Categories
ರಚನೆಗಳು

ಜಗನ್ನಾಥದಾಸರು

 ಶ್ರೀಕೃಷ್ಣನನ್ನು ಕುರಿತು
೬೧
ವಿಠಲಯ್ಯ ವಿಠಲಯ್ಯ ಪ
ತಟಿತ್ಕೋಟಿನಿಭಕಾಯ ಜಗನ್ನಾಥ ವಿಠಲಯ್ಯಾ ಅ.ಪ.
ಭಜಿಸುವೆ ನಿನ್ನನು ಅಜಭವ ಸುರನುತ
ಭಜಕಾಮರತರು ಕುಜನ ಕುಠಾರಾ ೧
ನೀ ಕರುಣಿಸದೆ ನಿರಾಕರಿಸಲು ಎನ್ನ
ಸಾಕುವರಾರು ದಯಾಕರ ಮೂರುತಿ ೨
ಶರಣಾಗತರನು ಪೊರೆವನೆಂಬ ತವ
ಬಿರಿದು ಕಾಯೋ ಕರಿವರದ ಜಗನ್ನಾಥ ೩

ಪಲ್ಲವಿ : ಭೈಷ್ಮೀ ಸತ್ಯಾ ಸಮೇತ
೧೨೬
ವೃಂದಾವನಗಳಿಗಾನಮಿಸಿ ನಿತ್ಯ
ನಂದ ತೀರ್ಥ ಮತೋದ್ದಾರಕರೆನಿಪ ಪ
ವರ ಮಧ್ವಮುನಿ ಕÀಮಲಕರ ಪದ್ಮ ಸಂಜಾತ
ಗುರು ಪದ್ಮನಾಭ ಶ್ರೀ ರಾಮತೀರ್ಥ ಕವೀಂದ್ರಾ
ಕರಸರೋರುಹ ಜಾತ ವಾಗೀಶಮುನಿ
ಪರಘುವರ್ಯ ಗೋವಿಂದಾಖ್ಯ ಒಡೆಯರ ಪವಿತ್ರತಮ ೧
ಶ್ರೀ ಸುಧೀಂದ್ರಾರ್ಯರ ಪ್ರಪೌತ್ರರೆನಿಪ
ವಸುಧೀಂದ್ರ ವ್ಯಾಸರಾಯ ಶ್ರೀನಿವಾಸ ಮುನಿಯಾ
ಭೂಸುರರು ಪರಮ ಸಂತೋಷದಲಿ ಸ್ಮರಿಸೆ ನಿ
ರ್ದೋಷರನ ಮಾಡಿ ಅಭಿಲಾಷೆ ಪೂರೈಸುತಿಹ ೨
ದೇವತೆಗಳು ಇವರು ಸಂದೇಹ ಬಡಸಲ್ಲಾ ಮಿ
ಥ್ಯಾವಾದಿಗಳ ಪರಾಭವ ಮಾಡಿ ಈ ವಸುಂಧರೆಯೊಳಗೆ
ಕೀರ್ತಿಯುತರಾಗಿ ಲಕ್ಷ್ಮೀವರ ಜಗ
ನ್ನಾಥ ವಿಠಲನ ಐದಿಹರಾ ೩
ಸತ್ಯಬೋಧ ತೀರ್ಥ

ಹಂಪೆಯ ಬಳಿ ಇರುವ ನವ ಬೃಂದಾವನ
೫೧
ವೆಂಕಟೇಶ ಕಾಯೋ ಕಿಂಕರರವನೆಂದು ಪ
ಪಂಕಜಾಸನ ಶಂಕರರಾರ್ಚಿತ
ಶಂಬಸುದರ್ಶನಾಂಕಿತ ಅ.ಪ.
ವಾಸುದೇವ ನೀನೆ ಶ್ರೀ ಸರಸಿಜಭವ
ವೀಶ ಫಣಿಪ ವಹೇಶ ವಾಸವರಾಶೆ ಪೂರೈಸಿ
ಪೋಷಿಸುವ ಜಗದೀಶ ಜೀವನದ ವಾ
ರಾಶಿಜಾಧಿಪ ಭೇಶ ರವಿ ಸಂಕಾಶ ಕರಿವರಕ್ಲೇಶ ಹಾ ೧
ಸ್ವಾಮಿತೀರ್ಥ ನಿವಾಸ ಸ್ವರಮಣ ಭಕುತರ
ಕಾಮಿತಪ್ರದ ಕೈರವದಳಶ್ಯಾಮ ಸುಂದರನೆ
ಹೇಮ ಶೃಂಗೀವರಧಾಮ ದೀನಬಂಧು
ಸಾಮ ಸನ್ನುತ ಸೋಮಧರ
ಸುತ್ರಾಮ ಮುಖ ಸುರಸ್ತೋಮನಾ ೨
ತ್ರಿಗುಣಾತೀತ ನರಮೃಗರೂಪ ನಾನಿನ್ನ
ಪೊಗಳಬಲ್ಲೆನೆ ನಿಗಮವೇದ್ಯನೆ ಜಗನ್ನಾಥ ವಿಠಲ
ಸ್ವಗತಭೇದ ಶೂನ್ಯನೆ ಮುಗಿವೆ ಕರಗಳ ಪನ್ನಗನಗಾಧಿಪ
ಪೊಗರೊಗುವ ನಗೆಮೊಗವ ಸೊಬಗಿನ ಸುಗುಣನೆ ೩

೨೨೦
ವೇದತತಿಗಳ ಕದ್ದೊಯ್ದವನ ಕೊಂದು ಪ್ರಳ
ಯೋದಧಿಯೊಳಗೆ ಚರಿಸಿ | ಚರಿಸಿ ವೈವಸ್ವತನ
ಕಾಯ್ದ ಮಹಾಮಹಿಮ ದಯವಾಗೊ ೧
೨೨೧ಮಂದರಾದ್ರಿಯ ಧರಿಸಿ ಸಿಂಧುಮಥನವ ಮಾಡಿ
ಬೃಂದಾರಕರಿಗೆ ಅಮೃತವ | ಅಮೃತವನುಣಿಸಿದ
ಇಂದಿರಾರಾಧ್ಯ ದಯವಾಗೊ ೨
೨೨೨ ಸೋಮಪನ ನುಡಿಕೇಳಿ ಹೇಮಾಂಬಕನ ಕೊಂದಿ
ಭೂಮಿಯಾ ನೆಗಹಿದ ದಾಡಿಂದ | ದಾಡಿಂದ ನೆಗಹಿದ
ಸ್ವಾಮಿ ಭೂವರಹ ದಯವಾಗೊ ೩
೨೨೩ ಕಂದ ಕರೆಯಲು ಕಂಬದಿಂದುದಿಸಿ ರಕ್ಷಿಸಿದಿ
ವಂದಿಸಿದ ಸುರರ ಸಲಹೀದಿ | ಸಲಹೀದಿ ನರಸಿಂಹ
ತಂದೆ ನೀನೆಮಗೆ ದಯವಾಗೊ ೪
೨೨೪ವೈರೋಚನಿಯ ಭೂಮಿ ಮೂರುಪಾದವ ಬೇಡಿ
ಈರಡಿಯೊಳಗಳೆದೆ ಭೂ ವ್ಯೋಮ |
ಭೂ ವ್ಯೋಮವಳೆದೆ ಭಾ
ಗೀರಥಿಯ ಜನಕÉ ದಯವಾಗೊ ೫
೨೨೫ ಕುವಲಯಾಧೀಶ್ವರರ ಬವರ ಮುಖದಲಿ ಕೊಂದೆ
ಅವನಿಭಾರವ ನೀನುಳುಹಿದ | ಇಳುಹಿದಾ ಸ್ವಾಮಿ ಭಾ
ರ್ಗವರಾಮ ಎಮಗೆ ದಯವಾಗೊ ೬
೨೨೬ ಶತಧೃತಿಯ ನುಡಿಗೆ ದಶರಥನ ಗರ್ಭದಿ ಬಂದು
ದಿತಿಜರನು ಸವರಿ ಸುಜನರ | ಸುಜನರ ಪೊರೆದ ರಘು
ಪತಿ ಎನಗೆ ದಯವಾಗೊ ೭
೨೨೭ ವಸುದೇವ ದೇವಕೀ ಬಸುರೀಲಿ ಜನಿಸಿದ
ವಸುಧೆ ಭಾರವನು ಇಳುಹಿದಿ | ಇಳುಹಿ ಪಾಂಡವರ ಕ
ವಿಸಿದ ಶ್ರೀಕೃಷ್ಣ ದಯವಾಗೊ ೮
೨೨೮ ಜಿನನೆಂಬ ದನುಜ ಸಜ್ಜನ ಕರ್ಮವ ಮಾಡೆ
ಜನಿಸಿ ಅವರಲ್ಲಿ ದುರ್ಬುದ್ಧಿ | ದುರ್ಬುದ್ಧಿ ಕವಿಸಿದ
ವಿನುತ ಶ್ರೀ ಬುದ್ಧ ದಯವಾಗೊ ೯
೨೨೯ ಕಲಿ ವ್ಯಾಪಾರ ವೆಗ್ಗಳವಾಗೆ ತಿಳಿದು ಶಂ
ಫಲಿ ಎಂಬ ಪುರದಿ ದ್ವಿಜನಲ್ಲಿ | ದ್ವಿಜನÀಲ್ಲಿ ಜನಿಸುವ
ಕಲಿಮಲವ ಹರಿಸುವ ಕಲ್ಕಿ ದಯವಾಗೊ ೧೦
೨೩೦ ಧಾರುಣಿಯಲ್ಲಿ ಹತ್ತವತಾರದಲಿ ಸುಜ
ನರ ರಕ್ಷಿಸಿದೆ ಜಗನ್ನಾಥ | ಜಗನ್ನಾಥವಿಠಲ ಮ
ದ್ಭಾರ ನಿನ್ನದೊ ಮಧು ವೈರಿ ೧೧

ನಿಂದಾಸ್ತುತಿಯನ್ನು ಹೋಲುವಂತಹ
೧೭೫
ವ್ಯರ್ಥಕಳೆವರೇನೊ ಕಾಲವ ಹೇ ಪ್ರಾಣಿ ನೀನು ಪ
ಪಾರ್ಥಸಖನ ವಿಮಲವಾರ್ತೆ
ಕೀರ್ತಿಸದೆ ಕುವಾರ್ತೆಯಿಂದ ಅ.ಪ.
ನೇಸರನುದಯಿಸದ ಮುನ್ನ
ಶ್ರೀಶನ ಗುಣ ಕರ್ಮ ನಾಮ
ಬೇಸರದಲೇ ಸ್ಮರಿಸದೇ
ಗ್ರಾಸದ್ಹರಟೆಗಳನು ಹರಟಿ ೧
ಪವನ ಮತವನವಲಂಬಿಸಿದ
ಸ್ಥವಿರ ಕವಿಗಳಿಂದ ಕಥಾ
ಶ್ರವಣ ರಸವ ಕಿವಿಯ ದಣಿಯೆ
ಸವಿದು ಸುಖಿಸಿ ಪ್ರವರನಾಗದೆ ೨
ಕ್ಷಿತಿ ಜಲಾಗ್ನಿ ವಾಯು ಖಂ
ಅತುಳ ಬುದ್ಧಿ ಅಹಂಕಾರಗಳು
ಕೃತಿರಮಣನ ವಿಮಲ ಭಿನ್ನ
ಪ್ರತಿಮೆಯೆಂದರಿದು ಭಜಿಸದೆ ೩
ಶ್ರೀಪಯೋಜ ಪೀಠ ಶೈಲ
ಚಾಪ ಗೋಪಮುಖರು ದ್ವಿತೀಯ
ರೂಪರೆಂದು ಹರಿಗೆ ನೀ ಪ
ದೇ ಪದೇ ನಮಸ್ಕರಿಸದೆ ೪
ಪುತ್ರ ಜನನಿ ಜನಕ ವಿತ್ತ
ಕರ್ತ ಜಗನ್ನಾಥವಿಠಲ
ಪಾತ್ರ ಕರ್ಮ ಕಠಿಣ ಕ್ರಿಯಾ
ಭೋಕ್ತನು ಮಿತ್ರನೆಂದರಿಯದೆ ೫

ನುಡಿ-೧: ಪೋರತನದವನು
೯೧
ಶಂಭೋ ಸುರಗಂಗಾಧರನೆ ಪಾಲಿಸಂಬಾರಮಣ ಲಿಂಗ ಪ
ನಂಬಿದವರಘ ಕಾದಂಬಿನಿ ಪಾವನ ಹೇ
ರಂಭ ಜನಕ ಕರುಣಾಂಬುಧಿ ಗುರುವರ ಅ.ಪ.
ಮುರಾರಿ ಮಹದೇವ ನಿನ್ನಯ ಪಾದ
ವಾರಿಜದಳಯುಗವ
ಸಾರಿದೆ ಸತತ ಸರೋರುಹೇಕ್ಷಣ ಹೃ
ದ್ವಾರಿಜದೊಳು ತೋರು ಗಾರುಮಾಡದಲೆನ್ನ
ಆರುಮೊಗನಯ್ಯ ಅಮಿತ ಗುಣಗುಣ
ವಾರಿನಿಧಿ ವಿಗತಾಘ ವ್ಯಾಳಾ
ಗಾರ ವಿತ್ತಪ ಮಿತ್ರ ಸುಭಗ ಶ
ರೀರ ದುರಿತಾರಣ್ಯ ಪಾವಕ ೧
ಇಳೆದೇರು ಇಂದು ಮೌಳೀ ಈಪ್ಸಿತಫಲ
ಸಲಿಸುವ ಘನತ್ರಿಶೂಲೀ
ಸಲೆ ನಂಬಿದೆನೊ ಹಾಲಾ ಹಲಕಂಠ ಎನ್ನ ನೀ
ಸಲಹೋ ಸಂತತ ರೌಪ್ಯಾಚಲವಾಸ ವರಪಂಪಾ
ನಿಲಯ ನಿರ್ಜರ ಸೇವಿತಾನಲ
ನಳಿನಸಖ ಸೋಮೇಕ್ಷಣನೆ ಬಾಂ
ದಳಪುರಾಂತಕ ನಿಜಶರಣವ
ತ್ಸಲ ವೃಷಾರೋಹಣ ವಿಬುಧವರ ೨
ದೃತಡಮರುಗ ಸಾರಂಗ ನಿನ್ನಯಪಾದ
ಶತಪತ್ರಾರ್ಚಿಪರ ಸಂಗ
ಸತತ ಪಾಲಿಸೊ ಜಗನ್ನಾಥ ವಿಠ್ಠಲನ ಸ
ನ್ನುತಿಸುವ ನೆರೆಧೀರ ಕ್ಷಿತಿಧರ ಧೃತಧನ್ವಿ
ಶತಮಖನ ಜೈಸಿದನ ಪುತ್ರನ
ಪಿತನ ಜನಕನ ಕೈಲಿ ಕೊಲಿಸಿದೆ
ಅತುಳ ಭುಜಜಲ ಭೂತಪಡೆ ಪಾ
ವನತಿ ಮುಖಾಂಭೋರುಹ ದಿವಾಕರ ೩

ಗಂಗಾಜನಕ : ನೋಡಿ
೨೦೧
೨. ಶ್ರೀ ವೆಂಕಟೇಶ ಸ್ತೋತ್ರ
೬ ಶರಣಾಗತರ ಕಲ್ಪತರುವೆ ವೆಂಕಟ ಧರಾ
ಧರನಾಥ ನಿನ್ನ ಚರಣಾಬ್ಜ | ಚರಣಾಬ್ಜಯುಗಳ ಸಂ
ದರುಶನವ ಈಯೊ ಎಂದೆಂದು ೧
೭ ಸ್ವಾಮಿ ತೀರ್ಥ ನಿವಾಸ ಸು
ಸ್ತೋಮ ಸುಜನರಾ ಭಯಹಾರಿ |
ಭಯಹಾರಿ ಸುರರ ಸಾರ್ವ
ಭೌಮ ನೀ ಸಲಹೆಮ್ಮೆ ೨
೮ವೆಂಕಟಾಚಲನಿಲಯ ಪಂಕಜೋದ್ಭವನಯ್ಯ
ಶಂಕರಪ್ರೀಯ ಕವಿಗೇಯ | ಕವಿಗೇಯ ನಿನ್ನ ಪದ
ಕಿಂಕರನೆನಿಸೊ ಶುಭಕಾಯ ೩
೯ ಸತ್ಯಸಂಕಲ್ಪ ಜಗದತ್ಯಂತ ಭಿನ್ನಸ
ರ್ವೋತ್ತಮ ಪುರಾಣ ಪುರುಷೇಶ | ಪುರುಷೇಶ ಸತತತ್ವ
ದ್ಭೈತ್ಯನ್ನ ಕಾಯೊ ಕರುಣಾಳೊ ೪
೧೦ ದೇವಶರ್ಮನ ತುತಿಗೆ ನೀನೊಲಿದು ಪಾಲಿಸಿದೆ
ದೇವಕೀಕಂದ ದಯದಿಂದ | ದಯದಿಂದ ಒಲಿದೆನ್ನ
ತಾವಕರೊಳಿಟ್ಟು ಸಲಹಯ್ಯ ೫
೧೧ ಕೃತಿಪತಿಯೆ ನಿನ್ನ ಸಂಸ್ರ‍ಮತಿಯೊಂದಿರಲಿ ಜನ್ಮ
ಮೃತಿ ನರಕ ಭಯವು ಬರಲಂಜೆ | ಬರಲಂಜೆ ಎನಗೆಕೃಸಂ
ತತ ನಿನ್ನ ಸ್ಮರಣೆ ಕರುಣೀಸೊ ೬
೧೨ಶುಚಿಸದ್ಮನೆ ಮನೋವಚನಾತ್ಮಕೃತ ಕರ್ಮ
ನಿಚಯ ನಿನಗೀವೆ ಸುಚರಿತ್ರ | ಸುಚರಿತ್ರ ಸುಗುಣಗಳ
ರಚನೆ ಸುಖವೀಯೊ ರುಚಿರಾಗ ೭
೧೩ಹೃದಯದಲಿ ತವರೂಪ ವದನದಲಿ ತವನಾಮ
ಉದರದಲಿ ನೈವೇದ್ಯ ಶಿರದಲ್ಲಿ | ಶಿರದಲ್ಲಿ ನಿರ್ಮಾಲ್ಯ
ಪದಜಲಗಳಿರಲು ಭಯವುಂಟೆ ೮
೧೪ಸತತ ಸ್ಮರಿಸುತ ನಿನ್ನ ನುತಿಸಿ ಬೇಡಿಕೊಳುವೆ
ಹಿತದಿಂದ ನಿನ್ನ ವಿಜ್ಞಾನ | ವಿಜ್ಞಾನ ನಿಜ ಭಾಗ
ವತರ ಸಂಗವನ್ನೇ ಕರುಣೀಸೊ ೯
೧೫ಪ್ರಕೃತಿ ಗುಣಗಳ ಕಾರ್ಯ ಸುಖ ದುಃಖ ಮೂಲ ಜಡ
ಪ್ರಕೃತಿಗಭಿಮಾನಿ ಮಹಲಕ್ಷ್ಮಿ | ಮಹಲಕ್ಷ್ಮಿ ಪತಿ ನಿನ್ನ
ಭಕುತ ನಾನಯ್ಯ ಎಂದೆಂದು ೧೦
೧೬ಪುಣ್ಯಪಾಪಾದಿಗಳು ನಿನ್ನಾಧೀನದೊಳಿರಲು
ಎನ್ನದೆಂದರುಹಿ ದಣಿಸುವಿ | ದಣಿಸುವುದು ಧರ್ಮವೇ
ನಿನ್ನರಿವ ಜ್ಞಾನ ಕರುಣೀಸೊ ೧೧
೧೭ಝಷಕೇತು ಜನಕ ದುರ್ವಿಷಯಕೊಳಗಾಗಿ ಸಾ
ಹಸ ಪಡುವ ಚಿತ್ತ ಪ್ರತಿದಿನ | ಪ್ರತಿದಿನಗಳಲ್ಲಿ ನಿನ್ನ
ವಶಮಾಡಿಕೊಳ್ಳೊ ವನಜಾಕ್ಷ ೧೨
೧೮ಇನಿತಿದ್ದ ಬಳಿಕ ಯೋಚನೆ ಯಾಕೆ ಗರುಡವಾ
ಹನನೆ ಮಹಲಕ್ಷ್ಮಿ ನರಸಿಂಹ/ನರಸಿಂಹ ಬಿನ್ನೈಪೆ
ಘನತೆ ನಿನಗಲ್ಲ ಕರುಣಾಳು ೧೩
೧೯ಸುಲಭರಿನ್ನುಂಟೆ ನಿನ್ನುಳಿದು ಲೋಕತ್ರಯದಿ
ಬಲವಂತರುಂಟೆ ಸುರರೊಳು/ಸುರರೊಳು ನೀನು ಬೆಂ
ಬಲವಾಗಿ ಇರಲು ಭಯವುಂಟೆ ೧೪
೨೦ಹಯವದನ ಸೃಷ್ಟಿ ಸ್ಥಿತಿಲಯ ಕಾರಣನುನೀನೆ
ದಯವಾಗಲೆಮಗೆ ದುರಿತೌಘ / ದುರಿತೌಘರ್ಕಳು ಬಟ್ಟ
ಬಯಲಾಗುತಿಹವೊ ಸುಕೃತಿಯಿಂದ ೧೫
೨೧ಕಲುಷವರ್ಜಿತನೆ ಮಂಗಳ ಚರಿತ ಭಕ್ತವ
ತ್ಸಲ ಭಾಗ್ಯವ ಪುಷ ಬಹುರೂಪಿ /ಬಹುರೂಪಿ ಎನಗೆಚಂ
ಚಲ ಬಿಡಿಸಿ ನೀ ಕರುಣೀಸೊ ೧೬
೨೨ಫಾಲಾಕ್ಷಪ್ರಿಯ ನಿನ್ನ ಲೀಲೆಗಳ ಮರೆಯದಲೆ
ಕಾಲಕಾಲದಲಿ ಸ್ಮರಿಸುವ/ ಸ್ಮರಿಸಿ ಹಿಗ್ಗುವ ಭಾಗ್ಯ
ಪಾಲಿಸೊ ಎನಗೆ ಪರಮಾತ್ಮ ೧೭
೨೩ಚತುರವಿಧ ಪುರುಷಾರ್ಥ ಚತುರಾತ್ಮ ನೀನಿರಲು
ಇತರ ಪುರುಷಾರ್ಥ ನಾನೊಲ್ಲೆ | ನಾನೊಲ್ಲೆ ತ್ವತ್ಪಾದ
ರತಿ ಭಾಗ್ಯ ನೀನೆ ಕರುಣೀಸೊ ೧೮
೨೪ ಜಯ ಮತ್ಸ್ಯ ಕೂರ್ಮ ವರಹ ನರಸಿಂಹ
ಜಯತು ವಾಮನನೆ ಭೃಗುಕ ರಮ |
ಭೃಗುರಾಮರಘುರಾಮ
ಜಯ ಬೌದ್ಧ ಕಲಿಹರ್ತಾ ೧೯
೨೫ ಜಯ ವಿಶ್ವತೈಜಸನೆ ಜಯ ಪ್ರಾಜ್ಞ ತುರ್ಯಾತ್ಮ
ಜಯ ಅಂತರಾತ್ಮ ಪರಮಾತ್ಮ | ಪರಮಾತ್ಮ ಜ್ಞಾನಾತ್ಮ
ಜಯತು ಅನಿರುದ್ಧ ಪ್ರದ್ಯುಮ್ನ ೨೦
೨೬ ಜಯ ಸಂಕರುಷಣನೆ ಜಯ ವಾಸುದೇವನೆಜಯ ಜಯತು ಲಕ್ಷ್ಮೀನಾರಾಯಣಾ |ನಾರಾಯಣಾನಂತ
ಜಯತು ಗೋವಿಂದಾಚ್ಯುತ ಶ್ರೀ ಕೃಷ್ಣ ೨೧
೨೭ಜಯ ಪೂರ್ಣ ಜ್ಞಾವಾತ್ಮ ಜಯ ಪೂರ್ಣೈಶ್ವರ್ಯ
ಜಯ ಪ್ರಭಾ ಪೂರ್ಣ ತೇಜಾತ್ಮ | ತೇಜಾತ್ಮ ನಂದಾತ್ಮ
ಜಯತು ಶಕ್ತ್ಯಾತ್ಮ ಕೃದ್ಧೋಲ್ಕ ೨೨
೨೮ಜಯ ಜಯತು ಮಹೋಲ್ಕ ಜಯತು ವೀರೋಲ್ಕ
ಜಯ ಜಯತು ದ್ಯುಲ್ಕ ಸಹಸ್ರೊಲ್ಕ | ಸಹಸ್ರೊಲ್ಕ ಜಯ
ಜಯ ಜಯತು ಜಗನ್ನಾಥ ವಿಠಲಾರ್ಯ ೨೩
೨೯ ಶ್ರೀನಿವಾಸನ ಪೋಲ್ವ ದೀನವತ್ಸಲರುಂಟೆ
ದಾನಿಗಳುಂಟೆ ಜಗದೊಳು |ಜಗದೊಳು ನೀನೆ ಗತಿಯೆಂದನರರಿಗೆ
ಆನಂದವೀವೆ ಅನುಗಾಲ ೨೪
೩೦ಒಪ್ಪಿಡಿ ಅವಲಕ್ಕಿಗೊಪ್ಪಿಕೊಂಡು ಮುಕುಂದ
ವಿಪ್ರನಿಗೆ ಕೊಟ್ಟ ಸೌಭಾಗ್ಯ | ಸೌಭಾಗ್ಯ ಕೊಟ್ಟ ನ
ಮ್ಮಪ್ಪಗಿಂತಧಿಕ ದೊರೆಯುಂಟೆ ೨೫
೩೧ಏನು ಕರುಣಾ ನಿಧಿಯೊ ಶ್ರೀನಿತಂಬಿನಿರಮಣ
ತಾನುಮ್ಮನಗಲಿ ಸೈರಿಸ | ಸೈರಿಸದ ಕರುಣಿಯ
ನಾನೆಂತು ತುತಿಸಿ ಹಿಗ್ಗಲಿ ೨೬
೩೨ಶ್ರೀನಿಧೆ ನಿನ್ನವರ ನಾನಾಪರಾಧಗಳ
ನೀನೆಣಿಸದವರ ಸಲಹುವಿ | ಸಲಹುವಿ ಸರ್ವಜ್ಞ
ಏನೆಂಬೆ ನಿನ್ನ ಕರುಣಕ್ಕೆ ೨೭
೩೩ಎನ್ನ ಪೋಲುವ ಭಕ್ತರನ್ನಂತ ನಿನಗಿಹರು
ನಿನ್ನಂಥ ಸ್ವಾಮಿ ಎನಗಿಲ್ಲ | ಎನಗಿಲ್ಲವದರಿಂದ
ಬಿನ್ನೈಪೆನಿನ್ನು ಸಲಹೆಂದು ೨೮
೩೪ಅಚ್ಯುತನೆ ನಿನ್ನಂಥ ಹುಚ್ಚು ದೊರೆಯನು ಕಾಣೆ
ಕಚ್ಚಿ ಬಯದೊಡ್ಡೆ ಭಕುತರ | ಭಕುತರಪರಾಧಗಳ
ತುಚ್ಛಗೈದವರ ಸಲಹೀದೆ ೨೯
೩೫ಎನ್ನ ಬಂಧುಗಳೆಲ್ಲ ನಿನ್ನ ದಾಸರು ಸ್ವಾಮಿ
ಮನ್ನಿಸಬೇಕು ಮಹರಾಯ | ಮಹರಾಯ ನೀನಲ್ಲ
ದನ್ಯರು ಸಾಕಲರಿಯರು ೩೦
೩೬ ತಂದೆ ತಾಯಿಯು ಭ್ರಾತ ಸಖ ಗುರು ಪುತ್ರ
ಎಂದೆಂದು ನೀನೆ ಗತಿ ಗೋತ್ರ | ಗತಿಗೋತ್ರ ಇಹಪರಕೆ
ಇಂದಿರಾರಾಧ್ಯ ಸಲಹೆಮ್ಮ ೩೧
೩೭ ಪತಿತ ನಾನಾದರೂ ಪತಿತ ಪಾವನ ನೀನು
ರತಿನಾಥ ನಗಪಾಣಿ | ನಗಪಾಣಿ ನೀನಿರಲು
ಇತರ ಚಿಂತ್ಯಾಕೊ ಎನಗಿನ್ನು ೩೨
೩೮ ನಡೆ ನುಡಿಗಳಪರಾಧ ಒಡೆಯ ನೀನೆಣಿಸಿದರೆ
ಬಡವ ನಾನೆಂತು ಬದುಕಲಿ | ಬದುಕಲಿ ಕರುಣಿಯೆ
ಕಡೆ ಬೀಳ್ವುದೆಂತೊ ಭವದಿಂದ ೩೩
೩೯ಏಸೇಸು ಜನ್ಮದಲಿ ದಾಸ ನಾ ನಿನಗಯ್ಯ
ಈಶ ನೀನೆಂಬೊ ನುಡಿಸಿದ್ಧ | ನುಡಿಸಿದವಾಗಿರಲು
ದಾಸೀನ ಮಾಡೋದುಚಿತಲ್ಲ ೩೪
೪೦ಆವ ಯೋನಿಯಲಿರಿಸು ಆವ ಲೋಕದಲಿರಿಸು
ಆವಾಗ್ಯೆ ನಿನ್ನ ನೆನೆವಂತೆ | ನೆನೆವಂತೆ ಕರುಣಿಸೊ
ದೇವಕೀಕಂದ ದಯದಿಂದ ೩೫
೪೧ಶಿಷ್ಟನೆಂದೆನಿಸೆನ್ನ ಭ್ರಷ್ಟನೆಂದೆನಿಸು ಸ
ರ್ವೇಷ್ಟ ಮೂರುತಿಯೆ ಜನರಿಂದ |
ಜನರಿಂದ ನುಡಿಸಿದ್ದು

ಶರಣು ದೇವರ ದೇವ ಶರಣು ಸುರವರ ಮಾನ್ಯ
ಶರಣು ಶತಕೋಟಿ ಲಾವಣ್ಯ | ಲಾವಣ್ಯ ಮೂರುತಿಯೆ
ಶರಣೆಂಬೆ ಸ್ವಾಮಿ ಕರುಣೀಸೊ ೧
ಆದಿನಾರಾಯಣನು ಭೂದೇವಿ ಮೊರೆ ಕೇಳಿ
ಯಾದವರ ಕುಲದಲ್ಲಿ ಜನಿಸೀದ | ಜನಿಸೀದ ಕೃಷ್ಣ
ಪಾದಕ್ಕೆ ಶರಣೆಂಬೆ ದಯವಾಗೊ ೨
ನಿನ್ನ ವಿಸ್ರ‍ಮತಿ ದೋಷ ಜನ್ಮ ಜನ್ಮಕ್ಕೆ ಕೊಡದಿರು
ಎನ್ನ ಕುಲ ಬಂಧು ಎಂದೆಂದು |ಎಂದೆಂದು ನಿನಗಾನು
ಬಿನ್ನೈಪೆ ಬಿಡದೆ ಸಲಹಯ್ಯ ೩
ವಸುದೇವನಂದನನ ಹಸುಗೂಸು ಎನಬೇಡಿ
ಶಿಶುವಾಗಿ ಕೊಂದ ಶಕಟನ್ನ | ಶಕಟನ್ನ ವತ್ಸಾಸುರನ
ಅಸುವಳಿದು ಪೊರೆದ ಜಗವನ್ನ ೪
ವಾತರೂಪಿಲಿ ಬಂದ ಆ ತೃಣಾವರ್ತನ್ನ
ಪಾತಾಳಕಿಳುಹಿ ಮಡುಹೀದ |
ಮಡುಹಿ ಮೊಲೆಯುಣಿಸಿದಾ
ಪೂತನಿಯ ಕೊಂದ ಪುರುಷೇಶ ೫
ನಿನ್ನ ಸ್ರ‍ಮತಿಗಿಂತಧಿಕ ಪುಣ್ಯ ಕರ್ಮಗಳಿಲ್ಲ
ನಿನ್ನ ವಿಸ್ರ‍ಮತಿಗಿಂತ | ಅಧಿಕವಾದ ಮಹಪಾಪಗಳು
ಇನ್ನಿಲ್ಲ ಲೋಕತ್ರಯದೊಳು ೬
ಅಂಬುಜಾಂಬಕಿಗೊಲಿದ ಜಂಭಾರಿಪುರದಿಂದ
ಕೆಂಬಣ್ಣದ ಮರ ತೆಗೆದಂಥ | ತೆಗೆದಂಥ ಕೃಷ್ಣನ ಕ
ರಾಂಬುಜವೆ ನಮ್ಮ ಸಲಹಲಿ ೭
ದೇವಕೀಸುತನಾಗಿ ಗೋವುಗಳ ಕಾದದೆ
ಪಾವಕವ ನುಂಗಿ ನಲಿವೋನೆ |
ನಲಿವೋನೆ ಮೂರ್ಲೋಕ
ಓವ ದೇವೇಂದ್ರ ತುತಿಪೋನೆ ೮
ಜಗದುದರ ನೀನಾಗಿ ಜಗದೊಳಗೆ ನೀನಿಪ್ಪೆ
ಜಗದಿ ಜೀವರನ ಸೃಜಿಸುವಿ | ಸೃಜಿಸಿ ಜೀವರೊಳಿದ್ದು
ಜಗದನ್ಯನೆಂದು ಕರೆಸುವಿ ೯
ಕರಣನೀಯಾಮಕನೆ ಕರುಣಾಳು ನೀನೆಂದು
ಮೊರೆಹೊಕ್ಕೆ ನಾನಾ ಪರಿಯಲ್ಲಿ | ಪರಿಯಲ್ಲಿ ಮಧ್ವೇಶ
ಮರುಳು ಮಾಡುವರೆ ನೀಯೆನ್ನ ೧೦
ಕುವಲಯಾಪೀಡನನು ಲವಮಾತ್ರದಿ ಕೊಂದು
ಶಿವನ ಚಾಪವನು ಮುರಿದಿಟ್ಟಿ | ಮುರಿದಿಟ್ಟಿ ಮುಷ್ಟಿಕನ
ಬವರದಲಿ ಕೆಡಹಿ ಬಲಿಗೈದೆ ೧೧
ಗಂಧವಿತ್ತಬಲೆಯೊಳ ಕುಂದನೆಣಿಸದೆ ಪರಮ
ಸುಂದರಿಯ ಮಾಡಿ ವಶವಾದಿ | ವಶವಾದಿ ನಮ್ಮ ಗೋ
ವಿಂದ ನೀನೆಂಥ ಕರುಣಾಳು ೧೨
ವಂಚಿಸಿದ ಹರಿಯೆಂದು ಪರಚಿಂತೆಯಲಿ ಕಂಸ
ಮಂಚದ ಮ್ಯಾಲೆ ಕುಳಿತಿದ್ದ | ಕುಳಿತಿದ್ದ ಮದಕರಿಗೆ
ಪಂಚಾಸ್ಯನಂತೆ ಎರಗೀದೆ ೧೩
ದುರ್ಧರ್ಷ ಕಂಸನ್ನ ಮಧ್ಯರಂಗದಿ ಕೆಡಹಿ
ಗುದ್ದಿಟ್ಟ ತಲೆಯ ಜನನೋಡೆ |
ಜನನೋಡೆ ದುರ್ಮತಿಯ
ಮರ್ದಿಸಿದ ಕೃಷ್ಣ ಸಲಹೆಮ್ಮ ೧೪

ಕೃಷ್ಣನ ಕೊಳಲಗಾನದ
೭೫
ಶರಣು ಭಾರತಿರಮಣ ಶಮಲವರ್ಜೀತ ಚರಣ
ಕೆರಗಿ ಬೇಡುವೆ ವರವ ಪಿಡಿಯೆನ್ನ ಕರವಾ ಪ
ಇಪ್ಪತ್ತೊಂದು ಸಾವಿರದಾರುನೂರು ಜಪ
ತಪ್ಪದೆಲೆ ಸಕಲ ಜೀವರೊಳು ಜಪಿಸಿ
ಮುಪ್ಪಿಲ್ಲದ ಜನ ಪದವಿಯನೈದಿ ಭಜಕರಿಗೆ
ಸುಪ್ತಿ ಸ್ವಪ್ನವ ಬಿಡಿಸಿ ಮುಕ್ತರನು ಮಾಳ್ಪೆ ೧
ಪವಮಾನರಾಯಾ ನೀ ಸಲಹದಿರೆ ಪಾಲಿಸುವ
ದಿವಿಜರಿನ್ನುಂಟೇನೋ ಲೋಕದೊಳಗೆ
ಯವನರಿಂದಲಿ ಬಂದ ಭಯವ ಪರಿಹರಿಸಿ ನಿ
ನ್ನವರ ಸಂತೈಸು ಸರ್ವಕಾಲದಲೀ ೨
ಲೋಗರಿಗೆ ಬೇಡಿದಿಷ್ಟಾರ್ಥಗಳ ಕೊಟ್ಟು ಚ
ನ್ನಾಗಿ ಸಂತೈಪೆನೆಂದನು ದಿನದಲೀ
ಭೋಗಪುರದಲಿ ಬಂದು ನೆಲೆಸಿದೆಯ ನೀ ಪರಮ
ಭಾಗವತ ತಿಲಕ ಪಾಲಕ ವೀತಶೋಕ ೩
ಭಾನುನಂದನಗೆ ನೀ ಒಲಿದ ಮಾತ್ರದಲಿ ರಘು
ಸೂನು ಸಂರಕ್ಷಿಸಿದ ಸುರಪತನಯಾ
ವಾನÀರೋತ್ತಮ ವಾಲಿಯನು ಸದೆದ ನಿನ್ನ ದಯ
ಕೇನೆಂಬೆ ಕಮಲ ಸಂಭವನ ಪದಕೆ ಯೋಗ್ಯ ೪
ಶುಚಿನಾಮಕನೆ ಎನಗೆ ಹರಿಕಥಾ ಶ್ರವಣದಲಿ
ರುಚಿಪುಟ್ಟುವಂತೆ ಮಾಡುನುಗಾಲದೀ
ಮುಚುಕುಂದ ವರದ ಜಗನ್ನಾಥವಿಠಲನ ಗುಣ
ರಚನೆಗೈವ ಸಮರ್ಥ ನೀನೇ ಸುಕೃತಾರ್ಥ ೫

ಶ್ರೀ ಮದುತ್ತಾರಾದಿ ಮಠದ
೫೨
ಶರಣು ಶಂಕರ ಭೂಷಣಾದ್ರಿಗೆ
ಶರಣು ಅಭಯಾಚಲನಿಗೆ ಪ
ಶರಣು ಖಗಮೃಗ ತರುಲತಾಂಕಗೆ
ಶರಣು ವಿಂಶತಿ ನಾಮಗೆ ಅ.ಪ.
ವರಹ ನೀಲಾಂಜನ ಕನಕಋಷಿ
ಗರುಡ ಘನ ನಾರಾಯಾಣಾ
ಉರಗ ತೀರ್ಥಾನಂದ ಶ್ರೀ ಪು
ಷ್ಕರ ವೃಷಭ ವೈಕುಂಠಗೆ ೧
ಜ್ಞಾನ ಪರ್ವತ ಮೇರು ಶೃಂಗಗೆ
ಶ್ರೀನಿವಾಸ ಸುಕ್ರೀಡಗೆ ಪಂ
ಚಾನನಾಹ್ವಯ ವೆಂಕಟಾದ್ರಿಗೆ
ಕ್ಷೋಣಿಯೊಳು ಸುರಮಾನ್ಯಗೆ ೨
ರತುನ ಕಾಂಚನ ಶ್ರೀನಿವಾಸನ
ಪ್ರತಿಮೆಯಂದದಿ ಪೊಳೆವಗೆ
ಕೃತಿರಮಣ ಜಗನ್ನಥವಿಠಲಗೆ
ಅತುಳ ಮಂಗಳನೆನಿಪಗೆ ೩

ನುಡಿ-೧:ಯುಕತಿ
೯೨
ಶರಣು ಶರಣು ಪ
ಶರಣು ಶರಣು ಮೃತ್ಯುಂಜಯ ಶರಣು ಸಜ್ಜನರ ಭಯ
ಪರಿಹರಿಸು ಕರುಣಾಳು ಬಿನ್ನಪವ ಕೇಳು ಅ.ಪ.
ವಾಸವಾದ್ಯಮರನುತ ವನಜಸಂಭವನ ಸುತ
ನೀ ಸಲಹೊ ಕೈಲಾಸವಾಸ ಈಶ
ಕ್ಲೇಶ ಮೋದಾದಿ ಸಮ ತಿಳಿದು ಅಶ್ವತ್ಥಾಮ
ಶ್ರೀಶುಕ ದುರ್ವಾಸ ಸ್ಫಟಿಕ ಸಮಭಾಸ ೧
ವೈಕಾರಿಕಾದಿ ತ್ರೈರೂಪ ನಿನ್ನಯ ಕೋಪ
ಶೋಕಕೊಡುವುದು ದೈತ್ಯಜನಕೆ ನಿತ್ಯ
ಲೌಕಿಕಗಳೆಲ್ಲ ವೈದಿಕವಾಗಲೆನಗೆ ಮೈ
ನಾಕಿ ಹೃತ್ಕುಮುದೇಂದು ಭಕ್ತಜನ ಬಂಧು ೨
ಪವಮಾನತನಯ ನಿನ್ನವರಲ್ಲಿ ಕೊಡು ವಿನಯ
ದಿವಸ ಸವನಗಳಲ್ಲಿ ಎನ್ನಿರುವ ನೀ ಬಲ್ಲಿ
ಪವನ ದ್ವಿತಿಯರೂಪ ಸತತ ಎನ್ನಯಪಾಪ
ಅವಲೋಕಿಸದಲೆನ್ನ ಸಲಹೊ ಸುರಮಾನ್ಯ ೩
ಶೇಷನಂದನ ಶೇಷಭೂಷಣನೆ ನಿಶೇಷ
ದೋಷರಹಿತನ ತೋರು ಕರುಣವನು ಬೀರು
ಶ್ರೀ ಷಣ್ಮುಖನ ತಂದೆ ಸತತ ನೀ ಗತಿಯೆಂದೆ
ಶೋಷಿಸು ಭವಾಮಯವ ಬೇಡುವೆನು ದಯವ೪
ಗರ್ಗ ಮುನಿಕರಪದುಮ ಪೂಜ್ಯ ಚರಣಾಬ್ಜ ಮಮ
ದುರ್ಗುಣಗಳೆಣಿಸದಲೆ ಜಗದೆ ಮೇಲೆ
ನಿರ್ಗತಾಶನ ಜಗನ್ನಾಥ ವಿಠಲನ ಸ
ನ್ಮಾರ್ಗವನೆ ತೋರು ಈ ದೇಹ ನಿನ ತೇರು ೫

೩೭೩
ಶಿವನು ನೀನಾದರೆ ಶಿವನ ರಾಣಿ ನಿನಗೇನೊ
ಅವಿವೇಕ ಮನುಜ ಈ ಮಾತು | ಈ ಮಾತು ಕೇಳಿದರೆ
ಕವಿಜನರು ನಗರೆ ಕೈ ಹೊಡೆದು ೧
೩೭೪ಎಲ್ಲ ಬಂದೇ ಎಂಬ ಖುಲ್ಲ ಮಾನವ ನಿನ್ನ
ವಲ್ಲಭೆಯ ಬೆರೆದು ಸಂತಾನ | ಸಂತಾನ ಪಡೆವೇಕೆ
ಇಲ್ಲವೇ ಜನನಿ ಭಗಿನೇರು ೨
೩೭೫ಬಿಂಬವೊಂದೆ ಪ್ರತಿಬಿಂಬ ವೊಂದೆಂಬಿ ಈಶು
ದ್ಧಾಂಬರದ ನೆರಳು ಕಪ್ಪಾಗೆ | ಕಪ್ಪಾದ ಬಳಿಕ ನೀ
ನೆಂಬೊ ಈ ಮಾತು ಪುಸಿಯಲ್ಲಿ ೩
೩೭೬ ಎಲ್ಲ ಒಂದೆ ಎಂಬ ಸೊಲ್ಲು ಖರೆಯೆಂತೆನಲು
ಸುಳ್ಳು ಎಂಬೋದು ಖರೆಯಾಗಿ |
ಖರೆಯೆಂಬ ಮಾತುಗಳು
ಸುಳ್ಳೆನ್ನರೇನೊ ಸುಜನಾರು ೪
೩೭೭ ನಿಮ್ಮ ನಾ ಬೈದರೆ ನಮ್ಮ ನೀವ್ ಬೈದರೆ
ನಿರ್ಮೂಲವಾಯ್ತು ಅದ್ವೈತ | ಅದ್ವೈ ತವುಳುಹಲಿಕೆ
ಸುಮ್ಮನಿರಬೇಕು ಎಲೊ ಭ್ರಾಂತ ೫
೩೭೮ ಶುದ್ಧ ಬ್ರಹ್ಮನ ಸುಂಗುಣವ ಕದ್ದ ಪ್ರಯುಕ್ತ ಪ್ರ
ಸಿದ್ಧ ಚೋರತ್ವ ನಿನ್ನಲ್ಲಿ | ನಿನ್ನಲ್ಲಿ ಪೊದ್ದಿತೊ
ಉದ್ಧಾರವೆಲ್ಲೊ ಭವದಿಂದ ೬
೩೭೯ ಮಾಯವಾದಿಯ ಮತವು ಹೇಯವೆಂಬುದು ಸಿದ್ದ
ತಾಯಿತಂದೆಗಳು ಸತಿಪುತ್ರ | ಸತಿಪುತ್ರರಗಲಿದರೆ
ಬಾಯಿ ಬಿಟ್ಯಾಕೊ ಆಳುತಿದ್ದಿ ೭
೩೮೦ ಸುಳ್ಳಿಗಿಂತಧಿಕ ಮತ್ತಿಲ್ಲವೋ ಮಹಪಾಪ
ಸುಳ್ಳು ಕಳ್ಳತನವು ನಿನ್ನಲ್ಲಿ | ನಿನ್ನಲ್ಲಿ ಉಂಟಾಯಿ
ತಲ್ಲೊ ಜಾರತ್ವ ಇದರಂತೆ ೮
೩೮೧ಮೇ ಮಾತೆ ವಂಧ್ಯೆಯೆಂಬ ಈ ಮಾತಿನಂತೆ ಮು
ಕ್ತಾಮುಕ್ತ ಜಗವು ಪುಸಿಯೆಂಬ |
ಅಪುಸಿಯಿಂಬೀ ಮಾತುಗಳು
ಭ್ರಾಮಕವೆ ಖರೆಯೊ ನಿಜವಲ್ಲ ೯
೩೮೨ ಶಶವಿಷಾಣಗಳೆಂದು ಒಪ್ಪುವರೆ ಬಲ್ಲವರು
ಬಸವನಿಗುಂಟೇನೊ ಮೊಲೆಹಾಲು |
ಮೊಲೆಹಾಲು ಉಂಡಿತೋ
ರಿಸೊ ಮಿಥ್ಯೆ ಸತ್ಯವಹುದೇನೊ ೧೦
೩೮೩ಸತ್ಯವೆಂದರೆ ಖರೆಯು ಮಿಥ್ಯೆಯೆಂದರೆ ಸುಳ್ಳು
ಸತ್ಯಮಿಥ್ಯಗಳು ಏಕತ್ರ | ಏಕತ್ರವಿಹುದೆ ಉ
ನ್ಮತ್ತ ಈ ಮಾತು ನಿಜವೆಲ್ಲಿ ೧೧
೩೮೪ಭೀತಿ ನಿರ್ಭೀತಿ ಶೀತತಾಪಗಳೊತ್ತಟ್ಟು
ನೀತವಾಗಿಹವೆ ಜಗದೊಳು |ಜಗದೊಳಿದ್ದರೆ ತೋರು
ಜಾತಿ ಭೇದಗಳು ಇರಲಾಗಿ ೧೨
೩೮೫ ಜೀವೇಶರೊಂದೆಂಬ ಈ ಮಾತು ಕೇಳ್ವರಿಗೆ
ಕೇವಲ ಶ್ರಾವ್ಯವೆಂದೆಂದು | ಎಂದೆಂದು ಬುಧರು ಪಶು
ಗಾವಿ ನೀನೆಂದು ಕರೆಯಾರೆ ೧೩
೩೮೬ ಗುಣವಂತನೆಂಬ ಈ ಮಾತನು ಕೇಳಿ ಸುಖಿಸದವ
ಮನುಜ ಪಶುಸಿದ್ಧ ಪುಸಿಯಲ್ಲ | ಪುಸಿಯಲ್ಲ ನಿನ್ನ ಮತ
ಗಣನೆ ಮಾಡದಲೆ ಬಯ್ವೋರ ೧೪
೩೮೭ಮಲದ ಗರ್ತಕೆ ಶುದ್ಧ ಜಲಧಿ ಸಮಯವೆಂತೆಂಬಿ
ಕಲುಷವರ್ಜಿತಕೆ ತೃಣಜೀವ | ತೃಣಜೀವ ಸರಿಯೆ ಸಿಂ
ಬಳಕ ಗೋಘೃತವು ಸಮವಹುದೆ ೧೫
೩೮೮ ಐರಾವತಕೆ ಸರಿಯೆ ಕೂರಿಹೇನಿನ ಮರಿಯು
ಮೇರು ಪರ್ವತಕ್ಕೆ ಕಸಕುಪ್ಪೆ | ಕಸಕುಪ್ಪೆ ಸರಿಯಹುದೆ
ತೋರಿತೊ ನಿನ್ನ ಅಜ್ಞಾನ ೧೬
೩೮೯ ದ್ವಾಸುಪರ್ಣಾ ಎಂಬ ಈ ಶ್ರುತಿಗಳಲ್ಲಿ ವಿ
ಶ್ವಾಸ ಮಾಡದಲೆ ಜೀವೇಶ | ಜೀವೇಶಕೈಕ್ಯೋಪ
ದೇಶ ಮಾಡಿದವ ಚಂಡಾಲ ೧೭
೩೯೦ಅಜರಾಮರಣ ಬ್ರಹ್ಮ ಭುಜಗಭೂಷಣ ಪೂಜ್ಯ
ತ್ರಿಜಗ ದೇವೇಶ ಹರಿಯೆತ್ತ | ಹರಿಯೆತ್ತ ನೀನೆತ್ತ
ಅಜಗಜನ್ಯಾಯ ಪುಸಿಯಲ್ಲ ೧೮
೩೯೧ ಪಾಲುಗಡಲೊಳಗಿಪ್ಪ ಶ್ರೀ ಲೋಲ ಹರಿಯೆಲ್ಲಿ
ಹೇಲುಚ್ಚೆವೊಳಗೆ ಹೊರಳುವ | ಹೊರಳಾಡಿ ಬಳಲುವ
ಖೂಳ ಮಾನವನೆ ನೀನೆಲ್ಲಿ ೧೯
೩೯೨ ಕ್ಷೀರಾಂಬುಧಿಗೆ ಸರಿಯೆ ಕಾರಿಕೆಯ ಶ್ಲೇಷ್ಮ ಭಾ
ಗೀರಥಿಗೆ ಸಮವೆ ಖರಮೂತ್ರ | ಖರಮೂತ್ರ ಜೀವ ಲ
ಕ್ಷ್ಮೀರಮಣಗೆಣೆಯೆ ಜಗದೊಳು ೨೦
೩೯೩ಗುಣಪೂರ್ಣ ಸರ್ವಜ್ಞ ಅಣುಮಹದ್ಗತನ ನಿ
ರ್ಗುಣ ಅಲ್ಪನೆನುತಿದ್ದಿ | ಎನುತಿದ್ದಿ ಹರಿಗೆ ದೂ
ಷಣೆಯು ಬೇರುಂಟೆ ಇದಕಿಂತ ೨೧
೩೯೪ ಈಶ ನಾನೆನಲು ಕೀನಾಶನಿಂದಲಿ ದಣಿಪ
ದಾಸನೆಂಬುವಗೆ ದಯದಿಂದ | ದಯದಿಂದ ತನ್ನಯಾ
ವಾಸದೊಳಿಟ್ಟು ಸಲಹೂವ ೨೨
೩೯೫ಈಶತ್ವ ವೆಂಬುದು ಲಕುಮೀಶಗಲ್ಲದೆ ಜೀವ
ರಾಶಿಗಳಿಗುಂಟೆ ಈ ಶಕ್ತಿ | ಈ ಶಕ್ತಿ ಸತ್ವಗುಣ
ಈಶ ಬಿಟ್ಟಿಹನೆ ಜಗದೊಳು ೨೩
೩೯೬ ಉದ್ಗೀಥಶ್ರೀ ಪ್ರಾಣ ಹೃದ್ಗತನು ಜಗದೇಕ
ಸದ್ಗುರುವರೇಣ್ಯನೆನುತಿಪ್ಪ | ಎನುತಿಪ್ಪರಿಗೆ ಯಮ
ಗದ್ಗದನೆ ನಡುಗಿ ನಮಿಸುವ ೨೪
೩೯೭ ಸ್ವಾಮಿ ಭೃತ್ಯನ್ಯಾಯ ಈ ಮಾತಿನೊಳಗುಂಟು
ಗ್ರಾಮಧಾಮಗಳು ಇದರಂತೆ | ಇದರಂತೆ ನೋಡಿಕೊ
ನೀ ಮಾತ್ರ ನುಡಿಯೆ ಸಾಕೆಂಬೆ ೨೫
೩೯೮ಈಶ ನಾನೆಂದವನ ಶ್ವಾಸ ಬಿಡಗೊಡದೆ ಯಮ
ಪಾಶಊಳ ಕಟ್ಟಿ ಸೆಳೆದೊಯಿದು |
ಸೆಳೆದೊಯಿದು ನರಕದೊಳು
ಘಾಸಿಗೊಳಿಸುವನೊ ಬಹುಕಾಲ ೨೬
೩೯೯ ಮಾತಾ ಪಿತರ ದ್ರೋಹಿ ಬಂಧು ಘಾತಕ ಬ್ರಹ್ಮ
ಘಾತಕನು ನೀನು ಪುಸಿಯಲ್ಲ | ಪುಸಿಯಲ್ಲ ಶ್ರೀ ಜಗ
ನ್ನಾಥ ವಿಠಲನೆ ನಾನೆಂಬಿ ೨೭

ಪಲ್ಲವಿ : ಹಯವದನ
೧೫೧
ಶೇಷ ಪರ್ಯಂಕ ಶಯನ ವಿಷಯದಭಿ
ಲಾಷೆ ಪರಿಹರಿಸಿ ಕಾಯೋ ಪ
ಧನ ಓದನಂಗಳ ಬಯಸಿ ನಿಚೋಚ್ಚ
ರೆನದೆ ಮನೆಮನೆ ತಿರುಗಿದೆ
ಅನಿಮಿಷೋತ್ತಂಸ ನಿನ್ನ ಪಾದವೊಂ
ದಿನ ಭಜಿಸಿದವನಲ್ಲವೋ ೧
ಹರಿ ಗುರುಗಳನು ನಿಂದಿಪ ನೀಚರನು
ಸರಿಸಿ ಅವರನು ಸ್ತುತಿಸಿದೆ
ಪೊರೆಯಲೋಸುಗ ಉದರವ – ಜನರಿಂದ
ಹರಿದಾಸನೆನಿಸಿಕೊಂಡೆ ೨
ಭಗವಂತ ನಿನ್ನ ಗುಣವ ವರ್ಣಿಸದೆ
ಭಗವತಿಯರವಯವಗಳಾ
ಸೊಗಸಿನಿಂದಲಿ ವರ್ಣಿಸಿ ಎನ್ನ ನಾ
ಲಗೆ ಎರಡು ಮಾಡಿಕೊಂಡೆ ೩
ಸರ್ವಪ್ರಕಾರದಲ್ಲಿ ಹಗಲಿರುಳು
ದುರ್ವಿಷಯಕೊಳಗಾದೆನೋ
ಶರ್ವಾದಿ ವಂದ್ಯ ಚರಣಾ ನೀನೊಲಿ
ದುರ್ವಿಯೊಳು ಸಲಹ ಬೇಕು ೪
ಉಪರಾಗ ಪರ್ವಗಳಲಿ ಸ್ನಾನ ಜಪ
ತಪ ಅನುಷ್ಠಾನ ಜರಿದು
ನೃಪರ ಮಂದಿರವ ಕಾಯ್ದು ಧನವ ತಂ
ದುಪ ಜೀವಿಸಿದೆನೊ ಜೀಯಾ ೫
ವೇದ ಶಾಸ್ತ್ರಾರ್ಥಗಳನು ತಿಳಿದು ಸ
ನ್ಮೋದ ಬಡದಲೆ ಕುಶಾಸ್ತ್ರ
ಓದಿ ಪಂಡಿತನೆನಿಸಿದೆ ಕೀರ್ತಿ ಸಂ
ಪಾದಿಸಿದೆ ವ್ಯರ್ಥ ಬಾಳಿದೇ ೬
ವೈರಾಗ್ಯ ಪುಟ್ಟಲಿಲ್ಲ ಘೋರ ಸಂ
ಸಾರದೊಳು ಮಗ್ನನಾದೆ
ಸೂರಿಗಳ ಮಧ್ಯದಲ್ಲಿ ಬುಧನಂತೆ
ತೋರುವೆನು ನೋಳ್ಪ ಜನಕೆ ೭
ನಾ ಮಾಡ್ದ ಪಾಪರಾಶಿ ಎಣಿಸಲ್ಕೆ
ತಾಮರಸಭವಗಸದಳ
ಸ್ವಾಮಿ ಎನಗೇನು ಗತಿಯೋ ಭಾರವಾದೆ
ಈ ಮಹಿಗೆ ಪ್ರತಿದಿನದಲೀ ೮
ಭೂತ ಸಂಬಂಧದಿಂದ ಬಹುವಿಧದ
ಪಾತಕವೆ ಸಮನಿಸಿದವೋ
ದಾತೃನೀ ಕಡೆ ಗೈದಿಸೋ ಭವದಿ ಜಗ
ನ್ನಾಥ ವಿಠ್ಠಲ ಕೃಪಾಳೋ ೯

ನುಡಿ-೩: ಊಟಿ ನೀರನು ಮಾಡೆ
೮೮
ಶೇಷದೇವ ವಾರುಣೀಪತಿ ಪಾಹಿ ಪ
ಶೇಷದೇವ ತ್ರೈಘೋಷಣ ಮುಖ ಪರಿ
ಪೋಷಿಸು ಎಮ್ಮಭಿಲಾಷೆಯ ಸಲಿಸಿ ಅ.ಪ.
ಭಜಿಸುವೆ ಸರ್ವದಾ ಸುಜನರಭೀಷ್ಟವ
ಸುಜನಾರಾಧಕ ಭುಜಗೋತ್ತಂಸ ೧
ಪುಣ್ಯ ಚರಿತ ಸುಶರಣ್ಯಗೆ ಸುಬ್ರ
ಹ್ಮಣ್ಯದೇವ ಕಾರುಣ್ಯ ಮೂರುತಿ ೨
ವಾರುಣಿ ಸುಮುಖ ಸರೋರುಹ ದಿನಕರ
ತೋರು ತವಾಂಘ್ರಿ ಮಹೋರಗ ರಾಜ೩
ಅಸಿತವಸನ ಹಲಮುಸಲಾಯುಧ ಧರ
ದ್ವಿಸ [ಹ] ಸ್ರೇಕ್ಷಣ ಸುಶರಣ ಪಾಲ ೪
ಪಾತಾಳಪ ಪುರುಹೂತನುತ ಜಗ
ನ್ನಾಥ ವಿಠಲನ ಪ್ರೀತಿ ವಿಷಯನೆ ೫

೧೮೭
ಶೋಭಾನವೆನ್ನಿರೆ ಸರ್ವಜ್ಞ ಹರಿಗೆ
ಶೋಭಾನವೆನ್ನಿರೆ ಸಕಲ ಗುಣನಿಧಿಗೆ
ಶೋಭಾನವೆನ್ನಿ ಸಮೀರ ಪಿತನಿಗೆ
ಶೋಭಾನವೆನ್ನಿ ಸರೋಜಸದನ
ಮನೋಭಿರಾಮನಿಗೆ ಶೋಭಾನವೆನ್ನಿ ಪ
ಶಫರ ವೇಷದವಗೆ ಕಪಟ ಕಮಠಗೆ
ತಪ ನಿಯಾಂಬಕನಸುಪರಿಹರಿಸಿದಗೆ
ಕೃಪಣ ಪ್ರಹ್ಲಾದನ ವಿಪತ್ತು ಕಳೆದವಗೆ
ಶಿಪಿಯ ಕರದಿ ಬಲು ವಪ್ರವ ಬಿಗಿಸಿದವಗೆ
ಚಪಲಾಕ್ಷಿಯರಾರುತಿ ಬೆಳಗಿರೆ ೧
ಕೊಡಲಿ ಕೋದಂಡವ ಪಿಡಿವ ಪಂಡಿತಗೆ
ಕಡಲ ಕಟ್ಟಿಸಿ ಖಳರೊಡಲ ಬಗೆದಗೆ
ಮಡುವಿನೊಳಗೆ ಫಣಿ ಪೆಡೆಯ ತುಳಿದವಗೆ
ಮೃಡನ ಗೆಲಿಸಿ ಕೀರ್ತಿ ಒಡನೆ ತಂದಿತ್ತಗೆ
ಮಡದೇರಾರುತಿಯ ಬೆಳಗೀರೆ ೨
ಹರಿಗಿ ಸುರಿಗಿ ಪಿಡಿದರವಿಂದಾಂಬಕಗೆ
ಶರಧಿಯೊಳಾಡ್ದಗೆ ಗಿರಿಮಹಿಧರಗೆ
ನರಹರಿ ರೂಪಗೆ ಧರಣಿಯಾಳ್ದಗೆ
ಧುರದೊಳು ರಾಯರ ತರಿದ ಸಮರ್ಥಗೆ
ಗರತೇರಾರುತಿಯ ಬೆಳಗೀರೆ೩
ದಶರಥ ತನಯಗೆ ವಸುದೇವ ಸುತಗೆ
ವಸನ ವಿಹೀನಗೆ ಅಸುರ ಭಂಜನಿಗೆ
ಝಷ ಕೂರ್ಮ ರೂಪಗೆ ವಸುಧಿ ವಾಹಕಗೆ
ಮಿಸುನಿ ಕಶ್ಯಪಗೆ ಹೆಬ್ಬಸಿರ ಬಗೆದವಗೆ
ಶಶಿಮುಖಿಯರಾರುತಿ ಬೆಳಗೀರೆ ೪
ವಟು ಭೃಗುರಾಮಗೆ ಜಟಲ ಮಸ್ತಕಗೆ
ಕಠಿಣ ಕಂಸನ ತಳ ಪಟವ ಮಾಡಿದಗೆ
ನಿಟಲಾಕ್ಷವರದಗೆ ಕಪಟ ಭೀಕರಗೆ
ವಟಪತ್ರಶಯನ ನಿಷ್ಕುಟಿಲ ಜಗನ್ನಾಥ
ವಿಠಲಗಾರುತಿಯ ಬೆಳಗೀರೆ ೫

ನುಡಿ-೪: ಕರ್ದಮ ಸೌಬರಿ
೯೯
ಶ್ರೀ ಕೃಷ್ಣವೇಣಿ ಕಲ್ಯಾಣೀ
ಪಂಕಜಾಸನ ಸ್ವೀಕೃತ ಬುಧ ಶ್ರೇಣೀ
ನೀ ಕೃಪೆಯಿಂದ ಮಹಾಕೃತು ಹರಿಯ ನಿ
ಜಾಕೃತಿ ತೋರ್ದೂರಿಕೃತ ದುರಿತೇ ಪ
ಭ್ರಮರ ಕುಂತಳ ಶೋಭಿತೇ | ಸುಜನ ಮಾತೆ
ಶಮಲ ಸಂಕೂಲ ನರ್ಧೂತೆ
ಸುಮನಸ ಜನ ಸನ್ನುತೆ ಸನ್ಮೋದ ದಾತೆ
ವಿಮಲ ಸದ್ಗುಣ ಸಂಭೃತೆ
ನಮಿಸುವೆ ತ್ವತ್ಪದ ಕಮಲಯುಗಳಿಗನು
ಪಮ ಸುಂದರೆ ಭ್ರಮೆಗೊಳಿಸುವ ದುರ್ಮಮ ಕಳೆದು |ಸೋ
ತ್ತಮರ ಪದಾಬ್ಜಕೆ ಭ್ರಮರನೆನಿಸಿ
ಮಾರಮಣನ ದುಹಿತ್ರೆ ೧
ಮದಗಜಯಾನೆ ಪಿಕಗಾನೆ ಉಭಯಾನೆ
ಉದಧೀರಾಜನ ಮಾನಿನಿ
ಮದನಾರಿ ಜಟಜಸೊನೆ ಪಾಪೌಘದಹನೆ
ಮುದವ ಕೊಡು ಎಮಗೆ ನಿೀನೆ
ಮದಡನರನು ಒಂದು ದಿನ ಮಜ್ಜನವ ವಿಧಿಸೆ ಶರೀರದಿ
ಹುದುಗಿದ ಪಾಪಗಳುದುರಿಸಿ ಕಾಲನ
ಸದನವ ಹೋಗಗೊಡದುದಧಿ ಮಥನ
ಪದ ಪದುಮವ ತೋರ್ಪೆ ೨
ಅನುಪಮ ನೀಲ ಸಮಕಾಶೇ | ಸೋಮಂದಹಾಸೆ
ಪುನತ ಹೃತ್ಕುಮುದಾ ಭೇಶೇ
ವನರಾಶೀಕಾಲ ವಿಲಾಶೇಯಮಭಿಲಾಪೇ ಅನುದಿನ ಪೂರೈಸೇ
ಜನನಿಯೆನ್ನ ದುರ್ಗುಣವೆಣಿಸದೆ | ಮಾ
ತನು ಲಾಲಿಸು ಸುಹೃದ್ವನರುಹದಲಿ ಶ್ರೀ
ವನತೆಯರಸ ಜಗನ್ನಾಥ ವಿಠಲನ
ಅನವರತ ನಿಲಿಸು ಘನ ಮಾಂಗಲ್ಯೇ ೩

ವಿದ್ಯಾಭಿಮಾನಿಯಾದ
೩೪
ಶ್ರೀ ನಾರಸಿಂಹ ಚಿತ್ಸುಖಮಯ ಕಾಯ ಪ
ದಾನವಾರಣ್ಯಪಾವಕ ವೀತಶೋಕ ಅ.ಪ.
ಆನತೇಷ್ಟ ಪ್ರದಾಯಕ ನಮಿಸುವೆನು ಸದಾ
ಮೈನಾಕಿಧರ ಬಿಂಬ ಸುರಮುನಿಕದಂಬ
ಧ್ಯಾನಗಮ್ಯನೆ ಭಕ್ತರಾಪತ್ತು ಕಳೆ ಶಕ್ತಾ
ನೀನೆ ಗತಿಯೆಂಬೆ ಮುನಿಮನ ವನಜ ತುಂಬೆ ೧
ಶ್ರವಣ ಮಂಗಳನಾಮಧೇಯ ನಿರ್ಜಿತಕಾಮ
ಸವನ ದ್ವಿತಿಯರೂಪ ವಿಗತಕೋಪ
ಸ್ವವಶ ಸ್ವಾತಂತ್ರ್ಯ ವಿಖನಸ ಪೂಜ್ಯವಜ್ರನಖ
ಪವಿ ದಂಷ್ಟ್ರದರ್ಶ ಭಾರ್ಗವಿರಮಣಗಶನಾ ೨
ಆದಿದೇವಾನಂತ ಮಹಿಮನೇ ನಿಶ್ಚಿಂತಾ
ಕಾದುಕೋ ನಿನ್ನವರ ವಿಬುಧ ಪ್ರವರಾ
ಮೋದಮಯ ಶ್ರೀ ಜಗನ್ನಾಥವಿಠಲರೇಯ
ವೈದಿಕವ ನುಡಿಸು ಲೌಕಿಕ ಮಾರ್ಗವ ಬಿಡಿಸು ೩

೨೩೧
ಶ್ರೀ ಭೂಮಿದುರ್ಗ ಮತ್ತೇಭೇಂದ್ರಿಗಮನೆ ಸ್ವ
ರ್ಣಾಭ ಗಾತ್ರೆ ಸುಚರಿತ್ರೆ | ಸುಚರಿತ್ರೆ ಶ್ರೀ ಪದ್ಮ
ನಾಭನ್ನ ಜಾಯೆ ವರವೀಯೆ ೧
೨೩೨ ದರಹಸಿತವದನೆ ಸುಂದರಿ ಕಮಲ ಸದನೆ ನಿ
ರ್ಜರರ ಸಿದ್ಧಗೀತೆ ವಿಧಿ ಮಾತೆ |
ವಿಧಿ ಮಾತೆ ಲೋಕಸುಂ
ದರಿಯೆ ನೀ ನೋಡೆ ದಯಮಾಡೆ ೨
೨೩೩ ತ್ರಿಗುಣಾಭಿಮಾನಿ ಎನ್ನವ ಗುಣದ ರಾಶಿಗಳ
ಬಗೆಯದಲೆ ತಾಯೆ ವರವೀಯೆ |
ವರವೀಯೆ ನಿನ್ನ ಪಾದ
ಯುಗಳಕ್ಕೆ ನಮಿಪೆ ಜಗದಂಬೆ ೩
೨೩೪ ಪ್ರಳಯ ಕಾಲದಲಿ ಪತಿ ಮಲಗ ಬೇಕೆನುತ ವಟ
ದೆಲೆಯಾಗಿ ಹರಿಯ ಒಲಿಸಿದಿ | ಒಲಿಸಿದಿ ಜಗದ ಮಂ
ಗಳ ದೇವಿ ನಮಗೆ ದಯವಾಗೆ ೪
೨೩೫ ತಂತು ಪಟದಂತೆ ಜಗದಂತರ್ಬಹಿರದಲ್ಲಿ
ಕಾಂತಮೊಡಗೂಡಿ ನೆಲೆಸಿಪ್ಪೆ | ನೆಲೆಸಿಪ್ಪೆ ನೀನೆ
ನ್ನಂತರಂಗದಲಿ ನೆಲೆಗೊಳ್ಳೆ ೫
೨೩೬ ಈಶಕೋಟಿ ಪ್ರವಿಷ್ಟೆ ಈಶ ಭಿನ್ನಳೆ ಸರ್ವ
ದೋಷವರ್ಜಿತಳೆ ವರದೇಶ | ವರದೇಶ ಪತಿದೊಡನೆ
ವಾಸವಾಗೆನ್ನ ಮನದಲ್ಲಿ ೬
೨೩೭ ಆನಂದಮಯಿ ಹರಿಗೆ ನಾನಾಭರಣವಾದೆ
ಪಾನೀಯವಾದೆ ಪಟವಾದೆ | ಪಟವಾದೆ ಪಂಕಜ
ಪಾಣಿ ನೀನೆಮಗೆ ದಯವಾಗೆ ೭
೨೩೮ಮಹದಾದಿ ತತ್ವಗಳ ವಹಿಸಿ ನಿನ್ನುದರದೊಳು
ದ್ರುಹಿಣಾಂಡ ಪಡೆದೆ ಪತಿಯಿಂದ | ಪತಿಯಿಂದ ಶ್ರೀಲಕ್ಷ್ಮಿ
ಮಹಮಹಿಮಳೆ ಎಮಗೆ ದಯವಾಗೆ ೮
೨೩೮ ಆವ ಬ್ರಹ್ಮಾದಿ ದೇವರೆಲ್ಲರು ತವ ಕೃ
ಪಾವ ಲೋಕನದಿ ಕೃತಕೃತ್ಯ | ಕೃತಕೃತ್ಯರಾಗಿ ಹರಿ
ದೇವಿ ನಾ ಬಯಸುವುದು ಅರಿದಲ್ಲ ೯
೨೪೦ ಪಕ್ಷೀಂದ್ರವಾಹನನ ವಕ್ಷಸ್ಥಳವಾಗಿ
ಅಕ್ಷಯಜ್ಞಾನಿ ಸುಖಪೂರ್ಣೆ | ಸುಖಪೂರ್ಣೆ ಕಮಲದ
ಳಾಕ್ಷಿ ನೋಡೆನ್ನ ದಯದಿಂದ ೧೦
೨೪೧ ಹಲವು ಮಾತ್ಯಾಕೆ ಶ್ರೀಲಲನೆ ಶ್ರೀಜಗನ್ನಾಥ ವಿ
ಠ್ಠಲ ಎಮಗೆ ಕೂಡಿ ಮನದಲ್ಲಿ |
ಮನದಲ್ಲಿ ವಾಸವಾಗೆಲ್ಲ
ಕಾಲದಲಿ ಅವಿಯೋಗಿ ೧೧

ನುಡಿ-೨ : ಕೆಟ್ಟ ಮಾತು ನುಡಿದ ಚೈದ್ಯಗೆ
೧೫೨
ಶ್ರೀ ಮಧ್ವಚಿತ್ತ ಮಂದಿರನೆ ನಿನ್ನಯ ಚರಣ
ತಾಮರಸ ನೆರೆ ನಂಬಿದೆ ಪ
ಕಾಮಕ್ರೋಧವ ಕಳೆದು ನಿನ್ನ ನಾಮಾಮೃತವ
ಪ್ರೇಮದಲಿ ಎನಗುಣಿಸೋ ಸ್ವಾಮಿ ಅ.ಪ.
ಉಪರಾಗ ದಶಮಿ ದ್ವಾದಶಿ ದಿವಸ ಮೊದಲಾದ
ಉಪೇಕ್ಷೆ ಮಾಡಿ ಕಳೆದೆ
ಉಪಕಾರಯೆಂದು ನಿಜ ಉಕ್ತಿ ಪೇಳಿದರೆನಗೆ
ಅಪಕಾರ ಕಾಣುತಿದೆಕೋ
ನಿಪುಣನೆನಿಸುವೆನೆಂದು ಅಜ್ಞಾನಿಗಳ ಮುಂದೆ
ತಪ ವೃದ್ಧರನ್ನು ಹಳಿವೆ
ಸ್ವಪನದೊಳಗಾದರೊ ವೈರಾಗ್ಯ ಬಯಸದಲೆ
ಕಪಟ ಮನುಜರೊಳಾಡಿ ನಿನ್ನ ಮರೆದೆ ಸ್ವಾಮೀ ೧
ಮಾರನ ಉಪಟಳಾಕಾರದಲಿ ನಾ ಬಲು
ಪೋರ ಬುದ್ಧಿಯನು ಮಾಡಿ
ಆರು ಇಲ್ಲದ ಸಮಯದೊಳವಳು ಕಣ್ಣು ಸನ್ನೆಯ ಮಾಡಿ
ಕೋರಿದ್ದು ಇತ್ತು ನೀಡಿ
ಬಾರಿ ಬಾರಿಗೆ ಅವಳ ವಾರಿನೋಟಕೆ ಬೆರದು
ಕ್ರೂರಮಾನವರೊಳಗೆ ಆಡಿ
ವಾರಿಜನಾಭ ನಿನ್ನ ಆರಾಧನೆಯ ಮರೆದು
ಧಾರಿಣೀ ಭಾರದೆ ಪರಲೋಕ ಮರೆದೆ ೨
ಭೂಸುರರು ಚಂಡಾಲ ಜಾತಿಯೆನ್ನದೆ ಬಲು
ಹೇಸಿಕಿಲ್ಲದೆ ತಿರುಗುವೆ
ಆ ಸತಿಸುತರ ಸಾಕುವೆನೆಂದು ಪರಿ ಪರಿ
ವೇಷವನು ಧರಿಸಿ ಮೆರೆದೇ
ಆಶೆಯುಳ್ಳ ಮಹಪಿಶಾಚಿಗೊಳಗಾಗಿ ಹರಿ
ದಾಸ ಸಹವಾಸ ಜರೆದೆ
ವಾಸುಕೀಶಯನ ವಸುದೇವತನಯನೆ ನಿನ್ನ
ದಾಸನೆನ್ನಿಸದೆ ಅಪಹಾಸ ಮಾನವನಾದೆ ೩
ಹರಿದಾಸರ ಬಳಿ ಅರಘಳಿಗೆ ಕೂತರೆ
ಶಿರವ್ಯಾಧಿಯೆಂದೇಳುವೇ
ದುರುಳ ದುರ್ವಾರ್ತೆಗಳ ಪೇಳಲು ಹಸಿವು ತೃಷೆ
ಮರೆದು ಲಾಲಿಸಿ ಕೇಳುವೆ
ತರುಣಿ ಮಕ್ಕಳು ಎನ್ನ ಪರಿಪರಿ ಬೈದರೆ
ಪರಮ ಹರುಷವ ತಾಳುವೆ
ಗುರುಹಿರಿಯರೊಂದುತ್ತರವನಾಡಲು ಕೇಳಿ
ಧರಿಸಲಾರದೆ ನಾನು ಮತ್ಸರಿಪೆನವರೊಡನೇ ೪
ನಾ ಮಾಡಿದಪರಾಧ ಎಣಿಸಿ ಬರೆದರೆ ಈ
ಭೂಮಂಡಲವು ಸಾಲದಿಹುದೊ
ಕ್ಷಮೆಯೊಳಗುಳ್ಳ ದುರ್ಮತಿ ಕೂಡಿಡಲು
ಈ ಮತಿಯ ಅದು ಪೋಲದು
ಹೋಮ ಜಪತಪಗಳನು ಎಷ್ಟು ಮಾಡಲು ಪಾಪ
ಸ್ತೋಮ ಎಂದಿಗು ಪೋಗದೊ
ಸಾಮಜವರದ ಜಗನ್ನಾಥ ವಿಠಲ ನಿನ್ನ
ನಾಮ ಒಂದಲ್ಲದೆ ಪ್ರಾಯಶ್ಚಿತ್ತವು ಕಾಣಿ ೫

ಈ ಸುಳಾದಿಯಲ್ಲಿ ಕಲಿಕಾಲದಿಂದ
೭೬
ಶ್ರೀ ಮಾರುತಾತ್ಮ ಸಂಭೂತ ಹನುಮ
ಭೀಮ ಮಧ್ವಾಖ್ಯ ಯತಿನಾಥ | ಮೂಲ
ರಾಮಕೃಷ್ಣಾರ್ಪಿತ ಸುಚೇತಾ | ಮಮ
ಸ್ವಾಮಿ ಚಿತ್ತೈಸೆನ್ನ ಮಾತಾ ೧
ಅಂಜನಾದೇವಿ ಸುಕುಮಾರ |ಎಮ್ಮ
ನಂಜಿಸುವ ಘೋರ ಸಂಸಾರ |ಹೇ ಪ್ರ
ಭಂಜನನೆ ನಿಗಮ ಸಂಚಾರ | ಕ್ಲೇಶ
ಭಂಜಿಸಿ ಸಲಹೋ ಗುಣೋದಾರ ೨
ಕುಂತಿ ಜಠರದಲುದಿಸೆ ಬಂದೆ | ಮಾ
ಹೊಂತ ಕೌರವರ ನೀ ಕೊಂದೆ | ಅನಾ
ದ್ಯಂತ ಕಾಲದಿ ಎಮ್ಮ ತಂದೆ | ನೀನೆ
ಸಂತೈಸಬೇಕೆಂದು ನಿಂದೆ ೩
ಮಧ್ಯ ಗೇಹಾಖ್ಯ ದ್ವಿಜಸದನ | ದೊಳಗೆ
ಉದ್ಭವಿಸಿ ಮೆರೆದೆ ಜಿತಮದನ | ಧರ್ಮ
ಪದ್ಧತಿಗಳ ಪ್ರಸನ್ನವದನಾ | ತಿಳಿಸಿ
ಉದ್ಧರಿಸೋ ದನುಜಕುಲ ನಿಧನ೪
ಶ್ರೀ ಪೂರ್ಣಬೋಧ ಯತಿರಾಯ | ಎಮ್ಮ
ತಾಪತ್ರಯಗಳಿಂದ ನೋಯ | ಗೊಡದೆ
ಪಾಲಿಪುದು ಗುಣ ನಿಕಾಯ | ಕೃಷ್ಣ
ದ್ವೈಪಾಯನಗೆ ನೀನೆ ಪ್ರೀಯ ೫
ಬದರಿಕಾಶ್ರಮಕೆ ನೀ ಪೋಗಿ | ಲಕ್ಷ್ಮೀ
ಹೃದಯ ವಾಸನ ಪದಕೆ ಬಾಗಿ | ಭಾಷ್ಯ
ಮುದದಿಂದ ಪೇಳ್ದೆ ಚೆನ್ನಾಗಿ | ಎನಗೆ
ಅದರ ಭಾವವ ತಿಳಿಸೋ ಯೋಗಿ೬
ಯಾರಿಗುಸುರಲಿ ಮನದ ತಾಪ ಭಾರ
ತೀರಮಣ ಮಹಪಾಪ ವೆಣಿಸಿ
ದೂರ ನೋಳ್ಪರೆ ಸುಪ್ರತಾಪ ಪರಮ
ಕಾರುಣಿಕ ತೋರೋ ತವರೂಪ ೭
ಭಕ್ತರಿಗೊಲಿದು ಭವದಿಂದ ನೀ
ಮುಕ್ತರನÀ ಮಾಡು ದಯದಿಂದ ನೀನೆ
ಶಕ್ತನಹುದೆಂದು ವೇದವೃಂದದೊಳಗೆ
ಉಕ್ತವಾಗಿದೆ ನಿಮ್ಮಾನಂದಾ೮
ಜೀವಕೋಟಿಯೊಳು ನೀನೆ ಪಿರಿಯ ಎಮ್ಮ
ನೋವು ಸುಖಗಳನು ನೀನೆ ಅರಿಯ ಈಗ
ನೀವೊಲಿಯದಿರೆ ಹರಿ ನಮ್ಮ ಪೊರೆಯಾ ಜಗವ
ಕಾಯ್ವ ಗುರುವರ ನೀನೆ ಖರೆಯ ೯
ಶ್ರೀ ಜಗನ್ನಾಥ ವಿಠ್ಠಲಯ್ಯ ನಂಘ್ರಿ
ಪೂಜಿಸುವ ಸಜ್ಜನರ ಕೈಯಾ ಪಿಡಿದು
ನೀ ಜೋಕೆ ಮಾಡುವುದು ಜೀಯಾ ನೀನೆ
ಈ ಜಗತ್ರಯ [ಕೆ] ಗುರುವರ್ಯಾ ೧೦

ನುಡಿ-೧ ಪೂರ್ಣ
೧೨೦
ಶ್ರೀ ರಾಘವೇಂದ್ರ ನಿಮ್ಮ ಚಾರು ಚರಣವ
ಸಾರಿದೆ ಶರಣ ಮಂದಾರ ಕರುಣವ
ಬೀರಿ ಭವವನಧಿ ತಾರಿಸು ತವಕದಿ
ಸೂರಿ ಸುಧೀಂದ್ರ ಕುಮಾರ ಉದಾರ ಪ
ಮುನಿರಾಯ ನಿನ್ನ ಪಾದ ವನರುಹ ಧ್ಯಾನ
ಪ್ರಣವನ ಸ್ತವನ ಅರ್ಚನೆ ಮಾಳ್ಪ ನಾನಾ
ಜನರ ವಾಂಛಿತವೀವಗುಣ ಪೂರ್ಣ ಜ್ಞಾನ
ಧನಪ ಪಾಲಿಸೆನಗೀಕ್ಷಣ ನಿನ್ನಾಧೀನ
ಮನುಜನ ನೀ ಪ್ರತಿದಿನದಿ ದಣಿಸುವುದು
ಘನವೆ ಗುರುವೆ ಪಾವನತರ ಚರಿತ ೧
ಮೂಲರಾಮನ ಪಾದ ಕೀಲಾಲಜ ಮಧುಪಾ
ಬಾಲಕನ ಬಿನ್ನಪವ ಲಾಲಿಸೋ ಮುನಿಪ
ತಾಳಲಾರೆನೊ ತಾಪತ್ರಯದ ಸಂತಾಪ
ಕೇಳೋವಿಮಲಜ್ಞಾನ ಶೀಲ ಸ್ವರೂಪ
ಭೂಲಲನಾಧವ ಕೋಲನಂದನಾ
ಕೂಲಗವರ ಮಂತ್ರಾಲಯ ನಿಲಯ ೨
ಕಲಿಕಲ್ಮಷವಿದೂರ ಕುಜನ ಕುಠರಾ
ನಳಿನಾಕ್ಷ ವಿಮಲ ಶ್ರೀ ತುಲಸಿಯ ಹಾರ
ಗಳ ಸುಶೋಭಿತ ಕಮಂಡಲ ದಂಡಧರಾ
ಅಲವಬೊಧರ ಮತ ಜಲಧಿ ವಿಹಾರಾ
ಸುಲಲಿತ ಕರುಣಾಂಬುಧಿಯೆ ಜಗನ್ನಾಥ ವಿ
ಠಲನೊಲಿಮೆಯ ಪಡೆದಿಳೆಯೊಳು ಮೆರೆದಾ ೩

೧೨೧
ಶ್ರೀ ರಾಘವೇಂದ್ರಾರ್ಯ ಬಾರೋ
ಕಾರುಣ್ಯ ವಾರಿಧಿಯೆ ಬಾರೋ
ಆರಾಧಿಪ ಭಕ್ತರಿಷ್ಟಾ ಪೂರೈಸುವ ಪ್ರಭುವೆ ಬಾರೋ ಪ
ರಾಜವಂಶೋದ್ಭವ ಪಾದ ರಾಜೀವ ಭೃಂಗನೆ ಬಾರೋ
ರಾಜಾಧಿರಾಜರೊಳು ವಿ
ರಾಜಿಸುವ ಚೆಲುವ ಬಾರೋ ೧
ವ್ಯಾಸರಾಯನೆನಿಸಿ ನೃಪನ ಕ್ಲೇಶ ಕಳೆದವನೆ ಬಾರೋ
ಶ್ರೀ ಸುಧೀಂದ್ರ ಕರಸಂಜಾತ
ವಾಸು ದೇವಾರ್ಚಕನೆ ಧೀರ ಬಾರೋ ೨
ಸನ್ಯಾಸಕುಲದೀಪ ಬಾರೋ ಸನ್ನುತ ಸದ್ಗುಣನೆ ಬಾರೋ
ಮಾನ್ಯ ಜಗನ್ನಾಥವಿಠಲಾಪನ್ನ
ಜನರ ಪ್ರೀಯಾ ಬಾರೋ ೩

ನುಡಿ-೨: ಯಂಕಾಮಯೇ ಎಂಬ ಶ್ರುತಿ
ವಸುಧೀಂದ್ರ ತೀರ್ಥರು
೧೧೧*
ಶ್ರೀ ವಸುಧೀಂದ್ರ ರಾಯಾ | ಪಾವನಕಾಯಾ
ಕೋವಿದ ಜನ ಪ್ರೀಯಾ ಪ
ಭೂವಲಯದೊಳತಿ | ತೀವಿದ ಅಘವನ
ದಾವಕ ನತಜನ ದೇವತರು ಎನಿಪ ಅ
ಜಿತಕ್ರೋಧ ಜಯಶೀಲಾ | ದುವ್ರ್ಯಸನ ಪ
ರ್ವತ ವಜ್ರ ಹರಿಲೋಲಾ
ರತಿಪತಿ ಮಾರ್ಗಣ | ಮಥನ ಮೌನೀಶ ವಾಂ
ಛಿತಫಲವಿತ್ತು ಸಂ | ತತ ಪಾಲಿಸುವುದೆಮ್ಮ
ಪತಿತ ಪಾವನ ವಿತತ ಕರುಣಾ
ಮೃತರತಾನತ ಹಿತಕರಾಗಮ
ತತಿ ಪಯೋಜಾರ್ಕ ಅತಿಮುದಾ೧
ಭೂದೇವಾನುತ ಮಹಿಮಾ |ಶಾತವಾನು ಭೀಮ
ವೇದಪೂಜಿತರಾಮಾ
ವೇದವ್ಯಾಸರ ಪಾದ | ಸಾದರದಲಿ ನಿತ್ಯಾ
ರಾಧಿಸುತಿಹ ಸುವಿ | ನೋದಚರಿತ ಗುರು
ಮೋದತೀರ್ಥ ಮತಾಬ್ಧಿ ಸೋಮ ಕು
ವಾದಿ ಮತ ಮತ್ತೇಭಕುಂಭಧ
ರಾಧರಾತಟವಾನುಗರೊಳೆ
ನ್ನಾದರಿಸುವುದಖಿಳಗುಣಾಂಬುಧೇ ೨
ಸರಸಭಾಷೋಹ್ಲಾಸಾ | ವರ್ಚಿತ ದೋಷಾ
ಹರಿನಿಭಸಂಕಾಶಾ
ಶರೀರಾ ಸಜ್ಜನಗೇಯಾ | ಗುರುವಾದೀಂದ್ರಕರ
ಸರಸೀರುಹ ಸಂಜಾತ | ನಿರುಪಮ ನಿರ್ಭೀತಾ
ಸುರುಚಿರಹಿಮ ಕಿರಣ ತೇಜ
ಸ್ಫುರುಣ ಶ್ರೀ ಜಗನ್ನಾಥವಿಠಲನ
ಚರಣ ಪಂಕೇರುಹ ಯುಗಳ ಮಧು
ಕರದುರಿತಘನ ಮಾರುತಾ ೩

ಈ ಎರಡು ಕೀರ್ತನೆಗಳು
೫೩
ಶ್ರೀ ವೆಂಕಟ ಶೈಲಾಧಿಪ ನಮೋ ರಾ
ಜೀವಭವ ಭವಾರಾಧ್ಯ ನಮೋ ಪ
ಭೂವರಾಹಾದ್ಯವತಾರ ನಮೋ
ಭೂ ವೈಕುಂಠವಿಹಾರ ನಮೋ
ಕೇವಲ ನಿರ್ಗುಣ ಬೋಧಾನಂದ ಮಾ
ಯಾವತಾರತೇ ನಮೋ ನಮೋ
ಗೋವಿಂದ ಜಗಜ್ಜೀವನ ಜಿತ – ಮದ
ದೇವಕಿನಂದನ ದೇವ ನಮೋ ೧
ಸ್ವಾಂತ ಧ್ವಾಂತ ನಿಕೃಂತನ ಕಮಲಾ
ಕಾಂತ ಶ್ರೀಮದನಂತ ನಮೋ
ಚಿಂತಿತ ಫಲದ ಮದಂತರ್ಯಾಮಿ ದು
ರಂತ ಶಕ್ತಿ ಜಯವಂತ ನಮೋ
ಸಂತತಾದಿಮಧ್ಯಾಂತ ವಿವರ್ಜಿತ
ನಂತಾಸನ ಕೃತಾಂತ ನಮೋ ೨
ಕುಸ್ಥ ನಮೋ ಆಪಸ್ಥ ನಮೋ ತೇ
ಜಸ್ಥ ನಮೋ ವಾಯಸ್ಥ ನಮೋ
ಖಸ್ಥ ನಮೋ ಆಶಸ್ಥ ನಮೋ ಮ
ಧ್ಯಸ್ಥ ನಮೋ ನಮೋ ಸ್ವಸ್ಥ ನಮೋ
ಮತ್‍ಸ್ಥನಮೋ ಕಮಲಸ್ಥ ನಮೋ
ಗೋಸ್ಥ ನಮೋ ಕಾಲಸ್ಥ ನಮೋ ದೇ
ವಸ್ಥ ನಮೋ ಸರ್ವಸ್ಥ ನಮೋ ೩
ಶ್ರೀಶ ನಮೋ ಬ್ರಹ್ಮೇಶ ನಮೋ ಪ್ರಾ
ಣೇಶ ನಮೋ ವಾಣೀಶ ನಮೋ
ವೀಶ ನಮೋ ಫಣಿಪೇಶ ನಮೋ ರು
ದ್ರೇಶ ನಮೋ ಉಮೇಶ ನಮೋ
ವಾಸವ ಮುಖ ದೇವೇಶ ನಮೋ ದು
ರ್ವಾಸ ಮುನಿ ಹೃದಯ ವಾಸವ ನಮೋ
ಭೇಶ ಬಿಂದು ಕ್ಷಿತಿಪೇಶ ನಮೋ ಹರಿ
ವ್ಯಾಸ ಖಷಭ ಮಹಿದಾಸ ನಮೋ ೪
ಲೊಕಾಂತರ್ಗತ ಲೋಕ ನಿಯಾಮಕ
ಲೋಕ ವಿಲಕ್ಷಣ ಪಾಲಯ ಮಾಂ
ಲೋಕಾಲೋಕ ವಿಲೋಕನ ವಿಷಯ ತ್ರಿ
ಲೋಕಾಧಾರಕ ಪಾಲಯ ಮಾಂ
ಲೊಕಮಹಿತ ಪರಲೋಕಪ್ರದ ವರ
ಲೋಕೈಕೇಶ್ವರ ಪಾಲಯ ಮಾಂ
ಲೋಕ ಜನಕ ತೈ ಲೋಕ್ಯ ಬಂಧು ಕರು
ಣಾಕರ ವೇಂಕಟ ಪಾಲಯಮಾಂ ೫
ಮುಕ್ತಾಮುಕ್ತ ನಿಷೇಧಿತಾವಯವಾ
ಸಕ್ತ ಜನಪ್ರಿಯ ಪಾಲಯ ಮಾಂ
ರಕ್ತ ಪೀತನಿಭ ಪಾಲಯ ಮಾಂ
ಉಕ್ತ ನಿಗಮ ತತಿಸೂಕ್ತ ಸಿತಾಸಿತ
ವ್ಯಕ್ತಾವ್ಯಕ್ತ ಸ್ವಾಂತ ಮಹಿಮ ಸಂ
ಯುಕ್ತ ಸದಾ ಹೇ ಪಾಲಯ ಮಾಂ
ಶಕ್ತ ನಿಗಮ ತತಿನಿಭ ಪಾಲಯ ಮಾಂ
ಯುಕ್ತಾಯುಕ್ತಾ ನಜಾನೆ ರಮಾಪತೆ
ಭಕ್ತೋಹಂ ತವ ಪಾಲಯ ಮಾಂ ೬
ವೇದಸ್ತೇಯ ಖಳಾಂತಕ ಕಮಠ ಧ
ರಾಧರ ನರಹರೇ ಪಾಲಯ ಮಾಂ
ಸಾಧಿತ ಲೋಕತ್ರಯ ಬಲಿಮದಹ ಹಯ
ಮೇಧ ವಿಭಂಜನ ಪಾಲಯ ಮಾಂ
ಭೂಧರ ಭುವನ ವಿರೋಧಿ ಯಮಕುಲ ಮ
ಹೋದಧಿ ಚಂದ್ರಮ ಪಾಲಯ ಮಾಂ
ಬೋಧ ಬುದ್ಧ ತನು ಶ್ರೀ ದಕಲ್ಕಿ ಕಪಿ
ಲಾದಿರೂಪ ಹೇ ಪಾಲಯ ಮಾಂ ೭
ಶರಣಾಗತ ರಕ್ಷಾಮಣಿ ಶಾಙ್ರ್ಗ
ಅರಿದರಧರ ತವ ದಾಸೋಹಂ
ಪರ ಪುರಷೋತ್ತಮ ವಾಙ್ಮನೋಮಯ ಭಾ
ಸ್ಕರ ಸನ್ನಿಭ ತವ ದಾಸೋಹಂ
ಗರುಡಸ್ಕಂಧ ಕರಾರೋಪಿತ ಪದ
ಸರಸಿಜಯುಗ ತವ ದಾಸೋಹಂ
ಉರಗಾಧಿಪ ಪರಿಯಂಕಶಯನ ಮಂ
ದರ ಗಿರಿಧರ ತವ ದಾಸೋಹಂ ೮
ಸೃಷ್ಟಿ ಸ್ಥಿತಿಲಯಕಾರರೂಪ ಪ್ರ
ಹೃಷ್ಟ ತುಷ್ಟತವ ದಾಸೋಹಂ
ಪುಷ್ಟ ಮಹಿಮ ಪರಮೇಷ್ಟಿ ಜನಕ
ಶಿಷ್ಟೇ ಷ್ಟದಿಷ್ಟ ತವ ದಾಸೋಹಂ
ಜೇಷ್ಠ ಶ್ರೇಷ್ಠ ತ್ರಿವಿಷ್ಠ ದಾರ್ಚಿತ
ವೃಷ್ಣಿವರ್ಯ ತವ ದಾಸೋಹಂ
ಅಷ್ಟ ಫಲಪ್ರದ ಪಕ್ಷಿಧ್ವಜ ಜಗನ್ನಾಥ
ವಿಠ್ಠಲ ತವ ದಾಸೋಹಂ ೯

ಈ ಎರಡು ಕೀರ್ತನೆಗಳು
೫೪
ಶ್ರೀ ವೆಂಕಟಾಚಲ ನಿವಾಸ ನಿನ್ನ
ಸೇವಾನುಸೇವಕರ ದಾಸಾ ಎನಿಸಿ
ಜೀವಿಸುವ ನರಗೆ ಆಯಾಸಾ ಯಾಕೆ
ಶ್ರೀವರನೆ ಕೊಡು ಎಮಗೆ ಲೇಸಾ ೧
ಸ್ವಾಮಿ ಕಂಸಾರಿ ಪ್ರಭು ನಿನ್ನ ದಿವ್ಯ
ನಾಮ ಒದಗಲು ಜಿಹ್ವೆಗೆನ್ನಾ ದೋಷ
ಸೀಮೆಗಾಣದಿದ್ದರೆನ್ನ ಸ್ವಾಮಿ
ನೀ ಮರೆಯಲಾಗದು ಸುಪ್ರಸನ್ನ ೨
ನೀಚ ಯೋನಿಗಳಲ್ಲಿ ಬಂದೆ ಇನ್ನು
ನಾಚಿಕಿಲ್ಲವೊ ಎನಗೆ ತಂದೆ ನೀನೆ
ಮೋಚಕನು ಬಿನ್ನಪ ವಿದೆಂದೆ ಸವ್ಯ
ಸಾಚಿಸಖ ಕೈಪಿಡಿಯೋ ತಂದೆ ೩
ನಾನೊಬ್ಬನೇ ನಿನಗೆ ಭಾರವಾದೆ
ನೇನೊ ಸಂತತ ನಿರ್ವಿಕಾರ ಎನ್ನ
ಹೀನತ್ವ ನೋಡಲ್ಕಪಾರ ಚಕ್ರ
ಪಾಣಿ ಮಾಡಿದಿರೆನ್ನ ದೂರ ೪
ಕಂಡ ಕಂಡವರಿಗಾಲ್ಪರಿದು ಬೇಡಿ
ಬೆಂಡಾದೆ ನಿನ್ನಂಘ್ರಿ ಮರೆದು ದಿಟ
ತೊಂಡವತ್ಸಲನೆಂಬ ಬಿರುದು ಕಾಯೊ
ಪುಂಡರೀಕಾಕ್ಷ ನೀನರಿದು ೫
ಈ ಸಮಯದೊಳೆನ್ನ ತಪ್ಪ ನೋಡಿ
ನೀ ಸಡಿಲ ಬೇಡುವರೇನಪ್ಪ ನಿನ್ನ
ದಾಸರ್ಪೆಸರ್‍ಗೊಳಲು ಬಪ್ಪಾ ದೋಷ
ನಾಶವಾಗೋದು ತಿಮ್ಮಪ್ಪ ೬
ಕಾಮಾದಿಗಳ ಕಾಟದಿಂದ ನಿನ್ನ
ನಾ ಮರೆದೆ ಸಚ್ಚಿದಾನಂದ ಎನ್ನ
ಈ ಮಹಾ ದೋಷಗಳ ವೃಂದ ನೋಡದೆ
ನೀ ಮನ್ನಿಸೆನ್ನ ಮುಕುಂದ ೭
ನೀ ಪಿಡಿದವರ ಸಹಸ್ರಾರ ಸುಜನ
ಪಾಪಾಟವಿಗೆ ಸುಕುಠಾರಾ ಜಗ
ದ್ವ್ಯಾಪಕನೆ ಎನ್ನ ಸಂಸಾರ ಘೋರ
ಕೊಪದಿಂದೆತ್ತಯ್ಯ ಧೀರ ೮
ಸಿಂಧೂರ ರಾಜ ಪರಿಪಾಲ ಕೋಟಿ
ಕಂದರ್ಪ ಲಾವಣ್ಯ ಶೀಲ ಧರ್ಮ
ಮಂದಾರ ಭೂಜಾಲಪಾಲ ಯೋಗಿ
ಸಂದೋಹ ಹೃತ್ಕುಮುದ ಶೀಲಾ ೯
ಶಿವನ ವೈರಿಯ ಕೊಂದ ಶಕ್ತ ಪುಣ್ಯ
ಶ್ರವಣ ಕೀರ್ತನ ನಿನ್ನ ಭಕ್ತಾ ಜನರ
ಭವದೊಳಗೆ ದಣಿಸುವುದು ಯುಕ್ತವೇನೊ
ಭುವನ ಪಾವನ ನಿತ್ಯಮುಕ್ತ ೧೦
ಶ್ರೀಕರ ಶ್ರೀಮದಾನಂತ ನಿಖಿಳ
ಲೋಕೈಕನಾಥ ನಿನ್ನಂಥ ಸಖರ
ನಾ ಕಾಣೆನೆಲ್ಲಿಯೂ ಮಹಂತಾ ಎನ್ನ
ನೀ ಕಾಯೋ ಕಂಡ್ಯ ಭೂಕಾಂತಾ ೧೧
ಕರ ಕರ್ಮ ಚಿತ್ರತ್ವಗ್ರಸನ ಕಾಯ
ಕರಣ ಮನಹಂಕಾರ ಘ್ರಾಣಾ ಬುದ್ದಿ
ಚರಣ ಪಾಯೂಪಸ್ಥ ನಯನಜಾತ
ಉರುಪಾಪ ಕ್ಷಮಿಸು ಶ್ರೀ ರಮಣಾ ೧೨
ಅನಿಮಿತ್ತ ಬಂಧು ನೀಯೆನ್ನ ಬಿಡುವು
ದನುಚಿತವೋ ಲೋಕಪಾವನ್ನ ಚರಿತ
ಮನ ವಚನ ಕಾಯದಲಿ ನಿನ್ನ ಪಾದ
ವನಜ ನಂಬಿದೆ ಸುಪ್ರಸನ್ನಾ ೧೩
ನೀನಲ್ಲದೆನಗೆ ಗತಿಯಿಲ್ಲ ಪವ
ಮಾನವಂದಿತ ಕೇಳೋ ಸೊಲ್ಲ ಎನ್ನ
ಜ್ಞಾನೇಚ್ಛೆ ಕ್ರಿಯಂಗಳೆಲ್ಲಾ ನಿನ್ನ
ಧೀನವಲ್ಲವೆ ಲಕ್ಷ್ಮೀನಲ್ಲಾ ೧೪
ಪ್ರಾಚೀನ ಕರ್ಮಾಂಧ ಕೂಪದೊಳಗೆ
ಯೋಚಿಸುವ ನರರ ಸಂತಾಪ ನಿನಗೆ
ಗೋಚರಿಸದೇನೋ ಬಹುರೂಪ ವೆಂಕ
ಟಾಚಲನಿಲಯ ಪಾಹಿ ಶ್ರೀಪಾ ೧೫
ಯಾಕೆ ದಯ ಬಾರದೆನ್ನಲ್ಲಿ ನರಕ
ನಾಕ ನರಕ ಭೂ ಲೋಕಂಗಳಲ್ಲಿ ಚರಿಸಿ
ನಾ ಕಷ್ಟಪಟ್ಟ ಬಗ್ಗೆ ನೀ ಬಲ್ಲಿ ವೀತ
ಶೋಕ ಕೊಡು ಭಕುತಿ ನಿನ್ನಲ್ಲಿ ೧೬
ನಿನ್ನಂಘ್ರಿ ದರುಶನವ ಕೊಡದೆ ಹೀಗೆ
ಬನ್ನ ಬಡಿಸುವರೇನೋ ಬಿಡದೆ ನಾನು
ಮುನ್ನ ಮಾಡಿದ ಪಾಪ ಕೆಡದೆ ನೀ ಪ್ರ
ಪನ್ನ ವತ್ಸಲನೆಂದು ನುಡಿದೆ ೧೭
ತಾಪತ್ರಯಗಳಿಂದ ನೊಂದೆ ಮಹಾ
ಪಾಪಿಷ್ಠರಲ್ಲನ್ನ ತಿಂದೆ ಇನ್ನು
ಆಪರೇತೇಶ್ವರನ ಮುಂದೆ ಪೋಗಿ
ನಾ ಪೇಕೊಳಲೇನು ತಂದೆ ೧೮
ದೇಹ ಸಂಬಂಧಿಗಳ ಸಹಿತವಾಗಿ
ನಾ ಹೊಂದಿದೆನು ಲೋಕಮೋಹಿತ ಎನ್ನ
ಮೋಹಿಪ್ರದು ನಿನ್ನಗೇನು ವಿಹಿತ ಹೃದಯ
ಬಾಹಿರಂತರದಿ ಸನ್ನಿಹಿತ ೧೯
ಪೋಗುತಿದೆ ದಿವಸ ಕಮಲಾಕ್ಷ ಪರಮ
ಯೋಗೇಶ ನಿನ್ನ ಅಪರೋಕ್ಷ ಎನಗೆ
ಹೇಗಾಗುವುದೊ ಸುರಾಧ್ಯಕ್ಷ ದುರಿತ
ನೀನು ಕಾಮಿತ ಕಲ್ಪವೃಕ್ಷ ೨೦
ಗತಿಯಾರು ನಿನ್ನುಳಿದು ದೇವ ರಮಾ
ಪತಿ ನೀನೆ ಭಕ್ತ ಸಂಜೀವ ಎನ್ನ
ಸತಿಸುತರ ಅನುದಿನದಿ ಕಾವ ಭಾರ
ಸತತ ನಿನ್ನದು ಮಹಾನುಭಾವ ೨೧
ದೊಡ್ಡವರ ಕಾಯ್ವುದೇನರಿದು ಪರಮ
ದಡ್ಡರನು ಕಾಯ್ವದೇ ಬಿರುದು ಎನ್ನ
ಗುಡ್ಡದಂತಹ ಪಾಪ ತರಿದು ಕಾಯೋ
ವಡ್ಡಿ ನಾಯಕ ಸಾರೆಗರದೊ ೨೨
ಜ್ಞಾನಿಗಳು ನೀಚರಲಿ ಕರುಣಾ ಮಾಡ
ರೇನೋ ಬಿಡುವರೇ ರಥಚರಣ ಪಾಣಿ
ಭಾನು ಚಂಡರವಿಕಿರಣ ಬಿಡದೆ
ತಾನಿಪ್ಪನೆ ರಮಾರಮಣ೨೩
ಆಡಲ್ಯಾತಕೆ ಬಹಳ ಮಾತಾ ಪರರ
ಬೇಡಲಾರೆನೋ ಜಗತ್ರಾತಾ ಹೀಗೆ
ಮಾಡುವರೇ ಕೆಳೆನ್ನ ಮಾತ ನೀನೆ
ನೀಡೆನಗೆ ಪುರುಷಾರ್ಥ ದಾತಾ ೨೪
ಬೇಡಲೇತಕೆ ಬಹಳ ಮಾತಾ ಎನ್ನ
ಕೇಡು ನಿನ್ನದಲ್ಲೇ ಬಲಿದೌತ ಪಾದ
ಬೇಡಿಕೊಂಬುವೆ ನಾನನಾಥ ದೂರ
ನೋಡಲಾಗದು ಪಾರ್ಥಸೂತ ೨೫
ಸಾರಸದ್ಭಕ್ತಿಯಲಿ ನಿತ್ಯ ಬಿಡದೆ
ಶಾರದೇಶನ ನುತಿಪ ಭಕ್ತ ಜನರ
ಪಾರ ಸಂತೈಸುವುದು ಮಿಥ್ಯವಲ್ಲ
ಶ್ರೀರಮಣ ಸಾಕ್ಷಿದಕೆ ಸತ್ಯಾ ೨೬
ಫಣಿರಾಜ ಭೋಗ ಪರಿಯಂತ ಶಯನ
ಪ್ರಣತಾರ್ತಿ ಹರನೆಂಬೊ ಅಂಕಾ ಕೇಳಿ
ಮಣಿದ ನಿನ್ನಂಘ್ರಿಗೆ ಶಶಾಂಕಾ ಭಾಸ
ದಣಿಸಲಾಗದು ನಿಷ್ಕಳಂಕಾ೨೭
ಕಾರ್ತವೀರ್ಯಾಜುನನ ಕೊಂದ ಭವ್ಯ
ಕೀರ್ತಿ ನಿನ್ನಾನಂದ ವೃಂದ ಸತತ
ಕೀರ್ತಿಸುವ ನರರ ಬಹುಕುಂದ ನೋಡ
ದಾರ್ತನ್ನ ಪೊರೆಯೊ ಗೋವಿಂದ ೨೮
ದಯದಿಂದ ನೋಡೆನ್ನ ಹರಿಯೆ ಜಗ
ನ್ಮಯನೆ ಜ್ಞಾನಾನಂದ ವೃಂದ ಸಿರಿಯೆ ಮನಾ
ಮಯವ ಪರಿಹರಿಸಿನ್ನು ದೊರೆಯೆ ಸರ್ವ
ಭಯದೂರರಿನ್ನೊಬ್ಬರರಿಯೇ ೨೯
ನರಸಿಂಹ ನಿನ್ನುಳಿದು ಜಗವ ಕಾಯ್ವ
ಪರದೈವರುಂಟೆಂದು ಬಗೆವ ನರರ
ಪರಮೋಷ್ಠಿ ರಾಯನು ನಗುವ ನಿತ್ಯ
ನಿರಯಾಂಧ ರೂಪದೊಳು ಹುಗಿವಾ ೩೦
ದಾಸ ದಾಸರ ದಾಸನೆಂದು ಬಿಡದೆ
ನೀ ಸಲಹೋ ಎನ್ನನೆಂದೆಂದೊ ನಿನ್ನ
ನಾ ಸೇವಿಸುವೆ ಕೃಪಾಸಿಂಧು ಎಮ್ಮನು
ದಾಸಿಸದನಿಮಿತ್ತ ಬಂಧೂ ೩೧
ಎಂದೆಂದು ನೀ ಬಡವನಲ್ಲ ನಿನ್ನ
ಪೊಂದಿದವನ ಬಿಡುವವನಲ್ಲ ಹೃದಯ
ಮಂದಿರದೊಳಗೆ ಬಲ್ಯಲ್ಲಾ ಚಿದಾ
ನಂದ ನೀ ಭಕ್ತ ವತ್ಸಲ್ಲಾ ೩೨
ಕಾಮಿತಪ್ರದನೆಂಬ ಬಿರಿದು ಕೇಳಿ
ನಾ ಮುದದಿ ಬಂದೆನೋ ಅರಿದು ಎನ್ನ
ತಾಮಸ ಮತಿಗಳೆಲ್ಲ ತರಿದು ಮಮ
ಸ್ವಾಮಿ ನೋಡೆನ್ನ ಕಣ್ದೆರದು೩೩
ಹಿತವರೊಳು ನಿನಗಧಿಕರಾದ ತ್ರಿದಶ
ತತಿಗಳೊಳು ಕಾಣೆನೋ ಪ್ರಮೋದ ನೀನೆ
ಗತಿಯೆಂದು ನಂಬಿದೆ ವಿವಾದವ್ಯಾಕೊ
ಪತಿತಪಾವನ ತೀರ್ಥಪಾದ ೩೪
ಮಡದಿ ಮಕ್ಕಳು ತಂದೆ ತಾಯಿ ಎನ್ನ
ಒಡಹುಟ್ಟಿದವರ ನೀ ಕಾಯಿ ಲೋಕ
ದೊಡೆಯ ನೀನಲ್ಲದಿನ್ನಾರೈ ಎನ್ನ
ನುಡಿ ಲಾಲಿಸೋ ಶೇಷಶಾಯಿ ೩೫
ಅನುಬಂಧ ಜನರಿಂದ ಬಪ್ಪ ಕ್ಲೇಶ
ವನುಭವಿಸಲಾರೆ ಎನ್ನಪ್ಪ ಉದಾ
ಸೀನ ಮಾಡಿ ದಯಮಾಡದಿಪ್ಪರೇನೋ
ಘನ ಮಹಿಮ ಫಣಿರಾಜತಲ್ಪ ೩೬
ಹದಿನಾಲ್ಕು ಲೋಕಂಗಳನಾಳ್ವ ಬ್ರಹ್ಮ
ಮೊದಲಾದವರು ನಿನ್ನ ಚಲ್ವನಖದ
ತುದಿ ಬಣ್ಣ ಕಂಡು ಕಡೆ ಬೀಳ್ವದಿಲ್ಲಾ
ವಿಧಿಸಲಾಪೆನೆ ನಿನ್ನ ಸಲ್ವಾ ೩೭
ಧನ ಧಾನ್ಯ ಪಶು ಪತ್ನಿ ಗೇಹ ಜನನೀ
ಜನಕ ಜಾಮಾತ ಸಖ ನೇಹ ಅನುಜ
ತನುಜಾಪ್ತವರ್ಗದಿಂದಾಹ ಸೌಖ್ಯ
ನಿನಗರ್ಪಿಸಿದೆ ಎನ್ನ ದೇಹಾ ೩೮
ನೀನಿತ್ತ ಸಂಸಾರದೊಳಗೆ ಸಿಲುಕಿ
ನಾನೊಂದೆ ಕರೆ ನಿನ್ನ ಬಳಿಗೆ ಚರಣ
ಧ್ಯಾನ ದೊರಕಲು ಭವದಿ ಮುಳುಗೆ ನಿನ್ನ
ಕಾಣದಿರಲಾರೆನರ ಘಳಿಗೆ ೩೯
ಸಲುಗೆ ಬಿನ್ನಪವ ನೀ ಕೇಳೋ ಎನ್ನ
ಬಲು ದುರುಳತನವ ನೀ ತಾಳೋ ನೀನೆ
ನೆಲೆಯಲ್ಲದೆನಗಾರು ಪೇಳೋ ಎನ್ನ
ಕುಲದೈವ ಬಹುಕಾಲ ಬಾಳೋ೪೦
ಸಾಂದೀಪ ನಂದನನ ತಂದ ನಂದ
ನಂದನನೆ ಎನ್ನ ಭವ ವೃಂದ ಕಳೆದು
ಎಂದೆಂದು ಕುಂದದಾನಂದವೀಯೋ
ಇಂದಿರಾರಮಣ ಗೋವಿಂದ೪೧
ವಿಶ್ವ ತೈಜಸ ಪ್ರಾಜ್ಞ ತುರಿಯಾ ಎನ್ನ
ದುಸ್ವಭಾವವ ನೋಡಿ ಪೊರೆಯದಿಹರೆ
ನಿಸ್ರ‍ಪಹ ನಾನಿನ್ನಂಘ್ರಿ ಮೊರೆಯ ಪೊಕ್ಕೆ
ಅಸ್ವತಂತ್ರನ ಕಾಯೋ ಪಿರಿಯಾ೪೨
ಇಹಪರದಿ ಸೌಖ್ಯ ಪ್ರದಾತ ನೀನೆ
ಅಹುದೋ ಲೋಕೈಕ ವಿಖ್ಯಾತ ಮಹಾ
ಮಹಿಮ ಗುಣಕರ್ಮ ಸಂಜಾತ ದೋಷ
ದಹಿಸು ಸಂಸಾರಾಬ್ದಿ ಪೋತಾ ೪೩
ಲೋಕಬಾಂಧವನೆಂಬ ಖ್ಯಾತಿಯನ್ನು
ನಾ ಕೇಳಿದೆನು ಖಳಾರಾತಿ ಮನೋ
ಶೋಕ ಮೋಹಾಜ್ಞಾನ ಭೀತಿ ಬಿಡಿಸು
ಶ್ರೀ ಕರಾರ್ಚಿತ ಸ್ವಯಂ ಜ್ಯೋತಿ೪೪
ಒಂದು ಗೇಣೊಡಲನ್ನಕಾಗಿ ಅಲ್ಪ
ಮಂದಭಾಗ್ಯರ ಮನೆಗೆ ಪೋಗಿ ದೈನ್ಯ
ದಿಂದ ಸತ್ಕರ್ಮಗಳ ನೀಗಿ ಕಂದಿ
ಕುಂದಿದೆನೋ ಸಲಹೋ ಲೇಸಾಗಿ೪೫
ಪಾತಕರೊಳಗಧಿಕ ನಾನಯ್ಯ ಜಗ
ತ್ಪಾತಕವ ಕಳೆವ ಮಹಾರಾಯ ನಿನ್ನ
ದೂತನಲ್ಲವೆ ಜೀಯ ಜಗ
ನ್ನಾಥ ವಿಠ್ಠಲ ಪಿಡಿಯೋ ಕೈಯಾ ೪೬

೧೭೯
ಶ್ರೀ ಶವಿಠ್ಠಲ ನೀನೆ ಸಂತೈಪುದು
ಕ್ಲೇಶನಾಶನ ನಿನ್ನದಾಸರವನೆಂದರಿತು ಪ
ಭೂದೇವ ಜನ್ಮವಿತ್ತವಗೆ ನೀ ದಯದಿಂದ
ಸಾಧು ಜನಸಂಗ ಸುಜ್ಞಾನ ಭಕುತಿ
ಸಾದರದಿ ನಿನ್ನ ತುತಿಸುವ ಭಾಗ್ಯ ಕರುಣಿಸಿದೆ ಕೃ
ಪೋದಧಿಯೆ ನಿನಗೆ ನಾ ನಮಿಪೆ ಬಹು ಬಗೆಯಿಂದ ೧
ಯೋಗ್ಯತೆಗಳನು ಬಲ್ಲೆ ಬಹು ಜೀವರೊಳಗಿದ್ದು
ಅಜ್ಞಾನಿ ನೀನಲ್ಲ ಸರ್ವಜ್ಞನೆಂದು
ವಿಜ್ಞಾಪಿಸುವೆ ನಿರುತ ವಿನಯದಿಂದಲಿ ಪರಮ
ಭಾಗ್ಯವಂತನೆ ನಿನ್ನ ಪಾದಕಮಲಕೆ ಬಿಡದೆ ೨
ಸಕಲ ಲೋಕಗಳ ನಾಯಕ ಇವಗೆ ಹೇಯ ಲೌ
ಕಿಕ ಮಾರ್ಗವನೆ ಬಿಡಿಸಿ ಸತ್ಯದಲ್ಲಿ
ಪ್ರಕಟವನೆ ಗೈಸು ಸದ್ಧರ್ಮ ಕರ್ಮಗಳ ದೇ
ವಕಿತನಯ ಶ್ರೀ ಜಗನ್ನಾಥವಿಠ್ಠಲ ಒಲಿದು ೩

ಚಿಣ್ಣವತ್ಸನು ……ಕಣ್ಣು ತಪ್ಪಿಸು
೭೭
ಶ್ರೀ ಹನುಮ ಮಾಂ ಪಾಹಿ ಪವನ ಜ
ಮೋಹದಾಹನನೆ ಖಗ ವಾಹನನ ದಾಸ
ನೇಹದಲಿ ಬಿಂಬರೂಪ ತೋರೆನಗೆ ಪ
ಭಾನುಸುತ ಪವಮಾನ ನಂದನ
ನೀನೆ ಸಲಹಿದೆ
ಮಾನನಿಧಿ ರಾಮಬಾಣದಲಿ ಇಂದ್ರ
ಸೂನುವಿನ ಪ್ರಾಣ
ಹಾನಿಯ ಗೈಸಿ ಮೇಣ್ ಆ ಕಿಷ್ಕಿಂಧ ನಗರದಲ್ಲಿ
ವಾನರೇಂದ್ರಗೆ
ನಾನಾ ಪರಿಯಲ್ಲಿ ಆನಂದವಿತ್ತ
ಜ್ಞಾನಿ ನಿನ್ನ ಅಧೀನದವನೆಂದೆಂದು ೧
ಸುರೇಶನಂದನ ಮಾರುತನೆ ನಿನ್ನ
ಕರುಣವು ಎನ್ನೊ
ಳಿರದ ಕಾರಣ ಹರಿ ಮುನಿದನೆಂದು
ಅರಿದು ಮನದಿ ದ್ವಾ
ಪರದಲ್ಯವ ತರಿಸಿ ಗುರುವರ್ಯ ನಿಮ್ಮ
ಚರಣ ಸೇವಿಸೆ
ಪೊರೆದೆ ಅಂದು ಸಮರದಿ ಕೃಷ್ಣನ
ಪರಮಕೃಪೆ ಪಡೆದವರಿಗೆ ನಿನ್ನಯ ಕರುಣ ಕಾರಣವೊ ೨
ಮೂರನೆಯ ಅವತಾರದಿಂದಲಿ
ಧಾರುಣಿಯೊಳು ………. ಬೀರಿದ್ದ ಶಾಸ್ತ್ರವ
ಬೇರೊರಿಸಿ ಕೀಳ್ದು
ತೋರಿಸಿದಿ ಹರಿಯ ಆರು ನಿನ್ನನು
ಆರಾಧಿಪರೊ ಆ
ಧೀರರಿಗೆ ದೋಷ ಸೇರಲಮ್ಮವು
ಮಾರಪಿತ ಜಗನ್ನಾಥ ವಿಠಲನ ಕರುಣ ವಾಹುದೊ ೩

೧೭೮
ಶ್ರೀದ ವಿಠಲ ಸರ್ವಾಂತರಾತ್ಮಾ
ನೀ ದಯದಿ ಒಲಿದು ನಿತ್ಯದಲಿ ಕಾಪಾಡುವುದು ಪ
ಚಿಕ್ಕ ತನದಲಿ ತಂದೆತಾಯಿಗಳು ಒಲಿದು ಪೆಸ
ರಿಕ್ಕಿ ಕರೆದರು ನಿನ್ನ ದಾಸನೆಂದೂ
ಅಕ್ಕರದಿ ಒಲಿದು ಭವದುಃಖಗಳ ಪರಿಹರಿಸಿ
ಮಕ್ಕಳನು ತಾಯ್ಸಲಹುವ ತೆರದಿ ಸಂತೈಸು ೧
ಶುಕನಯ್ಯ ನಿನ್ನ ಪದಭಕುತಿ ತ್ವತ್ಕಥಾಶಾಸ್ತ್ರ
ಯುಕುತಿವಂತರ ಸಂಗಸುಖವನಿತ್ತು
ಸಕಲ ಕರ್ಮಗಳ ವೈದಿಕವೆನಿಸು ಬಲಿದು ದೇ
ವಕಿತನಯ ನಿನ್ನವರ ಮುಖದಿಂದ ಪ್ರತಿದಿನದಿ ೨
ಮಾತರಿಶ್ವಪ್ರಿಯ ಸುರೇತರಾಂತಕನೆ ಪುರು
ಹೂತನಂದನಸಖ ನಿರಾತಂಕದಿ
ನೀ ತೋರು ಮನದಿ ಸಂಪ್ರೀತಿಯಿಂದಲಿ ಒಲಿದು
ಹೋತಾಹ್ವಗುರು ಜಗನ್ನಾಥ ವಿಠಲ ಬಂಧು ೩

ಶ್ರೀನಿಕೇತನ’ ಎಂಬುದು
೨೦
ಶ್ರೀನಿಕೇತನ ಪಾಲಯ ಮಾಂ ಪ
ಜ್ಞಾನಗಮ್ಯ ಕರುಣಾನಿಧೆ ನಿನ್ನಡಿ
ಗಾನಮಿಸುವೆ ಪೊರೆ ದೀನ ದಯಾಳೊ ಅ
ಜ್ಞಾನ ಮಾನದ ಶರಣರ ಸುರಧೇನು ಸರ್ವದಾ
ನೀನೆಂದರಿದು ಸದಾನುರಾಗದಲಿ
ಧೇನಿಪೆ ಮನದನುಮಾನವ ಕಳೆಯೋ ೧
ಶ್ರೀ ಕರಾರ್ಚಿತ ಪದಾಬ್ಜ ಪರಾಕು ಅಚ್ಯುತ
ಶೋಕನಾಶನ ವಿಶೋಕ ಸುಲಭ ಹೃದ್
ವ್ಯಾಕುಲ ಕಳೆ ಏಕ ಪ್ರಕಾರದಿ ಒಲಿದು ೨
ಪನ್ನಗಾಚಲ ನಿವಾಸ ಪ್ರಪನ್ನ ವತ್ಸಲಾ
ಬಿನ್ನಪ ಕೇಳು ಜಗನ್ನಾಥ ವಿಠ್ಠಲ
ಧನ್ಯನಮಾಡು ಶರಣ್ಯ ಶರಣನ ೩

ಪ್ರಾಣದೇವರ ಸ್ತೋತ್ರವಿದು.
೨೧
ಶ್ರೀಶ ಬ್ರಹ್ಮ ಸದಾಶಿವಾದಿ ಸುರಾರ್ಚಿತ ದಾಶರಥಿ ತವ
ದಾಸರೊಳಗಿಟ್ಟು ನೀ ಸಲಹೊ ವಿಷಯಾಶೆಗಳ ಬಿಡಿಸಿ ಪ
ಲೋಕನೀಯ ವಿಶೋಕ ಭಕ್ತರ
ಶೋಕ ಮೋಹವ ನೀ ಕಳೆದು ಸುಖ
ವೇ ಕರುಣಿಸು ಕೃಪಕಟಾಕ್ಷದಿ ಅಕೂತಿತನಯ
ವಾಕುಮನ್ನಿಸನೇಕ ಮಹಿಮ ವಿ
ವೇಕ ಬುದ್ದಿಯ ನೀ ಕೊಡೆನೆಗೆ ಪಿ
ನಾಕಿಸುತ ಪರಲೋಕದಾಯಕ
ಲೌಕಿಕವ ಬಿಡಿಸೊ೧
ವೈರಿವರ್ಗಗಳಾರು ಇಂದ್ರಿಯ
ದ್ವಾರದೊಳು ಪೊಕ್ಕು ಚಾರುಧರ್ಮದ
ದಾರಿ ಮನಸಿಗೆ ತೋರ ಗೊಡದಲೆ
ನಾರಿ ಧರಣಿ ಧನಾ ಹಾರಯಿಸುತಿದ್ದು
ಘೋರಿಸುತಿವೆ ಮುರಾರಿ ತವಚರ
ಣಾರವಿಂದವ ತೋರಿ ಮನದಿ ಸಂ
ಸಾರ ಶರಧಿಯ ತಾರಿಸನುದಿನ೨
ವೀತಭಯ ಭವವೈರಿ ತರಣಿ ನವ
ಪೋತ ಕಾಲವ ಭೀತಿ ಬಿಡಿಸು ಪುರು
ಹೂತನ ಪ್ರಿಯ ಮಾತುಳಾಂತಕ
ಮಾತುಗಳನೆ ಮನ್ನಿಸಿ
ಶ್ವೇತವಾಹನ ಸೂತಸುಖಮಯ
ವಾತಪಿತ ಜಗನ್ನಾಥವಿಠ್ಠಲ
ಪಾತಕಾರಣ್ಯ ವೀತಿಹೋತ್ರ ನಾ ತುತಿಪೆನೆ ನಿನ್ನಾ ೩

೯೭
ಶ್ರೀಶೈಲದೊಳಗಿಪ್ಪ ಸ್ವಾಮಿ ಪುಷ್ಕರಣಿ ಇತಿ
ಹಾಸವ ದಿಲೀಪನೃಪ ಬೆಸಗೊಳಲು ಕೇಳಿ ದು
ರ್ವಾಸಮುನಿ ಪೇಳ್ದ ಇನಿತೆಂದು ಸಜ್ಜನರಿದನು
ಕೇಳಿ ಸಂತೋಷಿಸುವುದು ಪ
ಮುನಿಕುಲೋತ್ತಮ ನೆನಿಸಿ ದುರ್ವಾಸಋಷಿ ದಿಲೀ
ಪನ ಸದನವೈದಿರಲು ಕೇಳಿ ಸಂತೋಷದಲಿ
ವಿನಯೋಕ್ತಿಯಿಂದ ತಲೆವಾಗಿ ಕರಗಳ
ಮುಗಿದು ವಿಜ್ಞಾಪಿಸಿದನು ಋಷಿಗೆ
ಅನಿಮಿಷೇಶಾ ವೆಂಕಟನ ನಾಮಧೇಯ ಕುಂ
ಭಿಣಿ ಯೊಳಿಪ್ಪಾಖ್ಯಾನ ತೀರ್ಥಗಳ ವೈಭವಗ
ಳೆನಗರುಪುವುದು ಯೆಂದು ಭಕ್ತಿಯಲಿ ಬೆಸಗೊಳಲು
ದುರ್ವಾಸ ಪೇಳೊದಗಿದಿ ೧
ಕೇಳು ರಾಜೇಂದ್ರ ವೆಂಕಟ ಪರ್ವತನು ಮೇರು
ಶೈಲಾತ್ಮಜನು ವಾಯು ಶೇಷರ ಸುಸಂವಾದ
ಮೂಂದಿಂದೈವತ್ತು ಸಾಹಸ್ರಯೋಜನದ
ಸ್ವರ್ಣ ಮುಖರೀ ತೀರದಿ
ಬೀಳಲ್ಕೆ ನೊಂದು ಪ್ರಾರ್ಥಿಸಿದ ಶೇಷನು ಎನ್ನ
ಮ್ಯಾಲೆ ಮಲಗಿಪ್ಪ ತೆರದಂತೆ ದಯದಿಂ ನೀನೆ
ಪಾಲಿಸೆಂದೆನೆ ಬಂದು ನೆಲೆಸಿದುದರಿಂದ ಗಿರಿ
ಶೇಷಾದ್ರಿಯೆನಿಸುತಿಹುದು ೨
ಈ ನಗೋತ್ತಮದಾದಿ ಮಧ್ಯಾವಸಾನ ಪ್ರ
ಸೂನು ಫಲ ಸಂಯುಕ್ತ ಸಾನುಗಳ ಸುರುಚಿಕೋ
ದ್ಯಾನಗಳನುಳಿದು ಲಕ್ಷ್ಮೀ ಸಹಿತ ಸ್ವಾಮಿ
ಪುಷ್ಕರಣಿ ತೀರ್ಥದ ತಟದಲಿ
ಶ್ರೀನಿವಾಸನು ಬಂದು ನಿಂತ ಕಾರಣವೆನಗೆ
ನೀನರುಪುವುದು ಯೆಂದು ಬೆಸಗೊಳಲು ದುರ್ವಾಸ
ಮುನಿ ಪೇಳಿದ ಪೂರ್ವದಿತಿಹಾಸ ಇನಿತೆಂದು
ನೃಪಗೆ ಹರುಷೋದ್ರೇಕದಿ ೩
ತೀರ್ಥೋತ್ತಮತ್ವ ಸಾಪೇಕ್ಷಿಯಿಂದಲಿ ಬ್ರಹ್ಮ
ಪತ್ನಿ ಪೂರ್ವದಲಿ ಬ್ರಹ್ಮಾವರ್ತ ದೇಶದೊಳ
ಗುತ್ತಮ ಶೋಕನಂ ಭಜಿಸುತಿರೆ ತಾಪಸೋತ್ತಮ
ಪುಲಸ್ತಾಖ್ಯ ಮುನಿಪ
ತತ್ತೀರದಲಿ ತಪವಗೈವೆನೆಂದೆನುತ ಬರೆ
ಪುತ್ರನೆಂದರಿದು ಮನ್ನಿಸದಿರಲು ಕೋಪದಲಿ
ಇತ್ತ ಶಾಪವ ನೀನಪೇಕ್ಷಿಸಿದ ತಪವು
ನಿಷ್ಫಲವಯೈದಲೆಂದು ನುಡಿದ ೪
ನದ್ಯೋತ್ತಮತ್ವ ಜಾಹ್ನವಿಗಿರಲಿ ಗುಣಗಳಿಂ
ಸ್ವರ್ಧುನಿಯು ನೀಚಳಾದರೆಯು ಸರಿ ಲೋಕ ಪ್ರ
ಸಿದ್ಧ ನದಿಗಳೊಳು ಉತ್ರ‍ಕಷ್ಟಳಾಗಲಿ ವಿಷ್ಣು
ಪಾದ ಪ್ರಸಾದದಿಂದ
ಉದ್ಧಟೋಕ್ತಿಯ ಕೇಳಿ ವಾಗ್ದೇವಿ ನುಡಿಗಳು ಭ
ವದ್ವಂಶರೆಲ್ಲ ರಾಕ್ಷಸರಾಗಿ ಬಹಳ ವಿ
ಷ್ಣುದ್ವೇಷ ಸಂಪಾದಿಸಲಿಯೆನಲು ಮುನಿವರನು
ಪದಕೆರಗಿ ಬಿನ್ನೈಸಿದ ೫
ಅನಭಿಜ್ಞ ಲೋಕೋಪಕಾರ ತಪವೆಂದರಿಯ
ದನುಚಿತೋಕ್ತಿಗಳನಾಡಿದೆ ಮಯಾಕೃತದೋಷ
ವೆಣಿಸದೆ ವಿಶಾಪವಿತ್ತೆನ್ನನುದ್ಧರಿಸೆಂದು
ಮುನಿವರನು ಸಂಪ್ರಾರ್ಥಿಸೆ
ಪುನರಪಿ ವಿಶಾಪವಿತ್ತಳು ಪ್ರಸನ್ಮುಖಳಾಗಿ
ಜನಿಸಲೀ ಭವದ ಪ್ರಾಂತಕ್ಕೆವರ ವಿಭೀ
ಷಣ ವಿಷ್ಣು ದಾಸ ಕಲ್ಪ ಸ್ಥಾಯಿಯೆಂದು
ಭಗವದ್ಧ್ಯಾನಪರಳಾದಳು ೬
ತೀರ್ಥೋತ್ತಮತ್ವ ಸಾಪೇಕ್ಷಯಿಂ ವಾಗ್ದೇವಿ
ಮತ್ತು ತಪದಿ ಪ್ರೀತಿಗೊಳಿಸಲ್ಕೆ ದೇವದೇ
ವೋತ್ತಮನು ಸನ್ನಿಧಾನಕೈದೆ ಕಂಡು
ಬಿನ್ನೈಸಿದಳು ವಾಂಛಿತವನು
ವ್ಯರ್ಥವಾಯಿತು ತಪವು ಬಹ್ಮ ಶಾಪದಲಿ ತೀ
ರ್ಥೋತ್ತಮತ್ವವು ಕರುಣಿಸೆಂದು ಕೇಳ್ದುದಕೆ ಪ್ರ
ತ್ಯುತ್ತರವ ನುಡಿದ ಹರಿಬ್ರಹ್ಮಾಣಿಜವದನೆ
ಇನಿತೆಂದು ಕಾರುಣ್ಯಸಿಂಧು ೭
ನದಿಯರೂಪಕೆ ಬ್ರಹ್ಮಶಾಪ ನಿನಗಾಯಿತ
ಲ್ಲದೆ ಸರೋವರಕೆ ಬ್ಯಾರಿಲ್ಲ ಪುಷ್ಕರಣಿಗಳೊ
ಳಧಿಕಳೆಂದೆನಿಸಿ ಶೇಷಾಚಲದೊಳಿರು ಪೋಗು
ಸ್ವಾಮಿ ಪುಷ್ಕರಣಿ ಎನಿಸಿ
ವಿಧಿಪತ್ನಿ ಶೇಷನೋದ್ದೇಶ ತ್ವತ್ ಸನ್ನಿಧಾ
ನದಿ ವಾಸವಾಹೆ ಸಂದೇಹವಿಲ್ಲಿದಕೆ ಸ
ರ್ವದ ನಿನ್ನ ಮಹಿಮೆ ಕೀರ್ತನೆ ಮಾಳ್ಪ
ಸಜ್ಜನರಿಗಖಿಳಾರ್ಥವೀವೆನೆಂದ ೮
ಮೂರುವರೆ ಕೋಟಿ ತೀರ್ಥಗಳು ಭುವನತ್ರಯದೊ
ಳಾರಾಧಿಸಿದರೆಯೆನ್ನ ಸ್ವಸ್ವ ಪಾಪೌಘ ಪರಿ
ಹರಗೋಸುಗ ಪೇಳೆನಿನಿತೆಂದು ಅವರಿಗೆ
ಧನುರ್ಮಾಸ ಸಿತಪಕ್ಷದ
ಈರಾರುದಿನದಲರುಣೋದಯಕೆ ತೀರ್ಥ ಪರಿ
ವಾರನೈದಿರಿ ಶುದ್ಧರಾಗುವಿರಿಯೆಂದು ತ
ತ್ತೀರದಲಿ ವಾಸವಾದನು ಮಹಪ್ರಭು ತೀರ್ಥ
ಪ್ರೇಷ್ಯತ್ವ ವಾಣಿಗಿತ್ತ ೯
ವಾಣಿದೇವಿಯು ತೀರ್ಥರೂಪಳಾಗಲು ಕೃಷ್ಣ
ವೇಣಿಸಮ ಬಕುಳ ಮಾಲಿಕೆ ತೀರ್ಥ ಭೂಮಾಭಿ
ಮಾನಿತ್ವ ಐದಿದಳು ಶ್ರೀದೇವಿಯಾಜ್ಞದಿಂ
ಹರಿಗೆ ನೈವೇದ್ಯರಚಿಸಿ
ಪಾನೀಯ ಧೀ ಭೋಗ ಪತ್ನಿ ಪೂರ್ವದಿ ಸನ್ನಿ
ಧಾನದಲ್ಲಿಪ್ಪೆನೆಂದೆನುತ ಪ್ರಾರ್ಥಿಸೆ ಶೇಷ
ಸಾನು ನೀ ತೀರ್ಥಭೂಮಾಧಿ ಪತ್ಯವನು
ತಾನಿತ್ತ ಕಮಲಾಕಾಂತನು ೧೦
ಸ್ವಾಮಿ ಪುಷ್ಕರಣಿ ನವತೀರ್ಥಮಾನಿಗಳಿಗೆ ಸು
ಧಾಮವೆನಿಸುವಳು ತತ್ತನ್ನಾಮಗಳು ಪೇಳ್ವೆ
ಶ್ರೀ ಮದ್ವರಹ ಧನಪಗಾಲ್ವ ಮಾರ್ಕಾಡೇಯ
ಅಗ್ನಿಯನು ಋಣವಿಮೋಚನಿ
ಈ ಮಹಾ ವಾಯು ತೀರ್ಥಗಳ ಸುಸ್ನಾನಲ
ಕ್ಷ್ಮೀ ಮನೋಹರನ ದರುಶನ ತತ್ವ್ರಸಾದಾತ್ರ
ಯಿ ಮೂರುಲೋಕದೊಳು ದೊರೆವುವತಿ ದುರ್ಲಭವು
ಅಲ್ಪಾಧಿಕಾರಿಗಳಿಗೆ ೧೧
ಕವಿಭಿರೀಡಿತ ಪೂಜ್ಯನೆನಿಸುವನು ಪದ್ಮಸಂ
ಭವನು ಪೂಜಕನೆನಿಪ ನೈವೇದ್ಯಕರ್ತೃ ಭಾ
ರ್ಗವಿಯೆನಿಪಳೆಂದೆಂದು ಸೇವಿಸುವ ಜನರೊಳಗೆ
ಶರ್ವಶಕ್ರಾರ್ಕ ಮುಖ್ಯ
ದಿವಿಜಗಣವಿಹರೆಂದು ಚಿಂತಿಸದೆ ಮರೆದು ಮಾ
ನವರೆ ವರ್ತಿಪರೆಂದು ತಿಳಿವವನು ಘೋರ ರೌರವ
ನರಕ ಯ್ಯೆದಿ ಚಾಂಡಾಲ ಯೋನಿಯೊಳು ಪುಟ್ಟುವ
ಧರಾತಳದೊಳೆಂದ ೧೨
ಮೇರುನಂದನ ವೈಕುಂಠಾದ್ರಿಶತಯೋಜನದ
ಮೇರೆಯೊಳು ಪುಣ್ಯತೀರ್ಥಗಳಿಪ್ಪವಲ್ಲೆಲ್ಲ
ಆರಧಿಕ ಅರವತ್ತು ಕೋಟಿ ಸಂಖ್ಯೆಯಲಿ
ಮುಖ್ಯಾಮುಖ್ಯ ಭೇದದಿಂದ
ನೂರೆಂಟು ತೀರ್ಥಗಳು ಮುಖ್ಯವೆನಿಸುವುವಿದರೊ
ಳಾರುತ್ತಮೋತ್ತಮವುಗಳ ನಾಮ ಪೇಳ್ವೆನು ಕು
ಮಾರಧಾರಕ ಪಾಂಡು ಪಾಪನಾಶನಿ ಸ್ವಾಮಿ
ತುಂಬರ ಆಕಾಶಗಂಗ ೧೩
ವಸುರುದ್ರ ಕಾಣ್ವಗ್ನಿ ಮನ್ವಿಂದ್ರಯಮ ಸೋಮ
ಬಿಸರುಹ ಪ್ರೀಯ ನವಪ್ರಜ ಆಶ್ವಿನಿಗಳು ಶುಕ
ಪಶು ಯಕ್ಷ ಯಮ ಭೌಮ ಪಾನಿ ಭದ್ರವು
ಜಗಜ್ಜಾಡ್ಯಹರ ಬಾರ್ಹಸ್ವತಿ
ದಶಪ್ರಚೇತಸ ಗರುಡ ಶೇಷವಾಸುಕಿಯು ಹೈ
ಬ್ಬಸುರ ನಾರದ ವೈಶ್ವದೇವ ಸ್ವಾಹಾಸ್ವಧಾ
ಋಷಿ ಹಸ್ತಿ ಜಾಹ್ನವೀ ಕಾವೇರೀ ವಾರುಣೀ
ನಾರಾಯಣಾದಿ ಪಂಚ ೧೪
ಶಿವರೂಪಿ ದೂರ್ವಾಸ ಪೇಳ್ದನಿನಿತೆಂದು ಜಾ
ಹ್ನವಿಯೊಳಬ್ದ ಸ್ನಾನಫಲ ಧನುರ್ಮಾಸದೊಳು
ನವತೀರ್ಥಯಕ್ತ ವಾಗ್ದೇವಿ ಪುಷ್ಕರಣಿಯೊಳು
ಶುಕ್ಲಪಕ್ಷ ದ್ವಾದಶಿ
ದಿವಸದಿ ಶುಚಿರ್ಭೂತನಾಗಿ ಸಂತೋಷದಲಿ
ವಿವರಾಗ್ರಜೋದಯದಿ ಸ್ನಾನವನು ಮಾಡೆ ಐ
ದುವನು ಸಂಶಯವಿಲ್ಲವೆಂದು ನೃಪತಿಗೆ ಪೇಳ್ದ
ಶಿಷ್ಯನೆಂದರಿದು ದಯದಿ ೧೫
ನಾರದ ಮುನೀಂದ್ರನುಪದೇಶದಿಂ ದಕ್ಷನ ಕು
ಮಾರಕರು ಸಾಹಸ್ರ ತಮ್ಮ ತಮ್ಮಾಶ್ರಮದ
ತೀರದಲಿ ತೀರ್ಥಗಳ ನಮಿಸಿದ ಕಾರಣದಿ
ದಾಕ್ಷಣ್ಯವೆನಿಸುತಿಹ್ಯದು
ಭೈರವಾಷ್ಟ ತೀರ್ಥ ಸಿದ್ಧಿಪ್ರದಾಯಕ ಕು
ಮಾರಧಾರಿಕ ಪಶ್ಚಿಮದಲಿಹವು ಎಂಟಧಿಕ
ನೂರು ತೀರ್ಥಗಳಿಗಾಸ್ಪದವಾದ ಕಾರಣದಿ
ತೀರ್ಥಾದ್ರಿಯೆನಿಸುತಿಹುದು ೧೬
ಭೂತಳಾಧಿಪ ದಿಲೀಪನಿಗೆ ದುರ್ವಾಸಮುನಿ
ತಾ ತಿಳಿ ಪುದಿತಿಹಾಸ ಶೌನಕಾದ್ಯರಿಗೆ ವರ
ಸೂತ ಋಷಿಪುಂಗವನು ಪೇಳ್ದ ವೈಕುಂಠ ಶೈಲಸ್ವಾಮಿ
ಪುಷ್ಕರಣಿಮಹಿಮೆ
ಪ್ರೀತಿಯಿಂದಲಿ ತಿಳಿದು ಪಠಿಸುವವರಿಗೆ ಜಗ
ನ್ನಾಥ ವಿಠಲ ಮನೋವಾಂಛಿತಗಳಿತ್ತು ಪುರು
ಹೂತ ಲೋಕದಲಿ ಸುಖಬಡಿಸಿ ಪ್ರಾಂತಕೆ ತನ್ನ ಪುರವನೈದಿಪ ಕೃಪಾಳು೧೭

೧೮೮
ಸಂಕರ್ಷಣ ಜಯಾತನಯಗೆ ಮಂಗಳ
ಕಂತು ಭವನ ಪದವಿಯೋಗ್ಯಗೆ
ಶಂಕ ಇಲ್ಲದ ಜೀವರಾಶಿಗಳೊಳಗಚ್ಯು
ತಾ ಕಸ್ಥನೆನಿಸಿದ ಪವಮಾನಗೆ ೧
ವಾನರ ವೇಷನಾ ತೋರ್ದಗೆ ಮಂಗಳ
ಭಾನುತನಯನ ಕಾಯ್ದ್ದಗೆ ಮಂಗಳ
ಜಾನಕಿಗುಂಗುರವಿತ್ತಗೆ ಮಂಗಳ
ದಾನವತತಿ ಪುರವ ದಹಿಸಿದವಗೆ ಮಂಗಳ ೨
ಅತಿ ಬಲವಂತರೆಂದೆನಿಸಿದ ದೈತ್ಯ ಸಂ
ತತಿಗಳನೆಲ್ಲವ ಸವರಿದವಗೆ ಮಂಗಳ
ಪ್ರೋತನದೊಳಗೆ ಪ್ರತಿಕೂಲ ಸುಯೋಧನನ
ಮೃತಿಗೆ ಕಾರಣನಾದ ಮರುದಂಶಗೆ ೩
ಏಳೇಳು ಲೋಕದ ಗುರುವರನೆನಿಸಿ ಮೂ
ರೇಳು ಕುಭಾಷ್ಯವ ಮುರಿದವಗೆ ಮಂಗಳ
ಏಳುಕೋಟ ಲೋಕದೊಳಗಿಟ್ಟು ದೈತ್ಯರ
ಪಳದಂತೆ ಮಾಡಿದ ಯತಿರಾಯಗೆ ೪
ಮೂರು ರೂಪಗಳಿಂದ ಮುಕ್ತಿ ಪ್ರದಾಯಕ
ನಾರಾಧಿಸಿದ ಅನಿಮಿಷ ಪೂಜ್ಯಗೆ ಮಂಗಳ
ಶ್ರೀ ರಮಾರಮಣ ಜಗನ್ನಾಥ ವಿಠಲನ
ಕಾರುಣ್ಯ ಪಾತ್ರ ಸಮೀರಣಗೆ ಮಂಗಳ ೫

ಇದು ಉತ್ತರಾಧಿಮಠದ
೧೬೨
ಸಂತರೆನಬಹುದು ಸಜ್ಜನರಿವರನಾ ಪ
ಇಂಥ ಗುಣಗಳಿಂದ ಯುಕ್ತರಾಗಿಪ್ಪರ ಅ.ಪ.
ಸ್ವಾಂತಸ್ಥಾ ನುತ ಸರ್ವಾಂತರಾತ್ಮಕನೆಂದು
ಚಿಂತಿಸುತ ಮನದೊಳು ನಿರಂತರದಲಿ
ನಿಂತಲ್ಲಿ ನಿಲ್ಲದೆ ದುರಂತ ಮಹಿಮನ ಗುಣವ
ಸಂಸ್ತುತಿಸುತನವರತ ಶಾಂತರಾಗಿಹರಾ ೧
ಲೇಸು ಹೊಲ್ಲೆಗಳು ಪ್ರದ್ವೇಷ ಗೇಹಗಳು ಸಂ
ತೋಷ ಕ್ಲೇಶಗಳಿಗವಕಾಶ ಕೊಡದೆ
ದೋಷ ವರ್ಜಿತ ಹೃಷಿಕೇಶ ಮಾಡುವನೆಂದು
ಭೇಶನಂದದಲಿ ಪ್ರಕಾಶಿಸುತಲಿಹರಾ ೨
ವೇದ ಶಾಸ್ತ್ರಂಗಳೊಳು ಮೇದಿನಿ ದಿವಿಜರೊಳು
ಸಾಧು ಜನರೊಳು ಧರ್ಮಕರ್ಮಗಳೊಳು
ಶ್ರೀದನೊಳು ಗೋವುಗಳೊಳಗೆ ದ್ವೇಷಿಪರಿಗೆ ಅ
ನ್ನೋದಕಗಳೀಯದೆ ನಿಷೇಧಗಯ್ಯುತಲಿಹರಾ ೩
ಎನ್ನ ಪೋಲುವ ಪತಿತರಜ್ಞಾನಿಗಳು ಜಗದೊ
ಳಿನ್ನಿಲ್ಲ ಪತಿತ ಪಾವನನೆನಿಸುವ
ಜಾಹ್ನವೀ ಜನಕಗಿಂದಧಿಕರ್ಯಾರಿಲ್ಲೆಂದು
ಉನ್ನತೋತ್ಯಂಶದಿಂದ ಸನ್ನುತಿಸುತಿಪ್ಪವರ ೪
ಸತ್ಯ ಸಂಕಲ್ಪ ಏನಿತ್ತಿದ್ದೆ ಪರಮ ಸಂ
ಪತ್ತು ಎನಗೆನುತ ಸದ್ಭಕ್ತಿಯಿಂದಾ
ನಿತ್ಯದಲಿ ಕೀರ್ತಿಸುತ ಪುತ್ರಿಮಿತ್ರಾದಿಗಳು
ಭೃತ್ಯಾನುಭೃತ್ಯರೆಂದರ್ತಿಯಲಿ ಸ್ಮರಿಸುವರಾ ೫
ಜನುಮ ಜನುಮಗಳಲ್ಲಿ ಎನಗೆ ಜನನೀ ಜನಕ
ಅನುಜ ತನುಜಾಪ್ತ ಪೋದನ ಭೂಷಣಾ
ಅನಿಮಿತ್ತ ಬಂಧು ಒಬ್ಬನೇ ಎನಿಸುತಿಪ್ಪ ಸ
ಜ್ಜನರಿಗಿಹ ಪರ ಸೌಖ್ಯ ರೂಪನೆಂಬುವರಾ ೬
ನಾಗೇಂದ್ರಶಯನ ಭವರೋಗಾಪಹರ್ತ ಪಾ
ಪೌಘಾದ್ರಿ ವಜ್ರ ಅಮೋಘ ಶೌರ್ಯ
ತ್ರೈಗುಣ್ಯ ವರ್ಜಿತ ಜಗನ್ನಾಥ ವಿಠಲಗೆ
ಕೂಗಿ ಕೈಮುಗಿದು ತಲೆಬಾಗಿ ನಮಿಸುವರಾ ೭

೨೬೯
ಸತ್ಯಲೋಕೇಶನೆ ಬಳಿತ್ಥಾದಿ ಶ್ರುತಿವಿನುತ
ಮತ್ಯುಂಜಯಾದಿ ಸುರಪೂಜ್ಯ |
ಸುರಪೂಜ್ಯ ಭಕುತರ ವಿ
ಪತ್ತು ಪರಹರಿಸಿ ಸಲಹಯ್ಯ ೧
೨೭೦ ಸತ್ಯಲೋಕವೆ ಸದನ ತತ್ವಾಭಿಮಾನಿಗಳು
ಭೃತ್ಯರೆನಿಸುವರು ಮಹಲಕ್ಷ್ಮಿ | ಮಹಲಕ್ಷ್ಮಿ ಜನನಿ ಪುರು
ಷೋತ್ತಮನೆ ಜನಕನೆನಿಸುವ ೨
೨೭೧ಚತುರದಶ ಲೋಕಾಧಿಪತಿಯೆಂದೆನಿಪ ನಿನಗೆ ಸರ
ಸ್ವತಿಯು ನಿಜರಾಣಿ ವಿಹಗೇಂದ್ರ | ವಿಹಗೇಂದ್ರ ಶೇಷ ಪಾ
ರ್ವತಿಪರಾತ್ಮಜರು ಎನಿಸೋರು ೩
೨೭೨ ಋಜುಗಣಾಧೀಶ್ವರನೆ ಅಜಪದವಿಗೋಸುಗದಿ
ಭಜಿಸಿದವನಲ್ಲ ಹರಿಪಾದ | ಹರಿಪಾದ ಸೇವೆಯು ಸ
ಹಜವೇ ಸರಿ ನಿನಗೆಂದೆಂದು ೪
೨೭೩ ಚತುರಾಸ್ಯ ತತ್ವ ದೇವತೆಗಳಂತರ್ಯಾಮಿ
ನತಿಸಿ ಬಿನ್ನೈಪೆ ನಿನ್ನಲ್ಲಿ | ನಿನ್ನಲ್ಲಿ ಭಕ್ತಿಶಾ
ಶ್ವತವಾಗಿರಲೋ ಹರಿಯಲ್ಲಿ ೫
೨೭೪ ದ್ವಿಶತ ಕಲ್ಪದಲಿ ತಪವೆಸಗಿ ಅಸುದೇವ ಪೊಂ
ಬಸಿರ ಪದ ಪಡೆದೆ ಹರಿಯಿಂದ |
ಹರಿಯಿಂದ ಮಿಕ್ಕ ಸುಮ
ನಸರಿಗುಂಟೇನೊ ಈ ಭಾಗ್ಯ ೬
೨೭೫ ಇನಿತಿದ್ದ ಬಳಿಕ ನೀ ಸಲಹದಿಪ್ಪುದು ನಮ್ಮ
ಅನುಚಿತೋಚಿತವೊ ನೀ ಬಲ್ಲೇ | ನೀ ಬಲ್ಲೆ ಶಾರದಾ
ವನಿತೆಯ ರಮಣ ದಯವಾಗೊ ೭
೨೭೬ ಸತ್ವಾತ್ಮಕ ಶರೀರ ಮಿಥ್ಯಾದಿ ಮತಗಳೊಳು
ಉತ್ಪತ್ತಿ ಸಂಪತ್ತು ಕೊಡದಿರು | ಕೊಡದಿರೆನಗೆಂದು ಸಂ
ಪ್ರಾರ್ಥಿಸುವೆ ನಿನಗೆ ನಮೋ ಎಂದು ೮
೨೭೭ ಅಜ್ಞಾನವೆಂಬ ಧಾನ್ಯವನು ಒರಳಿಗೆ ಹಾಕಿ
ಸುಜ್ಞಾನವೆಂಬೊ ಒನಕೀಲಿ | ಒನಕೀಲಿ ಪಾಪಧಾನ್ಯಗಳ
ನುಗ್ಗು ಮಾಡಿದೆಯೊ ಘಳಿಗ್ಯಾಗೆ ೯
೨೭೮ ಮಾತರಿಶ್ವನೆ ನಿನ್ನ ಪ್ರೀತಿಯೊಂದೇ ಜಗ
ನ್ನಾಥವಿಠಲನ್ನ ಕರುಣಕ್ಕೆ | ಕರುಣಕ್ಕೆ ಕಾರಣವು ಯಮ
ಯಾತನವು ಬರಲು ನಾನಂಜೆ ೧೦

ಪಲ್ಲವಿ : ತುಂಗಮಹಿಮನ
೧೩೩
ಸತ್ಯವರ ಮುನಿಪ ದಿಕ್ಷತಿಗಳಂತೆ
ನಿತ್ಯದಲಿ ತೋರ್ಪ ನೋಳ್ಪರಿಗೆ ಸಂಭ್ರಮದಿ ಪ
ಸಿಂಧೂರವೇರಿ ದೇವೇಂದ್ರನಂತೊಪ್ಪುವನು
ವಂದಿಪ ಜನರಘಾಳಿವನ ಕೃಶಾನು
ಮಂದ ಜನರಿಗೆ ದಂಡ ಧರನಂತೆ ತೋರ್ಪಕ
ರ್ಮಂದಿಪನು ನರವಾಹನವೇರಿ ನಿಋಋತಿಯೆನಿಪ ೧
ಜ್ಞಾನಾದಿ ಗುಣದಿ ರತ್ನಾಕರನೆನಿಪ ಶೈವ
ಜೈನಾದಿಮತ ಘನಾಳಿಗೆ ಮಾರುತಾ
ದೀನ ಜನರಿಗೆ ಧನದನಾಗಿ ಸಂತೈಪ ವ್ಯಾ
ಖ್ಯಾನ ಕಾಲದಿ ಜಗತ್ತೀಶನೆಂದೊರೆವಾ ೨
ಶ್ರೀಮದ್ರಮಾಪತಿ ಜಗನ್ನಾಥ ವಿಠಲ
ಸ್ವಾಮಿ ಪಾದಾಬ್ಜ ಭಜನಾಸಕ್ತನಿವ
ಧೀಮಂತ ಗುರು ಸಾರ್ವಭೌಮ ಭೂ ಸುರನುತ
ಮಹಾ ಮಹಿಮ ಪೊಗಳಲೆನ್ನೊಶವೇ ಕರುಣಾ ಸಿಂಧು೩

ವಾಯುದೇವರನ್ನು ತತ್ವಾಭಿಮಾನಿ
೨೨
ಸರ್ವಾಂತರ್ಯಾಮಿ ನೀ ಸಲಹೋ ಎನ್ನ ಪ
ದುರ್ವಾರ್ತೆ ಕೇಳಿ ಮನ ಬರಿದೆ ಚಿಂತಿಸುತಿದೆ ಅ
ಜೀವರಿಗೆ ಗುಣ ಕಾಲ ಕರ್ಮ ಪ್ರಕೃತಿಯು ಸ್ವ
ಭಾವಗಳನನುಸರಿಸಿ ಸುಖದುಃಖವಾ
ಈವ ದೊರೆ ನೀನಲ್ಲದಿನ್ನುಂಟೆ ಜಗಕೆ ಮ
ತ್ತಾವ ನೈಜ ಭಕ್ತರನು ಕಾಪಾಡುವ ದಾತ ೧
ಸತ್ಯ ಸಂಕಲ್ಪ ನೀನೆಂದೆಂದಿಗೂ ಸರಿ
ಭೃತ್ಯವತ್ಸಲನೆಂಬ ಬಿರುದಲ್ಲವೇ
ದತ್ತರೂಪನೆ ನಿನ್ನ ಸ್ಮರಣೆ ಮಾತ್ರದಲಿ ಅಪ
ಮೃತ್ಯು ಪರಿಹರವಾಹುದು ಸಂದೇಹವಿಲ್ಲಿದಕೆ ೨
ಮಾಪತಿ ಎನ್ನ ವಿಜ್ಞಾಪನೆ ಕೈಕೊಂಡು
ಪಾಪಿಜನರಿಂದ ಬಂದಾಪತ್ತನು
ನೀ ಪರಿಹರಿಸಿ ಸಲಹೋ ದ್ರೌಪದಿ ವರದ ೩

ಶ್ರೀನಿವಾಸ ಕಲ್ಯಾಣದ ಕತೆ
೧೭೬
ಸಾರಿದ ಡಂಗುರ ಯಮನು ಪ
ಅಘ ನಾರೇರ ಎಳತಂದು ನರಕದಲ್ಲಿಡಿರೆಂದು ಅ.ಪ.
ಹೊತ್ತಾರೆ ಎದ್ದು ಪತಿಗೆ ಎರಗದವಳ
ಮೃತ್ತಿಕೆ ಶೌಚ ಮಾಡದೆ ಇಪ್ಪಳಾ
ಬೆತ್ತಲೆ ಕುಳಿತು ಮೈದೊಳೆವಳ ನಾದಿನಿ
ಅತ್ತೆ ಮಾವನ ಬೈವವಳೆಳೆದು ತನ್ನೀರೆಂದು ೧
ತಿಲಕಾಯುಧವ ಬಿಟ್ಟು ಕುಂಕುಮವಿಡುವಳ
ಬೆಳಗಾದ ಕಾಲಕ್ಕೂ ಮಲಗಿಪ್ಪಳ
ಮಲಿನ ವಸ್ತ್ರದಲಿ ಪತಿಯ ಬಳಿಗೆ ಪೋಗುವಳ
ಕಲಹಕಾರಿಯ ಹಿಡಿದೆಳೆದು ತನ್ನಿರಿಯೆಂದು ೨
ಉತ್ತಮ ಗುರುಹಿರಿಯರನು ನಿಂದಿಸುವಳ
ಪೆತ್ತ ಮಕ್ಕಳ ಮಾರಿ ಬದುಕುವಳ
ಪ್ರತ್ಯೇಕ ಶಯ್ಯದಿ ಮಲಗಿ ಇಪ್ಪಳ ಪಿಡಿ
ದೆತ್ತ ಎಳೆದು ತಂದು ನರಕದಲ್ಲಿಡಿರೆಂದು ೩
ಜಲ ಜಕ್ಕಿ ಸಾಳಿ ಕಂಬಳಿ ಬೋಳಿ ಬಕ್ಕಿ ಗೊಂ
ಡಳಿ ಮೊದಲಾದವು ದೈವವೆಂದು
ತಿಳಿದು ಪಿಶಾಚಿ ಎಂಜಲ ಉಂಡು ಹಿಗ್ಗುವ
ಲಲನೇರಾ ಸೆಳೆದು ತನ್ನಿರೋ ಎಂದು ೪
ನಾಗೇಂದ್ರ ಶಯನನ ದಿನದುಪವಾಸದ
ಜಾಗರ ಮಾಡದೆ ಮಲಗಿಪ್ಪಳಾ
ಭಾಗವತ ಸಚ್ಛಾಸ್ತ್ರ ಕೇಳದೆ ಉನ್ಮತ್ತ
ಳಾಗಿರುವಳ ಎಳೆದು ತನ್ನಿರೆಂದು ೫
ಗಂಡ ನಿರ್ಧನಿಕನೆಂದಪಮಾನ ಮಾಳ್ಪಳ
ಉಂಡ ಶೇಷಾನ್ನುವನುಣಿಸುವಳಾ
ಕೊಂಡೆ ಮಾತುಗಳಾಡಿ ಕಳವಳಗೊಳಿಪಳ
ಮಂಡೆಗೊದಲು ಹಿಡಿದು ಎಳೆದು ತನ್ನಿರಿ ಎಂದು೬
ಉಡಲಿಲ್ಲ ಉಣಲಿಲ್ಲ ಇಡಲಿಲ್ಲ ತೊಡಲಿಲ್ಲ
ಸುಡಲಿಗಂಡನ ಒಗೆತನವೆನ್ನುತಾ
ಹಡೆದವರನು ನುಡಿನುಡಿಗೆ ಬಯ್ಯುತಿಪ್ಪಂಥ
ಕಡು ಪಾಪಿಗಳ ಹೆಡ ಮುಡಿಗಟ್ಟಿ ತನ್ನಿರಿ ಎಂದು೭
ಸಾಲೆಡೆಯಲಿ ಭೇದ ಮಾಡಿ ಬಡಿಸುವಳ
ನೀಲಾಂಬರವನುಟ್ಟು ಮಡಿಯೆಂಬಳ
ಬಾಲಕರ ಬಡಿದಳಿಸುತಿಪ್ಪಳ ಹಿಂ
ಗಾಲ ತೊಳೆಯದವಳ ಎಳೆದು ತನ್ನಿರೋ ಎಂದು೮
ಪತಿಗೆ ಬೇಕಾದವರ ಅಪಮಾನ ಮಾಳ್ಪಳ
ಮೃತವತ್ಸ ಗೋವಿನ ಪಾಲುಂಬಳಾ
ಹುತವಾದ ಅಗ್ನಿ ತೊಳೆದು ನಂದಿಸುವಳ
ಮತಿಗೇಡಿಯ ಬಿಡದೆಳೆದು ತನ್ನಿರೋ ಎಂದು ೯
ಒಲಿವ ಔಷಧ ಮಾಡಿ ಪತಿಯ ಬಳಲಿಸುವಳ
ಮಲಮಕ್ಕಳೊಳು ಮತ್ಸರಿಸುತಿಪ್ಪಳಾ
ಕಳವಿಲಿ ಕಾಂತನ ಧನವ ವಂಚಿಸುವಳ
ಗಳಕೆ ಪಾಶವ ಕಟ್ಟ ಎಳೆದು ತನ್ನಿರೋ ಎಂದು ೧೦
ಮಿಥ್ಯಾವಾದಿಯ ಕೂಡ ಸ್ನೇಹ ಮಾಳ್ಪಳಾ
ಸತ್ತವರ ನೆನೆದಳುತಿಪ್ಪಳಾ
ದತ್ತಾಪಹಾರವ ಮಾಡುತಿಪ್ಪಳ ನೀಚ
ವೃತ್ತಿಲಿ ಬದುಕುವಳೆಳೆದು ತನ್ನಿರೋ ಎಂದು ೧೧
ಲಶನು ವೃಂತಕಾದಿಗಳನು ಭಕ್ಷಿಸುವಳಾ
ಸೊಸೆಯರೊಡನೆ ಮತ್ಸರಿಸುತಿಪ್ಪಳಾ
ಹಸಿದು ಬಂದವರಿಗೆ ಅಶನವಿಲ್ಲೆಂಬಳಾ
ಉಸಿರು ಬಿಡದಂತೆ ಎಳೆದು ತನ್ನಿರೊ ಎಂದು ೧೨
ತುಲಸಿ ವೃಂದಾವನಕಭಿನಮಿಸದವಳ
ಜಲವ ಸೋಸದೆ ಪಾನವ ಮಾಳ್ಪಳಾ
ಫಲ ಧಾನ್ಯಾದಿಗಳ ನೋಡದೆ ಪಾಕ ಮಾಳ್ಪಳ
ಮಳೆ ಗಾಳಿ ನಿಂದಿಪಳ ಎಳೆದು ತನ್ನಿರೋ ಎಂದ ೧೩
ಮೀಸಲು ಮಡಿ ಎನ್ನದೆ ಭಕ್ಷಿಸುವಳ
ಕೇಶಿಯೊಡನೆ ಗೆಳೆತನ ಮಾಳ್ಪಳ
ದಾಸೆರಿಂದಲಿ ಪಾಕ ಪಾತ್ರೆ ಮುಟ್ಟಿಸುವಳ
ನಾಸಿಕ ಬಂಧಿಸಿ ಎಳೆ ತನ್ನಿರೋ ೧೪
ಬಾಲಕರನು ತೊಟ್ಟ್ಟಿಲೊಳಿಟ್ಟು ತೂಗುತ
ಪಾಲೆರೆವುತ ಬೀಸುತ ಕಟ್ಟುತಾ
ಆಲಯದೊಳು ಕೆಲಸಗಳ ಮಾಡುತ ಲಕ್ಷ್ಮೀ
ಲೋಲನ ಗುಣವ ಪಾಡುವರ ಮುಟ್ಟದಿರೆಂದು೧೫
ಅರಿಷಣ ಕುಂಕುಮ ಪುಷ್ಟಾಂಜನ ವಸ್ತ್ರಾ
ಭರಣ ಭೂಷಿತರಾಗಿ ಪತಿಯೊಡನೆ
ಸರಸವಾಡುತ ಸುಖ ಹರಿಗೆ ಅರ್ಪಿತವೆಂಬ
ಹರಿದ್ದೇರಿದೆಡೆಗೆ ಕೈಮುಗಿದು ಬನ್ನಿರಿ ಎಂದು೧೬
ಅಗಣಿತ ಮಹಿಮ ಶ್ರೀ ಜಗನ್ನಾಥ ವಿಠಲನ್ನ
ಬಗೆಬಗೆಯಿಂದ ಪಾಡುತಲೀ
ಹೊಗಳುವ ದಾಸರ ಬಗೆಯ ನೇಮಿಸಿ ಕಾಯ್ವ
ಸುಗುಣೇರಿದ್ದೆಡೆಗೆ ಕೈಮುಗಿದು ಬನ್ನಿರೆಂದು ೧೭

ಈ ಕೀರ್ತನೆಯಲ್ಲಿ ವ್ಯಾಸರಾಜರು
೧೫೩
ಸಿರಿರಮಣ ತವ ಚರಣ ಸೇವೆ ದೊರಕುವುದು ಹ್ಯಾಂಗಿನ್ನು
ಪರಮ ಪಾಪಿಷ್ಠ ನಾನು ಪ
ನರಹರಿಯೆ ನಿಮ್ಮ ನಾಮ ಸ್ಮರಣ ಮಾಡದಲೆ
ನರಕಕ್ಕೆ ಗುರಿಯಾದೆನೋ ಹರಿಯೆ ಅ.ಪ.
ಹೊಸಮನೆಯ ಕಂಡು ಬಲು ಹಸಿದು ಭೂಸುರರು ಬರೆ
ಕೊಸರಿ ಹಾಕುತ ದಬ್ಬುತ
ಶಶಿಮುಖಿಯೆ ಬಾರೆಂದು ಅಸಮಸದಿ ಬಣ್ಣಿಸಿ
ವಶವಾಗಿ ಅವಳೊಲಿಸುತ
ದಶಮಿ ಏಕಾದಶಿ ದ್ವಾದಶೀ ದಿನತ್ರಯದಿ
ಅಶನವೆರಡ್ಹೊತ್ತುಣ್ಣುತ
ಘಸಘಸನೆ ತಾಂಬೂಲ ಪಶುವಿನಂದದಿ ಮೆದ್ದು
ಕುಸುಮ ಗಂಧಿಯ ರಮಿಸುತ ಸತತ ೧
ಕೆರೆ ಭಾವಿ ದೇವಾಲಯವ ಕೆಡಿಸಿ ದಿವ್ಯ
ಹಿರಿದಾಗಿ ಮನೆ ಕಟ್ಟದೆ
ನೆರೆ ನಡೆವ ಮಾರ್ಗದೊಳು ಅರವಟ್ಟಗೆಗಳನ್ನು
ಧರಧರದಿ ಬಿಚ್ಚಿ ತೆಗೆದೆ
ಪರಮ ಸಂಭ್ರಮದಿಂದ ಅರಳಿಯಾ ಮರ ಕಡಿಸಿ
ಕೊರೆಸಿ ಬಾಗಿಲು ಮಾಡಿದೆ
ಏಕ ಮಂದಿರವ ಮುಗಿಸಿ ಹರುಷ ಚಿತ್ರವ ಬರೆಸಿ
ಪರಿಪರಿಯ ಸುಖ ಸಾರಿದೇ ಮೆರೆದೆ ೨
ಸಾಕಲ್ಯದಿಂದ ಸಾಲಿಗ್ರಾಮದ ಅಭಿಷೇಕ
ಆಕಳ ಹಾಲಲಿ ಮಾಡದೆ
ನಾಕೆಂಟು ನಾಯಿಗಳ ಸಾಕಿ ಮನೆಯೊಳು ಬದುಕ
ಬೇಕೆಂದು ಹಾಲು ಹೊಯ್ದೆ
ಕಾಕು ಬುದ್ಧಿಗಳಿಂದ ಗುಡಿ ಗುಡಿ ನಸಿ ಪುಡಿ
ಹಾಕಿ ಭಂಗಿಯಾ ಸೇದಿದೆ
ಲೋಕ ನಿಂದಕ ನಾಗಿ ಪಾಪಕ್ಕೆ ಕೈ ಹಚ್ಚಿ ಅ
ನೇಕ ಜೂಜುಗಳಾಡಿದೇ ಬಿಡದೆ ೩
ಸ್ನಾನ ಸಂಧ್ಯಾನ ಅತಿಮೌನ ಗಾಯಿತ್ರಿ ಜಪ
ಭಾನುಗಘ್ರ್ಯವನು ಕೊಡದೆ
ಹೀನತ್ವ ವಹಿಸಿ ದಾನ ಧರ್ಮವ ಮಾಡದೆ
ಶ್ವಾನನಂದದಿ ಚರಿಸಿದೇ
ಶ್ರೀನಿವಾಸನೆ ನಿನ್ನ ಅನುಪೂರ್ವಕ ಪೂಜೆ
ನಾನೊಂದು ಕ್ಷಣಮಾಡದೇ
ಬೇನೆ ಬಂದಂತಾಗೆ ಹೀನ ಸಕೇಶಿಯ ಕೈಲೆ
ನಾನ ವಿಧಾನ್ನ ತಿಂದೇ ನೊಂದೇ ೪
ಬಾದರಾಯಣ ಕೃತ ಭಾಗವತ ಕೇಳಲಿಕೆ
ಆದರವೆ ಪುಟ್ಟಲಿಲ್ಲಾ
ವಾದಿಗಳ ಮತವಳಿದ ಮಧ್ವ ಸಿದ್ಧಾಂತದ
ಹಾದಿಗೆ ಹೋಗಲಿಲ್ಲ
ಶೋಧಿಸಿದ ಚಿನ್ನಕೆ ಸಮರಾದ ವೈಷ್ಣವರ ಪಾದಕ್ಕೆ ಬೀಳಲಿಲ್ಲ
ವೇದ ಬಾಹಿರನಾಗಿ ಅಪಸವ್ಯ ಮನನಾಗಿ
ಓದಿಕೊಂಡೆನೋ ಇದೆಲ್ಲ ಸುಳ್ಳ ೫
ಉತ್ತಮ ಬ್ರಾಹ್ಮಣರ ವೃತ್ತಿಗಳನೆ ತೆಗಸಿ ಬ್ರ
ಹ್ಮಹತ್ಯಗಾರನು ಎನಿಸಿದೆ
ಮತ್ತೆ ಮದುವೆ ಮುಂಜಿ ಸಮಯಕ್ಕೆ ನಾ ಪೋಗಿ
ಸತ್ತ ಸುದ್ದಿಯ ಪೇಳಿದೆ
ವಿತ್ತವಿದ್ದವರ ಬೆನ್ಹತ್ತಿ ದೂತರ ಕಳುಹಿ
ಕುತ್ತಿಗೆಯ ನಾ ಕೊಯ್ಸಿದೆ
ಹತ್ತು ಜನರೆನ್ಹೆಣಕೆ ನಿತ್ಯ ಕಲ್ಲೊಡೆಯುತಿರೆ
ಮೃತ್ಯು ದೇವತೆಯೆನಿಸಿದೆ ಬಿಡದೇ ೬
ಕ್ಷಿತಿಯೊಳಗೆ ಇನ್ನಾರು ಹಿತವ ಬಯಸುವವರೆನಗೆ
ಗತಿಯೇನು ಪೇಳೊ ಕೊನೆಗೆ
ಸತತ ತವ ಧ್ಯಾನದಲಿ ರತನಾಗಿ ಇರುವ ಸ
ನ್ಮತಿಯ ಪಾಲಿಸಯ್ಯ ಎನಗೆ
ಪತಿತಪಾವನನೆಂಬ ಬಿರಿದು ಅವನಿಯ ಮೇಲೆ
ಶ್ರುತಿ ಸಾರುತಿದೆಯೋ ಹೀಗೆ
ಶಿತಕಂಠನುತ ಜಗನ್ನಾಥವಿಠ್ಠಲ ನಿನಗೆ
ನುತಿಸದೆ ಬೆಂಡಾದೆ ಕಾಯೋ ಹರಿಯೆ ೭