Categories
ರಚನೆಗಳು

ಜಗನ್ನಾಥದಾಸರು

ಸಕಲ ಶುಭ ಕಾರ್ಯಾಂಭಗಳಲ್ಲಿಯೂ
ಗಣಪತಿ ಸ್ತುತಿ

ಅಂಬಾತನಯ ಹೇರಂಬ ಪೂರ್ಣಕರು ಪ
ಣಾಂಬುಧೇ ತವ ಚರಣಾಂಬುಜ ಕೆರಗುವೆ ಅ.ಪ
ದಶನ ಮೋದಕ ಪಾಶಾಂಕುಳ ಪಾಣೇ
ಅಸಮಸಹಸ ಚರುದೇಷ್ಣ ವಂದಿಪೆ ೧
ವೃಂದಾರಕ ವೃಂದವಂದಿತ ಚರಣಾರ
ವಿಂದುಯುಗಳ ದಯದಿಂದ ತೋರೆನಗೆ ೨
ಯೂಥಪವದನ ಪ್ರದ್ಲೋತ ಸನ್ನಿಭ ಜಗ
ನ್ನಾಥ ವಿರು ಸಂಪ್ರೀತಿ ವಿಜಯ ಜಯ ೩

ಪನ್ನಗಾದ್ರಿ : ನೋಡಿ
೧ ಅಂಬಿಕಾತನಯ ಭೂತಂಬರಾಧಿಪ ಸುರಕ
ದಂಬ ಸಂಷೂಜ್ಯ ನಿರವದ್ಯ | ನಿರವದ್ಯ ನಿನ್ನ ಪಾ
ದಾಂಬುಜಗಳೆನ್ನ ಸಲಹಲಿ ೧
೨ ಕಕುಭೀಶ ನಿನ್ನ ಸೇವಕನ ಬಿನ್ನಪವ ಚಿ
ತ್ತಕೆ ತಂದು ಹರಿಯ ನೆನೆವಂತೆ | ನೆನೆವಂತೆ ಕರುಣಿಸೊ
ಅಕುಟಿಲಾತ್ಮಕನೆ ಅನುಗಾಲ ೨
೩ ಗಜವಕ್ತ್ರ ಷಣ್ಮುಖಾನುಜ ಶಬ್ದ ಗುಣಗ್ರಾಹಕ
ಭುಜಗ ಕಟಿಸೂತ್ರ ಸುಚರಿತ್ರ | ಸುಚರಿತ್ರ ತ್ವತ್ಪಾದಾಂ
ಬುಜಗಳಿಗೆ ಎರಗಿ ಬಿನ್ನೈಪೆ ೩
೪ವಿತ್ತಪತಿ ಮಿತ್ರಸುತ ಭೃತ್ಯಾನುಭೃತ್ಯನ್ನ ವಿ
ಪತ್ತು ಬಡಿಸುವ ಅಜ್ಞಾನ | ಅಜ್ಞಾನ ಬಿಡಿಸಿ ಮಮ
ಚಿತ್ತ ಮಂದಿರದಿ ನೆಲೆಗೊಳ್ಳೊ ೪
೫ಮಾತಂಗ ವರದ ಜಗನ್ನಾಥವಿಠಲನ್ನ ಸಂ
ಪ್ರೀತಿಯಿಂದ ಸಾರೂಪ್ಯ | ಸಾರೂಪ್ಯವೈದಿ ವಿ
ಖ್ಯಾತ ಯುತನಾದೆ ಜಗದೊಳು ೫

ಮನಸ್ಸು ಕೋಡಗದಂತೆ ಚಂಚಲ
ಶೇಷ
೮೬
ಅತಿ ಶೋಭಿಸುತಿದೆ ಶ್ರೀಪತಿವಾಹನ ಪ
ಚತುರದಶ ಲೋಕದಲಿ ಅಪ್ರತಿವಾಹನ ಅ.ಪ.
ವಿನುತಕಶ್ಯಪ ಮುನಿಗೆ ತನಯನೆನಿಸಿದ ವಾಹನ
ಅನುಜರನು ಕದ್ದೊಯ್ದ ಅತ್ಯಾಢ್ಯ ವಾಹನ
ವನಧಿ ಮಧ್ಯಧಿ ನಾವಿಕರ ಭಕ್ಷಿಸಿದ ವಾಹನ
ಜನಪನಾಜ್ಞದಿ ಕೂರ್ಮಾಗಜರ ನುಂಗಿದ ವಾಹನ೧
ಕುಲಿಶಪಾಣಿಯ ಕೂಡೆ ಕಲಹ ಮಾಡಿದ ವಾಹನ
ಒಳಹೊಕ್ಕು ಪೀಯೂಷ ತಂದ ವಾಹನ
ಮಲತಾಯಿ ಮಕ್ಕಳನು ಮರುಳುಗೊಳಿಸಿದ ವಾಹನ
ಬಲಿರಾಯ ಬಯ್ದ ಮಕುಟವ ತಂದ ವಾಹನ ೨
ಕಾಲನಾಮಕನಾಗಿ ಕಮಲಭವನಲಿ ಜನಿಸಿ
ಕಾಲಾತ್ಮಹರಿಯ ಸೇವಿಪ ವಾಹನ
ಕಾಳಗದಿ ಕಪಿವರರ ಕಟ್ಟುಬಿಡಿಸಿದ ವಾಹನ
ವಾಲಖಿಲ್ಲರ ಪಿಡಿದ ವರವಾಹನ ೩
ಕೂಪಾರದೆಡೆಗೆ ಮಂದರವೈದ ವಾಹನ ನಿಜ
ರೂಪದಿ ಹರಿಸೇವೆಗೈವ ವಾಹನ
ಆ ಪಿತೃಗಳಿಗಮೃತ ಪ್ರಾಪ್ತಿಸಿದ ವಾಹನ
ಸೌಪರ್ಣಿ ಪತಿಯೆಂಬ ಹೊಂಬಣ್ಣ ವಾಹನ ೪
ಪನ್ನಗಾಶನವಾಹನ ಪತಿತ ಪಾವನ ವಾಹನ
ಸನ್ನುತಿಪ ಭಕ್ತರನು ಸಲಹುವ ವಾಹನ
ಪನ್ನಗಾದ್ರಿನಿವಾಸ ಜಗನ್ನಾಥ ವಿಠ್ಠಲಗೆ
ಉನ್ನತ ಪ್ರಿಯವಾದ ಶ್ರೀ ಗುರುಡವಾಹನ ೫

‘ಮಾನವ ಜನ್ಮ ಬಲು ದೊಡ್ಡದು’
ಹನುಮ-ಭೀಮ-ಮಧ್ವ ಸ್ತೋತ್ರ
೬೫
ಅಪಮೃತ್ಯು ಪರಿಹರಿಸೊ ಅನಿಲದೇವಾ
ಕೃಪಣ ವತ್ಸಲನೆ ಕಾಯ್ವರ ಕಾಣೆ ನಿನ್ನುಳಿದು ಪ
ನಿನಗಿನ್ನು ಸಮರಾದ ಅನಿಮಿತ್ತ ಬಂಧುಗಳು
ಎನಗಿಲ್ಲವಾವಾವ ಜನ್ಮದಲ್ಲಿ
ಅನುದಿನ ನೀನೆಮ್ಮನುದಾಸೀನ ಮಾಡುವುದು
ಅನುಚಿತವು ಜಗಕೆ ಸಜ್ಜನ ಶಿಖಾಮಣಿಯೆ ೧
ಕರಣಮಾನಿಗಳು ನಿನ್ನ ಕಿಂಕರರು ಮೂಲೋಕ
ದೊರೆಯು ನಿನ್ನೊಳಗಿಪ್ಪ ಸರ್ವಕಾಲ
ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ
ಗುರುವರಿಯ ನೀ ದಯಾಕರನೆಂದು ಮೊರೆ ಹೊಕ್ಕೆ ೨
ಭವರೋಗ ಮೋಚಕನೆ ಪವಮಾನರಾಯಾ ನಿ
ನ್ನವರನು ನಾನು ಮಾಧವಪ್ರಿಯನೇ
ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ
ದಿವಿಜಗಣ ಮಧ್ಯದಲಿ ಪ್ರವರ ನೀನಹುದಯ್ಯ ೩
ಜ್ಞಾನಾಯು ರೂಪಕನು ನೀನಹುದೋ ವಾಣಿ ಪಂ
ಚಾನನಾದ್ಯಮರರಿಗೆ ಪ್ರಾಣದೇವಾ
ದೀನವತ್ಸಲನೆಂದು ನಿನ್ನ ಮೊರೆ ಹೊಕ್ಕೆ
ದಾನವಾರಣ್ಯ ಕೃಶಾನು ಸರ್ವದ ಎಮ್ಮ ೪
ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು
ಸಾಧಾರಣವು ಅಲ್ಲ ಸಾಧುಪ್ರಿಯಾ
ವೇದವದೋದಿತ ಜಗನ್ನಾಥ ವಿಠಲನ
ಪಾದ ಭಕುತಿಯನಿತ್ತು ಮೋದ ಕೊಡು ಸತತ೫

ಭೂಮಿಯಲ್ಲಿ ಶ್ರೀಹರಿಯ
೭೯
ಅಪರಾಧವೆಣಿಸದಲೆ ಕಾಯಬೇಕು
ಕೃಪಣವತ್ಸಲನೆ ಶ್ರೀ ಮಧ್ವಮುನಿ ಗುರುರಾಯ ಪ
ನೀ ಮಾಡಿದುಪಕಾರ ನಾ ಮರೆವುದೆಂತೋ ಲ
ಕ್ಷ್ಮೀ ಮನೋಹರನ ನಿಜದಾಸಾಗ್ರಣೀ
ಪಾಮರನ ಲೋಕದೊಳು ಧೀಮಂತನೆನಿಸಿದೆ ಮ
ಹಾಮಹಿಮ ನಿನ್ನ ಕರುಣಾಮೃತದ ಮಳೆಗರೆದೂ ೧
ಅವಿವೇಕಿ ನಾನು ನಿನ್ನವನೆಂದು ತಿಳಿದು ಎ
ನ್ನವಗುಣಗಳೆಣಿಸದೆ ನಿತ್ಯದಲ್ಲಿ
ಸುವಿವೇಕಿಯನೆ ಮಾಡು ಕವಿವರ್ಯ ತವ ಮನೋ
ತ್ಸವಕೆ ಎಣೆಗಾಣೆ ನಾನವನಿಯೊಳಗಾವಲ್ಲಿ ೨
ಏನರಿಯದ ಮೂಢ ಮಾನವನು ನಾನು ಸು
ಜ್ಞಾನವರ್ಯನು ನೀನೆ ಕಾಯಬೇಕು
ಮಾನುತ ಜಗನ್ನಾಥ ವಿಠಲನ ಪದಯುಗಳ ಸ
ಧ್ಯಾನ ಮಾಡುವ ಧೀರಪ್ರಾಣ ಪಂಚಕರಾಯ ೩

ವ್ಯಾಸರಾಜರ ಗುರುಗಳಾದ
೧೬೪
ಅರಿತವರಿಗತಿ ಸುಲಭ ಹರಿಯ ಪೂಜೆ ಪ
ಅರಿಯದವ ನಿರ್ಭಾಗ್ಯತರ ಲೋಕದೊಳಗೆ ಅ.ಪ.
ಹೈಮಾಂಡ ಮಂಟಪವು ಭೂಮಂಡಲವೆ ಪೀಠ
ಸೋಮ ಸೂರ್ಯರೆ ದೀಪ ಭೂರುಹಗಳು
ಚಾಮರಗಳತಿ ವಿಮಲ ವ್ಯೋಮ ಮಂಡಲ ಛತ್ರ
ಯಾಮಾಷ್ಟಕರಗಳಷ್ಟದಳದ ಪದ್ಮವುಯೆಂದು ೧
ಮಳೆಯೆ ಮಜ್ಜನವು ದಿಗ್ವಲಯಂಗಳೇ ವಸನ
ಮಲಯಜಾನಿಲವೇ ಶ್ರೀಗಂಧ ಧೂಪಾ
ಇಳೆಯೊಳಗೆ ಬೆಳೆದ ಧಾನ್ಯಗಳೆಲ್ಲ ನೈವೇದ್ಯ
ಥಳ ಥಳಿಪ ಮಿಂಚು ಕರ್ಪೂರದಾರತಿಗಳೆಂದು ೨
ನಕ್ಷತ್ರ ಮಂಡಲವೇ ಲಕ್ಷ ದೀಪಾವಳಿಯು
ದಕ್ಷಿಣೋತ್ತರ ಅಯನಗಳೇ ಬನವು
ವೃಕ್ಷ ವಲ್ಲಿಜ, ಸುಫಲ ಪುಷ್ಪಗಳೊಳಗೆ ಲಕ್ಷ್ಮೀ
ವಕ್ಷ ವ್ಯಾಪಕನಾಗಿ ತಾನೆ ಭೋಗಿಪನೆಂದು ೩
ಗುಡುಗು ಸಪ್ತ ಸಮುದ್ರ ಸಿಡಿಲು ಘೋಷವೇ ವಾದ್ಯ
ಪೊಡವಿಪರಿಗೀವ ಕಪ್ಪವೇ ಕಾಣಿಕೆಗಳು
ಉಡುಪ ಭಾಸ್ಕರರ ಮಂಡಲಗಳಾದರ್ಶಗಳು
ನಡೆವ ನಡೆಗಳು ಹರಿಗೆ ಬಿಡದೆ ನರ್ತನವೆಂದೂ ೪
ಯುಗ ಚತುಷ್ಟಯವೆ ಪರಿಯಂಕ ಪಾದಗಳಬ್ದ
ಬಿಗಿವ ಪಟ್ಟಿಗಳು ಕಂದಾಯ ಕಸಿ ಯೊ
ಗಗನ ಮೇಲ್ಗಟ್ಟು ಸಂಕ್ರಮಣಗಳೇ ಬಡವುಗಳೂ
ಭಗವಂತಗುಪಬರ್ಹಣಗಳು ಷಡೃತುಗಳೆಂದೂ ೫
ನಾಗವಲ್ಲೆಗಳೆ ದಿವಸಗಳು ಕರಣವೇ ಕ್ರಮಕೆ
ಯೋಗಗಳೇ ಚೂರ್ಣ ರಾತ್ರೆ ತಾಂಶೊಕ
ಭೋಗವತೀ ಜಲವೆ ಗಂಡೂಷೋದಕ ಶುದ್ಧ
ಸಾಗರವೆ ಪಾದೋದಕ ವಿರಾಡ್ರ್ರೂಪಗೆಂದು೬
ಶಾತಕುಂಭೋಧರಾಂಡಾಂತಸ್ಥ ರೂಪ ಸಂ
ಪ್ರೀತಿಯಿಂದಲಿ ಯಜಿಸಿ ಮೋದಿಪರನಾ
ಮಿತ ಶೋಕರ ಮಾಡಿ ಸಂತೈಸುತಿಹ ಜಗ
ನ್ನಾಥ ವಿಠಲ ಒಲಿದು ಸರ್ವ ಕಾಲಗಳಲ್ಲಿ ೭

೧೯೩
ಅಸುರ ಬಾಧಿಸುತಿರಲು ಋಷಿಗಳು ಸ್ತುತಿ ಮಾಡೆ
ದಶರಥನ ಗರ್ಭದಲಿ ಜನಿಸಿ ಬಂದೆ ೧
ಶಿಶುವಾಗಿ ಕೌಸಲೆಗೆ ಬಾಲಲೀಲೆಯ ತೋರ್ದು
ಕುಶಲದಿಂ ನಾಲ್ವರ ಕೂಡೆ ಬೆಳೆದೆ ೨
ಅಸುರರನೆ ಬಡಿದಟ್ಟಿ ಋಷಿಯ ಯಾಗವ ಕಾಯ್ದು
ವಸುಧೆಯೊಳು ಶಿಲೆಯನ್ನು ಸತಿಯ ಮಾಡಿ ೩
ಮಿಥಿಲ ಪಟ್ಟಣಕೈದಿ ಮೃಡನ ಧನುವನೆ ಮುರಿದು
ಶಶಿಮುಖಿ ಜಾನಕಿಯ ಕರವ ಪಿಡಿದು ೪
ಪಥದೊಳಗೆ ಬರುತ ಭಾರ್ಗವರೊಡನೆ ಹೋರಾಡಿ
ದಶರಥಗೆ ಏಕೀಭಾವವನೆ ತೋರಿ ೫
ಪರಮ ಹರುಷದಲಿ ಸಾಕೇತನಗರಿಗೆ ಬಂದು
ಕಿರಿಯ ಮಾತೆಯ ಕಠಿಣ ನುಡಿ ಕೇಳಿ ೬
ಚಿತ್ರಕೂಟಕೆ ಬಂದು ಕೃತ್ಯವೆಲ್ಲವ ನಡೆಸಿ
ಭ್ರಾತೃ ಭರತನಿಗೆ ಪಾದುಕೆಯನಿತ್ತು ೭
ವನದೊಳಗೆ ಸಂಚರಿಸಿ ಘನ ಕಾರ್ಯಗಳ ಮಾಡಿ
ಹನುಮನ ಕಳುಹಿ ಮುದ್ರಿಕೆಯ ಕೊಡಲು ೮
ಮಿತ್ರೆ ಜಾನಕಿಗರುಹಿ ರತ್ನ ಕೊಂಡು ಬರಲು
ಅತ್ಯಂತ ಹರುಷದಲಿ ಶರಧಿ ಕಟ್ಟಿ ೯
ದುಷ್ಟ ರಾಕ್ಷಸ ಕುಲವ ಕುಟ್ಟಿ ಬೇರನೆ ಸವರಿ
ಸೃಷ್ಟಿಸುತೆ ಜಾನಕಿಯ ಅಗ್ನಿ ಹೊಗಿಸಿ ೧೦
ಪಟ್ಟಣಕೆ ಬಂದು ಭರತನಿಗೆ ಪೇಳೆ
ಅಷ್ಟಗಂಗೆ ಉದಕವನೆ ತಂದು ೧೧
ಅಷ್ಟಋಷಿಗಳು ಎಲ್ಲ ಕೂಡಿ ಕೊಂಡು
ಪಟ್ಟಾಭಿಷೇಕವನು ಮಾಡುತಿರಲಂದು ೧೨
ಸೃಷ್ಟಿಯೊಳು ಜಗನ್ನಾಥವಿಠಲನಿಗೆ ಪುಷ್ಪ
ವೃಷ್ಟಿಗಳನ್ನು ಕರೆದರಾಗ೧೩

ನುಡಿ-೧ : ಕೊಳಲೂದಲು
೧೨೪
ಆ ನಮಿಪೆ ಗುರುಸಂತತಿಗೆ ಸತತ ಗೆ
ಜ್ಞಾನ ಭಕ್ಯಾದಿಗಳ ಕರುಣಿಸಲಿ ಎನಗೆಂದು ಪ
ಹಂಸನಾಮಕ ಹರಿ ಬ್ರಹ್ಮಗುರುವರ ಸರೋ
ಜಾಸನ ಪುತ್ರರೆನಿಸಿಕೊಂಬಾ
ಆ ಸನಕ ಸನಂದನ ಕುಮಾರಕರ ಶಿಷ್ಯ ದೂ
ರ್ವಾಸಮುನಿ ಜ್ಞಾನನಿಧಿ ತೀರ್ಥ ಪದಾಬ್ಜಗಳಿಗೆ ೧
ಗರುಡವಾಹನತೀರ್ಥ ಕೈವಲ್ಲಜ್ಞಾನೇಶ
ಪರತೀರ್ಥ ಸತ್ಯ ಪ್ರಜ್ಞ ಪ್ರಾಜ್ಞರಾ
ವರಕುಮಾರಕ ತಪೋರಾಜ ಸಂಯಮಿ ವಿಮಲ
ಕರಕಮಲ ಸಂಜಾತ ಅಚ್ಯುತ ಪ್ರೇಕ್ಷರಿಗೆ ೨
ಶ್ರೀ ಮಧ್ವವರ ಪದ್ಮನಾಭ ನರಹರಿಮುನಿಪ
ಶ್ರೀ ಮಾಧವಕ್ಷೋಭ್ಯಯತಿ ಜಯಾರ್ಯ
ಧೀಮಂತ ವಿದ್ಯಾಧಿರಾಜ ಸುಕವೀಂದ್ರ ನಿ
ಸ್ಸೀಮ ವಾಗೀಶಯತಿ ರಾಮಚಂದ್ರಾರ್ಯರಿಗೆ ೩
ವಿದ್ಯಾನಿಧಿ ರಘುನಾಥ ರಘುವರ್ಯೋತ್ತಮ ಕರ
ಪದ್ಮ ಸಂಜಾತ ವೇದವ್ಯಾಸರಾ
ವಿದ್ಯಾಪತಿ ಅಧೀಶನಿಧಿ ಸತ್ಯವ್ರತ ನಿಧಿಯಾ
ಶುದ್ಧಾತ್ಮ ಸತ್ಯನಾಥರ ಪಾದ ಕಮಲಗಳಿಗೆ ೪
ಸತ್ಯಾಭಿನವ ಪೂರ್ಣ ಸತ್ಯವಿಜಯ ಪ್ರೀಯಾ
ಸತ್ಯಬೋಧರ ಸತ್ಯಸಂಧವರರಾ
ನಿತ್ಯದಲಿ ನೆನೆದು ಕೃತಕೃತ್ಯನಾಗುವೆ ಬಿಂಬ
ಮೂರ್ತಿ ಜಗನ್ನಾಥವಿಠಲನ ತೋರಿಸಲೆಂದು ೫

