Categories
ರಚನೆಗಳು

ಗುರು ವಿಜಯವಿಠ್ಠಲರು

೧೫೯
ಧ್ರುವತಾಳ
ಬೋಮ್ಮಜನಕ ರಹಸ್ಯ ಪೇಳಿದ ವಾಕ್ಯ ಮೋದ ಒಂ-ದೆ ಹೊರ್ತು ಸಹ ಕಾರ್ಯವಾಗಲಿಲ್ಲ ಬಂಧಾನ ಪೋಗಲಿಲ್ಲಅಹಿತರ ಸಂಗದಿಂದ ತೊಲಗಲಿಲ್ಲದೇಹ ದೇಹಗಳು ನಿಯಮಿಸಿ ಜೀವರಿಗೆದೇಹಸ್ಥಿತನಾಗಿಪ್ಪ ಹೃತ್ಕಮಲದಲ್ಲಿಪಹರಿಯ ತಿರುಗುತ ಪ್ರೇರಿಪ ವ್ಯಾಪಾರವಿಹಿತಾವಿಹಿತ ಮೀರಲು ಸುರರಿಗೊಶವೆಅಹೋ ರಾತ್ರಿಯಲಿ ಸುಖದಿಂದ ನಿನ್ನವರಸಹವಾಸದಲಿ ಯಿಪ್ಪ ನರನ ತಂದುಲೋಹ ತಪ್ತದ ಮೇಲೆ ನಿಲ್ಲಿಸಿ ನೋಡಿದಂತೆಇಹಲೋಕದಿ ತಂದು ಸುಖ ದುಃಖ ವೇಗ ಪ್ರಾ-ವಹದೊಳಗೆ ಹಾಕಿ ಘಾಸೆ ಬಡಿಸುವುದುಶ್ರೀಹರಿ ನಿನಗಿದು ಸಮ್ಮತವೇಬಾಹುಳ್ಯ ಕೃಪನಿಧೆ ಗುರು ವಿಜಯ ವಿಠ್ಠಲರೇಯಾಘಮಹಾವಟಿಗೆ ಸ್ವಹಲೋಲ೧ ನೀನೆ ೩
ಅಟ್ಟತಾಳ
ಇದಕೆ ಐವರು ಕಾರಣವೆನಿಪರುಆ ಧುರನಿಷ್ಠರು ಭಕ್ತ್ಯಾದಿ ಗುಣದಿಂದಆಧಿಕ್ಯರೆನಿಸಿ ನಿರ್ಲೇಪರಾದರುಅವರ ಮಧ್ಯದಿ ನಾನೇವೆ ನಿನ್ನಯ ಪಾ-ದಾರವಿಂದಕೆ ಸಲ್ಲದವನೇನೊಈ ದೇಹದಿಂದಲಿ ಭಜಿಸಿದ ಕಾಲಕ್ಕುಸಾದರದಲಿ ಪೂರ್ವ ಸಂಬಂಧ ನಿಮಿತ್ಯವಾದರೂ ರಕ್ಷಿಸಬಹುದಯ್ಯಾ ದೇವನೆವೇದೇಶ ನಿನ್ನ ಪ್ರಸಾದವಾದ ಮೇಲೆಬಾಧಿಗಳುಂಟೇನೊ ಇಹಪರದಿ ನೋಡಾಮೋದ ಪ್ರಮೋದ ಗುರು ವಿಜಯ ವಿಠ್ಠಲರೇಯಾಆದರಿಪರಿಲ್ಲ ನಿನ್ನ ಹೊರತಾಗಿ ೪
ಆದಿತಾಳ
ಸ್ವತಮೇವ ಪೂರ್ಣನಿಗೆ ಅನ್ಯವಾದ ವಿಷಯದಿಂದತೃಪ್ತಿಯ ಬಡಿಸುವ ನರರಿಲ್ಲ ಜಗದೊಳುಅತ ಏವ ಪೂರ್ಣನಹುದು ಶ್ರುತಿ ಸ್ರ‍ಮತಿ ಸಮ್ಮತಅತಿರೋಹಿತ ಜ್ಞಾನಿಗಳಿಗೆ ಜ್ಞಾನ ಭಕ್ತಿ ವೀರಾಗವ್ಯತಿರೇಕ ಅನ್ಯಾಪೇಕ್ಷ ಪೂರ್ಣರೆಂದೆನಿಪದುಅತ್ಯಂತ ವಿಲಕ್ಷಣಗಿದಾಶ್ಚರ್ಯವೇನೂಮಿತಿಯಿಲ್ಲದ ಕರ್ಮ ಪಾಶದಿಂದ ಬದ್ಧನಾಗಿತುತಿಸುವೆ ನಿನ್ನ ಗುಣರೂಪ ಕ್ರೀಯಂಗಳಪ್ರತಿಹತ ನೀನೊಲಿದು ಮಾಡಿಸಿದದರೊಳುಅತಿಶಯವಾಗಿ ಪ್ರೀತಿ ಐದಿ ನಿಜಾಲಯಪ್ರತಿಕೂಲವಾಗಿದ್ದ ದುಷ್ಕರ್ಮ ದೂರ ಮಾಡೊಅತಿಹಿತ ಶ್ರೀ ಗುರು ವಿಜಯ ವಿಠ್ಠಲರೇಯಾಭಕುತಿಯೇ ಕಾರಣ ನಿನ್ನ ಕರುಣವಾಗುವದಕ್ಕೆ ೫
ಜತೆ
ಸಾಸಿರ ಹಣ ಒಂದು ಕಾಸಿಗೆ ತೀರದಂತೆತೋಷವೆ ಬಡುವದು ಗುರು ವಿಜಯ ವಿಠ್ಠಲ ||

೧೨೪
ಧ್ರುವತಾಳ
ಭಕ್ತರ ಭಿಡಿಯ ನಿನಗೆ ಅತ್ಯಂತವಾಗಿ ಉಂಟುಭಕ್ತರಾರ್ಜಿತವಾದ ಭಾಗ್ಯನಿಧೆಸಕಲ ವೈಭವ ಸದ್ಗುಣ ಗಣ ನಿಧಿಯೆಲಕುಮಿ ಬೊಮ್ಮಾದಿಗಳಿಗೆ ಸ್ವಾಮಿ ಎನಿಸಿಏಕ ದೇಶಾಧಿಪತಿ ಉಗ್ರಸೇನನ್ನ ತುತಿಸಿ ಪ-ರಾಕು ಪೇಳಿದಿ ನಿನ್ನ ಕೃಪೆಗೇನೆಂಬೇ ಏಕಮೇವಾದ್ವೀತಿಯನ್ನಾಸ್ತಿ ಎನಿಸಿಕೊಂಡುಭೃಕುಟಿ೧ ಸನ್ನಿಧಿಗೈದಿ ವರವ ಬೇಡಿದಿಯಂತೊಪ್ರಕೃತಿ ಪ್ರಾಕಾಮ್ಯಾದಿ೨ ಆಶ್ಚರ್ಯಪೂರ್ಣನೆನಿಸಿಭಕ್ತ ಬಲಿಯದಾನ ಬೇಡಿದಯ್ಯಾನೋಕನೀಯನೆ೩ ಮೋದ ಪ್ರಮೋದ ಆನಾತ್ಮಲೋಕ ಲೋಕದಿ ಜೀವರಾಶಿಗಳಿಗೆಸಾರುವಿ ಅನ್ನೋದಕ ದ್ವಾರ ನಿಮಿತ್ಯ ಮಾಡಿರಿಕ್ತ ಸ್ತ್ರೀಯರ ಅನ್ನ ಯಾಚಿಸಿದೆಂತೊನಖ ಶಿಖ ಪರಿಪೂರ್ಣ ನಿರ್ದೋಷನೆನಿಸಿಕೊಂಡುಗೋಕುಲ ಸ್ತ್ರೀಯರನ್ನು ವೊಲಿಸಿದಯ್ಯಾವಿಖನಸಾದಿ ದೇವದಾನವ ಸಮೂಹಕ್ಕೆಶಕುತಿಗಳನೆ ಯಿತ್ತು ಪೊರೆವನಾಗಿಭಕ್ತ ಭೀಷ್ಮನು ನಿಜ ಸತಿಯ ವ್ಯಾಜದಿಂದ ಭೀಕರವಾದ ಯುದ್ಧವನ್ನು ಮಾಡಲಾಗಿ ಅ-ಶಕ್ತನಂದದಿ ಸ್ವಪ್ನ ಪರಿಯಾಗಿ ತೋರಿಸಿದಿಭಕ್ತವತ್ಸಲ ನಿನ್ನ ದಯಕೆ ನಮೊ ನಮೊಪ್ರಕಟ ಮೂರುತಿ ಗುರು ವಿಜಯ ವಿಠ್ಠಲರೇಯಭಕ್ತರೇ ಬಲ್ಲಿದರು ನಿನ್ನ ಬಲದಿ ಸ್ವಾಮಿ ೧
ಮಟ್ಟತಾಳ
ನಿತ್ಯ ಮುಕ್ತಳಾದ ಲಕುಮಿಗೆ ಸಿಲುಕದಅತ್ಯುತ್ತಮನೆ ಪಾಂಡುತನಯರ ಮನೆಯಲ್ಲಿತೆತ್ತಿಗನಂದದಲಿ ವ್ಯಾಪಾರ ಮಾಡಿಹಸ್ತಿಪುರಿಗೆ ಪೋಗಿ ಸಂಧಾನವ ಮಾಡಿ ಪಾರ್ಥಂಗೆ ವೊಲಿದು ಪರಿಪೂರ್ಣ ಕರುಣದಲಿರಥ್ಯ ಕರ್ಮವನು ಪ್ರೀತಿಯಿಂದಲಿ ಮಾಡಿಮಿತ್ರನೆನಿಸಿಕೊಂಡು ಧರೆಯೊಳು ಮೆರೆಸಿದಿಭಕುತರ ವಿಷಯದಲಿ ಎಷ್ಟು ಕರುಣ ನಿನಗೆಪುತ್ರನ ತೊಡೆಯಲ್ಲಿ ಕುಳ್ಳಿರಿಸಿಕೊಳಲುಉತ್ತಮಾಂಗ ಕೆಳಪಾದ ಸೋಕುವದೆಂತೆಂಬಚಿತ್ತವಾಗದು ಪಿತಗೆ ಅತ್ಯೋಚ್ಛಿತವಾವ ಹಿತ ಮಾಳ್ಪನಾಗಿಭಕ್ತರ ಮಹಿಮೆಯನು ವಿಸ್ತಾರ ಮಾಳ್ಪ ಮುಕ್ತರಾಶ್ರಯ ಗುರು ವಿಜಯ ವಿಠ್ಠಲರೇಯಾಪೊತ್ತವನು ನೀನೆ ಸರ್ವ ಕಾಲದಿ ಎಮ್ಮ ೨
ತ್ರಿವಿಡಿತಾಳ
ಸರಸಿಜಭವ ಹರ ಸುರರಿಗೆ ಧೊರಿ ಎನಿಸಿನರನ ಸಾರಥಿ ಕರ್ಮ ಮಾಳ್ಪವನಾಗಿತುರಗಗಳಿಗೆ ಎಚಿದ ಕಾರ್ಮುಕಗಳ ಕಿತ್ತಿಸುರರಿಗಭಯ ಕೊಡುವ ಹಸ್ತದಿಂದ ಚ-ಪ್ಪರಿಸಿ ಪುಷ್ಟಿಯ ಗೈಸಿ ಜಲತೃಣದಿಂದಲ್ಲಿಹರುಷದಿಂದಲಿ ತಂದು ರಥಕೆ ಬಿಗಿದುನರನಿದ್ದೆಡೆಗೆ ತಂದು ನಿಲ್ಲಸಿ ದಿವಿಜರಭರದಲ್ಲಿ ನಿನ್ನ ಔದಾರತನಕೆ ಕರ ಮುಗಿದು ನಮಿಸಿ ಜಯ ಜಯ ಜಯವಂದುಪಾರ್ಥನ ಭಾಗ್ಯ ಮಹಿಮೆ ವರ್ಣಿಸಿದರುಸರಸಿಜಾಂಡವನ್ನು ಇಚ್ಛಾ ಮಾತ್ರದಲಿಂದ ಸಂ-ಹರಿಪ ಶಕ್ತನಾಗಿ ಸುಮ್ಮನಿದ್ದುಅರಿಗಳ ವರ್ಗವೆಲ್ಲ ಹನನ ಮಾಡಿದನೆಂಬ ವರಖ್ಯಾತಿ ಮಾತ್ರಕ್ಕೆ ತಂದು ಇತ್ತೇಪರಿಪೂರ್ಣ ಸ್ವಾತಂತ್ರ್ಯ ಸರ್ವತ್ರ ಸಮಸ್ಥಿತಚರಿಯಕ್ಕೆ ನಮೊ ನಮೊ ಆವ ಕಾಲ ಸುರದ್ರುಮ ನಾಮ ಗುರು ವಿಜಯ ವಿಠ್ಠಲರೇಯಶರಣರ್ಗೆ ಆವಾಸಾ ಸ್ಥಾನ ನೀನೆ ೩
ಅಟ್ಟತಾಳ
ಭಕ್ತರ್ಗೆ ಪಾಪದ ಕೃತ್ಯಗಳೇ ಇಲ್ಲಕೃತ್ಯಗಳಿದ್ದರು ಲೇಪನವೇ ಇಲ್ಲಕೃತ್ಯವ ಲೇಪಿಸೆ ಭೋಕ್ತವ್ಯವೇ ಇಲ್ಲಭೋಕ್ತವ್ಯವಾದರು ನರಕಯಾತನೆ ಇಲ್ಲಭಕ್ತನಾದವ ಒಂದು ದುಷ್ರ‍ಕತ್ಯ ಮಾಡಲಾಗಿಉತ್ತಮರ ದೋಷ ನೀಚರುಂಬುವರುಯುಕ್ತಿ ಪೂರ್ವಕವಾಗಿ ಇನಿತು ಮಾಡುವಿಪ್ರತ್ಯಕ್ಷವೆ ಸರಿ ಸುರಪತಿ ದೋಷವ ಧ-ರಿತ್ರಿಗೆ ವಿಭಾಗ ಮಾಡಿದಿ ಕಾರುಣ್ಯದಿಇತ್ತಲೀಗಲು ಅದರಂತೆ ಸರಿಯನ್ನುಮುಕ್ತರಾಶ್ರಯ ಗುರು ವಿಜಯ ವಿಠ್ಠಲರೇಯ ಮಿತ್ರ ನೀನೆ ಗತಿ ಆವ ಕಾಲದಲ್ಲಿ ೪
ಭಕ್ತರ ಭಾಗ್ಯವನ್ನು ವರ್ಣಿಪರಾರಯ್ಯಶಕ್ತನಾದರು ನೀನು ಭಕ್ತರಿಗೆ ಸೋಲುವಿ ಸಪ್ತ ದ್ವಯ ಲೋಕಕ್ಕೆ ಕರ್ತೃ ನೀನಾದರು ಭಕ್ತರ ವಶನಾಗಿ ಕರದಲ್ಲಿ ಬರುವಿಭಕ್ತರ ನಿನ್ನ ನೋಳ್ಪ ಸೌಖ್ಯದ ವ್ಯತಿರಿಕ್ತಮುಕ್ತಿಯನಾದರು ಅಪೇಕ್ಷೆ ಮಾಡರಯ್ಯಪ್ರತ್ಯುಪಕಾರ ಗುರು ವಿಜಯ ವಿಠ್ಠಲರೇಯಕೃತ್ಯಗಳೆಣಿಸುವ ಭಕ್ತರುಗಳು ಕಂದಿ ೫
ಜತೆ
ಭಕ್ತರಧೀನತೆ ಬಲು ಭೂಷಣೆಲೊ ನಿನಗೆಉತ್ತಮೋತ್ತಮ ಗುರು ವಿಜಯ ವಿಠ್ಠಲರೇಯ ||

೧೪೮
[ಅರ್ತಿವಮೇಪ್ರಿಯ ಎಂಬ ನುಡಿಯು ಸುಖಪ್ರದವಾದರೂ ಎನ್ನ ಮನಸ್ಸಿಗೆ ಆನಂದವಾಗದು. ನಿನ್ನ ಕಾಣದಿಪ್ಪದೆ ದುರ್ದಿನ. ನಿನ್ನ ಕಾಣುವದೆ ಮುಕ್ತಿ ಸುಖವು. ಇನ್ನಾದರು ಮನ್ನಿಸಿ ರಕ್ಷಿಸು. ಅಪರೋಕ್ಷ ಕೊಡು, ನಿನ್ನ ಸಂದರುಶನ ಮಾಡಿಸು.]
