Categories
ರಚನೆಗಳು

ಜಯೇಶವಿಠಲ

೯೮*
ಅಪರಾಧ ಎನ್ನದಯ್ಯ ಹೇ ಗುರುವರ್ಯ ಪ
ಅಪರಾಧ ಎನ್ನದಯ್ಯ ಅಪರಿಮಿತವು ಸರಿ
ಕೃಪೆಯು ಮಾಡಲಿ ಬೇಕು ಕೃಪಣವತ್ಸಲ ಗುರುವೆ ಅ.ಪ.
ಹಡೆದ ತಾಯಿ ಶಿಶುವ ಬಡಿದು ಕೊಂದರೆ ತೃಣವು
ಬಿಡಿಸಿಕೊಳ್ಳಲು ಬಲ್ಲುದೆ ಜಡಕೆ ಸಮವಾದದ್ದು
ಒಡೆಯ ನೀ ಎನ್ನಯ ಅಸ್ವಾತಂತ್ರ ಎಣಿಸದೆ
ಬಿಡುವೆನೆಂದರೆ ನಿನಗೆ ತಡೆಯ ಬರುವರು ಯಾರೈ ೧
ದೀನವತ್ಸಲ ಕೇಳು ಅನೇಕ ಜನ್ಮದೊಳು
ನಾನಾ ಪರಿಯೊಳು ನೊಂದು ಸೇರಿದೆ ನಿನಗೆ ಬಂಧು
ಏನು ಪೇಳದೆ ಎನ್ನ ಕಾನನದಲಿ ಬಿಟ್ಟು
ಶ್ರೀನಾಥನ ಸೇರಿದಿ ಅನಾಥನ ಮಾಡಿದಿ ಎನ್ನ ೨
ಬ್ಯಾರೆ ಉಪಾಯವಿಲ್ಲ ಸಾರಿದೆ ನಿನಗಯ್ಯ
ಕಾರುಣ್ಯ ನಿಧಿಯೆ ಅಪಾರ ಕರುಣಮಾಡಿ
ಮಾರಪಿತನಾದ ನ್ನ
ಆರಾಧನೆಯಲಿ ಸತತ ಧಾರಾಳ ಮತಿನೀಡೋ ೩

ತೃಣಕೆ ಕೈವಲ್ಲೀವ ತ್ರ್ಯಧೀಶ
೪೧
ಇಂದಿರಾನಂದ ಉದಧಿವರ್ಧನನೆಂದು ಪ
ಕಂದರ್ಪಕೋಟಿ ಲಾವಣ್ಯನಿಧಿ ಮನಪೊಂದು ಅ.ಪ
ನಾನು ನನ್ನದು ಎಂಬ ಜ್ಞಾನ ಸಂತತಿಯಿಂದ
ನಾನಾ ಯಾತನೆ ಭಾವ ಬಲೆಯ ಕಟ್ಟಿ
ಹೀನಗೋಜಿಲಿ ಸಿಕ್ಕಿ ಬಲುನೊಂದೆ ಗೋವಿಂದ
ನೀನು ನಿನ್ನದು ಎಂಬ ಅಮೃತಗಾನದಿ ನಿಲಿಸು ೧
ದರ್ವಿಯಂದದಿ ನಾನು ನೀ ಸರ್ವ ಸ್ವಾತಂತ್ರ
ನಿರ್ವಾಹ ನಿನ್ನಿಂದ ಸರ್ವ ಜಗಕೆ
ದೂರ್ವ ಏರಿಸೆ ಸಕಲ ದುರಿತವಳಿಸಿ ಮುಕ್ತಿಸುಖ
ತೋರ್ವಂಥ ಗುಣನಿಧಿ ಸರ್ವಾತ್ಮ ಹೊರೆ ಹೊರೆಯೊ ೨
ನಿನ್ನ ದರುಶನ ಬಿಟ್ಟು ಅನ್ಯತ್ರ ನಿರ್ಭೀತಿ
ಎನ್ನಲಿ ಎಂದೆಂದು ವೇದವೇದ್ಯ
ನಿನ್ನ ದರುಶನ ಫಲಕೆ ನಿನ್ನ ಮಹಕರುಣ
ಇನ್ನು ಕಾರಣದೇವ ಧನ್ಯರಲಿ ಇಡು ಎನ್ನ ೩
ಮನೋವಿಕಾರಗಳೆಂಬ ದುಃಖಾರ್ಣದಿ ಬಿದ್ದು
ಅನುಮಾನ ಮಾಡಿದೆನೊ ನಿನ್ನ ಅಮೃತ
ತನುಧ್ಯಾನ ಮನಕಿಡಿಯದೇನುಗತಿ ಯದುವರ್ಯ
ತೃಣಕೆ ಕೈವಲ್ಲೀವ ತ್ರ್ಯಧೀಶಮನಪೊಂದು ೪
ಜ್ಞಾನಮನ ಬಿಡದಿರು ದೀನ ಬಾಂಧವ ಕೃಷ್ಣ
ಇನ್ನು ಮಾಯವನು ತೆಗೆದೆನ್ನ ಬೆರೆಯೊ
ಜ್ಞಾನನಿಧಿ ನೆ ವಿಧಿವಂದ್ಯ
ಪ್ರಾಣಾಧಾರಕ ಶುಕನ ಆನಂದನಿಧಿ ಪಾಹಿ ೫

೪೨
ಎಂತು ಜೀವಿಸಲಯ್ಯ ಯಾದವೇಶ ಪ
ಸಂತ ಚಿಂತಾರತ್ನ ನೀನುಪೇಕ್ಷಿಸೆ
ಎನ್ನಸುವಿಗಸು ನೀನು ಭಿನ್ನ ಜ್ಞಾನದಿ ಎನ್ನ ಅ.ಪ
ಬನ್ನ ಬಡಿಸುವಿ ಮಾಯ ಜೈಸಲರಿಯೆ
ಧನ್ಯ ಶಿರಿ ವಿಧಿ ವಾಯು ಶಿವ ಶಕ್ರ ಸುರನಿಕರ
ನಿನ್ನಲ್ಲಿ ಸುಖಿಸುವರೊ ಅನ್ನೆಲ್ಲಿ ಅಸತೆಂದು ೧
ನೀರಗುಳ್ಳೆಯಂತೆ ಸಂಸೃತಿಯ ಸುಖವೆಂದು
ದಾರಿತೋರ್ವವ ನೀನು ಕಣ್ಣುಕಟ್ಟೆ
ಆರು ಬಿಚ್ಚುವರಯ್ಯ ಆ ಪಟಲಕಿಕ್ಕಟ್ಟು
ವಾರಿಜಾಸನನಯ್ಯ ವಂಚಿಸದೆ ಮೈದೋರು ೨
ಕಾಮಾದಿ ಷಡ್ವರ್ಗ ದುಷ್ಕರಣ ದುಮ್ಮಾನದ
ತಾಮಸದಿ ಸಿಗಬಿದ್ದು ಪಾಮರಾದೆ
ವ್ಯೋಮಕೇಶನ ಮಿತ್ರ
ನೀ ಮನಸು ಮಾಡಲು ಆತ್ಮಾಪಿ ವೈಕುಂಠ ೩

ಎನ್ನೊಡನೆ ಹುಟ್ಟಿದ ಹರಿಯೆ
೪೩
ಎನ್ನೊಡನೆ ಹುಟ್ಟಿದ ಹರಿಯೆ ಪಾಹಿ ಪ
ಅನ್ನಂತ ಗುಣವನಧಿ ಎನ್ನಂತೆ ನಟಿಸುವಿ ಅ.ಪ
ಸೃಷ್ಟಿಕಾಲದ ಮೊದಲು ಇಷ್ಟು ಪರಿಯಂತರದಿ
ಅಷ್ಟು ಕಾಲವು ನಿನ್ನ ನಾಮ ಧರಿಸೆ
ತುಷ್ಟಿ ಪೂರ್ಣನೆ ನೀನು ಮಂದಿ ಮೋಹಿಸಿ ಎನ್ನ
ಕಷ್ಟಕೆ ಗುರಿಮಾಳ್ಪುದುಚಿತವೇ ನಿನಗೆ ೧
ಒಳಗಿದ್ದು ಎನ್ನಲ್ಲಿ ಎಂತೆಂತು ನೀನಾದೆ
ತಲೆ ಮಣಿದು ನಾನಂತು ಮಾಡಬೇಕೊ
ಮಲಗುವುದು ನಿಲ್ಲುವುದು ನಿದ್ದೆಗೈವುದು ಮತ್ತೆ
ತಿಳಿವುದು ತಿನ್ನುವುದು ನಿನ್ನ ಶ್ರೀಯವೊ ದೇವ ೨
ಬಿಂಬನೀ ಪ್ರತಿಬಿಂಬ ನಾ ನಿನಗೆ ಎಂದೆಂದು
ಸಿಂಧು ಸದನ ರಾಯ
ಡಿಂಬದಲಿ ನಡೆದ ಶ್ರೇಯ ನಿನ್ನದೆಂಬೊಜ್ಞಾನ
ಬೆಂಬಿಡದೆ ಪಾಲಿಸಿ ಬಿಂಬ ದರುಶನ ನೀಡೊ ೩

ಪಾದದಿ ನದಿಯನು ಪೆತ್ತ
೪೪
ಎಲ್ಲ ದೇವರ ಗಂಡ | ಕೃಷ್ಣ
ಚಿಲ್ಲರೆ ದೈವರ ಮಿಂಡ ಪ
ಪಾದದಿ ನದಿಯನು ಪೆತ್ತ | ಅದನು
ರುದ್ರನು ಶಿರದಲಿ ಪೊತ್ತ
ಮಾಧವನ್ಹೊಕ್ಕಳ ಜಾತ | ಶತ
ಮೋದನು ಲೋಕ ಪ್ರಖ್ಯಾತ ೧
ಸೃಷ್ಟಿ ಸಂಹಾರಗೈದ | ಪರ
ಮೇಷ್ಟಿ ರುದ್ರರನಾಳ್ದ
ಯೆಟ್ಟ ದೈತ್ಯರ ಶಿರ ಮುರಿದ | ದುರಿತ-
ದೃಷ್ಟಿಸಿ ನಾಶಗೈದ ೨
ಬಂಟರ ಪಾಲಕನೀತ | ವೈ-
ಕುಂಠದ ಒಡೆಯನು ದಾತ
ತುಂಟರ ಮಡಹುವ ಸತತ | ನಮಗೆ
ನಂಟನು ಗೋಕುಲನಾಥ ೩
ಮನಸಿಗೆ ಬಂದುದು ಸಿದ್ಧ | ಪ್ರತಿ
ಯೆಣಿಸುವ ಜೀವನೆ ಬದ್ಧ
ನೆನೆಸುವರಲಿ ತಾನಿದ್ದ | ದಯ
ವನಧಿಯು ಬೆಣ್ಣೆಯ | ಕದ್ದ ೪
ದುರಿತ ದುರುಳರ ಭಂಗ | ತಾ
ನಿರುತ ಮಾಡುವ ರಂಗ
ತುಂಗ | ಮಹಿ
ಮಾ ರಕ್ಷಿಸು ದಯಾಪಾಂಗ

೪೫
ಏಕಿಷ್ಟು ಕರುಣವೊ ಶ್ರೀಕೃಷ್ಣದೇವ ಪ
ನಾಲ್ಕ್ಹತ್ತು ಲೋಕದಲಿ ಸುಖ ಸೂರೆ ಮಾಳ್ಪೊ ಹರಿ ಅ.ಪ
ಮುಕ್ತಗಣ ನೋಡಯ್ಯ ನಿತ್ಯಮುಕ್ತಳ ನೋಡು
ಶಕ್ತವಿಧಿ ವಾಣೀಶ ಭಕ್ತಿ ದೇವ
ಪಕ್ಷಿಪತಿ ಫಣಿ ರುದ್ರ ಇವರ ಸತಿಯರ ನೋಡು
ಉತ್ತಮೋತ್ತಮ ಸುಖವ ಸೂರೆಗೊಂಬರೊ ಹರಿಯೆ ೧
ನಿನ್ನಾರು ಮಹಿಷಿಯರ ಸುರಪ ಸುರಗಣ ನೋಡು
ಪುಣ್ಯತಮ ಸುರಮನಿಯ ಭೃಗುವ ನೋಡು
ಚಿಣ್ಣ ಪ್ರಹ್ಲಾದನನ್ನ ಬಲಿ ಧ್ರುವ ಭೀಷ್ಮನ್ನ
ಇನ್ನು ದ್ರೌಪದಿ ಶುಕನ ಆನಂದ ನೋಡಂಇÀಇ್ಯ ೨
ಅಂಬರೀಷನ ನೋಡು ರಾವಣಾನುಜ ಜನಕ
ಗಂಭೀರ ಪರೀಕ್ಷಿತ ವೃತ್ತ ಶಬರಿ
ತುಂಬಿದ ಸದ್ಭಕ್ತ ಋಷಿಪತ್ನಿಯರ ನೋಡು
ಕಂಬನಿಯ ಸುರಿಸುವೆನೊ ಕರುಣಿಸೊ ಹೃದ್ರ‍ಗಹದಿ ೩
ನೀಯೆನ್ನ ಸತ್ವ ನೀಯೆನ್ನ ಜ್ಞಾನ
ನೀಯೆನ್ನ ಮನ ಬುದ್ಧಿ ಕರುಣ ನಿಧಿಯೆ
ನೀಯೆನ್ನ ಪ್ರಾಣರತಿ ನೀಯೆನ್ನ ಸತ್ಕರಣ
ನೀಯೆನ್ನ ಧೃತಿ ಶಾಂತಿ ನೀಯೆನ್ನ ಸರ್ವನಿಧಿ ೪
ನೀ ಮಾಡೆ ನಾ ಮಾಳ್ಪೆ ನೀನಾಡಿಸಿದರಾಡ್ವೆ
ಕಾಮದನೆ ಕಾಮಪಿತ  ಶ್ರೀ
ರಮಣ ಸರ್ವೇಶ ಈ ಮನಸು ನಿನ್ನಲ್ಲಿ
ಪ್ರೇಮದಿ ನೆಲಸಿ ಇರುವಂತೆ ಕೃಪೆಮಾಡು ೫

೭೭
ಸಾಧನದ ಚಿಂತೆ ಎನಗ್ಯಾಕೊ ದೇವ
ಮಾಧವನೆ ನಿನ್ನ ನಾಮ ಧರಿಸಿಕೊಂಡಿರುವವಗೆ ಪ

ನಿನ್ನ ಚಿತ್ತಕೆ ಬಂದ ಅನುಭವವೆ ಸಾಧನವೊ
ಅನ್ಯಥಾ ಬೇಕಿಲ್ಲ ದೋಷರಹಿತ
ಎನ್ನ ಮನ ತನು ಕರಣತ್ರಯಗಳನು ನೀ ಮಾಳ್ಪೆ
ಅನ್ಯಸಾಧನವ್ಯಾಕೊ ಪಾವನ್ನ ಸಚ್ಚರಿತ ೧
ನಡೆವುದೇ ಯಾತ್ರೆಗಳು ನುಡಿವುದೇ ಸ್ತೋತ್ರಗಳು
ಬಿಡದೆ ನೋಡುವುದೆಲ್ಲ ನಿನ್ನ ಮೂರ್ತಿ
ಒಡನೆ ಕೇಳುವ ಶಬ್ದ ನಿನ್ನ ಮಂಗಳ ಕೀರ್ತಿ
ಪಡುವ ಭೋಗಗಳೆಲ್ಲ ನಿನ್ನ ಉಪಚಾರ ೨
ಪಾಪ ತೊಳೆವುದಕಿನ್ನು ದುಃಖ ಪ್ರಾಯಶ್ಚಿತ್ತ
ತಾಪ ಯೋಚನೆಗಳೆಲ್ಲ ತಪಸು ವಿಭುವೆ
ಗೋಪ ಚೂಡಾರತ್ನ
ಈ ಪಾತ್ರದೊಳಗಿದ್ದು ನೀ ಮಾಳ್ಪ ಸಾಧನವೊ ೩

ಕಣ್ಣಿನಾ ಕರಿರಟ್ಟು
೪೬
ಕಣ್ಣಿನಾಕರಿರಟ್ಟ ಸುಟ್ಟುಬೂದಿಯ ಮಾಡಿ
ನಿನ್ನ ಈಕ್ಷಿಪ ಶುಭ್ರ ದೃಷ್ಟಿಯ ನೀಡೊ ಪ
ಪುಣ್ಯಪುರುಷನೆ ಬಿಂಬಪೂರ್ಣ ಮಂಗಳ ಶೌರಿ
ಧನ್ಯ ಮಾಡೆನ್ನ ಮುನ್ನ ನಿಲ್ಲಲಿ ಸಳಿಯೊ ಅ.ಪ
ವಿಷಯಸುಖ ದುರ್ಗುಣದ ಪಂಕದಲಿ ಮನನೆನೆದು
ವಿಷಕ್ರಿಮಿಯಂತಿಹದೊ ಇದಕೆ ಮದ್ದು
ನಿನ್ನ ಕೃಪೆ ಹೊರತು ಬ್ಯಾರಿಲ್ಲ | ಭಿಷಜೋತ್ತಮ
ಜೀವೇಶ ಸನ್ನುತ ಹರಿಯೆ ವಿರಜ ಮಾಡೊ ಮನವ ೧
ಭಾವಸೂತ್ರಗಳಿಂದ ವಿಧಿಭವರೆ ಮೊದಲಾದ
ಜೀವರನು ಆಡಿಸುವ ಶ್ರೀಶ ಎನ್ನ
ಪಾವನ್ನ ಗುಣನಿಧಿಯೆ ಶ್ರೀ ವೇಣುಗೋಪಾಲ
ದೇವ ಅಜಮಿಳಪಾಲ ಪೂತ ಭಾವದಿ ನಿಲಿಸೊ ೨
ಕಾತುರವಪಡುತಿಹೆನೊ ಅಸುರಕರ್ಮದಿ ಸಿಕ್ಕಿ
ಪಾತಕಿಗಳ ಸಹವಾಸ ಬಿಡಿಸಿ ಕಾಯೊ
ಆತುಮಕೆ ಅತಿಮಿತ್ರ
ನಿನ್ನೊಲುಮೆಪಾತ್ರರಲಿ ಇಟ್ಟೆನ್ನ ಕಾಪಾಡು ೩

೮೨
ಕಪ್ಪುಗೊರಳ ಬಿಂಬ ಅಪ್ಪ ಸಲಹೋ ಪ
ಕ್ಷಿಪ್ರ ಕೃಪೆ ಪುಟ್ಟಿಸೈ ಅಪ್ರತಿಮ ದಯವನಧಿ ಅ.ಪ.
ದಿವಿಜ ದಾನವ ಗಣವ ತೃಣ ಮಾಡಿ ಆಳುವ
ಪವನಾಂಶ ಪಾವನ್ನ ಜ್ಞಾನ ಶರಧಿ
ನವವಿಧಾ ಹರಿಭಕ್ತಿ ರಸಸಿಂಧು ವೈರಾಗ್ಯ
ಸೌಭಾಗ್ಯನಿಧಿ ಮನದಿ ನೆಲೆಯಾಗಿ ನಿಲ್ಲಯ್ಯ ೧
ನಿತ್ಯಮಂಗಳೆ ಲಕ್ಷ್ಮೀಧವ ಶೌರಿ ಮೂರ್ತಿಯನು
ನಿತ್ಯೋತ್ಸವದಿ ಹೃದಯ ಕಮಲದಲ್ಲಿ
ನಿತ್ಯ ಪೂಜಿಪ ಹರಿಯ ಭೃತ್ಯ ಮಸ್ತಕ ಮಣಿಯೆ
ಚಿತ್ತದಲಿ ಕೂತೆನ್ನ ಹರಿಯ ತೋರಿಸು ಸ್ವಾಮಿ ೨
ಸಾರತಮ ಹರಿಯೆಂದು ಜಗಕೆ ತೋರಿದ ಗುರುವೆ
ಭಾರ ನಿನ್ನದೊ ಸ್ವಾಮಿ ಕಾಯೊ ಎನ್ನ
ಮಾರಪಿತ ನ ಪೂರ್ಣೊಲಿಮೆ
ವಾರಿಧಿ ವಿಹಾರ ತವ ಎಡಬಿಡದೆ ಇರಿಸೆನ್ನ ೩