ಶ್ರೀ ಮನ್ಮಧ್ವ ಸಿದ್ಧಾಂತದಲ್ಲಿ

ಆ ನಮಿಪೆ ವಿಷ್ಣು ಶ್ರೀ ಬ್ರಹ್ಮ ವಾಯು
ವಾಣಿ ಭಾರತಿ ಮುಖ್ಯರವತಾರ ಆವೇಶಕಾನಮಿಪೆ ಪ
ಶ್ರೀ ಮತ್ಸ್ಯ ಕೂರ್ಮ ಭೂವರಹ ನರಸಿಂಹ ದಧಿ
ವಾಮನ ತ್ರಿವಿಕ್ರಮ ಭೃಗುಕುಲೋದ್ಭವ
ರಾಮ ಯಾದವ ಕೃಷ್ಣ ಬುದ್ಧ ಕಲ್ಕಿ ಹಯಾಸ್ಯ
ನಾಮ ತಾಪಸ ಮನು ಉಪೇಂದ್ರ ಅಜಿತಾದಿಗಳಿಗಾ ನಮಿಪೆ ೧
ವಾಸುದೇವಾಚ್ಯುತಾನಂತ ಗೋವಿಂದ ಮಹಿ
ದಾಸ ಧನ್ವಂತ್ರಿ ಹರಿ ಹಂಸ ದತ್ತಾ
ವ್ಯಾಸ ಕಪಿಲಾತ್ಮಂತರಾತ್ಮ ಪರಮಾತ್ಮ ಯ
ಜ್ಞೇಶ ವೈಕುಂಠ ನಾರಾಯಣಾಧ್ಯವತಾರಕಾನಮಿಪೆ ೨
ನಾರಾಯಣೀ ಋಷಭ ಐತರೇಯ ಶಿಂಶು
ಮಾರ ಯಜ್ಞ ಪ್ರಾಜ್ಞ ಸಂಕರುಷಣಾ
ಕ್ಷಿರಾಬ್ದಿ ನಿಲಯ ಯಮನಂದನಾ ಕೃಷ್ಣ ಹರಿ
ನಾರಾಯಣ ಧರ್ಮಸೇತು ರೂಪಾದಿಗಳಿಗಾನಮಿಪೆ ೩
ಗುಣಗಳಭಿಮಾನಿ ಶ್ರೀ ಭೂ ದುರ್ಗ ದಕ್ಷಿಣಾಂ
ಭೃಣಿ ಮಹಾಲಕ್ಷ್ಮೀ ಶ್ರೀ ವಿಷ್ಣುಪತ್ನೀ
ಜನನಿ ಮಾಯಾ ಜಯ ಕೃತಿ ಶಾಂತಿ ಶುದ್ಧ ರು
ಕ್ಮಿಣಿ ಸತ್ಯ ಸೀತಾದ್ಯಮಿತ ರೂಪಗಳಿಗಾನಮಿಪೆ ೪
ಹೀನಳೆನಿಸುವಳನಂತಾಂಶದಲಿ ಸುಖ ಬಲ
ಜ್ಞಾನಾದಿ ಗುಣದಿ ಮಹಾಲಕ್ಷ್ಮಿ ಹರಿಗೆ
ಆನಂದ ವಿಜ್ಞಾನ ಮಯನ ವಕ್ಷಸ್ಥಳವೆ
ಸ್ಥಾನವಾಗಿಹುದು ಇಂದಿರೆಗೆ ಆವಾಗ ೫
ಪುರುಷ ನಾಮಕ ವಿಧಿ ವಿರಿಂಚಿ ಮಹನ್ ಬ್ರಹ್ಮ
ಸುರುಚಿ ಮುಖ್ಯ ಪ್ರಾಣ ಸೂತ್ರ ಸ್ರ‍ಮತಿ
ಗುರು ಮಹಾಪ್ರಭು ಋಜ ಸಮಾನ ವಿಜ್ಞ ಪ್ರಾಜ್ಞ
ಹರಿಭಕ್ತಿ ಮೇಧಾವಿ ಮುಕ್ತಿ ಧೃತಿ ಅಮೃತನಿಗೆ ೬
ಸ್ಥಿತಿ ಯೋಗ ವೈರಾಗ್ಯ
ಚಿಂತ್ಯ ಬಲಸುಖ ಬುದ್ಧಿ
ವಿತತಾದಿ ಗೋಪ ಹನುಮ ಭೀಮ
ವೃಷಿವರಾನಂದ ಮುನಿ ಮೊದಲಾದ ರೂಪಶ್ರೀ
ಪತಿಗಧಿಷ್ಟಾನ ಕೋಟಿಗುಣಾಧಮರು ರಮೆಗೆ ಆ ನಮಿಪ ೭
ಸರಸ್ವತಿ ಗಾಯತ್ರಿ ಬುದ್ಧಿ ವಿದ್ಯಾ ಪ್ರೀತಿ
ಗುರುಭಕ್ತಿ ಸರ್ವ ವೇದಾತ್ಮಿಕ ಭುಜಿ
ಪರಮಾನು ಭೂತಿ ಸಾವಿತ್ರಿ ಸು ಸುಖಾತ್ಮಿಕಾ
ಪರಮೇಷ್ಠಿ ಪತಿ ನಾಮಗಳಿವೆಂದರಿದು ೮
ಶಿವಕನ್ಯ ಇಂದ್ರಸೇನಾ ಕಾಶಿಜಾ ಚಂದ್ರ
ಯುವತಿ ದ್ರೌಪದಿಯು ಭಾರತಿ ರೂಪವು
ಪವಮಾನ ಬ್ರಹ್ಮರಿಗೆ ಶತಗುಣಾಧಮ ಸದಾ
ಶಿವನ ರೂಪಗಳ ಈ ಪರಿಯ ಚಿಂತಿಸುತ ೯
ತತ್ಪುಮಾನ್ನೂಧ್ರ್ವಪಟ ದುರ್ವಾಸ ವ್ಯಾಧ ಅ
ಶ್ವತ್ಥಾಮ ಜೈಗೀಷವ್ಯ ತಪ ಅಹಂಕ್ರತು
ನಿತ್ಯ ವಾಯ್ವಿಷ್ಟ ಶುಕ ವಾಮದೇವ ಗುರು
ಮೃತ್ಯುಂಜಯೋರ್ವ ಸದ್ಯೋಜಾತ ತತ್ಪುರುಷಗಾನಮಿಪೆ ೧೦
ನರ ವಯು ಶುಕಕೇಶವೇಶ ಬಲಗೆ ಸಂ
ಕರುಷಗಾವೇಶ ಲಕ್ಷ್ಮಣದೇವಗೆ
ಗರುಡ ಶೇಷಾಘೋರ ಸಮರು ಶತಗುಣದಿಂದ
ಕೊರತೆಯೆನಿಸುವರು ಮೂವರು ವಾಣಿ ದೇವಿಗೆ ೧೧
ಶೇಷಗೆ ಸಮಾನನೆನಿಪಳು ಜಾಂಬವತಿ ರಮಾ
ವೇಶ ಕಾಲದಿ ಷಣ್ಮಹಿಷಿಯರ ಒಳಗೆ
ಹ್ರಾಸಕಾಲದಿ ಸಮಳು ಐವರಿಗೆ ಜಾಂಬವತಿ
ವೀಶಾದ್ಯರಿಗೆ ಹರಿ ಸ್ತ್ರೀಯರ ಸಮರೈದುಗುಣ೧೨
ರೇವತಿ ಶ್ರೀಯುತ ಶ್ರೀ ಪೇಯ ರೂಪತ್ರ
ಯಾವಕಾಲದಿ ವಾರುಣಿಗೆ ಪಾರ್ವತೀ
ದೇವಿ ಸೌಪರಣಿಗೆ ಸಮ ಷಣ್ಮಹಿಷಿಯರಿಗೆರಡು
ಮೂವರೀರೈದು ಗುಣ ಕಡಿಮೆ ಪತಿಗಳಿಗೆ ೧೩
ಕುಶ ವಾಲಿ ಗಾಧಿ ಮಂದ್ರದ್ಯುಮ್ನನು ವಿಕುಕ್ಷಿ
ಶ್ವಸನ ಹರಿ ಶೇಷ ಸಂಯುಕ್ತಾರ್ಜುನಾ
ಅಶನೀಧರನ ಸುರೂಪಂಗಳಿವು ಮನ್ಮಥನ
ಪೆಸರು ಪೇಳುವೆನು ಅವತಾರಗಳ ನಿತ್ಯ ೧೪
ಪ್ರದ್ಯುಮ್ನ ಸಂಯುಕ್ತ ರುಕ್ಮಿಣೀ ದೇವಿ ಸುತ
ಪ್ರದ್ಯುಮ್ನ ಭರತನು ಸನತ್ಕು ಮಾರಾ
ಪದ್ಮಜಾನಿಷ್ಟ ಸಾಂಬ ಸ್ಕಂಧ ಸುದರುಶನ
ರುದ್ರ ನಾರ್ಧಾಂಗಿನಿಗೆ ದಶಗುಣಾಧಮರೆಂದು೧೫
ಕಾಮೇಂದ್ರರಿಗೆ ದಶಾಧಮನು ಅಹಂ ಭವ ಪ್ರಾಣ
ನಾಮರಗೆ ರೂಪ ಸರ್ಮೋತ್ತುಂಗನು
ಕಾಮ ಪುತ್ರಾನಿರುದ್ದಾದಿಗಳು ದಶ ಹೀನ
ಈ ಮಹಾತ್ಮರ ದಿವ್ಯ ಅವತಾರರೂಪಗಳಿಗಾನಮಿಪೆ ೧೬
ತಾರನಾಮಕ ಪ್ಲವಗ ಬ್ರಹ್ಮಾಂಶಯುಗ್ದೋಣ
ಮಾರುತಾವೇಶ ಸಂಯುತ ವುದ್ಧವಾ
ಮುರು ರೂಪವು ಬೃಹಸ್ಪತಿಗೆ ಪ್ರದ್ಯುಮ್ನನ ಕು
ಮಾರಾನಿರುದ್ಧ ಶತೃಘ್ನ ಅನಿರುದ್ಧನಿಗೆ ೧೭
ತಾರ ಚಿತ್ರಾಂಗದ ಶಚಿ ರೂಪ ಲಕ್ಷುಣ
ಈ ರುಗ್ಮವತ್ರಿ ಎರಡು ರತಿರೂಪವು
ಆರುಜನ ದಕ್ಷ ಸ್ವಯಂಭುವ ಮನು ಪ್ರಾಣ
ಗಿರೈದು ಗುಣಗಳಿಂದಧಮರೆಂದರಿದು ೧೮
ಭೂತಾಭಿಮಾನಿ ಪ್ರವಹ ಪಂಚಗುಣದಿ ಪುರು
ಹೊತ ಪತ್ನ್ಯಾದಿಗಳಿಗಧಮನೆನಿಪ
ಈತಗವತಾರವಿಲ್ಲವನಿಯೊಳು ಚಂದ್ರ ಪ್ರ
ದ್ಯೋತನಾಂತಕ ಸ್ವಯಂಭುವ ಪತ್ನಿ ಶತರೂಪಿ ೧೯
ಸತ್ಯಜಿತ ಜಾಂಬವಾನ್ ವಿದುರ ಗುರು ವಾಯು ಸಂ
ಯುಕ್ತ ಧರ್ಮಜ ಯಮಗೆ ರೂಪ ನಾಲ್ಕು
ರಾತ್ರಿ ಚರನವತಾರ ಯಿಂದ್ರ ಯುಕ್ತಾಂಗದಾ
ದಿತ್ಯ ನವತಾರ ಬ್ರಹ್ಮ ವಿಷ್ಟ ಸುಗ್ರೀವ ೨೦
ಹರಿಯುಕ್ತ ಕರ್ನ ಮನು ಪತ್ನಿ ಶತರೂಪ ನಾ
ಲ್ವರು ಸಮರು ಪ್ರವಹಗಿಂದೆರಡು ಗುಣದೀ
ಕೊರತಿ ಮಹ ಭಿಷಕು ಮಂಡೂಕ ಶಂತನು ಸುಶೇ
ಣ್ವರುಣ ರೂಪಗಳಧಮ ಪಾದ ಪಾದಾರ್ಧಿಕಾನಮಿಪೆ೨೧
ನಾರದಾಧಮ ವರುಣಗಿಂತಗ್ನಿ ಅವ
ತಾರ ದೃಷ್ಟದ್ಯುಮ್ನ ಲವ ನೀಲರೂ
ಮೂರು ಭೃಗುರೂಪ ಜನರೆಂಬ ವ್ಯಾಧ ಪ್ರಸೂತಿ
ವಾರಿನಿಧಿಗಿಂತ ಪಾದ ಗುಣದಾಧಮರು ಎಂದು೨೨
ಅಂಗೀರ ಪುಲಸ್ತ್ಯಾತ್ರಿ ಪುಲಹನು ಮರೀಚಿ ಮುನಿ
ಪುಂಗವ ದಶಿಷ್ಠ ಕೃತು ಬ್ರಹ್ಮ ಸುತರೂ
ತುಂಗ ವಿಶ್ವಾಮಿತ್ರ ವೈವಸ್ವತರು ಸದಾ
ಕೆಂಗದಿರಗಧಮರೊಂಭತ್ತು ಜನರೆಂದು ೨೩
ಸಪ್ತ ಋಷಿಗಳಿಗೆ ಸಮನೆನಿಪ ವೈವಸ್ವತನು
ಸಪ್ತ ವಾಹನನ ಆವೇಶ ಬಲದೀ
ಲುಪ್ತವಾಗಲು ಕಡಿಮೆಯೆನಿಪ ಪ್ರಾವಹ ತಾರ
ಕ್ಲುಪ್ತ ಒಂದೇ ರೂಪ ಕೃಪೆಯೆಂದು ಕರೆಸುವಳಿಗಾನಮಿಪೆ೨೪
ಹರನಾವೇಶಯುತ ಘಟೋತ್ಕಚ ದುರ್ಮಖನು
ನಿಋಋತಿ ಕರೆಸುವನು ರಾಹು ಯುಗ್ಭೀಷ್ಟಕ ನೃಪಾ
ನರೆ ಮಿತ್ರ ನಾಮಕನ ರೂಪ ನಾಲ್ವರು ಅಗ್ನಿ
ಗೆರಡು ಗುಣದಿಂಧಮರೆನಿಪರೆಂದೆಂದು ೨೫
ಮಾರಾರಿಯುಕ್ತ ಭಗದತ್ತ ತತ್ತನÀಯ ಕು
ಬೇರಗೆರಡವತಾರ ವಿಘ್ನೇಶಗೆ
ಚಾರುದೇಷ್ಣನು ಒಂದೆ ಇಂದ್ರನಾವೇಶಯುತ
ಆರುರೂಪಗಳುಳ್ಳ ನಾಸತ್ಯ ದಸ್ರರಿಗೆ ೨೬
ವಿವಿಧÀ ಮೈಂದ ತ್ರಿಸಿಖ ನಕುಲ ಸಹದೇವ ವಿಭು
ಅವತಾರ ಅಶ್ವಿನೀ ದೇವತೆಗಳ
ಲವಣಾದಿ ಷಡ್ರಸಗಳೊಳಗಿದ್ದು ಜೀವರಿಗೆ
ವಿವಿಧ ಭೋಗಗಳಿತ್ತು ಸಂತೈಪರೆಂದೆಂದು ೨೭
ದ್ರೋಣಾರ್ಕ ದೋಷಾಗ್ನಿ ಧ್ರುವ ವಿಭಾವಸು ವಸ್ತು
ಪ್ರಾಣಾಷ್ಟ ವಸುಗಳೊಳಗೆ ದ್ಯುನಾಮಕ
ವಾಣೀಶಯುಕ್ತ ಭೀಷ್ಮನು ನಂದಗೋಪಾಲ
ದ್ರೋಣನಾಮಕ ಪ್ರಧಾನಾಗ್ನಿಗಿಂದಧಮರೆಂದಾ ನಮಿಪೆ ೨೮
ಭೀಮರೈವತ ವೋಜಜ್ಯೆಕಪಾದ ಹಿರ್ಬದ್ನಿ ಭವ
ವಾಮ ಬಹುರೂಪೋಗ್ರಜ ವೃಷಾಕಪಿ
ಈ ಮಹನ್ನೆಂಬ ಹನ್ನೊಂದು ರುದ್ರರು ಭೂರಿ
ನಾಮಕ ಜೈಕ ಪಾದಹಿರ್ಬದ್ನಿ ಭೂರಿಶ್ರವಗಾನಮಿಪೆ೨೯
ತ್ರ್ಯಕ್ಷನುಳಿಧತ್ತು ರುದ್ರರು ಸಮರು ಶಲ್ಯ ವಿರು
ಪಾಕ್ಷನವತಾರ ಕೃಪ ವಿಷ್ಕಂಭುನೂ
ಅಕ್ಷೀಣಬಲ ಪತ್ರತಾಪಕ ಸಹದೇವ
ರಕ್ಷಘ್ನ ಸೋಮದತ್ತನು ಎನಿಸುತಿಹಗೆ ೩೦
ವಿರೂಪಾಕ್ಷ ವಿಷ್ಕಂಭ ಪತ್ರತಾಪಕ ಮೂರು
ಹರನ ರೂಪಾಂತರಗಳಿವು ವಿವಸ್ವಾನ್
ಅರಿಯಮ ಪೂಷ ಭಗ ಸವಿತು ತೃಷ್ಟಾಧಾತ
ವರುಣ ಶಕ್ರೋರುಕ್ರಮನು ಮಿತ್ರ ಪರ್ಜನ್ಯಗಾನಮಿಪೆ ೩೧
ಶೌರಿನಂದನ ಭಾನು ಸವಿತ್ರ ನಾಮಕ ಸೂರ್ಯ
ವೀರಸೇನನು ಯಮಾವಿಷ್ಟ ತ್ವಷ್ಟಾ
ಆರುಜನ ರುಕ್ತರೆನಿಪರು ವುರುಕ್ರ್ರಮ ಶಕ್ರ
ವಾರಿಧಿ ವಿವಸ್ವಾನ್ ಮಿತ್ರ ಪರ್ಜನ್ಯರಿಗೆ ೩೨
ಪ್ರಾಣ ನಾಗ ಪಂಚಕ ಅಹಂಕಾರಿಕ
ಪ್ರಾಣ ಪ್ರವಹ ನಿವಹ ಸಂವಹ ಸ್ವಹಾ
ಮಾನದಾವಹ ವಿವಹ ಕಾಲ ಶ್ವಾಸ ಏ
ಕೋನ ಪಂಚಾಶನ್ ಮರುದ್ಗಣಸ್ಥರು ಎಂದು ೩೩
ಅನಿಳ ನಳ ಕುಮುದ ಮಂಡೂಖ ಸಾಂಗ ಶ್ವೇತ ಶಂ
ತನು ಕೃಷ್ಣ ಶುಚಿ ಶಂಕು ರಕ್ತ ಸಿಂಧೂ
ಹನುಮ ಭೀಮ ಯತಿವುದಿತ ಕಾಮ ಜಡಪಿಂಗ ಕಂ
ಪನ ವೃದ್ವಹ ಧನಂಜಯ ದೇವದತ್ತರಿಗೆ ೩೪
ಶುಕ್ರ ಶಂಕು ಗುರು ಕಾಂತ ಪ್ರತಿಭ ಸಂವರ್ತಕನು
ಪಿಕ ಕಪಿಗಳಿವರು ಮುರುತರು ಸಮೀರಾ
ಯುಕುತ ಪಾಂಡು ವರಾಹನು ಎನಿಪ ಸಂಪಾತಿ
ಭೃಕುಟ ಕೇಸರಿ ಶ್ವೇತ ಮರುತನವತಾರ ವೆಂದಾನಮಿಪೆ೩೫
ಪ್ರತಿಭವಂಶನು ಚೇಕಿತಾನೆಂದೆನಿಪ ವಿ
ಪ್ರಥು ಸೌಮ್ಯ ಕುಂತೀಭೋಜನೆ ಕೂರ್ಮನು
ಕ್ಷಿತಿ ಯೊಳಗೆ ಪ್ರಾಣಪಂಚಕರೊಳು ಪ್ರಾಣ ಗಜ
ಅಥ ಗವಾಕ್ಷಾಪಾನ ವ್ಯಾನ ಗವಯನು ಎಂದು ೩೬
ವೃಷನು ಸರ್ವತ್ರಾತನು ವುದಾನಗಂಧ ಮಾ
ದ ಸಮಾನನರಿವರು ವಿತ್ತಪನ ಸುತರು
ಶ್ವಸನಗಣದೊಳು ಕಿಂಚಿದುತ್ತ ಮರಹಂ ಪ್ರವಹ
ಗಸಮರೆನಿಪರು ಪ್ರಾಣ ಪಂಚಕರು ಎಂದೂ ೩೭
ಪ್ರತಿ ವಿಂಧ್ಯ ಧರ್ಮಜನ ಭೀಮಸೇನನ ಪುತ್ರ
ಶೃತಸೋಮ ಅರ್ಜುನಜ ಶೃತಕೀರ್ತಿಸಾ
ಶತಾನೀಕÀನ ಕುಲಜ ಸಹದೇವಾತ್ಮಜನು
ಶೃತಕರ್ಮರಿವರು ದ್ರೌಪದಿ ದೇವಿಗಾತ್ಮಜರಿಗಾನಮಿಪೆ೩೮
ಚಿತ್ರರಥ ಅಭಿಪೌಮ್ರಬಲ ಕಿಶೋರ ಗೋಪಾಲ
ರುತ್ತಮರು ಗಂಧರ್ವರೈವರಿಂದ
ಯುಕ್ತರಾಗಿಹರು ಕೈಕೇಯರೈವರು ಪಾಂಡು
ಪುತ್ರಜರು ವಿಶ್ವದೇವತೆಗಳಿವರೆಂದು೩೯
ಧ್ರುವ ಕಾಲ ಕಾಮಲೋಚನದಕ್ಷ ಕೃತು ಪುರೂ
ರವ ಸತ್ಯ ವಸು ಧುರಿಗಳಿವರು ವಿಶ್ವೇ
ದಿವಿಜರೀರೈದು ಋಭು ಗುಣ ಪಿತೃತ್ರಯ ದ್ಯಾವ
ಅವನಿಪರು ಗಣಪಾದ್ಯರಧಮ ಮಿತ್ರನಿಗೆಂದು ೪೦
ವಸುಗಳೆಂಟಾದಿತ್ಯರೀರಾರು ಒಂದಧಿಕ
ದಶರುದ್ರಗಣ ಪಿತೃತ್ರಯ ಬೃಹಸ್ಪತೀ
ದಶ ವಿಶ್ವ ದೇವ ಅಶ್ವಿನಿಗಳೆರಡೈವತ್ತು
ಶ್ವಸನಗಣರು ಋಭುವೊಂದು ಎರಡು ದ್ಯಾವಾಪೃಥವಿ ೪೧
ಒಂಭತ್ತು ಕೋಟಿ ದೇವತೆಗಳೊಳು ನೂರು ಜನ
ಕೆಂಬರಿವರಿಗೆ ಸೋಮ ಪಾನಾರ್ಹರೂ
ಅಂಬುಜಾಪ್ತರ ಒಳಗುರುರುಕ್ರಮನುಳಿದು ಪದ್ಮ
ಸಂಭವನ ಸಹರಾಗಿಹರು ಶತಸ್ಥರಿಗೆ ೪೨
ಮರುತತ್ರಯರು ವನಿಯಮ ಸೋಮ ಶಿವದಿವಾ
ಕರರಾರು ರುದ್ರ ಗುರು ಇವರುಕ್ತರೂ
ಉರವರಿತ ಎಂಭತ್ತೈದು ಸಮರು ತಮ್ಮೊಳಗೆ
ಸರಸಿಜೋದ್ಭವನ ಸುತರೆನಿಪ ಸನÀಕಾದಿಗಳಿಗಾನಮಿಪೆ೪೩
ಸನಕಾದಿಗಳೊಳುತ್ತಮ ಸತತ್ಕುಮಾರ ಶಿಖಿ
ತನುಜ ಪಾವಕನು ಪರ್ಜನ್ಯನು ಮೇಘಪ
ಎನಿಸುವನು ಶರಭವೊಂದೇರೂಪ ಧರ್ಮರಾ
ಜನ ಪತ್ನಿ ದೇವಕಿಯು ಶಾಮಲೆಯ ರೂಪವೆಂದಾ ನಮಿಪೆ೪೪
ಯಮ ಭಾರ್ಯ ಶಾಮಲಾ ರೋಹಿಣಿದೇವಿ ಚಂ
ದ್ರಮನ ಸ್ತ್ರೀ ಅನಿರುದ್ಧದೇಹಿ ಉಷಾ
ದ್ಯುಮಣಿ ಭಾರ್ಯಾ ಸಂಜ್ಞ ಗಂಗಾ ವರುಣ ಭಾರ್ಯ
ಸುಮರಾರು ಜನರು ಪಾವಕಗೆ ಕಿಂಚಿದಧಮರೆಂದಾ ನಮಿಪೆ೪೫
ಎರಡು ಗುಣ ಮಿತ್ರಗಿಂದಧಮ ಪರ್ಜನ್ಯ ಈ
ರೆರಡು ವನ್ಹಿಗೆ ಕಡಿಮೆ ಪಾದಮಾನೀ
ಸುರಪನಂದನ ಜಯಂತನು ಪ್ರಹಲ್ಲಾದ ಈ
ರ್ವರು ಮುಖ್ಯರಧಮ ಪರ್ಜನ್ಯಗೆಂದೆಂದು ೪೬
ಎರಡು ಗುಣ ಪರ್ಜನ್ಯಗಿಂದಧಮಳು ಸ್ವಹಾ
ರೆರಡಧಿಕ ಗುಣದಿ ಸ್ವಪತಿಗೆ ನೀಚಳೂ
ಹರಿ ಶಕ್ರಸತಿ ಅಶ್ವಿ ಯುಕ್ತಾಭಿಮನ್ಯು ಚಂ
ದಿರಜ ಬುಧನವತಾರ ಸ್ವಾಹಾ ದೇವಿಗಧಮಳೆಂದಾ ನಮಿಪೆ ೪೭
ಎನಿಸುವಳು ಶಲ್ಯ ಜರಾಸಂಧನಾತ್ಮಜಾ
ಶ್ವಿನಿ ಭಾರ್ಯಾನಾಮಾಭಿಮಾನಿ ಉಷಾ
ಘನರಸಾಧಿಪ ಬುಧಗೆ ಕಿಂಚಿದ್ಗುಣ ಕಡಿಮೆ
ಅವಳ ಪತ್ನಿಗೆ ದಶಗುಣಾಧಮಳುಯೆಂದು ೪೮
ಧರಣಿಗಭಿಮಾನಿ ಎನಿಸುವ ಸೂರ್ಯಸುತ ಶನೇ
ಶ್ವರ ಉಷಾದೇವಿಗೆರಡು ಗುಣಾಧಮ
ತರಣಿ ನಂದನಗೆ ಸತ್ಕರ್ಮಾಭಿಮಾನಿ ಪು
ಷ್ಕರ ಕಡಿಮೆ ಪಂಚಗುಣದಿಂದ ಎಂದೆಂದು ೪೯
ನಾರದನ ಶಿಷ್ಯ ಪ್ರಹ್ಲಾದ ಬಾಲ್ಹೀಕ ಸ
ಮೀರ ಸಂಯುಕ್ತ ಸಹ್ಲಾದ ಶಲ್ಯಾ
ಮೂರನೆಯನುಹ್ಲಾದ ಸವಿತ್ರನಾವೇಶದಲಿ
ತೋರಿದನು ದೃಷ್ಟಕೇತು ಎನಿಸಿ ಧರೆಯೊಳಗೆ ೫೦
ತಾಮಾಂಶಯುಗ್ ಜಯಂತನು ಬಭ್ರುವಹ ವರು

