Categories
ರಚನೆಗಳು

ಗೋಪತಿವಿಠಲರು

೧೬೯
ವಾಯುದೇವರು
ಎರಡೂ ಕೈ ಮುಗಿದೂ ಬೇಡುವನ್ಯಾರೇ ಪೇಳಮ್ಮಯ್ಯ ಪ
ಸುರನರರ ಖಳರ ಪರಿಪರಿ ಕರ್ಮವ ಹರಿಗೊಪ್ಪಿಸುವಮರುತ ಕಾಣಮ್ಮ ಅ.ಪ.
ಕರವ ಬಲಕೆತ್ತೆ ನಿಂತಹನ್ಯಾರೇ ಪೇಳಮ್ಮಯ್ಯಾಭರದಿಂದ ಚರಣಗಳೂರಿದನ್ಯಾರೇ ಪೇಳಮ್ಮಯ್ಯಾದುರುಳ ಜನರ ಮೆಟ್ಟಿ ಶರಣರಿಗಭಯವಕರೆದು ಕೊಡುವ ಬಹು ಕರುಣಿ ಕಾಣಮ್ಮ ೧
ಬಿಂಕಾದಿ ಮುಖವಾ ತಿರುಹಿದನ್ಯಾರೇ ಪೇಳಕ್ಕಯ್ಯಟೊಂಕಾದಿ ಎಡಗೈಯಿಟ್ಟಿಹನ್ಯಾರೇ ಪೇಳಕ್ಕಯ್ಯಕಿಂಕರರಡಿ ಬರೆ ಅಂಕದೊಳೆತ್ತುವಡೊಂಕನಾದ ನಿಷ್ಕಳಂಕ ಕಾಣಮ್ಮ ೨
ಚೆಲುವ ಸರ್ವಾಂಗಲಕ್ಷಣನ್ಯಾರೇ ಪೇಳಮ್ಮಯ್ಯಹಲವೂ ಫಲಗಳನೂ ನೀಡುವನ್ಯಾರೇ ಪೇಳಮ್ಮಯ್ಯಸುಲಭಗೋಪತಿವಿಠಲನ ಪ್ರಿಯಕದರುಂಡಲಗಿ ಪುರಿ ಧೊರೆ ಇವನಮ್ಮ ೩

೧೭೦
ರುದ್ರದೇವರು
ಪಾಲಿಸೊ ಪಾರ್ವತಿ ರಮಣಾ ನಿನ್ನಪಾಲಿಗೆ ಬಂದೆನೊ ಪಾಲಿಸೆನ್ನದೆ ಪ
ವೇದವೇದಾಂತ ಪುರಾಣಗಳೆಲ್ಲನೀದಯಾಳುವೆಂದು ಪೊಗಳುತಿರೆಹಾದಿಬೀದಿ ದೇವತೆಗಳಿಗೆರಗಿ ನಾಖೇದಬಟ್ಟು ನಿನ್ನ ಮೊರೆ ಹೊಕ್ಕೆ ಮಹದೇವ ೧
ತುಂಗಾ ಕುಮದ್ವತಿ ಸಂಗಮೇಶ್ವರ ನಿನ್ನಕಂಗಳಿಂದಲಿ ನೋಡೂ ಕರುಣದಿಂದಕಂಗೆಟ್ಟು ಕಳವಳಿಸುತಿರೆ ನೀ ನೋಡಿಭಂಗಪಡಿಸಿದರೇನು ಭಾಗ್ಯವು ಬರುವದು ೨
ಆಪತ್ತು ಕಳೆದು ಸಂಪತ್ತು ನೀಡಿ ನಿನ್ನರೂಪವ ತೋರಿಸೋ ತ್ವರಿತದಲಿಗೋಪತಿಕೃಷ್ಣವಿಠಲನೆಲ್ಲ ಲೋಕವವ್ಯಾಪಿಸಿರಲು ಸಂದೇಹ ವ್ಯಾತಕಯ್ಯಾ ೩

೧೭೨
ಶ್ರೀ ರಾಘವೇಂದ್ರರು
ಯೋಗಿ ಕುಲವರ ಮಕುಟ ಗುರು ಶ್ರೀರಾಘವೇಂದ್ರನ ಭಜಿಸಿರೋ ಪ
ಮೋದತೀರ್ಥ ಪಯೋಧಿ ಚಂದಿರಸಾಧುಜನ ಸತ್ಕುಮುದಕೇಐದು ಆನನವಾಗಿಹನು ದು ರ್ವಾದಿ ಗಜಸಮುದಾಯರೇ ೧
ದೂಷಿಸುವ ಜನರುಗಳ ಗರ್ವ ಅಶೇಷ ಪರಿಹಾರಗೈಸುವಾ ೨
ದಿನಪನಂದದಿ ಕಾಂತಿಬೃಂದಾ ಬನದೊಳಿದ್ದು ಪ್ರಕಾಶವಾಅಣುಗರಿಗೆ ಸಂತೃಪ್ತಿ ಸುಖವನುಅನವರತ ಪೂರೈಸುವಾ ೩
ವ್ಯಾಕ್ತರಾಗಿಹ ಅಖಿಳರಿಗೆ ಫಲಪ್ರಾಪ್ತಿಗೋಸುಗ ಚರಿಸುವಾ ೪
ಆಪ್ತರಿಲ್ಲದೆ ಈತನೇಯೆನಗಾಪ್ತನನುದಿನವಾಗುವಾ ೫
ಕೋಲ ತನಯೆಯ ತೀರದಲಿ ಹೊ-ನ್ನಾಳಿಯಲಿ ವಿಹರಿಸುವಾಶೀಲ ಗೋಪತಿವಿಠಲನ ಕೃಪೆಗಾಲಯನು ಯೆಂದೆನಿಸುವಾ೬

೧೭೩
ರಾಘವೇಂದ್ರ ತೀರ್ಥ ಬೋಧಿಸುಭಾಗವತ ಗತಾರ್ಥರಾಘವ ಪದಾಂಬುಜ ಲಬ್ದಾರ್ಥ ಸರಾಗದಿ ಪಾಲಿಸು ನಿಜ ಪುರುಷಾರ್ಥ ಪ
ತುಂಗಾತಟವಾಸ ರಾಘವಸಿಂಗನ ನಿಜದಾಸಪಂಗು ಬಧಿರ ಮುಖ್ಯಾಂಗ ಹೀನರನಪಾಂಗ ನೋಟದಿ ಶುಭಾಂಗರ ಮಾಡಿ ೧
ಪಾದೋದಕ ಸೇವಾರತರಿಗಗಾಧ ಫಲಗಳೀವಬೂದಿ ಮುಖದ ದುರ್ವಾದಿಗಳೋಡಿಸಿಸಾಧು ಜನರಿಗಾಲ್ಹಾದ ಬಡಿಸುತಿಹ ೨
ಭುಜಗಧರಾಧಿಪನಾ ವೊಲಿಸಿದಸುಜನ ಶಿರೋಮಣಿಯೇನಿಜ ಪದ ಯುಗಳವ ಭಜಿಸುವ ಜನರಿಗೆ(ವಿಜಯದ ನೆನಿಸುವ ದ್ವಿಜಕುಲನಂದನ)ವಿಜಯದ ಗೋಪತಿ ವಿಠಲ ನಂದನ ೩

೧೭೧
ವಾದಿರಾಜರು
ವಾದಿರಾಜ ಗುರುರಾಜರ ಕೊಂಡಾಡಿ ಜನಿಪ ಸುಖವನು ಬೇಡ ಪ
ಸೋದೆ ಸ್ಥಳದಲಿ ನಿಂತು ಮೆರೆವನಯ್ಯಹಯವದನನ ಪ್ರಿಯ ಅ.ಪ.
ಮೋದತೀರ್ಥ ಮತವಾರಿಧಿ ಪೂರ್ಣಚಂದ್ರ ಸದ್ಗುಣ ಸಾಂದ್ರಾಮೇದಿನಿಯೊಳಗಿಹ ತೀರ್ಥ ಕ್ಷೇತ್ರವ ಚರಿಸಿ ಸಂತರನುದ್ಧರಿಸಿಸಾದರದಲಿ ಹರಿಮಹಿಮೆಯ ಕೊಂಡಾಡಿ ಪ್ರಬಂಧವನು ಮಾಡಿವಾದಿಗಳೆಂಬುವ ಗಜಕುಲ ಹರ್ಯಕ್ಷನಾಗಿಹ ಹರಿದೀಕ್ಷಾ ೧
ಎರಡೀರರುವತ್ತು ವಿದ್ಯಾಪೂರ್ಣನೆನಿಸೀ ದೂಷಕರನು ಜಯಿಸಿಬಿರುದುಗಳನಪಹರಿಸಿದ ಯತಿವರ್ಯ ಹರಕಾರ್ಯ ಧುರ್ಯವರಭೈಷ್ಮಿಶನ ವಿಜಯದ ಕಾವ್ಯವನು ಬಹುಪರಿ ಮಹಿಮೆಯನುವಿರಚಿಸಿ ಕವಿಕುಲ ಮಾನ್ಯನೆನಿಸಿಕೊಂಡ ಹರಿದಾಸ ಪ್ರಚಂಡಾ ೨
ಭೂತ ಬ್ರಹ್ಮರಾಕ್ಷಸ ಬಂದಿವರೊಳು ವಾದಿಸಿ ಮಾರ್ಗದೊಳುಸೋತು ಆಎ್ಞÁಧಾರಕರಾಗಿರುತಿಹರು ಅನುದಿನ ಸೇವಕರುಭೂತಳದ ಜನರು ಬೇಡಿದ ಇಷ್ಟಾರ್ಥ ಕೊಡುವಂಥ ಸಮರ್ಥಧಾರುಣಿಪತಿ ಗೋಪತಿವಿಠಲ ನಿನ್ನೊಶನಾಗಿಹನಲ್ಲ ೩

ಪಾಲಿಸೊ ಪಾರ್ವತಿ ರಮಣಾ
೧೭೦
ರುದ್ರದೇವರು
ಪಾಲಿಸೊ ಪಾರ್ವತಿ ರಮಣಾ ನಿನ್ನಪಾಲಿಗೆ ಬಂದೆನೊ ಪಾಲಿಸೆನ್ನದೆ ಪ
ವೇದವೇದಾಂತ ಪುರಾಣಗಳೆಲ್ಲನೀದಯಾಳುವೆಂದು ಪೊಗಳುತಿರೆಹಾದಿಬೀದಿ ದೇವತೆಗಳಿಗೆರಗಿ ನಾಖೇದಬಟ್ಟು ನಿನ್ನ ಮೊರೆ ಹೊಕ್ಕೆ ಮಹದೇವ ೧
ತುಂಗಾ ಕುಮದ್ವತಿ ಸಂಗಮೇಶ್ವರ ನಿನ್ನಕಂಗಳಿಂದಲಿ ನೋಡೂ ಕರುಣದಿಂದಕಂಗೆಟ್ಟು ಕಳವಳಿಸುತಿರೆ ನೀ ನೋಡಿಭಂಗಪಡಿಸಿದರೇನು ಭಾಗ್ಯವು ಬರುವದು ೨
ಆಪತ್ತು ಕಳೆದು ಸಂಪತ್ತು ನೀಡಿ ನಿನ್ನರೂಪವ ತೋರಿಸೋ ತ್ವರಿತದಲಿಗೋಪತಿಕೃಷ್ಣವಿಠಲನೆಲ್ಲ ಲೋಕವವ್ಯಾಪಿಸಿರಲು ಸಂದೇಹ ವ್ಯಾತಕಯ್ಯಾ ೩

ಹಾಡಿನ ಹೆಸರು :ಪಾಲಿಸೊ ಪಾರ್ವತಿ ರಮಣಾ
ಹಾಡಿದವರ ಹೆಸರು :ಮಧು ಕಶ್ಯಪ್
ಸಂಗೀತ ನಿರ್ದೇಶಕರು :ನಾಗರಾಜರಾವ್ ಹವಾಲ್ದಾರ್
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