Categories
ರಚನೆಗಳು

ಗುರು ವಿಜಯವಿಠ್ಠಲರು

೧೩೦
[ನಿನ್ನ ಭಕ್ತರಿಗೆ ಭವದ ದೋಷವಿಲ್ಲ ಸರ್ವ ಕರ್ತೃ ಸ್ವತಂತ್ರ ಹರಿಯೇ, ನೀನೆ ಪ್ರೇರಿಸಿ ಭಕ್ತರಿಂದ ಅಪರಾಧ ಮಾಡಿಸಿ ಹೊಣೆಗಾರರನ್ನು ಮಾಡಿ ದಣಿಸದಲೆ ಕ್ಷಮಿಸಿ ಚಿತ್ತದಲಿ ಪೊಳೆ ಎಂದು ಪ್ರಾರ್ಥನಾ.]
ಧ್ರುವತಾಳ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ವಿಪರೀತವೇನಯ್ಯ ಎನ್ನಂದಿಲಿ
ಅಪರಿಮಿತ ಸ್ವಾತಂತ್ರವುಳ್ಳ ಕರ್ತುತ್ವದಿಂದ
ಕೃಪಣರ ಬಾಧೆಗೆ ಯತನವೇನೋ
ವಿಪುಳ ಐಶ್ವರ್ಯದಿಂದ ಸ್ವಾಮಿ ನೀನಾದರೂ
ಸುಪಥ ನಡಿಯದಿಪ್ಪ ಕುಜನರನ್ನ
ತಪುತ ದುಃಖದಲ್ಲಿ ನಿಯಾಮಿಸುವಿಯೆಂದು
ಅಪೌರುಷೇಯವಾದ ಶ್ರುತಿಯು ಪೇಳೆ
ಖಪತಿ೧ಯು ಬಾಧಿಪದಕೆ ಕಾರಣವೇನುಂಟು
ಉಪಗೂಢ೨ ಕರುಣಿಯೇ ತಿಳುಹಬೇಕು
ಕ್ಲಿಪುತ ರಹಿತವಾದ ವಪುಗಳು ಬರಲೇಕೆ
ಶಪಥ ಉಂಟು ನಿನ್ನ ಬಿಡೆನೆಂದೂ
ಉಪರಿಯಿನ್ನು ಉಂಟು ಅಪರಾಧವೇನು ತಿಳಿಯೆ
ನೃಪತಿ ಹೀನವಾದ ಸತಿಯನೊಲಸೆ
ಉಪಮ ರಹಿತವಾದ ಸಥೆ ಮಾಳ್ಪ ತೆರದಂತೆ
ಚಪಲನಾದರು ಇದನು ಪೋಗದೆಂದು
ರಿಪು ಕುಲ ದಲ್ಲಣನಾದ ಪಿತನ ಭಯ
ಕೃಪೆಗೆ ವಿಷಯನಾದ ಸುತರಿಗೆ ನೀನು
ಅಪಾರ ಗುಣನಿಧೆ ಇನಿತು ಮಾತೆ ಹೊರತು
ಕುಪಿತನಾಗುವದಕ್ಕೆ ಕೃತ್ಯವಿಲ್ಲ
ಶಪಥ ರೂಪನೆ ನಿನ್ನ ಆಜ್ಞ ಪಾಲನೆ ಮುಖ್ಯ
ಸಫಲವಲ್ಲದೆ ಮತ್ತೊಂದಧಿಕವಿಲ್ಲ ಅ-
ನುಪಮ ಸಾಧನ ಇದೆ ಇದೆ ಸಿದ್ಧವೆಂದು
ವಿಪ ಅಹಿಪಾದ್ಯರು ಮಾಳ್ಪುದಾಗಿ
ಸುಪವಿತ್ರವೆನಿಪ ಸತ್ವಬೋಧಿತನಾಗಿ ಹರಿಕ್ಷಿಪಣರ೧
ವ್ಯಾಪಾರನಿಂದಾದಕ್ಕೆಸ್ವ ಪಕ್ಷದವರನ್ನು ವೊಹಿಸದಲೆ ಕಡಿಗೆ ಪ-
ರ ಪಕ್ಷದವರೆಲ್ಲ ನುಡಿದ ನುಡಿಗೆ ಅಪಹಾಸ ಮಾಡಿದಿ ಅಭಿಮಾನವಿಲ್ಲದಲೆ
ಆಪ್ತನೆಂಬೊ ಮಾತು ಉಳಿಸದಲೆ
ತಪನವಾದ ಭವದಿ ತಂದು ಕ್ಲೇಶವ ಬಡಿಸಿ
ಅಪಹೃತವಾದ ಜ್ಞಾನ ಮಾಡಿದೆನಗೆ
ಉಪಕಾರವೇನು ನಿನ್ನ ಮಾತು ಕೇಳಿದದಕೆ
ಈ ಪರಿ ಮಾಡದಿರು ನಂಬಿದವರತ
ಪುತ ಸುವರ್ಣ ವರ್ಣ ಗುರು ವಿಜಯ ವಿಠ್ಠಲರೇಯಯಃ ಪ್ರಾಣದಾತಿ ಮದ್ಭಕ್ತನೆಂಬೋದು೨ ಸತ್ಯ ಮಾಡು ೧
ಮಟ್ಟ ತಾಳ
ಪ್ರೌಢ ಕರ್ಮದಿ ನಿನ್ನ ಪ್ರೀತಿಯ ಎನಸಲ್ಲಕೀಡ ಕರ್ಮ೩ ನರಕವೆಂದೆಂಬೋಸು ಅಲ್ಲಮಾಡು ಎಂದವರನ್ನು ಬಿಡುವರೆ ಮಹಾಪಾಪಬೇಡ ಎಂದದರನ್ನ ಮಾಡುವದೆ ದೋಷಈಡಿಲ್ಲವೋ ನಿನ್ನ ಮಹಿಮೆಗೆ ಏನೆಂಬೆ ರೂಢಿಗಾಗಿದೆ ನೋಡು ದ್ರೋಣನ ವಧೆಗಾಗಿ ನೀ-ನಾಡಿದ ಉಕುತಿಯನು ಗ್ರಹಿಸದ ಕಾರಣದಿ ನೋಡಿಸಿದಿ ನರಕ ದುಃಖವ ಧರ್ಮಜಗೆಗೂಢ ಬಲ್ಲವರಾರು ನಿನ್ನ ಪ್ರೀತಿಯು ಧರ್ಮಗಾಢ ಭಕುತರೆಲ್ಲ ಇದೆ ಮಾಡುವರಾಗಿಕ್ರೋಧ ಮೂರುತಿ ಗುರು ವಿಜಯ ವಿಠ್ಠಲರೇಯಆಡಿದ ವಚನಗಳು ಸಕಲ ಸಾಧನವೆನಗೆ ೨
ತ್ರಿವಿಡಿತಾಳ
ಅರಸು ತನ್ನ ನಿಜ ಪರಿಚಾರ ಜನರಿಗೆಸರಿ ಬಂದ ಕಾರ್ಯದಲಿ ನಿಲ್ಲಿಸಲುನರರಿಗುಂಟೇನಯ್ಯ ವಿಹಿತಾವಿಹಿತದ ಭಯಧರಣಿಪತಿಯ ಪ್ರೀತಿ ಒಂದೇ ಹೊರ್ತುಸರಸಿಜ ಹರಿಭವ ಸುರಪಾದಿ ನಿರ್ಜರರುಹರಿಯೆ ನಿನ್ನಾಜ್ಞವ ಪಾಲಿಪರೋಸರಸಿಜಾಂಡವನ್ನು ನಿಯಾಮಿಸಿ ಒಂದೊಂದುಪರಿಯ ವ್ಯಾಪಾರದಲ್ಲಿ ನಿಲ್ಲಿಸಲೂಪರಮಾಣುಗಳ ಸ್ಥೂಲ ಸೃಷ್ಟಿ ಸ್ಥಿತಿಯ ಮಾಡಿತರುವಾಯ ಲಯದಲ್ಲಿ ಅಭಿಮುಖರುಪರಮ ಭಯಂಕರವಾದ ಕಾರ್ಯಗಳಿಂದಕರುಣವಿಲ್ಲದಲೆ ಖಂಡ್ರಿಪರು ಈತೆರದಿ ಮಾಡುವರಿಗೆ ಪಾಪ ಪುಣ್ಯವೇನುಧೊರಿಯೆ ನಿನ್ನಯ ಪ್ರೀತಿ ಒಂದಲ್ಲದೆಮರಳೆ ಸಂದೇಹವಿಲ್ಲ ”ಭೀಷಾಸ್ಮಾದ್ವಾತಃ ಪವತಿ’’ವರಲುತಿವೆ ವೇದ ಅಂತವಿಲ್ಲಸುರಲೋಲ ಮಹಧೃತಿ ಗುರು ವಿಜಯ ವಿಠ್ಠಲರೇಯಾಶರಣರ್ಗೆ ಕರ್ಮಗಳ ಲೇಪ ಉಂಟೆ ೩
ಅಟ್ಟತಾಳ
ಪ್ರಾತಿ ಡೊಂಕಾಗಿರೆ ತೀರ್ಥಕ್ಕೆ ದೋಷವೆತೀರ್ಥ ಮಮಿನ ತೋರೆ ಪವಿತ್ರಕ್ಕೆ ದೋಷವೆಯಾತ್ರೆಮಾಡುವಾಗ ಮಾರ್ಗವು ತಪ್ಪಲು ತಾ-ಪತ್ರಯವ ನೀಗುವ ಪುಣ್ಯಕ್ಕೆ ದೋಷವೆಉತ್ತಮ ಸತಿ ಒಂದು ಕರ್ಮ ಕೊರತೆ ಮಾಡೆಪಾತಿವ್ರತಕೆ ದೋಷಕೆ ಎಂದಿಗಾದರೂ ನೋಡಾಸ್ತೋತ್ರ ಮಾಡುವಾಗ ಶಬ್ದ ಡೊಂಕಾಗಲು ಪಾ-ರತ್ರಿಕವಾಗುವ ಪುಣ್ಯಕ್ಕೆ ದೋಷವೆಸೂತ್ರನಾಮಕ ನಿನ್ನ ಆಜ್ಞವ ನಡಿಸುವಭಕ್ತರಿಗೆ ಉಂಟೇನೊ ಭವದೋಷವನ್ನುಕ್ಷೇತ್ರ ಮೂರುತಿ ಗುರು ವಿಜಯ ವಿಠ್ಠಲರೇಯಾ ಧಾ-ರಿತ್ರಿಯೊಳಗೆ ನಿನ್ನವಗೆ ದೋಷವೇನೊ ೪
ಆದಿತಾಳ
ಒಂದಪರಾಧ ಉಂಟು ವಂದಿಪೆ ತಲೆಬಾಗಿಇಂದಿರೆ ಮೊದಲಾಗಿ ಶ್ವಾಸ ಬಿಡಿಸೊ ಶಕ್ತಿಎಂದಿಗೆ ಬಾರದು ನಿನ್ನ ಹೊರತಾಗಿ ಸಿಂಧುಜ೧ ಮೊದಲಾದ ಸುರರಲ್ಲಿ ನೀನಿಂದುಚಂದ ಚಂದದ ಕಾರ್ಯ ಮಾಡಿಸಿ ಭಕ್ತರ್ಗೆಪೊಂದಿದ ಘನತೆಯು ನಿನ್ನದಲ್ಲದೆ ಅನ್ಯ-ರಿಂದಲಿ ಮಾಳ್ಪ ಕೃತ್ಯ ಎಳ್ಳಿನಿತಿಲ್ಲವೆಂದುಮಂದಮತಿಗನಾಗಿ ತಿಳಿಯದೆ ಅಹಂಕಾರಬಂದೊದಗಲು ಅದರನ್ನೆ ಅತ್ಯಭಿವೃದ್ಧಿ ಮಾಡಿತಂದು ಈ ಲೋಕದಿ ಬಂಧನ ಮಾಡಿಸಿದಿತಂದೆ ನಿನಗೆ ಇದು ಪರಮ ಸಮ್ಮತವಾಗೆ ಎ-ನ್ನಿಂದಾಗುವದೆ ಮೋಚನ ಮಾರ್ಗವಒಂದು ತೀರಿಸ ಬಂದು ಹನ್ನೊಂದು ಗಳಿಸಿಕೊಟ್ಟಿಬಂಧು ಅನಿಮಿತ್ಯನಾದದ್ದು ನಿಜವಿತ್ತೆಕುಂದುಗಳೆಣಿಸದೆ ಪಾಲಿಪದೆನ್ನನುಮಂದರಧರ ಗುರು ವಿಜಯ ವಿಠ್ಠಲರೇಯಾಇಂದು ಎಂದೆಂದಿಗೆ ನೀನೆವೆ ಗತಿಯೊ ೫
ಜತೆ
ಭಕತರ ಅಪರಾಧವೆಣಿಸದಲೆ ತ್ವರಿತದಿ ಚಿತ್ತಮುಕುರದಲಿ ಪೊಳೆಯೊ ಗುರು ವಿಜಯ ವಿಠ್ಠಲರೇಯಾ ||
[ವಿಷನಾಮ ಸಂ|| ಮಾರ್ಗಶೀರ್ಷ ಶುದ್ದ ೮]

ಉಭಯ ಅಂಶಾಂಶದಲ್ಲಾಗೆ
೧೧೪
ಕರುಣಿಸಿ ವೃಷ್ಟಿಗರಿ ಕಮಲನಯನನರರಪರಾಧಗಳ ನೋಡದಲೆ ವೇಗದಲಿ ಪ
ಅನ್ನದಿಂದಲೆ ಭೂತಗಣವು ಉದ್ಭವಿಸುವುದುಅನ್ನದಿಂ ತ್ರಿವಿಧ ಸಾಧನ ಪೂರ್ತಿಪದು ||ಅನ್ನದಿಂದಲೆ ಅಭಿವೃಧ್ದಿ ಆಹದರಿಂದ ಪ-ರ್ಜನ್ಯದಿಂದಲಿ ಅನ್ನ ಜನಿಸುವ ಕಾರಣದಿ ೧
‘ಭೀಷ್ಮಾಸ್ಮಾದ್ವಹತಿ ಪವತಿ’ ಎಂಬೋಕ್ತಿಯಲಿಈ ಸಮಸ್ತಮರರೂ ನಿನ್ನ ಭಯದಿ ||ಬ್ಯಾಸರವೆ ತಮ ತಮ್ಮ ವ್ಯಾಪಾರಗಳ ಮಾಡಿಪೋಷಿಸುವರು ಜಗವ ಪ್ರೀತಿಯಿಂದ ೨
ವರುಷನ್ನ (ವರುಷನನು) ‘ಘೃಣ್ಹಾಮಿ ಸೃಜಾಮಿ ಚ’ ಎಂದು ಹರಿಯೇ ನಿನ್ನಿಂದಲೆ ವಿಹರಿಸಿತು ||ಸುರಪತಿಯ ವರುಣಾದಿ ಸುರರು ನಿಮಿತ್ಯ ಮಾತ್ರಪರಮ ಗುಣಸಾಂದ್ರ ಹೇ ಕರುಣಾಬ್ಧಿ ಚಂದ್ರ ೩
ನರನೊಬ್ಬ ಪ್ರಭು ತನ್ನ ಪರಿಚಾರಿಗಳನ್ನು ಪರಮ ಅಭಿಮಾನದಲಿ ಪರಿಪಾಲಿಪ ||ಸುರರ ಬ್ರಹ್ಮಾದಿಗಳ ದೊರೆಯ ನಿನಗೀ ಮಾತುಸರಿಹೋದರೆ ವಚನ ಸಲಿಸು ಕೃಪೆಯಿಂದ ೪
ಆವಾವ ಸಾಧನದಿ ಆವ ಸುಖವೈದುತಿರೆದೇವ ನಿನ್ನಯ ಕೀರ್ತಿ ಬರುವದೆಂತೋ ||ದೇವ ದೇವೇಶ ಗುರು ವಿಜಯ ವಿಠಲರೇಯ ಸಾವಧಾನದಲಿತ್ತು ಪರಿಪಾಲಿಪುದು ಬಿನ್ನಪವ ೫

೧೧೮
ಗುರುವೆ ನಿಮ್ಮಯ ಕರುಣ ವೃಕ್ಷ ನೆಳಲೊಹೊರತಾದ ಕಾರಣದಿ ಹೀನನಾದೆ ಪ
ತ್ರೈತಿಯಲಿ ತಾರಾಖ್ಯ ದ್ವಾಪರದಿ ಉದ್ಧವ ಖ್ಯಾತಿ ದ್ರೋಣನು ಕಲಿಯುಗದಿ ನಾನಾ ||ಭೌತಿಕಗಳ ಧರಿಸಿ ಪ್ರಾರ್ಥಿಸಿದ ಸಜ್ಜನರಆರ್ತಗಳ ಪರಿಹರಿಸಿ ಸರ್ವಾರ್ಥಗರೆವ೧
ಸುರವಂಶಕೆ ಮುಖ್ಯ ಗುರುವೆನಿಸಿ ಮೆರೆದೆಮರುತದೇವನ ದಯಕೆ ಪಾತ್ರನಾಗಿ ಹರಿಯ ಆನಂದಾಖ್ಯ ಶರಧಿ ಮುಣುಗಿದ ಮಹಾಪರಮ ಕರುಣಾನಿಧಿಯ ದೇವಮಣಿಯೆ೨
ನೀ ಪ್ರಸನ್ನನಾಗೆ ಸಕಲ ವೈಭವದಿಂದ ಪ್ರಪೂಜ್ಯರೆನಿಸುವರು ಅಮರ ತತಿಯು ||ನೀ ಪರಾಂಙ್ಮಖನಾಗೆ ಜ್ಞಾನ ಬಲ ಸಂಪದವುಲೋಪ ಐದುವರಯ್ಯ ಸರ್ವ ನಿರ್ಜನರು ೩
ಆವಾವ ಕಾಲದಲಿ ನಿನ್ನ ದಯದಿಂದಲ್ಲಿದೇವಾರ್ತಿಗಳನೈದು (ದಿ) ಸೌಖ್ಯಬಡುವೆ ||ಕಾವ ಕರುಣೆಯೆ ಎನ್ನ ಅವಗುಣಗಳೆಣಿಸದಲೆಸಾವಧಾನದಲೆನ್ನ ಸಲಹಬೇಕು೪
ಬಾಲಕನ ಅಪರಾಧ ಅನಂತವಿರಲಿನ್ನುಪಾಲಿಸಬೇಕಯ್ಯ ನೈಜಗುರುವೆ ||ಪಾಲಸಾಗರಶಾಯಿ ಗುರು ವಿಜಯ ವಿಠ್ಠಲರೇಯಕಾಲಕಾಲಕೆ ಅಗಲದಂತೆ ವರವೀಯೋ ೫

೧೧೭
ಶ್ರೀಮುಖ್ಯ ಪ್ರಾಣದೇವರ ಸ್ತೋತ್ರ
ನಂಬಿದೆ ನಿನ್ನಯ ಪಾದ ಮುಖ್ಯ ಪ್ರಾಣ ನಂಬಿದೆ ನಿನ್ನಯ ಪಾದ* ಪ
ನಂಬಿದೆ ನಿನ್ನಯ ಪಾದಾಡಂಬರ ತೊಲಗಿಸಿಡಿಂಬದೊಳಗೆ ಹರಿಯ ಬಿಂಬ ಮೊಳೆವಂತೆ ಮಾಡೋ ಅ.ಪ.
ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿ ಹಂಸಮಂತರ ತಪ್ಪದೆ ದಿನದಿನ ಒಪ್ಪದಿಂದಲಿ ಜಪಿಸಿತಪ್ಪಿಸೋ ಭವವ ಸಮೀಪದ ಜೀವಗೆ ||ಅಪ್ಪನಂದದಿ ಪುಣ್ಯವಪ್ಪಂತೆ ಕರುಣಿಸೊಕಪ್ಪು ವರ್ಣನ ಕೂಡೊಪ್ಪಿಸಿ ಪಾಲಿಸೊ ೧
ಹತ್ತೇಳು ಎರಡಾಯುತ ಸಾವಿರನಾಡಿಸುತ್ತಿ ಸುತ್ತುವ ಸೂತ್ರ ಮಾರುತಉತ್ತರ ಲಾಲಿಸೋ ಉತ್ರ‍ಕಮಣದಲ್ಲಿನೆತ್ತಿಯ ದ್ವಾರದಿಂದಲೆತ್ತ ಪೋಗಲೀಸದೆ ||ತತ್ತುವರೊಳು ಜೀವೋತ್ತಮನೆ ಸತ್-ಚಿತ್ತೆನಗೆ ಕೊಡು ಉತ್ತರ ಧರಿಸೊ (ಲಾಲಿಸೋ) ೨
ಅಂತರಂಗದ ಉಸಿರ ಹೊರಗೆ ಬಿಟ್ಟು ಅಂತರಂಗಕ್ಕೆ ಸೇದುವ ಪಂಥದೊಳು ನೀನೆ ಕಂತು ಜನಕನಲ್ಲಿಮಂತ್ರಿಯೆನಿಸಿ ಸರ್ವರಂತರ್ಯಾಮಿ ಆಗಿ ||ನಿಂತು ನಾನಾ ಬಗೆ ತಂತು ನಡಿಸುವ ಹಂತಕಾರಿ ಗುಣವಂತ ಬಲಾಢ್ಯ ೩
ಪಂಚ ಪ್ರಾಣರೂಪನೆ ಸತುವ ಕಾಯ ಪಂಚಾದ್ರಿಗಳ ಲೋಪನೆಮುಂಚಿನ ಪರಮೇಷ್ಠಿ ಸಂಚಿತಾಗಾಮಿ ಓಡಿಸಿಕೊಂಚ ಮಾಡೋ ಪ್ರಾರಬ್ಧ ವಂಚನೆಗೈಸದೆ ||ಅಂಚಂಚಿಗೆ ಪರಪಂಚವ ಓಡಿಸಿ ಪಂಚವಕ್ತ್ರ ಹರಿಮಂಚದ ಗುರುವೆ ೪
ಯೋಗಾಸನದೊಳಿಪ್ಪ ಯಂತ್ರೋದ್ಧಾರ ಭಾಗವತರಪ್ಪಯೋಗಿಗಳೀಶ ವ್ಯಾಸಯೋಗಿಗೊಲಿದ ನ್ಯಾಸ ಶ್ರೀ ತುಂಗಭದ್ರಾವಾಸ ಬಾಗುವೆ ಕೊಡಲೇಸ ||ಶ್ರೀ ಗುರು ವಿಜಯ ವಿಠಲನ ಪಾದಕೆಬಾಗುವ ಭವದೂರ ಜಾಗರ ಮೂರುತಿ ೫

೧೧೬
ಫಾಲಲಿಪಿ ಪರಿಹರಿಸಿಕೊಂಬರುಂಟೆ |ಕಾಲನಾಮಕ ನಿನ್ನ ಕ್ಲಪ್ತದಲಿ ಬರೆದಿದ್ದ ಪ
ಸಾಲು ಸ್ಫಟಿಕದ ರತ್ನಮಯವಾದ ಮನೆ ಇರಲು ವಿಶಾಲ ಪರ್ನದ್ದಾದರಿರಬಾರದೆ ||ಆಳುಗಳು ಬಹುಮಂದಿ ಇದ್ದವಗೆನುಡಿದ ಮಾತಾಲಿಸುವ ನರನೊಬ್ಬನಿರಬಾರದೆ ೧
ಜ್ಞಾನದಲಿ ಹರಿರೂಪ ಬಹಿರಂತರದಿ ನೋಳ್ಪಆನಂದದಲಿ ಸತತ ಇದ್ದವಗೆ ||ಧ್ಯಾನದಲಿ ಕ್ಷಣಮಪಿ ಕರುಹು ಕಾಣಿಸಿಕೊಂಬ ದೀನ ಮನವಾದರೂ ಇರಬಾರದೆ ೨
ಕೋಟಿ ದ್ರವ್ಯವು ಇದ್ದು ನೀಟ ಕವಡಿ ಇಲ್ಲದೆಕಾಟ ಕಾಣದೆ ಸೊರಗಿ ಮರುಗಿದಂತೆ ||ಹಾಟಕಾಂಬರಧಾರ ಗುರು ವಿಜಯವಿಠ್ಠಲರೇಯದಾಟುವರಿಲ್ಲ ನಿನ್ನ ಪ್ರಬಲ ಶಾಸನವ ೩

೧೧೫
ವ್ರತವನಲ್ಲದೆ ಅನುವ್ರತ ಮಾಡಬಹುದೇಶತಮುಖ ಸ್ಥಿತನಾದ ದಿವಿಜಪತಿಯ ಪ
ದಾನಶೀಲನೆನಿಸಿ ವಿಬುಧರಿಗೆ ಮೃಷ್ಟಾನ್ನಪಾನಗಳುಂಬೋ ಪಂಕ್ತಿಯಲ್ಲಿ ||ದೀನನೊಬ್ಬನು ಬರಲು ದೋಷಿಯಾದವನೆಂದು ಆನನವ ತಿರುಹುವನೇ ಅವನಿಯೊಳಗೇ ೧
ಅನ್ನ ಕಾರಣವಾದ ಪರ್ಜನ್ಯದಿಂದಲಿ ಸಕಲಜನರನು ಪರಿತೋಷ ಬಡಿಸಿ ಕೃಪದಿ ||ಚೆನ್ನಿಗನೆ ಈ ಅಲ್ಪ ಪ್ರಾದೇಶಸ್ಥಿತರನ್ನುಬನ್ನ ಬಡಿಸುವರೇನೊ ಘನ್ನ ಮಹಿಮಾ ೨
ಭಕ್ತವತ್ಸಲನೆಂಬೊ ಬಿರುದು ನಿನಗೆ ಉಂಟೆಸಖತನದಿ ಬಿನ್ನೈಪೆ ಸಾರ್ವಭೌಮ ||ಭಕುತ ಸುರಧೇನು ಗುರು ವಿಜಯ ವಿಠಲರೇಯಉಕುತಿ ಲಾಲಿಸಿ ವೃಷ್ಟಿಗರಿವುದು ಕರುಣದಲಿ ೩

೧೩೬
[ಶ್ರೀ ಪ್ರಾಣದೇವರ ಅನುಗ್ರಹವಿಲ್ಲದೆ ಶ್ರೀ ಹರಿಯು ಎಂದಿಗೂ ಒಲಿಯನೆಂಬ ಪ್ರಮೇಯ. ಪೂರ್ವಜನ್ಮದಲ್ಲಿ ವಾಲಿ ಹನುಮಂತನ ಅನುಗ್ರಹವಿಲ್ಲದ ಕಾರಣ ರಾಮನು ನಿಗ್ರಹಿಸಿದ. ಅರ್ಜುನನಾದಾಗ್ಗೆ ಭೀಮನು ಅಗ್ರಜನಾಗಿ ದಯ ಮಾಡಿದುದಕ್ಕೆ ಕೃಷ್ಣನು ಸಖನಾದ. ಮೂರನೆ ಜನ್ಮ ಜಯತೀರ್ಥರಾದಾಗ್ಗೆ ಜ್ಞಾನವಿತ್ತು ಕುಮತಗಳ ನಿರಾಕರಿಸಿದಿ ಪ್ರಾಣನ ಕೃಪೆಯಿಂದ ಎಲ್ಲ ಸೌಖ್ಯ ಗಂಟು. ಈಗಾದರು ಹಿಂದಿನಂತೆ ಪೊರೆಯೊ ಎಂದು ಪ್ರಾರ್ಥನೆ.]
ಧ್ರುವತಾಳ
ಹಿತಮಾಳ್ಪ ಜನಕನಾಗಿ ರಕ್ಷಸು ಎಂದೆಂಬೆನೆಪಿತೃ ಸಮಾನ ಜೇಷ್ಠನೆಂದೆಂಬ ವಿಧದಿ ಪಿತನೆ ಸರಿ ಎನಗೆ ಉಪಕಾರವ್ಯಾತಕಿನ್ನುಮಾತರಿಶ್ವನೆ ದೂರ ನೋಳ್ಪದೇನೊಭಾತೃನಾಗಿ ಎನ್ನ ಪಾಲಿಸು ಎಂದೆಂಬೆನೆನೋತ ಪುಣ್ಯಗಳಿಂದ ಹರಿಯು ತಾನೆ ಸ್ವತ ಏವ ಮಾಡಿದ ಈಗ ನುಡಿವದೇನೊಮಾತೃ ನೀನೆ ದೇಹ ಪೊರೆಯುವಲ್ಲಿಅತುಳ ಗುರುವಾಗಿ ಬೋಧಿಸು ಎಂದೆಂಬೆನೆಆತ್ಮ ಗುರುವಿಗೆ ನಿಜ ಗುರುವೆನಿಸಿದೆ ನಿತ್ಯನೂತನವಾಗಿ ಯಿದನು ಬೇಡಿಕೊಂಬುವದೇನುವೀತಿ ಹೋತ್ರನೆ ದೈತ್ಯ ಸಂತತಿಗೆಪ್ರತ್ಯಂತರ ಜನುಮದ್ವಯದಿ ನಿಜ ಮುಖದಿಂದಲೆಮತಿಯು ನೀಡಿದ ಮುಖ್ಯ ಗುರು ನೀನೆ ಪ್ರತಿಯಿಲ್ಲದೆ ಇದ್ದ ಇಷ್ಟನೇನೊ ಎನಗೆಗತಿ ಪ್ರದಾತನು ನೀನೆ ಆವಕಾಲಆಪ್ತನಾಗಿ ನೀನು ಸಲಹಬೇಕೆಂಬೆನೆ ಗತ ಜನ್ಮಗಳಲಿ ನೀನು ಮಾಡಿದುಪ-ಕೃತಿಗಳೆಣಿಸೆ ಈಗ ನಿನಗಿಂದಧಿಕವಾದಆಪ್ತನಾವನು ಎನಗೆ ಅರಸಿ ನೋಡಾಮತಿಯು ರಹಿತವಾದ ಜನುಮಗಳು ಬರಲಿಅತಿ ಹಿತ ನೀನೆ ಎನಗೆ ಇಹ ಪರದಿಅತಿಶಯ ಕೃಪಾನಿಧೆ ಗುರು ವಿಜಯ ವಿಠ್ಠಲರೇಯಅತಿ ಪೀಯನಾಗುವನು ನಿನ್ನ ದಯದಿ ೧
ಮಟ್ಟತಾಳ
ಬಾಂಧವನು ನೀನೆ ಎರಡು ಬಗೆಯಿಂದ ತಂದೆ ನಿನ್ನುಪಕಾರ ಅನಂತ ಜನುಮದಲಿಮಂದನಾದವ ನನು ತೀರಿಸಬಲ್ಲೆನೆಬಂಧು ಅನಿಮಿತ್ಯ ಗುರು ವಿಜಯ ವಿಠ್ಠಲ ನಿ-ನ್ನಿಂದಲಿ ಎನಗೆ ಅನುಗ್ರಹ ಮಾಡುವನೊ ೨
ತ್ರಿವಿಡಿತಾಳ
ನಿನ್ನ ಕರುಣಪೇಕ್ಷ ಮಾಡದಲೆ ಒಂದುಜನುಮ ಹರಿ ಕರುಣವಿಲ್ಲದಲೆ ಕಳದೇಅನಂತರದಿ ಎನ್ನ ಪುಣ್ಯ ಸಾಸಿರದಿಂದಅನುಜನಾದೆ ನಿನ್ನ ಕೃಪೆಯಿಂದಲಿಮನುಜ ಕೃತಿಯಾದರು ಪ್ರತಿಮದಲ್ಲಿ ಘನ್ನ ಚೇಷ್ಟಾದಿಗಳು ತೋರಿದಂತೆ ಎನ್ನ ನಾಮಕನಾಗಿ ಎನ್ನ ರೂಪದಿಂದಎನ್ನ ಕೃತ್ಯಗಳೆಲ್ಲ ನೀನೆ ಮಾಡಿಉನ್ನತವಾದ ಕೀರ್ತಿ ತಂದು ಇತ್ತು ಎನ್ನಜನ್ನರ ಮಧ್ಯದಲಿ ಶ್ರೇಷ್ಠನೆನಸಿಪನ್ನಗ ತಲ್ಪನ್ನ ಕರವಶನೆನನಿಸಿದಿನಿನ್ನ ಕರುಣಕೆ ಎಣೆ ಆವದಯ್ಯಾಎನ್ನ ಸ್ವಭಾವದಿಂದ ಹರಿ ತಾನು ಇನಿತಾದ ಮನ್ನಣೆ ಮಾಡುವನೆ ಎಂದಿಗನ್ನನಿನ್ನುಪಕಾರವೆಂಬ ವನ್ನಧಿಯೊಳಗೆ ನಿರುತಮುಣಗಿ ಇಪ್ಪೆನಯ್ಯಾ ತೆರವಿಲ್ಲದೆ ಚನ್ನ ಪ್ರಸನ್ನ ಗುರು ವಿಜಯ ವಿಠ್ಠಲರೇಯನಿನ್ನಿಂದಲೆ ಎನಗೆ ಬಂಧುನಾದಾ ೩
ಅಟ್ಟತಾಳ
ಸೈರಿಸದೆ ಅಪಕೃತಿ ಮಾಡಲಾಕ್ಷಣ ಪರಮ ಕರುಣದಿಂದ ಪೊರೆದು ತತ್ವವನರುಹಿಮರಳೆ ಜನ್ಮದಲಿ ಮೂಢ್ಯನಾದವನಿಗೆ ಸರಿಗಾಣದೆ ಇದ್ದು ವಿಮಲ ಜ್ಞಾನವನಿತ್ತುಹರಿಯೇ ಸರ್ವೋತ್ತಮನೆಂತೆಂಬೊ ಪ್ರಕಟದಿಧರೆಯೊಳಗೆ ಬೀರಿ ಕುಜನ ಮತದ ಬೀಜಹುರಿಸಿದಿ ನಿನ್ನಯ ಕರುಣಕ್ಕೆ ಎಣೆಯುಂಟೆಸರಿಯಿಲ್ಲ ಸರಿಯಿಲ್ಲ ನಿನ್ನುಪಕಾರಕ್ಕೆ ದುರುಳ ಮತಗಳೆಂಬೊ ಮಾಯಿ ಗೋಮಾಯಿಗಳುಶಿರವೆತ್ತಿ ನೋಡದೆ ಪಲಾಯಧ್ವರಾದರು ಈತೆರವಾದ ಮಹತ್ಮಿ ನಿನ್ನದು ನಿನ್ನದುಮರಳೆ ಮಾತುಗಳನ್ನು ತೋರದಿದ್ದರನಿಗೆ (ರೆನಗೆ)ಕರುಣವಲ್ಲದೆ ಅನ್ಯಾಲೋಚನೆ ಇದಕ್ಕಿಲ್ಲಸುರಲೋಲ ಮಹಧೃತಿ ಗುರು ವಿಜಯ ವಿಠ್ಠಲರೇಯಪೊರೆವನು ನಿನ್ನಯ ಬಲದಿಂದಲಾವಾಗ ೪
ಆದಿತಾಳ
ನಿನ್ನ ಕೃಪೆಯಿಂದ ಜ್ಞಾನವಂತರಾಹರೆಲ್ಲನಿನ್ನ ಕೃಪೆಯಿಂದ ಬಲವೀರ್ಯರಾಹರೈಯ್ಯಾನಿನ್ನ ಕೃಪೆಯಿಂದ ಐಶ್ವರ್ಯವಂತರೆಲ್ಲ ನಿನ್ನಯ ಕೃಪೆಯಿಂದ ಹರಿ ತಾನು ಒಲಿವನುನಿನ್ನಯ ಕೃಪೆಯಿಂದ ಪರಲೋಕವಾಗುವದುನಿನ್ನಯ ಕೃಪೆಯಿಂದ ಅನಾದಿ ಲಿಂಗ ದೇಹಛಿüನತ್ವ ಐದುವದು ಸಂಶಯ ಇದಕ್ಕಿಲ್ಲಚಿನ್ಮಯ ಮೂರ್ತಿ ಗುರು ವಿಜಯ ವಿಠ್ಠಲರೇಯನಿನ್ನಿಂದ ಮಾಡಿಸುವ ವಸುಧಿಯ ವ್ಯಾಪಾರ ೫
ಜತೆ
ನಿನ್ನ ಕರುಣದಿಂದ ನಿಖಿಳ ಸೌಖ್ಯವೆ ಉಂಟುಉನ್ನತ ಮಹಿಮ ಗುರು ವಿಜಯ ವಿಠ್ಠಲ ಒಲಿವ ||
[ನಳ ನಾಮ ಸಂ|| ಚೈತ್ರ ಬ|| ೧೨ ಆದಿತ್ಯವಾರ]

೧೬೩
ಉಗಾಭೋಗ
ಪಯಣವಾಗುವದಕ್ಕೆ ಎಳ್ಳನೀತಾದರುಅಸೂಯಪುಟ್ಟದು ನಿನ್ನ ಪಾದ ಸಾಕ್ಷಿಮಾಯಾ ರಮಣ ನಿನ್ನ ನೋಡಲಿಪ್ಪ ಸ್ಥಾನಪೂಯಲೆ೨ ಸಹವಾಗಿ ತೋರುವದು ಎನಗೆಕಾಯಾದೊಳಗೆ ಇದ್ದು ಪ್ರೇರಕನಾಗದವಗೆನೆಯವಲ್ಲವೋ ನಾಯ ಪೇಳ್ವದಕ್ಕೆಕಾಯಜ ಪಿತ ಬಂದು ಕಾಮಾ ಉಂಟುಲೇಶ ನೋಯಲಿಸದೆ ಮನಕೆ ತೋರಲಿಬೇಕುಶ್ರೀಯರಸನೆ ಇದಕೆ ವ್ಯವಧಾನ ಮಾಡದಲೆಪರಿಯ್ಯಾಪ್ತಿಸಂಸ್ಥಿತನಾದ ಗುರು ವಿಜಯ ವಿಠಲರೇಯ

೧೪೬
[ಭಾರತ ಕಥಾ, ಹಿಂದಿನ ಜನುಮದಲ್ಲಿ ಹರಿ ಕೃಪೆ ಮಾಡಿದ್ದು, ಇಂದಿನ ಜನುಮದಲ್ಲಿ ಆ ಚತುರ್ದಶ ವರುಷ ಕಾಲ ಕಳೆದದ್ದು, ಅನಂತರ ಲೌಕಿಕದಲ್ಲಿ ಪಾಪಘಟನೆಯಾದದ್ದು ಕ್ಷಮಿಸು ತನು-ಮನ-ಧನ ನಿನಗೆ ಸಮರ್ಪಣೆಗೈವೆ. ಶ್ರೀಹರಿಯೇ ಕೃಪೆ ಮಾಡೆಂದು ಪ್ರಾರ್ಥನಾ.]
ಧ್ರುವತಾಳ
ಅಂದು ಮಾನ್ಯರನ್ನು ಆವಾವ ಬಗೆಯಿಂದ ನಿಂದ ನಿಘ್ರ್ರಣವಾದ ವೃತ್ತಿಯಲ್ಲಿಕೊಂದ ಕಾರಣದಿಂದ ಈ ದೇಹದಲ್ಲಿ ನಿನಗೆವೃಂದ ದುಃಖಗಳ ವುಣಿಸಿ ಕೊನಿಗೆತಂದೆ ಲೋಕ೧ವನ್ನು ತ್ವರಿತದಿ ಐದಿಸುವೆನೆಂದು ನುಡಿದ ಮಾತು ನಿನಗೆ ಮಾತ್ರಛಂದವಾಗಿದೆ ನೋಡು ಮರುಳೆ ನೋಡುವರಿಗೆಅಂದವಾಗದಯ್ಯಾ ಅಧರ್ಮವಿದುಒಂದು ಕಾರ್ಯವ ಮಾಡಿ ಅದರ ಫಲವನ್ನುಬಂದು ಕೂಡಲಿಯೆಂಬ ಭ್ರಾಂತಿಯಾಗೆಕುಂದು ಲೇಶಗಳು ಎಲ್ಲಿ ಪೊಕ್ಕರು ಬಿಡದೆ ಸಂ-ಬಂಧವಾಗವು ಸಹಜವಿದುತಂದೆ ಈ ಪರಿ ಎನಗೆ ಇಲ್ಲದಿರಲು ಆವವೃಂದ ದುಃಖವನುಣಿಪ ದಾವ ಸೊಬಗೊಮಂದರೋದ್ಧರ ಧರ್ಮ ಮರ್ಯಾದಿಯಿಂದ ನೋಡೆಸಂಧಿಸಿಕೊಳ್ಳದಯ್ಯಾ ದೋಷ ಎನಗೆಇಂದಿರ ಪತಿ ನಿನ್ನ ಸ್ವಾತಂತ್ರವಾದ ಶಕುತಿಇಂದಲ್ಲಿ ಬಂದು ಕೂಡೆ ಯತನವೇನೊಮಂದನಾದವ ನಾನು ತಪ್ಪಿಸಿಕೊಂಡೆನೇನೊಕಂದರ್ಪ ಕೋಟಿ ರೂಪ ಸುಪ್ರತಾಪಾಹಿಂದಿನ ಕಾಲದಲ್ಲಿ ವಲ್ಲೆನೆಂದರೆ ಎನಗೆಪೊಂದದಿದ್ದಡೆ ಈಗ ನುಡಿದ ಮಾತು ಎ-ನ್ನಿಂದಲಿ ಪರಿಹಾರ ಮಾಡಿಕೊಂಬುವೆನುಹಿಂದೆ ಇಂದು ಮುಂದೆ ಯೆಂದೆಂದಿಗೆಬಂಧು ನಿನ್ನಿಂದಲೆ ಪ್ರೇರಿತನಾಗಿ ಸಕಲವೃಂದ ಸುಖ ದುಃಖವುಂಟೆ ದೇವಾಸಿಂಧುಶಯನ ಗುರು ವಿಜಯ ವಿಠ್ಠಲ ನಿನಗೆ ಸರಿಬಂದದ್ದು ಮಾಡೊ ನಿನ್ನ ನಂಬಿದವನೊ ೧
ಮಟ್ಟತಾಳ
ತನು ಮನ ಕರಣಗಳು ಕರಣಜ ವ್ಯಾಪಾರಮನೆ ಧನ ಮೊದಲಾದ ಕೀತ್ರ್ಯಪಕೀರ್ತಿಗಳುವನಜ ಪಾದಗಳಿಗೆ ನಿರುತ ವೊಪ್ಪಿಸಿಕೊಟ್ಟುನೀನೆ ಗತಿಯೆಂದು ನೆರೆ ನಂಬಿದವನವನ೧ ದೊಳಗೆ ಅದ್ದು ಕ್ಷೀರದೊಳಗೆ ಅದ್ದುತನು ಮನ ನಿನ್ನದು ಗುರು ವಿಜಯ ವಿಠ್ಠಲರೇಯಮನ ಬಂದದ್ದು ಮಾಡೊ ಏನಾದರು ಒಳಿತು ೨
ತ್ರಿವಿಡಿತಾಳ
ಜನುಮಾರಭ್ಯವಾಗಿ ಚತುರ್ದಶಬ್ದವು ಕರ್ಮಅನಿಯಮ್ಯನಾಗಿ ಮರದೆ ನಿನ್ನಇನಿತು ಕಾಲ೨ದಿಂದ ಯವ್ವನ ಮದದಿ ಪರವನತೇಯ ಅಭಿಲಾಷದಲ್ಲಿ ಶಿಲ್ಕಿ ವರಣನಾಪೇಕ್ಷದಿಂದ ಅವರ ಉತ್ತಮರೆನದೆಘನವಾದ ದೋಷವೆಂಬ ಪರಿಜ್ಞಾನವಿಲ್ಲದಲೆಇನಿತು ಕಾಲವ ಕಳದೆ ಕೆಲವು ಕಾಲಧನದಾಶದಿಂದಲಿ ಲೌಕಿಕ ಅನುಸರಿಸಿಜನರ ಹಿಂಸವ ಮಾಡಿ ಪಾಪ ಪುಣ್ಯಮನದೊಳು ಸ್ಮರಿಸದೆ ಇಪ್ಪ ಕುನರರಿಗೆಇನಕೋಟಿ ತೇಜ ನನ್ನ ಸ್ಮರಣಿ ಎಂತೊಅನಿತು ಕಾಲದ ಮಧ್ಯ ಮಾಡಿದ ಅಘರಾಸಿಗಣನೆ ಮಾಡುವುದಕ್ಕೆ ನೀನೆ ಬಲ್ಲಿಎಣೆ ಯಾವುದಯ್ಯಾ ಎನ್ನ ದೋಷ ಸಮೂಹಗಳಿಗೆ ಬ-ವಣೆ ಬಟ್ಟೆನು ಇನಿತು ಭವದಿ ಬಂದುಮನುಜರ ಕಂಗಳಿಗೆ ಭಕತನ ತೆರದಿ ತೋರಿಮನದಿ ನಿನ್ನ ಕುರುಹ ಪಥವ ತಿಳಿದೆಬಿನಗು೧ ಡಂಬಕನಾಗಿ ಚರಿಸಿದೆ ಕೆಲವು ಕಾಲ ಕ-ರಣಗಳು ಎನಗೆ ಪ್ರತಿಕೂಲವಾಗಿಕನಸಿನಲ್ಲಾದರು ನಿನ್ನ ಕಾಣದೆ ಪೋದೆಮುನಿಗಳ ಶಿರೋರನ್ನ ಗುಣಪೂರ್ಣನೆಅನುಜನ ವಿಯೋಗ ಜನಿತವಾದ ದುಃಖಕ್ಷಣಕ್ಷಣಕೆ ಹೃದಯ ಭೇದಿಸುತ್ತಶಣಿಸುವರು ಇದನು ಮನೆ ಮಾಡಿ ದೈತ್ಯರುಇನಿತರೊಳು ಒಂದು ವ್ಯಾಜದಿಂದಜನರಿಂದ ನಿಂದಿಸಿದಿ ತೃಣಕ ಸಮಾನ ಮಾಡಿಶಣಸಿದಿ೨ ಬರಿದೆ ನೀನು ಮುನಿದು ನೋಡಿಜನುಮಾರಭ್ಯವಾಗಿ ಇಂದಿನ ಪರಿಯಂತಖಣಿಯಾದ ನಿರ್ದಯ೩ ತಾಳಿ ನೀನುವನಜಾಕ್ಷ ನಿನ್ನ ಮುಖದಿ ನುಡಿದ ತೆರದಿ ಎನಗೆಉಣಿಸಿದಿ ದುಃಖಗಳ ಅಪರಿಮಿತನೀನೆವೆ ಗತಿ ಎಂದು ನೆರೆ ನಂಬಿದವನಜನುಮ ಜನುಮದ ಪುಣ್ಯ ರಾಶಿಗಳನುಹನನ ಮಾಡುವದು ಇದು ಘನತಿಯೇ ದೇವಸನಕಾದಿ ಮುನಿನುತ ಸಾರ್ವಭೌಮಾತನು ಮನದೊಡಿಯ ಗುರು ವಿಜಯ ವಿಠ್ಠಲರೇಯಏನು ಬಂದರು ನಿನ್ನ ಬಿಡಲಿಲ್ಲವೋ ೩
ಅಟ್ಟತಾಳ
ಒಡಿಯನು ಕೋಪಿಸಿ ಅಡಿಗಳರ್ಚಿಪರತಡಿಯದ ಕಾರಾಗೃಹದಲ್ಲಿ ಸೇರಿಸಿ ನಿ-ರ್ಭಿಡಿಯದಿಂದಲಿ ಕ್ರೂರ ದೈತ್ಯರಿಗೊಪ್ಪಿಸಿಕಡು ಕೋಪದಿಂದಲಿ ಶಿಕ್ಷವ ಮಾಡಿಸಿಬಿಡಿಸಿಕೊಂಬುವರಾರು ಹಿತ ಮಾಡುವವರಾರುಸಡಗರದಿಂದಲಿ ನೋಡೆ ಕರುಣ ಮಾಡುವಾಗಎಡಬಲದಲಿ ಆಪ್ತರಾಗಿಹರೆಲ್ಲಸಡಲ ಬಿಡುವಾಗ ಅವರೆಲ್ಲ ಎನ್ನನುಕಡೆಗಣ್ಣ ನೋಟದಿ ನೋಡರೊಮ್ಮಿಗೆ ದೇವಮೃಡ ಮುಖ್ಯ ಸುರರನ್ನ ಶಿಕ್ಷ ರಕ್ಷಕ ನಿನ್ನಒಡಿಯತನದ ಶಾಸನವನ್ನು ಇನಿತಿರೆಬಿಡಿಸಿಕೊಂಬುವರಾರು ಭವದಿಂದಲ್ಲಿ ಎನ್ನಗೂಢ ಕರುಣಿ ನಿನ್ನ ಮನ ಬಂದುದು ಮಾಡೊಜಡಜ ಸಂಭವ ನುತ ಗುರು ವಿಜಯ ವಿಠ್ಠಲರೇಯಜಡಮತಿ ನಾ ನಿನ್ನ ತುತಿಸಬಲ್ಲೆನೆ ಹರೆ ೪
ಆದಿತಾಳ
ಆವಾವ ಕಾಲದಲ್ಲಿ ದೇಹ ನಿನ್ನದೆಂಬೊ ಮಾತುಕೇವಲ ದೃಢವಾಗಿ ನುಡಿದದ್ದು ನಿಜವಾಗೆಧಾವತಿಗೊಳಿಸದಲೆ ಈ ವ್ಯಾಳ್ಯಗೊದಗುವದುಸೇವಕನಾದ ಮೇಲೆ ದೂರ ನೋಡುವದೇ(ದ್ಯಾ)ಕೆಪಾವನ್ನ ಮೂರ್ತಿ ಗುರು ವಿಜಯ ವಿಠ್ಠಲರೇಯಾಕಾವದು ಅಪರಾಧ ಸಾಸಿರವಿರಲ್ಯಾಕೆ ೫
ಜತೆ
ಗಾತ್ರ ನಿನ್ನದು ದೇವಾ ಮನ ಬಂದ ತೆರ ಮಾಡೊಸೂತ್ರಧಾರನೆ ಗುರು ವಿಜಯ ವಿಠ್ಠಲ ಪ್ರೀಯಾ ||
(ನಳ ನಾಮ ಸಂ || ಚೈತ್ರ ಬ || ೧೦ ಬುಧವಾರ)

