Categories
ರಚನೆಗಳು

ಚಿದಾನಂದ ಅವಧೂತರು

೨೬೩
ಛಿ ಛಿ ಮನುಜನೆ ನಿನ್ನನೆ ತಿಳಿಯೋಚಿಕ್ಕ ಬುದ್ಧಿಯ ನೀನೀಗ ಮಾಡಬೇಡ ಪ
ಎಲ್ಲ ದಿನಗಳು ಆಗಲೋ ಈಗಲೋ ಒಳ್ಳಿತಾಗಿ ಬಿಡು ಸಂಸಾರವನುಸರ್ವರನು ನಿನಗೊಪ್ಪಿಸೆಯೋ ಸತಿಸುತ ರೆಂಬರುಏನಾದರೆಂದು ತಿರುಗಿ ಪರಾಮರಿಸಿ ಕೊಂಬೆಯಾ ೧
ತುದಿಗಟ್ಟೆಯಲಿ ತಂಬಿಗೆ ಇಟ್ಟರೆ ತೆಗೆಯಿರಿ ಒಳಯಿಕೆ ನೀವೆಂಬಿತುದಿಗಟ್ಟೆಯಲಿಹ ತುಂಬಿಗೆಯಿಂದಲಿತಿರುಗಿ ಕುಡಿಯುವೆಯೋ ನೀನೀರ೨
ಮನೆ ಮಾತಿಗೆ ನೀ ಬಡಿದು ಆಡಿದ ಮನೆ ತಕ್ಕೊಂಡೆಲ್ಲದರಮನೆಯಲಿ ಆರಿಗೆ ಹೇಳಿ ಹೋಗುವೆಯೋಮನೆ ಪರಾಮರಿಗೆ ತಿರುಗಿ ಕೊಂಬೆಯೋ ೩
ದೇಹವ ಸಾರ್ಥಕ ಮಾಡಿರಿ ಎಂದು ದೈನ್ಯದಿ ಎಲ್ಲರಿಗೂ ಹೇಳುವೆದೇಹವ ಸಾರ್ಥಕ ಮಾಡಿದರಿಲ್ಲವೋದೇಹ ಪರಾಮರಿಕೆಯ ಕೊಂಬೆಯೋ ೪
ನಿನ್ನ ದೇಹವೇ ನಿನಗೆ ಇಲ್ಲವೋ ನಿನಗೆಲ್ಲಿಯ ಸತಿಸುತ ಭ್ರಾಂತಿನಿನ್ನ ಚಿದಾನಂದ ಗುರುವೆಂದು ಕಂಡರೆನಿನಗೇನಿಲ್ಲವೋ ಗುರುವಾಗುವೆ ನೀ ೫

೨೯೯
ಛೀ ಛೀ ಛೀ ಛೀ ಮೂಳಿ ನಾಚಿಕೆ ಇಲ್ಲದ ಹಾಳಿನೀಚ ಮನುಜರೊಡನೆ ಆಡಲುಬಂತು ಮೂರ್ಖೆ ಮೂಳಿ ಪ
ಸಜ್ಜನ ಸಂಗವ ಬಿಟ್ಟಿ ನೀದುರ್ಜನಕೆ ಮನವಿಟ್ಟಿಜಜ್ಜಿಗುಟ್ಟಿದೆ ಪೂರ್ಣ ಆಯುಷ್ಯ ಸುಕೃತ ಮಾರ್ಗವ ಸುಟ್ಟೆ ೧
ಎಲ್ಲಿ ಸತಿಯು ಸುತರು, ಮತ್ತೆಲ್ಲಿ ಪತಿಯು ಪಿತರುಯಮನು ವೈಯ್ಯುವಾಗ ಬಹರೆ ಸರ್ವಹಿತರುಗುರುವಿನ ಪಾದವ ಹೊಂದು ನೀ ೨
ಮರೆಯದಿರು ಮಾತೆಂದೂಗುರು ಚಿದಾನಂದನು ತಾನೆ ಎನಲು ಹೋಹುದು ಭವವುಹಿಂದು ೩

೩೫೬
ಜಂಗಮನು ಇಂತಿವನು ಸರ್ವಸಂಗ ದೂರಾದವನೀಗ ಜಂಗಮ ಪ
ತನ್ನ ತಿಳಿದು ತಾನಾದವ ಜಂಗಮ ಜಗವಭಿನ್ನವೆಂದು ಕಾಣದವ ಜಂಗಮಹೊನ್ನು ಹೆಣ್ಣು ಬಿಟ್ಟವನು ಜಂಗಮ ಸಂ-ಪನ್ನ ಸಾಧು ಸಂಗವಿಹ ಜಂಗಮ ೧
ಒಳಗೆ ಹೊರಗೆ ಒಂದಾದವ ಜಂಗಮ ಎಲ್ಲಹೊಳೆವುದೊಂದೆ ಜ್ಯೋತಿಯು ಎಂಬುವ ಜಂಗಮಹೊಲೆಯು ಶುದ್ಧವ ಕಳೆದವ ಜಂಗಮ ಎನಗೆಕುಲವು ಛಲವು ಇಲ್ಲವೆಂಬುವ ಜಂಗಮ ೨
ಅಂಗ ಲಿಂಗವಾಗಿಹ ಜಂಗಮಲಿಂಗ ಅಂಗ ಏಕವಾಗಿಹ ಜಂಗಮಮಂಗಳವೇ ನಿತ್ಯವಿಹ ಜಂಗಮ ಗುರುಲಿಂಗವಾದ ಚಿದಾನಂದ ಜಂಗಮ ೩

೩೯೯
ಜಯ ಜಯ ಮಂಗಳಜಯ ಮಂಗಳ ಅಮರಾಧೀಶನಿಗೆ ಪ
ಕಪ್ಪು ಗೊರಳನಿಗೆ ಕರುಣಾಸಮುದ್ರಗೆ ಕಾಮ ಸಂಹಾರ ಮಾಡಿದಗೆಮುಪ್ಪುರ ಗೆಲಿದಗೆ ಮೂಜಗದೊಡೆಯಗೆ ಮೂರನೆಯ ಗುಣದಾ ಮನೆಯವಗೆಒಪ್ಪುವ ದಶಭುಜ ತೋಳಲಿ ಡಮರುಗ ವಿಡಿದಿಹ ಪಾಶಾಂಕುಶಧರಗೆತಪ್ಪದೆ ಭಕ್ತರಿಗೊಲಿವಗೆ ಪಾಲಿಪ ಕರುಣಕೋಟಿ ಪ್ರಕಾಶನಿಗೆ ೧
ಕರಿದೊಗಲುಟ್ಟಿಹ ಕಮಲಜಪಾಕಸಖ ಅಖಂಡಲಖಂಡ ಪ್ರಕಾಶನಿಗೆಶಿರದಲಿ ಚಂದ್ರನ ಸೂಡಿಯೆ ಜಡೆಯೊಳು ಸುರನದಿ ಧರಿಸುತ ಮೆರೆದವಗೆಕೊರಳೊಳು ರುಂಡದ ಮಾಲೆಯ ಹಾಕಿಹಕೋಮಲ ಸ್ಫಟಿಕ ಪ್ರಕಾಶನಿಗೆಕರದಲಿ ಕಂಕಣ ಧರಿಸಿಹ ಮೂರ್ತಿಗೆ ಕಣ್ಣುರಿಭಾಳದಿ ರಂಜಿಪಗೆ ೨
ದೇಶದಿ ಪೆಸರಾಗಿರುತಿಹ ಅಮರಾಧೀಶನು ಎನಿಪ ನಾಯಕಗೆಮಾಸದ ಮಂಜಿನ ಮಲೆಯೊಳು ನೆಲಸಿಯೆ ಆಸೆಯನೆಲ್ಲವ ಸಲಿಸುವಗೆಶ್ರೀಸಚ್ಚಿದಾನಂದಾವಧೂತ ದೊರೆ ಶಿರತಾರಕ ಅಮರೇಶನಿಗೆ ೩

೪೦೦
ಜಯ ಜಯ ಮಂಗಳಜಯ ಮಂಗಳ ಶುದ್ಧಾದೈತನಿಗೆ ಪ
ಅಗಣಿತ ಮಹಿಮಗೆ ಅಕ್ಷಯರೂಪಗೆಅಖಂಡ ಸಹಜಾನಂದನಿಗೆಝಗಿ ಝಗಿತಾತ್ಮಗೆ ಝಳುಕಿಸಿ ಕರ್ಣದಿಝಣನಾದವ ಕೇಳ್ವನಿಗೆಸೊಗಯಿಸಿ ಚಂದ್ರನ ಶತಕೋಟಿಯಪ್ರಭೆ ಸಾರವ ಸವಿಸವಿದುಣ್ಣುವಗೆಬಗೆ ಆನಂದದಿ ಸುಖಿಸುವ ದೇವಗೆಭಾಸ್ಕರ ತೇಜಃಪುಂಜನಿಗೆ೧
ನಿತ್ಯಾನಂದಗೆ ನಿರ್ಮಲರೂಪಗೆನಿಶ್ಚಲ ಪರಬ್ರಹ್ಮಾತ್ಮನಿಗೆನಿತ್ಯಶುದ್ಧಗೆ ನಿಜನಿರ್ಮಾಯಗೆನಿಜಬೋಧ ಜ್ಞಾನೈಕ್ಯನಿಗೆಪ್ರತ್ಯಗಾತ್ಮಗೆ ಪೂರ್ಣಬ್ರಹ್ಮನಿಗೆಪರಮ ಪರತರ ಪಂಡಿತಗೆನಿತ್ಯತೃಪ್ತಗೆ ನಿಗಮಾಗಮನಿಗೆನಿಶ್ಚಿಂತಾತ್ಮ ನಿಸ್ರ‍ಪಹಗೆ ೨
ಕೈಯಲಿ ಪಿಡಿದಿಹ ಜಪಮಾಲೆಯಸರ ಕರ್ಣಕುಂಡಲವಿಟ್ಟಿಹಗೆಮೈಯೊಳು ಪೊದ್ಹಿಹ ಕಾಷಾಯಂಬರಮಿರುಪಿನ ಕೌಪೀನವುಟ್ಟಿಹಗೆಮೈಯೊಲೆದಾಡುವ ಸ್ವಾತ್ಮಾನಂದದಿನಲಿವ ಸದ್ಗುಣ ಶಾಂತನಿಗೆಮೈಯನೆ ಸದ್ಗತಿ ಭಕ್ತರಿಗೀಯುವವ್ಯಾಪಿತ ಜೀವನ್ಮುಕ್ತನಿಗೆ೩
ಆರವಸ್ಥೆಯ ಧರಿಸಿಯೆ ಜಗದಲಿಅನಂತರೂಪ ತಾನಾಗಿಹಗೆಮೀರಿಯೆ ಸದ್ಗುಣ ನಿರ್ಗುಣ ರೂಪವಮೆರೆದಿಹ ಮುಮುಕ್ಷಾಂಗನಿಗೆತೋರುವ ತ್ವಂಪದ ತತ್ತ್ವಮಸಿಪದತೋರಿ ವಿರಾಜಿಪ ತುಷ್ಟನಿಗೆಧೀರೋದ್ಧಾರಗೆ ದೀನರನಾಥಗೆದೃಶ್ಯಾದೃಶ್ಯ ವಿದೂರನಿಗೆ ೪
ನಿರುಪಮ ನಿರಮಯ ನಿಜ ನಿರ್ಲಿಪ್ತಗೆನಿರ್ಭಯ ನಿರ್ವಿಕಲ್ಪನಿಗೆಪರಮಪುರುಷಗೆ ನಿಗಮೋದರನಿಗೆಪರಮಾರೂಢಾ ಮಾರ್ಗನಿಗೆಗುರುಚಿದಾನಂದ ಅವಧೂತಾತ್ಮಗೆಗುಣನಿಧಿ ತುರಿಯಾತೀತನಿಗೆಸ್ಥಿರಸಿದ್ಧ ಪರ್ವತದಾಸ ಶ್ರೀಪುರುಷಗೆಬಗಳಾ ಶ್ರೀಗುರು ರೂಪನಿಗೆ ೫

೪೦೧
ಜಯ ಜಯ ಮಂಗಳಜಯ ಮಂಗಳ ಸುಂದರಿ ಶಾಂಭವಿಗೆ ಪ
ಕಾಲಲಂದುಗೆ ಕೈಯಲಿ ಕಂಕಣ ಲಲಾಟದಿ ಚಂದ್ರನ ನಿಟ್ಟಿಹಳೇಕಳೆಯಿಂ ಕಾಂತಳೆ ಕಮಲ ಮುಖಿಯಳೆಹೊಳೆವ ಮುತ್ತಿನ ವಾಲೆಯಳೇನಳಿನ ಮುಖಿಯರ ನಡುವೆ ಕುಳಿತುಥಳ ಥಳ ಹೊಳೆಯುವಳೇಒಳಹೊರಗೆ ತನ್ನ ಪ್ರಭೆಯನು ತೋರಿನೋಡಿ ಓಲಾಡಿ ತಾ ನಗುವವಳೇ ೧
ಪಂಚರತ್ನದಾ ಪದಕವನಿಟ್ಟು ಪದ್ಮಾಸನದಲ್ಲಿ ಕುಳಿತಿಹಳೇಮಿಂಚುವ ಮೂಗುತಿ ಮೂಗಲಿ ಹೊಳೆಯುತಮಿಗಿಲಾದಾಭರಣವ ಧರಿಸಿಹಳೇಅಂಚು ರಂಗಿನ ಸೀರೆಯನುಟ್ಟುಅನಂತ ರೂಪವ ತೋರಿಹಳೇಅಂಚೆ ನಡೆಯಲಿ ನಡೆಯುತ ನಲಿಯುತಸದಾ ಮತ್ತಳಾಗಿರುವವಳೇ೨
ರತ್ನದ ಉಡಿದಾರ ಚಿನ್ನದ ಚಿಂತಾಕಹೊನ್ನಿನ ಡಾಬನು ತೊಟ್ಟಿಹಳೇಎಡೆ ಎಡೆಗೆ ತಾ ಧರಿಸಿಹಳೇಸಣ್ಣ ಬಣ್ಣದ ಕುಪ್ಪಸ ತೊಟ್ಟುಮುಗುಳ್ನಗೆ ಬೀರುತ ಕುಳಿತಿಹಳೇಧನುರ್ಬಾಣ ಪಾಶವ ಕೈಯಲಿ ಅಂಕುಶಆಯುಧ ಪಿಡಿದಿಹಳೇ ೩
ದುಂಡು ಕೈಯವಳೇ ಸುಂದರ ಕಾಯಳೇಚಂಡ ಮುಂಡ ಸಂಹಾರಕಳೇಮಾಂಡಲಿಕಳೇ ಮಹದ್ಭೂತಳೇಮಹಾಯೋಗಿ ವಿಲಾಸಳೇದಂಡಿ ಕಿರೀಟಳೇ ದಂಡೆಯ ಮುಡಿದಿಹಗೊಂಡೆಯಂದೊಲಿದಾ ಜಡೆಯವಳೇಹಿಂಡು ಹಿಂಡಾದ ದೈತ್ಯರನೆಲ್ಲರ ಖಂಡಿಸಿದೇವಿ ತಾ ಕೊಂದಿಹಳೇ ೪
ಆದಿರಹಿತಳೇ ಅಧ್ವಯ ರೂಪಳೇಅನಂತ ಕೋಟಿ ಪ್ರಭಾರೂಪಳೆಶುದ್ಧ ಬುದ್ಧಳೇ ನಿತ್ಯಮುಕ್ತಳೇಚಿದಾನಂದ ರೂಪಳೇಸದ್ಯೋಜಾತಳೇ ಸರ್ವಾತೀತಳೆಸಿದ್ಧ ಪರ್ವತ ಬಗಳೇಶುದ್ಧಾದ್ವೈತಳೆ ಸುಷುಮ್ನನಾಳಳೆಸೂಕ್ಷ್ಮವೆನಿಸುವಳೇ ೫

೧೩೧
ಜಯತು ಜಯತು ಜಯತು ಸತ್ಯ ಸನಾಥ ಜಯತು ನಿಜ ನಿರ್ಭೀತಜಯತು ಸದ್ಗುರುನಾಥ ಜಯತು ಅವಧೂತ ಜಯತು ಜಯತು ಪ
ಭುಗು ಭುಗಿಸೆ ಪ್ರಭೆ ಛಾಯೆ ಝಗಝಗಿಸೆ ಖಳೆ ಮಾಯೆನಿಗಿನಿಗಿಸೆ ಶತಸೂರ್ಯ ಹೊಳೆವ ಮಧ್ಯಧಗಧಗಧಗಿಪ ಶಶಿ ಪ್ರಭೆಯು ಸವಿದುಂಬಮೃತಸುಧೆಯನ್ನುತಗತಗತಗಿಪ ನಿತ್ಯ ನಿರ್ವಿಕಾರ೧
ಪಾಲಿಸಗಣಿತ ಮಹಿಮ ಪಾಲಿಸಕ್ಷಯ ರೂಪಪಾಲಿಸೈ ನಿಷ್ಕಾಮ ನಿರ್ವಿಕಲ್ಪಪಾಲಿಸನಂತ ಪರಮಾತ್ಮ ಹರ ನಿರ್ಲೇಪಪಾಲಿಸೈ ಚಿದ್ರೂಪ ಸತ್ಯ ಸಂಕಲ್ಪ ೨
ಶರಣು ನಿತ್ಯಾನಂದ ಶರಣು ನಿರ್ಗುಣ ಸಾಂದ್ರಶರಣು ಪ್ರಭೆಯ ಖಂಡ ಸಹಜ ಆನಂದಶರಣು ಭವಭವ ದುರಿತ ದಾವಾಗ್ನಿ ನಿಜ ಬಾಧಶರಣು ಭಕುತರ ವಂದ್ಯ ರಾಜಯೋಗೀಂದ್ರ೩
ವಂದಿಪೆ ಚಿದಂಬರ ನಿರಾಮಯ ನಿರಪೇಕ್ಷಾವಂದಿಸುವೆ ಆರೂಢ ಪರಮ ಆಧ್ಯಕ್ಷವಂದಿಸುವೆ ನಿಶ್ಚಲ ಪರಬ್ರಹ್ಮ ಘನರಕ್ಷಾವಂದಿಸುವೆ ಗುಣಾತೀತ ದಕ್ಷ ನಿಜ ಮೋಕ್ಷ ೪
ನಿರುಪಮ ನಿಜಾನಂದ ನಿಸ್ರ‍ಪಹನೆ ನಿಶ್ಚಿಂತಪರಮ ಪರತರವಸ್ತು ನಿರ್ಭಯಾನಂದಗುರುತರ ನಿರಂಜನ ನಿರಾಧಾರ ನಿರ್ಲಿಪ್ತಗುರು ಚಿದಾನಂದ ಅವಧೂತ ಪ್ರಖ್ಯಾತ ೫

೭೩
ಜಯದೇವ ಜಯದೇವ ಜಯ ಚಿದಾನಂದಜಯ ಜಯತು ಜಯ ಜಯತು ಜಯ ನಿತ್ಯಾನಂದ ಪ
ದೃಶ್ಯಾ ದೃಶ್ಯವಿದೂರ ದೂರ ಪರತತ್ವಾಮಿಕ್ಕು ಮೀರಿಹ ತೇಜ ತೇಜ ಮಹತ್ವಾಪೊಕ್ಕು ನೋಡಿಯೆ ಕಂಡು ನಿನ್ನ ನಿಜತ್ವನಕ್ಕು ನಿಜದಲಿ ಮಾಳ್ವೆ ಪಂಚೋಪಚಾರತ್ವ ೧
ತಾನೆ ತಾನಾದ ಸುವಸ್ತು ನಿರ್ಲೇಪಧ್ಯಾನ ಮೌನ ಸಮಾಧಿಗೆ ತೋರ್ವರೂಪಏನ ಬಣ್ಣಿಸುವೆನು ಈ ಜಗವ್ಯಾಪಾನಾನರ್ಪಿಸುವೆ ನಿನಗೆ ಗಂಧಾನುಲೇಪ ೨
ನಿರ್ಗುಣಾಷ್ಟಾಂಗ ಯೋಗಗಳ ಸಾಗಿಸುವೆಧರ್ಮದ ದುರಿತ ಕುಠಾರ ನೀನೆನಿಪೆಭರ್ಗಾ ಶ್ರೀವತ್ಸ ವೀಥಿಗಳ ರಕ್ಷಿಸುವೆಸರ್ಗಾದಿ ಮಹಾಪುಷ್ಪ ನಿನಗೆ ನಾನರ್ಪಿಸುವೆ೩
ವಾಸನಕ್ಷಯದ ನಿರ್ವಾಸನ ಸ್ಪೂರ್ತಿಭಾಸಮಾನದಿ ತೋರುತಿದೆ ನಿನ್ನ ವಾರ್ತೆಈಶ ತಾಪಸರುಗಳು ನಿನ್ನ ಮೂರ್ತಿದೇಶಿ ಕೋತ್ತಮ ನಿನಗರ್ಪಿಸುವೆ ಧೂಪಾರತಿ೪
ವಿಶ್ವಾತ್ಮ ವಿಶ್ವ ವಿಶ್ವಾಧೀಶನಾಥವಿಶ್ವ ನಾಟಕ ವಿಶ್ವ ಸೂತ್ರ ವಿಖ್ಯಾತವಿಶ್ವ ಪೂರಿತ ತಂತ್ರ ವಿಶ್ವಾತೀತವಿಶ್ವ ಜ್ಯೋತಿಯನರ್ಪಿಸುವೆ ಗುರುನಾಥ ೫
ನಿತ್ಯ ಸಂತುಷ್ಟ ಶಿರೋಭಾಗಅತ್ಯಂತ ಆನಂದವಹ ಸದಾಭೋಗಪ್ರತ್ಯಗಾತುಮತರ ಪುಷ್ಪಪರಾಗಅರ್ಥಿಯಲಿ ಅರ್ಪಿಸುವೆ ನೈವೇದ್ಯ ನಾನೀಗ೬
ಇಂತುಪಚಾರಪಂಚದ ಪೂಜೆಯನೀಗಅಂತರಂಗದಿ ಚಿದಾನಂದನಿಗೆ ಈಗ ಸಂತಸದಿಂದ ನಾ ಮಾಡುತಲಾಗಎಂತು ಎನಲಿ ತಾನೇ ತಾನಾದ ಬೇಗ೭

೪೦೩
ಜಯದೇವ ಜಯದೇವ ಜಯ ಬಗಳಾ ರಮಣಜಯ ಜಯತು ಜಯ ಜಯತು ಜಯ ನಿರಾವರಣ ಪ
ಆಧಾರವ ಹತ್ತಿ ಸ್ವಾಧಿಷ್ಠಾನವ ತೋರಿಭೇದಿಸಿ ಮಣಿಪೂರಕ ಅನಾಹತ ಸಾರಿಶೋಧಿಸಿ ವಿಶುದ್ಧಿ ಆಜ್ಞೇಯವನೇರಿಹರಿದು ತ್ರಿಕೋಣೆಯ ಸಹಸ್ರಾರ ಮೀರಿ೧
ತೋರಲು ಪ್ರಭೆಗಳು ತುಂತುರು ತುಂತುರುಗಳಿಂದಮೀರಿಯೆ ರವಿ ಶತಕೋಟಿಯ ಕಳೆ ಬೆಳಗುತ ಚೆಂದಬೀರುತ ಬೆಳಕನು ಪುಂಖಾನುಪುಂಖದಿಚಾರು ಮಂಗಳ ಮೂರ್ತಿ ಘುನ ಬ್ರಹ್ಮಾನಂದ ೨
ಅವ್ಯಕ್ತಾ ಚಲ ಗೋಚರ ಅಗಮ್ಯ ವಸ್ತುನಿರ್ವಿಕಲ್ಪ ನಿತ್ಯ ನಿರ್ಮಲ ಸಂವಿತ್ತುನವ್ಯ ಕಲ್ಪ ಸಿದ್ಧ ಪರ್ವತ ನಿಜ ಕರ್ತೃದಿವ್ಯ ಚಿದಾನಂದಾವಧೂತ ಬಗಳ ಪರವಸ್ತು ೩

೪೦೨
ಜಯದೇವ ಜಯದೇವ ಜಯ ಸದ್ಗುರುವೆಂದುಜಯವೆಂದು ಬೆಳಗಿದಳು ಬಗಳಾಂಬನಿಂದು ಪ
ಬಿಗಿದ ಹೆದೆ ಬೆನ್ನಿಂಗೆ ಧನು ಶರಗಳ ಸೆಕ್ಕಿತಗತಗನೆ ಹೊಳೆಯುತಿಹ ಖಡ್ಗವ ಹೊರಗಿಕ್ಕಿಝಗಝಗನೆ ಆಭರಣ ಹೊಳೆಯಲು ಕಳೆಯುಕ್ಕಿಮಿಗಿಲೆನಿಪ ಆರುತಿಯೊಳ್ ಮುಕ್ತಾಕ್ಷತೆಯನಿಕ್ಕಿ ೧
ಹತ್ತು ಕೈಯೊಳು ಹೊತ್ತು ನೆಗೆಹಿದಳು ಚದುರೆರತ್ನಖಚಿತದ ನತ್ತು ಹಣೆಬಟ್ಟು ಬೆದರೆಮತ್ತೆ ಕಿರುಬೆರಳ ಮುತ್ತು ಮುತ್ತುದುರೆಎತ್ತತ್ತಲೂ ಆರತಿಯ ಬಲು ಬೆಳಕು ಚದುರೆ ೨
ಎತ್ತಿ ಹಾಡುತ ಒಲಿದು ಬಗಳೆ ಗುರುವಿಂಗೆತಥ್ಥೆಯ್ಯ ತಥ್ಥೆಯ್ಯ ತಥ್ಥೆಯ್ಯ ಕುಣಿದುಎತ್ತಲಾಯಿತೋ ದೇಹ ಪರವಶವದಾಗೆಮತ್ತೆ ಕಂಡಳು ತನ್ನ ಚಿದಾನಂದಾತ್ಮಗೆ ೩

೪೦೪
ಜಯದೇವಿ ಜಯದೇವಿ ಜಯ ದುರಿತ ಬ್ರಹ್ಮಾಸ್ತ್ರಜಯಜಯ ಜಯತು ಪ್ರತಿಯಿಲ್ಲದಸ್ತ್ರಾ ಪ
ಉಟ್ಟಿಹ ಕಾಶಿಯ ಉಡಿಗೆತೊಟ್ಟಿಹ ಎದೆ ಕಟ್ಟುಕಟ್ಟಿದ ಖಡ್ಗ ಕಠಾರಿರಕ್ತದ ತಿಲಕವಿಟ್ಟುಮುಷ್ಠಿಯಲಿ ಮುದ್ಗರ ಶೂಲಧನು ಶರವಳವಟ್ಟುಬಿಟ್ಟ ಕಂಗಳ ಕಿಡಿಯುಛಟಛಟ ಛಟವಿಟ್ಟು ೧
ಏರಿಸಿ ಪಟ್ಟೆಯ ಹಲಗೆಎಡಬಲ ನೋಡದೆಹರಿಯ ಘನ ಶತ್ರುವಿನನಾಲಗೆ ಹಿಡಿದೆಳೆಯೆವೀರ ಮಂಡಿಯ ಹೂಡಿಅವುಡನೇ ಕಡಿಕಡಿದೇಹಾರಿಸಿದೆ ತಲೆಗಳನುಹಾ ಎನುತಲಿ ಬಿಡದೆ ೨
ಮುಕುಟ ಕಾಂತಿಯಮಿಹಿರಕೋಟೆಯ ಕಳೆಯು ಹಳಿಯೆಲಕಲಕನೆ ಬೆಳಗುತಿಹಕುಂಡಲ ಸರಪಳಿಯೆಚಕಚಕನೆ ಮೂಗುತಿಯಮುತ್ತು ಹೊಳೆಹೊಳೆ ಹೊಳೆಯೇಸಬಲೆ ಎನಿಪ ಚಿದಾನಂದಬಗಳಾಂಬ ತಿಳಿಯೆ೩

೪೦೫
ಜಯದೇವಿ ಜಯದೇವಿ ಜಯ ಬಗಳಾಮುಖಿಯೇಜಯವೆಂದು ಬೆಳಗುವೆನು ಜಯಭಕ್ತ ಸಖಿಯೇ ಪ
ಪೀತಾಂಬರಧಾರಿಣಿ ಪೀತಭೂಷಣೆಪೀತ ಪುಷ್ಪವು ನಿತ್ಯ ಪೀತೋಪಚರಣೆಪೀತಕುಂಡಲ ಹಾರಪೀತ ವರ್ಗಾವರಣೆಪೀತಮೂರ್ತಿಯ ನೆನೆವೆ ಪೀತ ಪ್ರಿಯೆ ಸ್ಮರಣೆ ೧
ಬತ್ತೀಸಾಯುಧ ಪಿಡಿದೆ ಭಯಂಕರಿ ಉಗ್ರೇಶತ್ರುನಾಶಕಿ ನೀನು ಭಕುತ ಸಾಹಸ್ರೇಮತ್ತೆ ಹುಡುಕುತ್ತಿರುವೆ ದುಷ್ಟರನು ಶೀಘ್ರೆನಿತ್ಯ ನಾ ಭಜಿಸುತಿಹೆ ಮನವ ಏಕಾಗ್ರೇ ೨
ಬ್ರಹ್ಮ ಚಿದಾನಂದ ಬಗಳಾಮುಖಿ ರಾಣಿಹಮ್ಮಳಿದ ಮಹಿಮರಾ ಮೆಚ್ಚಿನ ಕಟ್ಟಾಣಿಬ್ರಹ್ಮರಂಧ್ರದೊಳು ವಾಸಿಸುತಿಹ ದಿನಮಣಿಬಿಮ್ಮನೆ ನಮಗೊಲಿಯೆ ಶೀಘ್ರದಿಂ ಕೃಪಾಣಿ ೩

೭೪
ಜಾಗುರೇ ಯೋಗೀಶೇ ಭಲರೇಜಾಗುರೇ ಯೋಗೀಶೇಜಾಗುರೇ ಯೋಗೀ ಚತುರ್ಗುಣ ಪೋಗಿರಾಗವ ನೀಗಿ ತಾನೆ ತಾನಾಗಿ ಪ
ಆಶಾವರ್ಜಿತೇ ಬಹಳಾಯಾಸ ನಿರ್ಜಿತೇವಾಸನನಾದಂ ಮಹಮತ್ತಾದಂಭಾಸುರತಾದಂ ಭವನೀಜಾದಂ ೧
ಕರ್ಮ ವಿದಾರಿತೇ ಬಹಳ ವರ್ಮನಿಸ್ಸಾರಿತೇನಿರ್ಮಳಾತ್ಮಂ ನಿಷ್ಕಳಾತ್ಮಂ ಸ್ವಪೂರ್ಣತ್ಮಂಸಮತೇಜಾತ್ಮಂ ೨
ವಾದಾ ದೂರಿತೇ ಬಹಳ ವಿವಾದೋತ್ತಾರಿತೇ ಸದಾನಂದಂ ಸಹಜಾನಂದಂಚಿದಾನಂದ ಗುರು ತಾನಾದಂ ೩

೨೬೪
ಜೀವ ನಾನೆನ್ನಬೇಡ ಮುಕ್ತಾ ಜೀವ ನಾನೆನ್ನ ಬೇಡ ಮುಕ್ತಾ ನೀನೆದೇವ ಚಿದಾನಂದನು ನೀನೆ ಸತ್ಯ ಅವಶ್ಯಕ್ತಾ ಪ
ಇಲ್ಲ ನಿನಗೆ ಸತಿ ಇಲ್ಲಿ ಸುತರು ಎಂಬುದಿಲ್ಲಭಾಗ್ಯವು ಎಂಬುದಿಲ್ಲ ಮನೆಇಲ್ಲವು ಇಲ್ಲವು ದೇಹವು ನಿನಗೆಎಲ್ಲವು ಭ್ರಾಂತಿಯು ನೀ ಪರಮಾತ್ಮ ೧
ಆರು ನಿನಗೆ ತಾಯಿಯು ಯಾರು ತಂದೆಯ ತಾ ನಾರು ಹಿತರುಯೆಂಬರಾರು ಮೊದಲು ನೀನಾರುಆರಾರಿಲ್ಲವು ಕೆಡಬೇಡ ವ್ಯರ್ಥವುಪೂರಣ ತಿಳಿ ನಾ ಸಾಕ್ಷಾತ್ತೆಂದು ೨
ಒಳಗೆ ದೃಷ್ಟಿಯಿಡು ದೃಷ್ಟಿಯೊಳಗೆ ಉಕ್ಕುವ ಕಳೆಯೊಳಗೆ ಉಕ್ಕುವ ತೇಜದೊಳಗೆ ಆ ಬೆಳಗಿನ್ನೊಳಗೆಥಳಥಳಿಸುತ ಕಲೆ ತಾ ಬಂಡದಿನಳನಳಿಸುವ ಚಿದಾನಂದನೆ ಆಗೋ ೩

೧೩೨
ಜೀವನ ಶಟವಿ ಹೇಳುವೆ ಕೇಳುಜೀವನವೆಂಬುವ ಮಾತೇ ಶಟವಿದೇವ ಚಿದಾನಂದ ನೀನಿಹೆಶಟವಿ ಎಲೆ ಜೀವನ ಶಟವಿ ಪ
ನಾರಿಗೆ ಒಗೆತನವೋಂದೇ ಶಟವಿಮೋರೆಯ ನಾದರೆ ಮುರುಕಿಪ ಶಟವಿಮೂರುದಿನದ ಒಗೆತನ ಶಟವಿ ಎಲೆ ಜೀವನ ಶಟವಿ ೧
ಆರ ಸಂಗಡ ಜಗಳವು ಶಟವಿಆರನಾದರು ಅಣಕಿಪೆ ಶಟವಿಊರು ನನ್ನದೆಂಬ ಶಟವಿ ಎಲೆ ಜೀವನ ಶಟವಿ ೨
ನನ್ನದು ನನ್ನದು ಎಂಬೆ ಶಟವಿನಿನ್ನ ತಂದೆಯು ಹೋದನೆ ಶಟವಿನನ್ನದೆನೆ ನಾಚಿಕೆ ಬಾರದು ಶಟವಿ ಜೀವನ ಶಟವಿ೩
ಗುರು ಹಿರಿಯರ ನೀ ನಿಂದಿಪೆ ಶಟವಿಗುಣ ನಿನಗೇನೇನಿಲ್ಲವೊ ಶಟವಿಬರಿದೇ ಬಯಲಿಗೆ ಹಂಬಲಿಪೆ ಶಟವಿ ಎಲೆ ಜೀವನ ಶಟವಿ೪
ಶರೀರವು ಸ್ಥಿರವಲ್ಲವು ಶಟವಿತೆರಳುವೆ ನೀನು ಬೆಳಗಿಗೆ ಶಟವಿತರಳನ ಆರ ಕೈಯಲಿಟ್ಟೆ ಶಟವಿ ಎಲೆ ಜೀವನ ಶಟವಿ ೫
ನಿನ್ನ ಸಂಸಾರ ಸುಳ್ಳಿದು ಶಟವಿನೀರಲಿ ಅಕ್ಷರ ಬರದಂತೆ ಶಟವಿನಿನ್ನನು ಏನಂತ ಕಂಡಿಹೆ ಶಟವಿ ಎಲೆ ಜೀವನ ಶಟವಿ ೬
ನಿನಗೆ ಅನಂತ ಜನ್ಮವು ಶಟವಿನೀನು ಹೆಣ್ಣು ಗಂಡಲ್ಲ ಶಟವಿನಿನಗೆ ಹೇಳಲು ಹೆಸರಿಲ್ಲ ಶಟವಿ ಎಲೆ ಜೀವನ ಶಟವಿ ೭
ಪಾಪದ ವಿದ್ಯದ ಮೂಲದಿ ಶಟವಿರೂಪಿಗೆ ಬಂದಿಹೆ ನೀನೀಗ ಶಟವಿ ಆ ಪರಿಚಂದ್ರನು ಹೊಳೆದಂತೆ ಶಟವಿ ಎಲೆ ಜೀವನ ಶಟವಿ ೮
ಭೂಪ ಚಿದಾನಂದನ ಹೊಂದೆಲೋ ಶಟವಿರೂಪು ವಿರೂಪು ಆಗುವಿ ಶಟವಿದೀಪದೊಳು ನಿಜದೀಪ ನೀ ಶಟವಿ ಎಲೆ ಜೀವನ ಶಟವಿ ೯

೧೩೩
ಜೀವನು ಹೋಗಿ ನಿರಂಜನ ಪಂಕ್ತಿಗೆ ಕೂರಲು ಅನಬೇಕೇನಜೀವನೆ ಬ್ರಹ್ಮವು ಸತ್ಯವೆಂದರಿ ಇದಕೇನಿಲ್ಲನುಮಾನ ಪ
ಗುಲಾಮ ಹೋಗಿ ಸದರಿಗೆ ಕೂರಲುಗುಲಾಮನನ ಬೇಕೇನಗುಲಾಮನಹುದೇ ಸದರಿಗೆ ಕುಳಿತವಗುರು ಅವ ಸಂಶಯವೇನ ೧
ಗೌಡಿಯು ಅರಸಗೆ ಪಟ್ಟದರಸಿಯಾಗೆಗೌಡಿಗೆ ಅನಬೇಕೇನಗೌಡಿಯೆ ಪಟ್ಟದರಸಿಯಾಗಲಿಕೆಗೌಡಿಯೆ ಅರಸು ಅನಮಾನೇನು ೨
ನರ ಚಿದಾನಂದ ಸದ್ಗುರುವನು ಹೊಂದಲುನರನನು ಅನುಬೇಕೇನನರಚಿದಾನಂದ ಸದ್ಗುರುತಾನಲ್ಲದೆ ಯೋಚನೆ ಮಾಡಲಿಕೇನು ೩

೧೩೪
ಜೀವನ್ಮುಕ್ತನೆ ಇದ ಮಾಡು ನಿನಗುಂಟೆ ಜೋಡುದಿವಸದಿಂದಲಿ ದೃಢನಾಗಿ ಸಾಧಿಸುಕೇವಲ ಶಿವನೀನಾಗುವಿ ಆಗುವಿ ಪ
ಏರಿಸು ವಾಯುವನು ಏರಿಸಿದ ಬಳಿಕಪೂರಿಸು ಕುಂಭವನು ಘಳಿಗಿಂತಿರಲಲ್ಲಿಭೇರಿಯ ಕಹಳಾರವ ಮೃದಂಗವಸಾರಿಯೆ ಕೇಳುತ ಶ್ರಮವನು ಹರಿಸುತ ೧
ಆರು ನೆಲೆಗೆ ಮುಟ್ಟಿನಿಲ್ಲು ನಿಂತ ಬಳಿಕಕಾರಣ ಮೃಡನಾಳಪೊಕ್ಕು ಮರವೆಂದು ಕಳೆದಿಕ್ಕುವಾರಿಯಮೃತಧಾರೆ ತ್ರಿವೇಣಿಯಸಾರಸನದಿಯಲಿ ಮುಳುಗುತ ಮುಳುಗುತ ೨
ಚಂದ್ರಮಂಡಲ ಎದುರಲಿ ಇರಲು ನೋಡುತಲಿಮುಂದೆ ಜೋತಿರ್ಮಯವಿರಲು ಬ್ರಹ್ಮವೆ ತಾನಿರಲುಇಂದ್ರಾದಿಗಳಿಗಳವಡದಿಹ ಸ್ಥಾನವಾನಂದದೆ ಎರೈ ಗುರು ಕೃಪೆಯಿಂದಲಿ ೩
ಕಾಮ ಕ್ರೋಧಗಳವು ನಾಶ ಜನ್ಮ ನಿರ್ನಾಶಧೂಮವಾಗುವವು ಆಶಾ ಎಲ್ಲ ನಿರ್ದೋಷಕಾಮಿತ ಕರ್ಮ ಅವಿದ್ಯೆಯನುಳಿದುತಾಮರ ಸಾಧಿಪ ನಂದದಿ ಬೆಳಗುತ ೪
ಯೋಗವ ಸಾಧಿಸು ಇದು ನಿತ್ಯ ಆಗುವುದು ತಥ್ಯಾಯೋಗಿ ಜನಕೆ ಇದು ಪಥ್ಯಾ ಸತ್ಯವಿದು ಸತ್ಯಭೋಗೈಶ್ವರ್ಯದ ಮುಕ್ತಿಗಧಿಪತಿಯಾಗು ಚಿದಾನಂದ ಗುರು ನೀನಾಗಿಯೆ ೫

೪೦೬
ಜೋ ಜೋ ಎನ್ನಿ ನಿರ್ವಿಕಾರಿಯಜೋ ಎಂದು ತೂಗಿರಿ ಬ್ರಹ್ಮಾಸ್ತ್ರ ದೊರೆಯ ಪ
ವಾದಾತೀತಳಿಗೆ ಹೃದಯ ತೊಟ್ಟಿಲ ಮಾಡಿವೇದ ನಾಲಕು ಎಂಬ ನೇಣನೆ ಹೂಡಿಸಾಧನ ಚತುಷ್ಪಯ ಹಾಸಿಗೆ ಹಾಸಿಬೋಧಾನಂದಳನು ಭಾವದಿ ತಂದು ನೋಡಿ ೧
ಶುದ್ಧದ ಚವುರಿ ಸಡಿಲಿಸಿ ಮಗ್ಗುಲಲಿ ಶಾಂತರಸ ದೀಪಗಳ ಹಚ್ಚಿಹೊಡೆಯುತಿಹ ಭೇರಿಗಳ ಘಂಟಾರವ ಹೆಚ್ಚೆಎಡೆಬಿಡದೆ ಓಂಕಾರ ಮಂತ್ರ ಘೋಷಣವು ಮುಚ್ಚಿಕಿಡಿ ನಯನೆಯಳನು ನೋಡಿ ಹರುಷ ತುಂಬೇರಿ ೨
ಹಿರಿದಾ ಖಡ್ಗದ ಹಲಗೆ ಬಲ ಭಾಗದಲಿಟ್ಟುಶರಶಾಙರ್É ಬತ್ತಳಿಕೆ ಎಡಭಾಗದಲ್ಲಿಟ್ಟು ದುಷ್ಟ ಶತ್ರುಗಳ ಕಾಲದೆಸೆಗಿಟ್ಟುಪರಮಾಮೃತ ಪಾನ ಪಾತ್ರೆ ತುಂಬಿಟ್ಟು ೩
ಜೋ ಜೋ ಶತ್ರು ಸ್ತಂಭಿನಿ ಎನ್ನಿರಿ ನರರೆಲ್ಲಜೋ ಜೋ ಗತಿಮತಿ ಸ್ತಂಭಿನಿ ಎನ್ನಿರಿ ಸುರರೆಲ್ಲಜೋ ಜೋ ಜಿಹ್ವಾ ಸ್ತಂಭಿನಿ ಎನ್ನಿರಿ ಹರರೆಲ್ಲಜೋ ಜೋ ಸ್ತಂಭಿನಿ ಎನ್ನಿರಿ ಧರೆಯೆಲ್ಲ ೪
ಜೋ ಜೋ ಸುರಗಿರಿ ಧೈರ್ಯದಾಯಿನಿ ಜೋ ಜೋಜೋ ಜೋ ಹರಿ ಸಮ ಭಾಗ್ಯವೀವಳೆ ಜೋ ಜೋಜೋ ಜೋ ಶಿವ ಸಮ ಸತ್ವವೀವಳೆ ಜೋ ಜೋಜೋ ಜೋ ನಂಬಿದ ರಾಜ್ಯವೀವಳೆ ಜೋ ಜೋ ೫
ಭಕ್ತರಭಿಮಾನಿ ಭಕ್ತಮಾತೃಕೆ ಜೋ ಜೋಭಕ್ತವತ್ಸಲೆ ಭಕ್ತ ಕರುಣಾಳು ಜೋ ಜೋಭಕ್ತ ಜೀವನಿ ಭಕ್ತ ಬಂಧುವೆ ಜೋ ಜೋಭಕ್ತ ಚಿಂತಾಮಣಿ ಭಾಗ್ಯಳೇ ಜೋ ಜೋ ೬
ಯೋಗಾರೂಢಕೆ ಏಕಾಕ್ಷರಿ ಜೋ ಜೋಯೋಗಿ ಹೃದ್ವಾಸಿನಿ ಯೋಗ್ಯಳೇ ಜೋಜೋಯೋಗಿ ಬೃಹತ್ಯಾಗಿ ವಿರಾಗಿ ಜೋಜೋಯೋಗಿಗಳ ಭಂಡಾರಿ ಯೋಗೀಳೆ ಜೋಜೋ ೭
ಚಿದಬಿಂದುಗಳೆಂಬ ಮಂತ್ರ ಪುಷ್ಪ ಚೆಲ್ಲಿಚೆದುರೆಯರು ಮಂಗಳಾರತಿ ಬೆಳಗುತಿಲ್ಲಿಸದಮಳೆ ನೀ ಮಲಗು ಯೋಗ ನಿದ್ರೆಯಲಿಚಿದಾನಂದ ತಾನಾದ ಬಗಳಾಂಬೆ ಸುಖದಲಿ ೮

೪೦೭
ಜೋ ಜೋ ಜೋ ಜೋ ಎನ್ನಿ ನಿರ್ವಿಕಾರಗೆಜೋ ಎಂದು ತೂಗಿರಿ ಚಿದಾನಂದ ದೊರೆಗೆ ಪ
ಚಿದ್ಬಯಲಿನೊಳು ಹೃದಯ ತೊಟ್ಟಿಲ ಮಾಡಿಬದ್ಧ ವೇದಾಂತದ ನೇಣ ಬಿಗಿದುಸದ್ಭಾವವೆಂಬ ಹಾಸಿಗೆಯ ಹಾಸಿಶುದ್ಧಾತ್ಮನನು ಭಾವದಿ ತಂದು ನೀಡಿ ೧
ಅದ್ವೈತವೆಂಬ ಆಭರಣ ತೊಡಿಸಿಸಿದ್ಧ ಭೂಮಿಕೆ ಎಂಬ ಅಡವನಿಡಿಸಿಬುದ್ಧಿ ನಿರ್ಮಳವಾದ ತಲೆದಿಂಬನಿಡಿಸಿನಿದ್ದೆ ಮಾಡೋ ಬ್ರಹ್ಮಾನಂದ ಬೋಧದಲಿ ೨
ಚಿತ್ಪ್ರಭೆಯ ದೀಪವನು ಎಡಬಲದಿ ಹಚ್ಚಿಮೊತ್ತವಹ ದಶನಾದ ಭೇರಿಯರವ ಹಚ್ಚಿಮತ್ತೆ ಓಂಕಾರ ಮಂತ್ರ ಘೋಷದಿ ಮುಚ್ಚಿನಿತ್ಯಾತ್ಮನನು ನೋಡಿ ಹರುಷ ತುಂಬುತಲಿ ೩
ವಸ್ತು ಸಾಕ್ಷಾತ್ತೆಂಬ ಮುತ್ತೈದೆಯರೆಲ್ಲಸ್ವಸ್ಥ ಚಿತ್ತೆಂಬುದನೆ ಸಿಂಗರಿಸಿಕೊಂಡುನಿಸ್ಸಂಗನಹ ಆತ್ಮ ಶಿಶುವನೊಡತಂದುಸುಸ್ವರದ ನಾದದಲಿ ಜೋಗುಳವ ಪಾಡುತಲಿ ೪
ಜೋ ಜೋ ಕಾಮಸ್ತಂಭವ ಎನ್ನಿ ನರರೆಲ್ಲಜೋ ಜೋ ಕ್ರೋಧ ಸ್ತಂಭನ ಎನ್ನಿ ನರರೆಲ್ಲಜೋ ಜೋ ಮೋಹ ಸ್ತಂಭನ ಎನ್ನಿ ನರರೆಲ್ಲಜೋ ಜೋ ವಿಷಯ ಸ್ತಂಭನ ಎನ್ನಿ ನರರೆಲ್ಲ೫
ಜೋ ಜೋ ಯಮನಿಯಮಾಸನ ಅರುಹಿದವನೆಜೋ ಜೋ ಜೋ ಜೋ ಖೇಚರ ಮುದ್ರೆ ನಿಲಿಸಿದವನೆಜೋ ಜೋ ಜೋ ಜೋ ಅವಿದ್ಯೆ ಖಂಡಿಸಿದವನೆಜೋ ಜೋ ಜೋ ಜೋ ಜೀವನ್ಮುಕ್ತಿದಾತನೆ ೬
ಜೋ ಜೋ ಪರಮಾರೂಢನೆ ಪರಮೇಶಜೋ ಜೋ ಪರಮ ಪರೇಶನೆ ಪಂಡಿತಜೋ ಜೋ ನಿರುತ ವಸ್ತು ವ್ಯಕ್ತ ಅವ್ಯಕ್ತಜೋ ಜೋ ಶರಣ ರಕ್ಷಕ ರಾಜ ಯೋಗೀಂದ್ರ ಜೋ ಜೋ ೭
ಸತ್ಯ ಸನಾಥ ವಿಶ್ವೋತ್ಪತ್ತಿ ಜೋ ಜೋಪ್ರತ್ಯಗಾತುಮ ಪರಬ್ರಹ್ಮನೆ ಜೋ ಜೋನಿತ್ಯ ಸಹಜಾನಂದ ಚಿನ್ಮಾತೃ ಜೋ ಜೋಭಕ್ತರ ಭಂಡಾರಿ ಭಾಗ್ಯನೆ ಜೋ ಜೋ ೮
ಮಿಹಿರ ಶತಕಳೆಯೆಂಬ ಮಂತ್ರಪುಷ್ಪವ ಚೆಲ್ಲಿಮಹಾ ಬೆಳಕಿನ ಮಂಗಳಾರತಿಯ ಬೆಳಗುತಲ್ಲಿಅಚಲ ಸಮಾಧಿಯೆ ಆದ ಯೋಗನಿದ್ರೆಯಲಿಮಹಾ ಚಿದಾನಂದಾವಧೂತ ಮಲಗಿರು ಸುಖದಲ್ಲಿ ೯

೩೫೭
ಜ್ಞಾನದ ಬೆಳೆಯನು ಬೆಳೆಯೊ ಶ್ರೀಗುರುಬಲವನು ನೀ ಪಡೆಯೋ ಪ
ನಾದಗಳೆತ್ತನು ಹೂಡು ಅದಕೆ ತ್ರಿಗುಣದ ಕೂರಿಗೆ ಜೋಡುಬೋಧದ ಬೀಜವು ನೋಡು ಮನಸಿನ ಹೊಲದಲಿ ಬಿತ್ತಿಬಿಡು ೧
ಧರ್ಮದೆಡೆಯ ಹಿಡಿದು ಬಳಿಕ ಕರ್ಮ ಕಸವ ಕಳೆದುನಿರ್ಮಳ ಬೆಳೆಗೊಂಡು ಗುರು ತಾ ಸ್ವರ್ಮಣಿ ಬಲಗೊಂಡು ೨
ತೇಜರಾಶಿಗಳನೆಳೆದು ರಾಜಿಪ ರಾಜ ಕೊಳಗದಲಿ ಅಳೆದುಭೋಜನಕೆ ಎಡೆಮಾಡಿ ಚಿದಾನಂದ ಸಹಜ ಮೂರುತಿಗೂಡಿ ೩

೨೬೬
ಜ್ಞಾನವನ್ನೇ ತಿಳಿದುಕೋ ಮನುಜ ಜ್ಞಾನವನ್ನೇ ತಿಳಿದುಕೋ ಪ
ಸತ್ತು ಹುಟ್ಟಿಯೇ ಸತ್ತು ಮುಂದಣ ಜನ್ಮಕು ಮತ್ತುಮತ್ತು ಗಳಿಸಿಕೊಂಡು ವಿಪತ್ತು ಮತ್ತೆ ಬಂದಿದೆ ಮೃತ್ಯು ೧
ಹಾದಿಯಿದೆ ಸಾಪು ಕಾಣದೆ ಬಿಡುವೆ ಆಪುಬಯಕೆ ಯೋನಿಯ ಕೂಪು ಹಾಕಿ ಹಾಕಿ ಭಾಪು ೨
ಹಸಿವು ಬಿಡೋ ಹಸಿವು ಯಾಕೆ ಆದಿ ಪಶುವುಬಗುಳ ಬೇಡ ಹುಸಿಯು ನಾಚುತಿದೆ ಬಸಿರು ೩
ಹೆಚ್ಚ ಬೇಡ ಹೆಚ್ಚು ಅಹಂಕಾರ ಮುಚ್ಚುಓದಿಗೆ ಬೆಂಕಿಯ ಹಚ್ಚು ಮಾಡಿಕೊಂಡೆಯ ಕಿಚ್ಚು ೪
ಜ್ಞಾನವ ತಿಳಿಯಿನ್ನು ಯಮಗೆ ಕೊಡಬೇಡ ಬೆನ್ನುಆರುತಾನಿಹನೆನ್ನು ಚಿದಾನಂದನೆ ಎನ್ನ ೫

೨೬೫
ಜ್ಞಾನಿಯ ಕಾಣಲು ಧಗದಲ್ಯನಾಗುವ ಶಾಸ್ತ್ರಿಜ್ಞಾನಿಗಳು ಶಾಸ್ತ್ರಿಗೇನ ಮಾಡಿದರೋಏನಾದರೂ ಪೂರ್ವದ್ವೇಷವಿತ್ತಾದರೂತಾನು ನಿಂದಿಸಿ ಕುಲಸಹ ಕೆಡಿಸುವನು ಶಾಸ್ತ್ರಿ ಪ
ದನವ ಕಾಣುವ ವದನವರಿಹುತಲಿಹದನವ ಕಾಯ್ದವಗಿಂತ ಅತ್ತಿತ್ತ ಕಡೆ ಶಾಸ್ತ್ರಿಘನ ವೇದಾಂತವನೋದಿ ಜ್ಞಾನಿಗಳ ನರರೆಂಬಎನಿತುಗರ್ವ ಅಹಮ್ಮಲಿ ತನ್ನ ತಿಳಿಯ ಶಾಸ್ತ್ರಿ ೧
ಓದೋದು ವೇದಾಂತ ಓದುವನಾರೆಂದು ಅರಿಯಓದಿಹೆನೆಂಬ ಗರ್ವವು ತಲೆಗೆ ಹತ್ತಿಓದಿಯೇ ಅಲ್ಲಿ ಗೆದ್ದೆ, ಇಲ್ಲಿ ಗೆದ್ದೆ ನೆಂಬಅದನೊಬ್ಬನೆಲ್ಲೋ ಇರೆ ಆರಗೆದ್ದನು ಶಾಸ್ತ್ರಿ ೨
ಸಾಧುಗಳಿಗೆ ವಂದಿಸಲಿಲ್ಲ ಸಾಧುಗಳ ಮನೆ ಹೋಗಲಿಲ್ಲಸಾಧುವು ಮುಂದೆ ಹಾಯಲು ಕುಳಿತು ಏಳದಲಿಹನುಸಾಧುವ ಕಂಡು ನಡೆಯೇನು ನುಡಿಯೇನು ಎಂಬಸಾಧುವ ಭಜಿಪಗೆ ಬಹಿಷ್ಕಾರೆಂದನು ಶಾಸ್ತ್ರಿ ೩
ನಾನು ಅರಿಯೆ ನಿನಗೆ ಗತಿಯೇನು ಮತಿಯೇನುನಾನು ಎಲ್ಲಿಂದ ಬಂದೆ ಎಲ್ಲಿಗೆ ಹೋಗುವೆನಾನು ನನ್ಹೆಸರೇನು ಆರು ತಿಳಿಸುವರೆಂಬಜ್ಞಾನವಿಲ್ಲದೆ ಘಟಪದಿ ಮೆರೆದಿಹ ಶಾಸ್ತ್ರಿ ೪
ನಾನೇ ಶ್ರೇಷ್ಠನೆಂದೂ ನಾನೇ ದೊಡ್ಡವನೆಂದೂನಾನು ಆರಿಹೆನೆಂಬ ಎಚ್ಚರವದು ಹೋಗಿತಾನಾದ ಚಿದಾನಂದರಾದ ಸತ್ಪುರುಷಏನೇನೋ ನಿಂದೆಯ ಮಾಡಿ ನರಕಕ್ಕಿಳಿಸುವ ಶಾಸ್ತ್ರಿ ೫

೩೫೯
ತನು ಸಹ ಕಾಂಬುದೆ ಬ್ರಹ್ಮಸತ್ಯವು ಸತ್ಯವ ಕೇಳೆಲೋ ತಮ್ಮತನು ಸಹ ಕಾಂಬುದೆ ಬ್ರಹ್ಮತನುವನು ಬಿಟ್ಟು ಬೇರೇನೂ ತೋರದುನಿನಗೆ ಅರಿದು ನಿಮ್ಮಪ್ಪಗೆ ಅರಿದು ಪ
ಹೂವನೆ ಮುಂದೆ ಮುಂದಿಟ್ಟುಕೊಂಡುಸರ ಕಟ್ಟಬಹುದು ದೊಡ್ಡ ಚೆಂಡುಹೂವನೆ ಮುಂದಿಟ್ಟಿಕೊಂಡುಹೂವನೆ ಬಿಟ್ಟು ಪರಿಮಳ ಕಟ್ಟೆನೆಅವ್ವಗೆ ಅರಿದು ಅವ್ವನವ್ವಗೆ ಅರಿದು೧
ಮುತ್ತದು ಕೇವಲ ಜ್ಯೋತಿ ಕಿವಿಗೆಮುತ್ತಿಡುವರಿಗದು ನೀತಿಮುತ್ತದು ಕೇವಲ ಜ್ಯೋತಿಮುತ್ತದು ಬಿಟ್ಟು ಜ್ಯೋತಿಯ ಬಿಡು ಎನೆಮುತ್ತದು ಅಜಗೆ ಅರಿದು ಮಹೇಶ್ವರಗರಿದು೨
ಬೆಲ್ಲದ ಮುದ್ದೆಯ ನೋಡುಹಲ್ಲಿನಿಂದಲೇ ತಿನಬೇಕು ಕಡಿದುಬೆಲ್ಲದ ಮುದ್ದೆಯ ನೋಡುಬೆಲ್ಲವನು ಬಿಟ್ಟು ಸಿಹಿಯನು ತಿನ್ನೆನೆಬಲ್ಲ ಚಿದಾನಂದ ಸದ್ಗುರುಗರುದು ೩

೧೩೫
ತನ್ನ ತಿಳಿದು ತಾ ನಿರ್ಲಿಪ್ತನಾದವಗೆ ಇನ್ನೇನಿನ್ನೇನುತನ್ನ ತನ್ನೊಳು ಕಂಡು ತಾನಾದ ಮಹಾತ್ಮಗೆ ಇನ್ನೇನಿನ್ನೇನು ಪ
ನಾನು ನೀನೆಂಬ ಹಮ್ಮುಳಿದುಳಿದಾತಗೆ ಇನ್ನೇನಿನ್ನೇನುನಾನು ನೀನೇ ನಿಶ್ಚಯವೆಂದು ನಿಶ್ಚಲನಾದವಗೆ ಇನ್ನೇನಿನ್ನೇನು೧
ಸರ್ವವನರಿತು ಸರ್ವವೆ ತಾನಾದವಗೆ ಇನ್ನೇನಿನ್ನೇನುಸರ್ವ ಸರ್ವವು ಆದ ಸರ್ವಾತ್ಮಗೆ ಇನ್ನೇನಿನ್ನೇನು ೨
ಮನದ ಮಾಟಗಳಿಗೆ ಮರುಳಾದವಗೆ ಇನ್ನೇನಿನ್ನೇನುಮನವು ತಾನಾದವಗೆ ಮನಕೆ ನಿಲುಕದವಗೆ ಇನ್ನೇನಿನ್ನೇನು ೩
ಸುಖ ದುಃಖಗಳಿಗೆ ತಾ ಸಾಕ್ಷಿಯಾದವಗೆ ಇನ್ನೇನಿನ್ನೇನುಸುಖ ದುಃಖ ತೋರದೆ ಸಮಮನನಾದವಗೆ ಇನ್ನೇನಿನ್ನೇನು ೪
ಆರು ಸ್ಥಾನವ ಬಿಟ್ಟು ಮೂರನಾಶ್ರಯಿಸಿದವಗೆ ಇನ್ನೇನಿನ್ನೇನುಆರು ಆರನೆ ಸುಟ್ಟು ಅಗಣಿತ ಮಹಿಮಗೆ ಇನ್ನೇನಿನ್ನೇನು ೫
ಎರಡನುಳಿದು ಮತ್ತೆರಡನು ಮರೆತವಗೆ ಇನ್ನೇನಿನ್ನೇನುಎರಡರೊಳು ತಾನೆಡಬಿಡದಿಪ್ಪಗೆ ಇನ್ನೇನಿನ್ನೇನು ೬
ಮುಟ್ಟು ಚಟ್ಟುಗಳ ಮುಗಿಸಿದಾತಗೆ ಇನ್ನೇನಿನ್ನೇನುಮುಟ್ಟು ಚಟ್ಟಲಿ ಅಡಗಿರುವಾತಗೆ ಇನ್ನೇನಿನ್ನೇನು ೭
ಸಕಲ ವಿಧವ ನೋಡಿ ಸಂತುಷ್ಟನಾದವಗೆ ಇನ್ನೇನಿನ್ನೇನುಸಕಲದಿ ಬೆರೆತು ಸಂಶಯವಳಿದಿಪ್ಪವಗೆ ಇನ್ನೇನಿನ್ನೇನು ೮
ಚಿದಾನಂದ ಗುರುವಿನ ಚಿತ್ತದಿ ಪಿಡಿದಾತಗೆ ಇನ್ನೇನಿನ್ನೇನುಚಿದಾನಂದ ಗುರುವಿನ ಚಿತ್ಸುಖಭರಿತಗೆ ಇನ್ನೇನಿನ್ನೇನು ೯

೬೯
ತನ್ನ ತಿಳಿದು ತಾನಾದಂಥ ಗುರುವಿನ ಪಾದವ ಹೊಂದುತನ್ನನರಿಯದ ಗುರುವ ಹೊಂದಬೇಡೆಂದೆಂದು ಪ
ನಿನ್ನನು ದೇವನೆಂದೆನ್ನುವಗೆ ಈಗ ಶರಣು ಮಾಡೋಅನ್ಯ ದೇವರನೆಂದೆನ್ನುವನ ಹಾದಿ ಹೋಗಬೇಡೋ ೧
ಕೋಟಿರವಿ ತೇಜವ ಕಣ್ಣಲಿ ನೋಡುಬೂಟಿಕ ಕಾಯಕಗಳ ದೂರಮಾಡು ೨
ಸೋಹಂ ಮಂತ್ರವ ಹೇಳದವನ ಸೆರಗ ಬಿಟ್ಟು ನೀನುಊಹಿಸುವ ಬೇರೆ ಗುರುವನು ಉತ್ತಮ ಅವನು ೩
ವಾಸನೆ ಕಳೆದಾತಂಗೆ ಒಪ್ಪಿಸಯ್ಯ ತನುವಆಸೆ ಹಚ್ಚುವವನತ್ತ ಬಿಡಲಿ ಬೇಡ ಮನವ ೪
ಚಿದಾನಂದ ಗುರುವ ಹೊಂದು ಚಿನ್ಮಾತ್ರನಹೆ ಮದಮುಖ ಗುರುವ ಹೊಂದದಿರು ತಿಳಿ ಮುಂದೆ ನೀನು ಕೆಡುವೆ ೫

೨೬೭
ತನ್ನ ತಿಳಿಯದವನೇಕೆ ಇನ್ನವನನು ಸುಡಬೇಕು ಪ
ವೇದಾರ್ಥಿಯು ತಾನಾಗಿ ವಾದಿಸುತಿಹನೀ ಗೂಗೆಓದಿದ ಓದದು ವ್ಯರ್ಥ ಒಳ್ಳಿತಾಗಿ ಗಳಿಸಿದನರ್ಥ ೧
ಆಚಾರದಿ ಒದ್ದಾಡಿ ಅಡವಿಯ ಹಿಡಿದನು ಖೋಡಿಕುಚಾಳಿಯೆ ವ್ಯವಹಾರ ಕುಮಂತ್ರಕೆ ಬಲು ಧೀರ ೨
ಮಾನ್ಯರ ಕೋಪದಿ ಝಡಿವಾ ಅವಮಾನ್ಯರ ಕೊಂಡಾಡಿ ನುಡಿವಾಜ್ಞಾನದ ಹಾದಿಯ ಕಾಣ ಗೋಣಿಯ ಹೊರುವ ಕೋಣ ೩
ಮುಕ್ತಿಯ ತಿಳಿಯಲು ಬಾರ ಮುಂದಿನ ಭವಿತವ ನೋಡಭಕ್ತಿಯೆಂಬುದಿಲ್ಲ ಈ ಕತ್ತೆಗೇನು ಸಲ್ಲ ೪
ಕಲ್ಲನೆ ದೇವರು ಎಂಬ ಕಡಮೆಯಲಿಲ್ಲವು ಎಂಬಒಳ್ಳಿತಲ್ಲವು ಅವನಿರವು ಒಲಿದವನೇ ಚಿದಾನಂದ ಗುರುವು ೫

೩೫೮
ತನ್ನನು ತಿಳಿದೇ ತಾನೇ ನೋಡಲಿ ಆನಂದಾನಂದಂತನ್ನನು ಕಂಡೆ ತಾನಾಗಿರುತಿರೆ ಆನಂದಾನಂದಂ ಪ
ಶ್ರವಣ ಮನನ ನಿಧಿಧ್ಯಾಸನ ಸಾಧಿಸೆ ಆನಂದಾನಂದಂಶ್ರವಣ ಮನನ ನಿಧಿಧ್ಯಾಸದಿ ಬೆರೆತಿರೆ ಆನಂದಾನಂದಂ ೧
ಒಳ ಹೊರ ಸಾಧಿಸೆ ತನ್ನನು ತಾನು ಆನಂದಾನಂದಂಒಳ ಹೊರಗೆಂಬುದ ಮರೆತರೆ ನಿಜದಿಂ ಆನಂದಾನಂದಂ ೨
ಲಕ್ಷ್ಯವು ಕೂರಲು ತನ್ನಲಿ ನಿಜದಿಂ ಆನಂದಾನಂದಂಲಕ್ಷ್ಯವು ನಿಲ್ಲೆ ಸಾಕ್ಷಾತಿರುತಿಹ ಆನಂದಾನಂದಂ ೩
ನಾದವ ಕೇಳುತ ಸುಖದಲಿ ಮಲಗಿರೆ ಆನಂದಾನಂದಂನಾದವ ಮರೆತೇ ನಾದವ ಮೀರಿರೆ ಆನಂದಾನಂದಂ ೪
ಉರಿವ ಕರ್ಪೂರದಂದದಲಿರುತಿದೆ ಆನಂದಾನಂದಂಉರಿವ ಕರ್ಪೂರವು ತಾನಾಗಿದ್ದುದೆ ಆನಂದಾನಂದಂ ೫
ಬ್ರಹ್ಮವೆ ತಾನೆಂದು ತನ್ನಲೆ ಕಾಣಲು ಆನಂದಾನಂದಂಬ್ರಹ್ಮವು ತಾನಾಗಿ ತನ್ಮಯನಾಗಿರೆ ಆನಂದಾನಂದಂ೬
ನರನು ತನ್ನನು ಗುರುವೆಂದು ಕಾಣಲು ಆನಂದಾನಂದಂಗುರು ಚಿದಾನಂದನು ಸಹಜವಾಗಿರೆ ಆನಂದಾನಂದಂ ೭

೩೪೦
ತಪ್ಪುವುದೇ ಬ್ರಹ್ಮಕೆ ಗುರಿಯು ನೀನುತಪ್ಪಿದರು ತಾನು ತಪ್ಪದು ಅರಿಯೋ ನೀನು ಪ
ಕರವ ಭೂಮಿಗೆ ಬಡಿಯಲು ಪೆಟ್ಟಹೊರಗನೆ ಮಾಡುವುದು ಆವ ಪರಿಪರಿಪೂರ್ಣ ಬ್ರಹ್ಮ ತುಂಬಿರಲು ನೀನುಪರವೆಂದು ಕಾಣೆ ಸಂಶಯವೆ ನಿಜವಿರಲು ೧
ಗುಡ್ಡಕೆ ಗುರಿಯ ನೋಡಿದೆ ಅದುಅಡ್ಡಬಿಟ್ಟು ಬೇರೆ ನಿಲ್ಲುವುದೆ ನೋಡೆಖಡ್ಡಿಕೊಳ್ಳದು ಬ್ರಹ್ಮವಾಡೆ ನಿನ್ನದೊಡ್ಡ ಬ್ರಹ್ಮವೆನಲು ಸಂಶಯ ನೋಡೆ ೨
ಆಕಾಶ ನೋಡುವುದೇ ತಾನು ಆಆಕಾಶ ನೋಡಲು ನೂಕು ನುಗ್ಗೇನುಏಕ ಚಿದಾನಂದ ನೀನು ಜಗದೇಕ ಬ್ರಹ್ಮವೆಂದು ನಿನ್ನ ನೀನೇ ಕಾಣ ೩

೧೩೬
ತಾನೆ ಬ್ರಹ್ಮಪುಟ್ಟಿರೆ ಮಾನವರೆದೆಂಬರಯ್ಯತಾನೆ ತನ್ನ ತಿಳಿದು ನೋಡೆ ತಾನೆ ಚಿದಾನಂದ ವಸ್ತು ತಾನೆ ಬ್ರಹ್ಮ ಪುಟ್ಟಿರೆ ಪ
ತಂದೆ ತಾಯಿಯೆಂಬುವರು ಒಂದನ್ನೂ ಮಾಡಲಿಲ್ಲಇಂದು ಕಿವಿ ಮೂಗು ತಾಳಿ ಬಂದಿದೆ ಸಾಕ್ಷಾತ್ ವಸ್ತುತಾನೆ ಬ್ರಹ್ಮಯಿರುತಲಿದೆ ೧
ಭಾವ ಕಲ್ಪಿತವಲ್ಲದ ದೇವನೆ ತಾನಾಗಿರೆದೇವತೆಯೆಂಬುದ ಮರೆತು ಕಲ್ಲದೇವರ ಪೂಜಿಪರಯ್ಯಾತಾನೆ ಬ್ರಹ್ಮ ಇರುತಲಿರೆ ೨
ಕಾರಣಪುರುಷನಾಗಿ ದೇಹವನ್ನೇ ಧರಿಸಿರೆಕಾರಣಪುರುಷನ ಬಿಟ್ಟು ಬೇರೆ ಧ್ಯಾನಿಸುವರಯ್ಯಾತಾನೆ ಬ್ರಹ್ಮ ಪುಟ್ಟಿರೆ೩
ವೇದಶಾಸ್ತ್ರಪುರಾಣದ ಓದೆಲ್ಲ ತಾನೆ ಇರೆಓದನ್ನು ತಿಳಿಯದ ತಾವು ಓದಿಓದಿ ಸಾವರಯ್ಯೋ ತಾನೇ ಬ್ರಹ್ಮ ಪುಟ್ಟಿರೆ ೪
ಇಂದು ಹರವಾಸರೆಂದು ಬಂಧ ಹೆಸರ ಮಾಡುತಬಂಧ ಹರ ಚಿದಾನಂದಗೆ ಒಂದು ಕುತ್ತ ಎಣಿಸರಯ್ಯೋ ತಾನೆ ಬ್ರಹ್ಮ ಪುಟ್ಟಿರೆ ೫

೩೬೦
ತಾನೇ ಬ್ರಹ್ಮ ತಾನೇ ಬ್ರಹ್ಮತಾನೇ ತಾನೆಯಾಗಿ ತನ್ನನೆ ಮರೆತರೆ ಪ
ಮನಸಿನೊಳಗೆ ಕೂಡಿ ಮನಸದು ಎರಡಾಗಿಮನದ ಅರಿವ ನಿಜದರಿವನೆ ಅರಿತರೆ೧
ಬುದ್ಧಿಯೊಳಗೆ ಕೂಡಿ ಬುದ್ಧಿಯದು ಎರಡಾಗಿಬುದ್ಧಿಯ ಅರಿವು ನಿಜದರಿವನೆ ಅರಿತರೆ೨
ಇಂದ್ರಿಯ ದೊಳಗೆ ಕೂಡಿ ಇಂದ್ರಿಯಗಳೆರಡಾಗಿಇಂದ್ರಿಯವರಿದ ಚಿದಾನಂದನು ಅರಿತರೆ ೩

