Categories
ರಚನೆಗಳು

ಚಿದಾನಂದ ಅವಧೂತರು

ದೇವ ದೇವತೆಗಳ ಸ್ತುತಿ

ಅಂಬ ಕಟಾಕ್ಷಿಸೆ ಅಂಬಅಂಬ ಪರಾಂಬ ಬಗಳಾಂಬ ಪ
ಮಧು ಕೈಟಭಾರಿಯೆ ಮಹಿಷಾಸುರೇಶ್ವರಿಯೆಕದನ ಶುಂಭಾಂತಕಿ ಕರುಣಾ ಕೃಪಾಕಟಾಕ್ಷೆ ೧
ಪರಮ ಪಾವನದೇವಿ ಪಂಡಿತ ಜನ ಸಂಜೀವಿಶರಣ ಜನರ ತಾಯಿ ಸುಧಾ ಶರಧಿ ಸಂಭಾವಿ ೨
ನಾರಾಯಣಿ ಭದ್ರೇ ನರಸಿಂಹಿಣಿ ರೌದ್ರಿವಾರಾಹಿ ಕಾಳಿಯೆ ಗೌರಿ ಉಮಾಮಹೇಶ್ವರಿ ಶಂಕರಿ ೩
ನಿತ್ಯ ನಿರ್ಗುಣರೂಪೇ ನಿಗಮ ಸ್ತುತ್ಯ ಚಿದ್ರೂಪೇನಿತ್ಯ ನಿರ್ವಿಕಾರಿ ನಿಂದಕಜನಸಂಹಾರಿ ೪
ಚಿದಾನಂದಾವಧೂತೇ ಚಿನ್ಮಯ ಬಗಳ ಪ್ರಖ್ಯಾತೇಬೋಧ ಸದ್ಗುರುನಾಥೇ ಭಕ್ತವಿಲಾಸ ಪ್ರೀತೆ ೫


ಅಕ್ಕ ಕೇಳೆ ಪಾಪಮಾಡಿ ಲೆಕ್ಕವಿಲ್ಲದೆ ಯಮನ ಕೈಯ್ಯದುಃಖದಲ್ಲಿ ನರಕದೊಳಗೆ ಮುಳುಗುವವರ ಕಡೆ ಹಾಯ್ವುದೆಂತೋ ಪ
ನೀರಗುಳ್ಳೆಯೆಂದು ತನುವ ನಿತ್ಯವಲ್ಲವೆಂದು ತಿಳಿಯರುಘೋರ ನೀಚತನವ ಮಾಡುವವರ ಕಡೆ ಹಾಯ್ವದೆಂತೋ ೧
ಹಿಂದೆ ಮುಂದೆ ನುಡಿಯುತಿಹರು ನಿಂದೆ ಮಾತನಾಡುತಿಹರುಸಂದೇಹಕ್ಕೆ ಒಳಗಾದವರು ಕಡೆ ಹಾಯ್ವದೆಂತೋ ೨
ಕೊಟ್ಟ ಸಾಲವನ್ನೇ ಕೊಡರು ಮತ್ತೆ ಆಣೆ ಎಂಬರಯ್ಯಹೆತ್ತ ಮಗನನು ದಾಟುವವರು ಕಡೆ ಹಾಯ್ವದೆಂತೋ ೩
ತಂದೆ ತಾಯಿ ಹೊರಡಿಸುವರು ತಂದು ಒಳಗೊಳಗೇ ತಿನ್ನುವವರುಮಂದಿಗಳ ಬಯ್ಯುವವರು ಕಡೆ ಹಾಯ್ವದೆಂತೋ ೪
ವಿಧ ವಿಧದ ದೇವರನ್ನು ಮುದದಿ ಕಟ್ಟಿಕೊಂಡಿಹರುಚಿದಾನಂದ ಬಗಳೆಯ ಅರಿಯದವರು ಕಡೆ ಹಾಯ್ವದೆಂತೋ ೫

೨೧೮
ಅಜ್ಞಾನಿ ನೀನೀಗ ಕೇಳು ಸುಜ್ಞಾನಿಗಳನು ನೀ ನಿಂದಿಸುವೆಭಗ್ನವಾಗುವೆ ನೀನು ಯಮನ ಕೈಯಿಂದಪ
ವಿಷಯದೊಳಗೆ ಹುಟ್ಟಿ ಬೆಳೆದುವಿಷಯದೊಳಗೆ ಮುಳುಗಿ ತೇಲಿವಶವಲ್ಲದ ಮಾತುಗಳ ನುಡಿವೆ ನೀನು ಕೇಳೋ ಅಜ್ಞಾನಿ ೧
ಅಸಮ ಗುಣಗಳ ನೋಡೆ ಋಷಿಗಳ ಅನುಭವಗಳನು ಹಳಿವೆದುಷ್ಮಾನ ನೀನು ಕೇಳೋ ಅಜ್ಞಾನಿ೨
ಒಂದು ನಿನಗ್ಹೋಗಲಿಲ್ಲ ಒಂದು ನುಡಿನಯವಿಲ್ಲಇಂದು ಅನುಭವಿ ತಾನು ಎಂಬೆಯಲ್ಲೊ ಕೇಳೋ ಅಜ್ಞಾನಿ೩
ಸುಂದರ ಸಾಕ್ಷಿಯ ನಲಿಯದೆ ನೀನೀಗಇಂದೀಗ ನಾನೆಂದು ಕಂಡೆಯಲ್ಲೋಚಂದ ಚಿದಾನಂದ ನೀನಾಗಿಹೆ ಕೇಳುಮಂದ ಮತಿಯ ಬಿಡು ನೀನು ಕೇಳೋ ಅಜ್ಞಾನಿ ೪

ಬ್ರಹ್ಮಾನುಭವ
೩೪೨
ಅದಕೋ ಕೈವಲ್ಯಂ ಅದಕೋ ಕೈವಲ್ಯಂಅದಕೋ ಕೈವಲ್ಯಂ ಅದಕೋ ಕೈವಲ್ಯಂ ಪ
ಬೆಳದಿಂಗಳಿನೊಳು ಪಟಿಕದ ಮಣಿ ಬಿದ್ದುಬೆಳಗೊಂದೆಯಾಗಿರುತಿಹುದೆ ಕೈವಲ್ಯಂ ೧
ಜೋತಿ ಎರಡು ಇರೆ ಜೋತಿ ಒಂದರಲಿಡೆಜೋತಿಯೊಂದಾಗಿ ಬೆಳಗುತಲಿರೆ ಕೈವಲ್ಯಂ ೨
ಕರ್ಪೂರ ಉರಿ ಸೋಂಕಿ ಉರಿ ಆವರಿಸಿರೆಕರ್ಪೂರ ಕಾಣ್ಬಾರದ ತೆರದಿಹುದೇ ಕೈವಲ್ಯಂ ೩
ದರ್ಪಣಕೆ ಮುಖವೆರಡು ಆಗೆದರ್ಪಣವಿಲ್ಲದಿರೆ ಕಾಣದಿಹುದೇ ಕೈವಲ್ಯಂ ೪
ಕೈವಲ್ಯವದು ವಾಙ್ಮಮನಕಗೋಚರ ಕೈವಲ್ಯ ಸ್ಥಿತಿ ನಿಲ್ಲಲವನೇ ಚಿದಾನಂದ೫


ಅದಕೋ ಬ್ರಹ್ಮಾಸ್ತ್ರ ನೋಡು ನೋಡದಕೋ ಬ್ರಹ್ಮಾಸ್ತ್ರ
ಅದಕೋ ಬ್ರಹ್ಮಾಸ್ತ್ರ ಅದ್ಭುತವಾದಸ್ತ್ರಬೆದರಿಪುದೆಲ್ಲರ ಬೇವುವು ಬ್ರಹ್ಮಾಂಡ ಪ
ಮಾರಿಗೆ ಮಾರಿಯು ಮೃತ್ಯುಗೆ ಮೃತ್ಯುವುಘೋರಕೆ ಘೋರವು ಕ್ರೂರಕೆ ಕ್ರೂರ ೧
ತಗ ತಗ ಚಕಚಕ ಲಕಲಕ ನಳನಳಝಗ ಝಗ ನಿಗಿ ನಿಗಿ ಕಳೆ ಕೋರೈಸುತಿದೆ ೨
ಛಟಛಟ ಛಿಳಿಛಿಳಿ ಧಗಧಗ ಭುಗುಭುಗುಪಟಿ ಪಟಿಸುತ ಉರಿ ಹೊಗೆಯೊಂದಾಗುತಿದೆ ೩
ಹಲವು ಬ್ರಹ್ಮಾಂಡವ ಸುಟ್ಟರು ಹಸಿವಡಗದುಹಲವು ಸಾಗರ ಕುಡಿದೆ ತೃಷೆಯಡಗದು ೪
ಬಿರುಗಣ್ಣಿಂದಲಿ ಖಡ್ಗವ ಬೀರುತಗುರುಚಿದಾನಂದ ತಾನಾಗಿಹ ಬಗಳೆ ೫

ತಾತ್ವಿಕ ಹಿನ್ನೆಲೆಯ ಕೀರ್ತನೆಗಳು
೯೫
ಅದಕೋ ವೈರಾಗ್ಯ ಅದಕೋ ವೈರಾಗ್ಯಅದಕೋ ವೈರಾಗ್ಯ ಕೇಳದಕೋ ವೈರಾಗ್ಯ ಪ
ಸತಿಸುತ ಭಾಗ್ಯವ ಸರ್ವವ ತ್ಯಜಿಸಿಯೆಮತಿಬ್ರಹ್ಮವಾದುದೆ ಅದಕೋ ವೈರಾಗ್ಯ೧
ಅನ್ನೋದಕ ವಸ್ತ್ರ ಅಪೇಕ್ಷೆ ಅಡಗಿಯೆಚಿನ್ಮಾತ್ರನಾದುದೆ ಅದಕೋ ವೈರಾಗ್ಯ೨
ದೂಷಣಭೂಷಣವೆರಡಕ್ಕೆ ಹೊಂದದೆವಾಸನ ಕ್ಷಯವಿರೆ ಅದಕೋ ವೈರಾಗ್ಯ ೩
ಇಹಪರ ಭೋಗವ ತೊರೆದಿಹ ಭಾವವೆಮಹಾಶಿವನಾದುದೆ ಅದಕೋ ವೈರಾಗ್ಯ ೪
ಇರುಳು ಹಗಲು ಚಿದಾನಂದ ಸದ್ಗುರುವಾಗಿಶರೀರವ ಕಳೆದುದೆ ಅದಕೋ ವೈರಾಗ್ಯ೫

೩೪೩
ಅದು ನಿರಾಲಂಬ ಅದು ನಿರಾಲಂಬ
ಅದು ನಿರಾಲಂಬ ಕೇಳದು ನಿರಾಲಂಬ ಪ
ತನು ಹಂಗು ಇಲ್ಲದೆ ಮನ ಹಂಗು ಇಲ್ಲದೆತನಗೆ ತಾನಿಹುದದು ನಿರಾಲಂಬ ೧
ಬುದ್ಧೀಂದ್ರಿಯಕೆ ಅತ್ತ ಅಹಂಕಾರಕೆ ಅತ್ತಸುದ್ದಿಲ್ಲದಹುದದು ನಿರಾಲಂಬ ೨
ಇಂದ್ರಿಯಕೆ ನಿಲುಕದೆ ಇಂದ್ರಿಯಕೆ ಸುಖಿಸದೆಇಂದ್ರಿಯಗಳರಿಯದುದು ನಿರಾಲಂಬ೩
ಅರಿವುದು ಕಾಣದೆ ಮರೆವುದುತೋರದೆ ಅದು ಚಿದಾನಂದ ಅದು ನಿರಾಲಂಬ ೪
ಬಹಿರಂತಲ್ಲದೆ ಬೇರೆಂಬುದಿಲ್ಲದೆಮಹಾ ಬೆಳುದಿಂಗಳದೆ ನಿರಾಲಂಬ ೫

೨೧೯
ಅಧಿಕಾರಿ ಮೋಕ್ಷಾಧಿಕಾರಿ ಬಲುಗುದಿಗೆಯ ಮಾರಿ ಅನಧಿಕಾರಿ ಪ
ಮುರುಕು ಮಾಳಿಗೆಯಲಿರೆ ಮರುಗುತಲ-ವರಿಗೆ ಮನೆಯ ಕೊಡುವನವನಧಿಕಾರಿಮರಗಳ ಕಡಿವನು ಮುಂದುಗಾಣದಲೆಮನೆ ಹೊಗಗೊಡದವ ಅನಧಿಕಾರಿ೧
ಕೇಳುತ ತತ್ವವ ಆಲೋಚನೆಮಾಡಿ ಅಂತೆಯ ನಡೆವವನಧಿಕಾರಿಖೂಳರೊಳಾಡುತ ಕುಂಚಿತನೆ ಕುರುಡನವನು ಅನಧಿಕಾರಿ ೨
ಪಡೆಯನು ಪಾಪವ ಬಿಡನವ ಸತ್ಯವನುಡಿವ ಸುವಾಕ್ಯವನಧಿಕಾರಿಮಡದಿಯ ಮೋಹಕೆ ಮುಂದುಗಾಣದಲಿಹಮುಡುದಾರನೆನಿಪವ ಅನಧಿಕಾರಿ ೩
ತಿಳಿದರ ಸೇವೆಗೆ ತೇಯುವ ತನುವನು ತಗಲನು ನಿಂದ್ಯಕೆ ಅಧಿಕಾರಿತಲೆಯನು ಮಣಿಯನು ಮನದಲಿ ಮೋಸವ ಚಿಂತಿಪನವನು ಅನಧಿಕಾರಿ ೪
ಚಿತ್ ಬಿಂದು ಉಕ್ಕುತ ಚಿತ್ಸುಖ ಸವಿದು ಚಿದಾನಂದನಾಗುವನಧಿಕಾರಿಎಡಬಲ ನೋಡುತ ಎತ್ತತ್ತ ಒಲೆವುತ ನಿಂತಿಹನವನು ಅನಧಿಕಾರಿ ೫


ಅನ್ಯವನರಿಯೆನು ಮತ್ತೆಂದು ಅನ್ಯವ ಅರಿಯೆನು
ನಿನ್ನ ಕಾಂಬೆ ಕಂಡದನೆಲ್ಲ ನಿರ್ವಿಕಾರ ಬಗಳೆ ಕೇಳು ಪ
ತನ್ನ ಹೆಂಡತಿಯನೀಗ ತನ್ನ ಸುತನು ರಮಿಸುತಿರಲು
ಭಿನ್ನದಿಂದ ಕಂಡೆನಾದರೆ ಮೆಚ್ಚಬೇಡ
ಎನ್ನಲಿ ಇಚ್ಚೆ ಬೇಡ ಹೊನ್ನುರನ್ನವು ಮುಂದೆ ಇರಲು ಹರಿದುದಾದರೆ
ಎನ್ನ ಚಿತ್ತ ನಿನ್ನ ಮೇಲೆ ಎನಗೆ ಆಣೆ ಸತ್ಯ-ವೆನ್ನು ಇದು ತಪ್ಪದೆನ್ನು ೧
ಪಡೆದ ತಾಯಿ ತಾನು ಹೋಗಿಕಂಡವನ ಕೂಡುತಿರಲು
ಮಿಡುಕು ಹುಟ್ಟಿತಾದರೆ ನಾನು ಸತ್ಯ ಬಿಟ್ಟೆ-
ನಾದರೆ ನೀನು ದೊರೆವುದೆಂತು ನಿನ್ನ ಕರುಣವೆಂತು೨
ತಂದೆ ಕೆಡಹಿ ಕೊರಳನೀಗ ನಂದನನನು ಕೊರೆಯುತಿರಲು
ಎಂದೆನಾದರೆ ಮನದಿ ಇವನ ಜ್ಞಾನಿಯಲ್ಲವು ನಾನು ಏನು ಅಲ್ಲವು
ಸುಂದರವ ಚಿದಾನಂದ ಬಗಳೆ ಎಂದು ಕಾಣದಿರಲು
ಎಂದು ಎಂದಿಗೆ ನಿನ್ನ ಚರಣ ಭಕ್ತನಲ್ಲವು ನಾನು ಮುಕ್ತನಲ್ಲವು ೩

೯೬
ಅಪ್ಪ ಕೇಳೋ ಬೇಡಿಕೊಂಬೆ ನಿನ್ನ ತಿಳಿಯಪ್ಪಒಪ್ಪಿ ಮಾತನ್ನಾಡಿಸಿದರೆ ನೀನೆ ಜಗದಪ್ಪ ಪ
ನಾನದಾರು ಬಂದೆನೆಲ್ಲಿಗೆ ಎನ್ನುತ ನೀನಪ್ಪನಾನು ಹೋಗುವೆ ಎಲ್ಲಿಗೆ ಎಂದು ಚಿಂತಿಸು ನೀನಪ್ಪನೀನು ಸುಳಿಗಾಳಿಯ ಶಾವದ ತೆರದಂದದಿ ಇಹೆಯಪ್ಪನಾನಾ ಭವವಾಚರಿಸುತಿಹೆ ಆದಿ ಅಂತ್ಯವಿಲ್ಲಪ್ಪತನುವ ನೆಚ್ಚಬೇಡ ಮೊದಲಿನ ತನುವದೇನಾಯಿತಪ್ಪತನಯ ಸತಿಯರನೆಲ್ಲ ಬಿಟ್ಟುಬಂದೆ ನೀನುಮನೆ ಕಟ್ಟುವೆ ನೀನು ಮೊದಲಿನ ಮನೆ ಏನಾಯಿತಪ್ಪಾನಿನಗೆ ಕುಲವು ಎಷ್ಟಾದವು ಎಣಿಸಿಕೊಳ್ಳಪ್ಪ೨
ಹಿಂದೆ ಮುಂದೆ ಕಾಣದಂತೆ ತಿರುಗಿ ತಿರುಗಿ ಅಪ್ಪಬೆಂದು ಬೆಂದು ಓಡಾಡುತಿಹೆ ಸ್ವರ್ಗ ನರಕಕಪ್ಪಎಂದೆಂದಿಗೂ ಅರಿವಾಗದ ಮರೆವು ಮುಚ್ಚಿ ಅಪ್ಪಅಂಧಕಾರ ಸಂಸಾರದಿ ಕಳವಳಿಸುತ ಅಪ್ಪ೩
ಕಣ್ಣುಯಿದ್ದು ಕಣ್ಣಿಗೀಗ ಬೀಳಬೇಡವಪ್ಪನಿನ್ನ ನರಿವುದಕ್ಕೆ ಮನುಜ ಜನ್ಮ ಸಾಧನವಪ್ಪಹೊನ್ನು ಹೆಣ್ಣು ಮಣ್ಣು ಎನಗೆ ಬೇಡ ಬೇಡಪ್ಪಎನ್ನ ಬೋಧೆ ಕೇಳದಿರಲು ಕೆಟ್ಟುಹೋದೆಯಪ್ಪ ೪
ವಾಸನದಿಂದ ತಿರುಗುವೆ ರಾಟಾಳರಂತಪ್ಪದೇಶಿಕ ಸದ್ಗುರು ಹೊಂದು ದೇವನಹೆಯಪ್ಪನಾಶವಹವು ನಾನಾ ಗುಣಗಳು ಜೀವನ ತನುವು ಅಪ್ಪಈಶ ಚಿದಾನಂದನಹೆ ಜನ್ಮವಳಿದು ಅಪ್ಪ ೫

೨೨೦
ಅರಿತ ಗುರುಗಳನೀಗ ಹುಡುಕಿ ಹೊಂದು ಎಚ್ಚರಿಂದುಮರುಳ ಗುರುಗಳನೀಗ ಸೇರೆ ನರಕ ತಪ್ಪದೋ ಪ
ಒಳ್ಳೆ ನಾವೆಯೊಳು ಕಲ್ಲು ಹಾಕಿ ನದಿಯನು ದಾಟಿಪುದುಕಲ್ಲಿಗೆ ಕಲ್ಲು ಕಟ್ಟಿ ಮುಂದೆ ನಡೆಯದು ಮುಳುಗಿಹೋಗುವುದೋ೧
ಜಾರುವವನ ಕಾಲು ಹಿಡಿಯೆ ಜಾರುತ ನೀನು ಬೀಳುವೆಪೋರ ಗುರುವ ನಿಂತು ಸೇರೆ ಕೆಟ್ಟುಹೋಗುವೆ ಭವಕೆ ಸೇರುವೆ೨
ತಾನು ಮೂರ್ಖ ಮೂರ್ಖನ ಕೂಡಲು ಇಹುದು ಕೇಡು ಮುಂದೆಜ್ಞಾನಿ ಚಿದಾನಂದ ಬಗಳೆ ಚರಣ ಹೊಂದೆ ಮುಕ್ತಿಯ ಅಂದೇ೩

ಗುರು ಸಂಕೀರ್ತನೆ
೪೯
ಅರಿತ ಗುರುವಿನ ಪಾದ ಹುಡುಕಿಹೊಂದು ಮುಕ್ತಿಯಿಂದುಮರೆತ ಗುರುವಿನಸಂಗ ಕೇಡು ಇಂದು ನರಕ ಮುಂದು ಪ
ಒಳ್ಳೆ ನಾವೆಯೊಳು ಕಲ್ಲು ಹಾಕಿಸಿಡು ಅದು ದಾಟಿಸುವುದುಕಲ್ಲಿಗೆ ಕಲ್ಲು ಕಟ್ಟಿದರಲ್ಲೆ ಮುಳುಗುವುದು ಅದು ಮುಂದಕೆ ಹೋಗದು ೧
ಜಾರುವವನ ಕೈಯ ಹಿಡಿದರೆ ತಾನು ಜಾರುವ ಮೇಲೆ ಜಾರಿ ಬೀಳುವಘೋರ ಗುರುವಿನ ಸಂಗ ಹಿಡಿದು ಭ್ರಷ್ಟನಾಗುವ ಮುಂದೆ ಕೆಟ್ಟು ಹೋಗುವ ೨
ತಾನು ಮೂರ್ಖ ಅವನು ಮೂರ್ಖ ಕೂಡಲೆಂದು ಮತ್ತೂ ಕೇಡು ಇಂದುಜ್ಞಾನಿ ಚಿದಾನಂದನ ಪಾದ ಹುಡುಕಿ ಹೊಂದು ಮುಕ್ತಿ ಇಂದು ೩

೯೭
ಅರಿತುಕೊಳ್ಳಿರೋ ನಿಮ್ಮ ಆತ್ಮವಸ್ತುವನುಪರಮ ಗುರು ಕರುಣದಿ ನೀವು ನಿಮ್ಮನು ಪ
ಬಿದಿಗೆ ಚಂದ್ರನು ಆವುದೆಂದು ಕೇಳಲಿಕೆಅದಕೋ ಶಾಖಾಗ್ರ ಎಂದೆನಲು ಅರಿದಂತೆವಿಧಿಸಿ ಗುರುಮುಖದಿ ವಿವರಿಸಿ ಕಂಡು ಅರಿದುಸದಯಲಾನಂದ ತಾವೆಂದು ಭಾವಿಪುದು ೧
ಊರು ಆವುದು ಎಂದು ಕೇಳುತಿರಲಿಕೆಊರದಕೋ ಗುಡ್ಡದ ಮೇಲೆನಲು ಅರಿದಂತೆಧೀರ ಗುರು ಮುಖದಿ ದಿಟ್ಟಿಸಿ ಕಂಡು ಅರಿತುಸಾರ ಸಂಪತ್ತು ತಾವೆಂದು ಧ್ಯಾನಿಪುದು ೨
ಅರಸು ಅವನು ಎಂದು ಕೇಳುತಿರಲಿಕೆಅರಸ ಅಲ್ಲಿಹನೆಂದು ನಡೆವವನೆ ಅರಿತಂತೆಪರಮ ಗುರು ದಯದಿ ಪಾಟಿಸಿ ಕಂಡು ಅರಿದುಪರಮ ಗುರು ಚಿದಾನಂದ ತಾವೆಂದು ಭಾವಿಪುದು ೩

೨೨೨
ಅಸುರ ಪ್ರಕೃತಿಯ ದೈವ ಪ್ರಕೃತಿಯನೆರಡನು ನೀನೀಗ ಕೇಳುಅಸುರ ಪ್ರಕೃತಿಯಲಿ ಜನ್ಮವು ದೈವ ಪ್ರಕೃತಿಯಲಿ ಮುಕ್ತಿಯೆ ಎಂಬೆನು ಪ
ಕೃತ್ರಿಮ ಕಾಮವು ಮದಮತ್ಸರವು ತಾನಿವು ಅಸುರ ಪ್ರಕೃತಿಸತ್ಯವು ಶಾಂತವು ಶಮದಮವೆಂಬಿವು ತಾನಿವು ದೈವ ಪ್ರಕೃತಿ ೧
ಬದ್ಧ ಅವಿದ್ಯೆಯು ಭ್ರಾಂತಿಯು ನಾಶವು ತಾನಿವು ಅಸುರ ಪ್ರಕೃತಿಶ್ರದ್ಧೆಯು ಸೌಮ್ಯವು ಸಂತಸ ಸಾಕ್ಷಿಯು ತಾನಿವು ದೈವ ಪ್ರಕೃತಿ ೨
ಕಪಟವು ಕಲ್ಮಷ ಕೃತ್ರಿಮ ಸಂಶಯ ತಾನಿವು ಅಸುರ ಪ್ರಕೃತಿಅಪರೋಕ್ಷಾನುಭವ ಆತ್ಮ ವಿಚಾರವು ತಾನಿವು ದೈವ ಪ್ರಕೃತಿ ೩
ದುಃಖ ದುರ್ಬೀಜವು ಕ್ರೂರ ದೃಷ್ಟಿಯು ತಾನಿವು ಅಸುರ ಪ್ರಕೃತಿಸುಖ ಆನಂದವು ಅಂತರ ದೃಷ್ಟಿಯು ತಾನಿವು ದೈವ ಪ್ರಕೃತಿ ೪
ಮರಣ ಜನನಕೆ ಅಜ್ಞಾನ ಕಾರಣ ತಾನಿದು ಅಸುರ ಪ್ರಕೃತಿಅರಿತು ತನ್ನನು ಚಿದಾನಂದನಾಗುವುದು ತಾನಿದು ದೈವ ಪ್ರಕೃತಿ ೫

೨೨೩
ಅಹಂಕಾರದಿ ಮದ ಅಹಂಕಾರದಿಅಹಂಕಾರದಿ ಹಿರಿಯರ ನಿಂದಿಸಿ ಆವ ನರಕಕೆ ತೆರಳುತಿಹರೋ ಪ
ಕಂಡ ಕಂಡ ಮನೆಯ ತಿರುಗಿ ಕಾಲ್ಮುರಿ ನಾಯಿ ಬೆದಕಿದಂತೆಹೆಂಡೆಯು ಜೊಂಡನು ಹಂದಿಯು ಬೆದಕಿದಂತೆಭಂಡ ಮನುಜರು ತುಂಡು ಗುಲಾಮರುಭ್ರಷ್ಟ ಹೊಲೆಯರು ಬಾಳುಗೇಡಿಗಳುಪಂಡಿತ ಮಹಾತ್ಮರ ತಪ್ಪು ಹುಡುಕುವವರು೧
ಯವಲಕಾಡೊಳು ಕತ್ತೆ ಗೊರಕನು ಯತ್ನವಮಾಡಿ ಬೆದಕಿದಂತೆನೆಲೆಯನರಸುತ ಪೊದೆಯೊಳಗನು ನರಿಯು ಬೆದಕಿದಂತೆಕಲುಷಕರ್ಮರು ಕಾಳ ಮೂಳರು ಕಷ್ಟದುಷ್ಟರುಬಲು ಮಹಾತ್ಮರ ನಡೆಯ ತಪ್ಪು ಹುಡುಕುವರು ೨
ನಿತ್ಯಾನಂದರ ನಿತ್ಯ ತೃಪ್ತರ ನಿತ್ಯ ಶುದ್ಧರನಿತ್ಯಬುದ್ಧ ನಿತ್ಯ ನಿಶ್ಚಯ ನಿತ್ಯನಿರವಯ ನಿತ್ಯ ಆತ್ಮರಪ್ರತ್ಯಗಾತ್ಮರ ಪರಬ್ರಹ್ಮರ ಪರಮ ಚಿದಾನಂದನ ಬೆರೆದವರನಿತ್ಯ ಜೀವನ್ಮುಕ್ತರ ನಡತೆಯ ತಪ್ಪು ಹುಡುಕುವರು ೩

೯೮
ಅಳತದೆ ಕೂಸು ಅಳತದೆಈ ಭವ ಭಯದೊಳು ಬಿದ್ದು ಬರಲಾರೆನೆಂದು ಪ
ಅಂಬೆಗಾಲೂರುತ್ತ ಕುಂಬಿಣಿ ತಿರುಗುತಡೊಂಬನಂಥ ಹೊಟ್ಟೆ ಎಳೆಯಲಾರೆನೆಂದು ೧
ಕಂದನಾಗಿ ಬಂದು ಹಿಂದು ಮುಂದರಿಯದೆಇಂದುಧರನ ರೂಪ ಕಣ್ಣೊಳಗಿಟ್ಟುಕೊಂಡು ೨
ಜನನ ಮರಣ ಹುಟ್ಟು ಮುರಿದು ಮೂಲ್ಯಾಗಿಟ್ಟುಚಿದಾನಂದ ಸ್ವಾಮಿನ್ನ ಕೂಡಿಕೊಂಡೆನೆಂದು ೩

೨೨೪
ಆಡಿದ ನಾಟಕವ ಕಿರಾತ ಮದನಗೂಢ ಚಿದಾನಂದನನರಿಯದ ನರ ಮೃಗವ ಪ
ಸ್ತ್ರೀಯ ದೇಹವು ಎಂಬ ಅಡವಿಯೊಳಗೆಸ್ತ್ರೀಯ ಹುಬ್ಬೆಂಬ ಸಿಂಗಾಡಿ ತೆಗೆದುಮುಂಗುರುಳುಗಳು ಎಂಬ ಸಿಂಜನಿಯನೆ ಬಿಗಿದುಸ್ತ್ರೀ ದೃಷ್ಟಿಯೆಂದೆಂಬ ಸಿಳೀ ಮುಖವನೆ ಪಿಡಿದು ೧
ಸಿರಿತುಳುಕುವ ಅವಯವದ ಸಿಡಿಬಲೆಯನೊಡ್ಡಿಪರಿಯ ತಿಳಿಯದೆ ಬರುವ ಪುರುಷ ಮೃಗವಕರುಣವಿಲ್ಲದೆ ಮಹಾ ಕೋಪದಿಂದಲಿಎರಡು ಗಿರಿಯ ಸಂದಿಯಲಿರಿದು ಇರಿದು ಕೆಡುತಿಹ ೨
ಇಂತು ಬೇಟೆಯನಾಡಿ ಎಲ್ಲ ಲೋಕವ ಕೆಡಹಿಚಿಂತೆ ಮಾಡುವ ಚಿದಾನಂದ ಭಕ್ತರ ಮುಂದೆ ಸುಳಿಯಲಿಕಂಜಿಮರೆಯದೆ ಶಿವನ ಗುರುತ ಅಂತಹುದುಇವರನೀಗ ಮುಟ್ಟಬಾರದು ಎಂದು ೩

೨೨೫
ಆಡುವನೀಶ್ವರ ಜೀವಪಗಡೆಯ ಕಾಯಆಡುವನವರವರ ಕರ್ಮಾನುಸಾರಆಡಿಯೆ ತನಗೆ ಬೇಸರವಾಗೆ ಕಟ್ಟುವಆಡುವ ವಿವರವ ಹೇಳುವೆ ಕೇಳಿ ಪ
ಪ್ರಪಂಚ ಹಾಸಂಗಿ ಪ್ರಾರಬ್ಧ ಲತ್ತವುಪಾಪ ಅಜ್ಞಾನ ಲಿಂಗತನುವೆಂಬ ಚಿಟ್ಟೆಯುರೂಪು ನಾನಾ ಬಗೆಯ ಜೀವಕಾಯನೆ ಮಾಡಿಭಾಪು ಭಳಿರೇ ಎಂದು ಕೊಂದು ಹೂಡಾಡುತ ೧
ಒಂದಕೊಂದರಬಲ ಒಂದಕೆ ಜೋಡು ಬಲಒಂದು ಜೋಡಿಗೆ ಒಂದು ಜೋಡು ಬಲ ಮಾಡಿಒಂದರಿಂದೊಂದು ಕೊಂದು ಜೋಡಿಂದ ಜೋಡು ಕೊಂದುಅಂದು ಹುಟ್ಟಿ ಸಾಯುವುದಕ್ಕೆ ಕಡೆಯಿಲ್ಲದೇ ೨
ಈ ಪರಿಯಲಾಡುತ್ತ ತನಗೆ ಬೇಸರ ಹುಟ್ಟೆಪಾಪಿಗಳನೆಲ್ಲ ಪಾಪ ಚೀಲದಿ ಕಟ್ಟಿಭೂಪ ಚಿದಾನಂದನು ಆದ ಈಶ್ವರ ತಾನುರೂಪು ವಿರೂಪಾದ ನಿದ್ದೆಯಲಿ ಮಲಗುವ ೩


