Categories
ರಚನೆಗಳು

ಗುರು ರಾಮವಿಠಲ

೫೩
ಮರೆತಿರಲಾರೆ ಪ್ರಿಯನ ಮಾರನಯ್ಯನ ಪ
ಇರುಳು ಹಗಲು ಅನುಸರಿಸಿ ತಿರುಗುತಲಿ
ಸುರತ ವಾರ್ತೆಗಳನಾಡಿಸುತ ನಲಿಸುತಿಹನ ಅ.ಪ
ಎನಗೆ ಬೇಕಾದುದ ತನಗೆ ತಾ ಕೊಡುತಲಿ
ಮನಕೆ ಹರುಷವ ಕೊಡುವನ ತ್ರಿಲೋಕ ಸುಂದರನ ೧
ಎನ್ನ ನೋಡುತಲಿ ಹಿಗ್ಗುತಲಿರುವನ
ಕಣ್ಣಲಿ ಕಾಣದ ಘಳಿಗೆ ಯುಗವಾಗಿರುವುದೆಲೆ ೨
ಕಾಮವಿಚಾರದಿ ಕಥೆಗಳ ಪೇಳುತ
ಪ್ರೇಮದಿ ಬಿಗಿದಪ್ಪುತ ಮುದ್ದಿಸಿ ಲಾಲಿಪನ ೩
ಮೊದಲಿಂದವಗೆನಗೊದಗಿದ ಸ್ನೇಹವೆ
ಚದುರನ ಸರಸವು ವಿಧ ವಿಧ ಲೀಲೆಗಳ ೪
ಜನುಮ ಜನುಮಕು ಇವನೆ ಪ್ರಿಯನಾಗಿರ-
ಲೆನುತ ಬೇಡುವೆನೆ ವನಜಾಕ್ಷಿ ಅನುದಿನ ೫
ಅವನಿಲ್ಲದ ಸೌಖ್ಯವು ನರಕಕ್ಕೆ ಸಮ
ಸವಿಯಾಗದು ಅಮೃತವು ವಿಷವಾಗುವುದೆಲೆ ಮನಕೆ ೬
ತರುಣೀಮಣಿ ಕೇಳು ನ
ಬೆರೆವ ಸುಖಕೆ ಇನ್ನು ಸರಿಯಾವುದೆ ಜಗದೊಳು ೭

೧೮೯
ಮರೆತೆ ಯಾಕೊ ಎನ್ನರಂಗ
ಮಾರಕೋಟಿ ಸುಂದರಾಂಗ ಪ
ನಿರತ ನಿನ್ನ ಚರಣ ಕಮಲಕ್ಕೆರಗಲಿಲ್ಲವೆ
ಸರುವಾಂತರಯಾಮಿಯೆಂದು ಶೃತಿಯು ನಿನ್ನ ಪೊಗಳವೆಅ.ಪ
ಎಲ್ಲಲೋಕ ತುಂಬಿರುವನು ಎನ್ನೊಳಿಲ್ಲವೆ
ಬಲ್ಲಿದನೀ ಒಳಗೆ ಇದ್ದು ಬರಿದೆ ಬನ್ನಬಡಿಸುವರೆ ೧
ಸಿರಿಯ ಮದದಿ ಸೊಕ್ಕಿ ದೀನರ ಪೊರೆಯದಿದ್ದರೆ
ಶರಣಾಗತ ಪ್ರಾಣನೆಂಬ ಬಿರುದು ಪೋಗದೆ ನಿನಗೆ ೨
ತಪ್ಪುನನ್ನದು ಒಪ್ಪುನಿನ್ನದು ಸರ್ಪಶಯನನೆ ನ-
ಮ್ಮಪ್ಪಕಾಯೊ ಶ್ರೀ ಗುರುರಾಮ ವಿಠಲರಾಯ ಸ್ವಾಮಿ ೩

೧೧೫
ಮಹಾಲಕ್ಷ್ಮಿದೇವಿ ಪ
ಆಹಾ ನಿನ್ನ ಮಹಿಮೆ ಹೊಗಳಲಳವೆ ಅ.ಪ
ಮೂಲ ಪ್ರಕೃತಿ ಮಹಾಮಾಯೆ ನಿನ್ನ
ಲೀಲೆಯಲ್ಲವೆ ಸಮಸ್ತವೂ
ಸಾಲದೆಂಬುವ ದುಸ್ವಭಾವ ಬಿಡಿಸಮ್ಮ ೧
ಕ್ಷೀರಸಾಗರಾತ್ಮಜೇ ಭಜೇ ಅಂ
ಭೋರುಹಾಕ್ಷನರ್ಧಾಂಗಿ
ಸಾರಸ ವೈರಿಯ ತಂಗಿ ಶುಭಾಂಗಿ ೨
ಚಿತ್ತ ಸ್ಥೈರ್ಯಾನ್ನವ ಭಕ್ತಜನಕೆ
ತುತ್ತುಮಾಡಿವುಣಿಸಮ್ಮ
ಮತ್ತಾರನು ಕಾಣೆಮ್ಮ ನಮ್ಮಮ್ಮ ೩
ತಾನೆ ಶ್ರೇಷ್ಟನೆಂಬ ಹೀನರ ಸಂಗವು
ಹಾನಿಯಾಗಿದೆ ವಿಚಾರಿಸೆ
ಜ್ಞಾನಿಗಳಿಗೆಯಿದು ಹಾಸ್ಯವಲ್ಲದೆ ೪
ನಿನ್ನ ಪತಿಯಾದ ಗುರುರಾಮ ವಿಠಲನ
ಘನ್ನ ಚಿತ್ತಗನುಸಾರ ಮನ್ನಿಸಿ ಕಾಯಿ ನೀ
ನೆನ್ನನು ನಿಜದೆ ಮಹಾಲಕ್ಷ್ಮಿದೇವಿ ೫

೧೬೦
ಮಾತಾನ್ನಪೂರ್ಣೆ ಮಾಮಮಾಪರ್ಣೆ ಪ
ಪಾತಕವನು ಕಳೆದು ಪಾದಸೇವೆಯ ನೀಯೆ ಅ.ಪ
ಏನು ಅರಿಯದ ಮೂಢನು ನಾನು
ಜ್ಞಾನವೃಷ್ಟಿ ಪ್ರದಾಯಕಳು ನೀನು
ಮಾನಸವನು ನಿರ್ಮಲ ಮಾಡಿ ಕೈಪಿಡಿಯೇ ೧
ಅನ್ನವ ನೀಡೇ ದರ್ಶನ ಮಾತ್ರ
ಧನ್ಯನ ಮಾಡೇ ಕರುಣದಿ ನೋಡೇ
ಅನ್ಯರಿಗೀಪರಿ ಬನ್ನಪಡಲಾರೆನು ೨
ತಾಯಿಯು ನೀನು ನಮಗೆ ತಂದೆ
ರಾಯ ಶಂಕರನು ಭವಜಲಧಿಯೊ
ಳಾಯಾಸಪಡುತಲಿ ನೋಯುತಲಿರುವೆನು ೩
ಕಾಶಿನಿವಾಸೆ ಭಕ್ತ ಜನರ
ಕ್ಲೇಶವಿನಾಶೆ ವಿಶ್ವವಿಲಾಸೆ
ಭೂಸುರವಿನುತೆ ದೇವಾಸುರ ಪೂಜಿತೆ ೪
ಪ್ರೇಮದಿ ಭಿಕ್ಷ ನಿನ್ನಿಂದ ಪಡೆದು
ತಾಮರಸಾಕ್ಷ ಬಲಿಯ ಗೆದ್ದವಾಮನ ಶ್ರೀ ಗುರುರಾಮ ವಿಠಲ ಸ್ವಾಮಿ ೫

೨೪೨
ಮಾತು ಆಡುವೆ ಯಾತಕೆ ಮನವೆ ನೀ
ಸೋತು ಸುಮ್ಮನಿರು ಜೋಕೆ ಪ
ಮಾತು ಆಡುವೆ ಯಾಕೆ ಮಮತಾ ಅಹಂಕಾರದಿ
ಶ್ರೀತರುಣಿವರನ ಸಿರಿನಾಮವಿಲ್ಲದೆ ಅ.ಪ
ಕಾಯ ಅಸ್ಥಿರವೆನ್ನದೆ | ಇಹ ಪರಕೆ ಸ-
ಹಾಯವಾಗುವದೇ ಮುಂದೆ
ನ್ಯಾಯ ತಿಳಿಯದೆ ಅನ್ಯಾಯದಿ ಕೂಗುತ
ಮಾಯವಾದಗಳಾಡೆ ಬಾಯಿ ನೋವಲ್ಲದೆ ೧
ವೇದ ಪುರಾಣವಿಲ್ಲ | ಶಾಸ್ತ್ರವೆ ಬ್ರಹ್ಮ-
ವಾದವೇ ಮೊದಲೇಯಿಲ್ಲಾ
ಸಾಧನೆಯೆಂಬುವದು ಲೇಶಯಿದರೊಳಿಲ್ಲಾ
ಹಾದಿಹೋಕರ ಕೂಡಿ ಪ್ರೌಢನು ನಾನೆಂದು ೨
ಗುರುಹಿರಿಯರ ನಿಂದಿಸಿ | ಬಾಯಿಗೆ ಬಂದ
ಹರಟೆ ಹರಟೆ ಮೋದಿಸಿ
ಪರಗತಿ ಚಿಂತೆ ಬಿಂದು ಮಾತ್ರವು ಕಾಣೆ
ಹರಿವ ನೀರೊಳು ಬೂದಿಹಾಕುವಂದದಿ ವ್ಯರ್ಥ ೩
ಒಂದಕ್ಕೊಂದ್ಹೆಚ್ಚಿಸುತ | ಶುಷ್ಕವಾದ-
ದಿಂದ ಕಾಲವ ಕಳೆಯುತ
ಹಿಂದು ಮುಂದರಿಯದೆ ಹಿತಾಹಿತ ಕಾಣದೆ
ನಿಂದಿಸಿ ಪರರ ಸ್ವಯೋಗ್ಯತೆ ತಿಳಿಯದೆ ೪
ಬಲ್ಲೆನಾ ಬಿಡು ಎಂಬುವೆ | ಸದಾ ಒಬ್ಬ-
ರಲ್ಲಿ ದೋಷವ ಎಣಿಸುವೆ
ಪುಲ್ಲಲೋಚನ ನ ಕಾಣ-
ಲಿಲ್ಲ ಶೋಧಿಸಿ ತಿಳಿಯಲಿಲ್ಲ ಬರಿದೆ ಬಾಯಿ ೫

೨೪೩
ಮಾನವನೆ ನೀ ಮರುಗದಿರೈ ಪ
ದೀನನಾಗಿ ಸದಾ ಹೀನರ ಬೇಡುತ
ನಾನು ನನ್ನದೆಂಬಭಿಮಾನದಲಿ ಅ.ಪ
ಹೊಟ್ಟೆಗೋಸುಗ ಪರರಿಷ್ಟಾನು ಸಾರದಿ
ಕೆಟ್ಟ ನುಡಿಗಳನು ನುಡಿಯುತಲಿ ೧
ಸಾವುತಪ್ಪದೆ ಮುಂದೆ ಭಾವಿಸಿ ನೋಡದೆ
ಜೀವನಕ್ಕಿಲ್ಲದೆ ನಿರ್ಜೀವಿ ನಾನೆಂದು ೨
ದುಷ್ಟರ ಓಲಗ ಕೆಟ್ಟ ಭೂಮಿಯ ಬೆಳೆ
ನಷ್ಟವಾಗೋದಲ್ಲದೆ ಲಾಭವುಂಟೇನೋ೩
ಹರಿಕೊಟ್ಟಭಾಗವು ಪರಿಪೂರ್ಣವಾಗಿರೆ
ದುರುಳರ ಬೇಡುವರೆ ಕರೆಕರೆ ಯಾಕೆ ೪
ಹಿರಿಯರು ಪೇಳಿದ ಪರಮಬೋಧೆಯಿಂದಾ
ಗುರುರಾಮವಿಠ್ಠಲನ ಚರಣವ ನಂಬಿದೆ ೫

೧೬೧
ಮಾಮಮ ಶ್ರೀಗೌರಿ ಮಾರಜನಕ ಸೋದರಿ ಅಂಬ ಪ
ಸಾಮಜಗಮನೆ ಬುಧಜನ ಸನ್ನುತ ಪದಯುಗಳೆ ಅಂಬ ಅ.ಪ
ಪರ್ವತ ರಾಜಕುಮಾರಿ ಪಾತಕ ವಿಪಿನ ಕುಠಾರಿ
ಶರ್ವಾಣಿ ಶಂಕರಿ ವಿಶಾಲಾಕ್ಷಿ ತ್ರಿಪುರ ಸುಂದರಿ ೧
ದಾಕ್ಷಾಯಣಿ ದಯಯಾಮಾಂ ವೀಕ್ಷಸ್ವಾದ್ಯ ಭವಾನಿ
ರಾಕ್ಷಸಕುಲ ಸಂಹಾರಿ ರಾಜರಾಜೇಶ್ವರಿ | ಅಂಬ ೨
ಸಾಮಜರಿಪುಯಾನೆ ಸಕಲಗುಣನಿದಾನೆಕಾಮಾರಿವಲ್ಲಭೆ  ಸಹಜೆ | ಅಂಬ ೩

(ನುಡಿ-೩) ರೋಮ ರೋಮಕೆ
೧೩೬
ಮಾರುತೀ ಗುರುಮಾರುತಿ ನಿನ್ನ
ಕೀರತಿ ಭಕ್ತ ಸಾರಥಿ | ಜಯ ಪ
ಧೀರ ಶರಧಿ ಗಂಭೀರ ನತಜನೋ-
ದ್ಧಾರ ಪವಿನಿಭ ಶರೀರ ಮಹಾವೀರ ಅ.ಪ
ಸಂಜೀವರಾಯ ಆಂಜನೇಯ ಭವ
ಭಂಜಕ ನೀನೆ ಪ್ರಭಂಜನ ತನಯ ೧
ಸೀತಾದೇವಿಯ ಪ್ರೀತಿ ಪೊಂದಿಸಿದೆ
ದಾತ ಶ್ರೀರಾಮನ ದೂತಾಗ್ರಣಿಯೆ ೨
ರೋಮರೋಮಕೆ ಕೋಟಿಲಿಂಗವುದರಿಸಿ ಗುರು-
ರಾಮ ವಿಠಲನ ನಿಷ್ಕಾಮದಿ ಭಜಿಸುವ ೩

೩೨೩
ಮಾಲೆ ಹಾಕುವೆ ಲೋಲ ಪುರುಷಗೆ ಪ
ಮಲ್ಲ ಮಲ್ಲಿಗೆ ಜಾಜಿ ಸಂಪಗೆಯ ಅ.ಪ
ವ್ಯಾಸಕೋಟ್ ಬನಿಯನ್ ಷರಟು ಜುಬ್ಬಾ
ವೀಷರಾಯಿ ಬೂಡ್ಸನು ಧರಿಸುವಗೆ ೧
ಇಂಗ್ಲೀಷು ಬುಕ್ಕನು ಕೈಲಿ ಹಿಡಿದು
ಬಂಗ್ಲೆಯಲಿ ಓದುತ ಕುಳಿತಿರುವಗೆ ೨
ಬೈಸ್ಕಲ್ ಮೇಲೆ ಸವಾರಿ ಮಾಡುತ್ತ
ಸೈ ಶಹಭಾಸೆನ್ನಿಸಿಕೊಳ್ಳುವವಗೆ ೩
ಸಂಧ್ಯಾವಂದನೆಗೆ ವಿರಾಮವಿಲ್ಲದೆ
ಮಂದಿಯೊಡನೆ ಮಾತಾಡುತ ನಗುವಗೆ ೪
ದ್ವಾಸೆ ಬ್ರೆಡ್ಡುಪ್ಪಿಟ್ಟನು ಭಕ್ಷಿಸಿ
ತಾಸುರ್‍ಸುರಯೆಂದು ಕಾಫಿಯಕುಡಿವಗೆ ೫
ದೊಡ್ಡ ದೊಡ್ಡ ಪ್ಯಾಸುಗಳನು ಮಾಡಿ
ಗುಡ್‍ಮ್ಯಾನ್ ದಿಸ್‍ಮ್ಯಾನ್‍ಯೆನ್ನಿಸಿಕೊಳ್ಳುವಗೆ ೬
ನು ತೋರಿದನಿವರನು
ಹಿರಿಯರ ಪುಣ್ಯವು ಎಷ್ಟೆಂದು ಹೇಳಲಿ ೭

೧೬೨
ಮೀನಾಕ್ಷಿದೇವಿ ಮಾಮಮ ಮಧುರ ಪ
ಸದಾ ನಿನ್ನ ಆನತರಿಗೆ ಡಿಂಗರಿಗನು ನಾನಮ್ಮ ಅ.ಪ
ಬಹು ಜನ್ಮದಿಂದ ಮಾಡಿದ ಪುಣ್ಯ
ವಿಹಿತ ಫಲದಿಂದ ತವಪದ ಪಂಕೇ
ರುಹವ ಕಂಡೆನು ಇಂದಿಗಹಹ ಧನ್ಯನು ನಾನು ೧
ಮಲಯರಾಜಸುತೇ ಮಾಂಪಾಹಿಮಾತೆ
ಕಲುಷವಿರಹಿತೆ ಕರಪಿಡಿದೀ
ಜಲಜಾಕ್ಷನಡಿದಾವರೆಗಳ ತೋರಮ್ಮ ೨
ಆಶಾಪಿಶಾಚಬಿಡಿಸಿ ತವ
ದಾಸರ ದಾಸ್ಯವನು ಕರುಣಿಸಿ
ಲೇಸುಪಾಲಿಸೆ ಸುಂದರೇಶನರ್ಧಾಂಗಿಯೆ ೩
ಹಿರಿಯರಿಗೆಲ್ಲಾ ವರಗಳ ಕೊಟ್ಟು
ಪೊರೆದುದನೆಲ್ಲ ಕೇಳಿ ನಿನ್ನ
ಚರಣವ ನಂಬಿದೆ ಸ್ಥಿರ ಮನವನು ಕೊಡೆ ೪
ಪಾಮರನು ನಾನು ಜ್ಞಾನ ಶೂನ್ಯನು
ತಾಮಸನರನು ಬಾಲಕನೆಂದು
ಪ್ರೇಮದಿ ನೋಡೆ ಗುರುರಾಮ ವಿಠಲನ ತಂಗಿ೫

೨೪೪
ಮೂಢನಾಗಿ ಕೆಡಬೇಡವೊ ಪ
ರೂಢಿ ಜನಂಗಳನ್ನು ನಂಬಿ ಅ.ಪ
ಆಡಬಾರದ ಮಾತುಗ-
ಳಾಡಿ ಎನಗೀಡಿಲ್ಲೆಂದು
ಖೋಡಿ ಎನಿಸಿಕೊಂಡು ಕೊಂ-
ದಾಡಿನರರನು ೧
ತತ್ವದರ್ಶಿಯಾದವರ
ಹತ್ತರಿದ್ದು ಗ್ರಹಿಸದೆ
ಸತ್ತು ಹುಟ್ಟುತೀರುವ ಸಂ-
ಸಾರದಿ ಮುಳುಗಿ ೨
ತಾರತಮ್ಯ ಜ್ಞಾನದಿಂದ

ಅರಿಯದ ಹುಲು ಪಾ-
ಮರರೊಳು ಸೇರಿ ೩

೧೫೧
ಮೃತ್ಯುಂಜಯ ಶಂಭೋಶಂಕರ ಪುರಹರ ಶಿವ ಪ
ಕೃತ್ತಿವಾಸ ದೇವೋತ್ತಮ ಭವಹರ ಅ.ಪ
ರಜತಗಿರಿನಿಲಯ ಭಜಕ ಜನಪ್ರಿಯ
ಭುಜಗಭೂಷಣ ಪಂಕಜಭವತನಯ ೧
ನಂದಿವಾಹನ ಪುರಂದರಾದಿ ಸುರ
ಬೃಂದವಂದ್ಯ ಹೃನ್ಮಂದಿರನಿಲಯ ೨
ಪರನೆಂಬರ್ಥವ ಅರಿಯುವಂತೆ ಮನದಿರವನು ಪಾಲಿಸು ೩

