Categories
ರಚನೆಗಳು

ಗುರು ರಾಮವಿಠಲ

ವಾಯು ದೇವರು – ಹನುಮಂತ
೧೨೭
ಅಂಜನಾ ಸುಕುಮಾರನೆ ಭವ ಪ
ದಂಜಿಕೆ ಬಿಡಿಸು ಬೇಗ ಸಂಜೀವರಾಯನೆ ಅ.ಪ.
ವಾಯುಪುತ್ರಾ ವಜ್ರಗಾತುರ
ನೋಯುವೆ ನಾ ಸಂಸಾರದೊಳ್
ಕೈಯಪಿಡಿದೆತ್ತುವರಾರೈ ೧
ಗುರುವರೇಣ್ಯ ತವ ಪಾದಪಂ
ಕರುಹಯುಗವಾಶ್ರಯಿಪರ
ನೆರಲಿನೊಳಗಿಟ್ಟುಯನ್ನನು ೨
ಕ್ಷೇಮದಾತನೇ ಶ್ರೀ ಗುರು
ರಾಮ ವಿಠಲ ಕಿಂಕರ
ಭೂಮಿಜಾಶೋಕನಾಶನ ೩

(ನುಡಿ-೧) ಹದಿನೆಂಟನೆಯ ತತ್ವ ತಿಳೀಬೇಕು
ಲೋಕನೀತಿ (ಅ)
೧೯೫
ಅಂಟಿ ಅಂಟದ ಹಾಗೆ ಇರಬೇಕು ಪ
ಈ ತಂಟೆ ಸಂಸಾರದ ಬುದ್ಧಿ ಉಂಟಾದವರಿಗೆಲ್ಲಾ ಅ.ಪ
ಎಂಟು ಮದಗಳನ್ನು ಬಿಡಬೇಕು | ಹದಿ-
ನೆಂಟನೇ ತತ್ವ ತಿಳಿಯಬೇಕು
ಮೂರೆಂಟು ಜಯಿಸಿ ನಿಜನೆಂಟನ ಕಂಡವನ
ಭಂಟನಾಗಿ ವೈಕುಂಠ ಸೇರುವದಕೆ ೧
ಶತ್ರುಗಳಾರ್ವರ ಗೆಲ್ಲಬೇಕು | ನಿಜ-
ಮಿತ್ರರಾರ್ವರೊಳು ನಿಲ್ಲಬೇಕು
ರಾತ್ರಿ ಹಗಲು ಪತ್ನೀಪುತ್ರರೊಡನೆ ಕಮಲ-
ಪತ್ರದಿ ನೀರಿದ್ದ ರೀತಿಯಿಂದಲಿ ತಾನು ೨
ಮಾನವಮಾನ ಒಂದಾಗಬೇಕು | ಅನು-
ಮಾನವಿಲ್ಲದೆ ತಿರುಗಲುಬೇಕು
ಇನ್ನೇನಾದರು ನಾ-
ಧೀನನೆನುತ ಮದ್ದಾನೆಯಂದದಿ ತಾನು ೩

(ನುಡಿ-೩) ದ್ವಾಸುಪರ್ಣ
ಆತ್ಮನಿವೇದನೆಯ ಹಾಡುಗಳು
೧೭೫
ಅಣುಗ ನಿನಗೆ ನಾನು | ಅಗಣಿತ
ಗುಣ ಸಮುದ್ರ ನೀನು ಪ
ಗಣಿಸಲಶಕ್ಯವು ನಿನ್ನ ಮಹಿಮೆಗಳು
ಕಮಲಭವಗೆ ಮಿಕ್ಕವರ ಪಾಡೇನು ಅ.ಪ
ನೀನುತ್ತಮ ಪರುಷ | ನಿನ್ನಯ
ಧ್ಯಾನ ಸುಜನಕೆ ಹರುಷ
ಕಾಣೆ ನಿನಗೆ ಸರಿ ಮೂರು ಲೋಕದೊಳು
ಪ್ರಾಣಿಗಳ ಹೃದಯ ಕಮಲ ನಿವಾಸನೆ ೧
ಎನ್ನನಾದಿಕರ್ಮ | ಕಳೆಸುವುದು
ಮುನ್ನು ನಿನಗೆ ಧರ್ಮ
ಬನ್ನಬಡುತಿಹೆನು ಭವ ವಾರಿಧಿಯೊಳು
ಭಿನ್ನೈಸುವುದೇತಕೆ ನೀನರಿಯಾ ೨
ದ್ವಾಸುಪರ್ಣ ಶ್ರುತಿಯ | ಪ್ರಮಾಣದಿ
ದಾಸನು ನಾನೈಯ್ಯ
ಓ ಸೀತಾಪತಿ ಗುರುರಾಮ ವಿಠಲ
ಶ್ವಾಸ ಬಿಡುವದಕೆ ಸ್ವತಂತ್ರವೆನಗಿಲ್ಲ ೩

ತತ್ವಚಿಂತನೆ
೨೭೪
ಅತಿಭಯಪುಟ್ಟುವುದಡವಿಯ ನೋಡಲ್ ಪ
ಮತಿ ಮಂದವಾಗಿಯೆ ಮಾರ್ಗತಪ್ಪುವುದು ಅ.ಪ
ಹುಲಿಸಿಂಹಶಾರ್ದೂಲ ಗಂಡಭೇರುಂಡ
ಬಲುದುಪ್ಪೆ ಆನೆ ಕಾಡ್ಗೋಣದ ತಂಡ ೧
ಝಿಲ್ಲಿಕದಿಂದೆದೆ ತಲ್ಲಣಿಸುವದು
ಎಲ್ಲೆಲ್ಲಿಗಿಡಮರ ಮುಳ್ಳುಕಲ್ಲುಗಳು ೨
ಅಲ್ಲಲ್ಲಿರಾಕ್ಷಸರಾರ್ಭಟದಿಂದ
ನಿಲ್ಲಗೊಡದ ದುಷ್ಟಕೀಟಕ ವೃಂದ ೩
ಸಂಸಾರಟವಿಯನ್ನು ಸೇರಿ ನಾ ಕೆಟ್ಟೆ
ಕಂಸಾರಿ ಸ್ಮರಣೆಗೆ ಕಾಣೆನು ಬಟ್ಟೆ ೪
ದೇಹ ಸಂಬಂಧ ಮೋಹ ಕಾಡ್ಗಿಚ್ಚು
ದಾಹಗೊಳಿಸಿ ಕೊಲ್ಲುತಿರುವುದು ಹೆಚ್ಚು ೫
ಮೃಗತೃಷ್ಣೆಯನು ಕಂಡುವೋಡಿ ಪೋಪಂತೆ
ಹಗಲು ಇರುಳು ಇದರೊಳಗಿದೆಚಿಂತೆ ೬
ದಾರಿಯ ತೋರುವ ಗುರುರಾಮ ವಿಠಲಾ
ಕಾರಣ ಕರ್ತನ ನಾ ನೋಡಲಿಲ್ಲ ೭

೩೧೨
ಅತ್ತಿಗೆ ಭೋಜನಮಾಡೆ ಸಾವಕಾಶದಿ ನೀನೂ
ಮತ್ತೆ ಮತ್ತೆ ಬೇಕಾದ್ದೆಲ್ಲ ತಂದು ಬಡಿಸುವೆನೂ ಪ
ನನ್ನಿಯಿಂದ ಈಗ ಕ್ಷೀರಾನ್ನ ದಧ್ಯೋದನ್ನ
ಇನ್ನು ಪರಮಾನ್ನಗಳು ಹೋಳಿಗೆ ಪಳಿದ್ಯ ಹುಳಿಕೂಟು
ಬಣ್ಣದ ಕಾಯಿಪಲ್ಯ ಕೊಸಂಬರಿ ಬಾಳಕ
ಉಪ್ಪಿನಕಾಯಿಗಳ ಪಚ್ಚಡಿ
ಚೆನ್ನಾಗಿ ಭೋಜನ ಮಾಡೆ ನಮ್ಮಣ್ಣನ ಸಹಿತದಿ ೧
ಲಾಡು ಚಿರೋಟಿ ಮಂಡಿಗೆಗಳು ಬೇಡವೆಂದು ಕಯ್ಯತೋರಿ
ಬೇಡಿ ಬೇಡಿ ಹಾಕಿಸಿಕೊಂಬಿ ಜೋಡು ಜೋಡಾಗಿ
ಗೂಡೆ ಗೂಡೆ ಹಪ್ಪಳ ಸಂಡಿಗೆ ಕೂಡೆ ಕೂಡೆ ಸುರಿಯುತ್ತಿದ್ದರೆ
ಹಾಡು ಹೇಳುವುದಕ್ಕೆ ಬಾಯಿ ಬಿಡುವುದಿಲ್ಲವೇನೀ? ೨
ಸೃಷ್ಠಿಯೊಳು ನಿನ್ನಂಥ ಹೆಣ್ಣು ಪುಟ್ಟಿಸಿದ ಬ್ರಹ್ಮದೇವ
ಪಟ್ಟದರಸಿ ನಮ್ಮಣ್ಣನ ಭಾಗ್ಯದೇವತೆಯೇ
ಸಿಟ್ಟುಮಾಡದೆ ನ್ನಾ ಸ್ಮರಿಸಿಕೊಂಡು
ಹೊಟ್ಟೆ ತುಂಬಾ ಭರ್ತಿಹಾಕೆ ದಿಟ್ಟೆ ಬೀಗಿತ್ತಿ ೩

೩೧೩
ಅತ್ತಿಗೇ ನಿನ್ನ ಹಾಡಿಗೆ ನಾ ಪ್ರತ್ಯುತ್ತರ ಕೊಡುತಿಹೆನೆ ಪ
ಪಥ್ಯವಸ್ತುಗಳು ನಿಮಗೇತಕೆ ಉನ್ಮತ್ತಜನರು
ನೀವ್ ಕತ್ತೆ ಸಮಾನರು ಅ.ಪ
ಎಣ್ಣೆ ಸಾಸುವೆ ಅರದಿಟ್ಟಿಹ ಚಿತ್ರಾನ್ನದ ರಾಶಿಗಳು
ಹಣ್ಣಾಗದ ಕುಂಬಳಕಾಯ್ ಪಲ್ಯ ಹಲಸಿನ ಕಾಯ್ ಪಲ್ಯ
ಸಣ್ಣ ಗೆಣಸು ಗೆಡ್ಡೆಯ ಪಲ್ಯಗಳ ಸಾಸುವೆ ಹುಳಿ ಪಳಿದ್ಯಾ
ನುಣ್ಣಗಿರುವ ಎಮ್ಮೆಗಳಂದದಿ ನೀವೆ ತಿನ್ನಿ ನಾಳೆ
ಮಾಡಿಸಿ ಹಾಕುವೆನೂ ೧
ಸಾಮೆ ಅಕ್ಕಿಯಾ ಅನ್ನವು ಮುಸುಕಿನ
ಜೋಳದ ಆಂಬೊಡೆಯು
ಶಾಮೆದಂಟಿನಾ ಹುಳಿಸೊಪ್ಪೂ ನವಣಕ್ಕಿಯ ಪರಮಾನ್ನ
ನೇಮವಾದ ನೆಲಗಡಲೆ ಕಾಯೆಣ್ಣೆಯ ಕರಿಗಡುಬುಗಳೂ
ಕಾಮಿತವಿದ್ದರೆ ಅಜಕ್ಷೀರವು ಕುರೀ ಮೊಸರನು
ತರಿಸಿ ಹಾಕುವೆ ೨
ವೃಂತಾಕ ಫಲಾಂಡುಲು ಶತಮೂಲಿ ತುಂಬ
ಫಲವು ಮುಲ್ಲಂಗೀ
ಕಾಂತೆ ನಿನ್ನ ಭೋಜನಕೆಡೆ ಮಾಡಲು
ಕಡು ಹರುಷದಿ ಕೊಂಬೀ
ಇಂಥಾ ಶತವರಟಾದ ಬೀಗರ ನಾನೆಲ್ಲೂ ಕಾಣಲಿಲ್ಲಾ
ಸ್ವಾಂತದಲ್ಲಿ ನ ಸ್ಮರಣೆ
ಮಾಡದವರಿಗೆ ಇವು ಬಲು ಪ್ರಿಯ್ಯಾ ೩

೧೯೬
ಅತ್ಯಾಸೆಪಡಬೇಡ ಅಸ್ಥಿರ ಸಂಸಾರ ಮತ್ತನಾಗದಿರೆಲವೊ ಪ
ಬತ್ತಿದ ಕೊಳದಂತೆ ಬರಿದಾಗುವದು ಮುಂದೆ
ವೆತ್ಯಸ್ತ ಸ್ಥಿತಿಯಿಂದಾನಿತ್ಯಾ ಶರೀರವಿದು ಅ.ಪ
ಜನರಾಡುವುದು ಕೇಳಿ ಮನಕೆ ಬಂದುದ ಕೋರಿ
ಅನುಮಾನ ಚಿತ್ತನಾಗಿ
ವನಿತೆಯರ ಬಲೆಯೊಳು ಸಿಲುಕಿ ಮೋಹಭ್ರಾಂತಿ
ವಶನಾಗಿ ಧರ್ಮಾಧರ್ಮಗಳ ತಿಳಿಯದೆ ೧
ಹೇಯ ಸುಖವ ಬಯಸಿ ಆಯಾಸ ಪಡುತಲಿ
ಬಾಯ ಬಿಡುತ ಸತತ
ನೋಯುತಾ ನುಡಿಯುತ ಕ್ರೋಧ ಲೋಭದಿ ಮುಳುಗಿ
ನಾಯಿಯಂದದಿ ತಿರಿಗಿ ನಾನಾ ವಿಧದಲಿ ೨
ದಾನಧರ್ಮಗಳಿಲ್ಲ ಜ್ಞಾನಸತ್ಯಗಳಿಲ್ಲ
ಧ್ಯಾನವು ಮೊದಲೇ ಇಲ್ಲ
ಹೀನರ ಸಂಗದಿ ಇರುಳು ಹಗಲೆನ್ನದೆ
ಮಾನಾಭಿಮಾನ ಅಜ್ಞಾನದಿ ಮುಳುಗಿ ೩
ಪರರೊಡೆವೆಯ ತಂದು ಒಡಲ ಹೊರೆಯುತಲ-
ಪಾರ ಚಿಂತನೆ ಪಡುತ
ಹರಿಕೊಡಲಿಲ್ಲೆಂದು ದೈವವ ದೂರುತ
ನೆರೆಹೊರೆ ನೋಡಿ ಅವರಂತೆ ನಾನಿರಬೇಕೆಂದ ೪
ಭಿನ್ನ ಜೀವರು ಕರ್ಮ ಭಿನ್ನಇವರಿಗೆಲ್ಲ
ಮುನ್ನಿನ ಕರ್ಮದಿ ಫಲ
ಬೆನ್ನಬಿಡದು ಎಂದು ಪೇಳುವ ಶಾಸ್ತ್ರಗ-
ಳನ್ನು ನಂಬದಲೆ ನಿನ್ನನ್ನೆ ನೀ ಪೊಗಳಿ ಕೊಂಡು ೫
ನ್ಯಾಯಾರ್ಜಿತ ದ್ರವ್ಯದಿಂದ ಕಾರ್ಯಗಳವು-
ಪಾಯದಂದಲಿ ನಡೆಸಿ
ತಾಯಿ ಮಕ್ಕಳ ನೋಡುವಂತೆ ದೀನರಿಗೆ ಸ-
ಹಾಯ ಮಾಡುತ ಜ್ಞಾನಿಗಳ ಸೇವಿಸುತಿಹರು ೬
ಪೊರೆವೊ ಭಾರಕರ್ತ  ತಾ
ಹೊರವಳಗಿರುತಿಹನು
ಶರಣಾದವರಿಗೆ ಭಯವೇನು ಸ್ವಾಮಿ
ಸರ್ವರ ಪಾಲಿಸುವನು ನಿನ್ನನು ಮಾತ್ರ ಬಿಡುವನೆ ೭

