Categories
ರಚನೆಗಳು

ಜಕ್ಕಪ್ಪಯ್ಯನವರು

೩೬
ಅಡಗುವದು ಘನ ಅಡಗುವದುತೋರದಡಗದು ದೃಷ್ಟಿಯಲ್ಲಿ ಪ
ಮಡದಿ ಮಕ್ಕಳು ಮನೆಯ ಬಲ್ಲಿತೊಡಕಿದೆ ಮನ್ಮಥನ ಬಲೆಯಲ್ಲಿ ೧
ನಾನೀನೆಂಬಭಿಮಾನದಲಿ ಸ್ವಾನುಭವದ ಸುಖ ವ್ಯರ್ಥವೇ ಅಲ್ಲಿ ೨
ದೀಪಕ ಶಂಕರನ ಪ್ರಭೆಯಲ್ಲಿದೀಪ ಕೀಟಕ…………….. ೩

೪೭
ಆಚರಸ ನೀ ಬಾಚರಸ ನೀ ಈಚಿಯೊಳು ಕಟ್ಟಿರುವ ಪೆಸರಿದ ನೆರೆದು ಸುವಾಚ್ಯ ಸಂಪನ್ನ ಸತ್ಕೀರ್ತಿಕರನೆನಿಪ ಲಿಂಗರಸ ಪೂರ್ಣ ಪುರುಷ |ಶ್ರೀ ಚಂದ್ರಮೌಳಿ ಪದಾಂಬುಜ ಮಧುಪ ……….. ದೇ ನಾಮ ಗುಜಾಯಿ ಗರ್ಭಜ……… ಸಪ್ತ ಋಷಿಗಳವತಾರನೆಂಬ ತೇಜೆನಿಸಿದ ರಾಶಿಗೆ ೧
(ಹಿರಿಯ) ಮಗ ಮುದ್ದಣ ಖೊಬ್ಬರಸ ಕಮಲರಸ………….ಹಿ ರಮಣ ಮೋಬರಸ ಬಾಲರಸ ತಿಪ್ಪರಸಸಿರಿವಂತರಿವರು ಪೂರ್ವಜ ಲಿಂಗರಸನ ಸತಿ ಗುಜಾಯಿಕುವರರೆನಿಸಿ | ಮೆರೆವ ಸಿಂಧಾಪುರದಿ ಕರಣಿಕಿರ್ಪಪ್ರತಿಸೃಷ್ಟಿ ಕರ್ತಾ ವಿಶ್ವಾಮಿತ್ರ ಗೋತ್ರಜ ಸಂಗಮೇಶ್ವರನ ಕೃಪಾ ಪಡೆದಹರ್ನಿಶಿ ಭಕ್ತರೆನಿಸಿಹ ನರ ಲೋಕದಿ ೨

೨೮
ಇಲ್ಲದಿಲ್ಲಾಗಿ | ಇಲ್ಲದ್ದೆಲ್ಲ ತಾನಾಗಿ | ತೋರುವದಾಶ್ಚರ್ಯ | ಆಶ್ಚರ್ಯ || ಸಂಶಯ ಪಾರ ಮಾಡಯ್ಯ ||ಶಿಷ್ಯನ ಪ್ರಶ್ನವ ತಿಳಿದು | ಸದ್ಗುರು ಹರ್ಷದಿಪೇಳಿದನೊಲಿದು ೧
ಸತ್ಯ ಸ್ವರೂಪಾಶ್ರಯಿಸಿ ಅಸತ್ಯವು ಸತ್ಯಂತೆನಿಸಿ || ಸತ್ಯಕಿರಣವಿಡಿದು ಮೃಗಜಲವಸತ್ಯವೆ ಆಗಿಹುದು || ದಿಟ ರಜ್ಜುವು ಶಿಂಪಿರುತ || ಆಶ್ರಯಿ ದಿಟವೆನಿಸುವದಹಿ ರಜತಾ|| ಆಶ್ರಯದಾರೋಪೆಂದು | ತೋರುವದು ಸರೂಪದ ಧ್ಯಾತೆಂ(ನೆಂ)ದೂ || ಅಧ್ಯಾರೋಪಾಪವಾದಾ | ಶಂಕರ ತಾನಿವು ಪುಸಿಯಂದೊರೆದಾ ೫

೫೩
ಎಂಥ ಮಹಿಮನು ನೋಡು ನಮ್ಮ ಯಲಗೂರದ ಹನುಮಾ |ಸಂತತ ನೆನೆವರ ಚಿಂತಾಮಣಿ ನಿಜ ಶಾಂತ ಸದಾ ನಿಶ್ಚಿಂತ ಪರಾಕ್ರಮಾ ಪ
ಹುಟ್ಟುತಲಿ ಮಿತ್ರನ ತಿನಬೇಕೆಂದು ಥಟ್ಟನೆ ತಾ ಬಂದು |ಬೆಟ್ಟರಿಯ ಬೆನ್ನನೆ ಬೀಳಬೇಕೆಂದು | ಪುಟ್ಟರಿದಾನೆಂದು |ಮುಟ್ಟಿ ಬರಲುಕವ ನೆಟ್ಟನೆ ಹೊಯ್ಯಲು | ಧಿಟ್ಟ ಮರಪನೆಂದು ಧಿಟ್ಟನೆ ಧಿಟ್ಟ ಬಂದು೧
ಅಂಜನಿಯ ಗರ್ಭದಲಿ ತಾ ಬಂದಾ | ಸಂಜೀವನಿ ತಂದಾ | ಕೆಂಜಡಿಯನ ಸ್ವರೂಪನು ಜಗದಾನಂದಾ ಸ್ವಾನಂದ ಕಂದಾ || ಮಂಜುಳ ಶಬ್ದ ಪ್ರಭಂಜನ ಕಪಿ ಜಗ ರಂಜಿತ ತೇಜಃ ಪುಂಜ ಸದಯದಾ ೨
ಹರಿಸುತನು ಬ್ರಹ್ಮನೆ ತಾನೆ ಬಂದೂ ಕರವಿಟ್ಟನು ಇಂದೂ | ಪರಿಪರಿಯ ಶಕ್ತಿಯು ನಿನ್ನಲ್ಲಿಂದು ಗುಪ್ತಿರಬೇಕೆಂದು ಸ್ಥಿರಪದ ಕೊಟ್ಟೆ ವಜ್ರಾಂಗವನಿಂದೂ ವರದಾ-ಭಯನಿಟ್ಟು ತನುನಿಧಿ ತಂದೂ೩
ರವಿತನಯನ ಭೆಟ್ಟಯನು ತಕ್ಕೊಂಡಾ ರಘುರಾಮರ ಕಂಡಾ | ಅವನಂಗುಲಿಯೊಳು ಮುದ್ರಿಯನಿತ್ತಾ ಪ್ರಚಂಡಾಬಹು ಬಾಹೋದ್ದಂಡಾ | ತವಕದಿ ಅಕ್ಷಯ ಕುವರನ ಮರ್ದಿಸಿ ಘವಿ ಘವಿಸುವ ಲಂಕಿಯದಾ ಕೆಂಡಾ ೪
ರಕ್ಕಸರೆಲ್ಲರ ಕುಕ್ಕಿರಿದನು ಅದ್ಭುತಾ ಜಗಕಪಿ ಪ್ರಖ್ಯಾತಾ |ಮಿಕ್ಕರಗಳನೆಲ್ಲ ಪಾಡುವೆ ರಾಮನ ದೂತಾ ಶರಣರ ಸಂಪ್ರೀತಾಉಕ್ಕಿ ಹರುಷದಲಿ ಬೇಗ ಬಾರೊ ಬೇಗ ಬಾರೊನೀಲಮೇಘಶ್ಯಾಮಾ ಭಕ್ತರ ಪಾಲಿಪ ಮುಕ್ತರಮಾಡುವ ಶಂಕರನೀತಾ ೫

೪೯
ಗುರು ರೂಪ ಸಾಕಾರ ಸಾಕಾರನೀರಡಗಿರಲವಿಕಾರ ಗುರು ಪ
ನೀರಲಿ ತೋರುವ ಗುರುಳೆ | ಕರಗಲು ನೀರಹೊರತು ಏನನಲಿ ? ೧
ಹೇಮವು ಕರಗಲು ಮುದ್ದಿ-ಯೆನಿಸಲು ಬಲ್ಲದು ಸದ್ಗುರು ಸಿದ್ಧಿ ೨
ಕಲ್ಲೆಂದರಿಯದೆ ಪರುಷಾ | ಜರಿದರೂ ಕಲ್ಲಿಂದಾಗುವ ಹರುಷಾ ೩
ಅವನ ಕೃಪೆಯಿಂದೆಲ್ಲಾ | ಜಗವಿದು ಕೇವಲ ಬ್ರಹ್ಮವಾಯಿತಲ್ಲಾ ೪
ಪರಬ್ರಹ್ಮವು ಜಗವಾಗೆ | ಗುರುಶಂಕರತಾನಲ್ಲದೆ ಹ್ಯಾಂಗೆ ೫

೫೦
ಗುರು ಸಾಕಿದ ಗೂಳಿ ಭರದಿಂದ ಬರುತಿದೆ | ಸರಿಸಿ ಹೋಗಲಿ ಬೇಡಿ ದುರ್ಜನರೇ || ಸರಿಸಿ ಹೋದರೆ ನಿಮ್ಮ ಬರು ಹೋಗುವ ಹಾದಿ | ತೆರ್ರನೆ ನಿಲ್ಲಿಸುವದು ತಿಳಿದು ನೋಡಿ ಪ
ಆರು ಕೋಣಗಳನ್ನು ಅರಿದು ಮುಂದಡಿ ಮಾಡಿ | ಆರೆರ-ಡಾನೆಯ ಅವಚಿಕೊಂಡು | ಕೋರೆತ್ತಿಕೊಂಡು ತಾ ಕೋಪದಿಬರುವಾಗ | ಮೂರು ಮನಿಯ ದಾಟಿ ಮುಂಡಾಯಿತೊ ೧
ಇಬ್ಬರನೊಗೆದು ಒಬ್ಬನ ಕೂಡಾ ಪೋದೀತು | ಅಬ್ಬರಿಸುತಲಾದ ಆನಂದದಿ | ಕಬ್ಬು ಬಿಟ್ಟು ಕಬ್ಬಿಣವ ಮೆದ್ದು ದಿಬ್ಬಿ ಗೂಡದಲಿಂದಲುಬ್ಬುತದೆ ೨
ಮೋರೆತ್ತಿಕೊಂಡು ಮುಂದಾಡು ಮುಂದಾಡುವ ಸರ್ಪಗೆ | ಮುದ್ದು ಇಕ್ಕುತ ಬಂದು ನಿಲ್ಲುವದು | ಆರು ನೆಲೆಯೆತ್ತಿ ನೀರು ಕುಡಿದು ಗೊತ್ತು ಸೇರಿತಲ್ಲಿ ಪುರಿವಾಸನಲ್ಲಿ ೩

೨೭
ಘನಾನಂದ ನಿಬಿಡವು ತಾನೇ ತಾ |ಮನಬುದ್ಧಿಗಳು ಏನಿಲ್ಲ ಪ
ಮಹಾ ಮಾಯಾ ಮಾಯಾ ಅವ್ಯಾಕೃತಿ |ಆ ಹಿರಣ್ಯಗರ್ಭ ವಿರಾಟಲ್ಲ ೧ಸ್ಥೂಲ ಸೂಕ್ಷ್ಮ ಕಾರಣ | ಮಹಾಕಾರಣಜಾಗ್ರತ್, ಸ್ವಪ್ನ, ಸುಷುಪ್ತಿ ಉನ್ಮನಿ ಬೆಳಕೆಲ್ಲ ||ಇದ್ದದ್ದು ಶಂಕರನ ಸುಖವಲ್ಲವೆ |ವಿದ್ಯಾ ಅವಿದ್ಯೆಯ ಕಲಕಿಲ್ಲ ||

೫೬
ಜಯದೇವ ಜಯದೇವ ಜಯ ವೆಂಕಟೇಶ |ಭಯಕೃದ್ಭಯನಾಶನ ಶೇಷಾಚಲವಾಸ ||ಜಯ|| ಪ
ಕಲಿಯುಗದಲಿ ಪ್ರತ್ಯಕ್ಷ ಭೂವೈಕುಂಠೆನಿಸಿ |ಸುಲಭವು ತೋರಿದಿ ಭಕ್ತರ ಬಯಕೆ ಪೂರೈಸಿ |ನಳಿನ ಸಂಭವ ಜನಕ ಸನಕಾದಿ ಪೋಷೀ |ತಿಳಿಯದು ನಿಮ್ಮಯ ಮಹಿಮೆಯು ಸಚ್ಚಿತ್ಸುಖರಾಶೀ ೧
ಹೊಳೆವ ಶಿರದಲಿ ಕಿರೀಟ ಮಕರ ಕುಂಡಲವೂ |ಎಳೆ ತುಳಸಿ ವನಮಾಲಿ ಕೊರಳಲಿ ಶೋಭಿತವೂ |ಶ್ರೀವತ್ಸ ಕೌಸ್ತುಭ ಮಣಿ ರತ್ನದ ಜಡವೂ |ಥಳ ಥಳಿಪ ತೇಜಾ ಅಂಜನೀ ತನಯಾ೨
ಮತ್ಸ್ಯ ಕೂರ್ಮ ವರಾಹ ನರಹರಿ ವಾಮನನೆ |ತುಚ್ಛ ಮಾಡಿದಿ ಯಮಪುರ ರಾಮ ರಾಘವನೆ ವತ್ಸಾ ಶಿರಿ ಶಂಕರ ಆತ್ಮಜನೆ || ಜಯ ೩