೨೪೫
ಮೊದಲಿಂದ ನೀ ಕೆಟ್ಟೆ ಮನುಜ ಪ
ಬುಧರಾಡುತಿಹ ನುಡಿಯನು ಕೇಳದೆ ಅ.ಪ
ಹಗಲಿರುಳು ದುರ್ವಿಷಯದಲಿ ಬಿದ್ದು
ಹಗರಣಕೆ ಗುರಿಯಾಗುತ
ಮಿಗೆ ದುರಿತಗಳ ಗಳಿಸಿ ಮುಂದೆ ಯ-
ಮಗೆ ನಿರುತ್ತರನಾದೆಯಲೊ ೧
ಹೆಣ್ಣು ಹೊನ್ನು ಮಣ್ಣುಗಳ ಬಯ
ಸಿನ್ನು ದುರ್ಜನ ಸೇವೆಯಿಂ
ಜನ್ಮವ ನಿರರ್ಥಕವ ಗೈಯುತಾ
ರಣ್ಯದೊಳಿಹ ಪಿಶಾಚದೋಲ್ ೨
ನಿರತವು ಸಜ್ಜನರಡಿಯ ಕಿಂ-
ಕರನೆನಿಸಿ ನೀ ಬಾಳೆಲೊ
ಕರುಣದಲಿ ಗುರುರಾಮ ವಿಠ್ಠಲ
ಕಾಯುವನು ಸಂದೇಹ ಬಿಡು ೩

೯೮
ಯಜ್ಞೋಪವೀತವೀವೆನೊ ನಿನಗೆ ಸ್ವಾಮಿ ಪ
ಯಜ್ಞಪುರಷ ಮುನಿ ಯಜ್ಞಪಾಲಕನಿಗೆ ಅ.ಪ
ಅಜ್ಞ್ಯಮನೋರಥನು ನಾನು | ಕಿಂ
ಚಿಜ್ಞನೆಂದಿಗು ನಿನ್ನ ಪೊಂದಿದೆನು
ಸುಜ್ಞಾನವೆಂಬುದು ಸ್ವಪ್ನದೊಳರಿಯೆ | ಸ
ರ್ವಜ್ಞ ನಿನ್ನವನೆಂದು ವಿಜ್ಞಾನ ಪಾಲಿಸು ೧
ಸಾಧು ಜನಪ್ರಿಯ ಸರೋಜಾಕ್ಷ ಪೂರ್ಣ
ಬೊಧಾಮೃತ ಮಯದಿವಿಜ ಪಕ್ಷಾ
ಕಾದುಕೊಂಡಿರುವೆ ಅನಾದಿಯಿಂದಲಿ ನಮ್ಮ ನಿ-
ರಾದರಣೆ ಮಾಡದೆ ನೀ ದಯದಿಂದ ಸಲಹೊ ೨
ಮುಕುತಿದಾಯಕ ದೇವಾಧಿದೇವಾ ನಿಜ
ಭಕುತ ಜನರಿಗೆ ನೀನೇ ಸಂಜೀವಾ | ಆ
ಯುಕುತ ಮಾತುಗಳಿದಲ್ಲ ವೇದಾಂತ ರಹಸ್ಯ
ಸಕಲಾಧಾರನೆ ಶ್ರೀ  ೩

೫೪
ಯಾಕೆ ಸಂಶಯ ಅವಿವೇಕ ಶಿಖಾಮಣಿ | ದುರ್ಗುಣಿ ಪ
ಶ್ರೀ ಕಳತ್ರನೆ ಜಗದೇಕ ನಾಯಕನೆಂದರಿಯದೆ ಅ.ಪ
ಅನ್ಯರಾದವರಿಗೆ ಭಿನ್ನವ ಗೈದರೆ
ನಿನ್ನಯ ಬನ್ನ ಬಿಡಿಸುವರೇನೊ
ಕುನ್ನಿ ಮಾನವ ಕಡು ಮೂರ್ಖನೆ ೧
ನಾನಾ ಪ್ರಯತ್ನಗಳ
ನೀನು ಮಾಡುತ ಫಲವನು
ಕಾಣುವುದಿಲ್ಲವೇಕೊ
ಪ್ರಾಣಿಮಾತ್ರನು ನೀ ನಿಜವಿದು ೨
ಇರುವೆ ಮೊದಲು ಬ್ರಹ್ಮನ
ವರಿಗೆ ಬಿಡದೆ ಸರ್ವರೊಳಗೆ ನಿಂತಿಹ
ಗುರುರಾಮ ವಿಠಲನೆಂದರಿಯದೆ ೩

೧೯೦
ಯಾರಲ್ಲಿ ಪೋದರು ನೀರಾದರೂ ಕೊಡರು ಪ
ದೂರ ಹೋಗೆಂಬರು ಬದಿಸೇರಲೀಸರು ಅ.ಪ
ಹಸಿವು ತೃಷೆಗಳಿಂದಲಿ ವ್ಯಸನವಪಡುತಲಿ
ಉಸುರುಸುರೆನುತಲಿ ಬಸವಳಿದು ಭಯದಲಿ ೧
ರೋಗದಲಿ ಬಳಲುತ ಹ್ಯಾಗಿನ್ನು ಎನ್ನುತ
ಕೂಗುತ್ತ ಬಾಯ್ಬಿಡುತ ಎಲ್ಲರನು ಬೇಡುತ ೨
ನ ನೆರೆ ನಂಬದಿರುವನ
ಪರಿಪರಿಯಲಿ ಜನ ಬಯ್ಯುವರನುದಿನ ೩

೧೧೬
ಯಾರು ಇಲ್ಲ ಎನಗೆ ನಿನ್ನ ಹೊರತು
ವಾರಿಜಾಲಯೆ ತಾಯೆ ಪ
ಘೋರತರ ಸಂಸಾರ ಮಡುವಿನ
ಪಾರತೋರೆ ಈಸಲಾರೆ ಅ.ಪ
ಈ ದೇಹದ ತಂದೆ ತಾಯ್ಗಳು ಪೋದರು ಮೊದಲೆ
ಆದರಿಸುವರಿನ್ಯಾರು ಕಾದುಕೋ ಕೈಬಿಡದಿರು ಕರುಣದಿ ೧
ಪಾರಂಪರ್ಯದಿ ಜೀವರು ನಿನಗೆ ಪುತ್ರರಲ್ಲವೆ
ಬಾರಿ ಬಾರಿಗೂ ಮೊರೆಯಿಡುವೆ ಭಕ್ತಾರ್ತಿಹಾರಿಣಿ ರುಕ್ಮಿಣಿ೨
ಪಂಕಜಾಸನನ ಮಾತೆ ಪದ್ಮಸಂಭೂತೆ
ವೆಂಕಟರಮಣನ ರಾಣೀ ವಿಶ್ವಜನನೀ ವಿವಿಧ ರೂಪಿಣಿ ೩
ನಾನು ಎಂಬ ಅಭಿಮಾನದಿಂದ ಹೀನನಾದೆನು
ಆನಂದದಾಯಕೆ ನೀನು ಜಾನಕಿದೇವಿ ಕೈಬಿಡದಿರು ೪
ಅರಿತು ಅರಿಯದೆ ಮಾಡಿದ ದುರಿತವ ಕಳೆಯಮ್ಮ
ಪರದೇಶಿ ಅನಾಥ ನಾನು ಗುರುರಾಮ ವಿಠಲನರ್ಧಾಂಗಿಯೆ೫

೨೭೧
ಯಾವಾಗ ಮಾಡುವದು ಅಡಿಗೆ
ಜೀವವು ತಲ್ಲಣಿಸುವುದು ಪ
ದೇವರ ಪೂಜೆಯಿಂದು ಮಾಡೋದಿಲ್ಲ
ನೀವೆಲೆಯ ಹಾಕಿ ಕರೆದರೆ ನಾ ಸಿದ್ಧ ಅ.ಪ
ಮನೆ ಕಲಸವು ಕೊನೆಗಾಣಲಿಲ್ಲ
ಜಣುಗಿ ಜಣುಗಿ ಕಾಲಕಳೆಯುವುದಲ್ಲ ೧
ಮುಸುರೆತೊಳೆಯದೆ ಕಸವತೆಗೆಯದೆ
ಮುಸುಕನಿಟ್ಟುಕೊಂಡು ಮಲಗಿದ್ದರಿನ್ನು ೨
ಕುಟ್ಟಿ ಬೀಸೋರಿಲ್ಲ ಅಟ್ಟುಂಬೋದೆ ಭಾರ
ಇಷ್ಟು ನುಡಿದುದಕೆ ಸಿಟ್ಟು ಬಹುಪೂರ ೩
ಹತ್ತುಗಂಟೆಯಾಯ್ತು ಹೊತ್ತು ಬಹಳ ಹೋಯ್ತು
ಬತ್ತಿ ಹಚ್ಚಿ ಒಲೆಯ ಹೊತ್ತಿಡ ಬಾರದೆ ೪
ಹಸಿವಿಗಿಲ್ಲದೂಟ ವಸತಿಯಾಗದ ಕೂಟ
ಬಿಸಜಾಕ್ಷಾಗುರುರಾಮ ವಿಠಲನಾಣೆ ಬ್ಯಾಡ ೫

೨೪೬
ಯುಕ್ತ ಕರ್ಮಮಾಡುವರಿಗೆ ಮುಕ್ತಿಯೇ ಫಲ ಪ
ಶಕ್ತರಾದ ಸಜ್ಜನರಿಗೆ ಶಾಂತಿಯೆ ಬಲ ಅ.ಪ
ಆರ್ಯರ ಪಥ ಪಿಡಿದು ಕಾರ್ಯಕಾರಣವರಿದು
ಸೂರ್ಯ ಮಂಡಲದಲಿ ಮೆರೆವ ನಾರಾಯಣನಂ ಭಜಿಸುತ್ತ ೧
ವೇದ ಶಾಸ್ತ್ರಗಳ ನೋಡಿ ಮಾಯಾವಾದಗಳೀಡ್ಯಾಡಿ
ಖೇದ ಮೋಹ ಸಮವೆಂದರಿತು ಸಾಧನಾನುಷ್ಠಾನದಿಂದ ೨
ಕಾಮ ಕ್ರೋಧ ಬಿಟ್ಟು ನಿತ್ಯ ನೇಮದಿ ಮನವಿಟ್ಟು
ತಾಮಸ ಗುಣವಿಲ್ಲದ ನ ನಂಬಿ ೩

೨೭೨
ರಚ್ಚೆ ಕಟ್ಟೆ ಪುರಾಣ ರಾದ್ಧಾಂತವು -ಇದು ಪ
ಹುಚ್ಚುತನದಲಿ ನೀ | ಚೋಚ್ಚ ನುಡಿಗಳನಾಡುವುದು ಅ.ಪ
ಇವನು ಸಾಹುಕಾರ ಮತ್ತವನು ಹಣಗಾರ
ನವನವ ಆಸ್ತಿಗಳೆಲ್ಲ | ಇವನ ಮನೆಗೆ ಸೇರಿ ಬಂತು ೧
ಪುಟ್ಟಣ್ಣನ ಹೆಂಡತಿ ಕಿಟ್ಟಣ್ಣನ ಅತ್ತಿಗೆ
ಸೊಟ್ಟಮೂತಿ ನಾಗಪ್ಪನ ಸೋದರಿಯರು ಏನು ಹೇಳಲಿ ೨
ಹತ್ತು ಖಂಡುಗ ಅವನಿಗೆ ಬಂತಿಪ್ಪತ್ತು ಖಂಡುಗ
ಇವನಿಗೆ ಬಂತು
ಮತ್ತೆ ನಾವು ಬಡವರು ನಮಗೆಲ್ಲಿಂದ ಬಹುದು? ೩
ದುರ್ಯೋಧನ ಯೋಗ್ಯ ಕುಂತೀತರಳರದೇ ಅನ್ಯಾಯ
ಕೃಷ್ಣನು ನೆರೆ ಮೋಸಗಾರನು ಭಾರತ ಕಥೆಯೆಂಬುವುದು೪
ವೇಷಹಾಕಿರುವ ಈ ದಾಸ ಬಹು ಧನಿಕನು
ಮೋಸಗಾರರೀವೂರೆಲ್ಲ ಆಶೆ ಪಾತಕರು ೫
ತಂಗಿ ಆಸ್ತಿ ಸೇರಿತಿವಗೆ ಭಂಗಿ ಕೋರ ವೆಂಕಟರಾಯ
ಮಂಗಿ ಸಂಗದಿಂದಲೀ ಕಮಂಗನಾನನು ೬
ಸಿದ್ಧ ಹೆಂಡತೀನ ಹೊಡೆದನಂತೆ ಶೀನ ಸೂಳೆಯ ಇಟ್ಟಿಹನಂತೆ
ಮಧ್ವರಾಯನ ಮಗನ ಕಥೆ ಏನು ಹೇಳೋಣ ೭
ದಾಸಕಾಶಿಗೆ ಹೋದ ಶ್ರೀನಿವಾಸ ರಾಮೇಶ್ವರಕೆ ಹೋದ
ಕಾಸಿದ್ದವರೇನು ಮಾಡಿದರೂ ಮಾಡಬಹುದು ೮
ದಾರಿಹೋಕರೆಲ್ಲ ಕೂಡಿ ಭಾರಿ ಭಾರಿ ಮಾತುಗಳಾಡಿ
ಸೂರೆಗೊಂಬುವರು ಪಾಪ ಶರಧಿಯನ್ನು ೯
ಧೀರ ನ ದಾರಿಯ ಕಾಣದೆ
ಶರಣರ ದೂರಿಪಾತಕಕ್ಕೆ ಭಾಗಿಗಳಹರು ೧೦

(ನುಡಿ-೧) ಬ್ರಹ್ಮನ ಶಿರವಿಡಿದು
೧೩೭
ರವಿಸುತನ ಪ್ರಧಾನಿಯೆ ರಾ
ಘವ ಕಾರ್ಯ ಧುರಂಧರಾಗಣಿತ ವಿಕ್ರಮಯಂ-
ಮವಗುಣಗಳನೆಣಿಸದೆ ಕಾ
ಯುವದೈ ನೀಂ ಪುಟಪರ್ತಿ ವೀರ ಹನುಮನೆ ೧
ಮಾರುತನ ಕುಮಾರ ಪವಿ ಶ
ರೀರ ಕಪಿವರಾಗ್ರಗಣ್ಯ ವರದಾಯಕ ನೀ
ನಾರಾಧಕರಿಗೆ ಕೊಡು ದಿ
ವ್ಯಾರೋಗ್ಯವ ಪುಟಪರ್ತಿ ವೀರ ಹನುಮನೆ ೨
ಆರೋಗ್ಯ ಭಾಗ್ಯಂ ಮಿಗೆ
ವೈರಾಗ್ಯವು ಭಕ್ತಿ ಜ್ಞಾನವಂ ಪಾಲಿಸುವೈ
ಮಾರುತಿ ನಿನ್ನನು ಪೋಲುವ
ರಾರಿಳೆಯೊಳು ಪುಟಪರ್ತಿ ವೀರ ಹನುಮನೆ ೩
ಧರಣಿಜೆಯರಸನ ತಮ್ಮಗೆ
ನೆರೆ ಪ್ರಾಣಗಳಿತ್ತೆ ಧೀರನೊಲಿಯುವಲೀ
ತರಳನ ಜ್ವರಾದಿಗಳ ಪರಿ
ಹರಿಸುತ ಪೊರೆ ಪುಟಪರ್ತಿ ವೀರ ಹನುಮನೆ ೪
ರಾವಣನ ಗುದ್ದಿದಾತನೆ
ದೇವನಿಕರಕೆಲ್ಲ ಕಲ್ಪವೃಕ್ಷನು ನೀನೆ
ಪಾವನ ಪರಮ ಪವಿತ್ರ ಕೃ
ಪಾವನಧಿಯೇ ಪುಟಪರ್ತಿ ವೀರ ಹನುಮನೆ ೫
ಮರುತಜನ ಪಂಚರತ್ನದ
ನರಿತನುದಿನ ಪಠಿಸುವರಿಗೆಯಾರೋಗ್ಯಸುವು
ಸ್ಥಿರ ವೈರಾಗ್ಯಾಯುಗಳನು ಶ್ರೀ
ಗುರುರಾಮ ವಿಠಲನು ಬಿಡದೆ ಕರುಣಿಸುತ್ತಿರುವಂ ೬

೧೭೨
ರಾಘವೇಂದ್ರ ಗುರುವರ್ಯ ಮಮಾಘನಾಶನಾ ಪ
ಬಾಗಿ ನಮಿಪೆ ನಿಮ್ಮ ಪಾದ ಪದ್ಮಕ್ಕನುದಿನ ಅ.ಪ
ಕನಕ ಕಶ್ಯಪನಾತ್ಮಜನೆಂದೆನಿಸಿ ಮೋದದಿ
ವನಜನಯನ ಸ್ಥಂಭದಿ ಬರುವಂದದಿ ಗೈದಿ ೧
ವ್ಯಾಸಮುನಿರಾಯ ಪುರಂದರದಾಸರ ಗುರುವೆ
ದೋಷರಹಿತ ಹರಿಭಕ್ತರಿಗೆ ಸುರತರುವೆ ೨
ಗುರುರಾಮ ವಿಠಲನ ಪ್ರಿಯಕಿಂಕರವರೇಣ್ಯನೆವರಮಂತ್ರಾಲಯನಿಲಯ ನೀಂ ಕರುಣಿಸೆನ್ನನೆ ೩

(ನುಡಿ-೧) ಊಂಛವೃತ್ತಿಯೇ ರಾಜ್ಯಕೋಶ
೩೦೧
ರಾಜರಯ್ಯ ನಾವು ನಮ್ಮ
ರಾಜೀವಾಕ್ಷನ ಕರುಣವ ಪಡೆದರೆ ಪ
ಊಂಛವೃತ್ತಿಯೇ ರಾಜ್ಯಕೋಶ | ನಿಷ್ಟ್ರ-
ಪಂಚ ನಡತೆಯೇ ನಮಗೆ ಕಛೇರಿ
ಪಂಚೇಂದ್ರಿಯ ಜಯಿಸುವುದು ಮ್ಯಾಜಿಸ್ಟ್ರೇಟ್
ಪಂಚವಿಷಯ ಹಂಚಿಕೆಯೇ ಸಿವಿಲ್‍ಬಾಬು ೧
ದೇವಾದಾಯದ ಧನವೇ ರೆವಿನ್ಯೂ
ಭಾವಶುದ್ಧಿಯೆ ಸಿಂಹಾಸನವು
ಕಾವನು ಕೊಲ್ವನು ಹರಿಯೆಂಬವುದು
ಪಾವನ ಜಡ್ಜ್‍ಮೆಂಟ್ ಕಾಪಿರಿಜಿಸ್ಟರು ೨
ಬ್ರಹ್ಮನೆ ವೈಸ್ರಾಯ್ ರುದ್ರನೆ ಗೌರ್ನರ್
ದೇವೇಂದ್ರಾದಿಗಳೇ ಕಲೆಕ್ಟರ್
ನಿರ್ಮಲ ಸುರರು ತಾಲ್ಲೂಕಾಫೀಸರು
ಧರ್ಮನಿಷ್ಠರೆಲ್ಲ ನೌಕರ ಜನಗಳು ೩
ದಾನಧರ್ಮವೇ ಡಬ್ಲಿಯು ಎಸ್ಸು
ಜ್ಞಾನ ಸಾಧನವೇ ವಸೂಲಿ ಲೆಖ್ಖ
ನಾನು ಕರ್ತನೆನದಿರುವುದೇ ಕಾನೂನು
ಮಾನವ ವೃತ್ತಿಗಳೆಲ್ಲ ರಿಕಾರ್ಡ್ ೪
ಸಪ್ತಾವರ್ಣವೇ ಸಪ್ತಾಂಗದ ಸಭೆ
ಆಪ್ತಮಂತ್ರಿಗಳೇ ಸುಗುಣಗಳು
ಸಪ್ತಧರ್ಮವೇ ಕಾರ್ಯಗೌರವವು
ಗುರೂಪದೇಶವೇ ಜ್ಞಾನಾರ್ಜನೆಯು ೫
ಅನುಸಂಧಾನವೆ ನಿತ್ಯಸಂಪಾದನೆ
ಘನನವವಿಧ ಭಕ್ತಿಯೆ ಭೋಗ
ವನಜನಯನ ಗುರುರಾಮವಿಠ್ಠಲನೆ
ಸೈನು ಮೊಹರು ಮಹಾ ಚಕ್ರವರ್ತಿಯು ೬