೨೭೫
ಅದ್ವೈತಿ ನಾನೆನ್ನ ಬೇಡ | ನಿರವದ್ಯ ಪ
ಸದ್ಗುಣಪೂರ್ಣ ನೀನೇನೊ ಮೂಢ ಅ.ಪ
ಬ್ರಹ್ಮಜಿಜ್ಞಾಸದ ಕ್ರಮವ | ನಿರ-
ಹಮ್ಮಿನೊಳಲ್ಲದೆ ತೋರ್ಪುದೆ ನಿಜವ
ಸಮ್ಯಕ್ ಶೋಧಿಸದೇ ಅಹಂ ಬ್ರಹ್ಮಾಸ್ಮಿ ಎಂಬುವ
ಆಮ್ನಾಯ ವಾಕ್ಯಕೆ ಅರ್ಥವ ತಿಳಿಯದೆ ೧
ಏಕಮೇವಾದ್ವಿತೀಯ ಬ್ರಹ್ಮ | ಶೃತಿಗೆ
ಕಾಕುಮಾಡುತಲರ್ಥ ಪೇಳ್ವುದಧರ್ಮ
ಏಕವಾವುದು ಇನ್ನು ಏಕವಾವುದು ಎಂದು
ನೀಕಳವಳಿಸುತ ನಿಜತತ್ವವರಿಯದೆ ೨
ಆತ್ಮನಾತ್ಮಗಳೆಂದರೇನೊ | ಪರ-
ಮಾತ್ಮ ಜೀವಾತ್ಮರೊ ಜೀವದೇಹಗಳೊ
ಸ್ವಾತ್ಮಾನುಸಂಧಾನದಿಂದಲಿ ನೋಡ-
ಧ್ಯಾತ್ಮ ವಿದ್ಯಾಭ್ಯಾಸ ಮಾಡದೆ ಬಾಯೊಳು ೩
ರವಿ ಗಣಪತಿ ಶಿವ ಶಕ್ತಿ | ಭೈ-
ರವ ವಿಷ್ಣು ಎಂಬುವ ಷಣ್ಮತಯುಕ್ತಿ
ಎವೆ ಮಾತ್ರ ಸ್ವಾತಂತ್ರ್ಯವಿಲ್ಲ ಕೇಳ್ ಸರ್ವಶ-
ಬ್ದವುಯಾವನಲ್ಲಿ ಸಮನ್ವಯವರಿಯದೆ ೪
ಜೀವ ಜೀವರಿಗೆಲ್ಲ ಭೇದ | ವಿದುಸ್ವ
ಭಾವವಾಗಿರುವುದು ಯಾತಕೀವಾದ
ಜೀವರೂಪದಿ ಸರ್ವಜೀವರೊಳಗಿದ್ದು
ದೇವಸಕಲ ಕರ್ಮಗಳ ಮಾಡಿಸುವನು ೫
ಕರ್ಮಬದ್ಧರು ಜೀವರೆಲ್ಲ | ಈ
ಕರ್ಮವೆಂಬುದು ಅವನಿಗೆ ಲೋಪವಿಲ್ಲ
ನಿರ್ಮಲ ಸಚ್ಚಿದಾನಂದ ಬ್ರಹ್ಮ ಎಂದು
ನೀನೆ ಪೇಳುವೆಯಲ್ಲ ನಿನಗೆ ನಿಜವಿಲ್ಲ ೬
ಹರಿಹರಬ್ರಹ್ಮೇಂದ್ರ ಸೂರ್ಯ | ಚಂದ್ರ
ಗರುಡ ಗಂಧರ್ವ ಕಿನ್ನರ ಸಿದ್ಧ ಸಾಧ್ಯ
ನರತಿರ್ಯಕ್ ಪಶುಪಕ್ಷಿ ಕೀಟಾದಿ ನಾಮಗಳು
ಪರಮಾತ್ಮನಲಿ ಸಮನ್ವಯವರಿಯದೆ ೭
ಮಾಯಾ ಪ್ರಪಂಚವಿದೆನ್ನುತ | ನಿ-
ರ್ಮಾಯಕ ಬ್ರಹ್ಮನೊಬ್ಬನು ನಾನೆ ಎನುತ
ಮಾಯೆಯಧಿಷ್ಠಾನದೊಳನಂತ ಜೀವನಿ-
ಕಾಯವು ಗುಣಗಳಿರುವ ಮರ್ಮವರಿಯದೆ ೮
ವೇದೋಪನಿಷತ್ ಶಾಸ್ತ್ರ | ಸಾರ
ಭೇದಾ ಭೇದ ಪೇಳ್ವುದು ತತ್ತತ್ಕಾರ್ಯಾನುಸಾರ
ಭೇದವಬದ್ಧ ಅಭೇದ ನಿಶ್ಚಯವೆಂದು
ವಾದಿಸುವುದಕೇನಾಧಾರ ನಿನಗುಂಟೊ ೯
ಜೀವಬ್ರಹ್ಮೈಕ್ಯವೆ ಮುಕ್ತಿ | ವೇ-
ದಾವಳಿಗಳ ಪರಮಾರ್ಥದ ಉಕ್ತಿ
ಜೀವದೊಳಗೆ ಆತ್ಮವಿಲ್ಲದಿರಲು ಯಾವ
ಜೀವನಿಂದೇನಾಗುವುದೆಂಬುದರಿಯದೆ ೧೦
ದ್ವಾಸುಪರ್ಣವೆಂಬುವುದಕೆ | ವಿಷ-
ಯಾಸಕ್ತ ಜೀವ ಆತ್ಮನು ಸಾಕ್ಷಿಯದಕೆ
ನೀಸರ್ವೋತ್ತಮನಾದರೆ ಇನ್ನು ಮಹದಾದಿ
ಈ ಸೃಷ್ಟಿ ಸ್ಥಿತಿಲಯವೇತಕೆ ತಿಳಿ ಜೋಕೆ ೧೧
ಅಂಧ ಪರಂಪರವಾದ | ಬಿಟ್ಟು
ಚಂದಾಗಿ ಪರಿಶೋಧಿಸು ಭೀದಾಭೀದ
ತಂದೆತಾಯಿಗು ಮಗನಿಗೂ ಎಷ್ಟು ಭೀದ ಆ-
ನಂದದೊಳೀ ಪರಿ ತಿಳಿದರೆ ನಿರ್ವಾದ ೧೨
ಪೂರ್ವೋತ್ತರ ವಿರೋಧವಿಲ್ಲ | ದಂತೆ
ಸರ್ವಶೃತಿಗಳರ್ಥ ತಿಳಿದು ನುಡಿಸೊಲ್ಲ
ಗರ್ವವೇತಕೆ ನಿನಗಿದರೊಳೇನಿಲ್ಲ ನೀ
ಸರ್ವಜ್ಞನೊ ಕಿಂಚಜ್ಞನೊ ನೋಡು ದೃಢಮಾಡು ೧೩
ಈಗ ಬ್ರಹ್ಮನು ನಾನು ಬೇರೆ | ಮುಂದೆ
ಯೋಗ ಒದಗಿದಾಗ ಒಂದೆ ಎಂಬುವರೆ
ಈಗೇನು ಆಗೇನು ಇಲ್ಲೇನು ಉಂಟೆ ನಾ-
ವಾಗಲು ಜೀವರಿಗೆ ಹರಿಕರ್ತನಾಗಿರೆ ೧೪
ಕಾಲಕರ್ಮ ಸ್ವಭಾವ ಜೀವ | ಹರಿಯ
ಲೀಲೆಯಿಂದಾಡಿಸುವನೊಬ್ಬ ದೇವ
ಪಾಲಿಸುವನು ಸಂಹರಿಸುವ ಸೃಜಿಸುವ
ಆಲಸ್ಯ ಬಿಟ್ಟು ಅವನಿಗೆ ದಾಸನಾಗದೆ ೧೫
ಸಾಲೋಕ್ಯ ಸಾಷ್ರ್ಣಿ ಸಾಮೀಪ್ಯ | ಇನ್ನು
ಮೇಲೆ ಸಾರೂಪ್ಯ ಸಾಯುಜ್ಯಗಳೆಂಬ
ನಾಲ್ಕೊಂದು ವಿಧ ಮುಕ್ತಿಗಳ್ಯಾವನಿಗೆ
ಆಲೋಚಿಸಿದರರ್ಥ ನಿಜವಾಗಿ ತಿಳಿಯದೆ ೧೬
ಜ್ಞಾನ ಕರ್ಮಗಳೆರಡಿಹುದು | ಕಾಂಡ
ಜ್ಞಾನವೆ ನಾನು ಕರ್ಮವೆ ಮಿಥ್ಯವೆಂದು
ನೀನಾಡುವುದಕೇನು ನೆಲೆ ಮೂಲ ಯಾವುದು
ಸ್ವಾನುಭವವೋ ಶಾಸ್ತ್ರವೊ ಮನಕೆ ತೋರಿದ್ದೊ ೧೭
ಹೋಮ ಜಪವು ಸ್ನಾನ ದಾನ | ನಿತ್ಯ
ನೇಮ ನಿಷ್ಠೆಗಳಿಂದ ಮಾಡಲಿಧ್ಯಾನ
ಸ್ವಾಮಿ ಭೃತ್ಯ ನ್ಯಾಯವರಿಯದವನು ಶುದ್ಧ
ತಾಮಸನಲ್ಲದೆ ತತ್ವಾರ್ಥಿ ಎನಿಸುವನೆ ೧೮
ಸ್ಮಾರ್ತ ಕರ್ಮವ ಮಾಡಿ ಸತತ | ಹರಿಗೆ
ಆರ್ತನಾಗುತ ಫಲಗಳ ಸಮರ್ಪಿಸುತ
ಕರ್ತನು ನೀನೆಂದು ಭೃತ್ಯನು ನಾನೆಂದು
ತೀರ್ಥಪಾದನ ದಿನದಿನದಿ ಸಂಸ್ತುತಿಸದೆ ೧೯
ಅನುಭವಿಸುವುದೆಲ್ಲ ಹರಿಯ | ಪಾದ
ವನಜಕೊಪ್ಪಿಸಿ ಸಂಸಾರದ ಕರಕರೆಯ
ಮನದಿ ಲೆಕ್ಕಿಸದೆ ಚಿಂತನಗೈದು ಸರ್ವತ್ರ
ಘನಮಹಿಮನ ದಿವ್ಯಗುಣರಾಶಿ ಪೊಗಳದೆ ೨೦
ಹೊರಗಣ್ಣ ಮುಚ್ಚಿ ಮೋದದಲಿ | ಒಳ-
ಗಿರುವಾಧಾರಾದಿ ಚಕ್ರಗಳ ಸ್ಥಾನದಲಿ
ಸರಸಿಜಭವ ಶಂಕರಾದಿ ಸುರರ ನೋಡಿ
ತರತಮವಾಗಿ ಮುಂದಿನ ಪರಿಯ ತಿಳಿಯದೆ ೨೧
ಗಂಗೆಯಮುನೆ ಸರಸ್ವತಿಯಾ | ಒಳಗೆ
ಹಿಂಗದೆ ಸ್ನಾನವ ಮಾಡಿ ಶುದ್ಧಿಯಲಿ
ಮಂಗಳ ಮೂರ್ತಿಯ ನೋಡಿ ಕೊಂಡಾಡಿ ಅ-
ನಂಗಗೆ ಸಿಲುಕದೆ ಅರ್ಥಿಯ ಪೊಂದದೆ ೨೨
ಎಪ್ಪತ್ತೆರಡು ಸಹಸ್ರನಾಡಿ | ಗಳೊ-
ಳೊಪ್ಪುವ ಭಗವದ್ರೂಪಗಳನು ನೋಡಿ
ಅಪ್ಪ ನೀನೆಂದು ಭಕ್ತಿಯಲಿ ಕೊಂಡಾಡಿ ಪುನ-
ರಾವರ್ತಿರಹಿತ ಶಾಶ್ವತ ಸುಖಿಯಾಗನೆ ೨೩
ವಿಪರೀತ ಮತಿಪುಟ್ಟದಂತೆ | ಧ್ಯಾನ-
ಗುಪಿತವಾಗಿರುತ ಜನರಿಗೆ ಹುಚ್ಚನಂತೆ
ಸುಪಥವ ಪಿಡಿದು ನಿಷ್ಕಪಟನಾಗುತ
ಅಪವರ್ಗಾಪೇಕ್ಷಯಿಂ ನಿಷ್ಕಾಮಿಯಾಗದೆ೨೪
ಆಪಾದಮಸ್ತಕ ದೇಹ | ದಿಸು
ರಾಪದಜನಕ ಶ್ರೀ
ವ್ಯಾಪಾರವೆಲ್ಲ ಮಾಡಿಸುವನೆಂದರಿತರೆ
ಸಾಫಲ್ಯನಾಗಿ ಜೀವನು ಧನ್ಯನಾಗುವ ೨೫

(ಅ) ಭಗವಂತನ ಸಂಕೀರ್ತನೆ

ಅಪ್ರಮೇಯ ಆದರಿಸೋ ಎನ್ನ ಪ
ಸ್ವಪ್ರಕಾಶಾನಂದರೂಪನೆ ಅ.ಪ
ಮುಪ್ಪುರಹರನುತ ಮುನಿಜನಸೇವಿತ
ತಪ್ಪುಗಳೆಣಿಸದೆ ದಾಸನೆಂತೆಂದು ೧
ನಿನ್ನದರುಶನದಿಂದಾ ಧನ್ಯರಾಗುವರುಜನರು
ಪುಣ್ಯವಂತರಾಗಿಹವರವ ಪಡೆವರು ೨
ಧಾರುಣಿಯೊಳಗೆ ಮಳೂರೊಳು ನೆಲಸಿದೆ
ಮಾರಜನಕ ಗುರುರಾಮ ವಿಠಲ ೩

ಅಭಾಗ್ಯದಾ ಲಕ್ಷ್ಮಿ ಹೋಗಮ್ಮಾ
೨೭೬
ಅಭಾಗ್ಯಾದ ಲಕ್ಷ್ಮಿ ಹೋಗಮ್ಮ ದೊಡ್ಡಮ್ಮ ನೀ ಪ
ಪೀಡೆಕಾಲುಗಳ ಮುಚ್ಚುತ ನೀವೋ
ಡೂೀಡಿ ಪೋಗುತಲಿ ನಿಲ್ಲದೆ ವ್ಯಾಜ್ಯಗ-
ಳಾಡುವ ಸ್ಥಳದಲಿ ನೆಲೆಯಾಗುತ ಹಾಳ
ಗೋಡೆಯೊಳಿರುತಿಹ ಕತ್ತೆಯಂತೆ ೧
ದೀಪದ ನೆರಳಲಿ ಕೋಪಿಯಮನದಲಿ
ಲೋಪವಾದಕರ್ಮದಿ ಸಂತತವು
ನಾಪರನೆಂಬುವ ಮಾಢನಲ್ಲಿ ನಿ-
ವ್ರ್ಯಾಪಾರಿಯ ಚಿತ್ತದಿ ಯಾವಾಗಲು ೨
ವಿಧವಾಸ್ರ್ರೀಯರ ಪಾದ ಧೂಳಿಯಲಿ
ಗದರಿಸುತಾಡುವ ಬಿರುನುಡಿಯಲಿ ನಿಂ-
ದ್ಯದ ಮಾತಾಡುವವರ ಬಾಯಲಿನೀ
ಮುದದೊಳಿದ್ದು ಅಜ್ಞಾನವ ಪಾಲಿಸೆ ೩
ಪತಿಗಲ್ಲದ ನಾರಿಯೊಳು ಬಿಡದಲೆ
ಪ್ರತಿದಿನದಲಿ ಅಳುತಿಹ ಸಂಸಾರದಿ ನೀ
ಪತಿಯೊಡನವರೊಳಿರುತ ಮೂರ್ಖರಲಿಯ-
ನೃತವಾಡಿಸಿ ನರಕವ ಪೊಂದಿಸಲು ೪
ಮರವೆ ಸುಷುಪ್ತಿಯು ಬಹುವಿಧ ಮೋಹವು
ಪರಿಪರಿ ಕಾಮಕ್ರೋಧ ಲೋಭಗಳು
ನೆರೆನಂಬಿದವರಿಗೀವುತ ನೀಹಗ-
ಲಿರುಳು ಕಲಿಯೊಡನೆ ಯೆಡೆಬಿಡದಲ್ಲಿಗೆ ೫
ಪೇಳುವ ಬೋಧೆಯ ಕೇಳದೆ ಜನ್ಮವ
ಹಾಳುಮಾಡಿಕೊಂಬುವ ಜನಗಳು ನಿ-
ನ್ನಾಳುಗಳವರಿಂದಲಿ ನೀ ಪ್ರತಿದಿನ
ವೂಳಿಗವನು ಕೈಕೊಳ್ಳುತ ಬಿಡದೆ ೬
ಗುರುರಾಮ ವಿಠಲನ ಶರಣ ಜನರ ಕ-
ಣ್ದೆರದು ನೋಡದಿರು ಬೇಡುವೆ ನಿನ್ನನು
ನಿರುತವು ನಿರ್ದಯ ಮಾಡುತ ದುರುಳರ
ಪರಮ ಕೃಪಾದೃಷ್ಟಿಯಲಿ ನೋಡಲು ೭

೧೯೭
ಅಭಿಮಾನವ್ಯಾಕೊ ಮಾನವಾ ಪ
ಸಭಯ ದುಃಖದೊಳಗಿರುವಾ ದುರಭಿಅ.ಪ
ನೀರ ಮೇಲಿನ ಗುಳ್ಳೆಯಂದದಿ ತೋರ್ಪ ಶ-
ರೀರ ಭೋಗಾಪೇಕ್ಷಿಸಿ | ನಾನು ನನ್ನದೆಂದು ೧
ಅನ್ನರಸದಿ ದೇಹ ಅಧಿಕವಾಯಿತಲ್ಲದೆ
ತನ್ನನೇನು ತಾ ಬಲ್ಲದೆ | ನಾನು ನನ್ನದೆಂದು ೨
ಊರಿನ ಜನಗಳು ಹೊರ ಪೈಣ ಮಾಡಲು
ದಾರಿಗೆ ದಾರಿಯಾವುದು | ನಾನು ನನ್ನದೆಂದು೩
ಶುಭ ಸಂತೋಷಗಳಿದರೊಳು ಕಾಣೆನು
ಇಭದಂತೆ ಮದವೇರುತಾ | ನಾನು ನನ್ನದೆಂದು೪
ಇದು ಸ್ಥಿರವಿಲ್ಲ ಇನ್ನೊಂದು ತಪ್ಪುವುದದಲ್ಲ
ಪದರದೆ ನೀ ಕೇಳೀಸೊಲ್ಲ | ನಾನು ನನ್ನದೆಂದು ೫
ವೇದಶಾಸ್ತ್ರ ಪುರಾಣವ್ಯಾರ ಪೊಗಳುವುದು
ಶೋಧನೆ ಮಾಡಿ ತಿಳಿಯದೆ | ನಾನು ನನ್ನದೆಂದು೬
ನು ಗುರುತಾಗಿರುವ ನೆಲೆ
ಅರಿತುಕೊಂಡವ ಧನ್ಯ | ನಾನು ನನ್ನದೆಂದು ೭

(ನುಡಿ-೧) ಅರುಣಜನ ನೇವರಿಸಿದ ಹಸ್ತ
೯೪
ಅಘ್ರ್ಯವರ್ಘವಿದುವೆ ನಿನ್ನ ಅಭಯ ಹಸ್ತಕೆ ಪ
ಭಾರ್ಗವೀ ಮನೋಹರಾಪ ವರ್ಗದಾಯಕ ಅ.ಪ
ಸಿರಿಯು ಮುಡಿಯೊಳೊಪ್ಪುವ ಹಸ್ತಕೆ
ಸಿರಿಕರವಾದ ದಿವ್ಯಹಸ್ತಕೆ
ಅರುಣಜನ ನೇವರಿಸಿದ ಹಸ್ತಕೆ
ಪರಮ ಕೋದಂಡ ಪಿಡಿದ ಹಸ್ತಕೆ ೧
ವರಕುಚೇಲನವಲನು ಬಹು-
ತ್ವರದಿ ಚಾಚಿ ಬೇಡಿದ ಹಸ್ತಕೆ
ತರುಣಿದೃಪದ ತನಯಳ ಶಾ-
ಕಾನ್ನವಾಂತ ದಿವ್ಯ ಹಸ್ತಕೆ ೨
ದಧಿಭಾಂಡವಡದೆಶೋದೆಗೆ
ಮುದವ ತೋರಿದ ಮುದ್ದು ಹಸ್ತಕೆ
ಅದುಭುತ ಅಪ್ರಮೇಯ ನಿನ್ನ ಹಸ್ತಕೆ ೩


ಅವತರಿಸಿದ ನೃಸಿಂಹ | ಶ್ರೀ ಹರಿ ಪರಬ್ರಹ್ಮ ಪ
ಅವತರಿಸಿದ ತನ್ನವರನು ಪಾಲಿಸುವ
ತವಕದಿ ಭೂ ಭಾರವನಿಳುಹುವುದಕೆ ಅ.ಪ
ದಡಿಗ ರಕ್ಕಸನು ಖಡುಗದಿ ಕಂಬವ
ಹೊಡೆದ ಮಾತ್ರದಲಿ ಗುಡುಗಿನಂತೆವಡ
ನೊಡನೆ ಘುಡುಘುಡಿಸಿ ಕಿಡಿಗಳುದುರೆ ಕೋಟಿ
ಸಿಡಿಲಿದೆನ್ನುತ ಕಿವುಡುಗೊಳೆ ಲೋಕವು ೧
ಭೂ ನಭೋಂತರಾಳದಲಿ ಭಯಂಕರ
ಧ್ವಾನ ತುಂಬಿ ಪೊಗೆ ಸುತ್ತಿ ಉರಿಯಲು ಶ
ತಾನಂದಾದ್ಯಮರರು ಕರಗಳ ಮುಗಿ
ದಾನತರಾಗಿ ನಮೋನಮೋಯೆನಲ್ ೨
ಚಿಟಿಲು ಚಿಟಿಲು ನಿರ್ ನಿಟಿಲು ಶಬ್ದದಿ
ಕ್ತಟಗಳೊಡೆಯೆ ಲಟಕಟಿಸೆ ಭುವನಚಯ
ಹಟಯೋಗದ ಮುನಿಕಟಕವು ಗುರುರಾಮ
ವಿಠಲನ ಪೊಗಳುತ ಮಿಟಿಮಿಟಿ ನೋಡಲು ೩

ಅವರೆಕಾಯಿ ಬೇಕು
೨೭೭
ಅವರೆ ಕಾಯ್‍ಬೇಕು ಕಾಲದಿ
ಅವರೇಕಾಯ್‍ಬೇಕು ಪ
ಅವರೆ ಬಹುರುಚಿಯವರೆ ಸಂಪದ
ಅವರಿಂದಲಿ ಮೋಕ್ಷಾದಿ ಸಾಧನವು ಅ.ಪ
ಯುಕ್ತರಾಗಿ ಇರುವ ಜನರಿಗೆ
ಭುಕ್ತಿಯನು ಕೊಡುವ
ಭಕ್ತರಿಗೆಲ್ಲಾ ಬಾಯ್ಸವಿಯಾದಾ-
ಸಕ್ತಿಪುಟ್ಟಿಸುವ ಸರ್ವೋತ್ತಮವಾದ ೧
ಇವರೆಲ್ಲ ಬೆಳೆದು ಬಿತ್ತಿ
ವಿವರವಾಗಿ ಅಳದು
ತವಕದಿ ಮೂಟೆಯ ಕಟ್ಟಿಟ್ಟಿದ್ದರೆ
ಜವನವರೆಳೆಯುವ ಕಾಲಕ್ಕೊದಗುತ ೨
ಹಿತರಾಗೀ ಅವರೆ ಮಾತಾ-
ಪಿತಾರಾಗೀ ಅವರೆ
ಗತಿದಾಯಕರಾಗಿ ಅವರೆ ಭೂ-
ಸುತೆ ರೀರ್ವರು ೩