೩೬೧
ತಾನೇ ಬ್ರಹ್ಮನಿರುತಲಿರೆತಾನೇ ವಸ್ತುವಿರುತಲಿರೆತಾನೇ ತನ್ನ ತಿಳಿಯಲಾರದೆಏನೇನೋ ಮಾಡುತಲಿಹರು ಪ
ಆಸನವನು ಒಲಿದು ಒಲಿದುನಾಸಿಕದೊಳು ದೃಷ್ಟಿಯಿಟ್ಟುಸೂಸಲೀಯದೆ ಮನವ ನಿಲ್ಲಿಸಿಈಸು ಪರಿಯ ಕಾಂಬುದೇನೋ ೧
ಅನ್ನವ ವರ್ಜಿಪುದಾರಿಗೆಅಡವಿಯೊಳು ಇಹುದು ಯಾರಿಗೆತನ್ನ ತಿಳಿಯಲಾರದ ದುಃಖತನ್ನ ನಿಂತು ಮಾಡುತಲಿಹುದು ೨
ಚೇತನರಹಿತ ಶರೀರಕ್ಕೆಚೇತನವಾಗಿ ತಾನೆ ಇರ್ದುಚೇತನಾತ್ಮಕ ಚಿದಾನಂದಚೇತನನಾಗಿ ಆಡುತಲಿರೆ ೩

೨೬೮
ತಿಳಿದು ನೋಡಲೆ ಮನವೆ ತೀವ್ರ ತಾಮಸವೇಕೆ ತಿಳಿದುಕೋನಿನ್ನ ನೀನು ತಿಳಿಯೆ ಮಾಯೆಗಳಿಲ್ಲ ತಿಳಿಯೆ ಶಿವನಾಗುತಿಹೆಬಲುಮರವೆ ಯಾಕೆ ಪಾಪಿ ಮನವೆ ಪ
ಮಂಗಳ ಮಹಾ ಶೂನ್ಯ ಮಹಾ ಪುರುಷ ನಿಸ್ಸಂಗ ನಿರ್ಗುಣ ನಿರಾಶಾಸಂಗದೂರ ಉದಾರ ಸಕಲ ಜಗದಾಧಾರ ಮಂಗಳಕಾರ ಮಹಿಮತುಂಗ ವೇದಾಂಗಗಳ ಗಣಿತಕಪಾರ ದುರಿತ ಭಂಗತರ ತರಂಗ ಮೂರ್ತಿಜಂಗಮನೆ ನೆಲೆಸಿಹನು ಜನಿಸಿನೀ ನಿನ್ನೊಳಗೆ ಕಣ್ಗಾಣದಿಪ್ಪೆ ಗುರುವ ಮನವೆ ೧
ಮಾಯೆ ಮೋಹಕೆ ಸಿಲುಕಿ ಮಗ್ನನಾಗಿರುತಿಹೆ ಕಾಯವಿದು ನಿನಗೆ ಸ್ಥಿರವೇಆಯಾಸಂಬಡಬಹುದೆ ಅಲ್ಪ ಮತಿಗಳ ಕೂಡಿ ನ್ಯಾಯವೆ ನಿನಗೆರಾಯ ನಾನೆಂಬ ಹೆಮ್ಮೆಯ ತಾಳ್ದು ರತಿ ಬಹಳ ಸ್ತ್ರೀಯರಲಿ ಸೊಗಸಬಹುದೇಮಾಯಕಿಂತಕಟ ನೀ ಶಿಲ್ಕಿ ಒಳಗಾಗುವುದುಮಾಯವೋ ಇದು ಮಹಿಮೆಯೋ ಮನವೇ ೨
ಎನ್ನ ಸತಿಸುತ ಬಂಧು ಎನ್ನ ಗೃಹವು ಇದೆಂದು ಬನ್ನಬಡುತಿಹೆ ಯಾತಕೆನಿನ್ನೊಳಗೆ ಇಹ ವಸ್ತು ನೀನೆ ಕಾಣದಲಿರೆ ಮನ್ನಿಸಾ ಗುರುಹಿರಿಯರಉನ್ನತ ಕಟಾಕ್ಷದಲಿ ಒಳಗೆ ದೃಷ್ಟಿಸಿ ಕಂಡು ನಿನ್ನೊಳಗೆ ಪುಳಕನಾಗುಚಿನ್ಮಯ ಚಿದಾನಂದ ಚಿದ್ರೂಪ ತಾನೆಂದುನಿನ್ನ ಸಂಶಯ ಕಳೆಯೋ ಮನವೇ ೩

೨೬೯
ತಿಳಿಯಲೋ ರನ್ನಾ ನಿನ್ನೊಳು ನಿನ್ನ ಪ
ಅನ್ನವ ನೀಡು ತುಪ್ಪವ ಕೊಡುಚೆನ್ನಾಗಿ ಉಣ್ಣುವವನಾರೋ ಅವನಾರೋ ೧
ಹೋಳಿಗೆ ಹಿಸುಕಿ ಹಾಲೊಳು ಕುಸುಕಿಹೋಳಿಗೆ ಉಂಬವನ್ಹೆಸರೇನೋ ಹೆಸರೇನೋ೨
ಜಡಕೆಯು ಇಲ್ಲಾ ಇದೆಲ್ಲಾಮೃಢ ಚಿದಾನಂದ ನೀನೆನ್ನು ನೀನೆನ್ನು ೩

೨೭೦
ತಿಳಿಯಿರೋ ಸಮ್ಮಿಂದ ಹೇಳುವೆ ಸುಧಾನಂದ ಪ
ಉಂಬವ ತಾನಾರು ಉಣಬಲ್ಲವನಾರುಸಂಭವಿಸುವನಾರು ಸಮನಿಸಿ ಇಂಬಾಗಿಹನಾರು ೧
ಕಣ್ಣಿಂದಲೆ ನೋಡಿ ನೋಡುವ ಕಣ್ಣು ಕಾಂಬುದೆ ಖೋಡಿಕಣ್ಣೊಳಗದೆ ನೋಡಿ ಕಂಡಾ ಕಣ್ಣಹುದೆಂದಾಡಿ ೨
ಕಿವಿಯಿಂದಲೆ ಕೇಳಿ ಕಿವಿಯನು ಕಿವಿಯೆ ಗಯ್ಯಾಳಿಕಿವಿಯೆ ದಿವಾಳಿ ಕಿವಿಗಾ ಕಿವಿಗರಿವಹುದ್ದೇಳಿ ೩
ನಾಲಗೆ ನುಡಿಯಿರಲಿ ನುಡಿವುದೆ ನಾಲಗೆ ಬರಿ ತೊಗಲುನಾಲಗೆಯೊಳಗಿರಲು ಮೂಲದ ನಾಲಗೆಯಲಿ ಬರಲು ೪
ಮೂಗಿನ ಮೂಲಕ ಪ್ರಾಣ ಅರಿವಡೆ ಮೂಗು ಬಲ್ಲುದೆ ಕೋಣಮೂಗರಿದವ ಜಾಣ ಮೂಗದು ನಿರ್ವಾಣ ೫
ತನುವಿನ ಒಳಗಿರ್ದು ಚೇತನ ಜನಿಸುತಲಿರುತಿರ್ದುಇನಿತಾದಲಿರ್ದು ಬೆಳಗುವ ತಾನೆ ತಾನಿರ್ದು ೬
ರೂಪಕೆ ವಿರಹಿತನೆ ತೋರ್ಪಾ ರೂಪವೇ ತಾನಿಹನಾಲೇಪಕೆ ದೂರಿಹನಾ ಚಿದಾನಂದಪತಿ ಗುರುವವನಾ ೭

೨೭೧
ತುಪಾಕಿ ಸಾಧನವನು ತ್ವರಿಯ ಬಿದ್ದು ಮಾಡುತಿರುವೆಶಾಬಾಸು ಶಿವನೇ ನೀನಣ್ಣ ಪೇಳುವೆನಣ್ಣ ಪ
ಮೌನವೆಂದೆನಿಪ ಮುಸೈದೆ ಸಹಿತಾಗಿಜ್ಞಾನ ಪಡೆದಳವ ಬಗಿಯಣ್ಣಾ ಸಾಧಿಸು ಅಣ್ಣಧ್ಯಾನವೆಂದೆನಿಪ ತಲೆಕಟ್ಟನೆ ಕಟ್ಟಿಆನಂದವನೆ ಆಡಣ್ಣ ಸಾಧಿಸು ಅಣ್ಣ ೧
ಆರು ಚಕ್ರವೆಂಬ ಆರು ಕಟ್ಟಿನ ತುಪಾಕಿಧೀರತನದಿಂದ ಪಿಡಿಯಣ್ಣಾ ಸಾಧಿಸು ಅಣ್ಣಮೂರಾವಸ್ಥೆಯೆಂಬ ಮೂವೆರಳ ಮದ್ದ ಹೊಯ್ದಪೂರಾಯದವನ ಮಾಡಣ್ಣ ಸಾಧಿಸು ಅಣ್ಣ ೨
ಇಡಾಪಿಂಗಳವೆಂಬ ಎರಡು ಗುಂಡನೆ ಹಾಕಿರೂಢಿ ಎಂಬ ಗಜವ ಜಡಿಯಣ್ಣ ಸಾಧಿಸು ಅಣ್ಣಕೂಡಿಹ ಸತ್ವನೆಂಬ ಕೂರಿ ರಂಜಕವರೆದುಗೂಡು ಗುರು ಜಾವಿಗೆ ಒತ್ತಣ್ಣ ಸಾಧಿಸು ಅಣ್ಣ ೩
ಆಸನ ನಳಿಕೆಯೆಂಬ ಆಧಾರವನೆ ಆಂತುವಾಸರ ಹೊಗ್ಗೊಡಬೇಡಣ್ಣ ಸಾಧಿಸು ಅಣ್ಣನಾಸಿಕಾಗ್ರವು ಎಂಬ ನೊಣನ ದಿಟ್ಟಿಸಿ ನೋಡಿಸೂಸದೆ ಏರಿಸಿ ನಿಲ್ಲಣ್ಣ ಸಾಧಿಸು ಅಣ್ಣ ೪
ಬರಿಯ ಪ್ರಣವವೆ ಎಂಬ ಬೆರಳ ಬೊಬ್ಬೆಯನಿಟ್ಟುಭರದಿ ಭೀತಿಯನಳಿಯಣ್ಣಾ ಸಾಧಿಸು ಅಣ್ಣಗುರು ಚಿದಾನಂದನು ಎಂಬ ಗುರಿ ಭ್ರೂಮಧ್ಯವೆ ಇರೆಗುರಿಯ ತಾಗುವಂತೆ ಇಡಣ್ಣ ಸಾಧಿಸು ಅಣ್ಣ ೫

೧೪೧
ತೋರು ಶರೀರದೊಳಗಾತ್ಮನಾ ತೋರು ಶರೀರದೊಳಗೆಸಾರ ನಿರ್ಗುಣ ನಿತ್ಯ ಶುದ್ಧನಾಪ
ಲೋಕಂಗಳ ಮಾಡಿರುವ ಲೋಕಕೆ ತಾನೆ ಗುರುವಲೋಕವೇ ತಾನಾಗಿರುವ ಬಹುಲೋಕ ಲೋಕದ ಹೊರಗಿರುವ ದೇವನೇ ೧
ದೃಶ್ಯವೇ ತಾನೆನಿಪ್ಪ ದೃಶ್ಯವ ನೋಡುತಲಿಪ್ಪದೃಶ್ಯಕೆ ಆನಂದಿಪ ಎಲ್ಲ ದೃಶ್ಯಕೆ ಆಧಾರವಿಪ್ಪನೇ ೨
ಬೋಧನೆ ತಾನಾಗಿರ್ದ ಬೋಧಾಬೋಧದ ಸಿದ್ಧಬೋಧದಿ ತಾ ಬೆರೆದಿರ್ದಾ ಬರೆ-ಬೋಧಾ ಬೋಧಂಗಳ ಹೊದ್ದದ ದೇವನೇ ೩
ನಾದದ ಮನೆಯಾಗಿಪ್ಪ ನಾದವ ಕೇಳುತಲಿಪ್ಪನಾದದಿಂ ನಲಿದಿಪ್ಪ ಮಹಾನಾದನಾದಕೆ ಬೆರೆದಿಪ್ಪ ದೇವನೇ ೪
ನಿರುಪಮ ನಿರಾಲಂಬ ನಿರವಯ ನಿಶ್ಚಲಬಿಂಬಶರಣರೊಳು ಬಲಗೊಂಬ ವರಪರಮ ಗುರು ಚಿದಾನಂದ ದೇವನೇ ೫

೨೭೨
ತ್ಯಜಿಸಬಾರದೋ ನೀವು ಸಜ್ಜನರ ಸಂಗತ್ಯಜಿಸಬಾರದೋ ನೀವು ಪ
ದರುಶನ ಮಾಡೆ ದುರ್ದೋಷವು ಹರಿವುದುಸ್ಪರ್ಶವ ಮಾಡೆ ಪ್ರಪಂಚವು ಹರಿವುದು ೧
ಮಾತು ಆಡುತಲಿರೆ ಮೈಯದು ಮರೆವುದುಪ್ರೀತಿಯಿಂ ಶರಣೆನೆ ಪರಿಣಾಮ ತೋರ್ಪುದು ೨
ವಾಸನೆ ಇರೆ ನಿರ್ವಾಸನೆಯಹುದುಸೂಸುತಲಿಹ ಮನ ನಿಶ್ಚಿತವಹುದು ೩
ಸಂಶಯವಿರೆ ನಿಃಸಂಶಯವಹುದುಹಂಸೋಹಂ ಭಾವ ಸಹಜಾವಾಗಿ ನಿಲ್ಲುವುದು ೪
ಸುದತಿ ಇಹಪರ ತಾ ಬಿಡಲು ಬಹುದುಸುಧಾ ಚಿದಾನಂದನ ಬೆರೆತರೆ ತ್ಯಾಗ ಮಾಡಲು ಬಾರದು ೫

೨೭೩
ಥೂ ಥೂ ಚತುಷ್ಪಾದಿ ನಿನಗೇತಕೋ ಗುರುಹಾದಿಮಾತು ತತ್ವದ ಬೋಧ ನಡತೆಯಲಿ ಕತ್ತೆಯಾದೆ ಪ
ನೀರಲಿ ನೆರಳನೆ ನೋಡುವೆ ಹಣೆಗೆ ಗಂಧವ ತೀಡುವೆಹಾರ ತುರಾಯ್ಗಳ ಸೂಡುವೆ ಮೋರೆಯನೆತ್ತೆತ್ತ ಮಾಡುವೆ ೧
ಜಾರೆಯರೊಡನೆ ಬೆರೆವೆ ಕಿಸಿ ಕಿಸಿ ಹಲ್ಲನೆ ಕಿರಿವೆಬಾರದ ಪದವ ಒದರುವೆ ಹಮ್ಮಿನಿಂದೆಲ್ಲೆಲ್ಲಿ ಮೆರೆವೆ ೨
ಬಿಡುವೆನು ಗುರುಪಾದವೆಂಬೆ ಬೇಡಿತಿಯ ಕೂಡುವೆನೆಂಬೆಸುಡುವೆನು ಕಪನಿಯನೆಂಬೆ ಲಿಂಗವ ಕಟ್ಟಿರಿ ಎಂಬೆ ೩
ವಿಧ ವಿಧ ವೇಷವ ಧರಿಸಿ ಬಹು ಜಾತಿಯಲಿ ಕೈ ಬೆರಳಿರಿಚಿದಾನಂದ ನೀ ಮೆರೆಸಿ ಬಾಳುವೆ ದೊಡ್ಡವನೆನಿಸಿ ೪

೧೪೨
ದಣಿದು ಮಲಗಿದೆನು ನಾನು-ದಣಿದು ಮಲಗಿದೆನುಮಣಿದೆ ಗುರುವಿಗೆ ಹಣಿದೆ ಶತ್ರುಗಳತಣಿದೆ ರಕ್ತವ ಕುಣಿದೆ ತಲೆಗಳಘಣ ಘಣ ಘಣ ಘಣ ನಾದವ ಕೇಳುತಮಣಿಮಯ ಮಂಟಪ ಉನ್ಮನಿ ಬಯಲಲಿ ಪ
ತರಿಸಿ ತಾಪವನು ಕಾಲಲಿ ಒರೆಸಿ ಮಮತೆಯನುಹರಿಸಿ ಸಂಶಯ ಹುರಿಸಿ ದುರ್ಗುಣಕೊರೆಸಿ ವ್ಯಸನವ ಜರಿಸಿ ಮದಗಳಸುರಿ ಸುರಿ ಸುರಿವ ಸುಧಾ ಕಾರಂಜಿಯಮೆರೆವ ಸಹಸ್ರಾರ ಚಪ್ಪರ ಮಂಚದಿ ೧
ಹೊಡೆದು ವಾಯುಗಳ ತುಂಡರಿಸಿ ಕ್ಲೇಶಗಳಮಡಿಯೆ ಈಷಣವು ಕಡಿಯೆ ಕಲ್ಪನೆಕೆಡೆಯೆ ಭ್ರಾಂತಿಯು ಒಡೆಯೆ ಶತ್ರುಗಳುಕಿಡಿ ಕಿಡಿಯುಗುಳುತ ವಿಷ ಮೂರ್ಧ್ನಿಯಬಿಡಿ ಮುತ್ತುದುರುವ ಹಂಸತೂಲದಿ ೨
ಬಳಿದು ವ್ರತಗಳನು ಎಳೆದು ಮತಗಳನುತುಳಿದು ಗರ್ವವ ತೊಳೆದು ಶೋಕವಮುರಿದು ರಾಗವ ಸೆಳೆದು ಮಾನವಥಳಥಳ ಬೆಳುದಿಂಗಳಿನೊಳುಬಲು ಚಿದಾನಂದ ಬ್ರಹ್ಮವೇ ಆಗಿಯೆ ೩

೧೪೩
ದಶವಿಧ ನಾದವು ಭಕ್ತರಿಗೆ ಕೇಳುತಿದೆದಶವಿಧ ನಾದವು ಭಕ್ತರಿಗೆ ಕೇಳುತಿದೆದುಶ್ಮಾನರು ಇಬ್ಬಗೆಯಾಗಲು ದೆಸೆ ಬಿರಿಯಲುಯೋಗಿಯ ಕಿವಿ ಎರಡರಲಿ ಪ
ಛಿಣಿ ಛಿಣಿ ಎಂಬ ಚಿನ್ನಿನ ನಾದವು ಚಿತ್ರ‍ಕತಿಯಾಗಿ ಚಿಮ್ಮತಿರೆಝಣಝಣವೆಂಬ ಝಿಲ್ಲಿಯ ನಾದವು ಝೇಂಕಾರದಿ ಝೇಂಕರಿಸುತಿದೆಎಣಿಕೆಯಿಲ್ಲದೆ ನಾಗಸ್ವರದ ಧ್ವನಿ ಎಡೆದೆರೆಪಿಲ್ಲದೆ ಕೂಗುತಿದೆಧಣಧಣ ಎನಿಪ ತಾಳನಾದವು ದಟ್ಟಣೆಯಾಗಿ ತುಂಬುತಿದೆ ೧
ಮೃಣು ಮೃಣು ಎನಿಪ ಮೃದಂಗ ನಾದವುಮುಂಕಾಟ್ಟಾಗಿಯೆ ನುಡಿಯುತಿದೆತನನಾ ಎಂಬ ವೀಣಾಸ್ವರವು ತಂಪಾಗೆಲ್ಲವ ಮುಚ್ಚುತಿದೆಘನಘನ ಎನುತಲಿ ಶಂಖನಾದವುಘಮ್ಮೆನ್ನುತಲಿ ಭೋರೆನುತಲಿದೆಘಣಘಣ ಎನುತಲಿ ಘಂಟಾನಾದವುಘಂಟ್ಯಾಗಿಯೆ ಓಂ ಎನುತಲಿದೆ ೨
ಭೇರಿಯ ನಾದವು ಧಮಧಮ ಎನುತಲಿ ಬಹಳಾಗಿಯೆ ಭೋಂಕರಿಸುತಿದೆಘೋರದಿ ಮೇಘದ ನಾದವು ಘರ್ಜಿಸುತಿದೆ ಘುಡಿ ಘುಡಿಸುತಿದೆನೂರಾರು ಸಿಡಿಲಂತೆ ನೂಕು ನುಗ್ಗಡಿಸುತಿದೆವೀರ ಚಿದಾನಂದ ವಿಸ್ಮಯನಾಗಲು ವಿಚಿತ್ರದಿ ಬಾರಿಸುತಿದೆ ೩

೧೪೪
ದಶವಿಧ ನೌಬತ್ತಾಗುತದಣ್ಣದಶವಿಧ ಸೌಬತ್ತಾಗುತದೆದುಸುಮಾನರ ಎದೆ ಇಬ್ಬಗೆಯಾಗಲುದೆಸೆ ಬಿರಿಯಲು ಯೋಗಿಯ ಕಿವಿಯೆರಡಲ್ಲಿ ಪ
ಚಿಣಿ ಚಿಣಿ ಎಂಬ ಸಿಂಜಿಣಿನಾದವುಚಿತ್ರ‍ಕತಿಯಾಗಿ ಚಿಮ್ಮುತಿದೆಝಣಝಣಕೃತವೆಂಬ ಝಿಯಾನಾದವುಝೇಂಕಾರದಿ ಝೇಂಕರಿಸುತಿದೆಎಣಿಕೆಯು ಇಲ್ಲದೆ ನಾಗಸ್ವರ ಧ್ವನಿಎಡದೆರಪಿಲ್ಲದೆ ಕೂಗುತಿದೆಘಣಘಣ ಎನಿಪ ತಾಳದ ನಾದವುದಟ್ಟಣೆಯಲಿ ತಾ ತುಂಬುತಿದೆ ೧
ಮೃಣು ಮೃಣು ಎನಿಪ ಮೃದಂಗ ನಾದವುಮುಂಕಟ್ಟಾಗಿಯೆ ನುಡಿಯುತಿದೆ ತನನಾ ಎಂಬವೀಣಾ ಸ್ವನವು ತಂಪಾಗೆಲ್ಲವ ಮುಚ್ಚುತಿದೆಘನ ಘನ ಎನುತಲಿ ಶಂಖನಾದವುಘಮ್ಮೆನ್ನುತಲಿ ಭೋರೆನುತಲಿದೆಘಣಘಣ ಎನುತಲಿ ಘಂಟಾನಾದವುಘಂಟ್ಯಾಗಿಯೆ ಓಂ ಎನುತಲಿದೆ ೨
ಭೇರಿಯ ನಾದವು ಧಮಧಮ ಎನುತಲಿಧಾಂಧಮ ಧಾಂಧಮ ನುಡಿಯುತಿದೆಘೋರದಿ ಮೇಘದ ನಾದವು ಗರ್ಜಿಸುತಿದೆಘುಡಿ ಘುಡಿಸುತಿದೆ ನೂರಾರು ಸಿಡಿಲಂತೆನೂಕು ನುಗ್ಗಡಿಸುತಿದೆ ವೀರ ಚಿದಾನಂದವಿಸ್ಮಯನಾಗಲು ವಿಚಿತ್ರದಿ ಬಾರಿಸುತಿದೆ ೩

೧೪೫
ದಶವಿಧ ಬ್ರಹ್ಮರ ಮನೆಯಲಿ ಭಿಕ್ಷವ ಕೊಳುತಿಹ ಅವಧೂತದಶವಿಧ ಬ್ರಹ್ಮರ ವಿವರವನೀಗಲೆ ಪೇಳುವೆ ಪ್ರಖ್ಯಾತ ಪ
ಸತ್ಯವು ಶೌಚವು ಸಮಸ್ತ ಬ್ರಹ್ಮವು ಸರ್ವದಿ ದಯವಿಟ್ಟಿಹನುನಿತ್ಯವು ತತ್ವವು ಈತನು ಬ್ರಾಹ್ಮಣರೊಳಗೆ ಬ್ರಾಹ್ಮಣನು ೧
ಮಾಯೆಯು ಇಲ್ಲವು ಸ್ನಾನಕರ್ಮದಲಿ ದೇವಗೋವು ಪ್ರಿಯನುಆಯುಧದಿಂ ರಣ ಜಯಿಸುವನೀತನು ಬ್ರಾಹ್ಮಣ ಕ್ಷತ್ರಿಯನು೨
ಸಿದ್ಧವು ಕರ್ಮದಿ ದೇವಗೋವುಗಳ ಪೂಜಿಸುತಿಹನೀತಉದ್ದಿಮೆ ಮಾಡುವ ನಾನಾ ಬ್ರಹ್ಮರೊಳು ವೈಶ್ಯನೆ ಇವನೀತ ೩
ಚಲ್ಲಣ ಹಾಕಿಯೆ ಮಿಣಿನೊಗ ಹೊತ್ತಿಹನೀತಎಲ್ಲ ಕೃಷಿಯ ವ್ಯವಹಾರವನು ಮಾಡುವ ಬ್ರಾಹ್ಮಣರೊಳು ಇವ ಶೂದ್ರ ೪
ಹಲಬರು ಇಹೆವೆಂದು ಸ್ವಯಂಪಾಕಕೆತ್ತುವ ಮಾಡುತ ಬಹುಜಾಲಆಚಾರದ ಸೋಗಿನಲಿ ಹೊರಗುಂಬುವರು ಬ್ರಾಹ್ಮಣಮಾರ್ಜಾಲ ೫
ಎಡಗೈ ಅರಿಯನು ಬಲಗೈ ಅರಿಯನು ನುಡಿವನು ಬಿರುಮಾತಉಡುವನು ಹಬ್ಬಕೆ ಧೋತ್ರವ ಬ್ರಾಹ್ಮಣರೊಳಿವನೀಗ ಕುರುಬ ೬
ಚೋರರ ಕೂಡಿಯೆ ಪಾಲನೆಕೊಂಬನು ಮಾಡುತ ಬಲು ಘಾತಆರಾದರನು ಅರಿಯನು ಬ್ರಾಹ್ಮಣರೊಳವ ಕಿರಾತ ೭
ಕಾಣನು ಭೇದವ ತಂದೆ-ತಾಯಿಯಲಿ ಜೀವರುಗಳ ನೋಡಪ್ರಾಣವ ಕೊಂಬನು ಬ್ರಹ್ಮೆಂತೆನ್ನದೆ ಬ್ರಾಹ್ಮಣರೊಳಿವ ಕಟುಕಾ ೮
ಬಗೆ ಬಗೆ ನಾಮವು ನಿರಿವುಡಿಧೋತ್ರವು ಸಂಧ್ಯಾಧಿಗಳವ ದೃಶ್ಯಸೊಗಸನೆ ಮಾಡಿಯೆ ಕಣ್ಣನೆ ಹಾರಿಪ ಬ್ರಾಹ್ಮಣರೊಳಿವ ವೇಶ್ಯಾ೯
ತಾಯಕ್ಕತ್ತೆಯು ಸೊಸೆ ಸಹೋದರಿ ರಜಕೀಪರಿಭಾಳಾಮಾಯಾದಿ ಸ್ವಪಚಳ ಹೋಗುವ ಬ್ರಾಹ್ಮಣರೊಳಿವ ಚಂಡಾಲ೧೦
ಈ ಪರಿ ದಶವಿಧ ಬ್ರಹ್ಮರುಗಳಲಿ ಭಿಕ್ಷೆಯ ಬೇಡುತಭೂಪ ಚಿದಾನಂದ ಅವಧೂತ ಸದ್ಗುರು ಮನವೊಪ್ಪಿಯೆ ಉಂಬ ೧೧

೩೬೨
ದೀಪ ಮುಟ್ಟಿಸಿ ಅಕ್ಕ ದೀಪ ಮುಟ್ಟಿಸಿ ಅಕ್ಕದೀಪ ಮುಟ್ಟಿಸೆ ಮನೆಗೆ ಈಗ ದೇವರು ನಿನಗೆ ಕಾಣಬಹುದು ಪ
ದೇಶಿಕ ಕರುಣೆಂಬೆ ಅಕ್ಕ ದಿಟ್ಟದ ಬೆಂಕಿಯು ಅಕ್ಕನಾಸಿಕ ಕೊನೆ ಭ್ರೂಮಧ್ಯದ ಒಲೆಯುನಂದದ ತೆರದಲಿ ವೈನದಲಿಟ್ಟೆ ೧
ಕಾಮ ಕ್ರೋಧವೆಂಬುವ ಅಕ್ಕ ಕರಡನೆ ಹಾಕಿ ಅಕ್ಕಸೋಮ ಸೂರ್ಯಸ್ವರ ಕೊಳವಿಯಲೂದಿಸೂರಿಯ ಕೋಟಿ ಎಂಬ ಉರಿಯನೆ ಮಾಡಿ ೨
ಜ್ಞಾನ ಜ್ಯೋತಿಯು ಅಕ್ಕ ಘನವಾಗಿ ಮುಟ್ಟಿಸೆ ಅಕ್ಕತಾನು ತಾನಾದ ಮನೆಮನೆ ಹೊಕ್ಕುತಾನಾದ ಚಿದಾನಂದ ಬ್ರಹ್ಮವ ಕಾಣುವ ೩

೨೭೪
ದುಃಖವನೆಷ್ಟೆಂದು ಹೇಳಲಿ ಸಂಸಾರ ಶರಧಿಯಿದುದುಃಖದ ಶರಧಿಯಿಂದ ಪರಮಾತ್ಮನ ಸ್ಮರಣೆಗೆ ವಿಘ್ನವಹುದು ಪ
ಮಗ ಬುದ್ಧಿವಂತನಾಗಲಿಲ್ಲವೆಂದೆಂಬಮಗಳಿಗೊದಗಲಿಲ್ಲ ಅಳಿಯ ಎಂದೆಂಬಹಗರಣವಾಯಿತು ಮನೆಯೀಗ ಎಂದೆಂಬ ದುಃಖವೊಂದುಜಗಳಗಂಟಿಯು ಎನ್ನ ಹಿರಿಯ ಸೊಸೆ ಎಂದೆಂಬ ದುಃಖವೊಂದು೧
ಹೆಂಡತಿ ವ್ಯಭಿಚಾರಿಯಾದಳು ಎಂದೆಂಬ ದುಃಖವೊಂದುಉಂಡೆನೆಂದರೆ ಅನ್ನವಿಲ್ಲ ಎಂದೆಂಬ ದುಃಖವೊಂದುಕಂಡಕಡೆಗೆ ಹೋಗೆ ಕೈ ಹತ್ತದೆಂದೆಂಬ ದುಃಖವೊಂದುಮುಂಡೆಯಾದಳು ಎನ್ನ ಮೊಮ್ಮಗಳು ಎಂದೆಂಬ ದುಃಖವೊಂದು ೨
ನೆಂಟರಿಗೆ ಮಾಡಲೆನ್ನೊಳಿಲ್ಲವೆಂದೆಂಬ ದುಃಖವೊಂದುಒಂಟಿ ಬಯಲಿನ ಹೊಲವು ಬೆಳೆಯದು ಎಂದೆಂಬ ದುಃಖವೊಂದುಕಂಟಕಿ ನಾದಿನಿ ಹಡೆಯಲಾರಳು ಎಂದೆಂಬ ದುಃಖವೊಂದುಎಂಟು ವರಹ ಎಮ್ಮೆ ಸತ್ತಿತು ಎಂದೆಂಬ ದುಃಖವೊಂದು೩
ಎದೆ ಮೇಲೆ ಕುಳಿತಿಹರು ದಾಯಾದಿಗಳೆಂದೆಂಬ ದುಃಖವೊಂದುಮುದುಕಿಗೆ ಗೆಲುವು ತಾನಿಲ್ಲವೆಂದೆಂಬ ದುಃಖವೊಂದು ಮದುವೆಗೆ ಹಾದಿಲ್ಲ ಹಾವಳಿ ಎಂದೆಂಬ ದುಃಖವೊಂದುಸದನ ಒಳ್ಳೇದಲ್ಲ ಏಳು ಮಕ್ಕಳ ತಾಯಿ ಎಂಬ ದುಃಖವೊಂದು ೪
ಜೋಡಿಪೆ ಧೈರ್ಯವೆಂದರೆ ನಿಶ್ಚಯಾಗಲಿಕೆ ಕೊಡದು ಒಂದುನೋಡುವೆ ಚಿಂತಿಸಿ ಎನೆ ಚಿಂತೆ ಹರಿಯಲು ಕೊಡದು ಒಂದುಮಾಡುವೆ ಮಂತ್ರ ಪೂಜನ ಪೂಜೆ ಮಾಡಲು ಕೊಡದು ಒಂದುಕೊಡುವೆ ಗುರು ಚಿದಾನಂದನೆನೆ ಕೂಡಗೊಡದು ಎಂದು ೫

೧೪೬
ದುಃಖವಿಲ್ಲವೋ ಪರಮಾತ್ಮನಿಗೆ ಲಿಂಗದ ದೇಹದದುಃಖವಿಲ್ಲವೋ ಪರಮಾತ್ಮನಿಗೆ ಪ್ರತ್ಯಗಾತ್ಮನಿಗೆದುಃಖವುಂಟೆ ನಿಜ ನಿರ್ಲಿಪ್ತಗೆಮಿಕ್ಕ ಥಳಥಳ ಸಾಕ್ಷಿಬ್ರಹ್ಮಂಗೆಪ
ಜಲದೊಳು ಹೊಳೆವ ಇಂದುವಿಂಗೆಜಲದ ಕಂಪವು ಹೊಳೆವುದೇ ಪೂರ್ಣಚಂದ್ರಗೆಆ ಪರಬ್ರಹ್ಮಂಗೆ ಹೊಳೆಯಲು ಲಿಂಗದಿಲಿಂಗದ ಗುಣಗಳು ಕೆಲವನು ತಿಳಿಯಲು ಪುಣ್ಯಾತ್ಮನಹೆ ೧
ಉದಧಿಲಿ ತೋರ್ವ ಸೂರ್ಯನಿಗೆ ಆಉದಧಿಯ ಕೊಳಕು ಬೆರೆಸೀತೆದ್ವಾದಶಾತ್ಮಂಗೆ ಆ ಪರಿ ಆತ್ಮಂಗೆ ಲಿಂ-ಗಾದಿ ಜನ್ಮವೊಂದುಗುಡೆ ಕಷ್ಟಪಡುವಿಕೆಲಿಂಗವೆ ಅಳಿಯಲು ನಿತ್ಯಾತ್ಮನುತಭಂಗವ ಕಳದೇ ಚಿದಾನಂದ ಬ್ರಹ್ಮನಹನು ೨

೧೪೭
ದೃಷ್ಟಿ ಇರಬೇಕಯ್ಯ ಬ್ರಹ್ಮದಿ ದೃಷ್ಟಿಯಿರಬೇಕುದೃಷ್ಟಿಯಿಲ್ಲದಿರಲು ಅನುಭವ ಪಟು ದೊರಕದು ಪ
ಆಲಿಯು ನಿಂತೆ ಆಲಿಯ ಗೊಂಬೆಯು ತಿರುಗದಲಿರಬೇಕುಆಲಿಯು ಮುಚ್ಚದೆ ಆಲಿಯ ರೆಪ್ಪೆಯು ಬಡಿಯದಲಿರಬೇಕು ೧
ಅನಿಮಿಷ ದೃಷ್ಟಿಯಂದದಿ ಬ್ರಹ್ಮವ ಆಲಿಸುತಿರಬೇಕುಅನಿಮಿಷದಂದದಿ ಕಣ್ಣಿನ ಗುಡ್ಡೆ ತಿರುಗದಲಿರಬೇಕು ೨
ದೃಷ್ಟಿಯು ಕುಳಿತಾ ದೃಷ್ಟಿಯು ಮುಂದಕೆ ಸಾಗಲಿರಬೇಕುದೃಷ್ಟಿಯು ತಾನೆಡಬಲಕೆ ಸರಿಯದೆ ದೃಷ್ಟಿಯು ಇರಬೇಕು ೩
ಕುಳಿತಾ ಸ್ಥಳವು ತಪ್ಪಲು ಮತ್ತೆಯು ಕುಳಿತುಕೊಳ್ಳಬೇಕುಥಳಥಳ ಹೊಳೆಯುವ ಬೆಳಗದ ಪಸರಿಸಿ ತರನಾಗಿರಬೇಕು ೪
ಉದಯಾಸ್ತಮಾನವು ದಿವರಾತ್ರಿಯುಡುಗಿ ಇರಬೇಕುಚಿದಾನಂದ ಸದ್ಗುರು ತಾನಾಗಿಯೆ ತಾನೆ ಇರಬೇಕು ೫