೫೭
ರಾಮ ಜಾನಕಿ ಮನೋಹರ ಮಾರ ಕೋಟಿ ಸುಂದರ ಪ
ಸೋಮಶೇಖರಾದಿ ಸುರ ಸ್ತೋಮನುತ ನಾಮ ಅ.ಪ
ವಾಯುಸುತ ಮುಖ್ಯ ಕಪಿನಾಯಕ ವಿನುತಾಮೋಘ
ಸಾಯಕ ಶ್ರೀದಾಯಕ ನಿರ್ಮಾಯ ರಘುರಾಯ ೧
ಅಪ್ರಾಕೃತ ಶರೀರ ಗೋ ವಿಪ್ರಜನ ಪಾಲ ನಿನ್ನ
ಸುಪ್ರಭಾವ ಪೊಗಳಲು ಸರ್ಪಾಧಿಪಗಳವೇ ೨
ದೇವ ಗುರುರಾಮ ವಿಠಲಾ ವನಜನೇತ್ರ ನೂತ-
ನಾವರಣ ಪುರಿವಾಸ ಕಾವುದೆಮ್ಮನು ಸರ್ವೇಶಾ ೩

೫೫
ರಾಮಚಂದ್ರ ಸೀತಾ ಮನೋಹರನೆ ಸ್ವಾಮಿಯೆನ್ನ
ಕಾಯೊನೀನೆ ಕರುಣದಿ ಪ
ಆ ಮಹೇಶ್ವರನು ನಿನ್ನ ದಿವ್ಯಸಿರಿ ನಾಮ ಮಹಿಮೆ
ತನ್ನ ಸತಿಗೆ ಪೇಳ್ದನು
ರಾಮರಾಮಯೆಂದು ಪೊಗಳುವನು ಮಹಾರಾಜ ಸಾರ್ವಭೌಮ
ಪೂರ್ಣ ಕಾಮನೆ
ಸಾಮಜರಾಜವರದ ಕೃಪಾಕರ ಸರ್ವಲೋಕವಂದಿತ ಪರಾತ್ಪರ
ಕಾಮಕೋಟಿಲಾವಣ್ಯ ರವಿಕುಲಸೋಮ
ದಶರಥಾವನೀಶ ಕುಮಾರ ೧
ದೇವದೇವನೆ ಕೃಪಾವಲೋಕನದಿ ದೀನಜನರ ನೋಡೊ
ನೀದಯಮಾಡೊ
ದೇವಿ ಸಹಿತ ಎನ್ನ ಹೃದಯದಲಿ ನಿನ್ನ ದಿವ್ಯದರ್ಶನವ
ನೀಡೋಯನ್ನದುರಿ-
ತಾವಳಿಗಳ ಪರಿಹರಿಸುವದು ಪತಿತ ಪಾವನಾ ಪ್ರಮೇಯ
ಜಯಜಯ ಪ್ರಭೋ
ರಾವಣಾದಿದನುಜ ಭಂಜನ ಜಗ ಜ್ಜೀವನ ನತಜನ ಸಂಜೀವನಸು-
ಗ್ರೀವ ಮಿತ್ರ ಶುಭ ಚರಿತ್ರ ಋಷಿಗಣ ಭಾವಿತ
ಕುಶೀಲವರತಾತ ಸುಪ್ರೀತ೨
ಸರಿಸಿಜೋದ್ಭವಾದ್ಯಮರನಾಯಕ ಸಾಧುರಕ್ಷಸ್ಸದ್ಧರ್ಮ ಪಾಲಕ
ತರುಚರಾಧಿನಾಥದಾತ ಪುರುಷೋತ್ತಮ ಸಮೀರಜಾಂತ
ರಂಗ ಮಂದಿರ
ತರಣಿ ಚಂದ್ರ ನಯನ ನೃಪವರೇಣ್ಯ ದಾಸ ಪೋಷ ಮಾಯ
ಮನುಜವೇಷ
ಪರಮಾತ್ಮ ನಾರದ ಗಾನಲೋಲ
ದುರ್ಜನ ಕಾಲ
ಖರಸೂದನ ಶರಧಿ ಸೇತು ಬಂಧನ ಕಂಜೇಕ್ಷಣ
ಮಾಂ ಪಾಹಿ ರಘುವೀರ ೩

೧೩೮
ರಾಮದೂತ ರಮ್ಯಚರಿತ ಸ್ವಾಮಿಹನುಮನೆ ಪ
ಕಾಮಿತಫಲದಾತ ನಮ್ಮ ಕಾವನು ನೀನೆ ಅ.ಪ
ಆಶಸಮುದ್ರವನ್ನು ದಾಟಿ ಮೋಸಗಾರರಂ
ನಾಶಗೊಳಿಸಿ ದಾಶರಥಿಯ ತೋಷ ಪಡದೆ ನೀಂ ೧
ಕುರುಭೂಪಾಲನ ತೊಡೆಗಳೊಡೆದು ಹರಿಯ ಮೆಚ್ಚಿಸಿದೆ
ತರುಣಿ ದ್ರೌಪದಿ ದೇವಿಯ ತಾತ್ಪರಿಯ ನಡೆಸಿದೆ ೨
ಕಲಿಯುಗದಲಿ ಹುಲುದನುಜರಗೆಲಿದೆ ಗುರುವರ ಜಲಜನೇತ್ರ ಗುರುರಾಮವಿಠ್ಠಲನ ಕಿಂಕರ ೩

೫೬
ರಾಮನಾಮ ಕೀರ್ತನೆ ಮಾಡೊ ಮುದಗೊಡೊ ಪ
ಹೃತ್ತಾಮರಸದಿ ನೋಡೋ ಕೊಂಡಾಡೊ ಅ.ಪ
ಮರಮರ ಎಂದಾ ವಾಲ್ಮೀಕನ
ವರಋಷಿ ಎನ್ನಿಸಿದಾತನ
ಧರಣಿಸುತೆಯಳ ಸಮೇತನ
ಮರುತಾತ್ಮಜಾದಿ ನುತನ ಸುಚರಿತನ ೧
ದಶರಥಗೆ ಮಗನಾದನ
ಪಶುಪತಿ ಚಾಪವ ಮುರಿದನ
ಅಸುರರನೆಲ್ಲ ಸಂಹರಿಸಿದನ
ಬ್ರಹ್ಮಾದಿದೇವ ವಂದ್ಯನಾ ರಾಜೇಂದ್ರನಾ ೨
ಭರತ ಶತೃಘ್ನ ಲಕ್ಷ್ಮಣ ಸೇವ್ಯನ
ಸರಸಿಜಗಾಪ್ತಜ ಭಾವ್ಯನ
ಪರಮಾತ್ಮ ಗುರುರಾಮವಿಠ್ಠಲನ
ನೃಪಾಗ್ರಗಣ್ಯನಾದನ ವಿನೋದನಾ ೩

೨೪೭
ರಾಮನಾಮ ಸ್ಮರಣೆಯ ಮಾಡದೆ ನೀ
ಪಾಮರನಾಗದಿರೊ ಮನುಜ ಪಾಮರನಾಗದಿರೊ ಪ
ಕಾಮಕ್ರೋಧದಿಂದ ಕೆಟ್ಟರು ಬಹುಜನ
ತಾಮಸಗುಣಬಿಟ್ಟು ಪ್ರೇಮದಿಂದಲಿ ನಮ್ಮ
ಸ್ವಾಮಿಯ ನೆರೆ ನಂಬಿರೋ ಅ.ಪ
ದೇಹವನಿತ್ಯವೋ ಮೋಹಪಡಬ್ಯಾಡವೋ
ಅಹಾ ಇದರೊಳು ಸಾಹಸವೇನು
ಲೇಶ ಸುಖ ಕಾಣೆನು ೧
ತೊಗಲುಬೊಂಬೆಗಳಂತೆ ನೆಗೆದಾಡುತಿರುವ
ಹಗರಣವಹ ವ್ಯಕ್ತಿಗಳನು ನಂಬುತಾ
ನಗೆಗೀಡಾಗದಿರೊ ೨
ಹೊರಗೊಳಗಿದ್ದು ನಮ್ಮ ಗುರುರಾಮವಿಠ್ಠಲ
ಕರುಣಿಸುವನು ಎಂದರಿತರೆ ಮುಕ್ತಿಯು
ಕರತಳವಾಗುವುದು೩

೫೮
ರಾಮರಾಜೀವಾಕ್ಷ ಬೇಗಬಾರೊ ಪ
ಕಾಮಿತ ವರಗಳನು ಬೀರೊ ಅ.ಪ
ದಶರಥ ನೃಪ ಸುಕುಮಾರ
ದಶವಿಧ ದಿವ್ಯಶರೀರ೧
ಸೀತಾದೇವಿಹೃದಯಾಬ್ಜಮಿತ್ರ
ಚೇತೋಹರನುತಿಪಾತ್ರ ೨
ಗುರುರಾಮವಿಠಲೇಶ ನೀನೆ
ಶರಣರ ಪರಿಪಾಲಕನೆ ೩

೧೫೨
ರಾಮೇಶ್ವರ ಜಗದಭಿರಾಮ | ಭಕ್ತ
ಕಾಮಿತ ಪ್ರದಾಯಕಧರ ಸೋಮ ಪ
ಪೂಜಿಸಿದ ನಿನ್ನ ಗಡ ರಘುರಾಮ
ನೀ ಜಪ ಮಾಡುವೆ ಅವನ ದಿವ್ಯನಾಮ೧
ಸಾಧು ಶಿರೋಮಣಿ ಸರ್ವೇಶ
ಮೋದದಾಯಕ ಕೈಲಾಸವಾಸ ೨
ವೈರಾಗ್ಯ ಭೂಷಣ ವಾಮದೇವ
ಕೈರಾತವೇಷ ದಿವ್ಯಪ್ರಭಾವ ೩
ಚರ್ಮಧಾರಿಯೆ ಷಟ್ಕರ್ಮನಿರತರು
ನಿರ್ಮಲರರಿವರು ನಿನ್ನ ಚಿದ್ವಿಲಾಸ ೪
ಸಂಕರ್ಷಣಮೂರ್ತಿ ನೀ ಸಚ್ಚರಿತ್ರ
ಪಂಕಜಾಕ್ಷ ಗುರುರಾಮ ವಿಠಲ ಮಿತ್ರ ೫

೧೯೧
ರೋಗದಿ ಬಳಲಲಾರೆ ನಾಗಶಯನ
ಹ್ಯಾಗಾದರು ಮಾಡು ನಿನ್ನ ಸಂಕಲ್ಪ ಪ
ವಾತಪಿತ್ತದ ರೋಗ ಬಾಯಿಗೆ ಅನ್ನಸೇರದು
ಸೋತಿಹುದು ಕೈಕಾಲು ಬಾಯಾರಿಕೆ
ಶೀತೇಶನುತ್ಸವವು ಬಹುಸಮೀಪಕೆ ಬಂತು
ನಾಥನೈಯ್ಯ ನೀನು ಅನಾಥನು ನಾನು ೧
ಹತ್ತು ಮಾಸಗಳಿಂದ ಹಾಸಿಗೆಯಲಿ ಬಿದ್ದು
ಬತ್ತಿ ಬಾಯಿಬಿಡುತಿರುವೆ ಭಯವಾಗಿದೆ
ಭಕ್ತರ ವಿಪತ್ತುಗಳು ಪರಿಹರಿಪೆ ನೀನೆಂದು
ಬಹಳ ಹಿರಿಯರು ನಿನ್ನ ಕೊಂಡಾಡುತಿಹರು ೨
ಹಿತವಾಗಬೇಕೆಂದು ನುತಿಸುವನು ನಾನಲ್ಲ
ಪತಿತ ಪಾವನನೆ ಭಾರವು ನಿನ್ನದು
ಪೃಥಿವಿಜೆಯರಸ ಶ್ರೀ ಗುರುರಾಮ ವಿಠಲನೆ
ಮತಿವಂತರಾನುಡಿ ಸಟೆ ಮಾಳ್ಪುದುಚಿತವೆ ೩

೩೦೨
ಲಗ್ನದರ್ಥ ತಿಳಿಯಿರಿ ಸುಜ್ಞಾನಿ ಜನರೆ
ಅಜ್ಞರಿಗೆಯಿದುನೋಡೆ ಹಾಸ್ಯವಾಗುವುದು ಪ
ಜೀವ ಪರಮಾತ್ಮನಂ ತಿಳಿವದಡಕೆಲೆ ಶಾಸ್ತ್ರ
ದೇವಧರ್ಮವು ಬರುವುದೇ ನಿಶ್ವಿತಾರ್ಥ
ಪಾವನಾಚರಣೆಗಳು ಸಂಭಾರ ವಸ್ತುಗಳು
ನಾವೆಂಬುವುದು ಬಿಡುವುದೆ ಭಾಜಾಭಜಂತ್ರಿಗಳು ೧
ಗುರುಹಿರಿಯರಾಜ್ಞೆಯೆ ನಗನಾಣ್ಯಜವಳಿಗಳು
ಸರವರಿಗು ಮರಿಯಾದೆ ಸಭೆಯ ಪೂಜೆ
ಗರುವವನು ಬಿಡುವುದೆ ಘನ ಭಕ್ಷ್ಯಭೋಜ್ಯಗಳು
ದುರುಳನು ನಿಂದಿಪೋದು ಬೀಗತಿಯ ಹಾಡು ೨
ಆತ್ಮಧ್ಯಾನಾಮೃತವೆ ನಾಲ್ಕು ದಿನ ಭೋಜನವು
ಅಂತರ್ಮುಖತ್ವವೇ ಭೂಮದೂಟ
ತತ್ವಗಳ ಮರೆಯದಿರುವುದೆ ದಿವ್ಯತಾಂಬೂಲ
ಸತ್ವಗುಣ ವೃತ್ತಿಗಳೆ ನಿತ್ಯಸಂತೋಷ ೩
ಇಬ್ಬರೊಂದಾದಾಗ ಶೋಭನ ಪ್ರಸ್ತವದು
ಹಬ್ಬ ಸೌಖ್ಯವು ಮಹಾಲಾಭವದುವೆ
ಕೊಬ್ಬಿದವರಿದು ಬಿಟ್ಟು ಹಣಕಾಸು ಕಳಕೊಂಡು
ಕೋರಿಕೆಗಳಿಂದ ಸತಿಯೊಡನೆ ಕಾದುವರು ೪
ಪುರುಷನೇ ಪರಮಾತ್ಮ ಸತಿಯೇ ಜೀವವು
ಮಹಾಗುರುವೆ ಪರಮಾತ್ಮ ಶಿಷ್ಯರು ಜೀವರಾಶಿ
ಅರಿತವರಿಗಿದರರ್ಥ ಅಮೃತಪಾನಕೆ ಸಮವು
ಗುರುರಾಮ ವಿಠಲನು ಮನದಿ ಹೊಳೆಯುವನು ೫

೩೨೪
ಲಾಲಿ ಗೌರೀಪ್ರಿಯನೆ ಲಾಲಿ ನಾಲ್ಮೊಗನೆ
ಲಾಲಿ ಲಕ್ಷ್ಮೀರಮಣ ಲಾಲಿ ಪರಿಪೂರ್ಣ ಪ
ತ್ರಿಪುರ ಸಂಹಾರ ದೀನ ಜನ ಮಂದಾರ
ಕಪಟದಾನವಶಿಕ್ಷ ಕರುಣಾ ಕಟಾಕ್ಷ
ತಪನಾಗ್ನಿ ಶಿಖಿನೇತ್ರ ಧನನಾಥ ಮಿತ್ರ
ಸುಪವಿತ್ರ ಚಾರಿತ್ರ ಸುಜನನುತಿ ಪಾತ್ರ೧
ವನಜ ಸಂಭವ ಸೃಷ್ಟಿ ಕರ್ತವಾಣೀಶ
ಕನಕ ಗರ್ಭಾಪ್ರತಿಮ ಮಹಿಮ ಜೀವೇಶ
ಘನ ಮಹಾಧ್ವಪು ಹಂಸ ಗಮನ ಸುವಿಲಾಸ
ಸನಕಾದಿ ಮುನಿವಿನುತ ಸರ್ವಲೋಕೇಶ೨
ಪಕ್ಷಿವಾಹನ ಜಗದ್ರಕ್ಷ ಸಿರಿವರನೆ
ಅಕ್ಷಯ ಪ್ರದ ಸುಮೋಕ್ಷದಾಯಕನೆ
ಕುಕ್ಷಿಯೊಳಗನೇಕಜಾಂಡಗಳ ಧರಿಸಿದನೆ
ಸಾಕ್ಷಿಯಾಗಿಹ ಗುರುರಾಮ ವಿಠ್ಠಲನೆ ೩

೫೯
ಲಾಲಿ ಪಾವನ ಚರಣ ಲಾಲಿ ಭವ ಹರಣ
ಲಾಲಿ ಲಕ್ಷ್ಮೀರಮಣ ಲಾಲಿ ನತ ಶರಣ ಪ
ಲೀಲಾ ವಿನೋದದಲಿ ಮೂಜಗವ ಸೃಜಿಸಿ
ಪಾಲಿಸುವೆ ನಿನ್ನ ವ್ಯಾಪಾರವನುಸರಿಸಿ
ಕಾಲಕಾಲಾರ್ಚಿತನೆ ಕಲುಷಹರನೆಂದು
ನೀಲಾಹಿವೇಣಿಯರು ನಿನ್ನ ತೂಗುವರು ೧
ಶೇಷ ಪರಿಯಂಕದಲಿ ಶ್ರೀ ಸಮೇತದಲಿ
ತೋಷದಿಂ ಪವಡಿಸುವೆ ಪ್ರಳಯ ವಾರಿಯಲಿ
ಭಾಷಾಪತಿಯ ಪಡದೆ ನಾಭಿ ಕಮಲದಲಿ
ಪೋಷಿಸುವೆ ಜೀವರನು ಸರ್ವಕಾಲದಲಿ ೨
ಶ್ರೀರಾಮ ಮಾಧವಾಶ್ರಿತಜನೋದ್ಧಾರಾ
ಘೋರ ಪಾಪ ವಿದೂರ ಕುಜನ ಸಂಹಾರಾ
ನಾರಾಯಣಾಚ್ಚುತಾನಂತಾವತಾರ ವಾರಿಜಾಯತ ನೇತ್ರ ಗುರುರಾಮವಿಠಲಾ ೩