(ನುಡಿ-೧) ತಾಮರಸ ಬಾಂಧವ ಕಬಳೀಕೃತ
೧೨೮
ಆಂಜನೇಯನೆ ಅನಿಲಸುತನೆ ಪ
ಸಂಜೀವರಾಯ ಮಂಜುಳ ವಜ್ರಕಾಯ ಅ.ಪ
ರಾಮದೂತ ಕ್ಷೇಮದಾತ ಕಾಮವಿರಹಿತ
ತಾಮರಸ ಭಾಂಧವ ಕಬಳೀಕೃತ ೧
ಸೋಮಕುಲಭೂಷ ಭೀಮವಿಕ್ರಮ ಧಾಮ ಸುನಾಮ
ತಾಮಸ ಕೌರವ ನಿರ್ನಾಮ ಕೃಷ್ಣಪ್ರೇಮ ೨
ಗುರುರಾಮ ವಿಠಲ ಕಿಂಕರ ಯತಿವರ ಮಧ್ವಾಭಿಧ
ಹರಿನಾನೇ ಯೆಂಬುವರ ಗರ್ವವ ಮುರಿದ ೩

(ನುಡಿ-೧) ಶಮಿಕಾತ್ಮಜನ ಶಾಪ
ಸಂಕ್ಷೇಪ ಭಾಗವತ
೩೪೨
ಆಗಮದಸಾರ ಶಾಸ್ತ್ರವಿಚಾರ ಪೌರಾಣ
ಯೋಗತತ್ವಗಳ ಶೃಂಗಾರವೆನಿಸುತಿಹ ಶ್ರೀ
ಭಾಗವತಮಂ ಪೇಳ್ವೆಸಂಕ್ಷೇಪದಿಂದ ಹನ್ನೆರಡು ಪದ್ಯಂಗಳಾಗಿ
ಗುರುಸುತನ ಬಾಣದುಪಹತಿಗೆ ಮೊರೆಯಿಡುವಉ
ತ್ತರೆಯ ಗರ್ಭವ ಶೌರಿರಕ್ಷಿಸಲ್ ಬಳಿಕಧರೆ
ಗರಸಾಗಿ ಕಲಿಯ ನಿಗ್ರಹಿಸಿ ಧರ್ಮದಿ
ರಾಜ್ಯವಾಳುತಿರೆವಿಷ್ಣುರಾತಂ
ವರಶಮೀಕಾತ್ಮಜನ ಶಾಪಬರೆತಾಕೇಳಿ
ಪರಮವೈರಾಗ್ಯದಿ ಕುಶಾಸ್ತರಣದೊಳಿರಲ್
ಕರುಣದಿಂ ಶುಕಮುನಿಪನೈತಂದನಿದುವೆ
ಪ್ರಥಮಸ್ಕಂಧದೋಳ್ ತಿಳಿವುದು ೧
ಸಾರವಾಗಿಹ ಭಕ್ತಿಯೋಗಮಂ ಪೂರ್ವದೋಳ್
ನಾರದಗೆ ವಿಧಿವೇಳ್ದ ಸೃಷ್ಟಿಯಕ್ರಮಂ ಪ್ರಳಯ
ವಾರಿಯಲಿ ಬ್ರಹ್ಮತಪಗೆಯ್ಯಲೊಲಿದಚ್ಯುತಂ
ತನ್ನಪುರಮಂ ತೋರಿಸಿ
ಚಾರುಭಾಗವತ ತತ್ವೋಪದೇಶದಿ ಸೃಷ್ಟಿ
ಗಾರಂಭ ಮಾಡಿಸಿದನೆಂದು ಶುಕಮುನಿವರಂ
ಧಾರುಣೀಪತಿ ಪರೀಕ್ಷಿತಗರುಹಿದಂ ದ್ವಿತೀಯಸ್ಕಂಧದೋಳ್
ತಿಳಿವುದು ೨
ವಿದುರ ಮೈತ್ರೇಯ ಸಂವಾದಮಂ ಸೃಷ್ಟಿಯ
ಭ್ಯುದಯವಂ ಸ್ವಾಯಂಭುವಿನಜ ನನವಹರೂ
ಪದ ಹರಿಯಚರಿತ ಸನಕಾದಿಗಳ್ ಜಯವಿಜಯರಿಗೆ
ಕೊಟ್ಟ ಶಾಪತೆರನು
ಉದಿಸಿದಂಹರಿಕರ್ದಮಂಗೆ ಕಪಿಲಾಖ್ಯದಿಂ
ವಿದಿತವಾಗಲ್ ತಾಯಿಗರುಹಿದಂಸಾಖ್ಯಯೋ
ಗದನೆಲೆಯ ರಾಜಂಗೆ ಮುನಿಯೊರೆದನಿದು
ತೃತೀಯಸ್ಕಂಧದೋಳ್ ತಿಳಿವದು ೩
ಶಿವನ ವೈರದಿನಕ್ಷಯಾಗವಂ ಮಾಳ್ಪುದಂ
ತವಕದಿಂ ಕೆಡಿಸಿ ಶಂಕರನು ಕರುಣಿಸುವದಂ
ಧೃವಚರಿತಮಂಗವೇನರಚರಿತ್ರೆಗಳ್ ಪೃಥುಚಕ್ರವರ್ತಿ ಜನನ
ಅವನಿಗೋರೂಪಿಯಾಗುತ ಸಕಲವಸ್ತುಸಾ
ರವಕೊಡುವದುಂ ಪ್ರಚೀತಸರುಪಾಖ್ಯಾನಮಂ
ತವೆಪುರಂಜನನುಪಾಖ್ಯಾನಮಂ ಯಿದುಚತುರ್ಥ
ಸ್ಕಂಧದೋಳ್ ತಿಳಿವದು ೪
ವರಪ್ರಿಯ ವ್ರತಚರಿತೆಯಾಗ್ನೀಧ್ರಚರಿತೆಯುಂ
ಹರಿಯ ಋಷಭಾವತಾರದ ಮಹಾಮಹಿಮೆಯಂ
ಭರತರಾಯನ ಮೂರುಜನ್ಮವೃತ್ತಾಂತಮಂ
ಭೂಗೋಳವಿಸ್ತಾರವು
ಎರಡನೆ ಖಗೋಳದೋಳ್ ವಾಯ್ವಾದಿಮಂಡಲವಿ
ವರಗಳುಂ ನರಕಾದಿ ವರ್ಣನೆಯ ಸಂಖ್ಯೆಯುಂ
ಪರಿಪರಿಯ ಪಾಪಪ್ರಭೇದಮುಂ
ಯಿದುಪಂಚಮಸ್ಕಂಧದೋಳ್ ತಿಳಿವದು ೫
ಅರುಹಿದನಜಾಮಿಳನ ಚರಿತೆಯಂದಕ್ಷುಸುತೆ
ಯರ ಜನನಮಂ ವಿಶ್ವರೂಪಾಖ್ಯಭೂಸುರಂ
ಹರಿಗೆ ನಾರಾಯಣಕವಚವ ಮಿಗೆ ಪೇಳ್ವುದುಂ
ವೃತ್ರಾಸುರನ ಕೊಲ್ವುದುಂ
ಭರದಿ ಬೆನ್ಹತ್ತಿಬಹ ಬ್ರಹ್ಮಹತ್ಯವ ಸುರಪ
ಧರಣಿಜಲ ವೃಕ್ಷಸ್ತ್ರೀಯರಿಗೆ ಭಾಗಿಸಿದುದಂ
ವರಚಿತ್ರಕೇತುವಿನುಪಾಖ್ಯಾನವಿದುವೆ ಷಷ್ಠಸ್ಕಂಧದೋಳ್
ತಿಳಿವದೂ ೬
ವಿಧಿಯವರದಿ ಹಿರಣ್ಯಕಶ್ಯಪನು ಗರ್ವದಿವಿ
ಬುಧರಂ ಜಯಿಸುವದುಂ ತರಳ ಪ್ರಹ್ಲಾದನ
ಭ್ಯುದಯಮುಂ ಹರಿಯವೈರದೊಳಸುರಭಾಧಿಸಲ್
ನರಸಿಂಹನಾಗಿ ಹರಿಯು
ಮದಮುಖನ ಸೀಳ್ವುದಂಪ್ರಹ್ಲಾದನೃಪನಜಗ
ರದಮುಖದಿ ವರ್ಣಾಶ್ರಮದ ಧರ್ಮಕೇಳ್ವುದಂ
ವಿಧುಧರಂತ್ರಿಪುರವಂವಧಿಸಿದಕಥೆಯಸಪ್ತಮಸ್ಕಂಧದೋಳ್
ತಿಳಿವದು ೭
ಮನುಗಳ ಚರಿತ್ರೆಗಳ್ ಗಜರಾಜ ಮೋಕ್ಷವಂ
ದನುಜ ದಿವಿಜರು ಶರಧಿಯಂಮಥಿಸೆವಿಷವರು
ದ್ರನು ಭಕ್ಷಿಸುವದುಮಮೃತವ ಮೋಹಿನೀ ರೂಪದಿಂದ
ಹರಿಸುರರಿಗೀಯ್ಯೆ
ಅನಿಮಿಷರ ಗೆದ್ದು ಬಲಿ ಶತಕ್ರತುವಮಾಳ್ಪುದಂ
ವನಜಾಕ್ಷ ವಟುವೇಷದಿಂ ದವಗೆಲ್ವುದಂ
ಘನವಾದ ಮೀನಾವತಾರ ದಚರಿತೆಯುಮಷ್ಟಮಸ್ಕಂಧದೋಳ್
ತಿಳಿವದು ೮
ಇನವಂಶ ರಾಜರಚರಿತ್ರೆಯೋಳಂಬರೀ
ಷನ ಮಹಿಮೆ ಯಿಕ್ಷಾ ್ವಕುರಾಜನಚರಿತ್ರ ರಾ
ಮನಚರಿತೆಯಂ ಭವಿಷ್ಯದ್ರಾಜರಿತಿಹಾಸ
ಚಂದ್ರವಂಶಾನುಚರಿತಂ
ವನಿತೆಯುಂ ಪುರುಷನಾಗಿದ್ದಿಳನ ಚರಿತಶು
ಕ್ರನ ಮಗಳ ಶರ್ಮಿಷ್ಠೆಯರಚರಿತೆಯದುವೂರು
ಜನಪಾಲ ವಂಶಪಾರಂಪರ್ಯವಿದುವೆ
ನವಮಸ್ಕಂಧದೋಳ್ ತಿಳಿವದು ೯
ಹರಿ ದೇವಕೀ ಪುತ್ರನಾಗಿ ಗೋಕುಲದಿ ಪರಿ
ಪರಿಲೀಲೆಗಳತೋರಿ ದುಷ್ಟರಂಸದೆದುತಾಂ
ತೆರಳಿ ಮಧುರೆಯೊಳುಕಂಸಾದಿಗಳವಧಿಸಿ
ಪಿತೃಮಾತೃಗಳಸೆರೆಯಬಿಡಿಸಿ
ವರವುಗ್ರಸೇನಂಗೆ ಪಟ್ಟಮಂಗಟ್ಟಿಸಾ
ಗರದಿ ಪುರವಂರಚಿಸಿ ಬಲುತರುಣಿಯರ ಕೂಡಿ
ಧರೆಯಭಾರವನಿಳುಹಿದಂ ಕೃಷ್ಣನಿದುವೆದಶಮಸ್ಕಂಧದೋಳ್
ತಿಳಿವದು ೧೦
ವಸುದೇವ ನಾರದನ ಬೋಧೆಯಿಂದಲೆ ಮಖವ
ನೆಸಗಿದಂ ಯದುಕುಲಕೆ ಹರಿಯಸಂಕಲ್ಪದಿಂ
ಋಷಿಶಾಪಬರುವದಂ ವುದ್ಧವಗೆ
ಪರಮಾತ್ಮತತ್ವಬೋಧೆಯನರುಪಿದಂ
ಮುಸಲದಿಂ ಯಾದವರಕ್ಷಯವೈದಲನ್ನೆಗಂ
ಬಿಸಜನಾಭಂ ರಾಮನೊಡನೆ ತಾತೆರಳಿದಂ
ಶಶಿಮುಖಿಯರುಳಿದವರನರ್ಜುನಂ
ಕರೆದೊಯಿದನೇಕಾದಶಸ್ಕಂಧದೊಳ್ ೧೧
ಏಳುದಿನದೋಳ್ ಪರೀಕ್ಷಿತ ಮಹಿಪಾಲತಾಂ
ಕೇಳಿದಂ ಶುಕನಿಂದಸಕಲಮುಂ ಕಲಿಕಾಲ
ದೇಳಿಗೆಯನು ಪ್ರಳಯವೃತ್ತಾಂತಮಂ
ಸೂತಶೌನಕಾದಿಗಳಿಗಿದನು
ಪೇಳಿದಂ ಬಾದರಾಯಣನ ಕೃಪೆಯಿಂದಲಿದ್ವಿ
ಜಾಳಿ ಹರುಷದ ಕಡಲೊಳೀಜಾಡಿದುದುರಮಾ
ಲೋಲನ ಮಹಾಲೀಲೆಯವತಾರಮದ್ಭುತಂ-
-ದ್ವಾದಶಸ್ಕಂಧವಿದುವೆ ೧೨
ಇಂತೀ ಪರಿಭಾಗವತ ಶಾಸ್ತ್ರಮಂ
ಸಂತರಡಿಗಳಿಗೆರಗಿ ಪೇಳ್ದೆ ಸಂಕ್ಷೇಪದಿಂ
ಕಂತುಪಿತಗುರುರಾಮವಿಠಲತಾಂಹೃದಯದೋಳ್-
-ನಿಂತುನುಡಿಸಿದತರದೊಳು
ಸ್ವಾಂತನಿರ್ಮಲರಾಗಿ ಪಠಿಸುವರಿಗನುದಿನಂ
ಚಿಂತಿತಾರ್ಥಂಗಳಿಹಪರಸೌಖ್ಯವಿತ್ತುಶ್ರೀ
ಕಾಂತ  ಪೊರೆವಜಯ-
-ಜಯಮನಂತಮಹಿಮಂಗೆನಿರತಂ ೧೩

೯೫
ಆಚಮನವ ಮಾಡು ನಿಗಮ ಗೋಚರ ಸಿರಿರಮಣಾ ಪ
ವಾಚಾಮಗೋಚರ ಕಂಜ ಲೋಚನ ಗುಣ ಪೂರ್ಣಾ ಅ.ಪ
ಪರಮ ಪವಿತ್ರ ಸಕಲಗುಣಭರಿತ ಜಗತ್ಪ್ರಭುವೇ
ನರಸುರ ಗರುಡೊರಗ ಕಿನ್ನರರೊಳು ನೀನಿರುವೆ ೧
ಪಾವನ ಸುಜನಾ ವನಜಗ ಜೀವನ ಮಮಸ್ವಾಮಿ
ಸಾವಧಾನದೊಳೆನ್ನ ಮೊರೆ ಕೇಳ್ ಸರ್ವಾಂತರ್ಯಾಮಿ ೨
ಸ್ಮರಣೆ ಮಾಳ್ಪರಘವ ಕಳೆವ ಬಿರುದು ಕಟ್ಟಹೆ ನೀನು
ಗುರುರಾಮ ವಿಠಲ ನಿಜ ಭಕ್ತರಿಗೆ ಕಾಮಧೇನು ೩

ಪ್ರಹ್ಲಾದ ಚರಿತೆ
ವಿಶೇಷ ಸಂದರ್ಭಗಳ ಹಾಡುಗಳು
೩೩೨
ಆಡುವ ಬನ್ನಿರಿ ಬಾಲಕರೆ ಪ
ರೂಢಿಗಚ್ಚರಿಯಾಗಿ ಬಲುಲೀಲೆಗಳಿಂ ಅ.ಪ
ಜನನ ಮರಣವಂಬ ಚೆಂಡು ಬುಗುರಿಯಿಂ
ಮನದ ವೃತ್ತಿಗಳೆಂಬ ಗೋಲಿಗಜ್ಜುಗದಿಂ
ಜನಸಂಘವೆಂಬುವ ಚಿಳ್ಳೆಕೋಲುಗಳಿಂ
ಅನುದಿನ ಭ್ರಾಂತಿಯೆಂಬ ಕವಣೆ ಕಲ್ಲುಗಳಿಂ ೧
ಏಳುತಲೀ ಮುಖ ತೊಳೆದು ನೀವೆಲ್ಲ
ಮೇಲಿನ ಪೂರ್ವ ಕರ್ಮ ಭಕ್ಷಗಳೆಲ್ಲ
ಲೀಲೆಯಿಂ ಮೆಲ್ಲುತಲಿದರೊಳು ಬಲ್ಲ
ಶೀಲ ಸದ್ಗುಣವುಳ್ಳ ಬಾಲಕರೆಲ್ಲ ೨
ಶ್ರವಣ ಮನನವೆಂಬ ಸಾಧನೆಯಿಂದ
ನವವಿಧ ಭಕ್ತಿಯೆಂಬ ಶೃಂಗಾರದಿಂದ
ಸುವಿಮಲ ಮತಿಗಳಿಗೆಲ್ಲ ಆನಂದ
ಭವಹರ ಗುರುರಾಮ ವಿಠಲ ಮುಕುಂದ ೩

೧೭೬
ಆಧಾರ ನೀನೆ ಶ್ರೀಹರಿ ಕಾಯೊ ದೊರೆ ಪ
ನಾಶ ರಹಿತ ಚಾರು ಚರಿತ ಮೂರುಲೋಕಕಾಧಾರ ನೀನೇ ಅ.ಪ
ನಾರಿಮನೆ ಮಕ್ಕಳು ಅಪಾರವಾದ ಬಂಧುಗಳು
ಸ್ವಾರಸ್ಯನೋಡಿ ನಿರಾಶೆಯಿಂದ ದೂರಾಗುವರು ೧
ಧನಜನವು ಮನವು ಇಲ್ಲದವರೆಲ್ಲಾವನಜಾಕ್ಷ ನಿನ್ನ
ನೆನಪು ಮಾಡದೆ ತೃಣಕೂ ಬಾರರು ೨
ರೋಗದಿ ಬಳಲುತಾ ಕೂಗುವೆ ಬಾಯ್ಬಿಡುತ
ನಾಗೇಂದ್ರಶಯ್ಯ ಜಾಗುಮಾಡದೆ ಬೇಗಾ ಬಾರಯ್ಯ ೩
ನಿನ್ನವರಿಗೆ ಇಂಥಾ ಬನ್ನವ್ಯಾಕೆ ಶ್ರೀಕಾಂತ
ಚನ್ನಕೇಶವ ಮನ್ನಿಸೊದೇವ ನಿನ್ನವನಿವ ೪
ಪೊರೆಯುವನೀನಲ ಶರಣಜನರ ಪಾಲಕರುಣಾಲವಾಲ ಗುರುರಾಮ ವಿಠಲ ಸಿರಿಲೋಲ ೫

೯೯
ಆಭರಣಗಳರ್ಪಿಸುವೆನು ಶೋಭನ ಚರಿತಾ ಪ
ಮಹಾಭಾಗ್ಯಪ್ರದೆ ನಿನ್ನರಸಿ ಯುಗುಣಭರಿತಾ ಅ.ಪ
ಪದನೂಪುರಗಳು ಘಂಟೆ ನಿನದದುಡಿದಾರಾ
ಉದರವು ಪರಿಯಂತ ವೈಜಯಂತಿಯ ಹಾರ
ವಿಧವಿಧಕರ ಕಂಕಣ ಹತ್ತು ಬೆರಳಿಗುಂಗೂರಾ
ಹೃದಯದಿ ಕೌಸ್ತುಭ ಶ್ರೀ ವತ್ಸದ ಶೃಂಗಾರಾ ೧
ಹೊಳೆಯುವ ಭುಜಕೀರ್ತಿಯು ಕುಂಡಲ ಕರ್ಣದಲ್ಲಿ
ತುಳಸಿಯ ವನಮಾಲೆ ಶೋಭಿಪುದು ಕಂಠದಲೀ
ಥಳಥಳಿಪುದು ರವಿಯಂತೆ ಕಿರೀಟಶಿರದಲ್ಲಿ
ಬೆಳಗುವ ತೇಜೋಮಯ ಗಾನಾವದು ಕೊಡಲಿ ೨
ಸ್ಮರ ಶತ ಸುಂದರ ವಿಗ್ರಹ ಕರುಣಾಕರನೇ
ಸರಸಿಜಭವ ಜನಕ ಪರಾತ್ಪರ ಮಾಧವನೆ
ಶರದಿಂದುನಿಭಾನನ ಸರ್ವತ್ಪ್ರಕಾಶನೇ
ಗುರುರಾಮ ವಿಠಲ ಹರಿ ಸರ್ವೋತ್ತಮನೇ ೩