ಶ್ರೀ ರಾಘವೇಂದ್ರ
೪೩
ಆ ವೆಂಕಟಗಿರಿನಿಲಯನಂಘ್ರಿ ರಾ
ಜೀವಯುಗಳಗಾನಮಿಸುವೆನು ಪ
ಸೇವಿಪ ಜನರಿಗಮರ ತರುವೆನಿಸಿ ಧ
ರಾವಲಯಾಖ್ಯ ದಿವಿಯೊಳೆಸವ ಅ.ಪ.
ಅವನಂಘ್ರಿ ಜಲ ನಿಖಿಳ ಜಗತ್ತಿಗೆ
ಪಾವನತರವೆಂದೆನಿಸುವುದು
ಶ್ರೀ ವಿಧಿಭವ ಶಕ್ರಾದ್ಯರು ಆವನ
ಸೇವಕ ಸೇವಕರೆನಿಸುವರು
ತಾ ಉತ್ತಮ ಪುರುಷನೆನಿಸಿ ಜಗವ ಸ
ದಾವಕಾಲ ಸಂತೈಸುವನು
ಜೀವಾಂತರ್ಗತನಾಗಿ ವಿವಿಧ ವೇ
ದಾವಳಿಯಿಂದ ತುತಿಸಿ ಕೊಂಬಾ ೧
ಪಾತನೊಳಹಿಪ ವಿರೋಧಿಸೆ ತವಸ
ತ್ವಾತಿಶಯನ ತೋರೆಂದೆನುತಾ
ಜಾತರೂಪ ಶೈಲಾತ್ಮಜನಪ್ಪಿರೆ
ವೀತಿ ಹೋತ್ರ ಸಖ ಕಿತ್ತೊಗೆಯೆ
ವೀತ ಕರ್ನನಳವಳಿದು ವೇಗ
ಧಾತ ಮಹಿಳೆ ತೀರ್ಥದಿ ಭೂ ಲಕ್ಷ್ಮೀಸ
ಮೇತನಾಗಿ ಮೋದಿಸುತಿಪ್ಪೆ ೨
ಭೂಸುರನೊರ್ವನು ತೊಂಡಮಾನ ಧರ
ಣೀಶನ ನಿಲಯದೊಳುಳುಹಿ ಸತಿಯ
ಕಾಶಿಗೆ ಪೋಗಲು ನೃಪತಿ ಮರೆಯೆ ನಿ
ಶ್ವಾಸ ವನೈದಿದಳಾ ಸತಿಯು
ಆ ಸಮಯದಿ ದ್ವಿಜವರ್ಯನು ಬೆಸಗೊಳೆ
ಕ್ಲೇಶದಿ ಭೂಮಿಪ ಸಂಸ್ತುತಿಸೆ
ಕೇಶವ ತಾನಸ್ಥಿಗಳ ತರಿಸಿ ಸು
ವಾಸಿನಿ ಶಿಶು ಸಹ ಒಲಿದಿತ್ತಾ ೩
ವೃದ್ಧ ಬ್ರಾಹ್ಮಣನು ತುತಿಸೆ ಸಲಿಲದೊಳ
ಗದ್ದಿ ಕುಮಾರತ್ವವನಿತ್ತ
ಅಧ್ವರವೆಸಗಿದ ಋಷಿಗಳ ಮಂತ್ರದ
ಪದ್ದತಿ ತಿದ್ದಿಯಜ್ಞವ ಮಾಡ್ದ
ಮಧ್ಯರಾತ್ರಿಯೊಳು ಬೆಸಗೊಂಡ ನೃಪನು
ಪದ್ರವ ಕಳೆದಾಯುಧವಿತ್ತು
ಮೃದ್ಭಾಂಡವ ರಚಿಸುವನಿಗೊಲಿದವನ
ಚೋದ್ಯ ತೋಂಡಮಾನಗೆ ತೋರ್ದ ೪
ಮನವಾಕ್ಕಾಯದಿ ಬಿಡದೆ ಸೇವಿಸುವ
ಜನರ ಸಂಚಿತ ಕುಕರ್ಮಗಳ
ಮನೆಯ ಮುರಿದು ಆಗಾಮಿ ಫಲಂಗಳ
ಅನುಭವಕೀಯದೆ ಪ್ರಾರಬ್ದಾ
ಉಣಿಸಿ ಸುಲಭದಲಿ ತನ್ನ ಮೂರ್ತಿ ಚಿಂ
ತನೆ ಇತ್ತು ಸ್ವರೂಪಸುಖಾ
ಅನುದಿನದಲಿ ವ್ಯಕ್ತಮಾಡಿಸಿ ಕೊ
ಟ್ಟನಿಮಿತ್ತಾಪ್ತನೆನಿಸುತಿಪ್ಪ ೫
ಏಕಮೇವ ರತ್ನಾಕರ ಮಂದಿರ
ಆಕೂತಿಜ ಯಜ್ಞಾಕರನೇ
ಲೊಕವಿಲಕ್ಷಣ ಸೂಕರಾತ್ಮ ಪಿ
ನಾಕಿ ವಿನುತ ಲಕ್ಷ್ಮೀ ಕಾಂತಾ
ಗೋಕುಲ ಮಂದಿರ ಏಕಾಂತಿಗಳ ನಿ
ರಾಕರಿಸಿದೆ ಲೋಕೈಕ ಸುಖ
ಶೋಕ ರಹಿತ ನಿಜಲೋಕವಿತ್ತು ನಿ
ರಾಕುಲ ಸುಖಗಳ ತಾ ಕೊಡುವಾ ೬
ದಿನಪನೊಳಗೆ ವೃಜಿನಿ ವಸು ತಾ ಎಂ
ದೆನಿಸಿ ಜಯಾಪತಿ ಪ್ರದ್ಯುಮ್ನ
ಅನಿರುದ್ಧಾದಿ ಚತುರ್ಮೂತ್ರ್ಯಾತ್ಮಕ
ತನಗೆ ತಾನೆ ಪೂಜಕ ಪೂಜ್ಯ
ಅನುಪಮ ನಾಮದಿ ಕರೆಸುತಲಿಹ ತ
ನ್ನನು ಈ ಪರಿಧೇನಿಸುತಿಪ್ಪ
ಮನುಜರಿಗೊಲಿದು ಜಗನ್ನಾಥವಿಠ್ಠಲ
ಜನನ ಮರಣಗಳ ಪರಿಹರಿಪಾ ೭

೩೫೧
ಆದಿತ್ಯದೇವ ತ್ವತ್ಪಾದಯುಗಳಕಭಿ
ವಾದನವ ಮಾಳ್ಪೆ ಅನುದೀನ | ಅನುದೀನ ಸಜ್ಜನರ
ವ್ಯಾಧಿಯ ಕಳೆದು ಸುಖವೀಯೊ ೧
೩೫೨ಸಂಜ್ಞಾರಮಣ ನಿನಗೆ ವಿಜ್ಞಾಪಿಸುವೆನೊ ಸ
ರ್ವಜ್ಞ ನೀನೆಂದು ಸರ್ವತ್ರ | ಸರ್ವತ್ರ ಎನಗೆ ಬ್ರ
ಹ್ಮಜ್ಞಾನ ಭಕುತಿ ಕರುಣೀಸೊ ೨
೩೫೩ ಸೂರಿಗಮ್ಯನೆ ವಾಕ್ಶರೀರ ಬುದ್ಧಿಜವಾದ
ಪಾರ ದೋಷಗಳನೆಣಿಸಾದೆ | ಎಣಿಸಾದೆ ಭಗವಂತ
ನಾರಾಧನೆಯನಿತ್ತು ಕರುಣೀಸೊ ೩
೩೫೩ ರೋಹಿಣೀರಮಣ ಮದ್ದೇಹಗೇಹಾದಿಗಳ
ಮೋಹ ಪರಿಹರಿಸಿ ಮನದಲ್ಲಿ | ಮನದಲ್ಲಿ ಎನಗೆ ಗರುಡ
ವಾಹನನ ಸ್ಮರಣೆಯನು ಕರುಣೀಸೊ ೪
೩೫೪ಕ್ಷೀರಾಬ್ದಿಜಾತ ಮಾರಾರಿಮಸ್ತಕಸದನ
ವಾರಿಜೋದ್ಭವನ ಆವೇಶ | ಆವೇಶಪಾತ್ರ ಪರಿ
ಹಾರ ಗೈಸೆನ್ನ ಭವತಾಪ ೫
೩೫೫ ದತ್ತದೂರ್ವಾಸನನುಜ ಅತ್ರಿಸಂಭವನೆ ತ್ವ
ದ್ರ‍ಭತ್ಯ ನಾನಯ್ಯ ಎಂದೆಂದು | ಎಂದೆಂದು ಪ್ರಾರ್ಥಿಸುವೆ
ಹೃತ್ತಿಮಿರ ಕಳೆದು ಸಂತೈಸೊ ೬
೩೫೬ ಕೋಲ ಭೂನಂದನ ಪ್ರವಾಳ ಸಮವರ್ಣ ಕರ
ವಾಳ ಸಮಖೇಟ ನಿಶ್ಯಂಕ | ನಿಶ್ಯಂಕನಾಖ್ಯ ಸುರ
ಮೌಳಿ ನೀಯೆನ್ನ ೭
೩೫೭ ಮಂಗಳಾಹ್ವಯನೆ ಸರ್ವೇಂಗಿತಜ್ಞನೆ ಅಂತ
ರಂಗದಲಿ ಹರಿಯ ನೆನೆವಂತೆ | ನೆನೆವಂತೆ ಕರುಣಿಸೊ
ಅಂಗಾರವರ್ಣ ಅನುದಿನ ೮
೩೫೮ ಭೌಮರಾಜನೆ ತ್ವನ್ಮಹಾಮಹಿಮೆ ತುತಿಸಲ್ಕೆ
ಪಾಮರನಿಗಳವೆ ಎಂದೆಂದು | ಎಂದೆಂದು ಸಜ್ಜನರ
ಕಾಮಿತಾರ್ಥವನೆ ಕರುಣೀಸೊ ೯
೩೫೯ ಬುಧನೆ ನೀ ಸುಗುಣವಾರಿಧಿಯೆಂದು ಬಿನ್ನೈಪೆ
ಕ್ಷುಧೆಯ ಸಂಹರಿಸಿ ಸುಜ್ಞಾನ | ಸುಜ್ಞಾನ ಸದ್ಭಕ್ತಿ
ಸುಧೆಯ ಪಾನವನೆ ಕರುಣೀಸೊ ೧೦
೩೬೦ ಚಂದ್ರನಂದನ ಸತತ ವಂದಿಸುವೆ ಮನ್ಮನದ
ಸಂದೇಹ ಬಿಡಿಸಯ್ಯಾ ಮಮದೈವ |
ಮಮದೈವ ಸರ್ವ ಗೋ
ವಿಂದನಹುದೆಂದು ತಿಳಿಸಯ್ಯಾ ೧೧
೩೬೧ ತಾರಾತ್ಮಜನೆ ಮಚ್ಛರೀರದೊಳು ನೆಲೆಗೊಂಡು
ತೋರು ಸಜ್ಜನರ ಸನ್ಮಾರ್ಗ | ಸನ್ಮಾರ್ಗ ತೋರಿ ಉ
ದ್ಧಾರಗೈಸೆನ್ನ ಭವದಿಂದ ೧೨
೩೬೨ ನತಿಸಿ ಬೇಡುವೆ ಬೃಹಸ್ಪತಿ ಗುರುವೆ ಎನ್ನದು
ರ್ಮತಿಯ ಪರಿಹರಿಸಿ ಸುಜ್ಞಾನ ಸುಜ್ಞಾನವಿತ್ತು ಶ್ರೀ
ಪತಿಯ ತೋರೆನ್ನ ಮನದಲ್ಲಿ ೧೩
೩೬೩ ಸುರರಾಜಗುರುವೆ ತ್ವಚ್ಚರಣಾರವಿಂದಗಳಿ
ಗೆರಗಿ ಬಿನ್ನೈಪೆ ಇಳೆಯೊಳು ಇಳೆಯೊಳುಳ್ಳಖಿಳ ಬ್ರಾಹ್ಮ
ಣರ ಸಂತೈಸೋ ದಯದಿಂದ ೧೪
೩೬೪ ತಾರಾರಮಣನೆ ಮದ್ಬಾರ ನಿನ್ನದೊ ಮಹೋ
ದಾರ ನೀನೆಂದು ಬಿನ್ನೈಪೆ | ಬಿನ್ನೈಪೆ ದುರಿತವ ನಿ
ವಾರಿಸಿ ತೋರೊ ತವರೂಪ ೧೫
೩೬೫ ಶಕ್ರಾರಿಗಳ ಗುರುವೆ ಶುಕ್ರಮುನಿರಾಯ ದರ
ಚಕ್ರಾಬ್ಜಪಾಣಿ ಗುಣರೂಪ | ಗುಣರೂಪ ವ್ಯಾಪಾರ
ಪ್ರಕ್ರಿಯವ ತಿಳಿಸೊ ಪ್ರತಿದೀನ ೧೬
೩೬೬ ಕವಿಕುಲೋತ್ತಂಸ ಭಾರ್ಗವ ಬೇಡಿಕೊಂಬೆ ಭಾ
ಗವತ ಭಾರತ ಮೊದಲಾದ | ಮೊದಲಾದ ಶಾಸ್ತ್ರಗಳ
ಶ್ರವಣ ಸುಖವೆನಗೆ ಕರುಣೀಸೊ | ೧೭
೩೬೭ ನಿಗಮಾರ್ಥ ಕೋವಿದನೆ ಭೃಗುಕುಲೋತ್ತಂಸ ಕೈ
ಮುಗಿದು ಬೇಡುವೆನೊ ದೈವಜ್ಞ | ದೈವಜ್ಞ ಹರಿಯ ಓ
ಲಗದಲ್ಲಿ ಬುದ್ಧಿಯಿರಲೆಂದು ೧೮
೩೬೮ ತರಣಿನಂದನ ಶನೈಶ್ಚರ ನಿನ್ನ ದಿವ್ಯ ಪದಾಬ್ಜ
ಕ್ಕೆರಗಿ ಬಿನ್ನೈಪೆ | ಬಿನ್ನೈಪೆ ಬಹುಜನ್ಮಕೃತ ಪಾಪ
ತ್ವರಿತದಿಂದಿಳಿಸಿ ಪೊರೆಯೆಂದು ೧೯
೩೬೯ ಛಾಯಾತನುಜ ಮನೋವಾಕ್ಕಾಯ ಕ್ಲೇಶಗಳಿಂದ
ಆಯಾಸಕೊಡುವ ಸಮಯದಿ |
ಸಮಯದಿ ಶ್ರೀ ಲಕ್ಷ್ಮೀನಾ
ರಾಯಣನ ಸ್ಮರಣೆ ಕರುಣೀಸೊ ೨೦
೩೭೦ ಇದನೆ ಬೇಡುವೆ ಪದೇಪದೆಗೆ ಪುಷ್ಕರನ ಗುರುವೆ
ಹೃದಯವದನದಲಿ ಹರಿಮೂರ್ತಿ |
ಹರಿಮೂರ್ತಿ ಕೀರ್ತನೆಗೆ
ಳೊದಗಲೆನಗೆಂದು ಬಿನ್ನೈಪೆ ೨೧
೩೭೧ಅಹಿಕ ಪಾರತ್ರಿಕದಿ ನರಹರಿಯದಾಸರ ನವ
ಗ್ರಹದೇವತೆಗಳು ದಣಿಸೋರೆ | ದಣಿಸೋರೆ ಇವರನ್ನು
ಅಹಿತರೆಂದೆನುತ ಕೆಡಬೇಡಿ೨೨
೩೭೨ ಜಗನ್ನಾಥವಿಠ್ಠಲನ ಬದಿಗರಿವರಹುದೆಂದು
ಹಗಲಿರುಳು ಬಿಡದೆ ತುತಿಸುವ | ತುತಿಸುವ ಮಹಾತ್ಮರಿಗೆ
ಸುಗತಿಗಳನಿತ್ತು ಸಲಹೋರು ೨೩

ನುಡಿ-೨: ಪೂರ್ಣಕಾಮ
೭೦
ಆನೆಂತು ತುತಿಪೆ ನಿನ್ನಾ ಶ್ರೀ ಗುರು ರನ್ನಾ
ಆನೆಂತು ತುತಿಪೆ ನಿನ್ನಾ ಪ
ಆನೆಂತು ತುತಿಪೆ ಪಂಚಾನನಸುತ ಪವ
ಮಾನ ಹನುಮ ಭೀಮ ಆನಂದತೀರ್ಥನೆ ಅ.ಪ.
ಸನಕನಂದನ ಸನತಕುಮಾರಾದಿ
ಮುನಿಗಳು ಹರಿ ದರುಶನವ ಮಾಡುವೆವೆಂದು
ಘನಹರುಷದಿ ಮೋಕ್ಷವನು ಕುರಿತು ಬಂದೊ
ಡನೆ ಬಾಗಿಲಲಿ ನಿಲ್ಲೆನಲು ಜಯ ವಿಜಯ
ರನ ನೋಡಿ ಎರಡೊಂದು ಜನುಮದಲಿ ಕ್ರೂರ
ದನುಜಕುಲದಲಿ ಜನಿಸಿರೆಂದೆನೆ ಸಿರಿ
ವನಜಾಕ್ಷರಗೋಸ್ಕರಾ ಅವತರಸಿ
ಗುಣಪೂರ್ಣ ಗುರು ಸಮೀರಾ ಸೇವಿಪೆನೆಂದಾ
ಕ್ಷಣದಿ ಜನಿಸಿ ವಾನರಾ ರೂಪಿಲಿ ಭುವ
ವನದೊಳು ಮೆರೆದೆ ಅಸಮಶೂರಾ ಹರಿಹರಾ ೧
ಕೋತಿ ಕಟಕಮಾಡಿ ಜಾತರಹಿತ ಹರಿ
ಗೇ ತಲೆಬಾಗಿ ಸುಪ್ರೀತಿಯಿಂದಲಿ ರವಿ
ಜಾತನ ಸಲಹಿ ಅತೀ ತೀವ್ರದಿಂದಲಿ
ಸೀತೆಯ ಕ್ಷೇಮವ ದೂತ ಪೇಳುವೆನೆಂದು
ವಾತವೇಗದಿ ವನಧಿಯ ತಡಿಲ್ಲದೆ ದಾಟಿ
ಮಾತೆಗುಂಗುರವಿತ್ತ ಶೋಕತರುಗಳ
ಭೀತಿ ಬಡದಲೆ ಕಿತ್ತಿ ರೋಮ ಬಳ
ವ್ರಾತವೆಲ್ಲವ ನುಗ್ಗೊತ್ತೀ ಲಂಕಾಪುರ
ಜಾತವೇದಸಗೆ ಇತ್ತೀ ಹನುಮಶಿರಿ
ನಾಥನಿಗೆರಗಿ ಪಡೆದ ಬಹುಕೀರ್ತಿ ೨
ದುರುಳ ಕಲ್ಯಾದ್ಯರು ಊರ್ವಿಯೊಳ್ಪುಟ್ಟಿ ಸಂ
ಚರಿಸುತ್ತ ಇರಲಾಗಿ ಮರುತದೇವನು ಅವ
ತರಿಸಿ ಅವನಿಯೊಳು ದುರಿಯೋಧನುಣಲಿತ್ತ
ಗರಳವ ಭುಂಜಿಸಿ ಅರಗಿನ ಸದನದಿ
ಪುರೋಚನಾದಿಗಳನ್ನು ಉರುಹಿ ಏಕಚಕ್ರಾ
ಪುರದಲ್ಲಿದ್ದ ಬಕಾಸುರನ ಸದೆದು ಭೂಮಿ
ಸುರವೇಷವನೆ ಧರಿಸೀ ಪಾಂಚಾಲಿ ಸ್ವಯಂ
ವರ ಪತಿಕರಿಸಿ ಮಗಧದೇಶ
ದರಸನ ಸಂಹರಿಸೀ ರಾಜಸೂಯಜ್ಞ
ಹರಿಗೆ ಅರ್ಪಿಸಿದಿ ಮೆರೆಸೀ ೩
ಭಕುತಳಾದ ಇಂದುಮುಖಿ ದ್ರೌಪದಿಗೆ ಸೌಗಂ
ಧಿಕವ ತರುವೆನೆಂದು ವೃಕೋದರ ಪೋಗಲು
ಅಕುಟಿಲ ಹನುಮಂತನನು ಅವಲೋಕಿಸ್ಯಂ
ಜಿಕೆಯಿಂದ ನಿಂದು ಮಾರಕಜನರಿಗೆ ಮೋ
ಹಕವ ತೋರಿಸಿ ಕುಪಥ ಖಳರನೊರಿಸಿ ನೀ
ಸಖಿಗೆ ಪೂವಿತ್ತು ಗುರುಕುಮಾರನಸ್ತ್ರಕ
ಳುಕದೆ ಯುದ್ಧವ ಮಾಡಿದೆ ದುಶ್ಯಾಸನ
ರಕುತ ವೆರಿಸಿ ಕುಡಿದೆ ಉಭಯಗಳ ರ
ಥಿಕರ ಬಲವಕರೆದೆ ಭಯದಲಿ ಉ
ದಕದಲಿರ್ದ ದುರ್ಯೋಧನನೂರು ಕಡಿದೆ ೪
ಭೀಮ ಭಯಂಕರ ಕಾಮಕೋಟಿ ಚಲ್ವ
ಧೀಮಂತಜನ ಮನೋಪ್ರೇಮ ಪಾವನ ಗುಣ
ಸ್ತೋಮ ಸರ್ವಾಧಾರ ಭ್ರಾಮಕಜನ ವನ
ಧೂಮಕೇತುವೆ ಸರ್ವಾಸೀಮ ಸೌಖ್ಯ ಪೂರ್ಣ
ಸೋಮಾರ್ಕ ಸುರಪತಿ ಸಾಮಜ ಹರಿಗುರು
ರೋಮ ಕೋಟೇಶ್ವರ ಶ್ರೀಮಾನ್ಯ ಭಕುತಲ
ಲಾಮ ಭವ್ಯ ಚರಿತಾ ಸೋಮಕುಲ
ಸೋಮ ಸುಖ ಭರಿತಾ ಭಕುತ ಪ್ರೀತಾ
ಹೇಮವರ್ಣ ಕಾಯ ಹಿತದಿಂದ ನಿರುತಾ ೫
ಮಣಿಮಂತನೆಂಬವನಿಯೊಳು ಪುಟ್ಟಿ ವೇ
ನನ ಮತ ಪಿಡಿದು ಜೀವನೆ ಪರಮಾತ್ಮನೆಂ
ದೆನುತ ಸ್ಥಾಪಿಸಿ ಪಣೆಗಣ್ಣೆನ್ವರದಿಂದ
ಅನಿಮಿಷರೆಲ್ಲರು ವನಜಜಗುಸುರಲು
ಮುನಿಗಳು ಸಹ ನಾರಾಯಣನ ಪದಕೆ ದಂಡ
ಪ್ರಣಾಮವ ಮಾಡಿ ಸ್ತೋತ್ರವಿನಯದಿ ಗೈಯೆ
ಅನಿಲನ ಅವಲೋಕಿಸಿ ಪೇಳಲು ಹರಿ
ಮನ ಭಾವವನು ಗ್ರಹಿಸಿ ಮಧ್ಯಗೇಹ
ಮನೆಯೊಳಗವತರಿಸಿ ಮೆರೆದೆ ಗುರು
ಅನುಗಾಲದಲಿ ನಿನ್ನ ಗುಣಗಳಾಶ್ರೈಸೀ ೬
ವಾಸುದೇವನೆಂಬ ಭೂಸುರನಾಮದಿ
ಲೇಸಾಗಿ ಚರಿಸಿ ಸಂತೋಷ ಭರಿತರಾಗಿ ಸಂ
ನ್ಯಾಸಾಚ್ಯುತ ಪ್ರೇಕ್ಷರಾ ಕರಸರಸಿಜ
ದೀ ಸಂತೋಷದಿ ಕೊಂಡು ಆಶÀಂಕರರÀ ಭಾಷ್ಯ
ದೂಷಿಸೆ ಗರುಗಳುಲ್ಲಾಸ ಸನ್ಮುಖದಲಿ ವಿ
ಶೇಷದಿಂದಲಿ ವಿರಚಿಸುವುದೆನಲು ಉ
ಲ್ಲಾಸದಿಂದಲಿ ಕೇಳಿ ಆಕ್ಷಣದಿ ಸಂ
ತೋಷ ಮನದಲಿ ತಾಳಿ ಮೋಹಕವ ಪರಿಹ
ರಿಸಿ ಅರ್ಥವ ಪೇಳೆ ಭೂಸುಜನರ
ಆಶೆ ಪೂರೈಸಿದ ಘನನಿನ್ನ ಲೀಲೆ ೭
ತರಳತನದಲಿ ಬದರಿಗೈದಿ ಪಾರಾ
ಶರ ನಾರಾಯಣನ ಸಂದರುಶನ ಕೊಂಡು ತೀ
ವರದಿಂದ ಹರಿತತ್ವ ನಿರ್ಣಯ ಶಾಸ್ತ್ರವ
ವಿರಚಿಸುವುದಕಿನ್ನು ವರವ ಪಡೆದು ಬಂದು
ಎರಡೇಳು ಆರೊಂದು ದುರುಳ ಭಾಷ್ಯಗಳೆಂಬ
ಗರಳ ತರುಗಳ ಮುರಿದಿಕ್ಕಿ ನೀ ಮೂವ
ತ್ತೆರಡೈದು ಗ್ರಂಥಗಳ ನಿರ್ಮಿಸಿ ವಿಬು
ಧರಿಗೆಲ್ಲ ಪೇಳಿ ವ್ಯಾಳ ಭೂಷಣದೇವ
ಪರನೆಂಬ ಯುಕುತಿಜಾಲ ಹರಿದು ಹರಿ
ಪರ ಶ್ರೀ ಬೊಮ್ಮಾದ್ಯರೆ ಗುರುಗಳೆಂದೆನಲು ೮
ನಮೋ ನಮೋ ಸಮೀರನೆ ನಮೋ ಶ್ರೀ ಮುಖ್ಯಪ್ರಾಣ
ನಮೋ ನಮೋ ದಯಾಸಿಂಧು ನಮೋ ಭಕ್ತಜನ ಬಂಧು
ನಮೋ ನಮೋ ಗುಣಶೀಲ ನಮೋ ಭಾರತಿಲೋಲ
ನಮೋ ನಮೋ ಭವ್ಯಾಂಗ ನಮೋ ಅರಿಗಜಸಿಂಗ
ನಮೋ ನಮೋ ಜಗದ್ವ್ಯಾಪ್ತ ನಮಿತಜನರಾಪ್ತ
ನಮೋ ನಮೋ ಸುಖತೀರ್ಥ ನಮೋ ಮೂರ್ಲೋಕದ ಕರ್ತ
ನಮೋ ಗುರುಕುಲ ತಿಲಕ ಪಾಲಿಸು ಎನ್ನ
ತಮಹರದೂರಶೋಕ ಸಜ್ಜನರಿಗೆ
ಅಮಿತ ಮೋದದಾಯಕ ಶ್ರೀಭೂ ದುರ್ಗಾ
ರಮಣ ಜಗನ್ನಾಥವಿಠಲ ಭಕ್ತಾಧಿಕಾ ೯

ಈ ಕೀರ್ತನೆಯೂ ಭೀಮಸೇನನ
೨೬
ಆವ ಕಾರಣ ಮೊಗವ ತಿರುಗಿಹಿದ್ಯೊ ಪೇಳು
ಭೂವರಹ ಸ್ವಾಮಿ ಪುಷ್ಕರಣಿ ತೀರಗನೆ ಪ
ರಥ ಸಮೂಹಗಳೇರಿ ನೀ ಪ್ರಕಾಶಿಪ ಬಗೆಯೇ
ಸತಿಯ ಲಾವಣ್ಯಾತಿಶಯವ ನೋಡುವ ಬಗೆಯೋ
ಮಿತಿಯಿಲ್ಲದಸುರರ ಉಪೇಕ್ಷೆ ಮಾಡುವ ಬಗೆಯೋ
ಪತಿತ ಪಾವನ ಪೂರ್ಣಕಾಮ ನಿನಗೆ
ನುತಿಸಿ ಬಿನ್ನೈಸುವೆನು ಪೇಳೋ ಗುಣಧಾಮಾ ೧
ಭಜಕರೆನ್ನನು ಬಿಡರೆಂಬ ಮನಸಿನಾ ಬಗೆಯೇ
ಅಜಭವಾದಿಗಳ ಸಂಸ್ತುತಿಗಳಾಲಿಪ ಬಗೆಯೋ
ರಜನೀಚರರ ಸದೆಯ ನಾಟ್ಯವಾಡುವ ಬಗೆಯೇ
ಭುಜಗ ಭೂಷಣ ಪೂಜ್ಯ ಚರಣ
ತ್ರಿಜಗದ್ವಿ ಲಕ್ಷಣ ಸುರೂಪಾ ನಿರ್ಲೇಪ ೨
ಅನುಗರೊಶ ನೀನಾದಡೆಮ್ಮನ ಮರೆವರೆಂದು
ವನತಿಗಾರರಿಯದಂತುಪದೇಶಿಸು ಬಗೆಯೋ
ಘನಲಕ್ಷಣ ಮುಖಾಬ್ಜವನು ಚುಂಬಿಸುವ ಬಗೆಯೋ
ವನಜ ಸಂಭವನ ನಾಸಜನೆ ಜಗ
ಜ್ಜನಕ ಜಗನ್ನಾಥವಿಠ್ಠಲ ಕೃಪಾಸಾಂದ್ರಾ ೩

೧೩೮
ಆವ ಜನುಮದ ಸುಕೃತ ಫಲಿಸಿತೆನಗೆ
ಕೋವಿದಾಗ್ರಣಿ ವ್ಯಾಸತತ್ವಜ್ಞರ ಕಂಡೆ ಪ
ಜೀವ ಸಾಮಾನ್ಯವೆಂದರಿಯದಿಲಿ ಶಾಸ್ತ್ರಗಳ
ನಾವಲೋಕನದಿ ಪೇಳ್ವರು ನಿತ್ಯದಿ
ದೇವಾಂಶರಿವರು ಸಂಶಯವು ಬಡಸಲ್ಲ ಮಾ
ಯಾ ವಲ್ಲಭನು ಇವರ ಹೃದಯದೊಳಗಿರುತಿಪ್ಪ ೧
ಕವಿ ಭರಿಡಿತ ಮಹಾಮುನಿ ವ್ಯಾಸಕೃತ ಸುಭಾ
ಗವತಾದಿ ಗ್ರಂಥ ವ್ಯಾಖ್ಯಾನ ನೋಡಿ
ಭುವನೇಂದ್ರರಾಯರ ಕರುಣದಲಿ ತುರೀಯಾ ಶ್ರ
ಮನವಿತ್ತು ವ್ಯಾಸತತ್ವಜ್ಞ ರಹುದೆಂದು ೨
ಈ ಜಗತ್ರಯ ದೊಳಗೆ ಪೂಜ್ಯ ಪೂಜಕರ ನಿ
ವ್ರ್ಯಾಜದಲಿ ತಳುಪಿದನು ಭಕ್ತಜನಕೆ
ಶ್ರೀ ಜಗನ್ನಾಥ ವಿಠಲನೊಬ್ಬ ಪೂಜ್ಯ ಪಂ
ಕೇಜ ಭವ ಭವರು ಪೂಜಕರೆಂಬುವರ ನೋಡ್ಡೆ ೩

ನುಡಿ-೪: ತತ್ವೇಶರೆಲ್ಲರೂ
೧೫೪
ಆವ ಭಯವಿಲ್ಲವೋ ಆವ ಭಯವಿಲ್ಲ
ಆವ ಭಯವಿಲ್ಲ ಪರಾವರೇಶನ ಸಕಲ ಪ
ಠಾವಿಲಿ ಚಿಂತಿಸುವ ಭಾವಜ್ಞ ಜನರಿಗಿನ್ನು ಅ.ಪ.
ದೇಶಕಾಲೋಚಿತ ಧರ್ಮ ಗಿರ್ಮಗಳು ಸ
ನ್ಯಾಸ ಮೊದಲಾದಾಶ್ರಮೋಚಿತ ಸುಕರ್ಮಗಳು
ಮಾಸೋಪವಾಸ ವ್ರತ ನೇಮ ಗೀಮಗಳು ಸದ್
ವ್ಯಾಸಂಗ ಗೀಸಾಂಗವೊ ಆಸನ ಜಯಗಿಯ
ಪ್ರದೋಷನ ಧ್ಯಾಯಗೀಯ
ಶ್ವಾಸ ಬಂಧನ ಉಪನ್ಯಾಸ ತೀರ್ಥಾಟನೆ ರ
ಮೇಶನ ಗುಣಗಳಟ್ಟಹಾಸದಲಿ ನೆನೆವುತ ನಿ
ರಾಶೆಯಿಂದಿಪ್ಪ ಹರಿದಾಸ ದಾಸರಿಗೆ ೧
ಸ್ನಾನ ಜಪ ದೇವತಾರ್ಚನೆ ವೈಶ್ಯದೇವ ಬಲಿ
ದಾನ ಪಾತ್ರಾಪಾತ್ರ ವಿಧಿ ನಿಷೇಧಗಳು ವಿ
ಜ್ಞಾನ ವಿಹಿತಾಚರಣೆ ಸರ್ವತ್ರ ವಿನಯ
ಸಂಹನನ ವೈರಾಗ್ಯ ಶಕ್ತಿ
ಶ್ರೀನಿವಾಸನ ಪರಮ ವಿಮಲ ಲೋಕೈಕ ಕ
ಲ್ಯಾಣ ಗುಣ ರೂಪ ಕ್ರಿಯೆಗಳನು ಜಡ ಚೇತನದಿ
ಧೇನಿಸುತ ಮನದಿ ಹಿಗ್ಗುತ ತುತಿಸಿ ನಲಿವ ಸುಮ
ಹಾನು ಭಾವರಿಗೆ ಈರೇಳು ಲೋಕದೊಳು ಇನ್ನು೨
ಮಲಿನರಾಗಿಹರು ನೋಳ್ಪರಿಗೆ ಪ್ರತಿ ದಿನದಲ್ಲಿ
ಸುಲಭರಂತಿಹರು ದುರ್ಗಮರಾಗಿ ತೋರುವರು
ಅಳುವರೊಮ್ಮೊಮ್ಮೆ ಪರವಶರಾಗಿ ಮೈ ಮರೆದು
ನಲಿವರೊಮ್ಮೊಮ್ಮೆ ನಗುತಾ
ಜಲಜಾಕ್ಷನಮಲ ಮಂಗಳ ಗುಣವ ಕೇಳಿ ಗಂ
ಟಲ ಶಿರಗಳುಬ್ಬಿ ಚಪ್ಪಳೆಗಳಂ ಬಾರಿಸುತ
ಮುಳುಗಿ ಸುಖ ವನಧಿಯೊಳು ತನು ಪುಳಕೋತ್ಪವದಿ
ಇಳೆಯೊಳಗೆ ಸಂಚರಿಪ ಕಲುಷವರ್ಜಿತಂಗೆ ೩
ನೋಡುವುದೆ ಹರಿಮೂರ್ತಿ ಕೇಳುವುದೆ ಹರಿಕೀರ್ತಿ
ಆಡುವುದೆ ಹರಿವಾರ್ತೆ ಮಾಡುವುದೆ ಹರಿಪೂಜೆ
ನೀಡುವುದೆ ಅವಧಾನ ಬೇಡುವುದೆ ಪುರುಷಾರ್ಥ
ಕೂಡುವುದೆ ಸಾಯುಜ್ಯವು
ದಾಡಿಯಿಂದಲಿ ದನುಜರಳಿದು ಧರಣಿಯನು ತಂದ
ಕ್ರೋಢರೂಪನೆ ಲೋಕಕ್ಕೆಲ್ಲ ಆನಂದ
ನಾಡಾಡ ದೈವದಂತಿವನಲ್ಲವೆಂದು ಕೊಂ
ಡಾಡುತವನಿಯೊಳು ಸಂಚರಿಸುವ ವಿಪಶ್ಚಿತರಿಗೆ ೪
ಕುಟಿಲರಹಿತನು ಧರ್ಮಾರ್ಥ ಮುಕುತಿ ಸಂ
ಘಟಸಲೆಮಗೆಂದು ಸುರನದಿ ಮುಖ್ಯ ತೀರ್ಥ ವೆಂ
ಕಟ ಶೈಲ ಮೊದಲಾದ ಕ್ಷೇತ್ರದಲಿ ಸತ್ಕರ್ಮ
ಹಟದಿಂದ ಮಾಳ್ಪರೆಲ್ಲಾ
ವಟ ಪತ್ರಶಯನನೊಲುಮೆಯನೆ ಬಯಸುವ ಜಾಂಡ
ಕಟಹದ್ಭಹಿವ್ರ್ಯಾಪ್ತನಾದ ಶ್ರೀ ಜಗನ್ನಾಥ
ವಿಠಲನಾವ ದೇಶದಿ ಕಾಲದಲ್ಲಿ ಪಾ
ಸಟೆಯಿಲ್ಲವೆನುತ ಲಾಲಿಸುತಿಪ್ಪರಿಗೆ೫

ಶ್ರೀಕೃಷ್ಣನನ್ನು
೬೨
ಇಂದಿರೆ ಇಂದುವದನೇ ಸರಸಿಜಸದನೇ
ನಿಂದಿತ ಜನಸೂದನೆ ಪ
ವಂದಿಸುವೆನೆ ಅರವಿಂದಗಂಧಿನಿ
ಮಂದಿರದಲಿ ಗೋವಿಂದನ ತೋರಿಸೆ ಅ.ಪ.
ಮೂಲೋಕಮಾತೆ ವಿಖ್ಯಾತೆ ಕೈವಲ್ಯದಾತೆ
ಪಾಲಗಡಲ ಸಂಭೂತೆ ಕಾಲ ದೇಶದಿ ವ್ಯಾಪಿತೆ ಭಜಕರಪ್ರೀತೆ
ಶೀಲೆ ಸಂಪೂರ್ಣ ಗುಣವ್ರಾತೇ
ಫಾಲನಯನ ತ್ರಿದಶಾಲಯ ಪ್ರಮುಖರ
ಪಾಲಿಸುತಿಹೆ ಮಂದಜಾಲಜನಕೆ ರಮೇ
ಶ್ರೀಲತಾಂಗಿ ನಿನ್ನಾಳುಗಳೊಳು ಹರಿ
ಲೀಲೆಯ ಮನದಲಿ ಅಲೋಚನೆ ಕೊಡೆ ೧
ಲೋಕನಾಯಕಿ ಲಕುಮಿ ಶ್ರೀ ಸಾರ್ವ ಭೌಮೆ
ಶೋಕರಹಿತ ಸುನಾಮೆ ನಾಕಜವನಧಿ ಸೋಮೆ ದೇವಲಲಾಮೆ
ಸಾಕಾರವಂತೆ ಗುಣ ಸ್ತೂೀಮೆ
ನೀ ಕರುಣಿಸಿ ಅವಲೋಕಿಸಿ ಎನ್ನಯ
ಕಾಕುಮತಿಯ ಕಳೆದೇಕಾಂತದಿ ನಿತ್ಯ
ಏಕ ಮನದಿ ಹರಿ ಶ್ರೀ ಕರಪದಧ್ಯಾನ
ನೀ ಕರುಣಿಸು ನಿರಾಕರಿಸದಲೆ ೨
ಜಾತರಹಿತ ಜಯವಂತೆ ದೈತ್ಯಕೃತಾಂತೆ
ಸೀತಾಂಶುಕೋಟಿ ಮಿಗೆಕಾಂತೆ
ಪಾತಕದೂರೆ ನಿಜಪಂಥೆ ನಿತ್ಯಾ ನಿಶ್ಚಿಂತೆ
ನೀತದೂರಾದಿ ಮಧ್ಯಾಂತೆ
ಭೂತನಾಥ ಪುರುಹೂತ ಮುಖಾವರ
ವ್ರಾತ ವಿನುತೆ ಅತಿಪ್ರೀತಿಯಿಂದಲಿ ನಮ್ಮ
ವಾತಜನಕ ಜಗನ್ನಾಥ ವಿಠಲನ
ಮಾತು ಮಾತಿಗೆ ನೆನೆವಾತುರ ಮನ ಕೊಡೇ ೩

ಜೀವರಿಗೂ ಪರಮಾತ್ಮನಿಗೂ

ಇದನೆ ಪಾಲಿಸು ಜನ್ಮ ಜನ್ಮಗಳಲಿ ಪ
ಮಧುಸೂದನನೆ ನಿನ್ನ ಸ್ಮರಣೆ ದಾಸರ ಸಂಗ ಅ
ಪುಣ್ಯಪಾಪ ಜಯಾಪಜಯ ಕೀರ್ತಿ ಅಪಕೀರ್ತಿ
ಮನ್ಯುಮೋಹಾಸಕ್ತಿ ಕಾಮಲೋಭಾ
ನಿನ್ನಾಧೀನವು ಎನ್ನದಲ್ಲವೆಂದಿಗು ಪ್ರಕೃತಿ
ಜನ್ಮ ಗುಣಕಾರ್ಯವೆಂಬುವ ಜ್ಞಾನವೇ ಸತತ ೧
ಗುಣಕರ್ಮ ಕಾಲಗಳ ಮನಮಾಡಿ ಜೀವರಿಗೆ
ಉಣಿಸುತಿಹೆ ಸುಖದುಃಖ ಘನ ಮಹಿಮನೆ
ಗುಣಗಳಭಿಮಾನಿ ಶ್ರೀವನಿತಾರಮಣ ಪ್ರಯೋ
ಜನವಿಲ್ಲದಲೆ ಮಾಡಿ ಜನರ ಮೋಹಿಪಿಯೆಂಬೋ ೨
ಈಶ ನೀನಾದ ಕಾರಣದಿಂದ ಸುಖದುಃಖ
ಲೇಶವಿಲ್ಲವು ಸರ್ವಕಾಲಗಳಲಿ
ಕೇಶವ ಜಗನ್ನಾಥ ವಿಠ್ಠಲನೆ ಭಕ್ತರ ಪ್ರ
ಯಾಸವಿಲ್ಲದೆ ಕಾಯ್ವಿಯೆಂಬ ಸ್ಮರಣೆ ನಿರುತ ೩

ಜಗನ್ನಾಥ ದಾಸರು ಅಸಾಮಾನ್ಯ ಭಕ್ತರಾಗಿದ್ದರು

ಇದನೆ ಪಾಲಿಸು ಪಾಲಿಸೆನಗೆ ದೇವಾ ಪ
ವಿದುರ ಸನ್ನುತ ಮಹಿಮ ಪದೋಪದಗೆ ಬಿನ್ನೈಪೆ ಅ
ಶ್ರೀವಿರಿಂಚಾದ್ಯಖಿಳ ಚೇತನಾಚೇತನವು
ಶ್ರೀವರನೆ ನಿನಗಧಿಷ್ಠಾನವೆಂದೂ
ಸ್ಥಾವರಗಳೊಳಗೆ ನೈಜನುಯೆನಿಸಿ ಪರಿಣಾಮ
ನೀವೆ ವೃದ್ಧಿ ಹ್ರಾಸ ಸರ್ವಕಾಲದ ವೆಂಬೋ ೧
ಪ್ರಕೃತಿ ಗುಣಗಳ ಪ್ರವೇಶಿಸಿ ಬಾಧ್ಯ ಬಾಧಕನು
ಅಕೃತಜ್ಞ ನೀನೆನಿಸಿ ಭಕತಾ ಜನರಾ
ಸುಕೃತ ದುಷ್ರ‍ಕತ ಕರ್ಮ ಪರಿಹರಿಸಿ ಪಾಲಿಸುವೆ
ಸಕೃತ ನಿನ್ನನು ಸ್ಮರಿಸಿ ಹಿಗ್ಗುವರ ಸಂಗ ಸುಖ ೨
ಕರ್ತು ಕಾರ್ಯರ್ತು ಪ್ರೇರಕ ಪ್ರೇರ್ಯ ಸುಖ ಸಾಕ್ಷಿ
ಕ್ಷೇತ್ರ ಧನಧಾನ್ಯಹಿಕ ಪಾರತ್ರಿಕಾ
ಮಿತ್ರ ತಮ ಶ್ರೀ ಜನಗನ್ನಾಥ ವಿಠಲನೆ ಸ
ರ್ವತ್ರ ವ್ಯಾಪಕ ಮಮಸ್ವಾಮಿಯೆಂಬೋ ಜ್ಞಾನ೩

ಮನುಷ್ಯ ಭಗವದ್ಭಕ್ತನಾಗಿ

ಇದು ನಿನಗೆ ಧರ್ಮವೇ ಇಂದಿರೇಶ
ಬದಿಗ ನೀನಾಗಿದ್ದು ಭೀತಿ ಪಡಿಸುವುದು ಪ
ನಿನ್ನ ಗುಣಗಳ ತುತಿಸಿ ನಿನ್ನನ್ನೇ ಹಾರೈಸಿ
ನಿನ್ನವರ ಪ್ರೀತಿಯನು ಸಂಪಾದಿಸಿ
ಅನ್ಯರನು ಲೆಕ್ಕಿಸದೆ ಚೆನ್ನಾಗಿ ಬಾಳುವ
ಮಾನ್ನವರನ ಈ ಪರಿಯ ಬನ್ನಬಡಿಸುವುದು ೧
ದುರುಳನಲ್ಲವೊ ನಿನ್ನ ಚರಣ ಸೇವಕರವನೊ
ಪರಿಪಾಲಿಸುವುದು ನಿನ್ನ ಪರಮ ಧರ್ಮ
ಗುರುಗಳಂತರ್ಯಾಮಿ ಕರಮುಗಿದು ಬಿನ್ನೈಪೆ
ಶರಣ ರಕ್ಷಕನೆಂಬೊ ಬಿರಿದು ಸುಳ್ಳಾಗುತಿದೆ ೨
ಶೋಕನಾಶಕ ವಿಗತಶೋಕನೆಂಬೋ ನಾಮ
ನಾ ಕೇಳಿ ಮೊರೆಹೊಕ್ಕೆ ಲೋಕಬಂಧು ನಿ
ರಾಕರಿಸದೆಮ್ಮ ನೀ ಸಾಕಬೇಕನುದಿನವು
ವಾಕು ಮನ್ನಿಪುದು ಲೋಕೈಕ ರಕ್ಷಾಮಣಿಯೆ ೩
ಗುಣವೆ ನಿನಗಿದು ಬರಿದೆ ದಣಿಸುವುದು ಶರಣರನು
ಪ್ರಣತಾರ್ತಿಹರ ವಿಭೀಷಣ ಪಾಲಕ
ಕ್ಷಣಕನಂತಪರಾಧವೆಣಿಸುವರೆ ಕಡೆಯುಂಟೆ
ಮಣಿದು ಬಿನ್ನಹ ಮಾಳ್ಪೆ ದನುಜದಲ್ಲಣನೆ ೪
ನಮೋ ನಮೋ ಬ್ರಹ್ಮಣ್ಯ ದೇವರ ದೇವ
ನಮೋ ನಮೋ ಧನ್ವಂತ್ರಿ ದುರಿತ ಹಂತ್ರೀ
ನಮೋ ನಮೋ ಕಾರುಣ್ಯ ಶೀಲ ಸಜ್ಜನ ಪಾಲಾ
ನಮೋ ನಮೋ ಜಗನ್ನಾಥವಿಠಲ ವಿಖ್ಯಾತ ೫

ವ್ಯಾಸರಾಜರ ಗುರುಗಳಾದ
೧೬೫
ಇನಿತೆಂದು ಶಾಸ್ತ್ರ ಪೇಳುವವು ಪ
ಪುನಹ ಪುನಹ ಭಗವತ್ಪ್ರಾಪ್ತಿ ಬೇಕೆಂಬುವರಿಗೆ ಅ.ಪ.
ಅನುಬಂಧಿಗಳಲಿ ಮಮತೆಯನೆ ಬಿಡು ವಿಷಯ ವಾ
ಸನೆಯನೀಡಾಡು ಸುಜ್ಞಾನ ಭಕ್ತಿಯ ಬೇಡು
ಮನದಲ್ಲಿ ಹರಿಯ ಮೂರ್ತಿಯನೆ ನೆರೆ ನೋಡು ಸುಜ್ಞ
ರನು ಕೊಂಡಾಡು ಅಜ್ಞಾನಿಗಳ ಸಹವಾಸ ಸುಡು
ವನಜನಾಭನ ಪೂಜೆ ಮಾಡು ಪ್ರತಿ
ಕ್ಷಣ ಬಿಡದೆ ಭಗವದ್ಗುಣಗಳ ಕೊಂಡಾಡು ೧
ಪರಮಾಣು ಮೊದಲ್ಗೊಂಡು ವ್ಯಕ್ತ ತತ್ತ್ವದೊಳ
ಹೊರಗೆ ವ್ಯಾಪಕನಾಗಿ ತದ್ರೂಪ ನಾಮದಿಂ
ಕರೆಸುತಲಿ ತದ್ವಿಕಾರಗಳಿಲ್ಲದಲೆ ಸೃಷ್ಟಿ
ಪರಿಪಾಲನೆ ಲಯಗಳನೆ ಮಾಡಿ ಮೋದಿಸುತಾ
ಪರಮಾತ್ಮನೊಬ್ಬನಿಹನೆಂದು ಹರಿಗೆ
ಮರೆಯದಲೆ ಮಹಿಮೆಗಳ ಪೊಗುಳುತಿರು ಮನುಜಾ ೨
ಹರಿಭಕ್ತರಿದ್ದೆಡೆಗೆ ಹರಿದು ಹೋಗಲಿ ಬೇಕು
ತಿರಿಯ ಕ್ಪುಂಡ್ರಗಳ ನಿಂದಿಸಬೇಕು
ಹರಿಯ ನಾಮತ್ರಯಾಂಕಿತರಿಗೆರಗಲು ಬೇಕು
ಗುರು ಹಿರಿಯರ ವಗುಣಗಳೆಣಿಸದಿರ ಬೇಕು ಮ
ತ್ಸರವ ಬಿಡಬೇಕು ಭಕ್ತರಲಿ ಹೀಗೆ
ಒರೆದೊರೆದು ಪೇಳುವರು ಬುಧರು ನಿತ್ಯದಲಿ ೩
ನಿತ್ಯ ನೈಮಿತ್ತಿಕ ಸುಕರ್ಮ ಮಾಡಲು ಬೇಕು
ಕೃತ್ಯವಲ್ಲದೆ ಲೋಕವಾರ್ತೆಗಳ ಬಿಡಬೇಕು
ಚಿತ್ತದಲಿ ಹರಿಪಾದ ಚಿಂತಿಸುತಲಿರಬೇಕು
ವಿತ್ತದೇಹಾಗಾರ ಭಗವಂತನದೆಂದು ದೇ
ಹತ್ಯಾಗ ಪರಿಯಂತ ಮಾಳ್ಪ ಕರ್ಮ
ಸತ್ಯಸಂಕಲ್ಪಕಿವು ಪೂಜೆ ಎನಬೇಕು ೪
ಸೀತೋಷ್ಣ ಸುಖ ದುಃಖ ಮಾನಾಪಮಾನ ಜಯ
ಭೀತಿ ನಿರ್ಭೀತಿ ಅಪಜಯ ಜ್ವರಾಪಸ್ಮಾರ
ಭೂತ ಬಾಲ ಗ್ರಹ ಮೃಗಸರ್ಪ ನೃಪ ಚೋರ
ಯಾತನೆಗೆ ಭಯಪಡದೆ ಸರ್ವತ್ರದಲಿ ಜಗ
ನ್ನಾಥವಿಠ್ಠಲನ ಸ್ಮರಿಸುತಿರು ಮಹಾ
ಪಾತಕವ ಪರಿಹರಿಸಿ ಪೊರೆವ ದಯದಿಂದಾ ೫

ವ್ಯಾಸರಾಜರ ಗುರುಗಳಾದ
೧೬೬
ಇರಬೇಕು ನಿಂದಕರು ಸಜ್ಜನರಿಗೆ ಪ
ದುರಿತ ರಾಶಿಗಳ ಪರಿಹರಿಸಲೋಸುಗ ಅ.ಪ.
ಕಲಿಯುಗದಿ ಕೋವಿದರು ಕಲುಷ ಕರ್ಮವ ಮಾಡೆ
ಕಳೆವರಿನ್ನಾರೆಂದು ಕಮಲಭವನು
ತಿಳಿದು ನಿರ್ಮಿಸಿದವನಿಯೊಳಗೆ ನಿಂದಕರ
ಕಲುಷರನ ಮಾಡಿ ತನ್ನವರ ಸಲಹುವ ೧
ದಿವಿಜರಿಳೆಯೊಳಗೆ ಜನ್ಮಗಳೊಲ್ಲೆವೆಂದಬ್ಜ
ಭವಗೆ ಮೊರೆಯಿಡಲು ವರವಿತ್ತನಂದು
ಭವಕೆ ಕಾರಣ ಕರ್ಮ ಮಾಡಿದರು ಸರಿಯೆತ
ನ್ನವನೆನಿಸದವಗೆ ತಜ್ಜನ್ಯ ಫಲ ಬರಲೆಂದು ೨
ಮಾನವಾಧಮ ಜನರು ನೋಡಿ ಸಹಿಸದಲೆ
ಹೀನ ಮತಿಯಿಂದ ಮಾತುಗಳಾಡಲು
ಭಾನು ಮಂಡಲಕೆ ಮೊಗವೆತ್ತಿ ಉಗುಳಿದರೆ
ನ್ನಾನನವೆ ತೊಯ್ವುದಲ್ಲದರ್ಕಗೇನಪಮಾನ ೩
ಮಲವ ತೊಳೆವಳು ತಾಯಿ ಕೈಗಳಿಂದಲಿ ನಿತ್ಯ
ತೊಳೆವ ನಿಂದಕ ತನ್ನ ನಾಲಗಿಂದ
ಬಲು ಮಿತ್ರನಿವನೆಂದು ಕರೆದು ಮನ್ನಿಸಬೇಕು
ಹಲವು ಮಹ ಪಾಪಗಳ ಕಳೆದು ಪುಣ್ಯವನೀವ ೪
ಅನುಭವಿಪ ದುಷ್ಕರ್ಮಗಳ ಜನ್ಯ ಫಲವು ತ
ನ್ನಣುಗರಿಗೆ ಅಪವಾದ ರೂಪದಿಂದ
ಉಣಿಸಿ ಮುಕ್ತರ ಮಾಡಿ ಸಂತೈಪ ನರಕ ಯಾ
ತನೆಗಳವರಿಗೆ ಇಲ್ಲದುದರಿಂದ ಎಂದೆಂದೂ ೫
ಮನುಜಾಧಮರಿಗೆ ಹರಿದಾಸರಲಿ ದ್ವೇಷ
ವೆನಿಪ ಸಾಧನವೆ ನಿಸ್ಸಂದೇಹವು
ಅನುತಾಪ ಬಿಡದೆ ಹರುಷಿತರಾಗಿ ನಿಷ್ಪ್ರಯೋ
ಜನದಿ ಹರಿಪದಾಬ್ಜ ಭಜಿಪ ಭಜಕರಿಗೆ ೬
ಲೋಕದೊಳು ನಿರ್ಮಿಸಿದನಿರ್ವರನು ಹರಿ ತಾನು
ಭೂ ಕೋವಿದರ ಮಲವು ಪೋಗಲೆಂದು
ಶ್ರೀ ಕರಾರ್ಚಿತ ಜಗನ್ನಾಥವಿಠಲ ಗ್ರಾಮ
ಸೂಕರರು ನಿಂದಕರು ಕರುಣಾಳು ಇಳೆಯೊಳಗೆ ೭

೧೯೨
ಎಂಥಾದೋ ಶ್ರೀ ವೈಕುಂಠವೆಂಥಾದೋ ಪ
ಎಂಥಾದೋ ವೈಕುಂಠಾವರಣ ಅಲ್ಲಿ
ಕಂತುಪಿತನ ದೇಹಕಿರಣ ಅದ
ರಂತರಂಗ ಹೇಮಾಭರಣ ಕಾಂತಿ
ಗಂತು ನಾಚಿದ ರವಿ ಅರುಣ ಅಹಾ
ನಂತ ಕಾಲದಲ್ಲಿ ಸಂತತ ತುತಿಪರ್ಗೆ
ಪ್ರಾಂತಕ್ಕೆ ನಾಲ್ಕು ನಿಶ್ಚಿಂತ ಮುಕ್ತಿಯ ಸ್ಥಾನ ೧
ಪಾಲಸಾಗರ ಮಧ್ಯೆ ಕೂಟ ಒಳ
ಗೇಳು ಸುತ್ತಿಸಾಗರ ದಾಟಿ ತಾಳ
ಮೇಳದವರು ಮೂರುಕೋಟಿ ನಾಮ
ಪೇಳ್ವ ಗಾಯಕರ ಗಲಾಟೆ ಆಹ
ಶೀಲ ಮುನಿಗಳು ದೇವ ಗಂಧರ್ವರು
ಜೀವನ್ಮುಕ್ತರುಗಳು ಸೇರಿಪ್ಪ ಹರಿಪುರ೨
ಹೇಮ ಪ್ರಾಕಾರದ ಪುರವು ಅಲ್ಲಿ
ಆ ಮಹ ಬೀದಿ ಶೃಂಗಾರವು ನೋಡೆ
ಕಾಮಧೇನು ಕಲ್ಪತರುವು ಬಲು
ರಮಣೀಯವಾದ ಇರವು ಆಹಾ
ಶ್ರೀ ಮೂರುತಿಯೊಂದು ವೇದಾಂತಶ್ರುತಿ ಸಾರೆ
ಆ ಮಹಮುಕ್ತರು ಸೇರಿಹ ಮಂದಿರ ೩
ಸುತ್ತಲು ಸನಕಾದಿ ಮುನಿಯ ದಿವ್ಯ
ನರ್ತನ ಗಾಯನ ಧ್ವನಿಯು ಪುಷ್ಟ
ವೃಷ್ಟಿ ಚಂಪಕ ಜಾಜಿ ಹನಿಯು ಅಲ್ಲಿ
ಅಷ್ಟಮ ಸ್ತ್ರೀಯರ ಮನೆಯು ಆಹಾ
ನಿತ್ಯಾವಿಯೋಗಿನಿ ಒತ್ತುತ್ತ ಪಾದ ಸಂ
ಪತ್ತಿಗೀ ಶಯನ ಸರ್ವೋತ್ತಮನ ಗೃಹ ೪
ಥಳಥಳಿಸುವ ದಿವ್ಯದ್ವಾರ ಅಲ್ಲಿ
ಹೊಳೆವಂಥ ರಂಗಮಂದಿರ ಮುತ್ತಿ
ನೆಳೆಗಳ ಗೊಂಚಲ ಭಾರ ಹೇಮ
ತುಳಸಿ ಸರದ ಶೃಂಗಾರ ಆಹಾ
ಹೊಳೆವ ಮಾಣಿಕದ ಮಂಟಪ ಮಧ್ಯದೊಳ್ಮೆರವ
ಚೆಲುವ ಜಗನ್ನಾಥ ವಿಠಲನ ನಿಜಸ್ಥಾನ ೫

ಈ ಎರಡು ಕೀರ್ತನೆಗಳು
೫೫
ಎಂದು ಕಾಂಬೆನು ಪಾಂಡುರಂಗ ಮೂರುತಿಯಾ
ಇಂದು ಭಾಗನಿವಾಸ ನರನ ಸಾರಥಿಯ ಪ
ಅರುಣಾಬ್ಜೋಪಮ ಚಾರು ಚರಣಾಂಗುಲಿ ನಖರ
ತರುಣೀಂದುಚ್ಛವಿ ತಿರಸ್ಕರಿಸುವ ಪ್ರಖರ
ಕಿರುಗೆಜ್ಜೆ ಕಡಗ ನೂಪುರ ಪೆಂಡೆ ಶಫರ
ತೆರಜಾನು ಜಂಘೆ ಭಾಸ್ಕರ ರತ್ನ ಮುಕುರ೧
ರಂಭಾ ಪೋಲುವ ಊರು ಪೊಂಬಣ್ಣಾಂಬರವ
ಕುಂಭೀ ಮಸ್ತಕದೊಲ್ ನಿತಂಬದಿ ಪೊಳೆವ
ಕಂಬು ಮೇಖಳಕಂಜ ಗಂಭೀರ ನಾಭೀ
ಅಂಬುಧಿಶಾಯಿ ವಿಧಿ ಶಂಭು ಪೂಜಿತನ ೨
ಲವಕುಕ್ಷಿತ್ರವಳಿ ಬಾರ್ಗವಿ ವಕ್ಷ ಉರವು
ದ್ರವಿಪೋಲುವ ಕೌಸ್ತುಭ ವೈಜಯಂತಿಯ
ಸುವಿಶಾಲ ವಕ್ಷದೊಳ್ ವಿವಿಧ ಹಾರಗಳು
ನವನೀತ ಚೋರ ಶ್ರೀ ಪವಮಾನಾರ್ಚಿತನ ೩
ಪದಕ ಸರಿಗೆಯ ಜಾಂಬೂನದ ಕಂಬುಕಂಠ
ರದನೀಕರ ಬಾಹು ಚದುರ ಭುಜಕೀರ್ತಿ
ಬದರ ಸಂಕಾಶಾ ಅಂಗದ ರತ್ನ ಕಟಕಾ
ಪದಮಾರುಣ ಕರಯುಗ್ಮ ಕಟಿಯಲ್ಲಿಟ್ಟವನಾ೪
ವಿಧುಬಿಂಬೋಪಮ ಚಲ್ವವದನ ಕೆಂದುಟಿಯಾ
ಬಿದುರಾಭಾದಶನಾಲಿಂಗದನೊಳ್ ಕಿರುನಗೆಯಾ
ಕದಪು ಕನ್ನಡಿ ನಾಸಾ ತುದಿ ಚಂಪಕ ತೆನೆಯಾ
ಉದಕೇಜಾಯತ ನೇತ್ರಯದುವಂಶೋದ್ಭವನಾ ೫
ಜ್ವಲಿತ ಕುಂಡಲ ಕರ್ಣ ಸುಲಲಿತ ಭ್ರೂಯುಗಳ
ಪೊಳೆವ ಬಾಲ ಶಶಾಂಕ ತಿಲಕಾಂಕಿತ ಫಾಲ
ಅಳಿಬಾಲವೆನಿಪ ಕುಂತಳ ರತ್ನ ಚಕಿತ
ಕಲಧೌತ ಮಕುಟ ದಿಗ್ವಲಯ ಬೆಳಗುವನ ೬
ಶಠಕೂರ್ಮರೂಪಿಯ ಕಿಟ ಮಾನವ ಹರಿಯಾ
ವಟುಭಾರ್ಗವ ಕಾಕುಸ್ಥ ಶಠ ಕಂಸದ್ವಿಷನ
ನಿಟೆಲಾಂಬಕ ಸಹಾಯ ಖಳಕಟಕಾರಿ ಭೀಮಾ
ತಟವಾಸ ಜಗನ್ನಾಥವಿಠಲ ಮೂರುತಿಯ ೭

ಹಂಪೆಯಲ್ಲಿರುವ ವಿರೂಪಾಕ್ಷ
೩೮
ಕಂಡೆ ಕಂಡೆ ಕೃಷ್ಣನ ಕಂಡೆ ಕಂಡೆ ಪ
ಕಂಡೆ ಕಮಲ ಕಳಾಯತಾಕ್ಷನ ಪುಂಡರೀಕ ಭವಾದಿ ಪೂಜ್ಯನ
ದಂಡ ಪಾಶಾನ್ವಿತನ ಕೋಟಿ
ಮಾರ್ತಾಂಡಸಮ ಸಂಕಾಶದೇವನ ಅ
ಅರುಣ ಪಂಕಜದಿರವ ಸೋಲಿಪ
ಚರಣತಳಿನಖ ಬೆರಳ ಪಂಕ್ತಿಯು
ಪರಡು ಬಣ್ಣದ ಪಿರಡಿಜಂಘೆಯು
ಉರದಿ ಜಾನುಗಳೆರಡು ದರ್ಪಣ
ತೆರದಿ ಶೋಭಿಸೆ ಕರಿಕರೋರುಗಳು
ತರು ನಿತಂಬದಿ ಮೆರೆವ ಪೀತಾಂ
ಬರದ ನಿರಿ ಸಡಗರದಿ ದೈತ್ಯರ
ಮರುಳುಗೊಳಿಸಿದ ಪರಮ ಪುರುಷನ ೧
ನಳಿನನಿಭ ಪೊಕ್ಕಳು ತನೂದರ
ವಳಿಗಳತ್ರಯ ಚೆಲುವ ವಕ್ಷ
ಸ್ಥ್ಥಳದಿ ಪದ್ಮಾಲಲನ ಕಾಂಚನ
ಗಳದ ರೋಮದ ಕಲಿತ ಭುಜಯುಗ
ಕುಲಿಶ ಪಲ್ದುಟಿಗಳು ಪ್ರವಾಳ ವರ್ತುಳ ಕ
ಪೋಲ ಪರಿಮಳ ಚಂಪಕದಳದ ನಾಸಿಕ
ಜಲಜಲೋಚನ ವಿಲಸಿತ ಭ್ರೂ
ತಿಲಕ ಫಣಿಯನು ೨
ಪೊಳೆವ ಮಕುಟರಳಲೆಯ ಮಕರ ಕುಂ
ಡಲವು ಮೂಗುತಿ ಎಳೆನಗೆಯ ಮೊಗ
ಹುಲಿಯುಗುರು ಥಳಥಳಿಪ ಕೌಸ್ತುಭ
ಬಲವು ಪದಕಾವಳಿ ಸರಿಗೆ ಶ್ರೀ
ತುಲಸಿ ವನಮಾಲ ಸಗ್ವಲಯ ರುಳಿ ಬಿಂ
ದಲಿ ರಸಾದ್ಯೆಳದಳ ಯುಗಳ ಕರ
ತಳನಾಗೋ ಮಕ್ಕಳೊಡನೆ ಗೋ
ಕುಲದಿ ಚರಿಸಿದೆ ಲಲಿತಾಂಗನೆ ೩
ನೇಣು ಕಡಗೋಲು ಪಾಣಿಪೃಥಗಳ
ಶ್ರೇಣಿಯಲಿ ಒಡ್ಯಾಣ ನೂಪುರ
ಪ್ರಾಣಮುಖ್ಯರು ಕಾಣದತಿ ಕ
ಲ್ಯಾಣಗುಣಗಣ ಶ್ರೇಣಿವಂತನ
ಮಾಣದನುದಿನ ಸಾನುರಾಗದಿ
ಧೇನಿಸುವರ ಮನೋನುಕೂಲನ
ಬಾಣಗುರುವಿನ ಕಾಣೆನೆನಿಸಿದ
ಜಾಣ ಪರಮ ಪುರಾಣ ಪುರುಷನ ೪
ಭೂತಕೃತ್ಯದ್ಭೂತಿದಾಯಕ
ವೀತ ಶೋಕ ವಿಧಾತಮರ ಪುರು
ಹೂತ ಮುಖವಧ್ಯಾತ ಖರಮುರ
ಮಾತುಳಾಂತಕ ಶ್ವೇತವಾಹನ
ಸೂತಗತಸಂಕೇತ ತ್ರಿಗುಣಾ
ತೀತ ನಂದನೀಕೇತನದಿ ನವ
ನೀತ ಸವಿದ ಪುರಾತನ ಜಗ
ನ್ನಾಥ ವಿಠಲನ ೫

ಇದು ವ್ಯಾಸತತ್ವಜ್ಞರ ಸ್ತೋತ್ರವಾಗಿದೆ
೫೬
ಕಂಡೆ ಫಂಡರಿರಾಯನ ತನ್ನನು
ಕೊಂಡಾಡುವರ ಪ್ರಿಯನ ವಿಠ್ಠಲನ ಪ
ಸಮಚರಣ ಭುಜನ ನಿಗಮಾ
ಗಮತತಿಗೋಚರನಾ
ಅಮಿತ ಪರಾಕ್ರಮನ ರುಕ್ಮಿಣಿ
ರಮಣ ರವಿಕ್ಷಣನಾ ವಿಠ್ಠಲನ ೧
ಕಾಮಿತಾರ್ಥ ಪ್ರದನ ಶ್ರೀ ತುಲಸೀ
ಧಾಮ ವಿಭೂಷಿತನ
ಸಾಮಜ ಪತಿ ಪಾಲನ ತ್ರಿಭುವನ
ಸ್ವಾಮಿ ಚಿತ್ಸುಖಮಯನ ವಿಠ್ಠಲನ ೨
ಗೋಕುಲ ಪೋಷಕನ ಮುನಿ ಪುಂಡ
ರೀಕಗೋಲಿದು ಬಂದನ
ಲೋಕವಿಲಕ್ಷಣನ ಪ್ರಣತರ
ಶೋಕವಿನಾಶಕನ ವಿಠ್ಠಲನ ೩
ಚಂದ್ರಭಾಗವಾಸನಾ ವಿಧಿ ವಿಹ
ಗೇಂದ್ರ ಮುಖಾರ್ಚಿತನ
ಇಂದ್ರೋತ್ಪಲನಿಭನ ಗುಣಗಣ
ಸಾಂದ್ರ್ರ ಸರ್ವೋತ್ತಮನ ವಿಠ್ಠಲನ ೪
ಶ್ವೇತವಾಹನ ಸಖನ ಸತಿಗೆ ಪಾರಿ
ಜಾತನ ತಂದವನಾ
ವೀತ ಶೋಕ ಭಯನಾ ಶ್ರೀ ಜಗ
ನ್ನಾಥ ವಿಠಲರೇಯನಾ ೫

ಕ್ರಿ.ಶ. ಹದಿನಾರನೆಯ ಶವ್ಮಾನದಲ್ಲಿ
೫೭
ಕಂಡೆ ಫಂಡರಿರಾಯನ ಸಿರಿಮನ ಪ್ರಿಯನಾ ಪ
ಚಂಡವಿಕ್ರಮ ಕರದಂಡ ಮುನಿಪನೊಲಿ
ದಂಡಜಾಧಿಪ ಪ್ರಕಾಂಡ ಸುಪೀಠನ ಅ.ಪ.
ಮಣಿಮಯ ಮಕುಟ ಮಧುಪನವಿರಪ್ಯರೇ
ಪಣೆಯೊಳಿಟ್ಟ ಕಸ್ತೂರಿ ತಿ¯ಕಾ
ವನರುಹ ಉಪಮ ಲೋಚನಯುಗ ಚಂಪಕ
ಸುನಾಸ ವಕುಂಡಲವ ವಿಕಾಸವ ಕದಪಿನ ವಿಲಾಸವ
ಮೊಗದ ಮಂದಹಾಸವ ೧
ಕುಂದ ಕೋರಕ ದಶನಾವಳಿಯ ಬಿಂಬಾ
ದಂದದಿ ಪೊಳೆವ ಅಧರ ಕಳೆಯ
ಕಂಧರ ತ್ರಿವಳಿ ಪುರಂದರ
ಇಭಕರ ಪೋಲುವ ಭುಜಯುಗ ವಿಶಾಲವಾ
ಕರತಳರಸಾಲವ ನಖರ ಮಲ್ಲಿಕಾಸವ ೨
ಅತಿವಿಸ್ರ‍ತತ ವಕ್ಷಸ್ಥಳವಾ ಸಿರಿ
ಸತಿ ಸದನಾರ್ಕನಂದದಿ ಪೊಳೆವಾ
ರತುನ ಕೌಸ್ತುಭ ದೀಧಿತಿ ವಿಲಸಿತ
ವೈಜಯಂತಿಯ ಉದರ ರೋಮ ಪಂಕ್ತಿಯಾ
ಕುಕ್ಷಿತ್ರಿವಳಿ ಕಾಂತಿಯಾ ನಾಭಿವಲ್ಮೀಕ ದಂತಿಹ ೩
ಮುಂಬಿಸಿಲಿನಂತೆ ಕನಕ ಚೈಲಾ ಸುನಿ
ತಂಬದಿ ಪೊಳೆವ ಗೋಲಿಯ ಚೀಲಾ
ಕುಂಬು ಕೋಕನದ ವಿಡಂಬ ಮೇಖಲ ಕದಂಬವ
ಊರು ಕದಳೀ ಜಾನುಗಳಿಂದು ಬಿಂಬನಾ
ಆಚರಿಪ ವಿಡಂಬನಾ ೪
ಮಾತಂಗಕರವ ಜಂಘೆಗಳ ಗುಲ್ಫ
ಜಾತಿಮಣಿಕಾಂಗುಲಿ ಸಂಘಗಳ
ಜ್ಯೋತಿ ಬೆಳಗೆ ಜಗನ್ನಾಥ ವಿಠಲ
ನಂಘ್ರಿ ಪುಷ್ಕರಾ ಉದಿತ ಶತ ಭಾಸ್ಕರಾ
ಗಭಸ್ತಿ ತಿರಸ್ಕರ ಸುಜನರಿಗೆ ಶ್ರೇಯಸ್ಕರ ೫

೩೪೪
ಕಡಲ ಒಡಲೊಳಗಿದ್ದು ಬಡಬಾಗ್ನಿ ಎನಿಸುವೆ
ಅಡವಿಯೊಳಗಿದ್ದು ದಾವಾಗ್ನಿ | ದಾವಾಗ್ನಿ ಎನಿಸುವಿ
ಪೊಡವಿಯೊಳು ಭೌಮ ಎನಿಸುವಿ ೧
೩೪೫ ಕೃಷ್ಣ ವತ್ರ್ಮನೆ ಎನ್ನ ದುಷ್ಟ ಕರ್ಮವ ನೋಡಿ
ಭ್ರಷ್ಟನೆನ್ನದಲೆ ಸಂತೈಸೊ | ಸಂತೈಸಿ ಭಾರ್ಗವಗ
ಧಿಷ್ಠಾನನೆಂದು ಮೊರೆಹೊಕ್ಕೆ ೨
೩೪೬ ದೇವಮುಖ ಎನ್ನಯ ಕರಾವಲಂಬನವಿತ್ತು
ಪಾಮರಗೊಲಿದು ಭವತಾಪ | ಭವತಾಪ ಪರಿಹರಿಸು
ಪಾವಕನ ಜನಕ ಪ್ರತಿದಿನ ೩
೩೪೭ ರುದ್ರಾಕ್ಷಗನೆ ಮಹೋಪದ್ರಗಳ ಪರಿಹರಿಸು
ಭದ್ರಪ್ರಕಾಶ ಮಹ ಭದ್ರ | ಮಹಭದ್ರ ವಿಖ್ಯಾತ ಕರುಣಾಸ
ಮುದ್ರ ನೀನೆಂದು ಶರಣೆಂಬೆ ೪
೩೪೮ವೀತಿಹೋತ್ರನೆ ಜಗನ್ನಾಥ ವಿಠ್ಠಲನ ಸಂ
ಪ್ರೀತಿ ಪೂರ್ವಕದಿ ಸುತಿಸುವ | ತುತಿಸಿ ಹಿಗ್ಗುವ ಭಾಗ್ಯ
ಜಿತವಾಗಿ ಇರಲಿ ಎಂದೆಂದು ೫
೩೪೯ ಶುಚಿನಾಮಕನೆ ಮನೋವಚನಾದಿಗಳ ದೋಷ
ನಿಭಯಗಳನೆಣಿಸಿ ದಣಿಸದೆ | ದಣಿಸದೆ ಮಚ್ಚಿತ್ತ
ಖಚಿತವನು ಮಾಡೊ ಹರಿಯಲ್ಲಿ ೬
೩೫೦ ಹುತವಹನೆ ಎನ್ನ ದುರ್ಮತಿಯ ಪರಿಹರಿಸಿ ಸ
ದ್ಗತಿಯ ಪಥ ತೋರೊ ದಯದಿಂದ |
ದಯದಿಂದ ನಿತ್ಯ ನಾ
ನುತಿಸುವೆ ನಿನ್ನಾ ಕರುಣಾಳು ೭

ಭಾರತೀರಮಣರೆನಿಸಿದ
೨೭
ಕನಕಮುನಿ ಕರಕಮಲ ಪೂಜಿತಾಂಘ್ರಿ
ಮನುಜಮೃಗವೇಷ ಮಾರಮಣ ನಿನಗಾನಮಿಪೆ ಪ
ನಿರ್ದುಷ್ಟ ನಿರವದ್ಯ ನಿರವಧಿಕ ಮಹಮಹಿಮ
ಸ್ವರ್ದುನಿ ಪಿತನೆ ಸಮಭ್ಯಧಿಕ ಶೂನ್ಯ
ವರ್ಧಿಸಲಿ ನಿನ್ನಲ್ಲಿ ಸದ್ಭಕ್ತಿ ಖಳಸಂಪ್ರ
ಮರ್ದನ ಮಮಸ್ವಾಮಿ ಸರ್ವರಂತರ್ಯಾಮಿ ೧
ತೀರ್ಥಪದ ನಿನ್ನ ಸತ್ಕೀರ್ತಿ ಸರ್ವತ್ರ
ಕೀರ್ತಿಸುವ ಭಕ್ತರ ಭವಾಬ್ಧಿಹರನೆ
ಪಾರ್ಥಸಖ ಸರ್ವದಾ ಪ್ರಾರ್ಥಿಸುವೆ ನಿನ್ನ ಚಿ
ನ್ಮೂರ್ತಿ ಮನದಲ್ಲಿ ಸ್ಪೂರ್ತಿಸಲಿ ಸರ್ವದಾ ೨
ಸೂತ್ರನಾಮಕ ಪ್ರಾಣಮಿತ್ರ ಭಾರತ ಪಂಚ
ರಾತ್ರಾದಿ ಆಗಮಸೂತ್ರಪ್ರಿಯ
ಕ್ಷೇತ್ರಜ್ಞ ಶ್ರೀ ಜಗನ್ನಾಥವಿಠ್ಠಲ ಅಹೋ
ರಾತ್ರಿಯಲಿ ನಿನ್ನವರ ಸಹವಾಸ ಕೊಡು ಎನಗೆ೩

ನುಡಿ-೩: ಶರಭಂಗಮುನಿಗೆ
ರಾಘವೇಂದ್ರ ತೀರ್ಥರು
೧೧೨
ಕರುಣಿಗಳೊಳಗೆಣೆಗಾಣಿ ನಾ ನಿನಗೆ ಸ
ದ್ಗುರುವರ ರಾಘವೇಂದ್ರ
ಚರಣ ಕಮಲಯುಗ ಮೊರೆಹೊಕ್ಕವರ ಮನದ
ಹರಕೆಯ ನಿರುತ ಈವೆ ನೀ ಕಾವೆ ಪ
ರಾಘವೇಂದ್ರ ಗುರುವೆ ನೀ ಗತಿ ಎಂದನು
ರಾಗದಿಂದಲಿ ಭಜಿಪ
ಭಾಗವತರ ದುರಿತೌಘಗಳಳಿದು ಚ
ನ್ನಾಗಿ ಸಂತೈಸುವೆ ನೀ ಸನ್ಮೌನಿ ೧
ಸುಧೀಂದ್ರ ಯತಿಕರ ಪದುಮ ಸಂಭವ ಮಧು
ವದ ಪಾದಾಂಬುಜ ಮಧುಪಾ
ತ್ರಿದಶ ಭೂರುಹದಂತೆ ಬುಧ ಜನರೀಪ್ಸಿತ
ಒದಗಿ ಪಾಲಿಸಿ ಪೊರೆವೆ ಮದ್ಗುರುವೆ ೨
ಕುಧರದೇವನ ದಿವ್ಯರದನದಿ ಜನಿಸಿದ
ನದಿಯ ತೀರದಿ ಶೋಭಿಪ
ಸದಮಲ ಘನಮಂತ್ರ ಸದನನಿಲಯ ಜಿತ
ಮದನ ಶ್ರೀ ಜಗನ್ನಾಥ ವಿಠಲದೂತ ೩

ಅನುಸಂಧಾನಪೂರ್ವಕವಾದ

ಕರುಣಿಸೆನಗಿನಿತು ಕರುಣಾರ್ಣವನೆ ನಿನ್ನ
ಚರಣಾಬ್ಜದಲಿ ಭಕುತಿ ವಿಷಯದಿ ವಿರಕುತಿ ಪ
ಬಿಂಬನೇ ಸರ್ವ ಪ್ರಯೋಜನವ ಮಾಡಿ ಪ್ರತಿ
ಬಿಂಬರಿಗೆ ತತ್ಫಲಗಳೀವ ಕಾವ
ಬಿಂಬನೆ ಸ್ವತಂತ್ರ ಪ್ರತಿಬಿಂಬಾ ಸ್ವತಂತ್ರತಮ
ನೆಂಬ ಸುಜ್ಞಾನ ಪೂರ್ವಕ ನಿನ್ನ ಭಜಿಪ ಸುಖ ೧
ಕಾರ್ಯ ಕಾರಣ ಅಂಶಿ ಅಂಶಾವತಾರ ಅಂ
ತರ್ಯಾಮಿ ವ್ಯಾಪ್ಯ ವ್ಯಾಪಕ ಪ್ರೇರಕ
ಪ್ರೇರ್ಯ ಬಾಧಕ ಬಾಧ್ಯ ಪೋಷ್ಯ ಪೋಷಕ ರೂಪ
ಆರ್ಯರಿಂದರಿತು ಅನುದಿನದಿ ಸುಖಿಸುವ ಭಾಗ್ಯ ೨
ತಾರತಮ್ಯದ ಜ್ಞಾನ ದುರ್ವಿಷಯಗಳಲಿ ಸ
ದ್ವೈರಾಗ್ಯ ಹರಿದ್ವೇಷಿಗಳಲಿ ದ್ವೇಷಾ
ಸೂರಿಗಳ ಸಂಗ ಗುಣರೂಪಕ್ರಿಯೆಗಳನು ಸುವಿ
ಚಾರಗೈಯುತ ನಿತ್ಯ ಅನುಮೋದ ಬಡುವಂತೆ ೩
ಮಿಂದೋದಕಗಳೆಲ್ಲ ಮಜ್ಜನವು ದೇಹಾನು
ಬಂಧಿ ಜನರೆಲ್ಲ ನಿನ್ನ ಪರಿವಾರವು
ನಿಂದ್ಯ ಕರ್ಮಗಳೆಲ್ಲ ಪಾದುಕಗಳೆಂಬ ಅನು
ಸಂಧಾನ ಮನಕೆ ನಿತ್ಯದಲಿ ಬರುವಂತೆ೪
ಚೇತನಾಚೇತನಗಳೆರಡು ಪ್ರತಿಮೆಗಳು ಸಂ
ಪ್ರೀತಿಯಲಿ ಸುರಕ್ಷಿಸುವುದು ಪೂಜೆ
ಈ ತನುವೆ ಸದನವೆಂದರಿತು ನಿತ್ಯದಿ ಜಗ
ನ್ನಾಥ ವಿಠ್ಠಲನೆಂಬ ವಿಷಯವೇ ಮುಖವೆಂದು ೫

ಜಗದುದರದೇವ
೧೬೭
ಕಲಿಮುಖ್ಯ ದೈತ್ಯರನು ಸ್ಮರಿಸಿ ಬಿಡದೆ
ಕಲುಷವರ್ಜಿತ ಭಾಗವತರು ಮರೆಯದಲೆ ಪ
ಮಲಮೂತ್ರಗಳ ವಿಸರ್ಜನೆ ಗೈವಾಗ ಎಂ
ಜಲ ಕೈ ಬಾಯ್ದೊಳೆದು ಉಗುಳುವಾಗ
ಹುಳಿ ಬೀಜ ಕವಡೆ ಪಗಡೆಗಳಾಡುವಾಗ ಮ
ಕ್ಕಳನಾಡಿಸುತಲಿ ವಿಸ್ಮರಣೆಯಿಂದಿರುವಾಗ ೧
ಸಂಧಿಕಾಲದಲಿ ಸತಿಯೊಡನೆ ಪವಡಿಸಿದಾಗ
ನಿಂದ್ಯ ಕರ್ಮಗಳನಾಚರಿಸುವಾಗ
ತಂದೆ ತಾಯಿಗಳ ದಿನ ಮರೆತು ಒಟ್ಟಾಗ ಕ
ರ್ಮೇಧಿ ಭಿಕ್ಷಕೆ ಬರಲು ಇಲ್ಲೆಂಬುವಾಗ ೨
ಮಾಸೋಕ್ತ ಧರ್ಮವನು ತೊರೆದಾಗ ವಿಪ್ರಗೋ
ಗ್ರಾಸಗಳ ಕೊಡದೆ ಭುಂಜಿಸುವಗಲೇ
ಮೀಸಲು ಮಡಿ ಮೈಲಿಗೆಗಳ ನೋಡದಲೆ ದು
ಷ್ಯಾಸೆಯಲಿ ನೀಚರಾಲಯದಲುಂಬಾಗ ೩
ಪ್ರಾಯ ಧನ ಮದದಿಂದ ಹೇಯ ವಿಷಯಗಳು ಪಾ
ದೇಯವೆಂದರಿದು ಭುಂಜಿಸುವಾಗಲು
ಜಾಯಾತ್ಮ ದೇಹಾದಿಗಳು ತನ್ನದೆಂಬಾಗ
ಮಾಯವಾದಿಯ ಉಕುತಿ ಮನಕೆ ತಂದಾಗ ೪
ಮತಿವಮತರೊಡನೆ ಮತ್ಸರ ಪುಟ್ಟಿದಾಗವ
ರ್ಪಿತ ಪದಾರ್ಥಗಳ ಭುಂಜಿಸುವಾಗಲು
ಮೃತ ವತ್ಸ ಗೋವಿನ ಚಲಮಂಬಾಗ ಶ್ರೀ
ಪತಿ ಜಗನ್ನಾಥವಿಠಲನ ಸ್ರ‍ಮತಿ ಬಿಟ್ಟಾಗ ೫

ಶ್ರೀ ಹರಿಯನ್ನು ಕುರಿತ

ಕಾಯೋ ಕಾಯೋ ಪ
ಕಾಯೋ ಕಾಯೋ ಕಮಲಯತಾಕ್ಷ ಭವ
ತೋಯಧಿಯೊಳು ಬಿದ್ದು ಬಾಯ ಬಿಡುವನ ಅ
ಅದ್ವೈತ ತ್ರಯದಧ್ವ ಪ್ರವರ್ತಕ
ಸದ್ವೈಷ್ಣವರ ಪದದ್ವಯತೋರಿ ೧
ಸಂಜೆಯ ತೋರಿ ಧನಂಜಯನುಳುಹಿದ
ಕುಂಜರವರದ ನಿರಂಜನ ಮೂರ್ತೆ ೨
ಸತ್ಯಕಾಮ ತವ ಭೃತ್ಯೆಗೆ ಬಂದಪ
ಮೃತ್ಯು ಕಳೆದು ಸಂಪತ್ತು ಪಾಲಿಸಿದೆ ೩
ಕುಕ್ಷಿಯೊಳಂದು ಪರೀಕ್ಷಿದ್ರಾಜನ
ರಕ್ಷಿಸಿದಂತೆ ಪ್ರತಿಕ್ಷಣದಲಿ ೪
ಎಲ್ಲರೊಳಿಹ ಕೈವಲ್ಯದರಸು ನೀ
ಬಲ್ಲಿದನೆಂಬುದ ಬಲ್ಲೆ ಬಹು ಬಗೆ ೫
ನೀ ದಯ ಮಾಡದಿರೀ ದಿವಿಜರು ಒಲಿ
ದಾದರಿಸುವರೆ ವೃಕೋದರ ವಂದ್ಯ ೬
ಅಧಮ ನಾನಹುದುದಧಿ ಮಥನ ಸ
ನ್ಮುದ ಮುನಿಮತ ಪೊಂದಿದವರಣುಗನು ೭
ಕ್ಷುದ್ರ ಭೂಮಿಪರುಪದ್ರವ ಕಳೆದು ಸು
ಭದ್ರವೀಯೋ ಕ್ಷುದ್ರುಮದಂತೆ ೮
ವೀತಭಯ ಜಗನ್ನಾಥ ವಿಠಲ ಸುಖೇತರ ಕಳೆದು ಮಹಾತಿಶಯದಲಿ ೯

ನುಡಿ-೧ : ಸಾರಹೃದಯ
೧೦೧
ಕಾವೇರಿ ಕಲುಪಾಪಹಾರಿ ಪಾವನ
ಶರೀರೆ ಶುಭತೋಷಕಾರಿ ಪ
ಶ್ರೀ ವಾಸುದೇವ ರಂಗೇಶನಾಲಯಕೆ ನೀ
ನಾವರಣಳಾಗಿಪ್ಪೆ ವಿರಜೆಯಂತೇ
ದೇವ ಋಷಿ ಗಂಧರ್ವ ಪಿತೃಪ ನರವರರಿಂದ
ಸೇವನೀಯಳಾಗಿ ಸರ್ವಾರ್ಥ ಪೂರೈಪೆ ೧
ಜಲಚರಾನ್ವೇಷಣ ಲುಬ್ಧ ಸಾಲಿಗ್ರಾಮ
ತುಲಸಿ ವೃಕ್ಷವನೆ ಕೊಡಿಸಿದ ಮಾತ್ರದೀ
ಕಲುಷರಾಶಿಗಳೆಲ್ಲ ಕಳೆದು ಮುಕ್ತಿಯನಿತ್ತೆ
ಸಲಿಲಮಂದಿರೆ ನಿನ್ನ ಕರುಣಕೇನೆಂಬೆ ೨
ರವಿ ತುಲಾರಾಶಿಗೈದಿದ ಸಮಯದೊಳಗೊಂದು
ದಿವಸ ಮಜ್ಜನ ಗೈವ ಮಾನವರಿಗೆ
ಪವನಾಂತರಾತ್ಮಕನ ಪಾದಕಮಲವ ತೋರಿ
ಭವಜ ರೋಗವ ಕಳೆದು ಭಾಗ್ಯವಂತರ ಮಾಳ್ಪೆ ೩
ಶ್ರೀ ಪವನ ಶಿವರಿಂದ ತಾ ಪೂಜೆಗೊಳುತ ಬಹು
ರೂಪಗಳ ಧರಿಸಿಕೊಂಡಾ ಪರ ಮನು
ವ್ಯಾಪಿಸಿಹ ನಿನ್ನೊಳದ್ಯಾಪಿ ಸ್ವರ್ಗಸ್ಥ ಜನ
ರೀ ಪೊಡವಿಯೊಳು ತವ ಸಮೀಪದಲಿ ಜನಿಸುವರು ೪
ಮೂಢಮತಿ ನಾನು ಕೊಂಡಾಡ ಬಲ್ಲೆನೆ ನಿನ್ನ
ಬೇಡಿಕೊಂಡೆನು ಹೃದಯ ನೀಡದೊಳಗೇ
ಗೂಡ ಪದ ಶಯನ ಜಗನ್ನಾಥ ವಿಠ್ಠಲನಂಘ್ರಿ
ನೋಡುವ ಸೌಭಾಗ್ಯ ದಯ ಮಾಡು ಪ್ರತಿದಿನದಲ್ಲಿ ಬ ೫

ಮಳೆಯಿಲ್ಲದೆ ತೀವ್ರ ಬರಗಾಲಕ್ಕೆ
೭೧
ಕೀಚಕಾಂತಕ ಭೀಮಸೇನರಾಯ
ಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು ಪ
ಕುಂತಿ ಜಠರೋದ್ಭವನೆ ಕುವಲಯದೊಳಗಿಪ್ಪಮ
ಹಂತರಿಗೆ ಬಪ್ಪ ಜನ್ಮಾದಿರೋಗ
ಚಿಂತೆಗಳ ಕಳೆದ ನಿಶ್ಚಿಂತರನು ಮಾಡು ಸ
ರ್ವಾಂತರಾತ್ಮಕ ಸುಖದ ಸರ್ವೇಶ ಶಕ್ರಾದಿ ನುತ ೧
ದ್ರೌಪದೀರಮಣ ಜ್ಞಾತಾಜ್ಞಾತ ಕರ್ಮಜ ಮ
ಹಾಪರಾಧಗಲೆಸದನು ದಿನದಲಿ
ನೀ ಪೊರೆಯಬೇಕುಪೇಕ್ಷಿಸದೆ ನಿನ್ನವರ ವಿ
ಜ್ಞಾಪನವ ಕೈಕೊಂಡು ವಿಶ್ವ ಚೇಷ್ಟಕನೆ ೨
ಕೌರವಾಂತಕನೆ ಕಾಶ್ಯಪಿಸುತರ ಸಂತೈಪ
ಭಾರ ನಿನ್ನದು ಭವದಿ ಭಕ್ತಬಂಧೋ
ಪ್ರೇರಕ ಪ್ರೇರ್ಯ ರೂಪಗಳಿಂದ ಸರ್ವರ ಶ
ರೀರದೊಳಗಾಡುವೆ ದೇವತೆಗಳೊಡನೆ ೩
ಪವಮಾನತನಯ ಪಾಪಿಷ್ಠರೊಳಗಿದ್ದು ನಿ
ನ್ನವರನೀಪರಿ ದಣಿಸಿ ನೋಡುತಿಹುದು
ಭುವನತ್ರಯೇಶ ಭೂಷಣವೇನೋ ನಿನಗೆ ಸ
ತ್ಕವಿ ಕುಲೋತ್ತಂಸ ಕಾವರ ಕಾಣೆ ನಿನ್ನುಳಿದು ೪
ವನುಜಾಂತಕನೆ ನಿನ್ನ ದಯವೊಂದಿರಲು ಮನೆ
ಧನಧಾನ್ಯ ಪಶುಪತ್ನಿ ಜ್ಞಾನಭಕುತಿ
ತನಗೆ ತಾನೊದಗಿ ಬಪ್ಪುದು ಸುನಿಶ್ಚಯ ಸನಾ
ತನ ಜಗನ್ನಾಥ ವಿಠ್ಠಲನೊಲುಮೆ ಪಾತ್ರ ೫

ನುಡಿ-೩: ಅನ್ನಾದಿಮಯ ಹರಿಯು
೧೩೯
ಕೃತ ಕೃತ್ಯನಾದೆನಿಂದಿನ ದಿನದೊಳು
ಕ್ಷಿತಿಸುತ ವೆಂಕಟರಾಮಾರ್ಯರನ ಕಂಡು ಪ
ಭೂಮಂಡಲದೊಳುಳ್ಳ ಸಕಲ ತೀರ್ಥಸ್ನಾನ
ಹೇಮಾದ್ರಿ ಮೊದಲಾದ ಕ್ಷೇತ್ರ ಯಾತ್ರೆ
ನೇಮ ಜಪತಪ ವ್ರತಾದಿಗಳ ಮಾಡಿದ ಪುಣ್ಯ
ಈ ಮಹಾತ್ಮರ ಕಂಡ ಮಾತ್ರ ಸಮನಿಸಿತು ೧
ಷಣ್ಣವತ್ಯಬ್ಧ ಪರಿಯಂತ ಹರಿಮಹಿಮೆಗಳ
ಸನ್ನುತಿಯಲೀ ಶ್ರುತಿಸ್ರ‍ಮತಿಗಳಿಂದ
ಧನ್ಯರೆಂದೆನಿಸಿ ಮಹಿಯೊಳಗೆ ಪೂರಿತರಾದ
ಪುಣ್ಯಚರಿತರ ದಿವ್ಯ ಪಾದವನೆ ನಾ ಕಂಡು ೨
ಹೀನ ಜನರೇ ಬಹಳ ಕ್ಷೋಣಿಯ ಮೇಲೆ ಸು
ಜ್ಞಾನಿಗಳು ದುರ್ಲಭರು ಕಲಿಯುಗದಲಿ
ಆನತೇಷ್ಟಪ್ರದ ಜಗನ್ನಾಥ ವಿಠಲ
ತಾನೆ ಕರೆತಂದು ತೋರಿ ಪುನೀತನ ಮಾಡ್ದ ೩

ನುಡಿ-೧ : ನೇದೃಶಂ ಸ್ಥಲಮಲಂ
೧೩೫
ಕೃತಕೃತ್ಯನಾದೆನಿಂದಿನ ದಿನದಲಿ
ವ್ರತಿ ಕುಲೋತ್ತಂಸ ಭುವನೇಂದ್ರರಾಯರ ಕಂಡು ಪ
ಗಂಗಾ ಪ್ರಯಾಗ ಗಯಾ ನೈಮಿಷಾರಣ್ಯ ಕುರು
ಜಾಂಗಳಾದ್ಯಖಿಳ ಸುಕ್ಷೇತ್ರಗಳಲಿ
ಸಾಂಗ ಕರ್ಮಗಳ ಹರಿಗರ್ಪಿಸಿದ ಫಲವು ಮುನಿ
ಪುಂಗವರ ಕಂಡ ಮಾತ್ರದಿ ಸಮನಿಸಿತೆನಗೆ ೧
ಹಿಂದೆ ಬಹು ಜನ್ಮದಿ ಮಾಡಿದ ಸುಕೃತಕೆ ಕ
ರ್ಮಂದೀಶ್ವರನ ದಿವ್ಯ ಪಾದ ಕಮಲ
ಸಂದರ್ಶನವೆ ಮಹತ್ಪಲವಾಯಿತೆನಗೆ ಗೋ
ವಿಂದನ ಪ್ರತಿಬಿಂಬರಾದ ಕಾರಣದಿಂದ ೨
ಅನ್ಯಸಾಧನೆಗಳಿನ್ನಾಚರಿಸಲ್ಯಾಕೆ ಮ
ತ್ತನ್ಯರಾರಾಧನೆಯ ಮಾಡಲ್ಯಾಕೆ
ಸನ್ನುತ ಮಹಿಮ ಜಗನ್ನಾಥ ವಿಠಲನ ಕಾ
ರುಣ್ಯ ಪಾತ್ರರಾ ಕರುಣವಾಯಿತೆನ್ನೊಳಿಂದು ೩

ಅನುಪಲ್ಲವಿ: ಆರುನಾಲ್ಕು
೧೦೯
ಕೃಷ್ಣ ದ್ವೈ ಪಾಯನ ಕೃಪಣವತ್ಸಲ ಪರ
ಮೇಷ್ಠಿ ಜನಕನ ತೋರೊ ಪ
ಅನಿಮಿಷ ಕುಲಗುರು ಆನಂದತೀರ್ಥ ಸ
ನ್ಮುನಿಮತ ವಿಮಲಾಂಬುಜಾ ಅ.ಪ.
ದಿನಕರ ದಯದಿ ನೋಡೆನ್ನನು ಬಾದರಾ
ಯಣ ನಾಮಧೇಯರ ತನಯ ಸಂಯಮಿ ವರ ೧
ಭೀಮ ತರಂಗಿಣಿ ಬದಿಗನೆನಿಸಿ ಸೀತಾ
ರಾಮ ಕರ್ಮ ಗುಣಕೀರ್ತನಗೈವ
ನಿರ್ಮಲಾತ್ಮಕನ ಸತ್ಪ್ರೇಮದಿ ಸಲಹುವ
ಸುಜನ ಶಿರೋಮಣಿ ೨
ವಿಗತದೇಹಾಭಿಮಾನಿಯೆ ನಿಮ್ಮೊಡನೆ ನಿತ್ಯ
ಹಗೆಗೊಂಬ ಪಾಪಿಗಳ
ವಿಗಡಕರ್ಮಗಳೆಲ್ಲ ಮರೆದು ವಿಶ್ವವ್ಯಾಪಿ
ಜಗನ್ನಾಥ ವಿಠಲ ಸ್ವತಂತ್ರ ಕರ್ತಯೆಂಬಾ ೩

ನುಡಿ-೧-೨: ವ್ಯಾಸರಾಜರು
೧೧೦
ಕೃಷ್ಣದ್ವೈ ಪಾಯನ ಗುರುರಾಯ ಮನೋ
ಭೀಷ್ಟದಾಯಕ ಕರುಣದಿ ಪಿಡಿ ಕೈಯಾ ಪ
ರಾಮಕೃಷ್ಣ ಪವನಾತ್ಮಜನಂಘ್ರಿ
ತಾಮರಸವ ಧೇನಿಸು ಪರಿವ್ರಾಜಾ
ಭೀಮತೀರ ಪಿಪ್ಪಲ ಭೂಜ ಮೂಲ
ಸೀಮೆಯೊಳಗೆ ರಾಜಿಸುವ ಯತಿರಾಜ ೧
ಭೇದ ಮತಾಂಬುಧಿ ಚಂದಿರಾ ಗುರು
ವೇದವ್ಯಾಸ ಮುನಿವರ ಸುಕುಮಾರಾ
ಸಾಧು ಸದ್ಗುಣಗಣ ಗಂಭೀರನಾದ
ಬಾದರಾಯಣನಾಮದಲಿಪ್ಪ ಧೀರಾ ೨
ದೇವ ಜಗನ್ನಾಥ ವಿಠಲನ್ನ ಪಾದ
ಸೇವಕ ಭೇಡುವೆ ಹರಿಮೂರ್ತಿ ಧ್ಯಾನ
ಕೇವಲ ಭಕುತಿ ನಿರ್ಮಲ ಜ್ಞಾನ
ವಿತ್ತು ಪಾವನ್ನ ಮಾಡಿ ಪಾಲಿಸೋ ಪ್ರತಿದಿನ ೩

ಗಂಗಾಧರ, ಪನ್ನಗಾಭರಣ
೩೯
ಕೃಷ್ಣನ ನೋಡಿರೈ ಭಕ್ತಿ ತುಷ್ಟನ ಪಾಡಿರೈ
ಕೃಷ್ಣೆಗೆ ಬಲಿದತಿ ದುಷ್ಟ ರಾಯರನು ತರಿದಾ
ಜಗದೊಳು ಮೆರೆದಾ ಪ
ನಂದ ವ್ರಜದಲಿ ಕಂದನಾಗಿ ತಾ ಬೆಳೆದಾ ದೈತ್ಯನರಳಿದಾ
ವೃಂದಾವನದೊಳು ಇಂದುಮುಖಿಯರನು
ಕೂಡಿ ಪರಿಪರಿಯಾಡಿ
ಒಂದೊಂದು ಪರಿಲೀಲೆ ಸಂದೇಹ
ತೋರಿಸಿದಾ ಮೋಹ ಚರಿಸಿದ
ಕಂದರ್ಪಪಿತ ತನ್ನ ಹೊಂದಿದ ಜನರನು
ಕಾವಾ ವರಗಳನೀವಾ ೧
ಬಾಲೆರ ಮನೆಯಲಿ ಪಾಲು ಮೊಸರುಗಳ
ಕದ್ದಾ ತೀವ್ರದಿ ಮೆದ್ದಾ
ಕಾಲಕಾಲದಿ ಗೋಪಾಲರ ಒಡಗೂಡಿ
ಗೋವಾ ಕಾಯ್ದನು ದೇವಾ
ಶೈಲವ ಬೆರಳಲಿ ತಾಳಿ ಗೋಕುಲವ
ಪೊರೆದ ಗರ್ವವ ಮೆರೆದಾ
ಶ್ರೀ ಲೋಲುಪನು ವಿಶಾಲ ಮಹಿಮೆಗಳ ತೊರೆದಾ
ಸುರದಿಂದ ಮೆರೆದಾ ೨
ಮಧುರ ಪಟ್ಟಣದಲಿ ಕದನ ಕರ್ಕಶರ ಕೊಂದಾ ಸಚ್ಚಿದಾನಂದಾ
ಸದುಗುಣ ನಿಧಿಯ ಪಡೆದವಳ ಜನಕಗೆ ಪಟ್ಟಾ ಗಟ್ಟದ ದಿಟ್ಟಾ
ಸುದತಿಗೋಸುಗ ಸುಧಾ ಪಾನೀಯ
ಪುರದಿಂದಾ ಸುರಪಮ ತಂದ
ಪದುಮಜಾಂಡಧರ ಜಗನ್ನಾಥ ವಿಠಲ ಗೀತಾ ತ್ರಿಗುಣಾತೀತಾ೩

ಪಂಚಶರಾರಿ=ಐದು ಬಾಣಗಳುಳ್ಳ
೪೦
ಕೃಷ್ಣರಾಯನೆ ನಿನ್ನ ಕೃತ್ಯಗಳೆಲ್ಲ
ಸೃಷ್ಟಿಯೊಳಗೆ ನಾ ಬೀರಲ್ಯಾ ಪ
ಶಿಷ್ಟರೊಳಗಿಟ್ಟು ಚಿರ ಕಾಲದ ಲೆನ್ನ
ಕಷ್ಟ ಬಿಡಿಸದೆ ಸುಮ್ಮನಿದ್ದೆಯಾ ಸ್ವಾಮಿ ಅ.ಪ.
ಜನನ ಮರಣ ಶೂನ್ಯನೆನಿಸಿಕೊಂಡು ಗೋಪಿ
ತನಯನಗಿದ್ದುದ ಹೇಳಲ್ಯಾ
ಸನಕಾದಿಸೇವ್ಯ ಪೂಜ್ಯನೆ ತುರುಗಳ ಹಿಂಡು
ವನದಲ್ಲಿ ಕಾಯ್ದದ್ದು ಹೇಳಲ್ಯಾ ನಾನು ೧
ದನುಜ ಭಂಜನನಾದ ಘನ ಮಹಿಮನೆ ಮಾಗ
ಧನಿಗಂಜಿ ಓಡಿದ್ದು ಹೇಳಲ್ಯಾ
ಎಣೆಯಿಲ್ಲದಾ ಶೂರ ರಣದೊಳು ಪಾರ್ಥಗೆ
ಅನುಗನಾಗಿದ್ದದ್ದು ಹೇಳಲ್ಯಾ ನಾನು ೨
ಸತತ ತೃಪ್ತನಾಗಿ ಕ್ಷಿತಿಯೊಳು ಬೆಣ್ಣೆಯ
ಮಿತವಾಗಿ ಕದ್ದದ್ದು ಹೇಳಲ್ಯಾ
ಕೃತಿದೇವಿರಮಣನೆ ಅತಿ ಪ್ರೀತಿಯಲಿ ಗೋಪ
ಸತಿಯರ ಕೂಡಿದ್ದು ಹೇಳಲ್ಯಾ ನಾನು ೩
ಶ್ರುತಿತತಿಗಳಿಗಭೇದ್ಯ ಪ್ರತಿಯಿಲ್ಲದೆ ದೇವ
ಸತಿಗೊಶನಾದದ್ದು ಹೇಳಲ್ಯಾ
ಶತಕೃತು ವಿಧಿವಂದ್ಯ ಸುತರಾಪೇಕ್ಷಿಸಿ ಭೂತ
ಪತಿಯನ್ನು ಬೇಡಿದ್ದು ಹೇಳಲ್ಯಾ ನಾನು ೪
ಭೂತಳದೊಳು ದೇವತೆಗಳೊಡನೆ ಇಂಥ
ರೀತಿಲಿ ಚರಿಸಿದ್ದು ಹೇಳಲ್ಯಾ
ಭೀತಿರಹಿತ ಜಗನ್ನಾಥವಿಠ್ಠಲನೆ ಅ
ದ್ಭುತ ಮಹಿಮನೆಂದು ಹೇಳಲ್ಯಾ ನಾನು ೫

ಸಪ್ತರ್ಷಿಗಳಾದ ಕಶ್ಯಪ
೧೯೧
ಕೊಳಲೇನು ಪುಣ್ಯವ ಮಾಡಿ ಕೃಷ್ಣನ ಕರವನೈದಿತೆ ಪ
ಬಹಳುಗ್ರತಪವ ಮಾಡದೆ ಇಂಥ ಭೋಗವಾದೀತೇ ಅ.ಪ.
ಧರಿಸಲ್ಹರಿಯು ಜಗವಮೋಹಿಪ ಶಕುತಿ ಬಂದಿತೇ
ಸ್ಮರನ ಬಾಧೆಯು ಆತನ ನುಡಿಗೆ ಸ್ಮರಗೈದಿತೇ ೧
ವಾರಿಜಾಕ್ಷನ ಮುಖರಿಗಿಂಥಾ ಸಾಹಸ ಬಂದಿತೇ
ಶ್ರೀ ರಮೆಯರಿಂಗೆ ಬಲವಾದಸೂಯೆ ದೊರಕಿತೇ ೨
ಭುವನಸದನ ಜೀವರಿಗೆ ಪಾದಪವಾಳೀತೇ
ಜಗನ್ನಾಥವಿಠಲನ ಮುಖರಿಗೆ ಶಬ್ದವಿಲ್ಲ ಧೋಯಿತೇ ೩

ನುಡಿ-೧: ಒಡಕು ಒಂಬತ್ತಿನ ದೇಹ
೧೪೮
ಗತಿ ಯಾವುದೆನಗೆ ಶ್ರೀಪತಿಯೆ ಪೇಳೊ ಪ
ಮತಿಗೆಟ್ಟು ಸತತ ಪರ ಸತಿಯರನು ಬಯಸುವೆನೊ ಅ.ಪ.
ಮರುಳು ಬುದ್ಧಿಗಳಿಂದ ಕರ ಸೂಚನೆಯ ಮಾಡಿ
ತರುಣಿಯರ ತಕ್ಕೈಸಿ ಸರಸವಾಡಿ
ಇರುಳು ಹಗಲು ಹೀಗೆ ದುರುಳತನದಲಿ ತಿರುಗಿ
ಧರೆಯೊಳಗೆ ನಾನೊಬ್ಬ ಹರಿದಾಸನೆನಿಸಿದೆನು ೧
ನಾಚಿಕಿಲ್ಲದಲೆ ಬಲು ನೀಚರಲ್ಲಿಗೆ ಪೋಗಿ
ಯೂಚಿಸುವೆ ಸನ್ಮಾರ್ಗ ಯೋಚಿಸದಲೆ
ಆ ಚತುರ್ದಶ ವರುಷರಾರಭ್ಯ ಈ ವಿಧದಿ
ಅಚರಿಪೆನೈ ಸವ್ಯ ಸಾಚಿಸಖ ಶ್ರೀ ಕೃಷ್ಣ ೨
ನಾನು ನನ್ನದು ಎಂಬ ಹೀನ ಬುದ್ಧಿಗಳಿಂದ
ಜ್ಞಾನ ಶೂನ್ಯನು ಆದೆ ದೀನ ಬಂಧು
ಸಾನುರಾಗದಿ ಒಲಿದು ನಾನಾ ಪ್ರಕಾರದಲಿ
ನೀನೆ ಕರುಣಿಸು ಹರಿಯೆ ಜ್ಞಾನಗುಣ ಪರಿಪೂರ್ಣ ೩
ಅಂಬುಜಾಕ್ಷನೆ ನಿನ್ನ ನಂಬಿ ಭಜಿಸುವರ ಪಾ
ದಾಂಬುಜಕ್ಕೆರಗದಲೆ ಸಂಭ್ರಮದಲಿ
ತಂಬೂರಿಯನು ಪಿಡಿದು ಡಂಭತನದಲಿ ನಾನು
ಶಂಬರಾರಿಗೆ ಸಿಲುಕಿ ಬೆಂಬಿಡದೆ ಚಾಲ್ವರಿದೆ ೪
ಪರಮೇಷ್ಟಿಯಾರಭ್ಯ ತ್ರಣಜೀವ ಪರ್ಯಂತ
ತರತಮವ ತಿಳಿಸಿ ತರುವಾಯದಲ್ಲಿ
ಗುರುಹಿರಿಯರಲಿ ಭಕುತಿ ವೈರಾಗ್ಯವನೆ ಕೊಟ್ಟು
ಸಿರಿಜಗನ್ನಾಥ ವಿಠಲ ನಿರುತ ನೀ ಪೊರೆಯದಿರೆ ೫

ಹರಿ=ವಾಯು, ವಾಯುದೇವರ
೪೪
ಗಿರಿರಾಜ ಗಿರಿರಾಜ ಪ
ತರಣಿಶತ ರುಚಿರ ತೇಜ ವೆಂಕಟ ಅ.ಪ.
ಆರನ ಕಾಣದೆ ಸಾರಿದೆ ತ್ರಿಜಗ ವಿ
ಹಾರ ಪಿಡಿ ಕರ ಸಮೀರಾಶನ ೧
ಶ್ರೀ ಕಮಲಭವ ಪಿನಾಕಿ ಮುಖ್ಯ ಸುರ
ನಿಕರವನಾಳ್ವ ಲೋಕೈಕ ಶರಣ್ಯ ೨
ನಂಬಿದ ಭಕುತ ಕುಟುಂಬಿಯೆಂಬದಂಬು
ಜಾಂಬಕ ಬಲ್ಲೆ ಕೃಪಾಂಬುಧಿ ಕರುಣಿಸು ೩
ಮನವಾಕ್ಕಾಯದಿ ಮನಸಿಜಪಿತ ನನ್ನ
ಧೇನಿಸುವಂತೆ ಅನುದಿನ ಮಾಡೋ ೪
ಸಟೆಯಲ್ಲೀ ನುಡಿ ದಿಟವೆಂಬುದು ಬುಧ
ಕಟಕ ಜಗನ್ನಾಥ ವಿಠಲ ವಿಹಂಗಪ ೫

ಪಲ್ಲವಿ ಮತ್ತು ನುಡಿ-೨
೧೩೪
ಗುರುಸತ್ಯವರರೆಂಬ ಕಲ್ಪಭೂಜಾ
ಧರೆಯೊಳಗೆಮ್ಮನುದ್ಧರಿಸ ಬಂತಿದಕೊ ಪ
ಶ್ರೀಮಧ್ವಮತವೆಂಬೋ ಭೂಮಿಯೊಳಗುದ್ಭವಿಸಿ
ರಾಮ ವೇದವಾಸ್ಯರಂಘ್ರಿ ಯುಗಳ
ವ್ಯೋಮ ಮಂಡಲವನಾಶ್ರಯಿಸಿ ಸತ್ಕೀರ್ತಿನಿ
ಸ್ಸೀಮ ಶಾಖೋಪಶಾಖೆಗಳಿಂದ ಶೋಭಿಸುತ ೧
ಭವವೆಂಬ ಭಾಸ್ಕರತಪದಿಂದ ಬೆಂದು ಬಂ
ದವರ ಮಂದಸ್ಮಿತ ನೆಳಲಿಂದಲೀ
ಪ್ರವಣರಂತಃಸ್ತಾಪ ಕಳೆದು ನಿತ್ಯದಲಿ ಸ
ತ್ಕವಿ ದ್ವಿಜಾಳಿಗಲಿಗಾಶ್ರಿತರಾಗಿ ಮೆರೆವ ೨
ವಿಳಿತ ಕರ್ಮ ಜ್ಞಾನ ಮಾರ್ಗಸ್ಥ ಜನರಿಗಾಗಿ
ಲ್ಲಿಹವು ಫಲ ಪುಷ್ಪ ಐಹಿಕಾಮುಷ್ಮಿಕಾ
ಮಹಿತ ಜಗನ್ನಾಥ ವಿಠಲನೆಂಬ ಭುಜಗ ಹೃ
ದ್ಗುಹದೊಳಿಪ್ಪದು ಮಾಯಿಮೂಷಕಗಳೋಡಿಸುತ ೩

ನುಡಿ-೨: ನಮ್ಮವರಿರುವರು
೧೪೭
ಗೋಪಾಲ ದಾಸರಾಯ ನಿನ್ನಯ ಪಾದ
ನಾ ಪೊಂದಿದೆನೊ ನಿಶ್ಚಯ ಪ
ಈ ಪೀಡಿಸುವ ತ್ರಯತಾಪಗಳೋಡಿಸಿ
ಕೈ ಪಿಡಿದೆನ್ನ ಕಾಪಾಡಿದ ಗುರುರಾಯ ಅ.ಪ.
ಘೋರ ವ್ಯಾಧಿಯನೆ ನೋಡಿ | ವಿಜಯರಾಯ
ಭೂರಿ ಕರುಣವ ಮಾಡಿ
ತೋರಿದರಿವರೆ ಉದ್ಧಾರಕರೆಂದಂದಿ
ನಾರಭ್ಯ ತವ ಪಾದ ಸಾರಿದೆ ಸಲಹೆಂದು ||
ಸೂರಿಜನ ಸಂಪ್ರೀಯ ಸುಗುಣೋದಾರ
ದುರುಳನ ದೋಷ ನಿಚಯವ
ದೂರಗೈಸಿ ದಯಾಂಬುನಿಧೆ ನಿ
ವಾರಿಸದೆ ಕರಪಿಡಿದು ಕರುಣದಿ
ಅಪ ಮೃತ್ಯುಯವನು ತಂದೆ ಎನ್ನೊಳಗಿದ್ದ ೧
ಅಪರಾಧಗಳ ಮರೆದೆ
ಚಪಲ ಚಿತ್ತನಿಗೊಲಿದು ವಿಪುಲ ಮತಿಯನಿತ್ತು
ನಿಪುಣನೆಂದೆನಿಸಿದೆ ತಪಸಿಗಳಿಂದಲಿ
ಕೃಪಣ ವತ್ಸಲ ನಿನ್ನ ಕರುಣೆಗೆ
ಉಪಮೆಗಾಣೆನೊ ಸಂತತವು ಕಾ
ಶ್ಯಪಿಯೊಳಗೆ ಬುಧರಿಂದ ಜಗದಾ
ಧಿಪನ ಕಿಂಕರನೆನಿಸಿ ಮೆರೆಯುವ ೨
ಎನ್ನ ಪಾಲಿಸಿದಂದದಿ ಸಕಲ ಪ್ರ
ಪನ್ನರ ಸಲಹೊ ಮೋದಿ
ಅನ್ಯರಿಗೀಪರಿ ಬಿನ್ನಪ ಗೈಯೆ ಜ
ಗನ್ನಾಥ ವಿಠಲನ ಸನ್ನುತಿಸುವ ಧೀರ ||
ನಿನ್ನ ನಂಬಿದ ಜನರಿಗೆಲ್ಲಿಯ
ಬನ್ನವೋ ಭಕ್ತಾನು ಕಂಪಿಶ
ರಣ್ಯ ಬಂದೆನೊ ಈ ಸಮಯದಿಅ
ಹರ್ನಿಶಿ ಧ್ಯಾನಿಸುವೆ ನಿನ್ನನು ೩

೩೨೬
ಚಂದ್ರಶೇಖರ ಸುಮನಸೇಂದ್ರ ಪೂಜಿತ ಚರಣಾ
ಹೀಂದ್ರ ಪದಯೋಗ್ಯ ವೈರಾಗ್ಯ | ವೈರಾಗ್ಯಾ ಪಾಲಿಸಮ
ರೇಂದ್ರ ನಿನ್ನಡಿಗೆ ಶರಣೆಂಬೆ ೧
೩೨೭ನಂದಿವಾಹನ ವಿಮಲ ಮಂದಾಕಿನೀಧರನೆ
ವೃಂದಾರಕೇಂದ್ರ ಗುಣಸಾಂದ್ರ | ಗುಣಸಾಂದ್ರ ಎನ್ನ ಮನ
ಮಂದಿರದಿ ನೆಲೆಸಿ ಸುಖವೀಯೊ ೨
೩೨೮ಕೃತ್ತಿವಾಸನೆ ನಿನ್ನ ಭೃತ್ಯಾನುಭೃತ್ಯ ಎ
ನ್ನತ್ತ ನೋಡಯ್ಯ ಶುಭಕಾಯ ಭಕ್ತರಪ
ಮೃತ್ಯು ಪರಿಹರಿಸಿ ಸಲಹಯ್ಯ ೩
೩೨೯ ನೀಲಕಂಧರ ರುಂಡಮಾಲಿ ಮೃಗವರಪಾಣಿ
ಶೈಲಜಾರಮಣ ಶಿವರೂಪಿ | ಶಿವರೂಪಿ ನಿನ್ನವರ
ಪಾಲಿಸೊ ನಿತ್ಯ ಪರಮಾಪ್ತ ೪
೩೩೦ತ್ರಿಪುರಾರಿ ನಿತ್ಯವೆನ್ನಪರಾಧಗಳ ನೋಡಿ
ಕುಪಿತನಾಗದಲೆ ಸಲಹಯ್ಯ | ಸಲಹಯ್ಯ ಬಿನ್ನೈಪೆ
ಕೃಪಣವತ್ಸಲನೆ ಕೃಪೆಯಿಂದ ೫
೩೩೧ಪಂಚಾಸ್ಯ ಮನ್ಮನದ ಚಂಚಲವ ಪರಿಹರಿಸಿ
ಸಂಚಿತಾಗಾಮಿ ಪ್ರಾರಬ್ಧ | ಪ್ರಾರಬ್ಧ ದಾಟಸು ವಿ
ರಿಂಚಿಸಂಭವನೆ ಕೃತಯೋಗ ೬
೩೩೨ ಮಾನುಷಾನ್ನವನುಂಡು ಜ್ಞಾನ ಶೂನ್ಯನು ಆದೆ
ಏನು ಗತಿ ಎನಗೆ ಅನುದಿನ | ಅನುದಿನದಿ ನಾ ನಿನ್ನ
ಧೀನದವನಯ್ಯ ಪ್ರಮಥೇಶ ೭
೩೩೩ ಅಷ್ಟಮೂತ್ರ್ಯಾತ್ಮಕನೆ ವೃಷ್ಟಿವರ್ಯನ ಹೃದಯಾ
ಧಿಷ್ಠಾನದಲ್ಲಿ ಇರದೋರು | ಇರದೋರು ನೀ ದಯಾ
ದೃಷ್ಟಿಯಲಿ ನೋಡೊ ಮಹದೇವ ೮
೩೩೪ ಪಾರ್ವತಿರಮಣ ಶುಕ ದೂರ್ವಾಸ ರೂಪದಲ್ಲಿ
ಉರ್ವಿಯೊಳಗುಳ್ಳ ಭಕುತರ | ಭಕುತರ ಸಲಹು ಸುರ
ಸಾರ್ವಭೌಮತ್ವ ವೈದಿದೆ ೯
೩೩೫ ಭಾಗಿಥಿಧರನೆ ಭಾಗವತ ಜನರ ಹೃ
ದ್ರೋಗ ಪರಿಹರಿಸಿ ನಿನ್ನಲ್ಲಿ | ನಿನ್ನಲ್ಲಿ ಭಕ್ತಿ ಚೆ
ನ್ನಾಗಿ ಕೊಡು ಎನಗೆ ಮರೆಯಾದೆ ೧೦
೩೩೬ ಮೃಡದೇವ ಎನ್ನ ಕೈಪಿಡಿಯೊ ನಿನ್ನವನೆಂದು
ಬಡವ ನಿನ್ನಡಿಗೆ ಬಿನ್ನೈಪೆ | ಬಿನ್ನೈಪೆನೆನ್ನ ಮನ
ದೃಢವಾಗಿ ಇರಲಿ ಹರಿಯಲ್ಲಿ ೧೧
೩೩೭ ವ್ಯೋಮ ಕೇಶನೆ ತ್ರಿಗುಣನಾಮ ದೇವೋತ್ತಮ ಉ
ಮಾಮನೋಹರನೆ ವಿರುಪಾಕ್ಷ |
ವಿರುಪಾಕ್ಷ ಮಮ ಗುರು
ಸ್ವಾಮಿ ಎಮಗೆ ದಯವಾಗೊ ೧೨
೩೩೮ ಅಷ್ಟ ಪ್ರಕೃತಿಗನೆ ಸರ್ವೇಷ್ಟ ದಾಯಕನೆ ಪರ
ಮೇಷ್ಟಿ ಸಂಭವನೆ ಪಂಮಾಪ್ತ | ಪರಮಾಪ್ತ ಎನ್ನದಯ
ದೃಷ್ಟಿಯಿಂದ ನೋಡಿ ಸಲಹಯ್ಯ ೧೩
೩೩೯ಪಂಚಾಸ್ಯ ದೈತ್ಯಕುಲ ವಂಚಕನೆ ಭಾವಿ ವಿ
ರಿಂಚಿ ಶೇಷನಲಿ ಜನಿಸಿದೆ | ಜನಿಸಿದೆ ಲೋಕತ್ರಯದಿ
ಸಂಚಾರ ಮಾಳ್ಪೆ ಸಲಹಯ್ಯ ೧೪
೩೪೦ ಉಗ್ರತಪ ನಾ ನಿನ್ನನುಗ್ರಹದಿ ಜನಿಸಿದೆ ಪ
ರಿಗ್ರಹಿಸಿ ಎನ್ನ ಸಂತೈಸು | ಸಂತೈಸಿ ಇಂದ್ರಿಯವ
ನಿಗ್ರಹಿಪ ಶಕ್ತಿ ಕರುಣೀಸೊ ೧೫
೩೪೧ ಲೋಚನತ್ರಯ ನಿನ್ನ ಯಾಚಿಸುವೆ ಸಂತತವು
ಖೇಚರೇಶನ ವಹನ ಗುಣರೂಪ |
ಗುಣರೂಪ ಕ್ರಿಯೆಗಳಾ
ಲೋಚನೆಯ ಕೊಟ್ಟು ಸಲಹಯ್ಯ೧೬
೩೪೨ಮಾತಂಗ ಷಣ್ಮುಖರ ತಾತ ಸಂತತ ಜಗ
ನ್ನಾಥ ವಿಠ್ಠಲನ ಮಹಿಮೆಯ | ಮಹಿಮೆಯನು ತಿಳಿಸು
ಪ್ರೀತಿಯಿಂದಲೆಮಗೆ ಅಮರೇಶ ೧೭
೩೪೩ ಭೂತನಾಥನ ಗುಣ ಪ್ರಭಾತ ಕಾಲದಲೆದ್ದು
ಪ್ರೀತಿಪೂರ್ವಕದಿ ಪಠಿಸುವ | ಪಠಿಸುವರ ಜಗ
ನ್ನಾಥವಿಠಲನು ಸಲಹುವ ೧೮

ಶ್ರೀಹರಿಯ ಮೋಹಿನಿ
೧೬೮
ಜಗದಾಖ್ಯ ವೃಕ್ಷ ಚಿಂತಿಪುದು ಬುಧರು ಪ
ಭಗವಂತನೆಂಬ ಆಗಸದಲಿ ಪಸರಿಸಿದಅ.ಪ.
ಚತುರಾಸ್ಯ ವಾಣಿ ಈರ್ವರು ಬೀಜ ಚಿತ್ಪ್ರ ಕೃತಿ
ಪೃಥವಿ ಕರ್ಮವು ಬೇರು ತ್ರಿಗುಣತ್ವ – ವು
ಕ್ಷಿತಿ ಜಲಾನಲ ವಾಯು ಗಗನ ಶಾಖೆಗಳಿಂದಕೆ
ಶತಕಿರಣ ಉಪಕೊಂಬೆಯೆನಿಸಿ ಕೊಂಬವು ಇದಕೆ ೧
ಅಹಂಕಾರ ಬಲದಿಂದ ಅಭಿವೃದ್ಧಿ ಐದುವುದು
ಅಹಿಕ ಸುಖ ಕುಸುಮ ತನ್ಮಾತ್ರ ರಸದಿ
ಸಹಿತವಾರ ಪ್ರವೃತ್ತಿ ನಿವೃತ್ತಿ ಕರ್ಮಫಲ
ಅಹರಹರ್ ಭುಂಜಿಪವು ತನ್ನಾಮ ಜೀವಖಗ ೨
ನಾನು ನನ್ನದು ಎಂಬ ನೀಡ ದ್ವಯಗಳಿದಕೆ
ಮಾನಾಪಮಾನಾದಿಗಳೆ ಪತ್ರವೂ
ಹೀನ ವಿದ್ಯಾದಿ ಪಂಚಕವೆ ಸರ್ಪಗಳಲ್ಲಿ
ಶ್ರೀನಿಧಿ ಜಗನ್ನಾಥವಿಠಲ ಸಂರಕ್ಷಕನು ೩