ಬಕಾಸುರವಧೆ ನಾಟಕದ
೩೩೬
ಲೇಸು ಮಾಡಿದೆ ಮಾತೆ ಪುಣ್ಯದ ರಾಶಿ ಎನಗೊದಗಿತು ಭಲ ಪ
ಆಶೆಯನು ಪೂರೈಪೆನಿಂದಿನ ಘಾಸಿಯಾಕೆ ದ್ವಿಜರಿಗಲಾ ಅ.ಪ
ಬಂಡಿಯನ್ನವು ಪಾಯಸವುಸುಖಿ
ಯುಂಡೆ ಕಾಯಿಪಲ್ಯಗಳನು
ಮಂಡಿಗಾಂಬೊಡೆ ಲಾಡು ಹೋಳಿಗೆ
ವುಂಡು ತೇಗುತ ಬರುವೆನು೧
ಸಾರು ಹುಳಿ ಪಳಿದ್ಯಗಳು
ಕಿಚ್ಚಡಿ ಶಾನೆ ಕೋಸಂಭರಿಗಳು
ಖಾರದಪ್ಪಳ ಸಂಡಿಗೆಯು
ನೂರಾರು ಬೆಂಡು ಪುಟ್ಟಿಗೆಗಳು ೨
ದೋಸೆ ಕೋಡುಬಳೆಯಪ್ಪಗಳು | ಸೋ-
ಮಾಸಿ ಹೂರಗಿ ಮಾಡಿಸು
ಸೂಸಲುಪ್ಪಿನಕಾಯಿಗಳನ್ನು
ರಾಸಿ ರಾಸಿಯು ತುಂಬಿಸು ೩
ಎಲ್ಲವನು ಹೆಚ್ಚಾಗಿ ಮಾಡಿಸು
ನಿಲ್ಲದೀಗಲೆ ಪೋಗುತಾ
ಸೊಳ್ಳೆಯಂದದಿ ದೈತ್ಯನೆನಗೆ
ಸುಳ್ಳಿದಲ್ಲವು ತಿಳಿಯುತ ೪
ಗಡಿಗೆ ಪಾಲ್ಮೊಸರು ತುಪ್ಪ ಮಜ್ಜಿಗೆ
ಕುಡಿವೆ ಭುಜವಪ್ಪಳಿಸಿ ನಾಂ
ಒಡೆಯ ಶ್ರೀನು
ಸಡಗರವೆನಗೆ ಗೈದ ತಾಂ ೫

೬೦
ವಂದಿಸುವೆ ವಾರಿಜನೇತ್ರ ಸುಚರಿತ್ರ ಜನಕೆ
ತಂದೆತಾಯಿ ನೀನೆ ಬಾ ಬೇಗನೆ ಪ
ಮಂದರೋದ್ಧಾರ ಮನ್ಮಥ ಜನಕ ಆ-
ನಂದ ಮೂರುತಿ ಹರಿಯೆ ಸಿರಿದೊರೆಯೆ ಅ.ಪ
ಕೇಶವ ಕೃಷ್ಣ ಮಾಧವ ವಾಮನ
ವಾಸುದೇವ ಗೋವಿಂದ ಮಧುಸೂಧನ
ದಾಶರಥೇ ಸಂಕರ್ಷಣ ತ್ರಿವಿಕ್ರಮ
ಹೃಷಿಕೇಶ ನಾರಸಿಂಹ ಪರಬ್ರಹ್ಮ ೧
ಪದ್ಮನಾಭಾಚ್ಯುತ ದಾಮೋದರ ಜ-
ನಾರ್ಧನ ಪುರಷೋತ್ತಮ ಶ್ರೀಧರ
ಪ್ರದ್ಯುಮ್ನಧೋಕ್ಷಜ ನಾರಾಯಣ ಅನಿ-
ರುದ್ಧ ವಿಷ್ಣು ಭೂಧರ ಉಪೇಂದ್ರ ೨
ಅರಿತು ಚತುರ್ವಿಂಶತಿ ನಾಮವ
ಮರೆಯದೆ ಅಡಿಗಡಿಗೂ ನೆನೆವ
ಶರಣರದುರಿತವ ಪರಿಹರಿಸುವನಮ್ಮ
ನೆ ನಿನ್ನನೆ ನಾಂ ೩

(ನುಡಿ-೩೩) ಷಟ್ರ‍ಕತಿಗಳು
ಮನ್ಮಥ ಚರಿತೆ೩೪೦
ವರಸಿದ್ಧಿ ಗಣೀಶನ ಬಲಗೊಂಡೀ-
ಶ್ವರನ ಪದಕೆ ನಮಿಸಿ | ಶಾರದೆಯ
ಹರುಷದಿ ಸಂಸ್ಮರಿಸಿ | ಚ
ತುರ್ಮುಖಗಳ ನೆರೆ ಭಜಿಸಿ
ಸಿರಿಪತಿಯನು ಕೊಂಡಾಡಿ | ಗುರುಹಿರಿಯರ
ಚರಣಸೇವೆಯ ಮಾಡಿ | ಕವಿಜನರ
ಹರುಷದಿ ನುತಿ ಮಾಡಿ | ಮಾಡಿ-
ದ ಕೃತಿಯ ಸುಜನರು ನೋಡಿ ೧
ಕಾಮಜನಕ ನಿಷ್ಕಾಮಜನಾಪ್ತ | ಸು-
ಧಾಮನ ಸಖ ಹರಿಯು |
ಮೂರು ಲೋಕಗಳಿಗೆ ತಾ ದೊರೆಯು | ಎನ್ನಹೃ-
ತ್ಕಮಲದೊಳೀಪರಿಯು
ಪ್ರೇಮದಿಂದ ತಾ ನೆಲಸಿ ನುಡಿಸಿದನು
ಕಾಮನ ಸುಚರಿತೆಯು | ಸಜ್ಜನರು-
ಗಳಿಗಿದು ಸಮ್ಮತಿಯು | ಪೇಳ್ವರಿಗೆ
ಇಹಪರ ಸದ್ಗತಿಯು | ೨
ಪೃಥಿವಿಯೊಳಿಹ ಸುಜನರು ಕೇಳಿ | ಮ
ನ್ಮಥ ಚರಿತ್ರೆಯನು | ಸಹ-
ರ್ಷೋತ್ಕರದಿ ನೀವ್ಗಳಿದನು | ಭಜಿಸೆ ಸ-
ದ್ಗತಿಗಳನು ಕೊಡುವನು |
ಶತಮುಖವಂದಿತ ಸಿರಿದೇವಿಯರಸ-
ನೊಲಿದು ಪಾಲಿಸುವನು | ಜನರ ಕೋ-
ರಿದ ಕೋರಿಕೆಗಳನು |
ತಾ ಕೊಟ್ಟವರನು ಪಾಲಿಪ ತಾನು ೩
ತಾರಕಾಸುರನ ಭಯದಿಂದಲಿ ವೃಂ-
ದಾರಕರೆಲ್ಲ ಕೂಡಿ | ಮನದಿ
ಆಲೋಚನೆಗಳ ಮಾಡಿ | ವನಜ ಸಂ-
ಭವನಡಿಗಳ ಬೇಡಿ |
ಯಾರು ನಮಗೆ ದಿಕ್ಕೆಂದು ಕಳವಳಿಸಿ
ಕ್ಷೀರಸಮುದ್ರದಲಿ | ಯಿರುವ
ನಾರಾಯಣನ ತ್ವರಿತದಲಿ | ಕಂಡು ವಂ-
ದಿಸಿದರು ತವಕದಲಿ | ೪
ವಾರಿಜಾಕ್ಷ ಪರುಷೋತ್ತಮ ವಿಶ್ವಾ-
ಧಾರ ಪರಾತ್ಪರನೆ | ಅನಂತನವ-
ತಾರ ಕೃಪಾಕರನೆ | ನಾವೆಲ್ಲ
ಸೇರಿದೆವೈ ನಿನ್ನನೆ |
ತಾರಕಾಸುರನ ಬಾಧೆ ಪರಿಹರಿಪ-
ರ್ಯಾರನು ನಾವ್ ಕಾಣೆವೈಯ್ಯ | ಉ–
ದ್ಧಾರ ಮಾಳ್ಪನು ನೀನೆ | ಭಕ್ತಜನ-
ವಾರಿಧಿ ಚಂದ್ರಮನೆ | ೫
ಎನಲು ಸುರರೊಡನೆ ನುಡಿದನಾಗಲಾ-
ವನಜನಾಭ ತಾನು | ಈ ಕಾರ್ಯ-
ಕೆನಾ ಮಾಡುವುದೇನು | ಭ-
ವಾನೀಧವನಾಗಿ ಶಿವನು |
ಘನತಪವನಾಚರಿಸುತ್ತ ಮೇರುಗಿರಿ
ಗುಹೆಯೊಳು ಕುಳಿತಿಹನೊ | ಫಾಲದಲಿ
ಉರಿಗುಣ್ಣುಳ್ಳವನು | ಏನಾದರು
ಸರಿ ತಾ ಲೆಕ್ಕಿಸನು | ೬
ಕಾಮನಿಂದ ಶಂಕರನ ತಪಕಿಡಿಸಿ
ಕರುಣಿಸಬೇಕೆಂದು ಬೇಡಿ | ಕೊಂ-
ಡರವ ನಿಮ್ಮೊಳು ದಯಮಾಡಿ | ತ-
ಕ್ಕಯೋಚನೆಗೈಯ್ಯುವ ನೋಡೀ |
ತಾಮಸನ ಮುರಿದು ನಿಮಗೆ ಸಂತತವ
ಕೊಡುವನು ಮುದಗೂಡಿ | ಎಂದು
ಪೇಳಿದ ಶ್ರೀಹರಿಯನುಡಿ | ಕೇಳಿ
ಇಂದ್ರನು ಗುರುವನು ನೋಡಿ ೭
ಕಂದರ್ಪನಿರುವ ಕುಸುಮಾವತಿಯನು
ಚಂದದಿಂದ ಸೇರಿ | ಸ್ಮರಗೆಯಿದ-
ರಂದವೆಲ್ಲವುಸುರಿ | ಅವನಮನ
ಹೊಂದುವಂತೆ ಶೌರಿ |
ಕಂದನೆಯಂತಾದರು ತಂದರೆ ಸುಖ-
ವೆಂದನುಪಕಾರಿ | ಗುರು
ವಂದಿಸೆ ಸುರರ ದೊರಿ | ಬೀಳ್ಕೊಂಡು
ಬಂದನು ಕುಸುಮಪುರಿ೮
ಕುಸುಮಾವತಿಯಲಿ ಮೀನಕೇತನನ
ಶಶಿನಿಭವದನೆಯರು | ಸೇ-
ವಿಸುತಿರೆ ಹಸನಾದ ಪನ್ನೀರು | ಪುನಗು
ಜವ್ವಾಜಿ ಗಂಧ ಅಗರು |
ಕುಸುಮಶರನ ಉಪಚರಿಸುತ ಬಾಲೆಯ-
ರೆಸೆಯಲು ಮೋದದೊಳು | ರತಿ-
ಕ್ರೀಡೆಯಲಿ ಮನಕರಗಲು | ಬೃ
ಹಸ್ಪತಿಯನಿತರೊಳೈತರಲು ೯
ಊಳಿಗದವರಿಂದ್ಹೇಳಿ ಕಳುಹೆ ಗುರು
ಕೇಳಿ ಸುದ್ದಿ ಮಾರಾ | ತವಕ
ದಲಿ ಬಂದನಾಗ ಧೀರಾ | ಮಾಡಿದನು
ಪರಿಪರಿಯುಪಚಾರ |
ಚಾರುಸ್ವರ್ಣಪೀಠದಿ ಕುಳ್ಳಿರಿಸಿದ
ಶ್ರೀಪತಿಯ ಕುಮಾರ | ಬಂದಹದ-
ನೇನೆನುತ ಪದಾರ | ವಿಂದ-
ಕೆರಗಿದನಾ ಕುಸುಮಶರ ೧೦
ಗುರುವುನುಡಿದ ಕೇಳಯ್ಯತಾರಕನ
ಭಯದೊಳಮರರೆಲ್ಲ |
ಕ್ಷೀರಸಾಗರಕೆ ಪೋಗಿ ಎಲ್ಲ | ಬಿನ್ನೈ-
ಸಲು ಕೇಳಿ ಸಿರಿಯನಲ್ಲಾ |
ಅರಘಳಿಗಾಲೋಚಿಸಿ ಎನ್ನೊಳುನುಡಿ-
ದನುಕೇಳಿಸಿರಿಯನಲ್ಲಾ | ಖಳಗೆಧರೆ-
ಯೊಳುಯಾರೆದುರಿಲ್ಲಾ | ಇದರ
ಪರಿ ಎಲ್ಲವನು ಬಲ್ಲ ೧೧
ಕಾಮನು ಪುಷ್ಪ ಶರಗಳಿಂದೆಸೆಯಲು ಗೌ-
ರಿಮನೋಹರನೂ | ಬ-
ಹಿರ್ಮುಖನಾಗುತ ಶಂಕರನೂ | ನಿ-
ಮ್ಮಮೊರೆಯೆಲ್ಲಾ ಕೇಳುವನು
ಆ ಮಹಾಸುರನ ವಧಿಸಿ ಎಲ್ಲರಿಗೆ
ಕ್ಷೇಮವ ಪಾಲಿಪನು | ರಜತಗಿ
ರಿವಾಸಿ ಮಹೇಶ್ವರನು | ಇದಕೆ
ಗುರಿಯಾದ ಎನ್ನ ಮಗನು ೧೨
ನಾವು ಪೇಳಿರುವೆವೆಂದು ನಮ್ಮ ಸು-
ಕುಮಾರ ಮನ್ಮಥನಿಗೆ | ಇದೆಲ್ಲಾ ಪೇ-
ಳಿವಿವರಮಾಗೆ | ಕರೆದುಕೊಂ-
ಡ್ಹೋಗಿ ಶಿವನ ಬಳಿಗೆ |
ಪಾವಕಾಕ್ಷ ಬಲು ಕರುಣಾನಿಧಿಯಿ-
ನ್ನೇನು ಚಿಂತೆ ನಮಗೆ | ಬೇಗನಡೆ
ಯೆಂದ ಹರಿಯು ಎನಗೆ |
ಸಕಲವೂ ತಿಳಿಸಿದೆ ನಾನಿನಗೆ | ೧೩
ಸುರರರಕ್ಷಿಸಿ ಅಸುರನ ಶಿಕ್ಷಿಸುವ
ಪರಿಯೋಚನೆ ಮಾಡು | ಸ-
ತ್ಕೀರ್ತಿಯ ಸಂಪಾದನೆ ಮಾಡು |
ಭರದಿ ಹೂ ಶರಗಳ ನೀ ಹೂಡು |
ಹರನ ತಪವ ಭಂಗಿಸಿ ನಮ್ಮೆಲ್ಲರ
ಕರುಣದಿ ಕಾಪಾಡು | ತಂದೆಯ-
ಪ್ಪಣೆಯ ಮನದಿ ನೋಡು | ಮೂಜಗದಿ
ಯಾರು ನಿನಗೆ ಜೋಡು | ೧೪
ಈ ಪರಿಪೇಳಿದ ಗುರುವಿನ ನುಡಿಯನು
ಶ್ರೀಪತಿಯ ಕುಮಾರ | ರತಿಯೊಡನೆ
ಯೋಚಿಸಿದನು ಮಾರ | ನುಡಿದಳಾ
ಶಿವನು ಮಹಾಕ್ರೂರ |
ಆಪತ್ತೊದಗುವುದೀಗ ಬೇಡ ಎಂ-
ದಾಸತಿಯಳಮಾತು | ಕೇಳಿದ
ಕಂದರ್ಪಮನದಿ ಸೋತು | ಬೃಹಸ್ಪತಿ-
ಗೆಂದ ಕಾಮನಿನಿತು ೧೫
ನಿಮ್ಮ ಮಾತು ಮೀರುವ ನಾನಲ್ಲ
ಸಮ್ಮತಿಯಿದು ಕೇಳಿ | ಪೂಶರನ
ಬಿಡಲು ಚಂದ್ರಮೌಳಿ | ಕೋಪಿಸಲಾ
ಹಣೆಗಣ್ಣೆನಗಾಳೀ |
ಬ್ರಹ್ಮಾಂಡಗಳಾದರು ದಹಿಸುವುದು
ಎನ್ನಳವೇ ಎಂದಾ | ಈ ಕಾರ್ಯಕೆ
ನಾನು ಬಾರೆನೆಂದ | ನುಡಿಗೆ ಸುರ-
ಗುರುಮತ್ತಿಂತೆಂದ | ೧೬
ಮರೆಹೊಕ್ಕಿರುವಮರರ ಪಾಲಿಸುನೀ
ಕರುಣದಿ ಕಂದರ್ಪ | ಜಗ-
ತ್ಕಾರಣನೈನಿಮ್ಮಪ್ಪ | ಪೇಳ್ದನುಡಿ
ನಡಿಸಲು ಬೇಕಪ್ಪಾ |
ಪರಿಪರಿಯಲಿ ನೋಡಿದರು ಜಗದೊಳಗೆ ನಿನ್ನ
ಸರಿಯಾರಪ್ಪಾ | ನಮ್ಮ ನುಡಿ
ಮೀರಬಾರದಪ್ಪಾ | ಅಷ್ಟು ಪೇಳಿ-
ದರು ಕಾಮವೊಪ್ಪಾ | ೧೭
ಕಾಮನವೊಪ್ಪಿಸಿ ಕರದೊಯಿದಮರರು
ಕೈಲಾಸವ ಸೇರಿ | ಅರುಹಿದರು
ಗಿರಿರಾಜ ಕುಮಾರಿ |
ಕೇಳಿನಡೆತಂದಳಾಗಗೌರಿ |
ವ್ಯೋಮಕೇಶನಿಹ ಗವಿಯ ದ್ವಾರಕೇ
ಬರಲು ನೋಡಿ ನಂದಿ | ತಾಯಿನೀ-
ನಿಲ್ಲಿಗೇಕೆ ಬಂದಿ | ಏನು ಅ-
ಪ್ಪಣೆಯೆಂದನು ನಂದಿ ೧೮
ವಂದನೆ ಒಳಗೆ ಹೋಗುವನು ಇವನನೀ
ತಡೆಯಬೇಡವಯ್ಯ | ಎನ್ನ
ಕಂದನು ಇವ ಕೇಳಯ್ಯ | ಎಂದು ಪೇ-
ಳಿದ ಗೌರಿಯ ನುಡಿಯಾ |
ಮುದದಿ ಶಿರದೊಳಾಂತನು ನಂದೀಶ್ವರ
ಮುಂದೆ ಕೇಳಿ ಕಥೆಯ | ಅನಿತರೊಳ್
ಬಂದ ಕಾಮರಾಯ | ಪೋಗ ಬಹು-
ದೆಂದ ಪ್ರಥಮಗೇಯ | ೧೯
ವಾಮದೇವ ಕುಳಿತಿಹ ಗುಹೆಯೊಳಗೆ
ಕಾಮಪೊಕ್ಕನಂದು | ಕರದಿ ಜ-
ಪಮಾಲೆ ಪಿಡಿದು ಮುಂದು | ಮ-
ಹಾಮಂತ್ರಗಳ ಜಪಿಸುತಂದು |
ನೇಮದೊಳೇಕೋಭಾವದೊಳಿರುತಿಹ
ಸೋಮಧರನ ಕಂಡ | ಏ-
ನು ಮಾಡುವದೆಂದು ಪ್ರಚಂಡಾ | ಇಕ್ಷುಧ-
ನುಶರಗಳ ಕೈಕೊಂಡಾ | ೨೦
ವಿನಯದಿಂದ ಪ್ರಾರ್ಥಿಸಿ ಮಾತಾಡಿಸು-
ವೆನೆಂದು ಶಂಕರನ | ನುತಿಸಿ ಬೇಡಿ-
ದನು ಶೂಲಧರನಾ | ಎಷ್ಟಾದರು
ಕರಗಲಿಲ್ಲವನಮನಾ | ಪರಿಪರಿಯೋ-
ಚನೆ ಮಾಡಿ ಮನ್ಮಥನು |
ಬೆರಗಾಗುತಾ ನಿಂತಾ
ಸಮಯನೋಡುತ-
ಲಿರತಿಯ ಕಾಂತಾ | ಮನ
ದಿ ಹೊಂದಿದನು ಮಹಾಚಿಂತಾ ೨೧
ಯಾವ ಬಗೆಯಲಿ ಶಿವನ ಭೇದಿಸುವೆ
ನೆಂದು ಯೋಚಿಸಿದನು | ಇ-
ಕ್ಷು ಧನುವನು ಜೇ ಹೊಡೆದಾನು | ಮಹೇ-
ಶನ ಮರ್ಮಸ್ಥಳಗಳನು |
ಪುಷ್ಪ ಬಾಣಗಳೂಡೆಸೆಯೆ ಮ-
ಹಾದೇವನ ದರ್ಪಕನು | ಅನೇಕ
ಶರಗಳನು ಸುರಿದಾನು | ಜ-
ನರೆ ಕೇಳೀಯಾಶ್ಚರ್ಯವನು | ೨೨
ಆ ಮಹೇಶ್ವರನ ಮೂಲ ತಿಳಿಯಲಿಂ-
ದ್ರಾದಿಸುರರಿಗಳವೆ | ಕೇಳಿಯೀ
ಮಹಿಮೆಗಳನು ಪೊಗಳುವೆ | ಪಶುಪತಿಗೆ
ಕಾಮನೇನು ಲಕ್ಷ್ಯವೆ |
ಕಾಮಿಯೆಂದು ಪೇಳುವರರಿಯದವರು
ಕರಿಚರ್ಮಾಂಬರನಾ | ಮೀನ ಕೇ-
ತನನ ಬಾಣಕೆ ಮನಾ | ಬಹಿರ್ಮು-
ಖನಾಗಿ ನೋಡಿ ಸ್ಮರನಾ | ೨೩
ಕಣ್ಣುತೆಗೆದು ಮುಕ್ಕಣ್ಣಯಲೋ ನಿನ-
ಗೆನ್ನೊಳೇಕೆ ಪಂಥಾ | ಛೀ
ಛೀನಡಿ ಹೋಗು ಹೋಗು ಭ್ರಾಂತ | ಎಂದು ತಾ-
ತನ್ನನಿಜಸ್ವಾಂತ-|
ವನ್ನು ಪೂರ್ವದಂದದಿ ತಪದಲ್ಲಿರಿಸಚ-
ಲನಾಗಿ ನಿಂತಾ | ಶಿಲೆಯ
ಪೋಲ್ವಂದದಲಾ ಶಾಂತಾ | ಶೂರ್ಪಕಾ-
ರಿಯು ಎದುರಲಿ ನಿಂತಾ | ೨೪
ನಾನು ಬಂದಾ ಕಾರ್ಯವ ಕೇಳದಲೆ ಇ-
ದೇನೀ ಪುರಹರನು | ಛೀಹೋಗೋ-
ಗೆಂದು ಗರ್ಜಿಸಿದನು | ಎನುತ ತೆ-
ಗೆದೆಚ್ಚ ಪೂಶರವನು |
ನಾನಾವಿಧದಲಿ ತನ್ನ | ಚಮತ್ಕಾ-
ರಗಳ ತೋರಿಸಿದನು | ಮನದಿ
ಭಯಗೊಳುತ ಮನಸಿಜನು |
ಮುಂದಾಗುವ ಕಥೆಯ ಕೇಳಿಯಿನ್ನು ೨೫
ಭರ್ಗಕಣ್ದೆರೆದು ನೋಡಲಾಕ್ಷಣದಿ
ಭರದಿಂ ಮನ್ಮಥನಾ | ಕೋಪಕಿಡಿ-
ಯಿಡುತ ಫಣೆಗಣ್ಣ | ತೆಗೆದು
ನೋಡಲು ತಕ್ಷಣ | ಚಿಣ್ಣಾ
ಭುಗ್ಗು ಭುಗ್ಗುಯೆಂದೇಳ್ವ ಉರಿಗಳಿಂ
ದಗ್ಧನಾದ ಮದನಾ | ಭಸ್ಮದಂ-
ತಿದ್ದು ಮರ್ಮಸದನಾ | ಅಗ್ನಿವ್ಯಾ
ಪಿಸೆ ಬ್ರಹ್ಮಾಂಡವನಾ ೨೬
ಸುರರು ಕಿನ್ನರರು ಗಡಗಡ ನಡುಗುತ
ಬೆರಗಾದರು ನೋಡಿ | ಅವರ-
ವರು ಗುಂಪುಗುಂಪು ಕೂಡಿ | ಹಾಹಾಯೆನುತ
ಶಿರವನಲ್ಲಾಡಿ |
ಚರರು ಬಂದು ರತಿಗೀ ಸುದ್ದಿಯ ಪೇಳಿ-
ದರು ದುಃಖ ಮಾಡಿ | ಕೇಳಿ
ನಾರಿಯರು ಶೋಕವಮಾಡಿ | ರತಿಯು
ನೆಲದೋಳ್ ಬಿದ್ಹೊರಳಾಡಿ | ೨೭
ಹಾಹಾರಮಣಾ ಹಾ ನಿಜೇಶ ಹಾ
ಪ್ರಾಣಕಾಂತಕಾಮಾ | ಎನ್ನ
ಹೃತ್ಸಾರಸಾಭಿರಾಮಾ | ಸಮರ
ಕರ್ಕಶನಿಸ್ಸೀಮ |
ಸಾಹಸ ಮಾಡುವೆನೆಂದು ಪೋಗಿ ಶಂ-
ಕರನಿಂದಲಿ ಮಡಿದೆ | ಪೇಳಿದಮಾ-
ತ್ಕೇಳದೆ ನೀ ನಡೆದೇ | ಪೋಗಬೇ-
ಡೆಂದು ನಾನು ನುಡಿದೆ ೨೮

ನೀಲಘನ ನಾಛ
೯೭
ವಸ್ತ್ರಗಳನರ್ಪಿಸುವೆ ವಾರಿಜನಾಭ ಪ
ಹಸ್ತಿರಾಜ ವರದ ನೀಲಘನನಾಭ ಅ.ಪ
ವರಪೀತಾಂಬರ ಧರಿಸಿರುವವನೆ
ತರುಣೆಗೆ ಅಕ್ಷಯಾಂಬರಗಳಿತ್ತವನೆ ೧
ಬ್ರಹ್ಮಾಂಡ ಶರೀರನೆ ಬ್ರಹ್ಮನ ಪೆತ್ತವನೆ
ಬ್ರಹ್ಮಸ್ವರೂಪನೆ ಬ್ರಾಹ್ಮಣ ಪ್ರೀಯನೆ ೨
ನೀನಿತ್ತುದೆಲ್ಲವು ನಿನಗೆ ಸಮರ್ಪಿಸುವ
ಧ್ಯಾನವಂದೇ ಪಾಲಿಸು ಗುರುರಾಮ ವಿಠಲಾ ೩

೧೩೯
ವಾಯು ಕುಮಾರನೆ ಧೀರಾಗ್ರೇಸರ
ವಂದಿಸುವೆನು ನಿನಗೆ
ಕಾಯುವರಾರು ಜಗದಿ ನೀನಲ್ಲದೆ
ಕಡೆಹಾಯಿಸು ಕೊನೆಗೆ ಪ
ಶರಧಿಯ ದಾಟಿಯಸುರನ ಪಟ್ಟಣದಿ
ಧರಣಿಜೆ ಸೀತೆಯನು
ಅರಸಿ ಉಂಗುರವನಿತ್ತು ಮಣಿಯ ಕೊಂ-
ದೊರಸಿದೆ ದನುಜರನು ೧
ರಾವಣನಿಗೆ ಬುದ್ಧಿಯ ಪೇಳಿ ಪುರವ
ಪಾವಕನಿಂ ಸುಟ್ಟೆ
ದೇವಿಯ ಮಾಣಿಕ್ಯವ ತಂದಾ ರಾಮ
ದೇವಗೆ ನೀ ಕೊಟ್ಟೆ ೨
ಭೂಮಿಯೊಳಗೆ ತಿರುಪತಿಯಲಿ ನೆಲಸಿದೆ
ಸ್ವಾಮಿ ಹನುಮರಾಯ
ಸಾಮಜರಾಜವರದನೆನಿಸುವ ಗುರು-
ರಾಮವಿಠಲ ಪ್ರೀಯ ೩

೨೪೮
ವಾರಿಧಿ ದಾಟಲುಬಹುದು ಈ ಸಂ-
ಸಾರವದಾಟುವುದೆ ಕಷ್ಟವೊ ಪ
ಬಂಧುಗಳು ಬಳಗಗಳು
ತಂದರೆ ಬಂದರೆ ಹಿಗ್ಗುವರು ೧
ಖೇದದಲಿ ಭೇದದಲಿ
ವಾದಗಳಾಡುವರೆಲ್ಲರಲೀ ೨
ಪಾಮರರು ಇವರುಗಳು ಗುರು-
ರಾಮವಿಠ್ಠಲ ಬಲ್ಲ ೩

(ನುಡಿ-೧) ಈಶನಾನೆಂಬುವುದು
೨೪೯
ವಿರೋಧವ್ಯಾತಕಯ್ಯ ನಿಮಗಿದರೊಳು ಪ
ಪರಂಪರದ ಸಂಪ್ರದಾಯಕೆ ನಿಮಗೆ ಅ.ಪ
ಈಶ ನಾನೆಂಬುವದೊಂದು ಸರ್ವೇಶ ಹರಿಯಂಬೊದೊಂದು
ಲೇಸಾಗಿ ಹೆಚ್ಚು ಕಡಮೆಗಳ ತಿಳಿಯುವದಿನ್ನೊಂದು ೧
ಈ ಮೂರು ಮತಗಳಿಗೆ ಪ್ರೇಮವಾದಭಿಪ್ರಾಯಗಳು
ನೇಮನೇಮವಾಗಿಟ್ಟು ಕೊಂಡಿರುತಿಹರೆಲ್ಲರು ೨
ನಿಮ್ಮ ನಿಮ್ಮ ಮನಗಳಿಗೆ ಸಮ್ಮತವಾಗುವ ಪರಿ
ಬ್ರಹ್ಮ ಜ್ಞಾನವೊಂದು ಸಂಪಾದಿಸಿದರೆ ಸಾಕು ೩
ಪುರಾಣ ಶಾಸ್ತ್ರವೇದ ಮೂರು ಮತಗಳಿಗೆ
ಸರಿಯಾದರ್ಥ ತೋರಿ ದಾರಿಯ ಕೊಡುವುದು ೪
ಮೂರು ಮತಗಳಿಗೆ ಮೂರಾಗಿ ತೋರುವ
ಧೀರ ಶ್ರೀಗುರುರಾಮವಿಠ್ಠಲನೊಬ್ಬನೆ ೫

೧೫೩
ವಿಶ್ವನಾಥ ವಿಶ್ವನಾಥ
ಸರ್ವೇಶ್ವರ ಕಾಶೀನಿವಾಸ ವಿಶ್ವನಾಥ ಪ
ಅನ್ನಪೂರ್ಣದೇವಿ ರಮಣ ವಿಶ್ವನಾಥ ದಿ
ವ್ಯಾನ್ನ ಕೊಟ್ಟುಯನ್ನು ಪಾಲಿಸು ವಿಶ್ವನಾಥ ೧
ತಾರಕೋಪದೇಶವನ್ನು ವಿಶ್ವನಾಥ | ನಿ
ನ್ನಾರಾಧಕರಿಗೆ ಈವೆ ವಿಶ್ವನಾಥ ೨
ಪಾಮರ ನಾನೈಯ್ಯ ಕೇಳು ವಿಶ್ವನಾಥ ಗುರು
ರಾಮ ವಿಠಲನ ಚರಣವ ತೋರಿಸು ವಿಶ್ವನಾಥ ೩

೬೧
ವೇಂಕಟೇಶ್ವರ ವೇದಗೋಚರ -ನಿನ್ನಪಾದ
ಪಂಕಜವನು ಕಂಡೆ ಶ್ರೀಧರ ಪ
ಮಂಕುಮನುಜ ಪಾಮರ ನಾ ನಿ
ಶ್ಯಂಕಜ್ಞಾನ ಶೂನ್ಯನು ತವ
ಕಿಂಕರರೊಳು ಸೇರಿಸೆನ್ನ ಸಂಕಟಗಳ ಪರಿಹರಿಸೈ ಅ.ಪ
ಜೀವರೂಪ ಜೀವಿತೇಶನೆ ಜೀಯ ರಾ-
ಜೀವನಾಭ ಶ್ರೀನಿವಾಸನೆ
ಜೀವೋಪಿಕರ್ತನೆಂಬ ಶಾಸ್ತ್ರ
ಭಾವವೇನೊ ತಿಳಿಯದು ಸ್ವ-
ಭಾವ ಸ್ಥಿತಿಯ ಬಿಡದೆ ಜೀವರ
ಕಾವ ಕೊಲುವ ನೀನೆ ೧
ಭೃಗುಮುನಿಪನು ಕಾಲಲೊದೆಯಲು -ಪೂಜಿಸಿದ
ಸುಗುಣ ಶುದ್ಧ ಸತ್ವ ನೀ ಬಲು
ನಗಧರ ದೀನಬಂಧು ಮೂ-
ಜಗದೊಡೆಯನೆ ಸಲಹು ಎನ್ನ
ಜಗದಿಂದಾದರೂ ಹೊರಗುಮಾಡು
ಅಗಣಿತ ಮಹಿಮಾಪ್ರಮೇಯ ೨
ತೀರ್ಥ ಪ್ರಸಾದ ಮಾರಿ ಹಣವನು-ಗಳಿಸುವೆ ನೀ
ಧೂರ್ತರನ್ನು ಅಣಕಿಸುವವನು
ಕರ್ತನೀನು ಪದ್ಮಾವತೀ
ಭರ್ತ ಶ್ರೀ
ಪಾರ್ಥಸಾರಥಿ ಪರಮಪುರುಷ
ಆರ್ತಜನರ ಕೃಬಿಡದಿರು ೩

೩೦೩
ವೇದಾಬಲು ಸ್ವಾದ ಪ
ಸಾದರದಲಿ ಬಿಡದೋದಿ ಪಠಿಸುವಗೆ ಅ.ಪ
ಆದಿಯನಾದಿಗಳ ಹಾದಿಯ ತೋರಿ ಸ-
ಮಾಧಿ ಗುಹ್ಯ ಪ್ರತಿತಾರ್ಥಗಳಿಹ ೧
ಅನುದಿನ ಶ್ರವಣ ಮನನ ನಿದಿಧ್ಯಾಸನ
ಘನಸಾಧನೆಗಳಿಗನುಕೂಲಿಸುವುದು ೨
ಸ್ವರಿತೋದಾತ್ತನುದಾತ್ತ ಪ್ರಚಯಗಳಿಂ
ನ ಚರಣನೋಡುವದಕೆ ವೇದಾ ೩

೧೫೪
ಶಂಕರ ಕೃಪಾಸಾಗರ ಶಿವ ಮೃಗಾಂಕಾ ಶಶಿಶೇಖರಾ ಪ
ಪಂಕಜಭವನುತ ಭವವನಧಿಗೆತ್ರಾತ
ಕಿಂಕರರಿಗೆ ಬಂದ ಸಂಕಟವ ಬಿಡಿಸುವ ಅ.ಪ
ಬಾಗಿ ನಮಿಪೆ ತವ ಪಾದಗಳಿಗೆ ಭವ
ರೋಗಗಳ ಕಳೆವ ಭೋಗ ನಂಜುಂಡದೇವ ೧
ಸಪರ್Àಭೂಷಣನೆ ನಮ್ಮಪ್ಪ ನೀನೆಂದು ನಾ
ತಪ್ಪದೆ ನಂಬಿದೆ ಕಂದರ್ಪ ಸಂಹಾರನೆ ೨
ಗಂಗಾಧರ ದೇವೋತ್ತುಂಗ ಮಹಾಲಿಂಗ
ಸಂಗರಹಿತ ಭಸಿತಾಂಗಲೇಪಿತ ಶಿವ ೩
ಗರಳಪುರದಿ ನೆಲೆಸಿರುವ ಶ್ರೀಕಂಠೇಶ
ಶರಣಾಗತರ ಸುರತರುವೆ ಮದ್ಗುರುವೆ | ಶಿವ ೪
ದಕ್ಷಸುತೆಯರಸ ದಾರಿದ್ರ್ಯವಿಧ್ವಂಸ
ಲಕ್ಷ್ಮೀಶನಾದ ನ ಸಖ೫

೧೫೫
ಶಂಭೋ ಚಂದ್ರಶೇಖರ ಪ
ವಂದಿಪೆ ನಿನ್ನಂಘ್ರಿಯುಗಳವ ಅ.ಪ
ರಜತ ಗಿರಿವರ ಮಂದಿರ
ಭಜಿಸುವೆ ನಾನ ನಿನ್ನ ಶಂಕರ ಶಂಭೊ ೧
ಶೈಲಸುತಾ ಚಿತ್ತಚೋರನೆ
ಶೂಲಧರಾಘ ವಿದೂರನೆ ೨
ಮಿತ್ರನೆ
ಕರುಣಿಸೆನ್ನ ಸುಚರಿತ್ರನೆ ಶಂಭೊ ೩

೧೫೬
ಶಂಭೋಶಿವಶಂಕರ ಗೌರೀಶಾ ಲಂಬೋದರಜನಕ ಪ
ಸಾಂಬಾನಂದಿವಾಹನ ನಂಬಿರುವೆನೊ ನಾನಿನ್ನ
ಜಂಭವೈರಿಮುಖ್ಯದೇವ ಕದಂಬವಂದಿತಾಭಯದಾತ ಅ.ಪ
ಅಣಿಮಾ ಮಹಿಮಾ ಗರಿಮಾ ಲಘಿಮಾದ್ಯಷ್ಟ ಸಿದ್ಧಿಗಳಿದ್ದರು
ಘನವೈರಾಗ್ಯದಿಂದ ಚರ್ಮವನು ಪೊದ್ದು
ಭಸ್ಮವನು ಲೇಪಿಸಿರುವ ೧
ಮನದಭಿಮಾನಿ ಎನಿಸಿ ಸರ್ವರಿಗುಂ ನೆನೆದಿಷ್ಟಾರ್ಥಗಳೀವುತ
ಕೊನೆಗಾಣದಿಹ ದುರಾಶಾಬದ್ಧರ ಹನನಗೈಸಿ ನಸುನಗುತ
ವಿರಾಜಿಪ ೨
ದೇವ ಶ್ರೀ ಸಖ ದೀನೋದ್ಧಾರ
ಪಂಚಮುಖಾ
ಪಾವನ ತ್ರಿಜಗಜ್ಜೀವನ ನೂತನಾವರಣ ಪುರೀಶಾ
ವಿಮುಕ್ತೇಶ ೩

೩೨೫
ಶರಣಾಗತರಾದವರನು
ಕರುಣಿಸಿಯಭಯವನು ಕೊಟ್ಟು ಕಾಯುವೆನಿರತಂ
ಕರಕಮಲವದಯಮಾಡೈ
ಅರಿಸಿನ ಹಚ್ಚುವೆನು ಮುದದಿ ಅರಸ ನಿನಗೆ ನಾಂ ೧
ಪಂಕಜರಿಪು ನಿಭವಕ್ತ್ರನೆ
ಪಂಕಜಲೋಚನೆ ಭಕ್ತ ಪಂಕಜ ಸೂರ್ಯನೆ
ವೆಂಕಟರಮಣ ಪರಾತ್ಪರ
ಕುಂಕುಮ ಹಚ್ಚುವೆ ನಿನಗೆ ಕೊಡು ನಡು ಪಣೆಯಂ ೨
ಮಂದರಗಿರಿಧರಿಸಿದೆ ಸುರ
ಬೃಂದಕೆ ಸುಧೆಯೆರೆದೆ ಲೋಕಸುಂದರನೆ ಭವ
ತ್ಕಂಧರವ ನೀಡು ಪರಿಮಳ
ಗಂಧವ ಹಚ್ಚುವೆನು ನಾನು ಕಮಲದಳಾಕ್ಷ ೩
ನಿರತವು ಮನ್ಮಾನಸ ಪಂ
ಕರುಹದಿ ಸೇವಿಸುವೆ ನಿನ್ನ ಕರುಣಾನಿಧಿಯೆ
ಪರಿಪರಿದಿವ್ಯಸುಪುಷ್ಪದ
ಸರವನು ಕಂಧರದಿ ಧರಿಸುವೆ ಜಗನ್ನಾಥಾ ೪
ನಾಮಾಡಿದ ತಪ್ಪುಗಳಂ
ನೀ ಮನದಲಿ ತರದೆ ಕ್ಷಮಿಸುವದು ಪ್ರಾಣೇಶಾ
ಪ್ರೇಮದಿ ವೀಳ್ಯವ ಶ್ರೀಗುರು
ರಾಮವಿಠಲ ಕೊಡುವೆ ನಿನಗೆ ರಮ್ಯಚರಿತ್ರ ೫

೬೨
ಶರಣು ಶರಣು ಸುರಾರಿ ಭಂಜನ
ಶರಣು ತ್ರಿಭುವನ ರಂಜನ
ಶರಣು ಸೇವಿತ ಸಕಲ ಮುನಿಜನ
ಶರಣು ರವಿಕುಲವರ್ಧನ ಶರಣು ಪ
ಹರಿಮುಕುಂದ ಮುರಾರಿ ಶ್ರೀಧರ ಆದಿಪುರಷ ರಮಾವರ
ಪರಮಭಕ್ತ ಸರೋಜ ಭಾಸ್ಕರ ಪಾಹಿ ಪಾಹಿ ಕೃಪಾಕಗ ೧
ತರುಣಿ ದ್ರೌಪದಿ ಮಾನ ರಕ್ಷಕ ದಾಸ ಜನ ಪರಿಪಾಲಕ
ದುರುಳ ದನುಜಾರಣ್ಯ ಪಾವಕ ದುರಿತಹರ ರಘುನಾಯಕ ೨
ಕೇಶವಾಚ್ಯುತ ಕೃಷ್ಣವಾಮನ ವಾಸುದೇವ ಜನಾರ್ಧನ
ವಾಸವನುತ ವನಜಲೋಚನ ವಂದಿತಾಖಿಲ ಬುಧಜನ ೩
ಬ್ರಹ್ಮರುದ್ರೆಂದ್ರಾದಿ ಪೂಜಿತ ಬ್ರಹ್ಮಋಷಿಗಣ ಭಾವಿತ
ಬ್ರಹ್ಮಪಿತ ಪ್ರಹ್ಲಾದವರದ ನೃಸಿಂಹದೇವ ನಮೋಸ್ತುತೇ ೪
ಎನುತ ಭಜಿಸುವ ಭಕ್ತ ಜನರಿಗೆ ಮನದಭೀಷ್ಟವ ಪಾಲಿಪ
ಜನವರನೆ ಗುರುರಾಮವಿಠ್ಠಲ ಜಾನಕೀ ಪ್ರಾಣವಲ್ಲಭ ೫

ರಾಮಾಯಣ ಎಂದೋ
೩೦೫
ಶಾಂತಿಯೇದಶರಥನೃಪನವನ
ಕಾಂತೆಯರುಮೂವರುಗುಣಂಗಳು
ಅಂತರಾತ್ಮನುರಾಮಸೇವಾಭಿದನು ಲಕ್ಷ್ಮಣನು
ಚಿಂತಿಸಲು ಕಾಲವೆಭರತ
ಶತ್ವ್ರಾಂತಕನು ಸುಜ್ಞಾನ ಭಕ್ತಿಯೇ
ಕಾಂತೆ ಜನಕಜೆಜೀವಹನುಮನು ಸುಪಥಸುಗ್ರೀವ ೧
ಸಾಧನಾತ್ಮಕಕೌಶಿಕನಮಖ
ಕಾದುಸಲಹಿದವಿಘ್ನವೇದು
ರ್ಮೇಧೆತಾಟಕಿದುಷ್ಟಸಂಗಸುಬಾಹುಮುಖಖಳರೂ
ಸಾಧರವೆವರಯಜ್ಞಗೌತಮ
ಭೂದಿವಿಜಸತಿಶಾಪಮೋಕ್ಷವೆ
ಶೋಧನಿಷ್ರ‍ಕತಿತಾರ್ತಿಚಾಪವಧರ್ಮವೆನಿಸುವುದು ೨
ಪರುಶುರಾಮ ಸಮಾಗಮವುವಿ
ಸ್ತರಿಸಿನೋಡೆಸಮತ್ವವಿಪಿನಾಂ
ತರವೆಕರ್ಮಸುವೃತ್ತಿಮುನಿಗಳು ರಾವಣನತಂಗಿ
ಪರಿಕಿಸಲುದುರ್ವೃತ್ತಿಗಳುತತ್
ಪರಿಜನಖರಾದಿಗಳುಭ್ರಾಂತಿಯು
ನೆರೆಕನಕಮೃಗದಶವದನನಿಂದ್ರಿಯಗಳೆನಿಸುವನು ೩
ಅರುಣತನಯನುಧರ್ಮನೋಡೆ ಶ
ಬರಿಸುಯುಕ್ತಿಕಬಂಧವಕ್ರತೆ
ಸುರಪಸುತದುಷ್ಕರ್ಮಚಪಲವೆಕಪಿಸಮೂಹಗಳು
ಗುರುಪದೇಶವೆಮುದ್ರೆಯರುಣನ
ಹಿರಿಯಮಗನೆಸಹಾಯವಾಸೆಯೆ
ಶರಧಿಲಂಕೆಯೆದೇಹಲಂಕಿನಿಯೇದುರಭಿಮಾನ ೪
ಮಣಿಯೆಜ್ಞಾಪಕಸ್ವಸ್ಥಚಿತ್ತತೆ
ವನವಶೋಕವುತ್ರಿಜಟೆಕನಸೇ
ಘನವೆನಿಪಸಂಸ್ಕಾರದುಷ್ಕರ್ಮಾಖ್ಯವನಭಂಗಾ
ದನುಜಪತಿಸುತಮುಖರವಧೆಯೇ
ಮುನಿಮತವುದುರ್ವೃತ್ತಿಪರಿಹರ
ವನಜಸಂಭವನಸ್ತ್ರವೇಸನ್ಮಾರ್ಗವೆನಿಸುವುದು ೫
ಮಮತೆಲಂಕೆಯದಹಿಸಿಮತ್ತೆಹ
ನುಮನುಜ್ಞಾಪಕವಿತ್ತಪತಿಗನು
ಪಮಶರಧಿ ಬಂಧನವೆಯಾಸೆನಿರೋಧನಂತರವು
ಕ್ರಮದಿಧರ್ಮವಿಭೀಷಣನಸುರ
ದಮನವಿಂದ್ರಿಯಜಯವುಮಿಗೆ ಹೃ
ತ್ಕಮಲವೇಸಾಕೇತಪುರವು ಸಮಾಧಿಯಭಿಷೇಕಾ ೬
ಹೃದಯಕಮಲದಿಯಂತರಾತ್ಮನು
ಚದುರತನದಲಿರಾಜ್ಯವಾಳುತ
ವಧೆಯಗೈಸಿದಕಾಲಜ್ಞಾನದಿಲವಣ ಮುಖ್ಯರನು
ವಿಧವಿಧದಯಜ್ಞಗಳವಿರಚಿಸಿ
ಸದಮಲಾತ್ಮನುಸಕಲರಿಂದೈ
ದಿದಸಹಸ್ರಪಾದನು ಶ್ರೀಗುರುರಾಮವಿಠ್ಠಲನು ೭

(ನುಡಿ-೭) ಪಥಂಗಳು ಮೂರು ಬಗೆಯು
ವಿಷ್ಣುಶತಕ
೩೪೧
ಶಿರಿದೇವಿ ಹೃತ್ಕುಮುದ ಚಂದ್ರಮನೆ
ಕರುಣಾರ್ಣವಾಗಣಿತ ಸದ್ಗುಣನೇ
ಶರಣಾರ್ಥಿ ಭಂಜನ ಮುರಾಂತಕನೇ
ಪರಮಾತ್ಮ ಪಾಲಿಸು ಪರಾತ್ಪರನೇ ೧
ಕಮಲಾಸನಾದ್ರಿಜೆ ಮನೋಹರ ಮು
ಖ್ಯಮರಾಳಿಯಂ ಭಕುತಿಯಿಂ ಬಲಗೊಂಡು ಮ-
ಹಾತ್ಮರಾದ ಗುರುಪಾದಕೆ ನಾಂ
ನಮಿಸೀ ಪ್ರಬಂಧವನು ಹೇಳುತಿಹೇಂ೨
ನೂರಾದ ಪದ್ಯಗಳೊಳಾಂ ಸಕಲಂ
ಧಾರಾಳವಾಗಿ ತವ ಸನ್ನಿದಿಯೋಳ್
ಸಾರಂಗಳಂ ಗ್ರಹಿಸಿ ಬಿನ್ನಯಿಪೇಂ
ಶ್ರಿರಾಮನೀಂ ದಯದಿ ಲಾಲಿಸಿ ಕೇಳ್ ೩
ತವ ಪಾದಸೇವಕರ ಸತ್ರ‍ಕಪೆಯಿಂ
ಕವಿತಾ ಧುರೀಣತೆಯು ಬಂದುದು ನಿ_
ನ್ನವ ನಾನು ಜೀವನುಅಕರ್ತನು ಭೋ
ನವ ಯುಕ್ತಿ ಚತುರತೆಗಳೊಂದರಿಯೇಂ ೪
ಜೀವಕ್ಕೆ ನೀನು ಮಿಗೆ ಚಿತ್ತದಿ ಶ್ರೀ
ದೇವೀ ಮನೀಷದೊಳು ಬ್ರಹ್ಮನಿಹಂ
ಯಾ ವಿಶ್ವನಾಥ ಸಹ ರುದ್ರ ಮನೋ
ಭಾವಂಗಳಿಂಗೊಡೆಯನಾಗಿರುವಂ ೫
ಸಲೆ ಹಮ್ಮಿಗಾ ತ್ರಿಪುರ ಸಂಹರನೇ
ಉಳಿದಿಂದ್ರಿಯಗಳಿಗೆ ಜಿಷ್ಣುಮುಖರ್
ಒಳಗಿದ್ದು ಒಳ್ಳಿದನು ಕೆಟ್ಟುದನೂ
ಬಲವಿತ್ತು ಮಾಡಿಸುವರೈ ಹರಿಯೆ ೬
ಕಲಿಮಾರ್ಗ ದೊಡ್ಡದು ಜಗತ್ತಿನೊಳು
ಸಲೆ ಮಧ್ಯದಾರಿಯು ಪುರಂ ಜನನ
ಜಲಜಾತ್ಮಜಾಭಿಮತ ಬಂಧು ಪಥಂ
ಗಳು ಮೂರು ಬಗೆಯು ನೋಡಿದರೆ ೭
ಮಿಗೆ ಕರ್ಮಕರ್ಮವು ವಿಕರ್ಮಗಳೂ
ಜಗದಲ್ಲಿ ಎಲ್ಲರಿಗು ಮೂಲವಿದೂ
ತ್ರಿಗುಣ ಪ್ರಬದ್ಧರಹ ಜೀವಗಣಾ
ಖಗರಾಜ ವಾಹನನೆ ಸಾಕ್ಷಿಯು ನೀಂ ೮
ಸದಸದ್ವಿವೇಕಾವನು ಕಾಣದೆ ಸ
ದ್ಬುಧರಾಡುವಂಥ ನುಡಿಯಂ ಜರಿದು
ಚಿದಚಿದ್ವಿಲಕ್ಷಣನು ನೀನೆನದೇ
ಮದಗರ್ವದಿಂದ ಮೆರೆದಾಂ ಕೆಡುವೇಂ ೯
ಬಹುಕಾಲದಿಂದ ಭವವಾರಿಧಿಯೋಳ್
ವಿಹಿತಾ ವಿಹಿತಂಗಳನು ಚಿಂತಿಸದೆ
ಕುಹುಕಾತ್ಮರಾದವರ ಸಂಗದಿ ಬಂ-
ದಿಹ ನೋವು ನಾನಕಟ ಬಣ್ಣಿಸೇಂ೧೦
ಅಂತವರ್ಗವಾರ್ವರು ಶರೀರದೊಳಿ
ನ್ನರರೇ ಸದಾ ಸಕಲ ಭಾಗದೊಳು
ದುರ್‍ವೃತ್ತಿ ಪುಟ್ಟಿಸುತ ಕೊಲ್ಲುತಿಹರ್
ಪರಮಾತ್ಮ ನಿನ್ನವರ ಸೇರಿರುವೇಂ ೧೧
ಮಲಮೂತ್ರ ಕೂಪವಹ ದೇಹವಿದು
ಜಲಗುಳ್ಳೆ ಎಂದರಿತಡಂ ಬರಿದೇ
ಲಲನಾದಿ ಭೋಗಗಳಪೇಕ್ಷಿಸುತ
ಕಲುಷಾತ್ಮನಾದೆ ಕರಿರಾಜವರದಾ ೧೨
ಹಸನಾಗಿ ತೋರುತಿಹ ದುರ್ವಿಷಯಂ
ಬಿಸಿನೀರು ತುಂಬಿರುವ ಬಾವಿಯಿದುಂ
ಕುಸುಮಾಸ್ತ್ರನೆಂಬ ಕಡುಗಳ್ಳನು ತಾ
ನೆಸಗೀ ಪ್ರವಾಹದಲಿ ನೂಕುತಿಹಂ೧೩
ತವೆ ಪಾದ ಪದ್ಮಂಗಳ ನಂಬಿದೆ ವೆಂ-
ಮ್ಮವಮಾನ ಮಾನಗಳು ನಿನ್ನದುದೆಂ-
ದೆವೆ ಕಾಲವುಂ ಬಿಡದೆ ಚಿಂತಿಪ ಸ
ದ್ವ್ಯವಸಾಯವಂತರೆ ಮಹಾತ್ಮಕರೂ ೧೪
ಜನುಮಗಳನೆತ್ತುತಲಿ ಜೀವರು ನಿಂ
ನನು ಕಾಂಬ ಯೋಚನೆ ತಿರಸ್ಕರಿಸೀ
ಘನ ಕಾಮಭೋಗಗಳಪೇಕ್ಷಿಸಿತಾಂ
ಧನಕಾಗಿ ದುರ್ಜನರ ಸೇವಿಸುವರು ೧೫
ಪಿತೃ ಮಾತೃ ದೈವ ಗುರು ಬಂಧುಗಳು
ಹಿತದಿಂದ ಎಲ್ಲರಿಗೆ ನೀನೆ ಇದಂ
ಮತಿಹೀನರಾದವರು ಬಾಹ್ಯರ ನಂ-
ಬುತ ದುಃಖದಿಂದಲವಿವೇಕರಹರ್ ೧೬
ಗುಣಶೂನ್ಯ ನೀನೆನುತ ಕೊಂಚ ಜನಂ
ಗಣಿಸಲ್ಕಸಾಧ್ಯವಹ ವಾದಗಳಿಂ
ಘನ ತರ್ಕದಿಂದ ಅನುವಾದಿಸಿ ದುರ್
ಜನ ಮುಖ್ಯರೆನಿಸುತಿಹರ್ ಭುವಿಯೊಳ್ ೧೭
ಅನುಮಾನವೇ ತಮಗೆ ಮುಖ್ಯವೆನು-
ತನುಸಾರಿ ರಾಜಸದಿ ತಾಂ ಮುಳುಗೀ
ಜನನಾದಿ ರೋಗಗಳ ಪೊಂದುತಲಿ
ವನಜಾಕ್ಷ ಕೋರಿಕೆಗಳಿಂ ಭಜಿಪರ್ ೧೮
ಉದರ ಪ್ರಯುಕ್ತ ಪರರಾಶ್ರಯಿಸಿ
ಪದ್ಯ ಪದ್ಯ ಪೇಳಿ ಬಹುನೀಚನು ನಾ-
ನುದಯಾಸಮುದ್ರರೆಲೆ ನೀವೆನುತೇ
ಸುದುರಾತ್ಮರಂ ಪೊಗಳಿ ಕೆಟ್ಟೆನು ೧೯
ಹಿತತತ್ವ ಭಾವದಲಿ ದುರ್ಜನರು
ಮತಿವಂತರಂತೆ ಬಹಿಯೋಳ್ ನಟಿಸಿ
ಸತಿ ಪುತ್ರ ವಿತ್ತಗಳ ಮೋಹದಲೀ
ವ್ಯಥೆಪಟ್ಟು ಬಾಯ್ಬಿಡುತ ನೋಯುತಿಹರ್೨೦
ವಿಧಿರುದ್ರ ಪಾಕರಿಪು ಮುಖ್ಯಸುರರ್
ಮೊದಲಾಗಿ ಎಲ್ಲರನು ಮಾಯದಿ ನಿ-
ನ್ನುದ ರಾಖ್ಯ ವಾರಿನಿಧಿಯಿಂದಲಿ ತಾವ್
ಉದಿಸಿರ್ಪರೆಂದುಸುರುಗುಂ ಶ್ರುತಿಗಳ್ ೨೧
ಅನುಮಾನವುಳ್ಳ ಜನಕೆಂದಿಗು ಪಾ-
ವನ ಮೂರ್ತಿ ನಿನ್ನ ಘನ ಜ್ಞಾನ ಸುಖಂ
ತೃಣ ಮಾತ್ರವೂ ಬರದು ಸ್ವಪ್ನದೊಳು
ಜನದಲ್ಲಿ ಕೀರ್ತಿ ಬಹಿಯೊಳ್ ಬರಿದೆ ೨೨
ಗುರುಸೇವೆಯಿಂದ ತನುದಂಡಿಸಿ ತಾ
ನಿರುತಂ ಸುಶಾಸ್ತ್ರಗಳ ನೋಡುತಲಿ
ಸ್ಥಿರ ಚಿತ್ತನಾಗಿ ಶ್ರವಣಾದಿಗಳಿಂ
ಹರಿಭಕ್ತರಿಂದ ಕಡೆಸೇರುತಿಹಂ ೨೩
ಕವಿಯಾದವರ್ ನಿರುತವುಂ ಮಿಗೆ ಭಾ-
ಗವತಾದಿ ಗ್ರಂಥಗಳ ಸಜ್ಜನರಿಂ
ಕಿವಿಯಿಂದ ಕೇಳುವುದಕಂ ಬಹು ಜ-
ನ್ಮವು ಪಕ್ವವಾಗಿ ಸಲೆ ಪ್ರಾಪ್ತಿಸುಗುಂ ೨೪
ಹರಿಕೃಷ್ಣ ಕೇಶವ ಮುಕುಂದ ನೃಕೇ-
ಸರಿ ವಿಷ್ಣುವಾಮನ ತ್ರಿವಿಕ್ರಮ ಶ್ರೀ
ಧರ ಪದ್ಮನಾಭ ಮಧುಸೂದನ ಹೇ
ಪುರಷೋತ್ತಮೌಚ್ಯುತ ಜನಾರ್ದನನೇ ೨೫
ವಸುದೇವ ನಂದನ ಮುರಾಂತಕನೇ
ಹೃಷಿಕೇಶ ನಾರೇಯಣ ಮಾಧವನೇ
ಅಸುರಾರಿ ಸಂಕರ್ಷಣ ಪರಿ ಪಾ-
ಲಿಸುಪೇಂದ್ರ ಭಕ್ತರ ಅಧೋಕ್ಷಜನೇ ೨೬
ಪರಮಾತ್ಮ ನೀನೆಮಗೆ ಎನ್ನುತನಂ-
ಬರು ನಿನ್ನ ತಾಮಸರು ಸತ್ಯವಿದು
ನೆರೆ ನೋವಿನಿಂಬಳಲಿ ತಾವ್ ಮಿಗೆ ಸಂ-
ಸರಣ ಪ್ರವಾಹದೊಳು ಬೀಳುತಿಹರ್ ೨೭
ಮನದಲ್ಲಿ ದುಷ್ರ‍ಕತವ ಚಿಂತಿಸಿ ಸ
ದ್ಗುಣದಲ್ಲಿ ದುರ್ಗುಣಗಳೇ ಗಣಿಸಿ
ಘನ ಮೋಹ ದುಃಖದೊಳು ಸತತ ನಿ-
ನ್ನನು ಕಾಂಬ ಯೋಚನೆಯ ಬಿಟ್ಟಿರುವರ್ ೨೮
ಅನುಮಾನದಿಂದ ಮನುಜರ್ ಮಿಗೆ ನಿ
ನ್ನನು ನಂಬಿ ನಂಬಿದಲೆ ತಾವ್ ನಿರತಂ-
ಘನ ಕಾಮ ಕ್ರೋಧ ಮದ ಮತ್ಸರದಿಂ
ಜನದಿಂದ ಯತ್ನವನು ಮಾಡುತಿಹರ್ ೨೯
ಗೋವಿಂದ ನಿನ್ನ ಗುಣರಾಶಿಗಳ
ದೇವಾದಿದೇವ ದಿವಿ ಭೂಮಿಗಳೋಳ್
ಭಾವ ಪ್ರಭೇದದಲಿ ಧ್ಯಾನಿಪರಿಂ-
ಗೀ ವೇಷ್ಟಸಿದ್ಧಿಗಳ ನೀನೆ ಸದಾ ೩೦
ಸನಕಾದಿ ಯೋಗಿ ಜನವಂದಿತ ಸ-
ಜ್ಜನಕಲ್ಪವೃಕ್ಷ ಜಗದೇಕ ವಿಭೋ
ವನಜಾಕ್ಷ ಇಂದಿರೆಯ ವಲ್ಲಭ ಬ್ರಾ-
ಹ್ಮಣ ಪ್ರೀಯ ಭಕ್ತಸುಖದಾಯಕನೇ ೩೧
ರವಿಕೋಟಿತೇಜ ರಮಣೀಯ ಕಥಾ-
ಭವವಾರಿಜಾಬ್ಧಿ ಬಡಬಾಘಹರಾ
ತವನಾಮ ಕೀರ್ತನೆಯ ಮಾಳ್ಪರ ಪಾ-
ಪವ ನೀನೆ ಓಡಿಸುವುದೇನರಿದೈ ೩೨
ವರ ಮೀನ ಕೂರುಮ ವರಾಹ ನೃಕೇ-
ಸರಿ ವಾಮನಾವನಿ ಸುರೋತ್ತಮ ಭಾ-
ಸ್ಕರ ವಂಶ ಚಂದ್ರವಸುದೇವಜ ಭಾ
ಸುರ ಬುದ್ಧ ಕಲ್ಕ ವಪುಷೇ ನಮಃ ೩೩
ಮುನಿಕರ್ದಮಂಗುದಿಸಿ ತಾಯಿಗೆ ಪಾ
ವನ ರಾಜಯೋಗವನು ಬೋಧಿಸಿದೈ
ಘನಯೋಗಿವರ್ಯ ಕಪಿಲಾಖ್ಯನೆನಿ-
ನ್ನನು ನಂಬಿ ಪ್ರಾರ್ಥಿಸುವೆನಾನನಿಶಂ ೩೪
ಅನುಸೂಯೆಯಾತ್ಮಜನುಮೆನ್ನಿಸಿಯ
ರ್ಜುನ ಕಾರ್ತವೀರ್ಯಗುಪದೇಶಿಸಿದೇ
ಘನಯೋಗ ಬೋಧೆಯನು ಹೈಹಯರ್ ತಾ
ವನುವಾದ ಶಿಷ್ಯರೆಲೆದತ್ತವಿಭೋ ೩೫
ಋಷಭಾಖ್ಯನಾಗಿ ಸುತರಿಂಗೆ ಮಹಾ
ಋಷಿಚರ್ಯ ಬೋಧಿಸಲವರ್ ತಿಳಿದು
ದಶಯೋಗಿವಂದಧಿಕ ಎಂಬತ್ತು ಭೂ-
ಮಿಸುರಕ್ರಿವೃತ್ತಿಯಲಿ ಶೋಭಿಸಿದರ್ ೩೬
ಒಂಬತ್ತು ಮಂದಿ ಋಷಭಾತ್ಮರು
ಜಂಭ್ವಾಖ್ಯ ದ್ವೀಪದೊಳು ಖಂಡಗಳಿಂ
ಇಂಬಾಗಿ ಪಾಲಿಸಿದರ್ ಧರ್ಮದಲಿ
ಅಂಭೋಜನಾಭ ತವನೇಮದಲೀ ೩೭
ಧರೆಯಲಿ ಧರ್ಮಗಳು ತಗ್ಗಿದರೆ
ಹರಿ ನೀನೆ ಪುಟ್ಟಿಯದು ಸ್ಥಾಪಿಸಿ ದು
ರ್ನರರನ್ನು ಕೊಂದು ಶರಣಾಗತರಂ
ಪರಿಪಾಲಿಸುತ್ತಿರುವೆ ಸಂತತವುಂ ೩೮
ಕಲಿಕಾಲವೀಗ ಖಳರೆಲ್ಲರು ಸ-
ತ್ಕುಲದಲೆ ಪುಟ್ಟಿ ನೆರೆ ಸಾಧುಗಳಂ
ಬಲುಬಾಧಿಸುತ್ತ ದುರಿತಂ ಘಳಿಸೇ
ನರಕಂಗಳಲ್ಲಿ ನೆರೆಯಾಗುತಿಹರ್ ೩೯
ಹರಿ ನಿನ್ನ ಪೂಜಿಸಲು ಬೇಸರವು
ನೆರೆ ತನ್ನ ಕಾರ್ಯದಲಿ ಬಲ್ಬಲವು
ಪರಮಾತ್ಮ ತತ್ವದಲಿಯೇ ಮರವು
ದುರ್ವಿದ್ಯವಭ್ಯಸಿಪುದಕೆ ಮನವು ೪೦
ಪರರನ್ನು ನೋಡಿಯವರಂತೆ ತಾ
ವಿರಬೇಕೆನ್ನುತ್ತಲನಿಶಂ ಬಳಲೀ
ಗುರುಯತ್ನಮಾಡಿ ವಿಫಲಾಗಲು ಶ್ರೀ
ಹರಿ ನಿನ್ನದೂರುತಿರುವರ್ ದುರುಳರ್೪೧
ದುರುಯೋಧನಂ ಬದುಕಬೇಕೆನುತ
ದೊರೆಪಾಂಡು ಪುತ್ರರನ್ನು ನೋಯಿಸಲು
ಗುರುಭೀಷ್ಮ ಕರ್ಣ ಮುಖರಿಂದಲಿ ಸಂ
ಗರದಲ್ಲಿ ಕಾದಿ ಮಡಿದಂ ಬರಿದೇ೪೨
ಜಮದಗ್ನಿ ಪುತ್ರನಿಗೆ ಶಿಷ್ಯನು ಭೀ
ಷ್ಮಮಹಾ ಪರಾಕ್ರಮಿಯು ದ್ರೋಣನುತಾಂ
ಕಮಲಾಪ್ತಪುತ್ರ ಕಲಿ ಶಲ್ಯ ಮುಖ್ಯರ್
ಭ್ರಮೆಯಿಂದಲನ್ನಕಸುಗಳ್ ತೊರೆದರ್ ೪೩
ಯಮಜಂ ವೃಕೋದರನು ಫಲ್ಗುಣನೂ
ಯಮಳರ್ ತವಾಂಫ್ರಿಸ್ರ‍ಮತಿಯೇ ಬಲವಾ-
ಗಿ ಮಹಾಪದಂಗಳನು ದಾಂಟಿದರೈ
ಸುಮಬಾಣನಯ್ಯನೆ ಮಹಾತ್ಮರವರ್ ೪೪
ಹರಿ ನಿನ್ನ ಡಿಂಗರಿಗರಿಗಾಶ್ರಯವೇ
ವರಭಾಗ್ಯ ನಿತ್ಯಸುಖವೆನ್ನುತಲೀ
ಅರಿದುತ್ತಮರ್ ಬಯಸರೆಂದಿಗು ಪಾ-
ಮರರಂತೆ ತುಚ್ಛಗಳ ಸ್ವಪ್ನದೊಳು ೪೫
ಸಲೆ ಚಿನ್ನ ಬೆಳ್ಳಿ ಬೆಲೆ ಹೆಚ್ಚು ಪಟ
ಗಳ ಗೃಹಕ್ಷೇತ್ರ ಸುತದಾರ ಧನ-
ಗಳ ನಿತ್ಯವೆಂದರಿದು ಲೆಕ್ಕಿಸದೇ
ಜಲಜಾಕ್ಷ ನಿನ್ನ ಭಜಿಪರ್ ಸುಜನರ್ ೪೬
ಸುಜನಾಬ್ಧಿ ಚಂದ್ರ ಸುಗುಣಾರ್ಣವ ನೀ
ರಜನಾಭ ನಿತ್ಯ ನಿರವದ್ಯ ಸ್ವಭಾ
ವಜ ಕರ್ಮದಿಂ ಸಕಲ ಪ್ರಾಣಿಗಳೂ
ನಿಜಯೋಗ್ಯತೆಯಂತೆ ವರ್ತಿಪುದು ೪೭
ಕರುಣಾನಿಧೇ ಕಮಲಲೋಚನನೆ ಸು-
ರರಾಜ ಸೋದರನೆ ಭಾವಜನೈ
ಯರಮಾಧಿನಾಥ ಯದುವಂಶ ಭೂ
ಷ ರಥಾಂಗ ಪಾಣಿಯೆ ಜನಾರ್ದನನೇ ೪೮
ರಘುವಂಶಕೇತು ರವಿಮಂಡಲದೋಳ್
ಭಗವನ್ನಿರಂತರದಿ ನೀನಿರುತೆ
ಜಗಕೆಲ್ಲ ಕಾಲದನುಸಾರದಿ ನೀ
ನಘನಾಳಿಯಿಂದ ಮಳೆಯಂ ಕೊಡುವೇ ೪೯
ವಿಭುದಾಗ್ರಗಣ್ಯರಹ ಜ್ಞಾನಿಗಳೂ
ಶುಭವನ್ನು ಲೋಕಕೆ ಸದಾಚರಿಸಿ
ನಭ ಭೂಮಿ ಮಧ್ಯದಲಿ ಕೀರ್ತಿ ಸೌ-
ರಭವಾಗಿ ಸ್ಥಾಪಿಸಿ ವಿಮುಕ್ತರಹರ್ ೫೦
ಭೋಗಗಳ ಬಯಸದಲೆ ಸಂತತವು
ಯೋಗ ಪ್ರವರ್ತನೆಯಲೇ ಸುಖಿಸಿ
ರೋಗಾದ್ಯುಪದ್ರಗಳು ಇಲ್ಲದಲೇ
ರಾಗಾದಿ ದೋಷಗಳ ಸುಟ್ಟಿರುವರ್ ೫೧
ಮನವಾಕ್ಕು ಕಾಯಗಳೊಳೊಂದೆ ವಿಧಂ
ಋಣಮುಖ್ಯ ಸೂತಕಗಳಿಲ್ಲದೆಲೇ
ಗುಣವಂತರೆನ್ನಿಸಿಯೇ ಶೋಭಿಸುತಾ
ಜನದಲ್ಲಿ ಮೌನದಲಿ ವರ್ತಿಸುವರ್ ೫೨
ನರರೊಳ್ ದಿವೌಕಸರು ಪುಟ್ಟುತಲೀ
ಹರಿಭಕ್ತಿಯುಕ್ತರೆನಿಸುತ್ತಲಿಸ-
ತ್ವರದಿಂದ ಸಾಧನವ ಮಾಡುತಲೀ

೧೫೭
ಶಿವ ಶಂಭೋ ಮಹದೇವ
ಶಂಕರ ಭಗವತ್ ಪರಭಾವ ಪ
ಭವಹರ ಪುರಹರ ಕವಿಜನ ವಂದಿತ
ನವವಿಧ ಭಕುತಿಯ ಸವಿಯನು ತೋರಿಸು ಅ.ಪ
ಜೈಗೀಷವ್ಯ ಮುನಿಯು ನೀನೆ
ನಾಗೇಂದ್ರಾಭೂಷಣನೆ
ಆಗಮೋಕ್ತ ಶ್ರೀ ರಾಘವನಂಘ್ರಿಪ
ರಾಗದೆ ರತಿಯನು ಜಾಗು ಮಾಡದೆ ಕೊಡು ೧
ಮನಕಭಿಮಾನಿಯು ನೀನು ಮನ್ಮ
ನನಿರ್ಮಲ ಮಾಡುವುದಿನ್ನು
ಅನುದಿನದಿ ಶ್ರವಣ ಮನನ ನಿಧಿ ಧ್ಯಾ
ಸನ ಮೊದಲಾದ ಸಾಧನೆಯನು ಮಾಡಿಸು ೨
ಸುರಪತಿ ಮೊದಲಾದವರೆಲ್ಲ ನಿನ್ನ
ಚರಣವ ಧ್ಯಾನಿಪರೆಲ್ಲ
ಧರಣಿಜಾರಮಣ ಗುರುರಾಮ ವಿಠಲನ
ಮರೆಯದಿರುವ ಮಹತ್ತರ ಭಾಗ್ಯವ ಕೊಡು೩

೧೬೩
ಶೈಲ ರಾಜಕುಮಾರಿ ಶಂಕರಿ ಪ
ಫಾಲಲೋಚನನರಸಿ ಭವಭೀತಿ ಬಿಡಿಸಿ ನಿ-
ನ್ನೋಲಗ ಸಂತತವೀವುದು ಅ.ಪ
ಕರಿಮಣಿ ಬಿಚ್ಚೋಲೆ ಹರಿದ್ರಾಕುಂಕುಮ ಬಳೆ
ಕರುಣದಿ ನಿರುತವು ಪಾಲಿಸೆ ೧
ನಿಜಪತಿಯಂಘ್ರಿ ನೀರಜ ಸೇವೆಯೊಳು ಮನ
ರುಜುವಾಗಿ ನಿಲುವಂತೆಮಾಳ್ಪುದು ೨
ಗುರುರಾಮ ವಿಠಲ ಸೋದರಿ ನಿನ್ನ ತುರುಬಿನ
ಪರಿಮಳ ಕುಸುಮವನೀಡುತ ಕಾಯ್ವುದು ೩

೩೨೬
ಶೋಭಾನೆ ಶೋಭಾನೆ ಶೋಭಾನೆ ಪ
ಶ್ರೀಗಣಾಧಿಪತಿಯ ಸಂಸೇವಿಸಿ ಶಂಕರನ ಭಜಿಸಿ
ವಾಗಾಭಿಮಾನಿಯೆನಿಪ ಸರಸ್ವತಿ ದೇವಿಗೆ ವಂದಿಸಿ
ರಾಗರಹಿತವಾದ ಹನುಮಂತನ ಕೊಂಡಾಡಿ
ಕಮಲಜನ ಪ್ರಾರ್ಥಿಸುವೆ
ಸಾಗರಸುತೆಯರಮಣ ನಿಂತು ಪೇಳಿಸಿದ ಪರಿಯೊ
ಳೀಗ ಗಂಡುಮಕ್ಕಳಾಶೀರ್ವಾದ ಪದವ ಪೇಳ್ವೆ
ಯೋಗಿ ಜನರಿಗೆ ತಲೆಬಾಗಿ ನಮಿಸುವೆ
ಸುಜನರೆಲ್ಲಾಲಿಪುದು ಶೋಭಾನೆ ೧
ಬಾಲನಾಗಿ ಪ್ರಹ್ಲಾದನವೋಲ್ ಬಹುಕ್ರೀಡೆಗಳಾಡುತಲಿ
ಮೇಲೆ ಪಂಚಾಬ್ದದಿ ಸದ್ ವಿದ್ಯಾಭ್ಯಾಸಗಳನೆ ಮಾಡಿ
ಏಳುವರುಷಕ್ಕೆ ಉಪವೀತನಾಗಿ ವೇದ ಪುರಾಣ
ಶಾಸ್ತ್ರಾರ್ಥವೇತ್ತನಾಗುತಲಿ
ಶೀಲಾದಿ ಸದ್ಗುಣಗಳುಳ್ಳ ಬಾಲೆಯಳ ಮದುವೆಯಾಗಿ
ಕಾಲ ಕಾಲದಲ್ಲಿ ದೇವಋಷಿ ಪಿತೃಗಣಗಳ ಪೂಜೆ
ಆಲಸ್ಯವಿಲ್ಲದೆ ಮಾಡಿ ಶ್ರೀ ಲೋಲ ಭಕ್ತರೊಳು
ಅಗ್ಗಳ ನೀನಾಗು ೨
ಕೆರೆಗಳ ಕಟ್ಟಿಸು ಸರೋವರಗಳನ್ನೆ ಮಾಡಿಸು ನಿ-
ರ್ಜರರಿಗೆ ಸಂತೋಷವಾಗಿ ನಿಖಿಳ ಯಜ್ಞಗಳಾಚರಿಸು
ಧರಣಿ ಗೋ ಸ್ವರ್ಣ ಕನ್ಯಾದಿದಾನ
ಸತ್ಪಾತ್ರಕ್ಕೆಯಿತ್ತುದಾತನೆಂದೆನಿಸು
ನಿರತ ಬಂದವರಿಗನ್ನ ನೀಡುತ್ತ ಪ್ರಸನ್ನ ಮನದಿ
ಮರಗಳ ಹಾಕಿಸು ಸಪ್ತಸಂತಾನಗಳನ್ನೆಗಳಿಸು
ವರಮಾತಾಪಿತೃಗಳ ಪಾದಕೆ ವಂದಿಸುತ್ತಾ
ಮಾನ್ಯರೊಳು ವರ್ತಿಸಿಸುಖಿಸು ೩
ಧರ್ಮಯುಕ್ತನಾಗುತ್ತ ಅಧರ್ಮಗಳ ಬಿಡುತ ಸ-
ತ್ಕರ್ಮಗಳಾಚರಿಸು ಫಲವ ಕಂಜಾಕ್ಷಗರ್ಪಿತಮಾಡು
ನಿರ್ಮಲ ಸದ್ಭಕ್ತಿ ಜ್ಞಾನ ವೈರಾಗ್ಯ ಶಾಲಿ
ನೀನಾಗಿ ನಿತ್ಯ ಸಂತಸದಿ
ಮರ್ಮಜ್ಞರೆನಿಪ ಗುರುಹಿರಿಯರ ಸೇವಿಸುತ ಸ
ದ್ಧರ್ಮ ಪತ್ನಿಯಲಿ ನೀ ಸತ್ಪುತ್ರರ ಪಡೆದು ಭಗವ
ನ್ನಿರ್ಮಿತ ಸಮಸ್ತವೆಂದು ಸರ್ವ ಸಮರ್ಪಣೆ
ಮಾಡಿ ನಿತ್ಯಸುಖಿಯಾಗು ೪
ಧೀರ್ಘಾಯುವಾಗಿರು ಬಂಧು ವರ್ಗವ ಪರಿಪೋಷಿಸು
ಭರ್ಗಾದಿ ದೇವತೆಗಳ ಭಕ್ತಿಯಿಂದಾ ಪೂಜಿಸಿತ್ರಿ-
ವರ್ಗಸೌಖ್ಯಗಳ ಪಡೆದವರ್ಗಳ ಭುಜವಿಕ್ರಮದಿ
ಅರ್ಥಿಯ ಪೊಂದು
ಸ್ವರ್ಗಸ್ಥಿತಿ ಲಯಕರ್ತ
ನಘ್ರ್ಯ ಸಂಪದಗಳಿತ್ತು ಆದರಿಸಿ ತನ್ನ ಭಕ್ತಾ
ವರ್ಗ ಸಂಗದೊಳು ನಿತ್ಯ ಶ್ರವಣ ಮನನಾದಿ
ಸತ್ಯಾಧನವ ಮಾಡಿಸುವಾ ಶೋಭಾನೆ ೫

೩೨೭
ಶ್ರೀ ಗಣಪತಿ ಗಿರಿಜೆ ಪುರಾಂತಕ
ವಾಗಭಿಮಾನಿ ಸರೋಜಜರಿಗೆ
ಬಾಗಿನಮಿಸುವೆ ಲಕ್ಷುಮಿಗೆ ನಾರಾಯಣಗನು-
ರಾಗದಲಿ ವಂದಿಸಿ ಪೇಳುವೆನು ೧
ನವರತ್ನಖಚಿತ ಮಂಟಪದಲಿ
ನವನವ ಚಿತ್ರಗಳನು ಬರೆಯಿಸಿ
ಭವನರಸಿ ಮುಖ್ಯಾ ಮುತ್ತೈದೆಯರು ಹರುಷದಿ ಲಕ್ಷ್ಮೀ
ಧವನಡಿಗಳ ಬೇಡಿ ಪ್ರಾರ್ಥಿಸುವರು ೨
ಮುತ್ತು ಮಾಣಿದ ಹಸೆಗಳ ಹಾಕಿಸಿ
ಪಚ್ಚೆಯ ಮಣಿಗಳ ತಂದಿರಿಸಿ
ಮಿತ್ರೇ ಮಹಲಕ್ಷ್ಮಿಯ ರಮಣೆಗೆ ಅಕ್ಷತೆಯನು ತಳಿದು
ವತ್ತೀದಾರೆಣ್ಣೆ ವಧೂವರರಿಗೆ ೩
ಕುಂಕುಮ ಕಸ್ತೂರಿ ತಿಲಕವ
ಅಂಕಿತವಾಗಳವಡಿಸಿ ಪಣೆಗೆ
ಪಂಕಜಾನನೆಯರು ವೀಳ್ಯವನು ಕರದಲಿಕೊಟ್ಟು
ವೆಂಕಟಾಗೆಣ್ಣೆ ವತ್ತೀದಾರು ೪
ಮಲ್ಲಿಗೆ ಸಂಪಿಗೆ ತೈಲವ
ನಲ್ಲೆಯರೊತ್ತಲು ನಸುನಗುತಲಿ
ಚಲ್ವಾಗೆ ಹರಸಿದರು ಸುರ
ರೆಲ್ಲ ಪೂಮಳೆಯ ಕರೆದಾರು ೫


ಶ್ರೀ ಗಣಾಧಿನಾಥಾಶ್ರಿತ ಸೌಖ್ಯಧಾತ ಪ
ನಾಗಭೂಷಣಸುತ ನಾರದಾದಿವಂದಿತ ಅ.ಪ
ಗಜವದನ ಗಣೇಶ ಲಂಬೋದರ ಗಿ-
ರಿಜಾಮಲ ಸಮುದ್ಭವ ಭೂತೇಶ
ಭುಜಗವಿಭೂಷಣ ಭೂರಿ ಕೃಪಾಕರ
ಭಜಿಸುವೆ ನಾನಿನ್ನ
ಸುಜನರ ಕಾರ್ಯಕೆ ಬರುತಿಹ ವಿಘ್ನ
ವ್ರಜವಖಂಡ್ರಿಸುತ ವರಗಳ ನೀಡುತ
ತ್ರಿಜಗದೊಳಗೆ ಪೂಜೆಗೊಂಬೆ ತವಪದ
ರಜಗಳಿಗೆ ನಮೊ ನಮೋ ಎಂಬುವೆನಾಂ ೧
ಇಂದುಧರನ ತನಯಾ ರವಿ ಶಶಿ ಸಂ-
ಕ್ರಂದನ ಮುಖ ಸುರಬೃಂದ ಸೇವ್ಯಮೃದು
ಮಂದಹಾಸ ಪೂರ್ಣೇಂದುವದನ ಸ್ಫುರಿ-
ತೇಂದೀವರನಯನಾ
ಇಂದಿನದಿನ ಸಕಲ ದೇಶದವರು ಮುದ-
ದಿಂದ ನಾಟಿ ಭೈರವಿ ಶ್ರೀರಾಗಗ-
ಳಿಂದ ಗೀತಗಳ ಪಾಡುತತವಪದ
ದ್ವಂದ್ವಗಳನು ಕೊಂಡಾಡುತಲಿಹರೊ ೨
ಪಾಶಾಂಕುಶಗಳ ಕರದಿ ಹಿಡಿದು ನಿಜ-
ದಾಸರ ಮನದಭಿಲಾಷೆ ಸಲ್ಲಿಸುವೆ
ಮೂಷಕವೇರಿ ಬರುವೆ ನತಜನ ಸುರ
ತರುವೆ ಜಗದ್ಗುರುವೆ
ದೋಷದೂರ ನ
ದಾಸರದಾಸ್ಯವನಿತ್ತು ಸದಾಸಂ-
ತೋಷದಿಂದ ಪಾಲಿಸು ಎನ್ನನು ಸ-
ರ್ವೇಶ ಮೋದಕ ಪ್ರಿಯ ವಿಘ್ನೇಶಾ ೩

೬೭
ಶ್ರೀ ಪಾರ್ಥ ಸಾರಥಿ ರಮಾಪತಿ ನೀನೇ ಗತಿ ಪ
ಕಾಪಾಡುವರಾರೊ ಕರುಣಾ ನಿಧಿ ಬಾರೋ ಅ.ಪ
ಭಕ್ತ ಹೃದಯ ಮಂದಿರ ಮುಕ್ತಿಲೋಕ ಸುಂದರ
ವ್ಯಕ್ತಾವ್ಯಕ್ತ ಸ್ವರೂಪ ವೇದ ವೇದ್ಯ ಮುರಹರ ೧
ಕುಬುಜೆಗಂಧ ಕೊಲಿದನೆ ಅಬುಜನಾಭ ಮುಕುಂದನೆ
ಶಬರಿಯಿತ್ತ ಫಲಕೆ ಮೆಚ್ಚಿ ಶಾಶ್ವತ ಫಲವಿತ್ತವನೆ ೨
ಚನ್ನಪಟ್ಟಣವಾಸನೆ ಪ್ರಸನ್ನ ಶ್ರೀನಿವಾಸನೆ
ಎನ್ನ ಪಾಲಿಸುವ ಭಾರವು ನಿನ್ನದು ಗುರುರಾಮ ವಿಠಲ ೩

೧೧೮
ಶ್ರೀ ಮಹಾಲಕ್ಷಮ್ಮ ಬಾರಮ್ಮ ಪ
ಸಹಕಾರಿಯಾಗಿದ್ದು ಸಲಹುವೆ ಜಗವ ಅ.ಪ
ಜ್ಞಾನ ಭಕ್ತಿ ವೈರಾಗ್ಯಾನಂದಗಳ ಕೊಟ್ಟು
ಹೀನ ದುರ್ವಿಷಯ ಚಿಂತನೆ ಬಿಡಿಸಮ್ಮ ೧
ಸೀತೆ ಭೀಷ್ಮಕ ನೃಪಜಾತೆ ನಿನ್ನಯ ವಿ
ಖ್ಯಾತಿಯ ಪೊಗಳುವಡೆನ್ನಳವಹುದೆ? ೨
ಚಿತ್ತ ನಿಯಾಮಕೆ ಶ್ರೀ ಗುರುರಾಮ ವಿಠಲನಪತ್ನಿ ಪಾಲಿಸು ಕ್ಷೀರ ರತ್ನಾಕರನ ಪುತ್ರಿ ೩

(ನುಡಿ-೩) ವಿರಾಧಾಂತಕ :
೬೯
ಶ್ರೀ ರಘುವರತೇ ನಮೋ ನಮೋ ಪ
ಆಶ್ರಿತ ಪರಿಪಾಲತೇ ನಮೋ ನಮೋ ಅ.ಪ
ಸರಸಿಜಭವಪಿತ ಸರಸಿಜಲೋಚನ
ಪರಮಪುರಷ ಖಗಪತಿ ಗಮನ
ಸುರಕಿನ್ನರ ಭೂಸುರನರವರನುತ
ಸೂರಿಜನಪ್ರಿಯತೇ ನಮೋ ನಮೋ ೧
ಮದನಕೋಟಿ ಲಾವಣ್ಯ ಶರಣ್ಯ ನಾ-
ರದ ವೀಣಾಗಾನ ವಿಲೋಲ
ಮುದತೀರ್ಥವರದ ಮುನಿಜನಪಾಲಕ
ಸದಮಲಾತ್ಮಕತೇ ನಮೋ ನಮೋ ೨
ರಾಮಭೂವರ ವಿರಾದಾಂತಕಬಲ-
ರಾಮಾನುಜ ರಘುರಾಮವಿಭೋ
ಸೋಮಸೂರ್ಯನಯನ ಶುಭ-
ತಮ ಶ್ರೀ ಗುರುರಾಮವಿಠ್ಠಲತೇ ನಮೋ ೩

೭೪
ಶ್ರೀವೆಂಕಟೇಶಾ ಶ್ರಿತಜನಪೋಷಾ ಪ
ದೇವ ದೇವ ಮಹದೇವ ವಿನುತಸುಜ |
ನಾವನ ಶ್ರೀ ಭೂದೇವಿಯರರಸನೆ ಅ.ಪ
ಅಂಬರರಾಜನಳಿಯನೆ ತ್ರಿಭುವನ ಕು |
ಟುಂಬಿ ನಿನ್ನ ನೆರೆ ನಂಬಿದೆನಯ್ಯ ೧
ಸ್ವಾಮಿ ಪುಷ್ಕರಣಿ ತಟದಿ ನೆಲಸಿ ಸುರ |
ಸ್ತೋಮದಿಂದ ಓಲಗ ಕೈಗೊಂಬ ೨
ದುರಿತವ ಕಳೆಯುವ ದೊರೆ ನೀನಲ್ಲವೆ
ಉರಗಗಿರಿನಿಲಯ  ೩

೬೩
ಶ್ರೀಗಣೇಶ ಪಾರ್ವತಿ ಶಿವ ಶಾರದೆಯರ ಕೊಂಡಾಡುವೆನು
ಮರುತ್ಸುತಗೆರಗಿನುತಿಪೆ ನಾನು ಪ
ಭಾಗವತಾಗ್ರಣಿಬ್ರಹ್ಮನಡಿಗೆ ತಲೆಬಾಗಿ ವಂದಿಸುವೆನು |
ಸಿರಿಯನನುರಾಗದಿ ಭಜಿಸುವೆನು ೧
ಕ್ಷೀರಸಾಗರಾತ್ಮಜೆಯರಸ ಕೃಪಾವಾರಿಧಿ ಸರ್ವೇಶ | ಅ
ಪಾರಗುಣಾರ್ಣವ ಜಗದೀಶ
ನಾರಾಯಣ ಸಕಲಾತ್ಮ ಪರಾತ್ಪರ ನಂಬಿದೆ ಶ್ರೀನಿವಾಸ |ಸಜ್ಜನರ
ಬೆಂಬಿಡದಿರು ಶ್ರೀಶಾ ೨
ದೋಷರಹಿತ ನಿನ್ನ ಪಾಡಿ ಪೊಗಳುವೊಡೆ ಶೇಷಗಳವೆಸ್ವಾಮಿ|
ಸದಾ ಸದ್ಭಕ್ತ ಜನಪ್ರೇಮಿ
ಭಾಷಾಪತಿ ರುದ್ರಾದ್ಯಮರ ವಿನುತ ಸಕಲಾಂತರ್ಯಾಮಿನಿನ್ನ
ನಂಬಿದವನೆ ನಿಷ್ಕಾಮಿ ೩
ಅಂಬುಜಾಕ್ಷ ಪೀತಾಂಬರಧರ ವಿಶ್ವಂಭರ ಗೋವಿಂದ |
ಸನ್ಮುನಿಗಳಿಗೆ ಪರಮಾನಂದ
ಶಂಬರಹರಪಿತ ಕಂಬುಕಂಠ ನಿನ್ನ ನಂಬಿದೆನು ಮುಕುಂದ |
ಪ್ರಪಂಚಕು ಟುಂಬಿ ಸದಾನಂದ ೪
ಕಾಮಜನಕ ಲಕ್ಷ್ಮೀಮನೋಹರ ನಿನ್ನನಾಮಸ್ಮರಣೆ
ಕೊಟ್ಟು | ಎನ್ನೊಳಿಹ
ದುರ್ವಿಷಯ ಸುಟ್ಟು
ನೇಮದಿ ಎನ್ನ ನಿಷ್ಕಾಮಿ ಎನಿಸು ಶ್ರೀರಾಮಕರುಣವಿಟ್ಟುಸದಾ
ನಿನ್ನ ಚಿಂತೆ ಮನಕೆ ಕೊಟ್ಟು ೫
ವೇದಚೋರನ ಕೊಂದು ನಿಗಮಗಳ ವೇದಗಿತ್ತದೇವ | ನಿನ್ನ ಶ್ರೀ
ಪಾದಗಳನು ನೆನೆವ
ಸಾಧುಗಳನು ಅನುರಾಗದಿ ಪಾಲಿಪ ಬಿರುದು ನಿನ್ನದು ಪಾವ |
ನಾತ್ಮಕನೆ ಶರಣ ಸಂಜೀವ ೬
ಬೆಟ್ಟ ಪೊತ್ತು ಸುರರಿಷ್ಟವ ಸಲ್ಲಿಸಿಕೊಟ್ಟೆ ಅಮೃತವನ್ನು |
ದುರ್ಜನರ ಬಿಟ್ಟೆ ದೈತ್ಯರನ್ನು
ಸೃಷ್ಟಿಗೊಡೆಯ ನಿನ್ನ ಮಹಾಮಹಿಮೆ ಪರ
ಮೇಷ್ಠಿ ಪೊಗಳುತಿಹನು ಎನ್ನಳವೆ ಶಿಷ್ಟರ ದೊರೆ ನೀನು ೭
ಸೂಕರರೂಪದೊಳು ಕನಕಾಕ್ಷನ ನೂಕಿ ಸಮುದ್ರದಲಿ |
ಭೂಮಿಯನೆ ತ್ತಿದೆ ಕೋರೆದಾಡೆಯಲಿ
ಸಾಕಾಗದೆ ನಿರುತವು ಭಜಿಸುವ ಶಶಿ ಶೇಖರ ಮೋದದಲಿಎಂದುಸು
ರುತಲಿದೆ ವೇದದಲಿ ೮
ದುರುಳರಕ್ಕಸನು ತರಳನ ಬಾಧಿಸೆ ಹರಿಯೆ ಬಾಯೆನಲು |
ಕಂಬದೊಳವ ತರಿಸಿದೆ ಮೋದದೊಳು
ಭರದಿ ಕರುಳು ಮಾಲೆಯನೆ ಮಾಡಿ ನೀ ಧರಿಸಿದೆ ಕಂಠದೊಳುಸಕಲಸು
ಮನಸರು ಭಲಾ ಎನಲು ೯
ಅದಿತಿ ಕಶ್ಯಪರಿಗೋಸುಗ ವಟುವಾಗುದಿಸಿ ವಿಪ್ರನಾಗಿ |
ಬಲಿಯಯಾಗ ಮಂಟಪಕ್ಕೆ ಪೋಗಿ
ಪದತ್ರಯಭೂಮಿಯ ದಾನವ ಬೇಡಿದೆ ಪರಮಾದ್ಭುತವಾಗಿ |
ನಿನ್ನಸಂ ಸ್ಮರಿಸುವನೇ ಯೋಗಿ ೧೦
ಕ್ಷತ್ರಿಯರಮುರಿದು ಧಾತ್ರಿಯನು ವಿಪ್ರೋತ್ತಮರಿಗೆ ಕೊಟ್ಟಿ |
ಸಮುದ್ರ ವನ್ನೊತ್ತಿದೆ ಜಗಜಟ್ಟಿ
ಪೃಥ್ವೀಪತಿ ದಾಶರಥಿಯ ಕರದಲಿ ನಿನ್ನಧನುವಿಟ್ಟಿ | ತಪವ
ನಾಚರಿಸಲು ಮನವಿಟ್ಟಿ ೧೧
ಕೌಸಲೇಯ ಕೌಶಿಕಯಾಗದಲಿ ಮಹಾಸುರರನು ಮುರಿದೆ |
ಗೌತಮನ ಸತಿ ಶಾಪವ ಪರಿದೆ
ದ್ವೇಷಿರಾವಣಾದ್ಯರ ಹತಮಾಡಿ ಸುರೇಶ ಮುಖರ ಪೊರೆದೆ |
ಸತ್ಕೀರ್ತಿಯ ಪಡೆದು ಜಗದಿ ಮೆರೆದೆ ೧೨
ದೇವಕೀತನಯನಾಗಿ ಗೊಲ್ಲರೊಲು ಗೋವುಗಳ ಕಾಯ್ದೆ |
ನಾರಿಯರ ಸೀರೆಗಳನು ಒಯ್ದೆ
ಮಾವನಮರ್ದಿಸಿ ಅರ್ಜುನನ ಬಂಡಿ ಬೋವನಾಗಿ
ಮೆರೆದೆ ಕೌರವರ ಭೀಮನಿಂ ಕೊಲ್ಲಿಸಿದೆ ೧೩
ಬುದ್ಧರೂಪದಲಿ ವೇದಶಾಸ್ತ್ರಗಳ ಬದ್ಧವೆಂದು ಪೇಳಿ |
ಜನಾದ್ಯರ ಗೆದ್ದು ಸುಮನಸಾಳಿ
ಹೊದ್ದಿಸಿ ಆನಂದವಬಲೆಯರ ವ್ರತ ತಿದ್ದಿಸೆ ತ್ರಿಪುರಾಳಿ |
ಯರಸಂ ಹರಿಸಿದನಾ ಶೂಲಿ ೧೪
ತುರಗವೇಗದಲಿ ಯುಗಾಂತದಲಿ ದುಷ್ಟರನು ಸೀಳಿದಯ್ಯಾ |
ಕೃತಯುಗದ ಧರ್ಮ ನಡೆಸಿದೆಯ್ಯಾ
ಶರಣಾಗತರಕ್ಷಕನೆಂಬೊ ಬಿರುದು ನಿನಗೆ ಸಲುವುದಯ್ಯಾ |
ಎನ್ನ ಪಾಲಿಸಯ್ಯ ಜೀಯಾ ೧೫
ಇಂತು ದಶಾವತಾರದ ಮಹಿಮೆಯ ಸುಸ್ವಾಂತದಲಿ
ಜನರುನೆನೆಯಲು ತಾ ಇಷ್ಟಾರ್ಥವ ಪಡೆವರು
ಕಂತುಜನಕ  ನಿರಂತರ ಕೈಬಿಡನು |
ಸದಾ ತನ್ನ ಸಂತರೊಳಗಿಡುವನು೧೬
ರಾಮ ರಾಮ ಸೀತಾಮನೋಹರ ರಾಜೀವದಳಾಕ್ಷ |
ಸುಜನ ಕಾಮಿತದಾಯಕ ರಕ್ಷ
ಕೋಮಲಾಂಗ ನೂತನ ಪುರಿ ಮಂದಿರ ಕುಜನನಿಕರ ಶಿಕ್ಷಾ | ವರದ
ರಾಜನಿಖಿಲ ಸಂರಕ್ಷಾ ೧೭

೧೧೭
ಶ್ರೀಜಾನಕಿದೇವಿ ನಿನ್ನ ನಾ ಧ್ಯಾನಿಪೆ ತಾಯಿ ಪ
ಸುಜ್ಞಾಪ್ರದೆಯೆನ್ನ ಮನೋಭೀಷ್ಟವನೀಯ್ಯೆ ಅ.ಪ
ಸಂಸಾರವಾರ್ಧಿಯೊಳಗೆ ಮುಳುಗಿ ಬಳಲುವೆನಮ್ಮ | ಇದು
ಪಾರುಗಾಣೋದೆಂದಿಗೊ ನಿನ್ನ ಪತಿಯ ಕೇಳಮ್ಮ ೧
ವಿಧಿ ಶಂಭು ಮುಖಾಮರ ವಿನುತ ಪದಾಂಬುಜಯುಗಳೆ
ಜಗದಂಬೆ ನಿನ್ನ ನಂಬಿದೆ ವಿಶ್ವಂಭರಪ್ರಿಯಳೆ ೨
ಸಾಮಜರಾಜವರದ ಶ್ರೀನ | ಹೃ
ದ್ಧಾಮದಲ್ಲಿ ತೋರಿಸಿ ಪರಚಿಂತೆ ಬಿಡಿಸೆನ್ನ ೩