ಆಣೆಕಲ್ಲಾಡಿದಳೇ ಆನಂದದಲಿ ಬಗಳೆಸೆಣಸುವ ವೈರಿಗಳ ಶಿರಗಳ ಪಿಡಿದು ಪ
ಮೊಂಡ ಮೂಕರ ತಲೆಯ ಮೂಳ ಮೂಸರ ತಲೆಯಭಂಡತನದಿ ಬಗುಳುವ ಪಾಪಿಯಚಂಡಾಲರ ತಲೆಯ ಚರಿಗೇಡಿಯ ತಲೆಯಪುಂಡರ ತಲೆಯನಂದು ಎನ್ನ ಕಣ್ಣಮುಂದೆ ತಾನು ೧
ಒಂದೊಂದು ಎರಡು ಎಂದುಮುಂದೆ ಮೂರು ನಾಲ್ಕು ಎಂದುಹಿಂದೆ ಆದುದು ತಪ್ಪಿತು ಥೂ ಥೂ ಎಂದುಇಂದಿದು ಸದ್ಗುರು ರಾಯನ ಗುಸ್ತೆಂದುಚೆಂದದಿ ಆಡಿದಳೆ ಎನ್ನ ಕಣ್ಣ ಮುಂದೆ ತಾನು ೨
ನಾನು ಎಲ್ಲಿದ್ದರೆ ತಾನಲ್ಲಿದ್ದಾಡುತಧ್ಯಾನವೆನ್ನಯ ಮೇಲೆ ಇಟ್ಟುಕೊಂಡುಮಾನನಿಧಿ ಚಿದಾನಂದ ರಾಣಿ ಬಗಳೆಏನ ಹೇಳಲಿ ನಿದ್ರೆ ನೀರಡಿಕೆಯಿಲ್ಲದೆ ಎನ್ನ ಕಾಯುತ ೩

೯೯
ಆತ್ಮನ ಕೊಂಬುವರಾರು ಅವರಿಗೆ ಸರಿಯಾರುಆತ್ಮನು ಅವನೆ ಗುರುವು ಅವನೆ ಅವನೆ ಈಶ್ವರ ಕೇಳಿಪ
ಘಟದ ದೀವಿಗೆಯಂತೆ ಪಟದ ಚಿತ್ರದಂತೆಅಡವಿಯ ಅಗ್ನಿಯಂತೆ ನಿಜವನೆತ್ತಿ ತೋರಿದಂತೆ ೧
ಪಡೆದ ದೇವತೆಯಂತೆ ಮರುಳನರಿವಿನಂತೆ ಉರಗನಹೆಡೆಯು ಗಿರಿಯ ಧೂಮದ ತೆರದಿ ಕಾಣಿಸಿದಂತೆ ೨
ಮರೆಯ ವೇಷದಂತೆ ಭರಣಿಯ ರಸದಂತೆಅರಿವೆಯ ರತುನ ಧರಣಿ ಸ್ವರ್ಗವು ಸ್ಥಿರದಿ ಕಾಣಿಸಿದಂತೆ೩
ಕೂಳದ ತಾವರೆಯಂತೆ ಘನ ಮರೆಯ ರವಿಯಂತೆಜಲದ ಬಡಬಾನಲಗಿನ ಪ್ರಭೆಯು ಬೆಳಗಿ ತೋರಿಸಿದಂತೆ ೪
ಈ ಪರಿ ಆತ್ಮನ ನಿಜವತಾ ಪರದೈವವೆಂದರಿವಭೂಪ ಚಿದಾನಂದ ರೂಪನೇ ತಾನಾಗಿ ವ್ಯಾಪಿಸಿಕೊಂಡಿಹ ಜಗದ ೫

೨೨೬
ಆತ್ಮನನು ತಿಳಿಯದುದೇ ಕೇಡು ಅವನ ಜನ್ಮವ ಸುಡುಆತ್ಮನನು ಅರಿಯದುದೆ ಪಾಪ ಅಹುದು ಜನ್ಮನಿರೂಪ ಪ
ಸರ್ವಶಾಸ್ತ್ರವನೋದಿ ಸಕಲರೊಳಗೆ ವಾದಿಸರ್ವವನೇಕವ ಕೂಡಿಟ್ಟು ಘನ ಅಹಂಕಾರದಿ ಕೆಟ್ಟು ೧
ಕೋಪ ತಾಪವ ಗಳಿಸಿ ಕೊನೆಬನೆ ಅನುಗೊಳಿಸಿವ್ಯಾಪಾರ ಸ್ತ್ರೀಯರ ಚಿಂತೆ ಊರ ಶ್ವಾನನು ಎಂಬಂತೆ ೨
ಹಿರಿಯರ ನಿಂದೆಯ ಮಾಡಿ ಹೀನತ್ವದಿ ಹಾಡಿಗುರು ಚಿದಾನಂದ ಕಾಣ ಪಾಪರಾಶಿಯಲಿ ಕೂಡಿ ೩

೧೦೦
ಆತ್ಮನೊಬ್ಬನೆ ದೇವಾತ್ಮನೆಂಬುದು ಉಪಾಧಿ ಬೇಡಆತ್ಮನೆಂಬುದೇ ಕಾಂಬುದು ನಿಮ್ಮ ಮಹಾತ್ಮರಾದವರು ಪ
ಕುಂಭಗಳು ಇರುತಲಿರೆ ಅಂಬರದ ಚಂದ್ರನುಕುಂಭಗಳೊಳಗೆ ಹಲವಾಗಿ ಬಿಂಬಿಸುವ ತೆರದಿಅಂಬುಜಾಸನ ಮೊದಲು ಜೀವ ಕಂಬದೊಳು ದೃಷ್ಟಿಯಿಟ್ಟು ಇಂಬಾಗಿ ಇರುವನೊಬ್ಬ ಚೇತನಾತ್ಮಕನು ೧
ಕನ್ನಡಿ ಪಳುಕಿನ ಗೃಹದಿ ಸನ್ನಿಧಿಯಲೊಂದು ದೀಪವಿಡೆಕನ್ನಡಿಯೊಳಗೆ ದೀಪ ಹಲವಾದ ತೆರದಿಉನ್ನತ ಜೀವರಾಶಿಯ ತನ್ನ ಛಾಯೆ ಹೊಳೆ ಹೊಳೆದುತನ್ನ ತಾನೇ ಇರುವನೊಬ್ಬ ಚೇತನಾತ್ಮಕನು ೨
ಒಬ್ಬನಾ ಕಾಂತಿಯಿಂ ಹಬ್ಬಿಕೊಂಡಿದೆ ಲೋಕಒಬ್ಬನೆಂದೇ ತಿಳಿದಡೆ ತಾನೊಬ್ಬನೇ ಇಹನೀಹರನುಒಬ್ಬನನೊಯ್ದು ನೀವು ಹಾಗಿಬ್ಬರ ಮಾಡಲಾಗದುಒಬ್ಬನೇ ಚಿದಾನಂದನು ಚೇತನಾತ್ಮಕನು ೩

೩೪೪
ಆತ್ಮಲಿಂಗ ಭವನದಿಆತ್ಮಲಿಂಗ ಭವನದಲಿ ವಿಚಿತ್ರವನೆ ಕಂಡುಆತ್ಮನೆಂತಿಹನೆಂದು ಅರಸನಾ ಬಲಗೊಂಡುಆತ್ಮನಾನೆರಡೆಂಬ ಅವಿ ವಾಚ್ಯನಳಿಗೊಂಡುಆತ್ಮನಾಗಿರುತಿಪ್ಪನು ಪ
ಭೂತ ಪಂಚಕಗಳು ದೇಹದೊಳು ಕಂಡೆಜಾತಿ ಜಾತಿಗೆ ಇಪ್ಪ ಜೀವರನು ಕಂಡೆಪ್ರೀತಿಯಿಂ ಪರಿ ಪರಿಯ ಸರಗಳನೆ ಕಂಡೆಮಾತಿಗುತ್ತರಿಸದಿಹ ಮಹಾ ಮಹಿಮೆಯ ಕಂಡೆ ೧
ಈಕ್ಷಿಸಿಯೆ ವಸ್ತುವನ ಏಳು ಬಾಗಿಲು ಕಂಡೆದಕ್ಷಿಣೋತ್ತರ ಎಂಬುದರ ಬಾಗಿಲನು ಕಂಡೆಅಕ್ಷಯಾಗಿಹ ಲಕ್ಷವಹ ದಿಡ್ಡಿಯನೆ ಕಂಡೆರಕ್ಷಕನಾಗಿಹನ ರಾಗದಲಿ ಕಂಡೆ ೨
ಪಂಚಇಂದ್ರಿಯಗಳೆಂಬ ಪರಿಚಾರಕರನು ಕಂಡೆಕಿಂಚ ಕೆಲಸಕ್ಕಿರುವ ಕರ್ಮೇಂದ್ರಿಯರ ಕಂಡೆಸಂಚರಿಪ ಮೂರೆರಡು ಸತ್ಪ್ರಾಣಿಗಳ ಕಂಡೆವಚನಾಂತಃಕರಣ ವರ್ತಕರ ಕಂಡೆ ೩
ಸತ್ಯಗುರು ಪೂರಿತಹ ಸಾರಣೆಯ ಕಂಡೆತಥ್ಯವೆನಿಸುವ ಶಾಂತ ತೋರಣವ ಕಂಡೆಅತ್ಯಧಿಕ ಬುದ್ಧಿಯ ರಂಗವಲ್ಲಿಯ ಕಂಡೆಎತ್ತ ನೋಡಿದಡತ್ತ ಎಸೆದಿಹುದ ಕಂಡೆ ೪
ಆರು ಅಂತಸ್ಥನು ಕಂಡೆ ಅಲ್ಲಿರುವವರ ಕಂಡೆಬೇರೆ ಮೂರಿಹ ಮಧ್ಯ ರಂಗಗಳ ಕಂಡೆಘೋರ ಘೋಷಣ ಪ್ರಣವ ಘಂಟನಾದವ ಕಂಡೆಸಾರವಮೃತ ಕಲಶ ಪಾನಕವ ಕಂಡೆ ೫
ಜ್ಯೋತಿ ಎಂದೆನ್ನುತಿಹ ಜ್ಯೋತಿರ್ಮಯನ ಕಂಡೆಸಾತಿಶಯ ಗರ್ಭಗುಡಿ ಶೀಘ್ರದಲಿ ಕಂಡೆಆತುರದಲೊಳ ಪೊಕ್ಕು ಆತ್ಮಲಿಂಗವ ಕಂಡೆಪೂತು ರಕ್ಷಿಸು ಎಂದು ಪೂಜೆ ಕೈಗೊಂಡೆ ೬
ನಿತ್ಯ ನಿಶ್ಚಲ ನಿಷ್ಕಲಂಕ ನಿಜನೆ ಎಂದುಪ್ರತ್ಯಗಾತ್ಮ ಪರಬ್ರಹ್ಮನೆ ಸ್ಥಿರವೆಂದುಸತ್ಯ ಸಂವಿದ್ರೂಪ ಸಕಲಕಧಿಪತಿ ಎಂದುಅತ್ಯಧಿಕ ಚಿದಾನಂದ ಆತ್ಮ ತಾನೆಂದು ೭

೧೦೧
ಆತ್ಮವೇ ಜೀವಾತ್ಮನುಆತ್ಮ ಬೇರೆ ಜೀವಾತ್ಮ ಬೇರೆಯಲ್ಲ ಪ
ಅರಸು ಎಂಬವ ಹೋಗಿ ಚಾಕರನಾಗಿರೆಅರಸು ಬೇರೆ ಚಾಕರ ಬೇರೆ ತಿಳಿ೧
ಬ್ರಹ್ಮಚಾರಿಯು ಹೋಗಿ ಯತಿಯಾಗಿ ಕುಳಿತರೆಬ್ರಹ್ಮಚಾರಿಯು ಬೇರೆ ಯತಿ ಬೇರೆ ತಿಳಿ೨
ಸಾಧಕನು ಹೋಗಿ ಸಾಧ್ಯನು ಆಗಿರೆಸಾಧಕನು ಬೇರೆ ಸಾಧ್ಯನು ಬೇರೆ ತಿಳಿ ೩
ಆತ್ಮನೆಂಬುವ ಹೋಗಿ ಜೀವನೇ ಆಗಿರೆಆತ್ಮನು ಬೇರೆ ಜೀವನು ಬೇರೆ ತಿಳಿ ೪
ಒಬ್ಬ ಉಪಾಧಿಯಿಂದಲಿ ನಾನು ಎರಡಿರೆಒಬ್ಬ ಚಿದಾನಂದ ತಾನೆ ಸತ್ಯ ಸತ್ಯ ೫

೧೦೨
ಆಧ್ಯಾತ್ಮ ಹೆಚ್ಚೇನು ಅವಿದ್ಯೆ ಕಡಿಮೆಯೇನುಆಧ್ಯಾತ್ಮ ವಿದ್ಯೆಯದು ಅನುಭವಿಸಲರಿಯದವಗೆ ಪ
ಪುಸ್ತಕಂಗಳ ಪಿಡಿದು ಪುಸ್ತಕದೊಳಿದ್ದುದನುವಿಸ್ತಿರಿಸಿ ಎಲ್ಲರಿಗೆ ಹೇಳುತಿಹನುಪುಸ್ತಕದ ಅರ್ಥವನು ಮನಕೆ ತಾರದಲೆಪುಸ್ತಕದ ಅಕ್ಷರವ ಪೇಳುವವಗೆ೧
ಜ್ಞಾನವನು ಹೇಳುತಿಹ ಜ್ಞಾನವನು ತಾನರಿಯಜ್ಞಾನಿಗಳ ನಡೆಯನು ಮೊದಲೆ ತಿಳಿಯಜ್ಞಾನಿಗಳನೇ ಕಂಡು ಜ್ಞಾನವಿಲ್ಲೆಂದೆಂಬಜ್ಞಾನಿ ತಾನೆಂತೆಂದು ಬರಿ ಬಣ್ಣಿಸುವಗೆ ೨
ದೇವತಾರ್ಚನೆ ಜಪವ ತಪವ ಡಂಭದಿ ತಾಳ್ದುಪಾವುಗೆಯ ಮೆಟ್ಟಿ ಸುಳಿ ಸುಳಿದಾಡುತಸಾಧಿಸದೆ ಪುಣ್ಯ ಪುರುಷರ ನೆಲೆಯ ತಿಳಿಯದಲೆದೇವ ತಾನೆಂದು ಬರಿ ಬೋಧಿಸುವವಗೆ ೩
ಯೋಗೀಶ್ವರರ ಕಂಡು ಯೋಗದಿಂದೇನೆಂಬಯೋಗವಳವಟ್ಟ ತೆರನಂತೆ ನುಡಿದಯೋಗಾಮೃತದ ಪೂರ್ಣರಸವ ಸವಿದುಣ್ಣದೆಲೆಯೋಗಿ ತಾನೆಂದು ಬರಿ ತೋರುತಿರುವವಗೆ ೪
ಮಾಡಿದಡೆ ಬಹದಲ್ಲ ಕೇಳಿದಡೆ ಬಹದಲ್ಲಆದರಿಸಿ ಒಬ್ಬರಿಗೆ ಹೇಳಿದಡೆ ತಾ ಬರದುಸಾಧಿಸಿಯೆ ಮನನದಭ್ಯಾಸದಿಂ ದೃಢವಾಗಿವಾದಹರ ಚಿದಾನಂದ ತಾನಾದರಲ್ಲದೆ ೫

೧೦೩
ಆನಂದವಾಯಿತು ಬ್ರಹ್ಮ ಆನಂದವಾಯಿತುಆನಂದದೊಳು ಆನಂದವೇ ಆಗಿಸ್ವಾನಂದ ಸುಖ ಶರೀರ ವ್ಯಾಪಿಸೆ ಪ
ಬಂಧತ್ರಯಾಭ್ಯಾಸದ ಬಂಧವ ಪಿಡಿಯುತನಿಂದು ನಾಸಿಕಗೊನೆ ನಿಟಿಲವ ನೋಡುತಛಂದ ಛಂದದ ಪುಷ್ಟ ಚದುರಲಿ ಕಾಣುತಸುಂದರನಾದ ಕೇಳಿ ಸುಖಿಸುವರ ಕಂಡು ೧
ಎಡಬಲ ಹಾದಿಯ ಎಡಬಲಕಿಕ್ಕುತನಡುವಿನ ಮಾರ್ಗವ ನೇರದಿ ಪೊಕ್ಕುನಡೆದು ಸುಷುಮ್ನದ ನಾಳನೆಲೆಯ ನೋಡಿಕುಡಿದಮೃತವ ಸೊಕ್ಕಿ ಕುಳಿತಿಹರ ಕಂಡು ೨
ನಿದ್ರೆಯ ಕುಂಡಲಿ ನಿದ್ರೆಯ ತಿಳಿಪುತಮುದ್ರಿಸಿ ನವಬಾಗಿಲನೆಲ್ಲವ ಮುಚ್ಚುತಭದ್ರ ಮಂಟಪದೊಳು ಭಾಸದಿ ಬೆಳಗಿ ಸ-ಮುದ್ರ ಗುರು ಚಿದಾನಂದ ಬೆರೆದವರ ಕಂಡು೩

೧೦೪
ಆನೆ ಬಂದಿತಯ್ಯ ಯೋಗಿ ಎಂಬ ಆನೆ ಬಂದಿತಯ್ಯಆನೆ ಬಂದಿತು ಪ್ರಪಂಚ ಪೇಟೆಯತಾನೆ ಕೀಳುತ ತಳಪಟ ಮಾಡುತ ಪ
ಪಾಷಗಳೆಂದೆಂಬ ಸರಪಳಿ ಹರಿದುಈಷಣಗಳು ಎಂಬ ಸಂಕೋಲೆ ಮುರಿದುದ್ವೇಷವೆನಿಪ ಗಾಡಿಕಾರರನರೆದುಕ್ಲೇಷವೆನಿಪ ಕಾವಲವರ ಜಡಿದು ೧
ದಶವಾಯುಗಳೆಂಬ ದನಗಳನೋಡಿಸಿವ್ಯಸನ ಕುದುರೆಗಳ ಸೀಳಿ ಸೀಳಿಕ್ಕಿಹಸಿವು ತೃಷೆಗಳನು ಕಾಲೊಳಿಕ್ಕಿಕಸೆಕಸೆ ಅಂಗಡಿಗಳನು ತೂರಿಕ್ಕಿ೨
ಬಹುಮತಗಳು ಎಂಬ ಮನೆಯನೆ ಕೆಡಹಿಇಹಪರ ವಾಸನೆ ಕೊಟ್ಟಿಗೆ ಕೊಡಹಿಮಹಾ ಅಭಿಮಾನದ ನಾಯಿಗಳ ಮುಡುಹಿಬಹು ಕಲ್ಪನೆಯ ಕುರಿ ಕೋಳಿಗಳ ಉಡುಹಿ೩
ಆನಂದ ಮದಧಾರೆ ಸಾಲುಸಾಲಿಡುತಸ್ವಾನಂದ ಬೋಧ ಲಹರಿಯಲಿ ತೂಗುತಜ್ಞಾನ ಸೊಕ್ಕಿನಲಿ ಕೆಕ್ಕರಿಸಿ ನೋಡುತ ತಾನೆ ತಾನಾಗಿ ತನ್ನ ಮರೆಯುತ ೪
ಬೆಳಗುವ ಸುಷುಮ್ನ ಬಾಜಾರವಿಡಿದುಗೆಲುವಿನಲಿ ಭ್ರೂಮಧ್ಯ ಜಾಡಿನಲಿನೆಡೆದುತಿಳಿಗೊಳ ಸಹಸ್ರಾರದ ನೀರ ಕುಡಿದುಬಲು ಚಿದಾನಂದವೆಂಬ ಆನೆಯು ನಡೆದು ೫

ಸಂಪ್ರದಾಯದ ಹಾಡುಗಳು
೩೯೪
ಆರತಿ ಬೆಳಗಿದೆನೆ ಗುರುವಿಗೆಆರತಿ ಬೆಳಗಿದೆನೆಆರಾರು ಬೆಳಗೇ ಬೆಳಗದಂಥಾಆರತಿ ಬೆಳಗಿದೆನೆ ಪ
ಹೃದಯ ತಳಿಗೆಯಲಿ ನಾನೀಗಭಾವದಾರತಿ ಮಾಡಿವಿದವಿದ ಬುದ್ಧಿಯ ಬತ್ತಿಯ ಮಾಡಿನಿರ್ಮಲಾಜ್ಯ ಹೊಯ್ದು ೧
ಜ್ಞಾನ ಜ್ಯೋತಿಯನೆ ಮುಟ್ಟಿಸಿಚಿತ್ತದಿಂ ಪಿಡಿದುನಾನೇ ನಾನೇ ನಾನೆಂದಾರತಿ ಬೆಳಗಿದೆನೇ ೨
ಬಲುಶಶಿ ಸೂರ್ಯರ ಶತಕೋಟಿಪ್ರಭೆಯನೆ ಮೀರ್ದುಥಳಥಳ ಥಳಥಳ ಹೊಳೆಯುತನಾನೇ ಆರತಿ ಬೆಳಗಿದೆನೆ ೩
ಎತ್ತೆತ್ತ ನೋಡೆ ಪ್ರಭೆ ತಾಮೊತ್ತ ಮೊತ್ತವಿದೆ ಕೋಚಿತ್ತದಿಂದಲಿ ಚಿಜ್ಯೋತಿಯ ಪ್ರಭೆನಿತ್ಯದಿ ಬೆಳಗಿದೆನೆ ೪
ಅನಂತಾನಂತವ ಮುಚ್ಚಿಹುದುಅನಂತಾನಂತವನುಅನಂತ ಚಿದಾನಂದ ಗುರು ತಾನೆ ಎಂದಾರತಿ ಬೆಳಗಿದನೆ ೫

೩೯೫
ಆರತಿ ಮಂಗಳಾರತಿ ಆರತಿ ಬೆಳಗಿದೆಆತ್ಮ ಚಿದಾನಂದಗೆ ಪ
ಆರು ಸ್ಥಾನವ ತಿಳಿದುಆರನೆ ಸ್ಥಳದಿ ನಿಂತುಆರು ಭ್ರಮೆಯ ಹರಿದುಆರ್ ಮೇಲೆ ಬೆಳಗಿದೆ ೧
ಮೂರು ಸ್ಥಾನವ ತಿಳಿದುಮುರನೆಯ ಸ್ಥಳದಿ ನಿಂದುಮೂರು ಗುಣವ ಹರಿದುಮೂರ್ ಮೇಲೆ ಬೆಳಗಿದೆ೨
ಎರಡು ಸ್ಥಾನವ ತಿಳಿದುಎರಡನೆಯ ಸ್ಥಳದಿ ನಿಂದುಎರಡನೆ ಚಿದಾನಂದನೊಳುಎರಡಾಗದೆ ಬೆಳಗಿದೆ ೩

೩೯೬
ಆರತಿಯನೆತ್ತಿರೆಲ್ಲ ಆನಂದಗೆಆರತಿಯನೆತ್ತಿರೆಲ್ಲ ಸ್ವಾನಂದಗೆ ಪ
ಆರು ಚಕ್ರಗಳಿಂದ ಅತ್ತಲಿಹಗೆಮೀರಿ ಭ್ರೂಮದ ಸದನ ಮೀರಿಹಗೆಸಾರಿ ಸಹಸ್ರ ಸದನ ಬಿಟ್ಟಿಹಗೆತೋರುತಿಹ ಬ್ರಹ್ಮರಂಧ್ರ ತುರೀಯ ರೂಪಗೆ ೧
ಕಣ್ಣಿನೊಳಗೆ ಕಣ್ಣು ತೆರೆದು ನಿರೀಕ್ಷಿಪಗೆಕಣ್ಣ ಬೊಂಬೆಯೊಳಗೆ ಕುಳಿತು ನೋಡುತಿಹಗೆಭಿನ್ನವಿಲ್ಲದ ಆನಂದ ಸುಖದಿ ರಮಿಸುತಿಹನಿಗೆಹೊನ್ನ ತಗಡಿನಂತೆ ಥಳಥಳಿಸುತಿಹಗೆ ೨
ಉಕ್ಕುವ ತೇಜಗಳೆಲ್ಲ ತಾವೊಂದಾಗಿ ಕೂಡಿಮಿರು ಹರಿವ ಬೆಳದಿಂಗಳಂತೆಯಿಹಗೆಲೆಕ್ಕವಿಲ್ಲದಲೆಯುತಿಹ ಸುಖದ ರಾಶಿಗೆಮುಕ್ತಿ ಮೂರುತಿ ಶ್ರೀ ಚಿದಾನಂದ ಗುರುವಿಗೆ ೩

೩೯೭
ಆರತಿಯಾಡುವೆನು ಸದ್ಗುರುವಿಗೆಆರತಿಯಾಡುವೆನು ಪ
ಕಾಯವ ಜರೆಯುತ್ತಲಿಕೈಯನೆ ಮುಗಿಯುತಲಿಮಾಯವ ಹರಿಯುತಲಿಬಾಯಿ ಕೊಂಡಾಡುತಲಿ ಸದ್ಗುರುವಿಗೆ ೧
ಕುಣಿ ಕುಣಿದಾಡುತಲಿಮನವನೆ ನೀಡುತಲಿಘನಮುಕ್ತಿ ಬೇಡುತಲಿಅನುಮಾನವ ಬಿಡುತಲಿ ಸದ್ಗುರುವಿಗೆ ೨
ಅರಿವನೆ ಅರಿತುಗುರಿಯನೆ ಮರೆತುಪೂರವನೆ ಬೆರೆತುಗುರು ಚಿದಾನಂದನರಿತು ಸದ್ಗುರುವಿಗೆ ೩

೨೨೭
ಆರಿಗಾರು ಇಲ್ಲವಯ್ಯ ಆರಿಗಾರು ಇಲ್ಲವಯ್ಯ ಪ
ಮಡದಿಯೆಂಬಳು ಯಾಕೆಬಿಡದೆ ಪಂಕ್ತಿಯ ಊಟ ಎಂಬ ಭಾವ ಮೈದುನನೇಕೆಪಡದ ತಂದೆ ತಾಯಿ ಏಕೆ ಪಡಿತತ್ವ ಯಾಕೆಬಡಿಯುತ ಯಮನೀಗ ಒಯ್ಯೆ ಬಿಡಿಸಿಕೊಂಬರಿಲ್ಲ ೧
ಅಣ್ಣತಮ್ಮನು ಯಾಕೆ ಅಳಿಯನು ಯಾಕೆಬಣ್ಣದ ಬಾಳು ತಾನೇಕೆ ಬಂಧುಗಳದೇಕೆಚಿನ್ನಕೊಪ್ಪರಿಗೆ ಯಾಕೆ ಚಿತ್ರಮನೆಯಾಕೆಕಣ್ಣ ಕಟ್ಟಿ ಕಾಲನೆಳೆಯ ಕಾವರಾರು ಇಲ್ಲವಯ್ಯ೨
ಆರ ನಂಬಿದರು ನಿನ್ನಕಡೆ ಹಾಯಿಪರಿಲ್ಲನೂರು ಬಾರಿ ತಿಳಿದು ನೋಡು ನಿನ್ನೊಳಗೆಲ್ಲಧೀಧೀ ಚಿದಾನಂದ ಹೊಂದೆಯುಕ್ತಿಯಹುದೆಲ್ಲಬಾರೆ ಜನನ ಮರಣಕೆ ಸಂದೇಹವಿಲ್ಲ ೩

೧೦೫
ಆವಾವಯ್ಯ ಇಹದ ಕುಲಗಳುಆವಾವಯ್ಯ ಇಹದ ಕುಲಗಳುಅಷ್ಟಮದಗಳನ್ನೇ ಗೆದ್ದುಭಾವಶುದ್ಧಿಯಿಂದ ಮುಕ್ತಿಭಾಮಿನಿಯನ್ನು ಸೇರಿದವಗೆ ಪ
ಮೂರನಳಿದು ಏಳ ಕಳೆದು ಮೂರ ಖಂಡಿಸಿಏಳ ಮುರಿದು ಆರ ಮೂರ ಮೀರಿದವಗೆ ೧
ನಾಕ ಕಳೆದು ಎರಡ ಮರೆತು ನಾಲ್ಕು ಮರೆತು ಎರಡ ತಿಳಿದುನಾಲ್ಕು ಎಂಟು ಎಂಬ ಜರೆದು ನಾಲ್ಕರಲ್ಲಿ ನಿಂತವನೆ೨
ಹತ್ತನಟ್ಟಿ ನವವ ಮೆಟ್ಟಿ ಹರಿಯ ಕೋಟಿ ಕಿರಣವೆಂಬತತ್ವ ಚಿದಾನಂದ ತಾನೆ ತಾನೆ ಆದವಗೆ ೩

೨೨೮
ಆಶ್ರಮ ಧರ್ಮ ನಾಲ್ಕು ಉಪದ್ರಆಶ್ರಮ ಧರ್ಮ ಬಿಡೆ ಅವ ಪಟ್ಟ ಬದ್ಧ ಪ
ಬ್ರಹ್ಮಚಾರಿಯು ಆಗೆ ಕರ್ಮದ ಉಪದ್ರಬ್ರಹ್ಮಚರ್ಯವು ಹೋಗೆ ಸ್ತ್ರೀಯ ಉಪದ್ರಸುಮ್ಮಗೆ ವಾನಪ್ರಸ್ಥನಾಗೆ ಬೆಂಕಿ ಉಪದ್ರಹಮ್ಮಳಿದು ಸಂನ್ಯಾಸಿಯಾಗೆ ಸ್ನಾನದುಪದ್ರ ೧
ಗೃಹಸ್ಥನಾಗೆ ವ್ರತಗಳ ಉಪದ್ರಸತತ ಸಂಧ್ಯಾ ಜಪತಪದ ಉಪದ್ರಮಿತಿ ಇಲ್ಲದ ನಾನಾ ಕರ್ಮಗಳ ಉಪದ್ರಸತತ ಶುಚಿ ಅಶುಚಿ ಎಂಬುದರ ಉಪದ್ರ ೨
ಆವ ಆಶ್ರಮದಲಿರೆ ಆವುದೊಂದು ಉಪದ್ರಆವ ಆಶ್ರಮದಿ ಉಪದ್ರವೇ ಅದು ಹೋಗದುಆವಾಶ್ರಮಗಳಿಗೆ ಬೇರೆ ಇರೆ ಸುಖಿಯಿಹದೇವ ಚಿದಾನಂದ ಮಹ ಸರ್ವಮಹೋಪದ್ರವ ಪರಿಹಾರವಯ್ಯ ೩

೨೨೯
ಆಸೆ ಎಂಬೋ ನದಿ ಆಸೆ ಎಂಬೋ ನದಿಆಸೆ ಎಂಬೋ ನದಿಯಿರೆ ಮಹಾ-ತೃಷೆಯ ಆರು ದಾಟಲಳವಲ್ಲ ಪ
ಮನೋರಥ ನೀರು ಮನೋರಥ ನೀರುಮನೋರಥ ನೀರು ಇರೆ ಮಹಾತೃಷೆ ಅಲೆಗಳಯ್ಯ ೧
ಮೋಹವೆಂಬೋ ಸುಳಿ ಮೋಹವೆಂಬೋ ಸುಳಿಮೋಹವೆಂಬಾ ಸುಳಿಯಿರೆ ಮಹಾತೊರೆ ಹರಿಯಯ್ಯಾ ೨
ಸತಿ ಎಂಬ ಮೊಸಳೆ ಸತಿ ಎಂಬಾ ಮೊಸಳೆಸತಿ ಎಂಬ ಮೊಸಳೆಯಿರೆ ಸುತರೆಂಬರು ಏಡಿಗಳಯ್ಯ ೩
ಬಂಧಗಳು ಗ್ರಹ ಬಂಧುಗಳು ಗ್ರಹಬಂಧಗಳು ಗ್ರಹ ಇರೆ ಬಡಿದಾಟ ನೀರು ಗುಳ್ಳೆಯಯ್ಯ೪
ಗುರು ದಯವೇ ನಾವೆ ಗುರುದಯವೇ ನಾವೆಗುರುದಯವೆ ನಾವೆಯಿರೆ ಗುರು ಚಿದಾನಂದನ ಸೇರಬೇಕಯ್ಯ ೫

೩೪೫
ಇಂತಿದೆ ಬ್ರಹ್ಮ ಇಂತಿದೆ ಅದುಎಂತೋ ಇಹುದು ಎಂದು ಚಿಂತೆ ಮೂಡಲದೇಕೆ ಪ
ಎರಡು ಕೈಗಳಿವೆ ಎರಡು ಕಾಲ್ಗಳಿವೆಎರಡು ಕಣ್ಣುಗಳು ಮತ್ತು ಎರಡು ಕಿವಿಗಳಿವೆಎರಡಕ್ಕೆ ಠಾವಿಲ್ಲ ಏಕವೇ ತಾನಿದೆಎರಡು ಎಂಬುದು ಮಾತಿನಿಂದೆರಡಾಗಿದೆ ೧
ತಾನೆ ಬೇಡುತಲಿದೆ ತಾನೆ ಉಣ್ಣುತಲಿದೆತಾನೆ ತನ್ನ ಬಾಯ ತೊಳೆದುಕೊಳ್ಳುತಿದೆತಾನೆ ನಡೆಯುತಿದೆ ತಾನೆ ಮಲಗುತಿದೆತಾನೆ ಕುಳ್ಳಿರ್ದು ಹಾಡಿ ಪಾಡಿ ನಗುತಲಿದೆ ೨
ಒಬ್ಬನೇ ಎನಿಸಿದೆ ಒಬ್ಬನೇ ತೋರಿದೆಒಬ್ಬನೇ ಆಗಿ ಆಡುತ್ತಲಿದೆಒಬ್ಬ ಚಿದಾನಂದ ಗುರುವರ ತಾನಿದೆಒಬ್ಬನೇ ಒಬ್ಬನೇ ಒಬ್ಬನೇ ಇದೆ ಇದೆ ೩

೩೪೬
ಇರಬೇಕು ಲಕ್ಷ್ಯ ಇರಬೇಕುಈ ಧರಣಿ ಮೇಲೆ ಶರೀರವಿರುವ ತನಕ ಪ
ಸೂರ್ಯನಿರುತಲಿರೆ ಸೂರ್ಯನೊಳ್ ಪ್ರಭೆ ಹುಟ್ಟಿಸೂರ್ಯನೊಳಗೆ ಪ್ರಭೆಯು ಅಡಗುವಂತೆಉರ್ವಿ ಎನ್ನಲಿ ಪುಟ್ಟಿ ಎನ್ನಲಿ ಲಯವೆಂದುಸರ್ವಕಾಲದ ನಿತ್ಯ ಸಾಕ್ಷಿ ವಿಷಯದಲಿ೧
ಉದಕವಿರುತಿರೆ ಉದಕದೊಳ್ ತೆರೆ ಪುಟ್ಟಿಉದಕದೊಳಗೆ ತೆರೆಯು ಅಡಗುವಂತೆಇದುವೆ ಎನ್ನಲಿ ಜಗವಿದೆನ್ನಲಿ ಲಯವೆಂದುವಿಧಿಸಿ ನಿಶ್ಚಯದಿಂದ ನಿತ್ಯ ವಿಷಯದಿಂದ೨
ನಭವು ಇರುತಲಿರೆ ನಭದಿ ಮೇಘವು ಹುಟ್ಟಿನಭದೊಳಗೆ ಮೇಘವು ಅಡಗುವಂತೆಈ ಭುವನವೆನ್ನಲಿ ಪುಟ್ಟಿ ಎನ್ನಲಿಲಯವೆಂದುಪ್ರಭು ಚಿದಾನಂದ ತಾನೆಂಬ ವಿಷಯದಲಿ ೩

೧೦೬
ಇಲ್ಲವಿಲ್ಲವು ಮಾಯೆಯಿಲ್ಲ ಬ್ರಹ್ಮರ ಹೊಳೆವುಬಲ್ಲವನರಿಯಲವ ಬ್ರಹ್ಮವಿನಾ ಜಗವಿಲ್ಲ ಪ
ಕಾಷ್ಟದಲಿ ರೂಪು ನಾಮಗಳೆಷ್ಟು ಆದರೇನುಕಾಷ್ಟದಾ ಹೊರತು ಮತ್ತಿನ್ನೊಂದು ಉಂಟೇಶ್ರೇಷ್ಠ ಮೊದಲಾಗಿ ತೃಣವರೆಗೆ ದಿಕ್ಕುಗಳೆಲ್ಲಶಿಷ್ಟಬ್ರಹ್ಮವಲ್ಲದೆ ಬೇರೆ ಜಗವಿಲ್ಲ೧
ಕನಕದಿಂದಲಿ ಒಡವೆ ನಾನಾ ಬಗೆಯಲಾಗೆಕನಕವೇ ಹೊರತು ಮತ್ತಿನ್ನೊಂದು ಉಂಟೆ ಏನಿತೆನಿತಸುರ ಸುರರು ಯಮುನೆ ಪರ್ವತವೆಲ್ಲಘನಬ್ರಹ್ಮವಲ್ಲದಲೆ ಬೇರೆ ಜಗವಿಲ್ಲ ೨
ಬ್ರಹ್ಮ ಆಧಾರದಲಿ ತೋರುತಡಗುವುದು ಮಾಯೆಸುಮ್ಮನೆಯೆ ಮೃಗಜಲವು ತೋರಡಗಿದಾತಹೆಮ್ಮೆ ತಾನೆಷ್ಟು ಮಾತಿನ ಮಾತ್ರವಲ್ಲದಲೆನಿರ್ಮಲ ಚಿದಾನಂದ ವಿನಾ ಜಗವಿಲ್ಲ ೩

೧೦೭
ಇಲ್ಲವೋ ಮುಕ್ತಿ ಇಲ್ಲವಿಲ್ಲವೋ ಮೆಲ್ಲ ಮೆಲ್ಲನೆ ದೃಷ್ಟಿನಿಲ್ಲಿಸಿಮೇರು ಶಿಖರವ ನೋಡುವತನಕ ಪ
ಚಕ್ರವಾರ ಮೆಟ್ಟಿನಿಂತು ಚಂಚಲಿಸದಂತೆ ದೃಷ್ಟಿಯಿಟ್ಟುವಿಕ್ರಮದಲಿ ಬ್ರಹ್ಮರಂದ್ರ ಪೊಕ್ಕು ತೇಜ ಕಾಣುವತನಕ ೧
ದೃಢಚಿತ್ತದಲಿದ್ದು ಮಾರುತನ ಮೇಲಕೆ ಊದಿಒಡನೆ ಕೂಡಿಸಿ ವಾಯುಮನವನು ಅಸುವನು ಕಾಣುವತನಕ೨
ಓಂಕಾರ ಧ್ವನಿಯ ಕೇಳಿ ಒತ್ತೊತ್ತು ಬೆಳಗಿನೊಳುಶಂಕರನೆನಿಪ ಚಿದಾನಂದ ಬ್ರಹ್ಮವನೆ ಕಾಣುವ ತನಕ ೩


ಇಷ್ಟ ಲಿಂಗವ ಪೂಜಿಸೆಂದು ಗುರುವು ಕೈಯಲಿ ಕೊಟ್ಟ
ಇಷ್ಟಲಿಂಗ ನೀನೆ ಎಂದು ಕಿವಿಯಲಿ ಹೇಳಿಬಿಟ್ಟ ಪ
ಉದಯದಲಿ ಲಿಂಗವನ್ನು ಬಯಲ ಕಡೆಗೆ ಒಯ್ಯುವೆ
ಅದರ ತರುವಾಯದಲಿ ಲಿಂಗಮುಖವನೀಗ ತೊಳೆವೆ
ಹದ ಮಾಡಿಯೆ ಬಿಸಿನೀರನು ಲಿಂಗಕ್ಕೆ ಎರೆವೆ
ವಿಧವಿಧದ ವಸ್ತ್ರಗಳನ್ನು ಲಿಂಗಕ್ಕೆ ಉಡಿಸುವೆ ೧
ಬಸಿತವನು ಹಣೆಯ ತುಂಬ ಲಿಂಗಕ್ಕೆ ಧರಿಸುವೆ
ಕುಸುಮವೇನು ದೊರಕಿದರು ಲಿಂಗಕ್ಕೆ ಮುಡಿಸುವೆ
ಬಿಸಿಯಾರಿದ ಎಡೆಯ ನಾನು ಲಿಂಗಕ್ಕೆ ಉಣಿಸುವೆ
ಪಶುಪತಿಯೆ ಉದಕವೆಂದು ಲಿಂಗಕ್ಕೆ ಕುಡಿಸುವೆ ೨
ಲಿಂಗ ಕೊಳ್ಳೆಂದು ತಾಂಬೂಲ ನೀಡುವೆ
ಭಂಗಭವನ ಸ್ತೋತ್ರ ಮಾಡಿ ಲಿಂಗವನ್ನು ಮಲಗಿಸುವೆಲಿಂಗವನ್ನು ನಡೆಸ್ಯಾಡಿ ಲಿಂಗವನ್ನು ಮಲಗಿಸುವೆಲಿಂಗ ಚಿದಾನಂದ ಬ್ರಹ್ಮಲಿಂಗವಾಗಿ ಇರುತಿಹೆ ೩

೩೪೭
ಇಹವಸ್ತುವೊಂದೇ ಜಗದೊಳಗೆ ಇಹವಸ್ತುವೊಂದೇಸೋಹಂ ಸೋಹಂ ಸೋಹಂ ಸೋಹಂಸೋಹಂ ಸೋಹಂ ಸೋಹಂ ಎಂದೇ ಪ
ಸಂಗ ದೂರೆನಿಸಿ ಸಂಗವೆ ತಾನೆನಿಸಿಮಂಗಳ ಮಂಗಳ ಮಂಗಳ ಮಂಗಳಮಂಗಳ ಮಂಗಳ ಮಂಗಳವೆಂದೇ ೧
ಜ್ಞಾನವೆ ತಾನಾಗಿ ಅಜ್ಞಾನಕೆ ತಾದೂರಾಗಿತಾನೇ ತಾನೇ ತಾನೇ ತಾನೇತಾನೇ ತಾನೇ ತಾನೇ ಎಂದು೨
ವರ್ಣಂಗಳು ಆರು ಮೀರುವರ ಚಿದಾನಂದ ಗುರುಪೂರಣ ಪೂರಣ ಪೂರಣ ಪೂರಣಪೂರಣ ಪೂರಣ ಪೂರಣವೆಂದು ೩

೧೦೮
ಇಹಾತನೆ ಯೋಗಿ ಜಗದೊಳಗೆಲ್ಲವೂ ತಾನಾಗಿಇಹಾತನೆ ಯೋಗಿ ಪ
ಉಡುವರ ಕಂಡು ಉಡುವನು ತಾನುತೊಡುವರ ಕಂಡು ತೊಡುವನು ತಾನುಕೊಡುವರ ಕಂಡು ಕೊಡುವನು ತಾನಾಗಿ ೧
ನಡೆವರ ಕಂಡು ನಡೆವನು ತಾನುಹಿಡಿವರ ಕಂಡು ಹಿಡಿವನು ತಾನುಬಿಡುವರ ಕಂಡು ಬಿಡುವನು ತಾನು ೨
ಪೇಳ್ವರ ಕಂಡು ಪೇಳ್ವನು ತಾನುಕೇಳ್ವರ ಕಂಡು ಕೇಳ್ವನು ತಾನುತಿಳಿವರ ಕಂಡು ತಿಳಿವನು ತಾನಾಗಿ ೩
ಆಡುವರ ಕಂಡು ಆಡುವನು ತಾನುಕಾಡುವರ ಕಂಡು ಕಾಡುವನು ತಾನುಓಡುವರ ಕಂಡು ಓಡುವನು ತಾನಾಗಿ ೪
ಹಿರಿಯರ ಕಂಡು ಹಿರಿಯನೆ ತಾನಾಗಿಕಿರಿಯರ ಕಂಡು ಕಿರಿಯನೆ ತಾನಾಗಿಗುರು ಚಿದಾನಂದನೆ ತಾನಾಗಿ ೫


ಉಗ್ರ ನರಸಿಂಹ ಜ್ವಾಲಾ ಉಗ್ರನರಸಿಂಹ
ಶೀಘ್ರದಿ ಬಂದು ಪ್ರಹ್ಲಾದನ ಮೊರೆಯನು
ಕೇಳ್ವ ಅಸುರನ ಸೀಳ್ವಾ ಪ
ಫಳ ಫಳಯೆನುತಾರ್ಭಟಿಸುತ ಕುಂಭದ ಲೊಡೆದು
ಕೋಪವ ಝಡಿದು ಛಿಳಿ ಛಿಳಿಛಿಳಿರನೆ ಕಣ್ಣಲಿ
ಕೆಂಗಿಡಿಯುಗುಳೇ ದಿವಿಜರು ಪೊಗಳೇಭಳಿ ಭಳಿ ಭಳಿರೆಂದಬ್ಬರಿಸುತ ದುಂದುಭಿ-
ಯೊದರೇ ಅಸುರರು ಬೆದರೇಝಳಪಿಸಿ ಖಡುಗದಿ
ರಕ್ಕಸ ಬಲವನು ತರಿದಾ ಶಿಶುವನು ಪೊರೆದಾ ೧
ಭುಗು ಭುಗಲೆನೆ ನಾಸಿಕದಿ ಉಸುರ್ಹೊಗೆ ಹೊರಟು ಖಳನುದ್ದುರುಟು
ಜಿಗಿ ಜಿಗಿದವನನು ಕೆಡಹಿ ತೊಡೆಯೊಳಗಿಟ್ಟು ರೋಷವ ತೊಟ್ಟು
ಬಗೆದುದರವ ರಕ್ತವ ನೊಕ್ಕುಡಿತೆಯಲಿ ಸುರಿದು ತಾ ಚಪ್ಪರಿದು
ಸೊಗಸು ಉರಕೆ ಕರುಳ ಮಾಲೆಯ ಹಾಕಿದ ದೇವ ಭಕ್ತರಕಾಯ್ವ ೨
ಹಿರಣ್ಯಕಶಿಪನ ಹತ ಮಾಡಿದ ಭಕ್ತ ಪ್ರಹ್ಲಾದನಿಗೆ ಆಹ್ಲಾದದ
ವರವನು ಪಾಲಿಸಿ ಸುರರನು ಪೊರೆದು
ಕರುಣದಿ ಸುರಿದು ಧರಣಿಯೊಳಗೆ ಪೆ-
ಸರಾಗಿಹ ಅಹೋಬಲ ಸ್ಥಳದಿ ನೀನಾ ನೆಲದಿಗುರು
ಚಿದಾನಂದ ಅವಧೂತರೆನಿಪ ದಾತಾ ಸಜ್ಜನ ಪ್ರೀತಾ ೩

೫೦
ಉಣ್ಣು ಉಣ್ಣು ಉಣ್ಣು ದೇವ ಉಣ್ಣು ಪ
ಕಣ್ಣಲಿ ನೋಡು ದೇವ ಮತ್ತನ್ನಕೆ ತುಪ್ಪ ಹಾಕು
ಚೆನ್ನಾಗಿ ಕಲಸಿ ಬಾಯೊಳಗಿಕ್ಕು ೧
ಎಡದಲೀಶ ಕಂಡ್ಯ ನೀ ದೃಢ ಸಮಾಧಿಯ ಪುರುಷಬಿಡಬೇಡ ಬೇಡಿಕೋ ಪೂರ್ಣ ೨
ನಿತ್ಯತೃಪ್ತನೆ ದೇವ ನೀ ನಿತ್ಯ ಪರವಸ್ತುನಿತ್ಯ ಚಿದಾನಂದ ತಾನಾದ ದೇವ ೩

೨೩೧
ಉದ್ಧರಿಸಿರೋ ನೀವು ನಿಮ್ಮ ತಿಳಿಯಬೇಕು ಪರಬೊಮ್ಮ ಪ
ಮನುಜ ಜನ್ಮಕೆ ಬಂದು ಮರೆತರೆ ಕಷ್ಟವು ಮುಂದುಇನಿತು ವಿಚಾರವಿಲ್ಲ ಇದುವೆ ವಿವೇಕವದಲ್ಲ ೧
ಕೊನಬುಗಳೆಲ್ಲವ ಬಿಡಿರೋ ಕೋಪವನೆಲ್ಲವ ಸುಡಿರೋತನು ಸುಖವಾಗಿಹುದಲ್ಲ ತಪ್ಪಿದರೆ ಬಳಿಕೆಲ್ಲ ೨
ಭ್ರಮೆಯೆಲ್ಲವ ಬಿಡಬೇಕು ಬಂಧನ ಹರಿಯಲು ಬೇಕುನಮಗಿದು ನೀತಿಯಿದಲ್ಲ ನಾಚಿಕೆ ಕಿಂಚಿತ್ತು ಇಲ್ಲ ೩
ತನ್ನ ತಿಳಿದರೆ ತಾ ಬಂಧು ತನ್ನ ಮರೆತರೆ ಶತ್ರುವಹಸನ್ನುತವಚನವಿದೀಗ ಸಾಧಿಸುವುದು ಬಹುಬೇಗ ೪
ಚೆನ್ನಾಗಿ ಶ್ರವಣದ ಕೇಳಿ ಚಿತ್ತ ಶುದ್ಧಿಯ ತಾಳಿಚಿನ್ಮಯನನು ನೀವು ಧರಿಸಿ ಚಿದಾನಂದ ತಾವೆಂದು ಸ್ಮರಿಸಿ ೫

೨೩೨
ಉಪವಾಸ ಬೀಳುವುದ್ಯಾಕೋ ಮನುಜಉಪವಾಸ ಬೀಳುವುದ್ಯಾಕೋ
ಉಪವಾಸ ಬೀಳಲಿಕೆ ನಿನಗೆ ಗ್ರಹಚಾರ ಸಾಲದೆ ಬೇಕೋ ಪ
ಅಂಗದಿ ತತ್ವಾಭಿಮಾನವು ಇರಲಿಕೆ ಆಹಾರವರ್ಜಿಪುದ್ಯಾಕೋ
ಮಂದ ಮತಿಗಳು ಕೂಡಿಯೆ ನೀನು ಮಂದಮತಿಯಾದೆ ಯಾಕೋ ೧
ದೇಹದಿ ವೈಶ್ವಾನರನಿರಲಿಕೆ ದೇಹವ ದಂಡಿಪುದ್ಯಾಕೋ
ಮಹಾವ್ರತವೆಂದು ಮೊಸರ ಬಿಟ್ಟು ಮಣ್ಣನೆ ಮುಕ್ಕುವಿಯಾಕೋ ೨
ನಿತ್ಯಾತ್ಮನು ಚಿದಾನಂದ ತಾನಿರೆ ನಿರಾಹಾರವದ್ಯಾಕೋ
ಮತ್ತೇಕಾದಶಿ ಶಿವರಾತ್ರೆನ್ನುತ ಬಿಣ್ಣನೆ ಬಳಲುವಿಯಾಕೋ ೩

೩೪೮
ಊಟ ಮಾಡಿದೆನು ಬ್ರಹ್ಮಾನಂದದ ಊಟವಆರು ಅರಿಯದ ಯೋಗ್ಯರು ಎಂಬ ಊಟ ಪ
ಸದ್ಗುರು ಎಂದೆಂಬ ಅನ್ನಪೂರ್ಣ ತಾನುಶುದ್ಧ ಹೃದಯವೆಂಬ ಹರಿವಾಣದೊಳಗೆಸಿದ್ಧನೆಂಬ ನಾನಾ ಭಕ್ಷ್ಯ ಭೋಜ್ಯ ಪಾಯಸವಸಿದ್ಧ ಗುರುವೇ ತಂದು ಎನ್ನ ಮುಂದಿಡಲು೧
ಆತ್ಮ ಎಂಬ ಅನ್ನಕ್ಕೆ ಅಷ್ಟಾಂಗ ತೊವ್ವೆಯನು ಹಾಕಿಸ್ವಾತ್ಮ ಸುಖವೆಂದೆಂಬ ತುಪ್ಪವನೆ ಹೊಯ್ದುಆತ್ಮ ನಾನೆರಡಲ್ಲವೆಂಬ ಸಮರಸವ ಕಲಸಿಎತ್ತಿ ಸವಿದೆನು ನಾನು ಅನುಭವದ ತುತ್ತ ೨
ಸಾರಾಮೃತವೆಂಬ ಸಾರನೇ ಸುರಿಯುತತೋರುತಿಹ ಚಿದ್ಬಿಂದು ಹಿಂಡಿಯನೆ ನಂಜಿಮೀರಿದಾನಂದಗುಳ್ಹೂರಿಗೆಯ ಮಂಡಿಗೆಯತೋರುವೆಚ್ಚರು ಮರೆತು ಹಾಯೆನುತಲುಂಡು ೩
ಹೇಳಬಾರದ ಪರಮಾತ್ಮ ಪರಮಾನ್ನ ಸುರಿದುಮೇಲೆ ಗುರುದಯದ ಉದಕವನೆ ಕುಡಿದುಮೂಲನಾದವ ಘೋಷ ಸುತ್ತೆಲ್ಲ ಪಸರಿಸಲುಗೋಲ ನಾನಾ ತೇಜ ದೀಪ ಬೆಳಕಿನಲ್ಲಿ ೪
ಇಂತೂಟವನೆ ಉಂಡು ನಿಜ ತೃಪ್ತಿಯದಾಗೆಅಂತು ಕಳೆದೆನು ಅವಿದ್ಯದ ಕಡು ಹಸಿವನುಚಿಂತಯಕ ಚಿದಾನಂದ ಅನ್ನ ಪೂರ್ಣನು ಎಣಿಸೆಎಂತು ಹೇಳಲಿ ಮರೆತೆ ಸರ್ವವನು ತೃಪ್ತಿಯಲಿ೫

೩೪೯
ಊರ ದೇವರ ಮಾಡಿ ಊರ ಶಾಂತಿಯಾಗಲಿಊರದೇವತೆ ಗುರು ಚಿದಾನಂದ ತಾನೆನುತ ಪ
ಶುದ್ಧ ಸುನಾದವೆನಿಸುವ ಡಂಗುರವ ಸಾರಿಸಾಧು ಶಮೆ ದಮೆ ಎಂಬ ಮೊಳಕೆ ಹೊಯ್ದುವೇದಾಂತವೆಂದೆಂಬ ಹಂದರವನೆ ಹಾಕಿವಾದಾತೀತಾತ್ಮದೇವಿಯ ಎದುರುಗೊಂಡು ೧
ಹಲವು ನಾದಗಳೆಂಬ ವಾದ್ಯಗಳನೇ ನುಡಿಸಿಬೆಳಗುತಿಹ ತೇಜಃಪುಂಜಗಳ ಮುಟ್ಟಿಸಿಯೆಹೊಳೆಯುತಿಹ ನಾನಾ ಕಳೆ ಬರಿಸು ಬತ್ತಿಯ ಹಚ್ಚಿಬಳಿಕ ಚಿತ್ಕಳೆ ಎಂಬ ದೇವಿಯನು ಮೆರೆಸುತ್ತ ೨
ಅಡ್ಡಾಡುವ ಮನವ ಹಿಡಿ ತಂದು ಕಟ್ಟಿದೊಡ್ಡ ಅಹಂಕಾರದ ಕೋಣವನು ಕಡಿಸಿಹೆಡ್ಡ ಕಾಮವದೆಂಬ ಕುರಿಯ ತಲೆ ಕಡಿಸಿಗೊಡ್ಡು ಗುಣಗಳು ಎಂಬ ಚೆರುಗ ಚೆಲ್ಲಿಸುತ್ತ೩
ಸಿದ್ಧ ತಾನೆಂದೆಂಬ ಅಡುಗೆಯದು ಆಗಲುಸಿದ್ಧ ಪುರುಷರು ಎಲ್ಲ ಉಣಲು ಕುಳ್ಳಿರೆಶುದ್ಧ ತೃಪ್ತಿಯು ಎಂಬ ಔತಣವು ಮುಗಿಯಲುಅದ್ದಿಸಿರಿ ಆನಂದದಲಿ ಊರ ಜನರ ೪
ಊರೆಂಬುದು ನಿಮ್ಮ ದೇಹವೇ ತಿಳಿಯಿರೋಊರ ದೇವತೆ ನೀನು ನಿಜವನರಿಯೋಊರ ದೇವರ ಮಾಡಿ ಆನಂದಪಡೆಯೋಇದಕೆ ತಾ ಸಾಕ್ಷಿ ಚಿದಾನಂದನರಿಯೋ ೫

೨೩೩
ಎಂತು ಪೇಳ್ವುದು ಇವನಿಗೆ ಎಂತು ಪೇಳ್ವುದು ಜ್ಞಾನಎಂತು ಗಂಗೆಯಲಿ ಮುಳುಗಿದರೇನು ಶುಚಿಯಹುದೇ ಶ್ವಾನ ಪ
ಹೆಂಡತಿ ಉಟ್ಟು ತಿರುಗಾಡುವುದು ಹರಕು ಹರಕು ಚಿಂದಿಮಿಂಡಿತಿ ಉಟ್ಟು ಮೆರೆಯುವುದು ಮಿಸುನಿಯ ಮೇಲ್ಬಂದಿ ೧
ಹೆಂಡತಿಯದು ತಾ ಕೊಳೆ ತುಂಬಿದ ಮಂಡೆಮಿಂಡತಿಯದು ಚೌರಿ ರಾಗಟೆ ಗೊಂಡೆ ೨ಇದ್ದಲಿಯನು ಹಾಲೊಳ್ ತೊಳೆದರೆ ಶುಭ್ರವು ತಾನಹುದೆಶುದ್ಧ ಚಿದಾನಂದನ ಬೋಧೆಯಲಿ ದುರ್ಬುದ್ಧಿಗೆ ಬುದ್ಧಿಯು ಬಹುದೆ೩

೫೧
ಎಂಥಾ ದಯಾಕರನು ನೋಡೆ ಸದ್ಗುರುರಾಯ
ಎಂಥಾ ದಯಾಕರನು ನೋಡೆ ಅಂತರಂಗದ ತಾಪವ ಹರಿಸಿ ಅಂತರಾತ್ಮನ ತೋರಿದ ಪ
ಹಸಿವು ತೃಷೆ ಪರಿಹರಿಸಿ ನಾನಾಬಗೆವಿಷಯವೆಲ್ಲವ ತೊರೆಸಿಮುಸುಕ ನುಗಿದು ಮಾಯೆಯಪರಂಜ್ಯೋತಿಯ ಬೆಳಗಿಸಿದನು ನೋಡೆ ೧
ಸಂಸಾರದ ಬಹು ದುಃಖವ ಹರಿಸಿಶಿಂಶುಮಾರ ಚಕ್ರವ ಹಂಸೋಹಂಸೋಹಮೆಂದೆನ್ನನೇರಿಸಿಸಂಶಯ ಹರಿಸಿದನೆ೨
ನಿರುಪಮ ನೀನೆ ಎಂದು ನಿರ್ಗುಣಪರಮ ಪುರುಷನೆ ಬಂದುಗುರು ಚಿದಾನಂದ ಸಾಕ್ಷಾತ್ಕಾರ ನೀನೆಂದುಗುರು ನೀನೆ ನಿಜವೆಂದನೆ ೩

೧೧೦
ಎಂಥಾ ಮರವೆ ಮಾಡಿತೋ ಈ ಪ್ರಣವ ನಾದಾ
ಎಂಥಾ ಮರವೆ ಮಾಡಿತೋಅಂತರಂಗದಲಿ ಭೋರೆಂದು ತುಂಬಿ
ಅಂತು ಅಂತೆನಲು ಕೂಡದು ಪ್ರಣವನಾದ ಪ
ಹೊಟ್ಟೆಗುಣ್ಣುವುದನೆ ಮರೆಸಿತು ಈ ಪ್ರಣವನಾದಮುಟ್ಟು ಚಟ್ಟನೆ ಮರೆಸಿತು
ಕೆಟ್ಟಕೇಡನೇನ ಹೇಳಲಿಉಟ್ಟ ಬಟ್ಟೆಯ ಅರಿವೇ ಇಲ್ಲ ೧
ಆಸೆಯೆಂಬುದ ಮರೆಸಿತು ಈ ಪ್ರಣವನಾದದ್ವೇಷವೆಂಬುದು ತೊರೆಸಿತುನಾಶವಾಯಿತು ಜಪತಪವೆಲ್ಲಮೋಸವೆನಗಿಂತು ಮಾಡಿತು೨
ಧ್ಯಾನವೆಂಬುದು ಮರೆಸಿತು ಈ ಪ್ರಣವನಾದ
ಓಂಕಾರವೆಂಬುದು ಕಲಿಸಿತುಜ್ಞಾನಮೂರುತಿ ಚಿದಾನಂದತಾನೆ ತಾನೆ ತಾನೆ ಎಂಬ ೩

೩೫೦
ಎಂದೆಂದು ಕಂಡುದಿಲ್ಲಮ್ಮಎಂದೆಂದು ಕಂಡುದಿಲ್ಲಮ್ಮ ಗುರುಇದೀಗ ತೋರಿದ ನಮ್ಮ ಮನಸಂದೇಹವು ಹರಿಯಿತಮ್ಮ ನೀನೇಎಂದೆನೆ ಹರುಷಾದೆ ನಮ್ಮ ಬ್ರಹ್ಮವನಮ್ಮ ಪ
ರೂಪುನಾಮವು ಅದಕ್ಕಿಲ್ಲವಮ್ಮ ಅದುಹೋಗುವುದಿಲ್ಲ ಬರುವುದಿಲ್ಲಮ್ಮ ಎಲ್ಲವ್ಯಾಪಕವಾಗಿಹುದಮ್ಮ ದೀಪವೆ ತುಂಬಿಹುದಮ್ಮ ಬ್ರಹ್ಮವದಮ್ಮ೧
ಕಾಯದ ಒಳಗೆ ಹೊರಗಮ್ಮ ಗುರುರಾಯನ ದಯವಾಗಬೇಕಮ್ಮ ತನ್ನಮಾಯೆ ಬಿಟ್ಟರೆ ತೋರುವುದಮ್ಮ ಬ್ರಹ್ಮವದಮ್ಮ ೨
ಮಂದಿರ ಮನೆ ಪಶುರೂಪವಮ್ಮ ಜಗವೊಂದೆ ಅಖಂಡವಿಹುದಮ್ಮತಂದೆ ತಾಯಿ ಮಕ್ಕಳು ತಾನೆ ಅಮ್ಮಚಿದಾನಂದನೆ ತಾನೆಂದ ನಮ್ಮ ಬ್ರಹ್ಮವನಮ್ಮ ೩

೧೦೯
ಎಂಬೆನು ವಿವೇಕ ಮನುಜಗೆ ಇರೆ ಎಂಬೆನು ಬ್ರಹ್ಮನು ಎಂಬೆಎಂಬೆನು ವಿವೇಕ ಮನುಜಗೆ ಇಲ್ಲದಿರೆ ಕತ್ತೆಯಮರಿಯದು ಎಂಬೆ ಪ
ವೇದದ ನಿಜ ಅರ್ಥವ ತಿಳಿದಡೆ ಉತ್ತಮೋತ್ತಮನು ಎಂಬೆಕ್ರೋಧದಿ ತರ್ಕದಿ ಕಾದಾಡುವವನು ಕೋಳಿಯ ಹುಂಜನು ಎಂಬೆನಾನಾರೆನುತಲಿ ನಿಜವನು ತಿಳಿವನ ನಾರಾಯಣನು ಎಂಬೆನಾದದ ತಿಳಿವನು ನಿಂದಿಸುವಾತನ ಸರಸವಾಡೋ ಪಶು ಎಂಬೆ ೧
ಮತಿಯ ವಿಚಾರದಿ ಜಗ ಬ್ರಹ್ಮವೆಂಬನ ವಿಚಾರವಾದಿಯು ಎಂಬೆಯತಿಗಳು ಬರೆ ಕುಳಿತೇಳದ ಮನುಜನಎಮ್ಮೆಯ ಮಗನವನೆಂಬೆಸುತ್ತಮುತ್ತಂಗನೆ ಮೋಹವ ತೊರೆದನ ಯೋಗಪುರುಷ ತಾನೆಂಬೆಗತಿಮತಿ ತೊರೆದಿಹ ನರನನು ಈಗಲೆ ಎಂಜಲು ತಿಂಬುವ ನಾಯೆಂಬೆ ೨
ಪರಮಾರ್ಥದಿ ಶಮದಮದಿಂದಿಹನನು ಪಂಡಿತನೀಗಲು ಎಂಬೆಹಿರಿಯರ ಕಾಣಲು ಹಲ್ಲನೆ ಕಿರಿವನ ಹಿರಿಯಮುಸುವನು ತಾನೆಂಬೆಗುರಿಯನು ತಪ್ಪದೆ ದೃಷ್ಟಿಸಿ ನಡೆವನ ಗುಣಕೆ ಅತೀತನು ಎಂಬೆಬರಿಯ ಪ್ರತಿಷ್ಟೆಯ ಸಾಧಿಸುತಿರುವನ ಬರಡು ಗೊಡ್ಡು ಎಂದೆಂಬೆ ೩
ನಾದದ ಧ್ವನಿಯನು ಕೇಳುತಲಿಹನನು ಜಗಜೀವನನು ಎಂಬೆನಾದದ ಸುಖವನು ಅರಿಯದ ನರನನು ಜೀನುಗಾರನು ಎಂದೆಂಬೆದಿನಕರ ಕೋಟಿಯ ತೇಜದಿ ಹೊಳೆವನ ದಿವ್ಯ ಮೂರುತಿ ಎಂದೆಂಬೆವನವನ ಅಲೆಯುವ ಬರಡು ಮುನಿಯನುವನಕೆಯ ತುಂಡದು ತಾನೆಂಬೆ ೪
ಆತ್ಮದ ಕಳೆಯನು ಅರಿತವನಿದ್ದರೆ ದೃಢದಲಿ ಬ್ರಹ್ಮನು ಎಂಬೆಸತ್ವಶಾಲಿ ಆ ಮಹಿಮರ ಜರೆವರ ಗುಡ್ಡದ ಗೂಗೆಯಮರಿ ಎಂಬೆಚಿನುಮಯ ಚಿನ್ಮಾತ್ರನೆ ತಾನಾದವನನು ಚಿದಾನಂದ ಗುರುವೆಂಬೆಕರೆಕರೆ ಎನಿಸುವ ಸಾಧು ವೇಷವನು ದೂರಕೆ ನೀ ನಿಲ್ಲೆಂಬೆ ೫

೨೩೪
ಎಚ್ಚರ ಹೇಳುವೆ ನಾನೀಗ ನಿನಗೆ ಎಚ್ಚರಿಕೆಚ್ಚರಿಕೆಸಚ್ಚಿದಾನಂದನೆ ನೀನೆಂದು ತಿಳಿ ನಿನ್ನ ಎಚ್ಚರಿಕೆಚ್ಚರಿಕೆ ಪ
ಈಷಣವೆಂದೆಂಬ ಕಾಡಿನೊಳಗೆ ಹೊಕ್ಕಿ ಎಚ್ಚರಿಕೆಚ್ಚರಿಕೆದೋಷಕಾರಿಗಳು ಇಂದ್ರಿಯನಾಯ್ಗಳು ಎಳೆದಾವು ಎಚ್ಚರಿಕೆಚ್ಚರಿಕೆ ೧
ಅಷ್ಟಮದವೆಂಬ ಆನೆ ಕೈಗೆ ಸಿಕ್ಕಿ ಎಚ್ಚರಿಕೆಚ್ಚರಿಕೆದುಷ್ಟ ಪಂಚಕ್ಲೇಶದ ಪೊದೆಗೆ ಸಿಲುಕೀಯೆ ಎಚ್ಚರಿಕೆಚ್ಚರಿಕೆ ೨
ವ್ಯಸನಗಳೆಂಬ ಕುದುರೆಯ ಕಾಲೊಳಾದೀಯೆ ಎಚ್ಚರಿಕೆಚ್ಚರಿಕೆದುಶ್ಮನರಾರ್ವರ ಕಣ್ಣಿಗೆ ಬಿದ್ದೀಯೆ ಎಚ್ಚರಿಕೆಚ್ಚರಿಕೆ ೩
ತಾಪತ್ರಯದ ಹಳ್ಳದಿ ಹರಿದುಹೋದೀಯೆ ಎಚ್ಚರಿಕೆಚ್ಚರಿಕೆಪಾಪವೆಂಟು ಪಾಶವೆಂಬ ಉರುಲಿಗೆ ತಗುಲೀಯೆ ಎಚ್ಚರಿಕೆಚ್ಚರಿಕೆ ೪
ಸಂಸಾರ ನಂಬಲು ಕೆಟ್ಟುಹೋಗುವೆ ಎಚ್ಚರಿಕೆಚ್ಚರಿಕೆಹಂಸ ಚಿದಾನಂದ ಗುರುಹೊಂದೆ ಕಡೆಹಾಯುವೆ ಎಚ್ಚರಿಕೆಚ್ಚರಿಕೆ ೫

೧೧೧
ಎತ್ತಲಿಂದ ಬಂದೆ ಎನ್ನ ಒಗೆತನಕೆ ಎಲೆಖೋಡಿ ಸವತಿಎತ್ತಲಿಂದ ಬಂದೆ ಎನ್ನ ಒಗೆತನಕೆ ಪ
ಕತ್ತಲು ಬೆಳುದಿಂಗಳಂತಾಯಿತುಮಿತ್ತು ಎತ್ತಲಿಂದ ಬಂದು ಸೇರಿತುಬಂದು ಎದುರಿಗೆ ಹಲ್ಲ ತೆರೆದಳುಒಂದು ಮಾತನು ಆಡದೆನ್ನೊಳುಒಂದನ್ನು ಸೇವೆಗೆ ಬರಗೊಡಳುಸಂದಿಯಲಿ ಲೊಟಕೆಯ ಹಾಕುತಲಿಹಳು೧
ಹಾಲೊಳು ವಿಷವ ಹೊಯ್ದಂತೆ ಮಾಡಿದಳುಇಲ್ಲವನೆ ಹೇಳಿ ಕಾಲಕಾಲಲಿ ಎನ್ನ ಒದೆಸಿದಳುಬೇಳ ಮೇಳದಿ ತೊಡೆಯ ಮೇಲೆ ಹೊರಳಿಮೇಲೆಯೆ ಮೀಸೆಯ ಹುರಿ ಮಾಡುವಳು ೨
ನೆರಳ ನೀರೊಳು ಬಗ್ಗಿ ನೋಡುವಳು ಎಬ್ಬಿ ತೆಗೆದುಮರಳಿ ಮರಳಿ ಒಡವೆಯ ನಿಡುವಳುಹೊರಯಿಕೆ ಒಳಯಿಕೆ ಮುರುಕಿಸಿ ನಡೆಯುತಲಿರೆ ಗಂಡಸು ಎಂದು ಅಣಕಿಸುತಿಹಳು೩
ಮೋರೆಯನೀಗ ಎನಗೆ ತೋರಿಸಳುಸೀರೆ ಕುಪ್ಪುಸವ ಆರು ಕಾಣದಂತೆ ಉಡುವಳುದಾರಿಯ ಹಿಡಿ ನೀನಿರಬೇಡೆಂಬಳುನೂರು ಬಾರಿಯು ಸಾರಿದೆನೆಂಬಳು ೪
ಮಾತವಳ ಕೂಡ ಆಡಿ ಎಂಬಳು ಎನ್ನ ಕೈಯಲಿ ಖಡ್ಡಿಯಾತಕೆ ಎನ್ನ ಕರದೆ ಎಂಬಳುದಾತ ಚಿದಾನಂದನ ಚಿಂತನೆ ಮರೆಸಿಘಾತಕಿ ಎನ್ನ ಒಗೆತನ ಕೊಂಡಳು ೫
ಜನನ ಮರಣಗಳಳಿದು ಜಠರ ಬಾಧೆಗಳಳಿದುಘನ ಪುರುಷನಾಗಿ ಘನತಾನಾಗಿ ಇರುವನವನ೬
ಸಕಲ ವಾಸನೆಯಳಿದು ಸಪ್ತ ವ್ಯಸನಗಳಳಿದುಅಖಿಲೇಂದ್ರಿಯಗಳ ವ್ಯಾಪಾರವಳಿದುಸುಖ ದುಃಖವೆರಡಳಿದು ಸೂಕ್ಷ್ಮ ದೇಹವನಳಿದುಮುಕುತಿ ಪತಿ ಚಿದಾನಂದ ಮೂರುತಿ ತಾನಾದವನು೭

೧೧೨
ಎದ್ದ ನೋಡಿ ಯೋಗಿ ದಿವಾಳಿ ತನ್ನಉದ್ಯೋಗವುಡುಗಿ ಕೈಗಂಟು ಮುಳುಗಲು ಪ
ಕ್ಲೇಶ ಪಂಚಕವೆಂಬ ಕಡು ತವಕವದು ಹರಿಯಿತುಈಷಣತ್ರಯವೆಂಬ ಇಟ್ಟ ಉದ್ರಿನಿಂತಿತು೧
ತಪ್ತನಾಲಕು ಒಡವೆ ತಾರದಲ ಹೋಯಿತುಲಿಪ್ತಿ ಇಂದ್ರಿಯ ಲಾಭ ಲಿಂಗಾರ್ಪಿತವಾಯಿತುಗುಪ್ತ ಜೀವವು ತಾನು ಗುರುತಿಲ್ಲದೆ ಮುಳುಗಿತು೨
ದೇಣಿಗಾರನು ಚಿದಾನಂದನು ಒಂದೇ ಕುಳಿತುದೇಣಿಯ ಸಲಿಸೆಂದು ಗಾಣಗತಿಯನೆ ಮಾಡಿದೇಣಿಯಕೆ ಸರ್ವವೆಲ್ಲ ಧಾರೆಯನೆರೆದೆಮಾಣದಲೆ ತನ್ನಾಳು ಮಗನ ಮಾಡಿಕೊಂಡ೩

೫೨
ಎನಿಕೆ ಒಂದಾಗಲಿ ಗುರುವೆ ಎನಿಕೆ ಒಂದಾಗಲಿಎನಿಕೆ ಒಂದಾಗಲಿ ಯೋಚನೆ ಇದಾಗಲಿಧ್ಯಾನ ಚಿದಾನಂದ ಗುರುವ ಧ್ಯಾನ ಮರೆಯದಂತೆ ಎನಗೆ ಪ
ಕಂಡವರು ಉಗುಳಲಿ ಕಾಲಲೆನ್ನ ಒದೆಯಲಿಭಂಡ ಮನುಜನಿವನು ಎಂದು ಬಾಳುಗೇಡಿ ಎನಲಿ ಎನಗೆ ೧
ಅನಾಯಾಸ ಬರಲಿ ಅಸಹ್ಯಿಸಿಕೊಳ್ಳುತಿರಲಿಹೀನಮನುಜನಿವನು ಎಂದು ಬಾಳುಗೇಡಿ ಎನಲಿ ಎನಗೆ೨
ಮುಂದೆ ಕೆಡಹಿ ಬೀಳಲಿ ಮುಂಗೈ ಮೊಳಕಾಲ್ಮುರಿಯಲಿಹಿಂದಣಿಂದ ಕಳ್ಳರು ಕಟ್ಟಿಯೆಹಿಮ್ಮಡ ಕಡಿಯಲೆನಗೆ ೩
ತನುವು ಎಲ್ಲ ನೋಯಲಿ ತಲೆ ಬೇನೆಯು ಬರಲಿಘನ ಕುರುವು ಕುತ್ತವು ಬಲಿದು ಘನವಾಗಿ ಇರಲಿ ಎನಗೆ೪
ಇಂತು ಎನಗಾಗಲಿ ಇದೇ ಎನಗಿರಲಿ ಚಿಂತಾಯುತ ಚಿದಾನಂದನ ಚಿಂತೆ ಮರೆಯದಂತೆ ಎನಗೆ ೫

೫೩
ಎನ್ನ ಗುರುವು ಬಂದನೆ ಏನಂತ ಅಂದನೆ
ನಿನ್ನ ನೀನು ತಿಳಿದು ನೋಡೆನೀನೆ ನಾನು ಎಂದನೆ ಪ
ಒತ್ತು ಮಡವನೆಂದನೆ ವಾಯು ಪೀಕೆಂದನೆಎತ್ತು ಸ್ವರವನೆಂದನೆ ಏರು ಮಾಳಿಗೆಂದನೆ ೧
ಕೆರೆಯ ಮುಳುಗು ಎಂದನೆ ಕಾಣುಜ್ಯೋತಿ ಎಂದನೆಸುರಿವ ಸುಖವು ಎಂದನೆ ಸೂರೆ ಪ್ರಪಂಚೆಂದನೆ ೨ ಹಗರಣದಿಂದಂದನೆ ಹಮ್ಮಿನಿಂದಂದನೆಬಗೆಬಗೆಯಿಂ ಚಿದಾನಂದ ನೀನೇ ಬ್ರಹ್ಮ ಎಂದನೆ ೩

೨೩೬
ಎನ್ನ ಮಾತನು ಕೇಳೋ ತಂದೆ ಎರವಾಗದಿರು ನೀನೆಂದೆನಿನ್ನ ಕುಲವನುದ್ಧರಿಸೆಂದೆ ನೀನು ಸುಪುತ್ರನಾಗೆಂದೆ ಪ
ಸುಳ್ಳನು ಬಿಡುಎಂದೆ ಶರಗೊಡ್ಡಿ ಕೊಂಬೆನು ಎಂದೆಕಳ್ಳತನವು ಬೇಡವೆಂದು ಕಾಲಿಗೆ ಬೀಳುವೆ ತಂದೆ ೧
ನಾಲಿಗೆ ಸಂಬಾಳಿಸೆಂದೆ ನಾರಿಯ ನೆಚ್ಚದಿರೆಂದೆಜಾಲವನೆ ತಳೆ ಎಂದೆ ಜೋಕೆಯ ಸಾಧಿಸು ಎಂದೆ ೨
ವಂಚನೆ ಬೇಡವು ಎಂದೆ ಭಾಷೆಯ ತಪ್ಪದಿರೆಂದೆಕಿಂಚನು ಆಗದಿರೆಂದೆ ಕುಮಂತ್ರ ನೆನಿಸದಿರೆಂದೆ೩
ಸಂಸಾರ ನಂಬದಿರೆಂದೆ ಸ್ವಪ್ನದ ತೋರಿಕೆ ಎಂದೆಧ್ವಂಸವು ಎಲ್ಲವು ಎಂದೆ ಯಾವುದು ಸತ್ಯವಲ್ಲೆಂದೆ ೪
ಕನಕದ ಮಾತಲ್ಲವೆಂದೆ ಕಾಲಗೆ ತುತ್ತಾಗದಿರೆಂದೆಚಿದಾನಂದನ ಹೊಂದು ಎಂದೆ ಚಿತ್ತಾರ ಮಶಿನುಂಗಿತೆಂದೆ೫

೨೩೭
ಎನ್ನ ಹಣೆಯ ಬರಹಕೆ ಎಂಥಾ ಗಂಡ ದೊರೆತನೇಎನ್ನ ಮನವೆಂಬ ಗಂಡನ ಪರಿಯ ಪೇಳುವೆನೆ ಪ
ಅಡಕಿಲಿಗಳನೆಲ್ಲವ ಹುಡುಕುವನೇ ಅಡುಗೆಯ ಮಡಕೆಯನೆಲ್ಲ ಒಡೆದನೇಗುಡುಗುಟ್ಟುತ ಯಾವಾಗಲೂ ಇಹನೇಗುಡ್ಡವನೇರುವನೇ ೧
ಮುನಿಸಿಕೊಂಡು ಮೇಲಟ್ಟದಿ ಕೂರುವನೇಘನ ಹುಟ್ಟನೆ ಮುಂದಿಹನೇಮನೆಯಲೆಲ್ಲರ ಬಡಿವನೇಮತವನು ಕೆಡಿಸಿದನೆ ೨
ದುಡಿವ ಕೋಣನನು ಕೊಂದನೇಕಡಿದುಬಿಟ್ಟನೆ ಕಾಯುವ ನಾಯನುಪುಡಿ ಮಾಡಿದ ಕಟ್ಟುವ ಹಗ್ಗವನೇ ಪಂಕ್ತಿಯ ಸೇರದಿಹನೆ ೩
ಒತ್ತೆಯ ಒಡವೆಯನೆ ತಿಂದನೇಬತ್ತಿಯ ಹಿರಿದಾಗೆ ಚಾಚುವನೇಕಿತ್ತು ಒಗದನೇ ದೇವರನೇ ಕಡಿದನೇ ಮರವನ್ನೇ ೪
ತ್ಯಜಿಸಿದ ನೆಚ್ಚಿದ ಮಡದಿಯನೇತ್ಯಜಿಸಿದ ಮೋಹದ ಮನೆಯನ್ನೇಭಜಿಸಿದ ಚಿದಾನಂದ ಗುರುವನ್ನೇನಿಜದಲಿ ಬೆರೆತನು ಅವರನ್ನೇ ೫

೨೩೮
ಎರಡು ದಿನ ಎರಡು ದಿನ ಸಂಸಾರ ಎರಡು ದಿನಎರಡು ದಿನವೆನ್ನದೇ ಕಡುತಲಿಹೆ ಮನುಜ ಪ
ಪೋರತನದಿ ಕುಣಿಯುವುದು ಎರಡು ದಿನನಾರಿ ಹಿಂದೆ ತಿರುಗುವುದು ತಾನು ಎರಡು ದಿನಸೇರಿ ಮನೆಯಗ್ಗಳಿಕೆ ಮೂಡುವುದು ತಾನು ಎರಡು ದಿನಜಾರಿ ಸತ್ಯವು ನಡುಗುವುದು ತಲೆಯು ಎರಡು ದಿನ೧
ಸಿರಿಯು ಬಂದು ಹಿಂದಕೆ ಸೆಲೆಯುವುದು ತಾನು ಎರಡುದಿನದೊರೆತನವು ದೌಲತ್ತು ತಾನದು ಎರಡು ದಿನಹಿರಿಯ ಆಕೆಯು ಮನೆಯು ಸೇರಿ ಬಳಲುವುದು ಎರಡು ದಿನತೆರಳುವುದು ದೊಡ್ಡ ಯಾತ್ರೆಗೆ ತಾನು ಎರಡು ದಿನ ೨
ಇಂತು ಎನಿತು ವ್ಯರ್ಥವಾಗಿ ಹೋದವೀಗ ದಿನಗಳುಇಂತು ಎನಿತು ಜನ್ಮದಲಿ ತಿರುಗುತಿರುವೆ ಯುಗಗಳುಚಿಂತೆಯಿಕ ಚಿದಾನಂದ ಬಗಳೆ ಹೊಂದು ನೀನುಅರಿತು ನಿನ್ನ ಖೂನ ತಿಳಿದು ಬಹುದು ಬ್ರಹ್ಮಜ್ಞಾನ ೩

೨೪೦
ಎರಿ ಮುಂಡೆ ಇವನೆರಿ ಮುಂಡೆ ಏನುಅರಿಯದೆ ಒದರುವ ಎರಿಮುಂಡೆ ಪ
ತನ್ನ ನಿಜವ ತಾನು ಅರಿಯದೆ ತತ್ವದಕುನ್ನಿಯಂತೆ ಒದರುವ ಎರಿಮುಂಡೆಭಿನ್ನ ಬುದ್ಧಿಯಲಿದ್ದು ನಾ ಬ್ರಹ್ಮವೆಂಬುದನುಚೆನ್ನಾಗಿ ಅರಿಯದ ಎರಿಮುಂಡೆ ೧
ಯೋಗವ ತಿಳಿಯದೆ ಯೋಗವ ಹಳಿವನುಈಗ ಹೇಳಿವನೀಗ ಎರಿಮುಂಡೆಆನಿಹೆ ಬ್ರಹ್ಮವು ನಾನೆಂದು ಎತ್ತೆತ್ತೆನುಡಿವನು ಎರಿಮುಂಡೆ ೨
ಕೋಟಿ ಸೂರ್ಯರ ತೇಜ ಪಾಟಿಸಿ ಕಾಣದೆಬೂಟಕ ನುಡಿವವ ಎರಿಮುಂಡೆದಾಟಿ ಸಹಸ್ರಾರ ಬ್ರಹ್ಮರಂಧ್ರದ ನಾಳ ಕೇಳದ ನರನಾಗ ಎರಿಮುಂಡೆ ೩
ಮಾತರಿಯದೆ ಜ್ಞಾನ ನುಡಿಯಿದ್ದುದಕಳೆದು ಮಣ್ಣು ಹೋಯ್ಯೆಂಬುವ ಎರಿಮುಂಡೆಮಾತಿಲಿ ಬ್ರಹ್ಮವು ಆಗಬೇಕಾದರೆ ಮಹಾಸಾಧನವೇಕೆ ಎರಿಮುಂಡೆ ೪
ಒಂದು ಹೋಗಲಿಲ್ಲ ಒಂದೇ ನಾನೆಂಚಿನುಇಂದು ಕೇಳುವನೀಗ ಎರಿಮುಂಡೆಸುಂದರ ಚಿದಾನಂದ ಸ್ವರೂಪ ತಿಳಿಯದೆ ಸುಲಭ ಎಂದೆಂಬುವ ಎರಿಮುಂಡೆ ೫

೨೪೧
ಎಲೆ ಕೊರಡೆ ಕೇಳೆಲೆ ಕೊರಡೆಎಳ್ಳಷ್ಟು ತೊಡಕಿಲ್ಲೆಲೆ ಕೊರಡೆ ಪ
ರೋಗಿಗೆ ಔಷಧಿ ಕಹಿ ಕೊರಡೆರೋಗ ನಿವಾರಕ ತಿಳಿ ಕೊರಡೆಎನ್ನ ಮಾತುಗಳು ಕಹಿ ಕೊರಡೆಮನ ಅಮೃತವು ತಿಳಿ ಕೊರಡೆ೧
ಅಂಗವು ಎಂತಾಯಿತು ಎಲೆ ಕೊರಡೆಅಧಿಪತಿಗಳನರಿನೀ ಎಲೆ ಕೊರಡೆಅಂಗವ ಧರಿಸಿಯೆ ಬೆಳೆಗುವವನ ತಿಳಿಅಳಬೇಡಲೆ ಮಾನವ ಕೊರಡೆ ೨
ಎಲ್ಲಿಂದ ಬಂದೆಯೋ ಎಲೆ ಕೊರಡೆಎಲ್ಲಿಗೆ ಹೋಗುವೆ ಎಲೆ ಕೊರಡೆಎಲ್ಲಿಯ ಕುಲ ನಿನ್ನ ನಾಮವದಾವುದುಎಗರಾಡಲು ಬೇಡಲೆ ಕೊರಡೆ ೩
ಸತಿ ಎಷ್ಟಾದರು ಎಲೆ ಕೊರಡೆಸುತರೆಷ್ಟಾದರು ಎಲೆ ಕೊರಡೆಅತಿ ದೇಹವು ಮನೆ ಎಷ್ಟಾದವು ತಿಳಿಹಿತರೆಲ್ಲಿಹರೋ ಎಲೆ ಕೊರಡೆ ೪
ಕರ್ಮೋಪಾಧಿಲಿ ಎಲೆ ಕೊರಡೆಕರ್ಮವು ಸತ್ತಿತು ಎಲೆ ಕೊರಡೆಓರ್ವ ಚಿದಾನಂದ ನೀನೆಂದು ಕಾಣಲುಜಾರುವುದದು ಭವ ತಿಳಿ ಕೊರಡೆ ೫

೩೫೧
ಎಲೆ ಜೀವನ್ಮುಕ್ತ ನೀನೆ ಬ್ರಹ್ಮವೆಂದು ಕಾಣೋಎಲೆ ಜೀವನ್ಮುಕ್ತ ನೀನೆ ಬ್ರಹ್ಮವೆಂದು ಕಾಣೋ ಪ
ಭಾನುವ ನೋಡಲು ಒಳಕಂಡಿಯ ಹಂಗ್ಯಾಕೆನೀನು ನಿನ್ನರಿವುದಕೆ ಯೋಗಗಳ ಸಾಧನ ಬೇಕೆ ೧
ನಳಿನ ಸಖನ ನೋಡುವುದಕೆ ಬೆಳಕನು ಕೋರಲುಬೇಕೆಬಲು ನಿನ್ನನು ಕಾಣುವುದಕೆ ಸಾಧಕರ ಸಾಧನ ಬೇಕೆ ೨
ಯೋಗಗಳೆಂಬುವುದಿನ್ನು ಜೀವ ಭ್ರಾಂತಿಯೆನ್ನುಈಗಲು ಇತರರಿಲ್ಲೆನ್ನು ಚಿದಾನಂದ ಸದ್ಗುರು ತಾನೆ ಎನ್ನು ೩

೧೦
ಎಲ್ಲ ತಾಪತ್ರಯದ ಚಿಂತೆ ಬಗಳಗೆ ಹತ್ತಿಹುದುಸೊಲ್ಲು ಸೊಲ್ಲಿಗೆ ನೆನೆವ ಚಿಂತೆ ಎನಗೆ ಹತ್ತಿಹುದು ಪ
ಮಡದಿ ಸುತರು ಮನೆಯ ಪಶುವು ಬಗಳೆಗೆ ಹತ್ತಿಹುದುಷಡು ಚಕ್ರಂಗಳ ಭೇದಿಪುದೆಲ್ಲಾ ಎನಗೆ ಹತ್ತಿಹುದುಕೊಡು ಕೊಳ್ಳುವುದು ಹಾಕುವುದೆಲ್ಲಾ ಬಗಳೆಗೆ ಹತ್ತಿಹುದುಎಡೆದೆರಪಿಲ್ಲದೆ ನಾದವ ಕೇಳುವುದೆನಗೆ ಹತ್ತಿಹುದು ೧
ನಿತ್ಯ ನಿತ್ಯದ ಪರಾಮರಿಕೆಯು ಬಗಳೆಗೆ ಹತ್ತಿಹುದುಮತ್ತೆ ಭ್ರೂಮಧ್ಯದ ಅರಿವೆಯ ಹುಚ್ಚು ಎನಗೆ ಹತ್ತಿಹುದುಬಿತ್ತಿ ಬೆಳೆಯುವುದು ಮಳೆಯಿಲ್ಲೆಂಬುದು ಬಗಳೆಗೆ ಹತ್ತಿಹುದುಎತ್ತೆತ್ತಲು ತಾ ಬೆಳಕ ನೋಡುವುದು ಎನಗೆ ಹತ್ತಿಹುದು ೨
ಭಕುತರ ಬದುಕನು ಹಸನು ಮಾಡುವುದು ಬಗಳೆಗೆ ಹತ್ತಿಹುದುಭಕುತಿಯ ಶರಧಿಲಿ ಮುಳುಗಾಡುವುದು ಎನಗೆ ಹತ್ತಿಹುದುಸದಾ ಕಾಲವು ಕಾದಿರುತಿಹುದು ಬಗಳೆಗೆ ಹತ್ತಿಹುದುಚಿದಾನಂದ ಶ್ರೀ ಬಗಳೆಯ ಭಜಿಪುದು ಎನಗೆ ಹತ್ತಿಹುದು ೩

೨೩೯
ಎಲ್ಲಿ ಗತಿಯು ನಾರಿಯ ಕೂಡಿದವಗೆಎಲ್ಲಿ ಗತಿಯು ತಿಳಿಯೋಬಲ್ಲವನಾದರೆ ಸತಿಯ ಬಿಟ್ಟು ಸದ್ಗುರು ಹೊಂದಲು ಮನೆಯು ಪ
ಮೊದಲೇ ಕೋತಿಯು ಮದ್ಯವನುಕುಡಿಸೆ ಮನೆಗೆ ಬಹುದೇಅದರ ತೆರೆದಿ ಪಾಮರನಿಗೆ ಸ್ತ್ರೀಯಕೂಡಿಸಬಹುದೇ ೧
ಕಣ್ಣೆಯಿಲ್ಲದವನೀಗಕುಣಿಯ ಬೀಳುವನಲ್ಲಕಣ್ಣು ಎರಡು ಇದ್ದವನುಬೀಳೆ ಪಾಪವಲ್ಲವೆ ೨
ಮುಕ್ತಿ ಬೇಕಾದರೆ ತನಗೆ ಸು-ದತಿಯ ಬಿಡಬೇಕುಶಕ್ತಿ ಚಿದಾನಂದ ಶುದ್ಧ ಬ್ರಹ್ಮವನೀತ ಕೂಡಲಿಬೇಕು ೩

೨೪೨
ಎಲ್ಲಿ ಮತಿಯು ಎಲ್ಲಿ ಗತಿಯು ಎಲ್ಲವೀಗ ಹುಸಿಯು ಕಂಡ್ಯಎಲ್ಲವಿಹುದು ಬಹುದು ಬಹಳ ಸಂಸ್ಕಾರಿಯೊಬ್ಬಗೆ ಪ
ಭಕ್ತಿಯನ್ನು ಮಾಡುವರು ಹಲವು ಮಂದಿ ನೋಡಲಿಕೆಭಕ್ತಿಯಿಹುದು ತಾನೀಗ ಅದರೊಳೊಬ್ಬಗೆಮುಕ್ತಿಮಾತ ಕೇಳುವರು ಮುಗಿದ ಕೈಗಳಿಂದಮುಕ್ತಿ ಮೇಲೆ ಚಿತ್ತವಿಹುದು ಅದರೊಳೊಬ್ಬಗೆ ೧
ಕಣ್ಣುಗಳ ಮುಚ್ಚಿಕೊಂಡು ನೋಡವರು ಆತ್ಮನಕಣ್ಣು ಕುಳಿತು ಕಾಣಬಹುದದರೊಳೊಬ್ಬಗೆಹುಣ್ಣಿಮೆಯ ಬೆಳಕಿನಂತೆ ಹರಹಿಯಿಹುದು ಎಂಬರುತಣ್ಣನೆಯ ಕಳೆಯು ತೋರುವುದದರೊಳೊಬ್ಬಗೆ ೨
ಜ್ಞಾನಗಳ ಹೇಳುವರು ಜ್ಞಾನಿಗಳೊ ಎಂಬಂತೆಜ್ಞಾನ ನಿಶ್ಚಯಹುದು ತಾನು ಅದರೊಳೊಬ್ಬಗೆಮಾನನಿಧಿ ಚಿದಾನಂದ ತಾನೀಗ ಎನುತಲಿಹರುತಾನೆ ತಾನಾದ ನಿಜವು ಅದರೊಳೊಬ್ಬಗೆ ೩

೧೧೩
ಎಲ್ಲಿದ್ದರೇನು ಯೋಗಿ ಮತ್ತೆಲ್ಲಿದ್ದರೇನುಫುಲ್ಲ ಲೋಚನನರಿತು ಪುರುಷೋತ್ತಮನಾದ ಬಳಿಕ ಪ
ಈಷಣ ತ್ರಯವಳಿದು ಇಷ್ಟ ಕಾಮ್ಯಗಳಳಿದುದೋಷವೆಂಬುದ ನಳಿದು ದ್ವೇಷವಳಿದುಆಸೆಯೆಂಬುದು ಅಳಿದು ಅಷ್ಟಪಾಶಗಳಳಿದುಈಶ ಸರ್ವೇಶವಿಭು ತಾನಾಗಿರುವವನು ೧
ಮನದ ವರ್ತನೆಯಳಿದು ದುಷ್ಟಮದಗಳ ಕಳೆದುಕನಸು ಜಾಗೃತಿ ಸುಷುಪ್ತಿ ಕರ್ಮವಳಿದುಜನನ ಮರಣಗಳಳಿದು ಜಠರ ಬಾಧೆಗಳಳಿದುಘನ ಪುರುಷನಾಗಿ ಘನ ತಾನಾಗಿ ಇರುವನವನು ೨
ಸಕಲ ವಾಸನೆಯಳಿದು ಸಪ್ತವ್ಯಸನಗಳಳಿದುಅಖಿಲೇಂದ್ರಿಯಗಳ ವ್ಯಾಪಾರವಳಿದುಸುಖದುಃಖವೆರಡಳಿದು ಸೂಕ್ಷ್ಮ ದೇಹವನಳಿದುಮುಕುತಿ ಪತಿ ಚಿದಾನಂದ ಮೂರುತಿ ತಾನಾದವನು ೩

೨೪೩
ಏಕೆ ಕೆಡುವಿರಿ ಸಂಸಾರವು ಸ್ವಪ್ನವೆಂದು ತಿಳಿಯಬಾರದೇಏಕ ಬ್ರಹ್ಮಾಸ್ತ್ರ ದೇವತೆಯ ಹೊಂದಿ ಜನ್ಮ ಕಳೆಯಬಾರದೆ ಪ
ಬಿಸಿಲೊಳು ಬಳಲುವರ ಕಂಡು ನೆರಳಿಗೆ ಕರೆಯಬಾರದೆತೃಷೆಯಿಂದ ನಾಲಗೆ ಒಣಗುತಲಿರೆ ನೀರನೆರೆಯಬಾರದೆಹಸಿದು ಬಂದವರಿಗೆ ಇದ್ದದ್ದರೊಳಗೆ ಅನ್ನವ ನೀಡಬಾರದೆಹುಸಿನುಡಿಯ ಬಿಟ್ಟು ಸತ್ಯವಾಕ್ಯವನೀಗ ಆಡಬಾರದೆ೧
ಸತಿ ಸುತರು ಸ್ವಾರ್ಥ ಮರೆತು ಮುಕ್ತ ಮನದಿ ಧರ್ಮ ಮಾಡಬಾರದೆಹಿತದವರು ಒಬ್ಬರಾದರೂ ಹಿಂದೆ ಬರುವರೇ ನೀನೇ ನೋಡಬಾರದೆಮತ ಅಭಿಮಾನ ಮರೆತು ಆತ್ಮಾಭಿಮಾನವ ಮರೆಯಬಾರದೆ ೨
ನಂಟರ ಮೇಲೆ ಚಿಂತೆಯಿದ್ದಂತೆ ಗುರುವಿನ ಮೇಲೆ ಇರಬಾರದೆಕುಂಠಿಣಿ ಮನೆಗೆ ಹೋಗುವಂತೆ ಮಠಕೆ ಹೋಗಬಾರದೆಒಂಟೆಯಂದದ ಮೋರೆಯನೀಗ ಹಿರಿಯರ ಕಂಡು ತಗ್ಗಿಸಬಾರದೆ ೩
ಸಾಧುಗಳು ಕಾಣೆ ಭಕ್ತಿಯಲೆದ್ದು ಚರಣಕೆ ಎರಗಬಾರದೇವ್ಯರ್ಥವಾದದ ಮಾತನು ಬಿಟ್ಟು ಸುಮ್ಮನೆ ತಾನಿರಬಾರದೆಕ್ರೋಧದ ಬೇರನು ಮೊಳಕೆಯಸಹಿತ ಕೀಳಬಾರದೆಮಾರ್ಗದಿ ಕಲ್ಲುಮುಳ್ಳುಗಳಿರೆ ಕಡೆಗೆ ತೆಗೆದೆಸೆಯಬಾರದೆ೪
ನಾನಾರು ಎಂದು ವೇದಾಂತ ವಾಕ್ಯದಲಿ ನಿನ್ನ ಅರಿಯಬಾರದೆವಾದವ ಬಿಟ್ಟು ಚಿದಾನಂದನ ಚರಣದಿ ಹೊರಳಬಾರದೆಮೇದಿನಿ ಪೂರ್ಣ ಸರ್ವಬ್ರಹ್ಮವೆಂದು ತಾನು ಅರಿಯಬಾರದೆಭೇದಾ ಭೇದಕೆ ಹೊರಗಾದ ಬಗಳೆಯ ಕೂಡಬಾರದೆ ೫

೨೩೫
ಏತರಿಂದ ಬ್ರಾಹ್ಮಣಿಕೆ ಪರಮಾತ್ಮನೆತಾನೆಂದು ತಿಳಿಯದ ನರನಲಿ ಪ
ಜನಿವಾರ ನೋಡಿ ಬ್ರಾಹ್ಮಣ ನೆಂದರೆ ಸು-ಮ್ಮನೆ ಮರಕೆ ಬಳ್ಳಿ ಸುತ್ತಿಲ್ಲವೆಹಣೆಯ ಬಟ್ಟದ ನೋಡಿ ಬ್ರಾಹ್ಮಣ ನೆಂದರೆಹಾದಿ ಕಲ್ಲಿಗೆ ಸುಣ್ಣ ಬರೆದಿಲ್ಲವೆ ೧
ಜುಟ್ಟು ನೋಡಿ ಇವ ಬ್ರಾಹ್ಮಣ ನೆಂದರೆಜುಟ್ಟಿನ ಗುಬ್ಬಿಯು ತಾನಿಲ್ಲವೆಉಟ್ಟ ಧೋತ್ರವ ನೋಡಿ ಬ್ರಾಹ್ಮಣ ನೆಂದರೆಉಟ್ಟುದಿಲ್ಲವೆ ಮನೆಯ ನಡುಗಂಬ ೨
ಬ್ರಾಹ್ಮಣನಾದರೆ ಬ್ರಹ್ಮ ಸರ್ವವು ಆಗಿಬ್ರಹ್ಮವಖಂಡದಿ ಭೇದವಿಲ್ಲದೆಬ್ರಹ್ಮ ಚಿದಾನಂದ ಗುರುನಾಥನಾಗಿಯೆಬ್ರಹ್ಮವ ಕಂಡವನೀಗ ಬ್ರಾಹ್ಮಣ ೩

೧೧
ಏನ ಪಡೆದಿದ್ದೆನೋ ಸುಕೃತವ ಮುಂ-ದೇನ ಪಡೆದಿದ್ದೆನೋ ಮಾನ ನಿಧಿಯು ಚಿದಾನಂದ ಗುರುವ ಕಂಡುತಾನೆ ತಾನಾಗಿ ತನ್ನನು ಮರೆದಿರ್ದುದ ಪ
ಆನಂದ ಮೂರುತಿಯ ನಾನೀಗ ಅತಿ ವೇಗ ಧ್ಯಾನಿಸಲುಏನೇನು ತೋರದೆ ಯೋಚನೆಗಳು ಕುಂದಿನಾನು ನೀನೆಂಬ ನೀತಿಯ ಮರೆದಿರ್ದುದಾ ೧
ಶತಕೋಟಿ ಶಶಿಸೂರ್ಯರ ಪ್ರಭೆಯ ತಾಳ್ದುಶತ ಪತ್ರಗಳ ಗೇಹನ ಅತಿಹರುಷದಿ ಕಂಡು ಆತನೇ ತಾನಾಗಿಮತಿಯನೆ ತೊರೆದೆ ಮರೆತು ನಾ ನಿರ್ದುದ ೨
ನಿರುಪಮ ನಿರ್ಗುಣನ ನಿರ್ವಿಕಲ್ಪ ನಿರವಯ ನಿರೀಹನವರಚಿದಾನಂದ ಗುರುವ ವರದಾತನಚರಣ ನೆನೆದು ಮನ ಚಲಿಸದಂತಿರ್ದುದ ೩

೫೪
ಏನ ಮಾಡಿ ತೀರುವೆ ಸದ್ಗುರುನಾಥಗೆ ಏನಮಾಡಿ ತೀರುವೆ
ನೀನೆಯು ಬ್ರಹ್ಮವೆಂದು ಯನ್ನಕೈಯಲಿ ಹಿಡಿದು ಕೊಟ್ಟ ಪ
ವೇದಕ್ಕೆ ನಿಲುಕದಿಹ ಷಣ್ಮತಗಳ ವಾದಕ್ಕೆ ತೋರದಿಹ
ನಾದಕ್ಕೆ ಬೇರಿಹ ನಾಮರೂಪವಳಿದಿಹ
ಆದಿಯು ನೀನೆಯೆಂದು ಯನ್ನಕೈಯಲಿ ಪಿಡಿದು ಕೊಟ್ಟ ೧
ಬುದ್ಧಿ ಮನಕೆ ಹೊರತಾ ತತ್ವಂಗಳಲಿದ್ದ ಗುಣಕೆ ಅತೀತ
ಶುದ್ಧ ಬ್ರಹ್ಮವು ನೀನು ಸಿದ್ಧಾ ಸಿದ್ಧಾಂತೆಂದು
ಮುದ್ದಿಸಿ ನಿನ್ನನು ಎನ್ನ ಕೈಯಲಿ ಹಿಡಿಕೊಟ್ಟ ೨
ಕಾರ್ಯ ತನುವ ಧರಿಸಿ ಜನ್ಮ ಜನ್ಮಾದಿ ತೋರುವ ಜೀವವೆನಿಸಿ
ಕಾರ್ಯ ಕಾರಣಾತೀತನಾದ ಚಿದಾನಂದನು ಬೇರಿಲ್ಲ
ನೀನೇ ಎಂದು ಎನ್ನ ಕೈಯಲಿ ಹಿಡಿದು ಕೊಟ್ಟ ೩

೨೪೪
ಏನು ತಿಳಿವುದೋ ಮೂರ್ಖರಿಗೇನು ತಿಳುವುದೋ
ತಾನೇ ತಾನಾದ ತತ್ವವ ಹೇಳಲು ತನ್ನ ತಲೆಯನು ತೂಗುತಿರುವಗೆ ಪ
ಮಂಕರಿ ಹೊರುವ ಕೋಣನ ಮುಂದೇ ಮಹಾವೀಣೆಯನು ಹಿಡಿದುಕಿಂಕಿಣಿ ಕಿಣಿ ಕಿಣಿ ಎಂದು ಬಾರಿಸೆ ತಿಳಿಯುವುದೇಓಂಕಾರದ ಮಹಿಮೆಯನು ಒಲಿದು ಹಿರಿಯರು ಹೇಳುತಿರಲುತಂಕದಿ ಕೇಳುತ ಹೋ ಹೋ ಎಂದು ತಲೆಯನು ತೂಗುವರಿಗೆ೧
ಮೂಟೆಯ ಹೊರುವ ಕತ್ತೆಯ ಮೂಗಿಗೆ ಮಘ ಮಘಿಪ ಕಸ್ತೂರಿಯ ಹಚ್ಚಲುಗಾಳಿಯ ಪರಿಮಳ ಸುಗಂಧಗಳ ಅದು ತಿಳಿಯುವದೇಲಾಲಿಪ ಬ್ರಹ್ಮಾನಂದದ ಲಕ್ಷಣ ಲಕ್ಷ್ಯವ ಹಿರಿಯರು ಹೇಳುತಿರಲು ಕೇಳಿದಾಗಲೇಹೋ ಹೋ ಎನ್ನುತ ತಲೆಯ ತೂಗುವವರಿಗೆ ೨
ಸತ್ಯಾನಂದರೆ ಅವರೇ ಗುರುಗಳು ಸತ್ಯ ಸಂಧರು ಅವರೇ ಭಕ್ತರುಸತ್ಯ ಜ್ಞಾನವ ತಿಳಿಯಲಿಕೆ ಅವರೇ ಯೋಗ್ಯರುಸತ್ಯವಸ್ತು ಚಿದಾನಂದ ಸಾಕ್ಷಾತ್ ರೂಪವೇ ಹೇಳುತಿರಲುಚಿತ್ತದಿ ಕೇಳು ಹೋ ಹೋ ಎಂದು ತಲೆಯ ತೂಗುವರಿಗೆ ೩

೨೪೫
ಏನು ನಡತೆಯೋ ಏಕೆ ಕೆಡುವೆಯೋಮನುಜ ಜನ್ಮವನ್ನು ವ್ಯರ್ಥಮಾಡಿಬಿಟ್ಟೆ ಮೂರ್ಖ ಪ
ಹಂಡತಿ ಕದಪನು ನೀನು ಸವರಿ ನೋಡುವಂತೆ ಮೊನ್ನೆಕೊಂಡ ಸಾಲಗ್ರಾಮವನ್ನು ಮುಟ್ಟಬಾರದೇ ತಡಹಬಾರದೇರಂಡೆಯರ ವಿಷಯವಾಗಿ ಕಾಲಿಗೆರಗಿದಂತೆ ತತ್ತ್ವಪಂಡಿತರ ಚರಣಕ್ಕೆ ಬೀಳಬಾರದೆ ಹೊರಳಬಾರದೆದುಂಡು ಮುತ್ತಿನ ಸರವ ಸತಿಗೆ ಕೊಂಡು ಹಾಕಿದಂತೆಪಿಂಡಾಂಡ ವಿವರಿಪರಿಗೆ ವಂದನೆ ಮಾಡಬಾರದೇಭಂಡ ಮಾತನು ನಾರಿ ಕಿವಿಯ ಖಂಡಿ ಯೊಳು ಪೇಳ್ದ ತೆರದಿಸುವಚನ ಸಾಧುಗಳೊಳು ಉಸುರಬಾರದೇ ಅರುಹಬಾರದೆ ೧
ನನ್ನ ಮಕ್ಕಳೆಂದು ನೀನು ಬನ್ನಬಟ್ಟ ತೆರದಿ ಇತರಸಣ್ಣವರ ಮೇಲೆ ನೀನು ಕರಗಬಾರದೆ ತೋರಬಾರದೆಹೊನ್ನು ಹಣವು ಬಿದ್ದುಯಿರೆ ಹೆಂಟೆಯೆನುತಲಾಗ ಎರಡುಕಣ್ಣು ತೆರೆದು ದೃಷ್ಟಿಸಿ ನೋಡಬಾರದೆ ಕಾಣಬಾರದೆಮನ್ನಣೆ ಎಂಬುದನ್ನು ಸೂಕರನ ವಿಷೈ ಸಮನುಎನ್ನುತಲಿ ಚಿತ್ತದಲ್ಲಿ ಎಣಿಸಬಾರದೆ ಹತ್ತಬಾರದೆಉನ್ನತದ ಜೀವರಾಶಿ ಎಲ್ಲ ಒಬ್ಬ ಶಿವನು ಎಂದುಭಿನ್ನ ಕಳೆದು ಆತ್ಮ ಸುಖದಿ ಮುಳುಗಬಾರದೆ ಬೆಳಗಬಾರದೆ ೨
ನಾನಾ ಜನ್ಮ ಜನ್ಮ ತಿರುಗಿ ನರನ ಜನುಮ ಬಂದುನಾನಾರೋ ಎಂದು ನಿನ್ನ ತಿಳಿಯಬಾರದೆ ಅರಿಯಬಾರದೆಜ್ಞಾನಿಗಳ ಮುಖಗಳಿಂದ ನಿನ್ನ ಒಳಗೆ ನಿನ್ನ ಕಂಡುನಾನೆ ಬ್ರಹ್ಮವೆಂದು ನಿಜವ ಕಾಣಬಾರದೆ ಕೂಡಬಾರದೆನಾನಾಧ್ವನಿಯು ನಾನಾಕಳೆಯು ದೇಹದೊಳು ತೋರುತಿರಲುಆನೆಯಂತೆ ನೀನು ಈಗ ತೊನೆಯಬಾರದೆ ತೂಗಬಾರದೆತಾನಾದ ಚಿದಾನಂದ ಗುರುವು ತಾನೆ ತಾನೆಯಾಗಿನಾನು ನೀನು ಎಂಬುದನ್ನು ತಿಳಿಯಬಾರದೆ ಕಳೆಯಬಾರದೆ ೩

೧೧೪
ಏನು ಭಯ ನನಗೆ ಏನು ಭಯತಾನೆಯಾದ ಪರಬ್ರಹ್ಮ ತಾನೆಯಾಗಿ ತಾನಿಹಗೆ ಪ
ಕಾಮಿಸಿ ಸುತರು ಸೊಸೆಯು ಕೊನೆಯಿಲ್ಲದ ಬಯಕೆಯಾಗೆಕಾಮನನ್ನು ಕಾಲಲೊದ್ದು ಕಸಕೆ ಮಾಡಿದವಗೆ ೧
ಇಹಪರ ವಾಸನೆಯನೆಲ್ಲ ಲೋಕ ವಾಸನೆಯದಹಿಸಿ ಬೂದಿಯನ್ನೆ ಮಾಡಿ ಧೂಳಿಪಟ ಮಾಡಿದವಗೆ ೨
ಬಣ್ಣ ಬಣ್ಣದ ಕ್ರೋಧಮದಗಳ ಬಳಿದು ಶೋಕ ಮೋಹವನುಣ್ಣಗೆ ಮಾಡಿ ಎಲ್ಲವ ನುಂಗಿ ನೀರು ಕುಡಿದವಗೆ ೩
ದಿಟ್ಟ ತಾಪತ್ರಯ ಕ್ಲೇಶ ದುಷ್ಟಗುಣ ವೆಂಬುದೆಲ್ಲವಹೊಟ್ಟು ಮಾಡಿ ಹಾರಲೊದ್ದಿಹ ದಿಟ್ಟ ಮಾನವಗೆ೪
ಕ್ರಿಯಾ ಭ್ರಾಂತಿ ಸಂಶಯ ಕಪಟ ಮೋಹ ಮೊಳೆಯ ಕಿತ್ತುಬಯಲು ಚಿದಾನಂದ ಸದ್ಗುರು ಬ್ರಹ್ಮವಾಗಿ ತೂಗುವಗೆ ೫

೨೪೬
ಏನು ವರ್ಣಿಸಿದ ಕವೀಶ್ವರ ನಾರಿಯಜ್ಞಾನಕೆ ಹಾನಿಯ ಮುಕ್ತಿಗೆ ಮೃತ್ಯುವಕಾನನ ರೂಪು ನರಕ ಕುಂಡವೆಂಬಳತಾನು ಕೆಡಲು ಸುಳ್ಳು ಸ್ತುತಿ ಮಾಡಿದ ಪ
ಗುದ್ದಲಿ ಮೂಗನು ಸಂಪಿಗೆ ನನೆ ಎಂದಬುದ್ದಲಿ ಮುಖವನು ಪದ್ಮಮುಖವೆಂದಇದ್ದಲಿ ತನುವನು ಇಂದ್ರನೀಲವೆಂದಹದ್ದಿನ ಕೈಯನು ಹರಿ ಸುಂಡಲೆಂದ ೧
ಬೆಳ್ಳುಳ್ಳಿ ಹಲ್ಲನು ದಾಳಿಂಬ ಬಿತ್ತವೆಂದಹುಲ್ಲೆಗಣ್ಣೆಂದನು ಸುಳಿಗಣ್ಣಮಲ್ಲಿಗೆ ಮೊಳೆಯೆಂದನು ಮುರುಕಿ ಮಾತುಗಳನ್ನುಜೊಲ್ಲು ಸುರಿವುದಕೆ ಅಮೃತವೆಂದನು ೨
ಕುಂಭ ಕುಚವೆಂದನು ಮಾಂಸದ ಮುದ್ದೆಯಬಿಂಬಾಧರವೆಂದನು ಹಂದಿಯ ತುಟಿಯಕಂಬ ಬಾಳೆ ಎಂದನು ಕೊರಡು ತೊಡೆಯನುಬಿಂಬ ಕನ್ನಡಿ ಎಂದನು ಕುಣಿಗಲ್ಲವ ೩
ಕಲಹಂಸ ನಡಿಗೆಯೆಂದ ಕೋಣನ ನಡಿಗೆಯಅಳಿಕುಂತಳವೆಂದ ಮುರುಟು ಕೂದಲನುಬಲು ಸಿಂಹನಡುವೆಂದ ಮೊಸಳೆ ನಡುವನ್ನುಹೊಳೆವ ಬೊಂಬೆಯೆಂದ ಕೊಳಕು ಮೈಯನ್ನು ೪
ಹೊಲಸು ಮೂಳಿಗೆ ನಾನಾ ಹೋಲಿಕೆಗಳನಿಟ್ಟುತಿಳಿದಂತೆ ಕವಿತಾನು ವರ್ಣಿಸಿದ ಕೊಂಡಾಡಿಸುಲಭ ಚಿದಾನಂದ ಸುಪಥವ ಕಾಣದಲೆಕಳಕೊಂಡ ಕವಿತಾನು ಬಹು ಪುಣ್ಯ ಪಥವ ೫

೧೧೫
ಏಸು ಜನ್ಮದ ಸುಕೃತವದು ಬಂದು ಒದಗಿತೋದೇಶಿಕೋತ್ತಮನ ದಯದಿಆಸೆಗಳು ಮರೆಯಾಗಿ ಆಷ್ಟ ಪಾಶಗಳಳಿದುಈಶ ಸರ್ವೇಶನಾಗಿ ಹೋದೆ ಪ
ಕಂಗಳ ಮುಚ್ಚಿ ದೇಹದೊಳು ದಿಟ್ಟಿಸಿ ನೋಡೆಮಂಗಳವೆ ತೋರುತಿಹುದು ಅಹುದುತಿಂಗಳಿನ ಕಳೆಯಂತೆ ಬೆಳಕಬೀರುತ ಬೆಳು-ದಿಂಗಳನೆ ಹರಡಿದಂತೆ ಅಂತುಕಂಗೊಳಿಸುತಿಹುದು ಬಗೆಬಗೆಯ ವರ್ಣಛಾಯೆಅಂಗ ವರ್ಣಿಸುವರಾರೋ ಆರೋಬಂಗಾರ ಪುಟದಂತೆ ನಡುಮಧ್ಯೆ ಹೊಳೆಹೊಳೆದುಹಿಂಗದನುದಿನ ತೋರುವ ಗುರುವಾ ೧
ನಾದವದು ಸುನಾದ ಸುಸ್ವರವರಳೆಭೇದವೆಂಬುದು ಮರೆಯಿತು ಕುರಿತುಮದವು ಇಂದ್ರಿಯ ಸ್ವರ ವ್ಯಾಪಾರ ಉಡುಗಿಹೋದವು ಸುಖದಿ ಮುಳುಗಿಕ್ರೋಧ ಕಾಮವು ಲೋಭ ಎಂಬುವರ ಕೈಕಾಲುಸೇದಿದುವು ಬೋಧದೊಳಗೆ ಕೆಳಗೆಛೇದವಾದುವು ತಾಪತ್ರಯವು ಈಷಣ ವ್ಯಸನಮೋದಿದರು ಅಮೃತ ಕಳದಿ ಝಳದಿ ೨
ನಿತ್ಯವಹ ಪರಮಾತ್ಮ ನಿಶ್ಚಲದಿ ತೋರುತಿದೆಚಿತ್ತವೆಂಬುದು ಸಾಯೇ ಬೇಯೆಮತ್ತೆ ಮನ ದೃಗ್ ದೃಶ್ಯ ಧಾರಣರವರುಎತ್ತ ಹೋದರೋ ಎಲ್ಲರೂಸತ್ಯವಾಗಿಹ ಪರಮ ಬಾಹ್ಯಾಂತರೀಯ ಹೆಸರುಎತ್ತುವರು ಇಲ್ಲದಾಯ್ತು ಹೋಯ್ತುಪ್ರತ್ಯಗಾತ್ಮನು ಚಿದಾನಂದ ಗುರು ತಾನಾದಅತ್ಯುಕ್ತಿ ಹೇಳ್ವುದೇನು ಏನು ೩

೨೩೦
ಐಲು ಬಡ್ಡಿ ಕೇಳೆ ನೀನು ಐಲು ಬಡ್ಡಿ ಪ
ಮನೆಯು ನಿತ್ಯವಲ್ಲ ವಸ್ತಿ ಮುಳಗಿತೆನ್ನು ಐಲುಬಡ್ಡಿತನಯ ಸತಿಯು ವಸ್ತಿ ಸಹವಾಸಿಯವರು ಐಲುಬಡ್ಡಿಇನಿಬರನ್ನು ನಂಬಬೇಡ ಹಾದಿಯವರು ಐಲುಬಡ್ಡಿನಿನಗೆ ಆರು ಇಲ್ಲ ವ್ಯರ್ಥ ಕೆಡುವೆ ಐಲುಬಡ್ಡಿ ೧
ಎಷ್ಟು ತಂದೆ ತಾಯಿ ನಿನಗೆ ಐಲುಬಡ್ಡಿಹುಟ್ಟಿದೆಲ್ಲಿ ಹೋಹರೆತ್ತ ನೀನು ಅರಿಯೆ ಐಲುಬಡ್ಡಿನಷ್ಟವಾಗುವಿ ನನ್ನ ನನ್ನದೆಂದು ಐಲುಬಡ್ಡಿಕುಟ್ಟಿ ಪುಡಿಯ ಮಾಡ್ವ ನಿನ್ನ ಯಮನು ಬಿಡದೆ ಐಲುಬಡ್ಡಿ ೨
ಇಂತು ನುಗ್ಗುತಿರೆ ಬರಿದೆ ಭ್ರಮೆಯಿಂದ ಐಲುಬಡ್ಡಿಮುಂತೆ ಸದ್ಗುರುವ ಹೊಂದು ನಿನ್ನ ತಿಳಿವೆ ಐಲುಬಡ್ಡಿಚಿಂತೆಯ ತನು ಚಿದಾನಂದ ನೀನಾಗೆ ಐಲುಬಡ್ಡಿಅಂತು ಕರ್ಮ ತೊಳೆದು ನಿನ್ನ ನಿಜದಿ ನಿಲುವೆ ಐಲುಬಡ್ಡಿ ೩

೧೧೬
ಒಂದೇ ಬ್ರಹ್ಮವು ಮತ್ತೊಂದಿಲ್ಲವುಇದ್ದುದು ಬ್ರಹ್ಮವು ಒಂದೇಒಂದನು ಎರಡಾಗಿ ಮಾಡುವುದೆಂತೈಮಾಡಲು ಕೆಡುವನು ಮುಂದೆ ೧
ಕನಕದಿಂದ ಒಡವೆ ಬಹಳಾಗಲು ಒಡವೆಗೆಲ್ಲಕನಕವೊಂದೇ ಘನ ಬ್ರಹ್ಮದಿಂದ ನಾನಾ ಜೀವವಾಗೆನಾನಾ ಜೀವಕೆ ಬ್ರಹ್ಮವೊಂದೇ೨
ಲೋಹಗಳಿಂದಲಿ ಅನೇಕ ವಿಧವಿರೆಅನೇಕ ವಿಧಕೆ ಲೋಹವೊಂದೇಮಹಾಬ್ರಹ್ಮಾದಿ ಮಹತ್ತು ಅಣುವಿರೆಮಹತ್ತು ಅಣುವಿಗೆ ಬ್ರಹ್ಮವೊಂದೇ ೩
ಬೀಜದಿಂದ ಬೀಜವನೇಕವಾಗಲುಅನೇಕ ಬೀಜಕೆ ಬೀಜವೊಂದೇತೇಜ ಚಿದಾನಂದ ಬ್ರಹ್ಮವು ಸರ್ವವುಆ ಸರ್ವಕೆ ಬ್ರಹ್ಮವು ತಾನೊಂದೆ ೪

೨೪೭
ಒರೆವೆ ಹಿತವನೆ ಕೇಳು ಎಲೆ ಮರುಳ ಮೂಢಾಒರೆವೆ ಹಿತವನೆ ಕೇಳೊಇರುವೆನು ಎಲ್ಲಿ ಎಂದೆನ್ನುವೆ ಏಕೆತೆರಳುವೆನೆಲ್ಲಿಗೆ ಎನ್ನು ಶಿವನಹೆ ಪ
ಸತಿಸುತರ ನಂಬಬೇಡ ಯಮಧರ್ಮನಮನೆಯ ಸೇವಕರು ನೋಡಾ ಮಕ್ಕಳ ಒಡಗೂಡಾಮಿತಿಯಿಲ್ಲದೆ ಮೋಹವು ಹೆಚ್ಚಿಗತಿಗೆಡಿಸೆ ಒಪ್ಪಿಸುವರು ನಿನ್ನ ೧
ಎಲ್ಲಿ ಎಮ್ಮ ಮನೆಯು ಇಂದು ನಿನಗೆ ವಸತಿ ಸ್ಥಳವುಎಲ್ಲಿ ದೇವರು ಬಂದು ತುಳಿದಾಡುವರಿಂದುಬಲ್ಲವನಾದರೆ ಸತ್ಯವಿದೆನ್ನುತಎಲ್ಲರ ಆಸೆಯ ಮನದಲಿ ತ್ಯಜಿಸು೨
ಸುಂಟರಗಾಳಿಯು ರವದಿ ತಿರುಗಿದವೊಲುಉಂಟು ಅನಂತಕಾಲದಿ ಜನನ ಮರಣಗಳುಅಂಟಿಯೆ ಕಾಲವ ಮರುಳದು ಬೇಡಅಂಟಿಯೆ ಹೊಂದು ಚಿದಾನಂದ ಬ್ರಹ್ಮವ ೩

೧೨
ಒಳಗೆ ಹೊರಗೆ ಓಡಾಡುವ ಉತ್ತಮಳಾರು ಹೇಳೆಬಳಿಕ ಹೇಳುವೆ ಬಹಳ ಭಾಗ್ಯ ಬಗಳಾಂಬ ಕೇಳೇ ಪ
ಸರಿ ವಾಲೆ ಕಪ್ಪನ್ನಿಟ್ಟು ವಜ್ರಗಳ ಸರವನೆ ಹಾಕಿಪರಮಾನಂದಪಡಿಸುತಿಹ ಪಂಡಿತಳಾರು ಹೇಳೆದುರುಳ ಮಹಿಷಾಸುರನ ಕೊಂದು ಮರಳಿ ಚಿದಾನಂದನಲ್ಲಿಸ್ಥಿರವ ಮಾಡಿಯಿಹಳು ಬಹಳ ಶಿಷ್ಟಳು ಕೇಳೇ ೧
ಪಿಲ್ಲಿ ಮಂಟಿಕೆ ಗೆಜ್ಜೆಯನಿಟ್ಟುಘುಲ್ಲು ಘುಲ್ಲು ಹೆಜ್ಜೆಯನಿಕ್ಕುತಪಲ್ಯ ಕಾಯ ಬಡಿಸುತಿಹಳಾರು ಹೇಳೆಮಲ್ಲ ನಿಶುಂಭರ ಕೊಂದು ಮಹಾತ್ಮ ಚಿದಾನಂದನಲ್ಲಿ ಮೆಲ್ಲಗೆ ವಾಸವ ಮಾಡಿಹ ಬಗಳ ಮಹಿಮಳು ಕೇಳೇ ೨
ದುಂಡು ಮುತ್ತ ಕಟ್ಟಿ ಹೇಮಗುಂಡು ಸರವೊಲೆವುತಮಂಡಿಗೆಯ ಹಿಡಿದು ಬಡಿಸುತಿಹ ಉದ್ದಂಡಳಾರು ಹೇಳೆಚಂಡ ಮುಂಡರ ಶಿರವ ಖಂಡಿಸಿ ಚಿದಾನಂದನಲಿ ಅ-ಖಂಡ ವಾಗಿಹಳು ಬಗಳ ಪುಂಡಳು ಕೇಳೇ ೩
ಹೊನ್ನ ಕಡಗ ಸೀರೆಯುಟ್ಟು ಚೆನ್ನ ರತ್ನದ ಕುಪ್ಪಸ ತೊಟ್ಟುಅನ್ನವ ಹಿಡಿದು ಬಡಿಸುತಿಹ ಮಾನ್ಯಳು ಯಾರು ಹೇಳೇಕುನ್ನಿ ದುರ್ಜನರ ಛೇದಿಸಿ ಚಿದಾನಂದ ಗುರುವಬೆನ್ನು ಕಾದು ಬಿಡದೆ ಇಹಳು ಬಗಳಾಂಬ ಕೇಳೇ ೪
ನಿತ್ಯಾತ್ಮ ಚಿದಾನಂದನಲ್ಲಿ ನಿಲುಗಡೆಯಿಲ್ಲದೆ ಓಡಾಡುತಸುತ್ತಮುತ್ತ ಸುಳಿದಾಡುವ ಸೂಕ್ಷ್ಮಳಾರು ಹೇಳೇಕರ್ತೃವಾಗಿ ತತ್ವವ ಕೇಳುತ ಚಿದಾನಂದನಲಿ ವಾಸವಮಾಡುವ ಮಹಾಮಾಯಿ ಬಗಳೆ ಪಾರುಪತ್ಯಳು ಕೇಳೇ ೫

೨೪೮
ಓದು ಬೇಡ ನಿನಗೆ ಶಾಸ್ತ್ರ ಬೇಡ ಸುಶೀಲಬುದ್ಧಿಲಿ ದೃಷ್ಟಿ ನಿಲಿಸಿದರೆ ಸಾಕೋ ಪ
ವೇದ ಎನ್ನಲಿ ಬೇಡ ಯಮುನೆಧುಮುಕಲಿ ಬೇಡ ಕಪ್ಪೆಯಂತೆ ನೀರಲಿ ಮುಳಗಬೇಡ ಬಾಯಿ ಬಿಗಿಯಲಿ ಬೇಡ ಮೂಗ ಹಿಡಿಯಲಿಬೇಡ ಆ ಜಾಗದಲಿ ದೃಷ್ಟಿ ನಿಲಿಸಿದರೆ ಸಾಕೋ ೧
ಆಯಾಸ ಬಡಬೇಡ ಅಡವಿ ಸೇರಲಿ ಬೇಡಕಾವಿ ಕಮಂಡಲ ಧರಿಸಬೇಡಜಪವ ಎಣಿಸಲಿ ಬೇಡ ಉಪವಾಸವಿರಬೇಡಕಾಳಷ್ಟು ದೃಷ್ಟಿ ನಿಲಿಸಿದರೆ ಸಾಕೊ ೨
ಎರಡೂ ಕಣ್ಣಿನಿಂದ ನೋಡಿ ನಿಂತಿರಲಾಗಿಶರೀರ ಬಯಲಾದರೂ ಅಳಿವು ತಪ್ಪುದುಅರಿವಿಗೇ ಅರಿವಾಗಿ ಅರಿವಿಗೆ ಕುರುಹಾಗಿಗುರು ಚಿದಾನಂದನ ಗುರುತು ಇಲ್ಲೆನ್ನಬೇಡ ೩

೩೫೨
ಕಂಡದಿಲ್ಲದ ಚಿತ್ರ ನಾ ಕಂಡೆ ಪ
ಕೋತಿ ಸತ್ತುದ ಕಂಡೆ ಕೋಣನಳಿದುದ ಕಂಡೆಮಾತಿಗೆ ಬಾರದ ನಾಯ ಹರಿ ತಿಂಬುದ ಕಂಡೆ ೧
ಕಾಗೆ ಕಣ್ಣು ಹೋದುದ ಕಂಡೆ ಕಳ್ಳರ ತಲೆ ಬಿದ್ದುದ ಕಂಡೆಕೋಗಿಲೆ ಕೊನೆಯಲಿ ಕೂಗಿದುದ ಕಂಡೆ ೨
ಮರವ ಕಡಿದುದ ಕಂಡೆ ನೆರಳಲಿ ನಿಂತುದ ಕಂಡೆಬರಿಯ ವೋಡಲಿ ಹಾಲ ಕರೆದುಂಬುದ ಕಂಡೆ ೩
ನೀರ ಮೇಲೆ ಒಲೆ ಉರಿವುದ ಕಂಡೆಮೇರುವಿನ ಶಿಖರದಿ ಜ್ಯೋತಿಯ ಕಂಡೆ ೪
ಇರುಳು ಹಗಲು ಒಂದಾಗಿ ಇರುವುದ ಕಂಡೆಗುರು ಚಿದಾನಂದ ಬ್ರಹ್ಮವ ಗುರುತಿಲ್ಲದ ಕಂಡೆ ೫

೧೩
ಕಂಡಿರೆ ಬಗಳಾಶ್ಚರ್ಯವ ಕಂಡಿರೇ ಬಗಳಾಶ್ಚರ್ಯವದಿಂಡೆಯರಾದವರನ್ನೆಲ್ಲ ತುಂಡು ಮಾಡಿಶುಂಭ ನಿಶುಂಭರಸುವ ಕೊಂಡವಳ ಪ
ಕ್ರೂರ ಧೂಮ್ರಾಕ್ಷ ಶುಂಭರಾಜನ ನೇಮದಿಂದಸಾರಿ ದೇವಿಯನ್ನು ಮುಂದಲೆ ಹಿಡಿದು ಎಳೆವೆನೆನಲುವೀರಳೀಗ ಕೇಳಿ ಅವಡುಗಚ್ಚಿ ಕಣ್ಣು ತೆರೆಯೆಹಾರಿದನು ಧೂಮ್ರಾಕ್ಷನುರಿದು ಭಸ್ಮವಾದನು೧
ಚಂಡ ಮುಂಡಗಪ್ಪಣೆಯನುದ್ದಂಡ ಶುಂಭನೀಗ ಕೊಡಲುಖಂಡೆಯವನೆ ಹಿರಿದು ಮುಂಕೊಂಡು ದೇವಿ ಬಲಕೆ ನಿಂದುಗುಂಡೆಯರ ಕೂದಲು ಹಿಡಿದು ತುಂಡು ಮಾಡಿಯೆ ತಿಂದುಚಂಡ ಮುಂಡರ ತಲೆಯ ಖಂಡಿಸಿದ ವೀರಳ ೨
ರಕ್ತ ಬೀಜನ ರಕ್ತದಿಂದ ರಕ್ತಬೀಜರಾಗೆರಕ್ತನಯನಿ ಹಾಸಿದಳು ನಾಲಿಗೆಯ ಭೂಮಿಗೆರಕ್ತ ಬೀಜರನ್ನು ಕಡಿದು ನುಣ್ಣಗೆ ನುಂಗಿ ಆದಿ-ರಕ್ತ ಬೀಜನನ್ನು ಶೂಲದಿಂದ ತಿವಿದು ತಿಂದಳು ೩
ಅಂಬನ ಮೇಲೆ ನಿಶುಂಭನೆರಡು ಹಸ್ತ ಹೋಗಿಎಂಬೆನೇನು ಒದಯಲಾಗ ಅಂಬುಜಾಕ್ಷಿ ತೊಡೆಯ ಕಡಿಯೆತುಂಬಿ ಕೋಪದಿಂದಲವನು ತಿಂಬೆನೆಂದು ಮುಂದೆ ಬರಲುಅಂಬಿನಿಂದ ತಲೆಯ ಕಳೆದಳಂಬರದಲುಘೇ ಎನಲು ೪
ತಕ್ಕೆಯಲ್ಲಿ ಬಿದ್ದು ದೆಕ್ಕಬುಕ್ಕಿಯಾಡೆ ಶುಂಭನನ್ನುನಕ್ಕು ಶಿವನ ಶೂಲದಿಂದಲಿಕ್ಕಿದಳು ಖಳನ ಎದೆಯಉಕ್ಕಿ ಹರುಷ ದೇವತೆಗಳು ಓಲಗವನೆ ಮಾಡಿದರುದುಃಖಾತೀತ ಚಿದಾನಂದ ತಾನಾದ ಬಗಳೆಗೇ ೫

೧೧೭
ಕಂಡಿರೇ ಬ್ರಹ್ಮದಾಟವ ಕಂಡಿರೆ ಬ್ರಹ್ಮದಾಟ ಅ-ಖಂಡರಾದ ಮಹಾತ್ಮರಿರಾ ಪ
ಬುದ್ಧಿಯನ್ನು ಹೇಳುತಿದೆ ಬುದ್ಧಿಯನ್ನು ಕೇಳುತಿದೆಬುದ್ಧಿಹೀನನೆಂದು ತಾನೆ ಬದ್ಧನಾಗಿ ಕುದಿಯುತಿದೆ ೧
ಒಮ್ಮೆ ಸುಖಪಡುತಲಿದೆ ಒಮ್ಮೆ ದುಃಖ ಮಾಡುತಿದೆಒಮ್ಮೆ ಹಾಡಿಪಾಡಿ ನಕ್ಕು ಒಮ್ಮೆ ಕೆಲೆದು ಕೆನೆಯುತಿದೆ ೨
ದುಡುಕು ತಾನು ಮಾಡುತಿದೆ ದುಡುಕು ಅವನದೆನ್ನುತಿದೆದುಡುಕು ದುಡುಕು ಎಂದು ತಾನೆ ಬಿಡಿಸಿ ನ್ಯಾಯ ಹೇಳುತಿದೆ ೩
ಗಂಡ ಹೆಂಡಿರಾಗಿ ಇದೆ ಗಂಡು ಮಗನ ಬೇಡುತಿದೆಗಂಡು ಗಂಡು ಎಂದು ತಾನು ಗಂಡ ದೀಪ ಹೊರುತಲಿದೆ ೪
ಬಹಳ ವೇಷ ಹಾಕಿ ಇದೆ ಬಹಳ ಹೆಸರ ಕರೆಸುತಿದೆಬಹಳ ಚೇಷ್ಟೆಯಿಂದ ತಾನು ಬಹಳ ಭೇದವಾಗಿ ಇದೆ ೫
ಇಂತು ಬಹಳ ರೂಪವಿದೆ ಇಂತು ತಿಳಿಯಲೊಂದೆ ಇದೆಇಂತು ಚಿದಾನಂದ ಬ್ರಹ್ಮ ಇಂತು ಹೊತ್ತು ಕಳೆಯುತಿದೆ ೬

೧೧೮
ಕಂಡ್ಯ ಕೆಳದಿ ಮಾಡಿದ ಮಾಟ ಕಂಡ್ಯ ಕೆಳದಿಗಂಡನು ತಾನೆಂಬ ಖಂಡನಂಬುಗೆ ಗೊಟ್ಟುಹಿಂಡನಗಲಿಸಿದನು ಉದ್ದಂಡ ಚಿದಾನಂದ ಪ
ಅವರಿಗೆ ನಾ ಮರುಳಾಗಿ ತನಯರೈವರ ಬಿಟ್ಟೆ ನಾಲ್ವರು ಭಾವಂದಿರನು ಬಿಟ್ಟೆ ಸನುಮ-ತವಾಗಿದ್ದ ಸರಿವರ್ಗತನವ ಬಿಟ್ಟೆನಿನಗೆ ಮಾಡಿದ ಲೇಸ ಎನ್ನಲೇಸನು ನೀನು೧
ಅರಸನೊಳ್ಳಿದನೆಂದು ಆರಣ್ಣರ ಬಿಟ್ಟೆಹಿರಿಯ ಮಮತೆಯಲ್ಲಿದ್ದ ಅಕ್ಕಂದಿರನು ಬಿಟ್ಟೆಸರಿಹೋಗಿ ಎನಗಿಷ್ಟದ ಸವತಿ ಮೂವರ ಬಿಟ್ಟೆಕರುಣಾಕರನು ಕೈ ವಿಡಿಯ ಲಂತಾದುದಾ೨
ಅತಿಮೋಹ ಮಾಡುವ ಅಷ್ಟಾಪ್ತರನು ಬಿಟ್ಟೆಪಿತರೀರ್ವರನು ನಾನು ಹೇವರಿಸಿ ಬಿಟ್ಟೆಸತತ ಚಿಂತಿಪ ಹತ್ತು ಸಖಿಯರನು ನಾ ಬಿಟ್ಟೆಮತಿ ಎನಗಿನ್ನೇನೆ ಮಂದಗಮನೆ ಹೇಳೆ ೩
ನಿತ್ಯ ಕಾಲದಿ ಅವನ ನಿಜಸೇವೆ ಮಾಡುತಿಹೆಸತ್ಯ ಸತ್ಯವೆ ಎಂಬ ತೆರದಿಂದಲಿಪ್ರತ್ಯಗಾತ್ಮನು ತನ್ನ ಕೀರ್ತಿವಾರ್ತೆಯ ನೆಲ್ಲಕೂರ್ತು ಮರೆಯಾದಂತೆ ಎನಗೆ ಮಾಡಿದುದ ನೀನು೪
ಎನ್ನ ಸುಖದುಃಖ ಫಲ ಎನ್ನ ಕೈ ಮೇಲುಂಟೆನೆಚೆನ್ನ ಚಿದಾನಂದ ಗುರುವಿನಿಂದಉನ್ನತ ನಂಬುಗೆ ಎಂಬುದಿಂತಾಯಿತೇಬಣ್ಣಿಸಲೇನವ್ವ ಬಯಲ ಕೂಡಿಸಿ ಬಿಟ್ಟ ೫

೫೫
ಕಣ್ಣಿನೊಳು ಕಣ್ಣು ಕಂಡೆ ಕಾಣ ಬಾರದನು ಕಂಡೆಪನ್ನಗಧರನ ಕಂಡೆ ನೋಡಿ ಕಣ್ಣಿನೊಳು ಪ
ಝಗ ಝಗಿಸುವುದನು ಕಂಡೆ ಜ್ಯೋತಿ ಪ್ರಕಾಶವ ಕಂಡೆ
ನಿಗಿ ನಿಗಿ ಕಿಚ್ಚು ಸುರಿಸುವುದು ಕಂಡೆ ನೋಡಿ ಕಣ್ಣಿನೊಳು ೧
ಮುತ್ತು ಸುರಿವುದು ಕಂಡೆ ಮಲ್ಲಿಗೆ ಮಳೆಗರೆವುದು ಕಂಡೆ
ರತ್ನದ ಕಾಂತಿ ಕಂಡೆ ನೋಡಿ ಕಣ್ಣಿನೊಳು ೨
ಸಾದು ಸತ್ಪುರುಷರ ಕಂಡೆ ಸಾಕ್ಷಾನ್ನಿರುಪಾಧಿಯ ಕಂಡೆ
ಗುರು ಚಿದಾನಂದನ ಕಂಡೆ ನೋಡಿ ಕಣ್ಣಿನೊಳು ೩

೨೪೯
ಕತ್ತಲೆಯೊಳಗಣ ಬಾವಿ ಕಾಲ್ದಪ್ಪಿ ಬೀಳಬೇಡಮೃತ್ಯುವಲ್ಲದೆ ಅದು ನಿತ್ಯವಲ್ಲ ಪ
ರಾವಣನೆಂಬುವ ಬಿದ್ದು ರಂಗಕ್ಕೆ ಈಡಾದಭಾವಿಸೆ ಜಲಂಧರನು ಬದುಕಲಿಲ್ಲಕೇವಲ ಕೀಚಕನೆಂಬುವವ ಕೇಡ ಹೇಳುವುದೇನುದೇವ ಇಂದ್ರನೆಂಬವನ ದೇಹ ಕೆಟ್ಟಿತು ೧
ನಹುಷನೆಂಬುವ ಬಿದ್ದು ನಾಚಿಕೆಗೆ ಈಡಾದಬಹು ಹೇಳುವುದೇನು ವಾಲಿಯುಬದುಕನುಮಹಾಮಾಯಾವಿ ಎಂಬುವನ ಬಣ್ಣ ಕಂಡವರಿಲ್ಲಊಹಿಸೆ ಭಸ್ಮಾಸುರನು ಉರಿದುಹೋದ ೨
ಕತ್ತಲೆ ಬಾವಿಯಲಿ ಬಿದ್ದು ಕೆಟ್ಟವರು ಹಲವರುಂಟುಕತ್ತಿಯ ಧಾರೆಗೆ ಇಕ್ಕಿದಾ ಮಧುವದುಚಿತ್ತಶುದ್ಧರು ಚಿದಾನಂದ ಭಕ್ತರು ಕಂಡುಕತ್ತಲೆಯ ಬಾವಿಯಲಿ ಬೀಳಲಿಲ್ಲ ೩

೨೫೦
ಕತ್ತೆಯು ನೀನಲ್ಲ ಕರುಣಾಕರನಹೆ ಕತ್ತೆಯಾಗಬೇಡ ಕತ್ತೆಸತ್ಯ ಚಿದಾನಂದ ನೀನರೆ ಮರೆತರೆ ಕತ್ತೆನೀನಾಗುವೆ ಕತ್ತೆ ಪ
ಬೊಂಬೆಗೆ ಪ್ರಾಣವನಿಟ್ಟು ದೇವರು ಎಂಬೆ ದೇವರು ಅವು ಕತ್ತೆಬೊಂಬೆಗೆ ಪ್ರಾಣ ಪ್ರತಿಷ್ಠೆಯ ಮಾಡಲು ನೀನಾರು ಹೇಳಲೋ ಕತ್ತೆಬೊಂಬೆ ಸತ್ತವಲ್ಲೊ ಪ್ರಾಣ ತೆಗೆದುಕೊಳ್ಳೆ ನೀರ ಮುಳುಗು ನೀನು ಕತ್ತೆಬೊಂಬೆ ಚೇತನ ಸಾಕ್ಷಾತ್ಕಾರವೆ ಇರೆ ದೇವ ನೀನೆಂತಲ್ಲ ಕತ್ತೆ ೧
ಹಿಂದಣ ಪುರಾಣ ಹೇಳುವೆ ನೀನೀಗ ನಿನ್ನ ಪುರಾಣವೆಲ್ಲೊ ಕತ್ತೆಬಂದವನಾರೋ ಹೋಗುವನಾರೋ ಎಂಬುದು ತಿಳಿಯಲಿಲ್ಲ ಕತ್ತೆಬಂದೆಯೋ ಅವಿದ್ಯೆ ದೆಸೆಯಿಂದ ರೂಪಿಗೆ ಜೀವ ನೀನೆನಿಸಿ ಕತ್ತೆಎಂದು ಎಂದಿಗೂ ನೀ ಬ್ರಹ್ಮವೆ ಸತ್ಯವು ಯೋಚನೆ ಬಿಡು ನೀ ಕತ್ತೆ ೨
ನಮಕ ಚಮಕ ಅಭಿಷೇಕ ಮಾಡುವಿ ಏನಂತ ಮಾಡುವಿ ಕತ್ತೆಸಮನಿಸಲಿಲ್ಲ ವೇದಾಂತದರ್ಥವು ನಿನಗೆ ಸುಡು ನಿನ್ನ ತಿಳಿವಿಗೆ ಕತ್ತೆಕಮಲಮುಖಿಯ ಸುತರನು ನೀನು ನಂಬುವೆ ಪ್ರಪಂಚ ಸತ್ಯವೇನೋ ಕತ್ತೆಭ್ರಮಣಕ್ಕೆ ಸಿಲುಕಿ ನಾನಾ ಭಂಗಪಡುವೆ ಭಾವಿಸಿ ತಿಳಿನೀ ಕತ್ತೆ ೩
ಕನಸಿನನುಭವದಂತೆ ಪ್ರಾರಬ್ಧ ತೋರುವುದು ದೇಹದಾರಿಗಳಿಗೆ ಕತ್ತೆಚಿನುಮಯಾತ್ಮಕನಲ್ಲಿ ಪ್ರಾರಬ್ಧ ತೋರಿಯೆ ತನಗೆ ತಾನಡಗುವುದು ಕತ್ತೆನಿನಗದು ಏನಿಲ್ಲ ಮನಸಿನ ಭ್ರಾಂತಿಯೆನಲನುಭವಿಸುವೆ ಕತ್ತೆ ೪
ಹಿಂದಾದುದನು ಬಿಡು ಹೊಂದು ಸದ್ಗುರು ಪಾದ ತಿಳಿ ತತ್ತ್ವಮಸಿಯನ ಕತ್ತೆಬಂಧಿಸಿ ಆಧಾರ ಚಕ್ರವನೇರು ಏರಿ ನಿಂತು ಭ್ರೂಮಧ್ಯದಿ ಕತ್ತೆಮುಂದೆ ಹರಿಯ ನೋಡು ಸಹಸ್ರಾರದ ಪೀಠ ಛಂದದಿ ಅಡರ್ಮೇಲೆ ಕತ್ತೆಸುಂದರ ಚಿದಾನಂದ ನಾಗಿಯ ಥಳಥಳ ಬೆಳಕಲ್ಲಿ ಬೆಳಕಾಗೊ ಕತ್ತೆ ೫

೨೫೧
ಕಥೆಕಾರ ದೇವಿಯೆಂದು ಕಥೆಯ ಹೇಳಿದ ತೆರದಲಿ
ಮಿತಿಯಿಲ್ಲದ ಮೃಷೆ ಸಂಸಾರವದು ಇರುತಿಹುದು ಆಪರಿಯಲ್ಲಿ ಪ
ಸತಿಯಂಬುವಳಾರು ತಾವಾರುಸುತರಿಂದ ಗತಿಯಾಗುವುದೆಲ್ಲಿ
ಮಿತಿಯಿಲ್ಲದ ಬಹುಬಂಧು ಬಳಗಗಳುಬಹರೆ ತನ್ನ ಹಿಂದಲ್ಲಿ ೧
ಹಗೇವಿನ ಬತ್ತವು ಬಣಬೆಯ ಸೊಪ್ಪೆಯುಬಗೆ ಬಗೆವಸ್ತುವು ತಾನೆಲ್ಲಿ
ಬಿಗುಮಿಗೆಯಾದ ದನಕರುವುಗಳುಬರಲಿಲ್ಲವು ತಾವಂದದಲ್ಲಿ ೨
ತಳ್ಳಿಗೆ ತಳ್ಳಿ ಸುಳ್ಳು ಸಂಸಾರವುತೆಗೆಲೀಯದು ಈ ಬಗೆಯೆಲ್ಲಿ
ಎಲ್ಲಕೆ ಮಂತ್ರವು ತಾ ಚಿದಾನಂದನುಎನಲಿಕೆ ಪಾಪವು ಇನ್ನೆಲ್ಲಿ ೩

೫೬
ಕನಸ ಕಂಡೆ ನಿನ್ನಿನಿರುಳೊಳು ಕೇಳುಕನಸಿನ ಸೊಗಸನು ತರಳೆಚಿನುಮಯಾತ್ಮಕ ಚಿದಾನಂದ ಅವಧೂತದಿನಕರ ಪ್ರಭಾತೀತ ಗುರುನಾಥ ಬಂದಿಹ ಪ
ಕಾಶ ಕೌಪೀನವನುಟ್ಟು ಚೆಲ್ವಬಾಸುರ ಕುಂಡಲವಿಟ್ಟುಕೇಶದ ಜಡೆಗಳು ಥಳಥಳಿಸಲು ಸರ್ವಭೂಷಿತನಾಗಿ ತನ್ನೆದುರಿಗೆ ನಿಂತಿಹ ೧
ನೆಟ್ಟನೆ ನಡುಮನೆಯೊಳು ತಾನುನೆಟ್ಟನೆ ಬಂದು ಕುಳಿತಿಹನುಶಿಷ್ಟ ಮೂರುತಿ ತನ್ನ ಕಾಯಬೇಕು ಎಂದುಮುಟ್ಟಿ ಪಾದವ ನಾನು ಶರಣು ಮಾಡಲಿದ್ದೆ ೨
ಸುಂದರ ಕಳೆಯುಳ್ಳ ಸ್ವಾಮಿತಾನು ಸಿಂಧು ಕೃಪಾಕರನಾಮಿ ಎಂದಡಿಗಡಿಗೆ ಸಾಷ್ಟಾಂಗವೆರಗಿನಿಂದು ಪೂಜಿಸಿ ಕಣ್ತುಂಬ ನೋಡಿನಲಿವ ೩
ನಾನಾ ಪೂಜೆಯನೆಲ್ಲವ ಮಾಡಿ ಗುರುಧ್ಯಾನದಿನಾನೋಲಾಡಿ ಮಾನವನಾಗಿನಾನು ನಿಂದಿರಲೆನ್ನ ಕಿವಿಯೊಳುನಾನು ನೀಗಿತ್ತೆಂದು ಉಪದೇಶ ನೀಡುವ ೪
ಈಪರಿ ಕನಸನು ಕಂಡು ಎಲ್ಲತಾಪವು ಪರಿಹಾರಗೊಂಡುಭೂಪ ಚಿದಾನಂದ ಅವಧೂತ ತಾನಾದರೂಪಾಗಿ ಬೆಳಗಿರೆ ಬೆಳಗಿರೆ ಬೆಳ್ಳನೆ ಬೆಳಕಿತ್ತು ೫

೧೪
ಕವಚ ಕವಚದೊಳು ಬ್ರಹ್ಮಾಸ್ತ್ರ ವಜ್ರ ಕವಚ
ಕವಚ ಏಳು ಕೋಟಿಯೊಳು ರಾಜ ಕವಚ ಪ
ಬಗಳಾ ಸ್ಮರಣೆಯಲಿ ಇರುಳು ಹಗಲು ಇಹುದೇ ವಜ್ರಕವಚ
ಬಗಳಾ ಸ್ತೋತ್ರವ ಮಾಡುತಿಹುದೇ ವಜ್ರ ಕವಚ
ಬಗಳಾ ಮೂರ್ತಿಯ ಧ್ಯಾನದೊಳಿರುವುದೇ ವಜ್ರ ಕವಚ
ಬಗಳೆಯ ಅರ್ಚನೆಯೊಳಿಹುದೇ ವಜ್ರ ಕವಚ ೧
ಬಗಳಾದೇಹವ ತನ್ನದು ಮಾಡುವುದೇ ವಜ್ರ ಕವಚ
ಬಗಳಳಾಗಿ ತಾನಿರುವುದೇ ವಜ್ರಕವಚ
ಬಗಳಾ ಒಳಹೊರಗೆ ಒಂದಾಗಿಹುದೇ ವಜ್ರಕವಚ
ಬಗಳೆ ನಿಜವಾಗಿ ಒಲಿದಿಹುದೇ ವಜ್ರಕವಚ ೨
ನಾರಾಯಣ ಕವಚ ಶಿವಕವಚ ಶಕ್ತಿಕವಚ
ಸೂರ್ಯ ಕವಚ ಎಲ್ಲ ದೇವ ಕವಚ
ಕಾರಣಾತ್ಮಕ ಚಿದಾನಂದ ಬಗಳ ಕವಚ
ಆರ ಯತ್ನವು ನಡೆಯದಿಹುದದು ವಜ್ರಕವಚ ೩

೧೧೯
ಕವಿ ಮಾತುಗಳ ಕೇಳಿ ಕೆಟ್ಹೋಗಬೇಡಿರಿಕವಿ ನಾಶ ತನವೆಂದು ಹೇಳಲಿಲ್ಲಶಿವನ ತಿಳಿದು ನಿಮ್ಮಶಿವನೆಂದು ಕಂಡರೆ ಸಾಕ್ಷಾತ್ ಬ್ರಹ್ಮನೆ ನೀವೆಯೆಲ್ಲಾ ಪ
ಸೋಗೆಗಣ್ಣುಗಳೆಂದು ಹೇಳಿದನಲ್ಲವೇಸೋಗೆಗಣ್ಣಿನ ಸೀಳ ಹೇಳಲಿಲ್ಲಮೂಗನು ಸಂಪಿಗೆ ನನೆಯೆಂದನಲ್ಲವೆಮೂಗಿನ ಸಿಂಬಳ ಹೇಳಲಿಲ್ಲ ೧
ಬಾಯಿ ಕರ್ಪೂರದ ಕರಡಿಗೆ ಎಂದನಲ್ಲವೆಬಾಯೊಳಗಣ ಲೊಟ್ಟೆ ಹೇಳಲಿಲ್ಲಕಾಯವು ಕನಕದ ಬಾಳ ಎಂದನಲ್ಲವೆಕಾಯ ದುರ್ಗಂಧವ ಹೇಳಲಿಲ್ಲ ೨
ಮಂದಗಮನೆ ಎಂದು ನಡೆಗಂದನಲ್ಲವೆಹಂದಿದುಟಿಯನದ ಹೇಳಲಿಲ್ಲಸುಂದರ ಸರ್ಪವೇಣಿ ಎಂದನಲ್ಲವೆಸಂದಿ ಸಂದಿಯ ಹೇನ ಹೇಳಲಿಲ್ಲ೩
ನರದೇಹವನು ಕೊಂಡಾಡಿದನಲ್ಲವೆನರದೇಹ ನರಕವೆಂದ್ಹೇಳಲಿಲ್ಲಗುರು ಚಿದಾನಂದ ಸದ್ಗುರುನಾಥನ ನಂಬಿಶರೀರವ ಕಳೆ ಎಂದು ಹೇಳಲಿಲ್ಲ೪

೨೫೨
ಕಾಲ ತಪ್ಪದು ನಿನಗೆಂದಿಗು ಮರುಳೆಒಳ್ಳಿತಾಗಿ ಕೇಳಿಕೋ ಹಿರಿಯರನು ಮರುಳೆನಾಳೆ ನಾಡದೋ ಆವಾಗಲೋ ತನು ನಿತ್ಯವಲ್ಲಕಾಲಕೆ ಸಿಕ್ಕಬೇಡ ಮರುಳೆ ಪ
ಆಳುವ ಮಠಪತಿ ಊರಲ್ಲಿ ತನ್ನನ್ನುಹೂಳ್ಯಾರು ಎನಬಾರದೆ ಮರುಳೆಮೂಳ ಸಂಸಾರ ನೆಚ್ಚಲು ಕೆಡುವೆಆಲೋಚನೆ ಮಾಡಿಕೋ ಮರುಳೆ ೧
ಮನವುಳ್ಳವರು ಇಹರೆ ಸಂಸಾರವೇನೆಂಬೆ ನೀನು ಸಂಗವ ಮರೆವೆ ಮರುಳೆಮಾನಿನಿ ಸುತರ ಮೋಹಕೆ ಬಿದ್ದುನಿನಗಾಗುವ ಮಾನಹಾನಿಯ ಕಾಣೆ ಮರುಳೆ ೨
ಸಂಸಾರಕಾಂಕ್ಷೆಯ ಮನದಿ ತ್ಯಾಗವ ಮಾಡುಸಂಸಾರವಿದು ಮಾರಿಯು ಮರುಳೆಹಂಸ ಚಿದಾನಂದ ಸದ್ಗುರು ಹೊಂದಿಯೇನೀ ಸದಾಸುಖಿಯಾಗು ಮರುಳೆ ೩

೧೨೦
ಕಾಲ ಮೃತ್ಯುವು ಸ್ತ್ರೀಯಲ್ಲದಲೆ ಕಾಯುವವಳು ತಾನಲ್ಲಣ್ಣ ಕಾಳಕವೀಶ್ವರ ಬಲ್ಲನು ತಾನೇನ ಕಾಳ ಕಿಚ್ಚಿನ ಕುಂಡವಣ್ಣ ಪ
ಮಲ ಮೂತ್ರವು ಮಜ್ಜೆಯು ಮೇದಸ್ಸು ಮೇಲೆ ಚರ್ಮ ಹೊದ್ದಿಹೆವಣ್ಣಎಲುಬುಗಳಡಕಲಿ ನರಗಳ ಬಿಗಿವು ಎಡದೆರ ಅಪಿಲ್ಲದೆ ಇಹುದಣ್ಣ ಬಲು ಹೊಲಸಿನ ಮಡುವದು ಮತ್ತೆ ಬಗೆಬಗೆಯ ಕ್ರಿಮಿಗಳು ಮನೆಯೊಳಣ್ಣ ಹೊಲೆಮಯವಿರುವ ಸ್ತ್ರೀಯ ವರ್ಣಿಪೆನು ಹೇವ ಮಾರಿಯು ಕಾಣಣ್ಣ ೧
ಕಳಸ ಕುಚವು ಎದೆಎಂಬನ ಬಾಯಲಿ ಕರಿಯ ಮಣ್ಣನೆ ಹಾಕಣ್ಣ
ಹೊಳೆವ ಕಂಗಳು ಎಂಬನ ಮೋರೆಗೆ ಹುಡಿಯನೀಗಲೆ ಚೆಲ್ಲಣ್ಣಬಳಕು ನಡೆಯಂತೆಂದು ಬೊಗಳುವನ ನಿಲಿಸದೆ ಅಲ್ಲಿಂದಟ್ಟಣ್ಣಚೆಲುವಿನ ಸುಂದರ ಚೇಷ್ಟೆಗೆ ನಲಿವನ ಚಪ್ಪಲಿಯಿಂದಲಿ ಕುಟ್ಟಣ್ಣ ೨
ಬ್ರಹ್ಮಧ್ಯಾನವ ಮಾಡುವುದಕ್ಕೆ ಬ್ರಹ್ಮರಾಕ್ಷಸವು ಇದು ಅಣ್ಣಹಮ್ಮಳಿದು ಯೋಗಾಭ್ಯಾಸದಲಿರೆ ಹೃದಯದಲಿ ಹರಿದಾಡುವುದಣ್ಣಬ್ರಹ್ಮೇತಿಯು ತಾನಿವನ ಸಂಗದಿ ಭವಭವತಿರುಗುವುದ ಬಿಡದಣ್ಣಸಮ್ಮತದಲಿ ಚಿದಾನಂದ ಹೊಂದಿಯೆ ಸೀಮಂತಿನಿಯ ಬಿಡಬೇಕಣ್ಣ ೩

೨೫೩
ಕಿವಿ ಮಾತು ಹೇಳುವೆನು ಎನ್ನ ಮಾತ ಕೇಳಿರೋಶಿವನು ನೀನಾಗುವಂಥ ಸಿದ್ಧಿಯನ್ನು ಹೇಳಿಕೊಡವೆ ಪ
ಅನಂತ ಯೋನಿಯೊಳಗೆ ಅನಂತ ಜನ್ಮತಿರುಗಿಅನಂತ ಯುಗಯುಗಂಗಳಲಿ ಸತ್ತು ಹುಟ್ಟೆಅನಂತನಾಟವೆಯೆಂದು ಅರಿವು ಇಲ್ಲದೆ ಹೋಗಿಅನಂತ ದುಃಖಸಾಗರದಿ ಹಿರಿದು ಬಳಲುವಿರಿ ೧
ವಿಶ್ವತೈಜಸ ಪ್ರಾಜ್ಞ ಮೂವರೆಂದೆನಿಸಿವಿಶ್ವದೊಳು ನಾನಾ ರೂಪಗಳ ತಾಳಿವಿಶ್ವದೊಳ ಹೊರಗೆಲ್ಲ ಪೂರ್ಣ ತಾನೆಂದೆನಲುವಿಶ್ವಾತ್ಮಕನು ನೀವು ಮತ್ತಾರು ತಿಳಿಯಿರೋ ೨
ಮೂರವಸ್ಥೆಗಳಲ್ಲಿ ಮೂರು ಮೂರ್ತಿಗಳಾಗಿತೋರುತಿಹ ನಾನಾ ಬಗೆ ಲೀಲೆಗಳನುಭೂರಿ ಸಂಸಾರಗಳ ದುಃಖ ಸುಖವೆಂದೆನಿಸಿತೋರಿ ನೋಡಿಪನವನು ಮತ್ತಾರು ತಿಳಿಯಿರೋ ೩
ಸತಿ ಪುರುಷರಾಗಿಹನು ಸುತನು ತಾನಾಗಿಹನುಖತಿಯು ಶಾಂತಿಯು ಕಾಮವಾಗಿ ತಾನಿಹನುಅತಿ ಕುಲಗಳಾಗಿಹನು ಅತಿ ಜಂತುವಾಗಿಹನುಮಿತಿಯಿಲ್ಲದಾಗಿಹನು ನೀವಾರು ತಿಳಿಯಿರೋ ೪
ಈ ವಾಕ್ಯಗಳನೇ ನೀವಾರಮುಂದುಸುರದಲೆಸಾವದಾನದಿ ತಿಳಿದು ನೋಡಿದೇವ ಚಿದಾನಂದ ಗುರು ತಾನೀಗ ನಿಜವೆಂದುಸಾವದಾನದಿ ಕಂಡು ಕಡೆಹಾಯಿರೋ ೫

೨೫೪
ಕುಲದ ಮೇಲೆಯೇ ಹೊಂದಲಿಬೇಡ ಕೇಳಿದನೋ ಕತ್ತೆಕುಲವು ಬೇರೆ ಜ್ಞಾನದ ಹಾದಿಗೆ ನಿನಗೆ ತಿಳಿಯಿತೆ ಪ
ಸಣ್ಣವನಾಗಲಿ ಸ್ತ್ರೀಯು ಆಗಲಿ ಆರು ಆದರೆ ಏನುತನ್ನನ್ನು ತಿಳಿದು ತಾನೆಯು ಆದರೆ ಅವನೆ ನಿಜ ಮುಕ್ತಾ ೧
ಹಿರಿಯನು ಇಲ್ಲವು ಕಿರಿಯನು ಇಲ್ಲವುತನ್ನನು ತಿಳಿದವ ಹಿರಿಯ ಕರೆಕರೆಸಂಸಾರ ಕೇವಲ ಸುತ್ತಲು ಅರಿತವ ಎಂದಿಗೆ ಮನೆಯೂ ೨
ಆವ ಕುಲವು ಆದರೆ ಏನು ತನ್ನ ತಿಳಿಯೆ ಜ್ಞಾನದೇವ ಚಿದಾನಂದನವನನು ಇಲ್ಲವನೆಂದವ ನಲಿವನಾ ೩

೧೨೧
ಕುಲವೇನೆಂತು ಹೇಳಲಿ ಯೋಗೀಶನಕುಲವೇನೆಂತು ಹೇಳಲಿಕುಲವ ಕೇಳುತಿಹ ಕತ್ತೆಯ ಮಗನಿಗೆ ಪ
ಬಲಿದು ಆಧಾರವನು ಕುಂಬಕದೊಳು ನಿಲಿಸಿ ವಾಯುವನುನೆಲೆಯನು ಹತ್ತಿಸಿ ನೆಲೆಯಾಗಿ ನೆಲೆಸಿನೆಲೆಯೊಳು ಕುಳಿತಿಹ ಪುಣ್ಯ ಪುರುಷನಿಗೆ ೧
ಜಾಗ್ರತದಿ ಸ್ವಪ್ನವನು ಸುಷುಪ್ತಿಯು ಸಹನಿಗ್ರಹಿಸೆಲ್ಲವನು ಸ್ವರ್ಗದ ಮೇಲೆ ಮಹಾ ಸ್ವರ್ಗವಿರಲುಸುಸ್ವರ್ಗದಿ ನೆಲೆಸಿಹ ಭರ್ಗನಾದವಗೆ೨
ಎಣಿಕೆಯ ಜನ್ಮವನು ಕಳೆದು ಮುಂದೆಕ್ಷೀಣಿಸಿ ಪ್ರಾರಬ್ಧವನು ತ್ರಿಣಯನನಾಗಿ ದಿನಮಣಿಯಾಗಿ ಕಣಿಯಾಗಿಗುಣಕಗೋಚರ ಚಿದಾನಂದನಾದವನಿಗೆ ೩

೨೫೫
ಕೆಟ್ಟ ಕೇಡನೇನ ಹೇಳಲಿ ಎನ್ನ-ದೃಷ್ಟದಿ ಪಡೆದಿದ್ದ ಫಲವಷ್ಟೇ ಅಮ್ಮ ಪ
ಸತಿಯ ಸಂಗ ಕೆಟ್ಟೆ ಸಕಲ ವರ್ತನೆಗೆಟ್ಟೆಸುತರು ಬೇಕೆಂಬ ಸಂತಸಗೆಟ್ಟೆಮತಿಯ ವಿಚಾರಗೆಟ್ಟೆ ಮನದ ವಾಸನೆಗೆಟ್ಟೆಖತಿಯು ಎಂಬುದ ಕೆಟ್ಟೆ ಕಾಮಗೆ ಮೊದಲು ಕೆಟ್ಟೆ ೧
ಮನೆವಾರ ನೇಮಗೆಟ್ಟೆ ಮನೆ ತಾಪತ್ರಯ ಕೆಟ್ಟೆಘನಭೋಗ್ಯ ಭಾಗ್ಯ ಕೆಟ್ಟೆ ಸರ್ವವ ಕೆಟ್ಟೆತನು ತಾನೆಂಬುದು ಕೆಟ್ಟೆ ತಳ್ಳಿ ತಗಾದೆ ಕೆಟ್ಟೆಜನರ ಕೂಡಿ ಕೆಟ್ಟೆ ಜಡ ಜೀವ ಕೆಟ್ಟೆ೨
ಕುಲದಭಿಮಾನ ಕೆಟ್ಟೆ ಕುಹಕರ ಮಾತು ಕೆಟ್ಟೆಕಲಹವೆಂಬುದ ಕೆಟ್ಟೆ ಕಠಿಣ ಗೆಟ್ಟೆಹಲವು ಎಂಬುದ ಕೆಟ್ಟೆ ವಿಧಿ ನಿಷೇಧ ಕೆಟ್ಟೆಫಲದ ತೋರಿಕೆಗೆಟ್ಟೆ ಪರರ ನಿಂದ್ಯ ಕೆಟ್ಟೆ೩
ಇಹ ಪರವನು ಕೆಟ್ಟೆ ಇಷ್ಟು ಎಲ್ಲವ ಕೆಟ್ಟೆಬಹಿರಂಗವನು ಕೆಟ್ಟೆ ಭಂಗ ಕೆಟ್ಟೆಅಹಿತತ್ವವನು ಕೆಟ್ಟೆ ಅಂಗಡಿಯನು ಕೆಟ್ಟೆಮಹಿಮೆ ಎಂಬುದ ಕೆಟ್ಟೆ ಮಹಾ ಸುಖ ದುಃಖ ಕೆಟ್ಟೆ ೪
ನ್ಯಾಯ ಅನ್ಯಾಯ ಕೆಟ್ಟೆ ನಿತ್ಯ ಕರ್ಮವ ಕೆಟ್ಟೆಬಾಯಿ ಪಿಟಪಿಟ ಬೆರಳೆಣಿಕೆ ಕೆಟ್ಟೆಪ್ರಿಯವೆಂಬುದ ಕೆಟ್ಟೆ ಪಿಂಡ ಪ್ರಧಾನ ಕೆಟ್ಟೆಜೀಯ ಚಿದಾನಂದನಾಗಿ ಜನ್ಮಗೆಟ್ಟೆ ೫

೨೫೬
ಕೆಟ್ಟದು ಮೋಹ ಕೆಟ್ಟದು ಈ ನಷ್ಟ ವಿಷಯಕೆ ಬಿದ್ದು ನಾರಿ ಪಾಲಾಗೋದು ಪ
ಕರುಳ ಭಾವಕೆ ಸೋತು ಕುಚದ ಭಾರಕೆ ಸೋತುಸಿರಿಮುಡಿ ವೇಣಿ ಶಿಸ್ತಿಗೆ ಸೋತುಕಿರುನಗೆಗೆ ತಾ ಸೋತುಉರಿಯ ಮೋಹಕೆ ಬಿದ್ದ ಚಿಟ್ಟೆಯಂತೊರಲುವುದು ೧
ಕಣ್ಣ ಭಾವಕೆ ಸೋತು ಕದಪುಗಳಿಗೆ ಸೋತುನುಣ್ಣನೆಯ ಮೋರೆಯ ನುಣುಪಿಗೆ ಸೋತುಸಣ್ಣ ಹಲ್ಲಿಗೆ ಸೋತು ಸುಮನಾಸಿಕಕೆ ಸೋತುಸುಣ್ಣ ನೀರಲಿ ಕೂಡಿ ಕುದಿವಂತೆ ಕುದಿವುದು ೨
ಬಳಲು ನಡೆಗೆ ಸೋತು ಬಡ ನಡುವಿಗೆ ಸೋತುಸುಳಿನಾಭಿಗೆ ಮೆರೆವ ಸುತ್ರಿವಳಿಗೆ ಸೋತುಸುಲಭ ಚಿದಾನಂದ ಸುಪಥವ ಕಾಣದೆತಲೆ ಕೆಳಕಾಗಿ ನರಕಕ್ಕೆ ತೆರಳುವುದು೩

೨೫೭
ಕೆಡಬೇಡವೋ ಎಲೆ ಕರ್ಮಿ ಮನುಜ ನೀಕೆಡದಿಹ ಪಥವ ಕೇಳಿನ್ನು ಪ
ಹೆಂಡತಿ ಮೋರೆಯ ಮೋಡಿಯ ನೋಡಿ ಹೆಂಡತಿ ಥೂ ಎನ್ನುಗಂಡಸು ಮಕ್ಕಳು ಗತಿಯೇನೆಂಬರು ಗಂಡು ಮಕ್ಕಳ ಛಿ ಎನ್ನುಕಂಡೆವು ಕಾಣೆವು ಎಂಬ ಬಂಧುಗಳ ಕಣ್ಣಮುಂದಿರಬೇಡಿನ್ನುಹಿಂಡು ಹಿಂಡು ನೆರೆದಿಹ ಪರಿಜನರ ಹಿಂಡು ಸಂದಳಿಯ ಬಿಡು ಇನ್ನು ೧
ಬಹುಗೃಹ ಕಟ್ಟಿದೆ ದಿಕ್ಕಿಲ್ಲವೆಂಬೆ ಬಹು ಗೃಹವನು ಸುಡಲೆನ್ನುಇಹುದಿದು ದ್ರವ್ಯವು ಇದಕೇನೆಂಬೆಯ ಇಹುದನು ಧರ್ಮವ ಮಾಡಿನ್ನುದಾಹದಿ ಗಳಿಸಿದೆ ಆಸ್ತಿಯನೆಂಬೆಯ ಸಜ್ಜನರಿಗೆ ಕೊಳ್ಳೆನ್ನುಇಹೆ ನಾಲಕು ದಿನ ಎಂಬ ಭ್ರಮೆಯನು ಇಡು ಪಾದರಕ್ಷೆಯೊಳಿನ್ನು ೨
ಮತಿವಂತರು ಆರಿಲ್ಲವೆಂಬೆಯ ಮತಿಗೆ ಶಿವ ತಾನಿಹೆನೆನ್ನುಗತಿಯೇನಿನ್ನು ಈ ಕುಟುಂಬಕೆಂಬೆಯ ಗತಿಯಿದ್ದಾಗುವುದೆನ್ನುಅತಿ ಋಣ ಭಾರವು ಆಗಿಹುದೆಂಬೆಯ ಆರಿಗೆ ಋಣ ಎಂದೆನ್ನುಸುತರಿಲ್ಲ ತನಗೆ ಗತಿಯಿಲ್ಲವೆಂಬೆಯ ಸುತರಿಂದ ಗತಿಯು ಸಾಕಿನ್ನು ೩
ಪಾಪಹರರ ಪುಣ್ಯಪುರುಷರ ನೋಡಿ ಪಾಪಿಯ ಕಡೆಹಾಯ್ಸಿನ್ನುದೀಪಿಸುತಿಹ ಬ್ರಹ್ಮ ಬೋಧೆಯ ನುಡಿಗಳ ದೀಪ್ಯಮಾನದಿ ಕೇಳಿನ್ನುಕೋಪದಿ ಹಿಡಿ ಕೆಟ್ಟೆನ್ನುವ ಯಮದೂತರ ಕಾಲಲಿ ಒದೆಯವರನ್ನುಆ ಪರ ಬ್ರಹ್ಮವ ನೋಡುತ ಸುಖದಲಿ ಆನಂದದಿ ಮಲಗಿನ್ನು೪
ನಿತ್ಯ ನಿರಾಳ ನಿರಂಜನ ನಿರವಯ ನಿತ್ಯನು ಬೇರಿಲ್ಲೆನ್ನುಪ್ರತ್ಯಗಾತ್ಮ ಪರಾತ್ಪರ ಪರತರ ಪ್ರತ್ಯಗೆ ತಾನಹುದೆನ್ನುಚಿತ್ತಿನ ಪ್ರಭೆಯದು ಢಾಳಿಸುತಿರುತಿರೆ ಚಿತ್ತವಲಯ ಮಾಡಿನ್ನುಪ್ರತ್ಯಗಾತ್ಮ ಚಿದಾನಂದನ ನೆನೆಯುತ ಪ್ರಾಣವ ಕಳೆಯಿನ್ನು ೫

೩೫೩
ಕೇಳಕ್ಕಯ್ಯ ನಾ ಮಾಡಿದ ಮದುವೆ ಮನಸಿಗೆ ಬರುತ್ತದೆಕೇಳಕ್ಕಯ್ಯ ನಾ ಮಾಡಿದ ಮದುವೆ ಮನಸ್ಸಿಗೆ ಬರುತ್ತದೆ ಪ
ಮುಂಡಕೆ ದಂಡೆಯ ಮಾಡಿಸಿದೆ ಮುಸುಕಲಿ ಸೋಭಾನ ಮಾಡಿದೆಮುಂಡಕೆ ರುಂಡವ ಕೂಡಿಸಿದೆ ಮಂಗಳಾರತಿ ಬೆಳಗಿಸಿದೆ ೧
ಕೋತಿಯು ಅಲ್ಲಿ ಕುಣಿಯುತ್ತಿತ್ತು ಕೋಣವು ಮದ್ದಲೆ ಬಾರಿಸುತ್ತಿತ್ತುಕೋತಿಯ ಕಾಲನೆ ಮುರಿದೆ ಕೋಣನ ಮದ್ದಲೆ ಮುರಿದೆ೨
ಹಾರುವವನನು ಕಟ್ಟಿ ಹಾಕಿಸಿದೆ ಹಾದಿಲಿ ದೀಪವ ಹಿಡಿಸಿದೆಮೂರು ಮನೆಯ ಮೇಲಟ್ಟದಲ್ಲಿ ಮೆರವಣಿಗೆಯನೆ ಮಾಡಿಸಿದೆ೩
ಒಳ್ಳೆ ಬೀಗರ ಬೆಳ್ಳಿ ತಳಿಗೆಯಲ್ಲಿ ಎಲ್ಲರ ಒತ್ತೊತ್ತಾಗಿ ಕೂರಿಸಿದೆಬೆಲ್ಲದ ಪರಮಾನ್ನವನೆ ಉಣಿಸಿದೆ ಬೆಳ್ಳನೆ ಉಡುಗೊರೆ ಹೊದಿಸಿದೆ ೪
ಗುಡ್ಡ ಮೂರ ಕೊನೆಯಲಿದ್ದ ಅಡ್ಡಗಲದೆ ದೇವರ ಮನೆಗೊಯ್ದುದೊಡ್ಡ ಚಿದಾನಂದ ಗುರುವಿಗೆ ನಾ ಅಡ್ಡಗೆಡವಿ ಮದುವೆ ಮಾಡಿಸಿದೆ೫

೧೨೨
ಕೊಡವನು ಹೊರಲಾರೆನೆ ಅಕ್ಕಕೊಡವನು ಹೊರಲಾರೆನೆಕೊಡವನು ಹೊರಲಾರೆ ಕಷ್ಟಪಡಲಾರೆಕೊಡವನು ಒಡೆದರೆ ಕಡೆಹಾಯುವೆನೆ ಪ
ತಿಳಿಯಲು ಒಂಭತ್ತು ಪೂರ್ತಿ ಕೊಡನೆತೊಳೆಯುವ ನಿತ್ಯವು ತುಂಬಿಹ ಕೊಡನೆಹೊಲಸಿನ ಹೊದಿಕೆಯ ಹೊದ್ದಿಹ ಕೊಡನೆತೊಳೆದರು ನಿತ್ಯ ಶುಚಿಯಾಗದ ಕೊಡನೆ೧
ರೂಪು ದಿನದಲಿ ಮಾಸಿಹ ಕೊಡನೆಆಪತ್ತಿನಿಂದ ನರಳುವ ಕೊಡನೆಪಾಪದ ಪುಂಜದ ಪಡಿಶಂಟು ಕೊಡನೆಜೋಪಾನ ಮಾಡಲು ಜರಿವಾ ಕೊಡನೆ ೨
ಎಲ್ಲಿಂದ ಬಂದಿತೋ ಎನಗೀ ಕೊಡವುಎಲ್ಲಿಯ ಪಾಪಿಯು ಮಾಡಿದ ಕೊಡವುಬಲ್ಲ ಚಿದಾನಂದನ ಮರೆಸುವ ಕೊಡವುಬಾಳನು ಕೊಡಿಸುವ ಸತಿಯೆಂಬ ಕೊಡವು ೩

೫೭
ಕೊಡು ಬೇಡುವೆನೊಂದ ಚಿದಾನಂದಕೊಡು ಬೇಡುವೆನೊಂದಕೊಡು ಬೇಡುವೆನೊಂದಕಡೆ ಹಾಯ್ದು ಹೋಗಿ ಮೆಲ್ಲಡಿಯಾದ ನಿಮ್ಮ ಪಾದದಡಿಯೊಳಡಗುವುದಾ ಪ
ನಿರ್ಮಳ ನಿತ್ಯ ನಿರಂಜನ ಸ್ವರ್ಮಣಿ ಸುಸಾತ್ವಿಕವರ್ಮ ಧರ್ಮ ಕರ್ಮ ನಿರ್ಮಾಯವಾದ ಷ-ಡೂರ್ಮೆ ವಿರಹಿತೆಂಬ ಪೆರ್ಮೆಯೊಳಡಗುವುದ ೧
ವಿಶ್ವಾತ್ಮ ವಿಶ್ವಾಧಾರ ವಿಶ್ವಹರ ವಿಶ್ವವಿಶ್ವದಾಕಾರ ಸ್ವಸ್ವ ನಿಸ್ವನದ ಸ್ವಸ್ವಪೂರಿತ ಮ-ಹಾಸ್ವಯಂ ಜ್ಯೋತಿಯೆ ಭಾಸ್ವ ಮೂರುತಿ ಈಗ ೨
ಶತಕೊಟಿ ಸೂರ್ಯರಾಕಾರ ಶತಾಶತ ಶತವಿಂದು ಪ್ರಭಾವಕಾರಸ್ತುತಿಗೆ ಮೀರಿದ ದೊರೆಯೋಗಿ ಚಿದಾನಂದಪತಿಯ ಪಾದಪದ್ಮನುತಿಸಿ ಕೊಡುವುದೀಗ ೩

೨೫೯
ಕೊರಡು ಎಂಬೆನು ಇಂಥವನ ಕಂಡು ಕೊರಡು ಎಂಬೆಹುಸಿಯದೆಕೊರಡು ಅಲ್ಲದೆ ಶಿವನಿರೆ ಜೀವನೆಂಬುವನ ಕೊರಡು ಎಂಬೆ ಪ
ಹಿರಿಯರು ಬರಲು ಏಳದವನನು ಕಂಡು ಕೊರಡು ಎಂಬೆಮರೆತು ತನ್ನನು ಕಲ್ಲ ಪೂಜಿಪ ಕಂಡು ಕೊರಡು ಎಂಬೆಅರಿತು ತನ್ನನು ಅಹುದಲ್ಲವೋ ಎಂಬುವನ ಕೊರಡು ಎಂಬೆಗುರುಪಾದ ಹೊಂದಿ ತನ್ನನು ತಿಳಿಯದವನು ಕೊರಡು ಎಂಬೆ ೧
ತನ್ನೊಳು ಪರಮಾತ್ಮನಿರಲು ಕಾಣದವನನು ಕೊರಡು ಎಂಬೆಅನ್ನವ ಬಿಟ್ಟು ತೊಪ್ಪಲ ತಿಂಬನ ಕಂಡು ಕೊರಡು ಎಂಬೆತಿನ್ನುವನಿರುಲು ಉಪವಾಸ ಬೀಳ್ವನ ಕಂಡು ಕೊರಡು ಎಂಬೆಚೆನ್ನಾಗಿ ಹಮ್ಮಳಿಯದೆ ಶ್ರೇಷ್ಠನೆಂಬುವನ ಕೊರಡು ಎಂಬೆ ೨
ನೀನಾರು ಎಂಬುವನ ಅದಾರೆನ್ನದನ ಕಂಡು ಕೊರಡು ಎಂಬೆವೇದಶಿರವನೋದಿನರ ತನ್ನನೆಂಬನ ಕೊರಡು ಎಂಬೆವಾದಕ್ಕೆ ಠಾವಿಲ್ಲ ಖೇದ ಮಾಡುವನ ಕಂಡು ಕೊರಡು ಎಂಬೆಬೋಧ ಚಿದಾನಂದನಿರೆ ಕಾಣದವನನು ಕೊರಡು ಎಂಬೆ ೩

೨೬೦
ಕೋಣ ಕೇಳಲೋ ಕೋಣ ನೀನು ಕೋಣನಲ್ಲವು ಬ್ರಹ್ಮ ಕೋಣ ಪ
ಶಾಸ್ತ್ರ ಪುರಾಣವ ಕೋಣ ನೀನು ವಿಸ್ತರವೋದಿದೆ ಕೋಣವಸ್ತು ತಿಳಿಯಲಿಲ್ಲ ಕೋಣ ನಿನ್ನ ಪುಸ್ತಕ ಬಟ್ಟೆಯಲ್ಲೋ ಕೋಣ ೧
ಎಲ್ಲವನೋದಿದೆ ಕೋಣ ನಾನು ಬಲ್ಲೆನೆನುತಿಹೆ ಕೋಣಬಲ್ಲೆನು ನಿನ್ನ ಕೋಣ ನೀನು ಬಲ್ಲಿಡೆ ಬಲ್ಲೆಯೋ ಕೋಣ೨
ಹೆಂಡಿರು ಮಕ್ಕಳು ಕೋಣ ಪ್ರಪಂಚ ಯಮನಾಳು ಕೋಣಖಂಡಿಸಿ ತಿಳಿ ನೀನು ಕೋಣ ಪ್ರಾಣ ಕೊಂಡವರವರೀಗ ಕೋಣ೩
ಎಲ್ಲಿಂದ ಬಂದೆಯೋ ಕೋಣ ನೀನೆಲ್ಲಿಗೆ ಹೋಗುವೆ ಕೋಣಬಲ್ಲವಿಕೆ ನಿನಗಿಲ್ಲ ಕೋಣ ನೀ ಎಲ್ಲರ ಹೊಡೆಗೆಡೆ ಕೋಣ ೪
ನನ್ನ ನುಡಿ ಕೇಳೋ ಕೋಣ ನಿನಗಿನ್ನ ಬುದ್ಧಿಯಿಲ್ಲವೋ ಕೋಣನಿನ್ನನೆ ನೀ ಅರಿ ಕೋಣ ಇನ್ನು ಚಿದಾನಂದನರಿಯದಿದ್ದಡೆ ಕೋಣ೫

೧೨೩
ಕೋಲನ್ನ ಕೋಲೇ ಕೋಲೇ ಕೋಲನ್ನ ಕೋಲೇಸದ್ಗುರುವ ಬಲಗೊಂಬೆ ಕೋಲನ್ನ ಕೋಲೆ ಪ
ನಾಯಿಗೋಣನೆ ಮುರಿದು ನಾಗಾರ ಇಲಿ ತಿಂದುಹೋಯಿತೇ ಕಣ್ಣು ಕಾಗೆಯದು ಕೋಲನ್ನ ಕೋಲೆ ೧
ಕಷ್ಟದ ಹದ್ದನೆ ಬಡಿದು ಇಷ್ಟವಿಲ್ಲದೆ ಗುಡ್ಡವನೇರಿದವನ ನರಿಸೂಚಿಸಿತೇ ಕೋಲನ್ನ ಕೋಲೆ೨
ಆನೆಯ ಅಣುನುಂಗಿ ಅಡರಿತೇ ಮೇಲಕೆಕೋಣನ ಕೋಗಿಲೆ ನುಂಗಿತೇ ಕೋಲನ್ನ ಕೋಲೆ ೩
ಊದಿತ್ತು ಓಲೆಯು ಒಂಭತ್ತು ಮಡಕೆಗೆಹಾದಿಯಾಯಿತೇ ನಡುವಣ ಮಾರ್ಗ ಕೋಲನ್ನ ಕೋಲೇ೪
ಕದವನೆ ತೆರೆದು ಕಳ್ಳರ ಬಲಿಕೊಟ್ಟುಮೊದಲಗಿತ್ತಿಗೆ ಮೂಗುತಿಯಿಟ್ಟೆ ಕೊಲನ್ನ ಕೋಲೇ ೫
ಬೆಳುದಿಂಗಳು ತುಂಬಿ ಬೆಳ್ಳಿಯ ತೆರೆಯೆದ್ದುಕೊಳವುಕ್ಕಿ ಕಮಲ ಕಳೆಯೇರೆ ಕೋಲನ್ನ ಕೋಲೇ ೬
ಓಡಿಲಗಲ ಮಾಡಿ ಉಣ್ಣದೂಟವುಂಡುಓಡುವ ಹಾರುವನ ಕಟ್ಟಿಹಾಕಿ ಕೋಲನ್ನ ಕೋಲೆ ೭
ಕೋತಿಯು ಸತ್ತಿತೇ ಕೊಡವೀಗ ಒಡೆಯಿತೇಜೋತಿಯು ಒಳಗ್ಹೊರಗೆ ಬೆಳಗಿತೇ ಕೋಲನ್ನ ಕೋಲೆ ೮
ಮುದುಕಿಯನೆ ಕೊಂದು ಮರವನೆ ಮುರಿದೊರಗಿಚಿದಾನಂದ ಬ್ರಹ್ಮ ತಾನಾಯಿತೇ ಕೋಲನ್ನ ಕೋಲೆ೯

೧೨೪
ಕೋಲು ಕೋಲು ಕೋಲು ಕೋಲೇಕೋಲೇ ಕೋಲನ್ನ ಪ
ಆಧಾರವನೆ ಮೆಟ್ಟಿ ಚಕ್ರಾರ ಭೇದಿಸಿನಾದದ ನಾದ ಸುನಾದವ ಕೇಳಿಶೋಧಿಸಿ ಸುಷುಮ್ನ ಮಾರ್ಗ ಮನೆಯ ಪೊಕ್ಕುಮೋದಿ ಬೆಳಗಿನೊಳ ಬೆಳಕು ತಾನಹುದೆ ಹಟ೧
ಪ್ರಾಣಾಪಾನವು ಕೂಡಿ ಸರ್ಪವನೆಬ್ಬಿಸಿಜಾಣತನದ ನಾಗ ಸ್ವರವನೂದಿಮಾಣದೆ ಮುತ್ತುಗಳುದುರುವ ಬಯಲಲಿಕೇಣವಿಲ್ಲದೆ ಆಡಿಪುದೆ ಕುಂಡಲಿಯೋಗ ೨
ಪೀಕುತ ನಾಲಗೆ ಕ್ಷೀರಾಹಾರದೊಳಿದ್ದುನೂಕುತಂಗಲದೊಳು ರಸನವನುತೇಕ ನಿಲ್ಲಿಸಿ ನಾಲಗೆಯಲಮೃತವನ್ನುಂಡುಮೂಕ ಸಕ್ಕರೆ ತಿಂದ ತೆರದಲಂಬಿಕ ಯೋಗ ೩
ಷಣ್ಮುದ್ರೆ ಹಿಡಿದು ಷಡಂಗುಲದಲಿ ಒತ್ತಿಕಣ್ಣ ಅಂತರ್ಯದಿ ದೃಷ್ಟಿಯಿಟ್ಟುಹುಣ್ಣಿಮೆ ಚಂದ್ರನ ಕಳೆಯ ಬೆಳಗಿನೊಳುಥಣ್ಣಗೆ ಥಳ ಥಳಿಸುವುದದು ಹಟ ರಾಜ೪
ವಾಯುವ ಸಮನಿಸಿ ರೇಚಕ ಪೂರಕದಿಂದಸಾಯಾಸದಲಿ ಕುಂಭಕವ ನಿಲ್ಲಿಸಿಬಾಯಿ ಮಾಡುವ ಸುನಾದವ ಲಕ್ಷಿಸಿಹಾಯಿ ಎಂದೆನಿಪ ಸುಖಹೊಂದೆ ಲಯಯೋಗ ೫
ದೃಷ್ಟಿಯರ್ಧವನೀಗ ಮುಚ್ಚಿ ಸದ್ಗುರುವಾಗಿದೃಷ್ಟಿಸಿ ತನ್ನನೆ ನೋಡುತಿರೆಸುಟ್ಟು ಜೀವತ್ವವ ದೇಹಭಾವವ ಮರೆತುಮುಟ್ಟಿ ಬ್ರಹ್ಮಾದುದೆ ಅದುವೆ ಸದ್ಗುರು ಮಾರ್ಗ೬
ಹೊರಗೊಂದು ಆಗದೆ ಒಳಗೊಂದು ಆಗದೆಹೊರಗೆ ಒಳಗೆ ತಾನೆ ತಾನೆಯಾಗಿಗುರು ಚಿದಾನಂದನು ಸಹಜ ತೋರುತ ಸರ್ವಪರಮ ಮಂಗಳ ಸಾಕ್ಷಿಯದು ರಾಜಯೋಗ೭

೩೯೮
ಖಳರನು ತರಿವಾ ಬಗಳಾಂಬೆಗೆಕಮಲದಾರತಿ ಬೆಳಗಿರೆ ಪ
ಅರಿ ಎಂಬ ಶಬ್ಧವು ಕಿವಿಗೆ ಬೀಳಲುಸರಿದವು ಸರಿದವು ಖಡ್ಗದಿಂ ಕೆಂಗಿಡಿಭರದಿಂದರಿಯನೆ ತುಡುಕಿಯೆ ಮುಂದಲೆತರಿದಳಾಗಲೆ ತಲೆಯ ಬಗಳಾಂಬೆಮುರಿದಳಾಗಲೆ ತಲೆಯ ಬಗಳಾಂಬೆ೧
ಕಡಿಯುತ ಅವುಡನು ಅರಿಯನು ದೃಷ್ಟಿಸಿಝಡಿಯುತ ಮುದ್ಗರ ಹಿಡಿದು ನಾಲಗೆಮೃಡಹರಿ ಬ್ರಹ್ಮರು ಅಹುದಹುದೆನೆಹೊಡೆದಳಾಗಲೆ ಅರಿಯ ಬಗಳಾಂಬಪುಡಿಯ ಮಾಡಿದಳರಿಯ ಬಗಳಾಂಬ ೨
ಕಾಲಲಂದುಗೆ ಗೆಜ್ಜೆ ಕಂಠಾಭರಣವುಮೇಲೆ ಸರಿಗೆವೋಲೆ ಮೂಗುತಿ ಹೊಳೆಯಲುಲೋಲ ಚಿದಾನಂದ ರೂಪಿಣಿ ಬಗಳೆಯುಪಾಲಿಸಿದಳು ಭಕ್ತರ ಬಗಳಾಂಬಲಾಲಿಸಿದಳು ಭಕ್ತರ ಬಗಳಾಂಬ ೩

೩೫೪
ಗಾಂಜ ಸೇದುವ ಬನ್ನಿ, ತಿಳಿವಿನ ಗಾಂಜ ಸೇದುವ ಬನ್ನಿಗಾಂಜ ಸೇದಿದರೆ ನಿಮಗೆ ಭವವಿಲ್ಲ ವೆನ್ನಿ ಪ
ಅವಗುಣವೆಂಬ ಭೂಮಿ ಶೋಧಿಸಿ ಅಗೆತ ಮಾಡಿದ ಗಾಂಜಸವನಿಸಿದ ಖೂರಾಕು ಹಾಕಿದ ಸತ್ವವಾದ ಗಾಂಜ ೧
ಸಾಧನೆ ಎಂಬ ನೀರು ಕಟ್ಟಿದ ಸಡಕು ಆದ ಗಾಂಜಭೇದವೆಂಬ ಕಳೆಯ ಕೆತ್ತಿದ ಬೋಧವೆಂಬ ಗಾಂಜ ೨
ಭಜನೆ ಭಾವದಿಂದ ಬೆಳೆದ ಬಡಕು ಆದ ಗಾಂಜಕುಜನವೆಂಬ ಎಲೆಗಳ ಚಿವುಟಿದ ಕಡಕು ಆದ ಗಾಂಜ ೩
ನಾನು ಎಂಬ ಹೂವು ಉದುರಿದ ನೊಣ ಹಾರದ ಗಾಂಜಜ್ಞಾನವೆಂಬ ಗೊಂಡೆಗಳಳಿದ ಘನ ತಾನಾದ ಗಾಂಜ ೪
ಏನೇನ ಅರಿವು ಎಲ್ಲ ಅಡಗಿದ ಏಕವಾದ ಗಾಂಜತಾನೆ ಚಿದಾನಂದ ಸದ್ಗುರು ವಾದ ತಾನೆ ತಾನಾದ ಗಾಂಜ ೫

೧೨೫
ಗುಡುಗುಡಿ ಭಾರಿ ಗುಡುಗುಡಿಗುಡುಗುಡಿ ಪಡೆಯಿರಿ ಗುರುಪುತ್ರರಾದವರು ಪ
ಆಸನ ನಳಿನವೆಂಬ ಸಿಂಬೆಯ ಮಾಡಿಭೂಷಣ ಶರೀರವ ಕಾಯ ಮಾಡಿಭಾಸುರ ಭಕ್ತಿ ಎಂದೆಂಬ ನೀರನೆ ಹೊಯ್ದುಸುಷುಮ್ನವೆಂಬ ಸೂಲಂಗಿಯನೆ ಹಾಕಿ ೧
ತ್ರಿಕೂಟವೆಂದೆಂಬ ತ್ರಿವಿಧ ಮೂಲೆಯ ಚೊಂಗೆಭೂತಲದ ಹಮ್ಮೆಂಬ ತೊಪ್ಪಲುಸಾಕಾರ ಗುರುವೆಂಬ ಬೆಂಕಿಯನೆ ಹಾಕಿಏಕಚಿತ್ತವೆಂಬ ಮುಚ್ಚಳವನೆ ಮುಚ್ಚಿ ೨
ಸೋಹಂ ಎಂದೆಂಬ ಕೊಳವೆಯನೆ ಹಚ್ಚಿಬಹ ಪೂರಕ ಸೂರಿಯನೆ ಸೇದುತಆಹ ರೇಚಕವೆಂಬ ಹೊಗೆಯನೆ ಬಿಡುತಮಹಾ ಕುಂಭಕವೆಂಬ ಉಸುರನೆ ಹಿಡಿಯುತ ೩
ಘುಡು ಘುಡು ಎಂದೆಂಬ ಮೇಘದ ನಾದವನು ನುಡಿಸೆಸುಡು ಮಾಯೆಯೆಂದು ಥೂ ಎಂದು ಉಗುಳುತಬಿಡಬಾರದು ಇದು ನಿತ್ಯವೆಂದೆನುತಅಡಿಗಡಿಗೆ ಊದುತ್ತ ಉರಿಯ ಎಬ್ಬಿಸುತ ೪
ಹಾರಿತು ಬ್ರಹ್ಮಾನಂದವೆಂದೆಂಬ ಹರಳುಏರಿತು ಪೂರ್ಣಾನಂದದ ಲಹರಿಜಾರಿತು ತನುಮನವೆಲ್ಲ ಮರೆತು ಚಿತ್ತಸೇರಿತು ಚಿದಾನಂದನೊಳಗೆ ಲಯಿಸಿ ಕೂಡಿ ೫

೨೬೧
ಗುಣವಂತರ ಗುಣವ ಗುಣವಂತನರಿವನುಗುಣಹೀನ ಗುಣವಂತನ ಗುಣವೇನ ಬಲ್ಲನೋ ಪ
ಕಮಲಗಳ ಹೃದಯ ಭ್ರಮರಕ್ಕೆ ತಿಳಿಯುವುದುಕಮಲಗಳ ಗುಣ ಕಪ್ಪೆಗೇನು ತಿಳಿವುದೋವಿಮಲರಾ ಹೃದಯ ವ್ಯುತ್ಪನ್ನರಿಗೆ ಹೊಳೆಯುವುದುಕುಮತಿಗಳಿಗೆ ಕೋಮಲರ ಘನತೆಯೆಂತರಿವುದೋ ೧
ಕೆಚ್ಚಲೊಳಿರುತಿಹುದು ಕರುವಿಗೆ ದೊರಕುವುದುಕೆಚ್ಚಲ ಕಚ್ಚಿರುವ ಉಣ್ಣೆಗದು ದೊರೆವುದೋಸಚ್ಚರಿತ್ರರ ಬೋಧೆ ಸತ್ಪುರುಷಗಂಟುವುದುಹುಚ್ಚ ತಾ ಬದಿಯಿದ್ದರೆ ಪರಿಣಾಮವೇನಹುದೋ ೨
ಸಾಧುಗಳ ಮಹಿಮೆಯ ಸಾಧುಗಳ ಹೃದಯವುಸಾಧುಗಳ ಬೋಧೆಯ ಸಾಧು ಸಹವಾಸಬೋಧ ಚಿದಾನಂದ ಬಗಳೆಯಾದವರಿಗರಿವುವಾದಿಯಾಗಿಹ ಮೂರ್ಖರಿಗೆ ಗುಣವೇನು ತಿಳಿಯುವುದೋ ೩

೧೨೬
ಗುಮ್ಮವ ನೋಡಿರೋ ಮೂಲಮಾಯೆ ಗುಮ್ಮವ ನೋಡಿರೋಗುಮ್ಮವು ಹೀಗೆಂದು ಶತಕೋಟಿ ಬ್ರಹ್ಮರು ಆಗಿವೆಗುಮ್ಮವ ಹೀಗೆಂದು ಗುರುತರಿವರಿಲ್ಲಯ್ಯ ಪ
ಇಲ್ಲದೆ ತಾನೀಗ ತೋರುವ ಗುಮ್ಮಎಲ್ಲ ಲೋಕತಾನೆ ಆಗಿಹ ಗುಮ್ಮಗೆಲ್ಲುವೆನಗೆ ಗೆಲುವಾಗದ ಗುಮ್ಮಒಳ್ಳೆ ಒಳ್ಳೆಯವರನು ಅಂಜಿಪ ಗುಮ್ಮ ೧
ಏನು ಜ್ಞಾನವ ನೋಡೆ ಹೋಗುದು ಗುಮ್ಮಏನುಸಾಧನೆಮಾಡೆ ಎತ್ತದ ಗುಮ್ಮ ಮಾನಿನಿ ಸುತ ಸಂಪತ್ತಾದ ಗುಮ್ಮನಾನಾ ಭವವು ಆಗಿ ತೊಳಲಿದ ಗುಮ್ಮ ೨
ತಿಳಿವೆ ನೆಂದರೆ ತಿಳಿಗೊಡದು ಗುಮ್ಮತಿಳಿದರೆ ತನ್ನೊಳಗಡವುದು ಗುಮ್ಮಬಲು ಚಿದಾನಂದ ಗುರುವಿನಲಿ ಗುಮ್ಮಹೊಳೆ ಹೊಳೆದು ತೋರಿಪುದು ಗುಮ್ಮ ೩

೧೨೭
ಗುರು ಎಂಥಾ ಗಾರುಡಿಗಗುರುವಿನ ನಂಬಿ ಗುಣವೆಲ್ಲ ಕಳಕೊಂಡೆ ಪ
ಶರಣು ಮಾಡೆಂದರೆ ಶರಣು ಮಾಡುತ್ತಲಿರ್ದೆಕರದಲ್ಲಿ ಏನಿತ್ತೋ ಜವೆಯ ಬೂದಿಶಿರದ ಮೇಲೆನ್ನ ಮೈಮೇಲೆ ಎಳೆಯಲು ಶರೀರವಮರೆತೆನೆ ಇದಕೆ ಸಾಕ್ಷಿಯಾದನೆ ಗುರು ೧
ಆರು ಇಲ್ಲದುದ ನೋಡಿ ಬೇರೆನ್ನ ಕರೆದೊಯ್ದುಮೋರೆಯನು ಕಿವಿಯೊಳಗಿಟ್ಟು ಮಂತ್ರಿಸಿದನಾರಿ ಬದುಕು ಮನಮಕ್ಕಳನೆಲ್ಲವಸೇರಿ ಸೇರದಂತೆ ಮಾಡಿದನೆ ಗುರು ೨
ಭವಗೇಡಿ ಕುಲಗೇಡಿ ಸಂಗಗೇಡಿಯಾದೆಇವನ ವಿಶ್ವಾಸದ ಫಲದಲಿಂದಇವನ ಮೇಲೆ ಎನ್ನ ವ್ಯಾಕುಲ ಹತ್ತಿದೆವ್ಯವಹಾರವೆಂಬುದು ಎಡವಟ್ಟಾಯಿತು ೩
ಮಂತ್ರಿಸಿದ ಕ್ರಿಯೆ ಮರಳಲೀಯದೆ ಎನ್ನಮಂತ್ರ ತಂತ್ರಕ್ಕದು ಬಗ್ಗಲಿಲ್ಲಮಂತ್ರದ ಮಹಿಮೆಯು ಮಹಾಮಹಿಮೆಯುಮಾಂತ್ರಿಕರೊಳಗೆ ದೊಡ್ಡವನಹುದೋ ಗುರು ೪
ಇವನ ನಂಬಿದ ಮೇಲೆ ಇವನಂತಲ್ಲದೆಭುವನಕ್ಕೆ ತಿರುಗಿ ತಾ ತಾರೆನೆವಿವರಿಸೆ ಹುರುಳಿಲ್ಲ ಹೇಳಿ ಕೇಳೋದೇನುಭುವನ ರಕ್ಷಕ ಚಿದಾನಂದನೆ ಗುರು ೫

೫೮
ಗುರು ಹೊಂದಿದವನೀಗ ಎಂದಿಗೂ ಕೆಡನುಮರಳಿ ಹುಟ್ಟಿದರೇನು ಗುರುವು ಕಾಯುವನು ಪ
ಗುರು ಹೇಳಿದಂತಿರದೆ ಗುರು ಆಜ್ಞೆಯಂತಿರದೆಬರಿಯ ಪ್ರಾಪಂಚದ ನಡೆಯನೆ ನಡೆದುಮರೆತೆಯಾದರೇನು ಗುರು ಕರುಣ ತಾನದುವೆನರಕಕ್ಕೆ ಕಳುಹದೋ ಯಮನ ಸೇರಿಸದೋ ೧
ತನ್ನ ಅವಗುಣದಿ ಜನ್ಮಗಳ ಸೇರಿದರೇನುಅನ್ಯಕೆ ಎಳಸದದು ಸೋಂಕಿನಲಿ ಮನವುಚೆನ್ನಾಗಿಯೇ ಗುರುದ್ವಾರವನು ಕಾದಿಹನುಭಿನ್ನಿಸದೆ ಪರತತ್ವ ಬೋಧೆ ಹೇಳುವನು ೨
ಭ್ರಷ್ಟತ್ವದಿಂ ತನ್ನ ಪಾಪವನು ಉಣುತಲಿಹುಟ್ಟುತಿಹ ಹಂದಿ ಪಶುವಾಗಿ ತಾನುಘಟ್ಯಾಗಿ ನರಜನ್ಮ ಧರಿಸುತ್ತ ಕಡೆಯಲಿಶಿಷ್ಟ ಚಿದಾನಂದ ಬಗಳೆಯನು ಕೂಡುವನು ೩

೫೯
ಗುರುಗಳಿಗೆ ಧೂಪ ಗುರುಗಣಗಳಿಗೆ ಧೂಪಗುರುಪಾದಕೆ ನಿತ್ಯ ನಿತ್ಯದಲಿ ಧೂಪ ಪ
ನಾನದಾರಿಹೆನೆಂದು ತಿಳಿದವಗೆ ಧೂಪನಾನು ಆತ್ಮವು ಎಂದು ಕಂಡವಗೆ ಧೂಪನಾನಾ ಜೀವ ಭ್ರಾಂತಿಯಳಿದವಗೆ ಧೂಪತಾನೆ ತಾನಾಗಿಹೆನೆಂದವಗೆ ಧೂಪ ೧
ಸಂಸಾರದೊಳು ಇದ್ದು ಇಲ್ಲದವನಿಗೆ ಧೂಪಸಂಸಾರ ಸಂತೆಂದು ಕಂಡವಗೆ ಧೂಪಸಂಸಾರ ಲೇಪ ಅಂಟದವನಿಗೆ ಧೂಪಸಂಸಾರದೊಳು ಮುಕ್ತನಾದವಗೆ ಧೂಪ ೨
ಸೂರ್ಯ ಚಂದ್ರ ಸ್ವರದಿ ನಡೆದವಗೆ ಧೂಪಆರು ಚಕ್ರದಿ ನಡೆದವಗೆ ಧೂಪಭೋರೆನಿಪ ಓಂಕಾರ ಕೇಳ್ದವಗೆ ಧೂಪಧೀರ ಚಿದಾನಂದ ಗುರುವಾದವಗೆ ಧೂಪ ೩

೬೦
ಗುರುಗಳೆಂಬರೆ ಇವರು ಸತ್ಯವುಗುರುಗಳೆಂಬರೆ ಇವರು ಸತ್ಯವು ಪ
ಅಣುರೇಣು ತೃಣಕಾಷ್ಠ ಬ್ರಹ್ಮ ಹೇಳುವರುಗುಣಗಳ ಹುಡುಕರು ಪ್ರಕೃತಿಯ ೧
ಜನನ ಮರಣಗಳ ಕಡಿದು ಹಾಕುವರುಜನನಕ್ಕೆ ಬರಗೊಡರು ಜನಗಳ ೨
ನರನನು ವೈದು ಹರನ ಮಾಡುವರುಗುರು ಚಿದಾನಂದರಹರು ನಿಜದಲಿ ೩

೧೨೮
ಗುರುನಾಥ ಗುರುನಾಥ ಹೇಳಿದ ಮಾತು ಮಾತೆನ್ನ ಬಹುದು ಮಾತುವೊಂದೇಪ
ವೇದಕ್ಕೆ ನಿಲ್ಲದು ವಿವರಕ್ಕೆ ತೋರದುಆದಿ ಪುರಾಣದ ಅರ್ಥ ಅರ್ಥ ಅದುವಾದಕ್ಕೆ ದೂರದು ಕರವಶವಾಗದುಸಾಧಿಸಿ ತನಗೆ ತಿಳಿದು ಹೇಳಿದ ಮಾತು ಮಾತು ವೊಂದೇ ೧
ಮೂರರ ನಡುವದು ಮೂಲವೆ ತಾನದುಧೀರ ಧೀರರೆಲ್ಲ ದಿಟ್ಟಿಪುದುಬೇರೆ ಮತ್ತಿಲ್ಲದು ಬೆಗಡಾಗಿ ಇಹುದು ೨
ಸಾರಾಯದಿಂದೆನಗೊಲಿದು ಹೇಳಿದ ಮಾತು ಮಾತುವೊಂದೇಮಾತಿನ ಮಹಿಮೆಯ ಮತ್ತೇನ ಹೇಳಲಿಪ್ರೀತಿ ಎಂಬವೆಲ್ಲ ಪೀಡೆಯಾದವುಭೂತನಾಥ ಚಿದಾನಂದ ಭೂಪತಿಯಾದಈ ತೆರದಲಿ ತಾನಿಂತು ಹೇಳಿದ ಮಾತು ಮಾತುವೊಂದೇ ೩

೬೧
ಗುರುವ ನೆನೆದರೆ ಸಾಲದೆ ಚಿದಾನಂದಗುರುವ ನೆನೆದರೆ ಸಾಲದೆಹಿರಿದು ಸಂಸಾರಗಳು ಮಾಡುತ್ತೊಂದುದಿನಕ್ಕೊಮ್ಮೆ ಗುರುವ ನೆನೆದರೆ ಸಾಲದೆ ಪ
ಜುಟ್ಟು ಜನಿವಾರ ಬಿಸುಟು ತಾವೀಗಉಟ್ಟೊಂದು ಕೌಪೀನವಕಟ್ಟಿ ಕಾಷಾಯ ಕಮಂಡಲು ದಂಡ ಹಿಡಿದುದಿಟ್ಟ ಸಂನ್ಯಾಸ ಪಡೆಯುವುದೇಕೆ ೧
ಅಡವಿ ಅರಣ್ಯವ ಸೇರಿ ಅಲ್ಲಿದ್ದಅಡವಿ ತೊಪ್ಪಲನೆ ತಿಂದುಗಿಡ ಮರಗಳಲಿ ಮಲಗಿ ಮಳೆ ಛಳಿಗೆ ಕಂಗೆಡೆದೆ ಕಡು ತಪವ ಮಾಡುವುದೇಕೆ ೨
ಉಡುದಾರಗಳನೆ ಹರಿದು ತಾವೀಗಸುಡುಗಾಡಿನಲಿಹ ಬೂದಿಯನುಬಿಡದೆ ಲೇಪಿಸಿ ಮೈಗೆ ದಿಗಂಬರ ತಾನಾಗಿಕಡು ಚರಿಯ ಬೇಡುವುದೇಕೆ ೩
ಕಾವಿ ವಸ್ತ್ರಗಳನುಟ್ಟು ಮೈಗೆಲ್ಲತಾ ವಿಭೂತಿಯ ಧರಿಸಿ ಕಂಠದಲಿತೀವಿ ರುದ್ರಾಕ್ಷಿ ತಾಳಿ ಶಿವಶಿವಾಯೆಂದುತಾವು ಗೊಣಗುವುದೇಕೆ ೪
ಜ್ಞಾನಿಗೀಯವಸ್ಥೆಯಾ ವೇಷಗಳು ತಾವು ಇವಗೇನು ಇಲ್ಲಿಲ್ಲ ತಾನೆ ಚಿದಾನಂದ ಗುರು ತಾನೆ ತಾನೇ ಎಂದು ಭಾವಿಸುತಲಿತೀವಿ ತನ್ನನೇ ಮರೆತಿರಲದೇಕೆ ೫

೬೨
ಗುರುವನು ಸ್ಪರ್ಶಿಸಿ ಗುರುಮೂರ್ತಿಯಾದೆನುಗುರುವನು ಸ್ಪರ್ಶಿಸಿ ಪ
ಕ್ಷೀರದಿ ಕ್ಷೀರವು ಕೂಡಿ ಕ್ಷೀರವೇ ಆದಂತೆಪಾರ ಪಾರವೆ ಕೂಡಿ ಪಾರವೇ ಆದಂತೆ ೧
ಜ್ಯೋತಿ ಜ್ಯೋತಿಯ ಕೂಡಿ ಜ್ಯೋತಿಯೇ ಆದಂತೆನೀತಿ ನೀತಿಯೆ ಕೂಡಿ ನೀತಿಯೇ ಆದಂತೆ ೨
ಮಂಗಳವೆನಿಸುವ ಚಿದಾನಂದ ಬ್ರಹ್ಮದಿಮಂಗಳದೊಳು ಕೂಡಿ ಮಂಗಳವಾದೆನು ೩

೨೬೨
ಗುರುವಿಗೆ ಒಂದು ಶರಣಾರ್ಥಿ ಗುರು ಭಕ್ತರಿಗೊಂದು ಶರಣಾರ್ಥಿ ಪ
ಸಾಧನ ನಾಲ್ಕನು ಸಾಧಿಸುತಿರುತಿಹ ಸಾಧಕರಿಗೆ ಒಂದು ಶರಣಾರ್ಥಿವಾದವ ವರ್ಜಿಸಿ ವಸ್ತುವ ಧ್ಯಾನಿಪ ಉತ್ತಮರಿಗೆ ಒಂದು ಶರಣಾರ್ಥಿ ೧
ಯೋಗಗಳಿಂದಲೆ ಯೋಗ್ಯರಾಗಿಹ ಯೋಗೀಶರಿಗೊಂದು ಶರಣಾರ್ಥಿರಾಗ ಪೋಗಿ ರಂಜಿಸುತಿರುತಿಹ ರಂಜಕರಿಗೆ ಒಂದು ಶರಣಾರ್ಥಿ ೨
ದೂಷಣ ಭೂಷಣ ದೂರ ಮಾಡಿಹ ದೃಢವಂತರಿಗೆ ಒಂದು ಶರಣಾರ್ಥಿಆಸೆಗಳೆಂಬ ಅಳಿದು ಇರುತಿಹ ಆನಂದರಿಗೊಂದು ಶರಣಾರ್ಥಿ ೩
ಪ್ರಪಂಚವೆಲ್ಲವ ಪರಮಾರ್ಥ ಮಾಡಿಹ ಪಂಡಿತರಿಗೆ ಒಂದು ಶರಣಾರ್ಥಿತಾಪವನೀಗಿ ತಮ್ಮನೆ ಮರೆತಿಹ ತಾಪಸರಿಗೆ ಒಂದು ಶರಣಾರ್ಥಿ ೪
ಜನನ ಮರಣಗಳ ಜಡರನೆ ಕಳೆದಿಹ ಜನಪತಿಗಳಿಗೊಂದು ಶರಣಾರ್ಥಿಚಿನುಮಯಾತ್ಮಕ ಚಿದಾನಂದನ ಬೆರೆದಿಹ ಚಿದ್ರೂಪರಿಗೆ ಒಂದು ಶರಣಾರ್ಥಿ ೫

೬೪
ಗುರುವಿನ ಕರುಣವ ನಾನೇನ ಹೇಳಲಿಗುರುವಿನ ಕರುಣವ ಪ
ಇಟ್ಟನು ಕೊಟ್ಟನು ಉಪದೇಶಸೃಷ್ಟಿಯೆ ನೀನೆಂದ ನಾನೇನ ಹೇಳಲಿ ೧
ಮೂಗಿನ ಕೊನೆಯಲ್ಲಿ ಮಾಡಿದ ಮನೆಯನ್ನುಕೂಗಿಸಿದನು ನಾದ ನಾನೇನು ಹೇಳಲಿ ೨
ಶರೀರನ ಮರೆಯಿಸಿ ದೊರೆಯು ಚಿದಾನಂದಗುರುವನೆ ಮಾಡಿದ ನಾನೇನ ಹೇಳಲಿ ೩

೬೫
ಗುರುವಿನ ಗುಣಂಗಳ ನೆನೆವೆ ಸಿದ್ಧೇಶ ನಾನುಗುರುವಿನ ಪಾದಂಗಳ ನೆನೆವೆ ಸಿದ್ಧೇಶ ಪ
ಸುಖವು ಬಂದರೆ ಹಿಗ್ಗದವರು ಸಿದ್ಧೇಶ ನಾನಾದುಃಖವು ಬಂದರೆ ಬಗ್ಗದವರು ಸಿದ್ಧೇಶ ಅಖಿಳವೆಲ್ಲವ ಬ್ರಹ್ಮವೆಂದರು ಸಿದ್ಧೇಶ ಇವರುಮುಕುತ ಗಣಂಗಳು ಈಗ ಸಿದ್ಧೇಶ ೧
ಮಾನ ಹಚ್ಚಿಕೊಳ್ಳದವರು ಸಿದ್ಧೇಶ ಅಭಿಮಾನಗಳು ನೀಗಿದವರು ಸಿದ್ಧೇಶತಾನೆ ಎಂದು ತಿಳಿದವರು ಸಿದ್ಧೇಶ ಅವರುಜ್ಞಾನ ಮುಕ್ತಗಣಂಗಳು ಸಿದ್ಧೇಶ ೨
ಸಂಸಾರವಿದ್ದರೆ ಬಾಧಕವಿಲ್ಲದವರು ಸಿದ್ಧೇಶಸಿದ್ಧ ಚಿದಾನಂದರಿಹರು ಸಿದ್ಧೇಶ ಇವರುಶುದ್ಧ ಮುಕ್ತ ಗಣಂಗಳು ಸಿದ್ದೇಶ ೩

೬೬
ಗುರುವಿನ ನೆನೆದವನೆಲ್ಲರಿಗಧಿಕಗುರುವಿನ ನೆನೆದವನೇ ಪ
ನರನಿಂದಧಿಕ ನರಪತಿಗಧಿಕಸುರರಿಂದಧಿಕ ಸುರನಾಥಗಧಿಕವರಮುನಿಗಧಿಕ ವಸುಧೆಗಳಿಗಧಿಕಗುರುಪಾದವ ನಿತ್ಯ ನೆನೆದವನಯ್ಯ ೧
ಧರೆಗಿಂತಲಧಿಕ ಗಿರಿಗಿಂತಲಧಿಕಹರಿಗಿಂತಲಧಿಕ ಹರಗಿಂತಲಧಿಕಪರಕಿಂತಲಧಿಕ ಪರತರಕಧಿಕಗುರುಪಾದವ ನಿತ್ಯ ನೆನೆದವನಯ್ಯ ೨
ಆವವರಧಿಕ ಅವರಿಗಿಂತಧಿಕಭಾವಶುದ್ಧಿಯಿಂದ ಗುರುವಿನಸಾವಧಾನದಿ ನಿತ್ಯ ಮನದಲಿ ನೆನೆದವದೇವ ಚಿದಾನಂದ ಗುರುನಾಥನಯ್ಯ ೩

೬೭
ಗುರುವು ಗುರುವು ಎಂದು ಜಗದೊಳಗಿಹರುಗುರುವು ಅದ್ಯಾತರ ಗುರುವುನರನನು ತಿಳುಹಿಯೆ ಹರನನು ಮಾಡುವಗುರುವು ಆತನೆ ಸದ್ಗುರುವು ಪ
ಜ್ಞಾನವನರುಹಿ ಅಜ್ಞಾನವ ಹರಿಸುವಜ್ಞಾನಿಯಾದವ ಗುರುವುಏನೇನೋ ಭ್ರಾಂತಿಯದೆಲ್ಲವ ನೀಗಿ ನಿ-ಧಾನ ಮಾಡಿದನಾತ ಗುರುವುನೀನೀಗ ನಾನೆಂದು ಸಂಶಯ ಬಿಡಿಸಿಸನ್ಮಾನ ಮಾಡಿದನಾತ ಗುರುವು ೧
ಯಮ ನಿಯಮಾಸನ ಎಲ್ಲವನರುಹಿಯೆಎಚ್ಚರಿಸಿದಾತನೆ ಗುರುವುಸಮರಸವಾಯು ಮನವ ಮಾಡಿಕುಂಭಕಕಮರಿಸಿದಾತನೆ ಗುರುವುಘುಮು ಘುಮು ಘುಮು ಎಂಬ ಘಂಟಾಘೋಷವನ್ನೆಬ್ಬಿಸಿ ಅನುವುಮಾಡಿದವ ಗುರುವುದ್ಯುಮಣಿಕೋಟಿ ಕಳೆದೃಷ್ಟಿಗೆ ತುಂಬಿಸಿದೃಢವ ಮಾಡಿದನಾತನೆ ಗುರುವು ೨
ದೃಷ್ಟಿಯ ನಿಟ್ಟು ಖೇಚರಿ ಮುದ್ರೆ ನಿಲಿಸಿದಯ ಮಾಡಿದಾತನೆ ಗುರುವುಕಟ್ಟಳಿಲ್ಲದ ತೇಜ ಖವಖವ ನಗಿಸಿಯೆದಿಟ್ಟ ಮಾಡಿದನಾತ ಗುರುವುಮುಟ್ಟಿ ತುಂಬಿದ ಬೆಳದಿಂಗಳ ಖಂಡದಿಮುಳಿಗಿಸಿದಾತನೆ ಗುರುವುಶಿಷ್ಟ ಚಿದಾನಂದ ಸದ್ಗುರುವನಮಾಡಿಸಾಕ್ಷಿ ಮಾಡಿದನಾತ ಗುರುವು ೩

೬೩
ಗುರುವು ಬಂದ ನಮ್ಮ ಸಿರಿಯು ಬಂದಹರಿ ಹರ ಬ್ರಹ್ಮರ ದೊರೆರಾಯ ಬಂದ ಪ
ಸರ್ವರೂಪಕ ಬಂದಸರ್ವಾಂತರ್ಯಾಮಿ ಬಂದಸರ್ವ ಚೇತನ ಬಂದಸರ್ವಸಾಕ್ಷಿ ಬಂದ ೧
ಆನಂದಾತ್ಮಕ ಬಂದ ಅಜಅನಾದಿಯು ಬಂದಸ್ವಾನಂದ ಶರಧಿ ಬಂದಸುಖರೂಪ ಬಂದ ೨
ಅಂತರಾತ್ಮಕ ಬಂದಅವ್ಯಕ್ತಾಚಲ ಬಂದಚಿಂತಾಮಣಿಯೆ ಬಂದಚಿದಾನಂದ ಬಂದ ೩

೭೧
ಗುರುವೆ ನಿನ್ನಯ ದಾಸನಾದೆ ಎನ್ನಕರುಣದಿ ಪೊರೆವೊಡೆ ನಾನೇ ನೀನಾದೆ ಪ
ನಿರ್ಮಳ ಕಾವಿಯನುಟ್ಟು ಭೇದಮರ್ಮವೆನಿಪ ರುದ್ರಾಕ್ಷಿಯ ತೊಟ್ಟುಧರ್ಮ ಕುಂಡಲವೆಂಬೊದಿಟ್ಟು ಹರಕರ್ಮ ಭಸ್ಮವ ಸ್ಥಾನ ಸ್ಥಾನಕೆ ಇಟ್ಟು ೧
ಸ್ವಸ್ಥ ಸುಸ್ಥಳದಲ್ಲಿ ಕುಳಿತು ಗುರುವಿಸ್ತರಿಸಿದ ಗೋಪ್ಯವ ಮಾಡ ಕಲಿತುನಾಸ್ತಿ ಎಂಬುದ ನಾ ಮರೆತು ಪರವಸ್ತುನೀ ನಿಜವೆ ಎಂಬುದ ನಾನರಿತು ೨
ತಾನೆಂದು ಚಿಂತಿಸಲ್ಯಾಕೆ ಚಿ-ದಾನಂದ ಗುರುವೆ ಎದುರಲಿರಲಿಕೆಧ್ಯಾನ ಮೌನಗಳವು ಯಾಕೆ ನಾನುನೀನೆ ಎಂಬುದ ಮನಗಂಡಿರಲೇಕೆ ೩

೬೮
ಗುರುವೇ ಗುರುವೇ ಗುರು ಗುರುವೇ ಮಹಾಗುರು ಗುರುವೇ ಶ್ರೀ ಗುರುವೇ ಪ
ನಿತ್ಯತೃಪ್ತ ನಿರಾಮಯ ನಿರಂಜನ ನಿಷ್ಕಲಂಕ ಗುರುವೇಪ್ರತ್ಯಾಗಾತ್ಮ ಪರಾತ್ಪರಾತ್ಪರ ಪ್ರತ್ಯಯರಹಿತ ಗುರುವೇ ೧
ನಿರ್ವಿಕಲ್ಪ ನಿರಾಕಾರ ನಿರ್ಗುಣ ನಿರ್ಮಾಯನೇ ಗುರುವೇನಿರ್ವಿಕಾರ ನಿದ್ರ್ವಂದ್ವ ನಿಜಾಕಾರ ನಿರುಪಮಾತ್ಮ ಗುರುವೇ ೨
ಪೂಜ್ಯಮಾನ ಸುರಾಸುರ ಸಿದ್ಧಾಯಿಂ ಪೂಜಾರ್ಪಿತ ಗುರುವೇಈ ಜಗದೇಕ ನಾಥನೆ ಚಿದಾನಂದ ತೇಜಃಪುಂಜ ಗುರುವೇ ೩

೭೦
ಗುರುವೇ ನಿತ್ಯನು ಗುರುವೇ ನಿತ್ಯನುಗುರುವೇ ನಿತ್ಯನು ಸತ್ಯ ಪ
ಓದು ಓದು ಅದು ಯಾತರ ಓದು
ಓದು ಅಧ್ಯಾತ್ಮವ ಓದು
ಬೋಧ ಬೋಧ ತಾನ್ಯಾತರ ಬೋಧವು
ಬೋಧವೆ ಆತ್ಮದ ಬೋಧ ೧
ಬುದ್ಧಿ ಬುದ್ಧಿ ತಾನ್ಯಾತರ ಬುದ್ಧಿಯು
ಬುದ್ಧಿಯು ನಿಶ್ಚಯ ಬುದ್ಧಿ
ಸಿದ್ಧಿ ಸಿದ್ಧಿ ತಾನ್ಯಾತರ ಸಿದ್ಧಿಯುಸಿ
ದ್ಧಿಯು ಜ್ಞಾನದ ಸಿದ್ಧಿ ೨
ಶಾಂತ ಶಾಂತ ತಾನ್ಯಾತರಶಾಂತವು
ಎಲ್ಲಕೆ ನಿಂತುದೆ ಶಾಂತಭ್ರಾಂತು
ಭ್ರಾಂತು ತಾನ್ಯಾತರ
ಭ್ರಾಂತದು ಗುರುವಿನಲ್ಲಿದ್ದುದೆ ಭ್ರಾಂತು ೩
ಧ್ಯಾನ ಧ್ಯಾನ ತಾನ್ಯಾತರ ಧ್ಯಾನವು
ಧ್ಯಾನವು ತನ್ನದೆ ಧ್ಯಾನ
ಮೌನ ಮೌನ ಅದು ಯಾತರ ಮೌನವು
ಮೌನವು ತುರ್ಯದೆ ಮೌನ ೪
ಭಕ್ತಿ ಭಕ್ತಿ ತಾನ್ಯಾತರ ಭಕ್ತಿಯು
ಮುಕ್ತಿಯು ನಿಜವಹ ಭಕ್ತಿ
ಮುಕ್ತಿ ಮುಕ್ತಿ ತಾನ್ಯಾತರ ಮುಕ್ತಿಯು
ಮುಕ್ತಿ ಚಿದಾನಂದ ಮುಕ್ತಿ ೫

೭೨
ಗುರುವೇ ಮಹಾಗುರುವೇ ಚಿದಾನಂದಗುರುವೇ ಕೊಡಿರಿ ಮತಿ ನಮಗೆ ಪ
ಅದ್ದಿ ಪಾಪದೊಳು ಸಮೃದ್ಧಿ ನನ್ನದೆಂಬ ಹಮ್ಮುಹೊದ್ದಿ ತುಂಬಿಹುದು ನನಗೆ ದು-ರ್ಬುದ್ಧಿ ನಮಗೆ ಕೊಡಿರಿ ನೀವುಸದ್ಬುದ್ಧಿ ಮಹಾಗುರುವೇ ೧
ಅಂತೇ ಸಂಸಾರವು ಸತ್ಯಂತೆ ಇದನು ನಂಬುವನುಕತ್ಯಂತೆ ಮಾಡುವುದೆಲ್ಲ ಭ್ರಾಂತಂತೆ ನಮಗೆ ಕೊಡಿರಿ ಗುರುಚಿಂತೆ ಮಹಾಗುರುವೆ ೨
ಮಾನ ಉಳಿವುದಿಲ್ಲ ನಿದಾನಾ ಸಂಸಾರವೆ ಬಲುಹೀನ ತೊಳಲಿದೆ ನಾನು ಜನ್ಮನಾನಾ ನಮಗೆ ಕೊಡಿರಿ ಸು-ಜ್ಞಾನ ಮಹಾಗುರುವೇ ೩
ಶಕ್ತಿ ಆದರೆಯು ವಿರಕ್ತಿ ಬ್ರಹ್ಮದಲಿ ಆ-ಸಕ್ತಿ ಕೊಡುವುದದು ಬಲುಭಕ್ತಿ ನಮಗೆ ಕೊಡಿರಿ ನೀವುಮುಕ್ತಿ ಮಹಾಗುರುವೇ ೪
ಹಾರಿ ಭವದಾರಣ್ಯ ಕುಠಾರಿ ತೋರಿಸುವ ನಿಜದಾರಿ ಸಚ್ಚಿದಾನಂದ ತೋರಿ ನಮಗೆ ಹಿಡಿದು ಕೊ-ಡಿರಿ ಮಹಾಗುರುವೆ ೫

೩೫೫
ಗುಲ್ಲು ಹುಟ್ಟಿತು ಗ್ರಾಮದೊಳಗೆ ಗಲಿಬಿಲಿಯಾಯಿತು ನೀವು ಕೇಳಿಖುಲ್ಲರು ಕುಲಸಹ ಕೂಡೆ ಮಡಿದರು ನೀವು ಕೇಳಿ ಪ
ಮರ ಮುರಿದೊರಗಿತು ನೆರಳೆ ನೆಲೆಯಾಯಿತು ನೀವು ಕೇಳಿಕುರಿತಳೇ ಸತ್ತವು ನರಿ ಮಾಳಿಗೆ ಏರಿತು ನೀವು ಕೇಳಿ ೧
ಅತ್ತೆಯು ಅಳಿದಳು ಸೊಸೆಯು ಸುಖಿಸಿದಳು ನೀವು ಕೇಳಿಮುತ್ತೈದೆಯಾದಳು ರಂಡೆ ತಾನೀಗ ನೀವು ಕೇಳಿ ೨
ಕೊಡವೊಡೆಯಿತು ಕಳ್ಳರ ತಲೆ ಹೋದವು ನೀವು ಕೇಳಿನಡೆದುಹೋದರು ಬಯಲೂರಿಗೆ ಗೂಳೆಯ ನೀವು ಕೇಳಿ ೩
ಮಂಡೆಗೆ ಕೈ ಬಂದಿತು ಮುರುಕು ಆಯಿತು ಹುಟ್ಟು ನೀವು ಕೇಳಿರುಂಡವಿಲ್ಲದೆ ತಲೆ ಬಂದು ಹತ್ತಿತು ನೀವು ಕೇಳಿ ೪
ಗುಡ್ಡದ ಸಂದಿಯ ನೀರನೆ ಕುಡಿದು ನೀವು ಕೇಳಿದೊಡ್ಡ ಚಿದಾನಂದ ಗುರುವ ಸೇರಿದರು ನೀವು ಕೇಳಿ ೫

೧೫
ಗೆಳೆತನ ಹಿಡಿದನೆ ಬಗಳೆಯ ಕೂಡೆಗೆಳೆತನ ಆರಿಗೂ
ದೊರಕದತನಯ ಸತಿಯು ಧನವೆಂಬುದ ಸೇರದಜನನ ಮರಣಕೆ ಹೊರತಾದ ಪ
ಎನ್ನ ಕಾಲು ಬಗಳೆ ಕಾಲಾಗಿಎನ್ನ ಹಸ್ತ ಬಗಳೆ ಹಸ್ತವಾಗಿ
ಎನ್ನ ಬುಜ ಬಗಳೆ ಬುಜವಾಗಿಎನ್ನ ಕಣ್ಣೇ ಬಗಳೆ ಕಣ್ಣಾಗಿ ೧
ಎನ್ನ ದೇಹವು ಬಗಳೆ ದೇಹವಾಗಿಎನ್ನ ಇಂದ್ರಿಯ ಬಗಳೆ
ಇಂದ್ರಿಯವಾಗಿಎನ್ನ ಮನವು ಬಗಳೆ ಮನವಾಗಿಎನ್ನ ಜೀವ ಬಗಳೆ ಜೀವವಾಗಿ ೨
ನಾನೇ ಬಗಳೆಯಾಗಿ ಬಗಳೆಯೇ ನಾನಾಗಿನಾನು ನೀನು ಎಂಬೆರಡುಳಿದು
ಜ್ಞಾನ ಚಿದಾನಂದ ಬ್ರಹ್ಮಾಸ್ತ್ರ ತಾನಾಗಿತಾನೇ ತಾನಾದ ಗೆಳೆತನವ ೩

೧೨೯
ಘಂಟಾನಾದವ ಕೇಳೋ ಮುಕ್ತಘಂಟಾನಾದವ ಕೇಳೋಘಂಟಾನಾದವು ಘಣ ಘಣವೆನಲುಅಂಟಿ ಕೊಳ್ಳದೆ ಲೌಕಿಕ ಸುಖಕೆ ಪ
ಈಷಣ ತ್ರಯಗಳು ಎಲ್ಲವು ಕೆಟ್ಟುಪಾಶವೆಂಟನು ಎಲ್ಲವ ಸುಟ್ಟುವಾಸನೆ ಹದಿನೆಂಟನು ಕಳಚಿಟ್ಟುಕ್ಲೇಷ ಪಂಚಕಗಳು ಹುಡಿಯಿಟ್ಟು ೧
ಅರಿಗಳು ಅರುವರ ತಲೆಯನೆ ಹೊಯ್ದುಕರಣ ನಾಲ್ವರ ಕಾಲನೆ ಕೊಯ್ದುಹರಿವಾ ಹತ್ತರ ನೆತ್ತಿಗೆ ಹೊಯ್ದುಮೆರೆವಾವರಣ ಏಳನೆ ಮೇದು ೨
ಘಂಟಾನಾದದ ಇಂಪನಾಲಿಸುಎಂಟು ಮೂರ್ತಿಗಳೊಡೆಯನಹೆಕಂಟಕಹರ ಚಿದಾನಂದ ಬ್ರಹ್ಮವುತಾನಾಗಿಯೇ ನೀ ನಿಜ ವಿರುವೆ ೩

೧೩೦
ಚರಣವನೀಗ ಹೊಂದಬೇಡ ಕೇಡಿಗಗುರುವಿನ ಚರಣವನೀಗ ಹೊಂದಬೇಡ ಪ
ಜಾರಣ ಮಾರಣ ಬೋಧಿಸಿ ಗುರುವಜೀವನ ನೀಗಲೆ ತಿನ್ನುವ ಗುರುವಕಾರಣಿಕವನೆ ನುಡಿಯುವ ಗುರುವಕಾಮಿತವನೆ ಹೇಳುವ ಗುರುವ ಕೇಡಿಗ ಗುರುವ ೧
ಮಹಿಮೆ ಗಿಹಿಮೆ ತೋರುವ ಗುರುವಮರಳಿ ಜನ್ಮಕೆ ತರುವ ಗುರುವದಹಿಸಿ ಮನೆಯ ಹೋಹ ಗುರುವದಂಡಣೆಯ ಗುರುವ ಕೇಡಿಗ ಗುರುವ ೨
ಹರಿದು ತಿನ್ನುವ ಮೋಸದ ಗುರುವಬರಕತವಿಲ್ಲದ ಗುರುವಕರಕೊಳ್ಳುತಲಿರುವ ಕರ್ಮಿತಾಗುರುವ ಕೇಡಿಗ ಗುರುವ ೩
ಶಾಂತಿ ಶಮೆ ದಮೆಗಳು ದೊರಕದ ಗುರುವಸೈರಣೆ ಎಂದಿಗು ನಿಲುಕದ ಗುರುವಕರುಣೆಯ ತಾತೋರದ ಗುರುವ ದಯವಿಲ್ಲದಗುರುವ ಕೇಡಿಗ ಗುರುವ ೪
ಆಸೆಯನು ಬಿಡದಿಹ ಗುರುವಅಂಗದ ಹಸಿವನು ತಿಳಿಯದ ಗುರುವಬಾಸ ಚಿದಾನಂದನ ನರಿಯದ ಗುರುವಬ್ರಹ್ಮನಾಗದ ಕೇಡಿಗ ಗುರುವ ೫