ಧ್ರುವತಾಳ
”ಭವಾಮಿ ನ ಚಿರಾತ್ಪಾರ್ಥ’’ ಎಂತೆಂದು ನುಡಿದ ನುಡಿಕೇವಲ ಸುಖಪ್ರದವಾದರೇನುಭಾವದಲ್ಲಿ ಹರುಷ ಪುಟ್ಟದಾಯಿತು ಎನಗೆಸಾವಧಾನದಿ ಕೇಳೊ ಬಿನ್ನೈಸುವೆಸಾವಿರ ವೃಶ್ಚಿಕದ ಸ್ಪರ್ಶದಂತೆ ದುಃಖಪ್ರವಹದೊಳಗೆ ಮುಳುಗಿ ಆಪ್ತನೆಂದುದೇವ ದೇವನೆ ನಿನ್ನ ಕೂಗಿ ಕಾಣದದಕೆ ಅ-ವ್ಯವಧಾನ೧ ದಿಂದ ಬಂದು ಎನ್ನನೋವುಗಳೋಡಿಸಿ ಆದರಿಸದೆ ಬರಿದೆನೀ ಔಪಚಾರದಿಂದ ನುಡಿವದೇನೊ ಹರಿಯೇ ಅ-ತೀವಮೇ ಪ್ರೀಯನೆಂದು ನೀ ನುಡಿದ ವಾಕ್ಯವನ್ನುಆವಾವ ಕಾಲದಲ್ಲಿ ಸಫಲ ಮಾಡುಕಾವ ಕರುಣಾನಿಧೆ ಗುರು ವಿಜಯ ವಿಠ್ಠಲ ರೇಯಅವ್ಯವಹಿತವಾದ ವಿಭವ ಪೂರ್ಣ ೧
ಮಟ್ಟತಾಳ
ನಿನ್ನಿಂದಲೆ ಬೆರದ ಯುಗ ಒಂದು ಕ್ಷಣನಿನ್ನಗಲಿದ ಕ್ಷಣ ಒಂದ್ಯುಗವಾಗಿಬನ್ನ ಬಡುತಲಿಪ್ಪೆ ನಿನ್ನ ಪಾದವೆ ಸಾಕ್ಷಿಇನ್ನೀ ದುಃಖವನು ಅನಂತ ಜನುಮಕ್ಕು ಅನುಭವಿಸಲಾರೆಎನ್ನಾಳುವ ಧೊರಿಯೆ ಮುನ್ನೆ ನೋಡುನಿನ್ನ ವಿಯೋಗದಲಿಂದ ಘನ್ನ ವಿಭವ ತೃಣ ಸಮವಾಗಿ ಬಗಿದುಎನ್ನವರಿಂದಲಿ ಯುಗ ಪಂಚ ದಿನಕ್ಕೆನಿನ್ನಗಾಗಿ ಪ್ರಾಣ ಕೊಟ್ಟಿದನು ಮರತೇಚಿನ್ಮಯನೆ ನಿನ್ನ ನಿರ್ಘೃಣ ವೃತ್ತಿ೨ಗೆ ಇನ್ನಾವುದು ಸಮ ಈ ಪೃಥ್ವಿಯಲ್ಲಿ ಪಾ-ವನ್ನ ಮೂರುತಿ ಗುರು ವಿಜಯ ವಿಠ್ಠಲರೇಯಾಸನ್ನುತ ಗುಣಪೂರ್ಣ ಸಕಲಂತರ್ಯಾಮಿ ೨
ತ್ರಿವಿಡಿತಾಳ
ಮುಕ್ತಾರ್ಥ೧ ಬಿನ್ನೈಸುವೆ ಚಿತ್ತಕ್ಕೆ ತರಲಿಬೇಕುವ್ಯರ್ಥ ಮಾಡದಲೆ ಕರುಣಾ ಮಾಡುಉತ್ತಮ ಸುಖಾಪೇಕ್ಷ ಭೋಕ್ರ‍ತತ್ವ ಫಲವನ್ನು ಧಾ-ರಿತ್ರ್ಯಸ್ಥ ಸೌಜನ್ಯ ಸಹಜವೆನ್ನು ಪ್ರ-ಕೃತಿ ಜನಿತವಾದ ವಸ್ತುಗಳಿಂದಲಿಉತ್ತಮೋತ್ತಮ ಸುಖವಾಹದೇನೊಭಕ್ತರ ಶಪಥ ಕೇಳೊ ನಿನ್ನ ವ್ಯತಿರಿಕ್ತವಾಗಿಮುಕ್ತಿ ಸುಖವು ಅಧಿಕವೆನ್ನರಯ್ಯಾಸತ್ಯಲೋಕಾದಿ ಪದ ಮೊದಲಾದ ಸಂಪದವಹತ್ತದು ಎಂಬೋದು ಅನಪೇಕ್ಷ೨ದಿ ಪ್ರತ್ಯಕ್ಷವಾಗಿದೆ ನೋಡು ಸಕಲ ಜ್ಞಾನಿಗಳಲ್ಲಿಭೃತ್ಯವತ್ಸಲನೆನಿಪ ಭಾವಾಧೀಶ೩ ವಿತ್ತಪ ನಾಮರೂಪ ಗುರು ವಿಜಯ ವಿಠ್ಠಲರೇಯನಿತ್ಯ ಸುಖವು ನೀನೆ ಭಕ್ತರಿಗೆ ೩
ಅಟ್ಟತಾಳ
ನಿನ್ನಭಿಮುಖವಾದ ಯುಗ ಒಂದು ಕ್ಷಣವಯ್ಯಾನಿನ್ನನಗಲಿದ ಕ್ಷಣ ಯುಗವಾಗಿ ಕಳೆವೆಮನೋಭಿಮಾನಿಗಳಾದ ಸುರರಿದಕೆ ಸಾಕ್ಷಿಅನಾಥ ಬಾಂಧವನೆಂಬ ಬಿರಿದು ನಿನಗೆಕ್ಷೀಣವಾಗದಯ್ಯಾ ಆವಾವ ಕಾಲಕ್ಕೆಜ್ಞಾನಾಂಬುಧಿ ಚಂದ್ರ ಗುರು ವಿಜಯ ವಿಠ್ಠಲರೇಯನೀನಲ್ಲದೆ ಯಿದ್ದ ನಿಮಿಷ ಕಲ್ಪವು ದೇವಾ ೪
ಆದಿತಾಳ
ನಿನ್ನಿಂದ ರಹಿತವಾದ ದುಃಖವೇನೆಂಬುವದುಅನಂತ ಜನ್ಮಕ್ಕಿದು ವಲ್ಲೆ ಇದು ವಲ್ಲೆನಿನ್ನಿಂದ ಸಹಿತನಾಗಿ ಘನ್ನ ನರಕದೊಳುಜನುಮಂತವಾಗಿ ಇಪ್ಪದು ಲೇಸುಇನ್ನೀ ಜನ್ಮದಿಂದ ಭಜಿಸಿದ ಕಾಲಕ್ಕೂಮುನ್ನಿನ ಪುಣ್ಯಶೇಷವನ್ನು ಮನಿಯ ಮಾಡಿನಿನ್ನಿಂದ ಸಹಿತನಾಗಿ ಇರುವಂತೆ ಮಾಡುವದುಪನ್ನಗಚಲವಾಸ ಗುರು ವಿಜಯ ವಿಠ್ಠಲರೇಯಾಬಿನ್ನಪವನು ಕೇಳಿ ಸಂತುಷ್ಟನಾಗುವದು ೫
ಜತೆ
ನಿನ್ನ ಕಾಣದೆ ಕಳೆವ ದಿನವೆ ದುರ್ದಿನ ದೇವಾಮನ್ನಿಸಿ ರಕ್ಷಿಪದು ಗುರು ವಿಜಯ ವಿಠ್ಠಲರೇಯಾ ||
(ಪಿಂಗಳನಾಮ ಸಂವತ್ಸರ ಚೈತ್ರ ಶುದ್ಧ ೧೧. ಆದಿತ್ಯವಾರ)

ತಾತ್ವಿಕ ಹಿನ್ನೆಲೆಯ ಸುಳಾದಿಗಳು
೧೬೧
[ಜ್ಞಾನ ಯಜ್ಞ ಸುಳಾದಿ – ಅಧ್ಯಾತ್ಮ ಉಪಸಾನೆ]
ಧ್ರುವತಾಳ
ಮಖವನ್ನೆ ಮಾಡುವದು ಮರ್ಮವ ನೀನರಿತುವಿಖನಸಾರ್ಚಿತ ಪಾದ ಮನದಿ ನಿಲಿಸಿಕಕುಲಾತಿಯನ್ನೆ ಬಿಟ್ಟು ದುರುಳರಿಗರುಹದಲೆಭಕುತಿಯಿಂದಲಿ ಯಜಿಸು ನೇಹದಿಂದನಖ ಶಿಖ ಪರಿಪೂರ್ಣ ಹರಿ ತಾನು ವಿಧಿ ಶಿವಾದಿಶುಕವಾಕ ಮೊದಲಾದ ಅಶೀತಿ ನಾಲ್ಕುಲಕ್ಷಸಕಲ ಜೀವಿಗಳಲ್ಲಿ ತನ್ನಾಮ ತದ್ರೂಪಸಖನಾಗಿ ಧರಿಸಿ ತತ್ತ ಚೇಷ್ಟೆಗಳ ಯುಕುತಿಯಿಂದಲಿ ಮಾಳ್ಪ ಅಂಭಸ ಪದ್ಮ ಇವ ಆ-ಸಕುತಿಯಿಂದಲಿ ಗ್ರಹಿಸೊ ಮುಖ್ಯವಾಗಿತ್ವಕು ಮೊದಲಾದ ಧಾತು ಕರಣಾದಿ ದೇಹದಲ್ಲಿ ಅ-ನೇಕ ರೂಪಗಳಿಂದ ವ್ಯಾಪ್ತನಾಗಿಪ್ರಕೃತಿ ಕಾಲಕರ್ಮ ಜೀವ ಲಕ್ಷಣದಂತೆಸಖನಾಗಿ ಮಾಡಿ ತತ್ತ ಜನಿತವಾದಸುಖ ದುಃಖ ಫಲ ”ಅನಶ್ನನ್’’ ಎಂಬೋ ಶೃತಿಯಂತೆಏಕಮೇವನು ಉಣದೆ ಜೀವರಿಗೆಹಾಕುವ ತೆರ ಆತ್ಮೋಪಮ್ಯೇನ ಸರ್ವತ್ರಲೋಕ ಲೋಕಾದಿ ತಿಳಿಯೋ ಇನಿತು ನೀನು”ಯೋಂತಶ್ಚರತಿ ಭೂತಾತ್ಮಾ ಯಸ್ತಪತ್ಯಂಡ ಮಧ್ಯಗ !’’ಶುಕಮುನಿ ವಾಕ್ಯದಂತೆ ದೃಢದಿ ನಂಬೋಶಕತನಾದ ಹರಿ ನಿಂದು ಮಾಡಿಸದಿರೆಲಕುಮಿ ವಿರಿಂಚಿ ಭವ ಶಕ್ರಾದ್ಯರು ಅ-ಶಕ್ತರಯಾ ಶ್ವಾಸ ಬಿಡಲು ಯೋಗ್ಯರಲ್ಲಪ್ರಕಟವಾಗಿದೆ ಶ್ರುತಿ ಶಾಸ್ತ್ರದಲ್ಲಿಮುಕುತಿಗೆ ದ್ವಾರವಿದು ಇನಿತು ತಿಳಿವ ನರರಿಕತ ನಲ್ಲವೊ ಬಲು ಭಾಗ್ಯಾಧಿಕನುಭಕುತಿಯಿಂದಲಿ ಅಲ್ಪ ಜಲವ ಕೊಡುವನ್ಯಾಕೆವಿಖನಸಾಂಡ ದಾನವಿತ್ತ ಫಲಕೆ ಅ-ಧಿಕಾರಿಯಾಗುವನು ಸಂಸಾರ ಮುಕ್ತನಾಗಿಶಕಟ ಭಂಜನ ಕರವ ಪಿಡಿವ ಬೇಗಕೃಕಳಂತರ್ಯಾಮಿ ಗುರು ವಿಜಯ ವಿಠ್ಠಲರೇಯಮಖ ಶಬ್ದವಾಚ್ಯನು ಮಖಭೋಕ್ತನು ೧
ಮಟ್ಟತಾಳ
ವಾಜಪೇಯ ಪೌಂಡರಿಕ ಮೊದಲಾದರಾಜಸ ಯಜ್ಞಗಳು ಬಲು ವಿಧವಾದಂಥವ್ಯಾಜಗಳಲ್ಲದಲೆ ಸರ್ವರಿಗೊಶವಲ್ಲ ಸ-ಹಜವಾಗಿದ್ದ ರಜೋಗುಣ ಕರ್ಮಗಳುರಾಜಿಸುವ ಸತ್ವಗುಣ ಮಿಶ್ರಿತವಿಲ್ಲದಲೆಭೋಜ ಕುಲೋತ್ತಮನ ಪ್ರೀತಿಯಾಗದು ಕೇಳಿ ವೈ-ರಾಜಿವಾದ ಜ್ಞಾನದ ವ್ಯತಿರಿಕ್ತರಾಜೀವ ಪೀಠ ಮಿಕ್ಕಾದವರೆಲ್ಲನೈಜವಾದ ಗತಿ ಐದರು ಎಂದಿಗೂರಾಜೀವ ಮಿತ್ರ ಗಗನದಿ ಉದಯಿಸದೆ ಆ-ರಾಜಿತವಾದ ತಮ ಓಡದು ಎಂದಿಗೂಬೀಜ ಮಾತಿದು ಕೇಳಿ ”ನಹಿ ಜ್ಞಾನೇನ ಸದೃಶಂ’’ಸುಜನರು ಇದರನ್ನ ನಿವ್ರ್ಯಾಜದಿ ತಿಳಿದುಮೂಜಗದೊಡಿಯನ್ನ ಪೂಜಿಸು ಜ್ಞಾನದಲಿವಾಜಿವದನ ಗುರು ವಿಜಯ ವಿಠಲರೇಯನಆ ಜನ್ಮವ ಭಜಿಸೆ ಅವಗಾವದು ಸಮ ೨
ರೂಪಕತಾಳ
ಸ್ನಾನವಿಲ್ಲದ ಕರ್ಮ ಎಣಿಕೆಯಿಲ್ಲದ ಜಪಪಾನಯಿಲ್ಲದ ಅನ್ನದಾನದಂತೆಜ್ಞಾನಯಿಲ್ಲದೆ ಕರ್ಮ ಏನೇನು ಮಾಡಲುಮಾಣದೆ ಗಜಭುಕ್ತ ಕಪಿತ್ಥವತು ”ಕ-ರ್ಮಣಾ ಜ್ಞಾನಮಾಪ್ನೋತಿ ಜ್ಞಾನೇನ ಅಮೃತೀ ಭವತಿ’’ಈ ನುಡಿ ಪ್ರಮಾಣದಂತೆ ಜನರು ಕೇಳಿಜ್ಞಾನ ಮಾರ್ಗದಿಂದ ಹರಿಯ ಯಜಿಸೋಗೌಣಾಧಿಕವಾದ ಅಧಿಷ್ಠಾನಗಳ ಗ್ರಹಿಸಿಆನಂದತೀರ್ಥರ ವಾಕ್ಯದಂತೆ ಸಾನುರಾಗದಿ ಶ್ರುತಿಗೆ ಅಪ್ರಾಮಾಣ್ಯ ಬರಲೀಯದೆಧೇನಿಸು ಹರಿ ವ್ಯಾಪ್ತಿ ಜಡ ಚೇತನದಿ ಅ-ಜ್ಞಾನಿ ಜನರೊಳು ಬೆರದಿದ್ದ ಕಾಲಕ್ಕುಮನಸಿನಲ್ಲಿ ವ್ಯಾಪ್ತಿ ಮರೆಯದಿರುಏನೇನು ಕರ್ಮಗಳು ಲಕುಮಿ ನಾರೇಯಣರುಪ್ರಾಣದೇವರ ದ್ವಾರ ಮಾಳ್ಪರೆನ್ನುಪ್ರಾಣನಾಥನು ಖಗ ಅಹಿಪೇಶ ಮೊದಲಾದಸುಮನಸರಿಂದಲಿ ಮಾಳ್ಪನೆನ್ನುಗೌಣರಿಗಧಿಕರು ಪ್ರೇರಕರಾಗಿಹರುಕಾಣಿಸದಿಪ್ಪರು ಮಂದರಿಗೆಜ್ಞಾನ ಪ್ರಾಪುತವಾಗೆ ಪ್ರತ್ಯಕ್ಷವಾಹರುದಾನವಾಂತಕಗಿವರು ಅಧಿಷ್ಠಾನರುಸ್ಥಾಣು ಚೇತನ ಮಿಕ್ಕ ಆವಾವ ಸ್ಥಳದಲ್ಲಿಮಾಣದೆ ತಿಳಿ ಇನಿತು ಲಕ್ಷಣದಿಜ್ಞಾನಿಗಳರಸ ಗುರು ವಿಜಯ ವಿಠ್ಠಲರೇಯಪ್ರಾಣಿಗಳಲ್ಲಿ ವ್ಯಾಪ್ತನಾಗಿಹನು ೩
ಝಂಪೆತಾಳ
ಸಾಧನದೊಳಧಿಕ ಸಾಧನಾವೆನಿಸುವುದುಸಾದರದಿ ಕೇಳುವರು ವಿಬುಧರೆಲ್ಲಮೇದಿನಿಯೊಳಗಿದ್ದ ಖಳರು ಅಹಂಕಾರದಲಿಗೋಧನ ಮೊದಲಾದ ಮಹದಾನವಕ್ರೋಧಾದಿ ಗುಣದಿಂದ ಇತ್ತರಾದೆಡೆ ಅವಗೆಮೋದವಾಹದೆಂತೊ ಇಹಪರದಿಸಾಧುಗಳು ಇದು ತಿಳಿದು ಜ್ಞಾನಾಖ್ಯ ಸುಧಿಯನ್ನು ಆ-ಸ್ವಾದಿಪರು ಕ್ರೋಧಾದಿ ಗುಣವ ಮರೆದುಶ್ರೀಧರನು ತನ್ನ ನಿಜ ಸಂಕಲ್ಪದಿಂದಲಿ ಅ-ನಾದಿ ಕರ್ಮ ಪ್ರಕೃತಿ ಕಾಲ ಜೀವಅಧಿಕಾರವನರಿತು ಕೊಟ್ಟದಕೆ ಮತ್ತಧಿಕ ಬೇ-ಡದಲಿರು ಶ್ರೀಶನಾಜ್ಞವೆಂದುಯದ್ರಿಚ್ಛ ಲಾಭದಿಂ ಸಂತುಷ್ಟನಾಗಿ ನೀನುಮೋದ ವೈದು ಇದ್ದ ವಿಭವದೊಳುಅಧಿಕಾಧಿಕವಾದ ಜ್ಞಾನವಾಪೇಕ್ಷಿಸುತಬೋಧಕರ ಸಂಗದಲಿ ಬೆರೆದು ನೀನುಮೇದಿನಿ ಸುರರನ್ನ ಕರದು ಮನ್ನಿಸಿ ಪರಮಆದರದಿ ಅನ್ನೋದಕವ ಕೊಡಲುಮೋದಮಯ ತಾನುಂಡು ಕೋಟ್ಯಾಧಿಕವಾದಸಾಧು ಯಜ್ಞದ ಫಲವು ತಂದು ಉಣಿಪಮಾಧವನ ಅರ್ಚನೆಗೆ ಭೂಸುರೋತ್ತಮ ತಾನುಅಧಿಷ್ಠಾನವೆಂದು ಗ್ರಹಿಸೋ ನೀನುಮೇದಿನಿ ಮೇಲಿದ್ದ ಕ್ಷೇತ್ರ ಮೂರುತಿ ಬಿಟ್ಟುಸಾದರದಿ ಕ್ಷೇತ್ರವನ್ನು ಭಜಿಸಿದವರಿಗೆಖೇದವಲ್ಲದೆ ಅವಗೆ ಮೋದವಾಹದೇನೋಮೇದಿನಿ ಸುರರಲ್ಲಿ ವ್ಯಾಪ್ತನಾದಆದಿದೇವನ ತುತಿಸಿ ಷೋಡಶೋಪಚಾರಈ ದ್ವಾರದಲಿ ಮಾಡುವದು ಜ್ಞಾನದಿಂದವೈದರ್ಭ ರಮಣ ಗುರು ವಿಜಯ ವಿಠ್ಠಲರೇಯಸಾಧಿಸೀ ಪರಿಯಿಂದ ತಿಳಿದು ನೀನು ೪
