Categories
ರಚನೆಗಳು

ಗೋಪಾಲಾರ್ಯರು

ಆರು ಕೊಟ್ಟರು ಕೊಟ್ಟರಾರುಂಡರಾರಿಲ್ಲಿಬೇರೆ ನಾ ನೀ ನಾನೆಂದು ಕೆಡುವುದೀ ಲೋಕ ಪ
ಕಾಲ ಚ್ಟೇಸಿತು ಕರ್ಮವು ಕೊಟ್ಟಿತೀ ಕಿವಿಗಳಾಲಿಸಿತು ಕಂಡಿತಕ್ಷಿಗಳೆಂದಿತಂಘ್ರಿಲೀಲೆಯಲಿ ಕೈಪಿಡಿಯುತಾ ಘ್ರಾಣಿ ಘ್ರಾಣವೀ ಲೋಲ ಚಿತ್ತವನುಸಂಧಾನಗೆಯ್ತು ೧
ಪ್ರಾಣ ಒಳಕೊಂಡಿತನ್ನವನು ಸಂಕಲ್ಪಿಸಿತುದೀನ ಮನಮತಿಗೆ ನಿಶ್ಚಯವಾುತೂತಾನಿದರೊಳಾರು ಕೊಂಬವನೊ ಕೊಡುವನೊ ದುರಭಿಮಾನದಿಂ ಕೆಡುತಿಹರು ನೀನು ನಾನೆಂದು ೨
ಭಾನು ಜಲದಲಿ ಪೊಳೆಯಲದರ ಕಂಪಾದಿಗಳುಭಾನುವಿನದೆಂದು ಭ್ರಮಿತರು ಬಗೆವ ತೆರದಿಜ್ಞಾನಮಯ ನಾದಾತ್ಮ ಹಮ್ಮಿನೊಳ್ಪೊಳೆಯಲಜ್ಞಾನದಿಂದೀ ರಾಸಿ ನಾನೆನ್ನುತಿಹರೊ ೩
ಈಯನಿರ್ವಚನೀಯ ಜೀವತ್ವವೆಂದರಿದುಕಾಯದಲಿ ಕೂಟಸ್ಥ ಸತ್ಯವೆಂದೂಮಾಯದಿಂದ ತೋರಿ ತಾನೀ ವಿಶ್ವಪುಸಿ ಎಂದುಹೇಯ ಭೋಗದಲನಾಸಕ್ತನಾಗಿರದೆ ೪
ತಾನು ನಿರ್ಲೇಪನೆಂದರಿಯದೆ ಶರೀರಾಭಿಮಾನದಿಂ ಗೋಪಾಲ ಯತಿಯ ಚರಣವನೂಸಾನುರಾಗದಲಿ ಸೇವಿಸದೆ ಮಿಥ್ಯಾವಿಷಯದೀನತೆಯನೈದಿ ರಾಗಾದಿಗಳ ಬಿಡದೆ ೫

ಇಕೋ ದೇವನೆಂದಾಗಮಗಳು ಪೇಳೆನೀ ಕೋಟಿದೇವರನೇಕೆ ಭಜಿಸುವೆ ಪ
ಸಾಕೊ ಸಂಸೃತಿಯಾಟವಿಷ್ಟರ ಮೇಲೆನೂಕೊ ರಾಗ ದ್ವೇಷಗಳ ಚನ್ನಾಗಿಕಾಕೋದರನಂತೆ ಕಾಡದೆ ಜನರನುಬೇಕೋ ಸಾಧನಗಳ ನೀ ಸಾಧಿಸಲು ೧
ಏಕೋ ಮೂಢನಂದದಿ ಸುಮ್ಮನಿರುವೆ ವಿವೇಕೋಪಚಯವ ಮಾಡು ಮನದಲಿಲೋಕೋಪಕಾರವ ನಡಸು ನಿಷ್ಕಪಟದಿಈ ಕೋಪವ ಬಿಟ್ಟರಿದಿರಾರು ನಿನಗೆ ೨
ಫಣ ಕೋಪಮನನಾಗಿ ಪಗಲ ಕಾಣದೆ ನಿನ್ನನಾ ಕೋಪಮೆಗೆ ಪೆಚ್ಚಿದ ನಿಜ ಸುಖವಾತಾಕೋ ಶ್ರೀ ಪಾದವನು ಗೋಪಾಲಾರ್ಯನಕೋ ಕೋ ಎಂದು ಕೊಡುವನು ಮುಕುತಿಯನು ೩

ಎಲ್ಲಿ ನಿತ್ಯಾನಂದವೆಲ್ಲಿದುದಜ್ಞಾನವೆಲ್ಲಿ ಬಂತೀ ಕಾಮವು ಗುರುವೆಎಲ್ಲಿದ್ದುದೀ ಕರ್ಮವೀಗ ನಮಗೀ ಮಾಯೆ ಯಾವ ಜನ್ಮದ ವೈರಿಯೊ ಸ್ವಾಮಿ ಪ
ಯಾಕೆ ಮಾಡಿದೆಯೊ ಪುಣ್ಯಾಪುಣ್ಯ ಮಿಶ್ರಗಳಯಾಕೆ ಬಂತೀ ದೇಹವು ತಂದೆಯಾಕೆ ವರ್ಣಾಶ್ರಮಂಗಳನೈದಿದೆವು ನಾವಿದಕೆ ಸುಖ ದುಃಖಂಗಳೂ ಸ್ವಾಮಿಯಾಕೆ ಬಂದರು ನಮಗೆ ಸತಿ ಸುತರು ನಾವಿವರೊಳೇಕೆ ಮರುಳಾದೆವಿಂತು ಗುರುವೆಪ್ರಾಕು ಜನ್ಮದ ವಾಸನೆಗಳೆಂಬ ಪಗೆಗಳಿಲ್ಯಾಕೆ ನೂಕಿದರೆಮ್ಮನೂ ಸ್ವಾಮಿ ೧
ಎಂತು ಬಂತೀ ರಕ್ತ ಮಾಂಸಾಸ್ತಿ ಚರ್ಮಗಳಿವೆಂತು ವಿಣ್ಮೂತ್ರಂಗಳೂ ದೇವಾಎಂತು ರಾಗದ್ವೇಷ ಮದಮತ್ಸರಂಗಳಲ್ಲೆಂತು ನರಕ ಸ್ವರ್ಗವೂ ಪರಮಾಎಂತು ಬಂತೀ ಭೋಗ ರೋಗ ವಾಸನೆಗಳಿಲ್ಲೆಂತು ವ್ಯಾಮೋಹಂಗಳು ಗುರುವೆಎಂತು ಚಿಂತೆಗಳಿದರೊಳಭಿಮಾನ ಕಷ್ಟಂಗಳೆಂತೆಂದು ನಾವರಿಯೆವೂ ಸ್ವಾಮಿ ೨
ಎಂತು ರಾಗ ದ್ವೇಷ ಪೋಗಿ ಸಾಧನೆಗಳೆಮಗೆಂತಹುದು ಚಿತ್ತ ಶುದ್ಧಿ ಪರಮಾಎಂತು ವೇದಾಂತ ತಿಳವದು ಬೊಮ್ಮ ಸುಜ್ಞಾನವೆಂತಹುದು ಸತ್ರಬುದ್ಧಿಸ್ವಾಮಿಎಂತು ನಾವಾತ್ಮರಾಗುವೆವು ನಿತ್ಯಾನಂದವೆಂತಹುದು ನಿತ್ಯ ತೃಪ್ತೀ ಗುರುವೆಅಂತು ಕರುಣಿಸಿ ಸಕಲಚಿಂತೆಗಳ ಪರಿಹರಿಸನಂತ ಗೋಪಾಲಾರ್ಯನೆ ಸ್ವಾಮಿ೩

ಏಕೆ ಮರೆದಿದ್ದೆನಯ್ಯಾ ಎನ್ನೊಳು ನಾ ಗೋಪಾಲಶ್ರೀಕಾಂತ ನಿನ್ನ ಪಾದದ ಚಿಂತೆಯ ಬಿಟ್ಟಜ್ಞನಾಗಿ ಪ
ಕಾಯವೆ ಸತ್ಯವಿದೆಂದು ಕಾಣದೆ ನಾನಿಲ್ಲಿ ಬಂದುಮಾಯೆಗೊಳಗಾಗಿ ನಿಂದು ಮತ್ತರ ಸಂಗದಿನೊಂದುಜಾಯೆ ಸುತರ್ಗತಿಯೆಂದು ಧ್ಯಾನಿಸಿ ದುಃಖದಿನೊಂದುಬಾಯ ಬಡುಕರೊಳ್ನಿಂದು ಬನ್ನಬಟ್ಟುಳಿಸೆಂದು ೧
ಆಶೆಗಳಿಗೊಳಗಾಗಿ ಆನಂದಮಾರ್ಗವ ನೀಗಿವಾಸನೆಗಳಿಂದ ಪೋಗಿ ವಾದಿಸುತಲಿ ಚೆನ್ನಾಗಿಮೋಸಹೋಗಿ ಮುಖಬಾಗಿ ಘಾಸಿಯಾಗಿ ಗುಣಪೋಗಿಕಾಸು ವೀಸಾ ಧಾನ್ಯಕಾಗಿ ದಾಸನಾಗಿ ಪರರಿಗೆ ೨
ಎಲ್ಲರೊಳುವಾದಗಳವಾಡಿ ಬಲ್ಲವನಂದದಿ ಕಾಡಿಖುಲ್ಲರಾ ಮಾರ್ಗವ ಕೂಡಿ ಕೂಳಿಲ್ಲದಿಲ್ಲಿಗೆ ಬಾಡಿತಲ್ಲಣದೊಳಗೋಲಾಡಿ ತಬ್ಬಿಬ್ಬೊ ಕರ್ಮವ ಮಾಡಿಕಲ್ಲೆದೆಯನನೆನ್ನನು ಕಾಯಬೇಕು ಗೋಪಾಲಾರ್ಯ ೩