೩೧೫
ಆರತಿಯನೆತ್ತುವೆ ಪ
ಸಾರಸನೇತ್ರಗೆ ಮುತ್ತಿನ ಅ.ಪ
ಬೇಡಿದಿಷ್ಟಾರ್ಥವನ್ನು
ನೀಡುತ್ತಯನ್ನನು
ಕೂಡಿ ಸುಖಪಡಿಸುವವಗೆ ೧
ಅನುದಿನದಲಿ ಎನ್ನ
ಮನ ಸಂತೋಷ ಪಡಿಸಿ
ಘನ ಬೋಧೆ ಪೇಳುವವಗೆ ೨
ಪಾಮರತ್ವವ ಬಿಡಿಸಿ
ಕ್ಷೇಮಾವಕೊಡುವ ಗುರು
ರಾಮ ವಿಠ್ಠಲನಿಗೆ ೩


ಆರತಿಯೆತ್ತಿದರು ಅಪ್ರಮೇಯಗೆ ಪ
ಸಾರಸಮುಖಿಯರು ಸಂತೋಷದಿಂದ ಅ.ಪ
ತರಳಗೋಸುಗ ಕಂಬ ಬಿರಿದು ಅವತಾರಗೈದು
ದುರುಳನುದುರವ ಸೀಳಿ ಕರುಳ ಧರಿಸಿದವಗೆ ೧
ಸಾಧುಜನರಿಗೆಲ್ಲ ಮೋದಕೊಡುವ ಜಗ
ದಾದಿ ಕಾರಣ ಪೂರ್ಣ ಭೋದಾಮೃತಮಯಗೆ ೨
ಕಾಮುಕರನು ಕೊಂದು ಭೂಮಿ ಭಾರವನಿಳುಹಿ
ಸ್ವಾಮಿಯಾಗಿ ಮೆರೆವ ಶ್ರೀ ಮನೋಹರನಿಗೆ ೩
ವಿಸ್ತಾರದಿ ಪಾಡುತ ವಿವಿಧ ರಾಗಗಳಿಂದ
ಸ್ವಸ್ತಿಯಾಗಲಿ ಎಂದು ಹಸ್ತಿನಿಯರು | ಹವಳದ ೪
ಕಿಂಕರ ಜನಮನ ಸಂಕಟಹರ ನಿಷ್ಕ
ಳಂಕ ನೀನೆನ್ನುತ ಶಂಕಿನಿಯರು | ರತ್ನದ ೫
ತತ್ವದರ್ಶಿಗಳಿಗೆ ನಿತ್ಯೈಶ್ವರ್ಯವನೀವ
ಭೃತ್ಯವತ್ಸಲನೆಂದು ಚಿತ್ತಿನಿಯರು | ಮುತ್ತಿನ ೬
ವಿದ್ವಜ್ಜನರ ಹೃದಯ ಪದ್ಮದಿ ಬೆಳಗುವ
ಶುದ್ಧಾನಂದ ರೂಪಗೆ ಪದ್ಮಿನಿಯರು | ಕುಂದಣ ೭
ವಾಣಿ ಭಾರತಿ ಸೌಪರ್ಣಿ ವಾರುಣಿ ಶ
ರ್ವಾಣಿ ಸ್ಮರನ ರಾಣಿ ಯಿಂದ್ರಾಣಿ ಮುಖ್ಯರು | ಹುವ್ವಿನ ೮
ಸರಸಿಜಭವ ಪುರಹರ ಪಾಕ ವೈರಿ ಮುಖ್ಯ
ಸುರವಂದ್ಯ ಶರಣ ಶ್ರೀ ಗುರು ರಾಮವಿಠಲಗೆ ೯

೧೦
ಆರತಿಯೆತ್ತಿದರು ನಾರಿಯರು ಕೃಷ್ಣಗೆ ಪ
ನೀರೆ ರುಕ್ಮಣಿ ಸತ್ಯಭಾಮ ಸಮೇತಗೆ ಅ.ಪ
ಭಕ್ತವತ್ಸಲಗೆ ಭವ ಭಯಗಳ ಬಿಡಿಸುತ
ಮುಕ್ತರ ಪೊರೆವಗೆ ಮುನಿಜನ ವಂದ್ಯಗೆ ೧
ವಾರಿಜಾಕ್ಷಿ ದ್ರೌಪದಿಗೆ ಸೀರೆಗಳಕ್ಷಯ ಮಾಡಿ
ಕ್ರೂರರ ಮುಖಗರ್ವ ಕುಂದಿಸಿದ ಮಹಿಮಗೆ ೨
ಪಾಂಡವಪ್ರಿಯಗೆ ಪದ್ಮಜನಯ್ಯಗೆ
ಕುಂಡಲಿಶಯನ ಶ್ರೀ ಗೆ ೩

೩೧೪
ಆರತಿಯೆತ್ತುವೆ ಆತ್ಮೇಶ್ವರಗೆ ಪ
ಮಾರ ಕೋಟಿ ಲಾವಣ್ಯ ಮತ್ಪ್ರಿಯ ಸ್ವಾಮಿಗೆ ಅ.ಪ
ಮನಕೊಡೆಯನೆನ್ನಿಸಿ ಮಮತೆಯ ವಿಸ್ತರಿಸಿ
ಅನುದಿನ ಬೇಡಿದಿಷ್ಟಾರ್ಥವನೀವಗೆ ೧
ಉಭಯ ಲೋಕದಲ್ಲಿಯು ಅಭಯವ ನೀಡುತ
ಶುಭದಾಯಕನಾಗಿ ಶೋಭಿಸುತಿರ್ಪಗೆ೨
ಸ್ಮರನಾಟದಿ ಮನಕರಗಿಸುವವಗೆ
ಗುರುರಾಮವಿಠ್ಠಲ ಕರುಣಾನಿಧಿಗೇ ೩

೩೧೬
ಆರತಿಯೇತ್ತುವೆ ನಾಂ ಪ
ಸತತ ಮನ್ಮನೋರತದೊಡೆಯಗೆ ಅ.ಪ
ಯಾವಾಗಲು ನಾಮಾಡುತಿರುವ ಸಂ
ಸೇವೆಯಕೈಕೊಂಬ ಮಹಾತ್ಮಗೆ ೧
ಬೇಡಿದಭೀಷ್ಟವ ನೀಡುತ ಎನ್ನಯ
ಮೂಢತೆಯನು ಪರಿಹರಿಸುವವಗೆ
ಕ್ಷೇಮವೀವ ಗುರುರಾಮವಿಠ್ಠಲನ
ನಾಮವ ಜಪಿಸುತ ನಲಿಯುವ ಪತಿಗೆ ೩

(ನುಡಿ-೧) ಗೋಳಕತ್ರಯ ಚಿಂತನೆ
೯೧
ಆವಾಹನೆ ಮಾಡಲಾನೇನು ಬಲ್ಲೆ
ಸರ್ವಾಂತರ್ಯಾಮಿ ನಿನಗೆ ಪ
ದೇವತಿರ್ಯಗ್ ಮನುಷ್ಯಾದಿ ಜಂತುಗಳಲ್ಲಿ
ದಿವಿಭುವಿ ಪಾತಾಳದೊಳ ಹೊರಗಿರುವಗೆ ಅ.ಪ
ಪ್ರಾಣ ಪ್ರತಿಷ್ಟೆಗೋಳಕತ್ರಯ ಚಿಂತನೆ
ಏನು ಬೃಹತಿನಾಮಗೆ
ನೀನೆ ಕರುಣದಿ ಮನ್ಮಾನಸದೊಳು ಪೊಳ-
ದೇನೇನು ಮಾಡಿಸಲದು ನಿನಗರ್ಪಿತ ೧
ಅಣುವಿನೊಳಣುವಾಗಿ ಮಹತ್ತಿನೊಳ್ಮಹತ್ತಾಗಿ
ಗುಣನಿಧಿ ತುಂಬಿರುವೆ
ಎಣಸಲೆನ್ನಳವೆ ನಿನ್ನಯ ಮಹಾಮಹಿಮೆಯ
ವಿನುತಿಸುವುದು ಕೊನೆಗಾಣದೆ ಶೃತಿ ತತಿ ೨
ಶ್ವೇತದ್ವೀಪಾನಂತಾಸನ ವೈಕುಂಠ ಆ-
ದಿತ್ಯ ಮಂಡಲ ಮಧ್ಯಗ
ಪ್ರೀತಿಯಿಂದಲಿ ನಿನ್ನ ಭಜಿಸುತಿರುವ ಭಕ್ತ-
ವ್ರಾತವ ಸಲಹುವ ನೆ ೩

೧೯೮
ಆಸೆಪಡಬೇಡ ಮನುಜ ತಿಳಿಯದೆ ದುರಾಸೆ ಪಡಬೇಡ ಪ
ಮೋಸ ಮಾರ್ಗಪಿಡಿದು ಮೂಢರನ್ನು ನೋಡಿ ನೋಡಿ ಅ.ಪ
ಚಿಂತಿಸಿ ಭ್ರಾಂತನಾಗಿ ಸಂತೋಷವಿಲ್ಲದೆ ಸದಾ
ಶಾಂತಚಿತ್ತರ ಕೂಡದೆ ಸಂತೆ ಕೂಟವನ್ನು ನಂಬಿ ೧
ಇಂದ್ರಿಯಂಗಳ ಸುಖ ಪೊಂದಿಸುತ್ತ ನೀನಿರಲು
ಮುಂದಿನ ಗತಿ ಗೋತ್ರವು ಸಂದೇಹವಾಗುವದೆಲೊ ೨
ಹೊರ ಒಳಗು ತುಂಬಿಹ ನ
ಶರಣರನಾಶ್ರಯಸದೆ ಕರೆ ಕರೆ ಸಂಸಾರದಿ೩

೨೭೯
ಆಸ್ಥಾನ ಮಾಡೋಣ ಆತ್ಮ ವಿಚಾರ ದಾಸ್ತಾನ ಮಾಡೋಣ ಪ
ಸ್ವಸ್ತಿ ಆಯುಷ್ಕೀರ್ತಿ ಧರ್ಮಯಶೋಕಾಮ
ಹಸ್ತಿವರದನಾಧೀನವೆಂದು ನಾವೆಲ್ಲಅ.ಪ
ಶಮದಮಶ್ಯಾಂತಿ ವಿರಕ್ತ್ಯುಪರತಿಯಂಬೋ
ಕ್ರಮಮಂತ್ರಿಗಳು ವಿಜ್ಞಾನಿ ಪ್ರಧಾನಿಯು
ಸಮಾಧಿಕ ಶೂನ್ಯವೆಂಬುವ ರಾಜನು ವಿಷಯ
ಭ್ರಮೆ ಎಂಬೊ ಕಟ್ಟು ವಿಚಾರಣೆಯಾಗುವ ೧
ಸತ್ಕರ್ಮವೆಂಬೊ ಭೂಮಿಯನು ಸಾಧುಗಳೆಂಬ
ವಕ್ಕಲುಗಳಿಗಿತ್ತು ಸಿದ್ಧಾಯವ ತೆಗೆದು
ಭಕ್ತಿ ಜ್ಞಾನ ವೈರಾಗ್ಯ ಬಂಡಿಗಳಲಿ ತುಂಬಿ
ಭಗವಂತನೆಂಬ ರಾಜಗೆ ಒಪ್ಪಿಸುವಂಥ ೨
ಸ್ವಾಮಿ ಭೃತ್ಯನ್ಯಾಯ ಎಂಬೋ ಡಂಗುರವನು ಹೊಯಿಸಿ
ತಾಮಸರಿಗೆ ನಿತ್ಯದಂಡನೆಯನು ವಿಧಿಸಿ
ಕಾಮಕ್ರೋಧಗಳೆಂಬೋ ಖಳರ ಶಿಕ್ಷಿಸಿ ಗುರು-
ರಾಮವಿಠಲನ ಕರುಣವೆಂಬೋ ಸಂಬಳ ಪಡೆದು ೩

(ನುಡಿ-೨) ಅರುಣಾತ್ಮಜ
೧೧
ಇಂದ್ರಾದಿಸುರರಾರಾಧಿತ ಇನವಂಶಸಂಜಾತಾ
ಚಂದ್ರಧರ ಪ್ರಿಯ ಶ್ರೀರಾಮಚಂದ್ರಾ ಎಚ್ಚರಿಕೆ ೧
ಅರುಣಾತ್ಮಜ ಮುಕ್ತಿಪ್ರದ ಕರುಣಾಸಮುದ್ರಾ
ಭರತಾಗ್ರಜ ಭವಹರರಾಮಭದ್ರಾ ಎಚ್ಚರಿಕೆ ೨
ಘಟಸಂಭವಮಖಸಮ್ಯಮಿ ಕಟಕಾರ್ಚಿತ ಚರಣಾ
ಕುಟಲಾರಿ ಶ್ರೀ ಗುರುರಾಮವಿಠಲಾ ಎಚ್ಚರಿಕೆ ೩

ನವವಿಧ ಭಕ್ತಿಗಳ ಆಚರಣೆಯ
೧೯೯
ಇದು ಮುಖ್ಯಸಾರ ಮನುಜರಿಗೆ ಪ
ಇದು ಮುಖ್ಯಸಾರವೆಂದೊದರುತಿಹುದು ವೇದ
ಸದುಮಲಾತ್ಮಕನಾದ ಪದುಮಾಕ್ಷನಲಿ ಭಕ್ತಿ ಅ.ಪ
ಕೇಳಿಪೇಳುತಮನದಿ ತಾಳಿ ಸೇವಿಸಿ ಪೂಜಿ-
ಸೋಲಾಡುತೊಂದಿಸಿ ಕಾಲವ ಕಳೆಯುವ ೧
ದಾಸ್ಯಸಖ್ಯಾತ್ಮನಿವೇದನಗಳಿಂದ ಆ-
ಲಸ್ಯವಿಲ್ಲದೆ ಪರಮಾತ್ಮನ ತಿಳಿಯುವ ೨
ತೃಟಿಕಾಲವಾದರು ನಟಿಸದೆ ಮಾಯದಿಹಟದಿ ಶ್ರೀನ ಭಜಿಸುವ ೩

೨೦೦
ಇದೇ ಪರಮಸುಖವೆಂದಿರಬೇಡಿ ಮುಂದಿನ ಗತಿ ನೋಡಿ ಪ
ಒದಗಿ ಯಮನವರು ಎಳೆಯುವಾಗ ನಿಮ
ಗಿದರಿಂದೇನು ಪ್ರಯೋಜನ | ಜನರೇ ಅ.ಪ
ಜಿಹ್ವೋಪಸ್ಥಪರಾಯಣರಾಗುತ ಬಹ್ವಾಶನರೆನಿಸಿ
ಗಹ್ವರ ಈ ಸಂಸಾರವೆಂದರಿಯದೆ ಗಾದೆಗಳ್ಹೇಳುತ
ಗತಿಶೂನ್ಯರಾಗಿ ೧
ಸಾಲವ ಮಾಡುತ ಸತಿಸುತರನು ಪರಿಪಾಲನಗೈಯುತಲಿ
ಲೋಲರು ತಾವೆಂದರಿದು ಕಷ್ಟದಲಿ ಮೇಲೆ
ದೈವಕಾಪಾಡುವುದೆನ್ನುತ ೨
ಆಟಪಾಟದಲಿ ಕಾಲವ ಕಳೆಯುತ ಪೋಟಿಗಾರರಾಗಿ
ನಾಟಕಧರನಾಡಿಸುತಿಹ ಬೊಂಬೆಯ ಆಟವಿದೆನ್ನದೆ
ಅತಿಗರ್ವದಿನೀವು ೩
ಎಷ್ಟು ಜನ್ಮಗಳು ಕಳೆದುಹೋಯಿತು ಈ ಅಜ್ಞಾನದಲೀ
ಶಿಷ್ಟರು ಬೂೀಧಿಸೆ ಉಪಹಾಸಿಸುತಲಿ ನಷ್ಟಜ್ಞಾನವುಳ್ಳತರಾಗುತ೪
ಕಾಮಕ್ರೋಧದೊಳೀಜುತ ಶ್ರೀ ಎನ್ನದೆ
ತಾಮಸರೊಳಗಗ್ರೇಸರರಾಗುತ ಕೋಮಲಾಂಗಿಯರ
ಸೊಬಗಿಗೆ ಹಿಗ್ಗುತ ೫

೧೨
ಇದ್ದೀಯಯ್ಯ ಎನ್ನೊಳಗೆನೀ ಇನಕುಲರಾಯ ಪ
ಇದ್ದೀಯೈ ಸರ್ವರ ಹೃದ್ಗುಹೆಯೆಂತೆಂಬ
ಪದ್ಮದೊಳಗೆನೀನು ಪದುಮೆಯಿಂದೊಡಗೂಡಿ ಅ.ಪ
ಮರುತಾತ್ಮಜ ನಿನ್ನ ಚರಣವನೊತ್ತಲು
ಸರಸಿಜಭವ ಮುಖ್ಯ ಪರಿವಾರಸಹಿತನು ೧
ಮೂರು ಲೋಕದ ವ್ಯಾಪಾರ ನಡೆಸುತ್ತ
ಯಾರಿಗು ತಿಳಿಸದೆಯೆಲ್ಲೆಲ್ಲಿಯು ನೀನೆ ೨
ಪ್ರೇಮದಿಂದಲಿ ಭಕ್ತಸ್ತೋಮವೋಲೈಸುವದು
ಸ್ವಾಮಿಯಾಗಿ ಗುರು ರಾಮವಿಠಲ ತಂದೆ ೩

ಲೋಕನೀತಿ (ಆ)
೨೫೯
ಇರುವುದೆಲ್ಲ ಮನೆಯೊಳಗಿದ್ದರೆ ಆಡಿಗೆಗೆ
ಯಾತಕ್ಕೆ ತಡವಾಗೋದು | ಪ
ತರಬೇಕೇಂದು ನೂರು ತಡವೆ ನಾ ನುಡಿದರು
ಅರಿಯದವರ ಪರಿತಿರುಗುತ್ತಲಿರುವದು ಅ.ಪ
ಮನೆ ಮನೆಯಲಿವಂದು ಮಾನಾರ್ಧಮಾನಗಳು
ಮೆಣಸಿನಪುಡಿ ಉಪ್ಪು ಅಕ್ಕಿ ಸಾಲ
ದಿನ ದಿನ ಮಧ್ಯಾಹ್ನ ತಿರುಗಿದ ಮೇಲೆ
ಮನೆಗೆ ಬಂದು ಹಸಿವೆನುತ ಪೇಳುವದು ೧
ಎಣ್ಣೆವಗ್ಗರಣೆಯಲ್ಲದೆ ಕಾಣೆನಭಿಗಾರ
ಮುನ್ನೆ ಪಿತ್ಥ ಹೆಚ್ಚಿ ತಲೆ ನೋಯ್ವುದು
ನಿನ್ನೆಮೊನ್ನೆ ಹೇಳಿದುದಕೆ ಹೊಡೆಸಿಕೊಂಡೆ
ದೊಣ್ಣೆಪೆಟ್ಟಿನಿಂದ ಬೆನ್ನು ಬಾತಿರುವದು ೨
ವರುಷಕ್ಕಾಗುವ ಮಟ್ಟಿಗೆಲ್ಲಾ ಪದಾರ್ಥ ಶೇ-
ಖರವ ಮಾಡುವುದು ಈ ಮನೆಯೊಳಿಲ್ಲಾ
ಹಿರಿಯರಿಂದ ಬಂದ ಸಂಪ್ರದಾಯವಿದೇನೊ
ಇಂಥಾಮನೆಯ ಸೇರಿ ಈ ಸುಖ ಪಡುವೆ ೩
ಮದುವೆಯಲ್ಲಿದ್ದದ್ದು ಪ್ರಸ್ತದೊಳಗೆಯಿಲ್ಲ
ಬದಲು ಸೀರೆಯು ನಾನುಟ್ಟರಿಯೆ
ವಿಧಿಲಿಖಿತವು ತಪ್ಪುವುದೆಯೆಂದಿಗಾದರು
ವದರಿ ಕೊಂಡರೆಯೇನು ಇದರೊಳು ಫಲವುಂಟು ೪
ನಾನಾಡಿದ ಮಾತು ನಾನೆ ಕೇಳಬೇಕು
ಜ್ಞಾನ ಶೂನ್ಯರು ಮನೆಯೊಳಿಹರೆಲ್ಲರು
ಈ ನರಜನ್ಮವು ಇಷ್ಟಕ್ಕೆಸಾಕೆಂದು
ಧೇನಿಸಿ ನ ಬೇಡುವೆ ೫