೨೭೫
ದೇಹ ಪ್ರಾರಬ್ಧವು ದೇಹಕೆ ಸ್ತ್ರೀದೇಹ ಬಿಟ್ಟಾತಗೆ ಹ್ಯಾಗೆದೇಹ ಪ್ರಾರಬ್ಧವು ಕಡೆಯಲ್ಲಿ ಬೀಳ್ವುದುದಯ ಮಾಡುವೆನು ಒಳಿತಾಗೆ ಪ
ಶರೀರದಿ ವ್ಯವಹಾರವೆಲ್ಲವ ಮಾಡುತ ಸಾಕ್ಷಿಯಾಗಿಹರದು ಹ್ಯಾಗೆತಿರುತಿರುಗಿ ಬಿಡೆ ಸತ್ವವೆಂತೋ ಅಂತಿರ್ದು ಒರಗುವ ಪರಿ ಹಾಗೆ೧
ಎಂಬನೇನು ನಾನಾ ವಿಷಯಂಗಳೊಳಿರ್ದು ಎರಡು ಆಗಿಹರದು ಹ್ಯಾಗೆಅಂಬ ಸೇಡಿಯಂಬಿಡೆ ಸತ್ವಂತೋ ಅಂತ್ಹೋಗಿ ಅಂಬು ತಿಲಕೆ ಬಿದ್ದ ಹಾಗೆ ೨
ಭೂಪ ಚಿದಾನಂದ ಸದ್ಗುರುವಾಗಿ ಭೂಮಿ ಮೇಲಿಹರದು ಹ್ಯಾಗೆದೀಪದ ತೈಲವು ತೀರುವನಕ ಇರ್ದು ದೀಪವು ನಂದಿದ ಹಾಗೆ ೩

೩೬೩
ದೇಹ ಭಾವವು ಹೋಗಿ ದೇವನೇ ತಾನಾಗಿದೇಹಗುಣವೆಲ್ಲಿಯದೋ ಮುಕ್ತ ಪ
ಗರುಡನ ಮನೆಯೊಳಗೆ ನಾಗರ ಜಾತಿಯಪರಿ ನಡೆವುದೇನೋ ಮುಕ್ತಶರೀರ ಸಹಿತದ ಬ್ರಹ್ಮಾಗಿ ತಾನಿರೆಹರಿವವೆ ಪ್ರಾಣಗಳು ಮುಕ್ತ೧
ಉರಿಯದು ಉರಿಯಲು ಉರಿಯಲಿಅರಗದು ಇಹುದೇನೋ ಮುಕ್ತಕರುವಿಟ್ಟೆರಕದಿ ಥಳಥಳ ಹೊಳೆಯದೆಇರುವುದೇ ಈ ಇಂದ್ರಿಯಗಳು ಮುಕ್ತ೨
ರವಿಯದು ಬೆಳಗಿರೆ ಕಿರಣ ಕಾಂತಿಯಿಂಗೂಗೆಗಳೆಲ್ಲ ತಿರುಗುವವೋ ಮುಕ್ತಖವ ಖವ ಖವಿಸುತ ಪರವಶವಿರೆವಿವರಿಸೆ ಮನವೆಲ್ಲೊ ಮುಕ್ತ ೩
ಈಶನ ಕಣ್ಣುರಿ ಭುಗು ಭುಗು ಭುಗಿಲೆನೆಏಸು ಉಳಿವುದು ಕಾದು ಮುಕ್ತಿಸೂಸುವ ಮುಖದಲಿ ತೃಪ್ತಿಯೆ ತುಂಬಿರೆವಾಸನೆ ಎಲ್ಲಿಹುದೋ ಮುಕ್ತ ೪
ಪರಮಾತ್ಮನು ತಾ ಪರಿಪೂರ್ಣನಾನಿರೆಮೆರೆವುದು ಅವಿದ್ಯೆ ಮುಕ್ತಗುರು ಚಿದಾನಂದ ಸಹಜದಿ ತಾನಿರೆಇರುವುದೆ ಜೀವತ್ವ ಮುಕ್ತ ೫

೧೪೮
ದೇಹವ ಬಿಟ್ಟು ಬ್ರಹ್ಮವು ಎಂತೆನೆ ದೇಹಬಿಟ್ಟು ಬ್ರಹ್ಮವೆಲ್ಲಿದೇಹವು ಬ್ರಹ್ಮವು ಒಂದೆಯೋ ದೇಹವು ಇಹುದು ಬ್ರಹ್ಮದಲ್ಲಿ ಪ
ಮಾಯೆಯು ಬಿಟ್ಟು ಬ್ರಹ್ಮವು ಎಂದೆನೆಮಾಯೆಯ ಬಿಟ್ಟು ಬ್ರಹ್ಮೆಲ್ಲಿಕಾಯ ಬಿಟ್ಟು ಆತ್ಮವು ಎಂತೆನೆಕಾಯವ ಬಿಟ್ಟು ಆತ್ಮೆಲ್ಲಿ೧
ಪಿಂಡವ ಬಿಟ್ಟು ಬ್ರಹ್ಮಾಂಡ ವೆಂತೆನೆಪಿಂಡಾಂಡಿಲ್ಲದೆ ಬ್ರಹ್ಮಾಂಡವೆಲ್ಲಿಖಂಡವ ಬಿಟ್ಟಾಖಂಡವೆಂತೆನೆಖಂಡವ ಬಿಟ್ಟು ಅಖಂಡವದೆಲ್ಲಿ೨
ಜಗವನು ಬಿಟ್ಟು ತನ್ನನು ತೋರೆನೆಜಗವನು ಬಿಟ್ಟು ತಾನೆಲ್ಲಿಜಗಪತಿ ಚಿದಾನಂದ ಸದ್ಗುರು ನೀನು ನೀಜಗಸಂಶಯವೆಲ್ಲಿ ೩

೭೫
ದೊರಕಿಸಬಹುದು ತಂದೆ ತಾಯಿಗಳ ಜನ್ಮ ಜನ್ಮದಲಿದೊರಕಿಸಲಾಗದು ಸದ್ಗುರುನಾಥನ ಆವ ಜನ್ಮದಲಿ ಪ
ತಂದೆ ತಾಯ್ಗಳ ಋಣವ ಜನ್ಮಾಂತರದಲಿ ತೀರಿಸಬಹುದುಗುರು ಋಣವು ತೀರುವುದದೆಂತೋ ೧
ತಂದೆತಾಯಿ ಋಣಗಳಿಂದ ಜಾತನಾಗುವೆಮುಂದೆ ಗುರು ಋಣಗಳಿಂದ ಅಜಾತನಾಗುವೆ ೨
ಗುರುವಿನ ಋಣವನು ತೀರಿಸಲಾಗದುಗುರು ಚಿದಾನಂದನ ಕೃಪೆಯಿಂ ತೀರುವುದು ೩

೧೪೯
ದೊರೆಯಾಗಿ ನಾನಿಹೆನಮ್ಮ ಅಜಹರಿಹರರ್ಗಿಲ್ಲದೆ ಪದ ಸೇರಿತಮ್ಮ ಪ
ಭೂಮಿಯೆ ಮಣಿಮಂಚವಮ್ಮ ಮಹಾವ್ಯೋಮವೆಂಬುದೆ ಹೊಸ ವಸ್ತ್ರವಮ್ಮಸಾಮವೆ ಮಣಿಭೂಷಣವಮ್ಮನಿಸ್ಸೀಮ ಭಿಕ್ಷವೇ ಪರಿ ಪರಮಾನ್ನವಮ್ಮ ೧
ಸಂಗರಹಿತ ಸತಿಯಮ್ಮ ಆಮಂಗಳವೆಂಬ ಘನಸುತರಮ್ಮಜಂಗಮವೇ ಜನವಮ್ಮ ಭೇದಂಗಳ ಪರಿದಿಹುದೇ ಅರಮನೆಯಮ್ಮ ೨
ನಾದವೆಂಬುದ ವಾದ್ಯವಮ್ಮ ಸುನಾದವೆಂಬುದೇ ಗೀತಗಾಯಕರಮ್ಮಆದಿ ಬಂಧುವೇ ಮದವಮ್ಮ ತೇಜವಾದ ಚಿತ್ತವೇ ದೀವಟಿಗೆಮ್ಮ ೩
ಜ್ಞಾನವೆಂಬುದೇ ಬಲವಮ್ಮ ಮಹದಾನಂದ ರಾಜ್ಯಕ್ಕೆ ಅಧಿಪತಿಯಮ್ಮತಾನೆ ಎಂಬುದೇ ಮುದ್ರೆಯಮ್ಮ ಇಂತುನ್ಯೂನವಿಲ್ಲದೆ ಸ್ಥಿರ ಸೇರಿದುದಮ್ಮ ೪
ಸುರವರರ್ಗಿನಿತುಂಟೆ ಅಮ್ಮಹಿರಿಯಾರಾರಾದರೇನು ದೊರಕದಮ್ಮಗುರುವಿನ ದಯದಿಂದಲಮ್ಮ ನಿಜಗುರು ಚಿದಾನಂದನೇ ತಾನಾದುದಮ್ಮ ೫

೪೦೮
ಧೂಪಾರತಿಯ ಮಾಡುವ ಬನ್ನಿ ಸರ್ವರೂಪ ರಹಿತ ತನ್ಮಾತ್ರನಿಗೆಕೆಟ್ಟ ವಾಸನೆಗಳು ಎಷ್ಟಿಹವೆಲ್ಲ ಪ
ಅಷ್ಟನು ಕುಟ್ಟಿ ಪುಡಿಯನು ಮಾಡಿದಶಿಷ್ಟ ದಶಾಂಗಮ ಘಮ ಘಮ ಬೀರಲುಸುಟ್ಟು ಎತ್ತುವ ಧೂಪಾರತಿಯ ೧
ವಾಸನತ್ರಯವೆಂಬ ಗುಗ್ಗುಳ ಸಾಂಬ್ರಾಣಿದ್ವೇಷ ಭ್ರಾಂತಿಗಳ ಪರಿಪರಿಯಾದವಾಸನೆ ಎತ್ತೆತ್ತ ಮಕಮಕ ಎಸೆಯಲುಸೂಸಿ ಎತ್ತುವ ಸುಧೂಪಾರತಿಯ ೨
ಶರೀರದೊಳಗೆ ಹೊರಗೆಲ್ಲ ಸರ್ವತನುವಿನಲೆಲ್ಲಬರಿಯ ಸುವಾಸನೆ ತುಂಬಿ ತುಂಬಿಗುರು ಚಿದಾನಂದ ತಾನಾದಾತ್ಮಗೆತ್ತುವೆಪರಮಮಂಗಳ ಸುಧೂಪಾರತಿಯ ೩

೭೯
ಧ್ಯಾನವಿರಲಿ ಗುರುವೆ ನಿನ್ನಯಧ್ಯಾನವಿರಲಿ ಗುರುವೆನಿನ್ನ ನಿತ್ಯಾ ಕಾಲದಿ ಪದಧ್ಯಾನದೊಳಗೋಲಾಡುವಂತೆ ಗುರು ಚಿದಾನಂದ ಎಂಬ ಪ
ಗಿರಿಯೊಳಿರಲಿ ಧರೆಯೊಳಿರಲಿಗಿರಿಯ ಗುಹೆಯ ಗೃಹದೊಳಿರಲಿಪುರದೊಳಿರಲರಣ್ಯಗಳೊಳುಚರಿಸುತಿರಲಿ ಮರೆಯದೇ ೧
ಮರದೊಳಿರಲಿ ಮುಳ್ಳೊಳಿರಲಿಕೆರೆಯ ತೀರ್ಥ ಕ್ಷೇತ್ರದೊಳಿರಲಿಹರವು ಹಳ್ಳ ಕೊಳ್ಳಗಳೊಳುಹರಿವುತಿರಲಿ ಮರೆಯದೆ ೨
ಹಸಿವೆಯಿರಲಿ ತೃಷೆಯೊಳಿರಲಿಬಿಸಿಲು ಮಳೆ ಛಳಿಗಳೊಳಿರಲಿವಿಷಯ ವ್ಯಾಧಿ ಕಂಟಕಗಳೊಳ್ವಿಷಮವಿರಲಿ ಮರೆಯದೇ ೩
ನಡೆವುತಿರಲಿ ಎಡವುತಿರಲಿನಡೆಯಲಾರದೆ ಕೆಡೆಯುತಿರಲಿಕಡುವಿರೋಧದಿಂ ಕುವಾದತಡೆಯುತಿರಲಿ ಮರೆಯದೆ ೪
ಹೆಂಡೆಲಿಡಲಿ ಹೆಂಟೆಲಿಡಲಿಕಂಡ ಕಂಡದರಲಿಡಲಿಭಂಡ ಮನುಜರವರು ಏನುಮಾಡುತಿರಲಿ ಮರೆಯದೇ೫
ನಿನ್ನ ಧ್ಯಾನ ಷಟ್ಸಮಾಧಿನಿನ್ನ ಧ್ಯಾನ ಮುಕ್ತಿ ನಿಲಯನಿನ್ನ ಧ್ಯಾನಕಧಿಕವಿಲ್ಲ ನಿನ್ನ ಧ್ಯಾನವೆನಗೆ ನಿತ್ಯವಿರಲಿ ಮರೆಯದೆ೬
ಧಾನ ವಿದ್ದಡಿರದಡೇನುನಿನ್ನ ಪಾದ ಕಂಡ ಬಳಿಕಧ್ಯಾನದಿಂದ ಸಾಧನೇನು ಗುರು ಚಿದಾನಂದ ಯೋಗಿ ೭

೧೫೦
ನಂಬುವುದು ತಾನು ಎಂತು ಸತಿಯು ಸುತರು ಮಗಳನುನಂಬಿ ಕಡೆ ಹಾಯ್ದುದುಂಟೆ ಹಾದಿಕಾರರನು ಪ
ದಾರಿಕಾರರಿಗೆ ವಸತಿ ಮಳಿಗೆ ಭೇಟಿಯಲ್ಲೇದಾರಿ ಹಿಡಿದ ಬಳಿಕ ತಿರುಗಿ ಭೇಟಿಯಾಗೋದೆಲ್ಲಿದಾರ ಸುತರ ಭೇಟಿಯಿದೇ ದೇಹದೊಳಗೆ ಎಂದರಿಯೋಶರೀರವು ಬಿದ್ದ ಬಳಿಕ ಭೇಟಿ ಮುಂದೆ ಮರೆಯೋ ೧
ಕನಸಿನವರ ತಾನು ಈಗ ನೆನಸಲಿಕ್ಕೆ ಬಹರೆಕನಸಿನಂತೆ ತೋರುವರು ನೀನು ನಚ್ಚುವರೆಮನೆಯ ಬದುಕುಭಾಗ್ಯವೆಲ್ಲ ಮನದಿ ಜರೆದು ಬಿಡುನಿನಗೆ ಗತಿಯು ಏನು ಎಂದು ನೀನು ತಿಳಿದು ನೋಡು ೨
ಹೆಗ್ಗಣವು ಜಾಗಿನೊಳಗೆ ಬಿದ್ದು ಮಿಡುಕಿದಂತೆವೆಗ್ಗಳಾಗಿ ಸಂಸಾರಕೆ ಮಾಡಿವೆಯೋ ಚಿಂತೆನುಗ್ಗು ಆದೆ ಬಯಲಭ್ರಾಂತಿ ನಿನಗೆ ವ್ಯಾಪಕಾಗಿಮುಗ್ಗುವೆ ನೀನೊಣನ ತೆರದಿ ನರಕದಲ್ಲಿ ಹೋಗಿ ೩
ನನ್ನ ಸಂಸಾರವೆನ್ನಬೇಡ ನೀನು ಇದನು ಈಗನನ್ನ ನನ್ನದೆಂದೆ ಹೋದ ನಿಮ್ಮಪ್ಪ ಮುಕ್ತನುಇನ್ನು ನಾಶವಿದು ಒಬ್ಬರಿಲ್ಲ ಸತ್ಯನಿನ್ನದಾರೆಂದು ಮರೆಯದಡೆ ನಿತ್ಯಾ ೪
ಇಂದ್ರಜಾಲ ನೋಡಲಿಕ್ಕೆ ಖರೆಯದಾಗಿ ಇಹುದುಅಂದದಾ ಪರಿಯು ಸಂಸಾರವೆ ನಿತ್ಯವಿಹುದುಬಂಧನವು ನಿನಗೆ ಇಹುದು ಗುರುವಿನ ಪಾದವಹೊಂದು ಮುಂದೆ ಚಿದಾನಂದನಹೆ ನೀನೀಗ ಎಂದು ೫

೩೬೪
ನಗುವು ಬರುತಿದೆ ಎನಗೆ ನಗುವು ಬರುತಿದೆಬಿಗಿದು ಶ್ವಾಸ ಮೂಗ ಹಿಡಿದು ನಿಟಿಲ ನೋಡುವವರ ಕಂಡು ಪ
ಹಡೆದ ದೈವ ಹತ್ತಿರಿರಲು ನೋಡಿದರು ನೋಡದಂತೆಮೃಡನು ತಾನೆ ಇರಲು ಮೂಗ ಕೊನೆಯ ನೋಡುವವರ ಕಂಡು ೧
ಹೊಳೆಯುತಿಹುದು ಪರಬ್ರಹ್ಮ ನಾನಾ ರೂಪಗಳನು ತಾಳಿತಿಳಿಯದಲೆ ತನ್ನನೀಗ ಕಣ್ಣು ಮುಚ್ಚುವವರ ಕಂಡು ೨
ಮನಕೆ ನಿಲುಕದವನು ತಾನೆ ಮಂಗಳವಾಗಿ ಬೆಳಗುತಿರಲುಮನದಿ ಪೂಜೆಯನ್ನು ಮಾಡ್ವ ಮಂದಮತಿಗಳನ್ನು ಕಂಡು ೩
ತಾನು ದೇವ ನಿಜವಿದಿರಲು ತಂದು ಪ್ರತಿಮೆ ಇಟ್ಟುಕೊಂಡುಏನೋ ಮಂತ್ರ ಒದರುತಿರುವ ಮನುಜರನ್ನು ಕಂಡು ನನಗೆ ೪
ಯೋಗ ಮಾಡಿಕೊಂಬುದೇನು ಯೋಗಮಾಡುವವನೆ ಇರಲುಯೋಗಿಯಾದ ಚಿದಾನಂದ ತಾನೆ ಸಾಕ್ಷಿಯಾಗಿ ಇರಲು ೫

೧೫೧
ನಡೆಯೇ ತೀರ್ಥವು ನುಡಿ ಪ್ರಸಾದವುಕೊಡುವುದೇ ತಾನೀಗನುಗ್ರಹವುಹಿಡಿವುದೇ ತತ್ವವು ಬಿಡುವುದೇ ವೈರಾಗ್ಯದೃಢದಲಿ ತನ್ನ ತಿಳಿದಾ ಮಹಾತ್ಮನಾ ಪ
ಮೆಟ್ಟಿದ್ದೆ ಕಾಶಿಯು ಮಲಗಿದ್ದೆ ಶ್ರೀ ಶೈಲದಿಟ್ಟಾಗಿ ಕುಳಿತುದೇ ಕುರುಕ್ಷೇತ್ರವುಘಟ್ಟಿಯಾಗಿಹುದೇ ಗಯವೀಗ ಗೋಕರ್ಣಮುಟ್ಟಿಯೇ ತನ್ನತಾ ತಿಳಿದ ಮಹಾತ್ಮನಾ ೧
ಉಂಡದ್ದೆ ಕೇದಾರ ಉಟ್ಟಿದ್ದೆ ಶ್ರೀ ಬದರಿಕಂಡದ್ದೆ ಕಂಚಿ ಕಾಳಹಸ್ತಿಮಂಡೆಗೆರಕೊಂಡುದೇ ಮೈಲಾರ ಮಧುರೆಯುಖಂಡಿಸಿ ತನ್ನತಾ ತಿಳಿದ ಮಹಾತ್ಮನಾ ೨
ಸುಧಾ ಶರಧಿಯು ಆತ ಸಾಕ್ಷಾತ್ತು ದೈವವುವಿಧ ವಿಧದ ಜಗ ತಾನೆಯಾದಾತನುಮದಕಾಮ ಕ್ರೋಧ ಪಾಶ ಶೋಕ ವರ್ಜಿತಚಿದಾನಂದ ಗುರುವೇ ತಾನಾದ ಮಹಾತ್ಮನಾ ೩

೩೬೫
ನನಗೆ ಹೊತ್ತು ಹೋಗದೆ ನಾನೆಯೆ ಆಡುವೆನನಗೆ ಹೊತ್ತು ಹೋಗದೆ ಪ
ಈಶನ ಅವತಾರವಾಗಿ ಜೀವನ ಅವತಾರವಾಗಿಈಶನಾಗಿ ಜೀವ ಬೊಂಬೆಯನಾಡುವೆ ೧
ಜೀವರ ಹುಟ್ಟಿಸಿಯೆ ಜೀವರ ಬೆಳೆಸಿಯೇಜೀವರಲಿ ಲಯಿಸುವೆ ತ್ರೈಮೂರ್ತಿಯಾಗುವೆ ೨
ಎಚ್ಚರವನೆ ಕೊಟ್ಟು ಎಚ್ಚರವನೆ ಕೊಟ್ಟುಎಚ್ಚರವನೆ ತಿಳುಹಿ ನಿಚ್ಚಳ ಚಿದಾನಂದನನು ಮಾಡುವೆ ೩

೨೭೬
ನನ್ನ ಮಗನೆಂಬರು ನಾಯಿ ಮಕ್ಕಳುತನ್ನ ತಾನೆ ಬ್ರಹ್ಮವದು ತಾನೆ ವೇಷ ಹಾಕಿ ಬರೆ ಪ
ಸತಿಪತಿ ತಾವು ಆಗ ಸಂಯೋಗದ ಕಾಲದಲ್ಲಿಸುತನ ಕಿವಿ ಮೂಗ ಏನ ತಿದ್ದಿದರೇನೋಅತಿ ಆಶ್ಚರ್ಯವಲ್ಲದೆ ಅವಯವ ತಾಳಿಕೊಂಡುಕ್ಷಿತಿಗೆ ಮೈದೋರುತ ತಾನೆ ಬಂದರೆ ೧
ಗಂಧ ಕಸ್ತೂರಿಯ ಪೂವು ಗಮಕದಲಿ ಧರಿಸುವಾಗಒಂದನ್ನ ಸುತೆಗೆ ಗುರುತು ಮಾಡಿದರೇನೋಇಂದು ಇದೆನೆವವೆಂದು ಇಳಿದು ಸಪ್ತಧಾತು ತಾಳಿಛಂದದಿ ವಿನೋದಕಾಗಿ ತಾನೆ ಬಂದರೆ ೨
ಮಂಚವೇನು ಸಂಪತ್ತಿಗೆ ಮಡಿಹಾಸಿಗೆಯೊಳಿರ್ದುಮಂಚದಲಿರುತ ಸುತಗೆ ಚೇತನ ತುಂಬಿದರೇನೋಹೊಂಚಿನೋಡಿ ಚಿದಾನಂದ ಹೊರೆಯೇರಿ ಹರುಷದಿಪಂಚವಿಂಶತಿ ತತ್ವ ಕೊಡಿ ತಾನೆ ಬಂದರೆ ೩

೭೬
ನರನೆನಬಹುದೆ ಸದ್ಗುರು ವರನಾತರುವೆನಬಹುದೆ ಸುರತರುವನ್ನ ಪ
ಆಸನವನೆಹಾಕಿ ಕುಳ್ಳಿರಿಸಿದವನನಾಸಿಕ ಕೊನೆದೃಷ್ಟಿ ಇರಿಸಿದವನಬೀಸುವ ವಾಯುವ ಕುಂಭೀಸೀದವನಸೂಸುವ ಮುತ್ತಿನ ಮಳೆ ಸುರಿಸಿದವನ ೧
ಆರು ಮಂಟಪ ನೆಲೆ ಅಡರಿಸಿದವನಭೇರಿ ಘಂಟವು ಶಂಖವು ಭೋರಿಡಿಸಿದವನಬೀರುವ ದ್ವಿದಳ ಸದರಕಾಶಿಸಿದವನನೂರು ಕೋಟಿಯ ರವಿ ಬೆಳಕ ಚೆಲ್ಲಿದವನ ೨
ಸಾವಿರ ದಳದ ಮನೆಯ ಜೈಸಿದವನಈವ ಬ್ರಹ್ಮರಂದ್ರ ಸುಖವುಣಿಸಿದವನಕೇವಲ ಶಿಂಶುಮಾರಕೆ ಸೇರಿದವನದೇವ ಚಿದಾನಂದನ ಮಾಡಿದವನ ೩

೧೫೨
ನಾ ಕಂಡ ಕನಸು ಕನಸಲ್ಲ ಅದು ಹೇಳಲು ಬಾರದು ಕೇಳಲು ಬಾರದು ಪ
ಕಂಗಳ ಮುಟ್ಟಿ ನಾನಿರುತಿಹೆ ಅಂತರಂಗದೊಳಗೆ ದೃಷ್ಟಿಯನಿಡೆಮಂಗಳವಿತ್ತು ಮಹತ್ತುಯಿತ್ತು ಜಂಗಮವಿತ್ತು ಜಗತ್ತು ಇತ್ತು ೧
ಧ್ಯಾನವು ಗುರುಪಾದದಲ್ಲಿರೆ ಒಳ್ಳೆ ಗಾನವು ಕಿವಿಗೆ ಕೇಳಿಸುತಲಿರೆಆನಂದವಿತ್ತು ಸುಖತರವಿತ್ತು ತನ್ಮಯವಿತ್ತು ಥಳಿಥಳಿಸಿತ್ತು ೨
ಆನಂದ ಮನೆಯೊಳಗಾನಿರೆ ಚಿದಾನಂದ ದೇವರ ಕೂಡಿರೆತಾನೆ ತಾನಿತ್ತು ತವೆ ಬೆರೆತಿತ್ತು ಏನೇನೋ ಇತ್ತು ಎಂತೆಂತೋ ಇತ್ತು ೩

೧೫೩
ನಾ ಕೆಟ್ಟ ಕೇಡ ಹೇಳುವೆನು ಎಲ್ಲ ಲೋಕದಂತೆನ್ನಬದುಕು ಆಗಲಿಲ್ಲ ಪ
ಹೆಂಡರಿಚ್ಛೆಯಿಲ್ಲ ಹೀನವೆಂಬುದಿಲ್ಲಪಂಡಿತತ್ವದ ಪರಮಾರ್ಥಕಿಲ್ಲಉಂಡೆ ಉಟ್ಟೆನೆಂಬ ಊಹೆ ಮೊದಲಿಗಿಲ್ಲಕಂಡ ಕಂಡಂತೆ ಚರಿಸುವಂತಾಯಿತೆ ೧
ಅರಿವು ಮರೆವು ಇಲ್ಲ ಆಸೆಗಳೇನಿಲ್ಲಇರುಳು ಹಗಲು ಎಂಬುದೆರಡಿಲ್ಲವೋಶರೀರ ಸ್ಮರಣೆಯಿಲ್ಲ ಶ್ರೇಷ್ಠ ಭಾವಗಳಿಲ್ಲಮರುಳು ಮರುಳು ಆಗಿ ತಿರುಗುವಂತಾಯಿತು ೨
ಚಿದಾನಂದ ಗುರುವಿನ ಚಿತ್ತದಿ ಪಿಡಿದರೆಒದವಿದ ಬ್ರಹ್ಮಾನಂದವ ಸವಿದುವಿಧವಿಧವಾದ ಬೆಳಕಿನೊಳಾನಡಗಿರೆಇದರಿಂದಲಿ ಇಂತಾದುದಿದೆಲ್ಲವು ೩

೧೫೪
ನಾಚಿಸಿದೆಯ ದೇವಯನ್ನ ಎಲ್ಲಈ ಚರಾಚರ ತುಂಬಿಹ ವ್ಯುತ್ಪನ್ನ ಪ
ಶ್ರೀಗಿರಿ ನೋಡುವೆನೆಂದು ನಾಸಾಗಿ ಪಯಣಗೊಂಡು ಬಂದುರಾಗವುದಿಸಿ ಮನಕಿಂದು ಮುಂದೆಭೋಗ ತರದ ಮನ ತೂರಿತು ನಿಂದು ೧
ಮಧ್ಯಾಹ್ನ ಬಿಸಿಲೊಳು ನಡೆಯೆ ನಾನುಅದ್ವಯವಿಲ್ಲದೆ ಹಾದಿ ನೀರ್ಗುಡಿಯೆಇದ್ದ ಚೈತನ್ಯ ತಾ ನುಡಿಯೆ ಇಂತುಹೊದ್ದ ಶರೀರ ಬಳಲಿ ನೆಲಕೆಡೆಯೆ ೨
ಧರಣಿಯ ಸುರರೂಪ ತಾಳಿ ನೋಡೆವರಣ ವರಣ ರುದ್ರಾಕ್ಷಿ ಚಾಳಿಚರಣ ಕಿರಣದಲ್ಲಿ ಹೂಳಿ ನಾನುಗುರುವೆ ಎಂದು ನುಡಿವುದ ಕೇಳಿ ೩
ಎಲ್ಲಿ ಪೋಗುವೆ ಎಂದು ಕೇಳೆಮಲ್ಲಿಕಾರ್ಜುನನ ನೋಡಿಯೇ ಬಹೆನೆಂದುಸೊಲ್ಲುಡುಗಲು ನಾನಿತ್ತೆಂದು ಗುರುಸುಳ್ಳು ಆದನೆ ಸರ್ವ ಪೂರಿತನಿಂದು ೪
ಸರ್ವರೂಪದು ಮೃಷೆಯಾಯ್ತು ಎಲ್ಲಸರ್ವಜನರಿಗೆ ಬೋಧಿಸುವಡೇನಾಯ್ತುಸರ್ವತಾನೆನಿಪುದೇನಾಯ್ತು ಎಲ್ಲಸರ್ವರನುಳಿದು ಬಂದಿಹುದೊಳಿತಾಯ್ತು ೫
ಇಂತು ಬುದ್ಧಿಗಳಿಂದ ಝಡಿಯೆ ಎಲ್ಲಅಂತು ಕೇಳುತ ನೀವು ಆರೆಂದು ನುಡಿಯೆನಿಂತಲ್ಲಿ ದೃಶ್ಯವ ಪಡೆಯೆ ಕಂಡುಸಂತೋಷದಿಂ ನಾ ಸಾಷ್ಟಾಂಗವೆರಗೆ ೬
ಆನಂದ ತೊರೆಯೊಳು ಮುಳುಗಿ ಚಿ-ದಾನಂದ ಗುರುವ ಕಾಣದೆ ಮನಮರುಗಿಧ್ಯಾನದಿ ಕಂಗಳು ತಿರುಗಿ ನೋಡಿತಾನೇ ತಾನಾದ ಘನದಿ ಮನ ಕರಗಿ ೭

೧೫೫
ನಾದದಿ ಬೆರೆತಿರು ಮುಕ್ತಾ ನಿತ್ಯವಿರಕ್ತಾವಾದದಿ ಬೆರೆತಿರುಮುಕ್ತಾ ನಾದದಿ ತಾನಾಗಿ ನಿನ್ನ ವಿಚಾರಿಸುನಾದಂ ಧಿಂಧಿಂಧಿಮಿಕೆ ಎಂಬ ಪ
ಸರ್ವರೂಪಕವಿದೆ ನಾದ ಸಕಲ ವಿನೋದಪರ್ವಿಕೊಂಡಿರುತಿಹ ನಾದ ಬಹುಲೋಕ ಮೋದದುರ್ವಿಕಾರದ ಮನವ ಎಲ್ಲೆಡೆ ಹರಿಯಿಸುವ ವೀಣಾನಾದ ೧
ಆನಂದಕಾಶ್ರಯನಾದ ಆಗಿದೆ ಭೇದಸ್ವಾನಂದ ತಾನೆಯದೆ ನಾದ ಹೇಳಲಿಕೆ ಭೇದಜ್ಞಾನ ಶುದ್ಧನು ಸುಭಕ್ತಿ ವಿರಕ್ತಿಯುತಾನಹುದಹುದೆಂದು ಭೇರಿಯ ನುಡಿಸುವ ೨
ತಾಪತ್ರಯದ ಮೂಲ ಹರಣ ಯೋಗಿಗಳ ಭರಣಪಾಪ ಪುರುಷನ ಸಂಹರಣ ತಾನಿಹುದು ಸದ್ಗುಣಭಾಪು ಚಿದಾನಂದ ಗುರುವನು ಕೂಡಲುಈ ಪಥವಲ್ಲದೆ ಇನ್ನೊಂದು ತಾನಿಲ್ಲ ೩

೧೫೬
ನಾದದಿ ಮಲಗ್ಯಾನೆ ಯೋಗಿ ನಿತ್ಯಾನಂದ ಭೋಗಿನಾದದಿ ಮಲಗ್ಯಾನೆ ಯೋಗಿನಾದಂ ಝಣಂ ಝಣನಾದಂ ಭಿಣಿಂಭಿಣಿನಾದಸಲೆಯ ವೀಣಾನಾದವ ಕೇಳುತ ಪ
ಈಷಣತ್ರಯ ಪಾಪಾತ್ಮರಿರಾ ಎಬ್ಬಿಸಲು ಬ್ಯಾಡಿವಾಸನವೆಂಬ ಆಷ್ಟಕರ್ಮಿಗಳೇ ಒದರ ಬ್ಯಾಡಿಪಾಶವ ಹರಿವುತ ಪಂಚಕ್ಲೇಶದಈಸು ಉಳಿಯದಂತೆ ತರಿದಾಯಾಸದಿ ೧
ಅಂತರ ಎಂಬ ಘಾತಕರಿರಾ ಅತ್ತ ಹೋಗಲು ಬ್ಯಾಡಿಭ್ರಾಂತುಯಂದೆಂಬ ಬ್ರಷ್ಟರಿರ ಜಗಳಾಡಲಿ ಬ್ಯಾಡಿಅಂತರಿಸದೆ ಆರು ಶತ್ರುವ ಛೇದಿಸಿಅಂತಿಂತೆನ್ನದೆ ಆಯಾಸದಿಂದಲಿ ೨
ಸಂಕಲ್ಪವೆಂಬೋ ಖೋಡಿಗಳಿರಾ ಸದ್ದು ಮಾಡಲಿ ಬ್ಯಾಡಿಮಂಕು ಎಂದೆಂಬ ಮಾಂದ್ಯಗಳಿರ ಮುಂದಕ್ಕಡ್ಡಾಡಬೇಡಿಬಿಂಕದಹಂಕಾರ ಬೇರ ಕಿತ್ತುಓಂಕಾರ ಚಿದಾನಂದ ವಸ್ತು ಆಯಾಸದಿ ೩

೧೫೭
ನಾದನಾದ ಸುನಾದವ ತಿಳಿದವ ನಾದ ಮೂರುತಿ ನಿಜನಾದ ಪ
ಆರು ಅರಿಗಳು ಅವರನು ಗೆಲುವೊಡೆ ಆಶ್ರಯ ತಾನಿದೆ ನಾದಧೀರತನದಲಿಹ ನಾಲ್ವರ ಸಾಧಿಸೆ ದಿಟವು ತಾನಿದೆ ನಾದ ೧
ಅಷ್ಟಮದಂಗಳನೆಲ್ಲವ ತಿಳಿವೊಡೆ ಆದಿಯಹುದು ಈ ನಾದದುಷ್ಟರು ಐವರ ದೃಢವನು ಕೆಡಿಸಲು ದೃಷ್ಟಿಗೆ ತಾನಿದೆ ನಾದ ೨
ಮೂರು ಮೂರು ಮೂರೆನಿಸುವ ತ್ರಿಪುಟಿಯ ಮೂಲನಾಶವಿದೆ ನಾದಚೋರರು ಸಪ್ತಾ ಸಪ್ತರು ಎಂಬರ ಭೇದಿಸೆ ತಾನಿದೆ ನಾದ ೩
ಎರಡರ ಭೇದವನೆಲ್ಲವನಳಿವೊಡೆ ಎಡೆದೆರಪಿಲ್ಲದ ನಾದಭರಿತವನಂದಾನಂದವ ತುಳುಕುವ ಭಾಗ್ಯವು ತಾನಿದೆ ನಾದ ೪
ನಾದದಿ ನಿತ್ಯವು ಬೆರೆತಿಹ ಪುರುಷನೆ ನಾದ ಚತುರ್ಮಖನಾದವಾದರಹಿತ ಚಿದಾನಂದ ಗುರುವಿನ ಪಾದದೊಳಗೆ ಅವನಾದ ೫

೧೬೦
ನಾದವ ಕೇಳುತ ನಿದ್ರೆಯ ಮಾಡುತ ಬ್ರಹ್ಮವು ತಾನಾಗಿನಾದವ ಕೇಳುತ ನಾನಾ ಗುಣಗಳು ಹೋದವು ತಾವಾಗಿ ಪ
ಕೂಡಿತು ದೃಷ್ಟಿ ಪರಬ್ರಹ್ಮದಿ ತಾ ಅನುದಿನದಲಿ ಬಾಗಿಮನ ಇಂದ್ರಿಯಗಳು ಹುಡುಕಿದರಿಲ್ಲ ಹೋದವು ತಾವಾಗಿ ೧
ನಾನಾ ವರ್ಣದ ಛಾಯೆಯ ನೋಡುತ ನಿದ್ರೆಯ ಮಾಡಿದೆನೋಭಾನು ಕೋಟಿ ಛಾಯೆಯ ನೋಡುತ ನಿದ್ರೆಯ ಮಾಡಿದೆನೋ ೨
ಕಾಣದ ರೂಪದ ಕಾಣುತಲೆ ನಾ ಕಾಮಿಸಿ ಮಲಗಿದೆನೋಬೋಧ ಚಿದಾನಂದ ಸದ್ಗುರು ನಾಥನ ಧ್ಯಾನವ ಮಾಡಿದೆನೊ ೩

೧೫೮
ನಾದವನಾಲಿಸೋ ನಿತ್ಯದಿ ನಾದದೊಳಗಿನ ನಾದ ಸುನಾದಓಂಕಾರ ನಾದವನರಿವನೆ ಧನ್ಯ ಯೋಗೀಶ ಪ
ನಾದದಿಂದಲಿ ಅಷ್ಟಪಾಶವಿಕ್ಕಡಿಯಹುದುನಾದದಿಂದಲಿ ಮದಗಳೆಂಟುಡುಗಿ ಹೋಗುವವುನಾದದಿಂದಲಿ ಅರಿಗಳರುವರೂ ತೊಲಗುವರುನಾದದಿಂದಲಿ ಕರ್ಮವು ದೂರಹುದುನಾದದಿಂದಲಿ ಧರ್ಮವು ವೃದ್ಧಿಪುದುನಾದದಿಂದಲಿ ಬ್ರಹ್ಮವು ಯೋಗೀಶ ೧
ನಾದದಿಂದಲಿ ಮೌನ ತನಗೆ ತಾನಾಗುವುದುನಾದದಿಂದಲಿ ಚತುಸ್ಸಾಧನವು ದೊರಕುವುದುನಾದದಿಂದಲಿ ಸಪ್ತ ಭೂಮಿಕೆಗಳಾಗಿಹವುನಾದದಿಂದಲಿ ಜ್ಞಾನವು ಸ್ಥಿರವಹುದುನಾದದಿಂದಲಿ ಚಿತ್ರವಚಲವಹುದುನಾದದಿಂದಲಿ ಸರ್ವರು ಯೋಗೀಶ ೨
ನಾದದಿಂದಲಿ ಬುದ್ಧಿ ನಿರ್ಮಲವಾಗುವುದುನಾದದಿಂದಲಿ ಮನವು ಹಿಡಿತದಲಿರುತಿಹುದುನಾದದಿಂದಲಿ ದೃಕ್‍ದೃಶ್ಯ ಸಾಧನವಹುದುನಾದವೆ ಬ್ರಹ್ಮವಹುದುಚಿದಾನಂದನಾದವನ ತೋರಲು ಬಹುದು ಅವನಲಿಭೇದವಿಲ್ಲದೆ ಕೂಡಲುಬಹುದು ಯೋಗೀಶ ೩

೧೫೯
ನಾದವಾದನು ನಾದದ ಮನೆಯಿದ್ದ ಅಚ್ಚರಿ ನೋಡಿವಾದಿಗಳನು ಗೆದ್ದು ಜಯವ ತಾ ಮಾಡಿ ನಾದವಾದನು ಪ
ಸುಮನಸವೆಂದೆಂಬ ಕುದುರೆಯ ಹತ್ತಿಅಮಲವೆನಿಪ ಧೈರ್ಯದ ಕತ್ತಿಯ ಹಿಡಿದುಭ್ರಮಣೆಯಲ್ಲದ ವಿವೇಕ ಫೇರಿಯಿಂದವಿಮಲಾನಂದದಿ ದುಮುಕಿಸುತಿರುತಿಪ್ಪ ನಾದವಾದನು ೧
ಅಷ್ಟ ಆನೆಗಳ ತಲೆಗಳ ಹೊಡೆದುಷಷ್ಟರಧಿಕರ ಸಾಲನು ಕಡಿದುದುಷ್ಟಕುದುರೆಗಳ ಏಳರ ಕಾಲನು ಉಡಿದುಕಷ್ಟರೂಪದ ಚೋರರೈವರನು ದೂಡಿದ ನಾದವಾದನು ೨
ಈಷಣತ್ರಯ ಪ್ರಧಾನರ ಜೀವವ ಕಳೆದುವಾಸನೆ ದಳವಾಯ್ಗಳೀರ್ವರ ನೆರೆ ತುಳಿದುಮೋಸಗಾರರ ದೊರೆ ನಾಲ್ವರನಳಿದುಏಸು ನುಡಿಯಲಿ ತಾನೊಬ್ಬನೇ ಉಳಿದು ನಾದವಾದನು ೩
ದೋಷಕರೆಲ್ಲರ ದೇಶ ಬಿಟ್ಟೋಡಿಸೆನಾದವಾದರು ಎಲ್ಲರು ಕೊನೆಗೆ ಉಳಿದವರೆಲ್ಲಾಸಾಷ್ಟಾಂಗ ವೆರಗಿದರುವಾಸಿ ಪಂಥವ ಬಿಟ್ಟು ಕೊಂಡಾಡುತ ನಾದವಾದನು ೪
ಇಂತು ರಣವ ಮಾಡಲು ಕೈಯ ಸುರಗಿಸಂತೋಷವೆಂಬ ಮೃತದಿ ತಾ ಮುಳುಗಿಶಾಂತನಾಗಿಯೆ ಚಿದಾನಂದ ಗುರುವಿಗೆರಗಿನಿಂತು ನೋಡಿಯೆ ಕಂಡನಾತನೆ ತಿರುಗಿ ನಾದವಾದನು ೫

೧೬೧
ನಾದಾನಂದದಿ ಮುಳುಗಾಡೋ ಪ
ಇಲ್ಲವೆಂಬುದು ಸಲ್ಲ ಗುರುಎಲ್ಲಾ ಪೂರಿತನಹುದಲ್ಲ ಇದ ಬಲ್ಲವರು ಬಲ್ಲರೆಲ್ಲತಾನೆಲ್ಲ ತಿಳಿಯೆ ನೀ ಸಾಕ್ಷಿಕನಹುದಲ್ಲ ೧
ಮತಿಯಿಂದ ತಿಳುಕೋ ವಿಚಾರ ಈಗತಿಯಲ್ಲಿ ಆತ್ಮನು ಪೂರಗತಿಗೆ ಕೇಡಿಲ್ಲ ಇದು ಸ್ಥಿರ ಮಹದತಿ ಸೌಖ್ಯ ಪದಕೆ ರಾಜ ನೀನೆ ಉದಾರ ೨
ಭೇದ ಭೇದವು ನಿನಗೇತಕೆ ನೀವಾದ ದೂರನು ಪರಕೆ ಈವಾದ ಸಂವಾದಗಳ್ಯಾತಕೆ ಮಹದಾದಿ ಪುರುಷನು ನೀನಹುದು ಬಿಡು ಜೋಕೆ ೩
ಸತ್ಯ ಸಂವಿದ್ರೂಪ ಆತ್ಮ ನೋಡೆಪ್ರತ್ಯಾಗಾತ್ಮ ಪರಕತೀತ ಆರಿಂದಲಾದುದುಖ್ಯಾತ ಸುನಾದವರಿದನೇ ನಿರ್ಭೀತ ಮಹಾನಾದ ಚಿದಾನಂದನ ಕೂಡಿದನಾತ ೪

೭೭
ನಾನಿನ್ನೇನ ಪೇಳಲಿ ಗುರುರಾಯನೋಡ ನೋಡುತ ಆಡ ಆಡುತ ಕಳೆದೆಲ್ಲೋ ಮಾಯಾ ಪ
ನರದೇಹ ಎಂಬುದು ಎಂಥಾ ಮರವುನೀನೇ ಬ್ರಹ್ಮಾಂತ ತೋರಿದಿ ಅರಿವು ೧
ತತ್ತ್ವಮಸಿ ಮಹಾವಾಕ್ಯ ಕೇಳಿ ಹಾರಿ ಹೋಯಿತು ದ್ವೈತದ ಧೂಳಿ ೨
ಮುತ್ತು ಮಾಣಿಕ ಪೆಸರಾಯಿತು ಲೋಪತುಂಬಿ ಉಳಿಯಿತು ಚಿದಾನಂದ ಸ್ವರೂಪ ೩

೨೭೭
ನಾಯಿ ನಿನಗೇತಕೆ ಯೋಗಿ ವೇಷ ನೀಚನಾಯಿ ನಿನಗ್ಯಾತಕೆ ತತ್ವ ಭಾಷಾ ಹುಚ್ಚನಾಯಿ ನಿನಗೇತಕೆ ವಸ್ತ್ರ ಕಾಷಾ ಮುರುಕುನಾಯಿ ನಿನಗೇತಕೆ ಗುರುಪಾದವಾಸ ಹೊಲಸ ಪ
ಕೊರಳಿಗೆ ಕಪನಿ ತೊಟ್ಟು ಜಪಸರವನೆ ಮುಂಗೈಯಲಿಟ್ಟು ತತ್ವಬರಿನುಡಿ ಸಾಲು ಸಾಲಿಟ್ಟು ಕಾಲಕೆರವನೆ ಇವನ ಬಾಯೊಳಗೆ ವಷಟ್ಟು ಭ್ರಷ್ಟಾ೧
ನೀರೊಳಗೆ ನೆರಳನೆ ನೋಡಿ ಹಣೆಗೆಗೀರುವೆ ಗಂಧವ ತೀಡಿ ಪೋರಪೋರರ ಜೋಡನೆ ಕೂಡಿ ನಿನ್ನಮೋರೆಯ ಮೇಲೆ ಹುಯ್ಯಬೇಕು ಕಸ ಪುಡಿಕೆ ಕಡುಗ ೨
ಅತ್ತ ಸಂಸಾರ ಕೆಟ್ಟುಮತ್ತಿತ್ತ ಗುರುಪಾದವ ಬಿಟ್ಟು ನೀನತ್ತತ್ತ ಉಭಯ ಭ್ರಷ್ಟಾ ನಿನಗೆಸತ್ತಿಹರು ಅರಮನೆಯ ಗೌಡೆಯರೆಷ್ಟು ಜಾಣ ೩
ಕಂಡ ಕಂಡಲ್ಲಿಯೇ ಉಂಡುದೊಡ್ಡ ಹೊಟ್ಟೆಯ ಬೆಳೆಸಿಕೊಂಡುಬಾಡದಂಡೆಯ ಮನೆಗಂಟಿಕೊಂಡು ನಿನ್ನಮಂಡೆಯ ಹೊಡಿಬೇಕು ಪಾಪಾರಿಕೊಂಡು ಹೊಲೆಯ ೪
ಅಂದವಾಗುವಿ ಗಳಿಗೆಗೊಂಡು ಹೂವಚೆಂಡಾಡಿ ಚುಂಗ ಬಿಟ್ಟುಕೊಂಡು ಯಮಮಂದಿರ ಮನೆ ಮಾಡೆಂದುಚಿದಾನಂದನ ಪಾದಕ್ಕೆ ದೂರಾದೆ ಇಂದು ಕೆಟ್ಟಾ ೫

೨೭೮
ನಿಂದಕರು ಎಂದವರ ತುಚ್ಚಿಸಲಾಗದುಸಂದೇಹವಿಲ್ಲವು ಅವರು ಅತಿಹಿತರು ಪ
ಸಂಚಿಸಿದ ಕರ್ಮದಿಂ ಸತ್ಪುರುಷರುದಿಸಿರಲುಹಂಚಿಕೊಂಬರು ತಾವು ಎಲ್ಲರದನುವಂಚಕರು ಎಂದವರ ನೀಚಸಲಿಕಾಗದು ಮುಂಚೆವಂದಿಸಬೇಕು ಅವರ ಪದಕೆ ೧
ತಾಯಿ ಶಿಶುವಿನ ಮಲವ ತಾ ತೃಣದಿ ತೆಗೆಯುವಳುಮಾಯಹರ ಮಹಾಪುರುಷರ ಮಲವನುಆಯಾಸವಿಲ್ಲದಲೆ ತಮ್ಮ ನಾಲಿಗೆಯಲಿ ತೆಗೆಯುವರುಪ್ರಿಯರಿಂತವರಿಗಿಂತ ಹಿತವರುಂಟೆ ೨
ಉದಯ ಮಧ್ಯಾಹ್ನ ಮುಹೂರ್ತಗಳ ನೋಡದಲೆವಿಧವಿಧದ ಪಾಪಗಳ ತಮ್ಮ ಮುಖದಿಮುದದಲುಚ್ಚರಿಸಿ ಚಿದಾನಂದ ಗುರುಭಕ್ತರನುಸುಧೆಯ ಸುಖಮುಕ್ತಿಯೊಳು ಹೊಂದಿಸುವವರು ೩

೧೬೨
ನಿನ್ನನೆ ತಿಳಿದು ನೀ ನೋಡು ಕಂಡ್ಯಾನೀ ನನ್ನ ತಿಳಿಯೆ ನೀ ಶಿವನು ಕಂಡ್ಯಾ ಪ
ಆದಿ ಮಧ್ಯಂತರ ಅನಾದಿ ಕಂಡ್ಯಾನಾದ ಬಿಂದು ಕಳಾತೀತ ಕಂಡ್ಯಾಭೇದಾಭೇದಕೆ ಅಭೇದ ಕಂಡ್ಯಾ ನೀವಾದ ಸುವಾದ ವರ್ಜಿತನು ಕಂಡ್ಯ ೧
ಮೂರು ಗುಣಕೆ ನೀ ಮೂಲ ಕಂಡ್ಯನೀನಾರು ಅರಿಗಳಿಗತ್ತತ್ತ ಕಂಡ್ಯತೋರುವುದಕೆ ನೀ ತೋರ್ಕೆ ಕಂಡ್ಯನೀ ಮಾರನಟ್ಟುಳಿಗೆ ಮಹೇಶ ಕಂಡ್ಯ ೨
ಮಂಗಳ ತರಕೆ ಮಂಗಳನು ಕಂಡ್ಯ ನೀಮಂಗಳ ಮೂರುತಿ ಮಹಾತ್ಮ ಕಂಡ್ಯಮಂಗಳ ವಸ್ತುಮಾಪತಿಯು ಕಂಡ್ಯ ನೀಮಂಗಳನಿಗೆ ಮಾಯೆ ಮಾತು ಕಂಡ್ಯ ೩
ನಿರುಪಮ ನಿರ್ಗುಣ ನೀನು ಕಂಡ್ಯ ನೀಪರಮ ಪರಾತ್ಪರನು ಕಂಡ್ಯಸುರವರ ಜೇಷ್ಠ ಸ್ತುತಿಪನು ಕಂಡ್ಯ ನೀಭರಿತವಾನಂದ ಸಿಂಧು ಕಂಡ್ಯ೪
ಗುರುವಿನ ಪಾದ ಸೇರು ಕಂಡ್ಯಗುರು ಕಟಾಕ್ಷವ ನೀನು ಪಡೆಯೋ ಕಂಡ್ಯಗುರುವೆಂದು ಎಲ್ಲವನರಿಯೋ ಕಂಡ್ಯಗುರು ಚಿದಾನಂದ ನೀನೆನ್ನು ಕಂಡ್ಯಾ ೫

೨೭೯
ನಿನ್ನನೆ ನೀ ಕಾಣಣ್ಣನಿನ್ನ ಕಾಣುವುದರಿಯಣ್ಣನಿನ್ನಯ ದೇಹದೊಳಣ್ಣನಿನಗೆ ಹೇಳುವೆನಣ್ಣ ಪ
ಕಣ್ಣನೆ ಮುಚ್ಚಣ್ಣ ಕಪ್ಪನು ಲಕ್ಷಿಸೋ ಅಣ್ಣಹೊನ್ನು ಕಳೆಗಳಣ್ಣ ಹುಟ್ಟುವುದು ಮುಂದಣ ೧
ಕಪ್ಪದು ಅಡಗಲಿ ಅಣ್ಣ ಕಪ್ಪಿನ ಸ್ಥಳ ಹಿಡಿಯಣ್ಣಕುಪ್ಪಳಿಸುವುದು ಬೆಳಗಣ್ಣ ಕಾಡು ಕಿಚ್ಚಿನಂತಣ್ಣ ೨
ದೃಷ್ಟಿಯಲಿ ದ್ರಷ್ಟಿವಣ್ಣ ದೃಷ್ಟಿಯ ನೆಲೆಯಾಗಲಣ್ಣಶಿಷ್ಟ ಚಿದಾನಂದನಣ್ಣ ಸಾಕ್ಷಾತ್ ನೀನಹೆಯಣ್ಣ ೩

೪೦೯
ನಿರ್ಮಲ ಹೃದಯ ಮಂಟಪದೊಳಗೆ ನಿಶ್ಚಲ ಮಣಿಯಿಟ್ಟುಧರ್ಮ ಪಟ್ಟಾವಳಿಯ ಹಸೆ ಹಾಸಿಧರ್ಮ ಪಟ್ಟಾವಳಿಯ ಹಸೆ ಹಾಸಿ ಮುಕ್ತಿಯನುಕರ್ಮ ಹರೆಯರು ಕರೆದರು ೧
ಪರಮ ಪುರುಷ ಬಂದು ಪರಿಣಾಮದಿ ಕುಳಿತು ಇಹನುಪರಮ ಪಾವನೆ ಹಸೆಗೇಳುಪರಮ ಪಾವನೆ ಹಸೆಗೆ ಏಳೆಂದು ಮುಕ್ತಿಯನುಪರಮ ಶಾಂತಿಯರು ಕರೆದರು ೨
ನಿತ್ಯತೃಪ್ತನು ಬಂದು ನಿಜದಲ್ಲಿ ಕುಳಿತಿಹನುನಿತ್ಯ ಆನಂದೆ ಹಸೆಗೆ ಏಳುನಿತ್ಯ ಆನಂದೆ ಹಸೆಗೆ ಏಳೆಂದು ಮುಕ್ತಿಯನುನಿತ್ಯ ಸತ್ಯೆಯರು ಕರೆದರು ೩
ಮಂಗಳ ಮೂರುತಿ ಬಂದು ಮಂಗಳವಾಗಿ ಕುಳಿತಿಹನುಮಂಗಳ ಮುಖಿಯೇ ಹಸೆಗೇಳುಮಂಗಳ ಮುಖಿಯೇ ಹಸೆಗೇಳು ಎಂದು ಮುಕ್ತಿಯನುಮಂಗಳ ಮುಖಿಯರು ಕರೆದರು ೪
ರೂಪ ರಹಿತನು ಬಂದು ರೂಪವಾಗಿ ಕುಳಿತಹನುರೂಪ ಮಹಾ ರೂಪೇ ಹಸೆಗೇಳುರೂಪ ಮಹಾ ರೂಪೇ ಹಸೆಗೇಳು ಎಂದು ಮುಕ್ತಿಯನುರೂಪವತಿಯರು ಕರೆದರು ೫
ಅಚ್ಯುತನೆ ತಾ ಬಂದು ಅಚ್ಚಾರಿಯಲಿ ಕುಳಿತಿಹನುಅಚ್ಯುತ ರೂಪಳೆ ಹಸೆಗೇಳುಅಚ್ಯುತ ರೂಪಳೆ ಹಸೆಗೇಳೆಂದು ಮುಕ್ತಿಯನುನಿಶ್ಚಿತ ಮತಿಯರು ಕರೆದರು ೬
ಸಾಕ್ಷಿರೂಪನೆ ಬಂದು ಸಾಕ್ಷಾತ್ತು ಕುಳಿತಿಹನುಸಾಕ್ಷಿಭೂತಳೆ ನೀನು ಹಸೆಗೇಳು ಸಾಕ್ಷಿಭೂತಳೆ ನೀನು ಹಸೆಗೇಳೆಂದು ಮುಕ್ತಿಯನುಸೂಕ್ಷ್ಮಮತಿಯರು ಕರೆದರು೭
ವೇದಾತೀತನೆ ವೇದ್ಯವಾಗಿ ಕುಳಿತಿಹನುವೇದಮಾತೆಯೆ ನೀನು ಹಸೆಗೇಳುವೇದಮಾತೆಯೆ ನೀನು ಹಸೆಗೆ ಏಳೆಂದು ಮುಕ್ತಿಯನುವೇದಸ್ರ‍ಮತಿಯರು ಕರೆದರು೮
ಜ್ಯೋತಿ ಚಿದಾನಂದನೆ ಬಂದು ಜೋಕೆಯಲಿ ಕುಳಿತಿಹನುಜ್ಯೋತಿ ಪ್ರದೀಪೆಯೇ ಹಸೆಗೇಳುಜ್ಯೋತಿ ಪ್ರದೀಪೆಯೇ ಹಸೆಗೇಳು ಏಳೆಂದು ಮುಕ್ತಿಯನುಜ್ಯೋತಿರ್ಮತಿಯರು ಕರೆದರು ೯

೭೮
ನೀನೇ ದಯಾಳು ದೊರೆ ಸದ್ಗುರುನಾಥನೀನೇ ದಯಾಳು ದೊರೆ ಪ
ಸತಿಸುತ ಮಿತ್ರರ ನೀನೇ ಮರೆಸಿದೆಮತಿಯನೆ ತುಂಬಿದೆ ಸದ್ಗುರುನಾಥ ೧
ನನ್ನನು ವೈದೆ ನಿನ್ನನು ಮಾಡಿದೆನನ್ನತನವ ಕಳೆದೆ ಸದ್ಗುರುನಾಥ ೨
ನಾಚಿದುದು ಭವ ನಿನ್ನನು ಸ್ಮರಿಸೆನೀ ಚಿದಾನಂದರಸೇ ಸದ್ಗುರುನಾಥ ೩

೨೮೦
ನೆನೆಯಿರೋ ಪಾಪಿಗಳಿರ ನೆನೆಯಿರೋ ಪಾಪಿಗಳಿರನೆನೆಯಿರೋ ದ್ರೋಹಿಗಳಿರ ನೆನೆಯಿರೋ ಆತ್ಮನನು ಪ
ಘಳಿಗೊಂದು ಮರೆಯಾಗಲಾಗಿ ಮೇರು ಕೊಟ್ಟರು ತಿರುಗದುಘಳಿಗೆರಡು ಪೋಗೆ ಕಡೆಯಿಲ್ಲ ಕೇಡುಸುಲಭವೆನಲಿಕ್ಕಿಲ್ಲ ದೇಹ ನಿತ್ಯವದಲ್ಲಕಲಹದ ಮಾತಲ್ಲ ಕಡೆ ಹಾಯ್ವ ಪಥವು ೧
ಮಲಗಿದಾಗಲೆ ಏನೋ ಕುಳಿತಾಗಲೇನೋತಿಳಿದು ನೋಡಲು ನಡೆವಾಗ ನುಡಿವಾಗಲೇನೋಬಲವು ಕಾರಣವಲ್ಲ ಆಗೇನೋ ಈಗೇನೋಮಲ ಮೂತ್ರ ಮಾಂಸಗಳ ಮುರಿಕೆ ಮಜ್ಜೆಯಿದು ೨
ತನ್ನ ದೇಹದೊಳಿರುವ ಆತ್ಮನನು ಮರೆತಾಗತಾನೆ ಆತ್ಮ ದ್ರೋಹಿ ತಾನೆ ಗುರು ದ್ರೋಹಿತನ್ನ ದೇಹವ ಹೊತ್ತು ಚಿದಾನಂದ ಬೆಳಗುತಿರೆತನ್ನ ಮರೆತು ಭವ ಪಾಲಹ ಪಾಪಿ೩

೧೬೩
ನೆಲೆಯಾವುದಯ್ಯ ಹೊಲಬಾವುದಯ್ಯತಿಳಿದು ಆತ್ಮನನು ತಿಳಿಯದ ಮನುಜರಿಗೆ ಪ
ವೇದ ಸಾರವನೋದಿ ವೇದದರ್ಥವ ಕಂಡುಆದಿಯಾಗಿಹಅನಾದಿ ಮೂರುತಿಯನ್ನುಸಾಧಿಸಿ ಸಾಧ್ಯವಾಗದೆ ಸರ್ವರೊಳಗಾಗಿಬಾಧೆಯೊಳಗೆ ಸಿಕ್ಕುಬಿದ್ದ ಮನುಜಗೆ ೧
ತನುದುಸ್ಥಿತಿಯ ಕಂಡು ತನುವಲಿಹನ ಕಂಡುಚಿನುಮಯವಾದ ಚಿದ್ರೂಪನೆಂಬನಮನದ ಕೊನೆಯಲಿಟ್ಟು ಮಥಿಸಲಾರದೆ ತಾನುಘನ ದುಃಖದೊಳು ಬಿದ್ದು ಗಲಭೆಯಾದವಗೆ೨
ಕರಣ ಚರಿತೆಯ ನೋಡಿ ಕರಣ ಸಾಕ್ಷಿಯ ಕಂಡುಸ್ಥಿರ ಬುದ್ಧಿಯಾಗಿಯೆ ಸ್ಥಿಮಿತನಾಗದೆ ತಾನುವರ ಚಿದಾನಂದ ಪದ ಹೊಂದಲಾರದೆ ನರಕದೊಳಗೆ ಬಿದ್ದು ನರಳಾಡುವವನಿಗೆ ೩

೨೮೧
ನೋಡಿರೆ ಅಡ್ಡ ಬಂದ ಗ್ರಹಚಾರಮಾಡೆ ಪಾಪವ ಮನ ಆತ್ಮಂಗೆಂಬುದು ಪ
ಕಳ್ಳ ಕನ್ನದಿ ಸಾಯೆ ಡೊಳ್ಳುಕೋಮಟಿಗನತಳ್ಳಿ ಶೂಲಕೆ ಏರಿಸು ಎಂಬ ಗಾದೆಜಳ್ಳು ಮನವಿದು ನಿಲದೆ ಪಾಪವನು ಮಾಡಿದರೆಆ ಪಾಪ ಆತ್ಮಗೆ ಎಂದು ಊಹಿಸುವರು ೧
ಏಡಿ ಹಾದರವಾಡೆ ಗೊದರಕಪ್ಪಯ ಕೂಡಿಎಲ್ಲರಿಗು ಕೋಳ ಹಾಕೆಂಬ ಗಾದೆಮೂಢ ಮನವಿದು ತಾನು ಪಾಪವನು ಮಾಡಿದರೆಆಡಲೇನದ ಆತ್ಮಗೆಂದು ಊಹಿಸುವರು ೨
ಮನವು ಎಂಬುದು ಆತ್ಮನಿಂದ ಸಂಚರಿಪುದುಮನವು ಆತ್ಮನೊಳು ಲಯವು ಅಹುದುಮನವು ಮೊದಲಿಗೆ ಸುಳ್ಳು ಪಾಪಗಳಿಹವೆಲ್ಲಿಮನಕುಗೋಚರ ಚಿದಾನಂದ ಶುದ್ಧಾತ್ಮನು೩

೩೬೬
ನೋಡು ನೋಡು ಬ್ರಹ್ಮವ ಮುಕ್ತನೆನೋಡು ನೋಡು ಬ್ರಹ್ಮವನೋಡು ನೋಡು ಬ್ರಹ್ಮವನ್ನುಗೂಢವಲ್ಲ ಎದುರಿಲ್ಲದೆಆಡಲಿಕ್ಕೆ ನಾಲಗಿಲ್ಲ ಸರ್ವರೂಪದಲ್ಲಿದೆ ಪ
ಸ್ತ್ರೀಯ ರೂಪಾಗಿದೆ ಪುರುಷ ರೂಪಾಗಿ ಇದೆಸ್ತ್ರೀಯು ಅಲ್ಲ ಪುರುಷನಲ್ಲ ಅಹುದು ಅಹುದು ಅಹುದು ಅಲ್ಲ ೧
ಸತಿಯು ಪತಿಯು ಆಗಿ ಇದೆಸುತರು ಸೊಸೆಯು ಆಗಿ ಇದೆಅತಿ ಬಳಗವಾಗಿ ಇದೆ ಎಲ್ಲ ವೇಷ ಹಾಕಿ ಇದೆ೨
ಎಲ್ಲವಾಗಿ ಆಡುತಿದೆಎಲ್ಲವಾಗಿ ಪಾಡುತಿದೆಎಲ್ಲವಾಗಿ ಚಿದಾನಂದ ಬ್ರಹ್ಮವೀ ಪರಿಯಲಿದೆ ೩

೩೬೭
ಪಡಿಶಟ್ಟು ಪಟ್ಟಣವ ಕೇಳದೆಯಕ್ಕಪಡಿಶಟ್ಟು ಪಟ್ಟಣವಪಡಿಶಟ್ಟು ಪಟ್ಟಣದ ವಿವರ ಕೇಳೇಹುಟ್ಟಳಿವುದಕೆ ಕಡೆಯಿಲ್ಲ ಪ
ಪಟ್ಟಣದರಸಗೆ ತಲೆಯೇ ಇಲ್ಲಪಟ್ಟಣದರಸನ ಹೆಂಡತಿ ರಂಡೆಪಟ್ಟುಗೊಡುವ ಓಲೆಕಾರರು ಪಾಪಾಶಿ ಬೆಲೆಯವರು ೧
ಸಿಂಗಲೀಕನವ ಪ್ರಧಾನಿ ಶಿಷ್ಟನೀಗವನು ಕೋಣಮಂಗಳನೀಗವನು ತಳವಾರಅಂಗತಿರುಗುವವನೆ ೨
ಕರಣೀಕನೀಗವ ಮೊಂಡನೊಣವು ಎಂಬುವನವನಾಚಾರಿಹಿರಿಯ ಗೂಗೆ ಬಹಳ ಮುದುಕಿ ಎಲ್ಲರಿಗು ಹಿರಿಯವಳು ೩
ಹದ್ದು ಈಗ ತಾ ದಳವಾಯಿನೀಚರೆಲ್ಲರು ನಾಯಕರುಇದ್ದ ವಕ್ಕಲು ಎಲ್ಲ ದುಃಖಿಗಳು ಬಲು ಎಡವಟ್ಟುಗಳು ೪
ಗುರು ಕರುಣದಿ ಅರಸಗೆ ತಲೆ ಬರಲುಅರಸನ ಹೆಂಡತಿ ಮಂಗಳೆಯಾಗಲುಗುರು ಚಿದಾನಂದ ತಾನಾದರಸು ಎಲ್ಲರು ಮುಕ್ತರೆ ೫

೨೮೨
ಪತ್ರ ಜಲದಂತೆ ಇಹ ಮಹಾತ್ಮರು ಬುದ್ಧಿ ಶಿಷ್ಯಂಗೆ ಹೇಳ್ವುದು ಹ್ಯಾಗೆಪತ್ರ ಜಲದಂತೆ ಇರುವವರ ವಿವರವ ಕಂಡದ್ದಪೇಳುವೆ ತಿಳಿದ್ಹಾಗೆ ಪ
ಪರಮ ಶಿಷ್ಯರಿಗೆ ತತ್ವದ ಬೋಧೆ ಬೋಧಿಸಿಪರವಾಗಿಹರದು ಹ್ಯಾಗೆಹುರಿದ ಚಣಕ ತಿನಲಿಕೆ ಬಹುದಲ್ಲದೆ ಹುಟ್ಟುವಣಿಲ್ಲದ ಹಾಗೆ ೧
ವೆಗ್ಗಳವಾಗಿಹ ತತ್ವಗ್ರಂಥವ ಹೇಳಿ ವಸ್ತುವಾಗಿರದು ಹ್ಯಾಗೆಬೊಗ್ಗೂವಡೆದ ಮಾಡಬಾಹಣವಲ್ಲದೆಬೊಗ್ಗೂ ಕಟ್ಟಿಗೆಯಾದ್ಹಾಗೆ ೨
ಶಬ್ದಡಗಿದ ಚಿದಾನಂದ ಮಹಾತ್ಮರುಶಬ್ದವಾಡುವರದು ಹ್ಯಾಗೆಶಬ್ದವು ಗವಿಯಲ್ಲಿ ಮಾಡಲು ಮಾಡುವುದುಶಬ್ದವೀ ಗವಿಗಿಲ್ಲದ ಹಾಗೆ೩

೧೬೪
ಪಥವ ಬಿಡು ಬಿಡು ದೇವ ಪಥದಿ ಮಲಗುವರೆಗತಿ ಚಿದಾನಂದನಿರೆ ಗತಿಗೆಡುವೆನೆ ಭಯಕೆ ಪ
ಅಲ್ಲಿ ನಾನಾ ಬೋಧೆ ಬೋಧಿಸಲು ಭವ ಹರಿದುನಿಲ್ಲದಲೆ ನಾನೀಗಲೈ ತರಲಿಕೆಇಲ್ಲಿ ಸರ್ವವೆ ಆಗಿ ನೀ ಬಂದು ಮಲಗಿರುವೆಸುಳ್ಳನಿತು ಸೇರದಿದು ನಿನ್ನವಗೆ ಬಿಡು ಪಥವ೧
ಮನುಜ ಸಂಗವನಳಿದು ಮಹದರಣ್ಯವ ಹೊಕ್ಕುಅನಂತರದ ಪುಣ್ಯದಾಶ್ರಮವ ನೋಡಿಸನುಮತದಿ ಪೂಜೆಯನು ಮಾಳ್ಪೆನಾನೆಂದು ಬರೆಘನಸರ್ಪವಾಗಿ ನೀನಡ್ಡ ಬಿದ್ದಿಹೆ ದೇವ ೨
ಸಕಲ ಸಂಗವನುಳಿದು ಸ್ವಾನುಭಾವಗಳಿಂದಅಖಿಲ ಮೃಗಗಳ ಕೂಡಿ ನಿಶ್ಚಲತೆಯಿಂದಭಕುತಿಯಲಿ ನಿನ್ನನು ಭಜಿಪೆನೆಂದೈದುತಿರೆಭಕುತನಿಗೆ ಸರ್ಪನಂತಿಹುದಿದೇನೈ ಸ್ವಾಮಿ೩
ಏಕಾಂತ ಗೃಹಗಳಲಿ ಏಕಾಂತ ಸ್ಥಳಗಳಲಿಏಕಾಂತವಾಗಿ ನಿನ್ನನೆ ಪೂಜಿಸಿಏಕಾಂತ ಸರ್ವಸಾಧನವೆನುತಲೈದುತಿರೆಏಕಾಂತ ಮಾತೇಕೆ ಪಥವ ಬಿಡು ಎಲೆ ದೇವ ೪
ಶುಕಗೆ ಪಂಜರದಂತೆ ಸಾಕ್ಷಿಯೆನಗಿರುತಿರಲುಅಖಿಲ ಚಿಂತೆಯ ಗಿಡುಗ ಬರಲಹುದೆಮುಕುತಿದಾಯಕ ಚಿದಾನಂದ ಗುರು ಕೇಳೆನಗೆಯುಕುತಿಯುಂಟೇ ಬೇರೆ ಬಿಡುಬಿಡಿರೆ ಬಿಡು ಪಥವ೫

೮೦
ಪದವಿಯಂಬುದದಿಹುದೆ ಪರಮ ಗುರುಪದಕಿಂತಪದವಿಯಂಬುದು ಗುರುಪದದೊಳಗಡಗಿಹುದು ಪ
ನಿತ್ಯವೂ ಗುರುಪದವ ನೆನೆವುದೇ ನಿತ್ಯ ಪದವಿಮತ್ತೆ ಶರಣೆಂಬುದೇ ವೈಕುಂಠ ಪದವಿಅತ್ಯಂತ ಭಕ್ತಿಯಾಭಾವಾನಂದ ಪದವಿ ೧
ಬಂಧುರ ಸುವಾಕ್ಯಗಳ ಬಣ್ಣಿಪುದೆ ಬ್ರಹ್ಮಪದವಿಇಂದು ಧನ್ಯನುನಾ ಎಂಬುದೀಶ್ವರ ಪದವಿಸಂದುಸುಖಿಸುತ್ತಿಹುದೆ ಸದಾಶಿವ ಪದವಿ೨
ಬೆರಗಿ ನಿಂದಿರುತಿಹುದೆ ಭೇದ ವಿಚ್ಛೇದ ಪದವಿಮರೆತು ತನುವಿರುತಿಹುದೆ ಮಹಾ ಮೋಕ್ಷ ಪದವಿಮರೆವು ಅರಿವೆರಡಿಲ್ಲದಿಪ್ಪುದೆ ಮಹಾಪದವಿನಿರವಯ ಚಿದಾನಂದನಾದುದೆ ನಿಜಪದವಿ ೩

೧೬೫
ಪರಮ ಪುರುಷ ನಿನಗೆ ನಮೋ ನಮೋಪರಮ ಪರಾತ್ಪರಗೆ ನಮೋ ನಮೋ ಪ
ಆದಿ ಅನಾದಿಗೆ ನಮೋ ನಮೋ ಮಹದಾದಿ ತತ್ವಕೆ ನಮೋ ನಮೋವಾದರಹಿತನಿಗೆ ನಮೋ ನಮೋ ನಿಜವಾದ ವಸ್ತುವಿಗೆ ನಮೋ ನಮೋ ೧
ಲೋಕ ಹಿತಾಖ್ಯಗೆ ನಮೋ ನಮೋ ಜಗದೇಕವಲ್ಲಭನಿಗೆ ನಮೋ ನಮೋನಾಕ ವಂದಿತಗೆ ನಮೋ ನಮೋ ನಿ-ರಾಕಾರ ನಿತ್ಯನಿಗೆ ನಮೋ ನಮೋ೨
ಸಿಂಧು ಆನಂದಗೆ ನಮೋ ನಮೋನಾದ ಬಿಂದು ಕಳಾತ್ಮಗೆ ನಮೋ ನಮೋಸುಂದರ ತೇಜಗೆ ನಮೋ ನಮೋಚಿದಾನಂದ ವಿಗ್ರಹಗೆ ನಮೋ ನಮೋ ೩

೨೮೩
ಪಾಪ ಹತ್ತಿದೆ ಜಗಕೆ ಪಾಪ ಹತ್ತಿದೆಪಾಪದೊಳಗೆ ಮಹಾಪಾಪ ಪುರುಷ ಬೀಜಕೆ ಬಂದಿದೆ ಮೃತ್ಯು ಪ
ಅಂದು ಕೃತಯುಗದಿ ಪಾರ್ವತಿಯಾಯಿತು ಭಸ್ಮಾಸುರಗೆಮುಂದೆ ತ್ರೇತಾಯುಗದಿ ಸೀತೆಯಾಗಿ ಹಿಡಿಯಿತು ರಾವಣಂಗೆ ಮೃತ್ಯು೧
ಹಿಂದೆ ದ್ವಾಪರಯುಗದಿ ದ್ರೌಪದಿಯಾಗಿ ದುರ್ಯೋಧನನ ಮುರಿಯಿತು ಮೃತ್ಯುಇಂದು ಕಲಿಯುಗದಿ ನೋಡಲು ಇದಕೋ ಮನೆಮನೆಗೆ ಮೃತ್ಯು ೨
ಹೆಡಕತ್ತಲಿ ಕೂತು ಹಗಲು ಇರುಳು ಕಾಯಿತಿದೆ ಮೃತ್ಯುಬಿಡಿಸಿಕೊಂಡು ಸ್ವರ್ಗಕೆ ಹೋದರೆ ಬೆನ್ನ ಬಿಡದು ಅಲ್ಲಿ ಮೃತ್ಯುಅಡ ಶಿರೋಶಿ ಇಲ್ಲಿಗೆ ಬಂದರೆ ಅಡರಿ ಕೊಂಬುದು ಮೃತ್ಯು೩
ಮೃತ್ಯುಭಯವ ಬಿಡಿಸಿ ಮುಂದೆ ಕಾವರಿಲ್ಲವೋಮೃತ್ಯುಂಜಯರು ಚಿದಾನಂದ ಭಕ್ತರುಂಟುನಂಬಿದರೆ ಮೃತ್ಯು ಮಗ್ಗುಲಲಿದ್ದರೇನು ಮೋಹವಿಲ್ಲದಂತೆ ಮಾಡುವುದು೪

೨೮೪
ಪಾಪಿಯ ನೋಡೆ ಬಡಿಸುವ ಪಾಪಿಯ ನೋಡೆಪಾಪಿಯ ನೋಡೆ ಪಾಪದ ಪಿಶಾಚಿಪಾಪಿಯ ಮೋರೆಯ ನೋಡಬಾರದಕ್ಕೆ ಪ
ಅನ್ನವನೀಗ ಇಷ್ಟಿಷ್ಟು ಹಾಕುವಳು ಅತ್ತಲಾಗಿ ಇಡುವಳುಏನು ಇಷ್ಟೆಂದು ಕೇಳಲು ಅರಿಯಿರಿ ಹೊಟ್ಟೆಯೆಂದು ಎದುರಿಗೆ ನಿಂತೆ ಮುಸಿ ಮುಸಿ ನಗುವಳು ೧
ಆಜ್ಯವ ಹಾಕೆನೆ ಅಲ್ಲಾಡುತಲಿ ಅರಿಯಿರಿ ಬೇಸಗೆ ಸೆಖೆ ಎಂತೆಂಬಳುಮಜ್ಜಿಗೆ ಹಾಕೆನೆ ಮಂದಮತಿಗಳ ಮಹಾಶೈತ್ಯವು ಬೇಡವು ಎಂತೆಂಬಳು ೨
ಉತ್ತಮರೆಂದರೆ ಒಳ್ಳೆಯದಿಕ್ಕಳು ಉಬ್ಬಿಸಹೋದರೆ ಉಬ್ಬದಿಹಳುನಿತ್ಯ ಚಿದಾನಂದ ಸತ್ಪುರುಷರಿಗೆ ನಿಶ್ಚಯವಾಗಿ ಉಣಬಡಿಸುವಳು ೩

೨೮೫
ಪುಣ್ಯದ ಹಾದಿಯ ಪೇಳ್ವೆ ಪೇಳಿದಂದದಲಿರೆ ಪುಣ್ಯಲೋಕವು ನಿನಗಣ್ಣಪುಣ್ಯವ ಕೆಡುಗೊಡದಲೆ ನೀನು ನಡೆದರೆ ಪುಣ್ಯ ಪುರುಷನಹೆಯಣ್ಣ ಪ
ಬಿಸಿಲೊಳಗಿದ್ದವರ ನೀನು ನೆರಳಿಗೆ ಕರೆದರೆ ಬಹಳ ಸುಖವು ನಿನಗಣ್ಣಹಸಿದು ಬಂದವರಿಗೆ ತುತ್ತನಿಕ್ಕಲು ನಿನಗೆ ಅರಕೆಯಿಲ್ಲದ ಅನ್ನವಣ್ಣ ೧
ನೀರಡಸಿದವರಿಗೆ ನೀರನ್ನು ಎರೆದರೆ ನಿನಗೆಂದು ಕಷ್ಟವಿಲ್ಲಣ್ಣದಾರಿ ತಪ್ಪಿದವರಿಗೆ ದಾರಿಯ ತೋರಿಸೆ ಧಾವತಿ ನಿನಗಿಲ್ಲವಣ್ಣ ೨
ಮನೆಯಿಲ್ಲದವರಿಗೆ ಮನೆಯ ಕೊಟ್ಟೊಡೆ ನಿನಗೆ ಮುಂದಿಹುದು ಮನೆಯಣ್ಣಇನಿತು ವಸ್ತ್ರವಿಲ್ಲದವಗೆ ವಸ್ತ್ರವನು ಕೊಡೆ ಏನು ವಿಪತ್ತು ನಿನಗಾಗದಣ್ಣ ೩
ಬಡವರನು ಮುಂದಂತೆ ತಂದರು ನೀನೀಗ ಬಲವಂತನಾಗುವೆಯಣ್ಣನುಡಿಯಲು ಒಳ್ಳೆಯ ವಾಕ್ಯವ ನೀನೀಗ ನೋಯದಂತಿರುವೆ ಮುಂದಣ್ಣ೪
ವನಗುಡಿ ಕೆರೆಬಾವಿ ಧರ್ಮ ಮಳಿಗೆ ಹಾಕೆ ಒಲಿವನು ಶಿವನು ನಿನಗಣ್ಣಘನ ಚಿದಾನಂದ ಸತ್ಪುರುಷರ ಸೇರಲು ಘಟ್ಟಿ ಮುಕ್ತಿಯು ನಿನಗಣ್ಣ೫

೨೮೬
ಪುರುಷ ಪ್ರಕೃತಿಯಲ್ಲಿಹನು ಎಂತೆನೆಇರುವನೀ ತೆರದಿ ಉಭಯದಲಿ ಪುರುಷ ಪ
ತಿಲದೊಳಗೆ ತೈಲ ಕಾಷ್ಟದೊಳಗೆ ಅಗ್ನಿಫಲದಲಿ ರುಚಿಯು ಇದ್ದಂತೆ ಪುರುಷ೧
ಸ್ತನದೊಳಗೆ ಕ್ಷೀರ ಕ್ಷೀರದೊಳಗೆ ಘೃತಘನ ಭೇರಿಯಲಿ ನಾದ ಇದ್ದಂತೆ ಪುರುಷ೨
ಮಣಿಗಣದಲಿಸೂತ್ರ ಮಾಲಿಕೆಯಲಿ ತಂತುಘನವಾದ ಘಟದಲ್ಲಿ ಬಯಲಂತೆ ಪುರುಷ ೩
ಘನದಲ್ಲಿ ಉದಕ ಗಗನದಲಿ ಮಿಂಚುಅನಿತು ಔಷಧಿಯಲ್ಲಿ ರಸದಂತೆ ಪುರುಷ೪
ತೈಲಬಿಂದುವು ಉದಕದಲ್ಲಿ ವ್ಯಾಪಿಸಿದಂತೆಲೋಲ ಚಿದಾನಂದ ತಾನಿಹ ಪುರುಷ ೫

೩೬೮
ಪುರುಷರಾದವರೆಲ್ಲ ಪುರುಷರೆನಿಸುವುದೋಪುರುಷರೊಳಗೂ ಪುಣ್ಯಪುರುಷನೇ ಪುರುಷ ಪ
ಪರಮ ದಿವ್ಯ ಜ್ಞಾನಪೂತ ಭಸಿತವಿಟ್ಟುಸ್ಥಿರವೆಂಬ ಸಿಂಹ ಪೀಠದಲಿ ಕುಳಿತುನಿರುತ ನಿತ್ಯಾನಂದ ನಿರಾಮಯ ತಾನೆಂದುಭರದಿ ಪೂಜಿಸುತಿರುವನು ಪುರುಷ ೧
ಸುಖ ದುಃಖವೆಂಬೆರಡು ಸೀಮೆಗೂ ಸೇರದೇಅಖಿಲೇಂದ್ರಿಯಗಳ ಆಟ ಕೆಡಿಸಿಭಕುತಿಯೇ ನಿಜವೆಂದು ಭಜಿಸಿ ಸರ್ವದಿ ಮಹಾಮುಕುತಿ ಪಥ ಸೇರಿದವನವ ಪುರುಷ೨
ಅಂಗ ಕಾಣುವ ವಿಷಯಗಳ ಆತ್ಮಗರ್ಪಿಸುತಸಂಗ ರಹಿತನಾಗಿ ತಾನಾಗಿ ಇರುತಮಂಗಳವು ಎನಿಸಿಯೇ ಮರೆತು ಬಾಹ್ಯವನುವಿಹಂಗಪಥದಿ ನಿಂತಿರುವನವ ಪುರುಷ ೩
ಶಾಂತರಸವಂ ಕುಡಿದು ಸರ್ವಕ್ಕೂ ಬೆದರದೆಭ್ರಾಂತು ಎನಿಪ ಬೆಳಗ ತರಿದುಸಂತ ಸಾಲೋಕ್ಯ ಮೊದಲು ಸಾಯುಜ್ಯವನೆಲ್ಲಪಂಥದಿ ಮೀರಿ ಪರಿವನವನೆ ಪುರುಷ ೪
ನಾದದಾನಂದದಿ ಮೂರವಸ್ಥೆಯ ಗೆಲಿದುನಾದ ವೀಣೆಯ ಪರಿ ಪರಿ ಕೇಳುತನಾದ ಸಾಕ್ಷಿಕ ತಾನು ಚಿದಾನಂದ ಗುರುವಾಗಿನಾದದಾನಂದದಲಿ ಮುಳುಗಿರುವನವ ಪುರುಷ ೫

೧೬೬
ಪೂಜೆಯ ಮಾಡಿದೆನೆ ದೇವರ ಪೂಜೆಯ ಮಾಡಿದೆನೆಈ ಜಗದರಸ ಚಿದಾನಂದ ತಾನೆಂದು ಪ
ಶುದ್ಧ ಸ್ನಾನವನೆ ಮಾಡುತ ನಿರ್ಮಲ ವಸನವನುಬಂಧಿಸಿ ಬಿಗಿದು ಸ್ವಸ್ಥಾನಾಸ ಮಧ್ಯದಲ್ಲಿ ಕುಳಿತು ೧
ನಿಸ್ರ‍ಪಹ ಭಸಿತವನೇ ಧರಿಸುತ ನಿಷ್ಕಲಂಕನಾಗಿವಿಶ್ವೇಶ್ವರ ವಿರೂಪಾಕ್ಷನೇ ತಾನೆಂದು ೨
ಸರ್ವ ಪೂಜಿತನು ತಾನೀಗ ಸರ್ವನಿವಾರಿತನುಸರ್ವರೂಪಕ ತಾನೀಗೆಂದು ಧ್ಯಾನವರ್ಪಿಸಿದೆನೆ೩
ಆನಂದ ವ್ಯಾಪಕನೆ ತಾನೀಗ ಆನಂದ ರೂಪಕನೇಆನಂದಾತ್ಮಕ ತಾ ನೀಗೆಂದಾಹ್ವಾನ ವರ್ಪಿಸಿದನೆ ೪
ಇಂದ್ರಿಯ ರೂಪಕ ತಾನೀಗ ಇಂದ್ರಿಯ ವ್ಯಾಪಕನೇಇಂದ್ರಿಯ ಸಾಕ್ಷಿಕ ತಾನೀಗೆಂದು ಸಿಂಹಾಸನವರ್ಪಿಸಿದೆನೆ ೫
ನಿಶ್ಚಲಾತ್ಮಕನವ ತಾನೀಗ ನಿಶ್ಚಲೈಕ್ಯನಾದನಿಶ್ಚಲವಸ್ತು ನಿಜತಾನೇ ಎಂದಘ್ರ್ಯವರ್ಪಿಸಿದೆನೆ ೬
ವಿಶ್ವದ ವಿಶ್ವಕರ್ತು ತಾನೀಗ ವಿಶ್ವ ವಿಶ್ವಭೋಕ್ರ‍ತವಿಶ್ವಲೀಲಾತ್ಮಕ ತಾನೀಗೆಂದು ಪಾದ್ಯವರ್ಪಿಸಿದೆನೆ ೭
ಅನಂತ ಮಹಿಮ ತಾನೀಗ ಅನಂತ ನಿಗಮಅನಂತ ನಿಗಮ ಗೋಚರ ತಾನೆಂದು ಸ್ನಾನವರ್ಪಿಸಿದೆನೆ ೮
ಅಂಬರ ರೂಪಕ ತಾನೀಗ ಅಂಬರ ವ್ಯಾಪಕನೇಅಂಬರದೊಳು ಚಿದಂಬರ ತಾನೆಂದು ವಸ್ತ್ರವರ್ಪಿಸಿದೆನೆ೯
ಚೈತನ್ಯಾಧಾರ ತಾನೀಗ ಚೈತನ್ಯಾದೂರ ಚೈತನ್ಯಾಧಿಪತಾನೆಂದು ಯಜ್ಞೋಪವೀತ ವರ್ಪಿಸಿದನೆ೧೦
ಕಲುಷ ನಿರ್ಧೂತ ತಾನೀಗ ಕಲುಷ ನಿರ್ಜಿತನೇಕಲುಷ ಹರತಾ ನಿಜವೆಂದಾಭರಣವರ್ಪಿಸಿದೆನೆ೧೧
ಲೇಪಕ್ಕಾಧಾರ ತಾನೀಗ ಲೇಪ ನಿರಾಧಾರಲೇಪಹರ ತಾ ನಿಜವೆಂದು ಅನುಲೇಪವರ್ಪಿಸಿದೆನೆ೧೨
ಪುರತನು ವಿಸ್ತರಿಸಿ ತಾನೀಗ ಪುರಾಧಿಪತಾನೆನಿಸಿಪುರುಷೋತ್ತಮ ತಾನೆಂದು ಸುಪುಷ್ಪವರ್ಪಿಸಿದೆನೆ೧೩
ಪರ ಇಹವು ತಾನೇ ತಾನೀಗ ಪರಾತ್ಪರನು ತಾನೆಪರವಸ್ತು ತಾ ನಿಜವೆಂದು ಧೂಪವರ್ಪಿಸಿದೆನೆ ೧೪
ಜ್ಯೋತಿಯ ರೂಪ ತಾನೀಗ ಜ್ಯೋತಿ ನಿರ್ಮಯನುಜ್ಯೋತಿಯಹ ಚಿಜ್ಯೋತಿಯು ತಾನೆಂದು ಜ್ಯೋತಿಯರ್ಪಿಸಿದೆನೆ ೧೫
ನಿತ್ಯನಿರ್ಲಿಪ್ತನು ತಾನೀಗ ನಿತ್ಯ ತೃಪ್ತನುನಿತ್ಯತೃಪ್ತ ತಾನೆಂದು ನೈವೇದ್ಯವರ್ಪಿಸಿದೆನೆ ೧೬
ಮಂಗಳವೆ ಆದ ತಾನೀಗ ಮಂಗಳಾಂಗನಾದಮಂಗಳ ಮೂರುತಿ ತಾನೆಂದು ತಾಂಬೂಲವರ್ಪಿಸಿದೆನೆ ೧೭
ನಿರ್ವಿಕಾರ ನಿಜ ತಾನೀಗ ನಿರಾವಲಂಬ ನಿಜ ನಿ-ರಾವರಣ ತಾನೆಂದು ಪ್ರದಕ್ಷಿಣವರ್ಪಿಸಿದೆನೆ ೧೮
ಜಯ ಜಯಾತ್ಮಕನೆ ತಾನೀಗ ಜಯ ಸದಾತ್ಮಕನೆಜಯನಿತ್ಯಾತ್ಮಕ ತಾನೆಂದು ನಮಸ್ಕಾರವರ್ಪಿಸಿದೆನೆ೧೯
ಲೋಕೈಕನಾಥ ತಾನೀಗ ಏಕೈಕ ನಾಥನುಏಕ ನಾಥನು ತಾನೆಂದು ವಿಸರ್ಜನವರ್ಪಿಸಿದೆನೆ ೨೦
ಈ ಪರಿ ಪೂಜೆಯನು ನಿತ್ಯದಿ ಆ ಪರಬ್ರಹ್ಮದಲಿಭೂಪ ಚಿದಾನಂದ ರೂಪನೆ ತಾನೆಂದೀ ಪರಿ ಮಾಡಿದೆನೆ ೨೧

೨೮೭
ಪ್ರತಿಮೆ ಪೂಜೆಗಳವು ಪರ-ಮಾರ್ಥವಲ್ಲವು ಪಾಮರರಿಗೆ ಅದು ಸಾಧನವುಪ್ರತಿಮೆ ಪೂಜೆಯು ತಿಳಿದವರಿಗೆಉತ್ತಮವಲ್ಲದ ಪರಮಾತ್ಮ ಪ್ರತ್ಯಕ್ಷ ನೀವೆನ್ನಿ ಪ
ಕಳ್ಳನು ಮನೆದೇವರನೊಯ್ಯೆ ಪ್ರತಿಮೆಯಲಿಎಳ್ಳಷ್ಟು ಕರುಣ ಹಿಡಿಯಲಿಲ್ಲಹುಲ್ಲು ಶುನಕ ಮನೆ ಮುಂದಿತ್ತು ಆದರೆಬಲ್ಲತೊದರಿ ಮನೆಯ ಉಳುಹುವುದು ೧
ದಂಡು ಬರಲು ದೇವರನು ಹೊರು ಎಂಬರುಮುಂದೆ ಏನು ಕೆಲಸವಿಲ್ಲವುಮುಂದೆ ಉರಿಯುವುದು ಹೊತ್ತರೆ ಹಗುರವಿಲ್ಲಚಂಡ ಚೈತನ್ಯಾತ್ಮೆ ನೀವೆನ್ನಿರಿ ೨
ಬೆಕ್ಕನೆ ಹಿಡಿದೊಯ್ಯೆ ಇಲಿಗಳ ಹಿಡಿಯುವುದುಬಟ್ಟೆ ಬರಿಯ ಜೋಪಾನ ಮಾಡುವುದುಬೆಕ್ಕು ಪ್ರಯೋಜನ ದೇವರಪ್ರಯೋಜನತಕ್ಕವು ಪರಮಾತ್ಮ ನೀವೆನ್ನಿರಿ ೩
ಪ್ರತಿಮೆಗಳ ಯೋಗ್ಯವಲ್ಲ ಬ್ರಹ್ಮವಾದೀಪ್ರತಿಮೆ ಎಂತು ಯೋಗ್ಯ ಪಂಚಾಳನವುಪ್ರತಿಮೆ ಎಂಬುವು ಜಡಬೊಂಬೆಸಂಶಯವಿಲ್ಲ ಪರವಿಲ್ಲ ಪರವಸ್ತು ನೀವೆನ್ನಿರಿ ೪
ಹೊಟ್ಟೆಗಿಲ್ಲದ ಕಾಲ ತಮಗೆ ಬಂದರೆಘಟ್ಟಾಗಿ ದೇವರೆ ಗತಿ ಎಂಬರುಶಿಷ್ಟ ಚಿದಾನಂದ ಸದ್ಗುರು ನೀವೀಗಬಿಟ್ಟಿರಿ ನಾನಾ ಪರಿ ದೇವರ೫

೩೭೧
ಬಯಲ ಜಾತ್ರೆಗೆ ನಡೆಹೋಗುವ ಬಾರದಲೆ ಅಲ್ಲಿರುವ ಪ
ಶಾಂತಿ ಎಂದೆಂಬ ಕಂಟಲೆಗಳು ಶಮೆ ಹುರಿಗೆಜ್ಜೆ ಎತ್ತುಗಳುದಾಂತಿ ಎಂದೆಂಬ ಕಾವಡಿಗಳು ದಮೆ ಎಂಬ ಹೂಜೆಗಳು೧
ಮಂಗಳವೆಂಬ ಬಾಲಕರು ಮುಕ್ತಿ ಎಂಬ ಮುತ್ತೈದೆಯರುಸಂಗ ಹರರಹ ವಿಟಗಾರರು ಸೈರಣೆ ಎಂಬ ಹಿರಿಯರು ೨
ಸಂತೋಷವೆಂಬ ಅಂಗಡಿಗುಂಪು ಸಹಜದ ಹೂಕಂಪುಶಾಂತರೆನಿಪ ದೊರೆಗಳ ಗುಂಪು ಸುಖ ಛತ್ರಿಯ ತಂಪು ೩
ಓಂಕಾರನಾದದ ನಗಾರಿ ವೀಣಾನಾದದ ತುತ್ತೂರಿಸಂಕಲ್ಪ ಸುಳ್ಳೆಂಬ ತಂಬೂರಿ ಸಾಮವೆನಿಸುವ ಭೇರಿ ೪
ಆರು ಚಕ್ರದ ಅರವಟ್ಟಿಗೆ ಅಮೃತ ಬಿಂದುವಿನ ಮೊಗೆಯುದಾರಿದಾರಿಗೆ ಸೋಹಂಸ್ಮರಣೆ ದೃಢ ಮನವದು ಚಡಿಯು ೫
ಆನಂದ ವನಗಳ ಸಾರುತ ಆಯಾಸ ಕಳೆಯುತ್ತಸ್ವಾನಂದ ಗೋಪುರ ಕಾಣುತ ಸುಮ್ಮಾನವ ಪಡೆಯುತ೬
ಮೃಢನಾಳ ದ್ವಾರವ ಪೋಗುತ ಮುಂದೆ ಚಂದ್ರನ ಕಾಣುತಅಡರಿದ್ವಿದಳ ಸದರೇರುತ ಅತ್ತತ್ತ ಸಾರುತ ೭
ಸಹಸ್ರಾರವೆನಿಪ ಸರೋವರ ಸ್ನಾನ ಮಾಡುವ ಅಪಾರಮಹಾ ಕಮಲ ಪೀಠವನೇರುವರ ಮಹೇಶನೆನ್ನು ಅವರ೮
ತುರೀಯವೆಂದೆಂಬ ಬಯಲಗೂಡಿ ತಾವು ಹೋಗುವ ನಾಡಿಹರ್ಷದ ಧೂಳ ದರ್ಶನ ಮಾಡಿ ಹಾಯಿಗುಡಾರ ಹೂಡಿ೯
ಶಿಂಶುಮಾರವೇ ದೇವರ ಪೀಠ ಸಿದ್ಧವೆಂಬ ಕವಾಟಸಂಶಯವಿಲ್ಲದ ಎಡೆಯಾಟ ತತ್ಪುರುಷರ ಕೂಟ೧೦
ಎತ್ತೆತ್ತ ನೋಡಿದರು ಚಿದೀಪ್ಯ ಸೂರ್ಯ ಕೋಟಿಗೆ ಘನವುಒತ್ತೊತ್ತು ಪೂರ್ಣಾಭಿಷೇಕ ಓಂ ಎಂದೆಂಬ ಸ್ವರವು ೧೧
ಸುವಾಸನೆ ಎಂದೆಂಬ ಧೂಪವು ಸುಂದರ ಪುಷ್ಪಗಂಧತಾವು ಮಾಡುವ ಭಾವದಲಿಂದ ತೃಪ್ತಿ ನೈವೇದ್ಯ ಚಂದ೧೨
ಎರಡಿಲ್ಲದೇಕಾರ್ತಿ ಬೆಳಗುತ ಎಲ್ಲೆಡೆ ತಾ ಹೊಳೆಯುತಹೊರ ವೊಳಗೆಂಬುದ ಮರೆಯುತ ಹೇಮದ ತಗಡಾಗಿ ಇರುತ೧೩
ಬೆಳಕ ಕಂಡಾರತಿ ಎತ್ತುತ ಬೆಳಗನು ಬೆಳಗುತ್ತತಿಳಿದು ಪ್ರದಕ್ಷಿಣೆ ಮಾಡುತ ತೋರುವುದು ಬ್ರಹ್ಮವದೆನ್ನುತ ೧೪
ಭಯದ ವಿಸರ್ಜನೆ ಮಾಡುತ ಬಯಲಾಗಿಯೆ ತೋರುತಬಯಲ ಚಿದಾನಂದನಿಗೆರಗುತ್ತ ಬ್ರಹ್ಮನಾಗಿ ತಾನಿರುತ ೧೫

೨೮೮
ಬಹು ಚಿಂತೆಯೊಳಗಾಗಿ ನೀನು ದುಃಖಿಸಬೇಡಬಹು ಕ್ಲೇಶ ಕಷ್ಟದಿ ಮುಳುಗಿ ಬಳಲಬೇಡ ಪ
ಹಿಂದೆ ನಾನಾ ಯೋನಿಯಲ್ಲಿ ಹಡಿಕೆಯೊಳು ಜನಿಸಿ ಜನಿಸಿತಂದೆ ತಾಯಿ ಹೆಂಡಿರೇಸು ಲೆಕ್ಕವಾಯ್ತು ನೋಡಮುಂದೆ ಬಹ ದುಃಖಕೆ ಮುಳುಗಿ ಮುಳುಗಿ ಧೈರ್ಯ ಪಡೆದುಮಂದ ಮತಿಯಾಗಿ ಗುರುವ ಮರೆಯಲಿ ಬೇಡ ೧
ದುರ್ಜನರ ಸಂಗ ಮಾಡಿ ದುಷ್ಟ ನಡತೆಯಲ್ಲಿ ನಡೆದುಸಜ್ಜನರ ಸಂಗ ನೀ ಮರೆಯಲಿ ಬೇಡಜಜ್ಜುಗಟ್ಟಿ ಪಾಪಕರ್ಮ ಜರಿದು ಜರಿದುಜೋಕೆಯಲ್ಲಿ ಸದ್ಗುರುನಾಥ ಸ್ಮರಣೆ ಮಾಡು೨
ಮನೆಯು ಮಕ್ಕಳೆಂಬ ಧನವು ಪಶುಗಳಲ್ಲಿ ಆಸೆಯಿಟ್ಟುನೆನೆಸಿ ನೆನೆಸಿ ಬಿಕ್ಕಿ ಬಿಕ್ಕಿ ಅಳಲು ಬೇಡಚಿನ್ಮಯ ಚಿದಾನಂದಾವಧೂತನೊಳು ಬೆರೆತುಘನವನೈದಿ ಸದ್ಗುಣಾದಿ ತಿಳಿದು ನೋಡ ೩

೧೬೮
ಬಿಟ್ಟೆನಯ್ಯ ಬಿಟ್ಟೆನಯ್ಯ ಪ್ರಪಂಚವಮುಟ್ಟಿದೆನು ಬ್ರಹ್ಮವನು ಮುಕ್ತನಾದೆನುಹುಚ್ಚು ಮೂಳಿ ಹೆಂಡತಿಯ ಪ
ಮೆಚ್ಚಿ ನಲಿವ ಮಗನು ಸೊಸೆಯುಉಜ್ಜಿ ಬದುಕನೆಲ್ಲ ನಾನು ಉಡುಗಿ ಕಳೆದೆನು ೧
ನೆಂಟರಿಷ್ಟರೆಲ್ಲರನ್ನು ದೂರಮಾಡಿ ಕುಳಿತೆ ನಾನುಹೆಂಟೆಯಂತೆ ಕಂಡೆನಯ್ಯ ಹೇರು ಹೇಮವ ೨
ಅಷ್ಟದೇವರನ್ನು ನಾನು ಅಡವಿಗೆಂದು ಅಟ್ಟಿಬಿಟ್ಟೆಕಷ್ಟಪಡಿಪ ಪುರೋಹಿತನ ಕಡೆಗೆ ತಳ್ಳಿದೆ ೩
ವಾರವಾರ ನೇಮವನ್ನು ಒಲೆಯನೀಗ ಹೊಗಿಸಿದೆದಾರಿ ಹಚ್ಚಿಸಿದೆನು ಕುಲವ ಶೀಲವ್ರತಗಳ ೪
ಮತಗಳೆಂಬ ವಾದವನ್ನು ಮಣ್ಣುಪಾಲು ಮಾಡಿದೆನುಸತತ ಚಿದಾನಂದ ಬ್ರಹ್ಮ ಸಾಕ್ಷಿಯಾದನು ೫

೧೬೭
ಬಿಡಬೇಕು ಸ್ತ್ರೀಸಂಗ ಬ್ರಹ್ಮನಾಗುದಕೆಬಿಡದಿರಲು ಕೆಡುತಿಹನು ಬಿಡೆಯವಿಲ್ಲಯ್ಯ ಪ
ಕಣ್ಣುಗಳು ತಿರುಹಲಿಕೆ ಕಾಲುಕೈಯುಡುಗುವುದುನುಣ್ಣನೆಯ ಗಂಟೊಲಿಯೆ ಎದೆಗುಂದುವುದು ಅಯ್ಯ ಸಣ್ಣ ಹಲ್ಲನು ಕಾಣೆ ಸರಿವುದು ಶಿವಧ್ಯಾನನುಣ್ಣನೆಯ ಮುಖಕ್ಕೆ ನುಗ್ಗಹುದು ದೃಢ ಚಿತ್ತ ೧
ಕಿರುನಗೆಯ ಕಾಣಲು ಕಳಚಿಹೋಹುದು ಬುದ್ಧಿಸೆರಗು ಸಡಿಲಲು ಸೈರಣೆಯು ಅಡಗುವುದು ಅಯ್ಯತಿರುಗಾಡುತಿರಲು ತಿಳಿವಳಿಕೆ ಹಾರುವುದು ಮು-ಕುರ ಮುಖ ಕಾಣಲು ಮುಳುಗುವುದು ಅರಿವು ಅಯ್ಯ ೨
ಗಾಳಿಯದು ಹಾಯಲಿಕೆ ಗತವಹುದು ಅನುಭವವುಬೀಳೆ ಅವರ ನೆರಳು ಬಯಲಹುದು ಬೋಧನೆಯುಬಾಲ ನುಡಿಗಳ ಕೇಳೆ ಬೀಳುವುದು ಬಲ್ಲವಿಕೆಬಾಲೆಯರ ಸಂಗವದು ಭವದ ತಿರುಗಣೆಯಯ್ಯ ೩
ನವನೀತ ಪುರುಷನು ನಾರಿಯೇ ಅಗ್ನಿಯುನವನೀತ ಕರಗದೆ ಅಗ್ನಿಯೆದುರಿನಲಿಯುವತಿ ಸನಿಹದಲಿರಲು ಎಲ್ಲಿ ಬ್ರಹ್ಮವು ನಿನಗೆಶಿವನಾಣೆ ಸತ್ಯವಿದು ಸುಳ್ಳೆಂದಿಗೂ ಅಲ್ಲ ೪
ಪಾತಕದ ಬೊಂಬೆಯು ಫಣಿವೇಣಿಯರ ರೂಪಘಾತಕವು ತಾನಹುದು ಯೋಗಗಳಿಗೆಯಲಯ್ಯಮಾತು ಬಹಳವದೇಕೆ ಮಹಿಳೆಯನು ತ್ಯಜಿಸಿದರೆದಾತ ಚಿದಾನಂದನು ತಾನೆ ಅಹನಯ್ಯ೫

೨೮೯
ಬುದ್ಧಿಯ ನಾನೇ ಹೇಳುವೆ ಎಲೆ ಎಂಗರವಟ್ಟೆಬುದ್ಧಿಯ ನಾನು ಹೇಳುವೆಬುದ್ಧಿಯ ನಾನು ಹೇಳುವೆ ಶುದ್ಧ ಬ್ರಹ್ಮನು ನೀನು ಎಲೆ ಎಂಗರವಟ್ಟೆ ಪ
ಹಿಂದಣ ಕುಲವು ಎಲ್ಲಿ ಎಲೆ ಎಂಗರವಟ್ಟೆಹಿಂದಣ ಮತವು ಎಲ್ಲಿ ಹಿಂದಣ ಸತಿ ಎಲ್ಲಿ ಹಿಂದಣ ಸುತರೆಲ್ಲಿಹಿಂದಾದುದನು ಬಿಟ್ಟು ಇಂದಿದು ನನ್ನದೆಂಬೆ ಎಲೆ ಎಂಗರವಟ್ಟಿ ೧
ಮುಂದಾವ ಜನ್ಮ ಭೋಗಿಪೆಯೋ ಎಲೆ ಎಂಗರವಟ್ಟೆಮುಂದಾರ ಮದುವೆಯಹೆ ಎಲೆ ಎಂಗರವಟ್ಟೆಮುಂದಣ ತಾಯಿ ಯಾರು ಮುಂದಣ ತಂದೆ ಯಾರುಮುಂದಣ ಹಿಂದಣದರಿಯೆ ಇಂದಿನದು ಎನ್ನದೆಂಬೆ ಎಲೆ ಎಂಗರವಟ್ಟಿ೨
ಭಿಕ್ಷವ ಹಾಕಲಾರಿ ಎಲೆ ಎಂಗರವಟ್ಟೆ ಕುಕ್ಷಿಗೆ ತಿನ್ನಲಾರಿಲಕ್ಷ ಹೊನ್ನುಗಳನ್ನು ನೆತ್ತಿಗೆ ಇಟ್ಟುಕೊಂಬೆಯಾ ಎಲೆ ಎಂಗರವಟ್ಟೆ ೩
ತನುವಿದು ತನ್ನದೆಂಬೆ ಎಲೆ ಎಂಗರವಟ್ಟೆ ತನುವನು ನೋಡಿಕೊಂಬೆನಿನ್ನ ಮುಂದೆಯೇ ತನು ತಾನು ಹೋಗುವುದುತನುವದು ನಿನಗಿಲ್ಲ ತನು ಸಂಬಂಧವೆಂತೋ ಎಲೆ ಎಂಗರವಟ್ಟೆ೪
ಹಿಡಿಯೋ ಗುರುಪಾದವನು ಎಲೆ ಎಂಗರವಟ್ಟೆ ಪಡೆಯೋ ಕಟಾಕ್ಷವನುಸಡಿಲದೇ ದೃಷ್ಟಿಯನು ತಿರುಹಿ ನಿನ್ನೊಳಗಿಟ್ಟುಒಡೆಯ ಚಿದಾನಂದನು ನೀನಾಗಿ ನೀನಿರು ೫

೧೬೯
ಬೆಳಗಾಯಿತು ಕೇಳಿ ಭ್ರೂಮಧ್ಯ ಮಂಟಪದೊಳಗೆಬೆಳಕು ಪಸರಿಸುತಿದೆಕೊ ಎತ್ತಿತ್ತ ನೋಡೆಮುಂಬೆಳಕು ಕಾಣಿಸುತ್ತ ರವಿಕೋಟಿಯಂ ಪಳಿಯುತಿದೆನಿರ್ಮಳ ನೋಡಲುಪ್ಪವಡಿಸ ಯತಿರಾಜ ಪ
ಷೋಡಶಾಕಾರವಹ ಸೋಮ ಕಳೆಗುಂದಿಹುದುಖೋಡಿ ಜನನ ಮರಣ ಚಕ್ರ ತಾ ಕೊರಗಿದುದುಪಾಡಳಿದು ಜೀವಶಿವ ಶೈತ್ಯ ಬಿಟ್ಟಾಡಿದುದುಆರೂಢನೊಲಿದುಪ್ಪವಡಿಸ ಯತಿರಾಜ೧
ತಾಪತ್ರಯಗಳೆಂಬ ರಾತ್ರಿ ತಾ ಜಗುಳಿದುದುಪಾಪಿ ಇಹಪರವೆಂಬ ಸುಳಿಗಾಳಿ ಜಾರಿದುದುಕೋಪಿ ಸಪ್ತವ್ಯಸನ ಗೂಗೆ ಕಣ್ಣುಡುಗಿದುದುನಿರ್ಲೇಪನುಪ್ಪವಡಿಸ ಯತಿರಾಜ೨
ಅಷ್ಟ ಪ್ರಕೃತಿಗಳೆಂಬ ನಕ್ಷತ್ರವಡಗಿದವುದುಷ್ಟ ಪಂಚೇಂದ್ರಿಯದ ಕುಮುದಗಳು ಬಾಡಿದವುನಷ್ಟರಾರುವರೆಂಬ ಶಿವನಿಕರ ವೋಡಿದವುಶಿಷ್ಟ ನೀನೊಲಿದುಪ್ಪವಡಿಸ ಯತಿರಾಜ೩
ಶಾಂತರಸ ಲಹರಿ ತನಿವಾತ ಸೂಸುತಲಿದೆಸ್ವಾಂತನಾದ ಭ್ರಮರ ಪರಿಪರಿಯ ಪಾಡುತಿದೆಅಂತರಂಗದ ಕಮಲ ತಾನಿಲ್ಲಿ ಬಿರಿಯುತಿದೆನಿಶ್ಚಿಂತನೊಲಿದುಪ್ಪವಡಿಸ ಯತಿರಾಜ ೪
ನಿರುಪಮ ನಿರಾಲಂಬ ನಿರಮಾಯ ನಿರಪೇಕ್ಷಪರಮ ಪರತರ ವಸ್ತು ಪರಮೇಶ ಪರಮಾತ್ಮನಿರುತ ನಿತ್ಯಾನಂದ ಮೂರ್ತಿ ಚಿದಾನಂದಗುರುನಾಥನುಪ್ಪವಡಿಸ ಯತಿರಾಜ ೫

೪೧೦
ಬೆಳಗಿ ಆರತಿಯನೀಗ ಭಾಗ್ಯದಂಬಗೆ ಮುಂದೆಸುಳಿದು ಆರತಿಯನೆತ್ತಿ ಶೂರೆ ಅಂಬಗೆ ಪ
ಮುತ್ತಿನೋಲೆ ಮೂಗುತಿಯ ಧರಿಸಿದಂಬಗೆಕತ್ತಿಯನ್ನು ಹಿಡಿದಿರುವ ಶೂರೆ ಅಂಬಗೆ ೧
ಪದಕ ಕುಂಡಲಧಾರಿ ಪೂರ್ಣೆ ಅಂಬಗೆಬೆದರದಲೆ ಶತ್ರುಗಳನು ಕೊಂದ ಅಂಬಗೆ೨
ಶರಣರ ದ್ವಾರ ಕಾಯುತಲಿಹ ವೀರೆ ಅಂಬಗೆಶರಧಿ ಕರುಣಿ ಚಿದಾನಂದ ಬಗಳಾಮುಖಿ ಅಂಬಗೆ ೩

೪೧೧
ಬೆಳಗಿತು ಆರತಿ ಗುರುವಿಗೆ ತಾನೆ ತನ್ನಿಂದತೊಳಗುತ ಬೆಳಗುತ ಥಳಥಳಿಸುತ ತಾ ನಿತ್ಯದಿಂದ ಪ
ಬ್ರಹ್ಮವಿಷ್ಣು ರುದ್ರೇಶ್ವರ ಶಿವರಾಸ್ಥಾನ ಸ್ಥಾನಗಳಲ್ಲಿಬ್ರಹ್ಮ ಆದಿಶಿವ ಅಂತ್ಯದವರೆಗೆ ಚೇತನಗೂಡುತಲ್ಲಿ ೧
ಒಳಹೊರಗೆಲ್ಲವ ವ್ಯಾಪಿಸಿ ತುಂಬಿಯೆ ಪೂರ್ಣವು ತಾನಾಗಿರುತತಿಳಿದೆ ನೋಡಲಿ ರವಿ ಕೋಟೆಯ ಪ್ರಭೆ ಪ್ರಭೆಯನು ಬೀರುತ೨
ಅತ್ತ ಮಿಂಚುತ ಇತ್ತ ಮಿಂಚುತ ಎತ್ತೆತ್ತಲು ಝಳಕುಚಿತ್ತ ಜ್ಯೋತಿ ಚಿದಾನಂದ ಗುರುವಿನ ಚಿಜ್ಯೋತಿಯ ಬೆಳಗು ೩

೩೬೯
ಬೆಳುದಿಂಗಳ ಪ್ರಭೆ ಬಲು ಕಾಂತಿಯಿರಲುಬಲವನು ದುರ್ಗುಣಕೆ ಹತ್ತಬಹುದೇಬೆಳಗುತ್ತ ಜ್ಞಾನದ ಚಂದ್ರನು ಹೊಳೆದಿರೆಬಳಿಕ ಜನನ ಮರಣ ಮುತ್ತಬಹುದೆ ಪ
ಬಹು ಬೆಳಕು ಬೆಳಗಲು ಮನದ ಮರ್ಕಟವದುಮರವ ನೇರದೆ ಕೆಳಗೆ ನಿಲ ಬಲ್ಲುದೆಬಹು ಕಾಮವೆಂಬ ಕಾಗೆ ಕಣ್ಣುಡುಗಲುಗೂಡಿನಿಂದಾ ಹೊರಗೆ ಬರಬಲ್ಲದೆ೧
ಚೆಲ್ಲಿರೆ ಕಾಂತಿಯು ಕಳ್ಳರಾರ್ವರ ತಲೆಚೆಂಡಾಡದೆ ತಾನು ಸುಮ್ಮನಿಹುದೆಫುಲ್ಲ ತಿಂಗಳ ಬೆಳಕು ಎಲ್ಲೆಡಗೆ ಹರಡಿರೆಪಂಚ ವಂಚಕರು ಓಡದಿಹರೆ೨
ಒಲಿದರೆ ತೇಜವು ಅವಿದ್ಯದ ಕತ್ತಲೆಯುತಾನೋಡದೆ ಅಲ್ಲಿ ನಿಲಬಲ್ಲುದೆಬಲು ಕಳೆ ಚಿದಾನಂದಗುರು ತಾನು ಬೆಳಗುತಿರೆಬಹಳ ಜನ್ಮದ ಪಾಪ ಹರಿಯದಿಹುದೇ೩

೩೭೦
ಬೆಳುದಿಂಗಳಿನೊಳು ಬೇಟೆಯನಾಡಿರಿಬಲ್ಲವರಾದವರೆಲ್ಲಒಳ್ಳೊಳ್ಳೆಯವರು ಕೂಡಿ ಆಡಿರಿ ಶಮದಮ ಶಾಂತರು ಎಲ್ಲ ಪ
ತನ್ನ ಸರಿಯದ ಅವಿದ್ಯೆ ಹುಲಿಯದುಘುಡುರು ಘುಡುರು ಘುಡುರೆಂದೆನಲುಸುಮ್ಮನೆ ಪ್ರಣವದ ಧನುವನು ಎಳೆದು ನಾದ ಬಾಣದಿ ಬೀಳಿಸಿರಿ ೧
ನಾನು ಎಂಬ ಕರಡಿಯು ಬಂದುಅಡರಲು ನಿಮ್ಮನು ನಿಲುವುದ್ಧಸ್ವಸ್ಥ ವಿವೇಕದ ಕೋಲಲಿ ಬಡಿಯಿರಿಕೆಡಹಿರಿ ನೋಡದೆ ನೀವೆಲ್ಲ೨
ಅಪರೋಕ್ಷವೆಂಬ ಬಲೆಯನೆ ಒಡ್ಡಿದುರ್ಗುಣ ಮೃಗಗಳನೆ ಬಡಿದುಭವ ಹರ ಚಿದಾನಂದನ ನೆನೆಯುತಬೇಟೆಯನಾಡಿರಿ ಎಲ್ಲ ೩

೨೯೦
ಬೇಗ ಮಾಡೋ ಭಕುತಿ ಆಗುವುದು ಮುಕುತಿಆಗ ಈಗ ಎನ್ನದಿರು ಇದೆ ನಿನಗೆ ಮುಕುತಿ ಪ
ಧ್ಯಾನ ಹಲವ ಬಿಡು ಧ್ಯಾನ ಆತ್ಮನ ಮಾಡುಧ್ಯಾನ ಧಾರಣ ಸಮಾಧಿಯಂಗಳ ನೋಡು ನಿಜವ ಕೂಡು ೧
ಎಚ್ಚರ ಬಾಹಿರ ಮರೆತು ಎಚ್ಚರ ಅಂತರವರಿತುಎಚ್ಚರ ಬಾಹಿರ ಅಂತರ ಮರೆತು ಎಚ್ಚರ ಬೇರರಿತು ೨
ಸಾಧಿಸು ನಿತ್ಯ ಬಿಡದೆ ವಾದಕೆ ಮಯ್ಯ ಕೊಡದೆಸಾಧಿಸು ನಿತ್ಯಾನಿತ್ಯಾ ವಸ್ತುವ ಸಾಧಿಸು ಗುರುವ ಹಿಡಿದೇ ೩
ಬೇರೆ ಎಂಬುದ ಮಾಣು ಎಲ್ಲವ ನಿನ್ನಲೆ ಕಾಣು ನಾಬೇರೆಯೆಂಬ ಮತಿಯ ಮಾಣು ಬಳಿಕ ಜಾಣ ೪
ಬೋಧವನ್ನೇ ಹಿಡಿಯೋ ಬೋಧ ತುರೀಯ ಪಡೆಯೋಬೋಧವೆನಿಪ ಚಿದಾನಂದ ಬೋಧ ಗುರಿವಿಡಿಯೋ ೫

೨೯೧
ಬೇಡವೀಗ ಬಾಲೆ ಸಂಗ ಕೆಟ್ಟುಹೋಗುವೆ ಇದುಪಾಡಲ್ಲ ಭಂಗವನು ಅನುಭವಿಸುತಕಾಡ ಹಿಡಿಯುವೇ ಹುಟ್ಟುಗೆಡುವೆಯಲ್ಲೊ ಪ
ಸತ್ಯವದು ನಾರಿದೋಷ ಮೃತ್ಯುವಲ್ಲೋ ಯಮನಿತ್ಯದಲಿ ಎತ್ತಿರುವ ಕತ್ತಿಯಲ್ಲೋ ಆತ್ಮ-ಹತ್ಯವಲ್ಲೋ ಅಪಥ್ಯವಲ್ಲೋ ೧
ನಾರಿ ಮುಖವು ತಿಳಿದವಗೆ ನರಕವಲ್ಲೋ ಇಷ್ಟುಮರುಕವಂತು ಕಾಲಗೆ ದೊರಕದಲ್ಲೋ ದೊಡ್ಡಫರಕು ಎಲ್ಲೊ ಕೆಟ್ಟ ಸರಕು ಎಲ್ಲೋ ೨
ಶಿಷ್ಟಾಶಿಷ್ಟರೆಂಬವರು ಕೆಟ್ಟರಲ್ಲೋ ಬಲುಗಟ್ಟಿ ತವಸಿಗಳು ಮತಿಗೆಟ್ಟರಲ್ಲೊ ಕಂ-ಗೆಟ್ಟರಲ್ಲೋ ಘಾಸಿಪಟ್ಟರಲ್ಲೋ ೩
ಧಾರಣೆಯು ಧ್ಯಾನಮೌನ ಹಾರಿತೆಲ್ಲೋ ಕಾಮಕೂರ್ಗಣೆಗಳು ಮೊನೆದೋರಿತಲ್ಲೋ ಮನೆಹಾರಿತಲ್ಲೋ ಧೈರ್ಯತೂರಿತೆಲ್ಲೋ ೪
ನಾರಿಯವಳು ನಿನ್ನ ಗತಿಗೆ ಮಾರಿಯಲ್ಲೋ ಗುರುವೀರ ಚಿದಾನಂದನನ್ನು ಸೇರು ಎಲ್ಲೋಪರಿಹಾರವೆಲ್ಲೊಲ್ಲೋ ಮುಕ್ತಿ ಸಾರೆ ಎಲ್ಲೋ ೫

೨೯೨
ಬೇಡವೋ ಸ್ತ್ರೀಯರ ವಶದಲಿಬಿದ್ದು ಭವಕೆ ಬೀಳಲಿ ಬೇಡ ಪ
ಒನಪುಗಳ ಸುಳ್ಳು ವಾಲಿಗಲು ಸಟೆವೈಯ್ಯಾರ ನಚ್ಚಲಿ ಬೇಡ ೧
ಮೋರೆ ಮುರುಕಿ ಪದಮೂಗನೇರಿಸುವುದು ಮುಸುಕನು ನೀ ನಚ್ಚಬೇಡಸೀರೆಯನೊಲೆಯುವುದು ಸೆರಗನು ಸಡಿಲಿಪನಾರಿಯ ನಂಬಲು ಬೇಡ ೨
ನರಕದ ಕುಂಡವು ನಾರಿಯೆಂಬವಳು ಸತ್ಯ ನೋಡುತ ನೀ ಬೀಳಬೇಡಕರುಣಿ ಚಿದಾನಂದ ಕಟಾಕ್ಷವನು ಪಡೆ ಕಾಲಗೆ ನೀ ಸಿಕ್ಕಬೇಡ ೩

೧೭೦
ಬೇಡಿದೆನು ಕೊಡುಕಂಡ್ಯ ಬೇಡಿದೆನು ಕೊಡುಕಂಡ್ಯಬೇಡಿದೆನು ನೀ ನೀಡು ಕಂಡ್ಯಾ ಪ
ನಿನ್ನ ಹಾಡನು ಹಾಡಿ ನಿನ್ನ ನಿಜದೊಳಗಾಡಿನಿನ್ನನೇ ಕಾಡಿ ನಿನ್ನನೇ ಬೇಡಿನಿನ್ನ ಓಲಗವ ಮಾಡಿ ನಿನ್ನ ನಿಟ್ಟಿಸಿ ನೋಡಿನಿನ್ನ ಲೀಲೆಯೊಳು ನಾನಿರುತಿಹುದದನಾ ೧
ನೋಟದೊಳಗಿನ ನೋಟ ಕೂಟದೊಳಗಿನ ಕೂಟಆಟದೊಳಗಿನ ಆಟ ಇಂಥ ಆಟನೀಟದೊಳಗಿನ ನೀಟ ನಿನ್ನಲ್ಲಿ ಬೆರೆದಾಟಪಾಟ ಮಾಡಿಯೆ ಎನಗೆ ಪಾಲಿಸುವುದನ೨
ಶರೀರದಿಚ್ಚೆಯನುಳಿದು ಶರೀರ ವಾಸನೆ ಕಳೆದುಶರೀರ ವಿಷಯದ ಹೊಲಬೆಲ್ಲ ಬಳಿದುಶರೀರದ ನೆಲೆಯು ತಿಳಿದು ಶರೀರದೊಳೊಬ್ಬನನುಳಿದುಶರೀರದ ಸಂಗ ದೊರಕದಿಹದದನಾ ೩
ನಾದಲಕ್ಷಿಸಿ ಹಿಡಿದು ನಾದ ಸಂಗವ ಪಡೆದುನಾದಾಮೃತವ ಕಿವಿತುಂಬ ಕುಡಿದುನಾದ ದಾರಿಯ ನಡೆದು ನಾದ ದೊಳ್ವೆಳ ಗೊಡದುನಾದವನೆ ಮರೆತು ಸುಖಿಸುತಿಹದದನ ೪
ನಿನ್ನ ನೀನುಳಿದಿಲ್ಲ ನೀ ದೈವ ಜಗಕೆಲ್ಲನಿನ್ನಂತೆ ಆಪ್ತರಿಲ್ಲ ನಿನ್ನ ನಂಬಿದೆನಲ್ಲನೀ ಕಾಯಬೇಕಲ್ಲ ಚೆನ್ನ ಚಿದಾನಂದನೆನೆಹಂಬತಾತ್ವಿಕ ಹಿನ್ನೆಲೆಯ ಕೀರ್ತನೆಗಳುದದನಾ ೫

೮೧
ಬ್ರಹ್ಮ ತಾವೆಂದು ಭಾವಿಸಿರೋ ಭಾಗ್ಯರಿರಾಬ್ರಹ್ಮತಾವೆಂದು ಭಾವಿಸಿದವರುಂಟು ಪ
ಕಪಿಲ ನಾರದನು ಗೌತಮನು ಕಣ್ವನುನಿಪುಣ ಕೌಶಿಕನು ನಿರ್ಮಲನು ಅಗಸ್ತ್ಯಾಉಪಮಾನ್ಯ ಶಿಖಿ ಪಂಚ ದೂರ್ವಾಸರಂತಿವರು ಬ್ರಹ್ಮ ತಾವೆಂದು ಭಾವಿಸುವರು ೧
ವ್ಯಾಸ ಶ್ರೀವತ್ಸ ಶುಕನು ಶೌನಕನುವಾಶಿಷ್ಟ ಅತ್ರಿ ಗಾರ್ಗೇಯನು ಕಶ್ಯಪನುದಾಸ ಪ್ರಹ್ಲಾದ ಬಕದಾಲ್ಬ್ಯ ಜಮದಗ್ನಿಭಾಸುರರಿಂತಿವರು ಬ್ರಹ್ಮತಾವೆಂದು ಭಾವಿಸುವರು ೨
ಸನಕ ಸನಂದನ ಸನತ್ಸುಜಾತನುಮುನಿಯು ತೃಣಬಿಂದು ಮಾರ್ಕಾಂಡೇಯ ರೋಮಶನುಘನ ವಾಮದೇವ ದತ್ತಾತ್ರೇಯ ವಡಬನುಚಿನುಮಯರಿವರು ಬ್ರಹ್ಮತಾನೆಂದು ಭಾವಿಪರು೩
ಭರದ್ವಾಜ ದಧೀಚಿ ಮರೀಚಿ ಕರ್ದಮನುಭರತ ಭಾರದ್ವಾಜ ಆಸ್ತಿಕನು ಪೌಲಸ್ತ್ಯಹರಿಹರ ಬ್ರಹ್ಮ ತ್ರೈಮೂರ್ತಿ ಸಹಿತರಿವರುನಿರುತದಿಂ ನಿತ್ಯ ತಾವೆಂದು ಭಾವಿಸುವರು ೪
ಬ್ರಹ್ಮ ತಾವೆನಲು ಭವ ಮೂಲ ಹರಿವುದುಬ್ರಹ್ಮ ಬೇರೆನಲು ಬಹುಜನ್ಮವೇ ಬಹುದುಬ್ರಹ್ಮತಾವೆಂದು ಭಾವಿಸಿ ನೀವು ನಿತ್ಯಬ್ರಹ್ಮ ಚಿದಾನಂದ ತಾವಾಗುವಿರಿ ಸತ್ಯ ೫

೩೭೨
ಬ್ರಹ್ಮ ರೂಪವೇ ಈತಬ್ರಹ್ಮ ಸ್ಥಿತಿಯಿಂತುಸಮ್ಮತ ವೇದಾಂತವು ಮುಕ್ತ ಪ
ಸರ್ಪ ಕುಪ್ಪಸ ಬಿಟ್ಟ ಬಳಿಕಕುಪ್ಪಸದ ಚಿಂತೆ ಇರ್ಪುದೆ ಸರ್ಪಕೆ ಮುಕ್ತತಪ್ಪದಾ ಪರಿ ದೇಹ ಭಾವವ ಬಿಟ್ಟಯೋಗಿಗೆಇರ್ಪುದೇ ತನು ಭ್ರಾಂತಿ ಮುಕ್ತ ೧
ಹೆಣ ಬಿಟ್ಟು ಜೀವಾತ್ಮ ಘನ ಮಾರ್ಗದಿ ನಿಲ್ಲೆಹೆಣಕೆ ಮಾನಾಪಮಾನವೆಲ್ಲೋ ಮುಕ್ತಾತನು ಬಿಟ್ಟಾ ಪರಿ ಸಾಕ್ಷಿಯಾಗಿ ನೋಡುವ ಜ್ಞಾನಿಗೆತನು ಭ್ರಾಂತಿ ತಾನಿಹುದೇ ಮುಕ್ತಾ ೨
ಹೊಲೆಯತನ ಶುದ್ಧತನ ಎಲ್ಲಿಹುದೋ ಎಲೆ ಮುಕ್ತಾಹೊಲೆಯತನ ಶುದ್ಧತನ ಸಿದ್ಧನಿಗದೇತಕೋತಿಳಿದು ಬಾಳನು ಬಾಳ್ವ ಚಿದಾನಂದನಾದವವಗೆಬಲು ದೇಹ ಭ್ರಾಂತಿಯಹುದೋ ಮುಕ್ತಾ ೩

೨೯೩
ಬ್ರಹ್ಮಜ್ಞಾನಿಗಳ ನೋಡಿರೊ ಇಹ್ಹಿಹ್ಹಿಬ್ರಹ್ಮಜ್ಞಾನಿಗಳ ನೋಡಿರೋ ಪ
ಜ್ಞಾನಿಗಳು ತಾವು ಅಂತೆ ತಾವೇ ಪರಬ್ರಹ್ಮರಂತೆಏನೋನೋ ಹುಚ್ಚುಮಾತು ಕೇಳಿರಯ್ಯ ಅಹ್ಹಹ್ಹ ೧
ಜೊಂಡು ಹುಲ್ಲಿನಂತೆ ಮಂಡೆಗಳ ಬೆಳೆಸಿಕೊಂಡುಕಂಡ ಕಂಡಂತೆ ತಿರುಗುವವರ ನೋಡಿರಯ್ಯ ಅಹ್ಹಹ್ಹ ೨
ಸಂಧ್ಯವಿಲ್ಲ ಸ್ನಾನವಿಲ್ಲ ಮುಂದೆ ಹೋಮ ತರ್ಪಣವಿಲ್ಲಅಂದು ತಾವೇ ಬ್ರಹ್ಮವಂತೆ ಕಂಡಿರೇನೋ ಅಹ್ಹಹ್ಹ೩
ಕಾವಿ ಕೌಪವುಟ್ಟುಕೊಂಡು ಕಮಂಡಲು ಹಿಡಿದುಕೊಂಡುದೈವ ತಾನೇ ಎಂಬ ದೈವಗಳ ನೋಡಿರೋ ಅಹ್ಹಹ್ಹ೪
ಇಂತು ಚಿದಾನಂದ ಗುರು ಭಕ್ತರಗಳ ನಿಂದ್ಯಮಾಡಿಅಂತು ಕಾಲನ ಅರಮನೆಯ ಕುರಿಗಳಾದರಹ್ಹಹ್ಹ ೫

೧೭೨
ಬ್ರಹ್ಮತಾನೆ ನಿತ್ಯಾ ಬ್ರಹ್ಮತಾನೆಬ್ರಹ್ಮ ಪರಾತ್ಪರ ಬ್ರಹ್ಮ ತಾನೇ ಪ
ಕಾಲು ಕಣ್ಣು ಕೈ ಬಾಯಿ ಕಿವಿ ಮೂಗು ತಾಳಿಕೊಂಡುಕಾಲವನಿಲ್ಲಿಯೆ ಕಳೆಯಲು ಬಂದ ಗುರುಮೂರ್ತಿಮೂಲಾಧಾರನೆಂದು ತಿಳಿದುಕೊಳ್ಳಿರಾ ಬ್ರಹ್ಮ ತಾನು ೧
ಪುತ್ರ ಮಿತ್ರರರು ಕಳತ್ರರಾಗಿ ಬಂಧುವಾಗಿನಿತ್ಯದಾಟವ ಇಲ್ಲಿ ಕಳೆಯಲು ಬಂದ ಬ್ರಹ್ಮ ತಾನೇ೨
ಆಪವಿರಲು ಚಂದ್ರನು ಬಂದ ತೆರನಂತೆಉಪಾಧಿಯಿಂದ ಚಿದಾನಂದ ಬಂದ ಬ್ರಹ್ಮತಾನೇಉಪಾಧಿಯಿಂದ ಚಿದಾನಂದ ಬಂದ ಗುರುಮೂರ್ತಿಉಪಾಧಿ ಹರನೆಂದು ತಿಳಿದುಕೊಳ್ಳಿ ಬ್ರಹ್ಮತಾನೆ೩

೩೭೩
ಬ್ರಹ್ಮವದು ಹ್ಯಾಗಿದೆಬ್ರಹ್ಮ ಕೇಳ್ವನ ಹಾಗಿದೆಬ್ರಹ್ಮವದು ಹೀಗೆಂದು ತೋರಲಿಕೆ ಶಕ್ಯವೇ ಪ
ಬ್ರಹ್ಮವದು ಶೂದ್ರನೇಬ್ರಹ್ಮವದು ಭದ್ರನೇಬ್ರಹ್ಮವದು ರುದ್ರನೆಂದು ತೋರಿಸಲು ಶಕ್ಯವೇ ೧
ಬ್ರಹ್ಮವದು ಯಂತ್ರವೇಬ್ರಹ್ಮವದು ತಂತ್ರವೇಬ್ರಹ್ಮವದು ಮಂತ್ರವೆಂದು ತೋರಿಸಲು ಶಕ್ಯವೇ ೨
ಬ್ರಹ್ಮವದು ರೊಟ್ಟಿಯೇಬ್ರಹ್ಮವದು ಪುಟ್ಟಿಯೇಬ್ರಹ್ಮವದು ಹೊಟ್ಟೆಯೆಂದು ತೋರಿಸಲು ಶಕ್ಯವೇ ೩
ಬ್ರಹ್ಮವದು ಜೋಳಿಗೆಬ್ರಹ್ಮವದು ಮಾಳಿಗೆಬ್ರಹ್ಮವದು ಹೋಳಿಗೆ ಎಂದು ತೋರಿಸಲು ಶಕ್ಯವೇ ೪
ಹೇಗಿದೆಂದು ಕೇಳ್ವಡೆಹೀಗೆದೆಂದು ಪೇಳ್ವಡೆಹೇಗೆ ಹೀಗೆ ಎಂಬುದಕ್ಕೆ ಚಿದಾನಂದನ ನೋಡಿದೆ ೫

೩೭೪
ಬ್ರಹ್ಮವು ನೀನೇಬ್ರಹ್ಮವು ನೀನೆಂದು ನಂಬಲೋ ದೊರೆಯೇ ಪ
ವ್ಯಾಪಾರ ಮೂಗಿನಲ್ಲಲ್ಲ ಮೂಗಿನವ್ಯಾಪಾರ ಕಣ್ಣಿನಲ್ಲಿಲ್ಲನಿನ್ನ ವ್ಯಾಪಾರ ಸಕಲವು ಎಲ್ಲನಿನ್ನ ಹೊರತು ಬೇರೆ ಏನಿಲ್ಲ೧
ಜಾಗೃತ ವ್ಯಾಪಾರ ಸ್ವಪ್ನದಲಿಲ್ಲಸ್ವಪ್ನದ ವ್ಯಾಪಾರ ಜಾಗೃತದಲ್ಲಿಲ್ಲಜಾಗೃತ ಸ್ವಪ್ನವೆರಡು ಸುಷುಪ್ತಿಯಲ್ಲಿಲ್ಲಸುಷುಪ್ತಿ ತುರೀಯವು ಜಾಗೃತದಲ್ಲಿಲ್ಲ ೨
ನಾದದ ವ್ಯಾಪಾರ ಬಿಂದುವಿನಲ್ಲಿಲ್ಲಬಿಂದು ವ್ಯಾಪಾರ ನಾದದಲ್ಲಿಲ್ಲನಾದ ಬಿಂದು ಕಳೆ ಮೂರಕೆ ಇಲ್ಲಬೋಧ ಚಿದಾನಂದ ಹೊರತಿಹನಲ್ಲ ೩

೧೭೧
ಬ್ರಹ್ಮವೆಂಬಿರಿ ನಿಮ್ಮ ಬರಿದೆ ಮಾತಲ್ಲದೆಬ್ರಹ್ಮನಾದವನ ಬಗೆಯನು ಹೇಳುವೆ ಕೇಳಿ ಪ
ಆಶಾಪಾಶಗಳಿಗೆ ವಶವಾಗದವ ಬ್ರಹ್ಮಮೋಸಹೋಗದೆ ಮಾಯೆಗೆ ಇರುವವ ಬ್ರಹ್ಮಕೂಸಿನಂದದಿ ಭಾವ ಕೂಡಿಹನವ ಬ್ರಹ್ಮಘಾಸಿಯಾಗನು ಮದನಗೆ ಅವನು ಬ್ರಹ್ಮ ೧
ಸತಿಸುತರಿಚ್ಛೆಯ ಸಮನಿಸದವ ಬ್ರಹ್ಮಇತರರ ವಾಕ್ಯಕೆ ಕಿವಿಗೊಡದವ ಬ್ರಹ್ಮಗತಿ ಯಾವುದೆನಗೆಂದು ಗುಣಿಸುತಿಪ್ಪವ ಬ್ರಹ್ಮಅತಿ ಹರುಷದಿಂ ಬಾಳುತಿರುವವನು ಬ್ರಹ್ಮ೨
ಸಕಲ ವಿಶ್ವವು ಎನ್ನ ಸರಿಯು ಎಂಬುವವ ಬ್ರಹ್ಮಸುಖ ದುಃಖವನು ಸಮದೃಷ್ಟಿಯಲಿ ನೋಡುವವ ಬ್ರಹ್ಮಭಕುತಿ ಭಾವನೆಯಿರುವ ಮಾನವನು ತಾ ಬ್ರಹ್ಮಮುಕುತಿ ಮರ್ಗದಲಿರುವ ಯೋಗಿಯವ ಬ್ರಹ್ಮ ೩
ಹುಚ್ಚರಂದದಿ ನೋಡೆ ಹುದುಗಿಕೊಂಡಿಹ ಬ್ರಹ್ಮಅಚ್ಚರಿಯ ಅವನಾಟ ತಿಳಿವವನು ಬ್ರಹ್ಮನಿತ್ಯಕಾಲದಿ ಜ್ಞಾನ ಬೇಕೆನ್ನುವವ ಬ್ರಹ್ಮಕೊಚ್ಚಿತೆಂಬನು ಎಲ್ಲ ಕುಲಜ ಬ್ರಹ್ಮ೪
ದಾಸದಾಸರ ದಾಸನಾದವನೆ ಬ್ರಹ್ಮಈ ದೇಹದಾ ಹಂಗ ತೊರೆದವನು ಬ್ರಹ್ಮಭಾಸುರ ಚಿದಾನಂದನ ಭಜಿಪ ಭಕ್ತನೆ ಬ್ರಹ್ಮವಾಸರಿಲ್ಲವೋ ಈ ವಾಕ್ಯಕೆಂಬುವವ ಬ್ರಹ್ಮ೫

೨೯೪
ಬ್ರಹ್ಮವೆತ್ತಲು ಪರಬ್ರಹ್ಮವೆತ್ತಲುಬ್ರಹ್ಮ ತಾವೆಯೆಂದು ವಾಚಾಬ್ರಹ್ಮವನೆ ಬಗಳುತಿಹರಿಗೆ ಪ
ಆಸೆಯೆಂಬದು ಅಳಿಯಲಿಲ್ಲ ಆಕಾಂಕ್ಷೆತಾ ಕಳೆಯಲಿಲ್ಲಪಾಶವೆಂಬುದು ಬಿಗಿದು ಉರುಲು ಬಿದ್ದಿಹುದುದೋಷವೆಂಬುದು ಅಡಗಲಿಲ್ಲ ದುಷ್ರ‍ಕತವೆಂಬುದು ಒಣಗಲಿಲ್ಲಕ್ಲೇಶ ಪಂಚಕದ ವಿಷಯದಿ ಕೆಡೆದಿಹ ಮನುಜರಿಗೆ ೧
ಕಾಮವೆಂಬುದು ಕಡಿಯಲಿಲ್ಲ ಕ್ರೋಧವೆಂಬುದು ಅಳಿಯಲಿಲ್ಲತಾಮಸವೆಂಬುದು ಶರೀರ ತುಂಬಿಕೊಂಡಿಹುದುಕಾಮಿತವೆಂಬುದು ಹೋಗಲಿಲ್ಲ ಕಷ್ಟವೆಂಬುದು ನೀಗಲಿಲ್ಲಪಾಮರರಾಗಿ ದಾಹಕೆ ಸಿಕ್ಕುಬಿದ್ದಿಹ ಮನುಜರಿಗೆ೨
ಮೋಹವೆಂಬುದು ಹರಿಯಲಿಲ್ಲ ಮೂರ್ಖತೆಯೆಂಬುದು ಕರಗಲಿಲ್ಲಊಹೆ ಎಂಬ ಕುಬುದ್ಧಿಯು ಉಡುಗಲಿಲ್ಲದೇಹ ಶೋಧನೆ ತಿಳಿಯಲಿಲ್ಲ ದೇಹಿ ಚಿದಾನಂದ ಅರಿಯಲಿಲ್ಲಕಾಹುರ ಮದದಲಿ ಮರೆತಿಹ ಮಂಕುವನು ಮನುಜರಿಗೆ ೩

೩೭೫
ಬ್ರಹ್ಮವೇ ನೀನೆನ್ನು ಮುಕ್ತನೇಬ್ರಹ್ಮವೇ ನೀನೆನ್ನು ಪ
ತುಪ್ಪದ ಹನಿಯೆಲ್ಲವು ಮುಕ್ತನೆತುಪ್ಪವೆಯಲ್ಲವೆ ಮುಕ್ತನೆಇಪ್ಪ ಈ ಜಗವೆಲ್ಲ ಮುಕ್ತನೆತುಪ್ಪದ ತೆರನಂತೆ ಈ ಬ್ರಹ್ಮ ೧
ಸಕ್ಕರೆ ಚೂರೆಲ್ಲ ಮುಕ್ತನೆಸಕ್ಕರೆಯಲ್ಲವೆ ಮುಕ್ತನೆತಕ್ಕು ಆಪರಿ ಆ ಜಗವು ಮುಕ್ತನೆಸಕ್ಕರೆ ತೆರನಂತೆ ಈ ಬ್ರಹ್ಮ೨
ಅಣುರೇಣು ತೃಣ ಕಾಷ್ಠ ಮುಕ್ತನೆಘನ ಜೀವ ತಾನೆ ಎನ್ನು ಮುಕ್ತನೆಗುಣಾತೀತ ಚಿದಾನಂದ ಮುಕ್ತನೆಅನುಮಾನವಿಲ್ಲದೆ ನೀನೇ ಈ ಬ್ರಹ್ಮ ೩

೩೭೬
ಬ್ರಹ್ಮಾಗಿ ತನ್ನ ಕಾಣೆ ಬ್ರಹ್ಮವಲ್ಲವೆ ಪ
ಕೀಟ ಭೃಂಗವ ಹೊಂದಿ ಕೀಟ ಭೃಂಗವಾಗಲುಕೀಟವ ನೆನೆಸಲುಂಟೆ ಭೃಂಗದಲ್ಲಾದಕೂಟ ಪ್ರಾಣವೆ ಹೋಗಿ ಘಾಟಿ ಬ್ರಹ್ಮದಲಿರೆಕೂಟ ಪ್ರಾಣವದೆನಲುಂಟೆ ಬ್ರಹ್ಮನಲ್ಲದೆ ೧
ಕರ್ಪೂರದುರಿಯ ಸೋಂಕಿ ಕರ್ಪುರ ಉರಿಯಾಗಲುಕರ್ಪೂರವ ನೆನಸಲುಂಟೆ ಉರಿಯಲ್ಲದೆಇಪ್ಪ ಇಂದ್ರಿಯ ಹೋಗಿ ಅಪ್ಪಟ ಆತ್ಮನಾಗೆಇಪ್ಪ ಇಂದ್ರಿಯ ಎನಲುಂಟೆ ಬ್ರಹ್ಮನಲ್ಲದೆ ೨
ತೊತ್ತು ಅರಸನಸೇರಿ ತೊತ್ತು ಅರಸನಾಗಲುತೊತ್ತುತನವ ನೆನಸಲುಂಟೆ ಅರಸಲ್ಲದೆಚಿತ್ತವೆಂಬುದು ಹೋಗಿ ಶುದ್ಧ ಆತ್ಮವ ದಾಗೆಚಿತ್ತವೆನಲುಂಟೆ ಬ್ರಹ್ಮವಲ್ಲದೆ೩
ಲವಣ ನೀರನು ಕೂಡಿ ಲವಣನೀರಾಗಲುಲವಣ ನೆನಸಲುಂಟೆ ನೀರಲ್ಲದೆಸವನಿಸೆ ಮನವದು ಶಿವನಾಗಿ ವರ್ತಿಸೆಸವನಿಸೆ ಮನ ಎನಲುಂಟೆ ಬ್ರಹ್ಮವಲ್ಲದೆ ೪
ಶರೀರ ತನ್ನದು ಎಲ್ಲ ಶರೀರ ಗುರುವಿನದಾಗೆಶರೀರ ತಾನೆ ಎನಲುಂಟೆ ಗುರುವಲ್ಲದೆನರನು ಚಿದಾನಂದ ಗುರುವಾಗಿ ತನ್ನ ಕಾಣೆನರನು ಎನಲುಂಟೆ ಬ್ರಹ್ಮವಲ್ಲದೆ೫

