Categories
ರಚನೆಗಳು

ಗುರುರಾಮಲಿಂಗ

೭೫
ಜಯ ಜಯ ಮಂಗಳಾ ಜಯ ಶುಭ ಮಂಗಳಾ |ಮಂಗಳಂ ಮಹ ಯೋಗಿ ಪುಂಗಗೆ | ಮಂಗಳಂ ಪಾಪೌಘ ಭಂಗಗೆ | ಮಂಗಳಂ ಯಾಳಗಿಯ ದೊರೆ ರಾಮಲಿಂಗನಿಗೆ ಪ
ಮೋದದಲಿ ದತ್ತಾವಧೂತನು ಪೇಳಿದನು ಶ್ರೀಕಪಿಲ ಮುನಿವರ |ಗಾಧಿಯಂ ಮಣಿಚೂಲ ಶೈಲದ ಗುಹದಿ ತಪಮಾಡಿ ||ಮೇದಿನಿಯ ಜನರಿಂಗೆ ಸಹಜದಿ ವೇದ ವೇದಾರ್ಥವನು ಬೋಧಿಸಿ |ಭೇದ ಬುದ್ಧಿಯ ಬಿಡಿಸಿ ಕೃಪೆಯನು ಮಾಡಿ ಪೊರೆ ಎಂದು ೧
ಕಪಿಲಮುನಿ ಲಿಂಗಾಂಬಿಕೆಗೆ ತಾ ಸ್ವಪ್ನದಲಿ ಪೇಳಿದನು ನಿಶ್ಚಯ |ಅಪರಿಮಿತ ವರ ಕೊಡುವ ಬೆಟ್ಟದ ರಾಮಲಿಂಗೇಶ ||ತಪವು ಮಾಡಲು ಕೊಡುವ ನೀ ತಪವು ಮಾಡೆಂದು ಪೇಳಿದ |ಗುಪಿತ ಮೂಲವ ತೋರಿ ಬೋಧಿಸಿ ಸುಖವ ಪಡೆ ಎಂದ ೨
ಮೊದಲು ಲಿಂಗಾಂಬಿಕೆಯು ಮನದಲಿ ನೆನೆದು ಬೆಟ್ಟದ ರಾಮಲಿಂಗನ | ಪದುಳದಿಂ ಸೇವಾ ಪ್ರದಕ್ಷಿಣೆ ಭಕ್ತಿಭಾವದಲಿ |ಮುದದಿ ಪ್ರಾರ್ಥಿಸೆಗೈದು ಎನ್ನಗೆ ಸುತನ ಕೊಡಬೇಕೆಂದು ಪ್ರಾರ್ಥಿಸೆ | ಸದಮಲಾತ್ಮರಾಮಲಿಂಗನು ಜನಿಸುತಿಹನೆಂದ ೩
ದೇವರಾಮನು ಕಲಿಯುಗದಿ ಮಹಯಾಳಗಿಯ ಕರ್ಣಿಕರ | ಶ್ರೀ ವತ್ಸಾನ್ವಯದ ನರಸಿಂಹ ಸತಿ ಲಿಂಗಾಂಬೆ ಗರ್ಭದೊಳುಪಾವನಾತ್ಮಕ ಜನಿಸಿ ಬೆಳೆದುದ್ದಾಮ ಆನಂದಾಭ್ಧಿಯೊಳು ಸ- |ದ್ಭಾವದಿಂ ಮಣಿಚೂಲ ಶೈಲದಿ ತಪವನೆಸಗಿದಗೆ ೪
ಕೆಲವು ದಿನ ಮಣಿಚೂಲ ಶೈಲದ ಗುಹೆಯೊಳಗೆ ತಪಗೈಯುತಿರೆ ಶ್ರೀಮಲಹರಿಯು ಪ್ರತ್ಯಕ್ಷರೂಪದಿ ಮಂತ್ರ ಬೋಧಿಸಿದ ||ಚೆಲುವ ರಾಮಪ್ಪಯ್ಯ ಮನದಲಿ ಹರುಷವಂ ಕೈಕೊಂಡು ಸಿದ್ಧಿಯಫಲವ ಪಡೆದನು ಮಂತ್ರ ಮಹಯೋಗಾದಿ ಸಿದ್ಧಿಗಳ ೫
ಗೌತಮಾನ್ವಯದಲ್ಲಿ ಜನಿಸಿ ಸುಕೀರ್ತಿ-ಪಡೆದಪ್ಪಯ್ಯ ಗುರುವರ |ಮಾತು ಮಾತಿಗೆ ರಾಮಲಿಂಗನ ನೆನೆ ನೆನೆದು ಮನದಿ ||ಸಾತಿಶಯ ಮಣಿಚೂಲ ಶೈಲವ ಸೇರಿ ಕಂಡಿಹ ರಾಮಲಿಂಗನ |ಮಾತು ತಿಳುಹಿಸಿ ಗ್ರಹಕೆ ಕರಕೊಂಡು ಬಂದಿಹಗೆ ೬
ಪರಮ ತಾರಕ ಮಂತ್ರ ಕರ್ಣದೊಳೊರೆದ ಗುರು ಅಪ್ಪಯ್ಯ ಮೂರ್ತಿಯ | ಚರಣವನು ಧ್ಯಾನಿಸುತೆ ಮಹಾ ವಾಕ್ಯಾರ್ಥ ಶೋಧಿಸಿದ | ಪರಿಪರಿಯ ವೇದಾರ್ಥವನು ಬಹು ಹರುಷದಿಂ ಶಿಷ್ಯರಿಗೆ ಬೋಧಿಸಿ | ನಿರುತ ಬ್ರಹ್ಮಾಕಾರ ವೃತ್ತಿಯೊಳಿರುವ ಶರಣಂಗೆ ೭
ಪಂಚಲಿಂಗವು ಪಂಚ ತೀರ್ಥಗಳುಳ್ಳ ಯಾಳಗಿ ಕ್ಷೇತ್ರದಲಿ ಪ್ರ- |ಪಂಚವನು ಪರಮಾರ್ಥ ಬುದ್ಧಿಯಲಿಂದ ನೆರೆಗೈದು ||ವಂಚನಿಲ್ಲದ ರಾಮಲಿಂಗ ವಿರಂಚಿ ಭಾವದೊಳಿರ್ದು ಜನರಿಗೆಹಂಚಿಕೆಯ ಪೇಳಿದನು ಇಲ್ಲಿಗೆ ಗಂಗೆ ಬರುತಿಹಳು ೮
ಇಂದು ವೇದ ರಸೈಕ ಶಕದ ವಿಕಾರಿವತ್ಸರ ದಕ್ಷಿಣಾಯನ |ಛಂದದಾಶ್ವೀನ ಶುದ್ದ ಸಪ್ತಮಿ ಸೌಮ್ಯ ವಾಸರದಿ ||ಸುಂದರದ ಜ್ಯೇಷ್ಠರ್ಕ ವೃಶ್ಚಿಕ ರಾಶಿ ಶುಭದಿನ ತೃತಿಯ ಪ್ರಹರದಿಹೊಂದಿದನು ಸುಸಮಾಧಿ ಸುಖವನು ರಾಮಗುರುವರನು ೯
ಸುರರು ಅಂಬರಕೇರಿ ಪುಷ್ಪದ ಮಳೆಯ ಸುರಿದರು ಹರುಷದಿಂದಲಿಪರಮ ವಿಸ್ಮಯವಾಗೆ ಸುರದುಂದುಭಿಯ ಧ್ವನಿಕೇಳಿ || ಹರುಷ ದಿಂದಲಿ ಶಿರವ ನಲಿಯುತ ದೇವ ಗಣಿಕೆಯರು ನೃತ್ಯ ಮಾಡುತ ತರ ತರದಿ ಜಯ ಘೋಷ ಮಾಡುತ ಜನ ಸಹಿತವಾಗಿ ೧೦||
ಜಯ ಜಯತು ಜಯ ನಿರ್ವಿಕಾರಗೆ ಜಯ ಜಯತು ಜಯ ನಿರ್ವಿಶೇಷಗೆ | ಜಯ ಜಯತು ನಿಃಸೀಮ ಪರಮಾನಂದ ರೂಪನಿಗೆ || ಜಯ ಜಯತು ಭಕ್ತಾಭಿಮಾನಿಗೆ ಜಯ ಜಯತು ಮಹ ಸಿದ್ಧ ವರದಗೆ | ಜಯ ಜಯತು ಸಿಂಧಾಪುರದ ಸಖರಾಮ ಗುರುವರಗೆ ೧೧

 

೭೬
ಜಯ ಮಂಗಳಂ ಮಹಾ ಶುಭಮಂಗಳಂ ಕ್ಷಯ ರಹಿತ ಗುರುಪಾದಾಂಗುಷ್ಠ ತೀರ್ಥಕ್ಕೆ | ಜಯ ಮಂಗಳಂ ಪ
ಚರಣ ನಾಲ್ಕುಗಳಿಂದ ತೋರುತಿಹ ಜಗದುದಯಚರಣಮಯ ಜಗವೆಂದು ತಿಳಿದು ನಿಜದಿಚರಣ ತೀರ್ಥವ ನಿರಂತರ ಸೇವಿಸುವ ಜನರಜನನ ಮರಣವ ಹಿಂಗಿಸುವ ತೀರ್ಥಕ್ಕೆ ೧
ಅಜ್ಞಾನ ಮಲನಾಶನವಾದುದದರಿಂದ ಸುಜ್ಞಾನ ವೈರಾಗ್ಯ ಸಿದ್ಧಿಸುವದು ವಿಜ್ಞಾನ ಮನದಿ ಉಭಯ ಪದದಲಿ ಐಕ್ಯ ಜಿಜ್ಞಾಸೆ ಹರಿದು ಮುಕ್ತಿಯ ಕೊಡುವ ತೀರ್ಥಕ್ಕೆ ೨
ಕಷ್ಟಭವ ದಾರಿದ್ರ್ಯದಿಂ ಬಿಡಿಸಿ ಆರ್ತ ಜನರಿಷ್ಟ ಪೂರಿತ ಶಾಂತಿ ಪದದಿ ನಿಂದು ತುಷ್ಟಮನದಿಂ ಬಿಡದೆ ಗುರು ರಾಮನಂಘ್ರಿಯಲಿ ನಿಷ್ಠೆಯುಳ್ಳರ ಭ್ರಾಂತಿ ಬಿಡಿಸುವ ತೀರ್ಥಕ್ಕೆಜಯ ಮಂಗಳಂ ಮಹಾ ಶುಭ ಮಂಗಳಂ ೩

 

೭೪
ಜೋ ಜೋ ಜೋ ಶ್ರೀ ಆತ್ಮಾರಾಮಾ | ಜೋ ಜೋ ಜೋ ನೀ ಸುಖ ಧಾಮಾ | ಜೋ ಜೋ ಸಾಧು ಸಜ್ಜನ ಪ್ರೇಮಾ | ಜೋ ಜೋ ಸಾಧು ಸಿದ್ಧ ಜ್ಞಾನಿ ನಿಃಸೀಮಾ ಪ
ಪಂಚಭೂತ ರತ್ನ ತೊಟ್ಟಿಲು ಮಾಡಿ | ಪಂಚ ವಿಂಶತಿ ತತ್ತ್ವ ನವಾರ ಹೂಡಿ | ಪಂಚಕೋಶವೆಂಬೊ ಹಾಸುಕೆ ನೋಡಿ |ಪಂಚ ತತ್ತ್ವಾತೀತ ಮೂರ್ತಿಯ ಪಾಡಿ | ಜೋ ಜೋ | ೧
ಪರಮ ಪುರುಷ ನಿತ್ಯ ನಿಜಸುಖ ರೂಪ | ಪರ ಸಚ್ಚಿದಾನಂದ ಕೀರ್ತಿಪ್ರತಾಪ | ಉರುತರ ಮಹಿಮನೆ ವಿರಹಿತ ಪಾಪ |ಶರಣ ಧ್ಯಾನಿಪ ನಿಜ ಹೃದಯ ಚಿದ್ದೀಪ || ಜೋ ಜೋ ೨
ನಿರುತ ಸಿಂಧುಗಿ ಸಖ ಯತಿರಾಜ ಪುಂಗ | ಪರಿಪರಿ ವರವೀವ ಸಾಮಥ್ರ್ಯಸಂಗ | ಕರುಣಿಸೊ ಬೇಗದಿ ಗುರು ಕುಲೋತ್ತುಂಗ | ಧರೆಯೋಳ್ಯಾಳಗಿ ಶ್ರೀ ಗುರುರಾಮಲಿಂಗ ೩

 

೧೩೦
[ನಿನ್ನ ಭಕ್ತರಿಗೆ ಭವದ ದೋಷವಿಲ್ಲ ಸರ್ವ ಕರ್ತೃ ಸ್ವತಂತ್ರ ಹರಿಯೇ, ನೀನೆ ಪ್ರೇರಿಸಿ ಭಕ್ತರಿಂದ ಅಪರಾಧ ಮಾಡಿಸಿ ಹೊಣೆಗಾರರನ್ನು ಮಾಡಿ ದಣಿಸದಲೆ ಕ್ಷಮಿಸಿ ಚಿತ್ತದಲಿ ಪೊಳೆ ಎಂದು ಪ್ರಾರ್ಥನಾ.]
ಧ್ರುವತಾಳ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲವಿಪರೀತವೇನಯ್ಯ ಎನ್ನಂದಿಲಿಅಪರಿಮಿತ ಸ್ವಾತಂತ್ರವುಳ್ಳ ಕರ್ತುತ್ವದಿಂದಕೃಪಣರ ಬಾಧೆಗೆ ಯತನವೇನೋವಿಪುಳ ಐಶ್ವರ್ಯದಿಂದ ಸ್ವಾಮಿ ನೀನಾದರೂಸುಪಥ ನಡಿಯದಿಪ್ಪ ಕುಜನರನ್ನತಪುತ ದುಃಖದಲ್ಲಿ ನಿಯಾಮಿಸುವಿಯೆಂದುಅಪೌರುಷೇಯವಾದ ಶ್ರುತಿಯು ಪೇಳೆಖಪತಿ೧ಯು ಬಾಧಿಪದಕೆ ಕಾರಣವೇನುಂಟುಉಪಗೂಢ೨ ಕರುಣಿಯೇ ತಿಳುಹಬೇಕುಕ್ಲಿಪುತ ರಹಿತವಾದ ವಪುಗಳು ಬರಲೇಕೆಶಪಥ ಉಂಟು ನಿನ್ನ ಬಿಡೆನೆಂದೂಉಪರಿಯಿನ್ನು ಉಂಟು ಅಪರಾಧವೇನು ತಿಳಿಯೆನೃಪತಿ ಹೀನವಾದ ಸತಿಯನೊಲಸೆಉಪಮ ರಹಿತವಾದ ಸಥೆ ಮಾಳ್ಪ ತೆರದಂತೆಚಪಲನಾದರು ಇದನು ಪೋಗದೆಂದು ರಿಪು ಕುಲ ದಲ್ಲಣನಾದ ಪಿತನ ಭಯಕೃಪೆಗೆ ವಿಷಯನಾದ ಸುತರಿಗೆ ನೀನುಅಪಾರ ಗುಣನಿಧೆ ಇನಿತು ಮಾತೆ ಹೊರತುಕುಪಿತನಾಗುವದಕ್ಕೆ ಕೃತ್ಯವಿಲ್ಲಶಪಥ ರೂಪನೆ ನಿನ್ನ ಆಜ್ಞ ಪಾಲನೆ ಮುಖ್ಯಸಫಲವಲ್ಲದೆ ಮತ್ತೊಂದಧಿಕವಿಲ್ಲ ಅ-ನುಪಮ ಸಾಧನ ಇದೆ ಇದೆ ಸಿದ್ಧವೆಂದುವಿಪ ಅಹಿಪಾದ್ಯರು ಮಾಳ್ಪುದಾಗಿ ಸುಪವಿತ್ರವೆನಿಪ ಸತ್ವಬೋಧಿತನಾಗಿ ಹರಿಕ್ಷಿಪಣರ೧ ವ್ಯಾಪಾರನಿಂದಾದಕ್ಕೆಸ್ವ ಪಕ್ಷದವರನ್ನು ವೊಹಿಸದಲೆ ಕಡಿಗೆ ಪ-ರ ಪಕ್ಷದವರೆಲ್ಲ ನುಡಿದ ನುಡಿಗೆ ಅಪಹಾಸ ಮಾಡಿದಿ ಅಭಿಮಾನವಿಲ್ಲದಲೆಆಪ್ತನೆಂಬೊ ಮಾತು ಉಳಿಸದಲೆತಪನವಾದ ಭವದಿ ತಂದು ಕ್ಲೇಶವ ಬಡಿಸಿಅಪಹೃತವಾದ ಜ್ಞಾನ ಮಾಡಿದೆನಗೆಉಪಕಾರವೇನು ನಿನ್ನ ಮಾತು ಕೇಳಿದದಕೆಈ ಪರಿ ಮಾಡದಿರು ನಂಬಿದವರತಪುತ ಸುವರ್ಣ ವರ್ಣ ಗುರು ವಿಜಯ ವಿಠ್ಠಲರೇಯಯಃ ಪ್ರಾಣದಾತಿ ಮದ್ಭಕ್ತನೆಂಬೋದು೨ ಸತ್ಯ ಮಾಡು ೧
ಮಟ್ಟ ತಾಳ
ಪ್ರೌಢ ಕರ್ಮದಿ ನಿನ್ನ ಪ್ರೀತಿಯ ಎನಸಲ್ಲಕೀಡ ಕರ್ಮ೩ ನರಕವೆಂದೆಂಬೋಸು ಅಲ್ಲಮಾಡು ಎಂದವರನ್ನು ಬಿಡುವರೆ ಮಹಾಪಾಪಬೇಡ ಎಂದದರನ್ನ ಮಾಡುವದೆ ದೋಷಈಡಿಲ್ಲವೋ ನಿನ್ನ ಮಹಿಮೆಗೆ ಏನೆಂಬೆ ರೂಢಿಗಾಗಿದೆ ನೋಡು ದ್ರೋಣನ ವಧೆಗಾಗಿ ನೀ-ನಾಡಿದ ಉಕುತಿಯನು ಗ್ರಹಿಸದ ಕಾರಣದಿ ನೋಡಿಸಿದಿ ನರಕ ದುಃಖವ ಧರ್ಮಜಗೆಗೂಢ ಬಲ್ಲವರಾರು ನಿನ್ನ ಪ್ರೀತಿಯು ಧರ್ಮಗಾಢ ಭಕುತರೆಲ್ಲ ಇದೆ ಮಾಡುವರಾಗಿಕ್ರೋಧ ಮೂರುತಿ ಗುರು ವಿಜಯ ವಿಠ್ಠಲರೇಯಆಡಿದ ವಚನಗಳು ಸಕಲ ಸಾಧನವೆನಗೆ ೨
ತ್ರಿವಿಡಿತಾಳ
ಅರಸು ತನ್ನ ನಿಜ ಪರಿಚಾರ ಜನರಿಗೆಸರಿ ಬಂದ ಕಾರ್ಯದಲಿ ನಿಲ್ಲಿಸಲುನರರಿಗುಂಟೇನಯ್ಯ ವಿಹಿತಾವಿಹಿತದ ಭಯಧರಣಿಪತಿಯ ಪ್ರೀತಿ ಒಂದೇ ಹೊರ್ತುಸರಸಿಜ ಹರಿಭವ ಸುರಪಾದಿ ನಿರ್ಜರರುಹರಿಯೆ ನಿನ್ನಾಜ್ಞವ ಪಾಲಿಪರೋಸರಸಿಜಾಂಡವನ್ನು ನಿಯಾಮಿಸಿ ಒಂದೊಂದುಪರಿಯ ವ್ಯಾಪಾರದಲ್ಲಿ ನಿಲ್ಲಿಸಲೂಪರಮಾಣುಗಳ ಸ್ಥೂಲ ಸೃಷ್ಟಿ ಸ್ಥಿತಿಯ ಮಾಡಿತರುವಾಯ ಲಯದಲ್ಲಿ ಅಭಿಮುಖರುಪರಮ ಭಯಂಕರವಾದ ಕಾರ್ಯಗಳಿಂದಕರುಣವಿಲ್ಲದಲೆ ಖಂಡ್ರಿಪರು ಈತೆರದಿ ಮಾಡುವರಿಗೆ ಪಾಪ ಪುಣ್ಯವೇನುಧೊರಿಯೆ ನಿನ್ನಯ ಪ್ರೀತಿ ಒಂದಲ್ಲದೆಮರಳೆ ಸಂದೇಹವಿಲ್ಲ ”ಭೀಷಾಸ್ಮಾದ್ವಾತಃ ಪವತಿ’’ವರಲುತಿವೆ ವೇದ ಅಂತವಿಲ್ಲಸುರಲೋಲ ಮಹಧೃತಿ ಗುರು ವಿಜಯ ವಿಠ್ಠಲರೇಯಾಶರಣರ್ಗೆ ಕರ್ಮಗಳ ಲೇಪ ಉಂಟೆ ೩
ಅಟ್ಟತಾಳ
ಪ್ರಾತಿ ಡೊಂಕಾಗಿರೆ ತೀರ್ಥಕ್ಕೆ ದೋಷವೆತೀರ್ಥ ಮಮಿನ ತೋರೆ ಪವಿತ್ರಕ್ಕೆ ದೋಷವೆಯಾತ್ರೆಮಾಡುವಾಗ ಮಾರ್ಗವು ತಪ್ಪಲು ತಾ-ಪತ್ರಯವ ನೀಗುವ ಪುಣ್ಯಕ್ಕೆ ದೋಷವೆಉತ್ತಮ ಸತಿ ಒಂದು ಕರ್ಮ ಕೊರತೆ ಮಾಡೆಪಾತಿವ್ರತಕೆ ದೋಷಕೆ ಎಂದಿಗಾದರೂ ನೋಡಾಸ್ತೋತ್ರ ಮಾಡುವಾಗ ಶಬ್ದ ಡೊಂಕಾಗಲು ಪಾ-ರತ್ರಿಕವಾಗುವ ಪುಣ್ಯಕ್ಕೆ ದೋಷವೆಸೂತ್ರನಾಮಕ ನಿನ್ನ ಆಜ್ಞವ ನಡಿಸುವಭಕ್ತರಿಗೆ ಉಂಟೇನೊ ಭವದೋಷವನ್ನುಕ್ಷೇತ್ರ ಮೂರುತಿ ಗುರು ವಿಜಯ ವಿಠ್ಠಲರೇಯಾ ಧಾ-ರಿತ್ರಿಯೊಳಗೆ ನಿನ್ನವಗೆ ದೋಷವೇನೊ ೪
ಆದಿತಾಳ
ಒಂದಪರಾಧ ಉಂಟು ವಂದಿಪೆ ತಲೆಬಾಗಿಇಂದಿರೆ ಮೊದಲಾಗಿ ಶ್ವಾಸ ಬಿಡಿಸೊ ಶಕ್ತಿಎಂದಿಗೆ ಬಾರದು ನಿನ್ನ ಹೊರತಾಗಿ ಸಿಂಧುಜ೧ ಮೊದಲಾದ ಸುರರಲ್ಲಿ ನೀನಿಂದುಚಂದ ಚಂದದ ಕಾರ್ಯ ಮಾಡಿಸಿ ಭಕ್ತರ್ಗೆಪೊಂದಿದ ಘನತೆಯು ನಿನ್ನದಲ್ಲದೆ ಅನ್ಯ-ರಿಂದಲಿ ಮಾಳ್ಪ ಕೃತ್ಯ ಎಳ್ಳಿನಿತಿಲ್ಲವೆಂದುಮಂದಮತಿಗನಾಗಿ ತಿಳಿಯದೆ ಅಹಂಕಾರಬಂದೊದಗಲು ಅದರನ್ನೆ ಅತ್ಯಭಿವೃದ್ಧಿ ಮಾಡಿತಂದು ಈ ಲೋಕದಿ ಬಂಧನ ಮಾಡಿಸಿದಿತಂದೆ ನಿನಗೆ ಇದು ಪರಮ ಸಮ್ಮತವಾಗೆ ಎ-ನ್ನಿಂದಾಗುವದೆ ಮೋಚನ ಮಾರ್ಗವಒಂದು ತೀರಿಸ ಬಂದು ಹನ್ನೊಂದು ಗಳಿಸಿಕೊಟ್ಟಿಬಂಧು ಅನಿಮಿತ್ಯನಾದದ್ದು ನಿಜವಿತ್ತೆಕುಂದುಗಳೆಣಿಸದೆ ಪಾಲಿಪದೆನ್ನನುಮಂದರಧರ ಗುರು ವಿಜಯ ವಿಠ್ಠಲರೇಯಾಇಂದು ಎಂದೆಂದಿಗೆ ನೀನೆವೆ ಗತಿಯೊ ೫
ಜತೆ
ಭಕತರ ಅಪರಾಧವೆಣಿಸದಲೆ ತ್ವರಿತದಿ ಚಿತ್ತಮುಕುರದಲಿ ಪೊಳೆಯೊ ಗುರು ವಿಜಯ ವಿಠ್ಠಲರೇಯಾ ||
[ವಿಷನಾಮ ಸಂ|| ಮಾರ್ಗಶೀರ್ಷ ಶುದ್ದ ೮]