ನಿನ್ನ ಕ್ರಿಯ ಗುಣರೂಪ ತೋರಿ ಎನಗೆ
೪೭
ಕರುಣಾಸಾಗರ ವಿಶ್ವ ಕಾಯೋ ಎನ್ನ ಪ
ಪರಮಾತ್ಮ ನೀ ದೂರ ಮಾಡಿದರೆ ಗತಿಯೇನು ಅ.ಪ
ನಿನ್ನ ಲೋಕಕೆ ಎನ್ನ ವೈದಾಗ ಕರುಣಾತ್ಮ
ನಿನ್ನ ಕ್ರಿಯ ಗುಣ ರೂಪ ತೋರಿ ಎನಗೆ
ನಿನ್ನ ಪರಿವಾರ ಜನರಲ್ಲಿ ಸೇರಿಸಿ ಪರಮ
ಧನ್ಯನಾ ಮಾಡಯ್ಯ ಮದ್ಬಿಂಬ ಮಾರಮಣ ೧
ಸ್ರ‍ಮತಿ ಜ್ಞಾನ ಮನ ಬುದ್ಧಿ ಮಾತ್ರ ಭೂತವು ಕರಣ
ಧಾತು ಸಪ್ತಕ ಪಂಚ ಕೋಶಗಳಲಿ
ಸತಿ ಸಹಿತ ಪ್ರಥಮಾಂಗನಲಿ ಕುಳಿತು ನೀ ಸತತ
ಪ್ರತಿ ತತ್ವ ವ್ಯಾಪಿಸಿ ಜೀವಕರ್ಮವ ಮಾಳ್ಪೆ ೨
ಚತುರ ದಶಲೋಕದಲಿ ಪ್ರತಿದೇಹರಥ ನಿನಗೆ
ಕೃತಿರಮಣ ಸರ್ವತ್ರ ನಿನ್ನ ಲೀ¯
ಅತಿಭಕ್ತಿಯಲಿ ಬ್ರಹ್ಮ ಸತಿ ರಮಣ ಸುರರೆಲ್ಲ
ಗತನಿದ್ರರಾಗಿನ್ನು ನೋಳ್ಪರೈ ಮಹಚಿತ್ರ ೩
ಕಂಡ ಕಡೆಯಲಿ ಪೂಜೆ ಭಂಡಾರ ತುಂಬಿಹುದು
ತೊಂಡ ವಿಧಿ ಶಿವ ಸುರರು ಸರ್ವತ್ರ ನಿನ್ನ
ಕಂಡು ಪೂಜಿಪರಯ್ಯಾ ಪೂರ್ಣ ವಿಭವಗಳಿಂದ
ಮಂಡÉ ಬಾಗಿದೆ ಭಕ್ತ ತಂಡದಲಿ ಇಡು ಎನ್ನ ೪
ಪೂಜ್ಯ ಪೂಜಕನಾಗಿ ಪರಿಪೂರ್ಣ ವೈಭವದಿ
ಪೂಜಿಸುವೆ ನಿನ್ನ ನೀ ಸರ್ವಕಾಲ
ಭೋಜ್ಯ ಭೋಕ್ರ‍ತನಾಗಿ ಆನಂದ ಸಿರಿಗೀವೆ
ಅಜರುದ್ರ ಸುರಗಣಕೆ ಉಣಿಸಿ ೫
ಹದಿನೆಂಟು ನರಮುಖವು ಮಧ್ಯ ಗಜಮುಖ ದೇವ
ಪದವೆರೆಡು ಭುಜ ನಾಲ್ಕು ಪದುಮೆ ರಮಣ
ಉದಯಾರ್ಕ ಕಿರೀಟ ಕುಂಡಲಭೂಷ
ಗದೆ ಪದುಮ ಆರೆ ಶಂಖ ಮಣಿಯುಕ್ತ ಮಾಲಧರ ೬
ವಿಶ್ವತೈಜಸ ಮೂರ್ತಿ
ವಿಶ್ವನಾಮಕ ವಿಶ್ವವ್ಯಾಪ್ತಗುಪ್ತ
ಉಚ್ಛ್ವಾಸ ಬಿಡುತಿಹೆನೊ ಉಡುಗಿ ಸಕಲ ಶಕ್ತಿ
ಉತ್ಸಾಹ ನೀಡಯ್ಯ ಸ್ವಾಂತರದಿ ಕಲೆತೆನ್ನ ೭

ಎಲ್ಲ ಕಾರ್ಯಗಳಿಗೂ ಮೂಲ
೪೯
ಕರ್ಮನಾಮಕ ಧರ್ಮಕಾರಿ ಪ
ನಿರ್ಮಮನ ಮಾಡೆನ್ನ ನಿರ್ಮಮರ ದೊರೆ ಹರಿಯೆ ಅ.ಪ
ಸೂರಿಗಳ ಹೃದಯಾಬ್ಜ ಸೂರ್ಯ ಸುಂದರಮೂರ್ತಿ
ನಾರಿಲಕ್ಷ್ಮೀ ವಕ್ಷ ಭೂರಿ ಕರುಣಿ
ಮೀರಿಹ ಅಹಂಜ್ಞಾನ ತಿಮಿರವನು ಪರಿಹರಿಸು
ಮಾರಮಣ ಮಾಂ ರಕ್ಷ ರಕ್ಷಿಸು ದಯವನಧಿ ೧
ಬಂಧನದಿ ನೀನಿಡಲು ಅಜ ರುದ್ರ ಸುರರೆಲ್ಲ
ವಂದಿಸಲು ಬಧಿರರಂತಿರುವರಯ್ಯ
ಹಿಂದು ಮುಂದೆಂದೆಂದು ಎನ್ನಲ್ಲಿ ನೀ ಕುಣಿಸಿ
ದಂದದಲಿ ನಾ ಕುಣಿದೆ ಅರ್ಪಿತವಾಗಲಿ ನಿನಗೆ ೨
ಮೋಚಕನೆ ನೆ ವಿಧಿವಂದ್ಯ
ಯಾಚಿಪೆನು ವಿಜ್ಞಾನ ಕರುಣಿಸೆಂದು
ಊಚುನೀಚದಿ ನಿನ್ನ ಪೂರ್ಣ ಮೂರ್ತಿಯ ಮಹಿಮೆ
ಗೋಚರಕೆ ಬರುವಂತೆ ಆಚರಿಸು ಎನ್ನಲ್ಲಿ ೩

ಕವಿವರರ ಕವನದಲಿ ಕವಿ
೪೮
ಕವಿವರರ ಕವನದಲಿ ಕವಿ ಕವಿದು ಪೊಳೆವ
ಭುವನಪಾವನ ಚರಿತ ಇಂದೀವರಾಕ್ಷ ಪ
ತವಪೂರ್ಣ ನಿಜ ಒಲಿಮೆ ಪ್ರಭುಪೂರ್ಣ ಕವನದಲಿ
ನವನವದಿ ತೋರಿದೆಯೊ ಮೋದ ಕರಿವರದ
ಭವಭಂಗ ಪರಿಹಾರ ಕವನ ವೋದಿದ ಮಾತ್ರ
ಧವಳ ಕೀರುತಿ ಬೆಳುದಿಂಗಳನು ಮೀರಿಹುದೊ ೧
ತವಪೂರ್ಣ ಗುಣ ಕ್ರಿಯೆ ರೂಪ ಘನ ಭಾವಗಳು
ಲವಲವಿಕೆ ಎಮ್ಮ ಚೇತನಕೆ ಕೊಟ್ಟು
ಭವಭೀತಿಗೆ ಭೀತಿ ತಂದೊಡ್ಡುವುದೊ ಕಮಲೇಶ
ಸವಿದುಣ್ಣುವಾ ಜನಕೆ ಜಡದಲ್ಲೂ ನೀ ಬರುವೆ ೨
ಶ್ರವಣ ಮಾತ್ರಕೆ ಮೈಮರೆಸುವುದು ಮಹಸಿರಿಯು
ಶಿವ ಶುಕ ಪಿತ ಸವಿದ ರುಚಿಯು ಇಹುದು
ಪವಮಾನ ಕೃಷ್ಣಾರ್ಯ ರಾಮಾರ್ಯರತಿ ವಲುಮೆ |
ಶ್ರವಿಸುವುದು ಪಠಿಪರನು ಭಕ್ತಿಮತ್ತರ ಮಾಡಿ ೩
ಕವಲುಮತಿಯಲಿ ಮುಳುಗಿ ಚಲಿಸದಿರು ಇದರಿಂದ
ಭವಮೂಲಕುನ್ಮೂಲ ಇದರ ಮಹಿವಇ
ಅವಲಿಯನು ತಿಂದವನು ಅಗಲಿರದೆ ಒಡನಿಹನು
ಜವನ ದೂತರು ತಲೆಮಣಿದು ಓಡುವರೊ ೪
ತತ್ವಾಭಿಮಾನಿಗಳಿಗಾಹಾರವಿದು ಸತ್ಯ
ತತ್ವಾರ್ಥ ಬಲು ಸುಲಭದಲ್ಲೆ ಮನಕವಗಾಹ್ಯ
ಸತ್ರ‍ಕತಿಯ ಮಾಡಿ ಚಿತ್ಸುಖವ ಉಣು ನಿತ್ಯ
ವಾತಾತ್ಮ ಗುರು ಶ್ರೀ ನ ನೋಡು ೫

ಋಜುವರ್ಗ ಸಂಪೂಜ್ಯ
೫೦
ಕುಡಿಸೆನಗೆ ಹರಿ ನಿನ್ನ ನಾಮರಸವ ಪ

ಕೊಡಬೇಡ ಅನ್ಯರಸ ಹಸಿದಿದ್ದರೂ ಇರುವೆ ಅ.ಪ
ಜನರ ಮನ್ನಣೆ ದೃಷ್ಟಿ ಕನಸಿನಲಾದರೂ ಬೇಡ
ಮನವು ನಿನ್ನಲಿ ಸತತ ನೆಲಸಿರಲಿ ಸ್ವಾಮಿ
ತೃಣವನು ಘನ ಮಾಳ್ಪ ಅನಿಲಮಂದಿರವಾಸ
ಪ್ರಣತಪಾಲಕ ನಿನ್ನ ಮೊರೆಹೊಕ್ಕೆನಯ್ಯ ೧
ನಿಜ ಭಕ್ತ ಪದವೀಯೊ ಋಜುವರ್ಗ ಸಂಪೂಜ್ಯ
ಅಜ ಜನಕ ಜಗದೀಶ ಗೋಪಾಲ ಬಾಲ
ವೃಜಿನವ ದೂರ ಮಾಡಿ ಮಾಯಸೆರೆಯನು ಬಿಡಿಸಿ
ಕುಜನರ ಸಂಗ ಎನ್ನ ಹತ್ರ ಸುಳಿಯದಂತೆ ಮಾಡೊ ೨
ಕೇಳಿಸು ನಿನ್ನ ಕಥೆ ನೋಡಿಸು ತವ ಮೂರ್ತಿ
ಬಾಳಿಸು ಮನ ನಿನ್ನ ಧ್ಯಾನದಲ್ಲಿ
ಫಾಲಕ್ಷ ಸಖ ಪೂರ್ಣ
ಕಾಲಿಗೆ ಬಿದ್ದವನ ಕೈಹಿಡಿದು ಉದ್ಧರಿಸು ೩

ಕ್ರಿಯರೂಪಗುಣ
೫೧
ಕ್ರಿಯ ರೂಪ ಗುಣ ನಾಮ ದರ್ಶನ ಕರ್ತಾ ಪ
ದಯವನಧಿ ಗೋಪಾಲಗೈಸು ಅಹಂ ನಾಶ ಅ.ಪ
ಉಂಡು ಉಣಿಸುವಿ ನೀನು ದಣುವಿಕೆಗೆ ನಾನಯ್ಯ
ಥಂಡ ಥಂಡದಿ ನಿನ್ನ ಲೀಲ ಜಾಲ
ಕಂಡರೂ ಕಾಣದಲೆ ಬೆಂಡಾದೆ ಬಹುನೊಂದು
ಮಂಡೆ ತಾಗಿದರು ಮನಕೆಚ್ಚರಾಗದು ಸ್ವಾಮಿ ೧
ನಾಯಿಯಂದದಿ ವಿಷಯಕ್ಹಾರುವುದು ಈ ಮನಸು
ದಾಯಾದಿಗಳ ವಶದಿ ಸಿಕ್ಕಿ ಸತತ
ಕಾಯಜಾಪಿತ ನಿನ್ನ ರೂಪ ಧ್ಯಾನಕೆ ಬರದು
ಮಾಯೇಶ ಮಾರಮಣ ಕಾಯೆನ್ನ ಕರುಣಾಬ್ಧಿ ೨
ತೆಗಿ ನನ್ನ ಭೋಗ ಬಲೆ ನಗೆ ಮುಖವ ತೋರಯ್ಯ
ನಿಗಮ ವೇದ್ಯ ರಾಯ
ಸುಗಮ ನೀನೆಂದು ಶ್ರುತಿ ಪೊಗಳುವದು ಅನುಗಾಲ
ಖಗಧ್ವಜ ಪರೆ ತೆಗೆದು ಜ್ಞಾನ ಚಕ್ಷುಸು ನೀಡು ೩

ಗುರುನಿಕರ ಸಂಸೇವ್ಯ ಸತಿಪತಿ
೫೨
ಖೋಡಿಗುಣ ಜಗದಲ್ಲಿ ಹೂಡಿ ನೀ ನಲಿವಾಗ
ನಾಡೆದ್ದು ಕುಣಿಯುವದೊ ನಾಸ್ತಿಕಾದಲ್ಲಿ ಪ
ಮಾಡಿ ದುಪ್ಕ್ರಿಯ ಜಾಲ ಮತಿಭ್ರಷ್ಟತನದಲ್ಲಿ
ನೋಡರೂ ಸನ್ಮಾರ್ಗ ಗಾಡಿಕಾರನೆ ಹರಿಯೆ ಅ.ಪ
ಗತಿಸಿದಾ ತನುಗಳಲಿ ರತಿವಿಷಯಗಳ ಮಾಡಿ
ಮತಿ ಮನಸು ದುರ್ಭಾವಗಳಲಿ ನೆಯದು
ವೃತಿವದನ ಮನೆಮಾಡಿ ಮೈಮರೆದು ಬಾಳುವ
ಮತ್ರ್ಯರನು ನೋಡಲತಿ ಭೀತಿ ಆಹುದೊ ಮನಕೆ ೧
ನಾನಾಭಾವವ ಪೊಂದಿ ಹಾನಿವಶರಾಗಿಹರು
ಜ್ಞಾನನಿಧಿ ತವಕರುಣಕೆರವಾಗಿ ನಡೆದು
ನಾನಾ ದುಃಖದಿ ನರಳಿ ನರಕ ಯಾತನೆಗೊಂಬ
ಜ್ಞಾನಹೀನರ ನೋಡಿ ನಡುಗುವೆನೊ ಹರಿಕಾಯೊ ೨
ಕ್ವಚಿತು ಸಜ್ಜನ ತಾವು ಶುಚಿ ಮನದಿ ನಿನ್ನಲ್ಲಿ
ರುಚಿಗೊಳಲು ಎತ್ತೆನಿಸೆ ಎದೆ ಬಿಚ್ಚುವಂತೆ
ಹೆಚ್ಚಿ ಆದಿವ್ಯಾಧಿ ನುಚ್ಚು ಮಾಳ್ಪದೊ ಮನಸು
ಸಚ್ಚಿದಾನಂದ ಹರಿ ಸಜ್ಜನಾಧಾರಿ ಧೊರಿ೩
ಇಂದುಶೇಖರ ವಿಧಿ ಲಕ್ಷ್ಮಿ ಸನ್ನತ ಮಹಿಮ
ಬಂದ ಭಯಗಳು ನಿನ್ನ ಇಚ್ಛೆಯಿಂದ
ಬಂದದಲ್ಲದೆ ಬೇರೆ ಒಂದು ಕಾರಣ ಕಾಣೆ
ಕುಂದಳಿದು ನಿತ್ಯಸುಖ ಸಿಂಧು ಕೊಡುವವ ನೀನೆ೪
ತಾಮಸರ ವಿಕಾರ ದುಃಖರಸ ಸೃಜಿಸುವುದು
ಸೌಮ್ಯ ಜನ ಸದ್ಭಾವ ಸುಖಸಾರ ಸೃಷ್ಟಿ
ಕಾಮಧೇನು ಯ್ಯ ನಿನ್ನ ಮಹ
ನೇಮ ಇಂಥಾದ್ದೆ ಪತಿತ ಪಾವನ ಪಾಹಿ ೫

೪೦
ಗಣನಾಥ ಮಣಿವೆನೊ ಗಣನಾಥ ಪ
ಘನ ವಿಶ್ವಾರಾಧಕ ವಿಘ್ನ ವಿದಾರಕ ಅ.ಪ
ಲಂಬ ಉದರ ವಿಳಂಬ ತಡೆಯಲಾರೆ
ಶಂಭುಗೆ ಪೇಳು ಭವಾಂಬುಧಿಗಂಬಿಗ ೧

ಸ್ಕಂದನನುಜ ಭವ ಬಂಧನ ಮೋಚಕ
ಚಂದ್ರವರ್ಣ ಗಾತ್ರ ಸುಂದರ ಗಜವಕ್ತ್ರ ೨
ಪ್ರಾಣಾವಿಷ್ಟ ಪ್ರಭು ಪ್ರಾಣಾ ಜಯೇಶ
ವಿಠಲನರಿಸುವ ವಿಘ್ನ ನಿವಾರಿಸು ೩

೫೩
ಗುರುನಿಕರ ಸಂಸೇವ್ಯ ಸತಿಪತಿಯ ಬಿಂಬ ಪ
ಪರಮ ಪಾವನ ನಾಮ ಪಾಹಿ ಪಾಹೀ ಎನ್ನ ಅ.ಪ
ಪತಿತಪಾವನ ಪರಮಗತಿ ನೀನು ಸರ್ವಸ್ವ
ಸತತ ತತ್ವದ ಪಾಲಿಸು ಎನ್ನ ಶಿರದಿ
ಹಿತದಿಂದ ನೆಲಸಿರಲಿ ಹರಿದಾಸ್ಯ ಕೊಟ್ಟೆನಗೆ
ರತಿ ಬಿಡಿಸು ವಿಷಯದಲಿ ಮನ ನಿನ್ನ ಬಿಡದಿರಲಿ ೧
ನಿನ್ನ ಕ್ರಿಯ ಗುಣರೂಪ ನಿನ್ನ ತಿಳಿಯದೆ ನಡೆದೆ
ಘನ್ನಭಾವವ ನೀಡು ಪೂರ್ಣದಯದಿ
ಅನ್ಯವೆಂದಿಗು ಒಲ್ಲೆ ಅನ್ನನೀಯನಗಾಗು
ಪೂರ್ಣಪ್ರಜ್ಞರ ದೈವ ಪನ್ನಗಾದ್ರಿನಿಲಯ ೨
ಲಕ್ಷ್ಮೀನಿಲಯ ನೆ ವಿಧಿವಂದ್ಯ
ಲಕ್ಷ್ಯನಿನ್ನಲಿ ನೆಲಸು ಸತತ ಬಿಡದೆ
ಪೃಷ್ಯೇಶ ತವ ಕರುಣ ಬಂದು ಎನ್ನೊಳು ಬೀಳೆ
ತಕ್ಷಣವೆ ಭವ ಹಿಂಗಿ ಮೋಕ್ಷಸುಖ ಕರಗತವೊ ೩

೯೫
ಗುರುರಾಘವೇಂದ್ರ ಶರಣರ ಸುರ
ತರುವೆ ಕರುಣಸಾಂದ್ರ ಪ
ಧರೆಯೊಳು ನಿನ್ನ ಶ್ರೀ ಚರಣಕಮಲ ಪ್ರಭೆ
ಮೆರೆವೋದು ಬಹು ಪರಿ ಉದ್ಧರಿಸು ಈ ಶರಣನ್ನ ಅ.ಪ.
ವಿಮಲ ಸುಕೃತ ಸ್ವರೂಪ ದರುಶನ ಮಾತ್ರದಿ ಭವ
ಶ್ರಮ ಹರಿಸುವ ಪ್ರತಾಪ
ರಮೆ ಅರಸನ ಗುಣ ಸಮುದಾಯದೊಳು ಮಗ್ನ
ಭ್ರಮೆರಹಿತ ಸ್ಥಿರಚಿತ್ತ ನಮೋ ನಮೋ ನಿನಗೆ
ಅಮಿತ ಮತಿಯ ಕರುಣ ಕವಚವ
ಅಮಿತಕಾಲದಿ ಕೊಟ್ಟು ಮೆರೆಯುವ
ಅಮಿತ ಮಂಗಳದಾಯಿ ತತ್ವದ
ಕಮಲ ವೈಭವ ಸಲಹಲೆನ್ನನು ೧
ಪಾವನ ಸುಯತಿ ರನ್ನ ಲಾಲಿಸು ವಾಕು
ಸಾವಧಾನದಿ ಘನ್ನ
ಭೋವಿಧ ಭವ ಭವಣೆ ದಾವಾಗ್ನಿಯೊಳು ನೊಂದೆ
ಶ್ರೀ ವರನ ದಾಸ ಕಾವ ದೃಷ್ಟಿಯಲಿ ನೋಡೊ
ದೇವದೇವನೆ ನಿತ್ಯ ಮಂಗಳ
ಭಾವರೂಪ ಗುಣತ್ರಯಗಳ
ಆವ ಕಾಲಕು ಬಿಡದೆ ನೋಡುವ
ಭೂವಿ ಬುಧಮಣಿ ಪಾಲಿಸೆನ್ನನು ೨
ತುಂಗಾತೀರ ನಿವಾಸ ರಾಘವೇಂದ್ರ ಗುರು
ತುಂಗ ಮಹಿಮ ನಿರ್ದೋಷ
ಮಂಗಳಾಸಮಹರಿ ಗಂಗಾಪಿತನ ಕೂಡಿ
ತುಂಗಪೂಜೆಯ ಕೊಂಡ್ವರಂಗಳ ಬೀರುವ
ತಿಂಗಳಾಸ್ಯನ ಪಾದ ತೀರ್ಥದಿ ಭವ
ಭಂಗ ಬಗೆಯನು ಬಲ್ಲ ಮಹಾತ್ಮ
ರಂಗ  ದೇವನ
ಸಂಗ ನೀಡುವ ಕೃಪೆಯ ಮಾಳ್ಪ ೩