೨೯
ಜೀವನ ಕಳೆಗಳು ಮುಳುಗುವ ತನಕ ಜೀವನ್ಮುಕ್ತನು ತಾನಲ್ಲ || ಜೀವನ ಕಳೆ ತಾನೇ ತಾನಾದರೆ | ಜ್ಯೋತಿರ್ಮಯವೀ ಜಗವೆಲ್ಲ ಪ
ಎಲ್ಲ ಪ್ರಪಂಚವು ಸೋಗಿನ ಪರಿಯಲಿ |ಪಸರಿಸಿ ತೋರುವದೆಲ್ಲಾ ||ಬೆಲ್ಲದ ಮೂಲವು ಕಬ್ಬಿನ ರಸವನು |ಅನುಭವ ಯೋಗಿಯೆ ತಾ ಬಲ್ಲಾ ೧
ಮುತ್ತಿನ ಆಕೃತಿ ಬೇರೆ ಬೇರಾದರೆ |ತೇಜವೆ ತತ್ತ್ವಗಳೆಲ್ಲಾ ||ಮುತ್ತಿನ ಮೂಲವು ಸ್ವಾತಿ ಬಿಂದುವು |ಸಿಂಧುವಾದವನೆ ತಾ ಬಲ್ಲಾ ೨
ಸುಮನ ಪರಾಗವು ಬೇರೆ ಬೇರಾದರೆ |ಘಮ ಘಮ ಮಕರಂದೆಲ್ಲಾ |ಸುಮನ ಪರಾಗವು ಭೃಂಗಾವಳಿ ಸುಖಸದ್ಗುರು ಶಂಕರ ತಾ ಬಲ್ಲಾ ೩

೫೪
ಜೋ ಜೋ ಜೋ ಅಂಜನಿ ಕಂದಾ ಜೋ ಜೋ ಸಂಜೀವನ ತಂದಾ | ಜೋ ಜೋ ಸಾಧು ಸಜ್ಜನ ವೃಂದಾ | ಜೋ ಜೋ ವಾಯು ಬಾಲಮುಕುಂದಾ ಜೋ ಜೋ ಪ
ಭೂತೈದೆಂಬೊ ಕನ್ನಡಿ ಮಂಟಪದೊಳಗೆ | ಜ್ಯೋತಿ ದೀಪದ ಭಾಸ ಉನ್ಮನಿಯೊಳಗೆ | ಪ್ರೀತಿಂದ ಪ್ರಣವೆಂಬ ಮೇಲ್ಕಟ್ಟ ಕೆಳಗೆ ರಕ್ತಶ್ವೇತ ಶ್ಯಾಮ ನೀಲ ಖಿಡಕಿಯೊಳಗೆ ಜೋ ಜೋ ೧
ಪಂಚ ಭೂತವೆಂಬ ಮಂಚವ ನಿಲಿಸಿ | ಪಂಚವಿಂಶತಿ ತತ್ತ್ವ ನವಾರ ಬಿಗಿಸಿ | ಪಂಚಕರಣವೆಂಬೋ ಹಾಸೀಗಿ ಹಾಸಿ | ಪಂಚ ಪ್ರಾಣವೆಂಬೋಲೇಪ ತೀವಿಸಿ ಜೋ ಜೋ ೨
ಆರು ಚಕ್ರ ಮೀರಿದ ಸ್ಥಾನದಲ್ಲಿ | ಘೋರ ಘೋರ ಘೋಷ ಉನ್ಮನಿಯಲ್ಲಿ |ತುರ್ಯಾತೀತ ಶಂಕರ ತಾನೇ ಅಲ್ಲಿ | ಸೂರ್ಯ ಚಂದ್ರ ಅಗ್ನಿ ಮೂಜಗದಲ್ಲಿ ಜೋ ಜೋ ೩

೩೪
ತೇಲಿಸೊ ನೀ ಮುಣುಗಿಸೊ | ನಿನ್ನ ಮಾಯವ ತಿಳಿಯದ ಮೂಢ ಜನರನು ಪ
ವಿಷಯದೊಳಗೆ ಮನ ಬುದ್ಧಿ ಗರ್ಕಾಯಿತುಘಸಣೆ ಬಡುವ ದೇಹ ಹ್ಯಾಗೆ ಪಾರಾಯ್ತು ೧|
ಹರ ಬಿಡಿಸು ಮೊರೆಹೋದೆ ದೇವಾ ಬಿರುಬೆಟ್ಟಿತು ಪರಿಹಾರ ಹ್ಯಾಗ ೨
ಭವನದಿಯೊಳು ಸುಳಿದಾಡು ಹರಗೋಲಕ್ಕೆಶಿವಶಂಕರ ಕಡೆಗೆ ಹಚ್ಚು ಧಡಕ್ಕೆ ೩

೪೮
ತೋರುವದು ಘನ ತೋರದಡಗದು ಸಹಜವಾದುದೆ ಪ
ಶ್ರೋತೃವಕ್ತ್ರವೆಂಬ ಬರಣಿಗಳು |ಸೂತ್ರ ಸುಮನದಿ ಮಂಥನ ಮಾಡಲು ೧
ಸಂತ ಸಾಧು ಮಹಂತಸಿದ್ಧ ವೇ-ದಾಂತ ಚರ್ಚದಿ ಭಕುತಿ ನೋಡಲು ೨
ಆದಿನಾಥ ಪರಂಪರೆ ಶಂಕರಬೋಧ ಸದ್ಗುರು ಸತ್ಸೀಲದಲ್ಲಿ ೩

೬೮
ದೇವರ ಗಿರಿಯ ಅಪ್ಪಯ್ಯನವರು ದೇವದುರ್ಗಸ್ಥಳದಲ್ಲಿಹರು ಪ
ತಿಮ್ಮಯ್ಯನ ……………………………………………………………………………………………………………………………….ಸುಮ್ಮನೇ ನರವಪು ಧರಿಸಿಹರು ೧
ಶೇಷ ಶಯನ ಕೃಪೆ ಪಡೆದಿಹರು |ದಾಸ ಮುಕುಟ ಮಣಿ ಎನಿಸಿಹರು |ಕ್ಲೇಶ ಪಂಚಕಗಳನಳಿದಿಹರು |ತೋಷಿಸಿ ಭಕ್ತರ ಸಲಹುವರು ೨
ವೆಂಕಟ ರಮಣಗೆ ಹೋಗುವರು |ಸಂಕಟ ಜನ ಪರಿಹರಿಸುವರು ||ಸಂಖ್ಯೆಯಿಲ್ಲದ ಅಪೂಪ ನೀಡುವರು |ಶಂಕರ ಸಖಗೆ ಬೇಕಾಗಿಹರು ೩

೩೨
ದೇಹ ಮನೇಂದ್ರಿಯವೆಲ್ಲಾ ಆತ್ಮಸಹಾಯದಿ ಚರಿಸುವವೆಲ್ಲಾ ಪ
ಮೂಢರು ತಿಳಿಯರು ಸುಮ್ಮೇ ದೇಹವ ಕೂಡುತೆ ಮಾಡಿತು ಹೆಮ್ಮೆ ೧
ವಪು ಜಡವದು ಪ್ರಕಾಶಾ |ಸ್ವರೂಪವಿಡಿದಾಗುವದಾಭಾಸಾ ೨
ಪಾವಕನಾಗಿರೆ ಲೋಹವಾಗಿರೆ | ಪಾವಕ ಲೋಹದ ಹತಿಗೆ ೩
ಮಾಲಾ ಸರ್ಪವದಾಗೆ |ತೋರದೆ ವ್ಯಾಳೆನಿಸುದು ಮಾಲ್ವೋಗೆ (ಮಾಲೆಹೋಗೆ) ೪
ಅಧಿಷ್ಠಾನ ದೃಷ್ಟಿಯಿಂದಾ |ಪ್ರಾಣಿಗೆ ದೊರಕದು ಶಂಕರ ಪದಾ ೫

೩೯
ನರ ಕುರಿ, ಗುರು ನರನೆಂಬಾ ಪಾತಕಿನರಕಾಲಯ ಪಡಕೊಂಬಾ |ಹರ ಹರ ಪಶು ಪ್ರಾಣಿ ಪಶು ಪ್ರಾಣಿ |ಮಾಡಿದಿ ನರತನು ಹಾನಿ ಪ
ಹಾನಿಯರಿಯದೆ ಅಎ್ಞÁನಿ ತಿರುಗುವಿ |ನಾನಾ ಪರಿ ಪರಿ ಯೋನಿ ೧
ಪರಿ ಪರಿಯೋನಿಗೆ ಬರುವಾ ಗುರುಗಳ |ಪರಿಚರ್ಯವ ಮರೆದಿರುವಾ ೨
ಮರವೆ ತನ್ನಿಂದಾಯಿತೇನೊತಿರುಳು ತೆರೆ ಅನಂತಪಘಾತವನೂ ೩
ಅಪಘಾತಕ ಮನದವಗೆಶಂಕರ ಕೃಪೆಯೆಂತಾಗುವದವಗೆ ೪

೩೭
ನೀ ಹೋಗುತಲಿ ಬಾಗೂ | ಗುರು ಕೃಪೆ ಪಡೆಯುತೆ ಪರಿಭವ ನೀಗೂ ಪ
ನಗಕನಕದ ಪರಿ ಈ ಜಗ ಸೋಗೂ |ಜಗದೀಶನ ಸುಖ ಪೊಂದಿ ನೀ ತೂಗೂ ೧
ತತ್ತ್ವಂ ಪದಗಳ ಕಳೆದುಳಿ ವೇಗೂ |ಸಚ್ಚಿತ್ಸುಖ ಅಸಿಜ್ಞಪ್ತಿ ನೀನಾಗು ೨
ಪ್ರೇಮಾಮೃತ ಸವಿಯುತೆ ನೀ ತೇಗೂ |ಕಾಮದಹನ ಶಿವಶಂಕರನಾಗೂ ೩

೩೦
ನೀನೆ ಪರಬ್ರಹ್ಮಾ ಸತ್ಯವು ನೀನೆ ಪರಬ್ರಹ್ಮಾ | ನೀನೆಪರಶಿವ ನೀನೆ ಪರತರ ನೀನೆ ಪರಮ ಪರ ನಿನ್ನಿಂದ ನೀನೈ ಪಅನೇಕ ಕೊಡಗಳೊಳು ರವಿ ತಾ | ಅನೇಕನೆನಿಸಿರಲು |ಅನೇಕ ವಾ ಘಟ ಉಪಾಧಿಯಳಿಯಲು | ಅನೇಕವೆಲ್ಲವು ಒಬ್ಬನೇ ನೀನೈ ೧
ಸರ್ವಾಲಂಕಾರಾ ಕರಗಲು ಸರ್ವವು ಬಂಗಾರಾ | ಸರ್ವ ಜಗವೆಲ್ಲವು ನಿನ್ನೊಳಗಿರುವದು |ಸರ್ವ ರಹಿತ ನಿಜ ಶರ್ವನೆ ನೀನೈ ೨
ಮಾಯಾ ಅವಿದ್ಯೆಯೊಳು ಶಿವ ಜೀವ ಕಾಯವು ಬಂದಿರಲು | ಮಾಯಾ ಅವಿದ್ಯೆಯ ಪರದೆಯು ಅಳಿಯಲು | ಕೇವಲ ಅತಿ ನಿಜ ಶಂಕರ ನೀನೈ ೩

೫೯
ಪರಮ ಪಾವನ ಪರಬ್ರಹ್ಮ ಸದಾಶಿವ ನಿರುಪಮ ನಿತ್ಯ ಮಂಗಲ ಮಹಿಮಾ || ಸರಸಿಜೋದ್ಭವ ಸುರಮುನಿ ವೃಂದೋವಂದಿತಪರಕೆ ಪರನೆಂದು ಪೊಗಳಿದೆನಲ್ಲದೆ |ತೀರಕ ಜಂಗಮನ ದಸೆಯಿಂದ ಪೊಡ…………………………… ಬಾಣನ ಕಾಯ್ದ ಸ್ಥಿರದಿ ತಾಳಿದನಂದನ | ಚರಾಚರ | ಗರ್ವಿಗೆ ಗರ್ವಾದನಂದೆನಲ್ಲನಿನಗೆ ತಿರುಕ ಜಂಗಮನೆಂದೆನೆ ೧
ಎತ್ತ ನೋಡಿದಲತ್ತತ್ತ ಪಿಡಿದಿಹ ಚಿತ್ಪ್ರಭೆ ಬೆಳಗು ಭಾನವು ಭಾಸವು ಚಿತ್ತಕೆ ಚೈತನ್ಯವಾದ ಚಿನ್ಮಯ ಶಿವ ಪ್ರತ್ಯಗಾತುಮನೆಂದು ಪೊಗಳಿದೆ-ನಲ್ಲದೆ…………………..| ಚಂದ್ರನ ಕಳೆ ನೆತ್ತಿಲಿಟ್ಟವನೆಂದೆನೆ | ಗಂಗೆಯ ಜಲಪಾತ ತಾಳಿದನೆಂದೆನೆ | ಕಲ್ಪನೆ ಮನದ ವೃತ್ತಿಗಗೋಚರನಂದೆನಲ್ಲದೆ ನಿನಗೆ ೨
ನಮಃ ನಿಜಘನತೇಜಃ ಪುಂಜ ರೂಪನಾಮದಿನೆ | ……………………………….ನಾಮ ರೂಪಕನೆಂದೆನೆ || ಕರ್ಮನೇಮ ನೈಷ್ಠಿಕನೆಂದೆನೆಸಿಂಧಾಪುರದ ಸೀಮೆ ಕರ್ಣಿಕನೆಂದೆನೆ | ಗಿರಿಗೆನಿಜಧಾಮದ ಏಕನೆಂದು ಪೊಗಳಿದೆನಲ್ಲದೆ |ನಾಮರೂಪಕನೆಂದೆನೆ ೩

೭೧
ಪೂಜೆಯ ಮಾಡುವೆನೊ ಸದ್ಗುರುವಿನ | ಪೂಜೆಯ ಮಾಡುವೆನು || ಮಾಜದೆ ತನು ಮನ ಧನವೆಲ್ಲ ಅರ್ಪಿಸಿ | ಪೂಜೆಯ ಮಾಡುವೆನು ಪ
ಗಣಪತಿ ಹರಿಹರರಾ ನಿಜಶಕ್ತಿ ದಿನಪತಿ ನಿಜಭಾಸವು | ತನುವೆಂಬ ಅಷ್ಟಕಂಬದ ಮನೆಯೊಳು ನಾಲ್ಕುಗುಣದ ಚೌಕಿಯನಿಡುವೆ ೧
ವೃತ್ತಿ ಉದಾಸೀನಕೆ ನಿರ್ಗುಣವಾದ ಸುತ್ತ ರೇಖೆಯ ಬರೆದು | ಚಿತ್ತವೆಂಬಷ್ಟದಳದ ಕಮಲದೊಳಿಷ್ಟಮೂರ್ತಿಯ ಧ್ಯಾನಿಸುವೆ ೨
ವೇದಾದಿ ಕಾರಣದಿ ಉಪನಿಷದಾದಿ ಅರ್ಥದಿ ಶಿರಸಾಮೇದಿನಿ ಮೊದಲಾದ ತತ್ತ್ವಭೂಷಣದಿಂದ ಆದಿನಾಥನ ಪೂಜೆಯ ೩
ಪ್ರವೃತ್ತಿ ಸ್ಥಾನದಲ್ಲಿ ಫಣಿಯಲ್ಲಿ ನಿವೃತ್ತಿ ವಿಭೂತಿಯು ನಿರ್ವಂಚನೆಯಾದ ಆಚಮನ ಕೊಡುವೆನು ಸರ್ವಾತ್ಮ ಗುರುಮೂರ್ತಿಗೆ ೪
ಭಕ್ತಿಯ ಜಲದಿಂದಲಿ ಸದ್ಗುರುವಿನ ನಿತ್ಯ ಚರಣ ತೊಳೆದು |ಮುಕ್ತಿಯ ಪಾವನ ಮಾಡುವ ಗುರುಪಾದ ತೀರ್ಥವಂದಿಸಿಕೊಂಬುವೆ ೫
ಸದ್ವಾಸನೆ ಗಂಧವ ಶ್ರೀಗುರುವಿಗೆ ಚಿದ್ ವೃತ್ತಿಯಕ್ಷತೆಯು | ಸದ್ಭಾವದಿಂದಲಿ ತೋರುವ ಪರಿಮಳ ಮದ್ಗುರುವಿನ ತನುವಿಗೆ೬
ಮೂರು ಮಾತ್ರೆಯ ಹೊಸೆದು | ನಿರ್ಗುಣವಾದ ಧಾರವ ಶಿವಸೂತ್ರಕ್ಕೆ | ತೋರುವ ವಿಶ್ವಚರಾಚರ ಪುಷ್ಪದ ಹಾರ ಕೊರಳಿಗೆ ಹಾಕುವೆ ೭
ನಾನೆಂಬ ಧೂಪ ಸುಟ್ಟು ಸದ್ಗುರುವಿಗೆ ಎ್ಞÁನದೇಕಾರತಿಯು |ಬೋನ ನೈವೇದ್ಯ ಜೀವದ ಭಾವವರ್ಪಿಸಿ ಎ್ಞÁನ ಕರೋದ್ವರ್ತಿಯ ೮
ವಾಚ್ಯಾರ್ಥ ತಂಬೂಲವಾ ಸದ್ಗುರುವಿಗೆ |ಲಕ್ಷ್ಯಾರ್ಥವೆ ದಕ್ಷಿಣಾ ಲಕ್ಷ್ಯಾತೀತಗೆ ಮಂಗಳಾರತಿಬೆಳಗುವೆ ಅಕ್ಷಯ ಮಂತ್ರಪುಷ್ಪ ೯ಸಂತ ಸನಕಾದಿಕರೂ ಸುರರೆಲ್ಲ ಅಂತರಿಕ್ಷದಿ ಬಂದರು | ತಂತಿ ಮದ್ದಳಿ ತಾಳ ಗೀತ ಶಂಖದ ವಾದ್ಯ ತಿಂತಿಣಿಯಲಿ ಕುಣಿಯುತ ೧೦
ಅದ್ವೈತ ಸಾಷ್ಟಾಂಗವಾ ಸದ್ಗುರುವಿಗೆ | ಚಿದ್ಬೋಧದಿಎರಗಲು ಶುದ್ಧಿ ಸಿದ್ಧಿಗಳೆಂಬ ಚರ್ಯವ ತೋರುವಮುದ್ರೆ ಶ್ರೀ ಗುರುಗಿಟ್ಟೆನು೧೧

೫೭
ಬಿಂದು ಮಾಧವ ರಮಾಧವ ಪ
ಬಿಂದು ಮಾಧವ ಸುಬಂಧು ದೀನ ಭವ |ಬಂಧತರಣ ಗೋವಿಂದ ಶ್ರೀ ಕೃಷ್ಣ ೧
ಮಂದರಾದ್ರಿಧರ ಕುಂದ ರದನ ಮಹಾ |ಸುಂದರ ಸಿರಿ ಹೃನ್ಮಂದಿರ ವಾಸಾ ೨
ಕದ್ದಿಕಾರ ಸುರವೃಂದ ಸುಪೂಜಿತ |ಇದ್ದಿ ದೇವ ಕಚವೃಂದ ಸಮೇತಾ ೩
ನಂದ ನಂದನ ಸುಸಿಂಧುರ ವರದ ಮು-ಕುಂದ ಗೋಪಿಕಾ ವೃಂದ ವಿಹಾರಾ ೪
ಮಲ್ಲಿಖೇಡ ಸ್ಥಳ ಹೊಳೆ ಕಾಗಿಣಿ ಥಡಿಬಳಿಗೆ ರಾಯರು ಕುಳಿತಲ್ಲಿರುವ ೫
ಪಂಕಜಾಕ್ಷ ಮೀನಕೇತು ಜನಕ ಗರು-ಡಾಂಕ ಶಶಿ ಧ್ವಜ ಶಂಕರಪ್ರಿಯ ಹರಿ೬

೫೧
ಬ್ರಹ್ಮಾಂಡದೊಳಗಿದ್ದ ಚರ್ಯೆಯ ತಂದು | ಪಿಂಡಾಂಡದೊಳಗೆಲ್ಲ ತೋರಬೇಕೆಂದು | ಪುಂಡಲೀಕನ ಭಕ್ತಿಗೆ ತಾನೆ ಬಂದು |ಪಾಂಡುರಂಗ ನಾಮ ರೂಪದಿ ನಿಂದೂ ಜೋ ಜೋ || ಜೋ ಜೋ ಜೋ ಶ್ರೀ ಗಂಗಾಧರನೆ ಜೋ ಜೋ ಜೋ ಶ್ರೀ ವತ್ಸಧರನೇ ಜೋ ಜೋ ಜೋ ಶ್ರೀ ಶಶಿಧರನೇ |ಜೋ ಜೋ ಜೋ ಶ್ರೀ ದತ್ತಾತ್ರೇಯನೇ ಜೋ ಜೋ ಜೋ ೧
ತನ್ನ ವಾಯು ಸಾಧು ಸಂತರೊಳಾಡಿ | ತನ್ನ ಸ್ಫುರಣಿ ಮಾಯಗಳಿತವೆ ಕೂಡಿ | ತನ್ನ ಸ್ವಸುಖವೆ ಬೋಧರಿಯೆತ್ತಿ ನೋಡಿ |ತನ್ನಿಂದುತ್ಪತ್ತಿ ಸ್ಥಿತಿ ಲಯವು ತೋರಡಗಿ | ಜೋ ಜೋ ೨
ನಿತ್ಯ ಶುದ್ಧ ಬುದ್ಧ ಸರ್ವಾಂತರಾತ್ಮಾ | ಸತ್ಯ ಶಾಶ್ವತ ಸಾಧು ದಯ ಸಾರ್ವಭೌಮಾ | ಪ್ರತ್ಯಾತ್ಮ ಪರಮಾತ್ಮ ಐಕ್ಯಮೇಕಾತ್ಮಾ |ನಿತ್ಯ ಅಪರೋಕ್ಷ ನಿರ್ಗುಣ ನಿಜ ಧಾಮಾ ಜೋ ಜೋ ೩
ಕಾಶೀ ನಿವಾಸಿ ವಿಶ್ವೇಶ ವೃಷಾತ್ಮಾ | ನಾಸಿಕ ತ್ರ್ಯಂಬಕ ನೀನೆ ಮಹಾತ್ಮಾ | ವಾಸುದೇವನ ಪ್ರಾಣ ಪ್ರಿಯ ಪರಮಾತ್ಮಾ | ಕ್ಲೇಶ ಭಕ್ತರಿಗಾಗಿ ವಾಸಿಸುವಾತ್ಮಾ ಜೋ ಜೋ೪

೬೨
ಬ್ರಹ್ಮಾದಿಕರನು ಪರಬ್ರಹ್ಮದಿಚ್ಛಿಲಿ ಪಡೆದಳಮ್ಮ ಪರಂಜ್ಯೋತಿ ಪರಬ್ರಹ್ಮಿಣೀ ಪ
ವಾಣಿ ಕಲ್ಯಾಣಿ ಫಣಿ ವೇಣಿ | ರುದ್ರಾಣಿ ಶರ್ವಾಣಿ ಸುವಾಣಿ ಗೀರ್ವಾಣಿ ವರದೆ | ಗಾಣಿತ್ರಿನಯನ ಅಜನ ರಾಣಿ ಶಂಕರ ಪ್ರಾಣಿ ಪುಸ್ತಕಪಾಣಿ ನಾರಾಯಣೀ ೧
ಅಂಬೆ ಲೋಕಾಂಬೆ ಭ್ರಮರಾಂಬೆ ಮೂಕಾಂಬೆ ಹರಡಿಂಬೆ ಪ್ರತಿಬಿಂಬೆ ಕುಚಕುಂಭೆ ಸಾಂಬೆ |ರಂಭೆ ಹೇರಂಬೆ ಶರಣೆಂಬೆ ವರಗೊಂಬೆ ಭಕ್ತರ ಬೊಂಬೆ ಹೊಳೆವ ಗೊಂಬೆ ೨
ಕಾಳೆ ಹಿಮ ಬಾಳೆ ಭೂ ಪಾಳೆ ಕುಸುಮಾಳೆ ವನಮಾಳೆ ಕಂದರ ಮೌಳೆ ಕುಟಿಲ ಕುರುಳೆ | ಕೇಳಿನಿನ್ನಯ ಲೀಲೆ ಕಾಲಿಗೆರಗುವರಘವ ಮೂಲಕೆತ್ತೆತ್ತಿ ಬಿಸುಟುವ ಕೃಪಾಳೆ ೩
ಬೇಕೆಂಬೊ ಬಯಕಿತ್ತು ಸಾಕು ಸಾಕೆನಿಸುವರು ಲೋಕದೊಳಗ್ಯಾರುಂಟು ನಿನ್ನ ಬಿಟ್ಟು |ಏಕೆ ವಿವೇಕೆ ಎನ್ನೀ ಕುಟಿಲ ಗುಣ ನೋಡ ಬೇಕೆಕ್ಷಮೆ ಮಾಡಿದರೆ ಮೈಯುಳಿಯುವದು ೪
ಕಾಯಜನ ಮಾತೆ ಸಿತಕಾಯನರ್ಧಾಂಗಿ ಜಗಕಾರ್ಯನಿರ್ಮಿಸುವ ನರರುದಿಸಿ ಮೂರು || ಕಾಯಡಗಿ ಹೋದನಿಷ್ಕಾಯ ಪರಶಕ್ತ್ಯೆನ್ನ ಕಾಯ್ದುಕೊಳ್ಳೆಲೆ ತಾಯಿ ಸ್ತ್ರೀಯರನ್ನೆ ೫
ಸಾರಿದರ ಹೊರೆವ ಸಂಸಾರದೊಳು ಮುಳುಗಿದರೆ ತಾರಿಸುವ ತವಕದಿಂ ತರುಳೆ ತರುಣೀ | ಸೇರಿಸುತ ತಿರುಗಿ ತನು ಬಾರದ್ಹಾದಿಗೆ ಒಯ್ದು ತಾರಿಸುವ ಸ್ಥಿರದಿ ನೀ ತೋಯಜಾಕ್ಷಿ ೬
ಕುಸುಮ ಸರ್ಪಾದಿಗಳು ಕುಸುಮಗಂಧಿಯ ಪದಕೆಕುಸುಮ ವೃಷ್ಟಿಗವು ದೇವಿಯ ಸುಕೃತಿಗಳೂ | ಕುಸುಮದೊಳು ಕರಕಂಜ ಕುಸುಮದೊಳುವರವಿಡಿದ ಕುಸುಮಶರ ರಿಪು ಶಂಕರನ ಶಂಕರೀ ೭

೪೪
ಭಕ್ತರ ಪ್ರೇಮಿ ಫಕೀರ ಸ್ವಾಮಿ | ಭಕ್ತರ ನಿರ್ಮಿಸಿಭಕ್ತಿಯ ಪ್ರಕಟಿಸಿ | ಯುಕ್ತಿಯ ಬೋಧಿಸಿ | ಶಕ್ತಿಯನೊದಗಿಸಿ | ತ್ಯಕ್ತ ವಿಷಯ ವಿರಕ್ತಿಯ ಸೇರಿಸಿ |ಮುಕ್ತನೆನಿಸಿ ಅವ್ಯಕ್ತವ ಕರಗಿಸಿ ೧
ಬೋಧವ ಬೋಧಿಸಿ ಭೇದವ ಛೇದಿಸಿ | ವಾದವ ಅರಗಿಸಿ ಕ್ರೋಧವ ಕರಗಿಸಿ | ಛೇದ-ವಿಚ್ಛೇದದ ಹಾದಿಯ ಹಾರಿಸಿಓದುವ ನುಡಿ ವೇದಾಗಮವಾದವು ೨
ನೀನೇ ನಿನ್ನ ನೀನೆ ನಿನ್ನೊಳು ನೀನೆ ಜಗದೊಳು ನೀನೆ ಎನ್ನೊಳು ನೀನೆ ಸರ್ವವು ನೀನೆ ಎಲ್ಲವು | ನೀನೆ ನಿನ್ಹೊರತೇನೊಂದಿಲ್ಲ ೩
ಶ್ರುತಿ ಸ್ವ ………….. ನಿಂತವುಸ್ರ‍ಮತಿಗಳು ನಿಂತವು ……………………. ಮತಿಗಳು ಸ್ತುತಿಗಳದ ನಿಮ್ಮ ನಾ ಕಂಡು ೪
ಮಾರ ಮದ ಸಂಹಾರ ತಿಸರ ಆಸಾರ ಸುಖ ಸಾಕಾರಾ |ಶಂಕರ ಶೂರಾ ಭವ ಭಯಹಾರಾ ಶ್ರೀ ಫಕೀರ………………. ಜಗದೋದ್ಧಾರ ಸದ್ಗುರು ೫

೬೩
ಮಂಗಲಂ ತ್ರಿಪುರ ಸುಂದರಿ ಬನ ಶಂಕರಿಗೆ | ಮಂಗಲಂ ಸನ್ನಿಧಿಯ ಕೌಮಾರಿಗೆ |ಮಂಗಲಂ ಭ್ರಮರಾಂಬದೇವಿ ಚೌಡೇಶ್ವರಿಗೆ |ಮಂಗಲಂ ಶ್ರೀ ಲಕ್ಷ್ಮೀ ಮಹಾ ಮಾಯಿಗೆ | ಮಂಗಲಂ ಜಯ ಪ
ಕಮಲದಳ ನಯನಿಗೆ ಕಮಠಾವಲೋಚನೆಗೆ ವಿಮಳ ವರವೀವ ಚೂಡಿ ದರ ಕೊರಳಿಗೆ | ದ್ಯುಮಣಿ ಶಶಿ ಕಿರಣದ ಶ್ರವಣ ಭೂಷಣಿಗೆ ಭ್ರಮರಾರಿ ನಾಸಿಕದ ಮಣಿ ಮೌಕ್ತಿಗೆ ಮಂಗಲಂ ಜಯ ಶುಭ ಮಂಗಲಂ ೧
ಓಂಕಾರ ವದನಿಗೆ ವೇದಾಂತ ರದನಿಗೆ |ಪಂಕ ವಿರಹಿತದ ಚಿದ್ರಸ ಜಿವ್ಹೆಗೆ |ಅಂಕದಲಿ ಬ್ರಹ್ಮ ಪೀಯೂಷ ರಸ ಸುರಿವ ರುಣದಂಕುರಿಪಪವಳ ಮಣಿ ರುಚಿಯ ಧರಿಗೆ ಮಂಗಳ೨
ಕನಕ ಕಲಶ ತೋಳಿಗೆ ಕಲಶ ಕುಚಯುಗಳಿಗೆ | ಚಿನಕ ಪೂರ್ವಣ್ಯ ಕಂಚುಕದ ರುಚಿಗೆ ಸನಕಾದಿಗಳ ತಲೆಯ ಮೇಲಿಡುವ ಹಸ್ತಯುಗ ವನಜೆ ಶ್ರೀದೇವಿಯಂಗುಲಿಯ ನಖಕೆ ಮಂಗಳ ೩
ಹಸ್ತದಾಭರಣಿಗೆ ಕೊರಳ ಭೂಷಣಿಗೆ ನಿಜ ನಿತ್ಯ ಮಂಗಳಿಗೆ ಹಾಟಕ ವರ್ಣಿಗೆ | ರತ್ನ ಬೈತಲಿಗೆ ವಜ್ರಾಣಿ ಪಾರಂಗಣಿಗೆ ನಿಜ | ಮುತ್ತಿನ ಬೊಟ್ಟು ಕುಂಕುಮದ ಫಣಿಗೆ ಮಂಗಳ ೪
ಮರಗು ಮಲ್ಲಿಗೆ ಮುಡಿಗೆ ದುಂಡ ದಂಡಿಯ ತಲೆಗೆ ಕೊರಳ ಹಾರವ ತುದಿಯ ಕಾಲಿಂದಿಗೆ | ಪರಿಕ್ರಮದ ತಾಂಬೂಲ ವದನ ನಸು ನಗೆ ಮೊಗದ ಪರಿಮಳದ ಘನಸಾರತನುಲೇಪಿಗೆ | ಮಂಗಳ೫
ಪರಬ್ರಹ್ಮರೂಪಿಗೆ ಪರಾತ್‍ಪರ ಶಂಕರಿಗೆ ನಿರುಪಮಾನಂದ ಶ್ರೀ ಮಹಾಲಕ್ಷ್ಮಿಗೆ | ಶಿರಸ ಪೂಜೆಯ ಅರಳು ಮಲ್ಲಿಗೆಯು ಕೃಪೆಯಿಂದ ಜರಿದು ಉದರಿದವು ಗಿರಿದ್ವಾರದಲ್ಲಿ ||ಮಂಗಳ ೬

೪೬
ಮಂಗಲಾ ಸ್ವಸಿದ್ದ ಸಿದ್ಧಗೆ ಮಂಗಲಾ ಸ್ವಶುದ್ಧ ಶುದ್ಧಗೆ |ಮಂಗಲಾ ಸ್ವಬುದ್ಧ ಬುದ್ಧಗೆ ಸದ್ಗುರೇಂದ್ರನಿಗೆ ಜಯ ಮಂಗಲಾ ಪ
ಆದಿಮಧ್ಯಾವಸಾನವಿಲ್ಲದೆ ನಾದ ಬಿಂದು ಕಳಾ ವಿಹೀನಗೆ |ವೇದ ವೇದಾಂತದ ವಿಚಾರವ ತಿಳಿದ ನಿಶ್ಚಲಗೆ |ಸಾಧು ಸಂತ ಮಹಾನುಭವಿಗಳು ಸಾಧಿಸುವ ವರಬೋಧ ಬೋಧಗೆ | ವಾದ ಮನ ಬುದ್ಧ್ಯಾದಿ ಉದಯಾದಿಕವ ಲಕ್ಷಿಪಗೆ ೧
ವಿಶ್ವತೋ ಮುಖ ವಿಶ್ವನೇತ್ರನು ವಿಶ್ವಪಾಣಿ ಪಾದ ಶೀರಿಷ | ವಿಶ್ವದೊಳಹೊರಗೇಕ |ಮಯನಾ ಸೂತ್ರನು ಮಣಿಯಂತೆ | ವಿಶ್ವವನ್ನುದ್ಧರಿಸ-ಲೋಸುಗ ವಿಶ್ವದೊಳಗವತರಿಸಿ ಸಾಕ್ಷಾದೀಶ್ವರನು ಕಲಿಯುಗದಿ ವಿಶ್ವಾಮಿತ್ರ ಗೋತ್ರದೊಳು ೨
ಪರಮ ಪುರುಷನು ಸ್ವಪ್ರಕಾಶನು ನರಾಕೃತಿಗೆ ತಾ ಬಂದು ಶಿಂಧಾಪುರದಿ ಗುರುನಾಥನು-ದರದಿ ಕರಣಿಕನ್ವಯದಿ | ಸರಸ ಲೀಲಾ ನಟನೆನಟಿಸುತ ತೆರಳಿ ಭ್ರಮರಾಪುರಕೆ ಸದ್ಗುರು ವರ ಕೃಪೆಯತಾ ಪಡೆದು ಜಗದೊಳು ಖ್ಯಾತಿ ಪಡೆದಂಗೆ ೩
ಅಂತು ಇಂತೆನಬಾರದಾ ನಿಶ್ಚಿಂತ ರೂಪನು ಬಳಿಕ | ಸಂತ ಮಹಾಂತನು ಸ್ತುತಿಸಲಾತ್ಮ ಸುಬೋಧ ಬೋಧಿಯಲಿ || ಅಂತರಂಗದ ಭ್ರಮೆಯನಳಿದೇಕಾಂತ ಭಾವಿಕ ಭಕ್ತರಿಗೆ ವಿ- ಶ್ರಾಂತವಾದ ಸ್ವ-ಪದದೊಳುದ್ಧರಿಸಿದಾತಂಗೆ ೪ ಸ್ಪರ್ಶ ದರ್ಶನದಿಂದೆ ಝಗ ಝಗ ಧರಿಸುತಲಿ ನಾನಾ ವಿ-ಚಿತ್ರಾಚರಣವನು ಚರಿಸುತ್ತ ಸದ್ಗುರು ರಾಯ ಕಡೆಯಲ್ಲಿ, ಪರಮ ಹಂಸಾಶ್ರಮವ ಕೈಕೊಂಡಿನಿತು ಕೆಲಕಾಲದಲಿ ಶಿಂಧಾಪುರದಿ ಸ್ವ-ಸ್ಥಾನ ದೊಳು ಸಹಜ ಸಮಾಧಿ ಸ್ಥಳದಲ್ಲಿ ೫
ಶಾಲಿವಾಹನ ಶಕೆಯ ಶತಕತಿ ಮೇಲೆ ಐವತ್ತಾಗೆ ಮೂರನು | ಕಾಲು ದಕ್ಷಿಣ ಅಯನ ಸಂವತ್ಸರ ವಿರೋಧಿಕೃತು | ಕಾಳ ದ್ವಿತಿಯಾಮಾಸ ಆಶ್ವೀನ ಮೇಲೆ ಶಿವ ಬುಧವಾರಕರ್ಣ ವಿಶಾಲಿ ಗರ್ಜಾ ಭರಣೆ ಪ್ರಥಮ ಪ್ರಹರ ಸಮಯದೊಳು ೬
ಆ ಸುದಿನದೊಳಗಾ ಮಹಾ ಸಂತೋಷ ಕಾಲದಿ ಸುರರು ಪೂಮಳೆ ಸೂಸುತಿರೆ ಬ್ರಹ್ಮಾದಿಕರು ಸ್ವಸುಖದಿನಲಿದಾಡಿ | ಏಸು ಕಾಲದ ಸುಕೃತ ಫಲವಿದು ವಸ್ತುಕಣ್ಣಲಿ ಕಂಡೆವೈ ಉಲ್ಲಾಸವೆನುತ ಸಮಸ್ತ ಸುರ ಜಯ ಘೋಷ ಮಾಡುತಲಿ ೭
ನಿಜ ಪರಂಧಾಮಕ್ಕೆ ಸದ್ಗುರು ಬಿಜಯ ಮಾಡಿದನೆಂಬ ಮಹಾಶಯ | ಸುಜನರೆಲ್ಲರುಬಲ್ಲರಿದನು ಲೋಕಕಿದು ಸತ್ಯ || ತ್ರಿಜಗವೇಪುಸಿಯೆಂಬ ಮಹಾತ್ಮಗೆ ತ್ಯಜನವೆಲ್ಲಿ ಉದಾರ ಮಹಿಮಗೆ | ನಿಜವು ಜಲ ದೊರೆತಿಲ್ಲ ತೋರಲು ಕರಗಲೆರಡಹುದೇ ೮
ನಿರಾಕಾರಾಕಾರ ವ್ಯಕ್ತಿಗೆ ಚರಣ ಒಂದೆ ಭೇದ ಮಿಥ್ಯೆಯು | ಚರಣ ಯುಗಕೆರಡುಂಟೆ ಈ ಪರಿ ಶರೀರ ಶರಣಂಗೆ || ಹಿರಿದ ಕಿರಿದ ದರದರ ಹಂಗನು ಹರಿದು ಬಿಸುಟುವ ಶ್ರೀ ಮಹಾಶಂಕರಾನಂದ ಸರಸ್ವತೀ ಯತಿವರ್ಯ ಗುರುವರಗೆ ಜಯ ಜಯ ಮಂಗಲಾ ಜಯ ಜಯ ಮಂಗಲಾ ೯

೬೪
ಮಂಗಳಾ ತ್ರಿಪುರ ಸುಂದರಿಗೆ | ಮಂಗಳಾ ಶಾಕಂಬರಿಗೆಮಂಗಳಾ ಬಾದಾಮಿ ಬನಶಂಕರಿಗೆ ಜಯತು ಹಾ ಪ
ಭೂಧರ ಭೂಷಿಗೆ ಜಯತು | ಭೂಧರ ವೈರಿಗೆ ಜಯತು |ಭೂಧರ ವೈರಿ ವಾಹನನ ಸಂಹರಳಿಗೆ ||ಜಯ ೧
ಹರಿಮಿತ್ರಿ ಲೋಚನೆ ಜಗತ್ | ಹರಿಗಾತ್ರ ಸೂಚನೀ ಜಯ || ಹರಿಪುತ್ರ ಕೋಟಿ ಲಾವಣ್ಯ ಸುಲೋಚನೆ || ಜಯ ೨
ಪಾಹಿ ಪರಾತ್ ಪರೇ ||ಜಯ|| ಪಾಹಿ ಪರಮಪರೆ | ಜಯ | ಪಾಹಿ ಪರಮ ಪರಮೇಶ್ವರೀ ಪುರಹರೀ ||ಜಯ|| ತ್ರಾಹಿ ತ್ರಾಹಿ ತ್ರ್ಯಂಬಕೇ | ಜಯ | ತ್ರಾಹಿ ತ್ರೈಲೋಕ್ಯಾಂಬಿಕೆ | ಜಯ | ತ್ರಾಹಿ ತ್ರಾಹಿ ತ್ರಿಪುರಿ ಶ್ರೀ ಮೂಕಾಂಬಿಕೆ ಜಯತು ೩
ಕುಲಸ್ವಾಮೀ ಸ್ವಾಮಿನೀ | ಜಯ | ಕುಲ ಕೋಟಿಯೇ ಕಲ್ಯಾಣೀ | ಜಯ | ಕುಲರಹಿತ ಕುಲೀ ಶಾಂಕರೀಶಂಕರ ರಾಣೀ ಜಯತು ೪

೪೫
ಮರೆಯದಿರು ಮರೆಯದಿರು ಗುರುರಾಯನ |ಲೋಕ ಪರಿಪಾಲಿಸುವ ಗುರು ಸಾರ್ವಭೌಮನ್ನ ಪ
ಪರಮೇಶ್ವರನು ತಾನೆ ಪರಮ ಪ್ರೇಮದಿಂದ ಗುರು ರೂಪವನುಧರಿಸಿ ಧರೆಗೆ ಬಂದು, ತ್ವರದಿಂದ ಮಾನವರ ಮರವೆಯನುಪರಿಹರಿಸಿ | ಸ್ಥಿರ ಮುಕ್ತಿ ಸುಖವಿತ್ತು ಪೊರೆವ ಗುರುವರನ ೧
ಕರುಣದಿಂ ಜನರ ರಕ್ಷಿಸುವ ಸದ್ಗುರುವರನ | ಶರಣು ಪೊಕ್ಕರೆಕೃಪಾ ಸುಧೆಗರೆವನ | ನಿರುತದಲಿ ಭಕುತರಿಗೆ | ನಿರತಿಶಯಸೌಖ್ಯವನು ಸರಿದಂತೆ ವರವಿತ್ತು | ಮೆರೆವ ದೇಶಿಕನ ೨
ಕುವರ ಬಾರೆಂದಭಯ ಕರವ ಶಿರದಲ್ಲಿರಿಸಿ | ನೆರೆ ಸುಬೋಧೆಯಗೈದು ನರಭಾವ ಕಳೆದು | ಮರಣ ಭಯ ಹರಸಿ | ಬಹು ಹರುಷದಿಂದಿರು ಎಂದ ಚಿರ ಸಿಂಧುಗಿಯವಾಸ | ಗುರು ಶಂಕರನ ಪಾದ ೩

೩೮
ಮಾಡೋ ಸುವಿಚಾರ ಸಾಧನಾ | ಹವಣಿಕಿಯಲಿ ನಿನ್ನ ಮಾಡೊ ಪ
ಮಾಡಿ ನಿನ್ನ ಕಡಿ ಮೋಹ ಬೇಡಿ ಘನಗೂಡಿನಲ್ಲಿ ಒಡಗೂಡಿ ಸರ್ಕನೆ | ಮಾಡೊ ಅ. ಪ.
ಶ್ರುತಿ ತತಿಯ ಪೇಳಿಹ ವಚನ ಸತತ ಮಾಡೊ ನೀ ಮಥನದನಾ | ಇತರ ಭಾವನತಿಗಳೆದು |ಶಾಂತಿ ನಿಜ ಸ್ಥಿತಿಯ ತಾಳಿ ಸದ್ಗತಿ ಪಡೆಯೊ ನೀ ಮಾಡೊ ೧
ಪರಿ ಪರಿಯ ಜನ್ಮಂಗಳನು | ಧರಿಸಿ ಬಟ್ಟಿ ಬಹುಕ್ಲೇಶವನು ಪರಿಹರಿಸಿಗುರುವರನ ಕರುಣದಿಂದರಿತುಕೊಳ್ಳೊ ನಿನ್ನರಿವು ನೋಡಿ ನೀ ಮಾಡೊ ೨
ಸ್ಥೂಲ ಸೂಕ್ಷ್ಮ ಕಾರಣದುದಯಾ | ಮೂಲ ಉನ್ಮನಿ ಕೀಲ ಸಾಕ್ಷಿಯನುಕೂಲ ಶಂಕರನ ಲೀಲೆ ನೋಡಿ ನೀ ಮಾಡೊ ೩

೫೮
ಮಾಧವಾನಂತ ಗೋವಿಂದಗೆ ಮಂಗಳಸಾಧು ಜನರ ಆನಂದಗೆ ಮಂಗಳ ಪ
ನೂತನ ಜಲಧರಗಾತ್ರಗೆ ಮಂಗಳ |ಪೀತಾಂಬರಧರ ನಿಜಸೂತ್ರಗೆ ಮಂಗಳ ೧
ಅಂಬುಜನಾಥ ದಾಮೋದರಗೆ ಮಂಗಳ ಕಂಬು ಚಕ್ರಾಬ್ಜ ಗದಾಧರಗೆ ಮಂಗಳ ೨
ಮಂದಹಾಸನ ಲಕ್ಷ್ಮೀಲೋಲಗೆ ಮಂಗಳ |ಕಂದ ಗಿರೀಶ ಪೋಷಿಸುವಗೆ ಮಂಗಳ ೩

೩೫
ಯಾಕೆ ಕೈ ಬಿಡುವೆ ದೇವಾ |ತ್ರಿಜಗವನು ಸಾಕುವ ನೀನಭವ || ಏಕೋ ಮೂರುತಿ ಶ್ರೀ ವೆಂಕಟ ಪತಿ ನಿನಗೆ ನಾ ಬೇಕಾದವನಲ್ಲವೆ ಸ್ವಾಮಿ ಪ
ಬಾಲನ ಪತಿಕರಿಸಿ ಹಿರಣ್ಯಕನ | ಸೀಳಿ ರಕ್ಷಿಸಿದಂತೆ | ಶ್ರೀ ಲೋಲಾ ಗತಿಯೆಂಬೆ ||ಬ್ರಹ್ಮಸುತನಿಗೆ ಪಾಲನ ಮುದ್ರೆಯನಿತ್ತೆ ಸ್ವಾಮಿ |ಸಭೆಯೊಳು ದ್ರೌಪದಿ ಸ್ತುತಿಸೆ ನಿನ್ನ | ಅಭಿಮಾನ ಕಾಯ್ದೆ |ಗಂಡ ಇಭ ನಕ್ರನೊಳ ……………………………….ಧ್ರುವ ಅಂಬರೀಷ ಅಂಗದ ವಿಭೀಷಣ | ಪವನಜರುಕ್ಮಾಂಗದ | ಅವರ ಪಾಲಿಸಿದಂತೆ ರಕ್ಷಿಸು ಬಿಡದೆ ಎನ್ನ ||ಭವಹರಾ ಶ್ರೀ ಶಂಕರನಾತ್ಮಸಖಾ ||

೫೨
ರಾಜ ರಾಜ ಮಹಾರಾಜ ಶ್ರೀಧವಾ ಗೋವಿಂದರಾಜ ಅಚರಾಚರ ಸಬೀಜ ಪ
ಆದಿಯುಗದಿ ಮತ್ಸ್ಯ ಕೂರ್ಮ- |ನಾದಿ ವರಾಹ ನರಸಿಂಹ- | ನಾದಿ ಹಿರಣ್ಯ ಕಶ್ಯಪನ | ಛೇದ ಮಾಡಿ ರಕ್ತ ಕುಡಿದಿ ೧
ದ್ವಿತೀಯ ಯುಗದಿ ವಾಮನ ದ್ವಿತೀಯ ಉದರದಲಿ ಬಂದು | ಮಥಿಸಿ ಬಲಿಯ ಕ್ರೋಧದಿಂದ | ಸುತಳಕ್ಕೊತ್ತಿ ಬಿಟ್ಟೆಯಾ ೨ಪರಶುರಾಮ ರೇಣುಕಿಯ | ವರ ಸುಪುತ್ರನಾಗಿಜನಿಸಿ | ವೀರಸದಿಂದ ಕ್ಷತ್ರಿ (ಯರ) ನಿರಸ ಮಾಡಿ ಬಿಟ್ಟಿ ೩
ರಾಮಚಂದ್ರ ದಾಶರಥಿಯ | ಶ್ಯಾಮ ನೀಲ ಮೇಘ ವರ್ಣ | ಸ್ತೋಮ ರಾವಣನ ಉದ್ದಾಮನವರ ವಂಶ ತರಿದಿ ೪
ದ್ವಿತೀಯ ದ್ವಾಪರದಲ್ಲಿ | ಮಥಿಸಿ ಕಂಸ ಪೂತನೆಯ | ಕಾತರ ಮಾಡಿ ಕೌರವನು | ಪಥಕೆ ಹೊಂದಿಸಿ ಬಿಟ್ಟ ಕೃಷ್ಣ ೫
ಕಲಿಯುಗ ಬರಲು ಬೌದ್ಧನಾಗಿ | ಛಲ ದ್ವೇಷ ಖಲ ಜನರ ಕಲಹ ಹೆಚ್ಚಲಾಗುತಿರೆ | ಕಲ್ಕಿ ಹಯಗ್ರೀವನಾದಾ ೬
ಮೂರು ತಾಪದಿಂದ ಬೆಂದ | ಘೋರ ದುರಿತ ಭವದ ಮೂಲ ಬೇರ ಕಿತ್ತಿ ಬಿಸುಟಿದ ಶ್ರೀಶಪಾಲ ಶಂಕರೇಶ ೭

೪೩
ಲಿಂಗ ಬಂದ ನೋಡೊ ಶಂಕರ ಲಿಂಗ ಬಂದ ನೋಡೊ |ಅಂಗಜನುರುಹಿದ ಮಂಗಳ ಮೂರುತಿ | ತಿಂಗಳ ಸೂಡಿದ ಕಂಗಳ ಮೂರುಳ್ಳ ಪ
ಸುರಗಂಗಾಧರನೂ ಪಾರ್ವತಿವರ ಪರಮೇಶ್ವರನೂ | ಪರಮ ಪುರುಷ ಪರಾತ್ಪರ ಪರತರ | ಸ್ಥಿರ ಚರವಣು ತೃಣ ಭರಿತ ಸದಾಶಿವ ೧
ಗಜ ಚರ್ಮಾಂಬರನೂ ಪುರಹರ ಭುಜಗ ಭೂಷಹರನೂ | ಅಜಸುರ ವಂದಿತ ತ್ರಿಜಗ ವ್ಯಾಪಕ | ಸುಜನರಿಗಿತ್ತ ಸುನಿಜಪದ ಮಹ ಘನ ೨
ಆರು ಚಕ್ರ ಮೀರಿ ಸಹಸ್ರಾರ ಮನೆಯನ್ನೇ ಸೇರಿ |ಸಾರಾಸಾರ ವಿಚಾರ ರಹಸ್ಯವ- ಪಾರ ಪರಾತ್ಪರ ಗುರುತರ ಶಂಕರ ೩

೬೫
ಶಕ್ತೀ ನಿಜ ಶಕ್ತೀ ಪಾರ್ವತಿಗೆ ಮಂಗಳಾ ||ಭುಕ್ತಿ ಮುಕ್ತಿ ಈವ ಅಲಿಪ್ತಿಗೆ ಮಂಗಳಾ ೧
ಅಂಬಾ ಸ್ವಯಂಬೆ ಜಗದಂಬೆಗೆ ಮಂಗಲಾ |ಬಿಂಬಾಧರೀ ಇಂದು ಬಿಂಬಿಗೆ ಮಂಗಳಾ ೨
ಭಕ್ತರ ಪ್ರೇಮ ಓಂಕಾರಿಗೆ ಮಂಗಳಾ |ರಕ್ತಾಕ್ಷಿಯುಕ್ತ ಶ್ರೀಗಿರಿಜೆಗೆ ಮಂಗಳಾ ೩

೩೩
ಶಾಂಭವಿ ನಿನ್ನ ಪಾದಾರವಿಂದದಿಂದೆಕಾಂಬುವೆ ಕರಣೇಂದ್ರಿಯ ವ್ಯಾಪಕ ತಾಯಿ ತಂದೆ ಪ
ಅಷ್ಟದಳದ ಕಮಲ ಮಧ್ಯದಲ್ಲೀ | ಸ್ಪಷ್ಟ ತೋರುವವೆರಡೂ ದಳದಲ್ಲೀ |ಮುಟ್ಟಿ ನೋಡುವರು ಮಹಾತ್ಮರು ಅಲ್ಲೀ | ಬಟ್ಟ ಬಯಲಿನ ಹಾದಿ ಬೆಳಗಿಲ್ಲೀ ೧
ಭೃಕುಟದಾಚಿಯಲಿ ಹತ್ತಂಗುಲ ಸ್ಥಾನಾ |ತ್ರಿಕೂಟ ಶ್ರೀಹಾಟ ಗೋಲ್ಹಾಟ ಕಾರಣಾ |ಜೌಟ ಪೀಠದಿಂದ ಧ್ಯಾನಾ | ಪ್ರಕಟವಾಗುವಳು ಭ್ರಮರ ಗುಂಫಾ ಸ್ಥಾನಾ ೨
ಏಕಾಕಾರೀ ಬ್ರಹ್ಮಾಂಡ ಪಿಂಡ ಮೀರಿ | ಓಂಕಾರ ನಾದ ಬಿಂದು ಕಲಾಧಾರಿ | ಲೋಕೋದ್ಧಾರಕ ಶಕ್ತಿ ಅವತಾರೀ | ಶಾಕಂಬರಿ ಶಂಕರಗೆ ಶಂಕರೀ ಶಾಂಭವಿ ನಿನ್ನ ಪಾದಾರವಿಂದದಿಂದೆ ೩

೬೧
ಶಿವ ಮಹಾಗುರು ಸಹಜಾನಂದ ಭವಹರ ಮೃಡ ಬ್ರಹ್ಮಾನಂದ |
ಭವಮೃಡ ಸಾಂಬ ಶಿವಾನಂದ | ದಶಭುಜ ಪಂಚವದನ ನೇತ್ರ | ದಳ ಪಂಚಕ ಮಂಗಳ ಗಾತ್ರ | ಭಸಿತವಿಲೇಪ ಸುಜನ ಸ್ತೋತ್ರ | ಪಶುಪತಿ ಬಿಸಜಾಕ್ಷನ ಮಿತ್ರ ೧
ಸುರನದಿ ಶಿರದಲಿಟ್ಟಿಹನು | ಸ್ಮರನ ಉರಿಗಣ್ಣಿಲಿಸುಟ್ಟಿಹನು | ಉರಗ ಭೂಷಣ ಕುಂಡಲದ್ವಯನ | ಪರಮ ಪುರಷ ಗೌರೀವರನ ೨
ಅಮರೇಂದ್ರಾದಿ ಪದಾರ್ಚಿತನು ಡಮರು ತ್ರೀಶೂಲ ಮೃಗಾಯುಧನು | ಶಮನ ಮಹಾ ಭಯ ಸಂಹರನು | ಸುಮನ ಸುಭಕ್ತರ ಪೊರೆವವನು ೩
ಗಜಚರ್ಮಾಂಬರಧರ ಯತಿ | ರಜನೀಪತಿ ಶೇಖರ ಗೋಪತಿ ಭಜಕ ಜನಗಳಾಂತರ ಸ್ಫೂರ್ತಿ |ಅಜಸುರನುತ ಸಚ್ಚಿನ್ಮೂರ್ತಿ ೪
ಸಿದ್ಧರ ಮಡುವಿನೊಳಗೆ ವಾಸಾ | ಬದ್ಧ ಜೀವಂಗಳುದ್ಧರಿಪ ಈಶಾ | ಶುದ್ಧ ಲಕ್ಷಕೆ ಉಪದೇಶ | ಅದ್ವಯ ಗುರು ಶಂಕರ ವೇಷಾ ೫

೭೦
ಶಿವಸುಖ ದಾರಿಯ ನೋಡಣ್ಣಾ | ಅದು ಕೂದಲ ಎಳೆಕಿಂತ ಬಲು ಸಣ್ಣಾ ಪಭವದಲಿ ಮುಳುಗಿಹ ಪ್ರಾಣಿಯ ಕಾಣದೆ | ಘವ ಘವಿಸುವ ಚಿನ್ನದ ಬಣ್ಣಾ ಅ.ಪ.
ಸಾಸಿವೆ ಕಾಳಿಗೆ ಸಾಸಿರ ಭಾಗಕೆ ಮೀರಿ ಉಳಿದಿಹುದಣ್ಣಾ ||ಘೋಷ ಸುಶಬ್ದದ ದಶಮದ್ವಾರದಿ | ಭಾಸುರ ಪರಮಣು ದ್ವಾರಣ್ಣಾ ೧ಸೂಜಿಯ ಮೊನೆಕಿಂತ ಸೂಕ್ಷಕೆ ಅತೀತನು | ಶೂನ್ಯಕೆ ಬೆಳಗುತ್ತಿಹುದಣ್ಣಾ || ಈ ಜಗವೆಲ್ಲವು ಮೃಗಜಲದಂದದಿ | ಸಚ್ಚಿತ್ಸೂರ್ಯನ ಕಿರಣಣ್ಣಾ ೨
ಅನುಭವ ಯೋಗಿಗೆ ಅನುಕೂಲವಾಗಿಹುದನಿಮಿಷ ದೃಷ್ಟಿಲಿ ಬಗೆಯಣ್ಣಾ || ಘನಗುರು ಶಂಕರ ತನ್ಮಯನಾಗಿಹ | ಚಿನುಮಯ ಗುರುತವೆ ನಿಜವಣ್ಣಾ ೩

೬೯
ಶಿವಸುಖದಲಿ ನೀ ನಲಿಯೊ | ನಿಜ ಮುಕ್ತಿಯ ಕಲಿಯೊ ಪ
ನಾಥನೆಂಬುವ ಭಾವವನಳಿಯೊ |ಚಿನ್ಮಯ ಜ್ಞಪ್ತಿ ಪ್ರಕಾಶದಿ ಸುಳಿಯೊ ೧
ಮೋಹ ಮಹತ್ವದ ಕೋಹಂ ಅಳಿಯೋ |ಸೋಹಂ ಚಿನ್ಮಯ ಸ್ತುತಿ ತಿಳಿಯೊ ೨
ಅಷ್ಟರಿಪುಗಳನು ಸುಟ್ಟು ನಿಜ ಉಳಿಯೊ | ಶ್ರೇಷ್ಠ ಪರಮಗುರು ದೀಪ್ತಿಲಿ ಹೊಳೆಯೊ ೩

೬೦
ಶ್ರೀ ಸದ್ಗುರು ಭೀಮಾ ಶಂಕರಲಿಂಗ | ಭವ ಬಾಧೆ ಭಂಗ ಪ
ಧರಿಸಿದಿ ಶಿರದಲ್ಲಿ ಸುರಗಂಗಾ | ಕೊರಳೊಳು ಶೋಭಿಸುವ ಭುಜಂಗ | ಹರ ಹುಲಿ ತೊಗಲನು ಮಾಡಿದಿ ಶಯ್ಯಂಗ ೧
ಭವಹರ ಮುನಿಮನ ಚಿತ್ ಶೃಂಗಾಭಕ್ತ ಚಕೋರ ಶೇಷಾಂಗ ಪಯನಿಧಿಜಾವರ ಸಖ ಶಂಕರ ಲಿಂಗ ೨
ಕಮಲಜ ಜನಕನ ಸುತ ಅನಂಗಗೆ ಮುನಿದಿ |ಉರಿ ನಯನದಿ ಭಂಗ |ಹಿಮಗಿರಿಜಾ ಪಾರ್ವತಿಗಿತ್ತ ಅರ್ಧಾಂಗ ೩

೬೭
ಸತ್ಯಬೋಧ ಸ್ವಾಮಿಯವರು | ಸತ್ಯಬೋಧ ಗುರುಮತ್ರ್ಯ ಜನರ ಭವ ಮೃತ್ಯು ಉದ್ಧರಿಸುತಿಹರು |ಸತ್ಯ ಸ್ವರೂಪ ಹರಿ ಪ
ಯತಿಗಳಲಗ್ರಣಿಯು ಆಶ್ರಮ ಚತುರ್ಥ ಪದವಅತಿಶಯ ಗುಣಕ್ರೀತ ಮತ ಸ್ಥಾಪನ |ಸತತ ತಪಸುಪೂರಿತ ………………………….. ೧
ಅರಿಷಡ್ಗಳ ಕಡಿದಿಹ ನಿರುತವರ ಭಯಗಳ |ಇರಿಸುವ ಸಕಲರ ತಾರಿಸುವ ಇಳೆಗವ-ತಿರಿಸಿಹ ಸುರರೂಪ ಋಷಿ ಮಹಾತ್ಮರು ೨
ಶಮಷಟ್ಕಾದಿಗಳ ಸಾಧನ | ಕ್ರಮವನುಕೂಲಲಿಹವು |ಯಮ ನಿಯಮ ಕ್ರಮ ವಿಮಲ ಅಷ್ಟಾಂಗದಸುಮನ ಸುಯೋಗ ಅನುಪಮ ಸಚಿನ್ಮಯ ೩
ಕ್ಲೇಶಪಂಚಗಳನು ಕಳೆದಿಹ | ಪಾಶವಂಟದವನು |ದೇಶಿಕನೆನಿಸುತ ಪೋಷಿಸುವ ಭಕ್ತರ |ಗಾಸಿಯ ನಂದಿಸುವೀಶ ಸೆರೆ ಬಿಡಿಸಯ್ಯ ೪
ರಾಮಚಂದ್ರ ಮೂರ್ತಿ ಪೂಜೆಯ | ಪ್ರೇಮಯುಕ್ತ ಭಕ್ತಿಕೂರ್ಮವರ ಶ್ರೀ ವಾಮನ ನರಹರಿ ಪ್ರೇಮದಿ ನಡಿಸುವ ಸ್ವಾಮೀ ರಾಯ ಬಲಿ ೫
ಸವಣೂರ ಸ್ಥಳದಿ ಇರುವ ತ್ರಿ- | ಭುವನ ಮಠ ಸ್ಥಾನದಿ |ತವಕದಿ ತಿಳಿಯದು ಇವರ ಮಹಾತ್ಮೆಯುಶಿವ ಶಂಕರಸಖನೊಬ್ಬನಿಗಲ್ಲದೆ ೬

೬೬
ಸಾಂಬ ಶ್ರೀವಾಹನ ಕುಂಟೋಜೀಶಾ | ಸುಂದರ ಬಸವೇಶಾ ಪ
ಜಗದೊಳಗಿಹ ಜನರಘನಾಶ | ಸುಗಮದಿ ಕಡಿವನು ಭವದ ಪಾಶ | ಅಗಣಿತ ಶಿವಗಣರೊಳು ಮೆರೆವ ಅವಿನಾಶ ೧
ಗಳ ಬೆನ್ನವನಿತ್ತು ಪರೇಶ | ಮಾಳ ಹೊಲಗಳ ನಡಿಸುವನೀಶ | ತಿಳಿ ಮನದೊಳು ಬೆಳಗುವ ಜ್ಯೋತಿ ಪ್ರಕಾಶ ೨
ಧರಣಿಗಧಿಕವಾದ ಕೈಲಾಸ | ಪೊರೆವುತ ಕುಂಟೋಜ ನಿವಾಸಾ | ಸ್ಥಿರವಾಗಲು ಶಂಕರಗಾಯಿತು ಉಲ್ಹಾಸ ೩ಸುಂದರ ಬಸವೇಶ ||

೪೦
ಸಾಕ್ಷಾತ್ ಶಿವ ಜಗದೊಳಗೆ ಭವದಿ ಬಂದಿರೆ ಬಳಿಗೆ |ನರನಲ್ಲಾ ನರನಲ್ಲಾ ಗುರುವರ ಪರನು || ನರನಲ್ಲ ನರನಲ್ಲ ಪ
ಅಲ್ಲಹುದೆಂಬುದು ಭ್ರಾಂತೀ || ಗುರುವಿಂದಲ್ಲದೆ ಆಗದು ಶಾಂತೀ || ನರನಲ್ಲ ನರನಲ್ಲ ೧
ತಮ್ಮಂತಲೆ ನೋಡುವರು | ದೇಹದ ಹಮ್ಮಿಂದಲೆ ಕೆಡುತಿಹರೂ || ನರನಲ್ಲ ನರನಲ್ಲ ೨
ಭ್ರಾಂತದ ಮಾತೂ ಗುಹ್ಯೇಕಾಂತದಿ |ಇಹುದೇನೋ | ನರನಲ್ಲ ನರನಲ್ಲ ೩
ಗುರುಶಂಕರ ಪರಬ್ರಹ್ಮ ಒಂದೆ ಎಂದೊದರಿತೊ ಶ್ರುತಿ ನಿಯಮಾ || ನರನಲ್ಲ ನರನಲ್ಲ೪

೩೧
ಸ್ವಾನಂದ ಸುಖರೂಪವು ತಾನಿರೆತನ್ನೊಳು ತೋರುವದಿಂತೆಲ್ಲ ಪ
ಘಟವದಾರೋಪಿಸಲದು ಮೃತ್ತಿಕಾ |ಪಟಗಳು ತಂತುವಿನ್ಹೊರತಿಲ್ಲ ೧
ವಾರಿಧಿಯೊಳು ತೆರೆ ನೊರೆಗಳು ತೋರಲ್ಕವು |ನೀರಲ್ಲದೆ ಅವು ಬ್ಯಾರಿಲ್ಲ ೨
ಸಕ್ಕರೆ (ಇಟ್ಟ) ಫಲ ಸವಿಯಲ್ಲಸಕ್ಕರೆ ಸ್ವಾದನ ಫಾಲಾಕ್ಷನು ಬಲ್ಲ ೩

೪೧
ಸ್ವಾಮಿ ನೀ ಮಾಡಿದುಪಕಾರಾ ಕಿಂತು ಪಾಮರನ ಪ್ರತಿಉಪಕಾರಾ | ಭೀಮಾಶಂಕರ ಗುರುವಾಗುವ ಪ್ರಕಾರಾ |ಈ ಮನಕೆ ಎಂದಿಗೆ ತೋರದಾಕಾರಾ ||ಸ್ವಾಮಿ|| ಪ
ಲಕ್ಷ ಎಂಬತ್ತು ಮೂರೊಂದನು | ಯೋನಿ ಕುಕ್ಷಿಯೊಳಗೆ ಹೊಕ್ಕು ಬಂದೆನೊ | ಭಕ್ಷ್ಯಾಭಕ್ಷ್ಯವ ಮೆದ್ದೆನು | ಅನುಪೇಕ್ಷಿಯೊಳಗೆ ಮುಳುಗಿದ್ದೆನೋ | ಭಿಕ್ಷುಕರೊಡೆಯ ನಿರೀಕ್ಷಿಸಿ ಕೃಪಾ ಕಟಾಕ್ಷದಿ ಸದ್ಗುರು ರಕ್ಷಿಸಿದಂಥಾ ೧
ನೀರೊಳು ಜೀವಿಸುತಿದೆ ಮೀನಾ |ನೀರು ಕಾರಣವರಿಯದು | ಆ ಮೀನಾ | ಪಾರವಿಲ್ಲದಂಥದೀ ಮೀನಾ | ಪರವಸ್ತು ಖೂನನರಿಯದು ಮನ ಮೀನಾ | ನಾರೇರ ನೋಟಕ್ಕೆ ಸೇರಿ ತಾ ಹೋದೀತು | ಸಾರವಸ್ತುವ ತಂದು ತೋರಿಸಿದಂಥ ೨
ತನುವು ತನ್ನೊಳಗೆ ತಾ ತೋರದು | ತನು ಮನದ ವೃತ್ತಿಗೆ ತಾ ಬಾರದು | ಜನನ ಮೃತ್ಯಂಗಳು ದೋರದು | ಎನಗೆ ಸಾಧು ಸಜ್ಜನ ಸಂಗ ದೊರಕದು | ಘನ ಗುರುಶಂಕರ ಚಿನುಮಯರೂಪ- | ದನುಭವಕೆ ತಂದು ಎನಗೆ ನೀ ಕೊಟ್ಟಂಥ ೩

೪೨
ಸ್ವಾಮಿ ಶಂಕರನಿರಲಿಕ್ಕೆ ಕಾಮದ ಕಳವಳಿಕೇಕೆ ಪ
ಗುರುನಾಮ ನಿಧಾನಿರಲಿಕ್ಕೆ | ಎನಗಿಲ್ಲೆಂಬುವದೇಕೆ ಅ.ಪ.
ಅನಾಥ ಬಂಧು ಅನುದಿನ ಎನಗಿರೆ | ಅನುಕೂಲದ ಚಿಂತ್ಯಾಕೆ | ತನುಮನಧನದೊಳು ತಾನೆ ತಾನಿರಲು | ಅನುಮಾನಿಸಲಿನ್ಯಾಕೆ ಸ್ವಾಮಿ ೧
ದಾತನೊಬ್ಬ ಶ್ರೀನಾಥ ಎನಗಿರಲು | ಯಾತಕೆ ಪರರ ದುರಾಶೇ | ಮಾತು ಮಾತಿಗೆ ತೋರುವ ಸದ್ಗುರು ತೇಜಃ ಪುಂಜಗಳ್ಯಾಕೆ ಸ್ವಾಮಿ ೨
ದೊಡ್ಡದು ಸಣ್ಣದು ಧಡ್ಡನು ಜಾಣನು | ಎಂದೆಣಿಸುವದಿನ್ಯಾಕೆ | ಗುಡ್ಡದ್ಹಾಂಗಶ್ರೀ ಶಂಕರನಿರಲು ದುಡ್ಡಿನ ಹಂಗುಗಳ್ಯಾಕೆ ಸ್ವಾಮಿ ೩

೫೫
ಹೋಗಿ ನೋಡುವ ಬನ್ನಿರಿ ಶ್ರೀ ಜಗದೀಶನಿಗೆ ಶ್ರೀನಿವಾಸನ ಸಾಗಿ ನೋಡುವ ಬನ್ನಿ ಬಾಗಿ ಪದ |ನಲಿಸದಿ ನೀಗಿ ಭವಕೇರಿದಿ ಭೋಗಿಶಯನ ಯೋಗಿ ಪ
ಪರಮ ಭಕ್ತರ ಪಾಲನ ಸವ್ಯಸೂಕರಧರಣಿ ಜಯವರನ ||ಕೊರಳೊಳು ಕೌಸ್ತುಭ ಶ್ರೀ ವತ್ಸಲಾಂಛನ |ಕರಿವರ ಭಯನಾಶನ || ಅಘಶೋಷಣ ೧
ಕಾಮಕೋಟಿ ತೇಜನ ಅನಂತ ಜನ ಕಾಮಿತ ಫಲ ಪೂರ್ಣನ |ವಾಮಕರದಿ ಅಕ್ಷಮಾಲಾಧರಸಂಭ್ರಮ ಪೂರಿತ ಶೀಲನ | ಶ್ರೀ ಲೋಲನ ೨
ವಕ್ಷಸ್ಥಳದಿ ಶಿರಿಯ ಧರಿಸಿಹ ನಿಜ……….. | ಮೋಕ್ಷ……………..ಲಕ್ಷ ಅಲಕ್ಷ ವಿಲಕ್ಷ ಸುಲಕ್ಷ ನಿಲಕ್ಷ || ಸಾಕ್ಷೀ ಹರಿಯ ಮುರಾರಿಯ ೩
ನೀಲಮೇಘಶ್ಯಾಮನ ಸುಜನರ ಅನುಕೂಲ ಸರಡಿಗಿ ವಾಸನ |ಕಾಲ ಕರ್ಮಾತೀತ ಕಲಿಮಲ ಜಲ್ಪ | ನಿರ್ಮೂಲ | ನಾಶನ ಪಾವನ || ಶ್ರೀ ದೇವನ ೪
ಪಂಕಜೋದ್ಭವನಯ್ಯನ ಮುನಿಜನ ಹೃತ್ಪಂಕಜಆಳ್‍ರೂಪನ ಶಂಖಚಕ್ರಧರ ಕಟಿ ಪೀತಾಂಬರಶಂಕರಾಂತರಂಗನ | ಸುಸಂಗನ ೫

ಜೀವನ ಕಳೆಗಳು ಮುಳುಗುವ ತನಕ
೨೯
ಜೀವನ ಕಳೆಗಳು ಮುಳುಗುವ ತನಕ ಜೀವನ್ಮುಕ್ತನು ತಾನಲ್ಲ || ಜೀವನ ಕಳೆ ತಾನೇ ತಾನಾದರೆ | ಜ್ಯೋತಿರ್ಮಯವೀ ಜಗವೆಲ್ಲ ಪ
ಎಲ್ಲ ಪ್ರಪಂಚವು ಸೋಗಿನ ಪರಿಯಲಿ |ಪಸರಿಸಿ ತೋರುವದೆಲ್ಲಾ ||ಬೆಲ್ಲದ ಮೂಲವು ಕಬ್ಬಿನ ರಸವನು |ಅನುಭವ ಯೋಗಿಯೆ ತಾ ಬಲ್ಲಾ ೧
ಮುತ್ತಿನ ಆಕೃತಿ ಬೇರೆ ಬೇರಾದರೆ |ತೇಜವೆ ತತ್ತ್ವಗಳೆಲ್ಲಾ ||ಮುತ್ತಿನ ಮೂಲವು ಸ್ವಾತಿ ಬಿಂದುವು |ಸಿಂಧುವಾದವನೆ ತಾ ಬಲ್ಲಾ ೨
ಸುಮನ ಪರಾಗವು ಬೇರೆ ಬೇರಾದರೆ |ಘಮ ಘಮ ಮಕರಂದೆಲ್ಲಾ |ಸುಮನ ಪರಾಗವು ಭೃಂಗಾವಳಿ ಸುಖಸದ್ಗುರು ಶಂಕರ ತಾ ಬಲ್ಲಾ ೩

ಹಾಡಿನ ಹೆಸರು :ಜೀವನ ಕಳೆಗಳು ಮುಳುಗುವ ತನಕ
ಹಾಡಿದವರ ಹೆಸರು :ನಾಗಚಂದ್ರಿಕ
ಸಂಗೀತ ನಿರ್ದೇಶಕರು :ಸುಂದರಮೂರ್ತಿ ಎ.
ನಿರ್ಗಮನ

ಜೋ ಜೋ ಜೋ ಅಂಜನಿ ಕಂದಾ
೫೪
ಜೋ ಜೋ ಜೋ ಅಂಜನಿ ಕಂದಾ ಜೋ ಜೋ ಸಂಜೀವನ ತಂದಾ | ಜೋ ಜೋ ಸಾಧು ಸಜ್ಜನ ವೃಂದಾ | ಜೋ ಜೋ ವಾಯು ಬಾಲಮುಕುಂದಾ ಜೋ ಜೋ ಪ
ಭೂತೈದೆಂಬೊ ಕನ್ನಡಿ ಮಂಟಪದೊಳಗೆ | ಜ್ಯೋತಿ ದೀಪದ ಭಾಸ ಉನ್ಮನಿಯೊಳಗೆ | ಪ್ರೀತಿಂದ ಪ್ರಣವೆಂಬ ಮೇಲ್ಕಟ್ಟ ಕೆಳಗೆ ರಕ್ತಶ್ವೇತ ಶ್ಯಾಮ ನೀಲ ಖಿಡಕಿಯೊಳಗೆ ಜೋ ಜೋ ೧
ಪಂಚ ಭೂತವೆಂಬ ಮಂಚವ ನಿಲಿಸಿ | ಪಂಚವಿಂಶತಿ ತತ್ತ್ವ ನವಾರ ಬಿಗಿಸಿ | ಪಂಚಕರಣವೆಂಬೋ ಹಾಸೀಗಿ ಹಾಸಿ | ಪಂಚ ಪ್ರಾಣವೆಂಬೋಲೇಪ ತೀವಿಸಿ ಜೋ ಜೋ ೨
ಆರು ಚಕ್ರ ಮೀರಿದ ಸ್ಥಾನದಲ್ಲಿ | ಘೋರ ಘೋರ ಘೋಷ ಉನ್ಮನಿಯಲ್ಲಿ |ತುರ್ಯಾತೀತ ಶಂಕರ ತಾನೇ ಅಲ್ಲಿ | ಸೂರ್ಯ ಚಂದ್ರ ಅಗ್ನಿ ಮೂಜಗದಲ್ಲಿ ಜೋ ಜೋ ೩

ಹಾಡಿನ ಹೆಸರು :ಜೋ ಜೋ ಜೋ ಅಂಜನಿ ಕಂದಾ
ಹಾಡಿದವರ ಹೆಸರು :ಚಂದನ ಬಾಲಾ
ರಾಗ :ಕಾಪಿ
ತಾಳ :ರೂಪಕ
ಸಂಗೀತ ನಿರ್ದೇಶಕರು :ಶ್ರೀನಿವಾಸ್ ಬಿ. ವಿ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಬಿಂದು ಮಾಧವ ರಮಾಧವ
೫೭
ಬಿಂದು ಮಾಧವ ರಮಾಧವ ಪ
ಬಿಂದು ಮಾಧವ ಸುಬಂಧು ದೀನ ಭವ |ಬಂಧತರಣ ಗೋವಿಂದ ಶ್ರೀ ಕೃಷ್ಣ ೧
ಮಂದರಾದ್ರಿಧರ ಕುಂದ ರದನ ಮಹಾ |ಸುಂದರ ಸಿರಿ ಹೃನ್ಮಂದಿರ ವಾಸಾ ೨
ಕದ್ದಿಕಾರ ಸುರವೃಂದ ಸುಪೂಜಿತ |ಇದ್ದಿ ದೇವ ಕಚವೃಂದ ಸಮೇತಾ ೩
ನಂದ ನಂದನ ಸುಸಿಂಧುರ ವರದ ಮು-ಕುಂದ ಗೋಪಿಕಾ ವೃಂದ ವಿಹಾರಾ ೪
ಮಲ್ಲಿಖೇಡ ಸ್ಥಳ ಹೊಳೆ ಕಾಗಿಣಿ ಥಡಿಬಳಿಗೆ ರಾಯರು ಕುಳಿತಲ್ಲಿರುವ ೫
ಪಂಕಜಾಕ್ಷ ಮೀನಕೇತು ಜನಕ ಗರು-ಡಾಂಕ ಶಶಿ ಧ್ವಜ ಶಂಕರಪ್ರಿಯ ಹರಿ೬

ಹಾಡಿನ ಹೆಸರು :ಬಿಂದು ಮಾಧವ ರಮಾಧವ
ಹಾಡಿದವರ ಹೆಸರು :ನೇತ್ರಾ ನಾಥ್
ಸಂಗೀತ ನಿರ್ದೇಶಕರು :ಪರಮೇಶ್ವರ ಹೆಗಡೆ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಮರೆಯದಿರು ಮರೆಯದಿರು ಗುರುರಾಯನ
೪೫
ಮರೆಯದಿರು ಮರೆಯದಿರು ಗುರುರಾಯನ |ಲೋಕ ಪರಿಪಾಲಿಸುವ ಗುರು ಸಾರ್ವಭೌಮನ್ನ ಪ
ಪರಮೇಶ್ವರನು ತಾನೆ ಪರಮ ಪ್ರೇಮದಿಂದ ಗುರು ರೂಪವನುಧರಿಸಿ ಧರೆಗೆ ಬಂದು, ತ್ವರದಿಂದ ಮಾನವರ ಮರವೆಯನುಪರಿಹರಿಸಿ | ಸ್ಥಿರ ಮುಕ್ತಿ ಸುಖವಿತ್ತು ಪೊರೆವ ಗುರುವರನ ೧
ಕರುಣದಿಂ ಜನರ ರಕ್ಷಿಸುವ ಸದ್ಗುರುವರನ | ಶರಣು ಪೊಕ್ಕರೆಕೃಪಾ ಸುಧೆಗರೆವನ | ನಿರುತದಲಿ ಭಕುತರಿಗೆ | ನಿರತಿಶಯಸೌಖ್ಯವನು ಸರಿದಂತೆ ವರವಿತ್ತು | ಮೆರೆವ ದೇಶಿಕನ ೨
ಕುವರ ಬಾರೆಂದಭಯ ಕರವ ಶಿರದಲ್ಲಿರಿಸಿ | ನೆರೆ ಸುಬೋಧೆಯಗೈದು ನರಭಾವ ಕಳೆದು | ಮರಣ ಭಯ ಹರಸಿ | ಬಹು ಹರುಷದಿಂದಿರು ಎಂದ ಚಿರ ಸಿಂಧುಗಿಯವಾಸ | ಗುರು ಶಂಕರನ ಪಾದ ೩

ಹಾಡಿನ ಹೆಸರು :ಮರೆಯದಿರು ಮರೆಯದಿರು ಗುರುರಾಯನ
ಹಾಡಿದವರ ಹೆಸರು :ಮಾನಸಿ ಪ್ರಸಾದ್
ರಾಗ :ಹಿಂದೋಳ
ತಾಳ :ಖಂಡಛಾಪು ತಾಳ
ಸಂಗೀತ ನಿರ್ದೇಶಕರು :ಕೃಷ್ಣಮೂರ್ತಿ ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಲಿಂಗ ಬಂದ ನೋಡೊ
೪೩
ಲಿಂಗ ಬಂದ ನೋಡೊ ಶಂಕರ ಲಿಂಗ ಬಂದ ನೋಡೊ |ಅಂಗಜನುರುಹಿದ ಮಂಗಳ ಮೂರುತಿ | ತಿಂಗಳ ಸೂಡಿದ ಕಂಗಳ ಮೂರುಳ್ಳ ಪ
ಸುರಗಂಗಾಧರನೂ ಪಾರ್ವತಿವರ ಪರಮೇಶ್ವರನೂ | ಪರಮ ಪುರುಷ ಪರಾತ್ಪರ ಪರತರ | ಸ್ಥಿರ ಚರವಣು ತೃಣ ಭರಿತ ಸದಾಶಿವ ೧
ಗಜ ಚರ್ಮಾಂಬರನೂ ಪುರಹರ ಭುಜಗ ಭೂಷಹರನೂ | ಅಜಸುರ ವಂದಿತ ತ್ರಿಜಗ ವ್ಯಾಪಕ | ಸುಜನರಿಗಿತ್ತ ಸುನಿಜಪದ ಮಹ ಘನ ೨
ಆರು ಚಕ್ರ ಮೀರಿ ಸಹಸ್ರಾರ ಮನೆಯನ್ನೇ ಸೇರಿ |ಸಾರಾಸಾರ ವಿಚಾರ ರಹಸ್ಯವ- ಪಾರ ಪರಾತ್ಪರ ಗುರುತರ ಶಂಕರ ೩

ಹಾಡಿನ ಹೆಸರು :ಲಿಂಗ ಬಂದ ನೋಡೊ
ಹಾಡಿದವರ ಹೆಸರು :ಯಶವಂತ್ ಹಳಿಬಂಡಿ
ಸಂಗೀತ ನಿರ್ದೇಶಕರು :ಸುಮಿತ್ರಾ ಬಿ. ಕೆ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಶಿವಸುಖ ದಾರಿಯ ನೋಡಣ್ಣಾ
೭೦
ಶಿವಸುಖ ದಾರಿಯ ನೋಡಣ್ಣಾ | ಅದು ಕೂದಲ ಎಳೆಕಿಂತ ಬಲು ಸಣ್ಣಾ ಪಭವದಲಿ ಮುಳುಗಿಹ ಪ್ರಾಣಿಯ ಕಾಣದೆ | ಘವ ಘವಿಸುವ ಚಿನ್ನದ ಬಣ್ಣಾ ಅ.ಪ.
ಸಾಸಿವೆ ಕಾಳಿಗೆ ಸಾಸಿರ ಭಾಗಕೆ ಮೀರಿ ಉಳಿದಿಹುದಣ್ಣಾ ||ಘೋಷ ಸುಶಬ್ದದ ದಶಮದ್ವಾರದಿ | ಭಾಸುರ ಪರಮಣು ದ್ವಾರಣ್ಣಾ ೧ಸೂಜಿಯ ಮೊನೆಕಿಂತ ಸೂಕ್ಷಕೆ ಅತೀತನು | ಶೂನ್ಯಕೆ ಬೆಳಗುತ್ತಿಹುದಣ್ಣಾ || ಈ ಜಗವೆಲ್ಲವು ಮೃಗಜಲದಂದದಿ | ಸಚ್ಚಿತ್ಸೂರ್ಯನ ಕಿರಣಣ್ಣಾ ೨
ಅನುಭವ ಯೋಗಿಗೆ ಅನುಕೂಲವಾಗಿಹುದನಿಮಿಷ ದೃಷ್ಟಿಲಿ ಬಗೆಯಣ್ಣಾ || ಘನಗುರು ಶಂಕರ ತನ್ಮಯನಾಗಿಹ | ಚಿನುಮಯ ಗುರುತವೆ ನಿಜವಣ್ಣಾ ೩

ಹಾಡಿನ ಹೆಸರು :ಶಿವಸುಖ ದಾರಿಯ ನೋಡಣ್ಣಾ
ಹಾಡಿದವರ ಹೆಸರು : ಅಪ್ಪಗೆರೆ ತಿಮ್ಮರಾಜು
ಸಂಗೀತ ನಿರ್ದೇಶಕರು :ಹೇಮಂತ್ ಬಿ.ಆರ್
ಸ್ಟುಡಿಯೋ :ಗಣೇಶ್ ಕುಟೀರ, ಬೆಂಗಳೂರು

ನಿರ್ಗಮನ

ಸ್ವಾಮಿ ಶಂಕರನಿರಲಿಕ್ಕೆ ಕಾಮದ
೪೨
ಸ್ವಾಮಿ ಶಂಕರನಿರಲಿಕ್ಕೆ ಕಾಮದ ಕಳವಳಿಕೇಕೆ ಪ
ಗುರುನಾಮ ನಿಧಾನಿರಲಿಕ್ಕೆ | ಎನಗಿಲ್ಲೆಂಬುವದೇಕೆ ಅ.ಪ.
ಅನಾಥ ಬಂಧು ಅನುದಿನ ಎನಗಿರೆ | ಅನುಕೂಲದ ಚಿಂತ್ಯಾಕೆ | ತನುಮನಧನದೊಳು ತಾನೆ ತಾನಿರಲು |ಅನುಮಾನಿಸಲಿನ್ಯಾಕೆ ಸ್ವಾಮಿ ೧
ದಾತನೊಬ್ಬ ಶ್ರೀನಾಥ ಎನಗಿರಲು | ಯಾತಕೆ ಪರರ ದುರಾಶೇ | ಮಾತು ಮಾತಿಗೆ ತೋರುವ ಸದ್ಗುರು ತೇಜಃ ಪುಂಜಗಳ್ಯಾಕೆ ಸ್ವಾಮಿ ೨
ದೊಡ್ಡದು ಸಣ್ಣದು ಧಡ್ಡನು ಜಾಣನು | ಎಂದೆಣಿಸುವದಿನ್ಯಾಕೆ | ಗುಡ್ಡದ್ಹಾಂಗಶ್ರೀ ಶಂಕರನಿರಲು ದುಡ್ಡಿನ ಹಂಗುಗಳ್ಯಾಕೆ ಸ್ವಾಮಿ ೩

ಹಾಡಿನ ಹೆಸರು :ಸ್ವಾಮಿ ಶಂಕರನಿರಲಿಕ್ಕೆ ಕಾಮದ
ಹಾಡಿದವರ ಹೆಸರು :ಸುಮಿತ್ರ ಬಿ. ಕೆ. ಮತ್ತು ವೃಂದ
ಸಂಗೀತ ನಿರ್ದೇಶಕರು :ಸುಮಿತ್ರಾ ಬಿ. ಕೆ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