೨೬೦
ಇಲ್ಲದ ಪದಾರ್ಥಕ್ಕೆ ಏನೇನೋ ಹೆಸರು ಬಿಡಿ ಪ
ಬಲ್ಲೆ ಇವೆಲ್ಲಾ ನಾನೆಂಬುವರು ದುರ್ಜನರು | ನಿಜ ಅ.ಪ
ನಾವೇ ದೇವರ ಮಾಡಿದೆವೋ
ದೇವರು ನಮ್ಮನು ಮಾಡಿದನೋ
ಭಾವಿಸಿ ನೋಡಿದರೆ ದೈವ ನಾವಲ್ಲದ್ಯಾರು ೧
ವಿಷ್ಣು ಈಶ್ವರನು ಬ್ರಹ್ಮ
ಎಲ್ಲಿರುವರು ನಾವೆ ವಿಶ್ವವ್ಯಾಪಕರು
ವಿವಿಧ ರೂಪವಾಗಿಹೆವು ೨
ಗುರುವೇ ಶಿಷ್ಯನಾಗಿರುವ
ಅರಿತ ಮೇಲೆ ಗುರುವೇತಾನಾಗುವ
ಸರ್ವವೂ ಸುಳ್ಳವನಿಗೆ ೩
ಬೆಳಕಿಗೆ ಕತ್ತಲು ವೈರಿ
ಕತ್ತಲಿಗೆ ಬೆಳಕು ಶತ್ರು
ಹೊಳವಿಗಿಂತಲೂ ಕತ್ತಲೆಯೇ ಲೇಸು ನಮಗೆ ೪
ನ್ನ ಮರೆತು ಈ
ಪರಿಯಲಿ ನಿರುತ ಸಂಸಾರ ಚಕ್ರದಿ
ದುರುಳರು ತೊಳಲುವರು ೫

೨೮೦
ಇಲ್ಲದ ಸ್ವಾತಂತ್ರ್ಯವೆಲ್ಲಿ ಬಂತು ನಾ ಪ
ಬಲ್ಲೆನೆಂಬುವುದು ಬಲು ಭ್ರಾಂತು ಅ.ಪ
ಪರಮಾತ್ಮನು ಜೀವನಾದರೆ
ನರರು ನೆನೆದ ಪರಿ ನಡೆಯದೇಕೆ ೧
ಜೀವದೇವಗೆ ಭೇದವೇ ಸಿದ್ಧ
ದೇವರಸನು ಜೀವಕರ್ಮಬದ್ಧ ೨
ಹ್ಯಾಗಾದರು
ತಾ ಘನಜೀವನು ಅಲ್ಪತೃಣ ೩

೧೭೭
ಇವರೇ ನಮ್ಮವರೂ ಇದು ಭಾಗ್ಯವುನಮಗ್ಹಗಲಿರಳೂ ಪ
ಭವ ಸಮುದ್ರದಲಿ ಮುಳುಗಿಸಿ ಕಡೆಯಲಿ
ಜವನಾಳ್ಗಳ ಕೈಗೊಪ್ಪಿಸಿ ಕೊಡುವ ಅ.ಪ
ಧನಯೌವನ ಬಲವು | ದೇಹದ
ಅನುಬಂಧಗಳಿರುವು
ಘನಕಾಮಾದಿಗಳಧಿಕವಾಗಿದ್ದರೆ
ಮನೆಮಕ್ಕಳುವನಿತಾದಿಗಳೊಲಿವರೊ ೧
ಕೇಳಿದ್ದಿಲ್ಲೆನಲೂ | ಇವನ ಹೀ-
ಯಾಳಿಪರ್ ಸ್ವಜನಗಳೂ
ಕಾಲಕಾಲದಿ ಬಾಡಿಗೆ ಎತ್ತಿನ ಪರಿ
ಆಳಾಗಿದ್ದರೆ ಹಾ ಎಂದು ನಗುವ ೨
ಇವರಾಸೆಯ ಮಾಡೀ | ನಾವುನ-
ಮ್ಮವರನು ಹೋಗಾಡಿ
ಕವಳಕೆ ಗತಿಯಿಲ್ಲದೆ ಪರಿಯಾಯಿತು
ಕಡೆಹಾಯಿಸು ಗುರುರಾಮವಿಠ್ಠಲನೆ ೩

ಇಸ್ಪೀಟ್ ಆಟದ ವಿವರಣೆಯಲ್ಲಿ
೨೮೧
ಇಸ್ಪೀಟಾಡಬೇಕು ನಮ್ಮಯ ತಸ್ಪೀರ್ ನೋಡಬೇಕು ಪ
ನಿಸ್ರ‍ಪಹರಾಗದ ಜನರಿಗೆ ಕಡೆಯಲಿ
ಸಸ್ಪಂಟಾದೀತೆಂದು ತಿಳಿದು ಅ.ಪ
ಆಸೆಂಬುವದಾತ್ಮ | ರಾಜಾ
ತಾಸಗುಣ ಬ್ರಹ್ಮ
ಲೇಸಾಗಿ ರಾಣಿಯು ಮೂಲ ಪ್ರಕೃತಿ
ಗುಲಾಮನೆಂಬುದು ಚತುರ್ಮಖನೆನ್ನುತ ೧
ದಹಿಲವೆಯಿಂದ್ರಿಯಗಳು | ದ್ವಾರವು
ನಹಿಲವಿದು ಭುವಿಯೋಳು
ಅಹಹಾ ಅಟ್ಟವು ಮದಗಳು ನೋಡಲು
ವಿಹಿತವೇಳನೆ ಬಂದು ವೆಸನಗಳು ೨
ಕಾಮಾದಿಗಳಾರು | ಅವೈದೆ
ಈ ಮಹಾ ವಿಷಯಗಳು
ನೇಮಕೆ ನಾಲ್ಕೇ ಪುರಷಾರ್ಥಗಳು
ನಿಜವಿದು ಮೂರನೆ ಬಂದು ತ್ರಿಕಾಲಗಳ್ ೩
ಎರಡು ಜೀವ ಪರಮಾ | ಯಿದರೊಳು
ಯಿಲ್ಲದಿಹದು ಮರ್ಮ
ತುರುಫೆಗುಣರಾಶಿಗಳೆಂದೀಪರಿ
ಅರಿತಾಡಲದೆ ಪರಮಾರ್ಥವಹದು ೪
ಕ್ಳಾವ್ರಿಸ್ಪೀಟಾಟೀನ್ | ಡೈಮಂಡ್
ಈ ವಿಧ ಪೆಸರಿರಲೇನ್
ಭಾವದಿ ಸಾಧನೆ ಯಿಂದಾಡುವ ನಿಜ
ಭಕ್ತರ ಗುರುರಾಮ ವಿಠಲ ಕೈಬಿಡ ೫

(ನುಡಿ-೮) ಆರು ಜನರ ಸೇವೆ
೧೭೮
ಇಹಸುಖ ಮೊದಲೇಯಿಲ್ಲ | ಕೃಷ್ಣ
ಅಹಹ ಪರಸುಖವಾಗುವುದ್ಹ್ಯಾಗೊ ಪ
ಸಾಹಸಿನಾನೆನುತ ಜನರ ಮೆಚ್ಚಿಸುವೊಡೆ
ಕುಹಕ ಮಾತುಗಳ ಕೂಗಿ ಬಾಯಾರಿದೆ ಅ.ಪ
ಶ್ರವಣ ಮನನ ನಿಧಿ ಧ್ಯಾಸನ ವೊಂ-
ದೆವೆ ಮಾತ್ರವು ನಿಜವಾಗಿ ಕಾಣೆನುನಾ
ಬವನಾಶಿ ಧರಿಸಿ ದಾಸನೆಂದು ನಾ
ಬರಿದೆ ದೇಶಗಳ ತಿರುಗಿ ಬೆಂಡಾದೆನು ೧
ಯಮನಿಯಮಾಸನ ಯೋಗ | ಗಳ
ಕ್ರಮವರಿಯೆನು ನರಜನ್ಮದೊಳೀಗ
ಭ್ರಮೆಯ ಪಡುತ ಬಳಲುವೆಯಾವಾಗ
ಮಮಯೆಂಬುದರಿಂ ಬಂದಿತು ರೋಗ ೨
ಶಂಕರ ಮುಖ ಸುರವಂದ್ಯ | ಅರಿ
ಶಂಖ ಗದಾಧರ ಶ್ರೀಶ ಮುಕುಂದ
ಸಂಕಟ ಬಂದಾಗ ವೆಂಕಟರಮಣೆಂದು
ಮಂಕುಜನರು ಪೇಳ್ವಗಾದೆಯಂತಾಯಿತು ೩
ಕಾಸಿಗೆ ತಿರುಗಿದೆನಲ್ಲದೆ | ದಿವ್ಯ
ಕಾಶಿಗಯಾಯಾತ್ರೆಯ ಮಾಡಿದೆನೇ
ಯೇಸೆಂದ್ಹೇಳಲಿಯನ್ನ ತಪ್ಪುಗಳು
ಘಾಶಿಪಟ್ಟಿ ಸಾಕು ಸಾಕಿದರ ಗೊಡವೇ ೪
ಕೊಟ್ಟದ್ದರೆ ಹರಿಕೊಡುವ | ಯಂ
ದಷ್ಟು ಜನರು ಆಡುವ ಬರಿ ಪದವ
ಕೊಟ್ಟರುವದಕು ಕೊಡದಿರುವದಕೂ
ಕೃಷ್ಣ ನೀನರಿಯದೆ ನಾನು ಸ್ವತಂತ್ರನೇ ೫
ಕಣ್ಣಿಲ್ಲದ ಚಿಂತೆವಂದು | ಸದಾ
ಬನ್ನ ಬಡುವದು ಯೋಚನೆಯೆರಡು
ನಿನ್ನವನೆನಿಸೀ ಕಷ್ಟ ಬಿಡಿಸಿ ಒಳ-
ಕಣ್ಣು ಕೊಟ್ಟು ನಿನ್ನ ಸೇವೆಯ ಪಾಲಿಸೋ ೬
ಛಳಿ ಜ್ವರದ ಯಾತನೆ ಪಡುವೆ | ನಿನ್ನ
ಚಿತ್ತದಂತೆ ಮಾಡಿಸು ನಿನ್ನೊಡವೆ
ಖಳನೆ ನಾನು ಬ್ರಹ್ಮಾದ್ಯರ ಗುರುವೆ
ಕರೆಕರೆ ಪಡಿಸುವುದು ನಿನಗೆ ತರವೇ ೭
ಆರು ಜನರ ಸೇವೆ ಕೊಡಿಸೋ | ಯೀ
ಆರು ಜನರ ಸಂಘವ ಪರಿಹರಿಸೋ
ಮೂರು ಜನದ ಕೂಟ ಮೊದಲೇ ಬಿಡಿಸೋ
ತಾಳಲಾರೆಯಿವರು ಬಲು ಕ್ರೂರಾತ್ಮರು ೮
ಆಸೆಯ ಪರಿಹರಿಸಯ್ಯಾ | ನಿಜ
ದಾಸನೆನಿಸಿ ನೀ ಪಿಡಿಯೆನ್ನ ಕೈಯ್ಯಾ
ಈಶನೆ ಬಲು ಆಯಾಸವಾಗಿದೆ
ಈಸಲಾರೆ ಗುರುರಾಮ ವಿಠ್ಠಲ ಜೀಯಾ ೯

೨೮೨
ಈ ಊರೊಳ್ಳೇದು | ನಮಗೆ
ಈ ಊರೋಳ್ಳೇದು ಪ
ಜೀವನ ಯೋಗ್ಯತೆ ಚನ್ನಾಗಿದ್ದರೆ
ದೇವರ ಕೃಪೆ ಒಂದಾದರೆ ಸಾಕು ಅ.ಪ
ಎಂಟು ಆನೆಗಳ ಸಂಹರಿಸಿದರೆ
ಉಂಟಾದ ಶತೃಗಳಿಲ್ಲೆನಿಸಿದರೆ
ತಂಟೆ ಮಾಳ್ಪ ಭಂಟರೈವರ ಗೆದ್ದರೆ
ತಾನೆಲ್ಲಿದ್ದರು ಭಯವಿಲ್ಲಣ್ಣ ೧
ಜಲತೃಣ ಕಾಷ್ಠಕೆ ವಸತಿ ಈ ಊರು
ಬಲು ಸಜ್ಜನಗಳ ನೆರೆ ಈ ಊರು
ಫಲಗಳುಂಟು ಮಾಡುವುದೀ ಊರು
ಹೊಲಗದ್ದೆ ತೋಟಗಳಿಹ ಊರು ೨
ಕೇಳಿದ ಪದಾರ್ಥ ದೊರೆಯುವ ಊರು
ವೇಳೆಗೆ ಅನುಕೂಲವು ಈ ಊರು
ತಾಳ ಮೇಳ ವಾದ್ಯಗಳಿಹ ಊರು
ಸೂಳೆ ಬೋಕರಿಗೆ ಕಷ್ಟದ ಊರು ೩
ಎಷ್ಟು ಪುಣ್ಯದಿಂದೀ ಊರಿಗೆ ಬಂದು
ಕಷ್ಟಪಡುವ ನರ ಭ್ರಷ್ಟನಲ್ಲವೇ
ಮುಷ್ಟಿಯತ್ಯಾದರು ಒಡಲನು ಹೊರೆಯುತ
ಮೂರು ಬಿಟ್ಟು ತಿರುಗುವ ಜನರಿಗೆ ೪
ಮರ ಕ್ರಿಮಿ ಪಕ್ಷಿಗಳಲಿ ಬಾರದೆ ಈ
ನರಜನ್ಮವೆಂಬ ಊರಿಗೆ ಬಂದು
ಗುರುರಾಮವಿಠ್ಠಲನ ಕರುಣನ ಪಡದರೆಕರತಲಾಮಲಕವಿದು ಕೈವಲ್ಯಕೆ ೫

೩೧೭
ಉಡಿಯ ತುಂಬಿದರು ಮೋದದಿ
ಮಡದಿಯರು ಜನಕನ ಸುಕುಮಾರಿಗೆ ಪ
ಸಡಗರದಲಿ ಹುರಿಗಡಲೆ ಕುಬುಸ ಕ-
ನ್ನಡಿ ಕದಳಿ ಖರ್ಜೂರ ದ್ರಾಕ್ಷಿಗಳನೂ-ಜನಕನ ಸುಕುಮಾರಿಗೆ ಅ.ಪ
ಸರಸಿಜಾಕ್ಷಿಯರು ಕೊಬ್ಬರಿ ಬಟ್ಲುಗಳು ಚಂದ-
ದರಸಿನ ಕುಂಕುಮ ಹಣಿಗೆಗಳನು-ಜನಕನ ಸುಕುಮಾರಿಗೆ ೧
ಮುತ್ತು ಮಾಣಿಕ ನವರತ್ನಗಳನು ಬಹು
ಕಿತ್ತಳೆ ದಾಡಿಮ ಮುಖ್ಯಫಲಗಳ-ಜನಕನ ಸುಕುಮಾರಿಗೆ ೨
ಪರಿಪರಿ ವಸ್ತುಗಳನು ಮಾನಿನಿಯರು
ನರಿಸಿಯಾದ-ಜನಕನ ಸುಕುಮಾರಿಗೆ ೩

೨೦೧
ಉದಯ ಕಾಲವದಗಿತೀಗಲೂ ನಿನ್ನಿನ್ನಂತೆ ರವಿ ಪಪದುಮನಾಭನ ಸ್ಮರಿಸುತ ಮೋ-ದದಿಯಾನ್ಹೀಕ ಬುಧರು ಮಾಳ್ಪ ಅ.ಪಅಪರಾತ್ರಿಯಲ್ಲಿ ಎದ್ದುಚಪಲಚಿತ್ತರಾಗದಲೆ ಸು-ರಪನ ದೆಸೆಯ ನೋಡಿ ನಮಿಸಿಸುಫಲಗಳನು ಪಡೆಯುವರಿಗೆ ೧
ಕಣ್ಣುತೆರೆದು ಕೈಗಳುಜ್ಜಿ
ಕನ್ನಡಿಯನು ನೋಡಿ ಶೌಚ
ವನ್ನು ತೀರಿಸಿ ಸ್ನಾನ ಸಂಧ್ಯಗ-
ಳನ್ನು ಮಾಳ್ಪ ಸದ್ವಿಜರಿಗೆ೨
ಬ್ರಂಹ್ಮಯಜ್ಞ ಜಪವು ಮುಖ್ಯ
ಕರ್ಮಗಳಿಂ ಸವಿತೃನಾಮಕ
ಧರ್ಮ ಮೂರುತಿ ನ
ಒಮ್ಮನದಲಿ ಧ್ಯಾನಿಸುವರಿಗೆ ೩

೩೧೮
ಉಪಾಯಗಾರತ್ತಿಗೆಯ ಮಹಾತ್ಮೆಯು
ಶಿಪಾಯಿಗಳೆಲ್ಲಾ ತಿಳಿದಿಹರು ಪ
ರುಪಾಯಿ ಬಂದರೆ ಸರಿ ಮುಂದಾಗುವ
ಅಪಾಯವು ಜನರೆ ಬಲ್ಲರು ಅ.ಪ
ಮನೆಗೊಬ್ಬರಿಗೂಟಕೆ ಹೇಳಿ | ಭೋ-
ಜನಕಾಲಕ್ಕೆ ಆಗದಂತೆ
ಜನ ಸಹಾಯ ನಮಗಿಲ್ಲವೆಂದು
ಉಪಚಿರಸುತ ಆಡುತಿಹಳು ಕಾಂತೆ ೧
ಎಚ್ಚರಿಸಿರುವಳು ಗಂಡಗೆ ಮೊದಲೆ
ಹೆಚ್ಚು ಖರ್ಚುಗಳು ನಮಗೇಕೆ
ನುಚ್ಚಕ್ಕಿ ಅನ್ನ ಗೊಡ್ಡುಸಾರೇಸಾಕು
ನೂರಾರು ಜನರು ಬರಲಿ ಜೋಕೆ ೨
ಅಳಿಯಗೆ ದೀಪಾವಳಿಗೆ ಕೊಡೋಣ
ಹಳೆಯ ಮಗುಟ ಪಾತ್ರೆಗಳಿಹುದು
ಕೆಲಸವಾದರೇಸಾಕು ಗುರುರಾಮ ವಿ
ಠಲನೆ ಬಲ್ಲ ಬಿಡಿ ಎಂತೆಂದು ೩

