Categories
ರಚನೆಗಳು

ಜಗನ್ನಾಥದಾಸರು

೯೮
ಜನನಿ ಜಾಹ್ನವಿ ಜಗತ್ರಯ ಪಾವನಿ
ಪ್ರಣತಕಾಮದೆ ಪದ್ಮಜಾಂಡ ಸಂಭೂತೆ ಪ
ಸೃಷ್ಟೀಶ ಪದಜಾತೆ ವಿಶ್ವಮಂಗಳ ಮಹೋ
ತ್ರ‍ಕಷ್ಟ ತೀರ್ಥಗಳೊಳುತ್ತಮಳೆನಿಸುವೇ
ಕಷ್ಟವರ್ಜಿತವೆನಿಪ ತ್ರಿಪಥಗಾಮಿನಿ ದಯಾ
ದೃಷ್ಟಿಯಿಂದಲಿ ನೋಡು ಪ್ರತಿದಿನದಿ ಎನ್ನಾ ೧
ಕರ್ಕರಾಶಿಗೆ ಕರ್ಮ ಸಾಕ್ಷಿಯೆನಿಸುತಿಹ
ಅರ್ಕದೇವನು ಬಂದ ಸಮಯದಲ್ಲಿ
ಶರ್ಕರಾಹ್ವರು ಸ್ನಾನಗೈಯೆ ದುರಿತಗಳು ಸಂ
ಪರ್ಕವಾಗದ ತೆರದಿ ಸಂತೈಪೆ ದಯದಿ ೨
ಕಾರುಣಿಕ ಬಹಿರಾವರಣದಿಂದ ನೀ ಪೊರಟು
ವಾರಾಹಿಯೊಡಗೂಡಿ ಭಕ್ತಜನರ
ಪ್ರಾರಬ್ಧ ಕರ್ಮಗಳನುಣಿಸಿ ಮುಕ್ತರನ ಮಾಳ್ಪೆ
ದೂರಗೈಸುವೆ ಸಂಚಿತಾಗಾಮಿಗಳನೂ ೩
ನಂದಿನೀ ನಳಿನಿ ಸುಸೀತಾ ಮಲಾಪಹರ
ಳೆಂದ ಮಾತ್ರದಿ ಪುನೀತರನು ಮಾಳ್ಪೆ
ಸಂದರುಶನ ಸ್ವರುಶನ ಸ್ನಾನಗಳ ಫಲ ಪು
ರಂದರಾರ್ಯರೆ ಬಲ್ಲರಲ್ಪರು ಅರಿಯರು ೪
ಮಾತೆ ವಿಜ್ಞಾಪಿಸುವೆ ಬಿನ್ನಪವ ಕೇಳು ಸಂ
ಪ್ರೀತಿಯಿಂದಲಿ ಕರುಣಿಸೆನಗೆ ಇದನೆ
ಶ್ರೋತವ್ಯ ವಕ್ತವ್ಯ ಮಂತವ್ಯ ಸ್ತವ್ಯ | ಜಗ
ನ್ನಾಥ ವಿಠ್ಠಲನೊಬ್ಬನೆಂದು ತಿಳಿವಂತೇ೫

ನುಡಿ-೧: ಗುರುವಾದಿ ವಾಯು
೧೦೫
ಜಯತೀರ್ಥ ಗುರುರಾಯ ಕವಿಗೇಯಾ ಪಾದ
ದ್ವಯಕಭಿನಮಿಸುವೆ ಶುಭಕಾಯ ಪ
ಭಯಹರ ಕರುಣಾನಯನದಿ ದಿನ ದಿನ
ವಯಿನವೆ ಪಾಲಿಸು ಬಯಸುವೆ ಒಡನೆ ಅ
ಎಂದೆಂದು ನಿನ್ನ ಪಾದ ಪೊಂದಿದವರ ಪಾದ
ದ್ವಂದ್ವಾರಾಧಕರ ಸಂಬಂಧಿಗ ನರ
ನೆಂದು ಪಾಲಿಪುದು ಕಾರುಣ್ಯ ಸಾಗರ
ಮಂದ ನಾನು ಕರ್ಮಂದಿಗಳರಸ ಮು
ಕುಂದನ ತೋರೋ ಮನಮಂದಿರದಲ್ಲಿ ೧
ಹರಿಪಾದಾಂಬುಜಾಸಕ್ತ ನಿಜ ಭಕ್ತ ಜನರಾ
ಪರಿಪಾಲಿಪ ಸಮರ್ಥ ಅಕ್ಷೋಭ್ಯ ತೀರ್ಥ
ಕರಕಮಲ ಸಂಜಾತಾನಂದ ದಾತಾ
ಪರಮಹಂಸ ಕುಲವರನೆ ವಂದಿಸುವೆ
ಕರುಣದಿಂದಲೆನಗರುಪು ಸುತತ್ವವ ೨
ಕಾಮಿತ ಫಲದಾತಾ ಜಗನ್ನಾಥ ವಿಠ್ಠಲ
ಸ್ವಾಮಿ ಪರಮ ದೂತಾ ಸುವಿಖ್ಯಾತಾ
ಶ್ರೀ ಮಧ್ವ ಮತಾಂಬರುಹ ಪ್ರದ್ಯೋತಾ
ತಾಮಸಗಳೆದೀ ಮಹೀಸುರರ ಮ
ಹಾಮಹಿತರ ಮಾಡ್ದೆ ಮುನಿವರ್ಯಾ ೩

ನುಡಿ-೧: ನಾಳೆ ನೋಡಿದಂಥ
೧೦೪
ಜಯರಾಯ ಜಯರಾಯ
ದಯವಾಗೆಮಗನುದಿನ ಸುಪ್ರೀಯಾ ಪ
ಸುರನಾಥನೆ ನೀ ನರನ ವೇಷದಿ
ಧರಣಿಯೊಳಗೆ ಅವತರಿಸಿ ದಯದಿ ೧
ವಿದ್ವನ್ಮಂಡಲಿ ಸದ್ವಿನುತನೆ ಪಾ
ದದ್ವಯಕೆರಗುವೆ ಉದ್ಧರಿಸೆನ್ನನು ೨
ವಿದ್ಯಾರಣ್ಯನಾ ವಿದ್ಯಮತದ ಕು
ಸಿದ್ಧಾಂತಗಳ ಅಪದ್ಧವೆನಿಸಿದೆ ೩
ಅವಿದಿತನ ಸತ್ಕವಿಗಳ ಮಧ್ಯದಿ
ಸುವಿವೇಕಿಯ ಮಾಡವನಿಯೊಳೆನ್ನನು ೪
ಗರುಪೂರ್ಣಪ್ರಜ್ಞರ ಸನ್ಮತವನು
ಉದ್ಧರಿಸಿ ಮೆರೆದೆ ಭುಸುರವರ ವರದಾ ೫
ಸಭ್ಯರ ಮಧ್ಯದೊಳಭ್ಯಧಿಕ ವರಾ
ಕ್ಷೋಭ್ಯ ಮುನಿಕರಾಬ್ಜಾಭ್ಯುದಿತ ಗುರು ೬
ನಿನ್ನವರವ ನಾನನ್ಯಗನಲ್ಲ ಜ
ಗನ್ನಾಥವಿಠಲನೆನ್ನೊಳಗಿರಿಸೋ ೭

ಪಲ್ಲವಿ : ಪಂಚಮುಖಿ ಪ್ರಾಣ
೧೫೫
ತಾರಕವಿದು ಹರಿಕಥಾಮೃತಸಾರ ಜನಕೆ ಪ
ಘೋರತರ ಅಸಾರ ಸಂಸಾರವೆಂಬ ವನಧಿಗೆ ನವ ಅ.ಪ.
ಶ್ವಾನಸೂಕರಾದಿ ನೀಚಯೋನಿಗಳಲಿ ಬಂದು ನೊಂದು
ವೈನತೇಯ ವಾಹನನ ಸನ್ನಿಧಾನ ಬೇಕು ಎಂಬುವರಿಗೆ ೧
ಪ್ರಿಯವಸ್ತುಗಳೊಳಗೆ ಪಾಂಡುವೇಯ ಸಖನೆ ಎಮಗೆ ಬ್ರಹ್ಮ
ವಾಯು ಉಚ್ಚ ಸುರರು ತಂದೆ ತಾಯಿ ಎಂದರಿತವರಿಗೆ ೨
ಜ್ಞೇಯ ಜ್ಞಾನ ಜ್ಞಾತೃ ಬಾದರಾಯಣಾಖ್ಯ ಹರಿಯ ವಚನ
ಕಾಯ ಮನದಿ ಮಾಡ್ದ ಕರ್ಮ ಶ್ರೀ ಯರಸ ನೀವನರಗೆ ೩
ಶ್ರೀ ಮುಕುಂದ ಸರ್ವ ಮಮಸ್ವಾಮಿ ಅಂತರಾತ್ಮ ಪರಂ
ಧಾಮ ದೀನಬಂಧು ಪುಣ್ಯ ನಾಮವೆಂದರಿತವರಿಗೆ ೪
ಭೂತಭವ್ಯ ಭವತ್ಪ್ರಭು ಅನಾಥಜನರಬಂಧು ಜಗ
ನ್ನಾಥ ವಿಠ್ಠಲ ಪಾಹಿಯೆಂದು ಮಾತುಮಾತಿಗೆಂಬುವರಿಗೆ ೫

ಕೀರ್ತನೆಯಂತೆ ಈ ಕೀರ್ತನೆಯಲ್ಲೂ
೧೬೯
ತಿಳಿವುದನ್ನಮಯ ಕೋಶಗಳನು
ಇಳೆಯೊಳಚ್ಯುತನ ದಾಸರು ನಿತ್ಯದಲಿ ಪ
ಮೇದಿನಿ ಸಲಿಲನ್ನಮಯ ವಿಹಾಯಸ ವಾಯು
ಆದಿತ್ಯ ಮುಖ್ಯಪ್ರಾಣ ಮನೋಮಯಕೆ
ಆದುದು ಮನ ಅಹಂಕಾರ ವಿಜ್ಞಾನಮಯ
ವೇದ್ಯ ತತ್ತ್ವಾನಂದ ಮಯಕೆ ಅವ್ಯಕ್ತವನು೧
ಅನಿರುದ್ಧ ಶಾಂತಿ ಪ್ರದ್ಯುಮ್ನ ಕೃತಿ ಸಂಕರು
ಷಣ ಜಯಾ ಶ್ರೀ ವಾಸುದೇವ ಮಾಯಾ
ಘನ ಸುಲಕ್ಷಣ ಲಕ್ಷ್ಮೀ ನಾರಾಯಣರು ಮುಖ್ಯ
ರೆನಿಸುವರು ಪಂಚಕೋಶದಲಿ ಎಂದೆಂದೂ ೨
ಪ್ರಾಣಾಪಾನ ವ್ಯಾನೋದಾನ ಸಮಾನ ಪಂ
ಚಾನಿಲರೂ ಅಲ್ಲಿಹರು ಮತ್ತು
ದಾನವಾದಿಗಳಿಹರು ಭೂತ ಮಾತ್ರ ಕರ್ಮ
ಜ್ಞಾನೇಂದ್ರಿಯಗಳು ತನ್ನಿಷ್ಟವಾಗಿಹವಲ್ಲಿ ೩
ಅಬುಜ ಭವಾಂಡ ಪಿಂಡಾಂಡಕ್ಕೆ ಈ ತತ್ತ್ವ
ಒಂಬತ್ತು ಆವರಣವೆಂದೆನಿಪವು
ಕಂಬುಪಾಣಿಯ ರೂಪ ಲಕ್ಷ್ಮೀ ರೂಪವು ಪಂಚ
ಇಂಬುಗೊಂಡಿಹವು ಚಿಂತಿಪುದು ಭೂಸುರರು ೪
ಭೂಶನೇಶ್ವರ ವರುಣ ಸುರನದಿಗಳನ್ನಮಯ
ಕೋಶದೊಳಗಿರುತಿಹರು ಪ್ರಾಣಮಯದಿ
ಮೇಷವಾಹನ ಪ್ರವಹವಾಯು ಪ್ರಾವಹಿ ಮಹಾ
ಕಾಶಾಧಿಪತಿ ಗಣಪರಧಿಪರೆಂದೆನಿಸುವರು ೫
ಕಾಮೇಂದ್ರ ಶಿವ ರತೀಂದ್ರಾಣಿ ಪಾರ್ವತಿ ಮುಖ್ಯ
ಈ ಮನೋಮಯಕಧಿಪರೆನಿಸುತಿಹರು
ತಾಮರಸಭವ ವಾಯು ವಾಣಿ ಭಾರತಿ ಮುಖ್ಯ
ಸ್ವಾಮಿಗಳೆನಿಸುವರು ವಿಜ್ಞಾನಕೋಶದಲಿ ೬
ಆನಂದಮಯ ಕೋಶಕಭಿಮಾನಿ
ಶ್ರೀನಿವಾಸನು ಪಂಚರೂಪಾತ್ಮಕಾ
ಈ ನಿರ್ಜರರೊಳಿದ್ದು ತತ್ತದಾಹ್ವಯನಾಗಿ
ಪಾನೀಯಜಾಂಡದೊಳಿಪ್ಪ ಕರುಣೀ ೭
ಪೃಥಿವಿ ಗಂಧ ಘ್ರಾಣೋಪಸ್ಥಪ್ಪುರ ಸಂಜೀವಾ
ಪ್ರಥಮ ಕೋಶದಿ ವಾಯು ಅಷ್ಟತತ್ತ್ವ
ದ್ವಿತೀಯ ಕೋಶದಿ ತೇಜರೂಪ ಚಕ್ಷುಪಾದ
ಪ್ರಥಮಾಂಗ ಸ್ಪರ್ಶ ತ್ವಕು ಪಾಣಿ ತತ್ವಗಳಿಹವು ೮
ಆಕಾಶ ಶಬ್ದ ಶ್ರೋತ್ರವು ಪಿಂತೆ ಪೇಳ್ದಷ್ಟು
ವಾಕು ಪ್ರಾಣಾದಿ ತತ್ತ್ವ ದ್ವಾದಶ ಕಾಮ
ಶ್ರೀ ಕಂಠ ತತ್ವ ಮನ ಮನೋಮಯದಿ ವಿಜ್ಞಾನ
ರಾ ಕಮಲ ಭವ ನಂದ ಮಯತೆ ಅವ್ಯಕ್ತವನು ೯
ಸ್ಥೂಲ ದೇಹಕೆ ಇನಿತು ಲಿಂಗ ತನುವಿನಲಿ ತತ್ತ ್ವ
ಜಾಲ ಸೂಕ್ಷ್ಮಗಳಿಹವು ಗುಣ ಭೇದದಿ
ಪೇಳುವೆನು ಅವ್ಯಕ್ತ ಮಹದಹಂಕಾರ ಮನ
ಮೇಳೈಸಿಹವು ಸತ್ವಪರಿ ಭೇದದಲಿ ೧೦
ರಜೋಪರಿಚ್ಛೇದದಲಿ ಜ್ಞಾನ ಕರ್ಮೇಂದ್ರಿಯವು
ರಜನೀ ಗುಣದ ಮಾತ್ರ ಭೂತ ಇಹವು
ಯಜಿಸು ಈ ತತ್ತ್ವ ಮಾನಿ ದಿವಿಜರನರಿತು
ವೃಜಿನವರ್ಜಿತನಾಗಿ ಸುಪದವೈದುವಿ ಮನುಜ೧೧
ಭೂಮ್ಯಭ್ರನ್ನ ಮಯನಳನೀಳಾಗಸ ಪ್ರಾಣ ಮಯ ಮ
ನೋಮಯ ಮಹಾ ಅವ್ಯಕ್ತ
ಸಮ್ಯಗಾನಂದ ವಿಜ್ಞಾನಮಯನೆನಿಸಿ ಗುರು
ಸಮೀರನೊಳಗಿದ್ದು ಪಾಲಿಸುವ ಜಗವಾ ೧೨
ಪಂಚಕೋಶದ ವಿವರ ತಿಳಿದ ಮಹಾತ್ಮರಿಗೆ
ಕಿಂಚಿತಾದರು ದೋಷ ಬರಲರಿಯದು
ಪಂಚ ಮಾರ್ಗಣ ಪಿತ ಜಗನ್ನಾಥ ವಿಠಲನು
ಸಂಚತಾಗಾಮಿ ಕರ್ಮಗಳ ಫಲ ಬಿಡಿಸುವನು ೧೩

ಶ್ರೀ ರಾಘವೇಂದ್ರ
೪೫
ತುತಿಸಬಲ್ಲೆನೆ ನಾ ನಿನ್ನೆ ವೆಂಕಟರನ್ನ ಪ
ತುತಿಸಬಲ್ಲೆನೆ ಲಕ್ಷ್ಮೀ ಪತಿ ನಿನ್ನ ಬ್ರಹ್ಮ ಪಾ
ರ್ವತಿ ಪತ್ಯಾದ್ಯಳವಡದುತುಳ ಮಹಿಮೆಗಳ ಅ.ಪ.
ನಮಿಪ ಜನರ ಕಲ್ಪದ್ರುಮ ದುಷ್ಟದಾನವ
ದಮನ ದಿವಿಜಕುಲೋತ್ತಮ ಲಕ್ಷ್ಮೀ ಪವನಾದಿ
ಸುಮನಸಾರ್ಚಿತ ಪಾದಕಮಲ ಯುಗ್ಮನೆ ಅನು
ಪಮ ರೂಪ ಲಾವಣ್ಯ ಕಮನೀಯ ಕಾಯ ಹೃ
ತ್ತಿಮಿರ ಭಾಸ್ಕರ ಶ್ರೀ ಭೂರಮಣ ಸರ್ವಗ ಸದಾ
ಗಮವೇದ್ಯ ವೇದವ್ಯಾಸ ಕಪಿಲ ದತ್ತ
ಕುಮುದಾಪ್ತ ಕೋಟಿ ಭಾಸಾ ತದ್ಭಕ್ತರ
ಸಮುದಾಯಕೀಯೋ ಲೇಸಾ ಆನತ ಬಂಧು
ಸುಮುಖ ಸುಲಭನೆಂದಾ ನಮಿಪೆ ಎನ್ನರಸಾ ೧
ಘನಮಹಿಮನೆ ವೃಂದಾವನವಾಸಿ ಸ್ವಪ್ರಯೋ
ಜನವಿವರ್ಜಿತ ಗೋವರ್ಧನಧಾರಿ ಗೋ ಗೋಪೀ
ಜನ ಮನೋರಂಜನ ಜನಕಜಾರಮಣ ಪೂ
ತನಿ ಪ್ರಾಣಾಂತಕ ವೇದವಿನುತ ಶ್ರೀ ವತ್ಸಲಾಂ
ಛನ ವಕ್ಷ ಕೌಸ್ತುಭ ಮಣಿ ವೈಜಯಂತೀ ಸ
ದ್ವನ ಮಾಲಾಂಚಿತ ಕಂಧರಾ ಸತ್ಕಲ್ಯಾಣ
ಗುಣ ಜ್ಞಾನಾತ್ಮಕ ಶರೀರಾ ಸಂತತ ನಿಷ್ಕಿಂ
ಚನ ಭಕ್ತಜನಮಂದಾರಾ ವಂದಿಸುವೆ ಮ
ನ್ಮನದಲಿ ನಿಲಿಸೋ ಕರುಣಾ ಪಾರಾವಾರಾ ೨
ಕವಿಭಿರೀಡಿತ ಪುಣ್ಯ ಶ್ರವಣ ಕೀರ್ತನ ಮತ್ಸ್ಯಾ
ದ್ಯವತಾರಂತರ್ಯಾಮಿ ಪ್ರವಿವಿಕ್ತ ಭುಗ್ವಿಭು
ಭುವನ ನಿಧಿಯ ಪೆತ್ತ ಸವನ ತ್ರಯಾಹ್ವಯ
ಶಿವರೂಪಿ ಶಿವದ ಭೂರ್ಭೂವಸ್ವಸ್ಥ ಸ್ವಶ ಭಾ
ರ್ಗವ ನಿನ್ನೊಳಿಪ್ಪ ದಾನವನ ಸಂಹರಿಸುವ
ನೆವದಿಂದ ದಾಶರಥೀ ಸಂಗಡ ಯುದ್ಧ
ತವಕದಿ ಮಾಡಿ ಭೀತಿ ಬಟ್ಟವನಂತೆ
ಅವನಿಗೆ ತೋರ್ದ ರೀತಿ ವರ್ಣಿಸಲಿನ್ನು
ಪವನಮುಖಾದ್ಯರಿಗವಶ ನಿನ್ನಯ ಖ್ಯಾತಿ೩
ಗತಶೋಕ ಗಾಯಿತ್ರಿ ಪ್ರತಿಪಾದ್ಯ ತತ್ವಾಧಿ
ಪತಿಗಳೆನಿಸುವ ದೇವತೆಗಳೊಳಗಿದ್ದು ಮಾ
ರುತನಿಂದ ಒಡಗೂಡಿ ಪ್ರತಿದೇಹಗಳಲಿ ಯೋ
ಗ್ಯತೆಯನರಿತು ಕರ್ಮಗತಿಗಳನೀವೆ ಸಾಂ
ಪ್ರತ ಬೇಡಿಕೊಂಬೆ ಆನತರ ಸಂತೈಸೆಂದು
ಪ್ರಥಮಾಂಗ ಪ್ರಿಯ ಸತ್ತಮ ಸೌಭಾಗ್ಯ ಸಂ
ಭೃತಸಾರ ಸರ್ವೋತ್ತಮ ನೀನೆ ಪಾಂಡು
ಸುತರಾದ ಧರ್ಮ ಭೀಮಾ ಪಾರ್ಥರ ಕಾಯ್ದೆ
ಪ್ರತಿಗಾಣೆ ನಿನಗೆ ಸಂತತ ಪರಂಧಾಮಾ ೪
ಕಲಿ ಮುಖ್ಯ ದೈತ್ಯ ಗಂಟಲಗಾಣ ಗುರುತಮ
ಬಲಿಬಂಧಮೋಚಕ ಸುಲಭ ಚೆತ್ಸುಖದಾಯಿ
ಫಲ ಚತುಷ್ಟಯನಾಮ ಫಲಸಾರ ಭೋಕ್ರ‍ತ ಶಂ
ಬಲನಾಗಿ ಭಕತರ ಸಲಹುವ ಕರುಣಿ ಶಂ
ಫಲಿಪುರವಾಸಿ ಬಾಂಬೊಳೆಯ ಜನಕ ಲಕ್ಷ್ಮೀ
ನಿಲಯ ನಿರ್ಗತ ದುರಿತಾ ಮನ್ಮನದ ಚಂ
ಚಲವ ಬಿಡಿಸೋ ನಿರುತಾ ಬೇಡಿಕೊಂಬೆ
ತಲೆ ಬಾಗಿ ಸರ್ವಗತಾ ನೀನಹುದೆಂದು
ತಿಳಿಸೋ ತೀವ್ರದಿ ಮುಪ್ಪೊಳಲುರಿಗನ ತಾತಾ ೫
ಉದಿತ ಭಾಸ್ಕರನಂತೆ ಸುದತೇರಿಂದೊಡಗೂಡಿ
ಉದರ ನಾಮಕ ನೀನು ಉದರದೊಳಿದ್ದೆನ್ನ
ಉದಕಗಳಿಗೆ ನಿತ್ಯಾಸ್ಪದನಾಗಿ ಜೀವರ
ಹೃದಯದೊಳಿರುತಿಪ್ಪೆ ಸದಸದ್ವಿಲಕ್ಷಣಾ
ವಿಧಿಭವ ಶಕ್ರಾದಿ ತ್ರ್ರಿದಶರೊಂದಿತ ಪಾದ
ಬದಿಗನಾಗಿರಲು ಪಾಪ ಕರ್ಮಗಳು ಬಂ
ದೊದಗುವುವೇನೋ ಶ್ರೀ ಪಾ ಬಿನ್ನೈಸುವೆ
ಬುಧ ಜನರಂತಸ್ತಾಪಾ ಕಳೆದು ನಿತ್ಯ
ಬೆದರದಂದದಲಿ ಮಾಳ್ಪುದು ದೋಷ ನಿರ್ಲೇಪಾ ೬
ಪಣಿಗಣ್ಣ ಸ್ವರದಿಂದಾಗ್ರಣಿಯಾದ ದುಷ್ಟ ರಾ
ವಣನ ಬಾಹುಬಲ ಗಣಿಸಿದೆ ನಿಶಿತ ಮಾ
ರ್ಗಣದಿ ಸದೆದು ವಿಭೀಷಣಗೆ ನೀ ಲಂಕಾಪ
ಟ್ಟಣ ಭೋಗ ತತ್ಕಾಲ ಉಣಲಿತ್ತು ಭಕ್ತಗೆ
ಪ್ರಣತ ಕಾಮದನೆಂಬೋ ಗುಣ ನಿನ್ನಲ್ಲಿದ್ದ ಕಾ
ರÀಣದಿ ಪ್ರಾರ್ಥಿಸುವೆ ನಿನ್ನಾ ದಾಸರೊಳು
ಗಣಿಸು ನೀ ದಯದಿ ಎನ್ನಾ ತಪ್ಪುಗಳ ನೀ
ನೆಣಿಸಲಾಗದು ಪ್ರಸಾನ್ನಾ ಪಾಲಕನೆ ಕುಂ
ಭಿಣಿಸುರರನು ಕಾಯೊ ಕ್ಷಣಾ ಲಕ್ಷ್ಮನಣ್ಣಾ ೭
ಬಿಸಜ ಸಂಭವನ ನಿರ್ಮಿಸಿ ನಾಭಿಕಮಲದಿ
ಸಶರೀರದೊಳು ಸುಮನಸರ ಪಡೆದು ನಿನ್ನಾ
ಪೆಸರಿಟ್ಟು ಅವರವರೊಶನಾದೋಪಾದಿ ತೋ
ರಿಸಿದಿ ನೀ ಸ್ವಾತಂತ್ಯ ಅಸಮನೆಸಿಕೊಂಡು
ಬಸಿರೊಳಗಿಟ್ಟು ಪೊಂಬಸರಾದಿ ಸುರರ ಪಾ
ಲಿಸುವಿ ನೀ ಪ್ರತಿ ಕಲ್ಪದಿ ನರಕ ಸ್ವರ್ಗ
ವಸುಮತಿ ಯಮ ಲೋಕದಿ ನರಕ ಸ್ವರ್ಗ
ವಸುಮತಿ ಯಮ ಲೋಕದಿ ವಾಸಿಸುತ ರ
ಕ್ಕಸರನಂಧಂತಮದಿ ದಣಿಸುತಿಪ್ಪ
ಪ್ರಸವಿತ್ತ ನಾಮ ವಂದಿಸುವೆ ಪ್ರಮೋದೀ ೮
ಆಪದ್ಭಾಂಧವ ಬಹುರೂಪಾ ರುಕ್ಮಿಣೀಶಾ
ತಾಪಸ ಜನರ ಹೃತ್ತಾಪದರ ಧರ್ಮ
ಸ್ಥಾಪಕ ಸ್ಥವಿರ ನಿರ್ಲೇಪ ಗುಣತ್ರಯ
ವ್ಯಾಪಕ ಸುಖಧರ್ಮ ಪ್ರಾಪಕ ಸುಜನ ಲೋ
ಕೋಪಕಾರಕ ಧರ್ಮ ವ್ಯೂಪ ಊಧ್ರ್ವಗ ನಿರ್ಗು
ಣೋಪಾಸಕರ ಸಲಹಲೋಸುಗದಿ ಸ
ಲ್ಲಾಪದಿ ಬಹ ಕಲಹಾ ಮನ್ನಿಸೋ ಭವಾ
ಕೂಪಾರ ನಾವಿಕ ಭೂಪತಿ ವರಹಾ ೯
ಶಫರ ಕೂರ್ಮ ಕ್ರೋಡ ವಪುಷ ಹಿರಣ್ಯಕ
ಶಿಪುವಿನ ಸೀಳ್ದ ಕಾಶ್ಯಪಿಯಾಚಿಕನೆ ದುಷ್ಟ
ನೃಪರ ಸಂಹರಿಸಿದ ಕಪಿವರ ಪೂಜಿತ
ದ್ರುಪದಾತ್ಮಜೆಯ ಕಾಯ್ದ ತ್ರಿಪುರಾರಿ ಕಲಿಮುಖ್ಯ
ರುಪಟಳ ಬಿಡಿಸಿದ ಕೃಪಣವತ್ಸಲ ಕಲ್ಕಿ
ಅಪವರ್ಗಪ್ರದ ಅಮಿತ ರೂಪಾತ್ಮಕ
ಸುಫಲ ಚಿತ್ಸುಖ ಭರಿತಾ ತ್ರೈ ಲೋಕಕ್ಕೆ
ಪ್ರಪಿತಾಮಹನೆ ನಿರುತಾ ಪ್ರಾರ್ಥಿಸುವೆ ನಿ
ನ್ನಪರೋಕ್ಷವಿತ್ತು ಪಾಲಿಪುದೆಮ್ಮ ಸ್ವರತಾ ೧೦
ವಟಪತ್ರಶಯನ ವೆಂಕಟಗಿರಿ ನಿಲಯ ನಿ
ಷ್ಕುಟಿಲ ದುರ್ವಿಷಯ ಲಂಪಟವ ಸದೆದು ನಿನ್ನ
ಭಟಜನರಿಗೆ ಧರ್ಮ ಘಟಕನಾಗುವೆ ನಿತ್ಯ
ವಟುರೂಪಿ ಎಡಪಾದಂಗುಟದಿ ಅಬ್ಬಜಾಂಡ
ಕಟಾಹ ಭೇದಿಸಿ ದೇವ ತಟನೀಯ ಪಡಿಯೋ ಧೂ
ರ್ಜಟಿ ತಲೆಯೊಳು ಧರಿಸಿ ನಿನ್ನ ನಾಮ
ಪರಿಸುತ್ತ ಸತಿಗೆರಸಿ ಕುಣಿದನೆಂದು
ತ್ಕಟದಿ ಕೈಗಳ ಬಾರಿಸಿ ಜಗನ್ನಾಥ
ವಿಠಲ ಸರ್ವೋತ್ತಮ ದಿಟನೆಂದುದ್ಫಟಸೀ೧೧

ನುಡಿ-೧: ಸ್ವರಮಣ
೧೪೫
ತೆರಳಿದರು ವಿಜಯರಾಯರು ವಿಜಯ ವಿಠಲನ
ಪುರದೊಳಗೆ ಪರಮ ಭಕ್ತರ ಕಾಣಬೇಕೆನುತ ಪ
ಯುವ ಸಂವತ್ಸರದ ಕಾರ್ತಿಕ ಶುದ್ಧ ದಶಮಿ ವಿಭಕ
ರವು ಗುರುವಾರ ಪ್ರಥಮ ಯಾಮದೀ
ಪವನಾಂತರಾತ್ಮಕ ಶ್ರೀ ಹರಿಯ ದರ್ಶನೋ
ತ್ಸವ ಸಂಪಾದಿಸುವ ಬಹು ಲವಲವಿಕೆಯಿಂದ ೧
ಧರಣಿಯೊಳು ಬಾಸ್ಕರ ಕ್ಷೇತ್ರವೆನಿಸುವ ಚಿಪ್ಪ
ಗಿರಿಯೆಂಬ ಗ್ರಾಮದಿ ವಿಬುಧರ ಮುಖದಿ
ವರ ಭಾಗವತ ಬ್ರಹ್ಮಸೂತ್ರ ಭಾರತ ಗೀತ
ಮರುತ ಶಾಸ್ತ್ರಾರ್ಥ ಗ್ರಂಥಗಳನಾಲಿಸುತಲಿ ೨
ಸುಖತೀರ್ಥ ಮುನಿಯ ಮನಕನುಕೂಲ ಸಚ್ಛಾಸ್ತ್ರ
ನಿಕರಗಳ ಕವನ ರೂಪದಲ್ಲಿ ರಚಿಸಿ
ಭಕತರಿಗೆ ಸನ್ಮಾರ್ಗ ತೋರಿ ಸಂತೋಷದಲಿ
ವಿಖನಸಾರ್ಚಿತ ಜಗನ್ನಾಥ ವಿಠಲನ ಪದಕೆ ೩

ನುಡಿ-೨: ತಂತ್ರಸಾರ
೧೪೩
ತೆರಳಿದರು ವೈಕುಂಠ ಪುರದರಸನ
ಚರಣಾಬ್ಜ ಸೇವಿಸಲು ನರಸಿಂಹದಾಸರು ಪ
ಜವಹರುಷದಿಂದ ಪಾರ್ಥಿವ ಮರುಷ ಮಾರ್ಗಶಿರ
ಅಪರ ಪಕ್ಷದ ಪಪ್ಠಿ ಭೌಮವಾರ
ದಿವದಿ ಪ್ರಾತಃಕಾಲ ಸಮಯದಲಿ ಶ್ರೀ ಲಕ್ಷ್ಮೀ
ಧವನಂಘ್ರಿ ಕಮಲ ಧೇನಿಸುತ ಸಂತೋಷದಲಿ ೧
ವರಹತನಯಾತೀರ ಪ್ರಾಚಿದಿಗ್ಬಾಗದಲಿ
ಪರಮ ವೈಷ್ಣವ ಸುಕೃತ ಛಾಗಿಯೆಂಬಾ
ಪುರವರದಿ ತತ್ವ ತತ್ವೇಶರೊಳು ಲಯವರಿತು
ಪರಮ ಪುರುಷನ ದಿವ್ಯ ನಾಮಗಳ ಸ್ಮರಿಸುತಲಿ ೨
ವರಯಜುಶ್ಯಾಖ ಹರಿತಸಗೋತ್ರ ಭವ ಅನಂ
ತರಸನ ಜಠರದಿ ಜನಿಸಿ ಬಂದೂ
ಗುರುವ್ಯಾಸಮುನಿ ಪುರಂದರ ದಾಸರಂಘ್ರಿಗಳ
ಸ್ಮರಿಸುತ ಜಗನ್ನಾಥ ವಿಠಲನೊಲುಮೆಯ ಪಡೆದು ೩

ನುಡಿ-೧ : ಪುಟ್ಟದ ಕಟ್ಟು
೧೪೦
ತೆರಳಿದರು ವ್ಯಾಸತತ್ವಜ್ಞರಿಂದು
ಪುರುಷೋತ್ತಮನ ಗುಣಗಳರುಪಿ ಸುಜನರಿಗೆ ಪ
ವರ ರೌದ್ರಿನಾಮ ಸಂವತ್ಸರದ ಶ್ರಾವಣ
ಪರಪಕ್ಷ ಅಷ್ಟಮಿ ಭಾನುವಾರ
ಭರಣಿ ನಕ್ಷತ್ರ ಪ್ರಾತಃಕಾಲದಲಿ ಸೋಮ
ಪುರದಿ ಗೋಪಾಲಕೃಷ್ಣನ ಪಾದ ಸನ್ನಿಧಿಗೆ ೧
ವೇದಾಬ್ಜಭವಸೂತ್ರ ಭಾಷ್ಯ ಭಾಗವತ ಮೊದ
ಲಾದ ಶಾಸ್ತ್ರಗಳ ಕೀರ್ತನೆಗೈಯುತಾ
ಪಾದೋದಕವ ಶಿರದಿ ಧರಿಸುತಿಪ್ಪ ವರಘತಿ
ರೋಧಾನಗೈಸಿ ಪರಗತಿ ಮಾರ್ಗವನು ತೋರಿ ೨
ಸೋಜಿಗವಿದಲ್ಲ ಸಜ್ಜನರನುದ್ಧರಿಸುವುದು
ನೈಜ ಜಗನ್ನಾಥ ವಿಠ್ಠಲನ ಪಾದ
ರಾಜೀವಯುಗಳ ನಿವ್ರ್ಯಾಜದಲಿ ಭಜಿಪ ಪ್ರ
ಯೋಜನನೊರೆದಿತರ ವ್ಯಾಪಾರ ತೊರೆದು ೩

ನುಡಿ-೧: ಅವಸರಕ್ಕೊದಗಿ
೧೦೦
ತ್ರಾಣಿ ಶ್ರೀ ಕೃಷ್ಣವೇಣಿ ಪ್ರಾಣಪತಿ ಪದಕಮಲ
ಕಾಣಿಸು ಹೃದಯದಿ ತ್ರಾಣಿ ಶ್ರೀ ಕೃಷ್ಣ ವೇಣಿ ಪ
ಯಮಧರ್ಮತನಯೆ ಶ್ರೀ ಕೃಷ್ಣ ಸಂಗದಿ ಜನಿಸಿ
ಕಮಲ ಸಂಭವನ ಲೋಕದಲಿ ಮೆರೆದೆ
ಸುಮನಸರ ನುಡಿಗೇಳಿ ಲೋಕಗಳ ದುರಿತೋಪ
ಶಮನ ಗೊಳಿಸಲು ಬಂದೆ ತುಮಲ ಹರುಷದಲಿ ೧
ಭೂತನಾಥನ ಜಟಾಜೂಟದಿಂದುದ್ಭವಿಸಿ
ಶ್ವೇತಪಿಂಗಳ ಶೈಲಶಿಖರಕಿಳಿದೇ
ಭೂತಳಕೆ ಭೂಷಣಳೆನಿಸಿ ಪೂರ್ವವನಧಿ ನಿ
ಕೇತನವನೈದಿ ಸುಖಿಸಿದಿ ನಿನ್ನ ಪತಿಯೊಡನೇ ೨
ಪ್ರಾಣಿಗಳು ನಿನ್ನ ಜಲಪಾನವನು ಗೈಯೆ ನಿ
ತ್ರಾಣ ಸಂಹಾರ ವ್ಯಾಧಿಗೆ ಭೇಷಜಾ
ಪ್ರಾಣ ಪ್ರಯಾಣ ಪಾಥೇಯವೆಂದರಿಯೆ ನಿ
ರ್ವಾಣಪದವಿತ್ತು ಕಲ್ಯಾಣವಂತರ ಮಾಳ್ಪೆ ೩
ಜನಪದಗಳಾಗಿ ಕಾನನವಾಗಿ ಮನ್ವಾದಿ
ದಿನಗಳಲ್ಲಾಗಿ ಮತ್ತೇನಾಗಲೀ
ಮನುಜ ಮಜನಗೈಯೆ ವಾಜಪೇಯಾದಿ ಮಖ
ವನುಸರಿಸಿದಕೆ ಫಲವೇನು ತತ್ಪಲವೀವೆ ೪
ಅರವತ್ತು ಸಹಸ್ರ ವರುಷಂಗಳಲ್ಲಿ ನಿ
ರ್ಜರ ತರಂಗಿಣಿಯ ಮಜ್ಜನದ ಫಲವು
ಗುರುವು ಕನ್ಯಸ್ಥನಾಗಿರಲು ಒಂದಿನ ಮಿಂದ
ನರರಿಗಾ ಪುಣ್ಯಸಮನೆನಿಸಿ ತತ್ಫಲವೀವೇ ೫
ಮನನಶೀಲ ಸುಯೋಗಿಗಳಿಗಾವ ಗತಿಯು ಇಹ
ವನುದಿನದಿ ನಿನ್ನ ತೀರದಲಿ ಇಪ್ಪಾ
ಮನುಜೋತ್ತಮರಿಗೆ ಆ ಗತಿಯಿತ್ತು ಪಾಲಿಸುವೆ
ಅನುಪಮ ಸುಕಾರುಣ್ಯಕೆಣೆಗಾಣಿ ಜಗದೊಳಗೆ ೬
ತಾಯೆ ಎನ್ನನುದಿನದಿ ಹೇಯ ಸಂಸಾರದೊಳ
ಗಾಯಾಸ ಗೊಳಿಸದಲೆ ಕಾಯಬೇಕೊ
ವಾಯುಪಿತ ಶ್ರೀ ಜಗನ್ನಾಥ ವಿಠ್ಠಲ ಹೃ
ತ್ತೋಯಜದೊಳಗೆ ಕಾಂಬುಪಾಯ ಮಾರ್ಗವ ತೋರೆ ೭

ಪಂಚೇಂದ್ರಿಯಗಳಿಂದ ಲೌಕಿಕ ಸುಖಗಳನ್ನು
೮೩
ದಯಮಾಡೆ ದಯಮಾಡೆ ತಾಯಿ ವಾಗ್ದೇವಿ ಪ
ದಯದಿಂದ ನೀನೆನ್ನ ನೋಡೆ ವಾಗ್ದೇವಿ ಅ.ಪ.
ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆ
ವ್ರತತಿಜನೇತ್ರೆ ಭಾರತಿ ನೀ ದಯಮಾಡೆ ೧
ಸುಮುಖೀ ತ್ವಚ್ಚರಣಾಬ್ಜದ್ರುಮಛಾಯಾಶ್ರಿತರ
ಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ ೨
ಜಗನ್ನಾಥವಿಠಲನಂಘ್ರಿಗಳ ಸೇವೆಯೊಳು
ಸುಗುಣೆ ಸನ್ಮತಿಗೊಟ್ಟು ಬೇಗೆನ್ನ ಸಲಹೆ ೩

ಶ್ರೀಹರಿ ಪರವಾದ ಸ್ತೋತ್ರ

ದಯವಾಗೋ ದಯವಾಗೋ ಪ
ಹಯಮುಖ ಭಯಕೃದ್ಭಯನಾಶನ ಹರಿ ಅ
ದ್ರೌಪದಿ ಮೊರೆ ಕೇಳ್ಯಾಪದ್ಬಾಂಧವ
ನೀ ಪೊರೆದಯ್ ರಮಾಪತಿ ನಿರುತ ೧
ಖರಮುರ ನರಕಾದ್ಯರ ಸಂಹರಿಸಿದೆ
ಪರಮ ಪುರುಷ ಸಂಹರಭವಹರನೆ ೨
ಶತ್ರುತಾಪಕ ಜಗತ್ರಯ ವ್ಯಾಪ್ತ ಪ
ವಿತ್ರ ಪಾಣಿ ಸರ್ವತ್ರದಿ ಎಮಗೆ ೩
ಎಷ್ಟೆಂದುಸುರಲಿ ದುಷ್ಟಜನರು ಬಲು
ಕಷ್ಟ ಬಡಿಪ ಬಗೆ ಜಿಷ್ಣು ಸಾರಥಿಯೆ ೪
ಗೋಭೂಸುರರಿಗೆ ಭೂಭುಜರ ಭಯ ಪ
ರಾಭವಗೈಪುದು ಶ್ರೀ ಭೂರಮಣನೆ ೫
ಅಪ್ರಮೇಯ ನೀ ಕ್ಷಿಪ್ರದಿ ಒಲಿದು ಜ
ಯಪ್ರದನಾಗು ಸುಪ್ರಹ್ಲಾದವರದನೆ ೬
ಯಾತಕೆ ಎಮ್ಮನು ಭೀತಿಗೊಳಿಪೆ ಪುರು
ಹೂತವಿನುತ ಜನಗನ್ನಾಥವಿಠ್ಠಲಾ ೭

ಚೆಂಡಾಟ, ಕಣ್ಣುಮುಚ್ಚಾಲೆ
೧೪೨
ದಾಸರಾಯ ಪುರಂದರ ದಾಸರಾಯ ಪ
ದಾಸರಾಯ ಪ್ರತಿವಾಸರದಲಿ ಶ್ರೀನಿ
ವಾಸನ್ನ ತೋರೋ ದಯಾಸಾಂದ್ರ ಅ.ಪ.
ವರದನಾಮಕ ಭೂಸುರನ ಮಡದಿ ಬ
ಸಿರಲಿ ಜನಿಸಿ ಬಂದು ಮೆರೆದೆ ಧರಣಿಯೊಳು ೧
ಕುಲಿಶಧರಾಹ್ವಯ ಪೊಳಲೊಳು ಮಡದಿ ಮ
ಕ್ಕಳ ಕೂಡಿ ಸುಖದಿ ಕೆಲ ಕಾಲದಲಿದ್ಯೊ ೨
ವ್ಯಾಸರಾಯರಲಿ ಭಾಸುರ ಮಂತ್ರೋ ಪ
ದೇಶವ ಕೊಂಡು ರಮೇಶನ ಒಲಿಸಿದ್ಯೊ ೩
ಮನೆ ಧನ ಧಾನ್ಯ ವಾಹನ ವಸ್ತುಗಳನೆಲ್ಲ
ತೃಣಕೆ ಬಗೆದು ಕೃಷ್ಣಾರ್ಪಣವೆಂದೆ ಬುಧರಿಗೆ ೪
ಪ್ರಾಕೃತ ಭಾಷೆಯೊಳ್ ನೀ ಕೃತಿ ಪೇಳಿ ಆ
ಪ್ರಾಕೃತ ಹರಿಯಿಂದ ಸ್ವೀಕೃತ ನೀನಾದ್ಯೊ ೫
ತೀರ್ಥಕ್ಷೇತ್ರಗಳ ಮೂರ್ತಿ ಮಹಿಮೆಗಳ
ಕೀರ್ತಿಸಿ ಜಗದಿ ಕೃತಾರ್ಥನೆಂದೆನಿಸಿದೆ೬
ಪಾತಕ ವನಧಿ ಪೋತನೆನಿಪ ಜಗ
ನ್ನಾಥ ವಿಠ್ಠಲನ ಸುಪ್ರೀತಿಯಿಂದೊಲಿಸಿದೆ ೭

ನುಡಿ-೪: ವೇದಾಭಿಮಾನಿಯಾದ
೧೫೬
ದಾಸರಿಗುಂಟೆ ಭಯಶೋಕ ಹರಿ
ದಾಸರಿಗುಂಟೆ ಭಯಶೋಕ ಪ
ವಾಸುದೇವನ ಸದಾ ಸ್ಮರಿಸುವ ಹರಿ
ದಾಸರಿಗುಂಟೆ ಭಯಶೋಕ ಅ.ಪ.
ಕಾಮಧೇನು ವರ ಕಲ್ಪವೃಕ್ಷ ಚಿಂ
ತಾಮಣಿ ಕೈ ಸೇರಿದಕಿಂತ
ನಾಮತ್ರಯದಿಂದಪ್ಪುದು ಸುಖವು ಸು
ಧಾಮನೆ ಸಾಕ್ಷಿದಕೆಂಬ ಹರಿ ೧
ರಾಮಚಂದ್ರ ಶಬರಿ ತಿಂದೆಂಜಲ
ಜಾಮಿಳ ಮಾಡ್ದ ಕುಕರ್ಮಗಳ
ಧೂಮಕೇತು ತಾ ಭುಂಜಿಸುವಂದದಿ
ಮೇಧ್ಯಾಮೇಧ್ಯ ಕೈಗೊಂಬನೆಂಬ ಹರಿ ೨
ನೇಮ ಮಂತ್ರ ಜಪ ದೇವತಾರ್ಚನ ಸ
ಕಾಮುಕವಾಗಲು ತ್ಯಜಿಸುತಲಿ
ಧೀಮಂತರಾಗತಿಪ್ರಿಯವಾಗಲು ಬಹು
ತಾಮಸ ಕರ್ಮವ ಮಾಳ್ಪುವೆಂಬ ಹರಿ ೩
ಏನು ಮಾಡಿದಪರಾಧವ ಕ್ಷಮಿಸುವ
ಏನು ಕೊಟ್ಟುದನು ಕೈಗೊಂಬ
ಏನು ಬೇಡಿದಿಷ್ಟಾರ್ಥವ ಕೊಡುವ ದ
ಯಾನಿಧಿ ಅನುಪಮನೆಂಬ ಹರಿ ೪
ಪ್ರಹ್ಲಾದವರದ ಪ್ರಕಟನಾಗದಲೆ
ಎಲ್ಲರೊಳಿಪ್ಪನು ಪ್ರತಿದಿನದಿ
ಬಲ್ಲಿದವರಿಗೆ ಬಲ್ಲದ ಜಗನ್ನಾಥ
ವಿಠ್ಠಲ ವಿಶ್ವವ್ಯಾಪಕನೆಂಬ ಹರಿ ೫

ಹರಿದಾಸರ ಸಿದ್ಧಾಂತದ ಪ್ರಕಾರ
೧೦
ದಾಸೋಹಂ ತವ ದಾಸೋಹಂ ಪ
ವಾಸುದೇವ ವಿತತಾಘಸಂಘ ತವ ಅ
ಜೀವಾಂತರ್ಗತ ಜೀವ ನಿಯಾಮಕ
ಜೀವವಿಲಕ್ಷಣ ಜೀವನದ
ಜೀವಾಧಾರಕ ಜೀವರೂಪ ರಾ
ಜೀವ ಭವಜನಕ ಜೀವೇಶ್ವರ ತವ ೧
ಕರ್ಮಕರ್ಮಕೃತ ಕರ್ಮಕೃತಾಗಮ
ಕರ್ಮ ಫಲಪ್ರದ ಕರ್ಮಜಿತ
ಕರ್ಮಬಂಧ ಮಹಕರ್ಮ ವಿಮೋಚಕ
ಕರ್ಮನಿಗ್ರಹ ಕರ್ಮಸಾಕ್ಷಿ ತವ ೨
ಕಾಲಾಹ್ವಯ ಮಹಕಾಲ ನಿಯಾಮಕ
ಕಾಲಾತೀತ ತ್ರಿಕಾಲಜ್ಞ
ಕಾಲಪ್ರವರ್ತಕ ಕಾಲನಿವರ್ತಕ
ಕಾಲೋತ್ಪಾದಕ ಕಾಲಮೂರ್ತಿ ತವ ೩
ಧರ್ಮಯೂಪ ಮಹಧರ್ಮ ವಿವರ್ಧನ
ಧರ್ಮ ವಿಧೋತ್ತಮ ಧರ್ಮನಿಧೇ
ಧರ್ಮ ಸೂಕ್ಷ್ಮ ಮಹಧರ್ಮ ಸಂರಕ್ಷಕ
ಧರ್ಮಸಾಕ್ಷಿ ಯಮಧರ್ಮಪುತ್ರ ತವ ೪
ಮಂತ್ರಯಂತ್ರ ಮಹ ಮಂತ್ರ ಬೀಜ ಮಹ
ಮಂತ್ರರಾಜಗುರು ಮಂತ್ರ ಧೃತ (ಜಿತ)
ಮಂತ್ರಮೇಯ ಮಹಮಂತ್ರಗಮ್ಯ ಫಲ
ಮಂತ್ರಮೇಯ ಜಗನ್ನಾಥ ವಿಠಲ ತವ ೫

ಬೆಳಗು – ಕಾಡುಕತ್ತಲೆ
೯೪
ದ್ವಾರಪಾಲಕರಿಗಾನಮಿಪೆ ನಿತ್ಯ
ಶ್ರೀ ರಮಣ ನಾರಯಣನ ಪುರತ್ರಯದೊಳಿಹ ಪ
ಜಯ ವಿಜಯ ಬಲಪ್ರಬಲ ಚಂಡ ಪ್ರಚಂಡ ನಿ
ರ್ಭಯ ನಂದ ಸುನಂದ ಕುಮುದ ಕುಮುದಾ
ನಯನ ಭದ್ರ ಸುಭದ್ರಾ ಧಾಮ ಸುಧಾಮ ಸಂ
ಪ್ರಿಯ ತಮನ ಆಜ್ಞಾಧಾರಕರೆಂದೆನಿಸುವ ೧
ಲಸದೂಧ್ರ್ವಪುಂಡ್ರ ದ್ವಾದಶನಾಮ ಶಂಖ ಸುದ
ರುಶನ ಸುಗದಾ ಪದ್ಮ ನಾಮ ಮುದ್ರಾ
ಬಿಸಿಜಾಕ್ಷ ಶ್ರೀತುಳಸಿ ಕುಸುಮ ಮಾಲಿಕೆ ಧರಿಸಿ
ನಸುನಗುತಹರ್ನಿಶಿಗಳಲಿ ಹರಿಯ ತುತಿಪಾ ೨
ಮಣಿಮಯ ಕಿರೀಟ ಕುಂಡಲ ಹಾರ ಪದಕ ಕಂ
ಕಣ ನಡುವಿನೊಡ್ಯಾಣ ಪೀತಾಂಬರ
ಕ್ವಣಿತನೂಪುರ ಗೆಜ್ಜೆ ಚರಣಾಭರಣ ಸುಲ
ಕ್ಷಣರಾದ ಸರ್ವಾಂಗ ಸುಂದರರೆನಿಸುವಾ ೩
ಕರದೊಳೊಪ್ಪುವ ಗದಾಯುಧ ಕುಂದರದನ ಕ
ಸ್ತುರಿನಾಮ ಮಾಣಿಕಕ್ಷತೆಯ ಧರಿಸಿ
ಪರಿಮಳಿಪ ಕುಸುಮ ಕೇಸರಿ ಗಂಧದಿಂ ಭಯಂ
ಕರರಾಗಿ ತೋರುವರು ನೋಳ್ಪರಿಗೆ ನಿತ್ಯ ೪
ಮೂರು ಬಾಗಿಲಲಿ ಶ್ರೀ ದೇವಿಯಿಪ್ಪಳು ವಾಯು
ಭಾರತಿ ಆಜ್ಞದಿಂದೀ ದೇವರು
ವೀರಜಯ ವಿಜಯಾದಿಗಳಿಗೆ ವಿಷ್ವಕ್ಸೇನ
ಪ್ರೇರಕನು ತಾನಾಗಿ ಶ್ರೀಶನರ್ಚಿಪನೆಂದು ೫
ಹೃದಯ ಶ್ರೋತ್ರ ಚಕ್ಷುವದನಾದಿ ಕರಣದೊಳು
ನದನದಿಗಳೊಳು ಮಹೋದಧಿಗಳೊಳಗೆ
ಉದಿತ ಭಾಸ್ಕರ ಮಂಡಲದಿ ದೇವಗೃಹದಿ
ಸದಸದ್ವಿಲಕ್ಷಣ ಸುದತಿಸಹ ಪೂಜಿಸುವ ೬
ದ್ರುಹಿಣ ಮೊದಲಾದ ಸುಮನಸ ಪೂಜ್ಯ ಚರಣಾಬ್ಜ
ಮಹಿಮ ಮಂಗಳಚರಿತ ಸುಗುಣ ಭರಿತ
ಅಹಿರಾಜ ಶಯನ ಜಗನ್ನಾಥವಿಠಲನ ಸ
ನ್ಮಹಿಮೆಗಳ ತಿಳಿಸಿ ತೋರಿಸಲಿ ಮನ್ಮನದೀ ೭
ತೀರ್ಥಕ್ಷೇತ್ರ

ತಮ್ಮ ತಂದೆಯವರಾದ
೫೮
ಧನ್ಯನಾದೆನು ವಿಠಲನ ಕಂಡು ಓಡಿತು ಅಘದ್ಹಿಂಡು ಪ
ಧನ್ಯನಾದೆನೂ ಕಾಮನ್ನ ಪಿತನ ಲಾ
ವಣ್ಯ ಮೂರುತಿಯ ಕಣ್ಣಿಲೆ ಕಂಡು ಅ.ಪ.
ದೇವವರೇಣ್ಯ ಸದಾ ವಿನೋದಿ ವೃಂ
ದಾವನ ಸಂಚರ ಗೋವನ ಕಂಡು ೧
ಮಂಗಳಾಂಗ ಕಾಳಿಂಗ ಮಥಸ್Àನ ಮಾ
ತಂಗವರ ವರದ ರಂಗನ ಕಂಡು ೨
ಹಾಟಕಾಂಬರ ಕಿರೀಟ ಸಾರಥಿ
ತಾಟಕಾರಿ ವೈರಾಟನ ಕಂಡು ೩
ಚಿಂತಿತ ಫಲವ ಕೃತಾಂತನಾತ್ಮಜಾ
ದ್ಯಂತರಹಿತ ನಿಶ್ಚಿಂತನ ಕಂಡು ೪
ಮಾತುಳಾಂತಕ ವಿಧಾತಪಿತ ಜಗ
ನ್ನಾಥ ವಿಠಲ ವಿಖ್ಯಾತನ ಕಂಡು ೫

ನುಡಿ-೧: ಸ್ವರಮಣ
೧೪೪
ನಂಬಿದೆ ನಿನ್ನ ಪಾದಾಂಬುಜ ನರಸಿಂಹ |
ದಾಸರಾಯಾ ಎನ್ನ |
ಬೆಂಬಿಡದಲೆ ಕಾಯೋ ಬಹು ಪರಿಯಿಂದ ದಾಸರಾಯಾ ಪ
ಈರೇಳು ವರುಷವಾರಂಭಿಸಿ ಪ್ರತಿದಿನ | ದಾಸರಾಯ ಜಾವು
ಮೂರುಗಳಲ್ಲಿ ಮುಕುಂದನ ಚರಣವ | ದಾಸರಾಯಾ |
ಚಾರು ಮನಾಬ್ಜದಿ ಬಹಿರದಿ ಬಗೆ ಬಗೆ | ದಾಸರಾಯಾ |
ಬಿಡದಾರಾಧಿಸಿದೆ ಭೂರಿ ಭಕುತಿ ಭರಿತನಾಗಿ | ದಾಸರಯ್ಯಾ೧
ರಂಗನೊಲಿಮೆ ಭಾಗವತರೆಂದು ಹರುಷದಿ | ದಾಸರಾಯಾ | ಗುರು
ಪುಂಗವ ಸುಮತೀಂದ್ರ ರಾಯ ಕರೆದ ನಿನ್ನ | ದಾಸರಾಯಾ |
ಸಂಗೀತ ರಸನ ಪಾನಮಾಡಿ ಹರುಷದಿ | ದಾಸರಾಯಾ | ಹರಿ |
ಡಿಂಗರೊಳುತ್ತುಂಗನೆನಿಸಿಕೊಂಡೆ ದಾಸರಾಯ ೨
ಕುಶಲಗಾನವ ಕೇಳಿ ಗುರುಸತ್ಯ ಪೂರ್ಣರು | ದಾಸರಾಯಾ | ಪರಾ
ವಸುನಾಮ ಗಂಧರ್ವನವತಾರ ನೀನೆಂದು | ದಾಸರಾಯಾ |
ಪೆಸರಿಟ್ಟರಂದು ವಿದ್ವಜ್ಜನ ಮೆಚ್ಚಲು ದಾಸರಾಯಾ | ಎನ
ಗೊಶವಹುದೇ ನಿಮ್ಮ ಮಹಿಮೆ ಕೊಂಡಾಡಲು |ದಾಸರಾಯಾ | ೩
ಚರಿಸಿದೆ ಪುಣ್ಯಕ್ಷೇತ್ರಗಳ ಭಕುತಿಯಿಂದ | ದಾಸರಾಯಾ | ಪ್ರತಿ |
ವರುಷ ಬಿಡದೆ ಶೇಷಗಿರಿಯವಾಸನ | ದಾಸರಾಯಾ |
ಚರಣಾಬ್ಜ ಯುಗಲರ ನೂರಬ್ಧ ಪರಿಯಂತ | ದಾಸರಾಯಾ | ಪರಿ
ಚರಿಯವ ಕೈಕೊಂಡು ಪಡೆದೆ ಮಂಗಳಗತಿ ದಾಸರಾಯ ೪
ಮುನಿಯು ಉಪೇಂದ್ರರಾಯರು ನಿಮ್ಮ ಚರಿತೆಯ | ದಾಸರಾಯಾಕೇಳಿ
ಸಾನುರಾಗದಿ ಸರ್ವ ಮಂತ್ರೋಪದೇಶವ | ದಾಸರಾಯಾ |
ಆನುಪೂರ್ವಕಮಾಡಿ ಅತಿ ಸಂತೋಷದಿ | ದಾಸರಾಯಾ | ಕೊಟ್ಟರು
ಶ್ರೀ ನರಸಿಂಹ ಪ್ರತಿಮೆ ಸಾಲಿಗ್ರಾಮ | ದಾಸರಾಯಾ | ೫
ಕಿಂಕರನೆನಿಸಿ ಪರಂದರದಾಸರೆ | ದಾಸರಾಯಾ | ಅವರಿಂ
ದಂಕಿತ ವಹಿಸಿ ನಿಶ್ಯಂಕೆಯಿಂದ ನೀನು ದಾಸರಾಯಾ |
ಪೊಂಕವ ಪೊಗಳುತ ಪೊಡವಿಯೊಳು ಚರಿಸಿದೆ | ದಾಸರಾಯಾ|ಭವ
ಪಂಕವ ದಾಟ ಪರೇಶನನೈದಿದೆ | ದಾಸರಾಯಾ ೬
ಜನನವಾರಭ್ಯವಸಾನದ ಪರಿಯಂತ | ದಾಸರಾಯಾ | ಹೀನ
ಮನುಜಗೆ ಕರ ಒಡ್ಡಲೊಲ್ಲೆನೆಂಬುವ ಛಲ | ದಾಸರಾಯಾ |
ನಿನಗೆ ಸಲ್ಲಿತು ನಿಜ ಭಾಗವತರ ಪ್ರಿಯ | ದಾಸರಾಯಾ | ನಿಮ್ಮಾ
ಅನುಭವೋಪಾಸನೆ ಏನು ತಿಳಿಯದು ದಾಸರಾಯಾ ೭
ಇರಳು ಹಗಲು ನಿಮ್ಮ ಚರಣ ಕಮಲ ಧ್ಯಾನ ದಾಸರಾಯಾ |
ಸ್ನಾನ ವರ ಮಂತ್ರ ಜಪ ತಪ ವಿಹಿತಾಚರಣೆಗಳು | ದಾಸರಾಯಾ
ಪೆರತೊಂದು ಸಾಧನ ಮನ ವಾಕ್ಕಾಯಗಳಲಿ | ದಾಸರಾಯಾ |
ನಾನೊಂದರಿಯೆ ದಯಾಬ್ಧಿ ಉದ್ಧರಿಸೆನ್ನ ಭವದಿಂದ ದಾಸರಾಯಾ ೮
ನಾರಾಯಣಾತ್ಮಜ ಅನಂತಾರ್ಯರುದರದಿ ದಾಸರಾಯಾ |ಪುಟ್ಟಿ |
ನೂರೊಂದು ಕುಲಗಳುದ್ಧಾರ ಮಾಡಿದೆ | ದಾಸರಾಯಾ |
ಕಾರುಣ್ಯನಿಧಿ ಜಗನ್ನಾಥವಿಠಲ | ದಾಸರಾಯಾ | ನಿಮ್ಮ
ಚಾರು ಚರಿತ್ರೆಯ ತುತಿಸಿ ಪಾವನನಾದೆ | ದಾಸರಾಯಾ ೯

ನುಡಿ-೨: ಚಂದ್ರಿಕಾ ನ್ಯಾಯಾಮೃತ
೧೩೬
ನಮಿಸುವೆನು ಭುವನೇಂದ್ರ ಗುರುರಾಯರ
ಅಮಿತ ಮಹಿಮಗೆ ಅಹೋರಾತ್ರಿಯಲಿ ಬಿಡದೆ ಪ
ಸಿದ್ಧಾರ್ಧಿ ನಾಮ ಸಂವತ್ಸರದ ವೈಶಾಖ
ಶುದ್ಧೇತರ ಪಕ್ಷ ಸಪ್ತಮಿಯಲಿ
ವಿದ್ವತ್ಸಭಾ ಮಧ್ಯದಲಿ ರಾಮವ್ಯಾಸರ
ಪದದ್ವಯವನೈದಿದ ಮಹಾಮಹಿಮರನ ಕಂಡು ೧
ರಾಜವಳ್ಳಿ ಎಂಬ ಪುರದಿ ಕರುಣದಿ ಪಾರಿ
ವ್ರಾಜಕಾಚಾರ್ಯ ವರವತಂಸ ಪಾದ
ರಾಜೀವಯುಗಳ ಧೇನಿಸುತಿಪ್ಪರಿಗೆ ಕಲ್ಪ
ಭೂಜದಂದದಿ ಬೇಡಿದಿಷ್ಟಾರ್ಥ ಕೊಡುವರಿಗೆ ೨
ಶ್ರೀ ತುಂಗ ಭದ್ರಾ ತರಂಗಿಣೀ ತೀರದಲಿ
ವಾತಾತ್ಮಜನ ಪಾದ ಮೂಲದಲ್ಲಿ
ಪ್ರೀತಿ ಪೂರ್ವಕವಾಗಿ ವಾಸವಾದರು ಜಗ
ನ್ನಾಥ ವಿಠಲನ ಕಾರುಣ್ಯಪಾತ್ರರ ಕಂಡು ೩

ಮೂರು ನುಡಿಗಳಿರುವ
೨೮
ನಮೋ ನಮಸ್ತೇ ನರಸಿಂಹ ದೇವಾ
ಸ್ಮರಿಸುವವರ ಕಾವಾ ಪ
ಸುಮಹಾತ್ಮ ನಿನೆಗೆಣೆ ಲೋಕದೊಳಾವಾ ತ್ರಿಭುವನ ಸಂಜೀವಾ
ಉಮೆಯರಸನ ಹೃತ್ಕಮಲದ್ಯುಮಣಿ ಮಾ
ರಮಣ ಕನಕ ಸಂಯಮಿ ವರವರದಾ ಅ
ಕ್ಷೇತ್ರಜ್ಞ ಕ್ಷೇಮಧಾಮ ಭೂಮಾ ದಾನವ ಕುಲಭೀಮಾ
ಗಾತ್ರ ಸನ್ನುತ ಬ್ರಹ್ಮಾದಿ ಸ್ತೋಮಾ ಸನ್ಮಂಗಳ ನಾಮಾ
ಚಿತ್ರ ಮಹಿಮನಕ್ಷತ್ರನೇಮಿಸ
ರ್ವತ್ರಮಿತ್ರ ಸುಚರಿತ್ರ ಪವಿತ್ರ ೧
ಅಪರಾಜಿತ ಅನಘ ಅನಿರ್ವಿಣ್ಣ ಲೋಕೈಕ ಶರಣ್ಯ
ಶಫರಕೇತು ಕೋಟಿಲಾವಣ್ಯ ದೈತ್ಯೇಂದ್ರ ಹಿರಣ್ಯಕ
ಶಿಪುಸುತನ ಕಾಯ್ದಪೆನೆನುತಲಿ ನಿ
ಷ್ಕಪಟ ಮನುಜಹರಿವಪುಷ ನೀನಾದೆ ೨
ತಪನ ಕೋಟಿ ಪ್ರಭಾವ ಶರೀರಾ ದುರಿತೌಘವಿದೂರಾ
ಪ್ರಪಿತಾಮಹ ಮಂದಾರ ಖಳವಿಪಿನ ಕುಠಾರಾ
ಕೃಪಣಬಂಧು ತವ ನಿಪುಣತನಕೆ ನಾ
ನುಪಮೆಗಾಣೆ ಕಾಶ್ಯಪಿವರವಾಹನಾ ೩
ವೇದವೇದಾಂಗವೇದ್ಯಾ ಸಾಧ್ಯ ಅಸಾಧ್ಯ
ಶ್ರೀದ ಮುಕ್ತಾಮುಕ್ತರಾರಾಧ್ಯಾ
ಅನುಪಮ ಅನವದ್ಯ ಮೋದಮಯನೆ ಪ್ರಹ್ಲಾದವರದ ನಿ
ತ್ಯೋದಯ ಮಂಗಳ ಪಾದಕಮಲಕೆ ೪
ಅನಿಮಿತ್ತ ಬಂಧು ಜಗನ್ನಾಥ ವಿಠಲ ಸಾಂಪ್ರತ
ನಿನಗೆ ಬಿನ್ನೈಸುವೆ ಎನ್ನಯ ಮಾತಾ ಲಾಲಿಸುವುದು ತಾತಾ
ಗಣನೆಯಿಲ್ಲದವ ಗುಣವೆನಿಸಿದೆ ಪ್ರತಿ
ಕ್ಷಣಕೆ ಕಥಾಮೃತ ಉಣಿಸು ಕರುಣದಿ ೫

ಕುವಲಯಾಪೀಡ ಎಂಬುದು
೬೩
ನಮೋ ನಮೋ ಕಮಲಾಲಯೆ ಸರ್ವೋ
ತ್ತುಮ ನಾರಾಯಣನಂಕದ್ವಯ
ಸಮುಪಸ್ಥಿತೆ ಸುಂದರ ಮದಗಜ
ಗಮನೆ ಗುಣಪೂರ್ಣೆ ಶೋಭಾನೆ ಪ
ಕಂಗಳ ಕುಡಿನೋಟದಿ ಕಂಜಜ
ಗಂಗಾಧರ ಸುರಮುಖ ಸುಜನರ
ಇಂಗಿತ ಫಲ ಪೂರೈಸಿಕೊಡುವ ಮಂಗಳ ಸುಚರಿತ್ರೆ
ಭೃಂಗಾಳಿಗಳಂದದಿ ಸೊಗಯಿಪ
ಮುಂಗುರುಳಿಂದೊಪ್ಪುವ ನಿಜಪತಿ
ಸಂಗಡ ಬಾ ಹಸಿಯ ಜಗಲೀಗೆ ೧
ಜಲಜಾಕ್ಷನ ವಿಮಲಾಂಗದಿ
ಪ್ರತಿ ಫಲಿಸಿದ ರೂಪಗಳನೆ ನೋಡುತ
ಪುಳಕೋತ್ಸವದಿಂದಲಿ ಪಾಡುತ
ಹೊಲಬು ಗಾಣದಲೆ ತಲೆದೂಗುತ ಮಿಗೆ ಸಂತೋಷದಿ
ಗಳರವದಿಂ ಪಾಡುತ ಶ್ರೀ ಭೂಲಲನೆ
ಬಾ ಹಸಿಯ ಜಗಲೀಗೆ ೨
ಪ್ರತಿಫಲಿಸಿಹ ರೂಪಗಳೆನ್ನವು
ಕತಿಪಯರೂಪಗಳೆನಗಿಂದಲಿ
ಅತಿಶಯವೆ ತೋರುತಲಿಪ್ಪವು
ಪ್ರತಿ ಪ್ರತಿಕ್ಷಣದಿ ಶ್ರುತಿ ಪ್ರತೀಕನು ದಯದಿಂದೆನ
ಗ್ಹಿತದಿಂದಲಿ ತೋರಿದನೆನುತಲಿ
ನತಿಸುತ ನಗುತಿಪ್ಪ ಲಕ್ಷ್ಮೀ ಹಸಿಗೇಳು ೩
ಆ ಬ್ರಹ್ಮಾಂಡಗಳೊಳ ಹೊರ
ಗುಪಮರು ನಿನಗಿಲ್ಲವಾಗಲು
ಅಪರಾಜಿತನಮಲ ಸುರೂಪ
ಗಳಪರೋಕ್ಷಣದಿ ಕಾಂಬ
ಚಪಲಾಂಬಕ ಕೃಪಣರ ಸಲಹಲು ಸ್ವಪತಿಯ
ಶಿಪಿವರನಂಸಗೆ ಸುಫಲದೆ ಬಾಹಸಿಯ ಜಗುಲೀಗೆ ೪
ವೀತಭಯನ ವಕ್ಷಸ್ಥಳವೆ ಪು
ರಾತನ ಮನೆಯೆನಿಪುದು ಅವಿನಾ
ಭುತರು ನೀವಿರ್ವರು ಅಮೃತಾ
ಜಾತರು ಎಂದೆಂದೂ
ಭೌತಿಕ ಮಂದಿರದೊಳು ನೆಲೆಸಿ ಪು
ನೀತರ ಮಾಳ್ಪುದೆಮ್ಮ ಜಗ
ನ್ನಾಥ ವಿಠಲನರ್ಧಾಂಗಿ ಜಗ
ನ್ಮಾತೆ ವಿಖ್ಯಾತೆ ಬಾಹಸಿಯ ಜಗುಲೀಗೆ ೫

ರಾಮಾಯಣದ ಕಥೆ ಸಂಕ್ಷಿಪ್ತವಾಗಿ
೧೮೧
ನಮೋ ನಮೋ ನಾರಾಯಣ
ನಿಖಿಳಾಗಮ ಸನ್ನುತ ಸುಗುಣ ಗುಣಾರ್ಣವ
ಸುಮನಪತಿ ಶ್ರೀ ಭೂದುರ್ಗಾರಮಣ ಮಾಂಪಾಹಿ ಪ
ಲೋಕೇಶ ವಿಧಾತಜನಕ ರ
ತ್ನಾಕರಮಥನ ಜಗದಾಘಪಹ
ಶ್ರೀಕಂಠ ಪಿತಾಮಹ ಮದನನೇಕ ಸುಲಾವಣ್ಯ
ಆಕಾಶ ತರಂಗಿಣಿ ಪಿತ ಕರುಣಾಕರ
ಕೌಮೋದಕಿಧರ ಧರಣಿ ಕುವರಾಂತಕ
ಕರುಣದಿ ಚಿತ್ತೈಸು ನೀ ಹಸಿಗೆ ಶೋಭಾನೆ ೧
ಅರದೂರಾಬ್ಜ ಭವಾಂಡೋದರ
ಶರಣಾಗತ ಸವಿ ಪಂಜರ ಅಂ
ಬರ ಭೂ ಪಾತಾಳದಿ ವ್ಯಾಪ್ತಾ ಜರಮೃತ್ಯು ವಿದೂರ
ಕರಿವರ ಪ್ರಭಂಜನ ಪೀತಾಂ
ಬರಧರ ಖಳಕುಲವನ ವೈಶ್ವಾ
ನರ ನಾರದನುತ ಮಹಿಮನೆ ಚಿತ್ತೈಸು [ಹಸೆಗೆ] ೨
ಸತ್ವರಜಸ್ತಮ ಜೀವರ
ತತ್ ಸಾಧನವರಿತವರಗತಿ ಗ
ಳಿತ್ತು ಪೊರೆವ ವಿಬುಧವರದ ವರಸತ್ಯವತಿ ಸೂನು
ಉತ್ತಮ ಪುರುಷನೆ ಚೇತನ ಜಡದ
ತ್ಯಂತವಿಭಿನ್ನ ವಿಜಯ ಸಖ
ಸತ್ಯಸುಕಾಮ ಕಮಲನಯನನೆ ಚಿತ್ತೈಸೊ [ಹಸೆಗೆ]೩
ವಾಸವತನುಸಂಭವ ಸಾರಥಿ
ವೀಶುದ್ಭುಜ ವಿಧೃತ ಸುದರ್ಶನ
ದಶಾರ್ಹ ದಿವಕರನಿಭ ಸಂಕಾಶ ಸುಭದ್ರಾತ್ಮಾ
ವಾಸುಕಿ ಪರ್ಯಂಕಶಯನ ಹರಿ
ವ್ಯಾಸಕಪಿಲ ದತ್ತಾತ್ರಯ ಮಹಿದಾಸ
ವೃಷಭರೂಪ ರಮೆಯರಸ ಚಿತ್ತೈಸು [ಹಸೆಗೆ]೪
ಪಾಂಡವ ಸಖ ಪತಿತ ಸುಪಾವನ
ಚಂಡಾಂಶು ನಿಶಾಕರ ಪಾವಕ
ಮಂಡಲದೊಳಗತಿ ಬೆಳಗುವ ಕೋದಂಡ ಧೃತ ಕರಾಬ್ಜ
ಕುಂಡಲ ಮಂಡಿತ ಗಂಡಸ್ಥಳ
ಖಂಡಮಹಿಮ ಖೇಚರ ಪುರಹರ
ಗಂಡುಗಲಿ ಜಗನ್ನಾಥ ವಿಠಲ ಚಿತ್ತೈಸೋ [ಹಸೆಗೆ]೫

ಕೃಷ್ಣನು ಎಂದಿಗೂ
೬೪
ನಮೋ ನಮೋ ರಮೆ ಕಮಲ ಸಂಭವೆ
ಹಿಮನಗಜಾರಮಣ ಸನ್ನುತೆ
ತಮರಿಪು ಶತ ಸಮಸನ್ನಿಭೆ ಇಭ
ಗಮನೆ ಇಂದಿರೆ ಶೋಭಾನೆ ಪ
ಶೃಂಗಾರ ತರಂಗ ಹೆಳಲಾ
ಬಂಗಾರವ ಪೊಂಗ್ಲಾದಿಗೆ ಬಲಿ
ವಂಗನೆ ಶಿರೋಮಂಗಳ ಮಡಿ ಜಡ ಜಂಗಮ ವ್ಯಾಪ್ತಿ
ಅಂಗಜ ಶರ ಕಂಗಳೆ ದ್ವಿಜೋ
ತ್ತುಂಗಮ ರಂಗನ ನಿಜ ಅ
ರ್ಧಾಂಗಿನಿಯೆ ಬಾ ಹಸಿಯ ಜಗುಲೀಗೆ ೧
ಪೊಸುಕುಸುಮ ಶಿರಸದಲೊಪ್ಪುವ
ನೊಸಲಲಿ ರಂಜಿಸುವ ಕಸ್ತೂರಿ
ದಿಶದುಂಬಿದ ಬಿಸಿಜಾನನ ಪ್ರಭೆ
ಎಸೆವ ಕಂಧರ ಕಕ್ಕಜ ಕುಚಕು
ಪ್ಪುಸದಲ್ಲತಿ ಶೋಭಿಸುತಿಹ ಪವಳ
ದಾ ಸರವ ತೂಗುವ ಅಸಮೇ ಬಾ ಹಸೆಯ ಜಗುಲೀಗೆ ೨
ಕರಿಸೊಂಡಿಲುತೆರ ಚತುರಕರ
ವರ ಅಭಯಸರಸಿಜಯುಗಧರ ಜಠರಾ
ವರತ್ರಿವಳಿ ಗಂಭೀರನಾಭಿ ಕ
ಟಸೂತರೆ ಹೇಮಾಂಬರೆ
ಚರಣಂದಿಗಿ ಸಪಳಿ ಪೊಂಗೆಜ್ಜೆಯಾ
ಮೆರೆಯುತ ಸರಸಳೆ ಬಾಹಸಿಯ ಜಗುಲೀಗೆ ೩
ಮೃಗಲಾಂಛನೆ ಮಿಗೆ ಶೋಭಿಪ ಪದ
ಯುಗ ನಖ ಪಂಕ್ತಿಗಳೊಪ್ಪುವ ಗತ
ಅಘ ಸಂಕುಲೆ ಅಗಣಿತ ಮಹಿಮಳೆ ಸುಗುಣ ಸಂಪನ್ನೆ
ಭಗವಂತನ ಜಘನದಿ ಪೊಳೆಯುತ
ಖಗರಾಜನ ಪೆಗಲನೇರಿ ಅಮ
ರ ಗಣವ ಚಿರ ಬಾ ಹಸಿಯ ಜಗಲೀಗೆ ೪
ಅಂಭೃಣಿ ಸ್ವಾಯಂಭೂ ಸುರ ನಿಕು
ರುಂಬಕರ ಅಂಬುಜ ಪೂಜಿತೆ
ನಂಬಿದ ಜನರ್ಹಂಬಲಿಸುವ ಫಲ
ಸಂಭ್ರಮದಿ ಕೊಡುವಾ ಗಂಭೀರಾ ಸು
ಖಾಂಬೋಧಿ ಹರಿ ನಿತಂಬೆ ಪ
ಯಾಂಬೋಧಿ ಸುತೆ ಜಗದಂಬೆ ಬಾ ಹಸಿಯ ಜಗುಲೀಗೆ ೫
ಮಾಯೆ ನಾರಾಯಣಿ ಶ್ರೀ ಭೂ
ಜಾಯೆ ಕೃತಿ ಆಯತಾಕ್ಷಳೆ ಕಾಯಜನ ತಾಯೆ ಶರಣೆ
ಪ್ರಿಯ ಪಾವನ್ನೆ ವಾಯುಭುಕು ಶಾಯಿ ಅಮರಾಧೇಯಾ
ಜಗನ್ನಾಥವಿಠಲನ ಜಾಯೆ ಬಾ ಹಸಿಯ ಜಗುಲೀಗೆ ೬

ನುಡಿ-೧:ತುಚ್ಛನೆಂಬೋ
೧೧೩
ನಮೋ ನಮೋ ಶ್ರೀ ರಾಘವೇಂದ್ರ | ಸದ್ಗುಣ ಸಾಂದ್ರ
ಕಮಲ ನಾಭನ ದಾಸ ಕಮಲಾಪ್ತ ಭಾಸಾ ಪ
ದೇಶ ದೇಶಗಳಿಂದ ದೈನ್ಯದಿಂದಲಿ ಬಂದಾ
ಶೇಷ ಜನರಿಗಳಿಗಿಷ್ಟ ಸಲ್ಲಿಸುವ ವಿಶಿಷ್ಟಾ
ನಾ ಸೇರಿದೆನೋ ನಿನ್ನ ನಮಿತ ಜನರ ಪ್ರಸನ್ನ
ಭಾಸುರ ಚರಿತನೆ ಭಜಿಸುವೆನು ಅನವರತ ೧
ಭೇದಾರ್ಥ ಜಲಜಾರ್ಕ ಭೂರಿ ಬಲತರತರ್ಕ
ವಾದಿಶೈಲ ಕುಲಶ ವರಹಸುತೆ ವಾಸಾ
ಬಾಧಿಪ ಅಘ ಜೀರ್ಣ ಮಾಡು ಗುರುವರ ಪೂರ್ಣ
ಬೋಧ ಮತ ಸಂಭೂತ ಭೂರಿ ಪ್ರಖ್ಯಾತ ೨
ನತಜನಾಶ್ರಯ ಪ್ರೀಯ ನೆರೆ ನಂಬಿದೆನೋ ಮಾಯ
ಮತ ಕದಳಿ ಗಜೇಂದ್ರ ವಿಬುಧಾಬ್ದಿ ಚಂದ್ರ
ಕ್ರತು ಭುಕು ಜಗನ್ನಾಥ ವಿಠಲನ ನಿಜದೂತ
ತುತಿಸಲಾಪೆನೆ ನಿನ್ನ ಯತಿಶಿರೋರನ್ನ ೩

ಹನುಮ, ಭೀಮ
೨೯
ನರಸಿಂಹ ಪಾಹಿ ಲಕ್ಷ್ಮೀ ನರಸಿಂಹ ಪ
ನರಸಿಂಹ ನಮಿಪೆ ನಾ ನಿನ್ನ
ಚಾರುಚರಣಕಮಲಕೆ ನೀ ಎನ್ನ
ಕರವ ಪಿಡಿದು ನಿಜ ಶರಣನೆಂದೆನಿಸೊ ಭಾ
ಸುರ ಕರಣಾಂಬುಧೆ ಗರುಡವಾಹನ ಲಕ್ಷ್ಮೀ ಅ
ತರಳ ಪ್ರಹ್ಲಾದನ್ನ ನುಡಿಯಾ ಕೇಳಿ
ತ್ವರಿತದಿ ಬಂದ್ಯೊ ಎನ್ನೊಡೆಯ ನಾನು
ಕರುಣಾಳೊ ಭಕ್ತರ ಭಿಡೆಯ ಮೀರ
ಲರಿಯೆ ಎಂದೆಂದು ಕೆಂಗಿಡಿಯ ಅಹ
ಭರದಿಂದುಗುಳುತ ಬೊಬ್ಬಿರಿದು ಬೆಂಬತ್ತಿಕ
ರ್ಬುರ ಕಶ್ಯಪುವಿನ ಹಿಂಗುರುಳ ಪಿಡಿದೆ ಲಕ್ಷ್ಮೀ ೧
ಪ್ರಳಯಾಂಬುನಿಧಿ ಘನಘೋಷದಂತೆ
ಘುಳಿ ಘುಳಿಸುತಲಿ ಪ್ರದೋಷ ಕಾಲ
ತಿಳಿದು ದೈತ್ಯನ ಅತಿರೋಷದಿಂದ
ಪ್ಪಳಿಸಿ ಮೇದಿನಿಗೆ ನಿದೋಷ ಅಹ
ಸೆಳೆಸೆಳೆಯುತ ಚರ್ಮಸುಲಿದು ಕೆನ್ನೆತ್ತರೋ
ಕುಳಿಯನಾಡಿದೆ ದಿಶಾವಳಿಗಳೊಳಗೆ ಲಕ್ಷ್ಮೀ ೨
ಕ್ರೂರ ದೈತ್ಯನ ತೋರಗರುಳಾ ತೆಗೆ
ದ್ಹಾರ ಮಾಡಿದೆ ನಿಜಕೊರಳ ಕಂಡು
ವಾರಿಜಾಸನ ಮುಖದಯರ್ಕಳ ಪುಷ್ಪ
ಧಾರಿಗೆರೆದು ವೇಗ ತರಳಾ ಆಹ
ಸೂರಿ ಪ್ರಹ್ಲಾದಗೆ ತೋರಿ ತವಾಂಘ್ರಿ ಸ
ರೋರುಹಾವನು ಕಾಯ್ದೆ ಕಾರಣ್ಯನಿಧಿ ೩
ಜಯಜಯ ದೇವವರೇಣ್ಯ ಮಹ
ದ್ಭಯ ನಿವಾರಣನೆ ಅಗಣ್ಯ ಗುಣಾ
ಶ್ರಯ ಘೋರ ದುರಿತಾರಣ್ಯ ಧನಂ
ಜಯ ಜಗದೇಕ ಶರಣ್ಯ ಅಹ
ಲಯವಿವರ್ಜಿತ ಲೋಕ
ತ್ರಯ ವ್ಯಾಪ್ತ ನಿಜಭಕ್ತ
ಪ್ರಿಯ ಘೋರಮಯ ಹರ
ದಯ ಮಾಡೆನ್ನೊಳು ಲಕ್ಷ್ಮೀ ೪
ಕುಟಲ ದ್ವೇಷದವನು ನೀನಲ್ಲ ನಿನ್ನಾ
ರ್ಭಟಕಂಜಿದರು ಸುರರೆಲ್ಲ ನರ
ನಟನೆ ತೋರಿದ್ಯೋ ಲಕ್ಷ್ಮೀನಲ್ಲ ನಾ ಪಾ
ಸಟಿ ಕಾಣೆನಪ್ರತಿಮಲ್ಲ ಅಹ
ವಟಪತ್ರಶಯನ ಧೂ
ರ್ಜಟಿವಂದ್ಯ ಜಗನ್ನಾಥ
ವಿಠಲ ಕೃತಾಂಜಲಿಪುಟದಿ ಬೇಡುವೆ ಲಕ್ಷ್ಮೀ೫

ನುಡಿ-೨: ಭುಜಪುಂಗರಿಪು ಧ್ವಜ
೧೨೭
ನಾ ಧನ್ಯನಾದೆನಿಂದು | ಸತ್ಯ | ಬೋಧರಾಯರ ದಿವ್ಯ |
ಪಾದಕಮಲವ ಕಂಡು ಪ
ಹಿಂಗಿದವಖಿಳದೋಷಂಗಳು ಸನ್ಮುನಿಗಳವ
ರಂಘ್ರಿ ಸಂದರುಶನದೀ
ಗಂಗಾದಿತೀರ್ಥ ಭುಜಂಗಾದಿ ಮೊದಲಾದ
ತುಂಗ ತೀರ್ಥಯಾತ್ರೆ ಫಲ ಸಮನಿಸಿತು೧
ಆವ ಮುನಿಗಳೋ ಮತ್ತಾವ ದೇವತೆಗಳೋ
ಆವಾವಬಲ್ಲ ಮತ್ತಾವಾಗಲೂ
ಸೇವಿಸುವರ ಕೃಪಾವಲೋಕನದಿಂದ
ಪಾವನ ಮಾಡಲು ಕೋವಿದಾರ್ಯರ ಕಂಡು ೨
ಸೀತಾರಮಣ ಜಗನ್ನಾಥ ವಿಠ್ಠಲರೇಯಾ
ಭೂತಳದೊಳಗೀ ಮಹಾತ್ಮರನಾ
ಪ್ರೀತಿಯಂ ಸೃಜಿಸಿದನಾಥ ಜನರನ ಪು
ನೀತರ ಮಾಡಲು ಆತ ತಕ್ಷಣದಿ ೩

ದ್ಯುಮಣಿ ಮಂಡಲ ತಾಡುಕಲು
೪೧
ನಾರದ ಪ್ರಿಯ ಕೃಷ್ಣ ನರಾಕಾರ
ಜಾರ ಚೋರ ಶೂರ ಧೀರಪ
ಘೋರತರವಾದ ಸಂಸಾರ ಸುಖ ದುಃಖಗಳ
ಮೀರಿ ಪೊರೆವಂಥ ಬಲು ಭಾರಕರ್ತನೇ
ಧಾರಿಣಿಯ ಮೇಲಿರುವ ಸೂರಿ ಜನರನು ಸದಾ
ಸಾರಸಾಕ್ಷ ಬಿಡದಲೆ ಪಾರುಗಾಣಿಸುವ ದೇವಾ ೧
ಮಂದಮತಿಯನಳಿದು ಚಂದದಿ ಸುಮಾರ್ಗವನ್ನು
ನಂದದಿಂದ ತೋರ್ಪ ಮುಚುಕುಂದ ವಂದ್ಯನೆ
ಎಂದಿಗೆಮ್ಮ ಗತಿಯೆಂದು ಹೊಂದಿ ಬೇಡ್ವ ಭಕುತರ
ವÀಂದಿಸುವರ ಭವಬಂಧನ ಬಿಡಿಸುವ ದೇವಾ೨
ದಾಶರಥೆ ಎನ್ನ ಕ್ಷೇಶ ನಾಶ ಮಾಡು ದಯದಿ ದಿ
ನೇಶ ಶತಕೋಟಿ ಭಾಸ ಸಂಕಾಶ ಶ್ರೀಶ
ವಾಸವಾದಿ ವಂದ್ಯ ಜಗನ್ನಾಥ ವಿಠ್ಠಲನೆ ಪ್ರೀಯದಾಸರಭಿಲಾಷೆಗಳ ಲೇಸುಗಯ್ಯೊ ವಾಸುದೇವ ೩

ಶ್ರೀ ರಾಘವೇಂದ್ರ
೪೬
ನಾರಾಯಣಾದ್ರಿ ಕೃತವಾಸ ಶರಣು
ತೋರಯ್ಯ ತವರೂಪ ರವಿಕೋಟಿಭಾಸ ಪ
ಆನತಜನಾಪ್ತ ನೀನೆಂಬೋ ನುಡಿಕೇಳಿ ಮಿಗೆ
ಸಾನುರಾಗದಲಿ ನಡೆತಂದೆ ನಿನ್ನ ಬಳಿಗೆ
ಮಿನಾಂಕಜನಕ ತವಪದಯುಗಾರ್ಚನೆ ಹೀಗೆ
ಜ್ಞಾನ ಪೂರ್ವಕದಿಂದಲೆನಗೆ ದಯದಿ
ಪಾನೀಯಜಾಂಬಕನೆ ಪೊರೆಯೆಂದೆ ನಿನಗೆ ೧
ವಾಸುಕೀ ತಪಕೆ ಸಲೆಮೆಚ್ಚಿ ಗಿರಿಯಲಿ ನಿಂದೆ
ಆ ಸಲಿಲದೊಳು ಮಿಂದು ಕರಿವರ ಕರೆಯೆ ಬಂದೆ ಸ್ವಾಮಿ
ವಾಸವಾತ್ಮಜನು ಬಿನ್ನೈಸೆ ನಿನ್ನಯ ಮುಂದೆ
ಆ ಸಮರದೊಳಗೊಲಿವನೆಂದೆ ನಿನಗೆ
ಪಾಸಟಿ ಯಾರು ನೀರಜಭವನ ತಂದೆ ೨
ಪೊಗಳಲರಿಯರು ಸುರರು ನಿನ್ನ ಮಹಿಮಾತಿಶಯ
ಬಗೆಯನರಿಯಳು ಲಕುಮಿ ಬದರ ಸನ್ನಿಭಕಾಯ
ಮುಗುದ ಮಾನವ ತಿಳಿವನೆನೋ ತಿರುಮಲರಾಯ
ಖಗÀರಾಜಗಮನ ಕಮನೀಯ ಪಾಹಿ
ಜಗನ್ನಾಥವಿಠಲ ವಿಗತಾಘ ಕವಿಗೇಯ ೩

ಭಗವಂತನಿಗೂ ಭಕ್ತರಿಗೂ
೧೧
ನಿನ್ನ ಪೋಲುವ ಕರುಣಿಗಳನಾರ ಕಾಣೆ ಪ್ರ
ಪನ್ನ ತಾ ಪಾಪಹರನೇ ಪ
ಎನ್ನಪರಾಧಗಳ ಎಣಿಸದಿರು ಅಜಭವಶ
ರಣ್ಯ ಪರಿಪೂರ್ಣೇಂದಿರಾಗಾರ ಅ
ಶುದ್ಧಾಖ್ಯ ದ್ವಿಜನು ದಾರಿದ್ರ್ಯದಲಿ ನೆರೆ ನೊಂದು
ಸದ್ಧರ್ಮ ತೊರೆದು ಮರೆದು
ಶ್ರಾದ್ಧಾದಿ ದುಷ್ಟನ್ನ ಮೆದ್ದು ನಿಂದಿತನಾಗಿ
ಬಿದ್ದಿರಲು ಸತಿಯು ಮತಿಯು
ತಿದ್ದಿ ಪೇಳಲು ಕೇಳಿ ಶುದ್ಧ ಭಾವದಿ ತವ ಪ
ದದ್ವಯಕ್ಕೆರಗಿ ಮರುಗಿ ಪದ್ಮೇಶ ಸಲಹೆನಲು
ಸಿದ್ಧಿಸಿ ಮನೋರಥವ ಉದ್ಧಾರವನು ಮಾಡ್ದೆ ನೋಡ್ದೆ ೧
ವಿಧಿಯ ಸಂಸ್ತುತಿ ಕೇಳಿ ಮಧ್ವಜಾಕಾರಿ
ಮದಡತಮನುದರ ಬಗೆದೇ
ಉದಧಿ ಮಥನದಲುದಿಸಿದಮೃತ ದೇವತೆಗಳಿಗೆ
ಮುದದಿಂದಲೆರೆದೆ ಪೊರೆದೆ
ಕದನ ಕರ್ಕಶ ಹೇಮ ಲೋಚನನ ನೀ ದೌಂಷ್ಟ್ರ
ತುದಿಯಿಂದ ಕೊಂದೆ ತಂದೆ
ಬೆದರದಲೆ ಕರೆದರ್ಭಕನ ನುಡಿಗೆ ಅವನಯ್ಯ
ನುದರ ರಕ್ತವನು ಸುರಿದೇ ಮೆರೆದೇ ೨
ವೈರೋಚನಿಯ ಭೂಮಿ ದಾನವನು ಬೇಡಿ ಭಾ
ಗೀರಥಿಯ ಪಡದಿ ಪದದಿ
ಧಾರಿಣಿಯ ದಿವಿಜರಿಗೆ ದಾನವಿತ್ತವನಿಪರ
ಗಾರು ಮಾಡಿದೆ ಸವರಿದೇ
ನೀರಧಿಯ ಬಂಧಿಸಿ ದಶಾಸ್ಯನ ಬಲವನು ಸಂ
ಹಾರ ಮಾಡಿದೆ ರಣದೊಳು
ಕಾರಗೃಹದೊಳಗಿಪ್ಪ ಜನನಿ ಜನಕರ ಬಿಡಿಸಿ
ತೋರಿಸಿದೆ ವಿಶ್ವರೂಪಾ ಶ್ರೀಪಾ ೩
ಆದಿತೇಯರು ಮಾಳ್ಪ ಸಾಧುಕರ್ಮಗಳ
ಶುದ್ಧೋದನಾಚರಿಸೆ ತಿಳಿದು
ವೇದ ಶಾಸ್ತ್ರಾರ್ಥ ಪುಸಿಯೆಂದರುಪಿ ಜಿನನತಿ
ಭೇದಗೈಸಿದೆ ಸಹಿಸಿದೇ
ಭೇದಗೊಳಿಸುವ ಕಲಿಯ ಕೊಂದು ಶೀ
ಘ್ರದಿ ತಮಸಿಗೈಸಿದೆ ಕಲ್ಕಿ ಭಳಿರೇ
ಸ್ವೋದರದಿ ನಿಖಿಳ ಲೋಕವನೆಲ್ಲ ಧರಿಸಿ ಪ್ರಳ
ಯೋದಕದಿ ಮಲಗಿ ಮೆರೆದೇ ಪೊರೆದೇ ೪
ಹಂಸರೂಪದಲಿ ಕಮಲಾಸನಗೆ ತತ್ವೋಪ
ದೇಶಮಾಡಿದೆ ಕರುಣದೀ
ವ್ಯಾಸಾವತಾರದಲಿ ದೇವ ಋಷಿ ಪಿತೃಗಳಭಿ
ಲಾಷೆ ಪೂರೈಪ ನೆವದೀ
ಭಾಷ್ಯತ್ರಯಗಳಿಂದ ಭಗವದ್ಗುಣಂಗಳ ಪ್ರ
ಕಾಶ ಮಾಡಿದೆ ಮೋದದಿ
ಭಾಷ್ಯತ್ರಯಗಳಿಂದ ಭಗವದ್ಗುಣಂಗಳ ಪ್ರ
ಕಾಶÀ ಮಾಡಿದೆ ಮೋದದಿ
ವಾಸವಾನುಜ ಜಗನ್ನಾಥವಿಠಲ ನಿನ್ನವರ ಸಲ
ಹೋ ಸಮರ್ಥಾ ಕರ್ತಾ ೫

ಭಗವಂತನು ತಮ್ಮನ್ನು
೧೨
ನಿನ್ನ ಸಂಕಲ್ಪಾನುಸಾರ ಮಾಡೋ
ಎನ್ನ ಸಾಕುವ ಧೊರೆಯೆ ತಿಳಿದು ನೀ ನೋಡೋ ಪ
ಪಾತ್ರನೆಂದೆನಿಸೋ ಬಹು ಪಾಪಾತ್ಮನೆಂದೆನಿಸೋ
ಶ್ರೋತ್ರೀಯನೆಂದೆನಿಸೋ ಶುಂಠನೆನಿಸೋ
ಪುತ್ರಮಿತ್ರಾದ್ಯರಿಂ ಬಯಸಿ ಪೂಜೆಯಗೈಸೋ
ಕರ್ತೃ ನೀ ಜಗಕೆ ಸರ್ವತ್ರ ವ್ಯಾಪಕನೆ ೧
ಜನರೊಳಗೆ ನೀನಿದ್ದು ಜನ್ಮಗಳಲ್ಲಿ
ಗುಣಕಾಲಕರ್ಮ ಸ್ವಭಾವಂಗಳಾ
ಅನುಸರಿಸಿ ಪುಣ್ಯ ಪಾಪಗಳ ಮಾಡಿಸಿ ಫಲಗ
ಳುಣಿಸಿ ಮುಕ್ತರ ಮಾಡಿ ಪೊರೆವೆ ಕರುಣಾಳು ೨
ಯಾತಕೆನ್ನನು ಇನಿತು ದೂಷಕನ ಮಾಡುವಿ ಧ
ರಾತಲದೊಳನುದಿನದಿ ಮಾಯಾಪತೇ
ಭೀತಿಗೊಂಬುವನಲ್ಲ ಭಯನಿವಾರಣ ಜಗ
ನ್ನಾಥ ವಿಠ್ಠಲ ಜಯಪ್ರದನೆ ಜಗದೀಶಾ೩

ಪಲ್ಲವಿ : ಭಾರತಿ : ಇವಳು ಕೃತಿ
೧೫೭
ನಿನ್ನವರ ಧರ್ಮ ವಿಹಿತವಾಗುವುದು ಮ
ತ್ತನ್ಯರಾಚರಿಸಿದ ಧರ್ಮ ಅಧರ್ಮ ಪ
ಕಡಲ ಮಥನದಲಿ ಕಪರ್ದಿ ಕಾಳಕೂಟ
ಕುಡಿಯಲು ಕಂಠಭೂಷಣವಾಯಿತು
ಒಡನೆ ರಾಹು ಕೇತು ಸುಧೆಯ ಪಾನದಿಂದ
ಮಡಿದರೆಂದು ಮೂರ್ಲೋಕವೇ ಅರಿಯೆ ೧
ಬಲಿನಿನ್ನ ಮುಕುಟ ಕದ್ದೊಯ್ಯ ಪಾತಾಳಕೆ
ಸಲೆ ಭಕ್ತನೆಂದು ಬಾಗಿಲ ಕಾಯ್ದೆ
ಇಳೆಯೊಳು ಸುರರಿಗೆ ಗೋ ಭೂ ಹಿರಣ್ಯವಿತ್ತಾ
ಖಳ ಜರಾಸಂಧನ ಕೊಲಿಸಿದೆ ಹೋಗಿ ೨
ಪತಿವ್ರತ ಧರ್ಮದಿ ಮೃತರಾದ ತ್ರಿಪುರರ
ಸತಿಯರು ಶಿವನಿಂದ ಹತರಾದರು
ಕೃತು ಭುಜರ ಗುರು ಸತಿ ಉಡುಪ ಪತಿಯಿಂದಲಿ
ಸುತರ ಪಡೆದು ನಿತ್ಯ ಸೇವೆಯೊಳಿರುವಳು ೩
ಮೇದಿನಿಯೊಳು ಪ್ರಾಣಿ ಹಿಂಸಕನೆನಿಸಿದಾ
ವ್ಯಾಧನ ಯಮಿಕುಲೇಶನ ಮಾಡಿದೆ
ವೇದೋಕ್ತ ಕರ್ಮವಾಚರಿಸಿದ ಜಿನನೊಳ್
ಪ್ರಾದುರ್ಭೂತನಾಗಿ ಕೆಡಹಿದೆ ತಮಕೆ ೪
ಪರಾಶರನು ಸತ್ಯವತಿಯ ಸಂಬಂಧಿಸೆ
ಶ್ರೀರಮಣ ನೀನವತರಿಸಿದಲ್ಲಿ
ವಾರಿಜಾಸನ ಭವ ಸರೋಜ ಕನ್ನಿಕೆಯಸಾರಲು ಬಿಡುವ ಜಗನ್ನಾಥ ವಿಠಲ ೫

ಭಗವಂತನನ್ನು ಮನಸ್ಸಿನಲ್ಲಿ
೧೩
ನಿಲ್ಲು ಬಾರೊ ದಯಾನಿಧೆ ಪ
ನಿಲ್ಲು ಬಾರೋ ಸರಿಯಲ್ಲ ನಿನಗೆ ಲಕ್ಷ್ಮೀ
ವಲ್ಲಭ ಮನ್ಮನದಲಿ ಬಿಡದೆ ಬಂದು ಅ
ಅತಿ ಮೃದುವಾದ ಹೃತ್ಯತ ಪತ್ರಸದನದಿ ಶಾ
ಶ್ವತವಾಗಿ ಭವ್ಯ ಮೂರುತಿ ಭಕ್ತವತ್ಸಲ ೧
ತನುಮನಧನದ ಚಿಂತೆಯ ಬಿಟ್ಟು ತ್ವತ್ಪದ
ವನರುಹ ಧೇನಿಪೆ ಮನುಮಥನಯ್ಯ ೨
ಆಶೆಪುಟ್ಟಿತು ನಿನ್ನಲ್ಲೀ ಸಮಯದಲಿ ಪಾ
ರಾಶರವರದ ಪೂರೈಸು ಬಯಕೆಯ ೩
ನಾನಾವ್ರತಂಗಳ ನಾನನುಕರಿಸಿದೆ ಶ್ರೀನಿಧಿ
ನಿನ್ನಂಘ್ರಿ ಕಾಣಬೇಕೆನುತಲಿ೪
ಯಾತರ್ಯೋಚನೆ ಮನಸೋತ ಬಳಿಕ ಪುರು
ಹೂತವಂದಿತ ಜಗನ್ನಾಧವಿಠ್ಠಲರೇಯ ೫

ರಕ್ಷೆಗಳನಿತ್ತರು :ಸಣ್ಣ ಮಕ್ಕಳಿಗೆ ದೃಷ್ಟಿಯಾಗಬಾರದೆಂದು
೧೭೦
ನೀಚನಲ್ಲವೇ ಇವನು ನೀಚನಲ್ಲವೇ ಪ
ಕೀಚಕಾರಿಪ್ರಿಯನ ಗುಣವ ಯೋಚಿಸದಲೆ ಯಾಚಿಸುವÀನು ಅ.ಪ.
ಶ್ರೀಕಳತ್ರನಂಘ್ರಿ ಕಮಲವೇಕಚಿತ್ತದಲ್ಲಿ ಮನೋ
ವ್ಯಾಕುಲಗಳ ಬಿಟ್ಟು ಸುಖೋದ್ರೇಕದಿಂದ ಭಜಿಸದವನು ೧
ಲೋಕವಾರ್ತೆಗಳಲಿ ಏಡ ಮೂಕರೆನಿಸಿ ವಿಷಯಗಳವ
ಲೋಕಿಸದಲೆ ಶ್ರೀಶಗಿವು ಪ್ರತೀಕವೆಂದು ತಿಳಿಯದವನು ೨
ಜನನಿ ಜನಕರಂತೆ ಜನಾರ್ದನನು ಸಲಹುತಿರಲು ಬಿಟ್ಟು
ಧನಿಕರ ಮನೆಮನೆಗಳರಸಿ ಶುನಕನಂತೆ ತಿರುಗುವವನು ೩
ಹರಿಕಥಾಮೃತವ ಬಿಟ್ಟು ನರ ಚರಿತ್ರೆಯಿಂದ ದ
ರ್ದುರಗಳಂತೆ ಹರಟೆ ದಿವಸ ಬರಿದೆ ಕಳೆಯುತಿಪ್ಪ ಮನುಜ೪
ವಿಹಿತ ಕರ್ಮ ತೊರೆದು ಪರರ ಗೃಹಗಳಲ್ಲಿ ಸಂಚರಿಸುತ
ಕುಹಕ ಯುಕ್ತಿಯಿಂದ ಲೋಕ ಮಹಿತರನ್ನು
ನಿಂದಿಸುವ ಮನುಜ೫
ಬಹಳ ದ್ರವ್ಯದಿಂದ ಗರುಡ ವಾಹನನಂಘ್ರಿ ಭಜಿಸಿ ಅನು
ಗ್ರಹವ ಮಾಡು ಎಂದು ಬೇಡಿ ಐಹಿಕಸುಖವ ಬಯಸುವವನು ೬
ಕರಣ ಜನ್ಯ ಪುಣ್ಯಪಾಪವೆರಡು ಹರಿಯಧೀನವೆಂದು
ಸ್ಮರಿಸುತಲತಿ ಭಕುತಿಯಿಂದ ಹರುಷಪಡದಲಿಪ್ಪ ಮನುಜ ೭
ಜೀವನ ಕರ್ತೃತ್ವ ಬಿಟ್ಟು ದೇವನೊಬ್ಬ ಕರ್ತೃ ರಮಾ
ದೇವಿ ಮೊದಲುಗೊಂಡು ಹರಿಯ ಸೇವಕರೆಂದರಿಯದವನು ೮
ವಾತಜನಕನೆನಿಪ ಜಗನ್ನಾಥವಿಠ್ಠಲನ ಪದಾಬ್ಜ
ಪೋತವಾಶ್ರಯಿಸಿ ಭವ ವೈತರಣಿಯ ದಾಟದವನು ೯

ಜಗನ್ನಾಥ ದಾಸರು ಬರೆದಿರುವ
೩೦
ನೀರ ತರಂಗಿಣಿ ತೀರ ನಾರಸಿಂಹ ಪ
ಸಾರಿದೆನೊ ತವಪಾದ ಪಂಕಜ
ತೋರು ಮನದಲಿ ತವಕದಿ ಅ
ನಾರದನುತ ಚಿಚ್ಛರೀರವ ಶ್ರೀ ಭೂದು
ರ್ಗಾರಮಣ ದುರಿತಾರಿ ಬ್ರಹ್ಮ ಸ
ಮೀರ ಮುಖ ವಿಬುಧಾರ್ಚಿತ
ಚಾರು ಚರಣಯುಗ ಕ್ಷೀರಾಬ್ಧಿ ಶಯನ ಮ
ದ್ಭಾರ ನಿನ್ನದು ಮೂರು ಲೋಕದ
ಸೂರಿಗಮ್ಯ ಸುಖಾತ್ಮಕ ೧
ವೇದವೇದ್ಯ ಸಂಸಾರೋದಧಿ ತಾರಕ
ಛೇದ ಭೇದ ವಿಷಾದವೇ ಮೊದ
ಲಾದ ದೋಷವರ್ಜಿತ
ಶ್ರೀದ ಶ್ರೀಶ ಅನಂತ ಆಪ್ತಕಾಮ
ಬಾದರಾಯಣ ಭಕ್ತವರ ಪ್ರ
ಹ್ಲಾದಪೋಷಕ ಪಾಹಿ ಮಾಂ ೨
ಹೋತಹೃದ್ಯ ಜಗನ್ನಾಥವಿಠಲ ನಿನ್ನ
ಮಾತು ಮಾತಿಗೆ ಸ್ಮರಿಸುತಿಹ ಸ
ಚ್ಚೇತನರನು ನೀ ಸರ್ವದಾ
ವೀತಶೋಕ ಭವಭೀತಿ ಬಿಡಿಸಿ ತವ
ದೂತರೊಳಗಿಡು ಮಾತರಿಶ್ವಗ ಭೂತಭಾವನ ಭವ್ಯದ೩

ನುಡಿ-೧ : ಸುಖರೂಪ ಪುರುಷನಿಗೆ
೮೯
ನೀಲಲೋಹಿತ ಡಮರುಗ ತ್ರಿಶೂಲ ಶೋಭಿತ ಪ
ಫಾಲನಯನ ಶುಂಡಾಲ ಚರ್ಮ ಸುದು
ಕೂಲ ಮೃಡ ಸತತ ಪಾಲಿಸು ಕರುಣದಿ ಅ.ಪ.
ನಂದಿವಾಹನ ನಮಿಪೆ ಖಳ
ವೃಂದ ಮೋಹನ
ಅಂಧಕರಿಪು ಶಿಖಿ ಸ್ಯಂದನ ಜನಕ ಸ
ನಂದನಾದಿ ಮುನಿ ವಂದಿತ ಪದಯುಗ ೧
ಸೋಮಶೇಖರ ಗಿರಿಜಾಸು
ತ್ರಾಮ ಲೇಖರಾ
ಸ್ತೋಮವಿನುತ ಭವ ಭೀಮ ಭಯಾಂತಕ
ಕಾಮರಹಿತ ಗುಣಧಾಮ ದಯಾನಿಧೆ ೨
ನಾಗಭೂಷಣ ವಿಮಲ ಸ
ರಾಗ ಭಾಷಣ
ಭೋಗಿಶಯನ ಜಗನ್ನಾಥ ವಿಠಲನ
ಯೋಗದಿ ಒಲಿಸುವ ಭಾಗವತರೊಳಿಡೊ ೩

ವಿಜಯದಾಸರ ಶಿಷ್ಯರು ಗೋಪಾಲದಾಸರು
೫೯
ನೋಡಿದೆ ವಿಠಲನ ನೋಡಿದೆ ಪ
ನೋಡಿದೆನು ಕಂಗಳಲಿ ತನುವೀ
ಡಾಡಿದೆನು ಚರಣಾಬ್ಜದಲಿ ಕೊಂ
ಡಾಡಿದೆನು ವದನದಲಿ ವರಗಳ
ಬೇಡಿದೆನು ಮನದಣಿಯ ವಿಠಲನ ಅ.ಪ.
ಇಂದಿರಾವಲ್ಲಭನ ತಾವರೆ
ಗಂದನಂಜಿಸಿ ತಪತಪಾವೆಂ
ತೆಂದು ಪೇಳ್ದನ ಯುವತಿ ವೇಷದಿ
ಕಂದು ಗೊರಳನ ಸ್ತುತಿಸಿದನ ಪು
ರಂದರಾನುಜನಾಗಿ ದಿವಿಯೊಳು
ಕುಂದದರ್ಚನೆಗೊಂಬ ಸನಕ ಸ
ನಂದನಾದಿ ಮುನೀಂದ್ರ ಹೃದಯ ಸು
ಮಂದಿರನ ಮಮ ಕುಲದ ಸ್ವಾಮಿಯ ೧
ಯಾತುಧಾನರ ಭಾರ ತಾಳದೆ
ಭೂತರುಣಿ ಗೋರೂಪಳಾಗಿ ಸ
ನಾತನನ ತುತಿಸಲ್ಕೆ ಶೇಷ ಫ
ಣಾತ ಪತ್ರನು ನಂದಗೋಪ ನಿ
ಕೇತನದಲವತರಿಸಿ ವೃಷ ಬಕ
ಪೂತನಾದ್ಯರ ಸದೆದು ಬಹುವಿಧ
ಚೇತನರಿಗೆ ಗತಿನೀಡಲೋಸುಗ
ಜಾತಿಕರ್ಮಗಳೊಹಿಸಿ ಮೆರೆದನ ೨
ತನ್ನತಾಯ್ತಂದೆಗಳ ಹೃದಯವೆ
ಪನ್ನಗಾರಿಧ್ವಜಗೆ ಸದನವೆಂ
ದುನ್ನತ ಭಕುತಿ ಭರದಿ ಅರ್ಚಿಪ
ಧನ್ಯಪುರುಷನ ಕಂಡು ನಾರದ
ಬಿನ್ನಯಿಸಿ ತುತಿಸಲ್ಕೆ ಕೇಳಿ ಪ್ರ
ಪನ್ನ ವತ್ಸಲ ಬಿರಿದು ಮೆರೆಯಲು
ಜೊನ್ನೊಡಲು ಭಾಗದಿ ನೆಲೆಸಿದ ಜ
ಗನ್ನಾಥ ವಿಠ್ಠಲನ ಮೂರ್ತಿಯ ೩

೧೮೨
ಪಂಕಜನಯನ ಪಾವನ್ನ ಸುಖ
ಸಂಕೂಲ ಮೂರುತಿ ಲಾಲಿಸು ಚಿನ್ನಾ
ವೆಂಕಟ ನಿಲಯಾ ಹಸೆಗೇಳು ಪ
ತಮನ ಕೊಂದು ವೇದಾವಳಿ ತಂದು
ಕಮಲ ಸಂಭವಗಿತ್ತ ಕಮನೀಯ ಕಾಯ
ಸುಮನಸ ಜನತೆ ಸುಧೆಯನುಣಿಸಿ
ಭೂಮಿ ಚೋರನ ಕೊಂದ ಮುನಿಗಳೊಡೆಯ
ವಿಮಲ ಮೂರುತಿ ಹಸೆಗೇಳೋ ೧
ನರಹರಿ ರೂಪದಿ ಬಂದು ದೈತ್ಯ
ನುರವ ಬಗೆದು ವಟು ರೂಪದಿ ನಿಂದ್ಯೋ
ದುರುಳ ರಾಯರನೆಲ್ಲ ಕೊಂದು ಲಂಕಾ
ಪುರದಾಧಿಪತಿಯ ಸದೆದ ದಯಸಿಂಧೋ
ಕರುಣಾಸಾಗರನೆ ಹಸೆಗೇಳೋ ೨
ಯದುಜನೆನಿಸಿ ಎಲ್ಲಾ ಖಳರ ಜಯಿಸಿ
ಸುದತೇರ ವ್ರತವ ಕೆಡಿಸಿದತಿ ಧೀರ
ಕುದುರೆನೇರಿದ ಮಾಧಾರಾ ನಿನ್ನ
ಅದುಭೂತ ಬಲ್ಲಿದಕ್ಕೆಣೆಗಾಣೆನುದಾರಾ
ಉದಧಿ ಶಯನನೆ ಹಸೆಗೇಳು ೩
ಅಪ್ರತಿಮಲ್ಲ ಅನಂತಾ ಸುಹಜ
ನ ಪ್ರೀಯಾ ಸುರಪತಿ ಸಿರಿದೇವಿ ಕಾಂತಾ
ಸ್ವ ಪ್ರಕಾಶಿತನೆ ಧೀಮಂತಾ ಅತಿ
ಕ್ಷಿಪ್ರದಿ ಭಕ್ತರ ಪೊರೆವತಿ ಶಾಂತಾ
ಸುಪ್ರದಾಯಕನೆ ಹಸೆಗೇಳೋ ೪
ಪರಮ ಪುರುಷ ಪುಣ್ಯನಾಮಾ ಪರ
ಪುರಷೋತ್ತಮ ಪರಿಪೂರ್ಣ ಕಾಮಾ
ಶರಣರ ಭವವನ ಧೂಮಾ ಕೇತು
ಕರಿಯ ಬಲ್ಲೆನೆ ಕಾಮಿತರ ಕಲ್ಪದ್ರುಮಾ
ಕರಿರಾಜವರದಾ ಹಸೆಗೇಳೋ ೫
ಸತ್ಯ ಸಂಕಲ್ಪ ಸಮರ್ಥಾ ನಿತ್ಯ
ತೆತ್ತಿಗರೊಡನೆ ನಮಿತರ ಸಾಧಕ
ಅತ್ಯಂತ ಮಹಿಮನೆ ಆಪ್ತ ಜನರ
ಚಿತ್ತದ ಕ್ಲೇಶ ಕಳೆವ ಸುಕೀರ್ತೀ
ಚಿತ್ತಜ ಜನಕ ಹಸೆಗೇಳೋ ೬
ಕ್ಷೀರಾಬ್ಧಿವಾಸಾ ಚಿನ್ಮಯನೆ ನಿನ್ನ
ಪಾರ ಮಹಿಮೆ ತಿಳಿವವನಿಹನೆ
ಮೂರು ಗುಣ ರಹಿತನೆ ದೋಷ ದೂರ ವಿದೂರ
ಶಿರಿದೇವಿಯೊಡನೆ ಬಾರಯ್ಯ ಹಸೆಯ ಜಗುಲಿಗೆ೭
ವ್ಯಾಳಮರ್ದನನೆ ವಿಗಮನಾ ತ್ರಿ
ಶೂಲ ಪಾಣಿಯ ಓಡಿಸಿದ ಖಳನಾ
ಸೋಲಿಸಿದಪ್ರತಿಸುಗುಣ ಹೇಮ
ದಾಲದಲೆಯ ಶಾಯಿ ಸಾಮಗಾಯನಾ ಲೋಲ
ಲಲಿತಾಂಗ ಹಸೆಗೇಳೋ ೮
ಅಗಣಿತ ಜೌದಾರ್ಯ ಸಾರಾ ನಿನ್ನ
ಪೊಗಳ ಬಲ್ಲೆನೆ ಪಾತಕದೂರಾ
ನಗರಾಜನುತ ನಿರಾಧಾರ ಭವಾದಿಗಳಿಂದ ವಂದ್ಯನೆ
ನವನೀತ ಚೋರ ಜಗನ್ನಾಥ ವಿಠಲ ಹಾಸೆಗೇಳೋ೯

ನುಡಿ-೧: ಪ್ರತಿ ಸಂಚರಕಾಲದಿ
೯೦
ಪಂಪಾಪುರನಿವಾಸ ಪ್ರಮಥರೇಶಾ ಪ
ತ್ವಂ ಪಾಹಿ ಪಾಹಿ ತ್ರಿಪುರಾರಿ ತ್ರಿನೇತ್ರ ಅ.ಪ.
ಕೈಲಾಸಸದ್ಮ ಚಿತಿಚೇಲ ಭೂಷಣ ಮನೋ
ಮೈಲಿಗೆಯ ಪರಿಹರಿಸೊ ನೀಲಕಂಠ
ಕಾಲ ಕಾಲಗಳಲ್ಲಿ ಕಾಲನಿಯಾಮಕನ
ಲೀಲೆಗಳ ತುತಿಪ ಸುಖ ನಾಲಿಗೆಗೆ ಕೊಡು ಸತತ ೧
ಪಾರ್ವತೀರಮಣ ನೀ ಮೋಹಶಾಸ್ತ್ರವ ರಚಿಸಿ
ಶಾರ್ವರೀಚರರ ಮೋಹಿಸಿದೆ ಹಿಂದೆ
ದೂರ್ವಾಸ ಶುಕ ವ್ಯಾಧ ಜೈಗೀಷ ರೂಪದಲಿ
ಈರ್ವಗೆ ಚರಿಯದಲಿ ಹರಿಯ ಮೆಚ್ಚಿಸಿದೆ ೨
ಸುರನದೀಧರ ನಿನ್ನ ಚರಿತೆಗಳ ವರ್ಣಿಸಲು
ಸುರಪಮುಖ ಸುಮನಸಾದ್ಯರಿಗಸದಳಾ
ಸ್ಮರನಪಿತ ಶ್ರೀ ಜಗನ್ನಾಥ ವಿಠ್ಠಲನ ಸಂ
ಸ್ಮರಣೆಯನು ಕೊಟ್ಟು ಉದ್ಧರಿಸು ದಯದಿಂದ ೩

ಭಗವಂತನ ಅಪರೋಕ್ಷಕ್ಕಾಗಿ
೧೪
ಪತಿತ ಪಾವನ ನಾಮ ಪೂರ್ಣ ಕಾಯ ಪ
ಗತಿ ನೀನೆ ಎನಗೆ ಸಂತತ ಪರಂಧಾಮಾ ಅ
ಕೃಪಣ ವತ್ಸಲನೆ ಎಮ್ಮಪರಾಧಗಳ ನೋಡಿ
ಕುಪಿತನಾಗುವರೇನೋ ಸುಫಲದಾಯೀ
ನೃಪಗನಿರುದ್ಧ ಬಿನ್ನಪವ ಮಾಡುವೆ ನಿನಗೆ
ಚಪಲ ಚಿತ್ತರಾದ ಕಾಶ್ಯಪಿಸುರರನ ಕಾಯೋ ೧
ಮಾನ್ಯಮಾನದನೆ ಬ್ರಹ್ಮಣ್ಯದೇವ ನೀನೆಂದು
ಉನ್ನತ ಶ್ರುತಿಗಳು ಬಣ್ಣಿಸುವುವು
ಸನ್ನುತ ಮಹಿಮನೆ ನಿನ್ನ ಪೊಂದಿದವರ
ಬನ್ನ ಬಡಿಸುವುದು ನಿನಗಿನ್ನು ಧರ್ಮವು ಅಲ್ಲ ೨
ಹಲವು ಮಾತುಗಳಾಡಿ ಫಲವೇನು ಬ್ರಾಹ್ಮಣರ
ಕುಲಕೆ ಮಂಗಳವೀಯೋ ಕಲುಷದೂರ
ಸುಲಭ ದೇವೇಶ ನಿನ್ನುಳಿದು ಕಾವರ ಕಾಣೆ
ಬಲಿಯ ಬಾಗಿಲ ಕಾಯ್ದ ಜಗನ್ನಾಥ ವಿಠಲಾ ೩

ಶ್ರೀ ರಾಘವೇಂದ್ರ
೪೭
ಪನ್ನಗಾದ್ರಿ ನಿವಾಸ ಸುದರುಶನ ಪಾಂಚ
ಜನ್ಯಧರ ದೂರ್ವಾಸ ಪ್ರಮುಖ ಮುನಿ ಸ
ನ್ಮಾನ ಕರುಣಿ ವಿಲಾಸ ಶ್ರೀ ಶ್ರೀನಿವಾಸ ಪ
ಎನ್ನವಗುಣ ಸಹಸ್ರವೆಣಿಸದೆ
ನಿನ್ನವರೊಳಗೆಣಿಸಿ ಅನುದಿನ
ಮನ್ಮನಾಲಯದೊಳು ನೆಲಸು ಮೈ
ಗಣ್ಣನನುಜ ವರಾಭಯ ಶ್ರೀಕರ ಅ.ಪ.
ಕಾಮಿತಪ್ರದಕೋಲಾ ಅಂಜನಾಧಿರ ಧಾರ
ಧಾಮ ಭೂಮಿ ವಿಲೋಲಾ ಶಂಖಣನೃಪವರದ
ಹೇಮ ಲೋಚನ ಕಾಲಾ ದ್ವಿಜ ಮಹಿಳೆಯುಳುಹಿದ
ಶಾಮಲಾಂಗ ಸುಶೀಲಾ ವೆಂಕಟ ಕುಲಾಲ
ಭೀಮಗೊಲಿದ ಮಹಾಮಹಿಮನೆ ಪಿ
ತಾಮಹನ ನಾಸೋದ್ಭವನೆ ವಿಯ
ದ್ಭೂಮಿಪತಿ ಜಾಮಾತ ಕಟಿಸು
ತ್ರಾಮಸುತಸೂತ ಪ್ರಮೋದಾಸು
ಧಾಮ ಸೌಖ್ಯ ಪ್ರದವರಾಹ
ತ್ರಯೀಮಯನೆ ಪ್ರಣತಾರ್ತಿಹರ ಬಲ
ರಾಮನಾನುಜ ದಂಷ್ಟ್ರಿ ಸಾಲಿಗ್ರಾಮ ಸದನ ಸಹಸ್ರನಾಮ
ಸಾಮಜಪತಿ ಪೋಷಕ ರಿಪುವನ
ಧೂಮಧ್ವಜ ವಿಧಿಭ ಸೇವಿತ
ವ್ಯೋಮಾಳಕಸಖ ಸರ್ವಜ್ಞರ
ಮಾಮನೋಹರ ಮನ್ನಿಪುದೆಮ್ಮ ೧
ದೀನಜನ ಮಂದಾರ ದೇವಕಿಸುತ ಜಗ
ತ್ರಾಣ ಗುಣ ಗಂಭೀರ ಪೃಥ್ವೀಶ ತೋಂಡ
ಮಾನವರದ ಉದಾರ ಲುಬ್ದಕನ ವಿಷ್ವ
ಕ್ಸೇನನೆನಿಸಿದ ಧೀರ ವೆಂಕಟವಿಹಾರ
ವೈನತೇಯ ವರೂಥ ಖಳ ಸ್ವ
ರ್ಭಾನುವಿನ ತಲೆಗಡಿದು ರವಿಶಶಿ
ಕ್ಷೋಣಿಜ ಬುಧ ಗುರು ಕವಿ ಶನಿಗಳ
ಶ್ರೇಣಿಯಲಿ ಮಾನಿಗಳ ಮಾಡ್ಡ ಮ
ಹಾನುಭಾವ ಮನೋಜಪಿತ ಚಲುವಾನನ
ಕಲಿಮಲಾಪಹಾರಿ ಕೃ
ಶಾನುಸಖ ಸಂಪೂಜ್ಯ ಸುಮನಸ
ಧೇನು ಶರಣ ಜನರ್ಗೆ ಸಂತತ
ಆ ನಮಿಸುವೆ ನಳಿನಜಪಿತ ನಿ
ರ್ವಾಣ ನಿರವದ್ಯ ನಿರುಜ ಬ್ರ
ಹ್ಮಾಣಿ ಸುರನಿಕರ ನಿಲಯನುಸಂ
ಧಾನಕೆ ಕೊಡು ಬಹುವಿಧಕರ್ಮ ೨
ಸಾರ ಶ್ರೀ ಮದನಂತಾ ಸನಕಾದಿ ಸೇವ್ಯ ಪಾ
ದಾರವಿಂದ ಮಹಂತಾ ಸತ್ವಾದಿ ತ್ರಿಗುಣವಿ
ದೂರ ದಿತಿಜ ಕೃತಾಂತಾ ಗುಣರೂಪ ಪಾರಾ
ವಾರ ವಿಗತಾದ್ಯಂತಾ ಶ್ರೀ ಭೂಮಿಕಾಂತಾ
ಭಾರಿ ಶಫರ ಕಮಠ ವರಹ ಕ
ರ್ಬುರ ಕಶಿಪು ವಿದಾರಣನೆ ಭಾ
ಗೀರಥಿಯ ಪದನಖದಿಪಡದಂಗಾರ ವರ್ಣನೆ
ಭೃಗುಕುಲೋದ್ಭವ
ವಾರಿನಿಧಿಬಂಧನ ವನೌಕಸ
ವಾರ ಪೋಷಕ ನಂದಗೋಪ ಕು
ಮಾರ ತ್ರಿಪುರ ವಿದೂರ ತುರಗವನೇರಿದ ಜಗನ್ನಾಥವಿಠಲ
ಸಾರುವೆ ತವ ಪದಪಂಕಜ ಜಂ
ಭಾರಿಮದ ವಿಭಂಜನ ಭವ ಭಯ
ತಾರಕ ನಿನ್ನವರೊಳು ತತ್ವ ವಿಚಾರಕೊಡು ಚಿರಕಾಲದಲಿ ೩

ಮಾನವ ಜನ್ಮ ಬಲು ದೊಡ್ಡದು
೬೬
ಪವಮಾನ ಮದ್ಗುರುವೆ ಪವಮಾನ
ಪವಮಾನ ಪಾವನ ಚರಿತ ಪದ್ಮ
ಭವನ ಪದಾರ್ಹನೆ ನಿರುತ ಅಹ ಪ
ಶ್ರವಣಾದಿ ಭಕುತಿ ಜ್ಞಾನವಿತ್ತು ಸಲಹೊ ಮೂ
ರವತಾರಾತ್ಮಕ ತತ್ವ ದಿವಿಜನಿಯಾಮಕ ಅ.ಪ.
ಪ್ರಾಣೋಪಾನ ವ್ಯಾನೋದಾನ ಹೇ ಸ
ಮಾನ ರೂಪಕನೆ ವಿಜ್ಞಾನ ತತ್ವ
ಮಾನಿಯೆ ಅಮೃತಾಭಿಧಾನ ಚತು
ರಾನನ ತನಯ ಗೀರ್ವಾಣ ಅಹ
ಸೇನಾಧಿಪತಿ ನಿನ್ನ ಜ್ಞಾನಸಾರದಲಿಪ್ಪ
ಮಾನವರನು ಕಾಯೋ ಮೌನಿ ಧ್ಯಾನಗಮ್ಯ ೧
ನಾಗಕೂರ್ಮ ದೇವದತ್ತ ಕೃಕಳ
ಯೋಗಿವರಿಯ ಮುಕ್ತಾಮುಕ್ತ ಕ್ಲುಪ್ತ
ಭೋಗಗಳೀವ ಸುಶಕ್ತಾ ತಲೆ
ಬಾಗಿ ಬೇಡುವೆ ಸರ್ವೋದ್ರ್ರಿಕ್ತ ಅಹ
ಪೋಗುತಲಿದೆ ಹೊತ್ತು ಜಾಗುಮಾಡದೆ ನಿಜ
ಭಾಗವತರೊಳಿಡೊ ಮೈಗಣ್ಣಪದನಾಳ್ದ ೨
ಮೂರುಕೋಟಿ ರೂಪಧರನೆ ಲೋಕ
ಧಾರಕ ಲಾವಣ್ಯಕರನೆ ಸರ್ವ
ಪ್ರೇರಕ ಭಾರತಿವರನೆ ತ್ರಿಪು
ರಾರಿಗೆ ವಜ್ರಪಂಜರನೆ ಆಹ
ನೀರಜ ಜಾಂಡದಿ ಮೂರೇಳು ಸಾವಿರ
ದಾರು ನೂರು ಜಪ ಬೇರೆ ಬೇರೆ ಮಾಳ್ಪ ೩
ಆಖಣಾಶ್ಮ ಸಮಚರಣ ಪದ್ಮ
ಲೇಖರ ಮಸ್ತಕಾಭರಣ ಕಲ್ಪ
ಶಾಖೆಯಂತೆ ಅತಿಕರುಣಾದಿಂದ
ಈ ಖಂಡದೊಳು ಮಿಥ್ಯಾವರಣ ಆಹಾ
ನೀ ಖಂಡಿಸಿದಿ ದಂಡ ಮೇಖಲ ಭೂಷಣ
ಆಖುವಾಹನಪಿತ ಆಖಂಡಲರ್ಚಿತ ೪
ಶ್ರೀವಲ್ಲಭಗೆ ಪ್ರತಿಬಿಂಬನಾಗಿ
ಜೀವವೇದ ಕಾಲಸ್ತಂಭಗತ
ಆವಾಗ ಹರಿರೂಪ ಕಾಂಬ ಶಕ್ತ
ನೀ ಒಬ್ಬನಹುದೋ ನಾನೆಂಬೆ ಆಹಾ
ದೇವತೆಗಳಿಗುಂಟೆ ಈ ವಿಭವ ಜಗ
ಜೀವನ ಜಯಶೀಲಾ ನಾ ವಂದಿಸುವೆ ನಿತ್ಯ ೫
ದಕ್ಷಿಣಾಕ್ಷಿಗತ ವತ್ಸಾ ರೂಪಿ
ದಕ್ಷನಹುದೋ ಪರಮೋಚ್ಚಾ ಚಾರು
ತ್ರ್ಯಕ್ಷಾದಿ ಸುರರೊಳಧ್ಯಕ್ಷಾ ಸರ್ವಾ
ಪೇಕ್ಷರಹಿತನೆ ಸ್ವೇಚ್ಛಾ ಆಹಾ
ಮೋಕ್ಷಾದಿ ದ್ವಾತ್ರಿಂಶ ಲಕ್ಷಣ ಪುರುಷ ನಿ
ರೀಕ್ಷಿಸಿ ಕರುಣದಿ ರಕ್ಷಿಸೋ ಎನ್ನನು ೬
ಮೂಲೇಶನಂಘ್ರಿ ಸರೋಜ ಭೃಂಗ
ಏಳೇಳು ಲೋಕಾಧಿರಾಜಾ ಇಪ್ಪ
ತ್ತೇಳು ರೂಪನೆ ರವಿತೇಜಾ ಲೋಕ
ಪಾಲಕರಾಳ್ವ ಮಹೋಜಾ ಆಹಾ
ಕಾಳಿರಮಣ ನಿನ್ನ ಕಾಲಿಗೆರಗುವೆ ಕೃ
ಪಾಳು ಭಕ್ತಿ ಜ್ಞಾನವಾಲಯ ಕರುಣಿಸು ೭
ಅಧಿಭೂತ ಅಧ್ಯಾತ್ಮಗತನೇ ವಿಮಲ
ಅಧಿದೈವರೊಳು ಪ್ರವಿತತನೆ ಕಲಿ
ಹೃದಯ ವಿಭೇದನಾ ರತನೆ ಎನ್ನ
ವದನದಿ ನಿಲಿಸೋ ಮಾರುತನೆ ಆಹಾ
ಬದರಿಕಾಶ್ರಮದೊಳು ಹದಿನಾರು ಸಾವಿರ
ಸುದತೇರ ಕಾಯ್ದ ನಾರದ ಮುನಿ ಸನ್ನುತ ೮
ಮಾತರಿಶ್ವ ಮಹಾಮಹಿಮ ಸರ್ವ
ಚೇತನ ಹೃದ್ಗತ ಹನುಮ ಭೀಮ
ಭೂತಳದೊಳು ಮಧ್ವ ನಾಮಾದಿಂದ
ಜಾತನಾಗಿ ಜಿತಕಾಮಾ ಆಹಾ
ಆ ತಿಪ್ಪಣ್ಣಾದಿ ವಿಖ್ಯಾತ ಮಾಯ್ಗಿಳ ಗೆದ್ದ
ಸೀತಾರಮಣ ಜಗನ್ನಾಥ ವಿಠ್ಠಲ ದೂತ ೯

ಹನುಮ, ಭೀಮ.
೪೨
ಪಾಲಿಸೆನ್ನ ಗೋಪಾಲ ಕೃಷ್ಣ ಪ
ಪಾಲಿಸೆನ್ನ ದಧಿಪಾಲ ಮುಖರ ಗೋ
ಪಾಲಬಾಲ ಕೃಪಾಲಯ ಹರಿಯೇ ಅ.ಪ.
ಪುಂಡರೀಕ ಭವ ರುಂಡಮಾಲ ಮೇ
ಷಾಂಡ ಪ್ರಮುಖ ಸುರಷಂಡ ಮಂಡಿತನೆ ೧
ಗೋಪ ಗೋಪಿ ಗೋಪಾಲ ವೃಷ್ಣಿಕುಲ
ದೀಪ ಶ್ರೀಪಶಿವಚಾಪ ಭಂಜನಾ ೨
ಅಂಡಜಾಧಿಪ ಪ್ರಕಾಂಡ ಪೀಠ ಕೋ
ದಂಡಪಾಣಿ ಬ್ರಹ್ಮಾಂಡ ನಾಯಕ ೩
ವ್ಯಾಪ್ತ ಗೋಪ್ತ ಜಗದಾಪ್ತ ದೋಷ ನಿ
ರ್ಲಿಪ್ತ ಪ್ರಾಪ್ತಗತಸುಪ್ತ ಸುಷುಪ್ತಾ ೪
ವೇದವೇದ್ಯ ಬ್ರಹ್ಮಾದಿವಂದ್ಯ ಸುಖ
ಬೋಧಪೂರ್ಣ ಬ್ರಹ್ಮೋದನ ಭೋಕ್ತಾ ೫
ಅಧ್ವರೇಶ ಲೊಕೋದ್ಧಾರ ಪಾಣಿ ಸ
ರಿದ್ವರ ಪಿತಗುರು ಮಧ್ವವಲ್ಲಭಾ೬
ಪೋತ ವೇಷದರ ಪೊತನಾರಿ ಪುರು
ಹೂತ ಮದಹ ಜಗನ್ನಾಥ ವಿಠ್ಠಲ ೭

ಭಗವಂತನ ಬಿಂಬದರ್ಶನಕ್ಕೆ
೩೧
ಪಾಲಿಸೊ ನರಸಿಂಹ ಪಾಲಿಸೊ ಪ
ಪಾಲಿಸೊ ಪರಮ ಪಾವನ್ನ ಕಮ
ಲಾಲಯ ನಂಬಿದೆ ನಿನ್ನ ಆಹ
ಬಾಲೇಂದುಕೋಟಿಯ ಸೋಲಿಪ ನಖ ತೇಜ
ಮೂರ್ಲೋಕದರಸೆ ನೀನಾಲಯ ಬಿಡದಲೆ ಅ.ಪ
ಹಿಂದೆ ಪ್ರಹ್ಲಾದನ ಮೊರೆಯ ಕೇಳಿ
ಬಂದು ಕಾಯಿದೆ ಭಕ್ತ ಪ್ರಿಯ ಸುಖ
ಸಂದೋಹ ಮೂರುತಿ ಆಯ ತಾಕ್ಷ
ಎಂದೆಂದು ಬಿಡದಿರು ಕೈಯ ಆಹ
ವೃಂದಾರ ಕೇಂದ್ರಗೆ ಬಂದ ದುರಿತಂಗಳ
ಹಿಂದೆ ಮಾಡಿ ಕಾಯ್ದೆ ಇಂದಿರಾರಮಣನೆ ೧
ಹರಣದಲ್ಲಿ ನಿನ್ನ ರೂಪ ತೋರಿ
ಪರಿಹರಿಸೊ ಎನ್ನ ಪಾಪ ದೂರ
ದಿರದಿರು ಹರಿಸಪ್ತ ದ್ವೀಪಾಧಿಪ
ಸಿರಿಪತಿ ಭಕ್ತ ಸಲ್ಲಾಪ ಆಹ
ಕರಣಶುದ್ಧನ ಮಾಡಿ ಕರೆಯೊ ನಿನ್ನ ಬಳಿಗೆ
ನರಕಂಠೀರವ ದೇವ ಚರಣ ಆಶ್ರೈಸಿದೆ ೨
ಶರಣ ಪಾಲಕನೆಂಬೊ ಬಿರುದು ಕೇಳಿ
ತ್ವರಿತದಿ ಬಂದೆನೊ ಅರಿದು ಇನ್ನು
ಪರಿ ಪರಿ ಅಪರಾಧ ಜರಿದು
ಪರತರನೆ ನೋಡೆನ್ನ ಕಣ್ತೆರೆದು ಆಹ
ಮರಣ ಜನನಂಗಳ ತರಿದು ಬಿಸುಟು ನಿನ್ನ
ಶರಣರ ಸಂಗದಲ್ಲಿರಿಸಿ ಉದ್ಧರಿಸೆನ್ನ ೩
ಸಂಸಾರ ಸಾಗರ ದೊಳಗೆ ಎನ್ನ
ಹಿಂಸೆ ಮಾಡುವರೇನೊ ಹೀಂಗೆ ನಾನು
ಕಂಸಾರಿ ಅನ್ಯರಿಗೆ ಬಾಗೆ ಮತ್ತೆ
ಸಂಶಯವಿಲ್ಲ ಮಾತಿಗೆ ಆಹ
ಹಂಸ ಡಿಬಿಕರನ್ನು ಧ್ವಂಸ ಮಾಡಿದ ಶೌರಿ
ಶಿಂಶುಮಾರ ಮೂರ್ತಿ ದಿವಸ ದಿವಸದಲ್ಲಿ ೪
ಸಿರಿಬೊಮ್ಮ ಭವ ಶಕ್ರಾದ್ಯಮರ ಕೈಯ
ನಿರುತ ತುತಿಸಿಕೊಂಬ ಧೀರ ಶುಭ
ಪರಿಪೂರ್ಣ ಗುಣ ಪಾರಾವರ ಭಕ್ತ
ವಾರಿನಿಧಿಗೆ ಚಂದಿರ ಆಹ
ಸ್ಮರನ ಕಾಂತಿಯ ನಿರಾಕರಿಸುವ ತೇಜನೆ
ಎರವು ಮಾಡದೆ ಹೃತ್ಸರಸಿಜದೊಳು ತೋರಿ ೫
ಮೊದಲು ಮತ್ಸ್ಯಾವತಾರದಿ ವೇದ
ವಿಧಿಗೆ ತಂದಿತ್ತ ವಿನೋದಿ ಶ
ರಧಿಯೊಳು ಸುರರಿಗೋಸ್ಕರದಿ ನೀನು
ಸುಧೆಯ ಸಾಧಿಸಿ ಉಣಿಸಿದೆ ಆಹ
ಅದುಭೂತ ಭೂಮಿಯ ತೆಗೆದೊಯ್ದುವನ ಕೊಂಡು
ಮುದದಿ ಹಿರಣ್ಯಕನುದರ ಬಗಿದ ಧೀರ ೬
ಬಲಿಯ ಮನೆಗೆ ಪೋಗಿ ದಾನ ಬೇಡಿ
ತುಳಿದೆ ಪಾತಾಳಕ್ಕೆ ಅವನ ಪೆತ್ತ
ವಳ ಶಿರ ತರಿದ ಪ್ರವೀಣ ನಿನ್ನ
ಬಲಕೆಣೆಗಾಣೆ ರಾವಣನ ಆಹ
ತಲೆಯನಿಳುಹಿ ಯದುಕುಲದಿ ಜನಿಸಿ ನೀನು
ಲಲನೇರ ವ್ರತವಳಿದಾಶ್ವಾರೂಢನೆ ೭
ಮಾನಸ ಪೂಜೆಯ ನೀ ದಯದಿ ಇತ್ತು
ಶ್ರೀನಾಥ ಕಳೆ ಭವವ್ಯಾಧಿ ಕಾಯೋ
ಅನಾಥ ಬಂಧು ಸುಮೋದಿ ಚತುರಾ
ನನಪಿತ ಕೃಪಾಂಬುಧಿ ಆಹ
ತಾನೊಬ್ಬರನರಿಯೆ ದಾನ ವಿಲೋಲನೆ
ಏನು ಮಾಡುವ ಸಾಧನ ನಿನ್ನದೊ ಹರಿ೮
ನಿನ್ನ ಸಂಕಲ್ಪವಲ್ಲದೆ ಇನ್ನು
ಅನ್ಯಥಾವಾಗಬಲ್ಲುದೆ ಹೀಂಗೆ
ಚೆನ್ನಾಗಿ ನಾ ತಿಳಿಯದೆ ಮಂದ
ಮಾನವನಾಗಿ ಬಾಳಿದೆ ಆಹ
ಎನ್ನಪರಾಧವ ಇನ್ನು ನೀ ನೋಡದೆ
ಮನ್ನಿಸಿ ಕಾಯೋ ಜಗನ್ನಾಥ ವಿಠಲ ೯

ಶ್ರೀ ಹರಿಯೊಲುಮೆಯನ್ನು ಪಡೆಯಲು
೬೦
ಪಾಲಿಸೋ ಫಂಡರಿಪುರಾಯಾ ಪಾವನ ಕಾಯಾ ಪ
ಶ್ಲೋಕ : ತರುಣ ತುಲಸಿಮಾಲಾ ತಪ್ತಗಾಂಗೇಯ ಚೇಲಾ
ಶರಧಿ ತನಯಲೋಲಾ ಶಕ್ವರೀಕಾರಿ ಫಾಲ
ಶಿರಿ ಅಜಭವ ಮೂಲಾ ಶುದ್ಧ ಕಾರುಣ್ಯ ಲೀಲಾ
ಪುರಹರ ಸುಖ ಲೀಲಾ ಪಾಹಿ ಗೋಪಾಲ ಬಾಲಾ
ಪದ : ನವ ಜಲಾಧರನಿಭ ಶಾಮಲಾ ವಪು
ಕೋಮಲ ವೈಜಯಂತಿ ಮಾಲಾ
ರವಿಯಂತೆ ಪೊಳೆವ ಕುಂಡಲ ಹಾರಾ ಧೃತ
ಕೇಯೂರ ಕೌಸ್ತ್ತುಭ
ಮಣಿರುಚಿರಾ ದಿವಿ ಭೂ ಪಾತಾಳ
ಲೋಕದಿ ವ್ಯಾಪ್ತಾ ದೋಷ ಸಿರ್ಲಿಪ್ತ
ವಿಪಶ್ಚಿತಜನರಾಪ್ತಾ ಭವವನಧಿಗೆ ಕುಂಭ ಸಂಭವ
ದೇವರ ದೇವಾ ಧರುಮಾದ್ಯರ ಭಾವಾ ೧
ಶ್ಲೋಕ : ಅಮಿತ ಸುಗುಣಧಾಮಾ ಆತ್ಮಭೂಪೂರ್ಣ ರಾಮಾ
ಅಮರಕುಲಲಲಾಮ ಅಬ್ಜಧಾಮಾಭಿರಾಮಾ
ಯಮಿಕುಲೋದಧಿ ಸೋಮ ಯಜ್ಞ ಭೃದ್ಯಜ್ಞ ನಾಮಾ
ಸಮರವಲಯ ಭೀಮಾ ಸಾತ್ವತಾಂ ಸಾರ್ವ ಭೌಮಾ
ಪದ :ದಿತಿಜಮರ್ದನ ದೀನರಕ್ಷಕಾ ಕರ್ಮ ಸಾಕ್ಷಿಕಾ
ಸಂರಕ್ಷಿತ ಸರ್ವ ಲೋಕಾ
ವಿತತ ಮಹಿಮ ವಿಶ್ವನಾಟಕ ವತ್ಪ್ರ ಘೋಟಕಾ ಶೋ
ಭಿತ ರತ್ನಕಟಕಾ ನತಿಸುವೆ ನಳಿನ
ಜಾಂಡೋದರಾ ಸರ್ವರಾಧಾರಾ
ಸಂತತ ನಿರ್ವಿಕಾರಾ ಮತಿ ಮಂದನಾಗಿ ನಿನ್ನನು ಬಿಟ್ಟೆ ಮ
ಮತೆಯ ತೊಟ್ಟೆ ಕಾಣೆನೋ ಪುಣ್ಯ ಬಟ್ಟೆ ೨
ಶ್ಲೋಕ : ಜನನ ಮರಣ ದೂರ ಜಂಗಮಾಚಾಗ್ ವಿಹಾರಾ
ದನುಜವನ ಕುಠಾರಾ ದೀನಮಂದಾರ ಧೀರಾ
ಪ್ರಣತ ಭಯ ವಿಹಾರಾ ಪ್ರಾಕೃತಾತೀತ ಸಾರಾ
ದಿನಪನಿಭ ಶರೀರಾ ದುಃಖವಾರಿಹ ಸಮೀರಾ ೩
ಪದ : ವನಧಿ ಬಂಧನ ವನೌಕಪನಾಥಾ
ಜಿತಾಸುರಯೂಥ ನಿರ್ಮಲ ಶ್ರುತಿಗಾಥಾ
ಅನುದಿನದಲಿ ನಂಬಿದೆ ನಿನ್ನ ಪಾಲಿಸು
ಎನ್ನ ಸಂತತ ಸಂಪ್ರಸನ್ನಾ
ಮನೋವಾಕ್ಕಾಯದಿ ಮಾಡಿದ ಕ್ರಿಯೆ ನಿನ್ನದು
ಜೀಯ ಕರಣಾದಿ ಪಿಡಿಕಯ್ಯಾ
ನೆನೆಯೆ ನೀನಲ್ಲದೆ ಅನ್ಯರ ದುರ್ಜನ ದೂರಾ ನಂದ
ಗೋಪಕುಮಾರಾ ೩
ಶ್ಲೋಕ : ಶಫರ ಕಮಠ ಕೋಲಾ ಶತ್ರುಕಾಶ್ಯಪಿಬಾಲಾ
ನೃಪಕುಲ ಈರವಾಳಾ ನೀಲಕಂಠಾಸ್ತ್ರಕಾಲಾ
ದ್ರುಪದತನಯ ಪಾಲಾ ದುರವರ್ಜಿತದುಕುಲಾ
ರಿಪುದಿತಿಸುರ ಬಾಲಾ ರಕ್ತಪದ ಭೇದ ಸಾಲಾ
ಪದ : ಕ್ಷೇತ್ರಜ್ಞಾ ಕ್ಷೇತ್ರನಾಮಕ ಕ್ಷೀ ಅಬ್ಧಿನಿಜಾಗಾರ
ನಿರ್ಮಲ ಓಂಕಾರಾ
ಮಾತೃ ಪ್ರತಿಪಾದ್ಯ ಸ್ವರೂಪಾ ವರ್ಜಿತ ಪಾಪ
ಗರುವೆನಿಪ ಸಾಂದೀಪ
ಪುತ್ರನ ತಂದ ಪರಾಕ್ರಮಿ ಎಲ್ಲರ ಸ್ವಾಮಿ
ಪರಮ ಪ್ರೀಯ ಜಾಮಿ
ಭಕ್ತಗೊಲಿದು ವಿಶ್ವರೂಪವಾ ತೋರಿ ಚಾಪವಾ ಕೊಟ್ಟು
ಕಳೆದ್ಯೊ ತಾಪವಾ ೪
ಶ್ಲೋಕ : ನಗಧರ ನಳಿನಾಕ್ಷ ನಾಕನಾಥಾದ್ಯ ಪಕ್ಷ
ನೃಗ ನಗಪತಿ ಶಾಪಾ ನಿರ್ವಹಕಾರ ಶ್ರೀಪಾ
ಭೃಗು ಮುನಿಗೇಯಾ ಭೂತನಾಥ ಸಹಾಯ
ಅಗಣಿತ ಸುಮಹಾತ್ಮ ಸರ್ವ ಜೀವಾಂತರಾತ್ಮಾ
ಪದ :ರಜನೀಶ ಬಿಂಬವನಿಳುಹಿದಾ ಮಾವಕಳುಹಿದ
ಅಹಿತರನಳುಹಿದಾ
ದ್ವಿಜನ ಸಾಹನಾಂತಾಸನ ಪುರಾವೈದೆ ಸತ್ವರಾ
ತೋರಿದೆ ಸತ್ಪುತ್ರರಾ
ಭುಜಗಮಾರ್ಗಣ ರವಿನಂದನಾ ಬಿಡೆ ಶಂದನಾ
ವಒತ್ತಿ ಕುಂತಿನಂದನಾ
ನಿಜಭಾಪುರೆ ಕಾಯ್ದೆ ರಣದೋಳು ಬಾಣನ ತೋಳು
ಖಂಡ್ರಿಸಿದ್ಯೊ ಕೃಪಾಳು ೫
ಶ್ಲೋಕ :ಶುಭತಮ ಸುಖತೀರ್ಥಾರಾಧ್ಯ ಸದ್ದಾನಪಾತ್ರಾ
ಇಭವರರಿಪು ಹತಾನ ವಿಶ್ವಜನ್ಮಾವಿಕರ್ತಾ
ಅಭಯದ ತವಪದಾಂಭೋಜಾತ ಯುಗ್ಮ ಪ್ರಸಾದಾ
ನಭದನುಪಿತ ದೇಹಿ ನಿಶ್ಚಲಾನಂತ ಪಾಹಿ
ಪದ :ವಸುಪತಿಸುತ ನಳಕೂಬರಾ ಮಣಿಗ್ರೀವರಾ
ತರುಜನ್ಮ ವಿದೂರಾ
ವೃಷಭ ಶಕಟ ಬಕಭಂಜನಾ ಜನರಂಜನಾ
ನಿರ್ಗುಣ ನಿರಂಜನಾ
ವಸುದೇವನಿಗೆ ಮಗನಾಗಿದ್ದೆ ಬೆಣ್ಣೆಯ ಕದ್ದೆ
ಗೋಪರೊಡಗೂಡಿ ಮೆದ್ದೆ
ಬಿಸಿಜಾಂಡವ ವದನದೊಳಂದು ಸಜ್ಜನಬಂಧೂ
ತೋರಿದೆ ದಯಸಿಂಧೂ ೬
ಶ್ಲೋಕ :ಅತಿವಮಲಸುಗಾತ್ರ ಅಖಿಳಲೋಕೈಕ ಪಾತ್ರಾ
ಷತತಿಜದಳನೇತ್ರಾ ವೃತ್ತಹಾದ್ಯ ಮರಮಿತ್ರಾ
ಶ್ರುತಿಕಮಂಜ ಸೂತ್ರಾ ಸ್ತುತ್ಯ ಪಾವನ ಪವಿತ್ರಾ
ಪ್ರತಿಹಯ ಸುಚರಿತ್ರಾ ಪಾತು ಲಕ್ಷ್ಮೀ ಕಳತ್ರ
ಪದ : ಏಳು ಘೊಳಿಯ ಗೆದ್ದ ಯದುಪತಿ ಸುಪರಂಜ್ಯೋತಿ
ನಿನ್ನಯ ದಿವ್ಯ ಖ್ಯಾತಿ ಈ
ರೇಳು ಜಗದೊಳು ನುತಿಸೋರು ನಿತ್ಯ
ಸುಖಿಸೋರು ಆನಂದಾಬ್ಧಿ ಸದ್ಗತರೋ
ಕೀಳು ಮಾನವ ನಾ ಬಲ್ಲೆನೆ ನಿನ್ನಾ ನಿರುತಾಪನ್ನ
ಜನಕ್ಲೇಶ ಭಂಜನಾ
ತಾಳಿದೆ ನರರೋಳು ನರವೇಷಾ ಮಂಜುಳ
ಭಾಷಾ ಎನ್ನಯ ಅಭಿಲಾಷಾ ೭
ಶ್ಲೋಕ :ವನರುಹಭವತಾತಾ ವೀತ ತನ್ಮಾತ್ರಭುತ
ದ್ಯುನದಿ ಜಲವಿಧೂತ ದಿವ್ಯ ಪಾದಾಂಬುಜಾತಾ
ಅನಿಲತನಯ ಪ್ರೀತಾ ಅತ್ರಿಸದ್ವಂಶಜಾತಾ
ಅನಿಮಿಷಜಯಸೂತಾ ಆನತೇಷ್ಟಪ್ರದಾತಾ
ಪದ :ಕರದಂಡಧರ ಕಟಸ್ಥಿತಪಾಣಿ
ಮಂಗಳಶ್ರೇಣಿ ಲೋಕೈಕಸತ್ರಾಣಿ
ಶರಣು ಹೊಕ್ಕರ ಕಾಯುವ ಛಲದಂಕಾ ಕಾಳಿಂಗನ
ಬಿಂಕಾ ಬಿಡಿಸಿದ್ಯೊ ನಿಷ್ಕಳಂಕಾ
ಮುರ ಶಿಶುಪಾಲ ಧೇನುಕಾಹಂಸಾ ವತ್ಸಾಸುರ ಕಂಸ
ದಂತವಕ್ತ್ರಾದ್ಯರ ಹಿಂಸಾ
ಪರನಾಗಿ ಕೊಟ್ಟೆ ಧಾರಿಣಿಷ್ಟಾ ಸುಜನರ ಕಷ್ಟಾ
ಬಿಡಿಸಿದೆಯೋ ಓಜಿಷ್ಠಾ ೮
ಶ್ಲೋಕ :ಹನುಮನತ ಪಾದಾಬ್ಜಹಂಸ ಸಂವಕ್ತ್ರುಕುಬ್ಜಾ
ತನುವಿಕೃತ ವಿನಾಶಂ ಕಾಳಿ ಜಿಹ್ವಾಶುದೇಶಂ
ದನುಜವಿಕರಾಳ ಮತ್ತೆ ಪೌಂಡ್ರೇ ಶೃಗಾಲಂ
ಹನನ ವಿದುರವಿಂದ್ಯ ಹೇಮಗರ್ಭಾಂಡ ವಂದ್ಯಂ
ಪದ : ಇಟ್ಟಿಗೆ ಪೀಠ ಸಂಸ್ಥಿತ ಪಾದಾ ಮಂಗಳಪ್ರದಾ
ಶಾಶ್ವತ ಮೋದ ಸುಪದ
ಕೊಟ್ಟು ಪಾಲಿಸೋ ಅನಿಮಿಷತರು ನಿನ್ನಯಚಾರು
ಮೂರುತಿಯನ್ನು ತೋರು
ಪುಟ್ಟಲಾರೆನೋ ಜಗದೊಳು ದಾತಾ ಎನ್ನಯ
ಮಾತಾ ಲಾಲಿಸು ಜಗನ್ನಾಥ
ವಿಠ್ಠಲ ವೃಂದಾರಕರರಸಾ ಸಂತತ ಲೇಸಾ
ನಿನ್ನವರಿಗೀಯೋ ಶ್ರೀಶಾ ೯

ಭಾಗವತಾದಿ ಪುರಾಣಗಳಲ್ಲಿರುವ
೧೫
ಪಾಹಿ ಪದ್ಮದಳಾಯತಾಂಬಕ ಪಾಹಿ ಪದ್ಮಾರಮಣ ಪರಾತ್ಪರ
ಪಾಹಿ ಪದ್ಮಾಸನ ಜನಕ ಮಾಂ ಪಾಹಿ ಪ್ರಪನ್ನ ಪಾಲಕ ಪ
ವಾಸುದೇವ ಕೃತೀಶ ಶಾಂತಿಪ
ಕೇಶವಾಚ್ಯುತ ವಾಮನ ಹೃಷೀಕೇಶ
ಪ್ರಶ್ನಿಗರ್ಭ ಋಷಭ ನೃಕೇಸರಿ ಹಯಗ್ರೀವ ವೇದ
ವ್ಯಾಸ ದತ್ತಾತ್ರಯ ಉರುಕ್ರಮಾ
ವಾಸವಾನುಜ ಕಪಿಲ ಯಜ್ಞ ಮ
ಹೇಶ ಧನ್ವಂತ್ರಿ ಹಂಸ ಮಹಿ
ದಾಸ ನಾರಾಯಣ ಕೃಷ್ಣಹರೆ ೧
ಮಾಧವ ಪ್ರದ್ಯುಮ್ನ ಶ್ರೀ ದಾಮೋದ
ರಾಧೋಕ್ಷಜ ಜನಾರ್ದನ ಶ್ರೀಧರ ಶ್ರೀ
ಪದ್ಮನಾಭ ವೃಕೋದರ ಪ್ರಿಯತಮ ತ್ರಿವಿಕ್ರ
ಮ ದೇವಗರ್ಭ ವಿರಿಂಚಿ ವಿನುತ
ಗದಾಧರ ಗಯಾಸುರ ವಿಮರ್ದನ
ಸಾಧಿತ ಜಗತ್ರಯ ಪುರಾತನ
ಪಾದ ಪರಮ ಕೃಪಾಂಬುಧೇ ಮಾಂ ೨
ನಂದಗೋಪನ ಕುಮಾರ ಗೋಪಿ
ವೃಂದ ಪೋಷಿತನಮಿತ ಸಂಕ್ರಂಡನ ಕೃಪಾ
ಸಾಂದ್ರ ವರ ಕಾಳಿಂದಿ ತಟನಿ ವಿಹಾರ ಪಾಂಡವ
ಬಂಧು ದ್ರೌಪದಿವರದ ನೃಪ ಮುಚು
ಕುಂದಸ್ತುತಿ ಸಂಪ್ರೀತ ಲಕ್ಷ್ಮೀ
ಮಂದಿರ ಮಹಾ ಮಹಿಮ ನಿತ್ಯಾ
ನಂದಮಯ ನಿಜ ಭಕ್ತವತ್ಸಲ ೩
ಮೀನಕೂರ್ಮವರಾಹ ಪಂ
ಚಾನನಾ ದಿತಿಸುತ ವಾಮನ
ಕ್ಷೋಣಿಪಾರ್ವನ ಬ್ರಾಹ್ಮಣ ಪ್ರಿಯ
ವನೌಕಸನಾಥ ಮುಖ್ಯ
ಪ್ರಾಣಸಖ ವಸುದೇವ ದೇವಕಿ
ಸೂನು ಸುಂದರಕಾಯ ಪುರಹರ
ಬಾಣರೂಪ ಬುದ್ಧ ಕಲ್ಕಿ ಪ್ರ
ಧಾನ ಪುರುಷೇಶ್ವರ ದಯಾಕರ ೪
ನಿಂತ ನಿಜಬಲ ಮಾತುಳಾಂತಕ
ಶ್ವೇತವಾಹನ ಸೂತ ತ್ರಿಗುಣಾ
ತೀತ ಭವನಿಧಿ ಪೋತ ಮೋಕ್ಷನಿ
ಕೇತನಪ್ರದ ಭೂತಭಾವ ಧೌತ ಪಾಪ
ವ್ರಾತ ತ್ರಿಜಗತಾತ ನಿರ್ಗತ ಭೀತ
ಶ್ರುತಿ ವಿಖ್ಯಾತ ಭಕ್ತಿಸುವೇತನ ಪ್ರಿಯ
ಭೂತಿದ ಜಗನ್ನಾಥ ವಿಠ್ಠಲ ೫

ನುಡಿ-೧: ಉತ್ತಮತೀರ್ಥರ
೧೧೪
ಪೊಂದಿ ಬದುಕಿರೋ ರಾಘವೇಂದ್ರ ರಾಯರ
ಕುಂದದೆಮ್ಮನು ಕರುಣದಿಂದ ಪೊರೆವರ ಪ
ನಂಬಿ ತುತಿಸುವಾ ಜನ ಕದಂಬಕಿಷ್ಟವ
ತುಂಬಿ ಕೊಡುವರೋ ಅನ್ಯ ಹಂಬಲೀಯರು ೧
ಫಾಲಲೋಚನ ವಿನುತ | ಮೂಲ ರಾಮನಾ
ಶೀಲ ಸದ್ಗುಣ ನುತಿಪ ಮೇಲು ಭರತನಾ ೨
ಅಲವ ಬೋಧರಾ ಸುಮತ | ಜಲಧಿ ಚಂದಿರಾ
ಒಲಿದು ಭಕ್ತಾರಾ ಪೊರೆವ ಸುಲಭ ಸುಂದರಾ ೩
ಗುರು ಸುಧೀಂದ್ರರಾ ವಿಮಲ | ಕರಜರೆನಿಪರಾ
ಸ್ಮರಿಸಿ ಸುರುಚಿರಾ ವಿಮಲ ಚರಣ ಪುಷ್ಕರಾ ೪
ಭೂತ ಭಾವನಾ ಜಗನ್ನಾಥ ವಿಠಲನಾ
ಪ್ರೀತಿ ಪಾತ್ರನಾ ನಂಬಿರೀತನೀಕ್ಷಣಾ ೫

ಮಧ್ವಾಚಾರ್ಯರು ಸ್ಥಾಪಿಸಿದ ಸಿದ್ಧಾಂತದ
೩೨
ಪ್ರಣವ ಪ್ರತಿಪಾದ್ಯ ಪ್ರಹ್ಲಾದವರದಾ ಪ
ಪ್ರಣತಕಾಮದನೆ ಪ್ರಾರ್ಥಿಸುವೆ ಪ್ರಭುವೆಂದು ಅ.ಪ.
ಸಕಲ ಜೀವ ಜಡಾತ್ಮಕ ಜಗತ್ತಿನೊಳಗಿದ್ದು
ಅಕಳಂಕ ನಾಮರೂಪದಲಿ ಕರೆಸಿ
ಪ್ರಕಟನಾಗದಲೆ ಮಾಡಿಸಿ ಸರ್ವ ವ್ಯಾಪಾರ
ಸುಖ ದುಃಖಗಳಿಗೆ ಗುರಿಮಾಡಿ ಎಮ್ಮನು ನೋಳ್ಪೆ ೧
ಏನೆಂಬೆ ನಿನ್ನ ಮಹಿಮೆಗೆ ರಮಾಪತಿ ನಿನ್ನ
ಧೀನರಲ್ಲದೆ ತತ್ವಮಾನಿ ಸುರರು
ದಾನವಾಂತಕನೆ ವಿಜ್ಞಾಪನೆಯ ಕೈಕೊಂಡು
ದೀನರುದ್ಧರಿಸುವುದು ದಯದಿಂದ ನಿರುತಾ ೨
ಸರ್ವ ಸ್ವತಂತ್ರ ನೀನಾದ ಕಾರಣ ಬ್ರಹ್ಮ
ಶರ್ವಾದಿಸುರರು ಪ್ರಾರ್ಥಿಸುತಿಪ್ಪರು
ದುರ್ವಿಭಾವ್ಯನೆ ಸುರಗಮೃತ ಪಾನವ ಗೈಸಿ
ಗರ್ವಿಸಿದ ದಾನವರ ಗಣವ ಸಂಹರಿಪೆ ೩
ಬುಧ್ಯಾದಿ ಇಂದ್ರಿಯಗಳೊಳಗೆ ತತ್ಪತಿಗಳೊಳ
ಗಿದ್ದು ಬಹುವಿಧ ಚೇಷ್ಟೆಗಳನೆ ಮಾಡಿ
ಬದ್ಧರನ ಮಾಳ್ಪೆ ಭವದೊಳಗೆ ಜೀವರನ ಅನಿ
ರುದ್ಧರೆಂದೆನಿಪೆ ಎಲ್ಲರೊಳು ವ್ಯಾಪಕನಾಗಿ ೪
ದಾಶರಥಿ ನೀನೆ ಗತಿಯೆಂದು ಮೊರೆಹೊಕ್ಕೆ ವಿ
ಭೀಷಣಗೆ ಲಂಕಾಧಿಪತ್ಯವಿತ್ತೇ
ವಾಸವಾನುಜ ಜಗನ್ನಾಥ ವಿಠ್ಠಲ ಭಕ್ತ
ಪೋಷಕನು ನೀನಹುದು ಕಲ್ಪ ಕಲ್ಪಗಳಲ್ಲಿ ೫

೧೨೮
ಪ್ರತಿಗಾಣೆ ನಿಮ್ಮ ಮಹಿಮೆಗೆ
ಸತ್ಯಭೋಧ ಯತಿಕುಲವರನೆ ನಿತ್ಯ
ತುತಿಸಿ ವಂದಿಸುವ ತಾವಕರೊಳು ಎಣಿಸೋ ಪ
ಅರ್ಥಿಜನ ಚಿಂತಾಮಣಿ ಸತ್ಕರುಣಿ
ಶ್ರೀನಿವಾಸನ ಗುಣ ಸಾನುರಾಗದಲಿ ವ್ಯಾ
ಖ್ಯಾನ ಪೇಳುವ ಕಾಲದಿ
ಶ್ವಾನರೂಪದಿ ಪವಮಾನ ಜನರು ನೋಡೆ
ಕಾಣಿಸಿಕೊಂಡನಂದೊ ತಾ ಬಂದು ೧
ಬವರಗೋಸುಗ ಬಂದ ಯವನಾಧಿಪತಿ ನಿಮ್ಮ
ಸುವಿಚಿತ್ರ ಮಹಿಮೆ ಕಂಡು
ಪ್ರವಿನೀತನಾಗಿ ಕಪ್ಪವೆ ಕೊಟ್ಟು ನಮಿಸಿದ
ಕವಿ ಆವಾ ವಿಭವಾ ವರ್ಣಿಸುವಾ ೨
ಇವರು ದೇವಾಂಶರೆಂದರುಪುವಗೋಸುಗ ಬಂದು
ದಿವಿಜತರಂಗಿಣಿಯು
ಶಿವನಂಗಭೂರುಹ ಮೂಲ ಭಾಗದಲಿ ಉ
ದ್ಭವಿಸಿ ಕಂಗೊಳಿಸಿದಳು ಕೃಪಾಳು ೩
ಸ್ವಾಂತಸ್ಥ ಮುಖ್ಯ ಪ್ರಾಣಾಂತರಾತ್ಮಕ ಭಗ
ವಂತನಂಘ್ರಿ ಕಮಲ
ಸಂತತ ಸರ್ವತ್ರ ಚಿಂತಿಸುತಿಪ್ಪ ಮ
ಹಾಂತರಿಗೇನಚ್ಚರೀ ವಿಚಾರ ೪
ಮರುತ ಮತಾಬ್ಧಿ ಚಂದಿರ ಚಾರು ಚರಿತ ಭೂ
ಸುರವರ ಸನ್ನುತನೇ
ಪರಮ ಪುರುಷ ಜಗನ್ನಾಥ ವಿಠ್ಠಲ ನಿಮ್ಮ
ಪರಿಪರಿ ಮಹಿಮೆ ಎಲ್ಲಾ ತಾ ಬಲ್ಲಾ ೫

ಮತ, ವ್ರತ, ಪುರಾಣಗಳಲ್ಲಿ
೬೭
ಪ್ರಾಣದೇವ ನೀನಲ್ಲದೆ ಕಾಯ್ವರ
ಕಾಣೆ ಲೋಕದೊಳಗೆ ಮುಖ್ಯ ಪ
ಪ್ರಾಣೋಪಾನ ವ್ಯಾನೋದಾನ
ಸಮಾನನೆನಿಪ ಮುಖ್ಯ ಅ.ಪ.
ವಾಸವ ಕುಲಿಶದಿ ಘಾತಿಸೆ ಜೀವರ
ಶ್ವಾಸ ನಿರೋಧಿಸಿದೆ
ಆ ಸಮಯದಿ ಕಮಲಾಸನ ಪೇಳಲು
ನೀ ಸಲಹಿದೆ ಜಗವಾ ಮುಖ್ಯ೧
ಅಂಗದ ಪ್ರಮುಖ ಪ್ಲವಂಗರು ರಾಮನ
ಅಂಗನೆಯನು ಪುಡುಕೆ
ತಿಂಗಳು ಮೀರಲು ಕಂಗೆಡೆ ಕಪಿಗಳ
ಜಂಗುಳಿ ಪಾಲಿಸಿದೆ ಮುಖ್ಯ ೨
ಪಾವಿನ ಪಾಶದಿ ರಾವಣ ನೀಲ ಸು
ಗ್ರೀವ ಮುಖ್ಯರ ಬಿಗಿಯೆ
ಸಾವಿರದೈವತ್ತು ಗಾವುದದಲ್ಲಿಹ ಸಂ
ಜೀವನ ಜವದಿ ತಂದೆ ಮುಖ್ಯ ೩
ಪರಿಸರ ನೀನಿರೆ ಹರಿತಾನಿಪ್ಪನು
ಇರದಿರೆ ತಾನಿರನು
ಕರಣ ನಿಯಾಮಕ ಸುರರಗುರುವೆ ನೀ
ಕರುಣಿಸೆ ಕರುಣಿಸುವಾ ೪
ಭೂತೇಂದ್ರಿಯದಧಿನಾಥ ನಿಯಾಮಕ
ಆ ತೈಜಸಹರನಾ
ತಾತನೆನಿಪ ಜಗನ್ನಾಥ ವಿಠಲನ
ಪ್ರೀತಿ ಪಾತ್ರನಾದ ಮುಖ್ಯ ೫

೨೪೨ ಫಣಿರಾಜಶಯನ ರುಕ್ಮಿಣೀ ದೇವಿಯೊಡಗೂಡಿ
ಮಣಿ ಮಂಚದ ಮೇಲೆ ಕುಳಿತಿರ್ದು |
ಕುಳಿತಿರ್ದು ಸತಿಯೊಡನೆ
ಅಣಕವಾಡಿದನು ಇನಿತೆಂದು ೧
೨೪೩ ಹೇ ರಾಜಕನ್ನಿಕೆ ಭೂರಮಣ ನಾನಲ್ಲ
ವಾರಿಧಿಯೊಳಗಿದ್ದು ಬದುಕುವ |
ಬದುಕುವಗೆ ಮರುಳಾದಿ
ನಾರದನ ನುಡಿಗೆ ನಳಿನಾಕ್ಷಿ ೨
೨೪೪ ಶಿಶುಪಾಲ ಮೊದಲಾದ ವಸುಧೆಪಾಲರ ಬಿಟ್ಟು
ಪಶುಪಾಲಗೊಲಿದೆ ಸುಕುಮಾರಿ |
ಸುಕುಮಾರಿ ಎನಲು ಪರ
ವಶಳಾದಳಾಗ ಮಹಲಕ್ಷ್ಮಿ ೩
೨೪೫ ಈ ಮಾತ ಕೇಳಿ ಕೈ ಚಾಮರವನೀಡಾಡಿ
ಭೂಮಿಗೊರಗಿದಳು ಭುಗಿಲೆಂದು |
ಭುಗಿಲೆಂದು ಮಲಗಿದಾ
ಕಾಮಿನಿಯ ಕಂಡ ಕಮಲಾಕ್ಷ ೪
೨೪೬ ಕಂಗೆಟ್ಟಳೆಂದು ತನ್ನ ಅಂಗನೆಯ ಬಿಗಿದಪ್ಪಿ
ಮುಂಗುರುಳ ತಿದ್ದಿ ಮುದ್ದಿಸಿ | ಮುದ್ದಿಸಿ ಮಾತಾಡ್ಡ
ಕಂಗಳಶ್ರುಗಳ ಒರೆಸುತ್ತ೫
೨೪೭ ಸಲಿಗೆ ಮಾತಿನ ಬಗೆಯ ತಿಳಿಯದಲೆ ಹೀಗೆ ಚಂ
ಚಲವನೈದುವರೆ ಚಪಲಾಕ್ಷಿ | ಚಪಲಾಕ್ಷಿ ಏಳೆಂದು
ತÀಲೆಯ ಮೇಲಿಟ್ಟ ಕರಪದ್ಮ ೬
೨೪೮ ಶ್ರೀ ದೇವಿ ನಿನ್ನೊಳು ವಿನೋದ ಮಾಡಲಿಷ್ಟು ವಿ
ಷಾದ ಪಡಲ್ಯಾಕೆ ಅನುದಿನ | ಅನುದಿನದಿ ಸ್ಮರಿಸುವರ
ಕಾದುಕೊಂಡಿಹೆನು ಬಳಿಯಲ್ಲಿ ೭
೨೪೯ ಹಿಗ್ಗಿದಳು ಮನದಿ ಸೌಭಾಗ್ಯ ಭೂಮಿನಿಯು ಅಪ
ವರ್ಗದನ ನುಡಿಗೆ ಹರುಷಾದಿ | ಹರುಷದಿಂದಲಿ ಪಾದ
ಯುಗ್ಮಕೆರಗಿದಳು ಇನಿತೆಂದು ೮
೨೫೦ ಜಗದೇಕ ಮಾತೆ ಕೈ ಮುಗಿದು ಲಜ್ಜೆಯಲಾಗ
ಮುಗುಳು ನಗೆ ಸೂಸಿ ಮಾತಾಡಿ |
ಮಾತಾಡಿದಳು ಪತಿಯ
ಮೊಗವ ನೋಡುತಲಿ ನಳಿನಾಕ್ಷಿ ೯
೨೫೧ ಪರಿಪೂರ್ಣಕಾಮ ನಿನ್ನರಸಿ ನಾನಹುದು ಸ್ವೀ
ಕರಿಸಿದೆಯೊ ಎನ್ನ ಸತಿಯೆಂದು | ಸತಿಯೆಂದ ಕಾರಣಾ
ಕ್ಷರಳೆನಿಸಿಕೊಂಡೆ ಶ್ರುತಿಯಿಂದ೧೦
೨೫೨ ಭುವನಾಧಿಪತಿ ನೀನು ಅವಿಯೋಗಿ ನಿನಗಾನು
ಅವಿವೇಕಿ ನೃಪರ ಪತಿಯೆಂದು | ಪತಿಯೆಂದು ಬಗೆವೆನೇ
ಸವಿ ಮಾತಿದಲ್ಲ ಸರ್ವಜ್ಞ ೧೧
೨೫೩ ಭಗವಂತ ನೀನು ದುರ್ಭಗ ದೇಹಗತರವರು
ತ್ರಿಗುಣವರ್ಜಿತವು ತವರೂಪ | ತವರೂಪ ಗುಣಗಳನು
ಪೊಗಳಲೆನ್ನಳವೆ ಪರಮಾತ್ಮ೧೨
೨೫೪ ಭಾನು ತನ್ನಯ ಕಿರಣ ಪಾಣಿಗಳ ದೆಸೆಯಿಂದ
ಪಾನೀಯಜಗಳನರಳಿಸಿ | ಆರಳಿಸಿ ಗಂಧ ಆ
ಘ್ರಾಣಿಸಿದಂತೆ ಗ್ರಹಿಸೀದಿ೧೩
೨೫೫ ಬೈದವನ ಕುತ್ತಿಗೆಯ ಕೊಯ್ದು ಅಂಧಂತಮಸ್ಸಿ
ಗೊಯ್ದು ಹಾಕಿದೆಯೊ ಪರಿಪಂಥಿ |
ಪರಿಪಂಥಿ ನೃಪರನ್ನು
ಐದುವೆನೆ ನಿನ್ನ ಹೊರತಾಗಿ ೧೪
೨೫೬ ನಿಮ್ಮನುಗ್ರಹದಿಂದ ಬ್ರಹ್ಮರುದ್ರಾದಿಗಳ
ನಿರ್ಮಿಸಿ ಸಲಹಿ ಸಂಹಾರ | ಸಂಹಾರ ಮಾಡುವೆನು
ದುರ್ಮದಾಂಧರನಾ ಬಗೆವೇನೆ ೧೫
೨೫೭ ಮಂಜುಳೋಕ್ತಿಯ ಕೇಳಿ ಅಂಜಲ್ಯಾತಕೆಂದು ನವ
ಕಂಜಲೋಚನೆಯ ಬಿಗಿದಪ್ಪಿ | ಬಿಗಿದಪ್ಪಿ ಮುದ್ದಿಸಿದ ಧ
ನಂಜಯ ಪ್ರಿಯನು ಸಥೆಯಿಂದ೧೬
೨೫೮ ನಿನಗೆ ಎನ್ನಲಿ ಭಕುತಿ ಎನಿತಿಹುದೊ ಕಂಡೆ
ಎನಗಿಹುದು ಕರುಣ ಎಂದೆಂದು |
ಎಂದೆಂದು ಇಹುದು ಇದ
ಕನುಮಾನವಿಲ್ಲ ವನಜಾಕ್ಷಿ ೧೭
೨೫೯ ದೋಷವರ್ಜಿತ ರುಕ್ಮಿಣೀಶನ ವಿಲಾಸ
ತೋಷದಲಿ ಕೇಳಿ ಪಠಿಸಿದ | ಪಠಿಸಿದಂಥವರ ಅಭಿ
ಲಾಷೆ ಪೊರೈಸಿ ಸಲಹೂವ ೧೮
೨೬೦ ನೀತಜನಕ ಶ್ರೀ ಜಗನ್ನಾಥ ವಿಠ್ಠಲ ಜಗ
ನ್ಮಾತೆಯೆನಿಸುವಳು ಮಹಲಕ್ಷ್ಮಿ | ಮಹಲಕ್ಷ್ಮಿ ಸುತ ಬ್ರಹ್ಮ
ಪಾತ್ರನೆನಿಸುವ ಗುರು ರುದ್ರ ೧೯