ತ್ರಿವಿಡಿತಾಳ
ಮೇಲು ಭಾಗದಲ್ಲಿ ಶಿರಸ್ಸನಲ್ಲಿಗೆ ದ್ವಿದ್ವಾಶಾಂ-ಗುಲಿ ಮೇಲೆ ದ್ವಿದಶ ದಳಯುಕ್ತಕೀಲಾಲಜವುಂಟು ಚಂದ್ರಪ್ರಕಾಶದಂತೆಆಲಯವೆನಿಪದು ಮುಕ್ತಾಮುಕ್ತರಿಂದವಾಲಗಗೊಳುತಿಪ್ಪ ಸರ್ವಸಾಕ್ಷಿಯಾಗಿಬಾಲಮತಿಯ ಬಿಟ್ಟು ಗುರು ಮುಖದಿಂದ ತಿಳಿದುಕಾಲಕಾಲಕೆ ತಿಳಿ ಸ್ವ ಪರದೇಹದಲ್ಲಿಖೂಳ ಜನರಿಗೆ ಕುರುಹು ಕಾಣಿಸದಲೆವ್ಯಾಳೆ ವ್ಯಾಳೆಕ್ಕೆ ಪರಮ ಭಕುತಿಯಿಂದಶೀಲ ಮೂರುತಿಯ ಧೇನಿಸಿ ನೀನಿತ್ತಸ್ಥೂಲ ರಸವನು ಸ್ವೀಕರಿಸು ಎಂದುಲೋಲ ಮನಸ್ಸಿನಿಂದ ಬೇಡಿಕೊಳ್ಳಲು ಹರಿವಾಲಗ ಸಹವಾಗಿ ಪ್ರೀತನಾಗಿಆಲಸವಿಲ್ಲದಲೆ ತೃಣ ಮೇರು ಮಾಡಿ ತನ್ನಹೇಳಲ ಬುದ್ಧಿಯಿಂದ ಇದನು ತಿಳಿಯದಲೆಸಾಲು ಕೋಟಿಗೆ ಅನ್ನವಿತ್ತೆನೆಂದುಬಾಲಮತಿಗಾನು ಬರಿದೆ ಅಹಂಕಾರದಿಂದಲಿಪ್ರಲಾಪಿಸಿದರೆ ಹರಿ ತುಷ್ಟನಾಹನೆವ್ಯಾಳ ವ್ಯಾಘ್ರನಾಮ ಗುರು ವಿಜಯ ವಿಠ್ಠಲರೇಯನಲೀಲೆಯಿನಿತೆಂದು ಸ್ಮರಿಸಿ ಬದುಕೋ ೫
ಅಟ್ಟತಾಳ
ಸತ್ಯಲೋಕವು ಶೀರ್ಷದಲ್ಲೆ ಇಪ್ಪದು ಕೇಳಿಸತ್ಯಲೋಕಾಧಿಪನು ಸಹಸ್ರರೂಪನ್ನಭಕ್ತಿಯಿಂದಲಿ ಭಜಿಸಿ ಸಾಸಿರ ಕೇಸರಯುಕ್ತವಾದ ಕಮಲ ಮಧ್ಯದಿ ಪೊಳೆವನ್ನಕೃತ್ತಿವಾಸನೆ ಮೊದಲಾದ ಗೀರ್ವಾಣರುಭಕ್ತರಾಗಿ ಸೇವೆ ಮಾಳ್ಪರು ಕ್ರಮದಿಂದಉತ್ತುಮೋತ್ತುಮ ದೇವ ಪರಿವಾರ ಸಮೇತತುತಿಸಿಕೊಳ್ಳುತ್ತ ವ್ಯಕ್ತವಾಗಿಹನುಧಾತ್ರಿಯೊಳಗೆ ಇದು ತಿಳಿದ ಮನುಜಮೃತ್ಯು ರೂಪವಾದ ಸಂಸಾರ ದೂರನುಪಾರತ್ರಿಕವಾದ ಸುಖದಿ ನಿತ್ಯದಿ ಕಾಣೊಈ ತೆರದಿಂದಲಿ ತಿಳಿದು ಈ ಬಗೆಯಿಂದತೃಪ್ತನಾಗೆಂದೆನ್ನ ಭಕ್ತಿಗೆ ವಶನಾಗಿಉಕ್ತಿ ಲಾಲಿಪರಯ್ಯಾ ಉದಾಸೀನ ಮಾಡದೆಕೃತಕೃತ್ಯನೆನಿಪ ಗುರು ವಿಜಯ ವಿಠ್ಠಲರೇಯಸತ್ಯವಾದ ಪದ ಐದಿಪ ಶೀಘ್ರದಿ ೬
ಆದಿತಾಳ
ದ್ವಿದಳಯುಕ್ತವಾದ ಕಿಂಜಲ್ಕ ಫಾಲಭಾಗಮಧ್ಯದಲಿ ಇಪ್ಪದುಇದನೇವೆ ತಪೋ ಲೋಕಯದುಕುಲ ಶ್ರೇಷ್ಠ ತಾನು ಲೋಕಾಧಿಪತಿ ಮಿಕ್ಕಆದಿತ್ಯರಿಂದ ಸೇವೆಗೊಂಬುವ ನಿತ್ಯದಲ್ಲಿಆದರದಲಿ ತಿಳಿ ಸ್ವಪರ ದೇಹದಲ್ಲಿಭೂದೇವತೆಗಳ ಪ್ರಿಯ ಗುರು ವಿಜಯ ವಿಠ್ಠಲರೇಯನ್ನಪಾದಗಳ ಧೇನಿಸು ಈ ಬಗೆಯಿಂದ ತಿಳಿದು ೭
ಇಂದ್ರಯೋನಿಯಲ್ಲಿ ಷೋಡಶದಳ ಅರ-ವಿಂದ ಶೋಭಿಸುವುದು ಧವಳ ವರ್ಣದಿಂದ ಪೊಳೆವದು ಇದನೇವೆ ಜನೋ ಲೋಕವೆಂದು ಕರೆವರು ವಿಬುಧರೆಲ್ಲಹೊಂದಿಕೊಂಡಿಪ್ಪನು ಲಕುಮಿ ನಾರಾಯಣವೃಂದಾರಕ ಶ್ರೇಷ್ಠ ಅಹಿಪ ದೇವರಿಂದ ಪೂಜೆಯಗೊಂಬ ನವವಿಧ ಭಕುತಿಯಿಂದಕುಂದು ಕಂಧರ ಮಿಕ್ಕ ದಿವಿಜರೆಲ್ಲವಂದಿಸಿಕೊಳುತಲಿ ಆನಂದದಲಿಹರುತಂದು ಇವರ ಫಲವ ತಿಳಿದವರ್ಗೆಚಂದ್ರಕಲಾಭಿಮಾನಿ ದಿವಿಜರ ಸಂತತಿಗೆಮಂದಿರವೆನಿಪದು ಆವಕಾಲಾಕುಂದು ಜನರ ಮನಕೆ ಎಂದಿಗೂ ತೋರನಯ್ಯ ನಿ-ಸ್ಸಂದೇಹದಲ್ಲಿ ನಂಬಿದವಗೆಮುಂದೊಲಿದು ಪೊಳೆವನು ವೇದೈಕ ವೇದ್ಯನುಒಂದಿಷ್ಟು ಅಹಂಕಾರ ಬಂದೊದಗೆಇಂದ್ರಗಾದರು ಶಿಕ್ಷೆ ಮಾಡದೆ ಬಿಡನಯ್ಯ”ಚಂದ್ರ ಶತಾನನ ಕುಂದ ಸುಹಾಸವಂದಿತ ದೈವತ ಆನಂದ ಸಂಪೂರ್ಣ’’ಎಂದೆಂದು ಬಿಡದೆ ಎಮ್ಮ ಸಲಹತಿಪ್ಪನೆಂದು ಕೊಂಡಾಡಿ ಪರಮ ಭಕುತಿಯಿಂದಲಿ ನಮಿಸಿ ಎನ್ನಿಂದ ಪ್ರೀತನಾಗುಯೆಂದು ಬೇಡೆಇಂದಿರಾಪತಿ ತನ್ನ ಪರಿವಾರ ಸಮೇತನಿಂದು ತೃಪ್ತನಾಹ ಭಕುತಿ ಪಾಶದಿಂದ ಕಟ್ಟಿಸಿಕೊಂಬ ಸ್ವತಂತ್ರ ಪುರುಷನಾಗೆಮಂದತನವೆ ಬಿಟ್ಟು ಇದನೇವೆ ಗ್ರಹಿಸುಕಂದರ್ಪ ಕೋಟಿ ರೂಪ ಗುರು ವಿಜಯ ವಿಠ್ಠಲರೇಯಬಂಧು ಎನಿಪ ಭಕುತ ನಿಕರಕೆಲ್ಲ ೮
ಮಟ್ಟತಾಳ
ಉರದಲ್ಲಿ ದ್ವಾದಶ ದಳ ಪದುಮವೆ ಉಂಟುಕರೆಸುವುದು ಇದು ಮಹರ್ಲೋಕವು ಯೆಂದುಹರಿನಾಮ ಮಿಕ್ಕಾದ ಭಗವದ್ರೂಪಗಳುಮಿರುಗುತಿವೆ ನೋಡು ಭೇದಗಳಿಲ್ಲದಲೆಪುರವೈರಿ ತನ್ನ ನಿಜ ಸತಿ ಸಹಿತದಲಿಪರಮ ಭಕುತಿಯಿಂದ ವಾಲ್ಗೈಸುತಲಿಹರುಸುರಪತಿ ಮಿಕ್ಕಾದ ದಿವಿಜರ ಸಂಘವನುಪರಿತೋಷದಲಿಂದ ಪೂಜಿಯನು ಮಾಡುವರುನರನೆ ಈ ಪರಿ ತಿಳಿದು ಕರವ ಮುಗಿದು ನಮಿಸಿಪರಿತೃಪ್ತಿಯನೈದು ನೀನಿತ್ಯ(ತ್ತ) ರಸದಿಂದಪರಿಪೂರ್ಣನಾದರು ಭಕ್ತರ ವಶನಾಗಿಸ್ವೀಕರಿಸುವ ಬಿಡದೆ ನಿತ್ಯ ತೃಪ್ತನಾಗಿಪರಿಪೂರ್ಣ ಮೂರುತಿ ವಿಜಯ ವಿಠ್ಠಲರೇಯಸಾರ ಹೃದಯ ನೋಡಿ ಸ್ವೀಕೃತನಾಗುವ ೯
ತ್ರಿವಿಡಿತಾಳ
ಹೃದಯದಲ್ಲಿ ಅಷ್ಟದಳದ ಪದುಮ ಉಂಟುಉದಯಾದಿತ್ಯ ವರ್ಣದಂತಿಪ್ಪದೋಇದನೇವೆ ಸ್ವರ್ಲೋಕವೆಂಬುವರು ಜ್ಞಾನಿಗಳುತ್ರಿದಶಾಧಿಪತಿಯಾದ ಇಂದ್ರ ಮಿಕ್ಕಆದಿತೇಯರಿಂದ ಪೂಜಿಯಗೊಂಬುವನುಮೋದ ಸಾಂದ್ರ ಲಕುಮಿ ನಾರಾಯಣಆದಿಮೂರುತಿ ಕೇಶವಾದಿ ಚತುರ ದ್ವಿದಶ ಮ-ತ್ಸ್ಯಾದಿ ರೂಪವು ಮಿಕ್ಕ ವರ್ಣ ಪ್ರತಿ ಪಾದನ ರೂಪ ಸ್ವಮೂರ್ತಿ ಗಣಮಧ್ಯಗನಾಗಿಆ ದಿಕ್ಪಾಲಕರಿಂದ ಪೂಜಿಯಗೊಳುತಪದೋಪದಿಗೆ ಬಂದು ಪಹರಿಯಾ ತಿರಗುವಸದಾಕಾಲದಲ್ಲಿ ವಿಹಿತಾವಿಹಿತ ಮಾಳ್ಪಇದು ಮೀರಲೊಶವಲ್ಲ ವಿಧಿ ಭವ ನಿರ್ಜರರುಇದೇ ಮಾರ್ಗದಿಂದ ಸಂಚರಿಸುವರುಇದೇ ಮೂಲ ಪತಿ ಪದಕೆ ಅಭಿಮುಖನಾಗಿ ಪ್ರಾಣಪದವ ಆಶ್ರೈಸಿ ಇಪ್ಪ ಜೀವ ತಾನುಐದು ದ್ವಾರದಲಿ ಪಂಚರೂಪನಾಗಿಬೋಧ ಮೂರುತಿ ಪ್ರಾಣರುಂಟು ಕೇಳಿಮೊದಲ ದ್ವಾರದಲ್ಲಿ ಪ್ರಾಣನಾಶ್ರಯದಿ ಪುಷ್ಕರಾದ್ಯರು ಅನಿರುದ್ಧನ ನೋಳ್ಪರಯ್ಯಾಸುದಕ್ಷಿಣ ದ್ವಾರದಲಿ ಅಪಾನಾಂತರ್ಗತಪ್ರದ್ಯುಮ್ನನ ನೋಳ್ಪರು ಋಷಿಗಳೆಲ್ಲಆದರದಲಿ ಕೇಳೊ ಮೂರನೆ ದ್ವಾರದಲಿಅರಿದಲ್ಲಣ ವ್ಯಾನಾಂತರ್ಗತ ಸಂಕರಷಣನನ್ನುವಿಧಿಯಿಂದ ನೋಳ್ಪರು ಪಿತೃದೇವತೆಗಳುಮುದದಿಂದ ತಿಳಿವದು ನಾಲ್ಕನೆ ದ್ವಾರದಲ್ಲಿ ಜಗದ ಸೂತ್ರನೆನಿಪ ಸಮಾನಂತರ್ಗತನಾದ ವಾಸುದೇವನ ತುತಿಪರು ಗಂಧರ್ವ ಗಣರುಐದನೇ ದ್ವಾರ ಊಧ್ರ್ವ ಭಾಗದಲ್ಲಿಪ್ಪರುಉದಾನಾಂತರ್ಗತ ಲಕ್ಷೀನಾರಾಯಣನಾಮದನ ವೈರಿ ಮಿಕ್ಕ ಸುರರೆಲ್ಲ ವಂದಿಪರುಮೊದಲು ಪೇಳಿದ ನಾಲ್ಕು ದ್ವಾರದಲ್ಲಿನಂದ ಸುನಂದನ ಮೊದಲಾದ ಅಷ್ಟ ಜನಆದಿದೇವನ ಪ್ರಥಮ ದ್ವಾರದಿಹರುಇದರ ಮೇಲೆ ಮೂರು ಮಂಡಲವುಂಟು ಕೇಳಿ ಮ-ತ್ತದು ಮೇಲೆ ವಿಶಾಲ ದೇಶವುಂಟು ಆಪ್ರದೇಶದಲ್ಲಿ ನೂರು ಕಂಬದ ತೇರುಉದಯಾರ್ಕನಂತದಂತೆ ಪೊಳೆವೂವುದೊ ಚಿ-ನ್ನದ ದಾಮದಿಂದ ವಿರಾಜಿಸುವ ಘಂಟೆ ನಾದದಿಂದೆಸೆವುತಿದೆ ಮುತ್ತಿನ ಗೊಂಚಲದಿಂದ ಬೆಳಗುತಿದೆ ಚಂದ್ರಪ್ರಕಾಶದಂತೆ ಮುದದಿ ಶೋಭಿತವಾದ ರಥದ ಮಧ್ಯಅದುಭೂತವಾದ ಮಹಿಮ ಪ್ರಾಜ್ಞನಾಮಕ ತಾನುವಿಧಿಭವಾದಿಗಳಿಂದ ಪೂಜೆಗೊಳುತಒದಗಿ ತುತಿಪ ಜನಕೆ ಅಭಯ ಕೊಡುವನಾಗಿ ಈ ತೆ-ರದಿ ನಿಂದಿಹ ಕರುಣಾವನಧಿ ಹರಿಪ್ರಾದೇಶ ಪರಿಮಿತಿ ಹರಿ ತಾನು ನಿಂದುಈ ದೇಹ ರಕ್ಷಿಪನು ನಾಳದಲಿ ನಿಂತುವಿಧಿ ಭವ ಸುರರಿಂದ ವಂದಿತನಾಗಿ ಹರಿಹೃದಯದೊಳಗೆ ಇರುವ ತಿಳಿಯದಲೆಉದಯಾಸ್ತಮಾನ ಬರಿದೆ ಸಾಧನ ಮಾಡುವನ್ನಹದುಳತನಕೆ ನಾನೇನೆಂಬೆನೋಉದಯಾರ್ಕ ಪ್ರಭು ಗುರು ವಿಜಯ ವಿಠ್ಠಲನ್ನಒದಗಿ ಬೇಡಿಕೋ ತೃಪ್ತನಾಗು ಎಂದು ೧೦
ಅಟ್ಟತಾಳ
ನಾಭಿ ಸ್ಥಾನದಲ್ಲಿ ಆರು ದಳದ ಪದ್ಮಶೋಭಿಸುತಿದೆ ಭುವರ್ಲೋಕ ನಾಮದಿಂದ ನೀ ಲಾಭ ಮೊದಲಾದ ಚತುರ ರೂಪಂಗಳುನಾಭಿಜಾತನ್ನ ಸಮನಾದ ದೇವನೊಳುಶೋಭಿಸುತಿಪ್ಪನು ಪ್ರದ್ಯುಮ್ನ ದೇವನುಸು ಭಕುತಿಯಿಂದ ಗಣಪತಿ ಸೇವಿಪನಾಭಿ ಸಂಭವ ಮೊದಲಾದ ದೇವತೆಗಳುವೈಭವದಿಂದಲಿ ವಂದಿಪರು ಪದುಮ-ನಾಭನ ಸತಿಯರು ಆರು ಜನರು ಉಂಟುಸೌಭಾಗ್ಯವಂತರು ಇದು ತಿಳಿಯದವ ಮುಖ್ಯನಿರ್ಭಾಗ್ಯನೆ ಸರಿ ಈ ಸೊಬಗು ತಿಳಿದವತ್ರಿಭುವನದೊಡಿಯ ಗುರು ವಿಜಯ ವಿಠಲರೇಯಸಾಭಿಮಾನದಿಂದ ಪೊರೆವನೊ ತಿಳಿದರೆ ೧೧
ರೂಪಕತಾಳ
ಮೂಲ ಸ್ಥಾನದಲ್ಲಿ ಚತುರದಳ ಪದ್ಮ ಪ್ರ-ವಾಳ ಮಾಣಿಕ ವರ್ಣದಂತಿಪ್ಪದುಭೂರ್ಲೋಕವಿದು ಯೆಂದು ಕರೆವರು ವಿಬುಧರುನೀಲೋತ್ಪಲ ಶ್ಯಾಮನಾಳುಗಳುನಾಲ್ಕು ನಾಡಿಗಳಲ್ಲಿ ನಾಲ್ಕು ರೂಪದಿ ಹರಿನಾಲ್ಕು ವೇದಗಳಿಂದ ತುತಿಸಿಕೊಳುತಮೇಲೆನಿಪ ಸುಷುಮ್ನದಲಿ ನಾರಾಯಣ ಲಕುಮಿಕೀಲಾಲಜ ಮಿಕ್ಕ ಸುರರಿಂದಲಿವಾಲಗ ಕೊಳುತಿಪ್ಪ ಆನಂದ ಪೂರ್ಣನುಶೀಲ ಭಕುತಿಯಿಂದ ಮನು ಶ್ರೇಷ್ಠನುನೀಲಾಭನನಿರುದ್ಧನರ್ಚಿಪ ನಿರುತ ಸ-ಲೀಲಜಕೆ ಅಭಿಮಾನಿ ಎನಿಸಿಕಾಲಚಕ್ರದ ತೆರದಿ ಜಡವಾಯು ತಾನೆಂದುಮೇಲಧೋ ಭಾಗದಲಿ ತಿರುಗುವದುಮೂರ್ಲೋಕನಾಥನು ಇನಿತು ವ್ಯಾಪಕನಾಗಿ ವಿ-ಶಾಲ ಕರುಣದಿಂದ ಸಲಹುತಿರೆಬಾಲ ಮತಿಗರಾಗಿ ಗ್ರಹಿಸದಿರು ಮನುಜಾವ್ಯಾಳ ವ್ಯಾಘ್ರಗೆ ಸರಿ ನರನಾದರೂಹೂಳುವ ನಿರಿಯ ನಿತ್ಯದಲ್ಲಿ ಯಮ ತಾನುಬಾಳುವನೆಂತೋ ಮುಕ್ತಿ ಪಥದಿಂದಲಿಕೀಲು ಕೀಲಿಗೆ ನಿಂದು ವ್ಯಾಪಾರ ಮಾಳ್ಪನ್ನಆಲೋಚಿಸಿ ತಿಳಿಯದೆ ವ್ಯರ್ಥವಾದಸಾಲು ಕರ್ಮವ ಮಾಡೆ ಅವನ ಸಾಹಸವನ್ನುಸೂಳಿಗಿಕ್ಕಿದ ಧನದಂತೆ ನೋಡೊಪಾಲಸಾಗರ ಶಾಯಿ ಗುರು ವಿಜಯ ವಿಠ್ಠಲನ್ನಲೀಲೆ ತಿಳಿದು ತೃಪ್ತನಾಗು ಇನ್ನು ೧೨