೩೧೯
ಉರುಠಾಣೆ ಮಾಡುವೆ ಅರಸ ನಿನಗೆ ನಾ ಪ
ಸ್ಮರಶತ ಸುಂದರ ಸರ್ವಲೋಕೇಶ್ವರ
ಚರಣಸೇವೆಕಳ ಕರುಣದಿ | ನೋಡು ದ-
ಶರಥಾತ್ಮಜ ಭಾಸುರ ಶುಭ ಚರಿತ ಅ.ಪ
ಶರಣರಿಗಭಯವ ನಿರತವು ಕೊಡುವ
ಕರಕಮಲವ ದಯಮಾಡು | ನಿನಗೆ ನಾ
ಅರಿಸಿನ ಪೂಸುವೆ ಸರಸಿಜನಯನ ೧
ಅಷ್ಟಮಿ ಚಂದ್ರಗೆ ಶ್ರೇಷ್ಠವ ಹೋಲುವ
ದಿಟ್ಟ ಲಲಾಟವ ಕೊಟ್ಟರೆ | ಕುಂಕುಮ
ವಿಟ್ಟು ತಿದ್ದುವೆನು ಸೃಷ್ಟಿಗೊಡೆಯನ ೨
ಪರಿಪರಿ ಪರಿಮಳದುರು ಚಂದನವನು
ಪರಮ ಪುರುಷ ನಿನ್ನ | ಶಿರಕೊರಳಿಗೆ ನಾ
ಧರಿಸಿ ಲೇಪಗೈಯ್ಯುವೆ ಪ್ರಾಣೇಶಾ ೩
ಮರುಗವು ಮಲ್ಲಿಗೆ ಸುರಗಿ ಸೇವಂತಿಗೆ
ಸರಗಳ ತವ ಶಿರಿ ಕಂಠಕೆ | ಹಾಕುವೆ
ಪರುಷೋತ್ತಮ ಭಾಸ್ಕರ ಕುಲತಿಲಕ ೪
ನಾ ಮಾಡಿದಪರಾಧವೆಲ್ಲವು ಕ್ಷಮಿಸುತ
ಹೇಮದ ತಟ್ಟೆಯ ತಾಂಬೂಲವ | ಗುರು-
ರಾಮವಿಠಲ ತವಕದಿ ಸ್ವೀಕರಿಸೈ ೫

೨೮೩
ಎಂಟಚ್ಚಮ್ಮ ಎಂದಿಗು ಬರಬೇಡಮ್ಮ ಪ
ತುಂಟ ಪಟಿಂಗರ ಬಳಿಗೆ ಹೋಗಮ್ಮ ಅ.ಪ
ನಿನ್ನ ಗಂಡ ಪಾಂಡವರನ್ನು ಬಾಧಿಸಿ
ತನ್ನ ಬಾಯೊಳು ಹುಡಿಮಣ್ಣು ಹಾಕಿಕೊಂಡ ೧
ದೊರೆಯಾಗಿ ಮಿಗೆ ಪಾಮರರ ಮಾಡಿ ಎಲ್ಲರ
ಹುರಿದು ತಿಂಬ ಕಲಿಪುರಷ ಅಯ್ಯಯ್ಯೋ ೨
ಗೆ ಪರಮದ್ವೇಷಿಯು ಹರಿ
ಶರಣರ ಬಾಧಿಸಿ ದುರಿತಗಳಿಸುವನು ೩

೧೮೧
ಎಂದಿಗೆ ಪಾಲಿಪೆ ಎನ್ನ ಗೋ- ಪ
ವಿಂದ ಮುಕುಂದ ಆ-
ನಂದ ಮೂರುತಿಅ.ಪ
ಚರಣಸೇವೆಯ ಕೊಡಿಸಿ
ಪರಮಭಕ್ತರೊಳಿರಿಸಿ
ದುರಿತರಾಸಿಗಳ ಪರಿಹರಿಸಿ ೧
ಯಾರಿಂದಲೇನಾದರು ಮನಕೆ
ತಾರದೆ ಸಂತೋಷದಿ
ಮಾರಜನಕ ನಿನ್ನ ಧೇನಿಸುವಂತ ೨
ಗುರುರಾಮವಿಠ್ಠಲ ನಿನ್ನ
ಹೊರತು ಅನ್ಯರಿಲ್ಲ
ಕರುಣಿಸಿ ಕಾಯೊ ಸಿರಿನಲ್ಲ ೩

೧೭೯
ಎಂದಿಗೆ ಬಿಟ್ಟೀತು ಈ ಆಸೆ ಪ
ಕುಂದಿ ಕುಂದಿ ಕೊರಗುವ ಮನಸೆ ಅ.ಪ
ಸಾರವಿಲ್ಲದ ಸುಖಗಳ ಕೋರಿ | ಸಂ-
ಸಾರವೆಂಬ ಚಕ್ರದಿ ಸೇರಿ೧
ಎಷ್ಟು ಬಂದರು ಸಾಲದು ನಿನಗೆ | ಈ
ಕಷ್ಟದಿಂದೇನು ಕಾಣುವೆ ಕೊನೆಗೆ ೨
ಹಿರಿಯರಾಡುವ ಮಾತ ಕೇಳದೆ
ಗರ್ವಹಂಕಾರಗಳಿಂ ಮೆರೆದೆ ೩
ಅದು ಇದು ಬೇಕೆಂದಪೇಕ್ಷಿಸುವೆ | ನಿನ್ನ
ಮೊದಲರಿಯದೆ ವೃಥಾ ಯೋಚಿಸುವೆ ೪
ನ ನೆರೆ ನಂಬುತ
ಪರಮಸುಖವ ಪಡು ನೀ ಸತತ ೫

೧೮೦
ಎಂದಿಗೊ ಕಾಣೆ ಸುಖವು | ಜೀವಕೆ ಪ
ನೊಂದು ಹಗಲಿರುಳು ಹಿಂದು ಮುಂದರಿಯದೆ
ಬಂಧಕದೊಳು ಸಿಕ್ಕಿ ಬಾಧೆ ಪಡುತಿಹುದು ಅ.ಪ
ಜನುಮಗಳೆಂಬುವದು ಗಣನೆಗೆ ಸಾಧ್ಯವಲ್ಲ
ಜನರೂಢಿ ನೋಡಿದರೆ ಕೊನೆಗಾಣುವುದೇ ಇಲ್ಲ ೧
ಗರ್ಭಯಾತನೆ ಎಂಬೋದರ್ಭುದವಾಗಿಹದು
ನಿರ್ಭರ ದುಃಖಗಳಾವಿರ್ಭೂತವಾಗುವುದೊ ೨
ಬಾಲ್ಯದಿ ಪರಾಧೀನ ಯೌವನದಿ ಅಜ್ಞಾನ
ಬಾಳುವ ಕೌಮಾರದಿ ಬಹುಚಿಂತೆಯನುದಿನ ೩
ಇದ್ದರು ದುಃಖವೆ ಇಲ್ಲದಿದ್ದರೂ ದುಃಖವೆ
ಬದ್ಧ ಸಂಸಾರಕೆ ಮದ್ದು ಮಾಡುವರಾರು ೪
ಯಾವಾವಸ್ಥೆಗಳಲ್ಲಿ ಜೀವಗೆ ಸುಖವಿಲ್ಲ
ಕಾವನು ನೊಬ್ಬನೆ ಬಲ್ಲ ೫

೨೮೪
ಎಂದಿಗೋ ಆಗುವುದಕೆ ಈಗ್ಯಾಕೆ ವ್ಯಾಜ್ಯ ಪ
ಮುಂದೆ ನೋಡಿ ನಡಿಯದಿರೆ ಮುಕ್ತಿ ಪೂಜ್ಯ ಅ.ಪ
ಬ್ರಹ್ಮಗೆ ಜೀವತ್ವ ಯಾವಾಗ ಬಂತು
ನಮ್ಮೊಳಗೆ ಗೊತ್ತಿಲ್ಲದ ಭ್ರಾಂತು ೧
ಜೀವಾತ್ಮ ಮಾಯಾ ಬ್ರಹ್ಮ ಮಿಥ್ಯ ಸತ್ಯ
ನಾವು ನೋಡಿಕ್ಕೊಂಡರೆರಡು ಅಗತ್ಯ ೨
ಎರಡಿದ್ದಮೇಲೆ ಅದ್ವೈತವಿಲ್ಲಾ
ಇದರ ಕುರುಹಲ್ಲಾ ೩

೨೮೫
ಎನಗೊಬ್ಬರು ಇಲ್ಲಾ ನೋಡಿ
ಕ್ಷಣ ಕ್ಷಣದಲಿ ಪಾಲಿಸು ಸಿರಿನಲ್ಲ ಪ
ಮನದಿ ಯೋಚಿಸಲು ತಂದೆ ತಾಯಿಸತಿ
ತನಯ ಸಹೋದರ ಮಿತ್ರರೆಂಬುವರು ಅ.ಪ
ಒಬ್ಬರಾದರೂ ಇವರಲಿ ಇದ್ದರೆ
ಹಬ್ಬವಾಗಿ ಸಂತೋಷ ಪುಟ್ಟುವುದು
ತಬ್ಬಲಿಯಾದೆನು ಸಂಸ್ಮರಣವೆಂಬ
ಹೆಬ್ಬುಲಿಯಕೈಗೆ ಸಿಕ್ಕಿರುವೆನು ನಾಂ೧
ಆರುಮಂದಿ ಶತ್ರುಗಳು ನಿರಂತರ
ಗಾರು ಮಾಡುತಿರುವರುಯನ್ನ ಬಿಡದೆ
ಯಾರಿಗೆ ಮೊರೆಯಿಡಲೀ ಕಷ್ಟ ಕಿವಿ-
ಯಾರ ಕೇಳಿ ಪರಿಹರಿಸುವರಾರು ೨
ತಾಯಿಯೆಂಬುವದೆ ಸತ್ಯ ಜ್ಞಾನಮಹ
ರಾಯ ತಂದೆ ಧರ್ಮವೆ ಸೋದರರು
ನ್ಯಾಯವಾಗಿ ಶಾಂತಿಯು ಸತಿ ಕ್ಷಮೆ ಸುತ
ನೋಯಿಸದಿರುವುದು ಮಿತ್ರನು ಇವರೊಳು ೩
ಈ ಬಂಧುಗಳುಳ್ಳವಗೆ ನಿರುತವು ಮ-
ಹಾಭಾಗ್ಯವುಯಿಹಪರ ಸೌಖ್ಯವು
ನಾ ಭ್ರಾಂತಿಯೊಳೆಲ್ಲೆಲ್ಲಿ ತಿರುಗಿದರು
ವೋ ಭಗವಂತ ಮಹಂತಾನಂತನೆ ೪
ಹೊರಗಿನವರ ಬಾಲ್ಯದಿ ಕಾಣದೆ ಕರೆ
ಕರೆಯಾಗಿದೆ ಒಳಗಿನವರುಯಿಲ್ಲದೆ
ಹೊರವೊಳಗೂನೀ
ನಿರುವೆ ಕರುಣಿಸೈ ಸರ್ವವು ನೀನೆ ೫

ಮಹಾಲಕ್ಷ್ಮೀ
೧೦೮
ಎನ್ನ ಪಾಲಿಸೆ ಇಂದಿರಾದೇವಿ ಜ-
ಗನ್ನುತ ಚರಿತೆ ಭಕ್ತ ಸಂಜೀವಿ ಪ
ಸನ್ನುತಾಂಗಿಯೆ ದೀನ ಜನರಾಪನ್ನರಕ್ಷಕಳಲ್ಲವೇ ನೀ-
ನಿನ್ನುತಡಮಾಡದಲೆ ಬಂದು ಪ್ರಸನ್ನಳಾಗಿರು
ಕೃಪಾ ಕಟಾಕ್ಷದಿ ಅ.ಪ
ಕಮಲನಾಭನರಾಣಿ | ಕಲ್ಯಾಣಿ
ವಿಮಲರೂಪಳೆ ಪಂಕಜ ಪಾಣಿ
ಶಮದಮಾದಿ ಸುಖಂಗಳಿತ್ತೆಮ್ಮಮಿತದುರಿತಗಳೋಡಿಸಿ ಅಹಂ
ಮಮ ಎನಿಪ ಪಾಶವ ಬಿಡಿಸಿ ತವರಮಣನಡಿಗಳ
ಕ್ರಮದಿ ತೋರಿಸಿ ೧
ಎಷ್ಟೊ ಜನ್ಮಗಳೆತ್ತಿದೆನಮ್ಮಾ | ಬಲು
ಕಷ್ಟಕಾಡುತಿಹುದು ಕರ್ಮ
ಪೊಟ್ಟೆಗೋಸುಗ ತಿರುಗಿ ತಿರುಗೆಳ್ಳಷ್ಟು ಸುಖವನು ಕಾಣದೆ ಸಂ-
ತುಷ್ಟನಾಗದೆ ಬಳಲುವೆನು ಪರಮೇಷ್ಠಿ
ಜನಕನ ಪಟ್ಟದರಸಿಯೆ೨
ಸಾಮಜಗಮನೆ ಸದ್ಗುಣರನ್ನೆ | ಕ್ಷೀರ –
ಸಾಗರಕನ್ನೆ ಸುಸಂಪನ್ನೆ
ನೀಮನವಲಿದು ಹೃದಯ ಕಮಲದಿ ನಿಂತು
ಕರುಣದಿ ನಿನ್ನಸಿರಿಪದ
ತಾಮರಸವನು ತೋರುವುದು ನ
ಪ್ರಾಣನಾಯಕಿ ೩

೨೮೭
ಎಲ್ಯಾದರು ಮಾಡಬೇಕು ಕೆಲಸ ಪ
ಅಲ್ಲೇನು ಇಲ್ಲೇನು
ಬಲ್ಲಂಥಾವನಾದರೆ ತಾನು ಅ.ಪ
ಶರೀರ ಸಂಬಂಧಿಗಳಿಗಾಗಿ | ಮೂರು
ಕರಣದಿಂದಲಿ ಅನುವಾಗಿ ಕರೆಕರೆಪಡುತಲಿ
ಅರೆನಿಮಿಷವಾದರೆ ಬಿಡದೆ ೧
ಪರಿಪರಿ ದಾಕ್ಷಿಣ್ಯ ಇಲ್ಲಿ | ಬಲವ
ತ್ತರವಾದ ಕಟ್ಟಾಜ್ಞೆ ಅಲ್ಲಿ ನ-
ರರ ಕಾಟವು ಇಲ್ಲಿ ಸುರರ ನಿಬಂಧನೆಯಲ್ಲಿ ೨
ಬಾಲ್ಯ ಯೌವನ ಕೌಮಾರ | ಮುಪ್ಪು
ಕಾಲಗಳಲ್ಲಿ ಶಕ್ತ್ಯಾನುಸಾರ
ಲೀಲೆಯಿಂದಲಿ ಕೆಲವರು ಗೋಳಾಡುತಲಿ ಕೆಲವರು೩
ಸ್ವಲ್ಪಾದರು ಸತ್ಕರ್ಮ ಮಾಡೆ | ಫಣಿ-
ತಲ್ಪಗರ್ಪಿತವೆಂದಾಡೆ ಕಲ್ಪಕಲ್ಪಕು ಸಾಧನೆ
ಅಲ್ಪರಿವುದು ಯಾಕೆ ೪
ಇಪ್ಪತ್ತು ನಾಲ್ಕು ತತ್ವಗಳಿಂದ | ನ-
ಮ್ಮಪ್ಪ ಗುರುರಾಮ ವಿಠಲ ಗೋವಿಂದ
ಕ್ಲುಪ್ತಗೈದಿರುವನು ಆಪ್ತ ಎಂದಿಗೂ ನಮಗವನು ೫

ದ್ವೈತ, ಅದ್ವೈತ, ವಿಶಿಷ್ಟಾದ್ವೈತ
೨೮೬
ಎಲ್ಲರ ಮಾತು ನಿಜ | ಇದು
ಅಲ್ಲ ಎಂಬುದು ಸಜ ಪ
ಬಲ್ಲವರು ಮನದಲಿ ಯೋಚಿಪುದು ಸು-
ಳ್ಳಲ್ಲವಾವುದು ಸೂರಿ ಜನಗಳಿಗೆ ಅ.ಪ
ಅಂತರ್ಯಾಮಿಯ ವೀಕ್ಷಾ | ಇದು ಅ
ದ್ವೈತ ಮತದ ದೀಕ್ಷಾ
ಸ್ವಾಂತದಿ ನೋಡೆ ಪ್ರಪಂಚಕಾಯ ಭಗ
ವಂತನೆಂಬುದು ವಿಶಿಷ್ಟಾದ್ವೈತವು ೧
ಅಣುರೇಣು ತೃಣಕಾಷ್ಠದಲಿ | ನೋಡೆ ಅ-
ವನೇ ವ್ಯಾಪಿಸಿಹನಲ್ಲಿ
ಅಣು ರೇಣು ಬೇರೆ ಅವನೇ ಬೇರೆ
ಅನಿಲಾಂತರ್ಗತನಾಗಿ ಸಮಸ್ತದಿ ೨
ಮೂರು ವಿಧದ ಜೀವಗಳು ಕರ್ಮ
ಮೂರು ಗುಣದ ಕಾರ್ಯಗಳು
ಮೂರು ಮೂರ್ತಿಗಳು ಮೂರು ಕಾಲಗಳು
ಮೂರಾಗಿ ತೋರುವ ಗುರುರಾಮ ವಿಠಲನು ೩

೧೮೨
ಎಲ್ಲವು ನಿನ್ನಾಧೀನ | ನಾ
ಬಲ್ಲೆನೆಂಬುದಜ್ಞಾನ ಪ
ಹುಲ್ಲು ಮೊದಲು ವಿಧಿ ಪರಿಯಂತವು ನೀ-
ನಿಲ್ಲದೆ ಕದಲದು ನಿಜವಿದು ನಿಜವಿದು ಅ.ಪ
ಸುಖವನಪೇಕ್ಷಿಸುತಿಹರು | ದು-
ಷ್ಟಖಳರು ಸಂಸಾರದೊಳು
ಸಖ ನೀನೆನ್ನದೆ ದಾರಾ ಪುತ್ರಾ-
ದ್ಯಖಿಳ ಸಂಪದವ ಬಯಸಿ ಕೆಡುವರು ೧
ಹಣ ಸಂಪಾದಿಸುವದಕು | ಸ-
ದ್ಗುಣ ವಂತನೆನಿಸುವದಕೂ
ಹೆಣಕೆ ಸಮಾನನು ಇವನೆಂಬುವದಕೂ | ಹಿರಿಯ-
ನೆನಿಸಿ ಪೂಜಿಸಿ ಕೊಂಬುವುದಕೂ ೨
ನೀನೊಲಿದರೆ ವಿಷವಮೃತ | ಬರಿ-
ದೆ ನಾನೆಂಬುವದ ಮೃತವಿಷ
ನೀನೆನ್ನೊಳಗೆ ನಾ ನಿನ್ನೊಳಗೆ
ಜ್ಞಾನಿಗಳರಿಯುವರೀ ನಾನಾ ಬಗೆ ೩
ಜ್ಞಾನ ಭಕ್ತಿಯು ವಿರಾಗ | ವೆಂ-
ಬೀನಿದಾನವೇ ಯೋಗ
ತಾನಾಗಿ ತನಗೆ ವದಗಿರಲಾಗ
ಆನಂದ ಪಡುವುದೇ ಬಲು ತ್ಯಾಗ ೪
ಕ್ಷೇಮದಿಂದಲಿರುವದಕೂ | ನಿ-
ರ್ನಾಮವೈದಿ ಕೆಡುವುದಕೂ
ಪಾಮರ ಜೀವರು ತಾವರಿಯರು ಗುರು
ರಾಮ ವಿಠಲ ನೀನಾ ಮಮತೆ ಕೊಡದಿರೆ ೫