೧೪೫
ಧ್ರುವತಾಳ
ಅಂದು ಶರತಲ್ಪ೧ದಲ್ಲಿ ಮಲಗಿಸಿದದರಿಂದಇಂದು ದುಃಖದ ಶಯ್ಯಾಲೊರಗಿಸಿದಿಯಾಅಂದು ಶಸ್ತ್ರಾಸ್ತ್ರದಿಂದ ನೊಂದಿಸಿದದರಿಂದಇಂದು ನುಡಿ ಅಂಬಿ೨ಲೇತಿಸಿದೆಯಾಅಂದು ಮಾನ್ಯನೆನಿಸಿ ವಂದಿಸಿ ಜನರಿಂದಇಂದು ಖಳರಿಂದ ನಿಂದಿಸಿದೆಯಾಅಂದೆನ್ನ ಪಕ್ಷವೊಹಿಸಿ ಸಖ್ಯನೆನಿಸಿ ಈಗನಿಂದು ನೋಡದಂತೆ ದ್ವೇಷಿಸಿದೆಯಾಅಂದು ಜ್ಞಾನದಿಂದ ಅಧಿಕನೆನಿಸಿ ಈಗಮುಂದೆ ತಿಳಿಯದಂತೆ ಮಾಡಿದಿಯಾಅಂದು ಬಲದಿಂದ ಶೂರನೆನಿಸಿ ಈಗಮುಂದೆ ತಿಳಿಯದಂತೆ ಮಾಡಿದಿಯಾಇಂದು ಕರವನೆ ಎತ್ತಸಮರ್ಥನೆಅಂದು ಶತ್ರುಗಳು ಮೊಗವೆತ್ತಿ ನೋಡುವುದಕ್ಕೆಸಂದೇಹ ಬಡುವರು ಎನ್ನ ಕಡೆಇಂದು ದುಷ್ಟರೆಲ್ಲ ಘುಡು ಘುಡಿಸುತ ಹೃದಯಮಂದಿರದೊಳು ಸೇರಿ ದಣಿಸುವರುಇಂದಿರೆ ಪತಿ ನಿನ್ನಿಂದ ಮಾಡಿದ ಕ್ಲಪ್ತಸಿಂಧುಜಾದ್ಯ೧ರೆಲ್ಲ ಮೀರಲೊಶವೆಕಂದರ್ಪಪಿತ ನಿನ್ನ ನೆರೆನಂಬಿದವರಿಗೆಕುಂದು ಮಾಡುವದು ಛಂದವೇನು ಬಂಧು ಅನಿಮಿತ್ಯ ಗುರು ವಿಜಯ ವಿಠ್ಠಲರೇಯಇಂದು ಎಂದೆಂದು ನೀನೆ ಗತಿಯೋ ೧
ಮಟ್ಟತಾಳ
ಕುರುವೃದ್ಧನ ದುಃಖ ಕಾರಣಾಗಿದ್ದವರ ಸತಿ ನಿರ್ಮಿಸಿದಾ ತೆರ ಇಂದಿಗೆ ಎನ್ನಗರುವ ನೀಗುವದಕ್ಕೆ ಇವಳ ನೇಮಿಸಿ ಇನಿತುಶರ ಸಮ ನುಡಿ ಮಂಚದಲ್ಲೊರಗಿಸಿದೆಲೊ ದೇವಸುರರೆಲ್ಲರು ಅಂದು ಮುನಿದು ಶಾಪವನೀಯೆಪರಿ ಮೂರರಲಿಂದ ಸರಿ ಮಾಡಿದಿ ಸ್ವಾಮಿಹರಿ ನಿನ್ನಿಂದಲೆ ಪರ ಸ್ವಪ್ನದಿ ತಿಳಿದುಮರಹು ಪುಟ್ಟಿತು ನಿನ್ನ ಬಂಧಕ ಶಕ್ತಿಯಲಿಸರಿ ಹೋಯಿತು ಪೂರ್ವದ ಕರ್ಮದ ಫಲವೆಲ್ಲಮರಳೆ ಮರಳೆ ಇದನು ಹಂಗಿಪದು ಸಲ್ಲನರ ಸಾರಥಿ ಗುರು ವಿಜಯ ವಿಠ್ಠಲರೇಯಕರುಣ ಮಾಡಲಿಬೇಕು ಇನ್ನು ಕರ ಪಿಡಿದು ೨
ತ್ರಿವಿಡಿತಾಳ
ಪರಲೋಕಕ್ಕೆ ಬಾ ಎಂದು ಸೂಚಿಸಲಾಗಿವರಭೂಮಿ (ಪರಭೂಮಿ) ವಾಸನಾ ತ್ಯಜಿಸಿದಾಗಿಪರಿಯು ಇನಿತು ಮಾಡಿ ಇರಲಿ ವಲ್ಲೆನೊ ಎಂದುವರಲುವಂತೆ ಮಾಡಿ ನೋಡಿದಿಂದುಬರುವ ಹೋಗುವದಕ್ಕೆ ಸ್ವಾತಂತ್ರ್ಯ ಎನಗುಂಟೆಹರಿ ನೀ ನಡಿಸಿದಂತೆ ನಡೆವರೆಲ್ಲಸರಿ ಹೋಯಿತೇ ನಿನ್ನ ಅನಿಮಿತ್ಯ ಸಖತನಸ್ಥಿರವಾಗದಿರೆ ನಿನ್ನ ವಚನ ವ್ಯಭಿ-ಚಾರವಾಗದೇನೊ ವಿಬುಧರಿಗಸಮ್ಮತತೋರದಂತೆ ಮಾಡು ಕೃಪೆಯ ನೀಡುಪರಮ ಪುರುಷ ಗುರು ವಿಜಯ ವಿಠ್ಠಲರೇಯಜರಿದು ನೋಡಲಿ ಬೇಡ ಕಠಿಣತ್ವ ಬಿಡು ಬಿಡು ೩
ಅಟ್ಟತಾಳ
ಹಿಂದೊಂದು ಬಗೆಯಿಂದ ಗುರುದ್ರೋಹ ಘಟಸಿದಿಇಂದೊಂದು ಪರಿಯಲ್ಲಿ ಒದಗಿಸಿದೆ ಅದೆಮುಂದೆ ತಿಳಿಯದ ಮಂದ ಮನುಜಂಗೆಪೊಂದಿದ ಪ್ರಾರಬ್ಧ ಜಾರಿ ಪೋಗುವದೆಒಂದಾದರು ನಿನ್ನಿಂದ ವಿಹಿತವಾಗಿಎಂದಿಗಾದರು ಮಾಡಿ(ಡ)ದ್ದು ನಿಜವಿತ್ತೆಹಿಂದೆ ಇಂದು ಮುಂದೆ ಬಂದ ಪಾಪ ಪುಣ್ಯತಂದೆ ನಿನ್ನ ಪಾದ ದ್ವಂದ್ವಾರವಿಂದಕ್ಕೆಸಂದೇಹವಿಲ್ಲದೆ ಸಮರ್ಪಣೆ ಮಾಡಿದೆಕುಂದುಗಳೆಣಿಸದೆ ಪೊರಿಯಬೇಕೆನ್ನನು ಮು-ಕುಂದ ಮುರಾಂತಕ ಗುರು ವಿಜಯ ವಿಠ್ಠಲರೇಯಪೊಂದಿಸು ಭಕ್ತರ ಸಂಗ ಸುಖದಲ್ಲಿ ೪
ಆದಿತಾಳ
ಮಮಕಾರದಿಂದಲೆ ಅಂಶಿ೧ಗೆ ಭಿನ್ನನಾದೆಮಮಕಾರದಿಂದಲೆ ಅಂಶಕ್ಕೆ೨ ಭಿನ್ನನಾದೆಮಮಕಾರದಿಂದಲೆ ಪದವಿಗೆ ದೂರನಾದೆಮಮಕಾರದಿಂದಲೆ ಜನುಮವೆನಗೊದಗಿತುಮಮಕಾರದಿಂದಲೆ ಸೌಖ್ಯವ ತೊಲಗಿತುಮಮಕಾರದಿಂದಲೆ ಜ್ಞಾನತಿರೋ ಭಾವಮಮಕಾರದಿಂದಲೆ ಸಕಲ ದುಃಖಾಶ್ರಯಮಮಕಾರದಿಂದಲೆ ನಾಖತಿ೩ಯಿಲ್ಲ ಜೀವನಕ್ಕೆನಮಮ ನಮಮ೪ ಎಂದು ದೃಢವಾಗಿ ತಿಳಿದರ್ಗೆಶ್ರಮವಿಲ್ಲ ಶ್ರಮವಿಲ್ಲ ಶ್ರುತಿ ಸ್ರ‍ಮತಿ ಸಮ್ಮತಅಮರವಂದಿತ ನಿನ್ನ ಮಾಯವೆಂಬೊ ಪಾಶದಲ್ಲಿಅಮರಾಧ್ಯಕ್ಷರೆಲ್ಲ ಪ್ರವಿಷ್ಟರಾಗುವರುಕುಮತಿಯು ಎನ್ನಿಂದ ದಾಟುವ ಬಗೆಯೆಂತೊಕಮಲಾಪ್ತ ತೇಜ ತವಪಾದಕ್ಕೆ ನಮೊ ನಮೊಮಮಕಾರ ಕೊಡದಿರು ಇನ್ನಿಂದಿಗಾದರುಶ್ರೀ ಮನೋಹರ ಗುರು ವಿಜಯ ವಿಠ್ಠಲರೇಯಶಮ ದಮಾದಿಗಳಿತ್ತು ಸೇರಿಸು ನಿಜ ಸ್ಥಾನ ೫
ಜತೆ
ಸತ್ಯ ಸಂಕಲ್ಪಕ್ಕೆ ಹಾನಿ ಎಂದಿಗೂ ಉಂಟೆನಿತ್ಯ ತೃಪ್ತನೆ ಗುರು ವಿಜಯ ವಿಠ್ಠಲರೇಯ ||
(ರಾಕ್ಷಸ ಸಂ || ಭಾದ್ರಪದ ಶುದ್ಧ ೧೦ ಶುಕ್ರವಾರ)

೧೪೯
[ಅತಿ ಆಪ್ತನಾದ ಹರಿಯೆ, ಸಕಲ ಚರಾಚರ ಜಗತ್ತು ಸೃಜಿಸಿ, ಜೀವರ ಯೋಗ್ಯತೆ ಯಂತೆ ಸುಖ ದುಃಖಾದಿಗಳನ್ನು ಕೊಡುವನೆ. ನಿನ್ನ ಆಜ್ಞಾದಲ್ಲಿರುವವನಿಗೆ ನಿಷ್ಕರುಣದಿಂದ ಅಜ್ಞಾನ ದುಃಖದೊಳಿಡಿಸುವುದು ನ್ಯಾಯವೆ ? ಸಕಲ ಕಾಲದಲ್ಲಿ ಪ್ರಾಣನೆಂದೆನಿಪ ಹರಿಯೆ ರಕ್ಷಿಸು.]
ಧ್ರುವತಾಳ
ಅತಿ ಹಿತ ಮಾಡುವಂಥ ಆಪ್ತನಾದವನಾಗಿಅತಿಶಯ ನಿಘ್ರ್ರಣ್ಯ ವರ್ತಿಯಿಂದಅತಿ ಘೋರತರವಾದ ದುಃಖವ ಬಡಿಸುವದುವಿತತ ಪ್ರಖ್ಯಾತ೧ನಿಗೆ ಘನತಿ ಏನೋ ಅ-ಶಿತ (ಶೀತಿ) ನಾಲ್ಕು ಲಕ್ಷ ಸಂಖ್ಯ ಜೀವರಾಶಿಗಳು ಸ-ದ್ಗತಿಯ ಚಿಂತನೆಯಿಂದ ಸೃಷ್ಟಿ ಮಾಡಿ (ಮಾ) ‘‘ಮಯಾ ತತ ಮಿದಂ ಸರ್ವಂ ಜಗದವ್ಯಕ್ತ ಮೂರ್ತಿನಾ’’ಅತಿ ವ್ಯಾಪ್ತ ರೂಪನಂತೆ ದಿಂದನಿಂದು ಪ್ರ-ಕೃತಿ ಕಾಲ ಕರ್ಮ ಜೀವ ಯೋಗ್ಯತಿಯಂತೆಕೃತಿಸಿ ಸತತ ಪೊರೆವೊ ಬಂಧುನಾಗಿಈ ತೆರ ಮಾಡುವದು ಸಮ್ಮತವಾಗಿ ತೋರೆಯತನವೇನಯ್ಯಾ ಅಲ್ಪ ಜೀವರಿಂದಖತಿಯುಕ್ತ ಜೀವರಿಗೆ ದುರ್ಗತಿಯ ಚಿಂತಿಸುವದುಶ್ರುತಿಗೆ ಸಾರ್ಥಕವೆಂದು ಅನ ಸಲ್ಲದುಪ್ರತಿ ಪ್ರತಿ ಕಾಲ ನಿನ್ನಾಜ್ಞಾಧಾರಕನಾಗಿಕ್ಷಿತಿಯೊಳು ಚರಿಸುವ ನರನಿಗೆಗತಿ ಯಾವದುಂಟೊ ಪೇಳೊ ಎಂದೆಂದಿಗಾದರುವೃತತಿ ಜಾಸನ ಮುಖ್ಯ ನಿರ್ಜರೇಶ ಪ-ದ್ಧತಿ ತಪ್ಪದಂತೆ ನೋಡು ನ್ಯಾಯವ ಬಿಡದಲೆಈ ತೆರ ನಿಗ್ರಹಕ್ಕೆ ನಾನರಹನಾಗೆಅತಿ ವಾಮ ಪ್ರೀಯನೆಂಬದು ಸಾರ್ಥಕವೆನಲ್ಯಾಕೆಸತ್ಯ ಸಂಕಲ್ಪನಾದ ಸಾರ್ವಭೌಮಾಸತಿ ಪತಿ ಗಿರಿ ನಿಲಯಾ ಗುರು ವಿಜಯ ವಿಠ್ಠಲ ರೇಯಾಯಾತಕ್ಕೆನ್ನನು ಬರಿದೆ ಬಳಲಿಸುವಿ ೧

ಮಟ್ಟತಾಳ
ನಿನ್ನಯ ಸಮ್ಮುಖವೇ ಅನಂತ ಸುಖವಯ್ಯಾನಿನ್ನ ಪರಾಙ್ಮುಖವೆ ಘನ್ನ ದುಃಖವೇ ಹರಿಯೇಮನ್ನಿಸಿ ಕೇಳುವದು ನಿನ್ನಿಂದ ನಿಯಾಮಿಸಿದಇನ್ನೀ ಧರೆಯಲ್ಲಿ ಉನ್ನಹ ದುಃಖಗಳುಅನಂತವಿರಲಿನ್ನು ಇನ್ನು ಇದರೊಳು”ಕಳಾನಾರ್ಹಂತಿ ಷೋಡಶೀಂ”ನಿನ್ನ ವಿರಹಿತವಾದ ಸ್ಥಾನದ ಸ್ಥಿತಿಯಿಂದಘನ್ನ ನರಕ ಎನಗೆ ಬಹು ಲೇಸು ಬಹು ಲೇಸುಬಿನ್ನಪವನು ಕೇಳಿ ಅವ್ಯವಧಾನದಲಿಮನ್ಮನದೊಳು ಪೊಳೆದು ಬನ್ನಗಳೋಡಿಸಿಅನಂತ ಭೂಷಣಾದ್ರಿ ನಿಲಯ ಗುರು ವಿಜಯ ವಿಠ್ಠಲರೇಯಾಎನ್ನಪರಾಧಕ್ಕೆ ನೀನೆ ಮೂಲವು ಕಾಣೋ ೨
ತ್ರಿವಿಡಿತಾಳ
ಪರಮ ಬಲಿಷ್ಠನಾದ ಧರಣಿಪತಿಯ ಸುತನನರರು ಬಾಧಿಪರುಂಟೆ ಎಂದೆಂದಿಗೂಹರಿ ಪಕ್ಕ ಸೇರಿದಂಗೆ ಕರಿಗಳ ಭಯ ಉಂಟೆವೀರ ಪತ್ನಿಯ ಶೀರಿ ಶಳೆವ ಧೀರರುಂಟೆಹರಿ ನಿನ್ನ ಪೊಂದಿದರ್ಗೆ ದುರಿತದ ಲೇಪ ಉಂಟೆ ಈತೆರವಾಗಿ ಶ್ರುತಿ ಸ್ರ‍ಮತಿ ವರಲುತಿರೆಪರಮಾಶ್ಚರ್ಯವಾಗಿ ತೋರುತಲಿದೆ ನಿನ್ನಚರಿಯಕ್ಕೆ ನಮೊ ನಮೊ ಕರುಣಾನಿಧೆನರಕಕ್ಕೆ ಸಮವಾದ ಮನುಜ ಲೋಕದಲ್ಲಿಸೇರಿಸಿ ದೃಢವಿದ್ಯ ಕವಚ ತೊಡಿಸಿಪರಮ ಬಲಿಷ್ಠರಾದ ಕಲಿ ಮುಖ್ಯ ದೈತ್ಯ ವರ್ಗಅರಿಗಳ ಸಂಗದಲಿ ನಿಯಾಮಿಸೆದುರುಳರೆಲ್ಲರು ಅತ್ಯಹರ್ಷಿತರಾಗಿ ಸದಾ ಧಿ-ಕ್ಕರಿಸುತ ದೂರರಾಗಿ ದುಃಖ ಬಡಿಸೆಪರಿಹರಿಸುವ ಶಕ್ತರಾರನ ಕಾಣದಲೆಹರಿ ನೀನೆ ಗತಿ ಎಂದು ಕೂಗಿದರೂಪರಮಾಪ್ತನಾಗಿ ಈಗ ಆರಿಗಾರಂತೆ ನೋಡಿವರಲುವ ವಾಕ್ಯವನ್ನು ವಹಿಸದಲೇಪರಮ ಕಾಠಿಣ್ಯ ವೊಹಿಸಿ ಜರಿದು ನೋಳ್ಪರಿಂದಹರಿಯೆ ಎನಗೆ ನಿನಗೆ ಘಟಣವಾದಪರಿ ಪರಿ ಸಂಬಂಧ ಮರಿಯಾದಿಗಳು ಇಂದುಸರಿದು ಪೋದವೇನೊ ನಿಃಶೇಷವಾಗಿಗಿರೀಶಾದ್ರಿ ನಿಲಯ ಗುರು ವಿಜಯ ವಿಠ್ಠಲರೇಯಾದರುಶನವಾಗದಿಪ್ಪ ದಿನವೆ ದುರ್ದಿನವೆನಗೆ ೩
ಅಟ್ಟತಾಳ
ಕಪಟ ಮಾನವನೊಬ್ಬ ಕಾಮ್ಯುದೇಶವಾಗಿನೃಪ ಮೊದಲಾದ ಮಹಾ ಧನಿಕರಾಶ್ರಯ ಮಾಡಿಕೃಪೆಯ ಸಂಪಾದನಗೋಸುಗ ಇಲ್ಲದವಪು ಸಂಬಂಧಗಳು ಬಲು ಪರಿ ಕಲ್ಪಿಸಿಉಪವಾಗಲಿದಕೆಲ್ಲ ಸಹಿಸಲಾರೆನೆಂಬಅಪೂರ್ವವಾಗಿದ್ದ ವಿನಯೋಕ್ತಿಯಿಂದಲಿಸ್ವಪ್ರಯೋಜನವ ಸಂಘಟಣಾ ನಂತರಸಪ್ನದಲ್ಲಾದರು ಸ್ಮರಿದಿರುವದುಚಪಳ ಮಾನವರಿಗೆ ಸಹಜವೆಂದೆನಿಪದು ನಿ-ಷ್ಕಪಟನಾದ ನಿರ್ಮಲಾತ್ಮಗೆ ಇದುವಿಪುಳವಾದ ಕೀರ್ತಿ ಎನಿಪದು ಎಲೊ ದೇವಕಪರ್ದಿಗಿರಿ ನಿಲಯಾ ಗುರು ವಿಜಯ ವಿಠ್ಠಲರೇಯಾಈ ಪರಿ ಮಾಳ್ಪುದುಚಿತವೆಂದೆನಿಪದೊ ೪
ಆದಿತಾಳ
ಸತ್ಯ ಸಂಕಲ್ಪ ನಿನ್ನ ಗುಣ ರೂಪ ಕ್ರೀಯಂಗಳುಅತ್ಯಂತ ಸತ್ಯವಯ್ಯಾ ಶ್ರುತಿ ಸ್ರ‍ಮತಿ ಸಮ್ಮತಾದಿಭೃತ್ಯನ ವಾಕ್ಯವನು ವ್ಯರ್ಥವ ಮಾಡದಲೆಚಿತ್ತಕ್ಕೆ ತಂದು ಇದಕೆ ಉತ್ತರ ಪೇಳುವದುಈ ತೆರ ಮುನಿವದಕ್ಕೆ ಆತ್ಮಾರ್ಥವಾದ ಅಪ-ಕೃತ್ಯಗಳಿಲ್ಲವಯ್ಯಾ ವಿದ್ವತ್ಸಮ್ಮತಾದಿಭತೃಜ್ಞಾ ನಡಿಸುವ ಪತ್ನಿಯು ಸರ್ವಕಾಲ ಪ-ವಿತ್ರಳೆನಿಪಳು ಪುಣ್ಯ ಪಾಪ ಕರ್ಮದಿಂದಈ ತೆರದಲಿ ನೋಡು ಪ್ರತ್ಯಙ್ಮುಖನಾಹದಕ್ಕೆ ನಿ-ಮಿತ್ಯ ಏನುಂಟು ಭೃತ್ಯ ವತ್ಸಲ ಪೇಳು ಧಾ-ರಿತ್ರಿಯ ಪತಿ ತಾನು ಭೃತ್ಯರ ದೋಷವೆಣಿಸೆನಾಸ್ತಿ ಎಂದೆನ್ನ ಸಲ್ಲ ಲೌಕಿಕ ನ್ಯಾಯದಿಂದಚಿತ್ತವೆ ಮೊದಲಾದ ಇಂದ್ರಿಯ ಗ್ರಾಮಗಳಿಗೆಕರ್ತು ನೀ ಮಾಡಿಸೆ ನಾತ್ಯಜನಿಗೆ ಯೋಗ್ಯನೇನೊ ದುಸ್ತ್ಯಜವಾದ ಒಂದು ದುಷ್ರ‍ಕತ್ಯವಿರಲ್ಯಾಕೆಚಿತ್ತಜಪಿತ ನಿನ್ನ ನಾಮಸ್ಮರಣೆಯನ್ನು ವಿ-ಜಿತ್ತವಾದ ಪಾಪ ಸಂಘ ಎಂದಿಗಾದರಿಲ್ಲಯತ್ಕಿಂಚದ್ದೋಷವನ್ನು ಅಪಹಾರ ಮಾಡುವಂಥಮಿತ್ರನಾದ ನಿನ್ನಿಂದ ಗತವಾದ ಜನ್ಮದಲ್ಲಿಉತ್ರ‍ಕಷ್ಟ ಅನುಗ್ರಹ ಮಾಡದೆ ಪಡಲಿಲ್ಲಸತ್ಪುಣ್ಯ ರೂಪ ನೀನು ಸಥಿಯಿಂದ ಸಲಹುತಿರೆಶತ್ರುರೂಪವಾದ ಪಾಪ ಎನ್ನೇನು ಮಾಳ್ಪುದಯ್ಯಾಸತ್ಯವಾಗಿ ನುಡಿವೆ ಗ್ರಹಿಸು ಅನಾವೃಷ್ಟಿಮಯವಾದ ಭೂಮಿ೧ ಸ್ಥಿತಿಯಿಂದ ಈ ದೇಹ ಪತನವೆ ಸುಖವಯ್ಯಾಸತ್ಯ ಸತ್ಯ ಪುನಃ ಸತ್ಯ ಚಿತ್ತೈಸು ಇದನ್ನೇವೆವ್ಯರ್ಥವಾಗಿ ಎನ್ನನು ಬಳಲಿಸಿ ನೋಳ್ಪದ್ಯಾಕೆಮುಕ್ತವಾದ ಎರಡರೊಳು ಒಂದನು ಪಾಲಿಪದುಕೃತ್ತಿವಾಸಾದ್ರಿ ನಿಲಯ ಗುರು ವಿಜಯ ವಿಠ್ಠಲರೇಯಾಹೊತ್ತು ಹೋಗಾಡಿ ಘೋರ ದುಃಖವ ಬಡಿಸದಿರು ೫
ಜತೆ
ಪ್ರಾಣನೆಂದೆನಿಸುವಿ ಎನಗಾವ ಕಾಲದಲ್ಲಿಸ್ಥಾಣು ಪರ್ವತವಾಸ ಗುರು ವಿಜಯ ವಿಠ್ಠಲ ||

೧೩೧
[ಪುನಃ ಅಪರೋಕ್ಷ ಒದಗಿದ ನಂತರದಿ ಶ್ರೀಹರಿಯನ್ನು ನಾನಾ ಬಗೆಯಿಂದ ಸ್ತೋತ್ರ ಗೈದದ್ದು. ಮುನ್ನಿನ ಸುಕೃತದಿಂದ ಇಂದು ಮಂದಹಾಸದಿಂದ ಹೃನ್ಮಂದಿರದಿ ದರ್ಶನವಿತ್ತು ನುಡಿದ ವಚನಕ್ಕೆ ಧನ್ಯನಾದೆ. ಅನಂತ ಜನ್ಮದ ಪುಣ್ಯ ಫಲವೆಂದು ಸ್ತೋತ್ರ.]
ಧ್ರುವತಾಳ
ಅನಂತ ಜನ್ಮದಲ್ಲಿ ನಿನ್ನಗಲದೆ ಯಿದ್ದಉನ್ನತ ಭಕುತಿಲಿ ಭಜಿಸಿದೆನೋಅನಂತ ಜನ್ಮದಲ್ಲಿ ಆವಾವ ಬಗೆಯಿಂದಚಿನ್ಮಯನಾಗಿ ಪದಗಳರ್ಚಿಸಿದೆನೋಅನಂತ ಜನ್ಮದಲ್ಲಿ ಆವಾವ ವಸ್ತುಗಳುಅನ್ನಪೇಕ್ಷದಿಂದ ಯಜಿಸಿದೆನೋಅನಂತ ಜನ್ಮದಲ್ಲಿ ವಿಧ್ಯುಕ್ತವಾದ ಕರ್ಮವನ್ನು ಮಾಡಿ ನಿನ್ನ ಬೇಡಿದೆನೋಧನ್ಯರಾದ ಪಿತೃ ಸಮಾನರೆಂಬೋ ದ್ವಯರು೧ಇನ್ನಾವ ಬಗೆಯಿಂದ ವೊಲಿಸಿದರೋಅನುಜರಾದವರು೨ ಎನ್ನ ನಿಮಿತ್ಯವಾಗಿಮನ್ನದಿ ಹರಿ ನಿನ್ನ ತುತಿಸಿದರೋ ಎನ್ನಿಂದ ಮಾನ್ಯರಾದ ಈರ್ವರು ಸತಿಯರುಮನ್ನಿಷಣ ಶೀರ್ಷ ಮಾಡಿದರೂಜನ್ನಕನಲ್ಲಿ ನಿನ್ನ ವರವೆಷ್ಟು ಬೇಡಿದನು ಜನ್ನನಿ ಇಲ್ಲಿ ಹಿತ ಚಿಂತಿಸಿದಳೊತನ್ನಿಮಿತ್ಯವಾಗಿ ತತ್ವಾಭಿಮಾನಿ ಸುರರುಮನ್ನಿಸಿ ವರಗಳನ್ನು ಸಲ್ಲಿಸಿದರುಇನ್ನಿವರ ಮಧ್ಯ ಆವದು ತಿಳಿಯಲರಿಯೆಎನ್ನ ಪುಣ್ಯದಿಂದ ಇನಿತಾಹದೋಅನಂತ ನಾಮರೂಪ ಗುರು ವಿಜಯ ವಿಠ್ಠಲರೇಯಾಎನ್ನ ಭಾಗ್ಯಕ್ಕೆ ಸಮ ಆವುದಯ್ಯಾ ೧
ಮಟ್ಟತಾಳ
ಸಲ್ಲಿಂಗ ವಿಲ್ಲಿಂಗ ಸುರರೆಲ್ಲರು ನಿನ್ನವಾಲ್ಗೈಸುತಲಿಹರೊ ಪರಮ ಭೀತಿಯಿಂದ ಶ್ರೀ ಲಕುಮಿ ನಿನ್ನ ಗುಣ ಕ್ರೀಯಗಳನ್ನುಆಲೋಚಿಸಿ ನೋಡೇ ಅನಂತ ಕಾಲಕ್ಕುಮೂಲನೀತವ ತಿಳಿದೆ ಆಶ್ಚರ್ಯದಿ ಮುಣಗಿಕಾಲ ದೇಶ ವ್ಯಾಪ್ತಳೆನಿಸಿ ನಿನ್ನ ಪಾದ ವಾಲಗ ಮಾಡುವಳೊ ಉಪಕರಣ ತಾನಾಗಿಜಾಲ ಮಹಿಮ ನೀನು ಗೂಢಚಾರಿ ಎನಿಸಿಲೀಲ ಮಾನುಷ ಕೈವಲ್ಯ ವಿಗ್ರಹ ನೀನಾಗಿ ವಿ-ಶಾಲ ಕರುಣದಿಂದ ಅನುಗ್ರಹಿಸಿದುದಕೆಮೇಲಾವದು ಎನ್ನ ಸಂಪದವಿಗೆ ಇನ್ನುವ್ಯಾಳ ವ್ಯಾಘ್ರರೂಪ ಗುರು ವಿಜಯ ವಿಠ್ಠಲರೇಯಾಕಾಲ ಕಾಲಕೆ ನಿನ್ನ ಉಪಕಾರವು ಮರಿಯೇ ೨
ತ್ರಿವಿಡಿತಾಳ
ಆಪಾಂಗ ದೃಷ್ಟಿಯಿಂದ ಸೃಷ್ಟಿ ಸ್ಥಿತ್ಯಾದಿ ಅಷ್ಟ ವ್ಯಾಪಾರ ಮಾಡುವಳು ಲಕುಮಿ ತಾನುಆಪಜಾಸನ೧ ಮುಖ್ಯ ಸುರರು ವಿಜಯವನ್ನುಆಪಾಂಗ ಲೇಶದಿಂದ ಐದುವರುಕೃಪಾಕಟಾಕ್ಷ ವೀಕ್ಷಣದಿ ಧರ್ಮಾರ್ಥದಿಆಪವರ್ಗವನೈದಿ ಸುಖಿಸುವರುಆಪಾರ ಗುಣನಿಧೆ ಅಮಿತ ಪೂರ್ಣ ನಿನ್ನಕೃಪಣ ವತ್ಸಲತನಕೆ ಎಣೆ ಆವದೋಉಪಸ್ಪರ್ಶದಿ೨ ಪರಶು ಲೋಹ ಸುವರ್ಣದಂತೆ ಸ್ವ-ರೂಪದಿಂದಲಿ ಹೀನನಾದವನನ್ನುಭೂಪತಿ ಭಿಕ್ಷುಕನ ಬಂಧುತ್ವ ಮಾಡಿದಂತೆಈ ಪರಿ ಮಾಡಿ ಅತಿ ಪ್ರೀಯನೆನೆಸಿತಾಪಗಳಿಲ್ಲದಲೆ ಕಾಪಾಡಿದದಕ ನಿನ್ನ ಉಪಕಾರವು ಮರಿಯೇ ಊರ್ವಿನಾಥತಾಪಶ್ವಿಗಳ ಪ್ರಾಣ ಗುರು ವಿಜಯ ವಿಠ್ಠಲರೇಯಾವ್ಯಾಪಕ ಎನ್ನ ಹೃದಯ ಕಮಲದಲ್ಲಿ ೩
ಅಟ್ಟತಾಳ
ಅಂದು ಮಾಡಿದ ಕೃಪೆ ವೈಶೇಷ೩ ಶೇಷ೪ವೊಇಂದು ಸ್ವಪ್ನದಲ್ಲಿ ಅತಿ ವ್ಯಾಮೊ ಪ್ರೀಯಾ೫ನೆಂದು ನುಡಿದ ಮಾತ್ರ ಕಲಿಕೃತ ಕಲ್ಮಷದಿಂದ ಪಾವನನಾದೆ ಸಂದೇಹ ಇದಕ್ಕಿಲ್ಲತಂದೆಯೆ ನಿನ್ನಯ ಕರುಣಾಸಿಂಧುವಿಗೆ ನಮೊಹಿಂದೆ ಕರುಣದಿ ”ಮಮ ಪ್ರಾಣಾಹಿ ಪಾಂಡವಃ’’ರೆಂದು ನುಡಿದ ಮಾತ್ರ ಜ್ಞಾನ ಭಕ್ತಿ ಸುಖವೃಂದಗಳೊದಗಿದ ತೆರದಿ ಎನಗೆಇಂದು ಮಂದಹಾಸದಿಂದ ನುಡಿದ ಮಾತಿಗೆ ಆ-ನಂದವ ಪಾಲಿಸು ಕುಂದುಗಳೆಣಿಸದೆಮಂದರಧರ ಗುರು ವಿಜಯ ವಿಠ್ಠಲರೇಯಾಎಂದೆಂದು ಈ ಮಾತು ಮರಿಯದಿರು ದೇವಾ ೪
ಆದಿತಾಳ
ಕರುಣನಿಧಿಯೆ ನಿನ್ನ ಘನವಾದ ವಾಕ್ಯವನ್ನುಪರವಾಗಿ ಎನ್ನಲ್ಲಿ ಸಫಲ ಮಾಡಿದಯ್ಯಾಹರಿ ನಿನ್ನ ಕರುಣಕ್ಕೆ ಸರಿ ಉಂಟೆ ಸರಿ ಉಂಟೆಮರಿಯೆ ಮರಿಯೆ ನಿನ್ನ ಅನಿಮಿತ್ತ ಉಪಕಾರ ನರ ಸಖನೆನಿಪ ಗುರು ವಿಜಯ ವಿಠ್ಠಲರೇಯಾಪರಮ ಕೃಪಾನಿಧೆ ಪರಮಾಪ್ತ ನಿರಲಿಪ್ತ ೫
ಜತೆ
ಅನಂತ ಜನುಮದ ವ್ರತ ಪುಣ್ಯ ಫಲವಿದೆಅನಂತ ಗುಣಪೂರ್ಣ ಗುರು ವಿಜಯ ವಿಠ್ಠಲರೇಯಾ ||

೧೨೬
ಧ್ರುವತಾಳ
ಅಪರಾಧಿಯಾದದಕ್ಕೆ ಕಾರಣವಿನಿತೆ ಕೇಳುಶಫರಾದಿ ದಶರೂಪ೧ ಅನಂತವೋನೃಪನು ವಿನೋದದಿಂದ ವಿಹಾರ ಮಾಡುತಲಿವಿಪಿನದಿ ಸಂಚರಿಪ ಸಮಯದಲ್ಲಿ ಅಪರಿಮಿತವಾದ ಮೃಗಗಳು ನೋಡಿ ಸಂಹ-ರಿಪ ಮನಸು ಮಾಡೆ ಭೃತ್ಯನಾದ ಆಪ್ತನೊಬ್ಬನ ಕರೆದು ಆಜ್ಞವ ಮಾಡಲಾಗಿ ಸ್ವಪತಿಗೆ ಬಿನ್ನೈಸಿದ ಸಥಿಯಲಿಂದ ಉಪಗೂಢ ಕರುಣಿಯೆ೨ ಇವುಗಳ ಹನನದಿಂದಪಾಪ ಸಂಚಯವು ಪ್ರಾಪ್ತವಾಹದೋಈ ಪರಿ ನುಡಿದು ಪರಿ ಪರಿ ಯುಕುತಿಯಿಂದಕೃಪಿಯ ವಿಷ್ಟನಾಗಿ ಪೇಳಲಾಗಿವಿಪರೀತ ನಿನಗಿಲ್ಲ ಎನ್ನ ವಚನದಿಂದ ಕ್ಷಪಿಸು೩ ಎಂದು ನುಡಿಯೆ ಮೀರಲೊಶವೆಭೂಪತಿ ವಾಕ್ಯವನ್ನು ಭೃತ್ಯನು ನಡಿಸುವದುಉಪಾಯವೇ ಸರಿ ಜೀವನಕ್ಕೆ ಈ ಪರಿಯಾಗದಿರೆ ಒಡಿಯ ನಿಂದಲ್ಲಿ ಅವಕೋಪಕ್ಕೆ ವಿಷಯನಾಹನೆಂದು ತಿಳಿದುಕುಪತಿ೪ ನುಡಿದ ಕ್ರಮದಂತೆ ಮಾಡಿದ ಕೀರ್ತಿನೃಪತಿಗಲ್ಲದೆ ಮಿಕ್ಕ ಜನರಿಗುಂಟೆ ?ಸುಪಥವೆ ಸರಿ ಇದು ಆಜ್ಞಾಧಾರಕರಿಗೆನೃಪ ಮುನಿವದಕ್ಕೆ ಲೇಶ ನಿಮಿತ್ಯ ಉಂಟುಕೃಪೆಯು ವಿಶೇಷವಾದ ಗರುವದಿಂದಲ್ಲಿ ಎನ್ನ ನಿ-ರುಪಮ ಯತ್ನದಿಂದ ಮಾಡೆನೆಂದು ಅಪಕೃತಿಯಾದ ಅಹಂಕಾರ ಬಂದೊದಗಲುಕುಪಿತನಾಗಿ ಶರಮನೆಯೊಳಿಟ್ಟುರಿಪುಗಳ ಸಂಘದಲ್ಲಿ ನಿಯಾಮಿಸಿ ಅವನನ್ನುತಪುತವಾದ ದುಃಖ ಬಡಿಸಿದಂತೆಅಪಚಾರ ಮಾಡದಿಪ್ಪ ಆಳುಗಳೊಬ್ಬರಿಲ್ಲಈ ಪೃಥ್ವಿಯ ಮಧ್ಯದಲ್ಲಿ ಎಣಿಸಿ ಗುಣಿಸೆ ನೃಪನ ಕಾದು ತಿರುಗಿ ಮಾತು ಲಾಲಿಸಿದಂಥಉಪಕಾರ ಲೇಶವನ್ನು ತಿಳಿಸದಲೆಅಪಹಾಸ ಮಾಡಿದರೆ ಆರಿಂದಾಗುವದೇನೋಶ್ರೀಪತಿ ಎನಗೆ ನಿನಗೆ ಇದರಂತೆವೋವಿಪಗಮನನೇ ನೀನು ಕಡಿಗೆ ಮುನಿವದಕ್ಕೆಅಪ್ರೀತಿಗೆ ಪಾತ್ರನೇನೊ ನಿನಗೆಂದಿಗೆಶಪಥವ್ಯಾತಕ್ಕೆ ದೇಹಿ ಎಂದವರ ಮೇಲೆ ಕೃಪಣ ವತ್ಸಲ ಸಕಲ ಗುಣ ಪೂರ್ಣನೆ ವಿಪುಳ ಐಶ್ವರ್ಯ ನಿಧಿ ಗುರು ವಿಜಯ ವಿಠ್ಠಲರೇಯನೀ ಪ್ರಸನ್ನನಾಗೆ ಎನಗಿಲ್ಲ ದೋಷರಾಶಿ ೧
ಮಟ್ಟತಾಳ
ಅರಸು ಒಬ್ಬನ ಕರೆದು ಗುಪ್ತದಿಂದಲಿ ಪೋಗಿಪುರದೊಳಗಿರುತಿಪ್ಪ ಧನಿಕರ ಮನೆಯಲ್ಲಿಇರುವ ವಸ್ತುಗಳೆಲ್ಲ ಕಳದು ತಾ ಎಂದೆನ್ನೆವರ ಆಜ್ಞವ ಆವ ಶಿರದಲ್ಲಿ ಧರಿಸಿಪರಿ ಪರಿ ವಸ್ತುಗಳ ಜನಪಗೆ ತಂದಿತ್ತಪರಮಾತ್ಮನ ಮಹ ಬಂಧಕ ಶಕುತಿಯಲಿಭರದಿಂದಲಿ ಎನ್ನ ಸಹಾಸದಿಂದಲ್ಲಿಸಿರಿಯನು ಕ್ಷಿತಿಪಂಗೆ ಬಂದೊದಗಿತು ಎಂದುವರಲಿ ಕೊಂಡದಕವನ ಕಾರಾಗೃಹದಲ್ಲಿಸ್ಥಿರವಾದ ದುಃಖ ಬಡಿಸಿ ನೋಡಿದ ತೆರದಿಹರಿಯೆ ಎನಗೆ ನಿನಗೆ ಇದೆ ನ್ಯಾಯದಂತೆಕರುಣವಿಲ್ಲದಲೆ ಭವದೊಳಗೆ ತಂದಿಬರಿದೆ ಶಬ್ದಕೆ ಮಹಾ ಬಂಧನವೊದಗಿಸಿದೆಪರಮ ದಯಾನಿಧೆ ಗುರು ವಿಜಯ ವಿಠ್ಠಲರೇಯಕರವ ಪಿಡಿಯಬೇಕು ಇನ್ನಾದರು ಬಿಡದೆ ೨
ತ್ರಿವಿಡಿತಾಳ
ಧನಿಕನೋರ್ವನು ಒಬ್ಬ ನಿರ್ಧನಿಕನ ನೋಡಿ ದಯದಿಘನ ದಾರಿದ್ರವ ಕಳೆವ ಇಚ್ಛೆಯಿಂದ ಧನವು ಕೆಲವು ಕೊಟ್ಟು ಯಿದರಿಂದ ಪ್ರಾಪ್ತವಾದಹಣದಿ ಜೀವಿಸು ಎಂದು ಬುದ್ಧಿ ಪೇಳೆವಿನಯದಿಂದಲಿ ಪೇಳ್ದ ಯುಕ್ತಿಯಂದದಿ ಮಾಡಿಘನೀ ಭೂತವಾದ ಸಂಪನ್ನನೆನಿಸಿಧನವಿತ್ತವನನ್ನು ಸ್ಮರಿಸದಲೆ ಹೀನಮನಸಿನಿಂದೆನ್ನದೆಂದು ಪೇಳಿಕೊಳಲುಧನಿಕನು ಕ್ರೋಧನಾಗಿ ಸಕಲ ವಸ್ತು ಅಪಹ-ರಣ ಮಾಡಿ ಅವನ ಮೇಲೆ ಮುನಿದುಘನ ಕ್ರೂರ ಬಂಧನದ ಮಾಡಿಸಿ ನೋಡಿದಂತೆಎನಗೆ ನಿನಗೆ ವ್ಯಾಜ ಇನಿತು ದೇವಧನಿಕರ ಶಿರೋಮಣಿ ಗುರು ವಿಜಯ ವಿಠ್ಠಲರೇಯಮಣಿದು ಬೇಡಿಕೊಂಬೆ ಕರುಣ ಮಾಡೋ ೩
ಅಟ್ಟತಾಳ
ಮತ್ಸ್ಯನೋರ್ವನು ಅಪರಾಧ ಮಾಡಿರಲಾಗಿಧಾರಿತ್ರಿವಲ್ಲಭ ತಾನು ಮುನಿದು ಶಿಕ್ಷಿಸುತಿರೆಮತ್ತೊಬ್ಬ ಅವಿವೇಕಿಯಾದ ಮನುಜ ಇವನಉಕ್ತಿಗೆ ಬಾಧ್ಯನು ನಾನು ಎಂದು ಪೇಳಲುಕ್ಷಿತಪ ಕೇಳ್ಯವನ ತ್ವರಿತದಿಂದಲಿ ಜರಿದುಈ ತೆರ ನುಡಿದ ಅಹಂಕಾರಿಯ ಪಿಡಿದುತಪ್ತವಾದ ಬಾಧೆ ಬಡಿಸಿದ ತೆರದಂತೆಸ್ವಾತಂತ್ರ ನೀನು ಪರತಂತ್ರ ನಾನಯ್ಯಾಗುಪ್ತವಾದ ದೋಷ ವ್ಯಕ್ತಯ ಮಾಡಿದಿಇತ್ತ ಇನ್ನಾದರು ತಪ್ಪುಗಳೆಣಿಸದೆಪ್ರತ್ಯರ್ಥಿಯಾಗಿದ್ದ ಪ್ರತಿಬಂಧ ತಪ್ಪಿಸುಮಿತ್ರನೆನಿಪ ಗುರು ವಿಜಯ ವಿಠ್ಠಲರೇಯಎತ್ತಲಿದ್ದರೇನು ನೀನೇವೆ ಗತಿಯೋ ೪
ಆದಿತಾಳ
ಜೀವಕ್ಕೆ ಸ್ವಾತಂತ್ರ ಎಳ್ಳಿನಿತಾದರನ್ನಆವಾವ ಕಾಲಕ್ಕು ಇಲ್ಲದು ನಿಜವಾಗಿದೇವ ನಿನ್ನ ಆಜ್ಞಾದಿಂದ ಇಂದ್ರಿಯ ಗ್ರಾಮದಲ್ಲಿದೇವ ದೈತ್ಯರೆಲ್ಲ ನಿಂದು ವ್ಯಾಪಾರ ಮಾಡುವರುಇವರಿಗೆ ಸ್ವಾತಂತ್ರ ಪೂರ್ವೋಕ್ತದಂತೆ ಸರಿಅವರಿಗೆ ಉತ್ತಮರು ಪ್ರೇರಕರಾಗುವರುಆವಾವ ಸುರರೆಲ್ಲ ಪ್ರಾಣನಿಂದ ಚಲಿಸುವರುಆವಾತ ದೇವಿಯಿಂದ ಪ್ರೇರಿಸಿಕೊಂಬುವನುದೇವಿಗೆ ಮುಖ್ಯ ನೀನು ನಿರುಪಮ ಕರ್ತೃನಾಗಿಅವ್ಯವಧಾನದಿಂದ ಭೂ ಚಕ್ರ ತಿರುಗುತಿರೆಜೀವಿಗಳಿಗೆ ಸ್ವಾತಂತ್ರ ಆವ ಬಗೆ ಪೇಳುವುದುನೋವುಗಳಿಗೆ ಸಂಜ್ಞವಾದ ಅಹಂಕಾರ ಮಮತೆಯನ್ನು ಆವ ನಿನ್ನಿಚ್ಛೆಯಿಂದ ಅಸುರರು ಪ್ರೇರಿಸಲು ಈದಾವ ಪ್ರತಿಬಂಧ ಎನ್ನಿಂದ ಮೀರಲೊಶವೆ ದೇವದೇವ ದೇವ ನೀನೊಲಿದು ಕರುಣವ ಮಾಡಿದರೆ ಏವಮಾದಿ ಅಪರಾಧವಂದಿಲ್ಲ ನೋಡಿದರುಶ್ರೀ ವಾಸುದೇವ ಗುರು ವಿಜಯ ವಿಠ್ಠಲರೇಯಆವಾವ ಬಗೆಯಿಂದ ನೀನೆವೆ ತಾರಕನೊ ೫
ಜತೆ
ಸಹಸ್ರ ಅಪರಾಧ ಮಾಡಿ ಪ್ರಾಂತ್ಯದಿ ನಿನಗೆದೇಹಿ ಎಂದೆನೊ ಗುರು ವಿಜಯ ವಿಠ್ಠಲರೇಯ ೬
[ರಾಕ್ಷಸ ನಾಮ ಸಂ|| ಆಶ್ವೀಜ ಬ|| ೮ ಶುಕ್ರವಾರದಲ್ಲಿ]

೧೨೦
ಶ್ರೀಹರಿಯ ಸ್ತೋತ್ರ
ಧ್ರುವತಾಳ
ಅರುಹು ಮರುಹುಗಳಿಗೆ ಕಾರಣ ನೀನೆ ದೇವಾನಿರುಪಮ ಮಹಿಮನೆ ನಿತ್ಯ ತೃಪ್ತಪರಮಾಣುಗಳಿಗೆ ಕಾಲ ಕರ್ಮಾನುಸಾರದಿಂದಎರಡು ದ್ವಾರದಿಂದ ಮುಖ್ಯ ನೀನೆಅರಹು ಮರಹು ಇತ್ತು ಜೀವರ್ಗೆ ಸುಖ ದುಃಖಪರಿವ್ರಾತಗಳುಣಿಪ ನಿಯಮದಂತೆಪರಮ ಸುಖ ಹೇತು ಅರಹು ಎನ್ನಲಿಬೇಕುಪರಮ ದುಃಖ ಹೇತು ಮರುಹು ಎನ್ನು ಈತೆರವಾದ ಬಗೆಯಿಂದ ನಿನ್ನ ಹೊರತಾಗಿಅರಹು ಮರಹು ಎನ್ನ ಆಧೀನವೋ ?ಅರುಹು ಮರುಹು ಜೀವರಾಧೀನವೆಂದು ನುಡಿಯೆಹರಿ ನಿನ್ನ ಕರ್ತೃತ್ವಕ್ಕೆ ಕೊರತೆ ಬಹದೆವರಲುತಿವೆ೧ ನೋಡು ಆ ವೇದ ಶಾಸ್ತ್ರಗಳುಸಿರಿ ಪತಿ ನಿನ್ನ ವ್ಯತಿರಿಕ್ತವಾಗಿ ಹೊರಗೆ ಬಿಟ್ಟ ಶ್ವಾಸ ಒಳಗೆ ಕೊಂಬುವರಿಲ್ಲಸರಸಿಜ ಭವಹರ ಸುರರ ಮಧ್ಯ ಸುರರಾದಿಗಳ ಧೊರಿಯೆ ಗುರು ವಿಜಯ ವಿಠ್ಠಲರೇಯ ಬರಿದೆ ಯಾತಕೆ ಎನ್ನ ದೂರುವುದು ೧
ಮಟ್ಟತಾಳ
ಹಿತಮಾಡಿ ನನಗೆ ಸಥಿ೨ಯಲಿ ಬೋಧಿಸಿದಅತಿಶಯಗಳ ಸಕಲ ಮರದಿ ನೀನು ಎಂದುಮತಿವಂತನೆ ನೀ ಎನ್ನ ಮೋಹಿಸಿದ್ಯೋ ನಿನ್ನಚತುರ ತನಕ ನಾನು ನಮೊ ನಮೊ ನಮೊ ಎಂಬೆ ಯು-ಕುತಿವಂತರ ಮಧ್ಯ ನಿನಗಿಂದಲಿ ಜಗದಿಅತಿಶಯವಿಲ್ಲವೊ ಗುರು ವಿಜಯ ವಿಠ್ಠಲ ನಿನ್ನಯತಾರ್ಥವ ನಾನು ವರ್ಣಿಸಬಲ್ಲೆನೆ ೨
ತ್ರಿವಿಡಿತಾಳ
ಒಳಗೊಂದು ಹೊರಗೊಂದು ನುಡಿವ ಜನರುಗಳನನಿಲಯದ ಪ್ರೀಯನೆಂದು ನುಡಿವರಯ್ಯಾಇಳಿಯೊಳಗೀ ಮಾತು ಸಾಕ್ಷಿಯಾಗಿದೆ ನೋಡುಮಲಿನ ರಹಿತವಾದ ಕರುಣಿ ನೀನುಒಳಗೊಂದು ಹೊರಗೊಂದು ನುಡಿದು ಬರಿದೆ ಎನ್ನಬಳಲಿಸಿ ನೋಡುವದು ಘನತೆ ಏನೋಒಳಗೆ ವ್ಯಾಪಕನಾಗಿ ಸುರರಿಂದ ಪ್ರೇರಿಸದೆಕಲಿಮುಖದನುಜರ ದ್ವಾರದಿಂದಬಲವತ್ತರವಾದ ಅಜ್ಞಾನ ಪ್ರಕಟಿಸಿ ನೀಮಲಿನ ಸಹಿತ ಕಾಮ ಕ್ರೋಧವಿತ್ತು ನಿ-ರ್ಮಲವಾದ ಜ್ಞಾನವನು ತಿರೋಧಾನವ ಮಾಡಿಜಲಜನಾಭನೆ ನೀನು ಸುಳಿಯದಲೆ ನೆಲೆಯಾಗಿ ನಿಂದು ಕರ್ಮಕಾಲಾನುಸಾರವಾಗಿನಳಿನನಾಭನೆ ನೀನು ಇನಿತು ಮಾಡಿತಿಳಿಯದ ಜನರಂತೆ ಮರದಿ ನೀನೆಂದು ಎನ್ನಹಲವು ಪರಿಯಲಿ ನುಡಿದು ಹಂಗಿಸುವರೇಶಿಲೆಯ ಪ್ರತಿಮೆಯಲ್ಲಿ ವರಶ್ಯಾಪದ ಕೃತ್ಯಶಿಲೆಯಾಧಿಷ್ಠಾತನಾದ ದೇವಗಲ್ಲದೆಶಿಲೆ ಸಹಜವನ್ನು ಎಂದಿಗಾದರು ನೋಡತಿಳಿವದು ಇದರಂತೆ ಎನ್ನ ಜ್ಞಾನ ಚಲನ ಕೃತ್ಯವ ತೋರ್ಪ ಸೂತ್ರಧಾರನ ಕೈಯಚಲಿಸುವ ದಾರುಮಯ ಬೊಂಬೆಯನ್ನುತಿಳಿಯದ ನರನೊಬ್ಬ ಬರಿದೆ ದೂಷಿಸಲದಕೆಒಳಿತು ನಡತಿ ನಡಿಯಲೊಶವೆ ಹರಿಯೆಚಲನಾದಿಗಳ ತೋರ್ಪ ಪುರುಷನಿಂದಲಿ ಅದಕಒಳಿತಾದ ಕೀತ್ರ್ಯಪಕೀರ್ತಿ ಬರುವದಯ್ಯಾಒಳಗೆ ವ್ಯಾಪಕನಾಗಿ ದೈತ್ಯರಿಂದ ಎನಗೆಮಲತ೧ ಮರುಹು ಇತ್ತು ಯುಕುತಿಯಿಂದ ಲೀಲೆ ಮಾಳ್ಪವನಾಗಿ ನೀನೆ ಮರತೆ ಎಂದುಜಲಜ ನಯನ ಎನ್ನ ದೂರುವರೇನಳಿನ ಸಂಭವ ಜನಕ ಗುರು ವಿಜಯ ವಿಠ್ಠಲರೇಯಮೂಲ ಕಾರಣ ನೀನೆ ಅರಹು ಮರಹುಗಳಿಗೆ ೩
ಅಟ್ಟತಾಳ
ಲೋಕವತು ನೀನು ಲೌಕಿಕ ಮಾಳ್ಪದು ಥರವಲ್ಲ ಥರವಲ್ಲಏಕಮೇವ ನಿನ್ನ ಮೋಹದ ಶಕುತಿಯೆಲೋಕೇಶ ಮೊದಲಾದ ಸುರರು ಮೋಹಿಸುವರುಕಾಕು ನರನು ನಾನೆಂತು ದಾಟುವೆನುಗೋಕುಲಾಂಬುಧಿ ಚಂದ್ರ ಗುರು ವಿಜಯ ವಿಠ್ಠಲರೇಯಸಾಕಾರ ರೂಪನೇ ಸತತ ಮಂಗಳ ಕಾಯಾ ೪
ಆದಿತಾಳ
ಪಾಹಿ ಪಾಹಿ ತವ ರೂಪಕ್ಕೆ ನಮೊ ನಮೊಪಾಹಿ ಪಾಹಿ ತವ ಸುಗುಣಕ್ಕೆ ನಮೊ ನಮೊಪಾಹಿ ಪಾಹಿ ತವ ಕ್ರೀಯಕ್ಕೆ ನಮೊ ನಮೊಪಾಹಿ ಪಾಹಿ ತವ ಮೋಹಕ್ಕೆ ನಮೊ ನಮೊಪಾಹಿ ಪಾಹಿ ತವ ಗುರು ವಿಜಯ ವಿಠ್ಠಲರೇಯ ಪಾಹಿ ಪಾಹಿ ತವ ಸದ ಅಪರಾಧವೆಣಿಸದೆ ೫
ಜತೆ
ಭಕ್ತರ ವಿಷಯದಿ ಯಕ್ತಿ ಮಾಡದಲಿರೊಭಕ್ತವತ್ಸಲ ಗುರು ವಿಜಯ ವಿಠ್ಠಲರೇಯ ೬

೧೧೯
ಧ್ರುವತಾಳ
ಆಲಿಸಿ ಕೇಳುವುದು ಆದರದಿಂದಲಿಶ್ರೀ ಲಕುಮೀಶನ ಭಕುತೆರೆಲ್ಲಾಕಾಲ ದೇಶ ವ್ಯಾಪ್ತಳೆನಿಪಳಿಗಾದರುಶೀಲ ಮೂರುತಿಯಿಂದೆ ಸುಖವೆಂಬೊದೊಕೇಳಿ ಬಲ್ಲದ್ದೆ ಸರಿ ಶ್ರುತಿ ಸ್ರ‍ಮತಿ ಮುಖದಿಂದಆಲೋಚನೆ ಇದಕ್ಕಿಲ್ಲ ಎಣಿಸೆ ಗುಣಿಸೆಮೂಲ ಜೀವರ ಸುಖಕೆ ಶ್ರೀಪತಿ ಆದಮೇಲೆ ಹಲವು ಬಗೆಯಲಿ ಹರಿಯ ಸಂಪಾದಿಸು ಇಳಿಯೊಳು ವಾಜಿಪೇಯ ಪೌಂಡ್ರಕಾದಿ ಯಜ್ಞನಿರ್ಮಲವಾದ ಧ್ಯಾನ ಜಪ ಹೋಮವೊಜಾಲ ನಕ್ಷತ್ರ ಸಂಖ್ಯ ಮೀರಿದ ಮಹಾದಾನಾಕಾಲೋಚಿತವಾದ ಕರ್ಮ ಧ್ಯಾನ ಮೌನ ಜ್ವಾಲವಾದ ಕ್ರೂರ ತಪ ಹೋಮ ಸುರರರ್ಚನಸ್ಥೂಲ ಕರ್ಮಾಭಿಜಾತ ಪುಣ್ಯದಿಂದ ತ್ರಿಲೋಕಾಧಿಪತಿ ಸ್ಥಾನವೈದಿದ ನಂತರಇಳಿಯಬೇಕೋ ಧರಿಗೆ ಭೂಯೊ ಭೂಯೊಒಲಿಯನು ಇದಕ್ಕೆ ಜಲಜಾಯತೇಕ್ಷಣ ಒಲಿಸಬೇಕೆಂಬೋದು ಮನದಲ್ಲಿತ್ತೆಪೇಳಿದ ಮಾತಿನಲ್ಲಿ ಸಂದೇಹ ಮಾಡದಲೆಸುಲಭವಾದ ಪಥ ಪಿಡಿಯೊ ಬೇಗನೀಲಾಂಬುದ ಶ್ಯಾಮ ಗುರು ವಿಜಯ ವಿಠ್ಠಲರೇಯಪಾಲಿಸುವನು ಇದಕೆ ಶ್ರುತಿಯೇ ಸಾಕ್ಷಿ ||
ಮಟ್ಟತಾಳ
ಪ್ರವರ್ತಿ ನಿವೃತ್ತಿ ಅಭಿಧಾನದಿ ಕರ್ಮದ್ವಿವಿಧವಾಗಿ ಉಂಟು ತಿಳಿವದು ಚೆನ್ನಾಗಿಪ್ರವರ್ತಿ ಕರ್ಮವನು ಸ್ವಪ್ನದಿ ಕಾಮಿಸಿದೆ ನಿವರ್ತಿ ಕರ್ಮದಲಿ ರತಿವುಳ್ಳವನಾಗಿದೇವ ಎನ್ನೊಳಗಿದ್ದು ಕಾಲ ಕರ್ಮಾನುಸಾರಆವಾವದು ಮಾಳ್ಪ ಮಾಡುವೆನದರಂತೆಆವ ಮಾಡಿಸದಿರಲು ನಾನ್ಯಾತಕ ಸಲ್ಲೆ ಕಾವ ಕೊಲ್ಲುವ ತಾನೆ ಅನ್ಯರು ಎನಗಿಲ್ಲಸರ್ವಾಧಿಷ್ಠಾನದಲಿ ಹರಿಯೇ ವ್ಯಾಪಿಸಿ ಇದ್ದುಶರ್ವಾದಿಗಳಿಂದ ವ್ಯಾಪಾರವ ಗೈಸಿ ನಿರ್ವಾಹಕನಾಹ ಸ್ವತಂತ್ರ ತಾನಾಗಿ ಓರ್ವನಾದರು ಶ್ವಾಸ ಬಿಡುವ ಸೇದಿಕೊಂಬಗರ್ವಗಳಿಲ್ಲವೊ ಈ ಫೃಥ್ವಿ ಮಧ್ಯಈ ವಿಧದಲಿ ತಿಳಿದು ಜೀವರ ಲಕ್ಷಣಸಾವಧಾನದಿ ಗುಣಿಸು ಹರಿ ಕರ್ತೃತ್ವವನುದೇವ ದೇವ ಬಿಂಬಿ ಜೀವನೆ ಪ್ರತಿಬಿಂಬಭಾವ ಕೆಡದಂತೆ ಯೋಚಿಸು ಸರ್ವತ್ರಜೀವ ಭಿನ್ನ ಗುರು ವಿಜಯ ವಿಠ್ಠಲ ರೇಯನಸೇವಕರಭಿಮಾನ ಎಂದೆಂದಿಗೆ ಬಿಡನು ೧
ತ್ರಿವಿಡಿತಾಳ
ತನುವಿನೊಳಗೆ ಹೊರಗೆ ವಿಭಕ್ತ ಅವಿಭಕ್ತಅಣು ಮಹದ್ರೂಪದಿ ಹರಿವಾಸವಕ್ಕುವನಜಜಾಂಡಾಧಾರವಾಗಿಪ್ಪ ರೂಪವನ್ನುಮನುಜರ ದೇಹಾಶ್ರಯವಾಗಿಪ್ಪದೊನೀನೊಲಿದು ಕೇಳುವುದು ಇದನೇವೆ ಅವಿಭಕ್ತಘನರೂಪವೆಂಬೋರು ಜ್ಞಾನಿಗಳೂಮುನಿಗಳ ಮತವಿದು ಸಂದೇಹ ಬಡಸಲ್ಲಮನದಿ ಚಿಂತಿಸು ಈ ಶೂನ್ಯಾಭಿದನ ವ-ದನದ ಮೇಲೆ ವದನ ಶ್ರೋತ್ರದ ಮೇಲೆ ಶ್ರೋತ್ರ ನಯನದ ಮೇಲೆ ನಯನ ಈ ಕ್ರಮದಿಂದಲಿತನು ಸಮಸ್ತದಲ್ಲಿ ಹರಿ ತನ್ನ ಅಂಗದಿಂದ ಅನುಸಾರವಾಗಿ ಆಶ್ರಯವಾಗಿಪ್ಪಾ ಕ್ಷೋಣಿಯೊಳಗೆ ಈ ರೂಪ ಅನಪೇಕ್ಷದಿಂದ ತನುವು ನಿಲ್ಲದಯ್ಯಾ ವಿಧಿಗಾದರೂಇನಿತು ಸೊಬಗು ಪರಿಜ್ಞಾನ ರಹಿತರಾಗಿ ವನಜ ಭವಾಂಡ ದಾನವಿತ್ತರೂನುವನಜನಾಭನೊಮ್ಮೆ ದೃಷ್ಟಿಲಿ ನೋಡನಯ್ಯಾಅನುಮಾನ ಇದಕ್ಕಿಲ್ಲ ಶ್ರುತ್ಯುಕ್ತವೊವಿನಯದಿಂದಲಿ ಇದು ಗ್ರಹಿಸಿದ ನರರಿಗೆ ಜನುಮ ಜನುಮದ ಪಾಪ ಪ್ರಶಾಂತವೊಬಿನಗು ಮೈಲಿಗೆಯುಂಟೆ ಸ್ಪ್ರಷ್ಟಾಸ್ಪ್ರಷ್ಟದಿಂದಅನುದಿನ ಪವಿತ್ರನು ಅಕೃತದಿಂದ ಋಣತ್ರಯದಿಂದಲಿ ಮುಕ್ತರಾಗಿ ಸತತದನುಜಾರಿ ಪುರವನ್ನೇ ಐದುವರೋ ಮಲಿನಮನುಜರ ಮನಸಿಗೆ ತೋರನೊಮ್ಮೆನೀನೇವೆ ಗತಿ ಎಂದು ನಂಬಿದವರಮನಕೆ ಪೊಳೆವನು ಬಿಡದೆ ಮಾತರಿಶ್ವರ ದಯದಿಮನುಜಾ ತಿಳಿ ಇದನೆ ಭಕುತಿಯಿಂದ ಗುಣಗಣ ಪರಿಪೂರ್ಣ ಗುರು ವಿಜಯ ವಿಠ್ಠಲರೇಯಜನನ ಮರಣಗಳಿಂದ ದೂರ ಮಾಳ್ಪ ೨
ಅಟ್ಟತಾಳ
ಈ ರೀತಿಯಲಿ ದೇಹಧಾರಿಯ ರೂಪದ ಸಾರಿ ಸಾರಿಗೆ ತಿಳಿದು ಪೂಜಿಸು ಗುಪ್ತದಿಶಾರೀರ ಉಪಯೋಗವಾದ ವಿಷಯ ಜಾಲಹರಿಗೆ ಷೋಡಶ ಉಪಚಾರವೆಂದೆನ್ನೂಆರಾರು ಮಾಡುವ ವಂದನಾ ನಿಂದ್ಯೆಯುಶ್ರೀ ರಮಣನಿಗಿದು ಬಲು ಸ್ತೋತ್ರವೆಂದೆನ್ನುದಾರಾ ಪುತ್ರಾದಿ ಸಮಸ್ತ ಬಂಧುವರ್ಗಪರಿಚಾರಕರೆನ್ನು ಘನ ಮಹಿಮಗೆಮೆರೆವದೆಲ್ಲದು ಆರ (ಹರಿ) ಮೆರವುದದೆಯೆನ್ನೂನಿರುತದಲಿ ಇದು ಮರೆಯದೆ ಮನದೊಳು ಕರ ಚರಣಾದಿ ಯಾವದ್ದವಯವ ಚೇಷ್ಟೆಯುಗುರುಮುಖದಲಿ ತಿಳಿದು ಯಜ್ಞ ಕ್ರಮದಿಂದನೀರಜನಾಭಗರ್ಪಿಸು ಅವದಾನ ಪೂರ್ವಕಮಾರಜನಕ ಗುರು ವಿಜಯ ವಿಠ್ಠಲರೇಯಕರವ ಪಿಡಿವನು ಇದನೇವೆ ಕೈಕೊಂಡು ೩
ಆದಿತಾಳ
ಬೊಮ್ಮಾಂಡದೊಳಗಿದ್ದ ಸ್ಥೂಲವಾದ ವಸ್ತುಗಳುನಿಮ್ನವಾಗಿ ದೇಹದಲ್ಲಿ ಸೂಕ್ಷ್ಮವಾಗಿ ಉಂಟು ತಿಳಿಈ ಮಹಾ ಲಕ್ಷಣದಿಂದಲೇ ಕ್ಷೇತ್ರವೆಂದುಸನ್ಮಾನ್ಯವಾಗಿಪ್ಪವೊ ಜಡಗಳ ಮಧ್ಯದಲ್ಲಿಆ ಮಹಾಮಹಿಮನಾದ ಕ್ಷೇತ್ರಜ್ಞನನ್ನು ಭಜಿಸುಜನ್ಮವ ನೀಗುವುದು ಅವ್ಯವಧಾನದಿಂದ ವೈಷಮ್ಯರಹಿತ ಗುರು ವಿಜಯ ವಿಠ್ಠಲರೇಯ

೧೫೬
[ಹಿಂದೆ ಕರ್ಣನ ವಧೆಗಾಗಿ ಅನೇಕ ವಿಧವಾದ ಮಾತುಗಳಾಡಿಸಿ ಅಧರ್ಮ ಯುದ್ಧ ವೆಂದು ನಾನು ಸಂದೇಹ ಉಳ್ಳವನಾಗೆ ಧರ್ಮವೆಂದು ತಿಳಿಹೇಳಿರಿ. ನಿನ್ನ ಮಾತಿನಲ್ಲಿ ಸಂದೇಹಬಟ್ಟ ಕಾರಣ ಈಗ ಅವನಿಯಲ್ಲಿ ಹಾಕಿ, ಬೆಕ್ಕು ಇಲಿಯನ್ನು ಹಿಡಿದು ಚಿನ್ನಾಟ ವಾಡಿದ ತೆರ ಮಾಡುವಿ. ಇದು ನಿನಗೆ ನ್ಯಾಯವೇ ? ರಕ್ಷಿಸೆಂದು ಪ್ರಾರ್ಥನೆ.]
ಧ್ರುವತಾಳ
ಆವನ್ನ ವಧೆಯನ್ನು ಇನಿತು ಮಾಡಿದಿ ಎಂದುದೇವ ಎನ್ನನು ಈಗ ಹಂಗಿಸಿದೀಆವನ ವಧೆಗಾಗಿ ಭ್ರಾತೃನಿಂದಲಿ ನೀನೆಆವ ಕಠಿಣೋಕ್ತಿಗಳು ನುಡಿಸಿದಿಭಾವದಿ ಮರಹು ನಿನಗೆ ಪುಟ್ಟಿದರಾದಡೆಸೇವಕ ಎನ್ನಿಂದ ದೂರಲೊಶವೇಅವನಿಪತಿ ತಾನು ಸ್ವೇಚ್ಛಾನುಸಾರದಿಂದಆವಾವ ಕೃತ್ಯ ಮಾಡೆ ಆಜ್ಞಾಧರರೂಸುವಿಹಿತವೆಂದು ತಲೆದೂಗಲಿಬೇಕಲ್ಲದೆಅವಿಹಿತವೆಂದು ನುಡಿದು ಬಾಳುವರೇಪಾವನ ನಿರ್ದೋಷ ಬಲು ದಯಾನಿಧಿ ಎಂದುಆವ ನಿಗಮ ಶಾಸ್ತ್ರ ವರಲುತಿರೇ ಆ-ಭಾವ ಜ್ಞಾನಿ೧ಯು ನಾನು ನಿನ್ನಲ್ಲಿ ದೋಷವನ್ನುಭಾವಿಸಾದು ಇದಕಾವದು ಅನಿಜವೋಪಾವನ್ನ ಮತಾನುಗರ ಸಮ್ಮತವಲ್ಲವೆಂದುಶ್ರೀವತ್ಸ ಲಾಂಛನ ಇನಿತು ತಿಳಿದುದೇವ ದೇವನೆ ನಿನಗಂಜುವೆನಲ್ಲದೆಈ ವಿಧ ಕಪಟತನವೆ ಎನ್ನ ಕೂಡಆವ ಕಾಲದಿ ಪ್ರಾಪ್ತವಾದ ರಾಜ್ಯವನ್ನುಕೋವಿದರರಸೆ ನೀನು ಶಾಂತಿಗೈಸಿಆವರ್ಣ ಭೂಮಿಗಭಿಮುಖವಾಗಿ ಬಾರೆಕೇವಲ ಗತವಾದ ಧೈರ್ಯದಿಂದಇವನ ಹನನ ಎನ್ನಿಂದಲೇ ನಿತಹದೆಂದುಶ್ರೀ ವಾಸುದೇವ ನಿನಗೆ ಮೊರಿಯಾ ನಿಡಲುಈ ವಿಷಯದಿ ನಿನಗೆ ಸಂದೇಹವ್ಯಾಕೆ ಇಂದುಸಾವಧಾನದಿ ನೀನೆ ಅಂದು ನುಡಿದುಭುವನದಲ್ಲೀಗ ನೀನ್ಯಾರೊ ನಾನಾರೊ ಎಂ-ಬುವಂತೆ ಮಾಡಿ ಆವ ಭಿಡಿಯವನ್ನು ಲೇಶವಿಡದೆಅವ್ಯವಧಾನದಿಂದ ದೂರುವ ಯುಕುತಿಗೆಆವದು ಇದಕೆ ಸಮ ಅವನಿಯೊಳಗೆಕಾವ ಕರುಣಿಯೆ ಭಕತರ ಸಮೂಹಕ್ಕೆಆವ ನಾನೊಬ್ಬ ನಿನಗಲ್ಲದವನೇ”ಕೈವಲ್ಯ ಲೋಕವತು ಕ್ರೀಡ’’ನೆಂಬ ಮಾತುನಿವ್ರ್ಯಾಜದಿ ಎನಗೇವೆ ತೋರಿಸಿದಿಜೀವನ ನಾಮಾ ಗುರು ವಿಜಯ ವಿಠ್ಠಲರೇಯಾಅವ್ಯಾಹತವಾದ ಐಶ್ವರ್ಯ ಪರಿಪೂರ್ಣ ೧
ಮಟ್ಟತಾಳ
ಧರ್ಮದ ಭಂಜನನೆ ನಿನ್ನ ಇಚ್ಛೆಯಲಿಂದಧರ್ಮ ಯುದ್ಧಕೆ ಕಾಲವಾಗದಲಿರುವಂಥಕರ್ಮವು ಆತನ್ನ ಪ್ರಾಪ್ತವಾಗಿರಲುಮರ್ಮವ ನೀನರಿತು ಇದೇ ಸಮಯದಲ್ಲಿಕಾರ್ಮುಕ ಪ್ರಯೋಗ ಮಾಡು ಎಂದೆನಲಾಗಿ ಅ-ಧರ್ಮವಿದೆಂತೆಂಬ ಸಂದೇಹದಿ ಜರಿಯೆ ಸ-ದ್ಧರ್ಮ ಪಾಲಕ ನೀನೆ ಸಾದರದಲಿ ಪೇಳೆನಿರ್ಮಲ ನಿನ್ನಾಜ್ಞಾ ನಡಿಸದ ಮಾತಿಗೆನಿರ್ಮಮವೆನ್ನಲ್ಲಿ ನಿಲ್ಲದೆ ಕಡಿಯಿಂದ ಈವರ್ಮವನೇ ಇತ್ತು ಸುಖ ದುಃಖನೀತವಊರ್ವಿಗಳೊಳಗೆನ್ನ ಹಾಕಿದಿ ಮಹಕರುಣಿಶರ್ಮಾ ವರ್ಮವನು ತೋರ್ಪವನು ನೀನೆಘರ್ಮ ಸುಖ ಸಾರ ಗುರು ವಿಜಯ ವಿಠ್ಠಲ ರೇಯ ದು-ಷ್ಕರ್ಮಿಯು ನಾನೆಂದೆ ನಿನ್ನಗಲಿದ ಕಾರಣದಿ ೨
ತ್ರಿವಿಡಿತಾಳ
ಹರಿ ನೀನು ಕಲ್ಪಿಸಿದ ಸೃಷ್ಟಿಯೊಳಗೆ ಒಂದುಪರಮಾಣು ದೇಹ ನಿನ್ನ ವ್ಯತಿರಿಕ್ತದಿಮರಣಗೈಸುವೆನೆಂಬ ಸ್ವೇಚ್ಛೆಯಿಂದಲಿ ಲಕುಮಿಸರಸಿಜ ಭವಹರ ಸುರರೆಲ್ಲರೂಭರದಿಂದ ಶಪಥದಿ ಯತ್ನ ಮಾಡಿದರನ್ನಪರಿ ಸಮಾಪ್ತಿಯು ಮಾಡಲೊಶವೆ ದೇವಮರುತ ಪಾವಕ ಮೊದಲಾದ ನಿಜ ಭಕ್ತರಿಗೆಪರಮ ಅಹಂಕಾರವನ್ನು ಪ್ರಾಪ್ತವಾಗೆಧರಿಗೆ ವಿಲಕ್ಷಣವಾದ ರೂಪದಿಂದತೋರಿ ಒಂದೊಂದು ತೃಣ ದಹಿಸೆನಲುಸರಸದಿಂದಲಿ ಅವರವರ ಕೃತ್ಯದಿಂದಪರಮ ಸಹಸವನ್ನು ವ್ಯರ್ಥವಾಗೆಕರ ಮುಗಿದು ನಮಿಸಿ ತಮ್ಮ ತಮ್ಮ ಕರ್ತೃತ್ವಹರಿ ನಿನ್ನಧೀನವೆಂದು ತುತಿಸಿದರೊಮರಳೆ ನೋಡಿದರೆ ನೀನಿತ್ತ ಕಾರ್ಯದಲ್ಲಿಅರಲವ ಕರ್ತೃತ್ವ ಇಪ್ಪದೆಂಬೊಪರಿಯ ಭಾರತಿಯನ್ನು ಜನಿಸಿ ತೋರುತಲಿದೆಹೊರಗೆ ಬಿಟ್ಟ ಶ್ವಾಸ ಒಳಗೆ ಕೊಂಬುವದಿಲ್ಲವೀರನಾದವನನ್ನು ನೀನೆ ಹನನ ಮಾಡಿಬರಿದೆ ಎನ್ನನು ಹೀಗೆ ದೂರಾದಿರೊದುರುಳ ಮರ್ದನ ಗುರು ವಿಜಯ ವಿಠ್ಠಲರೇಯಾನಿರುತ ಎನ್ನಯ ನಾಮ ರೂಪ ನೀನೆ ೩
ಅಟ್ಟತಾಳ
ಘನವಾದ ಬಿಡಲೊಶವಾದ ಮೂಷಕತನು ಅಂತವಹ ದುಃಖದಿಂದಲಿ ಮುಣಗಿರೆಮನದಭಿಲಾಷದಿ ಮಾರ್ಜಾಲ ನಲಿಯುವಾಗಎನಿತೆನ್ನ ದೈತ್ಯರ ಸಂಗದೊಳಗೆಯಿಟ್ಟುಗಣನೆಯಿಲ್ಲದ ಶ್ರಮಬಡುವ ಸಮಯದಲ್ಲಿವನಜಾಕ್ಷ ನೀ ಇಂಥ ಅಪಹಾಸ್ಯ ಮಾಡೋದುಎನಗಿದು ಅತ್ಯಂತ ಆಯಾಸವೆ ಸರಿಗುಣನಿಧಿ ಶ್ರೀ ಗುರು ವಿಜಯ ವಿಠ್ಠಲರೇಯಾಮುನಿದು ನೋಡುವದಕ್ಕೆ ಅನ್ಯನೇನೊ ಸ್ವಾಮಿ ೪
ಆದಿತಾಳ
ನಿನ್ನ ಇಚ್ಚೆಯಲಿಂದ ಎನಗಿದು ಫಲಿಸಿತು ನಿನ್ನ ಇಚ್ಚೆಯಲಿಂದ ನಿಜ ಸುಖವಲ್ಲದಲೆಖಿನ್ನಾಗಿ ಚರಿಸಿದೆ ದ್ವಿವಿಂಶತಿ ವತ್ಸರವ |
(ಮುಂದೆ ಉಪಲಬ್ಧವಿಲ್ಲ)

೧೨೯
ಸುರರಿತ್ತ ಶಾಪದಿಂದ ಈ ಧರೆಯಲ್ಲಿ ಜನಿಸಿ ಎನ್ನವರಿಂದ ಅಗಲಿ ಸಂಸಾರಾರಣ್ಯವೆಂಬ ಅಜ್ಞಾನ ಅಟವಿಯಲ್ಲಿ ನಿನ್ನ ಕಾಣದೆ ವರಲುವೆ. ವೈರಾಗ್ಯ ಶಸ್ತ್ರದಿಂದ ಕಲ್ಲ್ಯಾದಿಗಳ ನಿಗ್ರಹಗೈಸಿ, ದುರಿತವೆಂಬ ಕಂಟಕ ಪರಿಹರಿಸಿ, ಹೃದಯದಿ ಮಿಂಚಿನಂದದಿ ಹೊಳಿ ಎಂದು ಪ್ರಾರ್ಥನಾ.
ಧ್ರುವತಾಳ
ಇಂದಿನ ದಿನದಲ್ಲಿ ಸಕಲ ಸಜ್ಜನರಿಂದ ಆ-ನಂದದಿ ಇರುವಂಥ ಮನವೆ ಮಾಡೊಮಂದಜಾಸನ ಮುಖ್ಯ ಆಶೀತಿ ನಾಲ್ಕು ಲಕ್ಷಒಂದೊಂದು ಜೀವರ ಜಿಹ್ವಾಗ್ರದಿನಿಂದು ನುಡಿಸುವದು ಸತ್ಯವೆಂಬೊದಿತ್ತೆಅಂದ ವಚನ ಸತ್ಯವೆನಿಸುವದು ತರ-ಣೇಂದು ಕೋಟಿ ರೂಪ ಗುರು ವಿಜಯ ವಿಠ್ಠಲರೇಯಎಂದೆಂದು ಈ ಮಾತು ಸಫಲ ಮಾಡು ೧
ಮಟ್ಟತಾಳ
ದುರ್ಗಾಂತರ್ಗತ ಹರಿ ತುಷ್ಟನಾಗಿಸರ್ಗಾದಿಯಿಂದ ಸಂಪಾದನವಾಪವರ್ಗಂಗಳೆಲ್ಲ ಸಮವನೆ ಐದಿಸುನಿಗ್ರಹದಲಿ ನೋಡಿ ಸಕಲ ಶತ್ರುಗಳನ್ನುನಿರ್ಗತರನ ಮಾಡು ಅವ್ಯವಧಾನದಲಿದುರ್ಗಮ ಭವಾಬ್ಧಿಯಿಂದಲಿ ನೀನೇವೆ ನಿರ್ಗಮಗೈಸುವ ಮಮ ಸ್ವಾಮಿ ಏ ದೇವಭಾರ್ಗವಿ ನಾಮ ಗುರು ವಿಜಯ ವಿಠ್ಠಲ ನನ್ನಯೋಗ್ಯತೆ ಫಲವನ್ನು ತ್ವರಿತದಿ ಪಾಲಿಸೊ ೨
ತ್ರಿವಿಡಿತಾಳ
ವೈರಾಗ್ಯವೆಂದೆಂಬ ಶಸ್ತ್ರಗಳು ಪಿಡಿಸಿಕರಣಲಳಲಿದ್ದ ಕಲಿ ಮುಖ್ಯವೈರಿ ಸಮ್ಮೊಗಳೆಲ್ಲ ನಿರ್ಮೂಲ ಮಾಡಿಸುವದುನೀರಜಾಸನ ಮುಖ್ಯ ಸುರರ ತತಿಗೆ ಮೀರಿದ ಒಡೆಯನ್ನ ಸಖನೆಂದೆನಿಸಿಕೊಂಡುತೋರಿ ಎನ್ನಯ ಮನದಿ ಪ್ರಿಯ ದರ್ಶನಸಾರಿ ಸಾರಿಗೆ ಯಿತ್ತು ಮೋದ ಬಡಿಸಿ ಎನ್ನಸಾರ ಸೌಖ್ಯವನ್ನು ಐದಿಪದುಭೂರುಹ ಸ್ಥಿತ ಗುರು೧ ವಿಜಯ ವಿಠ್ಠಲರೇಯಾದೂರ ನೋಡದಲಿರು ಅನ್ಯ (ನಾ)ನಲ್ಲ ೩
ಅಟ್ಟತಾಳ
ದುರಿತಗಳೆಂಬುವ ಕಂಟಕವನೆ ಹರಿಸಿಅರುಹ ಮಾತ್ರಾದಿ ಕಟಾಕ್ಷದಲಿ ನೋಡಿಕರುಣ ಕವಚವೆಂಬೊ ಆಯುಷ್ಯವನೆ ಯಿತ್ತುನಿರುತ ಪ್ರಾಣನಾಗಿ ರಕ್ಷಿಸು ರಕ್ಷಿಸುಕರುಣ ನಿಯಾಮಕ ಗುರ ವಿಜಯ ವಿಠ್ಠಲರೇಯಾಪರಮ ಪ್ರೀಯನಾಗು ಅಂದಿನಂತೆ ಎನಗೆ ೪
ಆದಿತಾಳ
ಸುರರಿತ್ತ ಶಾಪದಿಂದ ಈ ಧರೆಯಲ್ಲಿ ಬಂದುಚರಿಸಿದೆನೊ ಬಲು ಅರಣ್ಯ ಅಜ್ಞಾತಪರಿಹಾರ ಮಾಡುವದು ಇಂದಿನ ಶುಭ ಕಾಲಹರಿ ನಿನ್ನ ಕೃಪೆಯಿಂದ ಅಂದಿನ ಕಾಲದಲ್ಲಿಧರೆಯಲ್ಲಿ ಚರಿಸಿದರು ಒಂದಿಷ್ಟು ಶ್ರಮವಿಲ್ಲಪರಿವಾರದಿಂದ ಕೂಡಿ ಸುಖವನ್ನೆ ಐದಿದೆನುಸುರಧೇನು ನಾಮ ನಿನ್ನ ಬಂಧಕ ಶಕುತಿಯಿಂದ ಪರಿವಾರ ವಗಲಿದ ಶಿಶುವಂತೆ ಮಹಿಯೊಳುಪರಿ ಪರಿ ದುಃಖದಿಂದ ಬಳಲಿದೆ ತೀರಿಸಿದೆಸರಿ ಮಾಡು ಸರಿ ಮಾಡು ಪರಿಪೂರ್ಣ ಕೃಪಾನಿಧೆಶರಗೊಡ್ಡಿ ಬೇಡಿಕೊಂಬೆ ಮುಕುತನ್ನ ಮಾಡುವದುಅರ ಲವವಾದರು ಉಳಿಸುವದು ಸಲ್ಲಪರಮಾನುಗ್ರಹ ಮಾಡುವದು ತಡಿಯದಲೆ ಪರಿವ್ಯಕ್ತಿ ಮಾಡಿದಂಥ ಶುಭ ಕಾಲವಿದು ಎಂಬೊವರವಾದ ಆಶೆಯಿಂದ ಬಿನ್ನಹ ಮಾಡಿದೆನೊತರು ಸ್ಥಿತ೧ ನಮ್ಮ ಗುರು ವಿಜಯ ವಿಠ್ಠಲರೇಯಾಪರಿಶುದ್ಧ ಮಾಡುವದು ಪಾಪದಿಂದ ತ್ವರಿತದಿ ೫
ಜತೆ
ಮಿಂಚಿನಂದದಿ ಪೊಳಿಯೊ ಹೃದಯ ಕಮಲದಲ್ಲಿಪಂಚ ಪಾಂಡವ ಪ್ರೀಯ ಗುರು ವಿಜಯ ವಿಠ್ಠಲರೇಯ ೬
[ನಳ ನಾಮ ಸಂ|| ಆಶ್ವೀಜ ಶುದ್ಧ ೧೦ ಗುರುವಾರ]

೧೨೭
ಶ್ರೀ ಹರಿಯ ಅಪರೋಕ್ಷ ಬಿಂಬ ದರ್ಶನವೆ ಸಕಲ ಸಂಪತ್ತು. ಶ್ರೀ ಹರಿಯನ್ನು ನೋಡದಿಪ್ಪದೆ ದುರ್ದಿನ. ಕಲ್ಯಾದಿ ದೈತ್ಯರಿಗೆ ಪ್ರೇರಿಸಿ ಎನ್ನ ಜ್ಞಾನ ತಿರೋಧಾನ ಮಾಡಿಸಿದಿ, ಒಂದು ಕ್ಷಣ ಬ್ರಹ್ಮ ಕಲ್ಪವಾಗಿ ದುಃಖದಿಂದ ಕಳೆವೆ. ನಿನ್ನ ಕಾಣದಿಪ್ಪ ಸತ್ಯಲೋಕದ ಸೌಖ್ಯವಾದರು ಒಲ್ಲೆ. ನಿನ್ನ ಕಾಣುವ ನರಕವಾದರು ಲೇಸು. ಕ್ರೂರರ ಬಾಧೆ ಪರಿಹರಿಸಿ ಗೋಚರನಾಗು ಎಂದು ಪ್ರಾರ್ಥನಾ.
ಧ್ರುವತಾಳ
ಇಂದಿರಾಪತಿ ನಿನ್ನ ನಿಗ್ರಹಕೆ ಪಾತ್ರರೆನಿಪಕುಂದು ಜನರಾದ ಕಲ್ಯಾದಿಗಳಿಗೆಒಂದೆ ದೇಹದಿಂದ ಸಾಧನ ಪೂರ್ಣವಾಹದೆಂದು ಬಾಹುಳ್ಯವಾದ ದೇಹವಿತ್ತುವೃಂದ ಅಘಗಳ ಮಾಡಿಸಿದಿ ಅಹರಹಛಂದ ಛಂದದ ದುಃಖ ಉಣಸಿದಂತೆಇಂದು ಎನಗೆ ಪ್ರಾಪ್ತವಾದ ದೇಹ ಕ್ಲಿಪ್ತದಿಂದನುಭವಿಸಿದ ಸುಖ ದುಃಖದಿಂದ ಪೂರ್ವ ಕೃತ ಕರ್ಮವು ತೀರಿಸದೆಮಂದಿ ಆಯುಷ್ಯ ಎನಗೆ ಯುಕುತಿಯಿಂದ ತಂದು ಹಾಕಿ ನಿಬಿಡ ಅಜ್ಞಾನ ಪಾಶದಿಂದ ಬಂಧನ ಮಾಡಿ ಎನ್ನ ಭವದಿ ನಿಲಿಸಿಒಂದು ನಿಮಿಷ ಒಂದು ಕಲ್ಪ ಕಳೆದ ತೆರದಿನಿಂದು ಉಂಬುವ ದುಃಖಕ್ಕೆಣೆ ಯಾವದುಹಿಂದೆ ಮಾಡಿದ ಉಪಕಾರವೇನೊ ನಿನಗೆಇಂದು ನಾ ಮಾಡಿದ ಅನುಪಕಾರವೇನೊಬಂಧು ನೀನಲ್ಲವೆ ಇನಿತು ಮಾಡುವದಕ್ಕೆತಂದೆ ನಿನಗೆ ನಾನು ಅಲ್ಲದವನೇಮಂದರೋದ್ಧರ ಗುರು ವಿಜಯ ವಿಠ್ಠಲರೇಯಎಂದೆಂದು ಮಾಡಿದದ್ದು ಮಾಡಿದಿಯಾ ೧
ಮಟ್ಟತಾಳ
ಧ್ರುವ ಋಷಿ ಮೊದಲಾದ ಸುಜನರ ಸಂತತಿಗೆಅವನಿಯೊಳಗೆ ಬಹು ಕಾಲಾವಧಿಯಾಗಿಜೀವಿಸುವ ಬಗೆ ಅನುಗ್ರಹ ಮಾಡಿದರುನವನವವಾದಂಥ ಜ್ಞಾನ ಭಕುತಿಯಿಂದಸುವಿಮಲವಾದ ಆನಂದದಿ ಮುಣುಗಿ ಅವನಿಯ ಪತಿ ನಿನ್ನ ಕಾಣುತ ಸುಖಿಸುವರುಜೀವಿತವಾದದಕೆ ಇದೇ ಸಾರ್ಥಕವಯ್ಯಾ”ಜೀವಿತಂ ವಿಷ್ಣು ಭಕ್ತಸ್ಯ ವರಂ ಪಂಚದಿನಾನ್ಯಪಿ’’ಈ ವಿಧವನ್ನು ಬಿಟ್ಟು ಅಜ್ಞಾನಾಂಧದಲಿಭವದಲ್ಲಿ ಮುಣಿಗಿ ಕ್ಷಣ ಕ್ಷಣಕೆ ದುಃಖತ್ರಿವಿಧ ತಾಪದಿ ಬಳಲಿ ಜ್ಞಾನರಹಿತನಾಗಿ ಈ ವಸುಧಿಯಲ್ಲಿಪ್ಪ ಮನಜರಿಗಿಂದಲ್ಲಿಕೇವಲ ನರಕ ಸ್ಥಾನವೆ ಲೇಸು ಹರಿಯೇ”ನತು ಕಲ್ಪ ಸಹಸ್ರಸ್ತು ಭಕ್ತಿ ಹೀನಸ್ತು ಕೇಶವೆ’’ ಇಂತೆಂ-ಬ ವಿಧದಿ ಈ ಅವನಿಯ ಮೇಲೆನಗೆ ನಿನ್ನಿಂದಲಿ ಅಗಲಿ ಇ-ರುವದಕಿಂತಲ್ಲಿ ಯಮ ಸದನದಲ್ಲಿನಿವಾಸವು ಎನೆ ಬಹು ಲೇಸು ನಿನ್ನಾಣೆಶಿವ ಮೂರುತಿ ಗುರು ವಿಜಯ ವಿಠ್ಠಲರೇಯತ್ರಿವಿಧ ಕರಣದಿಂದ ಇದೆ ಮಾತು ನುಡಿವೆ ೨
ತ್ರಿವಿಡಿತಾಳ
ಕ್ರೂರ ದೈತ್ಯರನ್ನ ಘೋರ ತಮಸಿನಲ್ಲಿಪಾರುಗಾಣದೆ ಇದ್ದು ದುಃಖ ಉಂಬಕಾರಣದಿಂದ ದೇಹ ಛೇದ ಭೇದಾದಿಗಳುತೋರಗೊಡದೆ ಜನಾರ್ದನನ ನಾಮದಿಂದಸಂರಕ್ಷಣ ಮಾಡುವುದು ನಿನ್ನ ಕರುಣವೆಂದುಆರಾದರೆಂಬುವರೆ ಅವನಿನಾಥಧಾರುಣಿ ಮಧ್ಯದಲ್ಲಿ ಕೇವಲ ದುಃಖ ಉಣಿಪಕಾರುಣದಿಂದ ಎನ್ನ ಉಳಿಸಿದದಕೆ ಕಾರುಣ್ಯ ಮಾಡಿದೆಂಬ ಸಂಜ್ಞವಾಗದು ಎನಗೆನೀರಜಾಕ್ಷನೆ ನಿನ್ನ ಕಾಣದ ದಿನ ಒಂದುಪರಮೇಷ್ಠಿ ಕಲ್ಪದ ನಿತ್ಯ ಕಳಿವೆಕಾರಣ ಸ್ಠಿತನಿಗೆ ಪ್ರತ್ಯೇಕ ಪೇಳುವದೇನೊಆರಿಗುಸರಲಿ ಎನ್ನ ಸುಖಾ ದುಃಖದೂರು ಕೇಳುವರಿಲ್ಲ ಎಷ್ಟು ಕೂಗಿದರುಆರೆನ್ನ ಮೋಹಿಸುವರು ಆರಿಗಾರು ಅ-ಪಾರ ದಾರಿದ್ರನ ಕರೆದು ಮನ್ನಿಸಿ ಮನ್ನಿಸಿ ಸಕಲವಾರಣಾಂತದಿ ಸಂಪದವನಿತ್ತುವರಣ ನಾಲ್ಕರಿಂದ ಮಾನ್ಯನೆನಸಿ ಕೊನೆಗೆತಿರಕಿಯ ಮನೆ ಮನೆ ತಿರಗುವಂಥತೆರದಿ ಮಾಡಿಸಿದ ಮಹಿಮೆಗೆ ಯೇನೆಂಬೆನೀರಥಿ ಪೋಲ್ವ ಕರುಣಿ ನಿರ್ಮಲಾತ್ಮಾಸಾರಿ ಸಾರಿಗೆ ನಿನಗೆ ವೈಶೇಷ ಪೇಳುದ್ಯಾಕೆನಾರಾಯಣ ನಿನ್ನ ವಿರಹಿತದಿನೀರಜಾಸನ ಲೋಕವಾದರು ಎನಗೆಮೀರಿದ ನರಕವೆಂದು ಮನದಿ ತಿಳಿವೆವಾರವಾರಕೆ ಎನ್ನ ಬರಿದೆ ಬಳಲಿಪದೇಕೆಭಾರ ಕರ್ತನಾದ ಸಖನೆ ಕೇಳು ಮಾರಜನಕ ಗುರು ವಿಜಯ ವಿಠ್ಠಲರೇಯಶಾರೀರದಲ್ಲಿದ್ದು ಸಾಕ್ಷಿ ನೀನೆ ೩
ಅಟ್ಟತಾಳ
ವೈಕುಂಠ ವಿಶೇಷ ಸಾಕಾರ ನೀನಿಂದುಭಕುತ ಸಮೂಹಕೆ ಬೇಕಾದ ಸುಖಗಳನೇಕವಾಗಿ ಯಿತ್ತು ಸಾಕುವೆನೆಂತೆಂಬ ಕಾರಣ ಸುಜನರುಬೇಕೆಂದು ಬಯಸಿ ಸಾಧನ ಮಾಳ್ಪರುಕಾಕುದರನಯ್ಯಾ೧ ನಿನ್ನ ವಿರಹಿತವಾದ ವೈಕುಂಠವಾದರೂ ಬಯಸರೊಬ್ಬರನ್ನಈ ಕುಂಭಿಣಿ ವಿಷಯ ಪೇಳ್ವದೇತಕಿನ್ನುವೈಖಾನಸ ವಂದ್ಯ೨ ಗುರು ವಿಜಯ ವಿಠ್ಠಲರೇಯಯಾಕೆ ಎನ್ನ ವ್ಯರ್ಥ ಬಳಲಿಸಿ ನೋಡುವಿ ೪
ಆದಿತಾಳ
ರಾಜಾಧಿರಾಜನೆನೆಸಿ ಸಕಲವಾದ ಜನರಿಂದ ಪೂಜ್ಯನಾಗುವದು ಆನೊಲ್ಲೆ ನಿನ್ನ ಸಾಕ್ಷಿಮೂರ್ಜಗದೊಳಗಿದ್ದ ಧನ ಮೊದಲಾದ ವಸ್ತುನಿವ್ರ್ಯಾಜದಿ ಎನಗೆ ಪ್ರಾಪ್ತವಾದರು ನಾನೊಲ್ಲೆಭೋಜ ಕುಲೋತ್ತಮ ಇದು ಸತ್ಯ ಇದು ಸತ್ಯಈ ಜೀವಿಗಳ ಮಧ್ಯ ಅಲ್ಪನಾದರು ಆಗೆ ಹೃತ್ಸರಸಿಜದಲ್ಲಿ ಕಾಂಬುವದು ಎನಗೆ ಬೇಕುರಾಜೀವ ನೇತ್ರ ಎನಗೆ ನೈಜವಾದ ಕಾಮವಿದೆವ್ಯಾಜದಿಂದ ಇದಕ್ಕೆ ಯೋಗ್ಯನ್ನ ಮಾಡದಲೆ ದುಃಖಭಾಜನ ರೂಪವಾದ ಈ ಭೂಮಿಯಲ್ಲಿ ವ್ಯರ್ಥನೀ ಜೀವಿಸೆಂದು ಪೇಳ್ವ ವಚನವು ನುಡಿವದೇಕೆತೈಜಸ ರೂಪ ಗುರು ವಿಜಯ ವಿಠ್ಠಲರೇಯಾಸೋಜಿಗವೇನಿಂಬೆ ನಿನ್ನಯ ಕರುನಕ್ಕೆ ೫
ಜತೆ
ನಿನ್ನ ನೋಡದಲಿಪ್ಪ ದಿನವೆ ದುರ್ದಿನವಯ್ಯಾಮುನ್ನದಿ ನಿಜವಿದು ಗುರು ವಿಜಯ ವಿಠ್ಠಲರೇಯಾ ||
[ನಳ ನಾಮ ಸಂ|| ವೈಶಾಖ ಬ|| ೧೧ ಶುಕ್ರವಾರ]

೧೪೭
[ಅಪರೋಕ್ಷ ತಿರೋಧಾನ ಕಾಲ ಶ್ರೀಹರಿಯು ಮೃದು ನುಡಿಯಿಂದ ಸಂತೈಸಿ, ಆನಂದವಾದರೂ ಶ್ರೀ ಬಿಂಬನನ್ನು ಹೃದಯದಿ ಕಾಣದಿಪ್ಪದು ಮಹಾ ದುಃಖ ತಮವು. ತ್ವರಿತ ಸಂದರುಶನ ಕೊಡು. ಇಹದ ಸೌಖ್ಯ ಒಲ್ಲೆ. ಹಿಂದೆ ಎರಡು ಜನ್ಮದಲ್ಲಿ ಸಲಹಿದಂತೆ ಒದಗು. ವರವಿತ್ತದ್ದು ಸತ್ಯ ಮಾಡು. ನಿನ್ನ ಕಾಣದಿಪ್ಪ ಕಾಲ ಬ್ರಹ್ಮಕಲ್ಪವಾಗಿ ಕಳೆದೆ. ನಿನ್ನ ನೋಡುವ ಸುಖ ಮುಕ್ತಿ ಸುಖವೆಂಬ ಸ್ತೋತ್ರ.]
ಧ್ರುವತಾಳ
ಇಂದು ಎನಗೆ ನೀನು ನುಡಿದ ಮಾತುಗಳಿಂದ ಆ-ನಂದವಾಯಿತು ಮನಕೆ ಅಂಬುಜಾಕ್ಷಕುಂದು ಮಾಡಿದಿ ಎಂಬ ಕಾರಣದಿಂದ ಮನಕೆಸಂದೇಹ ಎಳ್ಳಿನಿತು ಇಲ್ಲವಯ್ಯಾಒಂದು ಮಾತ್ರವು ಉಂಟು ವೈಶೇಷವಾದದ್ದುಇಂದಿರಾಪತಿ ನಿನ್ನ ಕಾಣದಿಪ್ಪವೃಂದ ದುಃಖವು ಮಾತ್ರ ಸಂದು ಸಂದುಗಳಲ್ಲಿನಿಂದು ವ್ಯಾಪಕವಾಗಿ ಬಾಧಿಸುವದುಸಿಂಧು ಕರುಣಿ ನಿನಗೆ ನೀನೆ ಒಲಿದು ಎನ್ನದಂಧನ೧ ಮಾಡದಲೆ ದಯದಿ ನೋಡಿಸಂದರುಶನವಿತ್ತು ತ್ವರಿತದಿಂದಲಿ ಎನ್ನಮಂದಿರ ಸೇರುವಂತೆ ಮಾಡುವದುಮಂದರಧರ ಗುರು ವಿಜಯ ವಿಠ್ಠಲರೇಯಾಬಂಧು ನೀನೆವೆ ಅನ್ಯ ಚಿಂತೆ ಯಾಕೆ ೧
ಮಟ್ಟತಾಳ
ಇಹ ಸೌಖ್ಯವು ಎನಗೆ ಆವಾವದು ಬರಲುನೇಹವಾಗದು ಕೇಳಿ ನಿನ್ನ ಪಾದವೆ ಸಾಕ್ಷಿ ಹೃ-ದ್ಗುಹವಾಸಿಗೆ ಆನು ಪೇಳುವದೇನೊಮೋಹ ಮಾತ್ರಕ ಉಂಟು ಜಾರಿ ಪೋದವನಲ್ಲಿಶ್ರೀಹರಿ ನಿನ್ನಯ ಇಚ್ಛೆಯಲಿಂದಲಿಅಹರ್ನಿಶದಲ್ಲೆನ್ನ ಬಾಧಿಪದು ಮಮತೆಮಹ ಮಹಿಮನೆ ನಿನ್ನ ಶಾಸನದಲ್ಲಿ ಎನ್ನದೇಹದ್ವಯದಲ್ಲಿ ತಪ್ಪದೆ ಒದಗಿಸಿದೆಗಹನ ಕರುಣಿ ನಿನ್ನ ಬಂಧಕ ಶಕುತಿಯನುಕುಹಕ ಮಾನವ ನಾನು ಮೀರಲಿ ಬಲ್ಲೆನೆ ವ್ಯ-ವಹಿತ೧ ನೀನಾಗಿ ನೋಳ್ಪ ಕಾರಣದಿಂದ ತಿ-ರೋಹಿತವಾದ ಜ್ಞಾನವುಳ್ಳವನಾಗಿಮೋಹ ಜಾಲದಲ್ಲಿ ಸಿಲ್ಕಿದೆನೊ ಮಿಕ್ಕಅಹಿಕ ಸುಖದಿ ಎನಗೆ ಸ್ರ‍ಪಹವಾಗದೊ ಹರಿಯೇವಿಹಿತ ಮಾಳ್ಪೆನೆಂಬ ಕೃಪೆ ನಿನ್ನಲ್ಲಿತ್ತೆಇಹಪರ ಸೌಖ್ಯಕ್ಕೆ ನೀನೆ ಗೋಚರನಾಗೆಬೃಹತಿ ನಾಮಕ ದೇವ ಗುರು ವಿಜಯ ವಿಠ್ಠಲರೇಯಅಹರಹದಲಿ ಇದನೆ ಆಪೇಕ್ಷವ ಮಾಳ್ಪ ೨
ತ್ರಿವಿಡಿತಾಳ
ಇಂದಿರಾಪತಿ ಕೇಳೊ ಎನ್ನ ವೃತ್ತಾಂತವಸಂದೇಹವಿಲ್ಲದಲೆ ಬಿನ್ನೈಸುವೆಒಂದು ಕ್ಷಣ ನಿನ್ನ ಕಾಣದಲಿಪ್ಪ ಕಾಲಮಂದಜಾಸನ ಕಲ್ಪವಾಗಿ ಕಳೆವೆಸಿಂಧುಶಯನ ನಿನ್ನ ಕಾಣುತಲಿಪ್ಪ ನಿರಯಾಎಂದೆಂದು ಎನಗಿರಲಿ ನಿನ್ನ ಸಾಕ್ಷಿಮಂದಿ ಮಾತಿಗೆ ನೀನು ಮುನಿದ ಕಾರಣದಿಂದವೃಂದ ಸುಖವನೀವ ಭರತಖಂಡಇಂದು ಸಾಧನಿ ಭೂಮಿ ನರಕ ಸಮಾನವೆನಿಸಿವೃಂದ ದುಃಖವನುಂಬೆ ಪ್ರತಿದಿನತಂದೆ ಎನಗೆ ಇತ್ತ ವರ ಸತ್ಯ ಮಾಳ್ಪನಾಗಿ ಹೃ-ನ್ಮಂದಿರದೊಳಗೆ ಪೊಳೆದು ಆನಂದವೀಯೊಕಂದರ್ಪ ಕೋಟಿ ರೂಪ ಗುರು ವಿಜಯ ವಿಠ್ಠಲರೇಯಾಬಂಧು ನೀನಲ್ಲದಲೆ ಅನ್ಯನೇನೋ ೩
ಅಟ್ಟತಾಳ
ನಿನ್ನ ನೋಡುವ ಸುಖ ಮುಕ್ತಿಯ ಸುಖವಯ್ಯಾನಿನ್ನ ನೋಡುವ ಕಾಲ ಮುಕ್ತಿಯಾದ ಕಾಲನಿನ್ನ ನೋಡುವ ಮನುಜ ತ್ರೈಲೋಕದಲಿ ಪೂಜ್ಯಘನ್ನಮಹಿಮ ಗುರು ವಿಜಯ ವಿಠ್ಠಲರೇಯಾನಿನ್ನ ನೋಳ್ಪ ಭಾಗ್ಯ ಎಣಿಕೆ ಮಾಡುವನಾರೊ ೪
ಆದಿತಾಳ
ಪಾಹಿ ಪಾಂಡವ ಪಾಲ ಸೌಜನ್ಯ ಮಂದಾರಪಾಹಿ ಗಜರಾಜ ಮಹಾ ಭಯ ನಿವಾರಪಾಹಿ ಭುವನ ರಕ್ಷ ಔದಾರ ಗಂಭೀರಪಾಹಿ ಅಣುಮಹ ಸಮಸ್ಥಿತ ಸಾಕಾರಪಾಹಿ ಸಮಾಧಿಕ ವರ್ಜಿತ ಶುಭಕಾರಪಾಹಿ ಅಣಿಮಾದಿ ಐಶ್ವರ್ಯ ಆಪೂರ್ಯಪಾಹಿ ಏಕಮೇವ ದ್ವಿತೀಯ ಧುರ (ದೂರಾ) ಧೀರಪಾಹಿ ”ಯೋನಃ ಪಿತಾ ಜನಿತಾ ಯೋ ವಿಧಾತ’’ಪಾಹಿ ಲೋಕಾತೀತ ತ್ರೈಗುಣ್ಯ ವರ್ಜಿತಪಾಹಿ ಭೂತ ಭವ್ಯ ಭವನ್ನಾಥ ಸುಖ್ಯಾತಪಾಹಿ ಪಾರ್ಥ ಪ್ರಿಯ ಪರಮಾಪ್ತ ಸಾರಥ್ಯಾಪಾಹಿ ಪಾಹಿ ಆರ್ತ ರಕ್ಷಾಮಣಿ ತತ್ಪರಪಾಹಿ ಯುಗಾದಿ ಕೃದ್ಯುಗವರ್ತ ವಿಜ್ಞೇಯಪಾಹಿ ಪಾಹಿ ನಾಸತು ನಾ ಅಸತು೧ ಪಾಹಿ ಸ್ಥೂಲ ಭುಕು ನಿರಾಮಯ ನಿರ್ಗುಣಪಾಹಿ ಲೋಕವತು ಕ್ರೀಡಾಗುಣ ವಿಶಿಷ್ಟಪಾಹಿ ಶಫರಾದಿ ಅನಂತಾನಂತವತಾರಪಾಹಿ ಪಾಹಿ ತವ ಚರಣಕ್ಕೆ ನಮೊ ನಮೊಲೋಹಿತಾಕ್ಷ ಗುರು ವಿಜಯ ವಿಠ್ಠಲ ರೇಯಾಅಹರಹದಲ್ಲಿ ಎನ್ನ ಮನದಲ್ಲಿ ನಿಲ್ಲುವದು ೫
ಜತೆ
ಅಪೇಕ್ಷೆ ಎನಗಿದೆ ನಿನ್ನ ಪಾದವೇ ಸಾಕ್ಷಿಉಪೇಕ್ಷೆ ಮಾಡದಲೀಯೋ ಗುರು ವಿಜಯ ವಿಠ್ಠಲರೇಯ ||
(ಪಿಂಗಳನಾಮ ಸಂ || ಚೈತ್ರ ಶುದ್ಧ ೫ ಗುರುವಾರ)

೧೩೩
ಶ್ರೀಮಹಾಲಕ್ಮೀ ಸ್ತೋತ್ರ
ಧ್ರುವತಾಳ
ಇಂದುಮುಖಿಯೆ ನಿನ್ನ ಸಂದರುಶನದಿಂದಾನಂದವಾಯಿತು ಅರವಿಂದನಯನೆಅಂದಿಗೆ ಗೆಜ್ಜೆ ಮೊದಲಾದಾಭರಣದಿಂದಸುಂದರವಾದ ರೂಪದಿಂದ ಬಂದುಮಂದಹಾಸದಿಂದ ಮಾತನಾಡಿದುದರಿಂದಬೆಂದು ಪೋದೆವೆನ್ನ ತ್ರಿವಿಧ ತಾಪಇಂದಿರೇ ಈ ರೂಪದಿಂದ ತೋರಿದಳುಬಂಧುನೆನಿಪ ಲೋಕ ಗುರು ಸತಿಯೊಕಂದುಕಂಧರ೧ನಾದ ದೇವನ್ನ ರಾಣಿಯೊಇಂದ್ರಾಣಿ ಮೊದಲಾದ ಜನರೋರ್ವಳೊಮಂದಾಕಿನಿಯೊ ಇದರೊಳೊಂದರಿಯೇ ಕರುಣಸಿಂಧುವೆ ನಿನ್ನ ಪದಕೆ ನಮೊ ನಮೊ ಮಂದರ್ಗೆ ಯೋಗ್ಯವಾದ ಮನುಷ್ಯ ದೇಹವನ್ನುವೊಂದಿಪ್ಪ ಕಾರಣದಿಂದ ನಿನ್ನಅಂದವಾದ ರೂಪ ಶ್ರೀಯಗಳನ್ನು ತಿಳಿದುವಂದಿಸಿ ವರಗಳು ಬೇಡಲಿಲ್ಲಇಂದಿರೆ ರಮಣನ ಬಂಧಕ ಶಕುತಿಯುಮಂದನಾದವ ನಾನು ಮೀರುವೆನೇಕಂದನ ಅಪರಾಧವೆಣಿಸದಲೇ ನೀನುಅಂದ ವಚನವನ್ನೆ ಸತ್ಯ ಮಾಡಿಬಂಧುನೆನಿಸಿಕೊಂಬ ಗುರು ವಿಜಯ ವಿಠ್ಠಲನ್ನಎಂದೆಂದಗಲದಿಪ್ಪ ವರವ ನೀಡು ೧
ಮಟ್ಟತಾಳ
ಸಾನುರಾಗದಿ ಎನ್ನ ಸಾಮೀಪ್ಯವನೈದಿಪಾಣಿದ್ವಯದಲ್ಲಿ ವೇಣು ಸ್ಪರಶ ಮಾಡಿಏನು ಬೇಡುವೆ ಬೇಡು ನೀಡುವೆನೆಂತೆಂದುವಾಣಿಯಿಂದಲಿ ನುಡಿದು ಅನುಗ್ರಹಿಸಿದುದಕೆಮಾನುಷನ್ನ ಜನಿತ ಅಜ್ಞಾನದಿಂದಜ್ಞಾನನಿಧಿಯೆ ನಿನ್ನ ಪದದ್ವಂದ್ವಕೆ ನಮಿಸಿಮಾನಸಿನಾಪೇಕ್ಷೆ ವಿವರಿಸಿ ಬಿನ್ನೈಸಿಪೂರ್ಣ ಮಾಡುಯೆಂದು ವರಗಳ ಬೇಡದಲೆಹೀನ ಮನೋಭಾವ ಮಾಡಿದೆ ಹೇ ಜನನಿಧೇನುವಿಗೆ ವತ್ಸ ಮಾಡಿದ ಅಪಚಾರತಾನೆಣಿಸಿ ಅದರ ಸಾಕದೆ ಬಿಡುವದೆಮಾನ ನಿಧಿಯೆ ಎನ್ನ ಅನುಚಿತವೆಣಿಸದಲೆಏನು ಬೇಡಿದ ವರವ ನೀಡುವೆನೆಂತೆಂದವಾಣಿ ಸತ್ಯ ಮಾಡು ಅವ್ಯವಧಾನದಲಿಜ್ಞಾನಪೂರ್ಣ ಗುರು ವಿಜಯ ವಿಠ್ಠಲರೇಯಪ್ರೇರಣೆಯಿಂದಲ್ಲಿ ಪ್ರಾರ್ಥಿಸುವೆನು ನಿನ್ನ ೨
ತ್ರಿವಿಡಿತಾಳ
ನಿನ್ನನುಗ್ರಹದಿಂದ ಧನ ಮೊದಲಾದ ವಸ್ತುತನ್ನಿಂದ ತಾನೆ ಬಂದು ಒದಗುತಿರೆಇನ್ನಿದಕ್ಕೆ ನಾನು ನಿನ್ನ ಪ್ರಾರ್ಥಿಪೊದಿಲ್ಲಬಿನ್ನಪವನು ಉಂಟು ಗ್ರಹಿಸಬೇಕು ಅನಂತ ಜನುಮದ ಪುಣ್ಯ ಪ್ರಭಾವದಿಂದಘನ್ನ ಮಹಿಮನಾದ ಪುರುಷನೋರ್ವಕ್ಷಣವಗಲದಿಪ್ಪ ಆಪ್ತನಾದವನೆನಿಸಿಎನ್ನ ವಿರಹಿತವಾದ ಸ್ಥಾನವನ್ನುಕಣ್ಣಿಲಿ ನೋಡಲಾರೆನೆಂದು ನುಡಿದವನ್ನಎನ್ನ ದುರ್ಭಾಗ್ಯದಿಂದ ಅಗಲಿ ನಾನಾಬನ್ನ ಬಡುತಲಿಪ್ಪೆ ನಿಮಿಷ ಒಂದ್ಯುಗವಾಗಿಮನ್ನಿಸಿ ಮನಕ ತಂದು ಪೂರ್ವದಂತೆಮನ್ಮನದಲಿ ತೋರೊ ವ್ಯವಧಾನ ಮಾಡದಲೆಇನ್ನಿದೆ ಬೇಡುವೆನೇ ಜನ್ನನೀಯೇನಿನ್ನಿಂದ ನುಡಿದಂಥ ವಾಕ್ಯ ಸಫಲ ಮಾಡಿಮನ್ಮನೋರಥವನು ಪೂರ್ಣ ಮಾಡು ಆಪನ್ನ೧ರ ರಕ್ಷಿಸುವ ಬಿರಿದು ನಿನಗೆ ಉಂಟುಸನ್ನುತಿಸಿ ಬೇಡಿಕೊಂಬೆ ಗುಣನಿಧಿಯೇಪನ್ನಂಗತಲ್ಪ ಗುರು ವಿಜಯ ವಿಠ್ಠರೇಯನಿನ್ನ ವಾಕ್ಯವೊಹಿಪ ಸರ್ವಕಾಲ ೩
ಅಟ್ಟತಾಳ
ಕರಣಗಳಲಿ ಹರುಇ ವ್ಯಾಪಕನೆಂತೆಂಬಪರಿಯನ್ನು ತಿಳಿದಿಪ್ಪ ನರ ನುಡಿದ ವಾಕ್ಯಪರಮೇಷ್ಠಿ ಮೊದಲಾದ ಸುರರು ಸಹಿತನಾದಸಿರಿಪತಿ ವೊಹಿಸುವನೆಂದು ಪೇಳುತಲಿರೆಕರಣಮಣನಿಗಳಾದ ಸುರರಿತ್ತ ವರಗಳಹರಿ ಸತ್ಯ ಮಾಡುವನೆಂಬದಚ್ಚರವೇನೊಶರಣನ್ನ ಮನೋರಥ ಪೂರ್ಣ ಮಾಡುವುದಕ್ಕೆಕೊರತೆ ನಿನಗಾವುದು ಕೋಮಲಾಂಗಿಯೆ ನಿನ್ನಚರಣ ದ್ವಂದ್ವಕೆ ನಮಿಸಿ ಶರಗೊಡ್ಡಿ ಬೇಡುವೆತ್ವರಿತದಿಂದಲಿ ಈ ವರವನ್ನೆ ಪಾಲಿಸುಸುರಪಕ್ಷಪಾಲ ಗುರು ವಿಜಯ ವಿಠ್ಠಲ ನಿಮ್ಮಕರವಶನಾಗಿಪ್ಪ ಆವಾವ ಕಾಲದಲಿ ೫
ಆದಿತಾಳ
ಆವಾವ ಜನ್ಮದಲ್ಲಿ ಅರ್ಚಿಸಿದೆ ನಿನ್ನಆವಾವ ಕಾಲದಲ್ಲಿ ಅನುಗ್ರಹಿಸಿದ ವರವುಈ ವಿದ್ಯಮಾನವಾದ ಜನುಮದಲೊಮ್ಮೆ ಘನ್ನದೇವಿಯೋ ನಿನಪಾದ ಸಾರಿದವನಲ್ಲಗೋವತ್ಸ ನ್ಯಾಯದಿಂದ ನಿನಗ ನೀನೆ ಬಂದುಆವದು ಬೇಡಿದ ವರಗಳನೀವೆನೆಂದುಸುವಾಣಿಯಿಂದ ಎನ್ನ ಆದರಿಸಿದಿ ನಿನ್ನಔದಾರ್ಯತನಕಿನ್ನು ಆವದಾವದು ಸಮಶ್ರೀ ವತ್ಸಲಾಂಛನ ಗುರು ವಿಜಯ ವಿಠ್ಠಲ ನಿನ್ನಭಾವದಿಂದಲಿ ನೋಳ್ಪ ಭಾಗ್ಯವೇ ಪಾಲಿಸೇ ೫
ಜತೆ
ನಿನ್ನ ದರುಶನದಿಂದ ಅನಿಷ್ಟವನು ನಾಶಘನ್ನ ಇಷ್ಟ ರೂಪ ಗುರು ವಿಜಯ ವಿಠ್ಠಲ ಪ್ರಾಪ್ತ ||
[ರಕ್ತಾಕ್ಷಿ ಸಂ|| ಶ್ರಾವಣ ಶುದ್ಧ ೧ ಬುಧವಾರ ನವವೃಂದಾವನದಲ್ಲಿ ಮಾಡಿದ್ದು.]

೧೪೧
ಧ್ರುವತಾಳ
ಇಷ್ಟು ನಿರ್ದಯವ್ಯಾಕೊ ಎಲೆ ಎಲೆ ಆಪ್ತನಾದಕೃಷ್ಣ ನಿನಗೆ ನಾನು ದೂರಾದವನೇಘಟ್ಟಿ ಮನಸಿನವ ನೀನಲ್ಲ ಎಂದಿಗೂ ಎನ್ನ ಅ-ದೃಷ್ಟ ಲಕ್ಷಣವೆಂತೊ ತಿಳಿಯದಯ್ಯಾಸೃಷ್ಟಿಯೊಳಗೆ ಭಕುತ ವತ್ಸಲನೆಂಬೊಶ್ರೇಷ್ಠವಾದ ಬಿರಿದು ಇಲ್ಲವೇನೋಶಿಷ್ಟ ಜನರ ಸಂಗ ವರ್ಜಿತನಾಗಿ ನಿನ್ನಮುಟ್ಟಿ ಭಜಿಸದಲಿಪ್ಪ ಹೀನನೆಂದೂಬಿಟ್ಟು ನೋಡಿದರೆ ಮತ್ತಿಷ್ಟು ಅಧಿಕವಾದದುಷ್ಟ ನಡತಿಯಿಂದ ಬಂಧನಾಹಾಪ್ರೇಷ್ಟ ಯೋಗ್ಯವಾದ ಕಾಲವ ನಿರೀಕ್ಷಿಸೆಎಷ್ಟು ಕಲ್ಪಗಳಿಗೆ ಭವದಲಿಂದನಿಷ್ಟವಾಗುವನೇನೊ ಅಭೀಷ್ಟವೈದುವನೆಂತುದೃಷ್ಟಿಲಿ ನೋಡಿದರೆ ಅಜ ಭವಾದ್ಯರುಕಷ್ಟವೈದುವರು ನಿಜಸುಖವಿಲ್ಲದಲೆವಿಷ್ಣು ನಿನ್ನಯ ಮಹಿಮೆ ಇನಿತು ಇರಲೂಎಷ್ಟರವರಯ್ಯಾ ಮಿಕ್ಕಾದ ಭಕುತರೆಲ್ಲತುಷ್ಟನಾಗಿ ನಿನಗೆ ನೀನೇ ಒಲಿದುದುಷ್ಟವಾದ ಕರ್ಮ ನೂಕಿ ಕಡಿಗೆ ಮಾಡಿಪುಷ್ಟಗೈಸು ಜ್ಞಾನಾನಂದದಿಂದತಟ್ಟಲೀಸದೆ ಕಲಿ ಬಾಧೆ ಎಂದೆಂದಿಗೆಹೃಷ್ಟನಾಗು ಎನ್ನ ಸಾಧನಕ್ಕೆದಿಟ್ಟ ಮೂರುತಿ ಗುರು ವಿಜಯ ವಿಠ್ಠಲ ರೇಯಾಪೊಟ್ಟಿಯೊಳಗೆ ಜಗವಿಟ್ಟು ಸಲಹುವ ದೇವಾ ೧
ಮಟ್ಟತಾಳ
ಕಾಳಿ ಸರ್ಪನು ನಿನ್ನ ಕಚ್ಚಿ ಬಿಗಿಯೆ ಅವನಕೀಳು ನಡತೆಯನ್ನ ನೋಡದೆ ಕರುಣದಲಿಮೇಲಾನುಗ್ರಹ ಮಾಡಿದಿ ಮುದದಿಂದಫಾಲಲೋಚನ ಸುರಪ ಗುರು ಸತಿ ಭೃಗು ಭೀಷ್ಮಶೀಲ ಭಕುತರೆಲ್ಲ ಕಲಿ ಕಲ್ಮಷದಿಂದಕಾಲನಾಮಕ ನಿನ್ನ ಬಂಧಕ ಶಕುತಿಯಲಿವ್ಯಾಳೆ ವ್ಯಾಳೆಗೆ ಅಪರಾಧವೆ ಮಾಡಿದರೂಪಾಲಿಸಿದೆ ಹೊರ್ತು ಪ್ರದ್ವೇಷವ ಮಾಡಿದಿಯಾಜಾಲ ಅಘವ ಮಾಡಿ ದೇಹಿ ದೇಹಿ ಎನಲುತಾಳುವರಲ್ಲದಲೆ ಛಿದ್ರಗಳೆಣಿಸುವರೆಮೂಲ ನೀನೆ ಸುಖ ದುಃಖಾ (ಖ) ನುಭವಕ್ಕೆಮೂರ್ಲೋಕಾಧಿಪ ಗುರು ವಿಜಯ ವಿಠ್ಠಲ ನಿನ್ನಆಳುಗಳಗೊಬ್ಬ ಅಧಮನು ನಾನೇವೆ ೨
ತ್ರಿವಿಡಿತಾಳ
ವಿದೇಶದವನಾಗಿ ಪಥದೊಳು ಒಂದು ಕ್ಷಣಆದರ ಪರಸ್ಪರವಾಗಿ ಭಿಡಿಯಾಹೃದಯದೊಳು ಮರಿಯದೆ ಸ್ಮರಿಸುವನೊಮ್ಮಿಗನ್ನಪದುಮನಾಭನೆ ನಿನ್ನ ನಿರ್ಭಿಡೆಯತನಕೆಆದಿ ಅಂತ್ಯವಿಲ್ಲ ಆಶ್ಚರ್ಯ ತೋರುತಿದೆಉದದಿ ಪೋಲುವ ದಯ ಪೂರ್ಣನೆಂದುಸದಮಲವಾಗಿ ನಿನ್ನ ಧೇನಿಸಬೇಕೆಂತೊವಿದೂರನೆನಿಪ ದೋಷರಾಶಿಗಳಿಗೆಪದೋಪದಿಗೆ ಗುರುದ್ರೋಹ ಮಾಡಿದಿ ಎಂದು ಅ-ವಧಿ ಇಲ್ಲದಲೆ ಹಂಗಿಸುವದುಮೋದವಾಗಿ ನಿನಗೆ ತೋರುತಲಿದೆ ನಿನ್ನಚದುರತನಕೆ ನಾನು ಎದುರೇ ನೋಡಾಪದುಮ ಸಂಭವ ಮುಖ್ಯ ದಿವಿಜರು ಸ್ವತಂತ್ರದಿಪದವಾಚಲಣದಲ್ಲಿ ಸಮರ್ಥರೇಹೃದಯದೊಳಗೆ ವಾಸವಾಗಿದ್ದ ಹರಿ ನಿನ್ನಚೋದ್ಯ ನಡತೆ ನಡವದಾವ ಕಾಲಇದು ಎನ್ನ ಮಾತಲ್ಲ ‘ಎಥಾ ದಾರುಮಯಿ’ಶುದ್ಧ ಭಾಗವತೋಕ್ತಿ ಪ್ರಮಾಣದಂತೆಅದುಭೂತ ಬಿಂಬ ನೀನು ಪ್ರತಿಬಿಂಬ ಜೀವ ನಿನಗೆ ನೀಮುದದಿಂದ ಮಾಡಿಸದಿಪ್ಪ ಕಾರ್ಯ ಎನಗೆಒದಗಲು ಪೂರ್ವೋಕ್ತವಾದ ಪ್ರಮಾಣಗಳಿಗೆಅಧಿಕಾರ ಸಿದ್ಧಾಂತ ಬರುವದೆಂತೋಉದರಗೋಸುಗವಾಗಿ ಮಾಡಿದವನಲ್ಲಉದಯಾಸ್ತಮಾನ ಎನ್ನ ಬಳಲಿಪುದುಇದು ಧರ್ಮವಲ್ಲ ನಿನಗೆ ಕರವ ಮುಗಿದು ನಮಿಪೆಪದಕೆ ಬಿದ್ದವನ ಕೂಡ ಛಲವ್ಯಾತಕೊಬದಿಯಲ್ಲಿ ಇಪ್ಪ ಗುರು ವಿಜಯ ವಿಠ್ಠಲರೇಯಾಸದಾ ಕಾಲದಲಿ ನೀನೆ ಗತಿ ಎಂದು ಇಪ್ಪೆ ನೋಡಾ ೩
ಅಟ್ಟತಾಳ
ಬಲವಂತವಾಗಿದ್ದ ಪೂರ್ವದ ಕರ್ಮವುತಲೆಬಾಗಿ ಉಣಬೇಕು ಉಣದಿದ್ದರೆ ಬಿಡದುಜಲಜನಾಭನೆ ನಿನ್ನ ಸಂಕಲ್ಪ ಇನಿತೆಂದುತಿಳಿದು ಈ ದೇಹದ ಅಭಿಮಾನವಿದ್ದರುತಲೆದೂಗಿ ಸುಮ್ಮನೆ ಇರಲಾಗಿ ಎನ್ನಿಂದಒಲ್ಲೆನೆಂದರೆ ಬಿಡದು ಎಲ್ಲಿ ಪೊಕ್ಕರನ್ನನಳಿನಾಕ್ಷ ನೀನೆವೆ ಘನ ಕರುಣವ ಮಾಡಿವಿಲಯಗೈಸುವ ಉಪಾಯಗಳಿಂದಲಿನೆಲೆಯಾಗಿ ನಿಂತಿದ್ದು ಪಾಪರಾಶಿಗಳನ್ನುಸಲೆ ಇಂದಿನ ದಿನಕ್ಕೆ ಸರಿ ಹೋಯಿತುಯೆಂದುಕುಲವ ಪಾವನ ನೀನೆ ಪೇಳಿದ ಮಾತಿಗೆಹಲವು ಬಗೆಯಿಂದ ಇನ್ನು ಬಳಲಿಪದಕ್ಕೆಮಲತ ಮಲ್ಲರ ಗಂಡ ಗುರು ವಿಜಯ ವಿಠ್ಠಲರೇಯಖಳದರ್ಪ ಭಂಜನ ಕೃಪೆಯಿಂದ ನೋಡೋದು ೪
ಆದಿತಾಳ
ಅನುಭವದಿಂದ ಇದು ತೀರಿಪೆನೆಂದೆನೆವನಜ ಭವ ಕಲ್ಪಕ್ಕೆ ಎನ್ನಿಂದಾಹದಲ್ಲಸನಕಾದಿ ಮುನಿವಂದ್ಯ ನೀನೆವೆ ದಯದಿಂದಋಣವನ್ನು ತೀರಿಪುದು ಆಲಸ್ಯ ಮಾಡದಲೆತೃಣದಿಂದ ಸಾಸಿರ ಹಣವನ್ನು ತೀರಿದಂತೆಶಣಸಲಿ ಬೇಡ೧ ಇನ್ನು ಅಪರಾಧ ಮೊನೆ ಮಾಡಿಕ್ಷಣ ಕ್ಷಣಕೆ ಇದು ಬೆಳ್ಳಿಸುವುದುಚಿತವೆಮುನಿ ಮನಮಂದಿರ ಗುರು ವಿಜಯ ವಿಠ್ಠಲರೇಯನಿನ್ನವನೆಂದರೆ ಎನಗಾವ ದೋಷ ಉಂಟು ೫
ಜತೆ
ಅಹಿತ ಮಾಡುವನಲ್ಲ ಭಕತರ ಸಮೂಹಕ್ಕೆಲೋಹಿತಾಕ್ಷ ಗುರು ವಿಜಯ ವಿಠ್ಠಲರೇಯ ||

೧೩೭
[ಶ್ರೀ ವಾಯುದೇವರ ಅನುಗ್ರಹವೆ ಮುಖ್ಯವಾದದ್ದೆಂಬ ಪ್ರಮೇಯ. ಹಿಂದಿನ ಜನುಮದಿ ವಾಯುದೇವರವತಾರ ಭೀಮಸೇನನಾದ ಅಣ್ಣನ ಕೃಪೆ ಈಗ ತಪ್ಪಿದ ಕಾರಣ ಈ ಅಜ್ಞಾನ ವಾದ ಅಂಧಕಾರದಲ್ಲಿ ಬಿದ್ದೆ. ಹಿಂದಿನ ವಿಭವವೆಲ್ಲ ತೀರಿ ನಿನ್ನ ಕಾಣದಾದೆ. ಎನ್ನ ಹಮ್ಮಿನಿಂದಲಿ ಹಿಂದೆ ಸುರರು ಶಾಪವಿತ್ತರು. ನಮ್ಮಣ್ಣ ಭೀಮನ ಬಲದಿಂದ, ಆಗ್ಗೆ ಏನು ಮಾಡದೆ, ಈ ಕಾಲ, ನಿರೀಕ್ಷಿಸಿ ಈ ಬಾಧೆ ಬಡಿಸುವರು ದೂರ ಮಾಡು ಇತ್ಯಾದಿ.]
ಧ್ರುವತಾಳ
ಎನ್ನಣ್ಣನ ಕೃಪೆ ಇನ್ನು ಎನಗಿಲ್ಲದುದರಿಂದಎನ್ನ ಮೇಲೆ ಈ ಪರಿ ಮುನದ್ಯಾ ದೇವಾಎನ್ನಣ್ಣನ ಕೃಪೆ ಇನ್ನು ತೊಲಗಿದುದರಿಂದಘನ್ನವಾದ ಸ್ಥಾನದಿಂದ ಇಳಿದೇಎನ್ನಣ್ಣನ ಕೃಪೆ ಇನ್ನು ಹಿಂಗದ ಕಡೆಯಿಂದಛಿüನ್ನವಾದ ಜ್ಞಾನಿ ಆದೆನೆಂದುಎನ್ನಣ್ಣನ ಕೃಪೆ ಇನ್ನು ಜರಿದು ಪೋದದರಿಂದ ಅ-ಛಿüನ್ನ ಭಕುತಿಯಿಂದ ಹೀನನಾದೆಎನ್ನಣ್ಣನ ಕೃಪೆ ಇನ್ನು ತಪ್ಪಿದುದರಿಂದನಿನ್ನ ನಿಗ್ರಹ೧ಕೆ ವಿಷಯನಾದೆಎನ್ನಣ್ಣನ ಕೃಪೆ ಇನ್ನು ಇಲ್ಲದ ಕಾರಣದಿಎನ್ನ ಈ ಪರಿ ನೀನು ಬಳಲಿಸುವಿಎನ್ನಣ್ಣನ ಕೃಪೆಯಿಂದ ಗುರು ವಿಜಯ ವಿಠ್ಠಲರೇಯಾಮನ್ನಿಸುವಿ ಎನ್ನ ಆವಕಾಲ ೧
ಮಟ್ಟತಾಳ
ಅಣ್ಣನ ಕೃಪೆಯಿಂದ ವಿಜಯವುಳ್ಳವನಾಗಿಜನರೊಳಗೆ ಶ್ರೇಷ್ಠನೆಂದೆನಿಸಿ ಮೆರದೆಅಣ್ಣನ ಕೃಪೆಯಿಂದ ಬಲು ವಿಧವಾದಂಥಮು(ಘ)ನ್ನ ಭಾಗ್ಯೋದಯವಾಯಿತು ಬಲು ಪರಿಅಣ್ಣನ ಕೃಪೆಯಿಂದ ಜ್ಞಾನ ಬಲವು ಎನಗೆ ಅಣ್ಣನ ಕೃಪೆಯಿಂದ ಶ್ರುತಿ ತತಿಗಗೋಚರ ಅನಂತ ಮಹಿಮನ್ನ ಆಪ್ತನೆನೆಸಿಕೊಂಡೆಅಣ್ಣನ ಕೃಪೆಯನ್ನು ಜರಿದ ಕಾರಣದಿಂದಎನ್ನನ್ನೀ ಪರಿ ಮಾಡಿ ಬಳಲಿಸುವೆ ಧೊರಿಯೆಘನ್ನ ದಯಾನಿಧೆ ಗುರು ವಿಜಯ ವಿಠ್ಠಲರೇಯ ನ-ಮ್ಮಣ್ಣನ ಬಲವನ್ನು (ವೆ) ಎನಗೆ ಮುಖ್ಯ ಸತತ ೨
ತ್ರಿವಿಡಿತಾಳ
ನಮ್ಮಣ್ಣನ ಬಲವೆಂಬೊ ಘನ್ನ ಛತ್ರದ ನೆರಳುಮನ್ಮಸ್ತಕದಲಿ ಮೆರೆವ ಸಮಯದಲ್ಲಿಆ ಮಹಾ ಶ್ರುತಿಗಳಿಗೆ ಸಿಲುಕದ ಪರಬ್ರಹ್ಮಸಮ್ಮುಖವಗಲದೆ ಇಪ್ಪನಾಗಿಈ ಮಹಿಯೊಳಗಾವದಯ್ಯ ಕೊರತೆ ಎನಗೆಸನ್ಮಂಗಳಾಂಗನ ಶಾಸನದಿಸುಮ್ಮನಸರು ಅಂದು ನಿರ್ನಿಮಿತ್ಯದಿ ಎನಗೆಹಮ್ಮಿನಿಂದಲಿ ಶಾಪವಿತ್ತರಾಗೆನಮ್ಮಣ್ಣನ ಬಲವೆಂಬೊ ಸುಪ್ರಭಾವಕ್ಕೆ ಅದುಸಮ್ಮೊಗವಾಗದೆ ನಿರೀಕ್ಷಿಸೆರಮ್ಮೆಯ ಪತಿ ನೀ ಎಮ್ಮಣ್ಣನ ಮೇಲೆನಮ್ಮಣ್ಣನ ಕೃಪೆಯು ದೂರವಾಗೆದುಮ್ರ್ಮನಾಗ್ರಣಿಯಾದ ಕಲಿ ತಾನು ಅತಿ ಮದದಿಜನ್ಮ ಜನ್ಮದ ದ್ವೇಷ ಮನದಿ ನಿಲಿಸಿಸಮ್ಮ ರಹಿತವಾದ ದುಃಖಗಳುಣಿಸಿದನಮ್ಮಣ್ಣನ ಬಲವನ್ನು ಇಲ್ಲದಾಗೆನಿಮ್ನ ಮಹಿಮ ಗುರು ವಿಜಯ ವಿಠ್ಠಲರೇಯಾವಿಮನಸ್ಕನಾದ ಇವನ ಕರುಣ ತೊಲಗೆ ೩
ಅಟ್ಟತಾಳ
ನಮ್ಮಣ್ಣನ ಬಲವನ್ನು ಇಲ್ಲದ್ದರಿಂದ ಜನ್ಮ ಜನ್ಮದೆ ಯೋನಿಯೈದಿ ಅಜ್ಞಾನದಿ ರಮ್ಮೆಯ ಪತಿ ಪಾದ ಸ್ವಪ್ನದಿ ನೆನೆಯದೆಉನ್ಮತ್ತನಾಗಿ ಇಂದ್ರಿಯ ವಿಷಯದನಿಮ್ನದೊಳಗಾದೆ ವೃಧೃತ್ಯ (ಉಧೃತ)ವಿಲ್ಲದೆಸಮ್ಮಚರಿತ ಗುರು ವಿಜಯ ವಿಠ್ಠಲರೇಯಾಒಮ್ಮೆಗಾದರು ಮುಖವೆತ್ತಿ ನೋಡದಾದ ೪
ಆದಿತಾಳ
ನಮ್ಮಣ್ಣನ ಬಲವನ್ನು ಇಲ್ಲದ ಕಾರಣದಿಕಣ್ಣೆತ್ತಿ ನೋಡರಯ್ಯಾ ಸುರರೆಲ್ಲ ಎನ್ನ ಕಡೆಖಮ್ಮಹಿಯೊಳಗೆಲ್ಲ ದುರ್ಮತಿ ನಾನಾಗಿ ಉ-ಪಮ್ಮ ರಹಿತವಾದ ಜನ್ಮವೈದಿದೆ ಬಲುಚಿನ್ಮಯ ಮೂರ್ತಿ ಗುರು ವಿಜಯ ವಿಠ್ಠಲರೇಯಎಮ್ಮನು ಪೊರೆವನು ಅಣ್ಣನ ಬಲದಿಂದ |೫
ಜತೆ
ಅಣ್ಣನ ವೆಲವೆನಗೆ ಬಲು ಶೋಭಾ ಬಲು ಶೋಭಾಘನ್ನ ಮಹಿಮ ಒಲಿವ ಗುರು ವಿಜಯ ವಿಠ್ಠಲರೇಯ ||
[ಪಿಂಗಳನಾಮ ಸಂ|| ಚೈತ್ರ ಬಹುಳ ೩ ಆದಿವಾರ]
೧೩೮
ಶ್ರೀ ರಾಘವೇಂದ್ರ ಯತಿಗಳ ಸ್ತೋತ್ರ ಸುಳಾದಿ
[ಅವರರಾದರೂ (ಅವತಾರಾದಿಗಳಲ್ಲಿ ಜ್ಞಾನಿಗಳೇ ಶ್ರೇಷ್ಠರೆಂಬ ಪ್ರಮೇಯ) ಶ್ರೀ ರಾಘವೇಂದ್ರರು ಸಕಲ ಮುನಿಗಳಿಂದ ಸ್ವಪ್ನದಲ್ಲಿ ಬಂದು ದರ್ಶನವಿತ್ತು ಅನುಗ್ರಹಿಸಿದ್ದು. ಹೇ ಮಧ್ವ ಮತೋದ್ಧಾರಕ ಗ್ರಂಥಕರ್ತರೇ, ಜ್ಞಾನಿಗಳೇ ಈ ತುಂಗಾನದಿ ತೀರದಿ ನಿಂದು ಹರಿವಾಯುಗಳ ಅನುಗ್ರಹದಿ ಸಜ್ಜನರನ್ನು ಸಲಹುವಿ, ಇತ್ಯಾದಿ ಸ್ತೋತ್ರ. ನೀನು ಸೂಚಿಸಿ ದಂತೆ ಎನ್ನನುದ್ಧರಿಸು, ನೀನು ಸುಜ್ಞಾನಿಯು, ಅಶುಚಿಯಾಗಿ ನೀಚ ದೇಹತೆತ್ತವ ನಾನು. ಹರಿ ವಾಯುಗಳು ನಿಮ್ಮ ದ್ವಾರಾ ಬಂಧ ವಿಮೋಚಕರು. ಕಾರಣ ಹಿಂದೆ ಸುರರಿತ್ತ ಶಾಪವನ್ನು ಪರಿಹರಿಸಿ ಹೃದಯದಲ್ಲಿ ಹರಿ ಪೊಳೆವಂತೆ ಮಾಡೆಂದು ಪ್ರಾರ್ಥನಾ.]
ಧ್ರುವತಾಳ
ಘನ ದಯಾನಿಧಿಯಾದ ಗುರು ರಾಘವೇಂದ್ರ ನಿಮ್ಮವನಜ ಪಾದಯುಗಕೆ ನಮೊ ನಮೊಜನುಮಾರಭ್ಯವಾಗಿ ಅಭಿನಮಿಸದಲಿಪ್ಪಮನುಜನ ಅಪರಾಧವೆಣಿಸದಲೆವನಧಿ ಪೋಲುವ ಕರುಣಿ ಗೋವತ್ಸ ನ್ಯಾಯದಿಂದನಿನಗೆ ನೀನೆ ಬಂದು ಸ್ವಪ್ನದಲ್ಲಿಸನಕಾದಿ ಮುನಿಗಳ ಮನನಕ್ಕೆ ನಿಲುಕದಇನಕೋಟಿ ಭಾಸ ವೇದೇಶ ಪ್ರಮೋದ ತೀರ್ಥಮುನಿಗಳಿಂದಲಿ ಕೂಡಿ ಸಂದರುಶನವಿತ್ತುವಿನಯೋಕ್ತಿಗಳ ನುಡಿದ ಕೃತ್ಯದಿಂದಆನಂದವಾಯಿತು ಅಘದೂರನಾದೆನಿಂದುದನುಜಾರಿ ಭಕತರ ಮಣಿಯೇ ಗುಣಿಯೇಎಣೆಗಾಣೆ ನಿಮ್ಮ ಕರುಣಾ ಕಟಾಕ್ಷ ವೀಕ್ಷಣಕ್ಕೆಅನುಪಮ ಮಹಿಮನೆ ಅನಿಳ ಪ್ರೀಯಾಗುಣ ಗಣ ಪರಿಪೂರ್ಣ ಗುರು ವಿಜಯ ವಿಠ್ಠಲ ನಿಮ್ಮಘನವಾದ ಬಲದಿ ಎನಗೆ ಸುಳಿದನೆಂದು ೧
ಮಟ್ಟತಾಳ
ಸುಖತೀರ್ಥರ ಮತವೆಂದೆಂಬ ಧ್ವಜವನ್ನು ವಿಖನಸಾಂಡದ೧ ಮಧ್ಯ ಪ್ರತಿಯಿಲ್ಲದೆ ಮೆರೆಯೆಪಖರಹಿತವಾದ ಪಕ್ಷಿಯು ತನ್ನಯಪಖ ಚಿನ್ಹಿಹ್ಯ (ಯ) ಜನಿತ ಮಾರುತನಿಂದಲಿ ಧ್ವಜವಪ್ರಕಟದಿ ಚರಿಸುವ ಯತ್ನದಂದದಿ ದುರುಳಸಕುಟಿಲರಾದಿ ಆ ವಿದ್ಯಾರಣ್ಯಮುಖ ಮಖರೆಲ್ಲ ಬರಲು ಅಮ(ವ)ಸ್ಥಿತ೨ ನಿಶ್ಚಯದಿ (ಮುಖ್ಯ ಜನರು ಬರಲು)ಮಖಶತಜನೆನೆಪ ಜಯರಾಯಾಚಾರ್ಯಪ್ರಕಟ ಗ್ರಂಥಗಳೆಂಬ ಪಾಶಗಳಿಂದಲ್ಲಿಯುಕುತಿಯಿಂದಲಿ ಬಿಗಿದು ವೀರಧ್ವನಿಯ ಗೈಯೆಉಕುತಿಗೆ ನಿಲ್ಲದಲೆ ಮೊಲದಂತೆ ಜರಿದುದಿಕ್ಕು ದಿಕ್ಕಿನಲ್ಲಿ ಪಲಾಯನರಾಗೆತ್ಯಕತ ಲಜ್ಜೆಯಲಿಂದ ಹತವಾಶೇಷ್ಯಸಾಕುಂಠಿತವಾದ ಬಲವೀರ್ಯನು ಮೇರುಶಿಖರವೆತ್ತುವನೆಂಬೊ ಸಹಸದಂದದಲಿವಿಕಟ ಮತಿಯುಕ್ತ ದುರುಳರು ರೋಷದಲಿ ಕು-ಯುಕುತಿಗಳಿಂದಲಿ ಸಂಚರಿಸುತ ಬರಲುಲಕುಮಿಪತಿಯ ನೇಮ ತಿಳಿದ ಪ್ರೌಢ ನೀನುಈ ಖಂಡದಿ ಬಂದು ದ್ವಿಜನ್ಮವ ಧರಿಸಿಪ್ರಖ್ಯಾತವಾದ ನ್ಯಾಯಾಮೃತವನ್ನುತರ್ಕ ತಾಂಡವ ಚಂದ್ರಿಕ ಪರಿಮಳ ಮೊದಲಾದಮಿಕ್ಕಾದ ಗ್ರಂಥವೆಂತೆಂಬ ವಜ್ರದಲಿ ದು-ರುಕುತಿಗಳೆಂಬಂಥ ಗಿರಿಗಳ ಛೇದಿಸಿಈ ಕುಂಭಿಣಿ ಮಧ್ಯ ಪ್ರತಿಯಿಲ್ಲದೆ ಮೆರದೆಭಕುತರಾಗ್ರೇಸರನೆ ಭೂ ವಿಬುಧರ ಪ್ರೀಯಾನಖ ಶಿಖ ಪರಿಪೂರ್ಣ ಗುರು ವಿಜಯ ವಿಠ್ಠಲ ನಿಮ್ಮಭಕುತಿಗೆ ವಶನಾಗಿ ಇತ್ತಿಹ ಕೀರ್ತಿಯನು ೨
ತ್ರಿವಿಡಿತಾಳ
ಕಲಿಯುಗದಿ ಜನರು ಕಲ್ಮಷದಲಿಂದ ಬಲವಂತವಾದ ತ್ರಿವಿಧ ತಾಪಗಳನುವಿಲಯ೧ಗೈಸುವ ಉಪಾಯವನರಿಯದೆಮಲಯುಕ್ತವಾದ ಭವ ಶರಧಿಯಲ್ಲಿನೆಲೆಯಾಗಿ ಮಗ್ನರಾಗಿ ನಿವೃತ್ತಿ ವತ್ರ್ಮಾ೨ವನ್ನು ತಿಳಿಯದಲೆ ದುಃಖ ಬಡುವ ಸುಜನಒಳಗೆ ತಾರಕನಾಗಿ ಈ ನದಿಯ ತೀರದಲ್ಲಿನಿಲಯವಲ್ಲದೆ ನಿನಗೆ ಅನ್ಯ ಕೃತ್ಯಗಳಿಲ್ಲನಳಿನ ಸಂಭವ ಜನಕ ಗುರು ವಿಜಯ ವಿಠ್ಠಲ ನಿನಗೆ ಒಲಿದಿಪ್ಪಾಧಿಕಧಿಕವಾಗಿ ಬಿಡದೆ ೩
ಅಟ್ಟತಾಳ
ಸೂಚನೆ ಮಾಡಿದ ಸೊಬಗಿನ ತೆರದಂತೆಯೋಚನೆ ಯಾತಕ್ಕೆನ್ನನು ಉದ್ಧರಿಪದಕ್ಕೆಊಚ ಜ್ಞಾನಾನಂದ ಬಲವೀರ್ಯನು ನೀನುನೀಚವಾದ ದೇಹ ಧಾರಣವನು ಮಾಡಿ ಅ-ನೂಚಿತವಾಗಿದ್ದ ಕಾಮ ಕ್ರೋಧಂಗಳು ಆಚರಣೆಯ ಮಾಳ್ಪ ಅಧಮನಾದವ ನಾನುಸೂಚರಿತ್ರವಾದ ಶುಚಿಯಾದ ಮನುಜಂಗೆನೀಚ ಅಶುಚಿಯಾದ ನರನು ಅಧಿಕನೆಂದುಭೂ ಚಕ್ರದಲಿ ಅವರ ದೇಹ ತೆತ್ತವನಾಗಿಆಚರಿಸಿದೆ ಬಲು ಹೀನ ಕೃತ್ಯಂಗಳುಸೂಚನೆ ಮಾಡಿದ್ದು ಸೊಬಗು ನೋಡದಲೆಯೋಚನೆ ಮಾಡಿದ್ದು ಸಾರ್ಥಕ ಮಾಳ್ಪದುಮೋಚನೆ ಮಾಡುವದು ಭವ ಬಂಧದಲಿಂದಶ್ರೀ ಚಕ್ರಪಾಣಿ ಗುರು ವಿಜಯ ವಿಠ್ಠಲರೇಯನಯೋಚನೆ ಮಾಡುವ ಯೋಗವೆ ಬೋಧಿಸು ೪
ಆದಿತಾಳ
ಪರಿಶುದ್ಧವಾದ ನಿನ್ನ ಭಕುತಿಗೆ ವಶನಾಗಿಹರಿ ತನ್ನ ಪರಿವಾರ ಸಮೇತನಾಗಿ ನಿಂದುಮೊರೆ ಹೊಕ್ಕ ಜನರಿಗೆ ಪರಿಪೂರ್ಣ ಸುಖವಿತ್ತುಪರಿ ಪರಿ ಕೀರ್ತಿಗಳು ತಂದೀವ ನಿಮಗೆಂದುಪರಮಾಪ್ತನಾಗಿ ತವಪಾದ ಸಾರಿದೆನುದೂರ ನೋಡದಲೆ ಕರುಣ ಮಾಡಿ ವೇಗಸುರರಿತ್ತ ಶಾಪದಿಂದ ಕಡಿಗೆ ಮಾಡಿ ಎನ್ನ ಹೃ-ತ್ಸರಸಿಜದಲ್ಲಿ ಹರಿ ಪೊಳೆವಂತೆ ಮಾಡುವದುಪರಿಪೂರ್ಣ ಕೃಪಾನಿಧೆ ಗುರು ವಿಜಯ ವಿಠ್ಠಲನ್ನಶರಣರ ಅಭಿಮಾನಿ ಔದಾರ್ಯ ಗುಣಮಣಿ ೫
ಜತೆ
ಗುರುಕುಲ ತಿಲಕನೆ ಗುರು ರಾಘವೇಂದ್ರಾಖ್ಯಸುರ ಕಲ್ಪತರು ಗುರು ವಿಜಯ ವಿಠ್ಠಲ ಪ್ರೀಯಾ ||

ಕಲಿ ನಿಗ್ರಹ ಸುಳಾದಿ
೧೩೯
ಧ್ರುವತಾಳ
ಎಲೆ ಎಲೆ ಪರಮ ದುಷ್ಟನಾದ ಕಲಿಯೆ ನಿನ್ನ ತಲೆಯ ಮೇಲೆ ಕಾಲು ಇಟ್ಟು ನಡಿವೆ ಸತತಬಲಹೀನನೆಂದು ತಿಳಿದು ನೈಜ ಸ್ವಭಾವದಿಂದಕುಲಗೇಡಿ ಚೇಷ್ಟೆಗಳ ಪ್ರೇರಿಸುವಿಮಲಿನಯುಕ್ತನೆ ನಿನ್ನ ಕರ್ತೃತ್ವ ಎನ್ನ ಮೇಲೆನೆಲೆಯಾಗಿ ನಿಂದಿರದು ಎಂದೆಂದಿಗೆತಿಳಿದು ನೋಡಿಕೋ ಉಭಯ ಅಂಶಾಂಶ೧ದಲ್ಲಾಗೆ ತಲಿಯ ಬಾಗಿದವನೆ ದುರುಳ ನಿನಗೆ ಬಲವೀರ್ಯನಾದ ಎನ್ನ ಒಡಿಯನ್ನ ಬಲದಿಂದ ಚಲಿಸದಲೇ ನಿನ್ನ ತೃಣಕೆ ಬಗೆದುಕೆಲವು ಶಸ್ತ್ರದಿಂದ ಕೆಲವು ವಾಕ್ಯದಿಂದತಲೆ ಎತ್ತದಂತೆ ಮಾಡಿದ್ದದನು ಮರದೇಮೊಲದಂತೆ ಜರಿದು ಈಗ ಮದೋನ್ಮತ್ತವಾದಬಲದಿಂದ ನಿನ್ನ ಯುಗವೆಂದು ತಿಳಿದುಮಲತ ಗರ್ವದಿಂದ ಮಾಯಾ ಮಾಡುವಿ ಸುಜನ ಕುಲದೂಷಕನೆ ಬಲು ಕುಜನ ಶಿರೋಮಣಿಯೆ ಬಲಿಗೆ ಬಲಿಯಾದ ಗುರು ವಿಜಯ ವಿಠ್ಠಲರೇಯನಬಲ ಎನಗಿರಲಾಗಿ ಎದುರೇ ನೀನು ೧
ಮಟ್ಟತಾಳ
ಬಲವುಳ್ಳವನೆಂದು ಬಲು ಗರ್ವದಲಿಂದಬಳಲುವದು ಸಲ್ಲಾ ಲಜ್ಜೆಯನು ತೊರೆದುಬಲಯುಕ್ತ ನೀನಾಗೆ ಅಂದಿನ ಕಾಲದಲ್ಲಿಮಲತ ಮಲ್ಲರ ಗಂಡ೧ನೆನಿಪರ ಕೈಯಿಂದತಲಿಯ ತುಳಿಸಿಕೊಂಡಿ ಚರಣ ತಳದಿಂದಹಳಿ ಹಳಿ ನಿನ್ನ ಪೌರುಷತನ ಸುಡಲಿಭಳಿರೆ ಭಳಿರೆ ಗುರು ವಿಜಯ ವಿಠ್ಠಲರೇಯನಒಲಿಮೆಯುಳ್ಳವರೆಲ್ಲ ನಿನಗಂಜುವರೇನೊ ೨
ತ್ರಿವಿಡಿತಾಳ
ಬಲಹೀನ ಮನುಜನೆ ನಿನ್ನ ಕುಹಕ ನಡತಿ ದು-ರ್ಬಲವಾದವರ ಮೇಲೆ ನಡೆಯು (ವೊ) ವದಲ್ಲದೆಬಲವುಳ್ಳ ಜನರಲ್ಲಿ ನಡೆವೊದಲ್ಲವೆ ಕೇಳೊತಿಳಿದು ನೋಡಿಕೋ ಎನ್ನ ಬಲದ ಮಹಿಮೆಜಲಜ ಜಾಂಡವನ್ನು ಕಲ್ಪಿಸಿ ಸ್ಥಿ-ತಿ ಲಯ ನೆಲೆಯಾದ ನಿಯಮನ ಜ್ಞಾನ ಜ್ಞಾನಬಲವದ್ರೂಪವಾದ ಬಂಧ ಮೋಕ್ಷದಿ ಅಷ್ಟ ಪ್ರ-ಬಲ ಕರ್ತುತ್ವದಿಂದ ದಿವಿಜ ದನುಜಾವಳಿಗೆ ಶಿಕ್ಷಿಸುವಂಥ ದುಷ್ಟ ಮರ್ದಕನೆನಿಪಜಲಧರಾ ವರ್ಣ ಕೃಷ್ಣರಾಯ ಎನ್ನಕುಲದೈವವೆನಿಪ ಮತ್ತೆ ಸಖನೆಂದೆನಿಸಿಕೊಂಬ ನಿನ್ನತಲಿಯನೊರಸಿದ ಧೀರ ಭ್ರಾತೃನೆನಿಪಕುಲಗೇಡಿ ನಿನ್ನಂಥ ಕುಹಕರ ಶಿಕ್ಷಿಸುವಬಲಿಯಾದ ದೇವ ಪೂರ್ವೋಕ್ತದಂತೆಬಲವು ಇನಿತು ಇರಲು ನಿನಗಂಜುವದೆಂತೊಸುಳಿಯದಿರುಯಿತ್ತ ಸೌಖ್ಯವಿಲ್ಲಾಅಲವ ಬೋಧರ ಪ್ರಿಯ ಗುರು ವಿಜಯ ವಿಠ್ಠಲರೇಯತಲಿಯ ಮೇಲಿಪ್ಪ ಛತ್ರದಂತೆ ಕಾಯ್ವಾ ೩
ಅಟ್ಟತಾಳ
ಬಲವೈರಿ ಎನ್ನಯ ಜನಕನೆಲೊ ಕೇಳು ಅ-ಖಿಳ ಸುಮನಸರು ಎನಗೆ ಸಹಾಯರೆಲೊಖಳ ಕುಲಮಣಿ ನಿನ್ನ ನೈಜ ವ್ಯಾಪಾರವಬಲ ನಡಿಯದಲೊ ಕಲ್ಪಾಂತ್ಯದಲ್ಲ್ಯಾಗಿಖಳ ದರ್ಪ ಭಂಜನ ಗುರು ವಿಜಯ ವಿಠ್ಠಲನ್ನಬಲದಿಂದ ನಿನ್ನಯ ತಲಿಯ ಕುಟ್ಟುವೆನೊ ೪
ಆದಿತಾಳ
ಕಾಲನಾಮಕ ಭಗವಂತನ ಇಚ್ಛಿಯಿಂದ ಮೂಲ ಕಾರಣವಾದ ಅನಾದಿ ಕರ್ಮದಿಂದ ಪಾಲಕನಾದ ಹರಿ ಪರಾಙ್ಮುಖನಾಗುತಿರೆಇಳಿಯೊಳು ಜನಿಸಿದಾಗ ಪೂರ್ವೋಕ್ತವಾದ ಬಲತೊಲಗಿಪ್ಪ ಕಾಲದಲ್ಲಿ ಇದೆ ಇದೆ ಸಮಯವೆಂದುಖಳ ಕುಲಮಣಿ ನಿನ್ನ ಕುಹಕದ ನಡತೆಯಿಂದಮೇಲಾದ ಸುಖಗಳ ಅಪಹಾರ ಮಾಳ್ಪನೆಂದುಬಲು ಮೋದದಿಂದ ನೀನು ಹಿಗ್ಗುವದು ಸಲ್ಲಾಕಾಲಕ್ಲಿಪ್ತ ನಂತರ ಹರಿ ಕೃಪೆಯಿಂದ ಎನ್ನಆಳಾಗಿ ನೀನೆ ಉಂಬಿ ಕಲಿಕೃತ ಕಲ್ಮಷದಿಆಲೋಚನೆ ಇದಕ್ಕಿಲ್ಲ ಇದು ಸತ್ಯ ಇದು ಸತ್ಯಶ್ರೀ ಲಲನಿಯ ಪ್ರಿಯ ಗುರು ವಿಜಯ ವಿಠ್ಠಲನ್ನಆಳುಗಳಂಜೊವರೆ ನಿನಗೆಂದಿಗಾದರು ೫
ಜತೆ
ಕಂಟಕಾರಿ೧ಯ ಮೆಟ್ಟಿ ನಿನ್ನ ಎದಿಯ ತುಳಿವೆ ನಿ-ಷ್ಕಂಟಕ ಗುರು ವಿಜಯ ವಿಠ್ಠಲನ್ನ ಕೃಪೆಯಿಂದ ||
[ರಾಕ್ಷಸ ನಾಮ ಸಂ|| ಕಾರ್ತಿಕ ಬ|| ೭ ಬುಧವಾರ]

೧೫೮
[ಕ್ಷಮಾಪನಪೂರ್ವಕ ತ್ರಿವಿಧ ಶಾಪಗಳಿಂದ ಪ್ರಶಮನ ಮಾಡಿ ಜಗದೀಶನಾದ ಶ್ರೀಹರಿಯನ್ನು ಹೃದ್ಗುಹದಲ್ಲಿ ತೋರಿಸಿರೆಂದು ಭೀಷ್ಮ, ದ್ರೋಣಾದಿಗಳ ಪ್ರಾರ್ಥನೆ.]
ಧ್ರುವತಾಳ
ಎಲೆ ಎಲೆ ಭೀಷ್ಮ ದ್ರೋಣ ಕೃಪ ಕರ್ಣ ಅಶ್ವತ್ಥಾಮಸಲೆ ಕರುಣಿಗಳ ಪಾದ ಸರಸಿರುಹಕೆತಲೆ ಬಾಗಿ ನಮಿಸಿ ಸತತ ಕೈ ಮುಗಿದು ಪ್ರಾರ್ಥಿಸುವೆಒಲಿದು ಪಾಲಿಸಬೇಕು ಅನ್ಯನೆನ್ನದೆಛಲದಿ ನೋಡುವದಕ್ಕೆ ದ್ವೇಷಿ ಆದವನಲ್ಲಕೆಲ ಕಾಲ ತಪ್ಪದನುಬಂಧ ಉಂಟುಇಳಿಯ ಜನರ ತೆರದಿ ಉದರಗೋಸುಗವಾಗಿಕುಲಗೇಡಿ ಕೃತ್ಯವನ್ನು ಚರಿಸಲಿಲ್ಲಖಳ ವೈರಿ ಪಾದಗಳ ಜ್ಞಾನ ಲಕ್ಷಣ ಮುಕುಟಾ ಭಕ್ತಾ-ವಳಿಯ ಮಸ್ತಕ ಭರಣವೆಂದು ತಿಳಿದುಮಲರಹಿತವಾದ ನಮ್ಮಿಂದರ್ಚಿತವೆಂದುತಿಳಿದಂಗೀಕರಿಸಿದ ಬಗೆ ಎಲ್ಲ ತಿಳಿವದು”ಮೈಯೈವೈತೇ ನಿಹತಾಃ ಪೂರ್ವಮೇವ’’ವೆಂಬಜಲಜನಾಭನ ವಿಮಲ ವಾಕ್ಯದಂತೆವಿಲಯದಿ ಸ್ಥಿತಿ ನಿಯಮನ ಜ್ಞಾನಾಜ್ಞಾನಬಲವದ್ರೂಪವಾದ ಬಂಧ ಮೋಕ್ಷಬಲವಂತನಾದ ಹರಿಯ ಆಧೀನವಲ್ಲದಲೆನಿ(ದು)ರ್ಬಲ ಜೀವರಿಂದಾಗುವದೆತಿಳಿಯಬಲ್ಲವರೊಳು ಆಧಿಕ್ಯವಾದ ನಿಮಗೆಪೇಳಲಾಹದೇನೊ ಬಿನ್ನಪವನಳಿನ ಸಂಭವ ಜನಕ ಗುರು ವಿಜಯ ವಿಠ್ಠಲರೇಯಾವೊಲಿವ ನಿಮ್ಮಯ ಕೃಪೆಗೆ ಆವಕಾಲ ೧
ಮಟ್ಟತಾಳ
ಅನಾದಿ ಕರ್ಮದ ಪ್ರಾಬಲ್ಯ ಕಾರಣದಿಪ್ರಾಣನಾಥನ ನಿಜ ಸಂಕಲ್ಪದಿ ಕರಣಮಾನಿಗಳಾದಂಥ ನಿಮ್ಮಿಂದಲೆ ಎನಗೆಹೀನವಾಗಿರುವ ಕಲಿಕೃತ ಕಲ್ಮಷವಸಾನುರಾಗದಿ ನಿಮ್ಮ ಪದಕೆರಗುವೆ ಸತತದೀನನಾದವನನ್ನು ದೂರ ನೋಡದಲೆಪ್ರೀಣರಾಗಿ ಎನ್ನ ವಾಕ್ಯವ ಮನ್ನಿಸಿತ್ರಾಣರಾಗುವದು ಅಪರಾಧವೆಣಿಸದಲೆದಾನವಾಂತಕ ಗುರು ವಿಜಯ ವಿಠ್ಠಲ ರಾಯನಕಾಣುವ ಉಪಾಯ ಕರುಣಿಸುವದು ಬೇಗ ೨
ತ್ರಿವಿಡಿತಾಳ
ನಿಮ್ಮ ನಿಗ್ರಹದಿಂದ ಈ ಪೃಥ್ವಿಯಲಿ ಬಂದುಜನ್ಮವೈದಿದೆ ಬಲು ನೀಚವಾದನಿಮ್ನವಾಗಿದ್ದು ಕಾಮ ಲೋಭಾರ್ಣವದಿ ಮುಳುಗಿ ವೈ-ಷಮ್ಯ ಭಾವಾಭಿಜನ್ಯ ತ್ರಿವಿಧ ಪಾಪಶ್ರಮಗಳನುಭವಿಸಿ ಮುಂಗಾಣದಲೆ ಹರಿಯಜನ್ಮದೊಳಗೆ ಒಮ್ಮೆ ಸ್ಮರಿಸದಲೆಖಮ್ಮಹಿಯೊಳಗೆಲ್ಲ ನಿಂದಿತನಾದೆ ಬಲುನಿಮ್ಮ ವಾಕ್ಯದಿಂದ ಇನಿತಾಯಿತುನಮೊ ನಮೊ ನಿಮ್ಮ ಪಾದ ಸರಸಿರುಹಕೆಸಮ್ಮುಖರಾಗಿ ನೀವು ತವಕದಿಂದಹಮ್ಮಿನಿಂದಲಿ ಯಿತ್ತ ತ್ರಿವಿಧ ಶಾಪಗಳನ್ನು ಪ್ರಾ-ಶಮ್ಯ ಐದಿಸುವದು ಕರುಣ ಮಾಡಿಬೊಮ್ಮ ಜನಕ ಗುರು ವಿಜಯ ವಿಠ್ಠಲರೇಯನೊಡಸನ್ಮಂಗಳಾಂಗನ ತೋರುವದು ೩
ಅಟ್ಟತಾಳ
ಗೋಪುರದ ಮೇಲೆ ಬೊಂಬೆಯು ಇದ್ದಂತೆಸುಪರಾಕ್ರಮಿಯಾದ ವೀರನ ಕೈಯಲ್ಲಿದೀಪುತವಾಗಿದ್ದ ಘನ್ನ ಶಸ್ತ್ರದಂತೆಸುಪವಿತ್ರವಾದ ಯಜ್ಞಕರ್ತನ ಕೈಯ್ಯದೀಪುತವಾಗಿದ್ದ ದರ್ವಿಯ ತೆರದಂತೆವ್ಯಾಪಾರ ಮಾಡುವ ವಾಣಿಜ್ಯನ ಕೈಯ್ಯಪ್ರಾಪುತವಾಗಿದ್ದ ಸೊಲಗಿ೧ಯ ತೆರದಂತೆಆಪಜಾಸನ೨ ಮುಖ್ಯ ಸುರರು ಇನಿತು ಯಿರಲುಈ ಪ್ರಪಂಚದಲ್ಲಿ ನಾನ್ಯಾತರವನಯ್ಯಾಅಪಾರ ಮಹಿಮ ಗುರು ವಿಜಯ ವಿಠ್ಠಲರೇಯಾದ್ವೀಪಾಧಿಪತಿ ಆಜ್ಞಾದವರೆ ಎಲ್ಲ ೪
ಆದಿತಾಳ
ಕಾಲಕರ್ಮದಿಂದ ತನ್ನ ಕ್ಲಿಪ್ತಿಯನೆಯಿತ್ತುಈ ಲೋಕ ನಿಮಿತ್ಯವಾದ ಕೀತ್ರ್ಯಪಕೀರ್ತಿಲೀಲೆಯಿಂದ ಪ್ರಾಣಿಗಳಿಗೆ ತಂದ ದೇವ ತಾನೆ ಒಲಿದುಶ್ರೀ ಲೋಲ ಪ್ರಿಯ ಗುರು ವಿಜಯ ವಿಠ್ಠಲರೇಯಾಪಾಲಿಸಿದರು ಬರಿದೆ ಖ್ಯಾತಿಯ ತಂದಿತ್ತು ೫
ಜತೆ
ಯುಗಳ ಪಾದ ನಮಿಸಿ ಮುಗಿವೆ ಕರಗಳನ್ನುಜಗದೀಶ ಗುರು ವಿಜಯ ವಿಠ್ಠಲನ್ನ ತೋರಿಪದು ೬

೧೨೮
ಶ್ರೀ ಹರಿಯ ಇಚ್ಛಾರೂಪ ಪ್ರಥಮಾವರ್ಕ, ಪ್ರಕೃತಿ ಮಾಯಾ ಬಂಧಕದಿಂದ ಜೀವನಿಗೆ ನಾನಾ ಯೋನಿ ಕರ್ಮಾನುಭವ ಪ್ರಾರಬ್ಧ ಯೋಗ ಹರಿ ಪ್ರಸಾದದಿಂದಲೇ ಅನಾದಿಲಿಂಗ, ದ್ವಯ ಸ್ತ್ರೀ ಅಭಿಮಾನ್ಯ ಭಾವರೂಪ, ಅವಿದ್ಯಾನಾಶ, ಸ್ವಾತ್ಮಾನುಭವ ಹರಿ ಪ್ರಸಾದ ವಿಷಯ, ಪ್ರಾರ್ಥನಾ.
ಧ್ರುವತಾಳ
ಏಸು ದಿವಸವುಂಟು ಈ ಪ್ರಾರಬ್ಧ ಕರ್ಮಸಾಸಿರ ರೂಪನೆನೆಪ ಏಕ ಮೇವಾಹಾಸುಗಲ್ಲಿನ ಮೇಲೆ ಬೀಸಿ ಅಪ್ಪಳಿಸಿದಂತೆಘಾಸಿಗೊಳಿಸುತಿದೆ ಅಪರಿಮಿತಕ್ಲೇಶ ಮಿಶ್ರಿತವಾದ ಸುಖನಾಮವೆ ಹೊರ್ತುಲೇಸಾದ ಸೌಖ್ಯವಿಲ್ಲ ಎಣಿಸೆ ಗುಣಿಸೆದ್ವಾಸುಪರ್ಣಾವೆಂಬೊ ಶ್ರುತಿ ಪ್ರತಿಪಾದ್ಯನೆನೆಸಿ ಜೀವರಾಶಿಗೆ ತಂದು ಉಣಿಪ ವಿಹಿತಾ ವಿಹಿತಆಶೆ ಮಮತೆ ಕ್ರೋಧ ಲೋಭ ಮತ್ಸರವೆಂಬೊಪಾಶದಿಂದಲಿ ಬಿಗಿದು ವಿಷಯದಲ್ಲಿಕಾಸು ಬಾಳದ ಸಂಸಾರದಲ್ಲಿ ತಂದುಮೋಸಗೊಳಿಸುವಿ ನಿನ್ನ ಮಾಯದಿಂದ ಭಾಸುರ ಮಹಿಮ ಗುರು ವಿಜಯ ವಿಠ್ಠಲರೇಯಈ ಸಮಯದಿ ಒದಗೆ ಕೀರ್ತಿ ನಿನಗೆ ೧
ಮಟ್ಟತಾಳ
ಹರಿ ನಿನ್ನಿಚ್ಛೆಯಲಿ ತೃಣ ಮೇರಾಗುವುದುಕರುಣೇತರದಿಂದ ಆವ ಮೇರು ತೃಣಪರಿಮಿತಿಯಿಲ್ಲದ ಮಹಿಮೆಗೆ ಏನೆಂಬೆವರ ಅಘಟಿತ ಘಟಣ ಐಶ್ವರ್ಯಾದಿ ಪೂರ್ಣಸಿರಿ ಬೊಮ್ಯಾದ್ಯರಿಗೆ ಸಿಲುಕದ ಗುಣನಿಧೆಸರಸಿಜ ಜಾಂಡವನ್ನು ವಿಸ್ತೀರ್ಣವ ಮಾಡಿಮರಳೆ ನೋಡಲು ಕೇವಲ ಸಂಕೋಚವ ಮಾಳ್ಪವರ ಸ್ಥೂಲವ ತೇಲಿಸಿ ಮುಣಗಿಸುವಿ ಸೂಕ್ಷ್ಮನೀರಿನಿಂದಲಿ ಪೃಥ್ವಿ ನಿರ್ಮಾಣವ ಮಾಳ್ಪ ಗರುಡೋರುಗಗಳಿಗೆ ಸಖತನ ಮಾಡಿಸುವಿಪರಮಾಣುಗಳಲ್ಲಿ ವ್ಯಾಪುತನಾಗಿದ್ದುಸರಿ ಸರಿ ಬಂದಂತೆ ಸಕಲ ಚೇಷ್ಟೆಯ ಮಾಡಿಪರಮ ವ್ಯಕ್ತನಾಗಿ ಸ್ಥಿತನಾದರು ಅದರಕುರುಹು ತೋರಲಿಗೊಡದೆ ಭ್ರಾಂತಿಯು ಕಲ್ಪಿಸಿದಾರು ಮಯವಾದ ಬೊಂಬಿಯು ತಾನೇವೆ ಧರಿಸಿದ ಸೂತ್ರಗಳ ಅನಪೇಕ್ಷದಿ ಕುಣಿದುಮೆರೆವದು ಎಂತೆಂಬ ಮೋಹಪಾಶದಿ ಬಿಗಿದುಪರಿಭ್ರಮಣಗೈಸುವಿ ಸಂಸಾರ ಚಕ್ರದಲಿಸರಿಯಿಲ್ಲವೊ ನಿನ್ನ ಮಾಯಕೆ ನಮೊ ನಮೊಪರಮ ಪಾವನ ಮೂರ್ತಿ ಗುರು ವಿಜಯ ವಿಠ್ಠಲರೇಯ ನೆರೆನಂಬಿದ ಜನಕೆ ಪಾರುಗಾಣಿಪ ನೀನೆ ೨
ತ್ರಿವಿಡಿತಾಳ
ಮುನಿಯಾಗಿ ಸುಕರ್ಮ ಶೀಲನಾದರು ನಿತ್ಯಘನವಾದ ಸಾಧನ ಮಾಳ್ಪನಾಗಿಕ್ಷಣದೊಳು ಹತ್ತು ಸಂಖ್ಯ ಅವರ ಯೋನಿಗಳಲ್ಲಿಜನನವಾಗುವ ಕರ್ಮಾ ಕೊರತೆ ಮಾಡಾಇನಿತು ಕರ್ಮದ ಸೊಬಗು ನಿನ್ನಿಂದಲೆ ನೇಮಿಸಿರೆಎಣೆಗಾಣದೆ ಕರ್ಮ ಬೆಳವದಕೆಗುಣದ್ವಯ ವಿಕಾರವಾಗಿ ಮೂರನೇ ಗುಣ೧ಖಣಿಯಾಗಿ ನಿಲ್ಲುವದು ಕೇಡಿಲ್ಲದೇಗುಣಿಸಿ ನೋಡಲು ಇದು ಜಡರೂಪವೆನಿಪದುತೃಣವ ಚಲಿಸುವ ಶಕ್ತಿ ಇದಕ್ಕಿಲ್ಲವೊಗುಣಪೂರ್ಣ ನಿನ್ನಿಂದೆ ವಿಷ್ಣು ಬ್ರಹ್ಮ ರುದ್ರನೆನಿಪ ರೂಪಗಳಿಂದ ವ್ಯಾಪ್ತನಾಗಿವನಜ ಜಾಂಡವನ್ನು ನಿರ್ಮಿಸಿ ಅದರಂತೆಕನಕಗರ್ಭಾದಿ ಗುರು ಸುರ ತೃಣ ಜೀವಾಂತತನುವಿನಲ್ಲಿ ವಾಸವಾಗಿ ಸುಖ ದುಃಖ ಕಾ-ರಣವಾಗಿಪ್ಪವೊ ಕ್ಲಿಪ್ತದಿಂದಮಿನುಗುವ ಪ್ರಕಾಶಕ್ಕೆ ತೈಲ ಮಿಳತದಂತೆ ಮನ ಮೊದಲಾದ ಸಕಲ ಇಂದ್ರಿಯಗಳಲ್ಲಿದನುಜರೆಲ್ಲರು ನಿಂದು ಸಾಭಿಮಾನದಿಂದಶಣಿಸುವರು ಬಿಡದೆ ಸರ್ವಕಾಲಕನಸಿನಲ್ಲಾದು ನಿವೃತ್ತಿ ಮಾರ್ಗದಲ್ಲಿಮನಸು ಕೊಡರು ಒಮ್ಮೆ ಎಂದಿಗನ್ನಮನುಜಲೋಕ ಮತ್ತೆ ನರವಿಹಿತನ್ನ ದು-ರ್ಗುಣ ಮಣಿಂಯಾದ ಕಲಿಯುಗದಿ ಜನನಮನಸಿಜಪಿತ ನೀನು ಮುನಿದು ನೋಡುವ ಕಾಲಅನಕೂಲ ಈ ಪರಿ ಒದಗಲಾಗಿ ಗಣನೆಯಿಲ್ಲದ ಕರ್ಮ ಅಭಿವೃದ್ಧಿಯಾಹದಕನ್ಯೂನವಾವದಯ್ಯಾ ಪೂರ್ಣತೆಗೆಬಿನಗು೧ ಯತ್ನಗಳಿಂದ ನಿಹಸಣ೨ವಾಗುವದೆವನಜಾಕ್ಷ ನಿನ್ನ ಕರುಣವಾಗಲಾಗಿ ವಿನಯದಿಂದಲಿ ಒಮ್ಮೆ ನಾಮಾಮೃತವ ನೆನೆಯೆಹನನವಾಗುವವು ತೂಲರಾಶಿಅನಳ ಪೊಕ್ಕಂತೆ ನಿರ್ಮಲಿನವಾಗುವ ಬಿಡದೆ”ಜ್ಞಾನಾಗ್ನಿ ದಗ್ಧ ಶರ್ಮಣಿ’’ ಎಂಬಈ ನುಡಿ ಪ್ರಮಾಣದಂತೆ ಶುದ್ಧನಾಗಿಅನುಪಮವಾದ ಸುಖವೈದಿಪದುಸನಕಾದಿ ವಂದ್ಯ ನೀ ಸುಮ್ಮನೆ ನೋಡಲಾಗಿಇನಿತ ಕರ್ಮದ ಬಂಧ ತೊಲಗುವದುಕೊನೆಗೆ ಬಿಡವದಕ್ಕೆ ದ್ವೇಷಿಯಾದವನಲ್ಲನೀನೆ ಗತಿಯೆಂದು ಇಪ್ಪೆ ಆವ ಕಾಲ ಅನುಮಾನ ಮುನಿಗತ ವಿಜಯ ವಿಠ್ಠಲರೇಯಾಏನು ಬಂದರು ನಿನ್ನ ಬಿಡೆನೆಂದು ೩
ಅಟ್ಟತಾಳ
ಕರ್ತುನಾಗಿದ್ದವ ನಿರ್ದೋಷಿ ಎನಿಸುವಭೃತ್ಯನಾಗಿದ್ದವ ಸಾದೋಷಿ ಎನಿಪನುಪ್ರತ್ಯಕ್ಷವೆ ಸರಿ ಇಹಪರದಲ್ಲಿ ನೋಡುಪತ್ನಿ ಪತಿಗೆ ತಾನಪರಾಧಿ ಎನಿಪಳುಈ ತೆರದಲಿ ಪರತಂತ್ರ ಜೀವರಾಶಿಮೊತ್ತಾರ ತತಿಗೆ ಸ್ವಾಮಿಯು ನೀನಾಗಿ ಅ-ಕೃತ್ಯಗಳೆಣಿಸುವ ಯತ್ನವ ಮಾಡಲುಹೊತ್ತಿಗೆ ಅನಂತ ಅಗಣಿತವೆ ಸರಿಕತ್ತಲೆ ಮನೆಯೊಳು ಕಣ್ಣುಗಳ ಮುಚ್ಚಿವಸ್ತು ಪರಿಕ್ಷವ ತಿಳಿಯಬೇಕೆಂದೆನ್ನ ನಿ-ಮಿತ್ಯವೇನೊ ಇದು ಅಪರಾಧ ವಿಷಯದಿಮುಕ್ತರಾಶ್ರಯ ಗುರು ವಿಜಯ ವಿಠ್ಠಲರೇಯಾಭಕ್ತ ವತ್ಸಲನೆಂಬೊ ಬಿರಿದೆಂತು ನಿಲ್ಲುವದೋ ೪
ಆದಿತಾಳ
ಜೀವನಕ್ಕೆ ಅನಾದಿ ಕ್ಲಪ್ತದಿಂದ ಲಿಂಗದೇಹಆವರ್ಕವಾಗಿಪ್ಪದು ಅದರಂತೆ ಕಾಲ ಕರ್ಮಜೀವ ಪರಮಾಚ್ಛ್ಯಾದ ದ್ವಯ ಸ್ತ್ರೀಯಾದಾ ವಿಷ್ಟಭಾವರೂಪ ಮೊದಲಾದ ಅವಿದ್ಯಾ ಪ್ರತಿಬಂಧಜೀವ ಪ್ರಕಾಶವನ್ನು ತಮ್ಮೊಳು ಮಾಡಿ ನಿಜ ಸ್ವ-ಭಾವದಂತೆ ಮಾಡಿಸುವ ಕರ್ಮಗಳಆವ ಮೀರುವೆನೆಂತೊ ದೇವ ನೀ ಕೃಪೆ ಮಾಡಿದರೆಕಾವ ಕರುಣಾನಿಧೆ ಗುರು ವಿಜಯ ವಿಠ್ಠಲರೇಯಾಈ ವಿಧ ಪ್ರತಿಕೂಲ ನೀನೆಂತು ದಾಂಟುವದೊ ೫
ಜತೆ
ನಾಮ ಮಾತ್ರವು ನೆನೆಯೆ ಭವರೋಗ ಪರಿಹಾರಶ್ರೀ ಮನೋಹರ ಗುರು ವಿಜಯ ವಿಠ್ಠಲರೇಯಾ ||
[ನಳ ನಾಮ ಸಂ|| ಆಶ್ವೀಜ ಶುದ್ಧ ೨]

ಆತ್ಮ ನಿವೇದನೆಯ ಸುಳಾದಿಗಳು
೧೪೦
ಧ್ರುವತಾಳ
ಒಡಿಯರಿಲ್ಲದ ವೃಕ್ಷ ಕಂಡ ಕಂಡವರೆಲ್ಲಬಡಿದು ತಿಂಬುವ ನ್ಯಾಯವಾಯಿತೆನಗೆಅಡಿ ತೊಲಗದೆ ಕಾಮ ಕ್ರೋಧಾದಿ ಗರ್ವಂಗಳುಸುಡುತಲಿವೆ ವ್ಯವಧಾನವಿಲ್ಲದೆಕಡು ದುಃಖವನ್ನು ಆರಿಗೆ ಪೇಳಲಿನ್ನುಒಡಿಯನಾವನು ಪರಿಹರಿಸುವುದಕ್ಕೆಪೊಡವಿಯೊಳಗೆನ್ನ ದೂರು ಕೇಳುವುದಕ್ಕೆಹುಡಿಕಿ ನೋಡಿದರನು ಒಬ್ಬರಿಲ್ಲಜಡಜ ಸಂಭವ ಮುಖ್ಯ ಸುರರಾದಿ ಜೀವಿಗಳಬಿಡದೆ ಸಾಕುವರಯ್ಯಾ ನಿಧಿಯು ಆವಾಜಡಜ ಜಾಂಡವನ್ನು ನೇಮಿಸಿ ಸ್ಥಿತಿ ಮಾಡಿಕಡೆಯನೈದಿಪದಕ್ಕೆ ಮುಖ್ಯ ಕರ್ತು ನಾವಕಡಲಶಯನನೆ ನಿನ್ನಿಂದ ವ್ಯತಿರಿಕ್ತವಾದಒಡೆಯರಿಲ್ಲವು ಆವ ಪರಿಯಲಿ ನೋಡಿಸಡಲ ಬಿಡುವುದು ಸಮ್ಮತವೇನು ನಿನಗೆಭಿಡಿಯ ಲೇಶವನ್ನು ಇಲ್ಲವೇನೋಜಡಮತಿಯವನೆಂದು ಜರಿದು ನೋಡಲು ಆವಮಡವು ದಾಟಿಪದಕ್ಕೆ ಆವ ಪೇಳೋಒಡಿಯ ಎನಗೆ ನೀನೆ ಜನುಮ ಜನುಮದಲ್ಲಿತೊಡರುಗಳೆಷ್ಟು ಒದಗೆ ಇದು ತಪ್ಪದೋನುಡಿವರು ಇನ್ನೊಂದು ಪರಿಯಲ್ಲಿ ಸಜ್ಜನರೆಲ್ಲಒಡಿಯ ಎನಗೆ ನಿನಗೆ ಅಗಲದೆಂದೂಆಡುವ ವಚನಕ್ಕೆ ವ್ಯಾಹತಿ ತಾರದಲೆಪಿಡಿಯೊ ಕರವ ಅವ್ಯವಧಾನದಿಉಡುರಾಜ ನಾಮ ಗುರು ವಿಜಯ ವಿಠ್ಠಲ ಭವಮಡುವಿನೊಳಗೆ ಬಿದ್ದು ಮೊರಿಯನಿಡುವೆ ೧
ಮಟ್ಟತಾಳ
ಅರಸನಿಗೆ ಸಖನಾಗಿ ಅನ್ನ ಕಾಣದಲೆತಿರಿಕಿಯ ಮನೆ ಮನೆ ತಿರುಗಿದೆ ಬಲುಅರಸಿಗೆ ಮಾನ್ಯತ್ವ ಬರುವದೆ ಜನರಿಂದವರ ಪ್ರಖ್ಯಾತದಲಿ ದೃಷ್ಟಿಯ ಅವಗಿತ್ತುಎರಡರ ಮಧ್ಯದಲಿ ವ್ಯವಹರಿಸುವ ನೊಂದುಪರಮ ಪ್ರೀಯನೆಂಬ ವಚನವನ್ನುಡಿಸಲ್ಲ(ಪರಮ ಪ್ರೀಯನಾಗೆ ತಿರಿಕಿಯ ಮನೆ ಮನೆ)ತಿರುಗುವದೆ ಬಿಡಸಿ ಪ್ರೀತಿಯಿಂದಲಿ ಕರೆದುಪರಿಪರಿ ಸಂಪದ ಪಾಲಿಪ ತಡೆಯದಲೆನರ ಸಖ ಸಿರಿ ಗುರು ವಿಜಯ ವಿಠ್ಠಲರೇಯಎರಡರೊಳಗೊಂದು ನಿರ್ಧಾರವ ಮಾಡೊ ೨
ತ್ರಿವಿಡಿತಾಳ
ಪರಿ ಪರಿ ದೇಹದಿಂದ ಆಯಾಸ ಬಡಬಹುದುಧರಣಿಪತಿಯ ಬಾಧೆ ಸ್ವೀಕರಿಸಬಹುದುನರರಿಂದ ಬಲು ಪರಿ ನಿಂದ್ಯವೈದಲಿಬಹುದುದಾರಿದ್ರ ದೋಷಾನುಭವಿಸಬಹುದುಪರಿಯು ಇನಿತಾದವೆಲ್ಲ ಬಾರಲೇಕೆ ನಿನ್ನಸಿರಿಚರಣ ಹೃದಯದಲ್ಲಿ ಕಾಣದಿಪ್ಪಪರಮ ದುಃಖವನ್ನು ದುಸ್ಸಹವಾಗಿದೆಪರಿಮಿತವೇ ಇಲ್ಲ ನೀನೆ ಬಲ್ಲಿಕರಣ ಪ್ರೇರಕನಿಗೆ ಪ್ರತ್ಯೇಕ ಪೇಳುವದೇಕೆಕರುಣಾಸಾಗರನೇ ಕಮಲನಯನಮರಳೆ ಛಿದ್ರಗಳೆಷ್ಟು ಇರಲಿ ಮತ್ತಿರಲಿತರುಳನ ಅಪರಾಧ ಕ್ಷಮಿಸಬೇಕುಕರಿರಾಜ ವರದ ಗುರು ವಿಜಯ ವಿಠ್ಠಲರೇಯಮೊರೆ ಹೊಕ್ಕೆನೊ ಪೊರಿಯಬೇಕೋ ಕರುಣಿ ೩
ಅಟ್ಟತಾಳ
ಅಪರಾಧ ಮಾಡಿದ ಭಕ್ತರಿಗೀಪರಿಉಪಶಮನವಿಲ್ಲದಿರಲು ಜಗದೊಳುಕೃಪಣ ವತ್ಸಲನೆಂಬೊ ಬಿರಿದಿನ್ನು ಪ್ರಖ್ಯಾತವಿಪಗಮನ ನಿನಗೆ ಬರುವದೆ ಎಲೋ ದೇವಸಪರಿಮಿತವಾದ ಸುಖದ ಲೋಕಂಗಳುಉಪಗಮ್ಯವಾಗವು ಎಂದಿಗಾದರು ನೋಡಾಅಪರಿಮಿತವಾದ ಆನಂದಪ್ರದವಾದಸುಪವಿತ್ರ ಲೋಕವು ದೂರತಿ ದೂರೆವೆ ಸರಿಶಫರಾದಿ ರೂಪನೆ ಗುರು ವಿಜಯ ವಿಠ್ಠಲರೇಯಕೃಪಣ ಬುದ್ಧಿಯ ಬಿಡು ಕರುಣದಿಂದಲಿ ನೋಡೊ ೪
ಆದಿತಾಳ
ಭಕತರ ಅಪರಾಧ ಎಣಿಸುವ ನೀನಲ್ಲಭಕತರ ಅಭಿಮಾನ ಸತತ ವಹಿಸಿ ಮೆರೆವಭಕತ ವತ್ಸಲ ನೀನು ಭಕತರ ಭಾಗ್ಯನಿಧೆಭಕತರ ಸುಖ ನೀನೆ ಭಜಕರ ಸುಖ ಗುರುಭಕತರಾಶ್ರಯ ನೀನೆ ನಿನಗಿಂದ ಅನ್ಯರಿಲ್ಲಭಕತರ ಬಿಡೆನೆಂಬೊ ಶಪಥವೆ ನಿನ್ನದಯ್ಯಾಭಕತರಿಗಾಗಿ ಸೃಷ್ಟಿ ನಿರ್ಮಿಸಿದ ನಂತರಭಕತರ ವಾಸಕ್ಕೆ ಲೋಕಂಗಳು ರಚಿಸಿದಿಭಕತರ ಸುಖಕಿನ್ನು ಸಕಲವು ನಿರ್ಮಿಸಿದಿಭಕತರ ನಿಮಿತ್ಯ ಬಲು ವಿಧವಾಗಿದ್ದಸಕಲವತಾರಗಳು ಧರಿಸಿದಿ ಪ್ರೀತಿಯಿಂದಭಕತರ ಸಲಹಲು ಜಾರ ಚೋರನೆನಿಸಿದಿಭಕತರ ಪ್ರಿಯನೆನಿಸಿ ಸಾರಥಿ ಮೊದಲಾದಕುಕರ್ಮವಂಗೀಕಾರ ಮಾಡಿದಿ ಎಲೋ ದೇವಭಕುತರ ವಶ್ಯ ನೀನು ಮಾಡುವ ವ್ಯಾಪಾರಭಕುತರಿಗಲ್ಲದಲೆ ನಿನಗುಂಟೆ ಪ್ರಯೋಜನ ಈ ಯುಕುತಿ ಎನ್ನದಲ್ಲ ಶ್ರುತಿ ಸ್ರ‍ಮತಿ ವರಲುತಿವೆವುಕುತಿಯ ಮನವಪ್ಪ ನೀನೇವೆ ಪ್ರೇರಿಸಿದಿಈ ಕಲಿಕೃತ ಮಮಕಾರ ಜನಿತವಾದ ಭವಬಂಧಮುಕುತನ ಮಾಡುವದು ಕ್ಷಣವನು ತಡಿಯದಲೆಲಕುಮಿಯ ಆಣೆ ನಿನಗೆ ಸಕಲ ಸುರರ ಆಣೆಭಕುತರ ಆಣೆ ಮತ್ತೆ ಎನ್ನಾಣೆ ಹೇ ಕರುಣಿಈ ಕುಂಭಿಣಿಗೆ ಮುಖ್ಯ ಒಡೆಯ ನೀನಾದರುಭಕತರ ವಾಕ್ಯವನ್ನು ಪಾಲಿಸಿ ಸಲಹಬೇಕುಭಕತರಿಚ್ಛೆಯಗಾರ ಗುರು ವಿಜಯ ವಿಠ್ಠಲ ರೇಯಭಕತರ ಮನೋಭೀಷ್ವಗರೆವನು ನೀನೆ ದೇವ ೫
ಜತೆ
ಭಕತರ ಅಪರಾಧ ಸಾಸಿರವಿರಲಿನ್ನುಶಕತ ರಕ್ಷಿಸೊ ಗುರು ವಿಜಯ ವಿಠ್ಠಲರೇಯಾ ||

೧೫೭
[ಹಿಂದೆ ನಾಲ್ಕು ಜನುಮಗಳಲ್ಲಿ ಅನುಗ್ರಹ ಮಾಡಿದ ಹರಿಯೆ ಇತರ ದೇಹಾನು ಬಂಧಗಳಂತೆ ಕರ್ಮ ತೀರಿತೆಂದು ಬಿಡುವರೇ ? ನೀನು ಅನಂತ ಕಾಲದ ಅನಿಮಿತ್ಯ ಬಂಧು, ತಂದೆ ಬಾಲಕರ ತಪ್ಪು ಎಣಿಸದಂತೆ ಇಂದು ಅನುಗ್ರಹಿಸಿ ನೀನು ಪೂರ್ಣ ಕಾಮನಾದರೂ ಭಕ್ತರನ್ನು ಕಾಪಾಡುವ ಭಾರ ನಿನ್ನದೆಂದು ಪ್ರಾರ್ಥನಾ.]
ಧ್ರುವತಾಳ
ಕ್ಷಿತಿಯ ಜನರು ನಿನ್ನ ದಯದಿ ಬೇಡುವದಕ್ಕೆಸಥೆ ಒಂದುಂಟು ಕೇಳು ಬಿನ್ನೈಸುವೆ”ಪಿತಾಸಿ ಲೋಕಸ್ಯ ಚರಾಚರಸ್ಯ’’ ”ಯೋನಃಪಿತಾ ಜನಿತಾ’’ ”ವಿಧ ಪುರುಷ ಪುರುಷಯೋ’’ಇತ್ಯಾದಿ ಪ್ರಮಾಣದಂತೆ ಸೃಷ್ಟಿಯ ಮಾಡಿ ಸ್ಥಿತಿಗೈಸಿಪ್ರಾಂತ್ಯದಲ್ಲಿ ಲಯವು ಮಾಡಿಗತಿಯ ಕೊಡುವಿ ಎಂಬ ಕಾರಣದಿಂದಸಥಿಯಿಂದ ಬೇಡುವರು ಈಪ್ಸಿತವಅತಿಶಯವುಂಟು ಎನಗೆ ಇದಕಿಂದಧಿಕವಾದಸಥೆ ಮಾಳ್ಪ ಕಾರಣವು ಸಾರ್ವಭೌಮಾಚತುರ್ದಶ ಭುವನಗಳು ಜಠರದಿ ಧರಿಪ ನೀಗತಜನ್ಮದೊಳಗೊಂದು ಜನ್ಮದಲ್ಲಿಪಿತನಾಗಿ ಉದರದಿಂದ ಪಡದೆ ಕರುಣನಿಧೆಪಿತಾಮಹನಿಗೆ ಪುತ್ರನೆನಿಸಿಪಿತಾಮಹನಾಗಿ ಮತ್ತೊಂದು ಜನ್ಮದಲ್ಲಿಆಪ್ತನಾಗಿ ದೇಹ ಬಂಧುನಾಗಿಅತಿಹಿತ ಮಾಳ್ಪುವಂಥ ಸಖನಾಗಿ ಗುರುವಾಗಿರಥಿಕನಾಗಿ ಏಕತ್ರ ಸ್ಥಿತನಾಗಿಭಾತೃನಿಗೆ ಕೈವಶನಾದ ಒಡೆಯನೆಂಬಈ ತೆರವಾದ ಸಂಬಂಧವನೇಕವಿರಲುರತಿಪತಿ ಪಿತ ನೀನು ಮುನಿದು ನೋಡಲಿ ಸಲ್ಲದಿ-ನಿತೆಂದು ಸಥಿಯಿಂದ ಅಂಜದಾದೆತುತಿಸಿ ನೋಡಿದದಕೆ ಮನಕೆ ಬಾರದು ಏನೊ ನಿ-ಮಿತ್ಯ ಅನಿಮಿತ್ಯ ಸಂಜ್ಞ ಸರಿದವೇನೊಶ್ರುತಿಗೆ ನಿಲುಕದ ಗುರು ವಿಜಯ ವಿಠ್ಠಲ ರೇಯಾಮತಿವಂತರಾದವರು ಮೆಚ್ಚರಯ್ಯಾ ೧
ಮಟ್ಟತಾಳ
ದೇಹದ ನಿಮಿತ್ಯ ನಾನಾ ವಿಧವಾದದೇಹ ಸಂಬಂಧಿಗಳು ಮೇಳನವಾಗುವರುದೇಹಾಖ್ಯ ವ್ಯಾಜ ತೊಲಗಿದ ಮೇಲ್ಯಾರಿಗೆ ಆ-ರಾಹರು ಎಂದು ಕೇಳುವೆ ಎಲೊ ದೇವಾಬಹು ದೇಹವ ಪೋದರು ಪೋಗದ ಸಂಬಂಧಶ್ರೀಹರಿ ಎನಗುಂಟು ತೆರಳಿ ಪೋಪದಲ್ಲ ಅ-ವ್ಯಾಹತವಾದ ನಿಮಿತ್ಯಾನಿಮಿತ್ಯಅಹರಹದಲ್ಲಿರಲು ಜರಿದು ನೋಳ್ಪದಿದುವಿಹಿತವಲ್ಲವು ಕೇಳು ಬರಿದೆ ದಂಧನವ್ಯಾಕೆಅಹಿ ತಲ್ಪನೆ ಗುರು ವಿಜಯ ವಿಠ್ಠಲರೇಯಾನೇಹ ಬಿಡುವದಲ್ಲ ಅನ್ಯರ ಮಾತಿಗೆ ೨
ತ್ರಿವಿಡಿತಾಳ
ಒಂದು ನಿಮಿತ್ಯದಿಂದ ಬೊಮ್ಮಾಂಡದಲಿ ಜನರುಛಂದ ಛಂದದ ಕೃಪೆಯು ಮಾಳ್ಪರೈಯ್ಯಾಇಂದಿರಪತಿ ಎನಗೆ ನಿನಗೆ ಇನಿತವಾದಬಂಧುತ್ವ ಇರಲಾಗಿ ಎಳ್ಳಿನಿತುಕುಂದು ಮಾಡದಲೆ ಪ್ರವಾಹವಾದ ಸುಖವೃಂದಗಳಿಂದಲ್ಲಿ ರಕ್ಷಿಪದೊತಂದೆ ನಿನ್ನಗೆ ಕೃಪೆ ಪುಟ್ಟದಿದ್ದರೆ ಎ-ನ್ನಿಂದಲೇನಾಹದೊ ಅಂಬುಜಾಕ್ಷತಂದೆ ಬಾಲ್ಯದಿ ಸುತರು ಕುಂದುಗಳೆಷ್ಟು ಮಾಡೆಮಂದಿಗೆ ಒಪ್ಪಿಸಿ ಕೊಡುವನೇನೊಹಿಂದೆನ್ನ ಅಪರಾಧ ಎಷ್ಟು ಕ್ಷಮಿಸಿದಿ ನೋಡುಇಂದು ಮಾತ್ರಕ ನಾನಲ್ಲದವನೇಬಂಧು ಅನಿಮಿತ್ಯ ಗುರು ವಿಜಯ ವಿಠ್ಠಲರೇಯಾಎಂದೆಂದಗಲದಂತೆ ಅನುಗ್ರಹಿಸೊ ೩
ಅಟ್ಟತಾಳ
ನಿನ್ನಿಂದ ನೀನೆವೆ ರಮಿಪ ಪೂರ್ಣನಿಗೆಭಿನ್ನ ವಸ್ತುಗಳಿಂದ ಪ್ರಯೋಜನವೇನುಮುನ್ನಿನ ಕರ್ಮವು ಕಾಲ ಪ್ರಕೃತಿ ಜೀವಅನುಸಾರದಿಂದ ಮಾಳ್ಪುವುನೆಂಬಿಯಾಸನ್ಮತವೆ ಸರಿ ಕಾರಣ ಒಂದು ಉಂಟುಚೆನ್ನಾಗಿ ಕೇಳುವದೆಲವೊ ಮಹಾರಾಜನೆಉನ್ನತವಾಗಿದ್ದ ಸಂಪದದಿಂದಲ್ಲಿಘನ್ನನಿವನೆನಸಿ ಪ್ರಾಂತ್ಯ ಭಾಗದಲ್ಲಿಮನುಜಾಧಮರಿಂದ ಕೊರತೆ ಮಾಳ್ಪದೇನೊಮುನ್ನ ಮಾಡಿದ ಉಪಕಾರವು ಏನುಂಟುಇನ್ನೀಗ ಮಾಡಿದ ಅನುಪಕಾರವೇನೊಚಿನ್ಮಯ ಮೂರುತಿ ಗುರು ವಿಜಯ ವಿಠ್ಠಲರೇಯಾಮನ್ನಿಸಿ ಇದಕಿನ್ನು ಉತ್ತರ ಪೇಳುವದು ೪
(ಮುಂದೆ ಉಪಲಬ್ಧವಿಲ್ಲ)

೧೩೪
ಶ್ರೀವಾಯುದೇವರ ಪ್ರಾರ್ಥನೆ
ಧ್ರುವತಾಳ
ಘನ ದಯಾನಿಧಿಯಾದ ಪವನರಾಯನೆ ನಮೊಪುನರಪಿ ನಮೋ ನಿನ್ನ ಪಾದ ಸರಸಿರುಹಕೆಮಣಿದು ಬೇಡಿಕೊಂಬೆ ನೀನೆವೆ ಗತಿ ಎಂದುನಿನಗಿಂತ ಹಿತರಾರು ಜೀವನಕೆಸನಕಾದಿ ವಂದ್ಯನ್ನ ಆಜ್ಞದಿಂದಲಿ ಪರಮಅಣುಗಳಲ್ಲಿ ವ್ಯಾಪ್ತನಾಗಿ ಬಿಡದೆಅಣುರೂಪಗಳಿಂದ ನಿಂದು ಮಾಡಿದ ಕೃತ್ಯಮನಸಿಜ ವೈರಿಯಿಂದ ತಿಳಿಯಲೊಶವೆಹೀನ ಮನಸಿನಿಂದ ಬದ್ಧನಾದವ ನಾನುಗುಣರೂಪ ಕ್ರಿಯಗಳ ವಿದಿತನೇನೊತನುವಿನೊಳಗೆ ಮೂರು ಕೋಟ್ಯಧಿಕ ಎಪ್ಪತ್ತೆರಡುಎನಿಪ ಸಾಸಿರ ರೂಪದಿಂದ ಸತಿಯ ಸಹಿತತೃಣ ಮೊದಲಾದ ಜೀವ ಪ್ರಕೃತಿ ಕಾಲಕರ್ಮಅನುಸರವಾಗಿ ಕ್ರಿಯಗಳನೆ ಮಾಡಿಅನಿಮಿತ್ಯ ಬಾಂಧವನೆನಿಸಿ ಸಜ್ಜನರಿಗೆಜ್ಞಾನ ಭಕ್ತ್ಯಾದಿಗಳು ನೀನೆ ಇತ್ತುಮನದಲ್ಲಿ ಹರಿ ರೂಪ ಸಂದರುಶನವಿತ್ತುಘನೀ ಭೂತವಾದ ಆನಂದದಿಂದವಿನಯದಿಂದಲ್ಲಿ ಪೊರೆವ ಉಪಕಾರವನು ಸ್ಮರಿಸಲಾಪೆನೆ ಎಂದಿಗೆ ಗುಣನಿಧಿಯೆಇನ ಕೋಟಿ ತೇಜ ಗುರು ವಿಜಯ ವಿಠ್ಠಲರೇಯಇನಿತು ನಿನ್ನೊಳು ಲೀಲೆ ಮಾಡುವ ಆವಕಾಲ ೧
ಮಟ್ಟತಾಳ
ಮಿನುಗುವ ಕಂಠದಲಿ ಎರಡು ದಳದ ಕಮಲಕರ್ಣಿಕಿ ಮಧ್ಯದಲಿ ಸತಿ ಸಹಿತದಲಿದ್ದುವನಜಾಸನವಿಡಿದು ತೃಣಜೀವರ ತನಕತನುವಿನೊಳಗೆ ವಿಹಿತವಾದ ಶಬ್ದಗಳನ್ನುನೀವೆ ಮಾಡಿ ಅವರವರಿಗೆ ಕೀರ್ತಿಘನತೆಯನೇ ಇತ್ತು ಕಾಣಿಸಿಕೊಳ್ಳದಲೆಮನುಜಾಧಮರಿಗೆ ಮಾಯವ ಮಸಗಿಸಿಕೊನೆ ಗುಣದವರನ್ನ ನಿತ್ಯ ದುಃಖಗಳಿಂದದಣಿಸುವಿ ಪ್ರಾಂತ್ಯದಲಿ ಕಡೆಮೊದಲಿಲ್ಲದಲೆದನುಜ ಮರ್ದನ ಗುರು ವಿಜಯ ವಿಠ್ಠಲರೇಯನಿನಗಿತ್ತನು ಈ ಪರಿಯ ಸ್ವತಂತ್ರ ಮಹಿಮೆಯನು ೨
ರೂಪಕತಾಳ
ನಾಸಿಕ ಎಡದಲ್ಲಿ ಭಾರತಿ ತಾನಧೋಶ್ವಾಸ ಬಿಡಿಸುವಳು ನಿನ್ನಾಜ್ಞದೀನಾಸಿಕ ಬಲದಲ್ಲಿ ಈಶನಾಜ್ಞದಿ ಊಧ್ರ್ವಶ್ವಾಸ ಬಿಡಿಸಿ ಪೊರೆವಿ ಜೀವರನ್ನೂತಾಸಿಗೊಂಭೈನೂರು ಕ್ರಮದಿಂದ ಇಪ್ಪತ್ತೊಂದುಸಾಸಿರದಾರು ಶತದಿನ ಬಂದಶಲಿಭೂ ಶಬ್ದದಿಂದಲ್ಲಿ ಹರಿಯನ್ನೇ ಪೂಜಿಸುತ್ತಆಶೀತಿ ನಾಲ್ಕು ಲಕ್ಷ ಜೀವರಿಗೆಲೇಸು ಮಿಶ್ರಗಳೆಲ್ಲ ಅದರಂತೆ ನಿರ್ದೇಶವಾಸಗೈಸುವಿ ನೀನೆ ಪ್ರಾಂತ್ಯದಲ್ಲಿಈ ಸುಜ್ಞಾನವೆ ತಿಳಿದುಪಾಸನೆ ಮಾಳ್ಪರಿಗೆಶ್ವಾಸ ಮಂತ್ರದ ಫಲವ ಶೇಷವೀವಕಾಶಿನಿಂದಲಿ ಕೋಟಿ ದ್ರವ್ಯ ಪ್ರಾಪುತದಂತೆವಾಸುದೇವನೆ ಇದಕೆ ತುಷ್ಟನಾಗೀಈ ಶರೀರದಿ ಪೊಳೆದು ಕ್ಲೇಶವ ಪರಿಹರಿಪಈ ಸಂಜ್ಞದಿಂದಲ್ಲಿ ದಿವಿಜರೆಲ್ಲದಾಸರಾಗಿಹರಯ್ಯಾ ನಿನ್ನ ಪಾದವ ಬಿಡದೆಕ್ಲೇಶಾನಂದಗಳೆಲ್ಲ ನಿನ್ನಾಧೀನ ದೇಶ ಕಾಲ ಪೂರ್ಣ ಗುರು ವಿಜಯ ವಿಠ್ಠಲರೇಯಭಾಸುರ ಜ್ಞಾನ ನಿನ್ನಿಂದವೀವ ೩
ಝಂಪಿತಾಳ
ಪಂಚ ದ್ವಾರಗಳಲ್ಲಿ ಪಂಚವ ಪುಷಗಳಿಂದಪಂಚರೂಪನ ಧ್ಯಾನ ಮಾಳ್ಪ ನಿನ್ನಪಂಚಮುಖ ಮೊದಲಾದಮರರೆಲ್ಲರು ನಿ-ಶ್ಚಂಚಲದಿ ಭಜಿಸುತಿರೆ ಅವರವರವಾಂಛಿತಗಳನಿತ್ತು ಪರಮ ಮುಖ್ಯ ಪ್ರಾಣ ದ್ವಿ-ಪಂಚಕರಣಕೆ ಮುಖ್ಯ ಮಾನಿ ನೀನೆಪಂಚರೂಪಗಳಿಂದ ಪಂಚಾಗ್ನಿಗತನಾಗಿಪಂಚ ವ್ಯಾಪರಗಳು ಮಾಳ್ಪ ದೇವಪಂಚ ಪರ್ವದಲಿಪ್ಪ ಪಂಚ ಪಂಚಮರರೊಸಂಚರಿಸುವರಯ್ಯಾ ನಿನ್ನಿಂದಲಿಪಂಚಭೇದಗಳರುಹಿ ಶುದ್ಧ ಶಾಸ್ತ್ರಗಳಿಂದ ಪ್ರ-ಪಂಚ ಸಲಹಿದ ವಿಮಲ ಉಪಕಾರಿಯೇ ನಿ-ಷ್ಕಿಂಚನ ಪ್ರೀಯ ಗುರು ವಿಜಯ ವಿಠ್ಠಲರೇಯನಮಿಂಚಿನಂದದಿ ಎನ್ನ ಮನದಿ ನಿಲಿಸೊ ೪
ತ್ರಿವಿಡಿತಾಳ
ದಳ ಅಷ್ಟವುಳ್ಳ ರಕ್ತಾಂಬುಜದ ಮಧ್ಯಪೊಳೆವ ಕರ್ಣಿಕೆಯಲ್ಲಿ ಶೋಭಿಸುವಮೂಲೇಶನ ಪಾದ ಪಂಕಜದಲಿ ನಿಂದುಸಲೆ ಭಕುತಿಯಿಂದ ಭಜಿಸುವ ನಿನ್ನ ಚರಣಮೂಲದಲ್ಲಿ ಜೀವ ಆಶ್ರೈಸಿ ಇಪ್ಪನಾಗಿಸ್ಥಳವ ಸೇರಿಪ ಭಾರ ನಿನ್ನದಯ್ಯಾಒಲ್ಲೆನೆಂದರೆ ಬಿಡದು ಭಕತರ ಅಭಿಮಾನ ಒಲಿದು ಪಾಲಿಸಬೇಕು ಘನ ಮಹಿಮಾಖಳ ದರ್ಪ ಭಂಜನ ಗುರು ವಿಜಯ ವಿಠ್ಠಲರೇಯಒಲಿವ ನಿಮ್ಮಯ ಕೃಪೆಗೆ ವಿಮಲ ಚರಿತ ೫
ಅಟ್ಟತಾಳ
ಜಾಗೃತಿ ಸ್ವಪ್ನ ಸುಷುಪ್ತಿಯಲ್ಲಿ ನೀನೆಜಾಗರೂಕನಾಗಿ ಜೀವನ ಪಾಲಿಸಿಭಾಗತ್ರಯದಲ್ಲಿ ವಿಭಾಗ ಮಾಡುವಿನಾಗಭೂಷಣಾದಿ ಸುರರಿಗೆ ಜೀವನಸಾಗರ ಮೊದಲಾದ ಸಕಲರಲ್ಲಿ ವ್ಯಾಪ್ತನಾಗರಾಜನ ಅಂಗುಟದಿ ಮೀಟಿದ ಶಕ್ತಯುಗಾದಿ ಕೃತು ನಾಮ ಗುರು ವಿಜಯ ವಿಠ್ಠಲರೇಯನಯೋಗವ ಪಾಲಿಸಿ ಭವದೂರೂ ಮಾಡೋದು ೬
ಆದಿತಾಳ
ಅಸುರರ ಪುಣ್ಯವನ್ನು ಭಕ್ತರಿಗಿತ್ತವರಅಸಮೀಚೀನ ಕರ್ಮ ದನುಜರಿಗುಣಿಸುವಿಈಶನೆ ಗತಿಯೆಂದು ನೆರೆ ನಂಬಿದವರಿಗೆಸು ಸಮೀಚೀನವಾದ ಮೋದಗಳೀವಿ ನಿತ್ಯವಸುಧೆಯ ಭಾರವನ್ನು ಧರಿಸಿ ತ್ರಿಕೋಟಿಯಸುಶರೀರಗಳಿಂದ ಬಹಿರಾವರಣದಲ್ಲಿವಾಸವಾಗಿ ಸಕಲ ಭೂತ ಹೃತ್ಕಮಲದಲ್ಲಿ ನಿಂದುಬಿಸಜಜಾಂಡವನ್ನು ಪೊರೆವ ಕರುಣಿ ನೀನುಅಸಮನೆನಿಪ ಗುರು ವಿಜಯ ವಿಠ್ಠಲರೇಯವಶವಾಗುವನು ನಿನ್ನ ಕರುಣದಿ ಆವಕಾಲಾ ೭
ಜತೆ
ಹರಿಯ ವಿಹಾರಕ್ಕೆ ಆವಾಸನೆನಿಸುವಿಗುರು ವಿಜಯ ವಿಠ್ಠಲನ್ನ ಸುಪ್ರೀತ ಘನದೂತ ||

೧೪೪
ಧ್ರುವತಾಳ
ತಂದೆ ನಿನ್ನಯ ಪಾದ ಸಂದರುಶನದಿಂದಾನಂದವಾಯಿತು ಎನಗೆ ಅಮರೇಂದ್ರನೆವೃಂದಾರಕರಂದು ಇತ್ತ ತ್ರಿವಿಧ ಶಾಪದಿ ಈ ವ-ಸುಂಧರೆ ಎಂಬೊ ಮಹಾ ಕಾರಾಗೃಹಬಂಧನದಲಿ ಸಿಲ್ಕಿ ದೈತ್ಯರ ವಶನಾಗಿಅಂಧಕಾರವೆಂಬೊ ಅಜ್ಞಾನದಿವೃಂದ ದುಃಖಗಳುಂಡು ಬಂಧು ಬಳಗ ಮಿತ್ರರಿಂದ ಬಾಹಿರನಾಗಿ ಸಕಲ ದೋಷವೃಂದಗಳಿಗೆ ನಾನು ಮಂದಿರ ಸ್ಥಾನನಾಗಿನಿಂದಿತನಾದೆ ನೈಜ ಜನರಿಂದಮಂದಹಾಸದಿ ಮಾತ ನಡಿಸಿಕೊಳ್ಳದೆ ಮುಖ್ಯಬಂಧುನಾದ ಹರಿಗೆ ವಿಮುಖನಾಗಿಅಂಧಕನಾಗಿ ಈ ಭೂ ಪ್ರದೇಶವೆಂಬೊಅಂಧಂತಮಸ್ಸಿನಲ್ಲಿ ನೊಂದು ದುಃಖ-ದಿಂದ ದಾಂಟುವುದಕ್ಕೆ ಇನ್ನು ಸಂದೇಹ ಉಂಟೆಕಂದು ಕಂಧಾರ೧ ನ್ನ ಪ್ರೀತ್ಯಾಸ್ಪದನೆಇಂದ್ರನಾಮಕ ಗುರು ವಿಜಯ ವಿಠ್ಠಲನ್ನತಂದು ತೋರಿಸು ಎನಗೆ ತಡ ಮಾಡದೆ ೧
ಮಟ್ಟತಾಳ
ಅತಿಶಯವಾದಂಥ ಹಿತದಿಂದಲಿ ನೀನುದ್ವಿತಿಯ ರೂಪ೨ವಾದ ಯತಿರೂಪದಿ ಬಂದುಆತ್ಮಜನೆ ನೀನು ಅಖಿಳ ಸೌಖ್ಯಗಳಿಂದಕ್ಷಿತಿಯಲಿ ಸುಖವೈದು ಎಂತೆಂತು ನುಡಿದುಹಿತ ಮಾಡಿದಿ ನಿನ್ನ ಕರುಣಕ್ಕೆ ನಮೊ ನಮೊಮತಿಯಲಿ ಇದ್ದಂಥ ಮರ್ಮವ ಪ್ರಾರ್ಥಿಸುವೆಸುತರಲಿ ಪಿತ ಮಾಳ್ಪ ಹಿತದ ತೆರದಂತೆಸತಿಯಲಿ ಪತಿ ಮಾಳ್ಪ ಪರಮ ಕರುಣದಂತೆಮಿತಿಯಿಲ್ಲದಲಿಪ್ಪ ಮಿತ್ರತ್ವವ ಮಾಡಿವ್ರತತಿ ಜಾಸನ ಮುಖ್ಯ ಸುರರ ಸಂತತಿಗಳಚಿತ್ತಕೆ ನಿಲುಕದ ಅಗಣಿತ ಮಹಿಮನ್ನಸಥೆಯಿಂದಲಿ ಎನ್ನ ಸಖನೆಂದು ಬಗೆದ೧ ಖತಿ ಎಣಿಸಿದೆ ಎನ್ನ ಹಟ ನಡೆಸುತ ಪೊರೆದುವೃತತಿ ಜಾಂಡಕೆ ಮುಖ್ಯ ತಾನೇ ಜೀವನಾಗಿಅತಿಶಯದಲಿ ಎನ್ನ ಪ್ರಾಣನೆಂದು ನುಡಿದುದಿತಿಜನ ವಧೆಗಾಗಿ ಆನಿಲ್ಲದಿಪ್ಪಕ್ಷಿತಿ ನೋಡಲು ಒಲ್ಲೆನೆಂದು ನುಡಿದಂಥಮಿತ್ರನಿಂದಲಿ ಅಗಲಿ ಬಹುಕಾಲವ ಕಳದೆವ್ಯರ್ಥ ಬಾಳಿದಂತಪರಾಧವೆಣಿಸದಲೆಕರ್ತೃನೆನಿಪ ಗುರು ವಿಜಯ ವಿಠಲನ್ನಹೃತ್ಕಮಲದಿ ತೋರಿ ಸುಖದಾಯಕನಾಗು ೨
ತ್ರಿವಿಡಿತಾಳ
ಕೃಷ್ಣನಿಂದಲಿ ಎನಗೆ ಉತ್ರ‍ಕಷ್ಟ ಸುಖವಯ್ಯಾ೨ ಕೃಷ್ಣನಿಂದಲಿ ಎನಗೆ ಆನಂದವೊಕೃಷ್ಣನಿಂದಲಿ ನಾನು ಅಸಮ ಬಲಾಢ್ಯನುಕೃಷ್ಣನಿಂದಲಿ ಎನಗೆ ಶೌರ್ಯ ಧೈರ್ಯಕೃಷ್ಣನೆ ಎನಗೆ ಪ್ರಾಣ ಕೃಷ್ಣ ಎನ್ನಗೆ ಬಂಧುಕೃಷ್ಣನಿಂದಲಿ ಎನಗೆ ಸುಖ ದುಃಖವೊಕೃಷ್ಣನಿಂದಲಿ ಎನಗೆ ನಿತ್ತೈಶ್ವರ್ಯವು ದೇವಕೃಷ್ಣನಿಂದಲಿ ನಾನು ಮಾನ್ಯನಾಹೆಎಷ್ಟು ಮಾತುಗಳ್ಯಾಕೆ ಕೃಷ್ಣನ ವ್ಯತಿರಿಕ್ತ ಅಷ್ಟೈಶ್ವರ್ಯವು ಎನಗೆ ಇಷ್ಟವಿಲ್ಲಜಿಷ್ಣು ಸಖನೆಂಬೊ ವಾಕ್ಯ ಸಫಲ ಮಾಡಿಕೃಷ್ಣನ ತಂದು ತೋರೆ ತಡ ಮಾಡದೆವಿಷ್ಣು ನಾಮಕ ಗುರು ವಿಜಯ ವಿಠ್ಠಲರೇಯ ಸಂ-ತುಷ್ಟನಾಗುವಂತೆ ಮಾಡುವದೂ ೩
ಅಟ್ಟತಾಳ
ದಾರುಮಯವಾದ ಪ್ರತಿಮದಿ ಗುಣದೋಷಧಾರಕ ನಿಂದಲ್ಲೆ ಜನಿಸುವ ತೆರದಂತೆಸರಸಿಜ ಭವ ಮಿಕ್ಕ ಸುರರಲ್ಲಿ ತನ್ನಾಮ ತತ್ಸ್ಯ(ಚ್ಛ)ರೀರವ ಧರಿಸಿ ತತ್ಕ್ರಿಯಗಳ ಮಾಡಿಪರಮ ಸುಖ ಉಣಿಪಿ ಆವಾವ ಕಾಲದಿ”ನಿತ್ಯೋತ್ಸವ ಭವತ್ಯೇಷಾಂ ನಿತ್ಯ ಶ್ರೀ ನಿತ್ಯಶೋಜಯಃಏಷಾಂ ಹೃದಯಸ್ತು ಭಗವಾನ್ ಮಂಗಳಾಯತನಂ ಹರಿಃ’’ಈ ಪರಿಯಾದ ಸಿರಿಪತಿ ಹೃದಯದಲ್ಲಿ ನಿಲ್ಲೆಕೊರತೆ ಯಾವದು ಎನಗೆ ಮನೋರಥ ಸಿದ್ಧಿಗೆಸುರಧೇನು ಸುರವೃಕ್ಷ ಚಿಂತಾಮಣಿ ಎನಿಪಪರಿಪೂರ್ಣ ಕೃಪಾನಿಧೆ ಗುರು ವಿಜಯ ವಿಠಲನ್ನತ್ವರಿತದಿಂದಲಿ ತೋರೆ ತಡಮಾಡದೆ ದೇವ ೪
ಆದಿತಾಳ
ಅಂದಿನ ಕಾಲದಲ್ಲಿ ಅವತಾರ ಕಾರ್ಯವನ್ನುಒಂದುಳಿಸದಂತೆ ಮಾಡಿ ಮಂದಮತಿಗಳಿಗೆಕುಂದು ತೋರುವಂತೆ ಅಂದವ ತೋರಿ ನಿಜಮಂದಿರವೈದಿದ ನಂತರದಲಿ ದುಃಖಸಿಂಧುವಿನೊಳಗೆ ಮುಳುಗಿ ಮಹದೈಶ್ವರ್ಯವನ್ನುಒಂದು ತೃಣಕೆ ಬಗೆದು ಯುಗ ಪಂಚ ದಿವಸಕ್ಕೆಬಂಧುಗಳಿಂದ ಕೂಡಿ ಈ ದೇಹ ಪರಿತ್ಯಾಗಅಂದು ಮಾಡಿದದ್ದು ಪ್ರತ್ಯಕ್ಷ ಸಿದ್ಧವಿದೆಇಂದೆನ್ನ ಸೌಖ್ಯಕ್ಕೆ ಸಿರಿ ಕೃಷ್ಣನಲ್ಲದೆ ಇ-ನ್ನೊಂದು ಮತ್ತುಂಟೆ ಎಂದೆಂದಿಗಾದರಿದೆಕಂದರ್ಪ ಪಿತ ಗುರು ವಿಜಯ ವಿಠ್ಠಲನ್ನತಂದು ತೋರಿಸು ಮನದಿ ತ್ವರಿತದಿ ಕೃಪೆಯಿಂದ ೫
ಜತೆ
ಸುಖವೈದು ಎಂದು ನೀನು ಅನುಗ್ರಹ ಮಾಡಿದದಕೆಸಖನಾದ ಗುರು ವಿಜಯ ವಿಠ್ಠಲನ್ನ ತೋರಿಪದೊ ||
(ಶೋಭನ ಸಂ ಆಶ್ವೀಜ ಶುದ್ಧ ೧೦ ಗುರುವಾರ)

೧೩೨
[ಹಿಂದೆ ಪಾರ್ಥ ಜನುಮದಲ್ಲಿ ಇದ್ದ ಭಗವದ್ವಿಭೂತಿ ವರ್ಣನೆ ಶುಕ್ತಿಯಲ್ಲಿ ರಜತ ಭ್ರಾಂತಿಯಂತೆ ತೋರಿದರೂ ನಿಜವಾಗಿ ಈ ಪ್ರಮೇಯ ಮಧ್ವ ಮತಾನುಗರು ಒಪ್ಪರು. ದತ್ತ ಸ್ವಾತಂತ್ರ್ಯ ಇತ್ತ ಹರಿಯೇ, ನೀನಿತ್ತ ನಿನ್ನ ವಿಭೂತಿಯಿಂದಲೆ ಸಕಲ ಜ್ಞಾನ ಸಂಪದ, ಬಲ, ಗಾಂಡೀವವನ್ನು ಎತ್ತಿದ್ದು ನಿನ್ನ ವಿಭೂತಿ ಈಗಿಲ್ಲದ ಕಾರಣ ತೃಣ ಚಲಿಸದಾದೆ.] ಇನ್ನಾದರೂ ನೀನೆ ಕರುಣಿಸು.]
ವಿಭೂತಿ ಸುಳಾದಿ
ಧ್ರುವತಾಳ
ತತ್ರ ಶ್ರೀ ರ್ವಿಜಯೋರ್ಭೂತಿ ಎಂದ ಕಾರಣದಿಂದಶ್ರುತ್ಯಾಭಿಮಾನರಾದ ಸುರರ ತತಿಯುಚಿತ್ತಕ್ಕೆ ನಿಲುಕದ ಅಗಣಿತ ಮಹಿಮ ಎನ್ನಹತ್ತಿಲಿ ಬಿಡದಿಪ್ಪ ಕಾರಣದಿಂದ ಭಕ್ತರಗ್ರೇಸರನ ಉಕ್ತಿಯ ತೆರದಂತೆಉತ್ತಮವಾದ ಭೂತಿ೧ ಐದಿದೆನೊಈ ತೆರವಾದದ್ದು ನಿನ್ನಿಂದಲ್ಲದೆ ಎನ್ನಕೃತ್ಯವಲ್ಲವಯ್ಯಾ ನಿನ್ನ ಸಾಕ್ಷಿಶುಕ್ತಿಯಲ್ಲಿ ರಜತ ಭ್ರಾಂತಿಯು ತೋರಿದಂತೆಉಕ್ತವಾದ ಪಾದ ಪಠಣದಿಂದಸ್ವಾತಂತ್ರದಿಂದ ಎನಗೆ ಭೂತಿಯು ತೋರುತಿದೆಮತ್ರ್ಯರಾದವರ ಕಂಗಳಿಗೆ ಸತ್ವ ಪ್ರಾಚುರ್ಯವಾದ ಪೂರ್ಣ ಪ್ರಜ್ಞರ ಮತವರ್ತಿಗಳಾದವರು ಒಪ್ಪರಿದನುಮಿತ್ರನಿಂದಲ್ಲಿ ಸಹಿತನಾದ ಪಾರ್ಥನಲ್ಲಿ’ಅತ್ರ’ ವಿಭೂತಿ ಉಂಟು ದೃಢವಾಗಿಪತ್ರ್ಯಭಿಯುಕ್ತಳಾದ ಸತಿಯೇವೆ ಮಂಗಳಯುಕ್ತಳೆನಿಸಿಕೊಂಬ ಸೊಬಗಿನಂತೆ ನಿತ್ಯ ಮುಕ್ತಳಾದ ಲಕುಮಿ ಬೊಮ್ಮಾದ್ಯರೆಲ್ಲಚಿತ್ತಜ ಪಿತ ನಿನ್ನ ಸಹಿತವಾಗಿಉತ್ತಮವಾದ ಭೂತಿ ಐದಿ ಸುಖಿಸುವರುವ್ಯತ್ಯಸ್ಥ ಇದಕಿಲ್ಲ ಎಂದೆಂದಿಗೆಈ ತೆರವಾಗದಿರೆ ಪಾರ್ಥನಿಂದಲೆ ಭೂತಿಸತ್ಯವೆಂದರಿತರೆ ಕಾರ್ಯದಿಂದಪ್ರತ್ಯಕ್ಷವಾಗುವದು ಘಟಕ ಕೃತ್ಯಗಳಿಂದ ಈಗಾತ್ರವೆ ಇದಕೆ ಸಾಕ್ಷಿ ಪೇಳಲೇನುಮುಕ್ತರಾಶ್ರಯ ಗುರು ವಿಜಯ ವಿಠ್ಠಲ ನಿನ್ನಅತ್ಯಧಿಕ ಪ್ರೀತಿಯೊ ಭೂತಿ ಎನಗೆ ೧
ಮಟ್ಟತಾಳ
ನೂರು ಸಾಸಿರ ಸಂಖ್ಯ ಪರಿಮಿತವಾಗಿದ್ದಘೋರ ಭಯಂಕರದಾ ಧನು ಕೈಯಲಿ ಪಿಡಿದುಚಾರು ವಿಲಾಸದಲಿ ವ್ಯವಧಾನವ ಕೊಡದೆಕ್ರೂರ ಶತ್ರುಗಳನ್ನು ಎಡಬದಲಿ ಯೆಚಿವಧೀರನೆನಿಸಿ ನಾಮಾ ವರದಂತೆ ಪಡೆದುಸಾರೆಕರದಲ್ಲಿ ಈಗ ತೃಣ ಚಲಿಸುವ ಶಕ್ತನಾಹದಿದ್ದವನಾದೆಧಾರುಣಿಯಲಿ ಮಾನ್ಯನೆನೆಸಿ ಮೆರೆವನಾಗಿನರಾಧಮರಿಂದ ಬಲು ನಿಂದಿತನಾದೆವಾರಿಜಾಕ್ಷ ಗುರು ವಿಜಯ ವಿಠ್ಠಲರೇಯಾದೂರ ನೊಳ್ಪದರಿಂದ ಇನಿತಾಯಿತು ಎನಗೆ ೨
ತ್ರಿವಿಡಿತಾಳ
ವಿಜಯ ನಾಮವ ಪಡೆದು ಈ ಕುಂಭಿಣಿಯ ಮಧ್ಯಅಜಯ ಉಳ್ಳವನಾದೆ ಅಲ್ಪರೊಡನೆ ದ್ವಿಜ ವರೂಢಿಯ ಪಾದ ಭಕುತನೆನೆಸಿ ಈಗನಿಜ ಭಕ್ತರಿಗೆ ದೂರನಾದೆ ನಿಂದುಕುಜನ ಮರ್ದನ ಗುರು ವಿಜಯ ವಿಠ್ಠಲನೆಂಬವಿಜಯ ಎನ್ನಗಲಿದ ಕೃತ್ಯದಿಂದ ೩
ಅಟ್ಟತಾಳ
ಹತ್ತು ನಾಮಗಳು ಧಾರಿತ್ರಿಯೊಳಗೆ ಪಡೆದುಸಾರ್ಥಕನೆನೆಸಿ ಇತ್ತಲೀಗಲು ಅದಕೆನಿರರ್ಥಕ ನಾನಾದೆ ಬಲು ವಿಧದಿಂದಲ್ಲಿಶಕ್ತನಾದ ನಿನ್ನ ಯುಕ್ತನಾಗದಿರೆ ವ್ಯರ್ಥವಾಗುವವು ಶಕ್ತ್ಯಾದಿ ಗುಣಗಳುಭೃತ್ಯ ವತ್ಸಲ ಗುರು ವಿಜಯ ವಿಠ್ಠಲ ಎನ್ನಹತ್ತೀಲಿ ನೀನಿಂದು ಕೃತಕೃತ್ಯನೆನೆಪದು ೪
ಆದಿತಾಳ
ಕೊಟ್ಟಿದ್ದ ಭಾಷೆಯನ್ನು ಸತ್ಯವ ಮಾಳ್ಪನಾಗಿಕೃಷ್ಣರಾಯ ಎನ್ನ ತೊಲಗದ ಕಾರಣದಿಸೃಷ್ಟಿಯೊಳಗೆ ನಾನು ಬಲು ಧನ್ಯನೆನೆಸಿದೆಸೃಷ್ಟೇಷ್ಟದನೆ ನೀನು ಬಿಟ್ಟು ನೋಡುವ ಕಾಲ ನಿ-ಕೃಷ್ಟದೊಳಗತಿ ನಿಕೃಷ್ಟನಾದೆ ಬಲುಅಷ್ಟಮ ಗರ್ಭಜಾತ ಗುರು ವಿಜಯ ವಿಠ್ಠಲನ್ನದೃಷ್ಟಿಯೆ ಎನಗೆ ಗತಿ ಶುಭವಯ್ಯಾ ಆವ ಕಾಲಾ ೫
ಜತೆ
ನಿನ್ನ ಕರುಣದಿಂದ ಧನ್ಯನಾನೆಲೊ ದೇವಪನ್ನಂಗಚಲವಾಸ ಗುರು ವಿಜಯ ವಿಠ್ಠಲರೇಯಾ ೬
[ಪಿಂಗಳನಾಮ ಸಂವತ್ಸರ ಕಾರ್ತಿಕ ಶುದ್ಧ ೩]

೧೫೨
ಗೀತಾ ಸುಳಾದಿ
[ಸ್ತೋತ್ರ ಭಾಗ ಜೀವ ಜಡಗಳು ನಿಮಿತ್ತರೇ ಹೊರ್ತಾಗಿ ಜೀವರದ್ವಾರಾ ಸಕಲವೂ ಹರಿ ಮಾಡಿ ಮಾಡಿಸುವನೆಂಬ ಪೂರ್ವ ಜನ್ಮದ ಸಂಸ್ಮರಣ ಪೂರ್ವಕ ಸರ್ವಕರ್ತಾ ಕರಾಯಿತಾ ಹರಿ ಎಂಬ ಸ್ತೋತ್ರ.]
ಧ್ರುವತಾಳ
”ತಸ್ಮಾತ್ ತ್ವಮುತ್ತಿಷ್ಟ ಯಶೋಲಭ ಸ್ವ-ಜಿತ್ವಾ ಶತ್ರೂನ್ ಭುಕ್ಷ್ವಂ ರಾಜ್ಯಂ ಸಮೃದ್ಧಂಮಯೈ ವೈತೇ ನಿಹತಾಃ ಪೂರ್ವಮೇವನಿಮಿತ್ತ ಮಾತ್ರಂ ಭವ ಸವ್ಯ ಸಾಚಿನ್’’ಎನ್ನಿಂದ ಆದ ಕೃತ್ಯ ಅವಜ್ಞ ಮಾಡದಲೆಉತ್ತರ ಪೇಳುವದುಭಾವಾಭಿಜನ್ಯವಾದ ಅಹಂಕಾರವಾದರೂಶ್ರೀವರ ನಿನ್ನಿಂದೇ ಪುಟ್ಟಿತೆನಗೆಪಾವನ ಮಹಿಮ ಗುರು ವಿಜಯ ವಿಠ್ಠಲರೇಯಾಆವಪರಾಧ ಉಂಟು ತಿಳಿಸಿ ಪೇಳೊ ೧
ಮಟ್ಟತಾಳ
”ದ್ರೋಣಂಚ ಭೀಷ್ಮಂಚ ಜಯದ್ರಥಂಚಕರ್ಣಂ ತಥಾ ನ್ಯಾನಪಿ ಯೋಧ ವೀರಾನ್‍ಮಯಾ ಹತಾಂ ಸ್ತ್ವಂ ಜಹಿ ಮಾ ವ್ಯಥಿಷ್ಟಾಯುದ್ಧಸ್ವ ಜೇತಾಸಿ ರಣೇ ಸಪತ್ನಾನ್’’ಪ್ರಾಣನಾಥ ಗುರು ವಿಜಯ ವಿಠ್ಠಲರೇಯಾಎನಗಾವದು ಕೃತ್ಯ ಇದರೊಳಗೆ ೨
ತ್ರಿವಿಡಿತಾಳ
ವೀರನಾದವ ಒಂದು ಕರಗಸ ಕೈಯಲ್ಲಿಧರಿಸಿ ಶತ್ರುಗಳನ್ನು ಹನನ ಮಾಡೇಪರಿ ಪ್ರಾಪ್ತವಾದ ಘನತಿ ಪುರುಷಗಲ್ಲದೆ ಜಡಕರಗಸಕೆ ಕೀರ್ತಿ ಬರುವದೆಂತುತುರಗ ಬಿಗಿದ ರಥ ಗಮನಾಗಮನದಿಂದಪರಿಖ್ಯಾತಿ ವೈದಿದ್ದಾ ಕೀರ್ತಿಯನ್ನುತುರಗ ಶ್ರೇಷ್ಠಕೆ ಹೊರತು ಜಡಕೆ ಬರುವದುಂಟೆ ಈತೆರದಿ ಬರುವದಯ್ಯಾ ಎನಗೆ ಕೀರ್ತಿಹರಿ ನೀವೊಲಿದು ಎನ್ನ ನಾಮರೂಪವ ಧರಿಸಿಧರಣಿ ಭಾರವನಿಳುಹಿ ಮೆರೆದ ದೇವಾ”ಎ ಏನಂ ವೇತ್ತಿಹಂತಾರಂ ಯಶ್ಚೈನಂ ಮನ್ಯತೇ ಹತಂಉಭೌ ತೌ ನ ವಿಜಾನೀತೋ ನಾಯಂ ಹಂತಿನಹನ್ಯತೇ’’ಕರುಣಾನಿಧಿಯೇ ಗುರು ವಿಜಯ ವಿಠ್ಠಲರೇಯಾಹರಣ ಮಾಡುವ ಕರ್ತು ನೀನೆ ದೇವಾ ೩
ಅಟ್ಟತಾಳ
”ನ ಜಾಯತೇ ಮ್ರೀಯತೇ ವಾ ಕದಾಚಿನ್‍ನಾಯಂ ಭೂತ್ವಾ ಭವಿತಾವಾ ನ ಭೂಯಃಅಜೋ ನಿತ್ಯಃ ಶಾಶ್ವತೋ ಅಯಂ ಪುರಾಣೋನ ಹನ್ಯತೇ ಹನ್ಯ ಮಾನೇ ಶರೀರೇ’’ವಿಜಯ ಸಾರಥಿ ಗುರು ವಿಜಯ ವಿಠ್ಠಲರೇಯಾಸೋಜಿಗವೇ ಸರಿ ಎನ್ನ ಅಪರಾಧವ ೪
ಆದಿತಾಳ
”ಲೇಲೀಹ್ಯಸೇ ಗ್ರಸಮಾನಃ ಸಮಂ ತಾ-ಲೋಕಾನ್ ಸಮಗ್ರಾನ್ ವದನೈಜ್ರ್ವಲದ್ಭಿಃತೇಜೋ ಭಿರಾ ಪೂರ್ಯ ಜಗತ್ ಸಮಗ್ರಂಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ’’ಬಾಲಾರ್ಕ ಕೋಟಿ ಪ್ರಭ ಗುರು ವಿಜಯ ವಿಠ್ಠಲರೇಯಾಆಲೋಚಿಸಿದರೆ ಎನಗಿಲ್ಲಪರಾಧವಾ ೫
ಜತೆ
ಬ್ರಹ್ಮಸ್ತು ಬ್ರಹ್ಮ ನಾಮಾ ಸೌ ರುದ್ರಸ್ತು ರುದ್ರನಾಮಕಃಎಮ್ಮ ನಾಮವು ನೀನೆ ಗುರು ವಿಜಯ ವಿಠ್ಠಲರೇಯಾ ||

೧೫೪
[ಎನ್ನ ಪಕ್ಷವೊಹಿಸಿ ಹಿಂದಿನ ಕಾಲದಲ್ಲಿ ಅಭಿಮುಖನಾಗಿ ಕೃಪೆ ಮಾಡಿದ್ದಕ್ಕೆ ಸಕಲ ಸುರರು ಮನ್ನಿಸಿದರು. ಈಗ ನೀನು ನಿರ್ದಯನಾಗಿ ದೃಷ್ಟಿಯಲಿ ಸಹ ನೋಡದ್ದಕ್ಕಾಗಿ ಮಹಾ ಅಪರಾಧಿ ಎನಿಸಿ ದುರುಳರಿಗೆ ಒಪ್ಪಿಸುವದು ನ್ಯಾಯವಲ್ಲ. ನಿನ್ನ ಕಾಣದೆ ಮಹಾ ದುಃಖ ಸಾಗರದಿ ಮುಳುಗಿಪ್ಪನ ಮೇಲೆ ಕರುಣಿಸು, ಎಷ್ಟು ಅಪರಾಧ ಮಾಡಿದ್ದರೂ ಕ್ಷಮಿಸಿ ಪೊರೆಯೋ ಕಷ್ಣ ನಿನಗೆ ತಪ್ಪಿದ್ದಲ್ಲ ಎಂದು ಪ್ರಾರ್ಥನಾ.]
ಧ್ರುವತಾಳ
ದೃಷ್ಟಿಲಿ ನೋಡದಂಥ ಅಪರಾಧವೆನ್ನ ಕಡೆಎಷ್ಟೆಷ್ಟು ನೋಡಿದಯ್ಯಾ ಕೃಷ್ಣರಾಯಾದೃಷ್ಟಾಂತದಿಂದ ನೋಡು ಅವನಿಪತಿಯು ನರರಕಷ್ಟ ಬಡಿಸುವನಾಗೆ ಅಪರಾಧವಗಟ್ಟ್ಯಾಗಿ ಉಚ್ಚರಿಸೆ ಪ್ರಾಂತ್ಯ ಭಾಗದಲಿ ಉ-ತ್ರ‍ಕಷ್ಟವಾದ ಬಾಧಿ ಬಡಿಸುವನುದೃಷ್ಟಿಗೆ ವಿಲಕ್ಷಣವಾಗಿದ್ದ ಅಪರಾಧಮುಟ್ಟಿ ಬಾಧಿಪದು ಪೇಳಲೇನುದೃಷ್ಟಿಗೋಚರವಾದ ಅಪರಾಧ ಎನ್ನಿಂದಎಷ್ಟು ಮಾತ್ರವಿಲ್ಲ ಎಣಿಸೆ ಗುಣಿಸೆಸೃಷ್ಟೇಷ್ಟ ನಿನ್ನ ಆಜ್ಞ ಪಾಲಿಸುವದು ಅ-ನಿಷ್ಟವಾಗುತಿದೆ ಬ್ರಹ್ಮೇಶಾದಿಶಿಷ್ಟರೆಲ್ಲರು ಪರಮ ಭಕುತಿಯಿಂದಲೆ ಇದನೆನಿಷ್ಟಿಯಿಂದಲಿ ಮಾಳ್ಪರ್ಯಾತಕ್ಕಯ್ಯಾಶಿಷ್ಟ ಕರ್ಮದಿಂದ ನಿಷ್ಟವಾಗಿ ಶಿಷ್ಟ ಕರ್ಮಕ್ಕೆ ಪರಮ ಶಿಷ್ಟತ್ವವೆನಲ್ಯಾಕೆಶಿಷ್ಟಾಚಾರದಿಂದ ಅನಿಷ್ಟವಾಗುತಿರೆದುಷ್ಟ ಕರ್ಮ ತೀರದ ಶಿಷ್ಟವಾಗೇಶಿಷ್ಟ ಕರ್ಮಕೆ ಪರಮ ಶ್ರೇಷ್ಠತ್ವ ಪೇಳ್ವದ್ಯಾಕೆದುಷ್ಟ ಪ್ರವರ್ತಿಗಳಿಗೆ ಶಿಕ್ಷವ್ಯಾಕೆಇಷ್ಟು ಸಹಜವಾಗೆ ಶ್ರುತಿಗೆ ಪ್ರಾಮಾಣ್ಯವ್ಯಾಕೆಎಷ್ಟು ಬಿನ್ನೈಸೆ ನೀನು ಸುಮ್ಮಗಿರೆ ಕಾಲಹೃಷ್ಟಾ ಪುಷ್ಟಾನೆ ನಿನ್ನ ಕರುಣಿ ಎಂಬುವದೇಕೆಕೊಟ್ಟ ಮಾತನು ತಪ್ಪದೆಂಬೊದೇಕೆದುಷ್ಟವಾದ (ನಿಶ್ಶೇಷ) ಕರ್ಮ ಪುಣ್ಯ ಲೇಶವೆಂದುಇಷ್ಟು ಮಾತ್ರಕೆ ಎನಗೆ ಪೇಳಿದೇಕೆವೃಷ್ಣಿ ಕುಲಾಬ್ಧಿಚಂದ್ರ ಗುರು ವಿಜಯ ವಿಠ್ಠಲ ನಿನ್ನಮುಟ್ಟಿ ಭಜಿಸುವರಿಗೆ ಅಘವಿಲ್ಲದೆಂಬೊದ್ಯಾಕೆ ೧
ಮಟ್ಟತಾಳ
ಆರಿಗೆ ಪೇಳಲಿ (ಕೇಳಲಿ) ಎನ್ನ ವೃತ್ತಾಂತವನುಕಾರುಣ್ಯದಲಿ ಪೊರೆವ ಘನ ಮಹಿಮನೆ ನೀನುಕಾರಣವಿಲ್ಲದಲೇ ಮುನಿದು ನೋಡುವದಕ್ಕೆಶ್ರೀರಮಣ ನಿನಗೆ ಪೇಳಿ ಕೇಳುವರಿಲ್ಲಧಾರುಣಿ ಮಧ್ಯದಲ್ಲಿ ಇರುವ ದೃಷ್ಟಾಂತರದಿನರಾಧಿಪರಿಂದ ಜನಪತಿಯಿಂದಲಿ(ನರಾಧಿಪ ಮಾರೆ ಗರ್ವರಾಗಿ)ಕಾರುಣ್ಯ ಮಾಡಿ ಪರಮಾನುರಾಗದಲ್ಲಿನಾರಾಯಣ ನಿನ್ನ ಕರ್ತೃತ್ವ ಮಹಿಮಿಗೆಸರಿಯಿಲ್ಲ ಸರಿಯಿಲ್ಲ ಅತ್ಯದ್ಭುತವಯ್ಯಾಮುರಹರನೆ ನೀನು ಅಭಿಮುಖನಾಗಿರಲುನೀರಧಿ ಪೋಲ್ವ ಕೃಪೆ ಮಾಡುವನಾಗಿದೂರ ತೊಲಗದಂತೆ ಇರುತಿಪ್ಪರು ಅಂದುನೀರಜಾಕ್ಷನೆ ನೀನೆ ನಿರ್ದಯ ಮಾಡಿರಲುನಿರೀಕ್ಷಿಸಿ ನೋಡರು ಸುರರೆನ್ನಯ ದಿಕ್ಕುಗಾರು ಮಾಡದಲೆ ಬೇಗ ಪರಿಪಾಲಿಸುಯೆಂದುಬಾರಿ ಬಾರಿಗೆ ನುಡಿದು ಭ್ರಮಗೊಂಡಿತು ಮನಸು ಅ-ಪಾರ ದಯಾನಿಧೆ ನೀ ಸುಮ್ಮನಿರಲುಆರನ ಕಾಣೆನೊ ಪ್ರತಿಬಂಧ ತೊಲಗಿಸಲುಭಾರಕರ್ತನಾದ ಗುರು ವಿಜಯ ವಿಠ್ಠಲರೇಯಾದಾರಿದ್ರ ಭಂಜನನೆ ಸನ್ಮುಖನಾಗುವದು ೨
ತ್ರಿವಿಡಿತಾಳ
ಎನ್ನ ಪಕ್ಷವು ನೀನೆ ಆವಾವ ಕಾಲದಲಿಮನ್ನಾದಿ ಗ್ರಹಿಸುವದು ಮರಿಯದಲೇಉನ್ನತಾಗ್ರಣಿಯೆಂದು ಸಹ ಯಾಚಿಸ ಬರಲುಘನ್ನ ಯುಕುತಿಯಿಂದ (ಯುಗಳಾಪೇಕ್ಷ) ಯುಗಳ ಪಕ್ಷನ್ಯಾಮಿಸಿ ನಿಮ್ಮ ನಿಮ್ಮ ವಿಶ್ವಾಸದಂತೆ(ನಿಮ್ಮ ನಿಮ್ಮ ಈಪ್ಸಿಸಿದಂತೆ)ಸನ್ಮುದದಲಿ ಕೊಂಡು ಪೋಗಿರೆನಲುಘನ್ನ ಕೃಪೆಯ ಪಡೆವ ತನ್ನಿಮಿತ್ಯದಿನಿನ್ನ ಅನಂತ ಜನ್ಮದಿ ಅರ್ಚಿಸಿದಪುಣ್ಯದ ಫಲದಿಂದ ನೀ ಎನ್ನ ಪಕ್ಷವೆಂದುಸನ್ನುತಿಸಿ ಬೇಡಿಕೊಂಡ ಕಾರಣದಿಂದ ನೀ(ಎನ್ನ ಪಕ್ಷವೆಂದು ಸನ್ನುತಿಸಿ ಬೇಡಿಕೊಂಡ ಕಾರಣದಿ)ಎನ್ನ ಪಕ್ಷವು ನೀನೆ ಆವಾವ ಕಾಲದಲ್ಲಿಮನ್ನದಿ ಮರೆವರೆ ಮಹಿಮಾನಂತಾನಿನ್ನಾಜ್ಞಾದವನಾಗಿ ರಚಿಸಿದ ಕೃತ್ಯಗಳಿಗೆಪುಣ್ಯ ಪಾಪಗಳೆನಗೆ ಸ್ಪರಶವುಂಟೆಎನ್ನ ಪಕ್ಷವ ವೊಹಿಸಿ ಪರಪಕ್ಷದವರಿಗೆಇನ್ನು ಒಪ್ಪಿಸದಿರೊ ಚನ್ನಿಗನೇಜನ್ಮರಹಿತ ಗುರು ವಿಜಯ ವಿಠ್ಠಲರೇಯ ನೀನುಸನ್ಮುಖನಾಗಿ ಎನ್ನ ಶ್ರಮ ಓಡಿಸೋ ೩
ಅಟ್ಟತಾಳ
ಪರಮಾಪ್ತ ನೀನಾಗಿ (ಪರಿ ಪರಿ) ಪಾರಿಶ್ರಮದಿಂದಒರಲಿ ಬಳಲುತಿರೆ ಆರಿಗಾರರಂತೆದೂರ ನೋಡುತಲಿದ್ದು ನಗುವರೆ ಸಿರಿ ಕೃಷ್ಣಸರಿಯಿಲ್ಲ ಸರಿಯಿಲ್ಲ ಎನ್ನಯ ದುಃಖಕ್ಕೆದೂರು ಕೇಳುವರಿಲ್ಲ ನಿನ್ನ ಹೊರತಾಗಿಸಿರಿ ರಮಣನೆ ಗುರು ವಿಜಯ ವಿಠ್ಠಲರೇಯಶರಣ ರಕ್ಷಕನೆಂಬೊ ಬಿರಿದು ನಿನ್ನದಯ್ಯಾ ೪
ಆದಿತಾಳ
ಸದಕಾಲ ಅರಸಿನ ಆಜ್ಞವ ಮಾಳ್ಪನಾಗಿಕದಾಚಿತ್ಕಾಲದಲ್ಲಿ ಕಿಂಚಿತ್ ಅಪರಾಧಉದಯಿಸಿದರೆ ಶಿಕ್ಷೆ ಮಾಡುವನೇನೋ ಆವಮಧುಸೂದನ ನಿನ್ನ ಆಳಾಗಿ ಅನುದಿನಪದಗಳ ಭಜಿಸುವರ್ಗೆ ಕಿಂಕರನಾಗಿ ನಿನ್ನಒದಗಿ ಬೇಡಿಕೊಂಡು ಜೀವನ್ನ ಮಾಡುವನುಆದ್ಯಂತವಿಲ್ಲದಿಪ್ಪ ಬಂಧಾನ ಮೊಸಗಿಸಿಅಧಿಕಧಿಕವಾದ ದುಃಖ ನೋಡಿಪದೋಇದು ಧರ್ಮದ ಪದ್ಧತಿಯೇ ಯದುಕುಲಾಬ್ಧಿ ಚಂದ್ರಉದಧಿಶಯನ ಗುರು ವಿಜಯ ವಿಠ್ಠಲರೇಯಾಉದಯಾರ್ಕನಂತೆ ಎನ್ನ ಮನದಲ್ಲಿ ನಿಲ್ಲುವದು ೫
ಜತೆ
ಎಷ್ಟಪರಾಧಿಯಾಗೆ ಕೃಷ್ಣ ತಪ್ಪದೋ ನಿನಗೆಇಷ್ಟು ದೈವವೆ ಗುರು ವಿಜಯ ವಿಠ್ಠಲರೇಯಾ ||

೧೨೩
ಧ್ರುವತಾಳ
ನಿನ್ನ ಕಾಂಬುವದೆನಗೆ ನಿಖಿಳ ಸೌಭಾಗ್ಯ ಪ್ರಾಪ್ತಿನಿನ್ನ ಕಾಂಬುವದೆನಗೆ ನಿತ್ಯಾನಂದನಿನ್ನ ಕಾಂಬುವದೆನಗೆ ಶುಭ ದಿನವೆನಿಪದುನಿನ್ನ ಕಾಂಬುವದೆ ಪರಮ ಮಂಗಳವೋನಿನ್ನ ಕಾಂಬುವದೆ ಘನ್ನ ಯಶಸ್ಸು ಎನಗೆನಿನ್ನ ಕಾಂಬುವದೆ ನಿತ್ಯೋತ್ಸವನಿನ್ನ ಕಾಂಬುವದೆ ದೇಹ ಪಟುತ್ವ ಎನಗೆನಿನ್ನ ಕಾಂಬುವದೆ ನಿಶ್ಚಿಂತವೋನಿನ್ನ ಕಾಂಬುವದೆ ಪರಮ ಪವಿತ್ರ ಎನಗೆನಿನ್ನ ಕಾಂಬುವದೆ ಆರೋಗ್ಯವೋನಿನ್ನ ಕಾಂಬುವದೆ ಗಂಗಾದಿ ಸ್ನಾನ ಎನಗೆನಿನ್ನ ಕಂಡದ್ದನೇಕ ಕೃತು ವಿಶೇಷ ನಿನ್ನ ಕಾಂಬುವದೆ ಷೋಡಶ ಮಹದಾನ ನಿನ್ನ ಕಾಂಬುವದೆ ಸಕಲ ವ್ರತವೋನಿನ್ನ ಕಾಂಬುವದೆ ಶೌರ್ಯ ಧೈರ್ಯನಿನ್ನ ಕಾಂಬುವದೆ ಇಹಪರ ಸೌಖ್ಯವೆಲ್ಲನಿನ್ನ ಕಂಡದ್ದೆ ಮುಕ್ತಿ ನಿಜವಿದುಅನ್ಯಥವಿದಕಿಲ್ಲ ನಿನ್ನ ಪಾದವೆ ಸಾಕ್ಷಿಪನ್ನಗಶಯನ ಗುರು ವಿಜಯ ವಿಠ್ಠಲರೇಯನಿನ್ನ ಕಾಂಬುವದೆ ಇಷ್ಟ ಎನಗೆ ೧
ಮಟ್ಟತಾಳ
ನಿನ್ನ ಕಾಣದ ದಿನ ಅಶುಭ ದುರ್ದಿನನಿನ್ನ ಕಾಣದ ಜ್ಞಾನ ಅಡವಿಯ ರೋದನ ನಿನ್ನ ಕಾಣದ ಭಕ್ತಿ ರೋಗಿಷ್ಟನ ಶಕುತಿನಿನ್ನ ಕಾಣದ ಸುಖ ತ್ರೈತಾಪ೧ದ ದುಃಖನಿನ್ನ ಕಾಣದ ಸ್ನಾನ ಬಧಿರ ಕೇಳುವ ಗಾನನಿನ್ನ ಕಾಣದ ಜಪ ಚಂಡಾರ್ಕನ ತಾಪನಿನ್ನ ಕಾಣದ ತಪ ನಿರ್ಗತ ಪ್ರತಾಪನಿನ್ನ ಕಾಣದ ಆಚಾರ ಬಾಧಿಪ ಗ್ರಹಚಾರನಿನ್ನ ಕಾಣದ ನರ ಕ್ರಿಮಿ ಕೀಟ ವಾನರನಿನ್ನ ಕಾಣದ ಕರ್ಮ ಅರಿಯದಿಪ್ಪ ಮರ್ಮನಿನ್ನ ಕಾಣದ ಪುಣ್ಯ ಗತವಾದ ಧಾನ್ಯನಿನ್ನ ಕಾಣದ ಯಾತ್ರಾ ಅಂಧಕನ ನೇತ್ರಾನಿನ್ನ ಕಾಣದ ಪಾತ್ರಾ ಕಾಣದಿಪ್ಪ ನೇತ್ರಾನಿನ್ನ ಕಾಣದೆ ಬಂದೆ ಪರಿಪರಿ ಸಾಧನ ಅನ್ನಂತ ಮಾಡಿದರು ಅವರಿಗಿಲ್ಲ ಸುಖ ಸ್ವರುಶಚಿನ್ಮಯ ಮೂರುತಿ ಗುರು ವಿಜಯ ವಿಠ್ಠಲ ರೇಯನಿನ್ನ ಕಾಂಬುವದೆಲ್ಲ ಕರ್ಮಕ್ಕೆ ಸಾಧಕ ೨
ತ್ರಿವಿಡಿ ತಾಳ
ನಿನ್ನ ಕಂಡವ ಸಕಲ ಸಾಧನ ಮಾಡಿದವನಿನ್ನ ಕಂಡವನು ನಿರ್ಮಲನುನಿನ್ನ ಕಂಡವಗುಂಟೆ ಕಲಿಕೃತ ಅಘವನ್ನುನಿನ್ನ ಕಂಡವನೆ ಜೀವನ್ಮುಕ್ತಾನಿನ್ನ ಕಂಡವರಲ್ಲಿ ಸಕಲ ಸುರರು ಉಂಟುನಿನ್ನ ಕಾಂಬುವ ದೇಹ ಸುಕ್ಷೇತ್ರವೊನಿನ್ನ ಕಾಂಬುವ ತನುವು ಪಾವನವೆನಿಪುದುನಿನ್ನ ಕಾಂಬುವದೆ ವಿಮಲ ಕೀರ್ತಿನಿನ್ನ ಕಾಂಬುವ ನರಗೆ ನರಕದ ಭಯ ಉಂಟೆ ?ನಿನ್ನ ಕಾಂಬುವದೆ ಮಾನ್ಯತೆಯೋಉನ್ನತ ಮಹಿಮ ಗುರು ವಿಜಯ ವಿಠ್ಠಲ ರೇಯನಿನ್ನ ಕಾಂಬುವದೇ ನಿಖಿಳ ಸುಖವೋ ೩
ಅಟ್ಟತಾಳ
ನಿನ್ನನು ಕಾಣದೆ ಧನ್ಯನಾಗೆನೆಂಬೋದುಖಿನ್ನ ಮಾತಲ್ಲದೆ ಸಮ್ಮತವಲ್ಲವುಉನ್ನತ ಗುಣ ನಾರಿ ಪತಿಯುಕ್ತಳಾಗಲುಸನ್ಮಾನ್ಯಳೆನಿಪಳು ಸಂತತ ಸುಖದಿ ಅನಂತ ರೂಪನ್ನ ಕಾಂಬುವ ಜನರೆಲ್ಲಚಿನ್ಮಯನೆನಿಸಿ ಶುಭದಿ ಶೋಭಿಸುವರುಪನ್ನಗಾರಿ ವಾಹನ ಗುರು ವಿಜಯ ವಿಠ್ಠಲರೇಯನಿನ್ನಿಂದ ಭಕುತ ವಿಚ್ಛಿನ್ನ ದಾರಿದ್ರನೋ ೪
ಆದಿತಾಳ
ನಿನ್ನ ಕಾಂಬುವದೆ ಜನ್ಮಕ್ಕೆ ಸಫಲವೋನಿನ್ನ ಕಾಂಬುವಗೆ ಪುನರಪಿ ಜನ್ಮವಿಲ್ಲಅನಾದಿ ಪ್ರಾರಬ್ಧ ಸಂಬಂಧ ನಿಮಿತ್ಯಜನ್ಮವು ಒದಗಲು ಅವಗಿಲ್ಲ ಲೇಪವುನಿನ್ನ ಕಾಂಬುವನ್ನ ಸುರರೆಲ್ಲ ಮನ್ನಿಪರುನಿನ್ನ ಕಾಂಬುವದೆ ಷಡುರಸ ಭೋಜನಉನ್ನತ ಭಕ್ತ೧ನಿಗೆ ಅನ್ನವನೀವೆನೆನಿಪಅನ್ನಮಯ ದೇವ ಗುರು ವಿಜಯ ವಿಠ್ಠಲರೇಯನಿನ್ನ ಕಾಂಬುವಂತೆ ಅಭಿಮುಖನಾಗುವದು ೫
ಜತೆ
ನಿನ್ನ ಕಾಂಬುವದೆ ನಿತ್ಯೈಶ್ವರ್ಯವೊ ದೇವಾ ಪ್ರ-ಸನ್ನನಾಗುವುದು ಗುರು ವಿಜಯ ವಿಠ್ಠಲರೇಯ ||

೧೨೨
ಧ್ರುವತಾಳ
ಪರಮ ಬಲವಂತನೆಂಬೊ ಗರ್ವ ತಾಳಿದದಕೆನಿರುಪಮ ನಿರ್ಬಲನಾದೆನಿಂದುಸಿರಿ ಅಜ ಭವರಿಗೆ ಸಿಲುಕದ ಮಹಿಮನ್ನಕರವಶನಾದ ಆಪ್ತನಂಬೊ ಮದದಿಸರಿಗಾಣೆನೆನುತಲಿ ಸಥೆ ಮಾಡಿದವರೆನ್ನುಹರಿ ನಿನ್ನ ಕುರುಹು ಒಮ್ಮೆ ಜನುಮದೊಳಗೆ ಅರಸಿ ನೋಡಿದರೆ ಕಾಣದಿದ್ದವನಾದೆತರಣೀಂದು ಕೋಟಿ ತೇಜ ಮಹಾರಾಜಾನಿರುಪಮ ಸೌಭಾಗ್ಯವಂತನೆಂದಾದಕೆದಾರಿದ್ರ್ಯ ದೋಷದಿಂದ ಅಧಿಕನಾದೆ ನರರಿಂದ ವಂದ್ಯನೆಂದು ಮನದಿ ಹಗ್ಗಿದುದಕೆಧರೆಯೊಳು ತೃಣ ಸಮನಾಗದಾದೆವೀರರಾದವರು ಎದುರು ನಿಲ್ಲರೆಂಬೊ ನಿ-ರ್ಭಾರವಾದ ಅಹಂಕಾರ ಮಾಡಿದುದಕೆ ಹೊರಗೆ ಒಳಗೆ ದುರುಳ ಸಂಗದೊಳಗೆ ಸಿಲ್ಕಿಪರಿಶ್ರಮದಿಂದ ಬಳಲಿದೆನೋಕರುಣ ಮಾಡಿದ ಬ್ರಹ್ಮಾದಿ ಸುರರೆಲ್ಲಪರಿಪೂರ್ಣರೆನಿಸುವರು ಪದವಿಯಿಂದ ಸರಿದು ನೋಡುವಾಗ ಸ್ವಪಚರಿಂದಧಿಕವಾದವರವಾದ ಕಷ್ಟತ್ವ ಐದುವರೊಪರಮೇಷ್ಠಿ ನಾಮರೂಪ ಗುರು ವಿಜಯ ವಿಠ್ಠಲರೇಯ ಸರಿಗಾಣೆನಯ್ಯಾ ನಿನ್ನ ಶಾಸನಕ್ಕೆ ೧
ಮಟ್ಟತಾಳ
ನಿನ್ನ ಕರುಣವೆ ಜ್ಞಾನ ನಿನ್ನ ಕರುಣವೆ ಭಕುತಿ ನಿನ್ನ ಕರುಣ ವಿರಕುತಿ ನಿನ್ನ ಕರುಣವೆ ಧರ್ಮನಿನ್ನ ಕರುಣವೆ ಧೈರ್ಯ ನಿನ್ನ ಕರುಣವೆ ಶೌರ್ಯನಿನ್ನ ಕರುಣವೆ ಶುಭ ನಿನ್ನ ಕರುಣವೆ ಲಾಭ ನಿನ್ನ ಕರುಣವೆ ಸಕಲ ಸಂಪದವೆನಿಪದು ಪನ್ನಗತಲ್ಪ ಗುರು ವಿಜಯ ವಿಠ್ಠಲರೇಯನಿನ್ನ ಕರುಣವ ತಪ್ಪಲಿದರೊಳಗೊಂದಿಲ್ಲ ೨
ತ್ರಿವಿಡಿತಾಳ
ನಿನ್ನ ಕರುಣವೆ ನಿಖಿಳ ನಿಧಿಯೊ ಎನಗೆ ದೇವನಿನ್ನ ಕರುಣವೆ ಸಕಲ ಸಂಭ್ರಮಮೋನಿನ್ನ ಕರುಣವೆ ನಿರುಪಮ ಜಯವೆನಗೆನಿನ್ನ ಕರುಣವೆ ಸಾರ ಸುಖವೊ ದೇವನಿನ್ನ ಕರುಣವೆ ಈಹ ಸೌಖ್ಯವೆನಿಪದು ನಿನ್ನ ಕರುಣಕೆ ಜನರು ಮನ್ನಿಪರೊಪನ್ನಗಾರಿ ವಾಹ ಗುರು ವಿಜಯ ವಿಠ್ಠಲರೇಯ ನಿನ್ನ ಕರುಣವೆ ತೊಲಗಲೆಂತು ಸುಖವೊ ೩
ಅಟ್ಟತಾಳ
ನಿನ್ನ ಕರುಣವೆ ಸಾಧನವೆನಿಪುದುನಿನ್ನ ಕರುಣದಿಂದ ಸುರರು ಮನ್ನಿಸುವರುನಿನ್ನ ಕರುಣದಿಂದ ನರಕ ಯಾತನೆ ದೂರನಿನ್ನ ಕರುಣವಿದ್ದ ಸ್ಥಳದಲ್ಲಿ ಯಮನಾಳುಮನ್ನಾದಿ ನಮಿಪರು ತಿರುಗಿ ನೋಡದಲೆನಿನ್ನ ಕರುಣವೆ ಅಪುನರಾವರ್ತಿಚಿನ್ಮಯ ಲೋಕವು ತಂದೀವದೆಂದಿಗೂನಿನ್ನ ಕರುಣಕ್ಕೆ ನೀನೆ ಕ್ಷಣವಗಲದೆ ಹೃದಯವನ್ನಜಾಂಡ ಮಧ್ಯದಿ ವಿರುತ ಪೊಳೆವ ದೇವಚನ್ನ ಪ್ರಸನ್ನ ಶ್ರೀ ಗುರು ವಿಜಯ ವಿಠ್ಠಲರೇಯನಿನ್ನ ಕರುಣವ ಜರಿಯೇ ವ್ಯತಿರೇಕವೆಲ್ಲವೂ ೪
ಆದಿತಾಳ
ಇನಿತು ತಿಳಿಯದಲೆ ಭವದೊಳಗೆ ಬಂದುಬನ್ನ ಬಟ್ಟೆನು ನಾನು ಬಲು ವಿಧದಿಂದಲಿಅನ್ನಾದಿ ಪ್ರಾರಬ್ಧ ಇದಕೆ ಸೂಚನೆ ಮಾಡಿನಿನ್ನ ಇಚ್ಛೆಯಲಿಂದ ಕಲಿಕೃತ ಕಲ್ಮಷಾದಿಜನ್ನಿತ ಮಮಕಾರ ಬಂದೊದಗಿದ ಕಾರಣಕೆನಿನ್ನ ಕರುಣವಿಲ್ಲದಲೆ ಪೂರ್ವೋಕ್ತವಾದ ಗುಣಕ ಭಿನ್ನವಾದ ವ್ಯತಿರೇಕ ಅನುಭವ ಮಾಡಿಸಿದಿಅನಂತ ಜನ್ಮವಾದರು ಬರಲೇಕೆನಿನ್ನ ಕರುಣ ಅಗಲದಿರಲಿ ಇನ್ನೆಂದಿಗಾದರು ಉನ್ನತ ಮಹಿಮ ಗುರು ವಿಜಯ ವಿಠ್ಠಲರೇಯಸನ್ನಾಗುವದು ಅವ್ಯವಧಾನದಿಂದ ೫
ಜತೆ
ನಿನ್ನ ಕರುಣವೆ ಸಕಲ ಸೌಭಾಗ್ಯ ಪದ ಪ್ರಾಪ್ತಿಭಿನ್ನ ಜೀವರ ದಾತಾ ಗುರು ವಿಜಯ ವಿಠ್ಠಲರೇಯ ೬

೧೩೫
[ಶ್ರೀ ವಾಯುದೇವರ ಅನುಗ್ರಹವೆ ಮುಖ್ಯ ತಾರಕ. ಹಿಂದೆ ಅರ್ಜುನಾವತಾರದಲ್ಲಿ ವಾಯುವೇ ಭೀಮಸೇನನು ಜೇಷ್ಠನಾಗಿ ಅವತರಿಸಿ ಅನೇಕ ಕಾಲದಲ್ಲಿ ರಕ್ಷಿಸಿದ್ದು ಆಶ್ಚರ್ಯ ವಲ್ಲ. ಈಗ ದುರುಳ ಕಲಿ ಬಾಧೆಯಿಂದಾದ ಅಜ್ಞಾನಾಂಧಕಾರವನ್ನು ಪರಿಹರಿಸಿ ರಕ್ಷಿಸು, ಹೃದಯ ಧ್ವಜಕೇತನದಲ್ಲಿ ಪೊಳೆದು ಹರಿಯನ್ನು ತೋರಲು ಪ್ರಾರ್ಥನಾ.]
ಧ್ರುವತಾಳ
ಪಿತೃ ಸಮಾನ ಜೇಷ್ಠನೆಂತೆಂಬ ವಿಧದಿಂದಪಿತೃ ನಿಷ್ಠವಾದ ಕರುಣದಿಂದಅತಿಶಯವಾಗಿ ಎನ್ನ ಪಾಲನ ಮಾಡದಿರೇಪಿತೃ ಸಮಾನ ಜೇಷ್ಠನೆಂಬೋಕ್ತಿಗೆ ವ್ಯಾ-ಹತಿ ಬಾರದೇನೊ ಶುಭಗಾತ್ರ ಜಗದ ಸೂತ್ರಮತಿ ಪ್ರದಾತೃನೆನಿಪ ಪವನರಾಯಾಈ ತೆರವಾದ ಘನತಿ ವೊಹಿಸದಿರಲು ಇರಲಿಯತಾರ್ಥವಾಗಿ ಎನಗೆ ಭ್ರಾತೃನೆನೆಸಿಭಾತೃ ನಿಷ್ಠವಾದ ಕೃಪೆಯ ಮಾಡದೆ ಎನ್ನಪ್ರತಿದಿನದಲ್ಲಿ ಬಿಡದೆ ಬಳಲಿಸಲುಭ್ರಾತೃನೆಂಬೋಕ್ತಿಗೆ ವ್ಯಾಹತಿ ಬಾರದೇನೊ ಧರ್ಮ ಪ-ದ್ಧತಿಯು ತಪ್ಪದಂತೆ ನಡೆವ ಸುಜನಪ್ರತಿತಿಗೆ೧ ಪ್ರಿಯನಾದ ಗುರು ವಿಜಯ ವಿಠ್ಠಲನ್ನಭಕ್ತರ ಶಿರೋಮಣಿ ದಯದ ಖಣಿ ೧
ಮಟ್ಟತಾಳ
ಗುರು ನಿಷ್ಠವಾದ ಧರ್ಮವ ನಿನ್ನಲ್ಲೀಪರಿನಿಷ್ಠೆಯ ನೋಡಿ ಸುರರೆಲ್ಲರು ನಿನ್ನಗುರು ನೀನೆಂದು ಭಜಿಸಿ ಪರಿಚಾರಕರಾಗಿಹರುಪರಮ ಕರುಣಿ ನೀನು (ದ್ವೌ) ದ್ವರನಾಪೇಕ್ಷಗುರುವೆನಿಸಿ ಎನಗೆ ಹಿತ ಮಾಡದಿರಲುಗುರುವೆಂಬೋಕ್ತಿಗೆ ಸಾರ್ಥಕವೆಂತಹುದೊಪರಿಪೂರ್ಣ ಕೃಪನಿಧೆ ಗುರು ವಿಜಯ ವಿಠ್ಠಲನ್ನಕರುಣ ಪಡೆವದೆಂತೊ ನೀ ಇನಿತು ನೋಡೆ ೨
ತ್ರಿವಿಡಿತಾಳ
ಪ್ರತ್ಯಕ್ಷವಾದ ಮೃತ್ಯು ಮನೆಯಿಂದ ಪಾಲಿಸಿದಕೀರ್ತಿ ಆಧಿಕ್ಯವಲ್ಲ ಗುಣನಿಧಿಯೇಮೃತ್ಯು ರೂಪವಾದ ಸಂಸಾರವೆಂತೆಂಬ ಕತ್ತಲೆ ಮನೆಯಿಂದ ರಕ್ಷಿಸಲುಉತ್ತಮೋತ್ತಮವಾದ ಖ್ಯಾತಿ ನಿನಗೆವುಂಟುಸತ್ವ ಪ್ರಮಾಣ್ಯವಾದ ಜೀವೋತ್ತಮಪ್ರತ್ಯಕ್ಷವಾದ ರಾತ್ರಿ ಚರನಿಂದ ವುಳಿಸಿದ್ದುಅತ್ಯಾಶ್ರ್ಚವಲ್ಲ ಅಸುರಾರಿಯೇ ಅ-ನುತ್ತಮನಾದ ಕಲಿಯಿಂದ ಬಾಧಿತನಾಗಿ ನಿತ್ಯ ಪ್ರವಾಹರೂಪವಾದ ದುಃಖಹೊತ್ತು ಹೊತ್ತಿಗೆ ಉಂಟೆ ಅವ್ಯವಧಾನದಿಂದಈ ತೆರವಾದ ಪ್ರಬಲ ದೋಷ ಎನ್ನಿಂದ ದೈತ್ಯನಿಂದಲಿ ಎನ್ನ ರಕ್ಷಿಸುವುದು ಮಹ ಅತ್ಯಧಿಕವಾದ ಕೀರ್ತಿ ನಿನಗೆ ನಿತ್ಯ ತೃಪ್ತನಾಮ ಗುರು ವಿಜಯ ವಿಠ್ಠಲನಿಂದ ಮಿತ್ರನ್ನ ಮಾಡುವದು ಖ್ಯಾತಿ ನಿನಗೆ ೩
ಅಟ್ಟತಾಳ
ತನಯನಿಂದಲಿ ಮೂರ್ಛಗೈದಿದ್ದ ಸಮಯದಿಘನ ಮಹಿಮನೆ ನಿನ್ನ ಕರುಣದಿಂದಲಿ ಹರಿಧೇನು ವತ್ಸ ನ್ಯಾಯದಿಂದ ಬಂದು ಎನ್ನತನವು ತಕ್ಷಿಸಿದ್ದು ಕೀರ್ತಿಯಲ್ಲವೊ ದೇವ ಸು-ಮನಸರಿಂದಲಿ ಬಂದ ವಾಕ್ಯಾನುಸಾರದಿಮಿನಗುವ ಸುಜ್ಞಾನದಿಂದ ರಹಿತನಾಗಿ ಅ-ಜ್ಞಾನವೆಂಬೊವ ಅಸ್ತ್ರದಿಂದ ಮೂರ್ಛಿತನಾಗಿತನುವಿನ ಸ್ಮರಣೆಯ ಇಲ್ಲದಿದ್ದವನಾದೆವಿನಯದಿಂದಲಿ ಈಗ ಬಂದು ರಕ್ಷಿಸಲು ಎಣಿಕೆಯಿಲ್ಲದ ಕೀರ್ತಿ ಬರುವದೊ ಯಲೊ ದೇವಮುನಿ ಮನಮಂದಿರ ಗುರು ವಿಜಯ ವಿಠ್ಠಲರೇಯಅನುಗ್ರಹ ಮಾಡುವ ನಿನ್ನಿಂದಲಾವಾಗ ೪
ಆದಿತಾಳ
ವಿಜಯವನೀವೆನೆಂದು ಧ್ವಜದಲ್ಲಿ ನೀನಿಂದುಕುಜನರ ಹೃದಯವ ನಿರ್ಭಿನ್ನಗೈಸಿ ಅಂದುವಿಜಯವ ಪಾಲಿಸಿದ್ದು ಆಶ್ಚರ್ಯವಲ್ಲ ನಿನಗೆರಜತ ಮೊಗಣದಿಂದ ಬಂಧಿಸಿಕೊಂಡು ಸತತರಜನಿಯ ಚರ೧ರಿಂದ ಆಚ್ಛಿನ್ನನಾದೆ ಬಲುಕುಜನ ಮಾರುತಿಯಿಂದ ಕರುಣವ ಮಾಡಿ ಹೃದಯಧ್ವಜದಲ್ಲಿ ನಿಂದು ವೇಗ ವಿಜಯವಗೈಸುವದುಭಜಕರ ಪ್ರಿಯ ಗುರು ವಿಜಯ ವಿಠ್ಠಲರೇಯವೃಜನಗಳೋಡಿಸುವ ನಿನ್ನಿಂದಲಾವಾಗ ೫
ಜತೆ
ಅಂದು ಮಾಡಿದ್ದೇನು ಆಶ್ಚರ್ಯವಲ್ಲ ನಿನಗೆಇಂದು ಪಾಲಿಸು ಗುರು ವಿಜಯ ವಿಠ್ಠಲ ಪ್ರೀಯಾ ||

೧೫೦
[ಹಿಂದಿನ ಕಾಲದಲ್ಲಿ ಸಖನೆಂದೆನಿಸಿ ಕಿಂಚಿತ ಜಡವಾದ ಪ್ರಾರಬ್ಧಕರ್ಮ ನೆವನ ಮಾಡಿ ಜ್ಞಾನ ತಿರೋಭಾವ ಐದಿಸಿ ಮಹಾದುಃಖ ಬಡಿಪದುಚಿತವಲ್ಲ. ಹಿಂದೆ ಘನ್ನತೆ ಎಂದವನೆನಸಿ ಈಗ ಅತಿ ಕನಿಷ್ಠನನ್ನಾಗಿ ಬಳಲಿಪದುಚಿತವಲ್ಲ. ಕೃಷ್ಣಾ ನೀನೆ ಸಲಹಿ ಅಪರೋಕ್ಷ ಕೊಡು ಇತ್ಯಾದಿ.]
ಧ್ರುವತಾಳ
ಪ್ರಾರಬ್ಧ ಕರ್ಮವೆಂಬೊ ಸ್ತಂಭ ನಿಮಿತ್ಯ ಮಾಡಿನೀರಜಾಕ್ಷನೆ ನೀನು ತದ್ರೂಪಾದಿನೀರಧಿ೧ ಸಮ ಪೋಲ್ವ ಕರುಣಿ ನೀನಾದರಾಗವೈರತನವ ಮಾಳ್ಪ ಕುಜನರಂತೆಘೋರವಾದ ದುಃಖ ವೃಂದಗಳುಣಿಸಿದಿಸ್ಮರಣೆ ಮಾತ್ರ ಹೃದಯ ಭೇದಿಸುವದೊಪ್ರಾರಬ್ಧ ಉಣಿಪೆನೆಂದು ಇಚ್ಛಾ ಮಾಡಿದ ಮಾತ್ರಕಾರಾಗೃಹಕ್ಕೆ ಸಮ ಪೃಥ್ವಿಯಲ್ಲಿಸೌರಭಯುಕ್ತವಾದ ದೇಹ ಇದ್ದವನಾಗಿನಾರುವ ದುರ್ಗಂಧ ದೇಹ ಧರಿಸಿವಿರಾಜಿತವಾದ ಜ್ಞಾನ ಪ್ರಕಾಶವನ್ನುತಿರೋಧಾನವೈದಿ ಅಜ್ಞಾನಾಂಧಕಾರದೊಳು ಮುಳುಗಿ ಕಾಮ ಕ್ರೋಧಾದಿ ಮೋಹವೈರಿಗಳಿಂದ ಆಶ್ರೈಸಿಕೊಂಡುವಾರವಾರಕೆ ಬಳಲಿ ದುಃಖವ ಬಡುವದುಆರಿಗೆ ವದರಿದರು ಕೇಳ್ವರಿಲ್ಲಧಾರುಣಿ ಪತಿಯಾಗಿ ನರರಿಂದ ಮಾನ್ಯನೆನೆಸಿನಾರಾಯಣನೆ ನಿನ್ನ ಇಚ್ಛಾದಿಂದದಾರಿದ್ರ ದೋಷವೈದಿ ಮನೆ ಮನೆ ಭಿಕ್ಷಾ ಬೇಡೆಆರಾದವರನ ಕಂಡು ಹಾ ಹಾ ದೈವವೆ ಎಂದುಕರುಣದಲಿ ಅವನ ಆದರಿಪರೋಶ್ರೀ ರಮಣನೆ ಎನ್ನ ಈ ಪರಿ ಮಾಡಿದರುಕಾರುಣ್ಯ ಎಳ್ಳನಿತು ಪುಟ್ಟಲಿಲ್ಲಸ್ವರೂಪದಲ್ಲಿ ನೀನು ಇತ್ತ ಗುಣಗಳ ಮಧ್ಯ ವಿ-ಚಾರಿಸಿ ನೋಡಿದರು ವಂದಿಲ್ಲದೆನರಾಧಮ ನಾನು ಸ್ವಪಚನಿಂದಧಿಕ ಕಷ್ಟಬಾರಿ ಬಾರಿಗೆ ಐದಿ ದುಃಖದಿಂದಶಾರೀರ ದಂಡಿಸಿ ಬಲು ಪರಿ ಬಳಲಿದರುಸಾರ ಹೃದಯ ಆದ್ರಾವಾಗಲಿಲ್ಲಭೂರು ಕರುಣನಿಧಿ ಗುರು ವಿಜಯ ವಿಠ್ಠಲ ನಿನ್ನಸಾರಿದವರಿಗೆ ಇನಿತು ಬಾಧೆಯುಂಟೆ ೧
ಮಟ್ಟತಾಳ
ಪ್ರಣಕೆ ಸಮನೆನಿಪ ಸಖನಿಂದಗಲಿದೇರಣಮಧ್ಯದಿ ಎನ್ನ ಸ್ವನ ಕೇಳಿಸದಿಪ್ಪಕ್ಷಣ ಸಹಿಸದೆ ಎನ್ನ ಹಿತವನು ಬಯಸುವಅನುಜ ಭ್ರಾತೃಗಳಿಂದ ಅತಿ ದೂರವೈದಿದೆಧನು (ಧನ) ಪಶು ಗಜ ಅಶ್ವರಥ ಸಂಕುಲವಾದಕ್ಷೋಣಿಯು ಮೊದಲಾದ ಐಶ್ವರ್ಯವು ಬಿಟ್ಟುಮನುಜಾಧಮರೊಳು ಅಧಮನು ನಾನಾಗೆಶ್ರೀನಾಥನೆ ನಿನಗೆ ಕರುಣ ಪುಟ್ಟದಿರೆಏನೆಂಬೆನೊ ನಿನ್ನ ಗುರು ವಿಜಯ ವಿಠ್ಠಲ ನೀನುಪ್ರೀಣನಾಗದಿರಲು೧ ತೊಲಗುವದೇ ಕರ್ಮ ೨
ತ್ರಿವಿಡಿತಾಳ
ಘನರಿಂದ ಮಾನ್ಯನೆನಿಸಿ ದುರ್ಜೀವಿಗಳ ಕೈಯ್ಯಅನುಪಮವಾದ ನಿಂದ್ಯವೈದಿಸಿದಿಧನ ಕನಕ ವಸ್ತುಗಳ ನಿಕ್ಷೇಪ೨ ಉಳ್ಳವನ್ನಘನೀಭೂತ ದಾರಿದ್ರನೆಂದೆನಿಸಿದಿಪಣವ ಗೋಮುಖ ವಾದ್ಯದಿಂದ ಎಚ್ಚರಿಪನ್ನದಿನಾಂಧ ಶಬ್ದಗಳು ಎಚ್ಚರಿಪವೋಹೀನಾ ಮತಾದ್ರಿ ಕುಲಿಶವೆನಿಸಿ ಜಗದಿ ಮೆರೆವವಾಣಿ ನಿನ್ನಯ ನಾಮ ಉಚ್ಚರಿಸದು‘‘ತತ್ರ ಶ್ರೀ ವಿಜಯೋರ್ಭೂತಿ’’ ಎಂದು ಸಾರುತಲಿದೆಈ ನುಡಿ ವ್ಯತಿರೇಕಗಳನೈದಿದೆಘನೀಭೂತವಾದ ಬಲದಿ ಅಸಮನೆನಿಸುವನ್ನತೃಣವ ಚಲಿಸುವ ಶಕ್ತನಾಗದಾದೆಮನದಲ್ಲಿ ರೂಪಾನಂತ ಸಂತತ ನೋಡಿ ಬಲುಆನಂದದಿಪ್ಪುವಂಥ ಮನವ ತ್ಯಜಿಸಿಹೀನ ವಿಷಯಗಳಿಂದ ದಣಿಸುವ ಸರ್ವಕಾಲಇನಿತು ಮಾಡಿದರಾಗ ಕರ್ಮವನ್ನುಕೊನೆ ಐದಿಸುವೆನೆಂಬ ಇಚ್ಛಾ ಪುಟ್ಟದಲಿರೆಏನೆಂಬೆ ನಿನ್ನ ನಾನು ಕರುಣ ನಿಧಿಯೇಅನಂತ ಜನುಮದಿ ಮಾಡಿದ ನಿನ ಕೃಪೆ ಈಬಿನಗು ಕರ್ಮದ ಪ್ರಾಂತ್ಯವೈದಿಸದಿಪ್ಪದೆವನಜನಾಭನೆ ಎನ್ನ ಬರಿದೆ ದಣಿಸುವದುಘನತೆಯೇ ನಿನಗಿದು ಕರುಣಾನಿಧಿಯೆಮನಸಿಜ ಪಿತ ಗುರು ವಿಜಯ ವಿಠ್ಠಲ ನಿನ್ನಮನಸಿಗೆ ಬಾರದ್ಯಾಕೊ ಇನಿತು ಕೂಗೆ ೩
ಅಟ್ಟತಾಳ
ನಿನ್ನಿಂದ ನುಡಿವೆ ನಿನ್ನಿಂದ ಕೇಳುವೆನಿನ್ನಿಂದ ಪೋಗುವೆ ನಿನ್ನಿಂದ ಬರುವೆನಿನ್ನಿಂದ ಮಾಡುವೆ ಸಕಲ ಕರ್ಮಾ ಕರ್ಮನಿನ್ನ ವ್ಯತಿರಿಕ್ತ ಶ್ವಾಸೋಚ್ಫ್ವಾಸಕ್ಕೆಎನ್ನ ಸ್ವಾತಂತ್ರವು ಯಿಲ್ಲವೆಂತೆಂದುಅನಂತ ಜನುಮದಿ ಮಾಡಿದ ಪುಣ್ಯದಿಇನ್ನೀ ಕರ್ಮದ ಪ್ರಾಂತ್ಯವನೈದಿಸಿನಿನ್ನಿಂದೆ ನುಡಿದಂಥ ವಾಕ್ಯ ಸಫಲ ಮಾಡಿಮನ್ಮನದಲಿ ತೋರೊ ತಡಮಾಡದೆ ಇನ್ನುಘನ್ನ ಮಹಿಮ ಗುರು ವಿಜಯ ವಿಠ್ಠಲರೇಯಾಮನ್ಮನೋಭೀಷ್ಟಿಯ ಸಲಿಪದೊ ಕೃಪೆಯಿಂದ ೪
ಆದಿತಾಳ
ಪಾಹಿ ಪಾಹಿ ನಿನ್ನ ರೂಪಕ್ಕೆ ನಮೊ ನಮೊಪಾಹಿ ಪಾಹಿ ನಿನ್ನ ಸುಗುಣಕ್ಕೆ ನಮೊ ನಮೊಪಾಹಿ ಪಾಹಿ ನಿನ್ನ ಕ್ರೀಯಕ್ಕೆ ನಮೊ ನಮೊಪಾಹಿ ಪಾಹಿ ನಿನ್ನ ಇಚ್ಛೆಕ್ಕೆ ನಮೊ ನಮೊಪಾಹಿ ಪಾಹಿ ನಿನ್ನ ಕರುಣಕ್ಕೆ ನಮೊ ನಮೊಪಾಹಿ ಪಾಹಿ ಎನ್ನ ಅಪರಾಧವೆಣಿಸದೆಪಾಹಿ ಪಾಹಿ ಗುರು ವಿಜಯ ವಿಠ್ಠಲ ನಿನಗೆದೇಹಿ ಎಂದವನಿಗೆ ಉಳಿವದೆ ದುಷ್ಕರ್ಮ ೫
ಜತೆ
ಕೃಷ್ಣಾ ಎನಗೆ ನೀನು ಪ್ರೀತನಾಗುತಲಿರೆದುಷ್ಟ ಕರ್ಮಗಳುಂಟೆ ಗುರು ವಿಜಯ ವಿಠ್ಠಲ ||

೧೨೧
ಧ್ರುವತಾಳ
ಬಲವದ್ರೂಪವಾದ ಪ್ರಾರಬ್ಧ ಕರ್ಮವನ್ನುನಳಿನ ಸಂಭವ ಮುಖ್ಯ ದಿವಿಜರೆಲ್ಲತಲೆಬಾಗಿ ಉಂಬುವರು ವಲ್ಲೆನೆಂದರೆ ಬಿಡದುಬಲವುಳ್ಳ ವಸ್ತು ಮಧ್ಯ ಮಹ ಪ್ರಬಲವಯ್ಯಾಆಲೋಚಿಸಿ ನೋಡಿದರೆ ಜಡರೂಪವೆನಿಸುವುದುಚಲಿಸುವ ಶಕುತಿ ಇಲ್ಲ ನಿನ್ನ ವ್ಯತಿರಿಕ್ತದಿಬಲವಂತನಾದ ಹರಿ ತಚ್ಛಬ್ದ ವಾಚ್ಯನಾಗಿ ಬಲಯುಕ್ತನಾಗಿ ಇದ್ದು ಬ್ರಹ್ಮೇಶನ ಬಲವೈರಿ ಮೊದಲಾದ ಸರ್ವ ಜೀವಿಗಳಬಲವೆಲ್ಲ ಹಿಂಗಿಪುದು ಕಾಲ ಕರ್ಮದಂತೆ ಲೀಲೆ ಕೈವಲ್ಯ ರೂಪನಾದ ವಿನೋದಿ ನಿನ್ನಲೀಲೆಗೆ ಕಾರಣವೆನಿಪದಯ್ಯಾ”ಬಲವಾನ್ ಇಂದ್ರಿಯ ಗ್ರಾವೋ(ಮಾ) ವಿದ್ವಾಂಸಮಪಿಕರ್ಷತಿ’’ಕಾಲರೂಪನಾಗಿ ಇಂದ್ರಿಯ ದ್ವಾರದಿಂದಮೇಲು ಕೀಳುಗಳೀವಿ ಜೀವರಿಗೆ ಇಳಿಗೆ ಮೀರಿದ ನಿನ್ನ ನೈಜಾಲಯ ದ್ವಾರಪಾಲಕರಿಗೆ ತಪ್ಪದಾಯಿತಯ್ಯಾಬಲಿಷ್ಠರ ಪಾಲ ಗುರು ವಿಜಯ ವಿಠ್ಠಲ ನಿನ್ನಒಲಿಮೆಯಿಂದಲಿ ತೊಲಗಿ ಪೋಪದಯ್ಯಾ ೧
ಮಟ್ಟತಾಳ
ಪ್ರಾರಬ್ಧ ಕರ್ಮ೧ದಲಿ ಚತುರ್ಮುಖ ದೇವನುಧಾರುಣಿಯಲಿ ಪೂಜೆ ತೊರೆದನು ಋಷಿಯಿಂದಭಾರತಿಪತಿ ನಿನ್ನ ಸಂಕಲ್ಪವನರಿತುವಾನರನಾದನು ಮತ್ತೆ ಸ್ತ್ರೀಯಾದನು ಕೇಳೊಶ್ರೀರಮಣ ನಿನ್ನ ಪ್ರೀತ್ಯಾಸ್ಪದನಾದ ಆರೂಢಕೆ ಯೋಗ್ಯನೆನಿಸುವ ಸೌಪರಣಿಮೀರಿದ ಬಲಯಾಗೆ ಕಾದ್ರುವೆಗಳ ಕೈಯಘೋರ ಬನ್ನ ಬಟ್ಟ ಜನನಿಯ ನಿಮಿತ್ಯವಾರಿಜಾಕ್ಷನ ಯೋಗ ನಿದ್ರಾಸ್ಪದ ನೆನೆಪವಾರುಣಿ ಪತಿಯಾದ ಬಲರಾಮನು ದುರುಳಕೌರವ ಪತಿ ಪಕ್ಷ ಮೋಹಿಸಿ ಸಜ್ಜನರಿಂದಮಾರು ಮಾತನು ನುಡಿಸಿಕೊಂಡು ಸಭೆಯಲ್ಲಿಮಾರಾರಿ ರೂಪನಾದ ಅಶ್ವತ್ಥಾಮನಸ್ವರೂಪದಿ ದುಷ್ಟನಾದವಗೆ ಒಲಿದುಸುರರಾದವರಿಗೆ ಅಹಿತವನೆ ಬಗೆದುನೀರಜಾಕ್ಷನೆ ನಿನಗೆ ವಿಮುಖನು ಎಂದೆನಿಸಿಪಾರುಗಾಣದೆಯಿದ್ದ ಶಾಪವು ಸ್ವೀಕರಿಸಿ ಶಾರೀರ ದುರ್ಗಂಧ ನಾರುವ ದುಃಖದಲಿಊರು ಸೇರದೆ ಅಡವಿ ಚರಿಸುವ ನಿನ್ನಿಂದ ಧೀರರೆಂದೆನಿಸುವ ದಿವಿಜರಿಗಿನಿತಿರಲು ಸುರಪತಿ ಮಿಕ್ಕಾದ ಸುರರಿಗೆ ತಪ್ಪುವದೆಸರಿಯಿಲ್ಲ ಸರಿಯಿಲ್ಲ ಈ ಪ್ರತಿಬಂಧಕ್ಕೆಭಾರ ಕರ್ತನೆನಿಪ ಗುರು ವಿಜಯ ವಿಠ್ಠಲರೇಯ ನೀತೋರದೆ ತೊಲಗುವದೆ ಆವಾವ ಕಾಲದಲಿ ೨
ತ್ರಿವಿಡಿತಾಳ
ಅನುಭವ ಪೇಳುವೆನು ಆದರದಲಿ ಕೇಳುಘನವಾದ ಪ್ರಾರಬ್ಧ ಮನಿಯ ಮಾಡಿ ಸು- ಮನಸರ ಶಾಪವೆಂಬೊ ಸೂಚಕದಿಂದಲ್ಲಿಘನವಾದ ಸ್ಥಾನದಿಂದ ಕಡೆಗೆ ಮಾಡಿಮನುಜ ಲೋಕದಲ್ಲಿ ಪುಟ್ಟಿಸಿ ಘೋರವಾದಬಿನಗು ಸಂಸಾರವೆಂಬ ಪಾಶದಲ್ಲಿ ತನುವ ಬಂಧಿಸಿ ಸತತ ಕಾಮ ಕ್ರೋಧವೆಂಬೊ ಗ-ಹನಮಡುವಿನೊಳಗೆ ನೂಕಿದಯ್ಯಾಜ್ಞಾನಾಚ್ಛಾದನ ಮಾಡಿ ಪರಿ ಪರಿ ದುಃಖದಿಂದಅನುದಿನ ಬಳಲಿಸಿದ ಅನ್ಯಾಯದಿ ಅಣು ಮಹ ವ್ಯಾಪ್ತ ಗುರು ವಿಜಯ ವಿಠ್ಠಲ ನಿನ್ನಅನುಗ್ರಹ ತಪ್ಪುವದೆ ಆಪದವೋ ೩
ಅಟ್ಟತಾಳ
ಪ್ರಕಟ ಸಂಪದದಿಂದ ಸಿದ್ಧನಾದವನಾಗಿರಿಕತನೆಂದೆನಿಸಿದಿ ಅಧಿಕಧಿಕವಾಗಿಪ್ರಖ್ಯಾತವಾಗಿ ಮಾನ್ಯನೆನಿಸಿ ಕುಂಭಿಣಿಯಲ್ಲಿ ಕು-ಹಕ ಜನರ ಮಧ್ಯ ನಿಂದ್ಯವೈದದೆ ಬಲುಉಕುತಿಯಿಂದಲಿ ದುಷ್ಟ ಮತಗಳ ಛೇದಿಸಿ ಲಕುಮಿ ಪತಿಯೆ ಪರನೆಂದು ಬೀರಿದ ಜಿಹ್ವೆಶಕುತಿಯಿಂದಲಿ ಒಮ್ಮೆ ಹರಿಯೆ ಉಚ್ಚರಿಸುವುದುವಿಖನಸಾಂಡಾಧಿಪ ಗುರು ವಿಜಯ ವಿಠ್ಠಲಂಗೆಭಕುತನೆನಿಸಿ ಈಗ ಬಲು ದೂರ ನಾನಾದೆ ೪
ಆದಿತಾಳ
ಹರಿ ನಿನ್ನ ಸಂಕಲ್ಪ ಮೀರುವರಿಲ್ಲ ಜಗದಿಪರಿ ಪರಿ ವಿಧದಿಂದ ಪರಿ ಅವಲೋಕಿಸಿಪರಮೇಷ್ಠಿ ಮೊದಲಾದ ಸುರರೆಲ್ಲ ತಲೆಬಾಗಿಕರವ ಮುಗಿದು ನಿನಗೆ ನಮೊ ನಮೊ ನಮೊ ಎಂದುಪರಿತೋಷ ಬಡುವರು ಕಡೆ ಮೊದಲರಿಯದೆನಿರುಪಮ ಗುಣಪೂರ್ಣ ಗುರು ವಿಜಯ ವಿಠ್ಠಲ ರೇಯಭಾರ ನಿನ್ನದಯ್ಯಾ ಮನಬಂದ ತೆರ ಮಾಡೋ ೫
ಜತೆ
ಪ್ರಾರಬ್ಧ ಕರ್ಮವನ್ನು ಮೀರುವವರಿಲ್ಲ ಜಗದಿನೀರಜಾಕ್ಷನೆ ಗುರು ವಿಜಯ ವಿಠ್ಠಲರೇಯಾ ||

೧೬೨
ಧ್ರುವತಾಳ
ಬಲವುಳ್ಳ ವಸ್ತು ಮಧ್ಯ ನಿನಗಿಂದಧಿಕವಾದಬಲವುಳ್ಳ ವಸ್ತು ಆವದಯ್ಯ ಪೇಳೊಜಲಜ ಜಾಂಡಕ್ಕೆ ಬಲವೆಂದೆನಿಪ ಸಿರಿದೇವಿಜಲಜ ಸಂಭವ ರುದ್ರಾಮ್ಯರ ತತಿಯುಕಲ್ಪಿಸಿ ಅವರವರ ಉಚಿತ ಪದಗಳಿತ್ತು ನಿ-ರ್ಮಲವಾದ ಜ್ಞಾನವಿತ್ತು ಪ್ರಾಂತ್ಯದಲ್ಲಿವಿಲಿಂಗರನ್ನು ಮಾಡಿ ಸ್ವ ಸ್ವಯೋಗ್ಯತೆ ಮುಕ್ತಿಫಲ ಉಣಿಪೆನೆಂದು ಶ್ರುತಿ ವರಲುತಿಪ್ಪಶ್ರೀ ಲಕುಮಿದೇವಿ ನಿನ್ನ ಅಪಾಂಗ ದೃಷ್ಟಿ೧ ಬಲದಿಚಲಿಸುವೆನೆಂದು ದೃಢದಿ ಪೇಳುತಲಿರೆಬಲವುಳ್ಳ ವಸ್ತು ಮಧ್ಯ ಬಲ ಯಾವದುಂಟು ಪೇಳೊನಳಿನನಾಭನೆ ನಿನ್ನ ವ್ಯತಿರಿಕ್ತವಾಗಿಕಾಲ ಕರ್ಮಾದಿಗಳಿಗೆ ಸ್ವಾತಂತ್ರ ಎನಿತು ಪೇಳೊಕಾಲ ಕರ್ಮಾದಿ ವಾಚ್ಯನಾಗಿ ನೀನೇಲೀಲೆ ಮಾಡುವನಾಗಿ ತತ್ತದ್ವಸ್ತುಗಳಿಗೆಒಲಿದು ತಂದಿತ್ತ ಮಹಿಮೆ ನಿನ್ನದಲ್ಲದೆ ಅ-ಖಳ ಶಾಸ್ತ್ರದಲ್ಲಿ ಆಲೋಚಿಸಿ ನೋಡಿದರುಮೂಲ ನೀನೇವೆ ಸಕಲ ವಸ್ತುಗಳಿಗೆಜಲಜ ನಯನನೆ ಇದನೆ ಸಿದ್ಧಾಂತವಾಗದಿರೆಒಲಿದು ಎನಗೆ ನೀನೆ ‘ಬೀಜಂ ತದಹಂ’ ಎಂದು ಪೇಳಿದ್ಯಾಕೆಖಳದರ್ಪ ಹರಿ ಗುರು ವಿಜಯ ವಿಠ್ಠಲ ನಿನ್ನಸಲೆ ವಾಕ್ಯ ಎನ್ನ ಮನದಿ ಚಲಿಸದೆಂದು ೧
ಮಟ್ಟತಾಳ
ಗರುಡಗೆ ಉರಗದ ಭಯ ತೋರಿಸಿದಂತೆಕರುಣ ನಿಧಿಯೆ ಎನ್ನ ಸಲೆ ಮೋಹಿಪನಾಗಿಪ್ರಾರಬ್ಧ ಕರ್ಮದ ಬಗೆ ಪೇಳಿದ ಮಾತು ಪರಿಹಾಸ್ಯವಲ್ಲದೆ ಶ್ರುತಿ ಸಮ್ಮತವಲ್ಲಸುರತರು ಸುರಧೇನು ಚಿಂತಾಮಣಿಯಲ್ಲಿಪರಿಪರಿ ಕಾಮಗಳ ಪರಿಪೂರ್ತಿಪ ಶಕ್ತಿಸ್ವರೂಪ ಭೂತವಾಗೆ ತತ್ತತ್ಸಮಯದಲಿಇರದೆ ಪೋಯಿತು ಯಾಕೆ ಜಡದಲಿ ಚೇತನಪರಮೇಷ್ಠಿ ಮೊದಲಾದ ಸುರನರ ಜಡದಲ್ಲಿಪರಿವ್ಯಾಪ್ತವಾಗಿ ಅವರವರಿಗೆ ಕೀರ್ತಿಹರಿ ನಿನ್ನಿಂದಲ್ಲೆ ತಂದಿತ್ತದಲ್ಲದೆಬರಿದೆ ಕರ್ಮವ ತೋರಿ ನೀನೆ ಬಳಲಿಪದೇಕೆನರ ಸಾರಥಿ ಗುರು ವಿಜಯ ವಿಠ್ಠಲ ನಿನ್ನಬಿರಿದಿಗೆ ಇದು ಘನತೆ ಕಠಿಣ ಬಿಡು ಬಿಡು ೨
ತ್ರಿವಿಡಿತಾಳ
ಜೀವ ಪ್ರಕೃತಿ ಕಾಲ ಕರ್ಮಾನುಸಾರವಾಗಿದೇವ ದೈತ್ಯರ ದ್ವಾರವೆರಡರಿಂದಸು ವಿಹಿತಾವಿಹಿತ ಕರ್ಮ ಮಾಳ್ಪ ಕಾರಣದಿಂದಕೇವಲ ನಿಘರ್ಲಣಾದಿ೧ ಶೂನ್ಯನೆಂದುಆ ವೇದ ಶಾಸ್ತ್ರಗಳು ವರುಲುತಿವೆ ಸತತಈ ವಿಧ ಕರ್ಮವನ್ನು ಕಳೆವದಕ್ಕೆದೇವ ದೇವನೆ ನಿನ್ನಿಂದ ನಿರ್ಮಿಸಿದಂಥಸುವಾಕ್ಯಗಳುಂಟು ಬಲು ವಿಧದಿ”ವಿಷ್ಣೋರಂಗಾರಶೇಷೇಣ ಯೋಽಂಗಾನಿ ಪರಿಮಾರ್ಜಯೇತ್‍ಕೋಟಿ ಜನ್ಮಾರ್ಜಿತಂ ಪಾಪಂ ತತ್‍ಕ್ಷಣಾ ದೇವನಸ್ಯತಿಕೋಟ್ಯೆಂದು ಸಹಸ್ತ್ರೈಸ್ತು ಮಾಸೋ ಪೋಷಣ ಕೋಟಿಭಿಃತತ್ಫಲಂ ಲಭತೇ ಪುಂಭಿಃ ವಿಷ್ಣೋರ್ನೈವೇದ್ಯ ಭಕ್ಷಣಾತ್ ||ಏವಮಾದಿಗಳು ಈ ಪರಿ ವರುಲುತಿರೆಶ್ರೀ ವಿಷ್ಣು ಪ್ರೀತ್ಯರ್ಥ ಮಾಳ್ಪ ಕರ್ಮಆವ ದುಷ್ಕರ್ಮದ ಫಲವು ಕಾಯದಿರೆಸುವಾಕ್ಯಗಳಿಗೆಂತು ಪ್ರಾಮಾಣ್ಯ ಬರುವದೊಆವ ವಸ್ತು ಧರ್ಮ ನಿನ್ನಿಂದಾಗುತಲಿರೆಪೂರ್ವೋಕ್ತ ಕರ್ಮದಿ ವ್ಯಾಪ್ತನಲ್ಲವೇನುಸಾವಧಾನದಿ ಕೇಳೊ ವ್ರಜನಾರ್ದನನೆ ನಿನ್ನಪವಿತ್ರವಾದ ನಾಮಸ್ಮರಣೆ ಮಾತ್ರ”ಯತ ತೋಪಿಹರೆಃ ಪದ ಸಂಸ್ಮರಣೆಸಕಲಂ ಹ್ಯಗಮಾಸುಲಯಂ ವ್ರಜತೀ’’ ಎಂದು ನುಡಿದಆ ವೇದಶಾಸ್ತ್ರಗಳಿಗೆ ಪ್ರಾಮಾಣ್ಯವೆಂತು ಅರಿಯೆಈ ವಸುಂಧರೆಯಲ್ಲಿ ಕೂಡಿದ ಅಘವೆಂಬೊಆವ ಮೇರು ಸಮ ತೂಲ ರಾಸಿದಾವಾಗ್ನಿ ಎನಿಪದು ನಿನ್ನ ನಾಮದ ಸ್ಮರಣಿಸಾವಿರ ಮಾತಿಗೆ ಸಿದ್ಧಾಂತವೋ ಭಾವಿ ಬ್ರಹ್ಮರಿಗೆಲ್ಲ ಇದೆ ಇದೆ ಸಿದ್ಧವೆಂದುಆ ವೇದ ಶಾಸ್ತ್ರಗಳು ವರಲಿ ದಣಿಯುತಲಿರೆಶ್ರೀ ವಾಸುದೇವ ಗುರು ವಿಜಯ ವಿಠ್ಠಲರೇಯಾನೋವು ಕರೆಯದಿರೆ ಹರಿ ಎಂದು ನುಡಿವದ್ಯಾಕೆ ೩
ಅಟ್ಟತಾಳ
ನೀನು ಎಂದಿಗೂ ಸತ್ಯ ನಿನ್ನ ಕ್ರೀಯವು ಸತ್ಯನೀನು ನುಡಿದಂಥ ವಾಕ್ಯ ಎಂದಿಗೂ ಸತ್ಯನೀನು ಮಾಡಿದ ಕ್ಲಪ್ತವೆಂಬೊ ಪಾಶದಿಂದಪ್ರಾಣಾದ್ಯಮರರು ನಿರುತ ಬದ್ಧಿತರಾಗಿಸಾನುರಾಗದಿಂದ ಸಂಚರಿಸುವರುದೀನನಾಥ ಗುರು ವಿಜಯ ವಿಠ್ಠಲ ನಿನ್ನಧೇನಿಪರಿಗೆ ಇಂತು ಕರ್ಮದ ಫಲವೋ ೪
ಆದಿತಾಳ
ಎಮ್ಮ ನಿಮಿತ್ಯವಾಗಿ ಅವತಾರ ಮಾಡಿದಿಎಮ್ಮ ನಿಮಿತ್ಯವಾಗಿ ಅನುಬಂಧ ಮಾಡಿದಿಎಮ್ಮ ನಿಮಿತ್ಯವಾಗಿ ಸಖತನ ಮಾಡಿದಿಎಮ್ಮ ನಿಮಿತ್ಯವಾಗಿ ಕ್ಷಣವಗಲದೆ ಇದ್ದಿಎಮ್ಮ ನಿಮಿತ್ಯವಾಗಿ ದೂತ ಕೃತ್ಯ ಮಾಡಿದಿಎಮ್ಮ ನಿಮಿತ್ಯವಾಗಿ ನೀಚೋಚ್ಚ ಮಾಡಿದಿಎಮ್ಮ ನಿಮಿತ್ಯವಾಗಿ ಸ್ವರೂಪ ಚಿಹ್ನೆಯ ಬಿಟ್ಟುಆ ಮಹಾ ಕೈಯಲ್ಲಿ ಕಶವನ್ನು ಧರಿಸಿದಿಎಮ್ಮ ನಿಮಿತ್ಯವಾಗಿ ಬಹು ಕೃತ್ಯ ಮಾಡಿ ಈಗಜನ್ಮದೊಳಗೆ ಒಮ್ಮೆ ಕಣ್ಣಿಲೆ ನೋಡದಿರೆಚಿನ್ಮಯ ನಿನ್ನ ಕೃತ್ಯ ವ್ಯಭಿಚಾರ೧ವಾಗದೇನೊಸಮ್ಮತವೆ ನಿನಗೆ ಯಿದು ಶ್ರುತಿ ಸ್ರ‍ಮತಿ ಸಂತತಿಗೆಒಮ್ಮೆ ನೆನೆದ ಮಾತ್ರ ಮುಕುತಿಯನಿತ್ತವಂಗೆಜನ್ಮವ ನಿನಗಾಗಿ ಸಮರ್ಪಣೆ ಮಾಡಿದವಗೆಎಮ್ಮ ಅಭಿಮಾನ ಬಿಟ್ಟು ಈ ಪರಿ ಮಾಡುವಂಥಹಮ್ಮು ಬಿಡು ಬಿಡು ಇನ್ನೆಂದಿಗಾದರುಖಮ್ಮಹಿಯೊಳಗಿದ್ದ ಸುರ ನರ ಜೀವಿಗಳಿಗೆಸಮ್ಮತವಲ್ಲ ನೋಡು ಬಲು ಬಗೆ ನೋಡಿದರುಎಮ್ಮ ಪಾಲಿನ ದೈವ ಗುರು ವಿಜಯ ವಿಠ್ಠಲರೇಯ ಸಮ್ಮುಖನಾಗುವದೆ ಕ್ಷಣವಗಲದೆ ಎನ್ನ ೫
ಜತೆ
ದುರುಳನ್ನ ಪಕ್ಷ ಬಿಟ್ಟು ಎನ್ನ ಪಾಲಿಗೆ ಬಂದಪರಿಯ ಮರಿಯದಿರು ಗುರು ವಿಜಯ ವಿಠ್ಠಲ ೬
(ಶೋಭನ ನಾಮ ಸಂ || ಆಶ್ವೀಜ ಶುದ್ಧ ೧೦ ಗುರುವಾರ)

೧೫೫
[ಎಮ್ಮ ಪರಾಜಿತವನ್ನು ಕೇಳಿ ಹಿಂದೆ ಕಾಮ್ಯಕ ವನದಲ್ಲಿ ಬಂದು ಎಮ್ಮ ಸಮ್ಮಖದಲ್ಲಿ ನಿಂದು ಇತ್ತ ವರರೂಪ ಮಾತು ಮರೆತೆನೋ ಕೃಷ್ಣಯ್ಯ ! ನೀನು ಸ್ವತಂತ್ರನಾದವ. ಕೊಟ್ಟ ಮಾತು ತಪ್ಪೆನೆಂಬುದು ನಿನಗೆ ಘನತೆಯೇ ? ನಾನು ಅಯೋಗ್ಯನೇ ? ಕೃಷ್ಣಾ ನಿನ್ನ ಮಾತಿನಂತೆ ಸತ್ಯವಾಗಿ ಪ್ರತ್ಯಕ್ಷನಾಗೆಂದು ಪ್ರಾರ್ಥನಾ.]
ಧ್ರುವತಾಳ
ಬೊಮ್ಮಾದಿಗಳಿತ್ತ ವರ ಸತ್ಯ ಮಾಡುವಂಥಆ ಮಹಾಮಹಿಮನಾದ ಹರಿಯೇ ನೀನುಸಮ್ಮುಖದಲಿ ಇತ್ತ ವರವ ಸತ್ಯ ಮಾಡದಲೆಈ ಮಹಿಯೊಳಗೆನ್ನ ಬಳಲಿಪದೋಸಮ್ಮತವೇನು ನಿನಗೆ ಬಲು(ಲ) ದಯಾಸಿಂಧು ಕೃಷ್ಣನಿಮ್ನವಾದ ಮಹಿಮಾ ಸಾರ್ವಭೌಮಾಹಮ್ಮುಳ್ಳ ಭಕ್ತರ ಕೂಡ ಸಮ್ಮತವಲ್ಲ ನಿನಗೆಸನ್ಮಂಗಳಾಂಗನೆ ಸುರರ ಪ್ರಾಣನಮ್ಮಯ ಪರಾಜಿತ ಕೇಳಿದಾಕ್ಷಣದಲ್ಲಿಕಾಮ್ಯ ನಾಮಕವಾದ ವನಕೆ ಬಂದುಸುಮ್ಮನೆ ಲೋಕವತು ಕ್ರೀಡೆ ಮಾಡುವನಾಗಿಸಮ್ಮೋಹ ಮಾಡುವ ಚರಿಯ ತೋರೆಮರ್ಮದ ಮಾತಿಲಿಂದ ಮಹಿಮನ್ನ ತುತಿಸಲಾಗಿಸಮ್ಮುಖದಲಿಯಿತ್ತ ಮಾತು ಮರತೇಬ್ರಹ್ಮೇಶ ನಾಮ ಗುರು ವಿಜಯ ವಿಠ್ಠಲರೇಯಾಚಿನ್ಮಯನಿಗೆ ಇನಿತು ಮರಹು ಬಂತೆ ೧
ಮಟ್ಟತಾಳ
ಸ್ವತಂತ್ರ ನೀನಾಗಿ ಬೊಮ್ಮಾಂಡ ಕಲ್ಪಿಸಿಶ್ಯಾತ ಗರ್ಭಾದ್ಯರ ಶಿಕ್ಷ ರಕ್ಷಕನಾದಭೂತಿ ಪೂರ್ಣನಿಗೆ ಈ ತೆರ ಮಾಡಲುಖ್ಯಾತಿ ಐದುವೆನೆಂತೊ ನೀ ಧರ್ಮಪಾಲಕನೆಂದುಭೂತಳ ಜನರಿಗೆ ಹಿತ ಮಾಳ್ಪವನಾಗಿ ಆ-ನೇಕ ಕರ್ಮನಾಗೆ ಲೋಕ ಶಿಕ್ಷಾರ್ಥಾದೆಜಾತಕರ್ಮಾದ್ಯನೇಕ ಕರ್ಮವ ಮಾಡೆಕ್ಷಿತಿಯೊಳು ಸ್ಥಾಪಿಸಿ ಅಪಾತ್ರಕರ (ಅಪ್ರಾರ್ಥಕರ)ಯಾತನೆ ಬಡಿಸುವ ಜ್ಯೋತಿರ್ಮಯನೆನೆಸಿಮಾತು ತಪ್ಪುವದಾವ ಮರ್ಯಾದಿಯೊ ದೇವಭೂತಿ ಮಹೇಶ್ವರ ಗುರು ವಿಜಯ ವಿಠ್ಠಲ ರೇಯಾನೀತರೊಳು ಮರಹು ಪುಟ್ಟಿತೆ ಘನ ಮಹಿಮಾ ೨
ತ್ರಿವಿಡಿತಾಳ
ಇಷ್ಟರೊಳಗೆ ಮರಹು ಹುಟ್ಟಿದರೆ ಇನ್ನುಎಷ್ಟು ಎಷ್ಟು ಕಲ್ಪ ಭಕ್ತರಿಗೆಕೊಟ್ಟಿದ್ದ ವರಗಳ ಸಲಿಸುವಿ ಎಂತೊ ಕೃಷ್ಣಶ್ರೇಷ್ಠ ಸಮ್ಮತವಾಹದೇನೊ ಹರಿಯೇಶ್ರೇಷ್ಠವಾದ ವರವನೀವ ಸಮಯದಲಿಘಟ್ಟ್ಯಾಗಿ ಯೋಗ್ಯತೆಯು ತಿಳಿಯಬಲ್ಲೆಪ್ರೇಷ್ಟದಾಯಕನಾಗಿ ಅನುಗ್ರಹಿಸಿ ಈಗಅಭೀಷ್ಟ ಪಾಲಿಸದಲೆ ಪೃಥ್ವಿಯಲಿಕಷ್ಟ ಬಡಿಸುವದು ಘನತಿಯೇ ಎಲೋ ದೇವಇಷ್ಟು ಮಾತ್ರಕೆ ವರವನಿತ್ಯಾತಕೆಸೃಷ್ಟ್ಯಾದ್ಯಷ್ಟ ಕರ್ತು ಗುರು ವಿಜಯ ವಿಠ್ಠಲರೇಯಎಷ್ಟರ ಮಾತು ನಿನಗೆ ನಿರ್ಮಲಾತ್ಮಾ ೩
ಅಟ್ಟತಾಳ
ಅನುಭವವಿಲ್ಲದ ಧನವಿರಲ್ಯಾತಕೆಮನಮೂರ್ತಿ ನೋಡದ ಜ್ಞಾನವಿದ್ಯಾತಕೆಬಿನಗು ಮಾತುಗಳಾಡೊ ಸ್ವಮತ ಸಿದ್ಧಾಂತವಘನವೆಂದು ಬೀರಿದ ಶಾಸ್ತ್ರ ಓದಿ ಯಾತಕೆಕುನರ ಕರ್ಮವ ಮಾಡಿ ಸುಖ ಬಡಲ್ಯಾತಕೆದನುಜಾರಿ ನಿನ್ನಿಂದ ಕರುಣ ಸಂಪಾದಿಸಿಆನಂದ ಬಡದಿದ್ದ ವರವಿದ್ದು ಯಾತಕೆಮುನಿ ಮನ ಮಂದಿರ ಗುರು ವಿಜಯ ವಿಠ್ಠಲರೇಯಾಕರುಣ ಮಾಡದಿದ್ದ ದೇಹವಿದ್ಯಾತಕೆ ೪
ಆದಿತಾಳ
ಜನ್ಮಾಂತರದಲಿ ನೀನಿತ್ತ ವರ ಸತ್ಯ ಮಾಳ್ಪದಕೆಈ ಮಹಾಕಾಲದಲ್ಲಿ ಅಯೋಗ್ಯ ನಾನಾದೆಚಿನ್ಮಯ ನಿನ್ನ ಇಚ್ಛೆ ಎಂಬೋದು ಮಾಳ್ಪದೇನುಸಮ್ಮತದಿಂದ ನೀನೇ ಈ ಜನ್ಮದಲ್ಲಿ ನುಡಿದಈ ಮಹಾ ವಾಕ್ಯವನ್ನು ತ್ವರಿತದಿ ಸಿದ್ಧಿಗೈಸಿಸಮ್ಮುಖವಾಗುವದು ಸ್ಥಾನಭೇದದಲ್ಲಾಗೆಖಮ್ಮಹಿವೊಡೆಯ ಗುರು ವಿಜಯ ವಿಠ್ಠಲರೇಯಾ ೫