Categories
ದಾಸ ಶ್ರೇಷ್ಠರು

ಜಗನ್ನಾಥದಾಸರು

ದಾಸರ ಹೆಸರು : ಜಗನ್ನಾಥದಾಸರು ;
ಜನ್ಮ ಸ್ಥಳ : ಬ್ಯಾಗವಟ್ಟಿ , (ಮಾನ್ವಿ ತಾಲ್ಲೂಕು ;
ತಂದೆ ಹೆಸರು : ನರಸಿಂಹಾಚಾರ್ಯ (ನರಸಿಂಹ ದಾಸರು) ;
ತಾಯಿ ಹೆಸರು : ಲಕ್ಷ್ಮೀಬಾಯಿ ;
ಕಾಲ : -1708- ; ಅಂಕಿತನಾಮ : ಜಗನ್ನಾಥ ವಿಠಲ ;
ಲಭ್ಯ ಕೀರ್ತನೆಗಳ ಸಂಖ್ಯೆ : 200 ;
ಗುರುವಿನ ಹೆಸರು : ವರದೇಂದ್ರತೀರ್ಥ ಶ್ರೀಪಾದಂಗಳು ಶ್ರೀ ಗೋಪಾಲದಾಸರು ;
ರೂಪ : ಜಗನ್ನಾಥದಾಸರು ; ಪೂರ್ವಾಶ್ರಮದ ಹೆಸರು : ತಿಮ್ಮಣ್ಣದಾಸ ಮತ್ತು ದಾಮೋದರ ದಾಸ ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : ಹರಿಕಥಾಮೃತ ಸಾರ (988 ಷಟ್ಪದಿಗಳಲ್ಲಿದೆ ದೈತ ಸಿದ್ದಾಂತವನ್ನು ಲೌಕಿಕ ಪಾರಮಾರ್ಥಿಕ ದೃಷ್ಯಾಂತಗಳ ಮೂಲಕ ಕನ್ನಡದಲ್ಲಿ ನಿರೂಪಿಸುವ ಕೃತಿ ಪದಗಳ ಪೊರುಢಿಮೆ ಕವಿತಾ ಕೌಶಲ, ಅಪಾರ ಜ್ಞಾನ ಶಕ್ತಿ ಅತೀಂದ್ರಿಯ ವಸ್ತುಗಳ ನಿರೂಪಣೆ ಮೊದಲಾದ ಅಪೂರ್ವ ಗುಣಗಳಿಂದ ಕೂಡಿದ ಗ್ರಂಥ ; ಪತಿ: ಪತ್ನಿಯ ಹೆಸರು : ತಾಮರಸಮ್ಮ ;
ವೃತ್ತಿ : ವರದೇಂದ್ರ ಮಠಲ ಆಸ್ಥಾನ ಪಂಡಿತರು ;
ಕಾಲವಾದ ಸ್ಥಳ ಮತ್ತು ದಿನ : ಮಾನ್ವಿ 0 179-1809 ಭಾದ್ರಪದ ಶುದ್ಧ ನವಮಿ ;
ವೃಂದಾವನ ಇರುವ ಸ್ಥಳ : ಮಾನ್ವಿಯಲ್ಲಿ ಜಗನ್ನಾಥದಾಸರ ಕಂಬವಿದೆ ;
ಕೃತಿಯ ವೈಶಿಷ್ಟ್ಯ : ಹರಿಗುರುಗಳನ್ನು ಕುರಿತ ರಚನೆಗಳು, ತತ್ವಾರ್ಥ ಗರ್ಭಿತವೂ ಪೊರುಢವೂ ಆಗಿವೆ. ಜಗನ್ನಾಥದಾಸರ ಸಂಸ್ಕ್ರತ ಭಾಷೆಯ ಪಾಂಡಿತ್ಯ ಕೃತಿಗಳಲ್ಲಿ ಒಡಮೂಡಿವೆ. ನರ್ತನ ಮತ್ತು ಹರಿವಾಣ ಸೇವೆಗೆ ಅಳಪಡುವ ಕೃತಿಗಳೂ ಇವೆ. ತತ್ವ ಸುವ್ವಾಲಿಗಳಲ್ಲಿ ಜಗನ್ನಾಥದಾಸರು ತಮ್ಮ ಜೀವನಾನುಭವವನ್ನು ತತ್ವಜ್ಞಾನದ ಬೆಳಕಿನಲ್ಲಿ ಮಂಡಿಸಿದ್ದಾರೆ.