೨೦೨
ಎಲ್ಲಾರಂತೆ ನೀ ಮಾತನಾಡು | ಸಿರಿ ಪ
ನಲ್ಲನವರ ಸಂಗದಿ ಕೂಡು ಅ.ಪ
ಉಪದೇಶ ಮಾಳ್ಪುದಕೆ ಹೋಗಬೇಡ ನೀ
ಚಪಲಚಿತ್ತನು ತಿಳಿದಿರು ಮೂಢ-
ಗುಪಿತವಾಗಿರಲಿ ಧ್ಯಾನ | ಹೊರಗೆ
ತೋರ್ಪದಿರು ಕೋಣ ೧
ಹಿಂದೆ ಹೋದರು ಬಹಳ ಮಂದಿ | ಸ್ಥಿರ-
ವೆಂದು ತಿಳಿದು ನೀದುಃಖ ಹೊಂದಿ
ಮುಂದಾಗುವುದುಕ್ಕೆಲ್ಲಾ
ಕಂದರ್ಪ ಕಾರಣನಲ್ಲಾ ೨
ಕಳ್ಳರಿಗೆ ಊರುದಾರಿ ತೋರೆ ಇನ್ನು
ಎಲ್ಲಾ ಜನರನು ಸುಲಿವರು ಮುನ್ನು
ಕ್ಷುಲ್ಲಕರಿಗೆ ತತ್ವವ ಪೇಳೆ
ಸುಳ್ಳೆಂದು ನಿಂದಿಸುವರು ೩
ಪ್ರಶ್ನೆಗೆ ತಕ್ಕ ಉತ್ತರವಾಡು | ಸೂರ್ಯ-
ರಶ್ಮಿಯೊಳಗಿರುವ ಲವಣಿಯ ನೋಡು ನಿ_
ನ್ನಸ್ವರೂಪವದರಂತೆ | ಯಾತಕೆ
ಇನ್ನು ಅಗಾಧ ಭ್ರಾಂತಿ ೪
ಅನಂತ ಪ್ರಾಣಿಗಳೊಳಗೆ ನಿವಾಸ | ನಮ್ಮ
ವನಜಾಕ್ಷ ಗುರುರಾಮವಿಠಲೇಶ
ಅನಿಮಿತ್ತ ಬಂಧುವನು ಬಿಡಿಬಿಡಿರೋ ದುರಾಶಾ೫

೩೨೦
ಎಷ್ಟು ಹೊತ್ತು ಮಲಗಿರುವೆ ಏಳತ್ತಿಗೆ
ಅಸಿಸ್ಟೆಂಟ್ ಅಮಲ್ದಾರ್ರು ಹೇಳಿಕಳುಹಿಸಿದ್ದಾರೆ ಪ
ಬಿಸಿ ನೀರು ನಿನಗಾಗಿ ಹಸನಾದ ಪನ್ನೀರ-
ರಿಸಿನ ಕುಂಕುಮ ಕಳಶ ಕನ್ನಡಿಗಳಾ
ಶಶಿಮುಖಿಯರೆಲ್ಲರು ತಂದು ಕಾದಿಹೆವಿಲ್ಲಿ
ಕುಸುಮಾಸ್ತ್ರ ನಾಟದಲಿ ನಿಶಿ ನಿದ್ರೆ ಇಲ್ಲವೇನೋ ೧
ಒಬ್ಬ ಒಡವೆಗಳು ಮತ್ತೊಬ್ಬ ಸೀರೆಗಳು | ಇ
ನ್ನೊಬ್ಬ ಪರಿಮಳ ದ್ರವ್ಯ ತಂದು ಕೊಡುವಾ
ಹಬ್ಬ ಪ್ರತಿದಿನ ರಾತ್ರಿಯಾಗುತ್ತಲೆ ನಿನಗೆ ನಮ್ಮ
ಸುಬ್ಬ ಪೋಲೀಸನವರಿಂದ ಬಿಡಿಸಲಿಲ್ಲವೆ ೨
ನಿನ್ನ ಚರಿತೆಯ ಪೊಗಳೆ ಪನ್ನಗೇಶ್ವರಗಳವೆ
ಹೊನ್ನು ಹಣಗಳಿಗೇನು ಕಡಿಮೆಯಿಲ್ಲ
ಚನ್ನ ಕೇಶವರಂಗ ಗುರುರಾಮ ವಿಠಲನ
ಇನ್ನಾದರು ಸ್ಮರಿಸಿ ಕಣ್ದೆರೆದು ನೋಡೆ ೩

೨೮೮
ಏಕಾದಶೀ ಉಪವಾಸ
ಬೇಕಾದವನೇ ಹರಿದಾಸ ಪ
ಏಕಾದಶಿ ಉಪವಾಸ ಮಾಡಿದರೆ
ನಾಕಿಗಳಿಗೆ ಆಗದು ವಿಶ್ವಾಸ ಅ.ಪ
ಏಕಾದಶಿಯೆ ಯೋಗಸಿದ್ಧಿ
ಏಕಾದಶಿಯೆ ಭೋಗಪ್ರಾಪ್ತಿ
ಏಕಾದಶಿಯಲಿ ಎರೆಡು ಕಾರ್ಯಲ-
ಕ್ಷೀಕಾಂತನ ಭಜನೆ ರಾತ್ರಿ ಜಾಗರವು ೧
ಉಪವಾಸ ವ್ರತವೆ ವ್ರತವು
ಜಪಶೀಲರ ತಪವೇ ಸುಖವು
ಅಪರಿಮಿತವಾದ ಸತ್ಕರ್ಮಗಳೆಲ್ಲಾ
ಚಪಲದಿ ಓಡುವುದುಪವಾಸದ ಹಿಂದೆ ೨
ಅನ್ನಸಾರು ಕಾಯಿಪಲ್ಯ ಒಬ್ಬಟ್ಟು
ಘನರುಚಿಯ ಚಿತ್ರಾನ್ನ ಭಕ್ಷ್ಯಗಳು
ಇನ್ನುರುಚಿಯ ವಸ್ತುಗಳು ನೋಡಿದರೆ
ತಿನ್ನುವುದೇ ಪ್ರತ್ಯಕ್ಷ ನರಕವು ೩
ಅನಗ್ನಿಕವಾದ ಆಹಾರಗಳು
ಪನಸಾಂಬ್ರವು ಇಕ್ಷು ಫಲಗಳು
ಘನಮೋದದಲಿ ಪವನಜನಾದ ಭೀ-
ಮನೇ ಸ್ವೀಕರಿಸಿರುವನು ಪೂರ್ವದೊಳು ೪
ರುಕುಮಾಂಗದ ಭೂಪಾಲಕನು
ಸುಖದಿಂದಾಚರಿಸಿದ ತಾನು
ವಿಕಳ ಬುದ್ಧಿಯಾಗದೆ ಸಮಯದಿ ತನ್ನ
ಸುಕುಮಾರನ ಕಡಿಯಲೆತ್ನಿಸಿದನು ೫
ನಿರಾಹಾರವು ನಡೆಯಲುತ್ತಮವು
ಎರಡನೇಯದು ಮೇಲ್ಪೇಳಿದುದು
ನರಾಧಮನು ವ್ರತನಮಗಿಲ್ಲೆನುತ
ಪರಿಪರಿ ಅನ್ನೋತ್ಸವದಿ ಕೆಡುವನು ೬
ಹೊರಗೊಳಗುಪವಾಸ ವ್ರತವ
ಮರೆಯದೆ ಮಾಡುತಿರುವ ಮಾನವ
ಗುರುರಾಮ ವಿಠಲನ ಕರುಣಾ ಪಡೆಯುವ
ಕರಾಮಲಕ ಮುಕ್ತಿಯಲಿ ಸುಖಪಡುವನು ೭

೧೦೩
ಏಕಾರತಿ ನೋಡೈ ಜಗದೇಕನಾಥ ಪ
ನಾಕೊಡುವೆನು ತ್ರಿಲೋ ಕೈಕ ರಕ್ಷಕ ಸ್ವಾಮಿ ಅ.ಪ
ಘೃತವರ್ತಿತ್ರಯ ವಂಹ್ನಿಯುತವಾದ ಮಂಗಳಾ-
ರತಿಯ ಸ್ವೀಕರಿಸು ಶ್ರೀಪತಿ ಪುರುಷೋತ್ತಮ ೧
ಮೂರುಲೋಕದ ಅಂಧಕಾರಾ ಪರಿಹರಗೈವ
ಘೋರಾನರಕ ತ್ರಾತ ದಿವ್ಯ ಜ್ಯೋತಿ ರೂಪನೆ ೨
ದ್ವಾದಶ ಸ್ತೋತ್ರ ಪ್ರತಿಪಾದಕ ಮಧ್ವಮುನಿಗೆ
ಮೋದವಿತ್ತೆಂಥಾ ಗುರುರಾಮ ವಿಠಲ ತಂದೆ ೩

(ನುಡಿ-೧) ಬ್ರಹ್ಮನ ಶಿರವಿಡಿದು
ರುದ್ರ (ಶಿವ) ಸ್ತುತಿ
೧೪೭
ಏಕೆ ನೀ ಬರಿದೆ ಮೆಚ್ಚಿದೆ ಭವಹರಗೆ
ಲೋಕರಕ್ಷಕನೆಂಬೊ ಹರ ಗಂಗಾಧರಗೆ ಪ
ನೀಕಮಲಮುಖಿ ಅಖುವೈರಿ ಅ-
ನೇಕ ಮೈಯೊಳು ಸುತ್ತಿಕೊಂಡು ವಿ-
ವೇಕವಿಲ್ಲದೆ ವಿಷವನುಂಡ ಪಿ-
ನಾಕಧರನಿಗೆ ಸೋಲುವುದೆ ಅ.ಪ
ಶಿರದೊಳು ಶಶಿಯ ಕೆಂಜಡೆಯಿಪ್ಪಭೋಗಿ
ಸ್ಮರನದಹಿಸಿ ಭಸ್ಮ ಹಣೆಗಿಟ್ಟಯೋಗಿ
ಇರುವೊಡೆ ಸ್ಥಳವಿಲ್ಲ ದಂತೆ ತಾ ಪೋಗಿ
ಬೆರೆವ ಸ್ಮಶಾನ ಮಂದಿರ ಸುಖವಾಗಿ
ಮರುಳು ಭೂತ ಪಿಶಾಚಿ ಯಕ್ಷರ
ನೆರವಿಯೊಳು ಕುಣಿ ಕುಣಿದು ಬ್ರಹ್ಮನ
ಶಿರವಿಡಿದು ತಿರಿದುಂಬ ಗೊರವಗೆ
ಬರಿದೆ ಒಲಿವುದೆ ಗರುವೆ ಪಾರ್ವತಿ೧
ಮಂಡೆಯೊಳ್ ಜಾಹ್ನವಿ ಶಶಿಯನ್ನೆ ಮಾಡಿ
ರುಂಡಮಾಲೆಗಳ ಕೊರಲೊಳಗಿಟ್ಟು ಆಡಿ
ಕುಂಡಲಗಳ ಧರಿಸಿರುವನ ನೋಡಿ
ಖಂಡಪರಶುವೆಂದು ಅವನ ಕೊಂಡಾಡಿ
ದಿಂಡೆಯಾಹ ಪ್ರಾಯದವಳು ನೀ
ಕೆಂಡಗಣ್ಣಿನ ಕ್ರೂರರೂಪನ
ಕಂಡು ನೀನವ ಗಂಡನೆಂದು ಪ್ರಾ-
ಚಂಡಗೊಲಿದಿಹೆ ಸರಿಯೆ ಪಾರ್ವತಿ ೨
ಕರದೊಳು ತ್ರಿಶೂಲ ಡಮರುಗ ಧರಿಸಿರುವ
ಕರಿಚರ್ಮಾಂಬರ ಹುಲಿದೊವಲುಟ್ಟು ಮೆರೆವ
ಹಿರಿಯತನಕೆ ವೃಷಭನ ಏರಿ ಬರುವ
ಸಿರಿಯ ಹೋಗಾಡಿ ಭಿಕಾರಿಯಾಗಿರುವ
ವಿರಚಿಸುವ ಲೀಲಾವಿನೋದನ
ಪರತರ ಶ್ರೀ ಪ್ರಣವ ರೂಪನ
ವರದ ಶ್ರೀ ನ
ಪರಮ ಪ್ರಿಯ ಪರಮೇಶ ಶಿವಗೆ ೩

೨೦೫
ಏತಕೀ ಭಯ ನೀತಿಯೇನಯ್ಯ ಪ
ಕೋತಿಯಂತೆ ನೀ ಕುಣಿದು ಜನರಾಡುವ
ಮಾತುಕೇಳು ತಾಮನದಲ್ಲಿನೊಂದು ಅ.ಪ
ತಬ್ಬಿಕೊಂಡಿರ್ಪ ಪ್ರಾರಬ್ದ ಬಿಡುವುದೆ
ಅಬ್ಜನಾಭನಿರುವ ನಮ್ಮರಕ್ಷಿಸಲು ೧
ಬೊಬ್ಬೆರೋಗ ಬಂತೆಂದಬ್ಬರ ಜನಗೈಯ್ಯೆ
ಉಬ್ಬಿಉಬ್ಬಿನೀ ಊರಬಿಟ್ಟೋಡಲು ೨
ಹುಲಿಗಳಂಥನರರು ಇಲಿಯ ನೋಡಿ ಬೆದರಿ
ಕಳೆದುಕೊಂಬರು ತಮ್ಮ ಸರ್ವಸ್ವವ ೩
ಛಳಿ ಮಳೆಯು ಬಿಸಿಲು ಗಾಳಿಯೊಳು
ಬಳಲುವುದ್ಯಾಕೆ ಬುದ್ಧಿಯಿಲ್ಲದೆ ೪
ಕುನ್ನಿ ನಿನ್ನಂಥವರೆಷ್ಟುಮಂದಿ ಪೋದರು
ಘನ್ನನ್ನ ನಂಬು೫

(ನುಡಿ-೨೨-೨೬) ದೇಹ ವೃಕ್ಷವೆಂಬ
೨೦೪
ಏತಕೆ ನೀ ಚಿಂತಿಸುವೆ ಹೇಡಿ ಜೀವವೇ ಪ
ವೀತಮೋಹರಾಗನಾಗಿ ವಿಧಿಪಿತ
ದಾತತಾನೆಂದು ತಿಳಿಯಲು ಹೃತ್ತಾಪನಾಶನಾ ಅ.ಪ
ಹೊನ್ನು ಹೆಣ್ಣು ಮಣ್ಣು ಮೂರು ನಂಬಬ್ಯಾಡಲೊ
ನಿನ್ನೊಳಿರುವ ಮೂರ್ತಿಯನ್ನು ಅರಿತು ಬಾಳೆಲೊ ೧
ವಂದಿಸುತ ಸಜ್ಜನರ ಕಂಡರಾನಂದ ಪೊಂದುತ
ಸಂದೇಹಗಳೆಲ್ಲ ತೊರೆದು ಸತತ ನಲಿಯುತ ೨
ಆತ್ಮವತ್ ಸರ್ವಭೂತನೆಂಬೊ ವಚನವು
ಆತ್ಮನಲ್ಲಿ ಸಮರ್ಪಿಸಿದರೆ ಪಡೆವೆ ಸೌಖ್ಯವು ೩
ಸಾಮಜೇಂದ್ರ ವರದ ಶ್ರೀ ನ
ಪ್ರೇಮದಿಂ ನಿಷ್ಕಾಮನಾಗಿ ಸೇವಿಸುನುದಿನ ೪

೨೦೩
ಏತಕೆ ಸಂತತ ಚಿಂತಿಸುವೆ ಪ
ಕೋತಿಗೆ ಮದ್ದಿಕ್ಕಿದ ರೀತಿಲಿ ಮನವೆಅ.ಪ
ಹಾನಿ ವೃದ್ಧಿಗಳು ತಾನಾಗಿ ಬರುವುದು
ಏನೇನು ಮಾಡಲು ಬಿಡಲೊಲ್ಲದು
ಜ್ಞಾನವಿಲ್ಲದೆ ವೃಥಾ ಧೇನಿಸಿ ಧೇನಿಸಿ ೧
ದೇಹಸಂಬಂಧಿಗಳ ಮೋಹ ಪಾಶಕ್ಕೆ ಸಿಕ್ಕಿ
ಸಾಹಸ ಮಾಡುವುದೇನು ಫಲ
ಊಹಿಸಿ ನೋಡಲು ಭ್ರಾಂತಿಯದಲ್ಲವೆ ೨
ಸರ್ವ ಪ್ರಾಣಿಗಳನು ಸೃಷ್ಟಿಸಿ ಇರುವನು
ಪೂರ್ವ ಕರ್ಮಾನುಸಾರ ನಡೆಸುವನು ಗರ್ವವಿರಹಿತನು ನು ೩

೧೨೯
ಏನಯ್ಯ ಹನುಮ ನಮ್ಮನು
ನೀನೇ ಕಾಪಾಡಬೇಕು ನಿರುತವು ಬಿಡದೆಯ-
ಜ್ಞಾನಾಬ್ಧಿಯ ದಾಟಿಸು ಸೀ-
ತಾನಾಯಕ ನಂಘ್ರಿ ಕಮಲ ಭೃಂಗ ಶುಭಾಂಗ ೧
ಸುಗ್ರೀವನ ಮಂತ್ರಿವರ ದ-
ಶಗ್ರೀವನ ಗುದ್ದಿದವನೆ ಶತ್ರುನಿಕರವಂ
ಶೀಘ್ರದಿ ಗೆಲುವಂದದಲಿಯ-
ನುಗ್ರಹವ ಮಾಡುತಲೆಮ್ಮ ಕೈಪಿಡಿ ಹನುಮ ೨
ಮರವೆಯು ದುರಾಸೆ ಚಪಲ
ತ್ವರಿತವತಿ ನಿಧಾನವಲಸಿಕೆಗಳನು ಬಿಡಿಸಿ
ಪಿರಿಯರು ಪೇಳಿದ ಪರಿಯಲಿ
ನೆರೆನಡೆವಂದದಲಿ ಸುಮತಿಯನು ಕೊಡು ಹನುಮ೩
ಹೊರಗಿನ ಶತ್ರುಗಳಂ ವಾ-
ಕ್ಪೌರುಷದಿ ವೋಡಿಸಲುಬಹುದು ಒಳಗಿನ ಕಾಮ್ಯಾ
ದ್ಯರ ಗೆಲುವುದಕೆ ಶಾಂತಿಯೆ
ಕ್ಷುರವಹುದು ದಯಮಾಡಿ ನೀನೆ ಕರುಣಿಸು ಹನುಮ೪
ಕತ್ತಿಯಲಿ ಕಡಿದೆರೆರಡಾ-
ಗುತ್ತಿರುವುದು ಜಡವು ವಾಕ್‍ಕತ್ತಿಯ ದೆಸೆಯಲಿ
ನೆತ್ತಿಮೊದಲು ಪಾದವರಿಗು
ಕತ್ತರಿಸಿದರೀತಿಯಹುದು ಕಾಯೈ ಹನುಮ ೫
ಪರಧನ ಪರಾಕಾಮಿನಿಯರಿ
ಗೆರಗುವ ಮನವೆಂಬ ತೊಂಡು ಪಶುವಿಗೆ
ಕೊರಳೊಳರಿವೆಂಬ ರಜ್ಜುವಿಂದಲಿ
ವಿರಾಗ ದೊಣ್ಣೆಯನು ಕಟ್ಟಿ ಕೈಪಿಡಿ ಹನುಮ ೬
ಸಂಗವು ನಿತ್ಯಾಹ್ನೀಕಕೆ
ಭಂಗವು ಬರುತಿಹುದು ಸದ್ವಿಷಯವಾದರದೆ
ಬಂಗಾರವು ರತ್ನವು ತಾ
ಹಿಂಗದೆ ಸೇರಿಸಿದ ರೀತಿ ಹಿತವೈ ಹನುಮ ೭
ನವವಿಧ ಭಕ್ತಿಯ ಕೊಡು ರಾ-
ಘವನಂಘ್ರಿಪರಾಗದಲಿ ಕಡು ವಿರತಿಯನು ನೀಂ
ತವಕದಲಿ ಪಾಲಿಸುತಲಿ ನಿ-
ನ್ನವರಂ ಕೈಪಿಡಿವುದೆಂದಿಗೂ ಬಿಡದೆ ಹನುಮ ೮
ಹನುಮಾಷ್ಟಕವನು ಪೇಳುವ ಜನರಿಗೆ
ಗುರುರಾಮ ವಿಠಲನ ದೂತನು
ತಾನನುದಿನದಿ ಬರುವ ಕಷ್ಟಗಳನು
ಪರಿಹರಿಸುತ್ತ ಹಿಂದೆ ತಿರುಗುತಲಿರುವಂ೯