ವೃತ್ತ||ಏಳಾ ಯತೀಂದ್ರ ಯೋಗಶಯನ ಸ್ಥಿತಿುಂ ಭಜಕಾಳಿಯಮ್ಮಹಾಶೀಲದಿ ಪಾಲಿಸಲ್ ಪರಿಕರಾರುಣ ತೋರಿದನಿಲ್ಲಿ ಚಿತ್ತದೊಳ್‍ಮೇಳದಿ ಬೋಧ ಭಾನು ಬರುತೈದನೆ ನಾದ ವಿನೋದವೆಂಬ ಈಕೋಳಿಯು ಕೂಗುತೈತವರನೀಕ್ಷಿಸೆ ಸತ್ಕರುಣಾ ಕಟಾಕ್ಷದಿಂಏಳಯ್ಯ ಗುರುವರ್ಯ ಏಳಯ್ಯ ಗುರುವರ್ಯ ಯತಿಜನಾಲಂಕಾರ ಪ
ಏಳು ಭಕ್ತಾಧಾರ ಯಮನಿಯಮ ಸಂಚಾರಏಳು ವಿದ್ವದ್ವರ್ಯ ಪರಮಹಂಸಾಚಾರ್ಯ ಏಳು ಗೋಪಾಲ ಯತಿವರ್ಯಾ ಸ್ವಾಮಿ ಅ.ಪ
ಆಧಾರ ಮಣಿಪೂರ ಹೃದಯ ಕಮಲಗಳಲ್ಲಿನಾದ ಬಿಂದು ಕಲೆಗಳೆಂಬರುಣನುದುಸಿದಬೋಧೆಯೆಂಬರ್ಕನಾವಿರ್ಭವಿಸಿದನು ಸಹಸ್ರಾರ ಕಮಲದ ತುದಿಯಲಿವೇದವೇದ್ಯಾನಂತಮಹಿಮ ಚಿನ್ಮಯರೂಪನಾದಸೌಖ್ಯಾಕಾರ ಕಲಿ ಕಲ್ಮಷವಿದೂರಆದಿಮಧ್ಯಾಂತರಹಿತಾನಂದ ನಿತ್ಯನಿಜಬೋಧನೊಲಿದುಪ್ಪವಡಿಸಾ ಸ್ವಾಮೀ೧
ನಿತ್ಯವೆ ನಿಮ್ಮ ಪದವೆಂದಜಾಂಡವನಿದನನಿತ್ಯವೆಂದಖಿಳ ವಿಷಯಗಳಲಿ ವಿರತರಾಗಿಅತ್ಯಂತ ಶಮ ದಮಾದಿಗಳೆಂಬ ಸಾಧನದಿ ಮುಕ್ತಿ ಸುಖವನು ಬಯಸುತಾಪ್ರತ್ಯಕ್ಷರ ಬ್ರಹ್ಮರೈಕ್ಯವರಿಯದೆ ವಿದುಗಳತ್ಯಂತ ತ್ವರೆುಂದ ನಿಮ್ಮ ಮುಖಕಮಲದಿಂತತ್ವಮಸಿ ವಾಕ್ಯದರ್ಥವ ತಿಳಿಯಬೇಕೆಂದು ನೃತ್ಯವನು ಮಾಡುತಿಹರೂ ಸ್ವಾಮಿ ೨
ದೇಹೇಂದ್ರಿಯಾಂತರಂಗವನೇತಿಗಳಿದು ಸಂದೇಹದಲಿ ಕೂಟಸ್ಥ ನೀನೆಂಬುದರಿಯದೆಮಹಾ ವಿಚಾರಿಸಿ ಭಕ್ತ ಸುಲಭನೆ ದಾಟಿಸೈ ಮೋಹಸಾಗರವನೆನುತಾಪಾಹಿ ನೊಂದೆವು ಸಂಸ್ರ‍ಕತಿಯ ಬಂಧದಲಿ ನಮ್ಮಬೇಹುದೈಪಾಲಿಸಲು ಯೋಗನಿದ್ರೆಯ ಬಿಟ್ಟುದಾಹರಿಸು ವೇದಾಂತಗೋಪ್ಯವನೆನುತ ನತಸಮೂಹ ಕಾದಿದೆ ಕೃಪಾಳು ಸ್ವಾಮಿ ೩
ಕೇಳಿ ಭಕುತರ ದೈನ್ಯ ಸಲ್ಲಾಪಗಳನಿಂತುಲೀಲಾವತಾರ ಗುರುರಾಯನೊಲಿದೆದ್ದವರಲಾಲಿಸುತ ಧನ್ಯರಾದಿರಿ ಸನ್ಮತಿಯೊಳಿಂತು ಮೇಳಾಪವಾುತೆನುತಾಬಾಲರಿರ ನಿಮ್ಮನಂತಃಕರಣದ ಧ್ಯಾನಜಾಲಸುತ್ತಿರಲಾಗಿ ನಿಮ್ಮ ನಿಜವನು ಮರೆದುಕಾಲಕರ್ಮಾಧೀನವಾಗಿ ನೊಂದಿರಸತ್ಯವೀ ಲೋಕವೆಂದರಿಯದೆ ಎನಲು ಗುರುವೇ ೪
ಜೀವೇಶ್ವರರ ವಾಚ್ಯ ಲಕ್ಷ್ಯಾರ್ಥವನು ನಿಚ್ಚ ಭಾವಿಸುತ ಬ್ರಹ್ಮ ಕೂಟಸ್ಥರೆಂದವರಿಗೆ ಸ್ವಭಾವದಿಂ ಭೇದವಿಲ್ಲೌಪಾಧಿಕವಿದೆಂದು ಸಾವಧಾನದಲಿ ತಿಳಿದೂನಾವೆ ಪರಿಪೂರ್ಣಾತ್ಮರೆಂದು ಬೋಧಾಮೃತವಸೇವಿಸಿದಡನುದಿನಂ ಕೃತಕೃತ್ಯರಹಿರೆನಲ್‍ದೇವ ಕೃತಕೃತ್ಯರಾದೆವು ನಮೋ ಎನುತ ಸ್ವಭಾವ ಪದದಲಿನಿಂದರೂ ಸ್ವಾಮೀ ೫

ಕಾಣೆವಾವಿದನು ಕಾಣೆವಾವಿದನಾವ ಶಾಸ್ತ್ರದಲಿ ವಿದುಗಳ ಪ್ರಮಾಣ ವಚನದಲಿ ಮೂರನೆಯ ಪಥದಾ ಪ ಜಾಣಿಲಾತ್ಮನ ಸಮಾಧಿಯಲನುಭವಿಸಿ ಸುಖವಕಾಣದೆ ಬರಿದೆ ಮುಕುತರಾವೆಂಬ ಪರಿಯಾ ಅ.ಪ
ತಾನೆ ಚೇತನವಂತೆ ತನಗೆ ಕರ್ಮಗಳಂತೆತಾನೆ ಸುಖಮಯನಂತೆ ತಾಪವನಂತೆತಾನೆ ಬೋಮವದಂತೆ ಹಾನಿವೃದ್ಧಿಗಳಂತೆತಾನೆ ನಿರ್ಲೇಪಸ್ತುತಿನಿಂದೆ ತನಗಂತೊ ೧
ಬೋಧೆಯು ತಾನಂತೆ ಸಾಧನವು ಬೇಕಂತೆಭೇದವಿಲ್ಲವದಂತೆ ಭೀತಿ ತನಗಂತೆನಾದ ಬಿಂದುಗಳನರಿದಿಪ್ಪಗತಿಯಂತೆಪಾದಾಭಿಮಾನ ಚಿಂತೆಯು ಪೋಗದಂತೆ ೨
ಕಾಯ ಕರುಣಾಭಿಮಾನಗಳಿಲ್ಲ ತನಗಂತೆಮಾಯೆ ಬಾಧಿಪುದಂತೆ ಮನಸಿನೊಳಗೆಈಯಹಂಕಾರವಿಲ್ಲದ ಬೊಮ್ಮಪದವಂತೆಹೇಯವಿದುಪಾದೇಯವೆನಿಪ ಭ್ರಮೆಯಂತೆ ೩
ಈಶ ತಾನಂತೆ ತನ್ನಾಶೆಗಳು ಬಿಡವಂತೆಕೋಶ ಸಾಕ್ಷಿಕನಂತೆ ಕೋಪ ತನಗಂತೆಪಾಶವಿಲ್ಲವದಂತೆ ಪಾಡುಪಂಥಗಳಂತೆಈ ಸಕಲ ತಾನಂತೆ ಇನ್ನು ವಿಧಿಯಂತೆ ೪
ಚೇತನವೆ ತಾನಂತೆ ಚಿತ್ತನಿಲ್ಲದುದಂತೆಪಾತಕಗಳಿಲ್ಲವಂತೆ ಪರಪೀಡೆಯಂತೆಜಾತಿಸೂತಕವೆಂಬ ಜಂಜಡಗಳಿಲ್ಲವಂತೆಮಾತಿನ ರಿಪು ಮತ್ಸರಗಳು ಬಿಡವಂತೆ ೫
ವಿಶ್ವಾತ್ಮತಾನೆಂಬ ವಿಶ್ವಾಸವುಂಟಂತೆವಿಶ್ವತ್ರೈಜಸರ ನಿಜವರಿಯನಂತೆನಶ್ವರದ ಭೋಗಂಗಳೆಂಬ ನಂಬಿಗೆಯಂತೆವಿಶ್ವಾದಿಗಳ ರೀತಿಯಲ್ಲಿ ಪಗೆಯಂತೆ ೬
ಅಂಡಪಿಂಡಗಳೈಕ್ಯವೆಂಬ ಬುದ್ಧಿಗಳಂತೆಚಂಡಾಲನಿವನೀತ ಮೇಲೆಂಬುದಂತೆಪಂಡಿತನು ಪ್ರವುಢ ತಾನೆಂಬ ಭಾಷೆಗಳಂತೆಕುಂಡಲಿಯ ಹೆಳವ ಕೇಳ್ದಡೆ ಕುದಿವನಂತೆ೭
ಚಿನ್ಮಯಾತ್ಮಕನು ತಾನೆಂಬ ಚಿಂತೆಗಳಂತೆತನ್ನವರು ತಾನೆಂಬ ಭ್ರಮೆಪೊಗದಂತೆಸನ್ಮುದ್ರೆಯಂತೆ ಸತ್ಯಾಸತ್ಯವೆರಡಂತೆತನ್ಮಯತೆಯಂತೆ ಲಕ್ಷಣೆಯರಿಯನಂತೆ ೮
ಗುರುಭಕುತಿಯಂತೆ ವರಕರುಣವಿಲ್ಲವದಂತೆಗುರುಶರಣನಂತವರನುಗೇಳನಂತೆಪರಮಪದ ತಾನಂತೆ ಪಿರಿದು ಸಂಶಯವಂತೆವರ ಮುಕ್ತಿಯಂತೆ ವಾಸನೆಯು ಬಿಡದಂತೆ ೯
ಈ ಪರಿಯ ಸಂಭಾವನೆಗಳ ಪರಿಹರಿಸಿ ಶ್ರೀಗೋಪಾಲಾರ್ಯ ಜನರಿಗೆ ದಯದಲಿತಾಪಂಗಳನು ಸವರಿ ದಾಟಿಸಯ್ಯಾ ಚಿತ್ಪ್ರತಾಪದಿಂ ನಿಜಪಾದ ಬೋಧೆಯನು ಕೊಟ್ಟು೧೦

ತಾನೆ ಬಂದ ಎನ್ನ ಮನಕೆ ಗೋಪಾಲಾರ್ಯಏನು ಸೇವೆ ಮಾಡಲಾತಗೆಪಬರುತಲೊಂದು ಮುಕುತಿಮಾರ್ಗವ ಶಾಸ್ತ್ರೀಯವಾದಪರಿ ಪರಿ ಸಾಧನವರ್ಗವಾ ಅರಿಷಡ್ವರ್ಗವೆಂಬ ದುರ್ಗವಾ ತನ್ನಯ ದಿವ್ಯಕರುಣಾರಸವೆಂಬ ಸ್ವರ್ಗವಾ ಕರೆದಿತ್ತಾ ಪರಿವುತ್ತಾ ಪರವುತ್ತಾ ಅರಿಸುತ್ತಾ ೧
ಕಾಳಗತ್ತಲೆಯ ಯೂಥವಾ ಮನದೊಳಿದ್ದಕೀಳು ಬುದ್ಧಿಯಪರಾಧವಾಮೂಳ ವಾಸನೆಯ ಮುಖವಾ ವೇದಾಂತ ಸಂಮೇಳದಿಂದ ಬಹ ಸುಖವಾಪೇಳುತ್ತಾ ಸೀಳುತ್ತಾ ತಾಳುತ್ತಾ ಕೀಳುತ್ತಾ ೨
ಸಾರ ಸತ್ಸಂಗದ ದಾರಿಯಾ ಮುಂದುಗಾಣಿಸದಕ್ರೂರ ಕರ್ಮಂಗಳ ಪರಿಯಾ ಘೋರ ಮಾಯೆಯೆಂಬ ತೊರೆಯಾ ಗೋಪಾಲಾರ್ಯಸಾರಾನಂದವೆಂಬ ಪುರಿಯಾತೋರಿಸುತಾ ಹೀರಿಸುತಾ ಹಾರಿಸುತಾ ಸೇರಿಸುತಾ ೩

ನಗಬಹುದು ನೀ ಮುಗುಳು ನಗೆಯಾ ಗುರುರಾಯಮಿಗೆ ಕಂಡು ದೇಹಾಭಿಮಾನಿಗಳ ಬಗೆಯಾ ಪ
ತನ್ನ ತಾನರಿಯಲೀಸದ ಮಾಯೆಗೊಳಗಾಗಿಅನ್ಯರೇತೋಜಾತಮಾದ ದೇಹವ ನೋಡಿತನ್ನಿಂದ ತಾ ಕಾಣಪಡುತಿಹುದಿದಲ್ಲವೆಂದೆನ್ನಲಾರದೆ ದೋಷದಿಂದಾಉನ್ನತದ ಮಾಂಸ ರಕ್ತಾಸ್ತಿಮಲ ಮೂತ್ರಂಗಳಿನ್ನೆನೆದುನಾರುವ ನವದ್ವಾರ ಮಾರ್ಗದಿಂತನ್ನ ಮರಸುವದೇಹವೆತನ್ನದೆಂದು ಮರೆದುಣ್ಣುರಿವಾತಗಳ ಕಂಡೂ ಮಾಯೆ ಭಾಪೆನ್ನುತ್ತ ಬೆರಳೊಲದು ಕೊಂಡು ಬಗೆಗಂಡೂ ೧
ಬಿಟ್ಟ ಮನೆ ಜನ ಧನಂಗಳಲಿ ಮತ್ತೂ ಮನವನಿಟ್ಟು ವಾಂತ್ಯಾಶನವನುಂಬ ನಾಯಂದದಲಿಪಟ್ಟಣಂಗಳಲಿ ತಿರುಗುತ ಪರರ ಬಾಧಿಸುತಕೆಟ್ಟ ಬುದ್ಧಿುಂದ ಧೃತಿಗುಂದಿಕೊಟ್ಟಪುದು ಕರ್ಮವೆಂಬುದ ಮರೆತು ಗೇಣುದ್ದಹೊಟ್ಟೆ ಬಟ್ಟೆಗೆ ದೈನ್ಯ ಬಟ್ಟು ಮೂಢತೆುಂದಕೆಟ್ಟೆನಿನ್ನಾರು ರಕ್ಷಿಪರೆಂದು ಚಿಂತಿಸುವಹೊಟ್ಟೆಹೊರಕರನು ನೋಡುತ್ತಾ ಕಟಕಟಾಕೆಟ್ಟರಿವರೆಂದು ಹಾಸ್ಯವನು ಮಾಡುತ್ತಾ ೨
ತಾನಾತ್ಮನೆಂಬುದನು ಕೇಳಿದ್ದುದೃಷ್ಟಾನುಮಾನಂಗಳಿಂ ನಂಬಿಗೆಯೆುಲ್ಲದದರಲ್ಲಿಮಾನಾವಮಾನಂಗಳಿಂ ಹರುಷ ಶೋಕಾದಿಹೀನಬುದ್ಧಿಗಳ ಮಾಡುತ್ತಾಜ್ಞಾನಮಾರ್ಗದಲಿ ವಿಶ್ವಾಸವಿಲ್ಲದೆ ತನ್ನ ಕಾಣಲಾರದೆ ಭೇದ ಬುದ್ಧಿುಂ ವ್ರತತೀರ್ಥಸ್ನಾನಾದಿುಂದ ಮುಕುತಿಯ ಪಡೆಯಬೇಕೆಂಬಮಾನವರ ಭ್ರಾಂತಿಯನು ತಿಳಿದೂ ಇವರ್ಗಳಿಗೆಸ್ವಾನುಭವವಿಲ್ಲೆಂದು ಸಮತೆಯಲಿ ನಿಂದೂ ೩
ರಾಗವನು ಬಿಡಲಾರದಾಶಾಪಿಶಾಚಕೊಳಗಾಗಿ ಸತ್ಸಂಗ ಸತ್ಕಥೆಯ ಕೇಳಿಕೆಗಳನುನೀಗಿ ಧನಿಕರೊಳಿಚ್ಚಿತವನಾಡಿ ಸದ್ಧರ್ಮತ್ಯಾಗಿಯಾಗ್ಯನೃತಕ್ಕೆ ಪೊಕ್ಕೂಹೀಗೆ ತಿರುಗುತ ಪರಾನ್ನಾದಿ ಭೋಗಕ್ಕಾಗಿಕಾಗೆಯಂದದಲಲ್ಲಿಗಲ್ಲಿಗೆ ಸದ್ಗತಿುೀವಯೋಗ ಮಾರ್ಗವ ಬಿಟ್ಟುಭ್ರಾಂತರಾದಿರಿ ಮಹದ್ರೋಗಿಗಳ ಕಂಡು ಬೆಸಗೊಂಡು ಇವರ್ಗೆ ಭವರೋಗ ಬಿಡದೆಂದು ನಿಜಪದದಲ್ಲಿ ನಿಂದೂ ೪
ಇಂತರಿವ ಜನರಲ್ಲಿ ನಿಂತು ಸನ್ಮತಿುತ್ತುಚಿಂತೆಗಳ ಬಿಡಿಸುತ್ತಲಂತರಾತ್ಮಕನಾಗಿಸಂತಗೋಪಾಲಾರ್ಯ ಗುರುವರ್ಯನಾಗಿ ವೇದಾಂತದರ್ಥವನು ಬೋಧಿಸುತಾಅಂತವಿಲ್ಲದ ನಿಜವ ತೋರಿ ಪಾಲಿಸಿ ಮುದವಂತಾಳ್ದು ಸಕಲ ಸಂಶಯಗಳನು ಪರಿಹರಿಸಿಶಾಂತರಾದಿರಿ ಮೋಹಹೋುತ್ತು ನಿತ್ಯ ಸ್ವಾತಂತ್ರ್ಯವಾುತು ಗೆದ್ದಿರೆನುತಾಸಂತತಾನಂದಕನುಗೈದು ಕೈ ಹೊುದೂ ೫

ಬದುಕಿದೆನು ಬದುಕಿದೆನು ಭವ ಎನಗೆ ಹರಿುತುಸದಯ ಗೋಪಾಲಾರ್ಯನ ಪದ ಕರುಣವಾಯ್ತೆನಗೆ ಪಮೊದಲು ಬಹು ಜನ್ಮಂಗಳಲ್ಲಿ ಮಾಡಿದ ಪುಣ್ಯಒದಗಿತೀ ಸಮಯದಲಿ ಧನ್ಯನಾದೆಸದಸದ್ವಿವೇಕ ಸಂಪತ್ತಿ ಮುಂತಾದ ಸತ್ವದ ಸಾಧನಂಗಳೊದಗಿದವೀಗಲೆನಗೆ ೧
ದೇವ ಋ ಪಿತೃ ಋಣಂಗಳು ತಿದ್ದಿದವು ಶುದ್ಧಭಾವನಾದೆನು ಕುಲ ಪವಿತ್ರವಾುತೆನ್ನಾಪಾವನತೆಯಾಗಿ ಜನನೀ ಜನಕರಿಗೆ ದೇವದೇವ ಪದವಾುತು ಕೃತಕತ್ಯ ನಾನಾದೆ ೨
ಸಕಲ ಸಂದೇಹಗಳಳಿದು ದೇಹಾತ್ಮ ಮತಿವಿಕಲವಾದುದು ನಿತ್ಯ ತೃಪ್ತಿಯಾುತುಪ್ರಕಟ ಗೋಪಾಲಾರ್ಯ ಪದವ ಸಾಕ್ಷಾತ್ಕರಿಸಿಸುಕರ ಸತ್ಯಾನಂದ ರೂಪ ನಾನಾದೆ ೩

ಭಜಿಸು ಭಜಿಸು ಮನುಜ ಸದಯ ಹೃದಯ ಗೋಪಾಲಾರ್ಯವರ್ಯನನಿಜದಿ ನಿಜದಿ ಕರಣವಿಜಯನ ಜನ ಸುಜನ ವಂದ್ಯನ ಪ
ಕಾಮ ತಾಮಸಗಳಲಿ ಬಳಲುತ್ತ ಸೀಮೆ ಸೀಮೆಗಳನುಸುತ್ತುವೀಮನೋರಥಗಳಲೇನು ಗುರುವಿನನೇಮ ಕೀರ್ತನೆಯನಿರಾಮಯಾಮಲಾರ್ಥ ನಿಷ್ಕಾಮ ರಾಮಣೀಯಕವನು ಪ್ರೇಮದಿಂದ ಪೊಗಳುತ ೧
ಯೋಗ ರಾಗದಿಂದ ಮನವ ನಾಗಲಾಗಲಧಿಕ ಭಕ್ತಿಯೋಗ ವೇಗ ಜನಿತ ಸದನುರಾಗದಿಂದ ನಿಲ್ಲಿಸಿರಾಗ ರೋಗವೆಂಬ ತಮವ ನೀಗಿ ಸದ್ವಿರಾಗದಿಂದ ಆಗಮಾಗಮಾಂತ ವಚನದಾಗು ಪೋಗನರಿತು ನೀ ೨
ಕಾಲ ಕಾಲದಲ್ಲಿ ಬಾಲಲೀಲೆುಂದ ನಡೆದು ನುಡಿದುಶೀಲ ಲೋಲನಾಗಿ ಲೋಕ ಜಾಲ ಮೂಲವಾಮೇಲೆ ಮೇಲೆ ತಿಳಿದು ಬೆಳೆದು ನಲಿದು ಭಕ್ತಪಾಲ ಗೋಪಾಲಯತಿ ಕೃಪಾಲ ಸದ್ವಿಶಾಲಸುಖವ ತಳೆದು ನೀ ೩

ಭ್ರಮೆುಂದಲಿದೆ ಲೋಕವೆಲ್ಲ ನಿನ್ನಭ್ರಮೆ ತೀರಲು ಲೋಕವೆಳ್ಳನಿತಿಲ್ಲ ಪ
ನೀ ನಿನ್ನ ತಿಳಿದರೆ ಸಾಕು ುೀಸೂನೀಯ ಭೋಗಂಗಳಿನ್ನೇನು ಬೇಕುನೀ ನಿನ್ನ ಮರೆವುದೆ ಕಾಕು ನೀಮೀನ ಮೇಷಂಗಳನೆಣಿಸದೆ ನೂಕು ೧
ಸಾಕು ಮಂದನಾಗಬೇಡ ನಿನಗೆಬೇಕಾದ ಸುಖವಿದೆ ನಿನ್ನೊಳು ನೋಡಶೋಕ ಮೋಹಗಳನೀಡಾಡ ನಿನ್ನನೀ ಕಂಡು ನಿಜ ಸುಧೆಯೊಳಗೋಲಾಡ೨
ನಿನ್ನೊಳು ನಿಜ ಸುಖವುಂಟು ನೀನನ್ಯವನಳಿದು ನೋಡಲು ಕೈಗಂಟು ಭಿನ್ನ ಬುದ್ಧಿಯನೆಲ್ಲದಾಂಟುಸನ್ನುತಾನಂದಾಮೃತವನೊಲಿದೀಂಟು ೩
ಗುರುವಿನ ಕೃಪೆುಲ್ಲದಿಲ್ಲಾ ಮುಕ್ತಿಕರೆದರೆ ಬರುವರೆ ಕಾಮಿನಿಯಲ್ಲಪರಮ ಧೈರ್ಯವ ಮಾಡುವನಲ್ಲ ನಿನ್ನಮರೆಯದೆ ನೋಡು ನಾನೆಂದಿದನೆಲ್ಲಾ ೪
ಈ ಪಾಳು ಕರ್ಮದಲೇನು ಈಗನಾ ಪೇಳಿದೆ ಕಂಡುದ ಮಾಡು ಮಾಣುಕೋಪವ ಬಿಡು ಸುಖಿ ನೀನು ಸದ್ಯಗೋಪಾಲಾರ್ಯರ ಕಂಡೆ ಇನ್ನೇನೂ ೫

ಶ್ಲೋ|| ಮಣಿ ಮಂತ್ರೌಷಧವೆಂಬ ಭ್ರಾಂತಿಯಲಿ ಮಾಯಾ ಮೋಹದೊಳ್ ಸಿಕ್ಕಿ ತಾಮಣಿಮಾದ್ಯಷ್ಟ ವಿಭೂತಿಯೆಂಬಯ ಸುಞೆÁನಾಂಧರಾಗೆಲ್ಲಿಯುಂಎಣೆಯಾರಿಲ್ಲೆಮಗೆಂದು ಮೋಹಿಸುವ ಈ ಮೂಢಾತ್ಮರಂ ಬೇಗದಿಂಗುಣಮೂರೊಂದಕೊದು ಪಾಲಿಸುಗೆ ಗೋಪಾಲ ಸಚ್ಚಿದಾನಂದಮಂಮತಿಹೀನನಾಗದಿರೊ ಓ ಜೀವಾಮತಿಹೀನನಾಗದಿರೊ ಪ
ಸುತರ ತನುಧನಗಳ ಹಿತವೆಂದು ನಂಬಿ ನೀ ಅ.ಪಶೃತಿ ಮತಗಳ ಬಿಟ್ಟು ಪ್ರತಿದಿನ ವಿಷಯವೆಗತಿಯೆಂದು ನೆಚ್ಚದಿರೊ ರಾಗದ್ವೇಷಯುತರ ನೀ ಮೆಚ್ಚದಿರೊ ನಿನ್ನ ತೋರದವ್ರತದಿಂದ ಹೆಚ್ಚದಿರೊ ಓ ಜೀವಾ ೧
ಪರಿಭವವ ಮಾಡುವ ಪರಸೇವೆಗೆಳಸುವಸಿರಿಯ ನೀ ಬೇಡದಿರೊ ಕಾಮುಕನಾಗಿಪರಸತಿಯ ನೋಡದಿರೊ ಮುಂದುಗೆಡಿಪಪರಧರ್ಮವ ಕೂಡದಿರೊ ಓ ಜೀವಾ ೨
ಧೈರ್ಯವಿಲ್ಲದೆ ನಿನ್ನೊಳಾರ್ಯ ಸಂಗವ ಬಿಟ್ಟುಕಾರ್ಯದೊಳ್ಬೆರೆಯದಿರೊ ಮನದಿ ಮಾತ್ಸರ್ಯದೊಳ್ ಕೊರೆಯದಿರೊ ಶ್ರೀ ಗೋಪಾಲಾರ್ಯನ ಮರೆಯದಿರೊ ಓ ಜೀವಾ ೩

ಮತಿಯ ಪಾಲಿಸು ಸ್ವಾಮಿ ನತಜನ ಪ್ರೇಮಿಸತತ ಗೋಪಾಲಾರ್ಯ ಸನ್ನುತ ಚರ್ಯ ಪ
ಕೃತಕವಾಗಿಹ ಕರ್ಮಗತಿಯ ಕಡೆಗೊತ್ತಿಹಿತರಿಲ್ಲದಿಹ ಭೋಗ ತತಿಯಕಳೆದೆತ್ತಿಸತಿಸುತರ್ಗತಿಯೆಂಬ ಮತವ ನೆಗ್ಗೊತ್ತಿಪ್ರತಿುಲ್ಲದಿಹ ಪಾದ ಭಕುತಿಯ ಬಿತ್ತಿ ೧
ದೇಹವೆ ನಾನೆಂಬ ದೈನ್ಯವ ಬಿಡಿಸಿಸಾಹಸದಲಿ ಸಕಲ ಸಾಧನವ ತೊಡಿಸಿಮೋಹ ಮತ್ಸರವೆಂಬ ಮೋಸವ ಕೆಡಿಸಿಸೋಹಮೆಂಬರಿವಿನಲ್ಲಿ ಸೊಗಸಾಗಿ ನಡೆಸಿ ೨
ಕಾಲಕರ್ಮಂಗಳ ಮೂಲವ ಕಿತ್ತು ಗೋಪಾಲಾರ್ಯ ನಿಜಸುಖ ಶೀಲವನಿತ್ತುಮೇಲಾದ ಮುಕುತಿಯ ಕೀಲಕಳೆದೆತ್ತುಶ್ರೀಲಕ್ಷ್ಮಿಯರಸನೆ ಚಿತ್ತವನಿತ್ತು ೩

ಮನವೊಂದು ನಿಂತರೆ ಸಾಕು ಇದಕಿಂತಘನವಾದ ಕರ್ಮವಿನ್ನೇನೊಂದು ಬೇಕು ಪ
ಮನನಿಲ್ಲದಿರುವದು ಕಾಕು ನಿನ್ನಮನವ ನಿಲ್ಲಿಸಿ ಅನ್ಯವನೆಲ್ಲವ ನೂಕು ಅ.ಪ
ಗುರುವಿನ ಚರಣಸೀಮೆಯಲಿ ನಿತ್ಯಪರಿಪೂರ್ಣರೂಪವಿದೆಂಬ ನೇಮದಲಿಅರಿಷಡುವರ್ಗದಂತ್ಯದಲಿ ತೋರುವರಿವೆ ತಾನೆಂಬ ಘನವಿವೇಕದಲಿ ೧
ಕರಣ ಜಯದ ಬಳಿಸಂದು ಸಂಸರಣ ಚಿಂತೆಯ ಬಿಟ್ಟು ಮುದದಿಂದ ನಿಂದುಅರಿಯ ಪಡುವದಲ್ಲವೆಂದು ತನ್ನಿರವೆಯಾನಂದದ ಘನಪದವೆಂದು ೨
ತಾಪಗಳೆಲ್ಲವ ಬಿಟ್ಟೂ ಸಾಧುಗೋಪಾಲಾರ್ಯರ ಹೃದಯದೊಳಿಟ್ಟುವ್ಯಾಪಕದಲಿ ವೃತ್ತಿ ನೆಟ್ಟೂ ುಂದೀಪರಿಯ ನಿರ್ವಿಕಲ್ಪದಲಳವಟ್ಟೂ ೩

ಮಾಯೆ ಮುಟ್ಟದಿರೆನ್ನನು ನಿನ್ನಯ ಮೂರುಕಾಯಾಭಿಮಾನವೆನಿಸುವ ಮೈಲಿಗೆಯನು ಹೇಯವಿದೆಂದು ಬಿಟ್ಟರಿಕೆಯ ಮಡಿಯುಟ್ಟೆಬಾಯ ಹೊೈುಸುವೆನಿನ್ನು ತಪ್ಪಿದೆಯಾದರೆ ಪ
ಧೀರತನದಿ ಸದಸದ್ವಿವೇಕವ ತೊಟ್ಟು | ಸಾರಿ ಧನಾದಿ ಭೋಗಗಳ ಬಿಟ್ಟುಸಾರವಲ್ಲೆಂದು ಸ್ವರ್ಗಾದಿ ಸುಖಂಗಳ | ಮೀರಿದ ವಿರತನು ನಾನೆಂದೆನಲ್ಲದೆ ನಿನ್ನನಾರಿಯಬೇಕೆಂದೆನೆ ವಿಷಯವಿ | ಕಾರದೊಳ್ಬಳಿಸಂದೆನೆ ಧ್ಯಾನ ಸಾಧನಕಾರವೆ ಸಾಕೆಂದೆನೆ ಕಲ್ಪಿತವಾದ ಘೋರ ಸಂಸಾರವಸಾರವೆಂದೆನಲ್ಲದೆ ೧
ಶಮೆುಂದ ಚಿತ್ತ ವಿಕ್ಷೇಪವ ತೊಲಯ | ದಯೆುಂದಿಂದ್ರಿಯಗಳ ತಗ್ಗಿಸಿಕ್ರಮದಿಂ ತಿತಿಕ್ಷೆುಂ ಸಹನವ ಮಾಡಿ | ಯಮಿತೋಪರಮದಲಗ್ಗಳನೆಂದೆನಲ್ಲದೆಸಮತೆುಲ್ಲದೆ ಬಂದೆನೆ ತನು ಭೋಗ | ಮಮತೆಯೊಳಗೆ ನಿಂದೆನೆ ವಿಘ್ನವಿಕ್ರಮಕೊಳಗಾದೆನೆಂದೆನೆ ವೇದಾಂತೋಪಕ್ರಮವೆನ್ನೊಳಾುತೆಂದು ವಿವರಿಸಿದೆನಲ್ಲದೆ ೨
ದೀಪಿತ ಮೋಕ್ಷೇಚ್ಛೆುಂದ ತೋರುವ ಸಕಲ | ತಾಪತ್ರಯಗಳ ತೊಲಗಿಸಿಈಪರಿ ವೇದಾಂತ ಶ್ರವಣ ಮನನದ ಪ್ರ | ತಾಪದಿಂದರಿಗಳಿಲ್ಲೆನಗೆಂದೆನಲ್ಲದೆನೀ ಪುಸಿಯಲ್ಲೆಂದೆನೆ ಕಲ್ಪಿತ ನಾಮ | ರೂಪವ ನಿಜವೆಂದೆನೆ ತಾದೃಶ್ಯ ವಿಲೋಪಕನಲ್ಲೆಂದೆನೆ ಕೇಳು ಪ್ರತಿಜ್ಞೆಯ | ಗೋಪಾಲಾರ್ಯನೆ ನಾನೆಂದೆನಲ್ಲದೆ ೩

ಶ್ಲೋ||ಶುದಮ ಸಹಿತೇನಸ್ವಾನುಭಾವೇನ ನಿತ್ಯಂಸಮಮತಿಮನುಯವ್ಯಣ ಸರ್ವದಾ ಸೇವಕಾನಾಂಯಮ ನಿಯಮ ಪರಾಣಾಮೇಕ ತತ್ಪಾದರಾಣಾಮಮಿತನಿಜ ಮಹಿಮ್ನಾ ದೇಶಿಕೇಂದ್ರೊ ವಿಭಾತಿಯೇನು ವಿಚಿತ್ರ ಪೇಳೆ ಯೇ ಮತಿಯೆ ನಿದಾನವನೆನ್ನೊಡನೆಮಾನಸ ವೃತ್ತಿಯಾತ್ಮನ ಕೂಡಿಬರಲೊಂದು ಗಾನ ತೋರುವುದಿದೇನೆ ಪ
ಎಲ್ಲವನುಳಿದೀಗಲೂ ಬಗೆಗೊಂಡು ಮುದದಿಂದ ಬಂದು ನಿಂದುಸಲ್ಲಲಿತಾನಂದ ಪದವ ನೋಡುವೆನೆಂದು ಸವರಿಸಿ ಬರಲು ಮುಂದುಇಲ್ಲ ಮತ್ತೊಂದಾತ್ಮನಿಂದಧಿಕವೆಂದು ನಿಲ್ಲದೆ ಧ್ಯಾನಿಸಲುಝಲ್ಲನೆ ಜಲಧಿಯ ಮೊರವಿನಂದದಿ ತೋರಲಲ್ಲಿ ನಾ ಬೆರಗಾದೆನು ೧
ಅಂಜದೆ ಚಿಂತಿಸಲು ಮುರಜ ಭೇರಿ ಮಂಜುಳ ವೀಣೆಗಳಸಿಂಜಿತಗಳು ಮೇಘನಾದ ಮುಂತಾದವು ಸಂಜನಿಸಿದವೊಳಗೆರಂಜನೆುಂದವನು ಕೇಳುತ ಹೃತ್ಕಂಜದೊಳ್ಬೋಧೆಯೆಂಬಅಂಜನವಚ್ಚಲು ಬಿಂದು ಪೊಳೆುತು ನಿರಂಜನ ರೂಪಿನಲಿ ೨
ಮತ್ತೆ ಮುಂದೆ ನೋಡಲು ಬಿಂದುವೆಂಬುತ್ತಮ ಹಿಮಕರನಕತ್ತಲೆಗವಿದುದು ಅದ ನೋಡುತ ಮನ ತತ್ತರಿಸಿತು ನಿಲ್ಲದೆಚಿತ್ತವನಲುಗದೆ ಗುರುಪಾದವ ಧೃತಿವೆತ್ತು ಚಿಂತಿಸುತಿರಲುಕತ್ತಲೆ ಪರಿದು ಕಳಾ ವಿಶೇಷ ನೋಡಲೆತ್ತಲೆತ್ತಲು ತುಂಬಿತು ೩
ಛಂದದಿತೇಜವನು ನೋಡುತಲದರಿಂದಲಧಿಕ ಸುಖವೂಮುಂದೆ ಪುಟ್ಟಲದರನುಭವದಲಿ ಹಿಗ್ಗಿ ನಿಂದು ಜುಂಮುದಟ್ಟಲುಎಂದೆಂದು ಕಾಣದ ಸುಖದೊಳು ಮನ ಬಳಿಸಂದು ಲಯವನೈದಲುಒಂದಲ್ಲದೆರಡಿಲ್ಲದ ನಿಜ ನಿತ್ಯಾನಂದವೆ ನಾನಾದೆನೂ ೪
ತಾಪತ್ರಯಗಳಡಗಿ ಕರ್ಮಕಲಾಪವಿಲ್ಲದೆ ಪೋದುದುಗೋಪಾಲಾರ್ಯರ ಕೃಪೆುಂದ ಭವಬಂಧವೀ ಪರಿ ಬಯಲಾದುದುವ್ಯಾಪಾರವೆಲ್ಲವನಿತ್ಯವಾದವು ನಿರ್ಲೇಪತೆಯೆನಗಾದುದುದೀಪಿತ ವಿಜ್ಞಾನ ರತ್ನವೆಂದೆನಿಸುವ ದೀಪ ಸುಸ್ಥಿರವಾುತೂ ೫

ಸತ್ತವರಿಗೆ ನೀನಳುತಲಿರುಮೆನ್ನೂಮತ್ತನಾಗಿ ಮಂದಜೀವಾ ಪ
ಮೃತ್ಯುವೆಂಬರಿಪು ಕುತ್ತಿಕೆಡಹಿದಾಗಮತ್ತಾರಿಗಳುವೆಯೊ ಜೀವಾ ಅ.ಪ
ನೆತ್ತಿಯ ಬಡುಕೊಂಬೆ ಜೀವಾಕತ್ತೆಯಂತೊದರದೆ ಬಿಡದೆ ಕಾಂತೆಯ ಬೆನ್ನಹತ್ತಿ ಹೋಗುತ್ತಿಹೆ ಜೀವಾ ೧
ಕತ್ತಲೆಯಂತಿಹ ನಿನ್ನ ವಿದ್ಯೆಯನುತೊತ್ತಳದುಳಿವರೆ ಜೀವಾಉತ್ತಮ ಜನ ಸಂಗವ ಮಾಡು ನಿನ್ನನೀನೆತ್ತಿಕೊ ಭವಕೂಪದಿಂದಾ ೨
ಏಳು ಶ್ರವಣ ಮನನವ ಮಾಡು ನೀನಿಂತುಘೋಳಿಟ್ಟರೆ ಫಲವೇನೂಬೀಳು ಗುರುವಿನ ಚರಣ ಕಮಲಗಳಲ್ಲಿನಾಳೆ ಮುಕ್ತಿ ಸುಖವುಂಟೂ ೩
ತಾಳು ಶೀತೋಷ್ಣಾದಿ ದೇಹಧರ್ಮಗಳನುಮೂಳ ಸುಮ್ಮನೆ ಕೆಡಬೇಡಾನಾಳೆ ನಾಡಿದ್ದು ಸಾಧಿಸುವೆನೆಂದೆನುತಲೆಹಾಳಾಗಬೇಡೆಲೊ ಜೀವಾ ೪
ಇತ್ತಲತ್ತ ಹಿಂದೆಮುಂದೆ ಕೆಳಗೆ ಮೇಲೆಉತ್ತಮ ಬೊಮ್ಮವೆಂದೆನುತಾಸತ್ಯವೆಂದು ಶೃತಿಬ್ರಹ್ಮಪುರಸ್ತಾದೆನುತ್ತ ಸಾರುತ್ತಿದೆ ಜೀವಾ ೫
ಮನೆಮಾರು ಧನ ನಿನ್ನತನು ಮೊದಲಾದವುಇನಿತು ನಿತ್ಯವಲ್ಲ ಜೀವಾಘನ ವಿರತಿಯ ಮಾಡು ಮನದಲ್ಲಿ ಧ್ಯಾನಿಸುವಿನುತ ಚೈತನ್ಯವ ಜೀವಾ ೬
ಅನುದಿನ ನಿನ್ನ ನಿಜವ ನೀತಿಳಿದರೆಳ್ಳನಿತುಶೋಕಮೋಹವಿಲ್ಲ ಜೀವಾಸನುಮತಿುಂದ ಗೋಪಾಲಾರ್ಯನ ಸೇರಿಚಿನುಮಯನಾಗೆಲೊ ಜೀವಾ ೭

ಸಾರವೇನೊ ಸಂಸಾರದೊಳೂಬಾರಿಗು ಬಾರಿಗು ವಿಚಾರಿಸಿ ನೋಡಿದಡತಿಘೋರ ದುಃಖದಾಗರ ನಿಸ್ಸಾರವಲ್ಲದಿದರೊಳೂ ಪ
ಜನನಿಯ ಉದರದಲಿ ಕಿಸುಕುಳದಕುಣಿತೆಯಂದದಲಿ ನವೆದಲ್ಲಿಂದಜನಿಸಿಯಾಯಾಸದಲಿ ಪೇಳಲು ಕೂಡಲನಿತುಬ್ಬಸ ಬಾಲ್ಯದಲಿ ಕೌಮಾರ ಯೌವನದಿ ಗೃಹಕ್ಷೇತ್ರ ವಿತ್ತ ವನಿತಾದಿ ವಿಷಯವೆಂಬಕನಸಿನ ಸಿರಿಯ ನೆಚ್ಚಿ ತೊನೆದುಕೊಂಬರಲ್ಲದೆ ೧
ಪೊಲೆಯ ಬೊಂಬೆಯೊಳು ತುಂಬಿದ ಕೀವುಮಲಮೂತ್ರಸಂದೋಹ ತೊಗಲು ರೋಮಎಲು ಮಜ್ಜೆ ಮಾಂಸದವ್ಯೂಹ ಎಷ್ಟು ತೊಳೆದರೂಹೊಲಸು ನಾರುವ ಚೋಹ ಮತ್ತಿದಕೊಂದುಕುಲಗೋತ್ರ ನಾಮರೂಪು ಚಲುವ ಚೆನ್ನಿಗನಿವ ಸಲೆ ಜಾಣನೆಂದು ಮೂಢರುಗಳಹಿಕೊಂಬರಲ್ಲದೆ ೨
ಮಡದಿಯಾದರಿಲ್ಲ ಮಕ್ಕಳು ಮಕ್ಕಳಾದರೆಒಡಮೆಲ್ಲವದು ಬರಲು ಸತಿಸುತರುಮಡಿದು ಹೋಗುವ ದುಃಖಂಗಳು ಗಳಿಸಿದರ್ಥಕೆಡುವಾ ಸಂಕ್ಲೇಶಂಗಳು ತನಗೆ ಮುಂಚಿಅಡಸಿ ಬರುವದೊ ಮೃತಿ ಜಡರು ಈ ಬದುಕನೆಚ್ಚಿಸಡಗರ ಬಡುತ ಹಿಗ್ಗಿ ಕೊಡಹಿಕೊಂಬರಲ್ಲದೆ ೩
ಬಾಲಕನಾಗ್ಯೊಂದು ಕ್ಷಣವು ಪ್ರಾಯದಿ ಕಾಮಲೋಲುಪನಾಗ್ಯೊಂದು ಕ್ಷಣವು ಧನಾಢ್ಯನೆಂಬಮೂಳ ಹೆಮ್ಮೆ ಒಂದು ಕ್ಷಣವು ದಾರಿದ್ರ್ಯ ಮುಪ್ಪುಜೋಲುವ ತನುವೊಂದು ಕ್ಷಣವು ನಾನಾವೇಷದಾಳಿದ ನಟನಂತಾಡಿ ಕಾಲನ ಬಾುಗೈದುವಬಾಳುವೆಗೆ ಖೂಳಜನರು ವೋಲಾಡಿಕೊಂಬರಲ್ಲದೆ ೪
ನೆರೆ ಭೋಗಕೆ ರೋಗಭಯ ಸುತ ಸಂಬಂಧಿನೆರವಿಗೆ ವಿಯೋಗ ಭಯ ದ್ರವ್ಯಕ್ಕೆ ಭೂಪರ ಭಯವು ಚೋರ ಭಯ ಕಾಯಕೆ ಭಯಂಕರನಾದ ಕೃತಾಂತ ಭಯ ತಾಪತ್ರಯವೀಪರಿಯನೇಕ ಚಿಂತೆಯಲ್ಲಿ ಕೊರಗುತುರಿವ ಮನೆಯೊಳಗಿರುವೆ ಸುಖದಲೆಂಬರು ಮೂಕೊರೆಯಮೊಂಡರಲ್ಲದೆ * ೫

ಸಾವಧಾನೊ ಜೀವ ಭವಸಂತತಂಜೀವನ್ಮುಕ್ತಿ ಸಾಧನ ಸಂತತೋದ್ಧರಂ ಪ
ಆಶಾ ಪಿಶಾಚಿ ಕಾಮ ವಧೂಯ ಕಷ್ಟತರಪಾಶ್ಯಾಕಾವೃತಿಂ ಪರಿಭೂಯಚಈಶಣತ್ರಯ ಮೂಲ ಮುತ್ಪಾಟ್ಯಚೌಥನಿಷ್ಕೋಶಾಸಿವಜ್ವಲಣ ಸರ್ವ ವಿಷಯೋಝ್ಝಿತಃ ೧
ಏಕಾಗ್ರತಾಮಾಕಲಯ್ಯ ಕೂಟಸ್ಥಾತ್ಮನಾಕಲಿತ ಚಿಂತಯಾನ್ಯದ್ವಿಲಾಪ್ಯಶೋಕ ಮೋಹಾದಿ ಪರಿಹೃತ್ಯಸುಪ ಬ್ರಹ್ಮಾಕಾರ ತಾಮನುಭವನ್ನಿತ್ಯ ಮುಕ್ತಯೋ ೨
ತಾಪತ್ರಯಂತ್ಯಜನ್ ತದಹಮಿತ್ಯಾನಂದರೂಪಿಣ ನಿತ್ಯತೃಪ್ತಿಂ ಪ್ರಪದ್ಯೆವ್ಯಾಪಕಾತ್ಮ ಭವ ನಿಜಾದ್ವೈತ ಬೋಧತೋಗೋಪಾಲಾರ್ಯ ದಯಯಾತೀವ ಧನ್ಯಃ ೩

ಸುರತರು ರೂಪಗೆ ಸುರಭಿಯಂತಿರುವಗೆಸಲ್ಲಲಿತ ಸರಸಾ ಮುನಿವಿನುತ ಸಲ್ಲಲಿತ ಸರಸ ಗೋಪಾಲಾರ್ಯ ಪ
ಚಿಲ್ಲಕ್ಷಣಾತ್ಮಚರ್ಯಾ ಚಿತ್ರಮಹಿ ಮೋಲ್ಲಾಸ ಯೋಗಿವರ್ಯಾ ಪಾಹಿಯತಿ ವಲ್ಲಭಾನಂತ ಧೈರ್ಯಾ ಸ್ವಾಮಿ ಅ.ಪ
ಸಾರತರ ಸಾಧನಾ ಪೂರ ಸೌಖ್ಯ ವಿಹಾರನೀರಜೋಪಮ ಪಾದ ನಿರ್ಜಿತಾಖಿಲವಾದಚಾರು ನಿಜ ಸಲ್ಲಾಪ ವೇದ ಸನ್ನುತ ರೂಪಕಾರಣಾನಂತ ಪುಣ್ಯಾ ಸತ್ಪಥಾಚಾರ ಸಜ್ಜನ ಶರಣ್ಯಾ ಕೀರ್ತಿವಿಸ್ತಾರ ಶೋಭಿತವರೇಣ್ಯಾ ನನ್ಯಾ ೧
ಸಂತತಾನಂದ ಘನ ಸಮಸ್ಯನಿದಾನಚಿಂತಿತಾರ್ಥದ ಶೀಲ ಚಿತ್ತಶುದ್ಧಿಯ ಲೀಲಶಾಂತ ಸದ್ಗುಣ ಭೂಪ ಸುಲಲಿತಾಮೃತ ಭಾಷಕಂತುಮದ ಪರಿಹಾರಕಾ ಆದಿಮಧ್ಯಾಂತ ರಹಿತಾಕಾರಕಾ ಆಶ್ರಿತಸ್ವಾಂತ ಸಂಸ್ರ‍ಕತಿ ತಾರಕಾಲೋಕಾ ೨
ತಾಪಸ ಜನೋತ್ತುಂಗ ತಾರತಮ್ಯ ವಿಭಂಗತಾಪತ್ರಯಾಳಿ ಹರ ದಳಿತ ಲಿಂಗ ಶರೀರಸ್ವಾಪಾದಿ ಕುಲದೂರಸ್ವಾಶ್ರಿತ ಜನೋದ್ಧಾರಧೀಪದಸ್ಫುರಣ ದೀಪ ಗೋಪಾಲತಾಪ ಸಮುದಯವಿಲಾಪ ದೇಶಿಕ ಪರೋಪಕೃತಿ ಕೃತ್ಪ್ರತಾಪಾಲೇಪ ೩

ಸೇರಿದೆ ನಾ ನಿಮ್ಮ ಪಾದ ಪದ್ಮಂಗಳಧೀರ ಗೋಪಾಲಾರ್ಯ ದಿವ್ಯ ಚಾತುರ್ಯಾ ಪಸಾರವಿಲ್ಲದ ಸಂಸಾರದೊಳಗೆ ನೊಂದುಘೋರ ಕಾಮಾನಲನಿಂದಲಿ ಬೆಂದುನೀರಸವಾದ ವಿಷಯಗಳ ಬಳಿಸಂದುಚಾರು ವಿವೇಕವೆನಗೆ ಬೇಕೆಂದು ೧ಚಿಂತೆಗಳಿಂದ ಬಳಲಿ ಕಷ್ಟಬಟ್ಟೂಸಂತತ ಪರಸೇವೆಯಲಿ ಕಂಗೆಟ್ಟೂಅಂತವಿಲ್ಲದ ಮೋಹದೊಳಳವಟ್ಟೂಭ್ರಾಂತಿಯಳಿಯಬೇಕೆಂದು ಮನದಲಿಟ್ಟು ೨ತಾಪತ್ರಯಂಗಳ ತರಿದು ನೀವಿಂದುಪಾಪರಾಶಿಗಳೆಂಬ ಪಗೆಗಳ ಕೊಂದುಈ ಪರಿ ಞೆÁನವನಿತ್ತು ರಕ್ಷಿಪರೆಂದುಗೋಪಾಲಾರ್ಯ ನೀನೇ ಗತಿಯೆಂದು ೩

ಸೇರಿದೆನು ಸೇರಿದೆನು ಗುರುವರನ ಪದವಾ ಮೀರಿದೆನು ಘೋರತರ ನರಕದತಿಭಯವಾ ಪ
ದೂರ್ವೆ ಮೊದಲಾದ ತೃಣಧಾನ್ಯ ಗರ್ಭವ ಮೆಟ್ಟಿಸರ್ವ ಸ್ಥಾವರ ಜಾತಿಗಳಲಿ ಪುಟ್ಟಿಪಾರ್ವಪಕ್ಷಿಗಳ ಬಸುರೊಳು ಪುಟ್ಟಿ ಬಹಳ ಪಶೂದರ್ವೀಕರಂಗಳಲಿ ಪುಟ್ಟಿ ಕಂಗೆಟ್ಟೂ೧
ಮನುಜರೊಳು ಪದಿನೆಂಟು ಜಾತಿಗಳೊಳಗೆ ಬಂದುಬಿನುಗುತನದಿಂದಖಿಳ ವಿಷಯಗಳ ತಿಂದೂಅನುವರಿಯದಜ್ಞಾನದೊಳಗೆ ಬಳಿಸಂದು ಪಾರ್ವನ ಜನ್ಮದಲಿ ವಿಹಿತಕರ್ಮದಲಿ ಮನನಿಂದು೨
ಮೆಲ್ಲ ಮೆಲ್ಲನೆ ಕಾಮ್ಯ ನಿಷ್ಕಾಮ ಕರ್ಮಗಳಬಲ್ಲ ಬಲ್ಲಂತೆ ಮಾಡುತ ಪೂರ್ವದಾಸಲ್ಲಲಿತ ಪುಣ್ಯದೊಳು ಭಕ್ತಿಯೊಳ್ಮನ ಮುಟ್ಟಿಅಲ್ಲಲ್ಲಿ ಹರಿನಾಮ ಕಥೆಯೊಳಳವಟ್ಟೂ ೩
ಭಾಗವತ ಜನ ಸಂಗದಿಂದ ಹರಿಕಥೆಗಳನುರಾಗದಿಂ ಕೇಳಿ ಗುರುವಿನ ಮಹಿಮೆಯಾಶ್ರೀಗುರುಗಳಿಂದಲೆ ಧನ್ಯತ್ವವಹುದೆಂದುಯೋಗ ಸಂಪದವೆ ತನಗಾಗಬೇಕೆಂದೂ ೪
ಸದಸದ್ವಿವೇಕ ಶಮೆ ದಮೆ ತಿತಿಕ್ಷೆಗಳಿಂದಲಧಿಕ ಮೋಕ್ಷೇಛ್ಛೆ ಮುಂತಾದ ಸಾಧನವೂಒದವಿರಲು ಬೇಕು ಗೋಪಾಲಾರ್ಯ ಗುರುವರನಪದವೆ ಸತ್ಯಾನಂದ ರೂಪವೆಂತೆಂದೂ ೫

ಸೋಹಮೆಂದು ಸುಖಿಸು ವಿಗತ ಮೋಹದಿಂದ ಸಂತ
ತಂದೇಹ ದೇಹದೊಳಗೆ ತೋರ್ಪನೀ ಹಿತಾತ್ಮನೀತ ಪರಮ ಪ
ಘನದ ರತುನಮಂಟಪವನು ಶುನಕವೇರಿ ತನ್ನ ನೆಳಲಕನಲಿ ನೋಡಿ ಗಳಹಿ ತಾನಿದೆಂಬುದರಿಯದೆಮನದೊಳನ್ನವೆಂದು ಭ್ರಮಿಸಿ ಮತ್ತೆ ಕಡಿಯಲದರೊಳೊಡದು*ನೆನೆವ ತನ್ನ ರಕುತವನ್ನು ಸವಿವ ರೀತಿಯಲಿವಿನುತ ಜೀವ ತನ್ನ ಛಾಯೆಯನು ಸಮಸ್ತರೊಳಗೆ ನೋಡಿನೆನೆದಿದನ್ಯವೆನುತ ಭ್ರಾಂತನಾಗಿ ಮಾಯೆುಂದನುಭವಿಸುವೆನಿದನಿದೊಲ್ಲೆನೆನುತ ಭೇದ ಬುದ್ಧಿುಂದಮನುಮಥಾಗ್ನಿುಂದ ಬೆಂದು ಮನದಲಿದ್ದ ಕಾರಣಂ ೧
ನರರು ಗಜವ ಪಿಡಿಯೆ ಕಪ್ಪ ಕೊರವುತದರ ನಡುವೆ ತಿಟ್ಟನಿರಿಸಿ ಕಣ್ಣಿಯಲ್ಲಿ ಕಟ್ಟಿಯದರ ಸುತ್ತಲೂನೆರಹಿ ಕಾಷ್ಠ ಮೃತ್ತುಗಳನು ನಿಜದಪ್ಪಿರಮಾಡೆ ಭ್ರಮಿಸಿಕರಿಣಿಗಾಗಿ ಬಂದು ಗಜವು ಮರೆದು ಬಿದ್ದ ರೀತಿುಂದುರೆ ವಿರಿಂಚಿ ರಕ್ತ ಮಾಂಸ ನರ ಮಲಂಗಳಿಂದ ರಚಿಸಿನರಕ ಕೂಪ ಸಾಮ್ಯವಾದ ನರಶರೀರಮಂಮರೆಸಲದರ ಮೇಲೆ ಚರ್ಮವೆನಿಪ ಮಾಯೆುಂದ ನರರುಮರೆತು ತಾವಿದೆನ್ನುತದರಲಿದ್ದ ಕಾರಣಂ ೨
ಮರೆದು ತನ್ನ ತಾಣವನ್ನು ಮೆರೆದುಲಂಘಿಸುತಲಿ ಭೇಕವಿರಲು ಹೊಂಚಿ ಪಿಡಿದು ಪಾವು ಪಿರಿದು ದೇಹಮಂನೆರೆದು ನುಂಗಲಾರದಿರುತಲಿರಲು ಭೇಕ ತನ್ನ ಹಸಿವಿಗಿರದೆ ಬಾಯ ತೆಗೆದು ನೊಣನನರಸಿ ಪಿಡಿವ ರೀತಿುಂನರರು ತಮ್ಮ ಕಾಲಸರ್ಪ ಉರುಬಲದನು ಮರೆತು ಭೋಗಪರತೆುಂದ ಕಾಮರೋಷ ವಿರಸರಾಗುತಿರಲು ನೀನರಿದನಿತ್ಯವೆಲ್ಲವೆಂದು ಮೆರೆದು ಗೋಪಾಲಾರ್ಯ ಪದವನೆರೆದು* ಭಕತಿುಂದ ನೋಡಿ ಪಾಡಿ ಹರುಷದಿಂದ ನೀ ೩

ಹೊಂದಿಕೊಂಡಿರಬೇಕು ಮನವೆ ಘನಚೈತನ್ಯಸಂದೋಹನಾದ ದೇಶಿಕನ ಪಾದಾಬ್ಜದೊಳು ಪ
ರಾಗವನು ನೆರೆಬಿಟ್ಟು ರತಿಯ ಮನದಲಿ ನೆಟ್ಟುಭಾಗವತನಾಗದರೊಳು ಭಕ್ತಿಯುಟ್ಟುಭೋಗವಾಂಛೆಯ ಬಿಟ್ಟು ಬೋಧಿಸುತಲೊತ್ತಟ್ಟುಯೋಗ ರಾಜ್ಯವ ಕಟ್ಟು ಯುಕ್ತಿುಂ ಸುಖಬಟ್ಟು ೧
ಯಮ ನಿಯಮಗಳ ಮಾಡಿ ಏಕಾಗ್ರತೆಯೊಳಾಡಿಸಮ ಚಿತ್ತದೊಳ್ಪಾಡಿ ಸೌಖ್ಯವನು ಬೇಡಿಕ್ರಮದಿ ಸಾಧನೆಗೂಡಿ ಕಾಯ ದಂಡನೆ ಮಾಡಿವಿಮಲ ವೇದಾಂತ ವಿದ್ಯವನೊಲಿದು ನೋಡಿ೨
ಭೇದ ಬುದ್ಧಿಯನುಳಿದು ಭಿಕ್ಷಾನ್ನದೊಳ್ಬೆಳೆದುವಾದ ವಿದ್ಯವ ಕಳೆದು ವಸ್ತುವೆಂದರಿದೂಸಾಧನಗಳೊಳ್ಮೆರೆದು ಸಂಸ್ರ‍ಕತಿ ಪಥವ ತರಿದುಸಾಧು ಗೋಪಾಲಾರ್ಯ ಗುರುವಿನೊಳ್ಬೆರೆದೂ ೩

ತಾನೆ ಬಂದ ಎನ್ನ ಮನೆಗೆ
ತಾನೆ ಬಂದ ಎನ್ನ ಮನಕೆ ಗೋಪಾಲಾರ್ಯಏನು ಸೇವೆ ಮಾಡಲಾತಗೆ ಪ
ಬರುತಲೊಂದು ಮುಕುತಿಮಾರ್ಗವ ಶಾಸ್ತ್ರೀಯವಾದಪರಿ ಪರಿ ಸಾಧನವರ್ಗವಾ ಅರಿಷಡ್ವರ್ಗವೆಂಬ ದುರ್ಗವಾ ತನ್ನಯ ದಿವ್ಯಕರುಣಾರಸವೆಂಬ ಸ್ವರ್ಗವಾ ಕರೆದಿತ್ತಾ ಪರಿವುತ್ತಾ ಪರವುತ್ತಾ ಅರಿಸುತ್ತಾ ೧
ಕಾಳಗತ್ತಲೆಯ ಯೂಥವಾ ಮನದೊಳಿದ್ದಕೀಳು ಬುದ್ಧಿಯಪರಾಧವಾಮೂಳ ವಾಸನೆಯ ಮುಖವಾ ವೇದಾಂತ ಸಂಮೇಳದಿಂದ ಬಹ ಸುಖವಾಪೇಳುತ್ತಾ ಸೀಳುತ್ತಾ ತಾಳುತ್ತಾ ಕೀಳುತ್ತಾ ೨
ಸಾರ ಸತ್ಸಂಗದ ದಾರಿಯಾ ಮುಂದುಗಾಣಿಸದಕ್ರೂರ ಕರ್ಮಂಗಳ ಪರಿಯಾ ಘೋರ ಮಾಯೆಯೆಂಬ ತೊರೆಯಾ ಗೋಪಾಲಾರ್ಯಸಾರಾನಂದವೆಂಬ ಪುರಿಯಾತೋರಿಸುತಾ ಹೀರಿಸುತಾ ಹಾರಿಸುತಾ ಸೇರಿಸುತಾ ೩

ಹಾಡಿನ ಹೆಸರು :ತಾನೆ ಬಂದ ಎನ್ನ ಮನೆಗೆ
ಹಾಡಿದವರ ಹೆಸರು :ರಾಜಪ್ಪ ಡಿ. ಆರ್.
ರಾಗ :ಕಲಾಶ್ರೀ ಆಧಾರಿತ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಪಿಚ್ಚಳ್ಳಿ ಶ್ರೀನಿವಾಸ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