೩೭೭
ಬ್ರಹ್ಮಾನಂದದ ಸಭಾ ಮಧ್ಯದಲಿಸುಮ್ಮನೆ ಇರುತಿಹುದೇನಮ್ಮಬ್ರಹ್ಮಾದಿಗಳಿಗೆ ದೂರಾಗಿಹನಿರ್ಮಲ ನಿರುಪಮ ತಾನಮ್ಮ ಪ
ಹೇಳಲು ಬಾರದ ಸುಖರೂಪದಲಿಹೊಳೆಯುತ ಅಹುದು ಏನಮ್ಮಮೇಳದ ಲೋಕಕೆ ಕರ್ತೃ ತಾನಾಗಿಹಲೋಲ ಪರಾತ್ಪರ ತಾನಮ್ಮ ೧
ಬೋಧದ ರೂಪದಿ ಹಾ…. ಎಂಬಂದದಿಬೆಳಗುತಲಿಹುದದು ಏನಮ್ಮಆದಿ ಅನಾಧಿಯು ಅವ್ಯಕ್ತವೆನಿಪಅಚಲಾನಂದವೆ ತಾನಮ್ಮ ೨
ತೃಪ್ತಾನಂದದಿ ತೂಷ್ಣೀ ಭಾವದಿದೀಪ್ತವಾಗಿಹುದದು ಏನಮ್ಮಸಪ್ತಾವರಣದ ಮೀರಿ ಮಿಂಚುವಗುಪ್ತಜ್ಞಪ್ತಿಯು ತಾನಮ್ಮ ೩
ಕದಲದೆ ಚೆದುರದೆ ಕೈ ಕಾಲಿಲ್ಲದೆಉಕ್ಕುತಲಿಹುದದು ಏನಮ್ಮಸದಮಲ ಸರ್ವಾತ್ಮತ್ವವೆಯಾಗಿಹಸಾಕ್ಷೀಭೂತವು ತಾನಮ್ಮ೪
ತೋರುತಲಡಗದ ಸಹಜಭಾವದಿಥಳಥಳಿಸುತಿಹುದದು ಏನಮ್ಮಕಾರಣ ಕಾರ್ಯವ ಕಳೆದ ಚಿದಾನಂದಕಾಲಾತೀತನು ತಾನಮ್ಮ ೫

೧೭೩
ಬ್ರಹ್ಮಾಸ್ತ್ರ ಬ್ರಹ್ಮಾಸ್ತ್ರ ಎಂಬ ಮಾತೆಂತೆನೆಬದಲಿಲ್ಲದಿರುವುದೇ ಬ್ರಹ್ಮಾಸ್ತ್ರಬ್ರಹ್ಮಾಸ್ತ್ರಕೆ ಬ್ರಹ್ಮಾಸ್ತ್ರವೇಯಲ್ಲದೆಬ್ರಹ್ಮಾಸ್ತ್ರವೇ ಬ್ರಹ್ಮಾಸ್ತ್ರವು ಬ್ರಹ್ಮಾಸ್ತ್ರ ಪ
ಪಾಶುಪತಾಸ್ತ್ರ ನಾರಾಯಣಾಸ್ತ್ರವನೆಲ್ಲಪೂರ್ಣಾಹುತಿಯ ಕೊಂಬುದೇ ಬ್ರಹ್ಮಾಸ್ತ್ರವಾಸವಾದಿತ್ಯ ಆಗ್ನೇಯಾಸ್ತ್ರವನೆಲ್ಲಬೆದರದೇ ನುಂಗುವುದೆ ಬ್ರಹ್ಮಾಸ್ತ್ರ೧
ಬ್ರಹ್ಮರಂದ್ರವೆ ಅದು ರಾಜಯೋಗ ಸ್ಥಾನಬ್ರಹ್ಮರಂದ್ರದ ನಿವಾಸಿ ಬ್ರಹ್ಮಾಸ್ತ್ರಬ್ರಹ್ಮದೇವರ ಜಿಹ್ವೆ ಹಿಡಿದತುರೀಯ ದೇವತೆಬ್ರಹ್ಮಾಸ್ತ್ರವೇ ಅಸ್ತ್ರವು ಬ್ರಹ್ಮಾಸ್ತ್ರ ೨
ಬ್ರಹ್ಮ ತುರೀಯಾತೀತ ಬ್ರಹ್ಮಾಸ್ತ್ರನಿರ್ಗುಣ ಬ್ರಹ್ಮಾಸ್ತ್ರವೆ ಸ್ವರಾಟ್ ಬ್ರಹ್ಮಾಸ್ತ್ರಬ್ರಹ್ಮ ಚಿದಾನಂದ ಬ್ರಹ್ಮಾಸ್ತ್ರವೆನಿಸಿತುಬ್ರಹ್ಮಾಸ್ತ್ರವೇ ಬಗಳ ಬ್ರಹ್ಮಾಸ್ತ್ರ ೩

೧೭೪
ಬ್ರಹ್ಮಾಸ್ತ್ರದ ನಿಜವನು ನಾ ಪೇಳುವೆಬ್ರಹ್ಮಾಸ್ತ್ರವೇ ಬ್ರಹ್ಮವುಬ್ರಹ್ಮಾಸ್ತ್ರ ತಾನೆಂದು ಭಜಿಸುವಾತನುಬ್ರಹ್ಮಾಸ್ತ್ರವೇ ಆತನು ಬ್ರಹ್ಮಾಸ್ತ್ರ ಪ
ಪೀತಾಂಬರದುಡಿಗೆ ರಾಶಿಯು ಹಾಕಿದ ಎದೆಕಟ್ಟುಪೀತವಾಗಿಹುದೇ ಬ್ರಹ್ಮಾಸ್ತ್ರಪೀತವರಣ ಪೀತ ಪುಷ್ಟ ಗಂಧಾನುಲೇಪನಪೀತದಿಂದಿಹುದೇ ಬ್ರಹ್ಮಾಸ್ತ್ರ ಪ್ರೀತಸರ್ವವು ಆಗಿಪ್ರೀತ ಪ್ರೀತೆಯೆ ಆಗಿ ಪೀತಾವರಣವೆ ಬ್ರಹ್ಮಾಸ್ತ್ರ ೧
ಬಿಗಿದ ಬತ್ತಳಿಕೆಯು ಎಡಹಸ್ತ ಶಾರ್ಙದಿಝಗಿ ಝಗಿಸುವುದೇ ಬ್ರಹ್ಮಾಸ್ತ್ರತೆಗೆದು ಕೆನ್ನೆಗೆ ಶರವನೆಳೆದು ರೌದ್ರದಿನಿಗಿನಿಗಿನಿಗಿಸುವುದೇ ಬ್ರಹ್ಮಾಸ್ತ್ರ ೨
ವೀರ ಮಂಡಿಯ ಹಾಕಿ ಖಡ್ಗವ ಸೆಳೆದುತೂರತಲಿಹುದೇ ಬ್ರಹ್ಮಾಸ್ತ್ರಕಾರುವ ಕಿಡಿಗಳ ಕ್ರೂರ ದೃಷ್ಟಿಯಲಿಘೋರವಾಗಿಹುದೇ ಬ್ರಹ್ಮಾಸ್ತ್ರಬಾರಿಬಾರಿಗೆ ಹೂಂಕಾರಗೈಯುತ ಅವಡುಗಚ್ಚಿಮಾರಿಯಾಗಿಹುದೇ ಬ್ರಹ್ಮಾಸ್ತ್ರಸಾರ ಕಿಚ್ಚಿನ ಜ್ವಾಲೆ ಭುಗುಭುಗು ಛಟಛಟಎನುತಲಿಹುದದೇ ಬ್ರಹ್ಮಾಸ್ತ್ರ೩
ದಿಸೆಗಳು ಮುಳುಗಿವೆ ಉರಿಯ ಕಾಂತಿಯಲಿರವಿಶತ ಕೋಟೆಯ ರಶ್ಮಿ ಚೆಲ್ಲುವುದೇ ಬ್ರಹ್ಮಾಸ್ತ್ರಪಸರಿಸಿ ಇಹ ಬ್ರಹ್ಮಾಂಡವನಂತವಭಸ್ಮ ಮಾಡುವುದೇ ಬ್ರಹ್ಮಾಸ್ತ್ರನುಸಿಗಳು ಅಸಂಖ್ಯಾದಿ ಬಹ್ಮರುದ್ರಾದ್ಯರಅಸುವ ಕೊಂಬುದೇ ಬ್ರಹ್ಮಾಸ್ತ್ರ ೪

೧೭೫
ಭಂಗಿ ಹತ್ತಿದೆ ಜ್ಞಾನ ಭಂಗಿ ಹತ್ತಿದೆನುಂಗಿ ಕಾಮ ಕ್ರೋಧಗಳನ್ನುಅಂಗ ಮೆರೆವ ಮರವೆನಿಕ್ಕಿ ಪ
ನಿತ್ಯತೃಪ್ತನು ನಿರಾಕಾರ ನಿರ್ಲಿಪ್ತನುಪ್ರತ್ಯಗಾತ್ಮ ಅತ್ಯಾಧಿಕಸತ್ಯಸಂಧನು ತಾನೆ ಎಂಬ ೧
ವಿಶ್ವ ನಾಟಕ ಮಹಾವಿಶ್ವದಾಧಾರವಿಶ್ವದೊಳ ಹೊರಗೆಲ್ಲವಿಶ್ವತೃಪ್ತ ತಾನೆ ಎಂಬ೨
ಏನ ಕೇಳುವಿರೋ ನೀವೇನ ಹೇಳುವಿರೋಜ್ಞಾನ ಮೂರುತಿ ಚಿದಾನಂದತಾನೆ ತಾನೆ ಎಂಬ೩

೨೯೫
ಭಕ್ತಿಯು ಸುಲಭ ತಾನಲ್ಲ ನಿಜಭಕ್ತಿ ದೊರಕಲವಗಾಗುವುದು ಎಲ್ಲ ಪ
ಎಲ್ಲ ಸಂಗವ ಬಿಡಬೇಕು ತಾನುಬಲ್ಲ ಗುರುವ ಸೇವೆ ಮಾಡಬೇಕುಎಲ್ಲಕೆ ತಾನಿರಬೇಕು ಭಕ್ತಿಬಲ್ಲವನಿಂದ ನಿತ್ಯದಿ ಹೆಚ್ಚಬೇಕು ೧
ಹೇಳಿದಲ್ಲಿಗೆ ಹೋಗಬೇಕು ಮನಕೇಳದಿರಲು ಬುದ್ಧಿಯ ಹೇಳಬೇಕುಕಾಳರಾತ್ರೆಯೆನ್ನದಿರಬೇಕು ನಿತ್ಯಬಾಲಕನಂತೆ ತೋರುತಲಿರಬೇಕು ೨
ಹಸಿವು ತೃಷೆಯ ಬಿಡಬೇಕು ತಾನುಎಸಗಿ ಗುರುಸೇವೆ ಮಾಡಬೇಕುಬಿಸಿಲು ಮಳೆ ಎನ್ನದಿರಬೇಕು ಧೈರ್ಯವೆಸಗಿ ಭಯಕೆ ಬೆಚ್ಚದಲಿರಬೇಕು ೩
ಗುರುವಿನನಡೆ ನೋಡಬೇಕು ಆಗುರುವಿನ ನಡೆಯ ಕಂಡಂತಿರಬೇಕುಕರಣ ವಿಷಯ ಹೋಗಬೇಕು ನಿತ್ಯಭರಿತವಾನಂದವಾಗಿರಬೇಕು ೪
ಇಂತು ಎಲ್ಲ ಕಾಂಬವನು ಗುರುಚಿಂತಾಯಕನು ಚಿದಾನಂದನು ತಾನುಸಂತೈಸಿ ಕರವ ನೀಡುವನು ಏ-ನೆಂತು ಪೇಳಲಿ ತನ್ನೊಳೆರಕ ಮಾಡುವನು ೫

೮೨
ಭಜರೇ ಚಿದಾನಂದ ಮೇ ಮನಸಾಭಜರೇ ಚಿದಾನಂದಂ ಭವ್ಯ ಚರಿತ ಸಾಮಜ ವಸ್ತ್ರಾಂಗಂ ಸುಮನೋತ್ತುಗಂ ಪ
ಪಾಲ ಶರಣ ಪಾಲಿತಂಫಾಲಾಕ್ಷ ವಿಶಾಲ ವಿಷಯ ಶೋಷಿತಂನೀಲ ಕಂಧರ ನಿರಾಶ ನಿಗಮ ಶಿರಲೋಲ ಸದಾನಂದಿತಂ ಮೇ ಮನಸಾ ೧
ಈಶ ತಾಪ ಭೀಷಣಂ ಈಶ್ವರವಿಶ್ವೇಶನಾದ ಘೋಷಣಂಭಾಸುರ ಕೋಟಿ ಸೇವಿತ ಸಂಕಾಶ ಮಹೇಶ ಸದಾನಂದಿತಂ ಮೇ ಮನಸಾ೨
ಪರಮ ಪರಾಪುರುಷಂ ಪಾರ್ವತಿ ಮನೋಹರ ಹರಿ ವಿಶ್ವಾರ್ಚಿತಂವರ ಚಿದಾನಂದ ಗುರುವೇ ಸಾಕ್ಷಾತಂಸ್ಮರಣ ಮನೋನಿಶ್ಚಿತಂ ಮೇ ಮನಸಾ೩

೨೯೬
ಭರಬರನೆ ಬಾಜಾರಕೆ ನಾ ಬಂದೆನಯ್ಯ ಚಿದಾನಂದನ ಮರೆಯಲಿಕೆ ಪ
ಐವರು ಗೌಡರು ಕಟ್ಟಿದ ಪೇಟೆ ಆ ಪೇಟೆಗೆಐದು ನಾಲ್ಕು ಬಾಗಿಲುಗಳುಐದು ಮಂದಿ ಸೆಟ್ಟರು ಸೇರಿಹರು ಆವರಲ್ಲಿಯೆಐದು ಮಂದಿ ಚಲವಾದಿಗಳು೧
ಸೂರ್ಯನ ಬೀದಿ ಚಂದ್ರನ ಬೀದಿ ಬಾಜಾರವಿದೆಸಾರೆ ಸಾರೆ ಮಳಿಗೆ ಇದ್ದಾವೆಬಾರದ ಗಿರಾಕಿ ಬರುತಿಹನು ಈನೆರೆವುದಕ್ಕೆ ವಾರದ ಭಾರ ನೇಮಲ್ಲಿದೆ ೨
ತಡುಗರೆಂಬವಾಲೆ ಶೆಟ್ಟಿಗಳೆ ಅಲ್ಲಿಗಲ್ಲಿಗೆಪಡುವಲ ಕೋರಿ ಶೆಟ್ಟಿಗಳೇಕಡುಕರ್ಮಿ ಕೋಮಟಿ ಶೆಟ್ಟಿಗಳೇ ಬಾಯಿ ಘನವಾಗೆಬಡಬಡಿಪ ಪಟ್ಟಣ ಶೆಟ್ಟಿ ೩
ಪಾಪವೆಂಬ ವಸ್ತ್ರದಂಗಡಿಯೇ ನಾ ನೋಡಲಾಗಿತಾಪವೆಂಬ ಜವಳಿ ಅಂಗಡಿಯೆಕೋಪವೆಂಬ ಕುಪ್ಪಸ ದಂಗಡಿಯೇಒಪ್ಪುತಲಿರೆ ಕಾಪಥವೆಂಬ ಸಕಲಾತ್ಮಂಗಡಿಯೇ ೪
ಚಿ, ಛೀ ಎಂಬ ಚಿಕ್ಕ ತಕ್ಕಡ ಗಂಡಿಯೆ ನಾ ಬರುತಿರೆನಾಚಿಕೆಯಿಲ್ಲದ ಕಂಚಿನಂಗಡಿಯೇಚು ಛೂ ಎಂಬ ಚೀನಿಯಂಗಡಿಯೇ ಯಡಬಲದಲ್ಲಿಕೋಚು ಮಾಡೋ ಉದ್ದಿನಂಗಡಿಯೇ ೫
ತನು ವ್ಯಸನವೆಂಬ ತಾಡಪತ್ರಿ ತೋರಲಾಗಿಮನವ್ಯಸನವೆಂಬ ಕಿಂಕಾಪುಧನವ್ಯಸನವೆಂಬೋ ಮಖಮಲ್ಲು ನಾ ಬೆರಗಾಗೆಜನ ವ್ಯಸನವೆಂಬೋ ಜರತಾರಿಯೇ೬
ನಾನಾ ವಿಷಯ ವೆಂಬೋ ಉತ್ತತ್ತಿ ಅಲ್ಲಿದ್ದಾವೆಜ್ಞಾನಶೂನ್ಯ ಜಾಜಿಕಾಯಿಮಾನ ಹಾನಿಯೆಂಬೋ ಜಾಪತ್ರಿನಾನು ನನ್ನದು ಎಂಬ ಭಂಗಿ ಸೊಪ್ಪು೭
ಜೀವನೆಂಬ ಹೊಗೆಯ ತೊಪ್ಪಲೇ ಹಿರಿಯವಾದನೋವು ಕಷ್ಟಗಳೆಂಬ ಗಾಂಜಿಯೇಸಾವು ಬದುಕು ಎಂದೆಂಬ ಮಾಲೆಗಳೇ ಮಾರುತಲಿತ್ತೋನಾನು ನೀನು ಎಂಬ ಚಿಲುಮೆಗಳೋ ೮
ಭೇದವೆಂಬ ನಿಲುವುಗನ್ನಡಿಯೆ ಒಳಗಿದ್ದಾವೆ ವಾದವೆಂಬವಜ್ರದಹರಳೇ ಹಾದಿ ಕಾಣೆನೆಂಬ ಹವಳದ ರಾಶಿಯೇ ಹರಡಿದ್ದಾವೆಗಾದೆ ಎಂಬ ಸೂಜಿದಬ್ಬಣವೇ ೯
ಪ್ರಾರಬ್ಧವೆಂಬೋ ಉಂಬತಳಿಗೆಯೇ ಪಸರಿಸುತಿರುವಘೋರ ತಾಪತ್ರಯದ ತಟ್ಟೆಯೇನಾರಿ ನೋಟೆಂಬ ಕಠಾರಿಯೇ ನಿಲಿಸಿದ್ದಾವೆಸೂರಿಯ ಸುಕೃತವೆಂಬೋ ತುಬಾಕಿಯೇ೧೦
ಪರಿಣಾಮಿಲ್ಲದ ಪಡವಲಕಾಯಿ ದಾರಿಯಲಿದಾರಿಯಿಲ್ಲದ ದೊಡ್ಡಿಲಕಾಯಿಅರಿವಿಲ್ಲದ ಕುಂಬಳಕಾಯಿ ಹಾಗಿದ್ದಾವೆಮರುಳು ಎಂಬ ಮಾವಿನಕಾಯಿ೧೧
ಮಂಠ ಎಂಬೋ ಮೆಂತ್ಯ ಪಲ್ಲಯೇ ಮಾಸಲವಿತ್ತೆಕಂಟಕ ಎಂಬೋ ಹರಿವೆ ಪಲ್ಲೆಯೇಕೊಂಟೆಯೆಂಬೊ ಬಸಲೆ ಪಲ್ಲೆಯೇ ತೀವ್ರದಲಿತ್ತೆಶುಂಠವೆಂಬೋ ಬೆರಕೆ ಪಲ್ಲೆಯೇ ೧೨
ಬಂಗಾರವೆಂಬೋ ಬಿಳಿಯ ಜೋಳವೇ ಬೆಡಗಿಲಿರೇರಂಗು ಎಂಬೋ ರಾಗಿ ರಾಶಿಯೇಸಂಗವೆಂಬೋ ಸಣ್ಣಕ್ಕಿಯೇ ಸಾರಿದ್ದಾವೆಹಿಂಗದೀಪರಿ ದಿವಾರಾತ್ರಿಯೇ ೧೩
ಸಂಕಲ್ಪೆಂಬೋ ಧಾರಣೆ ಹಚ್ಚಿರೋ ಸಂಗಾತಲೆವಿಕಲ್ಪೆಂಬೋ ಧಾರಣೆಯಿಳಿವುದೇಸುಖದುಃಖವೆಂಬೋ ಮಾರಾಟವೇ ಸಾಗಿರಲಾಗಿಕಾಕಧಾವಂತರ ಸಂಧಾನವೇ ೧೪
ಕಾಮಕ್ರೋಧಗಳೆಂಬ ಕಳ್ಳರೇ ಕಾವಲಿರ್ದುರಾಮನೆಂಬ ಸ್ಮರಣೆ ಕದ್ದಿಹರೋಕಾಮುಕರೆ ತಿರುಗಾಡುವರೆಲ್ಲ ಕಾಣದ ಹಾಗೆಆ ಮಹಾಜ್ಞಾನವ ಸುಲಿದಿಹರೋ೧೫
ಬರಬಾರದ ನಾನು ಬಂದೆನೇ ಬಾಜಾರ ಬಿಟ್ಟುಹೊರಡುವ ತೆರನ ಕಾಣೆನೇಕರುಣಿಯಾಗಿ ಕೈ ವಿಡಿವರಾರೋಕರುಣಾಕರ ಹರ ವಿಶ್ವೇಶನೇ ಬಲ್ಲ ೧೬
ಚಿಂತೆ ನಾನು ಮಾಡುತಿರಲಾಗಿ ಚಿದಾನಂದಚಿಂತೆ ಬೇಡೆಂದು ಮುಂದೆ ನಿಂದಿಹನುಚಿಂತೆ ಬಿಡು ಕಾವಲಿಹೆನೆಂದು ಚಿದ್ರೂಪ ತೋರಿಎಂತು ಪೇಳಲಿ ಎನ್ನೆದುರು ನಿಂದಿಹನೆ೧೭

೧೭೬
ಭವ ಸಂಸಾರ ಶರಧಿಯ ಗುರು ಅಂಬಿಗ ದಾಟಿಸಿದಶಿವನ ಮಾಡುತಲೆನ್ನ ಮುಕ್ತಿಗೇರಿಸಿದ ಪ
ಬಯಕೆಗಳೆಂಬ ತೆರೆಯು ತಾಪತ್ರಯಗಳೆ ಲಹರಿಯುಪ್ರಿಯಗಳೆಂಬುವೆ ನೊರೆಯು ಕ್ಲೇಶವೆಂಬುದೆ ಹರಿಯು ೧
ತಿಳಿವು ಇಲ್ಲದ ಮಡುವು ಕಸಿವಿಸಿ ಎಂಬುದೆ ದಡವುಬಲು ಅವಿವೇಕವೆ ಗುಡುಗು ಸುಖದುಃಖಗಳೆಂಬುವು ತೆರೆಯು ೨
ಸತಿಯೆಂಬುವಳೆ ಮೊಸಳೆ ಸುತರೆಂಬವರೆ ಜಿಗಳೆಅತಿ ಬಗುಳವೇ ನೀರ್ಗೋಳಿ ಮೋಹವೆಂಬುದೆ ಸುಳಿ ೩
ಸಂದಣಿಯೆಂಬುವು ಜಲಚರವು ಸಡಗರವೆಂಬುದೆ ತಳವುಹೊಂದಿಹ ಚಿಂತೆಯೆ ದಡವು ಸ್ಥಿರವಿಲ್ಲದುದೇ ಗಡುವು ೪
ಜ್ಞಾನದ ನಾವೆಗಳಿಂದ ಪ್ರಣವದ ಹುಟ್ಟುಗಳಿಂದದಾಟಿಸಿದ ಚಿದಾನಂದ ಅಂಬಿಗ ಛಲದಿಂದ ೫

೧೭೭
ಭ್ರಮೆಯಿಂದ ಎರಡಾಯ್ತು ಇದ್ದುದೊಂದೆ ವಸ್ತುಭ್ರಮೆಯಳಿದ ಬಳಿಕ ಮುನ್ನಿಹುದೆ ನಿಜವಸ್ತು ಪ
ಸ್ಥಾಣುವೆಂಬುದು ಪೋಗಿ ಮನುಜ ರೂಪಾದಂತೆಕಾಣಿಸಿತು ರಜ್ಜುವದು ಸರ್ಪದಂತೆ ೧
ಕೆಂಪು ಎಂಬುದು ಪೋಗಿ ಕನಕರೂಪಾದಂತೆಇಂಪು ಕಾಣಿಸಿ ಶುಪ್ತಿ ರಜತದಂತೆ೨
ಒಬ್ಬನಿರುತಿಹ ಆತ್ಮ ಜೀವತ್ವವದುಭ್ರಾಂತಿ ಒಬ್ಬನೆ ಚಿದಾನಂದ ತಾನೆ ಸತ್ಯ೩

೪೧೪
ಮಂಗಳ ಮಂಗಳ ಜಯ ಮಂಗಳ ಶುಭಮಂಗಳ ಗುರುಮೂರ್ತಿ ವಿರೂಪಾಕ್ಷನಿಗೆ ಪ
ಶುಭ್ರಾಂಶುಧರನಿಗೆ ಶುಭ್ರವಸ್ತ್ರವನಿಟ್ಟುಶುಭ್ರತಿದೇಹ ಶುಭ್ರದಾಭರಣಗೆಶುಭ್ರಸ್ತ್ರೀಧರ ಯಶಶ್ಶುಭ್ರನಿಗೆ ೧
ದರಹಾಸ ಮುಖನಿಗೆ ನಗಾಲಯನಾಗಿರ್ದಧರಶಿಖಿ ಶಿವಪಾತ್ರ ಭರಣಿಪತಿಗೆಧರಮುನಿ ವರದಗೆ ಧರರೂಪ ಪಾಲಗೆಧರಧನುವನು ತಾಳ್ದ ಧರವಾಸಗೆ ೨
ಪುರಮಾರಹರನಿಗೆ ಪುರಗಿರಿ ಗೇಹನಿಗೆಶರಣಜನ ಬಂಧು ಚರಣಾಂಗಗೆಗುರು ಚಿದಾನಂದಗೆ ಗಣಪತಿ ಸಾಂದ್ರಗೆದುರಿತ ಭವ ಭವ ದುರಿತನಿಗೆ ೩

೪೧೬
ಮಂಗಳ ಸದ್ಗುರುವರಗೆ ಮಂಗಳ ಸದ್ಗುರುವರೆಗೆಮಂಗಳ ದುರ್ಗುಣ ಹರಗೆ ಮಂಗಳ ಬಗಳಾಂಬ ಚಿದಾನಂದ ದೊರೆಗೆ ಪ
ಪೀತದ ಪೀಠದ ಮೇಲೆ ಪೀತಾಂಬರಿಯು ಕುಳ್ಳಿರಲುಪೀತದಾರತಿಯನ್ನು ಕೈಯಲಿ ಪಿಡಿದುಪೀತದಾಭರಣೆ ಪೀತದಾವರಣೆಗೆಪೀತದಾರತಿಯ ಬೆಳಗಿರೆ ೧
ಮುತ್ತಿನ ಪೀಠದ ಮೇಲೆ ಮುಕ್ತಾಂಗಿ ಕುಳಿತಿಹಳುಮುತ್ತಿನಾರತಿಯನ್ನು ಕೈಯಲ್ಲಿ ಪಿಡಿದುಮುತ್ತಿನಾಭರಣೆಗೆ ಚಿತ್ತ ಚಿದ್ರೂಪಿಣಿಗೆಮುತ್ತಿನಾರತಿಯ ಬೆಳಗಿರೆ೨
ಪದ್ಮಾಸನದ ಪೀಠದ ಮೇಲೆ ಪದ್ಮಾಸನೆ ಕುಳಿತಿಹಳುಪದ್ಮದಾರತಿಯನ್ನು ಕೈಯಲ್ಲಿ ಪಿಡಿದುಪದ್ಮಶ್ರೀ ಚಿದಾನಂದ ಸದ್ಗುರುವಿಗೆಪದ್ಮದಾರತಿಯ ಬೆಳಗಿರೇ ೩

೪೧೨
ಮಂಗಳಂ ಜಯ ಸದಾ ಶುಭ ಮಂಗಳಂಮಂಗಳಂ ಆರೂಢ ಮಹಾತ್ಮಗೆ ಪ
ಕಲುಷ ನಿರ್ಧೂತಗೆ ಕರ್ಮ ವಿಧ್ವಂಸಗೆಬಲು ಅವಿದ್ಯಾಬ್ರಾಂತಿ ವಿನಾಶಗೆಲಲಿತ ನಿಜ ಮುಕ್ತಗೆ ಲಕ್ಷ್ಯ ಅಲಕ್ಷ್ಯಗೆಥಳಥಳಿಪ ತೇಜೋಮಯಾತ್ಮನಿಗೆ ೧
ಮಾಯೆ ನಿರ್ಮೂಲಗೆ ಮಲತ್ರಯ ವಜ್ರ್ಯಗೆಕಾಯ ಭ್ರಾಂತಿಯನು ತೊಲಗಿಪಗೆಸಾಯಸವಳಿದಗೆ ಸಾಕ್ಷಿಯಾಗಿಹಗೆಮಾಯಾ ರಹಿತಗೆ ಶಿವಶರಣಗೆ೨
ಸಿಂಧು ಆನಂದಗೆ ಶಿವನಾದವನಿಗೆಎಂದೆಂದಿಗು ಇಹ ಏಕನಿಗೆಬಿಂದು ಕಳಾತೀತಗೆ ಬೋಧದಖಂಡಗೆಸುಂದರ ಚಿದಾನಂದ ಸೂಕ್ಷ್ಮಾತ್ಮನಿಗೆ೩

೪೧೩
ಮಂಗಳಂ ನಿತ್ಯ ಮಂಗಳಂ ಶುಭ ಮಂಗಳಂ ಮಹಾ ಮಂಗಳಂ ಪ
ಭಾನುವಿಗೆ ಆತ್ಮ ಭಾನುವಿಗೆಧೇನುಗೆ ನತ ಧೇನುಗೆಮೌನಿಗೆ ಶಬ್ದ ಮೌನಿಗೆದಾನಿಗೆ ಮುಕ್ತಿ ದಾನಿಗೆ ೧
ಪಾಲಗೆ ಜಗ ಪಾಲಗೆಕಾಲಗೆ ಭವ ಕಾಲಗೆಶೀಲಗೆ ಭಕ್ತ ಶೀಲಗೆಮೂಲಗೆ ಸರ್ವ ಮೂಲಗೆ ೨
ಬಂಧಗೆ ಹರ ಬಂಧಗೆನಂದಗೆ ಆನಂದಗೆಸಿಂಧುಗೆ ಜ್ಞಾನ ಸಿಂಧುಗೆಚೆಂದಗೆ ಚಿದಾನಂದಗೆ ೩

೩೭೮
ಮಂಗಳನಾದ ಕೇಳುವತನಕ ಮನಸು ನಿಲ್ಲುವುದೇ
ಸಂಗಹರನು ಆಗದತನಕ ಸಾಕ್ಷಿಯಾಗುವುದೇ ಪ
ಭಾಮಿನಿಯನ್ನು ತ್ಯೆಜಿಸದತನಕ ಭಕ್ತನಾಗಲಹುದೇ
ಕಾಮವನ್ನು ಕಡಿಯದತನಕ ಕರುಣಿಯಾಗಲಹುದೆ ೧
ಪ್ರಾಣಾಪಾನವು ಕೂಡದತನಕ ಪರ ತಾನಾಗುವುದೇ
ನೀನು ನಾನೆಂಬುದ ನೀಗದತನಕ ನಿಜವದು ತಾನಹುದೇ ೨
ಹಮ್ಮು ಕೋಶ ಕಳೆಯುವತನಕ ಹಂಸನಾಗಬಹುದೇ
ಬ್ರಹ್ಮ ಚಿದಾನಂದನಾಗದತನಕ ಭ್ರಮೆ ತಾ ತೊಲಗುವುದೇ ೩

೪೧೭
ಮಂಗಳವು ಬಗಳೆ ನಾಮ ಪರಮ ಮಂಗಳಮಂಗಳವು ಬಗಳ ಧ್ಯಾನ ನಿತ್ಯ ಮಂಗಳ ಪ
ಉಟ್ಟ ಪೀತಾಂಬರದುಡಿಗೆ ಕಾಶಿ ಮಂಗಳತೊಟ್ಟ ಹೇಮ ಕಂಚುಕಿಯ ತೊಡವು ಮಂಗಳದಟ್ಟ ದಟ್ಟವಿದ ಪಟ್ಟಿ ಮುತ್ತು ಮಂಗಳಇಟ್ಟ ಮೂಗು ರತ್ನ ನತ್ತು ನಿತ್ಯ ಮಂಗಳ ೧
ಕಣ್ಣ ಚಂಚಲ ಕಡೆಯ ಸರಗು ಮಂಗಳನುಣ್ಣನೆಯ ಗಲ್ಲದುಬ್ಬು ನುಡಿಯು ಮಂಗಳಎಣ್ಣೆ ನೂಲು ಉಡುವಣಿಯು ವಜ್ರ ಮಂಗಳಕನ್ನಡಿಯು ಕಾಲುಗೆಜ್ಜೆ ಕಡಗ ಮಂಗಳ ೨
ವಿಧ ವಿಧದ ಮಾಣಿಕ್ಯ ಮುಕುಟ ಮಂಗಳಅದ್ಭುತದ ಹಿರಿಯ ಖಡ್ಗ ತೇಜ ಮಂಗಳಪದುಮಭವನ ಜಿಹ್ವೆ ಹಿಡಿದ ಕರವು ಮಂಗಳಚಿದಾನಂದ ಬಗಳೆ ಸ್ಮರಣೆ ಸರ್ವ ಮಂಗಳ ೩

೪೧೮
ಮಂಗಳಾರತಿ ಎತ್ತಿರೆಲ್ಲ ಮಹಾತ್ಮರೆಲ್ಲ ಮಂಗಳಾರತಿ ಎತ್ತಿರೆಲ್ಲಮಂಗಳರೂಪಗೆ ಮಂಗಳ ಮಹಿಮಗೆ ಮಂಗಳಕರಗೆ ಮಂಗಳಪ್ರದಗೆ ಪ
ಹೃದಯ ಪಂಚಾರತಿ ಮಾಡಿ ತತ್ವಾಕ್ಷತೆ ನೀಡಿಒದವಿದ ಬುದ್ಧಿ ಬತ್ತಿಯಮಾಡಿ ನಿರ್ಮಳ ಘೃತ ನೀಡಿಮುದದಿಂ ಚಿಜ್ಯೋತಿಯನೆ ಮುಟ್ಟಿಸಿಸದಮಲ ಸರ್ವ ಬ್ರಹ್ಮವೆ ಎಂದು ೧
ನೆಲೆಗಾಣದಂತೆ ತೇಜ ತುಂಬೆಹೊಳೆಯಲು ಬಿಂದು ಬೊಂಬೆತಿಳಿದು ನೋಡಲಿ ಕಣ್ಣು ತುಂಬಿ ಉಳಿವು ಇನ್ನು ಎಂಬೆಬಲುಪ್ರಭೆ ತಿಳಿಯೆ ಥಳಥಳ ಹೊಳೆಯೆ ತೊಳಗಿ ತೊಳಗಿ ಬೆಳಗಿ ಬೆಳಗಿ ೨
ನಾನಾ ವರ್ಣವೆ ಪೊಳೆಯಲು ಅತ್ತಲಿತ್ತಲುನಾನಾ ವರ್ಣವ ತಾಳುತ್ತ ಎತ್ತಾಲೆತ್ತಲುತಾನು ಚಿದಾನಂದ ಗುರು ಬೇರಾಗದೆತಾನೆ ತಾನೆಯಾಗಿ೩