೧೮೩
ಏನಿದು ಚಿತ್ರ ಎಲೋ ಕಂಜನೇತ್ರ ಪ
ದೀನನು ನಾನೆಂದು ದಿನ ದಿನ ಮೊರೆಯಿಡೆ
ನೀನು ಮಾಡಿದ ಕರ್ಮವೆಂದು ತಪ್ಪಿಸಿಕೊಂಬ ಅ.ಪ
ನೀನರಿಯದ ಹಾಗೆ ನಾನೇನು ಮಾಡಿದೆ
ಮಾನಸದಲಿ ಸಾಕ್ಷಿಯಾಗಿ ನೀನಿಲ್ಲವೇ ೧
ಸಕಲ ತತ್ವೇಶರು ಅನುಸರಿಸುವರು ನಿನ್ನ
ಯುಕುತಿ ಮಾತು ಇದಲ್ಲ ವೇದಶಾಸ್ತ್ರ ಪ್ರಮಾಣ೨
ಸತ್ಯ ಸಂಕಲ್ಪನೆಂದು ಪೇಳುವರೆಲ್ಲರು
ಭೃತ್ಯರ ಸಲಹದ ಪ್ರಭುತ್ವವೇತಕೆ ನಿನಗೆ ೩
ಯಾವ ವಿಧದಿ ಸುಖ ಲೇಶಕಾಣೆನೋ ನಾನು
ದೇವ ನಿನ್ನ ಚಿತ್ತವೋ ಎನ್ನ ಪುರಾಕೃತವೋ ೪
ಕರಣಶುದ್ಧವಿಲ್ಲವೆಂದು ಕರಕರ ಪಡಿಸುವೆ
ಕರಣಾಭಿಮಾನಿಗಳಿಗೊಡೆಯ ನೀನಲ್ಲವೇ ೫
ಯಾವಾಗಲು ನಿನ್ನ ಮರೆಯದೆ ನೆನೆಯುವ
ಭಾವ ಕೊಡುವುದಕೆ ಬಡತನವೆ ನಿನಗೆ ೬
ಏನು ಅರಿಯೆ ನಾನು ಅಸ್ವಾತಂತ್ರನು ಜೀವ
ನೀನೆ ಸರ್ವ ಸ್ವತಂತ್ರ ಗುರುರಾಮ ವಿಠಲ ೭

೨೦೭
ಏನಿದು ಮನವೆ ಹೀನ ವಿಷಯಗಳ
ನೀನೆ ಕಾಮಿಸಿ ನಿರುತವು ಕೆಡುವೆ ಪ
ಪರರರಂತೆಯೆ ತಾನಿರಬೇಕೆನ್ನುತ
ಸ್ವರೂಪವರಿಯದೆ ನೀ ಕರೆಕರೆ ಪಡುವೆ ೧
ನಿಂತಲಿ ನಿಲ್ಲದೆ ಚಿಂತಿಸುತನುದಿನ
ಭ್ರಾಂತಿಯಪಡುತಲಿ ಬಾಯಿ ಬಾಯಿ ಬಿಡುವೆ ೨
ನಾಯಂದದಿ ಪರಸ್ತ್ರೀಯರ ಬಯಸುತ
ಹೇಯನೆನಿಸಿಕೊಂಡು ನೊಯ್ಯುವೆಯಲ್ಲದೆ ೩
ಮಲಮೂತ್ರದಿ ನೀ ಮಲಗಿರಲಿಲ್ಲವೇ
ಮರೆತು ಯೌವ್ವನ ಗರ್ವದಲಿ ತಲೆ ತೂಗುತ೪
ಪರಿಪರಿವಿಧದಲಿ ಭಕ್ತರ ಪಾಲಿಪ
ನ ಚರಣವ ನಂಬದೆ ೫

೨೦೬
ಏನಿದು ಸಂಸಾರ ನೋಡಿದರಿದುವೆ ಮಹಾಘೋರ ಪ
ನಾನಾವಿಧ ಕೋರಿಕೆಯಿಂದನುದಿನ ನರಳುತ
ನೀರೊಳು ಕೈಬಿಟ್ಟಂತೆ ಅ.ಪ
ಒಂದು ಲಾಭ ಬರಲು ನಷ್ಟ ವೆರ-
ಡೊಂದಾಗುವುದಿದರೊಳ್
ಹಿಂದಿನ ಬವಣಿಯ ಮರೆತೆಲ್ಲರು ತಾವು
ಮುಂದೆ ಸುಖವಪಡುವೆವೆಂದರಿತಿರುವರು ೧
ತನ್ನಿಂತಾನಾಯಿತೆಂಬರು
ಕುನ್ನಿಗಳರಿಯದೆಲೆ
ಬನ್ನಬಡುವರೆಲ್ಲ ಬ್ರಹ್ಮರಾದರೆ
ಇನ್ಯಾತಕೆ ಶೃತಿ ಸ್ರ‍ಮತಿ ಪುರಾಣಗಳು ೨
ನು ಒಳಗೆ ಹೊರಗೆ
ಇರುತೀ ಜಗವನ್ನು
ಕರುಣದಿ ಪ್ರೇರಿಸುವವನ ತಿಳಿದರೆ ಬರುವುದು ಲೆಕ್ಕಾಚಾರಕೆ ಸರ್ವವು ೩

ಇದೊಂದು ದಶಾವತಾರ ಸ್ತುತಿ
೧೩
ಏನು ಪೇಳಲಿ ಹರಿಯ ಚರ್ಯ ಎಂತು ಪೊಗಳಲಿ ಪ
ಗಾನಲೋಲ ಜ್ಞಾನಪೂರ್ಣ ಶ್ರೀನಿವಾಸನ ಅ.ಪ
ಬಲಿಯ ದಾನ ಬೇಡಿ ಬೆನ್ನೊಳು ಭಾರ ಪೊತ್ತನ
ಖಳನ ಮಡುಹಿ ವೇದರಾಶಿ ಅಜಗೆಯಿತ್ತನ ೧
ಧರಣಿ ಎತ್ತಿ ದೈತ್ಯನ ಸೀಳಿ ತರಳಗೊಲಿದನ
ಕರದಿಕೊಡಲಿ ಪಿಡಿದು ಅಡವಿ ಚರಿಸಿದಾತನ ೨
ಬೆಂಣೆ ತಿಂದು ತ್ರಿಪುರ ಸತಿಯರ ಬೆರಗು ಮಾಡ್ಡನ
ಪುಣ್ಯ ಮೂರುತಿ ಕಲ್ಕಿ ನ ೩

೨೦೮
ಏನು ಮಮತೆ ಏನು ಕತೆ ಇದೇನು ಜೀವವೇ
ಸಂಸಾರದೊಳ್ ಪ
ನಾನುನನ್ನದೆಂದು ವೃಥಾ ನರಳಿಬಳಲುವೆ ಅ.ಪ
ತಂದೆ ತಾಯಿಯು ಬಂಧು ಬಳಗವು ಸಂ
ಬಂಧಿಗಳೆಲ್ಲರು ಸತಿಸುತರೂ
ಎಂದಿಗು ರಕ್ಷಕರೆಂದು ನೀ ತಿಳಿದು
ಮಂದಮತಿಯೆ ಮುಂದೇ ಕೆಡುವೆಯೊ ೧
ದುರ್ವಿಷಯವನೀ ಸರ್ವದ ಕೋರುತ
ದುರ್ವಿದಗ್ಧ ವಿಜ್ಞಾನನಾಗಿ
ನಿರ್ವಹಿಸುವೆ ನಾನಿದರೊಳೆನ್ನುತ
ಗರ್ವಪಡಲೂ ಸುಪರ್ವರ್ ನಗರೇ ೨
ಸತ್ಯವೆಂಬುವದು ಮಾತೃ ಪಿತನು ಸ-
ರ್ವೋತ್ತಮ ಜ್ಞಾನವು ಭೂತದಯೆಯು ಸ-
ನ್ಮಿತ್ರಧರ್ಮವು ಭ್ರಾತೃಗಳ್ ಶಾಂತಿಯು
ಪತ್ನೀ ಕ್ಷಮೆಯೂ ಪುತ್ರರ್ ನಿತ್ಯರಿವರು ೩
ನಡೆವುದು ಯಾತ್ರೆಯು ನುಡಿವುದು ಮಂತ್ರ
ಕೊಡುವುದು ಯಜ್ಞ ಬಿಡುವುದು ತ್ಯಾಗ
ಒಡೆಯ ಹರಿ ನಿಮ್ಮೊಡನೆ ತಿರುಗುತ
ನಡೆಸುವನು ಎಂದು ಧೃಡವಾಗಿ ನಂಬದೆ೪
ಧ್ಯಾನನದೀಯೊಳು ಸ್ನಾನಮಾಡಿಸು-
ಜ್ಞಾನಾಮೃತವನು ಪಾನವಗೈಯುತ
ಏನೇನು ಮಾಡುವುದೆಲ್ಲವು ನಿರುತ
ಶ್ರೀನಿವಾಸನ ಸೇವೆಯಿದೆನ್ನದೆ ೫
ಮೂರು ವಿಧವಾದ ಜೀವ ಕೋಟಿಯೊ-
ಳಾರು ನಾನೆಂದು ದೂರದೃಷ್ಟಿಯಿಂ
ಸಾರ ಸಂಗ್ರಹಿಸಿಯಸಾರವ ತ್ಯಜಿಸಿ
ಧೀರ ನಾಗಿದರ ಪರವ ಗಾಣದೆ ೬
ಹೇಮ ಭೂಮಿಯು ಭಾಮಾಮಣಿಯರನು
ನೀಮನವಲಿದು ವ್ಯರ್ಥನಾದೆ
ಕ್ಷೇಮವೀವಾ ಗುರುರಾಮ ವಿಠ್ಠಲನ
ನಾಮಾ ಜಪಿಸೀ ಕಾಮಿತ ಪಡಿಯದೆ ೭

೨೦೯
ಏನು ಸುಖವಯ್ಯ ಪ
ಇನ್ನೇನು ಪರಗತಿಯಹುದು ಮುಂದೆಅ.ಪ
ನಾನಾವಿಧ ದುಃಖಗಳಲಿ
ತಾ ನರಳುತ ಹಗಲಿರುಳೆನ್ನದೆ
ಜ್ಞಾನಶೂನ್ಯನಾಗುತ ವಿಷ-
ಯಾನುಭವದಿ ವ್ಯಥೆ ಪಡುವವಗೆ ೧
ಮಾಳಿಗೆ ಮೇಲೋಡಾಟವು
ನಾಳೆಬಹುದು ಕಷ್ಟವು ಎಂ-
ದ್ಹೇಳುವ ಹಿರಿಯರ ಮಾತನು
ಕೇಳದೆ ಗರ್ವಿಸಿ ಮೆರೆವವಗೆ ೨
ನಿದ್ರಾ ಭೋಜನ ಮೈಥುನ
ಭದ್ರವು ತನಗೆಂದು ತಿಳಿದು
ಕ್ಷುದ್ರ ಮಾರ್ಗದಲಿ ತಿರುಗಿದ ದ-
ರಿದ್ರದಿ ಹಂಬಲಿಸುವವಗೆ ೩
ಕಡುನಾರುವ ಹೊಲೆ ಗುಡಿಸಲಿಗೆ
ಒಡವೆ ವಸ್ತ್ರ ಬೇಕೆನ್ನುತ
ಮಡದಿ ಮಕ್ಕಳೆಂತೆಂಬುವ
ತೊಡರೊಳು ಬಾಯ್ಬಿಡುತಿರುವವಗೆ ೪
ಹರಿಕೊಟ್ಟ ಮಹಾಭಾಗ್ಯದಿ
ಪರಮತೃಪ್ತನಾಗಿರದಲೆ
ನ ಮರೆದು
ಇರುಳು ಹಗಲು ಚಪಲ ಪಡುವಗೆ ೫

೩೨೧
ಏನೆಲೆ ಸಖಿ ವಾನರ ಮುಖಿ
ನೀನು ಒಳ ಒಳಗೆ ಮಾಡಿದ ಯೋಚನೆ ಪ
ಬಿಳಿಯ ಚಿನ್ನದೊಡವೆ
ಹಳೆಯ ಜೌಳಿಗಳು
ಘಳಿಲನೆ ತಂದಿಟ್ಟು ಘನವ ಪೇಳಿಕೊಂಬೆ ೧
ಭಕ್ಷ್ಯ ಭೋಜ್ಯ ನಿನ್ನ
ಕುಕ್ಷಿ ತುಂಬಿದಾರು
ಲಕ್ಷ್ಯವಿಲ್ಲದೆ ನಮ್ಮಾ-
ನಾಕ್ಷೇಪಿಸುತ್ತಿರುವೆ ೨
ಹಪ್ಪಳಾವು ಹತ್ತು
ಹೋಳಿಗೆ ಇಪ್ಪತ್ತು
ತಪ್ಲೇಲಿ ತಿಳಿ ತುಪ್ಪ
ತಪ್ಪದೆ ಮಾಯವಾಯ್ತು ೩
ಬಡವರಮ್ಮ ನಾವು
ಬಡಿವಾರವೆಮಗಿಲ್ಲ
ನಡುಬೀದಿಗೆ ಕಾಲ-
ಚಾಚದಿರತ್ತಿಗೆ ೪
ಜಲಜಾಕ್ಷ ಗುರುರಾಮ | ವಿ-
ಠಲನಾ ಸ್ಮರಿಸುತ್ತಾ
ಕಲಹಕಾರಿ ನೀನು
ಎಲೆಯ ನೋಡಿವುಣ್ಣೆ ೫

೧೪
ಏಳಯ್ಯ ಸ್ವಾಮಿ ಏಳಯ್ಯ ಪ
ಏಳು ಶ್ರೀದುರ್ಗಾಲೋಲ ಭಕ್ತಜನ
ಪಾಲ ವೇಣುಗೋಪಾಲಬಾಲಾ
ಏಳು ಇಂದ್ರಾದಿ ಸುರಾಳಿಗಳೆಲ್ಲ ನಿ-
ನ್ನೂಳಿಗ ಬಯಸಿ ಕಾದಿರುವರೊ ಕೃಷ್ಣಾ ಅ.ಪ
ರಕ್ಕಸರನೆಲ್ಲ ಸೊಕ್ಕು ಮುರಿಯುವದೇ
ವಕ್ಕಿತನಯ ಬೇಗ ಏಳಯ್ಯ
ಅಕ್ರೂರಗೆಮುನಾನದಿಯೊಳು ನಿನ್ನನಿ
ಜಾಕೃತಿ ತೋರುವೆ ಏಳಯ್ಯ ೧
ವರಮಾತೆ ಒರಳಿಗೆ ಕಟ್ಟಲು ಮರಗಳ
ಮುರಿದ ಮಹಾತ್ಮನೆ ಏಳಯ್ಯ
ತರುಣಿಯರೊಡನೆ ರಾಸಕ್ರೀಡೆಯಾಡಿದ
ಪರಮ ರಸಿಕನೀನು ಏಳಯ್ಯ ೨
ಬಿಲ್ಲು ಹಬ್ಬವಂತೆ ಮಲ್ಲಯುದ್ಧವಂತೆ
ಬಲ್ಲಿದನು ನೀನಂತೇಳಯ್ಯ
ಖುಲ್ಲ ಕಂಸನ ಕೊಂದು ತಾತನ ರಾಜ್ಯದಿ
ನಿಲ್ಲಿಸುವರೆ ಬೇಗ ಏಳಯ್ಯ ೩
ದೇವದೇವೋತ್ತಮನೆ ಮಾವನ ಭಂಗಿಸಿ
ದೇವಿ ಕೈ ಪಿಡಿಯಲು ಏಳಯ್ಯ
ದೇವಿಯರು ಹದಿನಾರು ಸಾವಿರವಾಳಿದ
ಭಾವಜಪಿತ ಕೃಷ್ಣ ಏಳಯ್ಯ ೪
ನರಗೆ ಸಾರಥಿಯಾಗಿ ಜಯವ ಕೊಡಿಸಿ ಯುಧಿ |
ಷ್ಠಿರಗೆ ಪಟ್ಟವಗಟ್ಟು ಏಳಯ್ಯ
ನರನಂತೆ ನಟಿಸಿ ದಾಸರ ಪರಿಪಾಲಿಪ |
ಗುರುರಾಮ ವಿಠಲನೆ ಏಳಯ್ಯ ೫

ಬ್ರಾಹ್ಮಣರ ಹೊಲಗಳನ್ನು ಗೇಣಿ
೨೬೧
ಏಳೇಳೇಳೆಲೆ ಮಾಮ | ಆರೋ
ರೇಳೋದು ಸುಳ್ಳು ಬಂತು ಕ್ಷಾಮ ಪ
ಹಾಳಾಗಿ ಹೋಯ್ತು ಮಳೆಬಳೆ
ಕಾಳೆಲ್ಲ ಕಸವಾಯಿತು ಅ.ಪ
ಭೂಮಿ ಒಕ್ಕಲಮಗನದು ಭೂಮೆಮ್ಮನ ಮಕ್ಕಳು ಒಕ್ಕಲಿಗರು
ಭೂಮಿ ಬೆಳೆದರೆ ಅರ್ಧವನ್ನು ಬ್ರಾಹ್ಮಣರಿಗೇಕೆ ಕೊಡಬೇಕು ೧
ಆರೋರು ಹೊಲ ಮಾಡಬಾರದು ಮಾಡಿದರೆ ಬಲು ಪಾಪ
ಮಾರಲಿ ನಮಗೆ ಮೂರಕ್ಕೆ ನಾಲ್ಕಕ್ಕೊ ಏನಲಾ ಯೀರ್ಕೆಂಪ ೨
ಎದ್ದುಕು ರೂಪಾಯಿಲು ಕಾವಾಲೆ ಎರವು ಇಸ್ತೆ ಚೇಸ್ತಾನು
ಒದ್ದಂಟೆ ವಾಡೆ ಪೋನಿ ವಲ್ಲ ಬಾ ಪ್ನೋಳ್ ಚೇನು ೩
ಹೊಲಕುಯಿದು ಕಟ್ಟುವಾಗ ಛಲದಿ ಹಾರುವೈಯ ಬೇಗ
ಒಕ್ಕಲಿಗನ ಕಾಯಬೇಕಂತಾನೆ ಬಲು ಭ್ರಾಂತನು ತಾನೆ೪
ಖಂಡುಗವರೇ ಕಾಳಿಗೆ ಎರಡು ಕೊಳಗ ಕೊಡÀುವೆವೇಳು
ದಂಡು ತರ್ತಾನೇನೋ ನೋಡಾಣಿ ದರ್ಪ
ನಮ್ಮಲ್ಲಿ ನಡೆಯದು ೫
ಕಂದಾಯ ಕೊಡುವಮಟ್ಟಿಗೆ ಕಾಳುಕೊಟ್ಟರೆ ಸಾಕು
ಮುಂದಲು ಬಾರಿಗೆ ಸಾವೇ ಹಾಕಿ ಮೂಗಳಕ್ಕೆ ಗುತ್ತಿಗೆಬೇಕು ೬
ನಾವು ತಿಂದು ಮಿಕ್ಕದರೊಳಗೆ ಹಾರೋರಿಗೆ ಸರಿಪಾಲು
ದೇವರಾಣÉ ಸತ್ಯವಾಗಿ ಹೇಳ್ತೀನಿ ಕಾಲ ಕಳ್ವೋದೆ ಮೇಲು ೭
ಹೆಂಡಿರು ಹಿಟ್ಟು ಹೊರಲಿಲ್ಲ ಈ ಪುಂಡುತನ ನಮ್ಮಲಿ ಸಲ್ಲಾ
ಭಂಡಿಸೌದೆ ಬೇಕೆಂದು ಬರುತಾನೆ ಭಲೆ ಭಲೆ ಹಾರೋನೆ ೮
ಹನ್ನೆರಡು ವರುಷ ಆದಮೇಲೆ ಉಳುಮೆ ಹಕ್ಕುದಾರಿ
ನಮ್ಮದುಕೇಳಲೆ
ಇನ್ನು ಉಳುಮೆಯಿಲ್ಲ ಹಾರುವೈಯಂಗೆ ರಾಜಿನಾಮೆ
ಕೊಡಲಿ ಬಿಡಲೆ ೯
ಎಷ್ಟು ಧರ್ಮದೊಳಿದ್ದುರು ರೈತರು ಕಷ್ಟಪಡುವರು ನಾವೆ
ಬಿಟ್ಟಿ ಹಾರುವಯ್ಯ ಬಲ್ಲೆನೆ ಗಾಗಲಿ ಸೇವೆ ೧೦