Categories
ರಚನೆಗಳು

ಜ್ಞಾನಬೋಧಕರು

೯೨
ಇಂದು ನೋಡಿದೆ ನಾನು ಸಾಧು ಸಂತರ ಇಂದು ಕೂಡಿದೆ ಎನ್ನ ಮನದ ಪ್ರೀಯರ ಪ
ಚರಣ ಕಮಲವು ಕಾಣುತಾಕ್ಷಣಹರುಷವಾಯ್ತು ಪೂರ್ಣ ಎನ್ನ ಮನಸಿಗೆ |ಶರಧಿ ಎಬ್ಬಿದ ಪರಿಯ ಎನ್ನೊಳುಪರಮ ಚಿದ್ಘನಾನಂದ ತುಳುಕಿತು ೧
ಪೇಳಲೆ ಎನ್ನಯ ಅಮಿತ ಸುಖವನುಭಾಲಲೋಚನನೆ ಬಲ್ಲ ಇದರ ಬಗೆಯನು |ಕೀಳ ಜನರಿದನೇನು ಬಲ್ಲರುಹಾಳ ಬದುಕುವದಿಂದೇತರದಿವರ ಜನ್ಮವು ೨
ಸಕಲ ಸಾಧುರ ಪಾದ ಧೂಳಿಯಭಕ್ತಿಯಿಂದಲಿ ನಾನು ಬಿಡದೆ ಧರಿಸುವೆ |ಮುಕ್ತಿ ನಾಲ್ಕಕೆ ಮಿಗಿಲ ಪದವನುನಿಖಿಲ ಮೂರ್ತಿ ಜ್ಞಾನಬೋಧನೊಡೆಯನೀವನು ೩

೮೪
ಇನ್ನೂ ಭ್ರಾಂತಿಯ ಮಾಡುವರೆ | ನನ್ನದೆಂದು ಆಡುವರೆ |ತನ್ನ ತಾ ತಿಳಿಯದೆ | ಅನ್ಯರ ಗುಣದೋಷ ನೋಡುವರೆ ಪ
ಸ್ತುತಿಸುತ ಬಂದರೇನು | ಮತ್ತೆ ಜಲವ ಮಿಂದರೇನು | ಎತ್ತ ಹೋದರೂ ದಣಿವಿಕೆಯಿಲ್ಲದೆ | ನಿತ್ಯಾನಿತ್ಯ ವಿವರಿಸಲಿಲ್ಲ ೧
ಮಾತಿನ ಬಣವಿಯನೊಟ್ಟಿ | ಸ್ವಂತ ವಿಷಯಂಗಳ ಮುಟ್ಟಿ |ಯಾತಕೆ ವೈರಾಗ್ಯದ ಮಾತು | ಮಾತಿನಂತೆ ನಡೆದರಾಯಿತು ೨
ನಾನು ದೊಡ್ಡವ ನನ್ನವರೆಂದು | ಜ್ಞಾನ ಗರ್ವದ ಮನೆಗೆ ಬಂದು | ಜ್ಞಾನಬೋಧನ ಪ್ರಭುವ ಕೂಡದೆ ದೀನನಾಗಿ ಬಳಲುವದೇನೊ ೩

೯೪
ಎಂತು ಗುರು ಪೂಜೆಯ ಮಾಡಲಿನಿಂತಿಹನು ಅಂತರ್ಬಾಹ್ಯದಲಿ ಪ
ಪಾಣಿಪಾದ ವಾಕು ಮೊದಲಲ್ಲಿಜ್ಞಾನೇಂದ್ರಿಯ ಪಂಚಕ ನೋಡಲ್ಲಿ |ಪ್ರಾಣಾಪಾನ ವ್ಯಾನೋದಾನದಲ್ಲಿತಾನೇ ಇಹ ದಶಪ್ರಾಣದಲ್ಲಿ ೧
ಆಕಾಶಾದಿ ಪಂಚಭೂತದಲ್ಲಿಅಕಾರಾದಿ ಮೂರು ಮಾತ್ರೆಯಲ್ಲಿ |ಲೋಕತ್ರಯ ವ್ಯಾಪಕವಲ್ಲಿ |ಏಕೋ ಮೂರ್ತಿ ತುಂಬಿಹವಿವನಲ್ಲಿ ೨
ಭಾನುಶಶಿ ನಕ್ಷತ್ರಂಗಳಲ್ಲಿನಾನಾ ಜಾತಿ ಕುಲಗೋತ್ರದಲ್ಲಿ |ತಾನು ತಾನೇ ತೋರಿಸುವಲ್ಲಿಜ್ಞಾನಬೋಧ ಬೇರುಂಟು ಮತ್ತೆಲ್ಲಿ ೩