೮೯
ಗೌರಿ ಗಜಮುಖನ ಮಾತೆ | ಗುಣಗಣ ಭರಿತೆ
ಶೌರಿ ಸಖನಂಗಸಂಗೀ ಸಂಪೂರ್ತೆ ಪ
ಸೌರಭ ಶುಭ ತನು ವಾರಿಜನೇತ್ರಳೆ
ವೀರಸತಿಯೆ ದಯವಾರಿಧಿ ಪಾಲಿಸು ಅ.ಪ.
ತುಂಗ ಮಂಗಳೇ ದೇವಿ | ಕಲಿಗೆ ಭೈರವೀ
ರಂಗಾನ ನವವಿಧಿ ಭಕ್ತಿ ಸಂಗ ನೀಡುವಿ
ಹಿಂಗದೆ ಪೊರಿಯೆ ತಾಯೇ | ಭಕ್ತ ಸಂಜೀವೆ
ತಿಂಗಳ ಮುಖಿವರಗರಿವೆ | ನಮ್ಮ ಶಂಭುವೆ
ಭಂಗಬಟ್ಟೇನು ನುಂಗುವ ಭವದೊಳು
ಮಂಗಳ ಕರುಣಾಪಾಂಗದಿ ನೋಡೆನ್ನ
ಹಿಂಗಿಸು ಭವ ಭಯ ಗಂಗೆಯ ಧರನಂಘ್ರಿ-
ಭೃಂಗಳೆ ಬೋದಯಾಕಂಗಳೆ ಕರುಣಿಸು ೧

ಇಂದ್ರಾದಿ ಸುರಗುರುವೆ | ದೇವ ತರುವೆ
ನೊಂದು ನಾನಾ ಪರಿ ನಿನ್ನ ಬೇಡುವೆ
ಕುಂದನೆಣಿಸದಲೆ ಶಿವ ಶಂಕರಿ ಕಾವೆ
ಸಂದೇಹ ಕಳಿ ವಿಭುವೆ | ವೀರಜತನುವೆ
ವಂದಿಪೆ ತತ್ಪದ ದ್ವಂದ್ವಕೆ ಪರಿಪರಿ
ನೊಂದವನಾ ಮ್ಯಾಲ್ಹೊಂದಿಸು ಕರುಣವ
ಮಂದಸ್ಮಿತೆ ಮುಕುಂದನ ಮನದಲಿ
ವಂದಿಸು ಅನಿಮಿತ್ತ ಬಂಧುವೆ ರಕ್ಷಿಸು ೨
ಕಸ್ತೂರಿ ಕುಂಕುಮ ಫಾಲೆ | ರನ್ನಾದ ಓಲೆ
ವಸ್ತುಗಳಿಟ್ಟ ಹಿಮವಂತನ ಬಾಲೆ
ಶಿಸ್ತಿನ ಶುಭ್ರಾಂಬರಧಾರೆ ವನಮಾಲೆ
ಮಸ್ತಕದ ಕಿರೀಟ ವದನೆ ತಾಂಬೂಲೆ
ಮಸ್ತಕದಲಿ ಸಿರಿ ಹಸ್ತಗಳಿಟ್ಟೆನ್ನ
ದುಸ್ತರದ ಹಾದಿಗಳಸ್ತಮಮಾಳ್ಪುದು
ವಿಸ್ತರ ಮಹಿಮ
ವಸ್ತುವ ನೀಡಮ್ಮ ಹಸ್ತಿಯ ಗಮನೆ ೩

ಜಯಾ ನಾಮಕ ಲಕ್ಷ್ಮೀದೇವಿಯ
೯೭
ಜಯರಾಯ ಭವಹರಣ ಪಾಲಿಸೆಮ್ಮ ಪ
ಜಯದೇವಿಪ್ರತಿ | ರೂಪ ಗುಣಕ್ರಿಯ ರತಯತಿಯೆ ಅ.ಪ.
ಅಮರೇಶ ಸ್ವರ್ಗಪದ ತೃಣಮಾಡಿ ಕ್ಷಿತಿಯಲಿ
ಅಮಿತಮತಿ ಶ್ರೀ ಪಾದ ಸೇವೆಗಾಗಿ
ಅಮಿತ ಭಾಗ್ಯವಿದೆಂದು ಪಶುವಾಗಿ ನೀನಿಂದು
ಭ್ರಮರವತ್ ಗುರುಚರಣ ಕಮಲ ಮಧು ಸೇವಿಸಿದೆ ೧
ತೃತಿ ಈಶರೆನಿಸುವ ಅಗ್ನಿ ಗರುಡ ಮಹರುದ್ರ
ಪ್ರತಿ ಕ್ಷಣದಿ ಅತಿ ಭಕುತಿ ಭಾರದಿಂದ
ನತಿಸಿ ಸೇವಿಪ ಪರಮ ಗುರುಚರಣವಾಶ್ರೈಸಿ
ದತಿ ಸುಕೃತನಿಧಿ ನಮ್ಮ ಅತಿದಯದಿ ಈಕ್ಷಿಪುದು ೨
ಶ್ರೀ ಭೂಮಿ ದುರ್ಗೇಶನ ಮತ ಮಂಗಳ ಮೂರ್ತಿ
ಶೋಭನಾಂತ ಗುಣಕ್ರಿಯ ನಿವಹಗಳನು
ಅದ್ಭುತದಿ ಧರಿಸಿಹಾ ಮಧ್ವಕೃತ ಗ್ರಂಥಗಳ
ಸದ್ಭಕ್ತಿಯಲಿ ಪೊತ್ತೆ ಸೌಭಾಗ್ಯನಿಧಿ ಗುರುವೆ ೩
ಪವಮಾನರಾಯನಾ ಕೃಪೆಯೆಷ್ಟೊ ನಿನ್ನಲ್ಲಿ
ಅವನಿಯೊಳು ಸಿದ್ಧಾಂತ ಗ್ರಂಥಗಳ ಟೀಕೆ
ಕವಿಶ್ರೇಷ್ಠನಿರಲಾಗಿ ನಿನ್ನಿಂದ ರಚಿಸಿದ ತ್ರಿ
ಭುವನ ಮಾನ್ಯನೆ ಧನ್ಯ ಧನ್ಯತೆಲಿ ಪೊರೆ ಎಮ್ಮ ೪
ಪಾರ್ಥನಾದಂದು ಶ್ರೀ ಯದುಪತಿಯ ಸಖ್ಯವನು
ಪೂರ್ತಿಪೊಂದಿದೆ ಸರ್ವ ಪುರುಷಾರ್ಥವೆಂದು
ಸ್ವಾರ್ಥಮತಿಯ ಹರಿಯ ಒಲಿಸಿದಾ ಮಹಾನಿಪುಣ
ಪ್ರಾರ್ಥಿಸುವೆ ತವ ಪಾದ ಪಾಂಶು ರಕ್ಷಿಸಲೆನ್ನ ೫
ದೇವಕೀಸುತ ನಿನ್ನ ಸಖನೆಂದು ಪವಮಾನ
ದೇವ ನಿನ್ನಲ್ಲಿ ಮಾಡಿದ ಪರಮ ಪ್ರೀತಿ
ಕೈವಲ್ಯ ಪತಿ ದಾಸ್ಯ ಪೂರ್ಣಪ್ರದ ಆರೂಢ
ಕೇವಲಾ ಕೃಪೆ ಮಾಡು ಹರಿದಾಸ ಮಣಿಗುರುವೆ ೬
ಭಾರತೀಪತಿಗೊಡೆಯ ನ
ವೈರಾಗ್ಯ ಸಿದ್ಧಿಯಲಿ ಏಕಾಂತ ಪೊಂದಿ
ಭೂರಿ ಭಕ್ತಿಯಲಿ ಭಜಿಪ ಭವ ತರಣ ಸತ್ಪಾತ್ರ
ಸೂರಿ ಸುರಿದೆಯೊ ವೃಷ್ಟಿ ಹರಿಗುರುಗಳೊಲಿವಂತೆ ೭

ಮಿಥ್ಯೆ ಎಂಬುದು ಬಲ್ಲೆ
೫೪
ಜೀವ ಕರ್ತೃತ್ವದ ಭ್ರಮೆಯ ಬಿಡಿಸೊ ಪ
ಜೀವೇಶನೊಡೆಯ ಶ್ರೀ ವೇಣುಗೋಪಾಲ ಹರಿ ಅ.ಪ
ಮಿಥ್ಯೆವೆಂಬುದು ಬಲ್ಲೆ ಕರ್ತೃತ್ವ ನಮಗಿಲ್ಲ
ಪ್ರತ್ಯಕ್ಷಕಪವಾದದಲ್ಲಿ ಬಾಳ್ವೆ
ವ್ಯರ್ಥಧಾವತಿಪಡುವೆ ಸರ್ವಕರ್ತನ ಮರೆದು
ಯತ್ನಕೆ ವಶವಲ್ಲ ಮಿಥ್ಯೆ ಭಾವವು ಬಿಡಲು ೧
ವಿಷಯ ವಿಷವದು ಬಲ್ಲೆ ತಲ್ಲೋಭ ಬಿಡಲರಿಯೆ
ವಿಷಮಗತಿ ಪ್ರವಹದಲಿ ವಿವಶನಾಗಿ
ಹುಸಿನಂಬಿ ತೆರಳುತಿಹೆ ಹರುಷ ಕಾಣದೆ ನಿಜದೆ
ಕೃಶನಾದೆ ಹರಿಯೆನ್ನ ಕೈಪಿಡಿದು ಉದ್ಧರಿಸೊ ೨
ಗುಣವಿಲ್ಲ ದೋಷಿಲ್ಲದೆಡೆಯಿಲ್ಲ ಎನ್ನಲ್ಲಿ
ದನುಜಾರಿ ನಿನ್ನವರ ಕರುಣ ಉಂಟೊ
ಪ್ರಣತಾರ್ಥಿ ಹರ ಶ್ರೀ ನಲ್ಲಿ
ಮನವಿತ್ತು ನೋಡಿ ನೀನೆನಗೊಲಿಯೊ ಶ್ರುತಿ ವಿನುತ ೩

೫೫
ಜ್ಞಾನದಾಯಕ ಜಗಕೆ ನೀನೆ ಶೌರಿ ಪ
ಪ್ರಾಣಪಂಚಶರೀರ ಜೀವ ಜಡ ನಿನ್ನೊಶವೊ ಅ.ಪ
ನೀನೆಂತು ನಮ್ಮಲ್ಲಿ ನಿಂತು ಕುಣಿಸಿದರಂತು
ಜ್ಞಾನೇಚ್ಛೆ ಯತ್ನಮನ ಕರಣದೇಹಾ
ನಾನಾಪರಿ ಅಂತೆಂತು ಕುಣಿ ಕುಣಿದು ಕುಣಿಬೇಕು
ಆನೊಲ್ಲೆನೆಂಬ ಶಕ್ತನ್ನ ನಾ ಕಾಣೆ ೧
ತನುಛಾಯದಂದಲಿ ನಮ್ಮಿರವು ನೀ ಬಲ್ಲಿ
ತನುಮನದ ಯತ್ನಗಳು ನಡಿವುದೇನೊ
ಅನಿಮಿತ್ತ ಸಖ ನೀನು ಅನುಗಾಲ ನಮಗೆಂದು
ಅನವರತ ಶ್ರುತಿರಾಸಿ ಘೋಷಿಪದು ನಂಬಿಹೆನು ೨
ಕಾಲಕರ್ಮಾಲಯನೆ ಮೂಲ ನೀ ಸರ್ವಕ್ಕೆ
ಫಲಾಕ್ಷಸಖ ನೀನು ವಿಮುಖನಾಗೆ
ಕೀಳು ಚೇತನ ಜಾಲ ಅಚೇತನ ಸಮರಹುದೊ
ಲೋಲ  ಸುಮ್ಮನೆ ಕೃಪೆಮಾಡೊ ೩

೯೦
ನಂಬು ನಂಬು ನಂಬು ಮನವೆ
ಅಂಬುಜಾಕ್ಷನ ಪ್ರಭುವ ಪಾದ
ಇಂಬು ನಿನಗೆ ದೊರಕುವುದು
ತುಂಬಿ ಮಂಗಳ ಪ
ದುಷ್ಟ ಅನ್ನ ದುಷ್ಟ ಸಂಗ
ಭ್ರಷ್ಟ ಭಾವದಿಂದ ಮನವು
ಕೆಟ್ಟು ಬೆದರಿ ಸವಿಯುಗೊಳ್ಳದು
ಶಿಷ್ಟರನುಭವ ೧
ಸತ್ಯಹರಿಯು ಜಗದ್ಗುರುವು
ಸತ್ಯ ಮಧ್ವಶಾಸ್ತ್ರ ಫಲವು
ಸತ್ಯ ಮಹಿಮ ಗುರುಕರುಣ
ಸತ್ಯ ನಿತ್ಯದಿ ೨
ಭಾರತ ಭಾಗವತವ ಕೇಳು
ಭರತನಣ್ಣನ ಚರಿತೆ ಕೇಳು
ಖರೆಯು ಹರಿಯ ಭಕ್ತರೀಗೆ
ನಿರುತ ಮಂಗಳ ೩
ನಿರುತ ವಿದಯ ಲೋಭಿಗಳ
ದುರುಳ ದುರ್ಬಲ ಭಾವ ತಿಳಿದು
ಹರಿಯ ಮೆರೆಯೆ ಸಕಲ ಭಯವು
ಮರುಳು ಮಾಳ್ಪವು ೪
ಕರಿಯ ಧ್ರುವನ ಅಸುರ ಬಾಲನ
ನರನ ಸತಿಯು ಭೀಷ್ಮ ಕುಚೇಲ
ವರದ ದೇವನ ದಾಸರ ಭಜಿಸು
ನಿರುತ ದೃಢದಲಿ ೫
ಹಿಂದೆ ಎಷ್ಟೊ ಕಾಲದಿಂದ
ಕುಂದು ನೋಡದೆ ನಿನ್ನ ಬಿಡದೆ
ಮುಂದು ತಂದ ಬಗೆಯ ತಿಳಿಯೊ
ಸಂದೇಹ ಪೋಪದು ೬
ಕಾಲಿಗೆ ಬಿದ್ದ ದೀನರನ್ನು
ಕಾಲ ಕರ್ಮ ಮೀರಿ ಪೊರೆವ
ಬಾಳ ಕರುಣಿ ಮಹಾ
ವಿಜಯ ರಾಮಚಂದ್ರನು೭
ಹಿಂದೆ ಪೇಳ್ದ ವಾಕ್ಯವೆಲ್ಲಿ
ಇಂದು ಬಿಡದೆ ಫಲಿಸುವೋವು
ಮಂದನಾಗದೆ ಪ್ರಭುವ ಪಾದ
ದ್ವಂದ್ವ ಬಿಡದಿರು ೮
ನಿತ್ಯ ಹನುಮ ಭೀಮ-ಮಧ್ವ
ಭೃತ್ಯರ ಶಿರೋರತನುನಿವನು
ಸತ್ಯ ಮಹಿಮ ಜಯೇಶವಿಠ-
ಲಾಪ್ತ ಸತ್ಯವು ೯

ಆರುನಾಲ್ಕು ತತ್ವ
೫೬
ನಾನು ನನ್ನದು ಎಂಬ ಜಾಣ ಶೌರಿ ಪ
ಕಾಣಿಸದೆ ಖತಿಗೊಳಿಸುವುದುಚಿತಲ್ಲ ಮೊರೆ ಕೇಳು ಅ.ಪ
ಕಾಣುವುದು ಕೇಳುವುದು ಗಂಧ ರಸ ಸ್ಪರ್ಶಗಳು
ನಾನಾ ಬಗೆ ವಿಷಯಗಳು ನೀನೆ ರಂಗ
ಭಾನು ಕೋಟಿ ತೇಜ ಭಾವ ಭಕ್ತಿ ಸುಪ್ರೀಯ
ನಾ ನಿನ್ನವರ ಪಾದರಜ ರಕ್ಷಿತನೊ ಸ್ವಾಮಿ ೧
ಶ್ರೀ ರಮಣಿ ಆನಂದ ಅಂಬುಧಿಯೆ ಅಬುಜಭವ
ವೀರ ಮೃಡ ಸುರ ಪೂಜ್ಯ ಪಾದ ವನಜ
ಆರು ನಾಲ್ಕು ತತ್ವ ಆದರ್ಶ ಪ್ರತಿಫಲಿತ
ಆನಂದ ಚಿತ್ಪ್ರಚುರ ಅನುರೂಪನೆ ಪಾಹೀ ೨
ಕಲ್ಯಾಣ ಗುಣವನಧಿ
ಕಲ್ಯಾಣ ಮಾಡೆನಗೆ ಕಾರುಣ್ಯಸಿಂಧು
ಎಲ್ಲ ಗುಣತ್ರಯ ರೂಪ ನಿನ್ನದೆಂಬೊ ಜ್ಞಾನ
ಎಲ್ಲ ಕಾಲದಿ ಕೊಟ್ಟು ಶಿಷ್ಟರಲಿ ಇಡು ಎನ್ನ ೩

ಪದುಮ ಮುಕ್ತರು
೫೭
ನಿನ್ನ ಕೃಪೆ ಕಾಣದ ಕಾಲ ವ್ಯರ್ಥ ಪ
ಘನ್ನ ನಿರಯಕೆ ವೈವೋ ಸಾಧನವೋ ಗೋಪಾಲ ಅ.ಪ
ವಿಧಿಬಲ್ಲ ಹರಬಲ್ಲ ಬುಧ ಸುರರು ಬಲ್ಲರೈ
ಚದುರ ತತ್ವೇಶಗಣ ಬಲ್ಲರಯ್ಯಾ
ವಿಧಿಪಿತನೆ ನಿನ್ನ ಬಿಟ್ಟನ್ಯತ್ರ ಮನವಿರಲು
ನಿಧನ ನೋವಿಗೆ ಮಿಗಿಲು ಪದುಮ ಮುಕ್ತರು ಸಾಕ್ಷಿ೧
ಬಂಧಿಸಲು ನೀ ನಮ್ಮ ಬಿಡಿಸಿಕೊಂಬುವರುಂಟೆ
ಅಂಧತಮಸಿನ ಭೋಗದಿಂದಾಹುದೊ
ಇಂದಿರಾನಂದ ಘನ ಸಿಂಧು ಚಿನ್ಮಯ ಕಾಯ
ತಂದೆ ನಿನ್ನಯ ಕರುಣ ಉಂಬುವನೆ ಬಹುಧನ್ಯ ೨
ಗೋ ಗೊಲ್ಲರಲಿ ಕರುಣ ಸುರಿದ ದೀನ ಬಂಧು
ಭಾಗ್ಯಪಾಲಿಸು ಭಕ್ತಿಯೋಗವಿತ್ತು
ರೋಗದಲಿ ಬಲು ನೊಂದೆ ಭಯವನ್ನು ಹೀರುವುದು
ನಾಗತಲ್ಪ ನೆ ಉದ್ಧರಿಸು ೩

೫೮
ನಿನ್ನ ಪ್ರೇಮದ ಭೋಗ ಇನ್ನಿಲ್ಲದ ಮನುಜ
ಘನ್ನ ಭೂ ಭಾರನವ ಭವನಮಿತ್ರ ಪ
ಬನ್ನಬಟ್ಟೆನೊ ಬಹಳ ಬಲುಹೀನ ವೃತ್ತಿಯಲಿ
ಮಾನ್ಯರಲಿ ತಲೆಯೆತ್ತಿ ಇರುವಂತೆ ಎಂದಿಡುವಿ ಅ.ಪ.
ಏನು ಕೊಟ್ಟರು ಕೊಡು ದಾನವಂತಕ ಎನ್ನ
ಜ್ಞಾನದಲಿ ನೀನಿತ್ಯ ನೆಲಸಿ ನಲಿಯೊ
ಧೇನುವತ್ಸದ ತೆರದಿ ನೀನೆನಗೆ ಹಿತತೋರು
ನಾನೊಲ್ಲೆ ಸುರಲೋಕ ನಿನ್ನೊಲಿಮೆ ಇಲ್ಲದಿರೆ ೧
ಮರುವೆಂಬ ಮಾರಿಯನು ಪರಿಹರಿಸು ಪರಿಪೂರ್ಣ
ಸುರಿ ನಿನ್ನ ಕರುಣರಸ ಪ್ರಾಣನಾಥ
ಸರ್ವೇಶ ನೀನೆಂದು ಪರತಂತ್ರ ನಾ ಸತತ
ಶರಣನ್ನ ದಣಿಸುವದು ಘನವೇನೊ ಹರಿಯೆ ೨
ಕೋಟಿಕಾಲ ನರಕವಾಸಿಯಾದರು ಎನಗೆ
ನೀಟುಗತಿ ದೊರೆವುದೇ ನೀನೊಲಿಯದಿರಲು
ಸಾಟಿಯಿಲ್ಲದ ದೈವ
ನಾಟಿ ಹಿರಿಯರ ಕರುಣ ನೀನಾಗಿ ಕೃಪೆಮಾಡು ೩

ಭಿನ್ನಸುಖಮೂಲ
೫೯
ನಿನ್ನ ಮರೆದಿಹ ಜನಕೆ ಮಂಗಳವು ಎಂತೋ ಪ
ಪೂರ್ಣಮಂಗಳ ಶರಧಿ ಗೋಪಾಲ ಚಿನ್ಮಯನೆ ಅ.ಪ
ಎದೆ ಭುಗಿಲು ಎನ್ನುವುದು ಮದದ ಮನುಜರ ನೋಡಿ
ವಿಧಿ ಬರಹ ತಿಳಿಯದೆ ಸರ್ವಜ್ಞರಂತೆ
ಮದ ಮತ್ಸರದಿಂದ ಆಯುವ ಕಳೆಯುತ ಮೋದ
ಪದವಿ ಬಯಸುವ ಮನುಜ ಪಶುರಾಸಿ ನೋಡಯ್ಯ ೧
ತನ್ನಾದಿ ಕೊನೆಗಾಣ ಘನ್ನ ಮೋಹದಿ ಮೆರೆವ
ಭಿನ್ನ ಸುಖಮೂಲನ್ನ ಸ್ವಪ್ನದಲಿ ಅರಿಯ
ತನ್ನ ವಶಮೀರಿ ಬಹು ಸುಪ್ತಿಯಲಿ ಪೊಂದುವ
ಇನ್ನು ಮರಿಯನು ಮನುಜ ತನ್ನ ಸ್ವಾತಂತ್ರ್ಯವ ೨
ನಿರುತ ಮೃತ್ಯೋವದನ ಸ್ಥಿತನಾಗಿ ಭೋಗಗಳ
ಪರಿಪರಿ ಹಾರೈಪÀ ಸತತ ಬಿಡದೆ
ಬರದು ಬಯಸಿದ ಸುಖವು ಒತ್ತಿ ಬರುವುದು ದುಃಖ
ಮರತು ಈ ಪರಿಸ್ಥಿತಿಯ ಕರ್ತ ನಾನೆಂಬುವನು ೩
ಅಜ್ಞಾನ ತಿಮಿರದಲಿ ಪ್ರಾಜ್ಞ ತಾನೆಂಬುವನು
ಸುಜ್ಞಾನ ಪಥ ಸುದ್ದಿ ಸ್ವಪ್ನದಲಿ ಅರಿಯ
ಜಿಜ್ಞಾಸೆಗ್ಹೊತ್ತಿಲ್ಲ ಭವಪ್ರವಹ ಪೊಂದಿಹನು
ಪ್ರಜ್ಞೆ ಇಲ್ಲದ ಪ್ರಾಜ್ಞಗೆಂತಹುದೊ ಶುಭಪ್ರಾಪ್ತಿ ೪
ರೋಗರುಜಿನದಿ ಜೀವವಾಗರವೆ ವಿರೂಪಹುದು
ಬಾಗನೊ ಭಗವಂತಗಂಜಿ ಮೂಢ
ಯೋಗೀಶರೊಂದ್ಯ ಶ್ರೀ
ಹ್ಯಾಗಪ್ಪ ಈ ಜನಕೆ ಕಲ್ಯಾಣಸಂಪದವು ೫

೬೧
ನೀ ಕೊಟ್ಟಿದುಣುವಲ್ಲಿ ಭಕ್ತಿ ಹರುಷ ಪ
ಶ್ರೀಕಾಂತ ನೀಡೆನಗೆ ಸಾಕು ಬೇಕೆನ್ನಿಸದೆ ಅ.ಪ.
ನಾ ಬಲ್ಲೆನೆ ಎನ್ನ ಹಿತಾಹಿತಗಳ ಬಗೆಯ
ನೀ ಬಲ್ಲ ಸರ್ವಜ್ಞ ನಮ್ಮ ಕ್ಷೇಮ
ನೀ ಬಂಧು ಅನಿಮಿತ್ತ ಅನಂತ ಕಾಲಕ್ಕೂ
ಆ ಬ್ರಹ್ಮಸ್ತಂಭಾಂತ ಸಂಸಾರಿ ಸರ್ವೇಶ ೧
ಕಂಸಮರ್ದನ ಎನ್ನ ಸಂಶಯಗಳಿಯಯ್ಯ
ಹಂಸ ಸದ್ಗುಣ ಪೂರ್ಣ ಪುರುಷ ಶ್ರೀಶ
ಹಿಂಸೆಗಳ ಪರಿ ಹರಿಸಿ ನಿನ್ನ ಜ್ಞಾನವ ನೀಡೊ
ಸ್ವಾಂಶಿಗಳ ಗುಣರೂಪ ಕ್ರಿಯದಿಂದ ದೇವ ೨
ನಿನಗಿಂತ ಹಿತರ್ಯಾರೊ ನಿತ್ಯ ಮಿತ್ರನೆ ನಮಗೆ
ಅನುಗಾಲ ಸಲಹುವಿ ತಾಯಿಯಂತೆ
ಬಿನಗು ದೈವಗಳಳಿವ
ಮನತೊಳೆದು ಪ್ರತಿಫಲಿಸು ನಿತ್ಯ ಮಂಗಳ ಮೂರ್ತಿ ೩
ನೀನಿತ್ತ ಭೋಗಗಳು ನಿನಗೊಪ್ಪಿಸುವೆನೆನಲು
ದೀನ ಜನ ಮಂದಾರ ನಿನ್ನ ಮನಕೆ
ಏನು ಕಾರಣ ಬರದು ಆನಿವರದನೆ ಕೇಳೋ
ಪ್ರಾಣಪತಿ ನೆ ಕರುಣಾಬ್ಧಿ ೪

೬೨
ನೀ ಬುದ್ಧಿ ಕೊಡದಿರಲು ಮನುಜ ಪಶುವೊ ಜೀವ ಪಶುವೊ ಪ
ಶ್ರೀ ಭೂಮಿ ದುರ್ಗೇಶ ಗೋವಿಂದ ಪರಿಪೂರ್ಣ ಅ.ಪ
ಜಡಜನ್ಮದಿಂದಲೆ ದ್ವಿಜ ಜನ್ಮ ಬಂದಿಹುದು
ಒಡೆಯಾ ನಮ್ಮೆತ್ನವೇ ಸತ್ಯ ಪೇಳೊ
ಕಡುನಿದ್ರೆಯಲಿ ಜೀವ ನಿಶ್ಚೇತನಾಗಿರಲು
ಬಿಡದೆ ದಿನದಿನದಲ್ಲಿ ಎಚ್ಚರಿಕೆ ಯಾರಿಂದ ೧
ಸೃಷ್ಟಿಗೆ ಬರಲಿನ್ನು ಜೀವ ಯತ್ನವು ಉಂಟೆ
ಸೃಷ್ಟಿ ಸ್ಥಿತಿ ಲಯ ಕರ್ತ ನೀನೆ ತಿಳಿಯೊ
ಮೊಟ್ಟ ಮೊದಲಿಗೆ ನಿನ್ನ ವಶನಾಗಿ ನಾನಿರಲು
ಸೃಷ್ಟಿಯಲಿ ನಮ್ಮೆತ್ನ ಕಲ್ಪಿಸುವುದುಂಟೆ ೨
ಇಂತಿರಲು ನಿಜತತ್ವ ಎಂಥ ಶಕ್ತಿಯು ನಮಗೆ
ಸ್ವಾಂತ ಮಂಗಳ ಸುಗುಣ ನಿಧಿಯೆ ಪೇಳೊ
ಭ್ರಾಂತಿ ಜೀವನ ಬಿಡಿಸಿ
ಶಾಂತಿ ಪಾಲಿಸು ನಮಗೆ ಅಂತರಾತ್ಮಕ ದೇವ೩

೬೦
ನೀಯೆನ್ನ ಸದ್ಭಾಗ್ಯ ಆನಂದ ನಿಧಿಯೊ ಪ
ಮಾಯೇಶ ಮಧುವೈರಿ ತಾಯಿಯಂದದಿ ಕಾಯೊ ಅ.ಪ
ಏನಾಗುವ ಪ್ರೀತಿ ನಿನ್ನಿಂದ ಎನಗಯ್ಯ
ಜ್ಞಾನಾದಿ ಆನಂದ ಸುಗುಣ ಸಿಂಧು
ದೀನ ಬಾಂಧವ ನಿನ್ನಧೀನದವ ನಾನಯ್ಯ
ನೀನೆನ್ನ ನಿಧಿ ನಿತ್ಯ ಪವಮಾನ ಹೃತ್ಸದನ ೧
ವಿದ್ಯ ಬುದ್ಧಿ ಜ್ಞಾನ ಮನಕರಣ ಶಕ್ತಿ
ಸದ್ಧೈರ್ಯ ಸುಖನಿಧಿಯು ನಿರ್ಭೀತ ಪದವಿ
ಅದ್ವಯನೆ ನೀನೆನಗೆ ಅನಿಮಿತ್ತ ಬಂಧು ಹರಿ
ಸಿದ್ಧಿಸೈ ಈ ಜ್ಞಾನ ಸರ್ವಕಾಲದಿ ದೇವ ೨
ನಾನು ನನ್ನದು ಎಂಬ ದೋಷದ ಮಕರಿ
ಗಾನೆ ಸಿಕ್ಕಿದ ತೆರದಿ ಮೊರೆಯುತಿಹೆನೊ
ದಾನವಂತಕನೆ ಶ್ರೀ
ದೀನ ಕರಿಯನು ಪೊರೆದ ತೆರದಿ ಸಲಹೊ ಎನ್ನ ೩

೬೩
ಪತಿತ ಪಾವನರಂಗ ಸತತ ಕಾಯೊ
ಗತಿಯಾರು ನಿನ್ನುಳಿದು ಶ್ರುತಿವಿನುತ ಗೋಪಾಲ ಪ
ಆದಿಮೂಲನು ನೀನು ಆದಿರಹಿತನೆ ಸ್ವಾಮಿ
ಸಾಧ್ಯ ಸಾಧಕ ಸೇವ್ಯ ಸೇವಕನ ಕೃಷ್ಣ
ಭಾದ್ಯ ಭಾಧಕ ರಮಾರಾಧ್ಯ ಚಿತ್ಸುಖ ಸುಖ ಸಿಂಧು
ಕಾದುಕೋ ನಿನ್ನವನ ಆದಿರೋಗವ ಕಳೆದೂ ೧
ನಾರಿ ದ್ರೌಪದಿ ಮಾನ ಕಾಯ್ದ ವಿಖ್ಯಾತನೆ ಶೌರಿ
ಕ್ರೂರ ನಕ್ರನ ಕೊಂದು ಕರಿಯ ಪೊರೆದೆ
ಹಾರಿ ಹಾವಿನ ಹೆಡೆಯ ಮೆಟ್ಟಿ ನರ್ತನಗೈದೆ
ಕ್ರೂರ ಫಣಿಯನು ಪೊರೆದ ಅಕ್ರೂರ ಸನ್ನುತ ಪಾಹಿ ೨
ಪೋತಧ್ರುವ ಪ್ರಹ್ಲಾದ ಪುಂಡರೀಕರ ಪಾಲ
ಖ್ಯಾತ ಅಜಮಿಳನ ವಿಜಯಸೂತ
ಭೀತಿ ರಹಿತನ ಮಾಡು ಮಾಶತರೀಶ್ವನ ದೇವ
ದಾತ  ನೀ ಅಭಯ ಪಾಲಿಸೊ ದೊರೆಯೆ ೩

ಒದ್ದವಗೆ ಶಿಕ್ಷಿಸದೆ ಬೈದವಗೆ ಗತಿಯಿತ್ತೆ
೬೪
ಪರಮಪರುಷನೆ ಕೃಷ್ಣ ಕಣ್ತೆರದು ನೋಡೊ ಪ
ಶಿರಿ ಅರಸ ದಯಸಿಂಧು ಶ್ರಾವ್ಯಮಂಗಳ ಕೀರ್ತಿ ಅ.ಪ.
ದ್ವಿಜಗಮನ ವೃಜಿನಹರ ಭುಜಗತಲ್ಪನೆ ದೇವ
ಅಜತಾತ ಗಜವರದ ಕುಜ ನಿವಾರಣನೆ
ಭಜನೆ ಪಾಲಿಸು ಎನ್ನ ವಿಮಲ ಮನದಲಿ ನಿಂತು
ಋಜು ಪುಂಗವರ ದೈವ ನಿರ್ಜರರ ಬಾಂಧವನೆ ೧
ಒದ್ದವಗೆ ಶಿಕ್ಷಿಸದೆ ಬೈದವಗೆ ಗತಿ ಇತ್ತೆ
ನಿರ್ದೋಷ ಗುಣಪೂರ್ಣನೆಂದು ಶ್ರುತಿ ಸಾರುತಿದೆ
ನಿದ್ದೆ ಮಾಡುವಗೊಲಿದಿ ಮುಕ್ತಿಯನಿತ್ತೆ
ಯುದ್ಧದಲಿ ಶರದಿಂದ ಹೊಡೆದವಗೆ ನೀನೊಲಿದೆ ೨
ಶುದ್ಧ ಆನಂದಾಬ್ಧಿ ನೆ
ಮಧ್ವ ಮುನಿದೈವ ಸಿದ್ಧರೊಡೆಯ
ಉದ್ಧವನ ಗುರು ಸುಧಾಮ ಮಿತ್ರನೆ ಮನ
ತಿದ್ದಯ್ಯ ಜ್ಞಾನ ನಿನ್ನಲ್ಲಿ ನಿಲುವಂತೆ ೩

೯೧
ಉಗಾಭೋಗ
ಪರಶು ಮುಟ್ಟಲು ಲೋಹ ಸ್ವರ್ಣವಾಗುವ ಪರಿ
ಸಿರಿ ಒಲಿಯೆ ದಾರಿದ್ರ್ಯ ಹತವಾಗಿ ಪೋಪಂತೆ
ಅರಸು ಮುಟ್ಟಲು ದಾಸಿ ವರನಾರಿ ಅಪ್ಪಂತೆ
ವಿರಜೆ ಮುಳುಗಲು ಜೀವ
ವಿರಜನಾಗುವ ತೆರದಿ ವರ ಸುಧಾಪಾನದಿ
ಜರೆ ಮರೆ ರೋಗಗಳು ಹರಿದ್ಹೋಗುವಂದದಿ
ಹರುಷದಿ ನಮಗಿನ್ನು ಗುರುವರ ದೊರಕಲು
ವರ ಪುಣ್ಯರಾಸಿಯಂತೆ ಪಾಪಿ ನಾನು ಹರಿಭಕ್ತನಾದೆ ಮುಂದೆ
ಕರುಣಾರ್ಣವ ಸುರತ
ಸುರಿವ ಕರುಣ ನಿಶ್ಚಿಂತೆ

೯೯**
ಪ್ರಸನ್ನವಿಠಲ ಪಾಲಿಸಿವನ ಪ
ಅಸತ್ಯದಲಿ ಮನವಿಡದೆ ಆಸಕ್ತಿ ನಿನ್ನಲ್ಲಿ ಕೊಟ್ಟು ಅ.ಪ.
ದೃಢÀ ನಿನ್ನ ಭಕ್ತರಲಿ ಕೊಡುಭಕ್ತಿ ವಿರಕ್ತಿ
ದೃಢ ಜ್ಞಾನ ನಿನ್ನಲ್ಲಿ ಬಿಡದೆ ನಿತ್ಯ
ಮಡದಿ ಮಕ್ಕಳ ಕೂಡಿ ನಿನ್ನ ಸೇವೆ ಸಲ್ಲಿಸಲಯ್ಯ
ಕಡಲಸುತೆ ಶ್ರೀ ರಮಣ ಬೆಂಬಲನು ನೀನಾಗು ೧
ಸಜ್ಜನರ ಪದಧೂಳಿ ಆಗಿರಲಿ ಎಂದೆಂದು
ದುರ್ಜನರ ಸಹವಾಸ ಕೊಡಬೇಡವಯ್ಯ
ಬೊಜ್ಜೆಯಲಿ ಮೂರ್ಜಗವ ಪೊತ್ತ ಮಹಾತ್ಮ ಇವನ
ಹೆಚ್ಚಾಗಿ ಪೊರಿ ಬಿಡದೆ ಅಚ್ಚ ಮಾರ್ಗದಿ ಇಟ್ಟು ೨
ನಿನ್ನ ನಾಮಾಮೃತ ಸತತ ಸುಖ ಸವಿಯಲಿ ಸ್ವಾಮಿ
ಬನ್ನ ಬಡಿಸಲಿ ಬೇಡ ತರಳನಿವನು
ಉನ್ನತೋನ್ನತ ಮಹಿಮ
ಮನ್ನಿಧಿ ನೀನೆಂದು ಪ್ರಾರ್ಥಿಸುವೆ ಕೈಪಿಡಿದು ೩

೮೫
ಬಿನ್ನಹಕೆ ಬಾಯಿಲ್ಲ ಭೂತನಾಥ ಪ

ನಿನ್ನ ಪದರಜ ಸ್ನಾನ ನೀಡೆನ್ನ ಉದ್ಧರಿಸು ಅ.ಪ.
ಹೀನ ಯೋಗ್ಯತೆಗಿನ್ನು ಏನು ಮಾಡಲೊ ಸ್ವಾಮಿ
ಧೇನು ವತ್ಸನ ತೆರದಿ ಪಾಲಿಸೆನ್ನ
ವೇಣುಗೋಪಾಲನಾ ಧ್ಯಾನ ನಿಲ್ಲದು ಮನದಿ
ನಾನು ನನ್ನದು ಬಿಡದು ಎನಗಾವ ಗತಿಯಿನ್ನು ೧
ನೀಲಕಂಠನೆ ನಿನ್ನ ನೀಳಪಾದದ ಧೂಳಿ
ಮೂರ್ಲೋಕದಘತೂಲಕಗ್ನಿ ಸತತ
ಫಾಲಾಕ್ಷ ಪತಿತ ಪರಿಪಾಲಕನು ನೀನೊಬ್ಬ
ಹಾಲಲ್ಲಿ ಅದ್ದೆನ್ನ ಹರಿಭಕ್ತರ ಬಂಧು ೨
ಮನಕರಣ ತನು ವಿಷಯ ಘನಪಾಶದಲಿ ಸಿಕ್ಕಿ
ಉಣಿಸುವುವು ಮಹದುಃಖ ಎನ್ನ ಮೀರಿ
ಮನೋ ಹೃದಯದಲಿ ದೋಷ ತುಂಬಿ ತುಳುಕುವುದಯ್ಯ
ಎನಿತು ನಿನ್ನಲಿ ನಿಂದು ಪೊರೆಯೆಂದು ಮೊರೆ ಇಡಲಿ ೩
ದುಷ್ಟವಾಸನೆ ಶಕ್ತಿ ಮೆಟ್ಟಿ ಆಳುವುದೆನ್ನ
ವೃಷ್ಟೀಶನಲಿ ಎನ್ನ ಪೋಗಬಿಡದೊ
ದುಷ್ಟನಕ್ರಗೆ ಸಿಕ್ಕ ಕರಿಯಂತೆ ಬಾಯ್ಬಿಡುವೆ
ಕಷ್ಟ ಪರಿಹರಿಸಯ್ಯ ಹರಿನಿಷ್ಠಧ್ಯಾನವನಿತ್ತು ೪
ಶತಕೋಟಿ ಶ್ರುತಿಯಲಿ
ನತಬಂಧು ಎಂತೆಂದು ಸಾರುತಿಹುದು
ಹಿತಭಕ್ತ ನೀ ಹರಿಗೆ ಹರಿಮೀರ ನಿನ್ನುಕ್ತಿ
ಪತಿತಪಾವನ ನನ್ನ ಹರಿಭಕ್ತನ ಮಾಡು ೫

ಬುದ್ಧಿಮಾನಿ ವಿವೇಕಯುತವಾದ
೮೦
ಬುದ್ಧಿಮಾನಿಯೆ ಎನ್ನ ಉದ್ಧರಿಸು ತಾಯೆ ಪ
ಶ್ರದ್ಧಾದೇವಿ ನಿನ್ನ ಕೃಪೆಯಾಗೆ ಹರಿ ನಲಿವ ಅ.ಪ.
ಮಧ್ವಮುನಿ ಮನದೈವನತಿ ಮುದ್ದು ಪರಿಸರಳೆ
ವಿದ್ಯಾ ಅಸಾದ್ಯ ಕರುಣಾಬ್ಧಿ ದೇವಿ
ಪ್ರಧ್ವಂಸ ಮಾಡು ಮಮ ಹೃದ್ರೋಗ ಮೂಲ ಪ್ರ
ಬುದ್ಧರಲಿ ಪದವಿತ್ತು ಉದ್ಧಾರ ನೀ ವಹಿಸು ೧
ನಿನ್ನ ಕೃಪೆಯಮೃತ ರಸವಿನ್ನು ದೊರೆಯಲು ನಾವು
ಧನ್ಯ ಧನ್ಯರು ಮಾತೆ ಭಕ್ತಿಮೂರ್ತೆ
ಪನ್ನಗ ವಿಧಿ ರುದ್ರಸೇವ್ಯ ಪದ ಪುಷ್ಕರಳೆ
ಪುಣ್ಯ ಪುರುಷ ಸಮೀರ ಸಂತ ಸಂಸ್ತುತೆ ಪಾಹಿ ೨
ನೀನೊಲಿಯದ ಜೀವ ಏನು ಸಾಧನೆ ಮಾಡೆ
ಪ್ರಾಣವಿಲ್ಲದ ದೇಹ ಶೃಂಗರಿಸಿದಂತೆ
ವಾನರ ಪ್ರತಿಬಿಂಬ
ತಾನೊಲಿಯ ಅವಗೆಂದು ನಿನ್ನವರ ಕರವಶನು ೩

ಮಹಿದಾಸ ಹರಿದಾಸ್ಯ ಮಹಪದವಿ
೬೬
ಭಕ್ತಿಯಲಿ ತನುಮನವು ಸತತ ಬಗ್ಗಿರಲಯ್ಯ
ಭುಕ್ತಿಯೆ ಮಹಾಭಕ್ತಿ ನೀಡು ಎನಗೆ ಪ
ಯುಕ್ತಿ ಶಕ್ತಿಗಳೆಲ್ಲ ಬಿಡದಿರಲಿ ತತ್ಪಾದ
ಶಕ್ತಿಯನು ಎಂದೆಂದು ಗುಣಪೂರ್ಣ ನಿಧಿಯೆ ಅ.ಪ
ಇಹಭೋಗ ಬಿಡಿಸಯ್ಯ ಮಹದಾದಿ ದೇವೇಶ
ಗುಹಪಿತನಸಖ ನರನಸೂತ ಬಂಧು
ಮುಹುರ್ಮುಹು ಪ್ರಾರ್ಥಿಸುವೆ ಮಹಿದಾಸ್ಯ ಹರಿದಾಸ್ಯ
ಮಹಪದವಿ ಕರುಣಿಸಯ್ಯ ಮರುತ ಮಂದಿರ ವಿಭುವೆ ೧
ಪಂಚಬೇಧ ಜ್ಞಾನ ಅನುಷ್ಠಾನದಿ ಇರಲಿ
ಚಂಚಲಿಲ್ಲದ ಭಕ್ತಿ ಇತ್ತು ಮೆಚ್ಚಿ
ವಂಚಿಸದೆ ಸಂಸಾರ ಯಾತ್ರೆಯಲಿ ಒಡನಾಡು
ಪಂಚಾತ್ಮ ನೆ ಮದ್ಬಿಂಬ ೨

ಭವಸಿಂಧು ಶೋಷಿಪೇಕ್ಷಣ
೯೨
ಭವ ಸಿಂಧು ಶೋಷಿಪೇಕ್ಷಣ ಕಲ್ಯಾಣಗಾತ್ರ ಪ
ಪವಮಾನ ಪ್ರಿಯ ಪುತ್ರ ಕಾರುಣ್ಯನೇತ್ರ ಅ.ಪ.
ನಿರವದ್ಯ ಭೂದೇವ ನಿರುತ ಸುಖಭರಿತ ಭಾವ
ಶರಣ ಜನರನು ಕಾವ ಶಪಥ ಭಾವ
ಹರಿಗುರು ಪರ ಸೇವಾ ನಿರುತ ಮಂಗಳ ಭಾವ
ಶರಣು ಶ್ರೀ ರಾಮಾರ್ಯ ಪರಮ ಸಂಜೀವ ೧
ತನುಮನವ ಹರಿಗಿತ್ತ ಗುಣನಿಧಿ ಮಹಗುಪ್ತ
ಅಣುಘನದಿ ಹರಿದೀಪ್ತ ತನುನೋಳ್ಪ ಶಕ್ತ
ಘನ ಕೃಷ್ಣವರ್ಯಾಪ್ತ ಮನೋವಾಕ್ಕಾಯಸ್ತ
ಗುಣಾಪೂರ್ಣಾ ಹರಿಕೃತ್ಯವನು ಎಣಿಪ ತೃಪ್ತ ೨
ಬಲುಭಕ್ತಿ ಭಾರನತ ಬಲಿತ ವಿಜ್ಞಾನರತ
ಲಲಿತ ಮಂಗಳಚರಿತ ನಲಿವನು ಪ್ರೀತ ಕ-
ಮಲಾ ಅಪಹರ್ತ ಕಲ್ಯಾಣ ಸಂಭರಿತ
ಪುಲ್ಲಾಕ್ಷ ಮಮನಾಥ ಕೃಷ್ಣಾಂಘ್ರಿದೂತ ೩
ಪರಮ ಸೌಭಗ ಪೂಜ ಪರಭಕ್ತಿ ನಿವ್ರ್ಯಾಜ
ಚರಿಸಿ ಶ್ರೀ ಗುರುರಾಜ ವರಕಲ್ಪಭೂಜ
ಸರುವ ತತ್ವಗಳೋಜ ವಶಗೊಂಡ ಮಹರಾಜ
ಸರುವ ಸಿದ್ಧಿಗೆ ದೊರಿ ಎನಿಪ ವಿರಜ ೪
ಸಂತಾಪಹರ ಶಾಂತ ಸೌಭಾಗ್ಯಕರವಂತ
ಸ್ವಾಂತದಲಿ ನಿಶ್ಚಿಂತ ಸರಸಿ ಶ್ರೀಮಂತ
ಧ್ವಾಂತ ಹರ ಶ್ರೀ ನ ಏಕಾಂತ
ಪಂಥ ಬಿಡದಿರುವಂಥ ಪೂರ್ಣ ಜಯವಂತ ೫

ನಾರಾಯಣಗೆ ಪುತ್ರ
೮೩
ಭಾರತೀಶನೆ ಎನ್ನ ಭಾರ ನಿನ್ನದು ತಂದೆ
ಭೂರಿದಯ ಸಿಂಧು ಎಂದೆಂದು | ಗುರುವರ್ಯ
ಬಂದು ಕರುಣಿಸುವನು ಮದ್ಬಂಧೊ ೧
ಮಂಗಳಾತ್ಮನೆ ಎನ್ನ ಅಂಗದಲಿ ನೀನಿಂದು
ಪೊಂಗಳಧರನ ತೋರಯ್ಯ | ಅಜರಾಯ
ಭಂಗಬಡಲಾರೆ ಭವದೊಳು ೨
ನಾರಾಯಣನ ಪುತ್ರ ನಾರಾಯಣಗೆ ಮಿತ್ರ
ನಾರಾಯಣಾತ್ಮ ನಿರವದ್ಯ | ನೀಡಭಯ
ಕರುಣಾತ್ಮ ಗುರುವೆ ಒಲಿದಿಂದು ೩
ಕಾಮರೂಪನೆ ಹರಿಯನೇಮದಲಿ ಕಪಿಯಾಗಿ
ಆ ಮಹಿಮೆಗುಂಗುರ ಅರ್ಪಿಸಿ | ಅಗ್ನಿಯಲಿ
ತಾಮಸರ ಹುರಿದೆ ಪುರದಲ್ಲಿ ೪
ಮರಳಿ ಶರಧಿಯ ದಾಂಟಿ ಭರದಿ ರಘುಪತಿ ಚರಣ
ಸರಸಿಜದಿ ಚೂಡಾಮಣಿಯನ್ನು | ಒಪ್ಪಿಸಿ
ಹರಿ ಅಂಗ ಸಂಗ ಪಡೆದಯ್ಯ ೫
ಸಿಂಧುವನು ಬಂಧಿಸಿ ಬಂದ ವಿಭೀಷಣಗೆ
ಕುಂದದೆ ಅಭಯ ಕೊಡಿಸಿದೆ | ದಯಸಿಂಧು
ನಿಂದೆನ್ನ ಒಳಗೆ ಮುದವೀಯೊ ೬
ದೇವೇಶನಾಜ್ಞೆಯಲಿ ಜೀವೇಶ ಸಂಜೀವ
ಪರ್ವತ ತಂದು ಕಪಿಸೈನ್ಯ | ಎಬ್ಬಿಸಿ
ಮೊದಲೆಡೆಗೆ ಬಗೆದ ಕುಶಲಾತ್ಮ ೭
ದಶಶಿರನ ಕೊಲ್ಲಿಸಿ ವಸುಧಿಪುತ್ರಿಯ ತಂದು
ನಸುನಗುತ ರಾಮಚಂದ್ರಾಗೆ | ಒಪ್ಪಿಸಿ ವಿ
ಭೀಷಣಗೆ ರಾಷ್ಟ್ರ ಕೊಡಿಸಿದೆ ೮
ಪ್ರೇಮದಿ ಭರತನು ಸ್ವಾಮಿ ಬರಲಿಲ್ಲೆಂದು
ನೇಮದಲಿ ಕಾಯ ಬಿಡುತೀರೆ | ಉಳುಹಿದೆ ಶ್ರೀ
ರಾಮನಾಗಮನ ತಿಳುಹೀಸಿ ೯
ತುಷ್ಟನಾದೆನು ಹನುಮ ಇಷ್ಟ ನೀ ಬೇಡೆನಲು
ಗಟ್ಯಾಗಿ ಪಾದ ಪಿಡಿಯಲು | ಭಕ್ತಿಯಲಿ
ಪಟ್ಟಾಭಿರಾಮ ತನ್ನಿತ್ತ ೧೦
ಆಖಣಾತ್ಮಕಾಯನೆ ಅಕಳಂಕ ಗುಣಧಾಮ
ನಿಖಿಲಾತ್ಮ ಹರಿಯ ಪೂಜಿಪ | ದೃಢಮಹಿಮ
ಶ್ರೀಕೃಷ್ಣ ಭಕ್ತಾ ಕಲಿಭೀಮ ೧೧
ಶಿಶುಭಾವದಲಿ ನೀನು ಶತಶೃಂಗ ಗಿರಿವಡೆದು
ನಸುನಗುತ ಜನನಿಗಭಯವ | ನಿತ್ತಂಥ
ಪಶುಪಾಲ ಪರನೆ ಪೊರೆಯೆನ್ನ ೧೨
ದುರ್ಯೋಧನನ ತ್ರಾಣ ತಂತುಗಳ ಹರಿದಾಡಿ
ಸರ್ವೇಶ ಹರಿಗೆ ಪ್ರಿಯಮಾಡಿ | ನಲಿದಂಥ
ಸರ್ವಜ್ಞ ಭೀಮ ಬಿಡೆ ನಿನ್ನ ೧೩
ದುಶ್ಯಾಸನನ ಮಹಾದುಶ್ಯೀಲ ಸ್ಮರಿಸುತ್ತ
ಪಶುವಂತೆ ವಧೆಯ ಮಾಡಿದಿ | ರಣದೊಳು
ಸುಸ್ವಾದ ಗುಣಸಾರ ಮಹವೀರ ೧೪
ಮಾನಿನಿಯ ಸಂಕಲ್ಪ ತ್ರಾಣನೀ ಪೂರೈಸಿ
ಪ್ರಾಣಸಖನಾಗಿ ಸಲಹಿದೆ | ಜಯಭೀಮ
ಪಾಣೆ ಪಿಡಿಯೆನ್ನ ಮಹಘನ್ನ ೧೫
ದುರಾರಾಧಕ ದುಷ್ಟ ಜರಸಂಧನ ಸೀಳಿ
ಮುರಾರಿ ಮತ್ಪ್ರೀತಿ ಬಿಡಿಸಿದೆ | ದೀಕ್ಷೆಯಲಿ ತ್ರಿ
ಪುರಾರಿ ವಂದ್ಯಾಗತಿ ನೀನೆ ೧೬
ನಾರಾಯಣಾಸ್ತ್ರವನು ವೀರ ಗುರುಸುತ ಬಿಡಲು
ಚೀರಿ ನಮೋಯೆನ್ನೆ ನೃಪರೆಲ್ಲ | ಸ್ರ‍ಮತಿ ತಪ್ಪೆ
ಧೀರ ಎದುರಾಗಿ ನೀ ನಿಂತೆ ೧೭
ಗರಡಿಯಲಿ ಕೀಚಕನ ಮುರಿದು ಮುದ್ದೆಯ ಮಾಡಿ
ಮರಿಯದೆ ಅವನ ಅನುಜರ | ಸದೆಬಡಿದು
ವರಸತಿಗೆ ಮೋದ ನೀನಿತ್ತೆ ೧೮
ಗರಳಬಕ್ಷಗಳ ವುಂಡು ಉರಗ ಬಂಧವ ಹರಿದು
ಹರಿಯಂತೆ ಕುರುಪ ಕರಿ ಮುಂದೆ | ನೀನಿಂತೆ
ಸರ್ವನಿತ್ಯಾತ್ಮ ಕೃಷ್ಣಾತ್ಮ ೧೯
ಮಧುವೈರಿ ಧ್ಯಾನದಲಿ ಕುದುರೆ ಆಟವನಾಡಿ
ಮುದದಿಂದ ಕುರುಪನ್ಹೆಗಲೇರಿ | ಹುದುಗ್ಯವನ
ಮುದದಿಂದ ನಲಿದೆ ಕಮಲಾಕ್ಷ ೨೦
ಅರಗಿನ ಮನೆಯಲ್ಲಿ ವೈರಿಜನರ ಕೊಂದು
ಪೊರೆದೆ ನೀ ಜನನಿ ಅನುಜರ | ಪಂಜರನೆ
ಧರೆಯೊಳಗೆ ಎನ್ನ ಸಲಹಯ್ಯ ೨೧
ಹಿಡಿಂಬನ ಕೊಂದು ವರ ಹಿಡಿಂಬಿಯ ಕೈಪಿಡಿದು
ನಡೆದೇಕ ಚಕ್ರಪುರದಲ್ಲಿ | ಬಕನೊರಸಿ
ನಡಕ ಬಿಡಿಸೀದಿ ಸುಜನರ ೨೨
ವ್ಯಾಸದೇವನ ಕಂಡು ಸೂಸಿದ ಸದ್ಭಕ್ತಿ
ಪಾಶದಲಿ ಕಟ್ಟಿ ಒಳಗಿಟ್ಟು | ಪೂಜಿಸುತ
ಲೇಸಾಗಿ ಮುಂದೆ ನಡೆದಯ್ಯ ೨೩
ನೀ ಸ್ವಯಂವರ ಸಭೆಯ ವೇಷಾಂತರದಿ ಪೊಕ್ಕು
ವಾಸುದೇವನ ಕಂಡು ಆನಂದ | ತುಳುಕುತ್ತ
ಆ ಸತಿಯ ತಂದೆ ವಿಜಯಾತ್ಮ ೨೪
ರಾಜರೆಲ್ಲರ ಹಿಡಿದು ರಾಜಸೂಯಯಾಗವನು
ಸೋಜಿದಿಗೈದೆ ಸರ್ವೇಶ | ಕೃಷ್ಣನ
ಪೂಜೆಯನು ಮಾಡಿ ಮೆರದಯ್ಯ ೨೫
ಲಕ್ಷ್ಮೀವನಕ್ಹೋದಂತೆ ಪಕ್ಷಿಯರ ಒಡಗೂಡಿ
ದಕ್ಷನೆ ನೀನು ವನವಾಸ | ಅಜ್ಞಾತ
ಪಕ್ಷವ ಕಳೆದು ಮರಳಿದೆ೨೬
ಸಂಗರವ ನೀ ಹೂಡಿ ಭಂಗಿಸಿ ಕೌರವನ
ರಂಗನ ಮುಂದೆ ಅರ್ಪಿಸಿ | ವಂದಿಸಿ
ಮಂಗಳಾತ್ಮಕನೆ ಸಲಹೆಮ್ಮ ೨೭
ನಿರ್ಮಲ ರಾಜ್ಯವನು ಧರ್ಮಂಗೆ ನೀನಿತ್ತೆ
ನಿರ್ಮೂಲಗೈದು ಅರಿಗಳ | ಕೊಂದ ಪರ
ಧರ್ಮಪರರನ್ನು ಪೊರೆದಯ್ಯ ೨೮
ಮಧ್ವಾಖ್ಯ ಮಹವೀರ ಶುದ್ಧ ಸತ್ವ ಶರೀರ
ಉದ್ಧರಿಪುದೊಂದೆ ವ್ಯಾಪಾರ | ಕೈಕೊಂಡ
ವಿದ್ಯಾಧಿಪತಿಯೆ ಸಲಹೆನ್ನ ೨೯
ಶ್ವಾಸ ನಿಯಾಮಕ ಪ್ರಭುವಾಸವೆ ನಿನ್ನಿಂದ
ಉಸರಲೇನಯ್ಯ ನಿನ್ನಲ್ಲಿ | ಜೀವೇಶ
ಸೂಸುವ ಭಕ್ತಿ ನೀಡಯ್ಯ ೩೦
ವೇದ ಚೋರನ ಮಡುಹಿ ಸಾದರದಿ ಸುಜನಕ್ಕೆ
ಬೋಧ ಮಾಡೆಂದು ಶ್ರೀ ವಿಷ್ಣು | ಕಳುಹಿದ
ಮಧ್ವಾಖ್ಯ ಗುರುವೆ ಪರಿಪಾಹಿ ೩೧
ಧರೆಯಲ್ಲಿ ಜನಿಸಲು ಸುರರು ದುಂದಭಿ ಮೊರೆಯೆ
ದುರುಳರ ಎದೆಯು ನಡುಗಲು | ಹರುಷದಲಿ
ಮೆರೆದು ನೆರೆದರು ಸುಜನರು ೩೨
ಗೋವಿತ್ತ ವಿಪ್ರಂಗೆ ಕೈವಲ್ಯ ನೀನಿತ್ತೆ
ಶ್ರೀವಲ್ಲಭನ ಪ್ರಥಮಾಂಗ | ಪ್ರಸನ್ನ
ನೀವಲಿದು ಹರಿಯ ತೋರಯ್ಯ ೩೩
ಹುಣಿಸೆ ಬೀಜದಿ ಪಿತನ ಘನೃಣವ ತೀರಿಸಿದಿ
ಅಣಿಮಾದಿ ಸಿದ್ಧಿ ತೃಣವಯ್ಯ | ನಿನಗಿನ್ನು
ಗುಣಪೂರ್ಣ ಹರಿಯ ಪ್ರತಿಬಿಂಬ ೩೪
ಶಿವಭಟ್ಟನನು ಗೆದ್ದು ಜಯಾಂಕ ರಸ ತೋರೆ
ಆ ವಿಪ್ರ ಸುರರು ಪೂಜಿಸೆ | ನಲವಿಂದ
ಅವನಿಯೊಳು ಪೊಳೆದೆ ರವಿಯಂತೆ ೩೫
ವಿದ್ಯಾಧಿಪತಿ ಗುರುವೆ ವಿದ್ಯೆ ಪೇಳಿದ ದ್ವಿಜಗೆ
ಸದ್ಭಕ್ತಿ ದಕ್ಷಿಣೆ ನೀನಿತ್ತೆ | ಕರುಣಾತ್ಮ
ಉದ್ಧರಿಸು ಎನ್ನ ದ್ವಿಜರತ್ನ ೩೬
ಜನನಿ ಜನಕರು ತಡಿಯೆ ಅನುವಾದ ಸುತನಿತ್ತು
ಘನವಾದ ತುರ್ಯ ಆಶ್ರಮ | ಕೈಗೊಂಡು
ಸುನವ ಪದ್ಧತಿಯ ತೋರಿದೆ ೩೭
ಅಚ್ಯುತಗೆ ಮೊರೆಯಿಟ್ಟ ಅಚ್ಯುತ ಪ್ರೇಕ್ಷಕರಿಗೆ
ಹೆಚ್ಚಾದ ದಯದಿ ಹರಿ ನಿನ್ನ | ವೊಯ್ದಿತ್ತ
ಅಚ್ಚುಮೆಚ್ಚುವ ನೀ ಹರಿಗೆಂದು ೩೮
ವಾದಿಗಳ ಭಂಗಿಸಲು ಸಾದರದಿ ಯತಿ ಕರಿಯೆ
ಛೇದಿಸಿ ಖಳರ ಮದವನ್ನು | ಹರಿಸಿದೆ
ಸ್ವಾದ ಗುಣಸಿಂಧು ಮದ್ಬಂಧು ೩೯
ಬಾಳೆಗೊನೆಗಳ ಮೆದ್ದು ಬಾಡಲೇತಕೆ ಉದರ
ಪೇಳೆಂದ ಯತಿಗೆ ಜಠರಾಗ್ನಿ | ಬ್ರಹ್ಮಾಂಡ
ಕೊಳ್ಳುವದುಯೆಂದು ವರದಯ್ಯ ೪೦
ವಾದಗಳ ಪರಿಹರಿಸಿ ಬೋಧಿಸಲು ಆ ದ್ವಿಜರು
ಪಾದಕ್ಕೆ ಎರಗಿ ನಮೋ ಎಂದು ಅಮರರಿಗೆ ಆ
ಬೋಧವೊ ಮಹಿಮೆಯೆಂದಾರು ೪೧
ಬದರಿಯಾತ್ರೆಯಲಿ ಸುರನದಿಯು ತಾ ಮಹಿಪಡೆದು
ಮುದದಲ್ಲಿ ಬಂದು ನಮಿಸಲು | ಶಿಷ್ಯಜನ
ಯೈದಿ ಭಕ್ತಿಯನು ನಮೋ ಎಂದು ೪೨
ಹರಿಯಂತೆ ನರಿಗಳನು ತುರಕ ದೂತರ ಜರಿದು
ನರಪನಿಂದರ್ಧ ಮಹಿಮೆಯನ್ನು | ಪಡೆದಂಥ
ಯರಡೇಳು ಭುವನ ಅಧಿಪತಿ ೪೩
ಸತ್ಯತೀರ್ಥರ ಬಳಿಗೆ ದೈತ್ಯ ವ್ಯಾಘ್ರನು ಬರಲು
ಮೃತ್ಯುವಿನ ಪುರಕೆ ಕಳುಹಿದೆ | ಲೀಲೆಯಲಿ
ಭೃತ್ಯತ್ವಯೆನಗೆ ನೀಡಯ್ಯ ೪೪
ಸೂಸುವಾ ಭಕ್ತಿಯಲಿ ವ್ಯಾಸದೇವನ ಕಂಡು
ಈಶ ಸಲಹೆಂದು ಎರಗಲು | ಮನವುಬ್ಬಿ
ಬಾ ಸುತನೆ ಎಂದು ತಬ್ಬಿದ ೪೫
ಆನಂದ ಮೂರ್ತಿಯ ಆನಂದ ಸಂಗವನು
ಆನಂದದಿಂದ ನೀ ಯೈದಿ | ನಂದ
ಆನಂದ ತೀರ್ಥ ಕೊಟ್ಟೆಯೊ ೪೬
ನಾರಾಯಣನಲಿ ಕರೆದೊಯ್ಯೆ ಬದರಿಪನ
ಚರಣಾಬ್ಜಕೆರಗಿ ಹರಿಲೀಲೆ | ಸ್ಮರಿಸಿದ
ಗುರುರತ್ನ ಸಲಹೊ ಧನ್ಯಾತ್ಮ ೪೭
ಅಚ್ಯುತನ ಸಂಗದಲಿ ಚಿತ್ಸುಖವ ಉಂಡುಬ್ಬಿ
ಹೆಚ್ಚಿನ ಪದವಿ ಇಲ್ಲೆಂದು | ನಲಿದಂಥ
ಅಚ್ಯುತಾತ್ಮಾನೆ ಸಲಹೆನ್ನ ೪೮

೬೭
ಭಾವದಲ್ಲಿಯೆ ಪೊರೆಯೊ ದೇವ ದೇವ ಪ
ಜೀವೋತ್ತಮರಸ ದೇವ ಗೋಪಾಲಕ ಅ.ಪ
ಸಂದೇಹ ಭೀತಿಯೊಳ್ ನೊಂದೆನೊ ಬಹುಕಾಲ
ಗಂಧವಾಹನ ವಂದ್ಯ ಸರ್ವ ಬಂಧೊ
ಬಂಧನವ ಬಿಡಿಸಲು ಭವ ಬೊಮ್ಮ ಸುರರಿಗೆ
ಒಂದಿಷ್ಟು ವಶವಲ್ಲವೆಂದು ದಯ ಸಲ್ಲಿಸೊ ೧
ಒಳಗಿನಾ ಅಘಮೂಲವಳಿಯದೆ ಇಷ್ಟಾರ್ಥ
ಮಳೆಗರೆದರೇನೊ ಗುಣವ ಹೊಂದೆ
ಹಲುಬಿ ಬೇಡುವುದೊಂದು ಒಲಿದು ಕೊಡುವುದೊಂದು
ಫಲ ಬೇಧವಾದರೆ ಮನ ನಂಬಿಸುವುದೆಂತೊ ೨
ಹರಿ ನಿನ್ನ ಇಚ್ಛೆಗೆ ಎದುರಿಲ್ಲವಾದರೆ
ಶರಣ ಸುರಧೇನು ಖರೆಯಾದರೆ
ನೆರೆ ನಂಬಿದೆ ನಿನ್ನ
ಸುರರು ಜಯವೆಂಬಂತೆ ಹರಿಕೆಯ ಸಲಿಸೊ ೩

೬೮
ಭಾವವೇ ಕಾರಣವೊ ಭವಕೆ ದೇವ ಪ
ಭಾವಜಾಪಿತ ನಿನ್ನ ಭಾವ ಬಿಡದವ ಧನ್ಯ ಅ.ಪ.
ಭಾವಸೂತ್ರದಿ ಸಿಕ್ಕ ಬರಿ ಬೊಂಬೆ ಜಗವಯ್ಯ
ಭಾವಧಾರಕ ನೀನು ಎನ್ನಿಂದಲೇನಹುದೊ ೧
ಎಂತು ನೀ ಕುಣಿಸಿದರೆ ಅಂತು ಕುಣಿವುದೊ ಜಗವು
ತಂತ್ರ ನಿನ್ನದು ದೇವ ಜಾವ ಜಾವದಿ
ಭ್ರಾಂತಿ ರೋಗವ ನೀಗಿ ಶಾಂತಿ ಪಾಲಿಸು ಹರಿಯೆ
ಸ್ವಾಂತರದಿ ಸಂತತ ದರುಶನವ ಕೊಟ್ಟೆನಗೆ ೨
ವಿಷಯ ಸಂಗವ ಬಿಡಿಸು ಹೃಷಿಕೇಶ ಮೃಡಮಿತ್ರ
ವಿಷಮಗತಿ ಪರಿಹರಿಸು ಪ್ರಾಣಮನದ
ವೃಷಭಾದ್ರಿಪಸಖ ನೆ ಕರುಣಾಬ್ಧಿ
ವರ್ಷಿಸೊ ಕೃಪೆ ವೃಷ್ಟಿ ಮದ್ಬಿಂಬಗಿದು ವಿಹಿತ ೩

೬೯
ಮಧುಹರನಿಗರ್ಪಿತವು ಸರ್ವಕರ್ಮ ಪ
ಉದಯಾದಿ ಶಯನಾಂತ ಕೃತ ಕರ್ಮ ಅನುಭವವು ಅ.ಪ
ಸ್ರ‍ಮತಿ ವಿಸ್ರ‍ಮತಿಯಲ್ಲಿ ಕೃತ ಉತ್ತಮಾಧಮ ಕರ್ಮ
ಮತ್ತೆ ಅನುಭವಿಸಿದ ಸುಖ ದುಃಖಗಳಿಗೆ
ಚಿತ್ತ ನಿನ್ನದು ಮೂಲ ಸರ್ವ ಸ್ಥಿತಿಗತಿ ಧರ್ಮ
ವೃತ್ತಿಗಳಿಗನವರತ ಸತ್ಯ ಸಂಕಲ್ಪನೆ ೧
ನೀನಮ್ಮನಿಟ್ಟಪರಿ ನಿನ್ನಿಷ್ಟವಾಗಿರಲು
ಎನ್ನಿಷ್ಟವೆನಲ್ಯಾಕೊ ಪ್ರೇಷ್ಠತಮನೆ
ವಾಣೀಶ ಹರಸುರರು ನಿನ್ನ ಪ್ರೀತಿಗಾಗಿ
ಏನು ಕೊಟ್ಟರು ಮುದದಿ ಉಂಡು ನಿನಗರ್ಪಿಪರೊ ೨
ಅಧಿಕಾರಿ ನಾನಲ್ಲದದರಿಂದ ಬೆದರುವೆನು
ಮದನನಯ್ಯನೆ ದಯದಿ ಮನ್ನಿಸೆನ್ನ
ಉದಯಾಸ್ತ ಕೃತಕರ್ಮ
ಮುದಖೇದಗಳು ನಿನ್ನ ಪ್ರೀತಿಗೊದಗಲೋ ದೇವ ೩

೮೬
ಮನದಧಿಪ ಮರೆಹೊಕ್ಕೆ ಮಹದೇವ ಪಾಹಿ ಪ
ತೃಣ ಮೊದಲು ಘನದಲ್ಲಿ ಬಿಡದೆ ಹರಿಯನು ಭಜಿಪ ಅ.ಪ.
ಕರುಣಾಬ್ಧಿ ನೀಡೆನಗೆ ವೈರಾಗ್ಯ ಮಹಭಾಗ್ಯ
ಪರಮ ಭಾಗವತ ಪದ ನಿನ್ನದಯ್ಯ
ಹರಿಯಂಘ್ರಿ ಕಮಲ ಮಧು ಮತ್ತ ಷಟ್ಪದ ದೊರೆಯೇ
ಸರ್ವತ್ರ ನಿನ್ನಲ್ಲಿ ಹರಿಯ ತೋರಿಸಿ ಸಲಹೊ ೧
ಆಪ್ತತಮ ನಿನ್ನಂಘ್ರಿ ಧ್ಯಾನದಲಿ ಇಡು ಎನ್ನ
ತೃಪ್ತಿ ಅನ್ಯದಿ ಬ್ಯಾಡ ಸುಪ್ತಿರಹಿತ
ಸಪ್ತೆರಡು ಭಕ್ತಿಯಲಿ ಬೆಳೆಸೆನ್ನ ಉದ್ಧರಿಸು
ಪ್ರಾಪ್ತಿ ಪಾಲಿಸು ಬಿಂಬ ಮೂರ್ತಿ ದರುಶನ ಭೋಗ ೨
ಮೂರುತಿಯ ಕೈಗಿತ್ತುದಾರ ಸಾಗರ ಶಂಭು
ಘೋರ ಭವಹರ ಹರಿಯ ದಾಸವರ್ಯ
ಮಾರಮಣ ನ ಭಜನೆಯಲಿ
ಧೀರ ದಿವಿಜರ ದೊರೆಯೆ ಸಾರ ಸುಖ ನೀಡೆನಗೆ ೩

೮೭
ಮನದಧಿಪ ಮಹದೇವ ಮೊರೆಯೆ ಕೇಳೊ ಪ
ಘನ ತಿಮಿರ ಸ್ಥಿತಿಯಲ್ಲಿ ಎದೆ ಒಡೆದು ನಿಂದಿಹೆನು ಅ.ಪ.
ಮನಕರಣಗಳು ಎನ್ನ ತಮ್ಮ ಸೆರೆಯಲಿ ಇಟ್ಟು
ಘನ ಯಾತನೆಯ ಪಡಿಸಿ ಮೂರ್ಛೆಗೊಳಿಸಿ
ಕ್ಷಣ ಬಿಡದೆ ದಣಿಸುವುವು ಮೊರೆ ಇಡಲು ಮುಖವಿಲ್ಲ
ಪ್ರಣಿತ ಪಾಲಕರಲ್ಲಿ ಸರಿ ಇಲ್ಲ ನಿನಗೆಂದು ೧
ಪವಮಾನ ಪದಕಮಲ ಮಧು ಮತ್ತ ಮಹಭೃಂಗ
ಹರಿದಾಸ ಶಿರೋರತ್ನ ಅಭಯದಾಯಿ
ಶಿವತಮನೆ ನಿನ್ನಂಘ್ರಿ ರಜಲಕ್ಷ್ಮಿಯನ್ನು ಶಿರ
ಧವನ ಮಾಡಲಿ ನಿತ್ಯ ಮಾಡೆನ್ನ ಕೃತಕೃತ್ಯ ೨
ಗೌರೀಶ ಗುಣನಿಧಿಯೆ ಗುಪ್ತ ಮಂಗಳ ಮಹಿಮ
ಶೌರಿ  ಧ್ಯಾನಲೋಲ
ತಾರಕನೆ ಭವಸಿಂಧು ದಾಟಿಸುವ ಅಂಬಿಗನೆ
ಕಾರುಣ್ಯಗರೆದೆನ್ನ ಹರಿಪಾದ ದಡಕೊಯ್ಯೊ ೩

೮೮
ಮಹದೇವ ಮದ್ರೋಗ ಮೂಲವಳಿಯೊ ಪ
ಮಹದಾದಿಗಳ ದೈವ ಹರಿಯಲ್ಲಿ ರತಿ ನಿಲಿಸಿ ಅ.ಪ.
ಸರ್ವಸಿದ್ಧನೆ ವಿಷಯ ಪರ್ವತಕೆ ಮಹಕುಲಿಶ
ಸರ್ವೇಶ ಹರಿಪಾದ ಕಮಲ ಭೃಂಗ
ಮರ್ವೆಂಬ ಮಾರಿಯನು ಅವಳ ನೇತ್ರದಿ ಸುಟ್ಟು
ಸರ್ವಾತ್ಮ ಹರಿಧ್ಯಾನಮಗ್ನ ಮನ ನೀಡೆನಗೆ ೧
ತಾಳಲಾರೆನೊ ಸ್ವಾಮಿ ಕಾಳ ವಿಷಯದ ದೋಷ
ಫಾಲಾಕ್ಷ ಬಿಡಿಸೈಯ್ಯ ಭೋಗದಾಸೆ
ಶೀಲ ಮನದಲಿ ಹರಿಯ ಲೀಲೆ ಲಾವಣ್ಯಗಳ
ಮೇಲಾಗಿ ನೋಡುವ ಮಹಕರುಣ ಮಾಡೆನ್ನ ೨
ಭಾರತೀಶನ ಪಾದಕಮಲ ಮಧುಪನೆ ನಿನ್ನ
ಕಾರುಣ್ಯವಾದವನೆ ಶೌರಿವಶನೊ
ಮಾರಾರಿ ಮದ್ಭಾರ ವಹಿಸಿ ಪಾಲಿಸು ಎನ್ನ
ಧೀರ ತವ ಚರಣಾಬ್ಜ ವಾರಿಜಕೆ ಮೊರೆ ಹೊಕ್ಕೆ ೩
ಎನ್ನ ಹೀನತೆ ನೋಡಿ ಘನ್ನ ಭಯಗೊಂಡಿಹೆನೊ
ಧನ್ಯರ ಮಾಳ್ಪ ದಯ ನಿನ್ನದಯ್ಯಾ
ಪುಣ್ಯತಮ ಮೂರುತಿಯ ಪ್ರತಿಬಿಂಬ ಹರಿಸಖನೆ
ಧನ್ಯನಾ ಮಾಡೆನ್ನ ವಿಷಯ ಜಯ ದಯಮಾಡಿ ೪
ಅಮರಗಣವಿನುತ ಅಮಿತ ಮಂಗಳದಾಯಿ
ವಿಮಲ ಪದರಜ ವಿಭವ ವಾಮದೇವ
ಮಮತಾದಿ ಅಭಿಮಾನ ದೋಷವರ್ಜಿತ ಮಹಾ
ಸಾಮ್ರಾಜ್ಯ ಯೋಗಕ್ಕೆ ಅಧಿನಾಥ ಕರುಣಿಪುವುದು ೫
ಶಂಭು ಶಂಕರ ತವ ಪದಾಂಬುಜದಿ ಶಿರವಿಟ್ಟು
ಹಂಬಲಿಪೆನಿಷ್ಟಪದ ಪಾಲಿಸೆಂದು
ತುಂಬಿತ್ವಕ್ಕರಸನ ಹೃದಂಬುಜದೊಳರಳಿಸಿ
ಬಿಂಬ  ಮೂರ್ತಿ ದರುಶನ ನೀಡೊ ೬

ಒಂದೇ ರೀತಿ ಇರುವವನೂ
೭೦
ಲಕುಮಿ ಸಾಮ್ರಾಜ್ಯ ಶರಧಿಗಮೃತಾಂಶು ನೇತ್ರ ಪ
ಲಕುಮಿ ಮಾಂಗಲ್ಯ ಕಟ್ಟಿದನೆ ಜಗದೇಕ ಸೂತ್ರ ಅ.ಪ.
ನಿತ್ಯ ಕಲ್ಯಾಣ ಸಾಗರನೆ ಶಶ್ವದೇಕ
ಸತ್ಯ ಕಾರುಣ್ಯ ಸಿಂಧು ಕೊಡು ಭಕ್ತಿಪಾಕ
ಭಕ್ತವತ್ಸಲನೆ ಕೃಪಾಪೂರ್ಣಾವಲೋಕ
ದೈತ್ಯದಲ್ಲಣನೆ ದುರಿತ ತಿಮಿರಾರ್ಕ ೧
ನಿರುತ ಪರಿಪೂರ್ಣ ಸೌಲಭ್ಯ ಸುಗುಣವನಧಿ
ನಿರವದ್ಯ ನಿತ್ಯ ಸ್ವಾನಂದ ಪೂರ್ಣ ಮೋದಿ
ಕರೆವ ಭಕ್ತರಾತುರಕೆ ಬರುವನವಸರದಿ
ಗರೆವ ಸರ್ವಾರ್ಥ ಸಲಹಿ ಶರಣರನು ಛಲದಿ ೨
ವಿಮಲ ಲಾವಣ್ಯ ಶೃಂಗಾರ ಸಿಂಧುಕಾಯ
ಅಮಿತ ಉತ್ತಮ ರಾಯ
ಕಮಲಭವ ವಾಯು ರುದ್ರಾದಿ ದೇವ ಧ್ಯೀಯ
ಅಮೃತಾತ್ಮ ದೇಹಿ ಅಮೃತ ಸೌಭಾಗ್ಯ ಸ್ವೀಯ ೩

ಭಾರತೀಪತಿ ಪದವನೈದುವ
೯೬
ವಾಜಿವದನಾರ್ಚಕ ಶ್ರೀ ವಾದಿರಾಜ ಪ
ರಾಜೀವನಯನ ಶ್ರೀ ಕೃಷ್ಣನಲಿ ಬಿಡು ಎನ್ನ ಅ.ಪ.
ದೇವದೇವೇಶನ ಪರಮ ಒಲುಮೆಗೆ ಪಾತ್ರ
ಪಾವನ್ನತಮಚರಿಯ ಪತಿತಪಾಲ
ಸಾವಧಾನದಿ ಎನ್ನ ಆದಿರೋಗವನಳಿದು
ಕೇವಲ ಸದ್ಭಕ್ತಿ ಶೀಲನ ಮಾಡಯ್ಯ ೧
ಭಾರತೀಪತಿ ಪದವನೈದುವ ಮಹಾತ್ಮ
ಮಾರಾರಿಸುರ ಪೂಜ್ಯ ಕರುಣಿಸಿ ಕಾಯೊ
ಸಾರಿದೆನು ತವ ಚರಣ ಸರಸಿಜಯುಗ್ಮಗಳ
ದೂರ ಮಾಡದೆ ಹರಿಯ ಕರುಣಪಾತ್ರನ ಮಾಡು ೨
ಪರಮ ಭಾಗವತ ಶಿರೋರತುನರಿಂದರ್ಚಿತನೆ
ಶಿರಿ ವೇಣುಗೋಪಾಲ ವೇದ ವೇದ್ಯ
ನ ಮನದಲ್ಲಿ ಬಿಡದಿಪ್ಪ
ಪರಮಕೃಪೆ ಬೇಡುವೆನು ಕರುಣಾಬ್ಧಿ ಕೃಪೆ ಮಾಡು ೩

೯೩
ವಿಜಯದಾಸರ | ದಿವ್ಯ
ವಿಜಯ ನೆನೆವರ ಪ
ವಿಜಯಸಾರಥಿಯ ಮನದಿ
ಭಜಿಪ ಸತ್ವರ ಅ.ಪ.
ಆದಿದೇವನ | ಒಲುಮೆ ಸಾಧಿಸಿದನ
ಯಾದವೇಶನ | ಕಂಡ ಮೋದ ಭರಿತನ ೧
ಮನದಿ ಹರಿಯನು | ಸತತ ಕುಣಿಸಿ ನಲಿವನು
ಪ್ರಣಿತ ಪಾಲಯ | ಅಮೃತ ಖಣಿ ವಿಶಿಷ್ಟನು ೨
ಭಕ್ತಿಯುಕ್ತಿಯ | ಮಹಾವಿರಕ್ತಿ ಉಕ್ಕುತ
ಭಕ್ತ ಜನರಿಗೆ ಬಿಂಬ ವ್ಯಕ್ತಿ ಮಾಡಿದ ೩
ಅಂಬುಜಾಧವ | ಇವರ ತುಂಬಿ ವೈಭವ
ತುಂಬಿ ಸುಜನರ ಕದಂಬ ಸಲಹುವ ೪
ಭಾರತೀಪತಿ | ಇವರ ವೀರಸಾರಥಿ
ಸಾರಿ ಭಜಿಪರ ಸಕಲ ಭಾರವಹಿಸುವ ೫
ಅಕ್ಷಯಾಫಲ | ಅಪರೋಕ್ಷ ಕೊಡುವನು
ತ್ರಕ್ಷವಲ್ಲಭಾ ಇವರ ದಕ್ಷರೆನಿಸಿಹ ೬
ದಾಸರತ್ನನಾ | ದಯವ ಲೇಸು ಪಡೆಯಲು
ಸೂಸಿ ಬರುವನು ಶ್ರೀ  ೭

೯೪
ವಿಜಯವಿಠಲರಾಯಾ | ನಂಘ್ರಿಯುಗ ಭಜಿಸುವ
ವಿಜಯರಾಯನೆ ಜೀಯ
ರಜದೂರ ತವಪದ ಭಜಕ ನಾನೆನಿಸಯ್ಯ
ಋಜುರಾಜ ಪ್ರೀಯ
ಕುಜನ ಸಂಗದಿ ಬೆರೆದು ಮನಹರಿ
ಭಜನೆಗೊದಗದು ಎಷ್ಟು ಬೇಡಲು
ದ್ವಿಜವರೇಣ್ಯನೆ ಎಮ್ಮ ಬಾಂಧವ
ಸೃಜಿಸು ಶ್ರೀಧರನೊಲಿಮೆ ಶಕ್ತಿಯ ೧
ದೀನಬಾಂಧವ ನೀನು | ಪಾವನ್ನ ತವ ಕುಲ
ಸೂನು ಎನಿಸಿದೆ ನಾನು
ಕುಲಸ್ವಾಮಿ ಕೃಷ್ಣನ ಧ್ಯಾನ ಪಾಲಿಸು ಇನ್ನು
ದಾನಿ ಸುರಧೇನು
ಜ್ಞಾನ ಭಕ್ತಿ ಧ್ಯಾನಯೋಗದಿ
ವೇಣುಗೋಪಾಲನ್ನ ಹೃದಯ ಪ್ರ
ಧಾನ ನಾಡಿಯ ಮಧ್ಯ ಕುಣಿಸುವ
ತ್ರಾಣ ತರಿಸು ತೀವ್ರ ಮಹಿಮನೆ ೨
ಲೋಕನಾಥನ ಪ್ರೇಮ | ಭೋಗಿಸುವ ಯೋಗಿಯೆ
ಸಾಕು ಸದ್ಗುಣಧಾಮ
ಬಾಗಿದಿನೊ ನಿನ್ನ ಅಂಘ್ರಿಗೆ | ಶೋಕ ಸಲ್ಲದೊ ನೇಮ
ಸ್ವೀಕರಿಸು ಎಮ್ಮ
ಏಕ ಭಕ್ತಿಯ ಭಾಗ್ಯ ಪಾಲಿಸು
ಶ್ರೀ ಕಳತ್ರನ ಸಂಗಮತ್ತನೆ ಅ-
ನೇಕ ಭಕ್ತಗ್ಹರಿಯ ತೋರಿದೆ
ನಾಕ ತರು ಕರುಣಾಳು ಗುರುವರ ೩
ದಾಸ ವರ್ಗದ ದೊರೆಯೆ | ಲಜ್ಜೆಯಾಗುತಿದೆನ್ನ
ದೋಷರಾಶಿಗಳೊರಿಯೆ
ಹಸಗೆಟ್ಟು ಬಗೆ ಬಿನ್ನೈಸಲಾಗದೊ ಖರಿಯೆ
ಬ್ಯಾಸರದ ಪೊರಿಯೆ
ಕಾಸು ಬಾಳದ ಎನ್ನಕರಗಳ
ಶ್ರೀಶ ಪಿಡಿವನು ಲೇಸು ಕರುಣದಿ
ವಾಸುದೇವಗೆ ದಾಸ ಜನರೊಳು
ಸೂಸಿ ಸುರಿವುದು ಸ್ನೇಹ ಸಂತತ ೪
ದಾತರೊಳು ಸರಿದಾರೊ | ಹರಿದಾಸವರ್ಯನೆ
ಆತುಮಪ್ರದ ತೋರೋ ನಿನ್ನಂಥ
ದಾತರ ನಾ ತಿಳಿಯ ದಯ ಬೀರೊ
ಆರ್ತಿಯನು ಹೀರೋ
ಖ್ಯಾತ ನಿನ್ನಯ ಮಾತು ಒಮ್ಮೆಗು
ಮಾತರಿಶ್ವನನಾಥ ಮೀರನು
ಆತುರದಿ ನಿನ್ನಂಘ್ರಿಗೆರಗುವೆ
ಭೂತ ಪಾಲಿಸು ಹರಿಯ ಒಲುಮೆಗೆ ೫
ಸುರಭಿ ಸುರತರು ಚಿಂತಾಮಣಿಗಳಂದದಿ ಮಹ
ವರಗಳೀವ ಶ್ರೀಮಂತ
ಭಾರತೀಶನ ಶ್ರೀ ಚರಣ ಬಿಡದಿಹ ಸ್ವಾಂತ
ಪರಮ ನಿಶ್ಚಿಂತ
ಚರಣ ಕಮಲದಿ ಮೊರೆಯನಿಟ್ಟನ
ಕರದ ಶಿಶುಗಳಂತೆ ಪಾಲಿಸಿ
ಮರುತ ಮಂದಿರ ನ
ಭರದಿ ತೋರಿದ ಕರುಣ ಸಾಗರ ೬

ಶಿಲೆಯ ನಾರಿಯ ಮಾಡ್ದ
೭೧
ಶಿಲೆಯ ನಾರಿಯ ಮಾಡ್ದ ಹನುಮ ನಿಲಯಾ ಪ
ನೆಲೆಯಿಲ್ಲದಾ ಮಹಿಮ ಶ್ರೀರಾಮ ಗೋಚರಿಸೊ ಅ.ಪ
ಶ್ರುತಿಗಗೋಚರ ನೀನು ಸರ್ವೇಶ ಸ್ವಾತಂತ್ರ ನೀನು
ಕೃತಿಮಗ್ನ ಪಶು ನಾನು ಗೋಪಾಲದೇವ
ಮೃತಿ ಭೀತಿ ವಶನಾಗಿ ನೆಲೆತಪ್ಪಿ ಪೋಗುತಿಹೆ
ಅತಿಭಯದಿ ನಡುಗುವೆ ಹೇ ಶ್ರುತಿನಾಥ ಪೊರೆ ಎನ್ನ ೧
ಪರಮ ಮಂಗಳ ಅನಿಲದೇವ ಮಂದಿರ ಶ್ರೀಶ
ಪರತತ್ವ ಪರಮಾತ್ಮ ಪಿಡಿಯೊ ಕರವ
ಮರುವೆಂಬ ಮಾರಿಯನು ನಿರ್ಮೂಲ ಮಾಡಯ್ಯ
ದೊರಿ ನಿನ್ನ ಸ್ರ‍ಮತಿ ಸತತ ಅಚ್ಛಿನ್ನವಾಗಿರಲಿ ೨
ನೀನು ನಿನ್ನವರಿಂದ ಕೂಡಿ ತನುರಥದಲ್ಲಿ
ಭಾನು ಕೋಟಿ ತೇಜ ಶ್ರೀ ಕ್ರೀಡೆಮಾಳ್ಪ
ಜ್ಞಾನ ಪಾಲಿಸು ಎನಗೆ
ಆನಿ ಅಜಮಿಳ ಅನಿಮಿತ್ತ ಬಾಂಧವನೆ ೩

೧೦೧*
ಶ್ರೀ ಪರಾತ್ಪರವಿಠಲ ಪಾಲಿಸಿವರ ಪ
ಚರಾಚರಾತ್ಮಕದೇವ ಪರಮ ಪ್ರೀತಿಯಿಂದ ಅ.ಪ.
ಜಗನ್ಮಂಗಳ ಮೂರ್ತಿ ಭಾಗವತ ಪ್ರಧಾನ
ಸಾಗರೋಪಮ ಭಕ್ತಿ ಪ್ರದದೇವ
ಬಾಗಿ ಬೇಡುವೆ ವಿಜ್ಞಾನರೂಪದಿ ನಿನ್ನ ೧
ಭಾಗವತೋತ್ತಮರ ಪದ್ಧತಿಯಲಿ
ಗುಪ್ತಸಾಧನ ಪಾಲಿಸು
ಶುಕಾನುಬಂಧದಿ ಶುಕಪ್ರೇಮ ಪಾತ್ರನಾಗಿ
ಸುಖಮಯನ ಭಜಿಸುತಿರಲಿ ೨
ಆಪ್ತತಮ ಗುಣಸಮುದ್ರ ಶ್ರೀಜಯೇಶ-
ವಿಠಲ ಪೂರ್ಣ ಪ್ರೀತಿಯಲಿ
ನಿತ್ಯ ಭಾಗವತರ ಸಂಗದಲಿಟ್ಟು
ನಿರುಪಮ ಸುಖನೀಡು ೩

*
ಮರುತಾತ್ಮಜನು ನಿರುತದಿ ಭಜಿಪನು
ಪರಿಪರಿ ಪಾಡಿ ಸುಖಗೂಡಿ ೧
ಪತಿತ ಪಾವನ್ನ ಸತತ ಈ ನಾಮ
ಗತಿಯಿಲ್ಲದವರಿಗೆ ಗತಿ ಈವ ನಾಮ
ಹತವೆ ಮಾಡುತಲಿದ್ದ ಕಿತವನಿಗೊಲಿದು
ಕ್ಷಿತಿಯೊಳು ಮುನಿಪತಿ ಎನ್ನಿಸಿತು
ಪಥದಿ ಪಾಷಾಣವ ಪೆಣ್ಣನು ಮಾಡಿದ
ಅತುಳ ಮಹಿಮನ ಹಿತನಾಮ ೨
ಕುಲಶೀಲಗಳನ್ನು ಎಂದೊ ಎಣಿಸನೊ
ಸುಲಭರೊಳಗೆ ಬಲು ಸುಲಭನು ಇವನು
ಕಲುಷದಿ ದೂರನು ಶಬರಿಯ ಫಲವನು
ಮೆಲ್ಲುತೆ ಮುಕ್ತಿಯನಿತ್ತಿಹನು
ಲಲನೆಯ ಕದ್ದೊಯ್ದ ಖಳನ ತಮ್ಮನಿಗೆನೆಲವಿತ್ತ ದಯವಂತ ಶ್ರೀಕಾಂತ ೩

೭೨
ಶ್ರೀ ವೇಣುಗೋಪಾಲ ಶುಕಮುನಿಯ ಬಿಂಬ ಪ
ಧ್ಯಾನ ಪಾಲಿಸು ನಿನ್ನದೀನಭವದಿ ನೆಲಸಿ ಅ.ಪ.
ಜ್ಞಾನ ಮನ ದಶ ಕರಣ ಪ್ರಾಣ ಪಂಚಕರಲ್ಲಿ
ಭಾನುತೇಜನೆ ನೆಲಿಸಿ ತಿಳಿಸದಲೆ
ನಾನಾ ಬಗೆಯಲಿ ದಣಿಸಿ ನೀನಾಟ ಆಡುತಿಹೆ
ದೀನನ ಮೊರೆ ಕೇಳಿ ಮರವೆ ಬಿಡಿಸಿ ಪೊರೆಯೊ ೧
ಕೋಟಿ ಸೂಂಇÀರ್ಇರ ಕಾಂತಿ ಧಿಕ್ಕರಿಪ ಚಿನ್ಮಯನೆ
ಮಾಟ ಮಾಡದೆ ನಿನ್ನ ಲೀಲೆ ತೋರೊ
ನೋಟ ನಾಸಿಕ ಶ್ರವಣ ತನುಮನದಿ ಸಾಯುಜ್ಯ
ಬೇಟೆಯಲಿ ಇದ್ದೆನ್ನ ಕಣ್ಣು ಕಟ್ಟುವುದ್ಯಾಕೆ ೨
ಶತಕೋಟಿ ಬ್ರಹ್ಮಾಂಡ ಗತ ಜೀವಗಣಕಮೃತ
ಸತತ ಪಾಲಿಪ ಕರುಣ ನಿನದಲ್ಲವೇನೊ
ಹಿತಮಾಡು ನೆ ಮದ್ಭಿಂಬ
ಪ್ರತಿಬಿಂಬ ಭಾವದಲಿ ಬೆಳೆಸೆನ್ನ ಉದ್ಧರಿಸೊ ೩

೧೦೦*
ಶ್ರೀಗುರು ನೆ ಪಾಲಿಸಯ್ಯ
ಈ ಸತಿಯ ಕರಪಿಡಿದು ಪ
ಸರ್ವಮಂಗಳ ಮೂರ್ತಿ ಸರ್ವೇಶ ಶರ್ವಸಖ
ಸರ್ವತ್ರ ಒಡನಿದ್ದು ಸಲಹು ಸತತ
ಉರ್ವಿಯಲಿ ಸತ್ಕೀರ್ತಿ ಸಂಪದದಿ ನಿಲಿಸಿವಳ
ನಿವ್ರ್ಯಾಜದಲಿ ಪೊರೆಯೊ ನಿತ್ಯ ತೃಪ್ತ ೧
ಗುಣವಂತಳನು ಮಾಡು ಗುಣ ಗಣಾಂಬುಧಿ ದೇವ
ಘನವೆನಿಸು ಈ ಸತಿಯ ಸಂಸಾರವೆಲ್ಲ
ಅನಿಲ ಜನರಲಿ ನಿಲಿಸು ಅನುಕೂಲ ನೀನಾಗಿ
ದನುಜಾರಿ ಸಂಪದವ ಹರುಷದಲಿ ಬೆಳೆಸುವುದು ೨
ಶೀಲ ಭಕ್ತಿ ಜ್ಞಾನ ಸತತ ಸಜ್ಜನ ಸಂಘ
ಮೇಲಾಗಿ ನೀಡುವುದು ಮೈದುನನ ಸೂತ
ಪಾಲುಸಾಗರದೊಡೆಯ ನೆ
ಕೊರತೆ ಇಲ್ಲದೆ ನೀಡು ಕಲ್ಯಾಣ ಈ ಸತಿಗೆ ೩

ದೇಹ ಚತುರದಿ ಇದ್ದು
೮೪
ಶ್ರೀಹರಿಗೆ ಪ್ರಥಮಾಂಗ ಮಧ್ವಮೂರ್ತಿ ಪ
ದೇಹ ಚತುರದಿ ಇದ್ದು ಜಗವ ಸಲಹುವೆ ದೊರೆಯೆ ಅ.ಪ.
ಅಮೃತರೂಪನೆ ಹರಿಯ ಅಮೃತಮಯ ಭಕ್ತಿಯೊಳು
ಅಮುಕುತಾ ಮುಕುತದಲಿ ನಿಂದು ಹರಿಯ
ರಮೆ ಸಹಿತ ರಾಜಿಪನ ಅಚ್ಛಿನ್ನ ಅರ್ಚಕನೆ
ಸಮರರಿಯೆ ನಿನಗಿನ್ನು ಅಜನುಳಿದು ಜೀವರೊಳು ೧
ನಿನ್ನ ನಾಮಸ್ಮರಣೆ ನಿಸ್ವಾರ್ಥಿಯ ಕಥನ
ನಿನ್ನ ವೈಭವ ಧ್ಯಾನ ಅಮೃತಪಾನ
ನಿನ್ನ ಗುಣ ಕ್ರಿಯ ರೂಪ ನೆನೆನೆನೆದು ಸುಖಿಸುವನು
ಧನ್ಯ ಸುರಕುಲದವನು ಜೀವನ್ಮುಕ್ತನವನಿಯೊಳು ೨
ನಿನ್ನಲ್ಲಿ ಹರಿ ಇದ್ದು ಜಗವ ನಡೆಸುವ ತಾನು
ನಿನ್ನಲ್ಲಿ ಶ್ರೀಹರಿಯ ಒಲುಮೆ ಅಮಿತ
ನಿನ್ನ ಕರವಶ ಮುಕ್ತಿ ಮಾಡಿಹನು ಯದುಪತಿಯು
ನಿನ್ನ ದಾಸರೆ ಹರಿಯ ಪುರವಾಸಿಗಳು ಸ್ವಾಮಿ೩
ಜ್ಞಾನ ಬಲ ಭಕ್ತಿ ವೈರಾಗ್ಯ ಲಾಘವ ಶಕ್ತಿ
ಧ್ಯಾನ ವಿದ್ಯಾ ಬುದ್ಧಿ ಕುಶಲ ತೇಜ
ಪೂರ್ಣಪ್ರಾಜ್ಞತೆ ಸಿರಿಯ ಮಾಧುರ್ಯ ಶುಭವಾಕು
ಪೂರ್ಣಧೈರ್ಯವು ಕಾರ್ಯ ಪೂರ್ಣ ನಿನ್ನಲಿ ಅಭಯ ೪
ವಾಣಿ ಭಾರತಿ ನಿನ್ನ ವೈಭವವ ನೆನೆನೆನೆದು
ಧೇನಿಸುತ ಆನಂದಮಗ್ನರಾಗಿ
ಕಾಣದಲೆ ಕೊನೆ ಮೊದಲು ತತ್ವದ ಕಮಲದಲಿ
ಜೇನಾಗಿ ಕ್ರೀಡಿಪರೊ ಮೈಮರೆದು ಸುಖ ಸುರಿದು ೫
ಶಿವ ಶೇಷ ದ್ವಿಜ ರಾಜ ಸುರರಾಜ ಮೊದಲಾದ
ದಿವಿಜಗಣ ನಿನ್ನಂಘ್ರಿ ಕಮಲ ರಜವ
ಪವಮಾನ ಪಾವನ ನಾಮ ಪರಮ ಭಕುತಿಯಲಿ ಶಿರದಿ
ಲವ ಬಿಡದೆ ಪೊತ್ತಿಹರೊ ಆನಂದ ಶರಧಿಯಲಿ ೬
ಶ್ರೀ ಲಕ್ಷ್ಮೀ ಹರಿಪುತ್ರ ಅಮಿತ ವೈಭವ ಗಾತ್ರ
ಕಾಳಕೂಟವನುಂಡು ಮೆರೆದ ಮಹಿಮ
ಶ್ರೀಲೋಲ ನಿನ್ನಲ್ಲಿ ಆನಂದ ಲೀಲೆಗಳ
ಕೊಲಾಹಲದಿ ಮಾಳ್ಪ ಕಾರುಣ್ಯರೂಪದಲಿ ೭
ಅಣು ರೇಣು ತೃಣ ಕಾಷ್ಟ ಬಹಿರಂತರದಲ್ಲಿ
ಘನ ಮಹತ್ತು ಅಣು ಜೀವ ಚಿದ್ದೇಹದಲ್ಲಿ
ಅನವರತ ಅಲ್ಲಿಪ್ಪ ಸರ್ವಮಂಗಳ ಹರಿಯ
ಗುಣನಿಕರಗತ ಚಿತ್ರ ಜಗದಸುವೆ ನಿರ್ದೋಷ ೮
ರಾಮದೂತನೆ ಹನುಮ ಹರಿ ಧೌತ್ಯಯನಗೀಯೊ
ಭೀಮ ಶೌರಿಯ ಗುಪ್ತ ಬಂಟ ಸತತ
ಭೂಮ ಭಾರತಿ ಖಳರ ಹರಣ ವೃಕೋದರ ವೀರ
ಶ್ರೀ ಮನೋಹರನಲ್ಲಿ ದಾಸ್ಯ ದೀಕ್ಷೆಯ ದೇಹಿ ೯
ಗರುಡ ಪನ್ನಗ ರುದ್ರ ಸುರಗಣವು ಮೊದಲಾದ
ಚರಾಚರ ಭ್ರೂ ಚಲನ ಮಾತ್ರದಿಂದ
ಖರೆ ಸೃಷ್ಟಿ ಸ್ಥಿತಿ ಮುಕ್ತಿಯೈದುವರೊ
ಘನ ಮಹಿಮ ವರ ವೇದ ಪ್ರತಿಪಾದ್ಯ ೧೦
ಪರಮಮಂಗಳ ನಂಘ್ರಿ
ಸರಸಿಜವ ಬಿಡದ ಮಧುಪರಾಜ
ಶರಣರಿಗೆ ಸುಜ್ಞಾನ ಶರಧಿಯನು ಪೊಂದಿಸಿದೆ
ಕರುಣನಿಧಿ ಆನಂದಮುನಿ ನಿನ್ನ ಕೃಪೆ ಮುಕ್ತಿ ೧೧

೭೩
ಶ್ರುತಿರಾಸಿ ಸನ್ನುತ ಸತತ ಸದ್ಗುಣಪೂರ್ಣ
ಪ್ರಥಮಾಂಗ ಸಂಪೂಜ್ಯ ಶರ್ವಮಿತ್ರ ಪ
ಪ್ರತಿ ಪ್ರತಿ ಕ್ಷಣ ನಿನ್ನ ಪತಿತಪಾವನ ಪಾದ
ಕ್ಕತಿ ದೈನ್ಯದಲ್ಲೆರಗಿ ಮೊರೆ ಇಡುವೆ ಪೊರೆಯೆಂದು ಅ.ಪ.
ಕೋರಿದರೆ ಮನಕರಗಿ ಹಾರಿ ಬರುವಿಯೆಂದು
ನಾರದರೆ ಮೊದಲಾದ ನಿಜಭಕ್ತರೆಲ್ಲ
ಸಾರಿಹರು ಸರ್ವೇಶ ಸಾರತಮ ಸರ್ವರೊಳು
ಘೋರ ಭವದಿಂದೆನ್ನ ಪೊರೆ ಎನಲು ಬರೆಯಂತೆ ೧
ಕೃಪೆಯಿಂದ ನೀ ನೋಡೆ ಬ್ರಹ್ಮಾಂಡ ದೋಷಗಳು
ಲುಪ್ತವಾಗುವುದಯ್ಯ ಒಂದೆ ಕ್ಷಣದಿ
ನಿಪುಣನಾಗುವನವನು ಇಹಪರ ನಿಧಿ ಒದಗಿ
ಅಪರಿಮಿತ ಸುಖ ಉಣುವ ಅಪ್ರತಿಮ ಕೀರ್ತಿಯು ೨
ಶಿರಿ ವಿಧಿ ಶಿವ ಶಕ್ತ ಸುರರಿಂದ ಸಂಸೇವ್ಯ
ಕೀರ್ತಿಪೂರ್ಣಾ
ಪರಿ ಪರಿ ದೋಷಗಳು ಪರಮ ಕೃಪೆ ವೀಕ್ಷಣದಿ
ಪರಿಹರಿಸಿ ಬೆರೆ ಎನ್ನ ಪರಭಕ್ತಿ ನಿಧಿ ಇತ್ತು ೩

೮೧
ಸಂಕರ್ಷಣನ ರಾಣಿ ವೀರದುರ್ಗೆ
ಕಿಂಕರರ ಪಾಲಿಸು ಖೂಳ ಜನ ಸಂಹಾರಿ ಪ
ಅಜ ಜನನಿ ಅಘನಾಶಿ ಅಮಿತ ಸದ್ಗುಣರಾಶಿ
ಕುಜನಾರಿ ಸುಗನಾಪ್ತೆ ಕಾಯೆ ತಾಯೆ ಅ.ಪ
ಮನದ ಖಳರಾ ಭೀತಿ ಬಹು ವೇಗ ಕೇಳಮ್ಮ
ಪ್ರಣಿತ ಜನರ ಪಾಲೆ ಕೊಲ್ಲೆ ಅವರ
ತನುಮನದಿ ನೆಲೆಸಿದ್ದು ಅನುದಿನವು ಪೊರೆ ನಮ್ಮ
ಗುಣಪೂರ್ಣ ನಿನ್ನ ಪತಿಧ್ಯಾನ ಒದಗಿಸಿ ನಲಿಯೆ ೧
ಪತಿವ್ರತವು ನೀ ಧರಿಸಿ ಪತಿವೈರಿಗಳ ಅರಿವೆ
ಪತಿಹಿತರ ಕಾವ ಕಂಕಣವ ಕಟ್ಟಿ
ಪತಿ ಪ್ರೀತಿಪಡಿಸುವೆ ವೀರವ್ರತ ದೀಕ್ಷೆಯಲಿ
ಪತಿತಪಾವನೆ ನೀನೆ ಕಾವಲಮ್ಮಾ ನಮಗೆ೨
ಕಲಿಯಲ್ಲಿ ಖಳಕೂಟ ಬಲು ಪ್ರಬಲ ಅತಿಕ್ರೂರ
ಉಳಿಯಲೀಯರು ದೇವಿ ಸುಜನರನ್ನು
ಬಲುಹೀನರೆಂತೆಂದು ಬಲು ಬಾಧೆಪಡಿಸುವರು
ಪ್ರಳಯಗೈಸವರನ್ನು ಪಾಲಿಸು ನಿನ್ನವರ ೩
ಜ್ಞಾನಮನ ತನುಕರಣ ಆಲಯದ ಅರಿಗಳ
ಆಸಕ್ತಚಾರಿಗಳ ಬಿಡದೆ ಮಡುಹಿ
ಆನಂದಮುನಿ ತಾಯೆ ನ
ಆನಂದ ನಿಜಕರುಣ ಬೆರಿಸಮ್ಮ ನಮ್ಮಲ್ಲಿ ೪

೭೪
ಸರ್ವಕ್ಕೂ ನೀ ಮೂಲ ಹರಿಯೆ ಕೇಳೊ ಪ
ದರ್ವಿ ಜೀವರ ಕೈಲಿ ಏನಾಹುದೆಲೊ ದೇವ ಅ.ಪ.
‘ಆ’ ಎನಲು ಶಕ್ತರೇ ಅಜಭವಾದಿಗಳಿನ್ನು
‘ನೀ’ಯಾದರದಲ್ಲಿ ಚೇತನರು ಅವರು
‘ನಾ’ಯಾತರವನಯ್ಯಾ ನಿನ್ನ ಮಾಯವ ಗೆಲಲು
ಆಯಾಸ ಮೀರಿದುದು ಶ್ರೀ ವರನೆ ದಯೆ ತೋರು ೧
ನಿನ್ನ ಚಿತ್ತಕೆ ಬಂದುದೇ ಹಿತವೆಂಬ
ಉನ್ನತ ಮತಿ ನೀಡು ಶರ್ವ ಬಿಂಬ
ಭಿನ್ನ ಭಾವಗಳೊಲ್ಲೆ ಅನಂತಗುಣವನಧಿ
ಮನದಲ್ಲಿ ನೀ ನಿಂದು ವಿಸ್ರ‍ಮತಿಯ ಪರಿಹರಿಸು ೨
ತವರೂಪ ಧ್ಯಾನಲವ ಬಿಡದೆ ಪೊಂದಿರಲಿ
ನವಭಕ್ತಿ ನಿನ್ನಲ್ಲಿ ಅಚ್ಛಿನ್ನವಾಗಿ
ಪವಮಾನ ಪೂಜಿತ
ಭವ ಕಡಲ ದಾಟಿಸೊ ನಿನ್ನವನೆಂದು ೩

೭೫
ಸರ್ವೇಶ ಸುಲಭತಮ ಶೌರಿ ನೀನು
ಸರ್ವ ಶ್ರುತಿ ಪಾದ್ಯ ಸರ್ವಾತ್ಮ ಶುಕ ಬಿಂಬ ಪ
ನಿತ್ಯ ವಸ್ತುವು ನೀನು ನಿತ್ಯರಲಿ ನೀ ನಿತ್ಯ
ನಿತ್ಯಸುಖ ಪರಿಪೂರ್ಣ ಸತ್ಯ ಕೃತ್ಯ
ಭೃತ್ಯಪಾಲಕರಲ್ಲಿ ಸಮರಿಲ್ಲ ನಿನಗಿನ್ನು
ಭಕ್ತವತ್ಸಲ ಎನ್ನ ಯುಕ್ತಿಯಲಿ ಕೈಪಿಡಿಯೊ ೧
ಕರ್ಮದಾಧೀನದಲಿ ಅಹಂಮಮ ಕರ ಪೊಂದಿ
ದುಮ್ಮನವ ಬೆಳೆಸಿದೆನೊ ಅವಶನಾಗಿ
ನಿರ್ಮಮರದೇವ | ತ್ವದಾಸ್ಯ ಪಾಲಿಸು ಎನಗೆ
ಕರ್ಮನಾಮಕ ನೀನೆ ಸದ್ಧರ್ಮಕಾರಕನೆ ೨
ಎನ್ನಲ್ಲಿ ನಿನ್ನ ಕ್ರಿಯ ಅನುಭವದಿ ತಿಳಿಸೆನಗೆ
ಅನ್ಯುಪಾಯವು ಇಲ್ಲ ಅಭಯಪದಕೆ
ಪೂರ್ಣಪ್ರಜ್ಞರ ಗುರುವೆ
ಎನ್ನ ಮನ ಒಡಲಲ್ಲಿ ನಿನ್ನ ಮೂರ್ತಿಯ ತೋರೊ ೩

೭೬
ಸರ್ವೇಶ ಹರಿ ನೀನು ಸರ್ವಾತ್ಮ ಶೌರಿ ಪ
ಸರ್ವಮಂಗಳಮಯನೆ ವಿಧಿತಾತ ಮುದವೀತೊ ಅ.ಪ.
ಉದ್ಧವನ ಗುರುವರ್ಯ ನಿರ್ದೋಷ ಗುಣವನಧಿ
ನಿದ್ದೆ ಮಾಡುವಗೊಲಿದು ಮುಕ್ತಿ ಇತ್ತೆ
ಹದ್ದುಮೀರಿ ಭವದಿ ಬಿದ್ದು ಮೊರೆ ಇಡುತಿಹೆನೊ
ಹೃದ್ಧಾಮದಲಿ ನಿನ್ನ ದರುಶನವ ನೀಡೆಯ್ಯ ೧
ಮನದಲ್ಲಿ ಮಹಪೂಜೆಕೊಳ್ಳಯ್ಯ ಎನ್ನಿಂದ
ಪ್ರಣೀತಪಾಲಕ ಕೃಷ್ಣಪೂರ್ಣ ಪುರುಷ
ತೃಣಮೊದಲು ಬ್ರಹ್ಮಾಂಡ ಸರ್ವರಲಿ ಸ್ವಾತಂತ್ರ್ಯ
ಅನಿಲಾತ್ಮ ಆನಂದ ಖಣಿ ಕರುಣ ಮಾಡಯ್ಯ ೨
ಕೆಸರು ಕಲ್ಕಿದಜ್ಞಾನಕಳವಡುವುದೇ ನಿನ್ನ
ಅಸಮ ಮಂಗಳ ಸುಗುಣ ಶ್ರುತಿ ವಿನುತನೆ
ದಶಮತಿಯ ಮನದೈವ ನೀ ಕೂತು ಮನದಲ್ಲಿ
ವಿಶದ ತಿಳಿಮತಿಯಿತ್ತು ವೈಭವವ ತೋರೆನಗೆ ೩
ಜೀವಜಡರಲಿ ಪೊಕ್ಕಾಡುವೆ ಬಹುಲೀಲೆ
ಭಾವಸೂತ್ರದಿ ನಮ್ಮ ಕಟ್ಟಿ ಕುಣಿಸಿ
ಈ ವಿಧವ ಬಲ್ಲವರ ಮೇಲಾಗಿ ಪಾಲಿಸುವಿ
ತಾವೀಶರೆಂಬುವರು ಮುಳುಗುವರು ದುಃಖದಲಿ ೪
ದುಷ್ಟಜನ ಸಹವಾಸ ಅಷ್ಟತತ್ವಗಳಲ್ಲಿ
ವೃಷ್ಣೀಶ ಬಿಡಿಸಯ್ಯ ಬಂಧ ಕಡಿದು
ಇಷ್ಟಾನಿಷ್ಟ ಜೀವರಲಿ ನಿಂತು ನಟಿಸುವ
ಗುಟ್ಟುತೋರಿ ನೆ ಕೃಪೆಮಾಡು ೫

೭೮
ಹರಿ ನೀ ನೋಡದಿರೆ ಬಾಳಬಹುದೆ ಪ
ಸರುವ ಮೂಲನೆ ದೇವ ಪರಮಪಾವನ ಮಹಿಮ ಅ.ಪ.
ಜ್ಞಾನಮಯ ವಿಜ್ಞಾನ ಮಾನಿಗಳ ಹೆದ್ದೈವ
ದಾನವಾಂತಕ ದಿವಿಜ ಪ್ರಾಣಾಧಾರಿ
ದೀನ ಬಾಂಧವ ಹೃದಯ ವನಜ ಮಂದಿರ ಪೂರ್ಣಾ
ನಿನೊಹಿಸಿ ಮದ್ಧರ್ಮ ಕಾಣಿಸೊ ಕರುಣಾಬ್ಧಿ ೧
ಘೋರ ಕಲಿಮಲ ವ್ಯಾಪ್ತಿ ಮೀರಿಹುದು ಸಜ್ಜನರ
ಶ್ರೀರಮಣ ಶ್ರುತಿಧರ್ಮ ಜಗವೆಲ್ಲಿದೆಯಯ್ಯ
ಭಾರಕರ್ತನೆ ನಿನ್ನ ಆರಾಧಿಸದೆ ಜನರು
ಸ್ವಾರಾಧ್ಯರಾಗಿಹರು ಗತಿಯೇನೊ ಸುಜನಕೆ ೨
ಸರ್ವೋತ್ತಮನೆ ನಿನ್ನ ಕತ್ರ್ಯುಳಿಸಲಿದು ಕಾಲ
ಸರ್ವಾತ್ಮ ಮರುದಾತ್ಮ
ಪೊರ್ವ ದೇವರ ಗಮನ ಗೀರ್ವಾಣ ಮುನಿ ವಂದ್ಯ
ಶರ್ವಸನ್ನುತ ಶೌರಿ ರುಜುಮನವ ಕೊಡೆನಗೆ ೩

೭೯
ಹರಿಹರೀ ಎನ್ನ ದೋಷವಳಿಯೊ ಪ
ಕರಿವರದ ಕೃಪೆಮಾಡು ನಿತ್ಯಮಿತ್ರನೆ ಕೃಷ್ಣ ಅ.ಪ.
ಬೇಲಿ ಎದ್ದು ಹೊಲವ ಮೆದ್ದರೆ ಬ್ಯಾರಿನ್ನು
ಪಾಲಿಪರು ಯಾರೆಯ್ಯ ಶೀಲರೊಡೆಯ
ಫಾಲಾಕ್ಷಸಖ ನಿನ್ನ ಅಚುಂಬಿತ ಕಾರುಣ್ಯ
ಶ್ರೀಲಕ್ಷ್ಮೀ ಶ್ರುತಿ ರಾಸಿ ವರ್ಣಿಪರೊ ಗುಣನಿಧಿಯೆ ೧
ಯಾತನೆಲ್ಹಣ್ಣಾದೆ ಪೂತನಿಯ ಅಸುಹರನೆ
ಪಾತಕಕೆ ಕೊನೆಗಾಣೆ ಪಾರ್ಥಸೂತ
ಆತ್ಮಬಂಧುವೆ ಇನ್ನು ತಡಮಾಡೆ ತಡಿಲಾರೆ
ಪೂತನ ಮಾಡೆನ್ನ ಪ್ರಾಣೇಶ ಪ್ರಿಯಬಂಧು ೨
ದೋಷಪುಂಜನು ನಾನು ಶೇಷಶಯನನೆ ಬಲ್ಲ
ಪೋಷಕನು ನೀನೆಂದು ವೇದರಾಸಿ
ಘೋಷಿಪವು ಅನವರತ ಕಾಪಾಡು ಶ್ರುತಿವಾಕು
ದೋಷಕರ ನೆ ಮೈದೋರು ೩

ಭಿನ್ನಸ್ರ‍ಮತಿ ದುಸ್ಸಂಗ ಎಂದೆಂದು
೬೫
ಪೂರ್ಣ ಲಕ್ಷ್ಮೀರಮಣ ನಿತ್ಯ ವಿಭವ ಪ
ಪೂರ್ಣ ಸದ್ಗುಣವನಧಿ ಆನಂದಮಯ ಬಾರೊ ಅ.ಪ
ನಿನ್ನಲ್ಲಿ ನಾನಿಹೆನು ನನ್ನಲ್ಲಿ ನೀನಿರುವಿ
ಇನ್ನು ಈ ಸ್ರ‍ಮತಿ ನಿತ್ಯ ಇತ್ತು ಪೊರೆಯೊ
ಧನ್ಯ ಮಾನ್ಯರ ಸಂಗ ಸತತ ಪಾಲಿಸು ದೇವ
ಭಿನ್ನ ಸ್ರ‍ಮತಿ ದುಸ್ಸಂಗ ಎಂದೆಂದು ಕೊಡದಿರು ೧
ಶಿರ ಮನಸು ನಿನ್ನಂಘ್ರಿ ನಿನ್ನ ವರ ಪದ ಪದ್ಮ
ನಿರುತ ಪೊಂದಿಹ ಪದವಿ ಪಾಲಿಸೆನಗೆ
ಮರುತ ಮಂದಿರ ಮಹಾ ಕರುಣಾರ್ಣವನೆ ಶೌರಿ
ಗಿರಿಜೇಶಸಖ ಯನ್ನ ಹೃತ್ಕಂಜಮನೆ ಮಾಡು ೨
ನಿನ್ನ ಗರ್ಭದಿ ಇರುವ ನಿರ್ಭೀತಿ ಸುಖ ನೀಡು
ಮನ್ನದಲಿ ನೀ ಕೂಡು
ಧನ್ಯ ಭಕ್ತರು ಮಾಳ್ಪ ಭಕ್ತಿ ವಿಧಿ ಪೂಜೆಗಳ
ಎನ್ನಲ್ಲಿ ತೋರಯ್ಯ ಹಿರಿಯರ ಪುಣ್ಯವನಿತ್ತು ೩

ಸಾಧನದ ಚಿಂತೆ ಎನಗ್ಯಾಕೊ ದೇವ
೭೭
ಸಾಧನದ ಚಿಂತೆ ಎನಗ್ಯಾಕೊ ದೇವ
ಮಾಧವನೆ ನಿನ್ನ ನಾಮ ಧರಿಸಿಕೊಂಡಿರುವವಗೆ ಪ
ನಿನ್ನ ಚಿತ್ತಕೆ ಬಂದ ಅನುಭವವೆ ಸಾಧನವೊ
ಅನ್ಯಥಾ ಬೇಕಿಲ್ಲ ದೋಷರಹಿತ
ಎನ್ನ ಮನ ತನು ಕರಣತ್ರಯಗಳನು ನೀ ಮಾಳ್ಪೆ
ಅನ್ಯಸಾಧನವ್ಯಾಕೊ ಪಾವನ್ನ ಸಚ್ಚರಿತ ೧
ನಡೆವುದೇ ಯಾತ್ರೆಗಳು ನುಡಿವುದೇ ಸ್ತೋತ್ರಗಳು
ಬಿಡದೆ ನೋಡುವುದೆಲ್ಲ ನಿನ್ನ ಮೂರ್ತಿ
ಒಡನೆ ಕೇಳುವ ಶಬ್ದ ನಿನ್ನ ಮಂಗಳ ಕೀರ್ತಿ
ಪಡುವ ಭೋಗಗಳೆಲ್ಲ ನಿನ್ನ ಉಪಚಾರ ೨
ಪಾಪ ತೊಳೆವುದಕಿನ್ನು ದುಃಖ ಪ್ರಾಯಶ್ಚಿತ್ತ
ತಾಪ ಯೋಚನೆಗಳೆಲ್ಲ ತಪಸು ವಿಭುವೆ
ಗೋಪ ಚೂಡಾರತ್ನ
ಈ ಪಾತ್ರದೊಳಗಿದ್ದು ನೀ ಮಾಳ್ಪ ಸಾಧನವೊ ೩

ಹಾಡಿನ ಹೆಸರು :ಸಾಧನದ ಚಿಂತೆ ಎನಗ್ಯಾಕೊ ದೇವ
ಹಾಡಿದವರ ಹೆಸರು :ಶಂಕರ ಶಾನ್‍ಭಾಗ್
ಸಂಗೀತ ನಿರ್ದೇಶಕರು : ಎನ್.ಎಸ್, ಪ್ರಸಾದ್
ಸ್ಟುಡಿಯೋ :ಅಶ್ವಿನಿ, ಬೆಂಗಳೂರು.

ನಿರ್ಗಮನ

ಪತಿತ ಪಾವನರಂಗ ಸತತ ಕಾಯೊ
೬೩
ಪತಿತ ಪಾವನರಂಗ ಸತತ ಕಾಯೊ
ಗತಿಯಾರು ನಿನ್ನುಳಿದು ಶ್ರುತಿವಿನುತ ಗೋಪಾಲ ಪ
ಆದಿಮೂಲನು ನೀನು ಆದಿರಹಿತನೆ ಸ್ವಾಮಿ
ಸಾಧ್ಯ ಸಾಧಕ ಸೇವ್ಯ ಸೇವಕನ ಕೃಷ್ಣ
ಭಾದ್ಯ ಭಾಧಕ ರಮಾರಾಧ್ಯ ಚಿತ್ಸುಖ ಸುಖ ಸಿಂಧು
ಕಾದುಕೋ ನಿನ್ನವನ ಆದಿರೋಗವ ಕಳೆದೂ ೧
ನಾರಿ ದ್ರೌಪದಿ ಮಾನ ಕಾಯ್ದ ವಿಖ್ಯಾತನೆ ಶೌರಿ
ಕ್ರೂರ ನಕ್ರನ ಕೊಂದು ಕರಿಯ ಪೊರೆದೆ
ಹಾರಿ ಹಾವಿನ ಹೆಡೆಯ ಮೆಟ್ಟಿ ನರ್ತನಗೈದೆ
ಕ್ರೂರ ಫಣಿಯನು ಪೊರೆದ ಅಕ್ರೂರ ಸನ್ನುತ ಪಾಹಿ ೨
ಪೋತಧ್ರುವ ಪ್ರಹ್ಲಾದ ಪುಂಡರೀಕರ ಪಾಲ
ಖ್ಯಾತ ಅಜಮಿಳನ ವಿಜಯಸೂತ
ಭೀತಿ ರಹಿತನ ಮಾಡು ಮಾಶತರೀಶ್ವನ ದೇವ
ದಾತ  ನೀ ಅಭಯ ಪಾಲಿಸೊ ದೊರೆಯೆ ೩

ಹಾಡಿನ ಹೆಸರು :ಪತಿತ ಪಾವನರಂಗ ಸತತ ಕಾಯೊ
ಹಾಡಿದವರ ಹೆಸರು :ವಾಗೀಶ್ ಭಟ್
ಸಂಗೀತ ನಿರ್ದೇಶಕರು :ಶ್ಯಾಮಲಾ ಜಿ. ಭಾವೆ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *