Categories
ರಚನೆಗಳು

ಗುರು ರಾಮವಿಠಲ

೨೬
ದೊರೆವನಲ್ಲವೋ ಹರಿ ದೊರೆವನಲ್ಲವೊ ಪ
ಪರಮಯೋಗನಿಷ್ಠೆಯಿಂದ ಇರುಳು ಹಗಲು ಸಮಾಧಿಯಲ್ಲಿ
ಇರುವ ಮಹಾಯೋಗಿಗಳಿಗೆ ಅರಿಯೆ ಸಾಧ್ಯವೇ ಅ.ಪ
ಸಕಲ ದಾನಧರ್ಮಗಳನು ಸರ್ವಕ್ರತುಗಳನ್ನು ಮಾಡೆ
ಶಕುತರಾಗಲರಿಯರೆಂದಿಗು ಶಾಙ್ಗಪಾಣಿಯಂ ೧
ಸಚ್ಚಿದಾನಂದ ರೂಪನ ಸರ್ವವ್ಯಾಪ್ತನ ಪರಾತ್ಪರನ
ರಚ್ಚೆಗಿಕ್ಕಿ ಕಾಣಬಹುದೇ ರಾಜೀವಾಕ್ಷನ ೨
ಪಾಮರ ತಾನೆಂದು ಸಕಲ ನೇಮನಿಷ್ಠೆಯಿಂದಲವನ
ನಾಮ ಸ್ಮರಿಸೆ ಸುಲಭನಹನು ಗುರುರಾಮವಿಠ್ಠಲನು ೩

೨೭
ದ್ವೈತಮತಾಬ್ಧಿ ಚಂದ್ರಮ ಪ
ಅದ್ವೈತ ಸ್ವರೂಪ ಪಾಲಿಸೊ ಶ್ರೀರಾಮ ಅ.ಪ
ಒಂದೆರಡಾಗಿ ನೀ ಛಂದದಿ ಮೂಲದೊ
ಳೊಂದು ಉತ್ಸವದಿ ಮತ್ತೊಂದು ರೂಪಾಗಿರುವೆ ೧
ಎಷ್ಟು ಪ್ರಾಣಿಗಳಿಗೆ ಅಷ್ಟುರೂಪಾಗಿ ನೀ
ಕೃಷ್ಣ ಒಳ ಹೊರಗೆ ಚೇಷ್ಟ್ಟೆ ಮಾಡಿಸೂತಿಹೆ ೨
ಅಣುವಿಗೆ ಅಣುವು ಮಹತ್ತಿಗೆ ಮಹತ್ತು
ಕೊನೆಗಾಂಬರಾರೊ ಶ್ರೀ ಗುರುರಾಮ ವಿಠಲನೇ ೩

೨೮
ಧನ್ಯನಾದೆನು ನಾಂ ಪ
ಘನ್ನಮಹಿಮ ಶ್ರೀನಿವಾಸ ಕರುಣದಿಂದ ಒಲಿದನಿನ್ನು ಅ.ಪ
ದೇಶದೇಶದಿಂದ ಸಕಲ
ದಾಸಜನರು ಬಂದು ಸದಾ
ಶ್ರೀಶ ಸಲಹೆಂದು ಕೂಗುವ
ಘೋಷ ಕೇಳಿ ಕರ್ಣಗಳಿಂ ೧
ಧಾರ್ತರಾಷ್ಟ್ರ ವೈರಿ ವಿನುತ
ಪ್ರಾರ್ಥಿಸುವರಭೀಷ್ಟ ಕೊಡುತ
ತೀರ್ಥ ಪ್ರಸಾದಗಳ ಮಾರಿಸಿ
ಅರ್ಥ ಗಳಿಸುವವನ ಕಂಡು೨
ರಥವನೇರಿ ಪದ್ಮಾವತಿ
ಪತಿಯು ಬರುವುದರಿತು ದೇವ
ಸತಿಯರೆಲ್ಲ ಮುತ್ತಿನಾ-
ರತಿಯ ಬೆಳಗುವುದು ಕಂಡು ೩
ಸಂತಸದಿ ಮಹಂತರು ಶ್ರೀ-
ಕಾಂತನ ಗುಣರಾಸಿ ಪೊಗಳಿ
ಸ್ವಾಂತನಿರ್ಮಲರಾಗಿ ಭಜಿಪ-
ರಂತರಾತ್ಮನ ಕಂಡು ೪
ಭೂಮಿಗಧಿಕ ಶೇಷಗಿರಿ
ಧಾಮಪೂರ್ಣಕಾಮ ಭಕ್ತ-
ಸ್ತೋಮವನ್ನು ಪಾಲಿಪ ಗುರು-
ರಾಮವಿಠಲನ್ನ ಕಂಡು ೫

೧೦೨
ಧೂಪವಾಘ್ರಾಣಿಸೋ ದುರಿತ ವಿದೂರ ಪ
ತಾಪಸ ಪ್ರಿಯ ನಿಜದಾಸ ಮಂದಾರಾ ಅ.ಪ
ನಾ ಸತ್ಯರೊಳಭಿಮಾನಿಯಾಗಿದ್ದು ಸಕಲ
ವಾಸನೆಗಳ ಕೊಂಡು ಎಲ್ಲ ಜೀವರ ಅಭಿ-
ಲಾಷೆಗಳರಿತು ಸುಖಗಳೀವುತ ಸರ್ವಾ-
ವಾಸನಾಗಿಹ ಇಂದಿರೇಶ ಕೃಪಾಳೊ ೧
ಸತತವು ಕಪಿಲಾ ಘೃತ ಶ್ರೀಚಂದನ
ಯುತ ಗುಗ್ಗುಳ ಸಂಮಿಳಿತ ಕೃಷ್ಣಾಗರು ಮಿ-
ಶ್ರೀತ ಧೂಪವ ಶ್ರೀಸಹಿತನಾಗಿ ನೀ ಕೈಕೊ-
ಳ್ಳುತ ಭಕ್ತರಿಗೀಪ್ಸಿತ ವರವೀವನೆ ೨
ವಾಸನೆಯರಿತು ಸರ್ವಭೂತದಲಿ ನಿ-
ವಾಸಮಾಡುತ ಕರ್ಮಫಲಗಳ ನೀವ
ವಾಸುದೇವನಿಗೆ ಸುವಾಸನೆಯಾವದು
ವಾಸುಕಿ ಶಯನ ಶ್ರೀಗುರುರಾಮ ವಿಠಲಾ ೩

(ಆ) ಭಗವಂತನ ಸಂಕೀರ್ತನೆ
(ಷೋಡಶೋಪಚಾರ ಪೂಜಾ ಕೀರ್ತನೆಗಳು)
೯೦
ಧ್ಯಾನಿಸಲರಿಯೆ ನಿನ್ನ ಶ್ರೀನಿವಾಸ ಪ
ಧ್ಯಾನಿಸಲರಿಯೆನು ದೀನಮಂದಾರ ನಿ-
ತ್ಯಾನಂದ ಮೂರ್ತಿಯಂದರಿತು ಹೃದಯದೊಳು ಅ.ಪ
ಯಮನಿಯಮಾಸನದಿ ಪ್ರಾಣಾಯಾಮ
ಕ್ರಮದಿ ಪ್ರತ್ಯಾಹಾರದಿ
ಭ್ರಮಗೊಳಿಸುವ ಮನವ ನಿಲಿಸಿಧಾರಣೆಯನು-
ಪಮ ಸಮಾಧಿಯಲಿ ಹಂಮಮಯಂಬುವದು ಬಿಟ್ಟು ೧
ಪರಿಪರಿಶಾಸ್ತ್ರ ವೇದ ಪುರಾಣಗಳ
ತರತಮ ಭೇದಾಭೇದದರುವಿಗೆ ಸಾಕ್ಷಿಯಾ-
ಗಿರುವ ತತ್ವೇಶರ ಗುರುವೆನಿಸುವ ನಿನ್ನ
ಚರಣಕಮಲವರಿತು ೨
ಮದಮತ್ಸರಾದಿಗಳು ಕೂಡಿಯನ್ನನು
ಬಾಧಿಸುತಿಪ್ಪವು ಅನುದಿನವು
ಸದಮಲಾತ್ಮಕ ಶ್ರವಣ ಮನನಗಳರಿಯೆ ಮೋ-
ಹದ ಕೂಪದಲ್ಲಿ ಬಿದ್ದೆ ಗುರುರಾಮ ವಿಠಲನೆ ೩

೨೯
ಧ್ಯಾನಿಸುವ ಸುಜನರಿಳೆಯೊಳೇನು ಧನ್ಯರೊ ಪ
ಶ್ರೀನಿಧಿ ನಮ್ಮ ನಾರಾಯಣನ ಚರಣಕಮಲವ ಅ.ಪ
ಬ್ರಹ್ಮ ರುದ್ರ ಪ್ರಮುಖ ಸುರರಿಗೇನು ಮೂಲವೊ
ಸಮ್ಮತಿ ವೇದ ಶಾಸ್ತ್ರ ಪುರಾಣವೇನು ಪೇಳ್ವುದೊ ೧
ಕಾಲಕರ್ಮ ಜೀವ ಮಾಯ ಯಾರಧೀನವೊ
ಮೇಲೆ ಅನುಭವದಲಿ ತಿಳಿವುದದುವೆ ಜ್ಞಾನವೊ ೨
ಅರ್ಥ ಚತುಷ್ಠಯವ ಕೊಡುವ ಪಾರ್ಥಸಾರಥಿ
ಕರ್ತಾ ಭೋಕ್ತಾ  ಮೂರುತಿ೩

೩೦
ನಂದ ನಂದನ ಸುಂದರಾ ನವನೀತ ಚೋರಾ ಪ
ಚಂದ್ರ ಸಹೋದರಿ ಮಾನಸ ಚಕೋರ
ಚಂದ್ರ ಚಂದ್ರ ಕುಲಚಂದ್ರ ಚಂದ್ರಮುಖ ಅ.ಪ
ಸೂರಿಜನಪ್ರಿಯ ಸುಗುಣನಿಲಯ ಪಾ-
ಕಾರಿಗರ್ವಹರ ಕರುಣಾ ಜಲಧೇ೧
ಮೃದ್ಭಕ್ಷಣಾದಿ ಚಿದ್ವಿಲಾಸನದ
ಸದ್ವಿಹಾರ ದೇವ ದ್ವಿಜ ಪೋಷಕ ೨
ರಾಮಾನುಜ ಭೃಗು ರಾಮತ್ರಿಜಗದಭಿರಾಮಪಾಹಿ  ಜಯ೩

೩೧
ನಂಬಿದೆ ನಾನಿನ್ನ ನಾರಾಯಣ ವಿಶ್ವಂಭರ ಮೂರುತಿಯೇ
ಕಂಬುಧರ ಕಮಲಾಂಬಕ ಶ್ರೀಹರಿ ಪಾರ್ಥನ ಸಾರಥಿಯೇ ಪ
ವಾರಿಜನಾಭನೆ ಪಾರುಗಾಣಿಸೊ ಸಂ-
ಸಾರ ಶರಧಿಯಿಂದ
ಮಾರಮಣನೆ ಮೊರೆಹೊಕ್ಕೆ ಲಾಲಿಸೊ
ಮುರಹರ ಗೋವಿಂದ ೧
ಪುಣ್ಯುಪುರುಷ ಲಾವಣ್ಯ ನಿಧಿಯೆ ಕಾ-
ರುಣ್ಯ ಸುಗುಣ ಸಾಂದ್ರ
ಸನ್ನುತಿಗೈಯಲು ಶೇಷಗಳವೆ
ವನಜಾಪ್ತವಂಶ ಚಂದ್ರ ೨
ಕಾಮ ಜನಕ ಸುತ್ರಾಮವಿನುತ ಶುಭ-
ನಾಮಸುಜನಪ್ರೇಮಿ
ತಾಮಸದೂರ ಸುಧಾಮವರದ ಗುರು-
ರಾಮವಿಠಲಸ್ವಾಮಿ ೩

೨೨೦
ನಮಗ್ಯಾಕೀ ಸಂಸಾರ ಚಿಂತೆ ಕ್ರಮವಾಗಿ ಧರ್ಮದೊಳಿದ್ದರೆ ಪ
ಸಮನಾಗಿ ಬಾರದು ಮಮತೆ ಅಧಿಕವಾದ
ಭ್ರಮೆಯುಯಿದು ಶ್ರಮವಾಗೋದು
ಕ್ಷಮೆಬಾರದು ಇದರಲ್ಲಿ ಅ.ಪ
ಇವರಾರು ನಮಗೆ ನಾವಾರಿವರಿಗೆ
ಜವನವರು ಎಳೆಯುವರು ಯಾರು ಬರರು | ಸಂಗಡ ೧
ಅನುಸಾರಿಗಳಲ್ಲ ಮನಸೇ ಜಿತವಿಲ್ಲ ಕೊನೆಗೆ ದಿಕ್ಕಿಲ್ಲ
ನೀನೆ ಸಿರಿನಲ್ಲ ಕಾಯಬೇಕಲ್ಲ | ನಿಜವು ೨
ತಾಯಿತಂದೆ ಅಣ್ಣ ತಮ್ಮ ಸತಿಸುತರು ಕಾಯಕಲ್ಲದೆ
ಮಾಯ ಬರಿದೆ ಜೀವಗೆಲ್ಲದೆ | ಶಾಸ್ತ್ರದಿ ೩
ದ್ವಾಸುಪರ್ಣವೆಂಬೊವಾಶೃತಿ ನೋಡಲು
ಈಶನಾಧೀನ ಸಕಲ ಜೀವನ ಯಾತಕ್ಕಭಿಮಾನ | ಅಜ್ಞಾನ ೪
ಹೊರವೊಳಗಿದ್ದೆಲ್ಲ ಕರುಣಿಸುವನು
ಸರ್ವಾಧಾರನು ತನ್ನವರನು ಭಯವೇನು ೫

೨೯೬
ನಮ್ಮ ತಂದೆಯು ರಾಮನು
ಜಾನಕಿಯು ನಮ್ಮಮ್ಮ
ನಮಗೆ ಭಯವೇನು ಪ
ಬ್ರಹ್ಮಾದಿ ದಿವಿಜರು ಬಂಧುವರ್ಗಂಗಳು
ಪವಮಾನ ತನಯನು ಪಾಲಿಪ ಗುರುವಯ್ಯಾ ಅ.ಪ
ಕಾಲಕಾಲದಿ ತಪ್ಪದೆ | ಭತ್ಯವ ಹಾಕಿ
ಬಾಲಲೀಲೆಗಳಾಡಿಸಿ
ಮೇಲೆ ತುಡುಗಾಟವಾಡಿದರೆ ಕೆನ್ನೆಯ ಹಿಂಡಿ
ಹಾಲ ಕುಡಿಸಿ ಮಕ್ಕಳರ್ಥಿಯ ನೋಡುವ ೧
ಇತರ ಮಕ್ಕಳಿಗೆಲ್ಲಾ | ಅವರ ಮಾತಾ
ಪಿತರು ವಡವೆಗಳಿಟ್ಟು
ಮತಿ ಹೀನರಾಗಿ ಕಳೆಯಲು ಶಿಕ್ಷೆಗೈವರು
ಮಿತಿಯಿಲ್ಲದೆ ಬೈದು ಬಲು ಚಿಂತೆಯ ಪಡುವರು ೨
ಕಳ್ಳರಿಗೆ ಸಿಕ್ಕದೈಯ್ಯ | ನಮ್ಮೊಡವೆಗಳ್
ಕಳಚುವುದಕೆ ಬಾರದು
ಒಳ್ಳೆ ವಸ್ತ್ರವ ಉಡಿಸಿ ಉಚಿತ ತಿಂಡಿಯ ಕೊಡಿಸಿ
ಸುಳ್ಳಾಡದಂದದಿ ಸುತ್ತಿಸಿ ನಗುವರು ೩
ಓದು ಬರಹವ ಕಲಿಸಿ | ನಮ್ಮನು ಕೆಲವು
ಹೊತ್ತು ಆಟಗಳಾಡಿಸಿ
ಆದರಿಸುತ ಜನ್ಮ ಜನ್ಮಗಳಲಿ ಬಿಡದೆ ಕಾದು
ಕೊಂಡಿರುವರು ಕಡೆಗೂ ನಮ್ಮಗಲರು ೪
ಇಂತಹ ನಮ್ಮವರ ಬಿಟ್ಟು | ಬರಿದೇ ಲೋಕ
ಸಂತೆಯವರನು ನಂಬುವರೆ
ಎಂತಾದರೂ ಗುರುರಾಮ ವಿಠಲನ ನಾಮ
ಸ್ವಂತವಾದರೆ ಮುಕ್ತಿ ಸ್ವಾಧೀನವಾಗುವುದು೫

೨೨೨
ನರದೇಹ ನಿತ್ಯವಲ್ಲ ನಾಳೆ ಮೃತ್ಯು ಬಿಡುವದಲ್ಲ ಪ
ಮರುಳುಮನವೆ ಕೇಳು ಸೊಲ್ಲ
ಹರಿಯ ಮರೆವುದುಚಿತವಲ್ಲ ಅ.ಪ
ಹಿಂದಿನವರು ಪಟ್ಟಪಾಡು
ಇಂದು ನೀನು ತಿಳಿದು ನೋಡು
ಸಂದೇಹಗಳೀಡಾಡು
ಒಂದೇ ಮನದಿ ಹರಿಯ ಕೊಂಡಾಡು ೧
ಹರಿ ನಮಗನಾದಿ ಮಿತ್ರ
ವರಶೋಭನ ಚಾರಿತ್ರ
ಪೊರೆವದೇನು ನಮ್ಮ ಚಿತ್ರ
ಕರುಣಿಸುವನು ಕಮಲನೇತ್ರ ೨
ಹೊನ್ನು ಹೆಣ್ಣು ಮಣ್ಣು ಮೂರು
ನಿನ್ನದೆಂದು ಹಿಗ್ಗದಿರು
ಜನ್ಮ ಜನ್ಮವೆತ್ತಿದರು
ಬೆನ್ನು ಹೊಡೆವರು ಯಮನವರು ೩
ಏಕೆ ಪಡುವೆ ವೃಥಾಯಾಸ
ಏನು ಸುಖವು ಕಾಣಲೇಶ
ಜೋಕೆ ಬಿಡುಬಿಡು ದುರಾಶಾ
ಬೇಕು ಸುಜನರ ಸಹವಾಸ ೪
ಕರಿಯು ಕೂಗೆ ಭರದಿ ಬಂದ
ತರುಣಿ ಕರೆಯೆ ಅಕ್ಷಯವೆಂದ
ಹರಿಕೊಡುವನು ಆನಂದ
ಮುಕುಂದ ೫

೩೨
ನರಹರಿಯೇ ಪಾಲಿಸೋ ಪ
ಪರಮ ಪುರಷ ಪ್ರಹ್ಲಾದ ವರದ ಅ.ಪ
ದನುಜ ತನ್ನ ಮಗನನು ಬಾಧಿಸುತಿರೆ
ಕನಲಿ ಕಂಬದಿಂದವತರಿಸಿದ ೧
ನಖದಿ ಉದರವನು ಸೀಳುತಲಿ ಹಿರ-
ಣ್ಯಕನ ಕೊಂದು ಕರುಳನು ಧರಿಸಿದ ೨
ಗುರುರಾಮ ವಿಠಲ ಕಾಮಿತವರಗಳ
ಶರಣಗೆ ನೀಡುತ ಆದರಿಸಿದ ೩

೧೮೬
ನಾಮರೆತರು ನೀಮರೆವರೆ ಹರಿಯೇ ಪ
ಬಲ | ರಾಮನನುಜ ಭವ್ಯಚರಿತ ಭದ್ರದಾಯಕ
ಅಭಿ | ರಾಮಪೂರ್ಣ ಕಾಮದುಷ್ಟರಾಕ್ಷಸಾಂತಕಅ.ಪ
ಸರ್ವತ್ರ ಸರ್ವವಾಗಿ ವ್ಯಾಪಿಸಿನೀನಿರುವೇ
ಸರ್ವೇಶ ಸರ್ವಾಧಾರಣಶರಣಜನ ಸುರತರುವೇ ೧
ಅಜ್ಞಾನಿ ನಾನು ಮೂಢ ಪಾಮರ ಅಲ್ಪಜೀವನು
ಸುಜ್ಞಾನಮಯ ಸ್ವರೂಪಾಂತರ್ಯಾಮಿಯು ನೀನು ೨
ಎಳೆ | ಗಂದಿಯ ತುರುವರಸುವ ಪರಿ ಎಲ್ಲ ಭಕ್ತರಾ
ತ್ವರ | ದಿಂದ ಬಂದು ಪೊರೆವೆ ನೀ ಕರುಣಾ ಸಾಗರಾ ೩
ಶುಕ | ಶೌನಕಾದಿ ಮೌನಿ ಹೃದಯ ಪದ್ಮಮಿತ್ರನೆ
ನಿನ್ನ | ಧ್ಯಾನ ಮಾಳ್ಪಗುಂಟೆ ಹಾನಿ ದೇವದೇವನೆ ೪
ಕರೆದರೆ ಬರದಿರಲು ನಮ್ಮ ಕಾವರ್ಯಾರೆಲಾ
ವಿಧಿ | ಹರಮುಖಾಮರವಂದಿತ ಗುರುರಾಮ ವಿಠ್ಠಲ ೫

೩೩
ನಾರಸಿಂಹ ನಮಿಪೆ ನಿಮ್ಮ ನತಜನಾಶ್ರಯ ಪ
ಘೋರ ದುರಿತದೂರ ಭಕ್ತಕುಮುದಕುಡುರಾಯ ಅ.ಪ
ವಿವಿಧಗತಿಯಲಸುರ ಸುತನ ವೇಧೆಪಡಿಸಲು
ತವ ಪದಾಂಬುರುಹವ ನೆನೆಯೆ ಒಂದೆ ಕ್ಷಣದೊಳು ೧
ಕೋಟಿ ಸಿಡಿಲು ಬಡಿದ ತೆರದಿ ಕೂಗು ಪುಟ್ಟಲು
ಚಾಟ ಸ್ತಂಭದೊಳುದಿಸೆ ದನುಜಕೂಟ ಬೆದರಲು ೨
ಹಿರಣ್ಯ ಕಶಿಪುನಸುವ ಬಗೆದು ಕರುಳ ಧರಿಸಿದೆ
ತರಳಗೊಲಿದೆ ಗುರುರಾಮ ವಿಠಲ ನಂಬಿದೆ ೩

೩೪
ನಿತ್ಯ ಪರಿಪೂರ್ಣ ಕಾಮ ಪಟ್ಟಾಭಿರಾಮ
ತನ್ನ ಸ್ಮರಿಸುವ ಜನಕೀವನು ಕ್ಷೇಮ ಪ
ಧರಣಿಜಾರಮಣ ಭಾಸ್ಕರವಂಶ ಭೂಷಣ
ತರಣಿಜಮಿತ್ರ ಭವ್ಯ ಚರಿತ್ರ | ದಾಶರಥಿ
ಕರುಣಾಳು ಸರೋಜನೇತ್ರ ಅ.ಪ
ಉಡತೆ ಭಕ್ತಿಗೆ ಮಚ್ಚಿಕೊಡಲಿಲ್ಲವೆ ಅಭಯ
ಜಡಮತಿಯಾದರೂ ಇವನ | ಮರೆಯಾ ಇನ್ನು
ಧೃಢಮತಿಗೆ ತನ್ನನೇ ಕೊಡುವೆನೈಯ್ಯಾ ೧
ಬ್ರಹ್ಮಾಂಡಕಿವರಾಜ ಬ್ರಹ್ಮಾದಿಸುರ ಸಮಾಜ
ತಮ್ಮೋಳು ತಾವು ತಿಳಿದು | ಭಜಿಸುವರು ಇನ್ನು
ಹೆಮ್ಮೆಯ ಮಾತುಗಳು ಬಿಡಿರಿ ಜನರು ೨
ರಾಮನು ನರನೆಂಬ ಪಾಮರನ ಬಾಯಲಿ ಮಣ್ಣು
ಸೋಮಶೇಖರ ತನ್ನ ಸತಿಗೆ | ಪೇಳಿದ ಇವನ
ನಾಮದ ಮಹಿಮೆ ಕುಣಿಕುಣಿದು ೩
ಮರ ಮರ ಎಂದ ವ್ಯಾಧ ಪರಮ ಋಷಿಯೆನಿಸಿದ
ನಿರುತಾ ಪೊಗಳುವವಿವನ ವೇದ | ಇವನಾ
ಚರಣೆ ಸಜ್ಜನರಿಗೆ ಬಲುಸ್ವಾದ ೪
ಸೇತುವೆ ಕಟ್ಟುವುದುಂಟೆ ಕೋತಿದಂಡುಗಳೆಲ್ಲಾ
ಸ್ವಾತಿಯ ಮುತ್ತಾಗುವುದಂತೆ | ದೇವ
ವ್ರಾತ ರಹಸ್ಯವೇತಕೆ ಚಿಂತೆ ೫
ಹೊರಗಿನ ಕಣ್ಣಿಂದ ಅರಿಯಲು ಸಾಧ್ಯವಲ್ಲಾ
ನೆರೆ ಒಳಗಣ್ಣಲಿ ನೋಡಬೇಕು | ಸ
ದ್ಗುರು ಕಟಾಕ್ಷವಾದವಗೆ ಜೋಕು ೬
ಪ್ರತ್ಯಕ್ಷವಾದಿಗಳಿಗೆ ಮೃತ್ಯುವಿನ ಬಾಯೊಳು
ಸತ್ತು ಹುಟ್ಟುವುದು ತಪ್ಪುವುದಿಲ್ಲಾ | ಆ
ಪತ್ತು ಇದೇ ದುರ್ಜನಿರಿಗೆಲ್ಲಾ ೭
ಮಗನು ಬ್ರಹ್ಮನು ಮೊಮ್ಮಗನು ರುದ್ರನು ಮೂ
ಜಗವನಾಳುವ ನಾರಾಯಣನಿವನು | ತಾನು
ಮಗುವಾಗಿ ದಶರಥಗುದಿಸಿದನು ೮
ಮುನಿ ಯಾಗವ ಪಾಲಿಸಿ ವನಿತೆಯ ಶಾಪ ಬಿಡಿಸಿ
ವನದೊಳಗಿದ್ದ ತಮ್ಮನು ತಾನು | ಸೀತೆಯನು
ತನ್ನೊಳಗಿಟ್ಟು ತಾ ಹುಡುಕಿದನು ೯
ನರನಾಗಿ ದೈತ್ಯರ ಮುರಿದು ದೇವತೆಗಳಿಗೆ
ಪರಮ ಹರುಷ ಪಡಿಸಿ ರಾಜ್ಯವಾಳಿ | ದ ಧರೆ
ಗರಸನಾಗಿ ಸಾಕೇತಪುರದಿ ಪೊಳೆದ ೧೦
ಹರಿಸರ್ವೋತ್ತಮ ಶ್ರೀಗುರುರಾಮ ವಿಠಲನ
ನರನು ಪಾಮರನು ಹ್ಯಾಗೆ ತಿಳಿಯುವನು | ಸಂಸೃತಿ
ಶರಧಿಯೊಳು ಬಿದ್ದು ಬಳಲುವನು೧೧

೩೫
ನಿದ್ರೆಗೈಯ್ಯುವ ನಮ್ಮ ಸ್ವಾಮಿ | ರಾಮ
ಭದ್ರ ಮೂಜಗದಂತರ್ಯಾಮಿ ಪ
ಸದ್ದು ಮಾಡದಿರಿನ್ನು ಸಾರ ಸಾಕ್ಷಿಯರೆಲ್ಲಾ
ಮುದ್ದು ಸೀತೆ ಸಹಿತ ಹುವ್ವಿನ ಮಂಚದಿ ಮಲಗಿ ಅ.ಪ
ಪೋಗಿ ನಿಮ್ಮಯ ಸದನಗಳಿಗೇ | ಉದಯ
ವಾಗೋದು ಬನ್ನಿ ಸನ್ನಿಧಿಗೇ
ಯೋಗೀ ಜಾಣರು ಪರಮ ಭಾಗವತೋತ್ತಮರು
ಸಾಗಿ ಪೋದರು ನಿಜಾಶ್ರಮಗಳಿಗೆಲ್ಲರು ೧
ತುಂಬುರಾ ನಾರದಾದಿಗಳು | ವೀಣೆ
ತಂಬೂರಿ ದಿವ್ಯನಾದದೊಳು
ಗಂಭೀರಾ ಸ್ವರದಿಂದಾಗಾಯನಗಳ ಮಾಡೆ
ಸಂಭ್ರಮದಲಿ ಇತರ ಹಂಬಲ ಮರೆತೀಗ ೨
ಹದಿನಾಲ್ಕು ಲೋಕಾವನಾಳಿ | ತಾದ-
ಣಿದೆನೆಂದು ಜನರಿಗೆ ಪೇಳಿ
ಸದಮಲಾತ್ಮಕ ಶ್ರೀ ಗುರುರಾಮ ವಿಠಲ ನಂ-ಬಿದವರಿಗಭಯವ ಕೊಡುವ ಇಚ್ಛೆಯಿಂದ ೩

೧೦೭
ನಿನಗೆ ನಿನ್ನ ನಾಮ ಗುಣಗಳಿಂದರ್ಚನೆ ಗೈವೆನು ಸ್ವಾಮಿ ಪ
ಎನಗೊಂದು ಪದಾರ್ಥವು ದೊರೆಯದು
ಮನ್ಮನದಿ ನೀನೆ ನಿಂತು ಮಾಡಿಸನುದಿನಾ ಅ.ಪ
ಧೇನುಸುವೆನು ವಾಙ್ಮಯನೆನ್ನುತ ಜೀವ ದೇವ ನಿನ್ನಾ
ನಾನಾ ದಿವ್ಯ ಸ್ವರೂಪನೆನ್ನುತಾವಾಹನೆಯನುಗೈವೆ
ಶ್ರೀನಾಥಗೆ ರತ್ನಮಯ ಮಣಿಖಚಿತ ಸಿಂಹಾಸನವೀವೆ
ಗಾನಲೋಲ ಗಂಗಾಜನಕನು ಎಂದಾನು ಪಾದ್ಯವನು
ಸಮರ್ಪಣೆ ಮಾಳ್ಪೆನು ೧
ಶರಣರಿಗಭಯವ ಕೊಡುವನೆಂದು ಅಘ್ರ್ಯಗಳ ಸಮರ್ಪಿಸುವೆನು
ಪರಮ ಪವಿತ್ರನು ನೀನೆನ್ನುತಲಾಚಮನ ಮಾಡಿಸುವೆನು
ಪರಿಶುದ್ಧಗೆ ಪಂಚಾಮೃತ ಶುದ್ಧೋದಕಗಳ ನಾ ಕೊಡುವೆ
ವರ ಪೀತಾಂಬರ ಧರಿಸಿರುವವನಿಗೆ ವಸ್ತ್ರಯುಗ್ಮವ
ಸಮರ್ಪಣೆಗೈವೆನು ೨
ಜನಿವಾರವ ಯಜ್ಞಪುರಷ ನೀನೆಂದನವರತವು ಕೊಡುವೆ
ಘನ ತೇಜೋಮಯ ರೂಪಗಾಭರಣಗಳಲಂಕರಿಸುವೆನು
ಹನುಮತ್ಪ್ರಿಯನಿಗೆ ದಿವ್ಯ ಚಂದನಾಕ್ಷತೆಗಳ ಧರಿಸುವೆನೂ
ವನಜಾಕ್ಷಗೆ ದಿವ್ಯ ತುಳಸಿ ಪುಷ್ಪಗಳನು ಸಮರ್ಪಣೆಯಗೈವೆನು
ಮುದದಲಿ ೩
ಭಕ್ತವತ್ಸಲನು ನೀನೆನ್ನುತ ಧೂಪವನೀವೆನು ಸ್ವಾಮಿ
ಭಕ್ತಿಯಿಂದ ದೀಪವ ಕೊಡುವೆನು ಭವ
ಭಯಹರ ನೀನೆಂದೂ
ನಿತ್ಯತೃಪ್ತಗೆ ಮಹಾ ನೈವೇದ್ಯ ತಾಂಬೂಲವನೀವೆ
ಶಕ್ತನು ಸರ್ವೋತ್ತಮ ನೀನೆನ್ನುತ ಉತ್ತರ
ನೀರಾಜನವರ್ಪಿಸುವೆನು ೪
ಸರಸಿಜಭವಪಿತನೆಂದು ಮಂತ್ರಪುಷ್ಪಗಳ ಸಮರ್ಪಿಸುವೆ
ಸರ್ವೋತ್ತಮ ನೀನೆಂದು ಪ್ರದಕ್ಷಿಣೆ ನಮಸ್ಕಾರವ ಗೈವೆ
ಪರಮಪುರಷವೆನ್ನುತಲಿ ಪುನಃ ಪೂಜೆಯ ಮಾಳ್ಪೆನು ನಿನಗೆ
ಎನ್ನಪರಾಧಗಳೆಣಿಸದೆ ನಿನ್ನವರಡಿ
ಸೇವೆಯ ಕೊಡೊ ೫

೨೨೩
ನಿನಗ್ಯಾಕೀ ಚಿಂತೆ ಮಾನವ ವನಜನಾಭನೆ ಕಾಯುವ ಪ
ಅಣುರೇಣು ತೃಣಕಾಷ್ಠ ಕೊನೆ ಮೊದಲುಗಳೊಳ-
ವನ ನೋಡಿ ಹರುಷಿಸದೆ ಅ.ಪ
ಈ ಶರೀರದೊಳಗೆ ಶ್ರೀ ತರುಣಿ ಸಹಿತ ಅವ-
ನಿರುವದು ಗುರುಮುಖದೊಳರಿಯದೆ ಬರಿದೆ ೧
ಇಂದ್ರಿಯಂಗಳಿಗೆ ಬ್ರಹ್ಮೇಂದ್ರಾದಿ ಸುಮನಸ
ವೃಂದವಿರುವುದು ಗೋವಿಂದನೆ ದಣಿ ೨
ಬಲಜ್ಞಾನೈಶ್ವರ್ಯಾದಿಗಳು ಯೋಗ್ಯತನುಸಾರ
ಒಳಗೆ  ಕೊಡುವನು೩

(ನುಡಿ-೪) ತತ್ವಾಭಿಮಾನಿಸುರರು
೨೨೪
ನಿನಗ್ಯಾಕೆ ದುರ್ಮತಿ ಎಲೆ ಕೋತಿ ಪ
ಅನುದಿನದಿ ನಾನು ನನದೆಂಬ ಅ.ಪ
ಮೊದಲಿಂದಲಿ ಅವಿವೇಕದಿಂದ ಮೋಹಪಡುತ ನೀನಿರಲ್
ತುದಿಗೆಯಮನ ಬಾಧೆಯಹುದು ಬಲು ೧
ಚಪಲಾತ್ಮರಾದವರಲಿ ಸೇರಿ
ಚಾಟು ಮಾತುಗಳಾಡುವೇ ವಿಪರೀತ ಜ್ಞಾನವಿದಲ್ಲವೇ ೨
ನಡೆನುಡಿಗಳಾದಿಯಾದ ಎಲ್ಲಕು ನಾಥ ನೀನೆಯೇನಲಾ
ದೃಢವಾಗಿ ನಿನ್ನೊಳು ತಿಳಿದು ನೋಡೋ ೩
ತತುವಾಭಿಮಾನಿ ಸುರರು ಒಳಗೆ ತಾವು ಪ್ರೇರಿಸದಿರ್ದರೆ
ಹಿತವಾಗದೆಂದಿಗು ನೀನಲ್ಲ ದೊರೆ ೪
ಸರ್ವಕ್ಕು ಭಾರ ಕರ್ತನಾಗಿ ಸೂತ್ರವಿಡಿದಾಡಿಸುವನು
ಪೊರೆಯುವನು ೫

೩೬
ನಿನ್ನ ಚಿತ್ತವೊ ಎನ್ನ ಭಾಗ್ಯವೊ
ಇನ್ನು ಏನು ತಿಳಿಯದು ಹರಿ ಪ
ಪನ್ನಗಾದ್ರಿನಿಲಯ ಪರಮ ಪಾವನ್ನ ಜಗನ್ಮೋಹನ ಅ.ಪ
ಎಲ್ಲಾ ಜಗನಿನ್ನೊಳಗಿಹುದು ಎಲ್ಲರೊಳಗೆ ನೀನಿರುವೈ
ಬಲ್ಲಿದನು ನೀನು ನಿನಗೆ ಸಮ ಬ್ರಹ್ಮಾದಿಸುರರೊಳಗ್ಯಾರು ೧
ದೀನರು ಮಾಡಿದ ಕರ್ಮವ ನೀನು ಕಳೆಯಲಾರೆಯಾ
ನಾನಿದಕೆ ಭಾಗಿಯೋ ನೀನಿದ್ದು ಮಾಡಿಸಲಿಲ್ಲವೆ ೨
ಎಂದೂ ನಿನ್ನ ಆಜ್ಞೆಯಿಲ್ಲದೆ ಒಂದಾದರು ಚಲಿಸುವುದೆ
ತಂದೆ ತಾಯಿ ಗುರುದೈವ ನೀನೆಂದು ನಂಬಿದೆ ಇಂದಿರೇಶ೩
ಶೃತಿತತಿ ಶಾಸ್ತ್ರ ಪುರಾಣಗಳತಿಶಯದಲಿ ಪೊಗಳುವುದು
ಗತಿ ನೀನೆ ಎಂದನವರತವು ಕಥೆಗಳ ಕೇಳುವುದೇಕೆ ೪
ಗುಣಬದ್ಧನಮಾಡಿ ಎನ್ನ ಕುಣಿಸುವ ನೀನಲ್ಲವೆ
ದಣಿಸುವುದುಚಿತವೆ ಅಗಣಿತ ಗುಣನಿಧಿ  ೫

೧೮೭
ನಿನ್ನ ಪೂಜೆ ಮಾಡುವುದಕನಾನುಕೂಲವು ಪ
ಎನ್ನದೇಹ ಪೋಷಣೆಗೆ ಎಲ್ಲ ಇರುವದು ಅ.ಪ
ತಾನು ಉಡುವುದಕ್ಕೆ ಹೆಚ್ಚುಧನದ ವಸ್ತ್ರವು
ದಾನ ಮಾಡುವುದಕೆ ನೀಚÀತರದ ಅರುವೆಯೂ ೧
ತನ್ನಸತಿಯು ಧರಿಸುವದಕೆ ಸ್ವರ್ಣದೊಡವೆಗಳು
ಘನ್ನಲೋಕ ಮಾತೆಗೆ ಗಿಲೀಟು ನಗಗಳು ೨
ಯಜಮಾನಗೆ ಘೃತದ ಪಕ್ವ ಭಕ್ಷ್ಯ ಭೋಜ್ಯವು
ಇತರ ಜನರಿಗೆಲ್ಲ ಎಣ್ಣೆಕರಿದ ಭಕ್ಷ್ಯವು ೩
ದೇಹ ಸಂಬಂಧಿಗಳಿಗೋಸುಗ ಸಾಲಗೈವುದು
ಶ್ರೀಹರಿ ನಿನ್ನವರು ಕೇಳೆ ಇದ್ದರು ಇಲ್ಲವೂ ೪
ತನ್ನಜನರು ತಪ್ಪುಗೈಯೈ ಮನ್ನಿಸುವದು
ಅನ್ಯಜನರೊಳಿದ್ದಗುಣವು ದೋಷವೆಣಿಪುದು ೫
ಅನ್ಯರಿಗೆ ಆಶಾಶ್ವತವು ತನಗೆ ಶಾಶ್ವತ
ಯನ್ನುತೀ ಪರಿ ತಿಳಿದು ಕೊನೆಗೆ ನರಕ ಹೊಂದುತ ೬
ಇನಿತುಭೇದ ಬುದ್ಧಿಯಿಂದ ಜನರು ಕೆಡುವರು
ಘನಮಹಿಮೆ  ನಿನ್ನ ಮರೆವರು ೭

೩೭
ನಿನ್ನಯ ನಾಮಾಪನ್ನರಿಗೆಲ್ಲಾ ಪ್ರೇಮ ಪ
ಪನ್ನಗ ಶಯನ ಪಾವನ ಚರಿತಅ.ಪ
ವಾಸುದೇವ ಮಾಧವ ದಾಶರಥಿ ಕೇಶವ
ಈಶ ರಮೇಶ ಭವ ಪಾಶ ವಿಮೋಚನ ೧
ಕರಿಧೃವ ಬಲಿರುಕ್ಮಾಂಗದ ಪ್ರಹ್ಲಾದ ದ್ರೌಪದಿ
ವರಚಂದ್ರಹಾಸಾದಿ ಭಕ್ತರÀನೆಲ್ಲ ಪಾಲಿಸಿತು ೨
ಪರಮಾತ್ಮ ಹರಿಕೃಷ್ಣ ಧರಣಿಧರ ಮುಕುಂದ
ವರದ ವರೇಣ್ಯ ಶ್ರೀ ೩

(ನುಡಿ-೧) ವಿಶ್ವತೈಜ ಪ್ರಾಜ್ಞ
೨೨೫
ನೀನಾಗಿ ನಿನ್ನೊಳಗಿರುತಿರುವನ
ಧ್ಯಾನಿಸುತಿರು ಜೀವಾ ಎಲ್ಲ ಅವನ ಸೇವಾ ಪ
ಜ್ಞಾನಿಗಳೊಡನಾಡದೆ ಸಂಸಾರದಿ
ನಾನೆಕರ್ತನೆಂದು ನರಕ ಪೊಂದುವೆ ಯಾಕೆ ಅ.ಪ
ಜಾಗರ ಸ್ವಪ್ನಸುಷುಪ್ತ್ಯವಸ್ಥೆಗಳನು
ಜಾಗುಮಾಡದೆ ನಿರತಾ
ನಾಗಶಯನ ವಿಶ್ವತೈಜ ಪ್ರಾಜ್ಞ
ನಾಗಿನಿನಗೆ ಕೊಡುವನು ಎಂದರಿಯೊ ೧
ಬಿಂಬನವನು ಪ್ರತಿಬಿಂಬನು ನೀನೆಂದು
ಹಂಬಲಿಸುವುದುಚಿತಾ
ಉಂಬುಡುವುದು ಮೊದಲಾದ ಕ್ರಿಯೆಗಳನು
ಅಂಬುಜಾಕ್ಷಗರ್ಪಿಸಿ ಸುಖಿಯಾಗೊ೨
ಆ ಬ್ರಹ್ಮಸ್ತಂಬಾದಿ ಜೀವರೊಳಗೆ
ಸ್ವಾಭಾವ್ಯದಿ ಸತತಾ
ಶೋಭಿಸುತಿಹನವಗಿಲ್ಲ ವಿಭೇದ ಲ-
ಕ್ಷ್ಮೀಭೂರಮಣ ಶ್ರೀನು ೩

೩೯
ನೀನೆ ಅನಾಥ ರಕ್ಷಕ ಪ
ನಿಖಿಲ ದ್ವೈತ್ಯ ಶಿಕ್ಷಕ ಅ.ಪ
ವಿಧಿ ಸೃಷ್ಟಿಯೊಳಿಲ್ಲದ ರೂಪದಿ ದಿತಿ ಸುತನುದರ ಬಗೆದು
ಭೇದಿಸಸುರನ ಮೋದದಲಿ ಕರುಳನು ಧರಿಸಿದೆ ೧
ಶರಣಸುರರ್ತನಗೆನ್ನುತ ಹರಶರಭಾಕೃತಿಯಂಬತಿ
ಘೋರ ಯುದ್ಧದಿ ಧಾರುಣಿಯೊಳಗೆ ಕೆಡಹಿ ತುಳಿದೆ ೨
ಅಷ್ಟಮುಖಭೇರುಂಡನೆಂದು ಸೃಷ್ಟಿಯೊಳ್ ಪ್ರಸಿದ್ಧವಾಯ್ತು
ದಿಟ್ಟಗುರುರಾಮ ವಿಠ್ಠಲ ಪ್ರಹ್ಲಾದವರದ ೩

೩೮
ನೀನೇ ಅನಾಥ ನಾನೇ ಸನಾಥ ಪ
ಜ್ಞಾನಿಗಳಾಡುವರು ಯೀಪರಿ ಮಾತಾ ಅ.ಪ
ನಂಬಿರುವುದೆ ಸುಳ್ಳು ನಂಬಿದಿರುವದೆ ನಿಜ
ಹಂಬಲಿಸಿದರೇನು ತುಂಬುವುದಿಲ್ಲ ೧
ಇಲ್ಲಾ ಎಂಬೋದುಂಟು ಉಂಟೂ ಎಂಬೋದಿಲ್ಲ
ಬಲ್ಲರು ಸರ್ವರು ಬಾಯಿಮಾತಲ್ಲ ೨
ನೀನಿಲ್ಲದಿರೆ ಮತ್ತೆ ನಾನೆಲ್ಲಿರುವೆನು
ಮಾನಾಭಿಮಾನ ನಿನ್ನಧೀನವು ಹರಿಯೇ ೩
ಕಾಣೋದು ಕೇಳೋದು ಮಾಣಾದೆ ಮಾಡೋದು
ನೀನೆ ಯನ್ನೊಳಗಿದ್ದು ನಡೆಸುತ್ತಲಿರುವೆ ೪
ಎನಗೇ ನೀನೆ ತಂದೆ ನಿನಗೇ ತಂದೆ ಕಾಣೆ
ಅನುಮಾನದ ಮಾತಿದಲ್ಲ ಸಿರಿನಲ್ಲ ೫
ನಿನ್ನೊಳಗೆ ಜಗವು ಜಗದೊಳಗೆ ನೀನೆ
ಪನ್ನಗ ಶಯನಾ ಪಾವನ ಚರಿತನೆ ೬
ಸರುವಾರೊಳಗೂ ಗುರುರಾಮ ವಿಠ್ಠಲ
ಪರಿಪೂರ್ಣನೆಂಬೋದು ಪ್ರಹ್ಲಾದ ಬಲ್ಲ೭

೪೦
ನೋಡಿರಯ್ಯ ಈ ರೂಢಿಯ ಜನರೆಲ್ಲಾ
ಮೂಡಲಗಿರಿವಾಸನಾ ವೆಂಕಟೇಶನಾ ಪ
ಬೇಡಿದ ವರಗಳ ಭಕ್ತ ಸಮೂಹಕೆ
ನೀಡುತಲಿ ಕೊನೆಗೆ ನಿಜಪದವೀವನಾ ಅ.ಪ
ಹರಿಬ್ರಹ್ಮರೊಳಾವನುತ್ತಮನೆಂದು
ಪರೀಕ್ಷಿಸೆ ಭೃಗುಮುನಿಯು
ತೆರಳಿಬಂದು ಅಜಹರನೊಪ್ಪದೆತಾ-
ಪರಮಪದಕೆ ಬರಲು
ಅರಿಯದವನ ಪರಿ ಸಿರಿಯ ತೊಡೆಯ ಮೇಲೆ
ಹರಿಮಲಗಿರೆ ಕಂಡು
ಚರಣದಿಂದ ಹೃದಯಕೆ ತಾಡನೆ ಮಾಡಲು
ಪರಮ ಭಕುತಿಯಿಂದ ಋಷಿಯ ಪೂಜಿಸಿದ ೧
ಸಿರಿಕರವೀರಪುರವನೈದಲು
ಹರಿಚಿಂತಿಸಿ ಮನದೊಳಗೆ
ಧರೆಯೊಳು ವೆಂಕಟಗಿರಿಯ ಸಾರುತ-
ಲ್ಲಿರೆ ವಲ್ಮೀಕದಲಿ
ಸರಸಿಜಭವ ಶಿವರು ತುರುಕರುವಾಗಿ ಪಾ
ಲ್ಗರೆಯೆ ವಲ್ಮೀಕದಲಿ
ದೊರೆ ಚೋಳನ ಭೃತ್ಯಗೋವನು ಭಾದಿಸೆ
ಶಿರದೊಳಾಂತು ನೃಪಗೆ ಶಾಪವನಿತ್ತ ೨
ಮನುಜನೋಲ್ ನಟಿಸುತಲಂಬರರಾಜನ
ತನುಜೆಯ ಕೈಪಿಡಿದು
ನೆನೆವರಿಗೆ ತಿರುಪತಿಯೆ ವೈಕುಂಠ-
ವೆನುತ ಸಾರಿ ಒಲಿದು
ಘನಮಹಿಮೆಗಳನು ತೋರಿ ಸಕಲರಿಂ
ಕಪ್ಪಗಾಣೆಕೆಗೊಳುತ
ಗುಣನಿಧಿ ಶ್ರೀ ಈ
ಘಣಿಗಿರಿಯೊಳಗಿರುತಿಪ್ಪ ತಿಮ್ಮಪ್ಪ ೩

ಪಂಚಮುಖಿ ಆಂಜನೇಯ
೧೩೨
ಪಂಚಮುಖಿ ಆಂಜನೇಯ ಅಂಚಿತ ವಿಕ್ರಮನೆ ಪ
ಸಂಚಿತಗಾಮಿ ಕರ್ಮವ ಮುಂಚೆ ಕಳೆದು
ಪೊರೆಯೊಯೆನ್ನ ಅ.ಪ
ದುಷ್ಟರೊಳಗೆ ಸೇರಿಕೊಂಡು ಭ್ರಷ್ಟ ಮಾಡುತಿಹರೈ
ಶ್ರೇಷ್ಠನು ನಾನೆಂಬಜ್ಞಾನವ ಕೊಟ್ಟು ಕೆಡಿಸುವರೈ ೧
ದಾಸ್ಯ ಭಾವವನು ರಹಸ್ಯವಾಗಿ ತಿಳಿಯುವಂತೆ
ಹಾಸ್ಯಗಾರರಾಟ ನಿಲಿಸು ನೀ ಸಲಹಬೇಕು ಎನ್ನಗುರುವೆ ೨
ತಂದೆರಾಮಚಂದ್ರಗಾಗಿ ಮಂದಮತಿ ರಾವಣನ
ಮಂದಿ ಎಲ್ಲವನ್ನು ಕೊಂದು ದಂದುಗಾವ ಬಿಡಿಸಿದೆ ೩
ಸೀತೆಗೆ ಶೋಕಬಿಡಿಸಿ ಪಾತಕ ದಶಕಂಠನ
ಭೂತಗಳ ಪಾಲು ಮಾಡಿಸಿ ಖ್ಯಾತಿಯನ್ನು ಪಡೆದೆ ನೀಂ ೪
ಗುರುಗಳೆಲ್ಲರಿಗೂ ಗುರು ನೀನೆಂದು ನಂಬಿದೆ
ಗುರುರಾಮ ವಿಠಲಗೆ ಪರಮಾಪ್ತ ಹನುಮಂತ ೫

೨೯೭
ಪತಿಯೆ ಪಾಲಿಸು ಎನ್ನ ಪತಿಯೇ ಮೂಲ ಪ್ರಕೃತಿ ಪ
ಪತಿಯೆ ಸದ್ಗತಿಯೆ ಇದನಿತರರಾ ಬೇಡೆ ನಾಂ
ಹಿತಮಾಡುವನು ನೀನು ಸತತಾಯನ್ನಗಲದಿರು ಅ.ಪ
ತತ್ವಾಮಂಗಳದ್ರವ್ಯ ಸಾತ್ವೀಕ ವೃತ್ತಿ ಸಂ
ಪತ್ತಿನೋಳ್ ಹಿಗ್ಗುವ ಮುತ್ತೈದೆಯೆನಿಸೆನ್ನ ೧
ಗುರುಭಕ್ತಿಯೆಂಬ ಭರ್ಜರಿಸೀರೆಯನುಡಿಸಿ
ಅರಿವೆ ಕಂಚುಕ ತೊಡಿಸಿ ಹರುಷದಿ ಕೊಡು ಮುಕ್ತ ೨
ಕಳ್ಳರಿಗೆ ಕಾಣದ ಒಳ್ಳೆ ವಡವೆಗಳಿಟ್ಟು ಚೆಲ್ವನಿ
ನ್ನೊಳು ಬೆರೆಸುನಲ್ಲಾ  ಪತಿಯೆ ೩

೧೧೦
ಪರದೇವತೆ ಪದ್ಮಾವತಿ ಶರಣಾಗತೋದ್ಧಾರಣೆ ಜನನಿ ಪ
ನಿರತವೂ ನಿನ್ನ ಚರಣಕಮಲ ನೆರೆನಂಬಿದೆಕರುಣಾವಾರಿಧೆ ಅ.ಪ
ವೇದಘೋಷೆಯಿಂದ ಉದಿಸಿ ಮೊದಲು ಶ್ರೀಧರನ
ಕೈಪಿಡಿವೆನೆನ್ನುತ
ಮೋದದಿಂದ ತಪವನಾಚರಿಸುತ ಮೂರ್ಖರಾವಣನಿಗೆ
ಶಾಪವಿತ್ತ ೧
ತಾವರೆಯೊಳು ಪುಟ್ಟಿ ಧಾತ್ರಿಯೊಳ್ ಜನಕ
ಭೂವರನಿಗೆ ಮಗಳೆನ್ನಿಸಿ
ದೇವದೇವರಾಮನ ವರಿಸುತ ದಿತಿಜರ ಸಂಹಾರ
ಮಾಡಿಸಿದಾ ೨
ಆಕಾಶ ನೃಪತಿಗಾತ್ಮಜೆಯಾಗಿ ಬೇಕಾದ ವರಗಳ ಭಕ್ತರಿಗೀವುತ
ಲೋಕವರಿಯೆ ಪದ್ಮ ಸರಸಿಯೋಳ್ ನೆಲಸಿದೆ ಭೂಕಾಂತ ಅರಸಿ ೩

೪೧
ಪರಮ ಪುರಷಾ ರಾಘವ ಪಾಲಿಸೊ
ಸುರಮುನಿವರ ಪೂಜಿತ ಪ
ಸರಸಿಜಾಪ್ತವಂಶಾಬ್ಧಿ ಚಂದ್ರಮ ನಿನ್ನ
ಹೊರತು ಪೊರೆವರನ್ಯರ ಕಾಣೆನೊ ಅ.ಪ
ಕಂಜದಳಾಕ್ಷನಿರಂಜನ ಶುಭಕರ
ಆಂಜನೇಯ ಪ್ರಿಯ ಆದರಿಸೈ ೧
ಮೃತ್ಯಪರಿಹರಿಸೆನುತ್ತ ಬೇಡಲು ನಿನ್ನ
ಭಕ್ತಜನರಿಗಭಯ ಕೊಡುವನೆ ೨
ಸಾಮಜವರದ ಮಹಾಮಹಿಮನೆ ನಮ್ಮ
ಸ್ವಾಮಿ ನೀನೆ ಗುರುರಾಮ ವಿಠಲ ೩

೪೨
ಪರಮ ಪುರುಷ ರಘುವೀರ ಪ
ಪಾಹಿಮಾಂ ದಶರಥ ಸುಕುಮಾರ ಅ.ಪ
ದುರಿತ ಸಂಹಾರ ದುರ್ಜನದೂರ
ಅಗಣಿತ ಸುಗುಣ ಗಂಭೀರ ೧
ರವಿಸುತಮಿತ್ರ ರಾಜೀವನೇತ್ರ
ಪ್ರವಿಮಲ ಭವ್ಯಚಾರಿತ್ರ ೨
ಗುರುರಾಮವಿಠ್ಠಲ ಸುರಮುನಿಪಾಲ
ತುಲಸೀಶೋಭಿತ ವನಮಾಲ ೩

೪೩
ಪರಮಾತ್ಮ ಪರಿಪಾಲಿಸೆನ್ನಾ
ದೊರೆಯೆಂದು ನಂಬಿದೆ ನಿನ್ನ ಪ
ಇರುವೇ ಮೊದಲು ವಿಧಿ
ಪರಿಯಂತವು ಪ್ರಾಣಿ
ಹೊರಗೊಳಗೆ ವ್ಯಾಪಿಸಿರ್ಪ ಅ.ಪ
ಯಾರು ಬಲ್ಲರೋ ನಿನ್ನಾ
ಪಾರ ಮಹಿಮೆಯನ್ನ
ಶ್ರೀನಾರಾಯಣ ಸುಪ್ರಸನ್ನಾ ೧
ದಾಸರನೆಲ್ಲಾ
ಪೋಷಿಸಬಲ್ಲಾ
ಈಶನೀನಲ್ಲದಿನ್ನಿಲ್ಲಾ ೨
ಕರಿವರದನೆಂದು
ಮರೆ ಹೊಕ್ಕ್ಕನಿಂದು | ಶ್ರೀ  ಬಂದು ೩

ಜ್ವರ ಪೀಡಿತನಾದ ಬಾಲಕನೊಬ್ಬನಿಗೆ
೩೩೪
ಪರಮಾನುಗ್ರಹ ಮಾಡು -ಈ
ತರಳನ ದಯದಿಂ ನೋಡು ಪ
ಜ್ವರದ ಪೀಡೆಯಂ ಮಂಕಾಗಿರುವನು
ನರಹರಿ ನೀನಲ್ಲವೆ ಕರುಣಾಳು ಅ.ಪ
ಅನ್ನ ಸೇರಲಿಲ್ಲವಂತೆ -ಮಲಗಿ
ನಿನ್ನಿಂದಲಿ ಹೀಗಿಹನಂತೆ
ಘನ್ನಮಹಿಮ ನಿನ್ನವರಿಗೆಲ್ಲ -ಈ
ಬನ್ನ ನ್ಯಾಯವೆ ಪ್ರಸನ್ನ ನೃಸಿಂಹ ೧
ತುಡುಗಾಟಗಳಾಡಿ ಬಳಲಿ -ಈ
ಹುಡುಗ ಮನೆ ಮನೆಯ ತೊಳಲಿ
ಕಡುಭೀತಿಯ ಹೊಂದಿರುವ ನಾವು ನಿ-
ನ್ನೊಡವೆಯಲ್ಲವೆ ಒಡೆಯ ನರಹರಿಯೆ ೨
ಔಷಧ ಪಥ್ಯಗಳೇಕೆ -ನಿ
ರ್ದೋಷ ನೀನೊಳಗಿರಲಿಕ್ಕೆ
ಶೇಷಶಯನ
ಪೂೀಷಿಸುವನು ನೀನೆ ನೀನೆ ನಿಜ೩

ಬ್ರಹ್ಮದೇವರು
೧೨೫
ಪರಮೇಷ್ಠಿ ನಿನ್ನನಾ ಸ್ಮರಿಸುವೆನನುದಿನ
ಕರುಣದಿಂದ ಅಭಯವಿತ್ತು ಕಾಯೊ ಎಂದೆ ನಾ ಪ
ಸೃಷ್ಟಿ ಕರ್ತನೆ ಜಗಕೆ ವಸಿಷ್ಠನಯ್ಯನೆ
ಶ್ರೇಷ್ಠ ಮದ್ಯಮಾಧಮರಿಗಭೀಷ್ಟ ಕೊಡುವನೆ ೧
ಹಿರಣ್ಯಗರ್ಭನೆ ಸುರಾಸುರೇಶನೆ
ಸರಸ್ವತಿ ಮನೋಹರನೆ ದಯಾ ಸಮುದ್ರನೆ ೨
ನಾ ನೆರೆ ನಂಬಿದವರನಾ
ಪರಮ ಸುಖದೊಳಿಟ್ಟು ಮುಕ್ತಿ ಪಥವ ತೋರ್ಪನಾ ೩

೪೪
ಪರಶುರಾಮದೇವಾ ನೀನೆ ದುರಿತ ವಿಪಿನ ದಾವಾ ಪ
ದರುಶನ ಮಾತ್ರದಿ ಭವರೋಗವಪರಿ
ಹರಿಸಿ ಕೈಪಿಡಿವ ಕರುಣಾನಿಧಿಯೆ ಅ.ಪ
ಜಮದಗ್ನಿಕುಮಾರಾ ನಿನ್ನನು
ಕ್ರಮದಿಭಜಿಸುವವರಾ
ಸಮವಿರಹಿತ ಉತ್ತಮ ಪದವಿಯೊಳಿ
ಟ್ಟಮಿತ ಸುಖಪಡಿಸಿ ಆದರಿಸುವೆ ಸದಾ ೧
ನಿನ್ನಮಹಿಮೆಯನ್ನು ಅರಿಯದ
ಕುನ್ನಿಪಾಮರನಾನು
ಬನ್ನಬಡುವೆನು ಭವಾರ್ಣವದೊಳುಯೆನ್ನ
ಜನ್ಮಜನ್ಮದಘವನ್ನು ಬಿಡಿಸಿ ಕಾಯೊ ೨
ಗರಳಪುರದದೊರಿಯೆ ನಿನ್ನ ಸಂ
ಸ್ಮರಣೆ ಕೊಡೊ ಹರಿಯೆ
ಸರಸಿಜಭವ ಶಿವ ಮುಖ ಸುರವಂದಿತ
ಪರಮ ಪುರುಷ ಶ್ರೀ ಗುರುರಾಮ ವಿಠಲ ೩

೨೨೬
ಪರಸೌಖ್ಯವಿದೆ ಮಾನವ ನಿನಗೆ ಪ
ನಿರತಂ ಹರಿಪಾದ ಭಜನೆ ಅ.ಪ
ಸುಜನಂಗಳ ಸಂಗದಲೀ | ಬೆರೆಯುತಲಿ
ನಿಜರಾಜಯೋಗದಲಿ
ಗಜರಾಜರಕ್ಷಕನೇ ಹರಿ ಪೊರೆಯೆಂಬುವುದು ೧
ಶರಣಾರ್ತಿಭಂಜನಾಯೆನುತಾ | ಹರುಷಿಸುತ
ಗುರುವಾಕ್ಯವನು ನಂಬಿ
ವರಭಕ್ತಿಯಿಂ ರೋಮಾಂಚನದಿ ಕುಣಿದಾಡುವದು ೨
ಹೇಮಭೂಮಿ ಕಾಮಿನೀಯರನು | ಕೋರದಲೇ ತಾ
ಕ್ಷೇಮಿಯಾಗುತ್ತಾ ಗುರು-
ರಾಮವಿಠಲನೇ ದೊರೆ ನಮಗೆಂಬುವದು ೩

೪೬
ಪರಾತ್ಪರಾ ಕೃಪಾ ಸಮುದ್ರ ಪಾಹಿಮಾಂ ಸದಾ ಪ
ಸರೋಜ ಸಂಭವಾದಿವಿನುತ ಸುಜನ ಸೌಖ್ಯದಾ ಅ.ಪ
ಅನಂತರೂಪ ಅಪ್ರಮೇಯ ಆದಿಕಾರಣಾ
ಸನಂದನಾದಿ ಮೌನಿಸೇವ್ಯ ಜಗನ್ಮೋಹನಾ ೧
ಖರಾದಿ ದನುಜ ಭಂಜನ ನವ ಕಂಜ ಲೋಚನಾ
ಸರಿಸೃಪಾಧಿಪಶಯನ ಶಿವ ಚಾಪಖಂಡನಾ ೨
ಧರಾತ್ಮಜಾ ಮನೋಹರ ನಿಜ ದಾಸ ಪೋಷಕಾ
ಗುರುರಾಮ ವಿಠಲ ಕುಶಿಕಪುತ್ರ ಯಾಗ ರಕ್ಷಕಾ ೩

೪೫
ಪರಾತ್ಪರಾಮಾಂಪಾಹಿ ಸುಖಪ್ರದ
ಪದ್ಮಸಂಭವಾದ್ಯಮರ ವಿನುತ ಪದ ಪ
ಸರೋಜದಳನಿಭಲೋಚನ ಭವ ಹರ
ಸರ್ವಜೀವ ಹೃದ್ವನಜ ನಿವಾಸಿ ಅ.ಪ
ಕ್ರೂರದನುಜ ಕಾನನ ವಿಚ್ಛೇದ ಕುಠಾರ
ಗಂಭೀರ ಸುಗುಣದಾರ ಸುವಿಚಾರಧೀರ | ರಘು
ವೀರ ಧರಣಿಜಾ ಚಿತ್ತಚೋರ ನೃಪವರ
ಕರುಣಾಕರ ದಿನಕರ ಕುಲಮಣಿ ಜನ ವರ ಶುಭಕರ೧
ಖರವಿದಾರ ಕಲಿ ಕಲ್ಮಷನಾಶನ ನಾಮ
ಶ್ರೀಕರ ಸುಂದರ ಶ್ಯಾಮ
ಭಾಸುರ ಶರೀರ ಸಂಪೂರ್ಣ ಕಾಮ ತುಳ-
ಸೀದಳಧಾಮ ವಿಭೀಷಣ ಪ್ರೇಮ ೨
ಮೀನ ಕಮಠ ಕಿಟ ನರಹರಿ ವಾಮನರೂಪ
ಭಾರ್ಗವ ಕರಧೃತ ಚಾಪ
ಸುಜ್ಞಾನದೀಪ ವಸುದೇವ ತನಯ
ಜಿನ ಜಾತ ಕಲ್ಕಿ ಗುರುರಾಮ ವಿಠಲ ೩

೧೨೬
ಪರಿಪಾಹಿ ಪದ್ಮಸಂಭವ | ದೇವ ದೇವ ಪ
ಪರಿಪಾಹಿ ಪದ್ಮಸಂಭವ ಸರಸ್ವತಿದೇವಿಧವ
ಕರುಣಾಂಬುನಿಧೆ ತವ ಚರಣವನ್ನು ನಂಬಿದವರ ಅ.ಪ
ಸೃಷ್ಟಿಸ್ಥಿತಿಲಯವ ನಿನ್ನಿಷ್ಟದಂತೆ ಮಾಡಿ ಪರ-
ಮೇಷ್ಟಿ ಪದದಲಿ ಬಹು ಶ್ರೇಷ್ಠನಾಗಿ ಶೋಭಿಸುವ ೧
ಮೂರುಲೋಕಗಳಿಗೆ ಆಧಾರ ನೀನೆ ಎಂದು ನಿನ್ನ
ಸೇರಿ ಭಜಿಸುವರಿಗೆ ಸಾರ ಸುಖವ ಕೊಡುವ ದೇವ ೨
ಸುರಾಸುರರೊಡೆಯನೆ ವರಮುನಿವಂದಿತನೆ
ನ ಬಸುರೊಳು ಬಂದವನೆ೩

೪೭
ಪಾಂಡುರಂಗ ವಿಠಲೇಶ್ವರಾ ಪಾಹಿಮಾಂ
ರುಕುಮಾಯಿ ಮನೋಹರಾ ಪ
ಪುಂಡರೀಕ ವರದಾಂತ ಜಗಮನ ಮೃಕಂಡು ಸುತ
ಪ್ರಿಯಾಖಂಡ ತೇಜ ಅ.ಪ
ಇಷ್ಟಭಕುತ ಪ್ರೀತಿಯಿಂದ ನಿನಗೆ ಕೊಟ್ಟ
ಇಟ್ಟಿಗೆ ಮೇಲೆ ನೆಲಸಿರುವ ದೇವ ೧
ಮರೆತಾದರು ಸಂಸ್ಮರಿಸುವಜನರಘ
ಪರಿಹರಿಸುವೆನೆಂಬ ಬಿರುದು ಕಟ್ಟ್ಟಿಹ ೨
ಭೂವಲಯದಿ ನೂತನಾವರಣ ಪುರದಿ
ದೇವ ಗುರುರಾಮ ವಿಠಲನೆಲಸಿದೆ ೩

(ನುಡಿ-೧) ಪದದಿ ಚಲುವ ಗಂಗೆಯ ಪಡೆದವನು
೯೩
ಪಾದ್ಯವಾನು ಕೊಡುವುದು ಹ್ಯಾಗೆ
ಪರಮಪುರುಷ ನಿನಗೆ ಪ
ಅನಾದ್ಯನಂತ ಕಾರಣ ಸರ್ವತ್ರ ತುಂಬಿರುವಗೆ ಅ.ಪ
ಬಲಿಯ ದಾನವ ಬೇಡುವ ಕಾಲದಿ
ನೆಲನಯೀರಡಿಯ ಗೈದು
ತಳತಳಿಸುವ ದಿವ್ಯ ಪದದಿ
ಚೆಲುವ ಗಂಗೆಯ ಪಡೆದವನಿಗೆ ೧
ಅನೇಕ ಪಾದಗಳೆಂದು ನಿನ್ನ
ಅನುತಿಹವು ಶ್ರುತಿ ತತಿಗಳು
ಅವಧಿಕಾರಿಯಾದ ಮೂಢ
ನಾನು ಅಲ್ಪಮತಿಯು ಸ್ವಾಮಿಯೇ ೨
ಮೌನಿ ಸತಿಯಳ ಶಾಪ ಬಿಡಿಸಿದ ಪಾದಕ್ಕೆ
ಮೌನಿಗಳಿಗಾಧಾರವಾದ ಪಾದಕ್ಕೆ
ವನಜದಳವ ಪೋಲ್ವ ಚೆಲುವ ಪಾದಕ್ಕೆ
ದನುಜರಿಪು ಗುರುರಾಮ ವಿಠಲ ಪಾದಕ್ಕೆ ೩


ಪಾಲಿಸೊ ಎನ್ನ ಗಣಪತಿಯೆ ಪ
ಆಲಿಸು ಎನ್ನ ವಿಜ್ಞಾಪನೆಯನು ನೀಂ ಅ.ಪ
ಮೂಷಿಕವಾಹನ ಮುನಿಜನ ಪೋಷಣ
ಶೇಷಾಭರಣ ವಿಶೇಷ ಮಹಿಮನೆ ೧
ಅಂಬಾಸುತ ಹೇರಂಭ ನಿನ್ನಯ ಪಾ-
ದಾಂಬುರುಹವ ನೆರೆ ನಂಬಿದೆ ಜೀಯ ೨
ಸ್ಮರಣೆ ಮಾಡುವುದಕೆ ನಿರ್ವಿಘ್ನತೆ ಕೊಡು ಕರುಣವಾರಿಧಿಯೆ೩

೧೦೧
ಪೂಜಿಸ ಬಲ್ಲೆನೆ ನಾನು ನಿನ್ನಂಘ್ರಿಯ
ರಾಜೀವದಳ ನಯನ ಪ
ರಾಜರಾಜಾನುಜ ಭಂಜನ ಭವ ದೂರ
ರಾಮಚಂದ್ರ ಸೀತಾ ಹೃತ್ಕುಮುದ ಚಂದ್ರ ಅ.ಪ
ಪಾರಿಜಾತ ಪುನ್ನಾಗ ಬಕುಳ ಮಂ-
ದಾರ ಮಲ್ಲಿಕ ಕೇತಕೀ-
ಸಾರಸ ಜಾಜಿ ಚಂಪಕ ತುಳಸಿಯುಕರ-
ವೀರವೇ ಮೊದಲಾದ ದಿವ್ಯ ಪುಷ್ಪಗಳಿಂದ ೧
ವಿಶ್ವಾದಿ ಸಾಹಸ್ರನಾಮಂಗಳಿಂ ನಿನ್ನ
ಶಾಶ್ವದ್ರೂಪವ ತಿಳಿದು
ಅಶ್ವಮುಖಾನಂದಮಯ ಪರಮಾತ್ಮ ನಿ-
ನ್ನರ್ಚಿಸುವಡೆ ಚಪಲ ಚಿತ್ತಗೆ ಸಾಧ್ಯವೆ ೨
ಮೇರು ಸಿಂಹಾಸನ ಸೂರ್ಯ ಚಂದ್ರರು ದೀಪ
ನೀರೆಲ್ಲ ಅಭಿಷೇಕವೂ
ತೋರೂವದಿಗ್ವಸ್ತ್ರ ಪೃಥ್ವಿಗಂಧವು ಸರ್ವ
ಸಾರ ಭೋಕ್ತಗೆ ಗುಣಗಳ ತಾಂಬೂಲಾದಿಗಳಿಂದ೩
ಹೃದಯ ಕಮಲ ನಿನ್ನ ಸದನ ಹಂಸಾಖ್ಯ ಕು-
ಡಿದ ನೀರು ಅಭಿಷೇಕವೂ
ಮುದದಿ ನಿತ್ಯದಿ ಉಂಬುವುದೆ ನೈವೇದ್ಯವು ಪ್ರತಿ
ಪದ ಪ್ರದಕ್ಷಣೆ ಮಲಗುವದೆ ವಂದನೆಯೆಂದು ೪
ಒಂದು ಅರಿಯದ ಉಭಯಾಂಧನು ನಾನು ಗೋ-
ವಿಂದ ನಿನ್ನಯ ಭಕ್ತಾರಾ
ಸಂದೋಹದೊಳಗಿಟ್ಟೆನ್ನರ್ಚನೆ ಕೈಕೊಂಡು
ತಂದೆ ಪಾಲಿಸೋ ಗುರುರಾಮ ವಿಠಲ ಸ್ವಾಮಿ ೫

೧೧೧
ಪೂತ ಚರಿತೆ ಭೂಮಿಜಾತೆ ಸೀತಾದೇವಿಯೇ ಪ
ಪಾತಕಗಳ ಕಳೆದು ಯಮ್ಮನು ಪಾಲಿಸು ತಾಯೆ ಅ.ಪ
ತಾವರೆಯೊಳಗುದಿಸಿ ಮೊದಲು
ದೇವ ವೈರಿಯ ಕೈಯಲಿ ಸೇರಿ
ಭೂವರ ಜನಕರಾಯಗೊಲಿದೌ
ಭೂವಿವರದೊಳಿಡಲು ಮಾಯದಿ ೧
ಶಿಶುಪಾಲಂಗೆ ಕೊಡಬೇಕೆನುತ
ಅಸುರ ರುಕ್ಮಿಯತ್ನಗೈಯಲು
ವಸುಧೆ ಸುರನಿಂದೋಲೆ ಕಳುಹಿಸಿ
ಬಿಸಜಾಕ್ಷ ಕೃಷ್ಣನೊಲಿಸಿ ಕೈಪಿಡಿದೆ ೨
ಶರಧಿರಾಜನ ಮಗಳೆ ಚಂದ್ರಸೋ
ದರಿ ಮಾಂ ಪಾಹಿ ಪರಾಶಕ್ತಿಯೆ
ಗುರುರಾಮ ವಿಠಲನರ್ಧಾಂಗಿಕರುಣಿಸಮ್ಮ ಕೃಪಾ ಪಾಂಗಿ ೩

೨೯೮
ಪ್ರಣವ ಪ್ರತಿಪಾದ್ಯನು ಶ್ರೀನಾರಾ-
ಯಣನೊಬ್ಬನೆ ಧ್ಯೇಯನುಜಗಕೆ ಪ
ತೃಣವಾದರು ಕದಲದು ಅವನಿಲ್ಲದೆ
ಎನುತ ಪೊಗಳುವದು ಶೃತಿ ತತಿಯೂ ಅ.ಪ
ಮೊದಲು ಮಧ್ಯಕಡೆ ನೋಡಲು
ನಿಸ್ಸಂಶಯವಾಗಿರುವುದು ಸದ್ಭೋಧೆ
ಮೊದಲು ಮಧ್ಯಕಡೆ ಗೊತ್ತಿಲ್ಲದಲೆ ಅಪಾರ್ಥ
ಪೇಳುವದು ದುರ್ಬೋಧೆ
ಸದಮಲರಾವಾಗುವೆವೆಂಬುದು ರಾಜಸ
ಜೀವರಿಗೊಂದೇ ವೇಧೆ
ತುದಿಗೆ ಎರಡು ಗುಂಪಿನವರನು ವಿಚಾರಿಸಿ
ಮಾಳ್ಪೆನು ಕಾಲನು ಬಾಧೆ ೧
ತಾಯಿ ಒಬ್ಬಳಿಗೆ ಮಕ್ಕಳು ಮೂವರು ತತ್ವವಿದೇ ನಿಶ್ವಯ ದಾರಿ
ನ್ಯಾಯ ಕಲಿ ಪುರಂಜನ ಬ್ರಂಹ್ಮರು
ಇವರಾಯತವಿವರಿವರಿಗೆ ಬಾರಿ
ದಾಯ ಭಾಗ ತಮಗುಂಟೆಂದಾಡುವರ್ದೈತ್ಯರು
ತಮ್ಮೊಳು ತಾವ್‍ಹೋರಿ
ರಾಯರ ಬಲವಿಲ್ಲದವರಿಗೆ ಬರಿದೆ ರಾದ್ಧಾಂತ ಪರಸ್ಪರ ಸೇರಿ ೨
ತಾಮಸ ಜೀವರ ಮತ ಸರಿಯೆಂಬುದು
ನೇಮವಾಗಿ ವೇದದೊಳಿಲ್ಲ
ಕಾಮುಕರಿಗೆ ಸದ್ಭೋಧೆ ಪೇಳುವದು
ಖಂಡಿತವಾಗಿ ಉತ್ತಮವಲ್ಲ
ಪಾಮರರಾಗಿಹ ಮಧ್ಯಮಜನ ಸಂಪಾದಿಸಿದರೆ ದಕ್ಕುವದಿಲ್ಲ
ಸ್ವಾಮಿಯಾದ ಶ್ರೀ  ತಾನೀ
ಮೂವ್ವರ ಮರ್ಮವು ಬಲ್ಲಾ ೩

೧೫೦
ಪ್ರದೋಷಕಾಲವಿದೀಗ ನೀ ಮರೆ-
ಯದೇ ನೆನೆಯೊ ಶಿವನಾ ಶಂಕರನಾ ಪ
ಸದಾ ಸಕಲ ಸುರರಿಂದ ಕೂಡಿ ತಕ
ತಧಿಂ ಎನುತ ಕುಣಿಯುವ ಶಿವನೀಗಲೂ ಅ.ಪ
ತಂಬೂರಿ ವೇಣು ವೀಣಾ ತಾಳ ಮೃಂದಂಗಾದಿ
ಸಕಲ ವಾದ್ಯಗಳೂ
ಸಂಭ್ರಮದಿಂ ನಂದಿ ಭೃಂಗಿಗಳು ಶಿವ
ಶಂಭೋ ಎಂಬ ಸುವಾದಗಳೂ
ರಂಭಾದ್ಯಪ್ಸರರೂ ಪಾಡುತಿರೆ
ತುಂಬುರ ನಾರದರೂ ನುಡಿಸಿ ಹೇ-
ರಂಬ ಜನಕ ವಿಶ್ವಂಭರ ಎಂದು ದಿ-
ಗಂಬರನಾಗಿ ಚಿದಂಬರ ಕುಣಿಯುವ ೧
ಭೂತಿಯನು ಪೂಸಿ ಮೈಯ್ಯೊಳುರಗಗಳ
ಭೂಷಣಗಳ ಮಾಡಿ
ಪ್ರೀತಿಯಿಂದ ಗಜಚರ್ಮ ಪೊದ್ದು ತಾ
ಭಿಕ್ಷವನೂ ಬೇಡಿ
ಪಾತಕಗಳ ಕಳೆದೂ ಜೀವರಿಗೆ
ತಾತನಾಗಿ ಮೆರೆದು ಹಿಮ ಶೈಲ-
ಜಾತೆ ಸಹಿತ ಪ್ರಖ್ಯಾತನಾಗಿ ಭವ-
ಭೀತಿ ಬಿಡಿಸಿ ದುಃಖೇತರ ಕೊಡುವನು ೨
ಗಿರಿರಾಜಕುಮಾರಿ ಕೈಮುಗಿದು ತನಗರುಹು ತತ್ವವೆನಲು
ಪರಮ ಹರುಷದಿಂದ ನುಡಿದ ದೇವಗೆ ಸುರರು ಭಲಾ ಎನಲು
ಪರಮ ಗುಣಸಾಂದ್ರ | ಕೇಳು ದಿನ-
ಕರಕುಲಾಬ್ಧಿ ಚಂದ್ರ | ರಘುವರ
ಪರಾತ್ಪರನು ಶ್ರೀ
ವರತಾರಕ ಮಂತ್ರವಿದೇ ಎಂದನು ೩

೨೬೯
ಪ್ರಸ್ತದ ವಿಚಾರವು
ಶಿಸ್ತಿಗೆ ಅಲಂಕಾರವು ಪ
ಗೃಹಸ್ಥರಲ್ಲಿ ವ್ಯಾಜ್ಯವು
ನಾಸ್ತಿ ಭಕ್ಷ್ಯ ಭೋಜ್ಯವು ಅ.ಪ
ಭಾರಿ ಬಾಳೆಲೆ ಹಾಕುತ
ನೂರಾರುಜನರ ಕರೆಸುತ
ಹಾರಿ ಹಾರಿ ಕುಣಿಯುತ
ನೀರು ತುಪ್ಪ ಬಡಿಸುತ ೧
ಹಪ್ಪಳ ಮುರಿದು ಹಾಕಿಸಿ
ಅತಿಥಿಗಳನು ನೂಕಿಸಿ
ತುಪ್ಪದ ಸೌಟು ತೋರಿಸಿ
ಉಪ್ಪು ಚಟ್ನಿ ಹೆಚ್ಚಿಸಿ ೨
ಮೂರು ಗಂಟೆಯೂಟವು
ಮೂಢತನದೋಡಾಟವು
ವೋರೆ ವೋರೆ ನೋಟವು
ಸಾರು ಅನ್ನಾ ಕಾಟವು ೩
ಎಣ್ಣೆ ವಗ್ಗರಣೆ ಎಲ್ಲಕು
ಅನ್ನ ಹೊತ್ತಿ ಇರುವುದು
ದೊನ್ನೆಯಿಲ್ಲ ತುಪ್ಪಕೆ
ಸನ್ನೆ ಸೈಯಿಗೆಯೇ ಬಲ ೪
ಸಾಲದಡಿಗೆ ಕಾಯಿಪಲ್ಯ
ಬೇಯಲಿಲ್ಲ ವೊಂದಾದರು
ರಾಯ  ಬಲ್ಲ ಉ-
ಪಾಯಗಾರರು ಬೀಗರು ೫

೧೩೩
ಪ್ರಾಣದೇವ ಚಿತ್‍ಸ್ವಭಾವ | ಕಾಣೆ ನಿನಗೆಣೆ ಪ
ಏಣಾಂಕಧರ ಪ್ರಮುಖ ಗೀರ್ವಾಣರಿಗತಿ ಪ್ರಿಯ ನೀನೆ
ಜಾಣ ಭಕ್ತಧುರೀಣ ತ್ರಿಜಗ ತ್ರಾಣ ಗುರುವರ ಅ.ಪ
ಮುಖ್ಯ ಪ್ರಾಣನೆಂದು ನಿನ್ನ ಅಕ್ಕರೆಯಿಂ ರಾಮ ಕರೆಯೆ
ಮಿಕ್ಕಾಮರರಿಗೀ ಭಾಗ್ಯವುಂಟೇ ಮಿಹಿರಜಾಮಾತ್ಯ ೧
ಧೀರತೆ ಪೌರುಷ ವಿಕ್ರಮ ದಾರಿಗಿಹುದೆಂದ್ಯೋಚಿಸುತ
ಧಾರುಣಿಜೆ ರತ್ನದ ಹಾರ ನಿನ್ನ ಕೊರಲಿಗೆ ಹಾಕಿ ಪರಸಿದಳ್ ೨
ಶ್ರೀ ಗುರುರಾಮ ವಿಠಲನು ಭಾಗವತಾಗ್ರಣಿ ನೀನೆನುತೆ
ರಾಗದಿ ಸತಿಸಹ ತತ್ವೋಪದೇಶವಾಗ ಕೊಟ್ಟನು ೩

೧೮೮
ಪ್ರಾಣದೇವ ಜೀಯ್ಯಾ ದೇಹದಲಿ
ತ್ರಾಣ ತಗ್ಗಿತಯ್ಯಾ ಪ
ಕಾಣೆ ಕಾಯುವರ ನೀ ಕೈ ಬಿಟ್ಟರೆ
ಜಾಣರಾಮ ಕಾರ್ಯಧುರೀಣ ಗುರುವೇ ಅ.ಪ
ಕಾಲು ನೋಯುತಿಹುದು ಕೈಸೋತು
ಬೀಳಾಗಿರುತಿಹುದು
ಕಾಲಮೃತ್ಯುಬಹ ಕಾಲದಲ್ಲಿ ಗೋ
ಪಾಲನ ಸ್ರ‍ಮತಿ ಕೊಡು ಜಾಲವ ಮಾಡದೆ ೧
ಜನರ ಬೇಡಲಾರೆ ನಿನಗಿದು
ವಿನೋದವೇನೋ ದೊರೆ
ಅನುದಿನದಲಿ ದುರ್ಜನರರಿಯದೆಯಿವ
ಧನಿಕನೆನ್ನುತಲಿ ಗೊಣಗಿ ಕೊಂಬುವರು ೨
ವರುಷವೈವತ್ತಾರು ಕಳೆದಿತು
ಪರಿಪಾಲಿಪರ್ಯಾರು
ಕರವಪಿಡಿದು ಶ್ರೀ ನ
ಚರಣವ ತೋರಿಸಿ ದುರಿತವ ಕಳೆಯೈ ೩

೧೭೧
ಪ್ರಾಣಪತೇ ಗುರುವರೇಣ್ಯಾಗ್ರಗಣ್ಯ ಪ
ಕಾಣೇ ನಿನಗೆ ಸರಿಜಾಣರ ತ್ರಿಜಗದೊಳು ಅ.ಪ
ರಾಮಕೃಷ್ಣ ವೇದವ್ಯಾಸ ನೀ ಮೂರವತಾರದಿ
ಪ್ರೇಮದಿ ಮಾಡಿದೆ ನಿಷ್ಕಾಮ ಮಾರ್ಗಸ್ಥಾಪಕನೆ ೧
ಪ್ರೇರಕ ಪ್ರೇರ್ಯನು ಶ್ರಿ ನಾರಾಯಣನೆಂಬೋ ಮತ
ಧಾರಾಳವಾಗಿ ನಿಲ್ಲಿಸಿ ಕ್ರೂರರೆದೆಯವೊಡೆದೆ ೨
ನಿನ್ನ ನಂಬಾದವ ಬನ್ನಬಡುವ ಭವದಿ
ಚೆನ್ನನ್ನ ಮಚ್ಚಿಸಿದೆ ಧೀರಾ ೩

ಬಂಡಿ ಹೋಗುವುದೀಗ
೩೦೦
ಬಂಡಿ ಹೋಗುವುದೀಗ | ನಮ್ಮೂರಿಗೆ
ತಿಂಡಿಯಾಗಲಿ ಬೇಗ ಪ
ಪುಂಡರೀಕಾಕ್ಷನ ಭಜನೆಯ ಮಾಡುತ
ತೊಂಡರೊಡನೆ ಕೂಡಿ ತ್ವರಿತದಿ ಹೊರಡೋಣ ಅ.ಪ
ಅನ್ನಸಾರೆರಡೇ ಬೇಕು | ಮಿಕ್ಕಾದ್ದೆಲ್ಲಾ
ನಿನ್ನೆ ಉಂಡದ್ದೇಸಾಕು
ಹನ್ನೊಂದು ಗಂಟೆ ಹೊತ್ತಿನೊಳಗೆ ಅಡಿಗೆಯ
ಮಾಡಿ ಹರಿದಾಸರ ಕೂಡಿ ಆ ವೂರಿಗೆ ಹೋಗೋಣ೧
ಚಿತ್ರಾನ್ನವ ಕಲಿಸಿ | ಬುತ್ತಿಯ
ಕಟ್ಟಿ ಪಾತ್ರೆಯೊಳಗಿರಿಸಿ
ರಾತ್ರೆಗೆ ಹಸಿವಾಗದಂತೆ ಭೋಜನ ಮಾಡಿ
ಜಾತ್ರೆ ನೋಡುವುದಕ್ಕೆ ಜನರು ಮಿತ್ರರು ಸಹ ೨
ತುಪ್ಪ ಹೆಚ್ಚಾಗಿರಲಿ ಬೇಕಾದರೆ
ಉಪ್ಪಿನಕಾಯಿ ತೆಗಿಯಲಿ
ಹಪ್ಪಳ ಸುಟ್ಟು ನಮ್ಮಪ್ಪ ಗುರುರಾಮ ವಿಠ-
ಲ್ಪಪನ ನೆನೆಯುತ ಚಪ್ಪಾಳೆ ತಟ್ಟುತ ೩

ತಿರುಪತಿ ಯಾತ್ರೆಗೆ ಭಕ್ತರ ಆಗಮನ
೩೩೫
ಬಂದರು ಹರಿದಾಸರು ಅಲ್ಲಿ |
ಗೋವಿಂದನಾಮವ ನೆನೆಯುತಲಿ ಪ
ಬರುತಿಹರೂ ಹರುಷಿಪರೂ
ತಿರುಪತಿಯಾತ್ರೆಗೆ ಹೋಗುವರು ೧
ತಾಳದಲೀ ಮೇಳದಲೀ ಶ್ರೀ
ಲೊಲಾಯೆನ್ನುತ ಕುಣಿಯುತಲಿ ೨
ನೇಮದಲೀ ಪ್ರೇಮದಲೀ ಗುರು
ರಾಮವಿಠಲ ಸಲಹೆನ್ನುತಲಿ ೩

೨೯೯
ಬಡವರೆಲ್ಲ ಬದುಕಿ ಸುಖದಲಿ ಬಹುಕಾಲ ಪ
ಬಡವರೆಲ್ಲ ಸುಖದಲಿ ಜಗ
ದೊಡೆಯ ಸಿರಿಮಡದಿಯರಸನ
ಕಡುಕರುಣಕೆ ಪಾತ್ರರಾಗಿ
ದೃಢದಿ ಬಾಳಿ ಸಡಗರದಲಿ ಅ.ಪ
ಭಿಕ್ಷವಾದರು ಕೂಲಿಯಾದರು
ಕುಕ್ಷಿಗಾಗಿ ಗೈದು ಬಂದುದು
ಲಕ್ಷವೆಂದು ತಿಳಿದು ನಮ್ಮ
ಲಕ್ಷ್ಮಣಾಗ್ರಜನಾಜ್ಞೆಯೆಂದು ೧
ಮಾನರಕ್ಷಣೆಗೆ ವಸ್ತ್ರವುಟ್ಟು
ಪ್ರಾಣಧಾರಣೆಗನ್ನ ಭುಜಿಸಿ
ನಾನು ಎಂಬ ಮಮತೆ ಬಿಟ್ಟು
ಜ್ಞಾನರತ್ನವ ಸಂಗ್ರಹಿಸುತ ೨
ತೆಗೆಯದಾಭರಣಗಳನು
ಮಿಗೆ ಧರಿಸುತ ಮೋದದಿಂದ
ಭಗವದ್ಧ್ಯಾನ ಪದಕ ಹೊಳೆಯೆ
ಜಗದ ಜನಗಳಂತೆ ನಡೆಯದೆ ೩
ಯೋಗಿಗಳನು ನೋಡಿ ಹಿಗ್ಗಿ
ಭೋಗಿಗಳನು ನೋಡಿ ತಗ್ಗಿ
ತ್ಯಾಗ ಬುದ್ಧಿಯುಳ್ಳವರಾಗಿ
ಭಾಗವತರಾಚರಣ ಪಿಡಿದು ೪
ಪರರ ಸ್ವತ್ತಿಗಾಸೆಪಡದೆ
ಪರಗತಿ ಸಂಪಾದನೆಯಲಿ
ನ ನಂಬಲು
ಎರೆಡು ಸುಖವು ಕರಗತವೈ ೫

೨೨೮
ಬರಿದೆ ಕಾಲಕಳಿಯ ಬ್ಯಾಡ
ದುರುಳ ಮಾನವಾ ಪ
ನರರು ಹಿಂದೆ ಪಟ್ಟಪಾಡು
ಮರವರೇಜೀವಾ ಅ.ಪ
ಝಷದ ತೆರದಿ ಬಾಯಿ ಬಿಡುವೆ
ವಿಷಯದಾಸೆಯೋಳ್
ವಿಷಮ ಸಂಸಾರದಲ್ಲಿ
ವಿವಿಧ ಚಿಂತೆಯೋಳ್ ೧
ಹೇಮಭೂಮಿ ಕಾಮಿನಿಯರ
ನೀಮನದಿ ಕೋರಿ
ಕಾಮಕ್ರೋಧಲೋಭಾದಿಗಳು
ಕಲುಷದದಾರಿ ೨
ನಡೆನುಡಿ ಮೊದಲಾದುದೆಲ್ಲ
ವಡೆಯಗೊಪ್ಪಿಸೊ
ಧೃಡಮನದಿ  ನಡಿಗಳಸ್ಮರಿಸೂ ೩

೨೨೭
ಬರಿದೆ ಭ್ರಾಂತಿಯಾತಕೆ ಎರಡು ದಿನದ ಬಾಳಿಗೇ ಪ
ಕರೆಕರೆ ಸಂಸಾರಕೆ ಕೆಲಕಾಲವಿರಲಿ ಎಚ್ಚರಿಗೆ ಅ.ಪ
ಹಿಂದಿನವರ ಪಾಡನು ಮುಂದರಿಯದ ಮೂಢನು
ಸಂದೇಹವ ಪಡುವನು ಎಂದಿಗು ಸುಖಿಯಾಗನು ೧
ಶಾಸ್ತ್ರವೇನು ಪೇಳ್ವುದು ಸ್ಥಿರವೆ ಅಲ್ಪ ಸುಖವಿದು
ಗಾತ್ರವ ನೋಯಿಸುವದು ರಾತ್ರಿಪಗಲು ದಣಿವುದು ೨
ಹಿತದ ಮಾರ್ಗ ತ್ಯಜಿಸುವೆ ಅತಿಶಯಗಳ ಬಯಸುವೆ
ಪಥಿಕರಂತೆ ನುಡಿಯುವೆ ಪಾಪಿಯಾದೆ ಛೀ ಮನವೆ ೩
ಸಂಸಾರವೆಂಬೋ ವಾರಿಧಿ ಹಿಂಸೆಪಡುತ ಸೇರಿದಿ
ಸಂಶಯಾತ್ಮನೆನಿಸಿದಿ ಕಂಸ ವೈರಿಯ ಮರೆದಿ ೪
ಯೋಗಸಿದ್ಧಿಯೇ ಬಲಾ ಕೂಗಿದರದು ನಿಷ್ಫಲಾ
ಹ್ಯಾಗು ನಮ್ಮ ಕೈ ಬಿಡನಲಾ ಶ್ರೀಗುರುರಾಮ ವಿಠಲಾ ೫

೪೮
ಬಾಗಿಲು ತೆಗೆಯೇ ಭಾಮಾಮಣಿ ನಾ
ಬಂದಿರುವೆನು ಭೂಜಾತೆ | ಶರ-
ದಿಂದುವದನೆ ವೋ ಸೀತೆ ಪ
ಕೂಗುವುದೇತಕೆ ನಿಮ್ಮಯ ಪೆಸರೇ
ನೀಗ ತಿಳಿಸಿರೈ ಸ್ವಾಮಿ | ನುಡಿ
ಭಾಗವತ ಜನಪ್ರೇಮಿ ಅ.ಪ
ಹೀನತಮವ ಮುರಿದಜಗೆ ಶೃತಿಗಳಿತ್ತ
ಮೀನಾವತಾರನೆ ನಾನು | ಬಾ
ಜಾನಕಿ ಬೇಗನೆ ನೀನು
ಮೀನಾದರೆ ನೀರೊಳಗಿರುವುದು ಸರಿ
ಮಾನಿನಿಯಲಿ ಕಾರ್ಯವೇನು | ನಡಿ
ದೀನ ಜನರ ಸುರಧೇನು ೧
ಕಮಠವಾಗಿ ಬೆನ್ನಲಿ ಗಿರಿ ಧರಿಸಿದೆ
ಕಮಲನಯನೆ ನಾ ಪೂರ್ವದಿ | ಗಜ-
ಗಮನೆಯೆ ನೋಡನುರಾಗದಿ
ಭ್ರಮೆಯಾತಕೆ ಕೇಳ್ ಕಠಿಣಾಂಗಗೆ ನಾ
ಸಮಳೆ ನಿನಗೆ ನೀ ನೋಡು | ಸಂ
ಭ್ರಮವಿದ್ದಲಿ ನಲಿದಾಡು ೨
ಹಿರಣ್ಯಾಕ್ಷನ ಕೊಂದೆತ್ತಿದೆ ಭೂಮಿಯ
ವರಹಾರೂಪನೆ ಕಾಮಿನಿ | ಓ
ತರುಣಿಯರೊಳಗೆ ಶಿರೋಮಣಿ
ವರಾಹನಾದರೆ ಅಡವಿಯ ತಿರುಗುತ-
ಲಿರದೇತಕೆ ಇಲ್ಲಿ ಬಂದೆ | ನಡಿ
ಪರಿಪರಿ ಮೃಗಗಳ ಹಿಂದೆ ೩
ಭರದಿ ಕಂಬದಲಿ ಬಂದು ಹಿರಣ್ಯನ
ಕರುಳ ಬಗೆದ ನರಸಿಂಹ | ನಾನು
ಪರಮ ಪುರಷ ಪರಬ್ರಹ್ಮ
ನರಸಿಂಹನು ನೀನಾದರೆ ನಡಿನಡಿ
ಗಿರಿಗುಹೆಯೊಳಗಿರು ಹೋಗೈ | ಬಹು
ಪರಿನುಡಿಗಳು ನಿನಗೇಕೈ ೪
ಭೂಮಿಯ ದಾನವ ಬೇಡಿ ಬಲಿಯ ಗೆದ್ದ
ವಾಮನ ನಾನೆಲೆ ನಾರಿ | ಸು
ತ್ರಾಮಾದ್ಯರಿಗುಪಕಾರಿ
ಬ್ರಾಹ್ಮಣನಾದರೆ ನಮಿಸುವೆ ಚರಣಕೆ
ಹೋಮಧ್ಯಾನ ಜಪಮಾಡೈ | ನಿ
ಷ್ಕಾಮ ಜನರ ಪಥನೋಡೈ ೫
ದುರುಳನೃಪರ ಸಂಹರಿಸವನಿಯ ಭೂ
ಸುರರಿಗೆ ಕೊಟ್ಟೆನೆ ದಾನವು | ಕೇಳ್
ಪರಶುರಾಮಾಭಿದಾನವು
ವರಮಾತೆಯ ಶಿರವರಿದವ ನೀನಂತೆ
ಸರಸವೇತಕೆನ್ನಲ್ಲಿ | ಮನ
ಬರುವಲ್ಲಿಗೆ ತೆರಳಲ್ಲಿ ೬
ತಾಯನುಡಿಗೆ ತಮ್ಮಗೆ ರಾಜ್ಯವ ಕೊಟ್ಟು
ಪ್ರಿಯದಿ ವನದೊಳಗಿದ್ದೆನೆ | ದೈ
ತ್ಯೇಯ ನಿಕರವನು ಗೆದ್ದೆನೆ
ಕಾಯಕ್ಲೇಶದಿ ಬಳಲುವ ಮನುಜಗೆ
ಸ್ರೀಯರಲ್ಲಿ ಹಿತವೇನು | ಕಮ
ಲಾಯತಾಕ್ಷ ನಡಿ ನೀನು ೭
ನಾರಿಯರನು ಕೂಡಿ ರಾಸ ಕ್ರೀಡೆಯೊಳ್
ತೋರಿದೆ ಪರಿಪರಿ ಚಿತ್ರವ | ವಿ-
ಚಾರಿಸು ನೀ ವೇದ ಶಾಸ್ತ್ರವ
ಜಾರ ಪುರಷನಿಗೆ ಹೋಲುವಳಲ್ಲವು
ಸಾರ ಪತಿವ್ರತೆ ನಾನು | ಇ-
ನ್ನ್ಯಾರು ತಿಳಿಸು ಮತ್ತೆ ನೀನು ೮
ಪತಿವ್ರತೆಯರ ಸದ್‍ವ್ರತವ ಕೆಡಿಸಿದಾ
ಪ್ರತಿಮ ಬುದ್ಧನೆ ಲತಾಂಗಿ | ಓ
ಮತಿವಂತಳೆ ಮೋಹನಾಂಗಿ
ಚತುರನೆ ನಾಸ್ತಿಕ ಶಾಸ್ತ್ರವ ಪೇಳಿದೆ
ಕೃತಕವಾಡದಿರು ಒಲ್ಲೆ | ಕೇ
ಳತಿ ಮೋಹಕ ನೀ ಬಲ್ಲೆ ೯
ಹಲವು ನುಡಿಗಳೇನು ಕಲಿಯುಗಾಂತದಲಿ
ಮಲೆತ ಮನುಜರನು ಕೊಲ್ವೆನೆ | ಓ
ಲಲನೆ ನೋಡು ಬಲು ಚೆಲ್ವನೇ
ಕಲಿತನವ ತೋರಿಸದಿರು ಈ ಪರಿ
ಹಲವು ವೇಷ ನಿನಗೇಕೆ | ಕೇ
ಳೆಲವೊ ಸ್ವಾಮಿ ನುಡಿ ಜೋಕೆ ೧೦
ವೇಷವಲ್ಲ ಸರ್ವೇಶ ನಾನು ಪರಿ-
ಪೋಷಿಸುವೆನು ನಿಜಭಕ್ತರ | ಸಂ-
ತೋಷಿಸುವೆನು ಧರ್ಮಯುಕ್ತರ
ಪೋಷಿಸುವನು ನೀನಾದರೆಲ್ಲಿ ನಿನ್ನ
ವಾಸಪೇಳು ನಿಜವೀಗಾ | ಪರಿ
ಹಾಸವೇಕೆ ನುಡಿಬೇಗ ೧೧
ಸರ್ವರ ಹೃತ್ಕಮಲಗಳು ಬೆಳಗಿಸುವ
ಪರಮಾತ್ಮನು ನಾ ಕೇಳೆ | ಎನ್ನ
ಮರತೆಯೇನೆ ಎಲೆ ಬಾಲೆ
ಅರಿತೆನೀಗ ಬಹು ಸಂತಸವಾಯಿತು
ಎರಗುವೆ ಚರಣಕೆ ನಾನು | ನಿನ್ನ
ಸರಿಯಾರೈ ದೊರೆ ನೀನು ೧೨
ಧರೆಯೊಳಯೋಧ್ಯಾ ಪುರದರಸನ ಮಗ
ನೆ ನಾನು | ಓ
ತರುಣಿ ನಿನಗೊಲಿದು ಬಂದೆನು
ಧರಣಿ ತನಯೆ ನಸುನಾಚಿಕೆಯಿಂದಲಿ
ಕದವನು ತೆಗೆದಳು ಆಗ | ಚರ
ಣಗಳನು ತೊಳೆದಳು ಬೇಗ ೧೩

೧೧೨
ಬಾರಮ್ಮ ಭಾಗ್ಯನಿಧಿಯೆ | ಸಿರಿಯೆ ಪ
ಬಾರಮ್ಮ ನಿನ್ನ ಪಾದಾರವಿಂದ ತೋರಲು ಅ.ಪ
ಸರಸಿಜಾಕ್ಷನ ವಕ್ಷ ಮಂದಿರೆ
ಸರಸಿಜಾಸನ ಮಾತೆ ಇಂದಿರೆ
ಸರಸಿಮುದವೆರಸಿ ನಿನ್ನರಸನೊಡನೆನೀ ೧
ಸೀತಾರುಕ್ಮಿಣ್ಯಾದ್ಯವತಾರಿಣಿ ಬುಧ-
ವ್ರಾತ ಮನಃ ಪದ್ಮ ವಿಹಾರಿಣಿ
ಚೇತೋದ್ಭವ ಜನನೀ ಶ್ರೀತರುಣೀಮಣಿ ೨
ಬ್ರಹ್ಮರುದ್ರೇಂದ್ರಾದಿ ಸುರಸೇವಿತೆ
ಬ್ರಹ್ಮಾಣಿ ಗಿರಿಜಾ ಶಚೀವಂದಿತೆ ಪರ-
ಬ್ರಹ್ಮ ನ ದಯಿತೆ ೩

೪೯
ಬಾರೋ ವೆಂಕಟೇಶ ನಮ್ಮ ಭಾಗ್ಯನಿಧಿಯೆ ಪ
ಬಾರೋ ವೆಂಕಟೇಶ ಬೇಗ ತೋರೊ ನಿನ್ನಪಾದವೀಗ
ಸಾರಿಸಾರಿ ಶಿರಬಾಗಿ ಬೇಡುವೆ ನಾ ಅ.ಪ
ವದ್ದಾ ವಿಪ್ರನ ಪೂಜಿಸಿದೀ ಶುದ್ಧಸತ್ವಗುಣಾಂಬೋಧಿ
ಪದ್ಮಾವತಿ ರಮಣ ಭಕ್ತ ಪಾಲನೀನೆ ೧
ಪಾಪಿಪಾವನನಾಗುವ ಶ್ರೀಪಾ ನಿನ್ನ ಸ್ಮರಣೆಯಿಂದ
ಆಪದ್ಟಂಧುಯೆಂಬುವನೀನಲ್ಲವೇ ಸ್ವಾಮಿ ೨
ನಾಮಧಾರಿದಾಸರಿಗೆ ಕ್ಷೇಮವ ಕೊಡುವಿ ಕೊನೆಗೆ
ತಾಮರಸನೇತ್ರಾ ಗುರುರಾಮವಿಠ್ಠಲ ೩

೧೧೩
ಬಿಜಯಂಗೈವುದು ಹಸೆಗೀಗಾ ಪ
ಅಜಮುಖ ಸುರನುತೆ ಅಖಿಳಲೋಕೈಕ ಮಾತೆ ಅ.ಪ
ಸೃಷ್ಟಿ ಸ್ಥಿತಿ ಲಯಗಳಿಗಧಿಕಾರಿಯೆ
ಕೃಷ್ಣನ ಮೋಹದ ಪಟ್ಟದ ಜಾಯೆ
ಅಷ್ಟ ಸೌಭಗ್ಯಗಳ ಅಮರರಿಗೀವಳೆ ೧
ಶೃಂಗಾರ ಮಂಟಪದಿ ಅಂಗನೆಯರೆಲ್ಲರು
ಸಂಗೀತವ ಪಾಡಿ ಸರಸದಲಿ
ಮಂಗಳದೇವತೆ ಬಾರೆಂದು ಕರೆವರು ೨
ಸರಸ್ವತಿ ಭಾರತಿ ಗಿರಿರಾಜ ಸುತೆಯರು
ಅರುಂಧತಿ ಶಚಿ ಮುಖರ್ನೆರದಿಹರು
ನ ತರುಣೀ ಮಣಿಯೆ ಬೇಗಾ ೩

(ನುಡಿ-೫) ಮಿತಿಯ ಬರಹ ತಪ್ಪುವುದಿಲ್ಲ
೨೨೯
ಬಿಡು ಬಿಡು ಮನದ ಸಂಶಯವನು ಪ
ನಡಿ ನಡಿ ಪಿಡಿಯೊ ಗುರುಪಾದವನು ಅ.ಪ
ಶ್ರವಣ ಮನನ ಧ್ಯಾನ ಶಾಸ್ತ್ರಾನುಸಂಧಾನ
ಎವೆ ಮಾತ್ರ ವ್ಯತ್ಯಾಸವಿಲ್ಲದಿರು ೧
ಯೋಗ್ಯತಾನುಸಾರ ಭಾಗ್ಯಬರುವದದು
ಶ್ಲಾಘ್ಯವೆನ್ನುತ ದಾಸನಾಗಿರು ೨
ಎರಡು ಸುಖಗಳನ್ನು ನೇ
ಕರುಣಿಸುವನು ಎಂದರಿತು ನಂಬು ೩

೧೩೪
ಬೆಟ್ಟವಿಳಿದು ಬೇಗಬಾರೊ ಜಗ-
ಜಟ್ಟಿ ಹನುಮನೆ ನಿನಗೆ ಸರಿಯಾರೊ
ಕರುಣವ ಬೀರೊ ಚರಣವ ತೋರೊ ಪ
ದುಷ್ಟದಶಕಂಠನ ಪಟ್ಟಣದಿ ರಾಮನ
ಇಷ್ಟಸತಿಗೆ ನೀಕೊಟ್ಟೆಯುಂಗರವ
ತಿಳುಹಿ ಕುಶಲವ ಪಡಿಸಿದೆ ಮುದವ ೧
ವನವ ಭಂಗಿಸಿ ಬಂದು ದನುಜರ ಶಿಕ್ಷಿಸಿ
ವನಜಜಾಸ್ತ್ರಕೆ ಸಿಕ್ಕಿದಹಿಸಿ ಲಂಕೆಯನು
ತಾಳಿ ಚಿಂತೆಯನು ಕಂಡೆ ಸೀತೆಯನು ೨
ಸೀತೆ ಕುರುಹ ರಘುನಾಥಗೆವೊಪ್ಪಿಸಿ
ಪ್ರೀತಿಪೊಂದಿಸಿ ಬ್ರಂಹ್ಮಪಟ್ಟವ ಪಡೆದೆ
ಕೀರ್ತಿಯಂ ಮೆರೆದೆ ಸೇವೆಯಗೈದೆ ೩
ರಣರಂಗದೊಳಗೆ ರಾವಣನ ಗುದ್ದಿದ ಶೂರ
ಕ್ಷಣದಿ ಲಕ್ಷಣಗೆ ಪ್ರಾಣವನಿತ್ತೆ ಧೀರಾ
ವಾಯು ಕುಮಾರ ವಜ್ರ ಶರೀರ ೪
ಬಂದ ಉರುತರ ವಾರ್ತೆಯ
ಭರತಗೆ ತಿಳುಹಿಸಿ ಹರುಷ ಪೊಂದಿಸಿದೆ
ಹಾರ ಕೈಕೊಂಡೆ ಘಟಿಕಾದ್ರಿಯೊಳ್ನಿಂದೆ೫

೨೩೦
ಬೆಳಗಾಯಿತೇಳಿರಯ್ಯಾ ಜನರೆ ಪ
ಒಳಹೊರಗೆ ಅಂಧಕಾರವು ವ್ಯಾಪಿಸಿರೆ ರಾತ್ರಿ
ಲಲನೆಯರ ತೆಕ್ಕೆಯಲಿ ನಿದ್ರಾಭರದಿ ಕಾಲ
ಕಳೆದುಹೋಯಿತು ಕೋಳಿ ಕೂಗುತದೆ ಪೂರ್ವದೆಸೆ
ಕೆಂಪ್ಹರಿದು ಪಕ್ಷಿನಿಕರ
ತಳಮಳದೆ ತಮ್ಮ ಸ್ಥಳಗಳನು ಬಿಟ್ಟು ತಾವ್
ಕಲಕಲಧ್ವನಿಯಿಂದ ದೆಸೆದೆಸೆಗೆ ಪೋಗುತವೆ
ಜಲಜಾಪ್ತನೈತರುವನದ ನೋಡಿ ನೀವಿನ್ನು
ಮಲಗಿರುವುದುಚಿತವಲ್ಲ ಜನರೆ ೧
ಮರೆವೆಯನು ಬಿಟ್ಟು ಕಣ್ದೆರದು ಕೈಯುಜ್ಜಿ ಶ್ರೀ-
ಹರಿಯ ಸಂಸ್ಮರಿಸಿ ಗುರುಹಿರಿಯರಡಿಗಳಿಗೆರಗಿ
ದೊರೆಭಾಗ್ಯವಂತಗೋಸತಿಯರಿಗೆ ನಮಿಸಿ ದರ್ಪಣ
ನೋಡಿನಿತ್ಯ ಕೃತ್ಯ
ತ್ವರದಿಂದ ನಡಸಿ ನಿನ್ನಿನ ಕಾರ್ಯಗಳ ನೆನದು
ಹರುಷದಲಿ ನಿಮ್ಮ ನಿಮ್ಮನುಕೂಲದಂತೆ ಆ-
ಚರಿಸುತ್ತ ಶ್ರವಣ ಮನನಾದಿ ಸಾಧನದಿ ಇಹಪರ
ಸುಖಂಗಳ ಪಡಿಯಿರೈ ೨
ವ್ಯರ್ಥಕಾಲಕ್ಷೇಪ ಮಾಡದಿರಿಯಿದರಿಂದ-
ನರ್ಥ ಬರದಂತೆ ಯೋಚಿಸಿ ಈಗ ನಾವೇ ಕೃ-
ತಾರ್ಥರೆಂದಿರಬೇಡಿ ಈ ದೇಹ ಸ್ಥಿರವಿಲ್ಲ ಮತ್ರ್ಯ
ಜನ್ಮವು ದುರ್ಲಭ
ಕರ್ತರಾವೆಂದಹಂಕರಿಸದಲೆ ಸಕಲವನು
ತೀರ್ಥಪಾದಗೆ ಸಮರ್ಪಣೆಗೈಯ್ಯೆಮನದಿಷ್ಟ
ಪೂರ್ತಿಯಾಗುವದು ಸಂಶಯವಿಲ್ಲ ಸಕಲ ವೇದಗಳು
ಸಜ್ಜನರು ಸಾಕ್ಷಿ ೩
ನರಹುಲಿಯ ನೋಡಿ ತಾ ಬರೆಯಿಟ್ಟು ಕೊಂಬಂತೆ
ನೆರೆಹೊರೆಯ ನೋಡುತಾಭರಣ ವಸ್ತ್ರಗಳು ಬಹು
ಪರಿಭಕ್ಷಗಳ ಬಯಸಿ ಋಣ ಮಾಡಿ ಜೇನಿನಲಿ ಬಿದ್ದ
ನೊಣದ ತೆರದಲೆ
ದೊರೆತ ಮಟ್ಟಿಗೆ ಭೋಗ ಭಾಗ್ಯಗಳನನುಭವಿಸಿ
ಅರುಣಿಯಾಗುತ ದುರ್ವಿಷಯ ಚಿಂತೆಗಳ ಮರೆತು
ಗುರುರಾಮವಿಠ್ಠಲನ ಚರಣ ಸೇವೆಯಗೈದು
ಪರಮಧರ್ಮವ ಘಳಿಸಿರೈ ೪

೨೩೧
ಬೇಡಿ ಬೇಡಿ ಬೆಂಡಾದರೆ ನಿನಗೆ
ನೀಡುವರು ಮತ್ಯಾರಿಲ್ಲ ಪ
ಬೇಡದಿರುವ ಸಜ್ಜನರಡಿಗಳ ಕೊಂ-
ಡಾಡುತಲಿರು ನೀ ಹಗಲೆಲ್ಲ ಅ.ಪ
ಕಾಸಾದರು ಹಿಡಿಕಾಳಾದರು ಹರಿ-
ದಾಸರಿಗೋಸುಗ ಕೊಡಲಿಲ್ಲ
ಲೇಸು ದೊರೆವುದೆಂದ್ಹಾರಾಡಿದರಾ-
ಯಾಸವಲ್ಲದೆ ಫಲವಿಲ್ಲ ೧
ನಿನ್ನಂತೆಯೆ ಪರರನು ನೋಡಿ ದಯೆ-
ಯನ್ನು ಅವರಲ್ಲಿ ಇಡಲಿಲ್ಲ
ಖಿನ್ನವಾಗಿ ನೀ ಬಾಯ್ಬಿಡುತ್ತಿದ್ದರೆ
ಮುನ್ನಿನ ಕರ್ಮವು ಬಿಡದಲ್ಲ ೨
ಗಳಿಸಿ ಗಳಿಸಿ ಗಂಟ್ಹಾಕುವೆಯಲ್ಲದೆ
ತಿಳಿವಳಿಕೆಯು ಸ್ವಪ್ನದಲಿಲ್ಲ
ನೆಲದೊಳು ಬಚ್ಚಿಟ್ಟಿರುತಿಹ ದ್ರವ್ಯವು
ಎಲೊ ನಿನಗದು ಸ್ವಾಧೀನವಲ್ಲ ೩
ಸತ್ಪಾತ್ರದಿ ಅಣುಮಾತ್ರವು ಕೊಟ್ಟರೆ
ವ್ಯಾಪ್ತವಾಗಿ ಹೆಚ್ಚುವದೆಲ್ಲ
ಆಪ್ತರು ದಾರಾ ಪುತ್ರಾದ್ಯರು ನಿ-
ನ್ನಾದರಿಸುವರೊಬ್ಬರು ಇಲ್ಲ ೪
ಕಾಮಕ್ರೋಧದೊಳಗೆ ಮುಳುಗಿ ನೀ
ಕಂಡ ಕಂಡದು ಕೋರುವೆಯಲ್ಲ
ಕ್ಷೇಮವೀವ ನ
ಕ್ಷಣವಾದರು ನೆನೆ ಭಯವಿಲ್ಲ ೫