೮೯
ಎಂದಿಗಾದರೂ ನಾನು ಮರೆಯೆ ಗುರುವಿನತಂದು ಪೂಜಿಸು ತ್ರಿನಯನ ಪ್ರಾಣದೊಡೆಯನ ಪ
ಪ್ರೇಮದಿಂದಲಿ ತನ್ನ ದಯದಿ ನೋಡಿದಕಾಮಕ್ರೋಧ ಮೋಹ ಮದಕೆ ಅಂಬು ಹೂಡಿದ |ತಾಮಸದ ಗುಣಗಳನು ಕಡೆಗೆ ಮಾಡಿದರಾಮ ರಾಮ ಎಂಬ ಬೀಜ ಮಂತ್ರ ನೀಡಿದ ೧
ಕಾಣ ಬಂತು ಜಗವು ಎನಗೆ ರಾಮರೂಪವುತಾನು ತಾನೆ ಉದಯವಾಯ್ತು ಜ್ಞಾನದೀಪವು |ಏನು ಪೇಳಲಿ ಕರಗಿ ಹೋಯ್ತು ಮನದ ತಾಪವುಸ್ವಾನುಭಾವದಲಿ ನಾಸ್ತಿ ಪುಣ್ಯಪಾಪವು ೨
ಎರಡು ಪಕ್ಷ ಮೀರಿಹ ಗುಣಾತೀತನಪರಬ್ರಹ್ಮ ಪರಂ ಜ್ಯೋತಿ ಸದೋದಿತನ |ಕರುಣಸಿಂಧು ತಂದ ಜ್ಞಾನಬೋಧ ತಾತನಹರುಷ ಪೂರ್ಣವಾಗಿ ಸುಖವ ಕೊಡುವ ದಾತನ ೩

೮೫
ಗುರುತಕೆ ಮುಟ್ಟದೆ ಗುರುತದ ಮಾತನು ಆಡಬೇಡ |ಗುರುವಿನ ಸನ್ಮುಖ ಗರ್ವ ಅಹಂಕಾರ ಮಾಡಬೇಡ ಪ
ನರಜನ್ಮಕೆ ಬಂದು (ಅಸಿದ್ಧದವರ ಕಾಡಬೇಡ) ಗುರುವಿನ ಭಕ್ತಿಯ ಮಾಡದವನ ಮೋರೆ ನೋಡಬೇಡ ೧
ಮನದೊಳಗಿನ ಮಾತು ಸದ್ಗುರುವಿನ ಮುಂದೆ ಮುಚ್ಚಬೇಡ | ಧನವಗಳಿಸಿಕೊಂಬ ನಾ ಬಲು ದೊರೆಯೆಂದು ನೆಚ್ಚಬೇಡ ೨
ಎನ್ನ ನೆಂಟರ ಚಿಂತಿಯ ಮನೆಯೊಳು ಸೇರಬೇಡ | ಜ್ಞಾನಬೋಧನ ಪ್ರಭು ಗೋವಿಂದನ ಮಾತು ಮೀರಬೇಡ ೩

೮೮
ಗುರುರಾಯ ನೀ ಎನ್ನ ತವರ ಮನಿ | ಶರಣರಿಗೆ ಕೈವಲ್ಯದಾನಿ ಪ
ಗುರುವೆ ಎನ್ನ ಬಂಧು | ಬಂದು ಪೇಳಿರಿ ವಾಕ್ಯ ಎನಗೊಂದು | ಬಿಡಿಸೀದಿ ಈ ಜೀವಶಿವ ಸಂದು | ನಿಜರೂಪ ತೋರಿದಿ ಕೃಪಾಸಿಂಧು ೧
ನಿನ್ನಂಥ ಉದಾರಿ ಎಲ್ಲಿ ಕಾಣೆ | ಸತತ ಸದ್ಬೋಧಕೊಟ್ಟು ಕಾಯುವನೆ | ಶಾಂತಿ ಶಮ ದಮವು ಕೊಡುತಾನೆ |ಅಂತರ ಬಾಹ್ಯದಲಿ ತಾ ತುಂಬ್ಯಾನೆ ೨
ಇರಲಾರೆನು ಬಿಟ್ಟು ಅರಕ್ಷಣಾ | ಗುರುರಾಯ ಎನ್ನಜೀವದ ಪ್ರಾಣ | ದೊರಕಿದಿ ಪರಮವೇ ದಾನಸಾರಿ ಪೇಳುವ ಜ್ಞಾನಬೋಧ ಪೂರ್ಣ ೩

೮೬
ನಿನ್ನ ನೀ ತಿಳಿದುಕೊಳ್ಳಣ್ಣ ಇನ್ನಾರ ಪ
ಸತ್ತು ಹೋಗುದು ಕಾಷಾಯಮತ್ತೆ ಮಮತೆ ಮಾಡುವಿ ನೀ ೧
ಸಂತರ ಪಾದ ಪಿಡಿವದಕೆ ಭ್ರಾಂತಿ ಮುಸುಕ್ಯಾತಕೆ ನಿನ್ನ ೨
ನಾನಾ ದೇಶವ ನೋಡಿದಿಏನ ಗಳಿಕಿ ನೀ ಮಾಡಿದಿ ೩
ಮಾನವ ತನುವು ದೊರಕಿತು ಜ್ಞಾನದ ರತ್ನ ಸಿಕ್ಕಿತು ೪
ಸಾರಾಯ ವಾದ ಶಬ್ದವನೆಸಾರಿದ ಜ್ಞಾನಬೋಧ ಮುನಿ ೫

೯೩
ಮುಕ್ತಿ ದೊರಕಿತು ಗುರುಕೃಪೆಯಿಂದಲಿ ಪ
ಒಮ್ಮನದಿಂದಲಿ ವಿವರಿಸಿ ನೋಡಲುಕರ್ಮ ಬ್ರಹ್ಮಾಗಿ ತೋರಿತಕ್ಕ |ಅಮ್ಮಾ ಅಮ್ಮಾ ಈ ಮಾತು ಏನಂತ ಹೇಳಲಿನಿರ್ಮಳ ನಿಜ ವಸ್ತು ಕಾಣ ಬಂತಕ್ಕ ೧
ಮಾತು ಮಾತಿನಲಿ ಸಪ್ತಧಾತುವಿನಲಿಮತ್ತೊಂದು ತೋರಿದ ಭುವನದಲಿ |ಎತ್ತ ನೋಡಿದರತ್ತ ವಸ್ತುವೇ ಪರಿಪೂರ್ಣವಿಚಾರದಿಂದಲಿ ಅನುಭವದಿಂದಲಿ೨
ಇಂದು ಜ್ಞಾನಬೋಧಗೆ ಆನಂದವಾಯಿತುಸಂದೇಹ ಹೋಯಿತು ಮನಸಿನಲಿ |ಎಂದಿಗೂ ಅಳಿಯದ ಸೌಭಾಗ್ಯ ದೊರಕಿತುತಂದೆ ಗೋವಿಂದನ ವಾಕ್ಯದಲಿ ೩

೯೦
ಮುಟ್ಟಲು ಮಾಯೆ ಹೋಯಿತು, ಗುರುರಾಯ ಪ
ಜ್ಞಾನದ ಪ್ರಭೆಯು ತೋರಿತು ಅ-ಜ್ಞಾನ ನನ್ನದು ಹಾರಿತು ೧
ಹರುಷಕೆ ಹರುಷವಾಯ್ತುನಿರಾಶೆಯು ಕಡೆಗಾಯಿತು ೨
ಜ್ಞಾನಬೋಧನ ಪ್ರಭು ಯೋಗಿತಾನು ತಾನೆ ದಯವಾಗಿ೩

೯೧
ಸಾಧುರು ದೊಡ್ಡವರು ಭವ ಬಂಧನ-ದೊಳಗವರೆಂದಿಗೂ ಸಿಗರು ಪ
ಪದ್ಮ ಪತ್ರದಂತೆ ಅಲಿಪ್ತ ಇಲ್ಲಿರುವರು | ನಮ್ಹಾಂಗತೋರರು ಜಗದೊಳಗ ಹಮ್ಮುನಳಿದು ಬೇಗ | ಶರಣು ಹೊಕ್ಕವರಿಗೆ ಸುಮ್ಮನೆ ಚನ್ನಾಗಿ ದಯ ಮಾಡುವರು೧
ಎಳ್ಳಿನೊಳಗೆ ಎಣ್ಣೆ ಇಂತಿಹರಂಥ ಬಲ್ಲವರಿವರು ಭುವನದಲ್ಲಿ | ಬಲಸ್ತನದ ಬಡಿವಾರವ ಮಿಗಿವಲ್ಲೆ ಸ್ವಾನಂದ ಸುಖದಿಂದ ಲೋಲ್ಯಾಡುವರು ೨
ಏನನರಿಯದೆ ಮರುಳರಂತೆ ಜಗದೊಳು |ತನುವಿನ ಹಂಬಲ ಹರಿದಿಹರು |ಅನುದಿನದಲ್ಲಿ ಜ್ಞಾನಬೋಧನ ಪ್ರಿಯರುಚಿನುಮಯ ರೂಪದಲಿ ಎಲ್ಲ ಬೆರೆದ ದೊರೆಯರು ೩

೮೨
ಸೋಜಿಗ ಸೋಜಿಗ ಗೋವಿಂದನ ಸೋಜಿಗ ಗೋಪಾಲನ ಸೋಜಿಗ ಪ
ಇಂದಿರೆ ರಮಣ ಈ ಪರಬ್ರಹ್ಮ | ಮಂದರೋದ್ಧಾರ ಈ ದೇವಾ | ತಂದೆ ತಾಯಿ ತ್ರೈಲೋಕ್ಯಕ್ಕೆ ತಾನಾಗಿ ನಂದ | ಆನಂದ ಯಶೋದೆಗೆ ಮಗನಾದ ನೋಡಮ್ಮ || ಸೋಜಿಗ ೧
ಸದಮಲ ಸ್ವರೂಪ ಸಚ್ಚಿದಾನಂದನು |ಮುನಿಜನ ವಂದಿಪನು ಈ ದೇವ ಮುನಿಜನ ವಂದಿಪನು |ಪದುಮನಾಭ ಪೀತಾಂಬರಧರ ದೇವ ವಿದುರನ | ಆವಿದುರನ ಮನೆಯಲ್ಲಿ ಉಂಡದ್ದು ನೋಡಮ್ಮ ಸೋಜಿಗ೨
ನಾನಾ ದೇವರ ದೇವ ನಾರಾಯಣ ಹರಿ ನಿಜಸುರ ವಂದಿ-ಪನು ಈ ದೇವ | ಭಾನು ಕೋಟಿ ತೇಜ ಜ್ಞಾನ-ಬೋಧನ ಸ್ವಾಮಿ | ತಾನಾಗಿ ಭಕುತಿಗೆ ಒಲಿದದ್ದುನೋಡಮ್ಮ ಸೋಜಿಗ ೩

೮೩
ಹೀಂಗ್ಯಾಕ ಪ್ರಾಣಿ | ಹೀನ ಗುಣಗಳನೆಬಿಡಲಿಲ್ಲ | ಶ್ರೀ ಗುರುವಿನಾಶೆಯ ಮಾಡಲಿಲ್ಲ ಪ
ವಿವೇಕವ ತೊಡಲಿಲ್ಲ ಅ-ವಿವೇಕವ ಸುಡಲಿಲ್ಲ |ಸಾವಧಾನದಿ ಮನವಿಡಲಿಲ್ಲ ೧
ಆಚಾರವ ಕೊಳಲಿಲ್ಲಮತ್ಸರವ ಮರೆಯಲಿಲ್ಲಸಚ್ಚಿದಾನಂದ ಸುಖ ಉಣಲಿಲ್ಲ ೨
ಈ ನಡತೀ ತರಹವಜಾಣನಾದವನೇ ಬಲ್ಲ |ಜ್ಞಾನಬೋಧನು ಸಾರಿದ ಸೊಲ್ಲ ೩

೮೭
ಹೋಗುಣು ನಡಿ ಸಾಧುರ ನೋಡುವಾ ಬೇಗ ಪ್ರಾಣನಾಥನ ಕೂಡುವಾ ಪ
ವ್ಯರ್ಥ ಆಯುಷ್ಯ ವೆಚ್ಚ ಮಾಡಬೇಡಿ ಹಿತಾಹಿತ ವಿವರಿಸಿ ನೋಡಿ |ನೀತಿ ಮಾರ್ಗದಲಿ ನಡೆದಾಡಿಭೀತಿ ಭ್ರಮೆ ಮೂಲದಿ ಹೋಗಾಡಿ ೧
ಮನಸಿನ ಕಲ್ಪನೆಯ ಬಿಟ್ಟುಗುಣತ್ರಯದ ವೃತ್ತಿ ಕಡೆಗಿಟ್ಟು |ಪೂರ್ಣ ಜ್ಞಾನ ವೈರಾಗ್ಯ ಒತ್ತಿಟ್ಟುಘನ ಹರುಷ ತಮ್ಮೊಳಗಿಂಬಿಟ್ಟು ೨
ನಾನಾ ತೀರ್ಥ ಉಂಟು ಸಾಧುರಲ್ಲಿನಾನೇನೆಂದು ಆ ಸುಖ ಹೇಳಲಿ |ಜ್ಞಾನಾಂಬುಧಿ ಸಾಧುರೇ ನೋಡಲಿಜ್ಞಾನಬೋಧ ಸಾರಿದ ಭಕ್ತೀಲಿ ೩

ಇನ್ನೂ ಭ್ರಾಂತಿಯ ಮಾಡುವರೆ
೮೪
ಇನ್ನೂ ಭ್ರಾಂತಿಯ ಮಾಡುವರೆ | ನನ್ನದೆಂದು ಆಡುವರೆ |ತನ್ನ ತಾ ತಿಳಿಯದೆ | ಅನ್ಯರ ಗುಣದೋಷ ನೋಡುವರೆ ಪ
ಸ್ತುತಿಸುತ ಬಂದರೇನು | ಮತ್ತೆ ಜಲವ ಮಿಂದರೇನು | ಎತ್ತ ಹೋದರೂ ದಣಿವಿಕೆಯಿಲ್ಲದೆ | ನಿತ್ಯಾನಿತ್ಯ ವಿವರಿಸಲಿಲ್ಲ ೧
ಮಾತಿನ ಬಣವಿಯನೊಟ್ಟಿ | ಸ್ವಂತ ವಿಷಯಂಗಳ ಮುಟ್ಟಿ |ಯಾತಕೆ ವೈರಾಗ್ಯದ ಮಾತು | ಮಾತಿನಂತೆ ನಡೆದರಾಯಿತು ೨
ನಾನು ದೊಡ್ಡವ ನನ್ನವರೆಂದು | ಜ್ಞಾನ ಗರ್ವದ ಮನೆಗೆ ಬಂದು | ಜ್ಞಾನಬೋಧನ ಪ್ರಭುವ ಕೂಡದೆ ದೀನನಾಗಿ ಬಳಲುವದೇನೊ ೩

ಹಾಡಿನ ಹೆಸರು :ಇನ್ನೂ ಭ್ರಾಂತಿಯ ಮಾಡುವರೆ
ಹಾಡಿದವರ ಹೆಸರು :ಶ್ರೀದೇವಿ
ಸಂಗೀತ ನಿರ್ದೇಶಕರು :ಪರಮೇಶ್ವರ ಹೆಗಡೆ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಹೀಂಗ್ಯಾಕ ಪ್ರಾಣಿ
೮೩
ಹೀಂಗ್ಯಾಕ ಪ್ರಾಣಿ | ಹೀನ ಗುಣಗಳನೆಬಿಡಲಿಲ್ಲ | ಶ್ರೀ ಗುರುವಿನಾಶೆಯ ಮಾಡಲಿಲ್ಲ ಪ
ವಿವೇಕವ ತೊಡಲಿಲ್ಲ ಅ-ವಿವೇಕವ ಸುಡಲಿಲ್ಲ |ಸಾವಧಾನದಿ ಮನವಿಡಲಿಲ್ಲ ೧
ಆಚಾರವ ಕೊಳಲಿಲ್ಲಮತ್ಸರವ ಮರೆಯಲಿಲ್ಲಸಚ್ಚಿದಾನಂದ ಸುಖ ಉಣಲಿಲ್ಲ ೨
ಈ ನಡತೀ ತರಹವಜಾಣನಾದವನೇ ಬಲ್ಲ |ಜ್ಞಾನಬೋಧನು ಸಾರಿದ ಸೊಲ್ಲ ೩

ಹಾಡಿನ ಹೆಸರು :ಹೀಂಗ್ಯಾಕ ಪ್ರಾಣಿ
ಹಾಡಿದವರ ಹೆಸರು :ದಿವ್ಯಾ ರಾಘವನ್
ರಾಗ :ಮೋಹನ
ತಾಳ :ಆದಿ ತಾಳ
ಶೈಲಿ :ಜನಪದ
ಸಂಗೀತ ನಿರ್ದೇಶಕರು :ಶ್ರೀನಿವಾಸ್ ಬಿ. ವಿ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಹೋಗೋಣು ನಡಿ ಸಾಧುರ ನೋಡುವಾ
೮೭
ಹೋಗುಣು ನಡಿ ಸಾಧುರ ನೋಡುವಾ ಬೇಗ ಪ್ರಾಣನಾಥನ ಕೂಡುವಾ ಪ
ವ್ಯರ್ಥ ಆಯುಷ್ಯ ವೆಚ್ಚ ಮಾಡಬೇಡಿ ಹಿತಾಹಿತ ವಿವರಿಸಿ ನೋಡಿ |ನೀತಿ ಮಾರ್ಗದಲಿ ನಡೆದಾಡಿಭೀತಿ ಭ್ರಮೆ ಮೂಲದಿ ಹೋಗಾಡಿ ೧
ಮನಸಿನ ಕಲ್ಪನೆಯ ಬಿಟ್ಟುಗುಣತ್ರಯದ ವೃತ್ತಿ ಕಡೆಗಿಟ್ಟು |ಪೂರ್ಣ ಜ್ಞಾನ ವೈರಾಗ್ಯ ಒತ್ತಿಟ್ಟುಘನ ಹರುಷ ತಮ್ಮೊಳಗಿಂಬಿಟ್ಟು ೨
ನಾನಾ ತೀರ್ಥ ಉಂಟು ಸಾಧುರಲ್ಲಿನಾನೇನೆಂದು ಆ ಸುಖ ಹೇಳಲಿ |ಜ್ಞಾನಾಂಬುಧಿ ಸಾಧುರೇ ನೋಡಲಿಜ್ಞಾನಬೋಧ ಸಾರಿದ ಭಕ್ತೀಲಿ ೩

ಹಾಡಿನ ಹೆಸರು :ಹೋಗೋಣು ನಡಿ ಸಾಧುರ ನೋಡುವಾ
ಹಾಡಿದವರ ಹೆಸರು :ಉದಯ್ ಅಂಕೋಲ
ರಾಗ :ಮಲಯಮಾರುತ
ತಾಳ :ಆದಿ ತಾಳ
ಶೈಲಿ :ಜನಪದ
ಸಂಗೀತ ನಿರ್ದೇಶಕರು :ಶ್ರೀನಿವಾಸ್ ಬಿ. ವಿ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *