Categories
ರಚನೆಗಳು

ಗುರು ಜಗನ್ನಾಥದಾಸರು

ಪಾರ್ವತಿ
೭೮
ಅಂಬಾ ನಿನ್ನಯ ಪಾದ ಅಂಬುಜಯುಗ ಮನ
ಅಂಬುಜಾದೊಳಗತಿ ಸಂಭ್ರಮದಿಂದಲಿ
ನಂಬಿ ಭಜಿಪನ ಚಿತ್ತದಿ ಇಂಬುಗೊಂಡಿರುವೋ
ಬಿಂಬರೂಪನ ತೋರೆ ಅಂಬುಜಾಂಬಕೆ
ಶಂಭುದೇವನ ಪ್ರಿಯೆ – ದಂಭೋಲಿಧರವಿನುತೆ
ಅಂಬರಮಾನಿಮಾತೆ ಪ್ರಖ್ಯಾತೆ
ಶುಂಭನಿಶುಂಭಾಸುರ ಕದಂಬ ಸಂಗ್ರಾಮ ಹಾರೀ
ಕುಂಭಿಣಿಧರಜಾತೆ ರಾಜಿತೆ
ಕಂಬುಚಕ್ರಪಾಣಿ ವಿಶ್ವಂಭರ ಮೂರುತಿ
ಅಂಬುಜಾಪತಿ ನಮ್ಮ ಗುರುಜಗನ್ನಾಥವಿಠಲನ್ನ
ಕಾಂಬುವತೆರ ಮಾಡೆ ಕರುಣಾಕರಳೆ

ಹನುಮ-ಭೀಮ-ಮಧ್ವರು
೫೩
ಅಖಿಳ ಬೊಮ್ಮಾಂಡ ನಾಯಕ
ಸಕಲ ಜೀವೋತ್ತುಮ
ವಿಖನಸಾರ್ಚಿತ ಪಾದ ನಿಖಿಳ ಲೋಕವ್ಯಾಪ್ತಾ
ಲಕುಮಿರಮಣನ ಪ್ರಾಣ ಸಂಭೂತ
ಸುಖಜ್ಞಾನಮಯ ಸ್ವರೂಪ ಸುಮನೋತ್ತಂಸ
ಶಿಖಿಸಖೋದಿತರವಿ ಪ್ರಕರ ಸನ್ನಿಭ ಮುಖ
ಸುಖಪೂರ್ಣ ಶುದ್ಧ ಸತ್ತ್ವ್ವಶರೀರ
ಆಖಣಾಶ್ಮ ಸಮಚರಣ ಭಕ್ತಾಭರಣ
ಲೋಕೈಕ ವೈದ್ಯಾಭಾರತೀಕಾಂತಾ
ಲೌಕಿಕ ಸುಖದಾತಾ ಪ್ರಖ್ಯಾತಾ
ಕಾಕೋದರ ಶಾಯಿ ನಮ್ಮ ಗುರುಜಗನ್ನಾಥವಿಠಲನಾ
ಲೋಕನವಿತ್ತು ಪೊರೆಯೋ ಪ್ರಾಣರಾಯ

೯೫
ಅರಿಯಾರೊ ಅಂದಿಗಂದಿಗನ್ಯ – ಈ
ಧರೆಯೊಳಿವರ ಮಹಿಮೆ ಘನ್ನ ಪ
ಮರುತಾವೇಶಯುತ – ಉರಗಾಂಶರನ್ನ ಅ.ಪ
ಪ್ರಲ್ಹಾದ ಲಕ್ಷ್ಮಣ ಬಾಹ್ಲೀಕ ವ್ಯಾಸನು
ಇಲ್ಲೀಗ ರಾಘವೇಂದ್ರ ಉಲ್ಲಾಸ ಬಡುವನು ೧
ಇನ್ನೂರ ನಾಲ್ವತ್ತು ಮುನ್ನೀಗ ಪೋದದ್ದು
ನನ್ನುರ ಅರವತ್ತು ಇನ್ನು ಉಳಿದಿಹದು ೨
ಎಲ್ಲೀ ನೋಡಲಿವರಿಲ್ಲದ ಸ್ಥಳವಿಲ್ಲ
ಬಲ್ಲಾ ಭಕುತಗೆ – ಅಲ್ಲಲ್ಲೆ ತೋರುವದು ೩
ಖುಲ್ಲ ನರರಿಗೆ – ಎಲ್ಲೆಲ್ಲಿ ಇಲ್ಲವೊ
ಸಲ್ಲೋದು ನಿಶ್ಚಯ – ಸುಳ್ಳಲ್ಲ ಈ ಮಾತು ೪
ದುಷ್ಟ ಜನರಿಗೆ ಇಷ್ಟಾರ್ಥ ಕೊಡುವೊನೊಮ್ಮೆ
ಶಿಷ್ಟಾ ಜನರಿಗ ಭೀಷ್ಠಾವ ಕೊಡುವದು ೫
ಇವರ ಪೂಜಿಪ ಜನ – ದಿವಿಜರು ನಿಶ್ಚಯ
ಭುವನದೊಳಗೆ ಇನ್ನು ಇವರಿಗೆ ಸರಿಯುಂಟೆ ೬
ಇವರನ ಒಲಿಸಲು ಪವನಾನು ಒಲಿವನು
ದಿವಿಜಾರುತ್ತಮ ಮಾಧವ ತಾನೆ ಒಲಿವನು ೭
ಅಮಿತ ಮಹಿಮರೆಂದು ಪ್ರಮಿತರು ಪೇಳೋರು
ಸುಮತಿಗಳ ಮನಕೆ ಗಮಿಸಿ ತಿಳಿಸುವದು ೮
ದಾತಾ ಗುರು ಜಗನ್ನಾಥಾ ವಿಠಲ ಬಹು
ಪ್ರೀತಿಯಿಂದಲಿ ಇವರ ಖ್ಯಾತಿಯ ಮಾಡೊದು ೯

ಚತುರವಿಂಶತಿತತ್ತ್ವಪತಿ ದೇವತೆಗಳು

೯೬
ಆದಿಯುಗದಿ ಮಹ ಆದಿದೈತೇಯನೊಬ್ಬ
ಮೇದಿನಿಯೊಳ್ ಸ್ವರ್ಣಕಶ್ಯಪು ನಾಮದಿ
ಸಾಧಿಸಿ ಬಂದವಗೊಬ್ಬ ಸೋದರ ಸ್ವರ್ಣಾಂಬಕನೆನಿಸಿ
ಮೇದಿನಿ ಚೋರನಾಗಿ ಹತನಾದನು
ಆದಿಶೇಷನೆ ವಿಷ್ಟಕ್ಸೇನ ತಾ-
ನಾದ ಪ್ರಹ್ಲಾದ ಪ್ರಾಣಾವೇಶದಿಂದ
ಸೋದರ ಜೀವಾಂಶಾಪಾನಾವಿಷ್ಟ ಸ-
ಲ್ಹಾದನಾಮಕ ಮಿತ್ರನಾದ ಕ
ಹ್ಲಾದ ವ್ಯಾನಾವೇಶದಿಂದ
ಮೋದದಿ ಸೋಮಾಂಶೋದಾನಾಯುತ ನು-
ಹ್ಲಾದ ನಾಮಕ ಸಂಭೂತನಾದ
ಆದಿ ಗಣಪ ಸಮಾನಾವೇಶದಿಂದ
ಆದರೈವರಾದೈತ್ಯಗೆ ಪುತ್ರರು
ಮೇದಿನಿ ಸುರರುದ್ಧಾರಗೋಸುಗ
ಆದಿದೈವ ನಾರೇಯಣ ತಾ
ನಾದಿಕಾರಣ ವಿಶ್ವಕರ್ತಾ
ಮೋದಾನಂದ ಮೂರುತಿ ಸುಗುಣ
ಭೋಧಪೊರ್ಣ ಸರ್ವಜ್ಞ ಸ್ವಾತಂತ್ರ
ವೇದಪುರುಷಾದಿ ಜಡಾದಿ ಜಗಕೆ
ಆಧಾರ ಹರಿ ಎಂಬ ಜ್ಞಾನವ
ಭೋದಿಸಿ ಬೊಮ್ಮಮುಖರು ಹರಿ
ಪಾದಸೇವಕರೆನುತ ನಿತ್ಯ
ವಾದದಿ ವಾದಿಗಳ ಜಯಸಿದರವರ
ಪಾದಸೇವಿಸಿ ಕರುಣಾಪಡೆದು
ಆದಿ ಗುರು ಜಗನ್ನಾಥವಿಠಲನ್ನ
ಆದರದಲಿ ಭಜಿಪೆ ಪರಮ ಸುಖ
ರಾಗ :ಕಲ್ಯಾಣಿ
ಅಸುರರ ಜನ್ಮದಿ ಪುಟ್ಟಿದ ಇವರಿಗೆ
ಶ್ವಸನನ ಆವೇಶ ಸುರರಾವೇಶ ಬಲದಿ
ಅಸಮಜ್ಞಾನ ಭಕುತಿ ವಿರಾಗವು
ವಸುಧಿಯ ತಳದಿ ದಿನದಿನದಲ್ಲಿ
ಪಸರಿಪ ಸೂರ್ಯನ ಪ್ರಭೆಯಂದದಲಿ
ಮಿಸುಪದಕಿದೇ ಕಾರಣ ಉಂಟು
ಬಿಸಜಾಂಬಕ ಹರಿಪೇಳಿದ ಇವರಿಗೆ
ಅಸುರೇಶ ಹಿರಣ್ಯಕಶಿಪುವಿನಲ್ಲಿ
ಶಿಶುಭಾವದಿಂದ ಜನಿಸಲು ಪೋಗಿರಿ
ಪುಸಿಯಲ್ಲ ಮಚ್ಛಾಪ
ಅಸುರಭಾವ ಪ್ರಲ್ಹಾದಾದ್ಯ
ರಸಮಮಹಿಮರಾಗೀ ಜನಿಸಿರೆಂದು
ಉಸುರಿದ ವಾಕ್ಯವು ಪ್ರಮಾಣ ಸಿದ್ಧವೆನ್ನಿ
ವ್ಯಸನಞ್ಲೈವರು ಹರಿಯನೆ ಮತ್ತೆ
ಬೆಸಗೊಂಡರೀಪರಿ ಪರಿಯಾ
ಅಸುರನ ಪತ್ನಿಯ ಬಸಿರೊಳು ಪುಟ್ಟುವುದು
ವಶವಲ್ಲವೋ ಸ್ವಾಮಿ
ಕುಸುಮನಾಭನೆ ನಿನ್ನ
ಅಸಮಲೋಕದ ಸುಖ ವಸುಧಿತಳಾದಲ್ಲಿ
ಎಸಗದು ಎಸಗದು ಎಂದಿನಕಾಲಕ್ಕೂ
ಮುಸುಕುವದಜ್ಞಾನ ದುಃಖದ ಭವದಲ್ಲಿ
ಕಸವಿಸಿಗೊಳುತಾ ಜ್ಞಾನವನೀಗಿ
ಬಿಸನಿಲಯನೆ ನಿನ್ನ ದರುಶನವಿಲ್ಲದೆ
ಅಸುನಿಲ್ಲುವ ಬಗೆ ಯಾವುದು ಪೇಳೋ
ಶಶಿಧರವಂದ್ಯ ಗುರುಜಗನ್ನಾಥ ವಿಠಲ ನಮ್ಮ
ವ್ಯಸನವನು ಕಳೆದು ಸುಖವನು ಸಲಿಸೋ
ರಾಗ – ಕಾಂಭೋದಿ ತಾಳ – ತ್ರಿವಿಡಿ
ಭಕುತವಾಕ್ಯವ ಲಾಲಿಸಿ ತಾನಾಗ
ಲಕುಮಿರಮಣನು ಈ ಪರಿ ನುಡಿದನು
ವಿಕಳ ಪೊಂದದೆ ನೀವು ತ್ವರಿತಾದಿ ಧರೆಯೊಳು
ಸಕಲರು ಜನಿಸಲು ಮುಸಕದಜ್ಞಾನ
ಲಕುಮಿ ಭೂಮಿಯ ಸಹಿತ ಇರುವೆನು ನಿಮ್ಮೊಳು
ವ್ಯಕುತನೆನಿಸಿ ನಿತ್ಯ ಪರಿಪರಿ ಮಹಿಮವ
ಪ್ರಕಟಮಾಡುವೆ ಮುಖ್ಯಪ್ರಾಣನಿಪ್ಪನು ಸತತ
ಕಕುಲಾತಿ ಯಾಕಿನ್ನು ನಡಿರೆಂದು ಹರಿಯೆಂದ
ಉಕುತ ವಾಕ್ಯದಲಿಂದ ದಿತಿಜನಲ್ಲಿ
ಸುಕೃತಿಗಳೈವರು ಉದಯವೈದಿದರಾಗ
ಮುಕುತಿದಾಯಕ ಗುರುಜಗನ್ನಾಥ ವಿಠಲನೆಂಬ
ಭಕುತಿ ಪೂರ್ವಕ ಜ್ಞಾನವೃದ್ಧಿಯೈದಿದರು
ರಾಗ – ಆರಭಿ ತಾಳ – ಅಟ್ಟ
ಪಿರಿಯ ಪ್ರಲ್ಹಾದನ್ನ – ಕರದು ತೊಡೆಯ ಮೇಲೆ
ಇರಿಸಿ ಪ್ರೇಮದಿ ನಿಮ್ಮ – ಗುರುವೇನು ಪೇಳ್ಯಾನೆ
ಮರಿಯಾದೆ ಎನಮುಂದೆ – ಅರಹು ಎನಲು ಬಾಲ
ಕಿರಿನಗೆ ಮುಖದಿಂದ – ಹರಿಯೆ ಸರ್ವೋತ್ತಮ
ಹರಬೊಮ್ಮ ಮುಖರೆಲ್ಲ – ಪರಿವಾರಭೂತರು
ಅರಿದಿಪ್ಪೆ ಎನ್ನಯ್ಯ ಸರಸಿಜಜಾಂಡಕ್ಕೆ
ಅರಸು ತಾನಾಗಿದ್ದು ಇರುವಾದಿ ಚೇತನ
ತರುವಾದಿ ಜಡಮಯ ಸರ್ವಸ್ಥಳದಲ್ಲಿ
ನಿರುತದಿ ವ್ಯಾಪಿಸಿ ಇರುತಿಹ ಹರಿ ಎಂದು
ಅರಿತ ಮಾನವನಿಗೆ ದೊರೆವೋನು ನಿಶ್ಚಯ
ಅರಿತು ಪೇಳಿದ ತನ್ನ ತರಳಾನ ನುಡಿಕೇಳಿ
ಭರದಿಂದ ಕಂಬವ ಕರದಿಂದ ಬಡಿಯಾಲು
ನರಮೃಗಾಕಾರದಿ ಹೊರಗೆ ಬಂದಾದೈತ್ಯನು
ದರವ ಬಗೆದು ಕರುಳಮಾಲೆಯತಾ
ಕೊರಳೊಳು ಧರಿಸಿದ ಚರಜನ ಪರಿಪಾಲ
ಬಿರುದು ಬೀರಿದ ನಮ್ಮ ಗುರುಜಗನ್ನಾಥವಿಠಲ
ಶರಣರ ಮರೆಯನೋ ಧರಿತಳದೊಳಗೆ
ರಾಗ :ಇಚ್ಛಾ :ತಾಳ – ಆದಿ
ಈ ತೆರ ಪ್ರಹ್ಹಾದ ಹರಿಪಾದವ ಭಜಿಸಿ
ಪ್ರೀತಿಯ ಪಡೆದು ಭೂಸುರಗಣಕೆ
ಭೂತಳದೊಳಗೆ ಯತಿಗಳ ಕುಲಕೆ
ನಾಥನು ವ್ಯಾಸಮುನಿ ಎನಿಸಿ ಮರಳಿ
ಖ್ಯಾತ ಶ್ರೀ ರಾಘವೇಂದ್ರನೆಂದೆನಿಸಿ
ಪ್ರೀತಿಯಿಂದಲಿ ಭಕ್ತರ ಪೊರೆಯಲು
ನೀತಿ ಭಾವದಲಿ ಯತಿಯಾಶ್ರಮ ಪೊಂದಿ
ಸೀತಾಪತಿರಾಮ ಯದುನಾಯಕ ಕೃಷ್ಣ
ಭೀತಿಹರ ನರಸಿಂಹ ವ್ಯಾಸರ ಭಜಿಸಿ
ದೂತರ ಮನೋರಥ ಪೂರ್ತಿಸಿ ಪೊರೆವನು
ದಾತಗುರುಜಗನ್ನಾಥ ವಿಠಲನ್ನ
ನೀತ ವಿಭೂತಿಯ ಪಡೆದು ನಿರ್ಭೀತನಾಗಿಹನು
ಜತೆ ದೂತಜನರ ಮಹಾಪಾತಕ ಹರನೆನ್ನಿ
ಪ್ರೀತಗುರುಜಗನ್ನಾಥವಿಠಲನೊಲಿವ
ರಾಗ :ಶಂಕರಾಭರಣ :ತಾಳ :ಏಕ

೯೭
ಆರಾಯರ ಪದ – ನೀರಜ ಯುಗ ಮನೋ –
ವಾರಿಜದಲಿ ನಾ ಭಜಿಸುವೆನು ಪ
ಸಾರಿದ ಜನರಘದೂರದಿ ಓಡಿಸಿ
ಧಾರುಣಿಯೊಳು ಸುರಸೌರಭಿ ಎನಿಸಿಹ ಅ.ಪ
ಅವರ ಪದಜಲ ಈ ಭುವನತ್ರಯ
ಪಾವನ ತರವೆಂದೆನಿಸುವದೋ
ಅವರ ಪದಯುಗ ಕೋವಿದಜನರು
ಭಾವದಿ ದಿನದಿನ ಸೇವಿಪರೋ
ಅವರ ಹೃದಯದಿ ನಾರಾಯಣ ಚ –
ಕ್ರಾವತಾರವ ಧರಿಸಿಹನೊ
ಶ್ರೀವರ ಹರಿ ಕರುಣಾವಲೋಕನದಿ
ದೇವಸ್ವಭಾವವ ನೈದಿಹರೋ ೧
ಆವ ಮಾನವನಿವರಚರಣ ಸೇವಕತೆರನೆಂದೆನಿಸುವನ್ನೋ
ಭಾವಿಪರವನೀತಳದೊಳು ಮತ್ತೆ
ಕೋವಿದ ಜನರೆಲ್ಲರು ಆವನ
ಧೀವರನಾಗುವ ಅವನೇ ಅವನೀ
ದೇವೋತ್ತುಮನೆಂದೆನಿಸುವನು
ಪಾವನಿ ಮುಖ ದೇವೋತ್ತುಮರೆಲ್ಲರು
ಈ ವಿಧ ಮಹಿಮೆಯ ತೀವ್ರದಿ ತೋರುವ ೨
ಅವರು ಅವನೀ ದೇವತೆಗಳಿಗೆ
ಜೀವನವಿತ್ತು ಪೊರೆದಿಹರೋ
ಪಾವಕಘಾಕಿದ ಹಾರವ ಮತ್ತೆ
ಭೂವರನಿಗೆ ತಂದಿತ್ತಿಹರೋ
ಮಾವಿನ ರಸದಲಿ ಬಿದ್ದಿಹ ಶಿಶುವಿಗೆ
ಜೀವನವಿತ್ತು ಕಾಯ್ದಿಹರೋ
ಶೈವನ ನಿಜಶೈವವ ಬಿಡಿಸೀ ತಮ್ಮ
ಸೇವೆಯನಿತ್ತು ಕಾಯ್ದಿಹರೋ ೩
ಸಲಿಲವ ತಂದಿರುತಿಹ ನರನಿಗೆ
ಸುಲಲಿತ ಮುಕ್ತಿಯನಿತ್ತಿಹರೋ
ಚಲುವ ತನಯನಾ ಪುಲಿನದಿ ಪಡೆದಿಹ
ಲಲನೆಯ ಚೈಲದಿ ಕಾದಿಹರೋ
ಸಲಿಲವು ಇಲ್ಲದೆ ಬಳಲಿದ ಜನಕೆ
ಸಲಿಲವನಿತ್ತು ಸಲಹಿದರೋ
ಇಳೆಯೊಳು ಯತಿಕುಲತಿಲಕರೆಂದೆನಿಸಿ
ಸಲಿದಂಥದು ತಾವು ಸಲಿಸಿಹರೋ ೪
ಅನುದಿನದಲಿ ತಮ್ಮ ಪದಕಮಲವನು
ಮನದಲಿ ಬಿಡದೆ ಭಜಿಸುವರಾ
ಜನರಿಗೆ ನಿಜಘನಸುಖವನು ಕೊಟ್ಟವ –
ರನುಸರಿಸೀ ಇರುತಿಹರಾ
ಮನೋ ವಾಕ್ಕಾಯದಿ ನಂಬಿದ ಜನಕೆ
ಜನುಮವನ್ನುನೀಡರು ಇವರ
ಘನಗುಣ ನಿಧಿ ಗುರುಜಗನ್ನಾಥ ವಿಠಲ –
ನಣುಗಾಗ್ರೇಸರೆರೆನಿಸಿಹರಾ ೫

ಧರೆಯನಳೆದ ಅಳತೆಗಾರ

೯೮
ಆವನ ಭಯ ತನಭಾವದಿ ಗುರುಪದ ಸೇವಕನಾದವಗೆ ಪ
ಕೋವಿದ ಕುಲ ಸಂಭಾವಿತ ಗುರುವರ
ಕಾವನೆನುತ ಮನೋಭಾವದಲಿರುವವಗೆ
ಧಾರುಣಿಪತಿ ತನ್ನ ಸೇರದೆ ಪರಿಪರಿ
ಗಾರುಮಾಡಿದರೇನೂ
ಕ್ರೂರತನದಲಧಿಕಾರಿ ಜನಂಗಳು
ದೂರ ನೋಡಲೇನು
ನಾರಿ ತನುಜ ಪರಿವಾರದ ಜನರೂ
ಮೋರೆಗಾಣದಿರಲೇನೂ
ಘೋರ ಭಯ ಪರಿಹಾರಕ ನಮ್ಮ
ಧೀರ ಗುರುಪದ ಸೇರಿದ ನರನಿಗೆ ೧
ಕಾಮಿತ ಫಲಪ್ರದ ಈ ಮಹಮಹಿಮನ
ನೇಮದಿ ಭಜಿಸುವಗೆ
ಆಮುಷ್ಮಿಕ ಸುಖ ಪ್ರೇಮದಿ ನೀಡುವ
ಕಾಮಧೇನು ನಂಬಿದಗೆ
ಧೀಮಂತರ ಮಹಸ್ತೋಮದಿ ನಮಿತನ
ನಾಮವ ಜಪಿಸುವಗೆ
ಈ ಮಹ ಸಾರ್ವಭೌಮನ ಪದಯುಗ
ತಾಮರಸವೆ ಹೃದ್ಯೋಮದಿ ನೆನೆವಗೆ ೨
ಭೂತಲ ಮಧ್ಯದಿ ಖ್ಯಾತಿಯ ಪಡೆದ್ಯತಿ
ನಾಥನ ಸ್ಮರಿಸುವಗೆ
ಭೂತ ಪ್ರೇತಭಯ ಘಾತಿಸಿ ನಿಜಸುಖ
ದಾತನ ಮೊರೆಪೊಕ್ಕವಗೆ
ಕಾತರ ಪಡುವ ಅನಾಥರ ಪೊರೆವನ
ದೂತನಾದ ನರಗೆ
ದಾತ ಗುರುಜಗನ್ನಾಥ ವಿಠಲನ
ಪ್ರೀತಿಯಪಡೆದ್ಯತಿನಾಥನ ಭಜಿಪಗೆ ೩

೯೯
ಇಂಥಾ ಗುರುಗಳ ಕಾಣೆನೋ ಈ ಜಗದೊಳು ನಾ ಪ
ಇಂಥಾ ಗುರುಗಳನೆಂದು ಕಾಣೆನಾ
ನಂತ ಚೇತನರಂತರ ಬಹಿರದಿ
ನಿಂತು ಕರ್ಮವವರಂತೆ ಮಾಳ್ಪಾ –
ನಂತ ಮಹಿಮಾನಂತನಾಂಶಜರಿಂಥಾಅ.ಪ
ತುಂಗಾತೀರದಿ ನಿವಾಸಾ ಮಂತ್ರಾಲಯಕೀಶ
ತುಂಗ ವಿಕ್ರಮ ಜಗದೀಶಾ ಶ್ರೀಹರಿ ದಾಸಾ
ಮಂಗಲ್ಮಾತಕ ವೃಂದಾವನ ದೇಶಾ ಸಾರಿದ ವ್ರತೀಶಾ
ಮಂಗಲ ಮಹಿಮ ರಂಗನ ಕರುಣಾಪಾಂಗ ಪಡೆದ ಕೃ –
ಪಾಂಗ ಯತಿಕುಲೋತ್ತುಂಗ ಮಾಯಿ ಮಾ –
ತಂಗ ಸಂಘಕೆ ಸಿಂಗ ದುಷ್ಟ ಭು –
ಜಂಗ ಗಣ ವಿಹಂಗ ಸ್ವಮತೋ –
ತ್ತುಂಗ ವಾರಿಜ ಭೃಂಗ ಮನ್ಮನೋ –
ರಂಗ ಬಿಂಬನ ಇಂಗಿತಙ್ಞರ ಸಂಗ ನೀಡಿ
ಕಂಗಳಿಗೆ ತಾವು ಕಂಗೊಳಿಪರಿಂಥಾ ೧
ಮೇದಿನಿ ತಳದಲಿ ಜನಿಸೀ ಸುಖತಿರ್ಥರ ಭಜಿಸೀ
ಭೇಧಮತವನೆ ಸಾಧಿಸೀ ವಾದದಿ ಜೈಸಿ
ಮಾಧವನೆ ಸರ್ವೋತ್ತಮನೆನಿಸಿ ಸ್ವಮತವ ಸ್ಥಾಪಿಸಿ
ಭೋಧಿಸಿ ತತ್ತ್ವವ ಭೇಧಿಸಿ ಪರಮತ
ಛೇಧಿಸಿ ಕುಮತಿಯ ಶೋಧಿಸಿ ತತ್ತ್ವದ
ಹಾದಿಯ ಹಿಡಿಸಿ – ಮೋದಕೊಡುವ ಪಂಚ
ಭೇದವ ತಿಳಿಸೀ ಸಾದರ ತನ್ನಯ ಪಾದಸೇವೆಯ
ಮೋದವ ನೀಡುವ ಮೇದಿನೀ ದಿವಿಜಾರಾಧಿತ ಪದಯುಗ
ಶೋಧಿಸಿ ಜನಮನೋ ಖೇದಗೊಳಿಪ ಭ –
ವೋಧಧಿ ದಾಟಿಸಿ ಶ್ರೀದನ ತೆರದಲಿ
ಮೇದಿನಿಯಾಳುವರಿಂಥಾ ೨
ಧಿಟ್ಟ ಗುರು ಜಗನ್ನಾಥ ವಿಠಲದೂತಾ
ಸೃಷ್ಟಯೊಳಗತಿ ವಿಖ್ಯಾತಾನೆನಿಸಿದ ಯತಿನಾಥಾ
ಕುಷ್ಟಾದಿ ರೋಗದ ಘಾತಾ ಮಾಡುವೊದಾತಾ
ಇಷ್ಟಾರ್ಥವಾ ತಾ ಸೃಷ್ಠಿಗೆ ಬೀರುವ
ಶಿಷ್ಟಜನರನುತ್ರ‍ನಷ್ಟದಿ ಪಾಲಿಪ
ಎಷ್ಟು ಪೇಳುವುದೋ ಉತ್ರ‍ಕಷ್ಟನ ಗುಣಗಳ
ಭ್ರಷ್ಟರರಿಯರೆಲೆ ಶಿಷ್ಟರು ಬಲ್ಲರು
ಇಷ್ಟೇ ಅಲ್ಲವೀತನ ವಿಶಿಷ್ಟ ಮಹಿಮೆಗ –
ಳೆಷ್ಟು ಪೇಳಲವಶಿಷ್ಟವೆನಿಪವೋ
ದೃಷ್ಟಿಹೀನರಿಗೆ ದೃಷ್ಟಿ ನೀಡುವ
ದೃಷ್ಟಿ ಮಾತ್ರದಿ ತುಷ್ಟಿಬಡಿಸುವೊರಿಂಥಾ ೩

ಮಧ್ಭಾಗವತದಲ್ಲಿ ಸಪ್ತಮ

ಇಂದಿಗೆ ಇರುತಿಹ ಮಂದನ ಶ್ರಮ ಬಹು ಬಂಧನ
ಬಿಡಿಸೊ ಗೋವಿಂದ ಎನ್ನನು ಕಾಯೊ ಮುಕುಂದ ಪ
ಹಿಂದಿನ ಕಾಲದೊಳಾದ ಪ್ರತೀಕಾರದಿಂದ
ಬಾಧಿಪನಿವನೆನ್ನ ಕಾಯ ಬೇಕೈಯ್ಯಾ ನೀ ಎನ್ನ ೧
ನಿಂದ್ರಾದೆ ಗ್ರಾಮದಿ ಪೊಂದಾದೆ ಜನರನ್ನು
ಕುಂದುತ ಬಂದೆನಾರಣ್ಯ ವಾಸವಮಾಡುತ ಇನ್ನಾ ೨
ಇಂದಿರಪತಿಪಾದದ್ವಂದ್ವವು ಮನ್ಮನ
ಮಂದಿರದಲಿ ತೋರಿನ್ನಾ ಐದುವೆ ನಿಜಸುಖವನ್ನಾ ೩
ಪೊಂದಿಸು ನಿನ್ನಯ ವಂದಿಸುವಾ ಜನ
ಸಂದಣಿಯೊಳು ಮುಂದೆನ್ನಾ ಐದುವೆ ನಾ ನಿನ್ನಾ ೪
ಇಷ್ಟುಶ್ರಮವ ನಾ ತಪ್ಟಿಸಿ ಪೇಳಿದೆ ಧಿಟ್ಟ
ಗುರುಜಗನ್ನಾಥಾ ವಿಠ್ಠಲ ನಿಜಜನಪ್ರೀತಾ ೫

೪೫
ಇಂದಿರೆ ನಿನ್ನ ಪಾದ ವಂದಿಸುವ ಎನ್ನ
ಮಂದಿರದಲ್ಲಿ ನಿಲ್ಲೆ ಕೇಳುವದೆನ ಸೊಲ್ಲೆ ಪ
ಅಂಧಕೂಪದ ಭವ ಸಿಂಧೂವಿನೊಳು ಬಹು
ನೊಂದು ನಿನ್ನ ಬೇಡಿಕೊಂಬೆ ಪಾಲಿಸು ಜಗದಂಬೆ೧
ಇಂದಿರೇಶನರಾಣಿ ಮಂದಭಾಗ್ಯನ ಕರುಣ –
ದಿಂದಲಿ ಎನ್ನ ನೋಡೆ ನೀ ನಲಿದಾಡೆ ೨
ಮಂದಜಾಸನ ಜನನಿ ಸುಂದರ ಸುಗುಣಿ ನಿನ್ನ
ಕಂದನು ನಾನಮ್ಮ ಶಿರಿಯೆ ನೀ ಸುಖ ಸುರಿಯೆ ೩
ಎಂದಿಗು ಎನ್ನನು ಪೊಂದಿದ ಈ ಭವ
ಬಂಧನ ಬಿಡಿಸೆಂದೆ ನಿನ್ನನು ಬೇಡಿಕೊಂಡೆ ೪
ದಾತ ಗುರುಜಗನ್ನಾಥ ವಿಠಲನ
ಪ್ರೀತಿಯಿಂದ ಎನಗೆ ತೋರೆ, ನೀ ಎನ್ನ ಮನೆಗೆ ಬಾರೆ ೫

೪೬
ಇಂದಿರೆ ಪಾಲಿಸು ಎನ್ನ ಪ
ಇಂದಿರೆ ನಿನ್ನನು ವಂದಿಸಿ ತುತಿಸುವೆ
ವಂದಿಪ ಜನಕಾನಂದ ನೀಡುವ ದೇವೀ ಅ.ಪ
ಮಂದಜಾಸನ ಮುಖ ಸುರರಾ ಕರುಣ
ದಿಂದಲಿ ಪಾಲಿಪೆ ಅವರ
ಇಂದು ಮುಖಿಯೆ ನಿನ್ನ ಸದರ ಸದಾ
ಪೊಂದಿದ ಜನಕೆ ಅಧಾರಾ ಆಹ –
ಳೆಂದು ನಿನ್ನಯ ಪಾದದ್ವಂದ್ವಜಲಜ ಮನೋ –
ಮಂದಿರದಲಿ ನಿತ್ಯ ವಂದಿಪೆ ಹರಿರಾಣೀ ೧
ಕರುಣವಾರಿಧಿ ನಿನ್ನ ಚರಣ – ಸದಾ
ಸ್ಮರಣೆ ಮಾಳ್ಪರ ಪಾಪಹರಣ
ಶರಣ ಜನರ ದುಃಖದಾವರಣ ಪರಿ –
ಹರಿಸಿ ಮಾಡುವಿ ಪೂರ ಕರುಣಾ ಆಹಾ
ಸರಿಯಿಲ್ಲ ನಿನಿಗಿನ್ನು ಹರಿಗೆ ಸಮಾಸಮೆ
ತ್ವರಿತಾದಿ ಎನ್ನನು ಮರೆಯದೆ ಪೊರೆಯೆಂದೆ೨
ಮಾತೆ ದಾರಿದ್ರ್ಯವ ಕಳೆದು ನಿನ್ನ
ದೂತ ನಾನೆಂದು ನೀನೊಲಿದು
ಮಾತು ಲಾಲಿಸಿ ಭಾಗ್ಯಗರಿದು ಎನಗೆ
ನೀತವಾಗಿ ಸುಖ ಸುರಿದು ಆಹಾ
ದಾತಗುರುಜಗನ್ನಾಥವಿಠಲ ನೀ –
ಕೇತನ ಸುಖ ಎನಗೆ ಈ ತೆರ ನೀಡಮ್ಮಾ೩

ಮಹಾಲಕ್ಷ್ಮಿ
೪೪
ಇಂದಿರೇ ಪಾಲಿಸು ಕಮಲಮಂದಿರೆ ಪ
ಇಂದಿರೆ ಇಂದುನಿಭಾಸ್ಯೆ – ಗುಣ –
ವೃಂದ ಶೋಭಿತೆ ಶುಭಗಾತ್ರೆ – ಆಹಾ
ಇಂದು ಶೇಖರಸುರವಂದಿತಪಾದ
ದ್ವಂದಾರವಿಂದಳೆ ಮಂದಸ್ಮಿತಾನನೆ ಅ.ಪ
ಅರುಣದಿಂದೊಪ್ಪುವ ಚರಣ ಯುಗಳಾ –
ಭರಣ ಭೂಷಿತ ಯೋಗಿಶರಣಾ ನಿಜ
ಶರಣರ್ಗೆ ರನ್ನದರ್ಪಣಾಭವ –
ಅರಣತಾರಣಕಾರಣ – ಆಹಾ
ಶರಣು ಪೊಕ್ಕೆನು ದೇವಿ ಚರಣಕಮಲಯುಗ
ವರಣಿಸಲಳವಲ್ಲ ಕರುಣಿಸು ನೀ ಎನ್ನ ೧
ಶ್ರುತಿನುತವಿತತಸಚ್ಚರಿಯೆ ಸದಾ-
ನತÀರ ಸಂತೈಪೊದಾಶ್ಚರಿಯೆ ನಿನ್ನ
ಸ್ತುತಿಸಿದವಗೆ ಮಹಾ ಶಿರಿಯೆ ಮತ್ತೆ
ನತಿಸದ ಉಗೆ ಘೋರ ನಿರಯ ಅಹಾ
ಸತತ ನಿನ್ನಲಿ ಮನೋರತಿನಿತ್ತು ಶೋಕದ
ವ್ರತತಿ ಖಂಡಿಸಿ ಸುಖತತಿಯ ಪಾಲಿಸು ದೇವೀ ೨
ಜಗಕೆ ಸೃಷ್ಟಿಸ್ಥಿತಿನಾಶಕಾರಿ
ಬಗೆ ಬಗೆ ಭವನದಲ್ಲಿ ಕ್ಲೇಶ-ಹರಸಿ
ಸುಗಮದಿಂದ ಪರಿತೋಷ-ಬಡಿಸಿ
ನಗಿಸುವಿ ಎನ್ನಭಿಲಾಷಾ ಅಹಾ
ನಗೆಮುಖದಲಿ ಗುರು ಜಗನ್ನಾಥ ವಿಠಲನ್ನ
ಅಗಲಿ ಇರದೆ ನಿತ್ಯ ಸೊಗಸಾಗಿ ಇರುತಿಪ್ಪಿ ೩

೧೦೦
ಇಂದು ನೋಡಿದೆ ನಂದಕರ ಯೋ-
ಗೀಂದ್ರ ವಂದಿತ ಚರಣನಾ ಪ
ವಂದನೀಯ ಶುಭೋರು ಗುಣ ಗಣ
ಸಾಂದ್ರಗುರುರಾಘವೇಂದ್ರನಾ ಅ.ಪ
ವೇದತತಿ ಶತಮೋದಗಿತ್ತ(ನ) – ಆದಿ ಮತ್ಸ್ಯನ ತೆರದಲಿ
ವೇದವಾದವ ಶೋಧಮಾಡಿ ಮೇದಿನೀಸುರಗಿತ್ತನಾ ೧
ಕಮಠರೂಪದಲಮರ – ತತಿಗೆ
ಅಮೃತ ನೀಡಿದ – ತೆರದಲಿ
ಸ್ವಮತ ಸುಧೆಯನು ಪ್ರಮಿತಗಿತ್ತಿಹ
ಅಮಿತ ಸುಮಹಾಮಹಿಮನ ೨
ಧರಣಿಮಂಡಲ ಧುರುದಿ ದಾಡಿಲಿ
ಧರಿಸಿ ತಂದನ ತೆರದಲಿ
ಧರಣಿ – ಜನರಿಗೆ ಧರೆಯ ಮೊದಲಾದ
ಪರಮಭೀಷ್ಟೆಯನಿತ್ತು ಪೊರೆವನ ೩
ದುರುಳದಿತಿಜನ ತರಿದು ನಿಜಪದ –
ತರುಳಪಾಲನ ತೆರದಲಿ
ದುರಿತರಾಶಿಯ ತರಿದು ತನ್ನಯ ಶರಣಜನಪರಿಪಾಲನ ೪
ಬಲಿಯ ಯಙ್ಞದ ಸ್ಥಳದಿ ಭೂಮಿಯ ನಳೆದರೂಪನತೆರದಲಿ
ಖಳರ ವಂಚಕ ತನ್ನ ತಿಳಿವಗೆ ಸುಲಭದಿಂದಲಿ ಒಲಿವನ ೫
ದುಷ್ಟಕ್ಷಿತ್ರಿಯರಷ್ಟು ಕುಲವನು ಸುಟ್ಟು ಬಿಟ್ಟನತೆರದಲಿ
ಕೆಟ್ಟರೋಗವು ಶ್ರೇಷ್ಠಭೂತದ ಅಟ್ಟುಳಿಯನೆ ಕಳೆವನ ೬
ಜನಕನಾಜ್ಞದಿ ವನವ ಚರಿಸಿದ
ಇನಕುಲೇಶನ ತೆರದಲಿ
ಜನರಿಗೀಪ್ಸಿತ ತನಯ ಮೊದಲಾದ
ಮನದಪೇಕ್ಷೆಯ ನೀಡೊನ ೭
ಕನಲಿ ದ್ರೌಪದಿ ನೆನೆಸಲಾಕೆಯ
ಕ್ಷಣಕೆ ಬಂದನ ತೆರದಲಿ
ಮನದಿ ತನ್ನನು ನೆನೆವ ಜನರನು
ಜನುಮ ಜನುಮದಿ ಪೊರೆವನ ೮
ಮುದ್ದು ಸತಿಯರ ಬುದ್ಧಿ ಕೆಡಿಸಿ(ದ)
ಗೆದ್ದು – ಬಂದನ ತೆರದಲಿ
ಮದ್ದು ಮತಿಯನು ತಿದ್ದಿ ಭಕುತಗೆ
ಶುದ್ಧ ಜ್ಞಾನವ ನೀಡೊನ ೯
ಕಲಹ ಕಂಟಕ ಕಲಿಯವೈರಿ
ಕಲಿಕಿರೂಪನ ತೆರದಲಿ
ಹುಳುಕು ಮನವನು ಕಳೆದು ತನ್ನಲಿ
ಹೊಳೆವ ಮನವನು ಕೊಡುವನಾ ೧೦
ನೀತ ಗುರುಜಗನ್ನಾಥ ವಿಠಲ ಭೂತಳಕ್ಕಧಿನಾಥನು
ಆತನಂತ್ಯತಿನಾಥ ಜಗಕೆ ಪ್ರೀತಿಶುಭಫಲದಾತನ ೧೧

ಇದು ಗೋಧಿಯಿಂದ ತಯಾರಿಸಿದ ಒಂದು

ಇಂದು ನೋಡಿದೆ ನಂದತೀರ್ಥ ಮು – ನೀಂದ್ರವಂದಿತ ಚರಣನಾ ಪ
ವಂದಿಸುವ ಭಕುತರಿಗೆ ನಿತ್ಯಾ – ನಂದಫಲದ ಮುಕುಂದನಾ ಅ.ಪ
ತಮನವೈರಿಯ ಮಂದರಧರ ಕಮಠರೂಪವ ಪೊತ್ತನಾ
ಕಮಲಸಂಭವಭವನಕಶಿಪು ದಮನ, ವಾಮನಮೂರ್ತಿಯಾ ೧
ಭೂಮಿಪರ ಸಂಹಾರಿ, ದಶರಥ ರಾಮನಾಮದಿ ಮೆರೆದನಾ
ಸೋಮಪಾಧಿಪಸುತಗೆ ಒಲಿದು ಸಂ – ಗ್ರಾಮದಲಿ ರಕ್ಷಿಸಿದನಾ ೨
ಬುದ್ಧರೂಪದಿ ತ್ರಿಪುರಸತಿಯರ ಬುಧ್ಧಿ ಭೇದವ ಮಾಳ್ದನಾ
ಬುದ್ಧರಲಿ ಕಲಿಮುಖ್ಯಯವನರ ಗೆದ್ದ ಗಾನವಿಲೋಲನಾ ೩
ದೇವಕೀವಸುದೇವತನಯನ ದೇವಗಣ ಸಂಸೇವ್ಯನಾ
ಈ ವಸುಂಧರೆಯೊಳಗೆ ಮಧ್ವಸ – ರೋವರದಲಾವಾಸನಾ ೪
ಪೋತವೇಷನ ವೀತಶೋಕನ ಪೂತನಾದಿವಿಘಾತನಾ
ಮಾತರಿಶ್ವಪ್ರಿಯಾ ಗುರುಜಗ ನ್ನಾಥವಿಠಲರಾಯನಾ ೫

ನೀನೋದ್ದ ದ್ವಿಜನ ಹಿಂದೊಮ್ಮೆ

ಇಂದು ನೋಡಿದೆ ನಂದದಾಯಕ ಇಂದಿರಾರಮಣನಾ ಪ
ಇಂದು ಮೌಲ್ಯಮರೇಂದ್ರ ವಂದಿತಪಾದನಾ ಅ.ಪ
ವಾರಿಚರ, ಗಿರಿಧಾರಿ, ಸೂಕರ ಕ್ರೂರರೂಪವತಾಳ್ದನಾ
ಪೋರ, ಜನನಿಶಿರಹಾರಿ, ವನಚರ, ನಾರಿಜನರಿಗೆ ಒಲಿದನಾ ೧
ನಾರಿವ್ರತ ಪರಿಹಾರ ಮಾಡಿ ಹಯವನೇರಿ ಮೆರೆದನಾ
ಧಾರುಣಿಯೊಳು ಸಮೀರಗಿರಿವಾಸ ವೀರಪುರದೊಳು ತೋರೊನಾ ೨
ವೀತಶೋಕ ವಿಧಾತಜನಕನ ದೂತಜನ ಪರಿಪಾಲನಾ
ಖ್ಯಾತಮಹಿಮನ ದಾತಗುರುಜಗ ನ್ನಾಥವಿಠಲ ರಾಯನಾ ೩

ರುದ್ರದೇವರು
೭೪
ಇಂದು ಶೇಖರ ಶಿವ ನಂದಿವಾಹನ ಶೂಲಿ
ಸ್ಕಂಧಗಣಪರ ತಾತ ದಂದಶೂಕಕಲಾಪ
ಮಂದಾಕಿನಿಧರ ಪುರಂದರ ಮುಖಸುರ
ವೃಂದವಿನುತ ಪಾದಾದಿಂದ ಶೋಭಿತ ದೇವ
ಕಂದು ಕಂಧರ ತ್ರಿಪುರ ಸಂದೋಹಹರ ಹರ
ವಂದಿಸಿ ಬೇಡುವೆ ಫಲ ಸಂದೇಹಮಾಡದಲಿತ್ತು
ನಂದ ನೀಡುವಿ ನೀನೆಂದು ನಿನ್ನಯ ಬಳಿಗೆ
ಬಂದೆನ್ನ ಮನೋರಥಾ ಇಂದು ಪೂರ್ತಿಸೋ ಗುರೋ
ಗಂಧವಾಹನ ತನಯಾ ಇಂದಿರಪತಿ ಗುರುಜಗನ್ನಾಥವಿಠಲಾ
ನಂದಾ ಬಡುವನಿದಕೆ ಸಂದೇಹ ಇನಿತಿಲ್ಲಾ

೫೪
ಇದನೆ ಪಾಲಿಸೋ ಹನುಮಾ ಮಾಳ್ಪೆನೊ
ಪದ ಪದುಮಯುಗಕೆ ಪ್ರಣಾಮಾ ಪ
ಸದಯನೆ ನಾ ನಿನ್ನ ಇದನನು ಬೇಡಿದೆ
ಪದುಮ ನಯನ ಶ್ರೀ ಮುದತೀರಥರಾಯಾಅ.ಪ
ದಿವಸ ಪೋದವಲ್ಲಾ ಗುರುಗಳ ಅನುಭವಾಗಲಿಲ್ಲಾ
ಪವನ ತನಯ ನೀ ಜವದಲಿ ಮಾಡಲು
ಭುವನದೊಳಗೆ ಬೃಹಚಸ್ರ‍ಪವನು ಎನಿಸುವೆನು ೧
ಧನವು ಎನಗೆ ಇಲ್ಲಾ ಸಹಾಯಕ
ಜನರು ಮೊದಲೆ ಇಲ್ಲಾ
ಧನಪಸಖ ನನ ಜನಕನು ನೀನಿರೆ
ಮನುಜರ ಬೇಡೋದು ಫನತಿ ಎ£ಗಲ್ಲಾ ೨
ದಾತ ಇದನು ಪೂರ್ತಿ ಮಾಡೊ ಧಾತ ನಾ ಶರಣಾರ್ಥಿ
ಯಾತಕೆ ಸುಮ್ಮನೆ ಈ ತೆರ ಇರುವುದು
ತಾತನೆ ಗುರುಜಗನ್ನಾಥವಿಠಲದೂತ ೩

ಭಗವಾನ್ ವೇದವ್ಯಾಸರು

ಇದು ಏನು ಚರಿಯಾ ವೆಂಕಟರಾಯ ಇದು ಏನು ಚರಿಯಾ ಪ
ಇದು ಏನು ಚರಿಯಾ ಶ್ರೀಯದುಕುಲ ತಿಲಕನೆ ಸದನತ್ರಯವ ಬಿಟ್ಟು ಹುದುಗಿಕೊಂಡಿರುವುದು ಅ.ಪ
ಕನಕಪರ್ವತದಲ್ಲಿ ದಿನದಿನ ಮಾಡುವ ಘನ ಪೂಜೆಯನೆ ನೀನೆನಿಸದಿರುವುದು ೧
ಪೊಂಬಣ್ಣಾಂಬರವುಟ್ಟು ಹೊಂಬಣ್ಣಾಂಬರವಿಟ್ಟು ಕಂಬೆಣ್ಣೆಯನೆ ಬಿಟ್ಟು ದಿಗಂಬರನಾಗಿದ್ದು ೨
ಬುತ್ತಿ ಮೊದಲಾದ ಉತ್ತಮನೈವೇದ್ಯ ಹೊತ್ತಿಗುಂಬೋದು ಬಿಟ್ಟು ತುತ್ತುಗಾಣದಿರುವೋದು ೩
ಭಾಗ್ಯವಂತನು ನೀನು ಭಾಗ್ಯರೂಪಳು ರಾಣಿ ಭಾಗ್ಯತನವ ಬಿಟ್ಟು ನಿರ್ಭಾಗ್ಯನಾಗಿರುವೋದು ೪
ದಾತಗುರುಜಗನ್ನಾಥ ವಿಠಲ ಜಗದಿ ನಾಥನಾಗದೆ ಅನಾಥನಾಗಿರುವೋದು ೫

೧೦೧
ಇನ್ನೇನು ಭಯವಿಲ್ಲನಿನಗೆ
ಘನ್ನಗುರುವರ ಪಾದ ಭಜಿಸೊ ಮನದೊಳಗೆ ಪ
ಬನ್ನಗೊಳಿಸುವಾ ವ್ಯಾಧಿ
ಮುನ್ನೆ ಬಾರದೋ ಮಗುವೇ ಅ.ಪ
ಆವ ಜನ್ಮದ ಕರ್ಮ ಶೇಷದಲಿಂದ
ಈ ವಿಧದ ವ್ಯಾಧಿ ಸಂಭವಿಸಿತಲ್ಲಾ
ಕೋವಿದೋತ್ತಮರ ಪಾದ ಸೇವೆ ಸತ್ಕಾರದಿಂದಲೇ
ತಾವಕÀನು ನೀನೆಂದು ಗುರುರಾಯ ಪೊರೆವಾ ೧
ಏನು ಕರುಣವೊ ಗುರುವರಗೆ ನಿನ್ನಲಿ
ನೀನೇನು ಧನ್ಯನೋ ಈ ಲೋಕದಲ್ಲೀ
ದೀನಭಾವವನೋಡಿ ದೀನವತ್ಸಲಬಂದು
ತಾನೆ ಕರುಣದಿ ಪೊರೆದಮೇಲೇ೨
ಅರಿಯದಿಹ ನರರಿಗಾಶ್ಚರ್ಯ ತೋರಲೋಸುಗದಿ
ಮರೆಯದಂತೆ ಮನಕೆ ಕುರುಹು ಮಾಡಿ
ಧರೆಯೊಳಗೀ ಗುರುವರಗೆ ಸರಿಯಿಲ್ಲ
ಗುರುಜಗನ್ನಾಥ ವಿಠಲ ತಾನೇ ಬಲ್ಲಾ ೩

೧೦೨
ಎಂತು ಬಣ್ಣಿಸಲಮ್ಮಯ್ಯಾ ಈ ಗುರುವರರ ಪ
ಎಂತು ಬಣ್ಣಿಪೆ ನಾ ನಂತನಾಂಶ ಜಗ –
ದಂತರದೊಳಗಾ – ನಂತ ಮಹಿಮರಅ.ಪ
ಸುರವರನಗರಸಮ – ವರಮಂತ್ರಸದನ ಜರಿದು
ಸ್ಥಿರವಾಗೀ ಪುರದಲ್ಲಿ ಮೆರೆಯುತಲಿಹರನ್ನ ೧
ಪೂರ್ವಯುಗದೊಳು ಸಾರ್ವಭೌಮನೆನಿಸಿ
ಪಾರ್ವರ ಪೊರೆವದಕ್ಕ ಪೂರ್ವ ಯತಿ ಎನಿಸಿಹರನ್ನ ೨
ದಿನ ದಿನದಲ್ಲಿ ಮಹ ಕನಕಾಭೀಷೇಕ ಮಾಳ್ಪ
ಧನಿಕರ ತೆಜಿಸಿ ನಿ – ರ್ಧನಿಕ ಗೊಲಿದಿಹರನ್ನ ೩
ಕ್ಷೀರಶೇಚನ ನಿತ್ಯ-ಸಾರ ಪಂಚಾಮೃತ ಬಿಟ್ಟು
ಕೀರುತಿ ಮಾಳ್ಪಜನರ ಸೇರಿ ಕೊಂಡಿಹರನ್ನ ೪
ದಾತರೆನಿಸಿ ಜಗದಿ – ಖ್ಯಾತರಾಗಿ ಗುರುಜಗ
ನಾಥ ವಿಠಲನೊಲಿಸಿ ದೂತಜನರ ಪೊರೆವೊರನ್ನ ೫

೫೫
ಎಂಥಾ ಬಲವಂತನೋ ಭಾರತೀಕಾಂತಾ
ಎಂಥಾ ದಯವಂತನೋ ಪ
ಎಂಥ ಮಹಬಲವಂತ ಬಹುಗುಣ –
ವಂತ ಸರ್ವದಾನಂತಚೇತನ
ರಂತರಾದೋಳ್ನಿಂತು ಪ್ರೇರಿಪ
ನಂತು ಮಹಿಮೆಯ ಅಂತು ತಿಳಿಯದೊ ಅ.ಪ
ವೀರರಾಘವನಂಘ್ರಿಯ ಭಜಿಸಿ ಕಪಿ –
ವೀರನಾದನು ಮಹರಾಯಾ
ವಾರಿಧಿಯಾಗಾಧತೋಯ ಲಂಘಿಸಿ ಲಂಕಾ
ಸಾರಿ ಪೇಳಿದ ವಾರ್ತೆಯ
ವೀರ ವನವನಂಗಾರಮುಖಕೆ ಇತ್ತು
ವೀರಾಕ್ಷನೆನಿಪ ಕುಮಾರನ ದಂಡಿಸಿ
ಸಾರಿ ಉಂಗುರವಿತ್ತು ಮತ್ತೆ
ಹಾರಿ ವಾರಿಧಿ ವಾನರೇಶನು
ತೋರಿ ರಾಮನ ಪದಕೆ ನಮಿಸಿ
ಚಾರು ರಾಗಟೆ ಇತ್ತ ತ್ವರದಿ ೧
ದುರುಳ ದುಶ್ಯಾಸನನೂ ಕೋಪದಿ ತಾ
ತರುಳೆ ದ್ರೌಪದಿಯನ್ನು
ಶರಗು ಪಿಡಿದು ಶಳದಾನು ಕರಿಯಲು ಬ್ಯಾಗ
ಹರಿ ತಾನಂಬರವಿತ್ತನು
ಧುರದಿ ಭೀಮನು ನಿನ್ನ ತರಿದರಕ್ತದಿ ತಾನು
ಬೆರೆಸಿ ಕೇಶವ ಕಟ್ಟಿ ಕರುಳ ದಂಡೆಯನಿಟ್ಟು
ಮೇರೆವೆ ಕೇಳೆಲೋ ದುರುಳನೆಂದಾ –
ತರುಣಿವಚನವ ಸ್ಥಿರವ ಮಾಡಿದ
ಧರಿಯತಳದಲಿ ಸರಿಯುಗಾಣೆನೊ
ವಗ್ವೃಕೋದರ ಪರಮ ಕರುಣಿಯೆ ೨
ಭೂತೇಶ ಸರ್ವೋತ್ತುಮಾನೆಂಬುವೊ ಮಹಾ –
ಪಾತಕಿ ಜನಮಾತನೇಮ
ಈತ ಮಾಡಿದ ನಿರ್ಧೂಮ ಹರಿಗೆ ಶಿವ
ದೂತಜನರಿಗುತ್ತುಮ
ಭೂತಳದಲಿ ತಾನೆ ಜಾತನಾಗಿ ಮಧ್ವ
ಖ್ಯಾತಿ ಮಾಡಿದ ಜೀವಜಾತಿ ಪ್ರೇರಕನಾಗಿ
ಶ್ವೇತವಾಹನ ದೂತನಾಗಿಹ
ನಾಥ ಗುರು ಜಗನ್ನಾಥವಿಠಲ
ಧಾತನಾಂಡಕೆನಾಥ, ನಿರ್ಜರ
ನಾಥರೆಲ್ಲರೂ ದೂತರೆಂದರು ೩

೧೦೩
ಎಂಥಾತ ಗುರುರಾಯನು ಜಗ – ದಂತರ್ನಿಯಾಮಕನು ಪ
ಸಂತೋಷದಿಂದಲಿ ಅಂತೇವಾಸಿಗಳ
ನಿಂತು ಪಾಲಿಸುತಿಹನು ಅ.ಪ
ಚಿಂತೆಯು ಯಾಕೆಂದನು ನಿ – ಶ್ಚಿಂತಿ ಮಾರ್ಗವಿದೆಂದನು
ಅಂತರದೊಳು ಶಿರಿಕಾಂತನ ಪದವೇಕಾಂತದಿ ಭಜಿಸೆಂದನು ೧
ಯಾತಕೆ ಶ್ರಮವೆಂದನು ನಿನಗೆ ಪಾತಕವಿಲ್ಲೆಂದನು
ದೂತಾನೆ ಎನ್ನೊಳಿಪ್ಪ ಮಾತರಿಶ್ವಗೆ
ಶಿರಿ ನಾಥನ ಭಜಿಸೆಂದನು ೨
ಪೋತಾನೆ ಕೇಳೆಂದನು ಎನ್ನ –
ಮಾತು ಮೀರದಿರೆಂದಾನು
ಪಾಥೋಜ ಗುರುಜಗನ್ನಾಥ ವಿಠಲ ನಿನ್ನ
ಮಾತು ಲಾಲಿಪನೆಂದನು ೩

೧೦೪
ಎಂಥಾದಯವಂತನೋ ಸಂತಾರನಾಥನೋ ಪ
ಕಂತೂ ಜನಕಾನ ಪ್ರಿಯ್ಯಾನೋ ಆ –
ನಂತಾ ನಂತಾ ಮಹಿಮನೋ ಅ.ಪ
ರಮ್ಯಾ ಗುಣಾ ಪೂರ್ಣನೋ – ಆ –
ಗಮ್ಯಾ ಸಚ್ಚರಿತಾನೋ
ನಮ್ಯಾನತರಾ ಪೊರೆವಾನೋ – ಈತ
ನಮ್ಯಲ್ಲಾರ ಸಲಹೋನೋ ೧
ಪ್ರಾಣಾವೇಶಾಯುತನೋ – ಜಗ –
ತ್ರಾಣಾ ತಾನಾಗಿಹನೋ
ಕ್ಷ್ಯೋಣೀಯೋಳ್ವಿಖ್ಯತಾನೋ – ಎನ್ನ
ಪ್ರಾಣಾಊಳಿಗೆ ನಾಥನೋ ೨
ಕರುಣಾಶಾಲಿ ಎನಿಪಾನೋ – ತನ್ನ
ಚರಣಾ ಸೇವಾ ನೀಡುವನೋ
ಶರಣಾಬ್ಜ – ತರಣೀ ಸಮನೋ – ಅಂತಃ
ಕರಣಾದಲ್ಲಿರುವಾನೋ ೩
ಜನನೀ ಜನಕಾರೆನಿಪನೋ – ಸಕಲ
ಜನರೀಗೆ ಸಮ್ಮತನೋ
ಜನುಮಾ ಜನುಮದಲೀತನೋ – ನಿಶ್ಚಯ
ಎನಗೆ ತಾತನೋ ೪
ಭೂತಾಳದೊಳು ವಿಖ್ಯಾತನೋ ನಿಜ –
ದಾತಾ ಜನರಿಗೆ ಪ್ರೀತನೋ
ನೀತಾ ಗುರು ಜಗನ್ನಾಥಾ ವಿಠಲ –
ಪ್ರೀತಿಯ ತಾಪೊಂದಿಹನೋ ೫

೧೦೫
ಎದ್ದು ಬರುತಾರೆ ನೋಡೆ ತಾ –
ವೆದ್ದು ಬರುತಾರೆ ನೋಡೆ ಪ
ಮುದ್ದು ಬೃಂದಾವನ ಮಧ್ಯದೊಳಗಿದ್ದು
ತಿದ್ದಿ ಹಚ್ಚಿದ ನಾಮ – ಮುದ್ರೆಗಳೊಪ್ಪುತೀಗ ಅ.ಪ
ಗಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಯು
ಚಲುವ ಮುಖದೊಳು ಪೊಳೆವೊ ದಂತಗಳಿಂದ ೧
ಹೃದಯ ಸದನದಲ್ಲಿ ಪದುಮನಾಭನ ಭಜಿಸಿ
ಮುದಮನದಿಂದ ನಿತ್ಯ ಸದಮಲ ರೂಪತಾಳಿ ೨
ದಾತ ಗುರು ಜಗನ್ನಾಥವಿಠಲನ್ನ
ಪ್ರೀತಿಯ ಬಡಿಸುತ ದೂತರ ಪೊರೆಯುತ ೩

ಶ್ರೀಮದಾಚಾರ್ಯರು ಪಂಚಭೇದಗಳನ್ನು

ಎನ್ನ ಬಿನ್ನಪ ಕೇಳೊ ಘನ್ನ ಮಹಿಮನೆ ಭವ ಬನ್ನ ಬಡಿಸುತಲಿಹುದೋ ಸ್ವಾಮಿ ಪ
ಇನ್ನು ನೀ ಪೊರೆಯೊ ಅಪನ್ನಜನರಾಪಾಲ ಮನ್ನಿಸಿ ಕಾಯೊ ಸ್ವಾಮೀ ಪ್ರೇಮೀ ಅ.ಪ
ಆಗಾಮಿಸಂಚಿತಭೋಗಂಗಳು ಎನ್ನ ಯೋಗ ಮಾರ್ಗಕೆ ಪೋಗದಂತೆ ಹೇಗೆ ಮಾಡಿ ಜ್ಞಾನನೀಗೆ ನಿನ್ನಲಿ ಮನಸು ಯೋಗವನು ಮಾಡಗೊಡದೇ ಜಾಗುಮಾಡುತ ಪರಮಭಾಗವತರಲಿಸದಾ ಆಗಮಗಳ ತಿಳಿಯದೇ ಹೀಗಾಗಿ ನಾನು ಅಯೋಗ್ಯನೆನಿಸೀ ಜಗದಿ ಕಾಗಿಯಾಗಿ ತಿರುಗಿದೇ ಸ್ವಾಮಿ ೧
ಹೆತ್ತ ಈ ಮೊದಲು ಮತ್ತಾರು ಜನರಿಲ್ಲ ಹೊತ್ತಿಗೇ ಕರೆದನ್ನವೀವರಿಲ್ಲಾ ಗೊತ್ತು ಸ್ಥಳಗಳು ಇಲ್ಲ ವೃತ್ತಿ ಸ್ವಾಸ್ಥ್ಯಗಳಿಲ್ಲ ಚಿÉತ್ತ ಶುದ್ಧಿಯು ಮೊದಲೆ ಇಲ್ಲಾ ಎತ್ತ ಪೋದರೆನ್ನ ಇತ್ತ ಬಾಯೆಂತೆಂದು ಹತ್ತಿರ ಕರೆವೊರಿಲ್ಲ ಎತ್ತ ಪೋದರೆನ್ನ ಮತ್ತೆ ಪಾಲಿಪರ್ಯಾರೊ ಉತ್ತಮನೆ ನೀನೆ ಕಾಯೋ ಸ್ವಾಮೀ ೨
ಗರ್ಭವಾಸದಕಿಂತ ದುರ್ಭರಾಭವತಾಪ ನಿರ್ಭರಾವಾಗಿಹುದೋ ಅರ್ಭಕಾಮತಿಯಿಂದ ಅಭರ್ಟಾ ಕಾರ್ಯವನು ನಿರ್ಭಯದಿ ಮಾಡಿದೆನೊ ಗರ್ಭ ನಾ ದೂತ ನೀ ನಿರ್ಭಯವ ಕೊಡದಿರಲು ಲಭ್ಯವೇ ಸರ್ವಕಾರ್ಯಾ ಲಭ್ಯ ಶ್ರೀಪತಿ ನೀನು ಲಭ್ಯನಾಗದಿರೆ ವೈದರ್ಭಿರಮಣಾ ಕಷ್ಟವೋ ಸ್ವಾಮಿ ೩
ಉಡುವ ವಸ್ತ್ರಗಳಿಲ್ಲ ಒಡಲಿಗಶನವು ಇಲ್ಲ ಕೊಡುವ ಧನ ಮೊದಲೆ ಇಲ್ಲ ಪೊಡವಿಯೊಳು ನಾನತೀ ಬಡವನಲ್ಲದೆ ಮಹಾ ಕಡು ಪಾಪಿಯಾದೆನಲ್ಲೋ ತುಡುಗುತನದಲಿ ಪರರ ಮಡದಿಯರ ನಾ ಬಲು ದೃಢಮನಸಿನಿಂದ ಬಯಸಿ ಧೃಢ ಭಕುತಿಯಿಂದ ಅಡಿಗೆರಗದಲೆ ನಾನು ಪೊಡವಿಭಾರಾದೆನಲ್ಲೋ ಸ್ವಾಮೀ ೪
ಓದಿ ಬರೆಯಾಲಿಲ್ಲ ವೇದ ಪಠಿಸಾಲಿಲ್ಲ ಮೋದತೀರ್ಥರ ಶಾಸ್ತ್ರ ತಿಳಿಯಲಿಲ್ಲಾ ವಾದಶಾಸ್ತ್ರಗಳಿಲ್ಲ ಭೇದಪಂಚಕವಿಲ್ಲ ಸಾಧನದ ಮಾರ್ಗವಿಲ್ಲ ಖೇದಗೊಳಿಸುವ ಭವದ ಹಾದಿ ತಿಳಿಯದೆ ನಾನು ಮೋದಕರವೆಂದು ಅಲ್ಲೀ ಸಾದರದಿ ಬಿದ್ದು ಆಮೋದಬಡುತಲಿ ದ್ವಿ ಪಾದಪಶು ನಾನಾದೆನಲ್ಲೋ ಸ್ವಾಮೀ ೫
ಸತಿಸುತ ಮೊದಲಾದ ಅತಿಹಿತ ಜನರೆನ್ನ ಸತತ ಸಂತ್ಯಜಿಸಿಹರೋ ವಿತತವಾಗಿಹ ಮಹಾಪತಿತದಾರಿದ್ರ್ಯನ್ನ ಅತಿಬಾಧೆ ಬಡಿಸುತಿಹದೋ ಇತರ ಜನರೂ ಎನ್ನ ಅತಿದೂರದಲಿ ನೋಡಿ ಅತಿಹಾಸ್ಯ ಮಾಡುತಿಹರೋ ವ್ರತತಿಜಾಂಬಕ ನಿನ್ನ ನತಿಸಿ ಬೇಡಿಕೊಂಬೆ ಸತತ ನೀ ಪಾಲಿಸೆಂದೂ ಸ್ವಾಮೀ ೬
ತಂದೆ ತಾಯಿಯೂ ನೀನೆ ಬಂಧು ಬಳಗವು ನೀನೆ ಇಂದು ಮುಂದೆನಗೆ ಗತಿ ನೀನೆ ವಂದಿಪಾ ಜನಕೆ ಆನಂದವನೆ ಕೊಡುವ ಮಂದಾರತರುವು ನೀನೆ ನೊಂದು ನಾನೀಭವದ ಸಿಂಧು ಒಳಗೆ ಬಿದ್ದೆ ಮುಂದಕ್ಕೆ ಕರೆದು ಕಾಯೋ ಸುಂದರಾಂಗನೆ ಕೃಪಾಸಿಂಧು ನೀ ಬಿಡೆ ಎನ್ನ ನೊಂದದಲೆ ಸಲಹೊರ್ಯಾರೋ ಸ್ವಾಮಿ ೭
ಹೊಟ್ಟೆಗಿಲ್ಲದೆ ನಾನು ಬಟ್ಟೆ ಹಾಸೀ ನರರಿ ಗ್ವಟ್ಟರಿಸಿ ಒದರುತಿಹೆನೋ ಪುಟ್ಟದಿರಲೂ ಅನ್ನ ಸಿಟ್ಟಿನಿಂದಾ ನಾಯಿ ಬೆಟ್ಟಕ್ಕೆ ಒದರಿ ತಾನೂ ಹೊಟ್ಟೆಯುಬ್ಬೀ ಕೊನೆಗೆ ಹೊರಳಿ ಹೊರಳಿ ತಾನು ಸುಟ್ಟ ಬೂದಿಲಿ ಬೀಳ್ವ ತೆರದೀ ಒಟ್ಟು ಮಾತಿದು ಕೃಪಾವಿಟ್ಟು ನೀ ಎನ್ನನು ಥಟ್ಟನೇ ಕರಪಿಡಿದು ಕಾಯೋ ಸ್ವಾಮೀ ೮
ನಿನ್ನ ದಾಸನು ಆಗಿ ಅನ್ಯರನ ಬೇಡಿದರೆ ಘನ್ನತೆಯು ನಿನಗುಂಟೇ ಘನ್ನ ಜನಪನ ತನುಜ ಇನ್ನು ದೈನ್ಯದಿ ತಾನೆ ಅನ್ಯರನು ಬೇಡುವುದು ಉಂಟೇ ಚೆನ್ನ ಸುಮನಸ ಧೇನು ಮುನ್ನ ಮನೆಯೊಳಿರೆ ಗೋ ವನ್ನು ಬಯಸುವರುಂಟೇ ಇನ್ನು ಪೇಳುವದೇನು ಎನ್ನಭವಣೇ ತಿಳಿದು ಇನ್ನು ಕಾಯಲಿ ಬೇಕೋ ಸ್ವಾಮೀ ೯
ಶುದ್ಧಮಾರ್ಗವ ಬಿಟ್ಟು ಬದ್ಧ ಭವಸಾಗರವೆ ಉದ್ಧಾರ ಮಾಳ್ಪದೆಂದೂ ಶಿದ್ಧಜನರಾ ಸೇವೆಗೆ ಬದ್ಧನಾಗದೆ ದುರಾ ರಾಧ್ಯ ಜನರನ್ನು ಭಜಿಸೀ ಉದ್ಧರಿಸುವೊ ಶ್ರೀ ಮಧ್ವಸಿದ್ಧಾಂತದ ಸೂ ಪದ್ಧತಿಯನ್ನೆ ಬಿಟ್ಟೂ ಸಿದ್ಧಮೂರುತಿ ಎನ್ನ ¥ದ್ಧಗಳ ಎಣಿಸದಲೆ ಉದ್ಧಾರಮಾಡೊ ಸ್ವಾಮೀ ಪ್ರೇಮೀ ೧೦
ದಾತ ನೀನೇ ಎನ್ನ ಮಾತುಲಾಲಿಸಿ ಭವದ ರತಿಯನ್ನೇ ಬಿಡಿಸಿ ಕಾಯೋ ಪೊತನಲ್ಲವೆ ನಿನಗೆ ಆತುರದಿ ನಾನೀ ರೀತಿಯಿಂದಲಿ ಪೇಳಿದೆ ಯಾತರಾ ಮಾತೆಂದು ನೀ ಪ್ರೀತಮನಕೇ ತರದೆ ತಾತನೂಕೀ ಬಿಟ್ಟರೆನ್ನಾ ಸೋತುಬಂದಾ ನಿನಗೆ ಆತುರಾವ್ಯಾಕೆಂದು ನೀತವಾಗೀ ಕಾಯ್ವರಾರೋ ಸ್ವಾಮೀ ೧೧
ಮಾತೆ ಮಕ್ಕಳಿಗೆ ವಿಷದಾತೆಯಾಗೇ ತಂದೆ ಪೋತರ ಮಾರಿದಾರೆ ದಾತನಾದಾ ರಾಜ ಆತುರಾದಿಂದಲಿ ನಿಜ ದೂತರರ್ಥಪಹಾರಮಾಡೆ ನೀತಸತಿಯು ತನ್ನ ನಾಥನಾಯು ತಾನೆ ಘಾತವನೆ ಮಾಡಿದಾರೆ ನೀತವೇ ನಿನಗಿದಕೆ ಯಾತರಾ ಚಿಂತೆ ಈ ಮಾತಿನಂತೆ ನಿನಗೆ ಪ್ರೀತೇ ಸ್ವಾಮೀ 12
ಎಷ್ಟು ಪೇಳಲಿ ಎನ್ನ ಕಷ್ಟರಾಶಿಗಳೆಲ್ಲ ಶ್ರೇಷ್ಟವಾಗಿರುತಿಹವೊ ಸ್ವಾಮೀ ದುಷ್ಟನಾದರು ವ್ನ್ನ ಭ್ರಷ್ಟಮಗನನು ತಾಯಿ ಅಟ್ಟೀಸೂವಳೆ ಅಡವಿಗೆ ಎಷ್ಟು ಕೆಟ್ಟವ ನಾನಾರಿಷ್ಟನಾದರು ಕೃಪಾ ದೃಷ್ಟಿಯಿಂದಲಿ ನೋಳ್ಪಳೋ ನಷ್ಟದೈವ ನಾನರಿಷ್ಟ ಅಜ್ಞಾನಿ ಕರುಣಾ ೧೩
ದೃಷ್ಟಿ ಯಿಂದಲಿ ನೋಡಿ ಸಲಹೋ ಸ್ವಾಮೀ ಕುಟಿಲ ಖಳಮತಿಯು ನಟಿನೆಮಾಡುತ ಭವಲಂ ಪಟದೊಳಗೆ ಬಿದ್ದಿಹೆನೂ ಸ್ವಾಮೀ ಶಠತರನು ನಾನತಿಕಠಿಣಮನಸೀನಿಂದ ಧಿಟಜ್ನಾನಿದ್ರೋಹಗೈದೆ ದಿಟರಿಲ್ಲ ಎನಗೆಂದು ನಟಿಸುತ್ತ ಸರ್ವದ ಅಟನೆಮಾಡಿದೆ ಸರ್ವರಲ್ಲಿ ಪಟುತರನು ನಾನೆಂದು ಧಿಟಗುರುಜಗನ್ನಾಥ ವಿಠಲ ದೇವಾ ನಿನ್ನ ಮರೆದೆ ಸ್ವಾಮೀ ೧೪

ಭವಿಷ್ಯತ್ ವರ್ತಮಾನಕಾಲ
೧೦
ಎನ್ನ ಮೊರೆಯ ಕೇಳಬಾರದೆ ಹೇ ಶ್ರೀನಿವಾಸ ಪ
ಎನ್ನ ಮೊರೆಯ ಕೇಳದಿರೆ ಎನ್ನನಿವರು ಬದುಕಿಸರು ಇನ್ನು ಮಾಡಲೇನು ಎಂದು ನಿನ್ನ ಪದಕೆ ಸಾರಿದೆನು ಅ.ಪ
ಇಬ್ಬರ್ರಮಣ ನಿನ್ನ ಪಾದ ಉಬ್ಬಿಮನದಿ ಭಜಿಪ ಎನಗೆ ಮಬ್ಬುಗವಿದು ತಾವು ಎನ್ನ ಮೊಬ್ಬಿನೊಳಗೆ ಕೆಡವಿದರೊ ೧ ಅನ್ಯವಾರ್ತೆಬಿಟ್ಟು ನಾನು ನಿನ್ನ ಗುಣವ ಕೇಳ್ವೆನೆನಲು ನಿನ್ನವಾರ್ತೆಬಿಡಿಸಿ ತಾವು ಅನ್ಯವಾರ್ತೆ ಕೇಳಿಸೋರು ೨
ನಿನ್ನ ನಾಮಸ್ತೋತ್ರಗಳು ಮನ್ನದಿಂದ ಪಠಿಪೆನೆನಲು ಎನ್ನ ಮಾತುಸಾಗಗೊಡದೆ ತಮ್ಮ ಮಾತು ಸಾಗಿಸುವರು ೩
ನಿನ್ನ ಪಾದಕಮಲಗಂಧವನ್ನು ಗ್ರಹಿಪೆನೆನಲು ಎನಗೆ ಚೆನ್ನಗಂಧ ಬಿಡಿಸಿ ತಾವು ಘನ್ನದುರ್ಗಂಧ ಕೊಡುವರೋ ೪
ನಿನ್ನಭಜಕರಂಗಸಂಗವನ್ನು ಮಾಳ್ಪೆನೆನಲು ಅದ ನನ್ನು ಬಿಡಿಸಿ ಪರರಾದವನ್ನು ತೇರ ಕೂಡಿಸೋರು ೫
ನಿನ್ನ ಚಕ್ರ ಶಿಲಾಸ್ಪರ್ಶವನ್ನು ಮಾಳ್ಪೆನೆನಲು ಅದ ನನ್ನು ಬಿಡಿಸಿ ನೀಚಜನಾರನ್ನು ಸ್ಪರ್ಶಮಾಡಿಸೋರು ೬
ನಿನ್ನ ಮನಿಗೆ ಬರುವ ಎನ್ನ ಚೆನ್ನವಾಗಿ ಕರೆದು ತಾವು ಅನ್ಯಮನಿಗೆ ವೈದು ಬಹಳ ಬನ್ನಬಡಿಸುವರಯ್ಯಾ ೭
ಅನ್ಯಮನಿಗೆ ಪೋಗದಲೆ ಎನ್ನ ಮನೆಯ ಒಳಗೆ ನಾನು ಅನ್ನವಸನ ದಿಂದ ಇರಲು ಅನ್ಯಸದನಕೆಳದು ವೈವ ೮
ಕಠಿಣ ಜನರು ಅªರು ಬಹಳ ಸಟೆಯುಅಲ್ಲವೆನ್ನ ಮಾತು ಥಟನೆ ಗುರುಜಗನ್ನಾಥವಿಠಲರೇಯ ಲಾಲಿಸೀಗ ೯

ಮೂರು ಮಾಡುವಿ
೧೧
ಎಲ್ಲಿ ಪೋದ ಶಿರಿನಲ್ಲತಾ
ನೆಲ್ಲಿ ಪೋದ ಶಿರಿನಲ್ಲ ಪ
ಎಲ್ಲಿ ಪೋದ ಪದಪಲ್ಲವಭಜಿಪರ
ನಲ್ಲೆ ಬಿಟ್ಟು ಪರನಲ್ಲೇರಿಗೊಲಿದು ತಾ ಅ.ಪ
ಸತಿ ಸುತ ಮುನಿಕಿಂತತಿಹಿತ ಪ್ರೀಯರು
ಮತಿವಂತರೆ ಎನಗತಿ ಎಂಬುವ ತಾ ೧
ಲಕುಮಿಯಕಿಂತಲು ಭಕುತರು ಎನಗೆ
ಸಕಲಭಾಗ್ಯ ಪರಸುಖವೆಂಬುವ ತಾ ೨
ಕಟ್ಟು ಕಾವಲಿ ಪರರಟ್ಟುಳಿ ಇಲ್ಲವೊ
ಬಿಟ್ಟರೆ ಭಕುತರು ಕಟ್ಟೋರು ಎಂಬುವ ೩
ಎಲ್ಲಿರಿಗತಿ ನಾ ಬಲ್ಲಿದ ಎನಪಾದ
ಪಲ್ಲವ ಭಜಕರು ಬಲ್ಲಿದರೆಂಬುವ ೪
ದಾತಗುರು ಜಗನ್ನಾಥವಿಠಲ ನೀ
ರೀತಿಯ ಪೇಳಿದ ದೂತ ಪಾಲಕ ತಾ ೫

೧೦೬
ಏಳಯ್ಯ ಗುರುವೆ ಬೆಳಗಾಯಿತು
ಏಳಯ್ಯ ಗುರುರಾಯ ಏಳಯ್ಯ ಶುಭಕಾಯ
ಏಳು ಮಹರಾಯ ಏಳು ಎನ ಜೀಯಾ ಪ
ಶೀಲ ನಿನ್ನ ಭಕ್ತರು ಸಾಲು ಸಾಲಾಗಿ ನಿಂತಿಹರೋ ಅ.ಪ
ಉದಯಾದ್ರಿ ಶೃಂಗದಲಿ ಉದಿಸಿದನು ಭಾಸ್ಕರನು
ಸದಮಲ ಬುಧರೆಲ್ಲ ಮುದದಿಂದಲೀ ಎದ್ದು
ನದಿಯ ಸ್ನಾನವ ಮಾಡಿ ಉದಕ ಪುಷ್ಪಗಳಿಂದ
ಸದನಕ್ಕೆ ತಾವ್ ಬಂದು ಪದುಮನಾಭನ ಭಜಿಸಿ
ಪಾದೋದಕವನೇ ಧರಿಸಿ ಸದಯ ನಿನ್ನ ಪಾದ –
ಸಂದರುಶನಕೆ ಬಂದಿಹರೋ ೧
ನಿತ್ಯ ಭಜಿಸುವ ಜನರೆಲ್ಲ ಹೊತ್ತು ಮೀರಿತು ಎಂದು
ಚಿತ್ತ ಶುದ್ಧಿಯಲಿಂದ ಉತ್ತುಮಾರ್ಹಣೆಗಳಾ ತಮ್ಮ
ನೆತ್ತಿಯಿಂದಾ ಪೊತ್ತು ಜತ್ತಾಯುತಾಗಿ ನಿಂತಿಹರೋ
ಉತ್ತಮಾ ನಿನ ನಿದ್ರೆ ಹೊತ್ತು ಮೀರ್ಯಾಯಿತೊ
ತೊತ್ತಿಗಾರೆಲ್ಲರೂ ಪಾದ ಒತ್ತಿ ಬೋಧಿಸುತಿಹರೋ
ಚಿತ್ತಕ್ಕೆ ತಂದು ತ್ವರಿತದಿ ಏಳೋ ೨
ವಿಮತಾದ್ರಿ ಕುಲಿಶನೇ
ವಿಮಲ ಗಾತ್ರನೇ ಏಳೋ
ನಮಿಪ ಜನರಾರ್ಥ ದಾತ ದಿವಿಜದೃಮನೆ
ಪ್ರೇಮ ವಾರಿಧಿ ಎಳೋ
ತಾಮರಸಾಂಬಕನೆ ಏಳೋ
ಆಮಯ ಧ್ವಂಸಕ ನೀನೇಳೋ
ಗೋಮತೀ ಕುಮುದ
ಸೋಮ ಸಾಂದ್ರನೆ ಏಳೋ – ಶ್ರೀ
ರಾಮ ಪಾದ ಭೃಂಗನೇ ಏಳೋ
ಯಾಮ ಮೀರಿತು ವಿಶ್ವನಿಯಾಮಕ ದೂತನೇ
ಸಾಮಗಾಯನ ಲೋಲ
ರಮಾ ವಲ್ಲಭಪ್ರೀಯ ಗುರುರಾಜವರ್ಯ ೩
ಮೌನಿ ಕುಲರನ್ನ ಮಾನ ನಿಧಿಯೇ
ಎನ್ನ ಬಿನ್ನಪವ ಕೇಳಯ್ಯ ಜೀಯಾ
ನಿನ್ನ ಭೋಧಿಪಕನ್ಯ ಜನರುಂಟೆ
ನಿನ್ನಿಂದ ನೀ ಚನ್ನಾಗಿ ಏಳೋ
ಮುನೆನ ಮಹ ಕಾರ್ಯಂಗಳೂ
ಘನ್ನವಾಗಿರುತಿಹವು
ನಿನ್ಹೊರತು ಇನ್ನಾರು ಮಾಳ್ಪರು
ಎನ್ನ ನುಡಿ ಈಗ
ಚನ್ನಾಗಿ ಮನದಿ ತಂದು
ಮನ್ನಿಸೀ ಪೊರೆಯೊ ಧ್ವರಿಯೇ ೪
ದಾತ ಈ ಜನ ಜಾತಿ ಸಾಕಲಾರದೆ –
ಸೋತು ಮಲಗಿದೆಯಾ
ಪಾತಕಾಂಬುಧಿ ಪೋತನೇ ಮಾತರಿಶ್ವನ ತಾತ
ಸೀತಾನಾಥನ ಪಾದ – ಪಾಥ ಭವ –
ಯುಗ್ಮದಲಿ ಸಂ –
ಜಾತವಾಗಿಹ ಸುಧಾ – ಪೀತ ಕಾರಣ ಮದಾ ಸಂ –
ಭೂತದಿಂದ ಮಲಗಿದೆಯಾ ಭೂತನಾಥನ ಗುರು ಜಗ –
ನ್ನಾಥ ವಿಠಲನ ದೂತ ನಾನೆಂಬ ಗರುವಿಂದ ಮಲಗಿದೆಯಾ ೫

೧೦೭
ಕಂಡೆ ಗುರುರಾಯನಾ ಸುರಮನೋಪ್ರಿಯನಾ ಪ
ತೊಂಡವತ್ಸಲ ಧರ – ದಂಡ ಕಮಂಡಲ
ಪಂಡಿತಾಗ್ರಣಿಗಳೊಳು – ದ್ದಂಡ ಮಹಿಮನ ಅ.ಪ
ಯತಿಕುಲಾಧಿಪನ ಸುಫಾಲವ ಶರಾ –
ಕ್ಷತಜಾಕ್ಷತಿ – ಮಣಿ ವಿಭವಾ
ವ್ರತತಿಜೋಪಮ ಯುಗನಯನ ಸಂಪಿಗಿನಾಸವಾ
ಗಂಡಯುಗಲ ವಿಕಾಸವಾ ಕಪೋಲ ಯುಗ ಭಾಸವಾ
ವದನಾಬ್ಜದೊಳೊಪ್ಪುವ ಕಿರಿಹಾಸವಾ ಹಾ-ಹಾ- ಹಾ ೧
ಕುಂದ – ಕುಟ್ಮಿಲ – ದಂತ ಪಂಕ್ತಿಯಾ ಅರುಣ
ಪೊಂದಿ ಪೊಳೆವೊದದರ ಛವಿಯಾ
ಸುಂದರ ದರೋಪಮ ಕಂಧರಾಂಕಿತ ಬಾಹುದಂಡವಾ
ಭುಜದಳೊಪ್ಪುವ ಮುದ್ರನಾಮವ
ಹೃದಯ – ಮಂಡಲ ಮುದ್ರನಾಮವ ಹಾ-ಹಾ-ಹಾ ೨
ಲಲಿತ ಶ್ರೀತುಳಸೀ ಜಲಜಾಕ್ಷಿಯಾ ಮಾಲಾ
ವಳಿಯ ವಕ್ಷದ ರೋಮಾವಳಿಯಾ
ಚಲುವ ಸುಳಿನಾಭೀ ಪುಳಿನ ಪೋಲುವೊ ನಿತಂಬವಾ
ಊರು ಕದಳಿ ಸ್ತಂಭವಾ
ಜಾನುಗಾಳು ಮುಕುರಬಿಂಬವ
ಮಾಡುವ ಚರ್ಯ ವಿಡಂಬವಾ ಹಾ – ಹಾ – ಹಾ ೩
ಕರಿರದೋಪಮ ಜಂಘೆಗಳಾ – ಗುಲ್ಫ
ವರರತ್ನ ಪಾದಾಂಗುಲಿ ಸಂಫಗಳ
ಸ್ಮರಿಸುವೊ ಜನರಿಗೆ ಸುರವರತರು ಪೋಲುವಾ
ತರಿವೋನು ದುರಿತ ಸಂಘವಾ
ನಿರುತ ನೀಡುವೋ ನಭೀಷ್ಟವಾ
ಭಕುತರೊಳಗೆ ತಾನಾಡುವಾ ಹಾ – ಹಾ – ಹಾ ೪
ನೀತ ಗುರುಜಗನ್ನಾಥಾ ವಿಠಲಪಾದ
ಪ್ರೀತಿಪೂರ್ವಕ ಭಜಿಸುತ
ಭೂತ ಪ್ರೇತದ ಭಾಧೆಊಳನೆಲ್ಲ ಕಳೆಯುವಾ
ಸಕಲ ಸೌಖ್ಯನೀಡುವಾ
ನಂಬಿದರೀತ ಪೊರೆಯುವಾ
ತೋರಿಪನಾಗಯ್ಯ ಮಹಿಮವಾ ಹಾ – ಹಾ – ಹಾ ೫

೧೦೮
ಕರವಪಿಡಿದು ಕಾಯೊ ಎನ್ನಾ
ಶ್ರೀ ಯತಿವರ ಗುರುರಾಘವೇಂದ್ರರನ್ನಾ ಪ
ಶರಣ-ಜನ-ಸುರ-ಪಾದಪನೆ ತವ
ಚರಣಯುಗಳತೆ ಮೊರೆಯ ಪೊಕ್ಕೆನೊ
ಕರುಣಿಸೆನ್ನನು ದೂರ ನೋಡದೆ
ಕರುಣಸಾಗರನೆ ನೀ ಅ.ಪ
ಆರು ಕಾಯ್ವರೊ ಪೇಳೋ ಎನ್ನ – ನೀ
ದೂರ ನೋಡುವದೇನು ಘನ್ನ
ಸಾರಿದವರಿಗಿಷ್ಟವನ್ನ – ಬೀರುವನೆಂಬೋ
ಬಿರುದು ಪೋಗಿಹದೋ ನಿನ್ನ
ಸಾರುವೆನೊ ತವ ಪಾದ – ಪದುಮ
ಸೌರಭ ಸ್ವೀಕರಿಪ ಜನರೊಳು
ಸೇರಿಸೆನ್ನನು ದೂರ ನೋಡದೆ
ಭೂರಿ ಕರುಣಾಕರನೆ ನೀ ೧
ದುರುಳು ಭವಾಂಬುಧಿ ಬಾಧಾ – ಎನ್ನ
ಮೀರಿ ಪೋಗಿಹ್ಯದು ಅಗಾಧಾ
ಘೋರ ಮದನ – ಶರ – ಬಂಧಾ – ದಿಂದ
ದೂರಾಗಿಹದೋ ನಿನ್ನ ಸಂಭಂಧ
ಪರಮ ಪಾಮರನಾದ ಎನ್ನಯ
ಮರುಳು ಮತಿಯನು ಬಿಡಿಸಿ ನಿನ್ನ –
ವರೊಡನೆ ಸೇರಿಸೊ ಪರಮ ಕರುಣಿಯೆ
ಚಾರತರನಾದ ಎನ್ನಾ ೨
ದುಷ್ಟಜನರ ಸಂಗದಿಂದ ನಿನ್ನಯ ಪಾದ
ಮುಟ್ಟ ಭಜಿಸದರಿಂದ
ಸೃಷ್ಟಿಯೊಳಗೆ ಮತಿಮಂದಾ ನಾಗೀ
ಪುಟ್ಟಿ ಬಂದೆನೊ ವೇಗದಿಂದಾ
ಕಷ್ಟಹರ ಗುರು ಜಗನ್ನಾಥ
ವಿಠಲನ ನಿಜ ಪಾದ ಪದುಮಕೆ
ಘಟ್ಟದೋಪಮ ನೆನಿಸಿ ಎನ್ನಾ
ಪುಟ್ಟಿ ಬರದಂತೆ ಮಾಡೊ ನೀ ೩

೪೮
ಕರುಣದಿ ಎನ್ನ ಪೊರಿಯೇ
ತೊರಮ್ಮ ಶಿರಿಯೇ ಪ
ಶರಣರ ಪೊರೆಯುವ ಕರುಣಿಯೆ ನಿನ್ನಯ
ಚರಣಯುಗಕೆ ನಾ ಶರಣು ಮಾಡಿದೆ ದೇವೀ ಅ.ಪ
ವಾರಿಜಾಂಬಕೆ ಅಂಭ್ರಣೀ ಶ್ರೀ ಹರಿಯ ರಾಣಿ
ಮಾರಾರಿ ಮುಖಸುರ ಸಂತ್ರಾಣಿ
ವಾರವಾರಕೆ ನಿನ್ನ ಸಾರಿಭಜಿಪೆ ಎನ್ನ
ದೂರ ನೋಡದೆ ಪೊರಿಭಾರ ನಿನ್ನದು ತಾಯಿ ೧
ಸೃಷ್ಟಿ ಸ್ಥಿತಿಲಯ ಕಾರಿಣೀ ಸುಗುಣಸನ್ಮಣಿ
ಕಷ್ಟ ದಾರಿದ್ರ್ಯ ದುಃಖ ಹಾರಿಣೀ
ದುಷ್ಟರ ಸಂಗದಿ ಕೆಟ್ಟಿಹ ಎನ್ನನು
ಥಟ್ಟನೆ ಕರುಣಾದೃಷ್ಟಿಲಿ ನೋಡಿ ೨
ಜಾತರೂಪಳೆ ಶುಭಗಾತ್ರಿ ತ್ರಿಜಗಕೆ ಧಾತ್ರೀ
ಸೀತೆ ಸತ್ರಾಜಿತನ ಪುತ್ರಿ
ದಾತ ಗುರುಜಗನ್ನಾಥವಿಠಲನ
ನೀತ ಸತಿಯೆ ಎನ್ನಮಾತೆ ವಿಖ್ಯಾತೇ ೩

೮೭
ಕರುಣಾರ್ಣವ ಶ್ರೀ ಗುರುವರ
ಕರುಣಿಸೊ ನೀ ಎನ್ನ
ಕರುಣಾಗತ ರಕ್ಷಾಮಣಿ ತವ
ಚರಣಾಂಬುಜ ತೋರಿನ್ನ ಪ
ಆನತಜನತತಿಜ್ಞಾನದ ಎನ್ನ –
ಜ್ಞಾನವ ಕಳೆದಿನ್ನ
ಜ್ಞಾನ ಭಕುತಿ ಸುವಿರಕುತಿ(ಯ)ನಿತ್ತು
ಮಾನದಿ ಸಲಹೆನ್ನಾ ೧
ಕಾಮಿತ ಫಲಪ್ರದ ಕಾಮ್ಯಾರ್ಥವನೂ
ಕಾಮಿಪ ಜನಕಿನ್ನ
ಪ್ರೇಮದಿ ಅವರಭಿಕಾಮವ ಪೂರ್ತಿಸಿ
ಕಾಮಧೇನುತೆರ ತೋರುವಿ ಘನ್ನ ೨
ಶಿಷ್ಟೇಷ್ಟ ಪ್ರದನಿಷ್ಟಘ್ನನೆ ನೀ
ಕಷ್ಟವ ಪರಿಹರಿಸಿನ್ನಾ
ಎಷ್ಟೆಂಥೇಳಲಿ ಸೃಷ್ಟಿ ಯೊಳಗೆ ನಿನ್ನ
ಶ್ರೇಷ್ಠ ಮಹಿಮೆಗಳನ್ನಾ ೩
ಶಿಷ್ಟನೆ ನೀ ಪರಮೇಷ್ಟಿಯ ಸತ್ಪದಾ –
ಧಿಷ್ಟತನೆಂದಿನ್ನಾ
ಪ್ರೇಷ್ಟನೆ ಎನ್ನಯಭೀಷ್ಟೆಯ ನಿತ್ತು
ಶ್ರೇಷ್ಠನ ಮಾಡಿನ್ನಾ ೪
ಪಾತಕವನಕುಲ ವಿತಿಹೋತ್ರ ಸುಖ
ದಾತನೆ ನೀ ಇನ್ನಾ
ಈತೆರ ಮಾಡದೆ ನೀತ ಗುರುಜಗ –
ನ್ನಾಥವಿಠಲ ಪ್ರಪನ್ನಾ ೫

ಮೂರಾರು ಭಕುತಿ
೧೩
ಕರುಣಿಸಲೊಲ್ಯಾ ಕರುಣಾನಿಧೇ ಪ
ಕರುಣಿಸಲೊಲ್ಯಾ ನೀ ಕರುಣಸಾಗರ ನಿನ್ನ
ಚರಣಭಜಿಸಿ ಭವ ಅರಣ ದಾಟುವಂತೆ ಅ.ಪ
ವಿಶ್ವಾಂತರ್ಗತನೆ ವಿಶ್ವಾಹ್ವಯಾ
ವಿಶ್ವವ್ಯಾಪಕನೆ ವಿಶ್ವಾಸುವಿಶ್ವ ನೀ
ವಿಶ್ವ ಪ್ರೇರಕ ನಿನ್ನ ವಿಶ್ವಪಾದದೊಳು ನಾ
ವಿಶ್ವಾಸಮಾಳ್ಪಂತೆ ೧
ದಾನವಾಂತಕನೆ ದಯಾಕರಾ
ಜ್ಞಾನದಾಯಕನೆ ಜ್ಞಾನದಾಯಕ ಎನ್ನ
ಜ್ಞಾನನಿಚಯ ನೀನೆ ಹಾನಿಮಾಡಿ ನಿನ್ನ
ಜ್ಞಾನವನೈದೊಂತೆ ೨
ಮಂದರೋದ್ಧರನೆ ಮಹಾರಾಯಾ
ನಂದದಾಯಕನೆ ಇಂದಿರಾಪತಿ ನಿಜ
ನಂದಕೊಡುವ ನಿನ್ನ ದ್ವಂದ್ವ ಚರಣದೊಳು
ಸಂದೇಹವಿಲ್ಲದಂತೆ ೩
ಕಾಮಿತಾರ್ಥವನೆ ಕಮಲಾಕ್ಷಾ
ಕಾಮನ್ನಪಿತನೆ ಕಾಮಿತಾರ್ಥಗಳನ್ನು
ಕಾಮಿಸದಲೆ ನಿನ್ನ ನಾಮವ ಭಜಿಸುವ
ನೇಮಮತಿಯನಿತ್ತು ೪
ಸೃಷ್ಟಿಕಾರಣನೆ ಶ್ರೀಕೃಷ್ಣಯ್ಯಾ
ವೃಷ್ಣಿನಾಯಕನೆ ದುಷ್ಟಮತಿಯ ಬಿಡಿಸಿ
ಶಿಷ್ಟಜ್ಞಾನವನಿತ್ತು ದಿಟ್ಟಗುರುಜಗನ್ನಾಥ
ವಿಠಲ ನೀ ಎನ್ನ ೫

೫೬
ಕರುಣಿಸೆನ್ನನು ಕರುಣಾನಿಧಿಯೆ ಪ
ಹರಿ ಭಜಕರಾಗ್ರಣಿಯೆ ವರಕಪಿಶಿರೋಮಣಿಯೆ ಅ.ಪ
ತರಣಿ ತನಯನನು ನೀ ಪೊರೆದ ಕೀರುತಿ ಈ
ಧರಣಿತಳದಲ್ಲಿ ಪರಿಪೂರ್ಣವಾಗೀ
ಇರುವ ವಾರ್ತೆಯ ಕೇಳಿ ಹರುಷ ಮನದಲಿ ನಿನ್ನ
ಚರಣ ಪಂಕಜಯುಗ್ಮ ಭರದಿ ಭಜಿಪ ಎನ್ನ ೧
ದುರುಳ ದೈತ್ಯನ ಶೀಳಿ ಧರಣಿಸುರಸುತನ ನೀ
ಪೊರೆದ ಕೀರುತಿ ಕೇಳಿ ತ್ವರದೀ
ಭರದಿ ನಿನ್ನಯ ಪಾದ ಸರಸಿಜ್ವದಯವನ್ನು
ನಿರುತ ಭಜನೆಯ ಮಾಳ್ಪ ದುರುಳ ಮಾನವ ನಾ ೨
ಜನಕ ಮಾಡಿದ ಋಣವ ಹುಣಿಸೆ ಬೀಜಗಳಿಂದ
ಋಣಗಳೆದ ಘನ ಮಹಿಮೆ ಕೇಳಿ
ಮನದಿ ಯೋಚಿಸಿ ಚರಣವನಜ ಭಜಿಸುವ ಎನ್ನ
ಋಣ ಬಿಡಿಸೊ ಗುರುಜಗನ್ನಾಥ ವಿಠಲ ಪ್ರಿಯಾ ೩

೪೭
ಕಾಯೆ ಕರುಣಾಂಬುಧಿಯೆ
ತೋಯಜನಯನೆ ಪ
ಕಾಯೆ ಕರುಣಿ ಗಿರಿರಾಯನ ಪಟ್ಟದ
ಜಾಯೆ ಭವದಲಿ ನೋಯಗೊಡದಲೆನ್ನ ಅ.ಪ
ಅಂಬುಜಾಂಬಕೆ ಅಂಭ್ರಣಿ ಸುಗುಣ ಸನ್ಮಣಿ
ಕಂಬುಚಕ್ರಾಂಕಿತಪಾಣಿ
ಅಂಬೆ ನಿನ್ನಯ ಪಾದಾಂಬುಜ ನಂಬಿದೆ
ಬಿಂಬನ ಎನ ಹೃದಯಾಂಬರದಲಿ ತೋರೆ ೧
ಕಾಮಿತಾರ್ಥ ಪ್ರದಾತೆ ಜಗದೊಳಗೆ ಖ್ಯಾತೆ
ಕಾಮಿತ ಸಲಿಸೆನ್ನ ಮಾತೆ
ಪ್ರೇಮದಿ ನಿನ್ನನು ನೇಮದಿ ಭಜಿಪೆನ್ನ
ಧಾಮದೊಳಗೆ ನೀ ಕ್ಷೇಮದಿ ನಿಲಿಸೀ ೨
ದೂತಜನಕತಿ ಪ್ರೀತೆ ಈ ಜಗಕೆ ಮಾತೆ
ಸೀತೆ ಪಾಲ್ಗಡಲಾ ಸಂಭೂತೆ
ದಾತ ಗುರುಜಗನ್ನಾಥ ವಿಠಲಗೆ
ಪ್ರೀತ ಸತಿಯೆ ಸುಖವ್ರಾತವ ಸಲಿಸಿ ನೀ ೩

೧೦೯
ಕಾಯೋ – ಕಾಯೋ ಪ
ಕಾಯೋ ಕಾಯೋ ಗುರು – ರಾಯನೆ ತವ ಪದ
ತೋಯಜ ಯುಗ ಎನ್ನ ಕಾಯದಲಿಟ್ಟು ಅ.ಪ
ಕ್ಷುಲ್ಲಕ ಮನುಜರ – ಸೊಲ್ಲನೆ ನೀಗಿಸಿ
ಹಲ್ಲನೆ ಮುರಿಯುವ – ಬಲ್ಲಿದ ನೀನೇ ೧
ಕ್ಷುದ್ರ ಮನುಜರೋ – ಪದ್ರವ ಕಳೆದು
ಭದ್ರ ಭಕುತಿಯ – ಉದ್ರೇಕವಿತ್ತು ೨
ತ್ವತ್ಸೇವಾ ಜನರಲಿ – ಮತ್ಸರ ಮಾಡುವ
ಕುತ್ಸಿತ ಜನತತಿ – ವಿಚ್ಛೇದ ಮಾಡುವ ೩
ನಿನ್ನಯ ಜನರನ – ಮನ್ನಣೆ ಮಾಡದೆ
ಬನ್ನವ ಬಡಿಪರ – ಖಿನ್ನರ ಮಾಡೀ ೪
ದೂತರ ನಿಚಯಕೆ – ಈ ತೆರ ಚಿಂತೆಯು
ಯಾತಕೆ ಗುರು ಜಗನ್ನಾಥ ವಿಠಲ ದೂತಾ ೫

೧೧೦
ಕೃಪಿಗಳೊಳು ನಿನಗುಪಮೆ ಕಾಣೆನೊ ಸದಾ
ಕೃಪಣವತ್ಸಲ ರಾಘವೇಂದ್ರಾ
ಅಪರಿಮಿತ ಪಾಪೌಘ ಸಪದಿ ಪೋಗಾಡಿಸಿ ನೀ
ಕೃಪಣ ಕಾಮಿತ ದಾತಾ – ಮನ್ನಾಥಾ ಪ
ಮೋದತೀರ್ಥ ಮತೋದಧಿ ಸಂಜಾತಾ –
ಮೋದ ಸಂಯುಕ್ತ ಸುಧಾ
ಭೋಧಿಸಿ ಚಂದ್ರಿಕ ಭುಧಜನ ವೃಂದಕೆ
ಉದಧಿನಂದನನಂತಿರುವೇ – ನಂದಕರ ಗುರುವೆ ೧
ಕ್ಷಿತಿ ತಳದೊಳು ವರ ಯತಿಯ ರೂಪವ ಧರಿಸಿ
ಪತಿತ ಪಾವನನೆನಿಸೀ
ಸತತ ಸುಜನರ ಅತಿಹಿತದಲಿ ಪೊರೆವೊ
ಮತಿವಂತ ಮನದಲೀಗ ಭಜಿಪೆ ತ್ವಚ್ಚರಣ೨
ಧಿಟ ಗುರು ಜಗನ್ನಾಥ ವಿಠಲಪಾದ ಹೃತ್ಸಂ –
ಪುಟದಿ ಭಜಿಸುತಲೀ
ಶಿಷ್ಟಜನರ ಮನದಿಷ್ಟಾರ್ಥ ಸಲಿಸುವ ವಂ –
ದ್ಯೇಷ್ಟದಾನದಿ ದಕ್ಷಾ – ಕಾಮಿತ ಕಲ್ಪವೃಕ್ಷಾ ೩

ಮೂರೇಳು ತತ್ವ
೧೪
ಕೊಡು ಕೊಡು ಕೊಡೋ ವರವಾ
ತಡವ್ಯಾಕೋ ದೇವಾ ನೀ ಪ
ಒಡೆಯ ನಿನ್ನಯ ಯುಗ
ಅಡಿಗಳ ಭಜಿಸುವೋ ಸು
ಧೃಢ ಭಕುತಿ ಜ್ಞಾನವನ್ನು
ತಡೆಯದೆ ಎನಗೆ ನೀ ಅ.ಪ
ಪೊಡವಿ ಪಾಲಕ ನೀನೆಂದು
ಭಿಡೆಯವನ್ನು ನಾ ಮಾಡೆ
ಕಡಲಶಯನ ಸುಮ್ಮನೆ
ಮಡದಿಸಹಿತಾಗಿ ನೀ ೧
ಜಡಜಲೋಚನ ದೇವಾ
ಹುಡಗ ನೀನೆಂದು ನಾ
ನುಡಿದ ಮಾತುಗಳ ನಿ
ನ್ನೊಡಲೊಳಗಿಡದೆ ನೀ ೨
ಚಟುಲಗುರು ಜಗನ್ನಾಥಾ
ವಿಠಲ ನಿನ್ನ ನಾ ಕರಾ
ಪುಟದಿ ಬೇಡುವೆ ಮಮ ಹೃ
ತ್ಪುಟದಿ ತೋರುವೆನಿಂದು ನೀ ೩

೧೧೧
ಕೊಡು ಬ್ಯಾಗಭೀಷ್ಟವ ತ್ವರದೀ – ನೀ ಸನ್ಮನದೀ ಪ
ಕೊಡುವೊದೆನುತ ನಿನ್ನಡಿಯನು ಭಜಿಸುವ
ಬಡವನ ಕರವನು ಪಿಡಿದೀ ಕಾಲದೀ ಅ.ಪ
ವಡೆಯ ನೀನೆನುತತಿ ಹರುಷದಲಿ ನಂಬಿದೆ ನಿನ್ನಾ
ಬಿಡದಲೆ ಪೊರೆ ಎನ್ನ ಕರುಣದಲಿ ಎನ್ನಯ ಕರವ
ಪಿಡಿದು ಭವಶ್ರಮ ಕಳಿಯುತಲಿ – ಬಹು ತೋಷದಲೀ
ನುಡಿದ ವಚನವ ಚಿತ್ತಕೆ ತಂದು
ಪೊಡವಿ ಪತಿ ಗುರುರಾಯನೆ ನೀ ೧
ನಮಿಪ ಜನರಿಗೆ ಸುರಧೇನು ಭಜಿಸುವ ಜನಕೆ
ಸುಮನಸೋತ್ತಮ ವರತರು ನೀನು – ಚಿಂತಿಪ ಜನಕೆ
ಅಮರೋತ್ತಮ ರತುನವು ನೀನು – ಎನುತಲಿ ನಾನು
ಅಮಿತ ಮಹಿಮವ ತೋರುತಲೀಗ
ಶ್ರಮವ ಕಳೆದು ಸುಖಸುರಿಸುತ ನೀ ೨
ಭೂತಳ ಮಧ್ಯದಲತಿ ಖ್ಯಾತ – ನೆನಿಸಿದ ನಾಥ
ಪಾತಕ ಕುಲವನ ನಿರ್ಧೂತಾ – ಮಾಡುತ ನಿಜಪದ
ದೂತಜನ ತತಿಮನೋರಥ – ಪೂರ್ತಿಪ ದಾತಾ
ವಾತ ಗುರುಜಗನ್ನಾಥ ವಿಠಲಗತಿ
ಪ್ರೀತಿಪಾತ್ರ ಸುಚರಿತ್ರ ಸುರಮಿತ್ರ೩

೫೭
ಗಡಾನೆ ವರ ಪಾಲಿಸೋ ಕೋಶಿಗಿಯೊಡೆಯ ಹನುಮನೆ ಪ
ತಡೆಯಾದೆ ತವ ಪಾದಯುಗಳ, ಜಡಜ ನಂಬಿದೆ ಅ.ಪ
ಕಡಲ ಲಂಘಿಸಿ ರಾಮನ ಮಡದಿಗುಂಗುರವನ್ನೆ ಇತ್ತು
ಸಡಗರದಿಂದವನ ನಗರ ಬಡಬಗೆ ನೀಡಿ ಬಂದೆ ನೀ ೧
ದುರುಳ ದುಶ್ಯಾಸನುದರ ಕರುಳುಗಳಿಂದ ದುೃಪದ
ತರಳೆಯಳಾ ಮನಪೂರ್ತಿಸಿ ಹಿಂಗುರುಳು ಕಟ್ಟಿದ ಧೀರನೆ ೨
ದಿಟ್ಟ ಮೋದತೀರ್ಥರೆನಿಸಿ ದುಷ್ಟ ಮಾಯಾವಾದ ಮತ
ಸುಟ್ಟ ಶ್ರೀ ಗುರುಜಗನ್ನಾಥ ವಿಠಲ ಪದ ಭಜಕನೆ ೩

ಮೂರೊಂದು ಮಗ
೧೫
ಗಿರಿರಾಯಾ ಗಿರಿರಾಯಾ ಪ
ಶರಣಾಗತರಿಗೆ ಕರುಣಾಕರ ವೆಂಕಟಅ.ಪ
ಸ್ಮರಿಸುವೆ ನಿನ್ನನು ಸರಸಿಜಭವನುತ
ಸ್ಮರತಾಮರತರು ದುರಿತವಿದೂರ ೧
ಶ್ರೀಕರಭವಭಯ ನೂಕಿಸಿ ಎನ್ನನು
ಸಾಕೆಲೋ ಭೂಧರಸೂಕರರೂಪ ೨
ಆಪದ್ಬಾಂಧವ ಶ್ರೀಪತಿ ಎನ್ನನು
ಕಾಪಾಡೆಲೊ ಸಕಲಾಪದ್ಧರ ವೆಂಕಟ೩
ಕಾಮಿತ ಫಲಪ್ರದ ಈ ಮಹೀತಳದೊಳು
ಸಾಮಜವರದ ಸುಧಾಮನ ಸಖ ಪೊರಿ ೪
ದಾತಗುರುಜಗನ್ನಾಥವಿಠಲ
ಪ್ರೀತನಾಗೊ ನಿನ್ನ ದೂತನು ನಾನೈ ೫

೧೧೫
ಗುರುರಾಜ ಗುರುಸಾರ್ವಭೌಮ ಪ
ಗುರುರಾಜ ತವ ಪಾದ
ಸರಸಿಜಯುಗಲಕ್ಕೆ
ಮೊರೆಪೊಕ್ಕ ಜನರನ್ನ
ಪೊರೆ ಎಂದೇ ಅ.ಪ
ಶರಣ ಪಾಲಕನೆಂಬೊ – ಬಿರುದು ಬೀರುತಲಿದೆ
ಶರಣರ ಮರೆವೊದು ಥರವೇನೋ ೧
ಸಾರಿದಜನರಘ ದೂರಮಾಡುವೆನೆಂಬೊ
ಧೀರರ ವಚನವು ಸಾರುತಿದೆ ೨
ದೂರದೇಶದಿ ಜನ – ಸಾರಿ ಬಂದರೆ ವಿ –
ಚಾರಿಸಿ ಹರಕೆ ಪೊರೈಸುವೀ ೩
ಕುಷ್ಟಾದಿ ಮಹರೋಗ ನಷ್ಟಮಾಡುತಲ –
ಭಿಷ್ಟೇಯ ಪೂರ್ತಿಪ ಮಹ ಶ್ರೇಷ್ಠನೆ ೪
ಆದಿವ್ಯಾಧಿ ಉ-ಪಾಧಿ ಸಂಘಗಳನ್ನು
ಛೇದಿಸಿ ಜನರಿಗಾ ಮೋದ ಸಲಿಸುವಿ ೫
ಸತಿಜನರಿಗೆ ಅತಿ ಹಿತದಿಂದ ಸುತರನ್ನ
ಸತತ ನೀಡುವಿ ಯತಿ ಕುಲನಾಥ ೬
ಮತಿ ಹೀನ ಅತಿ ಮೂರ್ಖ ತತಿನಿನ್ನ ಭಜಿಸಲು
ವಿತತ ಭಕುತಿ ಜ್ಞಾನ ನೀಡುವೀ ೭
ಮೂಕ – ಬಧಿರ – ಪಂಗು – ಏಕೋಭಾವದಿ ಸೇವೆ
ಏಕಮನದಿ ಮಾಡೆ ರಕ್ಷೀಪಿ ೮
ಅವರ ಮನೋ ಬಯಕೆ ಹವಣಿಸಿ – ನೀಡುತ
ಅವನಿಯೊಳಗೆ ನೀ ಮೆರೆಯುವೀ ೯
ಅಂಧಜನಕೆ ಚಕ್ಷು – ವಂಧ್ಯಜನಕೆ ಸುತರು
ಬಂದ ಬಂದವರರ್ಥ ಪೂರೈಸುವೀ ೧೦
ಪರಮಂತ್ರ ಪರಯಂತ್ರ ಪರಕೃತ್ಯಪರಮಾಹಿ
ಪರಿಪರಿ ವ್ಯಥೆಗಳ ಹರಿಸುವೀ ೧೧
ದುರುಳಜನರ ಬಾಧೆ ಮೊರಳುಮಾಯದ ಮೊದ್ದು
ಕಿರಳುಪದ್ರಗಳೆಲ್ಲ ಕಳೆಯುವೀ ೧೨
ಕಾಮಿತ ಫಲಗಳ – ಕಾಮಿಪ ಜನರಿಗೆ
ಪ್ರೇಮದಿ ನೀಡುವೊ ಧ್ವರಿ ನೀನೇ ೧೩
ಅನ್ನ ವಸನ ಧನ – ಧಾನ್ಯ ಹೀನರಗಿನ್ನು
ಮನ್ನಿಸಿ ನೀನಿತ್ತು ಸಲಹುವೀ ೧೪
ಅಧಿಕಾರ ಕಳಕೊಂಡು
ಬದಕಲಾರದ ಜನ
ವದಗಿ ನಿನ್ನನು ಭಜಿಸೆ ಕರುಣಿಪೀ ೧೫
ಆವ ಮಾನವ ನಿನ್ನ
ಸೇವೆ ಮಾಡುವನವ
ಕೋವಿದನಾಗುವ ನಿಶ್ಚಯಾ ೧೬
ಇನಿತೆ ಮೊದಲಾದ
ಘನತರ ಮಹಿಮವು
ಜನರಿಗೆ ಶಕ್ಯವೆ ಗುರುರಾಯಾ ೧೭
ಸುರತರು ಸುರಧೇನು
ವರಚಿಂತಾಮಣಿ ನೀನೆ
ಶರಣವತ್ಸಲ ಬಹು ಕರುಣೀಯೇ ೧೮
ದಿನ ದಿನ ಮಹಿಮವು
ಘನ ಘನ ತೋರೋದು
ಬಿನಗು ಮಾನವರಿಗೆ ತಿಳಿಯಾದೋ ೧೯
ಕರುಣಾನಿಧಿಯೆ ನೀನು
ಶರಣ ಮಂದಾರನೆ
ಶರಣ ವತ್ಸಲ ನಿನಗೆ ಶರಣೆಂಬೆ ೨೦
ವಸುಧಿತಳದಿ ನೀನೆ
ವಶನಾಗೆ ಜನರಿಗೆ
ವ್ಯಸನಗಳುಂಟೇನೊ ಪೇಳಯ್ಯಾ ೨೧
ದುರಿತ ದುಷ್ರ‍ಕತವೆಲ್ಲ
ದೂರದಲೋಡೋವು
ಕರಿಯು ಸಿಂಹನ ಕಂಡತೆರನಂತೆ ೨೨
ನಿನ್ನ ನಾಮದ ಸ್ಮರಣೆ
ಘನ್ನ ರೋಗಗಳನ್ನು
ಚೆನ್ನಾಗಿ ನಾಶನ ಮಾಳ್ಪೋದೋ ೨೩
ರಾಘವೇಂದ್ರ ಗುರು
ಯೋಗಿಕುಲಾಗ್ರಣಿ
ವೇಗಾದಿ ಪೊರೆದೆನ್ನ ಪಾಲಿಪೆ ೨೪
ಜನನಿ ಜನಕರು ತಮ್ಮ
ತನಯರ ಪೊರೆದಂತೆ
ದಿನದಿನ ನೀನೇವೆ ಸಲಹೂವಿ ೨೫
ಅನಿಮಿತ್ತ ಬಾಂಧವ
ಅನುಗಾಲ ನೀನಿರೆ
ಜನರು ಮಾಡುವ ಬಾಧೆ ಎನಗೇನೋ ೨೬
ಮನಸಿನೊಳಗೆ ನಿತ್ಯ
ನೆನೆಯುತ ತವ ಪಾದ
ವನಜ ಯುಗಳ ಮೊರೆ ಪೊಂದಿದೆ ೨೭
ನಿನ್ನ ಮಹಿಮ ಶ್ರವಣ
ನಿನ್ನ ಗುಣಕೀರ್ತನ
ನಿನ್ನ ಮೂರ್ತಿಧ್ಯಾನ ನೀಡೈಯ್ಯಾ ೨೮
ನಿನ್ನ ಉಪಾಸನ
ನಿನ್ನ ದಾಸತ್ವವ
ಚನ್ನಾಗಿ ಎನಗಿತ್ತು ಸಲಹೈಯ್ಯಾ ೨೯
ನಿನ್ನನುಳಿದು ಈಗ
ಮನ್ನಿಸಿ ಪೊರೆವಂಥ
ಘನ್ನ ಮಹಿಮರನ್ನ ಕಾಣೆನೋ ೩೦
ದಾತ ಗುರು ಜಗ
ನ್ನಾಥ ವಿಠಲಗತಿ
ಪ್ರೀತಿ ಪಾತ್ರನು ನೀನೆ ನಿಜವಯ್ಯೊ ೩೧

೧೧೩
ಗುರುರಾಜಾ – ಗುರುರಾಜಾ ಪ
ಧರಣಿಸುರರ – ಸುರಭೂಜಾ ಅ.ಪ
ಜ್ಞಾನಿಗಳರಸನೆ – ಧ್ಯಾನಿಪಜನರಿಗೆ
ಜ್ಞಾನವು ಪಾಲಿಸೊ – ಜ್ಞಾನಿಜನನಾಥ ೧
ಜ್ಞಾನಿಲ್ಲದೆ ಭವ – ಕಾನನ ಚರಿಸುವೆ
ಮಾನಸದಲಿ ತವ – ಧ್ಯಾನವ ಸಲಿಸೈ ೨
ಅನ್ಯರ ಭಜಿ¸ದೆ – ನಿನ್ನನೆ ನಿತ್ಯದಿ
ಮನ್ನದಿ ಭಜಿಸುವ ಉನ್ನತ ಮತಿ ನೀಡೈ ೩
ನೀಚರ ಮನಿಯಲಿ – ಯಾಚಿಪಗೋಸುಗ
ಯೋಚಿಪ ಮನವನು ಮೋಚನೆ ಮಾಡೈ ೪
ಯಾತಕೆ ಭವದಲಿ – ಈತೆರ ಬಳಲಿಪಿ
ದಾತನೆ ಗುರುಜಗ – ನ್ನಾಥ ವಿಠಲದೂತಾ೫

೧೧೪
ಗುರುರಾಜಾ ಗುರು ಸಾರ್ವಭೌಮ ಪ
ಗುರುರಾಜಾ ಗುರಸಾರ್ವಭೌಮ ನಿನ್ನಯ ಪಾದ
ಸರಸಿಜಯುಗಕಭಿ ನಮಿಸುವೇ ಅ.ಪ
ಕರುಣ ಸಾಗರನೆಂದು ಚರಣವ ನಂಬಿದೆ
ಶರಣನ ಪಾಲಿಸು ಕರುಣಿಯೇ ೧
ಅನ್ಯರ ಭಜಿಸದೆ ನಿನ್ನನ್ನೆ ಭಜಿಸುವೆ
ಎನ್ನ ಮರೆವೊದಿದು ನ್ಯಾಯವೇ ೨
ಪರಮ ಪುರುಷನೆ ನಿನ್ನನು ಚರನೆನಿಸಿ ಧರೆಯೋಳು
ನರರನ್ನ ಬೇಡೊದು ಘನತೆಯೆ ೩
ಸುರನು ಮನೆಯಲ್ಲಿ ಸ್ಥಿರವಾಗಿ ಇರಲಿನು
ತಿರಕ ತಕ್ರಕೆ ಬಾಯಿ ತೆರೆವೋರೇ ೪
ಬೇಡಿದ ಮನೋರಥ ನೀಡುವ – ನೀನಿರೆ
ಬೇಡೆನೆ ನರರನ್ನ ನೀಡೆಂದೂ ೫
ಸಂತತ ಎನ ಕಾರ್ಯ ವಂತರಿಲ್ಲದೆ ನೀ –
ನಿಂತು ಮಾಡುವದು ಪುಶಿಯಲ್ಲ ೬
ಕಾಲಕ್ಕೆ ಸುಖದುಃಖ – ಮೇಲಾಗಿ ಬರುತಿರೆ
ಪೇಳಿ ಎನ್ನನು ನೀ ಪಾಲಿಸುವಿ ೭
ನಿನ್ನ ಸೇವಿಪರಿಗೆ ಇನ್ನುಂಟೆ ಭಯ ಶೋಕ
ಉನ್ನತ ಸುಖದೊಳಗಿರುವರೋ ೮
ನಿನ್ನ ಸೇವಿಸಿ ಭವ – ಬನ್ನ ಬಡುವದಿದು
ಎನ್ನಪರಾಧವದೇನಯ್ಯಾ ೯
ಕುಚ್ಛಿತ ಜನರನ್ನ – ತುಚ್ಛ ಮಾಡದಲವರ
ಇಚ್ಛೆಕಾರ್ಯವ ಮಾಡಿ ಸಲಿಸುವಿ ೧೦
ಜನನಿ ಪುತ್ರಗೆ ವಿಷಸ್ – ವಿನಯದಿ ನೀಡಲು
ಜನಕ ತನಯನ ತಾ ಮಾರಲು ೧೧
ವಸುಧೀಶ ವೃತ್ತಿಯ – ಕಸಕೊಂಡ ವಾರ್ತೆಯ
ವ್ಯಸನದಿ ಆರಿಗೆ ಉಸರೋದೋ೧೨
ಇದರಂತೆ ನೀ ಮಾಡು – ವದು ಏನು ನ್ಯಾಯವೊ
ಪದುಮನಾಭನ ಪ್ರಿಯ ಗುರುರಾಯ ೧೩
ಮೂಕ ಬಧಿರ ಕುರುಡಾ – ನೇಕ ಜನಕೆ ಕಾರ್ಯವಿ –
ವೇಕ ಮಾಡಿ ನೀ ಸಲಹಿದಿ ೧೪
ಬಂದು ಬೇಡಿದ – ಮಹ – ವಂಧ್ಯಜನರಿಗೆ ಸು –
ಕಂದರ ನೀನಿತ್ತು ಸಲಹುವೀ ೧೫
ಭೂತಾದಿ ಬಾಧವ – ನೀತರಿದು ಸುಖಗಳ
ವ್ರಾತವ ಸಲಿಸೀ ಪಾಲಿಸುವಿ ೧೬
ಹಿಂದಿನ ಮಹಿಮ – ದಿಂದೇನು ಎನಗಯ್ಯ
ಇಂದು ಮಹಾ ಮಹಿಮೆ – ತೋರಿಸೋ ೧೭
ನಾಥನು ನೀನಲ್ಲೆ ದೂತನು ನಾನಲ್ಲೆ
ಯಾತಕೆ ಈ ತೆರ ಮಾಡಿದೀ ೧೮
ಎಲ್ಲೆಲ್ಲಿ ನಾ ಪೋದ – ರಲ್ಲಲ್ಲೆ ನೀ ಬಂದು
ಎಲ್ಲ ಕಾರ್ಯಗಳನ್ನು ಮಾಡಿದೀ ೧೯
ಇತರರಿಗಸಾಧ್ಯ ಅತಿಶಯ ಚರ್ಯವ
ಯತನಿಲ್ಲದಲೆ ನೀ ಮಾಡಿದಿ ೨೦
ಪೇಳಲೆನ್ನೋಶವಲ್ಲ ಭಾಳ – ನಿನ್ನಯ ಚರ್ಯ
ಕೀಳುಮಾನವ ನಾ ಬಲ್ಲೇನೆ ೨೧
ಜ್ಞಾನಿಗಳರಸನೆ ಮೌನಿ ಶಿರೋಮಣಿ
ಧ್ಯಾನವ ಸಂತತ ನೀಡಯ್ಯಾ ೨೨
ಸಂತತ ಎನ ಮನೊ – ಅಂತರದಲಿ ನೀ
ನಿಂತು ಪಾಲಿಸೊ ಎನ್ನ ಮಹರಾಯಾ ೨೩
ಎಂತೆಂಥ ಭಯ – ಬರೆ – ನಿಂತು ತಳೆದ್ಯೊ ದಯ –
ವಂತ ನಿನಗೆಣೆಗಾಣೆನಯ್ಯಾ ೨೪
ನಿನ್ನಲ್ಲಿ ಹರಿ ದಯ – ಉನ್ನತ ಇರಲಿನ್ನು
ಎನ್ನಲ್ಲಿ ನಿನ ದಯ ಇರಲಯ್ಯ ೨೫
ದಾತಗುರು ಜಗನ್ನಾಥ ವಿಠಲ ನಿನ್ನ
ಮಾತು ಲಾಲಿಸಿದಂತೆ ಪೊರೆ ಎನ್ನಾ ೨೬

೧೧೬
ಗುರುರಾಯ – ಗುರುರಾಯ ಪ
ನಿರುತದಿ ನಿನ್ನನು ಸ್ಮರಿಸುವೆ – ಶುಭಕಾಯಾ ಅ.ಪ
ಕುಧರರದನಜ – ನದಿಯ ತೀರದಿ ನಿಜ
ಸದನನೆ ಹರಿಪದ – ಮಧುಕರ ಸೈ ಸೈ ೧
ಮಾಗಧರಿಪು ಮತ ಸಾಗರ ಝಷಸ್ಸಮಾ –
ಮೋಘ ಮಹಿಮ ಎನ್ನ – ಬ್ಯಾಗನೆ ಪೊರಿಯೈ ೨
ಕಾಮಿತ ಫಲಪ್ರದ – ಪ್ರೇಮದಿ ನಿನ್ನಯ
ನಾಮವ ನೆನಿವಂತೆ – ನೇಮವ ಸಲಿಸೈ ೩
ಆನತ ಸುಜನ ಸ -ನ್ಮಾನದ ಎನ್ನನು
ಮಾನದಿ ಪಾಲಿಸೊ – ಮಾನಿಜನಪ್ರಿಯ ೪
ದಾತಗುರು ಜಗನ್ನಾಥವಿಠಲ ಸಂ –
ಪ್ರೀತಿ ಪಾತ್ರ ನಿಜ – ದೂತನ ಪಾಲಿಸೊ ೫

೧೧೭
ಗುರುರಾಯ ನೀನೆ ಧ್ವರೀ ! ಧ್ವರೀ ! ಪ
ಪರಮ ಭಾಗವತರ ನೀ ಮರೆಯದೆ ಪೊರೆವಂಥ ಅ.ಪ
ಪರಮ ಭಕ್ತರು ನಿನ್ನ ಕರೆಯಲಾಕ್ಷಣ ಬಂದು
ಪರಿಪರಿ ಸುಖಗಳ ಮರೆಯದೆ ಕೊಡುವಂಥ ೧
ಶರಣ ಜನರಪ – ಮರಣ ಕಳೆದು ಸ್ಥೂಲ
ಹರಣರಕ್ಷಿಸಿ ಸುಖ – ಅರಣದಲ್ಲಿಡುವಂಥ ೨
ಅನ್ಯರಿಗಳವಡದ – ಘನ್ನ ಮಹಿಮನೆ ನಿನ್ನ
ಮನ್ನದಿ ಭಜಿಪ ಜನರ – ಚನ್ನವಾಗಿ ಪೊರೆವಂಥ ೩
ರಾಜ ಚೋರ ವ್ಯಾಘ್ರ – ರಾಜ ವೃಶ್ಚಿಕ ಸರ್ಪ
ರಾಜಿ ನಕ್ರದ ಭಯ – ಮಾಜಿಸಿ ಪೊರೆವೊನಿಂಥಾ ೪
ಭೂತಳದೊಳಗತಿ – ಖ್ಯಾತನಾಗಿ ಸದಾ
ದಾತ ಗುರು ಜಗನ್ನಾಥ ವಿಠಲ ನೊಲಿಸಿದಂಥ ೫

೧೧೨
ಗುರೋ ರಾಘವೇಂದ್ರ ಭೋ
ಸಾರ್ವಭೌಮ ಸದಾ ಪಾಲಿಸೆನ್ನ ಪ
ಪರಾವರೋ ಹರಿಚರಾಗ್ರೇಸರಾ
ಪರೀಸರಾ ನಮಿಪೆ ನಿನ್ನಾ ಅ.ಪ
ಧರಾತಳದಿ ಧೇನು ವರಾನಂದದೀ
ಚರಾಜನರ ಕಾಮಾ
ಪರೀಪೂರ್ತಿಸಿ ದುರಾಳ ಸಂಗವ
ತ್ವರಾ ಕಳಿವೊ ಭೀಮಾ ೧
ಭಯಾಹರನೆ ಸದ್ದಯಾಕರನೆ ಆ –
ಮಯಾದೂರ ನಿನ್ನ
ಜಯಾ ಪಾಲಿಸೋ ಧಿಯಾ ಬೇಡುವೆನು
ನಯಾ ಮತೀತ್ಯನ್ನಾ ೨
ನೀತಾ ಗುರು ಜಗನ್ನಾಥಾ ವಿಠಲ ಪಾದ
ಪಾಥೋಜಯುಗವನ್ನಾ
ನೀತಾ – ಸುಖಮಯ – ವ್ರಾತ ಪಾಲಿಸೊ ನಿಜ –
ದೂತಾ ಜನಾರನ್ನಾ ೩

ಹಂಪೆಯಲ್ಲಿ ಒಂದು ಹನುಮಂತ ದೇವರಗುಡಿ
೧೬
ಗುರ್ವಂತರ್ಗತ ಗೋಪಾಲ ಪಾಹಿ
ಸರ್ವಪಾಲಕ ಶಿರಿಲೋಲ ಪ
ಶರ್ವಸುರಗಂಧರ್ವ ಮುನಿಕುಲ
ಸರ್ವಸೇವಿತ ಗರ್ವರಹಿತನೆ ಅ.ಪ
ರಾಮಾಕೃಷ್ಣ ವ್ಯಾಸರೂಪದಿಂದಾ
ಮಾಮನೋಹರ ಮಾಡೆಕೃಪಾ
ಶ್ರೀಮಧ್ವ ಮೊದಲಾದ ಆ ಮಹಾಮುನಿಗಳ
ಸ್ತೋಮಸಂತತ ಮಹಾಪ್ರೇಮಮನದಲಿದ್ದು
ಭೂಮಿತಳದೊಳಗಖಿಳಜನರಿಗೆ
ಕಾಮಿತಾರ್ಥವ ಸಲಿಸಿ ತಾ ನಿ
ಸ್ಸೀಮ ಮಹಿಮೆಯ ತೋರಿ ಇವರಿಗೆ
ಆ ಮಹತ್ತರ ಕೀರ್ತಿಕೊಡುತಿಹ ೧
ಆವಾವಜನುಮಗಳಲ್ಲಿ ಜಗಕೆ
ಜೀವನಪ್ರದನಾಗಿ ಇಲ್ಲೀ
ಶ್ರೀವರ ಸರ್ವೇಶ ಜೀವೇಶ ಸುರವಂದ್ಯ
ದೇವ ನಿನ್ನಯ ಪಾದಸೇವಾವ ಸಲಿಸೆಂದೆ
ಕೋವಿದರ ಕುಲಮಣಿಗಳೊಳಗೆ
ಭಾವಿಪುದು ಸನ್ಮನವನಿತ್ತು
ಗೋವಿದಾಂಪತೆ ಜ್ಞಾನಗಮ್ಯನೆ
ಪಾವನಾತ್ಮಕ ಪರಮ ಪಾಲಿಸೋ ೨
ದಾತ ಶ್ರೀ ಗುರುಜಗನ್ನಾಥವಿಠಲ ನೀ
ಧಾತನಾಂಡಕೆ ಮುಖ್ಯನಾಥಾ
ಧಾತಪ್ರಮುಖಸುರವ್ರಾತಸನ್ನುತಪಾದ
ಪಾಥೋಜಯುಗಳ ಸಂಭೂತ ರಜೋದಿಂದ
ಧೂತಪಾಪನ ಮಾಡುವದು ಅ
ದ್ಭೂತ ಜ್ಞಾನ ವಿರಕುತಿ ಸಂಪ
ದ್ಪ್ರಾತ ಪಾಲಿಸೊ ಹೇ ಮಹದ್ಭುತ
ದಾತ ಎಂಬೆನೊ ನಮೋ ನಮೋ ೩

ಯೋಗೀಂದ್ರ ವಂದಿತ
೧೭
ಛಲಾವ್ಯಾಕೊ ನಿನಗೆ ಎನ್ನಲಿ ಪ
ಛಲಾವ್ಯಾಕೊ ಕೋಲಾಚಲವೇಂಕಟ
ಫಲಾ ನೀಡಿ ನೀ ಭಲಾನೆನಿಸೊ ದೇವಾ ಅ.ಪ
ಧರಾತಳದಿ ಭೂಧರಾಗ್ರಮಂದಿರ
ಪರಾವರೇಶನೆ ದರಾರಿಕರಶೂರ ೧
ರಮಾವರನೆ ತವ ಸಮಾನರಾಗಿಹ
ಸುಮಾನಸಾರ್ಕರ ಕ್ಷಮಾತಳದಿ ಕಾಣೆ ೨
ಕುಲಾಲಕೃತ ಮೃತ್ ಕಲಾಪಧರಮಹಾ
ಉಲಾಯುಗಾತ್ಮಜ ಬಲಾರಿಸುತಸುಖ ೩
ಶತ್ರುಬವರದೊಳು ವೃತ್ರಾರಿತನಯನ
ಮಿತ್ರಾನ ತೋರಿ ಪೊರೆದ್ಯೊ ಶತ್ರುಹನನದೇವ ೪
ತಕ್ಷಕ ಶರಬರೆ ವೀಕ್ಷಿಸಿ ರಥ ಒತ್ತಿ
ತಕ್ಷಣದಲಿ ಸಾಸಿರಾಕ್ಷ ತನಯನ ಪೊರೆದಿ ೫
ಭರ್ಮಾನಸ್ತ್ರದ ನಿಜ ಮರ್ಮವರಿತು ನೀ
ಧರ್ಮಾಪೌತ್ರನ ಕಾಯ್ದಿ ಸುಧರ್ಮನಾಮಕ ನಿನಗೆ ೬
ದಶಾಸ್ಯ ಮುಖಮಹನಿಶಾಚರೇಶರ
ದಶಾಕಳದ ಮಹಾ ದಶಾವತಾರನೆ ೭
ವಟಾದ ಎಲೆಸಂಪುಟಾದಲೊರಗುಂ –
ಗುಟಾವ ನುಂಬುವ ದಿಟಾ ವಿಶ್ವೋದರ ೮
ದಾತಾ ಗುರುಜಗನ್ನಾಥ ವಿಠಲ ನಿಜ
ದೂತಾಪಾಲಕನೆಂದು ಖ್ಯಾತಾನಾಗಿಹ ನಿನಗೆ ೯

ಯತಿಗಳು
೭೯
ಟೀಕಾಚಾರ್ಯರು
ಜಯರಾಯಾ ಜಯರಾಯಾ ಪ
ದಯಕರ ಸಜ್ಜನಭಯಹರ ಗುರುವರ ಅ.ಪ
ವಾಸವ ನೀ ವಸುಧೀಶನ ನಿಜ
ಕೂಸೆನಿಸೀಪರಿ ದೇಶದಿ ಮೆರೆದೆ ೧
ಸತಿಯಳ ತ್ಯಜಿಸಿ ಯತಿರೂಪ ಧರಿಸಿ
ಪತಿತರ ಶಾಸ್ತ್ರವ ಹತಮಾಡಿದಿ ನೀ ೨
ಸುಧಾದಿಗ್ರಂಥವ ಮುದದಲಿ ರಚಿಸಿ
ಬುಧಜನಸ್ತೊಮಕೆ ಒದಗಿಸಿ ಕೊಟ್ಟಿ೩
ಅಲವಬೋಧರ ಮತ ಬಲವತ್ತರಮಾಡಿ
ಜಲಜನಾಭನ ಮನ ಒಲಿಸಿದ್ಯೊ ಜೀಯಾ ೪
ಪ್ರಮಿತಜನಗಣನಮಿತ ಪದಾಂಬುಜ
ಅಮಿತಮಹಿಮ ನಿನ್ನ ನಮಿಸುವೆ ದಿನದಿನ ೫
ಯಾತಕೆ ಎನ್ನನು ಈ ತೆರನೋಡುವಿ
ದಾತಗುರುಜಗನ್ನಾಥ ವಿಠಲ ಪ್ರೀಯ೬

೧೮
ತಿಳಿಯ ಬಲ್ಲೆನೆ ನಾನಿನ್ನ ವೆಂಕಟರಮಣ ಪ
ತಿಳಿಯ ಬಲ್ಲೆನೆ ನಿನ್ನ ನಳಿನಭವಾದ್ಯರಿ ಗಳವಡಿಯದ ಪಾದ ನಳಿನಮಹಿಮೆಗಳ ಅ.ಪ
ಭಜಿಪಜನಕೆ ಭಾಗ್ಯ ನಿಜವಾಗಿ ನೀಡುವಿ ಅಜನ ಪಿತನೆ ನಿನ್ನ ನಿಜರಾಣಿ ಮಹಾಲಕ್ಷ್ಮೀ ದ್ವಿಜರಾಜ ವರೂಥ ಭುಜಗೇಂದ್ರ ನಿನ ಶಯ್ಯ ಭುಜಗಭೂಷಣ ಪೌತ್ರ ಅಜನಾಂಡ ನಿಜಸದನ ಗಜಮೊಗ ಸುರರೆಲ್ಲ ನಿಜಪರಿವಾರವು ವಿಜಯಸಾರಥಿ ನೀನೆ ಭಜಕರ ಸುರಧೇನು ವಿಜಯದಾಯಕ ನೀನೆಂದು ನಿನ್ನಯ ಪಾದ ಭಜನೆ ಬೇಡಿದೆ ಕೃಪಾಸಿಂಧು ನಂಬಿದೆ ನಿನ್ನ ಸುಜನವಾರಿಧಿ ಶರದೇಂದು ಪಾಲಿಸು ಎನ್ನ ನಿಜವಾಗಿ ಪೇಳುವೆ ವೃಜಿ£ಮರ್ದನನೆಂದು ೧
ಎಡಬಲದಲಿ ನಿನ್ನ ಮಡದೇರ ಒಡಗೂಡಿ ಒಡಲನಾಮಕವಾಗಿ ಒಡಲೊಳಿದ್ದನ್ನವ ವಡಬಾಗ್ನಿಯೊಳುನಿಂತು ಜಡಜಸಂಭವಸುರ ಗಡಣ ಕೆ ನೀಡುತ್ತಾ ಒಡೆಯನೆನಿಸಿ ಭವ ಕಡಲ ದಾಟಿಸಿ ಚರರ ದಡಸೇರಿಸುವನೆಂದು ಸಡಗರದಿಂದಲಿ ಅಡಿಯುಗ ಸೇವಿಪೆ ಮೃಡಸ್ನುತ ಪದಕಮಲಾಯುಗನೆ ಈ ಪೊಡವಿಯೊಳಗೆ ಮಹಲೀಲಾ ಮಾಡುತ ನಿತ್ಯ ಒಡೆಯ ಪುಷ್ಕರಣಿಕೂಲನಿಲಯ ಜಗ ದ್ವಡೆಯ ಎನ್ನನು ಪೊರೆ ತಡವ್ಯಾಕೊ ಸಿರಿಲೋಲ ೨
ಸಿದ್ಧರಾಮಶೆಟ್ಟಿ ಶುದ್ಧಸ್ವರೂಪನೆ ಮುದ್ದುಮೋಹನ ಮುಖಕೆ ತಿದ್ದಿತೀಡಿದನಾಮ ಶುದ್ಧ ಭಕ್ತರನ್ನೆಲ್ಲ ಮುದ್ದುಗೊಳಿಸುವಂಥ ಮುದ್ದಾದ ಮುಖದಲ್ಲಿ ಎದ್ದು ಕಾಣುವ ನಗೆ ಪೊದ್ದುಕೊಂಡಿಹ ನಾನಾ ಆಭರಣದಿಂದಲಿ ಎದ್ದು ಬರುವ ನಿನ್ನ ಪ್ರದ್ಯೊತನಿಭ ಮೂರ್ತಿ ತಿದ್ದಿ ಎನ್ನಯಮನದಿ ನೀನೀಗವಾಸುದೇವ ಸದ್ಯೋ ಕೆಡಿಸೊ ದುರಿತರಾಶಿಯನ್ನು ಶುಧ್ಧಮಾಡೋ ನೀನೀಗ ವಾಸುದೇವ ಮದ್ರ‍ಹದಯಗತಬಿಂಬ ಸಿದ್ಧಗುರುಜಗನ್ನಾಥ ವಿಠಲರೇಯ ೩

೧೧೮
ತುತಿಸಲೆನ್ನೊಶವೆ ನಿನ್ನ ಶ್ರೀ ಗುರುರನ್ನ ಪ
ತುತಿಸಲೆನ್ನೊಶವೆ ನಿ -ನ್ನತುಳ ಮಹಿಮ ಮಹಾ
ಮತಿವಂತ ಜನರು ಸು – ಮತಿಗೆ ಸಿಲ್ಕದ ನಿನ್ನ ಅ.ಪ
ಸ್ಮರಿಪ ಜನರ ಸುರ ತರು ಪಾಪಕಾಂತಾರ
ನರ ಸಮ ಸಜ್ಜನ | ಶರಜನಿಚಯ ದಿನ
ಕರಪೋಲುವ ಪಾದ | ಸರಸಿಜ ಭಜಿಸುವ
ಪರಮ ಭಕ್ತರ ಕುಮುದ | ವರ ನಿಚಯಕೆ ಸುಧಾ –
ಕರನಂತೆ ಧರೆಯೊಳು ಧುರದಿ ಮೆರೆವೊ ನಿನ್ನ
ಪರಮ ಕರುಣಿಯು ಎಂದು ನಿನ್ನಯ ಪಾದ
ಮೊರೆಯ ಪೊಕ್ಕೇನೊ ನಾನಿಂದು ನೀನೆ ಎನ್ನ
ಮೊರೆಯ ಲಾಲಿಸು ಎಂದು ಬಿನ್ನೈಸಿದೆ
ಪರಮಕೃಪಾಕರ ಪೊರೆಯೊ ಅನಾಥ ಬಂಧೂ ೧
ದಯಕರ ನಿಜ – ಭಕ್ತಾ | ಮಯ ಹರ ಸುಖಸಾರಾ
ಶ್ರಯವಾಗಿ ಸಂತತ | ನಯದಿಂದ ನಿಜಜನ
ಭಯಕರ ಭವಹರ | ಜಯ ಜಯ ಜಯದಾತ
ಜಯ ವಿಜಯಾತ್ಮಜ | ಜಯಕುಲ ದಿಗ್ವಿಜಯ
ಜಯ ಕಾಲದಲಿ ನಿಜ | ಹಯಗ್ರೀವಮೂರ್ತಿಯ
ದಯದಿಳೆಯೊಳು ಜನಿಸೀ | ಜನ್ಮದಿ ಮೂರ್ತಿ
ತ್ರಯ ಪಾದವನೆ ಭಜಿಸಿ – ಧರಿಯೊಳು ಕ್ಷ –
ತ್ರಿಯ ಕುಲದೊಳು ಜನಿಸಿ ಯುಧಿ ಭೀಮ –
ಶಯನನಿಂದ ಹತನಾಗ್ಯಭüಯ ಸ್ಥಾನವನೆ ಬಯಸಿ ೨
ಭೂಸುರ ವರನಾಗಿ | ಕಾಶ್ಯಪಿ ಸ್ಥಳದಲ್ಲಿ
ವಾಸಮಾಡಿ ಶಿರಿ ವ್ಯಾಸ ಕೃಷ್ಣ ಪಾದೋ –
ಪಾಸನ ಮಾಡುತ | ವ್ಯಾಸಮುನಿ ಆಗಿ
ದೇಶದೇಶದಿ ಭಾರ | ತೀಶ ಪ್ರತೀಕವ
ವಾಸವಾಸರ ಸ್ಥಾ – ಪಿಸಿ ಯಂತ್ರೋದ್ಧಾರಾ
ಶ್ರೀಶ ಮಧ್ವಮುನಿಯಾ – ಸ್ಥಾಪಿಸಿ ಅಲ್ಲಿ
ವಾಸವ ಮಾಡಿ ತಾನೂ – ಪುರಂದರ
ದಾಸರಾಯರಿಗೆ ಇನ್ನು – ಸುಮಂತ್ರೋಪ –
ದೇಶಿಸಿ ಅನುದಿನ ವಾಸಮಾಡಿದಿ ನೀನು ೩
ಕ್ಷೋಣಿತಳದಿ ಕುಂಭ | ಕೋಣನಗರದಲ್ಲಿ
ಕ್ಷೋಣಿದೆವೋತ್ತುಮ | ವೀಣವೆಂಕಟನಾಮಾ –
ಕ್ಷೀಣಬಲ ಜ್ಞಾನ ತಾಣ | ಗೊಡದೆ ನಿನ್ನ
ಜಾಣತನದಿ ನರ | ಮಾಣವಕನಂತೆ
ಪಾಣಿ ಭಿಕ್ಷಾನ್ನವಾ | ಟಾಣಿ ಮಾಡುತ ನೀನು
ಕ್ಷೋಣಿಪ ಮನಿಗೆ ಬಾರೇ – ನಿನ್ನ ವೀ –
ಕ್ಷಣ ಗೈದು ತೋರೆ – ಶುಭ ಲ –
ಕ್ಷಣ ಬ್ಯಾರೆ ಬ್ಯಾರೇ ಇರಲು ನಿನ್ನ
ಕ್ಷಣ ಬಿಡದಲೆ ಜನ ಮಣಿದು ನಮಿಸುತಿರೆ ೪
ಜನಪ ನಿನ್ನಯ ಮಹ | ಘನ ಚರ್ಯವನೆ ನೋಡಿ
ದಿನದಿನದಲಿ ಬಹು | ವಿನಯಪೂರ್ವಕ ಪಾದ
ವನಜ ಸೇವಕನಾಗಿ |ತನು ಮನ ಧನ ಧಾನ್ಯ
ಘನ ನಿನಗರ್ಪಿಸಿ | ನಿನ ಸಂಗವಾಗಲೂ
ಜನುಮ ಇಲ್ಲೆಂಬುವ | ಘನ ಜ್ಞಾನ ಭಕುತಿಯ
ಮನದಲ್ಲಿ ಯೈದುತಲೆ – ತಾನು ನಿತ್ಯ
ಅನುಮಾನ ಮಾಡದಲೆ – ಇರಲು ಅವನ
ಘನಸುಖ ರೂಪದಲ್ಲೆ – ಇರುವಂತೆ
ಮನಪೂರ್ತಿ ಕರುಣಸಿದ್ಯನುಪಮ ಚರಿತಲ್ಲೆ ೫
ಸತ್ಯನಾಮಕ ಸುತ | ಮೃತ್ಯುನಿಂದಲಿ ತಾನು
ಸತ್ತುಪೋದ ವಾರ್ತೆ | ಬಿತ್ತರಿಸೆ ಲೋಕದಿ
ಉತ್ತುಮ ನೀನಾಗ | ಸತ್ಯ ಸಂಕಲ್ಪವ
ಗೊತ್ತು ತಿಳಿದು ಅವನ | ಮತ್ತೆ ಈ ಲೋಕಕ್ಕೆ
ತತ್ಕಾಲದಲಿ ತಂದು | ಉತ್ತುಮ ಭಾರ್ಯಳ
ಜತ್ತು ಮಾಡಿದ ವಾರ್ತೆಯಾ – ಕೇಳೀ ಶೈವ –
ರುತ್ತುಮನಾತ್ಮಜನಾ – ಇವಾನಂತೆ
ಸತ್ತನೆಂದು ಕರಿಯೇ – ಅದನು ನೀನು
ಸತ್ಯವೆಂದು ಪೇಳಿ ಮತ್ತೆ ಪೊರೆದ್ಯೊ ಜೀಯಾ ೬
ಇನತೆ ಮೊದಲಾದ | ಫನತರ ನಿನ ಮಹಿಮೆ
ಎನಗೆ ವಶವೆ ನಿತ್ಯ | ಅನಿಮಿಷ ಮುನಿಜನ
ಮನಕೆ ಸಿಲ್ಕದೆ ವೃಂದಾ – |ವನದಲಿ ನೀ ನಿಂತು
ವನುತೆ ಸುತ ಧನ | ಧಾನ್ಯ ಮೊದಲಾದ
ಅನುಪಮ ಇಷ್ಟಾರ್ಥ | ಅನುದಿನ ಸಲಿಸುತ್ತ
ಜನರ ಪಾಲಿಸೊಗೋಸುಗಾ – ಹರಿಯು ನಿನಗೆ
ಜನುಮಾವನಿತ್ತನೀಗ – ಅದಕೆ ನಿನ್ನ
ಜನರು ಭಜಿಸೊವೋರೀಗ – ಅದಕೆ ನಾನು
ಅನುದಿನ ತವಪಾದ ವನಜ ನಂಬಿದೆ ವೇಗ ೭
ರಕ್ಷಿಸೋ ನೀ ಎನ್ನ | ಲಕ್ಷ್ಮೀರಮಣ ದೂತ
ಮೋಕ್ಷಾದಿ ಪುರುಷಾರ್ಥ – | ಪೇಕ್ಷ ಪ್ರದಾಯಕ
ಲಕ್ಷ ಜನರೊಳೆನ್ನ | ವೀಕ್ಷಿಸಿ ಪರಜನಾ –
ಪೇಕ್ಷಾ ಮಾಡದಂತೆ | ಲಕ್ಷ್ಮೀಶ ನಾತ್ಮಜ
ಭಿಕ್ಷಾನ್ನ ಬೇಡೋದು | ಲಕ್ಷಣವೇನಿದು –
ಪೇಕ್ಷಾ ಮಾಡದೆ ನೀ ಎನ್ನಾ – ಕಾಯಲಿಬೇಕು
ವಿಕ್ಷೀಸಿ ಜ್ಞಾನವನ್ನಾ – ಭಕುತಿ ಇತ್ತು –
ರಕ್ಷಿಸು ಎಂದೆ ನಿನ್ನಾ ಇದೆ ಒಂದಾ
ಪೀಕ್ಷೆ ಪೂರ್ತಿಸೊ ಕಲ್ಪವೃಕ್ಷ ನೀ ಎನಗೆ ಇನ್ನ ೮
ಕಿಟಿಜ ಸರಿದ್ವರ | ತಟ ಕೃತ ಮಂದಿರ
ಚಟುಲ ಮಧ್ವಮುನಿ | ಪಟು ಶಾಸ್ತ್ರದಿಂದಲಿ
ಕುಟಿಲ ದುರ್ವಾದಿಗ | ಳ್ಥಟನೆ ಮುರಿದು ನಿಜ
ಚಟುಲ ಸಿದ್ಧಾಂತವ | ಭಟ ಜನರಿಗೆ ಸದಾ
ಘಟನೆ ಮಾಡಿ ಪ್ರತಿ | ಭಟರಿಲ್ಲದಲೆ ನೀನು
ಧಿಟನಾಗಿ ತ್ರಿಜಗದಿ – ಮೆರೆಯುತ
ಶಠಜನರನು ತ್ವರದಿ – ಮರಿದು ಜ್ಞಾನಿ
ಕಟಕ ಸುಪಾಲನದಿ ಪಟೋ ಎನಿಸಿ
ಧಿಟಗುರು ಜಗನ್ನಾಥ ವಿಠಲನ್ನ ಭಜಿಸಿದೆ ೯

೧೧೯
ತೊಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯತಿಕುಲ ತಿಲಕರ ಪ
ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ
ತೂಗಿರೆ ಗುರುರಾಘವೇಂದ್ರರ ಅ.ಪ
ಕುಂದಣಮಯವಾದ ಛಂದ ತೊಟ್ಟಿಲೊಳು
ನಂದದಿ ಮಲಿಗ್ಯಾರ ತೂಗಿರೆ
ನಂದನಂದನ ಗೋವಿಂದ ಮುಕುಂದನ
ನಂದದಿ ಭಜಿಪರ ತೂಗಿರೆ ೧
ಯೋಗನಿದ್ರೆಯನ್ನು ಬೇಗನೆಮಾಡುವ
ಯೋಗೀಶ ವಂದ್ಯರ ತೂಗಿರೆ
ಭೋಗಿಶಯನನಪಾದ ಯೋಗದಿ ಭಜಿಪರ
ಭಾಗವತರನ ತೂಗಿರೆ ೨
ನೇಮದಿ ತಮ್ಮನು ಕಾಮಿಪಜನರಿಗೆ
ಕಾಮಿತ ಕೊಡುವರ ತೂಗಿರೆ
ಪ್ರೇಮದಿ ನಿಜಜನರ ಆಮಯವನಕುಲ –
ಧೂಮಕೇತೆನಿಪರ ತೂಗಿರೆ ೩
ಅದ್ವೈತಮತದ ವಿಧ್ವಂಸನ ನಿಜ ಗುರು
ಮಧ್ವಮತೋದ್ಧರರ ತೂಗಿರೆ
ಶುದ್ಧ ಸಂಕಲ್ಪದಿ ಬದ್ಧ ನಿಜಭಕ್ತರ
ಉದ್ಧಾರಮಾಳ್ಪರ ತೂಗಿರೆ ೪
ಭಜಕಜನರ ಭವ ತ್ಯಜನೆ ಮಾಡಿಸಿ ಅವರ
ನಿಜಗತಿ ಇಪ್ಪರ ತೂಗಿರೆ
ನಿಜಗುರು ಜಗನ್ನಾಥವಿಠಲನ್ನ ಪದಕಂಜ
ಭಜನೆಯ ಮಾಳ್ಪರ ತೂಗಿರೆ ೫

೧೨೦
ದಯಮಾಡೋ ದಯಮಾಡೋ ಪ
ಭಯಕರ ಸುಮಹ -ದ್ಭಯಹರ ಯತಿವರ ಅ.ಪ
ಮೋಕ್ಷದ ಕರುಣ – ಕಟಾಕ್ಷದಿ ಎನ್ನನು
ವೀಕ್ಷಿಸಿ ನಿನ್ನ ನಿರೀಕ್ಷಿಸುವಂತೆ ೧
ಲಕ್ಷ್ಯಾಧೀಶರ ಲಕ್ಷಿಲ್ಲದೆ ಜ್ಞಾ –
ನಾಕ್ಷದಿ ತವಪದ ಲಕ್ಷಿಸುವಂತೆ ೨
ಸತ್ಯಾಭಿದ – ನಪ – ಮೃತ್ಯುಹರಿಸಿ ಮುದ
ವಿತ್ತು ಪಾಲಿಸಿದ – ಉತ್ತಮ ಎನಗೇ ೩
ಬಲ್ಲಿದತರ ಮಹ – ಪ್ರಲ್ಹಾದ ನಿನ್ನೊಳು
ನಿಲ್ಲಿಸು ಎನಮನ – ಎಲ್ಲಿ ಚಲಿಸದಂತೆ ೪
ದಾತಗುರು ಜಗನ್ನಾಥ ವಿಠಲನ
ದೂತಾಗ್ರಣಿ ಸು – ಖೇತರ ಕಳೆದು ೫

೧೨೨
ದಯಾನಿಧೆ ಶ್ರೀ ರಾಘವೇಂದ್ರ ಗುರುವೆ
ಕಾಮಿತ ಸುರತರುವೆ ಪ
ಧರಾತಳದಿ ಸುರತರೂವರೋಪಮ
ತ್ವರಾದಿ ಎನ್ನನು ಪೊರೇಯೊ ಗುರುವರ ೧
ಗಡಾನೆ ತವ ಪದ ಜಡಾಜ ಯುಗಲದಿ
ಧಢಾ ಮನವ ಕೊಡೊ ಒಡೇಯ ಗುರುವರ ೨
ಎಷ್ಟೊ ಪೇಳಲೆನ್ನ ಕಷ್ಟಾ ರಾಸಿಗಳನ್ನು
ಸುಟ್ಟುಬಿಡೊ ಸರ್ವೋತ್ರ‍ಕಷ್ಟಾ – ಮಹಿಮ ಗುರು ೩
ಮೋಕ್ಷಾದಾಯಕ ಎನ್ನ ವೀಕ್ಷೀಸಿ ಮನೋಗತಾ –
ಪೇಕ್ಷಾವ ಪೂರೈಸೊ ತ್ರ್ಯಕ್ಷಾದಿಸುರ ಪ್ರೀತ ೪
ದಾತಾನೆ ನೀ ಎನ್ನ ಮಾತೂ ಲಾಲಿಸೊ ನಿತ್ಯ
ನೀತಾ – ಗುರು ಜಗನ್ನಾಥ ವಿಠಲ ಪ್ರಿಯ ೫

೧೨೧
ದಯಾನಿಧೇ ಶ್ರೀ ರಾಘವೇಂದ್ರ ಗುರುವೇ
ಕಾಮಿತ ಸುರತರುವೇ ಪ
ದಯಾಕರನೆ ಭವ – ಭಯಾ ಹರಿಸಿ ತವ
ಜಯಾಕರ ಪಾದ – ಪಯೋಜ ಯುಗ ತೋರೋ ಅ.ಪ
ಧರಾತಳದಿ ಸುರ – ತರೂ ಸುರಭಿವರ
ತೆರಾದಿ ಕಾಮಿತ – ಕರಾದು ಮೆರೆಯೋ ೧
ಗಡಾನೆ ತವ ಪದ – ಜಡಾಜ ಭಜಿಸುವ
ಧೃಡಾವೆ ಕೊಡೊ ಎ – ನ್ನೊಡೇಯ ನೀನೇ ೨
ಎಷ್ಟೂ ಪೇಳಲಿ ಎನ್ನ – ಕಷ್ಟರಾಶಿಗಳ್ಯತಿ –
ಶ್ರೇಷ್ಠಾನೆ ಕಳಿಯೊ ಉ – ತ್ಕ್ರಷ್ಠಾ ಮಹಿಮ ಗುರೋ ೩
ಮೋಕ್ಷಾದ ಎನ್ನನು – ವೀಕ್ಷಿಸಿ ಈಗಲೆ
ಸುಕ್ಷೇಮ ನೀಡುತ್ತಾ – ಪೇಕ್ಷಾಪೂರ್ತಿಸೊ ಗುರೋ ೪
ದಾತಾನೆ ಎನ್ನಯ – ಮಾತಾನು ಲಾಲಿಸೊ
ನೀತಾ ಗುರು ಜಗ -ನ್ನಾಥಾ ವಿಠಲ ಪ್ರಿಯ ೫

೧೨೪
ದಾತ ಸನ್ಮುನಿಗಣ –
ನಾಥ ಕಾಮಿತ ಕಲ್ಪವೃಕ್ಷಾ – ಕಲ್ಪವೃಕ್ಷಾ ಆಶ್ರಿತಜನದಕ್ಷಾ ಪ
ಧಾತ ಮುಖ ಸುರಮುನಿಯ ಸಂತತಿ
ಪ್ರೀತಿ ಪೂರ್ವಕದಿಪ್ಪ ಕಾರಣ
ಜೋತಿ ವೃಂದಾವನದಿ ತಾ ನಿ –
ರ್ಭೀತ ಮಹಿಮೆಯ ತೋರ್ಪಜಗದಿ ಅ.ಪ
ಬಿಕ್ಷುನಾಯಕ ಸರ್ವಾಪೇಕ್ಷದಾಯಕನೆಂಬ ಬಿರಿದು
ನೆಂಬ ಬಿರಿದು ಪೊತ್ತಿಹ ಪಾಪ ತರಿದು
ಲಕ್ಷ್ಮೀರಮಣನ ಪಾದ ಪದುಮವ
ವಕ್ಷೋಮಂದಿರದೊಳಗೆ ತಾನಪ –
ರೋಕ್ಷಕರಿಸೀ ಸರ್ವಜನರಾ –
ಪೇಕ್ಷ ಪೂರ್ತಿಸಿ ಮೆರೆವ ಗುರುವರ ೧
ದಂಡಕಾಷಾಯ ಕ – ಮಂಡುಲಧರ ಹಂಸರೂಪಾ
ಹಂಸರೂಪ ಅಮಿತ ಪ್ರತಾಪ
ತೊಂಡ ಜಲಜೋತ್ಫುಲ್ಲ ಕರ ಮಾ –
ರ್ತಾಂಡ ಸನ್ನಿ ಭವನೆನಿಪ, ತ್ರಿಜಗ –
ನ್ಮಂಡಲಾನತನ, ಸುಜನ ಮನ್ಮನೋ –
ಪುಂಡರೀಕ ನಿವಾಸ ನಿರ್ಮಲ ೨
ಕಿಟಜ ಸರಿದ್ವರ – ತಟವಾಸ ಗುರುಜಗನ್ನಾಥ
ಜಗನ್ನಾಥ ವಿಠಲ ಗುಣಗಾಥ
ತಟನಿ ಲಹರೀ ಮಧ್ಯ ತನ ಹೃ
ತ್ಪುಟ ಸುನಾವಿಯ ಮಾಡಿ ಸಂತತ
ಅಟನಗೈಯುತ ಜಗದಿರಾಜಿಪ
ಚಟುಲ ವಿಕ್ರಮ ಕರುಣಸಾಗರ ೩

೧೨೩
ದಾತನೀತ ಯತಿನಾಥ ನಿಜಪದ
ದೂತಜನರ ಪೊರೆವಾ ಪ
ಧಾತನಾಂಡದೊಳತಿ ಖ್ಯಾತನಾಗಿ ಶಿರಿ
ನಾಥ ನೊಲಿಸಿ ಮೆರೆವಾ
ನೀತಮನದಿ ತನ ಮಾತು ಮೀರಿದಿಹ –
ಗೀತೆರದಿ ತಾನೆ ಒಲಿವಾ
ತಾತನೆ ಮನೋಗತ ಭೀತಿಯ ಬಿಡಿಸೆನೆ
ಪ್ರೀತಿ ಮನದಿ ತಾ ಬರುವಾ ಅ.ಪ
ರಾಮ ಕೃಷ್ಣ ನರಹರ್ಯಂಘ್ರಿಯ
ಪ್ರೇಮಮನದಿ ಭಜಿಪಾ
ನೇಮದಿ ತನ್ನನು ಕಾಮಿಪ ಜನರಿಗೆ
ಕಾಮಿತ ಫಲರೂಪಾ
ಈ ಮಹಾ ಮಹಿಮೆಯ ನೇಮದಿ ತೋರುವ
ಭೂವಿ ಸುರರ ಭೂಪಾ
ತಾಮಸ ಮತಿ ನಿರ್ಧೂಮ ಗೈಸುವ
ಧೂಮಕೇತುನೆನಿಪಾ ೧
ಮಂದ ಜನರಿಗೆ ಎಂದಿಗಲಭ್ಯನ –
ಮಂದ ಜನರ ಪ್ರೀಯಾ
ಪೊಂದಿದ ಜನರಾ ಕುಂದೆಣಿಸದೆ ತಾ
ನಂದ ಕೊಡವೊ ಮಹಾರಾಯಾ
ವಂದಿಪ ಜನರಘ – ವೃಂದವ ದರುಶನ –
ದಿಂದ ತರಿವೊ ಜೀಯಾ
ಸುಂದರತರ ವೃಂದಾವನ ನಿಜ
ಮಂದಿರ ಗತ ಧ್ಯೇಯಾ ೨
ದಾತಗುರು ಜಗನ್ನಾಥ ವಿಠಲನತಿ
ಪ್ರೀತಿಯಿಂದ ಭಜಿಪಾ
ದೂತ ಜನರು ಬಲು ಆತುರದಲಿ ಕರಿಯೆ
ಪ್ರೀತ ಮನದಿ ತಾ ಬಪ್ಪ
ಮಾತೆಯತೆರ ನಿಜ ದೂತರ ಮನಸಿನ
ಮಾತು ನಡೆಸುವ ನೀಭೂಪಾ
ಈತಗೆ ಸರಿಯತಿನಾಥ ಕಾಣೆನೊ
ಭೂತಳೇಶರಧಿಪಾ ೩

೧೨೫
ಧಣೀ ಧಣೀ ಧಣೀ ಧಣೀ
ಗುರುರಾಯ ನೀನೆ ಧಣೀ ಧಣೀ ಪ
ಮನದಿ ನಿನ್ನನೆ ನಿತ್ಯ ನೆನೆವರ ಪೊರೆವಂಥ ಅ.ಪ
ಆದಿಯುಗದಿ ಪ್ರಹ್ಲಾದರಾಯನೆನಿಸಿ
ಮಾಧವನುತ್ತಮನೆಂದು ಸಾಧಿಸಿದಂಥಾ ೧
ತ್ರೇತಾಯುಗದಿ ರಘುನಾಥನನುಜನೆನಿಸಿ
ಸೀತಾಪತಿಯ ಪಾದ ಈತೆರ ಭಜಿಸಿದಂಥ ೨
ದ್ವಾಪರ ಯುಗದಲ್ಲಿ ಭೂಪ ಬಾಹ್ಲೀಕÀನೆನಿಸಿ
ಶ್ರೀ ಪನಾಙ್ಞ ದಿಂದಲೀಪರಿ ಜನಿಸಿದಂಥ ೩
ಕಲಿಯುಗದಲ್ಲಿ ನೀ ಚಲುವ ವ್ಯಾಸನೆನಿಸಿ
ಇಳೆಯೊಳು ಗ್ರಂಥರಚಿಸಿ ಜಲಜನಾಭನೊಲಿಸಿದಂಥ ೪
ಎರಡನೆ ಜನುಮದಿ ಗುರುರಾಘವೇಂದ್ರನಾಗಿ !
ಗುರುಜಗನ್ನಾಥ ವಿಠಲ ಚರಣ ಕಮಲ ಭಜಿಸಿದಂಥ ೫