೨೭೦
ಬ್ರಾಹ್ಮಣನುಣಲಿಕೆ ರಾಗಿ ಹಿಟ್ಟು
ತನ್ನ ಬಂಧು ಜನಕ್ಕೆ ಒಬ್ಬಟ್ಟು ಪ
ಪಾಮರ ಜನರಲಿ ವಾಡಿಕೆಯಿದು | ಶ್ರೀ
ರಾಮನೊಲಿವನೆ ಎಂದಿಗಾದರು ಅ.ಪ
ಮಾತು ಮಾತಿಗೆ ಸಾಲಮಾಡಿ | ಬಹ
ಳಾತುರದಲಿ ಓಡಾಡಿ
ಜಾತುಕನಂದದಿ ಜನಗಳ ಮೆಚ್ಚಿಸಿ
ಪಾತಕವಾದರು ಲಾಭವಧಿಕ ೧
ದೊಡ್ಡದಾಗಿ ಮನೆಕಟ್ಟಿದರೆ -ಸಾಲ
ಹೆಡ್ಡಗಾದರು ಹುಟ್ಟುವುದು
ದುಡ್ಡುದೇವರಿಗಿಂತ ದೊಡ್ಡದೇವರು ಯಾವುದು?
ಬಡ್ಡಿ ಹಚ್ಚು ಬರುವನೆ ಮಹರಾಯನು೨
ಹೊಟ್ಟೆಗೆ ತಿಂಬುವದ್ಯಾರು ಬಲ್ಲರು?
ವುಟ್ಟ ಬಟ್ಟೆಯಲ್ಲರು ನೋಡುವರು
ಸಿಟ್ಟು ಬಂದರೆ ಬೆಂಕಿಯಂತವ ನಾನು
ಹೊಟ್ಟೆ ಚಿಕ್ಕದು ಕಣ್ಣು ದೊಡ್ಡದು ೩
ಪರಲೋಕವು ಉಂಟೆಂದು ಪೇಳು
ವರರಿಯದವರು ತಾವು ಮುಂದು
ನರಕವುಸ್ವರ್ಗವು ಯಾರು ನೋಡಿರುವರು
ಪುರಾಣ ಶಾಸ್ತ್ರಗಳು ಯಾತಕೆ ಬಿಡಿ೪
ಅತಿಥಿಗಳಿಗೆ ನೀರುಮಜ್ಜಿಗೆ | ಮೊಸರು
ಸತಿಸುತರಿಗೂ ಮತ್ತು ತನಗೆ
ಯಿತರರಿಗೆಲ್ಲಾ ಎಣ್ಣೆಕರೆದ ಭಕ್ಷ್ಯ
ಘೃತಭಕ್ಷ ತನಗೆ ಮಾತ್ರ ೫
ಎಣ್ಣೆಯು ಬಲುರುಚಿ ನಮಗೆ | ತುಪ್ಪ
ವಿನ್ನೇತಕೆ ಹೆಚ್ಚು ಬೆಲೆಗೆ
ಕಣ್ಣಲಿ ಕಂಡದು ಮಾತ್ರ ಸತ್ಯ | ನಾ
ವನ್ಯರ ನುಡಿ ನಂಬುವುದಿಲ್ಲವು ೬
ವೊರಿಗೆಲ್ಲ ನಾ ಮೇಟಿ | ಯನ್ನ
ನಾರು ಪೋಲುವರು ಸಾಟಿ
ನೂರೆಲೆ ಬೀಳ್ವುದು ನಮ್ಮ ಮನೇಲೀ
ಘೋರ ಕ್ಷಾಮದಲಿ ನಾನೆ ಪೊರೆವೆ ೭
ಪರರಂತೆ ನಾನಿರಬೇಕು | ಶ್ರೀ
ಹರಿ ಇಷ್ಟು ಕೊಟ್ಟರೆ ಸಾಕು
ಗುರುಹಿರಿಯರು ನುಡಿಯೇತಕವರು ಮುದು-
ಕರು ಏನು ಬಲ್ಲರು ಲೌಕೀಕವ ೮
ಗುರುರಾಮವಿಠಲೆಲ್ಲಿ ಭ್ರಾಂತು -ಈ
ಕರೆಕರೆ ನಮಗೇಕೆ ಬಂತು
ಪರಸ್ವತ್ತೆದುರು ಮನೆಯವಗೆ
ಸೇರಿತು ಬಡವರಾವು ೯

೨೩೩
ಭಕ್ತಿ ಒಂದೇ ಸಾಕು ಸಜ್ಜನರಿಗೆ | ಕು
ಯುಕ್ತಿಯಾತಕೆ ಹಲವು ಬಗೆ ಪ
ಭಕ್ತಿಯೊಂದಿದ್ದರೆ ಭವಗಳು ಬಂದರು
ರಕ್ತಿ ಪುಟ್ಟದುದುರ್ವಿಷಯದೊಳು
ಶಕ್ತರಾಗಿಹ ಅಧಿಕಾರಿಗಳಿಗೆ ಕು-
ಯುಕ್ತಿ ಏತಕೆ ಹಲವು ಬಗೆ ಅ.ಪ
ಏನೇನು ಮಾಡಲು ಶ್ರೀನಿವಾಸನ ಸೇವೆ
ದೀನರು ನಾವೆಂದು ದಿನ ದಿನದೀ
ನಾನು ಎಂಬುದು ಬಿಟ್ಟಿರುವವಗೆ ೧
ಆಸೆಯು ಇಲ್ಲದೆ ಮೀಸಲು ಮನದಲಿ
ಶ್ರೀಶನ ಪದವನು ಚಿಂತಿಸುತ
ಲೇಸಾದ ದಾರಿಯೊಳ್ ನಡಿಯುವರಿಗೆ೨
ಹರುಷ ಶೋಕಗಳೊಂದೆ ಸಮನಾಗಿ ತಿಳಿದು
ಪುರುಷ ಪ್ರಯತ್ನಗಳನು ಮೆರೆದು
ನ ಸ್ಮರಿಪರಿಗೆ ೩

೨೩೨
ಭಕ್ತಿಮಾಡದವನೇ ನಿರ್ಭಾಗ್ಯ
ಭಾರಿಬಾರಿಗು ಹರಿ ಪಾದದಲಿ ಪ
ಭಕ್ತಿಮುಕ್ತಿಗಳು ಭುವಿಸಾಧನೆಗಳು
ಯುಕ್ತಿಯಾಗಿ ರಕ್ತಿನೀಗಿ | ಶಕ್ತಿಯೊದಗಿ೧
ಸ್ನಾನ ಸಂಧ್ಯಾಧ್ಯಾನ ದಾನಜಪಂಗಳು
ಯೇನು ಮಾಡಲಿ ಮಾನಸದಲಿ | ಜ್ಞಾನದಿಂದಲಿ ೨
ತಾಮಸದೂರ  ನಮಗೆ
ಸ್ವಾಮಿಯೆನ್ನುತ ನೇಮ ವಿಡುತ | ಕಾಮಬಿಡುತ ೩


ಭಜಿಸುವೆ ವಿಘ್ನರಾಜ ಭಾವಜಾರಿ ಪುತ್ರನೆ ಪ
ಭಾವಜಾರಿ ಪುತ್ರನೇ ಭವಾಬ್ಧಿ ಕರ್ಣಾಧಾರನೆ ಅ.ಪ
ವರಗಳ ಕೊಡು ಕರುಣದಿ ವಂದಿಸುವೆ ನಿನ್ನನಾ
ವಂದಿಸುವೆ ನಿನ್ನನಾ ವೃಂದಾರಕೇಂದ್ರ ಪೂಜ್ಯನ ೧
ಆದಿಯಲ್ಲಿ ನಿನ್ನ ಪೂಜಿಸದೆ ಕೌರವೇಂದ್ರನು
ಮೋದರಹಿತನಾದನು ನಿರ್ಮೂಲವಾಗಿ ಪೋದನು ೨
ನ ದಾಸ ಕೋಟಿ ಸೂರ್ಯ ಭಾಸನೆ
ಕೋಟಿ ಸೂರ್ಯಭಾಸನೆ ಸುಕುಮಾರ ಮಂದಹಾಸನೆ ೩

೨೩೪
ಭಾಗ್ಯವಂತರಾರು ಪೇಳಿರೈ ಸದ್ಭಕ್ತರೆಲ್ಲರು ಪ
ಭಾಗ್ಯವೊ ವೈರಾಗ್ಯವೊ ನಿಮ್ಮ
ಯೋಗ್ಯತಾನುಸಾರ ಶ್ಲಾಘ್ಯವೆಂದರಿತವರು ಅ.ಪ
ಧನಿಕನು ಪರರನು ಗಣಿಸದೆ ತ-
ನ್ನನು ಸದಾ ಕೊಂಡಾಡಿಕೊಂಬನು
ಹಣವುಯಿಲ್ಲದ ಸುಗುಣವಂತನು ತಾ
ವನಜಾಕ್ಷನನೆನದೂ ಅನುದಿನದಿ ಸುಖಿಸುವನು೧
ಭೋಗದಲಿಯನುರಾಗವುಳ್ಳವ
ರೋಗಿಯಾಗಿಯೆ ಕೂಗುವ ಕೊನೆಗೆ
ಯೋಗವಂತರಾದ ಭಾಗವತ ಜನ ವಿ-
ರಾಗ ವೈಭೋಗದಿ ತ್ಯಾಗಿಗಳೆನಿಪರು ೨
ತಾಮಸ ಜನರು ಕಾಮಾದಿಗಳಿಗೆ
ತಾಮನೆಯೆನಿಸಿ ಧಾಮರಾಗಿಹರ್
ಕ್ಷೇಮವುಳ್ಳ ಸಾಧುಗಳು ನಿರತ ಗುರು-
ರಾಮವಿಠಲನ ನಿಷ್ಕಾಮದಿ ಭಜಿಸುವರು ೩

೨೩೫
ಭಾರತ ಕಥಾಶ್ರವಣವನುದಿನ ಜನತತಿಗೆ ಭವಭಯ ಹರಣ ಪ
ಜಗದಿ ಧರ್ಮಾ ಧರ್ಮವೆಂಬ ಅನುವರವು ಹುಟ್ಟುವ ಕಾರಣ
ಅಗಣಿತಾಘಘನ ನಿವಾರಣ ಅರಿನಿಕರ ಸಂಹಾರಣ ೧
ಸುಗುಣ ದುರ್ಗುಣಗಳ ಸಮೂಹಕೆ ಸುಲಭವಾಗಿಹುದೀ ಕಥಾ
ಮಿಗೆ ಸುಜನ ದುರ್ಜನರಿಗೆಲ್ಲವು
ಮೇಲುಪಂಕ್ತಿಯೆನಿಸುತಿಹುದು ೨
ತಾಮಸರ ನಿರ್ನಾಮ ವೈದಿಸಿ ತಾಮನವಲಿದ ಸುಜನಕೆ ಸ್ವಾಮಿ ಶ್ರೀಗುರುರಾಮ ವಿಠಲನ ಪ್ರೇಮ ಸಂಪಾದಿಸುವುದಕೆ ೩

೧೪೬
ಭಾರತಿದೇವಿ ಭಕ್ತಸಂಜೀವಿ ಪ
ಮಾರುತನರಾಣಿ ಮಾಮಮ ಕಲ್ಯಾಣಿ ಅ.ಪ
ಭಕುತಿ ವಿದೂರ ಕುಯುಕುತಿಗಳ ತರಿದು
ಯುಕುತ ಮಾರ್ಗದೊಳಗಿರಿಸುವದೆಮ್ಮನು | ಜನನಿ ೧
ಬುದ್ಧಿಯನು ಪರಿಶುದ್ಧಮಾಡಿಯನಿ-
ರುದ್ಧನ ತೋರಿಸೆ ಪ್ರದ್ಯುಮ್ನನ ಸುಕುಮಾರಿ ೨
ನೆ ಸರ್ವೋತ್ತಮನೆಂದು
ಸ್ಮರಿಸುವ ಶರಣರ ಚರಣಸೇವೆಯ ಕೊಡುವುದು ೩

೧೦೪
ಭೋಜನ ಮಾಡೈಯ ಶ್ರೀರಾಮಚಂದ್ರ ಪ
ರಾಜೀವಾನಯನ ಸ್ವರಾಜಾನುಜ ಮಹಾ
ರಾಜ ವಂದಿತ ರಾಜಾರಾಜ ಸಖಾರ್ಚಿತ ಅ.ಪ
ಉಪ್ಪು ಉಪ್ಪಿನಕಾಯಿ ಪಚ್ಚಡಿಗಳು ಗೊಜ್ಜು
ಹಪ್ಪಳ ಸಂಡಿಗೆ ಶಾಖಗಳೂ
ಒಪ್ಪುವ ರಸ ಕೂಟು ಹುಳಿ ಫಳಿದ್ಯವು ಸೂಪ
ತುಪ್ಪ ಶಾಲ್ಯೋದನ ಚಿತ್ರಾನ್ನಗಳನ್ನು ೧
ಹೊರೀಗೆ ಶಷ್ಕುಲಿ ಹೋಳಿಗೆ ಕಡುಬು ಮು-
ಚ್ಚೋರೆಯು ಅತಿರಸ ಹೊಯಗಡಬೂ
ಕೀರುಆಂಬೊಡೆ ಬೋಂಡ ಶಾವೀಗೆ ಹುಳಿದೋಸೆ
ಕ್ಷೀರ ಶರ್ಕರ ಜೇನು ತುಪ್ಪವೆ ಮೊದಲಾಗಿ೨
ಮಂಡೀಗೆ ಲಾಡು ಚಿರೋಟಿ ಘೀವರು ಪೇಣಿ
ಬೆಂಡು ಸೋಮಾಶಿಬತ್ತಾಸು ಫೇಡಾ
ಖಂಡ ಶರ್ಖರೆ ಕಬ್ಬು ಖರ್ಜೂರ ದ್ರಾಕ್ಷಿಗ-
ಳುಂಡು ತ್ರಿಲೋಕಳುದ್ಧರಿಸುವ ಸ್ವಾಮಿ ೩
ಪನಸು ಜಂಬೂ ಕದಳಿನಾರಂಗ ಎಳನೀರು
ಪಾನಕ ತಕ್ರಬೆಣ್ಣೆಯು ಮೊಸರೂ
ಅನುವಾದ ಸ್ವಾದೋದಕ ಮೊದಲಾಗಿ ಶ್ರೀ
ಯರ್ಪಿಸುವಳು ಭಕ್ತಿಯಿಂದಾ ಕೈಕೊಂಡು ನೀ ೪
ನಿತ್ಯತೃಪ್ತ ನಿರಾಮಯಗೆ ನಿರಂತರ
ಸತ್ವರಜಸ್ತಮೊಗುಣಗಳೆಂಬ
ಸತ್ಯತಾಂಬೂಲ ವರ್ಪಿಸಲು ಯಥಾಶಕ್ತಿ
ವಿತ್ತಸಮೇತವಾದಿದನು ಕೈಕೊಂಡು ನೀ ೫
ಪೂಗಲವಂಗ ಜಾಜಿಕಾಯಿ ಏಲಕ್ಕಿ
ನಾಗವಲ್ಲಿ ದಳಗಳು ಸಹಿತ
ಭೋಗದ್ರವ್ಯವು ಮುಕ್ತಚೂರ್ಣ ದಕ್ಷಿಣೆ ಸಹ
ಈಗ ತಾಂಬೂಲ ವೊಪ್ಪಿಸಲು ಕೈಕೊಂಡು ನೀ೬
ನವ್ಯ ಸುಗಂಧ ಪುನರ್ಧೂಪವರ್ಪಿಸಿ
ಕಾವ್ಯನಾಟಕ ಸ್ತುತಿ ಕಥೆಗಳಿಂದ
ಸೇವ್ಯಸೇವಕನಾಗಿ ಸೇವೆ ಕೈಕೊಳ್ಳೆಂದು
ಭವ್ಯಚರಿತ ನಿನ್ನ ಪೊಗಳುತ್ತ ಕುಣಿವರು ೭
ಅವ್ಯಯಾನಂತ ಜಗದ ಬದುಕು ನೀನೆಂದು
ಸೇವ್ಯಸೇವಕನಾಗಿರುವೆ ಎಂದು
ಭವ್ಯಚರಿತ್ರರು ಪೊಗಳುವರೈ ನಿನ್ನ
ಸವ್ಯಸಾಚಿಯ ಸೂತ ಗುರುರಾಮ ವಿಠಲನೆ ೮

೫೦
ಮಂಗಳಂ ಮಂಗಳಂ ಮಾರಮಣಗೆ ಪ
ಅಂಡಜ ಗಮನಗೆ ಅಖಿಲ ಲೋಕೇಶಗೆ
ಕುಂಡಲಿ ಶಯನಗೆ ಗುಣನಿಧಿಗೆ
ಪಾಂಡವಪಕ್ಷಗೆ ಪಾಪ ವಿದೂರಗೆ
ಪುಂಡರೀಕಾಕ್ಷ ಶ್ರೀ ಪುರುಷೋತ್ತಮಗೆ ೧
ಸರ್ವಪ್ರಾಣಿಗಳ ಹೃತ್ಕಮಲನಿವಾಸಗೆ
ಗರ್ವಿಗಳನು ಭಂಗಿಸುವವಗೆ
ಉರ್ವಿಭಾರವ ಪರಿಹರಿಸಿ ಭಕ್ತರ ಕಾಯ್ವ
ಸಾರ್ವಭೌಮ ಹರಿಸರ್ವೋತ್ತಮಗೆ ೨
ತರುಣಿ ದ್ರೌಪದಿ ಕರೆಯಲು ಓಡಿಬಂದಗೆ
ತುರುಗಳ ಕಾಯ್ದ ಗೋಪಾಲನಿಗೆ
ಧರೆಯೊಳ್ ಭಾಗ್ಯವಲ್ಲಿ ಹನುಮನೊಡೆಯನಮ್ಮ
ಗುರುರಾಮ ವಿಠಲ ಶ್ರೀ ಕೃಷ್ಣಮೂರುತಿಗೆ೩

೫೧
ಮಂಗಳಂ ವೆಂಕಟೇಶಗೆ ಅಲಮೇಲ್
ಮಂಗಾ ಮನೋಹರಗೆ ಪ
ಮಂಗಳ ಗರುಡ ತುರಂಗಗೆ ಮುನಿಜನ
ಸಂಗಗೆ ಭವ ಭಯ ಭಂಗಗೆ ಜಯ ಶುಭ ಅ.ಪ
ಆಕಾಶರಾಯನಳಿಯಗೆ | ಪಿ
ನಾಕಿ ಮುಖಸುರರ ಗೆಳೆಯಗೆ
ಲೋಕೇಶನ ನಾಭಿಯೊಳ್ ಪಡೆದವಗೆ
ಲೋಕವಿಶೃತಗೆ ಶ್ರೀ ಭೂರಮಣಗೆ ೧
ತೊಂಡಮಾನ ನೃಪ ಪೂಜಿತಗೆ | ಬ್ರ
ಹ್ಮಾಂಡಗಳುದರದೊಳಿಟ್ಟವಗೆ
ಕುಂಡಲಿ ಶಯನಗೆ ಗೋಪಾಲಗೆ ಮೃ
ದ್ಭಾಂಡವ ರಚಿಸುವಗೆ ಭೀಮಗೊಲಿದವಗೆ ೨
ಶರಣಾಗತರನು ಪಾಲಿಪಗೆ
ಪರಿಪರಿ ವರಗಳ ನೀಡುವಗೆ
ಉರಗಾದ್ರೀಶಗೆ ಗುರುರಾಮ ವಿಠಲಗೆ
ವರ ಚಕ್ರಗಧಾಧರ ಹಸ್ತಗೆ ೩

೧೦೬
ಮಂಗಳಂ ಸೀತಾಮನೋಹರ ಪ
ಮಂಗಳಂ ಜಗದೇಕ ಸುಂದರ ಅ.ಪ
ಮಂಗಳಂ ವಿಧಿರುದ್ರಮುಖ ಸುರವಿನುತ ಪದಯುಗಳ
ಮಂಗಳಂ ಸೂರ್ಯ ಕುಲಭೂಷಣ
ಮಂಗಳಂ ಮರುತಾತ್ಮಜ ಪ್ರಿಯ ಮಂಗಳಂ
ಮಂಗಳಾರತಿಯು ಗುರುರಾಮ ವಿಠಲಗೆ
ಪರಾತ್ಪರಾನಂತ ಗುಣಾರ್ಣವ ಪ್ರಭೋ
ಅಜೇಶವಂದ್ಯಾಮಲ ಪಾದ ಪಂಕಜ
ಸರೋಜಮಿತ್ರಾನ್ವಯ ಪೂರ್ಣ ಚಂದ್ರಮಾ
ನಮಾಮ್ಯಹಂ ತೇ ಗುರುರಾಮವಿಠ್ಠಲ

೧೩೫
ಮಂಗಳಭಾರತಿರಮಣಗೆ ಜಯ
ಮಂಗಳ ಮುಖ್ಯ ಪ್ರಾಣೇಶನಿಗೆ ಪ
ಆಶಾ ಸಮುದ್ರವ ದಾಟಿ ಸಾಮಥ್ರ್ಯದಿ
ಶ್ರೀಸೀತಾದೀವಿಗುಂಗುರವಿತ್ತಗೆ
ಮೋಸಗಾರರ ಮುರಿದು ಮಮತೆಯ ದಹಿಸಿದ
ಭಾಸುರಾಂಗ ವಾನರೇಶನಿಗೆ ೧
ಕೋಪಾದುರ್ಗುಣ ಮೊದಲಾದ ನೂರ್ವರ ನಿರ್
ವ್ಯಾಪಾರ ಪೊಂದಿಸಿದಾತನಿಗೆ
ಪಾಪಿ ಕೀಚಕ ಮುಖ್ಯಪಾಮರರನು ಕೊಂದು
ದ್ರೌಪದಿಗಿಷ್ಟ ನೀಡಿದಾತಗೆ ೨
ಕಾಮ್ಯಕರ್ಮವ ಮಾಡಿ ಗ್ರಾಮಸುಖ ಬಯಸುವ
ತಾಮಸರನು ಗೆದ್ದ ತತ್ವಾರ್ಥಿಗೆ
ಭೂಮಿಗಧಿಕ ಶಿಡ್ಲಘಟ್ಟನಿಲಯ ಗುರು
ರಾಮವಿಠಲ ಪ್ರಿಯ ದೂತನಿಗೆ ೩

೧೧೪
ಮಂಗಳಾಂಗಿ ಹಸೆಗೆ ಬಾರೆ ಮಾರ ಜನಕನ ನೀರೆ ಪ
ಗಂಗಾಧರನ ರಾಣಿ ವಾಣಿಯರ್ ಕರವ ಕೊಡಲು
ಹರುಷದಿಂದಾ ಅ.ಪ
ಕ್ಷೀರವಾರ್ಧಿತನಯೆಯೆಂದು ಸಾರಸಾಕ್ಷಿಯರು ಬಂದು
ಕೋರಿ ಭಜಿಸುವರು ನಿನ್ನ ಅಪಾರ ಮಹಿಮೆಗಳನು ೧
ಸುತ್ತ ಜ್ಯೋತಿಗಳ ಬೆಳಗಿ ಮುತ್ತೈದೆಯರೆಲ್ಲ ಕೂಡಿ
ಮುತ್ತು ಮಾಣಿಕ ಪೀಠವಿರಿಸಿ ಭಕ್ತಿಯಿಂದ ಪ್ರಾರ್ಥಿಸುವರು ೨
ಜನಕರಾಯನ ಕುಮಾರಿ ಸನಕಾದಿಯೋಗಿ ಜನಾಧಾರೀ
ದಿನಕರ ಕೋಟಿ ಪ್ರಕಾಶೆ ದಿವ್ಯಮಣಿಮಯ ಭೂಷೆ ೩
ಮಾನಸಾಬ್ಜ ಮಂಟಪದಲಿ ಧ್ಯಾನವೆಂಬೊ ಪೀಠದಲ್ಲಿ
ಜ್ಞಾನಿಶಕ್ತಿಗಳು ಪೊಗಳೆ ಸಾನುರಾಗದಿಂದಲೀಗಾ ೪
ನಿತ್ಯಸಂಪತ್ಪ್ರದಾಯಿನಿ ಭೃತ್ಯವತ್ಸಲೆ ಜನನೀಸತ್ಯಸಂಕಲ್ಪ ಗುರುರಾಮ ವಿಠಲನ ಪಟ್ಟದರಾಣಿ ೫

೧೦೫
ಮಂಗಳಾರತಿ ಎತ್ತುವೆ ಮಾರಮಣಗೆ ಪ
ಅಂಗಜ ಜನಕ ಶುಭಾಂಗ ಶ್ರೀರಂಗಗೆ ಅ.ಪ
ಭೋಜ್ಯ ಸಾಮ್ರಾಜ್ಯ ವೈರಾಜ್ಯ ಸ್ಯಾರಾಜ್ಯ ಮಹ
ರಾಜ್ಯ ಪರಮೇಷ್ಠಿ ರಾಜ್ಯ ಸಾರ್ವಭೌಮ ನೀನೆಂದು ೧
ವೇದೋಕ್ತ ಮಂತ್ರ ಪುಷ್ಪಾಂಜಲಿಯಿಂದ ನಿನ್ನಯ
ಪಾದಕ್ಕೆರಗಿ ಪುನಃ ಪ್ರಾರ್ಥನೆಗೆಯ್ಯುತ ೨
ಪಾಪಿಗಳೊಳಗತಿ ಪಾಪಿಯು ನಾನೆನ್ನ
ತಾಪತ್ರಯವ ಬಿಡಿಸಿ ಕಾಪಾಡು ನೀನೆಂದು ೩
ಪದಜಾನುಕರಗಳಿಂ ಉದರ ಹೃದಯದಿ ಶಿ-
ರದಿ ದೃಷ್ಟ್ಯಮನಸವಚನಸಾಷ್ಟಾಂಗದಿಂ ಮಣಿದು ೪
ದರ್ಪಣ ನೋಡು ಕಂದರ್ಪ ಕೋಟಿ ಲಾವಣ್ಯ
ಸರ್ಪಶಯನ ನಮ್ಮಪ್ಪಾ ತಿಮ್ಮಪ್ಪನೆಂದು ೫
ಛತ್ರಚಾಮರ ಗೀತೆ ನೃತ್ಯವಾದ್ಯ ವಾಹನ
ವಸ್ತೂಗಳರ್ಪಿಸಿ ಸರ್ವೋತ್ತಮ ನೀನೆಂದ್ಹೊಗಳಿ ೬
ಅಪರಾಧವೆಮ್ಮಿಂದಲಾಗುವುದೆಲ್ಲ ಕ್ಷಮಿಸು
ಕಪಟನಾಟಕ ಸೂತ್ರಧಾರೀ  ೭

೫೨
ಮಂಗಳಾರತಿಎತ್ತಿ ಮಾಮನೋಹರನಿಗೆ ಪ
ಅಂಗನೆಯರೆಲ್ಲ ಬಂಗಾರದ ತಟ್ಟೆಯಲ್ಲಿ ಅ.ಪ
ವೇದಚೋರನ ಕೊಂದು ಭೂಧರವನು ಪೊತ್ತು
ಮೇದಿನಿಯನು ಎತ್ತಿ ಕಂಬದಿ ಬಂದವಗೇ ೧
ಭೂಮಿದಾನವ ಕೇಳಿ ಭೂಮಿಪರನು ಸೀಳಿ
ಭೂಮಿಜಾತೆಯನಾಳಿ ಭೂ ಭಾರವಳಿದವಗೆ ೨
ಬುದ್ಧಿಹೀನರಿಗೆಲ್ಲಾಬದ್ಧವ ಬೋಧಿಸುತ
ಮುದ್ದುಕುದುರೆಯ ಏರಿದ ಗುರುರಾಮ ವಿಠಲಗೆ ೩

೨೩೬
ಮಂದಮತಿಯೇ ಮಾನವಾ ಪ
ಹಿಂದೊ ಮುಂದೊ ಎಂದು ಯೋಚಿಸದಿರು ಅ.ಪ
ಶೃತಿತಾಳಂಗಳ ಗತಿಯನುಸರಿಸುತ
ಸತತವು ಲಕ್ಷ್ಮೀಪತಿಯ ಭಜಿಸು ೧
ದೇವರನಾಮವೆ ಜೀವನವೆನ್ನುತ
ಭಾವದಿ ತಿಳಿದತಿಭಕ್ತಿಯೊಳಿರು ೨
ಈ ಚರಾಚರಕು ಗೋಚರಿಸುವ ಕಂಜ-
ಲೋಚನನೆಂದು ನಿನ್ನ ನಾಚಿಕೆ ಬಿಡು ೩
ದುರಭಿಮಾನ ಬಿಟ್ಟು ಹರಿಹರಿ ಎನ್ನುತ
ಕೊರಳು ನೋಯುವಂತೆ ಕೂಗುತಲಿರು ೪
ಪರದಲಿ ಮುಕ್ತಿಯು ಇಹದಲಿ ಸೌಖ್ಯವು
ನೆ ಕರುಣಿಸುವನು ೫

ಮಧ್ವಾಚಾರ್ಯರು
೧೪೩
ಮಧ್ವಮುನಿರಾಯ ಭಕ್ತೋದ್ಧಾರನೆ ಪ
ಶುದ್ಧಮೂರ್ತಿಯಾದ ಕೃಷ್ಣ ದ್ವೈಪಾಯನರ ಶಿಷ್ಯ ಅ.ಪ
ರಾಮದೂತನಾಗಿ ಕಡಲ ದಾಟಿದೆ
ಭಾಮೆಸೀತಾದೇವಿಗುಂಗುರವ ತೋರಿದೆ
ತಾಮಸರ ಮುರಿದು ಚೂ
ಡಾಮಣಿಯ ಸ್ವಾಮಿಗಿತ್ತೆ ೧
ಭೀಮ ಕೀಚಕ ಬಕಾದಿ ದೈತ್ಯರ
ಭೂಮಿ ಆಶೆಯುಳ್ಳ ದುರ್ಯೋಧನಾದ್ಯರ ನಿರ್-
ನಾಮವ ಹೊಂದಿಸಿ ಕೃಷ್ಣನ
ಪ್ರೇಮಕೆ ನೀ ಪಾತ್ರನಾದೆ ೨
ಇಪ್ಪತ್ತೊಂದು ಭಾಷ್ಯಗಳಾ ಖಂಡಿಸೀ
ಸರ್ಪಶಯನ ಸರ್ವೋತ್ತಮನೆಂದು ಸಾರಿಸಿ
ಅಪ್ಪ ಗುರುರಾಮ ವಿಠಲನ
ತಪ್ಪಾದೆ ಪೂಜಿಸುತಿರ್ಪ ೩

೨೩೮
ಮನವೆ ಸದಾ ಚಿಂತಿಸುವೆ ವನಜನಾಭನ ನಂಬದೆ ಪ
ಅನುದಿನ ನೀ ಮಾಳ್ಪ ಕಾರ್ಯವೆಲ್ಲವು
ಕೊನೆಗಾಣುವದೇನೊ ಫಲವೇನೊ ಅ.ಪ
ಅಧಿಕನು ತಾನೆನುತ ಅಸ್ಥಿರವಾದ
ಪದವಿಗಳನು ಕೋರುತ
ಮದಮತ್ಸರ ಕಾಮಕ್ರೋಧ ಲೋ-
ಭದಿ ಮಮತಾಸ್ಪದವಾಗಿ ಮರತೋಗಿ ೧
ಗುರುಹಿರಿಯರು ನೋಡಿ ವಂದಿಸದೆ ನೀ
ಮರುಳಾಟಗಳಾಡಿ
ಪರರನಪಹಾಸಿಸಿ ಪಾಪಿ ಇವನೆನಿಸಿ
ನರಕಕ್ಕೆ ಗುರಿಯಾಗುವೆ ವೋ ಚಪಲ ಮನವೇ ೨
ವೇದಮಾರ್ಗವ ಬಿಟ್ಟು ಯಾವಾಗಲು ದು-
ರ್ವಾದಗಳನು ಕೊಟ್ಟು
ಆದಿಯನುತಲಿ ಅನಾದಿಯನುತಲಿ
ಮುದಗೂಡಿ ಅತಿಭಾಷೆಗಳಾಡಿ ೩
ತತ್ವ ತಿಳಿಯಬೇಕು ಜ್ಞಾನವೆಂಬೋ ಸಂ-
ಪತ್ತಿನೊಳಿರು ಸಾಕು
ನಿತ್ಯಾನಿತ್ಯವಿವೇಕ ಶ್ಯೂನವಾಗಿ
ನಿತ್ಯ ಕೆಡಬೇಡೆಲವೋ ಚಪಲಾ ೪
ಪರಿಪರಿ ಲೀಲೆಯಿಂದಾ ತ್ರಿವಿಧ ಜೀ-
ವರೊಳಿರುವನು ಮುಕುಂದ
ನಿಜ ಶರಣರಿಗೆಲ್ಲ
ಪರಮಪದವಿ ಈವಾ ದೇವದೇವ ೫

೨೩೭
ಮನವೇ ಎಂದಿಗೆ ಇದು ಕೊನೆಯ ಕಾಣುವುದೊ ಪ
ಘನವಿಷಯ ಶರಧಿಯೊಳು ಮುಳಿಗಿ ಮುಂದರಿಯದೆ
ತನಗೆ ತಾನೆ ಚಿಂತೆಗೈಯ್ಯುತ ಜನರ ನೋಡಿ ಹಿಗ್ಗುತ ಅ.ಪ
ಮಂಗಳಾಂಗಿಯರ ನೋಡುತ ಮಾರಶರಕೆ ಗುರಿಯಾಗುತ
ಬಂಗಿತಿಂದ ಮಂಗನಂದದಿ ಭಂಗಕೆ ಒಳಗಾಗುವಿ ೧
ಎಷ್ಟುದಿನಗಳಾದರೂ ಪುಟ್ಟುವುದಿಲ್ಲ ವಿರಕ್ತಿ
ಭ್ರಷ್ಟನಾಗಿ ಕೆಟ್ಟು ಪೋಗುವೆ ಶ್ರೇಷ್ಠ ನೀನೆಂದು ಕೊಂಬುವೆ೨
ಕಾಮನಯ್ಯನಾದ ಶ್ರೀನ ನಾಮ
ಪ್ರೇಮದಿಂದಾ ಜಪಮಾಡದೆ ತಾಮಸರೊಳು ಸೇರಿದೆ ೩

೨೩೯
ಮಮತೆ ಯಾಕೆ ಸಂಸಾರದಿ ನಿನಗೆ
ಮರುಳು ಜೀವ ಏನು ಕಾಣುವೆ ಕೊನೆಗೆ ಪ
ಸಮಾಧಿಕ ಶೂನ್ಯನ ಚರಣಕಮಲಗಳಿಗೆ
ಸರ್ವಸಮರ್ಪಣೆ ಮಾಡದೆ ಇದರೊಳು ಅ.ಪ
ಯಮನಿಯಮಾಸನ ಪ್ರಾಣಾಯಾಮಗಳು
ಕ್ರಮ ತಿಳಿಯಲಿಲ್ಲಾ ನೀ ಹಗಲಿರುಳು
ಸಮರಾರೆನಗೆಂದು ಗರ್ವದಿ ಮೆರೆಯಲು
ಯಮನವರೆಳೆಯದೆ ಬಿಡುವರೆ ಛೀ ಹುಚ್ಚಾ ೧
ಇಂದ್ರಿಯಂಗಳು ನಿನ್ನಾಧೀನವಲ್ಲ
ಬಂದಮಾರ್ಗ ಸುಖ ಮರೆತು ಹೋದೆಯಲ್ಲ
ಮುಂದಿನ ಗತಿ ಗೋತ್ರ ಮೊದಲಿಗೆ ಇಲ್ಲ
ಮುಪ್ಪುತನವು ಹತ್ತಿರೇ ಬಂದಿತಲ್ಲ ೨
ಕರ್ಮವೆಂಬುವುದೊಂದು ಅನಾದಿಯಾಗಿ
ಧರ್ಮವ ಗಳಿಸುವವನೆ ಪರಮತ್ಯಾಗಿ
ನಿರ್ಮಲ ಮನದಿ ದುರಾಶೆಯ ನೀಗಿ
ಮರ್ಮವನರಿತುಕೊಂಡವನೇ ಮಹಾಯೋಗಿ೩
ಆಗುವ ಕಾರ್ಯವು ನಿಲ್ಲದು ಕೇಳು
ಭೋಗದಾಸೆಯ ಬಿಡು ಮೂರುದಿನದ ಬಾಳು
ರಾಗದ್ವೇಷವು ಅವಗೆ ಮನೆ ಹಾಳು
ಕೂಗುತಿಹವು ಶೃತಿ ಸ್ರ‍ಮತಿಪುರಾಣಗಳು ೪
ಸತಿಸುತರನು ನಾನೆ ಸಾಕುವೆನೆಂದು
ಮತಿಗೆಟ್ಟು ಭ್ರಾಂತಿ ಹೊಂದುವೆ ನೀ ಮುಂದು
ಮಿತಿಯ ಬರಹ ತಪ್ಪುವುದಿಲ್ಲ ಎಂದು
ಸತತವು ಪೊರೆವ ಶ್ರೀ ಪತಿ ಗುಣಸಿಂಧು ೫
ಆಹಾರ ನಿದ್ರೆಯಲ್ಲವೆ ನಿನ್ನ ಆಟ
ಸಾಹಸ ನೋಡೆ ಮಾಳಿಗೆಯ ಓಡ್ಯಾಟ
ಮೋಹದಿಂದಲಿ ಮುಂದೆ ಬರುವುದು ಗೂಟ
ಮೂಜಗದೊಳಗೆಲ್ಲಾ ಇದು ಗೊಂಬೆ ಆಟ ೬
ಕಾಮಕ್ರೋಧಗಳು ಬಿಡಲಾರೆಯೇನೊ
ಪಾಮರ ಜೀವ ಅಸ್ವಾತಂತ್ರಾ ನೀನೊ
ಯಾಮಯಾಮಕೆ ನಂಘ್ರಿ
ನೇಮದಿಂದಲಿ ಭಜಿಸಿ ಸುಖವಾಗುವುದು ಕಾಣೊ೭

೨೪೦
ಮರಿಯಾದೆ ಅಲ್ಲವೊ ನಿನಗೆ ಮನವೆ ಪ
ಸರಿಯಾಗಿ ನಡೆಯದೆ ನೀ ಚಪಲ ಪಡುವದು ಅ.ಪ
ಪರಧನ ಪರಕಾಮಿನಿಯರ ನೋಡಿ
ಎರಗುತ ತನಗದು ಬೇಕೆಂಬದು ೧
ಆಶೆಯಿಂದಲಿ ವೃಥಾಯಾಸವಲ್ಲದೆ ಏನು
ಲೇಸು ಕಾಣೆನು ಬಲು ಘಾಸಿಪಡುವೆ ೨
ಕೋತಿಯಂದದಿ ನೀನೇತಕೆ ಕುಣಿಯುವೆ
ಮಾತು ಮಾತಿಗೆ ನಾನು ನನ್ನದೆಂಬೋದು ೩
ನಿಂತಲ್ಲಿ ನಿಲ್ಲದೆ ಸಂತತ ದುರ್ವಿಷಯ
ಭ್ರಾಂತಿಯೊಳು ಮುಳುಗಿ ಚಿಂತಿಸುವದು೪
ನ ಸಿರಿನಾಮದ ರುಚಿ
ಸುರಿದು ತೃಪ್ತಿಗೊಳದೆ ಬರಿದೆ ಮರುಗುವೆ೫

೨೪೧
ಮರುಳು ಮನುಜ ಹರಿಯ ಧ್ಯಾನಿಸೋ
ಸ್ಥಿರವಿಲ್ಲವೀದೇಹ ಪ
ಬರಿದೆ ಹೊನ್ನು ಮಣ್ಣಿಗಾಗಿ
ಪರರ ಸೇವೆ ಮಾಡಿನೊಂದು
ಇರುಳು ಹಗಲು ವ್ಯರ್ಥವಾಗಿ
ಕರೆಕರೆಯನು ಪಡುವೆಯಲ್ಲೊ ಅ.ಪ
ತಂದೆ ತಾಯಿ ಸತಿಯು ಸುತರು
ಬಂಧು ಬಳಗಗಳಾರಿದ್ದರು
ಮುಂದಿನ ಕರ್ಮ ತಪ್ಪಿಪರಾರು
ಸಂದೇಹವಿಲ್ಲೆಂದು ತಿಳಿದು ೧
ಧನವ ಸಂಪಾದಿಸುವವರೆಗೆ
ಜನರು ನಿನ್ನ ಸೇರುತಿಹರು
ಕೊನೆಗೆ ಯಾರು ದಿಕ್ಕು ಕಾಣೆ
ಮನೆಯಬಿಟ್ಟು ಹೋಗುವಾಗ ೨
ನಂಘ್ರಿ
ಸ್ಮರಿಸಿ ಸ್ಮರಿಸಿ ಹರುಷ ಪೊಂದಿ
ಪರಮಸುಖವ ಪಡೆಯದೆ
ಪಾಪಿಯೆನ್ನಿಸಿಕೊಳ್ಳಬೇಡವೊ ೩