ಝಂಪೆತಾಳ
ಊರು ದ್ವಯಗಳಲ್ಲಿ ಅತಳ ವಿತಳ ಲೋಕಚಾರು ಜಾನುಗಳಲ್ಲಿ ಸುತಳ ಲೋಕಸಾರ ಜಂಘದಿ ತಳಾತಳವು ಇಪ್ಪದು ನೋಡಿಥೋರಗುಲ್ಫದಿ ಮಹಾ ತಳವು ಕೇಳಿಸಾರುತಿದೆ ಪ್ರಪದದಲಿ ರಸಾತಳ ಲೋಕವೆಂದುಮೀರದಲೆ ಕೇಳೊ ಪಾತಾಳ ಲೋಕತೋರುತಿದೆ ಪಾದ ಮೂಲದಲಿ ಸುಜನರುಗಳಿಗೆಬರಿದೆ ಮಾತುಗಳಲ್ಲ ಶ್ರುತಿ ಸಿದ್ಧವೋಮೂರುವರೆ ಕೋಟಿ ತೀರ್ಥಂಗಳುಂಟು ಅಂಗುಟದಿಧಾರುಣಿಯ ಕೆಳಗಿಪ್ಪ ಜಲ ಸಂಜ್ಞದಿನಾರಾಯಣನು ಕೂರ್ಮನಾಗಿ ಪೊತ್ತಿಹನಲ್ಲಿಸಾರ ಸುಂದರ ಮೂರ್ತಿ ತೀರ್ಥ ಪಾದಾನಾರಾಯಣನು ನಿಂದು ದೇಹ ದೇಹಂಗಳಭಾರ ಪೊತ್ತಿಹ ಸಿರಿ ವಾಯು ಸಹಿತಈ ರೀತಿ ಹರಿ ತನ್ನ ಪರಿವಾರ ಸಹಿತದಲಿಶಾರೀರ ವ್ಯಾಪಾರ ಮಾಡುತಿರಲುಕ್ರೂರರಿದು ತಿಳಿಯದಲೆ ನಾನೆ ಸ್ವಾತಂತ್ರನೆಂದುಸಾರಿ ಸಾರಿಗೆ ನುಡಿವ ದುರುಳ ಜನರಪೌರುಷಕೆ ಏನೆಂಬೆ ಸ್ವಾತಂತ್ರ ತಾನಾಗಿಶಾರೀರಕೆ ವ್ಯಾಧಿ ಬರುವದ್ಯಾಕೋಸರ್ವ ಕಾಲದಿ ಸುಖಾಪೇಕ್ಷೆ ಮಾಡುವ ನರಗೆಮೀರಿ ತ್ರಯ ತಾಪದಲಿ ಬಳಲಿ ನರಕಸೇರುವ ಬಗೆ ಯಾಕೆ ತೋರುತಿದೆ ಆಶ್ಚರ್ಯಶಾರೀರ ಮೊದಲಾದ ಕರ್ಣಂಗಳುವಾರ ವಾರಕೆ ದೃಢವನಾಪೇಕ್ಷಿಯಾದವಗೆಭರದಿ ಮಧ್ಯದಿ ನಾಶ ಬರುವದೇಕೋದೂರ ದೇಶಗಳೆಲ್ಲ ತಿರುಗಿ ಬರುವೆನೆಂದುಸಾರಿದಲಿ ಮೃತ್ಯು ವಶವಾಹದೇನೋಸಾರೆ ದೂರುವ ಕಾಣದಿಪ್ಪ ಮೂಢ ತಾನು ಅ-ಪಾರ ಮಹಿಮೆಗೆ ಸಮಾನನೆನಿಸುವನೇವರ ವೇದ (ವಾದ) ಪ್ರತ್ಯಕ್ಷ ಶಬ್ದನು ಮಾನಅಪೌರುಷೇಯವಾದ ನಿಗಮಗಳಿಗೆ ದೂರವಾಗಿಹ ಮಾತು ಸಜ್ಜನರ ಕಂಗಳಿಗೆತೋರದಯ್ಯಾ ನಿಜವು ಎಂದೆಂದಿಗೆ ವೈಕಾರವಾಗಿದ್ದ ಚಿತ್ತ ವಿಭ್ರಮದಿಂದಶಾರೀರ ಸ್ಮರಣೆ ಏನು ಇಲ್ಲದಿಪ್ಪನರಾಧಮ ತಾನು ನಾನಾ ವಾಕ್ಯವ ನುಡಿಯೆಧೀರರಿಗೆ ಪ್ರಾಮಾಣ್ಯವೆನಿಸುವದೇಕರವ ಚಲಿಸುವ ಶಕ್ತನಾಹದಿದ್ದವನಾಗಿಮೇರು ಎತ್ತುವೆನೆಂಬ ಮೃಷವಾದಿ ತೆರದಿವರಲಿಕೊಂಡದಕವನ ಮರಳಿ ನೋಡುವರಿಗೆಸ್ವಾರಸ್ಯ ಎನಿಸುವುದೆ ಎಂದಿಗನ್ನಶ್ರೀ ರಮಣ ಸರ್ವೇಶ ಗುರು ವಿಜಯ ವಿಠ್ಠಲರೇಯಸಾರಿಗಾಣದೆಯಿದ್ದ ಸ್ವಾತಂತ್ರನೋ ೧೩
ಧ್ರುವತಾಳ
ಪೆಟ್ಟಿಗೆಯೊಳಗಿಪ್ಪ ಮೂರ್ತಿಯ ಭಕುತಿಲಿನಿಷ್ಠೆಯಿಂದಲಿ ಪೂಜೆ ಮಾಡಿಕೊಳುತಇಷ್ಟ ಬೇಡುವದು ಸಹಜವೆ ಸರಿ ಬರಿದೆಪೆಟ್ಟಿಗೆ ಪೂಜೆಯನ್ನು ಮಾಡಿ ತನ್ನಇಷ್ಟ ಬೇಡುವೆನೆಂಬ ಸಾಹಸದಂತೆ ನೋಡಿವಿಷ್ಣು ಸಕಲವಾದ ವಸ್ತುಗಳಲಿದಿಟ್ಟನಾಗಿ ವ್ಯಾಪ್ತನಾಗಿ ಇರಲು ತಿಳಿಯದೆ ಅ-ಶ್ರೇಷ್ಠವಾದ ಜೀವ ಸಂಘಗಳನುಮುಟ್ಟಿ ಭಜಿಸಿದರೆ ಶ್ರೇಷ್ಠರಾಗುವದೆಂತೊಹೃಷ್ಟರಾಗರಯ್ಯಾ ಇಹಪರದಿದಿಟ್ಟಮೂರುತಿ ವ್ಯತಿರಿಕ್ತವಾಗಿ ಪರಮೇಷ್ಠಿ ಸುರರು ಪೂಜೆ ಸ್ವತಂತ್ರದಿಶ್ರೇಷ್ಠವಾಗದಯ್ಯಾ ಶ್ರುತಿ ಸ್ರ‍ಮತಿ ಸಮ್ಮತ ಶ್ರೀ-ಕೃಷ್ಣನ ವಾಕ್ಯವುಂಟು”ಯೇಪ್ಪ್ಯನ್ಯ ದೇವತಾ ಭಕ್ತ್ಯಾಯಜಂತೆ ಶ್ರದ್ಧಯಾನ್ವಿತಾತೇಪಿ ಮಾಮೇವ ಕೌಂತೇಯ ಯಜಂತೆ ವಿಧಿಪೂರ್ವಕಂ ||’’ಸೃಷ್ಟಿಯೊಳಗೆ ಬ್ರಹ್ಮ ರುದ್ರಾದಿ ಸುರರ ಪೂಜಾಪುಷ್ಟ ಷಾಡ್ಗುಣ್ಯ ತಾನೆ ಸ್ವೀಕರಿಸಿದರುಶಿಷ್ಟವಾದ ವಿಧಿಯೆನಿಸದು ಎಂದೆಂದಿಗೆ ಹೃಷ್ಟ ಮನಸಿನಿಂದ ಗ್ರಹಿಸುವದುಶಿಷ್ಟರಾದವರನ್ನ ಭಜಿಸಿದ ಕಾಲಕ್ಕು ಅವರ ಹೃದ-ಯಷ್ಟದಳದಲಿಪ್ಪ ದೇವನಲ್ಲಿದೃ(ಹೃ)ಷ್ಟಿ ಉಳ್ಳವನಾಗಿ ಮಾಡಿದ ಉಪಚಾರಶ್ರೇಷ್ಠನಾದ ಹರಿಗೆ ಸಮರ್ಪಿಸು ಉ-ತ್ರ‍ಕಷ್ಟನಾದ ಮಹಿಮ ಗುರು ವಿಜಯ ವಿಠ್ಠಲನ್ನಬಿಟ್ಟು ಮಾಡುವದು ಅವಿಧಿಯು ೧೪
ಮಟ್ಟತಾಳ
ಈ ವಿಧದಲಿ ತಿಳಿದು ಭಕುತಿಯಿಂದಲಿ ನೀನುದೇವ ದೇವನ ಯಜಿಸು ಜ್ಞಾನಪೂರ್ವಕದಿಂದಆವ ಷಡ್ರಸದಿಂದ ಪೂರ್ಣನಾದ ಹರಿಗೆಆವಾವ ಕಾಲದಲಿ ಆಪೇಕ್ಷೆಗಳಿಲ್ಲಜೀವದ ನಿಮಿತ್ಯ ಸ್ಥೂಲಾನ್ನವ ಕೊಂಬ ಸ್ವ-ಭಾವದಿಂದಲಿಹ್ಯ ಪರಿಪೂರ್ಣ ತಾನಾಗಿಭುವನತ್ರಯವನ್ನು ನಿರ್ಮಾಣವ ಮಾಡಿಪಾವಮಾನ ವಿಧಿ ಭವ ಇಂದ್ರಾದ್ಯರಿಗೆಅವರವರ ಯೋಗ್ಯ ಪದವಿಯ ಕಲ್ಪಿಸಿಆ ವಿಧಿ ಸ್ತಂಭ ಪರಿಯಂತವಾಗಿಸು ವಿಹಿತಾ ವಿಹಿತ ತೃಪ್ತಿಯ ನೀವಂಗೆನಾವಿತ್ತನ್ನದಲಿ ಅಪೇಕ್ಷೆಗಳುಂಟೆ ?ಸಾವಿರ ಕೋಟ್ಯಾಧಿಕ ಸಂಪನ್ನನು ಎನಿಸಿಜೀವ ಕೋಟಿಗಳಿಗೆ ಅನ್ನವ ನೀವಂಗೆಕೇವಲ ದಾರಿದ್ರನ ಅನ್ನಪೇಕ್ಷೆ ಮಾಡುವನೆಸು ವಿಮಲವಾದ ನವನವ ಭಕುತಿಯಲಿಭಾವ ಭರಿತನಾಗಿ ಪ್ರಾರ್ಥಿಸೆ ಕರುಣಿಸಿಆವ ರಸದ ದ್ವಾರ ಭಕುತಿಯ ಸ್ವೀಕರಿಪಭಾವದಲಿ ಭಕುತಿ ಇಲ್ಲದಿದ್ದರೆ ನೋಡುದೇವ ದೃಷ್ಟಿಲಿ ನೋಡ ಕಾಲತ್ರಯದಲ್ಲಿಶ್ರಾವ್ಯವೆ ಸರಿ ಧಾರ್ತರಾಷ್ಟ್ರನ ಧಿಕ್ಕರಿಸಿಆ ವಿದುರನ ಮನೆಯ ಪಾಲುಂಡನು ಕೃಷ್ಣಭೂ ವಿಬುಧರ ಪ್ರಿಯ ಗುರು ವಿಜಯ ವಿಠ್ಠಲ ರೇಯಸಾವಿರ ಮಾತಿಗೆ ಭಕುತಿಯಿಂದಲಿ ವಶನೋ ೧೫
ತ್ರಿವಿಡಿತಾಳ
ಒದಗಿ ಕೇಳುವದು ಭಕುತಿಯಿಂದಲಿ ಮನವೆಇದನು ಗ್ರಹಿಸಿದವ ಜೀವನ ಮುಕ್ತಾಇದನು ಗ್ರಹಿಸಿದವಗೆ ಪುನರಪಿ ಜನ್ಮವಿಲ್ಲಇದನು ಗ್ರಹಿಸೆ ಹರಿ ವಶನಾಗುವಇದನು ಗ್ರಹಿಸಿದವನ ಸುರರೆಲ್ಲ ಮನ್ನಿಪರುಇದನು ಗ್ರಹಿಸಿದವ ಮಾನ್ಯನಾಹಇದನು ಗ್ರಹಿಸಿದವ ಕುಲಕೋಟಿ ಸಹವಾಗಿಮಧು ವೈರಿ ಪುರವನ್ನೆ ಸೂರೆಗೊಂಬಇದನು ಗ್ರಹಿಸಿದವಗೆ ನರಕದ ಭಯವಿಲ್ಲಇದನು ಗ್ರಹಿಸೆ ನಿತ್ಯ ಸುಖಿಯಾಹನೋಮೊದಲು ಪೇಳಿದಂತೆ ಗುಣಿಸು ಅಂತರದಲ್ಲಿಅದುಭೂತ ಮಹಿಮನ್ನ ಸ್ವ ಪರ ದೇಹದಲ್ಲಿಸದಮಲ ಮೂರ್ತಿಗಳು ಅಸಂಖ್ಯವಾಗಿವುಂಟುವಿಧಿ ಭವ ಮುಖರಿಂದ ಎಣಿಸಲೊಶವೆಯಾದವ ಕುಲಮಣಿ ಕೃಷ್ಣನ ವಾಕ್ಯ ಉಂಟು”ಅವಿಭಕ್ತಂಚ ಭೂತೇಷು ವಿಭಕ್ತಮವಚಸ್ಥಿತಂ |”ಆದರದಲಿ ತಿಳಿ ಐದು ಮೂರು ಮತ್ತೆ ಕೃದ್ಧೊಲ್ಕಾದಿವಿಧಿ ಭವ ಪ್ರವರ್ತಕ ಕೇಶವಾದಿ ಚತುರ್ವಿಂಶತಿವಿದ್ಯ ಮತ್ಸಾದಿ ಮೂರುತಿ ದ್ವಾದಶವುಕುಧರಾದಿ ದಶರೂಪ ಹಿಂಕಾರ ಪ್ರಸ್ಥಾವಉದ್ಗೀಥ ಮೊದಲಾದ ನಾನಾರೂಪ ಅ-ಜಾದಿ ಐವತ್ತೊಂದು ನಾರಾಯಣಾದಿ ನೂರು ವಿ-ಶ್ವಾದಿ ಸಹಸ್ರ ಪಂಚಕೋಶದಿಪ್ಪಐದು ಲಕ್ಷದ ಎಂಭತ್ತೈದು ಸಾಸಿರ ನಾಲ್ಕು ನೂರುಮೋದ ಸಾಂದ್ರನು ಎಪ್ಪತ್ತೆರಡು ಸಹಸ್ರ ನಾಡಿಗಳಲ್ಲಿಇದೇ ಕ್ಲಿಪ್ತದಿಂದಲಿ ಸ್ತ್ರೀ ಪುರುಷ ರೂಪದಿಂದ ಅಜಿ-ತಾದಿ ಅನಂತವಾದ ರೂಪಆದಿಮೂರುತಿ ಪರಾದಿ ಅನಂತಾನಂತಸದಮಲ ರೂಪದಿಂದ ವ್ಯಾಪ್ತನೆನಿಸಿಈ ದೇಹದಲ್ಲಿದ್ದು ರಕ್ಷಿಪ ಬಗೆಯನರಿದೆಅಧಮ ನರನು ನಾನೆ ಸ್ವತಂತ್ರನೆನ್ನೆಬುಧರಿಗೆ ಪ್ರಿಯನಾದ ವೀರನ ಗದೆಯಿಂದಛೇದನವಾಗದಲೆ ಮೀರುವನೇಇದನು ಗ್ರಹಿಸಿದವ ಜೀವನ್ಮುಕ್ತನಾಗೆಬಾಧಿ ತಪ್ಪಿಸಿಕೊಳನು ನರಕದಲ್ಲಿಇದನು ಇರಲಿ ಮತ್ತೆ ಮುಂದೆ ಕೇಳುವದುಮೇದಿನಿಯಲ್ಲಿದ್ದ ಸಕಲ ಲಕ್ಷಣವಇದನು ಅಂಶಿಯೆಂದು ತಿಳಿವರು ಜ್ಞಾನಿಗಳುಹೃದಯದಲ್ಲಿಪ್ಪದು ಅಂಶವೆನ್ನುಇದನು ಕೇಳು ಪರಮ ವಿಸ್ತಾರವಾದ ಮಹಿಮಆದಿ ಪುರುಷ ವೈಕುಂಠವಾಸಿವದನ ಸಾಸಿರನ್ನ ನೆನೆದು ಅವರವರಹೃದಯ ದಿಪ್ಪವಂಗೆ ಏಕೀಕರಣ ಮಾಡುಉದಯಾರ್ಕ ಕೋಟಿ ಪ್ರಭಾ ಅನಂತಾಸನದಿಪ್ಪಪದುಮನಾಭ ಮತ್ತೆ ಕ್ಷೀರಾಬ್ಧಿಶಾಯಿವದನ ಸಾಸಿರ ತಲ್ಪನಾದ ನಾರಾಯಣಬದರಿ ನಿವಾಸಿಯಾದ ವೇದವ್ಯಾಸ ಮ-ಹಿದಾಸ ಶಿಂಶುಮಾರ ಹಯ ಶೀರ್ಷ ವಡಭಾ ಕಲ್ಕಿಸುಧನ್ವಂತ್ರಿ ಹಂಸ ವಕ್ತ್ರಾ ಕಪಿಲ ಋಷಭಮೋದ ಸಾಂದ್ರನಾದ ಪುರುಷರೂಪ ತ್ರಯಆದ್ಯಂತ ರಹಿತನಾದ ದತ್ತಾತ್ರಯಆದಿ ಮೂರುತಿ ಅವತಾರಗಳೆಲ್ಲ ಸ್ಮರಿಸಿಅದ್ವೈತ ತ್ರಯಂಗಳ ಅನ್ವಯಿಸೋಪ್ರಾದೇಶ ಮೂರ್ತಿ ತಾನೆ ಯಜ್ಞ ನಾಮಕನೆಂದುಪದೋ ಪದಿಗೆ ತಿಳಿದು ಸಕಲ ರೂಪಹೃದಯ ಸಂಸ್ಥಿತನಲ್ಲಿ ಐಕ್ಯ ಚಿಂತನೆ ಮಾಡೊಭೇದವಿಲ್ಲ ನೋಡೊ ಎಳ್ಳಿನಿತುಬೋಧ ಮೂರುತಿ ಗುರು ವಿಜಯ ವಿಠ್ಠಲರೇಯಇದನು ತಿಳಿದವನ್ನ ಕ್ಷಣವಗಲನೋ ೧೬
ರೂಪಕತಾಳ
ಬದರಿ ದ್ವಾರಕಾ ಲೋಹ ಕ್ಷೇತ್ರ ಕಾಶಿ ಪ್ರಯಾಗ ಶ್ರೀಪದವೀವ ಗಯಾ ಕ್ಷೇತ್ರ ಅಯೋಧ್ಯಯದುಗಿರಿ ತೋತ್ರಾದಿ ಶ್ರೀ ಮುಷ್ಟ ಮನ್ನಾರಿಪದುಮನಾಭಾನಂತ ವೈಕುಂಠಾಚಲಾನಿಧಿ ಮೊದಲಾದ ಸುಕ್ಷೇತ್ರವೋ(ದಲ್ಲಿ)ಲಿಪ್ಪವಿಧಿ ಭವ ಮುಖರಿಂದ ಪೂಜೆಗೊಂಬಸದಮಲ ಮೂರ್ತಿಗಳು ಇರುವ ಕ್ರಮದಿಂದ ದಶವಿಧದಿಂದ ಇರುತಿಪ್ಪ ಬಗೆಯನರಿತುಹೃದಯ ಸಂಸ್ಥಿತನಲ್ಲಿ ತಂದು ಕೂಡಿಸು ಮರಳೆಇದೇ ಲೋಕವಿಡಿದು ಮತ್ತೆ ಪಾತಾಳದಿ (ಈರೇಳು ಲೋಕಾದಿ)ಐದೆರಡು ಲೋಕಾದಿ ಇರುತಿಪ್ಪ ಮೂರ್ತಿಗಳುಒದಗಿ ಚಿಂತಿಸಿ ಐಕ್ಯ ತಿಳಿಯೊ ನೀನು ಈವಿಧದಿಂದ ಸಂಸ್ತುತಿಸಿ ಪರಮ ಭಕುತಿಯಿಂದಉದಕ ಕೊಡುವನ್ಯಾಕೆ ಅಮೃತೋಪಮವೋಪದುಮನಾಭನಿಗಿದೆ ಪೂಜೆಯೆನಿಸುವುದಯ್ಯಾಇದೇ ಬಗೆಯನೆ ತಿಳಿದೆ ವ್ಯರ್ಥವಾಗಿಬುಧರು ನಾವೆಂತೆಂದು ಬರಿದೆ ಹಿಗ್ಗುವ ನರನಮದ ಗರ್ವಕ್ಕೇನೆಂಬೆ ಮಹಿಯೊಳಗೆಸುಧಿಯಾಬ್ಧಿ ಪ್ರಯತ್ನವಿಲ್ಲದೆ ಜಗದೊಳುಉದುಭವಿಸಿರೆ ಬಿಟ್ಟು ಯತ್ನದಿಂದಆದರದಿ ವಿಷವನ್ನು ಪಾನ ಮಾಡುವರೆಲ್ಲವಿಧಿ ಲಿಖಿತವನೆ ಮೀರಲಾಪರಾರುಪದು ಸಂಭವನುತ ಗುರು ವಿಜಯ ವಿಠ್ಠಲನ್ನಪದಗಳ ಬಿಗಿದಪ್ಪಿ ಸುಖಿಸೊ ಸತತ ೧೭
ಝಂಪೆತಾಳ
ಸತ್ಯವಿದು ಗ್ರಹಿಸುವದು ಶ್ರುತಿ ಸ್ರ‍ಮತಿಯಲಿರುತಿಪ್ಪಅರ್ಥಗಳಿವು ಕೇಳಿ ಭಕುತಿಯಿಂದಮಿಥ್ಯವೆಂದಿಗು ಅಲ್ಲ ಅದೃಷ್ಟಹೀನನಾಗಿಅತಥ್ಯವೆಂದರೆ ಅದಕೆ ಮಾಳ್ಪದೇನುವ್ಯರ್ಥವಾಗಿ ಭವದಿ ದುಃಖಗಳುಣಲೇಕೆ ಉ-ಧೃತನಾಗುವೆನೆಂಬ ಮನಸಿನಿಂದಕೀರ್ತಿಸು ಹರಿಯನ್ನು ಪೂರ್ವೋಕ್ತದಂತೆ ತಿಳಿದುಭಕ್ತಿಯಿಂದಲಿ ಯಜಿಸೊ ವಿಧಿಪೂರ್ವಕಸತ್ಯ ಲೋಕಾಧಿಪನ ಸತಿ ಸಹಿತ ಮಿಕ್ಕಾದ ಲೋ-ಕಸ್ಥರೆಲ್ಲರ ಸ್ಮರಿಸೂ ತಪೋ ಜನೊ ಲೋಕವಮತ್ತೆ ಮಹರ್ಲೋಕ ಸ್ವರ್ಲೋಕ ಭುವರ್ಲೋಕಮತ್ರ್ಯಲೋಕವು ಮತ್ತೆ ಅಧೋ ಲೋಕಗಳಸಪ್ತವನ ಚಿಂತಿಸು ಮರೆಯದಲೆ ಲೋಕಾಧಿಪತ್ಯರನು ಭೃತ್ಯರನು ಸತಿಯರಿಂದಯುಕ್ತರಾದವರೆಲ್ಲ ಅಂಶಿಯೆನಿಸುವರಯ್ಯಾಹೃತ್ಪುಂಢ್ರದಲಿ ನಿಲಿಸಿ ಹರಿ ಅಂಶವನ್ನುಉಕ್ತಿಯನು ಲಾಲಿಪುದು ಅಂಶಾಂಶ ಭಾಗಗಳು ಏ-ಕತ್ರ ಚಿಂತಿಸು ಬಿಡದೆ ದೇಹದಲ್ಲಿ ಆ-ಸಕ್ತಿಯಿಂದಲಿ ಮನದಿ ಪ್ರಾರ್ಥಿಸಿ ಅವರವರಹೃತ್ಕಮಲದಲ್ಲಿದ್ದ ಮೂರ್ತಿಗಳನುಮತ್ತೆ ಕೂಡಿಸು ಮರಳೆ ಸಕಲ ರೂಪಗಳೆಲ್ಲಅತ್ಯಂತ ಅಭೇದವೆಂದು ತಿಳಿಯೊ ಅ-ನಿತ್ಯವೆನ್ನಲಿ ಸಲ್ಲ ಅರ್ಜುನಗೆ ಶ್ರೀ ಕೃಷ್ಣಮಿತ್ರನಾಗಿ ಪೇಳ್ದ ವಾಕ್ಯವುಂಟು”ವಿದ್ಯಾ ವಿನಯ ಸಂಪನ್ನೆ ಬ್ರಾಹ್ಮಣೆ ಗವಿಹಸ್ತಿನಿಶುನೀಚೈವ ಶ್ವಪಾಶೇಚ ಪಂಡಿತಾ ಸಮದರ್ಶನಃ ||’’ಈ ತೆರದಲಿ ತಿಳಿದು ಸಂದೇಹ ಮಾಡದಲೆಸರ್ವ ಮೂರ್ತಿಗಳ ಕೂಡಿಪದು ಬಿಂಬನಲ್ಲಿಮತ್ರ್ಯರಾರಂಭಿಸಿ ಸಕಳ ಜಡಚೇತನ ಎಂ-ಭತ್ತು ನಾಲ್ಕು ಲಕ್ಷ ಜಾತಿಗಳನ ಉತ್ತಮಾನುತ್ತಮ ಬಗೆಯರಿತು ಅವರಂತೆಸ್ಥಿತ್ಯ ಹರಿ ಮೂರ್ತಿಯನು ಐಕ್ಯ ತಿಳಿಯೋತತ್ವವಿದು ತಿಳಿಯದಲೆ ಕೋಟ್ಯಾಧಿಕ ಜೀವರಿಗೆವಿತ್ತನ್ನ ಮೊದಲಾದ ದಾನಗಳನುಇತ್ತರೇನು ಫಲವು ಅಲ್ಪ ಪುಣ್ಯಗಳಿಂದಮತ್ತೆ ಮತ್ತೆ ಬರುವ ಭೂಮಿಯಲ್ಲಿಮೃತ್ಯುವಿಗೆ ಸಮವಾದ ದುಃಖಗಳು ಮೀರುವನೆಎತ್ತಲಿದ್ದರೇನು ಹರಿ ವಿಮುಖನೋನಿತ್ಯ ತೃಪ್ತನಾದ ಗುರು ವಿಜಯ ವಿಠ್ಠಲರೇಯಎತ್ತಿ ನೋಡನು ಮುಖವು ಎಂದಿಗನ್ನ ೧೮
ಆದಿತಾಳ
ಇದು ಪರಮ ಗೌಪ್ಯವಯ್ಯಾ ಗುಹ್ಯಾದ್ಗುಹ್ಯೋತ್ತಮಆದಿತೇಯ ವಿದ್ಯವಿದು ಅಧಮಗೆ ಯೋಗ್ಯವಲ್ಲಮೋದತೀರ್ಥರ ಮತಾನುಗರಾಗಿದ್ದ ಸುಜನರ ಪಾದಕ್ಕೆರಗಿ ಬೇಡಿಕೊಂಬೆ ದುರುಳರಿಗೆ ಪೇಳಸಲ್ಲಸದಮಲ ಯಜ್ಞ ಶೇಷ ಶುನಕಗೆ ಯೋಗ್ಯವಲ್ಲಇದರಂತೆ ತಿಳಿವದು ಮನ್ನಿಸಿ ಕರುಣದಿಆದರದಲಿ ಹರಿಪದಗಳ ಭಜಿಸುವಬುಧರಿದು ಭಕುತಿಲಿ ಸ್ವೀಕಾರ ಮಾಡುವದುಇದೆ ಬಗೆ ತಿಳಿವರ್ಗೆ ಪುನರಪಿ ಜನ್ಮವಿಲ್ಲಇದು ಎನ್ನ ಮಾತಲ್ಲ ಶ್ರೀ ಹರಿ ವಾಕ್ಯವುಂಟು”ಸರ್ಗೋಪನೋಪಜಾಯಂತೆ ಪ್ರಳಯೇನ ವ್ಯಥಂತಿಚಃ |’’ಇದು ಗ್ರಹಿಸಿ ಸುರರೆಲ್ಲ ಸುಖಬಡುವರು ನಿತ್ಯಇದು ತಿಳಿದ ಮಾನವರು ನರರಲ್ಲ ಸುರರೇ ಸರಿವಿಧುಃ ಶ್ರೀ ವತ್ಸಲಾಂಛನ ಗುರು ವಿಜಯ ವಿಠ್ಠಲರೇಯಬದಿಯಲ್ಲಿ ಇರುತಿಪ್ಪ ಇದು ಗ್ರಹಿಸಿದವರಿಗೆ ೧೯
ಜತೆ
ಹರಿಯ ಯಾಜಿಸು ಇನಿತು ಜನುಮದೊಳಗೆ ಒಮ್ಮೆಮರಳಿ ಬಾರದು ದೇಹ ಗುರು ವಿಜಯ ವಿಠ್ಠಲವೊಲಿವಾ ||

೧೫೩
[ಗೂಢನಾದ ಹರಿಯೆ ಸಕಲ ಕ್ರಿಯಾದಲ್ಲಿ ನೀನು ಜೋಡಾಗಿ ನಿಂದು ಮಾಡಿ, ಋಣಕ್ಕೆ ಮಾತ್ರ ಎನ್ನನು ಗುರಿ ಮಾಡುವಿ. ಈ ಋಣ ವಿಮೋಚಕನು ನೀನೆ. ೪೦ ವರ್ಷ ಸಂತತವಾಗಿ ಅನೇಕ ಲೌಕಿಕ ವ್ಯವಹಾರದಲ್ಲಿ ಮಾಡಿದ ಪಾಪಕೃತ್ಯ ಋಣವನ್ನು ಪೋಗಾಡಿಸಲು ನೀನೇ ಯುಕ್ತಿವಂತರಲ್ಲಿ ಶ್ರೇಷ್ಠ. ಋಣ ಪೋಗಾಡಿಸಿ, ನೀನೇ ಕರುಣಿಸಿ ಪ್ರತ್ಯಕ್ಷನಾಗು ಎಂದು ಪ್ರಾರ್ಥನೆ.]
ಧ್ರುವತಾಳ
ಮಾಡಿದ ಋಣವನ್ನು ತೀರಿಸದಲೆ ಬಿಡದುನಾಡೊಳು ಎಣಿಸಿ ಗುಣಿಸೆ ವಿಧಿಗಾದರೂಗಾಢವಾದ೧ ಋಣ ಮಾಡಲೊಲ್ಲೆನು ಯೆಂದುಗಾಡಿಕಾರನೆ೨ ನಿನ್ನ ಪದಕೆ ಬಿದ್ದುಬೇಡಿಕೊಂಡದಕ್ಕೆ ಇದರ ಬಾಧ್ಯತ್ವ ನಿನಗೆಬೇಡವೆಂದು ಅಭಯವನ್ನು ಪೇಳೆಮಾಡುವ ಕಾಲದಲ್ಲಿ ಜೋಡಾಗಿ ನಿಂದು ಮಾಡಿಈಡು ಯಿಲ್ಲದ ಲಾಭ ನಿನ್ನದಾಗಿಕೇಡು ಮಾತ್ರಕ್ಕೆ ಎನಗೆ ಸಂಬಂಧಿಸಿದಿ ನಿನ್ನಗೂಢ ಯುಕ್ತಿಗೆ ಸಮ ಆವದಯ್ಯಾಕೇಡು ಲಾಭಂಗಳು ಕಾರಣಯಿಲ್ಲವೆಂದು ನೀನಾಡಿದ ವಚನವು ಇಲ್ಲವೇನೋನೋಡು ಪ್ರಖ್ಯಾತವಾಗಿ ಮೆರೆವುತಿದೆ ಜಗದಿಕೂಡಿದ ಮೇಲೆ ಕುಲವನೆಣಿಪದೇನೋಕ್ರೀಡಾದಿ ಗುಣ ವಿಶಿಷ್ಟ ಕುಂಭಿಣಿ ಭಾರಹರಕಾಡೊಳು ತುರುಗಳ ಕಾಯ್ದರಸೇಕ್ರೋಡಾದಿ ರೂಪ ಗುರು ವಿಜಯ ವಿಠ್ಠಲರೇಯಾಕೂಡದಯ್ಯ ಕೋಪ ಎನ್ನ ಮೇಲೆ ೧
ಮಟ್ಟತಾಳ
ಬಲವಂತನ ಸಹವಾಸ ಮಾಡುವಕಾಲದಲ್ಲಿ ಮಾಡಿದ ಮೇಲೆ ಮರಳೆ ಮಾತುಗಳೇಕೆಕೆಲಕಾಲ ನಿನ್ನ ಆಜ್ಞಧಾರಕನೆನೆಸಿಜಲಜ ಪಾದಕೆ ಎನ್ನ ತಲೆ ಬಾಗುವನಾಗಿಜಲಜ ಜಾಂಡದ ದೊರೆಗೆ ಮಾರು ನುಡಿವರಾರುತಿಳಿದು ಈ ಪರಿಯಲ್ಲಿ ಋಣವ ತೀರಿಸಲುಇಳಿಯೊಳಗೆ ಬಂದು ದ್ವಿವಿಂಶತಿ (೪೦) ವತ್ಸರಬಲು ಸಂಭ್ರಮದಲ್ಲಿ ದುಡದಿತ್ತೆನೊ ದೇವಕೆಲವು ಕಾರಣದಿಂದ ಕೆಲವು ಗಾತ್ರದಿಂದಕೆಲವು ಪುಣ್ಯದಿಂದ ಕೆಲವು ಪಾಪದಿಂದಹಲವು ಬಗೆಯಿಂದ ತೀರಿಸಿದದಕ್ಕಿನ್ನುಜಲಜ ನೇತ್ರದಿಂದ ನೋಡದ ಬಗೆ ಏನುಕುಲ ಪಾವನ ಮೂರ್ತಿ ಗುರು ವಿಜಯ ವಿಠ್ಠಲರೇಯಾಒಲಿದು ಪಾಲಿಸದಿರಲು ಮೋಚನೆಯಾಗುವದೇ ೨
ತ್ರಿವಿಡಿತಾಳ
ಕರಗಸದಲಿ ಶಿರವ ಕತ್ತರಿಸಿಕೊಳಬಹುದುನರಕದಲ್ಲಿ ವಾಸ ಮಾಡಬಹುದುಪರಿ ಪರಿ ಶ್ರಮಗಳ ಅನುಭವಿಸಲಿಬಹುದುಪರಿ ಪರಿ ದಾರಿದ್ರ ಚರಿಸಬಹುದುಹರಿ ನಿನ್ನ ಕೃಪಾ ಕಟಾಕ್ಷ ವಿರಹಿತವಾಗಿಧರೆಯೊಳಗೆ ಬಂದು ಅಲ್ಪರೊಡನೆಪರಮ ಪ್ರಖ್ಯಾತವಾದ ನಿನ್ನ ಮಹಿಮೆಗೆಸರಿ ಇಲ್ಲವೆಂದು ಡಂಗುರವ ಹೊಯ್ದುಮೆರೆಸಿದೆ ಗೂಢವಾದ ಚೋರನಂದದಿ ತಿರುಗಿಮರಳಿ ಪೋಗುವಂತೆ ಮಾಡಿದಂಥವರವಾದರು ಸಹ ಕರ್ಮವನುಣಿಸಿದಿಹರಿಯೆ ನಿನ್ನಿಚ್ಛೆಗೆ ಪೇಳ್ವರಾರುಸುರಲೋಲ ಮಹಧೃತಿ ಗುರು ವಿಜಯ ವಿಠ್ಠಲರೇಯಸರಿಗಾಣೆ ಸರಿಗಾಣೆ ನಿನ್ನ ಸಂಕಲ್ಪಕ್ಕೆ ೩
ಅಟ್ಟತಾಳ
ನೀನು ಮಾಡಿದ ಮರಿಯಾದಿ ಮೀರುವವರಿಲ್ಲವನಜ ಜಾಂಡದ ಮಧ್ಯ ಎಣಿಸಿ ಗುಣಿಸಿ ನೋಡೆವನಜನಾಭನೆ ನಿನ್ನ ಮಹಿಮೆಗೆ ನಮೊ ನಮೊಸನಕಾದಿ ಮುನಿನುತ ಗುರು ವಿಜಯ ವಿಠ್ಠಲರೇಯಾಋಣದಿಂದ ಮುಕ್ತನ್ನ ಮಾಡಿ ಸಲಹೊ ಎನ್ನ ೪
ಆದಿತಾಳ
ಕರುಣ ಮಾಡುವಾಗ ಅಪರಾಧ ಮಹಾಗುಣಕರುಣವ ಮಾಡದಿರೆ ಸುಗುಣವೆ ಅಪರಾಧಹರಿ ನಿನ್ನ ಚಿತ್ತಕ್ಕೆ ಬಂದದ್ದೆ ಮುಖ್ಯವಯ್ಯಾಸರಸಿಜ ಭವಹರ ಸುರರಾದಿಗಳ ದೊರಿಯೆನರ ಸಖನಾದ ಗುರು ವಿಜಯ ವಿಠ್ಠಲರೇಯಾಪರಮಾಪ್ತಾ ನಿರ್ಲಿಪ್ತಾ ನಿರ್ಮಲ ನಿತ್ಯ ತೃಪ್ತಾ ೫
ಜತೆ
ಯುಕುತಿವಂತರ ಮಧ್ಯ ನಿನಗಿಂದಧಿಕರಲ್ಲನಖ ಶಿಖ ಪರಿಪೂರ್ಣ ಗುರು ವಿಜಯ ವಿಠ್ಠಲರೇಯಾ ||

೧೪೨
ಧ್ರುವತಾಳ
ಮಾಯಗಾರನೆ ನಿನ್ನ ಮಾಯ ತಿಳಿಯುವದಕ್ಕೆಕಾಯಜಾದ್ಯಾದಿ ಸುರರು ಸಮರ್ಥರೆಕಾಯ ನಿನ್ನದು ಎಂದು ನೆರೆ ನಂಬಿದವನನ್ನಮಾಯಾ ಸಂಸಾರ ಪಾಶದಿಂದ ಬಿಗಿದುಹೇಯವಾದ ವಿಷಯ ಜಾಲದೊಳಗೆ ಹಾಕಿನೋಯ ದಣಿಸಿದಯ್ಯಾ ಕೃಪೆ ಇಲ್ಲದೆಮಾಯಾ ರಮಣ ನೀನು ಕಾಣಿಸಿಕೊಳ್ಳದಲೆಆಯಾಸ ಬಡಿಸಿದಿ ಅಪರಿಮಿತಾತಾಯಿ ಮಕ್ಕಳ ಕುರಿತು ವಂಚಿಸೆ ಇಚ್ಛಾ ಮಾಡೆಬಾಯಿ ಅರಿಯದ ಅಣುಗಳಿಂದೇನಹದೋರಾಯನೊಬ್ಬನು ತಾನು ಸ್ವಾತಂತ್ರ ಬಲಾರಾಧಿಪರರಾಯನಾಗಿ ರಾಜ್ಯಲಕ್ಷ್ಮೀ ಅಪಹರಿಸೆದಾಯಿಗಾರರು೨ ಬರಲು ಅಭಿಮಾನದಿ ಸೈನ್ಯಾನಾಯಕರನ್ನ ಕೈಶೆರೆ ಕೊಡಲು ಅ-ಪಾಯ ಕೃತ್ಯಗಳಿಂದ ದಂಡಣೆ ಮಾಡುತಿರೆಆ ಎಂಬಂಥರನ್ನ ಲೆಕ್ಕಿಸದೆ ತನ್ನರಾಯನಿಂದಲಿ ಇದು ನಿರ್ಹಣ೧ ಎಂದು ತಿಳಿದುಭೂಯೊ ಭೂಯೊ ನಮಿತಿ ಪೇಳಿ ಕೇಳುವದುದ್ರೋಹಿ ಆದವನೆಂದು ಅಪರಾಧವನ್ನೇ ಹೊರಿಸಿ ಅ-ಸೂಯದಿಂದಲಿ ಮನಕೆ ತಾರದಿರಲುರಾಯ ಮಾಡಿದ ಕರ್ಮ ಭೃತ್ಯರಿಂದಲಿ ಅದುಪರಿಯಾಪ್ತ೨ ವೆನಿಸುವದೆ ಎಂದಿಗನ್ನಶೌರ್ಯರ ಲಕ್ಷಣವೆ ಒಪ್ಪಿಸಿ ಕೊಡುವದುಧೈರ್ಯವೇನೋ ವೀರ ಸಂತತಿಗೆ ಅ-ಕಾರ್ಯಕನ ಮೇಲೆ ಬರಿದೆ ಈ ಪರಿ ಮುನಿದುಕ್ರೂರ್ಯ ಮಾಡುವದಿದು ಘನತಿಯೇನೊರಾಯ ರಾಯರ ಮಧ್ಯ ಮಾನ್ಯವೇನೊ ನಿನಗೆ ಅ-ನ್ಯಾಯವೆಂದು ನಗರೇ ವಿಬುಧರೆಲ್ಲಕಾಯಜ ಪಿತ ನಿನ್ನ ಚರಿತೆ ಇನಿತು ಸರಿತೋಯಜಾಕ್ಷನೆ ಈ ನುಡಿದ ಯುಕ್ತಿನ್ಯಾಯವಾಯಿತೆ ನೀ ಎನ್ನ ಮಾತಿಗೆ ಸೋಲುರಾಯ ದೃಷ್ಟಿಲಿ ನೋಡೊ ಕರುಣ ಮಾಡೊಛಾಯಕ್ಕೆ ಸಮವಾದ ಯತನದಿಂದಲಿ ಕಡೆಹಾಯಿಸು ವೇಗದಿಂದ ತಡ ಮಾಡದೇಗಾಯಿತ್ರಿ ಪ್ರತಿಪಾದ್ಯ ಗುರು ವಿಜಯ ವಿಠ್ಠಲರೇಯ ಉ-ಪಾಯವಿಲ್ಲವಯ್ಯಾ ನಿನ್ನ ಹೊರ್ತು ೧
ಮಟ್ಟತಾಳ
ಹಣಿಯಲ್ಲಿ ಬರದಿದ್ದ ಲಿಪಿಯಂತೊ ತಿಳಿಯೆಅನುಮಾನಿಸಿ ನೋಡೆ ಎನಗಿಂದಧಿಕವಾದಹೀನರೊಬ್ಬರು ಕಾಣೆ ಈ ಪೃಥ್ವಿಯಲ್ಲಿಗುಣನಿಧೆ ನಿನ್ನಿಂದ ಸುಖವೈದುವೆನೆಂದುಮನ ನಿರ್ಭರ೧ವಾದ ಸಂತೋಷವ ತಾಳಿಅನುದಿನದಲಿ ನಿನ್ನ ಅನುಸರಿಸಿ ಬಿಡದೆತನು ಮನವೊಪ್ಪಿಸಿ ನಿಯಾಮಿಸಿದ ಕಾರ್ಯಜನಕೆ ಸಮ್ಮತವಾಗೆ ಅಥವಾ ಅಸಮ್ಮತವಾಗೆನಿನ್ನಾಜ್ಞವೆ ಮುಖ್ಯ ಇದರಲಿಂದಲಿ ಎನಗೆಘನ ಪುರುಷಾರ್ಥಗಳು ನಿಜವೆಂದು ತಿಳಿದುಬಿನಗು ವಿಷಯದಲ್ಲಿ ಮಮತೆಯ ಮಾಡದಲೆವನಜ ಪಾದಗಳನ್ನು ನೆರೆನಂಬಿದವನಅನಿಮಿತ್ತವಾದ ಅಪರಾಧಕ್ಕೆ ಮುನಿದುಮನೆಯಿಂದಲಿ ಹೊರಗೆ ಹಾಕಿದ ತೆರದಂತೆದನುಜ ಮರ್ದನ ನೀನು ಇನಿತು ಮಾಡಿದದಕೆಏನೆಂಬೆನೋ ನಿನ್ನ ಔದಾರ್ಯತನಕಿನ್ನುಗುಣ ಗಣ ಪೂರ್ಣನೆ ಗುರು ವಿಜಯ ವಿಠ್ಠಲರೇಯಾಮಣಿದು ಬೇಡಿಕೊಳಲು ದಯಬಾರದು ಏಕೆ(ಯಾಕೆ) ೨
ತ್ರಿವಿಡಿತಾಳ
ಹೆದರಿದವನ ಮೇಲೆ ಬ್ರಹ್ಮಾಸ್ತ್ರ ಹಾಕಿದಂತೆಮೊದಲೆ ನಿನ್ನಯ ದೊರೆತನಕೆ ಅಂಜಿಅದುಭೂತ ಕಾರ್ಯದಲ್ಲಿ ನೇಮಿಸಬೇಡವೆಂದುಪಾದಕೆ ಬಿದ್ದು ನಿನ್ನ ಬೇಡಿಕೊಂಡೆಪದುಮನಾಭನೆ ನಿನಗೆ ಕರುಣ ಪುಟ್ಟದುದಕೆಪದೋ ಪದಿಗೆ ಈಗ ಬಳಲಿಸುವದುಇದು ಘನತಿಯೆ ನಿನ್ನ ಮಾತು ಕೇಳುವವರಿಗೆಆದರ ಇರುವಂತೆ ಮಾಡುವದುಉದಯಾರ್ಕ ತೇಜ ಗುರು ವಿಜಯ ವಿಠ್ಠಲರೇಯಬುಧರ ಸಮ್ಮತ ನಡೆವ ಸ್ವಾತಂತ್ರನೆ ೩
ಅಟ್ಟತಾಳ
ರಾಜಾಜ್ಞಾ ನಡೆಸದ ಭೃತ್ಯರಿಗೆ ತತ್ಕಾಲರಾಜನಿಂದಲಿ ಶಿಕ್ಷಿತನಾಗುವಮೂಜಗತ್ಪತಿ ನಿನ್ನ ಶಾಸನದಿಂದಲಿಪ್ರಜ್ವಲನವಾದ ನರಕವೈದುವೆನೆಂದುನೈಜವಾಗಿ ಶ್ರುತಿ ಶಾಸ್ತ್ರ ವರಲಿ ಪೇಳಾ ರಾಜಾಜ್ಞ ನಡಿಸಿದ ಜನರಿಗೆ ಪೂರ್ವೋಕ್ತವ್ಯಾಜ್ಯವೊದಗಲು ನ್ಯಾಯದ ಸೊಬಗುಸೋಜಿಗವಾಗಿ ತೋರುತಿದೆ ನೋಡಲುರಾಜೀವ ನೇತ್ರ ಸದ್ಧರ್ಮ ಪರಿಪಾಲಭೋಜ ಕುಲೋತ್ತಮ ಗುರು ವಿಜಯ ವಿಠ್ಠಲರೇಯಈ ಜೀವಿಗಳ ಮುಖ್ಯ ಪಾಲಿಸುವವ ನೀನೆ ೪
ಆದಿತಾಳ
ಪಾಲಿಪ ಇಚ್ಛೆ ಮಾಡೆ ಪಾಪದ ಕರ್ಮಗಳಜಾಲಗಳಿರಲಿ ಪುಣ್ಯವಾಗಿ ಫಲಿಸೋವುಸೋಲಿಪ ಇಚ್ಛೆ ಮಾಡೆ ಪುಣ್ಯದ ರಾಶಿಗಳು ಕೇ-ವಲ ಇರಲಿ ಫಲಕ್ಕವು ವೊದಗವುಲೀಲೆ ಇನಿತು ಇದೆ ಹಲವು ಮಾತುಗಳ್ಯಾಕೆಸ್ಥೂಲಕ್ಕೆ ಸ್ಥೂಲ ಗುರು ವಿಜಯ ವಿಠ್ಠಲರೇಯಾಮೂಲವು ನೀನೆವೆ ಎನ್ನ ಅಪರಾಧಗಳಿಗೆ ೫
ಜತೆ
ನಿನ್ನ ಆಜ್ಞವ ನಡಿಸಿದನೆಂಬೊ ಅಭಿಮಾನಮನ್ನದಿ ಮರಿಯದಿರೋ ಗುರು ವಿಜಯ ವಿಠ್ಠಲರೇಯ ||

೧೨೫
ಧ್ರುವತಾಳ
ಮಿತ್ರನು ಎಂದು ನಿನ್ನ ಮನದಿ ನಂಬಿದಕ್ಕೆಉತ್ತಮ ಉಪಕಾರ ಮಾಡಿದಯ್ಯಾಶತ್ರುಗಳಂತೆ ನಿಂದು ಬಹಿರಂತರಂಗದಲ್ಲಿಕತ್ತಲೆ ಚರರಿಗೆ ಸಹಾಯಕನಾಗಿನಿತ್ಯ ದುಃಖಗಳುಣಿಸಿ ಎಷ್ಟು ಕೂಗಿದರುನೇತ್ರ ದೃಷ್ಟಿಲಿ ನೋಡದಲೆ ಇರುವ ಬಗೆಯೋಮಿತ್ರರಲಕ್ಷಣವೆ ಅಥವಾ ಶತ್ರುತ್ವದ ಸೊಬಗೆ ಎತ್ತಣದೊ ಇದನು ತೋರದೆನಗೆಕರ್ತೃ ನಿನ್ನಲ್ಲಿ ದೋಷ ಎಂದೆಂದಿಗೆನಿಸ್ತ್ರೈಗುಣ್ಯ೧ನೆಂದು ಶ್ರುತಿ ಸಾರಿತು ಸ-ರ್ವತ್ರ ಸಮನಾದ ಹರಿ ನೀನು ಜೀವ ಕಾಲ ಪ್ರ-ಕೃತಿ ಅನುಸರಿಸಿ ಸುಖ ದುಃಖ ಹೊತ್ತು ಹೊತ್ತಿಗೆ ತಂದು ತುತ್ತು ಮಾಡಿ ಉಣಿಸಿಕೀತ್ರ್ಯಾಪಕೀರ್ತಿಗಳ ಜಾದಿಗಳಿಗೆಇತ್ತು ಪೊರೆವಿ ಎಂಬ ಕಾರಣದಿಂದ ನಿನಗೆಯುಕ್ತವಾಗದಯ್ಯಾ ದೋಷವನ್ನುಈ ತೆರವಾದ ಬಗೆಯಿಂದ ಎನ್ನ ಕರ್ಮದಂತೆ ದು-ಷ್ರ‍ಕತ್ಯಗಳುಂಬೆನೆಂದು ನಿಶ್ಚೈಸುವೆ ಧಾ-ರಿತ್ರಿಯೊಳಗೆ ಅಶಕ್ತರಾದವರೆಲ್ಲಶಕ್ತರಾದವರೆಲ್ಲ ಆಶ್ರೈಸೆಅತ್ಯಭಿಮಾನದಿಂದ ಪೊರೆಯದಿರಲು ಆವ ಕೀರ್ತಿ ಐದುವನೆಂತು ಮಾನ್ಯನಾಗಿ ತಾ-ಪತ್ರಯ ಕಳಿಯದಿರೆ ಅನುಸಾರ ಮಾಳ್ಪದೇಕೆ (ದ್ಯಾಕೊ)ಕೃತ್ಯಾಭಿಮಾನಿಗಳ೨ ಸುರರೊಡಿಯ ಮುಕ್ತಾಮುಕ್ತರಾಶ್ರಯ ಗುರು ವಿಜಯ ವಿಠ್ಠಲರೇಯಭಕ್ತವತ್ಸಲ ದೇವ ಮಹಾನುಭಾವಾ ೨
ಮಟ್ಟತಾಳ
ಅನಾದಿ ಕರ್ಮವನು ಅನುಭವ ಮಾಡುವದುಪ್ರಾಣಾದ್ಯಮರರಿಗೆ ತಪ್ಪುವದು ಎಂದುಜಾಣತನದಲಿಂದ ಜಾರಿ ಪೋಗುವದೊಳಿತೆಶ್ರೀನಾಥನ ನಿನ್ನ ಪಾದ ಸಾರಿದ ಜನಕೆ ಅನೇಕ ಜನ್ಮದ ಪಾಪ ತಕ್ಷಣದಲ್ಲೆವೇವಿನಾಶವಾಗುವದೆಂದು ಶೃತಿ ಸಾರುತಲಿದಕೋದೀನರಾಗಿ ನಿನ್ನ ಸ್ತುತಿಪರು ಸುರರೆಲ್ಲ ಎನಗಿದ್ದ ಕರ್ಮವನು ಕ್ಷೀಣವೈದಿಸದಿರಲುವಿನಯದಿಂದಲಿ ನಿನಗೆ ಬೇಡಿಕೊಂಬುವದೇಕೆ (ದ್ಯಾಕೆ)ಪ್ರಾಣನಾಥ ಗುರು ವಿಜಯ ವಿಠ್ಠಲರೇಯಾ ಪ್ರೀಣ೧ನಾಗುತಿರಲು ನಿಲ್ಲುವದೆ ದೋಷ ೧
ತ್ರಿವಿಡಿತಾಳ
ವೆಂಕಟನೆಂಬೊ ನಾಮ ವ್ಯವಹಾರ ತೋರುತಿದೆಪಂಕಜಾಕ್ಷನೆ ಇನಿತು ನಡತಿಯಿಂದ”ಯತ ತೋಪಿ ಹರೆಃ ಪದ ಸಂಸ್ಮರಣೆ ಸಕಲಂ ಹ್ಯಗಮಾಶುಲಯಂ ವ್ರಜತಿ’’ಎಂಬೋ ಉಕ್ತಿಗೆ ಕಳಂಕ ಬಾರದೇನೊ ಈ ತೆರ ನುಡಿದರೆಶಂಕರ೨ನೆಂಬೊ ನಾಮ ನುಡಿಯಲ್ಯಾಕೆ ನಿಖಿಳಾಘ ವಿನಾಶಕನೆಂಬೊದೇನೋಮಂಕು ಜನರ ಪಾಪ ಕಳೆಯದಿರೆ”ಯಂಕಾಮಯೆ ತಂತು ಮುಗ್ರಂ ತೃಣೋಮಿ’’ ಎಂಬಬಿಂಕದ ಉಕುತಿಗೆ ಘನ್ನತ್ಯಾಕೆ ಸಂಕಟ ಹರ ಗುರ ವಿಜಯ ವಿಠ್ಠಲ ನಿನ್ನಗ-ಲಂಕಾರವಾಗದಯ್ಯಾ ಇನಿತು ನೋಡೆ ೩
ಅಟ್ಟತಾಳ
ಮಾಡಿದ ಕರ್ಮವ ಕ್ಷೀಣವೈದಸದಿರಲುನಾಡೊಳಗೆ ಪುಟ್ಟಿ ಅನುಭವಿಸಲೆ ಎನ್ನಯೂಢವಾದ ಕಲ್ಪ ತಿರುಗಿ ತಿರುಗಿದರುಗಾಢವಾದ ಕರ್ಮ ನಾಶವಾಗದು ಕೇಳೊಈಡು ಇಲ್ಲದಿಪ್ಪ ಸೌಖ್ಯದಾಯ ಮುಕ್ತಿಪ್ರೌಢರಾದವರಿಗೆ ದುರ್ಲಭವೆ ಸರಿ ರೂಢಿಯ ಜನಕಿನ್ನು ಪೇಳುವದ್ಯಾತಕೆಗೂಢ ಕರುಣಿ ಗುರು ವಿಜಯ ವಿಠ್ಠಲ ಎಂಬೊರೂಢಿಯ ಸರಿ ಮತ್ತೆ ಯೋಗ ಎನ್ನಲ್ಯಾಕೆ ೪
ಆದಿತಾಳ
ವಿನಯದಿಂದಲಿ ಒಮ್ಮೆ ಹರಿ ಎನೆ ಹರಿ ಎಂದು ಸ್ಮರಿಸಲುಜನ್ಮ ಜನ್ಮದ ಪಾಪ ಪರಿಹಾರವಾಗುವವುಅನುನಯದಿ ಮತ್ತೊಮ್ಮೆ ಅಚ್ಯುತನೆಂದು ನೆನೆಯೆಮನದಲ್ಲಿ ತೋರಿ ನೀನು ಆನಂದ ಬಡಿಸುವಿಘನ ಮಹಿಮನೆ ನಿನ್ನ ಮೂರನೆ ಖ್ಯಾತಿ ನೆನೆಯೆಅನಾದಿಯಿಂದ ಬಂದ ಪ್ರತಿಬಂಧ ದೂರ ಮಾಡಿಆನಂದಪ್ರದವಾದ ಸ್ಥಾನವನ್ನು ಐದಿಸುವ ಚಿನುಮಯನೆ ನಿನ್ನ ನಾಲ್ಕನೆಯ ಬಾರಿ ನೆನೆಯೆಋಣವನ್ನೆ ತೀರೆಸುವೆ ಉಪಾಯವಿಲ್ಲ ನಿನಗೆಅನುಮಾನ ಇದಕಿಲ್ಲ ಬಲಿಯೇ ಇದಕೆ ಸಾಕ್ಷಿಇನಿತು ನಿನ್ನ ಮಹಿಮೆ ಶ್ರುತಿ ಸ್ರ‍ಮತಿ ವರಲುತಿರೆಎನಗಿದ್ದ ದುಷ್ಕರ್ಮ ಪರಿಹಾರ ಮಾಡದಿರಲುಘನವಾದ ಮಹಿಮೆಯು ಲೌಕಿಕವಾಗದೇನೊಸನಕಾದಿ ಮುನಿ ವಂದ್ಯ ಗುರು ವಿಜಯ ವಿಠ್ಠಲರೇಯಮನಕ್ಕೆ ತಂದುಕೋ ಎನ್ನ ಬಿನ್ನಪವ ೫
ಜತೆ
ಭಕುತಿ ಇಲ್ಲದೆ ಬರಿದೆ ಸಥೆಯಿಂದಲಿ ಬಿನ್ನೈಸಿದೆಉಕುತಿ ಲಾಲಿಸು ಗುರು ವಿಜಯ ವಿಠ್ಠಲರೇಯ ||

೧೫೧
[ಭಾರತ ಕಥಾ ದೃಷ್ಟಾಂತ ಪೂರ್ವಕ ಶರಣಾಗತ ರಕ್ಷಕನೆಂಬ ಬಿರುದುಳ್ಳ ಹರಿಯೆ ಈ ಶರಣಗೆ ಬಂದೊದಗಿದ ದುರುಳ ಬಾಧೆ (೫೨ ದಿನ ದುಃಖ ಬಟ್ಟದಕಿಂತ) ಬಹು ಬಾಧಿಸುತಿದೆ. ಇದು ಸ್ವತಂತ್ರವೇ ನೀ ಸರ್ವ ಸ್ವತಂತ್ರ, ಮಿತ್ರನೆಂದು ಪೇಳಲು ಲಜ್ಜೆ ಬರುವದು, ಕರುಣಾನಿಧೆ ರಕ್ಷಿಸು, ಭಕ್ತರ ದೋಷವೆಣಿಸುವುದುಚಿತವಲ್ಲ.]
ಧ್ರುವತಾಳ
ಯಾಕೆ ಮುನಿಸು ನಿನಗೆ ಎಲೊ ಎಲೋ ಸಖ್ಯನೆಕಾಕು ನರನ ಕೂಡ ಕಠಿಣತನವೆಲೋಕದೊಳಗೆ ಒಬ್ಬ ನಾನೆವೆ ಪಾಪಿ ಏನೋಹೇ ಕರುಣಾಬ್ಧಿಯೆ ಆದ್ರ್ರ ಹೃದಯಸೌಖ್ಯ ನಿಮಗ್ನ ನರಗೆ ಪರರ ದುಃಖದ ಪರವೇನೊಏಕಮೇವನೆ ನೀನು ಇನಿತು ನೋಡೆಲೋಕಾ ಲೋಕವನೆಲ್ಲ ನೇಮಿಸಿ ಜೀವರಿಗೆಸುಖ ಸಂಜ್ಞವಾದ ವಿಷಯಗಳ ಅ-ನೇಕ ಬಗೆಯಾಗಿ ಸೃಜಿಸಿ ನಾಮ ರೂಪಸುಕ್ರೀಯಗಳ ಮಾಡಿ ಪ್ರಾಕೃತರ್ಗೆಬೇಕಾದ ಈಪ್ಸಿತಗಳನು ಸಲಿಸುತ್ತಸಾಕುವ ಪರಾರ್ಥಿಗೆ ಇನಿತು ಮಾತೆಶೋಕ ಮೋಹಾದಿಗಳ ಕಲ್ಪಿಸಿ ಅಜ್ಞಾನದಿವ್ಯಾಕುಲ ಬಡಿಪದಕ್ಕೆ ಇದೆ ಸಮಯವೇಈ ಕಲಿಯುಗವೆಂಬ ಘೋರಾರಣ್ಯ ಮಧ್ಯವಾಕು ಕೇಳುವರಿಲ್ಲ ಎಷ್ಟು ಕೂಗೆಲೌಕೀಕ ಅನುಬಂಧದವರ ಹೊರತಾಗಿಬೇಕಾದ ಜನರಿಲ್ಲ ಒಬ್ಬರನ್ನಸೂಕರ ಮೊದಲಾದ ಯೋನಿಗಳಲ್ಲಿ ಬಿಡದೆಜೋಕೆ ಮಾಡುವ ಶಪಥ ನಿನ್ನದಯ್ಯಾನೋಕನೀಯನೆ ಚಲುವ ಗುರು ವಿಜಯ ವಿಠ್ಠಲರೇಯಾಗೋಕುಲಾಂಬುಧಿ ಚಂದ್ರ ಸುಗುಣ ಸಾಂದ್ರಾ ೧
ಮಟ್ಟತಾಳ
ಪರರ ದುಃಖವ ನೀನು ಪರಿಹರಿಸದಿರಲುಶರಣ ರಕ್ಷಿಕನೆಂಬೊ ಬಿರಿದು ಸುಮ್ಮನೆ ನಿನಗೆಬರುವದೆ ಎಲೊ ದೇವ ಭಾಗ್ಯೋದಯ ಪೂರ್ಣಪರಿಹಾಸದಿ ಒಮ್ಮೆ ಸ್ಮರಿಸಿದ ನರರನ್ನುಕರವ ಪಿಡಿದು ಪೊರೆವ ಘನ ಮಹಿಮನು ಎಂದುವರ ವೇದ ಶಾಸ್ತ್ರಗಳು ಒದರುತಲಿರಲಾಗಿತಿರುಗಿ ನೋಡದಲಿಪ್ಪದು ಘನತೆಯೆ ಹರಿಯೆಚಿರಕಾಲದಿ ನಿನ್ನ ಅನುಸರಿಸಿ ಮುಖ್ಯಪರಿ ಪರಿ ಅನುಬಂಧ ನಿಮಿತ್ಯವು ಇರಲುಆರ ಲವ ಮಾತಿಗೆ ಇನಿತು ಮುನಿವದಿದುಪರಮ ಸಮ್ಮತವೇನೊ ಪರಿಪೂರ್ಣ ಕೃಪಾನಿಧೆಮೀರಿದ ಅಪರಾಧ ಮಾಡಿದವನಲ್ಲದೂರ ನೋಡದಲಿರೋ ಅನ್ನಿಗನೋಪಾದಿನರ ಸಾರಥಿ ಗುರು ವಿಜಯ ವಿಠ್ಠಲರೇಯಕುರುಹು ಕಾಣಿಸಿ ನಿಜ ಪುರವನೆ ಸೇರಿಸೊ ೨
ತ್ರಿವಿಡಿತಾಳ
ಪ್ರತ್ಯಕ್ಷವಾದ ಶಸ್ತ್ರ ಇನಿತು ಬಾಧೆಯ ಕೊಡದುಪ್ರತ್ಯಕ್ಷ ಅಸ್ತ್ರದ ವ್ಯಥೆಯಿಂದಧಿಕವಯ್ಯಾಪ್ರತ್ಯಕ್ಷವಾದ ನಿಶಿತಾ೧ ವಿಶಿಖಾತಲ್ಲಾದಕಿಂತ೨ದುಸ್ತರವಾಗಿ ಕಾಣುತಲಿದೆ ವೈಮನಸುಪ್ರತ್ಯಕ್ಷ ರಣಭೂಮಿ ಪತಿತನಾದುದಕಿಂತಮೃತ್ಯು ಸಂಸಾರ ದುಃಖ ಅಧಿಕವೆನಗೆಪ್ರತ್ಯಕ್ಷ ಶಂಖ (ಧನಸು) ಘೋಷ ಸ್ವನದಕಿಂತಭೀತಿಗೊಳಿಸುತಿದೆ ದುರುಳ ಬಾಧೆಶತ ಅರ್ಧದ್ವಯ ದಿನ ದುಃಖಬಟ್ಟದಕಿಂತಶತಕಲ್ಪವೆನಿಸಿ ದಿನ ಕಳೆವೆನಿಂದುಯತ್ನದಿಂದಲಿ ಇದು ಪ್ರಾಪ್ತವಾದುದಲ್ಲಕರ್ತೃ ನಿನ್ನಿಂದಲೆ ಘಟಿಸಿದದಕೆಶತ್ರುಗಳಂತೆ ಪ್ರತ್ಯುಪಕಾರ ತೀರಿಸಿದಿಚಿತ್ತಕ್ಕೆ ಬಂದದಕ್ಕೆ ಮಾಳ್ಪದೇನೊನಿತ್ಯಮುಕ್ತಳಾದ ಲಕುಮಿ ಬೊಮ್ಮಾದಿಗಳಿಗೆತುತ್ತು ಮಾಡಿ ಸುಖ ಉಣಿಸುವವನೆಜತ್ತಾಗಿ ಮಾಡಿಸಿದ್ದು ಅನುಭವಿಸಲಿ ಯನ್ನೆಮುಕ್ತರಾಗುವರೇನೊ ಎಂದಿಗನ್ನಮಿತ್ರನೆಂದು ನಿನ್ನ ಬಳಿಸಿಕೊಂಬುವದಕ್ಕೆಚಿತ್ತದಿ ಲಜ್ಜೆ ಎನಗೆ ಪುಟ್ಟುವದೊಭಕ್ತರಲ್ಲಿ ನಿನಗೆ ಮತ್ಸರ ಎಂದಿಗಿಲ್ಲಭೃತ್ಯರ ಅಪರಾಧ ಎಣಿಸದಲೆಸತ್ಯ ಸಂಕಲ್ಪ ಗುರು ವಿಜಯ ವಿಠ್ಠಲರೇಯಾಉಧೃತ್ಯನ ಮಾಡುವದು ಬಂಧದಿಂದ ೩
ಅಟ್ಟತಾಳ
ಪುಣ್ಯ ಪಾಪಾದರೆ ಹೊನ್ನು ಲೋಹವಾಗೆವನ್ನಜ ಸಖ ತಾಪ ಉರಿವ ಅಗ್ನಿಯು ಆಗೆಪುನ್ನಿತರ ಮಾಡುವ ಕ್ಷೇತ್ರ ಪಾಪವ ನೀಯೆಮನ್ನುಜರಿಂದಲಿ ಮಾಳ್ಪ ಕೃತ್ಯವೇನೊಪನ್ನಂಗ ತಲ್ಪ ನೀ ಇನಿತು ಮಾಡಲು ಆ-ಪನ್ನ ಜನರೆಲ್ಲ ಪ್ರತಿಕೂಲರೇ ಕೇಳುನಿನ್ನ ದ್ವೇಷಿಗಳಾದ ದನ್ನುಜ ಸಂಹಾರಪುಣ್ಯಾತಿಶಯವೆಂದು ಶ್ರುತಿ ತತಿಯನು ಪೇಳಾಜನುಮದ್ವಯದಲ್ಲಿ ಎರಡು ಬಗೆಯಿಂದಮನುಜಾಧಮರನ್ನು ಅಳಹಿದ ಕರ್ಮಕ್ಕೆಧನ್ಯನ್ನ ಮಾಡದೆ ಕಡಿಗೆ ದೂರ ಮಾಡಿಕಣ್ಣಿಲೆ ನೋಡದೆ ಖಿನ್ನನ ಮಾಳ್ಪುದುಸನ್ನ್ಯಾಯವೇನೆಲೊ ಚಿನ್ನುಮಯ ದೇವಪನ್ನಗಚಲ ವಾಸ ಗುರು ವಿಜಯ ವಿಠ್ಠಲರೇಯಾಇನ್ನಾದರೂ ಕೃಪೆ ಚನ್ನಾಗಿ ಮಾಡೋದು ೪
ಆದಿತಾಳ
ಆವಾವ ಸುಖಾ ಸುಖ ಏನೇನು ಒದಗಲುಕಾವ ಕೊಲ್ಲುವ ನೀನೆ ಸಂಶಯ ಎನಗಿಲ್ಲಜೀವನಕ್ಕೆ ನಾನಾ ಜನ್ಮ ಅನಾದಿ ನಿರ್ಮಿತವುನೋವ ನೋವಾದರು ಇದರಂತೆ ತಿಳಿಯಬೇಕುಪಾವನ ಇದಕಾಗಿ ಪ್ರಾರ್ಥಿಸಿದವನಲ್ಲಭಾವ ಶುದ್ಧದಿ ನಿನ್ನ ಬೇಡುವೆನಿಂದು ಒಂದೆದೇವ ನಿನ್ನಗಲಿದ ದಿನ ಒಂದು ಕಲ್ಪವಾದನೋವು ಮಾತ್ರ ಕೊಡದಿರು ಅನಂತ ಕಲ್ಪಕ್ಕೆಸೇವಕನ ಅಪರಾಧ ಸಾವಿರ ಇರಲಿಈ ವರವನ್ನೆ ಇತ್ತು ಪಾಲಿಸು ತೋಷದಿಂದಪಾವನ್ನ ಮೂರ್ತಿ ಗುರು ವಿಜಯ ವಿಠ್ಠಲರೇಯಾಮೂವರಲ್ಲಿ ಸಮನೆನೆಪ ನಿರ್ಘೃಣ್ಯ ದೋಷ ದೂರಾ ೫
ಜತೆ
ಭಕ್ತರಲ್ಲಿ ದೋಷ ಎಣಿಪದುಚಿತವಲ್ಲಸೂತ್ರಧಾರಕ ಗುರು ವಿಜಯ ವಿಠ್ಠಲರೇಯಾ ||

ಲೋಕನೀತಿಯ ಸುಳಾದಿ
೧೬೦
ಧ್ರುವತಾಳ
ವೈವಾಹ ಮಾಡಿದೆ ವಿಭವ ಪೂರ್ವಕದಿಂದಆವದು ಇದಕೆ ಸಮವೆಂದು ತಿಳಿದುಭಾವದಲಿ ಹಿಗ್ಗಿ ಬಳಲಿದರೆ ಇದಕೆಭಾವಜ್ಞರಾದವರು ಮೆಚ್ಚುವರೇ”ಯ ದೇವ ವಿದ್ಯಯಾ ಕುರತೇ ಶ್ರದ್ಧಯಾತದೇವ ವೀರ್ಯವತ್ತರಂ ಭವತಿ || ಇತ್ಯುಪನಿಷದ್ |’’ಏವ ಮಾದಿಗಳು ಈ ಪರಿ ವರಲುತಿರೆ ಅ- |ಭಾವ ಜ್ಞಾನದಿಂದ ಅಹಂಕಾರದಿಸಾವಿರ ಸಂಖ್ಯವಾದ ಕೃತಿಗಳು ಮಾಡಲೇಕೆದೇವ ದೇವನು ದೃಷ್ಟಿಯಿಂದ ನೋಡಾಅವನಿಯೊಳಗೆ ಅಲ್ಪರ ಮಧ್ಯ ಕೀರ್ತಿಬಾಹೋದಲ್ಲದೆ ಅದಕ್ಕೇನಾಹದೋಕೇವಲ ಶ್ರಮದಿಂದ ಅರ್ಥ ಸಂಪಾದಿಸಿಆಹೋದು ಸಾಲದದಕೆ ಋಣವ ಮಾಡಿಧಾವಂತ ಈ ಪರಿ ಘಟಣವಾದ ಕರ್ಮಪಾವನ್ನವಾದ ಪುಣ್ಯವಾಗದಿರೆಭುವನದಲ್ಲಿ ಬರಿದೆ ಆಯಾಸ ಬಡಲೇಕೆವೈವಾಹ ಮಾಡುವ ವಿಧಿ ಬ್ಯಾರುಂಟುಆವಾವ ಕರ್ಮದಿಂದ ಮೂರೇಳು ಗೋತ್ರದವರುಪವಿತ್ರರಾಗುವರು ಪಾಪದಿಂದಸಾವಧಾನದಿ ಕೇಳು ಭಕುತಿಯಿಂದಲಿ ಮನವೆನೋವು ನಿನಗಾಗದು ಭವದಲಿಂದಕಾವ ಕರುಣನಿಧಿ ಗುರು ವಿಜಯ ವಿಠ್ಠಲರೇಯಸೇವಕನೆಂದವಗೆ ಸುಖವೀವನೋ ೧
ಮಟ್ಟತಾಳ
ಮಕ್ಕಳು ಎನಗಾರು ಅವರಿಗೆ ನಾನಾರುರಕ್ಕಸಾಂತಕ ತಾನು ಕರ್ಮಾನು ಬಂಧದಲಿಮುಖ್ಯವಾಗಿ ತನ್ನ ಕ್ಲಿಪ್ತಾನುಸಾರದಲಿಅಕ್ಕರದಿಂದಲ್ಲಿ ಆತ್ಮಜಗೆ ಪಿತನುತಾರಾ ಸಂಜ್ಞ ಹರಿ ಪಾದದಿಂದ ಉದುಭವಿಸಿದಪರಮ ಪಾವನ್ನ ಸ್ತ್ರೀಯರುಂಟುಸಿರಿಪತಿ ಅದರಂತೆ ಸ್ತ್ರೀ (ಶ್ರೀ) ರೂಪವನು ಧರಿಸಿಪರಿವ್ಯಾಪ್ತನಾಗಿಪ್ಪ ಸ್ತ್ರೀಯರಲ್ಲಿತರುವಾಯದಲಿ ಸ್ಥೂಲ ಬೊಮ್ಮಾಂಡದೊಳಗಿದ್ದಹರಿ ಸಿರಿ ಮೊದಲಾದ ದಿವಿಜರನ್ನುಶರೀರದಲಿ ತಂದು ಐಕ್ಯ ಚಿಂತಿಸು ಈತೆರದಿ ತಿಳಿದು ಪರಮ ಭಕುತಿಯಿಂದವರ ವಧುಗಳಿಗಾಗಿ ಪರಿಪರಿ ವಸ್ತುಗಳೀಪರಿಯ ಚಿಂತಿಸಿ ಹರಿ ಸಿರಿಗರ್ಪಿಸುಸಿರಿದೇವಿ ಮೊದಲಾದ ಸ್ತ್ರೀಯರಲಂಕರಿಸಿಪರಮ ಭಕುತಿಯಿಂದ ನಾರಾಯಣಗೆಸಿರಿದೇವಿಗರ್ಪಿಸು ಕ್ರಮದಿಂದ ವಿಧಿ ವಾಯುಸುರರಿಗರ್ಪಿಸು ಅವರವರ ಸ್ತ್ರೀಯರವರಲ್ಲಿ ಕೂಡಿಸು ವಿಧಿಯ ಪೂರ್ವಕಪರಮ ಪುರುಷ ಹರಿ ತುಷ್ಟನಾಹದುರುಳ ಮರ್ದನ ಗುರು ವಿಜಯ ವಿಠ್ಠಲರೇಯಪರಮ ಯಶಸ್ಸುನೀವ ಇಹಪರದಿ ೪
ಝಂಪಿತಾಳ
ದೇಹವೆಂಬೊ ಕ್ಷೇತ್ರ ಸನ್ನಿಧಾನದಲ್ಲಿಲೋಹಿತಾಕ್ಷನೆಂಬೊ ಪಾತ್ರನೀಗೆಅವ್ಯಾಹತವಾದ ಸ್ಥಾನವೈದಿಸು ನಿನ್ನಸಹವಾಗಿ ಮೂರೇಳು ಗೋತ್ರದವರುಸಹಸ್ರ ರೂಪ ಗುರು ವಿಜಯ ವಿಠ್ಠಲರೇಯನಮೋಹ ನಿನಗಾಗುವುದು ಆವ ಕಾಲ ೫
ಅಟ್ಟತಾಳ
ಇನಿತು ಲಕ್ಷಣದಿಂದ ಚತುರ್ಥ ದಿನದಲ್ಲಿಏನೇನು ಮಾಡತಕ್ಕದದನೆಲ್ಲದನುಜಾರಿಗೆ ಇದು ಉಪಚಾರವೆಂದೆನ್ನುನೀನು ಕೊಡುವದೆಲ್ಲಾ ನೀನು ಕೊಂಬುವದೆಲ್ಲಅನ್ವಯಿಸು ಬಿಂಬನ ಪಾದ ಸನ್ನಿಧಿಯಲ್ಲಿಇನಿತು ಮಾಡುವವನ ಮನೆಯಲ್ಲಿ ಸುರರೆಲ್ಲವನಜಾಕ್ಷನಾಜ್ಞದಿ ಶುಭವೆ ಕೊಡುತಿಪ್ಪರುಇನ ಶಶಿ ಮಂಡಲ ಪರಿಯಂತ ತಿಲಯವಘನರಾಶಿ ಗಣಿತದಿನಿತು ಸತ್ಪುಣ್ಯವಜಪಿಸುವದದರಿಂದ ಬರಿದೆ ಮಾತುಗಳಲ್ಲಅನುಮಾನ ಇದಕಿಲ್ಲ ಶ್ರುತಿ ಸ್ರ‍ಮತಿ ವಾಕ್ಯವುವನಜಾಧಿಪತಿ ಗುರು ವಿಜಯ ವಿಠ್ಠಲಂಗೆಮನೆಯವನೆನಿಸುವಿ ಇದರಿಂದ ಆವಾಗ ೬
ಆದಿತಾಳ
ಈ ಪರಿ ಮಾಡುವದೆ ಶುಭಲಗ್ನವೆನಿಪದುಈ ಪರಿ ಮಾಡಿದವನ ವಂಶವೆ ಸದ್ವಂಶಈ ಪರಿ ತಿಳಿದವನ ಗೋತ್ರವೆ ಅಭಿವೃದ್ಧಿಈ ಪರಿ ತಿಳಿದವನ ಮನೆಯಲ್ಲಿ ಸರ್ವಕಾಲಲೋಪವಾಗದಂತೆ ಶುಭಜಾಲವಾಗುವುದುಈ ಪರಿ ತಿಳಿಯದೆ ಶತಸಂಖ್ಯ ಕನ್ಯಾದಾನಆಪಾರ ಮಾಡಲೇಕೆ (ಲ್ಯಾಕ) ಅವಗಿಲ್ಲ ಪುಣ್ಯವನ್ನುಶ್ರೀಪತಿ ಮೆಚ್ಚದಿಹ ನಾನಾ ಪಥ ಕರ್ಮ ಜಾಲಪಾಪ ನಿವರ್ತಿಗೆ ಕಾರಣವಲ್ಲ ಕೇಳೋಸುಪ್ರಕಾಶವಾದ ಮಾಣಿಕ ಮಾರಿಕೊಂಡುಅಲ್ಪವಾದ ಅಜಿವಾನ ಪ್ರಾಪ್ತಿ ಮಾಡಿಕೊಂಡಂತೆಆಪಾರ ಮಹಿಮನ ಅನುಸಂಧಾನವಿಲ್ಲದೆವ್ಯಾಪಾರದಿಂದ ಬಂದ ಕ್ಷುದ್ರವಾದ ಪುಣ್ಯವನ್ನುಕೋಪಾದಿ ದ್ವಾರದಿಂದ ದೈತ್ಯರು ಕೊಂಬುವರುಈ ಪರಿ ತಿಳಿದವನ ಜನುಮವೆ ಸಫಲವೆನ್ನಿಆಪ ವರ್ಗದಾತ ಗುರು ವಿಜಯ ವಿಠ್ಠಲರೇಯಕಾಪಾಡುವನು ಸತತ ಈ ಪರಿ ಗ್ರಹಿಸಿದವರ ೭
ಜತೆ
ಮದುವೆ ಎನಿಪದು ಸಿರಿ ನಾರಾಯಣರಿಗೆಪದವಿಗೆ ಸೋಪಾನ ಗುರು ವಿಜಯ ವಿಠ್ಠಲ ವೊಲಿವಾ ||

೧೪೩
ಧ್ರುವತಾಳ
ಹರಿ ನಿನ್ನ ನಿರ್ಘಣತನ೧ಕೆ ಎಣೆಯುವುಂಟೆಪರಮ ನಿರ್ಭಾರಕ೨ ಕರುಣಾದ್ರ್ರ ಹೃದಯಾಚಿರಕಾಲ ವೀರ ಸಹಜ ವಿದ್ಯಾ ಸಂಪಾದಿಸಿನಿರುತ ಮನಿಯಲ್ಲಿದ್ದ ವೃದ್ಧ ತರುಣಿಯಲ್ಲಿಉರು ಪರಾಕ್ರಮವನೆ ತೋರಿದ ತೆರದಂತೆಹರಿ ನೀನೆ ಗತಿಯೆಂದು ಮನ ಮೊದಲಾದ ಸಕಳ ಕರುಣಾದಿ ಧನ ಸತಿ ಸುತರು ಮಿಕ್ಕಾದವೆಲ್ಲಚರಣಕರ್ಪಿಸಿ ಕೊಟ್ಟು ಆರ್ತನಾಗಿಕರವ ಮುಗಿದು ನಿನಗೆ ನಮೊ ನಮೊ ನಮೊ ಎಂದುಮೊರೆಯ ಹೊಕ್ಕವನ ಮೇಲೆ ಮರಳೆ ಮರಳೆಮರಿಯ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಹಾಕಿದಂತೆಹರಿಯೆ ಇನಿತು ಮಾಳ್ಪುದುಚಿತವೇನೊಪರಿಪೂರ್ಣ ಕೃಪಾನಿಧೆ ಗುರು ವಿಜಯ ವಿಠ್ಠಲರೇಯಸುರರ ಶಿರೋರನ್ನ ತ್ರಿಜಗನ್ಮಾನ್ಯಾ ೧
ಮಟ್ಟತಾಳ
ಧರೆಯಲಿ ನಿರ್ಮಿಸಿದ ಪರಿ ಪರಿ ಪ್ರತಿಬಂಧಪರಿವ್ರತಗಳೆಲ್ಲ ಪ್ರಾಪುತವಾದರುಕರಣಗಳು ಅದಕೆ ಶೆಣಿಸೆ ಎಂದಿಗುಹರಿ ನಿನ್ನಗಲಿದ ಕ್ಷಣ ವಂದ್ಯುಗವಾದಮೀರಿದ ಪ್ರತಿಬಂಧ ಸಮ್ಮತದಲಿ ಉಂಬಸುರ ನರರ ಮಧ್ಯ ಓರ್ವ ನಲ್ಲವು ಕೇಳಿಪರಮ ದುಸ್ಸಹವಯ್ಯಾ ಪರಮಾತ್ಮ ನಿನ್ನಾಣೆಸರಸಿಜ ಭವ ನಾಮ ಗುರು ವಿಜಯ ವಿಠ್ಠಲರೇಯಾಸೈರಿಸಲಾರೆನೊ ಅಗಣಿತ ದುಃಖಗಳ ೨
ತ್ರಿವಿಡಿತಾಳ
ದ್ವಿಜ ಕುಲೋತ್ತಮ ತಾನು ಶುಚಿಯಾಗಿ ವಿಧಿಯಿಂದವಿಜಯ ಮೂರುತಿಯನ್ನೇ ಅರ್ಚಿಸುವವ್ಯಾಜದಿಂದಲಿ ಸ್ನಾನ ಸಂಧ್ಯಾದಿ ಜಪ ತಪಯಜಿಪ ಸಮಯದಲ್ಲಿ ಸೈರಿಸದೆಕುಜನನೋರ್ವನು ಶ್ವಪಚನಾದ ಅಧಮ ಬಂದುದ್ವಿಜ ಕುಲ ಮಣಿಯನ್ನೆ ಸ್ಪರಶ ಮಾಡೇಭಜಕರ ಸುಖ ನೋಡು ಅವನ ದುಃಖಕೆ ಸಮತ್ರಿಜಗದೊಳಗೆ ಆವದೈಯ್ಯ ದೇವವಿಜಯ ಸಖನೆ ಕೇಳೊ ಉದಯ ಮೊದಲು ಮಾಡಿರಜನಿ ಮುಖ ಕಾಲ ನಿರೀಕ್ಷಿಸಿನೈಜವಾದ ಸತ್ವಗುಣ ಕ್ರೀಯಮಾಣಗಳಿಗೆಕುಜನ ಶಿರೋಮಣಿ ಕಲಿಯು ತಾನುನಿಜ ಪರಿವಾರದಿ ಪ್ರತಿಕೂಲನಾಗಿ ತನ್ನ ಸ-ಹಜವಾದ ಕೃತ್ಯಗಳ ಚರಿಸುತಿರೆದ್ವಿಜ ವರೂಥಿಯೆ ನೀನು ಜರಿದು ನೋಡುತ ನಿಂದುಕುಜನ ತತಿಗೆ ಸಹಾಯವಾಗುವುದುಸೋಜಿಗ ತೋರುತಿದೆ ಸಖನೆಂತೊ ಕೃಪಾನಿಧೆತ್ಯಜನೆ ಮಾಡುವ ಶಕ್ತನಲ್ಲವೇನೋಭುಜಗ ಭೂಷಣ ವಂದ್ಯ ಗುರು ವಿಜಯ ವಿಠ್ಠಲರೇಯರಜ ತಮೋ ಗುಣಗಳಿಗೆ ಪ್ರೇರಕ ನೀನೆ ೩
ಅಟ್ಟತಾಳ
ತಮೋ೧ಗುಣ ವೆಂಬ ಹೀನಾಶ್ರಯದಿಂದಕಾಮ೨ ವೆಂಬೊ ಪಂಥ ಗಹನಾರಣ್ಯದಿ ಬಿದ್ದುಆ ಮಹ ಕ್ರೋಧಾಖ್ಯ ವ್ಯಾಘ್ರ೩ ಬಾಧಿಸುತಿದೆವ್ಯಾಮೋಹ೪ವೆಂಬುದು ವರಹ ಬೆನ್ನಟ್ಟಿನೇಮದಿ ಲೋಭದ ಸರ್ಪ೫ ನುಂಗುತಲಿದೆಆ ಮದ೬ವೆಂಬಂಥ ಅಷ್ಟ ಗಜಂಗಳುವ್ಯೋಮ ಲಂಘಿಸಿದರು ಬಿಡದೆ ಬೆನ್ನಟ್ಟಿರೆಕುಮತ್ಸಿರಿ೭ಯಾದ ಕಂಟಕಗಳನಟ್ಟು ಭೀಮ ರೂಪ೮ವಾದ ಮಾಯಾಂಧಕಾರದೊಳೀಮನವೆಂಬುವ ವೃಶ್ಚಿಕ೯ ಸ್ಪರಶದಿ ದಾಮರೂಪ೧೦ವಾದ ಅಜ್ಞಾನ ಪಾಶದಿಸಮಸ್ತ ಕರಚರಣಾದಿ ದೇಹವ ಕಟ್ಟಿಆ ಮುಂದಣ ಮಾರ್ಗ ಕಾಣಗೊಡದಲಿಪ್ಪಸ್ತೋಮ ವೈರಿಗಳೆಲ್ಲ ಮುನಿದೇಕ ಕಾಲದಿನೇಮದಿ ಎನ್ನನು ಬಾಧೆ ಬಡಿಸುತಿರೆಈ ಮಹಾ ಪ್ರತಿಬಂಧ ತೊಲಗಿಪರಿಲ್ಲವೊಪ್ರೇಮ ನೀನೆ ಎಂದು ಎಷ್ಟು ಕೂಗಿದರುಸಾಮಜ ರಕ್ಷಕ ಸುಮ್ಮನಿರುವದುಭೂಮಂಡಲದಲ್ಲಿ ಧರ್ಮ ಪದ್ಧತಿ ಏನೋತಾಮರಸ ನಯನ ಗುರು ವಿಜಯ ವಿಠ್ಠಲರೇಯಧಾಮವ ಸೇರಿಪ ಭಾರ ನಿನ್ನದಯ್ಯಾ ೪
ಆದಿತಾಳ
ಧರಣಿಯ ಚಕ್ರದಲ್ಲಿ ಆರ್ತರನ ರಕ್ಷಿಸುವಬಿರಿದು ನಿನ್ನದಯ್ಯಾ ಅನ್ಯರ್ಗೆ ಸಲ್ಲದೆಂದುಮೆರೆವುತಿದೆ ಶ್ರುತಿ ಶಾಸ್ತ್ರ ಪುರಾಣಗಳಲ್ಲಿಹರಿ ನಿನ್ನ ಪದಗಳ ಜನುಮದೊಳಗೆ ಒಮ್ಮೆಸ್ಮರಿಸಿದ ನರನಲ್ಲ ಗುಣದಿಂದ ಹೀನವಾಗಿ ಪರಧನ ಪರಸತಿ ಪರನಿಂದ್ಯದವನಾಗಿಬರಿದೆ ಕಾಲ ಕಳೆದೆ ಪರಲೋಕ ದೂರನಾಗಿಕುರಿ ತನ್ನ ಮರಣದ ಕುರುಹವ ಕಾಣದಲೆವರ ಭೂಷಣವಾದ ತೋರಣ ಬಯಸಿದಂತೆಶಾರೀರ ಕೇವಲ ಅನಿತ್ಯವೆಂದು ತಿಳಿದುಪರಮೇಷ್ಠಿ ಕಲ್ಪ ತನಕ ಆಲೋಚನೆ ಮಾಡಿದುರುಳವಾದ ನಡತಿಯಿಂದ ವಿಷಯವ ಸಂಪಾದಿಸಿನರನೆಂದುದಾಸೀನ ಮಾಡದೆ ಕೃಪೆಯಿಂದತ್ವರಿತದಿ ಬಂದೊದಗಿ ನಿಃಶತೃರಮಾಡಿ ಎನ್ನ ಕರವ ಪಿಡಿದು ಪರಿಪೂರ್ಣ ದಯಾನಿಧೆನರ ಸಖನಾದ ಗುರು ವಿಜಯ ವಿಠ್ಠಲರೇಯಸೈರಿಸಲಾರೆನಯ್ಯಾ ಈ ವಿಧ ತಾಪಗಳ ೫
ಜತೆ
ಅನಿಮಿತ್ಯ ಬಾಂಧವನೆನಿಪ ದೇವರ ದೇವಚಿನುಮಯ ಮೂರುತಿ ಗುರು ವಿಜಯ ವಿಠ್ಠಲರೇಯಾ ||

ಗುರುವೆ ನಿಮ್ಮಯ
೧೧೮
ಗುರುವೆ ನಿಮ್ಮಯ ಕರುಣ ವೃಕ್ಷ ನೆಳಲೊಹೊರತಾದ ಕಾರಣದಿ ಹೀನನಾದೆ ಪ
ತ್ರೈತಿಯಲಿ ತಾರಾಖ್ಯ ದ್ವಾಪರದಿ ಉದ್ಧವ ಖ್ಯಾತಿ ದ್ರೋಣನು ಕಲಿಯುಗದಿ ನಾನಾ ||ಭೌತಿಕಗಳ ಧರಿಸಿ ಪ್ರಾರ್ಥಿಸಿದ ಸಜ್ಜನರಆರ್ತಗಳ ಪರಿಹರಿಸಿ ಸರ್ವಾರ್ಥಗರೆವ೧
ಸುರವಂಶಕೆ ಮುಖ್ಯ ಗುರುವೆನಿಸಿ ಮೆರೆದೆಮರುತದೇವನ ದಯಕೆ ಪಾತ್ರನಾಗಿ ಹರಿಯ ಆನಂದಾಖ್ಯ ಶರಧಿ ಮುಣುಗಿದ ಮಹಾಪರಮ ಕರುಣಾನಿಧಿಯ ದೇವಮಣಿಯೆ೨
ನೀ ಪ್ರಸನ್ನನಾಗೆ ಸಕಲ ವೈಭವದಿಂದ ಪ್ರಪೂಜ್ಯರೆನಿಸುವರು ಅಮರ ತತಿಯು ||ನೀ ಪರಾಂಙ್ಮಖನಾಗೆ ಜ್ಞಾನ ಬಲ ಸಂಪದವುಲೋಪ ಐದುವರಯ್ಯ ಸರ್ವ ನಿರ್ಜನರು ೩
ಆವಾವ ಕಾಲದಲಿ ನಿನ್ನ ದಯದಿಂದಲ್ಲಿದೇವಾರ್ತಿಗಳನೈದು (ದಿ) ಸೌಖ್ಯಬಡುವೆ ||ಕಾವ ಕರುಣೆಯೆ ಎನ್ನ ಅವಗುಣಗಳೆಣಿಸದಲೆಸಾವಧಾನದಲೆನ್ನ ಸಲಹಬೇಕು೪
ಬಾಲಕನ ಅಪರಾಧ ಅನಂತವಿರಲಿನ್ನುಪಾಲಿಸಬೇಕಯ್ಯ ನೈಜಗುರುವೆ ||ಪಾಲಸಾಗರಶಾಯಿ ಗುರು ವಿಜಯ ವಿಠ್ಠಲರೇಯಕಾಲಕಾಲಕೆ ಅಗಲದಂತೆ ವರವೀಯೋ ೫

ಹಾಡಿನ ಹೆಸರು :ಗುರುವೆ ನಿಮ್ಮಯ
ಹಾಡಿದವರ ಹೆಸರು :ವಿರೂಪಾಕ್ಷ ವಂದಲಿ
ರಾಗ :ತೋಡಿ
ತಾಳ :ಭಜನ್ ಠೇಕಾ
ಸಂಗೀತ ನಿರ್ದೇಶಕರು :ಸದಾಶಿವ ಪಾಟೀಲ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