಹರಿಚಾರು ಚರಿತೆ ಸತ್ | ಸ್ಫೋರಣ ಕೊಡುವುದು ೧೦
ಭಾವಜಪಿತ ಗುರು | ಗೋವಿಂದ ವಿಠಲನಭಾವದಿ ತೋರಿಸೊ | ಭಾವಜ ಭ್ರಾತಾ೧೧

೪೮೭
ನಮಾಮಿ ತಂದೆಯೇ | ಮುದ್ದುಮೋಹನಾನತೋಸ್ಮಿ ಸಿದ್ಧರೇ | ತ್ವತ್ವದಾಂಬುಜಂ ಪ
ಪುರಾಕೃತಾಮಯಾ | ಸುಕೃತ ವೆಂಥದೋಗುರುಗಳ್ ನಿಮ್ಮಯಾ | ಕರುಣದೊರಕಿತು ೧
ವಿಲಸಿತಾಮಲಾ ನಿ | ಷ್ಕಲ್ಮುಷ ಹೃದಯರೇಆಲವಾ ಬೋಧರಾ | ಒಲವ ಪಡೆದರೇ ೨
ಹಲವು ಜನುಮದೀ | ಬಳಲಿ ಬಂದುದಾತಿಳಿದು ನೀವೆನ್ನಾ | ಪಾಲಿಸೀದಿರಿ೩
ಅಂಕಿತಲ್ಲವೇ | ಪಂಕಜಾಕ್ಷನಾಲೆಂಕತನವೆಲ್ಲಾ ಕ | ಳಂಕ ವಿಹಿತವೂ ೪
ಎಂದು ಕರುಣೆಯಿಂ | ತಂದೆ ವೆಂಕಟನಾಹೊಂದಿ ಭಜಿಪರಾ | ಅಂದು ಪ್ರೇರಿಸೀ೫
ಕರೆದು ಎನ್ನನೂ | ತೆರಳು ಎನುತಲೀಒರೆದು ಮತಿಯನೂ | ದಾರಿ ತೊರ್ದಿರೀ ೬
ಸೋಮ ಶೇಖರಾ | ಸಮ ಪದಸ್ಥನೇಸಾಮಾಜಾದ್ರಿಲೀ | ಪ್ರಮಾಥಿವತ್ಸರಾ ೭
ವದ್ಯ ಫಾಲ್ಗುಣಾ | ಪ್ರತಿಪದಾದಿನಾಆದಿವಾರದೀ | ವಿದಿತ ಮಾರ್ಗದೀ ೮
ಗುರು ಗೋವಿಂದನಾ | ನಾಮ ತಾರಕಾಅರುಹೀ ಪ್ರೀತಿಲೀ | ದಾರಿ ತೋರ್ದಿರೀ ೯
ಕೋಮಲಾಂಗನೇ | ನಿಮ್ಮ ಮಹಿಮೆಯಾಪಾಮರಾನು ನಾ | ಗಮಿಸಲಾಪನೇ ೧೦
ಗತಿಯೆ ನೀವೆಂದೂ | ಸತತ ತುತಿಸುವೆಅತುಳ ಮಹಿಮರೇ | ಹಿತವ ಮಾಡಿರಿ ೧೧
ತವ ಪದಾರ್ಚನೇ ತ್ರಿ | ಸವನ ಸಂಧ್ಯವೂಹವನ ಹೋಮವೂ | ಭವದ ಶೋಷವೂ ೧೨
ನೀವೆ ಬಂಧುವೂ | ನೀವೆ ಬಳಗವೂನೀವೆ ತಾಯಿಯೂ | ನೀವೆ ತಂದೆಯೂ ೧೩
ನಿಂತು ನೀವೆನ್ನಾ | ಅಂತರಂಗದೀಮಂತವ್ಯ ರಂಗನಾ ಚಿಂತೆ ಪಾಲಿಸೀ ೧೪
ಗುರು ಗೋವಿಂದ ವಿಠಲನಾ | ಸುರಚಿರಾಮಲಾಚರಣ ಪುಷ್ಕರ | ಸ್ಮರಿಪ ಗುರುವರಾ ೧೫|

೭೩
ನಮಿಸು ಮನವೆ ನೃಹರಿ ರೂಪವಾ | ರೋಗ ಹರಣನಾ ಪ
ಅಮಿತ ಮಹಿಮ ದಾನವ ಹರಣ | ಸುರಪ ಪಾಲಕನಾ ಅ.ಪ.
ಸಕಲ ಸುರರ ದನುಜ ಭಾದಿಸೆ | ಹರಿಗೆ ಮೊರೆಯಿಡೇಅಕಳಂಕ ಮಹಿಮ ಅಭಯವಿತ್ತು | ಅವರ ಕಳುಹಿದಾ ೧
ಹಿರಣ್ಯಕಶಿಪುನುದರದಲ್ಲಿ | ಭಕುತ ಜನಿಸಲೂಶರಣ್ಯ ಶ್ರೀಹರಿಯ ತುತಿಸಿ | ಸುರರು ಪಾಡಿದರೂ ೨
ಪಿತನು ತನ್ನ ಸುತನ ಭಾದಿಸೆ | ಹರಿಯೆ ಚರಣವಾಸತತ ನಮಿಸಿ ಭಜಿಸಿ ಭರದಿ | ಕಂಬದಿ ಕರೆದನೂ ೩
ಭೃತ್ಯನ್ವೊಚನ ಸತ್ಯ ಮಾಡೆ | ಸ್ತಂಭವ ಸೀಳುತಾವೃತ್ಯಸ್ತವಾಗೆ ಸಕಲರ್ ಹೃದಯ | ಘಡ ಘಡೀಸುತಾ ೪
ದೈತ್ಯನುದರ ಬಗೆದು ಕರುಳ | ಮಾಲೆ ಧರಿಸುತಾನೃತ್ಯವಾಡಿ ತನ್ನ ಪ್ರಳಯ ರೂಪವ ತೋರಿದಾ ೫
ಅಕ್ಷರಜ್ಞೆ ಲಕುಮಿ ದೇವಿ | ಪಕ್ಷಿವಾಹನನಾಲಕ್ಷಣ ವೀಕ್ಷಿಸಿ ಕುಕ್ಷಿಯ ಬಿಡುತ | ವತ್ಸನ ನೂಕಿದಳು ೬
ಮುದದಿ ಅವನ ತೊಡೆಯಳಿಟ್ಟು | ಮೋದ ಪಡಿಸುತಾಸದಯದಿಂದ ಗೈದ ಅವನ | ಭಕ್ತ ಶ್ರೇಷ್ಟನಾ ೭
ಭಕುತಾ ಜನರ ಭೀಷ್ಟವೀವ | ಅಕುಟಿಲಾತ್ಮನೂಪ್ರಕಟ ಕರಿಗಿರೀಯ ಹರಿಯು | ರುಕುಮಿಣೀ ಪತಿ ೮
ಪುರುಹುತನೂ ಪ್ರಹ್ಲಾದವರದ | ತೋರೊ ತವ ರೂಪಾ |ಗುರು ಗೋವಿಂದ ವಿಠಲ ಭಜಿಪೆ | ಹರಿಸೊ ಭವ ಕೂಪಾ೯

ಯತಿ ಪರಂಪರೆಗೆ ಅಗ್ರೇಸರರಾದ
ಶ್ರೀ ಸುಮಧ್ವ ವಿಜಯಸ್ಥ ಅಷ್ಟೋತ್ತರ ಶತನಾಮಾವಳಿ
೨೪೨
ನಮಿಸುವೆ ಜಗದ್ಗುರುಗಳೇ ಪ
ನಮಿಸಿ ನಿಮ್ಮಡಿಗಳಿಗೆ ನಿರ್ಮಮದಿ ಬೇಡುವೆನು ಭ್ರಮ ಮೂರು ಪರಿಹರಿಸಿ | ಸಮಾ ಸಮ ಪೂಜ್ಯಹೃತ್ ಧಾಮದೊಳಗಿರುವಂಥ | ಅಮಿತ ಮಹಿಮನ ವಿಮಲ ಪದಪದ್ಮ ತೋರ್ವುದೆಮಗೇ ಅ.ಪ.
ನಮೊ ಪೂರ್ಣ ಬೋಧರೇ | ನಮೊ ಪೂರ್ಣ ಬುದ್ಧಿಯೇನಮೊ ನಮೋ ಪೂರ್ಣಧೀ | ರ್ಯಮಿತ ಪ್ರಮಿತಾತ್ಮರೇನಮೊ ಪೂರ್ಣ ಚೇತರೇ | ನಮೊ ನಮೊ ಸಮ್ಮೋದತೀರ್ಥಾರ್ಯ ಗುರುವರ್ಯರೆ | ನಮೊ ಭೂರಿ ಭಕ್ತಿಯೇ | ಪ್ರಮ್ಮೋದ ತೀರ್ಥರೇ ನಮೊ ಪೂರ್ಣ ಸಂಖ್ಯರೇ | ನಮೊ ನಮೋ ದಶ ಹೃದಯ ನಮೊವೀತ ಭೂಷರೇ | ನಮೊ ನಮೋ ವಿಶ್ವ ಭೂಷಣರೇ ಪಾಹಿಮಾಂ ಪಾಹಿ ೧
ಪರಿಪೂರ್ಣ ಪ್ರಮತಿಯೇ | ಪುರುಸಂಖ್ಯ ಪೂರ್ಣೇಕ್ಷ ಅರವಿಂದ ಲೋಚನರೆ | ಗುರುಮತ್ಯಮಿತ ಬುದ್ಧಿ ಮರುದಂಶ ಪ್ರಚುರಧೀ | ಪುರು ಕರುಣ ಆಂಬುಧಿಯ ಮೇರೆಯನು ಮೀರಿದವರೆ || ಸರುವಿತ್ ಪೂರ್ಣದೃಕ್ | ಉರುಮತಿಯೆ ಸಕಲಜ್ಞ ಸರುಧೀ ಪೃಥು ಹೃದಾ | ಪುರುಧೀ ಪ್ರಭೂತಧೀಃ ಪರಮ ಆನಂದ ಸತ್ತೀರ್ಥ ಸೂರಿರಾಜಾಧಿ ರಾಜರೆ ಪಾಹಿ ಪಾಹಿ ೨
ಬಹುಲ ಧೀರ್ದಶಮತಿಯೆ | ಮಹಮತಿಯೆ ಉಗ್ರಧೀಃ ಮಹಿಯೋಮತಿ ಚಾರುಧೀ | ಬೃಹನ್ಮತಿ ಪೃಥು ಬುದ್ಧಿ ಮಹಬೋಧ ಅಖಿಲಜ್ಞ | ಮಹಿಷ್ಯಧಿಯರ್ನಿಶಾತಧಿ ಯೆನಿಸಿ ಸುರ ಜ್ಞಾನದ || ಬಹು ಮತಿಯೆ ಫುಲ್ಲ ದೃಕ್ | ಬಹುಲ ಹೃದಲವ ಬೋಧ ಬಹುಲ ಪ್ರಬೋಧರೇ | ಮಹೀಷ್ಟ ಸುಹೃದಯರೇ ಬಹುಲ ಬೋಧಾಖ್ಯರೇ | ಮಹಾ ಪುರುಷೋತ್ತಮನ ದಾಸರೊಳಧಿಕನೆ ಪಾಹಿ ೩
ನಮೊ ನಮೋ ಧೀರಮತಿ | ನಮೊ ಪೃಥೂ ದರ್ಶನರೆನಮೊ ನಮೋ ಸುಖ ತೀರ್ಥ | ನಮೊ ಪೃಥುಲ ಚೇತಾತ್ಮನಮೊ ನಮೋ ಪೃಥುಮತಿಯೆ | ನಮೊ ನಮೊ ಸಮಗ್ರ ಧೀರ್ಸುಸ್ಮಿತೇಂದುಗಳೆ ಪಾಹಿ || ನಮೊ ವಿಪುಲ ಹೃದಯರೇ | ಅಮಂದಧಿಯೆ ಶುದ್ಧಧೀಃ ನಮೊ ನಮೋ ಸುವಿಚಾರ | ನಮೊ ದಾನವರ್ಭೀಮ ನಮೊ ಪುಷ್ಟ ಬುದ್ಧಿಯೇ | ನಮೊ ಪೃಥುಲ ಹರಿ ನಿಗೂಢ ಮೂರ್ತಿಯೆ ಪಾಹಿ ಪಾಹಿ೪
ಆನಂತ ಬೋಧಾಖ್ಯ | ಅನೂನ ಬೋಧರು ಎನಿಪಆನಂದ ತೀರ್ಥಾಖ್ಯ | ಅನುಮಾನ ತೀರ್ಥರೇಸ್ವರ್ಣವರ್ಣಾಭಿಧರೆ | ಧನ್ಯ ಪ್ರವರರು ಎನಿಪ ಆದೀನ ಸತುವಾಭಿಧರೆ ||ಅನಂತಧಿಯ ಮಧ್ವ ಸು | ಪೂರ್ಣ ಸಂಖ್ಯ ಧೀರದಿಹನುಮಂತ ಕೃಷ್ಣೇಷ್ಟ | ಪ್ರಾಣೇತ ಪ್ರಾಜ್ಯೇಕ್ಷಆನಮಿಸಿ ಬೇಡ್ವೆ ಸಂ | ಪೂರ್ಣ ಪ್ರಮತಿಯೆ ತವ ಚರಣ ತೋರಿಸಿ ಸಲಹುವುದೂ ೫
ಪಾಹ್ಯದ ಭ್ರಮನೀಷ | ಪಾಹಿ ಪ್ರಚುರ ಪ್ರಜ್ಞಪಾಹಿ ವಿಪುಲ ಪ್ರಮತಿ | ಪಾಹಿ ಆಯುತ ಚೇತಪಾಹಿ ಪೃಥು ಪ್ರಬೋಧಾ | ಪಾಹಿ ಪ್ರಬರ್ಹ ಬೋಧಾಖ್ಯರೇ ಪಾಹಿ ಪಾಹಿ ||ಪಾಹ್ಯ ಮಂದಮನೀಷ | ಪಾಹ್ಯದ ಭ್ರಸುಸಂಖ್ಯಪಾಹಿ ಬೃಹತು ಪ್ರಬೋಧ | ಪಾಹ್ಯತಿ ಭದ್ರ ಭಾಷಣಪಾಹ್ಯ ಪೂರ್ವ ಪುರುಷ | ಪಾಹಿ ದಶಧಿಷಣಾರ್ಯಾ ವರ್ಯ ಚರ್ಯರೇ ಪಾಹಿ ೬
ಪಾಹಿ ವಿಸ್ರ‍ತತ ಚಿತ್ತ | ಪ್ರೀತಿ ತೀರ್ಥಾಭಿಧನೆಪಾಹ್ವಿ ಶುದ್ಧ ಬುದ್ಧಿಯೆ | ಸಕಲ ಮತಿ ಅಲೇಶಧಿಪಾಹ್ಯಧಿಕ ಬೋಧಭಿಧ | ಪಾಹಿ ಪ್ರಮೋದ ತೀರ್ಥಾಖ್ಯರೇ ಪಾಹಿ ಪಾಹಿ ||ಪಾಹಿ ಸು ಸಮೀರಾಖ್ಯ | ಪಾಹಿ ಬೃಹತ್‍ಧಿಯ ಭಿಧಪಾಹಿ ಮಧುಮಥನಾಂಘ್ರಿ | ಭಕ್ತಿ ಭಾಗ್ಭ್ಯಾಭಿಧನೆ ಪಾಹಿ ಸಿರಿ ಮಾಧವನ | ಗುಣ ಸಾಧಕಾಗ್ರಣಿಯೆ ಪಾಹಿಮಾಂ ಪಾಹಿ ಪಾಹಿ ೭
ಜಯ ರಾಜ ಸೂಯ ಮುಖ | ಸನ್ಮುಖವೃತ್ತಜಯಜಯ ವಾಸುದೇವ ಗುಣ | ನಿಷ್ಠಿತ ಹೃದಯ ಜಯತು ಜಯ ಸರ್ವಧರ್ಮ ಪರಿ | ಶಿಕ್ಷಣದಿ ದಕ್ಷನೆನಿಸುವನಿಗೇ ಜಯವಾಗಲಿ ||ಜಯ ಹರಿಗಧಿಷ್ಠಾನ | ಜಯ ಮುಖ್ಯ ಪ್ರತಿ ಬಿಂಬಜಯ ಜಯತುದಾರಮತಿ | ಜಯ ಹರಿದಯಿತ ವರನೆಜಯ ಶ್ರೀ ಮದಾನಂದ | ತೀರ್ಥಾರ್ಯವರ್ಯ ಜಯ ಜಯತು ನಿಮ್ಮ ಪದಗಳಿಗೇ ೮
ಮಧ್ವಾಖ್ಯ ಶೃತಿಪ್ರತೀ | ಪಾದ್ಯರೆಂದೆನಿಸುತಲಿಮಧ್ವ ವಿಜಯಾಖ್ಯ ಪ್ರ | ಸಿದ್ಧ ಗ್ರಂಥದಿ ಪೊಳೆವಮಧ್ವಗುರು ತವನಾಮ | ಶಬ್ದಾಖ್ಯ ಮಣಿಗಳಷ್ಟೋತ್ತರದ ಮಾಲೆಯನ್ನೂ ||ಮುದ್ದು ಮೋಹಜ ತಂದೆ | ಮುದ್ದು ಮೋಹರಲಿರುವಮಧ್ವಗುರುವೇ ನಿಮ್ಮ | ಹೃದ್ಗುಹದಲಿರುವಂಥಮುದ್ದು ಗುರುಗೋವಿಂದ | ವಿಠ್ಠಲನಿಗರ್ಪಿಸುವೆ ಉದ್ಧರಿಪುದೆಮ್ಮ ಸತತ ೯

ಸೋದೆ ಮಠದ ಯತಿವರೇಣ್ಯ
೪೧೩
ನಮಿಸುವೆನು ನಮಿಸುವೆನು ವಿಶ್ವಪ್ರಿಯಾರ್ಯ |ಅಮದು ನಿಮ್ಮಯ ಮಹಿಮೆ ಪಾಮರನಿಗಳವೇ ಪ
ಮುನಿಯ ವಿಶ್ವಾಧೀಶ್ವರರ ಕರಜಾತಗುಣನಿಧಿಯು ವಿಶ್ವೇಶ ತೀರ್ಥ ಕರಜಜನಕತಿ ಪ್ರಿಯನೆಂದು ವಿಶ್ವಪ್ರಿಯಾಭಿಧನೆಗುಣಪೂರ್ಣ ಹಯಗ್ರೀವ ಪಾದ ಭಜಕ ೧
ಸ್ವಪ್ನದ್ರಷ್ಟ್ರುಗಳೆನಿಸಿ ಅಪ್ಪಹಯ ಮುಖದಯದಿಅಪ್ಪುತಲಿ ಜಾತಿಸ್ರ‍ಮತಿ ಗೊಪ್ಪವೆಂದೆನಿಪ |ಸ್ವಪ್ನದಾಖ್ಯಾನವನು ಪ್ರಕರಣಗಳಂದೆನಿಸಿಕೃಪ್ಪೆಯಲಿ ವ್ಯಕ್ತಿಗಳ ಪರಿಚಯವ ಗೈದೇ ೨
ನಿರಶಾನದಿ ವ್ರತವು ಮರಳಿ ಶಿಬಿಕಾರೋಹಪುರಟ ಸಂಪುಟಗತವು ಮಧ್ಯವಾಟಸ್ಥ |ಹರಿಪ್ರತಿಮೆ ಕೃಷ್ಣ ಬಳಿ ಅರ್ಚಿಸುತ ಭಾವೀಂದ್ರಮೆರೆದೆ ಗುರುಗೋವಿಂದ ವಿಠಲ ಭಕ್ತೇಶ೩

ಪೆನುಗೊಂಡೆಯಲ್ಲಿರುವ
೩೮೯
ಶ್ರೀವೇದವ್ಯಾಸತೀರ್ಥರು
ನಮಿಸುವೆನು ನಮಿಸುವೆನು ಮುನಿವರ್ಯರೇ ಪ
ಅಮಮ ನಿಮ್ಮಯ ಮಹಿಮೆಯ ಪೊಗಳಲೆನ್ನಳವೇ ಅ.ಪ.
ಭಾವ ಬೋಧಾರ್ಯ ವಿಮಲ ಸತ್ಕರಜಾತಭಾವಿ ಬೊಮ್ಮನ ಮತದಿ ಪೂರ್ಣ ವಿಖ್ಯಾತಧಾವಿಸಿ ನಿಮ್ಮಡಿಗೆ ಓವಿ ನಮಿಪರ ತ್ರಾತಕಾವುದೆಮ್ಮನು ಬಿಡದೆ ಪಾವಮಾನಿಯ ಪ್ರೀತ ೧
ಇಂದ್ರಗ ವರಜನಾಮ ಮಂದವಾಹಿನಿ ತಟದಿಚೆಂದುಳ್ಳ ಮಹತೆನಿಪ ವೃಂದಾವನದೊಳು |ಇಂದಿರೇ ರಮಣ ಶಿರಿ ರಾಮಚಂದ್ರನ ಮನದಿಛಂದಾಗಿ ಧ್ಯಾನಿಸುತ ನಿಂದ ಯತಿವರ್ಯಾ ೨
ಮೋದ ಮುನಿ ಸದ್ಭಾವ ಬೋಧಿಸುತ ಶಿಷ್ಯರಿಗೆವೇದ ವ್ಯಾಸರ ಪ್ರೀತಿ ಆದರದಿ ಗಳಿಸೀ |ಮೋದ ದಾಯಕನೆನಿಸಿ ಸಾಧುಗಳ ಸಲಹುತ್ತಸಾಧಿಸಿದೆ ಸತ್ಕೀರ್ತಿ ರಾಜ ಸನ್ಮಾನ್ಯ ೩
ಜೀಮೂತ ಸತ್‍ಕ್ಷೇತ್ರ ಶೋಭಿಸುವ ವಿಖ್ಯಾತಆ ಮಾಯಿ ಮತ ತಿಮಿರ ಹರಿಚಕ್ಷುಜಾತ |ಪಾಮರನು ನಾನಿಮ್ಮ ಚರಣಂಗಳಭಿನಮಿಪೆಶ್ರೀ ಮನೋಹರ ಪಾದ ನೀ ತೋರೊ ಮುನಿಪ ೪
ಬ್ರಹ್ಮಚರ್ಯಾಖ್ಯ ಮಹ ಮಹಿಮೆ ಪರಿಕಿಸಲು |ಸನ್ಮನದಿ ನೃಪನೆನ್ನ ನಿಮ್ಮ ಕೌಪೀನವಾ |ಒಮ್ಮನದಿ ಅಗ್ನಿಗಿಡೆ ದಹಿಸಲಾರದೆ ಪೋದಸನ್ಮಹಿಮ ವೇದೇಶ ಸನ್ನುತನೆ ಪೊರೆಯೋ ೫
ಹರಿಭಕ್ತ ಸುರತರುವೆ ವರ ಸು ಚಿಂತಾಮಣಿಯೆಪರಮ ಸೇವಾಸಕ್ತ ಶರಣ ಸುರಧೇನು |ಹರಿಯ ಸರ್ವೋತ್ತಮತೆ ಸ್ಥಿರ ಪಡಿಸೆ ಸಂಚರಿಸಿಮೆರೆದ ವೇದವ್ಯಾಸ ತೀರ್ಥ ಸದ್ದಭಿಧಾ ೬
ಘನಗಿರಿ ನರಹರಿಯ ಪದವನುಜ ಸಂಜಾತಮಿನುಗುತಿಹ ವಾಮನಾ ನದಿಯ ಸಂಗಮದಿಗುಣಪೂರ್ಣನಾದ ಗುರು ಗೋವಿಂದ ವಿಠ್ಠಲನ |ಮನದಿ ಧ್ಯಾನಾಸಕ್ತ ಪೊರೆಮಹ ವಿರಕ್ತ ೭

೪೩೭
ನಮಿಸುವೆನು ನಮಿಸುವೆನು | ವಿಜಯದಾಸರಿಗೇ ಪ
ಅಮಮ ಮಹಿಮೆಗಳ್ನಿಮ್ಮ | ವರ್ಣಿಸಲು ಅಳವೇ ಅ.ಪ.
ಕವಚ ವಿಜಯವ ಪಠಿಸಿ | ಅವನಿಯೊಳು ಸಜ್ಜನರುಬವಣೆಗಳ ಕಳಕೊಂಡು | ಸುಖದಿಂದ ಜೀವಿಪರೋ |ಅವರನುಗ್ರಹದಿಂದ | ಭವಣೆ ಎನೆ ಮದ್ಭಯವುಸವೆದು ಪೋಗುತ ಗ್ರಂಥ | ಮುದ್ರಣವ ಮುಂಬರಿಸಿದೆ ೧
ತ್ರಯಭಾರಿ ತೀರ್ಥವನು | ಸ್ವಪ್ನದಲಿ ಎನಗಿತ್ತುಕಾಯ ಶದ್ದಿಯ ಗೈದು | ಆಶಿಷಂಗಳನೆ ಇತ್ತು |ಜಯ ಜಯವೆಂದೆನಿಸಿ | ಹಯಾಸ್ಯ ನಂಘ್ರಿಯಲಿಕಾರ್ಯಮುಂಬರಿಸಿರುವ | ಮಹ ಕಾರುಣ್ಯ ಮೂರ್ತೇ ೨
ಹರಿಗುರು ಗೋವಿಂದ | ವಿಠಲ ಚರಣಬ್ಜವನುಪರಿಪರಿಯಲಿಂದತುತಿಸಿ | ಮರಳಿ ಕಾಂಬುವ ಸುಹವನಾವರ ವಿಜಯ ದಾಸಾರ್ಯಾ | ಕರುಣಿಸೆನೆ ಬಿನ್ನಪವಕರಗತವ ಮಾಡುವುದು | ಉರುಕರುಣ ಸಂಪನ್ನಾ ೩

೩೧೭
ನಮಿಸುವೆನು ಮನ್ಮಾತೆ ಪದಯುಗಳಕೇ ಪ
ಅಮಮ ಎನ್ನಲಿ ನಿಮ್ಮ | ಮಮತೆ ಎಷ್ಟಮ್ಮಾ ಅ.ಪ.
ಮೋದ ಮುನಿಮತ ನಿಷ್ಠೆ | ಆದರದೊಳನುಷ್ಠಾತೆಸಾದರದಿ ಭಾಗವತ | ಮೊದಲಾದ ಶಾಸ್ತ್ರಶೃತೆಖೇದ ಮೋದಾದಿ ಎನೆ | ದ್ವಂದ್ವಗಳ ಸಹಿಷ್ಣುತೆಸಾಧನೋತ್ತಮಗೈದೆ | ಈ ದೇಹ ದಾತೇ ೧
ವಿಷ್ಣು ಪಂಚಕ ದ್ವಯವು | ಕೃಷ್ಣ ದರ್ಶನವಷ್ಟೆಕೃಷ್ಣ ಕಾವೇರ್ಯಾದಿ | ನಿಷ್ಠೆಯಲಿ ಮಜ್ಜನವ |ಕೃಷ್ಣ ಸಿರಿ ವೆಂಕಟನ | ಬೆಟ್ಟಕ್ಕ ತ್ರೈಬಾರಿಕಷ್ಟದಲಿ ಸಾಧನ | ಸ | ಹಿಷ್ಣುತೆಯು ಎಷ್ಟಮ್ಮಾ ೨
ಸೇತು ರಾಮೇಶ್ವರದ | ಯಾತ್ರೆಗಳ ಗೈದು ಸ-ತ್ಪಾತ್ರರನ್ನಾದರಿಸಿ | ಕಾತುರತೆಯಲ್ಲೀ |ವಾತಾಂತರಾತ್ಮ ಗುರು | ಗೋವಿಂದ ವಿಠ್ಠಲನಕೀರ್ತನೆಯ ಚತುರೆ ತವ | ಪಾದಕಾ ನಮಿಪೇ ೩

೩೬೪
ನಮಿಸುವೆನು ವ್ಯಾಸಾರ್ಯ | ಸುಮನಸರಿಗತಿ ಪ್ರೀಯ ವಿಮಲಕೀರ್ತಿ ಸುಶಯ್ಯ ಯತಿವರಾರ್ಯ ಪ
ಅಮಮ ನಿಮ್ಮಯ ಕೀರ್ತಿ ಪೊಗಳಲಳವೇ ಎನಗೆಸುಮನಸ ಮುನಿಯನುಗ್ರಹೀತಾ – ಖ್ಯಾತಾ ಅ.ಪ.
ಕನಕ ಕಶ್ಯಿಪು ಸುತನೆ | ಧನಕನಕ ತೃಣಗಣನೆಅಣು ಘನನ ಶ್ರೀ ಚರಣ | ವನಜ ಭ್ರಮರಾ |ಮನುಜಮೃಗ ವೇಷ | ಶ್ರೀ ನರಹರಿಯ ಮೂರ್ತಿಯನುಘನವಾದ ಸ್ತಂಭದೊಳು | ಕರೆದು ತೋರಿಸಿದೇ ೧
ಮತ್ತೆ ನೀ ತ್ರೇತೆಯಲಿ | ಹತ್ತು ತಲೆ ರಾವಣನಭ್ರಾತೃವಾಗವತರಿಸಿ | ಕೀರ್ತಿಯಲಿ ಮೆರೆದೇ |ಭೃತ್ಯ ಭಾವದಿ ನಮಿಸಿ | ಸತ್ಯಾತ್ಮ ಶ್ರೀಹರಿಯವಿಸ್ತರದ ಕೀರ್ತಿಯಲಿ | ಲಂಕ ಪತ್ತನವಾಳ್ದ ೨
ನರಪ ಪ್ರತೀಪನಾ | ಪರಸೂನು ವೆಂದೆನಿಸಿ ಕುರುಪತಿಯ ಋಣಸೇವೆ | ಸರಿಯಾಗಿ ಸಲಿಸೀ |ಮರುತಾತ್ಮ ಭೀಮನಿಂ | ವರವನೇ ಪಡೆಯುತ್ತವರ ಕಲೀಯಲಿಯತಿ | ವರನೆನಿಸಿ ಮೆರೆದೇ ೩
ಬ್ರಹ್ಮಣ್ಯಯತಿ ಕರಜ | ಬ್ರಹ್ಮ ಬ್ರಾಹ್ಮಣ ಪ್ರೀಯಬ್ರಹ್ಮಣ್ಯ ಪ್ರೀಯ ಸು | ಬ್ರಹ್ಮಣ್ಯನಾವೇಶನೇ |ಬ್ರಹ್ಮಾಸ್ಮಿ ಎಂದೆನಿಪ | ಬ್ರಹ್ಮದ್ವೇಷಿಯ ನಿಕರಬ್ರಹ್ಮಾಂಡದಲಿ ತರಿದೇ | ಬ್ರಾಹ್ಮಣರ ಪೊರೆದೇ ೪
ಬಾಗಿ ಭಜಿಸುವ ಭಕ್ತ | ಭಾಗ್ಯ ನಿಧಿಯೇ ಶಕ್ತರೋಗ ರುಜಿನವ ಹರ್ತ | ಭಾಗ್ಯದಾತಾ |ರೋಗ ವರ್ಜಿತ ಗುರೂ | ಗೋವಿಂದ ವಿಠಲನರಾಗದಲಿ ಭಜಿಪಂಥ | ಭಾಗವತ ಪ್ರೀಯ ೫

೪೫೭
ಶ್ರೀ ಜಗನ್ನಾಥದಾಸರು
ನಮೋ ದಾಸವರ್ಯ ಪೂತಾತ್ಮ ಪದ ನಮೋ ದೇವತಾತ್ಮ || ಪ
ರಮಾ ರಮಣಪದ ಅಮಲ ಭಜನೆ ಕೊಡುನಮೋ ನಮೋ ಭವ್ಯಾತ್ಮ ಅ.ಪ.
ನಾರಸಿಂಹ ಸತ್ಪೋರನೆಡರ ಪರಿಹಾರ ಪದದಿ ದೀಕ್ಷಪಾರುಮಾಳ್ಪಕೂಪಾರ ಭವವ ಸತ್ಸರಾಮೃತ ಕೃತದಕ್ಷ |ಭಾರ ನಿನ್ನದಾಪಾರ ಕೃಪೆಯ ನೀತೋರ್ವುದೆಂಬ ಮಹರಕ್ಷಬಾರಿ ಬಾರಿ ನಿರ್ಧಾರ ಮನದಿ ಹಾರೈಸುತಿಹೆನೂ ಹರಿಪಕ್ಷ ೧
ಮಾನವೀಶ ಪ್ರಾಣೇಶ ದಾಸನುತ ಆನತೇಷ್ಟ ತೋಷಗಾನಲೋಲ ಮೌನೀಶ ಪದಾಂಬುಜ ಆನಮಿಪರ ಆಶೇಷ |ಹೀನವೆನಿಪ ಕುಯೋನಿ ನಿವಾರಕ ಧ್ಯಾನಗಮ್ಯ ಸುವಿಶೇಷಪ್ರಾಣನಾಥ ಮಹಿಮೋನ್ನತಿ ಗಾನದಿ ಕಳೆದೆ ದೋಷ ೨
ವಾದಿರಾಜ ಗುರು ಪಾದಾರ್ಚಿಸಿ ಸನ್ಮೋದ ಪಡೆದದೇವ ವೇದ ವ್ಯಾಸ ಸದ್ಬೋಧ ತಿಳಿದು ನೀ ಬೋಧಿಸಿದೆ ಗುರುಭಾವ | ಮೋದಕ ಪ್ರಿಯ ಗುರು ಪಾದ ಭಜಿಸಿ ಅರ್ಧಾಯು ಪಡೆದ ಸ್ವಭಾವನಾದ ಮೂರ್ತಿ ಗುರು ಗೋವಿಂದ ವಿಠಲನ ಪಾದ ತೋರೊ ದೇವ ೩

ಭಾವಬೋಧಕಾರರು ಎಂದು
೩೮೭
ಶ್ರೀ ರಘೋತ್ತಮತೀರ್ಥರು
ನಮೋ ದೈಶಿಕಾರ್ಯ | ರಘೂತ್ತಮ ಪದನಮೋ ದೇವತಾತ್ಮ ಪ
ವಿಮಲ ರಾಮ ಸನ್ಮಹಿಮ ಭಜಕಗುರುನಮೋ ನಮೋ ಪೂತಾತ್ಮ ಅ.ಪ.
ನಾರಿ ಚೋರ ಸಂಹಾರ ಪದಾಂಬುಜ ಆರಾಧನ ದೀಕ್ಷಸಾರ ಸುರಸ ಗ್ರಂಥಾರಾಧಿಸೆ ಬಹು ಚಾರು ವ್ಯಾಖ್ಯ ಕೃತ ದೀಕ್ಷಭಾರಿ ಗ್ರಂಥ ಬೃಹದಾರಣ್ಯ ವಿವರಣ ನ್ಯಾಯ ಗ್ರಂಥಲಕ್ಷ್ಯಸಾರ ತತ್ವಪ್ರಭೆ ಚಾರುಗೀತ ಪ್ರಭೆ ತೋರ್ದ ಭಾವದಕ್ಷ ೧
ಭ್ರಾಮಕ ಜನ ಸದ್ಭಾವದಿ ಮೆರೆವ ಸುಭಾವ ಬೋಧ ಕಾರ್ಯತೀವ್ರ ಮನದ ದುರ್ಭಾವ ಕಳೆದು ಹರಿಭಾವ ಈಯೊ ವರ್ಯಭಾವ ಕೊಲಿವ ಕರ್ಮಾವಳಿಗಲ್ಲೆನೆ ಓವಿ ಪೇಳ್ದ ದಾಸಾರ್ಯಕಾವ ಕರುಣಿ ಹರಿಭಾವದಿ ನಿಲ್ಲುವ ಭಾವ ಬೋಧಕೃತ ಆರ್ಯಾ ೨
ಗುರುಗಳೆನಿಪ ರಘುವರ್ಯಕರಾಬ್ಜಜ ಶರಣ ಕಲ್ಪವೃಕ್ಷವಿರಚಿಸೆ ನ್ಯಾಸವ ವರ ಸು ಅಂಗದೊಳು ಸುರರ ಕಾಂಬದಕ್ಷಗುರು ತೈಜಸ ಒರಯ ನ್ಯಾಯ ಸುಧೆ ಪೇಳ್ದ ಕೋಣಾಧ್ಯಕ್ಷಪರಿಪರಿ ಪ್ರಾರ್ಥಿಪೆ ಗುರು ಗೋವಿಂದ ವಿಠಲನ ಚರಣದಿ ದೀಕ್ಷ ೩

೧೯೧
ನಮೋ ನಮೋ ಭೀಮಾ | ಜೀವೋತ್ತುಮಾಪ್ತ ಜನ ಪ್ರೇಮಾ ಪ
ಕುಮಾನ ಜನ ಸುಪ್ರಮೋದ ವಿನಾಶಕ ಶಮಾದಿ ಗುಣನಿಧೆ | ಕ್ಷಮಾಪಣಂ ಕುರು ಅ.ಪ.
ಕುಂತಿಯವರ ಕುವರಾ | ಕುರು ಕುಲ | ಕಾನನ ಸುಕುಠಾರ ||ಭ್ರಾಂತ ದುಶ್ಯಾಸನ | ಅಂತ್ಯವ ಕಾಣಿಸಿಕಾಂತಾ ಮಣೀಯನು | ಸಂತೋಷ ಪಡಿಸಿದೆ ೧
ಸಿಂಧೂರ ಪುರಿ ನಿಲಯ | ಗೋಪಿ | ನಂದಾನಗತಿ ಪ್ರೀಯವಂದೀಸಿ ಬೇಡುವೆ | ಕುಂದೂಗಳೆನ್ನಯನೊಂದಾನು ಎಣಿಸಿದೆ | ನಂದನ ಪಾಲಿಸೊ ೨
ಪವಿ ಸಮಾನ ಕಾಯ | ನಿರುತ | ಭವ ಮುಖಾದಿ ಗೇಯ ||ಅವಿರತದಿ ಗುರು | ಗೋವಿಂದ ವಿಠಲನಸ್ತವನ ಗೈವನ | ಭವವ ಕಳೆಯುವ ೩

೭೪
ನರಸಿಂಗಪುರ ವಾಸ | ಕಯಾಧು ಶಿಶುಪೋಷಕರುಣಾಮಯ ಸುವಪುಷ | ಪರಿಪಾಲಿಸು ಮೇಶ ಪ
ಶರಧಿಜೆ ಲಕುಮೀಶ ಮೃತ್ಯುಂಜಯಗೆ ಬಿಂಬಶರಣ ಜನಾಬ್ದಿ ಭೇಶ | ಸರಸಿಜ ಭವಾದೀಶ ಅ.ಪ.
ಕೃಷ್ಣಾತೀರ ವಾಸ | ಕೃಷ್ಣೆಯ ಮಾನ ಪೋಷಜಿಷ್ಣು ಸಾಹಸ ಭಾಸ | ವೃಷ್ಣಿ ಕುಲಕೆ ಭೂಷ ೧
ಪಾಲಸಾಗರ ಶಾಯಿ | ಅರಳೆಲೆ ಮಾಗಾಯಿ |ವ್ಯಾಳದ ಮೇಲೆ ಶಾಯಿ | ಕೋಳ ನೃಹರಿ ಕಾಯಿ ೨
ಕೋಮಲ ಶುಭ ಕಾಯ | ಹೇಮ ಕಶಿಪು ಕಾಯನೇಮದೊಳಗೆ ಶೀಳ್ದ | ಕಾಮಿತ ಫಲಪ್ರದ ೩
ಕಾಡುವ ರಕ್ಕಸನ | ಒಡಲ ಶೀಳಲು ಬಾಹುಷೋಡಶ ಧರಿಸಿದ | ಗಾಢ ಕಾರಣವೇನೊ ೪
ದರ್ಶದಿನದೊಳಾ | ದರ್ಶ ದಾಸರ ದಿನ ದರ್ಶನ ನೀನಿತ್ತು | ಸ್ಪರ್ಶ ಪೂಜೆಯ ಕೊಂಡೆ೫
ಜ್ವಾಲಾ ನೃಕೇಸರಿ | ಹಾಲಾಹಲವು ಭವಜಾಲ ದೊಳ್ಹಾಕದಿರು | ಕೇಳುವೆ ವರ ನಿನ್ನ ೬
ಗೋವರ್ಧನೋದ್ದರ | ಗೋವ್ಗಳ ಪಾಲ ಗುರುಗೋವಿಂದ ವಿಠಲನೆ | ಭಾವದೊಳಗೆ ತೋರೊ ೭

೭೫
ತೊರವಿ ನರಸಿಂಹನ ಸ್ತೋತ್ರ
ನರಹರೀ | ಪಾಲಿಸೊ ಎನ್ನ | ನರಹರೀ ಪ
ನರಹರೀ | ನಮಿಸೂವೆ ನಿನ್ನ | ಚಾರುಚರಣ ಕಮಲಕ್ಕೆ ಮುನ್ನ | ಅಹತೊರವಿ ಕ್ಷೇತ್ರದಲ್ಲಿ | ಪರಿಪರಿ ಭಕುತರಮೊರೆಯ ಕೇಳ್ಕರುಣದಿ | ವರವ ನೀಡುತಲಿಹ ಅ.ಪ.
ಪೂರ್ವ ಸಾಲಿಗ್ರಾಮ ರೂಪ | ದಲ್ಲಿದೂರ್ವಾಸ ಪೂಜಿತ | ರೂಪ | ಇದ್ದುಓರ್ವ ಭಕ್ತನಿಗೆ ಸಲ್ಲಾಪ | ತೇಜಗೈವದ ಕೇಳ್ವದು ಅಪರೂಪ | ಅಹಊರ್ವಿಯೊಳ್ ಚಿಮ್ಮಲಗಿ | ಸರ್ವಾಧಿಕವು ಕ್ಷೇತ್ರಇರ್ವೆ ನಾನಲ್ಲೀಗ | ತರ್ವೋದು ತೊರವೀಗೆ ೧
ಸೊಲ್ಲ ಲಾಲಿಸಿ ಗಾಢ ಭಕ್ತ | ಎದ್ದುಚೆಲ್ಲೀದ ವಾರ್ತೆ ಸರ್ವತ್ರ | ಜನರಲ್ಲಸ ಗೊಳದೆ ಮುಂದತ್ತ | ಹಸಿಹುಲ್ಲನು ತೆಂಕದಿಶಿಯಿತ್ತ | ಅಹಚೆಲ್ಲುತ ಪೋಗುತಿರೆ | ಜ್ವಲೀಸಿತದುಚಿಮ್ಮಲ್ಲಿಗಿ ಊರ್ಬಳಿ | ಒಳ್ಳೆ ಕೃಷ್ಣಾತೀರ ೨
ಸ್ವಪ್ನ ಸೂಚಿತ ತಾಣ ಬಗೆದು | ನೋಡೆಅಪ್ಪ ನೃಹರಿ ಕಂಡನಂದು | ಭಕ್ತರಪ್ಪಿ ಆನಂದಾಶ್ರು ಬಿಂಧು | ಕೈಚಪ್ಪಾಳೆ ಬಡಿದುಘೇಯೆಂದು | ಆಹಅಪ್ಪಾರ ಮಹಿಮನ | ಗೊಪ್ಪಾದ ಘನಮೂರ್ತಿಉಪ್ಪರಿ ತಂದಿಡುತ | ದರ್ಪದಿ ನಿಂತರು ೩
ಶಿರಿ ಹಾಗೂ ಪ್ರಹ್ಲಾದರಾಯ | ಯುಕ್ತಹಿರಣ್ಯಕನ ತನ್ನ ತೊಡೆಯ | ಮೇಲೆಇರಿಸಿ ಉದರ ಸೀಳ್ದ ಬಗೆಯ | ಕೇಳಿಕರುಳನು ಮಾಲೆಯ ಪರಿಯ | ಆಹಧರಿಸುತ್ತ ತೋರ್ದನು | ಹಿರಣ್ಯಕಶಿಪೂಜತರಳ ಭಕ್ತನ ತೆರ | ತರಳನರಿದಿಷ್ಟೆಂದು ೪
ಶಿಷ್ಟ ಮತ್ಸ್ಯಾವತಾರ | ಯುಕ್ತಶ್ರೇಷ್ಠ ಪ್ರಭಾವಳಿಹಾರ | ಸುವಿಶಿಷ್ಟದಿ ನರ ಮೃಗಾಕಾರ | ನಾಗಿಅಷ್ಟವು ಭುಜಯುಕ್ತಾಕಾರ | ಆಹಶಿಷ್ಟ ಭಕ್ತರಿಂದ ಕಷ್ಟವಿಲ್ಲದೆ ತೆರಳಿಶ್ರೇಷ್ಠ ತೊರವಿಯಲ್ಲಿ ಇಷ್ಟನಾಗಿ ನಿಂದ ೫
ಮುನ್ನಿದ್ದ ನೃಹರಿಯ ಶಿಲೆಯ | ಕೊಂಡುಚೆನ್ನ ತೀರ್ಥದಿ ನರಹರಿಯ | ಇಡಲುಕೃಷ್ಣೆಗೆ ಪೋಗುವ ಪರಿಯ | ಪೇಳೆಘನ್ನ ಮೂರ್ತಿಯ ಒಯ್ದ ಬಗೆಯ | ಆಹ ಇನ್ನು ಮುನ್ನು ಪೇಳ್ವ | ನನ್ನೆಯ ಜನರಿಹರು ಮನ್ನಿಸುತೀವಾರ್ತೆ ಚಿನ್ಮಯನ ಕೊಂಡಾಡಿ ೬
ಗುಪ್ತಾವು ಗಂಗಾ ಸನ್ನಿಹಿತ | ತೀರ್ಥಉತ್ತಮ ದಿಂದಭಿಷೇಚಿತ | ನಾಗಿನಿತ್ಯವು ಪವಮಾನ ಸೂಕ್ತ | ಪಂಚಯುಕ್ತವು ಪೂಜಾದಿ ಕೃತ | ಆಹಭಕ್ತಿ ಪೂರ್ವಕವಾದ | ಉತ್ತಮ ಸೇವೆಯನಿತ್ಯ ಕೈಗೊಳ್ಳುತ | ಭಕ್ತರಭೀಷ್ಟದ ೭
ಸತ್ಸಂಗ ಪ್ರತಿವರ್ಷ ಮಾಸ | ಎರಡುಉತ್ಸವ ವೈಭವ ಘೋಷ | ಕೇಳಿ ಕುತ್ಸಿತ ಜನರೊಲ್ಲ ಈಶ | ಅಂತೆ ಸಚ್ಛಾಸ್ತ್ರ ಪ್ರವಚನ ಪೋಷ | ಆಹವತ್ಸಾರಿ ದುರುಳನ | ಕುತ್ಸಿತ ಉದರವವಿಸ್ತ್ರುತ ನಖದಿಂದ | ಕುತ್ತಿದ ಚಿಂತಿಸು ೮
ನರಹರಿ ನಾಮಕ ಕವಿಯು | ಇಲ್ಲಿತೊರವಿಯ ನರಹರಿ ಸನಿಯ | ಚೆಲ್ವವರರಾಮ ಕಥೆಯನ್ನು ಬರೆಯು | ಅವ – ಕುವರ ವಾಲ್ಮೀಕಿಯೆ ಮೆರೆಯು | ಆಹತೊರವೆ ರಾಮಾಯಣ | ವಿರಚಿತ ವಾಯ್ತಿಲ್ಲಿಹರಿಯನುಗ್ರಹ ಜಾತ | ವರ ಕವಿತೆ ಉಲ್ಲಾಸ ೯
ಹೃದಯ ಗುಹೆಯಲ್ಲಿ ವಾಸ | ಉಪನಿಷದು ಪೇಳ್ವದು ಅಂತೆಲೇಸ | ಬಲುಮುದದಿಂದ ಮಾಳ್ಪದ ವಾಸ | ಅಂಥಬುಧಜನಕಹುದು ಸಂತೋಷ | ಆಹವಿಧವು ಈ ಪರಿಯೆಂದು | ವಿಧಿಸಲು ಜಗತೀಗೆಹದುಳದಿ ತೊರವಿ ಸ | ನ್ನಿಧಿ ಗುಹೆಯೊಳುವಾಸ ೧೦
ಓದಿತುತಿಪತಿಗೆ ಸಾರತರ | ಹರಿಕಾವನು ಶರಣರ್ಗೆ ವಿಭವ | ದಿಂದಲೀವನು ಮುಕ್ತಿಯ ಸುಖವ | ಈತಕೈವಲ್ಯಾಕಧಿಪತಿ ಇರುವ | ಆಹತಾವಕನಾಗಿ ಗುರು | ಗೋವಿಂದ ವಿಠಲನಭಾವದಿ ನೆನೆವಂಗೆ | ತೀವರ ವರವೀವ೧೧

೩೨೨
ಶೂರ್ಪಾಲಯ ಕ್ಷೇತ್ರದ ನರಹರಿ ಸ್ತೋತ್ರ
(ಕೃಷ್ಣಾತೀರ)
ನರಹರೀ ಪಾಹಿ | ಮರನೂರ ನರಹರೀ ಪ
ನರಹರಿ ವಂದಿಪೆ ನಿನ್ನ | ಪಾದಸರಸೀರುಹಕೆ ನೀನು ಎನ್ನ | ಆಹಪರಿ ಪರಿ ಭವಣೆಯ | ಪರಿಹರಿಸುತ ಮುನ್ನವರ ವೈರಾಗ್ಯವನಿತ್ತು | ಕರುಣೀಸೊ ಸಂಪನ್ನ ಅ.ಪ.
ಕೃಷ್ಣಾತೀರಗ ಲಕುಮೀಶ | ನಿನ್ನತೃಷ್ಣೆಯೊಳಿಡು ಎನ್ನ ಅನಿಶ | ದಿವ್ಯದೃಷ್ಟಿಯ ಪಾಲೀಸೋ ಶ್ರೀಶ | ಬಲುಹೃಷ್ಟನ್ನ ಮಾಡೊ ಸರ್ವೇಶ | ಆಹಜಿಷ್ಣು ಸಖನೆ ಸತಿ | ಕೃಷ್ಣೆಗಕ್ಷಯ ವಸನಸೃಷ್ಟಿಗಿತ್ತವ ಹರಿ | ಕೃಷ್ಣನೆ ಸಲಹೆನ್ನ ೧
ಕೆಂಗಣ್ಣ ಮೀನ ನೀನಾದೆ | ಭಾರಿನಗವನು ಬೆನ್ನಿಲ್ಲಿ ಪೊತ್ತೆ | ಮಣ್ಣನಗಿದು ಚೋರನ ನೀನು ಗೆದ್ದೆ | ಪುಟ್ಟಮಗುವಿಗಾಗವತಾರ ಮಾಡ್ದೆ | ಆಹಭೃಗುರಾಮ ರಾಮನೆ | ನಗಧರ ಕೃಷ್ಣನೆಸೊಗಸು ಮಾತಿನ ಬುದ್ಧ | ಆಘಹರ ಕಲ್ಕಿಯೆ ೨
ಭೃಗು ಕುಲೋದ್ಭವ ರಾಮ ನಿನ್ನ | ಚೆಲ್ವದೃಗು ಜನಿತ ಸುಖ ಜಲ ಕಣ್ಣ | ಬಿಂದುಯುಗಳವು ಬೀಳೆ ಪಾವನ್ನ | ವೃಕ್ಷಯುಗಳೋದಯವಾಯ್ತು ಮುನ್ನ | ಆಹಅಗಣಿತ ಮಹಿಮ | ಅಶ್ವತ್ಥ ಸನ್ನಿಹಿತನೆನಿಗಮ ವೇದ್ಯನೆ ಸರ್ವ | ಜಗದೀಶ ಸಲಹೆನ್ನ ೩
ಶೂಲಿಯಿಂದೊಡಗೂಡಿ ರಾಮ | ಚಂದ್ರಪಾಲಿಸುತಿಹ ಸಾರ್ವಭೌಮ | ಸುಜನಾಳಿ ಪಾಪಾರಣ್ಯ ಧೂಮ | ಕೇತುಓಲೈಪ ಜನರಘ ಭಸ್ಮ | ಆಹಲೀಲೆಯಿಂದಲಿ ಗೈವ | ಆಲಯವಿದು ಶೂರಪಾಲೀಯ ಕ್ಷೇತ್ರದಿ | ಶ್ರೀಲೋಲ ನರಹರಿ ೪
ನಡು ನದಿಯೋಳು ಕೋಟೇಶ | ಮತ್ತೆಪಡುವಲಯದೋಳು ಕಂಕೇಶ | ಇನ್ನುಬಡಗ ನರಹರಿ ಬಳಿ ಬೈಲೇಶ | ಆಹರೊಡಗೂಡಿ ನೆಲಸೀಹ | ಕಡು ಮುದ್ದು ರೂಪದಿದೃಢ ಭಕ್ತನೆನಿಸೀಹ | ಮೃಡನಿಂದ ಪೂಜಿತ ೫
ಅಜಪಿತ ಪದಜಳು ಎನಿಪ | ಮತ್ತೆಅಜಾಂಡ ಕಟಹದಿಂ ಬರ್ಪ | ಇನ್ನುಅಜಸುತ ಶಿರದಲಿ ಧರಿಪ | ಸಗರಜರ ಪಾಪವನ್ನು ಹರಿಪ | ಆಹಮಝಬಾಪು ಗಂಗೆಯ | ನಿಜ ಪಾಪ ಕಳೆಯಲುಅಜಸುತ ನಾಜ್ಞೆಯಿಂ | ಬಿಜಯಿಸಿದಳು ಇಲ್ಲಿ ೬
ಪರರಘಗಳ ಹೊತ್ತು ಗಂಗೆ | ಬಂದುಹರ ಪೇಳಿದಂಥ ದ್ವಿಜಂಗೆ | ಶೂರ್ಪವರ ವಾಯು ನ್ವಿತ್ತಳವಂಗೆ | ಪಾಪಹೊರದೂಡಿದಳು ಮಂಗಳಾಂಗೆ | ಆಹಗುರುಕನ್ಯಾಗತನಾಗೆ | ಸರಿದ್ವರ ಕೃಷ್ಣೇಲಿಬೆರೆಯುತ ಸುರ ನದಿ | ಹರಿಪಳು ಜನರಘ ೭
ಮಧ್ವಾರ್ಯ ಸಂತತಿ ಜಾತ | ಗುರುವಿದ್ಯಾಧೀಶರು ಇಲ್ಲಿ ಖ್ಯಾತ | ದ್ವಾದಶಬ್ದ ಪರಿಯಂತನುಷ್ಠಾತ | ಪ್ರಾಣಮುದ್ದು ಪ್ರತಿಮೆ ಪ್ರತಿಷ್ಠೀತ | ಆಹಶುದ್ಧ ದ್ವಾದಶಿ ದಿನ | ಸದ್ವೈಷ್ಣ್ವ ಲಕ್ಷರ್ಗೆವಿಧ್ಯುಕ್ತ ಭೋಜನ | ಶ್ರದ್ಧೆಯಿಂದಲಿ ಗೈದರ್ ೮
ನಂದ ತೀರ್ಥರ ಶಿಷ್ಯನೆನಿಸಿ | ಕೃಷ್ಣೆಮಿಂದು ತಾ ಭಕ್ತಿಯವೆರಸಿ | ನಂದಕಂದನೆ ಪರ ತತ್ವವೆನಿಸಿ | ಸ್ತುತಿಸ್ಕಂದೋಕ್ತ ಮಹಿಮೆಯ ಸ್ಮರಿಸಿ | ಆಹಇಂದುಪ ಗುರು ಗೋ | ವಿಂದ ವಿಠಲನಹೊಂದಿ ಭಜಿಪರ್ಗ | ಬಂಧನವೆಲ್ಲಿಹದೋ ೯

೫೬೪
ನರ್ತನಗೋಪ ಕೃಷ್ಣ | ವಿಠಲ ಪೊರೆ ಇವನಾ ಪ
ಅರ್ತು ನಿನ್ನಂಘ್ರಿಯಲಿ | ದಾಸ್ಯ ಕಾಂಕ್ಷಿಪನಾ ಅ.ಪ.
ಮಧ್ವಮತ ತತ್ವಗಳ | ಉದ್ದರಿಸು ಇವನಲ್ಲಿಶ್ರದ್ಧೆ ಪತಿ ಸುಪ್ರೀಯ | ಮಧ್ವಾಂತರಾತ್ಮಸದ್ಧರ್ಮರತಿಯಿತ್ತು | ತಿದ್ದಿ ಸಂಸ್ಕತಿಗಳನುಶ್ರದ್ಧಾಳು ವೆಂದಿನಿಸು | ಸಿದ್ಧಾಂತ ಸಥದೀ ೧
ಸಾಧನ ಸುಮಾರ್ಗದಲಿ | ಒದಗುತಿಹದ್ವಂದ್ವಗಳಬಾಧೆಗೊಳಗಾಗದತಿ | ಸಮತೆ ಅನುಭವಿಪ ಬೋಧ ಓದಗಿಸಿಕಾಯೋ | ಬಾದರಾಯಣದೇವಮೋದದಿಂ ಪ್ರಾರ್ಥಿಸುವೆ | ಹೇ ದಯಾಪೂರ್ಣ ೨
ಧ್ಯಾನುಪಾಸನವಿತ್ತು | ಶ್ರೀನಿವಾಸನಮನದಿಕಾಣುವ ಸುವಿಜ್ಞಾನ | ನಿನಾಗಿ ಕೊಡುತಾಮೌನಿಕುಲ ಸನ್ಮಾನ್ಯ | ಜ್ಞಾನದಾಯಕ ಹರಿಯೆದೀನಜನ ಮಂದಾರ | ನೀನಾಗಿ ಪೊರೆಯೊ ೩
ಪಿತೃ ಮಾತೃ ಪರಿವಾರ | ವ್ಯಾಪ್ತ ಹರಿಮೂರ್ತಿಯನುಅರ್ಥಿಯಿಂದಲಿ ಭಜಿಪ | ಮತಿಯ ಪಾಲಿಸುತಾಕರ್ತೃತ್ವ ಭ್ರಾಂತಿಯನು | ಹತಮಾಡಿ ಶ್ರೀಹರಿಯೆಕೀರ್ತಿವಂತನ ಗೈಯ್ಯೋ | ಆರ್ತರುದ್ಧರಣಾ ೪
ಮುನ್ನವೇ ತ್ಯೆಜಸನು | ನನ್ನೆಯಿಂ ಸೂಚಿಸಿಹಚೆನ್ನ ಅಂಕಿತವನ್ನೆ | ಇನ್ನು ಸ್ಥಿರಪಡಿಸೀಘನ್ನ ಉಪದೇಶವನು | ಚಿತ್ಗಾನಿಗೆ ಇತ್ತಿಹೆನೋಮನ್ನಿಸೀಕೃತ್ಯ ಗುರು | ಗೋವಿಂದ ವಿಠಲಾ ೫

೭೬
ನಾಥಾ ನಮಿಪೆ ನಿನಗೇ | ಶ್ರೀ ಬದರೀನಾಥಾ ನಮಿಪೆ ನಮಿಪೆ ನಿನಗೆ ಪ
ನಾಥಾ ಜಗಕೆ ಸರ್ವಾ | ನಾಥ ಜನರ ಪಾಲಭೀತಿ ರಹಿತ ಬದರಿ | ನಾಥ ವಿಚಿತ್ರ ಶಕ್ತಾ ಅ.ಪ.
ಸರ್ವ ಪ್ರಾಭವ ಶಕುತೀ | ರಕ್ಷಣ ಲಯಸರ್ವ ವಿಚಿತ್ರ ಶಕುತೀ ||ಪರ್ವ ಪರ್ವಗಳಲ್ಲಿ | ಸರ್ವಾಸ್ಥಿ ಮಜ್ಜದಲಿಸರ್ವ ದೇಹದಿ ನಿಂತು | ಸರ್ವ ಕಾರ್ಯವ ಮಾಳ್ಪೇ ||ದ್ರುತ :- ಪರ್ವತ ಸುತೆ ಪ್ರಿಯ | ಶರ್ವನೊಡೆಯಪವಮಾನನಾದಿ ಸುರ | ಸರ್ವವಂದ್ಯ ಹರಿಉರ್ವಿಲಧಿಕ ಮ | ತ್ತೋರ್ವರ ಕಾಣೆನೊದುರ್ವಿಭಾವ್ಯ ಸಮ | ಸರ್ವೋತ್ತಮನೆ ೧
ಏಕಮೇವನೆ ತಪವ | ಆಚರಿಸುತ್ತಲೋಕರಕ್ಷಕ ಕಾರ್ಯಮ ||ಅನೇಕಾ | ವಿಚಿತ್ರರೂಪ | ಸಾಕಾರಿ ಪ್ರಭು ನಿ-ರ್ವಿಕಾರಿಯಾಗಿ ಆ | ನೇಕಾ ಬಗೇಲಿ ಮಾಳ್ಪೆದ್ರುತ :ನಾಕ ಜಪಿತಭುವ | ನೈಕಾರಾಧ್ಯನೆಏಕ ಗುಣದಲಿ | ಏಕದೇಶ ರಮೆಲೋಕೇಶಾದಿ ಪಿ | ನಾಕಿಗಳ್ಬಲ್ಲರೆಪ್ರಾಗ್ದೇವತೆ ಹರ | ಸಾಕುವುದೆಮ್ಮ ೨
ಚಿತ್ಸುಖಮಯ ವಪುಷ | ಧೇನುಕ ಮತ್ತೆವತ್ಸಾರಿ ಗೋಪ ಹರುಷ ||ವತ್ಸರದವಗುಣ | ಕುತ್ಸಿತ ಜನ ಹರಮತ್ಸ್ಯಾದಿರೂಪ ಶಿರಿ | ವತ್ಸ ಲಾಂಛನನೇ ||ದ್ರುತ :ಮತ್ಸ್ಯ ಧ್ವಜಪ ಪುರು | ಕುತ್ಸ ಭೋಜಪ ಗೋವತ್ಸ ಧ್ವನಿಗೆ ಬಹ | ಉತ್ಸಹ ಉಳ್ಳನೆಚಿತ್ಸುಖ ಪ್ರದ ಶರ | ಣ್ವೋತ್ಸಲ ಗುರು ಗೋ-ವಿಂದ ವಿಠಲ | ಮಾಂ ಪಾಹಿ ಪಾಹೀ ೩

೫೬೭
ನಾರಾಯಣ ಕೃಷ್ಣವಿಠಲ | ಪೊರೆಯ ಬೇಕಿವನಾ ಪ
ಕಾರುಣ್ಯನಿಧಿ ನಿನ್ನ | ಮೊರೆಯ ಹೊಕ್ಕವನಾ ಅ.ಪ.
ಗುರು ರಾಘವೇಂದ್ರರಾ | ಆಶಿಷವ ಪಡೆಯುತ್ತಗುರು ಪರಮ ಗುರುಗಳಾ | ದರುಶನವ ಪೊಂದೀಮೆರೆವ ಸುಸ್ವಾಪರಲಿ | ಹರಿಗುರು ದಾಸ್ಯಗಳವರಸು ತೈಜಸ ಸೂಚಿ | ಅಂಕಿತವ ನಿತ್ತೇ೧
ಮುಕ್ತಿಗಿವು ಸೋಪಾನ | ಭಕ್ತಿವೈರಾಗ್ಯಗಳುತತ್ವ ತರತಮಜ್ಞಾನ | ಉತ್ತಮರೆ ಸೇವೇಕೃತ್ತಿವಾಸನ ತಾತ | ಇತ್ತು ಪೊರವುದು ಇವನಾಮತ್ತನ್ಯನ ಬೇಡೆ | ಉತ್ತರಿಸೊ ಇವನಾ ೨
ಸಾಧನ ಸುಸಾಧ್ಯವೆನೆ | ಶ್ರೀಧರನ ನಾಮಸುಧೆಮೋದದಿಂದುಣಿಸಿವಗೆ | ಮೋದಮುನಿವಂದ್ಯನಾದ ಮೂರುತಿ ಗುರು | ಗೋವಿಂದ ವಿಠಲನೆನೀ ದಯದಿ ಬಿನ್ನಪವ | ಆದರಿಸಿ ಸಲಿಸೋ ೩

೫೬೫
ನಾರಾಯಣ ವಿಠ್ಠಲನೆ ನೀನಿವನ ಕಾಪಾಡೊ ಹರಿಯೆ ಪ
ನೀರಜಾಸನವಂದ್ಯ ಪೋರ ನಿನ್ನವನೆಂದುಕಾರುಣ್ಯದಲಿ ಕೈಪಿಡಿದು ಕಾಪಾಡೊ ಹರಿಯೇ ಅ.ಪ.
ಜ್ಞಾನಾಯು ರೂಪಕ ಸು | ವಾಯುದೇವನೊಳಿದ್ದುನೀನಿವಗೆ ಜ್ಞಾನಾಯು ಸಂಪದವನೀಯೋ |ಮೌನಿಕುಲ ಸನ್ಮಾನ್ಯ ಪೂರ್ಣಪ್ರಜ್ಞರ ಮತದಿ ಜ್ಞಾನಿ ಎಂದೆನಿಸಿವನ ಕಾಪಾಡೊ ಹರಿಯೆ ೧
ಗೋವುಗಳೊಳುದ್ಗೀಥ ಕಾವ ಕರುಣಿಯೆ ದೇವಭಾವದಲಿ ನೀನಿದ್ದು ಉದ್ಧರಿಸೊ ಹರಿಯೇ |ಆವ ಭವವನಧಿ ಲಕ್ಷ್ಮೀ ನರಹರಿಯೇನೋವುಗಳ ಪರಿಹರಿಸೊ ಪವನ ಪ್ರೀಯ ೨
ಹೆಂಚು ಹಾಟಕದಲ್ಲಿ ಸಮಬುದ್ಧಿ ನೀನಿತ್ತುಪಂಚ ಪಂಚಿಕೆ ತತ್ವ ತರತಮವ ತಿಳಿಸುತ್ತಮಿಂಚಿನಂತಿವನ ಹೃತ್ಪಂಕಜದಿ ಪೊಳೆಯೊವಾಂಛಿತ ಪ್ರದನೆ ಗುರು ಗೋವಿಂದ ವಿಠಲಾ ೩

೫೬೬
ನಾರಾಯಣ ಹರಿ ವಿಠಲ | ಪೊರೆಯ ಬೇಕಿವಳಾ ಪ
ಸಾರತಮ ವಿಶ್ವಾತ್ಮ | ಕಾರುಣಿಕ ಹರಿಯೇಅ.ಪ.
ನಾದ ಮೂರುತಿ ನಿನ್ನ | ಪಾದಾನುವರ್ತಿ ಇಹಸಾಧು ತರುಳೆಯ ಕಾಯೊ | ವೇದ ವೇದ್ಯಾ |ಶೋಧಿಸಿದ ಸಂಸ್ಕಾರ | ಕಾದಿಹುದು ಸತ್ಪುಣ್ಯಬೋಧವಿದು ಸಂಪಿಗೆಯ | ಸ್ವಾದು ದರ್ಶಾ ೧
ಆಗುಹೋಗುಗಳೆಲ್ಲ | ಸಾಗರಜೆ ಪತಿಯದೆಂಬಆಗ ಮಗಳರಿವ ಸ | ದ್ಯೋಗ ಪಾಲಿಪುದೂನಾಗಶಯ ದಯದಿ ಭವ | ಸಾಗರವ ದಾಂಟಿಸುವೆಯೋಗಿ ಕುಲ ಸದ್ವಂದ್ಯ | ಅಗಜೆದರ್ಶನದೀ ೨
ಭಾವಿ ಬೊಮ್ಮನ ಮತವ | ಭಾವದಲ್ಯಭಿವೃದ್ಧಿಗೈವ ಹವಣೆಯು ನಿಂದು | ದೇವದೇವೇಶಾಭಾವಿ ಕಾರ್ಯವು ಎನ್ನೆ | ಜೀವಗಂಕಿತಸೂಚಿಭಾವದಲಿ ತೋರಿರುವೆ | ಶ್ರೀ ವರನೆ ಹರಿಯೇ ೩
ಜ್ಯೋತಿಯಿಂದಲಿ ಜ್ಞಾನ | ದಾತವ್ಯ ವೆಂಬುದರನೀತಿ ತೋರ್ದೆಯೊ ಖಳಾ | ರಾತಿತೈಜಸಾಖ್ಯಾಮಾತಿಗೇ ಕೈವಲ್ಯ | ದಿಂತ ತವದಾಸ್ಯವನುಈ ತರಳೆಗಿತ್ತು ಸುಖ | ದಿಂದ ನಾಗುವುದೋ ೪
ಸಾರ್ವ ಭೌಮ ಸ್ವಾಮಿ | ಸಾರ್ವಕಾಲದಿ ನಿನ್ನಪಾವನ ಸ್ರ‍ಮತಿಯಿತ್ತು | ದರ್ವಿಜೀವಿಯನೂಕಾವುದೆನೆ ಭಿನ್ನಪವ | ನೀ ವೊಲಿದು ಸಲಿಸುವುದುದೇವ ದೇವೇಶ ಗುರು | ಗೋವಿಂದ ವಿಠಲಾ ೫

೫೬೮
ನಾರಾಯಣಚ್ಯುತ ವಿಠಲ ಪೊರೆಯ ಬೇಕಿವಳಾ ಪ
ಭೂರಿ ಕರುಣಾ ಮೂರ್ತಿ | ಪ್ರಾರ್ಥಿಸುವೆ ಹರಿಯೇ ಅ.ಪ.
ರೋಗದಿಂ ನರಳಿ ಬಹು | ರಾಘವೇಂದ್ರರ ದಯದೀರೋಗ ವರ್ಜಿತಳಾಗಿ | ರಾಗ ರಹಿತೇ |ಭೋಗಗಳ ತೆರೆದು ವೈರಾಗ್ಯ ಮಾರ್ಗದಿ ತೆರಳೇಭೋಗಿ ಶೈಲೇಶ ಕಥೆ | ಕೇಳಿ ಮುಂಧೋಗೇ ೧
ಮಂಗಳಾರತಿ ಕೊಂಡು | ಅಂಗನಾ ಮಣಿತೋರ್ವಮಂಗಳ ಪ್ರದ ಗುರುವ | ಕಂಗಳಲಿ ನೋಡೇಹೆಂಗಳೆಯು ಕಾತುರದಿ | ಭಂಗವಿಲ್ಲದೆ ಸಾಗೆಸಂಗವಾಯ್ತೀರ್ವ ನಿ | ಸ್ಸಂಗಿ ಮಾರ್ಗದರಾ ೨
ಗುರು ವಿರುವ ದೇಶವನು | ಒರೆದು ಕಣ್ಮರೆಯಾಗೆಭರದಿ ಸಾಗುತ ಅಲ್ಲಿ | ನೆರೆದವರ ಪೇರೇಬರೆದು ಪೂರ್ವಾನು ಭವ | ತೋರಿಗುರುಗಳಲ್ಲಿಅರುಹಿದಳ್ ಮುತ್ತೈದೆ | ವಿಠಲ ಮಂದಿರವಾ ೩
ತೈಜಸನ ಸೂಚನೆಲಿ | ಯೋಜಿಸಿದೆ ಅಂಕಿತವನೀಜಯ ಪ್ರದನಾಗೊ | ವೃಜಿನ ಹರ್ತಾ |ರಾಜೀವ ನಯನ ಸ | ದ್ಭ್ರಾಜಿಷ್ಣು ಧನ್ವಂತ್ರಿಭ್ರಾಜಿಸಿವಳ್ಮನದಿ ಅ | ವ್ಯಾಜ ಕರುಣಾಂಬುಧೆ ೪
ಬಾಧೆಗೊಳ ಪಡಿಸದಲೆ | ಕಾದುಕೊ ಇವಳನ್ನಮೋದ ತೀರ್ಥರ ಮತದಿ | ಸಾಧನವ ಗೈಸೀಐದಿಸೆನೆ ಸದ್ಗತಿಯ | ಪ್ರಾರ್ಥನೆಯ ಸಲ್ಲಿಪುದುಮೋದ ಪ್ರಮೋದ ಗುರು | ಗೋವಿಂದ ವಿಠಲಾ ೫

೭೮
ನಿನ್ನ ಕರುಣಕೆಯ ಕಾಣೆನಾ | ವಿಠಲರಾಯಮನ್ನುಜನ್ನ ರೂಪ ಧರಿಪನಾಅನ್ನ ವಸನವಿತ್ತು ಪಿತಗೆ | ಚನ್ನ ಸೇವೆ ಮಾಳ್ಪದೇವೆಘನ್ನ ಸಾಧ್ಯ ಸಾಧನವೆಂದು | ಮನ್ನಣೆಯ ತೋರ್ದೆ ಜಗಕೆ ಅ.ಪ.
ಪಂಥ ಜನರ ಸಂದಣೀಯಲಿ | ಮೆರೆಯುತ್ತಿದ್ದಪಂಢರಪುರದ ಸುಪ್ರದೇಶದಿಪುಂಡರೀಕ ನಯನ ಭಕ್ತ | ಬಂಡುಣೀಯ ಮನವ ನೋಡೆಅಂಡಾ ನಂತಕೀಶ ಮನುಜ | ದಿಂಡು ಧರಿಸಿ ಬಂದು ನಿಂತ ೧
ಇಂದು ಭಾಗ ಸರಿತು ತೀರದಿ | ಪುಂಡಲೀಕತಂದೆ ಪಾದಸೇವೆ ಭರದಲಿ |ಬಂದ ಮನುಜ ವೇಷ ಹರಿಗೆ | ನಿಂದಿರೆಂದು ಪ್ರಾರ್ಥಿಸುತ್ತಅಂದ ಅನ್ಯ ಪೀಠವಿರದೆ | ಒಂದು ಇಟ್ಟಗಿ ಪೀಠವಿತ್ತ೨
ಇಷ್ಟ ದೈವ ಇಟ್ಟಗಿ ಪೀಠದೀ | ನಿಂತು ಆಗಶಿಷ್ಟರಿಂದ ವಿಠೋಬ ನಾಮದೀ |ವಿಠಲ ವಿಠಲ ವಿಠೋಬ ಎಂದು | ನಿಷ್ಟರಿಂದ ಸ್ತುತಿಸಿ ನಿಂದುಪ್ರೇಷ್ಟ ಜನರ ಭವದ ಸಿಂಧು | ಸುಷ್ಠು ಒತ್ತಿಪ ದಯಾಸಿಂಧು೩
ಶಾಸ್ತ್ರ ಬಹಳ ಶೃತನು ಎನುತಲೂ | ಶುದ್ಧಮೇಧ ಶಕ್ತಿ ಬಹಳ ಯುತನು ಎನುತಲೂ | ಯುಕ್ತಿಗಾಗ್ಯ ವಲಿವನಲ್ಲ | ಮುಕ್ತಿದಾತ ಲಕ್ಷ್ಮೀನಲ್ಲಭಕ್ತಿ ಮುಡುಪು ಯಿತ್ತು ತುತಿಪ | ಭಕ್ತ ಜನರ ಬಿಡದೆ ಪಾಲಿಪ೪
ಭಾವ ದ್ರವ್ಯ ಕ್ರಿಯವು ಎಂಬುದಾ | ಮಹತು ಎನಿಪಈ ವಿಧ ದ್ವೈತತ್ರಯಗಳಾ |ಭಾವದಲ್ಲಿ ಚರಿಸುವಂಥ | ಭಾವವಿತ್ತು ಸಲಹೊ ಗುರುಗೋವಿಂದ ವಿಠಲ ಭಕ್ತಿಪಂಥ | ದೇವನೆಂದು ಮೆರೆವ ವಿಠಲ ೫

೧೯೨
ನಿನ್ನ ನಾನೇನೆಂದೆನೊ | ಗುರುವೆ ಜಗದ್ಗುರುನಿನ್ನ ನಾನೇನೆಂದೆನೋ ಪ
ನಿನ್ನ ನಾನೇನೆಂದೆ ನಿಖಿಲ ಜೀವರ ಒಡೆಯಪನ್ನಗ ನಗಧೀಶ ಪತಿತೋದ್ಧಾರನ ದೂತಅ.ಪ.
ವಾರಿಧಿಯನೆ ದಾಟಿ | ನಾರಿ ಚೋರನ ಜರೆದುನಾರಿಗೋಸುಗ ಕೌರವರ ಸವರೀ ||ಮಾರಮಣನೆ ಸಾರತಮನೆಂಬ ವೇದಾಂತಸಾರ ಪೇಳ್ದಗೆ ಶರಣೆಂದೆನು ಅಲ್ಲದೇ ||ಭಾರಿ ಕೋತಿಯು ಎಂದೆನೆ – ಕುಪ್ಪುಸ ತೊಟ್ಟುನಾರಿಯಾದವನೆಂದೆನೆ – ಕಾವಿಯನುಟ್ಟುಪೋರಯತಿಯು ಎಂದನೆ – ಕುಭಾಷ್ಯಗಳಾರು ಮೂರೆರಡೊಂದರರಿ ಎಂದೆನಲ್ಲದೆ ೧
ನೆರಹಿ ಕಪಿ ಸೈನ್ಯವ | ಶರಧಿಯ ಬಂಧಿಸಿದುರುಳ ರಕ್ಕಸರ ಸಂಹರಿಸೀ ||ಜರೆಯ ಸುತನ ಸೀಳಿ ಬದರೀಗೆತೆರಳೀದವಗೆ ನಮೋ ಎಂದನು ಅಲ್ಲದೇ ||ಗಿರಿಯ ಪೊತ್ತವನೆಂದನೆ – ರಕ್ಕಸಿಯಬೆರೆದ ನೆಂದವನೆಂದೆನೆ – ಕೌಪೀನವಧರಿಸಿದವನು ಎಂದೆನೆ – ಸುಜನರ್ಗೆಪರತತ್ವ ಪೇಳವನೆಂದೆನು ಅಲ್ಲದೆ ೨
ಕಾಚವ ಧರಿಸಿ ನಿ | ಶಾಚರ ಸಂಹಾರಿಯಾಚಕನಾಗಿ ಭಿಕ್ಷಾನ್ನವ ಮೆಲ್ಲುತ |ಈ ಚರಾಚರಕೆಲ್ಲ ಕರ್ತು ಹರಿಯೆ ಎಂದುನೀಚೋಚ್ಛ ತರತಮ ಪೇಳ್ದೆ ಎಂದೆಲ್ಲದೆ ||ಖೇಚರ ನೀನೆಂದೆನೆ – ವಿರಾಟನೊಳ್‍ಪಾಸಚಕ ನೀನೆಂದೆನೆ – ಭವಾಟವಿಮೋಚಕನೇ ಗುರು ಗೋವಿಂದ ವಿಠಲಅರ್ಚಕನೆಂದು ಸ್ತುತಿಗೈದೆನಲ್ಲದೆ ೩

೩೪೩
ನಿನ್ನ ನಾನೇನೆಂದೆನೋ | ಗುರುವೆ ಜಗದ್ಗುರು ನಿನ್ನ ನಾನೇನೆಂದೆನೋ ಪ
ನಿನ್ನ ನಾನೇನೆಂದೆ ನಿಖಿಲ ಜೀವರ ಒಡೆಯಪನ್ನಗ ನಗಧೀಶ ಪತಿತೋದ್ಧಾರನದೂತ ಅ.ಪ.
ವಾರಿಧಿಯನೆ ದಾಟಿ | ನಾರಿ ಚೋರನ ಜರೆದುನಾರಿ ಗೋಸುಗ ಕೌರವರ ಸವರೀ ||ಮಾರಮಣನೆ ಸಾರತಮನೆಂಬ ವೇದಾಂತಸಾರ ಪೇಳ್ವಗೆ ಶರಣೆಂದೆನು ಅಲ್ಲದೇ |ಭಾರಿ ಕೋತಿಯು ಎಂದೆನೆ – ಕುಪ್ಪಸ ತೊಟ್ಟುನಾರಿಯಾದವನೆಂದನೆ – ಕಾವಿಯನುಟ್ಟುಪೋರ ಯತಿಯು ಎಂದೆನೆ – ಕುಭಾಷ್ಯಗಳಾರು ಮೂರೆರಡೊಂದರರಿ ಎಂದೆನಲ್ಲದೆ ೧
ನೆರಹಿ ಕಪಿಸೈನ್ಯವ ಶರಧಿಯ ಬಂಧಿಸಿದುರುಳ ರಕ್ಕಸರ ಸಂಹರಸೀ ||ಜರೆಯ ಸುತನ ಸೀಳಿ ಬದರೀಗೆತೆರಳೀದವಗೆ ನಮೊ ಎಂದೆನು ಅಲ್ಲದೇ ||ಗಿರಿಯ ಪೊತ್ತವನೆಂದನೆ – ರಕ್ಕಸಿಯಬೆರೆದನೆಂದವ ನೆಂದೆನೆ – ಕೌಪೀನವಧರಿಸಿದವನು ಎಂದೆನೆ – ಸುಜನರ್ಗೆಪರತತ್ವ ಪೇಳ್ದೆವನೆಂದೆನು ಅಲ್ಲದೇ ೨
ಕಾಚವಧರಿಸಿ ನಿಶಾಚರ ಸಂಹಾರಿಯಾಚಕನಾಗಿ ಭಿಕ್ಷಾನ್ನವ ಮೆಲ್ಲುತಈ ಚರಾಚರಕೆಲ್ಲ ಕರ್ತು ಹರಿಯೆ ಎಂದುನಿಚೋಚ್ಛ ತರತಮ ಪೇಳ್ದೆ ಎಂದಲ್ಲದೆ ||ಖೇಚರ ನೀನೆಂದನೆ – ವಿರಾಟನೊಳ್‍ಪಾಚಕ ನೀನೆಂದನೆ – ಭವಾಟವಿಮೋಚಕನೇ ಗುರು ಗೋವಿಂದ ವಿಠ್ಠಲಾರ್ಚಕನೆಂದು ಸ್ತುತಿ ಗೈದನಲ್ಲದೆ ೩

೮೦
ನಿನ್ನ ನೋಡಿ ಧನ್ಯನಾದೆನೋ | ಶ್ರೀವೇದ ವ್ಯಾಸನಿನ್ನ ನೋಡಿ ಧನ್ಯನಾದೆನೋ ಪ
ನಿನ್ನ ನೋಡಿ ಧನ್ಯನಾದೆ | ಯಜ್ಞಕುಂಡ ದೇಶದಲ್ಲಿಘನ್ನ ಮಹಿಮ ಪೂರ್ಣ ಸಂ | ಪನ್ನ ಮೂರುತಿ ಬಾದರಾಯಣ ಅ.ಪ.
ಯಾದವಾರ್ಯ ಮೌನಿಶಿಲ್ಪಿ | ಶ್ರೀದ ನಿನ್ನ ನವ ಸುಮೂರ್ತಿಮೋದದಿಂದ ರಚಿಸಿ ತಿದ್ದಿ | ಪಾದ ಭಜಿಸಿ ಅರ್ಚಿಸಿರುವ ೧
ನವಸುಮೂರ್ತಿಗಳಲಿ ನಿನ್ನ | ನವ ಸುಭಕ್ತಿಗಳನು ಬೇಡೆನವ ಸುಮಹಿಮೆ ತೋರೆ ಕರಗ |ಳವಲಂಬನದಿ ದಯವ ತೋರ್ದ ೨
ಅಷ್ಟು ಮೂರ್ತಿಗಳಲಿ ತಮ್ಮ | ಇಷ್ಟ ಮೂರ್ತಿಯನ್ನೆ ಇರಿಸಿಅಷ್ಟದಿಗಿಭದಂತೆ ಮೆರೆದ | ಅಷ್ಟ ಶಿಷ್ಟರಿಗಿತ್ತ ಮುನಿಯು ೩
ಗುರ್ಜುರೀ ಬಂಕಾಪುರಂ | ಮರ್ಜಿ ಕಾಡಣೀಯುಘರ್ಜಿಪ ಉದ್ಗಾವಿ ಕಲ್ಲಾಪುರ | ನಿರ್ಜರ ಅಂಘೇರಿ ಮಣೂರ ೪
ತರ್ಕ ಮುದ್ರ ಅಭಯ ಹಸ್ತ | ಅರ್ಕಾನಂತ ಭಾಸ ಗಾತ್ರಶರ್ಕರಾಕ್ಷ ಮುಖರ ವಿನುತ | ವಕ್ರ ಮನದ ಜನಕೆ ಅಮಿತ್ರ ೫
ಯೋಗ ಪಟ್ಟಕ ವಸನ ಚೆಲ್ವ | ಯೋಗದಾಸನ ಕೂರ್ಮದುಪರಿನಾಗನಂತೆ ಪೋಲ್ವ ಜಟಾ | ಸೋಗಿನಿಂದ ಮೆರೆವ ದೇವ ೬
ಯಜ್ಞ ಕುಂಡ ಕ್ಷೇತ್ರ ಮೂರ್ತಿ | ಯಜ್ಞ ಭೋಕ್ತ ತ್ರಯ ಸುಮೂರ್ತಿಯಜ್ಞ ಗುರು ಗೋವಿಂದ ವಿಠಲ | ಭಗ್ನ ಗೈಸೊ ಮಾಯ ಪಟಲ ೭

೮೧
ನಿನ್ನ ಪದ ತಾಮರಸ ಇನ್ನು ಕಾಂಬುವದೆಂದುಪನ್ನಗಾತನ ವಾಹನಾ ಪ
ಕಣ್ಣು ಕಾಣದ ಹೀನ ಮಾನವನು ನಾನಾದೆಉನ್ನಂತ ಗುಣ ಪೂರ್ಣ ಕಾಯೋ ಯೆನ್ನ ಅ.ಪ.
ಕರಿರಾಜ ಸಿಲುಕಿ ತಾ | ಸರಸಿಯಲಿ ನೆಗಳಿಗೇಪರಿಪರೀಯಲಿ ಸೆಣಸಲೂ |ಹರಣ ಬಾಂಧವರೆಲ್ಲ | ಹರಹಿಕೊಂಡಿದಿರಾಂತುಪರಿಹರಿಸಿದರೆ ಅದರ ಎಡರಾ |ವರುಷ ಸಾವಿರ ಸಾಗಿ | ಕರಿ ಮಕರಿ ಸೆಣಸ್ಯಾಡಿಹರುಷ ಕುಗ್ಗುತ ಮರುಕದೀ |ಹರಿ ಹರಿ ಹರಿ ಎಂದು | ಕರಿರಾಜ ಮೊರೆಯಿಡಲುತ್ವರದಿಂದ ನೀಯವನ | ಎಡರ ಹರಿಸಿದೆ ದೇವ ೧
ಕುರುರಾಜ ಸಭೆಯಲಿ | ತರುಳೆ ದ್ರೌಪದಿ ಸೀರೆಕೌರವಾನುಜ ಸೆಳೆಯಲೂ |ನಾರಿಮಣಿ ನಿಜಪತಿಗಳೈ | ವರಲಿ ಮನ ತಿಳಿದುಹಿರಿಯ ಸಭಿಕರಿಗರುಹಲೂ | ವರ ವೃದ್ಧ ಭೀಷ್ಮಾದಿ |ಬಹುಮಂದಿ ಇರುತ ಕಾಲವ ಕಳೆಯಲು |ಆರಾದರೂ ಬಂದು ಪಾರು ಮಾಡಿದರೇನೊಶೌರಿ ನಿನ್ನನು ಕರೆಯೆ | ಪಾರು ಮಾಡಿದ ದೇವ ೨
ಪಾರುಗಾಣಿಸೊ ಎನ್ನ | ಮೂರು ವಿಧ ತಾಪಗಳಮಾರ ಜನಕನೆ ಪ್ರಾರ್ಥಿಪೇ ದೂರ ಮಾಡಿಸೊ ಹರಿಯೆ | ಮೂರು ಗುಣದಿಂದೆನ್ನಬಾರಿ ಬಾರಿಗು ಬೇಡುವೆ |ದುರುಳ ತತ್ವರ ಕಾರ್ಯ | ಕಡೆಗೈಸಿ ಶ್ರೀ ಹರಿಯೆಸುರರ ಸಹಕಾರ ನೀಡೊ |ಗುರುಗಳಂತರ್ಯಾಮಿ | ಗುರು ಗೋವಿಂದ ವಿಠಲನೆಕರುಣದಲಿ ತವ ಚರಣ | ಸರಸಿಜವ ತೋರೋ ೩

೭೭
ನಿನ್ನಂಥ ಕರುಣಿಗಳಿನ್ನುಂಟೆ ಭುವಿಯಲ್ಲಿ _ ಧನ್ವಂತರೇ ಪ
ಚೆನ್ನ ಪ್ರಸನ್ನ ನೀನಾಗುತ ಇವಗಿನ್ನುಘನ್ನ ರೋಗವ ಕಳೆದುನ್ನುತ ಸುಖವೀಯೋ ಅ.ಪ.
ಮೃತ್ಯುವಿಗೆ ನೀನು _ ಮೃತ್ಯುವಾಗಿರುವೆದೈತ್ಯರ ಉಪಟಳ – ಕತ್ತರಿಸು ಶೀಘ್ರದೀಹಸ್ತ ಕಲಶಾಮೃತ – ಸ್ರವಿಸಿ ವೇಗದಿ ಅಪಮೃತ್ಯುವ ಹರಿಸಯ್ಯ – ಭಕ್ತಳ ಭರ್ತುವಿನ೧
ಆರ್ತರುದ್ಧಾರಿಯೆ – ಭಕ್ತರ ಪರಿಪಾಲಕರ್ತ ಸಂಹರ್ತ – ಮೂರ್ಜಗಕೆಲ್ಲ ನೀನೇನಿತ್ಯಾನಿತ್ಯದ – ಜಗಕೆಲ್ಲ ಸ್ವಾಮಿಯೆಭೃತ್ಯಳ ಮಾಂಗಲ್ಯ – ಘಟ್ಟಿಯೆಂದೆನಿಸೋ ೨
ಪ್ರಾಣ ಗುರು ಜಯ – ವಿಠಲ ದಾಸಿಯಪ್ರಾಣನಾಥನ ಪ್ರಾಣ – ಉಳಿಸುವುದೆನುತಪ್ರಾಣ – ಪ್ರಾಣನೆ ಎನ್ನ – ಬಿನ್ನಪವ ಜಗತ್ರಾಣ ಗುರು ಗೋವಿಂದ ವಿಠಲ – ಸಲ್ಲಿಸೋ ೩

೭೯
ನಿನ್ನನೇ ನಂಬಿಹೆನೋ ಶ್ರೀನಿವಾಸಾಪನ್ನಗ ನಗಧೀಶ ಉದಯಾದ್ರಿ ವಾಸಾ ಪ
ಭೃತ್ಯ ಜನ ಸಂತೋಷ ನಿತ್ಯ ನೂತನ ಮಹಿಮ ಎತ್ತ ನೋಡಿದರತ್ತ ಮುಕ್ತ ಜನ ಸೇವ್ಯಾ |ಕೀರ್ತಿ ಭವ್ಯ ವಿಶಾಲ ವರ್ತಿಪುದು ಸದಾಕಾಲಆರ್ತವರಿಗಪವರ್ಗ ಮೋಕ್ಷಮಾರ್ಗಾ ೧
ಸೇವ್ಯ ಸೇವಕ ಭಾವ ದಿವ್ಯ ಸುಜ್ಞಾನವನುಪ್ರೀತಿಯಿಂದೆನಗಿತ್ತು ಕಾಯಬೇಕೋ |ಪ್ರೇರ್ಯ ಪ್ರೇರಕ ನೀನೇ ಕಾರ್ಯ ಕಾರಣ ಕರ್ತೃಭಾರ್ಯರಿಂದೊಡಗೂಡಿ ವೀರ್ಯಪ್ರದನಾಗೋ ೨
ಸೃಷ್ಠಿ ಸ್ಥತಿ ಸಂಹಾರ ಅಷ್ಟಕರ್ತೃಸ್ವಾಮಿನಷ್ಟ ಗೈಸಜ್ಞಾನ | ಇಷ್ಟ ಮೂರ್ತೇದಿಟ್ಟ ಗುರು ಗೋವಿಂದ | ವಿಠಲನೆ ಮದ್ ಹೃದಯಅಷ್ಟ ಕಮಲದಿ ತೋರೋ | ಶಿಷ್ಟಜನಪಾಲಾ ೩


ನಿರ್ವಿಘ್ನವನೆ ನೀಡೋ ನಭಕೀಶ ಪ
ಉರ್ವಿಯೊಳಗೆ ಕಾರ್ಯ ಪ್ರಾರಂಭಿಕ್ಕೀಶ ಅ.ಪ.
ಶೈಲಜೆ ಶರೀರ ಮಲಜನೆಂದೆನಿಸುತ್ತಶೀಲ ಸತ್ಕರ್ಮಾಳಿ ಪ್ರಾರಂಭದೀ |ಮಾಲೋಲನಾಜ್ಞಾದಿ ಪೂಜೆಯ ಕೊಳ್ಳುತ್ತಪಾಲಿಪೆ ಭಕುತರಾಭೀಷ್ಟವ ದಯದಿ ೧
ಪಂಚಮ ವೇದವು ಭಾರತ ರಾಹಸ್ಯಸಂಚಿಂತನೆಯಿತ್ತು ನಿನ್ನಿಂದಲೀ |ಪಂಚಾತ್ಮ ವ್ಯಾಸಾತ್ಮ ಬರೆಸಿದುದೆ ಸಾಕ್ಷಿಅಂಚೆ ಗಮನ ಪಿತ ಶ್ರೀಶಾನುಗ್ರಹ ಪಾತ್ರಾ ೨
ಹತ್ತೆಂಟು ಮೊಗ ಮಧ್ಯ ಹಸ್ತಿಯ ಮೊಗದವನನಿತ್ಯ ಉಪಾಸಿಪೆ ವಿಶ್ವ ಮೂರುತಿಯಸತ್ಯ ಮೂರುತಿ ಗುರು ಗೋವಿಂದ ವಿಠಲನಹೃತ್ಪದ್ಮದಲಿ ತೋರಿ ಕೃತಕೃತ್ಯನೆನಿಸೋ ೩

೮೨
ನೀರೇರುಹಾನಯನ | ವಾರನಿಧಿ ನಡುಶಯನತೋರೆನಗೆ ತವ ಚರಣ | ಸುಗುಣ ಗಣ ಪೂರ್ಣ ಪ
ಕೇಶಾಮರೇಂದ್ರನುತ | ಭಾಸುರ ಸುಚರಿತ್ರಶ್ರೀಶ ವೇದ ವ್ಯಾಸ | ಅಮಿತ ಶಶಿ ಭಾಸಾ ||ಕಾಸುವೀಸಕೆ ಮನ | ಕ್ಲೇಶ ಗೊಳಿಸದಂತೆನೀ ಸಲಹೋ ಎನ್ನ | ಶೇಷಾದ್ರಿ ವಾಸಾ ಪರೇಶಾ೧
ಲಿಂಗಕುಪಚಯಿಸಿ ಭವ | ಸಂಗದೊಳಗಿರಿಸೀಭಂಗ ಪಡಿಸುವಿ ದೊರೆಯೆ | ಶೃಂಗಾರ ನಿಧಿಯೇ |ಸಂಗ ವಿಷಯದಿ ಹರಿಸಿ ನಿ | ಸ್ಸಂಗನೆಂದೆನಿಸಿಲಿಂಗಾಂಗ ಕಳೆಯೊ ಹರಿ | ರಂಗ ಭವಹಾರಿ೨
ಸಾಮಸನ್ನುತ ಚರಣ | ಭೂಮಗುಣಿ ಸುಸ್ತವನಪ್ರೇಮದಲಿ ಗೈವ ಮನ | ನೇಮವೀಯೆಲೊ ವಾಮನ |ಈ ಮಹಾ ಕಲಿಯುಗದಿ | ನಾಮ ನಿಸನ್ನದೆ ಗತಿಯೆಶ್ರೀಮಹೀ ಸೇವಿತನೆ | ರಾಮ ಗುಣಧಾಮ ೩
ತ್ರೈಗುಣಾತೀತ ವಿ | ಖ್ಯಾತ ಭಾರ್ಗವಿಪ್ರೀತಭೋಗಿ ಭೂಷಣ ಸಖನೆ | ಭೋಗಿಶಯ್ಯಾ |ಆಗಮ ಸುವೇದ್ಯ ಭವ | ರೋಗ ವೈದ್ಯನೆ ಎನ್ನರೋಗ ಹರಿಸುವುದರಿದೆ | ಇದು ನಿನ್ನ ಬಿರುದೇ೪
ಗುರುವಂತರಾತ್ಮ ಗುರು | ಗೋವಿಂದ ವಿಠ್ಠಲನೆನಿರುಪಮನೆ ನಿರಪೇಕ್ಷ | ನಿರವದ್ಯ ಆದ್ಯಾಅರುಹಲೇನಿಹುದಿನ್ನು | ಸರ್ವಜ್ಞ ನೀನಿನ್ನು ಒರೆವೆನೆಂಬಪರಾಧ | ಮರೆದು ಪಾಲಿಸು ಶ್ರೀಶ ೫

೨೫೫
ನೀಲಕಂಠ | ನೀಲಕಂಠ | ನೀಲಕಂಠ | ಪಾಲಯ ಪ
ಗಾಳಿದೇವನ ಒಲಿಮೆ ಯಿಂದಕಾಲಕೂಟ ಮೆದ್ದ ಶಿವನೇ ಅ.ಪ.
ಭಕುತಾಭೀಷ್ಟ ಪ್ರದನು ಎನಿಸಿ | ಸುಕೃತ ಉಳ್ಳ ಜನರ ಕರೆಸಿ ||ಪ್ರಕಟಗೈವೆ ನಿನ್ನ ರೂಪ | ಭೃಕುಟಿ ಭವನೆ ಕಳೆವೆ ಪಾಪ ೧
ಕಾವೇರಿಕೆ ನರ್ಮದೇಗಳ್ | ಸೇರ್ವ ಸನಿಯ ಶೈಲದಲ್ಲಿ ||ಭಾವ ಜಾರಿ ನಿನ್ನ ಪ್ರಭವ | ತೋರ್ವೆ ಜ್ಯೋತಿರೂಪ ಭಾವ ೨
ನಿರುತ ಗಂಗೆ ಧರಿಪಗೇ ಜಲ | ಎರೆವೆವೆಂಬ ನರರ ಉಕುತಿ ಸುರರು ನಗುವ ಪರಿಯು ಅಲ್ಲವೆ | ಶರಣ ಜನರ ಪೊರೆಯೆ ಸ್ವೀಕರ ೩
ದೂರದಿಂದ ಬಂದಿಹೇವೊ | ಸಾರಿ ನಿನ್ನ ಚಾರು ಚರಣಘೋರ ಭವವ ತಾರಿಪ ಓಂ | ಕಾರ ಪ್ರತಿಮ ಕಾಯೊ ಎಮ್ಮ೪
ಹರಿಯ ಪದದ ನೀರನೀಗ | ಹರಿಯ ದ್ವಾರದಿಂದ ತಂದೂಹರಿಯ ದ್ವಾರ ತೋರ್ಪ ಭಾವಿ | ಹರಿಂ೫ಶಯ್ಯಗೆ ಎರೆವೆನಂಇ5 ೫
ಮನವ ಆಳ್ವನೆ ಮೊರೆಯ ಕೇಳಿ | ಮನದ ಮಲಿನ ತ್ವರದಿ ತಳ್ಳಿಮನದಾಭಿಧನ ಚಿಂತೆಯಲ್ಲಿ | ಮನವನಿರಿಸೊ ಕೃಷ್ಣನಲ್ಲಿ ೬
‘ದೂಃ’ ಎಂತ ಮರುತ ನಿನ್ನ | ಶರೀರದೊಳಗೆ ಇರುವನಲ್ಲಿದೂರುವಾಸ ತೋರೊ ಶ್ರೀಪ | ಗುರು ಗೋವಿಂದ ವಿಠಲ ರೂಪ ೭

೨೫೬
ನೇತ್ರ – ತ್ರಯನೇ | ಅಹಿಪದ ಪಾತ್ರಾ ||ಗೋತ್ರಾರಿ ಪಂಕೇರುಹ ಮಿತ್ರಾ | ಸ್ತೋತ್ರ ಪಾತ್ರ ಶತಪತ್ರ ಪ
ಚಿತ್ರ ಚರಣ ಭುವನತ್ರಯ ದೊಳಹಂತತ್ವ ವ್ಯಾಪ್ತ ಗೌರವ ಗಾತ್ರಾ ಅ.ಪ.
ಯಕ್ಷ ಪತಿಯ ಸಖನೆ ವಿರೂಪಾಕ್ಷ | ವೃಷ ಭೋದಾರ ಹರ್ಯಕ್ಷ |ಅಂಧಕ ಹರ ಮನ ಕಕ್ಷ | ನಿಯಾಮಕ ಲೋಕಾಧ್ಯಕ್ಷ ||ದಕ್ಷ ಭಗ್ನ ರುದ್ರಾಕ್ಷಮಾಲ ಹರಿ |ಪಕ್ಷ ಸ್ಥಾಣು ವೃಷಭೇಕ್ಷಣ ನೀರಕ್ಷ ೧
ಈಶಾ ಸಿತ ಕಂಠ ಅವ್ಯಕ್ತ ಕೇಶಾ | ವೀರಭದ್ರ ವ್ಯೋಮಕೇಶಾ |ದಯಾ ಸಮುದ್ರ ಗೌರೀಶ | ವೀರಾಗ್ರಣಿಯೆ ಕೈಲಾಸ |ವಾಸ ಶರ್ವ ಪ್ರಮಥೇಶ ಪಾವಕ ಸಂ |ಕಾಶ ಶ್ವೇತ ಗಿರೀಶ ಉಗ್ರೇಶ ೨
ಶೂಲ – ಪಾಣಿ ಗಂಗಾಧರ ನೀಲಕಂಠ ಹಿಮೆ ಗಿರಿಜೆ ಲೋಲ | ಗುರು ಗೋವಿಂದ ವಿಠಲಾ |ಬಾಲ ಗಾಳಿಸುತ ಬಾಲ ಎನ್ನ ಹೃತ್ಕೀಲಾಲಜದಲಿ ಸಿರಿ ಲೋಲನ ತೋರ್ವುದು೩

೨೫೭
ನೇತ್ರಾವತಿಯ ವಾಸಾ | ಪ್ರಮಥ ಪೋಷಾಸೂತ್ರತನಯನೆ ಕಾಯೊ | ಭಕ್ತ ಜನ ಪೋಷಾ ಪ
ಲೌಕಿಕ ಕುಕರ್ಮಗಳ | ನಾಚರಿಸಿ ಬಲು ವಿಧಧಿಕಾಕು ಜನರಾ ಸಂಗ | ಬಳಸಿ ಭವದೀ |ಏಕಮೇವನ ಚರಣ | ತೋಕನೆಂದೆನಿಸದಲೆನೂಕಿ ಎನ್ನಾಯುಗಳ | ವ್ಯರ್ಥ ಕಳೆವೇ ೧
ಕೃತ ತ್ರೇತ ದ್ವಾಪರದಿ | ವ್ಯಕ್ತನಾಗುತ ನೀನುಚತುರದೊಳಗೇ ಮಂಜು | ನಾಥನೆನಿಸೀ |ಕೃತಿಪತಿಯ ಸಚ್ಚರಣ | ಶತಪತ್ರ ಭಜಿಪರಿಗೆಗತಿ ತೋರಿ ಸನ್ಮುಕುತಿ | ಪಥಕೆ ಕೊಂಡೊಯ್ವೇ ೨
ಯತಿವಾದರಾಜರಿಂ | ಹಿತದಿ ಕದರೀಯಿಂದಪೃಥುಕು ನೃಹರಿಯ ಶಿಲೆಯು | ಸ್ಥಿತ ಧರ್ಮಸ್ಥಳದೀಕೃತವು ವೈಷ್ಣವ ಪೂಜೆ | ಚತುರಯುಗ ಮೂರುತಿಯೆವಿತತ ಮಹಿಮನ ತೋರ್ವ | ಮತಿಮಾಡೊ ಶರ್ವಾ೩
ವೈಕಾರಿಕಾದಿ | ಸಾಕಾರಿ ಮಹದೇವಕೈಕೊಳುತ ಮನ್ಮಾತ | ನೋಕರಿಸದೇ |ಪ್ರಾಕ್ಕು ಕರ್ಮವ ಕಳೆದು | ನೀ ಕೊಡುವುಧ್ಹರಿ ಭಕುತಿನಾಕಪತಿ ವಂದ್ಯ ಸ | ನ್ನಾಕನದಿ ಧರನೇ ೪
ಗುಣ ಪೂರ್ಣನಾದ ಗುರು | ಗೋವಿಂದ ವಿಠಲ ಪದವನಜ ಬೇಡುವೆ ಮನದಿ | ಕರುಣಾನಿಧೇ |ಅನಲಾಕ್ಷ ನಿನ್ನೊಲಿಮೆ | ಇಲ್ಲನಕ ಗತಿಯಿಲ್ಲಬೆನಕ ಪಿತ ಮನಮಾನಿ | ಎನಗೊಲಿಯೊ ಶಿವನೇ೫

೪೧೦
ಶ್ರೀ ಸತ್ಯಬೋಧರು
ನೋಡಿದೇ | ಗುರುವರರ ನಾ ನೋಡಿದೇ ಪ
ನೋಡಿ ಗುರುಗಳ ಪಾದ | ಈಡಾಡಿ ಶಿರವನುಬೇಡೆ ಭಕ್ತಿ ಜ್ಞಾನ ನೀಡುತ ಪೊರೆವರ ಅ.ಪ.
ಹೇಮ ಕಾಮಿನಿಯನೆ ಜರಿದೂ | ಪ್ರಿಯರಪ್ರೇಮದ ಚರಣಗಳ್ಪಿಡಿದೂ | ಬಲುನೇಮದಲ್ಸತಿಯಾಗಿ ಮೆರೆದೂ | ಮಾಯಿಗೋಮಾಯಿಗಳನೆಲ್ಲ ಜರಿದೂ | ಅಹರಾಮಚಂದ್ರರ ಪಾದ ತಾಮರಸವ ಧರಿಸಿಭೂಮಿಯೊಳಗೆ ಚರಿಸಿ | ಮೆರೆಸಿದ ಗುರುಗಳ ೧
ಶೇಷರೂಪಿಲಿ ಬಂದ ಹರಿಯಾ | ಗುಪ್ತಭಾಷೆಯ ಕೇಳುತ್ತ ಗೃಹವಾ | ಪೊಕ್ಕುಮೀಸಲೆಂದೆನಿಸಿದ ಧನವಾ | ಲೇಸಾಯಾಸಿಲ್ಲದೆ ತೆಗಿಸ್ಯದನಾ | ಆಹಏಸೇಸೋ ಜನುಮದಿ | ಪೋಷಿಸಿರೂವದನಶ್ರೀ ಶಗರ್ಪೀಸುತಲಿ ತೋಷವ ಪಡಿಸಿದರ ೨
ಮೋದದಿ ಹರಿ ಪರನೆಂದೂ | ಪೂರ್ಣಭೋದರೆ ಗತಿ ನಮಗೆಂದೂ | ಮಾಯವಾದಗಳನೆ ಬಿಡಿರೆಂದೂ | ಸತ್ಯಬೋಧರೆ ಅರುಹುತ ನಿಂದೂ | ಆಹವೇದ ವಿನುತ ಗುರುಗೊವಿಂದ ವಿಠಲನಪಾದ ಪಿಡಿದು ಸವಣೂರಲಿ ಮೆರೆವರ೩

೮೪
ನೋಡಿದೇ ಶ್ರೀ ವಿಠಲನ ನೋಡಿದೆ ಪ
ನೋಡಿದೆ ಲೀಲಾ ಮಾನುಷನ – ಕೊಂಡಾಡಿದೆ ಕರುಣ ಸಾಗರನ _ ಆಹನಾಡೊಳಗಾವೆಡೆ | ಈಡು ಇಲ್ಲದ ದೈವಗಾಡಿಕಾರನು ಕೃಷ್ಣ | ಜೋಡು ಕುಂಡಲ ಧರನ ಅ.ಪ.
ದಾಸರಂದದಿ ಕಾವಿ ವಸನ | ಹೊದ್ದುಭಾಸೀಸುತಿಹ ಸಿರಿವರನ | ವಸನಮೀಸಲನವನು ತೆಗೆಯಲದನ | ಕಂಡೆಲೇಸಾದ ಶಾಲು ಹೊದ್ದವನ | ಆಹಕಾಶಮೀರದ ಶಾಲು | ಭಾಸುರ ಜರೆ ಖಚಿತಭೂಷಿತ ಹರಿ ಕುಳಿತು | ತೋಷಿಪ ಭಕುತರನ ೧
ಸುತ್ತಿಹ ಪಾವಡೆ ಶಿರಕೇ | ಬಲುಸುತ್ತು ಸುತ್ತಿರುವುದು ಅದಕೆ | ಹರಿಮಸ್ತಕ ಛಂದ ಕಾಂಬುದಕೆ | ನೋಡಿಭಕ್ತ ಸಂದಣಿಯ ತೋಷಕ್ಕೆ | ಆಹಸುತ್ತಿಹುದನು ಬಿಚ್ಚೆ | ತುತ್ತಿಸುತಿರಲಾಗಕೃತ್ತಿವಾಸನ ತಾತ | ನೆತ್ತಿ ನೈಜವ ಕಂಡೆ ೨
ಪೂಜಾರಿ ತೆಗೆಯಲು ಜರಿಯ | ಶಾಲುಮಾಜಾದೆ ವಿಠಲನ ಪರಿಯ | ಕಂಡೆನೈಜದ ಶ್ರೀವರನ ದ್ವಯ | ಹಸ್ತಯೋಚಿಸಿ ಕಟಿಲಿಹ ಪರಿಯ | ಆಹಸೋಜಿಗತನರೂಪ | ನೈಜದಿ ತೋರುತಪೂಜಾದಿ ಸ್ವೀಕಾರ | ವ್ಯಾಜಾವ ಕಂಡೆನು ೩
ನಿರ್ಮಲಾಕೃತಿ ಪೊದ್ದ ಹಾರ | ತುಳಸಿಕಮ್ಮಲ ರ್ಸೂಸುವಧಾರಾ | ಕಾರಒಮ್ಮೇಲಿ ತೆಗೆದರಪಾರ | ದಯಸುಮ್ಮನ ಸರಿಗೀವ ಪೋರ | ಆಹಆಮ್ಮಹ ದೈವನ | ಇಮ್ಮಡಿ ಪ್ರಭೆ ಕಂಡನಿರ್ಮಾಲ್ಯ ತೆಗೆಯುವ | ಕರ್ಮಾಚರಿಸೂವಲ್ಲಿ ೪
ಲೌಕಿಕ ಪೂಜೆಗಳ ಮಮ | ಪರಲೋಕೈಕನಾಥಗೆ ಪರಮ | ಪ್ರೀತಿವಾಕು ಭಕ್ತಿಯುತ ಮರ್ಮ | ತಿಳಿಪ್ರಾಕೃತ ಕೊಳ್ಳುವ ನಮ್ಮ | ಆಹಶ್ರೀಕರಾರ್ಚಿತ ಪಾದ | ಸ್ವೀಕರಿಸುವ ಭಕ್ತತೋಕನ ಬಿಂಬೋದ | ಶ್ರೀಕರ ದಳ ತುಳಸಿ ೫
ನಾಕ್ಹತ್ತು ಭುವನಗಳ್ಜೋತಿ | ಮತ್ತನೇಕಾನೇಕಾಕಾರ ಜ್ಯೋತಿ | ಗಳೊಪ್ರಕಾಶ ಪ್ರದ ಪರಂಜ್ಯೋತಿ | ಮುಕ್ತಿಪ್ರಕಾರ ದೊಳಗಿವನೆ ಜ್ಯೋತಿ | ಆಹಏಕಮೇವ ಹರಿಗೆ | ಕಾಕಡಾರುತಿ ಮಾಳ್ಪಲೋಕರ ಪೂಜೆಯ | ಸ್ವೀಕರಿಪುದ ಕಂಡೆ ೬
ಪಂಚ ಮೋಕ್ಷ ಪ್ರದ ಹರಿಗೆ | ಆಯ್ತುಪಂಚ ವಿಧಭಿಷೇಕ ಆವಗೆ | ಶೇಷಮಂಚಿಕೆ ಕ್ಷೀರಾಬ್ದಿಶಯಗೆ | ಮಧುಸಂಚನ ಮಧ್ವಿದ್ಯ ಹರಿಗೆ | ಆಹಪಂಚಾಮೃತಭಿಷೇಕ | ಸಂಚಿಂತಿಸುವನೀಗೆಸಂಚಿತ ಕರ್ಮವ | ಕೊಂಚವ ಮಾಡುವ ೭
ಮಂಗಳ ಮಹಿಮಗ ಸ್ನಾನಾ | ಅವಗಂಗಾ ಪಿತನೆಂಬುದೆ ಮಾನ | ಹಾಗೂಅಂಗಜನಯ್ಯಗೆ ಸ್ನಾನಾ | ಆಯ್ತುಹಿಂಗದೆ ಲೋಕ ವಿಧಾನಾ | ಆಹಸಂಗೀತಲೋಲ ಸ | ತ್ಸಂಗವು ತುತಿಸಲುಸ್ವಾಂಗಾಯನಾಮ ಶು | ಭಾಂಗನು ಮೆರೆದನು ೮
ವಸ್ತ್ರದಿಂದಲಿ ಕಾಯ ವರೆಸಿ | ಬಹುಶಾಸ್ತ್ರೋಕ್ತಿ ಉಡಿಗೆಯ ಉಡಿಸಿ | ಮತ್ತೆರತ್ನಧ್ಯಾಭರಣವ ತೊಡಿಸಿ | ಚೆಲ್ವಕಸ್ತೂರಿ ತಿಲಕವನಿರಿಸಿ | ಆಹವಿಸ್ರ‍ತತೀಪರಿಯಲಿ | ಸತ್ಯ ಷೋಡಶ ಪೂಜೆಚತ್ತುರ ಮೊಗನಿಂದ | ಕೃತ್ಯಾನು ಸಂಧಾನ ೯
ವೇದ ಘೋಷ ಪೂಜಾ ಮಂತ್ರ | ಬಹುನಾದ ವಿಠಲ ನಾಮ ಮಂತ್ರ | ತುಂಬಿಮೋದ ಪೂರೈಸಿತು ತಂತ್ರ | ಘಂಟೆನಾದದಿಂದಾರುತಿ ಕೃತ | ಆಹಆದರದಿಂದ ಪ್ರ | ಸಾದವು ಸ್ವೀಕೃತಮೋದದಿ ವಿಠಲನ | ಪಾದಾಲಿಂಗಾಂತ್ಯವ ೧೦
ಉತ್ರ‍ಕಷ್ಟ ಸುಕೃತದ ಭೋಗ | ಹರಿಇತ್ತನು ಅನುಗ್ರಹ ಯೋಗ | ಸ್ವಂತಹಸ್ತದಿ ಪೂಜಾದಿ ಯೋಗ | ಮಾಳ್ಪಕೃತ್ಯ ಸಂಧಿಸಿದನು ಈಗ | ಆಹಚಿತ್ತಜ ಪಿತ ವಿಠಲ | ಭಕ್ತವತ್ಸಲ ದೇವನಿತ್ತಕಾರುಣ್ಯವ | ತುತ್ತಿಸಲೆನಗಳವೇ ೧೧
ಪಿತೃ ಸೇವಕ ಪುಂಡಲೀಕ | ತನ್ನಕೃತ್ಯದೊಳಿರೆ ನಿರ್ವಲ್ಕೀಕ | ಹರಿವ್ಯಕ್ತ ತನ್ಭಕ್ತ ಪರೀಕ್ಷಕ | ನಾಗೆಭಕ್ತನು ಮನ ಸ್ಥೈರ್ಯಾಲೋಕ | ಆಹಇತ್ತ ಇಟ್ಟಿಗೆ ಪೀಠ | ಮೆಟ್ಟಿ ನಿಂತಿಹ ದೇವಕೃತ್ತಿ ವಾಸಾದ್ಯರಿಂ | ಸ್ತುತ್ಯ ಶ್ರೀ ವಿಠಲನ ೧೨
ದಾಸೀಗೆ ಕಂಕಣವಿತ್ತು | ಹರಿದಾಸರ ರೂಪೀಲಿ ನಕ್ತ | ಕಳೆದಾಶು ದಾಸರ ಶಿಕ್ಷಕರ್ತ | ಮತ್ತೆದಾಸರ ನಿರ್ದೋಷ ವಾರ್ತ | ಆಹದಾಸನೋರ್ವಾ ವೇಶ | ಭೂಷಣ ಕೇಳುತ್ತವಾಸುಕಿ ಶಯನೊಲಿದ | ದಾಸ ಪುರಂದರಗೆ ೧೩
ಮುಯ್ಯಕೆ ಮುಯ್ಯ ತೀರಿತು | ಜಗದಯ್ಯ ವಿಠಲನ್ನ ಕುರಿತು | ಪೇಳಿಕಯ್ಯನೆ ಮುಗಿದರು ತ್ವರಿತು | ದಾಸಮೈಯ್ಯ ಬಿಗಿದ ಕಂಬ ಒಳಿತು | ಆಹತ್ರಯ್ಯ ಲೋಕದಿ ದಾಸ | ಅಯ್ಯನ ಪೆಸರಾಯ್ತುತ್ರಯ್ಯ ಗೋಚರ ಹರಿ | ಪ್ರೀಯ್ಯನಿಗೊಲಿದಂಥಾ ೧೪
ಅಂಡ ಬ್ರಹ್ಮಾಂಡಗಳೊಡೆಯ | ಭಕ್ತಪುಂಡಲೀಕನಿಗೊಲಿದ ಭಿಡೆಯ | ರಹಿತಚಂಡ ಕಿರಣಾನಂತ ಪ್ರಭೆಯ | ಹರಿಮಂಡಿತಿಂದು ಭಾಗ ತಡಿಯ | ಆಹಹಿಂಡು ದೈವರ ಗಂಡ | ಪುಂಡರೀಕ್ಷಾಕನೆಪಿಂಡಾಂಡದೊಳಗಿಹ | ಗಂಡನೆಂದೆನಿಸಿಹಗೆ ೧೫
ಪುರಂದರ ವಿಜಯ ಭಾಗಣ್ಣ | ಮತ್ತೆವರ ಜಗನ್ನಾಥವರ್ಯ | ಬಹುಪರಿಠವಿಸಿತ್ತೆ ಮೃಷ್ಠಾನ್ನ | ದಾಸವರರ ಸೇವಕ ಸೇವಕನ್ನ | ಆಹಪುರಂದರದಾಸರ ದಿನ | ದರುಶನ ವಿತ್ತಿಹೆಅರಿದಾಯ್ತೆನ್ನಯ ಕುಲ | ಪರಮ ಧನ್ಯವೆಂದು ೧೬
ಇಂದು ಭಾಗದಿ ವಾಸ ಜಯ | ಸಿರಿಇಂದಿರೆ ಲೋಲನೆ ಜಯ | ದಾಸಮಂದಗಭೀಷ್ಟದ ಜಯ | ಎನ್ನತಂದೆ ತಾಯಿ ಬಂದು ಜಯ | ಆಹ ಸುಂದರ ಗುರು ಗೋವಿಂದ ವಿಠಲ ಹೃ-ನ್ಮಂದಿರದೊಳು ತೋರಿ | ಬಂಧನ ಬಿಡಿಸುವ ೧೭

೪೮೮
ನೋಡಿದ್ರ್ಯಾ ಕಂಡಿದ್ರ್ಯಾ ಶ್ರೀಸುಬ್ಬರಾಯ ದಾಸರ್ಯರಾ ಪ
ಕಾಡೂವ ಭವದ ದೂರೋಡಿಪ ಮಾರ್ಗದಜಾಡನೆ ತಿಳಿಸುವಾಗಾಢ ಮಹಿಮರ ಅ.ಪ.
ವ್ಯಾಸೋಪತಿಷ್ಟ ಪುರಂದರ | ದಾಸರ ಪೀಳಿಗೆ ಶರಧಿಗಾಶಶಿಗೊಪ್ಪುವ ದಾಸವರ್ಯರನ ೧
ಮುದ್ದು ಮೋಹನ ಗುರು | ಮುದ್ದು ಶಿಷ್ಯರು ತಂದೆಮುದ್ದು ಮೋಹನರು | ಪ್ರಸಿದ್ಧರಾಗಿಹರಾ ೨
ಆರ್ತರುದ್ಧರ ಪರ | ಮಾರ್ಥ ಚಂದಿರ ಹರಿಕೀರ್ತನೆ ಗೈವ ಸ | ತ್ಪಂಥ ಬೀರಿದರಾ ೩
ಅಂಕಿತರಹಿತ ನಿ | ಷಿದ್ಧ ದೇಹವು ಎಂದುಅಂಕನಗೈಧರಿ | ಲೆಂಕತನವ ಬೀರ್ದರ ೪
ಸಹಸ್ರಾರು ಅಂಕಿತ | ವಿಹಿತೋಪದೇಶ ಸ-ನ್ನಿಹಿತರ ಗೈದೂ | ದ್ಧರಿಸಿದ ಗುರುಗಳ೫ |
ದಾಸಕೂಟಾಬ್ಧಿ ತಾ | ರೇಶನ ಪರಿಯಲಿಭಾಸಿಸಿ ಶರಣರ | ಪೋಷಿಸಿದವರನು ೬
ಸಾರ ಶಾಸ್ತ್ರದ ಸವಿ | ಆರು ಮೊಗನ ಪರಿಆರು ಬಗೇಯಲಿ | ಬೀರಿದ ವರನ ೭
ಸುಂದರೇಶ ಪ್ರಾಣ | ಅಂದ ಪ್ರತೀಕವಅಂದೇಭ ಗಿರಿಯಲ್ಲಿ | ಚಂದದಿ ನಿಲಿಸಿದರ ೮
ಪ್ರಥಮ ಮಾಸವು ವರ | ಸಿತ ನವಮಿ ಮಧ್ಯಾಹ್ನಪೃಥುವಿ ಸಂಬಂಧವ | ಮತಿಯಿಂದ ತ್ಯಜಿಸಿದರ ೯
ಬಂದ ಭಕುತರ ಸೇವೆ | ಚಂದಾಗಿ ಕೊಳ್ಳುತಒಂದಂಶದಿಂದಲ್ಲಿ | ಇಂದು ಕರಿಗಿರಿಲಿಹರ ೧೦
ಗೋವಿದಾಂಪತಿ ಗುರು ಗೋವಿಂದ ವಿಠಲ ಪರಾವರೇಶನು ಎಂದು | ಓವಿ ತುತಿಸುತ್ತಿಹರ೧೧

೮೩
ನೋಡಿರೇ ಬೇಲೂರ ಕೇಶವನ ನೋಡಿರೇ ಪ
ನೋಡಿ ನೀವವನ ಕೊಂಡ್ಯಾಡಿ | ತನುವೀಡ್ಯಾಡಿ ಅವನ ಚರಣದಿ | ಆಹಜೋಡಿಸಿ ಕರಗಳ | ಬೇಡಲು ವರಗಳಖೋಡಿ ದೈವರ ದೇವ ಗಾಢ ದಯವ ತೋರ್ವ ಅ.ಪ.
ಗೆಜ್ಜೆ ಕಾಲ್ಗಡಗದವು ಚರಣ | ಪೊನ್ನಗೆಜ್ಜೆ ಉಡಿದಾರಾಭರಣ | ಮತ್ತೆಸಜ್ಜೆ ಕೊರಳ ಹಾರ ರತುನ | ಕಣ್ಣುಕಜ್ಜಲ ತಿಲಕ ಪಣೆ ಸದನ | ಆಹವಜ್ರಿಯ ಮೊರೆ ಕೇಳಿ | ನಿರ್ಜರರ ಸಲಹಿದಕಜ್ಜಗಳಮಿತದಿ | ಸಜ್ಜನರ ಪೊರೆದನ ೧
ಕೇಳೆಡ ಕರದಲ್ಲಿ ಗದ | ನೋಡಿಮೇಲ್ಹಸ್ತದಲಿ ಚಕ್ರ ಬಲದ | ಮತ್ತೆಮೇಲ್ಕರ ಶಂಖದ ನಿನದ | ಇನ್ನುಕೀಳು ಕರಾಭಯ ಮಧ್ಯದ | ಆಹಶೀಲ ಭೂವರಹನ | ಶಾಲಿಗ್ರಾಮವ ನೋಡಿಲೀಲ ರೂಪದಿ ಘೋರ | ಕಾಲ್ಯವನನ ಕೊಂದ ೨
ಶ್ರೀವಿಷ್ಣು ಸಮುದ್ರದಿ ಸ್ನಾನ | ಮಾಡಿಭಾವಿ ಬ್ರಹ್ಮಾಂತರ್ಗತನ | ಗುರು ಗೋವಿಂದ ವಿಠಲ ಕೇಶವನ | ಚರಣಓದಿ ಭಜಿಸೂವಂಥ ಸುಜನ | ಆಹಆವಾವ ಕಾಲಕ್ಕೂ | ನೋವು ರಹಿತ ಧಾಮಆ ವೈಕುಂಠವ ಪೊಕ್ಕ | ಶಾಶ್ವತ ಸುಖ ಪೊಂದ್ವ ೩

೮೬
ದರ್ಭಶಯನ ಶ್ರೀರಾಮದೇವರ ಸ್ತೋತ್ರ
ಪಂಕಜಾಕ್ಷ ಮನ | ಪಂಕ ಕಳೆಯೊ ಎನ್ನ | ಕರುಣಾರಸ ಪೂರ್ಣ ಪ
ಲಂಕೇಶನನು ಜಗ್ವೊಲಿದ ಹರಿಯೇ | ಆಶ್ರಿತರಿಗೆ ಧೊರೆಯೇ ಅ.ಪ.
ನವಗ್ರಹ ಪೂಜೆಗಳ್ವೊಪ್ಪಿತ್ತೇನೊ ನಿನಗೇ | ಸರ್ವಾಧಾರಕಗೇ|ತವ ಚರಣಾಬ್ಜ ಸ್ತವನ ಮಾಳ್ಪನರನೂ | ಭವ ವಿಮುಕ್ತನಹನೂಕವಿ ಜನ ನುತ ಸತ್ಪ್ರವರ ನಿನ್ನ ಲೀಲಾ | ಲೋಕ ಶಿಕ್ಷೆಗನುಕೂಲ |ತವಕದಿ ಗೈದೆ ವಿವಿಧ ಪೂಜೆಗಳನ್ನ | ನವ ಪಾಪಾಣಗಳನ್ನ ೧
ಸರ್ಪ ಶಯನ ಪರಿವಾರದೊಡನೆ ಬಂದು | ಶರಧಿ ತೀರದಿ ನಿಂದು |ಅಪ್ಪಣೆ ನಡೆಸದ ಸಿಂಧು ಪತಿಯ ನೋಡೀ | ದರ್ಭಶಯನ ಮಾಡೀಕಪ್ಪುಗೊರಳ ಸಖ ಕುಪಿತನಾಗೆ ನೀನೂ | ಬೆದರಿ ಬಿನ್ನವಿಸಿದನೂಒಪ್ಪಿ ಬಂಧಿಸಿದೇ ಸೇತುವೆಯನ್ನಾ | ಭಕ್ತರಿಗೆ ಪ್ರಸನ್ನಾ ೨
ಘಾತಿಸುತಲಿ ಬಲು ಯಾತುಧಾನರನ್ನಾ | ರಾವಣಾದಿಗಳನಾ |ಸೀತೆಯೊಡವೆರಸಿ ತೆರಳಿ ನೀನೂ | ಸಲಹಿದೆ ಅನುಜನನೂ | ಸೇತು ಬಂಧ ಸಿರಿ ಮಾಧವ ಶ್ರೀನಲ್ಲಾ | ಗುರು ಗೋವಿಂದ ವಿಠ್ಠಲ |ಮಾತು ಮಾತಿಗೆ ಕೊಡು ತವ ಲೀಲಾ | ಉಚ್ಚರಿಸುವ ಸೊಲ್ಲಾ ೩

೮೫
ಪಂಕಜಾಕ್ಷನೆ ನಿನ್ನ | ಪಾವನ್ನ ತವಪದಪಂಕಜವ ತೋರೈಘನ್ನ | ನಿನ್ನಂಘ್ರಿ ಶರಣರಶಂಕೆ ಕಳೆ ಕಾರುಣ್ಯಾ | ಸಿಂಧುವೆ ವರೇಣ್ಯ ಪ
ಶಂಕರಾಭರಣಾದ್ರಿ ವೆಂಕಟ | ಪಂಕಜಾಸನ ವಂದಿತಾಂಘ್ರಿಯೆಶಂಕೆ ಇಲ್ಲದೆ ಭಜಿಪ ಭಕುತರ | ಪಂಕಕಳೆ ಅಕಳಂಕ ಮೂರುತಿ ಅ.ಪ.
ಬಂದುದಾಯಿತು ಭವದೀ | ನಿನ್ನಂಘ್ರಿ ನೀರಜ ದ್ವಂದ್ವ ಬೇಡುವೆ ಮನದೀ | ಅನ್ನಂತ ಮಹಿಮನೆ ಇಂದ್ರಸೂನುವ ರಣದೀ | ಕಾಯ್ದೆಂದಲಿ ಈ ಮಂದನನು ಬಹು ದಯದೀ | ಸಲಹಯ್ಯ ಭರದೀ ||ಅಂದಮೀನಗೆ ಮಂದರ ಧೃತ | ಸಿಂಧುಗತ ಹಿರಣ್ಯಾಕ್ಷ ಸಂಹೃತಕಂದನನು ಪಿತನಿಂದ ಸಲಹಿದ | ಇಂದ್ರಗವರಚುಪೇಂದ್ರ ಹರಿಯೇ ||ತಂದೆ ವಚನಕೆ ತಾಯ ಕಡಿದನೆ | ತಂದೆ ನುಡಿಗಡವಿಯನೆ ಸೇರ್ದನೆತಂದೆ ತಾಯ್ಗಳ ಬಂಧಹರ ಮುದ | ದಿಂದ ಮೋಹಕ ತುರಗವೇರ್ದ ೧
ಮೇಲು ಗಿರಿಯಲ್ಲಿರುವಾ | ಸಿರಿ ಭೂಮಿ ರಮಣನೆ |ಕಾಲಕಾಲಕೆ ಬರುವಾ ಆಧಿ ವ್ಯಾಧಿಯ ಮೂಲ ಸಹ ಕಿತ್ತೊಗೆವಾ | ಕರುಣಾಳುವೇ ತವ |ಶೀಲಗುಣರೂಪ ಕ್ರಿಯವಾ | ಸತತ ಸ್ಮರಿಸೂವಾ ||ಶೀಲ ಮನ ದಯಪಾಲಿಸುತ ಹರಿ | ಕಾಲ ಗುಣ ಕರ್ಮ ಸ್ವಭಾವಗಳಾಲಯನು ನೀನೆನಿಸಿ ಲಕ್ಷ್ಮೀ | ಲೋಲ ಜಗದುತ್ಪತ್ತಿ ಸ್ಥಿತಿಲಯಮೂಲ ಕಾರಣನೆಂಬ ಜ್ಞಾನವ | ಕಾಲಕಾಲಕೆ ತಿಳಿಸಿ ಹೃತ್ಕೀಲಾಲಜದಿ ತವ ಪಾದ ಪಲ್ಲವ | ಓಲೈಪ ಭಾಗ್ಯವ ಪಾಲಿಸೂವುದು ೨
ಕಾರಣಾಹ್ವಯ ದೇವಾ | ತಿಳಿವು ಕರ್ಮಕೆಪ್ರೇರಕನು ಬೇರಿನ್ನಾವಾ | ತತುವರೊಳು ನೆಲಸಿತೋರುತಿಹೆ ಕ್ರಿಯೆ ಸರ್ವಾ | ತ್ರಿಗುಣ ಮಯ ದ್ರವ್ಯಾಕಾರ ನಾಮದಲಿರುವಾ | ತದ್ಬಿನ್ನನೆನಿಸೂವಾ ||ಮಾರಮಣ ಬಹುರೂಪದಿಂದಲಿ | ವಾರಿರುಹ ಭವನಧಿ ಕರಿಸಿ ಜಗಕಾರಿಯಂಗಳಗೈದು ಜೀವರ | ಅಪಾರ ಕ್ರಿಯೆಗಳ ಋಣವ ತಿದ್ದುತಪ್ರಾರಂಭದ ಕರ್ಮಂಗಳುಣಿಸಿ | ಘೋರ ಭವ ಕೂಪಾರ ದಾಟಿಪಧೀರ ಗುರು ಗೋವಿಂದ ವಿಠಲನ | ಅಪಾರ ಕರುಣವ ತುತಿಸಲಾಪನೆ ೩

೫೬೯
ಪಂಕಜಾಸನ ವಂದ್ಯ | ವೆಂಕಟಾದ್ರಿ ವಿಠಲ ತವಕಿಂಕತನ ವಿತ್ತವಗೆ | ಸಂಕಟವ ಕಳೆಯೊ ಪ
ಮಂಕುಹರಿಸುಜ್ಞಾನ | ದಂಕುರಕೆ ಮನಮಾಡಿಬಿಂಕದಿಂ ಪೊರೆಇವನ | ಅಕಳಂಕ ಮಹಿಮಾ ಅ.ಪ.
ಸತ್ಯಶೌಚಾಚಾರ | ಕೃತ್ಯದಲಿ ಮನವಿರಿಸುನಿತ್ಯತವ ಮಹಿಮಗಳ | ಸುತ್ತಿಇರಲಿ ಇವಗೇನಿತ್ಯನೂತನ ಮಹಿಮ | ತತ್ವಗಳ ತಿಳಿಸುತ್ತಭೃತ್ಯವತ್ಸಲ ಕಾಯೋ | ಮೃತ್ಯುಹರದೇವಾ ೧
ತತ್ವಾರ್ಥ ತಿರುಳುಗಳೆ | ಚಿತ್ರಿಸುವ ಕಲೆವೃದ್ಧಿವಿಸ್ತರೀಸಿವನಲ್ಲಿ | ನಿಸ್ತುಲಾತ್ಮಕನೇ |ಅರ್ಥಕಾಮಸುರೂಪ | ಪೊತ್ತುಪೊರೆಯುವ ದೇವಾಪ್ರತ್ಯೇಕ ಪ್ರಾರ್ಥನೆಯ | ಕೃತ್ಯವೇಕಿನ್ನು ೨
ನಾನು ನನ್ನದು ಎಂಬ | ಹೀನಮತಿಕಳೆದಿನ್ನುನೀನು ನೀನೇ ಎಂಬ | ಜ್ಞಾನಮಹಬರಲೀ |ಪ್ರಾಣ ಪ್ರಾಣನೆ ಜಗ | ತ್ರಾಣನಹುದೆಂಬ ಸುಜ್ಞಾನ ಪಾಲಿಸಿ ಪೊರೆಯೋ | ಮನಿಮಧ್ವ ವರದಾ ೩
ಆನತೇಷ್ಟ ಪ್ರದನೆ | ಗಾನಕಲೆ ಇವನಲ್ಲಿಸ್ವಾನುಭಾವದಿ ಬರಲಿ | ಮೀನಾಂಕ ಜನಕಾಮಾನಮೇಯಾನುಭವ | ಸಾನು ಕೂಲಿಸುವಕೋನೇರಿವಾಸ ಕಾರುಣ್ಯ | ತೋರಿವಗೇ೪
ಗೋವತ್ಸದನಿ ಕೇಳಿ | ಆವುಧಾನಿಸುವಂತೆನೀವೊಲಿದು ಕಾಪಾಡು | ಬಾವುಕರ ಪಾಲಾ |ಪೂವಿಲ್ಲನಯ್ಯಗುರು | ಗೋವಿಂದ ವಿಠಲತವಪಾವನವ ಪದ ತೋರೆ | ಓವಿ ಪ್ರಾರ್ಥಿಸುವೆ ೫

೩೭೫
ಪಂಚ ವೃಂದಾವನದಿ ಮೆರೆಯುತಿರುವಾ ||ಪಂಚಾಸ್ಯ ಸಂದಿಷ್ಟ ವೈಭವವ ಕೇಳಿ ಪ
ವಿಪುಲ ಮತಿ ಪದಕರ್ಹ ಕಪಿಪ ರಾಮನ ಭಂಟಸ್ವಪನದಾಖ್ಯಾನವನೆ ಶಪಥ ಪೂರ್ವಕದೀ |ವಿಪ್ರಗೋಸುಗವಾಗಿ ಸುಪ್ರಕಟ ಗೈದಿಹರು ಅಪ್ರತಿಮ ಹಯಮೊಗನ ಸುಪ್ರೇಮ ಪಿಡಿದೂ ೧
ಆಖ್ಯಾನ ಪೆಟ್ಟಿಗೆಯು ಅಂಧಕಾರದಲಿದ್ದುವ್ಯಾಖ್ಯಾತೃ ವೇದನಿಧಿ ಜನ್ಮತಾಳುತಲೀ |ವ್ಯಾಖ್ಯಾನ ಗೈದಾಗ್ಯು ಭಾವ ತಿಳಿಯದಲೇವೆಪ್ರಖ್ಯಾತಿ ಪಡೆಯದಲೆ ಬೀಗ ಮುದ್ರಿತದೀ ೨
ಅಂಧ ಭಾವದೊಲೊಬ್ಬ ಪಂಗು ಭಾವದಲೊಬ್ಬ ಇಂದಿರೇಶನ ಮಹಿಮೆ ಪ್ರಕಟ ಗೈಯ್ಯುವಲೀ|ಅಂಧ ಪಂಗುನ್ಯಾಯ ಆಶ್ರಯಿಸಿ ಪ್ರಕಟಿಸುವಮಂದ ಜನರುದ್ಧಾರ ಕಾರ್ಯ ಗೈಸುತಲೀ ೩
ಅನುಮಾನ ತೀರಥರ ಶಾಸ್ತ್ರವನೆ ಮಥಿಸುತ್ತತನುಮನ ಧನಧಾನ್ಯ ತೃಣವೆಂಬ ಕೀಲಿಯಲೀ |ಜ್ಞಾನ ಪೆಟ್ಟಿಗೆ ಬೀಗ ಮುದ್ರೆಯನೆ ತೆರೆಯುತ್ತ ಮನದ ಪಾತ್ರಿಯಲುಣ್ಣಿ ಆಖ್ಯಾನದನ್ನಾ ೪
ಸಂತ ಸಂಗದಲಿಂದ ಮಂಥಿಸಲು ತತ್ವಗಳಅಂತ ರಂಗದ ಕದವು ತೆರೆದಂತರಾತ್ಮನನುಕಂತು ಪಿತನಾದ ಗುರು ಗೋವಿಂದ ವಿಠಲನ್ನಅಂತರಂಗದಿ ಕಾಂಬ ಪಂಥವಿತ್ತವರಾ ೫

೮೭
ಪಂಡರಿಯ ಪುರನಾಥ | ಭಕುತರ ದಾತಾ | ಅಂಡಲೆದು ಜನುಮಗಳ | ಬೆಂಡಾದೆ ಹರಿಯೇ ಪ
ಶ್ವಾನ ಸೂಕರ ಖರದ | ಹೇನು ಹಕ್ಕಿಯ ಮೃಗದಯೋನಿ ಯೋನಿಯ ಚರಿಸಿ | ಬೇನೆಗ್ವೊಳಗಾದೇಮಾನನಿಧಿ ಕಾರುಣ್ಯ | ವೇನ ಬಣ್ಣಿಪೆನಯ್ಯಮಾನವನ ಮಾಡೆನ್ನ | ನೀನಾಗಿ ಪೊರೆದೇ ೧
ಕರ್ಮ ಕೋಟಿಗಳಲ್ಲಿ | ಮರ್ಮಗಳ ಮರೆತಲ್ಲಿಒಮ್ಮನದಿ ಸೂತ್ರಗಳ ತದ್ಭಾಷ್ಯಂಗಳಾ ||ಪೇರ್ಮೆಯಲಿ ನೋಡದಲೆ | ಕರ್ಮಚರಿಸಿದೆನಲ್ಲೆಭರ್ಮ ಗರ್ಭನನಯ್ಯ | ನಿರ್ಮಮನ ಮಾಡಯ್ಯ ೨
ಸಕಲ ಶಾಸ್ತ್ರಾರ್ಥಗಳ | ಸಕಲ ಸಾರನೆ ಅಖಳಭಕುತ ಜನ ಸಂಸೇವ್ಯ | ಮಧ್ವಮುನಿ ವಂದ್ಯ ||ಸಕಲಾತ್ಮಕನೆ ಗುರು | ಗೋವಿಂದ ವಿಠಲಯ್ಯಸಕಲಕೂ ನೀನೇ ಚೇ | ಷ್ಟಕನೆಂದು ತಿಳಿಸೊ೩

೫೭೦
ಪಂಢರಿನಾಥ ವಿಠಲ | ತೊಂಡನನು ಸಲಹೊ ಪ
ಅಂಡಜಾದಿಪತುರಗ | ಕುಂಡಲಿಯ ಶಯನಾ ಅ.ಪ.
ಭವ ಸಮುದ್ರಕೆ ಪೋತ | ತವಪಾದವಾಶ್ರಯಿಸಿಬವಣೆಗಳ ಕಳೆವೆನೆನೆ | ತವಕದಿಂದಿರುವಾ |ಇವನ ಕೈ ಪಿಡಿಯುತ್ತ | ಧೃವವರದ ಸಲಹೋಮಾಧವನೆ ಭಿನ್ನವಿಪೆ ಶ್ರೀ | ಪವನ ವಂದಿತನೇ ೧
ಅಂತರಂಗದ ದೈತ್ಯ | ಸಂತತಿಯು ಕೊಡುತಿಪ್ಪಸಂತಾಪ ಹರಿಸಿ ಮ | ಧ್ವಾಂತರಾತ್ಮಾ ಹರಿಯೆಸಂತತವು ತವನಾಮ | ಚಿಂತೆಯಲ್ಲಿರಿಸುತ್ತಸಂತಸವ ಬಡಿಸೊ ಶ್ರೀ | ಕಂತುಹರಸಖನೇ ೨
ಏಸೇಸೊ ಜನ್ಮಗಳ | ರಾಶಿಪುಣ್ಯಗಳೊದಗಿದಾಸನಾಗಲು ಇಂದು | ಆಶಿಸುತ್ತಿಹನೇ |ಲೇಸಾದ ಸತ್ಪಂಥ | ದಾಶಯವ ತಿಳಿಸುತ್ತದಾಸನಾಗೆಂದೆನುತ | ಆಶಿಷವನೀವೇ ೩
ಹರಿಗುರೂ ಸದ್ಭಕ್ತಿ | ಪರತತ್ವ ಸುಜ್ಞಾನಮರುತ ಮತ ದೀಕ್ಷೆಯನು | ವಿಷಯ ವೈರಾಗ್ಯ |ಕರುಣಿಸುತ ತರಳನ್ನು | ಪೊರೆಯೆಂದು ಬಿನ್ನೈಪೆಕರಿವರದ ಕಮಲಾಕ್ಷ | ಕಾರುಣ್ಯ ನಿಧಿಯೇ ೪
ಗಾನಲೋಲನೆ ಇವಗೆ | ಧ್ಯಾನ ಸಾಧನ ಕೊಟ್ಟುಕಾಣಿಸೋ ಹೃದ್ಗುಹದಿ | ಮೌನಿಜನವಂದ್ಯ |ಜಾಣಗುರೂಗೋವಿಂದ | ವಿಠಲ ಮಧ್ಭಿನ್ನತವನೀನಾಗಿ ಸಲಿಸೆಂದು | ಆನಮಿಸಿ ಬೇಡ್ವೆ೫

೮೮
ಪಂಪತಟಗನ ಹೃದಯ | ಸಂಪುಟದಲಿಹ ಸದಯಶಂಫಲಿಯ ಪುರವಾಸಿ | ಭಕುತ ಜನ ತೋಷೀ ಪ
ಬಾದರಾಯಣ ಪೂರ್ಣ | ಬೋಧ ತೀರ್ಥರ ಸದನಮಾಧವನೆ ಹಯವದನ | ಸುಗುಣ ಗಣಪೂರ್ಣಾ ||ಹೇ ದಯಾಂಬುಧೆ ಚೆನ್ನ | ಯಾದವೇಶನೆ ಎನ್ನಕಾದು ಕೊಳ್ಳೆಲೊ ಘನ್ನ | ಶೀಲ ಸಂಪನ್ನಾ ೧
ಕೃಷ್ಣ ಪದ ಸರಸಿಜವ | ನಿಷ್ಠೆಯಲಿ ಭಜಿಸಿದವಜಿಷ್ಣು ಸಖನಿಗೆ ಪ್ರೀತ | ಮಧ್ವಮುನಿ ಭ್ರಾತಾ ||ವಿಷ್ಣು ತೀರ್ಥರ ಹಸ್ತ | ಇಷ್ಟ ಪೂಜೆ ಸಮಸ್ತಅಷ್ಟ ವಿಭವದಿ ಗೊಂಡ | ಶ್ರೀಲಕುಮಿ ಗಂಡಾ೨
ಕಶಿಪುತನಯನ ಪಾಲ | ಎಸೆವ ಕರುಳಿನ ಮಾಲಕುಸುಮಶರ ಹರ ಪಾಲ | ಕಲಿಕುಲಕೆ ಬಹು ಕಾಲ ||ವಸುಮತಿಯ ಶ್ರೀಲೋಲ | ಕಿಸಲಯಾವಳಿ ಮಾಲವಸುದೇವ ಮುದ ಬಾಲ | ಪರಿಪಾಹಿ ಕೋಲಾ ೩
ನಿಜಭೃತ್ಯ ಭಾಷಿತವ | ನಿಜವ ಮಾಡಲು ದೇವನಿಜ ವ್ಯಾಪ್ತಿ ಸ್ತಂಭದಲಿ | ನಿಜದಿ ತೋರುತಲಿಸುಜನ ಜನರುದ್ದರಣ | ಕುಜನರಸು ವಿಹರಣಅಜ ಜನಕ ವಿಶ್ವೇಶ | ಕರುಣಿಸೆಲೊ ಶ್ರೀಶಾ ೪
ನಿಟಿಲ ನೇತ್ರನ ಬಿಂಬ | ಪಟವು ವಡವೆಗಳೆಂಬಕಟು ಸವಿಯನುಂಬುವನು | ಸಕಲ ಕ್ರಿಯಗಳನೂಧಿಟ್ಟ ಗುರು ಗೋವಿಂದ | ವಿಠಲ ನಿನ್ನಾನಂದದಿಟವೆಂಬ ವರ ಮತಿಯ | ಪಾಲಿಸೆಲೊ ಜೀಯ ೫

೨೫೮
ಪಂಪಾಪತಿಯೆ ಶಂಭೋ – ಪಾಲಿಯ ಪ
ಶಂಫಲಿ ಪುರಗ ವಿರಂಚಿ ಪಿತ ಪದನೋಂಪಿಗೈವ ಮನ | ಇಂಪಾಗಿ ಕೊಡು ಹರ ಅ.ಪ.
ಪಂಚ ಬಾಣಾರಿ ಮಹದೇವಾ | ತ್ವರ್ಯಸಂಚುಗೊಳಿಸೊ ಹರಿ ಭಾವಾ |ಹೆಂಚು ಹಾಟಕ ಸಮ | ಸಂಚಿಂತನೆಯ ಕೊಟ್ಟುಸಂಚಿತಾಗಾಮಿ ಕಳೆ | ವಾಂಛಿತಾರ್ಥವ ಶಿವ ೧
ಸಯ೫ೂ ಮನಕಭಿಮಾನಿಯೆ ೫ಸ್Áವಿಶಯ್ಯ ಹರಿಗೆ ಎಂಬೊ ರೂಪಿಯೇ ||ಸ್ಥೈರ್ಯ ವನದಿ ಹರಿ | ಪ್ರೀಯ ಪಾಲಿಸಿನ್ನುಕೈಯ್ಯ ಪಿಡಿದು ಕಾಯೊ | ಅಯ್ಯ ನಿನಗೆ ಶರಣು ೨
ದೂರೆಂಬ ಅನಿಲಗೆ ನಿಲಯನೇ | ಅಂತೆದೂರ್ವಾಸಾಭಿಧ ಮಹದೇವನೇ ||ಪಾರ್ವತಿರಮಣನೆ | ಪೂರ್ವ ದಿವಿಜ ಪ್ರಿಯಸರ್ವಾರ್ಪಣೆಂಬ ಮನ | ಭಾವವ ಪಾಲಿಸು ೩
ಕಂದರ್ಪ ಮದಹ ಪುರಾಂತಕ | ನಂದನಂದನ ಪದ ದ್ವಂದ್ವಾರ್ಚಕ ||ಇಂದು ಮೌಳಿಧರ | ಬಿಂದು ಮಾಧವ ಪ್ರಿಯಚಂದ್ರಾರ್ಕಾನಲ ಚಕ್ಷು | ತಂದೆ ಕಾಯೋ ಹರ೪
ಗೋವ್ಗಳ ಪರಿ ಪರಿ ಪಾಲಕಾ ಗುರು |ಗೋವಿಂದ ವಿಠಲನ ಅರ್ಚಕಾ ||ತೀವರದಲಿ ಮನ | ಮಾವಾರಿ ಪದ ಸ್ರ‍ಮತಿಭಾವದಲಿಡು ಶಿವ | ಆವ ದನ್ಯವನೊಲ್ಲೆ ೫

೨೫೯
ಪಂಪಾಪುರದ ನಿವಾಸನೆ ಶಿವನೇ ಇಂಪು ಕೊಡುತ ಮನ | ಕಂಪನ ಕಳೆಯೋ ಪ
ಶಂಫಲಿ ಪುರದ ನಿ | ವಾಸನ ಸಖ ಹಸಗಂಪನು ಕೊಡುತಲಿ | ಇಂಪನೆ ತೋರೋಅ.ಪ.
ಬಿಂದು ಮಾಧವನ | ಸನ್ನಿಧಿ ನಿಲಯನೆಸುಂದರ ಮೃಗಧರ | ನಂದಿವಾಹನನೇ |ಇಂದುಧರನೇ ಭವ | ಬಂಧ ವಿಮೋಚಕಕಂದು ಗೊರಳ ಹರ | ಸಂದರುಶನ ವೀಯೋ ೧
ಅಂಬರ ಕೇಶಿಯೆ | ಅಂಬೆಯ ರಮಣನೆಶಂಬರಾರಿಯ ಹರ | ನಂಬಿ ವಂದಿಪೆನೊಉಂಬುವುದುಡುವುದು | ಹಂಬಲಿಸುವುದೆಲ್ಲಬಿಂಬನ ಕ್ರಿಯವೆಂಬ | ನಂಬುಗೆ ಈಯೋ ೨
ದಶ ಶಿರ ಮದ ಹರ | ವಾಸವ ವಂದಿತನಸುನಗೆ ಮೊಗ ಗುರು | ಗೋವಿಂದ ವಿಠಲನಾ ಆಶಿಪೆ ಮಧ್ರ‍ಹದಯಾ | ಕಾಶದೊಳಗೆ ತೋರಿಹೇ ಸದಾಶಿವ ಶಂಭೋ | ಪೋಷಿಸು ಈ ಪರಿ ೩

೧೭೪
ಪದ್ಮಾಕ್ಷಿ – ಪದ್ಮಾಕ್ಷಿ ಪ
ಪದ್ಮಜ ಜನನಿಯೆ | ಪದ್ಮಾನನೆ ಶಿರಿಪದ್ಮ ಭವೆಯೆ ಹೃ | ತ್ಪದ್ಮದಿ ನೆಲೆಸೈ ಅ.ಪ.
ಗುಣಕಾರ್ಯಗಳನು | ಕ್ಷಣ ಬಿಡದಲೆ ನೀವಿನಿಮಯ ಗೈಧರಿ | ಗನುಕೂಲೆನಿಸಿದೆ ೧
ನೀ ವೊಲಿಯಲು ತವ | ಭ್ರೂ ವಿಲಾಸದಲಿಆ ವಿಪ ಮುಖರಿಗೆ | ತೀವ್ರ ಪದಪ್ರದೆ ೨
ನಂದ ನಂದನೇ ಆ | ಬೃಂದಾರಕ ಮುನಿವಂದಿತ ಪದಯುಗೆ | ವಂದಿಪೆ ಪಾಲಿಸು ೩
ಸಿಂಧು ಶಯನ ಹರಿ | ವಕ್ಷೊನಿವಾಸಳೆಕುಂದನು ಎಣಿಸದೆ | ನಂದವ ನೀವುದು ೪
ಅಸಮನೆನಿಪ ಗುರು | ಗೋವಿಂದ ವಿಠಲಗೆಬಿಸರು ಹಾಂಬಕೆ ಸ | ಮಾಸಮಳೆನಿಪಳೆ ೫

೨೮೧
ಪದ್ಮಾದಳಾಯತಾಕ್ಷಿ | ಸೌಪರ್ಣಿ ಪತಿ ಪಕ್ಷಿಪದ | ಪದ್ಮಕ್ಕೆ ಶರಣೆಂಬೆ | ಸದ್ಮದೊಳಗೆ ಹರಿಪದ್ಮಪದವ ತೋರು || ಕರುಣವ ನೀ ಬೀರು ಪ
ಚಿತ್ತಾಭಿಮಾನಿಯೆ | ಕತ್ತಲೆ ಕಳೆಯುತಭೃತ್ಯನ ಸಲಹುದು | ನಿತ್ಯ ಹರಿಯ ಸ್ರ‍ಮತಿಯಿತ್ತು ಕಾವುದೆನ್ನ | ಬಂದ ಪ್ರಪನ್ನನ ಅ.ಪ.
ವೇದಕ್ರಿಯೆಗಳಿ | ಗಾದಿ ಮಾನಿಯೆ | ಮೋದ ತೀರ್ಥ ಮ | ತೋದಿ ತಾರ್ಥವಬೋಧಿಸುತ್ತಲ | ನಾದ್ಯವಿದ್ಯೆಯ | ಗೈದು ಹನ ಹರಿ | ಪಾದ ತೋರಿಸು ೧
ಗಾನಲೋಲ ಪ | ದಾನು ರಾಗದಿ | ಪಾಣಿಯಲಿ ಪಿಡಿ | ಧ್ರಾರುವನ ಸತಿಏನು ಬೇಡೆ ಕು | ಯೋನಿ ಬರೆ ಭಯ | ವೇನು ಹರಿಸ್ರ‍ಮತಿ | ಸಾನು ಕೂಲಿಸಮ್ಮ ೯
ಪಾಪಕಂಜೆ ದ | ಯಾ ಪಯೋನಿಧಿ | ಗೋಪ ಗುರು ಗೋ | ವಿಂದ ವಿಠಲನರೂ¥೫Éೂೀರೆ ಹೃ | ತ್ಕೂಪದೊಳು ಭವ | ಕೂಪ ದಾಟ೫ ಸೌಪರ್ಣಿದೇವಿ ೩

೫೭೧
ಪದ್ಮಾಪತಿ ವಿಠಲ ನೀನಿವಳ ಸಲಹ ಬೇಕೋ ಪ
ಪದ್ಮ ಸಂಭವ ಜನಕ ಪದ್ಮದಳ ನೇತೃ ಹೃತ್ಪದ್ಮ ದೋಷಗಳ ತಿದ್ದಿ ಕಾಪಾಡೊ ಹರಿಯೇ ಅ.ಪ.
ಜನ್ಮಜನ್ಮಾಂತರದ ಪುಣ್ಯ ಸಂಚಯದಿ ಶ್ರೀಮನ್ಮಧ್ವಮತದಲಿ ಜನ್ಮ ತಾಳಿಹಳೋ |ಕರ್ಮನಾಮನೆ ಅನಾದ್ವವಿದ್ಯಾಕಾಮಕರ್ಮಗಳನೆ ಕಳೆವ ಸನ್ಮಾರ್ಗವನೆ ತೋರೊ ೧
ತಾರತಮ್ಯ ಜ್ಞಾನ ಮೂರೆರಡು ಭೇದಗಳಸಾರವನೆ ತಿಳಿಸಿ ಸಂಸಾರನಿಧಿ ದಾಟಿಸೋಕಾರುಣ್ಯ ನಿಧಿ ಮೂಲ ಕಾರಣನು ನೀನೆಂದುಸಾರಿಬೇಡುವೆ ನಿನ್ನ ಪಾರು ಮಾಡಿವಳಾ ೨
ಪತಿಸುತರು ಹಿತರಲ್ಲಿ | ಮತಿಮತಾಂವರಲ್ಲಿಕೃತಿಪತಿಯ ವ್ಯಾಪ್ತಿ ಸನ್ಮತಿಯನೇ ಕೊಡುತಹಿತದಿ ಸೇವೆಯಗೈಸು ಕೃತಕಾರ್ಯಳೆಂದೆನಿಸುಗತಿ ವಿಹೀನರಿಗೆಲ್ಲ ಗತಿಪ್ರದನೆ ಸ್ವಾಮೀ ೩
ನಿನ್ನ ಸ್ರ‍ಮತಿಗಿಂದಧಿಕ ಅನ್ಯಸಾಧನ ಕಾಣೆಘನ್ನ ಈ ಕಲಿಯುಗದಿ ಪ್ರಾಣಾಂತರಾತ್ಮ |ಪುಣ್ಯ ಫಲದಾತ ಪ್ರಪನ್ನ ಪರಿಪಾಲಕನೆನಿನ್ನ ಸಂಕೀರ್ತನವ ಸರ್ವದಾ ಕೊಡು ಹರಿಯೇ ೪
ಶರ್ವಾದಿ ದಿವಿಜೇಡ್ಯ | ಸರ್ವಾಂತರಾತ್ಮಕನೆಸರ್ವಸ್ವತಂತ್ರನೆ ಹರಿಯೆ ಸರ್ವೋತ್ತಮಾ |ದರ್ವಿಜೀವಿಯ ಕಾವ | ಭಾರ ನಿನ್ನದೊಸ್ವಾಮಿಮಧ್ವಾಂತರಾತ್ಮ ಗುರು ಗೋವಿಂದ ವಿಠಲಾ ೫

೫೭೨
ಪದ್ಮೇಶ ವಿಠ್ಠಲನೆ | ಪೊರೆಯ ಬೇಕಿವನಾ ಪ
ಸನ್ಮುದವ ನೀನಿತ್ತು ಪ್ರೇಮದಲಿ ಸಲಹೋ ಅ.ಪ.
ಮನೊಮಾನಿ ಒಡೆಯನೇ | ಮನಸಿನಲಿ ನೀನಿದ್ದುಮನೊ ವಿಕಾರಕ್ಕೆಡೆಯು | ಉಚಿತವೇ ಹರಿಯೇ |ಮನಶಾಂತಿ ಕರುಣಿಸುತ | ಘನ್ನ ಸಾಧನಗೈಸೆಗುಣ ಉಳ್ಳವನು ಇವನು | ಅನಿಲಾಂತರಾತ್ಮಾ ೧
ಆದಿ ಮೂರುತಿ ಹರಿಯೆ ಭೇಧ ಪಂಚಕತಿಳಿಸಿಮೋದ ತೀರ್ಥರ ಶಾಸ್ತ್ರ | ಭೋಧ ವದಗಿಸುತಾಸಾಧನ ಸುಮಾರ್ಗದಲಿ | ನೀದಯದಲಿಡು ಇವನವೇದಾಂತ ವೇದ್ಯ ಹರಿ | ಬಾದರಾಯಣನೇ ೨
ತೈಜಸನು ನೀನಾಗಿ | ಯೋಜಿಸಿದ ಅಂಕಿತವಮಾಜದಲೆ ಇತ್ತಿಹೆನೊ | ಕಾರುಣ್ಯಮೂರ್ತೇಮೂಜಗಜ್ಜನ್ಮಾದಿ | ಕಾರಣನೆ ಸಂಸಾರಗೋಜುಗಳ ಬಿಡಿಸೊ ನಿ | ವ್ರ್ಯಾಜ ಮೂರುತಿಯೇ ೩
ಸಾಧು ಸತ್ಸಂಗಗಳ | ನೀ ದಯದಿ ಕೊಟ್ಟವಗೆಕಾದುಕೋ ಕೈ ಬಿಡದೆ | ಯಾದವರೊಡೆಯಾಬಾಧೆ ಮನಸಿಗೆ ಬಂದಿ | ಹುದ ಕಳೆದು ಸಂತವಿಸುಮೋದ ಮುನಿ ಸಂಪ್ರೀಯ | ಧನ್ವಂತ್ರಿ ದೇವಾ ೪
ಭಾವುಕರ ಪರಿಪಾಲ | ಭಾವ ಮೈದುನಗೊಲಿದಗೋವಳೇಶನೆ ಭುವನ | ಮೋಹನ ದೇವಾ |ಭಾವುಕನ ಪೊರೆಯೆಂದು | ಈ ವಿಧದ ಭಿನ್ನವಿಪೆಗೋವಿದಾಂ ಪತಿ ಗುರೂ | ಗೋವಿಂದ ವಿಠಲಾ ೫

೮೯
ಪನ್ನಗಾಚಲ ವಾಸ – ಪದುಮಿನೀಶಾ ಪ
ಬನ್ನ ಬಡಿಸುವ ರೋಗವನ್ನು ಕಳೆ ಶ್ರೀಶಾ ಅ.ಪ.
ತನುವ ರಥವನೆ ಮಾಡಿ ತತ್ಸೂತ ನೀನೆನಿಸೀಮನ ಆದಿ ಕರಣವೆಂಬಶ್ವಗಳ ಬಿಗಿಸೀ ||ಗುಣವೆನಿಪ ವಾಗಭಿ – ಮಾನಿಯನೆ ಬಂಧಿಸೀಚನ್ನ ರಥವನು ಚರಿಪೆ ಜೀ | ವನ್ನ ಕುಳ್ಳಿರಿಸೀ ೧
ಸೂತ್ರಾಂತರಾತ್ಮಕನೆ | ಸೂತ್ರಧಾರಿಯೆ ನೀನುಮಾತ್ರಾದಿ ಸುಖ ದುಃಖ | ಸಮವೆಂದು ತಿಳಿಸೋ ||ಧಾತೃ ಪಿತ ನೀನಹುದೊ | ಮಾತರಿಶ್ವ ಪ್ರಿಯನೆಗಾತ್ರ ಬಳಲಿಸ ಬೇಡ | ಪ್ರಾರ್ಥಿಸುವ ನಿನ್ನಾ ೨
ಘನ್ನ ಮಹಿಮನೆ ನಿನ್ನ | ಏನು ಬೇಡಲಿ ನಾನುನಿನ್ನ ನಾಮ ಸ್ಮರಣೆ | ಅನ್ನಂತ ವೀಯೋನಿನ್ನೊಲಿಮೆ ಉಳ್ಳನಕ | ಇನ್ಯಾವ ಭಯವಯ್ಯಪನ್ನಂಗ ಶಯನ ಗುರು | ಗೋವಿಂದ ವಿಠಲಾ ೩

೫೭೪
ಪನ್ನಗಾದ್ರಿವಿಠಲ | ನನ್ನೆಯಿಂ ಸಲಹೋ ಪ
ಸನ್ನುತಿಸಿ ತವ ದಾಸ್ಯ | ಪ್ರಾರ್ಥಿಸುತ್ತಿಹಳಾ ಅ.ಪ.
ಮನೋನಿಯಾಮಕನೊಡೆಯ | ಮನಶಾಂತಿ ಇತ್ತಿವಳಅನುನಯದಿ ಸಲಹಲ್ಕೆ | ಬಿನ್ನವಿಪೆ ಹರಿಯೇ |ಘನಸುತೈಜಸ ಮೂರ್ತಿ | ಅನಘ ತವನಾಮವನುಗುಣಿಸಿ ಇತ್ತಿಹೆ ಹರಿಯೇ | ಮುನಿ ಮೌಳಿ ವರದಾ ೧
ಭವವನದಿ ಉತ್ತರಿಸೆ | ಭುವನ ಪಾದವ ವೆನಿಪತವನಾಮ ಅಮೃತವ | ಸರ್ವದಾ ಸವಿಯೇ |ಹವಣಿಸೋ ಅಭಯಾದ್ರಿ ನಿವಸಿತ ಶ್ರೀಹರಿಯೇಧ್ರುವ ವರದ ಕರಿವರದ | ಪವನಾಂತರಾತ್ಮಾ ೨
ಮುಕ್ತಿಗೇ ಸೋಪಾನ | ಸತ್ಯಗವನೆ ಕೊಟ್ಟುಭಕ್ತಿ ಸುಜ್ಞಾನಗಳು | ಮತ್ತೆ ವೈರಾಗ್ಯ |ಇತ್ತು ಇವಳನು ಪೊರೆಯೆ | ಪ್ರಾರ್ಥಿಸುವೆ ಶ್ರೀಹರಿಯೇ |ಉತ್ತಮೋತ್ತಮನೆ ಗುರು | ಗೋವಿಂದ ವಿಠಲಾ ೩

೫೭೩
ಪರತತ್ವ ವಿಠಲನೇ | ಪೊರೆಯ ಬೇಕಿವಳಾ ಪ
ದುರಿತ ರಾಶಿಯ ತರಿದು | ಕರಪಿಡಿಯ ಬೇಕೋ ಅ.ಪ.
ಬಾಲೆಯತಿ ಮುಗ್ದೆ ಗುಣ | ಜಾಲವಂತೆಯ ಮಾಡಿಶೀಲವತಿ ಎನಿಸಿವಳ | ಶ್ರೀ ಲೋಲ ಹರಿಯೇ |ಓಲಗವ ಕೊಡಿಸಿ ತವ | ಕಾಲ ಕಾಲಕೆ ದೇವಪಾಲಿಸೋ ಶಿಶುವನ್ನು | ಕಾಲ ರೂಪಾತ್ಮಾ ೧
ಗುರು ಕರುಣವಿಲ್ಲದಲೆ | ಹರಿಯೊಲಿಯನೆಂದೆಂಬಪರಮರಾಹಸ್ಯವನು | ಅರುಹಿ ಪ್ರೀತಿಯಲೀಕರುಣಿಸೋ ತವನಾಮ | ಸ್ಮರಣೆ ಸುಖ ಸಖ್ಯವನುಮರುತಾಂತರಾತ್ಮ ಹರಿ | ದುರಿತವನದಾವಾ ೨
ಹರಿದಾಸ್ಯವತಿ ಕಷ್ಟ | ವಿರುವುದೆಂದರಿತಾಗ್ಯುಪರಿ ಪ್ರಶ್ನೆ ಭಕ್ತಿಯಲಿ | ಮೊರೆಯನಿಡುತಿರುವಾ |ತರಳೆ ಗಂಕಿತ ವಿತ್ತೆ | ವರ ಸ್ವಪ್ನ ಸೂಚ್ಯದಲಿಹರಿಯೆ ನಿನ್ನಾದೇಶ | ವಿರುವುದೆಂದರಿತು ೩
ತರತಮದ ಸುಜ್ಞಾನ | ಹರಿ ಗುರೂ ಸದ್ಭಕ್ತಿಹರಿಗನ್ಯ ವಸ್ತುವಿಲಿ | ವೈರಾಗ್ಯ ಭಾವಾ ಕರುಣಿಸುತ ಮನೆವಾರ್ತೆ | ಪರಿ ಪರಿಯಗೈಯ್ಯುವಲಿಹರಿಯೆ ತವ ಸಂಸ್ಮರಣೆ | ಮರೆಯದಂತಿರಿಸೋ ೪
ಜೀವೇಶ ಸನ್ನುತನೆ | ಜೀವರಂತರ್ಯಾಮಿಗೋವತ್ಸದನಿ ಗಾವು | ಧಾನಿಸೂವಂತೇ |ಕೈವಲ್ಯ ಪ್ರದ ಗುರೂ | ಗೋವಿಂದ ವಿಠ್ಠಲನೆಭಾವುಕಳ ಮಾಡಿವಳ | ನೀವೊಲಿಯ ಬೇಕೋ ೫

೪೮೯
ಪರಮಪ್ರೀಯಾ ದಾಸರಾಯಾ | ಸತ್ಕವಿಜನಗೇಯಾ ಪ
ಶರಣರ ಸುರತರು | ಕರಿಗಿರಿ ನಿಲಯನೆಉರುಗಾಯನ ಸಂದರುಶನ ಕೊಡಿಸಯ್ಯ ಅ.ಪ.
ಆರ್ಮೂರೇಳು ನಾಲ್ಕೆಂಟು ಗ್ರಂಥ | ಅವುಗಳ ಸಾರಾರ್ಥಸಾರುತ್ತ ಭಕುತರಿಗೆ ಪುರುಷಾರ್ಥ | ಮಾರ್ಗವ ತೋರುತ್ತ ||ಚಾರು ಚರಿತ ಶ್ರೀರಮಾರಮಣನಗುಣವಾರಿಧಿಯೊಳು ಬಹು ಈಸಿದ ನಿಪುಣ ೧
ಸಾಸೀರ ದಶನವತೀ ವತ್ಸರದಿ | ಕರಿಗಿರಿದುರ್ಗದಿಲೇಸಾಗಿ ಶರಣರ ಸಭೆ ನೆರೆಸೀ | ಸುಜನರ ಸತ್ಕರಿಸೀ ||ದಾಸಕೂಟ ಸಂಸ್ಥಾಪಿಸಿ ಗಿರಿಯಲಿಮಾಸಲಾದ ಪಥ ಪುನರುದ್ಧರಿಸಿದ ೨
ಪರತತ್ವ ಸಾರಾಂಬುಧಿ ಬೆಳಗುವನ ಪರಿಪರಿಕಲೆಯವನಶರಣರ ಹೃತ್ತಾಪವ ಹರಿಸುವನ | ನಿರತೈಕರೂಪನನಪರಮಾರ್ಥೇಂದು ವರೋದಯ ಕರುಣಿಸಿಧರಣಿಯ ಸುರರನು ಪೊರದೆಯೊ ಗುರುವೆ ೩
ಅಂಕೀತವಿಲ್ಲದ ದೇಹಗಳೊಂದು | ನಿಷಿದ್ಧವೆಂದೂಪಂಕಜಾಕ್ಷನ ನಾಮಗಳೊಂದೊಂದು | ಬಳಸುತ ನೀನಂದೂ ಅಂಕನ ಗೈಧರಿ ಲೆಂಕತನವನಿತ್ತುಬಿಂಕದಿ ಜನ ಹೃತ್ಸಂಕಟ ಕಳೆದೀ ೪
ಬಿಂಬೋಪದೇಶವೆ ತಾರಕವೆಂದೂ | ನಿಸ್ಸಂಶಯವೆಂದೂಹಂಬಾಲ ಹಚ್ಚುತ ಶರಣರಿಗೆಂದೆಂದೂ | ಕರುಣಾ ಸಿಂಧೂಬಿಂಬನು ಗುರುಗೋವಿಂದ ವಿಠಲ ಪಾದಾಂಬುಜದಲ್ಯನ ಹಂಬಲವಿರಿಸಿದೆ ೫

೩೧೮
ಪರಶುರಾಮಗೆ ಪರಮ ಪ್ರೀತ್ಯಾಗಲೀ ಪ
ವರವೆನಿಪ ನರದೇಹದ್ಹವಿಷನರ್ಪಿಸುವೆ ಅ.ಪ.
ಜಪತಪಾನುಷ್ಠಾನ | ಅಪರಿಮಿತಸದ್ಯಾತ್ರೆಉಪಕೃತಿಯು ಪರರಿಗೆ | ಕಪಟ ವಿರಹಿತವೂ |ವಿಪುಲದಲಿ ಗೈದು ಸೂ | ಪಕ್ವವಾಗಿರುವಂಥ ಸುಪವಿತ್ರ ದೇಹವನೆ | ಅರ್ಪಿಸುವೆ ಹರಿಯೇ ೧
ಯಜ್ಞ ಕೃದ್ಯಜ್ಞನೇ | ಯಜ್ಞ ನಾಮಕದೇವಯಜ್ಞ ಸಾಧನ ನೀನೆ | ಯಜ್ಞ ಭೋಕ್ತಾಯಜ್ಞ ಕೃತು ನೀನಾಗಿ | ಯಜ್ಞ ಫಲನೆಂದೆನಿಸಿಯಜ್ಞ ಗೈಸಿದ ಕರ್ಮ | ಪ್ರಾಜ್ಞ ನಿನದೈಯ್ಯಾ ೨
ಶಂಕೆ ಇಲ್ಲದೆ ಭಜಿಸೆ | ಭಾರತೀಶ ಪ್ರಿಯನಅಂಕಿತವ ಗೊಂಡು ನಿ | ಷ್ಪಂಕವೆನಿಸಿದ ದೇಹ |ಪಂಕಜ ಭವ ವಂದ್ಯ | ಪರುಶು ರಾಮಾಭಿನ್ನಪಂಕಜಾಕ್ಷ ಗುರು | ಗೋವಿಂದ ವಿಠಲ ಕೊಳ್ಳೋ೩

೫೭೫
ಪರಸೌಖ್ಯ ಪ್ರದ ವಿಠಲ | ಪೊರೆಯ ಬೇಕಿವಳಾ ಪ
ದುರಿತ ದುಷ್ರ‍ಕತವೆಲ್ಲ | ದೂರ ಓಡಿಸುತಾ ಅ.ಪ.
ಪಿತೃಮಾತೃ ಭಕ್ತಿಯುತೆ | ಪತಿಯ ಸೇವಾ ನಿರತೆಹಿತದಿಂದ ಸೇವಿಪಳು | ಗುರುಹಿರಿಯರುಗಳುವಿತತ ಅಚ್ಯುತ ನಿನ್ನ | ಮಹಿಮೆಗಳ ಕೊಂಡಾಡಿಕೃತ ಕೃತ್ಯಳೆಂದೆನಿಸೊ | ಕ್ಷಿತಿ ರಮಣ ಸೇವಾ ೧
ಸಾಧನಕೆ ಸಹಕಾರಿ | ಸಾಧು ಜನ ಸತ್ಸಂಗನೀ ದಯದಿ ಒದಗಿಸುತ | ಕಾಪಾಡೊ ಹರಿಯೇ |ಮೋದ ತೀರ್ಥರ ಮತವ | ಭೋಧಿಸುತ ಇವಳೀಗೆಮೋದ ಪಾಲಿಸಿ ಹರಿಯೆ ಉದ್ಧಾರ ಮಾಡೋ೨
ಮಾತೃದತ್ತವು ಎನ್ನೆ | ವೆಂಕಟೇಶನ ಪೂಜೆಸಾರ್ಥಕೆನಿಪುದು ಹರಿಯೆ | ಪಾರ್ಥ ಸಾರಥಿಯೇಕಾರ್ತಸ್ವರ ಮೊದಲಾದ | ಅರ್ಥಗಳ ಯೋಚಿಸಳುವಾರ್ತೆ ಎನ್ನನು ಭವವು ಆರ್ತರುದ್ಧರಣಾ ೩
ತಂದೆ ಮುದ್ದು ಮೋಹನ್ನ | ಗುರುವನುಗ್ರಹವಿಹುದುಇಂದು ನಿಮ್ಮದಿ ನಮಿಸಿ | ಅಂಕಿತದ ಪದವಾಛಂದದಲ್ಯುದ್ಧರಿಸಿ | ಉಪದೇಶಿಸುತ್ತಿಹೆನುಮಂದನುದ್ಧಟ ತನವ | ತಂದೆ ಮನ್ನಿಪುದೋ ೪
ಇಂದು ಮುಖಿ ಹೃದಯದಾ | ಅಂಬರದಿ ಪ್ರಕಾಶಿಸೆನೆನಂದ ತೀರ್ಥಸುವಂದ್ಯ | ಪ್ರಾರ್ಥಿಸುವೆ ನಿನಗೇತಂದೆ ಮುದ್ದು ಮೋಹನ್ನ | ವಿಠ್ಠಲನೆ ಗುರು ಗೋ-ವಿಂದ ವಿಠ್ಠಲ ಎನ್ನ | ಭಿನ್ನಪವ ಸಲಿಸೋ ೫

೯೦
ಕರಿಗಿರಿ ನರಹರಿ ಸ್ತೋತ್ರ
ಪರಾಕೆಂಬೆ ಕರಿಗಿರೀಶ | ಪರಾಕೆಂಬೆನೋ ಪ
ಪರಾವರನೆ ಅರೀಧರನೆ |ಹರಾದಿನುತ – ವಿರೋಧಿ ಹತ ಅ.ಪ.
ಹತನು ದಿತಿಜ | ಉದರ ದ್ವಿಜ | ಕೃತನು ವಿರಜನುತ ಕಶಿಪುಜ | ನುತ ಭೂಭುಜ | ಪ್ರತಿರಹಿತಜ ಸ್ತುತ ವ್ರತತಿಜ | ಸುತ ಕಮಲಜ | ಕೃತ ಕಾರ್ಯಜ ವತತಾಚ್ಯುತ ಹಿತ ಭಾಗ್ವತ | ಕ್ರತು ಶತಗತ – ಸಿತ ಫಲದಾತ ೧
ಮದನತಾತ | ವಿಧಿಯು ಪೋತ | ಸದಮಲಹಿತ ಬುಧ ಸುವ್ರಾತ ಸದಯ ಚರಿತ | ಮಧು ಅಹಿತ ಹತಸದೆಯ ವಿಧೃತ ಹೃದಯ ಶೋಭಿತಬುಧ ಜನಾಪ್ತ ವದಗೊ ಅಚ್ಯುತ ೨
ದೇವಜಾಲ | ಕಾವಲೀಲ | ಭಾವ ಶೀಲಭೂವಿಲೋಲ | ಭಾವುಕ ಪಾಲ | ಈವ ವರಗಳಲಾವುಕ ಜನ | ತೀವರ ಹನ | ಶ್ರೀವರ ಗುರು ಗೋವಿಂದ ವಿಠಲ

೩೯೫
ಪರಿಪಾಹಿ ಗುರು ರಾಘವೇಂದ್ರ ಪ
ಶರಣರ ಪೊರೆಯಲು | ವರ ಮಂತ್ರಾಲಯಪುರದಲಿ ನೆಲಿಸಿಹೆ | ಕರುಣಿಗಳರಸಅ.ಪ.
ಪಿತನ ಬಾಧೆಗೆ ಲವ | ವ್ಯಥೆಯನು ಪಡದಲೆರತಿಪತಿ ಪಿತನೆ ಸ | ರ್ವೋತ್ತಮನೆಂದೂರದೆ ೧
ದ್ವಿತಿಯ ಯುಗದಲಿ | ದೈತ್ಯನಲ್ಲುದಿಸುತಸೀತೆಯ ರಮಣನ | ಪ್ರೀತಿಯ ಪಡೆದೆಯೋ ೨
ದ್ವಾಪರದಲಿ ಪ್ರ | ತೀಪನ ಸುತನೆನಿಸೀ ಶ್ರೀಪತಿ ಕೃಷ್ಣನ | ಪ್ರೀತಿಯ ಪಡೆದೇ ೩
ಇಷ್ಟವಿಲ್ಲದ ಪುಣ್ಯ | ಎಷ್ಟೂ ಗಳಿಸಿ ನೀವುಶಿಷ್ಟರ ಪಾಲಿಸೆಂದು | ಕೃಷ್ಣನ ಮೊರೆಯಿಟ್ಟೆ ೪
ವ್ಯಾಸರಾಯರಾಗಿ | ಭೂಸುರ ಸುಜನರಕ್ಲೇಶವ ಹರಿಸಿದೆ | ದಾಸಕೂಟಕೆ ಹಿರಿಯಾ ೫
ಶ್ರೀಶನರಹರಿ | ವ್ಯಾಸ ರಾಮಾ ಕೃಷ್ಣಈಸು ರೂಪಗಳಲ್ಲಿ | ವಾಸವು ವೃಂದಾವನದಿ ೬
ಪರಿಪರಿ ವಿಧ ನಿಮ್ಮ | ಚರಣವ ಸ್ಮರಿಸುವನರರ ಮನೋರಥ | ಹರಿಯ ಕರುಣಿಪ ೭
ಸರಸಿಜಾಸನ ಮುಖ | ಸುರಪ ದೇವರ್ಕಳಲ್ಲಹರಿಯನು ಚರರೆಂಬಾ | ವರಮತಿ ಪಾಲಿಸೋ೮
ಪವನಾಂತರಾತ್ಮ ಗುರು | ಗೋವಿಂದ ವಿಠಲನತವಕದಿಂದಲಿ ತೋರಿ | ಭವ ಭಯ ಹರಿಸೀ ೯

೧೯೩
ಪವಮಾನ – ಪವಮಾನ – ಪವಮಾನ ಪ
ಪ್ರಾಣೋಪಾನ | ವ್ಯಾನೋದಾನ | ನೀನೆ ಸಮಾನಭಾರತಿರಮಣ | ಹರಿಯ ಗುಣಂಗಳ ಧೇನಿಪ ಸಜ್ಜನಮಾನಸ ಸರಸಿಜ | ಜ್ಞಾನಾರ್ಕನೆ ಗುರು | ಜ್ಞಾನ ಸುಪೂರ್ಣ ಪ್ರಧಾನ ಮರುತ ನಿ | ನ್ನಾಧೀನವು ಜಗ ನಿನ | ಗೇನು ಬೇಡೆ ಸುಜ್ಞಾನ ವೀವುದೆಂ | ದಾ ನಮಿಸುವೆನೊ |ಗಾನ ಲೋಲ ಹರಿಗಾನಕೆ ಮನ್ಮನ | ಪೋಣಿಸುತನುದಿನ | ಪಾಲಿಸು ಪ್ರಾಣಾ ಅ.ಪ.
ಪಂಚ ದ್ವಾರಪ | ಪಂಚರ ಪಾಲಿಪ | ಬಹು ಬಹು ರೂಪ ಹರಿಯೆ ಸುಚಾಪ | ಕೀರ್ತಿ ಪ್ರತಾಪ | ಹಾರಿದೆ ಆಪ ಸೀತೆ ಗುಂಗುರ | ಕೊಟ್ಟೆ ಕಪಿವರ | ಫಲಮೆಲ್ಲೆ ಮರ ಕಿತ್ತಿದೆ ಬೇರ | ಅಕ್ಷ ಕುಮಾರ | ಯುದ್ಧಕೆ ಬರೆ ಮೃತಿ ಹೊಂದೇ | ರಾಕ್ಷಸ ಗಣ ಭಯ ಪೊಂದೇ || ನಿನ್ನಿಂದೇ | ನಿನ್ನಿಂದೇ || ಇಂದ್ರ ಜಿತವು ಶತ ಮೋಹನಾಸ್ತ್ರ ಬಿಡೆ ಸಿಕ್ಕಿದೆ ನೀನೆ ನಿನ್ನಿಂದೇ ||ಸ್ಥಿರ ಚರ ಜೀವರೊಳಂತರ ಚೇಷ್ಟಕ ಕಾರ್ಯವೆಲ್ಲ ನಿನ್ನದು ತಂದೇ | ದಣಿಯೆ ಕಾರ್ಯವ ಸಾಧಿಸೆ ಈ ಪರಿಆಲೊಚನೆಯಿಂದ ನೀನೀಂದೆ | ನೀನಿಂದೆ |ಭಕ್ತ ವಿಭೀಷಣ | ನುಕ್ತಿಗೆ ರಾವಣ | ನಿತ್ತನು ಆಜ್ಞೆಯ ಸುತ್ತುವುದರಿವೆಯ | ಪುಚ್ಛಕೆನುತ್ತೆನೆ |ಮತ್ತೆ ಬೆಳೆಸೆ ಬಾಲ ಹ್ರಸ್ವಕೆ ಮನ ಮಾಡ್ಡೇ |ಇಕ್ಕಿಲು ಉರಿ ನೀ ಭಕ್ತಿಯಿಂದ ರಾಮನಿಗೆ ನಮನಗೈದೇಮಾಲೋಲ್ವೈರಿಯ | ಧಾಳಿಗೆದುರು ತನ ಸ| ಬಾಲ ವಹ್ನಿವೈ ಹಾಳಿಲಿ ಪುರ ಸ್ವಹ | ಲೋಲಗಿತ್ತು | ನೀಲಾಳಕೆ ಸೀತೆಗೆ ಪೇಳಲು ಮಣಿ ಕೊಡೆ | ಲೀಲೆಯೊಳ್ ಜಲನಿಧಿ ಕಾಲ್ಹೊಳೆಯಂದದಿ ಹಾರ್ದೆ | ರಕ್ಕಸ ವಧೆ ಸೂಚಿಸಿ ಸೇತುವೆ ಬಂಧಿಸಿದೇ || ಹರಿ ಕಾರ್ಯವ ನೀ ಸಾಧಿಸಿದೇ ||ಭಳಿರೇ ನೀನಜ ಪದವಿಯ ಪಡೆದೇ | ಗುಣನಿಧೇ | ಗುಣನಿಧೇ ||ಕಂದುಗೊರಳ ಸುರವಂದ್ಯ ಜೀವರ ಭವ ಸಿಂಧು ಒತ್ತಿಪ ಶತನಂದನೆ ಮಂದನ ಕುಂದು ಗಳೆಣಿಸದೆ | ಇಂದಿರೆ ಲೋಲನಅಂದ ಪದಾಬ್ಜಾನಂದದಿ ತುತಿಪಾನಂದೈಶ್ವರ್ಯವ ಇಂದೆ ಪಾಲಿಸಿ ಪೊರಿಮಂದಜಾಸನ ಸರಿ | ವಂದೇ ಅಸುರಾರಿ ೧
ಪಾಂಡು ಕುಮಾರ | ವಜ್ರ ಶರೀರ | ಗರ ಆಹಾರಜೀರ್ಣ ಸಮೀರ | ಅರಗಿನ ಮಂದಿರ | ಉರುಹಿದ ವೀರಧರ್ಮಾದೈವರ | ವನದಿ ನಿಲುವರ | ಘಟೋತ್ಕಚ ಕುವರಏಕಚಕ್ರ ವರ ನಗರಿಗೆ ಸಾರ್ದೆ | ಬಕನನು ತರಿದೆ |ಸ್ವಯಂವರ ಸಾರ್ದೆ | ನೃಪರನು ತರಿದೆ | ದೃಪದಜೆ ವಧಿಸಿದೆಹರಿದಯದಿಂದೆ | ನಿನ್ನಿಂದೇ | ನಿನ್ನಿಂದೇ ||ಅಸುವನೀಗೆ ಆ ಜರೆಯೆಳ ಸುತನು | ಅಧ್ವರ ಗೈಯಲುಧರ್ಮಜನೂ | ಮಾನವನೀಗಿದ ಕೌರವನೂಶಕುನಿ ಸಾಧಿಸಿದ ದ್ಯೂತವನೂ | ಹರಿಚಿತ್ತ | ಹರಿಚಿತ್ತಮನಕೆ ತಂದು ಸಹ ಧರ್ಮಿಣಿ ಅಗ್ರಜ | ಅನುಜರೊಡನೆವನವೆತ್ತೆ | ಧೌಮ್ಯ ನುಡಿಗಗ್ರಜನಿಂ ರವಿ ಸೇವಿಸಿಅಕ್ಷಯ ಪಾತ್ರೆಯ ಪಡೆಯುತ್ತ | ಮಥಿಸಿ ಕಿಮ್ಮೀರಾದಿಗಳಾರಣ್ಯದಲಿ | ಸತಿಗಡ್ಡೈಸಿದ ಸೈಂಧವನಟ್ಟುತ ಸೌಗಂಧಿಕ ತಂದಿತ್ತ || ತಂದಿತ್ತಪಾಚಕನೀನಿರೆ ಕೀಚಕಾಂತಕ ಸೂಶರ್ಮನಬಿಗಿಯುತ್ತ | ರಣದೊಳು ಗುರು ಸುತನುರುವಣಿಗಳಿಗ್ಹೊಕರಿಸುತ್ತ ನೆಗೆಯುತ್ತ ನೆಗೆಯುತ್ತಸತಿ ತುರುಬು ಪಿಡಿದ | ಮತಿ ವಿಕಳನುರರ | ಕುತ ಚೆಲ್ಲಿ ಕುರು ತತಿಯ ಸವರಿ ಹರಿಗಿತ್ತೆ | ಪ್ರಥಮಾಂಗನೆ ಹರಿ ಮತ ಸಾಧಕ ಧರೆ | ಯತಿ ಭಾರವ ನಿಳುಹಿದ ಧೀರಾ ||ನಿರ್ಜರ ಮಣಿಯೆ ಸು | ಸಜ್ಜನರಘಹರ ಅರ್ಜುನಗೊಲಿದು | ಧ್ವಜಾಗ್ರದಿ ನಿಲ್ಲುತ ಮೂರ್ಜಗ ಬೆದರೆ | ಗರ್ಜನೆ ಗೈದೆ ತವಾಬ್ಜಪದದರಜ | ಮಜ್ಜನದಲಿ ಭವವರ್ಜಿತ ನೆನೆಪುದು ಜೀಯ || ಭರ್ಜಿಸೆ ದುರುಳರ | ಸಜ್ಜುಗೈದೆ ರಥ ಕರಿ ಹಯ ಆಯುಧ ಆಶ್ಚರ್ಯ |ಬಹುಪರಿ ಸಾಧಿಸಿದೆ ಹರಿಕಾರ್ಯ ಭಳಿರೆ | ಭಳಿರೆ | ಪೃಕ್ಷೋವಪುಷಿ ಪಿಡಿಕೈಯ್ಯ | ನೃಪವರ್ಯ | ನೃಪವರ್ಯ ಅಂಗಜ ಪಿತ ಪದ | ಸಂಗಿ ಜನರ ಭವಹಿಂಗಿಸಲೂ ಸಿರಿ | ರಂಗ ಪದಾಂಬುದಿ ಭೃಂಗ ಜ್ಞಾನ ಕಿರ | ಣಂಗಳಿತ್ತು ತಮ ಅಂಗಜನರುಗಳ | ಲಿಂಗ ಶೀಳಲು ಕರಂಗಳಲೀಗದೆ | ಹಿಂಗದೆ ಪಿಡಿದಿಹಮಂಗಳ ಎನ್ನಂತ | ರಂಗದಲಿಹ ಸಿರಿ ರಂಗನ ತೋರಿಸು ಎಂಬೆನು ಜೀಯಾ | ನಮಿಸುವೆನು ಹರಿಪ್ರಿಯಾ ೨
ಕಲಿ ಪ್ರಾಬಲ್ಯ | ದೈತ್ಯರು ಎಲ್ಲ ವೈರಂಗಳೆಲ್ಲಸಾಧಿಸೆ ಬಲ್ಲ | ಮಣಿಮನ ಸೊಲ್ಲ | ಕೇಳುತಲೆಲ್ಲ ಬರುತಿಲ್ಲೆಲ್ಲ | ದುರ್ಮತಗಳ ಬೀರುತ ಬರುತಿರಲು |ಜಗಪುಸಿ ಎನಲು | ದೇವರಿಲ್ಲೆನಲು | ಐಕ್ಯ ಪೇಳಲುಜ್ಞಾನವಳಿಯಲು | ಸಜ್ಜನ ನೋಯಲು | ಮನವು ಕರಗಲುಹರಿಯು ಪೇಳಲು | ನೀ ಬರೊಸೊಲ್ಲು | ಎಲ್ಲೆಲ್ಲು | ಎಲ್ಲೆಲ್ಲು ||ತಪವನು ಮಾಡಲು | ನಡುಮನೆ ದ್ವಿಜನುವರ ಕೊಟ್ಟನು ತಾನನಂತೇಶ್ವರನುಕಂಬದ ಮೇಲೇ ರೋರ್ವ ಪೇಳಿದನುನಿನ್ನವತಾರ ವಿಚಾರವನು |ನೀನರಿದಂದೇ | ನಿನ್ನಿಂದೇ | ನಿನ್ನಿಂದೇ ||ದ್ವಿಜನಲಿ ಬಂದೆ | ಹುರಳಿಯ ತಿಂದೆ | ತಿಂತ್ರಿಣಿಯಿಂದೆ ಋಣ ತೀರಿ ತೆಂದೆ | ಹರಿ ಪ್ರೇಕ್ಷರಿಂದೆ | ಸನ್ಯಾಸ ಪೊಂದೆ ಗಂಗೆಯ ತಂದೆ | ಎನ ತಂದೆ | ಎನ ತಂದೇ ||ವ್ಯಾಸರ ಕಂಡುಪದೇಶವಗೊಂಡೆ | ಹೇ ಸಮೀರ ದು-ರ್ಭಾಷ್ಯವ ಖಂಡಿಸಿ ಶ್ರೀಶ ಸರ್ವೋತ್ತಮಆ ಶಿವ ಮುಖ ಹರಿ | ದಾಸರೆಂದು ಮ |ತೀ ಸಮಸ್ತ ಜಗ ಲೇಸು ಸತ್ಯವೆಂದುಪದೇಶಿಸಿದೆ ಗುರುವರ್ಯ | ಗುರುವರ್ಯ ||ಇಪ್ಪತ್ತು ಒಂದೆ | ಕು ಭಾಷ್ಯವ ಜರಿದೆಮುವತ್ತಾರೊಂದೆ | ಗ್ರಂಥವ ಮಾಡ್ಡೆಶಿಷ್ಯರಿಗ್ಹೇಳ್ದೆ | ಮಾಯವ ಜರಿದೆಉಡುಪಿಗೆ ಬಂದೆ | ಗೋಪಿಯಲಿಂದೆಕೃಷ್ಣನ ತಂದೆ | ಇಲ್ಲೆ ನಿಲಿಸಿದೆಅಷ್ಟ ಯತಿಗಳಿಗೆ | ಪಟ್ಟವಗಟ್ಟುತ | ಕೃಷ್ಣನಪೂಜೆ ನಿರ್ದಿಷ್ಟದಿ ನಡೆಸಿದೆ | ದುಷ್ಟಾದ್ವೈತವಕುಟ್ಟಿ ಸುಜನರುಗ | ಳಟ್ಟುಳಿ ಕಳೆಯೆ ವ |ರಿಷ್ಟರನೆಲ್ಲರ | ಕಟ್ಟಾಳೆನಿಸಿದೆ ||ದಿಟ್ಟ ಮೂರುತಿ ಜಗಜಟ್ಟಿ ಭೀಮಆನಂದತೀರ್ಥ ಗುರು ಗೋವಿಂದ ವಿಠಲನಹೃದದಿಷ್ಟಾನದಿ ತೋರಿಸೆಂದು ತವಪಾದಾಬ್ಜಕೆ ಶಿರ ಇಟ್ಟು ಬೇಡ್ವೆ ಋಜುವರ್ಯಗುರುವರ್ಯ | ಔದಾರ್ಯ | ಔದಾರ್ಯ ೩

೫೭೭
ಪವಮಾನವರದ ವಿಠಲ | ಇವನ ನೀಸಲಹೋ ಪ
ಭವದೊಳಗೆ ಸಂತಪ್ತ | ತವಪಾದ ಶರಣನ ಅ.ಪ.
ರಾಶಿಪುಣ್ಯವು ಫಲಿಸೆ | ದಾಸದೀಕ್ಷೆಗೆ ಒಲಿದುಆಶಿಸಲು ತೈಜಸನು | ಭಾಸುರಾಂಕಿತಕೇಸೂಸಿ ತನ್ನನುಗ್ರಹದ | ಭಾಷೆ ಅಸ್ತ್ವೆಂದೆನುತಲೇಸಾಗಿ ಪೇಳಲುಪ | ದೇಶಿಸಿಹೆ ಹರಿಯೇ ೧
ವಿಜ್ಞಾನ ತತ್ವಾಭಿಗ | ಭಿಮಾನಿ ಒಲಿದಿಹ ನಿನಗೇಸುಜ್ಞಾನ ಕರುಣಿಸುತ ಕಾಪಾಡೊ ಹರಿಯೇಮಗ್ನಗೈಸಿವನಹರಿ | ಪ್ರಾಜ್ಞನ್ನ ಪದದಲ್ಲಿಭಗ್ನವಾಗಲಿ ಕರ್ಮ | ಸಂಚಿತಾದಿಗಳು ೨
ತತ್ವರೊಲಿಮೆಯ ಕೊಡಿಸು | ತತ್ವಾರ್ಥಸ್ಪುರಿಸಿವಗೆಮೃತ್ಯುವೆನೆ ಗೆಲುವಂಥ | ಪಥವನ್ನೆ ತೋರಿಕರ್ತತಾನಲ್ಲೆಂಬ | ಉತ್ರ‍ಕಷ್ಟ ಮತಿಯಿತ್ತುಎತ್ತು ಭವದಿಂ ಹರಿಯೇ | ಉತ್ತಮೋತ್ತಮನೆ ೩
ಸರ್ವತ್ರ ಸರ್ವದಾ | ಶರ್ವನೊಡೆಯನೆದೇವಸರ್ವಮಂಗಳ ನಿನ್ನ | ನಾಮಸುಧೆಯನ್ನುದರ್ವಿಜೀವಿಗೆ ಉಣಿಸಿ | ಭವಕಡಲ ಪ್ಲವನೆನಿಸೊಸರ್ವಾಂತರಾತ್ಮಕನೆ | ಉದ್ದರಿಸೊ ಇವನಾ ೪
ಜೀವ ಅಸ್ವಾತಂತ್ರ | ದೇವ ನಿಜಸ್ವಾತಂತ್ರಜೀವ ಜಡರುಗಳೆಲ್ಲ | ದೇವರಾಧಿನಾಈ ವಿಧದ ಸುಜ್ಞಾನ | ಆವಾಗಲೂ ಕೊಟ್ಟುದೇವಗುರು ಗೋವಿಂದ | ವಿಠಲ ಪೊರೆ ಇವನಾ ೫

೫೭೬
ಪವಮಾನವಿಠಲ | ಕಾಪಾಡೊ ಇವನಾ ಪ
ಭುವಿ ಭವ್ಯ ಮರುತಮತ | ದೀಕ್ಷೆಯುಳ್ಳವನಾ ಅ.ಪ.
ಭಾವಿಮಾರುತರ ದಿವ್ಯ | ಪಾದಗಳನಾಶ್ರಯಿಸಿದೇವ ಗುಹ್ಯವು ಎಂಬ | ಆಖ್ಯಾನ ಪಠಿಸೀಭಾವಭಕ್ತಿಯಲಿಂದ | ಪೂರಿತನು ತಾನಾಗಿಧಾವಿಸಿ ಬಂದಿಹನೊ | ಎನ್ನ ಬಳಿಗಾಗಿ೧
ಗುರುವನುಗ್ರಹ ಪಡೆದು | ಗುರುದತ್ತ ಅಂಕಿತವನೆರವಿನಾ ಸಾಧನವ | ವಿರಚಿಸಲು ಮಾರ್ಗಅರಿಯದಲೆ ಪ್ರಾರ್ಥಿಸುವ | ಕರುಣಪಯೋನಿಧಿಯೇಪೊರೆಯ ಬೇಕಿವನ ಪರಿಯ | ಮರುತಾಂತರಾತ್ಮ ೨
ತರತಮಜ್ಞಾನವನು | ಹರಿಗುರು ಸದ್ಭಕ್ತಿಪರಿಪರಿಯಲಿಂ ವೃದ್ಧಿ | ಗೈಸಿವಗೆ ಹರಿಯೇಗುರು ಕರುಣ ಕವಚದಿಂ | ಹರಿಯ ಸರ್ವೊತ್ತಮತೆಅರಿವಾಗಲಿವಗೆಂದು | ಪ್ರಾರ್ಥಿಸುವೆ ಹರಿಯೆ ೩
ಸತಿಸುತರು ಹಿತರಲ್ಲಿ | ವ್ಯಾಪ್ತ ಶ್ರೀ ಹರಿಯೆಂಬಮತಿಯನೆ ಕರುಣಿಸುತ | ಕಾಪಾಡೊ ಹರಿಯೇಸತತ ತವ ಸ್ರ‍ಮತಿಯಿತ್ತ | ಭವದಿಂದ ಕಡೆಸೆತ್ತುವಿತತ ಮಲಗಳ ಮೂರ್ತಿ | ಕೃತಿರಮಣ ದೇವ ೪
ಮಧ್ವ ರಮಣನೆ ದೇವ | ಹೃದ್ಯ ಹರಿ ನಿನಕಾಂಬಹೃದ್ಯ ಸಾಧನ ಗೈಸಿ | ಉದ್ದರಿಸೊ ಇದನಾಶುದ್ಧ ಮೂರುತಿ ಗುರು | ಗೋವಿಂದ ವಿಠಲನೆಬುದ್ಧಿಯಲಿ ನೀನಿಂತು | ಶುದ್ಧ ಮತಿ ಈಯೋ ೫

೫೮೩
ಪಾಂಡು ರಂಗ ವಿಠಲ | ಪೊರೆಯ ಬೇಕಿವಳ ಪ
ಕುಂಡಲಿಯ ಶಯ್ಯ ಬ್ರ | ಹ್ಮಾಂಡದೊಡಿಯಾ ಅ.ಪ.
ಹಸುಳೆ ತನ ಸ್ವಾಪದಲಿ | ಎಸೆವ ನಂಜುಡೇಶದರ್ಶನಾಕಾಂಕ್ಷಿಸುತ | ನುಸುಳಿ ಗುಡಿ ಪೊಗಲೂಅಸಮ ಗುರು ಸುಧೀಂದ್ರ | ಶಿಷ್ಯರನು ತಾ ತೋರಿಎಸೆವ ಸದ್ಗತಿಗೆ ಗುರು | ದರ್ಶನವೆ ಪಥವೆಂದೇ ೧
ಲೀಲೆಯೊಳ್ ತೈಜಸನು | ಮಾಲೆಧರ ದಂಪತಿಯಶೀಲ ರೂಪವ ತಾಳಿ | ಬಾಲಕಿಯ ಬಯ್ದೂ |ಏಳಲನ ಮಾಡದಲೆ | ಶೀಲ ಗುರು ಬಳಿ ಪೋಗಿಬಾಲಕಿಯು ಪರಮಾನ್ನ | ಮೆಲುವಂತೆ ಮಾಡ್ಡಾ ೨
ಗುರು ಹಿರಿಯರಾ ಸೇವೆ | ಹರಿಯಲ್ಲಿ ಸದ್ಭಕುತಿವರಜ್ಞಾನ ಪಾಲಿಸುತ | ಮೆರೆಸೊ ಈ ಶಿಶುವವರ ಪ್ರದಯಕನಾಗಿ | ಸರುವ ಸದ್ಧಭಿಲಾಷೆಗರೆನು ಹರ್ಷವನೀಯೋ | ಮರುತಾಂತರಾತ್ಮಾ ೩
ಕಲಿಹೆಚ್ಚದಾ ಯುಗವು | ಸತಿಮಂತ್ರ ತಂತ್ರಗಳುಫಲಿಸಲಾರವು ಹರಿಯೆ | ಜಲಜನಾಭಾಚೆಲುವ ತವನಾಮ ಸ್ರ‍ಮತಿ | ಘಳಿಗೆ ಬಿಡದಲೆ ಕೊಟ್ಟುಒಲಿಯೊ ಕಾರುಣ್ಯನಿಧಿ | ಬಾಲ ಗೋಪಾಲ೪
ಪಾವನದ ಅಂಕಿತವ | ಓದಿ ಸೂಚಿಸಿದಂತೆತಾವಕಳಿಗಿತ್ತಿಹೆನು | ಶ್ರೀ ವರನೆ ಹರಿಯೇ |ದೇವ ದೇವೇಶಗುರು | ಗೋವಿಂದ ವಿಠ್ಠಲನೆನೀ ವೊಲಿದು ದಾಸತ್ವ | ಭಾವ ಸಿದ್ಧಿಪುದೋ ೫

೫೮೪
ಪಾಂಡುರಂಗ ಹರಿ ವಿಠಲ | ಕಾಪಾಡೊ ಇವನಾ ಪ
ತೊಂಡ ವತ್ಸಲ ನೆಂಬ | ಬಿರಿದುಳ್ಳೊ ದೇವಾ ಅ.ಪ.
ದಾಸವತ್ಯರ ಕರುಣ | ಲೇಸಾಗಿ ಪಡೆದಿಹಗೆಆಸುಪ್ತಿಪತಿ ಸೂಚ್ಯ | ಮೀಸಲುಪದೇಶದಾಸದೀಕ್ಷಾರೂಪ | ಆಶೆಯುಳ್ಳವಗಿತ್ತುಆಶಿಷವನಿತ್ತಿಹೆನೊ | ಹೃಷೀ ಕಪನ ಮೂರ್ತೇ ೧
ಸಾಧನ ಸುಮಾರ್ಗದಲಿ | ಹಾದಿ ಹಿಡಿದಿಹ ನಿವಗೆಮೋದ ತೀರ್ಥರ ಶಾಸ್ತ್ರ | ಬೋದ ಕೈ ಗೂಡೀವೇದೈಕಗಮ್ಯ ಹರಿ | ಪಾದ ಮಹಿಮಾನುಭವಸಾಧಿಸೊ ಇವನಲ್ಲಿ | ಶ್ರೀ ದ ಶ್ರೀ ಹರಿಯೇ ೨
ಊರ್ಮ ಷಟ್ಕಳವಕಳೆಯೆ | ಕರ್ಮನಿಷ್ಕಾಮಕದಿಪೇರ್ಮೆಯಲ್ಲಾ ಚರಿಪ | ಸನ್ಮಮನವ ನೀಯೋನಿರ್ಮಲಾತ್ಮನೆ ದೇವ | ಹಮ್ರ್ಯ ಗಹ್ವರದಲ್ಲಿಪರ್ಮ ನಿನ್ನಯರೂಪ | ತೋರಿಸೋ ಹರಿಯೇ ೩
ಬಿಂಬಾನು ಸಂಧಾನ | ತುಂಬಿಸುತ ಸೋತ್ತಮರಬಿಂಬೈಕ್ಯ ಚಿಂತನದ | ಹಂಬಲವ ನೀಯೋಕಂಬು ಚಂಕ್ರಾಂಕಿತನೆ | ಅಂಬರೀಷನವರದನಂಬಿ ಬಂದಿಹನ ಭವ | ಅಂಬುಧಿಯ ಕಳೆಯೋ ೪
ಕೈವಲ್ಯಪ್ರದ ಹರಿಯೆ | ಭಾವುಕರ ಪರಿಪಾಲನೋವಿಲ್ಲದಾ ಸ್ಥಳಕೆ | ಬಯ್ವದೋ ಇದನಾಈ ವಿಧದ ಭಿನ್ನಪವ | ಸಲಿಸೆಂದು ಪ್ರಾರ್ಥಿಸುವೆಧೀವರನೆ ಹರಿಯೆ ಗುರು | ಗೋವಿಂದ ವಿಠಲಾ ೫

೯೨
ಪಾರು ಮಾಡೋ ಕೃಷ್ಣಾ | ಪಾರು ಮಾಡೋ ಪ
ಸಾರತರರೊಳು ನೀನು | ಸಾರತಮನೆಂದು ಕೇಳಿಸಾರಿದೇ ನಿನ್ನ ಚರಣ | ಸಾರಸಾಕ್ಷ ಎನ್ನ ಭವ ಅ.ಪ.
ಜಗದೊಳು ರಸವಾರು | ಬಗೆಯೆಂದು ಪೇಳುವರುಖಗಗ ನಾಲ್ಕರಡನೆ | ಬಗೆಯುವ ನೀನೆಂದೂ | ಪೊಗಳುತಿದೇ ಶ್ರುತಿ | ನಿಗಮ ಗೋಚರ ತವಬಗೆ ಬಗೆ ಮಹಿಮಗಳವಗತ ಮಾಡುತ ೧
ರಸವೆನಿಪುದು ಭೂ | ವಸುಮತಿ ಪಂಚಕೆರಸವಹುದದರಿಂದ | ರಸವೆನಿಪಾಪಾ |ರಸವಾಚ್ಯ ವರುಣ ನಾ | ರಸವೆನಿಸುವ ಸೋಮಔಷಧಿ ದೇವನಿಂದ | ರಸವೆನಿಸುವ ರುದ್ರ ೨
ಈಶಗಿಂದಧಿಕ ವಾ | ಗೀಶನ ಭಾರ್ಯೆಯುಈ ಸರಸ್ವತಿಯಿಂದ | ಆಸಾಮನಾಮಾ |ಆ ಸಾಮುಖ್ಯನಿಲಗು | ಈಶ ಉದ್ಗೀಥನೆಹೇ ಸರ್ವೋತ್ತಮೋತ್ತಮ | ಭಾವಿಸಿ ಮನದಲಿ ೩
ರಸವಾದೊಡೆ ಭೂ | ರಸತಮ ವರುಣನುರಸತಮ ಚಂದ್ರ ಪರಮ | ರಸತಮ ಶಂಭೋ |ಅಸುಸತಿ ಪರಮ ಪರ | ರಸತಮ ವೆನಿಪಳುಸುಸಮ ಪರಮ ಪರರ್ಥ | ರಸತಮ ಪದ ಪಡೆದ ೪
ಮರುತನಾ ರಮಾ ಪರಮ | ಪರಾರ್ಥರಸತಮಹರಿ ಗುರು ಗೋವಿಂದ | ವಿಠಲನೆ ಪರಮಾ |ಪರಾಧ್ರ್ಯ ರಸತಮ | ಪರಾರ್ಧಿಯುತನಾಗಿದರುಶನ ಪಾಲಿಸೀ | ಪರಿಹರಿಸುತ ಭವ ೫

೯೧
ಪಾರ್ಥಿವ ವತ್ಸರ ಸಾರ್ಥಕವಾಗಲಿಪಾರ್ಥ ಸಖನ ಗುಣ ಕೀರ್ತಿಸುತಾ ಪ
ಅರ್ಥಿಯಿಂದ ಹರಿಕೀರ್ತನೆ ಮಾಡಲುಆರ್ತೇಷ್ಟದ ಸಕಲಾರ್ಥವ ಕೊಡುವ ಅ.ಪ.
ತಾರಣ ವತ್ಸರ ಸಾರಿತು ಹಿಂದೆಸಾರಿತು ನಮ್ಮಾಯುವು ಮುಂದೇ |ವಾರಿಜಾನಾಭನ ಸೇರಿ ಭಜಿಸಲುಸೇರಲಿಲ್ಲ ನಾವ್ ದಿನ ಒಂದೇ೧
ತಂದೆ ವೆಂಕಟನ ಪ್ರೇಮದ ದಾಸರುಸಂದೇಶವನೆ ಕಳುಹಿಸದರೂಇಂದಿರೆಯರಸನ ಭಕ್ತ ವೃಂದದಿಛಂಞ್ಸÀದಿ ಭಜಿಸೆಂದರುಹಿದರೂ ೨
ಇಂದಿನಿಂದಾದರು ಒಂದು ಗೂಡುತ ನಂದಕಂದನನು ಭಜಿಸುವ ಬನ್ನಿಸುಂದರ ಗುರು ಗೋವಿಂದ ವಿಠಲನದ್ವಂದ್ವ ಚರಣವನು ವಂದಿಸೆ ಬನ್ನಿ ೩

೨೯೧
ಪಾರ್ವತಿ ಮತಿಯನಗೇ – ಕೊಡುವುದುಪರ್ವತ ಪತಿ ತನಯೇ ಪ
ಆರು ನಿನಗೆ ಸರಿ ಮೂರು ಲೋಕದೊಳುವೃತ್ರಾರಿಗಳಿಂದಾರಾಧಿತಳೇ ಅ.ಪ.
ಅಗಜೆ ಎನ್ನ ವದನಾ | ಮಾಡಲಿ | ನಗಧ೫ಗುಣಸ್ತವನಾಖಗ ವಹ ಸಖ ಶಿವ | ಮೃಗ ಪಾಣಿಯ ೫ಇÉುಹಗಲಿರುಳಲಿ ಹರಿ ಗಾಯನ ಮಾಡಿಸೇ ೧
ಮನಸಿಜಾರಿಯ ಜಾಯೇ | ಮನ್ಮನ | ಚಪಲ ಬಿಡಿಸು ತಾಯೇಕನಸಿಲಿ ಮನಸಿಲಿ ಘನ ವಿಷಯಂಗಳನೆನೆವ ಕೊಡದೆ ಹರಿ ಧ್ಯಾನವನೀಯೇ ೨
ಲೋಕ ಪಾವನ ಮೂರ್ತೇ | ಪಾಲಿಸು | ಏಕದಂತನ ಮಾತೇನೋಕನೀಯ ಗುರು ಗೋವಿಂದ ವಿಠಲನಜೋಕೆಯಿಂದ ನೆನೆ ನೆನೆಯುವ ಮಾತೇ ೩

೨೯೨
ಪಾರ್ವತೀ – ಶರ್ವನ ಜಾಯೆ – ಪಾರ್ವತೀ ಪ
ಪಾರ್ವತಿ ಸನ್ಮತಿ ದಾತೇ – ಭಕ್ತಿಪೂರ್ವಕ ಭಜಿಪರ ಪ್ರೀತೆ | ಆಹಪೂರ್ವ ದಿವಿಜ ಧ್ವಂಸ | ಶರ್ವಾದಿ ದಿವಿಜೇಡ್ಯಸಾರ್ವಭೌಮನ ಸ್ರ‍ಮತಿ | ಸಾರ್ವಕಾಲದಲೀಯೆ ಅ.ಪ.
ಗೌರಿ ಕಾತ್ಯಾಯನಿ ದೇವೀ | ಭಕ್ತಿ ಸಾಕಾರಿ ಭಾರತಿ ಸಂಭವೀ | ಈ ಸಂ-ಸಾರ ನುತ್ತರಿಪ ಭಾರ್ಗವೀ | ಪತಿ ಪ-ದಾರವಿಂದವ ಉಮೆ ದೇವೀ | ಆಹತೋರೂವುದು ಹೃದ | ಯಾರವಿಂದದಿ ವೇಗನೀರೇರು ಹಾಕ್ಷಿ ಕು | ಮಾರ ಜನನಿ ತಾಯೇ ೧
ಸುರಪ ಗಣಪರ ಮಾತೆ ಶರ್ವೇ | ನಿನ್ನವರ್ಣಿಸಿ ಪೊಗಳಲೆನ್ನಳವೇ | ನೀನೆಕರುಣದಿ ಪೇಳಿಸೆ ಬರೆವೇ | ಎನ್ನಉರುತರ ಅಜ್ಞಾನವ ಬಲ್ಲೆ | ಆಹಕರಣಗಳೊಳು ನಿಂತು | ನಿರುತ ಪ್ರೇರಕಳಾಗಿಹರಿಗುಣ ದ್ಯೋತಕ | ಸ್ಮರಣೆ ಸುಖವ ನೀಯೆ ೨
ಮೃಡನಂತರಂಗಳೆ ತಾಯೇ | ಎನ್ನಕಡು ಕರುಣದಿಂದಲಿ ಕಾಯೇ | ಇನ್ನುಧೃಡ ಹರಿ ಭಕುತಿಯ ನೀಯೆ | ಅನ್ಯಬೇಡೆನು ನಾ ಪಾರ್ವತೀಯೇ | ಆಹಮೃಡವಂದ್ಯ ಗುರು ಗೋ | ವಿಂದ ವಿಠ್ಠಲನನಡು ಹೃದಯದಿ ನೋಳ್ಪ | ಧೃಡಮತಿಯನು ಕೊಡೆ ೩

೨೬೦
ಪಾಲಿಸಯ್ಯ ಪವನ ಕುವರನೇ | ಪಾವನ್ನ ಮೂರ್ತಿಶೀಲರೂಪಿ ಶೈಲ ಸದನನೇ ಪ
ಬಾಲ ಗೋಪಾಲ ಗುಣವ | ತೈಲಧಾರೆಯಂತೆ ಮನದಿಕಾಲಕಾಲ ಸ್ಮರಿಪ ಸುಖ | ಕೈಲಾಸವಾಸ ಕೊಟ್ಟು ಕಾಯೊಅ.ಪ.
ಪಂಪಾಪುರ ನಿವಾಸ ಈಶನೇ ಜೈಗೀಷ ಔರ್ವಪೊಂಪೆ ಎಂಬ ಗಿರಿಜೆ ರಮಣನೇ ||ಲಂಪಟಾವ ಬಿಡಿಸಿ ಜ್ಞಾನ | ಸಂಪದಾವನಿತ್ತು ಸಲಹೋನೋಂಪಿ ಗೈವೆ ನಿನ್ನ ಪದದಿ | ಇಂಪನೀಯೊ ಹರಿಯ ಪದದಿ ೧
ಕೃತ್ತಿವಾಸ ಕೃಪಣ ವತ್ಸಲಾ | ದ್ರೌಣಿ ವ್ಯಾಧಚಿತ್ತ ಕಲುಷ ಕಳೆದ ನಿರ್ಮಲಾ ||ಭಕ್ತಿ ಕೊಟ್ಟು ಹರಿಯ ಪದದಿ | ಎತ್ತು ಭವ ಸಮುದ್ರದಿಂದಮತ್ತೆ ಪುಟ್ಟಿ ಭಯವು ಕಾಣೆ | ಚಿತ್ತದಲ್ಲಿ ಹರಿಯು ಇರಲು ೨
ವೈಕಾರಿಕವು ತೈಜಸ ತಾಮಸಾ | ತ್ರಯವು ಅಹಂಸಾಕಾರಿ ಶುಕನೆ ದುರ್ವಾಸಾ |ಲೌಕಿಕಗಳೆಲ್ಲವು ವೈ | ದೀಕ ವೆನಿಸೊ ತತ್ಪುರೂಷಕಾಕು ಸಂಗ ಕೆಡಿಸೊ ಹರ ವಿ | ಶೋಕ ಹರಿಯ ತೋರಿ ಬೇಗ೩
ಶೇಷ ಭೂಷ ಶೇಷಾ ನಂದನಾ | ನಿಶ್ಚೇಷ ಗೈಸೋದೋಷ ನಿಕರ ವಾಯು ನಂದನಾ ||ವಾಸ ವಾದ್ಯಮರನುತ ಸ | ದಾಶಿವನೆ ಬ್ರಹ್ಮ ತನಯಮೀಸಲೆನಿಸೊ ಮನವ ಹರಿಯ | ಆಶೆಯಲ್ಲಿ ನಿರುತ ಎನಗೆ ೪
ಮಂಗಳಾಂಗ ಗಂಗೆ ಧಾರಕಾ | ಊಧ್ವ೫ಟನೆಅಂಗಜಹ ಮೃಕಂಡ ಪಾಲಕಾ ||ರಂಗ ಗುರು ಗೋವಿಂದ ವಿಠಲ | ಸಂಗಿ ಶಿವೀಡ್ವೆ ಭಕ್ತಿಸಂಗವಿತ್ತು ೫ಗೆ ವಿಷಯ | ಸಂಗ ಬಿಡಿಸಿ ಕಾಯೊ ರುದ್ರ ೫

೧೭೫
ಪಾಲೀಸೆ ಕೃಷ್ಣ ರಮಣೀ | ರುಕ್ಮಿಣಿಪಾಲೀಸೆ ಕೃಷ್ಣ ರಮಣಿ ಪ
ಲೋಲಾ ಲೋಚನೆ ಸೀತೆ | ಕೀಲಾಲ ಜಾತನುತೆವಾಲೀ ಭಂಜನ ಪ್ರೀತೆ | ಫಾಲಾಕ್ಷಪಿತ ಮಾತೆ ಅ.ಪ.
ಆರೀಗುಸುರಲಿ ನಾನೂ | ಕಳೆಯಲಿಭಾರಿ ಭವಣೆಗಳನ್ನೂ ||ಸಾರಸಾಕ್ಷಿ ನಿನ್ನ | ಚಾರು ಚರಣ ಸರೋರುಹ ಕೆರಗುವೆ | ಚಾರುಮತಿಯ ಕೊಡೆ ೧
ಮೂರು ಗುಣಾಭಿಮಾನೀ | ಮಾಳ್ಪುದುಮೂರು ಗುಣಗಳ್ಹಾನೀ ||ವಾರೀಸಿ ತ್ರೈಗುಣ | ಪಾರು ಮಾಡಿಸು ಭವತಾರಕೆ ನೀ ನೆಂದು | ಬಾರಿ ಬಾರಿಗೆ ಪೇಳ್ವ ೨
ಗುರು ಗೋವಿಂದ ವಿಠಲಾ | ನಿನ್ನೊಡವೆರಸಿ ಸೃಜಿಪ ಜಗಗಳಾ ||ಎರಡೆರಡು ವ್ಯೂಹಕಾಗಿ | ಎರಡೆರಡು ರೂಪ ತಾಳೆಎರಡೆರಡು ನೀನು ಆಗಿ | ಹರಿ ಕಾರ್ಯಕನುವಾದೆ ೩

೪೯೦
ಪಾಲಿಸೊ | ಗುರುವರನೇ ಪಾಲಿಸೋ ಪ
ಪಾಲಿಸೊ ಗುರುವರ ಎನ್ನ | ಬಲುಬಾಲ ಭಾಷೆಗೆ ಒಲಿದಿನ್ನ | ಆಹ |ಕಾಲ ಕಾಲಕೆ ಹೃದ | ಯಾಲಯದಲಿ ನಿಂತುಶೀಲ ಗೋಪಾಲನ | ಲೀಲ ಧ್ಯಾನವನಿತ್ತು ಅ.ಪ.
ತಂದೆ ವೆಂಕ್ಟನಾ ಕೃಪಾ ಬಲದೀ | ಸಾರಿಬಂದೆನೋ ಪೊಗಳುತ್ತ ಮುದದೀ | ನಿನ್ನದ್ವಂದ್ವ ಪಾದವ ನೋಡೆ ಜವದೀ | ಭವಬಂಧವ ಕಳೆಯಲೋಸುಗದೀ | ಆಹ |ಮಂದಾನ ಕರೆ ತಂದು | ಸಂದೇಶ ಎನಗಿತ್ತುಛಂದಾದಿ ಸಲಹಿದ್ಯೋ | ಸಿಂಧೂರ ಗಿರಿವಾಸ ೧
ಅಹಿನವಾಭಿಧ ಕಾಯೋಯನ್ನಾ | ಮನಮೋಹ ಜಾಲವ ನೀಗೋ ಘನ್ನಾ | ಬಲುಕುಹಕ ಬುದ್ಧಿಯ ಬಿಡಿಸೆನ್ನಾ | ನಿನ್ನನೇಹ ಕರುಣೀಸೆನಗೆ ಮುನ್ನ | ಆಹವಿಹಗವಾಹನ ದೂತ | ಮಹಭಯ ವಾರಣಸಹನಾದಿ ಗುಣವಂತ | ಪ್ರಹಿತಾದಿ ಸಲಹೆನ್ನ ೨
ಮುದ್ದು ಮೋಹನ ಗುರು ಬಾಲಾ ತಂದೆಮುದ್ದು ಮೋಹನ್ನ ವಿಠ್ಠಲ್ಲಾ | ಸಿರಿಮುದ್ದು ನೃಸಿಂಹನ ಲೀಲಾ | ಬಲುಮುದ್ದಿಸಿ ಪಾಡುವೆ ಬಹಳಾ | ಆಹಮಧ್ವಾಂತರ್ಗತ ಗುರು | ಗೋವಿಂದ ವಿಠಲನೆಹೆದ್ದ್ಯವ ವೆಂತೆಂಬ | ಶುದ್ಧ ಮತಿಯನಿತ್ತು ೩

ಶ್ರೀ ಪಾದರಾಜರ ಗುರುಗಳೆನಿಸಿ
೩೫೬
ಶ್ರೀ ಬ್ರಹ್ಮಣ್ಯ ತೀರ್ಥರು
ಪಾಲಿಸೊ ಗುರುವೆ ಬ್ರಹ್ಮಣ್ಯ | ತೀರ್ಥಕೇಳುವೆ ವರ ಸುರ ಮಾನ್ಯ ಪ
ಕಾಳೀಯ ರಮಣನ | ಲೀಲ ವಿನೋದವಕಾಲ ಕಾಲಕೆ ಸ್ಮರಿಪ | ಶೀಲಸನ್ಮನವ ಅ.ಪ.
ಜ್ಞಾನ ದಾಯಕನಾಗಿ ಮೆರೆವಾ | ಸ್ಥಾನಜ್ಞಾನ ಮಂಟಪದೊಳು ಇರುವಾ |ಮೌನಿ ವರೇಣ್ಯರೆ ಆನತ ಸುರತರುದಾನವಾರಣ್ಯ ಕೃ | ಶಾನುವೆ ಪಾಲಿಸೊ ೧
ಇಷ್ಟ ಜನರ ಪರಿಪಾಲಾ | ದಯದೃಷ್ಟಿಲಿ ಜನರಘ ಜಾಲಾ |ಸುಟ್ಟು ಭಸ್ಮೀ ಭೂತ | ಅಷ್ಟ ಸೌಭಾಗ್ಯದವಿಠ್ಠಲ ಚರಣೇಷ್ಟ | ಹೃಷ್ಟನ್ನ ಮಾಡೆನ್ನ ೨
ರವ್ಯಂಶ ಸಂಭೂತ ನೆನಿಸೀ | ಸರಿತ್ಕಣ್ವ ತಟದಿ ನೀನು ನೆಲೆಸೀ |ಪವನಾಂತಸ್ಥ ಗುರು | ಗೋವಿಂದ ವಿಠಲನಸ್ತವನ ಮಾಳ್ಪರ ಕಾವ | ಭುವನ ಪಾವನ ದೇವ ೩

೪೬೦
ಪಾಲಿಸೊ ಜಗನ್ನಾಥ ದಾಸಾ | ವರ್ಯಕಳೆಯೊ ಯನ್ನ ಕಲಿಕಲ್ಮಷ ಪ
ಶೀಲ ಗೋಪಾಲನ ದಾಸಾರ್ಯರ ಕರಜನೆಲಾಲಿಸೋಗುಣನಿಧಿ ಬಾಲನ ಬಿನ್ನಪ ಅ.ಪ.
ಹರಿಕಥಾಮೃತ ವಕ್ತಗುರುವೇ | ಕಾಯೊಪರಮ ಭಕ್ತರ ಕಲ್ಪತರುವೆ |ಹರಿಗುರು ಕರುಣ ಸಂಪೂರ್ಣಪಾತ್ರನೆ ಭವಸೆರೆಯ ಬಿಡಿಸಿ ಕಾಯೊ ಪರಮ ಪವಿತ್ರ೧
ಮೋದತೀರ್ಥರ ಭೇದ ಮತವಾ | ಸಾರಿಭೇದವಾದಿಗೆ ಮಧ್ವಹೃದಯಾ |ಸಾಧಿಸಿ ತೋರಿದ ಪದಪದ್ಯನೊರೆಯುತವಿದ್ವದಾರ್ಯನೆ ಕಾಯೊ ಅದ್ವೈತ ಗಜಸಿಂಹ ೨
ಭವಜಲಧಿ ನವಪೋತ ಹರಿಯಾ | ಗುರುಗೋವಿಂದ ವಿಠಲನ ಪದವಾ |ಅವಿರತ ಹೃದಯದಿ ನೋಡುವ ಸೌಭಾಗ್ಯಜವದಿ ಪಾಲಿಸೊ ಜಗನ್ನಾಥ ದಾಸಾರ್ಯನೆ ೩

೯೫
ಪಾಲಿಸೊ ಮನ್ಮಾನಸಾ | ಮಂದಿರಶ್ರೀಲೋಲ ಭಕ್ತ ಪೋಷ ಪ
ಕಾಲಕಾಲಕೆ ಹೃದಯಾಲಯದಲಿ ತೋರೊವಾಲೀ ಭಂಜನ ರಾಮ | ಗಾಳಿ ಸುತಗೆ ಪ್ರೇಮ ಅ.ಪ.
ದೈತ್ಯ ಜನರು ಬಹಳಾ | ಎನ್ನ ತಮ್ಮಭೃತ್ಯನ ಮಾಡಿ ಜಗಳಾ ||ನಿತ್ಯವಾಡುತಲೆನ್ನ | ಕೃತ್ಯಾಗಳಿಗೆ ದೋಷಎತ್ತಿಸುತಿಹರಯ್ಯ ದೈತ್ಯ ನಿಷೂದನ ೧
ಸಂಚೀತಾಗಾಮಿ ನಾಶಾ | ಗೈ ಭವವಂಚೀತನಿಹೆ ಶ್ರೀಶಾ ||ಹೆಂಚು ಹಾಟಕ ಸಮ | ಸಂಚಿಂತನೆಯ ಕೊಟ್ಟುಕೊಂಚ ಮತಿಯ ಕಳೆ | ವಾಂಛಿತಾರ್ಥದ ಹರಿ ೨
ಜನ್ಮಾಜನ್ಮವು ಬರಲೀ | ತವಸ್ರ‍ಮತಿಕರ್ಮಾಕರ್ಮದೊಳಿರಲೀ ||ಭರ್ಮ ಗರ್ಭನಯ್ಯ | ಸುಮ್ಮನಸರ ಪ್ರೀಯನಿರ್ಮಲ ಭಕ್ತಿಯಿತ್ತು | ಹಮ್ರ್ಯದೊಳಗೆ ತೋರೊ ೩
ಚರಾಚರದಿ ವ್ಯಾಪ್ತಾ | ಜಗದೊಳು ಸುರರು ಭೂಸುರ ಗೋಪ್ತಾ ||ಖರಾರಿ ಜಗ ಭೋಕ್ತ | ಹರಾದಿ ಸುರನುತಪರಾವರೇಶ ತವ | ಸ್ಮರಣೆ ಭಂಜನ ಭವ ೪
ಗುರು ಗೋವಿಂದ ವಿಠಲಾ | ತವಸ್ರ‍ಮತಿಹರಿಸೋಮ ಮಾಯ ಪಟಲ ||ಚಾರು ಚರಿತ ಭವ | ವಾರೀಧಿ ತವನಾಮಪಾರು ಮಾಡಯ್ಯ ಭವ | ಕಾರುಣ್ಯಾತ್ಮಕ ದೇವ ೫

೯೩
ಪಾಲಿಸೋ ಕೃಷ್ಣ – ಇವಳ ಪಾಲಿಸೋ ಪ
ಪಾಲಿಸೊ ಪಾಲಿಸೊ – ಭಕ್ತ ಪರಿಪಾಲಪೇಳಬೇಕೇನೋ – ಸರ್ವಜ್ಞ ಸುಶೀಲ ಅ.ಪ.
ಸಂತಾನ ಕಾಂಕ್ಷಿತೆ – ಸಂತತ ನಿನ ಪಾದಚಿಂತಿಲಿಹಳ ಲಕ್ಷ್ಮೀ – ಕಾಂತನೆ ಪಾಲಿಸೊ ೧
ಸಾಂದೀಪ ಗುರುವಿಗೆ – ಕಂದನ ತಂದಿತ್ತೆನಂದ ಗೋಪನ ಕಂದ – ಕಂದನ ಪಾಲಿಸೊ ೨
ಕಂದಿ ಕುಂದಿಹಳು ಸು – ನಂದಳು ಚಿಂತೇಲಿಕಂದನ ಕೊಡು ಗುರು – ಗೋವಿಂದ ವಿಠಲ ೩

೯೪
ಪಾಲಿಸೋ ಮಗುವ ನೀ | ಪಾಲಿಸೋ ಪ
ಪಾಲಿಸದಿದ್ದರೆ | ಬಿಡೆ ನಿನ್ನ ಪಾದವಶೈಲಜ ಪತಿ ಸಖ | ಕಾಲಿಗೆ ಬೀಳುವೆ ಅ.ಪ.
ಖಿನ್ನ ಮನದಿ ಬಾಲ | ಇನ್ನೆಲ್ಲಿ ಪೋದನೊಬಿನ್ನವಿಸುವೆ ಕೃಷ್ಣ | ಬನ್ನ ಬಡಿಸ ಬೇಡ ೧
ನಿನ್ನ ಪ್ರಾರ್ಥನೆ ಬಿಟ್ಟು | ಅನ್ಯ ಗತಿಯ ಕಾಣೆಪನ್ನಗ ನಗಪತಿ ಆ | ಪನ್ನ ಪರಿಪಾಲ ೨
ಭಯ ಕೃದ್ಭಯ ನಾಶ | ದಯೆ ಪರಿಪೂರ್ಣ ನಿಭಯವ ನೀನಿತ್ತೀಗ ಅ | ಭಯವ ಪಾಲಿಸೋ ೩
ಮಗುವಿನ ಮನದೊಳು | ಹಗುರವ ಮಾಡಿದೆಹಗರಣವೇಳಿನ್ನೂ | ನಿಗಮಾದಿ ಪ್ರತಿ ಪಾದ್ಯ ೪
ಮೊರೆಯನಿಡುವ ತಾಯ | ಮೊರೆಯ ಕೇಳಿಸದೇನೊತ್ವರಿತದಿ ಕಾಯೊ ಶ್ರೀ | ಕರಿರಾಜ ವರದಾ ೫
ವತ್ಸನ ಕರೆ ತಂದು ಉತ್ಸಾಹ ಕೊಡು ಭೃತ್ಯವತ್ಸಲನುಬಂಧ | ಬಿರಿದುಳ್ಳ ದೇವನೇ ೬
ಪೋರನಸುವ ಕಾಯ್ದ | ಭಾರ ನಿನ್ನದೊ ಹರಿನಾರಸಿಂಹನೆ ಗುರು | ಗೋವಿಂದ ವಿಠ್ಠಲ ೭

೧೯೫
ಪಾಲೀಸೊ ಪವಮಾನ | ಜಯಪತಿಬಾಲಾನೆ ಜಗತ್ರಾಣಾ ಪ
ಕಾಳೀರಮಣ ಹೃತ್ಕೀಲಾಲಜದಿ ತೋರೊಲೀಲಾಮಾನುಷನ | ಬಾಲ ಗೋಪಾಲನ ಅ.ಪ.
ಶ್ವಾಸ ರೂಪಕ ಪ್ರಾಣಾ | ತತುವರಿ | ಗೀಶಾ ಭಕ್ತ ಪೋಷಣ ||ವಾಸೀಸಿ ತ್ರಿವಿಧರೊಳ್ | ತಾಸೀಗ್ವಂಭೈನೂರುಶ್ವಾಸ ಜಪಂಗಳ | ಲೇಸಾಗಿ ನೀ ಗೈದೆ ೧
ಸಕಲ ಜಗವು ವ್ಯಾಪ್ತಾ | ಜೀವರ | ಅಖಿಲ ಕರ್ಮದಿ ಶಕ್ತಾ ||ಸೃಕು ಸೃವಾದ್ಯಂಗ | ಪ್ರಕಾರದೊಳಗಿದ್ಯುಕುತಿಯಲಿ ಯಜ್ಞ | ಭೋಕ್ರ‍ತವ ಸೇವಿಸುವ ೨
ಕೂರ್ಮರೂಪಿ ಜಗಭಾರ | ಪೊತ್ತಿಹೆ | ಪೇರ್ಮೆಯಲಿಂದ ಸಮೀರ ||ಧರ್ಮನನುಜ ಸೂ | ಶರ್ಮಾನ ಬಿಗಿದು ಗೋ-ಧರ್ಮಾ ಕಾಯ್ದ ಭಾವಿ | ಬ್ರಹ್ಮಾನೆ ಸಲಹೆನ್ನ ೩
ಬೃಹತೀ ನಾಮಕಗನ್ನಾ | ನಾಗುತ | ಮಹಾ ಪುರುಷ ಸೇವೆಯನ್ನಾ ||ವಿಹಿತ ಮಾರ್ಗದಿ ಗೈದೆ | ಮಹಾ ಮಹಿಮ ವಾಯು ಸಹೋಬಲೌಜ ಭ್ರಾಜ | ಪಾಹಿ ತೇಜೋರೂಪಿ ೪
ತರಾತಮದ ಸೊಲ್ಲಾ | ಶ್ರೀಹರಿ | ಗುರು ಗೋವಿಂದ ವಿಠಲಾ ||ಪರಮ ಪರಾಧ್ರ್ಯನುತ | ಪರಮ ರಸನು ಎನುತೊರೆವ ಮರುತ ಪದ | ಸರಸೀರುಹಕೆ ನಮೊ ೫

೨೮೬
ಪಾವನ್ನೆ ಪಾವನ್ನೆ ಪ
ಗೋವ ಕಾಯ್ದ ನಗ | ಗೋವರ್ಧನಧರಶ್ರೀ ವರನಿಗೆ ಪ್ರಿಯೆ | ಪಾವನೆ ತುಳಸೀ ಅ.ಪ.
ದಳ ದಳ ರೂಪಂ | ಗಳ ಬಹು ಧರಿಸುತನೆಲಿಸಿಹ ನಿನ್ನಲಿ | ಆಲವ ಪೂರ್ಣ ಹರಿ ೧
ತೀರ್ಥಮಾನಿ ಸುರ | ಜಾತರೆಲ್ಲ ಸಂ-ಪ್ರೀತಿಯಿಂದ ಇಹ | ರಾತು ಮೂಲದಲಿ ೨
ಕಂಡವರಘಗಗಳ | ಖಂಡಿಸಿ ಬಹು ತನುದಿಂಡುಗೆಡೆಹೆ ಹರಿ | ತೊಂಡರ ಗೈಯ್ಯುವ ೩
ನೀರನೆರೆಯೆ ತರು | ಬೇರಿಗೆ ಸಂಸ್ರ‍ಕತಿಪಾರು ಮಾಳ್ಪ ಹೆ | ದ್ದಾರಿಯ ತೋರುವೆ ೪
ಭಾವಜ ಪಿತ ಗುರು | ಗೋವಿಂದ ವಿಠಲನಭಾವದಿ ವಲಿಸಿಹೆ | ದೇವಿ ಜಾಂಬುವತಿ ೫

೧೯೪
ಪಾವಮಾನಿಯೆ ತವ | ಯಾವ ಮಹಿಮೆಯೊಳೇಕಭಾವ ಪೊಗಳಲು ಆವ | ದೇವತೆಗಳಿಗಳವÉೀ ಪ
ಶ್ರೀವರನಂಘ್ರಿಯ | ಸೇವೆಗೈವಲಿ ಬಹು | ಧಾವಿಸೀ |ಬಹು ಎಚ್ಚರದಿ ಸೇವಿಸೀ ||ನಿರುತ ಭಕ್ತಿಯ | ಭಾವದಲಿ ದುರಿ | ತಾವಳಿ ವಿಭಾವಸುನೀ ವೊಲಿದು ಭೃ | ತ್ಯಾವಳಿಯ ಪಾಲಿಪೆ | ಸಾರ್ವಕಾಲ ಮ-ತ್ತೋರ್ವರಿಲ್ಲವೊ | ದೇವರೊತ್ತಮ | ದೇವ ನೀನೇ ಅ.ಪ.
ಕೇಸರಿ ಗೃಹದಿ ನೀ ಲೇಸಾಗಿ ಉದಿಸುತಲೇಸು ರಾಹುಗ್ರಸ್ತ | ಆ ಸೂರ್ಯ ಮೋಚನ |ಆಶಿಸುತಲಿ ಹಾರಿ | ದೋಷವ ಕಳೆಯಲು | ಯತ್ನೀಸೆ ಆ ಸುಮಹದಾಕಾರ ಶೃಣಗೈದೀವಾಸವನು ನಿನ ಘಾತಿಸಲು ಕುಲಿಶದೀ ಅದಕಂಡು ತವ ಪಿತಶ್ವಾಸಗಳ ಬಲು ಪರಿಯ ರುದ್ಧಿಸಲು | ಮೂರ್ಲೋಕ ತಪಿಸೇಅಸುರರು ವಿಧಿವಿಧದಿ ಮೊರೆ ಇಡಲೂ | ಆಲೈಸ ನಾಲ್ಮೊಗಶ್ವಾಸ ಸತಿಯನು ಸೂಸಿ ಸೂಚಿಸಲೂ | ಅದಕೇಳಿ ಮತ್ತೆಲೇಸುಗೈಯ್ಯಲು ಮನವ ಮಾಡಲೂ ವಾಸವಾದ್ಯರಶ್ವಾಸ ಮಾಡುವ ತೆರನ ಮಾಡೆಯ್ದೊಕ್ಲೇಶನಾಶನ ಶ್ವಾಸಮಾನಿ ಮಹಾ ಕೃಪಾಳೊ ೧
ಕೋತಿ ರೂಪದಿ ರವಿ | ಜಾತಗೊಲಿದು ರಘುಜಾತನ ಸಖ್ಯ ಸು | ಪ್ರೀತಿಲಿ ಗೈಸೀ ||ನೀತಿಯಿಂದಲಿ ಸುರಪ | ಜಾತನಸುವ ಹಾನಿ | ಗೈಸೀದೆ |ರಾಜ್ಯ ರವಿಜಗೆ ಕೊಡಿಸೀದೆ ಅಂಗದನ ಯುವರಾಜನೆನಿಸೀದೆ | ಕಪಿ ಸೈನ್ಯನೆರಹಿ ಮಾತೆ ಸೀತೆಯ ನೀನೆ ಅರಸೀದೆ | ಶರಧಿಯನೆ ಹಾರುತ ಯಾತು ಧಾನೀ ಪುರಕೆ ಗಮಿಸೀದೆ | ವನಕಿತ್ತು ಖಳಕುಲ ವ್ರಾತ ನಾಶನ ನೀನೆ ಮಾಡೀದೆ | ಉರಿಯಿಡಲು ಬಾಲಕೆ ವೀತಿ ಹೋತ್ರಗೆ ಪುರಿಯ ಉಣಿಸೀದೆ |ಖ್ಯಾತ ಮಣಿ ರಘು | ಜಾತಗಿತ್ತೆಯೊ | ಮಾತರಿಶ್ವಾ ೨
ಪಾಂಡು ಸುತನೆ ಉ | ದ್ದಂಡ ಗದೆಯನೆ ಪಿಡಿದುಚಂಡ ಮಾಗಧನ | ದಿಂಡನೆ ಶೀಳೀ ||ತೊಂಡ ವತ್ಸಲ ಶಿರಿ | ಪುಂಡರೀಕಾಕ್ಷ ನಿ ಗರ್ಪಿ | ಸೀ |ಮಹಾಧ್ವರವ ಪೂರೈಸೀ |ಹರಿಪರ ದೈವವೆನ ಸ್ಥಾಪೀಸಿ | ದುಶ್ಯಾಸನನಮಂಡೆಯ ಪಿಡಿದು ಉರವಣಿಸೀ | ಉರ ಬಗೆದು ಕರುಳಕೊಂಡು ಕೊರಳಲಿ ಧರಿಸೀ | ನರ ಮೃಗನ ಲೀಲೆಕಂಡು ದ್ವಯೆ ಬಲ ತಪಿಸೀ | ಅರಕ್ಷೌಹಿಣಿ ಮುಂ-ಕೊಂಡು ನೀನೆ ಸಂಹರಿಸೀ | ಕೌರವನ ತೊಡೆಖಂಡಿಸುತವನ ಛೇದಿಸೀ |ಅಂಡಜಾಧಿಪವಹಗೆ ಅರ್ಪಿಸಿ | ನಿಂದೆ ಭೀಮಾ ೩
ತೋಯಜಾಕ್ಷನ ಆಜ್ಞೆ | ಪ್ರೀಯದಿಂ ಧರಿಸುತ್ತಕಾಯ ಧರಿಸಿ ಮಧ್ಯ | ಗೇಹರ ಗೃಹದೀ |ತಾಯಿ ತಂದೆಗೆ ಅಸ | ಹಾಯಕನೆಂದು | ತೋರಿಸೀ |ಬಾಲ್ಯದಲಿ ಸನ್ಯಾಸ ಸ್ವೀಕರಿಸೀ |ಪುಷ್ಕರಿಣಿಗೆ ಗಂಗೆಯನು ಕರೆ ತರಿಸೀ | ಅದ್ವೈತ ಸಿದ್ಧಿಲಿಹೇಯ ಬಹಳವ ನೀನೆ ತೋರಿಸೀ | ಬದರಿಯಲಿ ಬಾದರಾಯಣರಿಂದ ಉಪದೇಶೀಸಿ | ಮತ್ತಿಲ್ಲಿ ಬರುತಲಿಧೇಯ ಸಾಧಿಸೆ ಗ್ರಂಥ ಬಹು ರಚಿಸೀ | ಕುಭಾಷ್ಯಗಳ ಬಹುಹೇಯತ್ವವನೆ ಸಾಧಿಸೀ | ವಾದ ಕಥೆಯಲಿಮಾಯಿಗಳ ಬಲುಪರಿಯ ಸೋಲಿಸೀ |ಕಾರ್ಯ ಸರ್ವವ | ರಾಯ ಕೃಷ್ಣಗೆ ಅರ್ಪಿಸಿದೆ ಮಧ್ವಾ ೪
ಪ್ರಾಪಕ ಸ್ಥಾಪಕ | ರೂಪಾದಿಯಲಿ ಜಗ |ವ್ಯಾಪಾರಂಗಳ ಗೈದು | ಕಾಪಾಡ್ವನೇ ||ಹೇ ಪ್ರಥಮಾಂಗನೆ ತವ | ರೂಪ ತೋರಿಸು ಎಂಬೆನೇ |ಎರಡೊಂದು ಕೋಟಿ ರೂಪಧಾರಕನೆ |ಪ್ರತಿರೂಪ ರೂಪಕೆ ಭೇದ ವಿರಹಿತನೆ | ನಿಸ್ಸೀಮ ಗುಣಗಣಶಾಪವರಗಳ ಭೀತಿರಹಿತಾನೆ | ಒಳ ಹೊರಗೆ ಎಲ್ಲವ್ಯಾಪಿಸುತ ಬ್ರಹ್ಮಾಂಡವೆಲ್ಲವನೇ | ಪ್ರಾಣ ದಶವಿಧರೂಪವಧ್ಯಾತ್ಮಾಧಿ ದೈವಗನೇ | ಪ್ರಾಣ ಪಂಚಕರೂಪ ಪಂಚಾತ್ಮಕನ ಪರಿ ವ್ಯಾಪ್ತನೆ | ಅಧ್ಯರ್ಥ ರೂಪಿಅಪ್ರಾಪ್ಯ ಅಶಕ್ತಿ ರಹಿತಾನೇ |ವ್ಯಾಪಿಸುತ ಜಗ | ವೀಪರೀಯಲಿ | ಮಾಳ್ಪೆ ಪ್ರಾಣಾ ೫
ಮೋಕ್ಷಾಧೀಚ್ಛೆಯ ವರ್ಜ | ಅಚ್ಛಿನ್ನ ಭಕುತಾನೇದಕ್ಷಿಣಾಕ್ಷಿ ಗೋ | ವತ್ಸ ರೂಪಾನೇ ||ಅಕ್ಷಿಯೋಳಿಹ ತ್ರಿದಶಾ | ದ್ಯಕ್ಷರಿಂದಲಿ ಸಂ | ಸೇವ್ಯಾನೇ |ಕಂಠದಲಿ ನೀ ಹಂಸೋಪಾಸಕನೇ |ಶಬ್ದಗಳ ನುಡಿದು ನುಡಿಸುತಿರುವಾನೆ | ಕೂರ್ಮರೂಪಿ ಸಲಕ್ಷಣದಿ ಬ್ರಹ್ಮಾಂಡ ಧಾರಕನೆ | ಸಪುತ ಸ್ಕಂದಗತಇಚ್ಛೆಯಲಿ ಲೋಕಧಾರಕನೆ | ಬೃಹತಿ ಸಾಸಿರವಾಚ್ಯನೆಂದೆನಿಸುತ್ತ ಸ್ತುತ್ಯಾನೆ | ಪತ್ಯಬಿಂಬ ಮುಖ್ಯನೆಈಕ್ಷಿಸುವೆ ಸರ್ವತ್ರ ಹರಿಯನ್ನೆ | ಮುಂದಿನಜ ಅಪರೋಕ್ಷವನು ಪಾಲಿಸೆಂಬೇನೆ ||ಮೋಕ್ಷದನೆ ಕರುಣಾ ಕಟಾಕ್ಷದಿ | ಈಕ್ಷಿಪುದು ಪವನ ೬
ಜೇಷ್ಠ ಶ್ರೇಷ್ಠನೆ ಸ | ಮಷ್ಟಿ ರೂಪನೆ ಪವನ |ವ್ಯಷ್ಟಿರೂಪದಿ ಜಗದಿ | ವರೀಷ್ಟನೇ ||ನಿಷ್ಠೇಲಿ ಭಜಿಪರಿ | ಗಿಷ್ಟಾರ್ಥವನೆ | ಸಲಿಸೂವೇ |ಅತಿರೋಹಿತ ವಿಜ್ಞಾನಿ ಎನಿಸಿರುವೆ ||ಸಕಲ ಗುಣಗಣ ಭೋಕ್ರ‍ತವೆನಿಸಿರುವೆ | ಸಕಲ ಜ್ಞಾನೋಪದೇಷ್ಟನೆಂದೆನಿಸಿ ಕರೆಸೂವೆ | ಶಿವ ಶೇಷ ಖಗಪರಿನಿಷ್ಟ ಗುರು ನೀನೆ ಎನಿಸಿರುವೆ ಸಜಾತಿ ಗುಣ ಅಯುತವರಿಷ್ಟನು ನೀನು ಆಗಿರುವೆ | ವಿಜಾತ್ಯನಂತ ಗುಣಗರಿಷ್ಟ ರೂಪಿ ಎನಿಸಿರುವೇ | ವೇದಾನುಕ್ತ ಗುಣವಿಶಿಷ್ಟ ರೂಪದಲಿಂದ ಮೆರೆಯುವೇ ||ಇಷ್ಟ ಗುರು ಗೋವಿಂದ ವಿಠ್ಠಲ | ಪ್ರೀತಿ ಪಾತ್ರನು ಆದ ಪ್ರಾಣ ೭

೪೫೪
ಪಾಹಿ ಪಾಹಿ ಮೋಹನ್ನರೆ | ಲೋಹಲೊಷ್ಟ ಸಮೇಕ್ಷಣ ಪ
ಅಹಿಶಾಯಿ ಪಾದ ಸೇವೆ | ವಿಹಿತದಿ ನೀಡೆನಗೆ ಅ.ಪ.
ಪುಂಡರಿಕಾಕ್ಷನ ಪಾದ | ಬಂಡುಣಿಯಂದದಲೀಮಾಂಡವ್ಯರಾಗಿರುವಾಗ | ಚಂಡತಪ ಮಾಡಿದಿರಿ ೧
ಗಾಣಿಗನುದರದೀ | ಜನಿಸುತ ಪೂರ್ವದೀಧನ ಬಹುಗಳಿಸುತ | ಜನುಮವ ನೂಕಿದಿರಿ೨
ಗಳಿಸಿದ ಧನವನೂ | ಲಲನೆಗೂ ಪೇಳದೇಮಲಿನ ದೇಹವನೀಗಿ | ಕಳೆದಿರಿ ಪ್ರಾರಬ್ಧವ ೩
ಸತಿಸುತ ಬಂಧು ಜನ | ಗತಿತಪ್ಪಿ ಭ್ರಾಂತರಾಗೀಅತಿ ಅತಿ ವ್ಯಥೆಯಿಂದ | ಪಾಥೇಯವ ಕಾಣಲಿಲ್ಲ ೪
ಚಿನಿವಾರ ನೂದರದೀ | ಪುನರಪಿ ಜನಿಸಲೂಜನನಿಯು ಅನುವನು | ಕಾಣದಲೆ ಚಿಂತಿಸಿದಳ್ ೫
ಆರ್ತಳಾಗುತ ಚಕ್ರ | ತೀರ್ಥವ ಪೊಗಲೂ ಬರೇಪಾರ್ಥ ಸಖನ ಭಕ್ತ | ಆರ್ತೆಯನು ತಡೆದರು ೬
ಆಕೆಯ ಶಿಶು ಸಹಾ | ಸಾಕುವೆನೆನುತಲೀಶ್ರೀಕರ ವಾಕ್ಯವಿತ್ತು | ಭೀಕರವ ತಪ್ಪಿಸಿದ ೭
ವಿಜಯರಾಯರು ಬಂದೂ | ನಿಜಸತಿ ಮಡುವಿನೊಳ್‍ತೇಜಸ್ಸಿನಿಂ ಮೆರೆವಂಥ | ದ್ವಿಜಸುತನರ್ಪಿಸಿದರ್ ೮
ಮೋಹನ ಬಾಲನಿಗೆ | ಮೋಹನ ವಿಠಲನಾಮೋಹದಂಕಿತವಿತ್ತು | ಮಾಹಿತಾಂಘ್ರಿ ನೆನೆಸಿದರ್ ೯
ಮುಂಜಿ ಮದುವೆ ಮಾಡೀ | ಹಂಜರದಿ ನಿಲಿಸುತಾಕಂಜಾಕ್ಷನಂಘ್ರಿಯನು | ಅಂಜಾದಲೆ ಭಜಿಸೆಂದರ್೧೦
ಚಿನಿವಾರತನದಿಂದ | ಧನವನು ಗಳಿಸಿದಾಜನುಮ ಪೂರ್ವದಸ್ರ‍ಮತಿ | ಮನದೊಳು ನೆನೆದೆಯೋ೧೧
ಗಾನವ ಮಾಡುತಲೀ | ಗಾಣಿಗತನಯರನೂಕಾಣುತಲೀ ಪೇಳಿದೆಯೊ | ಧನವಿಟ್ಟ ಸ್ಥಳವನು ೧೨
ಗುರುಗಳ ಕರುಣಿಯಿಂ | ಹರಿದೆಯೊ ಅಪಮೃತೀನೆರೆದಿದ್ದ ಜನರುಗಳ್ | ಅರೀಯರು ಸೋಜಿಗವ ೧೩
ಪದಪದ್ಯ ಕೋಲ್ಹಾಡುಗಳ್ | ಮೋದದಿ ರಚಿಸುತಾ ಮೋದ ತೀರ್ಥರ ಮತ | ಸಾಧಿಸಿದೆ ಜಗದೊಳು೧೪
ಪವನಾಂತರಾತ್ಮ ಗುರು | ಗೊವಿಂದ ವಿಠಲನಾಪಾವನಾ ಸ್ಮರಣೆಯಿಂ | ಭವವನು ಕಳೆದೆಯೋ ೧೫

Leave a Reply

Your email address will not be published. Required fields are marked *